ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 1999ರ ಜನವರಿ 4ರಿಂದ ಎಪ್ರಿಲ್ 19ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ಬೈಬಲಿನಲ್ಲಿ ದಾಖಲಾಗಿರುವ ಎಲ್ಲ ಪದಗಳನ್ನೂ ಯೆಹೋವನು ನುಡಿಯಲಿಲ್ಲ. (2 ತಿಮೊ. 3:16) [w-KA97 6/15 ಪು. 5 ಪ್ಯಾರ. 3]
2. ಕುಟುಂಬ ಸಾಮರಸ್ಯ ಹಾಗೂ ಮಕ್ಕಳ ಆತ್ಮಿಕ ಬೆಳವಣಿಗೆಯು ಸಂಪೂರ್ಣವಾಗಿ ಹೆತ್ತವರ ಮೇಲೆಯೇ ಅವಲಂಬಿಸಿದೆ. (ಜ್ಞಾನೋ. 22:6) [fy ಪು. 85 ಪ್ಯಾರ. 19]
3. ಪಾಪವು ‘ಬಾಗಲಲ್ಲಿ ಹೊಂಚಿಕೊಂಡಿದ್ದ’ ಕಾರಣ, ಕಾಯಿನನು ಗಂಭೀರವಾದ ತಪ್ಪುಮಾಡುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. (ಆದಿ. 4:7) [ವಾರದ ಬೈಬಲ್ ವಾಚನ; w-KA94 6/15 ಪು. 14 ಪ್ಯಾರ. 11ನ್ನು ನೋಡಿರಿ.]
4. ಒಬ್ಬ ಹದಿಹರೆಯದವನು ದೊಡ್ಡವನಾದಂತೆ, ವಿನೋದದ ವಿಷಯದಲ್ಲಿ ಅವನು ಮಾಡುವ ಆಯ್ಕೆಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಬೇಕು. [fy ಪು. 73 ಪ್ಯಾರ. 20]
5. ನಮ್ಮ ನಿರ್ಮಾಣಿಕನನ್ನು ಮೆಚ್ಚಿಸುವ ಬಯಕೆಯು ತಾನೇ, ಎಲ್ಲ ಸಮಯಗಳಲ್ಲಿ ಸತ್ಯವನ್ನೇ ನುಡಿಯುವುದಕ್ಕೆ ನಮಗೆ ಅತ್ಯುತ್ತಮವಾದ ಪ್ರಚೋದನೆಯನ್ನು ನೀಡುತ್ತದೆ. (ಜ್ಞಾನೋ. 6:17) [g-KA97 3/8 ಪು. 28 ಪ್ಯಾರ. 4]
6. ಪ್ರಾರ್ಥಿಸುವಾಗ ‘ಯೆಹೋವನಿಗೆ ನಮ್ಮ ಮಾತುಗಳೂ ನಮ್ಮ ಹೃದಯದ ಧ್ಯಾನವೂ ಸಮರ್ಪಕವಾಗಿರುವಂತೆ’ ಮಾಡಲು, ನಾವು ಸಾಧ್ಯವಾದಷ್ಟು ವಾಕ್ಸಂಪತ್ತು ಉಳ್ಳವರಾಗಿರಲು ಪ್ರಯಾಸಪಡಬೇಕು. (ಕೀರ್ತ. 19:14) [w-KA97 7/1 ಪು. 29 ಪ್ಯಾರ. 4-5]
7. ಆದಿಕಾಂಡ 26:5ರಲ್ಲಿ ಉಲ್ಲೇಖಿಸಲ್ಪಟ್ಟಿರುವ ಯೆಹೋವನ ಆಜ್ಞೆಗಳು, ವಿಧಿಗಳು ಮತ್ತು ನಿಯಮಗಳು, ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಇರುವಂತಹವುಗಳನ್ನು ಸೂಚಿಸುತ್ತವೆ. [ವಾರದ ಬೈಬಲ್ ವಾಚನ; w-KA92 10/1 ಪು. 10 ಪ್ಯಾರ. 8ನ್ನು ನೋಡಿರಿ.]
8. ಲೂಕ 8:48ರಲ್ಲಿ ದಾಖಲಿಸಲ್ಪಟ್ಟಂತೆ, “ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಎಂದು ಯೇಸು ಹೇಳಿದಾಗ, ಗುಣಹೊಂದುವ ಮುಂಚೆ ಆ ರೋಗಿಯು ಯೇಸುವೇ ಮೆಸ್ಸೀಯನೆಂಬ ನಂಬಿಕೆಯನ್ನು ಪ್ರಕಟಪಡಿಸುವ ಅಗತ್ಯವಿತ್ತೆಂಬುದನ್ನು ಅವನು ಅರ್ಥೈಸಿದನು. [w-KA97 7/1 ಪು. 4 ಪ್ಯಾರ. 2-4]
9. “ಭೂಮಿ” (NW) ಎಂಬ ಪದವನ್ನು, ಮಾನವಕುಲ ಇಲ್ಲವೆ ಮಾನವ ಸಮಾಜವನ್ನು ಸೂಚಿಸಲಿಕ್ಕಾಗಿ ಬಳಸಿರುವ ಬೈಬಲಿನ ಹಲವಾರು ವಚನಗಳಲ್ಲಿ ಆದಿಕಾಂಡ 11:1 ಕೂಡ ಒಂದಾಗಿದೆ. [g-KA97 2/8 ಪು. 19 ಪ್ಯಾರ. 3]
10. ದೀನಳು ಸಮ್ಮತಿಸದಿದ್ದರೂ, ತನ್ನ ಕನ್ಯತ್ವವನ್ನು ಕಳೆದುಕೊಂಡದ್ದಕ್ಕೆ ಅವಳೂ ಒಂದಿಷ್ಟು ಜವಾಬ್ದಾರಳಾಗಿದ್ದಳು. (ಆದಿ. 34:1, 2) [ವಾರದ ಬೈಬಲ್ ವಾಚನ; w85 6/15 ಪು. 31 ಪ್ಯಾರ. 4ನ್ನು ನೋಡಿರಿ.]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಆದಿಕಾಂಡ 3:1-5ರಲ್ಲಿ ನಿರೂಪಿಸಲ್ಪಟ್ಟ ತರ್ಕದ ಮೂಲಕ ಸೈತಾನನು ಏನನ್ನು ಸೂಚಿಸಿದನು? [ವಾರದ ಬೈಬಲ್ ವಾಚನ; w-KA95 7/15 ಪು. 5 ಪ್ಯಾರ. 2 ನ್ನು ನೋಡಿರಿ.]
12. ಪ್ರಕಟನೆ 19:15ರಲ್ಲಿ, ಯೇಸುವಿನ ಬಾಯಿಂದ ಚಾಚುವ “ಹದವಾದ ಕತ್ತಿಯು” ಏನನ್ನು ಪ್ರತಿನಿಧಿಸುತ್ತದೆ? [ವಾರದ ಬೈಬಲ್ ವಾಚನ; w90 5/15 ಪು. 4 ಪ್ಯಾರ. 4ನ್ನು ನೋಡಿರಿ.]
13. ನೋಹನ ದಿನದ ಜಲಪ್ರಳಯದ ಸಂಬಂಧದಲ್ಲಿ ಮೋಶೆಯು ನಿರ್ದಿಷ್ಟವಾದ ತಾರೀಖುಗಳನ್ನು ಒದಗಿಸುವ ಸಂಗತಿಯಿಂದ ಯಾವ ವಿಷಯವು ಒತ್ತಿಹೇಳಲ್ಪಟ್ಟಿದೆ? [g-KA97 3/8 ಪು. 25 ಪ್ಯಾರ. 1]
14. ಅಬ್ರಹಾಮನು ‘ಯೆಹೋವನ ಹೆಸರನ್ನು ಹೇಳಿದ್ದು’ ಹೇಗೆ? (ಆದಿ. 12:8) [ವಾರದ ಬೈಬಲ್ ವಾಚನ; w89 7/1 ಪು. 20 ಪ್ಯಾರ. 9 ನ್ನು ನೋಡಿರಿ.]
15. ಯೆಹೋವನು ಪೌಲನಿಗೆ, “ನನ್ನ ಕೃಪೆಯೇ ನಿನಗೆ ಸಾಕು” ಎಂದಾಗ, ಏನನ್ನು ಅರ್ಥೈಸಿದನು? (2 ಕೊರಿಂ. 12:9) [w-KA97 6/1 ಪು. 25 ಪ್ಯಾರ. 3]
16. ಲೋಟನ ಹೆಂಡತಿಯು ಹಿಂದಿರುಗಿ ನೋಡಿ, ಉಪ್ಪಿನ ಕಂಬವಾಗುವಂತೆ ಯಾವುದು ಅವಳನ್ನು ಪ್ರೇರಿಸಿತು? (ಆದಿ. 19:26) [ವಾರದ ಬೈಬಲ್ ವಾಚನ; w90 4/15 ಪು. 18 ಪ್ಯಾರ. 10 ನ್ನು ನೋಡಿರಿ.]
17. ಕದ್ದ ವಸ್ತುಗಳ ಖರೀದಿಯನ್ನು ಕ್ರೈಸ್ತರು ಹೇಗೆ ವೀಕ್ಷಿಸುತ್ತಾರೆ? (ವಿಮೋ. 22:1; ಯೆರೆ. 17:11) [ವಾರದ ಬೈಬಲ್ ವಾಚನ; w92 6/15 ಪು. 30 ಪ್ಯಾರ. 3; ಪು. 31 ಪ್ಯಾರಗಳು 1, 7 ನ್ನು ನೋಡಿರಿ.]
18. ಆದಿಕಾಂಡ 33:18ಕ್ಕನುಸಾರ, ಕಾನಾನ್ಯರೊಂದಿಗೆ ಸಹವಾಸಿಸುವುದರಲ್ಲಿ ತನಗೆ ಅಭಿರುಚಿಯಿಲ್ಲವೆಂಬುದನ್ನು ಯಾಕೋಬನು ಹೇಗೆ ತೋರಿಸಿದನು? [ವಾರದ ಬೈಬಲ್ ವಾಚನ; w-KA95 9/15 ಪು. 21 ಪ್ಯಾರ. 5 ನ್ನು ನೋಡಿರಿ.]
19. ಆದಿಕಾಂಡ 37:13ರಲ್ಲಿ ವರ್ಣಿಸಲಾದ ಯೋಸೇಫನ ಕ್ರಿಯೆಗಳು, ಯೇಸುವಿನ ಕ್ರಿಯೆಗಳಿಗೆ ಹೇಗೆ ಸಮಾನವಾಗಿದ್ದವು? [ವಾರದ ಬೈಬಲ್ ವಾಚನ; w87 5/1 ಪು. 12 ಪ್ಯಾರ. 12 ನ್ನು ನೋಡಿರಿ.]
20. ಕೋಪವನ್ನು ವ್ಯಕ್ತಪಡಿಸುವ ವಿಷಯದಲ್ಲಿ ದೇವರು ಮತ್ತು ಮನುಷ್ಯರ ನಡುವಿನ ವ್ಯತ್ಯಾಸವೇನು? [g-KA97 7/8 ಪು. 29 ಪ್ಯಾರಗಳು 2-3]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. _________________________ ಕಾರಣವಿಲ್ಲದೆ ಇತರರ ಮೇಲೆ _________________________ ಹೇತುಗಳನ್ನು ಆರೋಪಿಸುವುದು, ಅವರಿಗೆ ತೀರ್ಪು ಮಾಡುವುದಕ್ಕೆ ಸಮಾನವಾಗಿದೆ. [w-KA97 5/15 ಪು. 26 ಪ್ಯಾರ. 5]
22. ಆದಿಕಾಂಡ ಪುಸ್ತಕದ ಸತ್ಯತೆಯು ಅದರ ಆಂತರಿಕ _________________________ಮತ್ತು ಉಳಿದ ಪ್ರೇರಿತ ಶಾಸ್ತ್ರಗಳೊಂದಿಗೆ ಅದರ ಸಂಪೂರ್ಣ _________________________ ಯಿಂದ ತೋರಿಸಲ್ಪಟ್ಟಿದೆ. [si ಪು. 14 ಪ್ಯಾರ. 8]
23. ರೆಹಬ್ಬಾಮನ ಮತ್ತು ಏಲಿಯನ ಉದಾಹರಣೆಗಳು, ಮಕ್ಕಳ ಪೋಷಣೆಯಲ್ಲಿ ತೀರ _________________________ ಇಲ್ಲವೆ ತೀರ _________________________ ಆಗಿರುವುದರ ಪರಿಣಾಮಗಳನ್ನು ಗ್ರಹಿಸಿಕೊಳ್ಳುವಂತೆ ಹೆತ್ತವರಿಗೆ ಸಹಾಯ ಮಾಡಬಲ್ಲದು. [fy ಪು. 80-1 ಪ್ಯಾರ. 9-13]
24. ದೈವಿಕ _________________________ ವಿಕಸಿಸಿಕೊಳ್ಳುವುದರಲ್ಲಿ _________________________ ಪಡೆದುಕೊಳ್ಳುವುದು ಒಂದು ಪ್ರಾಮುಖ್ಯ ಹೆಜ್ಜೆಯಾಗಿದೆ. [w-KA97 8/1 ಪು. 4 ಪ್ಯಾರ. 5]
25. ತಪ್ಪುಮಾಡುವಿಕೆಯನ್ನು ವರದಿಸುವುದು, _________________________ ಕಡೆಗೆ, _________________________ ಕಡೆಗೆ, ಮತ್ತು _________________________ ಕಡೆಗೆ ತತ್ವಾಧಾರಿತ ಕ್ರೈಸ್ತ ಪ್ರೀತಿಯನ್ನು ತೋರಿಸುವ ಕ್ರಿಯೆಯಾಗಿದೆ. [w-KA97 8/15 ಪು. 30 ಪ್ಯಾರ. 2]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. (ಕಟ್ಟುನಿಟ್ಟಿನ; ಮೃದುವಾದ; ಯೋಗ್ಯವಾ) ಶಿಸ್ತು, ತನ್ನ ಮಗುವಿಗಾಗಿ ಹೆತ್ತವರಲ್ಲಿರುವ ಪ್ರೀತಿಯ ಪ್ರಮಾಣವಾಗಿದೆ. (ಇಬ್ರಿ. 12:6, 11) [fy ಪು. 72 ಪ್ಯಾರ. 18]
27. “ಭೂಮಿಯ ಮೇಲೆ ಜಲಪ್ರಳಯವು” ಉಂಟಾದ ವರ್ಷವು ಸಾ.ಶ.ಪೂ. (2970; 2370; 2020) ಎಂದು ಆದಿಕಾಂಡ 7:6, 11 ಸೂಚಿಸುತ್ತದೆ. [ವಾರದ ಬೈಬಲ್ ವಾಚನ; si ಪು. 294ರ ಚಾರ್ಟನ್ನು ನೋಡಿರಿ.]
28. ಯೋಹಾನ 8:32ರಲ್ಲಿ, ಯೇಸುವಿನ ಮನಸ್ಸಿನಲ್ಲಿದ್ದ ಬಿಡುಗಡೆಯು, (ರೋಮನ್ ಶಾಸನ; ಮೂಢನಂಬಿಕೆ; ಪಾಪ ಮತ್ತು ಮರಣ)ದಿಂದ ಆಗುವ ಬಿಡುಗಡೆಯಾಗಿತ್ತು. [w-KA97 2/1 ಪು. 5 ಪ್ಯಾರ. 1]
29. ಆದಿಕಾಂಡ 22:18ರ ಕೊನೆಯ ನೆರವೇರಿಕೆಯಲ್ಲಿ, ಸಂತಾನವು (ಇಸಾಕ್; ಇಸ್ರಾಯೇಲ್ಯರು; ಯೇಸು ಮತ್ತು 1,44,000 ಮಂದಿ)ಯನ್ನು ಸೂಚಿಸುತ್ತದೆ. [ ವಾರದ ಬೈಬಲ್ ವಾಚನ; w-KA98 2/1 ಪು. 14 ಪ್ಯಾರ. 8 ನ್ನು ನೋಡಿರಿ.]
30. ಅನೈತಿಕ ಪ್ರಲೋಭನೆಗಳನ್ನು ಯಶಸ್ವಿಕರವಾಗಿ ಪ್ರತಿರೋಧಿಸಲು ಯೋಸೇಫನಿಗೆ ಸಹಾಯಮಾಡಿದ್ದು (ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆಯು; ದೇವರ ವಾಸ್ತವಿಕತೆ ಮತ್ತು ಆತನನ್ನು ಅಸಂತೋಷಪಡಿಸಬಾರದೆಂಬ ಹಿತಕರವಾದ ಭಯ; ಶಿಕ್ಷೆಯ ಭಯ) ಆಗಿತ್ತು. (ಆದಿ. 39:9) [ವಾರದ ಬೈಬಲ್ ವಾಚನ; w81 2/15 ಪು. 7 ಪ್ಯಾರ. 2 ನ್ನು ನೋಡಿರಿ.]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಜ್ಞಾನೋ. 5:3, 4; 15:22; 20:11; ಎಫೆ. 5:19; 2 ತಿಮೊ. 3:16
31. ನೈತಿಕವೂ ಶುದ್ಧವೂ ಆದ ಜೀವಿತವನ್ನು ನಡೆಸುವುದರ ಮಹತ್ವವನ್ನು ತಮ್ಮ ಮಕ್ಕಳು ಮನಃಪೂರ್ವಕವಾಗಿ ನಂಬುತ್ತಾರೆ ಎಂಬುದನ್ನು ಹೆತ್ತವರು ಖಚಿತಪಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. [fy ಪು. 67 ಪ್ಯಾರ. 8]
32. ಮುಚ್ಚುಮರೆಯಿಲ್ಲದ ಸಂವಾದಕ್ಕಾಗಿ, ಹೆತ್ತವರ ಮತ್ತು ಅವರ ಹದಿವಯಸ್ಕ ಮಕ್ಕಳ ನಡುವಿನ ಆಂತರ್ಯದ ಮಾತುಕತೆ ತುಂಬ ಪ್ರಾಮುಖ್ಯವಾಗಿದೆ. [fy ಪು. 65 ಪ್ಯಾರ. 4]
33. ಸಭಾ ಕೂಟಗಳಲ್ಲಿ ಉತ್ತಮವಾಗಿ ಹಾಡಸಾಧ್ಯವಾಗಲು, ಸರಿಯಾದ ಮನೋಭಾವ ಉಳ್ಳವರಾಗಿರುವುದೇ ಕೀಲಿ ಕೈಯಾಗಿದೆ. [w-KA97 2/1 ಪು. 27 ಪ್ಯಾರ. 3]
34. ದೇವರ ವಾಕ್ಯವಾದ ಬೈಬಲಿನ ಬೋಧನೆಗಳ ತಿಳಿವಳಿಕೆಯಿರುವುದು, ನಿತ್ಯಜೀವಕ್ಕೆ ಒಂದು ಆವಶ್ಯಕತೆಯಾಗಿದೆ. [w-KA97 8/15 ಪು. 6 ಪ್ಯಾರ. 5]
35. ಅನೈತಿಕತೆಯ ಪ್ರಲೋಭನೆಯಿಂದ ದೂರವಿರಲು, ಅಂತಹ ಕ್ರಿಯೆಯು ತಪ್ಪಾಗಿದೆ ಮತ್ತು ಅದರ ಪರಿಣಾಮಗಳು ವಿಪತ್ಕಾರಕವೂ ಕಹಿಯೂ ಆಗಿವೆ ಎಂಬುದನ್ನು ನಾವು ಗ್ರಹಿಸಬೇಕು. [fy ಪು. 93 ಪ್ಯಾರ. 9]