ಮೇ ತಿಂಗಳಿಗಾಗಿ ಸೇವಾ ಕೂಟಗಳು
ಮೇ 6ರ ವಾರ
ಸಂಗೀತ 153 (44)
10 ನಿ: ಸ್ಥಳಿಕ ತಿಳಿಸುವಿಕೆಗಳು. “ಬೇಸಿಗೆಗಾಗಿ ನಿಮ್ಮ ಯೋಜನೆಗಳೇನಾಗಿವೆ?” ಅನ್ನು ಪುನರ್ವಿಮರ್ಶಿಸಿರಿ.
15 ನಿ: “ಪ್ರಾಣಪೂರ್ವಕರಾಗಿರ್ರಿ!” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಅಕ್ಟೋಬರ್ 15, 1981ರ ವಾಚ್ಟವರ್, ಪುಟ 25ರಲ್ಲಿರುವ “ಒಂದು ಕುಟುಂಬವಾಗಿ ಚರ್ಚಿಸಲಿಕ್ಕಿರುವ ಅಂಶಗಳು” ಅನ್ನು ಪರಿಗಣಿಸಿರಿ.
20 ನಿ: “ನಿಮ್ಮ ನೆರೆಯವನೊಂದಿಗೆ ಸತ್ಯವನ್ನು ಮಾತಾಡಿರಿ.” ಪ್ರಶ್ನೋತ್ತರಗಳು. ಸೂಚಿಸಲ್ಪಟ್ಟ ನಿರೂಪಣೆಗಳನ್ನು ಪುನರ್ವಿಮರ್ಶಿಸಿರಿ. ಆರಂಭಿಸಲಿಕ್ಕಾಗಿರುವ ಸಂಕ್ಷಿಪ್ತ ನಿರೂಪಣೆಗಳನ್ನು ಬಳಸುತ್ತಾ, ಪತ್ರಿಕಾ ವಿತರಣೆಯಲ್ಲಿ ಪಾಲನ್ನು ತೆಗೆದುಕೊಳ್ಳಲು ಹೊಸಬರನ್ನು ಪ್ರೋತ್ಸಾಹಿಸಿರಿ. ಚಂದಾ ನೀಡುವಿಕೆಯ ಎರಡು ಪ್ರತ್ಯಕ್ಷಾಭಿನಯಗಳಿರಲಿ. ಚಂದಾವು ನಿರಾಕರಿಸಲ್ಪಡುವಲ್ಲಿ, ಪತ್ರಿಕೆಗಳ ಒಂದು ಅಥವಾ ಹಲವಾರು ಬಿಡಿ ಪ್ರತಿಗಳನ್ನು ನೀಡುವ ಅಗತ್ಯವನ್ನು ಒತ್ತಿಹೇಳಿರಿ.
ಸಂಗೀತ 148 (81) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 13ರ ವಾರ
ಸಂಗೀತ 63 (32)
7 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
18 ನಿ: “ನಾವು ಹಿಂದೆಂದೂ ಆತ್ಮಿಕವಾಗಿ ಇಷ್ಟೊಂದು ಪುಷ್ಕಳತೆಯನ್ನು ಪಡೆದಿರಲಿಲ್ಲ!” ಪ್ರಶ್ನೋತ್ತರಗಳು. ಒಬ್ಬ ಹದಿವಯಸ್ಕನನ್ನು ಒಳಗೊಂಡು, ಇಬ್ಬರು ಅಥವಾ ಮೂವರು ಪ್ರಚಾರಕರು, ಅವರ ಆಶೀರ್ವಾದಗಳಲ್ಲಿ ಕೆಲವನ್ನು ಉಲ್ಲೇಖಿಸಲಿ. ವರ್ಧಿಸಿದ ಗಣ್ಯತೆಯು ಪವಿತ್ರ ಸೇವೆಯಲ್ಲಿನ ಚಟುವಟಿಕೆಯ ಕುರಿತಾಗಿ ಹುರುಪುಳ್ಳವರಾಗುವಂತೆ ನಮ್ಮನ್ನು ಹೇಗೆ ಪ್ರಚೋದಿಸುತ್ತದೆಂಬುದನ್ನು ತೋರಿಸುತ್ತಾ ಮುಕ್ತಾಯಗೊಳಿಸಿರಿ.
20 ನಿ: “ಎಲ್ಲ ವಿಧಗಳ ಜನರಿಗೆ ಎಲ್ಲ ವಿಷಯಗಳಾಗಿ ಪರಿಣಮಿಸುವುದು.” 1-9 ಪ್ಯಾರಗ್ರಾಫ್ಗಳ ಪ್ರಶ್ನೋತ್ತರ ಆವರಿಸುವಿಕೆ. 5 ಮತ್ತು 6ನೇ ಪ್ಯಾರಗ್ರಾಫ್ಗಳನ್ನು ಓದಿರಿ. ನಾವು ಏನನ್ನು ಹೇಳುತ್ತೇವೋ ಅದರ ಕುರಿತಾಗಿ ಜಾಗ್ರತೆಯಿಂದಿರುವ ಅಗತ್ಯವನ್ನು ಒತ್ತಿಹೇಳಿರಿ—ಜಾಣ್ಮೆಯಿಂದಿರುವುದು ಸಂಧಾನ ಮಾಡಿಕೊಳ್ಳುವುದನ್ನು ಅರ್ಥೈಸುವುದಿಲ್ಲ. ಕ್ಷೇತ್ರದಲ್ಲಿ ನಾವು ಎದುರಾಗುವ ಧಾರ್ಮಿಕ ಅಭಿಪ್ರಾಯಗಳ ಸ್ವಲ್ಪ ಜ್ಞಾನವನ್ನು ಪಡೆದಿರುವುದು ಪ್ರಯೋಜನಕರವಾಗಿದೆಯಾದರೂ, ಯೆಹೋವನ ನಾಮವನ್ನು ಘನತೆಗೇರಿಸುವ ಮತ್ತು ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ಗುರಿಯ ದೃಷ್ಟಿಯನ್ನು ನಾವು ಕಳೆದುಕೊಳ್ಳಬಾರದು. ಅಂಥ ಒಂದು ಗ್ರಹಿಸುವಿಕೆಯು, ಅನೇಕ ವೇಳೆ ನಿಷ್ಪ್ರಯೋಜಕವಾಗಿ ರುಜುವಾಗುವ ಮಾನವ ತತ್ತ್ವಜ್ಞಾನಗಳ ಕುರಿತಾದ ಉದ್ದುದ್ದದ ವಿವಾದಗಳೊಳಗೆ ಪ್ರವೇಶಿಸುವುದರಿಂದ ನಮ್ಮನ್ನು ತಡೆಯಬೇಕು.
ಸಂಗೀತ 193 (103) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 20ರ ವಾರ
ಸಂಗೀತ 126 (58)
10 ನಿ: ಸ್ಥಳಿಕ ತಿಳಿಸುವಿಕೆಗಳು. ಪತ್ರಿಕಾ ವಿತರಣೆಯಲ್ಲಿ ಪಾಲುತೆಗೆದುಕೊಳ್ಳುವಂತೆ ಎಲ್ಲರನ್ನೂ ಉತ್ತೇಜಿಸಿರಿ.
15 ನಿ: “ಸತ್ಯವನ್ನು ಮಾತಾಡುತ್ತಾ ಇರಿ.” ಅಭ್ಯಾಸಗಳನ್ನು ಪ್ರಾರಂಭಿಸುವ ಗುರಿಯೊಂದಿಗೆ, ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿ ಚಂದಾಗಳು ಮತ್ತು ಪತ್ರಿಕೆಗಳು ನೀಡಲ್ಪಟ್ಟ ಸ್ಥಳದಲ್ಲೆಲ್ಲಾ ಪುನಃ ಸಂದರ್ಶನಗಳನ್ನು ಮಾಡುವ ಅಗತ್ಯವನ್ನು ಒತ್ತಿಹೇಳಿರಿ. ಪ್ರಥಮ ಭೇಟಿಯಲ್ಲಿ ಪತ್ರಿಕೆಗಳು ಮಾತ್ರವೇ ಸ್ವೀಕರಿಸಲ್ಪಟ್ಟಿರುವಲ್ಲಿ, ಪುನಃ ಸಂದರ್ಶನದಲ್ಲಿ ಒಂದು ಚಂದಾವು ನೀಡಲ್ಪಡಸಾಧ್ಯವಿದೆ, ಅಥವಾ ಒಂದು ಪತ್ರಿಕಾ ಪಥವನ್ನು ಆರಂಭಿಸಸಾಧ್ಯವಿದೆ. ಎರಡು ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳಿರಲಿ.
20 ನಿ: “ಎಲ್ಲ ವಿಧಗಳ ಜನರಿಗೆ ಎಲ್ಲ ವಿಷಯಗಳಾಗಿ ಪರಿಣಮಿಸುವುದು.” 10ನೇ ಪ್ಯಾರಗ್ರಾಫ್ನಿಂದ ಕೊನೆಯ ವರೆಗೆ ಆವರಿಸುತ್ತಾ ಸಭಿಕರೊಂದಿಗೆ ಚರ್ಚೆ. ನಾಲ್ಕು ಸಂಭಾಷಣ ತಡೆಗಟ್ಟುಗಳ ವಿಷಯದ ಪ್ರತಿಯೊಂದು ವಿಷಯಕ್ಕೆ, ಪ್ರತಿಕ್ರಿಯಿಸುವ ಕೆಲವು ವಿಧಗಳ ಕುರಿತಾಗಿ ಸಂಕ್ಷಿಪ್ತ ಪ್ರತ್ಯಕ್ಷಾಭಿನಯಗಳಿರಲಿ. ಶುಶ್ರೂಷೆಯಲ್ಲಿ ಅವರು ಪಾಲನ್ನು ತೆಗೆದುಕೊಳ್ಳುವಾಗಲೆಲ್ಲಾ ತಮ್ಮೊಂದಿಗೆ ಈ ನಾಲ್ಕು ಪುಟಗಳ ಪುರವಣಿಯನ್ನು ಇಟ್ಟುಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿರಿ, ಪ್ರಾಯಶಃ ರೀಸನಿಂಗ್ ಪುಸ್ತಕದ ತಮ್ಮ ವೈಯಕ್ತಿಕ ಪ್ರತಿಯೊಳಗೆ ಅದನ್ನು ಇಡುವುದರ ಮೂಲಕ.
ಸಂಗೀತ 28 (5) ಮತ್ತು ಸಮಾಪ್ತಿಯ ಪ್ರಾರ್ಥನೆ.
ಮೇ 27ರ ವಾರ
ಸಂಗೀತ 121 (20)
5 ನಿ: ಸ್ಥಳಿಕ ತಿಳಿಸುವಿಕೆಗಳು.
15 ನಿ: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ಜೂನ್ ತಿಂಗಳಿನಲ್ಲಿ ನೀಡುವುದು. ಜ್ಞಾನ ಪುಸ್ತಕವು ಏಕೆ ಪ್ರಕಾಶಿಸಲ್ಪಟ್ಟಿತೆಂಬುದನ್ನು ಸೇವಾ ಮೇಲ್ವಿಚಾರಕನು ಮೊದಲು ಚರ್ಚಿಸುತ್ತಾನೆ. ಅನಂತರ ಅವನು ಇಬ್ಬರು ಅಥವಾ ಮೂವರು ಸಮರ್ಥ ಪ್ರಚಾರಕರೊಂದಿಗೆ ಅದರ ಕೆಲವು ಎತ್ತಿತೋರಿಸುವ ಅಂಶಗಳನ್ನು ಪುನರ್ವಿಮರ್ಶಿಸುತ್ತಾನೆ. ಈ ಪುಸ್ತಕವು, ನಮ್ಮ ಭವಿಷ್ಯತ್ತು, ಮಾನವ ಕಷ್ಟಾನುಭವ, ದೇವರ ರಾಜ್ಯ, ದೇವಭಕ್ತ ನಡವಳಿಕೆ, ಕುಟುಂಬ ಜೀವನ, ಮತ್ತು ಪ್ರಾರ್ಥನೆಯ ಪ್ರಯೋಜನಗಳ ಕುರಿತಾದ ಪ್ರಶ್ನೆಗಳನ್ನು ಉತ್ತರಿಸುತ್ತದೆ. ಆ ಗುಂಪಿನಲ್ಲಿರುವ ಇಬ್ಬರು ಬೇರೆ ಬೇರೆ ವ್ಯಕ್ತಿಗಳು, ಪ್ರಥಮ ಭೇಟಿಯಲ್ಲಿ ಅಥವಾ ಒಂದು ಪುನಃ ಸಂದರ್ಶನದಲ್ಲಿ ಅಭ್ಯಾಸವೊಂದನ್ನು ಪ್ರಾರಂಭಿಸಲು ಉಪಯೋಗಿಸಸಾಧ್ಯವಿರುವ ಸಮೀಪಿಸುವಿಕೆಯನ್ನು ಪ್ರತ್ಯಕ್ಷಾಭಿನಯಿಸುತ್ತಾರೆ. ಅನಂತರ ಸೇವಾ ಮೇಲ್ವಿಚಾರಕನು ಮುಂದಿನ ಅಂಶಗಳನ್ನು ಚರ್ಚಿಸುತ್ತಾನೆ. ಒಂದು ಅಲ್ಪಾವಧಿಯ ಸಮಯದಲ್ಲಿ ಹೆಚ್ಚು ಪರಿಣಾಮಕಾರಿಯಾದ ಬೈಬಲ್ ಅಭ್ಯಾಸಗಳನ್ನು ನಡೆಸುವ ಅಗತ್ಯವಿದೆ. ಈ ಪುಸ್ತಕವು ಆ ಉದ್ದೇಶಕ್ಕಾಗಿಯೇ ವಿಶೇಷವಾಗಿ ವಿನ್ಯಾಸಿಸಲ್ಪಟ್ಟಿತು. ಇದು ಸತ್ಯವನ್ನು ಒಂದು ಸಕಾರಾತ್ಮಕ, ಸಂಕ್ಷೇಪ ವಿಧದಲ್ಲಿ ಪ್ರಸ್ತುತಪಡಿಸುತ್ತದೆ. ಪ್ರತಿಯೊಂದು ಪ್ಯಾರಗ್ರಾಫ್ನಲ್ಲಿರುವ, ಹಾಗೂ ಪ್ರತಿಯೊಂದು ಅಧ್ಯಾಯದ ಅಂತ್ಯದಲ್ಲಿರುವ ಪ್ರಶ್ನೆಗಳು, ನಮಗೆ ಮುಖ್ಯ ಅಂಶಗಳ ಮೇಲೆ ಕೇಂದ್ರೀಕರಿಸುವಂತೆ ಸಹಾಯಮಾಡುತ್ತವೆ. ಈ ಪುಸ್ತಕವು, ದೀಕ್ಷಾಸ್ನಾನ ಪಡೆಯಲು ಬಯಸುವ ಹೊಸದಾಗಿ ಸಮರ್ಪಿತರಾದವರಿಗೆ ಕೇಳಲ್ಪಡುವ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಳ್ಳುತ್ತದೆ. ಜೂನ್ ತಿಂಗಳಿನಲ್ಲಿ ಅಭ್ಯಾಸಗಳನ್ನು ಪ್ರಾರಂಭಿಸುವ ಗುರಿಯೊಂದಿಗೆ ಕೆಲಸಮಾಡಲು ಎಲ್ಲರನ್ನೂ ಉತ್ತೇಜಿಸಿರಿ.
10 ನಿ: ಪ್ರಶ್ನಾ ಪೆಟ್ಟಿಗೆ. ಓದಿ, ಸಭಿಕರೊಂದಿಗೆ ಚರ್ಚಿಸಿರಿ.
15 ನಿ: “ನೀವು ತೀರ ಕಾರ್ಯಮಗ್ನರಾಗಿದ್ದೀರೋ?” ಪ್ರಶ್ನೋತ್ತರಗಳು. ಸಮಯವು ಅನುಮತಿಸಿದಂತೆ, ಜೂನ್ 8, 1990ರ ಅವೇಕ್!, 14-16ನೇ ಪುಟಗಳಿಂದ ತೆಗೆದ ಹೇಳಿಕೆಗಳನ್ನು ಸೇರಿಸಿರಿ. ಒಂದು ಕಾರ್ಯಮಗ್ನ ದೇವಪ್ರಭುತ್ವ ಕಾರ್ಯತಖ್ತೆಯನ್ನು ಯಶಸ್ವಿಕರವಾಗಿ ನಿಭಾಯಿಸಲು, ತಾವು ಏನು ಮಾಡಿದ್ದೇವೆ ಎಂಬುದರ ಕುರಿತಾದ ಒಬ್ಬರು ಅಥವಾ ಇಬ್ಬರು ಪ್ರಚಾರಕರ ಸಂಕ್ಷಿಪ್ತ ತಿಳಿಸುವಿಕೆಗಳಿರಲಿ.
ಸಂಗೀತ 155 (36) ಮತ್ತು ಸಮಾಪ್ತಿಯ ಪ್ರಾರ್ಥನೆ.