ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಕೊರಿಂಥ 4
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಕೊರಿಂಥ ಮುಖ್ಯಾಂಶಗಳು

      • ಜವಾಬ್ದಾರಿ ವಹಿಸ್ಕೊಂಡವರು ನಂಬಿಗಸ್ತರಾಗಿರಬೇಕು (1-5)

      • ಕ್ರಿಸ್ತನ ಸೇವಕರು ದೀನರಾಗಿರಬೇಕು (6-13)

        • “ಬರೆದಿರೋ ವಿಷ್ಯಗಳನ್ನ ಮೀರಿ ಹೋಗಬೇಡಿ” (6)

        • ರಂಗಸ್ಥಳದಲ್ಲಿ ಕ್ರೈಸ್ತರು (9)

      • ತನ್ನ ಮಕ್ಕಳಂತಿದ್ದ ಕ್ರೈಸ್ತರಿಗೆ ಪೌಲನ ಕಾಳಜಿ (14-21)

1 ಕೊರಿಂಥ 4:1

ಪಾದಟಿಪ್ಪಣಿ

  • *

    ಅಥವಾ “ಪವಿತ್ರ ರಹಸ್ಯಗಳ ಮೇಲ್ವಿಚಾರಕರಾಗಿ.”

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:11; ರೋಮ 16:25, 26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2012, ಪು. 11-12

    8/1/2000, ಪು. 14-15

1 ಕೊರಿಂಥ 4:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/15/2012, ಪು. 12-13

1 ಕೊರಿಂಥ 4:3

ಪಾದಟಿಪ್ಪಣಿ

  • *

    ಅಥವಾ “ನ್ಯಾಯಾಲಯವಾಗ್ಲಿ.”

1 ಕೊರಿಂಥ 4:4

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 21:2; ರೋಮ 14:10; ಇಬ್ರಿ 4:13

1 ಕೊರಿಂಥ 4:5

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:1
  • +ಜ್ಞಾನೋ 10:9; 2ಕೊರಿಂ 10:18; 1ತಿಮೊ 5:24, 25

1 ಕೊರಿಂಥ 4:6

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 1:12
  • +ರೋಮ 12:3; 2ಕೊರಿಂ 12:20; 3ಯೋಹಾ 9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು, 2/15/1996, ಪು. 30

    ಕಾವಲಿನಬುರುಜು,

    4/15/2008, ಪು. 7

    2/1/1991, ಪು. 18-19

1 ಕೊರಿಂಥ 4:7

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 3:27

1 ಕೊರಿಂಥ 4:8

ಮಾರ್ಜಿನಲ್ ರೆಫರೆನ್ಸ್

  • +ಪ್ರಕ 20:4, 6
  • +2ತಿಮೊ 2:12; ಪ್ರಕ 3:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/15/2008, ಪು. 22

    1/15/1994, ಪು. 17-18

1 ಕೊರಿಂಥ 4:9

ಮಾರ್ಜಿನಲ್ ರೆಫರೆನ್ಸ್

  • +ರೋಮ 8:36; 1ಕೊರಿಂ 15:32; 2ಕೊರಿಂ 6:4, 9
  • +ಇಬ್ರಿ 10:33

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2009, ಪು. 24

    9/1/1990, ಪು. 28

    ರಾಜ್ಯ ಸೇವೆ,

    8/2001, ಪು. 1

    ಎಚ್ಚರ!,

    9/8/1998, ಪು. 24

1 ಕೊರಿಂಥ 4:10

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 3:18

1 ಕೊರಿಂಥ 4:11

ಪಾದಟಿಪ್ಪಣಿ

  • *

    ಅಕ್ಷ. “ಬೆತ್ತಲೆಯಾಗಿ.”

  • *

    ಅಥವಾ “ಮೇಲಿಂದ ಮೇಲೆ ಹೊಡೆತ.”

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 11:27; ಫಿಲಿ 4:12
  • +ಅಕಾ 14:19; 23:2; 2ಕೊರಿಂ 11:24

1 ಕೊರಿಂಥ 4:12

ಮಾರ್ಜಿನಲ್ ರೆಫರೆನ್ಸ್

  • +ಅಕಾ 18:3; 20:34; 1ಥೆಸ 2:9
  • +ರೋಮ 12:14; 1ಪೇತ್ರ 3:9
  • +ಮತ್ತಾ 5:44

1 ಕೊರಿಂಥ 4:13

ಪಾದಟಿಪ್ಪಣಿ

  • *

    ಅಕ್ಷ. “ಬೇಡ್ಕೊಳ್ತೀವಿ.”

ಮಾರ್ಜಿನಲ್ ರೆಫರೆನ್ಸ್

  • +1ಪೇತ್ರ 2:23

1 ಕೊರಿಂಥ 4:15

ಪಾದಟಿಪ್ಪಣಿ

  • *

    ಅಥವಾ “ಪಾಲಕರು.”

ಮಾರ್ಜಿನಲ್ ರೆಫರೆನ್ಸ್

  • +ಗಲಾ 4:19; 1ಥೆಸ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1993, ಪು. 15

1 ಕೊರಿಂಥ 4:16

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 11:1; ಫಿಲಿ 3:17; 1ಥೆಸ 1:6

1 ಕೊರಿಂಥ 4:17

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 1:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2018, ಪು. 14

    ಕಾವಲಿನಬುರುಜು (ಅಧ್ಯಯನ),

    1/2017, ಪು. 30-31

1 ಕೊರಿಂಥ 4:19

ಪಾದಟಿಪ್ಪಣಿ

  • *

    ಪರಿಶಿಷ್ಟ ಎ5 ನೋಡಿ.

1 ಕೊರಿಂಥ 4:21

ಮಾರ್ಜಿನಲ್ ರೆಫರೆನ್ಸ್

  • +2ಕೊರಿಂ 13:10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಕೊರಿಂ. 4:1ಮತ್ತಾ 13:11; ರೋಮ 16:25, 26
1 ಕೊರಿಂ. 4:4ಜ್ಞಾನೋ 21:2; ರೋಮ 14:10; ಇಬ್ರಿ 4:13
1 ಕೊರಿಂ. 4:5ಮತ್ತಾ 7:1
1 ಕೊರಿಂ. 4:5ಜ್ಞಾನೋ 10:9; 2ಕೊರಿಂ 10:18; 1ತಿಮೊ 5:24, 25
1 ಕೊರಿಂ. 4:61ಕೊರಿಂ 1:12
1 ಕೊರಿಂ. 4:6ರೋಮ 12:3; 2ಕೊರಿಂ 12:20; 3ಯೋಹಾ 9
1 ಕೊರಿಂ. 4:7ಯೋಹಾ 3:27
1 ಕೊರಿಂ. 4:8ಪ್ರಕ 20:4, 6
1 ಕೊರಿಂ. 4:82ತಿಮೊ 2:12; ಪ್ರಕ 3:21
1 ಕೊರಿಂ. 4:9ರೋಮ 8:36; 1ಕೊರಿಂ 15:32; 2ಕೊರಿಂ 6:4, 9
1 ಕೊರಿಂ. 4:9ಇಬ್ರಿ 10:33
1 ಕೊರಿಂ. 4:101ಕೊರಿಂ 3:18
1 ಕೊರಿಂ. 4:112ಕೊರಿಂ 11:27; ಫಿಲಿ 4:12
1 ಕೊರಿಂ. 4:11ಅಕಾ 14:19; 23:2; 2ಕೊರಿಂ 11:24
1 ಕೊರಿಂ. 4:12ಅಕಾ 18:3; 20:34; 1ಥೆಸ 2:9
1 ಕೊರಿಂ. 4:12ರೋಮ 12:14; 1ಪೇತ್ರ 3:9
1 ಕೊರಿಂ. 4:12ಮತ್ತಾ 5:44
1 ಕೊರಿಂ. 4:131ಪೇತ್ರ 2:23
1 ಕೊರಿಂ. 4:15ಗಲಾ 4:19; 1ಥೆಸ 2:11
1 ಕೊರಿಂ. 4:161ಕೊರಿಂ 11:1; ಫಿಲಿ 3:17; 1ಥೆಸ 1:6
1 ಕೊರಿಂ. 4:172ತಿಮೊ 1:13
1 ಕೊರಿಂ. 4:212ಕೊರಿಂ 13:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಕೊರಿಂಥ 4:1-21

ಕೊರಿಂಥದವರಿಗೆ ಬರೆದ ಮೊದಲನೇ ಪತ್ರ

4 ಜನ್ರು ನಮ್ಮನ್ನ ಕ್ರಿಸ್ತನ ಸೇವಕರಾಗಿ, ದೇವರ ಪವಿತ್ರ ರಹಸ್ಯಗಳ ಜವಾಬ್ದಾರಿಯನ್ನ ಹೊತ್ಕೊಂಡವರಾಗಿ* ನೋಡಬೇಕು.+ 2 ಜವಾಬ್ದಾರಿ ತಗೊಂಡ ಸೇವಕರು ನಂಬಿಗಸ್ತರಾಗಿ ಇರ್ಲೇಬೇಕು. 3 ನನ್ನ ಬಗ್ಗೆ ನೀವಾಗ್ಲಿ ನ್ಯಾಯಾಧೀಶರಾಗ್ಲಿ* ನ್ಯಾಯವಿಚಾರಣೆ ಮಾಡಿದ್ರೆ ನಾನೇನೂ ತಲೆಕೆಡಿಸ್ಕೊಳ್ಳಲ್ಲ. ನಿಜ ಹೇಳಬೇಕಂದ್ರೆ, ನಾನೇ ನನ್ನ ಬಗ್ಗೆ ನ್ಯಾಯವಿಚಾರಣೆ ಮಾಡ್ಕೊಳ್ಳಲ್ಲ. 4 ನಾನೇನೋ ತಪ್ಪು ಮಾಡಿದ್ದೀನಿ ಅಂತ ನನಗೆ ಅನಿಸಲ್ಲ. ಹಾಗಂತ ನಾನು ನೀತಿವಂತನಾಗಿ ಬಿಡಲ್ಲ. ನನ್ನ ಬಗ್ಗೆ ನ್ಯಾಯವಿಚಾರಣೆ ಮಾಡುವವನು ಯೆಹೋವನೇ.*+ 5 ಹಾಗಾಗಿ ಸರಿಯಾದ ಸಮಯ ಬರೋ ತನಕ ಅಂದ್ರೆ ಪ್ರಭು ಬರೋ ತನಕ ನೀವು ಯಾರಿಗೂ ತೀರ್ಪು ಮಾಡಬೇಡಿ.+ ಆತನು ಕತ್ತಲೆಯಲ್ಲಿ ಬಚ್ಚಿಟ್ಕೊಂಡಿರೋ ವಿಷ್ಯಗಳನ್ನ ಬೆಳಕಿಗೆ ತರ್ತಾನೆ, ಹೃದಯದ ಆಲೋಚನೆಗಳನ್ನ ಬಯಲು ಮಾಡ್ತಾನೆ. ಆಗ ಪ್ರತಿಯೊಬ್ಬನನ್ನ ದೇವರು ಅವನು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಹೊಗಳ್ತಾನೆ.+

6 ಸಹೋದರರೇ, ನಿಮ್ಮ ಒಳ್ಳೇದಕ್ಕೇ ನಾನು ನನ್ನನ್ನ, ಅಪೊಲ್ಲೋಸನನ್ನ+ ಉದಾಹರಣೆಯಾಗಿ ಬಳಸಿ ಈ ವಿಷ್ಯಗಳನ್ನ ಹೇಳ್ದೆ. ಯಾಕಂದ್ರೆ “ಬರೆದಿರೋ ವಿಷ್ಯಗಳನ್ನ ಮೀರಿ ಹೋಗಬೇಡಿ” ಅನ್ನೋದನ್ನ ನೀವು ನಮ್ಮಿಂದ ಕಲಿತ್ಕೊಬೇಕು. ಆಗ ನೀವು ಹೆಮ್ಮೆಯಿಂದ ಉಬ್ಬಿಕೊಳ್ಳಲ್ಲ,+ ಅವ್ರಿಗಿಂತ ಇವರು ಮೇಲು ಅಂತ ನೆನಸಿ ಪಕ್ಷವಹಿಸಲ್ಲ. 7 ‘ನಾನು ಬೇರೆಯವ್ರಿಗಿಂತ ಶ್ರೇಷ್ಠ’ ಅಂತ ನೀನು ನೆನಸ್ತಿಯಲ್ಲಾ, ನಿನ್ನ ಹತ್ರ ಅಂಥದ್ದು ಏನಿದೆ? ನಿನ್ನ ಹತ್ರ ಇರೋದೆಲ್ಲ ದೇವರೇ ಕೊಟ್ಟಿದ್ದಲ್ವಾ?+ ಅಂದ್ಮೇಲೆ ನೀನೇ ಏನೋ ನಿನ್ನ ಸ್ವಂತ ಶಕ್ತಿಯಿಂದ ಎಲ್ಲ ಪಡ್ಕೊಂಡಿರೋ ಹಾಗೆ ಯಾಕೆ ಕೊಚ್ಕೊಳ್ತೀಯಾ?

8 ನಿಮಗೆ ಬೇಕಾಗಿದ್ದೆಲ್ಲ ಈಗಾಗ್ಲೇ ನಿಮಗೆ ಸಿಕ್ಕಿದ್ಯಾ? ನೀವು ಈಗ್ಲೇ ಶ್ರೀಮಂತರಾಗಿಬಿಟ್ರಾ? ನಾವಿಲ್ದೇ ನೀವು ರಾಜರಾಗಿ ಆಳೋಕೆ ಶುರುಮಾಡಿಬಿಟ್ರಾ?+ ಹಾಗೆ ಶುರುಮಾಡಿದ್ರೆ ಚೆನ್ನಾಗಿತ್ತು ಅಂತ ನನಗೆ ಅನಿಸುತ್ತೆ, ಆಗ ನಾವೂ ನಿಮ್ಮ ಜೊತೆ ರಾಜರಾಗಿ ಆಳಬಹುದಿತ್ತು.+ 9 ನಿಜ ಏನಂದ್ರೆ, ಮರಣಶಿಕ್ಷೆ ಸಿಕ್ಕಿರೋ ಜನ್ರ ತರ ದೇವರು ಅಪೊಸ್ತಲರಾದ ನಮ್ಮನ್ನ ಎಲ್ರೂ ನೋಡೋ ಹಾಗೆ ಕೊನೇಲಿ ರಂಗಸ್ಥಳಕ್ಕೆ ಕರ್ಕೊಂಡು ಬರ್ತಿದ್ದಾನೋ ಅನ್ನೋ ಹಾಗೆ ನನಗೆ ಅನಿಸ್ತಿದೆ.+ ಯಾಕಂದ್ರೆ ಈ ಲೋಕ, ದೇವದೂತರು, ಜನ್ರು ಎಲ್ರೂ ನಮ್ಮನ್ನೇ ನೋಡ್ತಿದ್ದಾರೆ.+ 10 ಕ್ರಿಸ್ತನ ಶಿಷ್ಯರಾಗಿ ಇರೋದ್ರಿಂದ ನಮ್ಮನ್ನ ಹುಚ್ಚರ ತರ ನೋಡ್ತಿದ್ದಾರೆ,+ ಆದ್ರೆ ನೀವು ಕ್ರಿಸ್ತನ ಶಿಷ್ಯರಾಗಿ ಇರೋದ್ರಿಂದ ನೀವೇ ನಿಮ್ಮನ್ನ ವಿವೇಕಿಗಳು ಅಂದ್ಕೊಳ್ತೀರ. ನಮ್ಮನ್ನ ಬಲ ಇಲ್ಲದವ್ರ ತರ ನೋಡ್ತಾರೆ, ಆದ್ರೆ ನೀವು ನಿಮ್ಮನ್ನ ಬಲಶಾಲಿಗಳು ಅಂದ್ಕೊಳ್ತೀರ. ನಿಮಗೆ ಸನ್ಮಾನ ಮಾಡ್ತಾರೆ, ಆದ್ರೆ ನಮಗೆ ಅವಮಾನ ಮಾಡ್ತಾರೆ. 11 ಇವತ್ತಿನ ತನಕ ನಾವು ಊಟ-ನೀರು ಇಲ್ಲದೆ,+ ಹಾಕೋಕೆ ಸರಿಯಾಗಿ ಬಟ್ಟೆ ಇಲ್ಲದೆ,* ಹೊಡೆತ*+ ತಿಂದು, ಮನೆ ಇಲ್ಲದೆ ಇದ್ದೀವಿ. 12 ಕಷ್ಟಪಟ್ಟು ಕೆಲಸ ಮಾಡ್ಕೊಂಡು ಇದ್ದೀವಿ.+ ನಮ್ಮನ್ನ ಅವಮಾನ ಮಾಡಿದವ್ರಿಗೆ ನಾವು ಆಶೀರ್ವಾದ ಮಾಡ್ತೀವಿ,+ ಹಿಂಸೆ ಕೊಟ್ಟಾಗ ತಾಳ್ಮೆಯಿಂದ ಸಹಿಸ್ಕೊಳ್ತೀವಿ.+ 13 ನಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿದಾಗ ಸೌಮ್ಯವಾಗಿ ಉತ್ತರ ಕೊಡ್ತೀವಿ.*+ ಇವತ್ತಿನ ತನಕ ನಾವು ಲೋಕದ ದೃಷ್ಟಿಯಲ್ಲಿ ಕಸದ ತರ, ಹೊಲಸು ತರ ಇದ್ದೀವಿ.

14 ಇದನ್ನೆಲ್ಲ ನಾನು ನಿಮಗೆ ನಾಚಿಕೆ ಆಗಬೇಕಂತ ಬರೀತಿಲ್ಲ, ನಿಮ್ಮನ್ನ ನನ್ನ ಮುದ್ದು ಮಕ್ಕಳಾಗಿ ನೆನಸಿ ಬುದ್ಧಿಹೇಳೋಕೆ ಬರೀತಾ ಇದ್ದೀನಿ. 15 ಕ್ರಿಸ್ತನ ಶಿಷ್ಯರಾಗೋದು ಹೇಗೆ ಅಂತ ಹೇಳಿಕೊಡೋಕೆ ನಿಮಗೆ 10,000 ಶಿಕ್ಷಕರು* ಇರಬಹುದು. ಆದ್ರೆ ನಿಮಗೆ ತುಂಬ ಅಪ್ಪಂದಿರಿಲ್ಲ. ಕ್ರಿಸ್ತ ಯೇಸು ಬಗ್ಗೆ ಸಿಹಿಸುದ್ದಿಯನ್ನ ನಾನು ನಿಮಗೆ ಹೇಳಿದ್ರಿಂದ ನಾನು ನಿಮಗೆ ಅಪ್ಪ ತರ.+ 16 ಹಾಗಾಗಿ ನನ್ನನ್ನ ನೋಡಿ ಕಲೀರಿ+ ಅಂತ ನಿಮ್ಮನ್ನ ಬೇಡ್ಕೊಳ್ತೀನಿ. 17 ಅದಕ್ಕೇ ನಾನು ತಿಮೊತಿಯನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೀನಿ. ಅವನು ನನ್ನ ಪ್ರೀತಿಯ ಮಗ. ಅವನು ಒಡೆಯನ ಸೇವೆಯನ್ನ ನಂಬಿಗಸ್ತಿಕೆಯಿಂದ ಮಾಡ್ತಿದ್ದಾನೆ. ಕ್ರಿಸ್ತ ಯೇಸುವಿನ ಸೇವೆಯಲ್ಲಿ ನಾನು ಬಳಸೋ ವಿಧಾನಗಳನ್ನ ಅವನು ನಿಮಗೆ ನೆನಪಿಸ್ತಾನೆ.+ ಅದೇ ವಿಧಾನಗಳನ್ನ ನಾನು ಎಲ್ಲ ಸಭೆಗಳಲ್ಲಿ ಕಲಿಸ್ತಾ ಇದ್ದೀನಿ.

18 ನಾನು ನಿಮ್ಮ ಹತ್ರ ಬರಲ್ಲ ಅಂತ ನೆನಸಿ ಸ್ವಲ್ಪ ಜನ ಗರ್ವದಿಂದ ಉಬ್ಬಿಕೊಂಡಿದ್ದಾರೆ. 19 ಆದ್ರೆ ಯೆಹೋವನ* ಇಷ್ಟ ಇದ್ರೆ ನಾನು ಬೇಗ ನಿಮ್ಮ ಹತ್ರ ಬರ್ತಿನಿ. ಗರ್ವದಿಂದ ಉಬ್ಬಿಕೊಂಡಿರೋರು ಹೇಳೋ ಮಾತುಗಳನ್ನ ತಿಳ್ಕೊಳ್ಳೋಕೆ ನನಗೆ ಇಷ್ಟ ಇಲ್ಲ, ಆದ್ರೆ ಅವ್ರಲ್ಲಿ ಪವಿತ್ರಶಕ್ತಿ ಇದ್ಯಾ ಅಂತ ತಿಳ್ಕೊಳ್ತೀನಿ. 20 ಯಾಕಂದ್ರೆ ನಾವು ದೇವರ ಆಳ್ವಿಕೆಯನ್ನ ಬೆಂಬಲಿಸ್ತೀವಾ ಇಲ್ವಾ ಅನ್ನೋದು ಮಾತುಗಳ ಮೇಲಲ್ಲ ದೇವರ ಶಕ್ತಿಯ ಮೇಲೆ ಹೊಂದ್ಕೊಂಡಿದೆ. 21 ನಿಮಗೆ ಯಾವುದು ಇಷ್ಟ? ನಾನು ನಿಮ್ಮ ಹತ್ರ ಕೋಲು ಹಿಡ್ಕೊಂಡು ಬರೋದಾ?+ ಪ್ರೀತಿ, ಸೌಮ್ಯತೆಯಿಂದ ಬರೋದಾ?

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ