ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅ. ಕಾರ್ಯ 3
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅಪೊಸ್ತಲರ ಕಾರ್ಯ ಮುಖ್ಯಾಂಶಗಳು

      • ಕುಂಟ ಭಿಕ್ಷುಕನನ್ನ ವಾಸಿಮಾಡಿದ ಪೇತ್ರ (1-10)

      • ಸೊಲೊಮೋನನ ಮಂಟಪದಲ್ಲಿ ಪೇತ್ರನ ಭಾಷಣ (11-26)

        • “ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ” (21)

        • ಮೋಶೆ ತರ ಒಬ್ಬ ಪ್ರವಾದಿ (22)

ಅ. ಕಾರ್ಯ 3:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 28

    ಕಾವಲಿನಬುರುಜು,

    12/1/1990, ಪು. 27

ಅ. ಕಾರ್ಯ 3:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 28

ಅ. ಕಾರ್ಯ 3:6

ಮಾರ್ಜಿನಲ್ ರೆಫರೆನ್ಸ್

  • +ಅಕಾ 3:16; 4:10

ಅ. ಕಾರ್ಯ 3:7

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 8:14, 15; 9:24, 25
  • +ಯೋಹಾ 5:8, 9; ಅಕಾ 9:34; 14:8-10

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 28

ಅ. ಕಾರ್ಯ 3:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 35:6

ಅ. ಕಾರ್ಯ 3:10

ಮಾರ್ಜಿನಲ್ ರೆಫರೆನ್ಸ್

  • +ಅಕಾ 3:2

ಅ. ಕಾರ್ಯ 3:11

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 10:23; ಅಕಾ 5:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1990, ಪು. 27

ಅ. ಕಾರ್ಯ 3:13

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:6
  • +ಫಿಲಿ 2:9-11
  • +ಯೆಶಾ 52:13; 53:11
  • +ಅಕಾ 5:30

ಅ. ಕಾರ್ಯ 3:14

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 27:20, 21; ಲೂಕ 23:14, 18

ಅ. ಕಾರ್ಯ 3:15

ಮಾರ್ಜಿನಲ್ ರೆಫರೆನ್ಸ್

  • +ಅಕಾ 5:31; ಇಬ್ರಿ 2:10
  • +ಲೂಕ 24:46-48; ಅಕಾ 1:8; 2:32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2667

ಅ. ಕಾರ್ಯ 3:17

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 16:2, 3; 1ತಿಮೊ 1:13
  • +1ಕೊರಿಂ 2:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕೂಲಂಕಷ ಸಾಕ್ಷಿ, ಪು. 29

    ಕಾವಲಿನಬುರುಜು,

    6/15/2009, ಪು. 32

ಅ. ಕಾರ್ಯ 3:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 118:22; ಯೆಶಾ 50:6; 53:8; ದಾನಿ 9:26; ಲೂಕ 22:15

ಅ. ಕಾರ್ಯ 3:19

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅಕಾ 2:38
  • +ಯೆಹೆ 33:11; ಎಫೆ 4:22
  • +ಯೆಹೆ 33:14, 16; 1ಯೋಹಾ 1:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 265

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 47

    ಕಾವಲಿನಬುರುಜು,

    2/15/2014, ಪು. 28

    6/15/2013, ಪು. 19-20

    9/1/2000, ಪು. 17-18

    12/1/1997, ಪು. 12

    12/1/1990, ಪು. 27

    ಎಚ್ಚರ!,

    6/8/1995, ಪು. 14

    3/8/1994, ಪು. 15

ಅ. ಕಾರ್ಯ 3:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2000, ಪು. 17

    12/1/1990, ಪು. 27

ಅ. ಕಾರ್ಯ 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2024, ಪು. 4

    ಕೂಲಂಕಷ ಸಾಕ್ಷಿ, ಪು. 31

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 77-78

    ಶುದ್ಧ ಆರಾಧನೆ, ಪು. 104-105, 108

    ಕಾವಲಿನಬುರುಜು,

    12/15/2000, ಪು. 30

    9/1/2000, ಪು. 17-18

    12/1/1990, ಪು. 27

ಅ. ಕಾರ್ಯ 3:22

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 34:10; ಅಕಾ 7:37
  • +ಧರ್ಮೋ 18:15, 18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/1992, ಪು. 28-31

ಅ. ಕಾರ್ಯ 3:23

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 18:19

ಅ. ಕಾರ್ಯ 3:24

ಮಾರ್ಜಿನಲ್ ರೆಫರೆನ್ಸ್

  • +ಲೂಕ 24:27; ಅಕಾ 10:43

ಅ. ಕಾರ್ಯ 3:25

ಮಾರ್ಜಿನಲ್ ರೆಫರೆನ್ಸ್

  • +ರೋಮ 9:4
  • +ಆದಿ 22:18; ಗಲಾ 3:8

ಅ. ಕಾರ್ಯ 3:26

ಮಾರ್ಜಿನಲ್ ರೆಫರೆನ್ಸ್

  • +ಅಕಾ 13:45, 46; ರೋಮ 1:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/1990, ಪು. 27

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅ. ಕಾ. 3:6ಅಕಾ 3:16; 4:10
ಅ. ಕಾ. 3:7ಮತ್ತಾ 8:14, 15; 9:24, 25
ಅ. ಕಾ. 3:7ಯೋಹಾ 5:8, 9; ಅಕಾ 9:34; 14:8-10
ಅ. ಕಾ. 3:8ಯೆಶಾ 35:6
ಅ. ಕಾ. 3:10ಅಕಾ 3:2
ಅ. ಕಾ. 3:11ಯೋಹಾ 10:23; ಅಕಾ 5:12
ಅ. ಕಾ. 3:13ವಿಮೋ 3:6
ಅ. ಕಾ. 3:13ಫಿಲಿ 2:9-11
ಅ. ಕಾ. 3:13ಯೆಶಾ 52:13; 53:11
ಅ. ಕಾ. 3:13ಅಕಾ 5:30
ಅ. ಕಾ. 3:14ಮತ್ತಾ 27:20, 21; ಲೂಕ 23:14, 18
ಅ. ಕಾ. 3:15ಅಕಾ 5:31; ಇಬ್ರಿ 2:10
ಅ. ಕಾ. 3:15ಲೂಕ 24:46-48; ಅಕಾ 1:8; 2:32
ಅ. ಕಾ. 3:17ಯೋಹಾ 16:2, 3; 1ತಿಮೊ 1:13
ಅ. ಕಾ. 3:171ಕೊರಿಂ 2:8
ಅ. ಕಾ. 3:18ಕೀರ್ತ 118:22; ಯೆಶಾ 50:6; 53:8; ದಾನಿ 9:26; ಲೂಕ 22:15
ಅ. ಕಾ. 3:19ಅಕಾ 2:38
ಅ. ಕಾ. 3:19ಯೆಹೆ 33:11; ಎಫೆ 4:22
ಅ. ಕಾ. 3:19ಯೆಹೆ 33:14, 16; 1ಯೋಹಾ 1:7
ಅ. ಕಾ. 3:22ಧರ್ಮೋ 34:10; ಅಕಾ 7:37
ಅ. ಕಾ. 3:22ಧರ್ಮೋ 18:15, 18
ಅ. ಕಾ. 3:23ಧರ್ಮೋ 18:19
ಅ. ಕಾ. 3:24ಲೂಕ 24:27; ಅಕಾ 10:43
ಅ. ಕಾ. 3:25ರೋಮ 9:4
ಅ. ಕಾ. 3:25ಆದಿ 22:18; ಗಲಾ 3:8
ಅ. ಕಾ. 3:26ಅಕಾ 13:45, 46; ರೋಮ 1:16
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅ. ಕಾರ್ಯ 3:1-26

ಅಪೊಸ್ತಲರ ಕಾರ್ಯ

3 ಒಂದಿನ ಪ್ರಾರ್ಥನೆ ಸಮಯ ಆದಾಗ ಅಂದ್ರೆ ಮಧ್ಯಾಹ್ನ ಮೂರು ಗಂಟೆಗೆ ಪೇತ್ರ, ಯೋಹಾನ ದೇವಾಲಯಕ್ಕೆ ಹೋಗ್ತಾ ಇದ್ರು. 2 ಆಗ ಸ್ವಲ್ಪ ಜನ ಹುಟ್ಟಿನಿಂದನೇ ಕುಂಟನಾಗಿದ್ದ ಒಬ್ಬ ವ್ಯಕ್ತಿನ ಹೊತ್ಕೊಂಡು ಹೋಗ್ತಿದ್ರು. ಆ ಜನ ಪ್ರತಿದಿನ ಅವನನ್ನ ಹೊತ್ಕೊಂಡು ಹೋಗಿ ದೇವಾಲಯದ ‘ಸುಂದರ’ ಅನ್ನೋ ಬಾಗಿಲ ಹತ್ರ ಕೂರಿಸ್ತಿದ್ರು. ಅವನು ದೇವಾಲಯಕ್ಕೆ ಬರುವವರ ಹತ್ರ ಭಿಕ್ಷೆ ಬೇಡ್ತಿದ್ದ. 3 ಪೇತ್ರ ಮತ್ತು ಯೋಹಾನ ದೇವಾಲಯದ ಒಳಗೆ ಹೋಗ್ತಿದ್ದಾಗ ಅವನು ಅವರ ಹತ್ರ ಭಿಕ್ಷೆ ಕೇಳಿದ. 4 ಆಗ ಪೇತ್ರ, ಯೋಹಾನ ಅವನನ್ನ ನೋಡಿದ್ರು. ಆಮೇಲೆ ಪೇತ್ರ ಅವನಿಗೆ “ನಮ್ಮನ್ನ ನೋಡು” ಅಂದ. 5 ಅವನು ಅವ್ರಿಂದ ಏನಾದ್ರೂ ಸಿಗ್ಬಹುದು ಅಂತ ಅವ್ರನ್ನೇ ನೋಡ್ತಿದ್ದ. 6 ಆಗ ಪೇತ್ರ “ನನ್ನ ಹತ್ರ ಬೆಳ್ಳಿಬಂಗಾರ ಇಲ್ಲ, ಆದ್ರೆ ನನ್ನ ಹತ್ರ ಏನಿದೆಯೊ ಅದನ್ನೇ ನಾನು ನಿನಗೆ ಕೊಡ್ತೀನಿ. ನಜರೇತಿನ ಯೇಸು ಕ್ರಿಸ್ತನ ಹೆಸ್ರಲ್ಲಿ ಹೇಳ್ತೀನಿ, ಎದ್ದು ನಡಿ!” ಅಂತ ಹೇಳಿ,+ 7 ಅವನ ಬಲಗೈ ಹಿಡಿದು ಎತ್ತಿದ.+ ತಕ್ಷಣ ಅವನ ಕಾಲಿಗೆ ಶಕ್ತಿ ಬಂತು.+ 8 ಅವನು ಜಿಗಿದು ಎದ್ದುನಿಂತ.+ ಅವನು ನಡಿತಾ ಜಿಗಿತಾ ದೇವರನ್ನ ಹಾಡಿಹೊಗಳ್ತಾ ಅವರ ಜೊತೆ ದೇವಾಲಯದ ಒಳಗೆ ಹೋದ. 9 ಅವನು ನಡೆಯೋದನ್ನ, ದೇವ್ರಿಗೆ ಹಾಡಿಹೊಗಳೋದನ್ನ ಅಲ್ಲಿದ್ದ ಜನ್ರು ನೋಡಿದ್ರು. 10 ದೇವಾಲಯದ ‘ಸುಂದರ’ ಅನ್ನೋ ಬಾಗಿಲ+ ಹತ್ರ ಕೂತ್ಕೊಳ್ತಿದ್ದ ಭಿಕ್ಷುಕ ಇವನೇ ಅಂತ ಅವರು ಗುರುತುಹಿಡಿದ್ರು. ಅವನು ನಡೆಯೋದನ್ನ ನೋಡಿ ಅವ್ರಿಗೆಲ್ಲ ತುಂಬ ಆಶ್ಚರ್ಯ, ಆನಂದ ಆಯ್ತು.

11 ಆ ವ್ಯಕ್ತಿ ಪೇತ್ರ ಮತ್ತು ಯೋಹಾನನ ಕೈ ಹಿಡ್ಕೊಂಡು ಇದ್ದಾಗಲೇ ಜನ್ರೆಲ್ಲ ಅವ್ರ ಹತ್ರ ಓಡಿ ಬಂದು ಕಣ್ಣುಬಾಯಿ ಬಿಟ್ಟು ನೋಡ್ತಾ ಇದ್ರು. ಅವರು ಆಗ ಸೊಲೊಮೋನನ ಮಂಟಪದಲ್ಲಿ+ ನಿಂತಿದ್ರು. 12 ಜನ್ರನ್ನ ನೋಡಿ ಪೇತ್ರ ಅವ್ರಿಗೆ ಹೀಗಂದ “ಇಸ್ರಾಯೇಲ್‌ ಜನ್ರೇ, ಇದನ್ನ ನೋಡಿ ನೀವು ಯಾಕೆ ಆಶ್ಚರ್ಯಪಡ್ತಾ ಇದ್ದೀರಾ? ನಾವೇನೋ ನಮ್ಮ ಸ್ವಂತ ಶಕ್ತಿಯಿಂದಾನೋ ದೇವಭಕ್ತಿಯಿಂದಾನೋ ಇವನನ್ನ ನಡಿಯೋ ಹಾಗೆ ಮಾಡಿದ್ವಿ ಅನ್ನೋ ತರ ನೀವು ಯಾಕೆ ನಮ್ಮನ್ನೇ ನೋಡ್ತಾ ಇದ್ದೀರಾ? 13 ನಮ್ಮ ಪೂರ್ವಜರ ದೇವರು ಅಂದ್ರೆ ಅಬ್ರಹಾಮ, ಇಸಾಕ, ಯಾಕೋಬನ ದೇವರು+ ತನ್ನ ಸೇವಕನಾದ ಯೇಸುವನ್ನ+ ಉನ್ನತ ಸ್ಥಾನಕ್ಕೆ ಏರಿಸಿದ್ದಾನೆ.+ ಆ ಯೇಸುವನ್ನ ನೀವು ಹಿಡಿದು ಕೊಟ್ರಿ.+ ಪಿಲಾತ ಆತನನ್ನ ಬಿಟ್ಟುಬಿಡಬೇಕು ಅಂತ ಅಂದ್ಕೊಂಡ್ರೂ ನೀವು ಒಪ್ಪಲಿಲ್ಲ. 14 ಪವಿತ್ರನು, ನೀತಿವಂತನು ಆಗಿರೋ ಆ ವ್ಯಕ್ತಿಯನ್ನ ನೀವು ಬೇಡ ಅಂದ್ರಿ. ಆತನ ಬದಲಿಗೆ, ಒಬ್ಬ ಕೊಲೆಗಾರನನ್ನ ನಿಮಗೋಸ್ಕರ ಬಿಟ್ಟುಬಿಡೋಕೆ ಕೇಳ್ಕೊಂಡ್ರಿ.+ 15 ಜನ್ರಿಗೆ ಜೀವ ಕೊಡೋ ಮುಖ್ಯ ಪ್ರತಿನಿಧಿಯನ್ನೇ+ ನೀವು ಕೊಂದುಹಾಕಿದ್ರಿ. ಆದ್ರೆ ದೇವರು ಆತನನ್ನ ಎಬ್ಬಿಸಿ ಮತ್ತೆ ಜೀವ ಕೊಟ್ಟನು. ಅದು ನಿಜ ಅನ್ನೋದಕ್ಕೆ ನಾವೇ ಸಾಕ್ಷಿ.+ 16 ನಮಗೆ ಯೇಸುವಿನ ಹೆಸ್ರಲ್ಲಿ ನಂಬಿಕೆ ಇದೆ. ನೀವು ನೋಡ್ತಿರೋ ಈ ವ್ಯಕ್ತಿ ಆತನ ಹೆಸ್ರಿನ ಮೂಲಕನೇ ಚೆನ್ನಾಗಿ ಆಗಿದ್ದಾನೆ. ಈ ವ್ಯಕ್ತಿ ಮುಂಚೆ ಹೇಗಿದ್ದ ಅಂತ ನಿಮಗೇ ಗೊತ್ತು. ಯೇಸು ಮೇಲೆ ನಾವಿಟ್ಟಿರೋ ನಂಬಿಕೆಯಿಂದಾನೇ ಈ ವ್ಯಕ್ತಿನ ನಿಮ್ಮೆಲ್ಲರ ಮುಂದೆ ಪೂರ್ತಿ ವಾಸಿಮಾಡೋಕೆ ಆಗಿದೆ. 17 ಆದ್ರೆ ಸಹೋದರರೇ, ನಂಗೊತ್ತು, ನೀವು ಏನೆಲ್ಲ ಮಾಡಿದ್ರೋ ಅದೆಲ್ಲ ಗೊತ್ತಿಲ್ಲದೆ ಮಾಡಿದ್ರಿ.+ ನಿಮ್ಮ ನಾಯಕರು ಸಹ ಹಾಗೇ ಮಾಡಿದ್ರು.+ 18 ದೇವರು ತುಂಬ ಮುಂಚೆನೇ ಕ್ರಿಸ್ತನು ಕಷ್ಟಪಡ್ತಾನೆ ಅಂತ ತನ್ನ ಪ್ರವಾದಿಗಳ ಬಾಯಿಂದ ಹೇಳಿಸಿದ್ದನು. ಆ ಮಾತುಗಳೆಲ್ಲ ನಿಜ ಆಗೋ ತರ ದೇವರೇ ಬಿಟ್ಟುಕೊಟ್ಟನು.+

19 “ಹಾಗಾಗಿ ಪಶ್ಚಾತ್ತಾಪಪಟ್ಟು+ ಸರಿಯಾದ ದಾರಿಗೆ ಬನ್ನಿ.+ ಆಗ ಯೆಹೋವ* ದೇವರು ನಿಮ್ಮ ಪಾಪಗಳನ್ನ ಅಳಿಸಿಹಾಕಿ,+ ನೆಮ್ಮದಿ ಕೊಡ್ತಾನೆ. 20 ನಿಮಗೋಸ್ಕರ ಅಂತಾನೇ ಕ್ರಿಸ್ತನನ್ನಾಗಿ ಮಾಡಿರೋ ಯೇಸುವನ್ನ ನಿಮ್ಮ ಹತ್ರ ಕಳಿಸ್ತಾನೆ. 21 ಆದ್ರೆ ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ ಅಂತ ದೇವರು ತನ್ನ ಪವಿತ್ರ ಪ್ರವಾದಿಗಳ ಬಾಯಿಂದ ತುಂಬ ಮುಂಚೆನೇ ಹೇಳಿಸಿದ್ದನು. ಅಲ್ಲಿ ತನಕ ಯೇಸು ಸ್ವರ್ಗದಲ್ಲೇ ಇರಬೇಕು. 22 ಅದನ್ನೇ ಮೋಶೆ ಹೀಗೆ ಹೇಳಿದ್ದ ‘ನಿಮ್ಮ ದೇವರಾದ ಯೆಹೋವ* ನಿಮ್ಮ ಸಹೋದರರಿಂದಾನೇ ಒಬ್ಬನನ್ನ ಆರಿಸ್ಕೊಳ್ತಾನೆ. ಅವನನ್ನ ನನ್ನ ತರಾನೇ ಒಬ್ಬ ಪ್ರವಾದಿಯಾಗಿ ಮಾಡ್ತಾನೆ.+ ಅವನು ನಿಮಗೆ ಹೇಳೋ ಒಂದೊಂದು ಮಾತನ್ನೂ ನೀವು ಕೇಳಬೇಕು.+ 23 ಯಾರಾದ್ರೂ ಆ ಪ್ರವಾದಿಯ ಮಾತನ್ನ ಕೇಳದಿದ್ರೆ ದೇವರು ಅವ್ರನ್ನ ನಾಶಮಾಡ್ತಾನೆ.’+ 24 ಮೋಶೆ ಅಷ್ಟೇ ಅಲ್ಲ ಸಮುವೇಲನಿಂದ ಹಿಡಿದು ಅವನ ನಂತ್ರ ಬಂದ ಪ್ರವಾದಿಗಳೆಲ್ಲ ಈ ವಿಷ್ಯದ ಬಗ್ಗೆ ಸ್ಪಷ್ಟವಾಗಿ ಭವಿಷ್ಯವಾಣಿ ಹೇಳಿದ್ದಾರೆ.+ 25 ನೀವು ಆ ಪ್ರವಾದಿಗಳ ಮಕ್ಕಳು. ದೇವರು ನಿಮ್ಮ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದಿಂದ+ ನೀವೇ ಪ್ರಯೋಜನ ಪಡ್ಕೊಳ್ತೀರ. ದೇವರು ಅಬ್ರಹಾಮನ ಹತ್ರ ‘ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲ ಜನಾಂಗಗಳಿಗೆ ಆಶೀರ್ವಾದ ಸಿಗುತ್ತೆ’ ಅಂತ ಒಪ್ಪಂದ ಮಾಡ್ಕೊಂಡಿದ್ದನು.+ 26 ದೇವರು ತನ್ನ ಸೇವಕನನ್ನ ಎಬ್ಬಿಸಿ ಆತನಿಗೆ ಜೀವ ಕೊಟ್ಟ ಮೇಲೆ ನಿಮ್ಮಲ್ಲಿ ಪ್ರತಿಯೊಬ್ರು ಕೆಟ್ಟ ಕೆಲಸಗಳನ್ನ ಬಿಟ್ಟುಬರಬೇಕು ಅಂತ ಆತನನ್ನ ಮೊದಲು+ ನಿಮ್ಮ ಹತ್ರ ಕಳಿಸಿದನು. ಇದೇ ದೇವರ ಒಂದು ಆಶೀರ್ವಾದ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ