ಬೈಬಲ್ ಬೋಧಿಸುತ್ತದೆ ಪುಸ್ತಕದ ಉಪಯೋಗದಲ್ಲಿ ಪರಿಣತರಾಗಿ
1. ಯೇಸು ತನ್ನ ಶಿಷ್ಯರಿಗೆ ಯಾವ ಆಜ್ಞೆ ಕೊಟ್ಟನು?
1‘ಶಿಷ್ಯರನ್ನಾಗಿ ಮಾಡುವ’ ಬೃಹತ್ಪ್ರಮಾಣದ ಲೋಕವ್ಯಾಪಕ ಕಾರ್ಯಾಚರಣೆಯನ್ನು ನಿರ್ದೇಶಿಸಲು ಯೇಸುಕ್ರಿಸ್ತನಿಗೆ “ಎಲ್ಲ ಅಧಿಕಾರ” ಕೊಡಲಾಗಿದೆ. (ಮತ್ತಾ. 28:18, 19) ಅವನು ಸ್ವರ್ಗಕ್ಕೆ ಹೋಗುವ ತುಸು ಮುಂಚೆ ತನ್ನ ಶಿಷ್ಯರಿಗೆ ತುರ್ತಾಗಿ ಪೂರೈಸಬೇಕಾದ ಒಂದು ಆಜ್ಞೆಯನ್ನು ಕೊಟ್ಟನು. ಇಂದು ಈ ದೈವಿಕ ಆಜ್ಞೆಯನ್ನು ಪೂರೈಸಲು ನಮ್ಮ ಪ್ರಯತ್ನವನ್ನು ತೀವ್ರಗೊಳಿಸುವುದು ಇನ್ನಷ್ಟು ತುರ್ತಿನದ್ದಾಗಿದೆ.—ಯೋಹಾ. 4:35.
2. ಬೈಬಲ್ ಬೋಧಿಸುತ್ತದೆ ಪುಸ್ತಕವು ಒಂದು ಪ್ರಬಲ ಸಾಧನವೆಂದು ಏಕೆ ಹೇಳಸಾಧ್ಯ?
2 ಹತ್ತೊಂಬತ್ತು ಅಧ್ಯಾಯಗಳೂ ಸವಿವರ ಪರಿಶಿಷ್ಟವೂ ಇರುವ ಮತ್ತು ಸ್ಪಷ್ಟವಾದ ಸರಳ ಭಾಷೆಯಲ್ಲಿರುವ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವು ಶುಶ್ರೂಷೆಗೆ ಒಂದು ವರದಾನವೇ ಸರಿ. “ಒಡನೆ ಮನೆಯವನನ್ನು ಸಂಭಾಷಣೆಗೆ ಸೆಳೆಯುವ ಗುಣ” ಬೈಬಲ್ ಬೋಧಿಸುತ್ತದೆ ಪುಸ್ತಕಕ್ಕಿದೆ ಎಂದು ಒಬ್ಬ ಸರ್ಕಿಟ್ ಮೇಲ್ವಿಚಾರಕರು ವರದಿಸಿದರು. ಆ ಪುಸ್ತಕವನ್ನು ಬಳಸುವುದು ಎಷ್ಟು ಸುಲಭವೆಂದರೆ ಅವರನ್ನುವುದು “ಅದು ಅನೇಕ ರಾಜ್ಯ ಪ್ರಚಾರಕರಿಗೆ ಶುಶ್ರೂಷೆಯಲ್ಲಿನ ಭರವಸೆಯನ್ನು ನವೀಕರಿಸಿದೆ ಮತ್ತು ಆನಂದವನ್ನು ಕೊಟ್ಟಿದೆ.”
3. ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನಾವು ಪರಿಣಾಮಕಾರಿಯಾಗಿ ಹೇಗೆ ನೀಡಸಾಧ್ಯವಿದೆ?
3 ಬೈಬಲ್ ಬೋಧಿಸುತ್ತದೆ ಪುಸ್ತಕದ ಪರಿಣಾಮಕಾರಿ ಉಪಯೋಗ: ಈ ಪುಸ್ತಕವನ್ನು ನೀಡುವ ಸರಳ ವಿಧಾನವೆಂದರೆ (1) ಕಿವಿಗೊಡಲು ಮನೆಯವನಿಗೆ ಮನಸ್ಸಿದೆಯೋ ಎಂದು ಗ್ರಹಿಸಲು ಒಂದು ದೃಷ್ಟಿಕೋನ ಪ್ರಶ್ನೆ ಕೇಳಿ, (2) ಅವನು ಒಪ್ಪುವಲ್ಲಿ ಒಂದು ಸೂಕ್ತ ವಚನ ಓದಿ, (3) ನೀವು ಮಾತಾಡುತ್ತಿರುವ ವಿಷಯದ ಕುರಿತು ಚರ್ಚಿಸುವ ಅಧ್ಯಾಯವೊಂದನ್ನು ಆ ಪುಸ್ತಕದಿಂದ ತೆರೆದು ತೋರಿಸಿ ಮತ್ತು ಶೀರ್ಷಿಕೆಯಡಿಯಿರುವ ಪೀಠಿಕಾ ಪ್ರಶ್ನೆಗಳನ್ನು ಓದಿ. ಮನೆಯವನು ಆಸಕ್ತಿ ತೋರಿಸುವುದಾದರೆ ಆ ಅಧ್ಯಾಯದ ಆರಂಭದ ಪ್ಯಾರಗಳನ್ನು ಚರ್ಚಿಸುವ ಮೂಲಕ ಒಂದು ಬೈಬಲ್ ಅಧ್ಯಯನವನ್ನು ಪ್ರತ್ಯಕ್ಷಾಭಿನಯಿಸಬಹುದು. ಈ ವಿಧಾನವನ್ನು, ಆರಂಭದ ಭೇಟಿಯಲ್ಲಿ ಅಥವಾ ಪುನರ್ಭೇಟಿಯಲ್ಲಿ ಒಂದು ಅಧ್ಯಯನವನ್ನು ಆರಂಭಿಸಲು ಉಪಯೋಗಿಸಬಹುದು.
4. ಸಾರುವುದು ಮತ್ತು ಬೋಧಿಸುವುದು ಇವೆರಡೂ ಹೇಗೆ ಭಿನ್ನವಾಗಿವೆ?
4 ಆಸಕ್ತರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿದ ಬಳಿಕ ಪ್ರಚಾರಕರು ಅವರನ್ನು ಪುನಃ ಭೇಟಿಮಾಡಿ ಯೇಸು ಆಜ್ಞಾಪಿಸಿದ ‘ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸುವುದು’ ಅತ್ಯಾವಶ್ಯಕ. (ಮತ್ತಾ. 28:20) ಬೋಧಿಸುವುದು ಸಾರುವುದಕ್ಕಿಂತ ಭಿನ್ನ. ಹೇಗೆಂದರೆ ಬೋಧಕನು ವಿಷಯಗಳನ್ನು ತಿಳಿಯಪಡಿಸುತ್ತಾನಷ್ಟೇ ಅಲ್ಲ ಕಲಿಸುತ್ತಾನೆ, ವಿವರಿಸುತ್ತಾನೆ ಮತ್ತು ಪುರಾವೆಗಳನ್ನು ಕೊಡುತ್ತಾನೆ.
5. ಒಂದು ಬೈಬಲ್ ಅಧ್ಯಯನಕ್ಕಾಗಿ ನಾವು ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ತಯಾರಿಸಸಾಧ್ಯವಿದೆ?
5 ಬೈಬಲ್ ಅಧ್ಯಯನಕ್ಕಾಗಿ ಚೆನ್ನಾಗಿ ತಯಾರಿಸಿ: ಈ ಪ್ರಕಾಶನವನ್ನು ಉಪಯೋಗಿಸಿ ಪರಿಣಾಮಕಾರಿ ಬೋಧಕರಾಗಬೇಕಾದರೆ, (1) ಮುಂಚಿತವಾಗಿಯೇ ಅಧ್ಯಯನಕ್ಕಾಗಿ ತಯಾರಿಸಿ. ಹೀಗೆ ಕೇಳಿಕೊಳ್ಳಿ: ‘ಈ ವ್ಯಕ್ತಿ ಯೆಹೋವನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ಅಧ್ಯಯನ ಭಾಗದ ಯಾವ ಅಂಶವನ್ನು ಅನ್ವಯಿಸಿಕೊಳ್ಳುವುದು ಅಗತ್ಯವಾಗಿದೆ?’ (2) ಅಧ್ಯಯನವನ್ನು ಬೈಬಲಿನ ಮೇಲೆ ಆಧರಿಸಿ. ಬೈಬಲ್ ವಚನಗಳಿಂದ ನಮ್ಮ ನಂಬಿಕೆಗೆ ಶಾಸ್ತ್ರಾಧಾರಕೊಡುವ ಮುಖ್ಯ ಪದಗಳನ್ನು ಗುರುತಿಸಲು ವಿದ್ಯಾರ್ಥಿಗೆ ಸಹಾಯಮಾಡಿ. (ಇಬ್ರಿ. 4:12) (3) ಪೀಠಿಕಾ ಪ್ರಶ್ನೆಗಳು, ಪರಿಶಿಷ್ಟ, ಪುನರ್ವಿಮರ್ಶೆಯ ಚೌಕವನ್ನು ಉಪಯೋಗಿಸಿ. (4) ಮುಖ್ಯ ಅಂಶಗಳ ಮೇಲೆ ಗಮನ ಕೇಂದ್ರೀಕರಿಸುತ್ತಾ ಅಧ್ಯಯನವನ್ನು ಸರಳವಾಗಿಡಿ. ಹೆಚ್ಚು ಮಾತಾಡಬೇಡಿ ಅಥವಾ ಅನಗತ್ಯವಾಗಿ ಹೆಚ್ಚಿನ ಮಾಹಿತಿಯನ್ನು ತುರುಕಿಸಬೇಡಿ.—ಯೋಹಾ. 16:12.
6. ಯೇಸುವಿನ ಮಾತುಗಳಲ್ಲಿ ಯಾವ ಬಲವರ್ಧಕ ವಿಷಯವಿದೆ?
6 ಯೇಸುವಿನ ಆಜ್ಞೆಯ ಕೊನೇ ಮಾತುಗಳಿಂದ ನಾವು ಬಲ ಪಡೆದುಕೊಳ್ಳುತ್ತೇವೆ: “ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಹೌದು, “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರ” ಇರುವ ನಮ್ಮ ನಾಯಕ ಯೇಸು ನಮ್ಮನ್ನು ಬೆಂಬಲಿಸಲು ನಮ್ಮೊಂದಿಗಿದ್ದಾನೆ! ಆದುದರಿಂದ ಶಿಷ್ಯರನ್ನಾಗಿ ಮಾಡುವ ದೈವಿಕ ಆಜ್ಞೆಯನ್ನು ನೆರವೇರಿಸುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಉಪಯೋಗಿಸುವುದರಲ್ಲಿ ಪರಿಣತರಾಗಲು ಹುರುಪುಳ್ಳವರಾಗಿರೋಣ.