ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಸೆಪ್ಟೆಂಬರ್‌ ಪು. 8
  • ಬೈಬಲ್‌ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲ್‌ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಮನೆ ಬೈಬಲ್‌ ಅಧ್ಯಯನವೊಂದನ್ನು ನಡೆಸುವುದು
    1993 ನಮ್ಮ ರಾಜ್ಯದ ಸೇವೆ
  • ಮನೆ ಬೈಬಲ್‌ ಅಭ್ಯಾಸಗಳಿಗೆ ತಯಾರಿಸುವದು ಮತ್ತು ನಡಿಸುವದು
    1991 ನಮ್ಮ ರಾಜ್ಯದ ಸೇವೆ
  • ದೀಕ್ಷಾಸ್ನಾನ ತಗೊಳ್ಳೋಕೆ ವಿದ್ಯಾರ್ಥಿಗೆ ಸಹಾಯ ಮಾಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಸರಳತೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಸೆಪ್ಟೆಂಬರ್‌ ಪು. 8

ನಮ್ಮ ಕ್ರೈಸ್ತ ಜೀವನ

ಬೈಬಲ್‌ ಅಧ್ಯಯನ ಮಾಡುವಾಗ ಈ ವಿಷಯಗಳಿಂದ ದೂರವಿರಿ

ಮುದ್ರಿತ ಸಂಚಿಕೆ
ಬೈಬಲ್‌ ಅಧ್ಯಯನದಲ್ಲಿ ಹೆಚ್ಚು ಮಾತಾಡುತ್ತಿರುವ ಸಹೋದರ

ಹೆಚ್ಚು ಮಾತಾಡುವುದು: ವಿದ್ಯಾರ್ಥಿಗೆ ನೀವು ಎಲ್ಲಾ ವಿಷಯಗಳನ್ನು ವಿವರಿಸುವ ಅವಶ್ಯಕತೆ ಇಲ್ಲ. ಯೇಸು ಕೂಡ, ಜನರು ಯೋಚಿಸಿ ಸರಿಯಾದ ತೀರ್ಮಾನಗಳನ್ನು ಮಾಡಲಿಕ್ಕಾಗಿ ಅವರಿಗೆ ಪ್ರಶ್ನೆಗಳನ್ನು ಕೇಳಿದನಷ್ಟೆ. (ಮತ್ತಾ 17:24-27) ಪ್ರಶ್ನೆಗಳನ್ನು ಕೇಳುವಾಗ ಬೈಬಲ್‌ ಅಧ್ಯಯನ ಲವಲವಿಕೆಯಿಂದ ಇರುತ್ತದೆ. ಅಲ್ಲದೆ, ವಿದ್ಯಾರ್ಥಿಗೆ ಎಷ್ಟು ಅರ್ಥ ಆಯಿತು, ಅವನೇನು ನಂಬುತ್ತಾನೆ ಅಂತ ತಿಳಿದುಕೊಳ್ಳಬಹುದು. (ಶುಶ್ರೂಷಾ ಶಾಲೆ ಪು. 253, ಪ್ಯಾ.2-3) ಪ್ರಶ್ನೆ ಕೇಳಿದ ನಂತರ ವಿದ್ಯಾರ್ಥಿ ಉತ್ತರ ಹೇಳುವವರೆಗೆ ತಾಳ್ಮೆಯಿಂದ ಕಾಯಿರಿ. ಒಂದುವೇಳೆ ವಿದ್ಯಾರ್ಥಿ ತಪ್ಪು ಉತ್ತರ ಕೊಟ್ಟರೆ ಸರಿಯಾದ ಉತ್ತರವನ್ನು ನೀವೇ ಹೇಳಬೇಡಿ. ಇನ್ನು ಕೆಲವು ಪ್ರಶ್ನೆಗಳನ್ನು ಕೇಳುತ್ತಾ ಆತನೇ ಉತ್ತರ ಹೇಳುವಂತೆ ಸಹಾಯ ಮಾಡಿ. (ಶುಶ್ರೂಷಾ ಶಾಲೆ ಪು. 238, ಪ್ಯಾ. 2-3) ಹೊಸ ವಿಷಯಗಳನ್ನು ವಿದ್ಯಾರ್ಥಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಷ್ಟು ನಿಧಾನವಾಗಿ ಮಾತಾಡಿ.—ಶುಶ್ರೂಷಾ ಶಾಲೆ ಪು. 230, ಪ್ಯಾ. 4.

ನಾವು ಯಾಕೆ ವೃದ್ಧರಾಗುತ್ತೇವೆ ಎನ್ನುವುದರ ಬಗ್ಗೆ ಅನಾವಶ್ಯಕ ಮಾಹಿತಿ

ಅನಾವಶ್ಯಕ ಮಾಹಿತಿ ಹೇಳುವುದು: ಒಂದು ವಿಷಯದ ಬಗ್ಗೆ ನಿಮಗೆ ಗೊತ್ತಿರುವ ಎಲ್ಲವನ್ನೂ ಹೇಳಿಬಿಡಬೇಡಿ. (ಯೋಹಾ 16:12) ಪ್ಯಾರದಲ್ಲಿರುವ ಮುಖ್ಯ ವಿಷಯಕ್ಕೆ ಗಮನ ಕೊಡಿ. (ಶುಶ್ರೂಷಾ ಶಾಲೆ ಪು. 226, ಪ್ಯಾ. 4-5) ಜಾಸ್ತಿ ವಿವರಣೆ ಕೊಟ್ಟರೆ ಅದು ಆಸಕ್ತಿಕರವಾಗಿದ್ದರೂ ಮುಖ್ಯ ವಿಷಯವನ್ನು ಮರೆಮಾಡಬಹುದು. (ಶುಶ್ರೂಷಾ ಶಾಲೆ ಪು. 235, ಪ್ಯಾ. 3) ಮುಖ್ಯ ವಿಷಯ ವಿದ್ಯಾರ್ಥಿಗೆ ಅರ್ಥ ಆಗಿದೆ ಅಂತ ಗೊತ್ತಾದ ಮೇಲೆ ಮುಂದಿನ ಪ್ಯಾರಕ್ಕೆ ಹೋಗಿ.

ತುಂಬ ಮಾಹಿತಿಯನ್ನು ಆವರಿಸಿ ವಿದ್ಯಾರ್ಥಿಯನ್ನು ಗೊಂದಲಕ್ಕೀಡು ಮಾಡುತ್ತಿರುವ ಸಹೋದರ

ಕೇವಲ ಮಾಹಿತಿ ಆವರಿಸುವುದು: ನಮ್ಮ ಮುಖ್ಯ ಉದ್ದೇಶ ವಿದ್ಯಾರ್ಥಿಯ ಹೃದಯಕ್ಕೆ ಮುಟ್ಟುವುದಾಗಿದೆ, ಮಾಹಿತಿ ಆವರಿಸುವುದಲ್ಲ. (ಲೂಕ 24:32) ಅಧ್ಯಾಯದಲ್ಲಿರುವ ಮುಖ್ಯ ವಚನಗಳ ಕಡೆಗೆ ವಿದ್ಯಾರ್ಥಿಯ ಗಮನ ಸೆಳೆಯಿರಿ. ಹೀಗೆ ದೇವರ ವಾಕ್ಯಕ್ಕಿರುವ ಶಕ್ತಿಯನ್ನು ಸದುಪಯೋಗಿಸಿಕೊಳ್ಳಿ. (2ಕೊರಿಂ 10:4; ಇಬ್ರಿ 4:12; ಶುಶ್ರೂಷಾ ಶಾಲೆ ಪು. 144, ಪ್ಯಾ. 1-3) ಸರಳ ಉದಾಹರಣೆಗಳನ್ನು ಉಪಯೋಗಿಸಿ. (ಶುಶ್ರೂಷಾ ಶಾಲೆ ಪು. 245, ಪ್ಯಾ. 2-4) ವಿದ್ಯಾರ್ಥಿಯ ನಂಬಿಕೆ ಮತ್ತು ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟು ಅದಕ್ಕನುಸಾರ ಅಧ್ಯಯನ ನಡೆಸಿ. ಈ ಪ್ರಶ್ನೆಗಳನ್ನು ಕೇಳಿ: “ಕಲಿಯುತ್ತಿರುವ ವಿಷಯದ ಬಗ್ಗೆ ನಿಮಗೆ ಹೇಗನಿಸುತ್ತದೆ?” “ಇದು ಯೆಹೋವನ ಬಗ್ಗೆ ನಮಗೆ ಏನು ಕಲಿಸುತ್ತದೆ?” “ಈ ಸಲಹೆಗಳನ್ನು ಅನ್ವಯಿಸುವುದರಿಂದ ಯಾವ ಪ್ರಯೋಜನಗಳಿವೆ?”—ಶುಶ್ರೂಷಾ ಶಾಲೆ ಪು. 238, ಪ್ಯಾ. 4-6; ಪು. 259, ಪ್ಯಾ. 1.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ