2001ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್
ಸೂಚನೆಗಳು
2001ರಲ್ಲಿ, ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯಪುಸ್ತಕಗಳು: ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ [bi12], ಕಾವಲಿನಬುರುಜು [w], ಎಚ್ಚರ! [g], ಕುಟುಂಬ ಸಂತೋಷದ ರಹಸ್ಯ [fy], ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು [br78] ಜೀವಿತದ ಉದ್ದೇಶವೇನು? [pr], ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? [rq], ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್) [je] ಮತ್ತು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕಗಳು ನೇಮಕಗಳಿಗೆ ಆಧಾರವಾಗಿರುವವು.
ಶಾಲೆಯನ್ನು ಸಂಗೀತ, ಪ್ರಾರ್ಥನೆ, ಮತ್ತು ಸ್ವಾಗತದ ಹೇಳಿಕೆಗಳೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಬೇಕು. ಕಾರ್ಯಕ್ರಮದಲ್ಲಿ ಏನಿದೆ ಎಂಬುದರ ಕುರಿತು ಮುಂಚಿತವಾಗಿಯೇ ತಿಳಿಸುವ ಅಗತ್ಯವಿಲ್ಲ. ಏಕೆಂದರೆ, ಶಾಲಾ ಮೇಲ್ವಿಚಾರಕನು ಪ್ರತಿಯೊಂದು ಭಾಗವನ್ನು ಪರಿಚಯಿಸುವಾಗ, ಅವನು ಭಾಷಣದ ವಿಷಯವನ್ನು ಸಹ ತಿಳಿಸುವನು. ಈ ಕೆಳಗಿನ ಸೂಚನೆಯಂತೆ ಮುಂದುವರಿಸಿರಿ:
ನೇಮಕ ನಂಬ್ರ 1: 15 ನಿಮಿಷಗಳು. ಇದು ಒಬ್ಬ ಹಿರಿಯನಿಂದ ಅಥವಾ ಒಬ್ಬ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು, ಮತ್ತು ಇದು ಕಾವಲಿನಬುರುಜು [w] ಅಥವಾ ಎಚ್ಚರ! [g] ಪತ್ರಿಕೆ ಇಲ್ಲವೇ ಕುಟುಂಬ ಸಂತೋಷದ ರಹಸ್ಯ [fy] ಪುಸ್ತಕದ ಮೇಲೆ ಆಧಾರಿಸಿರುವುದು. ಈ ನೇಮಕವು ಯಾವುದೇ ಮೌಖಿಕ ಪುನರ್ವಿಮರ್ಶೆಯಿಲ್ಲದೆ, 15 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡತಕ್ಕದ್ದು. ಇದರ ಉದ್ದೇಶವು ಕೇವಲ ವಿಷಯವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿ ಇರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟ ಮುಖ್ಯ ವಿಷಯವು ಉಪಯೋಗಿಸಲ್ಪಡತಕ್ಕದ್ದು.
ಈ ಭಾಷಣಕ್ಕೆ ನೇಮಿತರಾದ ಸಹೋದರರು, ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಅಗತ್ಯವಿರುವಲ್ಲಿ ಅಥವಾ ಭಾಷಣಕರ್ತನಿಂದ ಕೇಳಿಕೊಳ್ಳಲ್ಪಡುವಲ್ಲಿ ಖಾಸಗಿ ಸಲಹೆಯನ್ನು ನೀಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷಗಳು. ಇದು ಸ್ಥಳಿಕ ಅಗತ್ಯಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಒಬ್ಬ ಹಿರಿಯನಿಂದ ಅಥವಾ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಒಂದು ಮುಖ್ಯವಿಷಯದ ಅಗತ್ಯವು ಇದಕ್ಕಿರುವುದಿಲ್ಲ. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ 30ರಿಂದ 60 ಸೆಕೆಂಡಿನ ಸಂಪೂರ್ಣ ಪುನರ್ವಿಮರ್ಶೆಯು ಒಳಗೂಡಿಸಲ್ಪಡಬಹುದು. ಹಾಗಿದ್ದರೂ, ಈ ಮಾಹಿತಿಯು ನಮಗೆ ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. ತದನಂತರ ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಗಳನ್ನು ಅವರ ವಿವಿಧ ಕ್ಲಾಸ್ರೂಮ್ಗಳಿಗೆ ಕಳುಹಿಸುವನು.
ನೇಮಕ ನಂಬ್ರ 2: 5 ನಿಮಿಷಗಳು. ಇದು ಒಬ್ಬ ಸಹೋದರನಿಂದ ಕೊಡಲ್ಪಡುವ, ನೇಮಿತ ವಿಷಯದ ಬೈಬಲ್ ವಾಚನವಾಗಿದೆ. ಇದು ಮುಖ್ಯ ಶಾಲೆಗೆ ಹಾಗೂ ಇತರ ಗುಂಪುಗಳಿಗೆ ಅನ್ವಯಿಸುವುದು. ಈ ವಾಚನ ನೇಮಕಗಳು, ವಿದ್ಯಾರ್ಥಿಯು ಆರಂಭದ ಹಾಗೂ ಸಮಾಪ್ತಿಯ ಹೇಳಿಕೆಗಳಲ್ಲಿ ಸಂಕ್ಷಿಪ್ತ ವಿವರಣಾತ್ಮಕ ಮಾಹಿತಿಯನ್ನು ಕೊಡಸಾಧ್ಯವಾಗುವಂತೆ, ಸಾಮಾನ್ಯವಾಗಿ ಸಾಕಷ್ಟು ಚಿಕ್ಕದಾಗಿರುತ್ತವೆ. ಐತಿಹಾಸಿಕ ಹಿನ್ನೆಲೆ, ಪ್ರವಾದನಾತ್ಮಕ ಅಥವಾ ತಾತ್ವಿಕ ಅರ್ಥವಿವರಣೆ, ಮತ್ತು ಮೂಲತತ್ವಗಳ ಅನ್ವಯವು ಇದರಲ್ಲಿ ಒಳಗೂಡಿಸಲ್ಪಡಬಹುದು. ಎಲ್ಲ ನೇಮಿತ ವಚನಗಳನ್ನು ನಿಲ್ಲಿಸದೇ ಓದಬೇಕು. ಓದಲ್ಪಡಬೇಕಾಗಿರುವ ವಚನಗಳು ಕ್ರಮಾನುಗತವಾಗಿ ಇಲ್ಲದಿರುವಲ್ಲಿ, ಓದುವಿಕೆಯು ಯಾವ ವಚನದಿಂದ ಮುಂದುವರಿಯುತ್ತದೋ ಆ ವಚನವನ್ನು ವಿದ್ಯಾರ್ಥಿಯು ಉಲ್ಲೇಖಿಸಬಹುದೆಂಬುದು ನಿಶ್ಚಯ.
ನೇಮಕ ನಂಬ್ರ 3: 5 ನಿಮಿಷಗಳು. ಇದು ಸಹೋದರಿಯೊಬ್ಬಳಿಗೆ ನೇಮಿಸಲ್ಪಡುವುದು. ಈ ಭಾಷಣಕ್ಕಾಗಿರುವ ವಿಷಯವು, ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು [br78] ಅಥವಾ ಜೀವಿತದ ಉದ್ದೇಶವೇನು? [pr] ಅಥವಾ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? [rq] ಅಥವಾ ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್) [je] ಎಂಬುದರ ಮೇಲೆ ಆಧಾರಿಸಿರುವುದು. ಸನ್ನಿವೇಶವು (ಸೆಟಿಂಗ್) ಅನೌಪಚಾರಿಕ ಸಾಕ್ಷಿಕಾರ್ಯ, ಪುನರ್ಭೇಟಿ, ಅಥವಾ ಮನೆ ಬೈಬಲ್ ಅಭ್ಯಾಸವಾಗಿರಬಹುದು. ಭಾಗವಹಿಸುವವರು ಕುಳಿತುಕೊಂಡಿರಬಹುದು ಅಥವಾ ನಿಂತುಕೊಂಡಿರಬಹುದು. ವಿದ್ಯಾರ್ಥಿನಿಯು ತನಗೆ ನೇಮಕವಾದ ವಿಷಯವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಶಾಸ್ತ್ರವಚನಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಮನೆಯಾಕೆಗೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲೇ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಈ ಭಾಗದ ನೇಮಕವನ್ನು ಪಡೆದಿರುವ ವಿದ್ಯಾರ್ಥಿನಿಗೆ ಓದುವುದು ಗೊತ್ತಿರಬೇಕು. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ, ಆದರೆ ನಾವು ಇನ್ನೊಬ್ಬ ಸಹಾಯಕಿಯನ್ನು ಉಪಯೋಗಿಸಬಹುದು. ಮುಖ್ಯ ಪರಿಗಣನೆಯು ಸನ್ನಿವೇಶಕ್ಕಲ್ಲ, ಬದಲಾಗಿ ವಿಷಯದ ಪರಿಣಾಮಕಾರಿಯಾದ ಉಪಯೋಗಕ್ಕೆ ಕೊಡಲ್ಪಡತಕ್ಕದ್ದು.
ನೇಮಕ ನಂಬ್ರ 4: 5 ನಿಮಿಷಗಳು. ಈ ನೇಮಕಕ್ಕೆ ವಿಷಯವು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಮೇಲೆ ಆಧಾರಿಸಿರುವುದು. ನೇಮಕ ನಂಬ್ರ 4ನ್ನು ಒಬ್ಬ ಸಹೋದರ ಅಥವಾ ಸಹೋದರಿಗೆ ನೇಮಿಸಬಹುದು. ಒಬ್ಬ ಸಹೋದರನು ನೇಮಿಸಲ್ಪಡುವಾಗ, ಅದು ಯಾವಾಗಲೂ ಒಂದು ಭಾಷಣವಾಗಿರಬೇಕು. ಒಬ್ಬ ಸಹೋದರಿಗೆ ಅದನ್ನು ನೇಮಿಸುವಾಗ, ಅದು ನೇಮಕ ನಂಬ್ರ 3ಕ್ಕೆ ರೇಖಿಸಲ್ಪಟ್ಟಂತೆಯೇ ಸಾದರಪಡಿಸಲ್ಪಡತಕ್ಕದ್ದು.
ಬೈಬಲ್ ವಾಚನದ ಶೆಡ್ಯೂಲ್: ವಾರದ ಬೈಬಲ್ ವಾಚನದ ಶೆಡ್ಯೂಲ್ ಅನ್ನು ಅನುಸರಿಸುವಂತೆ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ಉತ್ತೇಜನವು ಕೊಡಲ್ಪಟ್ಟಿದೆ. ಇದು ಒಂದು ದಿನಕ್ಕೆ ಒಂದು ಪುಟವನ್ನು ಓದುವುದಕ್ಕೆ ಸಮವಾಗಿದೆ.
ಸೂಚನೆ: ಸಲಹೆ, ಕಾಲನಿಯಮನ, ಲಿಖಿತ ಪುನರ್ವಿಮರ್ಶೆಗಳು, ಮತ್ತು ನೇಮಕಗಳನ್ನು ತಯಾರಿಸುವುದರ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಉಪದೇಶಕ್ಕಾಗಿ, ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ 3ನೆಯ ಪುಟವನ್ನು ದಯವಿಟ್ಟು ನೋಡಿರಿ.
ಶೆಡ್ಯೂಲ್
ಜನ. 1 ಬೈಬಲ್ ವಾಚನ: 2 ಅರಸು 13-16
ಸಂಗೀತ ನಂ. 3 (32)
ನಂ. 1: ಕ್ಷಮಾಪಣೆಯು ರಕ್ಷಣೆಗೆ ಮಾರ್ಗವನ್ನು ತೆರೆಯುತ್ತದೆ (w-KA99 1/1 ಪು. 30-1)
ನಂ. 2: 2 ಅರಸು 14:1-14
ನಂ. 3: ಯೆಹೋವನ ಸಾಕ್ಷಿಗಳು—ಅವರು ಯಾರು? (br78 ಪು. 3-5)
ನಂ. 4: ಪರಲೋಕದಿಂದ ಸಂದೇಶಗಳು (gt ಅಧ್ಯಾಯ 1)
ಜನ. 8 ಬೈಬಲ್ ವಾಚನ: 2 ಅರಸು 17-20
ಸಂಗೀತ ನಂ. 23 (200)
ನಂ. 1: ಸ್ವೀಕರಿಸಲು ಸುಲಭವಾಗಿರುವಂತಹ ಸಲಹೆ (w-KA99 1/15 ಪು. 21-4)
ನಂ. 2: 2 ಅರಸು 18:1-16
ನಂ. 3: ಯೆಹೋವನ ಸಾಕ್ಷಿಗಳು—ಅವರ ಆಧುನಿಕ ವಿಕಸನ ಮತ್ತು ಬೆಳವಣಿಗೆ (br78 ಪು. 6-11)
ನಂ. 4: ಆತನು ಹುಟ್ಟುವ ಮೊದಲೇ ಗೌರವಿಸಲ್ಪಟ್ಟನು (gt ಅಧ್ಯಾಯ 2)
ಜನ. 15 ಬೈಬಲ್ ವಾಚನ: 2 ಅರಸು 21-25
ಸಂಗೀತ ನಂ. 16 (143)
ನಂ. 1: ಕುಟುಂಬ ಸಂತೋಷದ ರಹಸ್ಯವೊಂದಿದೆಯೆ? (fy ಪು. 5-12)
ನಂ. 2: 2 ಅರಸು 21:1-16
ನಂ. 3: ಯೆಹೋವನ ಸಾಕ್ಷಿಗಳು—ಅವರು ಏನನ್ನು ನಂಬುತ್ತಾರೆ? (br78 ಪು. 12-14)
ನಂ. 4: ಹಾದಿಯನ್ನು ಸಿದ್ಧಪಡಿಸುವವನು ಹುಟ್ಟುತ್ತಾನೆ (gt ಅಧ್ಯಾಯ 3)
ಜನ. 22 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 1-5
ಸಂಗೀತ ನಂ. 22 (130)
ನಂ. 1: ಒಂದು ಯಶಸ್ವೀ ವಿವಾಹಕ್ಕಾಗಿ ತಯಾರಿಸುವುದು (fy ಪು. 13-26)
ನಂ. 2: 1 ಪೂರ್ವಕಾಲವೃತ್ತಾಂತ 1:1-27
ನಂ. 3: ನೀವು ಆಲಿಸಬೇಕೆಂದು ಯೆಹೋವನ ಸಾಕ್ಷಿಗಳು ಬಯಸುವ ಸುವಾರ್ತೆ (br78 ಪು. 14-17)
ನಂ. 4: ಗರ್ಭಿಣಿ, ಆದರೆ ವಿವಾಹಿತಳಲ್ಲ (gt ಅಧ್ಯಾಯ 4)
ಜನ. 29 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 6-10
ಸಂಗೀತ ನಂ. 7 (51)
ನಂ. 1: ನಿಜವಾದ ದೀನಭಾವವನ್ನು ಹೇಗೆ ತೋರಿಸಸಾಧ್ಯವಿದೆ? (w-KA99 2/1 ಪು. 6-7)
ನಂ. 2: 1 ಪೂರ್ವಕಾಲವೃತ್ತಾಂತ 9:1-21
ನಂ. 3: ಸುವಾರ್ತೆಯನ್ನು ನಿಮಗೆ ಹೇಳಲು ಯೆಹೋವನ ಸಾಕ್ಷಿಗಳು ಬಳಸುವ ವಿಧಾನಗಳು (br78 ಪು. 18-22)
ನಂ. 4: ಯೇಸುವಿನ ಜನನ—ಎಲ್ಲಿ ಮತ್ತು ಯಾವಾಗ? (gt ಅಧ್ಯಾಯ 5)
ಫೆಬ್ರ. 5 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 11-16
ಸಂಗೀತ ನಂ. 12 (113)
ನಂ. 1: ಪ್ರೋತ್ಸಾಹನೆಯ ಮೂಲವಾಗಿರಿ (w-KA99 2/15 ಪು. 26-9)
ನಂ. 2: 1 ಪೂರ್ವಕಾಲವೃತ್ತಾಂತ 11:1-19
ನಂ. 3: ನಿಮ್ಮ ಸಮುದಾಯಕ್ಕೆ ಸುವಾರ್ತೆಯ ವ್ಯಾವಹಾರಿಕ ಉಪಯುಕ್ತತೆ (br78 ಪು. 23-4)
ನಂ. 4: ವಾಗ್ದಾನಿತ ಮಗು (gt ಅಧ್ಯಾಯ 6)
ಫೆಬ್ರ. 12 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 17-23
ಸಂಗೀತ ನಂ. 23 (200)
ನಂ. 1: ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಳ್ಳಿರಿ (w-KA99 3/1 ಪು. 30-1)
ನಂ. 2: 1 ಪೂರ್ವಕಾಲವೃತ್ತಾಂತ 18:1-17
ನಂ. 3: ಯೆಹೋವನ ಸಾಕ್ಷಿಗಳು—ಅವರ ಲೋಕವ್ಯಾಪಕ ಸಂಸ್ಥೆ ಮತ್ತು ಕಾರ್ಯ (br78 ಪು. 25-6)
ನಂ. 4: ಯೇಸು ಮತ್ತು ಜೋಯಿಸರು (gt ಅಧ್ಯಾಯ 7)
ಫೆಬ್ರ. 19 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 24-29
ಸಂಗೀತ ನಂ. 14 (117)
ನಂ. 1: ಚಿರಸ್ಥಾಯಿಯಾದ ವಿವಾಹಕ್ಕೆ ಎರಡು ಕೀಲಿ ಕೈಗಳು (fy ಪು. 27-38)
ನಂ. 2: 1 ಪೂರ್ವಕಾಲವೃತ್ತಾಂತ 29:1-13
ನಂ. 3: ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು—ಭಾಗ-1 (br78ಪು. 26 ಪ್ಯಾರ 2-ಪು. 27 ಪ್ಯಾರ. 4)
ನಂ. 4: ಪ್ರಜಾಪೀಡಕ ರಾಜನಿಂದ ಪಾರಾಗುವದು (gt ಅಧ್ಯಾಯ 8)
ಫೆಬ್ರ. 26 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 1-5
ಸಂಗೀತ ನಂ. 8 (53)
ನಂ. 1: ನೀವು ಒಂದು ಮನೆವಾರ್ತೆಯನ್ನು ಹೇಗೆ ನಿರ್ವಹಿಸಬಲ್ಲಿರಿ? (fy ಪು. 39-50)
ನಂ. 2: 2 ಪೂರ್ವಕಾಲವೃತ್ತಾಂತ 1:1-17)
ನಂ. 3: ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು—ಭಾಗ-2 (br78 ಪು. 28 ಪ್ಯಾರ. 1-3)
ನಂ. 4: ಯೇಸುವಿನ ಆರಂಭಿಕ ಕುಟುಂಬ ಜೀವನ (gt ಅಧ್ಯಾಯ 9)
ಮಾರ್ಚ್ 5 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 6-9
ಸಂಗೀತ ನಂ. 11 (85)
ನಂ. 1: ಕಳವಳವು ನಿಮ್ಮ ಮೇಲೆ ಜಯಸಾಧಿಸುವಂತೆ ಬಿಡಬೇಡಿರಿ (w-KA99 3/15 ಪು. 21-3)
ನಂ. 2: 2 ಪೂರ್ವಕಾಲವೃತ್ತಾಂತ 8:1-16
ನಂ. 3: ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು—ಭಾಗ-3 (br78 ಪು. 29 ಪ್ಯಾರ. 1-3)
ನಂ. 4: ಯೆರೂಸಲೇಮಿಗೆ ಪ್ರಯಾಣಗಳು (gt ಅಧ್ಯಾಯ 10)
ಮಾರ್ಚ್. 12 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 10-15
ಸಂಗೀತ ನಂ. 5 (46)
ನಂ. 1: ನಿಮ್ಮ ಆಲೋಚನಾಕ್ರಮವನ್ನು ಯಾರು ರೂಪಿಸುತ್ತಾರೆ? (w-KA99 4/1 ಪು. 20-2)
ನಂ. 2: 2 ಪೂರ್ವಕಾಲವೃತ್ತಾಂತ 10:1-16
ನಂ. 3: ಆಸಕ್ತ ವ್ಯಕ್ತಿಗಳಿಂದ ಅನೇಕ ವೇಳೆ ಕೇಳಲ್ಪಡುವ ಪ್ರಶ್ನೆಗಳು—ಭಾಗ-4 (br78 ಪು. 30 ಪ್ಯಾರ. 1-5)
ನಂ. 4: ಯೋಹಾನನು ದಾರಿಯನ್ನು ಸಿದ್ಧಮಾಡುತ್ತಾನೆ (gt ಅಧ್ಯಾಯ 11)
ಮಾರ್ಚ್. 19 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 16-20
ಸಂಗೀತ ನಂ. 9 (37)
ನಂ. 1: ಬಾಳನ ಆರಾಧನೆಯ ಸೆಳೆತದಿಂದ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿರಿ (w-KA99 4/1 ಪು. 28-31)
ನಂ. 2: 2 ಪೂರ್ವಕಾಲವೃತ್ತಾಂತ 16:1-14
ನಂ. 3: ಜೀವಿತಕ್ಕೆ ಒಂದು ಉದ್ದೇಶವಿದೆಯೆ? (pr ಪು. 4-6 ಪ್ಯಾರ. 1-17)
ನಂ. 4: ಯೇಸುವಿನ ದೀಕ್ಷಾಸ್ನಾನ (gt ಅಧ್ಯಾಯ 12)
ಮಾರ್ಚ್. 26 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 21-25
ಸಂಗೀತ ನಂ. 26 (212)
ನಂ. 1: ಗಣ್ಯತೆಯನ್ನು ತೋರಿಸಲು ಹಿಂಜರಿಯದಿರಿ (w-KA99 4/15 ಪು. 15-17)
ನಂ. 2: 2 ಪೂರ್ವಕಾಲವೃತ್ತಾಂತ 22:1-12
ನಂ. 3: ಜೀವಿತದ ಉದ್ದೇಶವನ್ನು ನಮಗೆ ಯಾವನು ತಿಳಿಸಬಲ್ಲನು? (pr ಪು. 6-10 ಪ್ಯಾರ. 1-26)
ನಂ. 4: ಯೇಸುವಿನ ಶೋಧನೆಗಳಿಂದ ಕಲಿಯುವುದು (gt ಅಧ್ಯಾಯ 13)
ಏಪ್ರಿ. 2 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 26-29
ಸಂಗೀತ ನಂ. 6 (45)
ನಂ. 1: ದೇವರು “ವಕ್ರವಾದ” ರೀತಿಯಲ್ಲಿ ಕ್ರಿಯೆಗೈಯುತ್ತಾನೊ? (w-KA99 5/1 ಪು. 28-9)
ನಂ. 2: 2 ಪೂರ್ವಕಾಲವೃತ್ತಾಂತ 28:1-15
ನಂ. 3: ಶ್ರೇಷ್ಠ ವಿವೇಕದ ಅದ್ವಿತೀಯ ಮೂಲ—ಅದರ ವೈಜ್ಞಾನಿಕ ನಿಷ್ಕೃಷ್ಟತೆ (pr ಪು. 10-13 ಪ್ಯಾರ. 1-17)
ನಂ. 4: ಯೇಸುವಿನ ಮೊದಲ ಶಿಷ್ಯರು (gt ಅಧ್ಯಾಯ 14)
ಏಪ್ರಿ. 9 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 30-33
ಸಂಗೀತ ನಂ. 2 (15)
ನಂ. 1: ಮನುಷ್ಯರು ಯೆಹೋವ ದೇವರನ್ನು ಹೇಗೆ ಸ್ತುತಿಸಸಾಧ್ಯವಿದೆ? (w-KA99 5/15 ಪು. 21-4)
ನಂ. 2: 2 ಪೂರ್ವಕಾಲವೃತ್ತಾಂತ 33:1-13
ನಂ. 3: ಶ್ರೇಷ್ಠ ವಿವೇಕದ ಅದ್ವಿತೀಯ ಮೂಲ—ಅದರ ಐತಿಹಾಸಿಕ ನಿಷ್ಕೃಷ್ಟತೆ (pr ಪು. 13-15 ಪ್ಯಾರ. 18-31)
ನಂ. 4: ಯೇಸುವಿನ ಮೊದಲ ಅದ್ಭುತ (gt ಅಧ್ಯಾಯ 15)
ಏಪ್ರಿ. 16 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 34-36
ಸಂಗೀತ ನಂ. 4 (43)
ನಂ. 1: ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ (fy ಪು. 51-63)
ನಂ. 2: 2 ಪೂರ್ವಕಾಲವೃತ್ತಾಂತ 36:1-16
ನಂ. 3: ಶ್ರೇಷ್ಠ ವಿವೇಕದ ಅದ್ವಿತೀಯ ಮೂಲ—ಅದರ ನೆರವೇರಿದ ಪ್ರವಾದನೆ (pr ಪು. 15-16 ಪ್ಯಾರ. 32-7)
ನಂ. 4: ಯೆಹೋವನ ಆರಾಧನೆಗಾಗಿ ಅಭಿಮಾನ (gt ಅಧ್ಯಾಯ 16)
ಏಪ್ರಿ. 23 ಬೈಬಲ್ ವಾಚನ: ಎಜ್ರ 1-6
ಸಂಗೀತ ನಂ. 7 (51)
ನಂ. 1: ನಿಮ್ಮ ಹದಿಹರೆಯದವನು ಏಳಿಗೆ ಹೊಂದುವಂತೆ ನೆರವಾಗಿರಿ (fy ಪು. 64-75)
ನಂ. 2: ಎಜ್ರ 4:1-16
ನಂ. 3: ಕ್ರೈಸ್ತಪ್ರಪಂಚವು ದೇವರಿಗೂ ಬೈಬಲಿಗೂ ದ್ರೋಹ ಮಾಡಿದೆ (pr ಪು. 16-19 ಪ್ಯಾರ. 1-19)
ನಂ. 4: ನಿಕೊದೇಮನಿಗೆ ಕಲಿಸಿದ್ದು (gt ಅಧ್ಯಾಯ 17)
ಏಪ್ರಿ. 30 ಲಿಖಿತ ಪುನರ್ವಿಮರ್ಶೆ. ಬೈಬಲ್ ವಾಚನ: ಎಜ್ರ 7-10
ಸಂಗೀತ ನಂ. 24 (185)
ಮೇ 7 ಬೈಬಲ್ ವಾಚನ: ನೆಹೆಮೀಯ 1-5
ಸಂಗೀತ ನಂ. 4 (43)
ನಂ. 1: ಮನೆಯಲ್ಲಿ ಪ್ರತಿಭಟಕನೊಬ್ಬನಿದ್ದಾನೊ? (fy ಪು. 76-89)
ನಂ. 2: ನೆಹೆಮೀಯ 1:1-11
ನಂ. 3: ಜೀವಿತಕ್ಕೆ ಒಂದು ಮಹಾ ಉದ್ದೇಶವಿದೆ (pr ಪು. 20-2 ಪ್ಯಾರ. 1-13)
ನಂ. 4: ಯೋಹಾನನು ಕಡಿಮೆಯಾಗುತ್ತಾನೆ, ಯೇಸುವು ವೃದ್ಧಿಯಾಗುತ್ತಾನೆ (gt ಅಧ್ಯಾಯ 18)
ಮೇ 14 ಬೈಬಲ್ ವಾಚನ: ನೆಹೆಮೀಯ 6-9
ಸಂಗೀತ ನಂ. 23 (200)
ನಂ. 1: ಕ್ರೈಸ್ತ ಸಭೆ—ಬಲಗೊಳಿಸುವ ನೆರವಿನ ಒಂದು ಮೂಲ (w-KA99 5/15 ಪು. 25-8)
ನಂ. 2: ನೆಹೆಮೀಯ 9:1-15
ನಂ. 3: ಇಷ್ಟೊಂದು ಕಷ್ಟಾನುಭವ ಮತ್ತು ಅನ್ಯಾಯವೇಕೆ? (pr ಪು. 22-5 ಪ್ಯಾರ. 1-15)
ನಂ. 4: ಸಮಾರ್ಯದ ಸ್ತ್ರೀಗೆ ಕಲಿಸುವುದು (gt ಅಧ್ಯಾಯ 19)
ಮೇ 21 ಬೈಬಲ್ ವಾಚನ: ನೆಹೆಮೀಯ 10-13
ಸಂಗೀತ ನಂ. 5 (46)
ನಂ. 1: ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ (fy ಪು. 90-102)
ನಂ. 2: ನೆಹೆಮೀಯ 12:27-43
ನಂ. 3: ದೇವರ ಉದ್ದೇಶವು ಬೇಗನೆ ಕೈಗೂಡಲಿದೆ (pr ಪು. 25-8 ಪ್ಯಾರ. 1-22)
ನಂ. 4: ಕಾನಾದಲ್ಲಿರುವಾಗ ಎರಡನೆಯ ಅದ್ಭುತ (gt ಅಧ್ಯಾಯ 20)
ಮೇ 28 ಬೈಬಲ್ ವಾಚನ: ಎಸ್ತೇರಳು 1-4
ಸಂಗೀತ ನಂ. 16 (143)
ನಂ. 1: ಒಂಟಿ ಹೆತ್ತವರ ಕುಟುಂಬಗಳು ಯಶಸ್ವಿಯಾಗಬಲ್ಲವು! (fy ಪು. 103-115)
ನಂ. 2: ಎಸ್ತೇರಳು 1:1-15
ನಂ. 3: ಪ್ರಮೋದವನವಾದ ಭೂಮಿಯೊಂದರ ಮೇಲೆ ಸದಾ ಜೀವಿಸಿರಿ (pr ಪು. 29-30 ಪ್ಯಾರ. 1-27)
ನಂ. 4: ಯೇಸುವಿನ ಸ್ವಂತ ಊರಿನ ಸಭಾಮಂದಿರದಲ್ಲಿ (gt ಅಧ್ಯಾಯ 21)
ಜೂನ್ 4 ಬೈಬಲ್ ವಾಚನ: ಎಸ್ತೇರಳು 5-10
ಸಂಗೀತ ನಂ. 9 (37)
ನಂ. 1: ಕುಟುಂಬ ಸದಸ್ಯನೊಬ್ಬನು ಅಸ್ವಸ್ಥನಾಗಿರುವಾಗ (fy ಪು. 116-127)
ನಂ. 2: ಎಸ್ತೇರಳು 5:1-14
ನಂ. 3: ದೇವರು ಅಪೇಕ್ಷಿಸುವುದನ್ನು ನೀವು ಕಂಡುಕೊಳ್ಳಸಾಧ್ಯವಿರುವ ವಿಧ (rq ಪು. 3)
ನಂ. 4: ನಾಲ್ವರು ಶಿಷ್ಯರು ಕರೆಯಲ್ಪಟ್ಟರು (gt ಅಧ್ಯಾಯ 22)
ಜೂನ್ 11 ಬೈಬಲ್ ವಾಚನ: ಯೋಬ 1-7
ಸಂಗೀತ ನಂ. 6 (45)
ನಂ. 1: ನಿಮ್ಮ ಮನೆವಾರ್ತೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿರಿ (fy ಪು. 128-141)
ನಂ. 2: ಯೋಬ 1:6-22
ನಂ. 3: ದೇವರು ಯಾರು? (rq ಪು. 4-5)
ನಂ. 4: ಕಪೆರ್ನೌಮಿನಲ್ಲಿ ಇನ್ನೂ ಹೆಚ್ಚು ಅದ್ಭುತಗಳು (gt ಅಧ್ಯಾಯ 23)
ಜೂನ್ 18 ಬೈಬಲ್ ವಾಚನ: ಯೋಬ 8-14
ಸಂಗೀತ ನಂ. 21 (191)
ನಂ. 1: ಸೌಲ—ಕರ್ತನು ಆರಿಸಿಕೊಂಡ ಸಾಧನ (w-KA99 5/15 ಪು. 29-31)
ನಂ. 2: ಯೋಬ 8:1-22
ನಂ. 3: ಯೇಸು ಕ್ರಿಸ್ತನು ಯಾರು? (rq ಪು. 6-7)
ನಂ. 4: ಯೇಸುವು ಭೂಮಿಗೆ ಬಂದ ಕಾರಣ (gt ಅಧ್ಯಾಯ 24)
ಜೂನ್ 25 ಬೈಬಲ್ ವಾಚನ: ಯೋಬ 15-21
ಸಂಗೀತ ನಂ. 26 (212)
ನಂ. 1: ತನ್ನ ವಾಗ್ದಾನದ ವಿಷಯದಲ್ಲಿ ದೇವರು ವಿಳಂಬಿಸುತ್ತಿಲ್ಲ (w-KA99 6/1 ಪು. 4-7)
ನಂ. 2: ಯೋಬ 17:1-16
ನಂ. 3: ಪಿಶಾಚನು ಯಾರು? (rq ಪು. 8-9)
ನಂ. 4: ಕುಷ್ಠರೋಗಿಯೊಬ್ಬನಿಗೆ ಅನುಕಂಪ (gt ಅಧ್ಯಾಯ 25)
ಜುಲೈ 2 ಬೈಬಲ್ ವಾಚನ: ಯೋಬ 22-29
ಸಂಗೀತ ನಂ. 23 (200)
ನಂ. 1: ನೀವು ನಿಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸಬೇಕೋ? (w-KA99 6/15 ಪು. 10-13)
ನಂ. 2: ಯೋಬ 27:1-23
ನಂ. 3: ಭೂಮಿಗಾಗಿ ದೇವರ ಉದ್ದೇಶವು ಏನು? (rq ಪು. 10-11)
ನಂ. 4: ಕಪೆರ್ನೌಮಿನ ಮನೆಗೆ ಹಿಂತೆರಳುವಿಕೆ (gt ಅಧ್ಯಾಯ 26)
ಜುಲೈ 9 ಬೈಬಲ್ ವಾಚನ: ಯೋಬ 30-35
ಸಂಗೀತ ನಂ. 5 (46)
ನಂ. 1: ನೀವು ಬೈಬಲ್ ಪ್ರವಾದನೆಯನ್ನು ನಂಬಸಾಧ್ಯವಿರುವ ಕಾರಣ (w-KA99 7/15 ಪು. 4-8)
ನಂ. 2: ಯೋಬ 31:1-22
ನಂ. 3: ದೇವರ ರಾಜ್ಯವು ಏನು? (rq ಪು. 12-13)
ನಂ. 4: ಮತ್ತಾಯನನ್ನು ಕರೆಯುವದು (gt ಅಧ್ಯಾಯ 27)
ಜುಲೈ 16 ಬೈಬಲ್ ವಾಚನ: ಯೋಬ 36-42
ಸಂಗೀತ ನಂ. 25 (204)
ನಂ. 1: ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ (fy ಪು. 142-152)
ನಂ. 2: ಯೋಬ 36:1-22
ನಂ. 3: ಪ್ರಾರ್ಥನೆಯಲ್ಲಿ ದೇವರ ಸಮೀಪಕ್ಕೆ ಬರುವುದು (rq ಪು. 14-15)
ನಂ. 4: ಉಪವಾಸದ ಕುರಿತು ಪ್ರಶ್ನಿಸಲ್ಪಟ್ಟದ್ದು (gt ಅಧ್ಯಾಯ 28)
ಜುಲೈ 23 ಬೈಬಲ್ ವಾಚನ: ಕೀರ್ತನೆ 1-10
ಸಂಗೀತ ನಂ. 7 (51)
ನಂ. 1: ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ (fy ಪು. 153-162)
ನಂ. 2: ಕೀರ್ತನೆ 3:1–4:8
ನಂ. 3: ದೇವರನ್ನು ಮೆಚ್ಚಿಸುವ ಕುಟುಂಬ ಜೀವನ (rq ಪು. 16-17)
ನಂ. 4: ಸಬ್ಬತ್ನಲ್ಲಿ ಸತ್ಕಾರ್ಯಗಳನ್ನು ಮಾಡುವುದು (gt ಅಧ್ಯಾಯ 29)
ಜುಲೈ 30 ಬೈಬಲ್ ವಾಚನ: ಕೀರ್ತನೆ 11-18
ಸಂಗೀತ ನಂ. 10 (82)
ನಂ. 1: ಜೊತೆಯಾಗಿ ವಯಸ್ಸಾದವರಾಗುತ್ತಾ ಹೋಗುವುದು (fy ಪು. 163-172)
ನಂ. 2: ಕೀರ್ತನೆ 11:1–13:6
ನಂ. 3: ದೇವರ ಸೇವಕರು ಶುದ್ಧರಾಗಿರಬೇಕು (rq ಪು. 18-19)
ನಂ. 4: ಅವನ ದೂರುಗಾರರಿಗೆ ಉತ್ತರ ನೀಡುವದು (gt ಅಧ್ಯಾಯ 30)
ಆಗಸ್ಟ್ 6 ಬೈಬಲ್ ವಾಚನ: ಕೀರ್ತನೆ 19-26
ಸಂಗೀತ ನಂ. 14 (117)
ನಂ. 1: ಹಿತಕರ ಸಂವಾದ—ಸುಖೀ ವಿವಾಹಕ್ಕೆ ಕೀಲಿ ಕೈ (w-KA99 7/15 ಪು. 21-3)
ನಂ. 2: ಕೀರ್ತನೆ 20:1–21:13
ನಂ. 3: ದೇವರು ದ್ವೇಷಿಸುವ ಆಚರಣೆಗಳು (rq ಪು. 20-1)
ನಂ. 4: ಸಬ್ಬತ್ನಲ್ಲಿ ಧಾನ್ಯವನ್ನು ಕೀಳುವದು (gt ಅಧ್ಯಾಯ 31)
ಆಗಸ್ಟ್ 13 ಬೈಬಲ್ ವಾಚನ: ಕೀರ್ತನೆ 27-34
ಸಂಗೀತ ನಂ. 22 (130)
ನಂ. 1: ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ (w-KA99 7/15 ಪು. 24-5)
ನಂ. 2: ಕೀರ್ತನೆ 28:1–29:11
ನಂ. 3: ದೇವರನ್ನು ಅಸಂತೋಷಪಡಿಸುವ ನಂಬಿಕೆಗಳು ಮತ್ತು ಪದ್ಧತಿಗಳು (rq ಪು. 22-3)
ನಂ. 4: ಸಬ್ಬತ್ನಲ್ಲಿ ನಿಯಮಾನುಸಾರವಾದದ್ದು ಯಾವುದು? (gt ಅಧ್ಯಾಯ 32)
ಆಗಸ್ಟ್ 20 ಬೈಬಲ್ ವಾಚನ: ಕೀರ್ತನೆ 35-39
ಸಂಗೀತ ನಂ. 15 (127)
ನಂ. 1: ಸಮಾನಸ್ಥರ ಒತ್ತಡ—ಅದು ನಿಮಗೆ ಪ್ರಯೋಜನಕರವೋ? (w-KA99 8/1 ಪು. 22-5)
ನಂ. 2: ಕೀರ್ತನೆ 38:1-22
ನಂ. 3: ಜೀವ ಮತ್ತು ರಕ್ತಕ್ಕಾಗಿ ಗೌರವವನ್ನು ತೋರಿಸುವುದು (rq ಪು. 24-5)
ನಂ. 4: ಯೆಶಾಯನ ಪ್ರವಾದನೆಯನ್ನು ನೆರವೇರಿಸುವದು (gt ಅಧ್ಯಾಯ 33)
ಆಗಸ್ಟ್ 27 ಲಿಖಿತ ಪುನರ್ವಿಮರ್ಶೆ. ಬೈಬಲ್ ವಾಚನ: ಕೀರ್ತನೆ 40-47
ಸಂಗೀತ ನಂ. 21 (191)
ಸೆಪ್ಟೆಂ. 3 ಬೈಬಲ್ ವಾಚನ: ಕೀರ್ತನೆ 48-55
ಸಂಗೀತ ನಂ. 13 (124)
ನಂ. 1: ಕೋಪವು ನಿಮ್ಮನ್ನು ಮುಗ್ಗರಿಸದಂತೆ ಎಚ್ಚರವಹಿಸಿರಿ (w-KA99 8/15 ಪು. 8-9)
ನಂ. 2: ಕೀರ್ತನೆ 49:1-20
ನಂ. 3: ಸತ್ಯ ಧರ್ಮವನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ? (rq ಪು. 26-27)
ನಂ. 4: ಅವನ ಅಪೊಸ್ತಲರನ್ನು ಆರಿಸುವದು (gt ಅಧ್ಯಾಯ 34)
ಸೆಪ್ಟೆಂ. 10 ಬೈಬಲ್ ವಾಚನ: ಕೀರ್ತನೆ 56-65
ಸಂಗೀತ ನಂ. 19 (164)
ನಂ. 1: ಪಿಶಾಚನು ನಮಗೆ ರೋಗವನ್ನು ಬರಿಸುತ್ತಾನೋ? (w-KA99 9/1 ಪು. 4-7)
ನಂ. 2: ಕೀರ್ತನೆ 59:1-17
ನಂ. 3: ಯೆಹೋವನ ಸಾಕ್ಷಿಗಳು ಸಂಘಟಿತರಾಗಿರುವ ವಿಧ (rq ಪು. 28-9)
ನಂ. 4: ಎಂದೆಂದಿಗೂ ಕೊಡಲ್ಪಟ್ಟ ಅತಿ ಪ್ರಖ್ಯಾತ ಪ್ರಸಂಗ (gt ಅಧ್ಯಾಯ 35)
ಸೆಪ್ಟೆಂ. 17 ಬೈಬಲ್ ವಾಚನ: ಕೀರ್ತನೆ 66-71
ಸಂಗೀತ ನಂ. 23 (200)
ನಂ. 1: “ಉತ್ತಮ ಭಾಗವನ್ನು” ಆರಿಸಿಕೊಳ್ಳಿರಿ (w-KA99 9/1 ಪು. 30-1)
ನಂ. 2: ಕೀರ್ತನೆ 69:1-19
ನಂ. 3: ದೇವರ ಚಿತ್ತವನ್ನು ಮಾಡುವಂತೆ ಇತರರಿಗೆ ಸಹಾಯ ಮಾಡುವುದು (rq ಪು. 30)
ನಂ. 4: ಸೇನಾ ಅಧಿಕಾರಿಯೊಬ್ಬನ ದೊಡ್ಡ ನಂಬಿಕೆ (gt ಅಧ್ಯಾಯ 36)
ಸೆಪ್ಟೆಂ. 24 ಬೈಬಲ್ ವಾಚನ: ಕೀರ್ತನೆ 72-77
ಸಂಗೀತ ನಂ. 9 (37)
ನಂ. 1: ನೀವು ಕೊಟ್ಟ ಮಾತುಗಳನ್ನು ಏಕೆ ಪಾಲಿಸಬೇಕು? (w-KA99 9/15 ಪು. 8-11)
ನಂ. 2: ಕೀರ್ತನೆ 73:1-24
ನಂ. 3: ದೇವರಿಗೆ ಸೇವೆ ಸಲ್ಲಿಸುವ ನಿಮ್ಮ ನಿರ್ಧಾರ (rq ಪು. 31)
ನಂ. 4: ವಿಧವೆಯೊಬ್ಬಳ ದುಃಖವನ್ನು ಯೇಸು ನೀಗಿಸುತ್ತಾನೆ (gt ಅಧ್ಯಾಯ 37)
ಅಕ್ಟೋ. 1 ಬೈಬಲ್ ವಾಚನ: ಕೀರ್ತನೆ 78-81
ಸಂಗೀತ ನಂ. 6 (45)
ನಂ. 1: ವಿವೇಕವನ್ನು ಸಂಪಾದಿಸಿಕೊಂಡು, ಶಿಸ್ತನ್ನು ಸ್ವೀಕರಿಸಿ (w-KA99 9/15 ಪು. 12-15)
ನಂ. 2: ಕೀರ್ತನೆ 78:1-22
ನಂ. 3: ದೇವರ ಉದ್ದೇಶವು ಈಗ ಪರಮಾವಧಿಯನ್ನು ತಲುಪುತ್ತಿದೆ (je ಪು. 4-5)
ನಂ. 4: ಯೋಹಾನನಲ್ಲಿ ನಂಬಿಕೆಯ ಕೊರತೆಯಿತ್ತೇ? (gt ಅಧ್ಯಾಯ 38)
ಅಕ್ಟೋ. 8 ಬೈಬಲ್ ವಾಚನ: ಕೀರ್ತನೆ 82-89
ಸಂಗೀತ ನಂ. 27 (221)
ನಂ. 1: ತಿಮೊಥೆಯ—“ನಂಬಿಕೆಯ ವಿಷಯದಲ್ಲಿ ನಿಜಕುಮಾರ” (w-KA99 9/15 ಪು. 29-31)
ನಂ. 2: ಕೀರ್ತನೆ 88:1-18
ನಂ. 3: ಪ್ರಥಮ ಶತಮಾನದ ಕ್ರೈಸ್ತ ಸಭೆ (je ಪು. 6-7)
ನಂ. 4: ಅಹಂಕಾರಿಗಳು ಮತ್ತು ದೀನರು (gt ಅಧ್ಯಾಯ 39)
ಅಕ್ಟೋ. 15 ಬೈಬಲ್ ವಾಚನ: ಕೀರ್ತನೆ 90-98
ಸಂಗೀತ ನಂ. 28 (224)
ನಂ. 1: ತಪ್ಪುಮಾಡುವಿಕೆಗೆ ಇಲ್ಲವೆಂದು ಹೇಳುವಂತೆ ಬಲಪಡಿಸಲ್ಪಟ್ಟದ್ದು (w-KA99 10/1 ಪು. 28-31)
ನಂ. 2: ಕೀರ್ತನೆ 90:1-17
ನಂ. 3: ಯೆಹೋವನು ತನ್ನ ಜನರನ್ನು ಕೆಲಸಕ್ಕಾಗಿ ಒಟ್ಟುಗೂಡಿಸುತ್ತಾನೆ ಮತ್ತು ಸಿದ್ಧಗೊಳಿಸುತ್ತಾನೆ (je ಪು. 8-11)
ನಂ. 4: ಕರುಣೆಯ ಒಂದು ಪಾಠ (gt ಅಧ್ಯಾಯ 40)
ಅಕ್ಟೋ. 22 ಬೈಬಲ್ ವಾಚನ: ಕೀರ್ತನೆ 99-105
ಸಂಗೀತ ನಂ. 23 (200)
ನಂ. 1: ಪ್ರೀತಿಯ ಅತ್ಯುತ್ಕೃಷ್ಟ ಮಾದರಿಯನ್ನು ಕಲಿತುಕೊಳ್ಳುವುದು (w-KA99 10/15 ಪು. 8-11)
ನಂ. 2: ಕೀರ್ತನೆ 103:1-22
ನಂ. 3: ಪ್ರೀತಿ ಮತ್ತು ಐಕ್ಯತೆಯನ್ನು ಉತ್ತೇಜಿಸಲಿಕ್ಕಾಗಿ ಸಭೆಗಳು (je ಪು. 12-13)
ನಂ. 4: ವಾಗ್ವಾದದ ಒಂದು ಕೇಂದ್ರ (gt ಅಧ್ಯಾಯ 41)
ಅಕ್ಟೋ. 29 ಬೈಬಲ್ ವಾಚನ: ಕೀರ್ತನೆ 106-109
ಸಂಗೀತ ನಂ. 1 (13)
ನಂ. 1: “ಯೆಹೋವನೇ ವಿವೇಕವನ್ನು ಕೊಡುವಾತನು” (w-KA99 11/15 ಪು. 24-7)
ನಂ. 2: ಕೀರ್ತನೆ 107:1-19
ನಂ. 3: ಪ್ರೀತಿ ಹಾಗೂ ಸತ್ಕಾರ್ಯಗಳನ್ನು ಪ್ರೇರೇಪಿಸಲಿಕ್ಕಾಗಿ ಕೂಟಗಳು (je ಪು. 14-15)
ನಂ. 4: ಯೇಸುವು ಫರಿಸಾಯರನ್ನು ಗದರಿಸುತ್ತಾನೆ (gt ಅಧ್ಯಾಯ 42)
ನವಂ. 5 ಬೈಬಲ್ ವಾಚನ: ಕೀರ್ತನೆ 110-118
ಸಂಗೀತ ನಂ. 8 (53)
ನಂ. 1: ಅಪಾಕಲಿಪ್ಸ್—ಭಯಪಡಬೇಕೊ ಅಥವಾ ನಿರೀಕ್ಷಿಸಬೇಕೊ? (w-KA99 12/1 ಪು. 5-8)
ನಂ. 2: ಕೀರ್ತನೆ 112:1–113:9
ನಂ. 3: ದೇವರ ರಾಜ್ಯದ ಸಾರುವಿಕೆಗಾಗಿ ಸಭೆಗಳು ವ್ಯವಸ್ಥಾಪಿಸಲ್ಪಟ್ಟದ್ದು (je ಪು. 16-17)
ನಂ. 4: ದೃಷ್ಟಾಂತಗಳ ಮೂಲಕ ಕಲಿಸುವುದು (gt ಅಧ್ಯಾಯ 43)
ನವೆಂ. 12 ಬೈಬಲ್ ವಾಚನ: ಕೀರ್ತನೆ 119
ಸಂಗೀತ ನಂ. 20 (93)
ನಂ. 1: ನಿಮ್ಮ ಬಲವೇ ನಿಮ್ಮ ಬಲಹೀನತೆಯಾಗದಿರಲಿ (w-KA99 12/1 ಪು. 26-9)
ನಂ. 2: ಕೀರ್ತನೆ 119:1-24
ನಂ. 3: ಸಮ್ಮೇಳನಗಳಲ್ಲಿ ಆನಂದಿಸುವುದು ಮತ್ತು ದೇವರನ್ನು ಸ್ತುತಿಸುವುದು (je ಪು. 19)
ನಂ. 4: ಭಯಂಕರ ಚಂಡಮಾರುತವನ್ನು ಸುಮ್ಮನಾಗಿಸುವದು (gt ಅಧ್ಯಾಯ 44)
ನವೆಂ. 19 ಬೈಬಲ್ ವಾಚನ: ಕೀರ್ತನೆ 120-137
ಸಂಗೀತ ನಂ. 5 (46)
ನಂ. 1: ನಮ್ಮ ವೃದ್ಧ ಹೆತ್ತವರನ್ನು ಸನ್ಮಾನಿಸುವುದು (fy ಪು. 173-182)
ನಂ. 2: ಕೀರ್ತನೆ 120:1–122:9
ನಂ. 3: ಸಂಚರಣ ಮೇಲ್ವಿಚಾರಕರು—ಸತ್ಯದಲ್ಲಿ ಜೊತೆ ಕೆಲಸಗಾರರು (je ಪು. 20-1)
ನಂ. 4: ಒಬ್ಬ ಅಸಂಭಾವ್ಯ ಶಿಷ್ಯ (gt ಅಧ್ಯಾಯ 45)
ನವೆಂ. 26 ಬೈಬಲ್ ವಾಚನ: ಕೀರ್ತನೆ 138-150
ಸಂಗೀತ ನಂ. 6 (45)
ನಂ. 1: ನಿಮ್ಮ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ (fy ಪು. 183-191)
ನಂ. 2: ಕೀರ್ತನೆ 139:1-24)
ನಂ. 3: ಪೂರ್ಣಸಮಯದ ಶುಶ್ರೂಷಕರು ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಾರೆ (je ಪು. 22-3)
ನಂ. 4: ಅವಳು ಅವನ ಉಡುಪನ್ನು ಮುಟ್ಟಿದಳು (gt ಅಧ್ಯಾಯ 46)
ಡಿಸೆಂ. 3 ಬೈಬಲ್ ವಾಚನ: ಜ್ಞಾನೋಕ್ತಿ 1-7
ಸಂಗೀತ ನಂ. 23 (200)
ನಂ. 1: ದೇವರ ಪವಿತ್ರಾತ್ಮವೆಂದರೇನು? (g-KA99 2/8 ಪು. 26-7)
ನಂ. 2: ಜ್ಞಾನೋಕ್ತಿ 4:1-27
ನಂ. 3: ದೇವರನ್ನು ಸ್ತುತಿಸಲಿಕ್ಕಾಗಿ ಬೈಬಲ್ ಸಾಹಿತ್ಯದ ಉತ್ಪಾದನೆ (je ಪು. 24-5)
ನಂ. 4: ದುಃಖಾಶ್ರುಗಳು ಮಹಾ ಹರ್ಷೋನ್ಮಾದವಾಗಿ ಪರಿವರ್ತಿಸಿದ್ದು (gt ಅಧ್ಯಾಯ 47)
ಡಿಸೆಂ. 10 ಬೈಬಲ್ ವಾಚನ: ಜ್ಞಾನೋಕ್ತಿ 8-13
ಸಂಗೀತ ನಂ. 7 (51)
ನಂ. 1: ಮೃತರಿಗೆ ಗೌರವ ಸಲ್ಲಿಸಬೇಕೊ? (g-KA99 3/8 ಪು. 10-11)
ನಂ. 2: ಜ್ಞಾನೋಕ್ತಿ 13:1-25
ನಂ. 3: ಐಕ್ಯತೆಯಲ್ಲಿ ದೇವರ ಮಂದೆಯನ್ನು ಮುನ್ನಡೆಸುವುದು (je ಪು. 26-7)
ನಂ. 4: ಯಾಯಿರನ ಮನೆಯನ್ನು ಬಿಟ್ಟು ನಜರೇತಿಗೆ ಪುನಃಭೇಟಿ ನೀಡುವುದು (gt ಅಧ್ಯಾಯ 48)
ಡಿಸೆಂ. 17 ಬೈಬಲ್ ವಾಚನ: ಜ್ಞಾನೋಕ್ತಿ 14-19
ಸಂಗೀತ ನಂ. 29 (222)
ನಂ. 1: ದೇವರ ನಾಮವನ್ನು ಉಚ್ಚರಿಸುವುದು ತಪ್ಪೋ? (g-KA99 4/8 26-7)
ನಂ. 2: ಜ್ಞಾನೋಕ್ತಿ 16:1-25
ನಂ. 3: ಸ್ವಯಂಪ್ರೇರಿತ ಕಾಣಿಕೆಗಳಿಂದ ಆರ್ಥಿಕವಾಗಿ ಬೆಂಬಲಿಸಲ್ಪಟ್ಟಿದೆ (je ಪು. 28)
ನಂ. 4: ಗಲಿಲಾಯಕ್ಕೆ ಇನ್ನೊಮ್ಮೆ ಸಾರುವ ಸಂಚಾರ (gt ಅಧ್ಯಾಯ 49)
ಡಿಸೆಂ. 24 ಬೈಬಲ್ ವಾಚನ: ಜ್ಞಾನೋಕ್ತಿ 20-25
ಸಂಗೀತ ನಂ. 22 (130)
ನಂ. 1: ಸ್ನೇಹಿತರ ನಡುವೆ ಲೇವಾದೇವಿ (g-KA99 5/8 ಪು. 18-19)
ನಂ. 2: ಜ್ಞಾನೋಕ್ತಿ 20:1-30
ನಂ. 3: ನೀತಿಯ ಸಲುವಾಗಿ ಹಿಂಸಿಸಲ್ಪಡುವುದು (je ಪು. 29)
ನಂ. 4: ಹಿಂಸೆಯನ್ನು ಎದುರಿಸಲು ಸಿದ್ಧತೆ (gt ಅಧ್ಯಾಯ 50)
ಡಿಸೆಂ. 31 ಲಿಖಿತ ಪುನರ್ವಿಮರ್ಶೆ. ಬೈಬಲ್ ವಾಚನ: ಜ್ಞಾನೋಕ್ತಿ 26-31
ಸಂಗೀತ ನಂ. 18 (162)