“ಸ್ವಾತಂತ್ರ್ಯ ಪ್ರಿಯರ” 1991ರ ಜಿಲ್ಲಾ ಅಧಿವೇಶನವನ್ನು ಹಾಜರಾಗಲು ಈಗಲೇ ಏರ್ಪಡಿಸಿರಿ
1 ಇಂದಿನ ಲೋಕ ಪರಿಸ್ಥಿತಿಗಳ ನೋಟದಲ್ಲಿ, ಅನೇಕ ದೇಶಗಳ ಜನರು ತಮಗಿರುವ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದಕ್ಕಾಗಿ ಹಾರೈಸುವದೇನೂ ಆಶ್ಚರ್ಯವಲ್ಲ. ಆದರೆ ನಿಜ ಸ್ವಾತಂತ್ರ್ಯವನ್ನು ನಾವೆಲ್ಲಿ ಕಾಣಬಹುದು? ಯೇಸು ಕ್ರಿಸ್ತನು ಅಂದದ್ದು: “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡವರಾದರೆ ನಿಜವಾಗಿ ನನ್ನ ಶಿಷ್ಯರಾಗಿದ್ದು ಸತ್ಯವನ್ನು ತಿಳುಕೊಳ್ಳುವಿರಿ. ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ (ಸ್ವತಂತ್ರ) ಮಾಡುವುದು.” (ಯೋಹಾ. 8:31, 32) ಈ ಸ್ವಾತಂತ್ರ್ಯವು, ಒಂದು ರಾಜಕೀಯ ಅಧಿಪತಿ ಅಥವಾ ಸರಕಾರ ಕ್ರಮವನ್ನು ಇನ್ನೊಂದು ಅಧಿಪತ್ಯಕ್ಕಾಗಿ ಜನರು ತಿರಸ್ಕರಿಸಿದಾಗ ಅವರು ನಿರೀಕ್ಷಿಸುವ, ಆ ಸೀಮಿತ ರೀತಿಯ ಸ್ವಾತಂತ್ರ್ಯವಲ್ಲ. ಬದಲಾಗಿ ಅದು ಮಾನವ ಸಮಸ್ಯೆಗಳ ತಿರುಳನ್ನೇ ತೆಗೆಯುವದು. ಯೇಸು ಇಲ್ಲಿ ಚರ್ಚಿಸುತ್ತಿದ್ದದ್ದು ಪಾಪಕ್ಕೆ ಬಂಧಿತವಾದ ದಾಸ್ಯತದ್ವಿಂದ ಬಿಡುಗಡೆಯ ಕುರಿತಾಗಿ. (ಯೋಹಾನ 8:24, 34-36 ನೋಡಿ.) ಹೀಗೆ, ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನ ನಿಜ ಶಿಷ್ಯನಾದಾಗ, ಅದು ಅವನ ಜೀವಿತದಲ್ಲಿ ಒಂದು ಗಮನಾರ್ಹ ಬದಲಾವಣೆಯನ್ನು, ಒಂದು ಬಿಡುಗಡೆಯನ್ನು ಫಲಿಸುತ್ತದೆ.
2 ಮೂರು-ದಿನದ ಅದಿವೇಶನ: 1991ರ “ಸ್ವಾತಂತ್ರ್ಯ ಪ್ರಿಯರ” ಜಿಲ್ಲಾ ಅಧಿವೇಶನ ಮಾಲೆಯು ಭಾರತದಲ್ಲಿ ಸಪ್ಟಂಬರ 13-15ಕ್ಕೆ ಆರಂಭಿಸುತ್ತದೆ. ಕಾರ್ಯಕ್ರಮದ ಪ್ರಾರಂಭವು ಶುಕ್ರವಾರ ಬೆಳಿಗ್ಗೆ 10:20ಕ್ಕೆ ಆರಂಭಿಸಲಿದೆ, ಮತ್ತು ರವಿವಾರ ಮಧ್ಯಾಹ್ನ ಸುಮಾರು 4 ಗಂಟೆಗೆ ಕೊನೆಗೊಳ್ಳಲಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಜಾಗ್ರತೆಯಿಂದ ಆಯ್ದ, ನಮ್ಮ ಆತ್ಮಿಕ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಸಮಾಚಾರವನ್ನು ನೀಡಲಾಗುವುದು. ಹಲವಾರು ವಿವಿದ ವಿಷಯಗಳು, ರೋಮಾಯ 8:21ರಲ್ಲಿ ಸೂಚಿತವಾದ ಸ್ವಾತಂತ್ರ್ಯವು ಹೇಗೆ ನಮ್ಮದಾಗಬಲ್ಲದೆಂದು ಎತ್ತಿಹೇಳುವವು. ಹುರಿದುಂಬಿಸುವ ಸಮಾಚಾರವು ವಿಕಸಿಸಲ್ಪಟ್ಟು, ಭಾಷಣಗಳು, ದೃಶ್ಯಗಳು, ಇಂಟರ್ವ್ಯೂ ಮತ್ತು ಒಂದು ಡ್ರಾಮಾದ ರೂಪದಲ್ಲಿ ನೀಡಲ್ಪಡುವವು.
3 ಒಂದು ಕಾರ್ಯಕ್ರಮವನ್ನಾದರೂ ತಪ್ಪಿಸದಂತೆ ನಿರ್ಧಾರ ಮಾಡಿಕೊಳ್ಳಿರಿ. ಇದಕ್ಕಾಗಿ ನಿಮ್ಮ ಕಾಲತಖ್ತೆಯಲ್ಲಿ ವೈಯಕ್ತಿಕ ತ್ಯಾಗಗಳನ್ನು ಮತ್ತು ಬದಲಾವಣೆಗಳನ್ನು ಮಾಡಬೇಕಾದೀತು. ನಿಮ್ಮ ಧಣಿಯೊಂದಿಗೆ ವಿಶೇಷ ಏರ್ಪಾಡುಗಳನ್ನು ಮಾಡುವುದೂ ಅವಶ್ಯವಾದೀತು. ಅನೇಕರು ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಿರುವದಕ್ಕೋಸ್ಕರ, ಆರ್ಥಿಕ ಸೌಲಭ್ಯಗಳನ್ನೂ ತೊರೆಯುತ್ತಾರೆ. ಯಾರು ಇದನ್ನು ಒಂದು ಯಥಾರ್ಥವಾದ ಪ್ರಾರ್ಥನೆಯ ಸಂಗತಿಯಾಗಿ ಮಾಡುತ್ತಾರೋ ಮತ್ತು ಉಪಸ್ಥಿತರಿರಲು ಹೃದಯಪೂರ್ವಕ ಪ್ರಯತ್ನ ಮಾಡುತ್ತಾರೋ ಅವರನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುವನು.—ಲೂಕ 13:24.
4 ಬೇಗ ಬನ್ನಿರಿ: ಯೆಹೋವನ ಸಾಕ್ಷಿಗಳು ತಮ್ಮ ನಂಬಲರ್ಹತೆ ಮತ್ತು ಕಾಲನಿಷ್ಠೆಯ ಯತ್ನಗಳಿಗೆ ಹೆಸರಾದವರು. (ಲೂಕ 16:10) ಜಿಲ್ಲಾ ಅಧಿವೇಶನವನ್ನು ಹಾಜರಾಗುವಾಗಲೂ ಇದು ಮಹತ್ವದ್ದು. ಪ್ರತಿದಿನ ಬೇಗ ಬಂದು, ಕಾರ್ಯಕ್ರಮವು ಆರಂಭಿಸುವ ಮುಂಚೆ ನಿಮ್ಮ ಆಸನದಲ್ಲಿ ಕೂತಿರ್ರಿ. ಇದು ನಿಮ್ಮ ವಾಹನಗಳನ್ನು ಪಾರ್ಕ್ ಮಾಡಲು ಮತ್ತು ಕುಟುಂಬಕ್ಕಾಗಿ ಆಸನ ಕಂಡುಕೊಳ್ಳುವದೇ ಮುಂತಾದ ಗಮನಕೊಡತಕ್ಕ ಇತರ ವಿಷಯಗಳಿಗೂ ಸಾಕಷ್ಟು ಸಮಯವನ್ನು ಕೇಳಿಕೊಳ್ಳುವುದು.
5 ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವಿಕೆಯು ನಮಗೆ ಹಿತಕರವಾದ ಸಹವಾಸದಲ್ಲಿ ಅನಂದಿಸುವ ಉತ್ತಮ ಸಂದರ್ಭವನ್ನು ಕೊಡುತ್ತದೆ. ರಾತ್ರಿ ವೇಳೆ ಮೀರಿ ಮಿತ್ರರೊಂದಿಗೆ ಸಂದರ್ಶಿಸುವುದಾದರೆ, ಮರುದಿನ ಸಮಯಕ್ಕೆ ಸರಿಯಾಗಿ ಹಾಜರಾಗುವ ನಮ್ಮ ಪ್ರಯತ್ನಗಳಿಗೆ ತಡೆಯಾಗಬಹುದು. ರಾತ್ರಿ ತಡವಾಗಿ ಬಂದ ಫಲವಾಗಿ ಬೆಳಿಗ್ಗೆ ಅವಸರಪಟ್ಟು ಹೊರಡಬೇಕಾದಾಗ, ಬಹಳ ವ್ಯಾಕುಲ ಮತ್ತು ಹತಾಶೆಯು ಅಲ್ಲಿರುವುದು. ಇದನ್ನು ತಡೆಯಲು, ರಾತ್ರಿಗೆ ಒಂದು ಸಮಂಜಸ ಸಮಯದಲ್ಲಿ ಮಲಗುವುದು ಪ್ರಯೋಜನಕಾರಿ. ಒಂದು ಕಾಲತಖ್ತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ರಾತ್ರಿ ಎಲ್ಲರಿಗೂ ಒಳ್ಳೇ ನಿದ್ದೆ ಸಿಗುವುದು ಮತ್ತು ಮರುದಿನ ಬೇಗನೆ ಏಳಲು ಸಾಧ್ಯವಾಗುವುದು. ಇದು ಕಾರ್ಯಕ್ರಮ ಆರಂಭವಾದ ಮೇಲೆ ಮುಟ್ಟುವ ಸಂಭಾವ್ಯತೆಯನ್ನು, ಹಾಗೂ ಈವಾಗಲೇ ಉಪಸ್ಥಿತರಿರುವವರನ್ನು ಅಪಕರ್ಶಿಸದಂತೆ, ಒಂದುವೇಳೆ ರೇಗಿಸದಂತೆಯೂ ತಡೆಯುವದು. ಪ್ರತಿದಿನ ಬೇಗ ಬರುವ ಮೂಲಕ ನಿಮ್ಮ ಸಹೋದರ ಮತ್ತು ಸಹೋದರಿಯರೊಂದಿಗೆ ಸಹವಾಸ ಮಾಡಲು ಸಮಯ ಸಿಗುವುದು. ಯೆಹೋವನಿಗೂ ಆತನು ಒದಗಿಸುವ ಆತ್ಮಿಕ ವಿಷಯಗಳಿಗಾಗಿಯೂ ಗೌರವದೊಂದಿಗೆ, ಕ್ರೈಸ್ತ ಪ್ರೀತಿ ಮತ್ತು ಪರಿಗಣನೆಯು, ಸಮಯಕ್ಕೆ ಸರಿಯಾಗಿ ಬರುವಂತೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುವಂತೆ ನಮ್ಮನ್ನು ಪ್ರೇರಿಸಬೇಕು.
6 ಕಿವಿಗೊಟ್ಟು ಕೇಳಿರಿ: ಕಿವಿಗೊಡುವುದೆಂದರೆ ನಮ್ಮ ಹೃದಯ ಮತ್ತು ಮನಸ್ಸಿನಿಂದ, ಕಿವಿ ಮತ್ತು ತಿಳುವಳಿಕೆಯ ಶಕ್ತಿ ಎರಡರಿಂದಲೂ ಲಕ್ಷ್ಯ ಕೊಡುವದಾಗಿದೆ. “ಯೆಹೋವನ ವಾಕ್ಯವನ್ನು ಕೇಳುವ” ಮತ್ತು ಅದಕ್ಕೆ ಕಿವಿಗೊಡುವ ಅಗತ್ಯ ನಮಗಿದೆ. (ಯೆರೆ. 2:4) ಯೆಶಾಯ 55:2ರಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದು: “ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ.” “ಕಿವಿಗೊಟ್ಟು” ಎಂಬದರ ಅರ್ಥವು “ಬಹಳ ಶ್ರಮದಿಂದ ಅಥವಾ ಆತುರದಿಂದ ಗಮನಕೊಡುವುದು” ಎಂದಾಗಿದೆ. ಅಧಿವೇಶನದ ಸಮಯದಲ್ಲಿ ನಾವು ಗಮನಕೊಟ್ಟರೆ, “ಅವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು” ಹೊಂದುವೆವು. (ಜ್ಞಾನೋ. 1:5) ಜಿಲ್ಲಾ ಅಧಿವೇಶನದಲ್ಲಿ ಕಿವಿಗೊಡಲು ಮತ್ತು ಕಲಿಯಲು ರಾಜ್ಯ ಸಭಾಗೃಹಕ್ಕಿಂತ ಸಾಮಾನ್ಯವಾಗಿ ಹೆಚ್ಚು ಯತ್ನ ಮತ್ತು ಏಕಾಗ್ರತೆ ಬೇಕು. ಯಾಕೆ? ಯಾಕಂದರೆ ನಾವು ಹೆಚ್ಚು ಸಮಯ ಕೂತಿರುತ್ತೇವೆ ಮತ್ತು ಬಹುಸಂಖ್ಯೆಯಲ್ಲಿ ಜನರು ಹಾಜರಿರುವದರಿಂದ ಹೆಚ್ಚು ಅಪಕರ್ಶಣೆಗಳು ಅಲ್ಲಿವೆ. ನಾವು ಗಮನ ಕೊಡದಿದ್ದರೆ, ಒದಗಿಸಲ್ಪಡುವ ಸಮೃದ್ಧ ಆತ್ಮಿಕ ಭೋಜನದ ಪೂರ್ಣ ಪ್ರಯೋಜನವನ್ನು ಕಳಕೊಳ್ಳುವೆವು, ನಮ್ಮಿಂದ ಅಪಹರಿಸುವೆವು. (1 ಪೇತ್ರ 2:2) ಏನು ಮಾಡ ಸಾಧ್ಯವಿದೆ? ಕಾರ್ಯಕ್ರಮದ ಸಮಯ ನೋಟ್ಸ್ ಬರೆದಿಡುವ ಉಪಯುಕ್ತ ಹವ್ಯಾಸವನ್ನು ಅಧಿವೇಶನ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ವಿಕಸಿಸುವದನ್ನು ನೋಡುವುದು ಎಷ್ಟು ಸಂತೋಷಕರ. ಜಿಲ್ಲಾ ಅಧಿವೇಶನದ ಕೆಲವು ಭಾಷಣಗಳು ಕಾಲಾನಂತರ ಪ್ರಕಾಶನಗಳಲ್ಲಿ ಬರುತ್ತವೆಯಾದರೂ, ಎಲ್ಲವೂ ಬರಲಾರವು. ಜಿಲ್ಲಾ ಅಧಿವೇಶನದ ಸಮಯದಲ್ಲಿ ಎಲ್ಲರೂ ಸಂಕ್ಷಿಪ್ತ ನೋಟ್ಸ್ಗಳನ್ನು ಬರೆಯುವಂತೆ ಉತ್ತೇಜಿಸಲ್ಪಡುತ್ತಾರೆ ಯಾಕಂದರೆ ಹೇಳಲ್ಪಡುವ ವಿಷಯಗಳ ಕಡೆಗೆ ನಿಮ್ಮ ಗಮನವನ್ನು ಬಿಗಿಹಿಡಿಯಲು ಅದೊಂದು ಒಳ್ಳೇ ಮಾರ್ಗವು.
7 ನೋಟ್ಸ್ಗಳು ವಿಸ್ತಾರವಾಗಿ ಯಾ ಸವಿವರವಾಗಿರಬೇಕಾದ ಅಗತ್ಯವಿಲ್ಲ. ಸಾಮಾನ್ಯವಾಗಿ ಒಂದು ಮುಖ್ಯ ವಿಷಯಕ್ಕೆ ಒಂದೆರಡು ವಾಕ್ಯಗಳು ಸಾಕು. ಎಳೆಯ ಮಕ್ಕಳಿಗೂ ಒಂದು ನೋಟ್ ಪುಸ್ತಕ ಮತ್ತು ಪೆನ್ ಯಾ ಪೆನ್ಸಿಲನ್ನು ಕೊಟ್ಟಲ್ಲಿ ಅವರು ಭಾಷಕನು ನೀಡುವ ಮುಖ್ಯ ವಿಷಯ ಮತ್ತು ಮುಖ್ಯ ವಚನಗಳನ್ನು ಅಥವಾ ಹೊಸ ವಿಚಾರಗಳನ್ನು ಬರೆದಿಡುವರು ಮತ್ತು ಹೀಗೆ ಭಾಷಣಗಳಿಗೆ ಗಮನವಿಡಲು ಮತ್ತು ಅವುಗಳಿಂದ ಹೆಚ್ಚು ಪ್ರಯೋಜನ ಪಡೆಯಲು ಶಕ್ತರಾಗುವರು. ಜಿಲ್ಲಾ ಅಧಿವೇಶನವನ್ನು ಹಿಂಬಾಲಿಸಿ ಬರುವ ಸೇವಾ ಕೂಟದಲ್ಲಿ ಅಧಿವೇಶನದ ಕಾರ್ಯಕ್ರಮದ ಪುನರ್ವಿಮರ್ಶೆ ನಡಿಸಲಿಕ್ಕಾಗಿ, ನೀಟಾಗಿ ಏರ್ಪಡಿಸಲ್ಪಟ್ಟ ನೋಟ್ಸನ್ನು ಹಿರಿಯರು ಉಪಯುಕ್ತವಾಗಿ ಕಾಣುವರು. ಅಲ್ಲದೆ, ಅಧಿವೇಶನದಲ್ಲಿ ನೀಡಲಾದ ಇತರ ಅನೇಕ ವಿಷಯಗಳನ್ನು ತಮ್ಮ ಕಲಿಸುವ ಮತ್ತು ಕುರಿಪಾಲನೆಯ ಕೆಲಸದಲ್ಲಿ ಜತೆಗೂಡಿಸಲೂ ಅವರು ಬಯಸಬಹುದು.
8 ಸಂಗೀತ ಮತ್ತು ಪ್ರಾರ್ಥನೆಯಲ್ಲಿ ಐಕ್ಯರಾಗಿರಿ: ನಮ್ಮ ಆರಾಧನೆಯಲ್ಲಿ ಯೆಹೋವನಿಗೆ ಸ್ತುತಿಗಳನ್ನು ಹಾಡುವ ಮೂಲಕ ಆತನನ್ನು ಗೌರವಿಸುವುದೂ ಸೇರಿದೆ, ಯೇಸು ಮತ್ತು ಅವನ ಅಪೊಸ್ತಲರೂ ಹಾಗೆ ಮಾಡಿದ್ದರು. (ಮಾರ್ಕ 14:26) 1 ಕೊರಿಂಥ 14:15ರಲ್ಲಿ ಹಾಡುವಿಕೆಯ ಕುರಿತಾದ ಪೌಲನ ಹೇಳಿಕೆಯು, ಅದು ಕ್ರೈಸ್ತ ಆರಾಧನೆಯ ಕ್ರಮದ ಭಾಗವಾಗಿತ್ತೆಂದು ಸೂಚಿಸುವಂತೆ ತೋರುತ್ತದೆ. (ನಮ್ಮ ರಾಜ್ಯದ ಸೇವೆ ಮಾರ್ಚ್ 1991, ಪುಟ 3 ಸಹಾ ನೋಡಿ.) ಸಂಗೀತ ಮತ್ತು ಪ್ರಾರ್ಥನೆ ಎರಡರಿಂದಲೂ ಯೆಹೋವನನ್ನು ಸ್ತುತಿಸುವುದರಲ್ಲಿ ನಮ್ಮ ಸಾವಿರಾರು ಸಹೋದರ ಮತ್ತು ಸಹೋದರಿಯರೊಂದಿಗೆ ಐಕ್ಯರಾಗುವ ಒಂದು ಎಣೆಯಿಲ್ಲದ ಸಂದರ್ಭವನ್ನು ಜಿಲ್ಲಾ ಅಧಿವೇಶನಗಳು ನಮಗೆ ಕೊಡುತ್ತವೆ. ಆದರೂ ಕೆಲವರು, ನಮ್ಮ ಆರಾಧನೆಯ ಈ ಮಹತ್ವದ ಭಾಗಗಳಿಗೆ ಗೌರವದಲ್ಲಿ ಕೊರತೆಯನ್ನು ತೋರಿಸಿದ್ದಾರೆ. ಹೇಗೆ? ಆರಂಭದ ಪ್ರಾರ್ಥನೆ ಮತ್ತು ಸಂಗೀತವಾಗುವಾಗ ಅಥವಾ ಅದರನಂತರ ಅನಾವಶ್ಯಕ ತಡವಾಗಿ ಬರುವ ಮೂಲಕವೇ. ಕಾರ್ಯಕ್ರಮದ ಅಂತ್ಯದಲ್ಲಿ ಕೆಲವರು, ಸಂಗೀತವಾಗುವಾಗ ಅಥವಾ ಪ್ರಾರ್ಥನೆಗೆ ಮುಂಚೆ ತಮ್ಮ ಸೀಟುಗಳನ್ನು ಬಿಟ್ಟು ಹೋಗಿ ಬಿಡುತ್ತಾರೆ. ಅಪೂರ್ವ ಸಂದರ್ಭಗಳಲ್ಲಿ ಇದನ್ನು ಮಾಡಲು ಸಕಾರಣವಿದ್ದೀತು. ಆದರೂ, ತಮ್ಮ ಕಾರುಗಳಿಗೆ ಬೇಗ ತಲಪುವಂತೆ ಅಥವಾ ಊಟಕ್ಕೆ ತಡವಾಗದಂತೆ, ಐಕ್ಯತೆಯಲ್ಲಿ ಹಾಡುವ ಮತ್ತು ಪ್ರಾರ್ಥಿಸುವ ಈ ಸಂದರ್ಭವನ್ನು ಕೆಲವರು ಬಿಟ್ಟುಕೊಡುವುದು ಯೆಹೋವನ ಮೇಜಿಗೆ ಯೋಗ್ಯ ಗೌರವವನ್ನೂ ಗಣ್ಯತೆಯನ್ನೂ ತೋರಿಸಿದಂಥಾಗುತ್ತದೋ?—ಮತ್ತಾ. 6:33.
9 ವೈಯಕ್ತಿಕ ಅನುಕೂಲತೆಯನ್ನು ಬೆನ್ನಟ್ಟುವ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. ನಾನು ಮೊದಲೆಂಬ ಲೌಕಿಕ ಭಾವಕ್ಕೆ ನಾವು ಎಡೆಗೊಡಬಾರದು ಅಥವಾ ದುರಾಶೆ ಮತ್ತು ಸ್ವಾರ್ಥತೆಯೇ ಮೊದಲಾದ ಭಕ್ತಿಹೀನ ಸ್ವಭಾವಗಳು ನಮ್ಮ ಆತ್ಮಿಕ ಪ್ರಗತಿಯನ್ನು ಕುಂಠಿಸುವಂತೆ ಬಿಡಬಾರದು. ಇತ್ತೀಚಿನ ವರ್ಷಗಳಲ್ಲಿ, ಪೂರ್ವ ಯುರೋಪ್ ದೇಶಗಳ ನಮ್ಮ ಅನೇಕ ಸಹೋದರ ಮತ್ತು ಸಹೋದರಿಯರು, ಈ ಹಾಡುವ ಮತ್ತು ಪ್ರಾರ್ಥಿಸುವ ಸ್ವಾತಂತ್ರ್ಯದಲ್ಲಿ ಕಟ್ಟಕಡೆಗೆ ಆನಂದಿಸ ಶಕ್ತರಾದರು. ಬಹು ಸಂಖ್ಯಾತರೊಂದಿಗೆ ಕೂಡಿ ಹಾಡಲು ಮತ್ತು ಪ್ರಾರ್ಥಿಸಲು ಶಕ್ತರಾದದ್ದಕ್ಕಾಗಿ ಅವರು ಹೇಗೆ ಪುಳಕಿತಗೊಂಡರೋ ಹಾಗೆ ನಾವು ಸಹಾ ಅದೇ ಗಣ್ಯತೆಯ ಭಾವವನ್ನು ಪವಿತ್ರ ಸಂಗತಿಗಳಿಗಾಗಿ ಈಗ ತೋರಿಸೋಣ ಮತ್ತು ಒಟ್ಟುಗೂಡಿ ಹಾಡುವ ಮತ್ತು ಪ್ರಾರ್ಥಿಸುವ ನಮ್ಮ ಸಂದರ್ಭಗಳನ್ನೆಂದೂ ಹಗುರವಾಗಿ ವೀಕ್ಷಿಸದಿರೋಣ.
10 ನಮ್ಮ ಕ್ರೈಸ್ತ ವರ್ತನೆಗಳು: ಜಿಲ್ಲಾ ಅಧಿವೇಶನಗಳಲ್ಲಿ ನಮ್ಮ ಕ್ರೈಸ್ತ ವರ್ತನೆಗಳು ಮತ್ತು ತೋರಿಕೆಯು, ಯೆಹೋವನ ಸಾಕ್ಷಿಗಳೋಪಾದಿ ನಮಗೆ ಒಳ್ಳೇ ಕೀರ್ತಿಯನ್ನು ಗಳಿಸುತ್ತಾ ಇದೆ. ಇದು ಯಾಕೆಂದರೆ ನಾವು ಯೆಹೋವನ ನಮ್ಮ ಆರಾಧನೆಯಲ್ಲಿ ಗಂಭೀರರಾಗಿದ್ದೇವೆ ಮತ್ತು ಅಧಿವೇಶನಕ್ಕೆ ಹಾಜರಾಗುವುದನ್ನು ಕೇವಲ ಒಂದು ಸಾಮಾಜಿಕ ಗೋಷ್ಟಿಯಾಗಿ ನಾವು ನೋಡದಿರುವ ಕಾರಣದಿಂದಲೇ. ಅಂಥ ವಿಶೇಷ ಸಮಾರಂಭಗಳಲ್ಲಿ ಒಟ್ಟುಗೂಡಿ ಬರುವಾಗ ನಮ್ಮನ್ನು ಎಲ್ಲಾ ಸಮಯದಲ್ಲಿ ಶುಶ್ರೂಷಕರಾಗಿ ನಡೆಸಿಕೊಳ್ಳುವ ಮೂಲಕ, ನಮ್ಮ ಕ್ರೈಸ್ತ ಗಾಂಭೀರ್ಯ ಮತ್ತು ಆತ್ಮಿಕ ಮನಸ್ಸನ್ನು ನಾವು ಕಾಪಾಡಿಕೊಳ್ಳಬೇಕು.—1 ಕೊರಿ. 10:31-33.
11 ಇದನ್ನು ಮಾಡುವುದಕ್ಕೆ ನಾವು ತಪ್ಪಿದರೆ, ಇತರರ ಸಂತೋಷವನ್ನು ಬಾಧಿಸುತ್ತೇವೆ, ಹೊಸಬರನ್ನು ಮುಗ್ಗರಿಸಲೂ ಬಹುದು. ನಮಗೆ ತೋರಿಸಲ್ಪಟ್ಟ ಚಿಕ್ಕ ಉಪಕಾರವನ್ನಾದರೂ ನಾವು ಅಂಗೀಕರಿಸಿ, ಗಣ್ಯತೆ ವ್ಯಕ್ತಪಡಿಸುತ್ತೇವೊ? ನಮ್ಮ ಸುತ್ತಲೂ ಬೇರೆಯವರೂ ಇದ್ದಾರೆ ಮತ್ತು ಅವರಿಗೆ ಗೌರವ ಮತ್ತು ಪರಿಗಣನೆ ತೋರಿಸುವ ಅಗತ್ಯವನ್ನು ನಾವು ಅರಿಯಬೇಕು. ಕಾರ್ಯಕ್ರಮವು ಚಾಲು ಇರುವಾಗ, ಅದು ಕಿವಿಗೊಡುವ ಸಮಯ, ಅಡಾಡ್ಡುವ ಅಥವಾ ಮಾತಾಡುವ ಸಮಯವಲ್ಲವೆಂಬದನ್ನು ಪ್ರತಿಯೊಬ್ಬನು ಗಣ್ಯಮಾಡಬೇಕು.—ಧರ್ಮೋ. 31:12.
12 ನಮ್ಮ ಕ್ರೈಸ್ತ ಸ್ವದರ್ತನೆಗಳು ದೇವರನ್ನು ಗೌರವಿಸಬಹುದಾದ ಇನ್ನೊಂದು ಕ್ಷೇತ್ರವು, ನಮಗೆ ವಸತಿ ಗೃಹದ ಸೌಕರ್ಯ ಕೊಟ್ಟಿರುವವರೊಂದಿಗೆ ನಮ್ಮ ವ್ಯವಹಾರದಲ್ಲಿಯೇ. ಒಳ್ಳೆಯ ಹೊಟೇಲು ರೂಮುಗಳು ನಮಗೆ ಗಮನಾರ್ಹವಾಗಿ ತಗ್ಗಿದ ಬೆಲೆಯಲ್ಲಿ ದೊರಕುತ್ತವೆ. ಹೋಟೆಲ್ ಸಿಬ್ಬಂಧಿಗಳಿಗೆ ನಾವು ಗಣ್ಯತೆಯನ್ನೂ ಪರಿಗಣನೆಯನ್ನೂ ತೋರಿಸಬೇಕು, ಅತಿಯಾಗಿ ತಗಾದೆ ಮಾಡುವವರಾಗದೆ ಸೌಜನ್ಯದಿಂದ ವರ್ತಿಸಬೇಕು. (ಗಲಾ. 6:10) ಹೊಟೇಲಿನಲ್ಲಿ ಯೋಗ್ಯ ನಡವಳಿಕೆಯ ಕುರಿತು ಒಳ್ಳೇ ಬುದ್ಧಿವಾದವು ಕೊಡಲ್ಪಟ್ಟಿದೆ. ಹೆಚ್ಚಿನವರು ಒಳ್ಳೇದಾಗಿ ಪ್ರತಿಕ್ರಿಯಿಸಿ ಹೊಟೇಲು ಸಿಬ್ಬಂಧಿಗಳೊಂದಿಗೆ ಪೂರ್ಣವಾಗಿ ಸಹಕರಿಸಲು ಯಥಾರ್ಥವಾಗಿ ಪ್ರಯತ್ನಿಸುತ್ತಾರಾದರೂ, ಕೆಲವು ಸ್ಥಳಗಳಲ್ಲಿ ಯೆಹೋವನ ಸಾಕ್ಷಿಗಳೆಡೆಗೆ ನಕಾರಾತ್ಮಕ ನೋಟವು ಇನ್ನೂ ಪಟ್ಟುಹಿಡಿದಿರುವುದು ನಿರುತ್ತೇಜನಕ. ಯಾಕೆ?
13 ಹಣ ಉಳಿತಾಯದ ವಿಷಯ ನಾವು ಚಿಂತಿಸಬಹುದಾದರೂ, ತಾವು ನೀಡಿದ ಸೇವೆಗಾಗಿ ಬಕ್ಷೀಸು ಅಪೇಕ್ಷಿಸುವವರನ್ನು ನಾವು ಬುದ್ಧಿಪೂರ್ವಕವಾಗಿ ಅಲಕ್ಷಿಸ ಸಾಧ್ಯವಿಲ್ಲ. “ಟು ಟಿಪ್ ಆರ್ ನಾಟ್?” ಮತ್ತು “ಟಿಪ್ಸ್ ಆನ್ ಟಿಪ್ಪಿಂಗ್” ಎಂಬ ಜೂನ್ 22, 1986ರ ಅವೇಕ್! ಲೇಖನಗಳು (ಪುಟ 24-7) ನಮ್ಮ ಗಮನಕ್ಕೆ ಇನ್ನೂ ಅರ್ಹವಾಗಿವೆ. 24ನೇ ಪುಟದಲ್ಲಿ ಅದು ತಿಳಿಸಿದ್ದು: “ಬಕ್ಷೀಸು ಕೊಡುವುದು, ನೀಡಲ್ಪಟ್ಟ ಹೆಚ್ಚಿನ ಸೇವೆಗಾಗಿ ‘ಉಪಕಾರ’ ಹೇಳುವದಕ್ಕಿಂತ ಹೆಚ್ಚಿನದ್ದು. ಅದು ಒಬ್ಬ ವ್ಯಕ್ತಿಯ ಆದಾಯದ ಮುಖ್ಯ ಭಾಗವಾಗಿದೆ.” ಅವೇಕ್! ಇದನ್ನೂ ತಿಳಿಸಿದೆ ಏನಂದರೆ, “ಅಧಿವೇಶನವೊಂದನ್ನು ಹಾಜರಾಗುವಾಗ, ನೀವು ವೈಯಕ್ತಿಕವಾಗಿ ಏನು ಮಾಡುತ್ತೀರೋ ಅದು, ಇಡೀ ಗುಂಪಿನ ಮೇಲೆ ಪ್ರತಿಬಿಂಬಿಸುತ್ತದೆ. ನಿಮ್ಮ ವರ್ತನೆಯಿಂದ ಜನರು ಇಡೀ ಗುಂಪಿಗೆ ತೀರ್ಪು ಮಾಡುತ್ತಾರೆ.” ಆದ್ದರಿಂದ ಬಕ್ಷೀಸು ಕೊಡುವ ವಿಷಯವಾಗಿ ನಿಮ್ಮ ವೈಯಕ್ತಿಕ ನೋಟಗಳು ಏನೇ ಇರಲಿ, ಯೆಹೋವನ ಸಾಕ್ಷಿಗಳ ಅಧಿವೇಶನದ ಅಭ್ಯರ್ಥಿಗಳಾಗಿ ನೀವು ಒಂದು ಶಹರವನ್ನು ಸಂದರ್ಶಿಸುವಾಗ, ಒಳ್ಳೇ ತೀರ್ಮಾನ ಮತ್ತು ವಿವೇಚನೆಯನ್ನು ಬಳಸಿರಿ, ಮತ್ತು “ಎಲ್ಲವನ್ನು ಸುವಾರ್ತೆಗೋಸ್ಕರವೇ ಎಂದು ಮಾಡಲು” ಸಿದ್ಧರಾಗಿರ್ರಿ.— 1 ಕೊರಿ. 9:19-23.
14 ಕೆಲವು ಸಾಕ್ಷಿಗಳು ಹೊಟೇಲನ್ನು ಬಿಟ್ಟು ಹೋದಾಗ ತಮ್ಮ ರೂಮುಗಳನ್ನು ಅಸಹ್ಯಕರ ಸ್ಥಿತಿಯಲ್ಲಿ ಬಿಟ್ಟದ್ದು ಹೊಟೇಲು ಮ್ಯಾನೇಜರುಗಳನ್ನು ಸ್ವಲ್ಪ ವ್ಯಾಕುಲಕ್ಕೆ ಹಾಕಿದೆ. ಶುದ್ಧತೆ ಮತ್ತು ಪರಿಗಣನೆಯು ನಮ್ಮ ನಡತೆ ಮತ್ತು ಉಡುಪಿನಲ್ಲಿ ಮಾತ್ರವಲ್ಲ ಇತರರ ಸೊತ್ತನ್ನು ಉಪಚರಿಸುವ ರೀತಿಯಲ್ಲೂ ತೋರಿಬರಬೇಕು. ಬಾಡಿಗೆಗೆ ಹಿಡಿದ ರೂಮನ್ನು ನೀಟಾಗಿ ಮತ್ತು ಶುಚಿಯಾಗಿ ಬಿಟ್ಟುಹೋಗಬಾರದೆಂಬದಕ್ಕೆ ಏನು ಕಾರಣವಿದೆ? ಅಪರಿಗಣನೆಯ ವರ್ತನೆ ನಮ್ಮ ಒಳ್ಳೇ ಹೆಸರನ್ನು ಹಾಳುಮಾಡುತ್ತದೆ. ಬರುವ ಜಿಲ್ಲಾ ಅಧಿವೇಶನಗಳಲ್ಲಿ ನಾವೆಲ್ಲರೂ ನಮ್ಮನ್ನು, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿ” ನಡೆಸಿಕೊಳ್ಳುವಂತೆ ನಿರ್ಧಾರವನ್ನು ಮಾಡಬೇಕು. —ತೀತ 2:10.
15 ಹೆತ್ತವರಿಗಾಗಿ: ಎಳೆಯ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ “ಸ್ವಾತಂತ್ರ್ಯ ಪ್ರಿಯರ” ಜಿಲ್ಲಾ ಅಧಿವೇಶನಕ್ಕೆ ಸ್ವಾಗತವಿದೆ ಮತ್ತು ಅವರು ಅದಕ್ಕೆ ಹಾಜರಾಗುವಂತೆ ಅಪೇಕ್ಷಿಸಲಾಗುತ್ತದೆ. ಲೋಕವು ನೀಡುವಂಥ ಸ್ವಾತಂತ್ರ್ಯವು ಅವರನ್ನು ಆತ್ಮಿಕ ಮರಣಕ್ಕೆ ನಡಿಸಬಲ್ಲದು, ಮಾನವ ಕುಲಕ್ಕೆ ಆರಂಭದಲ್ಲಿ ಕೊಡಲ್ಪಟ್ಟ ಸ್ವಾತಂತ್ರ್ಯವನ್ನು ಆದಾಮನು ಕಳಕೊಂಡ ಪ್ರಕಾರವೇ. ಈ ವಿಷಯದಲ್ಲಿ ಸಾಚಾ ವಿವೇಚನೆಯನ್ನು ಯೆಹೋವನ ಸಂಸ್ಥೆಯು ನಮಗೆಲ್ಲರಿಗೆ ಒದಗಿಸಿದೆ. ಎಲ್ಲಾ ಕ್ರೈಸ್ತ ಕೂಟಗಳಲ್ಲಿ ಗಮನಕೊಟ್ಟು ಕೇಳಲು ಕಲಿತಿರುವ ಮತ್ತು ಅಧಿವೇಶನ ಕಾರ್ಯಕ್ರಮದಲ್ಲಿ ತೀವ್ರ ಆಸಕ್ತಿ ತೋರಿಸುವ ಎಳೆಯರನ್ನು ಕಾಣುವಾಗ ನಮಗೆ ಉತ್ತೇಜನ ಸಿಗುತ್ತದೆ. (ಕೀರ್ತ. 148:12, 13) ಆದರೆ ಹೆತ್ತವರ ಮೇಲ್ವಿಚಾರ ಮತ್ತು ಮಾದರಿಯ ಮೇಲೆ, ಹೆಚ್ಚು ಆತುಕೊಂಡಿದೆ. ಅನೇಕ ಎಳೆಯರಿಗೆ ನೋಟ್ಸ್ ಬರಕೊಳ್ಳುವುದರಲ್ಲಿ ಒಳ್ಳೇ ತರಬೇತಿ ಕೊಡಲ್ಪಟ್ಟಿದೆ. ನೋಟ್ಸ್ ಬರೆಯುವದು ಹೇಗೆಂಬದನ್ನು ನಿಮ್ಮ ಮಕ್ಕಳಿಗೆ ನೀವಿನ್ನೂ ಕಲಿಸಿರದಿದ್ದರೆ, ನಿಮ್ಮ ಅಧಿವೇಶನಕ್ಕೆ ಮುಂಚೆ ಉಳಿದಿರುವ ಸಮಯವನ್ನು ಅದಕ್ಕೆ ಯಾಕೆ ಉಪಯೋಗಿಸಬಾರದು? ಅತಿ ಚಿಕ್ಕ ಮಕ್ಕಳು ಸಹಾ, ಭಾಷಕರಿಂದ ನುಡಿಯಲ್ಪಟ್ಟ ವಚನಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಮುಖ್ಯ ಶಬ್ದಗಳನ್ನು ಬರೆಯಶಕ್ತರು. ಕೆಲವು ಹೆತ್ತವರು ದಿನದ ಕಾರ್ಯಕ್ರಮದ ಮುಖ್ಯ ವಿಷಯಗಳನ್ನು ತಮ್ಮ ವಸತಿಗೃಹಕ್ಕೆ ಬಂದ ನಂತರ ಅಥವಾ ಮನೆಗೆ ಹಿಂದೆ ಪ್ರಯಾಣಿಸುವಾಗ ಪುನರಾವರ್ತಿಸುವಂತೆ ಏರ್ಪಡಿಸುತ್ತಾರೆ.
16 ಮಕ್ಕಳ ಸಹಜ ಸ್ವಭಾವವು ಹುಡುಗಾಟಿಕೆ ಎಂದು ಹೆಚ್ಚಿನ ಹೆತ್ತವರು ಬಲ್ಲರು ನಿಶ್ಚಯ. ಅವರಿಗೆ ಜೀವಿತದ ಅನುಭವವಿಲ್ಲ ಮತ್ತು ಅವರು ಬಲಿತವರಲ್ಲ. ಆದ್ದರಿಂದ, ಯಾವಾಗ ಗಮನ ಕೊಡಬೇಕು ಮತ್ತು ಕೂಟಗಳಲ್ಲಿ ಹೇಗೆ ನಡಕೊಳ್ಳಬೇಕು ಎಂದು ಕಲಿಸುವ ಅಗತ್ಯವಿದೆ. ಇದಕ್ಕಾಗಿ ಹೆತ್ತವರ ಉತ್ತಮ ಮೇಲ್ವಿಚಾರವು ಬೇಕು. ಕೆಲವು ಹೆತ್ತವರು ಈ ಕ್ಷೇತ್ರದಲ್ಲಿ ಸಡಿಲವಾಗಿದ್ದಾರೆ. ಕೆಲವೊಮ್ಮೆ, ಒಂದು ಪ್ರಾರ್ಥನೆಯ ಸಮಯದಲ್ಲಿ, ಹೆತ್ತವರು ಯೆಹೋವನಿಗೆ ಯೋಗ್ಯ ಭಯಭಕ್ತಿಯನ್ನು ತೋರಿಸುತ್ತಾರಾದರೂ, ಅವರ ಮಕ್ಕಳು ಆಡುತ್ತಿರುತ್ತಾರೆ ಮತ್ತು ಇತರರನ್ನು ಅಪಕರ್ಶಿಸುತ್ತಾರೆ. ಪ್ರಾರ್ಥನೆಯ ಸಮಯದಲ್ಲೂ ತಮ್ಮ ಮಕ್ಕಳು ಏನು ಮಾಡುತ್ತಾರೆಂದು ಹೆತ್ತವರಿಗೆ ತಿಳಿದಿರಬೇಕು. ಅಲ್ಲದೆ, ಕಾರ್ಯಕ್ರಮದ ಸಮಯದಲ್ಲಿ ಆಸನ ಬಿಟ್ಟು ಹೊರಗೆ ಹೋಗುವಾಗ ಅವರೇನು ಮಾಡುತ್ತಾರೆ? ಅಧಿವೇಶನದ ಕಾರ್ಯಕ್ರಮದಲ್ಲಿ ಅಥವಾ ಅನಂತರ ಮಕ್ಕಳು ಮೇಲ್ವಿಚಾರವಿಲ್ಲದೆ ಬಿಡಲ್ಪಡುತ್ತಾರೋ?—ಜ್ಞಾನೋ. 29:15.
17 ಕೆಲವು ಸಂದರ್ಭಗಳಲ್ಲಿ ಹೆತ್ತವರು ರೂಮಿನಲ್ಲಿರುವಾಗ, ಇಲ್ಲವೇ ಊಟಕ್ಕೆ ಹೋಗಿರುವಾಗ ಅಥವಾ ಬೇರೆ ಯಾವುದೇ ಚಟುವಟಿಕೆಯಲ್ಲಿ ಬಿದ್ದಿರುವಾಗ, ಮಕ್ಕಳನ್ನು ಹೋಟೇಲಿನಲ್ಲಿ ಮೇಲ್ವಿಚಾರವಿಲ್ಲದೇ ಬಿಡಲಾಗುತ್ತದೆ. ಇದು ಯೋಗ್ಯವಲ್ಲ. ಕೆಲವು ಮಕ್ಕಳು ಶಿಸ್ತುರಹಿತರಾಗಿ ಮತ್ತು ಒರಟಾಗಿ ವರ್ತಿಸಿದ್ದಾರೆ ಮತ್ತು ಅವರಿಗೆ ದಯೆಯಿಂದ ಬುದ್ಧಿಹೇಳಲು ಪ್ರಯತ್ನಿಸಿದ ಹಿರಿಯ ಸಹೋದರ ಮತ್ತು ಸಹೋದರಿಯರಿಗೆ ಅವಮರ್ಯಾದೆಯನ್ನೂ ತೋರಿಸಿದ್ದಾರೆ. ಅಂಥ ಒರಟುತನ ಮತ್ತು ಕ್ರೈಸ್ತರಿಗೆ ಅಯೋಗ್ಯವಾದ ನಡವಳಿಕೆ, ಮನೆಯಲ್ಲಿ ಬಿಡಲ್ಪಟ್ಟ ಸ್ವೇಚ್ಛಾಚಾರ ಮತ್ತು ಶಿಸ್ತುರಹಿತ ಜೀವನದ ಫಲಿತಾಂಶವು. ಅದನ್ನು ಖಂಡಿತವಾಗಿ ಸರಿಪಡಿಸಬೇಕು. ತಮ್ಮ ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ” ಬೆಳೆಸುವಾಗ, ಎಲ್ಲಾ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳ ಮೇಲೆ ಎಲ್ಲಾ ಸಮಯದಲ್ಲಿ ನಿಕಟವಾದ ಮೇಲ್ವಿಚಾರ ನಡಿಸಬೇಕು.—ಎಫೆ. 6:4.
18 ನಿಮ್ಮ ಪೂರ್ಣ ಸಹಕಾರವು ಮಾನ್ಯಮಾಡಲ್ಪಡುತ್ತದೆ: ಸಾಕಷ್ಟು ಆಸನಗಳು, ಲಿಟ್ರೇಚರ್, ಆಹಾರ, ಮತ್ತು ಇತರ ಒದಗಿಸುವಿಕೆಗಳು ಹಾಜರಾಗುವ ಪ್ರತಿಯೊಬ್ಬನಿಗೆ ದೊರಕುವಂತೆ ಮಾಡಲು ಗಮನಾರ್ಹ ಯೋಜನೆ ಮತ್ತು ಕೆಲಸವನ್ನು ಮಾಡಲಾಗಿದೆ. ಈ ಏರ್ಪಾಡುಗಳ ಪರಿಣಾಮಕಾರತೆಯನ್ನು ಖಚಿತಗೊಳಿಸಲು, ಕೆಲವು ಸಭೆಗಳನ್ನು ವಿಶಿಷ್ಟವಾಗಿ ಒಂದು ನಿರ್ದಿಷ್ಟ ಅಧಿವೇಶನಕ್ಕೆ ನೇಮಿಸಲಾಗಿದೆ. ಜನನಿಬಿಡತೆಯನ್ನು ತಡೆಯಲು ನಿಮ್ಮ ಪೂರ್ಣ ಸಹಕಾರವು ಅತ್ಯಾವಶ್ಯಕ. ಆದರೂ ಕೆಲವರಿಗೆ ಬೇರೊಂದು ಕ್ಷೇತ್ರದ ಒಂದು ಅಧಿವೇಶನಕ್ಕೆ ಹಾಜರಾಗಲು ಪರಿಸ್ಥಿತಿಗಳು ಅವಶ್ಯಪಡಿಸಬಹುದು. ಹೇಗಿದ್ದರೂ ಹೆಚ್ಚಿನವರು ತಮಗೆ ನೇಮಿತವಾದ ಸ್ಥಳದ ಅಧಿವೇಶನಕ್ಕೇ ಹಾಜರಾಗಲು ಶಕ್ತರಾಗಬೇಕು.—1 ಕೊರಿ. 13:5; ಫಿಲಿ. 2:4.
19 ಸೀಟುಗಳನ್ನು ಕಾದಿರಿಸುವ ವಿಷಯದಲ್ಲೂ ನಿಮ್ಮ ಪೂರ್ಣ ಸಹಕಾರವನ್ನು ವಿನಂತಿಸಲಾಗುತ್ತದೆ. ಸೀಟುಗಳನ್ನು ನಿಮ್ಮ ಅತಿ ಸಮೀಪದ ಕುಟುಂಬ ಸದಸ್ಯರಿಗಾಗಿ ಮತ್ತು ನಿಮ್ಮೊಡನೆ ನಿಮ್ಮ ಸ್ವಂತ ಕಾರಲ್ಲಿ ಪ್ರಯಾಣ ಮಾಡಬಹುದಾದವರಿಗಾಗಿ ಮಾತ್ರವೇ ಕಾದಿರಿಸಬಹುದು ಎಂಬದನ್ನು ದಯವಿಟ್ಟು ನೆನಪಿಡಿರಿ. ಬೇರೆಯವರಿಗಾಗಿ ಸೀಟುಗಳನ್ನು ಕಾದಿರಿಸಬೇಡಿರಿ. ಕೆಲವು ಸಾರಿ ಯಾರೂ ಬರಲಿಕ್ಕಿಲ್ಲದಿದ್ದರೂ ಹೆಚ್ಚು ಸೀಟುಗಳನ್ನು ಕಾಯಿಡ್ದಲಾಗುತ್ತದೆ. ಇದು ಪ್ರೀತಿರಾಹಿತ್ಯತೆ, ಮತ್ತು ಸೀಟುಗಳಿಗಾಗಿ ಹುಡುಕುವ ಅಟೆಂಡೆಂಟರಿಗೆ ಮತ್ತು ಇತರರಿಗೆ ದಾರಿತಪ್ಪಿಸುತ್ತದೆ. ಬೈಬಲ್ ಸೂಚನೆಗೆ ಹೊಂದಿಕೆಯಲ್ಲಿ, ನಾವು ಸಹೋದರ ಪ್ರೀತಿಯನ್ನು ಪ್ರದರ್ಶಿಸಲು ಪ್ರಯಾಸ ಪಡಬೇಕು ಮತ್ತು ಸೀಟು ಕಾದಿರಿಸಲು ಒಪ್ಪಲ್ಪಟ್ಟ ಏರ್ಪಾಡಿನೊಂದಿಗೆ ಪೂರ್ಣ ಸಹಕರಿಸಬೇಕು. ಸೀಟುಗಳು ಧರ್ಮಾರ್ಥವೆಂಬ ಕಾರಣ ಮಾತ್ರದಿಂದ, ತನ್ನ ಅತಿ ಸಮೀಪದ ಕುಟುಂಬಕ್ಕೆ ಅಥವಾ ತನ್ನ ಕಾರಿನಲ್ಲಿ ಬರುವವರಿಗಾಗಿ ಬೇಕಾಗುವಷ್ಟೆ ಹೊರತು, ಹೆಚ್ಚು ಸೀಟುಗಳನ್ನು ಹಿಡಿಯಲು ಯಾರಿಗೂ ಹಕ್ಕಿಲ್ಲ.—2 ಪೇತ್ರ 1:7.
20 ಹಿಂದಿನ-ರಾತ್ರಿ ಯಾವ ಸೀಟು ಹಿಡಿಯುವಿಕೆಗೂ ಅನುಮತಿಯಿಲ್ಲ. ಸಮಯಕ್ಕೆ ಮುಂಚೆ ಡ್ಯೂಟಿಯಲ್ಲಿರಬೇಕಾದ ವಾಲಂಟಿಯರ್ ಕೆಲಸಗಾರರಿಗೆ ಹೊರತು ಬೇರೆ ಯಾರಿಗೂ ಯಾವುದೇ ಅಧಿವೇಶನ ಸೌಕರ್ಯವನ್ನು ಬೆಳಿಗ್ಗೆ 7:00 ಗಂಟೆಗೆ ಮೊದಲು ತೆರೆಯಲಾಗುವುದಿಲ್ಲ. ಈ ಕೆಲಸಗಾರರಲ್ಲಿ ಯಾರಿಗೂ ಬೆಳಿಗ್ಗೆ 7 ಗಂಟೆಗೆ ಮೊದಲು, ಅಂದರೆ ಇತರರು ಕಟ್ಟಡವನ್ನು ಪ್ರವೇಶಿಸುವಂತೆ ಬಿಡಲ್ಪಡುವ ಮುಂಚೆ, ಸೀಟುಗಳನ್ನು ಕಾದಿರಿಸಲು ಅನುಮತಿಯಿಲ್ಲ. ಆ ಸಮಯಕ್ಕೆ ಮುಂಚೆ ಏನು ನಡಿಯುತ್ತದೆಂದು ನೋಡಿಕೊಳ್ಳಲು ಎಟೆಂಡೆಂಟರು ತಮ್ಮ ನಿಯಮಿತ ಸ್ಥಳದಲ್ಲಿ ಇರುವರು, ಹೀಗೆ, ಸೊಸೈಟಿಯ ಸೀಟು-ಕಾದಿರಿಸುವ ಮಾರ್ಗದರ್ಶಕಗಳ ದುರುಪಯೋಗಗಳನ್ನು ತಡೆಯಲಾಗುವುದು. ಹಾಜರಾಗುವ ಎಲ್ಲರ ಪ್ರಯೋಜನಕ್ಕಾಗಿ ಎಟೆಂಡೆಂಟರು ತಮ್ಮ ನೇಮಕಗಳನ್ನು ಪೂರೈಸುವಾಗ ದಯವಿಟ್ಟು ಅವರೊಂದಿಗೆ ಪೂರ್ಣವಾಗಿ ಸಹಕರಿಸಿರಿ.
21 ಧಿವೇಶನದ ವಠಾರಕ್ಕೆ ವೈಯಕ್ತಿಕ ಸಾಮಾನುಗಳನ್ನು ತರುವ ವಿಷಯದಲ್ಲಿ ಯೋಗ್ಯ ನಿರ್ಣಯ ಮಾಡುವಂತೆ ಸೂಚಿಸಲಾಗಿದೆ. ಹಿಂದೆ ಕೆಲವರು, ತಮ್ಮ ಸೀಟುಗಳ ಅಡಿಯಲ್ಲೂ ಇಡಲಾಗದಷ್ಟು ದೊಡ್ಡ ಶೀತಕಗಳನ್ನು ಯಾ ಇತರ ದೊಡ್ಡ ಗಾತ್ರದ ವಸ್ತುಗಳನ್ನು ತಂದಿರುತ್ತಾರೆ. ಇವನ್ನು ಕುರ್ಚಿಗಳ ಮೇಲೆ ಇಲ್ಲವೇ ಕುರ್ಚೀಸಾಲುಗಳ ನಡುವೆ ಇಡಲಾಗುತ್ತಿತ್ತು. ಇದು ಬೇರೆಯವರಿಗೆ ಒಂದು ಸೀಟಿನ ಅಪಹರಣೆ ಮಾತ್ರವಲ್ಲ, ಬೆಂಕಿ ಮತ್ತು ಇತರ ಸುರಕ್ಷಾ ನಿಯಮಗಳ ಉಲ್ಲಂಘನೆಯೂ ಆಗಿತ್ತು. ಇಂಥ ವಿಷಯಗಳಲ್ಲಿ ನಾವು ಪರಿಗಣನೆಯನ್ನು ತೋರಿಸುವ ಅಗತ್ಯವಿದೆ.
22 ಆಹಾರ ಮತ್ತು ಇತರ ಅಧಿವೇಶನದ ಒದಗಿಸುವಿಕೆಗಳನ್ನು ವ್ಯರ್ಥವಾಗಿ ನಷ್ಟಪಡಿಸದಂತೆ ದಯವಿಟ್ಟು ಜಾಗ್ರತೆ ವಹಿಸಿರಿ. ಕಳೆದ ವರ್ಷದ ಅಧಿವೇಶನಗಳಲ್ಲಿ, ಇಡೀ ಸ್ಯಾಂಡ್ವಿಚ್ಗಳನ್ನು ಮತ್ತು ಇತರ ತಿಂಡಿಗಳನ್ನು ಕಸದ ಬುಟ್ಟಿಗಳಲ್ಲಿ ಬಿಸಾಡಿರುವುದು ಕಂಡುಬಂದಿದೆ. ಇದು, ತೋರಿಸಲ್ಪಟ್ಟ ಔದಾರ್ಯದ ದುರುಪಯೋಗ ಮತ್ತು ಶಾಸ್ತ್ರೀಯ ಸೂತ್ರಗಳ ಉಲ್ಲಂಘನೆಯಾಗಿದೆ.—ಯೋಹಾ. 6:12.
23 ತಯಾರಿಸಲ್ಪಟ್ಟ ಆತ್ಮಿಕ ಕಾರ್ಯಕ್ರಮದಿಂದ ಪ್ರಯೋಜನ ಹೊಂದುವುದಕ್ಕಾಗಿ ಸುಸೌಕರ್ಯವಿರುವಲ್ಲಿ ಒಟ್ಟುಗೂಡಲು ಸಾಧ್ಯವಾಗಿರುವುದನ್ನು ಯೆಹೋವನ ಜನರು ಗಣ್ಯಮಾಡುತ್ತಾರೆ ಖಂಡಿತ. ಅಂಥ ಒಕ್ಕೂಟಗಳಲ್ಲಿ ಒದಗಿಸಲಾದ ಅನೇಕ ಸೇವೆಗಳನ್ನು ಮತ್ತು ಅನುಕೂಲತೆಗಳನ್ನೂ ನಾವು ಮಾನ್ಯ ಮಾಡುತ್ತೇವೆ. ಒಳ್ಳೇ ಆಸನಗಳ ಏರ್ಪಾಡು, ಬೆಲೆಯುಳ್ಳ ದ್ವನಿವರ್ಧಕಗಳ ಏರ್ಪಾಡು, ಕಾರ್ಯಸಾಧಕ ಫುಡ್ ಸರ್ವಿಸ್ ವಿಭಾಗಗಳು ಮತ್ತು ಅಧಿವೇಶನ ಹಾಜರಿಯನ್ನು ಆನಂದಕರವೂ ಆತ್ಮಿಕವಾಗಿ ಚೈತನ್ಯಕರವೂ ಆಗಿ ಮಾಡುವ ಇತರ ಸೇವೆಗಳನ್ನು ಸೊಸೈಟಿಯು ಬಹಳ ಪರಾಮರಿಕೆ ಮತ್ತು ಖರ್ಚಿನೊಂದಿಗೆ ಮಾಡುತ್ತದೆ.
24 ಇವುಗಳಿಗಾಗಿ ಖರ್ಚುಗಳು, ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ನಿಮ್ಮ ಸ್ವ-ಸಂತೋಷದ ಕಾಣಿಕೆ ಮತ್ತು ಬೆಂಬಲದಿಂದ ಆವರಿಸಲ್ಪಡುತ್ತದೆ. ನಿಮ್ಮ ಅನುಕೂಲಕ್ಕಾಗಿ ಸ್ಪಷ್ಟವಾಗಿ ಗುರುತಿಸಲ್ಪಟ್ಟ ಕಾಣಿಕೆ ಪೆಟಿಕ್ಟೆಗಳು ಅಧಿವೇಶನ ಸೌಕರ್ಯದಲ್ಲೆಲ್ಲಾ ಇಡಲ್ಪಡುತ್ತವೆ. ಎಲ್ಲಾ ಕಾಣಿಕೆಗಳು ಬಹಳವಾಗಿ ಗಣ್ಯಮಾಡಲ್ಪಡುತ್ತವೆ, ಮತ್ತು ಈ ರೀತಿಯಲ್ಲಿ ರಾಜ್ಯಾಭಿರುಚಿಗಳಿಗೆ ನಿಮ್ಮ ಉದಾರ ಮತ್ತು ಐಕ್ಯತೆಯ ಬೆಂಬಲಕ್ಕಾಗಿ ನಿಮಗೆ ಮುಂಗಡವಾಗಿ ಉಪಕಾರ ಹೇಳಲು ಸೊಸೈಟಿಯು ಬಯಸುತ್ತದೆ. ಇಂತಿಷ್ಟೇ ಕಾಣಿಕೆ ಕೊಡಬೇಕೆಂಬ ಸೂಚನೆ ಇಲ್ಲದಕ್ಕಾಗಿ ಒಬ್ಬ ವ್ಯಕ್ತಿ ಗಣ್ಯತೆ ವ್ಯಕ್ತಪಡಿಸಿ ಹೇಳಿದ್ದು: ‘ನಾವಾಗಿಯೇ ಸ್ವಇಚ್ಛೆಯಿಂದ—ನಮ್ಮ ಗಣ್ಯತೆಯ ಆಳಕ್ಕೆ ಅನುಸಾರ ಕೊಡುವಂಥಾದ್ದು ಅತ್ಯಂತ ಇಷ್ಟಕರವಾಗಿ ತೋರುತ್ತದೆ. ಹೀಗೆ ಎಂದಿಗಿಂತ ಹೆಚ್ಚನ್ನು ಕೊಡಲು ನಾವು ಪ್ರೇರಿಸಲ್ಪಡುವುದು ಕೃತಜ್ಞತೆಯಿಂದಲೇ.’ ಈ ಖರ್ಚುಗಳ ಕುರಿತು ಎಲ್ಲರೂ ತಮ್ಮ ವೈಯಕ್ತಿಕ ಜವಾಬ್ದಾರಿಯನ್ನು ಅರಿತುಕೊಳ್ಳುವಂತೆ ಪ್ರೇರಿಸಲ್ಪಟ್ಟು, ತಮ್ಮ ಪರಿಸ್ಥಿತಿಯು ಅನುಮತಿಸುವ ಮಟ್ಟಿಗೆ ಪಾಲು ಕೊಡುವ ಮೂಲಕ ಇದರಲ್ಲಿ ಪೂರ್ಣವಾಗಿ ಸಹಕರಿಸುವರೆಂಬ ಭರವಸ ನಮಗಿದೆ.—ಲೂಕ 6:38.
25 “ಸ್ವಾತಂತ್ರ್ಯ ಪ್ರಿಯರ” ಜಿಲ್ಲಾ ಅಧಿವೇಶನಕ್ಕೆ ಉಪಸ್ಥಿತರಿರ್ರಿ! “ಸ್ವಾತಂತ್ರ್ಯ ಪ್ರಿಯರ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಮೂಲಕ ಮತ್ತು ಕಾರ್ಯಕ್ರಮಕ್ಕೆ ನಿಕಟ ಗಮನವನ್ನು ಕೊಡುವ ಮೂಲಕ, ಕ್ರಿಸ್ತನ ದ್ವಾರ ಬರುವ ಸ್ವಾತಂತ್ರ್ಯಕ್ಕಾಗಿ ಮತ್ತು ಕ್ರೈಸ್ತ ಸ್ವಾತಂತ್ರ್ಯದ ಯೋಗ್ಯ ಉಪಯೋಗಕ್ಕಾಗಿ ನಾವು ನಮ್ಮ ಗಣ್ಯತೆಯನ್ನು ಹೆಚ್ಚಿಸುವೆವು. ಆರಂಭದ ಸಂಗೀತಕ್ಕೆ ನೀವು ಅಲ್ಲಿರುವಂತೆ ಮತ್ತು ಆದಿತ್ಯವಾರ ಮಧ್ಯಾಹ್ನ ಸಮಾಪ್ತಿಯ ಪ್ರಾರ್ಥನೆಯ ತನಕ ಎಲ್ಲಾ ಕಾರ್ಯಕ್ರಮಗಳಿಗೆ ಉಪಸ್ಥಿತರಿರುವಂತೆ ಈಗಲೇ ನಿಮ್ಮ ಯೋಜನೆಗಳನ್ನು ಮಾಡಿರಿ.
[Box on page 5]
ಜಿಲ್ಲಾ ಅಧಿವೇಶನ ಮರುಜ್ಞಾಪಕಗಳು
ರೂಮಿಂಗ್: ಅಧಿವೇಶನದಿಂದ ಒದಗಿಸಲ್ಪಡುವ ವಸತಿಯನ್ನು ಉಪಯೋಗಿಸುವುದರಲ್ಲಿ ನಿಮ್ಮ ಸಹಕಾರವು ಅತಿಯಾಗಿ ಗಣ್ಯಮಾಡಲ್ಪಡುತ್ತದೆ. ನಿಮ್ಮ ರಿಸರ್ವೇಶನನ್ನು ರದ್ದು ಮಾಡುವುದು ಅವಶ್ಯವೆಂದು ಕಂಡರೆ, ನೇರವಾಗಿ ಹೊಟೇಲಿಗೆ ಬರೆಯಿರಿ ಇಲ್ಲವೇ ಫೋನ್ ಮಾಡಿರಿ. ಇದನ್ನು ಸಾಧ್ಯವಾದಷ್ಟು ಮುಂಚಿತವಾಗಿ ಮಾಡಿದಲ್ಲಿ, ರೂಮನ್ನು ಬೇರೆಯವರಿಗೆ ದೊರಕುವಂತೆ ಮಾಡಬಹುದು.
ದೀಕ್ಷಾಸ್ನಾನ: ದೀಕ್ಷಾಸ್ನಾನ ಅಭ್ಯರ್ಥಿಗಳು ಶನಿವಾರ ಬೆಳಿಗ್ಗೆ ಕಾರ್ಯಕ್ರಮ ಪ್ರಾರಂಭಿಸುವ ಮುಂಚೆ ನೇಮಿತ ವಿಭಾಗದಲ್ಲಿ ಕೂತಿರುವಂತೆ ಪ್ರಯತ್ನಿಸಬೇಕು. ದೀಕ್ಷಾಸ್ನಾನ ಪಡೆಯಲು ಬಯಸುವ ಪ್ರತಿಯೊಬ್ಬನು ಒಂದು ಸಭ್ಯ ಸ್ನಾನದುಡುಪು ಮತ್ತು ಟವಲನ್ನು ತರಬೇಕು. ಭಾಷಕನಿಂದ ಸ್ನಾನದ ಭಾಷಣ ಮತ್ತು ಪ್ರಾರ್ಥನೆ ಮಾಡಲ್ಪಟ್ಟ ಮೇಲೆ, ಕಾರ್ಯಕ್ರಮದ ಅಧ್ಯಕ್ಷನು ಸ್ನಾನದ ಅಭ್ಯರ್ಥಿಗಳಿಗೆ ಸಂಕ್ಷಿಪ್ತ ಸೂಚನೆಗಳನ್ನು ಕೊಡುವನು ಮತ್ತು ಸಂಗೀತವನ್ನು ತಿಳಿಸುವನು. ಕೊನೆಯ ಶ್ಲೋಕವು ಆರಂಭಿಸುವಾಗ, ಎಟೆಂಡೆಂಟರು ಸ್ನಾನದ ಅಭ್ಯರ್ಥಿಗಳನ್ನು ಸ್ನಾನದ ಸ್ಥಳಕ್ಕೆ ಅಥವಾ ಅಲ್ಲಿಗೆ ಕೊಂಡೊಯ್ಯುವ ವಾಹನಗಳಿಗೆ ನಡಿಸುವರು ಮತ್ತು ಉಳಿದ ಸಭಿಕರು ಸಂಗೀತವನ್ನು ಹಾಡಿ ಮುಗಿಸುವರು. ದೀಕ್ಷಾಸ್ನಾನವು ಸಮರ್ಪಣೆಯ ಸೂಚಕವಾಗಿರುವುದರಿಂದ ಅದು, ಆ ವ್ಯಕ್ತಿ ಮತ್ತು ಯೆಹೋವನ ನಡುವಣ ಆಪ್ತತೆಯ ಮತ್ತು ವೈಯಕ್ತಿಕ ವಿಷಯವಾಗಿರುವುದು. ಆದ್ದರಿಂದ, ಯಾವದರಲ್ಲಿ ಇಬ್ಬರು ಅಥವಾ ಹೆಚ್ಚು ಸ್ನಾನ ಅಭ್ಯರ್ಥಿಗಳು ಆಲಿಂಗಿಸಿ ಅಥವಾ ಕೈಕೈ ಹಿಡಿದು ಸ್ನಾನ ತಕ್ಕೊಳ್ಳುತ್ತಾರೋ ಅಂಥ ಜೊತೆ-ಸ್ನಾನಗಳಿಗೆ ಯಾವ ಒದಗಿಸುವಿಕೆಯೂ ಅಲ್ಲಿರಲಾರದು.
ಪಯನೀಯರ ಐಡೆಂಟಿಫಿಕೇಶನ್: ಎಲ್ಲಾ ಕ್ರಮದ ಮತ್ತು ವಿಶೇಷ ಪಯನೀಯರರು, ಹಾಗೂ ಸಂಚಾರ ಮೇಲ್ವಿಚಾರಕರು, ತಮ್ಮ ವಾಚ್ಟವರ್ ಐಡೆಂಟಿಫಿಕೇಶನ್ ಆ್ಯಂಡ್ ಎಸೈನ್ಮೆಂಟ್ ಕಾರ್ಡ್ (ಎಸ್-202)ನ್ನು ಅಧಿವೇಶನಕ್ಕೆ ತರಬೇಕು. ಅವರು ಹಾಜರಾಗುವ ಜಿಲ್ಲಾ ಅಧಿವೇಶನದ ಸಮಯದಲ್ಲಿ ಕಡಿಮೆಪಕ್ಷ ಆರು ತಿಂಗಳಿಂದಾದರೂ ಸೇವೆಯಲ್ಲಿರುವ ಪಯನೀಯರರಿಗೆ ರೂ.60.00 ಮೌಲ್ಯದ ಅಧಿವೇಶನ ಊಟದ ಟಿಕೆಟುಗಳು, ತಮ್ಮ ವಾಚ್ಟವರ್ ಐಡಿ ಕಾರ್ಡನ್ನು ತೋರಿಸುವ ಮೂಲಕ ಸಿಗುವುದು, ಈ ಸೌಲಭ್ಯವು ಒಂದು ಅಧಿವೇಶನದಲ್ಲಿ ಮಾತ್ರ. ಆದ್ದರಿಂದ ನಿಮ್ಮ ಕಾರ್ಡನ್ನು ಹಣದಂತೆ ಜೋಪಾಸನೆ ಮಾಡಿರಿ. ಅಧಿವೇಶನದಲ್ಲಿ ಅದರ ಬದಲಿ ಸಿಗಲಾರದು. ವಾಚ್ಟವರ್ ಐಡಿ ಕಾರ್ಡನ್ನು ತೋರಿಸಿದಾಗ ಮಾತ್ರವೇ ಪಯನೀಯರರಿಗೆ ಬುಕ್ರೂಮಲ್ಲಿ ಲಿಟ್ರೇಚರ್ ಪಯನೀಯರ ದರದಲ್ಲಿ ಸಿಗುವುದು. ಬೆತೆಲ್ ಸೇವೆಯಲ್ಲಿರುವವರು ಇವೇ ಒದಗಿಸುವಿಕೆಗಳನ್ನು ತಮ್ಮ ಬೆತೆಲ್ ಐಡಿ ಕಾರ್ಡನ್ನು ತೋರಿಸುವ ಮೂಲಕ ಪಡಕೊಳ್ಳಬಹುದು.
ವಾಲಂಟಿಯರ್ ಸೇವೆ: ಜಿಲ್ಲಾ ಅಧಿವೇಶನದ ಸುಗಮ ಸಾಗುವಿಕೆಗಾಗಿ ಸ್ವಯಂಸೇವೆಯ ಸಹಾಯವು ಬೇಕಾಗಿದೆ. ಅಧಿವೇಶನದ ಸ್ವಲ್ಪಾಂಶ ಮಾತ್ರ ನೀವು ಸೇವೆ ಮಾಡ ಶಕ್ತರಾದರೂ, ನಿಮ್ಮ ಸೇವೆಯು ಗಣ್ಯ ಮಾಡಲ್ಪಡುವುದು. ನೀವು ಸಹಾಯ ಮಾಡಶಕ್ತರಿದ್ದರೆ, ಅಧಿವೇಶನಕ್ಕೆ ಬಂದಾಗ ವಾಲಂಟಿಯರ್ ಸರ್ವಿಸ್ ವಿಭಾಗಕ್ಕೆ ದಯವಿಟ್ಟು ವರದಿ ಮಾಡಿರಿ. 16 ವಯಸ್ಸಿಗೆ ಕೆಳಗಿನ ಮಕ್ಕಳೂ ಅಧಿವೇಶನದ ಸಾಫಲ್ಯಕ್ಕೆ ನೆರವಾಗಬಹುದು, ಆದರೆ ಅವರು ಒಬ್ಬ ಹೆತ್ತವನೊಂದಿಗೆ ಅಥವಾ ಬೇರೆ ಜವಾಬ್ದಾರಿ ವಯಸ್ಕನೊಂದಿಗೆ ಕೆಲಸಮಾಡುವಂತೆ ಕೇಳಲ್ಪಡುತ್ತಾರೆ.
ಲ್ಯಾಪೆಲ್ ಕಾರ್ಡ್ಗಳು: ಅಧಿವೇಶನದಲ್ಲಿ ಮತ್ತು ಅಧಿವೇಶನ ಸ್ಥಳಕ್ಕೆ ಬರುವ ಮತ್ತು ಹೋಗುವ ಸಮಯದಲ್ಲಿ, ವಿಶಿಷ್ಟವಾಗಿ ರಚಿಸಲ್ಪಟ್ಟ ಲ್ಯಾಪೆಲ್ ಕಾರ್ಡುಗಳನ್ನು ದಯವಿಟ್ಟು ಧರಿಸಿರಿ. ಪ್ರಯಾಣ ಮಾಡುವಾಗ ಒಂದು ಉತ್ತಮ ಸಾಕ್ಷಿಯನ್ನು ಕೊಡುವಂತೆ ಇದು ಹೆಚ್ಚಾಗಿ ಸಹಾಯಕಾರಿ. ಲ್ಯಾಪೆಲ್ ಕಾರ್ಡುಗಳನ್ನು ನಿಮ್ಮ ಸಭೆಯ ಮೂಲಕ ಪಡಕೊಳ್ಳಬೇಕು, ಅವು ಅಧಿವೇಶನದಲ್ಲಿ ದೊರೆಯಲಾರವು. ಲ್ಯಾಪೆಲ್ ಕಾರ್ಡ್ ಹೋಲರ್ಡ್ಗಳಿಗಾಗಿ ಸಭೆಗಳು ಆರ್ಡರ್ ಮಾಡಬೇಕು, ಆದರೆ ಲ್ಯಾಪೆಲ್ ಕಾರ್ಡ್ಗಳು ಸೊಸೈಟಿಯಿಂದ ಸಭೆಗಳಿಗೆ ರವಾನಿಸಲ್ಪಡುವವು. ಹೋಲರ್ಡಿನ ಬೆಲೆ 1.00 ರೂಪಾಯಿ ಮತ್ತು ಕಾರ್ಡಿನ ಬೆಲೆ 0.20 ಪೈಸೆ.
ಎಚ್ಚರಿಕೆಯ ಮಾತುಗಳು: ನಿಮ್ಮ ವಾಹನಗಳನ್ನು ನೀವೆಲ್ಲೇ ಪಾರ್ಕ್ ಮಾಡಿದರೂ ಅದಕ್ಕೆ ಎಲ್ಲಾ ಸಮಯದಲ್ಲಿ ಬೀಗ ಹಾಕಿಡಿರಿ ಮತ್ತು ಹೊರಗೆ ಕಾಣುವಂತೆ ಒಳಗೆ ಏನನ್ನೂ ಎಂದೂ ಬಿಟ್ಟು ಹೋಗಬೇಡಿ. ಸಾಧ್ಯವಾದರೆ ನಿಮ್ಮ ವಸ್ತುಗಳನ್ನು ಕಾರಿನ ಟ್ರಂಕಿನೊಳಗೆ ಬೀಗ ಹಾಕಿಡಿರಿ. ಅಲ್ಲದೆ, ಕಳ್ಳರು ಮತ್ತು ಜೇಬುಗಳ್ಳರ ವಿಷಯದಲ್ಲೂ ಎಚ್ಚರವಿರ್ರಿ, ದೊಡ್ಡ ಜನಸಮೂಹಕ್ಕೆ ಅವರು ಆಕರ್ಶಿತರಾಗುತ್ತಾರೆ. ಅಧಿವೇಶನದ ಆಸನಗಳ ಮೇಲೂ ಬೆಲೆಯುಳ್ಳ ಯಾವ ವಸ್ತುವನ್ನೂ ಬಿಟ್ಟುಹೋಗಬಾರದು. ದಯವಿಟ್ಟು ಜಾಗ್ರತೆ ವಹಿಸಿರಿ.
ಕೆಲವು ಹೊಟೇಲುಗಳು ಅನೈತಿಕ ವಿಷಯದ ಯಾ ಅಶ್ಲೀಲ ರೂಪದ ಟೀವೀ ಚಿತ್ರಪಟಗಳನ್ನು ಸುಲಭವಾಗಿ ಒದಗಿಸುತ್ತವೆಂದು ವರದಿಯಾಗಿದೆ. ಇಂಥಾ ವಸತಿ ಗೃಹಗಳಲ್ಲಿ ಮಕ್ಕಳು ಮೇಲ್ವಿಚಾರವಿಲ್ಲದೆ ಟೀವೀ ನೋಡುವದನ್ನು ತಡೆಯುವ ಅಗತ್ಯವನ್ನು ಇದು ಎತ್ತಿಹೇಳುತ್ತದೆ.
1991-92 ಜಿಲ್ಲಾ ಅಧಿವೇಶನ ಸಂಗೀತ ನಂಬ್ರಗಳು
ಬೆಳಿಗ್ಗೆ ಮಧ್ಯಾಹ್ನ
ಶುಕ್ರವಾರ 19 (90) 172 (92)
34 (8) 85 (44)
136 (23)
ಶನಿವಾರ 117 (65) 155 (49)
121 (68) 113 (62)
13 (82) 105 (46)
ಆದಿತ್ಯವಾರ 215 (117) 53 (27)
174 (78) 191 (9)
10 (80) 212 (110)
*ಆವರಣದೊಳಗೆ ಕೊಡಲ್ಪಟ್ಟ ಸಂಗೀತ ನಂಬ್ರಗಳು 1966ರ ಸಂಗೀತ ಪುಸ್ತಕ ಉಪಯೋಗಿಸುವ ಕೇರಳ ಅಧಿವೇಶನಗಳಿಗೆ ಮಾತ್ರ. ಉಳಿದ ಅಧಿವೇಶನಗಳು 1984ರ ಸಂಗೀತ ಪುಸ್ತಕವನ್ನು ಉಪಯೋಗಿಸುವವು.