ಕೀರ್ತನೆ
99 ಯೆಹೋವ ರಾಜ ಆಗಿದ್ದಾನೆ.+ ದೇಶಗಳು ನಡುಗಲಿ.
ಆತನು ಕೆರೂಬಿಗಳ ಮೇಲೆ* ಕೂತಿದ್ದಾನೆ.+ ಭೂಮಿ ಕಂಪಿಸಲಿ.
2 ಚೀಯೋನಲ್ಲಿ ಯೆಹೋವ ದೊಡ್ಡವನು,
ಆತನು ಉನ್ನತನು, ಎಲ್ಲ ಜನಾಂಗಗಳು ಆತನ ಕೈಕೆಳಗಿವೆ.+
3 ಅವರು ನಿನ್ನ ಮಹಾ ಹೆಸ್ರನ್ನ ಸ್ತುತಿಸಲಿ,+
ಯಾಕಂದ್ರೆ ಅದು ವಿಸ್ಮಯವಾಗಿದೆ, ಪವಿತ್ರವಾಗಿದೆ.
4 ಆತನು ನ್ಯಾಯವನ್ನ ಪ್ರೀತಿಸೋ ಶಕ್ತಿಶಾಲಿ ರಾಜ.+
ಯಾವುದು ಸರಿನೋ ಅದನ್ನ ನೀನು ದೃಢವಾಗಿ ಸ್ಥಾಪಿಸಿದ್ದೀಯ.
ಯಾಕೋಬಿನಲ್ಲಿ ನೀನು ನ್ಯಾಯ, ನೀತಿಯನ್ನ ಸ್ಥಾಪಿಸಿದ್ದೀಯ.+
ಅವರು ಯೆಹೋವನಿಗೆ ಮೊರೆ ಇಡ್ತಿದ್ರು,
ಆತನು ಅವ್ರಿಗೆ ಉತ್ತರ ಕೊಡ್ತಿದ್ದ.+
7 ಆತನು ಮೋಡಗಳಿಂದ ಅವ್ರ ಜೊತೆ ಮಾತಾಡ್ತಿದ್ದ.+
ಆತನು ಅವ್ರಿಗೆ ಕೊಟ್ಟ ಎಚ್ಚರಿಕೆಯನ್ನ ಮತ್ತು ಆಜ್ಞೆಯನ್ನ ಅವರು ಪಾಲಿಸಿದ್ರು.+
8 ನಮ್ಮ ದೇವರಾದ ಯೆಹೋವನೇ, ನೀನು ಅವ್ರಿಗೆ ಉತ್ತರ ಕೊಟ್ಟೆ.+