ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/13 ಪು. 2-3
  • ದೇವರಿಗೆ ಮಹಿಮೆ ತರುವ ನಡತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರಿಗೆ ಮಹಿಮೆ ತರುವ ನಡತೆ
  • 2013 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ‘ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆ ಉತ್ತಮವಾಗಿರಲಿ’
    2014 ನಮ್ಮ ರಾಜ್ಯದ ಸೇವೆ
  • ಅಧಿವೇಶನದ ಮರುಜ್ಞಾಪನಗಳು
    2015 ನಮ್ಮ ರಾಜ್ಯದ ಸೇವೆ
  • ಸತ್ಯಕ್ಕೆ ಪ್ರಬಲ ಸಾಕ್ಷಿಕೊಡುವ ನಮ್ಮ ಜಿಲ್ಲಾ ಅಧಿವೇಶನಗಳು
    2012 ನಮ್ಮ ರಾಜ್ಯದ ಸೇವೆ
  • ಆಧ್ಯಾತ್ಮಿಕ ಚೈತನ್ಯದ ಮೂರು ದಿನಗಳು
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2013 ನಮ್ಮ ರಾಜ್ಯದ ಸೇವೆ
km 7/13 ಪು. 2-3

ದೇವರಿಗೆ ಮಹಿಮೆ ತರುವ ನಡತೆ

1. ಅಧಿವೇಶನಕ್ಕೆ ಹಾಜರಾಗುವ ಯೆಹೋವನ ಸಾಕ್ಷಿಗಳನ್ನು ಜನರು ಬೇಗನೆ ಗುರುತಿಸುತ್ತಾರೆ ಯಾಕೆ?

1 ನಾವು ಅಧಿವೇಶನಕ್ಕೆ ಹಾಜರಾಗುವಾಗ ಜನರು ನಮ್ಮನ್ನು ಬೇಗನೆ ಗುರುತಿಸಿಬಿಡುತ್ತಾರೆ. ಕೆಲವು ಕಡೆಗಳಲ್ಲಂತೂ ಸುದ್ದಿವಾಹಿನಿಗಳೇ ಪ್ರಚಾರ ಮಾಡಿಬಿಡುತ್ತವೆ. ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಅಧಿವೇಶನಕ್ಕೆ ಹಾಜರಾದವರೇ ಇರುತ್ತಾರೆ. ಅಧಿವೇಶನದ ಬ್ಯಾಜ್‌ ಧರಿಸಿರುವುದನ್ನು ಕೂಡ ಜನರು ಗಮನಿಸುತ್ತಾರೆ. ಅಧಿವೇಶನ ನಡೆಯುವ ನಗರದಲ್ಲಿ ನಮ್ಮ ನಡತೆ ದೇವರಿಗೆ ಮಹಿಮೆ ತರಬೇಕಾದರೆ ಹೇಗಿರಬೇಕು ಅಂತ ಕೆಲವು ಮರುಜ್ಞಾಪನಗಳನ್ನು ಕೆಳಗೆ ಕೊಡಲಾಗಿದೆ.—1 ಪೇತ್ರ 2:12.

2. ಅಧಿವೇಶನ ನಡೆಯುವ ನಗರದಲ್ಲಿರುವಾಗ ನಮ್ಮ ಸಭ್ಯ ಉಡುಗೆ ಹೇಗೆ ದೇವರಿಗೆ ಮಹಿಮೆ ತರುತ್ತೆ?

2 ಸಭ್ಯ ಉಡುಗೆ: ಅಧಿವೇಶನದಲ್ಲಿ ನಾವು ಧರಿಸುವ ಸಭ್ಯ ಉಡುಗೆ ಜನರ ಮನಸ್ಸನ್ನು ಗೆಲ್ಲುತ್ತೆ. ಆದರೆ ಬೇರೆ ಸಮಯದಲ್ಲಿ, ಉದಾಹರಣೆಗೆ ಮನೆಯಿಂದ ಹೊರಟು ಅಧಿವೇಶನ ನಗರದಲ್ಲಿ ನಾವು ತಂಗುವ ಹೋಟೆಲಿಗೆ ಹೋಗುವಾಗ, ರೆಸ್ಟೋರೆಂಟ್‌ಗಳಿಗೆ ಹೋಗುವಾಗ, ಖರೀದಿಸಲು ಹೋಗುವಾಗ ನಾವು ಧರಿಸಿರುವ ಬಟ್ಟೆಯ ಶೈಲಿ ಕೂಡ ಜನರ ಮೇಲೆ ಪ್ರಭಾವ ಬೀರುತ್ತೆ. ಹಾಗಾಗಿ ನಮ್ಮ ಉಡುಪು ಆಗಲೂ ಸಭ್ಯ, ಗೌರವಯುತ ಆಗಿರಬೇಕು. ತೀರ ಮಾಮೂಲಿ ಆಗಿರಬಾರದು. ಈ ವಿಷಯದಲ್ಲಿ ನಮ್ಮ ಮತ್ತು ಹೊರಗಿನ ಜನರ ಮಧ್ಯೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ಕಾಣಬೇಕು. (ರೋಮ. 12:2) ಅಧಿವೇಶನ ಬ್ಯಾಜ್‌ ಅನ್ನು ನಾವು ಧರಿಸಬೇಕು. ಯಾಕೆಂದರೆ ಅದು ಅಧಿವೇಶನಕ್ಕೆ ಜಾಹೀರಾತು ನೀಡುತ್ತೆ, ಸಾಕ್ಷಿನೀಡಲು ಅವಕಾಶ ನೀಡುತ್ತೆ, ಅಧಿವೇಶನಕ್ಕೆ ಹಾಜರಾದ ಇತರರು ನಮ್ಮನ್ನು ಗುರುತಿಸಲು ನೆರವಾಗುತ್ತೆ.

3. ನಾವು ಹೇಗೆ ತಾಳ್ಮೆ, ಸೌಜನ್ಯತೆ ತೋರಿಸಬಹುದು?

3 ತಾಳ್ಮೆ, ಸೌಜನ್ಯ: ಲೋಕದಲ್ಲಿ ಸ್ವಾರ್ಥಿಗಳು, ಉಪಕಾರ ಸ್ಮರಿಸದವರೇ ಜಾಸ್ತಿ ಇರುವಾಗ ನಾವು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ತಾಳ್ಮೆ, ಸೌಜನ್ಯತೆ ತೋರಿಸಿದರೆ ಸಿಬ್ಬಂದಿವರ್ಗಕ್ಕೆ ತುಂಬ ಖುಷಿಯಾಗುತ್ತೆ. (2 ತಿಮೊ. 3:1-5) ಸೀಟು ಹಿಡಿಯುವಾಗ ಮತ್ತು ಬಿಡುಗಡೆಯಾದ ಹೊಸ ಪ್ರಕಾಶನಗಳನ್ನು ಪಡೆಯಲು ಸಾಲಿನಲ್ಲಿ ನಿಲ್ಲುವಾಗ ಪರಹಿತ ಚಿಂತನೆ ತೋರಿಸೋಣ. (1 ಕೊರಿಂ. 10:23, 24) ಮೊದಲ ಬಾರಿ ಅಧಿವೇಶನ ಹಾಜರಾದ ಒಬ್ಬ ಆಸಕ್ತ ವ್ಯಕ್ತಿ ಹೀಗೆ ಹೇಳಿದರು: “ಆ ದಿನ ಯಾವ ಯಾವ ಭಾಷಣ ಇತ್ತು ಅಂತ ನಂಗೆ ನೆನಪೇ ಇಲ್ಲ. ಆದರೆ ಸಾಕ್ಷಿಗಳ ನಡೆನುಡಿಯನ್ನು ನಾನು ಯಾವತ್ತೂ ಮರೆಯಲ್ಲ.”

4. ನಮ್ಮಿಂದ ಸಾಧ್ಯ ಆಗೋದಾದರೆ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಬೇಕು ಯಾಕೆ?

4 ಸ್ವಇಚ್ಛೆಯಿಂದ ಸಹಾಯ ನೀಡುವ ಸ್ವಯಂ ಸೇವಕರು: ಸೇವಾ ಮನೋಭಾವದಿಂದ ಕೆಲಸಮಾಡುವುದರಲ್ಲಿ ನಿಜ ಕ್ರೈಸ್ತರದ್ದು ಎತ್ತಿದ ಕೈ. (ಕೀರ್ತ. 110:3) ಅಧಿವೇಶನದಲ್ಲಿ ನೀವು ಸ್ವಯಂಸೇವಕರಾಗಿ ಕೆಲಸ ಮಾಡುತ್ತೀರಾ? ಒಂದು ಅಧಿವೇಶನದಲ್ಲಿ ಸುಮಾರು 600 ಸಹೋದರ ಸಹೋದರಿಯರು ಸೇರಿ ಅಧಿವೇಶನದ ಹಿಂದಿನ ದಿನ ನಿವೇಶನವನ್ನು ಸ್ವಚ್ಛಗೊಳಿಸಿದರು. ಆ ನಿವೇಶನದ ಸಿಬ್ಬಂದಿ ಹೇಳಿದರು: “ಇಂಥ ಸಂಗತಿಯನ್ನು ನಾವು ಎಂದೂ ನೋಡಿಲ್ಲ! ಕೆಲಸ ಮಾಡಿದ ಇಷ್ಟೊಂದು ಜನ ಸ್ವಯಂ ಸೇವಕರು ಅಂತ ನಂಬಕ್ಕಾಗ್ತಿಲ್ಲ.” 2013ನೇ ಸಾಲಿನ ಅಧಿವೇಶನಕ್ಕಾಗಿ ಕಾಯುತ್ತಿದ್ದೇವೆ. ಅಧಿವೇಶನದಲ್ಲಿ ಬರೀ ಕೇಳಿ ತಿಳಿದುಕೊಳ್ಳುವ ಅವಕಾಶ ಮಾತ್ರ ಇಲ್ಲ, ದೇವರನ್ನು ಮಹಿಮೆ ಪಡಿಸುವ ಅವಕಾಶ ಕೂಡ ಇದೆ.

[ಪುಟ 2ರಲ್ಲಿರುವ ಚಿತ್ರ]

2013ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು

◼ ಕಾರ್ಯಕ್ರಮದ ಸಮಯ: ಸಭಾಂಗಣದ ಬಾಗಿಲು ಬೆಳಿಗ್ಗೆ 8:00 ಗಂಟೆಗೆ ತೆರೆಯುತ್ತೆ. ಮೂರೂ ದಿನ ರಾಜ್ಯ ಸಂಗೀತ ಬೆಳಿಗ್ಗೆ 9:20ಕ್ಕೆ ಆರಂಭವಾಗುತ್ತೆ. ಆಗ ಎಲ್ಲರೂ ತಮ್ಮ ತಮ್ಮ ಸೀಟುಗಳಲ್ಲಿ ಕೂರಬೇಕು. ಇದು ಕಾರ್ಯಕ್ರಮ ಗೌರವಾನ್ವಿತ ರೀತಿಯಲ್ಲಿ ಆರಂಭವಾಗಲು ನೆರವಾಗುತ್ತೆ. ಕಾರ್ಯಕ್ರಮ ಶುಕ್ರವಾರ, ಶನಿವಾರದಂದು ಸಂಜೆ 4:50ಕ್ಕೆ ಹಾಗೂ ಭಾನುವಾರದಂದು ಸಂಜೆ 3:35ಕ್ಕೆ ಕೊನೆಗೊಳ್ಳುತ್ತೆ.

◼ ಪಾರ್ಕಿಂಗ್‌: ಪಾರ್ಕಿಂಗ್‌ ಸೌಕರ್ಯಗಳಿರುವ ಎಲ್ಲ ಅಧಿವೇಶನ ಸ್ಥಳಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಗನುಸಾರ ವಾಹನಗಳಿಗೆ ಫ್ರೀ ಪಾರ್ಕಿಂಗ್‌ ವ್ಯವಸ್ಥೆ ಇರುತ್ತೆ. ಪಾರ್ಕಿಂಗ್‌ ಸ್ಥಳ ಸೀಮಿತ. ಹಾಗಾಗಿ ಒಂದು ಕಾರಿನವರು ಇನ್ನೊಂದು ಕಾರಿನವರನ್ನು ತಮ್ಮೊಂದಿಗೆ ಕರೆದುಕೊಂಡು ಬರಬಹುದು. ವಿಕಲಚೇತನರ ವಾಹನಗಳಿಗೆಂದು ಕಾದಿರಿಸಲಾದ ಜಾಗದಲ್ಲಿ ಅಥವಾ ಬೋರ್ಡ್‌ ಇಟ್ಟಿದ್ದರೆ ಅಲ್ಲಿ ಬೇರೆಯವರು ಪಾರ್ಕಿಂಗ್‌ ಮಾಡಬಾರದು.

◼ ಸೀಟು ಹಿಡಿಯುವುದು: ನಮ್ಮ ಮನೆಯಲ್ಲಿರುವವರಿಗೆ ಅಥವಾ ಕಾರ್‌ನಲ್ಲಿ ನಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೆ ಅಥವಾ ನಮ್ಮ ಸದ್ಯದ ಬೈಬಲ್‌ ವಿದ್ಯಾರ್ಥಿಗಳಿಗೆ ಮಾತ್ರ ಸೀಟು ಹಿಡಿದಿಡಬಹುದು. ವಯಸ್ಸಾದವರಿಗಾಗಿ ಮಾತ್ರ ಸೀಟುಗಳನ್ನು ಕಾದಿರಿಸಲಾಗುವುದರಿಂದ ಕುಟುಂಬದ ಎಲ್ಲರೂ ಅವರೊಂದಿಗೆ ಕೂರಲಾಗುವುದಿಲ್ಲ. ಆ ಸೀಟುಗಳಲ್ಲಿ ವಯಸ್ಸಾದವರು ಮತ್ತು ಅವರ ಸಹಾಯಕ್ಕಾಗಿ ಬರುವವರು ಮಾತ್ರ ಕೂರಲಿ.—1 ಕೊರಿಂ. 13:5.

◼ ಮಧ್ಯಾಹ್ನದ ಊಟ: ಮಧ್ಯಾಹ್ನದ ಊಟಕ್ಕಾಗಿ ಅಧಿವೇಶನ ಸ್ಥಳದಿಂದ ಹೊರಗೆ ಹೋಗೋ ಬದಲು ದಯವಿಟ್ಟು ಲಘು ಊಟ ತನ್ನಿ.

◼ ದಾನಗಳು: ಲೋಕವ್ಯಾಪಕ ಕೆಲಸಕ್ಕಾಗಿ ಅಧಿವೇಶನದಲ್ಲಿ ಸ್ವಯಂ ಪ್ರೇರಿತ ದಾನಗಳನ್ನು ನೀಡುವ ಮೂಲಕ ಅಧಿವೇಶನ ಏರ್ಪಾಡುಗಳಿಗಾಗಿ ಕೃತಜ್ಞತೆ ತೋರಿಸಬಲ್ಲೆವು. ನೀವು ಅಧಿವೇಶನದಲ್ಲಿ ಕಾಣಿಕೆಯಾಗಿ ಕೊಡುವ ಯಾವುದೇ ಚೆಕ್‌ಗಳಲ್ಲಿ “ದ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಇಂಡಿಯಾ”ಗೆ ಹಣಸಂದಾಯವಾಗಬೇಕೆಂದು ಗುರುತಿಸಬೇಕು.

◼ ಔಷಧ: ವೈದ್ಯರು ಬರೆದುಕೊಟ್ಟ ಔಷಧವನ್ನೇ ನೀವು ತೆಗೆದುಕೊಳ್ಳಬೇಕಾದಲ್ಲಿ ಅದನ್ನು ದಯವಿಟ್ಟು ಸಾಕಷ್ಟು ಪ್ರಮಾಣದಲ್ಲಿ ತನ್ನಿ. ಏಕೆಂದರೆ ಅಧಿವೇಶನದ ಸ್ಥಳದಲ್ಲಿ ಅವು ಲಭ್ಯವಿರುವುದಿಲ್ಲ. ಸಿರಿಂಜು ಸೂಜಿಗಳನ್ನು ಬಳಸಿದರೆ ಸೂಕ್ತ ಸ್ಥಳದಲ್ಲಿ ಬಿಸಾಡಿ. ಅಧಿವೇಶನ ಸ್ಥಳದಲ್ಲಿ ಅಥವಾ ಹೋಟೆಲಿನ ಕಸದ ಬುಟ್ಟಿಗಳಲ್ಲಿ ಹಾಕಬೇಡಿ.

◼ ಪಾದರಕ್ಷೆ: ಪ್ರತೀ ವರ್ಷ ಅಧಿವೇಶನಗಳಲ್ಲಿ ಪಾದರಕ್ಷೆಗಳಿಂದಾಗಿ ಅನೇಕರು ಗಾಯಗೊಳ್ಳುತ್ತಿದ್ದಾರೆ. ಕಾಲಿನ ಗಾತ್ರಕ್ಕೆ ಸರಿಹೊಂದುವ ಸಭ್ಯ ಪಾದರಕ್ಷೆ ಧರಿಸಿದರೆ ಇಳಿಜಾರಿನಲ್ಲಿ, ಮೆಟ್ಟಿಲುಗಳಲ್ಲಿ, ಇನ್ನಿತರ ಸ್ಥಳಗಳಲ್ಲಿ ಸುರಕ್ಷಿತವಾಗಿ ನಡೆಯಲು ಸಾಧ್ಯ.

◼ ಶ್ರವಣ ವೈಕಲ್ಯ: ಕೆಲವು ಆಯ್ದ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಸನ್ನೆಭಾಷೆಯಲ್ಲೂ ಪ್ರಸ್ತುತಪಡಿಸಲಾಗುತ್ತೆ.

◼ ಸುಗಂಧ ದ್ರವ್ಯಗಳು: ಹೆಚ್ಚಿನ ಅಧಿವೇಶನಗಳು ಹವಾನಿಯಂತ್ರಿತ ಸಭಾಂಗಣಗಳಲ್ಲಿ ನಡೆಯುತ್ತೆ. ಆದುದರಿಂದ, ಉಸಿರಾಟ ಅಥವಾ ಅದಕ್ಕೆ ಸಂಬಂಧಿಸಿದ ತೊಂದರೆಗಳಿರುವವರ ಆರೋಗ್ಯಕ್ಕೆ ಹಾನಿಯಾಗದಂತೆ ತೀಕ್ಷ್ಣ ಸುವಾಸನೆಯ ಸೆಂಟ್‌ಗಳನ್ನು ಮಿತವಾಗಿ ಬಳಸಿ ನಮ್ಮ ಪ್ರೀತಿಯನ್ನು ತೋರಿಸಬಹುದು.—1 ಕೊರಿಂ. 10:24.

◼ ಪ್ಲೀಸ್‌ ಫಾಲೋ-ಅಪ್‌ (S-43) ಫಾರ್ಮ್‌ಗಳು: ಅಧಿವೇಶನದ ಸಮಯದಲ್ಲಿ ಅನೌಪಚಾರಿಕ ಸಾಕ್ಷಿ ನೀಡಿದಾಗ ಸಿಕ್ಕಿದ ಆಸಕ್ತ ವ್ಯಕ್ತಿಗಳ ಕುರಿತು ಮಾಹಿತಿ ಒದಗಿಸಲು ಪ್ಲೀಸ್‌ ಫಾಲೋ ಅಪ್‌ ಫಾರ್ಮ್‌ ಬಳಸಬೇಕು. ಅವನ್ನು ತುಂಬಿಸಿ ಅಧಿವೇಶನದ ಬುಕ್‌ರೂಮ್‌ಗೆ ಅಥವಾ ನಿಮ್ಮ ಸಭೆಯ ಸಭಾ ಸೆಕ್ರಿಟರಿಗೆ ಕೊಡತಕ್ಕದ್ದು.

◼ ರೆಸ್ಟೋರೆಂಟ್‌: ರೆಸ್ಟೋರೆಂಟ್‌ಗಳಲ್ಲಿ ಉತ್ತಮ ನಡತೆ ಮೂಲಕ ಯೆಹೋವನ ಹೆಸರನ್ನು ಮಹಿಮೆಪಡಿಸಿ. ಅಲ್ಲಿ ಟಿಪ್ಸ್‌ ಕೊಡುವ ರೂಢಿಯಿದ್ದರೆ ಕೊಡಿ. ಸಾಕ್ಷಿಗಳಿಗೆ ತಕ್ಕಂಥ ಬಟ್ಟೆ ಧರಿಸಿ.

◼ ಹೋಟೆಲ್‌:

(1) ದಯವಿಟ್ಟು ಅಗತ್ಯಕ್ಕಿಂತ ಹೆಚ್ಚು ರೂಮ್‌ಗಳನ್ನು ಬುಕ್‌ ಮಾಡಬೇಡಿ. ಹೋಟೆಲ್‌ ಅನುಮತಿಸುವುದಕ್ಕಿಂತ ಹೆಚ್ಚು ಮಂದಿ ರೂಮ್‌ನಲ್ಲಿ ತಂಗಬಾರದು.

(2) ತುರ್ತು ಪರಿಸ್ಥಿತಿ ಬಿಟ್ಟು ಬೇರಾವ ಕಾರಣಕ್ಕೂ ಬುಕ್ಕಿಂಗ್‌ ರದ್ದುಮಾಡಬಾರದು. ರದ್ದುಗೊಳಿಸಬೇಕಾದಲ್ಲಿ ಕೂಡಲೆ ಹೋಟೆಲ್‌ನವರಿಗೆ ತಿಳಿಸಿರಿ. (ಮತ್ತಾ. 5:37) ರದ್ದುಗೊಳಿಸಿದ್ದಲ್ಲಿ ಕ್ಯಾನ್ಸಲ್ಲೇಷನ್‌ ನಂಬರನ್ನು ಪಡೆದುಕೊಳ್ಳಲು ಮರೆಯದಿರಿ. 48 ತಾಸು ಮುಂಚಿತವಾಗಿ ರೂಮನ್ನು ರದ್ದುಗೊಳಿಸಲಿಲ್ಲವಾದರೆ ನೀವು ಪಾವತಿಸಿದ ಹಣ ನಿಮಗೆ ಹಿಂದೆ ಸಿಗುವುದಿಲ್ಲ.

(3) ದಯವಿಟ್ಟು ನೆನಪಿಡಿ: ಹೋಟೆಲಿಗೆ ದಾಖಲಾಗುವಾಗ ನೀವು ಡೆಬಿಟ್‌ ಯಾ ಕ್ರೆಡಿಟ್‌ ಕಾರ್ಡ್‌ ಬಳಸುವಲ್ಲಿ, ರೂಮ್‌ ಬಾಡಿಗೆಯ ಜತೆಗೆ ಸಂಭಾವ್ಯ ಹಾನಿಗೆಂದು ಹೆಚ್ಚುವರಿ ಹಣವನ್ನು ಹೋಟೆಲಿನವರು ಹಿಡಿದಿಟ್ಟುಕೊಳ್ಳುವುದು ರೂಢಿ. ನೀವಲ್ಲಿಂದ ಹೊರಟು ಲೆಕ್ಕ ಚುಕ್ತಾ ಆಗುವ ತನಕ ಅಂದರೆ ಕೆಲವು ದಿನ ನೀವು ಆ ಹಣ ಬಳಸಲು ಸಾಧ್ಯವಿಲ್ಲ.

(4) ಎಲ್ಲ ಸಾಮಾನನ್ನು ಸಿದ್ಧವಾಗಿಟ್ಟ ಬಳಿಕವೇ ಟ್ರಾಲಿ ತೆಗೆದುಕೊಳ್ಳಿ. ಉಪಯೋಗಿಸಿದ ನಂತರ ಕೂಡಲೆ ಹಿಂದಿರುಗಿಸಿ.

(5) ನಿಮ್ಮ ಸಾಮಾನನ್ನು ಹೊರುವ ಹೋಟೆಲ್‌ ಕೆಲಸಗಾರರಿಗೆ ಟಿಪ್ಸ್‌ ಕೊಡಿ. ಕೋಣೆ ಶುಚಿ ಮಾಡುವವನಿಗೆ ಪ್ರತಿದಿನ ಟಿಪ್ಸ್‌ಕೊಡಿ.

(6) ಅಪ್ಪಣೆ ಇಲ್ಲದೆ ರೂಮಿನಲ್ಲಿ ಅಡುಗೆ ಮಾಡಬಾರದು.

(7) ಅತಿಥಿಗಳಿಗೆ ಹೋಟೆಲ್‌ನಲ್ಲಿರುವಾಗ ಉಚಿತವಾಗಿ ಸಿಗುವ ಉಪಹಾರ, ಕಾಫಿ ಅಥವಾ ಐಸ್‌ಕ್ಯೂಬ್‌ಗಳನ್ನು ದುರುಪಯೋಗಿಸಬೇಡಿ.

(8) ಹೋಟೆಲ್‌ ಸಿಬ್ಬಂದಿಯೊಂದಿಗೆ ವ್ಯವಹರಿಸುವಾಗಲೆಲ್ಲಾ ದೇವರಾತ್ಮದ ಫಲವನ್ನು ತೋರಿಸಿ. ಅವರಿಗೆ ಅನೇಕ ಅತಿಥಿಗಳನ್ನು ನೋಡಿಕೊಳ್ಳಬೇಕಾಗಿರುತ್ತೆ. ಆದ್ದರಿಂದ ಅವರೊಂದಿಗೆ ದಯೆ, ತಾಳ್ಮೆ, ವಿವೇಚನೆಯಿಂದ ನಡಕೊಂಡರೆ ಅವರದನ್ನು ಮಾನ್ಯ ಮಾಡುವರು.

(9) ಹೋಟೆಲಿನಲ್ಲಿ ಎಲ್ಲ ಸಮಯ ಹೆತ್ತವರು ಮಕ್ಕಳ ನಿಗಾ ವಹಿಸಬೇಕು. ಈಜುಕೊಳ, ಲಿಫ್ಟ್‌, ಲಾಬಿ ಸೇರಿದಂತೆ ಮತ್ತಿತರ ಕಡೆಗಳಲ್ಲೂ ನಿಗಾ ವಹಿಸಬೇಕು.

(10) ಶಿಫಾರಸು ಮಾಡಲಾದ ಲಾಡ್ಜಿಂಗ್‌ ಲಿಸ್ಟ್‌ನಲ್ಲಿರುವ ರೂಮ್‌ ದರಗಳು ದಿನವೊಂದಕ್ಕೆ ತೆರಬೇಕಾದ ಪೂರ್ಣ ಬೆಲೆಯಾಗಿವೆ. ಇದರಲ್ಲಿ ತೆರಿಗೆ ಸೇರಿಲ್ಲ. ಅದನ್ನು ನೀವು ಕೊಡಬೇಕಾಗುತ್ತೆ. ಆದರೆ ನೀವು ವಿನಂತಿಸದ ಅಥವಾ ಬಳಸದ ಯಾವುದಕ್ಕಾದರೂ ಹೆಚ್ಚು ಹಣವನ್ನು ನಿಮ್ಮ ಬಿಲ್‌ಗೆ ಹಾಕಿದ್ದಲ್ಲಿ ಅದನ್ನು ಕೊಡಬೇಡಿ ಮತ್ತು ಈ ವಿಷಯವನ್ನು ಅಧಿವೇಶನದ ರೂಮಿಂಗ್‌ಡಿಪಾರ್ಟ್‌ಮೆಂಟ್‌ಗೆ ಆದಷ್ಟು ಬೇಗ ತಿಳಿಸಿ.

(11) ಹೋಟೆಲ್‌ ರೂಮ್‌ ಸಂಬಂಧದಲ್ಲಿ ಸಮಸ್ಯೆ ಏಳುವಲ್ಲಿ ಅಧಿವೇಶನದಲ್ಲೇ ರೂಮಿಂಗ್‌ ಇಲಾಖೆಗೆ ತಿಳಿಸಿದರೆ ಅವರು ನಿಮಗೆ ಸಹಾಯ ಮಾಡುತ್ತಾರೆ.

◼ ಸ್ವಯಂ ಸೇವೆ: ಸ್ವಯಂ ಸೇವಕರಾಗಲು ನೀವು ಬಯಸುವಲ್ಲಿ ಸ್ವಯಂ ಸೇವಾ ಇಲಾಖೆಯನ್ನು ಸಂಪರ್ಕಿಸಿ. 16 ವರ್ಷಕ್ಕಿಂತ ಚಿಕ್ಕವರು ತಮ್ಮ ಹೆತ್ತವರ, ಪೋಷಕರ ಇಲ್ಲವೆ ಅವರ ಒಪ್ಪಿಗೆಯಿರುವ ಒಬ್ಬ ಪ್ರೌಢ ವ್ಯಕ್ತಿಯ ನಿರ್ದೇಶನದಡಿ ಸ್ವಯಂ ಸೇವಕರಾಗಿ ಕೆಲಸಮಾಡಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ