ಮಾದರಿ ನಿರೂಪಣೆಗಳು
ಕಾವಲಿನಬುರುಜು ಅಕ್ಟೋಬರ್-ಡಿಸೆಂಬರ್
“ಜೀವನದ ಜಂಜಾಟಗಳನ್ನು ನೋಡುವಾಗ ನಮಗೆ ಇರುವ ಚಿಂತೆಗಳನ್ನು ನಿಭಾಯಿಸಲು ಆಗುತ್ತಾ ಅಂತ ನಿಮಗನಿಸಿದೆಯಾ? [ಉತ್ತರಕ್ಕಾಗಿ ಕಾಯಿರಿ.] ಚಿಂತೆ ಮಾಡದೆ ಇರಲು ನನಗೆ ಸಹಾಯ ಮಾಡಿದಂಥ ಒಂದು ಸಲಹೆಯನ್ನು ನಿಮಗೆ ತೋರಿಸಬಹುದಾ? [ಮನೆಯವನು ಒಪ್ಪಿದರೆ ಮತ್ತಾಯ 6:25 ನ್ನು ಓದಿ.] ಹಣದ ಕುರಿತು, ಕುಟುಂಬದ ಸಮಸ್ಯೆ ಕುರಿತು, ಯಾವಾಗ ಏನಾಗುತ್ತೋ ಎನ್ನುವುದರ ಕುರಿತು ಚಿಂತೆಯಿದ್ದರೆ ಅದನ್ನು ಕಡಿಮೆ ಮಾಡಲು ದೇವರ ಮಾತುಗಳು ಹೇಗೆ ಸಹಾಯ ಮಾಡುತ್ತವೆ ಎಂದು ಈ ಕಾವಲಿನಬುರುಜು ಸಂಚಿಕೆಯು ತಿಳಿಸುತ್ತದೆ.”