ಆಧ್ಯಾತ್ಮಿಕ ಚೈತನ್ಯದ ಮೂರು ದಿನಗಳು
1. ಈ ವರ್ಷದ ಜಿಲ್ಲಾ ಅಧಿವೇಶನದಿಂದ ನಾವೇನನ್ನು ನಿರೀಕ್ಷಿಸಬಲ್ಲೆವು?
1 ಆಧ್ಯಾತ್ಮಿಕವಾಗಿ ಮರುಭೂಮಿಯಂತಿರುವ ಸೈತಾನನ ಈ ಲೋಕದಲ್ಲಿ ಯೆಹೋವನಾದರೋ ತನ್ನ ಸೇವಕರನ್ನು ಚೈತನ್ಯಗೊಳಿಸುತ್ತಿದ್ದಾನೆ. (ಯೆಶಾ. 58:11) ನಮ್ಮನ್ನು ಬಲಗೊಳಿಸಲು ಯೆಹೋವನು ಉಪಯೋಗಿಸುವ ಒಂದು ಏರ್ಪಾಡು ವಾರ್ಷಿಕ ಜಿಲ್ಲಾ ಅಧಿವೇಶನವಾಗಿದೆ. ಈ ವರ್ಷದ ಅಧಿವೇಶನವು ಹತ್ತಿರವಾಗುತ್ತಿರುವಾಗ ಆಧ್ಯಾತ್ಮಿಕ ಚೈತನ್ಯವನ್ನು ಸ್ವೀಕರಿಸಲು ಮತ್ತು ಅದನ್ನು ಇತರರಿಗೆ ದಾಟಿಸಲು ಹೇಗೆ ಸಿದ್ಧತೆಗಳನ್ನು ಮಾಡಬಲ್ಲೆವು?—ಜ್ಞಾನೋ. 21:5.
2. ನಾವು ಯಾವೆಲ್ಲ ಸಿದ್ಧತೆಗಳನ್ನು ಮಾಡಬೇಕಿದೆ?
2 ಮೂರೂ ದಿನ ಅಧಿವೇಶನಕ್ಕೆ ಹಾಜರಾಗಲು ನೀವು ಈಗಾಗಲೇ ನಿಮ್ಮ ವೈಯಕ್ತಿಕ ಹಾಗೂ ಐಹಿಕ ಕೆಲಸಗಳನ್ನು ಹೊಂದಿಸಿರದಿದ್ದಲ್ಲಿ ಅದನ್ನು ಮಾಡಲು ಈಗ ಸಮಯ ತೆಗೆದುಕೊಳ್ಳಿ. ಪ್ರತಿದಿನ ಅಧಿವೇಶನ ಸ್ಥಳಕ್ಕೆ ತಲಪಲು ಎಷ್ಟು ಸಮಯ ಹಿಡಿಯುತ್ತದೆಂದು ನೀವು ಲೆಕ್ಕಹಾಕಿದ್ದೀರೊ? ಆಗ ಕಾರ್ಯಕ್ರಮ ಆರಂಭವಾಗುವ ಸಾಕಷ್ಟು ಮುಂಚೆ ಅಧಿವೇಶನ ಸ್ಥಳಕ್ಕೆ ತಲಪಿ ಸೀಟುಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದು. ನಮ್ಮನ್ನು ಆಧ್ಯಾತ್ಮಿಕವಾಗಿ ಚೈತನ್ಯಗೊಳಿಸಲು ಯೆಹೋವನು ಏರ್ಪಡಿಸಿರುವ ಔತಣದ ಯಾವುದೇ ಭಾಗವನ್ನು ತಪ್ಪಿಸಿಕೊಳ್ಳಲು ನಾವ್ಯಾರೂ ಖಂಡಿತ ಬಯಸೆವು! (ಯೆಶಾ. 65:13, 14) ವಸತಿ ಹಾಗೂ ಪ್ರಯಾಣದ ಏರ್ಪಾಡುಗಳನ್ನು ಈಗಾಗಲೇ ಮಾಡಿದ್ದೀರೊ?
3. ಕಾರ್ಯಕ್ರಮದ ಪೂರ್ಣ ಪ್ರಯೋಜನ ಪಡೆಯುವಂತೆ ನಮಗೂ ನಮ್ಮ ಕುಟುಂಬಕ್ಕೂ ಯಾವ ಸಲಹೆಗಳು ಸಹಾಯ ಮಾಡುವವು?
3 ಕಾರ್ಯಕ್ರಮದ ಸಮಯದಲ್ಲಿ ನಿಮ್ಮ ಮನಸ್ಸು ಅತ್ತಿತ್ತ ಅಲೆದಾಡದಂತೆ ನೀವೇನು ಮಾಡಬಲ್ಲಿರಿ? ಪ್ರತಿ ರಾತ್ರಿ ಆದಷ್ಟು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಿ. ಭಾಷಣಕಾರನ ಮೇಲೆ ದೃಷ್ಟಿ ಕೇಂದ್ರೀಕರಿಸಿ. ಪ್ರತಿಯೊಂದು ವಚನವನ್ನು ನಿಮ್ಮ ಬೈಬಲ್ನಲ್ಲಿ ತೆರೆದು ಓದಿ. ಚುಟುಕಾದ ಟಿಪ್ಪಣಿ ಬರೆದಿಡಿ. ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವಲ್ಲಿ ಮಕ್ಕಳು ಕಾರ್ಯಕ್ರಮದ ಮೇಲೆ ಗಮನ ಕೇಂದ್ರೀಕರಿಸುವಂತೆ ಹೆತ್ತವರು ಸಹಾಯ ಮಾಡಶಕ್ತರಾಗುವರು. (ಜ್ಞಾನೋ. 29:15) ಪ್ರಾಯಶಃ ಪ್ರತಿ ಸಂಜೆ ಕುಟುಂಬವಾಗಿ ನೀವು ಕಾರ್ಯಕ್ರಮದ ಮುಖ್ಯಾಂಶಗಳನ್ನು ಚರ್ಚಿಸಬಹುದು. ಅಲ್ಲದೆ, ಅಧಿವೇಶನ ಮುಗಿದ ಬಳಿಕವೂ ನಿಮ್ಮ ಕುಟುಂಬ ಆಧ್ಯಾತ್ಮಿಕ ಚೈತನ್ಯವನ್ನು ಗಳಿಸುತ್ತಿರಬೇಕಾದರೆ ಅಧಿವೇಶನದಿಂದ ನಿಮ್ಮ ಕುಟುಂಬ ಅನ್ವಯಿಸಬೇಕಾದ ಅಂಶಗಳನ್ನು ಪರಿಗಣಿಸಲು ಕುಟುಂಬ ಆರಾಧನೆಯ ಸಂಜೆಯಂದು ಸಮಯ ಬದಿಗಿರಿಸಿ.
4. ನಮ್ಮ ಸಭೆಯಲ್ಲಿನ ಇತರರು ಆಧ್ಯಾತ್ಮಿಕ ಚೈತನ್ಯ ಪಡೆಯುವಂತೆ ನಾವು ಹೇಗೆ ಸಹಾಯ ಮಾಡಬಹುದು?
4 ಚೈತನ್ಯ ಪಡೆದುಕೊಳ್ಳಲು ಇತರರಿಗೆ ಸಹಾಯಮಾಡಿ: ಇತರರೂ ಆಧ್ಯಾತ್ಮಿಕ ಚೈತನ್ಯ ಪಡೆದುಕೊಳ್ಳಬೇಕೆಂಬದು ನಮ್ಮ ಬಯಕೆ. ನಿಮ್ಮ ಸಭೆಯಲ್ಲಿರುವ ವೃದ್ಧ ಪ್ರಚಾರಕರಿಗೆ ಇಲ್ಲವೇ ಇತರರಿಗೆ ಅಧಿವೇಶನಕ್ಕೆ ಹಾಜರಾಗಲು ಸಹಾಯದ ಅಗತ್ಯವಿದೆಯೊ? ನೀವು ಅವರಿಗೆ ಸಹಾಯ ಮಾಡಬಲ್ಲಿರೊ? (1 ಯೋಹಾ. 3:17, 18) ಹಿರಿಯರು, ವಿಶೇಷವಾಗಿ ಗುಂಪು ಮೇಲ್ವಿಚಾರಕರು ಅಂಥ ಪ್ರಚಾರಕರಿಗೆ ಅಗತ್ಯವಾದ ಸಹಾಯ ದೊರಕುವಂತೆ ನೋಡಿಕೊಳ್ಳಬೇಕು.
5. ಅಧಿವೇಶನದ ಆಮಂತ್ರಣ ಪತ್ರಗಳನ್ನು ನಾವು ಹೇಗೆ ವಿತರಿಸುವೆವು? (ಪುಟ 5ರ ಚೌಕವನ್ನೂ ನೋಡಿ.)
5 ಎಂದಿನಂತೆ ಈ ಬಾರಿಯೂ ಅಧಿವೇಶನಕ್ಕೆ ಹಾಜರಾಗಲು ಇತರರನ್ನು ಆಮಂತ್ರಿಸುವ ಕಾರ್ಯಾಚರಣೆಯಲ್ಲಿ ನಾವು ಪಾಲ್ಗೊಳ್ಳಲಿದ್ದೇವೆ. ಇದನ್ನು ಅಧಿವೇಶನಕ್ಕೆ ಮೂರು ವಾರಗಳ ಮುಂಚೆ ಆರಂಭಿಸಲಿದ್ದೇವೆ. ನಿಗದಿಪಡಿಸಿದ ಆಮಂತ್ರಣ ಪತ್ರಗಳನ್ನು ವಿತರಿಸಲು ಸಭೆಗಳು ಗುರಿಯನ್ನಿಡತಕ್ಕದ್ದು ಹಾಗೂ ತಮ್ಮ ಟೆರಿಟೊರಿಯನ್ನು ಆದಷ್ಟು ಹೆಚ್ಚಾಗಿ ಆವರಿಸಲು ಪ್ರಯತ್ನಿಸಬೇಕು. ಎಚ್ಚರಿಕೆ ವಹಿಸಬೇಕಾದ ಟೆರಿಟೊರಿಗಳಲ್ಲಿ ಮನೆಯವನಿಗೆ ಆಮಂತ್ರಣ ಪತ್ರ ಕೊಡುವ ಮುಂಚೆ ಅವನು ಆಸಕ್ತನೊ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ಕಾರ್ಯಾಚರಣೆಯ ಕೊನೆಯಲ್ಲಿ ನಿಮ್ಮ ಕುಟುಂಬದ ಬಳಿ ಉಳಿದಿರುವ ಆಮಂತ್ರಣ ಪತ್ರಗಳನ್ನು ಅಧಿವೇಶನದ ನಗರದಲ್ಲಿ ಅನೌಪಚಾರಿಕವಾಗಿ ಸಾಕ್ಷಿನೀಡುವಾಗ ಬಳಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶುಕ್ರವಾರದ ಕಾರ್ಯಕ್ರಮದಲ್ಲಿ ನೀಡಲಾಗುವುದು. ಅಧಿವೇಶನದ ನಗರದಲ್ಲಿ ನಿಮ್ಮ ಕುಟುಂಬಕ್ಕೆ ಎಷ್ಟು ಬೇಕೋ ಅಷ್ಟು ಆಮಂತ್ರಣ ಪತ್ರಗಳನ್ನು ಇಟ್ಟುಕೊಂಡು ಉಳಿದದ್ದನ್ನು ಅಧಿವೇಶನ ಸ್ಥಳದ ಪ್ರವೇಶದ್ವಾರದ ಬಳಿಯಿರುವ ಅಟೆಂಡೆಂಟರಿಗೆ ಕೊಡಬೇಕು. ದಯವಿಟ್ಟು ಒಂದು ಪ್ರತಿಯನ್ನು ನೀವು ಇಟ್ಟುಕೊಳ್ಳಿ. ಭಾನುವಾರದ ಕೊನೆಯ ಭಾಷಣದ ಸಮಯದಲ್ಲಿ ನಿಮಗದು ಬೇಕಾಗುವುದು.
6. ಅಧಿವೇಶನದಲ್ಲಿ ನಾವು ಯಾವ ವಿಧಗಳಲ್ಲಿ ಸದ್ವರ್ತನೆ ತೋರಿಸಬಹುದು?
6 ಸದ್ವರ್ತನೆ ಚೈತನ್ಯದಾಯಕ: ಅನೇಕರು “ಸ್ವಪ್ರೇಮಿಗಳೂ” ಇತರರ ಭಾವನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದವರೂ ಆಗಿರುವ ಈ ಸಮಯದಲ್ಲಿ ಸದ್ವರ್ತನೆಯನ್ನು ತೋರಿಸುತ್ತಿರುವ ಜೊತೆ ಕ್ರೈಸ್ತರೊಂದಿಗಿರುವುದು ಎಷ್ಟೊಂದು ಚೈತನ್ಯದಾಯಕ! (2 ತಿಮೊ. 3:2) ಸಭಾಂಗಣವು ಬೆಳಿಗ್ಗೆ 8:00 ಗಂಟೆಗೆ ತೆರೆಯಲ್ಪಡುವಾಗ ಶಾಂತ ರೀತಿಯಲ್ಲಿ ಶಿಸ್ತಿನಿಂದ ಪ್ರವೇಶಿಸುವ ಮೂಲಕ ಮತ್ತು ಕೇವಲ ನಮ್ಮ ಮನೆಯವರಿಗೆ ಅಥವಾ ನಮ್ಮೊಂದಿಗೆ ಕಾರ್ನಲ್ಲಿ ಪ್ರಯಾಣಿಸುತ್ತಿರುವವರಿಗೆ ಅಥವಾ ನಮ್ಮ ಈಗಿನ ಬೈಬಲ್ ವಿದ್ಯಾರ್ಥಿಗಳಿಗಾಗಿ ಮಾತ್ರ ಸೀಟುಗಳನ್ನು ಕಾದಿರಿಸುವ ಮೂಲಕ ಸದ್ವರ್ತನೆ ತೋರಿಸುವೆವು. ಪ್ರತಿ ಸೆಷನ್ನ ಆರಂಭದಲ್ಲಿ ಸಂಗೀತಕ್ಕೆ ಕಿವಿಗೊಡಲು ನಮ್ಮ ನಮ್ಮ ಸೀಟುಗಳಲ್ಲಿ ಕುಳಿತುಕೊಳ್ಳುವಂತೆ ಅಧ್ಯಕ್ಷನು ವಿನಂತಿಸುವಾಗ ನಾವು ಅವನ ನಿರ್ದೇಶನಗಳನ್ನು ಅನುಸರಿಸುವೆವು. ನಮ್ಮ ಮೊಬೈಲ್ ಫೋನ್ಗಳನ್ನು ಇಲ್ಲವೇ ಪೇಜರ್ಗಳನ್ನು ಇತರರಿಗೆ ಅಪಕರ್ಷಣೆಯಾಗದ ರೀತಿಯಲ್ಲಿ ಸೆಟ್ ಮಾಡಿಡುವುದೂ ಸದ್ವರ್ತನೆಯಾಗಿದೆ. ಅಲ್ಲದೆ ಕಾರ್ಯಕ್ರಮ ನಡೆಯುತ್ತಿರುವಾಗ ಮಾತಾಡದಿರುವುದು, ತಿನ್ನದಿರುವುದು, ಸಭಾಂಗಣದ ಹೊರಗೆ ಅನಾವಶ್ಯಕವಾಗಿ ಅಡ್ಡಾಡದಿರುವುದು ಇಲ್ಲವೆ ಎಸ್ಎಮ್ಎಸ್ ಕಳುಹಿಸದಿರುವುದೂ ಸದ್ವರ್ತನೆಯಾಗಿದೆ.
7. ನಮ್ಮ ಸಹೋದರರೊಂದಿಗಿನ ಸಹವಾಸದಲ್ಲಿ ನಾವು ಚೈತನ್ಯವನ್ನು ಹೇಗೆ ಪಡೆಯಬಹುದು ಮತ್ತು ಕೊಡಬಹುದು?
7 ಚೈತನ್ಯದಾಯಕ ಸಹವಾಸ: ಚೈತನ್ಯದಾಯಕ ಕ್ರೈಸ್ತ ಐಕ್ಯತೆ ಹಾಗೂ ಸಹೋದರತ್ವದಲ್ಲಿ ಆನಂದಿಸಲು ಅಧಿವೇಶನಗಳು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ. (ಕೀರ್ತ. 133:1-3) ನಿಮ್ಮ ‘ಹೃದಯವನ್ನು ವಿಶಾಲಗೊಳಿಸುತ್ತಾ’ ಇತರ ಸಭೆಗಳಿಂದ ಬಂದ ಸಹೋದರ ಸಹೋದರಿಯರನ್ನು ಭೇಟಿಮಾಡಲು ಮುಂದಾಗಿರಿ. (2 ಕೊರಿಂ. 6:13) ಪ್ರತಿ ದಿನ ಕನಿಷ್ಠಪಕ್ಷ ಒಬ್ಬ ವ್ಯಕ್ತಿ ಇಲ್ಲವೇ ಒಂದು ಕುಟುಂಬದ ಪರಿಚಯ ಮಾಡಿಕೊಳ್ಳುವ ಗುರಿಯನ್ನು ನೀವಿಡಬಹುದು. ಮಧ್ಯಾಹ್ನದ ವಿರಾಮವು ಇದಕ್ಕೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಆದ್ದರಿಂದ ಆಹಾರವನ್ನು ಕೊಳ್ಳಲೆಂದು ಇಲ್ಲವೆ ಹತ್ತಿರದ ರೆಸ್ಟೋರೆಂಟ್ನಲ್ಲಿ ಊಟಮಾಡಲೆಂದು ಹೊರಗೆ ಹೋಗುವ ಬದಲು ಲಘು ಉಪಹಾರವನ್ನು ತೆಗೆದುಕೊಂಡು ಬನ್ನಿ. ಅಧಿವೇಶನದ ಸ್ಥಳದಲ್ಲಿದ್ದುಕೊಂಡು ಆಹಾರವನ್ನೂ ಸಹೋದರರೊಂದಿಗಿನ ಸಹವಾಸವನ್ನೂ ಆನಂದಿಸಿ. ಇದರಿಂದ ಹೊಸ ಹಾಗೂ ಬಾಳುವ ಸ್ನೇಹಬಂಧಗಳನ್ನು ನೀವು ಗಳಿಸುವಿರಿ.
8. ಅಧಿವೇಶನದಲ್ಲಿ ನಾವೇಕೆ ಸ್ವಯಂಸೇವಕರಾಗಿ ಕೆಲಸ ಮಾಡಬೇಕು? ನಾವದನ್ನು ಹೇಗೆ ಮಾಡಬಲ್ಲೆವು?
8 ಪವಿತ್ರ ಸೇವೆಯಲ್ಲಿ ಜೊತೆ ಆರಾಧಕರೊಂದಿಗೆ ಕೆಲಸಮಾಡುವುದು ಎಷ್ಟು ಚೈತನ್ಯದಾಯಕ! ಯಾವುದಾದರೊಂದು ಇಲಾಖೆಯಲ್ಲಿ ಸ್ವಯಂಸೇವಕರಾಗಿ ನೀವು ನೆರವು ನೀಡಬಲ್ಲಿರೊ? ಇಲ್ಲವೆ ನಿಮ್ಮ ಸಭೆಗೆ ಸಿಕ್ಕಿರುವ ಶುಚಿಮಾಡುವ ನೇಮಕದಲ್ಲಿ ನೆರವಾಗಬಲ್ಲಿರೊ? (ಕೀರ್ತ. 110:3) ನಿಮಗೆ ಇಂತಹ ಕೆಲಸದ ಯಾವುದೇ ನೇಮಕ ಇಲ್ಲದಿರುವಲ್ಲಿ ಅಧಿವೇಶನದ ಸ್ವಯಂಸೇವಾ ಇಲಾಖೆಯನ್ನು ದಯವಿಟ್ಟು ಸಂಪರ್ಕಿಸಿ. ಅನೇಕ ಕೈಗಳು ಕೂಡಿದಲ್ಲಿ ಕೆಲಸ ಆನಂದದಾಯಕವೂ ಸುಲಭವೂ ಆಗಬಲ್ಲದು.
9. ನಮ್ಮ ನಡತೆಗೂ ಹೊರತೋರಿಕೆಗೂ ಅಧಿವೇಶನದ ಸಮಯದಲ್ಲಿ ವಿಶೇಷ ಗಮನ ಕೊಡುವುದು ಅಗತ್ಯವೇಕೆ?
9 ನಮ್ಮ ನಡತೆಯು ನೋಡುಗರಿಗೆ ಚೈತನ್ಯದಾಯಕ: ಕೇವಲ ಕಾರ್ಯಕ್ರಮ ನಡೆಯುತ್ತಿರುವಾಗ ಮಾತ್ರವಲ್ಲ ಅಧಿವೇಶನ ನಡೆಯುವ ಮೂರೂ ದಿನಗಳಂದು ನಾವು ಅಧಿವೇಶನದ ಪ್ರತಿನಿಧಿಗಳು. ಅಧಿವೇಶನದ ನಗರದಲ್ಲಿರುವಾಗ ನಮ್ಮನ್ನು ಗಮನಿಸುವವರು ನಮ್ಮಲ್ಲೂ ಸಾಕ್ಷಿಗಳಲ್ಲದ ಜನರಲ್ಲೂ ಸ್ಪಷ್ಟವಾದ ಭಿನ್ನತೆಯನ್ನು ಕಾಣುವಂತಿರಬೇಕು. (1 ಪೇತ್ರ 2:12) ಅಧಿವೇಶನದ ಸ್ಥಳದಲ್ಲಿ, ವಸತಿಗೃಹದಲ್ಲಿ, ರೆಸ್ಟೋರೆಂಟ್ಗಳಲ್ಲಿ ನಮ್ಮ ಉಡುಪು ಮತ್ತು ಹೊರತೋರಿಕೆ ಯೆಹೋವನಿಗೆ ಮಹಿಮೆ ತರುವಂತಿರಬೇಕು. (1 ತಿಮೊ. 2:9, 10) ನಾವು ಬ್ಯಾಜ್ಗಳನ್ನು ಧರಿಸಿಕೊಂಡಿರುವಲ್ಲಿ ದಾರಿಹೋಕರು ನಮ್ಮನ್ನು ಯೆಹೋವನ ಸಾಕ್ಷಿಗಳೆಂದು ಗುರುತಿಸಲು ಸಾಧ್ಯವಾಗುವುದು. ಇದು ನಮ್ಮ ಅಧಿವೇಶನದ ಬಗ್ಗೆ ಅವರಿಗೆ ತಿಳಿಸಲು ಹಾಗೂ ಹೆಚ್ಚಿನ ಸಾಕ್ಷಿಕೊಡಲು ನಮಗೆ ಅವಕಾಶ ಕೊಡುವುದು.
10. ಹೋಟೆಲ್ನ ಹಾಗೂ ರೆಸ್ಟೋರೆಂಟ್ನ ಕೆಲಸಗಾರರಲ್ಲಿ ನಮ್ಮ ಅಧಿವೇಶನದ ಬಗ್ಗೆ ಒಳ್ಳೇ ಅಭಿಪ್ರಾಯ ಮೂಡಿಸಲು ನಾವೇನು ಮಾಡತಕ್ಕದ್ದು?
10 ಹೋಟೆಲಿನ ಹಾಗೂ ರೆಸ್ಟೋರೆಂಟ್ನ ಕೆಲಸಗಾರರೊಂದಿಗೆ ನಾವು ಹೇಗೆ ಸಹಕರಿಸಬಹುದು? ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟು ರೂಮ್ಗಳನ್ನು ಮಾತ್ರ ಬುಕ್ ಮಾಡಬೇಕು. ಇದರಿಂದಾಗಿ ಅಧಿವೇಶನದ ಇತರ ಪ್ರತಿನಿಧಿಗಳು ರೂಮ್ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದು ಅಲ್ಲದೆ ಹೋಟೆಲಿನವರಿಗೂ ಯಾವುದೇ ನಷ್ಟವಾಗದು. ನಾವು ಹೋಟೆಲಿನಲ್ಲಿ ಇಳಿದುಕೊಳ್ಳಲು ದಾಖಲಾತಿ ಮಾಡುವಾಗ ಅಥವಾ ಖಾಲಿ ಮಾಡಿ ಹೋಗುವಾಗ ಹೋಟೆಲಿನವರು ಬ್ಯುಸಿಯಾಗಿರುವಲ್ಲಿ ಅವರೊಂದಿಗೆ ತಾಳ್ಮೆಯಿಂದ, ಸೌಜನ್ಯದಿಂದ ವ್ಯವಹರಿಸಬೇಕು. (ಕೊಲೊ. 4:6) ರೆಸ್ಟೋರೆಂಟ್ನ ಪರಿಚಾರಕರಿಗೆ ಹಾಗೂ ಹೋಟೆಲಿನಲ್ಲಿ ನಮ್ಮ ಸಾಮಾನು ಸಾಗಿಸುವ, ರೂಮ್ ಶುಚಿಮಾಡುವ ಹಾಗೂ ಇತರ ಸಹಾಯ ಮಾಡುವ ಕೆಲಸಗಾರರಿಗೆ ಟಿಪ್ಸ್ ಕೊಡಬೇಕು.
11. ನಮ್ಮ ಕ್ರೈಸ್ತ ನಡತೆಯು ಕೊಡುವ ಉತ್ತಮ ಸಾಕ್ಷಿಯನ್ನು ಯಾವ ಅನುಭವಗಳು ತೋರಿಸುತ್ತವೆ?
11 ಅಧಿವೇಶನದ ಸಮಯದಲ್ಲಿ ನಮ್ಮ ಉತ್ತಮ ನಡತೆ ಇತರರಲ್ಲಿ ಯಾವ ಅಭಿಪ್ರಾಯ ಮೂಡಿಸುತ್ತದೆ? ಒಂದು ವಾರ್ತಾಪತ್ರಿಕೆಗನುಸಾರ ಅಧಿವೇಶನಗಳಿಗೆ ಬಳಸಲಾಗುತ್ತಿದ್ದ ಒಂದು ಸಭಾಂಗಣದ ಮ್ಯಾನೇಜರ್ ಹೀಗಂದನು: “ಆ ಜನರು ತುಂಬ ವಿನಯಶೀಲರು. ಅವರು ಪ್ರತಿ ವರ್ಷ ಬಂದಾಗ ನಮಗೆ ಸಂತೋಷವಾಗುತ್ತದೆ.” ಕಳೆದ ವರ್ಷ ಅಧಿವೇಶನದ ಪ್ರತಿನಿಧಿಗಳು ತಂಗಿದ್ದ ಹೋಟೆಲ್ನಲ್ಲಿ ಸಾಕ್ಷಿಯಲ್ಲದ ವ್ಯಕ್ತಿಯೊಬ್ಬ ತನ್ನ ಪರ್ಸನ್ನು ಕಳೆದುಕೊಂಡಿದ್ದ. ಆ ಪರ್ಸನ್ನು ಅದರೊಳಗಿದ್ದ ಎಲ್ಲ ವಸ್ತುಗಳೊಂದಿಗೆ ಮ್ಯಾನೇಜರನಿಗೆ ಹಿಂದಿರುಗಿಸಲಾದಾಗ ಮ್ಯಾನೇಜರನು ಆ ಪರ್ಸ್ನ ಯಜಮಾನನಿಗಂದದ್ದು: “ಹತ್ತಿರದಲ್ಲೇ ಯೆಹೋವನ ಸಾಕ್ಷಿಗಳ ಅಧಿವೇಶನ ಇದ್ದದ್ದರಿಂದ ಒಳ್ಳೇದಾಯ್ತು. ನಮ್ಮ ಹೋಟೆಲಿನಲ್ಲೆಲ್ಲ ಅವರೇ ಉಳಿದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ನಿನಗೆ ನಿನ್ನ ಪರ್ಸ್ ಖಂಡಿತ ವಾಪಸ್ ಸಿಗುತ್ತಿರಲಿಲ್ಲ.”
12. ಅಧಿವೇಶನವು ಸಮೀಪಿಸುತ್ತಿರುವಾಗ ನಮ್ಮ ಗುರಿ ಏನಾಗಿರಬೇಕು? ಏಕೆ?
12 ಈ ವರ್ಷದ ಅಧಿವೇಶನಗಳು ಧಾವಿಸುತ್ತಾ ಬರುತ್ತಿವೆ. ಕಾರ್ಯಕ್ರಮವನ್ನು ತಯಾರಿಸಲು ಮತ್ತು ಅಧಿವೇಶನದ ವಾತಾವರಣ ಚೈತನ್ಯದಾಯಕವಾಗಿರುವಂತೆ ಬಹಳಷ್ಟು ಸಮಯ ಹಾಗೂ ಶ್ರಮ ವ್ಯಯಿಸಲಾಗಿದೆ. ಮೂರೂ ದಿನ ಉಪಸ್ಥಿತರಿರುವ ಗುರಿಯಿಡಿ. ಯೆಹೋವನೂ ಆತನ ಸಂಘಟನೆಯೂ ನಿಮಗಾಗಿ ಸಿದ್ಧಪಡಿಸಿರುವುದನ್ನು ಸ್ವೀಕರಿಸಲು ತಯಾರಾಗಿರಿ. ನಿಮ್ಮ ಸದ್ವರ್ತನೆ, ಹರ್ಷಕರ ಸಹವಾಸ, ಉತ್ತಮ ನಡತೆಯ ಮೂಲಕ ಇತರರನ್ನು ಚೈತನ್ಯಗೊಳಿಸುವ ದೃಢಸಂಕಲ್ಪ ಮಾಡಿ. ಹಾಗೆ ಮಾಡುವಲ್ಲಿ, ಕಳೆದ ವರ್ಷದ ಅಧಿವೇಶನದ ಪ್ರತಿನಿಧಿಯೊಬ್ಬಾಕೆಗೆ ಅನಿಸಿದಂತೆ ನಿಮಗೂ ಇತರರಿಗೂ ಅನಿಸುವುದು. ಆಕೆ ಬರೆದದ್ದು: “ಇಂಥ ಸಂತೃಪ್ತಿಕರ ಅನುಭವ ನನಗೆಂದೂ ಆಗಿದ್ದಿಲ್ಲ!”
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ಎಂದಿನಂತೆ ಈ ಬಾರಿಯೂ ಅಧಿವೇಶನಕ್ಕೆ ಹಾಜರಾಗಲು ಇತರರನ್ನು ಆಮಂತ್ರಿಸುವ ಕಾರ್ಯಾಚರಣೆಯಲ್ಲಿ ನಾವು ಪಾಲ್ಗೊಳ್ಳಲಿದ್ದೇವೆ. ಇದನ್ನು ಅಧಿವೇಶನಕ್ಕೆ ಮೂರು ವಾರಗಳ ಮುಂಚೆ ಆರಂಭಿಸಲಿದ್ದೇವೆ
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅಧಿವೇಶನದ ಸ್ಥಳದಲ್ಲಿ, ವಸತಿಗೃಹದಲ್ಲಿ, ರೆಸ್ಟೋರೆಂಟ್ಗಳಲ್ಲಿ ನಮ್ಮ ಉಡುಪು ಮತ್ತು ಹೊರತೋರಿಕೆ ಯೆಹೋವನಿಗೆ ಮಹಿಮೆ ತರುವಂತಿರಬೇಕು
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮ್ಮ ಸದ್ವರ್ತನೆ, ಹರ್ಷಕರ ಸಹವಾಸ, ಉತ್ತಮ ನಡತೆಯ ಮೂಲಕ ಇತರರನ್ನು ಚೈತನ್ಯಗೊಳಿಸುವ ದೃಢಸಂಕಲ್ಪ ಮಾಡಿ
[ಪುಟ 4-7ರಲ್ಲಿರುವ ಚೌಕ]
2011ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು
◼ ಕಾರ್ಯಕ್ರಮದ ಸಮಯ: ಮೂರೂ ದಿನ ಕಾರ್ಯಕ್ರಮವು ಬೆಳಿಗ್ಗೆ 9:20ಕ್ಕೆ ಆರಂಭವಾಗುವುದು. ಸಭಾಂಗಣದ ಬಾಗಿಲುಗಳನ್ನು ಬೆಳಿಗ್ಗೆ 8:00 ಗಂಟೆಗೆ ತೆರೆಯಲಾಗುವುದು. ರಾಜ್ಯ ಸಂಗೀತವು ಆರಂಭಿಸಲಿದೆ ಎಂಬ ಪ್ರಕಟನೆಯಾದಾಗ ನಾವೆಲ್ಲರೂ ನಮ್ಮ ಸೀಟುಗಳಲ್ಲಿ ಕುಳಿತುಕೊಳ್ಳಬೇಕು. ಆಗ ಕಾರ್ಯಕ್ರಮವು ಗೌರವಾನ್ವಿತ ರೀತಿಯಲ್ಲಿ ಆರಂಭವಾಗಬಲ್ಲದು. ಕಾರ್ಯಕ್ರಮವು ಶುಕ್ರವಾರ, ಶನಿವಾರದಂದು ಸಂಜೆ 4:55ಕ್ಕೆ ಹಾಗೂ ಭಾನುವಾರದಂದು ಸಂಜೆ 3:40ಕ್ಕೆ ಕೊನೆಗೊಳ್ಳುವುದು.
◼ ಪಾರ್ಕಿಂಗ್: ಪಾರ್ಕಿಂಗ್ ಸೌಕರ್ಯಗಳಿರುವ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗುವುದು. ಪಾರ್ಕಿಂಗ್ ಸ್ಥಳವು ಸೀಮಿತವಾಗಿರುವುದರಿಂದ ಒಂದು ಕಾರಿನವರು ಇನ್ನೊಂದು ಕಾರಿನವರನ್ನು ತಮ್ಮೊಂದಿಗೆ ಪ್ರಯಾಣಿಸಲು ಏರ್ಪಾಡು ಮಾಡಬಹುದು.
◼ ಸೀಟು ಹಿಡಿಯುವುದು: ನಮ್ಮ ಮನೆಯಲ್ಲಿರುವವರಿಗೆ ಅಥವಾ ಕಾರ್ನಲ್ಲಿ ನಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಮ್ಮ ಸದ್ಯದ ಬೈಬಲ್ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ಹಿಡಿದಿಡಬಹುದು.—1 ಕೊರಿಂ. 13:5.
◼ ಮಧ್ಯಾಹ್ನದ ಊಟ: ಮಧ್ಯಾಹ್ನದ ವಿರಾಮದಲ್ಲಿ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗುವ ಬದಲು ದಯವಿಟ್ಟು ಲಘು ಊಟವನ್ನು ತೆಗೆದುಕೊಂಡು ಬನ್ನಿ. ಲಂಚ್ ಬ್ಯಾಗ್ ಸೀಟಿನಡಿ ಇಡುವಷ್ಟು ಚಿಕ್ಕದಿರಲಿ. ದೊಡ್ಡ ದೊಡ್ಡ ಟಿಫಿನ್ಗಳು, ಗಾಜಿನ ಪಾತ್ರೆಗಳನ್ನು ತರಬಾರದು. ಅಧಿವೇಶನ ಸಮಿತಿಯು ಆಹಾರಪಾನೀಯಗಳ ಯಾವುದೇ ಏರ್ಪಾಡನ್ನು ಮಾಡುವುದಿಲ್ಲ.
◼ ದಾನಗಳು: ಲೋಕವ್ಯಾಪಕ ಕೆಲಸಕ್ಕಾಗಿ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ನಾವು ನಮ್ಮ ಅಧಿವೇಶನ ಏರ್ಪಾಡುಗಳಿಗಾಗಿ ಗಣ್ಯತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಕೊಡುವ ಯಾವುದೇ ಚೆಕ್ಗಳಲ್ಲಿ “ದ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯಾ”ಗೆ ಹಣಸಂದಾಯವಾಗಬೇಕೆಂದು ಗುರುತಿಸಬೇಕು.
◼ ಅಪಘಾತಗಳು ಮತ್ತು ತುರ್ತು ಪರಿಸ್ಥಿತಿಗಳು: ಅಧಿವೇಶನದ ಸ್ಥಳದಲ್ಲಿ ಯಾವುದೇ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಾಗ ದಯವಿಟ್ಟು ಹತ್ತಿರದಲ್ಲಿರುವ ಅಟೆಂಡೆಂಟ್ನನ್ನು ಸಂಪರ್ಕಿಸಿರಿ. ಅವನು ಕೂಡಲೇ ಪ್ರಥಮ ಚಿಕಿತ್ಸೆಯ ಇಲಾಖೆಗೆ ಅದನ್ನು ತಿಳಿಸುವನು. ಆಗ ಪ್ರಥಮ ಚಿಕಿತ್ಸೆ ನೀಡಲು ಅರ್ಹರಾದ ನಮ್ಮ ಸಿಬ್ಬಂದಿ ಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಪರೀಕ್ಷಿಸಿ ಬೇಕಾದ ಸಹಾಯ ನೀಡುವರು. ಅವಶ್ಯಬೀಳುವಲ್ಲಿ ಅವರೇ ಆ್ಯಂಬುಲೆನ್ಸ್ ಕರೆಸುವರು. ಆ್ಯಂಬುಲೆನ್ಸ್ಗಾಗಿ ಹಲವಾರು ಮಂದಿ ಕರೆಗಳನ್ನು ಮಾಡುತ್ತಿರುವಲ್ಲಿ ಅಂಥ ಸೇವೆಯನ್ನು ಒದಗಿಸುವವರಿಗೆ ಅಡಚಣೆಯಾಗುವುದು.
◼ ಔಷಧ: ವೈದ್ಯರು ಬರೆದುಕೊಟ್ಟ ಔಷಧವನ್ನೇ ನೀವು ತೆಗೆದುಕೊಳ್ಳಬೇಕಾದಲ್ಲಿ ಅದನ್ನು ಸಾಕಷ್ಟು ಪ್ರಮಾಣದಲ್ಲಿ ದಯವಿಟ್ಟು ತೆಗೆದುಕೊಂಡು ಬನ್ನಿ. ಏಕೆಂದರೆ ಅಧಿವೇಶನದ ಸ್ಥಳದಲ್ಲಿ ಅವು ಲಭ್ಯವಿರುವುದಿಲ್ಲ.
◼ ಪಾದರಕ್ಷೆ: ಪ್ರತಿವರ್ಷವೂ ಅಧಿವೇಶನಗಳಲ್ಲಿ ಅನೇಕರು ತಮ್ಮ ಪಾದರಕ್ಷೆಗಳಿಂದಾಗಿ ಗಾಯಗೊಳ್ಳುತ್ತಿದ್ದಾರೆ. ಕಾಲಿನ ಗಾತ್ರಕ್ಕೆ ಸರಿಹೊಂದುವ ಸಭ್ಯ ಪಾದರಕ್ಷೆಗಳನ್ನು ಧರಿಸಿದರೆ ಇಳಿಜಾರಿನಲ್ಲಿ, ಮೆಟ್ಟಿಲುಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.
◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುತ್ತವೆ. ಆದುದರಿಂದ, ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್ಗಳನ್ನು ಮಿತವಾಗಿ ಬಳಸಿ ನಮ್ಮ ಪ್ರೀತಿಯನ್ನು ತೋರಿಸಬಹುದು.—1 ಕೊರಿಂ. 10:24.
◼ ಪ್ಲೀಸ್ ಫಾಲೋ-ಅಪ್ (S-43) ಫಾರ್ಮ್ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಒದಗಿಸಲು ಪ್ಲೀಸ್ ಫಾಲೋ ಅಪ್ ಫಾರ್ಮ್ ಅನ್ನು ಉಪಯೋಗಿಸಬೇಕು. ಅಧಿವೇಶನಕ್ಕೆ ಬರುವಾಗ ಪ್ರಚಾರಕರು ಒಂದೆರಡು ಫಾರ್ಮ್ಗಳನ್ನು ತರಬೇಕು. ಅವನ್ನು ತುಂಬಿಸಿದ ಮೇಲೆ ಅಧಿವೇಶನದ ಬುಕ್ರೂಮ್ಗೆ ಅಥವಾ ಸಭೆಗೆ ಹಿಂದೆ ಬಂದ ಮೇಲೆ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.—ನವೆಂಬರ್ 2009ರ ನಮ್ಮ ರಾಜ್ಯ ಸೇವೆಯ ಪುಟ 3ನ್ನು ನೋಡಿ.
◼ ರೆಸ್ಟೋರೆಂಟ್ಗಳು: ರೆಸ್ಟೋರೆಂಟ್ಗಳಲ್ಲಿ ಉತ್ತಮ ನಡತೆಯ ಮೂಲಕ ಯೆಹೋವನ ಹೆಸರನ್ನು ಮಹಿಮೆಪಡಿಸಿ. ಅಲ್ಲಿ ಟಿಪ್ಸ್ ಕೊಡುವ ರೂಢಿಯಿದ್ದರೆ ಕೊಡಿ.
◼ ಹೋಟೆಲ್ಗಳು:
(1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್ಗಳನ್ನು ಬುಕ್ ಮಾಡಬೇಡಿ ಮತ್ತು ಅನುಮತಿಸಿದ್ದಕ್ಕಿಂತ ಹೆಚ್ಚು ಮಂದಿ ನಿಮ್ಮ ರೂಮ್ನಲ್ಲಿ ಉಳುಕೊಳ್ಳಬಾರದು.
(2) ತುರ್ತು ಸಂದರ್ಭದ ಹೊರತು ಬುಕ್ಕಿಂಗ್ ಅನ್ನು ರದ್ದುಮಾಡದಿರಿ. ರದ್ದುಗೊಳಿಸಬೇಕಾದಲ್ಲಿ ಕೂಡಲೆ ಅದನ್ನು ಹೋಟೆಲ್ನವರಿಗೆ ತಿಳಿಸಿರಿ.—ಮತ್ತಾ. 5:37.
(3) ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿಯನ್ನು ತೆಗೆದುಕೊಳ್ಳಿ ಮತ್ತು ಇತರರ ಉಪಯೋಗಕ್ಕಾಗಿ ಕೂಡಲೆ ಹಿಂದಿರುಗಿಸಿ.
(4) ರೂಮಿನಲ್ಲಿ ಅಪ್ಪಣೆ ವಿನಃ ಅಡಿಗೆ ಮಾಡಬಾರದು.
(5) ನಿಮ್ಮ ಸಾಮಾನನ್ನು ಹೊರುವ ಹೋಟೆಲ್ ಕೆಲಸಗಾರರಿಗೆ ಟಿಪ್ಸ್ಕೊಡಿ ಮತ್ತು ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್ ಕೊಡಿರಿ.
(6) ಅತಿಥಿಗಳಿಗೆ ಹೋಟೆಲ್ನಲ್ಲಿರುವಾಗ ಉಚಿತವಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್ಕ್ಯೂಬ್ಗಳನ್ನು ದುರುಪಯೋಗಿಸಬೇಡಿ.
(7) ಹೋಟೆಲ್ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲವನ್ನು ತೋರಿಸಿರಿ. ಅವರಿಗೆ ಅನೇಕ ಅತಿಥಿಗಳನ್ನು ನೋಡಿಕೊಳ್ಳಲಿಕ್ಕಿದೆ. ಆದ್ದರಿಂದ ನಾವು ಅವರೊಂದಿಗೆ ದಯೆ, ತಾಳ್ಮೆ ಮತ್ತು ವಿವೇಚನೆಯಿಂದ ನಡಕೊಂಡರೆ ಅವರದನ್ನು ಗಣ್ಯಮಾಡುವರು.
(8) ಶಿಫಾರಸ್ಸು ಮಾಡಲ್ಪಟ್ಟಿರುವ ಲಾಡ್ಜಿಂಗ್ ಲಿಸ್ಟ್ನಲ್ಲಿರುವ ರೂಮ್ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿವೆ. ಇದರಲ್ಲಿ ತೆರಿಗೆಯು ಸೇರಿಲ್ಲ. ಅದನ್ನು ನೀವು ಕೊಡಬೇಕಾದೀತು. ಆದರೆ ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್ಗೆ ಹಾಕಿದ್ದಲ್ಲಿ ಅದನ್ನು ಕೊಡಬೇಡಿ ಮತ್ತು ಈ ವಿಷಯವನ್ನು ಅಧಿವೇಶನದ ರೂಮಿಂಗ್ ಡಿಪಾರ್ಟ್ಮೆಂಟ್ಗೆ ಆದಷ್ಟು ಬೇಗ ತಿಳಿಸಿರಿ.
(9) ಹೋಟೆಲ್ ರೂಮ್ನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲಿರುವಾಗಲೇ ರೂಮಿಂಗ್ ಡಿಪಾರ್ಟ್ಮೆಂಟ್ಗೆ ತಿಳಿಸಿದರೆ ಅವರು ನಿಮಗೆ ಸಹಾಯ ಮಾಡುವರು.
(10) ದಯವಿಟ್ಟು ನೆನಪಿಡಿ: ಹೋಟೆಲಲ್ಲಿ ದಾಖಲಾಗುವಾಗ ನೀವು ಡೆಬಿಟ್ ಯಾ ಕ್ರೆಡಿಟ್ ಕಾರ್ಡ್ ಬಳಸುವಲ್ಲಿ, ರೂಮ್ ಬಾಡಿಗೆಯ ಜೊತೆಗೆ ಸಂಭಾವ್ಯ ಹಾನಿಗೆಂದು ಹೆಚ್ಚುವರಿ ಹಣವನ್ನು ಹೋಟೆಲಿನವರು ಹಿಡಿದಿಟ್ಟುಕೊಳ್ಳುವುದು ರೂಢಿ. ನೀವಲ್ಲಿಂದ ಹೊರಟು ಲೆಕ್ಕಾಚಾರ ಚುಕ್ತಾ ಆಗುವ ತನಕ ಅಂದರೆ ಕೆಲವು ದಿನ ನೀವು ಆ ಹಣವನ್ನು ಬಳಸಲು ಸಾಧ್ಯವಿಲ್ಲ.
◼ ಸ್ವಯಂ ಸೇವೆ: ಸ್ವಯಂ ಸೇವಕರಾಗಿ ಸಹಾಯ ಮಾಡಿದರೆ ಅಧಿವೇಶನಕ್ಕೆ ಹಾಜರಾಗುವುದರಿಂದ ನಮಗೆ ಸಿಗುವ ಆನಂದವು ಇಮ್ಮಡಿಯಾಗುತ್ತದೆ. (ಅ. ಕಾ. 20:35) ಸ್ವಯಂ ಸೇವಕರಾಗಲು ನೀವು ಬಯಸುವಲ್ಲಿ ಸ್ವಯಂ ಸೇವಾ ಇಲಾಖೆಯನ್ನು ಸಂಪರ್ಕಿಸಿ. 16 ವರ್ಷದ ಕೆಳಗಿನವರು ಕೂಡ ಈ ಇಲಾಖೆಯಲ್ಲಿ ಕೆಲಸಮಾಡಬಹುದು. ಆದರೆ ಈ ಮಕ್ಕಳು ತಮ್ಮ ಹೆತ್ತವರ, ಪೋಷಕರ ಇಲ್ಲವೆ ಅವರ ಒಪ್ಪಿಗೆಯಿರುವ ಒಬ್ಬ ಪ್ರೌಢ ವ್ಯಕ್ತಿಯ ನಿರ್ದೇಶನದಡಿಯಲ್ಲಿ ಕೆಲಸಮಾಡುವರು.
[ಪುಟ 5ರಲ್ಲಿರುವ ಚೌಕ]
ನಾವು ಆಮಂತ್ರಣ ಪತ್ರವನ್ನು ಹೇಗೆ ಕೊಡುವೆವು?
ನಮ್ಮ ಟೆರಿಟೊರಿಯನ್ನು ಆವರಿಸಬೇಕಾಗಿರುವುದರಿಂದ ನಾವು ಚುಟುಕಾಗಿ ಮಾತಾಡತಕ್ಕದ್ದು. ಬಹುಶಃ ನಾವು ಹೀಗನ್ನಬಹುದು: “ನಮಸ್ಕಾರ. ಲೋಕವ್ಯಾಪಕವಾಗಿ ಈ ಆಮಂತ್ರಣ ಪತ್ರವನ್ನು ವಿತರಿಸಲಾಗುತ್ತಿದೆ. ಈ ಪ್ರತಿ ನಿಮಗಾಗಿ. ಹೆಚ್ಚಿನ ಮಾಹಿತಿ ಅದರಲ್ಲಿ ಕೊಡಲಾಗಿದೆ.” ಆಮಂತ್ರಣ ಪತ್ರದ ಮುಖಪುಟ ಆಸಕ್ತಿಹುಟ್ಟಿಸುತ್ತದೆ. ಆದ್ದರಿಂದ ಮನೆಯವರದನ್ನು ನೋಡುವಂಥ ರೀತಿಯಲ್ಲಿ ಅವರ ಕೈಗೆ ಕೊಡಿರಿ. ಉತ್ಸಾಹದಿಂದ ಮಾತಾಡಿ. ವಾರಾಂತ್ಯಗಳಂದು ಆಮಂತ್ರಣ ಪತ್ರಗಳನ್ನು ಕೊಡುವಾಗ ಸೂಕ್ತವಾಗಿರುವಲ್ಲಿ ಪತ್ರಿಕೆಗಳನ್ನೂ ಕೊಡಬಹುದು.