ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಮತ್ತಾಯ ಮುಖ್ಯಾಂಶಗಳು

      • ಯೇಸು “ಸಬ್ಬತ್‌ ದಿನದ ಒಡೆಯ” (1-8)

      • ಕೈಗೆ ಲಕ್ವ ಹೊಡಿದಿದ್ದ ವ್ಯಕ್ತಿ ವಾಸಿಯಾದ (9-14)

      • ದೇವರ ಪ್ರೀತಿಯ ಸೇವಕ (15-21)

      • ಪವಿತ್ರಶಕ್ತಿಯ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸಿದನು (22-30)

      • ಕ್ಷಮೆ ಇಲ್ಲದ ಪಾಪ (31, 32)

      • ಮರ ಯಾವ ತರದ್ದು ಅಂತ ಹಣ್ಣು ನೋಡಿದ್ರೆ ಗೊತ್ತಾಗುತ್ತೆ (33-37)

      • ಯೋನನಿಗಾದ ಅದ್ಭುತ (38-42)

      • ಕೆಟ್ಟ ದೇವದೂತರು ವಾಪಸ್‌ ಬಂದ್ರು (43-45)

      • ಯೇಸುವಿನ ಅಮ್ಮ ಮತ್ತು ತಮ್ಮಂದಿರು (46-50)

ಮತ್ತಾಯ 12:1

ಮಾರ್ಜಿನಲ್ ರೆಫರೆನ್ಸ್

  • +ವಿಮೋ 12:16; ಧರ್ಮೋ 23:25; ಮಾರ್ಕ 2:23-28; ಲೂಕ 6:1-5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1997, ಪು. 28

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 20:10; 31:15; ಧರ್ಮೋ 5:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1997, ಪು. 28

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:3

ಮಾರ್ಜಿನಲ್ ರೆಫರೆನ್ಸ್

  • +1ಸಮು 21:1-6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 18

    8/15/2002, ಪು. 11-12

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:4

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:30; 40:22, 23
  • +ಯಾಜ 24:5-9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 18

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:5

ಮಾರ್ಜಿನಲ್ ರೆಫರೆನ್ಸ್

  • +ಅರ 28:9; ಯೋಹಾ 7:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:6

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:31, 32

ಮತ್ತಾಯ 12:7

ಮಾರ್ಜಿನಲ್ ರೆಫರೆನ್ಸ್

  • +ಹೋಶೇ 6:6; ಮೀಕ 6:6, 8; ಮತ್ತಾ 9:13; 23:23

ಮತ್ತಾಯ 12:8

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 2:27, 28; ಲೂಕ 6:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/15/2008, ಪು. 28

    ಮಹಾನ್‌ ಪುರುಷ, ಅಧ್ಯಾ. 31

ಮತ್ತಾಯ 12:10

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 3:1-6; ಲೂಕ 6:6-11
  • +ಲೂಕ 14:3; ಯೋಹಾ 9:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1998, ಪು. 9-10

    ಮಹಾನ್‌ ಪುರುಷ, ಅಧ್ಯಾ. 32

ಮತ್ತಾಯ 12:11

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:4; ಧರ್ಮೋ 22:4; ಲೂಕ 14:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/1998, ಪು. 9-10

    ಮಹಾನ್‌ ಪುರುಷ, ಅಧ್ಯಾ. 32

ಮತ್ತಾಯ 12:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 32

ಮತ್ತಾಯ 12:15

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 3:7

ಮತ್ತಾಯ 12:16

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 8:3, 4; ಮಾರ್ಕ 3:11, 12; 7:35, 36

ಮತ್ತಾಯ 12:18

ಮಾರ್ಜಿನಲ್ ರೆಫರೆನ್ಸ್

  • +ಅಕಾ 3:13
  • +ಮತ್ತಾ 3:17; 17:5
  • +ಯೆಶಾ 61:1; ಮಾರ್ಕ 1:10

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 39-40

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 151-156

    ಯೆಶಾಯನ ಪ್ರವಾದನೆ II, ಪು. 31-37

    ಕಾವಲಿನಬುರುಜು,

    8/1/1998, ಪು. 9-11

    4/15/1993, ಪು. 10

    ಮಹಾನ್‌ ಪುರುಷ, ಅಧ್ಯಾ. 33

ಮತ್ತಾಯ 12:19

ಮಾರ್ಜಿನಲ್ ರೆಫರೆನ್ಸ್

  • +2ತಿಮೊ 2:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 33

ಮತ್ತಾಯ 12:20

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 11:28

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    12/2017, ಪು. 5

    ಕಾವಲಿನಬುರುಜು,

    2/15/2015, ಪು. 8

    6/15/2008, ಪು. 6

    8/1/1998, ಪು. 13-14

    11/15/1995, ಪು. 21-24

    10/1/1994, ಪು. 16-17

    4/15/1993, ಪು. 10

    ಮಹಾನ್‌ ಪುರುಷ, ಅಧ್ಯಾ. 33

ಮತ್ತಾಯ 12:21

ಪಾದಟಿಪ್ಪಣಿ

  • *

    ಅಕ್ಷ. “ಇವನ ಹೆಸ್ರಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 11:10; 42:1-4; ಅಕಾ 4:12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 33

ಮತ್ತಾಯ 12:24

ಪಾದಟಿಪ್ಪಣಿ

  • *

    ಅಕ್ಷ. “ಬೆಲ್ಜೆಬೂಲ.”

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 3:22-27; ಲೂಕ 11:15-23

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 113-114

    ಹೊಸ ಲೋಕ ಭಾಷಾಂತರ, ಪು. 2664

    ಕಾವಲಿನಬುರುಜು,

    9/1/2002, ಪು. 11-12

ಮತ್ತಾಯ 12:25

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/1/2002, ಪು. 11-12

ಮತ್ತಾಯ 12:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 113-114

    ಕಾವಲಿನಬುರುಜು,

    9/1/2002, ಪು. 11-12

ಮತ್ತಾಯ 12:27

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 114

    ಕಾವಲಿನಬುರುಜು,

    9/1/2002, ಪು. 12

    ಮಹಾನ್‌ ಪುರುಷ, ಅಧ್ಯಾ. 41

ಮತ್ತಾಯ 12:28

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:20

ಮತ್ತಾಯ 12:30

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 9:40; ಲೂಕ 9:50; 11:23

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 41

ಮತ್ತಾಯ 12:31

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 3:28, 29; ಅಕಾ 7:51; ಇಬ್ರಿ 6:4, 6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    8/1/2007, ಪು. 13

    ಮಹಾನ್‌ ಪುರುಷ, ಅಧ್ಯಾ. 41

ಮತ್ತಾಯ 12:32

ಮಾರ್ಜಿನಲ್ ರೆಫರೆನ್ಸ್

  • +1ತಿಮೊ 1:13
  • +ಲೂಕ 12:10; ಇಬ್ರಿ 10:26

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/1993, ಪು. 9-10

    ಮಹಾನ್‌ ಪುರುಷ, ಅಧ್ಯಾ. 41

ಮತ್ತಾಯ 12:33

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 7:17; ಲೂಕ 6:43

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:34

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 3:7; 23:33
  • +ಮತ್ತಾ 15:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/2008, ಪು. 12

    9/15/2003, ಪು. 10-11

ಮತ್ತಾಯ 12:35

ಮಾರ್ಜಿನಲ್ ರೆಫರೆನ್ಸ್

  • +ಲೂಕ 6:45; ಯಾಕೋ 3:6

ಮತ್ತಾಯ 12:36

ಮಾರ್ಜಿನಲ್ ರೆಫರೆನ್ಸ್

  • +ಪ್ರಸಂ 12:14; ರೋಮ 14:12

ಮತ್ತಾಯ 12:38

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:1

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/15/1996, ಪು. 29

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:39

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 16:4; ಲೂಕ 11:29-32

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1996, ಪು. 28

    11/1/1995, ಪು. 13

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:40

ಮಾರ್ಜಿನಲ್ ರೆಫರೆನ್ಸ್

  • +ಯೋನ 1:17
  • +ಮತ್ತಾ 16:21; 17:23; 27:63; ಲೂಕ 24:46

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/15/2003, ಪು. 17-18

    5/15/1996, ಪು. 28

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:41

ಮಾರ್ಜಿನಲ್ ರೆಫರೆನ್ಸ್

  • +ಯೋನ 3:5
  • +ಲೂಕ 11:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/1996, ಪು. 28

ಮತ್ತಾಯ 12:42

ಮಾರ್ಜಿನಲ್ ರೆಫರೆನ್ಸ್

  • +1ಅರ 10:1; 2ಪೂರ್ವ 9:1
  • +ಮತ್ತಾ 12:6; ಲೂಕ 11:31

ಇಂಡೆಕ್ಸಸ್

  • ಸಂಶೋಧನಾ ಸಾಧನ

    “ನನ್ನನ್ನು ಹಿಂಬಾಲಿಸಿರಿ”, ಪು. 83-84

    ಕಾವಲಿನಬುರುಜು,

    7/1/1999, ಪು. 31

ಮತ್ತಾಯ 12:43

ಮಾರ್ಜಿನಲ್ ರೆಫರೆನ್ಸ್

  • +ಲೂಕ 11:24-26

ಮತ್ತಾಯ 12:45

ಮಾರ್ಜಿನಲ್ ರೆಫರೆನ್ಸ್

  • +ಇಬ್ರಿ 6:4, 6; 2ಪೇತ್ರ 2:20

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    11/1/1995, ಪು. 13

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:46

ಮಾರ್ಜಿನಲ್ ರೆಫರೆನ್ಸ್

  • +ಮತ್ತಾ 13:55; ಯೋಹಾ 2:12; ಅಕಾ 1:14; 1ಕೊರಿಂ 9:5; ಗಲಾ 1:19
  • +ಮಾರ್ಕ 3:31-35

ಮತ್ತಾಯ 12:48

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾ ಬೋಧಕ, ಪು. 222-223

ಮತ್ತಾಯ 12:49

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 20:17; ಇಬ್ರಿ 2:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಮಹಾ ಬೋಧಕ, ಪು. 222-223

    ಮಹಾನ್‌ ಪುರುಷ, ಅಧ್ಯಾ. 42

ಮತ್ತಾಯ 12:50

ಮಾರ್ಜಿನಲ್ ರೆಫರೆನ್ಸ್

  • +ಮಾರ್ಕ 3:35; ಲೂಕ 8:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/1/2003, ಪು. 8

    11/15/1998, ಪು. 13-14

    ಮಹಾ ಬೋಧಕ, ಪು. 222-223

    ಮಹಾನ್‌ ಪುರುಷ, ಅಧ್ಯಾ. 42

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಮತ್ತಾ. 12:1ವಿಮೋ 12:16; ಧರ್ಮೋ 23:25; ಮಾರ್ಕ 2:23-28; ಲೂಕ 6:1-5
ಮತ್ತಾ. 12:2ವಿಮೋ 20:10; 31:15; ಧರ್ಮೋ 5:14
ಮತ್ತಾ. 12:31ಸಮು 21:1-6
ಮತ್ತಾ. 12:4ವಿಮೋ 25:30; 40:22, 23
ಮತ್ತಾ. 12:4ಯಾಜ 24:5-9
ಮತ್ತಾ. 12:5ಅರ 28:9; ಯೋಹಾ 7:22
ಮತ್ತಾ. 12:6ಲೂಕ 11:31, 32
ಮತ್ತಾ. 12:7ಹೋಶೇ 6:6; ಮೀಕ 6:6, 8; ಮತ್ತಾ 9:13; 23:23
ಮತ್ತಾ. 12:8ಮಾರ್ಕ 2:27, 28; ಲೂಕ 6:5
ಮತ್ತಾ. 12:10ಮಾರ್ಕ 3:1-6; ಲೂಕ 6:6-11
ಮತ್ತಾ. 12:10ಲೂಕ 14:3; ಯೋಹಾ 9:16
ಮತ್ತಾ. 12:11ವಿಮೋ 23:4; ಧರ್ಮೋ 22:4; ಲೂಕ 14:5
ಮತ್ತಾ. 12:15ಮಾರ್ಕ 3:7
ಮತ್ತಾ. 12:16ಮತ್ತಾ 8:3, 4; ಮಾರ್ಕ 3:11, 12; 7:35, 36
ಮತ್ತಾ. 12:18ಅಕಾ 3:13
ಮತ್ತಾ. 12:18ಮತ್ತಾ 3:17; 17:5
ಮತ್ತಾ. 12:18ಯೆಶಾ 61:1; ಮಾರ್ಕ 1:10
ಮತ್ತಾ. 12:192ತಿಮೊ 2:24
ಮತ್ತಾ. 12:20ಮತ್ತಾ 11:28
ಮತ್ತಾ. 12:21ಯೆಶಾ 11:10; 42:1-4; ಅಕಾ 4:12
ಮತ್ತಾ. 12:24ಮಾರ್ಕ 3:22-27; ಲೂಕ 11:15-23
ಮತ್ತಾ. 12:28ಲೂಕ 11:20
ಮತ್ತಾ. 12:30ಮಾರ್ಕ 9:40; ಲೂಕ 9:50; 11:23
ಮತ್ತಾ. 12:31ಮಾರ್ಕ 3:28, 29; ಅಕಾ 7:51; ಇಬ್ರಿ 6:4, 6
ಮತ್ತಾ. 12:321ತಿಮೊ 1:13
ಮತ್ತಾ. 12:32ಲೂಕ 12:10; ಇಬ್ರಿ 10:26
ಮತ್ತಾ. 12:33ಮತ್ತಾ 7:17; ಲೂಕ 6:43
ಮತ್ತಾ. 12:34ಮತ್ತಾ 3:7; 23:33
ಮತ್ತಾ. 12:34ಮತ್ತಾ 15:11
ಮತ್ತಾ. 12:35ಲೂಕ 6:45; ಯಾಕೋ 3:6
ಮತ್ತಾ. 12:36ಪ್ರಸಂ 12:14; ರೋಮ 14:12
ಮತ್ತಾ. 12:38ಮತ್ತಾ 16:1
ಮತ್ತಾ. 12:39ಮತ್ತಾ 16:4; ಲೂಕ 11:29-32
ಮತ್ತಾ. 12:40ಯೋನ 1:17
ಮತ್ತಾ. 12:40ಮತ್ತಾ 16:21; 17:23; 27:63; ಲೂಕ 24:46
ಮತ್ತಾ. 12:41ಯೋನ 3:5
ಮತ್ತಾ. 12:41ಲೂಕ 11:30
ಮತ್ತಾ. 12:421ಅರ 10:1; 2ಪೂರ್ವ 9:1
ಮತ್ತಾ. 12:42ಮತ್ತಾ 12:6; ಲೂಕ 11:31
ಮತ್ತಾ. 12:43ಲೂಕ 11:24-26
ಮತ್ತಾ. 12:45ಇಬ್ರಿ 6:4, 6; 2ಪೇತ್ರ 2:20
ಮತ್ತಾ. 12:46ಮತ್ತಾ 13:55; ಯೋಹಾ 2:12; ಅಕಾ 1:14; 1ಕೊರಿಂ 9:5; ಗಲಾ 1:19
ಮತ್ತಾ. 12:46ಮಾರ್ಕ 3:31-35
ಮತ್ತಾ. 12:49ಯೋಹಾ 20:17; ಇಬ್ರಿ 2:11
ಮತ್ತಾ. 12:50ಮಾರ್ಕ 3:35; ಲೂಕ 8:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಓದಿ ನೂತನ ಲೋಕ ಭಾಷಾಂತರ (bi7)
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
  • 34
  • 35
  • 36
  • 37
  • 38
  • 39
  • 40
  • 41
  • 42
  • 43
  • 44
  • 45
  • 46
  • 47
  • 48
  • 49
  • 50
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಮತ್ತಾಯ 12:1-50

ಮತ್ತಾಯ

12 ಒಮ್ಮೆ ಸಬ್ಬತ್‌ ದಿನದಲ್ಲಿ ಯೇಸು ಶಿಷ್ಯರ ಜೊತೆ ಹೊಲ ದಾಟ್ತಿದ್ದಾಗ ಶಿಷ್ಯರಿಗೆ ಸಿಕ್ಕಾಪಟ್ಟೆ ಹಸಿವಾಗಿತ್ತು. ಅವರು ತೆನೆಗಳನ್ನ ಕಿತ್ತು ತಿಂದ್ರು.+ 2 ಇದನ್ನ ನೋಡಿ ಫರಿಸಾಯರು “ನೋಡು! ನಿನ್ನ ಶಿಷ್ಯರು ಸಬ್ಬತ್‌ ದಿನದಲ್ಲಿ ಮಾಡಬಾರದ ಕೆಲಸ ಮಾಡ್ತಿದ್ದಾರೆ” ಅಂದ್ರು.+ 3 ಅದಕ್ಕೆ ಯೇಸು “ದಾವೀದ ಮತ್ತು ಅವನ ಜನ ಹಸಿದಾಗ ಅವನು ಏನು ಮಾಡಿದ ಅಂತ ನೀವು ಓದಿಲ್ವಾ?+ 4 ದೇವಾಲಯಕ್ಕೆ ಹೋಗಿ ಪುರೋಹಿತರು ಮಾತ್ರ ತಿನ್ನಬೇಕಾಗಿದ್ದ ನೈವೇದ್ಯದ ರೊಟ್ಟಿಗಳನ್ನ+ ಅವನೂ ಅವನ ಜೊತೆ ಇರೋರು ತಿಂದ್ರಲ್ವಾ?+ 5 ಅಷ್ಟೇ ಅಲ್ಲ ಸಬ್ಬತ್‌ ದಿನದಲ್ಲಿ ಪುರೋಹಿತರು ಆಲಯದಲ್ಲಿ ಕೆಲಸ ಮಾಡ್ತಾರೆ, ಅವರು ಕೆಲಸ ಮಾಡಿದ್ರೂ ತಪ್ಪಲ್ಲ ಅಂತ ನೀವು ನಿಯಮ ಪುಸ್ತಕದಲ್ಲಿ ಓದಿಲ್ವಾ?+ 6 ಆಲಯಕ್ಕಿಂತ ದೊಡ್ಡವನು ಇಲ್ಲಿದ್ದಾನೆ ಅಂತ ನಾನು ನಿಮಗೆ ಹೇಳ್ತಿದ್ದೀನಿ.+ 7 ‘ನನಗೆ ಬಲಿ ಬೇಡ, ಜನ್ರಿಗೆ ಕರುಣೆ ತೋರಿಸಿ’+ ಅನ್ನೋ ಮಾತಿನ ಅರ್ಥ ನಿಮಗೆ ಗೊತ್ತಿದ್ರೆ ಯಾವ ತಪ್ಪನ್ನೂ ಮಾಡದೆ ಇರುವವರನ್ನ ಅಪರಾಧಿಗಳು ಅಂತ ಹೇಳ್ತಿರಲಿಲ್ಲ. 8 ಯಾಕಂದ್ರೆ ಮನುಷ್ಯಕುಮಾರ ಸಬ್ಬತ್‌ ದಿನದ ಒಡೆಯನಾಗಿದ್ದಾನೆ”+ ಅಂದನು.

9 ಯೇಸು ಅಲ್ಲಿಂದ ಸಭಾಮಂದಿರಕ್ಕೆ ಹೋದನು. 10 ಕೈಗೆ ಲಕ್ವ ಹೊಡಿದಿದ್ದ ಒಬ್ಬ ವ್ಯಕ್ತಿ ಅಲ್ಲಿದ್ದ.+ ಆಗ ಸ್ವಲ್ಪ ಜನ ಯೇಸು ಮೇಲೆ ತಪ್ಪು ಹೊರಿಸೋ ಉದ್ದೇಶದಿಂದ ‘ಸಬ್ಬತ್‌ ದಿನದಲ್ಲಿ ವಾಸಿ ಮಾಡೋದು ಸರಿನಾ?’ ಅಂತ ಕೇಳಿದ್ರು.+ 11 ಅದಕ್ಕೆ ಆತನು “ನಿಮ್ಮ ಹತ್ರ ಒಂದು ಕುರಿಯಿದೆ ಅಂತ ನೆನಸಿ, ಸಬ್ಬತ್‌ ದಿನದಲ್ಲಿ ಅದು ಗುಂಡಿಗೆ ಬಿದ್ರೆ ಮೇಲೆ ಎತ್ತದೆ ಇರ್ತಿರಾ?+ 12 ಕುರಿಗಿಂತ ಮನುಷ್ಯ ಅಮೂಲ್ಯ ಅಲ್ವಾ! ಹಾಗಾಗಿ ಸಬ್ಬತ್‌ ದಿನದಲ್ಲಿ ಒಳ್ಳೇ ಕೆಲಸ ಮಾಡೋದು ಸರಿನೇ” ಅಂದನು. 13 ಆಮೇಲೆ ಯೇಸು ಆ ವ್ಯಕ್ತಿಗೆ “ನಿನ್ನ ಕೈಚಾಚು” ಅಂದನು. ಅವನು ಕೈ ಚಾಚಿದಾಗ ಅದು ವಾಸಿ ಆಗಿ ಇನ್ನೊಂದು ಕೈ ತರಾನೇ ಆಯ್ತು. 14 ಆದ್ರೆ ಫರಿಸಾಯರು ಹೊರಗೆ ಹೋಗಿ ಯೇಸುನ ಕೊಲ್ಲೋಕೆ ಒಳಸಂಚು ಮಾಡಿದ್ರು. 15 ಯೇಸುಗೆ ಇದು ಗೊತ್ತಾದಾಗ ಅಲ್ಲಿಂದ ಹೊರಟು ಹೋದನು. ತುಂಬ ಜನ ಆತನ ಹಿಂದೆ ಹೋದ್ರು.+ ಆತನು ಅವ್ರನ್ನೆಲ್ಲ ವಾಸಿಮಾಡಿದನು. 16 ಆದ್ರೆ ತನ್ನ ಬಗ್ಗೆ ಬೇರೆ ಯಾರಿಗೂ ಹೇಳಬೇಡಿ ಅಂತ ಆಜ್ಞೆ ಕೊಟ್ಟನು.+ 17 ಹೀಗೆ ಪ್ರವಾದಿ ಯೆಶಾಯ ಹೇಳಿದ ಮಾತು ನಿಜ ಆಯ್ತು. ಆ ಮಾತು ಏನಂದ್ರೆ

18 “ಇವನೇ ನಾನು ಆರಿಸ್ಕೊಂಡಿರೋ ಸೇವಕ!+ ನನ್ನ ಪ್ರೀತಿಯ ಮಗ. ನನಗೆ ಇಷ್ಟ ಆಗೋದನ್ನೇ ಇವನು ಮಾಡ್ತಾನೆ!+ ನಾನು ನನ್ನ ಪವಿತ್ರಶಕ್ತಿಯನ್ನ ಇವನಿಗೆ ಕೊಟ್ಟಿದ್ದೀನಿ.+ ಇವನು ಎಲ್ಲ ಜನ್ರಿಗೆ ನ್ಯಾಯ ಅಂದ್ರೆ ಏನಂತ ತೋರಿಸ್ಕೊಡ್ತಾನೆ. 19 ಇವನು ಜಗಳ ಮಾಡಲ್ಲ,+ ಕೂಗಾಡಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಇವನ ಸ್ವರ ಯಾರಿಗೂ ಕೇಳಿಸಲ್ಲ. 20 ಇವನು ಜಜ್ಜಿದ ದಂಟನ್ನ ಮುರಿದು ಹಾಕಲ್ಲ, ಆರಿಹೋಗೋ ದೀಪವನ್ನ ಆರಿಸಲ್ಲ.+ ನ್ಯಾಯಕ್ಕೆ ಜಯ ಸಿಗೋ ತರ ನೋಡ್ಕೊಳ್ತಾನೆ. 21 ನಿಜಕ್ಕೂ ಲೋಕ ಇವನಲ್ಲಿ* ಭರವಸೆ ಇಡುತ್ತೆ.”+

22 ಆಮೇಲೆ ಜನ ಯೇಸು ಹತ್ರ ಒಬ್ಬನನ್ನ ಕರ್ಕೊಂಡು ಬಂದ್ರು. ಅವನು ಕೆಟ್ಟ ದೇವದೂತನ ಹತೋಟಿಯಲ್ಲಿದ್ದ, ಮೂಕ ಕುರುಡನಾಗಿದ್ದ. ಯೇಸು ಅವನನ್ನ ವಾಸಿಮಾಡಿದಾಗ ಮಾತು, ದೃಷ್ಟಿ ಎರಡೂ ಬಂತು. 23 ಜನ್ರೆಲ್ಲ ಇದನ್ನ ನೋಡಿ ತುಂಬ ಆಶ್ಚರ್ಯಪಟ್ಟು “ಇವನೇ ದಾವೀದನ ಮಗ ಇರಬೇಕು!” ಅಂತ ಹೇಳ್ತಿದ್ರು. 24 ಫರಿಸಾಯರು ಅವ್ರ ಮಾತು ಕೇಳಿಸ್ಕೊಂಡು “ಇವನು ಕೆಟ್ಟ ದೇವದೂತರನ್ನ ಸೈತಾನನ* ಸಹಾಯದಿಂದಾನೇ ಬಿಡಿಸ್ತಾ ಇದ್ದಾನೆ”+ ಅಂದ್ರು. 25 ಅವ್ರ ಆಲೋಚನೆನ ಅರ್ಥ ಮಾಡ್ಕೊಂಡ ಯೇಸು ಹೀಗೆ ಹೇಳಿದನು “ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಿದ್ರೆ ಆ ದೇಶ ನಾಶವಾಗಿ ಹೋಗುತ್ತೆ. ತಮ್ಮತಮ್ಮೊಳಗೇ ಜಗಳ ಆಡೋ ಊರು, ಕುಟುಂಬ ಹಾಳಾಗಿ ಹೋಗುತ್ತೆ. 26 ಅದೇ ತರ ಸೈತಾನ ಸೈತಾನನನ್ನೇ ಬಿಡಿಸಿದ್ರೆ ಅವನು ತನ್ನ ವಿರುದ್ಧಾನೇ ತಿರುಗಿ ಬಿದ್ದ ಹಾಗೆ ಆಗುತ್ತಲ್ವಾ? ಹಾಗೆ ಮಾಡಿದ್ರೆ ಅವನ ಸಾಮ್ರಾಜ್ಯ ಒಡೆದು ಹೋಗುತ್ತೆ ತಾನೇ? 27 ನಾನು ಸೈತಾನನ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಬಿಡಿಸ್ತಿದ್ದಾರೆ? ನೀವು ಮಾತಾಡ್ತಿರೋದು ತಪ್ಪು ಅಂತ ನಿಮ್ಮ ಶಿಷ್ಯರೇ ತೋರಿಸಿಕೊಡ್ತಾ ಇದ್ದಾರೆ. 28 ನಾನು ಕೆಟ್ಟ ದೇವದೂತರನ್ನ ಬಿಡಿಸೋದು ದೇವರ ಪವಿತ್ರಶಕ್ತಿಯಿಂದ ಆಗಿದ್ರೆ ಅದರರ್ಥ ದೇವರ ಆಳ್ವಿಕೆ ಈಗಾಗಲೇ ಬಂದಿದೆ, ಆದ್ರೆ ನೀವು ಅದನ್ನ ಗಮನಿಸಲಿಲ್ಲ.+ 29 ಒಬ್ಬ ಬಲಶಾಲಿಯ ಮನೆಗೆ ನುಗ್ಗಿ ಅವನ ಕೈಕಾಲು ಕಟ್ಟಿಹಾಕದೆ ಆಸ್ತಿ ದೋಚೋಕಾಗುತ್ತಾ? ಅವನನ್ನ ಕಟ್ಟಿಹಾಕಿದ ಮೇಲೆನೇ ಮನೆ ದೋಚಕ್ಕೆ ಆಗೋದು. 30 ನನ್ನ ಪರವಾಗಿ ನಿಲ್ಲದವನು ನನ್ನ ವಿರೋಧಿ. ನನ್ನ ಹತ್ರ ಬರೋಕೆ ಜನ್ರಿಗೆ ಸಹಾಯ ಮಾಡದವನು ಅವ್ರನ್ನ ನನ್ನಿಂದ ದೂರ ಓಡಿಸ್ತಿದ್ದಾನೆ.+

31 ಹಾಗಾಗಿ ನಿಮಗೆ ಹೇಳ್ತಿದ್ದೀನಿ, ಜನ ಮಾಡೋ ಎಲ್ಲ ಪಾಪಕ್ಕೂ ಕ್ಷಮೆ ಇದೆ. ಪವಿತ್ರವಾಗಿರೋ ವಿಷ್ಯಗಳ ವಿರುದ್ಧ ಮಾತಾಡಿದ್ರೂ ಕ್ಷಮೆ ಇದೆ. ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಕ್ಷಮೆನೇ ಇಲ್ಲ.+ 32 ಉದಾಹರಣೆಗೆ ಮನುಷ್ಯಕುಮಾರನ ವಿರುದ್ಧ ಮಾತಾಡಿದ್ರೆ ಅವನಿಗೆ ಕ್ಷಮೆ ಸಿಗುತ್ತೆ.+ ಆದ್ರೆ ಪವಿತ್ರಶಕ್ತಿಯ ವಿರುದ್ಧ ಮಾತಾಡಿದ್ರೆ ಅವನಿಗೆ ಈಗ್ಲೂ ಕ್ಷಮೆ ಸಿಗಲ್ಲ, ಬರಲಿರೋ ಹೊಸ ಲೋಕದಲ್ಲೂ ಕ್ಷಮೆ ಸಿಗಲ್ಲ.+

33 ನೀವು ಒಳ್ಳೇ ಮರ ಆಗಿದ್ರೆ ಒಳ್ಳೇ ಹಣ್ಣು ಕೊಡ್ತೀರ. ಕೆಟ್ಟ ಮರ ಆಗಿದ್ರೆ ಕೆಟ್ಟ ಹಣ್ಣು ಕೊಡ್ತೀರ. ಹಣ್ಣು ನೋಡಿದ್ರೆ ಸಾಕು ಆ ಮರ ಯಾವ ತರದ್ದು ಅಂತ ಗೊತ್ತಾಗುತ್ತೆ.+ 34 ವಿಷಹಾವಿನ ಮರಿಗಳೇ,+ ಕೆಟ್ಟವರಾಗಿರೋ ನಿಮ್ಮ ಬಾಯಿಂದ ಒಳ್ಳೇ ಮಾತು ಹೇಗೆ ಬರುತ್ತೆ? ಹೃದಯದಲ್ಲಿ ಇರೋದೇ ಬಾಯಲ್ಲಿ ಬರೋದು.+ 35 ಒಳ್ಳೆಯವನು ಒಳ್ಳೇದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಒಳ್ಳೇದೇ ತುಂಬಿರುತ್ತೆ. ಆದ್ರೆ ಕೆಟ್ಟವನು ಕೆಟ್ಟದ್ದನ್ನೇ ಮಾತಾಡ್ತಾನೆ. ಯಾಕಂದ್ರೆ ಅವನ ಹೃದಯದಲ್ಲಿ ಕೆಟ್ಟದ್ದೇ ತುಂಬಿರುತ್ತೆ.+ 36 ನೆನಪಿಡಿ, ಜನ ತಮ್ಮ ಪೊಳ್ಳು ಮಾತಿಗೆ ತೀರ್ಪಿನ ದಿನದಲ್ಲಿ ದೇವರಿಗೆ ಲೆಕ್ಕ ಕೊಡಬೇಕಾಗುತ್ತೆ.+ 37 ಯಾಕಂದ್ರೆ ನಿನ್ನ ಮಾತು ಒಳ್ಳೇದಾಗಿದ್ರೆ ದೇವರು ನಿನ್ನನ್ನ ನೀತಿವಂತ ಅಂತ ಹೇಳ್ತಾನೆ. ನಿನ್ನ ಮಾತು ಕೆಟ್ಟದಾಗಿದ್ರೆ ದೇವರು ನಿನ್ನನ್ನ ಶಿಕ್ಷಿಸ್ತಾನೆ.”

38 ಆಗ ಕೆಲವು ಪಂಡಿತರು ಫರಿಸಾಯರು ಯೇಸುಗೆ “ಗುರು, ನಿನ್ನನ್ನ ದೇವರೇ ಕಳಿಸಿದ್ದು ಅಂತ ನಂಬೋಕೆ ಒಂದು ಅದ್ಭುತಮಾಡು” ಅಂದ್ರು.+ 39 ಅದಕ್ಕೆ ಯೇಸು “ದೇವರ ಮಾತನ್ನ ಕೇಳದ ದುಷ್ಟ ಪೀಳಿಗೆ, ಅದ್ಭುತ ನೋಡಿದ್ರೆ ನಂಬ್ತೀವಿ ಅಂತ ಹೇಳುತ್ತೆ. ಆದ್ರೆ ಪ್ರವಾದಿ ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ನೋಡೋಕೆ ಸಿಗಲ್ಲ.+ 40 ಯೋನ ಮೂರು ದಿನ ಹಗಲೂರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿದ್ದ ಹಾಗೆ+ ಮನುಷ್ಯಕುಮಾರ ಮೂರು ದಿನ ಹಗಲೂರಾತ್ರಿ ಸಮಾಧಿಯಲ್ಲಿ ಇರ್ತಾನೆ.+ 41 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಎದ್ದು ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪುಗಳನ್ನ ತಿದ್ಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+ 42 ತೀರ್ಪಿನ ದಿನದಲ್ಲಿ ಶೆಬದ ರಾಣಿ ಈ ದುಷ್ಟ ಪೀಳಿಗೆ ಜೊತೆ ಜೀವಂತವಾಗಿ ಎದ್ದು ಬಂದಾಗ ನೀವು ತಪ್ಪು ಮಾಡಿದ್ರಿ ಅಂತ ಅವ್ರಿಗೆ ಹೇಳ್ತಾಳೆ. ಯಾಕಂದ್ರೆ ಅವಳು ಸೊಲೊಮೋನನ ವಿವೇಕದ ಮಾತುಗಳನ್ನ ಕೇಳಿಸ್ಕೊಳ್ಳೋಕೆ ದೂರದಿಂದ ಬಂದಳು.+ ಆದ್ರೆ ಸೊಲೊಮೋನನಿಗಿಂತ ಎಷ್ಟೋ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+

43 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನನ್ನ ಮನೆಯಾಗಿ ಮಾಡ್ಕೊಂಡಿದ್ದ. ಅವನು ಹೊರಗೆ ಬಂದು ವಿಶ್ರಾಂತಿಗಾಗಿ ಜಾಗ ಹುಡುಕ್ತಾ ಇದ್ದ. ಮರುಭೂಮಿಯಲ್ಲಿ ಅಲೆದಾಡಿದ್ರೂ ಅವನಿಗೆ ಎಲ್ಲೂ ಜಾಗ ಸಿಗಲಿಲ್ಲ.+ 44 ಆಗ ಅವನು ‘ನಾನು ಬಿಟ್ಟುಬಂದ ಮನೆಗೆ ಮತ್ತೆ ಹೋಗ್ತೀನಿ’ ಅಂತ ವಾಪಸ್‌ ಹೋದ. ಅಲ್ಲಿ ಹೋದಾಗ ಆ ಮನೆ ಖಾಲಿ ಇತ್ತು, ಚೆನ್ನಾಗಿ ಗುಡಿಸಿ ಅಲಂಕಾರ ಮಾಡಿದ್ರು. 45 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಕೆಟ್ಟವರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನ ಕರ್ಕೊಂಡು ಬರ್ತಾನೆ. ಅವ್ರೆಲ್ಲ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಹದಗೆಟ್ಟು ಹೋಗುತ್ತೆ.+ ಈ ದುಷ್ಟ ಪೀಳಿಗೆ ಗತಿ ಕೂಡ ಹಾಗೇ ಆಗುತ್ತೆ” ಅಂದನು.

46 ಯೇಸು ಜನ್ರ ಜೊತೆ ಇನ್ನೂ ಮಾತಾಡ್ತಾ ಇರುವಾಗ ಆತನ ಅಮ್ಮ, ತಮ್ಮಂದಿರು+ ಆತನ ಹತ್ರ ಮಾತಾಡಬೇಕಂತ ಹೊರಗೆ ಕಾಯ್ತಾ ಇದ್ರು.+ 47 ಒಬ್ಬ ಯೇಸುಗೆ “ನಿನ್ನ ಅಮ್ಮ, ತಮ್ಮಂದಿರು ನಿನ್ನ ಹತ್ರ ಮಾತಾಡೋಕೆ ಕಾಯ್ತಾ ಇದ್ದಾರೆ” ಅಂದ. 48 ಅದಕ್ಕೆ ಯೇಸು “ನನ್ನ ಅಮ್ಮ ತಮ್ಮಂದಿರು ಯಾರು?” ಅಂತ ಕೇಳಿ, 49 ಶಿಷ್ಯರ ಕಡೆ ಕೈತೋರಿಸಿ “ನೋಡು, ಇವ್ರೇ ನನ್ನ ಅಮ್ಮ, ತಮ್ಮಂದಿರು!+ 50 ಸ್ವರ್ಗದಲ್ಲಿರೋ ನನ್ನ ತಂದೆಯ ಇಷ್ಟದ ಪ್ರಕಾರ ನಡಿಯೋರೆ ನನ್ನ ಅಮ್ಮ, ಅಣ್ಣತಮ್ಮ, ಅಕ್ಕತಂಗಿ”+ ಅಂತ ಹೇಳಿದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ