ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜನ.-ಮಾರ್ಚ್
“ಭಾರತದಲ್ಲಿ ಒಳ್ಳೆಯ ಕೌಟುಂಬಿಕ ಮೌಲ್ಯಗಳಿವೆ ಎಂದು ನಾವು ಹೆಮ್ಮೆಪಟ್ಟುಕೊಳ್ಳುತ್ತೇವಾದರೂ, ಈ ಸಮಸ್ಯೆಯು ಅಸ್ತಿತ್ವದಲ್ಲಿದೆ ಎಂದು ನೀವು ನೆನಸುತ್ತೀರೋ? [ಎಚ್ಚರ! ಪತ್ರಿಕೆಯನ್ನು ತೋರಿಸಿರಿ ಮತ್ತು ಪ್ರತಿಕ್ರಿಯೆಗಾಗಿ ಕಾಯಿರಿ.] ಹದಗೆಡುತ್ತಿರುವ ಈ ಸನ್ನಿವೇಶದ ಬಗ್ಗೆ ಶಾಸ್ತ್ರವಚನಗಳಲ್ಲಿ ಮುಂತಿಳಿಸಲಾಗಿತ್ತು ಎಂಬುದು ಆಸಕ್ತಿಕರ ವಿಷಯವಾಗಿದೆ. [2 ತಿಮೊಥೆಯ 3:1, 3ನ್ನು ಓದಿರಿ] ಈ ಸಂಚಿಕೆಯು, ಬಾಧಿತರಾಗಿರುವವರೊಂದಿಗೆ ನಾವು ಹಂಚಿಕೊಳ್ಳಸಾಧ್ಯವಿರುವ ಪ್ರಾಯೋಗಿಕ ಬುದ್ಧಿವಾದವನ್ನು ನೀಡುತ್ತದೆ ಮತ್ತು ಶಾಶ್ವತವಾದ ಪರಿಹಾರದ ಕಡೆಗೆ ಕೈತೋರಿಸುತ್ತದೆ.”
ಕಾವಲಿನಬುರುಜು ಫೆಬ್ರ.15
“ನಿಮ್ಮ ಜೀವನವನ್ನು ಅತಿ ಉತ್ತಮವಾಗಿ ಮಾರ್ಗದರ್ಶಿಸಿ, ಪ್ರಾಮುಖ್ಯವಾದ ತೀರ್ಮಾನಗಳನ್ನು ಹೇಗೆ ಮಾಡಬೇಕೆಂಬುದರ ಕುರಿತಾಗಿ ನೀವು ಎಂದಾದರೂ ಯೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿ.] ಸುವರ್ಣ ನಿಯಮದಂಥ ಅತ್ಯುತ್ತಮವಾದ ಮಾರ್ಗದರ್ಶನವು ಬೈಬಲಿನಲ್ಲಿ ಕಂಡುಬರುತ್ತದೆ. [ಮತ್ತಾಯ 7:12ನ್ನು ಓದಿರಿ.] ಬೇರೆ ಯಾವ ದೈವಿಕ ಮೂಲತತ್ತ್ವಗಳು ನಮಗೆ ನೇರವಾದ ಪ್ರಯೋಜನಗಳನ್ನು ತರಬಲ್ಲವು? ನೀವು ಉತ್ತರವನ್ನು ಈ ಪತ್ರಿಕೆಯಲ್ಲಿ ಕಂಡುಕೊಳ್ಳುವಿರಿ.”
ಎಚ್ಚರ! ಜನ.-ಮಾರ್ಚ್
“ಸೆಪ್ಟೆಂಬರ್ 11ರ ಭಯೋತ್ಪಾದಕ ಆಕ್ರಮಣಗಳಿಂದಾಗಿ, ಎಲ್ಲೆಡೆಯೂ ಇರುವ ಜನರು, ದೇವರು ಏಕೆ ಇಂತಹ ವಿಷಯಗಳನ್ನು ಅನುಮತಿಸುತ್ತಾನೆ ಎಂದು ಕುತೂಹಲಪಡುತ್ತಿದ್ದಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಕಾಯಿರಿ.] ಒಂದು ಕಾರಣಕ್ಕಾಗಿಯೇ ದೇವರು ದುಷ್ಟತನವನ್ನು ತಾಳಿಕೊಳ್ಳುತ್ತಾನೆ, ಆದರೆ ಆತನ ತಾಳ್ಮೆಯು ಅತಿ ಬೇಗನೆ ಕೊನೆಗೊಳ್ಳುವುದು. [ಪ್ರಕಟನೆ 21:4, 5ನ್ನು ಓದಿರಿ.] 16ನೆಯ ಪುಟದಲ್ಲಿರುವ ಈ ಲೇಖನವು ವಿವರಿಸುವಂತೆ, ಒಂದು ಬದಲಾವಣೆಯು ಬರಲಿದೆ.”
ಕಾವಲಿನಬುರುಜು ಮಾರ್ಚ್1
“ಇಂದು ಸಂಭವಿಸುತ್ತಿರುವ ಎಲ್ಲ ವಿಷಯಗಳಿಂದಾಗಿ, ಭವಿಷ್ಯದಲ್ಲಿ ಏನು ಕಾದಿದೆಯೋ ಎಂದು ನಮ್ಮಲ್ಲಿ ಹೆಚ್ಚಿನವರು ಚಿಂತಿಸುತ್ತಿರುತ್ತೇವೆ. ಒಂದು ಪ್ರಸಿದ್ಧ ಪ್ರಾರ್ಥನೆಯಲ್ಲಿ, ನಾವು ಭವಿಷ್ಯವನ್ನು ಏಕೆ ಭರವಸೆಯೊಂದಿಗೆ ಎದುರುನೋಡಬಹುದೆಂಬ ಕಾರಣವನ್ನು ಯೇಸು ಕ್ರಿಸ್ತನು ವ್ಯಕ್ತಪಡಿಸಿದನು. [ಮತ್ತಾಯ 6:9, 10ನ್ನು ಓದಿರಿ.] ತುಂಬ ಸಮಯದ ಹಿಂದೆ ಮಾಡಲ್ಪಟ್ಟ ತಪ್ಪುಗಳನ್ನು ಮಾನವಕುಲವು ಪುನರಾವರ್ತಿಸುತ್ತಿದೆ. ಆದರೆ ಆ ದಿನಗಳಲ್ಲಿ, ದೇವರ ಸೇವೆ ಮಾಡಿದವರಿಗೆ ಒಂದು ಸಂತೋಷಕರವಾದ ಭವಿಷ್ಯತ್ತು ಇತ್ತು. ಇದು ನಮಗೂ ಹೇಗೆ ಸಾಧ್ಯ ಎಂಬುದನ್ನು ಈ ಪತ್ರಿಕೆಯು ತೋರಿಸುತ್ತದೆ.”