ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 1
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಸಮುವೇಲ ಮುಖ್ಯಾಂಶಗಳು

      • ಎಲ್ಕಾನ ಮತ್ತು ಅವನ ಹೆಂಡತಿಯರು (1-8)

      • ಹನ್ನ ಒಬ್ಬ ಮಗನಿಗಾಗಿ ಬೇಡ್ಕೊಂಡಳು (9-18)

      • ಸಮುವೇಲನ ಜನನವಾಯ್ತು, ದೇವರ ಸೇವೆಗೆ ಅರ್ಪಿಸಲಾಯ್ತು (19-28)

1 ಸಮುವೇಲ 1:1

ಪಾದಟಿಪ್ಪಣಿ

  • *

    ಅಥವಾ “ರಾಮದ ಚೂಫಿಮ್ಯನಾದ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 16:5
  • +1ಸಮು 1:19; 7:15, 17
  • +1ಪೂರ್ವ 6:22, 27

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    3/1/1998, ಪು. 16

1 ಸಮುವೇಲ 1:3

ಮಾರ್ಜಿನಲ್ ರೆಫರೆನ್ಸ್

  • +ವಿಮೋ 23:14; 34:23; ಧರ್ಮೋ 12:5, 6; ಯೆಹೋ 18:1; ನ್ಯಾಯ 21:19; ಲೂಕ 2:41
  • +1ಸಮು 2:12, 22; 4:17
  • +ಅರ 3:10; ಧರ್ಮೋ 33:10; ಮಲಾ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 58, 62

    ಕಾವಲಿನಬುರುಜು,

    1/1/2011, ಪು. 24-25

    3/1/1998, ಪು. 16

1 ಸಮುವೇಲ 1:4

ಮಾರ್ಜಿನಲ್ ರೆಫರೆನ್ಸ್

  • +ಯಾಜ 7:15

1 ಸಮುವೇಲ 1:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 60

    ಕಾವಲಿನಬುರುಜು,

    1/1/2011, ಪು. 25

1 ಸಮುವೇಲ 1:7

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:16; 1ಸಮು 2:18, 19

1 ಸಮುವೇಲ 1:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 59-60

    ಕಾವಲಿನಬುರುಜು,

    1/1/2011, ಪು. 25

    3/15/2005, ಪು. 22

1 ಸಮುವೇಲ 1:9

ಪಾದಟಿಪ್ಪಣಿ

  • *

    ಅದು, ಪವಿತ್ರ ಡೇರೆ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 25:8; 1ಸಮು 3:3; 2ಸಮು 7:2

1 ಸಮುವೇಲ 1:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:22; 65:2

1 ಸಮುವೇಲ 1:11

ಮಾರ್ಜಿನಲ್ ರೆಫರೆನ್ಸ್

  • +ಆದಿ 30:22
  • +ಅರ 6:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 5

    ಅನುಕರಿಸಿ, ಪು. 65

    ಕಾವಲಿನಬುರುಜು,

    1/1/2011, ಪು. 27

1 ಸಮುವೇಲ 1:12

ಪಾದಟಿಪ್ಪಣಿ

  • *

    ಅಕ್ಷ. “ಅವಳ ಬಾಯನ್ನೇ.”

1 ಸಮುವೇಲ 1:14

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 63-64

    ಕಾವಲಿನಬುರುಜು,

    1/1/2011, ಪು. 26

    2/1/2001, ಪು. 20

1 ಸಮುವೇಲ 1:15

ಪಾದಟಿಪ್ಪಣಿ

  • *

    ಅಥವಾ “ನಾನು ಅಂತರಂಗದಲ್ಲಿ ನೊಂದಿರೋ ಸ್ತ್ರೀ.”

  • *

    ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 42:6; 62:8; 142:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2001, ಪು. 20-21

1 ಸಮುವೇಲ 1:16

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    2/1/2001, ಪು. 20-21

1 ಸಮುವೇಲ 1:17

ಮಾರ್ಜಿನಲ್ ರೆಫರೆನ್ಸ್

  • +1ಸಮು 1:11

1 ಸಮುವೇಲ 1:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಅನುಕರಿಸಿ, ಪು. 64-65

    ಕಾವಲಿನಬುರುಜು,

    1/1/2011, ಪು. 26, 27-28

1 ಸಮುವೇಲ 1:19

ಪಾದಟಿಪ್ಪಣಿ

  • *

    ಅಕ್ಷ. “ಅವಳನ್ನ ನೆನಪು ಮಾಡ್ಕೊಂಡನು.”

ಮಾರ್ಜಿನಲ್ ರೆಫರೆನ್ಸ್

  • +1ಸಮು 1:1
  • +1ಸಮು 1:11; ಕೀರ್ತ 66:19; ಜ್ಞಾನೋ 15:29

1 ಸಮುವೇಲ 1:20

ಪಾದಟಿಪ್ಪಣಿ

  • *

    ಬಹುಶಃ, “ಸರಿಯಾದ ಸಮಯಕ್ಕೆ.”

  • *

    ಅರ್ಥ “ದೇವ್ರ ಹೆಸ್ರು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 5:29; 41:51; ವಿಮೋ 2:21, 22; ಮತ್ತಾ 1:21

1 ಸಮುವೇಲ 1:21

ಮಾರ್ಜಿನಲ್ ರೆಫರೆನ್ಸ್

  • +1ಸಮು 1:3

1 ಸಮುವೇಲ 1:22

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 16:16
  • +1ಸಮು 1:11; 2:11; 2ಪೂರ್ವ 31:16

1 ಸಮುವೇಲ 1:24

ಪಾದಟಿಪ್ಪಣಿ

  • *

    ಸುಮಾರು 22ಲೀ. ಪರಿಶಿಷ್ಟ ಬಿ14 ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ಅರ 15:8-10
  • +ಯೆಹೋ 18:1

1 ಸಮುವೇಲ 1:26

ಮಾರ್ಜಿನಲ್ ರೆಫರೆನ್ಸ್

  • +1ಸಮು 1:15

1 ಸಮುವೇಲ 1:27

ಮಾರ್ಜಿನಲ್ ರೆಫರೆನ್ಸ್

  • +1ಸಮು 1:11, 17; ಕೀರ್ತ 66:19

1 ಸಮುವೇಲ 1:28

ಪಾದಟಿಪ್ಪಣಿ

  • *

    ಅಕ್ಷ. “ಸಾಲವಾಗಿ ಕೊಡ್ತಿದ್ದೀನಿ.”

  • *

    ಎಲ್ಕಾನ ಆಗಿರಬೇಕು.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    4/2017, ಪು. 5

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಸಮು. 1:1ಯೆಹೋ 16:5
1 ಸಮು. 1:11ಸಮು 1:19; 7:15, 17
1 ಸಮು. 1:11ಪೂರ್ವ 6:22, 27
1 ಸಮು. 1:3ವಿಮೋ 23:14; 34:23; ಧರ್ಮೋ 12:5, 6; ಯೆಹೋ 18:1; ನ್ಯಾಯ 21:19; ಲೂಕ 2:41
1 ಸಮು. 1:31ಸಮು 2:12, 22; 4:17
1 ಸಮು. 1:3ಅರ 3:10; ಧರ್ಮೋ 33:10; ಮಲಾ 2:7
1 ಸಮು. 1:4ಯಾಜ 7:15
1 ಸಮು. 1:7ಧರ್ಮೋ 16:16; 1ಸಮು 2:18, 19
1 ಸಮು. 1:9ವಿಮೋ 25:8; 1ಸಮು 3:3; 2ಸಮು 7:2
1 ಸಮು. 1:10ಕೀರ್ತ 55:22; 65:2
1 ಸಮು. 1:11ಆದಿ 30:22
1 ಸಮು. 1:11ಅರ 6:5
1 ಸಮು. 1:15ಕೀರ್ತ 42:6; 62:8; 142:2
1 ಸಮು. 1:171ಸಮು 1:11
1 ಸಮು. 1:191ಸಮು 1:1
1 ಸಮು. 1:191ಸಮು 1:11; ಕೀರ್ತ 66:19; ಜ್ಞಾನೋ 15:29
1 ಸಮು. 1:20ಆದಿ 5:29; 41:51; ವಿಮೋ 2:21, 22; ಮತ್ತಾ 1:21
1 ಸಮು. 1:211ಸಮು 1:3
1 ಸಮು. 1:22ಧರ್ಮೋ 16:16
1 ಸಮು. 1:221ಸಮು 1:11; 2:11; 2ಪೂರ್ವ 31:16
1 ಸಮು. 1:24ಅರ 15:8-10
1 ಸಮು. 1:24ಯೆಹೋ 18:1
1 ಸಮು. 1:261ಸಮು 1:15
1 ಸಮು. 1:271ಸಮು 1:11, 17; ಕೀರ್ತ 66:19
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಸಮುವೇಲ 1:1-28

ಒಂದನೇ ಸಮುವೇಲ

1 ಎಫ್ರಾಯೀಮ್‌+ ಬೆಟ್ಟ ಪ್ರದೇಶದ ರಾಮಾತಯಿಮ್‌-ಚೋಫೀಮಲ್ಲಿ*+ ಒಬ್ಬ ವ್ಯಕ್ತಿ ಇದ್ದ. ಅವನ ಹೆಸ್ರು ಎಲ್ಕಾನ.+ ಅವನು ಯೆರೋಹಾಮನ ಮಗ. ಯೆರೋಹಾಮ ಎಲೀಹುವಿನ ಮಗ. ಎಲೀಹು ತೋಹುವಿನ ಮಗ. ತೋಹು ಎಫ್ರಾಯೀಮ್ಯನಾಗಿದ್ದ ಚೂಫನ ಮಗ. 2 ಎಲ್ಕಾನನಿಗೆ ಇಬ್ರು ಹೆಂಡತಿಯರು. ಒಬ್ಬಳ ಹೆಸ್ರು ಹನ್ನ. ಇನ್ನೊಬ್ಬಳ ಹೆಸ್ರು ಪೆನಿನ್ನ. ಪೆನಿನ್ನಳಿಗೆ ಮಕ್ಕಳಿದ್ರು, ಹನ್ನಗೆ ಮಕ್ಕಳಿರಲಿಲ್ಲ. 3 ಸೈನ್ಯಗಳ ದೇವರಾದ ಯೆಹೋವನನ್ನ ಆರಾಧಿಸೋಕೆ, ಆತನಿಗೆ ಬಲಿ ಅರ್ಪಿಸೋಕೆ ಎಲ್ಕಾನ ತನ್ನ ಪಟ್ಟಣದಿಂದ ಪ್ರತಿ ವರ್ಷ ಶೀಲೋಗೆ ಹೋಗ್ತಿದ್ದ.+ ಶೀಲೋನಲ್ಲಿ ಏಲಿಯ ಇಬ್ರು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ+ ಪುರೋಹಿತರಾಗಿ ಯೆಹೋವನಿಗೆ ಸೇವೆ ಮಾಡ್ತಿದ್ರು.+

4 ಒಂದಿನ ಎಲ್ಕಾನ ಬಲಿ ಅರ್ಪಿಸಿ ಅದ್ರ ಪಾಲುಗಳನ್ನ ತನ್ನ ಹೆಂಡತಿ ಪೆನಿನ್ನಗೆ, ಅವಳ ಎಲ್ಲ ಮಕ್ಕಳಿಗೆ ಕೊಟ್ಟ.+ 5 ಆದ್ರೆ ಒಂದು ವಿಶೇಷ ಪಾಲನ್ನ ಹನ್ನಗೆ ಕೊಟ್ಟ. ಯಾಕಂದ್ರೆ ಹನ್ನ ಅಂದ್ರೆ ಅವನಿಗೆ ತುಂಬ ಪ್ರೀತಿ. ಆದ್ರೆ ಯೆಹೋವ ಅವಳಿಗೆ ಮಕ್ಕಳನ್ನ ಕೊಟ್ಟಿರಲಿಲ್ಲ. 6 ಯೆಹೋವ ಹನ್ನಗೆ ಮಕ್ಕಳನ್ನ ಕೊಡದೆ ಇದ್ದದ್ರಿಂದ ಅವಳ ಸವತಿ ಪೆನಿನ್ನ ಅವಳನ್ನ ನೋಯಿಸಬೇಕು ಅಂತಾನೇ ಯಾವಾಗ್ಲೂ ಕೆಣಕಿ ಮಾತಾಡ್ತಿದ್ದಳು. 7 ಪೆನಿನ್ನ ಪ್ರತಿವರ್ಷ ಹೀಗೇ ಮಾಡ್ತಿದ್ದಳು. ಯಾವಾಗೆಲ್ಲ ಹನ್ನ ಯೆಹೋವನ ಆಲಯಕ್ಕೆ ಹೋಗ್ತಿದ್ದಳೋ+ ಆಗೆಲ್ಲ ಅತ್ತು ಕರೆದು ಊಟ ಬಿಡುವಷ್ಟರ ಮಟ್ಟಿಗೆ ಅವಳ ಸವತಿ ಚುಚ್ಚಿಚುಚ್ಚಿ ಮಾತಾಡ್ತಿದ್ದಳು. 8 ಆದ್ರೆ ಹನ್ನಳ ಗಂಡ ಎಲ್ಕಾನ “ಹನ್ನ, ಯಾಕೆ ಅಳ್ತೀಯಾ? ಯಾಕೆ ನೀನು ಊಟ ಮಾಡಲ್ಲ? 10 ಗಂಡು ಮಕ್ಕಳಿಗಿಂತ ನಾನು ನಿಂಗೆ ಹೆಚ್ಚಲ್ವಾ? ನಾನೇ ನಿನಗಿರುವಾಗ ಯಾಕಷ್ಟು ಬೇಜಾರು ಮಾಡ್ಕೊಳ್ತೀಯ?” ಅಂದ.

9 ಶೀಲೋನಲ್ಲಿ ಅವರು ಊಟ ಮಾಡಿದ ಮೇಲೆ ಹನ್ನ ಅಲ್ಲಿಂದ ಎದ್ದು ಹೋದಳು. ಆ ಸಮಯದಲ್ಲಿ ಪುರೋಹಿತ ಏಲಿ ಯೆಹೋವನ ದೇವಾಲಯದ*+ ಬಾಗಿಲ ಹತ್ರ ಇದ್ದ ಕುರ್ಚಿಯಲ್ಲಿ ಕೂತಿದ್ದ. 10 ಹನ್ನ ಬಿಕ್ಕಿಬಿಕ್ಕಿ ಅಳ್ತಾ ದುಃಖದಿಂದ ಯೆಹೋವನಿಗೆ ಪ್ರಾರ್ಥಿಸೋಕೆ+ ಶುರು ಮಾಡಿದಳು. 11 “ಸೈನ್ಯಗಳ ದೇವರಾದ ಯೆಹೋವನೇ, ನಿನ್ನ ಈ ದಾಸಿಯ ಪರಿಸ್ಥಿತಿಗೆ ಗಮನಕೊಡು. ನನ್ನನ್ನ ನೋಡಿ ನನ್ನ ಬಿನ್ನಹ ಕೇಳಿಸ್ಕೊ. ಈ ನಿನ್ನ ದಾಸಿಗೆ ಒಂದು ಗಂಡು ಮಗುವನ್ನ+ ಕೊಟ್ರೆ ಜೀವನಪೂರ್ತಿ ನಿನ್ನ ಸೇವೆ ಮಾಡೋ ತರ ಅವನನ್ನ ಯೆಹೋವನಾದ ನಿನಗೇ ಕೊಡ್ತೀನಿ. ಅವನ ತಲೆಗೆ ಕ್ಷೌರ ಕತ್ತಿ ಮುಟ್ಟಿಸಲ್ಲ”+ ಅಂತ ಮಾತು ಕೊಟ್ಟಳು.

12 ಹೀಗೆ ಹನ್ನ ಯೆಹೋವನ ಮುಂದೆ ತುಂಬ ಹೊತ್ತಿನ ತನಕ ಪ್ರಾರ್ಥನೆ ಮಾಡ್ತಿರುವಾಗ ಏಲಿ ಅವಳನ್ನೇ* ಗಮನಿಸ್ತಿದ್ದ. 13 ಹನ್ನ ಮನಸ್ಸಲ್ಲೇ ಮಾತಾಡ್ಕೊಳ್ತಾ ಇದ್ದಳು. ಹಾಗಾಗಿ ಅವಳ ಧ್ವನಿ ಕೇಳಿಸ್ತಿರಲಿಲ್ಲ. ತುಟಿಗಳು ಮಾತ್ರ ಅದುರುತ್ತಿದ್ದವು. ಹಾಗಾಗಿ ಏಲಿ ಅವಳು ಕುಡಿದು ಮತ್ತಳಾಗಿದ್ದಾಳೆ ಅಂತ ನೆನಸಿ 14 “ಕುಡಿದ ಅಮಲು ಇನ್ನೂ ಇಳಿಲಿಲ್ವಾ? ಹೋಗು, ಅಮಲು ಇಳಿದ ಮೇಲೆ ಬಾ” ಅಂದ. 15 ಅದಕ್ಕೆ ಹನ್ನ “ಇಲ್ಲ ಸ್ವಾಮಿ! ನಾನು ದ್ರಾಕ್ಷಾಮದ್ಯ ಆಗ್ಲಿ ಬೇರೆ ಮದ್ಯ ಆಗ್ಲಿ ಕುಡಿದಿಲ್ಲ. ನಾನು ತುಂಬ ಸಂಕಟದಲ್ಲಿದ್ದೀನಿ.* ಹಾಗಾಗಿ ಯೆಹೋವನಿಗೆ ನನ್ನ ಮನಸ್ಸಿನ* ನೋವನ್ನೆಲ್ಲ ಹೇಳ್ಕೊಳ್ತಾ ಇದ್ದೀನಿ.+ 16 ನಿನ್ನ ದಾಸಿಯಾದ ನನ್ನನ್ನ ಅಯೋಗ್ಯಳು ಅಂತ ನೆನಸಬೇಡ. ನನ್ನ ಅಳಲು ತೋಡ್ಕೊಳ್ತಿದ್ದೆ, ನೋವು ಹೇಳ್ಕೊಳ್ತಿದ್ದೆ” ಅಂದಳು. 17 ಆಗ ಏಲಿ “ಸಮಾಧಾನದಿಂದ ಹೋಗು. ಇಸ್ರಾಯೇಲ್‌ ದೇವರು ನಿನ್ನ ಬೇಡಿಕೆಯನ್ನ ಈಡೇರಿಸಲಿ”+ ಅಂದ. 18 ಅದಕ್ಕೆ ಅವಳು “ನಿನ್ನ ದಯೆ ನನ್ನ ಮೇಲೆ ಯಾವಾಗ್ಲೂ ಇರಲಿ” ಅಂತ ಹೇಳಿ ಅಲ್ಲಿಂದ ಹೊರಟು ತನ್ನ ದಾರಿ ಹಿಡಿದಳು. ಸಮಾಧಾನದಿಂದ ಹೋಗಿ ಊಟ ಮಾಡಿದಳು. ಆಮೇಲೆ ಅವಳ ಮುಖದಲ್ಲಿ ದುಃಖ ಕಾಣಿಸ್ಲೇ ಇಲ್ಲ.

19 ಎಲ್ಕಾನ ಮತ್ತವನ ಕುಟುಂಬ ಬೆಳಿಗ್ಗೆ ಬೇಗ ಎದ್ದು ಯೆಹೋವನ ಮುಂದೆ ಅಡ್ಡಬಿದ್ರು. ಆಮೇಲೆ ಅವರು ರಾಮದಲ್ಲಿದ್ದ ತಮ್ಮ ಮನೆಗೆ ವಾಪಸ್‌ ಹೋದ್ರು.+ ಎಲ್ಕಾನ ತನ್ನ ಹೆಂಡತಿ ಹನ್ನಳನ್ನ ಕೂಡಿದ. ಯೆಹೋವ ಅವಳನ್ನ ಮರಿಲಿಲ್ಲ.*+ 20 ಒಂದು ವರ್ಷದೊಳಗೆ* ಹನ್ನಗೆ ಒಂದು ಗಂಡು ಮಗು ಆಯ್ತು. “ನಾನು ಯೆಹೋವನನ್ನ ಕೇಳಿ ಇವನನ್ನ ಪಡಿದಿದ್ದೀನಿ” ಅಂತ ಹೇಳಿ ಸಮುವೇಲ* ಅಂತ ಹೆಸ್ರಿಟ್ಟಳು.+

21 ಸ್ವಲ್ಪ ಸಮಯ ಆದ್ಮೇಲೆ ಎಲ್ಕಾನ ಕುಟುಂಬ ಸಮೇತ ಯೆಹೋವನಿಗೆ ವಾರ್ಷಿಕ ಬಲಿಯನ್ನ, ತನ್ನ ಹರಕೆಯನ್ನ ಅರ್ಪಿಸೋಕೆ ಹೋದ.+ 22 ಆದ್ರೆ ಹನ್ನ ಹೋಗಲಿಲ್ಲ.+ ಅವಳು ಗಂಡನಿಗೆ “ಮಗು ಎದೆಹಾಲು ಕುಡಿಯೋದನ್ನ ಬಿಟ್ಟ ಕೂಡ್ಲೇ ಯೆಹೋವನ ಸನ್ನಿಧಿಗೆ ಕರ್ಕೊಂಡು ಬರ್ತಿನಿ. ಯಾಕಂದ್ರೆ ಅವತ್ತಿಂದ ಅವನು ಅಲ್ಲೇ ಇರಬೇಕಲ್ವಾ”+ ಅಂದಳು. 23 ಅದಕ್ಕೆ ಎಲ್ಕಾನ “ನಿನಗೆ ಹೇಗೆ ಸರಿ ಅನಿಸುತ್ತೋ ಹಾಗೇ ಮಾಡು. ಮಗು ಎದೆಹಾಲು ಕುಡಿಯೋದನ್ನ ಬಿಡೋ ತನಕ ಮನೆಯಲ್ಲೇ ಇರು. ನಿನ್ನ ಆಸೆಯನ್ನ ಯೆಹೋವ ಪೂರೈಸ್ಲಿ” ಅಂದ. ಹಾಗಾಗಿ ಮಗು ಎದೆಹಾಲು ಕುಡಿಯೋದನ್ನ ಬಿಡೋ ತನಕ ಹನ್ನ ಮನೆಯಲ್ಲೇ ಇದ್ದು ಅವನನ್ನ ಚೆನ್ನಾಗಿ ಸಾಕಿದಳು.

24 ಎದೆಹಾಲು ಕುಡಿಯೋದನ್ನ ಬಿಡಿಸಿದ ಕೂಡ್ಲೆ ಅವನನ್ನ ಶೀಲೋಗೆ ಕರ್ಕೊಂಡು ಹೋದಳು. ಹೋಗುವಾಗ ಮೂರು ವರ್ಷದ ಒಂದು ಹೋರಿ, ಒಂದು ಏಫಾದಷ್ಟು* ಹಿಟ್ಟು, ಒಂದು ದೊಡ್ಡ ಜಾಡಿಯ ತುಂಬ ದ್ರಾಕ್ಷಾಮದ್ಯ+ ತಗೊಂಡು ಹೋದಳು. ಆ ಪುಟ್ಟ ಬಾಲಕನ ಜೊತೆ ಶೀಲೋನಲ್ಲಿದ್ದ+ ಯೆಹೋವನ ಆಲಯಕ್ಕೆ ಬಂದಳು. 25 ಅಲ್ಲಿ ಅವರು ಹೋರಿಯನ್ನ ಅರ್ಪಿಸಿ ಮಗನನ್ನ ಏಲಿ ಹತ್ರ ಕರ್ಕೊಂಡು ಬಂದ್ರು. 26 ಆಗ ಹನ್ನ ಏಲಿಗೆ “ಸ್ವಾಮಿ, ನಿನ್ನ ಮೇಲೆ ಆಣೆ, ಅವತ್ತು ಇಲ್ಲಿ ನಿನ್ನ ಮುಂದೆ ನಿಂತು ಯೆಹೋವನಿಗೆ ಪ್ರಾರ್ಥಿಸ್ತಿದ್ದ ಆ ಸ್ತ್ರೀ ನಾನೇ.+ 27 ನಾನು ಪ್ರಾರ್ಥಿಸಿದ್ದು ಈ ಹುಡುಗನನ್ನ ಪಡಿಯೋಕೆ. ಯೆಹೋವ ನನ್ನ ಪ್ರಾರ್ಥನೆ ಕೇಳಿ ನನ್ನ ಮನಸ್ಸಿನ ಆಸೆ ನೆರವೇರಿಸಿದನು.+ 28 ಅದಕ್ಕೆ ಪ್ರತಿಯಾಗಿ ಈಗ ನಾನು ಈ ಹುಡುಗನನ್ನ ಯೆಹೋವನಿಗೆ ಒಪ್ಪಿಸ್ತಾ ಇದ್ದೀನಿ.* ಇವನು ತನ್ನ ಜೀವನಪರ್ಯಂತ ಯೆಹೋವನ ಸೇವೆ ಮಾಡ್ತಾನೆ” ಅಂದಳು.

ಆಮೇಲೆ ಅವನು* ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ