ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಏಪ್ರಿ.-ಜೂನ್
“ಒಳ್ಳೇ ಶಿಕ್ಷಣದ ಪ್ರಾಮುಖ್ಯತೆಯನ್ನು ಬೈಬಲು ಒತ್ತಿಹೇಳುತ್ತದೆ. [ಜ್ಞಾನೋಕ್ತಿ 2:10, 11ನ್ನು ಓದಿರಿ.] ಮಕ್ಕಳು ಅರ್ಹರಾದ ಶಿಕ್ಷಕರನ್ನು ಪಡೆದುಕೊಳ್ಳುವುದು ಎಷ್ಟು ಅತ್ಯಾವಶ್ಯಕವಾಗಿದೆ ಎಂಬುದನ್ನು ನಮಲ್ಲಿ ಹೆಚ್ಚಿನವರು ಗ್ರಹಿಸುತ್ತೇವೆ. ಈ ಎಚ್ಚರ! ಪತ್ರಿಕೆಯು ಶಿಕ್ಷಕರ ನಿರ್ಣಾಯಕ ಪಾತ್ರವನ್ನು, ಅವರು ಮಾಡುವ ತ್ಯಾಗಗಳನ್ನು ನಾವು ಹೇಗೆ ಗಣ್ಯಮಾಡಬೇಕು, ಮತ್ತು ಶಿಕ್ಷಕರಿಗಿರುವ ಈ ಕಷ್ಟಕರವಾದ ಪಂಥಾಹ್ವಾನದಲ್ಲಿ ಅವರಿಗೆ ಸಹಾಯಮಾಡಲಿಕ್ಕಾಗಿ ಹೆತ್ತವರು ಏನು ಮಾಡಸಾಧ್ಯವಿದೆ ಎಂಬುದನ್ನು ಎತ್ತಿತೋರಿಸುತ್ತದೆ.”
ಕಾವಲಿನಬುರುಜು ಏಪ್ರಿ.15
“ಜನರು ಎಲ್ಲಿಯೇ ಜೀವಿಸುತ್ತಿರಲಿ, ಅವರು ಭದ್ರತೆಯಲ್ಲಿ, ಉದಾಹರಣೆಗೆ ಸಂತೃಪ್ತಿಕರವಾದ ಒಂದು ಉದ್ಯೋಗವನ್ನು ಕಂಡುಕೊಳ್ಳುವ ಹಾಗೂ ಅದನ್ನು ಕಾಪಾಡಿಕೊಳ್ಳುವುದರಿಂದ ಸಿಗುವ ಭದ್ರತೆಯಲ್ಲಿ ಆಸಕ್ತರಾಗಿದ್ದಾರೆ. ಆದರೆ ಸದಾಕಾಲಕ್ಕೂ ಭದ್ರವಾಗಿರುವಂತೆ ನಿಮ್ಮನ್ನು ಶಕ್ತರನ್ನಾಗಿಮಾಡುವ ಶಾಶ್ವತ ಭದ್ರತೆಯ ಒಂದು ಮೂಲವಿದೆ ಎಂದು ನೀವೆಂದಾದರೂ ಯೋಚಿಸಿದ್ದೀರೋ? [ಕೀರ್ತನೆ 16:8, 9ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ನಿಜವಾದ ಭದ್ರತೆಯು ಯಾವುದರ ಮೇಲೆ ಆತುಕೊಂಡಿದೆ ಎಂಬುದನ್ನು ಪರಿಶೀಲಿಸುತ್ತದೆ.”
ಎಚ್ಚರ! ಏಪ್ರಿ.-ಜೂನ್
“ಒಂದು ತಪ್ಪನ್ನು ಮಾಡಿದ ಬಳಿಕ ನಮಗೆಲ್ಲರಿಗೂ ಅಪರಾಧಿ ಮನೋಭಾವವು ಉಂಟಾಗುತ್ತದೆ. ಇದು ನಮಗೆ ಒಳ್ಳೇದಾಗಿರಸಾಧ್ಯವಿದೆ ಎಂದು ನೀವು ನೆನಸುತ್ತೀರೋ? [ಪ್ರತ್ಯುತ್ತರದ ಬಳಿಕ, ಕೀರ್ತನೆ 32:3, 7ನ್ನು ಓದಿ.] ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಈ ಭಾವನೆಗಳು ನಾವು ಸಕಾರಾತ್ಮಕ ಕ್ರಿಯೆಯನ್ನು ಕೈಗೊಳ್ಳುವಂತೆ ಹೇಗೆ ಪ್ರಚೋದಿಸಬಲ್ಲವು ಎಂಬುದನ್ನು ನಮಗೆ ತಿಳಿಸುತ್ತದೆ.”
ಕಾವಲಿನಬುರುಜು ಮೇ1
“ತುಂಬ ಗಂಭೀರವಾಗಿ ಅಸ್ವಸ್ಥರಾಗಿರುವ ಅಥವಾ ಅಂಗವಿಕಲತೆಯಿಂದ ಕಷ್ಟಾನುಭವಿಸುತ್ತಿರುವ ಯಾರ ಪರಿಚಯವಾದರೂ ನಿಮಗಿದೆಯೆ? ಅಂತಹವರಿಗೆ ಉತ್ತೇಜನದ ಅಗತ್ಯವಿದೆ ಎಂಬುದರಲ್ಲಿ ಸಂಶಯವಿಲ್ಲ. ಅವರನ್ನು ಉತ್ತೇಜಿಸಲಿಕ್ಕಾಗಿ ನಾವೇನು ಹೇಳಸಾಧ್ಯವಿದೆ? ಬೈಬಲು ನಿರೀಕ್ಷೆಯ ಮಾತುಗಳನ್ನು ಒದಗಿಸುತ್ತದೆ. [ಯೆಶಾಯ 35:5, 6ನ್ನು ಓದಿರಿ.] ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು, ಈ ಪ್ರವಾದನೆಯು ನಿಜವಾಗಿಯೂ ನೆರವೇರುವುದು ಎಂಬದರ ಬಗ್ಗೆ ನಾವು ಏಕೆ ನಿಶ್ಚಿತರಾಗಿರಸಾಧ್ಯವಿದೆ ಎಂಬುದನ್ನು ವಿವರಿಸುವುದು.”