ಯೆಶಾಯ
3 ನೋಡಿ! ನಿಜವಾದ ಒಡೆಯನೂ ಸೈನ್ಯಗಳ ದೇವರೂ ಆದ ಯೆಹೋವ,
ಯೆರೂಸಲೇಮ್ ಮತ್ತು ಯೆಹೂದದಿಂದ ಎಲ್ಲ ತರದ ಜೀವನಾಧಾರಗಳನ್ನ ತೆಗೆದುಬಿಡ್ತಾನೆ,
ಆಹಾರ, ನೀರು,+
2 ಬಲಿಷ್ಠ, ಯೋಧ,
ನ್ಯಾಯಾಧೀಶ, ಪ್ರವಾದಿ,+ ಕಣಿ ಹೇಳುವವನು, ಹಿರಿಯ,
3 ಐವತ್ತು ಜನ್ರ ಮುಖ್ಯಸ್ಥ,+ ಉನ್ನತ ಅಧಿಕಾರಿ, ಸಲಹೆಗಾರ,
ಚತುರ ಮಂತ್ರವಾದಿ ಮತ್ತು ನಿಪುಣ ಹಾವಾಡಿಗ ಇವ್ರೆಲ್ಲರನ್ನೂ ತೊಲಗಿಸಿಬಿಡ್ತಾನೆ.+
4 ನಾನು ಹುಡುಗರನ್ನ ಅವ್ರ ಮೇಲೆ ಅಧಿಕಾರಿಗಳಾಗಿ ನೇಮಿಸ್ತೀನಿ,
ಚಂಚಲ* ಸ್ವಭಾವದವನು ಅವ್ರನ್ನ ಆಳ್ತಾನೆ.
5 ಜನ ಒಬ್ಬರ ಮೇಲೊಬ್ಬರು ದಬ್ಬಾಳಿಕೆ ಮಾಡ್ತಾರೆ,
ಪ್ರತಿಯೊಬ್ಬನೂ ತನ್ನ ಜೊತೆಗಾರನನ್ನ ತುಳಿದುಹಾಕ್ತಾನೆ,+
ವೃದ್ಧನ ಮೇಲೆ ಹುಡುಗ ಹಲ್ಲೆ ಮಾಡ್ತಾನೆ,
ಗೌರವ ಇರೋ ವ್ಯಕ್ತಿಯನ್ನ ಒಬ್ಬ ಸಾಮಾನ್ಯ ವ್ಯಕ್ತಿ ತಳ್ಳಿಹಾಕ್ತಾನೆ.+
6 ಪ್ರತಿಯೊಬ್ಬನು ತನ್ನ ತಂದೆ ಮನೆಯಲ್ಲಿ ಸ್ವಂತ ಅಣ್ಣನಿಗೆ
“ನಿನ್ನ ಹತ್ರ ಮೇಲಂಗಿ ಇದೆ. ಹಾಗಾಗಿ ನೀನು ನಮ್ಮ ನಾಯಕನಾಗಿರು,
ಹಾಳುದಿಬ್ಬ ಆಗಿರೋ ಈ ಸ್ಥಳದ ಉಸ್ತುವಾರಿ ಮಾಡು” ಅಂತಾನೆ.
7 ಆದ್ರೆ ಅವನು ಆ ದಿನ ಅದನ್ನ ವಿರೋಧಿಸ್ತಾ
“ನಾನು ನಿಮ್ಮ ಗಾಯಗಳಿಗೆ ಪಟ್ಟಿ ಕಟ್ಟುವವನಾಗಿ* ಇರಲ್ಲ,
ನನ್ನ ಮನೆಯಲ್ಲಿ ಆಹಾರ ಆಗಲಿ ಬಟ್ಟೆ ಆಗಲಿ ಇಲ್ಲ.
ನನ್ನನ್ನ ಜನ್ರ ಮೇಲೆ ನಾಯಕನಾಗಿ ಮಾಡಬೇಡಿ” ಅಂತಾನೆ.
8 ಯೆರೂಸಲೇಮ್ ಎಡವಿ ಬಿದ್ದಿದೆ,
ಯೆಹೂದ ಬಿದ್ದುಹೋಗಿದೆ.
ಯಾಕಂದ್ರೆ ಅವ್ರ ಮಾತು ಮತ್ತು ನಡತೆ ಯೆಹೋವನಿಗೆ ವಿರುದ್ಧವಾಗಿದೆ.
ಆತನ ಮಹಿಮಾನ್ವಿತ ಸನ್ನಿಧಿಯಲ್ಲಿ* ಅವರು ಆತನ ಮಾತನ್ನ ಕೇಳಿಲ್ಲ.+
9 ಅವ್ರ ಮುಖಭಾವನೇ ಅವ್ರ ವಿರುದ್ಧ ಸಾಕ್ಷಿ ಹೇಳ್ತಿದೆ,
ಸೊದೋಮಿನ ಜನ್ರ ತರ ಅವರು ತಮ್ಮ ಪಾಪದ ಬಗ್ಗೆ ರಾಜಾರೋಷವಾಗಿ ಮಾತಾಡ್ತಾರೆ,+
ಅವರು ಅದನ್ನ ಮುಚ್ಚಿಡೋಕೆ ಪ್ರಯತ್ನಿಸಲ್ಲ.
ಅಯ್ಯೋ ಅವ್ರ ಗತಿನ ಏನು ಹೇಳಲಿ! ಯಾಕಂದ್ರೆ ಅವರು ತಮ್ಮ ಮೇಲೆ ತಾವೇ ಆಪತ್ತು ತಂದ್ಕೊಳ್ತಿದ್ದಾರೆ.
10 ನೀತಿವಂತರಿಗೆ ಒಳ್ಳೇದಾಗುತ್ತೆ.
ಅವ್ರ ಕೆಲಸಗಳಿಗೆ ಒಳ್ಳೇ ಪ್ರತಿಫಲ ಸಿಗುತ್ತೆ ಅಂತ ಅವ್ರಿಗೆ ಹೇಳಿ.+
11 ಅಯ್ಯೋ ಕೆಟ್ಟವನ ಗತಿಯನ್ನ ಏನು ಹೇಳಲಿ!
ಅವನಿಗೆ ಕಷ್ಟ ಬರುತ್ತೆ,
ಅವನು ಬೇರೆಯವ್ರಿಗೆ ಏನು ಮಾಡಿದ್ನೋ ಅದೇ ಅವನಿಗೂ ಆಗುತ್ತೆ!
12 ನನ್ನ ಜನ್ರ ವಿಷ್ಯಕ್ಕೆ ಬರೋದಾದ್ರೆ, ಬಿಟ್ಟಿಕೆಲಸ ಮಾಡಿಸೋ ಅವ್ರ ಅಧಿಕಾರಿಗಳು ಅವ್ರನ್ನ ದುರುಪಯೋಗಿಸಿಕೊಳ್ತಾರೆ,
ನನ್ನ ಜನ್ರ ಮೇಲೆ ಹೆಂಗಸರು ಆಳ್ವಿಕೆ ಮಾಡ್ತಾರೆ.
ನನ್ನ ಜನ್ರೇ, ನಿಮ್ಮ ನಾಯಕರು ನಿಮ್ಮನ್ನ ಅಲೆದಾಡೋ ತರ ಮಾಡ್ತಾರೆ,
ಅವರು ನಿಮ್ಮನ್ನ ದಾರಿ ತಪ್ಪಿಸ್ತಾರೆ.+
13 ತೀರ್ಪು ವಿಧಿಸೋಕೆ ಯೆಹೋವ ತಯಾರಾಗಿದ್ದಾನೆ,
ಜನಾಂಗಗಳ ನ್ಯಾಯ ತೀರಿಸೋಕೆ ದೇವರು ಎದ್ದು ನಿಂತಿದ್ದಾನೆ.
14 ಯೆಹೋವ ತನ್ನ ಜನ್ರ ಹಿರಿಯರಿಗೆ ಮತ್ತು ಅಧಿಕಾರಿಗಳಿಗೆ ಶಿಕ್ಷೆ ವಿಧಿಸ್ತಾನೆ. ಆತನು ಅವ್ರಿಗೆ ಹೀಗೆ ಹೇಳ್ತಾನೆ:
“ನೀವು ದ್ರಾಕ್ಷಿತೋಟನ ಸುಟ್ಟು ಭಸ್ಮ ಮಾಡಿದ್ದೀರ,
ನೀವು ಬಡವರ ಮನೆ ದೋಚ್ಕೊಂಡು ನಿಮ್ಮ ಮನೆ ತುಂಬಿಸಿಕೊಂಡ್ರಿ.”+
15 ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಇದನ್ನೂ ಹೇಳ್ತಾನೆ:
“ನನ್ನ ಜನ್ರನ್ನ ತುಳಿಯೋಕೆ,
ಬಡವರ ಮುಖವನ್ನ ಧೂಳಲ್ಲಿ ಉಜ್ಜೋಕೆ ನಿಂಗೆಷ್ಟು ಧೈರ್ಯ?”+
16 ಯೆಹೋವ ಹೀಗೆ ಹೇಳ್ತಾನೆ “ಚೀಯೋನಿನ ಹೆಣ್ಣುಮಕ್ಕಳಿಗೆ ಜಂಬ ಬಂದಿರೋದ್ರಿಂದ
ತಲೆಯೆತ್ತಿ* ನಡಿತಾರೆ,
ಕಣ್ಣು ಮಿಟುಕಿಸಿ ಚೆಲ್ಲಾಟ ಆಡ್ತಾರೆ,
ಗೆಜ್ಜೆಯಿಂದ ಗಲ್ಗಲ್ ಅಂತ ಸದ್ದುಮಾಡ್ತಾರೆ,
ಸೊಂಟ ಬಳುಕಿಸ್ತಾ ನಡಿತಾರೆ,
17 ಯೆಹೋವ ಚೀಯೋನಿನ ಹೆಣ್ಣುಮಕ್ಕಳ ತಲೆ ತುಂಬ ಹುಣ್ಣುಗಳು* ತರ್ತಾನೆ,
ಯೆಹೋವ ಅವ್ರ ತಲೆಯನ್ನ ಬೋಳು ಮಾಡಿಬಿಡ್ತಾನೆ.+
18 ಆ ದಿನ ಯೆಹೋವ ಅವ್ರ ಕಾಲ್ಬಳೆಗಳ ಸೌಂದರ್ಯನ ಕಿತ್ಕೊಳ್ತಾನೆ,
ಅವ್ರ ತಲೆಪಟ್ಟಿ, ಅರ್ಧಚಂದ್ರಾಕಾರದ ಆಭರಣ,+
19 ಕಿವಿಯ ಓಲೆ,* ಕಡಗ, ಮುಖಮುಸುಕು,
20 ತಲೆ ಉಡುಪು, ಕಾಲ್ಗೆಜ್ಜೆ, ಸೊಂಟಪಟ್ಟಿ,
ಸುಗಂಧ ದ್ರವ್ಯದ ಬುಟ್ಟಿ, ತಾಯಿತ,*
21 ಉಂಗುರ, ಮೂಗುತಿ,
22 ಹಬ್ಬದ ಬಟ್ಟೆ, ಶಾಲು, ಮೇಲಂಗಿ, ಹಣದ ಚೀಲ,
ಪೇಟ ಮತ್ತು ಮುಖಮುಸುಕು ಇವೆಲ್ಲವುಗಳ ಸೌಂದರ್ಯವನ್ನ ಕಿತ್ಕೊಳ್ತಾನೆ.