ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 21-22
“ಯೆಹೋವನ ಚಿತ್ತದಂತೆಯೇ ಆಗಲಿ”
ಪವಿತ್ರಾತ್ಮ ತನ್ನನ್ನು ಯೆರೂಸಲೇಮಿಗೆ ಹೋಗುವಂತೆ ಮಾರ್ಗದರ್ಶಿಸುತ್ತಿದೆ ಎಂದು ಪೌಲನು ನಂಬಿದನು. ಅಲ್ಲಿ ಆತನಿಗೆ ಅಪಾಯ ಕಾದಿತ್ತು. (ಅಕಾ 20:22, 23) ಹಾಗಾಗಿ ಆತನು ಸುರಕ್ಷಿತವಾಗಿರಬೇಕು ಎಂದು ಬಯಸುತ್ತಿದ್ದ ಕ್ರೈಸ್ತರು ಯೆರೂಸಲೇಮಿಗೆ ಹೋಗಬೇಡ ಎಂದು ಆತನನ್ನು ಬೇಡಿಕೊಂಡರು. ಆಗ ಪೌಲ “ನೀವು ಅಳುತ್ತಾ ನನ್ನ ಹೃದಯವನ್ನು ಬಲಹೀನಗೊಳಿಸುವುದೇಕೆ?” ಎಂದು ಕೇಳಿದನು. (ಅಕಾ 21:13) ನಮ್ಮ ಸಹೋದರರು ಯಾರಾದರೂ ಯೆಹೋವನ ಸೇವೆಗಾಗಿ ತಮ್ಮಿಂದ ಆಗುವುದನ್ನೆಲ್ಲ ಮಾಡಲು ಸಿದ್ಧರಾಗಿರುವಾಗ ನಾವು ತಡೆಯಬಾರದು.