ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ನೆನಪಲ್ಲಿಡೋಕೆ ಆಸಾಫನ+ ಮಧುರ ಗೀತೆ.
80 ಇಸ್ರಾಯೇಲಿನ ಕುರುಬನೇ,
ಯೋಸೇಫನನ್ನ ಕುರಿಗಳ ತರ ನಡೆಸುವವನೇ ಕೇಳು.+
ನಿನ್ನ ಬೆಳಕನ್ನ ಪ್ರಕಾಶಿಸು.*
4 ಸೈನ್ಯಗಳ ದೇವರಾದ ಯೆಹೋವನೇ, ನೀನು ನಿನ್ನ ಜನ್ರನ್ನ ಎಲ್ಲಿ ತನಕ ವಿರೋಧಿಸ್ತೀಯ?
ಅವ್ರ ಪ್ರಾರ್ಥನೆಗಳನ್ನ ಎಲ್ಲಿ ತನಕ ಕೇಳದೆ ಇರ್ತಿಯ?+
5 ನೀನು ಅವ್ರಿಗೆ ಕಣ್ಣೀರನ್ನ ಊಟವಾಗಿ ಕೊಟ್ಟೆ,
ಕಣ್ಣೀರಧಾರೆಯನ್ನ ಕುಡಿಯೋ ತರ ಮಾಡಿದೆ.
6 ನಮ್ಮ ಅಕ್ಕಪಕ್ಕದವರು ನಮ್ಮ ಜೊತೆ ಜಗಳ ಆಡೋಕೆ ಬಿಟ್ಟೆ,
ನಮ್ಮ ಶತ್ರುಗಳು ಮನಸ್ಸಿಗೆ ಬಂದ ಹಾಗೆ ಮಾತಾಡಿ ನಮಗೆ ಗೇಲಿಮಾಡ್ತಾ ಇದ್ದಾರೆ.+
7 ಸೈನ್ಯಗಳ ದೇವರೇ, ಇನ್ನೊಂದು ಸಾರಿ ದಯೆ ತೋರಿಸು,
ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+
8 ಒಂದು ದ್ರಾಕ್ಷಿ ಬಳ್ಳಿನ+ ಕಿತ್ಕೊಂಡು ಬರೋ ತರ ನೀನು ನಿನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದೆ.
ನೀನು ಜನಾಂಗಗಳನ್ನ ಅವುಗಳ ದೇಶದಿಂದ ಓಡಿಸಿ ಆ ದೇಶದಲ್ಲಿ ಅದನ್ನ ನೆಟ್ಟೆ.+
9 ನೀನು ಅದಕ್ಕಾಗಿ ನೆಲವನ್ನ ಹದ ಮಾಡಿದೆ,
ಅದು ಬೇರು ಬಿಟ್ಟು ದೇಶದಲ್ಲೆಲ್ಲ ಹಬ್ಬಿತು.+
10 ಅದ್ರ ನೆರಳಿಂದ ಬೆಟ್ಟಗಳು ಮುಚ್ಚಿಹೋದ್ವು,
ಅದ್ರ ಕೊಂಬೆಗಳಿಂದ ದೇವರು ನೆಟ್ಟ ದೇವದಾರು ಮರಗಳು ಮರೆಯಾದ್ವು.
12 ದಾರಿಹೋಕರೆಲ್ಲ ದ್ರಾಕ್ಷಿತೋಟದ ಹಣ್ಣನ್ನ ಕಿತ್ಕೊಂಡು ಹೋಗೋ ಹಾಗೆ,+
ನೀನು ಯಾಕೆ ಅದ್ರ ಕಲ್ಲಿನ ಗೋಡೆಗಳನ್ನ ಬೀಳಿಸಿಬಿಟ್ಟೆ?+
13 ಕಾಡುಹಂದಿಗಳು ಅದನ್ನ ನಾಶಮಾಡುತ್ತೆ,
ಬಯಲಿನ ಕಾಡು ಪ್ರಾಣಿಗಳು ಅದನ್ನ ತಿಂದುಹಾಕುತ್ತೆ.+
14 ಸೈನ್ಯಗಳ ದೇವರೇ, ದಯವಿಟ್ಟು ವಾಪಸ್ ಬಾ.
ಸ್ವರ್ಗದಿಂದ ಕೆಳಗೆ ನೋಡು!
ಈ ದ್ರಾಕ್ಷಿ ಬಳ್ಳಿ ಕಡೆ ಕಾಳಜಿ ತೋರಿಸು.+
16 ಆ ಕೊಂಬೆಯನ್ನ ಕಡಿದಿದ್ದಾರೆ, ಬೆಂಕಿಯಿಂದ ಸುಟ್ಟು ಹಾಕಿದ್ದಾರೆ.+
ನಿನ್ನ ಗದರಿಕೆಯಿಂದ ಅವರು ನಾಶ ಆಗ್ತಾರೆ.
18 ಆಗ ನಾವು ನಿನ್ನನ್ನ ಬಿಟ್ಟು ಬೇರೆ ಕಡೆ ತಿರುಗಿಕೊಳ್ಳಲ್ಲ.
ನಾವು ನಿನ್ನ ಹೆಸ್ರನ್ನು ಕರಿಯೋಕೆ ನಮ್ಮ ಜೀವವನ್ನ ಕಾಪಾಡು.
19 ಸೈನ್ಯಗಳ ದೇವರಾದ ಯೆಹೋವನೇ, ಇನ್ನೊಂದು ಸಾರಿ ದಯೆ ತೋರಿಸು,
ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+