ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/03 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2003 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 14ರಿಂದ ಆರಂಭವಾಗುವ ವಾರ
  • ಜುಲೈ 21ರಿಂದ ಆರಂಭವಾಗುವ ವಾರ
  • ಜುಲೈ 28ರಿಂದ ಆರಂಭವಾಗುವ ವಾರ
  • ಆಗಸ್ಟ್‌ 4ರಿಂದ ಆರಂಭವಾಗುವ ವಾರ
2003 ನಮ್ಮ ರಾಜ್ಯದ ಸೇವೆ
km 7/03 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೂಚನೆ: ನಮ್ಮ ರಾಜ್ಯದ ಸೇವೆಯು, ಅಧಿವೇಶನದ ತಿಂಗಳುಗಳಲ್ಲಿ ಪ್ರತಿಯೊಂದು ವಾರಕ್ಕಾಗಿ ಒಂದು ಸೇವಾ ಕೂಟವನ್ನು ಶೆಡ್ಯೂಲ್‌ ಮಾಡುವುದು. “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಅನುಮತಿಸುವಂತೆ ಅಗತ್ಯವಿರುವ ಹೊಂದಾಣಿಕೆಗಳನ್ನು ಸಭೆಗಳು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನಕ್ಕೆ ಹಾಜರಾಗುವ ಮುಂಚಿನ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ಸ್ಥಳಿಕವಾಗಿ ಅನ್ವಯಿಸುವ ಸೂಚಿತ ಸಲಹೆಯನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಜನವರಿ ತಿಂಗಳಿನಲ್ಲಿ, ಅಧಿವೇಶನ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸಲಿಕ್ಕಾಗಿ ಒಂದು ಇಡೀ ಸೇವಾ ಕೂಟವನ್ನು ಏರ್ಪಡಿಸಲಾಗುವುದು. ಆ ಚರ್ಚೆಗೆ ತಯಾರಿಯೋಪಾದಿ, ಅಧಿವೇಶನದಲ್ಲಿ ನಾವೆಲ್ಲರೂ ಅರ್ಥಭರಿತ ಟಿಪ್ಪಣಿಗಳನ್ನು ಬರೆದುಕೊಳ್ಳಸಾಧ್ಯವಿದೆ. ಇದರೊಂದಿಗೆ ನಮ್ಮ ಸ್ವಂತ ಜೀವಿತದಲ್ಲಿ ಹಾಗೂ ಕ್ಷೇತ್ರ ಸೇವೆಯಲ್ಲಿ ನಾವು ವೈಯಕ್ತಿಕವಾಗಿ ಅನ್ವಯಿಸಿಕೊಳ್ಳಲು ಬಯಸುವ ನಿರ್ದಿಷ್ಟ ಅಂಶಗಳನ್ನೂ ಪಟ್ಟಿಮಾಡಿಕೊಳ್ಳಬಹುದು. ಬಳಿಕ ಅಧಿವೇಶನಕ್ಕೆ ಹಾಜರಾದಂದಿನಿಂದ ನಾವು ಆ ಸಲಹೆಗಳನ್ನು ಹೇಗೆ ಅನ್ವಯಿಸಿಕೊಂಡಿದ್ದೇವೆ ಎಂಬುದನ್ನೂ ನಾವು ಇತರರಿಗೆ ವಿವರಿಸುವುದರ ಮೂಲಕ ಅವರನ್ನು ಉತ್ತೇಜಿಸಸಾಧ್ಯವಿದೆ.

ಜುಲೈ 14ರಿಂದ ಆರಂಭವಾಗುವ ವಾರ

ಗೀತೆ 4 (43)

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೇ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣಾ ಕಾಲಮ್‌ನಲ್ಲಿ ಮೊದಲನೆಯದ್ದು), ಮತ್ತು ಜುಲೈ 15ರ ಕಾವಲಿನಬುರುಜುವನ್ನು ಸಭೆಯ ಟೆರಿಟೊರಿಯಲ್ಲಿ ಹೇಗೆ ನೀಡಸಾಧ್ಯವಿದೆ ಎಂಬುದರ ಕುರಿತು ಎರಡು ನೈಜವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಒಂದೇ ಒಂದು ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ ಎರಡೂ ಪತ್ರಿಕೆಗಳನ್ನು ಒಟ್ಟಾಗಿ ನೀಡಬೇಕು.

15 ನಿ:  “ಯೆಹೋವನನ್ನು ಸ್ತುತಿಸಲಿಕ್ಕಾಗಿ ಕೂಡಿಬರುವುದು.”a ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಎಲ್ಲರೂ ಮೊದಲನೆಯ ದಿನದ ಬೆಳಿಗ್ಗೆಯಿಂದ ಹಿಡಿದು ಮೂರನೆಯ ದಿನದ ಮಧ್ಯಾಹ್ನದ ವರೆಗಿರುವ ಪ್ರತಿಯೊಂದು ಸೆಷನ್‌ಗೂ ಹಾಜರಾಗಿರುವಂತೆ ಪ್ರೋತ್ಸಾಹಿಸಿರಿ. ಕಲಿಸಲ್ಪಡುವುದನ್ನು ಕೇಳಿಸಿಕೊಳ್ಳುವುದು ಮಾತ್ರವಲ್ಲ ಅದನ್ನು ಅನ್ವಯಿಸುವುದು ಪ್ರಾಮುಖ್ಯವೆಂಬುದನ್ನು ಒತ್ತಿಹೇಳಿರಿ. ಜನವರಿಯಲ್ಲಿ ಒಂದು ಸೇವಾ ಕೂಟಕ್ಕಾಗಿ ಏನು ಯೋಜಿಸಲ್ಪಟ್ಟಿದೆ ಎಂಬುದರ ಕುರಿತು ತಿಳಿಸುವ ಮೇಲಿನ ಸೂಚನೆಯನ್ನು ಪರಿಗಣಿಸಿರಿ. ಆಗ ಜಿಲ್ಲಾ ಅಧಿವೇಶನ ಮುಖ್ಯಾಂಶಗಳ ಒಂದು ಪುನರ್ವಿಮರ್ಶೆಯಿರುವುದು. ಟಿಪ್ಪಣಿಗಳನ್ನು ತೆಗೆದುಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.

20 ನಿ:  “ದೇವರು ತೋರಿಸಿದ ಕರುಣೆಗಾಗಿ ಕೃತಜ್ಞತೆ.”b 3ನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಒಂದು ಪತ್ರಿಕಾ ಮಾರ್ಗವನ್ನು ಆರಂಭಿಸುವುದರ ಕುರಿತು ಸಲಹೆಗಳನ್ನು ಕೊಡಿರಿ. ನಿಮ್ಮ ಹೇಳಿಕೆಗಳು ಅಕ್ಟೋಬರ್‌ 1998ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟದ ಮೇಲೆ ಆಧರಿಸಿರಬೇಕು. ಬೈಬಲ್‌ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ತಾವು ಯಾವ ಪ್ರಸ್ತಾಪವನ್ನು ಪರಿಣಾಮಕಾರಿಯಾಗಿ ಕಂಡುಕೊಂಡಿದ್ದಾರೆ ಎಂದು ಒಬ್ಬರು ಅಥವಾ ಇಬ್ಬರು ಸಮರ್ಥ ಪ್ರಚಾರಕರನ್ನು ಕೇಳಿರಿ. ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಿ ನಡೆಸುವುದನ್ನು ತಮ್ಮ ಗುರಿಯನ್ನಾಗಿ ಮಾಡಿಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.​—⁠om-KA ಪು. 91.

ಗೀತೆ 8 (53) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 21ರಿಂದ ಆರಂಭವಾಗುವ ವಾರ

ಗೀತೆ 28 (224)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ.

15 ನಿ:  “ಸತ್ಕಾರ್ಯಮಾಡುವುದರಲ್ಲಿ ಮಾದರಿಗಳಾಗಿರಿ.”c ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ನಮ್ಮ ಪ್ರಯೋಜನಕ್ಕಾಗಿ ಸ್ಥಾಪಿಸಲ್ಪಟ್ಟಿರುವ ರೂಮಿಂಗ್‌ ಏರ್ಪಾಡುಗಳ ಪ್ರಕಾರ ನಡೆಯುವ ಆವಶ್ಯಕತೆಯನ್ನು ಒತ್ತಿ ಹೇಳಿರಿ. ಇಡೀ ಅಧಿವೇಶನದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಏಕೆ ಪ್ರಾಮುಖ್ಯ ಎಂಬುದನ್ನು ಗಣ್ಯಮಾಡುವಂತೆ ಎಲ್ಲರಿಗೂ ಸಹಾಯಮಾಡಿರಿ. ಎಲ್ಲರ ಒಳ್ಳೆಯ ನಡತೆಯೂ ಏಕೆ ಪ್ರಾಮುಖ್ಯವಾಗಿದೆ ಎಂಬುದನ್ನು ವಿವರಿಸಿರಿ.

20 ನಿ:  ಸಾರುವಿಕೆಯಲ್ಲಿ ಅವರ ಧೈರ್ಯವನ್ನು ಅನುಕರಿಸಿರಿ. ದೇವರನ್ನು ಆರಾಧಿಸಿರಿ ಪುಸ್ತಕದ 170-1 ಪುಟಗಳ ಮೇಲಾಧರಿತವಾದ ಸಭಿಕರೊಂದಿಗಿನ ಚರ್ಚೆ. 7ನೇ ಪ್ಯಾರಗ್ರಾಫ್‌ನಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳನ್ನು ಉತ್ತರಿಸುವಂತೆ ಮತ್ತು ತಮ್ಮ ಹೇಳಿಕೆಗಳಲ್ಲಿ ಉದ್ಧರಿತ ಶಾಸ್ತ್ರವಚನಗಳನ್ನು ಒಳಗೂಡಿಸುವಂತೆ ಸಭಿಕರನ್ನು ಕೇಳಿಕೊಳ್ಳಿ. ಅವುಗಳಲ್ಲಿರುವ ಕೆಲವು ವಚನಗಳನ್ನು ಓದಲು ಆಯ್ಕೆಮಾಡಿರಿ. ಈ ವೃತ್ತಾಂತಗಳಿಂದ ನಾವು ಕಲಿತುಕೊಳ್ಳುವ ಪಾಠಗಳನ್ನು ಮತ್ತು ನಮ್ಮ ಸಾರುವ ನೇಮಕದ ಕುರಿತು ಸರಿಯಾದ ದೃಷ್ಟಿಕೋನವನ್ನು ಹೊಂದಿರುವಂತೆ ಅದು ನಮಗೆ ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಒತ್ತಿಹೇಳಿರಿ.

ಗೀತೆ 12 (113) ಮತ್ತು ಸಮಾಪ್ತಿಯ ಪ್ರಾರ್ಥನೆ.

ಜುಲೈ 28ರಿಂದ ಆರಂಭವಾಗುವ ವಾರ

ಗೀತೆ 6 (45)

10 ನಿ:  ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳಿಗಾಗಿರುವ ತಮ್ಮ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. 8ನೇ ಪುಟದಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಜುಲೈ-ಸೆಪ್ಟೆಂಬರ್‌ ಎಚ್ಚರ! (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಆಗಸ್ಟ್‌ 1ರ ಕಾವಲಿನಬುರುಜುವನ್ನು ಹೇಗೆ ನೀಡುವುದು ಎಂಬುದರ ಎರಡು ಪ್ರತ್ಯೇಕವಾದ ಪ್ರತ್ಯಕ್ಷಾಭಿನಯಗಳಿರಲಿ. ಪ್ರತಿಯೊಂದು ಪ್ರತ್ಯಕ್ಷಾಭಿನಯದಲ್ಲೂ, ಒಂದೇ ಒಂದು ಪತ್ರಿಕೆಯ ಕುರಿತು ಮಾತಾಡಲ್ಪಡುವುದಾದರೂ, ಎರಡೂ ಪತ್ರಿಕೆಗಳನ್ನು ಒಟ್ಟಾಗಿ ನೀಡಬೇಕು. ಅದರಲ್ಲಿ ಒಂದು ನಿರೂಪಣೆಯಲ್ಲಿ, ಪ್ರಚಾರಕನು ಅನೌಪಚಾರಿಕವಾಗಿ ಸಾಕ್ಷಿಕೊಡುತ್ತಿರುವಂತೆ ತೋರಿಸಿರಿ.

15 ನಿ:  “ಮರ್ಯಾದೆಗೆ ತಕ್ಕ ಉಡುಪು ದೇವರಿಗೆ ಪೂಜ್ಯತೆಯನ್ನು ತೋರಿಸುತ್ತದೆ.”d ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡಬೇಕು. ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. ಒಳ್ಳೆಯ ಓದುಗನಾಗಿರುವ ಒಬ್ಬ ಸಹೋದರನಿಂದ ಪ್ರತಿಯೊಂದು ಪ್ಯಾರಗ್ರಾಫನ್ನು ಓದಿಸಿ.

20 ನಿ:  “ಗುಂಪು ಸಾಕ್ಷಿಕಾರ್ಯವು ಆನಂದವನ್ನು ತರುತ್ತದೆ.”e 3ನೇ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಸೆಪ್ಟೆಂಬರ್‌ 2001ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಶ್ನಾ ಚೌಕದ ಮೇಲೆ ಹೇಳಿಕೆಗಳನ್ನು ನೀಡಿರಿ. ಒಬ್ಬ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕನ ಚಿಕ್ಕ ಇಂಟರ್‌ವ್ಯೂ ಮಾಡಿರಿ. ತನ್ನ ಪುಸ್ತಕ ಅಧ್ಯಯನ ಗುಂಪಿಗಾಗಿ ಅವನು ಯಾವ ಏರ್ಪಾಡುಗಳನ್ನು ಮಾಡಿದ್ದಾನೆ ಮತ್ತು ಒಟ್ಟಿಗೆ ಸಾಕ್ಷಿಕೊಡುವುದರಿಂದ ತನ್ನ ಗುಂಪು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತದೆ ಎಂದು ಕೇಳಿರಿ.

ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.

ಆಗಸ್ಟ್‌ 4ರಿಂದ ಆರಂಭವಾಗುವ ವಾರ

ಗೀತೆ 20 (93)

10 ನಿ:  ಸ್ಥಳಿಕ ಪ್ರಕಟನೆಗಳು. ಈ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿರಿ. ಉಪಯೋಗಿಸಲ್ಪಡಬಹುದಾದ ಒಂದು ಅಥವಾ ಎರಡು ಚುಟುಕಾದ ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ:  “ಬಹುಭಾಷೀಯ ಟೆರಿಟೊರಿಯಲ್ಲಿ ಸಾಹಿತ್ಯವನ್ನು ನೀಡುವುದು.”f ಒದಗಿಸಲ್ಪಟ್ಟಿರುವ ಪ್ರಶ್ನೆಗಳನ್ನು ಉಪಯೋಗಿಸಿರಿ. 3ನೇ ಪ್ಯಾರಗ್ರಾಫನ್ನು ಪರಿಗಣಿಸುತ್ತಿರುವಾಗ, ಸ್ಥಳಿಕ ಟೆರಿಟೊರಿಯಲ್ಲಿ ಆಡಲ್ಪಡುವ ಮತ್ತು ಆ ಭಾಷೆಯ ಸಭೆ ಇಲ್ಲದಿರುವ ಒಂದು ಭಾಷೆಯಲ್ಲಿ ಒಂದು ಸರಳವಾದ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ:  “ಅಂಗವಿಕಲರು​—⁠ಆದರೂ ಫಲಪ್ರದರು.”g ಇತರರು ಹೇಗೆ ಸಹಾಯಮಾಡಬಲ್ಲರು ಎಂಬುದರ ಕುರಿತು, 1990, ಆಗಸ್ಟ್‌ 22ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 22-3ನೇ ಪುಟಗಳ “ಏನು ಮಾಡಸಾಧ್ಯವಿದೆ?” (What Can Be Done?) ಎಂಬ ಉಪಶೀರ್ಷಿಕೆಯ ಕೆಳಗಿರುವ ವಿಷಯಭಾಗದ ಮೇಲಾಧರಿಸಿದ ಹೇಳಿಕೆಗಳನ್ನು ಸೇರಿಸಿಕೊಳ್ಳಿ.

ಗೀತೆ 16 (143) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

f ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

g ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ