ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆರೆಮೀಯ 42
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆರೆಮೀಯ ಮುಖ್ಯಾಂಶಗಳು

      • ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸೋಕೆ ಜನ ಯೆರೆಮೀಯನನ್ನ ಕೇಳ್ಕೊಂಡ್ರು (1-6)

      • ಯೆಹೋವನ ಉತ್ರ: “ಈಜಿಪ್ಟಿಗೆ ಹೋಗಬೇಡಿ” (7-22)

ಯೆರೆಮೀಯ 42:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 40:13, 14

ಯೆರೆಮೀಯ 42:2

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:62

ಯೆರೆಮೀಯ 42:8

ಮಾರ್ಜಿನಲ್ ರೆಫರೆನ್ಸ್

  • +ಯೆರೆ 41:16

ಯೆರೆಮೀಯ 42:10

ಪಾದಟಿಪ್ಪಣಿ

  • *

    ಅಕ್ಷ. “ವಿಷಾದಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:36; ಯೆರೆ 18:7, 8; ಮೀಕ 7:18

ಯೆರೆಮೀಯ 42:11

ಮಾರ್ಜಿನಲ್ ರೆಫರೆನ್ಸ್

  • +ಯೆರೆ 41:17, 18

ಯೆರೆಮೀಯ 42:12

ಮಾರ್ಜಿನಲ್ ರೆಫರೆನ್ಸ್

  • +ವಿಮೋ 34:6

ಯೆರೆಮೀಯ 42:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:4, 7

ಯೆರೆಮೀಯ 42:15

ಪಾದಟಿಪ್ಪಣಿ

  • *

    ಅಥವಾ “ಸ್ವಲ್ಪ ಸಮಯಕ್ಕಂತ ಅಲ್ಲಿ ಹೋಗಿ ಇದ್ರೆ.”

ಯೆರೆಮೀಯ 42:16

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 28:45; ಯೆರೆ 44:12-14, 27, 28

ಯೆರೆಮೀಯ 42:17

ಪಾದಟಿಪ್ಪಣಿ

  • *

    ಅಥವಾ “ಕಾಯಿಲೆಯಿಂದ.”

ಯೆರೆಮೀಯ 42:18

ಮಾರ್ಜಿನಲ್ ರೆಫರೆನ್ಸ್

  • +2ಅರ 25:8-10; 2ಪೂರ್ವ 34:24, 25; 36:16, 17; ಪ್ರಲಾ 2:4
  • +ಯೆರೆ 29:18

ಯೆರೆಮೀಯ 42:20

ಮಾರ್ಜಿನಲ್ ರೆಫರೆನ್ಸ್

  • +ಯೆರೆ 42:1, 2

ಯೆರೆಮೀಯ 42:21

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 24:19; ನೆಹೆ 9:26; ಜೆಕ 7:11

ಯೆರೆಮೀಯ 42:22

ಮಾರ್ಜಿನಲ್ ರೆಫರೆನ್ಸ್

  • +ಯೆರೆ 43:10, 11

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆರೆ. 42:1ಯೆರೆ 40:13, 14
ಯೆರೆ. 42:2ಧರ್ಮೋ 28:62
ಯೆರೆ. 42:8ಯೆರೆ 41:16
ಯೆರೆ. 42:10ಧರ್ಮೋ 32:36; ಯೆರೆ 18:7, 8; ಮೀಕ 7:18
ಯೆರೆ. 42:11ಯೆರೆ 41:17, 18
ಯೆರೆ. 42:12ವಿಮೋ 34:6
ಯೆರೆ. 42:14ಯೆರೆ 43:4, 7
ಯೆರೆ. 42:16ಧರ್ಮೋ 28:45; ಯೆರೆ 44:12-14, 27, 28
ಯೆರೆ. 42:182ಅರ 25:8-10; 2ಪೂರ್ವ 34:24, 25; 36:16, 17; ಪ್ರಲಾ 2:4
ಯೆರೆ. 42:18ಯೆರೆ 29:18
ಯೆರೆ. 42:20ಯೆರೆ 42:1, 2
ಯೆರೆ. 42:212ಪೂರ್ವ 24:19; ನೆಹೆ 9:26; ಜೆಕ 7:11
ಯೆರೆ. 42:22ಯೆರೆ 43:10, 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆರೆಮೀಯ 42:1-22

ಯೆರೆಮೀಯ

42 ಆಮೇಲೆ ಎಲ್ಲ ಸೇನಾಪತಿಗಳು, ಕಾರೇಹನ ಮಗನಾದ ಯೋಹಾನಾನ,+ ಹೋಷಾಯನ ಮಗನಾದ ಯೆಜನ್ಯ, ಚಿಕ್ಕವರಿಂದ ದೊಡ್ಡವರ ತನಕ ಎಲ್ಲ ಜನ್ರು 2 ಪ್ರವಾದಿ ಯೆರೆಮೀಯನ ಹತ್ರ ಬಂದು “ದಯವಿಟ್ಟು ನಮಗೊಂದು ಉಪಕಾರ ಮಾಡು. ನೀನು ನೋಡ್ತಾ ಇದ್ದಿಯಲ್ಲಾ, ನಾವೀಗ ಉಳಿದಿರೋದು ಸ್ವಲ್ಪ ಜನ. ನಮಗೋಸ್ಕರ, ಉಳಿದಿರೋ ಈ ಎಲ್ಲ ಜನ್ರಿಗೋಸ್ಕರ+ ನಿನ್ನ ದೇವರಾದ ಯೆಹೋವನ ಹತ್ರ ಪ್ರಾರ್ಥನೆ ಮಾಡು. 3 ನಾವು ಯಾವ ದಾರಿಯಲ್ಲಿ ನಡಿಬೇಕು, ಏನು ಮಾಡಬೇಕು ಅಂತ ನಿನ್ನ ದೇವರಾದ ಯೆಹೋವನೇ ನಮಗೆ ಹೇಳಲಿ” ಅಂತ ಕೇಳ್ಕೊಂಡ್ರು.

4 ಆಗ ಪ್ರವಾದಿ ಯೆರೆಮೀಯ ಅವ್ರಿಗೆ “ಸರಿ, ನೀವು ಹೇಳಿದ ಹಾಗೆ ನಿಮ್ಮ ದೇವರಾದ ಯೆಹೋವನ ಹತ್ರ ಬೇಡ್ಕೊಳ್ತೀನಿ. ನಿಮಗೆ ಉತ್ರವಾಗಿ ಯೆಹೋವ ಏನೆಲ್ಲ ಹೇಳ್ತಾನೋ ಅದನ್ನೆಲ್ಲ ನಿಮಗೆ ಹೇಳ್ತೀನಿ. ನಿಮ್ಮಿಂದ ಏನೂ ಮುಚ್ಚಿಡಲ್ಲ” ಅಂದ.

5 ಅದಕ್ಕೆ ಅವರು ಯೆರೆಮೀಯನಿಗೆ “ಇದಕ್ಕೆ ಯೆಹೋವನೇ ಸತ್ಯ ಸಾಕ್ಷಿ ನಂಬಿಗಸ್ತ ಸಾಕ್ಷಿ. ನಿನ್ನ ದೇವರಾದ ಯೆಹೋವ ನಿನ್ನ ಮೂಲಕ ಹೇಳಿದ್ದನ್ನ ನಾವು ಮಾಡದಿದ್ರೆ ಆತನು ನಮಗೆ ಶಿಕ್ಷೆ ಕೊಡ್ಲಿ. 6 ನಾವು ಯಾರ ಹತ್ರ ವಿಚಾರಿಸೋಕೆ ನಿನ್ನನ್ನ ಕಳಿಸ್ತಾ ಇದ್ದೀವೋ ಆ ನಮ್ಮ ದೇವರಾದ ಯೆಹೋವ ಹೇಳೋ ಮಾತು ನಮಗೆ ಇಷ್ಟ ಆಗ್ಲಿ ಆಗದೇ ಇರ್ಲಿ ಅದನ್ನೇ ಮಾಡ್ತೀವಿ. ಯಾಕಂದ್ರೆ ನಮ್ಮ ದೇವರಾದ ಯೆಹೋವನ ಮಾತನ್ನ ಕೇಳಿದ್ರೆ ನಮಗೆ ಒಳ್ಳೇದಾಗುತ್ತೆ” ಅಂದ್ರು.

7 ಹತ್ತು ದಿನ ಆದ್ಮೇಲೆ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಕೊಟ್ಟನು. 8 ಹಾಗಾಗಿ ಅವನು ಕಾರೇಹನ ಮಗನಾದ ಯೋಹಾನಾನನನ್ನ, ಅವನ ಜೊತೆ ಇದ್ದ ಎಲ್ಲ ಸೇನಾಪತಿಗಳನ್ನ, ಚಿಕ್ಕವರಿಂದ ದೊಡ್ಡವರ ತನಕ ಎಲ್ಲ ಜನ್ರನ್ನ ಕರೆಸಿದ.+ 9 ಯೆರೆಮೀಯ ಅವ್ರಿಗೆ “ಇಸ್ರಾಯೇಲಿನ ದೇವರಾದ ಯೆಹೋವನ ದಯೆಗೋಸ್ಕರ ಬೇಡ್ಕೊ ಅಂತ ನೀವು ನನ್ನನ್ನ ಕೇಳ್ಕೊಂಡ್ರಲ್ಲಾ. ಇಲ್ಲಿ ಕೇಳಿ ಆತನು ಏನು ಹೇಳ್ತಾನಂದ್ರೆ 10 ‘ನೀವು ಈ ದೇಶದಲ್ಲೇ ಉಳ್ಕೊಂಡ್ರೆ ನಾನು ನಿಮ್ಮನ್ನ ಕಟ್ತೀನಿ, ಹಾಳು ಮಾಡಲ್ಲ. ನಿಮ್ಮನ್ನ ನೆಡ್ತೀನಿ, ಕಿತ್ತು ಹಾಕಲ್ಲ. ಯಾಕಂದ್ರೆ ನಿಮ್ಮ ಮೇಲೆ ತಂದಿರೋ ಕಷ್ಟದ ವಿಷ್ಯದಲ್ಲಿ ನಾನು ಆಗ ದುಃಖಪಡ್ತೀನಿ.*+ 11 ನೀವು ಬಾಬೆಲಿನ ರಾಜನಿಗೆ ಭಯಪಡ್ತೀರಲ್ಲಾ, ಆದ್ರೆ ಭಯಪಡಬೇಡಿ.’+

ಯೆಹೋವ ಹೇಳೋದು ಏನಂದ್ರೆ ‘ನಾನೇ ನಿಮ್ಮ ಜೊತೆ ಇದ್ದು ನಿಮ್ಮನ್ನ ಅವನ ಕೈಯಿಂದ ಬಿಡಿಸಿ ಕಾಪಾಡ್ತೀನಿ. ಹಾಗಾಗಿ ನೀವು ಅವನಿಗೆ ಹೆದ್ರಬೇಡಿ. 12 ನಾನು ನಿಮಗೆ ಕರುಣೆ ತೋರಿಸ್ತೀನಿ,+ ರಾಜ ಕೂಡ ನಿಮಗೆ ಕರುಣೆ ತೋರಿಸ್ತಾನೆ, ಅವನು ನಿಮ್ಮನ್ನ ನಿಮ್ಮ ದೇಶಕ್ಕೆ ಕಳಿಸ್ತಾನೆ.

13 ಆದ್ರೆ ನೀವು “ಇಲ್ಲ, ನಾವು ಈ ದೇಶದಲ್ಲಿ ಇರಲ್ಲ!” ಅಂತ ಹೇಳಿದ್ರೆ, ನಿಮ್ಮ ದೇವರಾದ ಯೆಹೋವನ ಮಾತು ಕೇಳದಿದ್ರೆ 14 “ನಾವು ಈಜಿಪ್ಟ್‌ ದೇಶಕ್ಕೆ ಹೋಗ್ತೀವಿ,+ ಅಲ್ಲೇ ಇರ್ತಿವಿ. ಅಲ್ಲಿ ಯುದ್ಧ ಇರಲ್ಲ, ಕೊಂಬೂದೋ ಶಬ್ದ ಕಿವಿಗೆ ಬೀಳಲ್ಲ, ನಮಗೆ ಊಟಕ್ಕೇನೂ ಕಡಿಮೆ ಇರಲ್ಲ” ಅಂತ ಹೇಳಿದ್ರೆ 15 ಯೆಹೋವನ ಮಾತು ಕೇಳಿಸ್ಕೊಳ್ಳಿ. ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಯೆಹೂದದಲ್ಲಿ ಉಳಿದಿರೋ ಜನ್ರಿಗೆ ಹೀಗೆ ಹೇಳ್ತಾನೆ “ನೀವು ಈಜಿಪ್ಟಿಗೆ ಹೋಗಲೇಬೇಕಂತ ದೃಢನಿರ್ಧಾರ ಮಾಡಿದ್ರೆ, ಅಲ್ಲಿ ಹೋಗಿ ವಾಸ ಮಾಡಿದ್ರೆ* ನಿಮಗೆ ಏನಾಗುತ್ತೆ ಅಂತ ಹೇಳ್ತೀನಿ ಕೇಳಿ. 16 ನೀವು ಕತ್ತಿಗೆ ಹೆದರ್ತಿರಲ್ಲಾ, ಆ ಕತ್ತಿನೇ ನಿಮ್ಮನ್ನ ಅಟ್ಟಿಸ್ಕೊಂಡು ಬಂದು ಈಜಿಪ್ಟ್‌ ದೇಶದಲ್ಲಿ ನಿಮ್ಮನ್ನ ಕೊಲ್ಲುತ್ತೆ. ನೀವು ಬರಗಾಲಕ್ಕೆ ಹೆದರ್ತಿರಲ್ಲಾ, ಆ ಬರಗಾಲನೇ ನಿಮ್ಮನ್ನ ಅಟ್ಟಿಸ್ಕೊಂಡು ಬಂದು ನಿಮ್ಮನ್ನ ಈಜಿಪ್ಟ್‌ ದೇಶದಲ್ಲಿ ಸಾಯಿಸುತ್ತೆ.+ 17 ಈಜಿಪ್ಟಿಗೆ ಹೋಗಿ ಅಲ್ಲೇ ಇರಬೇಕಂತ ದೃಢನಿರ್ಧಾರ ಮಾಡಿರೋ ಜನ್ರೆಲ್ಲ ಕತ್ತಿ, ಬರಗಾಲ, ಅಂಟುರೋಗದಿಂದ* ಸಾಯ್ತಾರೆ. ನಾನು ಅವ್ರ ಮೇಲೆ ಕಷ್ಟ ತಂದಾಗ ಒಬ್ರೂ ಬದುಕಲ್ಲ, ಒಬ್ರಿಗೂ ತಪ್ಪಿಸ್ಕೊಳ್ಳೋಕೆ ಆಗಲ್ಲ.”’

18 ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ ‘ನೀವು ಈಜಿಪ್ಟಿಗೆ ಹೋದ್ರೆ ನಾನು ಯೆರೂಸಲೇಮಿನ ಜನ್ರ ಮೇಲೆ ನನ್ನ ಕೋಪಾನ ಸುರಿದ ಹಾಗೆ+ ನಿಮ್ಮ ಮೇಲೂ ಸುರಿತೀನಿ. ನಿಮ್ಮ ಪಾಡನ್ನ ನೋಡಿದವರ ಎದೆ ಡವಡವ ಅನ್ನುತ್ತೆ. ಜನ ನಿಮಗೆ ಶಾಪ ಹಾಕ್ತಾರೆ, ಗೇಲಿ ಮಾಡ್ತಾರೆ, ಅವಮಾನ ಮಾಡ್ತಾರೆ.+ ನೀವು ಯಾವತ್ತೂ ಈ ದೇಶ ನೋಡಲ್ಲ.’

19 ಯೆಹೂದದಲ್ಲಿ ಉಳಿದಿರೋ ಜನ್ರೇ, ಯೆಹೋವ ನಿಮ್ಮ ವಿರುದ್ಧ ಮಾತಾಡಿದ್ದಾನೆ. ನೀವು ಈಜಿಪ್ಟಿಗೆ ಹೋಗಬೇಡಿ. ನಾನು ನಿಮಗೆ ಮೊದ್ಲೇ ಎಚ್ಚರಿಕೆ ಕೊಟ್ಟಿದ್ದೀನಿ, ಹೋಗಬೇಡಿ! 20 ನನ್ನ ಮಾತು ಕೇಳದೆ ತಪ್ಪು ಮಾಡಿದ್ರೆ ನೀವು ಜೀವ ಕಳ್ಕೊಳ್ತೀರ. ಯಾಕಂದ್ರೆ ನಿಮ್ಮ ದೇವರಾದ ಯೆಹೋವನ ಹತ್ರ ವಿಚಾರಿಸೋಕೆ ನೀವೇ ನನಗೆ ಹೇಳಿದ್ರಲ್ವಾ? ‘⁠ನಮಗೋಸ್ಕರ ನಮ್ಮ ದೇವರಾದ ಯೆಹೋವನ ಹತ್ರ ಪ್ರಾರ್ಥನೆ ಮಾಡು. ನಮ್ಮ ದೇವರಾದ ಯೆಹೋವ ಹೇಳೋದನ್ನೆಲ್ಲ ನಮಗೆ ಹೇಳು. ನಾವು ಹಾಗೇ ಮಾಡ್ತೀವಿ’+ ಅಂತ ನನಗೆ ಹೇಳಿದ್ರಲ್ವಾ? 21 ಇವತ್ತು ನಾನು ನಿಮಗೆ ಆತನ ಮಾತನ್ನೆಲ್ಲ ಹೇಳಿದ್ದೀನಿ, ಆದ್ರೆ ನಿಮ್ಮ ದೇವರಾದ ಯೆಹೋವನ ಮಾತನ್ನ ನೀವು ಕೇಳಲ್ಲ. ಆತನು ನನ್ನ ಮೂಲಕ ನಿಮಗೆ ಹೇಳಿದ ಯಾವುದನ್ನೂ ನೀವು ಮಾಡಲ್ಲ.+ 22 ಹಾಗಾಗಿ ಒಂದು ವಿಷ್ಯ ಚೆನ್ನಾಗಿ ತಿಳ್ಕೊಳ್ಳಿ, ನೀವು ಎಲ್ಲಿ ಹೋಗಿ ವಾಸ ಮಾಡಬೇಕಂತ ಆಸೆಪಡ್ತಿರೋ ಅಲ್ಲೇ ಕತ್ತಿ, ಬರಗಾಲ, ಅಂಟುರೋಗದಿಂದ ಸಾಯ್ತೀರ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ