ಸೇವಾ ಕೂಟದ ಶೆಡ್ಯೂಲ್
ಡಿಸೆಂಬರ್ 12ರಿಂದ ಆರಂಭವಾಗುವ ವಾರ
ಗೀತೆ 32
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಅಕ್ಟೋಬರ್-ಡಿಸೆಂಬರ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ಡಿಸೆಂಬರ್ 15ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಲಿಕ್ಕಾಗಿ ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತಿಯೊಂದು ಪ್ರತ್ಯಕ್ಷಾಭಿನಯದ ನಂತರ, ನಿರೂಪಣೆಯಲ್ಲಿ ಒಂದು ವಚನವನ್ನು ಹೇಗೆ ಸುಲಭವಾಗಿ ಒಳಗೂಡಿಸಸಾಧ್ಯವಿದೆ ಎಂಬುದರ ಬಗ್ಗೆ ಹೇಳಿಕೆ ನೀಡಿರಿ.
15 ನಿ: “ಪ್ರಾಯೋಗಿಕ ಅನ್ವಯವನ್ನು ಮಾಡಲು ನಮಗೆ ಸಹಾಯಮಾಡುವ ಒಂದು ಶಾಲೆ.” ಶಾಲಾ ಮೇಲ್ವಿಚಾರಕನಿಂದ ಕೊಡಲ್ಪಡುವ ಭಾಷಣ. ನಮ್ಮ ರಾಜ್ಯದ ಸೇವೆಯ 2005ರ ಅಕ್ಟೋಬರ್ ಸಂಚಿಕೆಯ ಪುರವಣಿಯಿಂದ ಹೇಳಿಕೆಗಳನ್ನು ಸೇರಿಸಿರಿ.
20 ನಿ: “ಜೀವಕ್ಕೆ ನಡೆಸುವ ಶಿಕ್ಷಣ.”a ಒಬ್ಬರು ಅಥವಾ ಇಬ್ಬರು ತಾವು ಹೇಗೆ ದೈವಿಕ ಶಿಕ್ಷಣದಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಹೇಳಿಕೆ ನೀಡುವಂತೆ ಮುಂಚಿತವಾಗಿಯೇ ಏರ್ಪಾಡುಮಾಡಿರಿ.
ಗೀತೆ 101 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 19ರಿಂದ ಆರಂಭವಾಗುವ ವಾರ
ಗೀತೆ 160
5 ನಿ: ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ 25 ಮತ್ತು ಜನವರಿ 1ಕ್ಕಾಗಿ ಯೋಜಿಸಲ್ಪಟ್ಟಿರುವ ವಿಶೇಷ ಕ್ಷೇತ್ರ ಸೇವಾ ಏರ್ಪಾಡುಗಳ ಕುರಿತು ತಿಳಿಸಿರಿ.
15 ನಿ: “ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ಹೊಂದಿಸಿಕೊಳ್ಳುವವರಾಗಿರುವ ಮೂಲಕ.”b ಒಬ್ಬ ಪ್ರಚಾರಕನು ಮನೆಯವನ ಹೇಳಿಕೆಗನುಸಾರ ತನ್ನ ಪ್ರಸ್ತಾಪವನ್ನು ಹೇಗೆ ಹೊಂದಿಸಿಕೊಳ್ಳಸಾಧ್ಯವಿದೆ ಎಂಬುದನ್ನು ತೋರಿಸುವಂಥ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವನ್ನು ಸೇರಿಸಿರಿ.
25 ನಿ: “ನಿಮ್ಮ ಮಗ ಅಥವಾ ಮಗಳು ಒಂದು ಪ್ರೌಢ ನಿರ್ಣಯವನ್ನು ಮಾಡಬಲ್ಲರೊ?”c ಒಬ್ಬ ಹಿರಿಯನಿಂದ ನಿರ್ವಹಿಸಲ್ಪಡತಕ್ಕದ್ದು. ಒಬ್ಬ ಸಮರ್ಥ ಓದುಗನಾಗಿರುವ ಸಹೋದರನು ಪ್ರತಿ ಪ್ಯಾರಗ್ರಾಫನ್ನು ಗಟ್ಟಿಯಾಗಿ ಓದಲಿ. ಕೊಡಲ್ಪಟ್ಟಿರುವ ಎಲ್ಲ ವಚನಗಳನ್ನು ಚರ್ಚಿಸಿರಿ. ಎರಡನೇ ಪ್ಯಾರಗ್ರಾಫನ್ನು ಪರಿಗಣಿಸಿದ ಬಳಿಕ, 1992, ಮಾರ್ಚ್ 15ರ ಕಾವಲಿನಬುರುಜುವಿನ ಪುಟ 25ರಲ್ಲಿರುವ ಪ್ಯಾರಗ್ರಾಫ್ 16-17ರಲ್ಲಿ ಮತ್ತು ಅದೇ ಪುಟದ ಚೌಕದಲ್ಲಿ ತಿಳಿಸಲ್ಪಟ್ಟಿರುವ ಇಬ್ಬರು ಯುವ ಜನರ ಪರಿಸ್ಥಿತಿಗಳಲ್ಲಿ ಇರುವ ಭಿನ್ನತೆಯನ್ನು ತೋರಿಸಿರಿ. ಮುಕ್ತಾಯಗೊಳಿಸುವಾಗ, ಮಕ್ಕಳು ದೃಢನಿಶ್ಚಿತಾಭಿಪ್ರಾಯದಿಂದ ತಮ್ಮ ನಂಬಿಕೆಯನ್ನು ಸ್ಪಷ್ಟವಾಗಿ ತಿಳಿಸಲಿಕ್ಕಾಗಿ ಅವರನ್ನು ಸಜ್ಜುಗೊಳಿಸುತ್ತಾ ಹೆತ್ತವರು ಅವರೊಂದಿಗೆ ಕಾವಲಿನಬುರುಜುವಿನಲ್ಲಿರುವ ಆ ಲೇಖನವನ್ನು ಪೂರ್ತಿಯಾಗಿ ಪರಿಶೀಲಿಸುವಂತೆ ಮತ್ತು ರಕ್ತದ ಬಗ್ಗೆಯಿರುವ ಬೈಬಲಾಧಾರಿತ ಆಜ್ಞೆಯ ಕುರಿತು ಚರ್ಚೆಗಳನ್ನು ಹಾಗೂ ಪ್ರ್ಯಾಕ್ಟಿಸ್ ಸೆಷನ್‌ಗಳನ್ನು ಸಾಧ್ಯವಾದಷ್ಟು ಬೇಗನೆ ನಡೆಸುವಂತೆ ಉತ್ತೇಜಿಸಿರಿ. ದೀಕ್ಷಾಸ್ನಾನ ಪಡೆದುಕೊಂಡಿರುವ ಮಗನು/ಮಗಳು ಡೀಪೀಏ ಕಾರ್ಡನ್ನು ಮತ್ತು ಅಸ್ನಾತ ಮಗನು/ಮಗಳು ಐಡೆಂಟಿಟಿ ಕಾರ್ಡ್ ಅನ್ನು ಯಾವಾಗಲೂ ತಮ್ಮೊಂದಿಗೆ ಒಯ್ಯುತ್ತಿದ್ದಾರೆ ಎಂಬುದನ್ನು ಕುಟುಂಬದ ತಲೆಗಳು ಖಚಿತಪಡಿಸಿಕೊಳ್ಳತಕ್ಕದ್ದು. ಎಂದಾದರೂ ಯಾರಾದರೊಬ್ಬರು ಆಸ್ಪತ್ರೆಗೆ ಸೇರಿಸಲ್ಪಟ್ಟು ರಕ್ತಪೂರಣದ ಪ್ರಶ್ನೆಯು ಎಬ್ಬಿಸಲ್ಪಟ್ಟಲ್ಲಿ, ಹಿರಿಯರು ಸಹಾಯಕ್ಕಾಗಿ ಸ್ಥಳಿಕ ಹಾಸ್ಪಿಟಲ್ ಲಿಏಸಾನ್ ಕಮಿಟಿಯನ್ನು ಸಂಪರ್ಕಿಸಬೇಕು.
ಗೀತೆ 56 ಮತ್ತು ಸಮಾಪ್ತಿಯ ಪ್ರಾರ್ಥನೆ.
ಡಿಸೆಂಬರ್ 26ರಿಂದ ಆರಂಭವಾಗುವ ವಾರ
ಗೀತೆ 85
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನದ ಅಂಗೀಕಾರ ಪತ್ರಗಳನ್ನು ಓದಿಹೇಳಿರಿ. ಡಿಸೆಂಬರ್ ತಿಂಗಳಿನ ಕ್ಷೇತ್ರ ಸೇವಾ ವರದಿಗಳನ್ನು ಹಾಕುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ನಿಮ್ಮ ಸಭೆಯು ಹೊಸ ವರುಷಕ್ಕೆ ಕೂಟಗಳ ಸಮಯವನ್ನು ಬದಲಾಯಿಸಲಿಕ್ಕಿರುವಲ್ಲಿ, ಹೊಸ ಸಮಯದ ಕುರಿತು ಪ್ರಕಟನೆಯನ್ನು ಮಾಡಿರಿ. ಜನವರಿ ತಿಂಗಳಿಗಾಗಿರುವ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ ಮತ್ತು ಸೂಚಿತ ನಿರೂಪಣೆಗಳನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂಬುದನ್ನೂ ತಿಳಿಸಿರಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡಿರಿ. 2005ರ ಫೆಬ್ರವರಿ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ರಲ್ಲಿ ಹೆಚ್ಚು ಪತ್ರಿಕೆಗಳನ್ನು ನೀಡುವುದರ ಬಗ್ಗೆ ಕೊಡಲ್ಪಟ್ಟ ಸಲಹೆಗಳನ್ನು ಪುನರ್ವಿಮರ್ಶಿಸಿರಿ. ಪತ್ರಿಕೆಗಳ ಇತ್ತೀಚಿನ ಸಂಚಿಕೆಗಳಲ್ಲಿರುವ ಆಸಕ್ತಿಕರವಾದ ವಿಷಯಗಳನ್ನು ಚರ್ಚಿಸಿರಿ. ಪುಟ 8ರಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು (ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವುದಾದರೆ) ಉಪಯೋಗಿಸುತ್ತಾ, ಜನವರಿ-ಮಾರ್ಚ್ ಎಚ್ಚರ! (ಪತ್ರಿಕಾ ನಿರೂಪಣೆ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಜನವರಿ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಇತರ ಪ್ರಾಯೋಗಿಕ ನಿರೂಪಣೆಗಳನ್ನು ಉಪಯೋಗಿಸಬಹುದು. ಪ್ರತಿ ನಿರೂಪಣೆಯಲ್ಲೂ, ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣದ ಸಹಾಯವು ಎಲ್ಲಿಂದ ಬರುತ್ತದೆ ಎಂಬುದರ ಕುರಿತು ವಿವರಿಸಿರಿ.—ಕಾವಲಿನಬುರುಜುವಿನ ಪುಟ 2, ಅಥವಾ ಎಚ್ಚರ! ಪತ್ರಿಕೆಯ ಪುಟ 5ನ್ನು ನೋಡಿರಿ.
ಗೀತೆ 116 ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 2ರಿಂದ ಆರಂಭವಾಗುವ ವಾರ
ಗೀತೆ 5
ಸೂಚನೆ: ಜನವರಿ 2ರ ವಾರಕ್ಕಾಗಿರುವ ಸೇವಾ ಕೂಟವನ್ನು ಸಭೆಗಳು ಈ ತಾರೀಖಿಗಿಂತ ಮುಂಚೆ ನಡೆಸಬಾರದು; ಒಂದುವೇಳೆ ಸಂಚರಣ ಮೇಲ್ವಿಚಾರಕರ ಭೇಟಿಯು ಇರುವಲ್ಲಿ ಮಾತ್ರ ಹಾಗೆ ಮಾಡಬಹುದು. ಪ್ರತಿ ಸಭೆಯಲ್ಲೂ ಶೆಡ್ಯೂಲ್ ಮಾಡಲ್ಪಟ್ಟಿರುವಂತೆ ಸೇವಾ ಕೂಟದಲ್ಲಿ ಅಧಿವೇಶನದ ಪುರವಣಿಯು ಪರಿಗಣಿಸಲ್ಪಡತಕ್ಕದ್ದು. ಈ ವಾರದಲ್ಲಿ ಸರ್ಕಿಟ್ ಸಮ್ಮೇಳನವಿರುವುದಾದರೆ, ಪುಸ್ತಕ ಅಧ್ಯಯನದ ಮೇಲ್ವಿಚಾರಕರು ಅವರ ಪುಸ್ತಕ ಅಧ್ಯಯನ ಗುಂಪುಗಳಲ್ಲಿ ಅಧಿವೇಶನದ ಸ್ಥಳ ಮತ್ತು ದಿನಾಂಕಗಳನ್ನು ಪ್ರಕಟಿಸತಕ್ಕದ್ದು.
5 ನಿ: ಸ್ಥಳಿಕ ಪ್ರಕಟನೆಗಳು.
15 ನಿ: “ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ವಿವೇಕಯುತವಾಗಿ ಬಳಸುವುದು.”d 2002ರ ಸೆಪ್ಟೆಂಬರ್ ತಿಂಗಳಿನ ನಮ್ಮ ರಾಜ್ಯದ ಸೇವೆಯ ಪುಟ 1ರಿಂದ ಹೇಳಿಕೆಗಳನ್ನು ಸೇರಿಸಿರಿ.
25 ನಿ: “‘ಬಿಡುಗಡೆಯು ಸಮೀಪವಿದೆ’—2006ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ.”e ಸಭೆಯ ಕಾರ್ಯದರ್ಶಿಯಿಂದ ನಿರ್ವಹಿಸಲ್ಪಡತಕ್ಕದ್ದು. ಒಂದನೇ ಪ್ಯಾರಗ್ರಾಫನ್ನು ಪರಿಗಣಿಸಿದ ಬಳಿಕ, 2005, ಡಿಸೆಂಬರ್ 15ರ ಅಧಿವೇಶನ ನೇಮಕ ಪತ್ರವನ್ನು ಓದಿರಿ. ಸಾಧ್ಯವಾದಷ್ಟು ಬೇಗನೆ ತಮ್ಮ ಅಧಿವೇಶನದ ಏರ್ಪಾಡುಗಳನ್ನು ಮಾಡುವಂತೆ ಎಲ್ಲರನ್ನೂ ಉತ್ತೇಜಿಸಿರಿ.
ಗೀತೆ 48 ಮತ್ತು ಸಮಾಪ್ತಿಯ ಪ್ರಾರ್ಥನೆ.
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ಬಳಿಕ ಪ್ರಶ್ನೋತ್ತರಗಳ ಚರ್ಚೆಯಿರಲಿ.