‘ಎಲ್ಲಾ ರೀತಿಯ ಮನುಷ್ಯರಿಗೆ’ ಸಾಕ್ಷಿನೀಡುವುದು
1 ವಿಭಿನ್ನ ಸಂಸ್ಕೃತಿಗಳ ಇಲ್ಲವೆ ಧಾರ್ಮಿಕ ಹಿನ್ನೆಲೆಗಳ ಜನರನ್ನು ನಾವು ಸಂಧಿಸುವಾಗ, “ಎಲ್ಲಾ [“ರೀತಿಯ,” Nw] ಮನುಷ್ಯರು ರಕ್ಷಣೆಯನ್ನು ಹೊಂದಿ, ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ ಎಂದು ನಾವು ಜ್ಞಾಪಿಸಿಕೊಳ್ಳುತ್ತೇವೆ. (1 ತಿಮೊ. 2:4) ವಿಶೇಷವಾಗಿ ತಯಾರಿಸಲ್ಪಟ್ಟ ಹಲವಾರು ಕಿರುಹೊತ್ತಗೆಗಳು ಹಾಗೂ ಬ್ರೋಷರ್ಗಳ ಜೊತೆಗೆ, ನಮ್ಮಲ್ಲಿ ಅತ್ಯುತ್ಕೃಷ್ಟವಾದ ಎರಡು ಪ್ರಕಾಶನಗಳಿವೆ. ಯಾರ ಧರ್ಮವು ಅವರಿಗೆ ದೇವರ ಹಾಗೂ ಕ್ರಿಸ್ತನ ಕುರಿತಾದ ಸತ್ಯವನ್ನು ಕಲಿಸಿರುವುದಿಲ್ಲವೊ, ಅಂತಹ ವ್ಯಕ್ತಿಗಳಿಗೆ ಸಹಾಯಮಾಡಲು ಇವುಗಳನ್ನು ಯಾವುದೇ ಸಮಯದಲ್ಲಿ ಉಪಯೋಗಿಸಸಾಧ್ಯವಿದೆ.
2 ಯೇಸು ಕ್ರಿಸ್ತನ ಜೀವಿತಕ್ಕೆ ತಕ್ಕ ಪ್ರಮುಖತೆಯನ್ನು ಕೊಡುವ ಮೂಲಕ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವು, ದೇವರ ಕುಮಾರನ ಒಳ್ಳೆಯ ಪರಿಚಯವಾಗಲು ಮತ್ತು ಅವನ ಕಡೆಗೆ ಆಕರ್ಷಿತನಾಗಲು—ಪ್ರಥಮ ಶತಮಾನದಲ್ಲಿ ಅನೇಕ ಜನರಿಗೆ ಆದ ಅನುಭವದಂತೆ—ವ್ಯಕ್ತಿಯೊಬ್ಬನಿಗೆ ಸಹಾಯಮಾಡಬಲ್ಲದು. (ಯೋಹಾ. 12:32) ನಿತ್ಯಜೀವದ ಪ್ರತೀಕ್ಷೆಗೂ ವ್ಯಾಪಕವಾದ ಆಕರ್ಷಣೆಯಿದೆ. ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕವು, ಈ ಅದ್ಭುತಕರ ಪ್ರತೀಕ್ಷೆಯ ಪರಿಚಯ ಸಕಲರಿಗೂ ಆಗುವಂತೆ ಸಹಾಯಮಾಡಲು ರಚಿಸಲ್ಪಟ್ಟಿದೆ. ಮಹಾನ್ ಪುರುಷ ಮತ್ತು ಸದಾ ಜೀವಿಸಬಲ್ಲಿರಿ ಎಂಬ ಎರಡೂ ಪುಸ್ತಕಗಳು, ಕಡಿಮೆ ದರಗಳಲ್ಲಿ ನೀಡಲ್ಪಡಬಹುದು. ಸೂಕ್ತವಾದಲ್ಲೆಲ್ಲ ಈ ಪುಸ್ತಕಗಳನ್ನು ಪರಿಚಯಪಡಿಸಲು, ನೀವು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಲು ಬಯಸಬಹುದು.
3 ಯಾರೊ ಒಬ್ಬರಿಗೆ “ಮಹಾನ್ ಪುರುಷ” ಪುಸ್ತಕವನ್ನು ನೀಡುವುದು ಸೂಕ್ತವೆಂದು ನಿಮಗನಿಸುವಲ್ಲಿ, ನೀವು ಹೀಗೆ ಕೇಳಬಹುದು:
◼“ಯೇಸು ಕ್ರಿಸ್ತನ ಕುರಿತು ನೆನಸುವಾಗ, ಯಾವ ವಿಚಾರವು ನಿಮ್ಮ ಮನಸ್ಸಿಗೆ ಬರುತ್ತದೆ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ಎಂದಾದರೂ ಜೀವಿಸಿರುವವರಲ್ಲೇ ಅತ್ಯಂತ ಮಹಾನ್ ಪುರುಷನೆಂದು ಅನೇಕ ಇತಿಹಾಸಕಾರರು ಒಪ್ಪಿಕೊಳ್ಳುತ್ತಾರೆ. [ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿರುವ ಪೀಠಿಕೆಯಿಂದ ಒಂದು ಉದಾಹರಣೆಯನ್ನು ಉದ್ಧರಿಸಿರಿ.] ಯೇಸುವಿನ ಜೀವಿತವು ನಾವು ಅನುಕರಿಸಬೇಕಾದ ಒಂದು ಮಾದರಿಯಾಗಿತ್ತೆಂದು ಬೈಬಲು ತೋರಿಸುತ್ತದೆ.” 1 ಪೇತ್ರ 2:21ನ್ನು ಮತ್ತು ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿರುವ ಪೀಠಿಕೆಯ ಕೊನೆಯ ಪುಟದಲ್ಲಿರುವ ಪ್ರಥಮ ಪ್ಯಾರಗ್ರಾಫನ್ನು ಓದಿರಿ. ಯೇಸುವಿನ ಕುರಿತು ತಿಳಿದುಕೊಳ್ಳುವುದಕ್ಕೆ ಮನೆಯವನಿಗೆ ಆಸಕ್ತಿಯಿದ್ದರೆ, ಪುಸ್ತಕವನ್ನು ನೀಡಿರಿ. ನೀವು ಆ ಮನೆಯನ್ನು ಬಿಟ್ಟುಬರುವ ಮೊದಲು, ಯೋಹಾನ 17:3ನ್ನು ಓದಿ, ಹೀಗೆ ಕೇಳಿರಿ: “ನಿತ್ಯಜೀವಕ್ಕೆ ನಡೆಸುವ ಈ ಜ್ಞಾನವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ?” ಉತ್ತರದೊಂದಿಗೆ ಹಿಂದಿರುಗಲು ನಿಶ್ಚಿತವಾದ ಏರ್ಪಾಡುಗಳನ್ನು ಮಾಡಿರಿ.
4 ಜೀವದಾಯಕ ಜ್ಞಾನವನ್ನು ಪಡೆದುಕೊಳ್ಳುವುದು ಹೇಗೆಂಬುದನ್ನು ವಿವರಿಸಲು ನೀವು ಹಿಂದಿರುಗುವಾಗ, ನೀವು ಹೀಗೆ ಹೇಳಸಾಧ್ಯವಿದೆ:
◼“ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ನಿಮಗೆ ತೋರಿಸಲು ನಾನು ಹಿಂದಿರುಗುವೆನೆಂದು ಹೇಳಿದ್ದೆ.” ಜ್ಞಾನ ಪುಸ್ತಕವನ್ನು ನೀಡಿ, ಮೊದಲನೆಯ ಅಧ್ಯಾಯವನ್ನು ಉಪಯೋಗಿಸುತ್ತಾ, ಒಂದು ಅಧ್ಯಯನವನ್ನು ಪ್ರದರ್ಶಿಸಿರಿ.
5 “ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ” ಎಂಬ ಪುಸ್ತಕವನ್ನು ನೀಡಲು ನೀವು ಬಯಸುವುದಾದರೆ, ನೀವು ಹೀಗೆ ಕೇಳಸಾಧ್ಯವಿದೆ:
◼“ಸದಾಕಾಲ ಜೀವಿಸುವುದು ಕೇವಲ ಒಂದು ಕನಸೆಂದು ನೀವು ನೆನಸುತ್ತೀರೊ?” ಪ್ರತಿಕ್ರಿಯೆಯ ನಂತರ, ಸದಾ ಜೀವಿಸಬಲ್ಲಿರಿ ಪುಸ್ತಕವನ್ನು 7ನೆಯ ಪುಟಕ್ಕೆ ತಿರುಗಿಸಿರಿ. 4ನೆಯ ಪ್ಯಾರಗ್ರಾಫ್ನಲ್ಲಿರುವ ವಿಷಯಗಳನ್ನು ಎತ್ತಿತೋರಿಸಿ, ಸ್ವಚ್ಛವಾದ ಭೂಮಿಯಲ್ಲಿ ಸದಾಕಾಲ ಜೀವಿಸುವುದು ಅಪೇಕ್ಷಣೀಯವಾಗಿ ಇರುವುದೆಂಬ ವಿಷಯಕ್ಕೆ ಮನೆಯವನೂ ಸಮ್ಮತಿಸುತ್ತಾನೊ ಎಂದು ಕೇಳಿರಿ. 8 ಮತ್ತು 9ನೆಯ ಪುಟಗಳಲ್ಲಿರುವ ಚಿತ್ರಗಳು ಹಾಗೂ 11-13ನೆಯ ಪುಟಗಳಲ್ಲಿರುವ ಚಿತ್ರಗಳ ನಡುವಿನ ವ್ಯತ್ಯಾಸವನ್ನು ತೋರಿಸಿರಿ. 13ನೆಯ ಪ್ಯಾರಗ್ರಾಫ್ನಲ್ಲಿ ಉದ್ಧರಿಸಲ್ಪಟ್ಟ ವಚನಗಳಲ್ಲೊಂದನ್ನು ತೆರೆದುನೋಡಿರಿ. ಯಥಾರ್ಥವಾದ ಆಸಕ್ತಿಯಿರುವಲ್ಲಿ, ಪುಸ್ತಕವನ್ನು ನೀಡಿರಿ. ಅಲ್ಲಿಂದ ಹೊರಡುವಾಗ, “ನಿತ್ಯಜೀವದ ಪ್ರತೀಕ್ಷೆಯು ನಿಮ್ಮ ವಿಷಯದಲ್ಲಿ ಒಂದು ನೈಜತೆಯಾಗುವುದನ್ನು ನೋಡಲು, ನೀವು ಏನು ಮಾಡಬೇಕಾಗುವುದೆಂದು ನೀವು ನೆನಸುತ್ತೀರಿ?” ಎಂದು ನೀವು ಕೇಳಸಾಧ್ಯವಿದೆ. ಆ ಪ್ರಶ್ನೆಗೆ ಉತ್ತರನೀಡಲು ಒಂದು ಪುನರ್ಭೇಟಿಗಾಗಿ ಏರ್ಪಡಿಸಿರಿ.
6 ನಿತ್ಯಜೀವವು ಹೇಗೆ ಒಂದು ನೈಜತೆಯಾಗುವುದು ಎಂಬುದನ್ನು ವಿವರಿಸಲು ನೀವು ಹಿಂದಿರುಗುವಾಗ, ನೀವು ಹೀಗೆ ಕೇಳಸಾಧ್ಯವಿದೆ:
◼ಕಳೆದ ಬಾರಿ ನಾನು ಇಲ್ಲಿಂದ ಹೊರಡುವಾಗ, “ನಿತ್ಯಜೀವದ ಪ್ರತೀಕ್ಷೆಯು ನಿಮ್ಮ ವಿಷಯದಲ್ಲಿ ಒಂದು ನೈಜತೆಯಾಗುವುದನ್ನು ನೋಡಲು, ನೀವು ಏನ್ನು ಮಾಡಬೇಕಾಗುವುದೆಂದು ನೀವು ನೆನಸುತ್ತೀರಿ?” ಎಂಬ ಪ್ರಶ್ನೆಯನ್ನು ಕೇಳಿದ್ದೆ. [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸದಾ ಜೀವಿಸಬಲ್ಲಿರಿ ಪುಸ್ತಕದ 15ನೆಯ ಪುಟವನ್ನು ತೆರೆದು, 19ನೆಯ ಪ್ಯಾರಗ್ರಾಫ್ನಲ್ಲಿ ಉದ್ಧರಿಸಲ್ಪಟ್ಟ ಯೋಹಾನ 17:3ನ್ನು ಓದಿರಿ. ಈ ವಿಶೇಷ ರೀತಿಯ ಜ್ಞಾನವು, ಅವನಿಗೂ ಅವನ ಕುಟುಂಬಕ್ಕೂ ಲಭ್ಯವಾಗಿದೆಯೆಂದು ಮನೆಯವನಿಗೆ ಹೇಳಿ, ಅವನಿಗೆ ಅನುಕೂಲವಾಗಿರುವ ಸಮಯಕ್ಕೆ ಕ್ರಮವಾಗಿ ಹಿಂದಿರುಗಲು ನೀವು ಸಂತೋಷಿಸುವಿರೆಂದು ಹೇಳಿರಿ. ನೀವು ಮನೆಯವನನ್ನು ಕ್ರಮವಾಗಿ ಭೇಟಿಮಾಡಲು ಆರಂಭಿಸಿದ ತರುವಾಯ, ನೀವು ಅಪೇಕ್ಷಿಸು ಬ್ರೋಷರ್ ಇಲ್ಲವೆ ಜ್ಞಾನ ಪುಸ್ತಕವನ್ನು ಅವನಿಗೆ ಪರಿಚಯಿಸಬಹುದು.
7 ಸಂಭಾಷಣೆಯನ್ನು ತೊಡಗಲು ಸಹಾಯ ಮಾಡುವ ವಿಷಯಗಳು: ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಅನೇಕ ಬೋಧನಾ ಸಹಾಯಕಗಳಿವೆ. ಇವುಗಳನ್ನು ಪ್ರಥಮ ಭೇಟಿಯಲ್ಲಿ ಇಲ್ಲವೆ ಪುನರ್ಭೇಟಿಯಲ್ಲಿ ಸಂಭಾಷಣೆಯನ್ನು ತೊಡಗಲು ಸಹಾಯ ಮಾಡುವ ವಿಷಯಗಳಾಗಿ ಉಪಯೋಗಿಸಬಹುದು. ಸೂಕ್ತವಾದೊಂದು ಪ್ರಶ್ನೆಯನ್ನು ಕೇಳುವ ಮೂಲಕ ನೀವೊಂದು ಸಂಭಾಷಣೆಯನ್ನು ಆರಂಭಿಸಸಾಧ್ಯವಿದೆ. ಉದಾಹರಣೆಗೆ, ಈ ಪ್ರಶ್ನೆಗಳನ್ನು ಮತ್ತು ಅವು ಎಲ್ಲಿ ಉತ್ತರಿಸಲ್ಪಟ್ಟಿವೆಯೊ ಆ ಅಧ್ಯಾಯಗಳನ್ನು ಗಮನದಲ್ಲಿಟ್ಟುಕೊಳ್ಳಿರಿ:
ದೇವರು—ಆತನು ಯಾರು?(4)
ಬೈಬಲು ವಾಸ್ತವವಾಗಿಯೂ ದೇವರಿಂದಲೋ?(5)
ಮರಣದಲ್ಲಿ ಸಂಭವಿಸುವುದೇನು?(8)
ದೇವರು ದುಷ್ಟತ್ವಕ್ಕೆ ಏಕೆ ಅವಕಾಶ ಕೊಟ್ಟಿದ್ದಾನೆ?(11)
ಸ್ವರ್ಗಕ್ಕೆ ಹೋಗುವವರು ಯಾರು, ಮತ್ತು ಏಕೆ?(14)
ನಾವು ದಶಾಜ್ಞೆಗಳಿಗೆ ಅಧೀನರೋ?(24)
8 ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಆಯ್ದ ಪುಟ(ಗಳ)ಕ್ಕೆ ತಿರುಗಿಸಿ, ಚರ್ಚಿಸಲ್ಪಡುತ್ತಿರುವ ಅಂಶವನ್ನು ವಿವರಿಸಸಾಧ್ಯವಿದೆ. ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುವ ಮೂಲಕ ಒಂದು ಪುನರ್ಭೇಟಿಗಾಗಿ ಏರ್ಪಾಡು ಮಾಡಿರಿ. ಆ ಪ್ರಶ್ನೆಯನ್ನು ಅಪೇಕ್ಷಿಸು ಬ್ರೋಷರ್ ಇಲ್ಲವೆ ಜ್ಞಾನ ಪುಸ್ತಕದಿಂದ ಉತ್ತರಿಸಸಾಧ್ಯವಿದೆ. ಸಾರ್ವಜನಿಕ ಕೂಟಕ್ಕೆ ಮನೆಯವನನ್ನು ಆಮಂತ್ರಿಸಲು ಮರೆಯದಿರಿ ಮತ್ತು ಒಂದು ಕರಪತ್ರವನ್ನು ಬಿಟ್ಟುಬನ್ನಿ. ಮೇಲಿನ ಪುಸ್ತಕಗಳಿಗಾಗಿ ನೀಡಲ್ಪಡುತ್ತಿರುವ ಕಾಣಿಕೆಯು, ಅವುಗಳನ್ನು ಮುದ್ರಿಸಲು ತಗಲಿದ ಬೆಲೆಗಿಂತ ಕಡಿಮೆಯಾಗಿದೆ ಮತ್ತು ನಮ್ಮ ಎಲ್ಲ ಕೆಲಸವು ಸ್ವಯಂಪ್ರೇರಿತ ದಾನಗಳಿಂದ ಬೆಂಬಲಿಸಲ್ಪಟ್ಟಿದೆ ಎಂದು ಹೇಳಿರಿ.
9 ಎಲ್ಲ ರೀತಿಯ ಪ್ರಾಮಾಣಿಕ ಹೃದಯದ ಜನರು, ದೇವರ ಮತ್ತು ಕ್ರಿಸ್ತನ ಕುರಿತಾದ ಸತ್ಯಕ್ಕಾಗಿ ಹುಡುಕುತ್ತಿದ್ದಾರೆ. ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ವಿಚಾರದಿಂದ ಅನೇಕರು ಹಿತವಾದ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ನಮ್ಮ ಸಾಕ್ಷಿ ಕೆಲಸದ ಮುಖಾಂತರ ನಾವು ಅಂತಹ ಎಲ್ಲ ಜನರಿಗೆ ನೆರವು ನೀಡಬಲ್ಲೆವು. ಹಾಗಾದರೆ, ನಾವು ‘ಕಷ್ಟಪಡುತ್ತಾ ಹೋರಾಡುತ್ತಾ ಇರೋಣ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟಿದ್ದೇವೆ.’—1 ತಿಮೊ. 4:10.