ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 46
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಈಜಿಪ್ಟ್‌ ವಿರುದ್ಧ ಭವಿಷ್ಯವಾಣಿ (1-26)

        • ನೆಬೂಕದ್ನೆಚ್ಚರ ಈಜಿಪ್ಟನ್ನ ಸೋಲಿಸ್ತಾನೆ (13, 26)

      • ಇಸ್ರಾಯೇಲಿಗೆ ಕೊಟ್ಟ ಮಾತುಗಳು (27, 28)

ಯೆರೆಮೀಯ 46:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 1:10

ಯೆರೆಮೀಯ 46:2

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +2ಅರ 23:36; ಯೆರೆ 25:1; 36:1
  • +ಯೆರೆ 25:15, 19; ಯೆಹೆ 29:2; 32:2
  • +2ಪೂರ್ವ 35:20

ಯೆರೆಮೀಯ 46:3

ಪಾದಟಿಪ್ಪಣಿ

  • *

    ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊಳ್ತಿದ್ರು.

ಯೆರೆಮೀಯ 46:6

ಮಾರ್ಜಿನಲ್ ರೆಫರೆನ್ಸ್

  • +2ಅರ 24:7

ಯೆರೆಮೀಯ 46:8

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 29:3; 32:2

ಯೆರೆಮೀಯ 46:9

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 27:2, 10
  • +ಆದಿ 10:6, 13; ಯೆಹೆ 30:4, 5
  • +ಯೆಶಾ 66:19

ಯೆರೆಮೀಯ 46:10

ಪಾದಟಿಪ್ಪಣಿ

  • *

    ಅಥವಾ “ಒಂದು ಸಂಹಾರ ನಡಿಯುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +2ಅರ 24:7

ಯೆರೆಮೀಯ 46:11

ಮಾರ್ಜಿನಲ್ ರೆಫರೆನ್ಸ್

  • +ಆದಿ 37:25; ಯೆರೆ 8:22
  • +ಯೆಹೆ 30:21

ಯೆರೆಮೀಯ 46:12

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 32:9

ಯೆರೆಮೀಯ 46:13

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:10; ಯೆಹೆ 29:19; 30:10

ಯೆರೆಮೀಯ 46:14

ಪಾದಟಿಪ್ಪಣಿ

  • *

    ಅಥವಾ “ಮೋಫ್‌.”

ಮಾರ್ಜಿನಲ್ ರೆಫರೆನ್ಸ್

  • +ಯೆರೆ 44:1; ಯೆಹೆ 29:10; 30:6
  • +ಯೆರೆ 43:4, 7; ಯೆಹೆ 30:18

ಯೆರೆಮೀಯ 46:17

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 29:3

ಯೆರೆಮೀಯ 46:18

ಪಾದಟಿಪ್ಪಣಿ

  • *

    ಅಂದ್ರೆ, ಈಜಿಪ್ಟನ್ನ ಸೋಲಿಸುವವನು.

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:17, 22; ನ್ಯಾಯ 4:6; ಕೀರ್ತ 89:12
  • +1ಅರ 18:42

ಯೆರೆಮೀಯ 46:19

ಪಾದಟಿಪ್ಪಣಿ

  • *

    ಅಥವಾ “ಮೋಫ್‌.”

  • *

    ಬಹುಶಃ, “ಬಂಜರು ಭೂಮಿ ಆಗುತ್ತೆ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 32:15

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2003, ಪು. 32

ಯೆರೆಮೀಯ 46:20

ಪಾದಟಿಪ್ಪಣಿ

  • *

    ಅಂದ್ರೆ, ಇನ್ನೂ ಕರು ಹಾಕದಿರೋ ಹಸು.

ಯೆರೆಮೀಯ 46:21

ಮಾರ್ಜಿನಲ್ ರೆಫರೆನ್ಸ್

  • +ಯೆರೆ 46:5, 15

ಯೆರೆಮೀಯ 46:22

ಪಾದಟಿಪ್ಪಣಿ

  • *

    ಅಥವಾ “ಸೌದೆ ಕೂಡಿಸುವವರ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2007, ಪು. 11

ಯೆರೆಮೀಯ 46:24

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 30:10

ಯೆರೆಮೀಯ 46:25

ಪಾದಟಿಪ್ಪಣಿ

  • *

    ಅದು, ಥೀಬ್ಸ್‌.

ಮಾರ್ಜಿನಲ್ ರೆಫರೆನ್ಸ್

  • +ಯೆಹೆ 30:14
  • +ನಹೂ 3:8
  • +ವಿಮೋ 12:12; ಯೆಶಾ 19:1; ಯೆರೆ 43:12, 13
  • +ಯೆರೆ 17:5; 42:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/1/2003, ಪು. 32

ಯೆರೆಮೀಯ 46:26

ಪಾದಟಿಪ್ಪಣಿ

  • *

    ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:10, 11; ಯೆಹೆ 32:11
  • +ಯೆಹೆ 29:13, 14

ಯೆರೆಮೀಯ 46:27

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 41:13; 43:1, 2; 44:2
  • +ಯೆಶಾ 11:11; ಯೆರೆ 50:19; ಯೆಹೆ 39:27; ಆಮೋ 9:14; ಚೆಫ 3:20
  • +ಯೆರೆ 23:3, 6; 30:10, 11

ಯೆರೆಮೀಯ 46:28

ಮಾರ್ಜಿನಲ್ ರೆಫರೆನ್ಸ್

  • +ಯೆರೆ 25:9
  • +ಯೆರೆ 5:10; ಆಮೋ 9:8
  • +ಯೆರೆ 10:24

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜ್ಞಾನ, ಪು. 148

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 46:1ಯೆರೆ 1:10
ಯೆರೆ. 46:22ಅರ 23:36; ಯೆರೆ 25:1; 36:1
ಯೆರೆ. 46:2ಯೆರೆ 25:15, 19; ಯೆಹೆ 29:2; 32:2
ಯೆರೆ. 46:22ಪೂರ್ವ 35:20
ಯೆರೆ. 46:62ಅರ 24:7
ಯೆರೆ. 46:8ಯೆಹೆ 29:3; 32:2
ಯೆರೆ. 46:9ಯೆಹೆ 27:2, 10
ಯೆರೆ. 46:9ಆದಿ 10:6, 13; ಯೆಹೆ 30:4, 5
ಯೆರೆ. 46:9ಯೆಶಾ 66:19
ಯೆರೆ. 46:102ಅರ 24:7
ಯೆರೆ. 46:11ಆದಿ 37:25; ಯೆರೆ 8:22
ಯೆರೆ. 46:11ಯೆಹೆ 30:21
ಯೆರೆ. 46:12ಯೆಹೆ 32:9
ಯೆರೆ. 46:13ಯೆರೆ 43:10; ಯೆಹೆ 29:19; 30:10
ಯೆರೆ. 46:14ಯೆರೆ 44:1; ಯೆಹೆ 29:10; 30:6
ಯೆರೆ. 46:14ಯೆರೆ 43:4, 7; ಯೆಹೆ 30:18
ಯೆರೆ. 46:17ಯೆಹೆ 29:3
ಯೆರೆ. 46:18ಯೆಹೋ 19:17, 22; ನ್ಯಾಯ 4:6; ಕೀರ್ತ 89:12
ಯೆರೆ. 46:181ಅರ 18:42
ಯೆರೆ. 46:19ಯೆಹೆ 32:15
ಯೆರೆ. 46:21ಯೆರೆ 46:5, 15
ಯೆರೆ. 46:24ಯೆಹೆ 30:10
ಯೆರೆ. 46:25ಯೆಹೆ 30:14
ಯೆರೆ. 46:25ನಹೂ 3:8
ಯೆರೆ. 46:25ವಿಮೋ 12:12; ಯೆಶಾ 19:1; ಯೆರೆ 43:12, 13
ಯೆರೆ. 46:25ಯೆರೆ 17:5; 42:14
ಯೆರೆ. 46:26ಯೆರೆ 43:10, 11; ಯೆಹೆ 32:11
ಯೆರೆ. 46:26ಯೆಹೆ 29:13, 14
ಯೆರೆ. 46:27ಯೆಶಾ 41:13; 43:1, 2; 44:2
ಯೆರೆ. 46:27ಯೆಶಾ 11:11; ಯೆರೆ 50:19; ಯೆಹೆ 39:27; ಆಮೋ 9:14; ಚೆಫ 3:20
ಯೆರೆ. 46:27ಯೆರೆ 23:3, 6; 30:10, 11
ಯೆರೆ. 46:28ಯೆರೆ 25:9
ಯೆರೆ. 46:28ಯೆರೆ 5:10; ಆಮೋ 9:8
ಯೆರೆ. 46:28ಯೆರೆ 10:24
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 46:1-28

ಯೆರೆಮೀಯ

46 ಯೆಹೋವ ದೇಶಗಳ ಬಗ್ಗೆ ಪ್ರವಾದಿ ಯೆರೆಮೀಯನಿಗೆ ಹೇಳಿದ ಮಾತುಗಳು+ 2 ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ+ ಆಳ್ತಿದ್ದ ನಾಲ್ಕನೇ ವರ್ಷದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ* ಈಜಿಪ್ಟಿನ+ ರಾಜ ಫರೋಹ ನೆಕೋನನ್ನ+ ಸೋಲಿಸಿದ್ದ. ಯೂಫ್ರೆಟಿಸ್‌ ನದಿ ಹತ್ರ ಕರ್ಕೆಮೀಷಲ್ಲಿ ಇದು ನಡಿತು. ಆ ಫರೋಹನ ಸೈನ್ಯದ ಬಗ್ಗೆ, ಅವನ ದೇಶವಾದ ಈಜಿಪ್ಟ್‌ ಬಗ್ಗೆ ದೇವರು ಹೇಳಿದ ಮಾತುಗಳು ಏನಂದ್ರೆ

 3 “ನಿಮ್ಮ ಚಿಕ್ಕ ಗುರಾಣಿಗಳನ್ನ,* ದೊಡ್ಡ ಗುರಾಣಿಗಳನ್ನ ತಯಾರಿ ಮಾಡಿ ಇಟ್ಕೊಳ್ಳಿ,

ಯುದ್ಧಕ್ಕೆ ಹೊರಡಿ.

 4 ಕುದುರೆ ಸವಾರರೇ, ಕುದುರೆಗಳನ್ನ ತಯಾರು ಮಾಡಿಸಿ ಅವುಗಳ ಮೇಲೆ ಹತ್ತಿ,

ಶಿರಸ್ತ್ರಾಣಗಳನ್ನ ಹಾಕೊಂಡು ತಯಾರಾಗಿ,

ಉದ್ದ ಈಟಿಗಳನ್ನ ಉಜ್ಜಿ ಚೂಪು ಮಾಡ್ಕೊಳ್ಳಿ, ಯುದ್ಧಕವಚ ಹಾಕೊಳ್ಳಿ.

 5 ಯೆಹೋವ ಹೀಗೆ ಹೇಳ್ತಾನೆ ‘ಆ ಸೈನಿಕರು ಯಾಕೆ ಭಯ ಹಿಡಿದವರ ತರ ಕಾಣ್ತಿದ್ದಾರೆ?

ಅವರು ಹಿಂದೆ ಸರಿತಾ ಇದ್ದಾರೆ, ಯುದ್ಧಶೂರರು ಸೋತು ಹೋಗಿದ್ದಾರೆ.

ಏನು ಮಾಡಬೇಕಂತ ಗೊತ್ತಾಗದೆ ಓಡಿಹೋಗಿದ್ದಾರೆ, ವೀರ ಸೈನಿಕರು ತಿರುಗಿನೂ ನೋಡಲಿಲ್ಲ.

ಎಲ್ಲಿ ನೋಡಿದ್ರೂ ಬರೀ ಭಯ ಭೀತಿ.’

 6 ‘ವೇಗವಾಗಿ ಓಡೋನಿಗೆ ಓಡಕ್ಕಾಗ್ತಿಲ್ಲ, ಯುದ್ಧಶೂರರಿಗೆ ತಪ್ಪಿಸ್ಕೊಳ್ಳೋಕೆ ಆಗ್ತಿಲ್ಲ.

ಉತ್ತರದಲ್ಲಿ, ಯೂಫ್ರೆಟಿಸ್‌ ನದಿ ದಡದಲ್ಲಿ

ಅವರು ಎಡವಿ ಬಿದ್ದಿದ್ದಾರೆ.’+

 7 ನೈಲ್‌ ನದಿ ತರ ಉಕ್ಕಿ ಮೇಲೆ ಬರ್ತಿರೋ ಇವರು ಯಾರು?

ಉಕ್ಕೇರೋ ನದಿ ತರ ಬರ್ತಿರೋ ಇವರು ಯಾರು?

 8 ನೈಲ್‌ ನದಿ ತರ ಈಜಿಪ್ಟ್‌ ನುಗ್ಗಿ ಮೇಲೆ ಬರ್ತಿದೆ,+

ಅದು ಉಕ್ಕಿ ಹರಿಯೋ ನದಿಗಳ ತರ ಬರ್ತಿದೆ,

‘ನಾನು ಉಕ್ಕಿ ಹರಿದು ಇಡೀ ಭೂಮಿ ತುಂಬ್ಕೊಳ್ತೀನಿ.

ಆ ಪಟ್ಟಣವನ್ನ ಅದ್ರಲ್ಲಿ ವಾಸ ಮಾಡೋರನ್ನ ನಾಶ ಮಾಡ್ತೀನಿ’ ಅಂತ ಅದು ಹೇಳ್ತಿದೆ.

 9 ಕುದುರೆಗಳೇ, ನುಗ್ಗಿ ಮುಂದೆ ಓಡಿ!

ರಥಗಳೇ, ತುಂಬ ರಭಸವಾಗಿ ಹೋಗಿ!

ರಣವೀರರು ಮುಂದೆ ಹೋಗ್ಲಿ,

ಗುರಾಣಿ ಹಿಡಿದಿರೋ ಕೂಷ್‌, ಪೂಟ್‌ ಮುಂದೆ ನಡಿಲಿ,+

ಬಿಲ್ಲನ್ನ ಕೌಶಲದಿಂದ ಬಳಸೋ, ಅದನ್ನ ಬಗ್ಗಿಸೋ ಲೂದ್ಯರು+ ನುಗ್ಗಿ ಮುಂದೆ ಹೋಗ್ಲಿ.+

10 ಯುದ್ಧದ ಆ ದಿನ ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವನ ದಿನ. ಆ ದಿನ ಆತನು ತನ್ನ ಶತ್ರುಗಳ ಮೇಲೆ ಸೇಡು ತೀರಿಸ್ಕೊಳ್ತಾನೆ. ಹಾಗಾಗಿ ಅದು ಸೇಡು ತೀರಿಸೋ ದಿನ. ಆಗ ಕತ್ತಿಗೆ ತೃಪ್ತಿ ಆಗೋ ತನಕ ಅದು ಅವ್ರನ್ನ ಕೊಲ್ಲುತ್ತೆ, ಅವ್ರ ರಕ್ತ ಕುಡಿದು ದಾಹ ತೀರಿಸ್ಕೊಳ್ಳುತ್ತೆ. ಯಾಕಂದ್ರೆ ವಿಶ್ವದ ರಾಜನು ಸೈನ್ಯಗಳ ದೇವರು ಆದ ಯೆಹೋವ ಉತ್ತರದ ದೇಶದಲ್ಲಿ, ಯೂಫ್ರೆಟಿಸ್‌ ನದಿ+ ಹತ್ರ ಒಂದು ಬಲಿ ಅರ್ಪಿಸ್ತಾನೆ.*

11 ಕನ್ಯೆಯಾದ ಈಜಿಪ್ಟ್‌,

ಸುಗಂಧ ತೈಲ ತರೋಕೆ ಎತ್ರದಲ್ಲಿರೋ ಗಿಲ್ಯಾದಿಗೆ ಹೋಗು.+

ನೀನು ಬೇರೆಬೇರೆ ಔಷಧಿಗಳನ್ನ ಉಪಯೋಗಿಸಿದ್ದು ವ್ಯರ್ಥ,

ಯಾಕಂದ್ರೆ ಅದ್ರಿಂದ ನಿನಗೆ ವಾಸಿನೇ ಆಗಲ್ಲ.+

12 ನಿನಗಾದ ಅವಮಾನದ ಬಗ್ಗೆ ದೇಶಗಳು ಕೇಳಿಸ್ಕೊಂಡಿವೆ,+

ನೀನು ಗೋಳಾಡೋದು ಇಡೀ ದೇಶಕ್ಕೇ ಕೇಳ್ತಿದೆ.

ಯಾಕಂದ್ರೆ ವೀರ ಸೈನಿಕರು ಒಬ್ಬರಿಂದಾಗಿ ಇನ್ನೊಬ್ರು ಎಡವಿ

ಇಬ್ರೂ ಕೆಳಗೆ ಬೀಳ್ತಾರೆ.”

13 ಬಾಬೆಲಿನ ರಾಜ ನೆಬೂಕದ್ನೆಚ್ಚರ* ಈಜಿಪ್ಟ್‌ ದೇಶವನ್ನ ಸೋಲಿಸೋಕೆ ಬರೋ ವಿಷ್ಯದ ಬಗ್ಗೆ ಯೆಹೋವ ಪ್ರವಾದಿ ಯೆರೆಮೀಯನಿಗೆ ಹೀಗೆ ಹೇಳಿದನು+

14 “ಈಜಿಪ್ಟಿಗೆ ಇದನ್ನ ಹೇಳಿ, ಮಿಗ್ದೋಲಿಗೆ ಹೀಗೆ ಹೇಳಿ.+

ನೋಫ್‌,* ತಹಪನೇಸಲ್ಲಿ+ ಸಾರಿಹೇಳಿ.

ಏನಂದ್ರೆ ‘ಒಂದು ಕತ್ತಿ ನಿಮ್ಮ ಸುತ್ತಾ ಇರೋ ಜನ್ರನ್ನ ಕೊಂದು ಹಾಕುತ್ತೆ,

ಹಾಗಾಗಿ ನಿಮ್ಮ ನಿಮ್ಮ ಜಾಗದಲ್ಲೇ ನಿಲ್ಲಿ, ತಯಾರಾಗಿ ಇರಿ.

15 ನಿಮ್ಮಲ್ಲಿರೋ ಬಲಶಾಲಿಗಳು ಯಾಕೆ ನಾಶ ಆದ್ರು?

ಅವ್ರನ್ನ ಕೆಳಗೆ ತಳ್ಳಿಬಿಟ್ಟಿದ್ದು ಯೆಹೋವ,

ಹಾಗಾಗಿ ಹೋರಾಡೋಕೆ ಅವ್ರಿಗೆ ಆಗಲಿಲ್ಲ.

16 ತುಂಬ ಜನ ಎಡವಿ ಬೀಳ್ತಾ ಇದ್ದಾರೆ.

ಅವರು ಒಬ್ಬರಿಗೊಬ್ರು

“ಏಳು, ನಾವು ಕ್ರೂರವಾದ ಕತ್ತಿಯಿಂದ ತಪ್ಪಿಸ್ಕೊಂಡು ಓಡಿಹೋಗೋಣ!

ನಮ್ಮ ಜನ್ರ ಹತ್ರ, ನಮ್ಮ ದೇಶಕ್ಕೆ ವಾಪಸ್‌ ಹೋಗೋಣ”

ಅಂತ ಮಾತಾಡ್ಕೊಳ್ತಾ ಇದ್ದಾರೆ.’

17 ‘ಈಜಿಪ್ಟಿನ ರಾಜ ಫರೋಹ ಸುಮ್ಮನೆ ಕೊಚ್ಕೊಳ್ತಾನೆ,

ಅವನಿಗೆ ಸಿಕ್ಕಿದ ಅವಕಾಶನ ಬಿಟ್ಟುಬಿಟ್ಟಿದ್ದಾನೆ’+

ಅಂತ ಅಲ್ಲಿ ಅವರು ಎಲ್ರಿಗೂ ಹೇಳಿದ್ದಾರೆ.

18 ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋ ರಾಜ ಹೇಳೋದು ಏನಂದ್ರೆ ‘ನನ್ನ ಜೀವದಾಣೆ,

ಬೆಟ್ಟಗಳ ಮಧ್ಯ ಇರೋ ತಾಬೋರ್‌+ ಬೆಟ್ಟದ ತರ

ಸಮುದ್ರಗಳ ಹತ್ರ ಇರೋ ಕರ್ಮೆಲ್‌ ಬೆಟ್ಟದ+ ತರ ಅವನು* ಬರ್ತಾನೆ.

19 ಈಜಿಪ್ಟಲ್ಲಿ ಇರೋ ಮಗಳೇ,

ನೀನು ಕೈದಿಯಾಗಿ ಹೋಗೋಕೆ ಗಂಟುಮೂಟೆ ಕಟ್ಕೊ.

ಯಾಕಂದ್ರೆ ನೋಫ್‌* ಪಟ್ಟಣಕ್ಕೆ ಎಂಥ ಗತಿ ಬರುತ್ತೆ ಅಂದ್ರೆ ನೋಡೋರ ಎದೆ ಭಯದಿಂದ ಹೊಡ್ಕೊಳ್ಳುತ್ತೆ.

ಅದಕ್ಕೆ ಬೆಂಕಿ ಹಚ್ತಾರೆ,* ಅಲ್ಲಿ ಒಬ್ರೂ ವಾಸ ಮಾಡಲ್ಲ.+

20 ಈಜಿಪ್ಟ್‌ ಅನ್ನೋಳು ಅಂದವಾದ ಕಡಸು* ತರ ಇದ್ದಾಳೆ,

ಆದ್ರೆ ಉತ್ತರದಿಂದ ಭಯಾನಕ ಸೊಳ್ಳೆಗಳು ಬಂದು ಅವಳನ್ನ ಕಚ್ಚುತ್ತೆ.

21 ಅವಳ ಹತ್ರ ಕೂಲಿಗೆ ಕೆಲಸ ಮಾಡೋ ಸೈನಿಕರು ಕೂಡ ಕೊಬ್ಬಿದ ಕರು ತರ ಇದ್ದಾರೆ,

ಆದ್ರೆ ಅವ್ರೆಲ್ಲ ಬೆನ್ನು ಹಾಕಿ ಓಡಿಹೋಗಿದ್ದಾರೆ.

ನಿಂತು ಹೋರಾಡೋಕೆ ಅವ್ರಿಗೆ ಆಗಲಿಲ್ಲ,+

ಯಾಕಂದ್ರೆ ಅವರು ನಾಶ ಆಗೋ ಕಾಲ ಬಂದಿದೆ,

ಅವ್ರಿಂದ ಲೆಕ್ಕ ಕೇಳೋ ಸಮಯ ಬಂದಿದೆ.’

22 ‘ಅವಳ ಧ್ವನಿ ಹರಿದಾಡೋ ಹಾವು ಬುಸುಗುಟ್ಟೋ ತರ ಇದೆ,

ಯಾಕಂದ್ರೆ ಮರಕಡಿಯೋ ಜನ್ರ* ಹಾಗೆ

ಅವರು ಕೊಡಲಿಗಳನ್ನ ಹಿಡ್ಕೊಂಡು ಗುಂಪು ಗುಂಪಾಗಿ ಅವಳ ಹಿಂದೆ ಬರ್ತಾರೆ.

23 ಯೆಹೋವ ಹೇಳೋದು ಏನಂದ್ರೆ, ಅವಳ ಕಾಡು ಯಾರೂ ಹೋಗೋಕೆ ಆಗದಷ್ಟು ದಟ್ಟವಾಗಿದ್ರೂ ಅದನ್ನ ಕಡಿದು ಹಾಕ್ತಾರೆ.

ಯಾಕಂದ್ರೆ ಅವ್ರ ಸಂಖ್ಯೆ ಮಿಡತೆಗಳಿಗಿಂತ ಜಾಸ್ತಿ ಇದೆ, ಅವರು ಲೆಕ್ಕ ಮಾಡಕ್ಕಾಗದಷ್ಟು ಇದ್ದಾರೆ.

24 ಈಜಿಪ್ಟ್‌ ಅನ್ನೋಳಿಗೆ ಅವಮಾನ ಆಗುತ್ತೆ.

ಅವಳನ್ನ ಉತ್ತರದ ಜನ್ರು ವಶ ಮಾಡ್ಕೊಳ್ತಾರೆ.’+

25 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನಾನು ನೋ* ಪಟ್ಟಣದ+ ಆಮೋನ+ ದೇವರಿಗೆ,+ ಫರೋಹನಿಗೆ, ಈಜಿಪ್ಟಿಗೆ, ಅಲ್ಲಿನ ದೇವರುಗಳಿಗೆ, ರಾಜರಿಗೆ ಶಿಕ್ಷೆ ಕೊಡೋಕೆ ಅವ್ರ ಮೇಲೆ ಕಣ್ಣಿಡ್ತೀನಿ. ಹೌದು, ನಾನು ಫರೋಹನ ಮೇಲೆ ಅವನನ್ನ ನಂಬಿರೋ ಎಲ್ರ ಮೇಲೆ ಕಣ್ಣಿಡ್ತೀನಿ.’+

26 ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರನ್ನ ಅವ್ರ ಜೀವ ತೆಗಿಯೋಕೆ ಕಾಯ್ತಿರೋರ ಕೈಗೆ, ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ,*+ ಅವನ ಸೇವಕರ ಕೈಗೆ ಕೊಡ್ತೀನಿ. ಆಮೇಲೆ ಈಜಿಪ್ಟಲ್ಲಿ ಮುಂಚಿನ ತರ ಜನ್ರು ವಾಸ ಮಾಡ್ತಾರೆ.’+

27 ‘ಆದ್ರೆ ನನ್ನ ಸೇವಕ ಯಾಕೋಬನೇ, ನೀನು ಹೆದ್ರಬೇಡ,

ಇಸ್ರಾಯೇಲೇ, ನೀನು ಭಯಪಡಬೇಡ.+

ಯಾಕಂದ್ರೆ ತುಂಬ ದೂರದಲ್ಲಿರೋ ನಿನ್ನನ್ನ ನಾನು ಕಾಪಾಡ್ತೀನಿ,

ನಿನ್ನ ವಂಶದವರನ್ನ ಕೈದಿಗಳಾಗಿ ಹೋಗಿರೋ ದೇಶದಿಂದ ಬಿಡಿಸ್ತೀನಿ.+

ಯಾಕೋಬ ವಾಪಸ್‌ ಬರ್ತಾನೆ, ಏನೂ ತೊಂದರೆ ಇಲ್ದೆ ನೆಮ್ಮದಿಯಾಗಿ ಬದುಕ್ತಾನೆ,

ಅವ್ರನ್ನ ಹೆದರಿಸೋರು ಯಾರೂ ಇರಲ್ಲ.+

28 ಹಾಗಾಗಿ ನನ್ನ ಸೇವಕ ಯಾಕೋಬನೇ, ನೀನು ಹೆದ್ರಬೇಡ, ಯಾಕಂದ್ರೆ ನಿನ್ನ ಜೊತೆ ನಾನು ಇರ್ತಿನಿ.

ನಾನು ಯಾವ ದೇಶಗಳಲ್ಲಿ ನಿನ್ನನ್ನ ಚದರಿಸಿಬಿಟ್ನೊ ಆ ಎಲ್ಲ ದೇಶಗಳನ್ನ ನಾಶ ಮಾಡ್ತೀನಿ.+

ಆದ್ರೆ ನಿನ್ನನ್ನ ನಾಶ ಮಾಡಲ್ಲ.+

ನಿನ್ನನ್ನ ಸರಿಯಾದ ಪ್ರಮಾಣದಲ್ಲಿ ತಿದ್ದುತೀನಿ,+

ಆದ್ರೆ ನಿನಗೆ ಶಿಕ್ಷೆ ಕೊಡ್ದೆ ಮಾತ್ರ ಇರಲ್ಲ’ ಅಂತ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ