ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಭಾಗ 2 ಅರಸರು, ನಕ್ಷತ್ರಗಳಂತೆ, ಮೇಲೇರಿ ಬೀಳುತ್ತಾರೆ
ರಾಜಪ್ರಭುತ್ವ: ಅನುವಂಶಿಕವಾಗಿ ಸರಕಾರದ ತಲೆಯಾಗಿರುವ, ಅರಸ ಯಾ ಚಕ್ರವರ್ತಿಯಂಥ ವ್ಯಕ್ತಿಯ ಸರಕಾರ; ರಾಜ್ಯ: ರಾಜ ಅಥವಾ ರಾಣಿ ತಲೆಯಾಗಿರುವ ಒಂದು ರಾಜಪ್ರಭುತ್ವ ರೂಪದ ಸರಕಾರ; ಸಾಮ್ರಾಜ್ಯ: ಸಾಮಾನ್ಯವಾಗಿ ಚಿಕ್ರವರ್ತಿಯೊಬ್ಬನು ತಲೆಯಾಗಿರುವ ಒಂದೇ ಪರಮಾಧಿಕಾರದ ನಿಯಂತ್ರಣದಲ್ಲಿರುವ, ಸಾಮಾನ್ಯವಾಗಿ ರಾಷ್ಟ್ರಗಳ, ರಾಜ್ಯಗಳ, ಯಾ ಜನರ ಸಮೂಹಗಳ ವ್ಯಾಪಕವಾದ ಕ್ಷೇತ್ರ.
“ಆ ದಿವಸಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೇಲನು.” ಇಲ್ಲಿ, ಆದಿಕಾಂಡ 14ನೆಯ ಅಧ್ಯಾಯ ಆರಂಭವಾಗುವಾಗ, ಬೈಬಲು “ಅರಸ” ಎಂಬ ಪದವನ್ನು ಪ್ರಥಮ ಬಾರಿ ಉಪಯೋಗಿಸುತ್ತದೆ. ಈ ಅಮ್ರಾಫೇಲನು, ಕೆಲವರು ವಾದಿಸುವಂತೆ, ಬಾಬೆಲಿನ ಪ್ರಸಿದ್ಧ ಹಮುರಾಬಿ ರಾಜನೊ ಅಲ್ಲವೊ, ನಾವು ತಿಳಿಯೆವು. ಆದರೆ, ಅವನ ಗುರುತು ಏನೇ ಇರಲಿ, ಮಾನವ ರಾಜತ್ವ ಅಮ್ರಾಫೇಲನಿಂದ ಆರಂಭವಾಗಿರುವುದಿಲ್ಲವೆಂದು ನಮಗೆ ತಿಳಿದದೆ. ಇದಕ್ಕೆ ಅನೇಕ ನೂರು ವರ್ಷಗಳ ಹಿಂದೆ, ಅರಸನೆಂದು ಕರೆಯಲ್ಪಡದಿದ್ದರೂ, ನಿಮ್ರೋದನು ಇವರಲ್ಲಿ ಒಬ್ಬನಾಗಿದ್ದನೆಂಬುದು ಸುವ್ಯಕ್ತ. ವಾಸ್ತವವೇನಂದರೆ, ಅವನು ಇತಿಹಾಸದಲ್ಲಿ ಪ್ರಥಮ ಮಾನವ ಅರಸನು.—ಆದಿಕಾಂಡ 10:8-12.
ಹೌದು, ನಿಮ್ರೋದ ಯಾ ಅಮ್ರಾಫೇಲ ಅರಸರನ್ನು ಸೂಚಿಸುವ ಯಾವ ಪ್ರಾಕ್ತನ ಕೃತಿಗಳೂ ನಮ್ಮಲ್ಲಿಲ್ಲವೆಂಬುದು ನಿಜ. “ಪ್ರಾಮಾಣ್ಯವಿರುವ ಸ್ಮಾರಕ ಲೇಖನಗಳ ಸೂಚಿಯಲ್ಲಿ, ಕಿಷ್ ಊರಿನ ಅರಸನಾದ ಎನ್ಮೆಬರಗೇಸಿ ಎಂಬ ಮೆಸಪೊಟೇಮ್ಯದ ಅರಸನೇ ಅತಿ ಹಳೆಯವನು” ಎನ್ನುತ್ತದೆ, ದಿ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ. ಮೆಸಪೊಟೇಮ್ಯದ ಕಿಷ್ ಎಂಬ ಈ ಪುರಾತನ ನಗರ-ರಾಜ್ಯದಿಂದಲೆ ಪ್ರಭು, ಅರ್ಥಾತ್ “ದೊಡ್ಡ ಮನುಷ್ಯ” ಎಂಬುದಕ್ಕಿರುವ ಸುಮೇರಿಯನ್ ಪದ ಬಳಕೆಗೆ ಬಂತು. ಈ ಎನ್ಮೆಬರಗೇಸಿಯ ಆಳಿಕೆ, ಬೈಬಲ್ ಕಾಲನಿಯಾಮಕ ಪಟ್ಟಿಗೆ ಹೊಂದಿಕೆಯಾಗಿಲ್ಲದಿದ್ದರೂ ಬೈಬಲು ಅನುಮತಿಸುವ ಸಮಯಾವಧಿಯೊಳಗೆ ಬರುವುದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ, ಮಾನವಾಳಿಕೆಯ ಆರಂಭವನ್ನು ಬೈಬಲು ಹೇಳುವ ಭೂಭಾಗದಲ್ಲಿಯೆ ಇರಿಸುತ್ತದೆ.
ಒಂದೇ ಬಹುಮತದ ಮೂಲಕ ಏಕತೆ
ಚೀನಾದವರ ಷಾಂಗ್, ಯಾ ಯಿನ್, ರಾಜವಂಶವು ಸಾ.ಶ.ಪೂ. 18 ರಿಂದ 16 ಶತಮಾನಗಳ ಮಧ್ಯದಲ್ಲಿ ಆರಂಭವಾಯಿತೆಂಬುದು ಸಾಮಾನ್ಯವಾದ ಅಭಿಪ್ರಾಯವಾದರೂ ಇದು ಅನಿಶ್ಚಿತ. ಹೇಗಿದ್ದರೂ, ರಾಜಪ್ರಭುತ್ವಗಳು ಮಾನವ ಸರಕಾರಗಳಲ್ಲಿ ಅತಿ ಹಳೆಯವು. ಅವು ವ್ಯಾಪಕವೂ ಆಗಿವೆ.
“ಮಾನರ್ಕ್” (ಅರಸ) ಎಂಬ ಪದ ಗ್ರೀಕ್ ಪದಗಳಾದ “ಒಂಟಿಗ” ಎಂದರ್ಥ ಬರುವ ಮೋನೋಸ್ ಮತ್ತು “ಆಳಿಕೆ” ಎಂದರ್ಥ ಬರುವ ಆರ್ಕೆ ಎಂಬವುಗಳಿಂದ ಬಂದಿವೆ. ಇದಕ್ಕನುಸಾರವಾಗಿ, ರಾಜಪ್ರಭುತ್ವವು ಪರಮಾಧಿಕಾರವನ್ನು ಸ್ವಂತ ಹಕ್ಕಿನಿಂದ ಸರಕಾರದ ಕಾಯಂ ಶಿರಸ್ಸಾಗಿರುವ ಒಬ್ಬನೇ ವ್ಯಕ್ತಿಗೆ ಕೊಡುತ್ತದೆ. ನಿರಂಕುಶ ಪ್ರಭುತ್ವದಲ್ಲಿ, ರಾಜನ ನುಡಿಯೆ ನಿಯಮ. ಅವನು, ಒಂದು ಅರ್ಥದಲ್ಲಿ, ಒಬ್ಬನ ಬಹುಮತವನ್ನು ಉಂಟುಮಾಡುತ್ತಾನೆ.
ಜನಾಂಗಗಳನ್ನು ಐಕ್ಯವಾಗಿ ಹಿಡಿದುಕೊಳ್ಳಲು ರಾಜಪ್ರಭುತ್ವಗಳು ಸಹಾಯಕರವೆಂದು ಸದಾ ಎಣಿಸಲ್ಪಟ್ಟಿದೆ. ಮಧ್ಯಯುಗಗಳ ಯೂರೋಪಿಯನ್ ಇತಿಹಾಸವನ್ನು ಕಲಿಸುವ ಜಾನ್ ಎಚ್. ಮಂಡಿ, ಮಧ್ಯಯುಗಗಳಲ್ಲಿ ರಾಜಕೀಯ ವಾದಗಳು, “ರಾಜಪ್ರಭುತ್ವವು ನಿರ್ದಿಷ್ಟ ಪಕ್ಷಗಳಿಗೆ ಅತೀತವಾಗಿರುವುದರಿಂದ, ಅದು ವಿವಿಧ ಹಾಗೂ ವಿರೋಧಾತ್ಮಕ ಪ್ರಾದೇಶಿಕ ಅಭಿರುಚಿಗಳಿರುವ” ವಿಸ್ತಾರವಾದ ಪ್ರದೇಶಗಳಿಗೆ ಯೋಗ್ಯವಾಗಿದೆ. ಈ “ವಿರೋಧಾತ್ಮಕ ಪ್ರಾದೇಶಿಕ ಅಭಿರುಚಿಗಳು” ಇರುವ ವಿಸ್ತಾರವಾದ ಪ್ರದೇಶಗಳು, ಅನೇಕ ವೇಳೆ, ಅರಸರುಗಳೇ ಮಿಲಿಟರಿ ನಾಯಕರಾಗಿದ್ದುದರಿಂದ, ಮಿಲಿಟರಿ ಗೆಲವುಗಳ ಕಾರಣವಾಗಿ ಉಂಟಾಗಿದ್ದವು. ವಾಸ್ತವವಾಗಿ, ಇತಿಹಾಸಗಾರ ಡಬ್ಲ್ಯು. ಎಲ್. ವಾರನ್ ಹೇಳುವುದೇನಂದರೆ, ಯುದ್ಧವಿಜಯವನ್ನು “ಸಾಮಾನ್ಯವಾಗಿ ಯಶಸ್ವಿಯಾದ ರಾಜತ್ವದ ಪ್ರಥಮ ಒರೆಗಲ್ಲಾಗಿ ಎಣಿಸಲಾಗುತ್ತಿತ್ತು.”
ಹೀಗೆ, ರಾಜಪ್ರಭುತ್ವ ರೀತಿಯ ಸರಕಾರವು, ಮಹಾ ಅಲೆಗ್ಸಾಂಡರನ ಗ್ರೀಕ್ ಸಾಮ್ರಾಜ್ಯ, ಕೈಸರರ ರೋಮನ್ ಸಾಮ್ರಾಜ್ಯ, ಮತ್ತು, ಹೆಚ್ಚು ಇತ್ತೀಚೆಗಿನ ಬ್ರಿಟಿಷ್ ಸಾಮ್ರಾಜ್ಯದಂಥ ಲೋಕಶಕ್ತಿಗಳ ಸ್ಥಾಪನೆಗೆ ಅನುಕೂಲತೆಯನ್ನು ಒದಗಿಸಿತು. ಈ ಕೊನೆಯ ಸಾಮ್ರಾಜ್ಯವು, 20ನೆಯ ಶತಕದ ಆದಿಯಲ್ಲಿ ಅದು ಏಕ ರಾಜಪ್ರತಿನಿಧಿಯ ಕೆಳಗೆ ಪರಮಾವಧಿಗೆ ಏರಿದ್ದಾಗ, ಲೋಕದ ಜನಸಂಖ್ಯೆಯಲ್ಲಿ ಸುಮಾರು ಕಾಲು ಭಾಗವನ್ನೂ, ಪ್ರದೇಶದಲ್ಲಿ ಸುಮಾರು ಕಾಲು ಭಾಗವನ್ನೂ ಐಕ್ಯಗೊಳಿಸಿತು.
ಧಾರ್ಮಿಕ ಉಡುಪು ಧರಿಸಿದ ರಾಜತ್ವ
ಅನೇಕ ಪುರಾತನ ರಾಜರುಗಳು ತಮಗೆ ದೇವತ್ವವಿದೆಯೆಂದು ವಾದಿಸಿದರು. ಇತಿಹಾಸಗಾರ ಜಾರ್ಜ್ ಸೆಬೈನ್ ಗಮನಿಸಿದ್ದು: “ಅಲೆಗ್ಸಾಂಡರಿನಿಂದ ಹಿಡಿದು, ಗ್ರೀಕ್ ಅರಸರು ಸಹ ಗ್ರೀಕ್ ನಗರಗಳ ದೇವರುಗಳಾಗಿ ಸೇರಿಸಲ್ಪಟ್ಟರು. ದೇವತ್ವಕ್ಕೆ ಏರಿಸಲ್ಪಟ್ಟ ಅರಸನು ಪೂರ್ವದೇಶಗಳಲ್ಲಿ ಒಂದು ಸಾರ್ವತ್ರಿಕ ಪದ್ಧತಿಯಾಗಿ ಪರಿಣಮಿಸಿದ್ದರಿಂದ ಅದನ್ನು ರೋಮನ್ ಚಕ್ರವರ್ತಿಗಳು ಆಯ್ದುಕೊಳ್ಳಬೇಕಾಯಿತು.” ಈ ರಾಜ ದೇವತ್ವದ ನಂಬಿಕೆಯು, “ಒಂದಲ್ಲ ಒಂದು ರೂಪದಲ್ಲಿ, ಈ ಆಧುನಿಕ ದಿನಗಳ ತನಕವೂ” ಯೂರೋಪಿನಲ್ಲಿ ಇರುತ್ತಾ ಬಂದಿದೆ. ಎನ್ನುತ್ತಾರೆ ಅವರು.
ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ, ಆ್ಯಸ್ಟೆಕ್ ಮತ್ತು ಇನ್ಕ ಸರಕಾರಗಳು ಪವಿತ್ರ ರಾಜ ಸರಕಾರಗಳಾಗಿ ಎಣಿಸಲ್ಪಟ್ಟಿದ್ದವು. ಏಷ್ಯಾದಲ್ಲಿ, ತಾನು ಸೂರ್ಯದೇವತೆ ಅಮಟೆರಸು ಒಮಿಕಾಮಿಯ 124ನೆಯ ವಂಶಸ್ಥ ಎಂಬ ವಾದವನ್ನು ಜಪಾನಿನ ಮಾಜಿ ಚಕ್ರವರ್ತಿ ಹಿರೊಹಿಟೊ ತ್ಯಜಿಸಿದ್ದು 1946ರಲ್ಲಿಯೆ.
ಎಲ್ಲ ಅರಸರು ದೇವತ್ವದ ವಾದವನ್ನು ಮಾಡಲಿಲ್ಲವಾದರೂ, ಅವರಲ್ಲಿ ಅಧಿಕಾಂಶ ಜನರು ತಮಗೆ ದೇವರ ಬೆಂಬಲವಿದೆಯೆಂದು ಹೇಳಿಕೊಂಡರು. ಭೂಮಿಯ ಮೇಲೆ ದೇವ ಪ್ರತಿನಿಧಿಯಾಗಿರುವ ಪ್ರತ್ಯೇಕತೆಯಲ್ಲಿ ಪೌರೋಹಿತ್ಯದ ಮೋಹಕತೆಯಿತ್ತು. ಜಾನ್ ಎಚ್. ಮಂಡಿ ವಿವರಿಸುವುದು, “ರಾಜರು ತಾವೇ ಪುರೋಹಿತರೆಂಬ ಪುರಾತನ ವಿಚಾರವು ಪಶ್ಚಿಮದಲ್ಲಿ ಹರಡಿ, ರಾಜನನ್ನು ಅವನ ಚರ್ಚಿನ ಆಡಳಿತ ಶಿರಸ್ಸಾಗಿ ಮತ್ತು ಅಪೊಸ್ತಲ ಸ್ಥಾನದ ಡೈರೆಕ್ಟರನಾಗಿ ಮಾಡಿತು.” ಇದು “[ಸಾ.ಶ. ನಾಲ್ಕನೆಯ ಶತಮಾನದಲ್ಲಿ] ಕಾನ್ಸ್ಟೆಂಟೀನನ ಚರ್ಚ್ ಮತ್ತು ಸರಕಾರದ ಸಹಭಾಗಿತ್ವದಿಂದ ಮತ್ತು ಚರ್ಚು ಹೊಸ ಪ್ಲೇಟೋ ತಾತ್ವಿಕ ವಿಚಾರವನ್ನು ಅದೇ ಸಮಯದಲ್ಲಿ ಹೀರಿಕೊಂಡದರ್ದಿಂದಾಗಿ ಬಂದ” ಧಾರ್ಮಿಕ ಕಲ್ಪನೆಯಾಗಿತ್ತು. ಪಟ್ಟಾಭಿಷೇಕದ ಸಮಯದಲ್ಲಿ ದೊರೆತ ಧಾರ್ಮಿಕ ಆಶೀರ್ವಾದವು ನ್ಯಾಯಸಮ್ಮತತೆಯ ಕೊರತೆಯನ್ನು ಹೋಗಲಾಡಿಸಿ ರಾಜನ ಆಳಿಕೆಗೆ ಗೌರವವನ್ನು ತಂದಿತು.
ಇಂಗ್ಲೆಂಡಿನ II ಹೆನ್ರಿ, 1173ರಲ್ಲಿ “ಭಗವದನುಗ್ರಹದಿಂದ ಅರಸ” ಎಂಬ ಬಿರುದನ್ನು ಉಪಯೋಗಿಸಲು ಆರಂಭಿಸಿದನು. ಇದು, ಆ ಬಳಿಕ ರಾಜರುಗಳ ದೈವಿಕ ಹಕ್ಕು, ಅಂದರೆ, ರಾಜನ ಅಧಿಕಾರ ಅನುವಂಶಿಕವೆಂಬ ವಿಚಾರಕ್ಕೆ ನಡೆಸಿತು. ದೇವರು ಜನ್ಮದಲ್ಲಿ ತನ್ನ ಆಯ್ಕೆಯನ್ನು ತೋರಿಸಿದ್ದಾನೆ ಎಂಬ ಊಹೆ ಇದರಲ್ಲಿ ಅಡಗಿತ್ತು. 1661ರಲ್ಲಿ, ಫ್ರಾನ್ಸಿನ XIVನೆಯ ಲುಯೀ ಈ ತತ್ವಕ್ಕೆ ವಿಪರೀತ ನಿರೂಪಣೆ ಕೊಟ್ಟು ಸರಕಾರದ ಪೂರ್ತಿ ಅಧಿಕಾರವನ್ನು ವಹಿಸಿದನು. ತನಗೆ ವಿರೋಧವು ತಾನು ಪ್ರತಿನಿಧೀಕರಿಸಿದ ದೇವರ ವಿರುದ್ಧ ಮಾಡುವ ಪಾಪವಾಗಿ ಅವನು ನೋಡಿದನು. “ಲಿತಾತ್ ಸೆ ಮ್ವಾ! [ನಾನೇ ಸರಕಾರ],” ಎಂದು ಅವನು ಆತ್ಮಸ್ತುತಿ ಮಾಡಿದನು.
ಹೆಚ್ಚುಕಡಮೆ ಅದೇ ಸಮಯದಲ್ಲಿ ಇದಕ್ಕೆ ಸದೃಶವಾದ ಇನ್ನೊಂದು ವಿಚಾರ ಸ್ಕಾಟ್ಲೆಂಡಿನಲ್ಲಿ ತೋರಿಬಂತು. 1603ರಲ್ಲಿ ಇಂಗ್ಲೆಂಡಿನ Iನೆಯ ಜೇಮ್ಸ್ ರಾಜನಾಗುವ ಮೊದಲು ಸ್ಕಾಟ್ಲೆಂಡನ್ನು IVನೆಯ ಜೇಮ್ಸ್ ಆಗಿ ಆಳುತ್ತಿದ್ದಾಗ ಈ ಅರಸನು ಬರೆದುದು: “ಅರಸರನ್ನು ದೇವರುಗಳೆಂದು ಕರೆಯಲಾಗುವುದು . . . ಅವರು ಭೂಮಿಯಲ್ಲಿ ದೇವರ ಸಿಂಹಾಸನದ ಮೇಲೆ ಕುಳಿತುಕೊಂಡು ತಮ್ಮ ಆಡಳಿತದ ಲೆಕ್ಕವನ್ನು ಆತನಿಗೆ ಒಪ್ಪಿಸಲಿಕ್ಕಿರುವುದರಿಂದಲೆ.” ಜೇಮ್ಸನು ಬೈಬಲನ್ನು ಇಂಗಿಷ್ಲಿಗೆ ಭಾಷಾಂತರಿಸಲು ಈ ನಂಬಿಕೆ ಅವನನ್ನು ಎಷ್ಟು ಪ್ರಭಾವಿಸಿತೆಂದು ನಮಗೆ ತಿಳಿಯದು. ಆದರೆ, ಇದರ ಪರಿಣಾಮವಾಗಿ ಹೊರಬಂದ, ಪ್ರಾಟೆಸ್ಟಂಟರು ಇನ್ನೂ ವ್ಯಾಪಕವಾಗಿ ಉಪಯೋಗಿಸುವ ಕಿಂಗ್ ಜೇಮ್ಸ್ ವರ್ಷನ್ ಬೈಬಲಿನ ಪರಿಚಯ ನಮಗಿದೆ.
ನಿರಂಕುಶ ಪ್ರಭುತ್ವಗಳ ಯುಗ
ಮಧ್ಯ ಯುಗಗಳ ಆರಂಭದಿಂದ ಹಿಡಿದು, ರಾಜಪ್ರಭುತ್ವಗಳು ಪ್ರತಿನಿಧಿರೂಪದ ಸರಕಾರಗಳಾಗಿದ್ದವು. ಪ್ರಮುಖ ಜಮೀನುದಾರರಿಗೆ ಅಧಿಕಾರ ವಹಿಸಿಕೊಡುವ ಮೂಲಕ ರಾಜರು ಒಂದು ಅಗದ್ಗ ಹಾಗೂ ಅನುಕೂಲವಾದ ಆಳುವ ವಿಧವನ್ನು ವಿಕಸಿಸಿದರು. ಇವರು ಸರದಿಯಾಗಿ, ಊಳಿಗ ಮಾನ್ಯ ಪದ್ಧತಿಯೆಂದು ಕರೆಯಲ್ಪಡುವ ರಾಜಕೀಯ ಹಾಗೂ ಮಿಲಿಟರಿ ವ್ಯವಸ್ಥೆಯನ್ನು ಸ್ಥಾಪಿಸಿದರು. ಮಿಲಿಟರಿ ಮತ್ತು ಇತರ ಸೇವೆಗಳಿಗೆ ಪ್ರತಿಯಾಗಿ ಜಮೀನ್ದಾರರು ಹಿಡುವಳಿದಾರರಿಗೆ ಜಮೀನನ್ನು ಕೊಟ್ಟರು. ಆದರೆ ಈ ಊಳಿಗ ಮಾನ್ಯ ಜಮೀನುದಾರರು ಹೆಚ್ಚು ಕಾರ್ಯಸಾಧಕರೂ ಬಲಾಢ್ಯರೂ ಆಗುವಾಗ ರಾಜ್ಯವು ಊಳಿಗಮಾನ್ಯ ಅಧಿಕಾರದ ಚಿಕ್ಕ ಪಕ್ಷಗಳಾಗಿ ಶಿಥಿಲವಾಗುವ ಸಂಭವವಿತ್ತು.
ಇದಲ್ಲದೆ, ಇಂಥ ಊಳಿಗ ಮಾನ್ಯ ಪದ್ಧತಿ ನಾಗರಿಕರ ಗೌರವ ಮತ್ತು ಸ್ವಾತಂತ್ರ್ಯವನ್ನು ದೋಚಿತು. ಮಿಲಿಟರಿ ಜಮೀನ್ದಾರರು ತಮ್ಮ ಸಂಪಾದನೆಗೆ ಮುಖ್ಯ ಕಾರಣರಾಗಿರುವ ಜನರ ಮೇಲೆ ಅಧಿಕಾರ ನಡೆಸಿದರು. ವಿದ್ಯೆ ಮತ್ತು ಸಾಂಸ್ಕೃತಿಕ ಸಂದರ್ಭಗಳ ಕೊರತೆಯ ಕಾರಣ “ಜೀತಗಾರನಿಗೆ ಜಹಗೀರುದಾರನ ವಿರುದ್ಧ ನ್ಯಾಯಾತ್ಮಕವಾಗಿ ಜಾರಿಗೆ ತರಸಾಧ್ಯವಿದ್ದ ಕೆಲವೇ ಹಕ್ಕುಗಳಿದ್ದವು” ಎನ್ನತ್ತದೆ, ಕಾಲ್ಯರ್ಸ್ ಎನ್ಸೈಕ್ಲೊಪೀಡಿಯ. “ಜಮೀನ್ದಾರನ ಅಪ್ಪಣೆಯಿಲ್ಲದೆ ಅವನು ಮದುವೆ ಮಾಡಿಕೊಳ್ಳಲಿಕ್ಕಿರಲಿಲ್ಲ, ತನ್ನ ಹೊಲವನ್ನು ಉತ್ತರಾಧಿಕಾರಿಗಳಿಗೆ ಕೊಡಲಿಕ್ಕಿರಲಿಲ್ಲ ಮತ್ತು ಜಹಗೀರನ್ನು ಬಿಟ್ಟುಹೋಗಲಿಕ್ಕೂ ಇರಲಿಲ್ಲ.”
ನಿರಂಕುಶ ಪ್ರಭುತ್ವಗಳಲ್ಲಿ ಆಳುವ ವಿಧಾನ ಇದು ಒಂದೇ ಆಗಿರಲಿಲ್ಲ. ಕೆಲವು ಅರಸರು ಒಬ್ಬೊಬ್ಬರಿಗೆ ಆಡಳಿತದ ಸ್ಥಾನಗಳನ್ನು ಕೊಟ್ಟರೂ, ಬಳಿಕ ಅಗತ್ಯವೆಂದು ತೋರಿದಲ್ಲಿ, ಅವರನ್ನು ಆ ಸ್ಥಾನದಿಂದ ತೆಗೆದು ಬಿಡುತ್ತಿದ್ದರು. ಇತರ ಅರಸರು ಸ್ಥಳೀಕ ಆಡಳಿತವನ್ನು ಜನಪ್ರಿಯ ಸಂಘಗಳಿಗೆ, ಅವು ವಾಡಿಕೆ ಮತ್ತು ಸಾಮಾಜಿಕ ಒತ್ತಡದ ಮೂಲಕ ಆಳುವಂತೆ ಒಪ್ಪಿಸುತ್ತಿದ್ದರು. ಆದರೆ, ಈ ಎಲ್ಲ ವಿಧಾನಗಳು ಒಂದಲ್ಲ ಒಂದು ರೀತಿಯಲ್ಲಿ ಅತೃಪ್ತಿಕರವಾಗಿದ್ದವು. ಆದರೂ, 17ನೆಯ ಶತಕದ ಇಂಗ್ಲೆಂಡಿನ ಸರ್ ರಾಬರ್ಟ್ ಫಿಲ್ಮರ್ ಮತ್ತು ಫ್ರಾನ್ಸಿನ ಫಷಾಕ್ ಬೇನೀ ಬಾಸ್ವೆ ಇವರಂಥ ಲೇಖಕರು ಇನ್ನೂ ಒಂದೇ ಯೋಗ್ಯ ರೀತಿಯ ಸರಕಾರವು ನಿರಂಕುಶ ಪ್ರಭುತ್ವವೆಂಬುದನ್ನು ಸಮರ್ಥಿಸಿದರು. ಆದರೂ ಅದರ ದಿನಗಳು ಮುಗಿಯುತ್ತ ಬಂದಿದ್ದವು.
“ದೇವರುಗಳು” ನಾಮ ಮಾತ್ರರಾದುದು
ರಾಜರು ದೇವರಿಗೆ ಮಾತ್ರ ಉತ್ತರವಾದಿಗಳೆಂಬ ಸಾಮಾನ್ಯ ನಂಬಿಕೆಯು ಅಸ್ತಿತ್ವದಲ್ಲಿದ್ದರೂ, ಅವರು ಮಾನವ ನಿಯಮ, ವಾಡಿಕೆ ಮತ್ತು ಅಧಿಕಾರಿಗಳಿಗೆ ಉತ್ತರವಾದಿಗಳಾಗಬೇಕೆಂಬ ಒತ್ತಡವು ಅನೇಕ ಸಮಯದಿಂದ ಹೆಚ್ಚಾಗುತ್ತಿತ್ತು. 18ನೆಯ ಶತಮಾನದೊಳಗೆ, “ಅರಸರು ಹದಿನೇಳನೆಯ ಶತಕದ ಅರಸರುಗಳಿಗಿಂತ ಭಿನ್ನವಾದ ಭಾಷಣ ಚಾತುರ್ಯವನ್ನು ಉಪಯೋಗಿಸಿದರು” ಎನ್ನುತ್ತದೆ, ದ ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್. ಆದರೆ ಅದು ಕೂಡಿಸಿ ಹೇಳುವುದು: “ಈ ಭಾಷಣ ಚಾತುರ್ಯದ ಕೆಳಗೆ ಮತ್ತು ಹಿಂದುಗಡೆ ಅವರು ಇನ್ನೂ ಪರಮಾಧಿಕಾರಿಗಳೇ ಆಗಿದ್ದರು.” ಬಳಿಕ ಅದು ವಿವರಿಸುವುದು: “ಫ್ರೆಡ್ರಿಕ್ ದ ಗ್ರೇಟ್ ಅರಸನು ತನ್ನನ್ನು ‘ಸರಕಾರದ ಪ್ರಥಮ ಸೇವಕನು’ ಎಂದು ಕರೆದು ಅರಸರ ದೈವಿಕ ಹಕ್ಕನ್ನು ತ್ಯಜಿಸಿದಾಗ ತನ್ನ ಅಧಿಕಾರತ್ಯಾಗದ ಕುರಿತು ಅವನು ಯೋಚಿಸತ್ತಿರಲಿಲ್ಲ.”
ಆದರೂ, 1688ರಲ್ಲಿ ಇಂಗ್ಲೆಂಡಿನಲ್ಲಿ ಮತ್ತು 1789ರ ಫ್ರೆಂಚ್ ಕ್ರಾಂತಿಗಳ ಬಳಿಕ ಅಧಿಕಾಂಶವಾಗಿ ನಿರಂಕುಶ ಪ್ರಭುತ್ವದ ದಿನಗಳು ಅಂತ್ಯಗೊಂಡವು. ಕ್ರಮೇಣ, ನಿರಂಕುಶ ಪ್ರಭುತ್ವಗಳು ಶಾಸನ ಸಭೆ ಅಥವಾ ಸಂವಿಧಾನ ಅಥವಾ ಎರಡೂ ಇರುವ ಸೀಮಿತ ಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟವು. ಇತಿಹಾಸಗಾರ ಡಬ್ಲ್ಯು. ಎಲ್. ವಾರನ್ ಅವರು, “ರಾಜನಿಗೆ ಯಾವುದನ್ನು ಮಾಡಸಾಮರ್ಥ್ಯವಿದೆಯೊ ಮತ್ತು ಪ್ರಜೆಗಳು ಯಾವುದನ್ನು ಸ್ವೀಕರಿಸಸಿದ್ಧರಾಗಿದ್ದಾರೊ ಅದೇ ರಾಜತ್ವ” ಎಂದು 12ನೆಯ ಶತಮಾನದ ಕುರಿತು ಬರೆದಿರುವುದಕ್ಕೆ ವ್ಯತಿರಿಕ್ತವಾಗಿ ಇಂದು ಅನೇಕ ರಾಜ ಮತ್ತು ರಾಣಿಯರ ರಾಜಕೀಯ ಬಲ ತೀರಾ ಸೀಮಿತವಾಗಿದೆ.
ಹೌದು, ಕೆಲವು ಅರಸರಲ್ಲಿ ಇನ್ನೂ ಅಲ್ಪವಲ್ಲದ ಅಧಿಕಾರವಿದೆ ನಿಶ್ಚಯ. ಆದರೆ, ಇರಲ್ಲಿ ಹೆಚ್ಚಿನವರು ಬಹಳ ಸಮಯದಿಂದ ತಮ್ಮ “ದೇವತ್ವ”ದ ಪ್ರಭಾವಲಯವನ್ನು ಕಳೆದುಕೊಂಡು ನಾಮಮಾತ್ರಕ್ಕೆ, ಅಂದರೆ ರಾಜನಿಷ್ಠೆಯ ಮನೋಭಾವದಿಂದ ಜನರು ಅಧಿಕಾರದ ಕೇಂದ್ರ ವ್ಯಕ್ತಿಗೆ ಬೆಂಬಲ ನೀಡುವಂತೆ ಪ್ರೋತ್ಸಾಹಿಸಲ್ಪಡುವ ಉದ್ದೇಶದಿಂದ ಅಧಿಕಾರದಲ್ಲಿದ್ದಾರೆ. ಸೀಮಿತ ರಾಜಪ್ರಭುತ್ವಗಳು ಒಬ್ಬ ವ್ಯಕ್ತಿಯ ಆಳಿಕೆಯ ಏಕೀಕರಿಸುವ ಲಕ್ಷಣಗಳನ್ನು ಇಟ್ಟುಕೊಂಡು ಅದರ ನಕಾರಾತ್ಮಕ ಲಕ್ಷಣಗಳನ್ನು ಒಂದು ಶಾಸನ ಸಭೆಗೆ ನಿಜ ಅಧಿಕಾರವನ್ನು ಕೊಡುತ್ತಾ ನೀಗಿಸುವಂತೆ ಪ್ರಯತ್ನಿಸಿವೆ.
ಈ ಸೀಮಿತ ರಾಜಪ್ರಭುತ್ವ ವಿಚಾರವು ಇನ್ನೂ ಜನಪ್ರಿಯವಾಗಿದೆ. 1983ರಷ್ಟೂ ಇತ್ತೀಚೆಗೆ, ನೇಪಾಲದಲ್ಲಿ ನೇಪಾಲಿ ಕಾಂಗ್ರೆಸ್ ಪಾರ್ಟಿಯ ನಾಯಕ, ಕೃಷ್ಣ ಪ್ರಸಾದ ಭಟ್ಟಾರೈ, ‘ಅವ್ಯವಸ್ಥೆಯ ವಿರುದ್ಧ ತಡೆಯಾಗಿ’ ರಾಜಪ್ರಭುತ್ವವನ್ನು, ‘ದೇಶವನ್ನು ಐಕ್ಯವಾಗಿರಿಸಲು ಅರಸನು ಅವಶ್ಯ’ ಎಂದು ಹೇಳುತ್ತಾ ಸಮರ್ಥಿಸಿದರು. ಮತ್ತು 1987ರಲ್ಲಿ ಫ್ರೆಂಚರು ಫ್ರೆಂಚ್ ಕ್ರಾಂತಿಯ 200ನೆಯ ವಾರ್ಷಿಕಾಚರಣೆಯನ್ನು ಆಚರಿಸಲು ತಯಾರಿಸಿದರೂ, ಅಭಿಪ್ರಾಯ ಕೊಟ್ಟವರಲ್ಲಿ 17ಪ್ರತಿಶತ ರಾಜಪ್ರಭುತ್ವಕ್ಕೆ ಹಿಂದಿರುಗುವುದನ್ನು ಸಮರ್ಥಿಸಿದರು. ರಾಜಪ್ರಭುತ್ವ ಸಮರ್ಥನ ಗುಂಪಿನ ಒಬ್ಬ ಸದಸ್ಯನು ಹೇಳಿದ್ದು: “ರಾಜಕೀಯ ಬಿಕ್ಕಟ್ಟಿನಿಂದ ಇಷ್ಟು ದೀರ್ಘಕಾಲ ವಿಭಾಗಿಸಲ್ಪಟ್ಟಿರುವ ರಾಷ್ಟ್ರವನ್ನು ಒಂದುಗೂಡಿಸಲು ಇರುವ ಒಂದೇ ಮಾರ್ಗ ರಾಜನೇ.”
ಅದೇ ವರ್ಷ, ಟೈಮ್ ಪತ್ರಿಕೆ ಗಮನಿಸಿದ್ದು: “ರಾಜವಂಶಕ್ಕೆ ರಾಜನಿಷ್ಠೆ ದೊರೆಯುವುದು, ಪ್ರಾಯಶಃ ರಾಜರು ನಮ್ಮ ಜಾತ್ಯತೀತ ಯುಗದ ಕೊನೆಯ ಮಹಾ ಮೂರ್ತಿಗಳು, ರಹಸ್ಯ ಗರ್ಭಿತವಾಗಿ ವಾಸಿಸಿದರೂ ನಂಬಿಕೆಯನ್ನು ಇನ್ನೂ ಪ್ರೇರಿಸಬಲ್ಲ ಪ್ರತ್ಯಕ್ಷ ಮೂರ್ತಿಗಳು. ದೇವರು ಸತ್ತಿರುವುದಾದರೆ, ರಾಣಿ ದೀರ್ಘಕಾಲ ಬಾಳಲಿ!” ಆದರೆ ಕೊನೆಗೆ, ವಾಸ್ತವಿಕತೆಯಿಂದ ವಿಷಯವನ್ನು ನೋಡುತ್ತಾ ಅದು ಹೇಳಿದ್ದು: “[ಬ್ರಿಟಿಷ್] ರಾಣಿಯ ಪರಮಾಧಿಕಾರ ಅಧಿಕಾಂಶ ಆಕೆಯ ಥಳಥಳಿಕೆಯ ಶಕಿಹ್ತೀನತೆಯಿಂದ ಬರುತ್ತದೆ.”
ಕೊರತೆಯುಳ್ಳದ್ದಾಗಿ ಕಂಡುಬರುವುದು
ನಿರಂಕುಶ ಪ್ರಭುತ್ವಗಳು ಅತೃಪ್ತಿಕರ. ಅವುಗಳ ಪ್ರಕೃತಿಯೆ ಅಸ್ಥಿರ. ಇಂದೊ ನಾಳೆಯೊ, ಪ್ರತಿಯೊಬ್ಬ ಅರಸನು ಸಾಯುತ್ತಾನೆ, ಮತ್ತು ಅವನ ಸ್ಥಾನವನ್ನು ಅನೇಕ ವೇಳೆ, ಉಚ್ಚ ರೀತಿಯ ನೈತಿಕತೆ ಯಾ ಸಾಮರ್ಥ್ಯಕ್ಕಾಗಿ ಅಲ್ಲ, ಒಬ್ಬನು ಅವನ ವಂಶಜನಾಗಿರುವ ಕಾರಣದಿಂದ ತುಂಬಿಸಲಾಗುತ್ತದೆ. ರಾಜಕುಮಾರನು ತಂದೆಯಷ್ಟೆ ಒಳ್ಳೆಯವನಾಗಿರುವನೆಂದು ಯಾರು ಖಾತರಿ ಕೊಡಬಲ್ಲನು? ಅಥವಾ, ಒಬ್ಬ ತಂದೆ ಕೆಟ್ಟವನಾಗಿದ್ದರೆ, ಅವನ ಪುತ್ರನು ಅದಕ್ಕಿಂತ ಒಳ್ಳೆಯವನಾಗುವನೆಂದು ಯಾರು ಖಾತರಿ ಕೊಡಬಲ್ಲನು?
ಅಲ್ಲದೆ, ಕ್ರಿಸ್ಟಿಯಾನೊ ಗ್ರೊಟನೆಲಿ ತೋರಿಸುವಂತೆ, ಅನೇಕ ವೇಳೆ, “ರಾಜನ ಉತ್ತರಾಧಿಕಾರಿಯ ಆಯ್ಕೆ ಕೇವಲ ಸಡಿಲವಾಗಿ ವಿಧಿಸಲ್ಪಟ್ಟಿರುವುದರಿಂದ ಅರ್ಹತೆಯುಳ್ಳ ರಾಜವಂಶಸ್ಥರಲ್ಲಿ ಸ್ಪರ್ಧೆ ಎದ್ದೇಳಬಹುದು. ಹೀಗೆ ರಾಜನ ಮರಣವನ್ನು ಹಿಂಬಾಲಿಸಿ ಬರುವ ಅವಧಿ, ಸಾಮಾನ್ಯವಾಗಿ, ವಾಸ್ತವವಾಗಿಯೂ ಸಾಂಕೇತಿಕವಾಗಿಯೂ ಸಾಮಾಜಿಕ (ಮತ್ತು ವಿಶ್ವದ) ಅವ್ಯವಸ್ಥೆಯ ಅವಧಿಯಾಗಿದೆ.”
ಒಬ್ಬ ವ್ಯಕ್ತಿಯ ಆಳಿಕೆಯಾಗಿರುವುದರಿಂದ, ನಿರಂಕುಶ ಪ್ರಭುತ್ವದ ಕಾರ್ಯಸಾಧಕತೆ ಅದರ ಪ್ರಭುವಿನ ಮೇಲೆ ಹೊಂದಿಕೊಂಡಿದೆ. ಅವನ ಸಾಮರ್ಥ್ಯ ಮತ್ತು ಬಲಾಢ್ಯ ಗುಣಗಳನ್ನು ಅವನ ಸರಕಾರವು ಪ್ರತಿಬಿಂಬಿಸಬಹುದಾದರೂ ಅದು ಅವನ ಬಲಹೀನತೆ, ದೌರ್ಬಲ್ಯ ಮತ್ತು ಜ್ಞಾನಹೀನತೆಗಳನ್ನೂ ಪ್ರತಿಬಿಂಬಿಸುವುದು. ಅವನ ಸ್ವದಂಶದ ನೆತ್ತರು ಸಹ ಅಪೂರ್ಣ. ಕೆಟ್ಟ ಅರಸರು ಕೆಟ್ಟ ಸರಕಾರಗಳನ್ನು ಸ್ಥಾಪಿಸುತ್ತಾರೆ, ಒಳ್ಳೆಯ ಅರಸರು ತುಸು ಉತ್ತಮ ರೀತಿಯ ಸರಕಾರಗಳನ್ನು ಸ್ಥಾಪಿಸಬಹುದು. ಆದರೆ ಒಬ್ಬ ಪರಿಪೂರ್ಣ ಅರಸನು ಮಾತ್ರ ಮಾನವ ಸಂತತಿಯು ಹಾತೊರೆಯುವ ಮತ್ತು ಅದಕ್ಕೆ ಅರ್ಹವಾಗಿರುವ ಸರಕಾರವನ್ನು ಸ್ಥಾಪಿಸಶಕ್ತನಾಗಿದ್ದಾನೆ.
ಪಾರ್ಲಿಮೆಂಟ್ ವಿಧಾನದ ಮತ್ತು ಸೀಮಿತ ರಾಜಪ್ರಭುತ್ವಗಳಲ್ಲೂ ಕೊರತೆಗಳಿವೆ. ಇಂಗ್ಲೆಂಡಿನ ಯುನೊಯಿಟೆಡ್ ಕಿಂಗ್ಡಮ್ನಲ್ಲಿ, ಇಂಗ್ಲೆಂಡಿನ ನಾಮಮಾತ್ರರಾದ ರಾಜ, ರಾಣಿಯರು, ಲೋಕವು ಇದುವರೆಗೆ ಕಂಡಿರುವ ಅತ್ಯಂತ ಮಹಾ ಮತ್ತು ಬಲಾಢ್ಯವಾದ ಸಾಮ್ರಾಜ್ಯವು ಈ ಶತಕದಲ್ಲಿ ಶಿಥಿಲವಾಗುವುದರ ಅಧ್ಯಕ್ಷತೆ ವಹಿಸಿದ್ದಾರೆ.
ವಿಭಿನ್ನ ರೀತಿಯ ನಕ್ಷತ್ರ
ಅರಸರು, ನಕ್ಷತ್ರಗಳಂತೆ, ಮೇಲೇರುವುದೂ ಉಂಟು, ಬೀಳುವುದೂ ಉಂಟು. ಆದರೆ ಒಂದನ್ನು ಬಿಟ್ಟು. ಯೇಸು ಕ್ರಿಸ್ತನು ತನ್ನ ವಿಷಯದಲ್ಲಿ, ತಾನು, “ದಾವೀದವಂಶವೆಂಬ ಬುಡದಿಂದ ಹುಟ್ಟಿದ ಚಿಗುರೂ ಅವನ ಸಂತತಿಯೂ ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರವೂ ಆಗಿದ್ದೇನೆ” ಎಂದು ಹೇಳುತ್ತಾನೆ. (ಪ್ರಕಟನೆ 22:16) ದಾವೀದ ಅರಸನ ನೇರವಾದ ಮಾಂಸಿಕ ವಂಶಜನಾಗಿದ್ದುದರಿಂದ ಯೇಸು ದೇವರ ದೈವಿಕ ಸರಕಾರದ ಅರಸನಾಗಲು ಅರ್ಹನಾಗುತ್ತಾನೆ. “ಪ್ರಕಾಶವುಳ್ಳ ನಕ್ಷತ್ರ”ವಾದ ಯೇಸು, ಪೇತ್ರನು ಅಂದಂತೆ, ದಿನವನ್ನು ಉದಯಿಸುವಂತೆ ಮಾಡಲಿಕ್ಕಾಗಿ ಏಳುವ “ಬೆಳ್ಳಿ”ಯೂ ಆಗಿದ್ದಾನೆ.—2 ಪೇತ್ರ 1:19; ಅರಣ್ಯಕಾಂಡ 24:17; ಕೀರ್ತನೆ 89:34-37.
ಈ ನಿಜತ್ವಗಳ ದೃಷ್ಟಿಯಲ್ಲಿ, ಮಾರ್ಗದರ್ಶನಕ್ಕಾಗಿ ಮಾನವ ರಾಜಪ್ರಭುತ್ವಗಳೆಂಬ ಉಲ್ಕಾನಕ್ಷತ್ರಗಳೆಡೆಗೆ ನೋಡುವುದು ವಿವೇಕವೆ? ಬದಲಿಗೆ, ನಾವು ನಮ್ಮ ನಿರೀಕ್ಷೆಗಳನ್ನು ದೇವರ ನಿಯಮಿತ ಅರಸ, “ರಾಜಾಧಿರಾಜನೂ ಕರ್ತರ ಕರ್ತನೂ ತಾನೊಬ್ಬನೇ [ಮಾನವ ಅರಸರಲ್ಲಿ] ಅಮರತ್ವವುಳ್ಳವನೂ” ಆದ ಯೇಸು ಕ್ರಿಸ್ತನ ಮೇಲಿಡುವಂತೆ ವಿವೇಕವು ವಿಧಿಸುವುದು. (1 ತಿಮೊಥಿ 6:15, 16) ಈಗಾಗಲೆ ಸ್ವರ್ಗದಲ್ಲಿ ಅದೃಶ್ಯ ಅರಸನಾಗಿ ಎದ್ದಿರುವ ಅವನು, ನೂತನ ಜಗತ್ತಿನ ಉದಯವನ್ನು ಬೇಗನೆ ತರುವನು. ಈಗ ಎದ್ದಿರುವ ಮತ್ತು ಮುಂದೆ ಎಂದಿಗೂ ಬೀಳದ ಅವನು ಒಬ್ಬ ಅರಸನಾಗಿರುವ ನಕ್ಷತ್ರವಾಗಿದ್ದಾನೆ! (g90 12/22)
[ಪುಟ 13 ರಲ್ಲಿರುವಚಿತ್ರ]
ಮರಣದಲ್ಲಿ ಅತ್ಯುತ್ತಮ ಮಾನವ ಅರಸನು ಸಹ ಅನಿಶ್ಚಿತ ಕೈಗಳಿಗೆ ತನ್ನ ಕೆಲಸಗಳನ್ನು ಒಪ್ಪಿಸುತ್ತಾನೆ