ಪ್ರಸಂಗಿ
1 ದಾವೀದನ ಮಗನೂ ಯೆರೂಸಲೇಮಲ್ಲಿ+ ಆಳ್ತಿರೋ ರಾಜನೂ ಆದ ಪ್ರಸಂಗಿಯ*+ ಮಾತುಗಳು.
6 ಗಾಳಿ ದಕ್ಷಿಣಕ್ಕೆ ಬೀಸುತ್ತೆ, ಸುತ್ತು ಹಾಕಿ ಮತ್ತೆ ಉತ್ತರಕ್ಕೆ ಬರುತ್ತೆ,
ಹೀಗೆ ಮತ್ತೆಮತ್ತೆ ಸುತ್ತು ಹಾಕ್ತಾ ಇರುತ್ತೆ, ಅದು ನಿಲ್ಲೋದೇ ಇಲ್ಲ.
7 ನದಿಗಳೆಲ್ಲಾ* ಸಮುದ್ರಕ್ಕೆ ಹರಿದು ಹೋಗುತ್ತೆ, ಆದ್ರೂ ಸಮುದ್ರ ತುಂಬಲ್ಲ.+
ಅವು ಎಲ್ಲಿಂದ ಹರಿದು ಬಂದ್ವೋ ಆ ಸ್ಥಳಕ್ಕೇ ವಾಪಸ್ ಹೋಗ್ತವೆ ಮತ್ತೆ ಅಲ್ಲಿಂದ ಹರಿತವೆ.+
8 ಎಲ್ಲ ವಿಷ್ಯಗಳು ಮನುಷ್ಯನನ್ನ ಬಳಲಿಸೋ ವಿಷ್ಯಗಳೇ,
ಅವುಗಳನ್ನ ಯಾರೂ ವಿವರಿಸಕ್ಕಾಗಲ್ಲ.
ಎಷ್ಟು ನೋಡಿದ್ರೂ ಕಣ್ಣಿಗೆ ತೃಪ್ತಿ ಆಗಲ್ಲ,
ಎಷ್ಟು ಕೇಳಿಸಿಕೊಂಡ್ರೂ ಕಿವಿಗೆ ತೃಪ್ತಿ ಆಗಲ್ಲ.
10 “ನೋಡಿಲ್ಲಿ, ಇದು ಹೊಸದು” ಅಂತ ಹೇಳೋಕೆ ಏನಾದ್ರೂ ಇದ್ಯಾ?
ಅದು ಹಿಂದಿನ ಕಾಲದಿಂದಾನೂ ಇರೋದೇ,
ಅದು ನಮ್ಮ ಕಾಲಕ್ಕಿಂತ ಮುಂಚಿನಿಂದಾನೂ ಇರೋದೇ.
11 ಹಿಂದಿನ ಕಾಲದ ಜನ್ರನ್ನ ಯಾರೂ ನೆನಪಿಡಲ್ಲ,
ಅವ್ರ ನಂತ್ರ ಬರೋ ಜನ್ರನ್ನೂ ನೆನಪಿಡಲ್ಲ,
ಅವ್ರಾದ ಮೇಲೆ ಬರೋ ಪೀಳಿಗೆನೂ ನೆನಪಿಡಲ್ಲ.+
12 ಪ್ರಸಂಗಿ ಆಗಿರೋ ನಾನು ಯೆರೂಸಲೇಮಲ್ಲಿ ಇಸ್ರಾಯೇಲ್ಯರ ಮೇಲೆ ರಾಜನಾಗಿ ಆಳ್ತಿದ್ದೀನಿ.+ 13 ಆಕಾಶದ ಕೆಳಗೆ ನಡಿತಿರೋ ಪ್ರತಿಯೊಂದನ್ನ+ ವಿವೇಕದಿಂದ+ ಅಧ್ಯಯನ ಮಾಡಿ ಪರೀಕ್ಷಿಸಬೇಕಂತ ನಿರ್ಧಾರ ಮಾಡ್ದೆ. ಮನುಷ್ಯರನ್ನ ಕಾರ್ಯನಿರತರನ್ನಾಗಿ ಇಡೋಕೆ ದೇವರು ಅವ್ರಿಗೆ ಕೊಟ್ಟ ಆಶಾಭಂಗಗೊಳಿಸೋ ಕೆಲಸಗಳನ್ನ ನಾನು ಪರಿಶೋಧಿಸಿದೆ.
14 ಆಕಾಶದ* ಕೆಳಗೆ ನಡೆಯೋ ಎಲ್ಲ ಕೆಲಸಗಳನ್ನ ನಾನು ನೋಡಿದೆ,
ಗಾಳಿನ ಹಿಡಿಯೋಕೆ ಓಡಿದ ಹಾಗೆ ಎಲ್ಲಾನೂ ವ್ಯರ್ಥ ಅಂತ ನಾನು ತಿಳ್ಕೊಂಡೆ.+
15 ಸೊಟ್ಟಗಿರೋದನ್ನ ನೆಟ್ಟಗೆ ಮಾಡೋಕಾಗಲ್ಲ,
ಇಲ್ಲದಿರೋದನ್ನ ಲೆಕ್ಕಿಸೋಕಾಗಲ್ಲ.
16 ಆಮೇಲೆ ನಾನು ಮನಸ್ಸಲ್ಲೇ “ಆಹಾ! ನಾನು ತುಂಬ ವಿವೇಕ ಪಡೆದಿದ್ದೀನಿ. ಯೆರೂಸಲೇಮಲ್ಲಿ ನನಗಿಂತ ಮುಂಚೆ ಇದ್ದ ಎಲ್ರಿಗಿಂತ ಹೆಚ್ಚು ವಿವೇಕ ಸಂಪಾದಿಸಿದ್ದೀನಿ.+ ನಾನು* ಅಪಾರ ಜ್ಞಾನ, ವಿವೇಕ ಪಡ್ಕೊಂಡಿದ್ದೀನಿ”+ ಅಂತ ಯೋಚಿಸಿದೆ. 17 ವಿವೇಕದ ಬಗ್ಗೆ, ಹುಚ್ಚುತನದ* ಬಗ್ಗೆ ಮತ್ತು ಮೂರ್ಖತನದ ಬಗ್ಗೆ ತಿಳ್ಕೊಳ್ಳೋಕೆ ನಾನು ಪ್ರಯಾಸಪಟ್ಟೆ,+ ಇದು ಕೂಡ ಗಾಳಿಯನ್ನ ಹಿಡಿಯೋಕೆ ಓಡಿದ ಹಾಗೆ ಅಂತ ತಿಳ್ಕೊಂಡೆ.
2 ಆಮೇಲೆ ನಾನು ಮನಸ್ಸಲ್ಲೇ “ಮಜಾ ಮಾಡೋಣ ಅದ್ರಿಂದ ಏನು ಪ್ರಯೋಜನ ಸಿಗುತ್ತೆ ನೋಡೋಣ” ಅಂದ್ಕೊಂಡೆ. ಆದ್ರೆ ಅದೂ ವ್ಯರ್ಥ.
2 “ನಗು ಹುಚ್ಚುತನ!” ಅಂತಾನೂ
“ಮೋಜು ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ” ಅಂತಾನೂ ನಾನು ಹೇಳಿದೆ.
3 ದ್ರಾಕ್ಷಾಮದ್ಯವನ್ನ ತೃಪ್ತಿಯಾಗುವಷ್ಟು ಕುಡಿದು ನೋಡೋಣ+ ಅಂತ ನಾನು ನಿರ್ಧಾರ ಮಾಡ್ದೆ. ಎಷ್ಟು ಕುಡಿದ್ರೂ ನಾನು ಬುದ್ಧಿ ಕಳ್ಕೊಳ್ಳಲಿಲ್ಲ. ಭೂಮಿ ಮೇಲಿನ ನಾಲ್ಕು ದಿನದ ಬದುಕಲ್ಲಿ ಮನುಷ್ಯರು ಏನು ಮಾಡಿದ್ರೆ ಒಳ್ಳೇದು ಅಂತ ಕಂಡುಹಿಡಿಯೋಕೆ ನಾನು ಮೂರ್ಖ ವಿಷ್ಯಗಳನ್ನೂ ಮಾಡಿ ನೋಡಿದೆ. 4 ದೊಡ್ಡದೊಡ್ಡ ಕೆಲಸಗಳನ್ನ ಕೈಗೆತ್ತಿಕೊಂಡೆ.+ ನನಗೋಸ್ಕರ ಮನೆಗಳನ್ನ ಕಟ್ಟಿದೆ,+ ದ್ರಾಕ್ಷಿ ತೋಟಗಳನ್ನ ಮಾಡಿದೆ.+ 5 ನನಗೋಸ್ಕರ ತೋಟಗಳನ್ನ, ಹೂವಿನ ತೋಟಗಳನ್ನ ಮಾಡಿದೆ. ಅಲ್ಲಿ ಎಲ್ಲ ರೀತಿಯ ಹಣ್ಣಿನ ಮರಗಳನ್ನ ನೆಟ್ಟೆ. 6 ಸೊಂಪಾಗಿ ಬೆಳಿತಿರೋ ಮರಗಳ ತೋಪಿಗಾಗಿ* ನೀರಿನ ಕೊಳಗಳನ್ನ ಮಾಡಿದೆ. 7 ನನಗೆ ಕೈಗೊಬ್ರು ಕಾಲಿಗೊಬ್ರು ಆಳುಗಳಿದ್ರು.+ ನನ್ನ ಮನೆಯಲ್ಲೇ ಹುಟ್ಟಿ ಬೆಳೆದ ಸೇವಕರೂ ನನಗಿದ್ರು. ಲೆಕ್ಕ ಇಲ್ಲದಷ್ಟು ದನ, ಆಡು, ಕುರಿಗಳನ್ನ ಸಂಪಾದಿಸಿದೆ.+ ಯೆರೂಸಲೇಮಲ್ಲಿ ನನಗಿಂತ ಮುಂಚೆ ಆಳ್ತಿದ್ದ ಯಾರ ಹತ್ರನೂ ಅಷ್ಟು ಜಾನುವಾರುಗಳು ಇರಲಿಲ್ಲ. 8 ನಾನು ನನಗೋಸ್ಕರ ಚಿನ್ನಬೆಳ್ಳಿಯನ್ನ,+ ರಾಜರ ಮತ್ತು ಪ್ರಾಂತಗಳ ಸಂಪತ್ತನ್ನ ಕೂಡಿಸಿಟ್ಟೆ.+ ನನಗೋಸ್ಕರ ಗಾಯಕ ಗಾಯಕಿಯರನ್ನ ನೇಮಿಸಿದೆ. ಗಂಡಸರಿಗೆ ತುಂಬಾ ಸಂತೋಷ ಕೊಡೋ ಸ್ತ್ರೀಯ, ಅಷ್ಟೇ ಯಾಕೆ ತುಂಬ ಸ್ತ್ರೀಯರ* ಸಹವಾಸ ಮಾಡ್ದೆ. 9 ಯೆರೂಸಲೇಮಲ್ಲಿ ನನಗಿಂತ ಮುಂಚೆ ಇದ್ದ ಎಲ್ರಿಗಿಂತ ನಾನು ದೊಡ್ಡ ವ್ಯಕ್ತಿಯಾದೆ.+ ಆಗಲೂ ನಾನು ವಿವೇಕದಿಂದ ನಡ್ಕೊಂಡೆ.
10 ನನ್ನ ಕಣ್ಣು ಆಸೆಪಟ್ಟಿದ್ದನ್ನೆಲ್ಲ ಪಡೆದೆ.+ ಎಲ್ಲ ರೀತಿ ಸುಖಸಂತೋಷದಲ್ಲಿ ತೇಲಾಡಿದೆ. ನನ್ನೆಲ್ಲಾ ಪರಿಶ್ರಮದಲ್ಲಿ ನಾನು ಸಂತೋಷ ಪಡ್ದೆ. ಇದು ನನ್ನೆಲ್ಲ ಶ್ರಮಕ್ಕೆ ಸಿಕ್ಕಿದ ಪ್ರತಿಫಲ.+ 11 ಆದ್ರೆ ನಾನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ತುಂಬ ಕಷ್ಟಪಟ್ಟು ಸಾಧಿಸಿದ+ ವಿಷ್ಯಗಳ ಬಗ್ಗೆ ಯೋಚಿಸಿದಾಗ ಅದೆಲ್ಲ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗೆ ಅಂತ ಅರ್ಥ ಆಯ್ತು.+ ಈ ಭೂಮಿಯಲ್ಲಿ* ಯಾವುದ್ರಿಂದನೂ ಏನೂ ಪ್ರಯೋಜನ ಇಲ್ಲ ಅಂತ ಅರ್ಥ ಮಾಡ್ಕೊಂಡೆ.+
12 ಆಮೇಲೆ ನಾನು ವಿವೇಕಕ್ಕೆ, ಹುಚ್ಚುತನಕ್ಕೆ ಮತ್ತು ಮೂರ್ಖತನಕ್ಕೆ ಗಮನಕೊಡೋಕೆ ಶುರುಮಾಡಿದೆ.+ (ರಾಜನ ನಂತ್ರ ಬರುವವನಿಗೆ ಬೇರೇನು ಮಾಡಕ್ಕಾಗುತ್ತೆ? ಈಗಾಗ್ಲೇ ಮಾಡಿರೋದನ್ನ ಅವನು ಮಾಡಬೇಕಷ್ಟೆ.) 13 ಕತ್ತಲೆಗಿಂತ ಬೆಳಕು ಹೇಗೆ ಪ್ರಯೋಜನ ತರುತ್ತೋ ಹಾಗೇ ಮೂರ್ಖತನಕ್ಕಿಂತ ವಿವೇಕ ಪ್ರಯೋಜನ ತರುತ್ತೆ ಅಂತ ನನಗೆ ಗೊತ್ತಾಯ್ತು.+
14 ವಿವೇಕಿಗೆ ತಾನು ನಡಿತಿರೋ ಮಾರ್ಗ ಚೆನ್ನಾಗಿ ಕಾಣುತ್ತೆ.*+ ಆದ್ರೆ ಅವಿವೇಕಿ ಕತ್ತಲಲ್ಲಿ ಅಲೆದಾಡ್ತಾನೆ.+ ಅಷ್ಟೇ ಅಲ್ಲ ಕೊನೇಲಿ ಇಬ್ರಿಗೂ ಒಂದೇ ಗತಿ ಬರುತ್ತೆ ಅಂತಾನೂ ಅರ್ಥ ಮಾಡ್ಕೊಂಡಿದ್ದೀನಿ.+ 15 ಆಮೇಲೆ ಮನಸ್ಸಲ್ಲೇ “ಕೊನೆಗೆ ಅವಿವೇಕಿಗೆ ಬರೋ ಗತಿ ನನಗೂ ಬರುತ್ತೆ.+ ಅಂದ್ಮೇಲೆ ಇಷ್ಟೊಂದು ವಿವೇಕಿಯಾಗಿ ನನಗೇನು ಲಾಭ?” ಅಂದ್ಕೊಂಡೆ. ಹಾಗಾಗಿ “ಇದೂ ವ್ಯರ್ಥ” ಅಂತ ನೆನೆಸಿದೆ. 16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+
17 ಈ ಭೂಮಿಯಲ್ಲಿ ನಡಿತಿರೋ ವಿಷ್ಯಗಳನ್ನೆಲ್ಲ ನೋಡಿ ನನಗೆ ತುಂಬ ದುಃಖ ಆಯ್ತು, ಅವೆಲ್ಲ ವ್ಯರ್ಥ.+ ಗಾಳಿ ಹಿಡಿಯೋಕೆ ಓಡೋ ಹಾಗೆ.+ ಹಾಗಾಗಿ ಇಂಥ ಜೀವನಾನೇ ಸಾಕಾಗಿ ಹೋಯ್ತು.+ 18 ನಾನು ಕಷ್ಟಪಟ್ಟು ಈ ಭೂಮಿಯಲ್ಲಿ ಏನೆಲ್ಲ ಮಾಡಿದ್ನೋ ಅದನ್ನೆಲ್ಲ ಹಗೆಮಾಡಿದೆ.+ ಯಾಕಂದ್ರೆ ನಾನು ಸತ್ತ ಮೇಲೆ ಅದೆಲ್ಲ ನನ್ನ ನಂತ್ರ ಬರುವವನ ಪಾಲಾಗುತ್ತೆ.+ 19 ಅವನು ವಿವೇಕಿಯೋ ಮೂರ್ಖನೋ ಯಾರಿಗೆ ಗೊತ್ತು?+ ಅವನು ಹೇಗೇ ಇದ್ರೂ ನಾನು ಇಷ್ಟು ಕಷ್ಟಪಟ್ಟು ವಿವೇಕದಿಂದ ಮಾಡಿದ್ದೆಲ್ಲ ಅವನ ಕೈಗೆ ಸೇರುತ್ತೆ. ಇದು ಕೂಡ ವ್ಯರ್ಥ. 20 ಇದನ್ನ ನೆನಸಿದಾಗ ಈ ಭೂಮಿ ಮೇಲೆ ನಾನು ಪರಿಶ್ರಮಪಟ್ಟು ಮಾಡಿದ ಎಲ್ಲ ಕೆಲಸಗಳ ಬಗ್ಗೆ ನನಗೆ ನಿರಾಶೆ ಆಯ್ತು. 21 ಒಬ್ಬ ವ್ಯಕ್ತಿ ವಿವೇಕ, ಜ್ಞಾನ, ಕೌಶಲದಿಂದ ಎಷ್ಟೇ ಕಷ್ಟಪಟ್ಟು ಏನೇ ಮಾಡಿದ್ರೂ ಅದನ್ನೆಲ್ಲ ಅದಕ್ಕಾಗಿ ಸ್ವಲ್ಪನೂ ಕಷ್ಟಪಡದವನಿಗೆ ಬಿಟ್ಟುಹೋಗಬೇಕಾಗುತ್ತೆ.+ ಇದೂ ವ್ಯರ್ಥ, ಅತಿ ದುರಂತಕರ.
22 ಒಬ್ಬ ಮನುಷ್ಯ ಭೂಮಿ ಮೇಲೆ ತನ್ನ ಆಸೆಯನ್ನ ಈಡೇರಿಸೋಕೆ ಬೆವರು ಸುರಿಸಿ ಎಷ್ಟೇ ದುಡಿದ್ರೂ ಅದ್ರಿಂದ ಅವನಿಗೆ ನಿಜವಾಗ್ಲೂ ಏನು ಸಿಗುತ್ತೆ?+ 23 ಜೀವಮಾನ ಎಲ್ಲಾ ಅವನಿಗೆ ತನ್ನ ಕೆಲಸದಿಂದ ಸಿಗೋದು ನೋವು, ಕಿರಿಕಿರಿ ಅಷ್ಟೇ.+ ರಾತ್ರಿಯಲ್ಲೂ ಅವನ ಮನಸ್ಸಿಗೆ ನೆಮ್ಮದಿ ಇರಲ್ಲ.+ ಹಾಗಾಗಿ ಇದೂ ವ್ಯರ್ಥ.
24 ತಿನ್ನೋದು, ಕುಡಿಯೋದು ಮತ್ತು ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಸಂತೋಷ ಪಡಿಯೋದು, ಇದಕ್ಕಿಂತ ಒಳ್ಳೇದು ಮನುಷ್ಯನಿಗೆ ಬೇರೆ ಯಾವುದೂ ಇಲ್ಲ.+ ಇವುಗಳನ್ನ ಕೂಡ ಸತ್ಯ ದೇವರೇ ಕೊಟ್ಟಿದ್ದಾನೆ ಅಂತ ಅರ್ಥ ಮಾಡ್ಕೊಂಡೆ.+ 25 ಯಾಕಂದ್ರೆ ಎಲ್ರಿಗಿಂತ ಒಳ್ಳೇ ಆಹಾರ ಪಾನೀಯಗಳನ್ನ ತಿನ್ನುವವನು ನಾನೇ ಅಲ್ವಾ?+
26 ಸತ್ಯ ದೇವರು ತನ್ನ ಇಷ್ಟದ ಪ್ರಕಾರ ನಡಿಯುವವನಿಗೆ ವಿವೇಕ, ಜ್ಞಾನ ಮತ್ತು ಹರ್ಷಾನಂದ ಕೊಡ್ತಾನೆ.+ ಆದ್ರೆ ಪಾಪಿಗೆ ಏನ್ ಕೊಡ್ತಾನಂದ್ರೆ, ತನ್ನ ಇಷ್ಟದ ಪ್ರಕಾರ ನಡಿಯೋ ಜನ್ರಿಗಾಗಿ ಸಂಪತ್ತನ್ನ ಕೂಡಿಸಿಡೋ ಕೆಲಸ ಕೊಡ್ತಾನೆ.+ ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.
3 ಪ್ರತಿಯೊಂದಕ್ಕೂ ಒಂದು ಸಮಯ ಇದೆ.
ಆಕಾಶದ ಕೆಳಗೆ ನಡಿಯೋ ಒಂದೊಂದು ಕೆಲಸಕ್ಕೂ ಒಂದೊಂದು ಸಮಯ ಇದೆ.
2 ಹುಟ್ಟೋಕೆ ಒಂದು ಸಮಯ, ಸಾಯೋಕೆ ಒಂದು ಸಮಯ,
ನೆಡೋಕೆ ಒಂದು ಸಮಯ, ನೆಟ್ಟದ್ದನ್ನ ಕೀಳೋಕೆ ಒಂದು ಸಮಯ,
3 ಕೊಲ್ಲೋಕೆ ಒಂದು ಸಮಯ, ವಾಸಿ ಮಾಡೋಕೆ ಒಂದು ಸಮಯ,
ಕೆಡವಿ ಹಾಕೋಕೆ ಒಂದು ಸಮಯ, ಕಟ್ಟೋಕೆ ಒಂದು ಸಮಯ,
4 ಅಳೋಕೆ ಒಂದು ಸಮಯ, ನಗೋಕೆ ಒಂದು ಸಮಯ,
ಗೋಳಾಡೋಕೆ ಒಂದು ಸಮಯ, ಕುಣಿದಾಡೋಕೆ ಒಂದು ಸಮಯ,
5 ಕಲ್ಲುಗಳನ್ನ ಎತ್ತಿ ಬಿಸಾಡೋಕೆ ಒಂದು ಸಮಯ, ಕಲ್ಲುಗಳನ್ನ ಕೂಡಿಸೋಕೆ ಒಂದು ಸಮಯ,
ಅಪ್ಕೊಳ್ಳೋಕೆ ಒಂದು ಸಮಯ, ಅಪ್ಕೊಳ್ಳದೇ ಇರೋಕೆ ಒಂದು ಸಮಯ,
6 ಹುಡುಕೋಕೆ ಒಂದು ಸಮಯ, ಸಿಗಲ್ಲ ಅಂತ ಬಿಟ್ಟುಬಿಡೋಕೆ ಒಂದು ಸಮಯ,
ಇಟ್ಕೊಳ್ಳೋಕೆ ಒಂದು ಸಮಯ, ಬಿಸಾಡೋಕೆ ಒಂದು ಸಮಯ,
7 ಹರಿದು ಹಾಕೋಕೆ ಒಂದು ಸಮಯ,+ ಹೊಲಿಯೋಕೆ ಒಂದು ಸಮಯ,
ಸುಮ್ಮನಿರೋಕೆ ಒಂದು ಸಮಯ,+ ಮಾತಾಡೋಕೆ ಒಂದು ಸಮಯ,+
8 ಪ್ರೀತಿಸೋಕೆ ಒಂದು ಸಮಯ, ದ್ವೇಷಿಸೋಕೆ ಒಂದು ಸಮಯ,+
ಯುದ್ಧ ಮಾಡೋಕೆ ಒಂದು ಸಮಯ, ಶಾಂತಿಯಿಂದ ಇರೋಕೆ ಒಂದು ಸಮಯ.
9 ಕಷ್ಟಪಟ್ಟು ದುಡಿಯುವವನಿಗೆ ಏನು ಲಾಭ ಸಿಗುತ್ತೆ?+ 10 ಮನುಷ್ಯರನ್ನ ಕಾರ್ಯನಿರತರನ್ನಾಗಿ ಇಡೋಕೆ ದೇವರು ಅವ್ರಿಗೆ ಕೊಟ್ಟ ಕೆಲಸವನ್ನ ನಾನು ನೋಡಿದ್ದೀನಿ. 11 ದೇವರು ಪ್ರತಿಯೊಂದನ್ನ ಸರಿಯಾದ ಸಮಯದಲ್ಲಿ ಅಂದವಾಗಿ* ಮಾಡಿದ್ದಾನೆ.+ ಶಾಶ್ವತವಾಗಿ ಜೀವಿಸೋ ಆಸೆಯನ್ನ ದೇವರು ಮನುಷ್ಯರ ಹೃದಯದಲ್ಲಿ ಇಟ್ಟಿದ್ದಾನೆ. ಆದ್ರೂ ಅವ್ರಿಗೆ ಸತ್ಯ ದೇವರು ಮಾಡಿರೋ ಕೆಲಸವನ್ನ ಪೂರ್ತಿ* ಅರ್ಥ ಮಾಡ್ಕೊಳ್ಳೋಕೆ ಯಾವತ್ತೂ ಆಗಲ್ಲ.
12 ನಾನೊಂದು ತೀರ್ಮಾನಕ್ಕೆ ಬಂದಿದ್ದೀನಿ. ಅದೇನಂದ್ರೆ ಜೀವನದಲ್ಲಿ ಸಂತೋಷವಾಗಿ ಇರೋದು ಮತ್ತು ಒಳ್ಳೇದು ಮಾಡೋದು, ಇದಕ್ಕಿಂತ ಉತ್ತಮವಾದದ್ದು ಮನುಷ್ಯರಿಗೆ ಬೇರೇನೂ ಇಲ್ಲ.+ 13 ಅದ್ರ ಜೊತೆ ಪ್ರತಿಯೊಬ್ಬನು ತಿನ್ಲಿ, ಕುಡಿಲಿ, ತನ್ನೆಲ್ಲ ಶ್ರಮದ ಕೆಲಸದಲ್ಲಿ ಸಂತೋಷ ಪಡಿಲಿ. ಇದು ದೇವರ ಉಡುಗೊರೆ.+
14 ಸತ್ಯ ದೇವರು ಮಾಡೋದೆಲ್ಲ ಶಾಶ್ವತವಾಗಿ ಉಳಿಯುತ್ತೆ ಅಂತ ನಾನು ತಿಳ್ಕೊಂಡೆ. ಅವುಗಳಿಗೆ ಏನೂ ಕೂಡಿಸಬೇಕಾಗಿಲ್ಲ, ಅವುಗಳಿಂದ ಏನೂ ತೆಗಿಬೇಕಾಗಿಲ್ಲ. ಜನ್ರು ತನಗೆ ಭಯಪಡಬೇಕಂತ ಸತ್ಯ ದೇವರು ಇದನ್ನೆಲ್ಲ ಈ ರೀತಿ ಮಾಡಿದ್ದಾನೆ.+
15 ಏನು ನಡಿತಿದ್ಯೋ ಅದು ಈ ಹಿಂದೆ ನಡೆದಿರೋ ವಿಷ್ಯಗಳೇ, ಮುಂದೆ ನಡಿಯೋದು ಈಗ ನಡಿತಿರೋ ವಿಷ್ಯಗಳೇ.+ ಮನುಷ್ಯರು ಬೆನ್ನಟ್ಟಿರೋದನ್ನ* ಸತ್ಯ ದೇವರು ಹುಡುಕ್ತಾನೆ.
16 ಭೂಮಿಯಲ್ಲಿ* ನ್ಯಾಯ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ, ನೀತಿ ಇರಬೇಕಾದಲ್ಲಿ ಕೆಟ್ಟತನ ಇದ್ದಿದ್ದನ್ನ ಕೂಡ ನೋಡಿದ್ದೀನಿ.+ 17 ಹಾಗಾಗಿ ನಾನು ಮನಸ್ಸಲ್ಲೇ “ಸತ್ಯ ದೇವರು ನೀತಿವಂತರಿಗೂ ಕೆಟ್ಟವ್ರಿಗೂ ತೀರ್ಪು ಕೊಡ್ತಾನೆ.+ ಪ್ರತಿಯೊಂದು ವಿಷ್ಯಕ್ಕೂ ಪ್ರತಿಯೊಂದು ಕೆಲಸಕ್ಕೂ ಒಂದು ಸಮಯ ಇದೆ” ಅಂತ ಯೋಚಿಸಿದೆ.
18 “ಸತ್ಯ ದೇವರು ಮನುಷ್ಯರನ್ನ ಪರೀಕ್ಷಿಸಿ ಅವರು ಪ್ರಾಣಿಗಳ ತರ ಇದ್ದಾರೆ ಅಂತ ಅವ್ರಿಗೆ ತೋರಿಸ್ತಾನೆ” ಅಂತಾನೂ ನಾನು ಮನಸ್ಸಲ್ಲೇ ಯೋಚಿಸಿದೆ. 19 ಯಾಕಂದ್ರೆ ಮನುಷ್ಯರಿಗೂ ಪ್ರಾಣಿಗಳಿಗೂ ಕೊನೆಗೆ ಬರೋ ಗತಿ ಒಂದೇ. ಅದ್ರಲ್ಲಿ ಏನೂ ವ್ಯತ್ಯಾಸ ಇಲ್ಲ.+ ಪ್ರಾಣಿಗಳು ಸಾಯೋ ತರ ಮನುಷ್ಯರೂ ಸಾಯ್ತಾರೆ. ಮನುಷ್ಯರಲ್ಲೂ ಪ್ರಾಣಿಗಳಲ್ಲೂ ಇರೋದು ಜೀವಶಕ್ತಿನೇ.*+ ಪ್ರಾಣಿಗಳಿಗಿಂತ ಮನುಷ್ಯರು ಶ್ರೇಷ್ಠರಲ್ಲ, ಹಾಗಾಗಿ ಎಲ್ಲ ವ್ಯರ್ಥ. 20 ಎಲ್ಲಾ ಹೋಗೋದು ಒಂದೇ ಜಾಗಕ್ಕೆ.+ ಎಲ್ಲಾ ಮಣ್ಣಿಂದ ಆಯ್ತು,+ ಎಲ್ಲಾ ಮತ್ತೆ ಮಣ್ಣಿಗೇ ಸೇರುತ್ತೆ.+ 21 ಮನುಷ್ಯರ ಜೀವಶಕ್ತಿ ಮೇಲೆ ಹೋಗುತ್ತಾ, ಪ್ರಾಣಿಗಳ ಜೀವಶಕ್ತಿ ಕೆಳಗೆ ಮಣ್ಣಿಗೆ ಹೋಗುತ್ತಾ ಅಂತ ಯಾರಿಗಾದ್ರೂ ಗೊತ್ತಿದ್ಯಾ?+ 22 ಮನುಷ್ಯ ತನ್ನ ಕೆಲಸದಲ್ಲಿ ಸಂತೋಷ ಪಡಿಯೋದಕ್ಕಿಂತ ಬೇರೇನೂ ಒಳ್ಳೇದಿಲ್ಲ ಅಂತ ತಿಳ್ಕೊಂಡೆ.+ ಅದೇ ಅವನಿಗೆ ಸಿಗೋ ಪ್ರತಿಫಲ. ಯಾಕಂದ್ರೆ ಅವನು ಸತ್ತ ಮೇಲೆ ಏನಾಗುತ್ತೆ ಅಂತ ನೋಡೋ ಸಾಮರ್ಥ್ಯವನ್ನ ಅವನಿಗೆ ಕೊಡೋಕೆ ಯಾರಿಂದಾಗುತ್ತೆ?+
4 ಭೂಮಿ ಮೇಲೆ* ನಡಿತಿರೋ ಎಲ್ಲ ದಬ್ಬಾಳಿಕೆ ಕಡೆ ನಾನು ಮತ್ತೆ ಗಮನ ಹರಿಸಿದೆ. ದಬ್ಬಾಳಿಕೆಗೆ ಒಳಗಾದವರು ಕಣ್ಣೀರಿಡೋದನ್ನ ನೋಡಿದೆ, ಅವ್ರನ್ನ ಸಮಾಧಾನ ಮಾಡುವವರು ಯಾರೂ ಇರಲಿಲ್ಲ.+ ಅವ್ರ ಮೇಲೆ ದಬ್ಬಾಳಿಕೆ ಮಾಡುವವ್ರಿಗೆ ಅಧಿಕಾರ ಬಲ ಇದ್ದಿದ್ರಿಂದ ಯಾರೂ ಅವ್ರನ್ನ ಸಮಾಧಾನ ಮಾಡ್ತಾ ಇರಲಿಲ್ಲ. 2 ಇದನ್ನ ನೋಡಿ ಬದುಕಿರೋರಿಗಿಂತ ಸತ್ತವ್ರೇ ಮೇಲು ಅಂತ ನೆನಸಿದೆ.+ 3 ಅವರಿಬ್ರಿಗಿಂತ ಹುಟ್ಟದೇ ಇರುವವರು ಇನ್ನೂ ಮೇಲು.+ ಯಾಕಂದ್ರೆ ಅವರು ಭೂಮಿಯಲ್ಲಿ ನಡಿತಿರೋ ಅನ್ಯಾಯ ನೋಡಿರೋದೇ ಇಲ್ಲ.+
4 ಪೈಪೋಟಿಯಿದ್ದಾಗ ಜನ ಬೇರೆಯವ್ರನ್ನ ಮೀರಿಸೋಕೆ ಎಷ್ಟು ಕಷ್ಟಪಟ್ಟು, ಕೌಶಲದಿಂದ ಕೆಲಸ ಮಾಡ್ತಾರೆ ಅಂತ ನೋಡಿದ್ದೀನಿ.+ ಇದು ಕೂಡ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗೆ.
5 ಅವಿವೇಕಿ ಕೈಕಟ್ಟಿ ಕೂತು ತನ್ನ ಜೀವನನ ತಾನೇ ಹಾಳು ಮಾಡ್ಕೋತಾನೆ.+
6 ಅತಿಯಾಗಿ* ದುಡಿಯೋದಕ್ಕಿಂತ ಒಂದಿಷ್ಟು* ವಿಶ್ರಾಂತಿ ಪಡ್ಕೊಳ್ಳೋದೇ ಒಳ್ಳೇದು. ಅತಿಯಾಗಿ ದುಡಿಯೋದು ಗಾಳಿ ಹಿಡಿಯೋಕೆ ಓಡಿದ ಹಾಗೆ.+
7 ನಾನು ಭೂಮಿ ಮೇಲೆ ಇನ್ನೊಂದು ವ್ಯರ್ಥ ವಿಷ್ಯ ನೋಡ್ದೆ. ಅದೇನಂದ್ರೆ, 8 ಒಬ್ಬ ವ್ಯಕ್ತಿಯಿದ್ದ. ಅವನಿಗೆ ಮಕ್ಕಳು, ಅಣ್ಣತಮ್ಮಂದಿರು ಯಾರೂ ಇರಲಿಲ್ಲ. ಆದ್ರೂ ಹಗಲುರಾತ್ರಿ ದುಡಿತಿದ್ದ. ಎಷ್ಟು ಐಶ್ವರ್ಯ ಇದ್ರೂ ಅವನಿಗೆ ಸಾಕಂತ ಅನಿಸ್ತಾನೇ ಇರಲಿಲ್ಲ.+ ಆದ್ರೆ ಅವನು “ನಾನು ನನ್ನ ಸುಖಸಂತೋಷ ಎಲ್ಲಾ ಬಿಟ್ಟು ಯಾರಿಗೋಸ್ಕರ ಇಷ್ಟೆಲ್ಲ ಕಷ್ಟಪಟ್ಟು ದುಡಿತಿದ್ದೀನಿ?” ಅಂತ ಯಾವತ್ತಾದ್ರೂ ಕೇಳ್ಕೊಳ್ತಾನಾ?+ ಇದೂ ವ್ಯರ್ಥ, ಈ ರೀತಿ ಕೆಲಸದಿಂದ ಸಿಗೋದು ಬರೀ ದುಃಖನೇ.+
9 ಒಬ್ಬನಿಗಿಂತ ಇಬ್ರು ಉತ್ತಮ.+ ಅವ್ರ ಪರಿಶ್ರಮಕ್ಕೆ ಒಳ್ಳೇ ಪ್ರತಿಫಲ* ಸಿಗುತ್ತೆ. 10 ಒಬ್ಬ ಬಿದ್ರೆ ಏಳೋಕೆ ಇನ್ನೊಬ್ಬ ಸಹಾಯ ಮಾಡ್ತಾನೆ. ಆದ್ರೆ ಒಂಟಿಯಾಗಿ ಇರುವವನು ಬಿದ್ರೆ ಅವನನ್ನ ಎಬ್ಬಿಸೋಕೆ ಯಾರು ಇರ್ತಾರೆ?
11 ಅಷ್ಟೇ ಅಲ್ಲ ಇಬ್ರು ಒಟ್ಟಿಗೆ ಮಲಗಿದ್ರೆ ಅವ್ರಿಗೆ ಬೆಚ್ಚಗಾಗುತ್ತೆ. ಒಂಟಿಯಾಗಿ ಇರುವವನಿಗೆ ಹೇಗೆ ಬೆಚ್ಚಗಾಗುತ್ತೆ? 12 ಒಂಟಿಯಾಗಿ ಇರುವವನನ್ನ ಯಾರಾದ್ರೂ ಸೋಲಿಸಬಹುದು, ಇಬ್ರು ಇದ್ರೆ ಜೊತೆಯಾಗಿ ಎದುರಿಸಿ ನಿಲ್ಲಬಹುದು. ಮೂರು ಎಳೆಗಳಿರೋ ಹಗ್ಗ ಬೇಗ* ಕಿತ್ತು ಹೋಗಲ್ಲ.
13 ವಯಸ್ಸಾದ್ರೂ ಎಚ್ಚರಿಕೆಗೆ ಕಿವಿಗೊಡುವಷ್ಟು ಬುದ್ಧಿಯಿಲ್ಲದ+ ಅವಿವೇಕಿ ರಾಜನಿಗಿಂತ ವಿವೇಕಿ ಬಡ ಹುಡುಗನೇ ಮೇಲು.+ 14 ಅವನು* ಆ ರಾಜನ ರಾಜ್ಯದಲ್ಲಿ ಬಡವನಾಗಿ ಹುಟ್ಟಿದ್ರೂ+ ಜೈಲಿಂದ ಅರಮನೆಗೆ ಹೋಗಿ ರಾಜನಾದ.+ 15 ಈ ಭೂಮಿ ಮೇಲೆ ಬದುಕ್ತಿರೋ ಎಲ್ರನ್ನ ನಾನು ಗಮನಿಸಿದೆ. ಅಷ್ಟೇ ಅಲ್ಲ ಒಬ್ಬ ರಾಜನ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಬರೋ ಯುವ ರಾಜನಿಗೆ ಏನಾಗುತ್ತೆ ಅಂತಾನು ನೋಡ್ದೆ. 16 ಅವನಿಗೆ ಲೆಕ್ಕ ಇಲ್ಲದಷ್ಟು ಬೆಂಬಲಿಗರು ಇದ್ರೂ ಆಮೇಲೆ ಬರೋ ಜನ್ರಿಗೆ ಅವನು ಇಷ್ಟ ಆಗಲ್ಲ.+ ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.
5 ಸತ್ಯ ದೇವರ ಆಲಯಕ್ಕೆ ಹೋದಾಗೆಲ್ಲ ನೀನು ಜಾಗ್ರತೆಯಿಂದ ನಡ್ಕೊ.+ ಮೂರ್ಖರ ತರ ಬಲಿ ಅರ್ಪಿಸೋಕೆ ಹೋಗೋದಕ್ಕಿಂತ+ ಅಲ್ಲಿ ಹೇಳೋದನ್ನ ಕೇಳಿಸ್ಕೊಳ್ಳೋಕೆ ಹೋಗೋದು ಉತ್ತಮ.+ ಯಾಕಂದ್ರೆ ಮೂರ್ಖರಿಗೆ ತಾವು ಮಾಡ್ತಿರೋದು ಕೆಟ್ಟದು ಅಂತ ಗೊತ್ತಿಲ್ಲ.
2 ಸತ್ಯ ದೇವರ ಮುಂದೆ ನೀನು ಬಾಯಿಗೆ ಬಂದಿದ್ದೆಲ್ಲ ಹೇಳಬೇಡ, ದುಡುಕಿ ಮಾತಾಡ್ಲೂಬೇಡ.+ ಯಾಕಂದ್ರೆ ಸತ್ಯ ದೇವರು ಸ್ವರ್ಗದಲ್ಲಿ ಇದ್ದಾನೆ, ಆದ್ರೆ ನೀನು ಭೂಮಿಯಲ್ಲಿ ಇದ್ದೀಯ. ಹಾಗಾಗಿ ನಿನ್ನ ಮಾತು ಮಿತವಾಗಿ ಇರಬೇಕು.+ 3 ತಲೆತುಂಬಾ ಚಿಂತೆ ಇರುವವನಿಗೆ* ನೆಮ್ಮದಿ ಕೆಡಿಸೋ ಕನಸು ಬೀಳುತ್ತೆ.*+ ವಟವಟ ಅಂತ ಮಾತಾಡ್ತಿದ್ರೆ ಮೂರ್ಖತನದಿಂದ ಮಾತಾಡ್ತಿದ್ದಾನೆ ಅಂತ ಗೊತ್ತಾಗುತ್ತೆ.+ 4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+ 5 ಹರಕೆ ಹೊತ್ತು ಅದನ್ನ ತೀರಿಸದೇ ಇರೋದಕ್ಕಿಂತ ಹರಕೆ ಮಾಡದೇ ಇರೋದೇ ಒಳ್ಳೇದು.+ 6 ನಿನ್ನ ಬಾಯಿ ನಿನ್ನನ್ನ ಪಾಪಕ್ಕೆ ಸಿಕ್ಕಿಸದ ಹಾಗೆ ನೋಡ್ಕೊ.+ ‘ಬಾಯಿತಪ್ಪಿ ಹೇಳಿಬಿಟ್ಟೆ’ ಅಂತ ದೇವದೂತನ* ಮುಂದೆ ಹೇಳಬೇಡ.+ ನೀನಾಡಿದ ಮಾತುಗಳಿಂದಾಗಿ ಸತ್ಯ ದೇವರಿಗೆ ಕೋಪಬಂದು ನೀನು ಮಾಡಿದ ಕೆಲಸನ್ನೆಲ್ಲ ನಾಶಮಾಡೋ ಪರಿಸ್ಥಿತಿ ಯಾಕೆ ಬರಬೇಕು?+ 7 ತುಂಬ ಚಿಂತೆ ಇರುವವನಿಗೆ* ನೆಮ್ಮದಿ ಕೆಡಿಸೋ ಕನಸುಗಳು ಬೀಳೋ* ಹಾಗೇ+ ತುಂಬ ಮಾತುಗಳನ್ನ ಆಡೋದ್ರಿಂದ ಏನೂ ಪ್ರಯೋಜನ ಇಲ್ಲ. ಹಾಗಾಗಿ ಸತ್ಯ ದೇವರಿಗೆ ಭಯಪಡು.+
8 ನಿನ್ನ ಪ್ರದೇಶದಲ್ಲಿ ದೊಡ್ಡ ಅಧಿಕಾರಿಯೊಬ್ಬ ಬಡವನ ಮೇಲೆ ದಬ್ಬಾಳಿಕೆ ಮಾಡ್ತಿದ್ರೆ, ನೀತಿನ್ಯಾಯ ಮೀರಿ ನಡಿತಿದ್ರೆ ಆಶ್ಚರ್ಯ ಪಡಬೇಡ.+ ಯಾಕಂದ್ರೆ ಅವನಿಗಿಂತ ಮೇಲಿರೋ ಅಧಿಕಾರಿ ಅವನನ್ನ ಗಮನಿಸ್ತಾ ಇರ್ತಾನೆ. ಅವರಿಬ್ರ ಮೇಲೆ ಇನ್ನೂ ದೊಡ್ಡ ಅಧಿಕಾರಿಗಳು ಇದ್ದಾರೆ.
9 ಭೂಮಿಯ ಹುಟ್ಟುವಳಿಯನ್ನ ಎಲ್ರೂ ಪಾಲು ಮಾಡ್ಕೊಳ್ತಾರೆ. ರಾಜನ ಹೊಟ್ಟೆ ತುಂಬೋದು ಕೂಡ ಹೊಲದ ಬೆಳೆಯಿಂದಾನೇ.+
10 ಹಣದ* ವ್ಯಾಮೋಹ ಇರುವವನಿಗೆ ತನ್ನ ಹತ್ರ ಎಷ್ಟೇ ಹಣ ಇದ್ರೂ ತೃಪ್ತಿ ಆಗಲ್ಲ. ಸಂಪತ್ತಿನ ಮೋಹ ಇರುವವನಿಗೆ ಎಷ್ಟೇ ಆದಾಯ ಇದ್ರೂ ತೃಪ್ತಿ ಆಗಲ್ಲ.+ ಇದೂ ವ್ಯರ್ಥ.+
11 ಸೊತ್ತು ಹೆಚ್ಚಾದಾಗ ಅವುಗಳನ್ನ ತಿನ್ನುವವರೂ ಹೆಚ್ಚಾಗ್ತಾರೆ.+ ಅವುಗಳನ್ನ ಕಣ್ಣಿಂದ ನೋಡೋದು ಬಿಟ್ರೆ ಯಜಮಾನನಿಗೆ ಬೇರೆ ಯಾವ ಪ್ರಯೋಜನನೂ ಇಲ್ಲ.+
12 ದುಡಿಯುವವನು ಸ್ವಲ್ಪಾನೇ ಊಟ ಮಾಡ್ಲಿ ಜಾಸ್ತಿನೇ ಮಾಡ್ಲಿ ಹಾಯಾಗಿ ನಿದ್ದೆ ಮಾಡ್ತಾನೆ. ಆದ್ರೆ ಶ್ರೀಮಂತನಿಗೆ ತುಂಬ ಸಂಪತ್ತು ಇರೋದ್ರಿಂದ ನಿದ್ದೆ ಬರಲ್ಲ.
13 ಭೂಮಿ ಮೇಲೆ* ನಾನು ಅತಿ ದುರಂತಕರವಾದ ಒಂದು ವಿಷ್ಯ ನೋಡಿದ್ದೀನಿ. ಅದೇನಂದ್ರೆ ಐಶ್ವರ್ಯ ಕೂಡಿಸಿಟ್ಟವನಿಗೆ ಆ ಐಶ್ವರ್ಯದಿಂದಾನೇ ಹಾನಿಯಾಗುತ್ತೆ. 14 ಅವನು ವ್ಯಾಪಾರದಲ್ಲಿ ತೊಡಗಿ ಕೈ ಸುಟ್ಕೊಂಡು ತನ್ನ ಐಶ್ವರ್ಯನೆಲ್ಲಾ ಕಳ್ಕೊಳ್ತಾನೆ. ಅವನಿಗೊಬ್ಬ ಮಗ ಹುಟ್ಟಿದ್ರೆ ಆ ಮಗನಿಗೆ ಕೊಡೋಕೂ ಅವನ ಹತ್ರ ಏನೂ ಉಳಿದಿರಲ್ಲ.+
15 ಒಬ್ಬನು ತಾಯಿ ಗರ್ಭದಿಂದ ಬರುವಾಗ ಹೇಗೆ ಏನೂ ತಗೊಂಡು ಬರಲ್ವೋ ಹಾಗೇ ಹೋಗುವಾಗ್ಲೂ ಏನೂ ತಗೊಂಡು ಹೋಗಲ್ಲ.+ ಕಷ್ಟಪಟ್ಟು ದುಡಿದ ಆಸ್ತಿಯಲ್ಲಿ ಏನನ್ನೂ ಅವನು ಸತ್ತಾಗ ಹೊತ್ಕೊಂಡು ಹೋಗೋಕೆ ಆಗಲ್ಲ.+
16 ಅತಿ ದುರಂತಕರವಾದ ವಿಷ್ಯ ಇನ್ನೊಂದಿದೆ. ಅದೇನಂದ್ರೆ ಮನುಷ್ಯ ಬಂದ ಹಾಗೇ ಹೋಗಿಬಿಡ್ತಾನೆ. ಅಂದ್ಮೇಲೆ ಗಾಳಿ ಹಿಡಿಯೋಕೆ ತುಂಬ ಕಷ್ಟಪಟ್ಟು ಕೆಲಸ ಮಾಡೋದ್ರಿಂದ ಅವನಿಗೇನು ಪ್ರಯೋಜನ?+ 17 ಅಷ್ಟೇ ಅಲ್ಲ ಪ್ರತಿದಿನಾನೂ ಅವನು ಕತ್ತಲೆಯಲ್ಲಿ, ಬಹಳ ಹತಾಶೆಯಿಂದ, ಕೋಪದಿಂದ, ಕಾಯಿಲೆಯಿಂದ ಊಟ ಮಾಡ್ತಾನೆ.+
18 ನಾನು ನೋಡಿರೋ ಪ್ರಕಾರ ಒಬ್ಬ ಮಾಡಬೇಕಾದ ಒಳ್ಳೇ ಮತ್ತು ಸರಿಯಾದ ವಿಷ್ಯ ಒಂದಿದೆ. ಅದು ಯಾವುದಂದ್ರೆ ಸತ್ಯ ದೇವರು ಅವನಿಗೆ ಕೊಟ್ಟಿರೋ ಕೆಲವೇ ದಿನಗಳ ಬದುಕಲ್ಲಿ ತಿಂದು ಕುಡಿದು ಭೂಮಿ ಮೇಲಿನ ತನ್ನೆಲ್ಲ ಶ್ರಮದ ಕೆಲಸದಲ್ಲಿ ಸಂತೋಷ ಕಾಣೋದೇ.+ ಯಾಕಂದ್ರೆ ಅದೇ ಅವನಿಗೆ ಸಿಗೋ ಪ್ರತಿಫಲ.+ 19 ಅಷ್ಟೇ ಅಲ್ಲ ಸತ್ಯ ದೇವರು ಒಬ್ಬನಿಗೆ ಐಶ್ವರ್ಯವನ್ನೂ ಸ್ವತ್ತನ್ನೂ ಕೊಟ್ಟು+ ಅದನ್ನ ಆನಂದಿಸೋ ಸಾಮರ್ಥ್ಯ ಕೊಟ್ಟಿರುವಾಗ ಅವನು ಅವುಗಳನ್ನ ಸ್ವೀಕರಿಸಿ ತನ್ನ ಶ್ರಮದ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಬೇಕು. ಇದು ದೇವರ ಉಡುಗೊರೆ.+ 20 ಹೀಗೆ ಸತ್ಯ ದೇವರು ಅವನನ್ನ ಹರ್ಷಾನಂದದಲ್ಲಿ ತಲ್ಲೀನನಾಗಿರೋ ತರ+ ಮಾಡಿರೋದ್ರಿಂದ ಅವನಿಗೆ ತನ್ನ ನಾಲ್ಕು ದಿನದ ಬದುಕಿನ ಕಷ್ಟಗಳು ಗಮನಕ್ಕೇ ಬರಲ್ಲ.
6 ಇನ್ನೊಂದು ದುರಂತಕರ ಸಂಗತಿಯನ್ನ ನಾನು ಭೂಮಿ ಮೇಲೆ* ನೋಡಿದ್ದೀನಿ. ಅದು ಮನುಷ್ಯರಲ್ಲಿ ಸಾಮಾನ್ಯ. ಅದೇನಂದ್ರೆ, 2 ಮನುಷ್ಯ ಬಯಸಿದ್ದೆಲ್ಲ ಅವನಿಗೆ ಸಿಗಬೇಕಂತ ಸತ್ಯ ದೇವರು ಅವನಿಗೆ ಐಶ್ವರ್ಯ, ಸೊತ್ತು, ಘನತೆ ಕೊಡ್ತಾನೆ. ಆದ್ರೆ ಅವುಗಳನ್ನ ಅನುಭವಿಸೋ ಸಾಮರ್ಥ್ಯವನ್ನ ಅವನಿಗೆ ಕೊಡದೆ ಬೇರೊಬ್ಬ ಅದನ್ನ ಅನುಭವಿಸೋಕೆ ಬಿಡ್ತಾನೆ. ಇದು ವ್ಯರ್ಥ ಮತ್ತು ತುಂಬ ವೇದನಾಮಯ. 3 ಒಬ್ಬ ನೂರು ಮಕ್ಕಳನ್ನ ಪಡೆದು ತುಂಬ ವರ್ಷ ಬದುಕಿ ವಯಸ್ಸಾದ್ರೂ ಅವನು ಸಮಾಧಿ* ಸೇರೋ ಮುಂಚೆ ತನ್ನ ಜೀವನನ ಆನಂದಿಸದಿದ್ರೆ ಏನು ಪ್ರಯೋಜನ? ಅವನಿಗಿಂತ ಹುಟ್ಟುವಾಗ್ಲೇ ಸತ್ತಿರೋ ಮಗು ಮೇಲು ಅನ್ನೋದು ನನ್ನ ಅಭಿಪ್ರಾಯ.+ 4 ಆ ಮಗು ಹುಟ್ಟಿದ್ದು ವ್ಯರ್ಥ, ಅದು ಕತ್ತಲೆಯಲ್ಲಿ ಮರೆಯಾಗಿ ಹೋಯ್ತು. ಅದು ಹೆಸ್ರಿಲ್ಲದೆ ಕತ್ತಲೆಯಲ್ಲಿ ಹೂತುಹೋಯ್ತು. 5 ಆ ಮಗು ಸೂರ್ಯನನ್ನ ಯಾವತ್ತೂ ನೋಡ್ಲಿಲ್ಲ, ಅದಕ್ಕೆ ಏನೂ ಗೊತ್ತಿಲ್ಲ, ಆದ್ರೂ ಅದು ಆ ಮನುಷ್ಯನಿಗಿಂತ ಎಷ್ಟೋ ಮೇಲು.+ 6 ಒಬ್ಬ ಮನುಷ್ಯ ಎರಡು ಸಾವಿರ ವರ್ಷ ಬದುಕಿದ್ರೂ ಜೀವನದಲ್ಲಿ ಯಾವ ಸಂತೋಷನೂ ಅನುಭವಿಸದಿದ್ರೆ ಏನು ಪ್ರಯೋಜನ? ಕೊನೆಗೆ ಎಲ್ರೂ ಹೋಗೋದು ಒಂದೇ ಸ್ಥಳಕ್ಕೆ ಅಲ್ವಾ?+
7 ಮನುಷ್ಯ ಬೆವರು ಸುರಿಸಿ ದುಡಿಯೋದೆಲ್ಲ ತನ್ನ ಹೊಟ್ಟೆಗಾಗಿ.+ ಆದ್ರೂ ಅವನಿಗೆ ತೃಪ್ತಿ ಆಗಲ್ಲ. 8 ಹೀಗಿರುವಾಗ, ಅವಿವೇಕಿಗಿಂತ ವಿವೇಕಿ ಯಾವ ವಿಧದಲ್ಲಿ ಮೇಲು?+ ಬಡವನಿಗೆ ಜೀವನ ಮಾಡೋದು ಹೇಗಂತ ಗೊತ್ತಿರೋದ್ರಿಂದ ಏನು ಪ್ರಯೋಜನ ಆಗುತ್ತೆ? 9 ಬಯಕೆಗಳ ಬೆನ್ನು ಹತ್ತೋದಕ್ಕಿಂತ ಕಣ್ಮುಂದೆ ಇರೋದನ್ನ ಆನಂದಿಸೋದೇ ಮೇಲು. ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.
10 ಈಗ ಏನೇನು ಇದ್ಯೋ ಅದಕ್ಕೆಲ್ಲ ಮೊದಲೇ ಹೆಸ್ರಿಡಲಾಗಿದೆ, ಮನುಷ್ಯ ನಿಜವಾಗ್ಲೂ ಎಂಥವನಂತ ಬೆಳಕಿಗೆ ಬಂದಿದೆ. ಅವನು ತನಗಿಂತ ಬಲಶಾಲಿಯಾದವನ ಜೊತೆ ಕಾದಾಡೋಕೆ* ಆಗಲ್ಲ. 11 ಹೆಚ್ಚು ಮಾತಾಡಿದಷ್ಟು* ಅವು ಹೆಚ್ಚು ವ್ಯರ್ಥವಾಗಿ ಇರುತ್ತೆ, ಅವುಗಳಿಂದ ಮನುಷ್ಯನಿಗೆ ಯಾವ ಪ್ರಯೋಜನನೂ ಆಗಲ್ಲ. 12 ಮನುಷ್ಯ ತನ್ನ ಜೀವಮಾನದಲ್ಲಿ ಏನು ಮಾಡಿದ್ರೆ ಅತ್ಯುತ್ತಮ ಅಂತ ತಿಳ್ಕೊಳ್ಳೋಕೆ ಯಾರಿಗೆ ತಾನೇ ಸಾಧ್ಯ? ಅವನ ಅಲ್ಪ* ಜೀವಮಾನ ನೆರಳಿನ ತರ ಕಾಣದೆ ಹೋಗುತ್ತೆ.+ ಅವನು ಸತ್ತ ನಂತ್ರ ಭೂಮಿ ಮೇಲೆ ಏನಾಗುತ್ತೆ ಅಂತ ಅವನಿಗೆ ಹೇಳೋಕೆ ಯಾರಿಂದ ತಾನೇ ಸಾಧ್ಯ?
7 ಬೆಲೆಬಾಳೋ ಸುಗಂಧತೈಲಕ್ಕಿಂತ ಒಳ್ಳೇ ಹೆಸ್ರು ಉತ್ತಮ.+ ಹುಟ್ಟಿದ ದಿನಕ್ಕಿಂತ ಮರಣದ ದಿನನೇ ಮೇಲು. 2 ಔತಣದ ಮನೆಗೆ+ ಹೋಗೋದಕ್ಕಿಂತ ಸಾವಿನ ಮನೆಗೆ ಹೋಗೋದೇ ಒಳ್ಳೇದು. ಯಾಕಂದ್ರೆ ಇವತ್ತಲ್ಲ ನಾಳೆ ಎಲ್ಲ ಮನುಷ್ಯರಿಗೆ ಸಾವು ಬಂದೇ ಬರುತ್ತೆ, ಇದನ್ನ ಬದುಕಿರುವವರು ಮನಸ್ಸಲ್ಲಿಡಬೇಕು. 3 ನಗುಗಿಂತ ನೋವೇ ಉತ್ತಮ.+ ಯಾಕಂದ್ರೆ ಸಪ್ಪೆ ಮುಖ ಹೃದಯವನ್ನ ಸುಧಾರಿಸುತ್ತೆ.+ 4 ವಿವೇಕಿ ಸಾವಿನ ಮನೆಯಲ್ಲಿರೋಕೆ ಇಷ್ಟಪಡ್ತಾನೆ. ಆದ್ರೆ ಅವಿವೇಕಿ ಯಾವಾಗ್ಲೂ ಮಜಾ ಮಾಡ್ತಾ ಇರೋಕೆ ಇಷ್ಟಪಡ್ತಾನೆ.+
5 ಮೂಢರ ಬೆಣ್ಣೆ ಮಾತುಗಳನ್ನ ಕೇಳೋದಕ್ಕಿಂತ ವಿವೇಕಿಯ ಗದರಿಕೆ ಕೇಳೋದು ಉತ್ತಮ.+ 6 ಮೂಢನ ನಗು ಹಂಡೆಯ ಕೆಳಗೆ ಉರಿಯೋ ಮುಳ್ಳಿನ ಚಟಪಟ ಶಬ್ದದ ಹಾಗೆ.+ ಅದೂ ವ್ಯರ್ಥ. 7 ದಬ್ಬಾಳಿಕೆಗೆ ತುತ್ತಾದಾಗ ವಿವೇಕಿನೂ ಹುಚ್ಚನ ತರ ನಡ್ಕೊಳ್ತಾನೆ. ಲಂಚ ಒಬ್ಬನ ಹೃದಯನ ಹಾಳು ಮಾಡುತ್ತೆ.+
8 ಒಂದು ವಿಷ್ಯದ ಆರಂಭಕ್ಕಿಂತ ಅದ್ರ ಅಂತ್ಯನೇ ಉತ್ತಮ. ಗರ್ವ ಪಡೋದಕ್ಕಿಂತ ತಾಳ್ಮೆಯಿಂದ ಇರೋದೇ ಒಳ್ಳೇದು.+ 9 ತಟ್ಟಂತ ಕೋಪ ಮಾಡ್ಕೊಬೇಡ.+ ಯಾಕಂದ್ರೆ ಮೂಗಿನ ತುದಿಯಲ್ಲೇ ಕೋಪ ಇರೋದು ಮೂಢರಿಗೆ.*+
10 “ಈಗ ಇರೋದಕ್ಕಿಂತ ಹಿಂದೆ ನಾವು ತುಂಬ ಚೆನ್ನಾಗಿದ್ವಿ” ಅಂತ ನೀನು ಹೇಳಬೇಡ. ಹಾಗೆ ಹೇಳೋದು ಬುದ್ಧಿವಂತನ ಲಕ್ಷಣ ಅಲ್ಲ.+
11 ವಿವೇಕದ ಜೊತೆ ಆಸ್ತಿಪಾಸ್ತಿ ಇದ್ರೆ ಒಳ್ಳೇದು. ವಿವೇಕ ಬದುಕಿರುವವರಿಗೆ ಪ್ರಯೋಜನಕರ. 12 ಯಾಕಂದ್ರೆ, ಹಣ ಸಂರಕ್ಷಣೆ ಕೊಡೋ+ ತರ ವಿವೇಕನೂ ಸಂರಕ್ಷಣೆ ಕೊಡುತ್ತೆ.+ ಆದ್ರೆ ಹಣಕ್ಕಿಂತ ಜ್ಞಾನ, ವಿವೇಕ ಶ್ರೇಷ್ಠ. ಹೇಗಂದ್ರೆ ಅವು ಯಾರಲ್ಲಿ ಇರುತ್ತೋ ಅವ್ರ ಜೀವ ಉಳಿಯುತ್ತೆ.+
13 ಸತ್ಯ ದೇವರ ಕೆಲಸದ ಬಗ್ಗೆ ಯೋಚಿಸು, ಆತನು ಸೊಟ್ಟ ಮಾಡಿರೋದನ್ನ ನೆಟ್ಟಗೆ ಮಾಡೋಕೆ ಯಾರಿಂದಾದ್ರೂ ಸಾಧ್ಯನಾ?+ 14 ಒಳ್ಳೇ ದಿನದಲ್ಲಿ ಒಳ್ಳೇದನ್ನ ಮಾಡು.+ ಕಷ್ಟದ ದಿನದಲ್ಲಿ ಒಂದು ವಿಷ್ಯ ಅರ್ಥಮಾಡ್ಕೊ. ಅದೇನಂದ್ರೆ ಒಳ್ಳೇ ದಿನ, ಕೆಟ್ಟ ದಿನ, ಈ ಎರಡನ್ನೂ ದೇವರು ಅನುಮತಿಸಿದ್ದಾನೆ+ ಮತ್ತು ಮನುಷ್ಯರು ತಮಗೆ ಮುಂದೆ ಏನಾಗುತ್ತೆ ಅಂತ ತಿಳುಕೊಳ್ಳೋಕೆ* ಆಗದಂತೆ ಆತನು ಹೀಗೆ ಮಾಡಿದ್ದಾನೆ.+
15 ನನ್ನ ಅಲ್ಪ* ಜೀವನದಲ್ಲಿ+ ನಾನು ಎಲ್ಲ ನೋಡಿದ್ದೀನಿ. ನೀತಿಯಿಂದ ನಡಿಯೋ ನೀತಿವಂತ ಬೇಗ ಸಾಯೋದನ್ನ ನೋಡಿದ್ದೀನಿ,+ ದುಷ್ಟ ಕೆಟ್ಟದ್ದನ್ನ ಮಾಡಿದ್ರೂ ತುಂಬ ಕಾಲ ಬದುಕೋದನ್ನೂ ನೋಡಿದ್ದೀನಿ.+
16 ನೀನು ಅತಿ ನೀತಿವಂತ ಆಗಿರಬೇಡ,+ ದೊಡ್ಡ ವಿವೇಕಿ ಅಂತ ತೋರಿಸ್ಕೊಳ್ಳಬೇಡ.+ ನಿನ್ನ ಮೇಲೆ ನೀನೇ ಯಾಕೆ ನಾಶ ತಂದ್ಕೊಳ್ತೀಯಾ?+ 17 ನೀನು ತುಂಬ ಕೆಟ್ಟವನಾಗಿ ಇರಬೇಡ, ಮೂರ್ಖನಾಗಿರಲೂ ಬೇಡ.+ ನೀನು ಅಕಾಲ ಮರಣಕ್ಕೆ ಯಾಕೆ ತುತ್ತಾಗಬೇಕು?+ 18 ನಿನಗೆ ಕೊಟ್ಟಿರೋ ಮೊದಲ ಎಚ್ಚರಿಕೆಗೆ ಕಿವಿಗೊಡು, ಎರಡನೇ ಎಚ್ಚರಿಕೆಯನ್ನೂ ಕಡೆಗಣಿಸಬೇಡ.+ ಅದೇ ನಿನಗೆ ಒಳ್ಳೇದು. ದೇವಭಯ ಇರುವವನು ಅವೆರಡಕ್ಕೂ ಕಿವಿಗೊಡ್ತಾನೆ.
19 ವಿವೇಕ ಒಬ್ಬ ವಿವೇಕಿಯನ್ನ ಪಟ್ಟಣದಲ್ಲಿರೋ ಹತ್ತು ಬಲಶಾಲಿ ಗಂಡಸ್ರಿಗಿಂತ್ಲೂ ಶಕ್ತಿಶಾಲಿಯಾಗಿ ಮಾಡುತ್ತೆ.+ 20 ಯಾವಾಗ್ಲೂ ಒಳ್ಳೇದನ್ನೇ ಮಾಡ್ತಾ ಪಾಪನೇ ಮಾಡದಿರೋ ನೀತಿವಂತ ಭೂಮಿ ಮೇಲೆ ಯಾರೂ ಇಲ್ಲ.+
21 ಜನ ಹೇಳೋ ಪ್ರತಿಯೊಂದು ಮಾತನ್ನ ಮನಸ್ಸಿಗೆ ತಗೊಳ್ಳಬೇಡ.+ ಹಾಗೆ ತಗೊಂಡ್ರೆ ನಿನ್ನ ಸೇವಕ ನಿನ್ನನ್ನ ಕೆಟ್ಟದಾಗಿ ಬೈಯೋದು* ನಿನ್ನ ಕಿವಿಗೆ ಬೀಳಬಹುದು. 22 ಯಾಕಂದ್ರೆ ನೀನು ಸಹ ಬೇರೆಯವ್ರನ್ನ ಎಷ್ಟೋ ಸಾರಿ ಕೆಟ್ಟದ್ದಾಗಿ ಬೈದಿದ್ದೀಯ ಅನ್ನೋದಕ್ಕೆ ನಿನ್ನ ಹೃದಯನೇ ಸಾಕ್ಷಿ.+
23 ನಾನು ಇವೆಲ್ಲವನ್ನ ವಿವೇಕದಿಂದ ಪರೀಕ್ಷಿಸಿ “ವಿವೇಕಿ ಆಗ್ತೀನಿ” ಅಂತ ನಿರ್ಣಯಿಸಿದೆ. ಆದ್ರೆ ಅದು ನನ್ನ ಕೈಗೆ ಎಟುಕದೆ ಇರುವಂಥದ್ದು. 24 ಇಲ್ಲಿ ತನಕ ಆಗಿರೋದೆಲ್ಲ ನನ್ನ ಗ್ರಹಿಕೆಗೆ ಮೀರಿದ್ದು ಮತ್ತು ತುಂಬ ಗಾಢವಾದದ್ದು. ಅದನ್ನ ಅರ್ಥ ಮಾಡ್ಕೊಳ್ಳೋಕೆ ಯಾರಿಂದನೂ ಆಗಲ್ಲ.+ 25 ವಿವೇಕದ ಬಗ್ಗೆ ಮತ್ತು ಪ್ರತಿಯೊಂದರ ಹಿಂದಿರೋ ಕಾರಣದ ಬಗ್ಗೆ ತಿಳ್ಕೊಳ್ಳೋಕೆ, ಅದನ್ನ ಪರಿಶೋಧಿಸೋಕೆ, ಹುಡುಕೋಕೆ ನಾನು ನಿರ್ಧರಿಸಿದೆ. ಅಷ್ಟೇ ಅಲ್ಲ ಅವಿವೇಕ ಎಷ್ಟು ಕೆಟ್ಟದ್ದು, ಹುಚ್ಚುತನ ಎಷ್ಟು ಮೂರ್ಖತನವಾಗಿದೆ ಅಂತ ಅರ್ಥ ಮಾಡ್ಕೊಳ್ಳೋಕೆ ನಿಶ್ಚಯಿಸಿದೆ.+ 26 ಆಮೇಲೆ ಮರಣಕ್ಕಿಂತ ಕೆಟ್ಟದ್ದು ಒಂದಿದೆ, ಅದು ಬೇಟೆಗಾರನ ಬಲೆಯಂತಿರೋ ಸ್ತ್ರೀನೇ ಅಂತ ನನಗೆ ಗೊತ್ತಾಯ್ತು. ಅವಳ ಹೃದಯ ಮೀನು ಹಿಡಿಯೋ ಬಲೆಗಳ ತರ ಇದೆ. ಅವಳ ಕೈಗಳು ಸೆರೆಯ ಬೇಡಿಗಳು. ಸತ್ಯ ದೇವರನ್ನ ಮೆಚ್ಚಿಸುವವನು ಅವಳ ಕೈಯಿಂದ ತಪ್ಪಿಸಿಕೊಳ್ತಾನೆ,+ ಆದ್ರೆ ಅವಳು ಪಾಪಿಯನ್ನ ಸೆರೆಹಿಡಿತಾಳೆ.+
27 ಪ್ರಸಂಗಿ+ ಹೀಗನ್ನುತ್ತಾನೆ: “ನೋಡು, ನಾನು ಒಂದರ ನಂತ್ರ ಒಂದನ್ನ ಪರೀಕ್ಷಿಸಿ ಒಂದು ವಿಷ್ಯ ಕಂಡುಹಿಡಿದು ಒಂದು ನಿರ್ಣಯಕ್ಕೆ ಬಂದೆ. ಅದೇನಂದ್ರೆ 28 ನಾನು ಪ್ರಯತ್ನಬಿಡದೆ ಹುಡುಕಿದ್ದು ನನಗೆ ಸಿಗಲಿಲ್ಲ. ಸಾವಿರ ಪುರುಷರಲ್ಲಿ ನೀತಿವಂತನಾದ ಒಬ್ಬ ಪುರುಷ ನನಗೆ ಸಿಕ್ಕಿದ್ರೂ ಸಾವಿರ ಸ್ತ್ರೀಯರಲ್ಲಿ ನೀತಿವಂತಳಾದ ಒಬ್ಬ ಸ್ತ್ರೀನೂ ಸಿಗಲಿಲ್ಲ. 29 ನಾನು ಕಂಡುಹಿಡಿದದ್ದು ಇಷ್ಟನ್ನೇ: ಸತ್ಯ ದೇವರು ಮಾನವರನ್ನ ನೀತಿವಂತರನ್ನಾಗಿ ಸೃಷ್ಟಿಮಾಡಿದನು,+ ಆದ್ರೆ ಅವರು ತಮ್ಮದೇ ಆದ ದಾರಿಗಳನ್ನ ಹುಡುಕಿ ಅವುಗಳಲ್ಲಿ ನಡೆದಿದ್ದಾರೆ.”+
8 ವಿವೇಕಿ ತರ ಯಾರಿದ್ದಾರೆ? ಒಂದು ಸಮಸ್ಯೆಗೆ ಪರಿಹಾರ* ಏನಂತ ವಿವೇಕಿಯನ್ನ ಬಿಟ್ಟು ಬೇರೆ ಯಾರಿಗೆ ಗೊತ್ತು? ಒಬ್ಬನಲ್ಲಿ ವಿವೇಕ ಇದ್ರೆ ಅದು ಅವನ ಮುಖಕ್ಕೆ ಕಳೆ ತರುತ್ತೆ, ಒರಟು ಮುಖವನ್ನ ನಗುವಿಂದ ಅರಳಿಸುತ್ತೆ.
2 ನಾನು ಹೇಳೋದು ಏನಂದ್ರೆ “ದೇವರಿಗೆ ಮಾಡಿದ ಆಣೆನ+ ಮನಸ್ಸಲ್ಲಿಟ್ಟು ರಾಜನ ಅಪ್ಪಣೆಗಳಿಗೆ ವಿಧೇಯನಾಗು.+ 3 ನೀನು ರಾಜನ ಸನ್ನಿಧಿಯಲ್ಲಿ ಇರುವಾಗ ಅವಸರಪಟ್ಟು ಅಲ್ಲಿಂದ ಹೋಗಬೇಡ.+ ಕೆಟ್ಟದ್ದು ಯಾವುದೇ ಇದ್ರೂ ಅದ್ರ ಪಕ್ಷವಹಿಸಬೇಡ.+ ಯಾಕಂದ್ರೆ ರಾಜ ತಾನು ನೆನಸಿದ್ದನ್ನ ಮಾಡಿಬಿಡ್ತಾನೆ. 4 ರಾಜ ಹೇಳಿದ್ದೇ ನಡಿಯೋದ್ರಿಂದ+ ‘ನೀನು ಯಾಕೆ ಹೀಗೆ ಮಾಡ್ತಿದ್ದೀಯ’ ಅಂತ ಅವನನ್ನ ಕೇಳೋಕೆ ಯಾರಿಂದಾದ್ರೂ ಆಗುತ್ತಾ?”
5 ಆಜ್ಞೆಗನುಸಾರ ನಡೆಯುವವನಿಗೆ ಹಾನಿ ಆಗಲ್ಲ.+ ಪ್ರತಿಯೊಂದು ವಿಷ್ಯವನ್ನ ಯಾವ ಸಮಯದಲ್ಲಿ, ಯಾವ ತರ ಮಾಡಬೇಕಂತ ವಿವೇಕಿಗೆ ಗೊತ್ತಿರುತ್ತೆ.+ 6 ಮನುಷ್ಯರ ಸಮಸ್ಯೆಗಳು ಲೆಕ್ಕ ಇಲ್ಲದಷ್ಟು ಇರೋದ್ರಿಂದ ಪ್ರತಿಯೊಂದು ವಿಷ್ಯವನ್ನ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಮಾಡಬೇಕು.+ 7 ನಾಳೆ ಏನಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ ಅಂದ್ಮೇಲೆ ಅದು ಹೇಗೆ ಆಗುತ್ತೆ ಅಂತ ಹೇಳೋಕೆ ಯಾರಿಗಾದ್ರೂ ಆಗುತ್ತಾ?
8 ಒಬ್ಬನಿಗೆ ತನ್ನ ಜೀವಶಕ್ತಿ* ಮೇಲೆ ಹೇಗೆ ಹಿಡಿತ ಇಲ್ವೋ ಹಾಗೇ ತನ್ನ ಸಾವಿನ ದಿನದ ಮೇಲೂ ಹಿಡಿತ ಇಲ್ಲ.+ ಯುದ್ಧ ನಡಿತಿರೋವಾಗ ಹೇಗೆ ಒಬ್ಬ ಸೈನಿಕ ಅದನ್ನ ಬಿಟ್ಟುಬರೋಕೆ ಆಗಲ್ವೋ ಹಾಗೇ ಕೆಟ್ಟದ್ದನ್ನ ಮಾಡುವವನು ಅದ್ರ ಪರಿಣಾಮಗಳಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.*
9 ನಾನು ಇದೆಲ್ಲವನ್ನ ತಿಳ್ಕೊಂಡಿದ್ದು ಭೂಮಿ ಮೇಲೆ* ನಡಿತಿರೋ ಎಲ್ಲದಕ್ಕೂ ಗಮನಕೊಟ್ಟಾಗಲೇ. ಆ ಸಮಯದಲ್ಲೆಲ್ಲ ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ ಅನ್ನೋದನ್ನ ನೋಡಿದೆ.+ 10 ಪವಿತ್ರ ಸ್ಥಳಕ್ಕೆ ಹೋಗ್ತಾ ಬರ್ತಾ ಇದ್ದ ಕೆಟ್ಟವ್ರನ್ನ ಸಮಾಧಿ ಮಾಡಿದ್ದನ್ನ ನೋಡಿದೆ. ಆದ್ರೆ ಅವರು ಯಾವ ಪಟ್ಟಣದಲ್ಲಿ ಕೆಟ್ಟ ಕೆಲಸಗಳನ್ನ ಮಾಡಿದ್ರೋ ಆ ಪಟ್ಟಣದ ಜನ್ರು ಅವ್ರನ್ನ ಬೇಗ ಮರೆತುಬಿಟ್ರು.+ ಇದೂ ವ್ಯರ್ಥ.
11 ಕೆಟ್ಟದ್ದನ್ನ ಮಾಡಿದಾಗ ತಕ್ಷಣ ಶಿಕ್ಷೆ ಸಿಗದ ಕಾರಣ+ ಮನುಷ್ಯರು ಕೆಟ್ಟದ್ದನ್ನ ಮಾಡೋಕೆ ಇನ್ನೂ ಧೈರ್ಯ ಮಾಡ್ತಾರೆ.+ 12 ಪಾಪಿ ನೂರು ಕೆಟ್ಟ ಕೆಲಸ ಮಾಡಿ ತುಂಬ ಕಾಲ ಬದುಕಬಹುದು. ಆದ್ರೆ ಒಳ್ಳೇದಾಗೋದು ಸತ್ಯ ದೇವರಿಗೆ ಭಯ ಪಡುವವ್ರಿಗೇ ಅಂತ ನನಗೆ ಗೊತ್ತು. ಯಾಕಂದ್ರೆ ಅವರು ಆತನಿಗೆ ನಿಜವಾಗ್ಲೂ ಭಯಪಡ್ತಾರೆ.+ 13 ಆದ್ರೆ ಕೆಟ್ಟವನಿಗೆ ಒಳ್ಳೇದಾಗಲ್ಲ.+ ನೆರಳಿನ ತರ ಕಣ್ಮರೆಯಾಗೋ ಅವನ ಜೀವನವನ್ನ ಜಾಸ್ತಿ ಮಾಡೋಕೆ ಸಹ ಅವನಿಂದ ಆಗಲ್ಲ.+ ಯಾಕಂದ್ರೆ ಅವನು ದೇವರಿಗೆ ಭಯಪಡಲ್ಲ.
14 ಭೂಮಿ ಮೇಲೆ ನಡಿಯೋ ವ್ಯರ್ಥ* ವಿಷ್ಯ ಒಂದಿದೆ. ಅದೇನಂದ್ರೆ ನೀತಿವಂತರನ್ನ ಕೆಟ್ಟ ಕೆಲಸ ಮಾಡಿದವ್ರ ತರ ನೋಡ್ತಾರೆ,+ ಕೆಟ್ಟವರನ್ನ ನೀತಿಯಿಂದ ನಡ್ಕೊಂಡವ್ರ ತರ ನೋಡ್ತಾರೆ.+ ಇದೂ ವ್ಯರ್ಥ ಅಂತ ನನ್ನ ಅನಿಸಿಕೆ.
15 ಹಾಗಾಗಿ ಮನುಷ್ಯ ಸಂತೋಷದಿಂದ ಇರಬೇಕನ್ನೋದೇ ನನ್ನ ಕಿವಿಮಾತು.+ ಅವನಿಗೆ ಸತ್ಯ ದೇವರು ಈ ಭೂಮಿ ಮೇಲೆ ಕೊಟ್ಟಿರೋ ಜೀವಮಾನದಲ್ಲೆಲ್ಲ ಕಷ್ಟಪಟ್ಟು ಕೆಲಸ ಮಾಡ್ತಾ ತಿಂದು, ಕುಡಿದು, ಸಂತೋಷವಾಗಿ ಇರಬೇಕು.+ ಇದಕ್ಕಿಂತ ಉತ್ತಮವಾದದ್ದು ಬೇರೊಂದಿಲ್ಲ.
16 ನಾನು ಹಗಲೂರಾತ್ರಿ ನಿದ್ದೆ ಮಾಡದೆ* ವಿವೇಕ ಪಡ್ಕೊಬೇಕಂತ ಮತ್ತು ಭೂಮಿ ಮೇಲೆ ನಡಿಯೋ ಎಲ್ಲ ಕೆಲಸಗಳಿಗೆ ಗಮನಕೊಡಬೇಕಂತ ತೀರ್ಮಾನ ಮಾಡ್ದೆ.+ 17 ಸತ್ಯ ದೇವರ ಎಲ್ಲ ಕೆಲಸಗಳಿಗೆ ಗಮನಕೊಟ್ಟೆ, ಆಮೇಲೆ ನಾನು ತಿಳ್ಕೊಂಡಿದ್ದು ಏನಂದ್ರೆ ಆಕಾಶದ ಕೆಳಗೆ ನಡಿಯೋ ವಿಷ್ಯಗಳನ್ನ ಮನುಷ್ಯರಿಂದ ಅರ್ಥ ಮಾಡ್ಕೊಳ್ಳೋಕೆ ಆಗಲ್ಲ.+ ಅವರು ಎಷ್ಟೇ ಪ್ರಯತ್ನಪಟ್ರೂ ಅದು ಅವ್ರಿಂದ ಆಗಲ್ಲ. ಅವುಗಳನ್ನ ತಿಳ್ಕೊಳ್ಳುವಷ್ಟು ವಿವೇಕ ತಮ್ಮಲ್ಲಿದೆ ಅಂತ ಹೇಳ್ಕೊಂಡ್ರೂ ಅವುಗಳನ್ನ ನಿಜವಾಗ್ಲೂ ಅರ್ಥ ಮಾಡ್ಕೊಳ್ಳೋಕೆ ಅವ್ರಿಂದಾಗಲ್ಲ!+
9 ಹಾಗಾಗಿ ನಾನು ಈ ಎಲ್ಲ ವಿಷ್ಯಗಳ ಬಗ್ಗೆ ತುಂಬಾ ಯೋಚ್ನೆ ಮಾಡಿ ಒಂದು ತೀರ್ಮಾನಕ್ಕೆ ಬಂದೆ. ಏನಂದ್ರೆ ನೀತಿವಂತರೂ ವಿವೇಕಿಗಳೂ ಸತ್ಯ ದೇವರ ಕೈಯಲ್ಲಿದ್ದಾರೆ, ಅವ್ರ ಕೆಲಸಗಳೂ ಆತನ ಕೈಯಲ್ಲಿವೆ.+ ಮನುಷ್ಯರಿಗೆ ತಮ್ಮ ಕಾಲಕ್ಕಿಂತ ಮುಂಚೆ ಇದ್ದ ಜನ್ರಲ್ಲಿ ಎಷ್ಟು ಪ್ರೀತಿ ಇತ್ತು, ಎಷ್ಟು ದ್ವೇಷ ಇತ್ತು ಅಂತ ಗೊತ್ತೇ ಇಲ್ಲ. 2 ನೀತಿವಂತನಿಗೂ ಕೆಟ್ಟವನಿಗೂ+ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಬಲಿ ಅರ್ಪಿಸುವವನಿಗೂ ಬಲಿ ಅರ್ಪಿಸದವನಿಗೂ ಕೊನೇಲಿ ಬರೋದು ಒಂದೇ ಗತಿ.+ ಪಾಪಿಗೆ ಬರೋ ಗತಿನೇ ಒಳ್ಳೆಯವನಿಗೂ ಬರುತ್ತೆ. ದುಡುಕಿ ಆಣೆ ಮಾಡುವವನಿಗೆ ಬರೋ ಗತಿನೇ ಆಣೆ ಮಾಡದವನಿಗೂ ಬರುತ್ತೆ. 3 ಭೂಮಿ ಮೇಲೆ* ನಡಿಯೋ ಒಂದು ದುಃಖದ ವಿಷ್ಯ ಏನಂದ್ರೆ, ಎಲ್ರಿಗೂ ಒಂದೇ ಗತಿ ಬರೋದ್ರಿಂದ+ ಮನುಷ್ಯರ ಮನಸ್ಸಲ್ಲಿ ಕೆಟ್ಟದ್ದೇ ತುಂಬ್ಕೊಂಡಿದೆ. ಅವರು ತಮ್ಮ ಜೀವನಪೂರ್ತಿ ಮೂರ್ಖತನದಿಂದ ನಡ್ಕೊಳ್ತಾರೆ, ಕೊನೆಗೆ ಸಾಯ್ತಾರೆ!
4 ಜೀವದಿಂದ ಇರುವವ್ರಿಗೆ ಮಾತ್ರ ನಿರೀಕ್ಷೆ ಇದೆ. ಯಾಕಂದ್ರೆ ಸತ್ತ ಸಿಂಹಕ್ಕಿಂತ ಬದುಕಿರೋ ನಾಯಿನೇ ಮೇಲು ಅಲ್ವಾ?+ 5 ಬದುಕಿರುವವ್ರಿಗೆ ಒಂದಿನ ತಾವು ಸಾಯ್ತೀವಂತ ಗೊತ್ತಿರುತ್ತೆ.+ ಆದ್ರೆ ಸತ್ತವ್ರಿಗೆ ಏನೂ ಗೊತ್ತಿರಲ್ಲ.+ ಅವರಿಗೆ ಇನ್ನು ಮುಂದೆ ಯಾವ ಪ್ರತಿಫಲನೂ ಸಿಗಲ್ಲ. ಅವ್ರ ನೆನಪು ಜನ್ರ ಮನಸ್ಸಿಂದ ಅಳಿಸಿಹೋಗುತ್ತೆ.+ 6 ಅಷ್ಟೇ ಅಲ್ಲ ಅವ್ರಲ್ಲಿದ್ದ ಪ್ರೀತಿ, ದ್ವೇಷ, ಹೊಟ್ಟೆಕಿಚ್ಚು ಸಹ ಅವ್ರ ಜೊತೆ ಮಣ್ಣಾಗುತ್ತೆ. ಭೂಮಿ ಮೇಲೆ ನಡೆಯೋ ಯಾವ ವಿಷ್ಯದಲ್ಲೂ ಅವ್ರಿಗೆ ಪಾಲಿಲ್ಲ.+
7 ಹೋಗು, ನಿನ್ನ ಊಟವನ್ನ ಸಂತೋಷದಿಂದ ತಿನ್ನು, ದ್ರಾಕ್ಷಾಮದ್ಯವನ್ನ ಉಲ್ಲಾಸದಿಂದ ಕುಡಿ.+ ಯಾಕಂದ್ರೆ ನಿನ್ನ ಕೆಲಸಗಳನ್ನ ಸತ್ಯ ದೇವರು ಮೆಚ್ಚಿದ್ದಾನೆ.+ 8 ನೀನು ಹಾಕೋ ಬಟ್ಟೆಗಳು ಯಾವಾಗ್ಲೂ ಬೆಳ್ಳಗಿರಲಿ.* ನಿನ್ನ ತಲೆಗೆ ಯಾವಾಗ್ಲೂ ಎಣ್ಣೆ ಹಚ್ಕೊ.+ 9 ದೇವರು ನಿನಗೆ ಈ ಭೂಮಿಯಲ್ಲಿ ಕೊಟ್ಟಿರೋ ಅಲ್ಪ* ಜೀವಮಾನದ ಎಲ್ಲ ದಿನಗಳನ್ನ ನಿನ್ನ ಪ್ರೀತಿಯ ಪತ್ನಿ ಜೊತೆ ಆನಂದಿಸು.+ ಯಾಕಂದ್ರೆ ನಿನ್ನ ಈ ಅಲ್ಪ* ಜೀವನದಲ್ಲಿ ನಿನಗೆ ಸಿಗೋ ಪಾಲು ಅದೇ ಮತ್ತು ಭೂಮಿ ಮೇಲೆ ನಿನ್ನ ಶ್ರಮದ ಕೆಲಸಕ್ಕೆ ಸಿಗೋ ಪ್ರತಿಫಲ ಅದೇ.+ 10 ನಿನ್ನ ಕೈಯಿಂದ ಆಗೋ ಕೆಲಸನೆಲ್ಲ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಯಾಕಂದ್ರೆ ನೀನು ಸಮಾಧಿ* ಸೇರಿದ ಮೇಲೆ ಅಲ್ಲಿ ಯಾವುದೇ ಕೆಲಸ ಮಾಡಕ್ಕಾಗಲ್ಲ, ಯೋಚ್ನೆ ಮಾಡಕ್ಕಾಗಲ್ಲ, ಜ್ಞಾನ ಆಗ್ಲಿ ವಿವೇಕ ಆಗ್ಲಿ ಪಡಿಯೋಕೆ ಆಗಲ್ಲ.+
11 ಭೂಮಿ ಮೇಲೆ ನಾನು ಇನ್ನೊಂದು ವಿಷ್ಯನೂ ನೋಡಿದ್ದೀನಿ. ಅದೇನಂದ್ರೆ ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, ಶೂರರಿಗೆ ಯಾವಾಗ್ಲೂ ಜಯ ಸಿಗಲ್ಲ,+ ವಿವೇಕಿಗಳಿಗೆ ಆಹಾರ ಯಾವಾಗ್ಲೂ ಸಿಗಲ್ಲ, ಬುದ್ಧಿವಂತರ ಹತ್ರ ಸಿರಿಸಂಪತ್ತು ಯಾವಾಗಲೂ ಇರಲ್ಲ,+ ಜ್ಞಾನಿಗಳಿಗೆ ಯಶಸ್ಸು ಯಾವಾಗ್ಲೂ ಸಿಗಲ್ಲ.+ ಯಾಕಂದ್ರೆ ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ. 12 ಮನುಷ್ಯನಿಗೆ ತಾನು ಯಾವಾಗ ಸಾಯ್ತೀನಂತ ಗೊತ್ತಿರಲ್ಲ.+ ಜೀವಕ್ಕೆ ಕುತ್ತು ತರೋ ಬಲೆಯಲ್ಲಿ ಮೀನುಗಳು ಸಿಕ್ಕಿಬೀಳೋ ಹಾಗೆ, ಬೋನಲ್ಲಿ ಪಕ್ಷಿಗಳು ಸಿಕ್ಕಿಬೀಳೋ ಹಾಗೆ, ಇದ್ದಕ್ಕಿದ್ದಂತೆ ಅವಗಢ ಸಂಭವಿಸಿದಾಗ ಮನುಷ್ಯರು ಸಿಕ್ಕಿಬೀಳ್ತಾರೆ, ಅದ್ರಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.
13 ಭೂಮಿಯಲ್ಲಿ ನಾನು ವಿವೇಕದ ಬಗ್ಗೆ ಇನ್ನೊಂದು ಮನಮುಟ್ಟೋ ವಿಷ್ಯವನ್ನ ಸಹ ಗಮನಿಸಿದೆ. ಅದೇನಂದ್ರೆ 14 ಒಂದು ಚಿಕ್ಕ ಪಟ್ಟಣ ಇತ್ತು. ಕೆಲವೇ ಜನ ಅಲ್ಲಿದ್ರು. ಒಬ್ಬ ಬಲಿಷ್ಠ ರಾಜ ಆ ಪಟ್ಟಣದ ವಿರುದ್ಧ ಬಂದು ಅದಕ್ಕೆ ಮುತ್ತಿಗೆ ಹಾಕಿದ. 15 ಆ ಪಟ್ಟಣದಲ್ಲಿ ಒಬ್ಬ ಬಡವ ಇದ್ದ, ಅವನು ತುಂಬ ಬುದ್ಧಿವಂತ. ಅವನು ಬುದ್ಧಿ ಉಪಯೋಗಿಸಿ ಪಟ್ಟಣವನ್ನ ಕಾಪಾಡಿದ. ಆದ್ರೆ ಆ ಬಡವನನ್ನ ಎಲ್ರೂ ಮರೆತುಬಿಟ್ರು.+ 16 ಹಾಗಾಗಿ ನಾನು ಮನಸ್ಸಲ್ಲೇ ‘ಶೌರ್ಯಕ್ಕಿಂತ ವಿವೇಕನೇ ಶ್ರೇಷ್ಠ.+ ಹಾಗಿದ್ರೂ ಬಡವನಲ್ಲಿರೋ ವಿವೇಕನ ಕಡೆಗಣಿಸಲಾಗುತ್ತೆ. ಅವನ ಮಾತಿಗೆ ಯಾರೂ ಬೆಲೆಕೊಡಲ್ಲ’+ ಅಂದ್ಕೊಂಡೆ.
17 ಮೂರ್ಖರನ್ನ ಆಳುವವನ ಕಿರಿಚಾಟಕ್ಕೆ ಕಿವಿಗೊಡೋದಕ್ಕಿಂತ ವಿವೇಕಿಯ ಮೃದು ಮಾತಿಗೆ ಕಿವಿಗೊಡೋದೇ ಉತ್ತಮ.
18 ವಿವೇಕ ಯುದ್ಧದ ಆಯುಧಗಳಿಗಿಂತ ಶ್ರೇಷ್ಠ. ಆದ್ರೆ ತುಂಬ ಒಳ್ಳೇ ಕೆಲಸಗಳನ್ನ ಹಾಳು ಮಾಡೋಕೆ ಒಬ್ಬ ಪಾಪಿ ಸಾಕು.+
10 ಸತ್ತ ನೊಣಗಳಿಂದಾಗಿ ಸುಗಂಧ ತೈಲ ಗಬ್ಬುನಾತ ಹಿಡಿದು ನೊರೆ ಬರೋ ಹಾಗೆ ಸ್ವಲ್ಪ ಮೂರ್ಖತನ ವಿವೇಕಿಯ ತುಂಬ ಗೌರವ ಇರೋ ಹೆಸ್ರನ್ನ ಹಾಳು ಮಾಡುತ್ತೆ.+
2 ವಿವೇಕಿಯ ಹೃದಯ ಅವನನ್ನ ಸರಿ ದಾರಿಯಲ್ಲಿ ನಡಿಸುತ್ತೆ. ಆದ್ರೆ ಅವಿವೇಕಿಯ ಹೃದಯ ತಪ್ಪಾದ ದಾರಿಯಲ್ಲಿ ನಡಿಸುತ್ತೆ.+ 3 ಮೂರ್ಖ ಯಾವ ದಾರಿಯಲ್ಲಿ ಹೋದ್ರೂ ಬುದ್ಧಿ ಇಲ್ಲದವನ ತರ ನಡ್ಕೊಳ್ತಾನೆ+ ಮತ್ತು ತಾನು ಮೂರ್ಖ ಅಂತ ಎಲ್ರಿಗೂ ತೋರಿಸ್ಕೊಡ್ತಾನೆ.+
4 ರಾಜ ನಿನ್ನ ಮೇಲೆ ಕೋಪ ಕಾರಿದ್ರೆ ನಿನ್ನ ಸ್ಥಳ ಬಿಟ್ಟು ಹೋಗಬೇಡ.+ ಯಾಕಂದ್ರೆ ನೀನು ಶಾಂತವಾಗಿದ್ರೆ ದೊಡ್ಡ ಪಾಪಗಳನ್ನ ತಡಿಬಹುದು.+
5 ನಾನು ಭೂಮಿ ಮೇಲೆ* ಆಗೋ ದುಃಖದ ಒಂದು ವಿಷ್ಯ ನೋಡಿದ್ದೀನಿ. ಅದು ಅಧಿಕಾರದಲ್ಲಿ ಇರುವವರು ಮಾಡೋ ಒಂದು ತಪ್ಪು.+ 6 ಅದೇನಂದ್ರೆ ಮೂರ್ಖರಿಗೆ ದೊಡ್ಡ ಸ್ಥಾನ ಸಿಗುತ್ತೆ, ಸಮರ್ಥರು* ಕೆಳಮಟ್ಟದ ಸ್ಥಾನಗಳಲ್ಲೇ ಇರ್ತಾರೆ.
7 ಸೇವಕರು ಕುದುರೆ ಮೇಲೆ ಕೂತು ಸವಾರಿ ಮಾಡೋದನ್ನ, ಆದ್ರೆ ಅಧಿಕಾರಿಗಳು ಸೇವಕರ ತರ ನೆಲದ ಮೇಲೆ ನಡಿಯೋದನ್ನ ನೋಡಿದ್ದೀನಿ.+
8 ಗುಂಡಿ ತೋಡಿದವನು ಆ ಗುಂಡಿಯಲ್ಲಿ ಬೀಳಬಹುದು,+ ಕಲ್ಲಿನ ಗೋಡೆ ಕೆಡವಿ ಹಾಕುವವನನ್ನ ಹಾವು ಕಚ್ಚಬಹುದು.
9 ಕಲ್ಲು ಗಣಿಯಿಂದ ಕಲ್ಲು ತೆಗಿಯೋ ವ್ಯಕ್ತಿಗೆ ಅವುಗಳಿಂದ ಹಾನಿ ಆಗಬಹುದು. ದಿಮ್ಮಿಗಳನ್ನ ಒಡೆಯೋ ವ್ಯಕ್ತಿಗೆ ಅವುಗಳಿಂದ ಅಪಾಯ ಆಗಬಹುದು.*
10 ಮೊಂಡು ಕೊಡಲಿಯನ್ನ ಹರಿತ ಮಾಡದಿದ್ರೆ ಜಾಸ್ತಿ ಬಲ ಉಪಯೋಗಿಸಿ ಹೊಡಿಬೇಕಾಗುತ್ತೆ. ಆದ್ರೆ ವಿವೇಕದಿಂದ ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ.
11 ಹಾವಾಡಿಗ ಹಾವನ್ನ ಪಳಗಿಸೋ* ಮುಂಚೆನೇ ಅದು ಅವನನ್ನ ಕಚ್ಚಿದ್ರೆ ಅವನು ಚತುರ ಹಾವಾಡಿಗನಾಗಿದ್ದೂ ಏನು ಪ್ರಯೋಜನ?
12 ವಿವೇಕಿ ತನ್ನ ನುಡಿಗಳಿಂದ ಮೆಚ್ಚುಗೆ ಪಡಿತಾನೆ.+ ಅವಿವೇಕಿ ತನ್ನ ನುಡಿಗಳಿಂದ ತನ್ನ ಮೇಲೆ ತಾನೇ ನಾಶ ತಂದ್ಕೊಳ್ತಾನೆ.+ 13 ಅವನ ಬಾಯಿಂದ ಬರೋ ಮೊದಲ ಮಾತುಗಳು ಮೂರ್ಖತನ,+ ಕೊನೇ ಮಾತುಗಳೂ ಹುಚ್ಚುತನ. ಅವು ನಾಶಕ್ಕೆ ನಡಿಸುತ್ತೆ. 14 ಹಾಗಿದ್ರೂ ಅವನು ಮಾತಾಡ್ತಾ ಇರ್ತಾನೆ.+
ಮುಂದೆ ಏನಾಗುತ್ತೆ ಅಂತ ಮನುಷ್ಯನಿಗೆ ಗೊತ್ತಿಲ್ಲ, ಅವನು ಸತ್ತಮೇಲೆ ಏನಾಗುತ್ತೆ ಅಂತ ಅವನಿಗೆ ಹೇಳೋಕೆ ಯಾರಿಂದ ತಾನೇ ಸಾಧ್ಯ?+
15 ಅವಿವೇಕಿಯ ಪರಿಶ್ರಮ ಅವನನ್ನ ಬಳಲಿಸುತ್ತೆ, ಯಾಕಂದ್ರೆ ಅವನಿಗೆ ಪಟ್ಟಣಕ್ಕೆ ಹೋಗೋ ದಾರಿ ಸಹ ಗೊತ್ತಾಗಲ್ಲ.
16 ಒಂದು ದೇಶದ ರಾಜ ಚಿಕ್ಕ ಹುಡುಗನಾಗಿದ್ರೆ+ ಮತ್ತು ಅಧಿಕಾರಿಗಳು ಬೆಳಬೆಳಿಗ್ಗೆನೇ ಔತಣದ ಊಟಕ್ಕೆ ಕೂತ್ರೆ ಆ ದೇಶದ ಗತಿ ಅಧೋಗತಿ! 17 ಆದ್ರೆ ರಾಜಮನೆತನದಲ್ಲಿ ಹುಟ್ಟಿದವನು ದೇಶದ ರಾಜನಾಗಿದ್ರೆ ಆ ದೇಶ ಏಳಿಗೆ ಹೊಂದುತ್ತೆ! ಅಷ್ಟೇ ಅಲ್ಲ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಊಟ ಮಾಡಿದ್ರೆ, ಮಿತಿಮೀರಿ ಕುಡಿಯೋಕಲ್ಲ, ಬದಲಾಗಿ ಬಲ ಪಡ್ಕೊಳ್ಳೋಕಂತ ತಿಂದು ಕುಡಿದ್ರೆ ಆ ದೇಶ ಅಭಿವೃದ್ಧಿ ಹೊಂದುತ್ತೆ.+
18 ಒಬ್ಬ ವ್ಯಕ್ತಿ ಶುದ್ಧ ಸೋಮಾರಿ ಆಗಿದ್ರೆ ಅವನ ಮನೆಯ ಚಾವಣಿಯ ತೊಲೆಗಳು ಕುಸಿದು ಬೀಳುತ್ತೆ, ಕೈಕಟ್ಟಿ ಕೂತ್ರೆ ಅವನ ಮನೆ ಸೋರುತ್ತೆ.+
19 ಆಹಾರ ಖುಷಿ ಕೊಡುತ್ತೆ, ದ್ರಾಕ್ಷಾಮದ್ಯ ಜೀವನದಲ್ಲಿ ಆನಂದ ತುಂಬುತ್ತೆ.+ ಆದ್ರೆ ಹಣ ಪ್ರತಿಯೊಂದು ಅಗತ್ಯವನ್ನ ಪೂರೈಸುತ್ತೆ.+
20 ಮನಸ್ಸಲ್ಲೂ* ರಾಜನಿಗೆ ಶಾಪ ಹಾಕಬೇಡ,*+ ಮಲಗೋ ಕೋಣೆಯಲ್ಲಿ ಇದ್ದಾಗ್ಲೂ ಶ್ರೀಮಂತನಿಗೆ ಶಾಪ ಹಾಕಬೇಡ. ಯಾಕಂದ್ರೆ ಪಕ್ಷಿ ಹೋಗಿ ಅದನ್ನ ಅವನಿಗೆ ಹೇಳಬಹುದು, ಹಾರಾಡೋ ಪಕ್ಷಿ ಹೋಗಿ ನೀನು ಹೇಳಿದ್ದನ್ನ ಹಾಗೇ ಹೇಳಬಹುದು.
11 ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ,+ ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.+ 2 ನಿನ್ನ ಹತ್ರ ಇರೋದನ್ನ ಏಳು ಅಥವಾ ಎಂಟು ಜನರ ಜೊತೆ ಹಂಚ್ಕೊ.+ ಯಾಕಂದ್ರೆ ಭೂಮಿ ಮೇಲೆ ನಾಳೆ ಎಂಥ ವಿಪತ್ತು ಸಂಭವಿಸುತ್ತೆ ಅಂತ ನಿನಗೆ ಗೊತ್ತಿಲ್ಲ.
3 ಮೋಡಗಳಲ್ಲಿ ನೀರು ತುಂಬಿದ್ರೆ ಅವು ಭೂಮಿ ಮೇಲೆ ಖಂಡಿತ ಮಳೆ ಸುರಿಸುತ್ತೆ. ಒಂದು ಮರ ದಕ್ಷಿಣದ ಕಡೆ ಬಿದ್ರೂ ಉತ್ತರದ ಕಡೆ ಬಿದ್ರೂ ಅದು ಬಿದ್ದಲ್ಲೇ ಇರುತ್ತೆ.
4 ಗಾಳಿ ನೋಡ್ಕೊಂಡು ಇರುವವನು ಬೀಜ ಬಿತ್ತಲ್ಲ, ಮೋಡ ನೋಡ್ಕೊಂಡು ಇರುವವನು ಬೆಳೆ ಕೊಯ್ಯಲ್ಲ.+
5 ಗರ್ಭಿಣಿಯ ಗರ್ಭದಲ್ಲಿರೋ ಮಗುವಿನ ಮೂಳೆಗಳಲ್ಲಿ ಜೀವಶಕ್ತಿ* ಕೆಲಸಮಾಡೋ ವಿಧ ಹೇಗೆ ನಿನಗೆ ಗೊತ್ತಿಲ್ವೋ+ ಹಾಗೇ ಎಲ್ಲವನ್ನ ಮಾಡೋ ಸತ್ಯ ದೇವರ ಕೆಲಸಗಳು ಸಹ ನಿನಗೆ ಗೊತ್ತಿಲ್ಲ.+
6 ಬೆಳಿಗ್ಗೆ ಬೀಜ ಬಿತ್ತೋಕೆ ಶುರು ಮಾಡು, ಸಂಜೆ ತನಕ ಬಿತ್ತೋದನ್ನ ನಿಲ್ಲಿಸಬೇಡ.+ ಬಿತ್ತಿದ ಬೀಜದಲ್ಲಿ ಯಾವುದು ಮೊಳಕೆ ಒಡೆದು ಬೆಳೆಯುತ್ತೆ. ಇದು ಬೆಳೆಯುತ್ತೋ ಅದು ಬೆಳೆಯುತ್ತೋ ಅಥವಾ ಎರಡೂ ಬೆಳೆಯುತ್ತೋ ನಿಂಗೊತ್ತಿಲ್ಲ.
7 ಬೆಳಕು ಆಹ್ಲಾದಕರ, ಸೂರ್ಯನ ಬೆಳಕನ್ನ ನೋಡೋದು ಕಣ್ಣುಗಳಿಗೆ ಒಳ್ಳೇದು. 8 ಒಬ್ಬ ಮನುಷ್ಯ ತುಂಬ ವರ್ಷ ಬದುಕಿದ್ರೆ ಅವನು ಜೀವನದ ಎಲ್ಲ ದಿನಗಳನ್ನ ಆನಂದಿಸಲಿ.+ ಆದ್ರೆ ಮುಂದೆ ಕತ್ತಲೆಯ ದಿನಗಳು ಬಂದಾಗ ಅವು ಜಾಸ್ತಿ ಇರಬಹುದು ಅಂತ ಮರಿದಿರಲಿ. ಮುಂದೆ ಬರೋ ಆ ದಿನಗಳೆಲ್ಲ ವ್ಯರ್ಥನೇ.+
9 ಯುವಕನೇ, ನಿನ್ನ ಯೌವನದಲ್ಲಿ ಖುಷಿಪಡು. ನಿನ್ನ ಯೌವನದ ದಿನಗಳಲ್ಲಿ ಆನಂದಪಡು. ನಿನ್ನ ಮನಸ್ಸು ಬಯಸಿದ್ದನ್ನ ಮಾಡು, ನಿನ್ನ ಕಣ್ಣು ಸೆಳೆದಲ್ಲೆಲ್ಲ ಹೋಗು. ಆದ್ರೆ ನೀನು ಏನೇ ಮಾಡಿದ್ರೂ ಅದಕ್ಕೆಲ್ಲ ಸತ್ಯ ದೇವರು ಲೆಕ್ಕ ಕೇಳ್ತಾನೆ ಅಂತ ನಿನಗೆ ಗೊತ್ತಿರಲಿ.+ 10 ಹಾಗಾಗಿ ಕಳವಳ ಉಂಟುಮಾಡೋ ವಿಷ್ಯಗಳನ್ನ ನಿನ್ನ ಮನಸ್ಸಿಂದ ತೆಗೆದುಹಾಕು. ನಿನ್ನ ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರಮಾಡು. ಯಾಕಂದ್ರೆ ಯೌವನ, ಜೀವನದ ಉದಯ ಕಾಲ ಬೇಗ ಕಳೆದುಹೋಗುತ್ತೆ.*+
12 ನೀನು ಯೌವನದಲ್ಲೇ ನಿನ್ನ ಮಹಾ ಸೃಷ್ಟಿಕರ್ತನನ್ನ ನೆನಪಿಸ್ಕೊ.+ ಕಷ್ಟದ ದಿನಗಳು ಬರೋ ಮುಂಚೆ+ “ಜೀವನದಲ್ಲಿ ಸಂತೋಷ ಅನ್ನೋದೇ ಇಲ್ಲ” ಅಂತ ನೀನು ಹೇಳೋ ವರ್ಷಗಳು ಬರೋ ಮುಂಚೆ ಆತನನ್ನ ನೆನಪಿಸ್ಕೊ. 2 ಆ ಕಷ್ಟದ ದಿನಗಳಲ್ಲಿ ಸೂರ್ಯ, ಬೆಳಕು, ಚಂದ್ರ ಮತ್ತು ನಕ್ಷತ್ರಗಳು ಮಬ್ಬಾಗ್ತವೆ,+ ಧಾರಾಕಾರ ಮಳೆ ಬಂದ ಮೇಲೂ ಮತ್ತೆ ಮೋಡ* ಕವಿಯುತ್ತೆ, 3 ಮನೆಯ ಕಾವಲುಗಾರರು ನಡುಗ್ತಾರೆ, ಬಲಶಾಲಿ ಗಂಡಸ್ರು ಬಾಗ್ತಾರೆ, ಕೆಲವೇ ಜನ ಉಳಿದಿರೋದ್ರಿಂದ ಸ್ತ್ರೀಯರು ಅರೆಯೋದನ್ನ ನಿಲ್ಲಿಸ್ತಾರೆ, ಕಿಟಕಿಗಳಿಂದ ಹೊರಗೆ ನೋಡೋ ಸ್ತ್ರೀಯರಿಗೆ ಎಲ್ಲೆಲ್ಲೂ ಕತ್ತಲೆ ಕಾಣುತ್ತೆ,+ 4 ಬೀದಿ ಕಡೆಗಿರೋ ಬಾಗಿಲುಗಳು ಮುಚ್ಚಿರುತ್ತೆ, ಬೀಸೋ ಕಲ್ಲಿನ ಶಬ್ದ ಕಡಿಮೆ ಆಗುತ್ತೆ, ಪಕ್ಷಿಯ ಧ್ವನಿ ಕೇಳಿದ್ರೂ ಎಚ್ಚರಿಕೆಯಾಗುತ್ತೆ, ಎಲ್ಲಾ ಗಾಯಕಿಯರು ಕುಗ್ಗಿ ಹೋಗ್ತಾರೆ,+ 5 ಎತ್ತರ ಅಂದ್ರೆ ಭಯ ಆಗುತ್ತೆ, ಬೀದಿಯಲ್ಲಿ ಅಪಾಯ ಆಗುತ್ತೆ ಅನ್ನೋ ಭೀತಿ ಇರುತ್ತೆ, ಬಾದಾಮಿ ಮರ ಹೂಬಿಡುತ್ತೆ,+ ಮಿಡತೆ ತನ್ನನ್ನೇ ಎಳ್ಕೊಂಡು ನಡಿಯುತ್ತೆ, ಹಸಿವನ್ನ ತಣಿಸೋ ಹಣ್ಣುಗಳು* ಯಾವ ಪ್ರಯೋಜನಕ್ಕೂ ಬಾರದೆ ಹೋಗುತ್ತೆ. ಯಾಕಂದ್ರೆ ಮನುಷ್ಯ ತನ್ನ ದೀರ್ಘಕಾಲದ ಮನೆಗೆ ಹೋಗ್ತಾನೆ,+ ಶೋಕಿಸುವವರು ಬೀದಿಯಲ್ಲಿ ನಡಿತಾರೆ,+ 6 ಬೆಳ್ಳಿಯ ಹಗ್ಗ ಕಿತ್ತೋಗುತ್ತೆ, ಚಿನ್ನದ ಬಟ್ಟಲು ಜಜ್ಜಿಹೋಗುತ್ತೆ, ಬುಗ್ಗೆ ಹತ್ರ ಇರೋ ಕೊಡ ಒಡೆದು ಹೋಗುತ್ತೆ, ಬಾವಿಯ ರಾಟೆ ಜಜ್ಜಿಹೋಗುತ್ತೆ. ಈ ಎಲ್ಲ ಕಷ್ಟದ ದಿನಗಳು ಬರೋ ಮುಂಚೆನೇ ನೀನು ನಿನ್ನ ದೇವರನ್ನ ನೆನಪಿಸ್ಕೊ. 7 ಮಣ್ಣಿಂದ ಬಂದ ಮನುಷ್ಯ ಮತ್ತೆ ಮಣ್ಣಿಗೆ ಹೋಗ್ತಾನೆ+ ಮತ್ತು ಜೀವಶಕ್ತಿ* ಅದನ್ನ ಕೊಟ್ಟ ಸತ್ಯ ದೇವರ ಹತ್ರ ವಾಪಸ್ ಹೋಗುತ್ತೆ.+
8 “ವ್ಯರ್ಥನೇ ವ್ಯರ್ಥ! ಎಲ್ಲ ವ್ಯರ್ಥ”+ ಅಂತ ಪ್ರಸಂಗಿ+ ಹೇಳ್ತಾನೆ.
9 ಪ್ರಸಂಗಿ ವಿವೇಕಿಯಾದದ್ದು ಮಾತ್ರವಲ್ಲ ತನಗೆ ಗೊತ್ತಿದ್ದನ್ನ ಜನ್ರಿಗೆ ಕಲಿಸ್ತಾ ಇದ್ದ.+ ಅವನು ಗಾಢವಾಗಿ ಯೋಚಿಸಿ, ಜಾಗರೂಕತೆಯಿಂದ ಪರಿಶೀಲಿಸಿ ತುಂಬ ನಾಣ್ಣುಡಿಗಳನ್ನ+ ಒಟ್ಟುಸೇರಿಸಿದ.* 10 ಪ್ರಸಂಗಿ ಹೃದಯ ಮುಟ್ಟೋ ಪದಗಳನ್ನ+ ಹುಡುಕೋಕೆ ಮತ್ತು ಸ್ಪಷ್ಟವಾದ, ಸತ್ಯ ಮಾತುಗಳನ್ನ ಬರಿಯೋಕೆ ತುಂಬ ಕಷ್ಟಪಟ್ಟ.
11 ವಿವೇಕಿಗಳ ಮಾತು ತಿವಿಗೋಲುಗಳ+ ತರ ಇದೆ. ಅವರು ಸಂಗ್ರಹಿಸಿದ ನುಡಿಮುತ್ತುಗಳು ಬಿಗಿಯಾಗಿ ಬಡಿದಿರೋ ಮೊಳೆಗಳ ತರ ಇದೆ. ಅವು ಒಬ್ಬನೇ ಕುರುಬನಿಂದ ಬಂದ ಮಾತುಗಳು. 12 ನನ್ನ ಮಗನೇ, ಇವುಗಳನ್ನ ಬಿಟ್ಟು ಬೇರೆ ಬರಹಗಳ ಬಗ್ಗೆ ಎಚ್ಚರಿಕೆಯಿಂದ ಇರು. ಯಾಕಂದ್ರೆ ಪುಸ್ತಕಗಳ ರಚನೆಗೆ ಕೊನೆನೇ ಇಲ್ಲ. ಆ ಪುಸ್ತಕಗಳ ಅತಿಯಾದ ಅಧ್ಯಯನ ದೇಹಕ್ಕೆ ಆಯಾಸ.+
13 ಇಲ್ಲಿ ತನಕ ಕೇಳಿಸ್ಕೊಂಡ ಎಲ್ಲ ವಿಷ್ಯಗಳ ಸಾರಾಂಶ ಏನಂದ್ರೆ, ಸತ್ಯ ದೇವರಿಗೆ ಭಯಪಡು+ ಮತ್ತು ಆತನ ಆಜ್ಞೆಗಳನ್ನ ಪಾಲಿಸು.+ ಇದೇ ಎಲ್ಲಾ ಮನುಷ್ಯರ ಕರ್ತವ್ಯ.+ 14 ಯಾಕಂದ್ರೆ ಜನ ಮಾಡೋ ಪ್ರತಿಯೊಂದು ವಿಷ್ಯ, ರಹಸ್ಯ ವಿಷ್ಯನೂ, ಒಳ್ಳೇದಾ ಕೆಟ್ಟದಾ ಅಂತ ಸತ್ಯ ದೇವರು ತೀರ್ಪು ಕೊಡ್ತಾನೆ.+
ಅಥವಾ “ಸಭೆ ಸೇರಿಸುವವನ, ಜನ್ರನ್ನ ಒಟ್ಟುಗೂಡಿಸುವವನ.”
ಅಕ್ಷ. “ಸೂರ್ಯನ ಕೆಳಗೆ.”
ಅಕ್ಷ. “ನಿಲ್ಲುತ್ತೆ.”
ಅಥವಾ “ಚಳಿಗಾಲದ ನದಿಗಳೆಲ್ಲಾ; ಬೇರೆ ಕಾಲಗಳಲ್ಲಿ ಹರಿಯೋ ನದಿಗಳೆಲ್ಲಾ.”
ಅಕ್ಷ. “ಸೂರ್ಯನ.”
ಅಕ್ಷ. “ನನ್ನ ಹೃದಯ.”
ಅಥವಾ “ವಿಪರೀತ ಅವಿವೇಕದ.”
ಅಥವಾ “ಕಾಡಿಗಾಗಿ.”
ಅಥವಾ “ಪ್ರಸಿದ್ಧ ಸ್ತ್ರೀ, ಅನೇಕ ಪ್ರಸಿದ್ಧ ಸ್ತ್ರೀಯರ.”
ಅಕ್ಷ. “ಸೂರ್ಯನ ಕೆಳಗೆ.”
ಅಥವಾ “ವಿವೇಕಿಯ ಕಣ್ಣುಗಳು ತೆರೆದಿರುತ್ತೆ.”
ಅಥವಾ “ಸುವ್ಯವಸ್ಥಿತವಾಗಿ; ಸರಿಯಾಗಿ; ಸೂಕ್ತವಾಗಿ.”
ಅಕ್ಷ. “ಆರಂಭದಿಂದ ಕೊನೆ ತನಕ.”
ಬಹುಶಃ, “ಗತಿಸಿ ಹೋಗಿರೋದನ್ನ.”
ಅಕ್ಷ. “ಸೂರ್ಯನ ಕೆಳಗೆ.”
ಅಥವಾ “ಉಸಿರೇ.”
ಅಕ್ಷ. “ಸೂರ್ಯನ ಕೆಳಗೆ.”
ಅಕ್ಷ. “ಎರಡು ಹಿಡಿಯಷ್ಟು.”
ಅಕ್ಷ. “ಒಂದು ಹಿಡಿಯಷ್ಟು.”
ಅಥವಾ “ಹೆಚ್ಚು ಪ್ರಯೋಜನ.”
ಅಥವಾ “ಸುಲಭವಾಗಿ.”
ವಿವೇಕಿ ಹುಡುಗನಿಗೆ ಸೂಚಿಸ್ತಿರಬಹುದು.
ಅಥವಾ “ಕೆಲಸ ಇದ್ದವನಿಗೆ.”
ಅಥವಾ “ಹಗಲುಗನಸು ಕಾಣ್ತಾನೆ.”
ಅಥವಾ “ಸಂದೇಶವಾಹಕನ.”
ಅಥವಾ “ಕೆಲಸ ಇದ್ದವನಿಗೆ.”
ಅಥವಾ “ಹಗಲುಗನಸು ಕಾಣೋ.”
ಅಕ್ಷ. “ಬೆಳ್ಳಿ.”
ಅಕ್ಷ. “ಸೂರ್ಯನ ಕೆಳಗೆ.”
ಅಕ್ಷ. “ಸೂರ್ಯನ ಕೆಳಗೆ.”
ಪದವಿವರಣೆ ನೋಡಿ.
ಅಥವಾ “ವಾದಿಸೋಕೆ.”
ಬಹುಶಃ, “ವಸ್ತುಗಳು.”
ಅಥವಾ “ವ್ಯರ್ಥ.”
ಅಕ್ಷ. “ಕೋಪ ಮೂಢರ ಎದೆಯಲ್ಲಿ ನೆಲೆಸಿರುತ್ತೆ.” ಬಹುಶಃ, “ಕೋಪ ಮೂಢರ ಲಕ್ಷಣ.”
ಅಥವಾ “ಕಂಡುಹಿಡಿಯೋಕೆ.”
ಅಥವಾ “ವ್ಯರ್ಥ.”
ಅಕ್ಷ. “ಶಪಿಸೋದು.”
ಅಥವಾ “ಒಂದು ವಿಷ್ಯದ ಅರ್ಥವಿವರಣೆ.”
ಅಥವಾ “ಉಸಿರು; ಗಾಳಿ.”
ಬಹುಶಃ, “ಕೆಟ್ಟವನನ್ನ ಅವನ ಕೆಟ್ಟ ಕೆಲಸಗಳು ರಕ್ಷಿಸಲ್ಲ.”
ಅಕ್ಷ. “ಸೂರ್ಯನ ಕೆಳಗೆ.”
ಅಥವಾ “ನಿರಾಶೆಗೊಳಿಸೋ.”
ಬಹುಶಃ, “ಜನ ಹಗಲೂರಾತ್ರಿ ನಿದ್ದೆಗೆಟ್ಟು.”
ಅಕ್ಷ. “ಸೂರ್ಯನ ಕೆಳಗೆ.”
ಅದು ಶೋಕದ ಬಟ್ಟೆಯಲ್ಲ. ಉಜ್ವಲ ಬಟ್ಟೆ ಹಾಕೋದು ಸಂತೋಷವಾಗಿ ಇರೋದನ್ನ ಸೂಚಿಸುತ್ತೆ.
ಅಥವಾ “ವ್ಯರ್ಥ.”
ಅಥವಾ “ವ್ಯರ್ಥ.”
ಅದು, ಸಕಲ ಮಾನವರಿಗಾಗಿರೋ ಸಾಂಕೇತಿಕ ಸಮಾಧಿ. ಪದವಿವರಣೆ ನೋಡಿ.
ಅಕ್ಷ. “ಸೂರ್ಯನ ಕೆಳಗೆ.”
ಅಕ್ಷ. “ಶ್ರೀಮಂತರು.”
ಬಹುಶಃ, “ಒಡೆಯುವವನು ಜಾಗ್ರತೆ ವಹಿಸಬೇಕು.”
ಅಥವಾ “ಮಂತ್ರಿಸೋ.”
ಬಹುಶಃ, “ಹಾಸಿಗೆ ಮೇಲಿದ್ದಾಗ್ಲೂ.”
ಅಥವಾ “ಕೆಟ್ಟದಾಗ್ಲಿ ಅಂತ ಬಯ್ಯಬೇಡ.”
ಇದು ದೇವರ ಪವಿತ್ರಶಕ್ತಿಗೂ ಸೂಚಿಸಬಹುದು.
ಅಥವಾ “ವ್ಯರ್ಥ ಆಗುತ್ತೆ.”
ಬಹುಶಃ, “ಮಳೆ ಜೊತೆ ಮೋಡ.”
ಅಕ್ಷ. “ಕೇಪರ್ ಹಣ್ಣುಗಳು.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಅಥವಾ “ವ್ಯವಸ್ಥಿತವಾಗಿ ಜೋಡಿಸಿದ.”