ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 35
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೆಜ್ಕೇಲ ಮುಖ್ಯಾಂಶಗಳು

      • ಸೇಯೀರ್‌ ಬೆಟ್ಟದ ವಿರುದ್ಧ ಭವಿಷ್ಯವಾಣಿ (1-15)

ಯೆಹೆಜ್ಕೇಲ 35:2

ಮಾರ್ಜಿನಲ್ ರೆಫರೆನ್ಸ್

  • +ಆದಿ 32:3; ಧರ್ಮೋ 2:5
  • +ಯೆರೆ 49:8; ಪ್ರಲಾ 4:22; ಯೆಹೆ 25:8, 9; ಓಬ 1

ಯೆಹೆಜ್ಕೇಲ 35:3

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 25:12, 13

ಯೆಹೆಜ್ಕೇಲ 35:4

ಮಾರ್ಜಿನಲ್ ರೆಫರೆನ್ಸ್

  • +ಯೋವೇ 3:19; ಮಲಾ 1:3

ಯೆಹೆಜ್ಕೇಲ 35:5

ಮಾರ್ಜಿನಲ್ ರೆಫರೆನ್ಸ್

  • +ಆದಿ 27:41; ಆಮೋ 1:11
  • +ಕೀರ್ತ 137:7; ಓಬ 10

ಯೆಹೆಜ್ಕೇಲ 35:6

ಮಾರ್ಜಿನಲ್ ರೆಫರೆನ್ಸ್

  • +ಓಬ 15
  • +ಯೆಹೆ 25:14

ಯೆಹೆಜ್ಕೇಲ 35:7

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 25:13

ಯೆಹೆಜ್ಕೇಲ 35:9

ಮಾರ್ಜಿನಲ್ ರೆಫರೆನ್ಸ್

  • +ಯೆರೆ 49:17, 18; ಯೆಹೆ 25:13; ಮಲಾ 1:4

ಯೆಹೆಜ್ಕೇಲ 35:10

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 36:5; ಓಬ 13

ಯೆಹೆಜ್ಕೇಲ 35:11

ಮಾರ್ಜಿನಲ್ ರೆಫರೆನ್ಸ್

  • +ಆಮೋ 1:11

ಯೆಹೆಜ್ಕೇಲ 35:13

ಮಾರ್ಜಿನಲ್ ರೆಫರೆನ್ಸ್

  • +ಓಬ 3

ಯೆಹೆಜ್ಕೇಲ 35:15

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 4:21; ಓಬ 12, 15
  • +ಯೆಶಾ 34:5; ಯೆಹೆ 25:12, 13; 36:5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೆ. 35:2ಆದಿ 32:3; ಧರ್ಮೋ 2:5
ಯೆಹೆ. 35:2ಯೆರೆ 49:8; ಪ್ರಲಾ 4:22; ಯೆಹೆ 25:8, 9; ಓಬ 1
ಯೆಹೆ. 35:3ಯೆಹೆ 25:12, 13
ಯೆಹೆ. 35:4ಯೋವೇ 3:19; ಮಲಾ 1:3
ಯೆಹೆ. 35:5ಆದಿ 27:41; ಆಮೋ 1:11
ಯೆಹೆ. 35:5ಕೀರ್ತ 137:7; ಓಬ 10
ಯೆಹೆ. 35:6ಓಬ 15
ಯೆಹೆ. 35:6ಯೆಹೆ 25:14
ಯೆಹೆ. 35:7ಯೆಹೆ 25:13
ಯೆಹೆ. 35:9ಯೆರೆ 49:17, 18; ಯೆಹೆ 25:13; ಮಲಾ 1:4
ಯೆಹೆ. 35:10ಯೆಹೆ 36:5; ಓಬ 13
ಯೆಹೆ. 35:11ಆಮೋ 1:11
ಯೆಹೆ. 35:13ಓಬ 3
ಯೆಹೆ. 35:15ಪ್ರಲಾ 4:21; ಓಬ 12, 15
ಯೆಹೆ. 35:15ಯೆಶಾ 34:5; ಯೆಹೆ 25:12, 13; 36:5
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೆಜ್ಕೇಲ 35:1-15

ಯೆಹೆಜ್ಕೇಲ

35 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಸೇಯೀರ್‌+ ಬೆಟ್ಟದ ಕಡೆ ಮುಖಮಾಡಿ ಅದ್ರ ವಿರುದ್ಧ ಭವಿಷ್ಯ ಹೇಳು.+ 3 ಅದಕ್ಕೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಸೇಯೀರ್‌ ಬೆಟ್ಟವೇ, ನಾನು ನಿನಗೆ ವಿರುದ್ಧವಾಗಿದ್ದೀನಿ. ನಾನು ನಿನ್ನ ವಿರುದ್ಧ ಕೈಚಾಚಿ ನಿನ್ನನ್ನ ಯಾರೂ ವಾಸ ಮಾಡದ ಬಂಜರು ಭೂಮಿಯಾಗಿ ಮಾಡ್ತೀನಿ.+ 4 ನಿನ್ನ ಪಟ್ಟಣಗಳು ಹಾಳು ಬೀಳೋ ತರ ಮಾಡ್ತೀನಿ. ನೀನು ಬಂಜರು ಭೂಮಿ ಆಗ್ತೀಯ, ಖಾಲಿಖಾಲಿ ಹೊಡಿತೀಯ.+ ಆಗ, ನಾನೇ ಯೆಹೋವ ಅಂತ ನಿಂಗೆ ಗೊತ್ತಾಗುತ್ತೆ. 5 ನೀನು ಇಸ್ರಾಯೇಲ್ಯರ ಮೇಲೆ ಶಾಶ್ವತ ಹಗೆ ಸಾಧಿಸಿದೆ.+ ಅಷ್ಟೇ ಅಲ್ಲ ಅವ್ರ ಆಪತ್ತಿನ ಕಾಲದಲ್ಲಿ, ಅವ್ರಿಗೆ ಕೊನೆ ಶಿಕ್ಷೆ ಸಿಕ್ಕಿದಾಗ ನೀನು ಅವ್ರನ್ನ ಕತ್ತಿಯ ಬಾಯಿಗೆ ಒಪ್ಪಿಸಿದೆ.”’+

6 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನಾನು ನಿನ್ನನ್ನ ಮರಣಕ್ಕೆ ಒಪ್ಪಿಸ್ತೀನಿ, ನೀನು ಸಾವಿನ ಬಾಯಿಂದ ತಪ್ಪಿಸ್ಕೊಳ್ಳೋಕೆ ಸಾಧ್ಯನೇ ಇಲ್ಲ.+ ನೀನು ಯಾರನ್ನ ದ್ವೇಷಿಸಿದ್ಯೋ ಅವ್ರನ್ನ ಸಾಯಿಸಿದ್ರಿಂದ ನೀನು ಸತ್ತೇ ಸಾಯ್ತೀಯ.+ 7 ನಾನು ಸೇಯೀರ್‌ ಬೆಟ್ಟವನ್ನ ಯಾರೂ ವಾಸಿಸದ ಹಾಗೆ ಬಂಜರು ಭೂಮಿಯಾಗಿ ಮಾಡ್ತೀನಿ.+ ಅಲ್ಲಿ ಹೋಗುವವ್ರನ್ನ, ಬರುವವ್ರನ್ನ ಸಾಯಿಸ್ತೀನಿ. 8 ನಾನು ಅದ್ರ ಬೆಟ್ಟಗಳನ್ನ ಸತ್ತವ್ರ ಶವಗಳಿಂದ ತುಂಬಿಸ್ತೀನಿ. ಕತ್ತಿಯಿಂದ ಸತ್ತವರು ನಿನ್ನ ಬೆಟ್ಟಗಳ ಮೇಲೆ, ನಿನ್ನ ಕಣಿವೆಗಳಲ್ಲಿ, ನಿನ್ನ ಎಲ್ಲ ತೊರೆಗಳಲ್ಲಿ ಬಿದ್ದಿರ್ತಾರೆ. 9 ನೀನು ಇನ್ಮುಂದೆ ಹಾಳುಬೀಳೋ ಹಾಗೆ ನಾನು ಮಾಡ್ತೀನಿ. ನಿನ್ನ ಪಟ್ಟಣಗಳಲ್ಲಿ ಯಾರೂ ವಾಸಿಸಲ್ಲ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’

10 ಯೆಹೋವನಾದ ನಾನೇ ಇಲ್ಲಿರುವಾಗ ‘ಆ ಎರಡು ದೇಶಗಳು, ಜನಾಂಗಗಳು ನನ್ನದಾಗುತ್ತೆ, ನಾವು ಅವನ್ನ ವಶ ಮಾಡ್ಕೊಳ್ತೀವಿ’+ ಅಂತ ನೀನು ಹೇಳ್ದೆ. 11 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ನನ್ನ ಜನ್ರನ್ನ ದ್ವೇಷಿಸಿ ಕಿಡಿಕಾರಿ ಅವ್ರ ಮೇಲೆ ಉರಿದುಬಿದ್ದ ಹಾಗೇ ನಾನು ನಿನ್ನ ಜೊತೆ ನಡ್ಕೊತೀನಿ.+ ನಾನು ನಿನಗೆ ತೀರ್ಪು ಕೊಡುವಾಗ ನಾನು ಯಾರಂತ ನನ್ನ ಜನ್ರಿಗೆ ತೋರಿಸ್ತೀನಿ. 12 ಆಗ, ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ನೀನು ಆಡಿದ ಕೀಳು ಮಾತುಗಳನ್ನೆಲ್ಲ ಯೆಹೋವನಾದ ನಾನು ಕಿವಿಯಾರೆ ಕೇಳಿಸ್ಕೊಂಡಿದ್ದೀನಿ ಅಂತ ನಿನಗೆ ಗೊತ್ತಾಗುತ್ತೆ. ನೀನು “ಅವು ಹಾಳುಬಿದ್ದಿವೆ. ಅವನ್ನ ನಾಶ ಮಾಡೋಕೆ ನಮಗೆ ಇದೇ ಒಳ್ಳೇ ಅವಕಾಶ” ಅಂತ ಹೇಳಿದ್ಯಲ್ಲಾ. 13 ನೀನು ನನ್ನ ವಿರುದ್ಧ ಜಂಬದ ಮಾತುಗಳನ್ನಾಡಿದೆ. ನೀನು ನನಗೆ ಅವಮಾನ ತರೋ ಮಾತುಗಳನ್ನ ಆಡಿದ್ದು ಅಷ್ಟಿಷ್ಟಲ್ಲ.+ ಅವನ್ನೆಲ್ಲ ನಾನು ಕೇಳಿಸ್ಕೊಂಡಿದ್ದೀನಿ.’

14 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ನಿನ್ನಲ್ಲಿ ಜನ್ರೇ ಇಲ್ಲದ ಹಾಗೆ ಮಾಡ್ತೀನಿ, ನಿನ್ನನ್ನ ಬಂಜರು ಭೂಮಿಯಾಗಿ ಮಾಡಿದಾಗ ಇಡೀ ಭೂಮಿ ಖುಷಿಪಡುತ್ತೆ. 15 ಇಸ್ರಾಯೇಲ್ಯರ ಆಸ್ತಿಯೆಲ್ಲ ಹಾಳುಬಿದ್ದಾಗ ನೀನು ಖುಷಿಪಟ್ಟೆ ತಾನೇ? ನಿನಗೂ ಅದೇ ಗತಿ ಬರೋ ತರ ಮಾಡ್ತೀನಿ.+ ಸೇಯೀರ್‌ ಬೆಟ್ಟವೇ, ಇಡೀ ಎದೋಮೇ, ನೀನು ಹಾಳುಬೀಳ್ತಿಯ.+ ಆಗ, ನಾನೇ ಯೆಹೋವ ಅಂತ ಎಲ್ರಿಗೂ ಗೊತ್ತಾಗುತ್ತೆ.’”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ