ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ನ್ಯಾಯಸ್ಥಾಪಕರು 8
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ನ್ಯಾಯಸ್ಥಾಪಕರು ಮುಖ್ಯಾಂಶಗಳು

      • ಗಿದ್ಯೋನನ ಜೊತೆ ಎಫ್ರಾಯೀಮ್ಯರ ಜಗಳ (1-3)

      • ಮಿದ್ಯಾನ್ಯರ ರಾಜರನ್ನ ಅಟ್ಟಿಸ್ಕೊಂಡು ಹೋಗಿ ಕೊಂದ್ರು (4-21)

      • ಗಿದ್ಯೋನ ರಾಜನಾಗೋಕೆ ಒಪ್ಪಲಿಲ್ಲ (22-27)

      • ಗಿದ್ಯೋನನ ಜೀವನದ ಸಾರಾಂಶ (28-35)

ನ್ಯಾಯಸ್ಥಾಪಕರು 8:1

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 7:2
  • +ನ್ಯಾಯ 12:1; 2ಪೂರ್ವ 25:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2000, ಪು. 25

ನ್ಯಾಯಸ್ಥಾಪಕರು 8:2

ಪಾದಟಿಪ್ಪಣಿ

  • *

    ಅಕ್ಷ. “ಸುಗ್ಗಿಯಲ್ಲಿ ಅಬೀಯೆಜೆರ ಕೊಯ್ದ ದ್ರಾಕ್ಷಿಗಿಂತ ಎಫ್ರಾಯೀಮ್ಯರು ಹಕ್ಕಲಾಯ್ದ ದ್ರಾಕ್ಷಿ ಹೆಚ್ಚಾಗಿತ್ತಲ್ವಾ?”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:11, 34
  • +ನ್ಯಾಯ 7:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2021, ಪು. 16-17

    ಕಾವಲಿನಬುರುಜು,

    8/15/2000, ಪು. 25

ನ್ಯಾಯಸ್ಥಾಪಕರು 8:3

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 7:24, 25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/15/2000, ಪು. 25

ನ್ಯಾಯಸ್ಥಾಪಕರು 8:4

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2004, ಪು. 16-17

ನ್ಯಾಯಸ್ಥಾಪಕರು 8:7

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:16

ನ್ಯಾಯಸ್ಥಾಪಕರು 8:9

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:17

ನ್ಯಾಯಸ್ಥಾಪಕರು 8:10

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 7:12

ನ್ಯಾಯಸ್ಥಾಪಕರು 8:11

ಮಾರ್ಜಿನಲ್ ರೆಫರೆನ್ಸ್

  • +ಅರ 32:34, 35

ನ್ಯಾಯಸ್ಥಾಪಕರು 8:15

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:5, 6

ನ್ಯಾಯಸ್ಥಾಪಕರು 8:16

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:7

ನ್ಯಾಯಸ್ಥಾಪಕರು 8:17

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:8, 9

ನ್ಯಾಯಸ್ಥಾಪಕರು 8:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 83:11

ನ್ಯಾಯಸ್ಥಾಪಕರು 8:22

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:14

ನ್ಯಾಯಸ್ಥಾಪಕರು 8:23

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:18; 1ಸಮು 10:19; ಯೆಶಾ 33:22; 43:15

ನ್ಯಾಯಸ್ಥಾಪಕರು 8:24

ಮಾರ್ಜಿನಲ್ ರೆಫರೆನ್ಸ್

  • +ಆದಿ 16:11; 25:13; 28:9; 37:28

ನ್ಯಾಯಸ್ಥಾಪಕರು 8:26

ಪಾದಟಿಪ್ಪಣಿ

  • *

    ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 8:21

ನ್ಯಾಯಸ್ಥಾಪಕರು 8:27

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಕ್ಷ. “ವೇಶ್ಯೆ ತರ ನಡ್ಕೊಂಡ್ರು.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 28:6; ನ್ಯಾಯ 17:5
  • +ನ್ಯಾಯ 6:11
  • +ನ್ಯಾಯ 2:17
  • +ಕೀರ್ತ 106:36

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2005, ಪು. 16

ನ್ಯಾಯಸ್ಥಾಪಕರು 8:28

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:1
  • +ನ್ಯಾಯ 3:11; 5:31

ನ್ಯಾಯಸ್ಥಾಪಕರು 8:29

ಪಾದಟಿಪ್ಪಣಿ

  • *

    ಅಂದ್ರೆ, ಗಿದ್ಯೋನ. ನ್ಯಾಯ. 6:32 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:32; 1ಸಮು 12:11

ನ್ಯಾಯಸ್ಥಾಪಕರು 8:31

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:1, 2; 2ಸಮು 11:21

ನ್ಯಾಯಸ್ಥಾಪಕರು 8:32

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 6:11, 24

ನ್ಯಾಯಸ್ಥಾಪಕರು 8:33

ಪಾದಟಿಪ್ಪಣಿ

  • *

    ಅಕ್ಷ. “ವೇಶ್ಯೆ ತರ ನಡ್ಕೊಂಡ್ರು.”

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 2:17, 19; 10:6
  • +ನ್ಯಾಯ 9:4

ನ್ಯಾಯಸ್ಥಾಪಕರು 8:34

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 106:43
  • +ನ್ಯಾಯ 3:7

ನ್ಯಾಯಸ್ಥಾಪಕರು 8:35

ಮಾರ್ಜಿನಲ್ ರೆಫರೆನ್ಸ್

  • +ನ್ಯಾಯ 9:16-18

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ನ್ಯಾಯ. 8:1ನ್ಯಾಯ 7:2
ನ್ಯಾಯ. 8:1ನ್ಯಾಯ 12:1; 2ಪೂರ್ವ 25:10
ನ್ಯಾಯ. 8:2ನ್ಯಾಯ 6:11, 34
ನ್ಯಾಯ. 8:2ನ್ಯಾಯ 7:24
ನ್ಯಾಯ. 8:3ನ್ಯಾಯ 7:24, 25
ನ್ಯಾಯ. 8:7ನ್ಯಾಯ 8:16
ನ್ಯಾಯ. 8:9ನ್ಯಾಯ 8:17
ನ್ಯಾಯ. 8:10ನ್ಯಾಯ 7:12
ನ್ಯಾಯ. 8:11ಅರ 32:34, 35
ನ್ಯಾಯ. 8:15ನ್ಯಾಯ 8:5, 6
ನ್ಯಾಯ. 8:16ನ್ಯಾಯ 8:7
ನ್ಯಾಯ. 8:17ನ್ಯಾಯ 8:8, 9
ನ್ಯಾಯ. 8:21ಕೀರ್ತ 83:11
ನ್ಯಾಯ. 8:22ನ್ಯಾಯ 6:14
ನ್ಯಾಯ. 8:23ವಿಮೋ 15:18; 1ಸಮು 10:19; ಯೆಶಾ 33:22; 43:15
ನ್ಯಾಯ. 8:24ಆದಿ 16:11; 25:13; 28:9; 37:28
ನ್ಯಾಯ. 8:26ನ್ಯಾಯ 8:21
ನ್ಯಾಯ. 8:27ವಿಮೋ 28:6; ನ್ಯಾಯ 17:5
ನ್ಯಾಯ. 8:27ನ್ಯಾಯ 6:11
ನ್ಯಾಯ. 8:27ನ್ಯಾಯ 2:17
ನ್ಯಾಯ. 8:27ಕೀರ್ತ 106:36
ನ್ಯಾಯ. 8:28ನ್ಯಾಯ 6:1
ನ್ಯಾಯ. 8:28ನ್ಯಾಯ 3:11; 5:31
ನ್ಯಾಯ. 8:29ನ್ಯಾಯ 6:32; 1ಸಮು 12:11
ನ್ಯಾಯ. 8:31ನ್ಯಾಯ 9:1, 2; 2ಸಮು 11:21
ನ್ಯಾಯ. 8:32ನ್ಯಾಯ 6:11, 24
ನ್ಯಾಯ. 8:33ನ್ಯಾಯ 2:17, 19; 10:6
ನ್ಯಾಯ. 8:33ನ್ಯಾಯ 9:4
ನ್ಯಾಯ. 8:34ಕೀರ್ತ 106:43
ನ್ಯಾಯ. 8:34ನ್ಯಾಯ 3:7
ನ್ಯಾಯ. 8:35ನ್ಯಾಯ 9:16-18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ನ್ಯಾಯಸ್ಥಾಪಕರು 8:1-35

ನ್ಯಾಯಸ್ಥಾಪಕರು

8 ಆಮೇಲೆ ಎಫ್ರಾಯೀಮಿನ ಗಂಡಸ್ರು ಗಿದ್ಯೋನನಿಗೆ “ನೀನ್ಯಾಕೆ ಹೀಗೆ ಮಾಡ್ದೆ? ಮಿದ್ಯಾನ್ಯರ ವಿರುದ್ಧ ಹೋರಾಡೋಕೆ ಹೋದಾಗ ನಮ್ಮನ್ನ ಯಾಕೆ ಕರೀಲಿಲ್ಲ?”+ ಅಂತ ಹೇಳಿ ಗಿದ್ಯೋನನ ಜೊತೆ ಜಗಳಕ್ಕೆ ಹೋದ್ರು.+ 2 ಆಗ ಅವನು “ನಿಮಗೆ ಹೋಲಿಸಿದ್ರೆ ನಾನು ಮಾಡಿದ್ದು ಏನೇನೂ ಅಲ್ಲ. ಅಬೀಯೆಜೆರನ+ ಗಂಡಸ್ರಾದ ನಾವು ಮಾಡಿದ್ದಕ್ಕಿಂತ ಎಫ್ರಾಯೀಮ್‌+ ಗಂಡಸ್ರಾದ ನೀವು ಸಾಧಿಸಿದ್ದು ತುಂಬ ದೊಡ್ಡದು.* 3 ಮಿದ್ಯಾನ್ಯರ ಅಧಿಕಾರಿಗಳಾಗಿದ್ದ ಓರೇಬ್‌ ಮತ್ತು ಜೇಬನನ್ನ+ ದೇವರು ಒಪ್ಪಿಸಿದ್ದು ನಿಮ್ಮ ಕೈಗೆ. ನಿಮಗೆ ಹೋಲಿಸಿದ್ರೆ ನಾನು ಮಾಡಿದ್ದು ಏನೇನೂ ಅಲ್ಲ” ಅಂದ. ಅವನು ಹೀಗೆ ಮಾತಾಡಿದಾಗ ಅವ್ರ ಕೋಪ ತಣ್ಣಗಾಯ್ತು.

4 ಗಿದ್ಯೋನ ಯೋರ್ದನಿಗೆ ಬಂದು ಅದನ್ನ ದಾಟಿದ. ಅವನು, ಅವನ ಜೊತೆ ಇದ್ದ 300 ಗಂಡಸ್ರು ಸುಸ್ತಾಗಿದ್ರು. ಹಾಗಿದ್ರೂ ಶತ್ರುಗಳನ್ನ ಅಟ್ಟಿಸ್ಕೊಂಡು ಹೋದ್ರು. 5 ಆಗ ಅವನು ಸುಕ್ಕೋತಿನ ಗಂಡಸ್ರಿಗೆ “ಮಿದ್ಯಾನಿನ ರಾಜ ಜೆಬಹ ಮತ್ತು ಚಲ್ಮುನ್ನರನ್ನ ಅಟ್ಟಿಸ್ಕೊಂಡು ಹೋಗ್ತಾ ಇದ್ದೀನಿ. ನನ್ನ ಜೊತೆ ಬಂದಿರೋ ಜನ ಸುಸ್ತಾಗಿದ್ದಾರೆ. ದಯವಿಟ್ಟು ಅವ್ರಿಗೆ ತಿನ್ನೋಕೆ ರೊಟ್ಟಿಗಳನ್ನ ಕೊಡಿ” ಅಂದ. 6 ಆದ್ರೆ ಸುಕ್ಕೋತಿನ ಅಧಿಕಾರಿಗಳು “ನಿನ್ನ ಸೈನ್ಯಕ್ಕೆ ರೊಟ್ಟಿ ಕೊಡೋಕೆ ನೀನೇನು ಈಗಾಗ್ಲೇ ಜೆಬಹ ಮತ್ತು ಚಲ್ಮುನ್ನರನ್ನ ಕೈದಿಯಾಗಿ ಹಿಡಿದಿದ್ಯಾ?” ಅಂದ್ರು. 7 ಅದಕ್ಕೆ ಗಿದ್ಯೋನ “ನೀವು ಹೀಗೆ ಹೇಳಿದ್ರಿಂದ ಯೆಹೋವ ಜೆಬಹ ಮತ್ತು ಚಲ್ಮುನ್ನರನ್ನ ನನ್ನ ಕೈಗೆ ಒಪ್ಪಿಸಿದಾಗ ನಿಮಗೆ ಮುಳ್ಳು ಪೊದೆ ಮುಳ್ಳು ಗಿಡಗಳಿಂದ ಬಾರಿಸ್ತೀನಿ”+ ಅಂದ. 8 ಅಲ್ಲಿಂದ ಪೆನೂವೇಲಿಗೆ ಹೋಗಿ ಅಲ್ಲಿನ ಜನ್ರ ಹತ್ರ ಇದನ್ನೇ ಕೇಳ್ಕೊಂಡ. ಆದ್ರೆ ಪೆನೂವೇಲಿನ ಜನ್ರೂ ಸುಕ್ಕೋತಿನ ಜನ ಕೊಟ್ಟ ಉತ್ರಾನೇ ಕೊಟ್ರು. 9 ಆಗ ಅವನು ಪೆನೂವೇಲಿನ ಜನ್ರಿಗೆ “ನಾನು ಸಮಾಧಾನದಿಂದ ವಾಪಸ್‌ ಬರುವಾಗ ಈ ಕೋಟೆಯನ್ನ ನಾಶ ಮಾಡ್ತೀನಿ”+ ಅಂದ.

10 ಜೆಬಹ ಮತ್ತು ಚಲ್ಮುನ್ನ ಸುಮಾರು 15,000 ಸೈನಿಕರ ಜೊತೆ ಕರ್ಕೋರದಲ್ಲಿ ಇದ್ರು. ಪೂರ್ವದಿಕ್ಕಲ್ಲಿ ಇರೋವ್ರ ಸೈನ್ಯದಲ್ಲಿ+ ಉಳಿದಿದ್ದವರು ಇಷ್ಟೇ ಜನ. 1,20,000 ವೀರ ಸೈನಿಕರನ್ನ ಈಗಾಗ್ಲೇ ಕೊಂದುಬಿಟ್ಟಿದ್ರು. 11 ಗಿದ್ಯೋನ ನೋಬಹದ, ಯೊಗ್ಬೆಹಾದ+ ಪೂರ್ವಕ್ಕಿದ್ದ ಡೇರೆವಾಸಿಗಳ ದಾರಿಯಿಂದ ಹೋದ. ದಾಳಿ ಮಾಡೋಕೆ ತಯಾರಾಗಿ ಇರದ ಶತ್ರುಗಳ ಮೇಲೆ ಇದ್ದಕ್ಕಿದ್ದ ಹಾಗೆ ದಾಳಿ ಮಾಡಿದ. 12 ಮಿದ್ಯಾನ್ಯರ ರಾಜರಾಗಿದ್ದ ಜೆಬಹ ಮತ್ತು ಚಲ್ಮುನ್ನ ಅಲ್ಲಿಂದ ಓಡೋದ್ರು. ಆದ್ರೆ ಗಿದ್ಯೋನ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಹಿಡಿದ. ಇದ್ರಿಂದ ಅವ್ರ ಇಡೀ ಪಾಳೆಯ ಭಯಪಡ್ತು.

13 ಹೆರೆಸಿಗೆ ಹತ್ತಿ ಹೋಗೋ ದಾರಿಯಿಂದ ಯೋವಾಷನ ಮಗ ಗಿದ್ಯೋನ ಯುದ್ಧದಿಂದ ವಾಪಸ್‌ ಬಂದ. 14 ಬರೋ ದಾರಿಯಲ್ಲಿ ಸುಕ್ಕೋತಿನ ಒಬ್ಬ ಯುವಕನನ್ನ ಹಿಡಿದು ವಿಚಾರಣೆ ಮಾಡಿದ. ಆ ಯುವಕ ಸುಕ್ಕೋತಿನ ಅಧಿಕಾರಿಗಳಾಗಿದ್ದ ಹಿರಿಯರಾಗಿದ್ದ 77 ಗಂಡಸ್ರ ಹೆಸ್ರುಗಳನ್ನ ಬರೆದು ಗಿದ್ಯೋನನಿಗೆ ಕೊಟ್ಟ. 15 ಅದನ್ನ ತಗೊಂಡು ಅವನು ಸುಕ್ಕೋತಿನ ಗಂಡಸ್ರ ಹತ್ರ ಹೋಗಿ “‘ಸುಸ್ತಾಗಿರೋ ನಿನ್ನ ಸೈನ್ಯಕ್ಕೆ ರೊಟ್ಟಿ ಕೊಡೋಕೆ ನೀನೇನು ಈಗಾಗ್ಲೇ ಜೆಬಹ ಮತ್ತು ಚಲ್ಮುನ್ನರನ್ನ ಕೈದಿಯಾಗಿ ಹಿಡಿದಿದ್ಯಾ?’ ಅಂತ ನನ್ನನ್ನ ಹಂಗಿಸಿದ್ರಲ್ಲ, ಆ ಜೆಬಹ ಮತ್ತು ಚಲ್ಮುನ್ನ ಇಲ್ಲಿದ್ದಾರೆ ನೋಡಿ”+ ಅಂದ. 16 ಅವನು ಆ ಪಟ್ಟಣದ ಹಿರಿಯರಿಗೆ ಮುಳ್ಳು ಪೊದೆ, ಮುಳ್ಳು ಗಿಡಗಳಿಂದ ಬಾರಿಸಿ ಸುಕ್ಕೋತಿನ ಗಂಡಸ್ರಿಗೆ ಪಾಠ ಕಲಿಸಿದ.+ 17 ಆಮೇಲೆ ಪೆನೂವೇಲ್‌+ ಪಟ್ಟಣದ ಕೋಟೆ ನಾಶ ಮಾಡಿ ಅಲ್ಲಿನ ಗಂಡಸ್ರನ್ನ ಕೊಂದ.

18 ಗಿದ್ಯೋನ “ತಾಬೋರಿನಲ್ಲಿ ನೀವು ಕೊಂದು ಹಾಕಿದ ಮನುಷ್ಯರು ಹೇಗಿದ್ರು?” ಅಂತ ಜೆಬಹ ಮತ್ತು ಚಲ್ಮುನ್ನರನ್ನ ಕೇಳ್ದಾಗ “ನಿನ್ನ ಹಾಗೇ ಇದ್ರು. ಒಬ್ಬೊಬ್ನೂ ರಾಜಕುಮಾರನ ತರ ಇದ್ದ” ಅಂದ್ರು. 19 ಅದಕ್ಕೆ ಗಿದ್ಯೋನ “ಅವರು ನನ್ನ ಸಹೋದರರು. ನನ್ನ ತಾಯಿಯ ಮಕ್ಕಳು. ನೀವು ಅವ್ರ ಜೀವ ತೆಗೀದೇ ಇದ್ದಿದ್ರೆ ಜೀವ ಇರೋ ಯೆಹೋವನ ಆಣೆ ನಿಮ್ಮನ್ನ ಸಾಯಿಸ್ತಿರಲಿಲ್ಲ” ಅಂದ. 20 ತನ್ನ ಮೊದಲ್ನೇ ಮಗ ಯೆತೆರನಿಗೆ “ಎದ್ದು ಇವ್ರನ್ನ ಕೊಲ್ಲು” ಅಂದ. ಆದ್ರೆ ಅವನು ಹೆದರಿ ತನ್ನ ಕತ್ತಿ ತೆಗಿಲಿಲ್ಲ. ಯಾಕಂದ್ರೆ ಅವನು ಇನ್ನೂ ಹುಡುಗನಾಗಿದ್ದ. 21 ಆಗ ಜೆಬಹ ಮತ್ತು ಚಲ್ಮುನ್ನ “ನಿನಗೆ ತಾಕತ್ತಿದ್ರೆ ನೀನೇ ಬಂದು ನಮ್ಮನ್ನ ಕೊಲ್ಲು” ಅಂದ್ರು. ಗಿದ್ಯೋನ ಎದ್ದು ಜೆಬಹ ಮತ್ತು ಚಲ್ಮುನ್ನರನ್ನ+ ಕೊಂದ. ಅವ್ರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನ ತಗೊಂಡ.

22 ಆಮೇಲೆ ಇಸ್ರಾಯೇಲ್‌ ಗಂಡಸ್ರು ಗಿದ್ಯೋನನಿಗೆ “ನಮ್ಮನ್ನ ಮಿದ್ಯಾನ್ಯರ ಕೈಯಿಂದ ಕಾಪಾಡಿದ್ದೀಯ.+ ಹಾಗಾಗಿ ನೀನು, ನಿನ್ನ ಮಗ, ನಿನ್ನ ಮೊಮ್ಮಗ ನಮ್ಮನ್ನ ಆಳಬೇಕು” ಅಂದ್ರು. 23 ಅದಕ್ಕೆ ಗಿದ್ಯೋನ “ನಾನಾಗ್ಲಿ ನನ್ನ ಮಗನಾಗ್ಲಿ ನಿಮ್ಮನ್ನ ಆಳಲ್ಲ. ಯೆಹೋವನೇ ನಿಮ್ಮ ರಾಜ, ಆತನೇ ನಿಮ್ಮನ್ನ ಆಳ್ತಾನೆ”+ ಅಂದ. 24 ಆಮೇಲೆ ಗಿದ್ಯೋನ “ನಾನೊಂದು ವಿಷ್ಯ ಕೇಳ್ತೀನಿ. ಲೂಟಿ ಮಾಡಿದ ವಸ್ತುಗಳಿಂದ ನಿಮ್ಮಲ್ಲಿ ಒಬ್ಬೊಬ್ರು ಒಂದೊಂದು ಮೂಗುತಿ ಕೊಡಿ” ಅಂದ. (ಸೋತವರು ಇಷ್ಮಾಯೇಲ್ಯರಾಗಿದ್ರು. ಅವರು ಚಿನ್ನದ ಮೂಗುತಿಗಳನ್ನ ಹಾಕ್ತಿದ್ರು.)+ 25 ಅದಕ್ಕೆ ಅವರು “ಖಂಡಿತ ಕೊಡ್ತೀವಿ” ಅಂತ ಹೇಳಿ ಒಂದು ಬಟ್ಟೆ ಹಾಸಿದ್ರು. ಅದ್ರ ಮೇಲೆ ಪ್ರತಿಯೊಬ್ರೂ ಲೂಟಿ ಮಾಡಿದ ಮೂಗುತಿ ಹಾಕಿದ್ರು. 26 ಅರ್ಧಚಂದ್ರಾಕಾರದ ಆಭರಣಗಳು, ಪದಕಗಳು, ಮಿದ್ಯಾನ್‌ ರಾಜರು ಹಾಕ್ತಿದ್ದ ನೇರಳೆ ಬಣ್ಣದ ಉಣ್ಣೆ ಬಟ್ಟೆಗಳು, ಅವ್ರ ಒಂಟೆಗಳ ಕಂಠಮಾಲೆಗಳು ಇದನ್ನೆಲ್ಲ ಬಿಟ್ಟು ಗಿದ್ಯೋನ ಇಸ್ರಾಯೇಲ್ಯರಿಂದ ಕೇಳಿ ಪಡ್ಕೊಂಡ ಚಿನ್ನದ ಮೂಗುತಿಗಳ ತೂಕನೇ 1,700 ಶೆಕೆಲ್‌* ಇತ್ತು.+

27 ಈ ಚಿನ್ನದಿಂದ ಗಿದ್ಯೋನ ಒಂದು ಏಫೋದನ್ನ*+ ತಯಾರಿಸಿ ತನ್ನ ಪಟ್ಟಣ ಒಫ್ರದಲ್ಲಿ+ ಪ್ರದರ್ಶಿಸಿದ. ಅಲ್ಲಿನ ಇಸ್ರಾಯೇಲ್ಯರೆಲ್ಲ ಅದನ್ನ ಆರಾಧಿಸಿದ್ರು.*+ ಅದು ಗಿದ್ಯೋನನಿಗೆ, ಅವನ ಕುಟುಂಬದವ್ರಿಗೆ ಉರ್ಲಾಯ್ತು.+

28 ಮಿದ್ಯಾನ್ಯರು+ ಇಸ್ರಾಯೇಲ್ಯರ ಕೈಕೆಳಗಿದ್ರು. ಮುಂದೆ ಯಾವತ್ತೂ ಇಸ್ರಾಯೇಲ್ಯರ ಮುಂದೆ ಅವರು ತಲೆ ಎತ್ತಲಿಲ್ಲ. ಗಿದ್ಯೋನನ ಕಾಲದಲ್ಲಿ 40 ವರ್ಷ ದೇಶದಲ್ಲಿ ಸಮಾಧಾನ ಇತ್ತು.+

29 ಹಾಗಾಗಿ ಯೋವಾಷನ ಮಗನಾಗಿದ್ದ ಯೆರುಬ್ಬಾಳ*+ ತನ್ನ ಮನೆಗೆ ವಾಪಸ್‌ ಹೋಗಿ ಅಲ್ಲೇ ಇದ್ದ.

30 ಗಿದ್ಯೋನನಿಗೆ ತುಂಬ ಹೆಂಡತಿಯರು ಇದ್ರು, ಹಾಗಾಗಿ ಅವನಿಗೆ 70 ಗಂಡು ಮಕ್ಕಳಿದ್ರು. 31 ಶೆಕೆಮಿನಲ್ಲಿದ್ದ ಅವನ ಉಪಪತ್ನಿಗೆ ಒಂದು ಗಂಡು ಮಗು ಆಯ್ತು. ಗಿದ್ಯೋನ ಆ ಮಗುಗೆ ಅಬೀಮೆಲೆಕ+ ಅಂತ ಹೆಸ್ರಿಟ್ಟ. 32 ಯೋವಾಷನ ಮಗ ಗಿದ್ಯೋನ ತುಂಬ ವರ್ಷ ಬದುಕಿ ಮುದುಕನಾಗಿ ತೀರಿಹೋದ. ಅವನನ್ನ ಅವನ ತಂದೆ ಯೋವಾಷನ ಸಮಾಧಿಯಲ್ಲೇ ಸಮಾಧಿ ಮಾಡಿದ್ರು. ಅದು ಅಬೀಯೆಜೆರೀಯರಿಗೆ ಸೇರಿದ ಒಫ್ರದಲ್ಲಿತ್ತು.+

33 ಗಿದ್ಯೋನ ತೀರಿಹೋದ ತಕ್ಷಣ ಇಸ್ರಾಯೇಲ್ಯರು ಮತ್ತೆ ಬಾಳ್‌ ದೇವರುಗಳನ್ನ ಆರಾಧಿಸಿದ್ರು.*+ ಬಾಳ್‌-ಬೆರೀತನ್ನ ದೇವರು ಮಾಡ್ಕೊಂಡ್ರು.+ 34 ಇಸ್ರಾಯೇಲ್ಯರು ತಮ್ಮ ಸುತ್ತ ಇದ್ದ ಎಲ್ಲ ಶತ್ರುಗಳ ಕೈಯಿಂದ ತಮ್ಮನ್ನ ಕಾಪಾಡಿದ+ ತಮ್ಮ ದೇವರಾದ ಯೆಹೋವನನ್ನ ಮರೆತುಬಿಟ್ರು.+ 35 ಅಷ್ಟೇ ಅಲ್ಲ ಯೆರುಬ್ಬಾಳ ಅಂದ್ರೆ ಗಿದ್ಯೋನ ಅವ್ರಿಗೆ ಅಷ್ಟೆಲ್ಲ ಒಳ್ಳೇದು ಮಾಡಿದ್ರೂ ಅವರು ಅವನ ಕುಟುಂಬದವ್ರಿಗೆ ಶಾಶ್ವತ ಪ್ರೀತಿ ತೋರಿಸಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ