ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ 1999ರ ಸೆಪ್ಟೆಂಬರ್ 6ರಿಂದ ಡಿಸೆಂಬರ್ 20ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬ್ರಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ತಾನು ಆಳ್ವಿಕೆ ನಡಿಸುವ ವಿಧವು ಯಾವಾಗಲೂ ಯೋಗ್ಯವೂ ನ್ಯಾಯಯುಕ್ತವೂ ಆಗಿದೆಯೆಂಬುದನ್ನು ರುಜುಪಡಿಸಲಿಕ್ಕಾಗಿಯೇ ಯೆಹೋವನು ಸ್ವತಂತ್ರವಾಗಿರುವ ಮಾನವ ಆಳ್ವಿಕೆಯನ್ನು ಅನುಮತಿಸಿದ್ದಾನೆ. (ಧರ್ಮೋ. 32:4; ಯೋಬ 34:10-12; ಯೆರೆ. 10:23) [w-KA97 2/15 ಪು. 5 ಪ್ಯಾರ. 3]
2. ದೇವರು ಎಲ್ಲ ವಿಧದ ದೂರುಹೇಳುವಿಕೆಯನ್ನು ಖಂಡಿಸುತ್ತಾನೆಂದು ಬೈಬಲು ಸೂಚಿಸುತ್ತದೆ. [w-KA97 12/1 ಪು. 30 ಪ್ಯಾರ. 3-4]
3. ತಲೆತನದ ದೈವಿಕ ಮೂಲತತ್ವಗಳ ಒಂದು ಗ್ರಹಿಕೆ ಮತ್ತು ಒಳ್ಳೆಯ ಕ್ರಮದ ಮೂಲಕ, ಹೆತ್ತವರು ತಮ್ಮ ವಿವಾಹಿತ ಮಕ್ಕಳೊಂದಿಗಿನ ಸಂಬಂಧಗಳನ್ನು ಯೋಗ್ಯ ನೋಟದಲ್ಲಿಡುತ್ತಾರೆ. (ಆದಿ. 2:24; 1 ಕೊರಿಂ. 11:3; 14:33, 40) [fy ಪು. 164 ಪ್ಯಾರ. 6]
4. ಯೇಸುವು ಜನಸಮೂಹಗಳ ಮೇಲೆ ಕನಿಕರಪಟ್ಟ ಕಾರಣವು, ಕೇವಲ ಅವರ ಅನಾರೋಗ್ಯ ಮತ್ತು ಬಡತನವಾಗಿತ್ತು ಎಂದು ಮಾರ್ಕ 6:31-34 ತೋರಿಸುತ್ತದೆ. [w-KA97 12/15 ಪು. 29 ಪ್ಯಾರ. 1]
5. ಬೇರೆ ಕುರಿಯ ಒಬ್ಬ ಕ್ರೈಸ್ತನು ಯೇಸುವಿನ ಮರಣದ ಜ್ಞಾಪಕಾಚರಣೆಗೆ ಹಾಜರಾಗುವುದಕ್ಕೆ ಸಾಧ್ಯವಿಲ್ಲದಿದ್ದಲ್ಲಿ, ಅರಣ್ಯಕಾಂಡ 9:10, 11ರಲ್ಲಿ ತಿಳಿಸಲಾದ ತತ್ವಕ್ಕೆ ಹೊಂದಿಕೆಯಲ್ಲಿ ಅವನು ಅದನ್ನು ಒಂದು ತಿಂಗಳಿನ ನಂತರ ಆಚರಿಸತಕ್ಕದ್ದು. (ಯೋಹಾ. 10:16) [ವಾರದ ಬೈಬಲ್ ವಾಚನ; w-KA93 5/1 ಪು. 31 ಪ್ಯಾರ. 9 ನ್ನು ನೋಡಿರಿ.]
6. ತಮ್ಮ ಮಕ್ಕಳಲ್ಲಿ ಬೈಬಲ್ ಸತ್ಯಗಳನ್ನು ಬೇರೂರಿಸುವ ತಂದೆತಾಯಂದಿರ ಜವಾಬ್ದಾರಿಯನ್ನು ಕ್ರೈಸ್ತ ಅಜ್ಜಅಜ್ಜಿಯರು ತೆಗೆದುಕೊಳ್ಳದಿದ್ದರೂ, ಮಗುವಿನ ಆತ್ಮಿಕ ಬೆಳವಣಿಗೆಯಲ್ಲಿ ಅಮೂಲ್ಯವಾದ ಕಾಣಿಕೆಯನ್ನು ನೀಡುವುದರಲ್ಲಿ ಅಜ್ಜಅಜ್ಜಿಯರು ಪೂರಕವಾಗಿರುವ ಪಾತ್ರವನ್ನು ವಹಿಸಬಲ್ಲರು. (ಧರ್ಮೋ. 6:7; 2 ತಿಮೊ. 1:5; 3:14, 15) [fy ಪು. 168 ಪ್ಯಾರ. 15]
7. ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾಡಲ್ಪಡುವ ಕಳ್ಳತನವು ಕ್ಷಮಿಸಲ್ಪಡಬಹುದು ಅಥವಾ ಸಮರ್ಥಿಸಲ್ಪಡಬಹುದು ಎಂಬುದನ್ನು ಜ್ಞಾನೋಕ್ತಿ 6:30 ತೋರಿಸುತ್ತದೆ. [g-KA97 12/8 ಪು. 13 ಪ್ಯಾರ. 2]
8. ವಿಲ್ಯಮ್ ಟಿಂಡಲ್ 1530ರಲ್ಲಿ, ಹೀಬ್ರು ಶಾಸ್ತ್ರಗಳ ಇಂಗ್ಲಿಷ್ ಭಾಷಾಂತರವೊಂದರಲ್ಲಿ ಯೆಹೋವ ಎಂಬ ದೇವರ ಹೆಸರನ್ನು ಉಪಯೋಗಿಸಿದ ಪ್ರಥಮ ವ್ಯಕ್ತಿಯಾಗಿದ್ದನು. [w-KA97 9/15 ಪು. 28 ಪ್ಯಾರ. 3]
9. ಇಂದು ಸೂಚಿತರೂಪ ಆಶ್ರಯನಗರವು, ರಕ್ತದ ಪಾವಿತ್ರ್ಯದ ಕುರಿತಾದ ದೇವರ ಆಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಮ್ಮನ್ನು ಮರಣದಿಂದ ರಕ್ಷಿಸಲಿಕ್ಕಾಗಿರುವ ದೇವರ ಮುನ್ನೇರ್ಪಾಡಾಗಿದೆ. (ಅರಣ್ಯ. 35:11) [ವಾರದ ಬೈಬಲ್ ವಾಚನ; w-KA95 11/15 ಪು. 17 ಪ್ಯಾರ. 8 ನ್ನು ನೋಡಿರಿ.]
10. “ದೇವರ ರಾಜ್ಯವು ನಿಮ್ಮೊಳಗಿದೆ” ಎಂದು ಯೇಸು ದುಷ್ಟ ಫರಿಸಾಯರಿಗೆ ಹೇಳಿದಾಗ ಅದರ ಅರ್ಥವು ಆ ಭ್ರಷ್ಟ ಮನುಷ್ಯರ ದುಷ್ಟ ಹೃದಯಗಳಲ್ಲಿ ಆ ರಾಜ್ಯವಿತ್ತು ಎಂದಾಗಿತ್ತು. (ಲೂಕ 17:21, ಕಿಂಗ್ ಜೇಮ್ಸ್ ವರ್ಷನ್) [kl ಪು. 91 ಪ್ಯಾರ. 6]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಪಂಚಾಶತ್ತಮ ಹಬ್ಬದ ಸಮಯದಲ್ಲಿ, ಮಹಾ ಯಾಜಕನು ಅರ್ಪಿಸುತ್ತಿದ್ದ ಹುಳಿಸೇರಿಸಿದ ಎರಡು ರೊಟ್ಟಿಗಳಿಂದ ಏನು ಚಿತ್ರಿಸಲ್ಪಟ್ಟಿದೆ? (ಯಾಜ. 23:15-17) [ವಾರದ ಬೈಬಲ್ ವಾಚನ; w-KA98 3/1 ಪು. 13 ಪ್ಯಾರ. 21 ನ್ನು ನೋಡಿರಿ.]
12. ಕ್ರೈಸ್ತ ಜೂಬಿಲಿ ಸಂವತ್ಸರವು ಯಾವಾಗ ಪ್ರಾರಂಭವಾಯಿತು ಮತ್ತು ಆ ಸಮಯದಲ್ಲಿ ಯಾವ ರೀತಿಯ ಬಿಡುಗಡೆಯನ್ನು ಅದು ತಂದಿತು? (ಯಾಜ. 25:10) [ವಾರದ ಬೈಬಲ್ ವಾಚನ; w-KA95 5/15 ಪು. 24, ಪ್ಯಾರ. 14 ನ್ನು ನೋಡಿರಿ.]
13. ದುಷ್ಟತ್ವ ಮತ್ತು ಕಷ್ಟಾನುಭವಕ್ಕೆ ಯೆಹೋವನು ಕೊಟ್ಟಿರುವ ಅನುಮತಿಯು ಯಾವ ಮೂರು ವಿಷಯಗಳನ್ನು ರುಜುಪಡಿಸಿದೆ? [kl ಪು. 77, 78 ಪ್ಯಾರ. 18-20]
14. ಈರ್ಷ್ಯೆಯ ಭಾವನೆಯು ತನಗಿರಲಿಲ್ಲವೆಂಬುದನ್ನು ತೋರಿಸುವುದರಲ್ಲಿ ಮೋಶೆ ಯಾವ ವಿಧದಲ್ಲಿ ಒಂದು ಉತ್ತಮ ಮಾದರಿಯಾಗಿದ್ದನು? (ಅರಣ್ಯ. 11:29) [ವಾರದ ಬೈಬಲ್ ವಾಚನ; w-KA95 9/15, ಪು. 18, ಪ್ಯಾರ. 11 ನ್ನು ನೋಡಿರಿ.]
15. ಕಣ್ಣಾರೆ ನೋಡುವುದು ಯಾವಾಗಲೂ ನಿಜವಾದ ನಂಬಿಕೆಗೆ ನಡಿಸುವುದಿಲ್ಲವೆಂದು ಕೋರಹ, ದಾತಾನ್ ಮತ್ತು ಅಬೀರಾಮರ ವಿದ್ಯಮಾನವು ಹೇಗೆ ತೋರಿಸುತ್ತದೆ? [w-KA97 3/15 ಪು. 4 ಪ್ಯಾರ. 2]
16. ಮತ್ತಾಯ 15:3-6ರಲ್ಲಿ ಮತ್ತು 1 ತಿಮೊಥೆಯ 5:4ರಲ್ಲಿ ವೃದ್ಧ ಹೆತ್ತವರನ್ನು ಸನ್ಮಾನಿಸುವ ಕುರಿತು ಯಾವ ಎರಡು ವಿಷಯಗಳು ಎತ್ತಿತೋರಿಸಲ್ಪಟ್ಟಿವೆ? [fy ಪು. 173-5 ಪ್ಯಾರ. 2-5]
17. ಅರಣ್ಯಕಾಂಡ 26:64, 65ರಲ್ಲಿ ಯಾವ ಪ್ರಾಮುಖ್ಯವಾದ ಪಾಠವು ಎತ್ತಿತೋರಿಸಲ್ಪಟ್ಟಿದೆ? [ವಾರದ ಬೈಬಲ್ ವಾಚನ; g-KA95 9/8 ಪು. 10-11 ಪ್ಯಾರ. 5-8 ನ್ನು ನೋಡಿರಿ.]
18. ಯೆಹೋವನಿಗೆ ಮಾಡುವ ಸಮರ್ಪಣೆಯು ಏನನ್ನು ಅರ್ಥೈಸುತ್ತದೆಂಬುದನ್ನು ತಿಳಿಯಲು ಫೀನೆಹಾಸನ ಉದಾಹರಣೆಯು ನಮಗೆ ಹೇಗೆ ಸಹಾಯ ಮಾಡುತ್ತದೆ? (ಅರಣ್ಯ. 25:11) [ವಾರದ ಬೈಬಲ್ ವಾಚನ; w-KA95 3/1 ಪು. 16 ಪ್ಯಾರ. 12-13 ನ್ನು ನೋಡಿರಿ.]
19. ಸೂಚಿತರೂಪದ ಆಶ್ರಯನಗರದಲ್ಲಿರುವವನೊಬ್ಬನು ಪಟ್ಟಣದ ‘ಮೇರೆಯ ಹೊರಗೆ’ ಹೇಗೆ ಹೋಗಸಾಧ್ಯವಿದೆ? (ಅರಣ್ಯ. 35:26) [ವಾರದ ಬೈಬಲ್ ವಾಚನ; w-KA95 11/15 ಪು. 20 ಪ್ಯಾರ. 20 ನ್ನು ನೋಡಿರಿ.]
20. ಕೋಡೆಕ್ಸ್ ಸೈನೈಟಿಕಸ್, ಬೈಬಲ್ ಭಾಷಾಂತರಕ್ಕೆ ಯಾವ ವಿಧದಲ್ಲಿ ಒಂದು ವರವಾಗಿತ್ತು? [w-KA97 10/15 ಪು. 11 ಪ್ಯಾರ. 2]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಆತನೊಬ್ಬನೇ _________________________ ಮತ್ತು ಆತನ ಎಲ್ಲಾ ಸೃಷ್ಟಿಗಳ ಶಾಂತಿ ಮತ್ತು ಸಂತೋಷಕ್ಕಾಗಿ, ಆತನ ನಿಯಮಗಳಿಗೆ _________________________ ಅತ್ಯಾವಶ್ಯಕವೆಂಬ ಮೂಲಭೂತ ಸತ್ಯವನ್ನು ಅಂತಿಮವಾಗಿ ಸ್ಥಾಪಿಸಲಿಕ್ಕಾಗಿ ಯೆಹೋವನು ದುಷ್ಟತನವನ್ನು ಅನುಮತಿಸಿದ್ದಾನೆ. (ಕೀರ್ತ. 1:1-3; ಜ್ಞಾನೋ. 3:5, 6; ಪ್ರಸಂ. 8:9) [w-KA97 2/15 ಪು. 5 ಪ್ಯಾರ. 4]
22. _________________________ ಯೆಹೋವನು _________________________ ದೇವರೆಂದೂ ನಮಗೆ ಕಲಿಸುತ್ತದೆ. [kl ಪು. 66 ಪ್ಯಾರ. 14.]
23. ಕೀರ್ತನೆ 144:15ಬಿ ಭಾಗಕ್ಕೆ ಹೊಂದಿಕೆಯಲ್ಲಿ, ನಿಜ ಸಂತೋಷವು ಹೃದಯದ ಒಂದು ಸ್ಥಿತಿಯಾಗಿದ್ದು, ನಿಜವಾದ _________________________ ಮತ್ತು ಯೆಹೋವನೊಂದಿಗಿನ ಒಂದು ಒಳ್ಳೆಯ _________________________ ಮೇಲೆ ಆಧಾರಿತವಾಗಿದೆ. [w-KA97 3/15 ಪು. 23 ಪ್ಯಾರ. 7]
24. ಹೀಬ್ರು ಬೈಬಲನ್ನು ಸಾಮಾನ್ಯವಾದ ಗ್ರೀಕ್ ಭಾಷೆಗೆ ಭಾಷಾಂತರಿಸುವುದರಿಂದ ಉಂಟಾದ ಬೈಬಲ್ ಸುಮಾರು ಸಾ.ಶ.ಪೂ. 150ರಲ್ಲಿ ಪೂರ್ಣಗೊಳಿಸಲ್ಪಟ್ಟು, _________________________ ಎಂದು ಜ್ಞಾತವಾಯಿತು; ಬೈಬಲನ್ನು ಲ್ಯಾಟಿನ್ ಭಾಷೆಗೆ ಭಾಷಾಂತರಿಸಿದ ಜೆರೋಮ್ನ ಕೃತಿಯು ಸುಮಾರು ಸಾ.ಶ.ಪೂ. 400ರಲ್ಲಿ ಪೂರ್ಣಗೊಳಿಸಲ್ಪಟ್ಟು, _________________________, _________________________, ಎಂದು ಜ್ಞಾತವಾಯಿತು. [w-KA97 8/15 ಪು. 9 ಪ್ಯಾರ. 1 ಪು. 10 ಪ್ಯಾರ. 4]
25. ದೇವರ ಸ್ಮರಣೆಯಲ್ಲಿರುವ ಸಕಲ ಮೃತರಿಗೆ _________________________ಯಾಗಿರುವ _________________________ನಿಂದ ವಿಮೋಚಿತರಾಗುವ ಪ್ರತೀಕ್ಷೆಯಿದೆ. [kl ಪು. 88 ಪ್ಯಾರ. 18]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ವರ್ಷಕ್ಕೊಮ್ಮೆ, ಯಾವುದು (ಪರ್ಣಶಾಲೆಗಳ ಹಬ್ಬ; ದೋಷಪರಿಹಾರಕ ದಿನ; ಪಸ್ಕಹಬ್ಬ)ವೆಂದು ಕರೆಯಲ್ಪಟ್ಟಿತೊ ಆ ದಿನದಂದು, ಇಡೀ ಇಸ್ರಾಯೇಲ್ ರಾಷ್ಟ್ರವು—ಯೆಹೋವನನ್ನು ಆರಾಧಿಸಿದ ಅನ್ಯದೇಶೀಯರನ್ನು ಸೇರಿಸಿ—(ಸಕಲ ಕೆಲಸವನ್ನು ನಿಲ್ಲಿಸಿ; ದಶಮಾಂಶಗಳನ್ನು ಸಲ್ಲಿಸಿ; ಪ್ರಥಮಫಲಗಳನ್ನು ಅರ್ಪಿಸಿ), ಉಪವಾಸಮಾಡಬೇಕಿತ್ತು. (ಯಾಜ. 16:29-31) [ವಾರದ ಬೈಬಲ್ ವಾಚನ; w-KA96 7/1 ಪು. 10 ಪ್ಯಾರ. 12 ನ್ನು ನೋಡಿರಿ.]
27. (ಎಷ್ಟು ಸಾಧ್ಯವೊ ಅಷ್ಟು ಅಕ್ಷರಶಃವಾಗಿರುವ; ಮೂಲ ಭಾಷೆಗಳ ಭಾವಾನುವಾದವಾಗಿರುವ; ನಿರ್ದಿಷ್ಟವಾದೊಂದು ತಾತ್ವಿಕ ತಿಳುವಳಿಕೆಯೊಂದಿಗೆ ಹೊಂದಿಕೆಯಲ್ಲಿರುವ) ಒಂದು ಭಾಷಾಂತರವನ್ನು ಓದುಗರಿಗೆ ಕೊಡುವುದು ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿಯ ಗುರಿಗಳಲ್ಲಿ ಒಂದಾಗಿತ್ತು. [w-KA97 10/15 ಪು. 11 ಪ್ಯಾರ. 5]
28. ಇಬ್ರಿಯರಿಗೆ 13:19ಕ್ಕನುಸಾರ, ಜೊತೆ ವಿಶ್ವಾಸಿಗಳ ನಿರಂತರವಾದ ಪ್ರಾರ್ಥನೆಗಳು (ದೇವರು ಯಾವುದನ್ನು ಅನುಮತಿಸುತ್ತಾನೆ; ದೇವರು ಯಾವಾಗ ಕ್ರಿಯೆಗೈಯುವನು; ದೇವರು ವಿಷಯಗಳನ್ನು ಹೇಗೆ ನಿರ್ವಹಿಸುವನು) ಎಂಬ ವಿಷಯದಲ್ಲಿ ವ್ಯತ್ಯಾಸವನ್ನು ಮಾಡಸಾಧ್ಯವಿದೆ. [w-KA97 4/15 ಪು. 6 ಪ್ಯಾರ. 1]
29. “ನೀಲಿದಾರದಿಂದ ಕೂಡಿದ ವಸ್ತ್ರಗಳ ಮೂಲೆಗಳಲ್ಲಿ ಗೊಂಡೆ”ಯು (ಪವಿತ್ರ ಅಲಂಕಾರ; ನಮ್ರತೆಯ ಸೂಚನೆ; ಯೆಹೋವನ ಜನರೋಪಾದಿ ಲೋಕದಿಂದ ಪ್ರತ್ಯೇಕರಾಗಿರಲು ಒಂದು ದೃಶ್ಯ ಮರುಜ್ಞಾಪಕ)ವಾಗಿ ಇಸ್ರಾಯೇಲ್ಯರಿಗೆ ಇರಬೇಕಿತ್ತು. (ಅರಣ್ಯ. 15:38, 39) [ವಾರದ ಬೈಬಲ್ ವಾಚನ; w-KA84 7/1 ಪು. 16 ಪ್ಯಾರ. 16 ನ್ನು ನೋಡಿರಿ.]
30. ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಅಸ್ತಿವಾರವು, (ಯೇಸುವಿನ ಅಪೊಸ್ತಲರ ಆರಿಸುವಿಕೆಯ; ಕ್ರಿಸ್ತನ ಯಜ್ಞಾರ್ಪಿತ ಮರಣದ; ಸ್ವರ್ಗಕ್ಕೆ ಕ್ರಿಸ್ತನ ಆರೋಹಣದ) ಮೂಲಕ ಹಾಕಲ್ಪಟ್ಟಿತು. [kl ಪು. 93 ಪ್ಯಾರ. 10]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ಅರಣ್ಯ. 16:41, 49; ಮತ್ತಾ. 19:9; ಲೂಕ 2:36-38; ಕೊಲೊ. 2:8; 3:14
31. ಸಂನ್ಯಾಸವು ವಿಶೇಷ ರೀತಿಯ ಪಾವಿತ್ರ್ಯಕ್ಕಾಗಲಿ ನಿಜ ಜ್ಞಾನೋದಯಕ್ಕಾಗಲಿ ನಡೆಸುವುದಿಲ್ಲ. [g-KA97 11/8 ಪು. 29 ಪ್ಯಾರ. 4]
32. ಪುನರ್ವಿವಾಹವು ಶಕ್ಯವಿರುವ ವಿಚ್ಛೇದಕ್ಕೆ ಏಕಮಾತ್ರ ಶಾಸ್ತ್ರೀಯ ಆಧಾರವು ಜಾರತ್ವವಾಗಿದೆ. [fy ಪು. 158-9 ಪ್ಯಾರ. 15]
33. ವೃದ್ಧಾಪ್ಯದಲ್ಲೂ ದೇವಪ್ರಭುತ್ವ ಚಟುವಟಿಕೆಗಳಲ್ಲಿ ತುಂಬ ಸಕ್ರಿಯರಾಗಿರುವುದು, ವಿವಾಹ ಜೊತೆಯನ್ನು ಕಳೆದುಕೊಂಡಿರುವ ನೋವನ್ನು ನಿಭಾಯಿಸಲು ಒಬ್ಬನಿಗೆ ಸಹಾಯಮಾಡಬಲ್ಲದು. [fy ಪು. 170-1 ಪ್ಯಾರ. 21]
34. ತನ್ನ ನೇಮಿತ ಸೇವಕರ ಮೂಲಕ ನ್ಯಾಯವನ್ನು ನಿರ್ವಹಿಸುವ ಯೆಹೋವನ ವಿಧದಲ್ಲಿ ತಪ್ಪನ್ನು ಕಂಡುಹಿಡಿಯುವುದು ವಿಪತ್ಕಾರಕ ಪರಿಣಾಮಗಳನ್ನು ತರಸಾಧ್ಯವಿದೆ. [ವಾರದ ಬೈಬಲ್ ವಾಚನ; w-KA96 6/15 ಪು. 21 ಪ್ಯಾರ. 13 ನ್ನು ನೋಡಿರಿ.]
35. ನಿಸ್ವಾರ್ಥ ಪ್ರೀತಿಯು ಒಬ್ಬ ವಿವಾಹಿತ ದಂಪತಿಯನ್ನು ಒಂದಾಗಿ ಬಂಧಿಸಿ, ತಾವು ಒಬ್ಬರಿಗೊಬ್ಬರು ಮತ್ತು ತಮ್ಮ ಮಕ್ಕಳಿಗಾಗಿ ಅತ್ಯುತ್ತಮವಾದುದನ್ನು ಮಾಡಬಯಸುವಂತೆ ಮಾಡುತ್ತದೆ. [fy ಪು. 187 ಪ್ಯಾರ. 11]