ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 28:45
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 45 ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆಜ್ಞೆಗಳನ್ನ ನಿಯಮಗಳನ್ನ ಪಾಲಿಸದೆ ಇದ್ರೆ,+ ಆತನ ಮಾತು ಕೇಳದೆ ಇದ್ರೆ ಎಲ್ಲ ಶಾಪಗಳು+ ತಟ್ಟಿ ನೀವು ಪೂರ್ತಿ ನಾಶ ಆಗ್ತೀರ. ಅವುಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.+

  • ಯೆರೆಮೀಯ 44:12-14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಈಜಿಪ್ಟ್‌ ದೇಶಕ್ಕೆ ಹೋಗಿ ಅಲ್ಲಿ ವಾಸಿಸೋಕೆ ದೃಢತೀರ್ಮಾನ ಮಾಡ್ಕೊಂಡಿದ್ದ ಯೆಹೂದದ ಉಳಿದ ಜನ್ರನ್ನ ನಾನು ಹಿಡಿತೀನಿ, ಅವ್ರೆಲ್ರೂ ಈಜಿಪ್ಟ್‌ ದೇಶದಲ್ಲಿ ನಾಶ ಆಗ್ತಾರೆ.+ ಅವರು ಕತ್ತಿಯಿಂದ ಸಾಯ್ತಾರೆ, ಬರಗಾಲ ಬಂದು ನಾಶ ಆಗ್ತಾರೆ. ಚಿಕ್ಕವರಿಂದ ದೊಡ್ಡವರ ತನಕ ಎಲ್ರೂ ಕತ್ತಿಯಿಂದ, ಬರಗಾಲದಿಂದ ಸಾಯ್ತಾರೆ. ಅವ್ರ ಪಾಡು ನೋಡಿದವರ ಎದೆ ಡವಡವ ಅಂತ ಬಡ್ಕೊಳ್ಳುತ್ತೆ, ಜನ್ರು ಅವ್ರಿಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+ 13 ನಾನು ಯೆರೂಸಲೇಮ್‌ ಮೇಲೆ ಕತ್ತಿ, ಬರಗಾಲ, ಅಂಟುರೋಗ* ಬರೋ ಹಾಗೆ ಮಾಡಿ ಅದಕ್ಕೆ ಶಿಕ್ಷೆ ಕೊಟ್ಟೆ. ಅದೇ ತರ ಈಜಿಪ್ಟ್‌ ದೇಶದಲ್ಲಿ ವಾಸಿಸ್ತಿರೋ ಜನ್ರಿಗೂ ಶಿಕ್ಷೆ ಕೊಡ್ತೀನಿ.+ 14 ಈಜಿಪ್ಟ್‌ ದೇಶದಲ್ಲಿ ವಾಸಿಸೋಕೆ ಹೋದ ಯೆಹೂದದ ಉಳಿದ ಜನ್ರು ಅಲ್ಲಿಂದ ತಪ್ಪಿಸ್ಕೊಳ್ಳಲ್ಲ. ಯೆಹೂದ ದೇಶಕ್ಕೆ ವಾಪಸ್‌ ಬರೋಕೆ ಅವರು ಬದುಕಿರಲ್ಲ. ವಾಪಸ್‌ ಬಂದು ವಾಸ ಮಾಡೋಕೆ ಅವರು ತುಂಬ ಆಸೆಪಡ್ತಾರೆ, ಆದ್ರೆ ಸ್ವಲ್ಪ ಜನ ಮಾತ್ರ ವಾಪಸ್‌ ಬರ್ತಾರೆ.’”

  • ಯೆರೆಮೀಯ 44:27, 28
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ನಾನು ಅವ್ರಿಗೆ ಒಳ್ಳೇದು ಮಾಡೋಕ್ಕಲ್ಲ ಕೆಟ್ಟದು ಮಾಡೋಕೆ ಅವ್ರ ಮೇಲೆ ಕಣ್ಣಿಟ್ಟಿದ್ದೀನಿ.+ ಈಜಿಪ್ಟ್‌ ದೇಶದಲ್ಲಿರೋ ಯೆಹೂದದ ಎಲ್ಲ ಜನ್ರ ಮೇಲೆ ಕತ್ತಿ ಬರಗಾಲ ಬಂದು ಪೂರ್ತಿ ನಾಶ ಆಗ್ತಾರೆ.+ 28 ಸ್ವಲ್ಪ ಜನ ಮಾತ್ರ ಕತ್ತಿಯಿಂದ ತಪ್ಪಿಸ್ಕೊಳ್ತಾರೆ, ಈಜಿಪ್ಟಿಂದ ಯೆಹೂದ ದೇಶಕ್ಕೆ ವಾಪಸ್‌ ಬರ್ತಾರೆ.+ ಆಗ ಈಜಿಪ್ಟಲ್ಲಿ ವಾಸಿಸೋಕೆ ಬಂದ ಯೆಹೂದದ ಉಳಿದ ಎಲ್ಲ ಜನ್ರಿಗೆ ನನ್ನ ಮಾತು ನಿಜ ಆಯ್ತಾ ಅವ್ರ ಮಾತು ನಿಜ ಆಯ್ತಾ ಅಂತ ಗೊತ್ತಾಗುತ್ತೆ.”’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ