ಯೆಶಾಯ
27 ಆ ದಿನ ಯೆಹೋವ ಚೂಪಾದ, ಭಯಾನಕ ಕತ್ತಿಯನ್ನ ಬಳಸಿ+
ವೇಗವಾಗಿ ಹೋಗೋ ಲಿವ್ಯಾತಾನ್* ಅನ್ನೋ ವಕ್ರ ಹಾವಿನ ಮೇಲೆ ಆಕ್ರಮಣ ಮಾಡ್ತಾನೆ.
ಸಮುದ್ರದಲ್ಲಿ ವಾಸಿಸೋ ಆ ದೊಡ್ಡ ಹಾವನ್ನ ಕೊಂದುಹಾಕ್ತಾನೆ.
2 ಆ ದಿನ ನೀವು ಆ ಸ್ತ್ರೀ* ಬಗ್ಗೆ ಈ ಹಾಡನ್ನ ಹಾಡಿ
“ನೊರೆಸೂಸೋ ದ್ರಾಕ್ಷಾಮದ್ಯದ ದ್ರಾಕ್ಷಿತೋಟ!+
3 ಯೆಹೋವ ಅನ್ನೋ ನಾನು ಅವಳನ್ನ ಕಾಪಾಡ್ತಿದ್ದೀನಿ.+
ಪ್ರತಿಕ್ಷಣ ಅವಳಿಗೆ ನೀರು ಹಾಕ್ತಿದ್ದೀನಿ.+
ಯಾರೂ ಅವಳಿಗೆ ಹಾನಿಮಾಡದ ಹಾಗೆ
ಹಗಲೂರಾತ್ರಿ ಅವಳನ್ನ ಸಂರಕ್ಷಿಸ್ತಿದ್ದೀನಿ.+
4 ಅವಳ ಮೇಲೆ ನನಗೆ ಯಾವುದೇ ಕೋಪ ಇಲ್ಲ.+
ಯಾವನಾದ್ರೂ ನನ್ನ ಮುಂದೆ ಮುಳ್ಳುಪೊದೆಗಳನ್ನ, ಕಳೆಗಳನ್ನ ತಂದಿಟ್ರೆ
ನಾನು ಅವನ ವಿರುದ್ಧ ಯುದ್ಧಮಾಡಿ ಅವುಗಳನ್ನ ತುಳಿದು ಸುಟ್ಟುಹಾಕ್ತೀನಿ.
5 ಹೀಗೆ ಆಗಬಾರದಂದ್ರೆ ಅವನು ನನ್ನ ಭದ್ರಕೋಟೆಯಲ್ಲಿ ಸಂರಕ್ಷಣೆ ಪಡಿಲಿ.
ಅವನು ನನ್ನ ಜೊತೆ ಶಾಂತಿ ಮಾಡ್ಕೊಳ್ಳಲಿ,
ಹೌದು, ನನ್ನ ಜೊತೆ ಸಮಾಧಾನ ಮಾಡ್ಕೊಳ್ಳಲಿ.”
6 ಮುಂಬರೋ ದಿನಗಳಲ್ಲಿ ಯಾಕೋಬ ಬೇರು ಬಿಡ್ತಾನೆ,
ಇಸ್ರಾಯೇಲ್ ಹೂಬಿಡುತ್ತೆ, ಮೊಳಕೆ ಒಡೆಯುತ್ತೆ,+
ಅವರು ದೇಶವನ್ನ ಬೆಳೆಯಿಂದ ತುಂಬಿಸ್ತಾರೆ.+
7 ಇಸ್ರಾಯೇಲ್ ಜನಾಂಗದವ್ರನ್ನ ಅಷ್ಟು ತೀವ್ರವಾಗಿ ಹೊಡಿಬೇಕಾ?
ಅವ್ರನ್ನ ಅಷ್ಟು ಕ್ರೂರವಾಗಿ ಸಂಹಾರ ಮಾಡ್ಬೇಕಾ?
8 ನೀನು ಅವಳ ವಿರುದ್ಧ ಹೋರಾಡ್ತೀಯ, ಕಿರಿಚಾಡ್ತಾ ಅವಳನ್ನ ದೂರ ಓಡಿಸ್ತೀಯ.
ಪೂರ್ವದ ಗಾಳಿ ಬೀಸೋ ದಿನ ನಿನ್ನ ಕಡುಕೋಪದಿಂದ ನೀನು ಅವಳನ್ನ ಹೊರಗಟ್ತೀಯ.+
9 ಹೀಗೆ ಯಾಕೋಬನ ತಪ್ಪಿಗೆ ಪ್ರಾಯಶ್ಚಿತ್ತ ಆಗುತ್ತೆ,+
ಅವನ ಪಾಪವನ್ನ ತೆಗೆದು ಹಾಕಿದಾಗ ಅವನಿಗೆ ಸಿಗೋ ಸಂಪೂರ್ಣ ಪ್ರತಿಫಲ ಇದೇ,
ಆತನು ಯಜ್ಞವೇದಿಯ ಎಲ್ಲ ಕಲ್ಲುಗಳನ್ನ
ಪುಡಿಪುಡಿಯಾಗಿರೋ ಸುಣ್ಣದ ಕಲ್ಲುಗಳ ತರ ಮಾಡ್ತಾನೆ,
10 ಯಾಕಂದ್ರೆ ಭದ್ರ ಕೋಟೆಗಳಿರೋ ಪಟ್ಟಣ ನಿರ್ಜನ ಆಗುತ್ತೆ,
ಹುಲ್ಲುಗಾವಲುಗಳನ್ನ ಕಾಡಿನ ಹಾಗೆ ತೊರೆಯಲಾಗುತ್ತೆ,+
ಕರು ಅಲ್ಲೇ ಮೇಯುತ್ತೆ, ಅಲ್ಲೇ ಮಲಗುತ್ತೆ,
ಅದ್ರ ಕೊಂಬೆಗಳನ್ನ ತಿಂದುಹಾಕುತ್ತೆ.+
ಯಾಕಂದ್ರೆ ಈ ಜನ್ರಿಗೆ ತಿಳುವಳಿಕೆನೇ ಇಲ್ಲ.+
ಅದಕ್ಕೇ ಅವ್ರನ್ನ ರಚಿಸಿದವನು ಅವ್ರಿಗೆ ಕರುಣೆ ತೋರಿಸಲ್ಲ,
ಅವ್ರನ್ನ ಮಾಡಿದವನು ಅವ್ರಿಗೆ ಕೃಪೆ ತೋರಿಸಲ್ಲ.+
12 ಮರದಲ್ಲಿರೋ ಹಣ್ಣುಗಳನ್ನ ಒಂದೊಂದಾಗಿ ಕಿತ್ತು ಕೂಡಿಸೋ ತರ ಇಸ್ರಾಯೇಲಿನ ಜನ್ರೇ, ಹರಿಯೋ ನದಿಯ ಕಾಲುವೆಯಿಂದ ಈಜಿಪ್ಟಿನ ನಾಲೆ+ ತನಕ* ಚೆದರಿಹೋಗಿರೋ ನಿಮ್ಮನ್ನ ಆ ದಿನ ಯೆಹೋವ ಕೂಡಿಸ್ತಾನೆ.+ 13 ಆ ದಿನ ಒಂದು ದೊಡ್ಡ ಕೊಂಬನ್ನ ಊದಲಾಗುತ್ತೆ,+ ಅಶ್ಶೂರ್ ದೇಶದಲ್ಲಿ ಇನ್ನೇನು ನಾಶ ಆಗಲಿರೋ+ ಮತ್ತು ಈಜಿಪ್ಟ್ ದೇಶದಲ್ಲಿ ಚೆದರಿ ಹೋಗಿರುವವರು+ ಯೆರೂಸಲೇಮಲ್ಲಿರೋ ಪವಿತ್ರ ಬೆಟ್ಟಕ್ಕೆ ಬಂದು ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ.+