ಪ್ರಶ್ನಾ ಚೌಕ
◼ ನಾವು ಪುನರ್ಭೇಟಿಗಳನ್ನು ಮಾಡುವಾಗಲೆಲ್ಲಾ ಪ್ರತಿ ಸಲ ಮನೆಯವನಿಗೆ, ಲೋಕವ್ಯಾಪಕ ಕೆಲಸಕ್ಕಾಗಿ ಮಿತವಾದ ಮೊತ್ತದ ದಾನವನ್ನು ಸ್ವೀಕರಿಸಲು ಸಿದ್ಧರಿದ್ದೇವೆ ಎಂದು ಹೇಳಬೇಕೊ?
ಇಲ್ಲ. ಡಿಸೆಂಬರ್ 1999ರ ನಮ್ಮ ರಾಜ್ಯದ ಸೇವೆಯಲ್ಲಿ ಪ್ರಕಟವಾದ “ನಮ್ಮ ಸಾಹಿತ್ಯವನ್ನು ವಿವೇಕಯುತವಾಗಿ ಉಪಯೋಗಿಸೋಣ” ಎಂಬ ಲೇಖನವು ತಿಳಿಸಿದ್ದು: “ಕೆಲವೊಂದು ಸಂದರ್ಭಗಳಲ್ಲಿ, ನಮ್ಮ ಲೋಕವ್ಯಾಪಕ ಕೆಲಸಕ್ಕಾಗಿ ದಾನಗಳ ಕುರಿತು ವಿವರಿಸುವುದು ಕಷ್ಟಕರವಾಗಿರಬಹುದು.” ಈ ವಿಷಯದಲ್ಲಿ ಒಳ್ಳೇ ವಿವೇಚನೆಯನ್ನು ಬಳಸುವ ಅಗತ್ಯವಿದೆ. ನಮ್ಮ ಕೆಲಸವು ನಿಜವಾಗಿ ಒಂದು ಬೈಬಲ್ ಶೈಕ್ಷಣಿಕ ಕೆಲಸವಾಗಿದೆಯೇ ಹೊರತು, ವ್ಯಾಪಾರವಲ್ಲ ಎಂಬುದು ಜನರ ಮನಸ್ಸಿನಲ್ಲಿ ಸ್ಪಷ್ಟವಾಗಿರಬೇಕೆಂಬುದು ನಮ್ಮ ಅಪೇಕ್ಷೆ. ನಾವು ದಾನಗಳನ್ನು ಬೇಡಲು ಹೋಗುವುದಿಲ್ಲ.
ಆಸಕ್ತ ಜನರಿಗೆ ಮೊದಲ ಬಾರಿ ನಾವು ಸಾಹಿತ್ಯವನ್ನು ಕೊಡುವಾಗ, ನಮ್ಮ ಕೆಲಸವು ಹೇಗೆ ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಡುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುವುದು ಸಾಮಾನ್ಯವಾಗಿ ಒಳ್ಳೇದು. ನಾವು ಸಾಹಿತ್ಯವನ್ನು ಕೇವಲ ಆಸಕ್ತಿಯನ್ನು ತೋರಿಸುವವರೊಂದಿಗೆ ಇಲ್ಲವೆ ನಮ್ಮ ಸಾಹಿತ್ಯವನ್ನು ಓದುವ ಇಚ್ಛೆಯನ್ನು ವ್ಯಕ್ತಪಡಿಸುವವರೊಂದಿಗೆ ಮಾತ್ರ ಬಿಟ್ಟುಬರುತ್ತೇವೆಂಬದನ್ನು ಮನಸ್ಸಿನಲ್ಲಿಡುವುದಾದರೆ, ಆಗ ದಾನಗಳ ಕುರಿತಾದ ಈ ಅಂಶವನ್ನು ಸಾಮಾನ್ಯವಾಗಿ ಚೆನ್ನಾಗಿ ನಿರ್ವಹಿಸಲು ಸಾಧ್ಯವಾಗುವುದು.
ಇಂಥ ಆಸಕ್ತ ಜನರಲ್ಲಿ ಅನೇಕರು, ಮುಂದಿನ ಭೇಟಿಗಳಲ್ಲಿ ದಾನಗಳನ್ನು ಕೊಡಲು ತಾವಾಗಿಯೇ ಮುಂದೆಬರುತ್ತಾರೆ. ಇನ್ನೂ ಕೆಲವರು, ಸಾಹಿತ್ಯದ ಬೆಲೆಯನ್ನು ಕೇಳುತ್ತಾರೆ. ನಮ್ಮ ಈ ಕೆಲಸ ಒಂದು ವ್ಯಾಪಾರವಲ್ಲವೆಂದು ಚುಟುಕಾಗಿ ತಿಳಿಸುತ್ತಾ, ನಮ್ಮ ಸಾಹಿತ್ಯವನ್ನು ಆಸಕ್ತ ಜನರಿಗೆ ಯಾವುದೇ ವೆಚ್ಚವಿಲ್ಲದೆ ನೀಡುತ್ತೇವೆಂದು ನಾವು ವಿವರಿಸಬಹುದು. ಯಾರಿಗಾದರೂ ನಮ್ಮ ಲೋಕವ್ಯಾಪಕ ಕೆಲಸವನ್ನು ಬೆಂಬಲಿಸಲು ಮನಸ್ಸಿರುವಲ್ಲಿ ಅವರು ಮಿತವಾದ ಮೊತ್ತದ ಸ್ವಯಂಪ್ರೇರಿತ ದಾನವನ್ನು ಕೊಡಬಹುದೆಂದೂ ಅವರಿಗೆ ತಿಳಿಸಬಹುದು. ನಾವು ಪುನರ್ಭೇಟಿ ಮಾಡುತ್ತಿರುವ ವ್ಯಕ್ತಿಯು ಲೋಕವ್ಯಾಪಕ ಕೆಲಸವನ್ನು ಬೆಂಬಲಿಸದೇ ಇರುವಲ್ಲಿ, ಆಗಿಂದಾಗ್ಗೆ ಸೂಕ್ತವಾಗಿರುವಾಗಲೆಲ್ಲಾ ಈ ವಿಷಯವನ್ನು ಪ್ರಸ್ತಾಪಿಸಬಹುದು.
ನಾವು ಆಸಕ್ತ ಜನರಿಗೆ ನಮ್ಮ ಸಾಹಿತ್ಯವನ್ನು ವೆಚ್ಚವಿಲ್ಲದೆ ನೀಡುತ್ತಿರುವುದಾದರೂ, ನಮ್ಮ ಸಾಹಿತ್ಯವನ್ನು ಮುದ್ರಿಸಿ ವಿತರಿಸಲಿಕ್ಕಾಗಿ ಹಣ ಖರ್ಚಾಗುತ್ತದೆಂಬದನ್ನು ನಾವು ಮನಸ್ಸಿನಲ್ಲಿಡತಕ್ಕದು. ಲೋಕವ್ಯಾಪಕ ಕೆಲಸದ ಎಲ್ಲಾ ಅಂಶಗಳ ಖರ್ಚುಗಳಿಗಾಗಿ ಅಗತ್ಯವಿರುವ ದಾನಗಳನ್ನು ಸ್ವಯಂಪ್ರೇರಿತರಾಗಿ ಕೊಡುವಂತೆ ದೇವರಾತ್ಮವು ತನ್ನ ಸೇವಕರನ್ನೂ ಆಸಕ್ತ ಜನರನ್ನೂ ಪ್ರಚೋದಿಸುವುದೆಂಬ ಭರವಸೆ ನಮಗಿದೆ.
◼ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ಹೇಗೆ ಪಡೆದುಕೊಳ್ಳಬಹುದು?
ಎಲ್ಲಾ ಭಾಷೆಗಳಲ್ಲಿಯೂ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಚಂದಾ ಏರ್ಪಾಡನ್ನು ತುಂಬ ಸಮಯದ ಹಿಂದೆ ನಿಲ್ಲಿಸಲಾಗಿರುವುದರಿಂದ, ಎಲ್ಲಾ ಪ್ರಚಾರಕರು ತಮ್ಮ ಪತ್ರಿಕೆಗಳನ್ನು ಸ್ಥಳಿಕ ಸಭೆಯಿಂದ ಪಡೆದುಕೊಳ್ಳಬೇಕು. ಬ್ರೇಲ್ ಲಿಪಿಯ ಪತ್ರಿಕೆಗಳಿಗೆ ಇದು ಅನ್ವಯವಾಗುವುದಿಲ್ಲ. ಇವುಗಳನ್ನು ಅರ್ಹರಾಗಿರುವವರಿಗೆ ಉಚಿತ ಸಾಮಗ್ರಿಯಾಗಿ ಅಂಚೆ ಮೂಲಕ ಕಳುಹಿಸಲಾಗುವುದು. ದಯವಿಟ್ಟು ಗಮನಿಸಿ: ಸಭೆಗಳು ವಿದೇಶಿ-ಭಾಷೆಯ ಮತ್ತು ದೊಡ್ಡ ಅಕ್ಷರದ ಆವೃತ್ತಿಗಳನ್ನು, ಕಾಂಗ್ರಿಗೇಷನ್ ರಿಕ್ವೆಸ್ಟ್ಸ್ (M-202) ಫಾರ್ಮ್ ಅನ್ನು ಉಪಯೋಗಿಸಿ ವಿನಂತಿಸಬಹುದು.
ನಿಮ್ಮ ಟೆರಿಟೊರಿಯಲ್ಲಿ ಯಾರಾದರೂ ಕ್ರಮವಾಗಿ ಪತ್ರಿಕೆಗಳನ್ನು ತಂದುಕೊಡುವಂತೆ ವಿನಂತಿಸುವಲ್ಲಿ, ಒಂದೇ ಒಂದು ಸಂಚಿಕೆಯನ್ನೂ ತಪ್ಪಿಸದೆ, ತಡಮಾಡದೆ ಈ ವಿನಂತಿಯನ್ನು ಪೂರೈಸುವಂತೆ ದಯವಿಟ್ಟು ನೋಡಿಕೊಳ್ಳಿ. ಬಹಿಷ್ಕೃತ ವ್ಯಕ್ತಿಗಳು ತಮ್ಮ ವೈಯಕ್ತಿಕ ಉಪಯೋಗಕ್ಕಾಗಿ ಪತ್ರಿಕೆಗಳು ಇಲ್ಲವೆ ಇತರ ಸಾಹಿತ್ಯವನ್ನು ರಾಜ್ಯ ಸಭಾಗೃಹದಲ್ಲಿನ ಪತ್ರಿಕೆ ಮತ್ತು ಸಾಹಿತ್ಯ ಕೌಂಟರ್ನಲ್ಲಿ ಪಡೆದುಕೊಳ್ಳಬಹುದು. ಬಹಿಷ್ಕೃತ ವ್ಯಕ್ತಿಗಳನ್ನು, ವೈಯಕ್ತಿಕ ಪತ್ರಿಕಾ ಮಾರ್ಗದಲ್ಲಿ ಸೇರಿಸಬಾರದು.
ಒಬ್ಬ ಸಭಾ ಪ್ರಚಾರಕನು ಯಾರನ್ನು ಪತ್ರಿಕಾ ಮಾರ್ಗದ ಮೂಲಕ ತಲಪಲಾರನೊ ಅಂಥವರಿಗಾಗಿ ಮಾತ್ರ ಭಾರತದ ಬ್ರಾಂಚ್ ಚಂದಾಗಳ ಫೈಲನ್ನು ಇಡುವುದು. ಒಂದುವೇಳೆ ಸಭಾ ಸೇವಾ ಕಮಿಟಿಯು, ಬೇರಾವುದೇ ರೀತಿಯಲ್ಲಿ ಪತ್ರಿಕೆಗಳನ್ನು ಪಡೆಯಲಾರದ ಒಬ್ಬ ವ್ಯಕ್ತಿಗಾಗಿ ಚಂದಾ ವಿನಂತಿಯನ್ನು ಕಳುಹಿಸುತ್ತದಾದರೆ, ಈ ಚಂದಾ ವಿನಂತಿಯನ್ನು ಸಭಾ ಸೇವಾ ಕಮಿಟಿಯು ಜಾಗ್ರತೆಯಿಂದ ಪರಿಶೀಲಿಸಿ ಒಪ್ಪಿಗೆಕೊಟ್ಟಿದೆಯೆಂದು ದೃಢೀಕರಿಸುವ ಒಂದು ಚಿಕ್ಕ ಚೀಟಿಯನ್ನು ಸೆಕ್ರಿಟರಿಯು ಅದರೊಂದಿಗೆ ಸೇರಿಸಬೇಕು.
ಇದರರ್ಥ, ಪ್ರಚಾರಕರು ವೈಯಕ್ತಿಕ ಚಂದಾಗಳಿಗಾಗಿ ವಿನಂತಿಸುತ್ತಾ ಬ್ರಾಂಚ್ ಆಫೀಸಿಗೆ ಬರೆಯಬಾರದು. ಚಂದಾಗಳಿಗಾಗಿ ಪ್ರಚಾರಕರಾಗಲಿ ಆಸಕ್ತ ಜನರಾಗಲಿ ಮಾಡುವಂಥ ಯಾವುದೇ ವಿನಂತಿಗಳನ್ನು ಪುನಃ ಆ ಸಭೆಗೇ ಹಿಂದೆ ಕಳುಹಿಸಲಾಗುವುದು.