ಸೆಪ್ಟೆಂಬರ್ಗಾಗಿ ಸೇವಾ ಕೂಟಗಳು
ಸೂಚನೆ: ಬರಲಿರುವ ತಿಂಗಳುಗಳಲ್ಲಿ ನಮ್ಮ ರಾಜ್ಯದ ಸೇವೆಯು ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್ ಮಾಡುವುದು. “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನವನ್ನು ಹಾಜರಾಗಲಿಕ್ಕಾಗಿ ಹಾಗೂ ಅನಂತರ ಮುಂದಿನ ವಾರದ ಸೇವಾ ಕೂಟದಲ್ಲಿ ಕಾರ್ಯಕ್ರಮದ ಮುಖ್ಯಾಂಶಗಳ 30 ನಿಮಿಷಗಳ ಪುನರ್ವಿಮರ್ಶೆಗಾಗಿ ಸಭೆಗಳು ಬೇಕಾಗಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಜಿಲ್ಲಾ ಅಧಿವೇಶನ ಕಾರ್ಯಕ್ರಮದ ಪ್ರತಿದಿನದ ಪುನರ್ವಿಮರ್ಶೆಯನ್ನು ಇಬ್ಬರು ಅಥವಾ ಮೂವರು ಅರ್ಹ ಸಹೋದರರಿಗೆ ಮುಂದಾಗಿಯೇ ನೇಮಿಸಬೇಕು. ಇವರು ಕಾರ್ಯಕ್ರಮದ ಎದ್ದುಕಾಣುವ ಅಂಶಗಳ ಮೇಲೆ ಗಮನವನ್ನು ಕೇಂದ್ರೀಕರಿಸುವರು. ಚೆನ್ನಾಗಿ ತಯಾರಿಸಲ್ಪಟ್ಟ ಈ ಪುನರ್ವಿಮರ್ಶೆಯು, ವೈಯಕ್ತಿಕ ಅನ್ವಯಕ್ಕಾಗಿ ಹಾಗೂ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಲಿಕ್ಕಾಗಿ ಮುಖ್ಯ ಅಂಶಗಳನ್ನು ಸಭೆಯು ಜ್ಞಾಪಕದಲ್ಲಿಟ್ಟುಕೊಳ್ಳುವಂತೆ ಸಹಾಯಮಾಡುವುದು. ಸಭಿಕರಿಂದ ಹೇಳಿಕೆಗಳು ಹಾಗೂ ಹೇಳಲ್ಪಟ್ಟ ಅನುಭವಗಳು ಸಂಕ್ಷಿಪ್ತವೂ ವಿಷಯಕ್ಕೆ ಸಂಬಂಧಪಟ್ಟದ್ದೂ ಆಗಿರತಕ್ಕದ್ದು.
ಸೆಪ್ಟೆಂಬರ್ 6ರಿಂದ ಆರಂಭವಾಗುವ ವಾರ
ಸಂಗೀತ 190
10 ನಿ:ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
17 ನಿ:“ನೀವು ಒಂದು ಉದ್ದೇಶದೊಂದಿಗೆ ಕಾರ್ಯನಡಿಸುತ್ತಿದ್ದೀರೋ?” ಪೀಠಿಕಾ ಹೇಳಿಕೆಗಳನ್ನು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಕೊಡಿರಿ ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆ. ನಮ್ಮ ಶುಶ್ರೂಷೆಯ ಪುಸ್ತಕದ ಪುಟ 88-9ರ ಹೇಳಿಕೆಗಳನ್ನು ಸೇರಿಸಿರಿ. ಎಲ್ಲರೂ ಶುಶ್ರೂಷೆಯಲ್ಲಿ ಕ್ರಮವಾಗಿರುವಂತೆ ಮತ್ತು ಅದನ್ನು ಸಂಪೂರ್ಣವಾಗಿ ಪೂರೈಸುವಂತೆ ಉತ್ತೇಜಿಸಿರಿ.
18 ನಿ:“ಹೆತ್ತವರೇ—ನಿಮ್ಮ ಮಕ್ಕಳಿಗಾಗಿ ಒಂದು ಒಳ್ಳೆಯ ಮಾದರಿಯನ್ನಿಡಿರಿ.” ಒಬ್ಬ ಹಿರಿಯನಿಂದ ಸಂಕ್ಷಿಪ್ತ ಪೀಠಿಕೆ. ಇದಾದ ನಂತರ ಹೆತ್ತವರಾಗಿರುವ ಇಬ್ಬರು ಸಹೋದರರು ಲೇಖನವನ್ನು ಚರ್ಚಿಸುತ್ತಾರೆ. ತಮ್ಮ ಮಕ್ಕಳು ಶಾಲೆಯಲ್ಲಿ, ಟೆಲಿವಿಷನ್ನಲ್ಲಿ ಮತ್ತು ಸಾಕ್ಷಿಗಳಾಗಿರದ ಸಂಬಂಧಿಕರಲ್ಲಿ ಮತ್ತು ಇತರರಲ್ಲಿ ನೋಡುವ ಹಾನಿಕಾರಕ ನಡವಳಿಕೆಗಳು ಮತ್ತು ಮನೋಭಾವಗಳಿಂದ ಅವರನ್ನು ಸಂರಕ್ಷಿಸುವುದರ ಕುರಿತು ಚಿಂತೆಯನ್ನು ಅವರು ವ್ಯಕ್ತಪಡಿಸುತ್ತಾರೆ. ಅಗೌರವಪೂರ್ಣ ಮನೋಭಾವಗಳು, ಲೌಕಿಕ ಮಾತುಕತೆ ಮತ್ತು ಕೇಶಾಲಂಕಾರ ಹಾಗೂ ಅಹಿತಕರವಾದ ಮನೋರಂಜನೆಯ ಕುರಿತು ಸಹೋದರರು ಪರಿಗಣಿಸುತ್ತಾರೆ. ಒಂದು ಒಳ್ಳೆಯ ಮಾದರಿಯನ್ನಿಡುವ ಅಗತ್ಯವನ್ನು ಪರಿಗಣಿಸಿದ ನಂತರ ಅವರು ಕುಟುಂಬ ಅಭ್ಯಾಸ, ಸಭಾ ಕೂಟಗಳು ಮತ್ತು ಕ್ಷೇತ್ರ ಸೇವೆಗಾಗಿ ಹೆಚ್ಚಿನ ಉತ್ಸುಕತೆಯನ್ನು ಕಟ್ಟುವ ವಿಧಾನಗಳ ಕುರಿತು ಚರ್ಚಿಸುತ್ತಾರೆ.—ಜುಲೈ 1, 1999 ವಾಚ್ಟವರ್ ಪತ್ರಿಕೆಯ 8-22ನೆಯ ಪುಟಗಳನ್ನು ಮತ್ತು ಅಕ್ಟೋಬರ್ 8, 1992 ಎಚ್ಚರ! ಪತ್ರಿಕೆಯ 8-9ನೆಯ ಪುಟಗಳನ್ನು ನೋಡಿರಿ.
ಸಂಗೀತ 101 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 13ರಿಂದ ಆರಂಭವಾಗುವ ವಾರ
ಸಂಗೀತ 171
10 ನಿ:ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ:ನಾವು ಕಳೆದ ವರ್ಷ ಏನು ಮಾಡಿದೆವು? ಸೇವಾ ಮೇಲ್ವಿಚಾರಕನಿಂದ ಭಾಷಣ. 1999ರ ಸೇವಾ ವರ್ಷದ ಸಭೆಯ ವರದಿಯಿಂದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಿರಿ. ಸಾಧಿಸಲ್ಪಟ್ಟಿರುವ ಒಳ್ಳೆಯ ವಿಷಯಗಳಿಗಾಗಿ ಪ್ರಶಂಸೆಯನ್ನು ನೀಡಿರಿ. ಯಾವ ಕ್ಷೇತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂಬುದನ್ನು ಒತ್ತಿಹೇಳಿರಿ. ಕೂಟಗಳಿಗೆ ಹಾಜರಾಗುವುದು ಮತ್ತು ಬೈಬಲ್ ಅಭ್ಯಾಸಗಳನ್ನು ನಡೆಸುವ ವಿಷಯದಲ್ಲಿ ಸಭೆಯು ಏನನ್ನು ಮಾಡಿದೆ ಎಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಮುಂದಿನ ವರ್ಷಕ್ಕಾಗಿ ಪ್ರಾಯೋಗಿಕ ಧ್ಯೇಯಗಳನ್ನು ರೇಖಿಸಿರಿ.
20 ನಿ:“ನೀವು ಒಬ್ಬ ಹಿಂದೂ ವ್ಯಕ್ತಿಗೆ ಏನನ್ನು ಹೇಳುವಿರಿ?” ಪ್ರಶ್ನೋತ್ತರಗಳು. ಇಬ್ಬರಿಗೂ ಒಪ್ಪಿಗೆಯಾಗುವ ವಿಷಯದಿಂದ ಆರಂಭಿಸುವ ಪ್ರಯೋಜನವನ್ನು ಒತ್ತಿಹೇಳಿರಿ ಮತ್ತು ಹಿಂದೂ ವ್ಯಕ್ತಿಯೊಂದಿಗೆ ಅವನ ಧರ್ಮದ ಬಗ್ಗೆ ನಾವು ಒಪ್ಪಬಹುದಾದ ಕೆಲವು ಕ್ಷೇತ್ರಗಳ ಕುರಿತು ಚರ್ಚಿಸಿರಿ. ಯಾವುದೇ ಧರ್ಮದ ವ್ಯಕ್ತಿಗೆ ಸಾಕ್ಷಿನೀಡಲು ಸೂಚಿತ ನಿರೂಪಣೆಗಳಲ್ಲಿ ಹೇಗೆ ಹೊಂದಾಣಿಕೆಗಳನ್ನು ಮಾಡಬಹುದೆಂಬುದನ್ನು ತೋರಿಸಿರಿ. ಒಬ್ಬ ಹಿಂದೂ ವ್ಯಕ್ತಿಗೆ ಸಾಕ್ಷಿಯನ್ನು ನೀಡುವ, ಚೆನ್ನಾಗಿ ತಯಾರಿಸಲ್ಪಟ್ಟ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. ಹಿಂದೂ ಧರ್ಮದ ಕುರಿತು ಹೆಚ್ಚಿನ ಮಾಹಿತಿಗಾಗಿ, ಫೆಬ್ರವರಿ 1998ರ ನಮ್ಮ ರಾಜ್ಯದ ಸೇವೆ; ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ, ಪುಟ 14; ಮತ್ತು ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್) ಎಂಬ ಪುಸ್ತಕದ 5ನೆಯ ಅಧ್ಯಾಯವನ್ನು ನೋಡಿರಿ.
ಸಂಗೀತ 140 ಮತ್ತು ಸಮಾಪ್ತಿಯ ಪ್ರಾರ್ಥನೆ
ಸೆಪ್ಟೆಂಬರ್ 20ರಿಂದ ಆರಂಭವಾಗುವ ವಾರ
ಸಂಗೀತ 193
5 ನಿ:ಸ್ಥಳಿಕ ತಿಳಿಸುವಿಕೆಗಳು.
15 ನಿ:ಸ್ಥಳಿಕ ಅಗತ್ಯಗಳು.
25 ನಿ:“1999 ‘ದೇವರ ಪ್ರವಾದನ ವಾಕ್ಯ’ ಜಿಲ್ಲಾ ಅಧಿವೇಶನಗಳು.” (1-15 ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. 6, 8, 11 ಮತ್ತು 15ನೆಯ ಪ್ಯಾರಗ್ರಾಫ್ಗಳನ್ನು ಓದಿರಿ. ಶುಕ್ರವಾರದ ಕಾರ್ಯಕ್ರಮವನ್ನು ಸೇರಿಸಿ, ನಾವು ಇಡೀ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿರುವ ಕಾರಣಗಳನ್ನು ಒತ್ತಿಹೇಳಿರಿ. ಪ್ರತಿದಿನ ಅಧಿವೇಶನಕ್ಕೆ ಬರುವಾಗ ತಮ್ಮ ಸ್ವಂತ ಆಹಾರವನ್ನು ತರುವಂತೆ ಸೊಸೈಟಿಯು ಕೊಟ್ಟಿರುವ ನಿರ್ದೇಶನವನ್ನು ಅನುಸರಿಸುವ ಮಹತ್ವವನ್ನು ಒತ್ತಿಹೇಳಿರಿ.
ಸಂಗೀತ 19 ಮತ್ತು ಸಮಾಪ್ತಿಯ ಪ್ರಾರ್ಥನೆ.
ಸೆಪ್ಟೆಂಬರ್ 27ರಿಂದ ಆರಂಭವಾಗುವ ವಾರ
ಸಂಗೀತ 141
10 ನಿ:ಸ್ಥಳಿಕ ತಿಳಿಸುವಿಕೆಗಳು. ಸೆಪ್ಟೆಂಬರ್ ತಿಂಗಳಿಗಾಗಿ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಅಕ್ಟೋಬರ್ ತಿಂಗಳಿನಲ್ಲಿ ಎಲ್ಲರೂ ಪತ್ರಿಕಾ ವಿತರಣೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳಲು ಯೋಜನೆಗಳನ್ನು ಮಾಡುವಂತೆ ಉತ್ತೇಜಿಸಿರಿ. ಅಕ್ಟೋಬರ್ 1996, ನಮ್ಮ ರಾಜ್ಯದ ಸೇವೆಯ 8ನೆಯ ಪುಟದಲ್ಲಿ, ನಿರೂಪಣೆಗಳನ್ನು ಹೇಗೆ ತಯಾರಿಸುವುದೆಂಬುದರ ಕುರಿತು ಕಂಡುಬರುವ ಕೆಲವು ಸೂಚನೆಗಳನ್ನು ಪುನರ್ವಿಮರ್ಶಿಸಿರಿ. ಪ್ರಚಲಿತ ಪತ್ರಿಕೆಗಳನ್ನು ಉಪಯೋಗಿಸುತ್ತಾ, ಚರ್ಚಿಸಲಿಕ್ಕಾಗಿರುವ ಕೆಲವು ಒಳ್ಳೆಯ ಅಂಶಗಳನ್ನು ತಿಳಿಸಿರಿ ಮತ್ತು ಒಂದು ಅಥವಾ ಎರಡು ಸಂಕ್ಷಿಪ್ತ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ:ಪ್ರಶ್ನಾ ರೇಖಾಚೌಕ. ಒಬ್ಬ ಹಿರಿಯನಿಂದ ಭಾಷಣ.
20 ನಿ:“1999 ‘ದೇವರ ಪ್ರವಾದನ ವಾಕ್ಯ’ ಜಿಲ್ಲಾ ಅಧಿವೇಶನಗಳು.” (16-23 ಪ್ಯಾರಗ್ರಾಫ್ಗಳು) ಪ್ರಶ್ನೋತ್ತರಗಳು. 17-20 ಪ್ಯಾರಗ್ರಾಫ್ಗಳನ್ನು ಓದಿರಿ. ಉಡುಗೆ, ಕೇಶಾಲಂಕಾರ ಮತ್ತು ನಡತೆಗೆ ನಾವು ನಿಕಟ ಗಮನವನ್ನು ಏಕೆ ಕೊಡಬೇಕೆಂಬುದನ್ನು ಒತ್ತಿಹೇಳಲಿಕ್ಕಾಗಿ, ಉಲ್ಲೇಖಿಸಲ್ಪಟ್ಟ ಮತ್ತು ಉದ್ಧರಿಸಲ್ಪಟ್ಟ ಶಾಸ್ತ್ರವಚನಗಳನ್ನು ಉಪಯೋಗಿಸಿರಿ.
ಸಂಗೀತ 87 ಮತ್ತು ಸಮಾಪ್ತಿಯ ಪ್ರಾರ್ಥನೆ.