ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 17
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಯೆಹೂದದ ಪಾಪ ಆಳವಾಗಿ ಬೇರೂ​ರಿದೆ (1-4)

      • ಯೆಹೋವನಲ್ಲಿ ಭರವಸೆ ಇಡೋದ್ರಿಂದ ಆಶೀರ್ವಾದಗಳು (5-8)

      • ಹೃದಯ ಎಲ್ಲಕ್ಕಿಂತ ಮೋಸ (9-11)

      • ಇಸ್ರಾಯೇಲ್ಯರ ನಿರೀಕ್ಷೆ ಯೆಹೋವನೇ (12, 13)

      • ಯೆರೆಮೀಯನ ಪ್ರಾರ್ಥನೆ (14-18)

      • ಸಬ್ಬತ್‌ ದಿನವನ್ನ ಪವಿತ್ರವಾಗಿ ನೋಡಬೇಕು (19-27)

ಯೆರೆಮೀಯ 17:1

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಯೆರೆಮೀಯ 17:2

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 1:29; ಯೆಹೆ 6:13
  • +ನ್ಯಾಯ 3:7; 2ಪೂರ್ವ 24:18; 33:1, 3

ಯೆರೆಮೀಯ 17:3

ಪಾದಟಿಪ್ಪಣಿ

  • *

    ಅಕ್ಷ. “ಎತ್ತರದ ಸ್ಥಳಗಳಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +2ಅರ 24:11, 13; ಯೆರೆ 15:13
  • +ಯಾಜ 26:30; ಯೆಹೆ 6:3

ಯೆರೆಮೀಯ 17:4

ಪಾದಟಿಪ್ಪಣಿ

  • *

    ಬಹುಶಃ, “ನನ್ನ ಕೋಪದಲ್ಲಿ ನಿಮ್ಮನ್ನ ಬೆಂಕಿ ತರ ಉರಿಸಲಾಗ್ತಿದೆ.”

ಮಾರ್ಜಿನಲ್ ರೆಫರೆನ್ಸ್

  • +ಪ್ರಲಾ 5:2
  • +ಧರ್ಮೋ 28:48; ಯೆರೆ 16:13
  • +ಯೆಶಾ 5:25; ಯೆರೆ 15:14

ಯೆರೆಮೀಯ 17:5

ಪಾದಟಿಪ್ಪಣಿ

  • *

    ಅಥವಾ “ಯೆಹೋವನನ್ನ ಬಿಟ್ಟು ದೂರ ಹೋಗೋ ಹೃದಯ ಇರೋ.”

ಮಾರ್ಜಿನಲ್ ರೆಫರೆನ್ಸ್

  • +2ಅರ 16:7
  • +ಯೆಶಾ 30:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 44

    ಕಾವಲಿನಬುರುಜು,

    4/1/2007, ಪು. 10

    8/15/1998, ಪು. 6

ಯೆರೆಮೀಯ 17:7

ಪಾದಟಿಪ್ಪಣಿ

  • *

    ಅಥವಾ “ಬಲಶಾಲಿ ಮನುಷ್ಯ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:8; 146:5; ಯೆಶಾ 26:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 10

ಯೆರೆಮೀಯ 17:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 1:3; 92:12, 13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    9/2019, ಪು. 8

    ಕಾವಲಿನಬುರುಜು,

    3/15/2011, ಪು. 14

    7/1/2009, ಪು. 16-17

ಯೆರೆಮೀಯ 17:9

ಪಾದಟಿಪ್ಪಣಿ

  • *

    ಅಥವಾ “ವಂಚಿಸುತ್ತೆ.”

  • *

    ಬಹುಶಃ, “ಅದು ವಾಸಿ ಆಗಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 6:5; 8:21; ಜ್ಞಾನೋ 28:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2004, ಪು. 10-11

    10/15/2001, ಪು. 25

    8/1/2001, ಪು. 9-10

    3/1/2000, ಪು. 30

ಯೆರೆಮೀಯ 17:10

ಪಾದಟಿಪ್ಪಣಿ

  • *

    ಅಥವಾ “ಮನದಾಳದ ಭಾವನೆಗಳನ್ನ.” ಅಕ್ಷ. “ಮೂತ್ರಪಿಂಡಗಳು.”

ಮಾರ್ಜಿನಲ್ ರೆಫರೆನ್ಸ್

  • +1ಸಮು 16:7; 1ಪೂರ್ವ 28:9; ಜ್ಞಾನೋ 17:3; 21:2
  • +ರೋಮ 2:6; ಗಲಾ 6:7; ಪ್ರಕ 2:23; 22:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2013, ಪು. 9

ಯೆರೆಮೀಯ 17:11

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 28:20; ಯೆಶಾ 1:23; ಯಾಕೋ 5:4

ಯೆರೆಮೀಯ 17:12

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 2:5; ಯೆಶಾ 6:1

ಯೆರೆಮೀಯ 17:13

ಪಾದಟಿಪ್ಪಣಿ

  • *

    ಅಕ್ಷ. “ನನ್ನನ್ನ,” ಇದು ಯೆಹೋವನಿಗೆ ಸೂಚಿಸ್ತಾ ಇರಬಹುದು.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:27; ಯೆಶಾ 1:28
  • +ಯೆರೆ 2:13; ಪ್ರಕ 22:1

ಯೆರೆಮೀಯ 17:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 15:20

ಯೆರೆಮೀಯ 17:15

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 5:19; 2ಪೇತ್ರ 3:4

ಯೆರೆಮೀಯ 17:18

ಮಾರ್ಜಿನಲ್ ರೆಫರೆನ್ಸ್

  • +ಯೆರೆ 15:15; 20:11
  • +ಯೆರೆ 18:23

ಯೆರೆಮೀಯ 17:19

ಪಾದಟಿಪ್ಪಣಿ

  • *

    ಅಕ್ಷ. “ಜನರ ಪುತ್ರರ ಬಾಗಿಲ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 7:2

ಯೆರೆಮೀಯ 17:21

ಮಾರ್ಜಿನಲ್ ರೆಫರೆನ್ಸ್

  • +ನೆಹೆ 13:19

ಯೆರೆಮೀಯ 17:22

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:9, 10; ಯಾಜ 23:3
  • +ವಿಮೋ 31:13

ಯೆರೆಮೀಯ 17:23

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 48:4; ಯೆಹೆ 20:13

ಯೆರೆಮೀಯ 17:24

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 5:12-14

ಯೆರೆಮೀಯ 17:25

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 132:11
  • +ಯೆರೆ 22:4

ಯೆರೆಮೀಯ 17:26

ಪಾದಟಿಪ್ಪಣಿ

  • *

    ಅಥವಾ “ದಕ್ಷಿಣದಿಂದ.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 32:44
  • +ಯೆರೆ 33:13
  • +ಯಾಜ 1:3
  • +ಎಜ್ರ 3:3
  • +ಯಾಜ 2:1, 2
  • +ಕೀರ್ತ 107:22; 116:17; ಯೆರೆ 33:10, 11

ಯೆರೆಮೀಯ 17:27

ಮಾರ್ಜಿನಲ್ ರೆಫರೆನ್ಸ್

  • +2ಅರ 25:9, 10; ಯೆರೆ 39:8
  • +2ಅರ 22:16, 17; ಪ್ರಲಾ 4:11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 17:2ಯೆಶಾ 1:29; ಯೆಹೆ 6:13
ಯೆರೆ. 17:2ನ್ಯಾಯ 3:7; 2ಪೂರ್ವ 24:18; 33:1, 3
ಯೆರೆ. 17:32ಅರ 24:11, 13; ಯೆರೆ 15:13
ಯೆರೆ. 17:3ಯಾಜ 26:30; ಯೆಹೆ 6:3
ಯೆರೆ. 17:4ಪ್ರಲಾ 5:2
ಯೆರೆ. 17:4ಧರ್ಮೋ 28:48; ಯೆರೆ 16:13
ಯೆರೆ. 17:4ಯೆಶಾ 5:25; ಯೆರೆ 15:14
ಯೆರೆ. 17:52ಅರ 16:7
ಯೆರೆ. 17:5ಯೆಶಾ 30:1, 2
ಯೆರೆ. 17:7ಕೀರ್ತ 34:8; 146:5; ಯೆಶಾ 26:3
ಯೆರೆ. 17:8ಕೀರ್ತ 1:3; 92:12, 13
ಯೆರೆ. 17:9ಆದಿ 6:5; 8:21; ಜ್ಞಾನೋ 28:26
ಯೆರೆ. 17:101ಸಮು 16:7; 1ಪೂರ್ವ 28:9; ಜ್ಞಾನೋ 17:3; 21:2
ಯೆರೆ. 17:10ರೋಮ 2:6; ಗಲಾ 6:7; ಪ್ರಕ 2:23; 22:12
ಯೆರೆ. 17:11ಜ್ಞಾನೋ 28:20; ಯೆಶಾ 1:23; ಯಾಕೋ 5:4
ಯೆರೆ. 17:122ಪೂರ್ವ 2:5; ಯೆಶಾ 6:1
ಯೆರೆ. 17:13ಕೀರ್ತ 73:27; ಯೆಶಾ 1:28
ಯೆರೆ. 17:13ಯೆರೆ 2:13; ಪ್ರಕ 22:1
ಯೆರೆ. 17:14ಯೆರೆ 15:20
ಯೆರೆ. 17:15ಯೆಶಾ 5:19; 2ಪೇತ್ರ 3:4
ಯೆರೆ. 17:18ಯೆರೆ 15:15; 20:11
ಯೆರೆ. 17:18ಯೆರೆ 18:23
ಯೆರೆ. 17:19ಯೆರೆ 7:2
ಯೆರೆ. 17:21ನೆಹೆ 13:19
ಯೆರೆ. 17:22ವಿಮೋ 20:9, 10; ಯಾಜ 23:3
ಯೆರೆ. 17:22ವಿಮೋ 31:13
ಯೆರೆ. 17:23ಯೆಶಾ 48:4; ಯೆಹೆ 20:13
ಯೆರೆ. 17:24ಧರ್ಮೋ 5:12-14
ಯೆರೆ. 17:25ಕೀರ್ತ 132:11
ಯೆರೆ. 17:25ಯೆರೆ 22:4
ಯೆರೆ. 17:26ಯೆರೆ 32:44
ಯೆರೆ. 17:26ಯೆರೆ 33:13
ಯೆರೆ. 17:26ಯಾಜ 1:3
ಯೆರೆ. 17:26ಎಜ್ರ 3:3
ಯೆರೆ. 17:26ಯಾಜ 2:1, 2
ಯೆರೆ. 17:26ಕೀರ್ತ 107:22; 116:17; ಯೆರೆ 33:10, 11
ಯೆರೆ. 17:272ಅರ 25:9, 10; ಯೆರೆ 39:8
ಯೆರೆ. 17:272ಅರ 22:16, 17; ಪ್ರಲಾ 4:11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 17:1-27

ಯೆರೆಮೀಯ

17 “ಯೆಹೂದದ ಪಾಪವನ್ನ ಕಬ್ಬಿಣದ ಲೇಖನಿಯಿಂದ* ಬರೆಯಲಾಗಿದೆ.

ಅದನ್ನ ವಜ್ರದ ಚೂಪಾದ ತುದಿಯಿಂದ ಅವ್ರ ಹೃದಯದ ಹಲಗೆ ಮೇಲೆ,

ಯಜ್ಞವೇದಿಗಳ ಕೊಂಬುಗಳ ಮೇಲೆ ಕೆತ್ತಲಾಗಿದೆ,

 2 ಸೊಂಪಾದ ಮರದ ಪಕ್ಕದಲ್ಲಿ, ಎತ್ತರವಾದ ಬೆಟ್ಟಗಳ ಮೇಲೆ+ ಇದ್ದ

ಈ ಯಜ್ಞವೇದಿಗಳನ್ನ, ಪೂಜಾಕಂಬಗಳನ್ನ*+ ಅವರ ಮಕ್ಕಳು ಸಹ ನೆನಪಿಸ್ಕೊಳ್ತಾರೆ,

 3 ಹಳ್ಳಿಗಳಲ್ಲಿ ಇರೋ ಬೆಟ್ಟಗಳ ಮೇಲೆ ಸಹ ಇದ್ದ ಯಜ್ಞವೇದಿಗಳನ್ನ ಪೂಜಾಕಂಬಗಳನ್ನ ನೆನಪಿಸ್ಕೊಳ್ತಾರೆ.

ನಿನ್ನ ಸಿರಿಸಂಪತ್ತು, ನಿನ್ನ ಎಲ್ಲ ನಿಧಿನಿಕ್ಷೇಪಗಳನ್ನ ಬೇರೆಯವರು ಲೂಟಿ ಮಾಡೋ ತರ ಮಾಡ್ತೀನಿ,+

ನಿನಗೆ ಸೇರಿದ ಎಲ್ಲ ಪ್ರದೇಶಗಳಲ್ಲಿ ನೀನು ಮಾಡಿದ ಪಾಪಗಳಿಗಾಗಿ ನಿನ್ನ ಪೂಜಾಸ್ಥಳಗಳಲ್ಲಿ* ಇರೋದನ್ನೆಲ್ಲ ಲೂಟಿ ಮಾಡೋ ತರ ಮಾಡ್ತೀನಿ.+

 4 ನಾನು ನಿನಗೆ ಕೊಟ್ಟ ಆಸ್ತಿಯನ್ನ ಕೈಯಾರೆ ಕಳ್ಕೊಳ್ತೀಯ.+

ನಿನಗೆ ಗೊತ್ತಿಲ್ಲದ ದೇಶದಲ್ಲಿ ಶತ್ರುಗಳಿಗೆ ನೀನು ದಾಸಿಯಾಗೋ ತರ ಮಾಡ್ತೀನಿ,+

ಯಾಕಂದ್ರೆ ನೀನು ನನ್ನ ಕೋಪ ಅನ್ನೋ ಬೆಂಕಿಯನ್ನ ಹೊತ್ತಿಸಿದ್ದೀಯ.*+

ಅದು ಯಾವಾಗ್ಲೂ ಉರಿತಾ ಇರುತ್ತೆ.”

 5 ಯೆಹೋವ ಹೀಗೆ ಹೇಳ್ತಾನೆ

“ಏನೂ ಅಲ್ಲದ ಮನುಷ್ಯನ ಮೇಲೆ ನಂಬಿಕೆ ಇಡೋ,

ಅವನ ಶಕ್ತಿ ಮೇಲೆ ಹೊಂದ್ಕೊಂಡಿರೋ,+

ಯೆಹೋವನನ್ನ ಬಿಟ್ಟುಹೋಗೋ* ಬಲಶಾಲಿ ಮನುಷ್ಯನಿಗೆ ಶಾಪ ತಟ್ಟಲಿ.+

 6 ಅವನು ಮರುಭೂಮಿಯಲ್ಲಿ ಒಂಟಿ ಆಗಿರೋ ಮರದ ತರ ಆಗ್ತಾನೆ,

ಅವನು ಒಳ್ಳೇದನ್ನ ಅನುಭವಿಸಲ್ಲ,

ಕಾಡಲ್ಲಿ ಒಣಗಿಹೋದ ಸ್ಥಳಗಳಲ್ಲಿ,

ಯಾರೂ ವಾಸಿಸೋಕೆ ಆಗದ ಉಪ್ಪಿನ ಪ್ರದೇಶದಲ್ಲಿ ಅವನು ವಾಸಿಸ್ತಾನೆ.

 7 ಆದ್ರೆ ಯೆಹೋವನಲ್ಲಿ ನಂಬಿಕೆ ಇಡೋ,

ಯೆಹೋವನಲ್ಲಿ ದೃಢವಿಶ್ವಾಸ ಇಡೋ ಮನುಷ್ಯ* ಆಶೀರ್ವಾದ ಪಡಿತಾನೆ.+

 8 ಅವನು ನದಿ ಹತ್ರ ನೆಟ್ಟಿರೋ,

ತನ್ನ ಬೇರುಗಳನ್ನ ನೀರಿನ ತನಕ ಹರಡ್ಕೊಂಡಿರೋ ಮರದ ಹಾಗೆ ಆಗ್ತಾನೆ.

ಆ ಮರ ಸುಡು ಬಿಸಿಲನ್ನ ಲೆಕ್ಕಿಸಲ್ಲ,

ಅದ್ರ ಎಲೆಗಳು ಯಾವಾಗ್ಲೂ ಹಚ್ಚಹಸುರಾಗಿ ಇರುತ್ತೆ.+

ಬರಗಾಲದಲ್ಲಿ ತಲೆ ಕೆಡಿಸ್ಕೊಳ್ಳಲ್ಲ,

ಹಣ್ಣು ಕೊಡೋದನ್ನ ನಿಲ್ಲಿಸಲ್ಲ.

ಆ ಮರದ ತರ ಅವನು ಇರ್ತಾನೆ.

 9 ಹೃದಯ ಬೇರೆ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತೆ,* ಅದು ಏನು ಮಾಡೋಕ್ಕೂ ಹಿಂದೆಮುಂದೆ ನೋಡಲ್ಲ.*+

ಅದನ್ನ ತಿಳ್ಕೊಳ್ಳೋಕೆ ಯಾರಿಂದ ಆಗುತ್ತೆ?

10 ಯೆಹೋವನಾದ ನಾನು ಹೃದಯವನ್ನ ಪರೀಕ್ಷಿಸಿ,+

ಅಂತರಾಳದ ಯೋಚನೆಗಳನ್ನ* ಪರಿಶೀಲಿಸಿ

ಪ್ರತಿಯೊಬ್ಬನ ನಡತೆಗೆ ಕೆಲಸಕ್ಕೆ

ತಕ್ಕ ಪ್ರತಿಫಲ ಕೊಡ್ತೀನಿ.+

11 ಕೌಜುಗ ಪಕ್ಷಿ ತಾನಿಡದ ಮೊಟ್ಟೆಗಳನ್ನ ಕೂಡಿಸ್ಕೊಳ್ಳುತ್ತೆ,

ಮೋಸದಿಂದ ಹಣಆಸ್ತಿ ಮಾಡೋನು ಆ ಪಕ್ಷಿ ತರ ಇದ್ದಾನೆ.+

ಆ ಹಣಆಸ್ತಿ ಅವನ ಮಧ್ಯವಯಸ್ಸಲ್ಲೇ ಅವನನ್ನ ಬಿಟ್ಟು ಹೋಗುತ್ತೆ,

ಕೊನೆಯಲ್ಲಿ ಅವನು ಮೂರ್ಖ ಅಂತ ಸಾಬೀತಾಗುತ್ತೆ.”

12 ದೇವರ ಮಹಿಮಾನ್ವಿತ ಸಿಂಹಾಸನಕ್ಕೆ ಆರಂಭದಿಂದಾನೇ ಗೌರವ ಸಿಗ್ತಿದೆ,

ಆ ಸಿಂಹಾಸನ ನಮ್ಮ ಆರಾಧನಾ ಸ್ಥಳ.+

13 ಯೆಹೋವನೇ, ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡೋನೇ,

ನಿನ್ನನ್ನ ಬಿಟ್ಟುಬಿಡುವವ್ರಿಗೆಲ್ಲ ಅವಮಾನ ಆಗುತ್ತೆ.

ನಿನ್ನನ್ನ* ಬಿಟ್ಟು ದೂರ ಹೋದವ್ರೆಲ್ಲರ ಹೆಸ್ರನ್ನ ಧೂಳಲ್ಲಿ ಬರಿತಾರೆ,+

ಯಾಕಂದ್ರೆ ಅವರು ಜೀವ ಕೊಡೋ ನೀರಿನ ಮೂಲನಾಗಿರೋ ಯೆಹೋವನನ್ನೇ ಬಿಟ್ಟುಬಿಟ್ಟಿದ್ದಾರೆ.+

14 ಯೆಹೋವನೇ, ನನ್ನನ್ನ ವಾಸಿ ಮಾಡು, ಆಗ ನಾನು ವಾಸಿ ಆಗ್ತೀನಿ.

ನನ್ನನ್ನ ಕಾಪಾಡು, ಆಗ ಬದುಕಿ ಉಳಿತೀನಿ.+

ಯಾಕಂದ್ರೆ ನಾನು ನಿನ್ನನ್ನೇ ಹಾಡಿ ಹೊಗಳ್ತೀನಿ.

15 ನೋಡು! ಅವರು ನನ್ನ ಹತ್ರ,

“ಯೆಹೋವ ಕೊಟ್ಟ ಮಾತು ಏನಾಯ್ತು?+

ಯಾಕೆ ಇನ್ನೂ ನಿಜ ಆಗಲಿಲ್ಲ?” ಅಂತ ಕೇಳ್ತಾರೆ.

16 ಆದ್ರೆ ನಾನು ಒಬ್ಬ ಕುರುಬನಾಗಿ ನಿನ್ನ ಹಿಂದೆ ಬರೋದನ್ನ ಬಿಟ್ಟು ಓಡಿ ಹೋಗಲಿಲ್ಲ,

ಕಷ್ಟದ ದಿನ ಯಾವಾಗ ಬರುತ್ತೋ ಅಂತ ಕಾಯಲಿಲ್ಲ.

ನಾನು ಏನೇನು ಮಾತಾಡಿದೆ ಅಂತ ನಿನಗೆ ಚೆನ್ನಾಗಿ ಗೊತ್ತು,

ಇದೆಲ್ಲ ನಿನ್ನ ಕಣ್ಮುಂದೆನೇ ಆಗಿದೆ!

17 ನನ್ನನ್ನ ಭಯಪಡಿಸಬೇಡ,

ಕಷ್ಟದ ದಿನದಲ್ಲಿ ನೀನೇ ನನಗೆ ಆಶ್ರಯ.

18 ನನಗೆ ಹಿಂಸೆ ಕೊಡುವವ್ರಿಗೆ ಅವಮಾನ ಆಗಲಿ,+

ಆದ್ರೆ ನನಗೆ ಅವಮಾನ ಆಗದ ಹಾಗೆ ನೋಡ್ಕೊ.

ಅವ್ರನ್ನ ಭಯ ಹಿಡಿಲಿ,

ಆದ್ರೆ ನನ್ನನ್ನ ಭಯ ಹಿಡಿಯದ ಹಾಗೆ ನೋಡ್ಕೊ.

ಕಷ್ಟದ ದಿನವನ್ನ ತಂದು+ ಅವ್ರನ್ನ ಜಜ್ಜಿ ಹಾಕು,

ಪೂರ್ತಿ ನಾಶಮಾಡು.

19 ಯೆಹೋವ ನನಗೆ ಹೇಳೋದು ಏನಂದ್ರೆ “ನೀನು ಹೋಗಿ ಯೆಹೂದದ ರಾಜರು ಬಂದುಹೋಗೋ ಮುಖ್ಯ ಬಾಗಿಲ* ಹತ್ರ, ಯೆರೂಸಲೇಮಿನ ಬೇರೆ ಎಲ್ಲ ಬಾಗಿಲ ಹತ್ರ ನಿಲ್ಲು.+ 20 ನೀನು ಅವ್ರಿಗೆ ಹೀಗೆ ಹೇಳಬೇಕು ‘ಈ ಬಾಗಿಲುಗಳಿಂದ ಒಳಗೆ ಬರ್ತಿರೋ ಯೆಹೂದದ ರಾಜರೇ, ಯೆಹೂದದ ಎಲ್ಲ ಜನ್ರೇ, ಯೆರೂಸಲೇಮಿನ ಎಲ್ಲ ಜನ್ರೇ ಯೆಹೋವನ ಮಾತು ಕೇಳಿ. 21 ಯೆಹೋವ ಹೀಗೆ ಹೇಳ್ತಾನೆ “ನೀವು ಜಾಗ್ರತೆಯಿಂದ ಪಾಲಿಸಬೇಕಾದ ವಿಷ್ಯ ಏನಂದ್ರೆ, ಸಬ್ಬತ್‌ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿ. ಆ ದಿನ ಯಾವ ಹೊರೆಯನ್ನೂ ಯೆರೂಸಲೇಮಿನ ಬಾಗಿಲುಗಳಿಂದ ಒಳಗೆ ತರಬೇಡಿ.+ 22 ಸಬ್ಬತ್‌ ದಿನ ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಹೊರಗೆ ತಗೊಂಡು ಹೋಗಬಾರದು. ಅವತ್ತು ಯಾವ ಕೆಲಸವನ್ನೂ ಮಾಡಬಾರದು.+ ನೀವು ಸಬ್ಬತ್‌ ದಿನವನ್ನ ಪವಿತ್ರವಾಗಿ ನೋಡಬೇಕು. ಹೀಗೆ ಮಾಡೋಕೆ ನಿಮ್ಮ ಪೂರ್ವಜರಿಗೆ ಆಜ್ಞೆ ಕೊಟ್ಟಿದ್ದೆ.+ 23 ಆದ್ರೆ ಅವರು ನನ್ನ ಮಾತು ಕೇಳಿಲ್ಲ, ನಾನು ಹೇಳಿದ್ದನ್ನ ಕಿವಿಗೆ ಹಾಕೊಳ್ಳಲಿಲ್ಲ, ಹಠಮಾರಿಗಳಾದ್ರು, ನಾನು ಹೇಳಿದ ಹಾಗೆ ಮಾಡಲಿಲ್ಲ. ನಾನು ತಿದ್ದಿದ್ರೂ ತಿದ್ಕೊಳ್ಳಲಿಲ್ಲ.”’+

24 ‘ಯೆಹೋವ ಹೇಳೋದು ಏನಂದ್ರೆ “ನಾನು ಹೇಳಿದ ಹಾಗೆ ನೀವು ತಪ್ಪದೆ ನಡ್ಕೊಂಡ್ರೆ, ಸಬ್ಬತ್‌ ದಿನ ಯಾವ ಹೊರೆಯನ್ನೂ ಈ ಪಟ್ಟಣದ ಬಾಗಿಲಿಂದ ಒಳಗೆ ತರದಿದ್ರೆ, ಸಬ್ಬತ್‌ ದಿನ ಯಾವ ಕೆಲಸವನ್ನೂ ಮಾಡ್ದೆ ಆ ದಿನವನ್ನ ಪವಿತ್ರವಾಗಿ ನೋಡಿದ್ರೆ+ 25 ದಾವೀದನ ಸಿಂಹಾಸನದಲ್ಲಿ ಕೂತ್ಕೊಳ್ಳೋ ರಾಜರು,+ ಅಧಿಕಾರಿಗಳು ರಥದಲ್ಲಿ, ಕುದುರೆಗಳ ಮೇಲೆ ಸವಾರಿಮಾಡ್ತಾ ಈ ಪಟ್ಟಣದ ಬಾಗಿಲುಗಳಿಂದ ಒಳಗೆ ಬರ್ತಾರೆ. ರಾಜರು, ಅವ್ರ ಅಧಿಕಾರಿಗಳು, ಯೆಹೂದದ ಜನ್ರು, ಯೆರೂಸಲೇಮಿನ ಜನ್ರು ಪಟ್ಟಣದ ಒಳಗೆ ಬರ್ತಾರೆ.+ ಈ ಪಟ್ಟಣದಲ್ಲಿ ಜನ್ರು ಯಾವಾಗ್ಲೂ ಇರ್ತಾರೆ. 26 ಯೆಹೂದದ ಪಟ್ಟಣಗಳಿಂದ, ಯೆರೂಸಲೇಮಿನ ಸುತ್ತಮುತ್ತ ಇರೋ ಸ್ಥಳಗಳಿಂದ, ಬೆನ್ಯಾಮೀನ್‌ ಪ್ರದೇಶದಿಂದ,+ ತಗ್ಗು ಪ್ರದೇಶದಿಂದ,+ ಬೆಟ್ಟ ಪ್ರದೇಶದಿಂದ, ನೆಗೆಬಿನಿಂದ* ಜನ್ರು ಬರ್ತಾರೆ. ಅವರು ಸರ್ವಾಂಗಹೋಮ ಬಲಿಗಳನ್ನ,+ ಬೇರೆ ಬಲಿಗಳನ್ನ,+ ಧಾನ್ಯ ಅರ್ಪಣೆಗಳನ್ನ,+ ಸಾಂಬ್ರಾಣಿಯನ್ನ, ಕೃತಜ್ಞತಾ ಬಲಿಗಳನ್ನ ಯೆಹೋವನ ಆಲಯಕ್ಕೆ ತರ್ತಾರೆ.+

27 ಆದ್ರೆ ನೀವು ನನ್ನ ಮಾತು ಕೇಳದೆ, ಸಬ್ಬತ್‌ ದಿನವನ್ನ ಪವಿತ್ರವಾಗಿ ನೋಡ್ದೆ, ಸಬ್ಬತ್‌ ದಿನ ಹೊರೆಗಳನ್ನ ಹೊತ್ರೆ, ಅವುಗಳನ್ನ ಯೆರೂಸಲೇಮಿನ ಬಾಗಿಲುಗಳಿಂದ ಒಳಗೆ ತಂದ್ರೆ ನಾನು ಆ ಪಟ್ಟಣದ ಬಾಗಿಲುಗಳಿಗೆ ಬೆಂಕಿ ಹಚ್ತೀನಿ. ಅದು ಖಂಡಿತ ಯೆರೂಸಲೇಮಿನ ಭದ್ರ ಕೋಟೆಗಳನ್ನ ಸುಟ್ಟು ಬಿಡುತ್ತೆ.+ ಆ ಬೆಂಕಿ ಆರಿಹೋಗಲ್ಲ.”’”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ