ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಕೊರ್ನೇಲ್ಯನ ದರ್ಶನ (1-8)

      • ಪೇತ್ರನಿಗೆ ಬಂದ ಶುದ್ಧ ಮಾಡಿರೋ ಪ್ರಾಣಿಗಳ ದರ್ಶನ (9-16)

      • ಪೇತ್ರ ಕೊರ್ನೇಲ್ಯನನ್ನ ಭೇಟಿ ಮಾಡ್ತಾನೆ (17-33)

      • ಪೇತ್ರ ಸಿಹಿಸುದ್ದಿಯನ್ನ ಬೇರೆ ಜನಾಂಗದವ್ರಿಗೂ ಸಾರ್ತಾನೆ (34-43)

        • “ದೇವರು ಭೇದಭಾವ ಮಾಡಲ್ಲ” (34, 35)

      • ಬೇರೆ ಜನ್ರ ಮೇಲೂ ಪವಿತ್ರಶಕ್ತಿ ಮತ್ತು ಅವ್ರ ದೀಕ್ಷಾಸ್ನಾನ (44-48)

ಅ. ಕಾರ್ಯ 10:1

ಪಾದಟಿಪ್ಪಣಿ

  • *

    ಒಂದು ಗುಂಪಲ್ಲಿ 600 ರೋಮನ್‌ ಸೈನಿಕರು ಇರ್ತಿದ್ರು.

  • *

    ಅಥವಾ “ಶತಾಧಿಪತಿ.” ಇವನ ಕೆಳಗೆ 100 ಸೈನಿಕರು ಇದ್ರು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 70

    ಕಾವಲಿನಬುರುಜು,

    1/1/1991, ಪು. 14

    5/1/1990, ಪು. 30

ಅ. ಕಾರ್ಯ 10:3

ಮಾರ್ಜಿನಲ್ ರೆಫರೆನ್ಸ್

  • +ಅಕಾ 3:1

ಅ. ಕಾರ್ಯ 10:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 65:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1991, ಪು. 14

ಅ. ಕಾರ್ಯ 10:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 69

ಅ. ಕಾರ್ಯ 10:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/1990, ಪು. 30

ಅ. ಕಾರ್ಯ 10:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 11:5-10

ಅ. ಕಾರ್ಯ 10:14

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:4, 13-20; 20:25; ಧರ್ಮೋ 14:3, 19; ಯೆಹೆ 4:14

ಅ. ಕಾರ್ಯ 10:17

ಮಾರ್ಜಿನಲ್ ರೆಫರೆನ್ಸ್

  • +ಅಕಾ 11:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 71

ಅ. ಕಾರ್ಯ 10:19

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:2; 15:28; 16:6; 20:23

ಅ. ಕಾರ್ಯ 10:22

ಮಾರ್ಜಿನಲ್ ರೆಫರೆನ್ಸ್

  • +ಅಕಾ 10:1

ಅ. ಕಾರ್ಯ 10:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 71-72, 75

    ಕಾವಲಿನಬುರುಜು,

    3/15/2014, ಪು. 3-4

ಅ. ಕಾರ್ಯ 10:26

ಮಾರ್ಜಿನಲ್ ರೆಫರೆನ್ಸ್

  • +ಲೂಕ 4:8; ಅಕಾ 14:12-15; ಪ್ರಕ 19:10; 22:8, 9

ಅ. ಕಾರ್ಯ 10:28

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 18:28
  • +ಅಕಾ 10:45; ಎಫೆ 3:5, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 71-72

ಅ. ಕಾರ್ಯ 10:32

ಮಾರ್ಜಿನಲ್ ರೆಫರೆನ್ಸ್

  • +ಅಕಾ 9:43

ಅ. ಕಾರ್ಯ 10:33

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಅ. ಕಾರ್ಯ 10:34

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 10:17; 2ಪೂರ್ವ 19:7; ರೋಮ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2022 ಪು. 6-7

    ಕೂಲಂಕಷ ಸಾಕ್ಷಿ, ಪು. 72

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 5

    ಎಚ್ಚರ!,

    ನಂ. 1 2021 ಪು. 7

    ಕಾವಲಿನಬುರುಜು (ಅಧ್ಯಯನ),

    8/2018, ಪು. 9

    ಕಾವಲಿನಬುರುಜು,

    7/1/2013, ಪು. 14

    2/1/2004, ಪು. 30

    9/15/1993, ಪು. 5

ಅ. ಕಾರ್ಯ 10:35

ಮಾರ್ಜಿನಲ್ ರೆಫರೆನ್ಸ್

  • +ರೋಮ 2:13; 1ಕೊರಿಂ 12:13; ಗಲಾ 3:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು, ಲೇಖನ 64

    ಕಾವಲಿನಬುರುಜು (ಸಾರ್ವಜನಿಕ),

    ನಂ. 1 2022 ಪು. 6-7

    ಕೂಲಂಕಷ ಸಾಕ್ಷಿ, ಪು. 72

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 5

    ಎಚ್ಚರ!,

    ನಂ. 1 2021 ಪು. 7

    ಕಾವಲಿನಬುರುಜು (ಅಧ್ಯಯನ),

    8/2018, ಪು. 9

    ಕಾವಲಿನಬುರುಜು,

    7/1/2013, ಪು. 14

    ಕಿರುಹೊತ್ತಗೆ

    2/1/2004, ಪು. 30

ಅ. ಕಾರ್ಯ 10:36

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 52:7; ನಹೂ 1:15
  • +ಮತ್ತಾ 28:18; ರೋಮ 14:9; ಪ್ರಕ 19:11, 16

ಅ. ಕಾರ್ಯ 10:37

ಮಾರ್ಜಿನಲ್ ರೆಫರೆನ್ಸ್

  • +ಲೂಕ 4:14

ಅ. ಕಾರ್ಯ 10:38

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:2; 42:1; 61:1; ಮತ್ತಾ 3:16
  • +ಲೂಕ 13:16
  • +ಯೋಹಾ 3:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    7/2020, ಪು. 31

    ಬೈಬಲ್‌ ಪಾಠಗಳು, ಪು. 186-187

ಅ. ಕಾರ್ಯ 10:39

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ಒಳ್ಳೆಯ ದೇಶ”, ಪು. 28

ಅ. ಕಾರ್ಯ 10:40

ಮಾರ್ಜಿನಲ್ ರೆಫರೆನ್ಸ್

  • +ಯೋನ 1:17; 2:10; ಅಕಾ 2:23, 24

ಅ. ಕಾರ್ಯ 10:41

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:30, 31; ಯೋಹಾ 21:13, 14

ಅ. ಕಾರ್ಯ 10:42

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 28:19, 20; ಅಕಾ 1:8
  • +ಅಕಾ 17:31; ರೋಮ 14:9; 2ಕೊರಿಂ 5:10; 2ತಿಮೊ 4:1; 1ಪೇತ್ರ 4:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2008, ಪು. 16, 19

    1/1/2005, ಪು. 12

    ರಾಜ್ಯ ಸೇವೆ,

    2/2003, ಪು. 3

ಅ. ಕಾರ್ಯ 10:43

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:27; ಪ್ರಕ 19:10
  • +ಯೆಶಾ 53:11; ಯೆರೆ 31:34; ದಾನಿ 9:24

ಅ. ಕಾರ್ಯ 10:44

ಮಾರ್ಜಿನಲ್ ರೆಫರೆನ್ಸ್

  • +ಅಕಾ 4:31; 8:14, 15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 72

ಅ. ಕಾರ್ಯ 10:45

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 72

ಅ. ಕಾರ್ಯ 10:46

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:1, 4; 19:6

ಅ. ಕಾರ್ಯ 10:47

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:11; ಅಕಾ 8:36; 11:17

ಅ. ಕಾರ್ಯ 10:48

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:19; ಅಕಾ 2:38

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 10:3ಅಕಾ 3:1
ಅ. ಕಾ. 10:4ಕೀರ್ತ 65:2
ಅ. ಕಾ. 10:10ಅಕಾ 11:5-10
ಅ. ಕಾ. 10:14ಯಾಜ 11:4, 13-20; 20:25; ಧರ್ಮೋ 14:3, 19; ಯೆಹೆ 4:14
ಅ. ಕಾ. 10:17ಅಕಾ 11:11
ಅ. ಕಾ. 10:19ಅಕಾ 13:2; 15:28; 16:6; 20:23
ಅ. ಕಾ. 10:22ಅಕಾ 10:1
ಅ. ಕಾ. 10:26ಲೂಕ 4:8; ಅಕಾ 14:12-15; ಪ್ರಕ 19:10; 22:8, 9
ಅ. ಕಾ. 10:28ಯೋಹಾ 18:28
ಅ. ಕಾ. 10:28ಅಕಾ 10:45; ಎಫೆ 3:5, 6
ಅ. ಕಾ. 10:32ಅಕಾ 9:43
ಅ. ಕಾ. 10:34ಧರ್ಮೋ 10:17; 2ಪೂರ್ವ 19:7; ರೋಮ 2:11
ಅ. ಕಾ. 10:35ರೋಮ 2:13; 1ಕೊರಿಂ 12:13; ಗಲಾ 3:28
ಅ. ಕಾ. 10:36ಯೆಶಾ 52:7; ನಹೂ 1:15
ಅ. ಕಾ. 10:36ಮತ್ತಾ 28:18; ರೋಮ 14:9; ಪ್ರಕ 19:11, 16
ಅ. ಕಾ. 10:37ಲೂಕ 4:14
ಅ. ಕಾ. 10:38ಯೆಶಾ 11:2; 42:1; 61:1; ಮತ್ತಾ 3:16
ಅ. ಕಾ. 10:38ಲೂಕ 13:16
ಅ. ಕಾ. 10:38ಯೋಹಾ 3:1, 2
ಅ. ಕಾ. 10:40ಯೋನ 1:17; 2:10; ಅಕಾ 2:23, 24
ಅ. ಕಾ. 10:41ಲೂಕ 24:30, 31; ಯೋಹಾ 21:13, 14
ಅ. ಕಾ. 10:42ಮತ್ತಾ 28:19, 20; ಅಕಾ 1:8
ಅ. ಕಾ. 10:42ಅಕಾ 17:31; ರೋಮ 14:9; 2ಕೊರಿಂ 5:10; 2ತಿಮೊ 4:1; 1ಪೇತ್ರ 4:5
ಅ. ಕಾ. 10:43ಲೂಕ 24:27; ಪ್ರಕ 19:10
ಅ. ಕಾ. 10:43ಯೆಶಾ 53:11; ಯೆರೆ 31:34; ದಾನಿ 9:24
ಅ. ಕಾ. 10:44ಅಕಾ 4:31; 8:14, 15
ಅ. ಕಾ. 10:46ಅಕಾ 2:1, 4; 19:6
ಅ. ಕಾ. 10:47ಮತ್ತಾ 3:11; ಅಕಾ 8:36; 11:17
ಅ. ಕಾ. 10:48ಮತ್ತಾ 16:19; ಅಕಾ 2:38
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 10:1-48

ಅಪೊಸ್ತಲರ ಕಾರ್ಯ

10 ಕೈಸರೈಯದಲ್ಲಿ ಕೊರ್ನೇಲ್ಯ ಅನ್ನೋ ಒಬ್ಬ ವ್ಯಕ್ತಿಯಿದ್ದ. ಇವನು ಇಟಲಿಯ ಸೈನ್ಯದ ಒಂದು ಗುಂಪಲ್ಲಿ* ಸೇನಾಧಿಕಾರಿ* ಆಗಿದ್ದ. 2 ಅವನಿಗೂ ಅವನ ಕುಟುಂಬದವ್ರಿಗೂ ದೇವ್ರ ಮೇಲೆ ತುಂಬ ಭಯಭಕ್ತಿ ಇತ್ತು. ಅವನು ಬಡವ್ರಿಗೆ ತುಂಬ ಸಹಾಯ ಮಾಡ್ತಾ ಇದ್ದ. ತಪ್ಪದೆ ದೇವ್ರಿಗೆ ಪ್ರಾರ್ಥನೆ ಮಾಡ್ತಾ ಇದ್ದ. 3 ಒಂದಿನ ಮಧ್ಯಾಹ್ನ ಸುಮಾರು ಮೂರು ಗಂಟೆಗೆ+ ಅವನಿಗೆ ಒಂದು ದರ್ಶನ ಬಂತು. ಒಬ್ಬ ದೇವದೂತ ಅವನ ಮನೆಯಲ್ಲಿ ಬರೋದು ಅವನಿಗೆ ಕಾಣಿಸ್ತು. ಅವನು ಬಂದು “ಕೊರ್ನೇಲ್ಯ” ಅಂತ ಕರೆದ. 4 ಆಗ ಕೊರ್ನೇಲ್ಯ ಭಯಪಟ್ಟು ದೇವದೂತನನ್ನ ನೋಡಿ “ಹೇಳು ಸ್ವಾಮಿ, ನಾನೇನು ಮಾಡಲಿ?” ಅಂತ ಕೇಳಿದ. ಅದಕ್ಕೆ ದೇವದೂತ “ನಿನ್ನ ಪ್ರಾರ್ಥನೆ ದೇವ್ರಿಗೆ ಕೇಳಿಸಿದೆ. ನೀನು ಬಡವರಿಗೆ ಸಹಾಯ ಮಾಡಿದ್ದನ್ನ ಆತನು ನೋಡಿದ್ದಾನೆ.+ 5 ಹಾಗಾಗಿ ಈಗ ಸ್ವಲ್ಪ ಜನ್ರನ್ನ ಯೊಪ್ಪಕ್ಕೆ ಕಳಿಸಿ ಪೇತ್ರ ಅನ್ನೋ ಹೆಸ್ರಿರೋ ಸೀಮೋನನನ್ನ ಬರೋಕೆ ಹೇಳು. 6 ಅವನು ಚರ್ಮಕಾರ ಸೀಮೋನನ ಮನೆಯಲ್ಲಿ ಇದ್ದಾನೆ. ಅವನ ಮನೆ ಸಮುದ್ರದ ಹತ್ರ ಇದೆ” ಅಂದ. 7 ಇದನ್ನ ಹೇಳಿ ದೇವದೂತ ಹೋದ. ತಕ್ಷಣ ಕೊರ್ನೇಲ್ಯ ಇಬ್ರು ಸೇವಕರನ್ನ ಮತ್ತು ಒಬ್ಬ ಸೈನಿಕನನ್ನ ಕರೆದ. ಕೊರ್ನೇಲ್ಯನಿಗೆ ಸೇವೆಮಾಡ್ತಿದ್ದ ಈ ಸೈನಿಕನಿಗೆ ತುಂಬ ದೇವಭಕ್ತಿ ಇತ್ತು. 8 ಕೊರ್ನೇಲ್ಯ ಅವ್ರಿಗೆ ಆಗಿದ್ದನ್ನೆಲ್ಲ ಹೇಳಿ ಯೊಪ್ಪಕ್ಕೆ ಕಳಿಸಿದ.

9 ಆ ಸೇವಕರು ಪ್ರಯಾಣ ಮಾಡ್ತಾ ಮಾರನೇ ದಿನ ಆ ಪಟ್ಟಣಕ್ಕೆ ಬಂದ್ರು. ಆ ಸಮಯದಲ್ಲಿ ಪೇತ್ರ ಪ್ರಾರ್ಥನೆ ಮಾಡೋಕೆ ಮಹಡಿ ಮೇಲೆ ಹೋದ. ಆಗ ಮಧ್ಯಾಹ್ನ ಸುಮಾರು 12 ಗಂಟೆ ಆಗಿತ್ತು. 10 ಅವನಿಗೆ ತುಂಬ ಹಸಿವಾಗಿ ಏನಾದ್ರೂ ತಿನ್ನಬೇಕು ಅಂತ ಅನಿಸ್ತು. ಆದ್ರೆ ಊಟ ಇನ್ನೂ ತಯಾರಾಗ್ತಾ ಇರುವಾಗ ಪೇತ್ರನಿಗೆ ಒಂದು ದರ್ಶನ ಬಂತು.+ 11 ಆಕಾಶ ತೆರೆಯೋದನ್ನ, ಒಂದು ದೊಡ್ಡ ಬಟ್ಟೆಯನ್ನ ನಾಲ್ಕೂ ಕಡೆ ಹಿಡಿದು ಮೇಲಿಂದ ಕೆಳಗೆ ಇಳಿಸೋದನ್ನ ಅವನು ನೋಡಿದ. 12 ಅದ್ರಲ್ಲಿ ಎಲ್ಲ ತರದ ನಾಲ್ಕು ಕಾಲಿನ ಪ್ರಾಣಿಗಳು, ಹರಿದಾಡೋ ಜೀವಿಗಳು, ಹಾರಾಡೋ ಪಕ್ಷಿಗಳು ಇದ್ದವು. 13 ಆಗ ಒಬ್ಬ ದೇವದೂತ ಪೇತ್ರನಿಗೆ “ಪೇತ್ರ, ಎದ್ದು ಇವನ್ನ ತಿನ್ನು” ಅಂತ ಹೇಳೋ ಧ್ವನಿ ಕೇಳಿಸಿತು. 14 ಅದಕ್ಕೆ ಪೇತ್ರ “ಬೇಡ ಪ್ರಭು. ನಾನು ತಿನ್ನಲ್ಲ. ನಿಯಮ ಪುಸ್ತಕದ ಪ್ರಕಾರ ಅಶುದ್ಧ ಆಗಿರೋದನ್ನ ಮತ್ತು ಅಪವಿತ್ರ ಆಗಿರೋದನ್ನ ನಾನು ಯಾವತ್ತೂ ತಿಂದಿಲ್ಲ”+ ಅಂದ. 15 ಆಗ ಆ ದೇವದೂತ ಎರಡನೇ ಸಲ ಮಾತಾಡ್ತಾ “ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು” ಅಂದ. 16 ಹೀಗೆ ಮೂರನೇ ಸಲನೂ ಆಯ್ತು. ಆಮೇಲೆ ಆ ದೊಡ್ಡ ಬಟ್ಟೆ ಮೇಲೆ ಆಕಾಶಕ್ಕೆ ಹೋಯ್ತು.

17 ಆ ದರ್ಶನದ ಅರ್ಥ ಏನು ಅಂತ ಪೇತ್ರ ಯೋಚಿಸ್ತಾ ಇದ್ದ. ಆಗಲೇ ಕೊರ್ನೇಲ್ಯ ಕಳಿಸಿದ್ದ ಸೇವಕರು ಸೀಮೋನನ ಮನೆ ಎಲ್ಲಿ ಅಂತ ಹುಡುಕ್ತಾ ಅವನ ಮನೆ ಬಾಗಿಲ ಹತ್ರ ಬಂದು ನಿಂತ್ರು.+ 18 ಸೀಮೋನ ಪೇತ್ರ ಉಳ್ಕೊಂಡಿರೋದು ಇಲ್ಲೇನಾ ಅಂತ ಅವರು ಜೋರಾಗಿ ಕೇಳ್ತಾ ವಿಚಾರಿಸಿದ್ರು. 19 ಪೇತ್ರ ಇನ್ನೂ ಆ ದರ್ಶನದ ಬಗ್ಗೆ ಯೋಚಿಸ್ತಾ ಇದ್ದ. ಆಗ ದೇವ್ರ ಪವಿತ್ರಶಕ್ತಿ+ ಅವನಿಗೆ “ನೋಡು, ಮೂರು ಜನ ನಿನ್ನನ್ನ ಹುಡ್ಕೊಂಡು ಬಂದಿದ್ದಾರೆ. 20 ನೀನು ಕೆಳಗಿಳಿದು ಅವ್ರ ಜೊತೆ ಹೋಗು. ಒಂಚೂರೂ ಸಂಶಯಪಡಬೇಡ. ನಾನೇ ಅವ್ರನ್ನ ಕಳಿಸಿದ್ದೀನಿ” ಅಂತ ಹೇಳಿತು. 21 ಆಗ ಪೇತ್ರ ಕೆಳಗಿಳಿದು ಆ ಸೇವಕರ ಹತ್ರ ಹೋದ. ಅವನು ಅವ್ರಿಗೆ “ನೀವು ಹುಡುಕ್ತಾ ಇರೋದು ನನ್ನನ್ನೇ. ನೀವ್ಯಾಕೆ ಇಲ್ಲಿಗೆ ಬಂದ್ರಿ?” ಅಂತ ಕೇಳಿದ. 22 ಅದಕ್ಕೆ ಅವರು “ಸೇನಾಧಿಕಾರಿ ಕೊರ್ನೇಲ್ಯ+ ನಮ್ಮನ್ನ ಕಳಿಸಿದ್ದಾನೆ. ಅವನು ಒಳ್ಳೆಯವನು. ದೇವ್ರ ಮೇಲೆ ಅವನಿಗೆ ತುಂಬ ಭಯಭಕ್ತಿ ಇದೆ. ಎಲ್ಲ ಯೆಹೂದ್ಯರಲ್ಲೂ ಅವನಿಗೆ ಒಳ್ಳೇ ಹೆಸ್ರಿದೆ. ದೇವರು ಒಬ್ಬ ದೇವದೂತನನ್ನ ಕೊರ್ನೇಲ್ಯನ ಹತ್ರ ಕಳಿಸಿ ನಿನ್ನನ್ನ ಅವನ ಮನೆಗೆ ಕರ್ಕೊಂಡು ಬರೋಕೆ ಹೇಳಿದ್ದಾನೆ. ನೀನು ಹೇಳೋದನ್ನ ಕೇಳೋಕೆ ಅವನಿಗೆ ಹೇಳಿದ್ದಾನೆ” ಅಂದ್ರು. 23 ಇದನ್ನ ಕೇಳಿ ಪೇತ್ರ ಅವ್ರನ್ನ ಮನೆ ಒಳಗೆ ಕರೆದು ಅತಿಥಿಸತ್ಕಾರ ಮಾಡಿದ.

ಮಾರನೇ ದಿನ ಪೇತ್ರ ಅವ್ರ ಜೊತೆ ಹೋದ. ಯೊಪ್ಪದಲ್ಲಿದ್ದ ಕೆಲವು ಸಹೋದರರೂ ಅವನ ಜೊತೆ ಹೋದ್ರು. 24 ಒಂದು ದಿನದ ಪ್ರಯಾಣ ಮಾಡಿ ಪೇತ್ರ ಕೈಸರೈಯಕ್ಕೆ ಬಂದ. ಕೊರ್ನೇಲ್ಯ ಇವ್ರಿಗಾಗಿ ಕಾಯ್ತಾ ಇದ್ದ. ಅಷ್ಟೇ ಅಲ್ಲ ಅವನು ತನ್ನ ಸಂಬಂಧಿಕರನ್ನೂ ಆಪ್ತ ಸ್ನೇಹಿತರನ್ನೂ ತನ್ನ ಮನೆಯಲ್ಲಿ ಒಟ್ಟುಸೇರಿಸಿದ್ದ. 25 ಪೇತ್ರ ಅಲ್ಲಿಗೆ ಬಂದಾಗ ಕೊರ್ನೇಲ್ಯ ಹೊರಗೆ ಹೋಗಿ ಅವನನ್ನ ಭೇಟಿಮಾಡಿ ಅವನಿಗೆ ಬಗ್ಗಿ ನಮಸ್ಕರಿಸಿದ. 26 ಆದ್ರೆ ಪೇತ್ರ ಅವನನ್ನ ಮೇಲೆತ್ತಿ “ಎದ್ದೇಳು, ನಾನೂ ನಿನ್ನ ತರ ಒಬ್ಬ ಮನುಷ್ಯ ಅಷ್ಟೇ”+ ಅಂದ. 27 ಪೇತ್ರ ಅವನ ಜೊತೆ ಮಾತಾಡ್ತಾ ಮನೆ ಒಳಗೆ ಹೋದ. ಅಲ್ಲಿ ತುಂಬ ಜನ ಇದ್ರು. 28 ಅವನು ಅವ್ರಿಗೆ “ಯೆಹೂದ್ಯರ ನಿಯಮದ ಪ್ರಕಾರ ಒಬ್ಬ ಯೆಹೂದ್ಯ ಬೇರೆ ಜನಾಂಗದ ವ್ಯಕ್ತಿಯ ಜೊತೆ ಸಹವಾಸ ಮಾಡೋದು, ಅವನನ್ನ ಭೇಟಿ ಮಾಡೋದು ತಪ್ಪು ಅಂತ ನಿಮಗೆ ಗೊತ್ತು.+ ಆದ್ರೂ ನಾನು ಯಾವ ಮನುಷ್ಯನನ್ನೂ ಅಪವಿತ್ರ ಅಂತಾಗಲಿ ಕೆಟ್ಟವನು ಅಂತಾಗಲಿ ಹೇಳಬಾರದು ಅಂತ ದೇವರು ನನಗೆ ತೋರಿಸಿದ್ದಾನೆ.+ 29 ಹಾಗಾಗಿ ನೀವು ನನ್ನನ್ನ ಕರ್ಕೊಂಡು ಬರೋಕೆ ಜನ್ರನ್ನ ಕಳಿಸಿದಾಗ ನಾನು ಹಿಂದೆಮುಂದೆ ನೋಡದೆ ಬಂದೆ. ಆದ್ರೆ ನೀವು ನನ್ನನ್ನ ಯಾಕೆ ಕರಿದ್ರಿ ಅಂತ ತಿಳ್ಕೊಬಹುದಾ?” ಅಂದ.

30 ಅದಕ್ಕೆ ಕೊರ್ನೇಲ್ಯ “ನಾಲ್ಕು ದಿನಗಳ ಹಿಂದೆ ಸರಿಯಾಗಿ ಇದೇ ಸಮಯಕ್ಕೆ ಅಂದ್ರೆ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ನಾನು ನನ್ನ ಮನೆಯಲ್ಲಿ ಪ್ರಾರ್ಥನೆ ಮಾಡ್ತಾ ಇದ್ದೆ. ಆಗ ಹೊಳೆಯೋ ಬಟ್ಟೆ ಹಾಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಮುಂದೆ ಬಂದು ನಿಂತ್ಕೊಂಡ. 31 ಅವನು ನನಗೆ ‘ಕೊರ್ನೇಲ್ಯ, ನಿನ್ನ ಪ್ರಾರ್ಥನೆ ದೇವ್ರಿಗೆ ಕೇಳಿಸಿದೆ. ನೀನು ಬಡವ್ರಿಗೆ ಸಹಾಯ ಮಾಡಿದ್ದನ್ನ ಆತನು ನೋಡಿದ್ದಾನೆ. 32 ಹಾಗಾಗಿ ಈಗ ಸ್ವಲ್ಪ ಜನ್ರನ್ನ ಯೊಪ್ಪಕ್ಕೆ ಕಳಿಸಿ ಪೇತ್ರ ಅನ್ನೋ ಹೆಸ್ರಿರೋ ಸೀಮೋನನನ್ನ ಬರೋಕೆ ಹೇಳು. ಅವನು ಚರ್ಮಕಾರ ಸೀಮೋನನ ಮನೆಯಲ್ಲಿ ಇದ್ದಾನೆ. ಅವನ ಮನೆ ಸಮುದ್ರದ ಹತ್ರ ಇದೆ’+ ಅಂದ. 33 ಆಗ ನಾನು ತಕ್ಷಣ ನಿನ್ನನ್ನ ಕರ್ಕೊಂಡು ಬರೋಕೆ ಸೇವಕರನ್ನ ಕಳಿಸಿದೆ. ನೀನು ಇಲ್ಲಿಗೆ ಬಂದಿದಿಕ್ಕೆ ನಮಗೆ ತುಂಬ ಖುಷಿ ಆಯ್ತು. ಈಗ ನೀನು ಹೇಳೋದನ್ನ ಕೇಳಿಸ್ಕೊಳ್ಳೋಕೆ ನಾವು ದೇವ್ರ ಮುಂದೆ ನಿಂತಿದ್ದೀವಿ. ಯೆಹೋವ* ನಿನಗೆ ಹೇಳು ಅಂತ ಅಂದಿದ್ದನ್ನೆಲ್ಲ ದಯವಿಟ್ಟು ನಮಗೆ ಹೇಳು” ಅಂದ.

34 ಆಗ ಪೇತ್ರ ಮಾತಾಡೋಕೆ ಶುರುಮಾಡಿ ಹೀಗೆ ಹೇಳಿದ “ದೇವರು ಭೇದಭಾವ ಮಾಡಲ್ಲ+ ಅಂತ ಈಗ ಚೆನ್ನಾಗಿ ಅರ್ಥ ಆಗಿದೆ. 35 ಯಾವುದೇ ದೇಶ ಆಗಿರಲಿ, ಜನ ದೇವ್ರ ಮೇಲೆ ಭಯಭಕ್ತಿಯಿಂದ ಆತನಿಗೆ ಇಷ್ಟ ಆಗಿರೋದನ್ನ ಮಾಡಿದ್ರೆ ದೇವರು ಅವ್ರನ್ನ ತನ್ನ ಸೇವಕರಾಗಿ ಆರಿಸ್ಕೊಳ್ತಾನೆ.+ 36 ಇಸ್ರಾಯೇಲ್ಯರು ದೇವ್ರ ಜೊತೆ ಮತ್ತೆ ಒಂದು ಒಳ್ಳೇ ಸಂಬಂಧಕ್ಕೆ ಬರೋಕೆ ದೇವರು ಯೇಸು ಕ್ರಿಸ್ತನ ಮೂಲಕ ಸಿಹಿಸುದ್ದಿ+ ಕಳಿಸಿದನು. ಈ ಯೇಸುನೇ ಎಲ್ರ ಪ್ರಭು.+ 37 ದೀಕ್ಷಾಸ್ನಾನದ ಬಗ್ಗೆ ಯೋಹಾನ ಸಾರಿದ ಮೇಲೆ ಗಲಿಲಾಯದಿಂದ+ ಇಡೀ ಯೂದಾಯದ ತನಕ ಯಾವುದರ ಬಗ್ಗೆ ಎಲ್ಲ ಜನ ಮಾತಾಡ್ಕೊಳ್ತಿದ್ರು ಅಂತ ನಿಮಗೆ ಚೆನ್ನಾಗಿ ಗೊತ್ತು. 38 ಅವ್ರೆಲ್ಲ ನಜರೇತಿನ ಯೇಸು ಬಗ್ಗೆ ಮಾತಾಡ್ಕೊಳ್ತಿದ್ರು. ದೇವರು ಆತನನ್ನ ಪವಿತ್ರಶಕ್ತಿಯಿಂದ+ ಆರಿಸ್ಕೊಂಡನು. ಆತನಿಗೆ ಅಧಿಕಾರ ಕೊಟ್ಟನು. ಆತನು ಆ ಇಡೀ ಪ್ರದೇಶ ತಿರುಗಾಡ್ತಾ ಒಳ್ಳೇ ಕೆಲಸಗಳನ್ನ ಮಾಡಿದನು. ಸೈತಾನನಿಂದಾಗಿ ಕಷ್ಟಗಳನ್ನ ಅನುಭವಿಸ್ತಿದ್ದ ಜನ್ರನ್ನ ವಾಸಿಮಾಡಿದನು.+ ದೇವರು ಯಾವಾಗ್ಲೂ ಆತನ ಜೊತೆ ಇದ್ದ ಕಾರಣ ಆತನಿಗೆ ಇದನ್ನೆಲ್ಲ ಮಾಡೋಕಾಯ್ತು.+ 39 ಯೆಹೂದ್ಯರ ದೇಶದಲ್ಲಿ, ಯೆರೂಸಲೇಮಲ್ಲಿ ಆತನು ಮಾಡಿದ ಎಲ್ಲ ಕೆಲಸಗಳಿಗೆ ನಾವೇ ಸಾಕ್ಷಿ. ಆದ್ರೆ ಅವರು ಆತನನ್ನ ಕಂಬಕ್ಕೆ ಜಡಿದು ಕೊಂದುಹಾಕಿದ್ರು. 40 ದೇವರು ಆತನನ್ನ ಮೂರನೇ ದಿನ+ ಮತ್ತೆ ಎಬ್ಬಿಸಿ ಜೀವಕೊಟ್ಟು ಜನ್ರಿಗೆ ಕಾಣಿಸ್ಕೊಳ್ಳೋ ತರ ಮಾಡಿದನು. 41 ಆದ್ರೆ ದೇವರು ಎಲ್ಲ ಜನ್ರಿಗೆ ಆತನು ಕಾಣಿಸ್ಕೊಳ್ಳೋ ತರ ಮಾಡಲಿಲ್ಲ. ದೇವರು ಮುಂಚೆನೇ ಆರಿಸ್ಕೊಂಡಿದ್ದ ನಮಗೆ ಕಾಣಿಸ್ಕೊಳ್ಳೋ ತರ ಮಾಡಿದನು. ಅದಕ್ಕೇ ಆತನು ಮತ್ತೆ ಎದ್ದು ಬಂದ ಮೇಲೆ ನಾವು ಆತನ ಜೊತೆ ತಿಂದು ಕುಡಿದ್ವಿ.+ 42 ಅಷ್ಟೇ ಅಲ್ಲ ಯೇಸು ನಮಗೆ ‘ಬದುಕಿರುವವ್ರಿಗೂ ಸತ್ತವ್ರಿಗೂ ದೇವರು ನನ್ನನ್ನ ನ್ಯಾಯಾಧೀಶನನ್ನಾಗಿ ಆರಿಸ್ಕೊಂಡಿದ್ದಾನೆ ಅಂತ ಎಲ್ಲ ಜನ್ರಿಗೆ ಹೇಳಿ+ ಮತ್ತು ಚೆನ್ನಾಗಿ ವಿವರಿಸಿ’ ಅಂತ ಆಜ್ಞೆ ಕೊಟ್ಟನು.+ 43 ಆತನ ಮೇಲೆ ನಂಬಿಕೆ ಇಟ್ರೆ ದೇವರು ಆತನ ಹೆಸ್ರಿನ ಆಧಾರದ ಮೇಲೆ+ ಅವ್ರ ಪಾಪಗಳನ್ನ ಕ್ಷಮಿಸ್ತಾನೆ ಅಂತ ಎಲ್ಲ ಪ್ರವಾದಿಗಳು ಹೇಳಿದ್ರು.”+

44 ಪೇತ್ರ ಹೀಗೆ ಮಾತಾಡ್ತಿರುವಾಗಲೇ ಕೇಳಿಸ್ಕೊಳ್ತಿದ್ದ ಜನ್ರ ಮೇಲೆ ಪವಿತ್ರಶಕ್ತಿ ಬಂತು.+ 45 ಆಗ ಪೇತ್ರನ ಜೊತೆ ಬಂದಿದ್ದ ಸುನ್ನತಿಯಾಗಿದ್ದ ಯೆಹೂದ್ಯರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಪವಿತ್ರಶಕ್ತಿ ಅನ್ನೋ ದೇವ್ರ ವರ ಯೆಹೂದ್ಯರಲ್ಲದ ಜನ್ರಿಗೂ ಸಿಗ್ತಾ ಇತ್ತು. 46 ಅವರು ಬೇರೆಬೇರೆ ಭಾಷೆಯಲ್ಲಿ ಮಾತಾಡ್ತಾ ಇದ್ರು.+ ಆಗ ಪೇತ್ರ ಹೀಗೆ ಹೇಳಿದ 47 “ನಮ್ಮ ಹಾಗೆ ಇವ್ರಿಗೂ ಪವಿತ್ರಶಕ್ತಿ ಸಿಕ್ಕಿದೆ. ಹಾಗಾದ್ರೆ ಇವರು ನೀರಿನ ದೀಕ್ಷಾಸ್ನಾನ+ ತಗೊಳ್ಳೋದು ತಪ್ಪು ಅಂತ ಯಾರಾದ್ರೂ ಹೇಳ್ತಾರಾ?” 48 ಹೀಗೆ ಹೇಳಿ ಪೇತ್ರ ಅವ್ರಿಗೆ ಯೇಸು ಕ್ರಿಸ್ತನ ಹೆಸ್ರಲ್ಲಿ+ ದೀಕ್ಷಾಸ್ನಾನ ತಗೊಳ್ಳೋಕೆ ಆಜ್ಞೆ ಕೊಟ್ಟ. ಆಮೇಲೆ ಅವರು ಪೇತ್ರನಿಗೆ ಇನ್ನೂ ಸ್ವಲ್ಪ ದಿನ ತಮ್ಮ ಜೊತೆ ಇರೋಕೆ ಕೇಳ್ಕೊಂಡ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ