ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಜನ. - ಮಾರ್ಚ್
“ಕುಟುಂಬದಲ್ಲಿ ಮನನೋಯಿಸುವ ಮಾತುಗಳನ್ನಾಡದಿರುವ ಬಗ್ಗೆ ನಾವು ನಮ್ಮ ನೆರೆಯವರೊಂದಿಗೆ ಮಾತಾಡುತ್ತಿದ್ದೇವೆ. ಈ ವಿಷಯದ ಕುರಿತು ಕೆಲವು ಪ್ರಾಯೋಗಿಕ ಸಲಹೆಗಳನ್ನು ಚರ್ಚಿಸಲು ನಿಮಗೆ ಇಷ್ಟವಿದೆಯೋ? [ಮನೆಯವನು ಇಷ್ಟಪಟ್ಟರೆ, ಈ ವಿಷಯದಲ್ಲಿ ಮಾನವರಿಗಿರುವ ಬಲಹೀನತೆಯ ಕುರಿತು ದೇವರು ಏನು ಹೇಳುತ್ತಾನೆಂದು ಓದಿತೋರಿಸಬಹುದೋ ಎಂದು ಕೇಳಿ. ಅವನು ಒಪ್ಪುವಲ್ಲಿ ಯಾಕೋಬ 3:2ನ್ನು ಓದಿರಿ.] ಈ ಲೇಖನವು, ನಮ್ಮ ಮಾತಿನಿಂದ ಕುಟುಂಬ ಸದಸ್ಯರ ಮನನೋಯಿಸುವುದನ್ನು ತಡೆಯಲು ಕೆಲವು ವ್ಯಾವಹಾರಿಕ ಸಲಹೆಗಳನ್ನು ನೀಡುತ್ತದೆ.” ಪುಟ 10 ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.
ಎಚ್ಚರ! ಜನ. - ಮಾರ್ಚ್
ಪ್ರತಿಯೊಂದು ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಇವೆ. ಹೀಗಿರುವುದರಿಂದ, ದಂಪತಿಗಳು ಭರವಸಾರ್ಹ ಸಲಹೆಯನ್ನು ಎಲ್ಲಿ ಕಂಡುಕೊಳ್ಳಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಮನೆಯವನಿಗೆ ಸಂಭಾಷಣೆ ನಡೆಸಲು ಮನಸ್ಸಿದೆ ಎಂದು ತೋರುವುದಾದರೆ, ಈ ವಿಷಯದಲ್ಲಿ ದೇವರು ನೀಡಿರುವ ಸಲಹೆಯನ್ನು ಓದಿತೋರಿಸಲೋ ಎಂದು ಕೇಳಿ. ಅವನು ಒಪ್ಪುವಲ್ಲಿ ಎಫೆಸ 5:22, 25ನ್ನು ಓದಿ.] ಈ ಲೇಖನವು, ಹೆಂಡತಿಯೊಬ್ಬಳು ತನ್ನ ಗಂಡನಿಗೆ ಅಧೀನಳಾಗಿರುವುದರ ಅರ್ಥವೇನೆಂದು ವಿವರಿಸುತ್ತದೆ. ಪುಟ 28 ರಿಂದ ಆರಂಭವಾಗುವ ಲೇಖನವನ್ನು ತೋರಿಸಿ.