“ಇವತ್ತೂ ಅವರು ಮನೆಯಲ್ಲಿ ಇರಲಿಲ್ಲ!”
ಆಸಕ್ತಿ ತೋರಿಸಿದವರನ್ನು ಭೇಟಿಯಾಗಲು ಹೋದಾಗ ನಿಮಗೂ ಹೀಗೇ ಆಗಿದೆಯಾ? ನೀವು ಎಷ್ಟೇ ಸಾರಿ ಭೇಟಿ ಮಾಡಲು ಪ್ರಯತ್ನಿಸಿದರೂ ನೀವು ಬಿತ್ತಿದ ಸತ್ಯವೆಂಬ ಬೀಜಕ್ಕೆ ನೀರು ಹಾಕಲು ಆಗದೇ ಹೋಗಬಹುದು. (1 ಕೊರಿಂ. 3:6) ಇಂಥ ಸಮಯದಲ್ಲಿ, ಕೆಲವು ನುರಿತ ಪ್ರಚಾರಕರು ಮನೆಯಲ್ಲಿ ಸಿಗದ ಆಸಕ್ತ ವ್ಯಕ್ತಿಗಳಿಗೆ ಪತ್ರ ಬರೆಯುತ್ತಾರೆ, ಇಲ್ಲವೆ ಅವರ ಮನೆ ಬಾಗಿಲಲ್ಲಿ ಒಂದು ಚೀಟಿ ಇಟ್ಟು ಬರುತ್ತಾರೆ. ಇನ್ನು ಕೆಲವು ಪ್ರಚಾರಕರು ಈ ಸಮಸ್ಯೆಯನ್ನು ಮುಂಚಿತವಾಗಿ ಊಹಿಸಿ, ಮೊದಲ ಭೇಟಿಯಲ್ಲೇ “ನಿಮ್ಮ ಫೋನ್ ನಂಬರ್ ಕೊಡ್ತೀರಾ?” ಎಂದು ಕೇಳಿ ಅವರ ಫೋನ್ ನಂಬರನ್ನು ತೆಗೆದುಕೊಳ್ಳುತ್ತಾರೆ. ನೀವು ಸಹ ಸ್ವತಃ ಹೋಗಿ ಅವರನ್ನು ಭೇಟಿಯಾಗಬಹುದು, ಅವರಿಗೆ ಒಂದು ಪತ್ರ ಬರೆಯಬಹುದು, ಇ-ಮೇಲ್, ಮೆಸೇಜ್ ಅಥವಾ ಒಂದು ಕರೆ ಮಾಡಬಹುದು ಇಲ್ಲವೆ ಮನೆಬಾಗಿಲಲ್ಲಿ ಒಂದು ಚೀಟಿಯನ್ನು ಇಟ್ಟು ಬರಬಹುದು. ಇದರಲ್ಲಿ ಯಾವುದೇ ವಿಧಾನವನ್ನು ಅನುಸರಿಸಿದರೂ ಅದನ್ನು ಒಂದು ಪುನರ್ಭೇಟಿ ಎಂದು ವರದಿ ಮಾಡಬಹುದು. ಹೀಗೆ ಮಾಡಿದರೆ ಅವರು ಮನೆಯಲ್ಲಿ ಅಪರೂಪವಾಗಿ ಸಿಕ್ಕಿದರೂ ಅವರಲ್ಲಿನ ಆಸಕ್ತಿಯನ್ನು ಹೆಚ್ಚಿಸಲು ಖಂಡಿತ ಸಾಧ್ಯವಿದೆ.