ನೀವದನ್ನು ಮುಂದೂಡುತ್ತಿದ್ದೀರೊ?
ಏನನ್ನು? ದೀಕ್ಷಾಸ್ನಾನ ಪಡೆದ ಸಾಕ್ಷಿಗಳಿಗೆ ಕೊಡಲಾಗಿರುವ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡ್ ತುಂಬಿಸುವುದನ್ನು. ‘ನಾಳೆ ನಿಮ್ಮ ಜೀವನವು ಹೇಗಿರುವುದೆಂದು ನಿಮಗೆ ತಿಳಿದಿಲ್ಲದ’ ಕಾರಣ ವೈದ್ಯಕೀಯ ತುರ್ತುಪರಿಸ್ಥಿತಿ ಏಳುವಲ್ಲಿ ಯಾವ ಔಷಧೋಪಚಾರ ಮತ್ತು ಚಿಕಿತ್ಸಾಕ್ರಮಗಳನ್ನು ಸ್ವೀಕರಿಸುವಿರೆಂದು ಮುಂಚಿತವಾಗಿಯೇ ನಿರ್ಣಯಿಸಿ ಬರೆದಿಡುವುದು ತುಂಬ ಪ್ರಾಮುಖ್ಯ. (ಯಾಕೋ. 4:14; ಅ. ಕಾ. 15:28, 29) ಪ್ರತಿವರ್ಷವೂ ಈ ಕಾರ್ಡನ್ನು ನವೀಕರಿಸಬೇಕು. ಸಾಕ್ಷಿ ಹೆತ್ತವರ ಅಸ್ನಾತ ಮಕ್ಕಳಿಗಾಗಿ ಐಡೆಂಟಿಟಿ ಕಾರ್ಡ್ ಅನ್ನು ತುಂಬಿಸಬೇಕು.
ನಿಮಗೂ ನಿಮ್ಮ ಮಕ್ಕಳಿಗೂ ಯಾವ ಔಷಧೋಪಚಾರ ಮತ್ತು ಚಿಕಿತ್ಸಾಕ್ರಮಗಳನ್ನು ಸ್ವೀಕರಿಸುವಿರೆಂಬ ವಿಷಯದಲ್ಲಿ ಸ್ಪಷ್ಟ ನಿರ್ಣಯಮಾಡಿ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡ್ ಅನ್ನು ತುಂಬಿಸಿದ್ದೀರೋ? ಇದರ ಸವಿವರವಾದ ಮಾಹಿತಿಗಾಗಿ 2004, ಜೂನ್ 15ರ ಕಾವಲಿನಬುರುಜುವಿನ ‘ವಾಚಕರಿಂದ ಪ್ರಶ್ನೆಗಳು’ ಲೇಖನವನ್ನು ಮತ್ತು 2006, ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ “ರಕ್ತದ ಅಂಶಗಳ ಬಗ್ಗೆ ಮತ್ತು ನನ್ನ ಸ್ವಂತ ರಕ್ತವನ್ನು ಬಳಸುವ ಚಿಕಿತ್ಸಾಕ್ರಮಗಳ ಬಗ್ಗೆ ನನ್ನ ನಿರ್ಣಯವೇನು?” ಎಂಬ ಪುರವಣಿಯನ್ನು ಜಾಗರೂಕತೆಯಿಂದ ಪರಿಗಣಿಸಿ. ಕೊನೆಗೆ, ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡ್ನಲ್ಲಿ ನಿಮ್ಮ ಆಯ್ಕೆಗಳನ್ನೆಲ್ಲ ನಿಖರವಾಗಿ ಬರೆದಿದ್ದೀರೆಂದು ಖಚಿತಪಡಿಸಿಕೊಳ್ಳಿ. ನಿಮ್ಮ ಈ ನಿರ್ಣಯಗಳ ಬಗ್ಗೆ ಅವಿಶ್ವಾಸಿ ಕುಟುಂಬ ಸದಸ್ಯರಿಗೆ ತಪ್ಪದೆ ಪೂರ್ಣ ಮಾಹಿತಿಕೊಡಿ.
ನೀವು ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡ್ ಅನ್ನು ಮನೆಯಲ್ಲಿ ತುಂಬಿಸಬಹುದಾದರೂ ಇಬ್ಬರು ಸಾಕ್ಷಿಗಳ ಮುಂದೆಯೇ ಸಹಿಹಾಕಿ, ದಿನಾಂಕ ಬರೆಯಬೇಕು. ಇದನ್ನು ಈಗ ರಾಜ್ಯ ಸಭಾಗೃಹದಲ್ಲಿ ಗುಂಪು ಮೇಲ್ವಿಚಾರಕ ಅಥವಾ ಇನ್ನಿತರ ಹಿರಿಯರ ಸಹಾಯದಿಂದ ಮಾಡಬಹುದು. ಪ್ರಾಮುಖ್ಯ ಸಂಗತಿಯೇನೆಂದರೆ, “ಸಹಿಹಾಕಿದ ಸಾಕ್ಷಿಗಳ ಹೇಳಿಕೆ”ಗನುಸಾರ (STATEMENT OF WITNESSES) ನೀವು ಆ ಸಾಕ್ಷಿಗಳ ಮುಂದೆಯೇ ಸಹಿಹಾಕಬೇಕು. ಇನ್ನೂ ಹೊಸ ಕಾರ್ಡ್ಗಳನ್ನು ಭರ್ತಿಮಾಡಿರದವರಿಗೆ ನೆರವಿನ ಅಗತ್ಯವಿದೆಯೋ ಎಂದು ಗುಂಪು ಮೇಲ್ವಿಚಾರಕರು ಆಗಾಗ್ಗೆ ವಿಚಾರಿಸಬಹುದು.
ಇಂಗ್ಲಿಷ್ ಓದಿ ಅರ್ಥಮಾಡಿಕೊಳ್ಳುವವರು ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ (dpa-E In 11/04) ಕಾರ್ಡನ್ನು ಬಳಸಬಹುದು. ಆದರೆ ಇಂಗ್ಲಿಷ್ ಬಾರದವರಿಗಾಗಿ ಇನ್ನೊಂದು ಕಾರ್ಡ್ (dpa-1-E In 11/04) ತಯಾರಿಸಲಾಗಿದೆ. ಅದರಲ್ಲಿ 8ನೇ ಅಂಶವೊಂದನ್ನು ಸೇರಿಸಲಾಗಿದೆ. ಅಲ್ಲಿ, ಡೈರೆಕ್ಟಿವ್ ಕಾರ್ಡನ್ನು ಓದಿ ವಿವರಿಸಿದ ವ್ಯಕ್ತಿಯ ಹೆಸರನ್ನು ಬರೆಯಬೇಕು. ಪ್ರಚಾರಕರು ಡೈರೆಕ್ಟಿವ್ ಕಾರ್ಡ್ನ ಮೂಲಪ್ರತಿಯನ್ನೇ ತಮ್ಮೊಂದಿಗೆ ಕೊಂಡೊಯ್ಯಬೇಕು, ನಕಲುಪ್ರತಿಯನ್ನಲ್ಲ.
[ಪುಟ 3ರಲ್ಲಿರುವ ಚೌಕ]
• ನಿಮಗೂ ನಿಮ್ಮ ಮಕ್ಕಳಿಗೂ ಯಾವ ಔಷಧೋಪಚಾರ ಮತ್ತು ಚಿಕಿತ್ಸಾಕ್ರಮಗಳನ್ನು ಸ್ವೀಕರಿಸುವಿರೆಂಬ ವಿಷಯದಲ್ಲಿ ದೃಢನಿರ್ಣಯ ಮಾಡಿದ್ದೀರೋ?
• ತುರ್ತುಪರಿಸ್ಥಿತಿಯಲ್ಲಿ ಉಪಯೋಗಿಸಲಿಕ್ಕೆಂದು ಪೂರ್ತಿಯಾಗಿ ಭರ್ತಿಮಾಡಿರುವ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಕಾರ್ಡನ್ನು ಯಾವಾಗಲೂ ಕೊಂಡೊಯ್ಯುತ್ತೀರೋ?