ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/99 ಪು. 2
  • ಜನವರಿಗಾಗಿ ಸೇವಾ ಕೂಟಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿಗಾಗಿ ಸೇವಾ ಕೂಟಗಳು
  • 1999 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜನವರಿ 4ರಿಂದ ಆರಂಭವಾಗುವ ವಾರ
  • ಜನವರಿ 11ರಿಂದ ಆರಂಭವಾಗುವ ವಾರ
  • ಜನವರಿ 18ರಿಂದ ಆರಂಭವಾಗುವ ವಾರ
  • ಜನವರಿ 25ರಿಂದ ಆರಂಭವಾಗುವ ವಾರ
1999 ನಮ್ಮ ರಾಜ್ಯದ ಸೇವೆ
km 1/99 ಪು. 2

ಜನವರಿಗಾಗಿ ಸೇವಾ ಕೂಟಗಳು

ಜನವರಿ 4ರಿಂದ ಆರಂಭವಾಗುವ ವಾರ

ಸಂಗೀತ 36

10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಜನವರಿ 1ರಿಂದ ಕೂಟದ ಸಮಯಗಳಲ್ಲಿ ಏನಾದರೂ ಬದಲಾವಣೆಗಳಿರುವಲ್ಲಿ, ಹೊಸ ಸಮಯಗಳನ್ನು ತೋರಿಸುವ ಕರಪತ್ರಗಳನ್ನು ಉಪಯೋಗಿಸುವಂತೆ ಎಲ್ಲರಿಗೂ ಜ್ಞಾಪಿಸಿರಿ.

15 ನಿ: “ಹಳೆಯ ಪುಸ್ತಕಗಳ ಸದುಪಯೋಗವನ್ನು ಮಾಡಿರಿ.” ಪ್ರಶ್ನೋತ್ತರಗಳು. ಸಭೆಯಲ್ಲಿರುವ ಹಳೆಯ ಪುಸ್ತಕಗಳ ಬಗ್ಗೆ ತಿಳಿಸಿರಿ. ಅವುಗಳ ಆಸಕ್ತಿದಾಯಕ ವೈಶಿಷ್ಟ್ಯಗಳಲ್ಲಿ ಕೆಲವೊಂದನ್ನು ಹೇಳಿರಿ ಮತ್ತು ಅವುಗಳನ್ನು ಇತರರಿಗೆ ಹೇಗೆ ನೀಡಬಹುದೆಂಬುದನ್ನು ವಿವರಿಸಿರಿ. ಕ್ಷೇತ್ರ ಸೇವೆಯಲ್ಲಿ ಮತ್ತು ಜನವರಿ ತಿಂಗಳಿನಲ್ಲಿ ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ತೊಡಗುವಾಗ ಈ ಪುಸ್ತಕಗಳನ್ನು ನೀಡಲು ಎಲ್ಲರಿಗೂ ಉತ್ತೇಜಿಸಿರಿ. ಚುಟುಕಾದ, ಸರಳ ನಿರೂಪಣೆಯ ಒಂದು ಪ್ರತ್ಯಕ್ಷಾಭಿನಯವನ್ನು ಮಾಡಿರಿ.

20 ನಿ: ಆರೋಗ್ಯಾರೈಕೆಯ ರಕ್ತರಹಿತ ಚಿಕಿತ್ಸೆಗಾಗಿ ಒಂದು ಶಾಸನಬದ್ಧ ಆಯ್ಕೆಯನ್ನು ಮಾಡುವುದು (ಅ. ಕೃತ್ಯಗಳು 15:28, 29). ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌/ರಿಲೀಸ್‌ ಕಾರ್ಡಿನ ಮೌಲ್ಯದ ಬಗ್ಗೆ ಒಬ್ಬ ಸಮರ್ಥ ಹಿರಿಯನಿಂದ ಭಾಷಣ. ಈ ಕೂಟದ ಅನಂತರ, ದೀಕ್ಷಾಸ್ನಾನಿತ ಸಾಕ್ಷಿಗಳಿಗೆ ಒಂದು ಹೊಸ ಕಾರ್ಡನ್ನು ನೀಡಲಾಗುವುದು. ಮತ್ತು ಅಸ್ನಾತರಾದ ಅಪ್ರಾಪ್ತ ವಯಸ್ಕ ಮಕ್ಕಳಿಗಾಗಿಯೂ ಐಡೆಂಟಿಟಿ ಕಾರ್ಡನ್ನು ನೀಡಲಾಗುವುದು. ಈ ಕಾರ್ಡುಗಳನ್ನು ಅದೇ ರಾತ್ರಿಯಂದು ತುಂಬಿಸಬಾರದು. ಮನೆಯಲ್ಲಿ ಜಾಗರೂಕತೆಯಿಂದ ಅವುಗಳನ್ನು ತುಂಬಿಸಬೇಕು, ಆದರೆ ಸಹಿಹಾಕಬಾರದು. ಎಲ್ಲ ಕಾರ್ಡುಗಳ ಮೇಲೆ ಸಹಿ, ಸಾಕ್ಷಿದಾರರ ಸಹಿ, ಮತ್ತು ದಿನಾಂಕವನ್ನು ಅದರ ಮುಂದಿನ ಸಭಾ ಪುಸ್ತಕ ಅಭ್ಯಾಸದ ನಂತರ, ಪುಸ್ತಕ ಅಭ್ಯಾಸ ಸಂಚಾಲಕನ ಸಮಕ್ಷಮದಲ್ಲಿ ಮಾಡಲಾಗುವುದು. ಸಹಿಹಾಕುವ ಮುಂಚೆ, ಕಾರ್ಡುಗಳು ಸಂಪೂರ್ಣವಾಗಿ ತುಂಬಿಸಲ್ಪಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಸಾಕ್ಷಿಗಳಾಗಿ ಸಹಿಹಾಕುವವರು, ಕಾರ್ಡನ್ನು ಪಡೆದಿರುವ ವ್ಯಕ್ತಿಯು ಡಾಕ್ಯುಮೆಂಟಿಗೆ ಸಹಿಹಾಕುವುದನ್ನು ವಾಸ್ತವವಾಗಿ ನೋಡಬೇಕು. ಅಸ್ನಾತ ಪ್ರಚಾರಕರು, ತಮ್ಮ ಸ್ವಂತ ಸಂದರ್ಭಗಳು ಹಾಗೂ ನಂಬಿಕೆಗಳಿಗೆ ಅನುಸಾರವಾಗಿ ಈ ಕಾರ್ಡಿನಲ್ಲಿ ಸೂಚಿಸಲ್ಪಟ್ಟಿರುವ ವಿಷಯಕ್ಕೆ ತಕ್ಕಂತೆ, ತಮಗೆ ಇಲ್ಲವೇ ತಮ್ಮ ಮಕ್ಕಳಿಗೆ ತಮ್ಮದೇ ಆದ ಡೈರೆಕ್ಟಿವ್‌ ಅನ್ನು ಬರೆದುಕೊಳ್ಳಬಹುದು. ತಮ್ಮ ಗುಂಪಿಗೆ ನೇಮಿಸಲ್ಪಟ್ಟಿರುವವರಿಗೆ, ಅಡ್ವಾನ್ಸ್‌ ಮೆಡಿಕಲ್‌ ಡೈರೆಕ್ಟಿವ್‌/ರಿಲೀಸ್‌ ಕಾರ್ಡನ್ನು ತುಂಬಿಸಲು ಬೇಕಾಗಿರುವ ಸಹಾಯವು ಕೊಡಲ್ಪಡುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ, ಪುಸ್ತಕ ಅಭ್ಯಾಸ ಸಂಚಾಲಕರು ಒಂದು ಪಟ್ಟಿಯನ್ನು ಮಾಡಬೇಕು.

ಸಂಗೀತ 61 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 11ರಿಂದ ಆರಂಭವಾಗುವ ವಾರ

ಸಂಗೀತ 88

10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್‌ ವರದಿ.

20 ನಿ: “ಯೆಹೋವನ ಜೀವನ ಮಾರ್ಗವನ್ನು ಬೆನ್ನಟ್ಟುವುದೇ ನಮ್ಮ ದೃಢಸಂಕಲ್ಪ.” ಒಂದು ಭಾಷಣ. ಸಭೆಯ ಎಲ್ಲ ಐದು ಸಾಪ್ತಾಹಿಕ ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

15 ನಿ: “ತಾಳ್ಮೆಯನ್ನು ತೋರಿಸಿರಿ.” ಒಂದು ಕುಟುಂಬದ ಸದಸ್ಯರ ನಡುವೆ ಚರ್ಚೆ. ತಮ್ಮ ಶುಶ್ರೂಷೆಯಲ್ಲಿ ಹೆಚ್ಚು ದೀರ್ಘಶಾಂತಿಯುಳ್ಳವರಾಗಿರಲು ವಿವಿಧ ವಿಧಗಳನ್ನು ಅವರು ಪುನರ್ವಿಮರ್ಶಿಸುತ್ತಾರೆ. 1995, ಜೂನ್‌ 15ರ ಕಾವಲಿನಬುರುಜು, ಪುಟ 12ರಲ್ಲಿರುವ ವಿಷಯದಿಂದ ಸೂಕ್ತ ಹೇಳಿಕೆಗಳನ್ನು ಮಾಡಿರಿ.

ಸಂಗೀತ 135 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 18ರಿಂದ ಆರಂಭವಾಗುವ ವಾರ

ಸಂಗೀತ 169

5 ನಿ: ಸ್ಥಳಿಕ ತಿಳಿಸುವಿಕೆಗಳು.

10 ನಿ: ಸ್ಥಳಿಕ ಅಗತ್ಯಗಳು.

15 ನಿ: “ಮುಂದಾಳತ್ವವನ್ನು ವಹಿಸುವ ಮೇಲ್ವಿಚಾರಕರು—ಸಭಾ ಪುಸ್ತಕ ಅಭ್ಯಾಸ ಸಂಚಾಲಕರು.” ಆದರ್ಶಪ್ರಾಯ ಪುಸ್ತಕ ಅಭ್ಯಾಸ ಸಂಚಾಲಕನೊಬ್ಬನಿಂದ ಒಂದು ಭಾಷಣ. ಅವನು ತನ್ನ ಕರ್ತವ್ಯಗಳನ್ನು ಪುನರ್ವಿಮರ್ಶಿಸುತ್ತಾನೆ. ಅಂಥ ಕೆಲಸವು ಸಭೆಯ ಪ್ರಗತಿ ಮಾಡಲು ಮತ್ತು ಆತ್ಮಿಕ ಒಳಿತಿಗೆ ಹೇಗೆ ಸಹಾಯನೀಡುತ್ತದೆ ಎಂಬುದನ್ನು ಅವನು ವಿವರಿಸುತ್ತಾನೆ. ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು, ಪುಟಗಳು 43-5, 74-6ರಿಂದ ಮುಖ್ಯಾಂಶಗಳನ್ನು ಹೇಳಿರಿ.

15 ನಿ: ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಲು ನಿಶ್ಚಯಿಸಿಕೊಳ್ಳಿರಿ! ಒಬ್ಬ ಹಿರಿಯನು ಸಭಿಕರೊಂದಿಗೆ ಚರ್ಚಿಸುತ್ತಾ ಭಾಷಣವನ್ನು ನೀಡುತ್ತಾನೆ. ಇದರ ಮೂಲ ಮಾಹಿತಿಯು 1998, ಸೆಪ್ಟೆಂಬರ್‌ 1ರ ಕಾವಲಿನಬುರುಜು ಪತ್ರಿಕೆಯಲ್ಲಿ 19-21 ಪುಟಗಳಲ್ಲಿ ಕಂಡುಬರುವ ಲೇಖನವಾಗಿದೆ.

ಸಂಗೀತ 197 ಮತ್ತು ಸಮಾಪ್ತಿಯ ಪ್ರಾರ್ಥನೆ.

ಜನವರಿ 25ರಿಂದ ಆರಂಭವಾಗುವ ವಾರ

ಸಂಗೀತ 201

10 ನಿ: ಸ್ಥಳಿಕ ತಿಳಿಸುವಿಕೆಗಳು.

15 ನಿ: “ಪಯನೀಯರರ ತಾಸಿನ ಆವಶ್ಯಕತೆಗಳಲ್ಲಿ ಬದಲಾವಣೆ.” ಹಿರಿಯನಿಂದ ಭಾಷಣ. ಸಭೆಯಲ್ಲಿರುವ ಪಯನೀಯರರನ್ನು ಶ್ಲಾಘಿಸಿರಿ. ಮತ್ತು ಮಾರ್ಚ್‌, ಏಪ್ರಿಲ್‌, ಮತ್ತು ಮೇ ತಿಂಗಳಿನಲ್ಲಿ ಅಧಿಕ ಚಟುವಟಿಕೆಯನ್ನು ಮಾಡುವುದನ್ನು ಮನಸ್ಸಿನಲ್ಲಿಡುತ್ತಾ, ಆಕ್ಸಿಲಿಯರಿ ಮತ್ತು ಕ್ರಮದ ಪಯನೀಯರ್‌ ಸೇವೆಯನ್ನು ಮಾಡುವಂತೆ ಹೆಚ್ಚೆಚ್ಚು ಪ್ರಚಾರಕರಿಗೆ ಉತ್ತೇಜನವನ್ನು ನೀಡಿರಿ. ನಮ್ಮ ರಾಜ್ಯದ ಸೇವೆಯ, ಫೆಬ್ರವರಿ 1997 ಮತ್ತು ಜುಲೈ 1998ರ ಪುರವಣಿಯಿಂದ ವಿಷಯವನ್ನು ಸೇರಿಸಿರಿ.

20 ನಿ: ನೀವು ಪ್ರತಿದಿನವೂ ಶಾಸ್ತ್ರವಚನಗಳನ್ನು ಪರೀಕ್ಷಿಸುತ್ತೀರೋ? ಭಾಷಣ ಮತ್ತು ಸಭಿಕರ ಚರ್ಚೆ. ಸೊಸೈಟಿಯು ಪ್ರತಿ ವರ್ಷವೂ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯನ್ನು ಒದಗಿಸುತ್ತದೆ. ನೀವು ವೈಯಕ್ತಿಕವಾಗಿ ಇಲ್ಲವೇ ಒಂದು ಕುಟುಂಬದೋಪಾದಿ ಈ ಪ್ರಕಾಶನದ ಸದುಪಯೋಗವನ್ನು ಮಾಡುತ್ತಿದ್ದೀರೋ? ಪ್ರತಿ ದಿನಕ್ಕಾಗಿರುವ ಶಾಸ್ತ್ರವಚನವನ್ನು ನಾವು ಏಕೆ ಪರಿಗಣಿಸಬೇಕು ಎಂಬುದಕ್ಕೆ ಉಪಯುಕ್ತ ಕಾರಣಗಳನ್ನು ವಿವರಿಸಿರಿ. ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು—1999, ಪುಟಗಳು 3-4ರಲ್ಲಿರುವ ಮುನ್ನುಡಿಯಿಂದ ಹೇಳಿಕೆಗಳನ್ನು ಚರ್ಚಿಸಿರಿ. ವೈಯಕ್ತಿಕವಾಗಿ ಮತ್ತು ಕುಟುಂಬಗಳೋಪಾದಿ, ದಿನದ ವಚನವನ್ನು ಪರಿಗಣಿಸಲಿಕ್ಕಾಗಿ ತಾವು ಮಾಡುತ್ತಿರುವ ವಿಶೇಷ ಪ್ರಯತ್ನದ ಕುರಿತು ತಿಳಿಸುವಂತೆ ಪ್ರಚಾರಕರನ್ನು ಆಮಂತ್ರಿಸಿರಿ.

ಸಂಗೀತ 225 ಮತ್ತು ಸಮಾಪ್ತಿಯ ಪ್ರಾರ್ಥನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ