ಸೇವಾ ಕೂಟದ ಶೆಡ್ಯೂಲ್
ಮಾರ್ಚ್ 10ರಿಂದ ಆರಂಭವಾಗುವ ವಾರ
ಗೀತೆ 131
10 ನಿ:ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳನ್ನು ಜ್ಞಾಪಕಾಚರಣೆಯ ಆಮಂತ್ರಣಪತ್ರದೊಂದಿಗೆ ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ:ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ? 2000, ಮಾರ್ಚ್ 15ರ ಕಾವಲಿನಬುರುಜು, ಪುಟ 15-20ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಭಾ ಕೂಟಗಳಿಗೆ ಹಾಜರಾದದ್ದರಿಂದ ತಾವು ಹೇಗೆ ಪ್ರಯೋಜನಪಡೆದಿದ್ದಾರೆ ಮತ್ತು ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಅವರು ಅಡೆತಡೆಗಳನ್ನು ಹೇಗೆ ಜಯಿಸಿದ್ದಾರೆ ಎಂಬುದರ ಕುರಿತು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
15 ನಿ:“ನಾವು ಯೆಹೋವನಿಗೆ ಏನು ಕೊಡಬಹುದು?”a ಸಮಯವಿರುವಲ್ಲಿ, ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 8
ಮಾರ್ಚ್ 17ರಿಂದ ಆರಂಭವಾಗುವ ವಾರ
ಗೀತೆ 144
10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ:ಪ್ರಶ್ನಾ ಚೌಕ. ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು. ಇಡೀ ಲೇಖನವನ್ನು ಓದಿ ಚರ್ಚಿಸಿ.
20 ನಿ:“ಜ್ಞಾಪಕಾಚರಣೆಗೆ ಹಾಜರಾದವರಿಗೆ ನಾವು ಹೇಗೆ ಸಹಾಯ ನೀಡಬಹುದು?”b ಪ್ಯಾರ 5ನ್ನು ಪರಿಗಣಿಸುವಾಗ, ಜ್ಞಾಪಕಾಚರಣೆಗೆ ಹಾಜರಾದ ಒಬ್ಬ ವ್ಯಕ್ತಿಯೊಂದಿಗೆ ಹೇಗೆ ಬೈಬಲ್ ಅಧ್ಯಯನವನ್ನು ಆರಂಭಿಸಸಾಧ್ಯವಿದೆ ಎಂಬುದನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿರಿ.
ಗೀತೆ 214
ಮಾರ್ಚ್ 24ರಿಂದ ಆರಂಭವಾಗುವ ವಾರ
ಗೀತೆ 111
10 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಪುಟ 8ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ:“ಕ್ಷೇತ್ರದಲ್ಲಿ ವಿವೇಚನೆಯಿಂದ ವರ್ತಿಸುವುದು.” ಹಿರಿಯನೊಬ್ಬನು ಸಭಿಕರೊಂದಿಗೆ ನಡೆಸುವ ಚರ್ಚೆ. ಮಾಹಿತಿಯನ್ನು ಸ್ಥಳಿಕ ಪರಿಸ್ಥಿತಿಗಳಿಗೆ ಅನ್ವಯಿಸಿರಿ ಮತ್ತು ಕ್ಷೇತ್ರಸೇವೆಯಲ್ಲಿ ವಿವೇಚನೆಯುಳ್ಳವರಾಗಿರುವಂತೆ ಸಹೋದರರನ್ನು ಪ್ರೋತ್ಸಾಹಿಸಿರಿ.
15 ನಿ:ನಾವು ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ಸಾರುತ್ತೇವೆ. ಹಿರಿಯನೊಬ್ಬನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯ ಪೀಠಿಕೆಯ ಬಳಿಕ 2005, ಜುಲೈ 1ರ ಕಾವಲಿನಬುರುಜು, ಪುಟ 18-19, ಪ್ಯಾರ 10-14ರ ಮೇಲೆ ಆಧರಿಸಿ ಭಾಷಣ ನೀಡುತ್ತಾನೆ. ರಾಜ್ಯ ಸಂದೇಶವನ್ನು ಪ್ರಥಮ ಬಾರಿ ಕೇಳಿಸಿಕೊಂಡಾಗ, ಅದು ಅವರಿಗೆ ಹೇಗೆ ಸಾಂತ್ವನ ಮತ್ತು ನಿರೀಕ್ಷೆಯನ್ನು ಕೊಟ್ಟಿತು ಎಂಬುದರ ಬಗ್ಗೆ ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 29
ಮಾರ್ಚ್ 31ರಿಂದ ಆರಂಭವಾಗುವ ವಾರ
ಗೀತೆ 37
10 ನಿ:ಸ್ಥಳಿಕ ಪ್ರಕಟನೆಗಳು. ಮಾರ್ಚ್ ತಿಂಗಳ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
20 ನಿ:“ಆಡಳಿತ ಮಂಡಲಿಯಿಂದ ಒಂದು ಪತ್ರ.” ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
15 ನಿ:“ಶುಶ್ರೂಷೆಯಲ್ಲಿ ತೊಡಗಿರುವಾಗ ಪರಸ್ಪರ ಭಕ್ತಿವೃದ್ಧಿ ಮಾಡುವುದು.”c
ಗೀತೆ 122
ಏಪ್ರಿಲ್ 7ರಿಂದ ಆರಂಭವಾಗುವ ವಾರ
ಗೀತೆ 186
ಗಮನಿಸಿ: ಜಿಲ್ಲಾ ಅಧಿವೇಶನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಏಪ್ರಿಲ್ 7ನೇ ವಾರಕ್ಕೆ ಮುಂಚೆ ಚರ್ಚಿಸಬಾರದು. ಸರ್ಕಿಟ್ ಮೇಲ್ವಿಚಾರಕನ ಸಂದರ್ಶನವಿರುವಲ್ಲಿ ಮಾತ್ರ ಸಭೆಗಳು ಅದನ್ನು ಮುಂಚಿನ ವಾರ ಚರ್ಚಿಸಬಹುದು. ಶಿಫಾರಸು ಮಾಡಲ್ಪಟ್ಟ ಲಾಡ್ಜಿಂಗ್ ಲಿಸ್ಟ್ ಸಿಕ್ಕಿದ ಕೂಡಲೇ ಅದನ್ನು ಮಾಹಿತಿ ಫಲಕದಲ್ಲಿ ಹಾಕಬೇಕು. ಸರ್ಕಿಟ್ ಸಮ್ಮೇಳನದ ಕಾರಣ ಸೇವಾ ಕೂಟವನ್ನು ಆ ವಾರ ರದ್ದುಪಡಿಸುವಲ್ಲಿ ಪುಸ್ತಕ ಅಧ್ಯಯನ ಮೇಲ್ವಿಚಾರಕರು ಅಧಿವೇಶನದ ತಾರೀಖು ಮತ್ತು ಸ್ಥಳವನ್ನು ಪುಸ್ತಕ ಅಧ್ಯಯನದಲ್ಲಿ ಪ್ರಕಟಿಸತಕ್ಕದ್ದು. ಸಾಧ್ಯವಿರುವಲ್ಲಿ ಶಿಫಾರಸು ಮಾಡಲ್ಪಟ್ಟ ಲಾಡ್ಜಿಂಗ್ ಲಿಸ್ಟ್‌ನ ಪ್ರತಿಯನ್ನು ಎಲ್ಲ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೀಡಿ. ಇದರಿಂದ, ಆಯಾ ಗುಂಪಿನಲ್ಲಿರುವವರು ರೂಮನ್ನು ಕಾದಿರಿಸಲಿಕ್ಕಾಗಿ ಹೋಟೆಲ್‌ನ ಫೋನ್ ನಂಬರ್‌ಗಳನ್ನು ಬರೆದುಕೊಳ್ಳಲು ನೆರವಾಗುವುದು. ಆದರೆ ಲಿಸ್ಟ್‌ನ ಪ್ರತಿಗಳನ್ನು ಪ್ರಚಾರಕರಿಗೆ ನೀಡಬಾರದು.
5 ನಿ:ಸ್ಥಳಿಕ ಅಗತ್ಯಗಳು.
15 ನಿ:ದೀಕ್ಷಾಸ್ನಾನವನ್ನು ಮುಂದೂಡುವುದೇಕೆ? ಹಿರಿಯನೊಬ್ಬನಿಂದ ಭಾಷಣ. 2006, ಜುಲೈ 1ರ ಕಾವಲಿನಬುರುಜು, ಪುಟ 29-30, ಪ್ಯಾರ 14-17ರ ಮೇಲೆ ಆಧಾರಿತ. ಹದಿಪ್ರಾಯದಲ್ಲೇ ದೀಕ್ಷಾಸ್ನಾನ ಪಡಕೊಂಡ ಒಂದಿಬ್ಬರು ಪ್ರಚಾರಕರ ಸಂಕ್ಷಿಪ್ತ ಇಂಟರ್‌ವ್ಯೂ ಅನ್ನು ಸೇರಿಸಿರಿ. ಚಿಕ್ಕ ವಯಸ್ಸಿನಲ್ಲಿ ಈ ಪ್ರಾಮುಖ್ಯ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಅವರನ್ನು ಯಾವುದು ಪ್ರೇರಿಸಿತು? ಸಂರಕ್ಷಣಾತ್ಮಕವಾದ ಕ್ರೈಸ್ತ ಪ್ರೌಢತೆಯನ್ನು ಬೆಳೆಸಿಕೊಳ್ಳುವಂತೆ ದೀಕ್ಷಾಸ್ನಾನವು ಅವರಿಗೆ ಹೇಗೆ ಸಹಾಯಮಾಡಿತು?
25 ನಿ:“ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ—2008.”d ಸಭಾ ಸೆಕ್ರಿಟರಿ ನಿರ್ವಹಿಸತಕ್ಕದ್ದು. ಪುರವಣಿಯನ್ನು ಪರಿಗಣಿಸುವ ಮುಂಚೆ 2008, ಫೆಬ್ರವರಿ 14ರ ಅಧಿವೇಶನ ನೇಮಕ ಪತ್ರವನ್ನು ಓದಿರಿ. ಪುರವಣಿಯ ಪ್ಯಾರ 7ನ್ನು ಪರಿಗಣಿಸುವಾಗ ಪುಟ 4ರಲ್ಲಿನ “ರೂಮಿಂಗ್ ನಿರ್ದೇಶನಗಳು” ಮತ್ತು “ಹೋಟೆಲ್ ರಿಸರ್ವೇಷನ್ ಮಾಡಬೇಕಾದ ವಿಧ” ಚೌಕದಲ್ಲಿರುವ ಪ್ರತಿಯೊಂದು ಅಂಶವನ್ನು ಓದತಕ್ಕದ್ದು. ಆದರೆ ಈ ಅಂಶಗಳನ್ನು, ಸ್ಥಳಿಕವಾಗಿ ಅಧಿವೇಶನ ನಡೆಯಲಿದ್ದು ಹೋಟೆಲ್ ರಿಸರ್ವೇಷನ್ ಮಾಡುವ ಅಗತ್ಯವಿಲ್ಲದಿರುವ ಸಭೆಗಳಲ್ಲಿ ಪರಿಗಣಿಸುವ ಅಗತ್ಯವಿಲ್ಲ. ಸಾಧ್ಯವಾದಷ್ಟು ಬೇಗನೆ ಅಧಿವೇಶನ ಏರ್ಪಾಡುಗಳನ್ನು ಮಾಡುವುದಕ್ಕಾಗಿ ಎಲ್ಲರಿಗೆ ಕೃತಜ್ಞತೆ ತಿಳಿಸಿ.
ಗೀತೆ 99
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.