ಜ್ಞಾಪಕಾಚರಣೆಯ ಸಮಯಾವಧಿ —ಸೇವೆ ಹೆಚ್ಚಿಸಲು ಅವಕಾಶ!
1. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಮ್ಮ ಚಟುವಟಿಕೆಯನ್ನು ಹೆಚ್ಚಿಸಲು ಯಾವ ಕಾರಣಗಳಿವೆ?
1 ಮುಂಬರುವ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ (ಮಾರ್ಚ್, ಏಪ್ರಿಲ್, ಮೇ) ಹೆಚ್ಚು ಸೇವೆ ಮಾಡಬಲ್ಲಿರೋ? ಅನೇಕ ಸ್ಥಳಗಳಲ್ಲಿ ಬೇಗನೆ ಕತ್ತಲಾಗುವುದಿಲ್ಲ, ಬೆಳಕು ಹೆಚ್ಚು ಹೊತ್ತು ಇರುತ್ತದೆ. ಕೆಲವು ಪ್ರಚಾರಕರಿಗೆ ಕೆಲಸಕ್ಕೊ ಶಾಲೆಗೊ ರಜೆ ಇರುವುದರಿಂದ ಅದನ್ನವರು ಶುಶ್ರೂಷೆಗೆ ಬಳಸಬಹುದು. ಏಪ್ರಿಲ್ 2ರಿಂದ ಒಂದು ವಿಶೇಷ ಕಾರ್ಯಾಚರಣೆ ಆರಂಭವಾಗಲಿದೆ. ಇದು, ಏಪ್ರಿಲ್ 17ರಂದು ಜ್ಞಾಪಕಾಚರಣೆಗೆ ಬರುವಂತೆ ಆಸಕ್ತರನ್ನು ಆಮಂತ್ರಿಸಲಿಕ್ಕಾಗಿದೆ. ಜ್ಞಾಪಕಾಚರಣೆಯಾದ ಬಳಿಕ ಅದಕ್ಕೆ ಹಾಜರಾದವರ ಆಸಕ್ತಿಯನ್ನು ಹೆಚ್ಚಿಸಲು ಅವರನ್ನು ಭೇಟಿಯಾಗಿ, ಏಪ್ರಿಲ್ 25ರ ವಾರದಲ್ಲಿ ನೀಡಲಾಗುವ ವಿಶೇಷ ಭಾಷಣಕ್ಕೆ ಅವರನ್ನು ಆಮಂತ್ರಿಸುವೆವು. ನಿಜವಾಗಿಯೂ ಇವೆಲ್ಲ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನಮ್ಮ ಚಟುವಟಿಕೆಯನ್ನು ಹೆಚ್ಚಿಸಲು ಕಾರಣಗಳು.
2. ನಮ್ಮ ಸೇವೆಯನ್ನು ಹೆಚ್ಚಿಸುವ ಒಂದು ಉತ್ತಮ ವಿಧಾನ ಯಾವುದು?
2 ಆಕ್ಸಿಲಿಯರಿ ಪಯನೀಯರ್ ಸೇವೆ: ನಮ್ಮ ಚಟುವಟಿಕೆಯನ್ನು ಹೆಚ್ಚಿಸುವ ಒಂದು ಉತ್ತಮ ವಿಧಾನ ಆಕ್ಸಿಲಿಯರಿ ಪಯನೀಯರ್ ಸೇವೆಯೇ ಆಗಿದೆ. ನಾವೆಲ್ಲರೂ ಬ್ಯುಸಿ ಆಗಿರುವುದರಿಂದ ಇದಕ್ಕಾಗಿ ನಾವು ಮುಂಚಿತವಾಗಿಯೇ “ಯೋಜನೆ”ಗಳನ್ನೂ ನಮ್ಮ ಕಾರ್ಯತಖ್ತೆಯಲ್ಲಿ ಹೊಂದಾಣಿಕೆಗಳನ್ನೂ ಮಾಡಬೇಕು. (ಜ್ಞಾನೋ. 21:5, NW) ಸಾಮಾನ್ಯವಾಗಿ ಈ ಅವಧಿಯಲ್ಲಿ ನಿಮಗಿರಬಹುದಾದ ಪ್ರಾಮುಖ್ಯವಲ್ಲದ ಚಟುವಟಿಕೆಗಳಲ್ಲಿ ಕೆಲವೊಂದನ್ನು ಬಹುಶಃ ಮುಂದೂಡಬಹುದು. (ಫಿಲಿ. 1:9-11) ಪಯನೀಯರ್ ಸೇವೆ ಮಾಡಲು ನಿಮಗಿರುವ ಆಸೆಯನ್ನು ಸಭೆಯಲ್ಲಿ ಇತರರಿಗೆ ವ್ಯಕ್ತಪಡಿಸಬಾರದೇಕೆ? ಹೀಗೆ, ಅವರಿಗೆ ನಿಮ್ಮ ಜೊತೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಮನಸ್ಸಿದೆಯೊ ಎಂದು ನೀವು ತಿಳಿದುಕೊಳ್ಳಬಹುದು.
3. ಕುಟುಂಬಗಳು ಶುಶ್ರೂಷೆಯನ್ನು ಹೆಚ್ಚಿಸಲು ಏನು ಮಾಡಬಹುದು?
3 ನೀವು ಕುಟುಂಬವಾಗಿ ಜ್ಞಾಪಕಾಚರಣೆಯ ಸಮಯಾವಧಿಗಾಗಿ ಯಾವ ಗುರಿಗಳನ್ನಿಡಬಹುದೆಂದು ಮುಂದಿನ ‘ಕುಟುಂಬ ಆರಾಧನೆಯ ಸಂಜೆ’ಯಲ್ಲಿ ಚರ್ಚಿಸುವುದು ಒಳ್ಳೇದು. (ಜ್ಞಾನೋ. 15:22) ಎಲ್ಲರೂ ಸಹಕರಿಸಿದರೆ ಕುಟುಂಬದಲ್ಲಿ ಕೆಲವರಾದರೂ ಒಂದು ಇಲ್ಲವೆ ಹೆಚ್ಚು ತಿಂಗಳು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಹುದು. ಇದು ಅಸಾಧ್ಯವಾದರೆ ಆಗೇನು? ಕೆಲವೊಂದು ಸಂಜೆಗಳಂದು ಇಲ್ಲವೇ ವಾರಾಂತ್ಯಗಳಲ್ಲಿ ಶುಶ್ರೂಷೆಯಲ್ಲಿ ಹೆಚ್ಚು ಸಮಯ ಕಳೆಯುವುದರ ಮೂಲಕ ಕುಟುಂಬವಾಗಿ ನಿಮ್ಮ ಸೇವೆ ಹೆಚ್ಚಿಸಬಹುದು.
4. ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಮ್ಮ ಸೇವೆಯನ್ನು ಹೆಚ್ಚಿಸುವುದರಿಂದ ಯಾವ ಆಶೀರ್ವಾದಗಳು ಸಿಗುವವು?
4 ಯೆಹೋವನು ನಾವಾತನ ಸೇವೆಗಾಗಿ ಮಾಡುವುದೆಲ್ಲವನ್ನು ಗಮನಿಸುತ್ತಾನೆ. ನಮ್ಮ ತ್ಯಾಗಗಳನ್ನು ಗಣ್ಯಮಾಡುತ್ತಾನೆ. (ಇಬ್ರಿ. 6:10) ಯೆಹೋವನಿಗೂ ಇತರರಿಗೂ ಏನು ಕೊಡುತ್ತೇವೊ ಅದರಿಂದ ನಮ್ಮ ಆನಂದ ಹೆಚ್ಚಾಗುತ್ತದೆ. (1 ಪೂರ್ವ. 29:9; ಅ. ಕಾ. 20:35) ಆದ್ದರಿಂದ ಈ ಜ್ಞಾಪಕಾಚರಣೆಯ ಸಮಯಾವಧಿಯಲ್ಲಿ ನಿಮ್ಮ ಸೇವೆಯನ್ನು ಹೆಚ್ಚಿಸುವಿರೋ? ಫಲಿತಾಂಶವಾಗಿ ಹೆಚ್ಚಿನ ಆನಂದ, ಆಶೀರ್ವಾದಗಳನ್ನು ಕೊಯ್ಯುವಿರಿ.