ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಜನ.15
“ನಾವೆಲ್ಲರೂ ನಮಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ಉತ್ತಮವಾದ ಜೀವನವನ್ನು ಬಯಸುತ್ತೇವೆ, ಆದರೆ ಇದನ್ನು ಗಳಿಸುವ ಸಾಮರ್ಥ್ಯ ತಮ್ಮಲ್ಲಿಲ್ಲ ಎಂದು ಅನೇಕರಿಗನಿಸುತ್ತದೆ. ನಾವು ನಮ್ಮ ಭವಿಷ್ಯವನ್ನು ನಿಯಂತ್ರಿಸಬಲ್ಲೆವು ಎಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ನಾವು ಅಸಮರ್ಥರಾಗಿಲ್ಲ ಮತ್ತು ನಾವು ಇಂದು ಮಾಡುವ ನಿರ್ಣಯಗಳ ಮೇಲೆ ನಮ್ಮ ಭವಿಷ್ಯವು ಅವಲಂಬಿಸಿದೆ ಎಂಬುದನ್ನು ಬೈಬಲಿನಿಂದ ತೋರಿಸುತ್ತದೆ.” ಧರ್ಮೋಪದೇಶಕಾಂಡ 30:19ನ್ನು ಓದಿರಿ.
ಎಚ್ಚರ! ಜನ. - ಮಾರ್ಚ್
“ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ಅನೇಕವೇಳೆ ಸೋಲನ್ನು ಅನುಭವಿಸುತ್ತೇವೆಂಬ ಭಯದಿಂದ ಮಕ್ಕಳು ಸರಿಯಾಗಿ ಕಾರ್ಯನಡಿಸುವುದಿಲ್ಲ. ಸೋಲನ್ನು ನಿಭಾಯಿಸಲು ಮಕ್ಕಳಿಗೆ ಯಾವುದು ಸಹಾಯಮಾಡುವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ಜ್ಞಾನೋಕ್ತಿ 12:25ನ್ನು ಓದಿರಿ.] ಮಕ್ಕಳು ಹೇಗೆ ಸೋಲನ್ನು ನಿಭಾಯಿಸಿ ಜೀವನದಲ್ಲಿ ಮುಂದೆ ಸಾಗಬಲ್ಲರು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.”
ಕಾವಲಿನಬುರುಜು ಫೆಬ್ರ.1
“ಇಂದು ಬಹಳಷ್ಟು ಜನರು ದಬ್ಬಾಳಿಕೆ ಮತ್ತು ಹಿಂಸಾಕೃತ್ಯದ ಬಲಿಪಶುಗಳಾಗಿದ್ದಾರೆ ಎಂಬ ವಿಷಯವು ನಮ್ಮನ್ನು ಬೇಸರಪಡಿಸುವುದಿಲ್ಲವೋ? [ಸ್ಥಳಿಕವಾಗಿ ತಿಳಿದಿರುವ ಇತ್ತೀಚಿನ ಉದಾಹರಣೆಯೊಂದನ್ನು ತಿಳಿಸಿ, ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಮಾನವ ಜೀವವನ್ನು ದೇವರು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ಈ ಪತ್ರಿಕೆಯು ಚರ್ಚಿಸುತ್ತದೆ. ಇಂದಿರುವ ಕಷ್ಟಸಂಕಟದಿಂದ ಆತನು ನಮ್ಮನ್ನು ಹೇಗೆ ರಕ್ಷಿಸಲಿದ್ದಾನೆ ಎಂಬುದರ ಕುರಿತೂ ಇದು ವಿವರಿಸುತ್ತದೆ.” ಕೀರ್ತನೆ 72:12-14ನ್ನು ಓದಿರಿ.
ಎಚ್ಚರ! ಜನ. - ಮಾರ್ಚ್
“ಕಣ್ಣಿನ ದೃಷ್ಟಿಯು ದೇವರಿಂದ ಕೊಡಲ್ಪಟ್ಟಿರುವ ಅಪೂರ್ವ ಕೊಡುಗೆಯಾಗಿದೆ. ಆದರೆ ‘ಗ್ಲಾಕೋಮಾ’ ಎಂಬ ದೃಷ್ಟಿಚೋರ ರೋಗವು ತಮ್ಮ ದೃಷ್ಟಿಯನ್ನು ಕಸಿದುಕೊಳ್ಳುವಂಥ ದುಃಸ್ವಪ್ನವನ್ನು ಅನೇಕರು ಪಡೆಯುತ್ತಾರೆ. ಈ ಲೇಖನವು, ಈ ಸಮಸ್ಯೆಯನ್ನು ನಾವು ಅದರ ಆರಂಭದ ಹಂತದಲ್ಲೇ ಪತ್ತೆಹಚ್ಚಸಾಧ್ಯವಿರುವ ಹೆಜ್ಜೆಗಳನ್ನು ಮತ್ತು ಅದನ್ನು ನಿಭಾಯಿಸಸಾಧ್ಯವಿರುವ ವಿಧವನ್ನು ಚರ್ಚಿಸುತ್ತದೆ.”