ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ಫಿಲಿಷ್ಟಿಯರು ದಾವೀದನಿಗೆ ಚಿಕ್ಲಗನ್ನ ಕೊಟ್ರು (1-12)

1 ಸಮುವೇಲ 27:1

ಮಾರ್ಜಿನಲ್ ರೆಫರೆನ್ಸ್

  • +1ಸಮು 19:18; 22:1, 5
  • +1ಸಮು 18:29; 23:23

1 ಸಮುವೇಲ 27:2

ಮಾರ್ಜಿನಲ್ ರೆಫರೆನ್ಸ್

  • +1ಸಮು 25:13; 30:9
  • +1ಸಮು 21:10, 14; 27:12

1 ಸಮುವೇಲ 27:3

ಮಾರ್ಜಿನಲ್ ರೆಫರೆನ್ಸ್

  • +1ಸಮು 25:43
  • +1ಸಮು 25:39, 42

1 ಸಮುವೇಲ 27:4

ಮಾರ್ಜಿನಲ್ ರೆಫರೆನ್ಸ್

  • +1ಸಮು 23:14; 26:25

1 ಸಮುವೇಲ 27:6

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:1, 5; 1ಸಮು 30:1; 2ಸಮು 1:1; 1ಪೂರ್ವ 12:1, 20

1 ಸಮುವೇಲ 27:7

ಪಾದಟಿಪ್ಪಣಿ

  • *

    ಅಕ್ಷ. “ದಿನಗಳ ಲೆಕ್ಕ.”

ಮಾರ್ಜಿನಲ್ ರೆಫರೆನ್ಸ್

  • +1ಸಮು 29:3

1 ಸಮುವೇಲ 27:8

ಮಾರ್ಜಿನಲ್ ರೆಫರೆನ್ಸ್

  • +ಆದಿ 25:17, 18; ವಿಮೋ 15:22; 1ಸಮು 15:7
  • +ಯೆಹೋ 13:1, 2
  • +ಆದಿ 36:12; ವಿಮೋ 17:8, 14; ಅರ 13:29; 1ಸಮು 15:2; 2ಸಮು 1:1

1 ಸಮುವೇಲ 27:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 25:19; 1ಸಮು 15:3

1 ಸಮುವೇಲ 27:10

ಪಾದಟಿಪ್ಪಣಿ

  • *

    ಅಥವಾ “ನೆಗೆಬಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:1, 2
  • +1ಪೂರ್ವ 2:9
  • +ಅರ 24:21; 1ಸಮು 15:6

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 27:11ಸಮು 19:18; 22:1, 5
1 ಸಮು. 27:11ಸಮು 18:29; 23:23
1 ಸಮು. 27:21ಸಮು 25:13; 30:9
1 ಸಮು. 27:21ಸಮು 21:10, 14; 27:12
1 ಸಮು. 27:31ಸಮು 25:43
1 ಸಮು. 27:31ಸಮು 25:39, 42
1 ಸಮು. 27:41ಸಮು 23:14; 26:25
1 ಸಮು. 27:6ಯೆಹೋ 19:1, 5; 1ಸಮು 30:1; 2ಸಮು 1:1; 1ಪೂರ್ವ 12:1, 20
1 ಸಮು. 27:71ಸಮು 29:3
1 ಸಮು. 27:8ಆದಿ 25:17, 18; ವಿಮೋ 15:22; 1ಸಮು 15:7
1 ಸಮು. 27:8ಯೆಹೋ 13:1, 2
1 ಸಮು. 27:8ಆದಿ 36:12; ವಿಮೋ 17:8, 14; ಅರ 13:29; 1ಸಮು 15:2; 2ಸಮು 1:1
1 ಸಮು. 27:9ಧರ್ಮೋ 25:19; 1ಸಮು 15:3
1 ಸಮು. 27:10ಯೆಹೋ 15:1, 2
1 ಸಮು. 27:101ಪೂರ್ವ 2:9
1 ಸಮು. 27:10ಅರ 24:21; 1ಸಮು 15:6
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 27:1-12

ಒಂದನೇ ಸಮುವೇಲ

27 ಆದ್ರೆ ದಾವೀದ ತನ್ನ ಹೃದಯದಲ್ಲಿ “ನಾನು ಸೌಲನ ಕೈಯಿಂದ ಒಂದಲ್ಲ ಒಂದು ದಿನ ಸಾಯ್ತೀನಿ. ಹಾಗಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸ್ಕೊಂಡು ಹೋಗೋದೇ ಒಳ್ಳೇದು.+ ಆಗ ಸೌಲ ನನ್ನನ್ನ ಇಸ್ರಾಯೇಲಿನ ಪ್ರಾಂತ್ಯಗಳಲ್ಲಿ ಹುಡುಕೋದನ್ನ ಬಿಟ್ಟುಬಿಡ್ತಾನೆ.+ ನಾನು ಅವನ ಕೈಯಿಂದ ತಪ್ಪಿಸ್ಕೊಳ್ತೀನಿ” ಅಂದ್ಕೊಂಡ. 2 ಹಾಗಾಗಿ ದಾವೀದ ತನ್ನ ಜೊತೆ ಇದ್ದ 600 ಗಂಡಸ್ರನ್ನ+ ಕರ್ಕೊಂಡು ಮಾವೋಕನ ಮಗ ಆಕೀಷ್‌+ ಹತ್ರ ಹೋದ. ಅವನು ಗತ್‌ ಊರಿನ ರಾಜ. 3 ದಾವೀದ, ಅವನ ಗಂಡಸ್ರು, ಅವ್ರ ಕುಟುಂಬದವರೂ ಆಕೀಷ್‌ ಜೊತೆ ಗತ್‌ನಲ್ಲಿ ವಾಸ ಮಾಡಿದ್ರು. ದಾವೀದನ ಜೊತೆ ಅವನ ಹೆಂಡತಿಯರಾದ ಇಜ್ರೇಲಿನ ಅಹೀನೋವಮ,+ ತೀರಿಹೋಗಿದ್ದ ನಾಬಾಲನ ಹೆಂಡತಿಯಾದ ಕರ್ಮೆಲಿನ ಅಬೀಗೈಲ್‌+ ಇದ್ರು. 4 ದಾವೀದ ಗತ್‌ ಊರಿಗೆ ಓಡಿಹೋಗಿದ್ದಾನೆ ಅನ್ನೋ ಸುದ್ದಿ ಸೌಲನಿಗೆ ಗೊತ್ತಾದಾಗ ಅವನು ದಾವೀದನನ್ನ ಹುಡುಕೋದನ್ನ ನಿಲ್ಲಿಸಿದ.+

5 ಆಮೇಲೆ ದಾವೀದ ಆಕೀಷ್‌ಗೆ “ನಿನಗೆ ನನ್ನ ಮೇಲೆ ದಯೆ ಇದ್ರೆ ದಯವಿಟ್ಟು ನನಗೆ ಯಾವುದಾದ್ರೊಂದು ಪಟ್ಟಣದ ಗ್ರಾಮಾಂತರ ಪ್ರದೇಶವನ್ನ ವಾಸಿಸೋಕೆ ಕೊಡು. ನಿನ್ನ ಸೇವಕನಾದ ನಾನು ರಾಜರು ವಾಸಿಸೋ ನಗರದಲ್ಲಿ ನಿನ್ನ ಜೊತೆ ಯಾಕೆ ವಾಸಿಸಬೇಕು?” ಅಂದ. 6 ಆಕೀಷ್‌ ಆ ದಿನಾನೇ ದಾವೀದನಿಗೆ ಚಿಕ್ಲಗನ್ನ+ ಕೊಟ್ಟ. ಹಾಗಾಗಿ ಇವತ್ತಿನ ತನಕ ಚಿಕ್ಲಗ್‌ ಯೆಹೂದದ ರಾಜರಿಗೆ ಸೇರಿದೆ.

7 ದಾವೀದ ಫಿಲಿಷ್ಟಿಯರ ಗ್ರಾಮಾಂತರ ಪ್ರದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳು* ಇದ್ದ.+ 8 ದಾವೀದ ತನ್ನ ಗಂಡಸ್ರ ಜೊತೆ ಹೋಗಿ ತೇಲಾಮಿಂದ ಶೂರಿನ+ ತನಕ, ಈಜಿಪ್ಟ್‌ ದೇಶದ ತನಕ ವಾಸ ಇದ್ದ ಗೆಷೂರ್ಯರ,+ ಗಿಜ್ರೀಯರ, ಅಮಾಲೇಕ್ಯರ+ ಮೇಲೆ ದಾಳಿ ಮಾಡ್ತಿದ್ದ. 9 ದಾವೀದ ಆ ಪ್ರದೇಶಗಳ ಮೇಲೆ ದಾಳಿ ಮಾಡ್ತಿದ್ದಾಗ ಅಲ್ಲಿದ್ದ ಗಂಡಸ್ರನ್ನ ಹೆಂಗಸ್ರನ್ನ ಉಳಿಸ್ತಾ ಇರಲಿಲ್ಲ.+ ಆದ್ರೆ ಅಲ್ಲಿದ್ದ ಕುರಿ, ದನ, ಕತ್ತೆ, ಒಂಟೆ, ಅಲ್ಲಿನ ಬಟ್ಟೆಗಳನ್ನ ತಗೊಂಡು ಆಕೀಷ್‌ ಹತ್ರ ವಾಪಸ್‌ ಬರ್ತಿದ್ದ. 10 ಆಕೀಷ್‌ ದಾವೀದನಿಗೆ “ದಾಳಿ ಮಾಡೋಕೆ ಇವತ್ತು ಎಲ್ಲಿಗೆ ಹೋಗಿದ್ದೆ?” ಅಂತ ಕೇಳಿದಾಗೆಲ್ಲ ದಾವೀದ “ಯೆಹೂದದ ದಕ್ಷಿಣಕ್ಕೆ”*+ ಅಂತಾನೋ “ಯೆರಹ್ಮೇಲ್ಯರ+ ದಕ್ಷಿಣಕ್ಕೆ” ಅಂತಾನೋ “ಕೇನ್ಯರ+ ದಕ್ಷಿಣಕ್ಕೆ” ಅಂತಾನೋ ಉತ್ರ ಕೊಡ್ತಿದ್ದ. 11 ದಾವೀದ ದಾಳಿ ಮಾಡಿದಾಗೆಲ್ಲ ಅಲ್ಲಿನ ಗಂಡಸ್ರಾಗಲಿ ಸ್ತ್ರೀಯರಾಗಲಿ ಒಬ್ರನ್ನೂ ಗತ್‌ ಊರಿಗೆ ಕರ್ಕೊಂಡು ಬರದೆ ಅವ್ರನ್ನ ಅಲ್ಲೇ ಕೊಲ್ತಿದ್ದ. ಯಾಕಂದ್ರೆ “ಅವರು ತನ್ನ ಬಗ್ಗೆ ‘ದಾವೀದ ಹೀಗೆಹೀಗೆ ಮಾಡಿದ’ ಅಂತ ಎಲ್ಲಿ ಹೇಳಿಬಿಡ್ತಾರೋ” ಅಂದ್ಕೊಳ್ತಿದ್ದ. (ಫಿಲಿಷ್ಟಿಯರ ಗ್ರಾಮಾಂತರ ಪ್ರದೇಶದಲ್ಲಿದ್ದ ಕಾಲವೆಲ್ಲ ಇದೇ ಅವನ ರೂಢಿ ಆಗಿತ್ತು.) 12 ಹಾಗಾಗಿ ಆಕೀಷ್‌ ದಾವೀದನನ್ನ ನಂಬಿ ತನ್ನ ಮನಸ್ಸಲ್ಲೇ ‘ಖಂಡಿತ ಇವನನ್ನ ನೋಡಿ ಇವನ ಸ್ವಂತ ಜನ್ರಾದ ಇಸ್ರಾಯೇಲ್ಯರೇ ಅಸಹ್ಯಪಡ್ತಾರೆ. ಹಾಗಾಗಿ ಇವನು ಶಾಶ್ವತವಾಗಿ ನನ್ನ ಸೇವಕನಾಗಿ ಇರ್ತಾನೆ’ ಅಂದ್ಕೊಂಡ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ