ಯೆಹೆಜ್ಕೇಲ
1 ಕೆಬಾರ್ ನದಿ+ ಹತ್ರ ಕೈದಿಗಳ ಜೊತೆ ನಾನಿದ್ದೆ.+ ಅದು 30ನೇ ವರ್ಷದ* ನಾಲ್ಕನೇ ತಿಂಗಳ ಐದನೇ ದಿನ. ಆಗ ದೇವರು ಆಕಾಶ ತೆರೆದು ತೋರಿಸಿದ ದರ್ಶನಗಳನ್ನ* ನೋಡಿದೆ. 2 ಅದು ರಾಜ ಯೆಹೋಯಾಖೀನ+ ಕೈದಿಯಾಗಿ ಬಂದ ಐದನೇ ವರ್ಷ. ಆ ವರ್ಷದ ಆ ತಿಂಗಳಿನ ಐದನೇ ದಿನ 3 ಪುರೋಹಿತ ಬೂಜಿಯ ಮಗ ಯೆಹೆಜ್ಕೇಲನಾದ* ನನಗೆ ಯೆಹೋವ ಒಂದು ಸಂದೇಶ ಕೊಟ್ಟನು. ನಾನಾಗ ಕಸ್ದೀಯರ+ ದೇಶದ ಕೆಬಾರ್ ನದಿ ಹತ್ರ ಇದ್ದೆ. ಅಲ್ಲಿ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂತು.+
4 ನಾನು ನೋಡ್ತಾ ಇದ್ದಾಗ ಉತ್ತರದಿಂದ ಬಿರುಗಾಳಿ+ ಬೀಸಿತು. ಒಂದು ದೊಡ್ಡ ಮೋಡ ಮತ್ತು ಧಗಧಗ ಅಂತ ಉರೀತಿದ್ದ ಬೆಂಕಿ*+ ಕಾಣಿಸ್ತು. ಸುತ್ತ ಬೆಳಕು ಹೊಳೀತಿತ್ತು. ಬೆಂಕಿ ಮಧ್ಯದಲ್ಲಿ ಚಿನ್ನ-ಬೆಳ್ಳಿ ತರ ಹೊಳೀತಿತ್ತು.+ 5 ಅದ್ರೊಳಗೆ ನಾಲ್ಕು ಜೀವಿಗಳ+ ಆಕಾರ ಕಾಣಿಸ್ತು. ಪ್ರತಿಯೊಂದ್ರ ರೂಪ ಮನುಷ್ಯನ ರೂಪದ ಹಾಗಿತ್ತು. 6 ಒಂದೊಂದಕ್ಕೂ ನಾಲ್ಕು ಮುಖ, ನಾಲ್ಕು ರೆಕ್ಕೆ ಇತ್ತು.+ 7 ಅವುಗಳ ಪಾದ ನೆಟ್ಟಗೆ ಇದ್ದು, ಅಂಗಾಲು ಕರುವಿನ ಅಂಗಾಲಿನ ತರ ಇತ್ತು. ಪಾದಗಳು ಹೊಳಪು ಕೊಟ್ಟಿರೋ ತಾಮ್ರದ ಹಾಗೆ ಮಿಣಮಿಣ ಹೊಳೀತಿತ್ತು.+ 8 ಆ ಜೀವಿಗಳ ನಾಲ್ಕೂ ಬದಿ ಇದ್ದ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಿದ್ವು. ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖ ಮತ್ತು ನಾಲ್ಕು ರೆಕ್ಕೆ ಇತ್ತು. 9 ಅವುಗಳ ರೆಕ್ಕೆಗಳು ಒಂದಕ್ಕೊಂದು ತಾಗ್ತಿತ್ತು. ಆ ಜೀವಿಗಳು ನೇರವಾಗಿ ಮುಂದೆ ಹೋಗ್ತಿದ್ವು, ಹಿಂದೆ ತಿರುಗ್ತಾ ಇರಲಿಲ್ಲ.+
10 ಆ ನಾಲ್ಕು ಜೀವಿಗಳಿಗೂ ನಾಲ್ಕು ಮುಖ ಇತ್ತು. ಮುಂದೆ ಮನುಷ್ಯನ ಮುಖ, ಬಲಕ್ಕೆ ಸಿಂಹದ+ ಮುಖ, ಎಡಕ್ಕೆ ಹೋರಿಯ+ ಮುಖ ಮತ್ತು ಹಿಂದೆ ಹದ್ದಿನ+ ಮುಖ.+ 11 ಆ ಜೀವಿಗಳ ಮುಖಗಳು ಹೀಗೇ ಇದ್ವು. ಅವುಗಳ ರೆಕ್ಕೆ ಅವುಗಳ ಮುಖದ ಮೇಲೆ ಚಾಚಿತ್ತು. ಪ್ರತಿಯೊಂದು ಜೀವಿಯ ಎರಡು ರೆಕ್ಕೆ ಒಂದಕ್ಕೊಂದು ತಾಗ್ತಿತ್ತು, ಇನ್ನೆರಡು ರೆಕ್ಕೆ ಜೀವಿಗಳ ದೇಹವನ್ನ ಮುಚ್ಚಿತ್ತು.+
12 ಪವಿತ್ರಶಕ್ತಿ ಆ ಜೀವಿಗಳನ್ನ ಎಲ್ಲೆಲ್ಲಿ ಹೋಗಬೇಕಂತ ಪ್ರೇರಿಸ್ತಿತ್ತೋ ಅಲ್ಲೆಲ್ಲ ಅವು ಹೋಗ್ತಿದ್ವು.+ ಅವು ನೇರವಾಗಿ ಮುಂದಕ್ಕೆ ಹೋಗ್ತಿದ್ವು, ತಿರುಗ್ತಿರಲಿಲ್ಲ. 13 ಆ ಜೀವಿಗಳು ಉರೀತಿರೋ ಕೆಂಡಗಳ ತರ ಕಾಣ್ತಿದ್ವು. ಆಗ ಉರೀತಿರೋ ಬೆಂಕಿಯ ಪಂಜುಗಳ ತರ ಇದ್ದ ಏನೋ ಒಂದು ನನಗೆ ಕಾಣಿಸ್ತು. ಆ ಪಂಜುಗಳು ಆ ಜೀವಿಗಳ ಮಧ್ಯ ಹಿಂದೆ ಮುಂದೆ ಹೋಗ್ತಿದ್ವು. ಬೆಂಕಿಯೊಳಗಿಂದ ಮಿಂಚು ಹೊಳೀತಿತ್ತು.+ 14 ಆ ಜೀವಿಗಳು ಮುಂದೆ ಹಿಂದೆ ಹೋಗುವಾಗ ಮಿಂಚು ಬಂದು ಹೋದ ಹಾಗಿತ್ತು.
15 ನಾಲ್ಕು ಮುಖಗಳಿರೋ ಆ ಜೀವಿಗಳನ್ನ ನಾನು ನೋಡ್ತಾ ಇದ್ದಾಗ ಪ್ರತಿಯೊಂದು ಜೀವಿಯ ಪಕ್ಕದಲ್ಲಿ ಭೂಮಿ ಮೇಲೆ ಒಂದೊಂದು ಚಕ್ರ ಇರೋದು ಕಾಣಿಸ್ತು.+ 16 ಆ ಚಕ್ರಗಳು ಕ್ರಿಸಲೈಟ್ ರತ್ನಗಳ ಹಾಗೆ ಪಳಪಳ ಅಂತ ಹೊಳೀತಿತ್ತು. ಆ ನಾಲ್ಕು ಚಕ್ರಗಳು ನೋಡೋಕೆ ಒಂದೇ ತರ ಇದ್ವು. ಪ್ರತಿಯೊಂದು ಚಕ್ರದೊಳಗೆ ಇನ್ನೊಂದು ಚಕ್ರ ಇರೋ ಹಾಗೆ ಕಾಣ್ತಿತ್ತು.* 17 ಅವು ಹೋಗುವಾಗ ನಾಲ್ಕು ದಿಕ್ಕಲ್ಲಿ ಯಾವ ದಿಕ್ಕಿಗೆ ಬೇಕಾದ್ರೂ ಹೋಗೋಕೆ ಆಗ್ತಿತ್ತು, ತಿರುಗೋದೇ ಬೇಕಾಗಿರಲಿಲ್ಲ. 18 ಆ ಚಕ್ರಗಳು ಎಷ್ಟು ಎತ್ತರವಾಗಿದ್ವು ಅಂದ್ರೆ ಅದನ್ನ ನೋಡಿದ್ರೆ ಭಯ, ಆಶ್ಚರ್ಯ ಆಗ್ತಿತ್ತು. ಆ ನಾಲ್ಕೂ ಚಕ್ರಗಳ ಸುತ್ತ ತುಂಬ ಕಣ್ಣುಗಳಿದ್ವು.+ 19 ಆ ಜೀವಿಗಳು ಹೋದಾಗೆಲ್ಲ ಅವುಗಳ ಜೊತೆ ಆ ಚಕ್ರಗಳೂ ಹೋಗ್ತಿದ್ವು. ಆ ಜೀವಿಗಳನ್ನ ಭೂಮಿಯಿಂದ ಮೇಲೆ ಎತ್ತಿದಾಗ ಆ ಚಕ್ರಗಳೂ ಮೇಲೆ ಹೋಗ್ತಿದ್ವು.+ 20 ಪವಿತ್ರಶಕ್ತಿ ಆ ಜೀವಿಗಳನ್ನ ಎಲ್ಲೆಲ್ಲಿ ಹೋಗಬೇಕಂತ ಪ್ರೇರಿಸ್ತೋ ಅಲ್ಲೆಲ್ಲ ಅವು ಹೋಗ್ತಿದ್ವು. ಪವಿತ್ರಶಕ್ತಿ ಎಲ್ಲೆಲ್ಲಿ ಹೋಗ್ತಿತ್ತೋ ಅಲ್ಲೆಲ್ಲ ಆ ಜೀವಿಗಳು ಹೋಗ್ತಿದ್ವು. ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಆ ಚಕ್ರಗಳಲ್ಲೂ ಇದ್ದಿದ್ರಿಂದ ಆ ಜೀವಿಗಳ ಜೊತೆ ಚಕ್ರಗಳೂ ಮೇಲೆ ಹೋಗ್ತಿದ್ವು. 21 ಜೀವಿಗಳು ಚಲಿಸಿದಾಗ ಚಕ್ರಗಳೂ ಚಲಿಸ್ತಿದ್ವು. ಜೀವಿಗಳು ನಿಂತಾಗ ಚಕ್ರಗಳೂ ನಿಲ್ತಿದ್ವು. ಆ ಜೀವಿಗಳು ಭೂಮಿಯಿಂದ ಮೇಲೆ ಎದ್ದಾಗ ಅವುಗಳ ಜೊತೆ ಆ ಚಕ್ರಗಳೂ ಮೇಲೆ ಹೋಗ್ತಿದ್ವು. ಯಾಕಂದ್ರೆ ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಚಕ್ರಗಳಲ್ಲೂ ಇತ್ತು.
22 ಆ ಜೀವಿಗಳ ತಲೆ ಮೇಲೆ ಒಂದು ಕಲ್ಲಿನ ನೆಲದ ತರ ಏನೋ ಹಾಸಿತ್ತು.+ ಅದು ಮಂಜುಗಡ್ಡೆ ತರ ಪಳಪಳ ಅಂತ ಹೊಳೀತಿತ್ತು, ರಮಣೀಯವಾಗಿತ್ತು. 23 ಆ ನೆಲದ ಕೆಳಗೆ ಜೀವಿಗಳ ರೆಕ್ಕೆಗಳು ನೇರವಾಗಿದ್ದು* ಒಂದಕ್ಕೊಂದು ತಾಗುತ್ತಿದ್ವು. ಪ್ರತಿಯೊಂದು ಜೀವಿ ತನ್ನ ಎರಡು ರೆಕ್ಕೆಗಳಿಂದ ದೇಹದ ಒಂದು ಬದಿಯನ್ನ, ಇನ್ನೆರಡು ರೆಕ್ಕೆಗಳಿಂದ ದೇಹದ ಇನ್ನೊಂದು ಬದಿಯನ್ನ ಮುಚ್ಕೊಳ್ತಿದ್ವು. 24 ನನಗೆ ಆ ಜೀವಿಗಳ ರೆಕ್ಕೆಗಳ ಶಬ್ದ ಕೇಳಿಸ್ತು. ಅದು ಪ್ರವಾಹದ ನೀರು ಹರಿಯೋ ಶಬ್ದದ ಹಾಗೆ, ಸರ್ವಶಕ್ತನ ಧ್ವನಿಯ+ ಹಾಗೆ ಇತ್ತು. ಆ ಜೀವಿಗಳು ಚಲಿಸುವಾಗ ಸೈನ್ಯದ ಶಬ್ದದ ಹಾಗೆ ಕೇಳಿಸ್ತಿತ್ತು. ಅವು ನಿಂತಾಗ ತಮ್ಮ ರೆಕ್ಕೆಗಳನ್ನ ಕೆಳಗಿಳಿಸ್ತಿದ್ವು.
25 ಆ ಜೀವಿಗಳ ತಲೆ ಮೇಲೆ ಇದ್ದ ಆ ಕಲ್ಲಿನ ನೆಲದ ಮೇಲಿಂದ ಒಂದು ಧ್ವನಿ ಕೇಳಿಸ್ತು. (ಅವು ನಿಂತಾಗ ತಮ್ಮ ರೆಕ್ಕೆಗಳನ್ನ ಕೆಳಗಿಳಿಸ್ತಿದ್ವು.) 26 ಆ ಜೀವಿಗಳ ತಲೆ ಮೇಲಿದ್ದ ಕಲ್ಲಿನ ನೆಲದ ಮೇಲೆ ನೀಲಮಣಿಯಿಂದ+ ಮಾಡಿದ ಏನೋ ಒಂದು ಕಾಣ್ತಿತ್ತು. ಅದು ಸಿಂಹಾಸನದ+ ತರ ಕಾಣ್ತಿತ್ತು. ಅದ್ರ ಮೇಲೆ ಒಬ್ಬ ಕೂತಿದ್ದನು. ಆತನು ನೋಡೋಕೆ ಮನುಷ್ಯನ ತರ ಇದ್ದನು.+ 27 ಆತನ ಸೊಂಟದಿಂದ ಮೇಲಿನ ತನಕ ಚಿನ್ನಬೆಳ್ಳಿ ತರ ಪಳಪಳ ಅಂತ ಹೊಳೀತಿತ್ತು+ ಮತ್ತು ಅದ್ರಿಂದ ಬೆಂಕಿ ಬರ್ತಿರೋ ಹಾಗಿತ್ತು. ಆತನ ಸೊಂಟದ ಕೆಳಭಾಗ ಬೆಂಕಿ ತರ ಇತ್ತು.+ ಆತನ ಸುತ್ತ ತೇಜಸ್ಸು ಪ್ರಕಾಶಿಸ್ತಿತ್ತು. 28 ಆ ಬೆಳಕು ಹೇಗಿತ್ತೆಂದ್ರೆ ಮಳೆ ಸುರಿದಾಗ ಮೋಡಗಳ ಮಧ್ಯ ಕಾಣಿಸೋ ಮಳೆಬಿಲ್ಲಿನ+ ತರ ಇತ್ತು. ಅದು ಯೆಹೋವನ ಮಹಿಮೆ ತರ ಕಾಣಿಸ್ತಿತ್ತು.+ ಅದನ್ನ ನೋಡ್ದಾಗ ನಾನು ಅಡ್ಡಬಿದ್ದೆ. ಆಗ ಯಾರೋ ಮಾತಾಡ್ತಿರೋದು ನನಗೆ ಕೇಳಿಸ್ತು.
2 ಆತನು ನನಗೆ “ಮನುಷ್ಯಕುಮಾರನೇ,* ಎದ್ದು ನಿಂತ್ಕೊ. ನಾನು ನಿನ್ನ ಜೊತೆ ಮಾತಾಡಬೇಕು”+ ಅಂದನು. 2 ಆತನು ನನ್ನ ಜೊತೆ ಮಾತಾಡ್ದಾಗ ಪವಿತ್ರಶಕ್ತಿ ನನ್ನೊಳಗೆ ಬಂದು ನಾನು ಎದ್ದು ನಿಲ್ಲೋ ಹಾಗೆ ಮಾಡ್ತು.+ ಹಾಗಾಗಿ ನನಗೆ ಆತನ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಆಯ್ತು.
3 ಆತನು ಹೀಗಂದನು: “ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್ ಜನ್ರ ಹತ್ರ,+ ನನ್ನ ವಿರುದ್ಧ ದಂಗೆ ಎದ್ದಿರೋ ದಂಗೆಕೋರ ಜನಾಂಗಗಳ* ಹತ್ರ ಕಳಿಸ್ತಿದ್ದೀನಿ.+ ಅವರು ಇವತ್ತಿನ ತನಕ ತಮ್ಮ ಪೂರ್ವಜರ ಹಾಗೆ ನನ್ನ ನಿಯಮಗಳನ್ನ ಮುರಿತಾ ಇದ್ದಾರೆ.+ 4 ನನಗೆ ತಿರಿಗಿಬೀಳೋ ಮತ್ತು ಕಲ್ಲೆದೆಯ ಜನ್ರ+ ಹತ್ರ ನಿನ್ನನ್ನ ಕಳಿಸ್ತಿದ್ದೀನಿ. ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳಬೇಕು. 5 ಅವರು ನಿನ್ನ ಮಾತನ್ನ ಕೇಳಲಿ ಅಥವಾ ದಂಗೆಕೋರ ಜನ್ರಾಗಿರೋದ್ರಿಂದ+ ನಿನ್ನ ಮಾತನ್ನ ಕೇಳದೆ ಹೋಗಲಿ ತಮ್ಮ ಮಧ್ಯ ಒಬ್ಬ ಪ್ರವಾದಿ ಇದ್ದ ಅನ್ನೋದಂತೂ ನಿಜವಾಗ್ಲೂ ತಿಳ್ಕೊಳ್ತಾರೆ.+
6 ಆದ್ರೆ ಮನುಷ್ಯಕುಮಾರನೇ, ನೀನು ಅವ್ರಿಗೆ ಭಯಪಡಬೇಡ.+ ನಿನ್ನ ಸುತ್ತ ಮುಳ್ಳುಪೊದೆಗಳು, ಮುಳ್ಳುಗಳು ಇದ್ರೂ*+ ನೀನು ಚೇಳುಗಳ ಮಧ್ಯ ವಾಸಿಸ್ತಿದ್ರೂ ಅವ್ರ ಮಾತುಗಳಿಗೆ ಹೆದರಬೇಡ. ಅವರು ದಂಗೆಕೋರರು. ಅವ್ರ ಮಾತುಗಳಿಗೆ ನೀನು ಭಯಪಡಬೇಡ.+ ಅವ್ರ ಮುಖ ನೋಡಿ ಗಾಬರಿ ಆಗಬೇಡ.+ 7 ಅವರು ಕೇಳಲಿ ಕೇಳದೇ ಇರಲಿ ನೀನು ನನ್ನ ಮಾತುಗಳನ್ನ ಅವ್ರಿಗೆ ಹೇಳಲೇಬೇಕು. ಯಾಕಂದ್ರೆ ಅವರು ದಂಗೆಕೋರರು.+
8 ಆದ್ರೆ ಮನುಷ್ಯಕುಮಾರನೇ, ನಾನು ಹೇಳೋದನ್ನ ಗಮನಕೊಟ್ಟು ಕೇಳು. ನೀನು ಈ ದಂಗೆಕೋರ ಜನ್ರ ತರ ಆಗಬೇಡ. ನೀನೀಗ ಬಾಯಿ ತೆಗೆದು ನಾನು ಕೊಡೋದನ್ನ ತಿನ್ನು.”+
9 ಆಗ ನಾನು ಒಂದು ಕೈ ನನ್ನ ಕಡೆ ಚಾಚಿರೋದನ್ನ ನೋಡಿದೆ.+ ಆ ಕೈಯಲ್ಲಿ ಒಂದು ಸುರುಳಿ+ ಇತ್ತು. ಅದ್ರಲ್ಲಿ ಏನೋ ಬರೆದಿತ್ತು. 10 ಆತನು ಆ ಸುರುಳಿಯನ್ನ ನನ್ನ ಮುಂದೆ ಬಿಚ್ಚಿದನು. ಆ ಸುರುಳಿಯ ಎರಡೂ ಕಡೆ ಬರೆದಿತ್ತು.+ ಶೋಕಗೀತೆಗಳು, ಜನ್ರು ಶೋಕಿಸೋ ಹಾಗೆ ಗೋಳಾಡೋ ಹಾಗೆ ಮಾಡೋ ವಿಷ್ಯಗಳು ಅದ್ರಲ್ಲಿ ಬರೆದಿದ್ವು.+
3 ಆಮೇಲೆ ಆತನು ನನಗೆ “ಮನುಷ್ಯಕುಮಾರನೇ, ನಿನ್ನ ಮುಂದೆ ಇರೋ ಈ ಸುರುಳಿಯನ್ನ ತಿನ್ನು. ಆಮೇಲೆ ಇಸ್ರಾಯೇಲ್ಯರ ಹತ್ರ ಹೋಗಿ ಮಾತಾಡು”+ ಅಂದನು.
2 ನಾನು ಬಾಯಿ ತೆಗೆದಾಗ, ಆತನು ಸುರುಳಿಯನ್ನ ನನಗೆ ತಿನ್ನೋಕೆ ಕೊಟ್ಟನು. 3 ಆತನು ನನಗೆ “ಮನುಷ್ಯಕುಮಾರನೇ, ನಾನು ಕೊಡ್ತಿರೋ ಈ ಸುರುಳಿಯನ್ನ ತಿಂದು ಹೊಟ್ಟೆ ತುಂಬಿಸ್ಕೊ” ಅಂದನು. ಹಾಗಾಗಿ ನಾನು ಅದನ್ನ ತಿನ್ನೋಕೆ ಶುರುಮಾಡ್ದೆ. ಅದು ನನ್ನ ಬಾಯಲ್ಲಿ ಜೇನಿನಷ್ಟು ಸಿಹಿಯಾಗಿತ್ತು.+
4 ಆತನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಹತ್ರ ಹೋಗಿ ನಾನು ಹೇಳೋ ಮಾತುಗಳನ್ನ ಹೇಳು. 5 ನಾನು ನಿನಗೆ ಗೊತ್ತಿಲ್ಲದ, ಅರ್ಥ ಮಾಡ್ಕೊಳ್ಳೋಕೆ ಕಷ್ಟವಾದ ಭಾಷೆ ಮಾತಾಡೋ ಜನ್ರ ಹತ್ರ ಕಳಿಸ್ತಿಲ್ಲ, ಇಸ್ರಾಯೇಲ್ಯರ ಹತ್ರ ಕಳಿಸ್ತಿದ್ದೀನಿ. 6 ನಿನಗೆ ಅರ್ಥ ಮಾಡ್ಕೊಳ್ಳೋಕೆ ಕಷ್ಟವಾದ, ಗೊತ್ತಿಲ್ಲದ ಭಾಷೆ ಮಾತಾಡೋ ಅಥವಾ ಅರ್ಥಾನೇ ಆಗದ ಮಾತುಗಳನ್ನಾಡೋ ಬೇರೆ ಬೇರೆ ಜನಾಂಗಗಳ ಹತ್ರ ನಾನು ನಿನ್ನನ್ನ ಕಳಿಸ್ತಿಲ್ಲ. ಹಾಗೇನಾದ್ರೂ ನಾನು ನಿನ್ನನ್ನ ಕಳಿಸಿದ್ರೆ ಅವರು ನಿಜವಾಗ್ಲೂ ನೀನು ಹೇಳೋದನ್ನ ಕೇಳ್ತಾರೆ.+ 7 ಆದ್ರೆ ಇಸ್ರಾಯೇಲ್ಯರು ನೀನು ಹೇಳೋದನ್ನ ಕಿವಿಗೆ ಹಾಕೊಳ್ಳೋದೇ ಇಲ್ಲ, ಯಾಕಂದ್ರೆ ನನ್ನ ಮಾತನ್ನ ಕೇಳೋಕೆ ಅವ್ರಿಗೆ ಇಷ್ಟ ಇಲ್ಲ.+ ಇಸ್ರಾಯೇಲ್ಯರು ಹಠಮಾರಿಗಳು, ಕಲ್ಲೆದೆಯವರು.+ 8 ನೋಡು! ನಾನು ನಿನ್ನ ಮುಖವನ್ನ ಅವ್ರ ಮುಖಗಳಷ್ಟೇ ಕಠಿಣವಾಗಿ ಮಾಡಿದ್ದೀನಿ, ನಿನ್ನ ಹಣೆಯನ್ನ ಅವ್ರ ಹಣೆಗಳಷ್ಟೇ ಗಟ್ಟಿಯಾಗಿ ಮಾಡಿದ್ದೀನಿ.+ 9 ನಾನು ನಿನ್ನ ಹಣೆಯನ್ನ ವಜ್ರದಷ್ಟು ಗಟ್ಟಿಯಾಗಿ, ಗಡುಸು ಕಲ್ಲಿಗಿಂತ+ ಗಟ್ಟಿಯಾಗಿ ಮಾಡಿದ್ದೀನಿ. ನೀನು ಅವ್ರಿಗೆ ಹೆದರಬೇಡ, ಅವ್ರ ಮುಖ ನೋಡಿ ಗಾಬರಿ ಆಗಬೇಡ.+ ಯಾಕಂದ್ರೆ ಅವರು ದಂಗೆಕೋರರು” ಅಂದನು.
10 ಆತನು ಇನ್ನೂ ಮಾತಾಡ್ತಾ “ಮನುಷ್ಯಕುಮಾರನೇ, ನಾನು ನಿನಗೆ ಹೇಳೋದನ್ನೆಲ್ಲ ಗಮನಕೊಟ್ಟು ಕೇಳು, ಅದನ್ನ ಮನಸ್ಸಲ್ಲಿ ಇಟ್ಕೊ. 11 ಕೈದಿಗಳಾಗಿರೋ ನಿನ್ನ ಜನ್ರ+ ಹತ್ರ ಹೋಗಿ ಮಾತಾಡು. ಅವರು ಕೇಳಲಿ ಬಿಡಲಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳು” ಅಂದನು.+
12 ಆಮೇಲೆ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಹೋಯ್ತು.+ ಆಗ ನನ್ನ ಹಿಂದೆ ಒಂದು ದೊಡ್ಡ ಗುಡುಗಿನ ಶಬ್ದ ಕೇಳಿಸ್ತು. ಅದ್ರ ಜೊತೆ “ಯೆಹೋವನ ಮಹಿಮೆಗೆ ಸ್ವರ್ಗದಿಂದ ಹೊಗಳಿಕೆ ಸಿಗಲಿ” ಅಂತ ಹೇಳ್ತಿರೋ ಧ್ವನಿ ಕೇಳಿಸ್ತು. 13 ಜೀವಿಗಳ ರೆಕ್ಕೆಗಳು ಒಂದಕ್ಕೊಂದು ತಾಗ್ತಿದ್ದ ಶಬ್ದ,+ ಅವುಗಳ ಪಕ್ಕದಲ್ಲಿದ್ದ ಚಕ್ರಗಳ ಶಬ್ದ+ ಮತ್ತು ದೊಡ್ಡ ಗುಡುಗಿನ ಶಬ್ದ ಕೇಳಿಸ್ತಿತ್ತು. 14 ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಹೋಯ್ತು. ನಾನು ದುಃಖದಿಂದ, ಕೋಪದಿಂದ ಹೋದೆ. ಯೆಹೋವನ ಪವಿತ್ರಶಕ್ತಿ* ನನ್ನೊಳಗೆ ವೇಗವಾಗಿ ಕೆಲಸಮಾಡ್ತಿದೆ ಅಂತ ನನಗೆ ಗೊತ್ತಾಯ್ತು. 15 ಹಾಗಾಗಿ ತೇಲ್-ಆಬೀಬಲ್ಲಿ, ಕೆಬಾರ್ ನದಿ ಹತ್ರ+ ಕೈದಿಗಳಾಗಿದ್ದ ಜನ್ರ ಹತ್ರ ನಾನು ಹೋಗಿ ಅಲ್ಲೇ ಉಳ್ಕೊಂಡೆ. ನಾನು ಅವ್ರ ಮಧ್ಯ ಏಳು ದಿನ ಮಂಕು ಬಡಿದವನ ತರ ಇದ್ದೆ.+
16 ಏಳು ದಿನ ಆದ್ಮೇಲೆ ಯೆಹೋವ ನನಗೆ ಹೀಗಂದನು:
17 “ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್ಯರಿಗೆ ಕಾವಲುಗಾರನಾಗಿ ಇಟ್ಟಿದ್ದೀನಿ.+ ನಾನು ನಿನಗೆ ಹೇಳೋದನ್ನೆಲ್ಲ ಅವ್ರಿಗೆ ಹೇಳಿ ನನ್ನ ಪರವಾಗಿ ಅವ್ರಿಗೆ ಎಚ್ಚರಿಕೆ ಕೊಡ್ಬೇಕು.+ 18 ನಾನು ಒಬ್ಬ ಕೆಟ್ಟವನಿಗೆ ‘ನೀನು ಸತ್ತೇ ಸಾಯ್ತೀಯ’ ಅಂತ ಹೇಳ್ದಾಗ ನೀನು ಹೋಗಿ ಅವನಿಗೆ ಎಚ್ಚರಿಕೆ ಕೊಡ್ಲಿಲ್ಲ ಅಂದ್ರೆ ಮತ್ತು ಅವನು ಕೆಟ್ಟತನ ಬಿಟ್ಟುಬಿಟ್ಟು ತನ್ನ ಜೀವ ಉಳಿಸ್ಕೊಳ್ಳೋಕೆ ನೀನು ಹೇಳದಿದ್ರೆ+ ಆ ಕೆಟ್ಟವನಂತೂ ಅವನು ಮಾಡಿದ ತಪ್ಪಿಗಾಗಿ ಸಾಯ್ತಾನೆ.+ ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.+ 19 ಆದ್ರೆ ನೀನು ಒಬ್ಬ ಕೆಟ್ಟವನನ್ನ ಎಚ್ಚರಿಸಿದ ಮೇಲೂ ಅವನು ಕೆಟ್ಟತನ ಬಿಡದೆ ಅದನ್ನೇ ಮಾಡ್ತಾ ಇದ್ರೆ ಅವನು ತನ್ನ ತಪ್ಪಿಗಾಗಿ ಸಾಯ್ತಾನೆ, ಆದ್ರೆ ನೀನು ನಿನ್ನ ಜೀವ ಉಳಿಸ್ಕೊಳ್ತೀಯ.+ 20 ಆದ್ರೆ ಒಬ್ಬ ನೀತಿವಂತ ಒಳ್ಳೇ ರೀತಿ ಜೀವಿಸೋದನ್ನ ಬಿಟ್ಟು ಕೆಟ್ಟದು* ಮಾಡಿದ್ರೆ ನಾನು ಅವನ ಮೇಲೆ ಕಷ್ಟ ತರ್ತಿನಿ, ಆಗ ಅವನು ಸಾಯ್ತಾನೆ.+ ನೀನು ಅವನನ್ನ ಎಚ್ಚರಿಸದೇ ಇದ್ರೆ ಅವನಂತೂ ತನ್ನ ಪಾಪಕ್ಕಾಗಿ ಸಾಯ್ತಾನೆ, ಅವನ ಒಳ್ಳೇ ಕೆಲಸಗಳನ್ನ ನಾನು ನೆನಪಿಸ್ಕೊಳ್ಳಲ್ಲ. ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.+ 21 ಆದ್ರೆ ನೀನು ಒಬ್ಬ ನೀತಿವಂತನಿಗೆ ಪಾಪ ಮಾಡಬೇಡ ಅಂತ ಎಚ್ಚರಿಸಿದ್ರೆ ಮತ್ತು ಅವನು ಅದನ್ನ ಕೇಳಿ ಪಾಪ ಮಾಡದಿದ್ರೆ ಅವನು ನಿಜವಾಗ್ಲೂ ತನ್ನ ಜೀವ ಉಳಿಸ್ಕೊಳ್ತಾನೆ.+ ನೀನೂ ನಿನ್ನ ಜೀವ ಉಳಿಸ್ಕೊಳ್ತೀಯ.”
22 ಆಮೇಲೆ ಅಲ್ಲಿ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂತು. ಆತನು ನನಗೆ “ನೀನೆದ್ದು ಕಣಿವೆ ಬೈಲಿಗೆ ಹೋಗು, ಅಲ್ಲಿ ನಾನು ನಿನ್ನ ಜೊತೆ ಮಾತಾಡ್ತೀನಿ” ಅಂದನು. 23 ನಾನೆದ್ದು ಕಣಿವೆ ಬೈಲಿಗೆ ಹೋದೆ. ಅಲ್ಲಿ ನನಗೆ ಯೆಹೋವನ ಮಹಿಮೆ ಕಾಣಿಸ್ತು!+ ಕೆಬಾರ್ ನದಿ ಹತ್ರ+ ನೋಡಿದ ಅದೇ ಮಹಿಮೆಯನ್ನ ಇಲ್ಲೂ ನೋಡ್ದೆ. ಅದನ್ನ ನೋಡಿ ಅಡ್ಡಬಿದ್ದೆ. 24 ಆಗ ದೇವರ ಪವಿತ್ರಶಕ್ತಿ ನನ್ನೊಳಗೆ ಬಂದು ನಾನು ಎದ್ದು ನಿಲ್ಲೋ ತರ ಮಾಡ್ತು.+ ಆಮೇಲೆ ಆತನು ನನ್ನ ಜೊತೆ ಮಾತಾಡ್ತಾ ಹೀಗಂದನು:
“ನೀನು ನಿನ್ನ ಮನೆಯೊಳಗೆ ಹೋಗಿ ಬಾಗಿಲು ಮುಚ್ಕೊ. 25 ಮನುಷ್ಯಕುಮಾರನೇ, ನೀನು ಜನ್ರ ಮುಂದೆ ಬರಬಾರದು ಅಂತ ಅವರು ನಿನ್ನನ್ನ ಹಿಡಿದು ಹಗ್ಗಗಳಿಂದ ಕಟ್ತಾರೆ. 26 ನಿನ್ನ ನಾಲಿಗೆ ಬಾಯೊಳಗೆ ಅಂಟ್ಕೊಳ್ಳೋ ಹಾಗೆ ನಾನು ಮಾಡ್ತೀನಿ. ಆಗ ನೀನು ಮೂಕನ ತರ ಆಗ್ತೀಯ. ಅವ್ರನ್ನ ಖಂಡಿಸೋಕೆ ನಿನ್ನಿಂದ ಆಗಲ್ಲ. ಯಾಕಂದ್ರೆ ಅವರು ದಂಗೆಕೋರ ಜನ್ರು. 27 ಆದ್ರೆ ನಾನು ನಿನ್ನ ಜೊತೆ ಮಾತಾಡುವಾಗ ನೀನು ಮತ್ತೆ ಮಾತಾಡೋ ಹಾಗೆ ಮಾಡ್ತೀನಿ. ಆಗ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ’ ಅಂತ ಹೇಳಬೇಕು.+ ಕೇಳೋಕೆ ಮನಸ್ಸು ಇರುವವನು ಕೇಳಲಿ,+ ಮನಸ್ಸು ಇಲ್ಲದವನು ಬಿಡಲಿ. ಯಾಕಂದ್ರೆ ಅವರು ದಂಗೆಕೋರರು.+
4 ಮನುಷ್ಯಕುಮಾರನೇ, ನೀನು ಒಂದು ಇಟ್ಟಿಗೆ ತಗೊಂಡು ನಿನ್ನ ಮುಂದೆ ಇಡು. ಅದ್ರ ಮೇಲೆ ಯೆರೂಸಲೇಮ್ ಪಟ್ಟಣದ ನಕ್ಷೆ ಕೆತ್ತು. 2 ಅದಕ್ಕೆ ಮುತ್ತಿಗೆ+ ಹಾಕ್ತಿರೋ ಹಾಗೆ ಅದ್ರ ಸುತ್ತ ಗೋಡೆ ಕಟ್ಟಿ+ ಇಳಿಜಾರು ದಿಬ್ಬ ಮಾಡು,+ ಅದ್ರ ಮುಂದೆ ಪಾಳೆಯಗಳನ್ನ ಮಾಡು, ಗೋಡೆ ಬೀಳಿಸೋ ಯಂತ್ರಗಳನ್ನ ಸುತ್ತ ಇಡು.+ 3 ನೀನು ಕಬ್ಬಿಣದ ಒಂದು ಹೆಂಚನ್ನ ತಗೊಂಡು ಅದನ್ನ ಕಬ್ಬಿಣದ ಗೋಡೆ ಹಾಗೆ ನಿನ್ನ ಮತ್ತು ಆ ಪಟ್ಟಣದ ಮಧ್ಯ ನಿಲ್ಸು. ಆಮೇಲೆ ಆ ಪಟ್ಟಣವನ್ನ ಗುರಾಯಿಸಿ ನೋಡು. ಈ ರೀತಿ ಮುಂದೆ ಪಟ್ಟಣಕ್ಕೆ ಮುತ್ತಿಗೆ ಹಾಕೋದನ್ನ ನೀನು ತೋರಿಸಬೇಕು. ಇದು ಇಸ್ರಾಯೇಲ್ಯರಿಗೆ ಒಂದು ಗುರುತು.+
4 ಆಮೇಲೆ ನೀನು ಎಡಕ್ಕೆ ತಿರುಗಿ ಮಲಗಬೇಕು ಮತ್ತು ಇಸ್ರಾಯೇಲ್ ಜನ್ರ ಅಪರಾಧವನ್ನ ಹೊತ್ಕೊಬೇಕು.+ ನೀನು ಎಷ್ಟು ದಿನ ಹಾಗೆ ಮಲಗ್ತೀಯೋ ಅಷ್ಟು ದಿನ ಅವ್ರ ಅಪರಾಧವನ್ನ ಹೊತ್ಕೊಂಡು ಇರ್ತಿಯ. 5 ಇಸ್ರಾಯೇಲ್ಯರು ನನ್ನ ವಿರುದ್ಧ ಪಾಪ ಮಾಡ್ತಿರೋ ವರ್ಷಗಳಿಗೆ ತಕ್ಕ ಹಾಗೆ ಒಂದು ವರ್ಷಕ್ಕೆ ಒಂದು ದಿನದ ತರ+ ನೀನು 390 ದಿನ ಈ ತರ ಮಲಗಿರಬೇಕು. ಹೀಗೆ ನೀನು ಅವ್ರ ಅಪರಾಧವನ್ನ ಹೊತ್ಕೊಬೇಕು. 6 ಅಷ್ಟೂ ದಿನ ನೀನು ಹಾಗೇ ಮಾಡಬೇಕು.
ಆಮೇಲೆ ನೀನು ಬಲಕ್ಕೆ ತಿರುಗಿ ಮಲ್ಕೊಬೇಕು. 40 ದಿನ ನೀನು ಯೆಹೂದದ ಜನ್ರ ಅಪರಾಧವನ್ನ ಹೊತ್ಕೊಬೇಕು.+ ಒಂದು ವರ್ಷಕ್ಕೆ ಒಂದು ದಿನದ ತರ ನಾನು ಇದನ್ನ ನಿನಗೆ ನೇಮಿಸಿದ್ದೀನಿ. 7 ನಿನ್ನ ಅಂಗಿಯ ತೋಳನ್ನ ಮಡಚಿ ಯೆರೂಸಲೇಮಿನ ಮುತ್ತಿಗೆಯನ್ನ ಗುರಾಯಿಸಿ ನೋಡ್ಬೇಕು+ ಮತ್ತು ಅದ್ರ ವಿರುದ್ಧ ಭವಿಷ್ಯ ಹೇಳ್ಬೇಕು.
8 ನೋಡು, ಆ ಪಟ್ಟಣಕ್ಕೆ ನೀನು ಮುತ್ತಿಗೆ ಹಾಕೋ ದಿನಗಳು ಮುಗಿಯೋ ತನಕ ನಿನಗೆ ಒಂದು ಕಡೆಯಿಂದ ಇನ್ನೊಂದು ಕಡೆ ತಿರುಗೋಕೆ ಆಗದೆ ಇರೋ ಹಾಗೆ ನಾನು ನಿನ್ನನ್ನ ಹಗ್ಗಗಳಿಂದ ಕಟ್ತೀನಿ.
9 ನೀನು ಗೋದಿ, ಬಾರ್ಲಿ,* ಅವರೆಕಾಳು, ಬೇಳೆಕಾಳು, ಸಿರಿಧಾನ್ಯ ಮತ್ತು ಇನ್ನೊಂದು ತರದ ಗೋದಿಯನ್ನ* ಒಂದು ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿ ಮಾಡ್ಕೊಬೇಕು. ನೀನು ಎಡಗಡೆಗೆ 390 ದಿನ ಮಲಗಿರುವಾಗ ಆ ರೊಟ್ಟಿ ತಿನ್ನಬೇಕು.+ 10 ನೀನು ಪ್ರತಿದಿನ 20 ಶೆಕೆಲ್* ರೊಟ್ಟಿಯನ್ನ ತೂಕಮಾಡಿ ತಿನ್ನಬೇಕು. ಹೇಳಿದ ಸಮಯಕ್ಕೇ ಅದನ್ನ ತಿನ್ನಬೇಕು.
11 ನೀರನ್ನೂ ಅಳತೆ ಮಾಡಿ ಕುಡಿಬೇಕು. ದಿನಕ್ಕೆ ಒಂದು ಹಿನ್ ಅಳತೆಯ ಆರನೇ ಒಂದು ಭಾಗದಷ್ಟು* ನೀರನ್ನ ನೀನು ಕುಡಿಬೇಕು. ಹೇಳಿದ ಸಮಯಕ್ಕೇ ಅದನ್ನ ಕುಡಿಬೇಕು.
12 ಬಾರ್ಲಿಯ ರೊಟ್ಟಿಯನ್ನ ತಿನ್ನೋ ತರ ನೀನು ಆ ರೊಟ್ಟಿಯನ್ನ ತಿನ್ನಬೇಕು. ನೀನು ಜನ್ರ ಕಣ್ಮುಂದೆ ಮನುಷ್ಯನ ಒಣಗಿದ ಮಲವನ್ನ ಉರಿಸಿ ರೊಟ್ಟಿಯನ್ನ ಸುಡಬೇಕು.” 13 ಮತ್ತೆ ಯೆಹೋವ “ನಾನು ಇಸ್ರಾಯೇಲ್ಯರನ್ನ ಯಾವ ಜನಾಂಗಗಳ ಮಧ್ಯ ಚೆಲ್ಲಾಪಿಲ್ಲಿ ಮಾಡ್ತೀನೋ ಅಲ್ಲಿ ಅವರು ಇದೇ ತರ ಅಶುದ್ಧ ಊಟ ತಿಂತಾರೆ” ಅಂದನು.+
14 ನಾನಾಗ “ವಿಶ್ವದ ರಾಜ ಯೆಹೋವನೇ, ಅದು ಮಾತ್ರ ನನ್ನಿಂದ ಆಗಲ್ಲ. ಚಿಕ್ಕಂದಿನಿಂದ ನಾನು ಯಾವತ್ತೂ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿ ಕೊಂದ ಪ್ರಾಣಿಯ ಮಾಂಸವನ್ನಾಗಲಿ ತಿಂದು ಅಶುದ್ಧನಾಗಿಲ್ಲ.+ ಅಶುದ್ಧವಾದ ಯಾವ ಮಾಂಸವನ್ನೂ ತಿಂದಿದ್ದೇ ಇಲ್ಲ”+ ಅಂದೆ.
15 ಅದಕ್ಕೆ ಆತನು “ಸರಿ, ನೀನು ಮನುಷ್ಯನ ಮಲದ ಬದಲಿಗೆ ಸಗಣಿ ಗೊಬ್ಬರವನ್ನ ಉರಿಸಿ ರೊಟ್ಟಿ ಸುಡಬಹುದು” ಅಂದನು. 16 ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ನಾನು ಯೆರೂಸಲೇಮಿಗೆ ಆಹಾರ ಬರೋದನ್ನ ನಿಲ್ಲಿಸಿಬಿಡ್ತೀನಿ.*+ ಊಟ, ನೀರು ಎಲ್ಲಿ ಮುಗಿದುಹೋಗುತ್ತೋ ಅನ್ನೋ ಭಯ, ಚಿಂತೆಯಿಂದ ಅವರು ಊಟ ತೂಕಮಾಡಿ ತಿಂತಾರೆ+ ಮತ್ತು ನೀರನ್ನ ಅಳತೆ ಮಾಡಿ ಕುಡಿತಾರೆ.+ 17 ಊಟ, ನೀರು ಇಲ್ಲದೆ ಅವ್ರಿಗೆ ದಂಗು ಬಡಿದ ಹಾಗೆ ಎಲ್ರೂ ಮುಖಮುಖ ನೋಡ್ಕೊತಾರೆ. ಮಾಡಿದ ತಪ್ಪುಗಳಿಂದಾಗಿ ಅವರು ಹಾಳಾಗಿ ಹೋಗ್ತಾರೆ.
5 ಮನುಷ್ಯಕುಮಾರನೇ, ನೀನು ಒಂದು ಚೂಪಾದ ಕತ್ತಿ ತಗೊ. ಅದನ್ನ ಕ್ಷೌರದ ಕತ್ತಿ ತರ ಬಳಸಿ ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ. ಆಮೇಲೆ ಒಂದು ತಕ್ಕಡಿಯಲ್ಲಿ ಆ ಕೂದಲನ್ನ ತೂಕಮಾಡಿ ಮೂರು ಭಾಗ ಮಾಡು. 2 ಪಟ್ಟಣಕ್ಕೆ ನೀನು ಮುತ್ತಿಗೆ ಹಾಕೋ ದಿನಗಳು+ ಮುಗಿದ ಮೇಲೆ ಮೂರರಲ್ಲಿ ಒಂದು ಭಾಗದ ಕೂದಲನ್ನ ಪಟ್ಟಣದ ಒಳಗೆ ಸುಟ್ಟುಬಿಡು. ಇನ್ನೊಂದು ಭಾಗದ ಕೂದಲನ್ನ ಪಟ್ಟಣದ ಸುತ್ತ ಕತ್ತಿಯಿಂದ ಕತ್ತರಿಸು.+ ಮೂರನೇ ಭಾಗದ ಕೂದಲನ್ನ ಗಾಳಿಗೆ ತೂರು. ನಾನು ಕತ್ತಿಯನ್ನ ಹೊರಗೆ ತೆಗಿತೀನಿ ಮತ್ತು ಅದು ಅವ್ರನ್ನ ಅಟ್ಟಿಸ್ಕೊಂಡು ಹೋಗೋ ತರ ಮಾಡ್ತೀನಿ.+
3 ನೀನು ಮೂರನೇ ಭಾಗದಿಂದ ಸ್ವಲ್ಪ ಕೂದಲು ತಗೊಂಡು ನಿನ್ನ ಅಂಗಿ ಅಂಚಲ್ಲಿ ಸುತ್ತಿಡು. 4 ಅದೇ ಭಾಗದಿಂದ ಇನ್ನೂ ಸ್ವಲ್ಪ ಕೂದಲು ತಗೊಂಡು ಬೆಂಕಿಯಲ್ಲಿ ಸುಟ್ಟು ಬೂದಿ ಮಾಡು. ಇದ್ರಿಂದ ಬೆಂಕಿ ಹೋಗಿ ಇಸ್ರಾಯೇಲ್ ಜನ್ರ ಮೇಲೆಲ್ಲ ಹರಡುತ್ತೆ.+
5 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇದು ಯೆರೂಸಲೇಮ್. ನಾನು ಅವಳನ್ನ ಜನಾಂಗಗಳ, ದೇಶಗಳ ಮಧ್ಯ ಇಟ್ಟಿದ್ದೀನಿ. 6 ಆದ್ರೆ ಅವಳು ನನ್ನ ತೀರ್ಪುಗಳ ವಿರುದ್ಧ, ನನ್ನ ನಿಯಮಗಳ ವಿರುದ್ಧ ದಂಗೆ ಎದ್ದಿದ್ದಾಳೆ. ಅವಳು ಸುತ್ತ ಇರೋ ಜನಾಂಗ, ದೇಶಗಳಿಗಿಂತ ತುಂಬ ಕೆಟ್ಟವಳಾಗಿ ನಡ್ಕೊಂಡಿದ್ದಾಳೆ.+ ಅವಳ ಜನ್ರು ನನ್ನ ತೀರ್ಪುಗಳನ್ನ ಧಿಕ್ಕರಿಸಿದ್ದಾರೆ, ನನ್ನ ನಿಯಮಗಳ ಪ್ರಕಾರ ನಡೀಲಿಲ್ಲ.’
7 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಿಮ್ಮ ನಡವಳಿಕೆ ಸುತ್ತ ಇರೋ ಜನಾಂಗಗಳಿಗಿಂತ ತುಂಬ ಕೆಟ್ಟದ್ದಾಗಿತ್ತು. ನೀವು ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನನ್ನ ತೀರ್ಪುಗಳನ್ನ ಕೇಳಲಿಲ್ಲ. ಅದಕ್ಕೆ ಬದಲಾಗಿ ನಿಮ್ಮ ಸುತ್ತ ಇರೋ ಜನಾಂಗಗಳ ಆಚಾರ-ವಿಚಾರಗಳನ್ನ ಪಾಲಿಸಿದ್ರಿ.+ 8 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಪಟ್ಟಣವೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ.+ ನಾನು ದೇಶಗಳ ಮುಂದೆ ನಿನ್ನ ವಿರುದ್ಧ ತೀರ್ಪು ಮಾಡ್ತೀನಿ.+ 9 ನೀನು ಮಾಡಿದ ಎಲ್ಲ ಅಸಹ್ಯ ಕೆಲಸಗಳಿಗಾಗಿ ನಿನಗೆ ಏನು ಮಾಡ್ತೀನಿ ಅಂತ ನೋಡು. ನಾನು ಯಾವತ್ತೂ ಕೊಟ್ಟಿರದ, ಮುಂದೆನೂ ಕೊಡದ ಶಿಕ್ಷೆಯನ್ನ ನಿನಗೆ ಕೊಡ್ತೀನಿ.+
10 ಹಾಗಾಗಿ ನಿನ್ನಲ್ಲಿರೋ ಹೆತ್ತವರು ತಮ್ಮ ಮಕ್ಕಳನ್ನ ತಿಂತಾರೆ,+ ಮಕ್ಕಳು ತಮ್ಮ ಹೆತ್ತವರನ್ನ ತಿಂತಾರೆ. ನಾನು ನಿನಗೆ ಶಿಕ್ಷೆ ಕೊಡ್ತೀನಿ, ಉಳಿದವ್ರನ್ನ ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡಿಬಿಡ್ತೀನಿ.”’+
11 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ನಿನ್ನ ಎಲ್ಲ ಅಸಹ್ಯ ಮೂರ್ತಿಗಳಿಂದ ಮತ್ತು ಅಸಹ್ಯ ಕೆಲಸಗಳಿಂದ ನನ್ನ ಆಲಯವನ್ನ ಅಶುದ್ಧ ಮಾಡಿದ್ದೀಯ.+ ಹಾಗಾಗಿ ನನಗೆ ನೀನು ಬೇಡ. ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ನಿನ್ನ ನೋಡಿ ‘ಅಯ್ಯೋ ಪಾಪ’ ಅನ್ನಲ್ಲ.+ 12 ನಿನ್ನ ಜನ್ರಲ್ಲಿ ಮೂರರ ಒಂದು ಭಾಗದಷ್ಟು ಜನ ಅಂಟುರೋಗದಿಂದ* ಸಾಯ್ತಾರೆ ಅಥವಾ ಬರ ಬಂದು ನಾಶವಾಗ್ತಾರೆ. ಇನ್ನೊಂದು ಭಾಗದ ಜನ ಕತ್ತಿಯಿಂದ ಸತ್ತು ನಿನ್ನ ಸುತ್ತ ಬೀಳ್ತಾರೆ.+ ಮೂರನೇ ಭಾಗದ ಜನ್ರನ್ನ ನಾನು ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡಿಬಿಡ್ತೀನಿ. ನಾನು ಕತ್ತಿಯನ್ನ ಹೊರಗೆ ತೆಗೆದು ಅವ್ರನ್ನ ಅಟ್ಟಿಸ್ಕೊಂಡು ಹೋಗೋ ತರ ಮಾಡ್ತೀನಿ.+ 13 ಆಗ ನನ್ನ ಸಿಟ್ಟು ಕಮ್ಮಿ ಆಗುತ್ತೆ, ಅವ್ರ ಮೇಲಿದ್ದ ಕೋಪ ತಣ್ಣಗಾಗುತ್ತೆ, ತೃಪ್ತಿ ಆಗುತ್ತೆ.+ ನನ್ನ ರೋಷಾಗ್ನಿಯನ್ನ ಅವ್ರ ಮೇಲೆ ಸುರಿದ ಮೇಲೆ ಅವ್ರಿಗೆ ಒಂದು ವಿಷ್ಯ ಚೆನ್ನಾಗಿ ಅರ್ಥ ಆಗುತ್ತೆ. ಯೆಹೋವನಾದ ನಾನು, ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರಾಗಿದ್ದೀನಿ,+ ಅದಕ್ಕೇ ಇದನ್ನೆಲ್ಲ ಅವ್ರಿಗೆ ಹೇಳಿದ್ದೀನಿ ಅನ್ನೋದನ್ನ ಅವರು ತಿಳ್ಕೊಬೇಕಾಗುತ್ತೆ.
14 ನಾನು ನಿನ್ನನ್ನ ಹಾಳುಬಿದ್ದ ಜಾಗ ಮಾಡ್ತೀನಿ. ನಿನ್ನ ಸುತ್ತ ಇರೋ ಜನಾಂಗಗಳವರು ಮತ್ತು ಹಾದುಹೋಗೋ ಜನ್ರೆಲ್ಲ ನಿನ್ನನ್ನ ನೋಡಿ ನಕ್ಕು ತಮಾಷೆ ಮಾಡ್ತಾರೆ.+ 15 ನಾನು ಕೋಪ, ಕ್ರೋಧದಿಂದ ನಿನ್ನ ವಿರುದ್ಧ ತೀರ್ಪು ಕೊಡುವಾಗ, ರೋಷದಿಂದ ಶಿಕ್ಷೆಗಳನ್ನ ಕೊಡುವಾಗ ನಿನ್ನ ಸುತ್ತ ಇರೋ ಜನಾಂಗದವರು ನಿನ್ನನ್ನ ಬೈತಾರೆ, ಅಣಕಿಸ್ತಾರೆ.+ ನಿನ್ನ ನೋಡಿ ಅವರು ಪಾಠ ಕಲಿತಾರೆ. ನಿನಗೆ ಬಂದಿರೋ ಗತಿಯನ್ನ ನೋಡಿ ಅವ್ರ ಎದೆ ಒಡೆದು ಹೋಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.
16 ನಿಮಗೊಂದು ಗತಿ ಕಾಣಿಸೋಕೆ ನಾನು ಬರಗಾಲ ಅನ್ನೋ ಬಾಣಗಳನ್ನ ಬಿಡ್ತೀನಿ. ನಾನು ಬಿಡೋ ಬಾಣ ನಿಮ್ಮನ್ನ ನಾಶಮಾಡುತ್ತೆ.+ ನಿಮ್ಮ ಪಟ್ಟಣಕ್ಕೆ ಆಹಾರ ಬರೋದನ್ನ ನಿಲ್ಲಿಸಿ* ಬರಗಾಲವನ್ನ ಇನ್ನೂ ಜಾಸ್ತಿ ಮಾಡ್ತೀನಿ.+ 17 ನಾನು ನಿಮ್ಮ ಮಧ್ಯ ಬರಗಾಲ ಮತ್ತು ಕ್ರೂರ ಕಾಡುಪ್ರಾಣಿಗಳನ್ನ ಕಳಿಸ್ತೀನಿ.+ ಅವು ನಿನ್ನ ಮಕ್ಕಳನ್ನ ನಿನ್ನಿಂದ ಕಿತ್ಕೊಳ್ಳುತ್ತೆ. ಅಂಟುರೋಗದಿಂದ ರಕ್ತಪಾತದಿಂದ ನೀನು ತತ್ತರಿಸಿ ಹೋಗ್ತೀಯ. ನೀನು ಕತ್ತಿಗೆ ತುತ್ತಾಗೋ ತರ ಮಾಡ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳ್ತಿದ್ದೀನಿ.’”
6 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲಿನ ಬೆಟ್ಟಗಳ ಕಡೆ ಮುಖಮಾಡಿ ಅವುಗಳ ವಿರುದ್ಧ ಭವಿಷ್ಯ ಹೇಳು. 3 ನೀನು ಅವಕ್ಕೆ ಹೀಗೆ ಹೇಳಬೇಕು: ‘ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವ ಹೇಳೋದನ್ನ ಕೇಳಿಸ್ಕೊಳ್ಳಿ. ವಿಶ್ವದ ರಾಜ ಯೆಹೋವ ಪರ್ವತ, ಬೆಟ್ಟ, ತೊರೆ ಮತ್ತು ಕಣಿವೆಗಳಿಗೆ ಹೀಗಂತಾನೆ: “ನೋಡಿ! ನಾನು ನಿಮ್ಮನ್ನ ಕತ್ತಿಗೆ ತುತ್ತಾಗೋ ಹಾಗೆ ಮಾಡಿ ನಿಮ್ಮ ದೇವಸ್ಥಾನಗಳನ್ನ* ನಾಶಮಾಡ್ತೀನಿ. 4 ನಾನು ನಿಮ್ಮ ಯಜ್ಞವೇದಿಗಳನ್ನ ನಾಶ ಮಾಡ್ತೀನಿ. ಧೂಪಸ್ತಂಭಗಳನ್ನ ಮುರಿದು ಹಾಕ್ತೀನಿ.+ ನನ್ನ ಕೈಯಿಂದ ಸಾಯೋ ಜನ್ರ ಶವಗಳನ್ನ ನಿಮ್ಮ ಅಸಹ್ಯ ಮೂರ್ತಿಗಳ* ಮುಂದೆ ಬಿಸಾಡ್ತೀನಿ.+ 5 ಇಸ್ರಾಯೇಲಿನ ಜನ್ರ ಶವಗಳನ್ನ ಅವ್ರ ಅಸಹ್ಯ ಮೂರ್ತಿಗಳ ಮುಂದೆನೇ ಎಸಿತೀನಿ. ನಿಮ್ಮ ಮೂಳೆಗಳನ್ನ ನಿಮ್ಮ ಯಜ್ಞವೇದಿಗಳ ಸುತ್ತ ಚೆಲ್ಲಾಪಿಲ್ಲಿ ಮಾಡ್ತೀನಿ.+ 6 ನೀವು ಎಲ್ಲೆಲ್ಲ ಇರ್ತಿರೋ ಆ ಎಲ್ಲ ಪಟ್ಟಣಗಳು ಬಿದ್ದು ಹೋಗುತ್ತೆ.+ ಅಲ್ಲಿನ ದೇವಸ್ಥಾನಗಳು* ಬಿದ್ದು ಹೋಗುತ್ತೆ ಮತ್ತು ಅವು ಹಾಳು ಬಿದ್ದಿರುತ್ತೆ.+ ನಿಮ್ಮ ಯಜ್ಞವೇದಿಗಳು ಪುಡಿಪುಡಿ ಆಗಿ ನಾಶ ಆಗುತ್ತೆ. ನಿಮ್ಮ ಅಸಹ್ಯ ಮೂರ್ತಿಗಳು ನಾಶ ಆಗುತ್ತೆ, ಧೂಪಸ್ತಂಭಗಳು ಮುರಿದು ಹೋಗುತ್ತೆ, ನಿಮ್ಮ ಕೈಕೆಲಸಗಳೆಲ್ಲ ಹಾಳಾಗುತ್ತೆ. 7 ಜನ್ರು ಕತ್ತಿಯಿಂದ ನಿಮ್ಮ ಮಧ್ಯ ಸತ್ತು ಬೀಳ್ತಾರೆ.+ ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+
8 ಆದ್ರೆ ನಿಮ್ಮಲ್ಲಿ ಸ್ವಲ್ಪ ಜನ್ರನ್ನ ಉಳಿಸ್ತೀನಿ. ನೀವು ಬೇರೆಬೇರೆ ದೇಶಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಜನಾಂಗಗಳ ಮಧ್ಯ ಇರುವಾಗ ನಿಮ್ಮಲ್ಲಿ ಕೆಲವರು ಕತ್ತಿಯಿಂದ ತಪ್ಪಿಸ್ಕೊಳ್ತಾರೆ.+ 9 ಹಾಗೆ ತಪ್ಪಿಸ್ಕೊಂಡವರು ಕೈದಿಗಳಾಗಿ ಹೋದ ಜನಾಂಗಗಳ ಮಧ್ಯ ನನ್ನನ್ನ ನೆನಪಿಸ್ಕೊಳ್ತಾರೆ.+ ಅವರು ದ್ರೋಹ ಮಾಡಿ* ಅವ್ರ ಹೃದಯ ನನ್ನಿಂದ ದೂರ ಆದಾಗ ಮತ್ತು ಅವ್ರ ಕಣ್ಣು ಕಾಮಾತುರದಿಂದ* ಅವ್ರ ಅಸಹ್ಯ ಮೂರ್ತಿಗಳನ್ನ ನೋಡ್ತಿದ್ದಾಗ+ ನನ್ನ ಹೃದಯ ಒಡೆದುಹೋಯ್ತು+ ಅಂತ ಆಗ ಅವರು ಅರ್ಥ ಮಾಡ್ಕೊತಾರೆ. ಅವರು ಮಾಡಿದ ಎಲ್ಲ ಅಸಹ್ಯ ವಿಷ್ಯಗಳನ್ನ ನೆನಸಿ ಅವ್ರ ಬಗ್ಗೆ ಅವ್ರಿಗೇ ನಾಚಿಕೆ, ಹೇಸಿಗೆ ಆಗುತ್ತೆ.+ 10 ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. ಅವ್ರ ಮೇಲೆ ಈ ಕಷ್ಟ ತರ್ತಿನಿ ಅಂತ ನಾನು ಹೆದರಿಸಿದ್ದು ಸುಳ್ಳಲ್ಲ ಅಂತಾನೂ ಅವರು ತಿಳ್ಕೊತಾರೆ.”’+
11 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್ ಜನ್ರು ಕೆಟ್ಟ ಮತ್ತು ಅಸಹ್ಯವಾದ ಕೆಲಸಗಳನ್ನ ಮಾಡಿದ್ರಿಂದ ನೀನು ದುಃಖದಿಂದ ಕೈಗಳನ್ನ ತಟ್ಟಿ, ವ್ಯಥೆಯಿಂದ ಕಾಲನ್ನ ನೆಲಕ್ಕೆ ಬಡಿದು ಗೋಳಾಡು. ಯಾಕಂದ್ರೆ ಅವರು ಕತ್ತಿ, ಬರಗಾಲ, ಅಂಟುರೋಗದಿಂದ ಸಾಯ್ತಾರೆ.+ 12 ದೂರದಲ್ಲಿ ಇರುವವರು ಅಂಟುರೋಗದಿಂದ ಸಾಯ್ತಾರೆ. ಹತ್ರ ಇರುವವರು ಕತ್ತಿಯಿಂದ ಸಾಯ್ತಾರೆ. ಇವೆರಡರಿಂದ ತಪ್ಪಿಸ್ಕೊಂಡವರು ಬರಗಾಲದಿಂದ ಸಾಯ್ತಾರೆ. ಹೀಗೆ ನಾನು ಅವ್ರ ಮೇಲೆ ನನ್ನ ರೋಷಾಗ್ನಿಯನ್ನ ಪೂರ್ತಿ ಸುರಿದುಬಿಡ್ತೀನಿ.+ 13 ಅವ್ರ ಶವಗಳು ಅಸಹ್ಯ ಮೂರ್ತಿಗಳ ಮಧ್ಯ, ಅವ್ರ ಯಜ್ಞವೇದಿಗಳ ಸುತ್ತ,+ ಎತ್ತರವಾದ ಎಲ್ಲ ಬೆಟ್ಟಗಳ ಮೇಲೆ, ಎಲ್ಲ ಪರ್ವತಗಳ ತುದಿಗಳಲ್ಲಿ, ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ ಕೆಳಗೆ ಮತ್ತು ದೊಡ್ಡ ದೊಡ್ಡ ಮರಗಳ ಕೊಂಬೆಗಳ ಕೆಳಗೆ ಬಿದ್ದಿರುತ್ತೆ. ಹೀಗೆ ಎಲ್ಲೆಲ್ಲಿ ಅವ್ರ ಅಸಹ್ಯ ಮೂರ್ತಿಗಳನ್ನ ಖುಷಿಪಡಿಸೋಕೆ ಸುಗಂಧಭರಿತ ಅರ್ಪಣೆಗಳನ್ನ ಕೊಡ್ತಿದ್ರೋ+ ಅಲ್ಲೆಲ್ಲ ಶವಗಳು ಬಿದ್ದಾಗ ನಾನೇ ಯೆಹೋವ ಅಂತ ಗೊತ್ತಾಗುತ್ತೆ.+ 14 ನಾನು ನನ್ನ ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ. ಅವ್ರ ದೇಶದಲ್ಲಿ ಜನ್ರೇ ಇಲ್ಲದ ಹಾಗೆ ಮಾಡ್ತೀನಿ. ಅವರು ವಾಸಿಸೋ ಸ್ಥಳಗಳು ಬಿಕೋ ಅನ್ನುತ್ತವೆ. ಎಷ್ಟೆಂದ್ರೆ ಅವುಗಳ ಗತಿ ದಿಬ್ಲದ ಹತ್ರ ಇರೋ ಕಾಡಿಗಿಂತ* ಕಡೆ ಆಗಿರುತ್ತೆ. ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”
7 ಯೆಹೋವ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಇಸ್ರಾಯೇಲ್ಯರ ದೇಶಕ್ಕೆ ಹೇಳೋದು ಏನಂದ್ರೆ ‘ಅಂತ್ಯ ಬಂದಿದೆ! ಹೌದು, ಇಡೀ ದೇಶದ ಮೇಲೆ ಅಂತ್ಯ ಬಂದಿದೆ. 3 ಈಗ ನಿನ್ನ ಅಂತ್ಯ ಬಂದಿದೆ. ನಾನು ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಸುರಿತೀನಿ. ನಿನ್ನ ನಡತೆಗೆ ಸರಿಯಾಗಿ ನಿನಗೆ ತೀರ್ಪು ಕೊಡ್ತೀನಿ. ನಿನ್ನ ಎಲ್ಲ ಅಸಹ್ಯ ಕೆಲಸಗಳಿಗೆ ಲೆಕ್ಕ ಕೇಳ್ತೀನಿ. 4 ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ನೀನು ಬಿತ್ತಿದ್ದನ್ನ ಕೊಯ್ಯೋ ತರ ಮಾಡ್ತೀನಿ. ನಿನ್ನ ಅಸಹ್ಯ ಕೆಲಸಗಳಿಗೆ ತಕ್ಕ ಶಿಕ್ಷೆ ಕೊಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ.’+
5 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಕಷ್ಟ! ಇಲ್ಲಿ ತನಕ ಯಾರ ಮೇಲೂ ಬಂದಿರದ ಕಷ್ಟ ಬರ್ತಾ ಇದೆ!+ 6 ಅಂತ್ಯ ಬರ್ತಿದೆ, ಬಂದೇ ಬರುತ್ತೆ. ಅದು ಥಟ್ಟಂತ ನಿನ್ನ ಮೇಲೆ ಬೀಳುತ್ತೆ. ನೋಡು, ಅದು ಬರ್ತಿದೆ! 7 ದೇಶದಲ್ಲಿ ವಾಸಿಸ್ತಾ ಇರುವವನೇ, ನಿನ್ನ ಸರದಿ* ಬಂದಿದೆ. ಆ ಸಮಯ ಬರ್ತಿದೆ. ಆ ದಿನ ಹತ್ರ ಇದೆ.+ ಬೆಟ್ಟಗಳ ಮೇಲೆ ಹರ್ಷಧ್ವನಿ ಅಲ್ಲ, ಬರೀ ಗೋಳಾಟ ಕೇಳಿಸ್ತಾ ಇದೆ.
8 ಆದಷ್ಟು ಬೇಗ ನಾನು ನನ್ನ ಕ್ರೋಧವನ್ನ ನಿನ್ನ ಮೇಲೆ ಸುರಿತೀನಿ.+ ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಹಾಕ್ತೀನಿ.+ ನಿನ್ನ ನಡತೆಗೆ ಸರಿಯಾಗಿ ತೀರ್ಪು ಕೊಡ್ತೀನಿ. ನಿನ್ನ ಎಲ್ಲ ಅಸಹ್ಯ ಕೆಲಸಗಳಿಗೆ ನಿನ್ನಿಂದ ಲೆಕ್ಕ ಕೇಳ್ತೀನಿ. 9 ನಾನು ನಿನ್ನನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ನೀನು ಬಿತ್ತಿದ್ದನ್ನ ನೀನೇ ಕೊಯ್ಯೋ ತರ ಮಾಡ್ತೀನಿ. ನಿನ್ನ ಅಸಹ್ಯ ಕೆಲಸಗಳಿಗೆ ತಕ್ಕ ಶಿಕ್ಷೆ ಆಗುತ್ತೆ. ಆಗ ಯೆಹೋವನಾದ ನಾನೇ ನಿನ್ನನ್ನ ಶಿಕ್ಷಿಸ್ತಾ ಇದ್ದೀನಿ ಅಂತ ನಿನಗೆ ಗೊತ್ತಾಗುತ್ತೆ.+
10 ನೋಡು, ನೋಡು! ಆ ದಿನ ಬರ್ತಿದೆ!+ ನಿನ್ನ ಸರದಿ* ಬಂದಿದೆ, ನಿನ್ನನ್ನ ಶಿಕ್ಷಿಸೋಕೆ ನಾನು ಕೋಲು ಸಿದ್ಧ ಮಾಡಿದ್ದೀನಿ. ಅದಕ್ಕೆ ಜಂಬ ಜಾಸ್ತಿ.* 11 ಹಿಂಸಾಚಾರ ಬೆಳೆದು ಬೆಳೆದು ಕೆಟ್ಟತನವನ್ನ ಶಿಕ್ಷಿಸೋ ಕೋಲು ಅದು.+ ನಿಮ್ಮಲ್ಲಿ ಯಾರೂ ಬದುಕಲ್ಲ. ನಿಮ್ಮ ಹಣ-ಆಸ್ತಿ, ನಿಮ್ಮ ಜನ್ರು, ನಿಮ್ಮ ಪ್ರಖ್ಯಾತಿ ಯಾವುದೂ ಉಳಿಯಲ್ಲ. 12 ಆ ಸಮಯ ಬಂದೇ ಬರುತ್ತೆ, ಆ ದಿನ ನಿಜವಾಗ್ಲೂ ಬರುತ್ತೆ. ಕೊಂಡ್ಕೊಳ್ಳೋನು ಖುಷಿಪಡದಿರಲಿ, ಮಾರುವವನು ಅಳದಿರಲಿ. ಯಾಕಂದ್ರೆ ಎಲ್ಲ ಜನ್ರ ಮೇಲೆ ನನಗೆ ಕೋಪ ಬರ್ತಿದೆ.*+ 13 ಜಮೀನನ್ನ ಮಾರಿದವನ ಜೀವ ಉಳಿದ್ರೂ ಅವನು ತನ್ನ ಜಮೀನಿಗೆ ವಾಪಸ್ ಹೋಗಲ್ಲ. ಯಾಕಂದ್ರೆ ದರ್ಶನದಲ್ಲಿ ಹೇಳಿದ ವಿಷ್ಯಗಳು ಇಡೀ ಸಮೂಹದ ಮೇಲೆ ಬರುತ್ತೆ. ಯಾರೂ ವಾಪಸ್ ಹೋಗಲ್ಲ. ಅವ್ರ ತಪ್ಪಿಂದ* ಅವ್ರಲ್ಲಿ ಒಬ್ಬರ ಜೀವಾನೂ ಉಳಿಯಲ್ಲ.
14 ಅವರು ತುತ್ತೂರಿ ಊದಿದ್ದಾರೆ,+ ಎಲ್ರೂ ಸಿದ್ಧರಾಗಿದ್ದಾರೆ, ಆದ್ರೆ ಒಬ್ಬರೂ ಯುದ್ಧಕ್ಕೆ ಹೋಗ್ತಿಲ್ಲ. ಯಾಕಂದ್ರೆ ಇಡೀ ಸಮೂಹದ ಮೇಲೆ ನನಗೆ ಕೋಪ ಬರ್ತಿದೆ.+ 15 ಪಟ್ಟಣದ ಹೊರಗೆ ಕತ್ತಿ,+ ಒಳಗೆ ಅಂಟುರೋಗ, ಬರಗಾಲ ಇದೆ. ಪಟ್ಟಣದ ಹೊರಗೆ ಇರೋರು ಕತ್ತಿಯಿಂದ ಸಾಯ್ತಾರೆ, ಒಳಗೆ ಇರೋರು ಬರಗಾಲ, ಅಂಟುರೋಗದಿಂದ ನಾಶವಾಗ್ತಾರೆ.+ 16 ಇದ್ರಿಂದ ತಪ್ಪಿಸ್ಕೊಂಡವರು ಬೆಟ್ಟಗಳಿಗೆ ಹೋಗ್ತಾರೆ. ಅವ್ರಲ್ಲಿ ಒಬ್ಬೊಬ್ಬನೂ ತಾನು ಮಾಡಿದ ತಪ್ಪಿಗಾಗಿ ಕಣಿವೆಗಳಲ್ಲಿರೋ ಪಾರಿವಾಳಗಳ ತರ ಮುಲುಗ್ತಾನೆ.+ 17 ಭಯದಿಂದ ಅವ್ರೆಲ್ಲರ ಕೈಗಳು ಬಿದ್ದುಹೋಗುತ್ತೆ, ಅವ್ರ ಮಂಡಿಯಿಂದ ನೀರು ತೊಟ್ಟಿಕ್ಕುತ್ತೆ.*+ 18 ಅವರು ಗೋಣಿಬಟ್ಟೆ ಹಾಕೊಂಡಿದ್ದಾರೆ.+ ಅವ್ರ ಮೈಯೆಲ್ಲ ಗಡಗಡ ಅಂತ ನಡುಗ್ತಿದೆ. ಎಲ್ರೂ ನಾಚಿಕೆಪಡ್ತಾರೆ, ತಲೆ ಬೋಳಾಗುತ್ತೆ.*+
19 ಅವರು ತಮ್ಮ ಬೆಳ್ಳಿಯನ್ನ ಬೀದಿಗಳಲ್ಲಿ ಬಿಸಾಡ್ತಾರೆ, ಅವ್ರ ಹತ್ರ ಇರೋ ಚಿನ್ನ ನೋಡಿ ಅವ್ರಿಗೇ ಅಸಹ್ಯ ಆಗುತ್ತೆ. ಯೆಹೋವನ ಉಗ್ರಕೋಪದ ದಿನ ಅವ್ರ ಹತ್ರ ಇರೋ ಚಿನ್ನಕ್ಕಾಗಲಿ ಬೆಳ್ಳಿಗಾಗಲಿ ಅವ್ರನ್ನ ಕಾಪಾಡೋಕೆ ಆಗಲ್ಲ.+ ಅವುಗಳಿಂದ ಅವ್ರಿಗೆ ತೃಪ್ತಿ ಆಗಲ್ಲ, ಹೊಟ್ಟೆ ತುಂಬಲ್ಲ. ಯಾಕಂದ್ರೆ ಅವರು ಪಾಪ ಮಾಡೋಕೆ ಆ ಚಿನ್ನಬೆಳ್ಳಿನೇ ಅವರಿಗೆ ಎಡವಿಸೋ ಕಲ್ಲಾಗಿದೆ. 20 ಅವರು ತಮ್ಮ ಅಂದಚೆಂದದ ಆಭರಣಗಳ ಬಗ್ಗೆ ಕೊಚ್ಕೊಳ್ತಿದ್ರು. ಆ ಆಭರಣಗಳಿಂದ ಅಸಹ್ಯ ಮೂರ್ತಿಗಳನ್ನ, ಹೇಸಿಗೆ ಹುಟ್ಟಿಸೋ ಮೂರ್ತಿಗಳನ್ನ ಮಾಡ್ಕೊಂಡ್ರು.+ ಹಾಗಾಗಿ ಆ ಚಿನ್ನ ಬೆಳ್ಳಿಯನ್ನ ನೋಡಿ ಅವ್ರಿಗೇ ಹೇಸಿಗೆ ಆಗೋ ತರ ನಾನು ಮಾಡ್ತೀನಿ. 21 ಆ* ಚಿನ್ನ ಬೆಳ್ಳಿಯನ್ನ ವಿದೇಶಿಯರಿಗೂ ಭೂಮಿಯಲ್ಲಿರೋ ಕೆಟ್ಟವರಿಗೂ ಕೊಡ್ತೀನಿ. ಅವರು ಅದನ್ನ ಲೂಟಿ ಮಾಡಿ ಅಪವಿತ್ರ ಮಾಡ್ತಾರೆ.
22 ನಾನು ಅವ್ರ* ಕಡೆಯಿಂದ ನನ್ನ ಮುಖ ತಿರುಗಿಸ್ಕೊಳ್ತೀನಿ,+ ಮರೆಯಾಗಿರೋ ನನ್ನ ಸ್ಥಳವನ್ನ* ಅವರು* ಅಪವಿತ್ರ ಮಾಡ್ತಾರೆ, ದರೋಡೆಕೋರರು ಅದ್ರೊಳಗೆ ನುಗ್ಗಿ ಅದನ್ನ ಅಪವಿತ್ರ ಮಾಡ್ತಾರೆ.+
23 ಒಂದು ಸರಪಣಿ*+ ಮಾಡು. ಯಾಕಂದ್ರೆ ಅನ್ಯಾಯವಾಗಿ ತೀರ್ಪು ಕೊಟ್ಟು ಕೊಂದವ್ರ ರಕ್ತ ದೇಶದಲ್ಲೆಲ್ಲ ತುಂಬಿದೆ.+ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಬರೀ ಹಿಂಸೆ.+ 24 ಜನಾಂಗಗಳಲ್ಲೇ ತುಂಬ ಕೆಟ್ಟವರನ್ನ ನಾನು ಒಳಗೆ ಕರ್ಕೊಂಡು ಬರ್ತಿನಿ.+ ಅವರು ಅಲ್ಲಿನ ಮನೆಗಳನ್ನ ವಶ ಮಾಡ್ಕೊಳ್ತಾರೆ.+ ನಾನು ಬಲಿಷ್ಠರ ಗರ್ವ ಭಂಗ ಮಾಡ್ತೀನಿ. ಅವ್ರ ಪವಿತ್ರ ಸ್ಥಳಗಳು ಅಪವಿತ್ರ ಆಗುತ್ತೆ.+ 25 ಅವರು ಕಷ್ಟನೋವಲ್ಲಿ ಇರುವಾಗ ಶಾಂತಿ ನೆಮ್ಮದಿಗಾಗಿ ಹಾತೊರಿತಾರೆ, ಆದ್ರೆ ಅದು ಅವ್ರಿಗೆ ಸಿಗಲ್ಲ.+ 26 ಒಂದಾದ ಮೇಲೊಂದು ಕಷ್ಟ ಬರುತ್ತೆ, ಮೇಲಿಂದ ಮೇಲೆ ಸುದ್ದಿ ಕೇಳಿಸುತ್ತೆ. ಜನ್ರು ಪ್ರವಾದಿ ಹತ್ರ ಹೋಗಿ ಏನಾದ್ರೂ ದರ್ಶನ ಆಯ್ತಾ ಅಂತ ಕೇಳೋದು ವ್ಯರ್ಥ.+ ನಿಯಮ ಪುಸ್ತಕದಿಂದ ಪುರೋಹಿತರು ಕಲಿಸಿದ್ರೂ, ಹಿರಿಯರು ಸಲಹೆ ಕೊಟ್ರೂ ಅವ್ರಿಗೆ ಯಾವ ಪ್ರಯೋಜನನೂ ಸಿಗಲ್ಲ.+ 27 ರಾಜ ಅಳ್ತಾನೆ,+ ಪ್ರಧಾನವ್ಯಕ್ತಿ ಬೇಜಾರಲ್ಲಿ ಮುಳುಗಿ ಹೋಗ್ತಾನೆ. ಭೀತಿಯಿಂದ ದೇಶದ ಜನ್ರ ಕೈಗಳು ನಡುಗುತ್ತೆ. ಅವ್ರ ನಡತೆಗೆ ತಕ್ಕ ಹಾಗೆ ನಾನು ಅವ್ರ ಜೊತೆ ನಡ್ಕೊಳ್ತೀನಿ. ಅವರು ಬೇರೆಯವ್ರಿಗೆ ಹೇಗೆ ನ್ಯಾಯ ತೀರಿಸಿದ್ರೋ ಹಾಗೇ ನಾನು ಅವ್ರಿಗೆ ನ್ಯಾಯ ತೀರಿಸ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”+
8 ಆರನೇ ವರ್ಷದ* ಆರನೇ ತಿಂಗಳ ಐದನೇ ದಿನ ಅದಾಗಿತ್ತು. ನಾನು ನನ್ನ ಮನೆಯಲ್ಲಿ ಕೂತಿದ್ದೆ, ನನ್ನ ಮುಂದೆ ಯೆಹೂದದ ಹಿರಿಯರು ಕೂತಿದ್ರು. ಆಗ ವಿಶ್ವದ ರಾಜ ಯೆಹೋವನ ಶಕ್ತಿ* ನನ್ನಲ್ಲಿ ಕೆಲಸಮಾಡೋಕೆ ಶುರುಮಾಡ್ತು. 2 ನಾನು ಗಮನಿಸ್ತಾ ಇದ್ದಾಗ ಒಬ್ಬ ಮನುಷ್ಯನ ರೂಪ ಕಾಣಿಸ್ತು. ಅವನು ಬೆಂಕಿ ತರ ಇದ್ದ. ಯಾವುದು ಅವನ ಸೊಂಟದ ಹಾಗೆ ಕಾಣಿಸ್ತೋ ಅದರ ಕೆಳಗೆ ಬೆಂಕಿ ಇತ್ತು.+ ಅವನ ಸೊಂಟದಿಂದ ಮೇಲಕ್ಕೆ ಚಿನ್ನಬೆಳ್ಳಿ ತರ ಹೊಳೀತಾ ಇತ್ತು.+ 3 ಆಮೇಲೆ ಕೈ ತರ ಕಾಣ್ತಿದ್ದದನ್ನ ಚಾಚಿ ಅವನು ನನ್ನ ತಲೆಕೂದಲನ್ನ ಹಿಡಿದ. ದೇವರು ತೋರಿಸಿದ ಒಂದು ದರ್ಶನದಲ್ಲಿ ಪವಿತ್ರಶಕ್ತಿ* ನನ್ನನ್ನ ಗಾಳಿಯಲ್ಲಿ* ಎತ್ಕೊಂಡು ಯೆರೂಸಲೇಮಿಗೆ ಹೋಯ್ತು. ಅದು ನನ್ನನ್ನ ಉತ್ತರದ ಕಡೆಗಿರೋ ಒಳಗಿನ ಬಾಗಿಲ ಹತ್ರ ಕರ್ಕೊಂಡು ಹೋಯ್ತು.+ ಅಲ್ಲಿ ದೇವರಿಗೆ ಸಿಟ್ಟು* ಬರಿಸೋ ಮೂರ್ತಿ ಇತ್ತು.+ 4 ಆಹಾ! ನಾನಲ್ಲಿ ಇಸ್ರಾಯೇಲಿನ ದೇವರ ಮಹಿಮೆಯನ್ನ ನೋಡಿದೆ.+ ಅದು ಕಣಿವೆ ಬಯಲಲ್ಲಿ ನಾನು ನೋಡಿದ್ದ ಮಹಿಮೆ ತರಾನೇ ಇತ್ತು.+
5 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ದಯವಿಟ್ಟು ನಿನ್ನ ಕಣ್ಣೆತ್ತಿ ಉತ್ತರದ ಕಡೆ ನೋಡು” ಅಂದ. ಆಗ ನಾನು ಕಣ್ಣೆತ್ತಿ ಉತ್ತರದ ಕಡೆ ನೋಡ್ದೆ. ಅಲ್ಲಿ ಯಜ್ಞವೇದಿಯ ಉತ್ತರಕ್ಕಿದ್ದ ಬಾಗಿಲಲ್ಲಿ ದೇವರಿಗೆ ಸಿಟ್ಟು* ಬರಿಸೋ ಆ ಮೂರ್ತಿ ಇತ್ತು. 6 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ ಜನ್ರು ಇಲ್ಲಿ ಎಂಥ ಅಸಹ್ಯ ಕೆಲಸಗಳನ್ನ ಮಾಡ್ತಿದ್ದಾರೆ ಅಂತ ನೋಡಿದ್ಯಾ?+ ನಾನು ನನ್ನ ಆಲಯವನ್ನ ಬಿಟ್ಟು ದೂರ ಹೋಗೋ ಹಾಗೆ ಇವರು ನಡ್ಕೊತಿದ್ದಾರೆ.+ ಆದ್ರೆ ಇದಕ್ಕಿಂತ ಅಸಹ್ಯ ಕೆಲಸಗಳು ನಡಿಯೋದನ್ನ ನೀನು ನೋಡ್ತೀಯ” ಅಂದ.
7 ಆಮೇಲೆ ಅವನು ನನ್ನನ್ನ ಅಂಗಳದ ಬಾಗಿಲ ಹತ್ರ ಕರ್ಕೊಂಡು ಬಂದ. ನಾನು ಅಲ್ಲಿದ್ದ ಗೋಡೆಯನ್ನ ನೋಡಿದಾಗ ಗೋಡೆಯಲ್ಲಿ ಒಂದು ತೂತು ಕಾಣಿಸ್ತು. 8 ಆಗ ಅವನು “ಮನುಷ್ಯಕುಮಾರನೇ, ದಯವಿಟ್ಟು ಗೋಡೆಯಲ್ಲಿರೋ ಆ ತೂತನ್ನ ಕೊರೆದು ದೊಡ್ಡದು ಮಾಡು” ಅಂದ. ನಾನು ಆ ತೂತನ್ನ ದೊಡ್ಡದು ಮಾಡ್ದೆ. ಆಗ ನನಗೆ ಅಲ್ಲಿಂದ ಒಂದು ಬಾಗಿಲು ಕಾಣಿಸ್ತು. 9 ಅವನು ನನಗೆ “ಒಳಗೆ ಹೋಗಿ ಇಲ್ಲಿ ಅವರು ಮಾಡ್ತಿರೋ ಅಸಹ್ಯವಾದ ಕೆಟ್ಟ ಕೆಲಸಗಳನ್ನ ನೋಡು” ಅಂದ. 10 ಹಾಗಾಗಿ ನಾನು ಒಳಗೆ ಹೋಗಿ ನೋಡ್ದೆ. ಅಲ್ಲಿ ಸುತ್ತ ಗೋಡೆ ಮೇಲೆ ಎಲ್ಲ ತರದ ಹರಿದಾಡೋ ಜೀವಿಗಳ, ಹೇಸಿಗೆ ಹುಟ್ಟಿಸೋ ಪ್ರಾಣಿಗಳ+ ಮತ್ತು ಇಸ್ರಾಯೇಲ್ ಜನ್ರ ಅಸಹ್ಯ ಮೂರ್ತಿಗಳ*+ ಚಿತ್ರಗಳನ್ನ ಕೆತ್ತಲಾಗಿತ್ತು. 11 ಅವುಗಳ ಮುಂದೆ ಇಸ್ರಾಯೇಲ್ಯರ 70 ಹಿರಿಯರು ನಿಂತಿದ್ರು. ಅವ್ರ ಜೊತೆ ಶಾಫಾನನ+ ಮಗ ಯಾಜನ್ಯನೂ ನಿಂತಿದ್ದ. ಒಬ್ಬೊಬ್ಬನ ಕೈಯಲ್ಲೂ ಧೂಪಪಾತ್ರೆ ಇತ್ತು. ಅದ್ರಿಂದ ಸುವಾಸನೆಯ ಹೊಗೆ ಮೇಲೆ ಹೋಗ್ತಿತ್ತು.+ 12 ಆಗ ಅವನು ನನಗೆ “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಹಿರಿಯರಲ್ಲಿ ಪ್ರತಿಯೊಬ್ಬನು ಮೂರ್ತಿಗಳಿರೋ ಒಳಗಿನ ಕೋಣೆಗಳಲ್ಲಿ, ಕತ್ತಲೆಯಲ್ಲಿ ಏನು ಮಾಡ್ತಿದ್ದಾನೆ ಅಂತ ನೀನು ನೋಡಿದ್ಯಾ? ‘ಯೆಹೋವ ನಮ್ಮನ್ನ ನೋಡ್ತಿಲ್ಲ, ಯೆಹೋವ ಈ ದೇಶನ ಬಿಟ್ಟುಬಿಟ್ಟಿದ್ದಾನೆ’ ಅಂತ ಅವರು ಹೇಳ್ತಿದ್ದಾರೆ”+ ಅಂದ.
13 ಆಮೇಲೆ ಅವನು ನನಗೆ “ಇದಕ್ಕಿಂತ ಅಸಹ್ಯ ಕೆಲಸಗಳನ್ನ ಅವರು ಮಾಡೋದನ್ನ ನೀನು ನೋಡ್ತೀಯ” ಅಂದ. 14 ಆಮೇಲೆ ಅವನು ನನ್ನನ್ನ ಯೆಹೋವನ ಆಲಯದ ಉತ್ತರಕ್ಕಿದ್ದ ಬಾಗಿಲ ಹತ್ರ ಕರ್ಕೊಂಡು ಬಂದ. ಅಲ್ಲಿ ಹೆಂಗಸರು ಕೂತು ತಮ್ಮೂಜ್ ದೇವನಿಗಾಗಿ ಅಳೋದು ನನಗೆ ಕಾಣಿಸ್ತು.
15 ಅವನು ನನಗೆ “ಮನುಷ್ಯಕುಮಾರನೇ, ನೋಡಿದ್ಯಾ? ಇದಕ್ಕಿಂತ ಅಸಹ್ಯ ಕೆಲಸಗಳನ್ನ ನೀನು ನೋಡ್ತೀಯ”+ ಅಂದ. 16 ಆಮೇಲೆ ಅವನು ನನ್ನನ್ನ ಯೆಹೋವನ ಆಲಯದ ಒಳಗಿರೋ ಅಂಗಳಕ್ಕೆ ಕರ್ಕೊಂಡು ಬಂದ.+ ಯೆಹೋವನ ಆಲಯದ ಬಾಗಿಲ ಹತ್ರ ಅಂದ್ರೆ ಮಂಟಪ ಮತ್ತು ಯಜ್ಞವೇದಿಯ ಮಧ್ಯ ಸುಮಾರು 25 ಗಂಡಸ್ರು ಯೆಹೋವನ ಆಲಯಕ್ಕೆ ಬೆನ್ನುಹಾಕಿ ಪೂರ್ವಕ್ಕೆ ಮುಖಮಾಡಿ ಸೂರ್ಯನಿಗೆ ಅಡ್ಡ ಬೀಳ್ತಿದ್ರು.+
17 ಅವನು ನನಗೆ “ಮನುಷ್ಯಕುಮಾರನೇ, ಇದೆಲ್ಲ ನೋಡಿದ್ಯಾ? ಯೆಹೂದದ ಜನ ಈ ಎಲ್ಲ ಅಸಹ್ಯ ಕೆಲಸಗಳನ್ನ ಮಾಡ್ತಿದ್ದಾರೆ, ದೇಶದಲ್ಲಿ ಹಿಂಸಾಚಾರ ತುಂಬಿಸಿದ್ದಾರೆ,+ ನನ್ನನ್ನ ಕೆಣಕ್ತಾ ಇದ್ದಾರೆ, ಇದೆಲ್ಲ ಒಂದು ಚಿಕ್ಕ ವಿಷ್ಯನಾ? ಅವರು ಕೊಂಬೆಯನ್ನ* ನನ್ನ ಮೂಗಿಗೆ ತಿವೀತಿದ್ದಾರೆ. 18 ಹಾಗಾಗಿ ನಾನು ಅವ್ರಿಗೆ ನನ್ನ ಕೋಪ ತೋರಿಸ್ತೀನಿ. ಅವ್ರನ್ನ ನೋಡಿ ನಾನು ಸ್ವಲ್ಪಾನೂ ಕನಿಕರ ಪಡಲ್ಲ,+ ಅಯ್ಯೋ ಪಾಪ ಅನ್ನಲ್ಲ. ಅವರು ಎಷ್ಟೇ ಜೋರಾಗಿ ಕೂಗಿದ್ರೂ ನಾನು ಅವ್ರ ಕೂಗು ಕೇಳಲ್ಲ”+ ಅಂದ.
9 ಆಮೇಲೆ ಅವನು “ಈ ಪಟ್ಟಣಕ್ಕೆ ಶಿಕ್ಷೆ ಕೊಡುವವ್ರನ್ನ ಬರೋಕೆ ಹೇಳಿ. ಪ್ರತಿಯೊಬ್ಬನೂ ತನ್ನ ಕೈಯಲ್ಲಿ ನಾಶನದ ಆಯುಧ ಹಿಡ್ಕೊಂಡು ಬರಲಿ!” ಅಂತ ಜೋರಾಗಿ ಹೇಳೋದನ್ನ ಕೇಳಿಸ್ಕೊಂಡೆ.
2 ಉತ್ತರಕ್ಕಿರೋ ಮೇಲಿನ ಬಾಗಿಲ+ ಕಡೆಯಿಂದ ಆರು ಗಂಡಸ್ರು ಬರೋದನ್ನ ನೋಡ್ದೆ. ಪ್ರತಿಯೊಬ್ಬನ ಕೈಯಲ್ಲಿ ಜಜ್ಜಿಹಾಕೋ ಆಯುಧ ಇತ್ತು. ಅವ್ರ ಜೊತೆ ನಾರುಬಟ್ಟೆ ಹಾಕೊಂಡಿದ್ದ ಒಬ್ಬ ವ್ಯಕ್ತಿ ಇದ್ದ. ಅವನ ಸೊಂಟದಲ್ಲಿ ಕಾರ್ಯದರ್ಶಿಯ* ಒಂದು ಶಾಯಿಕೊಂಬು* ಇತ್ತು. ಆ ಗಂಡಸ್ರೆಲ್ಲ ಬಂದು ತಾಮ್ರದ ಯಜ್ಞವೇದಿಯ+ ಪಕ್ಕ ನಿಂತ್ರು.
3 ಆಮೇಲೆ ಇಸ್ರಾಯೇಲಿನ ದೇವರ ಮಹಿಮೆ+ ಕೆರೂಬಿಯರ ಮೇಲಿಂದ ಎದ್ದು ಆಲಯದ ಬಾಗಿಲಿನ ಹೊಸ್ತಿಲಿಗೆ ಹೋಯ್ತು.+ ಆಗ, ನಾರುಬಟ್ಟೆ ಹಾಕಿದ್ದ ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ಆ ವ್ಯಕ್ತಿಯನ್ನ ಆತನು ಕರೆದನು. 4 ಯೆಹೋವ ಅವನಿಗೆ “ನೀನು ಯೆರೂಸಲೇಮ್ ಪಟ್ಟಣದಲ್ಲಿ ಎಲ್ಲ ಕಡೆ ಹೋಗು. ಪಟ್ಟಣದಲ್ಲಿ ನಡಿತಿರೋ ಎಲ್ಲ ಅಸಹ್ಯ ಕೆಲಸಗಳನ್ನ+ ನೋಡಿ ದುಃಖದ ನಿಟ್ಟುಸಿರು ಬಿಡ್ತಾ ನರಳಾಡ್ತಿರೋ ಜನ್ರ ಹಣೆ ಮೇಲೆ ಒಂದು ಗುರುತು ಹಾಕು”+ ಅಂದನು.
5 ಆಮೇಲೆ ಆತನು ಉಳಿದವ್ರಿಗೆ “ನೀವು ಅವನ ಹಿಂದೆ ಹೋಗಿ. ಪಟ್ಟಣದಲ್ಲೆಲ್ಲ ಹೋಗಿ ಜನ್ರನ್ನ ಸಾಯಿಸಿ. ಅವ್ರನ್ನ ನೋಡಿ ಕನಿಕರಪಡಬೇಡಿ, ಅಯ್ಯೋ ಪಾಪ ಅನ್ನಬೇಡಿ.+ 6 ವಯಸ್ಸಾದವರು, ಯುವಕರು, ಕನ್ಯೆಯರು, ಚಿಕ್ಕ ಮಕ್ಕಳು, ಹೆಂಗಸ್ರು ಅಂತ ನೋಡದೆ ಎಲ್ರನ್ನೂ ಕೊಂದು ನಾಶಮಾಡಿ.+ ಆದ್ರೆ ಹಣೆ ಮೇಲೆ ಗುರುತು ಇರೋ ಯಾರ ಹತ್ರಾನೂ ಹೋಗಬೇಡಿ.+ ಈ ಕೆಲಸವನ್ನ ನೀವು ನನ್ನ ಆಲಯದಿಂದಾನೇ ಶುರುಮಾಡಬೇಕು”+ ಅಂತ ಹೇಳೋದನ್ನ ಕೇಳಿಸ್ಕೊಂಡೆ. ಹಾಗಾಗಿ ಮೊದ್ಲು ಅವರು ಆಲಯದ ಮುಂದಿದ್ದ ಹಿರಿಯರನ್ನ ಕೊಂದ್ರು.+ 7 ಆಮೇಲೆ ಆತನು ಅವ್ರಿಗೆ “ಹೋಗಿ! ನನ್ನ ಆಲಯವನ್ನ ಅಶುದ್ಧಮಾಡಿ, ನೀವು ಕೊಂದವ್ರ ಶವಗಳನ್ನ ಆಲಯದ ಅಂಗಳಗಳಲ್ಲಿ ಎಲ್ಲ ಕಡೆ ಹಾಕಿ”+ ಅಂದನು. ಆಗ ಅವರು ಹೋಗಿ ಪಟ್ಟಣದ ಜನ್ರನ್ನ ಕೊಂದ್ರು.
8 ಅವರು ಜನ್ರನ್ನ ಕೊಲ್ತಿದ್ದಾಗ ನಾನೊಬ್ಬನೇ ಜೀವಂತ ಉಳಿದೆ. ಆಗ ನಾನು ಅಡ್ಡಬಿದ್ದು “ಅಯ್ಯೋ! ವಿಶ್ವದ ರಾಜ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನ ಸುರಿಯುವಾಗ ಇಸ್ರಾಯೇಲಿನಲ್ಲಿ ಉಳಿದಿರೋ ಎಲ್ರನ್ನೂ ನಾಶಮಾಡ್ತೀಯಾ?” ಅಂತ ಕೂಗಿಕೊಂಡೆ.+
9 ಆಗ ಆತನು ನನಗೆ “ಇಸ್ರಾಯೇಲ್ ಮತ್ತು ಯೆಹೂದದ ಜನ್ರ ಪಾಪಗಳಿಗೆ ಲೆಕ್ಕಾನೇ ಇಲ್ಲ.+ ದೇಶದಲ್ಲಿ ರಕ್ತಪಾತ,+ ಭ್ರಷ್ಟಾಚಾರ ತುಂಬಿ ತುಳುಕ್ತಿದೆ.+ ಆ ಜನ್ರು ‘ಯೆಹೋವ ಈ ದೇಶವನ್ನ ಬಿಟ್ಟುಬಿಟ್ಟಿದ್ದಾನೆ, ಯೆಹೋವ ಏನೂ ನೋಡ್ತಿಲ್ಲ’ ಅಂತಿದ್ದಾರೆ.+ 10 ನಾನಂತೂ ಅವ್ರನ್ನ ನೋಡಿ ಸ್ವಲ್ಪಾನೂ ಕನಿಕರಪಡಲ್ಲ, ಅಯ್ಯೋ ಪಾಪ ಅನ್ನಲ್ಲ.+ ಅವ್ರ ನಡತೆಯ ಪರಿಣಾಮಗಳನ್ನ ಅವ್ರೇ ಅನುಭವಿಸೋ ತರ ಮಾಡ್ತೀನಿ” ಅಂದನು.
11 ಆಮೇಲೆ, ನಾರುಬಟ್ಟೆ ಹಾಕೊಂಡು ಸೊಂಟದಲ್ಲಿ ಶಾಯಿಕೊಂಬನ್ನ ಇಟ್ಕೊಂಡಿದ್ದ ವ್ಯಕ್ತಿ ವಾಪಸ್ ಬರೋದನ್ನ ನಾನು ನೋಡ್ದೆ. “ನೀನು ಆಜ್ಞೆ ಕೊಟ್ಟ ಹಾಗೇ ನಾನು ಮಾಡಿದ್ದೀನಿ” ಅಂತ ಅವನು ಹೇಳಿದ.
10 ನಾನು ನೋಡ್ತಿದ್ದಾಗ, ಕೆರೂಬಿಯರ ತಲೆ ಮೇಲೆ ಕಲ್ಲಿನ ನೆಲ ಕಾಣಿಸ್ತು, ಅದ್ರ ಮೇಲೆ ನೀಲಮಣಿಯಿಂದ ಮಾಡಿದ ಏನೋ ಒಂದಿತ್ತು. ಅದು ಸಿಂಹಾಸನದ ತರ ಕಾಣ್ತಿತ್ತು.+ 2 ಆಮೇಲೆ ಆತನು ನಾರುಬಟ್ಟೆ ಹಾಕಿದ್ದ ವ್ಯಕ್ತಿಗೆ+ “ನೀನು ಚಕ್ರಗಳ ಮಧ್ಯ,+ ಕೆರೂಬಿಯರ ಕೆಳಗೆ ಹೋಗು. ಕೆರೂಬಿಯರ ಮಧ್ಯ ಇರೋ ಕೆಂಡಗಳನ್ನ+ ಎರಡೂ ಕೈಗಳಲ್ಲಿ ತುಂಬಿಸ್ಕೊಂಡು ಬಂದು ಪಟ್ಟಣದ ಮೇಲೆ ಎರಚು”+ ಅಂದನು. ಅದೇ ತರ ಅವನು ಹೋಗಿದ್ದನ್ನ ನಾನು ನೋಡಿದೆ.
3 ಆ ವ್ಯಕ್ತಿ ಒಳಗೆ ಹೋದಾಗ ಕೆರೂಬಿಯರು ದೇವಾಲಯದ ಬಲಗಡೆ ನಿಂತಿದ್ರು. ಒಳಗಿರೋ ಅಂಗಳದಲ್ಲಿ ಮೋಡ ತುಂಬ್ತು. 4 ಯೆಹೋವನ ಮಹಿಮೆ+ ಕೆರೂಬಿಯರ ಮೇಲಿಂದ ಎದ್ದು ಆಲಯದ ಬಾಗಿಲಿನ ಹೊಸ್ತಿಲಿಗೆ ಹೋಯ್ತು. ದೇವಾಲಯದಲ್ಲಿ ಮೋಡ ನಿಧಾನವಾಗಿ ತುಂಬ್ಕೊಳ್ತು.+ ಅಂಗಳದಲ್ಲೆಲ್ಲ ಯೆಹೋವನ ಮಹಿಮೆಯ ಬೆಳಕು ಆವರಿಸಿತ್ತು. 5 ಕೆರೂಬಿಯರ ರೆಕ್ಕೆಗಳ ಶಬ್ದ ಎಷ್ಟು ಜೋರಾಗಿತ್ತಂದ್ರೆ ಅದು ಹೊರಗಿನ ಅಂಗಳದ ತನಕ ಕೇಳಿಸ್ತಿತ್ತು, ಅದು ಸರ್ವಶಕ್ತ ದೇವರು ಮಾತಾಡೋ ಶಬ್ದದ ತರ ಇತ್ತು.+
6 ಆಮೇಲೆ ಆತನು ನಾರುಬಟ್ಟೆ ಹಾಕಿದ್ದ ವ್ಯಕ್ತಿಗೆ “ಚಕ್ರಗಳ ಮಧ್ಯದಿಂದ, ಕೆರೂಬಿಯರ ಮಧ್ಯದಿಂದ ಬೆಂಕಿ ತಗೊ” ಅಂತ ಆಜ್ಞೆ ಕೊಟ್ಟನು. ಆಗ ಅವನು ಹೋಗಿ ಚಕ್ರದ ಪಕ್ಕದಲ್ಲಿ ನಿಂತ. 7 ಕೆರೂಬಿಯರ ಮಧ್ಯ ಇದ್ದ ಬೆಂಕಿ ಕಡೆ ಒಬ್ಬ ಕೆರೂಬಿ ಕೈಚಾಚಿ ಸ್ವಲ್ಪ ಬೆಂಕಿಯನ್ನ ತಗೊಂಡು,+ ನಾರುಬಟ್ಟೆ ಹಾಕಿದ್ದ ವ್ಯಕ್ತಿಯ+ ಎರಡೂ ಕೈಗಳಲ್ಲಿ ಇಟ್ಟ. ಆ ವ್ಯಕ್ತಿ ಅದನ್ನ ತಗೊಂಡು ಹೊರಗೆ ಹೋದ. 8 ಆ ಕೆರೂಬಿಯರ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳ ತರ ಇದ್ದ ಏನೋ ಒಂದು ನನಗೆ ಕಾಣಿಸ್ತು.+
9 ನಾನು ಗಮನಿಸ್ತಿದ್ದಾಗ ಕೆರೂಬಿಯರ ಪಕ್ಕ ನಾಲ್ಕು ಚಕ್ರಗಳು ಇರೋದು ಕಾಣಿಸ್ತು. ಒಬ್ಬೊಬ್ಬ ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರ ಇತ್ತು. ಆ ಚಕ್ರಗಳು ಕ್ರಿಸಲೈಟ್ ರತ್ನಗಳ ಹಾಗೆ ಪಳಪಳ ಅಂತ ಹೊಳೀತಿತ್ತು.+ 10 ಆ ನಾಲ್ಕು ಚಕ್ರಗಳು ನೋಡೋಕೆ ಒಂದೇ ತರ ಇದ್ವು. ಪ್ರತಿಯೊಂದು ಚಕ್ರಾನೂ, ಒಂದು ಚಕ್ರದೊಳಗೆ ಇನ್ನೊಂದು ಚಕ್ರ ಇರೋ ಹಾಗೆ ಕಾಣ್ತಿತ್ತು. 11 ಅವು ಹೋಗುವಾಗ ನಾಲ್ಕು ದಿಕ್ಕಲ್ಲಿ ಯಾವ ದಿಕ್ಕಿಗೆ ಬೇಕಾದ್ರೂ ಹೋಗೋಕೆ ಆಗ್ತಿತ್ತು, ತಿರುಗೋದೇ ಬೇಕಾಗಿರಲಿಲ್ಲ. ಯಾಕಂದ್ರೆ, ಕೆರೂಬಿಯರ ತಲೆ ಯಾವ ದಿಕ್ಕಿಗೆ ಇತ್ತೋ ಆ ದಿಕ್ಕಿಗೇ ಚಕ್ರಗಳು ಹೋಗ್ತಿದ್ವು, ತಿರುಗ್ತಿರಲಿಲ್ಲ. 12 ಕೆರೂಬಿಯರ ಮೈಮೇಲೆ, ಬೆನ್ನ ಮೇಲೆ, ಕೈ ಮತ್ತು ರೆಕ್ಕೆಗಳ ಮೇಲೆಲ್ಲ ತುಂಬ ಕಣ್ಣುಗಳು ಇದ್ವು. ನಾಲ್ಕೂ ಕೆರೂಬಿಯರ ಪಕ್ಕದಲ್ಲಿದ್ದ ಚಕ್ರಗಳ ಸುತ್ತಾನೂ ತುಂಬ ಕಣ್ಣುಗಳು ಇದ್ವು.+ 13 ಆಮೇಲೆ ಒಂದು ಸ್ವರ “ಚಕ್ರಗಳೇ!” ಅಂತ ಕೂಗಿ ಕರೆದಿದ್ದು ನನಗೆ ಕೇಳಿಸ್ತು.
14 ಪ್ರತಿಯೊಬ್ಬ ಕೆರೂಬಿಗೆ ನಾಲ್ಕು ಮುಖ ಇತ್ತು. ಮೊದಲನೇದು ಕೆರೂಬಿಯ ಮುಖ, ಎರಡನೇದು ಮನುಷ್ಯನ* ಮುಖ, ಮೂರನೇದು ಸಿಂಹದ ಮುಖ, ನಾಲ್ಕನೇದು ಹದ್ದಿನ ಮುಖ.+
15 ನಾನು ಕೆಬಾರ್ ನದಿ+ ಹತ್ರ ನೋಡಿದ ಆ ಜೀವಿಗಳೇ ಈ ಕೆರೂಬಿಯರಾಗಿದ್ರು. ಆ ಕೆರೂಬಿಯರು ಮೇಲೆ ಏಳುವಾಗ 16 ಮತ್ತು ಮುಂದೆ ಹೋಗುವಾಗ ಅವ್ರ ಪಕ್ಕದಲ್ಲಿ ಚಕ್ರಗಳೂ ಹೋಗ್ತಿದ್ವು. ಕೆರೂಬಿಯರು ತಮ್ಮ ರೆಕ್ಕೆಗಳನ್ನ ಮೇಲೆ ಚಾಚಿ ಭೂಮಿಯಿಂದ ಮೇಲೆ ಏಳುವಾಗ ಚಕ್ರಗಳು ಕೆರೂಬಿಯರ ಪಕ್ಕದಿಂದ ದೂರ ಸರೀತಿರಲಿಲ್ಲ, ಬೇರೆ ಕಡೆಗೂ ತಿರುಗ್ತಿರಲಿಲ್ಲ.+ 17 ಆ ಜೀವಿಗಳು ನಿಂತಾಗ ಚಕ್ರಗಳೂ ನಿಲ್ತಿದ್ವು. ಆ ಜೀವಿಗಳು ಭೂಮಿಯಿಂದ ಮೇಲೆ ಎದ್ದಾಗ ಅವುಗಳ ಜೊತೆ ಆ ಚಕ್ರಗಳೂ ಮೇಲೆ ಏಳುತ್ತಿದ್ವು. ಯಾಕಂದ್ರೆ ಆ ಜೀವಿಗಳನ್ನ ಪ್ರೇರಿಸ್ತಿದ್ದ ಪವಿತ್ರಶಕ್ತಿನೇ ಚಕ್ರಗಳಲ್ಲೂ ಇತ್ತು.
18 ಆಮೇಲೆ ಆಲಯದ ಬಾಗಿಲಿನ ಹೊಸ್ತಿಲ ಮೇಲಿದ್ದ ಯೆಹೋವನ ಮಹಿಮೆ+ ಕೆರೂಬಿಯರ ಮೇಲೆ ಹೋಗಿ ನಿಲ್ತು.+ 19 ನಾನು ನೋಡ್ತಿದ್ದಾಗ ಕೆರೂಬಿಯರು ತಮ್ಮ ರೆಕ್ಕೆಗಳನ್ನ ಮೇಲೆ ಚಾಚಿ ಭೂಮಿಯಿಂದ ಮೇಲೆ ಎದ್ದು ಮುಂದೆ ಹೋದ್ರು. ಚಕ್ರಗಳೂ ಅವ್ರ ಪಕ್ಕದಲ್ಲೇ ಇದ್ವು. ಕೆರೂಬಿಯರು ಯೆಹೋವನ ಆಲಯದ ಪೂರ್ವದ ಬಾಗಿಲಲ್ಲಿ ನಿಂತ್ರು ಮತ್ತು ಇಸ್ರಾಯೇಲಿನ ದೇವರ ಮಹಿಮೆ ಅವ್ರ ಮೇಲಿತ್ತು.+
20 ನಾನು ಕೆಬಾರ್ ನದಿ+ ಹತ್ರ ಇಸ್ರಾಯೇಲಿನ ದೇವರ ಸಿಂಹಾಸನದ ಕೆಳಗೆ ನೋಡಿದ ಜೀವಿಗಳು ಇವ್ರೇ. ಹಾಗಾಗಿ ಆ ಜೀವಿಗಳು ಕೆರೂಬಿಯರು ಅಂತ ನನಗೀಗ ಗೊತ್ತಾಯ್ತು. 21 ನಾಲ್ಕೂ ಕೆರೂಬಿಯರಿಗೆ ನಾಲ್ಕು ಮುಖ ಮತ್ತು ನಾಲ್ಕು ರೆಕ್ಕೆ ಇತ್ತು. ಮನುಷ್ಯನ ಕೈಗಳ ತರ ಕಾಣ್ತಿದ್ದ ಏನೋ ಒಂದು ಅವ್ರ ರೆಕ್ಕೆಗಳ ಕೆಳಗಿತ್ತು.+ 22 ಅವ್ರ ಮುಖಗಳು ನಾನು ಕೆಬಾರ್ ನದಿ ಹತ್ರ ನೋಡಿದವ್ರ ಮುಖಗಳ ತರಾನೇ ಕಾಣ್ತಿದ್ವು.+ ಪ್ರತಿಯೊಬ್ಬ ಕೆರೂಬಿ ನೇರವಾಗಿ ಮುಂದಕ್ಕೆ ಹೋಗ್ತಿದ್ದ.+
11 ಆಮೇಲೆ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಯೆಹೋವನ ಆಲಯದ ಪೂರ್ವದ ಬಾಗಿಲಿಗೆ ಅಂದ್ರೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲಿಗೆ+ ಕರ್ಕೊಂಡು ಬಂತು. ಆ ಬಾಗಿಲ ಹತ್ರ 25 ಅಧಿಕಾರಿಗಳು+ ಇರೋದನ್ನ ನಾನು ನೋಡಿದೆ. ಅವ್ರಲ್ಲಿ ಅಜ್ಜೂರನ ಮಗ ಯಾಜನ್ಯ ಮತ್ತು ಬೆನಾಯನ ಮಗ ಪೆಲಟ್ಯ ಇದ್ರು. 2 ಆತನು ನನಗೆ “ಮನುಷ್ಯಕುಮಾರನೇ, ಇವರು ಕೆಟ್ಟದ್ದನ್ನ ಮಾಡೋಕೆ ಸಂಚು ಮಾಡ್ತಿದ್ದಾರೆ, ಪಟ್ಟಣದಲ್ಲಿ* ಜನ್ರಿಗೆ ತುಂಬ ಕೆಟ್ಟ ಸಲಹೆಗಳನ್ನ ಕೊಡ್ತಿದ್ದಾರೆ. 3 ‘ನಾವೀಗ ಇನ್ನಷ್ಟು ಮನೆಗಳನ್ನ ಕಟ್ಟೋಕೆ ಇದು ಒಳ್ಳೇ ಸಮಯ.+ ಈ ಪಟ್ಟಣ* ಅಡುಗೆ ಪಾತ್ರೆ* ತರ ಇದೆ,+ ನಾವು ಅದ್ರೊಳಗಿರೋ ಮಾಂಸದ ತರ ಇದ್ದೀವಿ’ ಅಂತಿದ್ದಾರೆ.
4 ಹಾಗಾಗಿ ಮನುಷ್ಯಕುಮಾರನೇ ಭವಿಷ್ಯ ಹೇಳು, ಅವ್ರ ವಿರುದ್ಧ ಭವಿಷ್ಯ ಹೇಳು”+ ಅಂದನು.
5 ಆಮೇಲೆ ಯೆಹೋವನ ಪವಿತ್ರಶಕ್ತಿ ನನ್ನ ಮೇಲೆ ಬಂತು.+ ಆತನು ನನಗೆ ಹೀಗಂದನು: “ನೀನು ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ “ಇಸ್ರಾಯೇಲ್ಯರೇ, ನೀವು ಹೇಳಿದ್ದು ಸರಿ. ನಿಮ್ಮ ತಲೆಯಲ್ಲಿ ಏನು ಓಡ್ತಿದೆ ಅಂತ ನಂಗೊತ್ತು. 6 ಈ ಪಟ್ಟಣದಲ್ಲಿ ತುಂಬ ಜನ್ರ ಸಾವಿಗೆ ನೀವು ಕಾರಣ ಆಗಿದ್ದೀರ, ಬೀದಿಗಳಲ್ಲಿ ಶವಗಳನ್ನ ತುಂಬಿಸಿದ್ದೀರ.”’”+ 7 “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೌದು, ಈ ಪಟ್ಟಣ ಅಡುಗೆ ಪಾತ್ರೆನೇ.+ ಪಟ್ಟಣದಲ್ಲಿ ಚೆಲ್ಲಾಪಿಲ್ಲಿಯಾಗಿ ನೀವು ಎಸೆದಿರೋ ಶವಗಳು ಅದ್ರಲ್ಲಿರೋ ಮಾಂಸ. ಆದ್ರೆ ನೀವು ಈ ಪಟ್ಟಣದಲ್ಲಿ ಇರಲ್ಲ, ನಿಮ್ಮನ್ನ ಇಲ್ಲಿಂದ ಎಳ್ಕೊಂಡು ಹೋಗ್ತಾರೆ.”
8 “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವು ಕತ್ತಿಗೆ ಹೆದರಿದ್ರಲ್ಲಾ,+ ಅದೇ ಕತ್ತಿಯನ್ನ ನಾನು ನಿಮ್ಮ ವಿರುದ್ಧ ತರ್ತಿನಿ. 9 ನಿಮ್ಮನ್ನ ಪಟ್ಟಣದಿಂದ ಹೊರಗೆ ಕರ್ಕೊಂಡು ಬಂದು ವಿದೇಶಿಯರ ಕೈಗೆ ಕೊಟ್ಟು ಶಿಕ್ಷಿಸ್ತೀನಿ.+ 10 ನೀವು ಕತ್ತಿಯಿಂದ ಸಾಯ್ತೀರ.+ ಇಸ್ರಾಯೇಲಿನ ಗಡಿಯಲ್ಲಿ ನಾನು ನಿಮಗೆ ತೀರ್ಪು ಕೊಟ್ಟು ಶಿಕ್ಷಿಸ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 11 ಈ ಪಟ್ಟಣ ನಿಮಗೆ ಅಡುಗೆ ಪಾತ್ರೆ ತರ ಇರಲ್ಲ, ನೀವು ಅದ್ರೊಳಗಿರೋ ಮಾಂಸದ ತರಾನೂ ಇರಲ್ಲ. ಇಸ್ರಾಯೇಲಿನ ಗಡಿಯಲ್ಲಿ ನಾನು ನಿಮಗೆ ತೀರ್ಪು ಕೊಟ್ಟು ಶಿಕ್ಷೆ ಕೊಡ್ತೀನಿ. 12 ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ನೀವು ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನಾನು ಕೊಟ್ಟ ತೀರ್ಪುಗಳನ್ನ ಪಾಲಿಸಲಿಲ್ಲ.+ ಅದಕ್ಕೆ ಬದ್ಲಾಗಿ ನಿಮ್ಮ ಸುತ್ತ ಇರೋ ಜನಾಂಗಗಳ ಆಚಾರ-ವಿಚಾರಗಳನ್ನ ಮಾಡಿದ್ರಿ.’”+
13 ನಾನು ಭವಿಷ್ಯ ಹೇಳಿದ ತಕ್ಷಣ ಬೆನಾಯನ ಮಗ ಪೆಲಟ್ಯ ಸತ್ತುಹೋದ. ಆಗ ನಾನು ಅಡ್ಡಬಿದ್ದು ಜೋರಾಗಿ ಕೂಗ್ತಾ “ಅಯ್ಯೋ! ವಿಶ್ವದ ರಾಜ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದಿರೋ ಜನ್ರನ್ನ ನಾಶ ಮಾಡಿಬಿಡ್ತೀಯಾ?”+ ಅಂದೆ.
14 ಯೆಹೋವ ನನಗೆ ಮತ್ತೆ ಹೀಗಂದನು: 15 “ಮನುಷ್ಯಕುಮಾರನೇ, ಯೆರೂಸಲೇಮಲ್ಲಿ ಇರುವವರು ಇಸ್ರಾಯೇಲ್ ಜನ್ರಿಗೆ ಮತ್ತು ನಿನ್ನ ಹತ್ರದ ಸಂಬಂಧಿಗಳಾಗಿರೋ* ನಿನ್ನ ಅಣ್ಣತಮ್ಮಂದಿರಿಗೆ ‘ಯೆಹೋವನಿಂದ ತುಂಬ ದೂರ ಇರಿ. ಈ ದೇಶ ನಮ್ಮದು, ಇದನ್ನ ನಮ್ಮ ಆಸ್ತಿಯಾಗಿ ಈಗಾಗಲೇ ಕೊಟ್ಟಾಗಿದೆ’ ಅಂತ ಹೇಳಿದ್ದಾರೆ. 16 ಹಾಗಾಗಿ ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಅವ್ರನ್ನ ತುಂಬ ದೂರದ ಜನಾಂಗಗಳಿಗೆ ಕೈದಿಗಳಾಗಿ ಹೋಗೋ ಹಾಗೆ ಮಾಡಿದ್ರೂ ಬೇರೆ ಬೇರೆ ದೇಶಗಳಲ್ಲಿ ಅವ್ರನ್ನ ಚೆಲ್ಲಾಪಿಲ್ಲಿ ಮಾಡಿದ್ರೂ+ ಅವರು ಎಲ್ಲಿದ್ದಾರೋ ಆ ದೇಶಗಳಲ್ಲಿ ಸ್ವಲ್ಪ ಸಮಯಕ್ಕೆ ನಾನು ಅವ್ರಿಗೆ ಪವಿತ್ರ ಸ್ಥಳ ಆಗ್ತೀನಿ.”’+
17 ಹಾಗಾಗಿ ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮನ್ನ ಚೆಲ್ಲಾಪಿಲ್ಲಿ ಮಾಡಿರೋ ಜನಾಂಗಗಳಿಂದ ಮತ್ತು ದೇಶಗಳಿಂದ ನಾನು ನಿಮ್ಮನ್ನ ಒಟ್ಟು ಸೇರಿಸ್ತೀನಿ, ನಿಮಗೆ ಇಸ್ರಾಯೇಲ್ ದೇಶವನ್ನ ಕೊಡ್ತೀನಿ.+ 18 ಅವರು ಅಲ್ಲಿಗೆ ವಾಪಸ್ ಬಂದು ಅಲ್ಲಿರೋ ಅಸಹ್ಯ ವಸ್ತುಗಳನ್ನ ತೆಗೆದುಹಾಕಿ ಅಸಹ್ಯ ಕೆಲಸಗಳನ್ನ ನಿಲ್ಲಿಸಿಬಿಡ್ತಾರೆ.+ 19 ನಾನು ಅವ್ರಿಗೆ ಒಂದೇ ಮನಸ್ಸನ್ನ* ಕೊಡ್ತೀನಿ,+ ಅವ್ರಿಗೆ ಹೊಸ ಸ್ವಭಾವ ಕೊಡ್ತೀನಿ.+ ಅವ್ರ ಕಲ್ಲು ಹೃದಯವನ್ನ ತೆಗೆದುಹಾಕಿ+ ಮೃದು ಹೃದಯವನ್ನ* ಇಡ್ತೀನಿ.+ 20 ಆಗ ಅವರು ನನ್ನ ನಿಯಮಗಳ ಪ್ರಕಾರ ನಡಿತಾರೆ, ನಾನು ಕೊಟ್ಟ ತೀರ್ಪುಗಳನ್ನ ಪಾಲಿಸ್ತಾರೆ. ಆಗ ಅವರು ನನ್ನ ಜನ್ರಾಗಿ ಇರ್ತಾರೆ ಮತ್ತು ನಾನು ಅವ್ರ ದೇವರಾಗಿ ಇರ್ತಿನಿ.”’
21 ‘“ಆದ್ರೆ ಹೇಸಿಗೆ ಹುಟ್ಟಿಸೋ ಅಸಹ್ಯ ಕೆಲಸಗಳನ್ನ ಮುಂದುವರಿಸೋಕೆ ದೃಢಮನಸ್ಸು ಇರುವವರು ತಮ್ಮ ಕೆಲಸಗಳ ಪರಿಣಾಮಗಳನ್ನ ಅನುಭವಿಸೋ ಹಾಗೆ ನಾನು ಮಾಡ್ತೀನಿ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.’”
22 ಇದಾದ್ಮೇಲೆ ಕೆರೂಬಿಯರು ರೆಕ್ಕೆಗಳನ್ನ ಮೇಲೆ ಚಾಚಿದ್ರು. ಚಕ್ರಗಳು ಅವ್ರ ಹತ್ರಾನೇ ಇದ್ವು.+ ಇಸ್ರಾಯೇಲಿನ ದೇವರ ಮಹಿಮೆ ಅವ್ರ ಮೇಲಿತ್ತು.+ 23 ಆಮೇಲೆ ಯೆಹೋವನ ಮಹಿಮೆ+ ಪಟ್ಟಣದಿಂದ ಮೇಲೆ ಹೋಗಿ ಪಟ್ಟಣದ ಪೂರ್ವಕ್ಕಿದ್ದ ಬೆಟ್ಟದ ಮೇಲೆ ನಿಲ್ತು.+ 24 ದೇವರ ಪವಿತ್ರಶಕ್ತಿಯಿಂದ ನನಗೆ ಸಿಕ್ಕ ದರ್ಶನದಲ್ಲಿ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಕಸ್ದೀಯ ದೇಶದಲ್ಲಿ ಕೈದಿಗಳಾಗಿದ್ದ ಜನ್ರ ಹತ್ರ ಕರ್ಕೊಂಡು ಬಂತು. ಅಲ್ಲಿಗೆ ನಾನು ನೋಡ್ತಿದ್ದ ದರ್ಶನ ಮುಗಿತು. 25 ಯೆಹೋವ ನನಗೆ ತೋರಿಸಿದ ಎಲ್ಲ ವಿಷ್ಯಗಳನ್ನ ಅಲ್ಲಿದ್ದ ಕೈದಿಗಳಿಗೆ ನಾನು ಹೇಳಿದೆ.
12 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಯಾರ ಮಧ್ಯ ವಾಸಿಸ್ತಾ ಇದ್ದಿಯೋ ಆ ಜನ್ರು ದಂಗೆಕೋರರು. ಅವರು ಕಣ್ಣಿದ್ರೂ ನೋಡ್ತಿಲ್ಲ, ಕಿವಿಯಿದ್ರೂ ಕೇಳ್ತಿಲ್ಲ.+ ಯಾಕಂದ್ರೆ ಅವರು ದಂಗೆಕೋರ ಜನ್ರು.+ 3 ಮನುಷ್ಯಕುಮಾರನೇ, ನೀನು ಕೈದಿಯಾಗಿ ಹೋಗೋಕೆ ಗಂಟುಮೂಟೆ ಕಟ್ಕೊ. ಹಗಲಲ್ಲಿ ಜನ್ರ ಕಣ್ಮುಂದೆ ಕೈದಿಯಾಗಿ ಹೋಗೋ ತರ ನೀನು ಅಲ್ಲಿಂದ ಹೋಗಬೇಕು. ಅವರು ನೋಡ್ತಾ ಇರುವಾಗ ನೀನು ನಿನ್ನ ಮನೆಯನ್ನ ಬಿಟ್ಟು ಬೇರೆ ಜಾಗಕ್ಕೆ ಹೋಗು. ಅವರು ದಂಗೆಕೋರ ಜನ್ರಾಗಿದ್ರೂ ನಿನ್ನನ್ನ ನೋಡಿ ಅರ್ಥಮಾಡ್ಕೊಬಹುದು. 4 ಕೈದಿಯಾಗಿ ಹೋಗೋಕೆ ನೀನು ಮೂಟೆ ಕಟ್ಟಿರೋ ಸಾಮಾನನ್ನ ಹಗಲಲ್ಲಿ ಅವ್ರ ಕಣ್ಮುಂದೆನೇ ಮನೆಯಿಂದ ಹೊರಗೆ ತಗೊಂಡು ಬಾ. ಸಂಜೆ ಅವರು ನೋಡ್ತಾ ಇರೋವಾಗ ನಿನ್ನನ್ನ ಯಾರೋ ಕೈದಿಯಾಗಿ ಕರ್ಕೊಂಡು ಹೋಗ್ತಿದ್ದಾರೆ ಅನ್ನೋ ತರ ಅಲ್ಲಿಂದ ಹೋಗು.+
5 ನೀನು ಅವ್ರ ಕಣ್ಮುಂದೆ ಗೋಡೆ ಕೊರೆದು ಅದ್ರೊಳಗಿಂದ ನಿನ್ನ ಮೂಟೆನ ಗೋಡೆ ಆಚೆ ತಗೊಂಡು ಬಾ.+ 6 ಕತ್ತಲಾದಾಗ ಅವ್ರ ಮುಂದೆನೇ ನಿನ್ನ ಸಾಮಾನನ್ನ ಹೆಗಲ ಮೇಲೆ ಹೊತ್ಕೊಂಡು ಹೋಗು. ನೆಲ ಕಾಣದ ಹಾಗೆ ನಿನ್ನ ಮುಖ ಮುಚ್ಕೊ. ಯಾಕಂದ್ರೆ ನಾನು ನಿನ್ನನ್ನ ಇಸ್ರಾಯೇಲ್ಯರಿಗೆ ಒಂದು ಗುರುತಾಗಿ ಮಾಡಿದ್ದೀನಿ.”+
7 ಆತನು ಆಜ್ಞೆ ಕೊಟ್ಟ ಹಾಗೇ ನಾನು ಮಾಡ್ದೆ. ಕೈದಿಯಾಗಿ ಹೋಗೋಕೆ ಗಂಟುಮೂಟೆ ತಗೊಳ್ಳೋ ಹಾಗೆ ನಾನು ಹಗಲಲ್ಲಿ ನನ್ನ ಮೂಟೆ ತಗೊಂಡು ಹೊರಗೆ ಬಂದೆ. ಸಂಜೆ ಗೋಡೆಯನ್ನ ಕೈಯಿಂದ ಕೊರೆದೆ. ಕತ್ತಲಾದಾಗ ನನ್ನ ಮೂಟೆಯನ್ನ ಹೊರಗೆ ತಂದು ಅವ್ರ ಕಣ್ಮುಂದೆನೇ ಅದನ್ನ ಹೆಗಲ ಮೇಲೆ ಹೊತ್ಕೊಂಡು ಹೋದೆ.
8 ಬೆಳಿಗ್ಗೆ ಮತ್ತೆ ಯೆಹೋವ ನನಗೆ ಹೀಗಂದನು: 9 “ಮನುಷ್ಯಕುಮಾರನೇ, ದಂಗೆಕೋರ ಇಸ್ರಾಯೇಲ್ಯರು ‘ನೀನು ಏನು ಮಾಡ್ತಿದ್ಯಾ?’ ಅಂತ ನಿನ್ನನ್ನ ಕೇಳಿದ್ರೆ 10 ನೀನು ಅವ್ರಿಗೆ: ‘ಯೆರೂಸಲೇಮಲ್ಲಿರೋ ಪ್ರಧಾನನ+ ಬಗ್ಗೆ ಮತ್ತು ಆ ಪಟ್ಟಣದ ಒಳಗಿರೋ ಎಲ್ಲ ಇಸ್ರಾಯೇಲ್ಯರ ಬಗ್ಗೆ ವಿಶ್ವದ ರಾಜ ಯೆಹೋವ ನನಗೆ ಹೇಳಿದ್ದು ಏನಂದ್ರೆ
11 “ನೀನು ಅವ್ರಿಗೆ ಒಂದು ಗುರುತಾಗಿದ್ದೀಯ.+ ನಾನು ಈಗ ನಿನಗೆ ಏನು ಮಾಡ್ತಿದ್ದಿನೋ ಅದನ್ನೇ ಅವ್ರಿಗೂ ಮಾಡ್ತೀನಿ. ಅವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗ್ತಾರೆ.+ 12 ಅವ್ರ ಪ್ರಧಾನ ತನ್ನ ಸಾಮಾನುಗಳನ್ನ ಹೆಗಲ ಮೇಲೆ ಹೊತ್ಕೊಂಡು ಕತ್ತಲಲ್ಲಿ ಹೋಗ್ತಾನೆ. ಗೋಡೆ ಕೊರೆದು ಒಳಗೆ ಹೋಗಿ ತನ್ನ ಮೂಟೆ ತಗೊಂಡು ಹೊರಗೆ ಹೋಗ್ತಾನೆ.+ ನೆಲವನ್ನ ನೋಡೋಕೆ ಆಗದ ಹಾಗೆ ಅವನು ತನ್ನ ಮುಖವನ್ನ ಮುಚ್ಕೊಳ್ತಾನೆ” ಅಂತ ಹೇಳು. 13 ನಾನು ಅವನನ್ನ ಹಿಡಿಯೋಕೆ ಬಲೆ ಬೀಸ್ತೀನಿ. ಅವನು ಅದ್ರಲ್ಲಿ ಸಿಕ್ಕಿಬೀಳ್ತಾನೆ.+ ಆಮೇಲೆ ನಾನು ಅವನನ್ನ ಬಾಬೆಲಿಗೆ ಅಂದ್ರೆ ಕಸ್ದೀಯರ ದೇಶಕ್ಕೆ ತರ್ತಿನಿ, ಆದ್ರೆ ಅವನು ಆ ದೇಶನ ನೋಡದೇ ಅಲ್ಲೇ ಸಾಯ್ತಾನೆ.+ 14 ಅವನ ಸುತ್ತ ಇರೋ ಎಲ್ರನ್ನ, ಅವನ ಸಹಾಯಕರನ್ನ, ಸೈನಿಕರನ್ನ ನಾನು ಎಲ್ಲ ಕಡೆ ಚೆಲ್ಲಾಪಿಲ್ಲಿ ಮಾಡ್ತೀನಿ.+ ನಾನು ಕತ್ತಿಯನ್ನ ಹೊರಗೆ ತೆಗೆದು ಅವ್ರನ್ನ ಅಟ್ಟಿಸ್ಕೊಂಡು ಹೋಗ್ತೀನಿ.+ 15 ನಾನು ಅವ್ರನ್ನ ಜನಾಂಗಗಳಲ್ಲಿ ಚದರಿಸಿಬಿಟ್ಟಾಗ ಮತ್ತು ಬೇರೆ ಬೇರೆ ದೇಶಗಳಿಗೆ ಓಡಿಸಿಬಿಟ್ಟಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. 16 ಆದ್ರೆ ಅವ್ರಲ್ಲಿ ಸ್ವಲ್ಪ ಜನ್ರನ್ನ ಕತ್ತಿ, ಬರಗಾಲ ಮತ್ತು ಅಂಟುರೋಗದಿಂದ ತಪ್ಪಿಸ್ತೀನಿ. ಇದ್ರಿಂದ ಅವರು ಹೋಗೋ ಜನಾಂಗಗಳಲ್ಲಿ ಅವರು ಮಾಡಿದ ಅಸಹ್ಯ ಕೆಲಸಗಳ ಬಗ್ಗೆ ಹೇಳೋಕೆ ಆಗುತ್ತೆ. ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”
17 ಯೆಹೋವ ಮತ್ತೆ ನನಗೆ 18 “ಮನುಷ್ಯಕುಮಾರನೇ, ನೀನು ನಡುಗ್ತಾ ಊಟ ಮಾಡಬೇಕು ಮತ್ತು ಗಾಬರಿಯಿಂದ ಚಿಂತೆ ಮಾಡ್ತಾ ನೀರು ಕುಡಿಬೇಕು.+ 19 ನೀನು ದೇಶದ ಜನ್ರಿಗೆ ಹೀಗೆ ಹೇಳು: ‘ಯೆರೂಸಲೇಮಲ್ಲಿರೋ ಇಸ್ರಾಯೇಲ್ ದೇಶದ ಜನ್ರ ಬಗ್ಗೆ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಅವರು ನಡುಗ್ತಾ ಊಟ ಮಾಡ್ತಾರೆ, ಭಯದಿಂದ ನೀರು ಕುಡಿತಾರೆ. ಅಲ್ಲಿ ಇರೋರು ಮಾಡಿದ ಹಿಂಸಾಚಾರದಿಂದ+ ಆ ದೇಶ ಪೂರ್ತಿ ಖಾಲಿಖಾಲಿ ಹೊಡಿಯುತ್ತೆ.+ 20 ಜನ್ರಿದ್ದ ಪಟ್ಟಣಗಳು ನಾಶ ಆಗುತ್ತೆ. ದೇಶ ಬಂಜರು ಭೂಮಿ ಆಗುತ್ತೆ.+ ಆಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ”’”+ ಅಂದನು.
21 ಯೆಹೋವ ಮತ್ತೆ ನನಗೆ ಹೀಗಂದನು: 22 “ಮನುಷ್ಯಕುಮಾರನೇ, ಇಸ್ರಾಯೇಲಲ್ಲಿ ಜನ್ರು ಅದೆಂಥ ಗಾದೆ ಹೇಳ್ತಿದ್ದಾರೆ? ‘ದಿನಗಳು ಓಡ್ತಿವೆ, ಆದ್ರೆ ಒಂದು ದರ್ಶನನೂ ನಿಜ ಆಗ್ತಿಲ್ಲ’ ಅಂತಿದ್ದಾರಲ್ಲಾ!+ 23 ಹಾಗಾಗಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ: “ಈ ಗಾದೆ ಜನ್ರ ಬಾಯಲ್ಲಿ ಬರದ ಹಾಗೆ ನಾನು ಮಾಡ್ತೀನಿ. ಇಸ್ರಾಯೇಲಲ್ಲಿ ಇನ್ಮುಂದೆ ಅವರು ಆ ಗಾದೆ ಹೇಳಲ್ಲ”’ ಅಂತ ಹೇಳು. ಅಲ್ಲದೆ, ‘ಆ ದಿನಗಳು ಹತ್ತಿರ ಆಗಿವೆ,+ ಎಲ್ಲ ದರ್ಶನಗಳು ನಿಜ ಆಗುತ್ತೆ’ ಅಂತ ಅವ್ರಿಗೆ ಹೇಳು. 24 ಇನ್ಮುಂದೆ ಯಾರಿಗೂ ಸುಳ್ಳು ದರ್ಶನ ಆಗಲ್ಲ, ಬೇರೆಯವ್ರಿಗೆ ಹಿಡಿಸೋ ಹಾಗೆ* ಕಣಿ ಹೇಳೋರು ಯಾರೂ ಇಸ್ರಾಯೇಲ್ಯರಲ್ಲಿ ಇರಲ್ಲ.+ 25 ‘ಯಾಕಂದ್ರೆ ಯೆಹೋವನಾದ ನಾನೇ ಮಾತಾಡ್ತೀನಿ, ನಾನು ಏನು ಹೇಳ್ತೀನೋ ಅದು ನಡೆದೇ ನಡಿಯುತ್ತೆ, ತಡ ಆಗಲ್ಲ.+ ದಂಗೆಕೋರ ಜನ್ರೇ ನೀವು ಬದುಕಿರುವಾಗ್ಲೇ+ ನನ್ನ ಮಾತನ್ನ ಹೇಳ್ತೀನಿ ಮತ್ತು ನೀವು ಬದುಕಿರುವಾಗ್ಲೇ ಅದನ್ನ ನಿಜಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
26 ಯೆಹೋವ ನನಗೆ ಮತ್ತೆ 27 “ಮನುಷ್ಯಕುಮಾರನೇ ಇಸ್ರಾಯೇಲ್ಯರು, ‘ಇವನು ನೋಡೋ ದರ್ಶನ ನಮ್ಮ ಕಾಲದಲ್ಲಂತೂ ನಿಜ ಆಗಲ್ಲ, ಇವನು ಮುಂದೆ ಯಾವತ್ತೋ ಆಗೋದ್ರ ಬಗ್ಗೆ ಭವಿಷ್ಯ ಹೇಳ್ತಿದ್ದಾನೆ’+ ಅಂತ ಹೇಳ್ತಿದ್ದಾರೆ. 28 ಹಾಗಾಗಿ ನೀನು ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗನ್ನುತ್ತಾನೆ: “ನಾನು ಹೇಳೋ ಒಂದೊಂದು ಮಾತೂ ಬೇಗ ನಿಜ ಆಗುತ್ತೆ, ನಾನು ಏನೇ ಹೇಳಿದ್ರೂ ಅದು ನಡೆದೇ ನಡಿಯುತ್ತೆ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ’ ಅಂತ ಹೇಳು.”
13 ಆಮೇಲೆ ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲಿನ ಪ್ರವಾದಿಗಳ ವಿರುದ್ಧ ಭವಿಷ್ಯ ಹೇಳು,+ ಅವ್ರೇ ಕಥೆ ಕಟ್ಕೊಂಡು ಭವಿಷ್ಯ ಹೇಳುವವರಿಗೆ+ ಹೀಗೆ ಹೇಳು: ‘ಯೆಹೋವನ ಮಾತನ್ನ ಕೇಳಿ. 3 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಯಾವ ದರ್ಶನ ನೋಡದಿದ್ರು ಮನಸ್ಸಿಗೆ ಬಂದ ಹಾಗೆ ಭವಿಷ್ಯ ಹೇಳೋ ಮೂರ್ಖ ಪ್ರವಾದಿಗಳ ಗತಿಯನ್ನ ಏನಂತ ಹೇಳಲಿ!+ 4 ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಬಿದ್ದಿರೋ ಪ್ರದೇಶದ ನರಿಗಳ ತರ ಆಗಿದ್ದಾರೆ. 5 ಪ್ರವಾದಿಗಳೇ, ನೀವು ಕಲ್ಲಿನ ಗೋಡೆಗಳಲ್ಲಿ ಒಡೆದಿರೋ ಭಾಗಗಳನ್ನ ಇಸ್ರಾಯೇಲ್ ಜನ್ರಿಗೋಸ್ಕರ ಸರಿಮಾಡೋಕೆ ಅದ್ರ ಹತ್ರ ಹೋಗಲ್ಲ.+ ಹಾಗಾಗಿ ಯೆಹೋವನ ದಿನದಲ್ಲಿ ಆಗೋ ಯುದ್ಧದಲ್ಲಿ ಇಸ್ರಾಯೇಲ್ಯರು ಬದುಕಿ ಉಳಿಯಲ್ಲ.”+ 6 “ಅವರು ನೋಡಿದ ದರ್ಶನಗಳೂ ಸುಳ್ಳು, ಅವರು ಹೇಳಿದ ಭವಿಷ್ಯನೂ ಸುಳ್ಳು. ಯೆಹೋವನಾದ ನಾನು ಅವ್ರನ್ನ ಕಳಿಸಿಲ್ಲಾಂದ್ರೂ ‘ಇದು ಯೆಹೋವ ಹೇಳಿದ ಮಾತು’ ಅಂತ ಅವರು ಹೇಳ್ತಿದ್ದಾರೆ. ಅಷ್ಟೇ ಅಲ್ಲ ಅವರು ಹೇಳಿದ ಭವಿಷ್ಯ ನಿಜ ಆಗೋಕೆ ಕಾಯ್ತಿದ್ದಾರೆ.+ 7 ನಾನು ಏನೂ ಹೇಳಿಲ್ಲ ಅಂದ್ರೂ ‘ಇದು ಯೆಹೋವ ಹೇಳಿದ ಮಾತು’ ಅಂತ ನೀವು ಹೇಳ್ತಾ ಇದ್ದೀರಲ್ಲಾ, ನೀವು ನೋಡಿದ ದರ್ಶನ ಮತ್ತು ಹೇಳಿದ ಭವಿಷ್ಯ ಸುಳ್ಳು ಅಲ್ವಾ?’”
8 ‘ಹಾಗಾಗಿ ವಿಶ್ವದ ರಾಜ ಯೆಹೋವನು ಹೀಗಂತಾನೆ: “‘ನೀವು ಸುಳ್ಳು ಹೇಳಿದ್ರಿಂದ ಮತ್ತು ನಿಮ್ಮ ದರ್ಶನಗಳು ಸುಳ್ಳಾಗಿದ್ರಿಂದ ನಾನು ನಿಮಗೆ ವಿರುದ್ಧವಾಗಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”+ 9 ಸುಳ್ಳು ದರ್ಶನಗಳನ್ನ ನೋಡ್ತಿರೋ, ಸುಳ್ಳು ಭವಿಷ್ಯ ಹೇಳ್ತಿರೋ ಪ್ರವಾದಿಗಳ ವಿರುದ್ಧ ನಾನು ಕೈಚಾಚಿ ಅವ್ರನ್ನ ಶಿಕ್ಷಿಸ್ತೀನಿ.+ ಅವರು ನನ್ನ ಸ್ನೇಹಿತರಾಗಿ ಇರಲ್ಲ. ಇಸ್ರಾಯೇಲ್ಯರ ದಾಖಲೆ ಪುಸ್ತಕದಲ್ಲಿ ಅವ್ರ ಹೆಸ್ರೂ ಇರಲ್ಲ. ಅವರು ಇಸ್ರಾಯೇಲಿಗೆ ವಾಪಸ್ ಹೋಗೋದೂ ಇಲ್ಲ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 10 ಶಾಂತಿ ಇಲ್ಲ ಅಂದ್ರೂ “ಶಾಂತಿ ಇದೆ!” ಅಂತ ಹೇಳ್ತಾ ನನ್ನ ಜನ್ರನ್ನ ದಾರಿ ತಪ್ಪಿಸಿದ್ರಿಂದಾನೇ ಇದೆಲ್ಲ ನಡಿಯುತ್ತೆ.+ ಒದ್ದರೆ ಬಿದ್ದುಹೋಗೋ ಗೋಡೆಗೆ ಅವರು ಸುಣ್ಣ ಬಳೀತಿದ್ದಾರೆ.’*+
11 ಸುಣ್ಣ ಬಳಿಯೋರಿಗೆ ಆ ಗೋಡೆ ಬಿದ್ದು ಹೋಗುತ್ತೆ ಅಂತ ಹೇಳು. ಜೋರಾಗಿ ಸುರಿಯೋ ಮಳೆ, ಆಲಿಕಲ್ಲು ಮತ್ತು ಬೀಸೋ ಬಿರುಗಾಳಿ ಆ ಗೋಡೆಯನ್ನ ಬೀಳಿಸುತ್ತೆ.+ 12 ಗೋಡೆ ಬಿದ್ದಾಗ ‘ನೀವು ಬಳಿದ ಸುಣ್ಣ ಎಲ್ಲಿ ಹೋಯ್ತು?’+ ಅಂತ ಜನ ನಿಮ್ಮನ್ನ ಕೇಳ್ತಾರೆ.
13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ತುಂಬ ಕೋಪದಿಂದ ಬಿರುಗಾಳಿಗಳು ಬೀಸೋ ಹಾಗೆ ಮಾಡ್ತೀನಿ. ಸಿಟ್ಟಿಂದ ಧಾರಾಕಾರ ಮಳೆ ಸುರಿಸ್ತೀನಿ. ರೋಷದಿಂದ ಆಲಿಕಲ್ಲುಗಳನ್ನ ಸುರಿಸಿ ಆ ಗೋಡೆಯನ್ನ ನಾಶಮಾಡ್ತೀನಿ. 14 ನೀವು ಸುಣ್ಣ ಬಳಿದ ಗೋಡೆಯನ್ನ ನಾನು ಕೆಡವಿ ನೆಲಸಮ ಮಾಡ್ತೀನಿ. ಆಗ ಅದ್ರ ಅಡಿಪಾಯ ಕಾಣಿಸುತ್ತೆ. ಪಟ್ಟಣ ಬಿದ್ದು ಹೋಗುವಾಗ ನೀವೂ ಅದ್ರ ಜೊತೆ ನಾಶ ಆಗ್ತೀರ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’
15 ‘ನಾನು ಗೋಡೆ ಮೇಲೆ ಮತ್ತು ಅದಕ್ಕೆ ಸುಣ್ಣ ಬಳಿಯೋರ ಮೇಲೆ ನನ್ನ ಕೋಪಾಗ್ನಿಯನ್ನ ಸುರಿಸಿದ ಮೇಲೆ “ಗೋಡೆನೂ ಇಲ್ಲ, ಅದಕ್ಕೆ ಸುಣ್ಣ ಬಳಿದವ್ರೂ ಇಲ್ಲ.+ 16 ಯೆರೂಸಲೇಮಿನ ಬಗ್ಗೆ ಭವಿಷ್ಯ ಹೇಳ್ತಿದ್ದ ಮತ್ತು ಪಟ್ಟಣದಲ್ಲಿ ಶಾಂತಿ ಇಲ್ಲದಿದ್ರೂ ಶಾಂತಿ ಬರುತ್ತೆ ಅಂತ ದರ್ಶನಗಳನ್ನ ನೋಡ್ತಿದ್ದ ಇಸ್ರಾಯೇಲಿನ ಪ್ರವಾದಿಗಳು ನಾಶ ಆಗಿದ್ದಾರೆ”+ ಅಂತ ಹೇಳ್ತೀನಿ.’ ಇದು ವಿಶ್ವದ ರಾಜ ಯೆಹೋವನ ಮಾತು.
17 ಮನುಷ್ಯಕುಮಾರನೇ, ಈಗ ನೀನು ನಿನ್ನ ಜನ್ರಲ್ಲಿ ಕಥೆ ಕಟ್ಕೊಂಡು ಭವಿಷ್ಯ ಹೇಳೋ ಹೆಂಗಸರ ಕಡೆ ಮುಖಮಾಡಿ ಅವ್ರ ವಿರುದ್ಧ ಭವಿಷ್ಯ ಹೇಳು. 18 ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಜನ್ರ ಜೀವವನ್ನ ಬೇಟೆ ಆಡೋಕೆ ಅವ್ರೆಲ್ಲರ ಕೈಗಳಿಗೆ ಪಟ್ಟಿಗಳನ್ನ* ಹೊಲಿಯೋ ಮತ್ತು ಒಬ್ಬೊಬ್ಬರ ಎತ್ತರಕ್ಕೆ ತಕ್ಕ ಹಾಗೆ ತಲೆಮುಸುಕುಗಳನ್ನ ಹೊಲಿಯೋ ಸ್ತ್ರೀಯರಿಗೆ ಬರೋ ಗತಿಯನ್ನ ಏನಂತ ಹೇಳಲಿ! ನೀವು ನನ್ನ ಜನ್ರ ಪ್ರಾಣಗಳನ್ನ ಬೇಟೆ ಆಡ್ತಾ ನಿಮ್ಮ ಪ್ರಾಣಗಳನ್ನ ಉಳಿಸ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದೀರಾ? 19 ನಿಮ್ಮ ಸುಳ್ಳುಗಳನ್ನ ಕೇಳೋ ನನ್ನ ಜನ್ರಿಗೆ ಸುಳ್ಳು ಹೇಳಿ ಬದುಕಬೇಕಾದವ್ರನ್ನ ಸಾಯಿಸಿ, ಸಾಯಬೇಕಾದವ್ರನ್ನ ಬದುಕಿಸಿ ನನ್ನ ಹೆಸ್ರು ಹಾಳು ಮಾಡ್ತೀರಾ?+ ಒಂದು ಹಿಡಿ ಬಾರ್ಲಿಗಾಗಿ ಮತ್ತು ತುಂಡು ರೊಟ್ಟಿಗಾಗಿ ನನ್ನ ಜನ್ರ ಮಧ್ಯ ನನಗೆ ಅವಮಾನ ಮಾಡ್ತೀರಾ?”’+
20 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೆಂಗಸರೇ, ಪಕ್ಷಿಗಳ ತರ ಜನ್ರನ್ನ ಬೇಟೆ ಆಡೋಕೆ ನೀವು ಬಳಸೋ ಪಟ್ಟಿಗಳನ್ನ ನಾನು ದ್ವೇಷಿಸ್ತೀನಿ. ಅವನ್ನ ನಿಮ್ಮ ಕೈಯಿಂದ ಕಿತ್ತು ಹಾಕ್ತೀನಿ ಮತ್ತು ನೀವು ಬೇಟೆ ಆಡ್ತಿರೋ ಪಕ್ಷಿಗಳ ತರ ಇರೋ ಜನ್ರನ್ನ ನಾನು ಬಿಡಿಸ್ತೀನಿ. 21 ನಿಮ್ಮ ಮುಸುಕನ್ನ ಕಿತ್ತು ಎಸಿತೀನಿ ಮತ್ತು ನನ್ನ ಜನ್ರನ್ನ ನಿಮ್ಮ ಕೈಯಿಂದ ಬಿಡಿಸಿ ಕಾಪಾಡ್ತೀನಿ. ಅದಾದ್ಮೇಲೆ ನೀವು ಅವ್ರನ್ನ ಬೇಟೆಯಾಡಿ ಹಿಡಿಯೋಕೆ ಆಗಲ್ಲ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 22 ನೀತಿವಂತ ಕಷ್ಟಪಡೋ* ತರ ಮಾಡೋಕೆ ನನಗೆ ಇಷ್ಟ ಇಲ್ಲ ಅಂದ್ರೂ ನೀವು ಸುಳ್ಳು ಹೇಳಿ ಅವನು ಧೈರ್ಯ ಕಳ್ಕೊಳ್ಳೋ ತರ ಮಾಡಿದ್ದೀರ.+ ಕೆಟ್ಟವನಿಗೆ ಕುಮ್ಮಕ್ಕು ಕೊಟ್ಟಿದ್ದೀರ.+ ಹಾಗಾಗಿ ಅವನು ತನ್ನ ಕೆಟ್ಟತನವನ್ನ ಬಿಡಲಿಲ್ಲ. ಇದ್ರಿಂದ ಅವನು ಪ್ರಾಣ ಕಳ್ಕೊಳ್ತಾನೆ.+ 23 ಹಾಗಾಗಿ ಹೆಂಗಸರೇ, ನೀವು ಇನ್ಮುಂದೆ ಸುಳ್ಳು ದರ್ಶನಗಳನ್ನ ನೋಡೋಕೆ, ಕಣಿ ಹೇಳೋಕೆ ಆಗಲ್ಲ.+ ನಾನು ನನ್ನ ಜನ್ರನ್ನ ನಿಮ್ಮ ಕೈಯಿಂದ ಬಿಡಿಸಿ ಕಾಪಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”
14 ಇಸ್ರಾಯೇಲಿನ ಕೆಲವು ಹಿರಿಯರು ಬಂದು ನನ್ನ ಮುಂದೆ ಕೂತ್ಕೊಂಡ್ರು.+ 2 ಆಗ ಯೆಹೋವ ನನಗೆ ಹೀಗಂದನು: 3 “ಮನುಷ್ಯಕುಮಾರನೇ, ಈ ಗಂಡಸರು ಅಸಹ್ಯ ಮೂರ್ತಿಗಳನ್ನ* ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡಿದ್ದಾರೆ ಮತ್ತು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದೆ ಇಟ್ಟಿದ್ದಾರೆ. ಹೀಗಿದ್ದ ಮೇಲೆ ನನ್ನ ಇಷ್ಟ ಏನಂತ ತಿಳಿಯೋಕೆ ಬಂದಿರೋ ಇವ್ರಿಗೆ ನಾನ್ಯಾಕೆ ಉತ್ತರ ಕೊಡ್ಲಿ?+ 4 ನೀನೀಗ ಅವ್ರಿಗೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಒಬ್ಬ ಇಸ್ರಾಯೇಲ್ಯನು ಅವನ ಅಸಹ್ಯ ಮೂರ್ತಿಗಳನ್ನೇ ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದೆ ಇಟ್ಟು ಆಮೇಲೆ ಒಬ್ಬ ಪ್ರವಾದಿ ಹತ್ರ ಬಂದು ನನ್ನ ಇಷ್ಟ ಏನಂತ ವಿಚಾರಿಸಿದ್ರೆ ನಾನು ಹೀಗೆ ಮಾಡ್ತೀನಿ: ಆ ಇಸ್ರಾಯೇಲ್ಯನ ಹತ್ರ ಎಷ್ಟು ಅಸಹ್ಯ ಮೂರ್ತಿಗಳು ಇವೆಯೋ ಯೆಹೋವನಾದ ನಾನು ಅವನಿಗೆ ಅಷ್ಟೇ ಶಿಕ್ಷೆ ಕೊಡ್ತೀನಿ. 5 ಇಸ್ರಾಯೇಲ್ಯರ ಹೃದಯದಲ್ಲಿ ಭಯ ಹುಟ್ಟಿಸ್ತೀನಿ. ಯಾಕಂದ್ರೆ ಅವ್ರೆಲ್ಲ ನನ್ನನ್ನ ಬಿಟ್ಟು ಅಸಹ್ಯ ಮೂರ್ತಿಗಳ ಹಿಂದೆ ಹೋಗಿದ್ದಾರೆ”+ ಅಂತ ಹೇಳು.’
6 ಹಾಗಾಗಿ ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮ ಅಸಹ್ಯ ಮೂರ್ತಿಗಳನ್ನ ಬಿಟ್ಟು ನನ್ನ ಹತ್ರ ವಾಪಸ್ ಬನ್ನಿ ಮತ್ತು ನಿಮ್ಮ ಅಸಹ್ಯ ಕೆಲಸಗಳನ್ನೆಲ್ಲ ಬಿಟ್ಟುಬಿಡಿ.+ 7 ಒಬ್ಬ ಇಸ್ರಾಯೇಲ್ಯನು ಅಥವಾ ಇಸ್ರಾಯೇಲಿನಲ್ಲಿ ಇರೋ ವಿದೇಶಿ ನನ್ನಿಂದ ದೂರ ಹೋಗಿ ಅವನ ಅಸಹ್ಯ ಮೂರ್ತಿಗಳನ್ನೇ ಆರಾಧಿಸೋಕೆ ಗಟ್ಟಿ ಮನಸ್ಸು ಮಾಡ್ಕೊಂಡಿದ್ರೆ ಮತ್ತು ಜನ್ರನ್ನ ಪಾಪಕ್ಕೆ ನಡಿಸೋ ಎಡವುಗಲ್ಲನ್ನ ಅವ್ರ ಮುಂದಿಟ್ಟು ಆಮೇಲೆ ನನ್ನ ಪ್ರವಾದಿ ಹತ್ರ ಬಂದು ನನ್ನ ಇಷ್ಟ ಏನಂತ ವಿಚಾರಿಸಿದ್ರೆ+ ಯೆಹೋವನಾದ ನಾನು, ಹೌದು ನಾನೇ ಅವನಿಗೆ ಉತ್ತರ ಕೊಡ್ತೀನಿ. 8 ನಾನು ಅವನನ್ನ ವಿರೋಧಿಸ್ತೀನಿ. ಅವನನ್ನ ಎಚ್ಚರಿಕೆಯ ಉದಾಹರಣೆಯಾಗಿ, ಗಾದೆ ಮಾತಾಗಿ ಮಾಡ್ತೀನಿ. ಅವನು ನನ್ನ ಜನ್ರ ಮಧ್ಯ ಇರದ ಹಾಗೆ ಅವನನ್ನ ನಾಶ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’
9 ‘ಆದ್ರೆ ಆ ಪ್ರವಾದಿ ಮೋಸಹೋಗಿ ಅವನ ಹತ್ರ ವಿಚಾರಿಸೋಕೆ ಬಂದವನಿಗೆ ಏನಾದ್ರೂ ಉತ್ತರ ಕೊಟ್ರೆ ಆ ಪ್ರವಾದಿಯನ್ನ ಮೂರ್ಖನಾಗಿ ಮಾಡಿದ್ದು ಯೆಹೋವನಾದ ನಾನೇ.+ ನಾನಾಗ ಅವನ ವಿರುದ್ಧ ಕೈಚಾಚಿ ನನ್ನ ಜನ್ರಾದ ಇಸ್ರಾಯೇಲ್ಯರಲ್ಲಿ ಇರದ ಹಾಗೆ ಅವನನ್ನ ನಾಶಮಾಡ್ತೀನಿ. 10 ಪ್ರವಾದಿ ಅಪರಾಧಿ ಆದ ಹಾಗೇ ವಿಚಾರಿಸೋಕೆ ಬಂದವನೂ ಅಪರಾಧಿ ಆಗಿದ್ದಾನೆ. ಆ ಪ್ರವಾದಿ ಮತ್ತು ಅವನನ್ನ ವಿಚಾರಿಸೋಕೆ ಬಂದವನು, ಇಬ್ರೂ ತಮ್ಮ ತಪ್ಪಿನ ಪರಿಣಾಮಗಳನ್ನ ಅನುಭವಿಸಲೇಬೇಕು. 11 ಹೀಗಾದ್ರೆ ಇಸ್ರಾಯೇಲ್ಯರು ನನ್ನನ್ನ ಬಿಟ್ಟು ಅಲ್ಲಿ ಇಲ್ಲಿ ಅಲೆದಾಡೋದನ್ನ ಮತ್ತು ಅಪರಾಧಗಳನ್ನ ಮಾಡಿ ಅಶುದ್ಧರಾಗೋದನ್ನ ಬಿಟ್ಟುಬಿಡಬಹುದು. ಆಗ ಅವರು ನನ್ನ ಜನ್ರಾಗಿ ಇರ್ತಾರೆ ಮತ್ತು ನಾನು ಅವ್ರ ದೇವರಾಗಿ ಇರ್ತಿನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
12 ಯೆಹೋವ ಮತ್ತೆ ನನಗೆ 13 “ಮನುಷ್ಯಕುಮಾರನೇ, ಒಂದುವೇಳೆ ಒಂದು ದೇಶ ನಂಬಿಕೆ ದ್ರೋಹ ಮಾಡಿ ನನ್ನ ವಿರುದ್ಧ ಪಾಪ ಮಾಡಿದ್ರೆ ನಾನು ಅದ್ರ ವಿರುದ್ಧ ಕೈಚಾಚಿ ಅದಕ್ಕೆ ಆಹಾರ ಬರೋದನ್ನ ನಿಲ್ಲಿಸಿ ನಾಶ ಮಾಡಿಬಿಡ್ತೀನಿ.*+ ಆ ದೇಶದಲ್ಲಿ ಬರಗಾಲ ತರ್ತಿನಿ+ ಮತ್ತು ಅಲ್ಲಿರೋ ಮನುಷ್ಯರನ್ನ ಪ್ರಾಣಿಗಳನ್ನ ಸಾಯಿಸ್ತೀನಿ.”+ 14 “‘ಆ ದೇಶದಲ್ಲಿ ನೋಹ,+ ದಾನಿಯೇಲ,+ ಯೋಬ+ ಈ ಮೂರು ಜನ ಇದ್ದಿದ್ರೂ ಅವರು ನೀತಿವಂತರಾಗಿ ಇದ್ದಿದ್ರಿಂದ ತಮ್ಮನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
15 “‘ಅಥವಾ ನಾನು ದೇಶದಲ್ಲಿ ಕ್ರೂರ ಪ್ರಾಣಿಗಳು ಬರೋ ಹಾಗೆ ಮಾಡಿದ್ರೆ ಅವು ಎಲ್ಲ ಕಡೆ ತಿರುಗಾಡಿ ದೇಶದಲ್ಲಿ ಜನ್ರೇ ಇಲ್ಲದ ಹಾಗೆ ಮಾಡಿ ಹಾಳುಮಾಡ್ತವೆ. ಜನ್ರು ಕಾಡುಪ್ರಾಣಿಗಳಿಗೆ ಹೆದರೋದ್ರಿಂದ ಯಾರೂ ಹೊರಗೆ ಬರಲ್ಲ.+ 16 ನನ್ನಾಣೆ, ಆ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ಅವ್ರನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು ಮತ್ತು ಆ ದೇಶ ಖಾಲಿಖಾಲಿ ಹೊಡಿತಿತ್ತು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
17 “‘ಅಥವಾ ನಾನು ಆ ದೇಶದ ವಿರುದ್ಧ ಕತ್ತಿ ಕಳಿಸಿ+ “ಕತ್ತಿ ದೇಶದಲ್ಲೆಲ್ಲಾ ಹೋಗ್ಲಿ” ಅಂತ ಹೇಳಿ, ಆ ದೇಶದಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ಕೊಂದ್ರೆ+ 18 ನನ್ನಾಣೆ, ಆ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ಅವ್ರನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
19 “‘ಅಥವಾ ಒಂದುವೇಳೆ ನಾನು ಆ ದೇಶದಲ್ಲಿ ಅಂಟುರೋಗ ತಂದು+ ಆ ದೇಶದ ಮೇಲೆ ನನ್ನ ಕೋಪ ಸುರಿಸಿ ಮನುಷ್ಯರನ್ನೂ ಪ್ರಾಣಿಗಳನ್ನೂ ಕೊಂದು ರಕ್ತಕೋಡಿ ಹರಿಸಿದ್ರೆ 20 ನನ್ನಾಣೆ, ನೋಹ,+ ದಾನಿಯೇಲ,+ ಯೋಬ+ ಈ ಮೂರು ಜನ ಆ ದೇಶದಲ್ಲಿ ಇದ್ದಿದ್ರೂ ಅವರು ತಮ್ಮ ಮಕ್ಕಳನ್ನ ಕಾಪಾಡೋಕೆ ಆಗ್ತಿರಲಿಲ್ಲ. ಅವರು ನೀತಿವಂತರಾಗಿ ಇರೋದ್ರಿಂದ ಅವರು ತಮ್ಮನ್ನ ಮಾತ್ರ ಕಾಪಾಡ್ಕೊಳ್ಳೋಕೆ ಆಗ್ತಿತ್ತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
21 “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಯೆರೂಸಲೇಮಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡೋಕೆ+ ಕತ್ತಿ, ಬರಗಾಲ, ಕ್ರೂರ ಕಾಡುಪ್ರಾಣಿಗಳು ಮತ್ತು ಅಂಟುರೋಗ+ ಅನ್ನೋ ನಾಲ್ಕು ಶಿಕ್ಷೆಗಳನ್ನ+ ತಂದಾಗ ಅಲ್ಲಿ ಇದೇ ಪರಿಸ್ಥಿತಿ ಬರುತ್ತೆ. 22 ಆದ್ರೂ ಅಲ್ಲಿ ಉಳಿದ ಸ್ವಲ್ಪ ಜನ ತಪ್ಪಿಸ್ಕೊಳ್ತಾರೆ. ಅವ್ರ ಜೊತೆ ಅವ್ರ ಮಕ್ಕಳೂ ಇರ್ತಾರೆ. ಅವ್ರೆಲ್ಲ ಅಲ್ಲಿಂದ ಹೊರಗೆ ಬರ್ತಾರೆ.+ ಅವರು ನಿಮ್ಮ ಹತ್ರ ಬರ್ತಾರೆ. ಅವ್ರ ನಡತೆ, ಅವ್ರ ಕೆಲಸಗಳನ್ನ ನೀವು ನೋಡಿದಾಗ ನಾನು ಯೆರೂಸಲೇಮಿನ ಮೇಲೆ ಕಷ್ಟ ತಂದಿದ್ದು ಮತ್ತು ಆ ಪಟ್ಟಣಕ್ಕೆ ನಾನು ಹೀಗೆಲ್ಲ ಮಾಡಿದ್ದು ನ್ಯಾಯವಾಗೇ ಇತ್ತು ಅಂತ ಗೊತ್ತಾದಾಗ ನಿಮಗೆ ಸಮಾಧಾನ ಆಗುತ್ತೆ.’”
23 “‘ನೀವು ಅವ್ರ ನಡತೆ ಅವ್ರ ಕೆಲಸಗಳನ್ನ ನೋಡಿದಾಗ ನಾನು ಸುಮ್ಮಸುಮ್ನೆ ಅವ್ರ ಮೇಲೆ ಕಷ್ಟ ತರಲಿಲ್ಲ, ಬದಲಿಗೆ ನಾನು ಹಾಗೆ ಮಾಡಿದ್ದು ಸರಿ ಅಂತ ನಿಮಗೆ ಅರ್ಥ ಆಗುತ್ತೆ, ಆಗ ನಿಮಗೆ ಸಮಾಧಾನ ಆಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
15 ಯೆಹೋವ ನನಗೆ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ಕಾಡು ದ್ರಾಕ್ಷಿಬಳ್ಳಿಯ ಕಟ್ಟಿಗೆ ಕಾಡಲ್ಲಿರೋ ಬೇರೆ ಮರಗಳಿಗಿಂತ ಅಥವಾ ಮರಗಳ ಕೊಂಬೆಗಿಂತ ಶ್ರೇಷ್ಠವಾಗಿರುತ್ತಾ? 3 ಅದ್ರಿಂದ ಮಾಡಿದ ಕೋಲು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ? ಪಾತ್ರೆಗಳನ್ನ ನೇತುಹಾಕೋಕೆ ಜನ್ರು ಅದ್ರಿಂದ ಗೂಟ ಮಾಡ್ತಾರಾ? 4 ಅದನ್ನ ಸೌದೆಯಾಗಿ ಉರಿಸ್ತಾರೆ ಅಷ್ಟೇ. ಅದನ್ನ ಬೆಂಕಿಗೆ ಹಾಕಿದಾಗ ಅದ್ರ ಎರಡೂ ಕೊನೆ ಸುಟ್ಟುಹೋಗುತ್ತೆ, ಮಧ್ಯಭಾಗ ಇದ್ದಿಲಾಗುತ್ತೆ. ಆಗ ಅದು ಯಾವುದಕ್ಕಾದ್ರೂ ಉಪಯೋಗಕ್ಕೆ ಬರುತ್ತಾ? 5 ಬೆಂಕಿಗೆ ಹಾಕೋದಕ್ಕೆ ಮುಂಚೆನೇ ಅದ್ರಿಂದ ಏನೂ ಪ್ರಯೋಜನ ಇರಲಿಲ್ಲ ಅಂದ್ಮೇಲೆ ಬೆಂಕಿಯಲ್ಲಿ ಸುಟ್ಟ ಮೇಲೆ ಅದ್ರಿಂದ ಏನಾದ್ರೂ ಪ್ರಯೋಜನ ಇದ್ಯಾ?”
6 “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಕಾಡಿನ ಮರಗಳಲ್ಲಿ ಸೌದೆಯಾಗಿ ಉರಿಸೋಕೆ ಕೊಟ್ಟಿರೋ ದ್ರಾಕ್ಷಿಬಳ್ಳಿಯ ಕಟ್ಟಿಗೆ ತರ ಯೆರೂಸಲೇಮಿನ ಜನ್ರನ್ನ ನಾಶಮಾಡ್ತೀನಿ.+ 7 ನಾನು ಅವ್ರಿಗೆ ವಿರುದ್ಧವಾಗಿ ಇದ್ದೀನಿ. ಅವರು ಬೆಂಕಿಯಿಂದ ತಪ್ಪಿಸ್ಕೊಂಡಿದ್ದಾರೆ, ಆದ್ರೂ ಬೆಂಕಿ ಅವ್ರನ್ನ ಸುಡುತ್ತೆ. ನಾನು ಅವ್ರಿಗೆ ವಿರುದ್ಧವಾಗಿ ಇರೋವಾಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”+
8 “‘ಅವರು ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ+ ನಾನು ಅವ್ರ ದೇಶದಲ್ಲಿ ಜನ್ರೆ ಇಲ್ಲದ ಹಾಗೆ ಮಾಡ್ತೀನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
16 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಯೆರೂಸಲೇಮಿಗೆ ಅವಳು ಮಾಡಿರೋ ಅಸಹ್ಯ ಕೆಲಸಗಳ ಬಗ್ಗೆ ಹೇಳು.+ 3 ನೀನು ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಯೆರೂಸಲೇಮ್ ಅನ್ನೋಳಿಗೆ ಹೇಳೋದು ಏನಂದ್ರೆ “ನೀನು ಹುಟ್ಟಿದ್ದು ಕಾನಾನ್ಯರ ದೇಶದಲ್ಲಿ. ನಿನ್ನ ಅಪ್ಪ ಅಮೋರಿಯನು,+ ನಿನ್ನ ಅಮ್ಮ ಹಿತ್ತಿಯಳು.+ 4 ನೀನು ಹುಟ್ಟಿದ ದಿನ ಯಾರೂ ನಿನ್ನ ಹೊಕ್ಕಳ ಬಳ್ಳಿಯನ್ನ ಕತ್ತರಿಸಲಿಲ್ಲ. ನಿನ್ನನ್ನ ನೀರಿಂದ ತೊಳಿದು ಶುದ್ಧ ಮಾಡಲಿಲ್ಲ. ನಿನಗೆ ಉಪ್ಪನ್ನ ಸವರಲಿಲ್ಲ. ಬಟ್ಟೆಯಿಂದ ನಿನ್ನನ್ನ ಸುತ್ತಲಿಲ್ಲ. 5 ಇದ್ರಲ್ಲಿ ಒಂದನ್ನೂ ಮಾಡೋ ಕನಿಕರ ಯಾರಿಗೂ ಬರಲಿಲ್ಲ. ನಿನ್ನನ್ನ ನೋಡಿ ಯಾರಿಗೂ ಅಯ್ಯೋ ಪಾಪ ಅನಿಸಲಿಲ್ಲ. ನೀನು ಹುಟ್ಟಿದ ದಿನಾನೇ ಯಾರಿಗೂ ಇಷ್ಟ ಆಗಲಿಲ್ಲ, ಅದಕ್ಕೆ ನಿನ್ನನ್ನ ಬಯಲಲ್ಲಿ ಎಸೆದುಬಿಟ್ರು.
6 ನಾನು ಆ ದಾರಿಯಲ್ಲಿ ಹೋಗ್ತಿದ್ದಾಗ ನಿನ್ನನ್ನ ನೋಡ್ದೆ. ನೀನು ನಿನ್ನ ರಕ್ತದಲ್ಲೇ ಬಿದ್ಕೊಂಡು ಒದ್ದಾಡ್ತಾ ಇದ್ದೆ. ಆಗ, ‘ನೀನು ಬದುಕಿ ಬಾಳು’ ಅಂತ ನಾನು ಹೇಳಿದೆ. ಹೌದು, ನಿನ್ನ ರಕ್ತದಲ್ಲೇ ಬಿದ್ಕೊಂಡಿದ್ದ ನಿನಗೆ ‘ನೀನು ಬದುಕಿ ಬಾಳು’ ಅಂತ ನಾನು ಹೇಳಿದೆ. 7 ಹೊಲದಲ್ಲಿ ಮೊಳಕೆ ಒಡೆಯೋ ಗಿಡಗಳ ತರ ನಾನು ನಿನ್ನ ಸಂಖ್ಯೆಯನ್ನ ಜಾಸ್ತಿ ಮಾಡ್ದೆ. ನೀನು ಬೆಳಿದು ದೊಡ್ಡವಳಾಗಿ ಒಳ್ಳೇ ಆಭರಣಗಳನ್ನ ಹಾಕೊಂಡೆ. ನಿನ್ನ ಸ್ತನಗಳು ಬೆಳೆದ್ವು, ನಿನ್ನ ಕೂದಲು ಉದ್ದ ಆಯ್ತು. ಆದ್ರೂ ನಿನ್ನ ಮೈಮೇಲೆ ಬಟ್ಟೆ ಇರಲಿಲ್ಲ, ನೀನು ಬೆತ್ತಲೆ ಆಗಿದ್ದೆ.”’
8 ‘ನಾನು ಆ ಕಡೆಯಿಂದ ಹೋಗ್ತಿದ್ದಾಗ ನಿನ್ನನ್ನ ನೋಡ್ದೆ. ನೀನು ಪ್ರೀತಿ ಮಾಡೋ ವಯಸ್ಸಿಗೆ ಬಂದಿದ್ದೀಯ ಅಂತ ನನಗೆ ಗೊತ್ತಾಯ್ತು. ಹಾಗಾಗಿ ನಾನು ನನ್ನ ಬಟ್ಟೆಯನ್ನ ನಿನ್ನ ಮೇಲೆ ಹೊದಿಸಿ+ ನಿನ್ನ ಮೈಮುಚ್ಚಿದೆ. ನಾನು ನಿನಗೆ ಮಾತು ಕೊಟ್ಟು ನಿನ್ನ ಜೊತೆ ಒಂದು ಒಪ್ಪಂದ* ಮಾಡ್ಕೊಂಡೆ. ಆಗ ನೀನು ನನ್ನವಳಾದೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 9 ‘ಅಷ್ಟೇ ಅಲ್ಲ, ನಾನು ನಿನ್ನನ್ನ ನೀರಲ್ಲಿ ಸ್ನಾನ ಮಾಡಿಸಿ ನಿನ್ನ ಮೇಲಿದ್ದ ರಕ್ತ ತೊಳಿದೆ, ಎಣ್ಣೆ ಹಚ್ಚಿದೆ.+ 10 ಆಮೇಲೆ ಕಸೂತಿ ಮಾಡಿದ ಬಟ್ಟೆ ಹಾಕಿದೆ. ಒಳ್ಳೇ ಚರ್ಮದ* ಚಪ್ಪಲಿಗಳನ್ನ ಕೊಟ್ಟೆ. ಒಳ್ಳೇ ಗುಣಮಟ್ಟದ ನಾರುಬಟ್ಟೆಯನ್ನ ಸುತ್ತಿದೆ. ದುಬಾರಿ ಬಟ್ಟೆಗಳನ್ನ ತೊಡಿಸಿದೆ. 11 ಆಭರಣಗಳಿಂದ ಸಿಂಗಾರ ಮಾಡ್ದೆ. ಕೈಗೆ ಬಳೆ, ಕತ್ತಿಗೆ ಸರ ಹಾಕ್ದೆ. 12 ಮೂಗಿಗೆ ಮೂಗುತಿಯನ್ನ, ಕಿವಿಗೆ ಓಲೆಗಳನ್ನ ತೊಡಿಸಿದೆ. ತಲೆಗೆ ಅಂದದ ಕಿರೀಟ ಇಟ್ಟೆ. 13 ನೀನು ಚಿನ್ನ ಬೆಳ್ಳಿಯ ಒಡವೆಗಳಿಂದ ಅಲಂಕರಿಸ್ಕೊಳ್ತಾ ಇದ್ದೆ. ನಿನ್ನ ಬಟ್ಟೆ ಒಳ್ಳೇ ಗುಣಮಟ್ಟದ ನಾರುಬಟ್ಟೆ, ದುಬಾರಿ ಬಟ್ಟೆ, ಕಸೂತಿ ಮಾಡಿದ ಬಟ್ಟೆ ಆಗಿತ್ತು. ನುಣ್ಣಗಿನ ಹಿಟ್ಟು, ಜೇನುತುಪ್ಪ, ಎಣ್ಣೆನೇ ನಿನ್ನ ಊಟ ಆಗಿತ್ತು. ನೀನು ಬೆಳೆದು ಸುಂದರಿ ಆದೆ,+ ರಾಣಿ ಆಗೋ ಯೋಗ್ಯತೆ ನಿನ್ನಲ್ಲಿತ್ತು.’”
14 “‘ನಾನು ನನ್ನ ವೈಭವವನ್ನ ನಿನಗೆ ಕೊಟ್ಟಿದ್ರಿಂದ ನೀನು ಪರಿಪೂರ್ಣ ಸುಂದರಿಯಾದೆ.+ ನಿನ್ನ ಸೌಂದರ್ಯದಿಂದಾಗಿ ನಿನ್ನ ಕೀರ್ತಿ ಜನಾಂಗಗಳಲ್ಲೆಲ್ಲ ಹಬ್ಬಿತು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
15 “‘ಆದ್ರೆ ನೀನು ನಿನ್ನ ಸೌಂದರ್ಯವನ್ನೇ ನಂಬೋಕೆ ಶುರುಮಾಡ್ದೆ.+ ನಿನ್ನ ಕೀರ್ತಿಯಿಂದಾಗಿ ವೇಶ್ಯೆ ಆದೆ.+ ದಾರಿಯಲ್ಲಿ ಹೋಗಿ ಬರೋ ಒಬ್ಬೊಬ್ಬನ ಜೊತೆನೂ ಸಂಬಂಧ ಇಟ್ಕೊಂಡು ವೇಶ್ಯಾವಾಟಿಕೆ ಮಾಡ್ದೆ+ ಮತ್ತು ನಿನ್ನನ್ನೇ ಅವ್ರಿಗೆ ಒಪ್ಪಿಸ್ಕೊಂಡೆ. 16 ನಿನ್ನ ಬಣ್ಣಬಣ್ಣದ ಕೆಲವು ಬಟ್ಟೆಗಳನ್ನ ತಗೊಂಡು ದೇವಸ್ಥಾನಗಳನ್ನ* ಮಾಡ್ದೆ. ಅಲ್ಲಿ ವೇಶ್ಯಾವಾಟಿಕೆ ನಡಿಸಿದೆ.+ ಅಂಥ ವಿಷ್ಯ ಆಗಬಾರದಾಗಿತ್ತು, ಯಾವತ್ತೂ ನಡಿಬಾರದಾಗಿತ್ತು. 17 ಅಷ್ಟೇ ಅಲ್ಲ ನಾನು ನಿನಗೆ ಕೊಟ್ಟಿದ್ದ ಚಿನ್ನಬೆಳ್ಳಿಯ ಸುಂದರ ಆಭರಣಗಳನ್ನ* ನೀನು ತಗೊಂಡು ನಿನಗಾಗಿ ಗಂಡಸರ ಮೂರ್ತಿಗಳನ್ನ ಮಾಡ್ಕೊಂಡು ಅವುಗಳ ಜೊತೆ ವೇಶ್ಯಾವಾಟಿಕೆ ನಡೆಸಿದೆ.+ 18 ಕಸೂತಿ ಹಾಕಿದ ನಿನ್ನ ಬಟ್ಟೆಗಳನ್ನ ಅವುಗಳಿಗೆ ಹೊದಿಸಿದೆ. ನನ್ನ ಎಣ್ಣೆ ಮತ್ತು ನನ್ನ ಧೂಪವನ್ನ ಅವಕ್ಕೆ ಅರ್ಪಿಸಿದೆ.+ 19 ನಾನು ನಿನ್ನ ಆಹಾರಕ್ಕಾಗಿ ನುಣ್ಣಗಿನ ಹಿಟ್ಟು, ಎಣ್ಣೆ ಮತ್ತು ಜೇನುತುಪ್ಪದಿಂದ ಮಾಡಿದ ರೊಟ್ಟಿಗಳನ್ನ ಕೊಟ್ಟಿದ್ದೆ. ಆದ್ರೆ ನೀನು ಅದನ್ನೂ ಆ ಮೂರ್ತಿಗಳಿಗೆ ಕೊಟ್ಟೆ. ಅವನ್ನ ಖುಷಿಪಡಿಸೋಕೆ* ಆ ಅರ್ಪಣೆಗಳಿಂದ ಸುವಾಸನೆಯ ಹೊಗೆ ಮೇಲೆ ಏರೋ ಹಾಗೆ ಮಾಡಿದೆ.+ ಹೌದು, ನೀನು ಹೀಗೇ ಮಾಡಿದೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
20 “‘ನೀನು ಇಷ್ಟೆಲ್ಲ ವೇಶ್ಯಾವಾಟಿಕೆ ಮಾಡಿದ್ದು ಸಾಲದು ಅಂತ ನೀನು ಹೆತ್ತ ನನ್ನ ಮಕ್ಕಳನ್ನ+ ಮೂರ್ತಿಗಳಿಗೆ ಬಲಿ ಕೊಟ್ಟೆ.+ 21 ನನ್ನ ಮಕ್ಕಳನ್ನ ಸಾಯಿಸಿ ಬೆಂಕಿಯಲ್ಲಿ ಆಹುತಿ ಕೊಟ್ಟೆ.+ 22 ಮಗುವಾಗಿದ್ದಾಗ ನೀನು ನಿನ್ನ ರಕ್ತದಲ್ಲೇ ಬಿದ್ಕೊಂಡು ಒದ್ದಾಡ್ತಾ ಇದ್ದಿದ್ದನ್ನ, ಮೈಮೇಲೆ ಬಟ್ಟೆಯಿಲ್ಲದೆ ಬೆತ್ತಲೆಯಾಗಿದ್ದ ದಿನಗಳನ್ನ ಮರೆತುಬಿಟ್ಟೆ. ಎಲ್ಲ ತರದ ಅಸಹ್ಯ ಕೆಲಸ ಮತ್ತು ವೇಶ್ಯಾವಾಟಿಕೆಯನ್ನ ಮಾಡ್ತಿರೋವಾಗ ನಿನಗದು ನೆನಪಿಗೇ ಬರಲಿಲ್ಲ. 23 ಅಯ್ಯೋ, ಈ ಎಲ್ಲ ಕೆಟ್ಟ ಕೆಲಸಗಳನ್ನ ಮಾಡಿದ್ರಿಂದ ನಿನಗೆ ಬರೋ ಗತಿಯನ್ನ ಏನಂತ ಹೇಳಲಿ!’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 24 ‘ನೀನು ಗುಡ್ಡವನ್ನ ಮಾಡಿದೆ ಮತ್ತು ನಿನಗಾಗಿ ಪಟ್ಟಣದ ಪ್ರತಿಯೊಂದು ಮುಖ್ಯಸ್ಥಳದಲ್ಲಿ* ದೇವಸ್ಥಾನಗಳನ್ನ ಕಟ್ಟಿದೆ. 25 ಪ್ರತಿಯೊಂದು ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಅವನ್ನ* ಕಟ್ಟಿದೆ. ದಾರಿಯಲ್ಲಿ ಹೋಗ್ತಾ ಬರ್ತಾ ಇರೋರಿಗೆಲ್ಲ ನಿನ್ನ ದೇಹವನ್ನ ಕೊಡೋ ಮೂಲಕ ನಿನ್ನ ಸೌಂದರ್ಯವನ್ನ ಅಸಹ್ಯವಾಗಿ ಮಾಡ್ಕೊಂಡೆ.+ ನೀನು ವೇಶ್ಯಾವಾಟಿಕೆಯನ್ನ ಇನ್ನೂ ಜಾಸ್ತಿ ಮಾಡಿದೆ.+ 26 ನಿನ್ನ ನೆರೆಯವರಾದ ಈಜಿಪ್ಟಿನ ಕಾಮುಕರ ಜೊತೆ ಸಂಬಂಧ ಇಟ್ಕೊಂಡು ವೇಶ್ಯಾವಾಟಿಕೆ ನಡಿಸಿದೆ.+ ನಿನ್ನ ಮಿತಿಮೀರಿದ ವೇಶ್ಯಾವಾಟಿಕೆ ನನಗೆ ಕೋಪ ಬರಿಸಿದೆ. 27 ಹಾಗಾಗಿ ನಾನು ಕೈಚಾಚಿ ನಿನ್ನನ್ನ ಶಿಕ್ಷಿಸ್ತೀನಿ. ನಿನಗೆ ಬರೋ ಆಹಾರವನ್ನ ಕಮ್ಮಿ ಮಾಡ್ತೀನಿ.+ ನಿನ್ನನ್ನ ದ್ವೇಷಿಸೋ ಸ್ತ್ರೀಯರು ಅಂದ್ರೆ ನಿನ್ನ ಅಶ್ಲೀಲ ನಡತೆಯನ್ನ ನೋಡಿ ದಂಗಾದ+ ಫಿಲಿಷ್ಟಿಯ ಹುಡುಗಿಯರು ಅವ್ರಿಗೆ ಇಷ್ಟ ಬಂದ ಹಾಗೆ ನಿನಗೆ ಮಾಡೋಕೆ ನಿನ್ನನ್ನ ಅವ್ರ ಕೈಗೆ ಕೊಡ್ತೀನಿ.+
28 ಇಷ್ಟೆಲ್ಲ ವೇಶ್ಯಾವಾಟಿಕೆ ಮಾಡಿದ್ದು ಸಾಲದು ಅಂತ ಅಶ್ಶೂರ್ಯರ ಜೊತೆನೂ ವೇಶ್ಯಾವಾಟಿಕೆ ನಡಿಸಿದೆ.+ ಹೀಗೆ ಮಾಡಿದ ಮೇಲೂ ನಿನ್ನ ಕಾಮದಾಹ ತೀರಲಿಲ್ಲ. 29 ನಿನ್ನ ವೇಶ್ಯಾವಾಟಿಕೆ ಇನ್ನೂ ಜಾಸ್ತಿ ಮಾಡ್ತಾ ವ್ಯಾಪಾರಿಗಳ ದೇಶದಲ್ಲೂ* ಕಸ್ದೀಯರ ಜೊತೆ ಸಂಬಂಧ ಇಟ್ಕೊಂಡೆ.+ ಆಗಲೂ ನಿನಗೆ ತೃಪ್ತಿ ಆಗಲಿಲ್ಲ.’ 30 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಸ್ವಲ್ಪನೂ ನಾಚಿಕೆ ಇಲ್ಲದ ವೇಶ್ಯೆ ತರ ನಡ್ಕೊಂಡು ನೀನು ಅದನ್ನೆಲ್ಲ ಮಾಡಿದಾಗ ನಿನ್ನ ಹೃದಯಕ್ಕೆ ದೊಡ್ಡ ರೋಗ ಬಂದಿತ್ತು.*+ 31 ಎಲ್ಲ ಬೀದಿಯಲ್ಲಿ ಎಲ್ಲರಿಗೂ ಕಾಣೋ ಜಾಗದಲ್ಲಿ ನೀನು ಗುಡ್ಡ ಮಾಡಿದಾಗ ಮತ್ತು ಪಟ್ಟಣದ ಎಲ್ಲ ಮುಖ್ಯಸ್ಥಳದಲ್ಲಿ ದೇವಸ್ಥಾನಗಳನ್ನ ಕಟ್ಟಿದಾಗ ನೀನು ಬೇರೆ ವೇಶ್ಯೆಯರ ತರ ಇರಲಿಲ್ಲ, ಯಾಕಂದ್ರೆ ನೀನು ನಿನ್ನ ಜೊತೆ ಸಂಬಂಧ ಇಟ್ಕೊಂಡವ್ರಿಂದ ದುಡ್ಡು ತಗೊಳ್ಳಲಿಲ್ಲ. 32 ಗಂಡನನ್ನ ಬಿಟ್ಟು ಪರಿಚಯ ಇಲ್ಲದ ಗಂಡಸರ ಹತ್ರ ಹೋಗೋ ವ್ಯಭಿಚಾರಿಣಿ ನೀನು!+ 33 ಸಾಮಾನ್ಯವಾಗಿ ಎಲ್ಲ ವೇಶ್ಯೆಯರಿಗೆ ಜನ್ರು ಉಡುಗೊರೆ ಕೊಡ್ತಾರೆ,+ ಆದ್ರೆ ಕಾಮಾತುರದಿಂದ ನಿನ್ನ ಹತ್ರ ಬರೋರಿಗೆ ನೀನೇ ಉಡುಗೊರೆ ಕೊಟ್ಟಿದ್ದೀಯ.+ ನಿನ್ನ ಜೊತೆ ಸಂಬಂಧ ಇಟ್ಕೊಳ್ಳೋಕೆ ಎಲ್ಲ ಕಡೆ ಇರೋರನ್ನ ಲಂಚಕೊಟ್ಟು ನಿನ್ನ ಹತ್ರ ಕರೆಸ್ಕೊಳ್ತೀಯ.+ 34 ವೇಶ್ಯಾವಾಟಿಕೆ ನಡೆಸೋ ಬೇರೆ ಹೆಂಗಸರಿಗಿಂತ ನೀನೇ ಬೇರೆ. ನಿನ್ನ ತರ ವೇಶ್ಯಾವಾಟಿಕೆ ಮಾಡೋರು ಯಾರೂ ಇಲ್ಲ. ನಿನ್ನ ಹತ್ರ ಬರೋರು ನಿನಗೇನೂ ಕೊಡಲ್ಲ, ನೀನೇ ಅವ್ರಿಗೆ ಕೊಡ್ತೀಯ. ನಿನ್ನ ದಾರಿನೇ ಬೇರೆ.’
35 ಹಾಗಾಗಿ ವೇಶ್ಯೆಯೇ,+ ಯೆಹೋವನ ಮಾತನ್ನ ಕೇಳು. 36 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಿನ್ನ ಕಾಮಾತುರವನ್ನ ನೀನು ಅತಿರೇಕವಾಗಿ ತೋರಿಸಿದ್ದೀಯ. ನೀನು ಸಂಬಂಧ ಇಟ್ಕೊಂಡಿರೋ ಗಂಡಸರ ಜೊತೆ ಮತ್ತು ನಿನ್ನ ಮಕ್ಕಳನ್ನೂ ಬಿಡದೆ ಅವ್ರ ರಕ್ತವನ್ನ ಬಲಿಯಾಗಿ ಅರ್ಪಿಸಿದ+ ಎಲ್ಲ ಅಸಹ್ಯ ಮೂರ್ತಿಗಳ+ ಜೊತೆ* ವೇಶ್ಯಾವಾಟಿಕೆ ಮಾಡುವಾಗ ನಿನ್ನ ಬರಿಮೈಯನ್ನ ತೋರಿಸಿದ್ದೀಯ. 37 ಹಾಗಾಗಿ ನೀನು ಯಾರಿಗೆಲ್ಲ ಸುಖಕೊಟ್ಟಿಯೋ ಆ ಎಲ್ಲ ಗಂಡಸ್ರನ್ನೂ ನೀನು ಪ್ರೀತಿಸಿದವ್ರನ್ನೂ ದ್ವೇಷಿಸಿದವ್ರನ್ನೂ ಒಟ್ಟುಸೇರಿಸ್ತೀನಿ. ಅವ್ರನ್ನ ಎಲ್ಲ ಕಡೆಯಿಂದ ಒಟ್ಟು ಸೇರಿಸಿ ನಿನ್ನ ವಿರುದ್ಧ ಬರೋ ತರ ಮಾಡ್ತೀನಿ. ನಾನು ಅವ್ರೆಲ್ಲರ ಮುಂದೆ ನಿನ್ನನ್ನ ಬೆತ್ತಲೆ ಮಾಡ್ತೀನಿ. ನೀನು ಪೂರ್ತಿ ಬೆತ್ತಲೆ ಆಗಿರೋದನ್ನ ಅವರು ನೋಡ್ತಾರೆ.+
38 ವೇಶ್ಯೆಯರಿಗೆ+ ಮತ್ತು ರಕ್ತ ಸುರಿಸೋ ಹೆಂಗಸರಿಗೆ+ ಕೊಡೋ ಶಿಕ್ಷೆಗಳನ್ನೇ ನಾನು ನಿನಗೆ ಕೊಡ್ತೀನಿ. ರೋಷದಿಂದ ಕ್ರೋಧದಿಂದ* ನಾನು ನಿನ್ನ ರಕ್ತ ಸುರಿಸ್ತೀನಿ.+ 39 ನಾನು ನಿನ್ನನ್ನ ಅವ್ರ ಕೈಗೆ ಒಪ್ಪಿಸ್ತೀನಿ. ನೀನು ಮಾಡಿದ ಗುಡ್ಡಗಳನ್ನ ಅವರು ಕೆಡವಿ ಹಾಕ್ತಾರೆ. ನಿನ್ನ ದೇವಸ್ಥಾನಗಳನ್ನ* ನೆಲಸಮ ಮಾಡ್ತಾರೆ.+ ಅವರು ನಿನ್ನ ಬಟ್ಟೆಗಳನ್ನ ಕಿತ್ತು+ ನಿನ್ನ ಸುಂದರ ಒಡವೆಗಳನ್ನ* ತಗೊಳ್ತಾರೆ.+ ನಿನ್ನ ಮೈಮೇಲೆ ಬಟ್ಟೆ ಇಲ್ಲದ ಹಾಗೆ ಮಾಡಿ ನಿನ್ನನ್ನ ಬೆತ್ತಲೆಯಾಗಿ ಬಿಟ್ಟು ಹೋಗ್ತಾರೆ. 40 ನಿನ್ನ ಮೇಲೆ ದಾಳಿ ಮಾಡೋಕೆ ಜನ್ರ ಗುಂಪನ್ನ ಕರ್ಕೊಂಡು ಬರ್ತಾರೆ.+ ಅವರು ನಿನ್ನನ್ನ ಕಲ್ಲು ಹೊಡಿದು ಸಾಯಿಸ್ತಾರೆ,+ ಕತ್ತಿಗಳಿಂದ ಕೊಲ್ತಾರೆ.+ 41 ಅವರು ನಿನ್ನ ಮನೆಗಳನ್ನ ಬೆಂಕಿಯಿಂದ ಸುಟ್ಟುಬಿಡ್ತಾರೆ.+ ತುಂಬ ಹೆಂಗಸರ ಕಣ್ಮುಂದೆನೇ ನಿನ್ನನ್ನ ಶಿಕ್ಷಿಸ್ತಾರೆ. ನಾನು ನಿನ್ನ ವೇಶ್ಯಾವಾಟಿಕೆಯನ್ನ ನಿಲ್ಲಿಸಿಬಿಡ್ತೀನಿ.+ ನೀನು ಇನ್ಮೇಲೆ ಯಾರಿಗೂ ದುಡ್ಡು ಕೊಡೋಕೆ ಆಗಲ್ಲ. 42 ನಾನು ನಿನ್ನ ಮೇಲಿರೋ ಕೋಪವನ್ನ ತೀರಿಸ್ಕೊಳ್ತೀನಿ.+ ಆಗ ನಿನ್ನ ಮೇಲಿರೋ ನನ್ನ ಕ್ರೋಧವು ಹೋಗುತ್ತೆ,+ ನನ್ನ ಕೋಪ ತಣ್ಣಗಾಗುತ್ತೆ. ಇನ್ಮೇಲೆ ನಾನು ಸಿಟ್ಟು ಮಾಡ್ಕೊಳಲ್ಲ.’
43 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಮಗು ಆಗಿದ್ದಾಗ ನೀನು ಹೇಗಿದ್ದೆ ಅಂತ ನೆನಪಿಸ್ಕೊಳ್ಳದೆ+ ಈ ಎಲ್ಲ ಕೆಲಸಗಳನ್ನ ಮಾಡಿ ನನಗೆ ಕೋಪ ಬರಿಸಿದ್ದೀಯ. ಹಾಗಾಗಿ ನಿನ್ನ ನಡತೆಯ ಪರಿಣಾಮಗಳನ್ನ ನೀನು ಅನುಭವಿಸೋ ತರ ಮಾಡ್ತೀನಿ. ಆಗ ನೀನು ನಿನ್ನ ಅಶ್ಲೀಲ ನಡತೆ ಮತ್ತು ಎಲ್ಲ ಅಸಹ್ಯ ಕೆಲಸಗಳನ್ನ ಬಿಟ್ಟುಬಿಡ್ತೀಯ.
44 ನೋಡು! ಮಾತಾಡುವಾಗ ಗಾದೆಗಳನ್ನ ಬಳಸೋರು ನಿನ್ನ ಬಗ್ಗೆ “ತಾಯಿಯಂತೆ ಮಗಳು!”+ ಅನ್ನೋ ಗಾದೆ ಹೇಳ್ತಾರೆ. 45 ಗಂಡ ಮತ್ತು ಮಕ್ಕಳನ್ನ ಕೀಳಾಗಿ ನೋಡಿದ ನಿನ್ನ ಅಮ್ಮನ ತರಾನೇ ನೀನಿದ್ದೀಯ. ಗಂಡ ಮತ್ತು ಮಕ್ಕಳನ್ನ ಕೀಳಾಗಿ ನೋಡಿದ ನಿನ್ನ ಅಕ್ಕತಂಗಿಯ ಹಾಗೇ ನೀನಿದ್ದೀಯ. ನಿನ್ನ ಅಮ್ಮ ಹಿತ್ತಿಯಳು, ನಿನ್ನ ಅಪ್ಪ ಅಮೋರಿಯನು.’”+
46 “‘ನಿನ್ನ ಅಕ್ಕ ಸಮಾರ್ಯ,+ ತನ್ನ ಹೆಣ್ಣುಮಕ್ಕಳ ಜೊತೆ ನಿನ್ನ ಎಡಕ್ಕೆ* ವಾಸಿಸ್ತಿದ್ದಾಳೆ.+ ನಿನ್ನ ತಂಗಿ ಸೊದೋಮ್,+ ತನ್ನ ಹೆಣ್ಣುಮಕ್ಕಳ ಜೊತೆ* ನಿನ್ನ ಬಲಕ್ಕೆ* ವಾಸಿಸ್ತಿದ್ದಾಳೆ.+ 47 ಅವ್ರ ತರಾನೇ ನೀನು ಕೆಟ್ಟದಾರಿ ಹಿಡಿದೆ. ಅವರು ಮಾಡಿದ ಅಸಹ್ಯ ಕೆಲಸಗಳನ್ನ ನೀನೂ ಮಾಡಿದೆ. ಅಷ್ಟೇ ಅಲ್ಲ, ನಿನ್ನ ನಡತೆ ಎಷ್ಟು ಕೀಳಾಗಿ ಇತ್ತಂದ್ರೆ ಸ್ವಲ್ಪ ಸಮಯದಲ್ಲೇ ನೀನು ಅವ್ರಿಗಿಂತ ಕಡೆ ಆದೆ.’+ 48 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ಮತ್ತು ನಿನ್ನ ಹೆಣ್ಣುಮಕ್ಕಳು ಎಂಥ ಕೆಲಸಗಳನ್ನ ಮಾಡಿದ್ದೀರ ಅಂದ್ರೆ ಅಂಥದ್ದನ್ನ ನಿನ್ನ ತಂಗಿ ಸೊದೋಮ್ ಆಗಲಿ ಅವಳ ಮಕ್ಕಳಾಗಲಿ ಮಾಡಲಿಲ್ಲ. 49 ನೋಡು, ನಿನ್ನ ತಂಗಿ ಸೊದೋಮ್ ಮಾಡಿದ ತಪ್ಪು ಏನಂದ್ರೆ, ಅವಳೂ ಅವಳ ಮಕ್ಕಳೂ+ ಜಂಬದಿಂದ ಮೆರೀತಿದ್ರು.+ ಅವ್ರ ಹತ್ರ ಬೇಕಾದಷ್ಟು ಆಹಾರ ಇತ್ತು,+ ಹಾಯಾಗಿದ್ರು,+ ಹಾಗಿದ್ರೂ ಅವರು ಬಡಬಗ್ಗರಿಗೆ, ಕಷ್ಟದಲ್ಲಿ ಇರೋರಿಗೆ ಏನೂ ಸಹಾಯ ಮಾಡಲಿಲ್ಲ.+ 50 ಅವ್ರ ಸೊಕ್ಕು ಇಳೀಲಿಲ್ಲ,+ ನನ್ನ ಕಣ್ಮುಂದೆ ಅಸಹ್ಯ ಕೆಲಸಗಳನ್ನ ಮಾಡ್ತಾ ಹೋದ್ರು.+ ಹಾಗಾಗಿ ನಾನು ಅವ್ರನ್ನ ನಾಶ ಮಾಡ್ಲೇಬೇಕಾಯ್ತು.+
51 ನೀನು ಮಾಡಿದ ಪಾಪಗಳಲ್ಲಿ ಅರ್ಧದಷ್ಟನ್ನೂ ಸಮಾರ್ಯ+ ಮಾಡಲಿಲ್ಲ. ಅವ್ರಿಗಿಂತ ಜಾಸ್ತಿ ನೀನೇ ಅಸಹ್ಯ ಕೆಲಸಗಳನ್ನ ಮಾಡ್ತಾ ಹೋದೆ. ಅದು ಯಾವ ಹಂತಕ್ಕೆ ಹೋಯ್ತು ಅಂದ್ರೆ ನಿನಗೆ ಹೋಲಿಸಿದ್ರೆ ನಿನ್ನ ಅಕ್ಕ-ತಂಗಿನೇ ನೀತಿವಂತರು ಅಂತ ಹೇಳಬಹುದು.+ 52 ನೀನು ಈ ರೀತಿ ನಡ್ಕೊಂಡು ನಿನ್ನ ಅಕ್ಕ ಮತ್ತು ತಂಗಿ ಮಾಡಿದ್ದು ತಪ್ಪೇ ಅಲ್ಲ ಅನ್ನೋ ತರ ತೋರಿಸ್ಕೊಟ್ಟೆ. ಹಾಗಾಗಿ ನೀನೀಗ ಅವಮಾನ ಅನುಭವಿಸಬೇಕು. ನೀನು ಅವ್ರಿಗಿಂತ ಜಾಸ್ತಿ ಅಸಹ್ಯವಾಗಿ ನಡ್ಕೊಂಡು ಪಾಪಮಾಡಿದ್ರಿಂದ ಅವ್ರೇ ತುಂಬ ನೀತಿವಂತರಾಗಿ ಇದ್ದಾರೆ. ನಿನ್ನ ಅಕ್ಕ ಮತ್ತು ತಂಗಿ ನೀತಿವಂತರು ಅಂತ ನೀನು ತೋರಿಸ್ಕೊಟ್ಟಿದ್ರಿಂದ ನೀನೀಗ ನಾಚಿಕೆಪಡು, ಅವಮಾನ ಅನುಭವಿಸು.’
53 ‘ನಾನು ಕೈದಿಗಳಾಗಿ ಹೋದ ಜನ್ರನ್ನ ಅಂದ್ರೆ ಸೊದೋಮ್, ಸಮಾರ್ಯ ಮತ್ತು ಅವ್ರ ಹೆಣ್ಮಕ್ಕಳನ್ನ ಒಟ್ಟು ಸೇರಿಸ್ತೀನಿ. ಅವ್ರ ಜೊತೆ ಕೈದಿಗಳಾಗಿ ಹೋದ ನಿನ್ನ ಜನ್ರನ್ನೂ ಒಟ್ಟು ಸೇರಿಸ್ತೀನಿ.+ 54 ಆಗ ನಿನಗೆ ಅವಮಾನ ಆಗುತ್ತೆ. ನೀನು ನಿನ್ನ ಕೆಲಸಗಳಿಂದ ಅವ್ರನ್ನ ಸಮಾಧಾನ ಮಾಡಿದ್ರಿಂದ ನೀನು ಅವಮಾನ ಅನುಭವಿಸ್ತೀಯ. 55 ನಿನ್ನ ಅಕ್ಕ ಸಮಾರ್ಯ, ನಿನ್ನ ತಂಗಿ ಸೊದೋಮ್ ಮತ್ತು ಅವ್ರಿಬ್ಬರ ಮಕ್ಕಳು ಮುಂಚಿನ ಸ್ಥಿತಿಗೆ ಬರ್ತಾರೆ. ನೀನು ಮತ್ತು ನಿನ್ನ ಮಕ್ಕಳೂ ಮುಂಚಿನ ಸ್ಥಿತಿಗೆ ಬರ್ತಿರ.+ 56 ನೀನು ಜಂಬದಿಂದ ಬೀಗ್ತಿದ್ದಾಗ ನಿನ್ನ ತಂಗಿ ಸೊದೋಮಿನ ಹೆಸ್ರನ್ನ ನಿನ್ನ ಬಾಯಲ್ಲಿ ಹೇಳೋಕ್ಕೂ ಇಷ್ಟಪಡ್ತಿರಲಿಲ್ಲ, ಅಷ್ಟು ಯೋಗ್ಯತೆ ಅವಳಿಗಿಲ್ಲ ಅಂತ ನಿನಗೆ ಅನಿಸ್ತಿತ್ತು. 57 ನಿನ್ನ ಕೆಟ್ಟ ಕೆಲಸಗಳು ಬಯಲಾಗೋ ಮುಂಚೆ+ ನಿನಗೆ ಅಂಥ ಅಭಿಪ್ರಾಯ ಇತ್ತು. ಸಿರಿಯದ ಮಕ್ಕಳು, ಅವಳ ಅಕ್ಕಪಕ್ಕದವರು ಮತ್ತು ಫಿಲಿಷ್ಟಿಯರ ಮಕ್ಕಳು+ ನಿನ್ನನ್ನ ಬೈತಾರೆ. ನಿನ್ನ ಸುತ್ತ ಇರೋರೆಲ್ಲ ನಿನ್ನನ್ನ ಕೀಳಾಗಿ ನೋಡ್ತಾರೆ. 58 ನೀನು ನಿನ್ನ ಅಶ್ಲೀಲ ನಡತೆ ಮತ್ತು ನಿನ್ನ ಅಸಹ್ಯ ಕೆಲಸಗಳ ಪರಿಣಾಮಗಳನ್ನ ಅನುಭವಿಸ್ತೀಯ’ ಅಂತ ಯೆಹೋವ ಹೇಳ್ತಾನೆ.”
59 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀನು ಮಾಡಿದ ಕೆಲಸಗಳಿಗೆ ತಕ್ಕ ಹಾಗೆ ನಾನು ನಿನ್ನನ್ನ ಶಿಕ್ಷಿಸ್ತೀನಿ.+ ಯಾಕಂದ್ರೆ ನೀನು ನನ್ನ ಒಪ್ಪಂದ ಮುರಿದೆ, ಹೀಗೆ ನನಗೆ ಕೊಟ್ಟ ಮಾತನ್ನ ಮುರಿದುಬಿಟ್ಟೆ.+ 60 ಆದ್ರೆ ನೀನು ಯುವತಿ ಆಗಿದ್ದಾಗ ನಾನು ನಿನ್ನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ನೆನಪಿಸ್ಕೊಳ್ತೀನಿ ಮತ್ತು ನಿನ್ನ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ತೀನಿ.+ 61 ನೀನು ನಿನ್ನ ಅಕ್ಕತಂಗಿಯರನ್ನ ಸ್ವಾಗತಿಸುವಾಗ ನಿನ್ನ ನಡತೆಯನ್ನ ನೆನಸ್ಕೊಂಡು ನಿನಗೇ ಅವಮಾನ ಆಗುತ್ತೆ.+ ಅವ್ರನ್ನ ನಾನು ನಿನಗೆ ನಿನ್ನ ಮಕ್ಕಳಾಗಿ ಕೊಡ್ತೀನಿ. ನಾನು ಇದನ್ನ ಮಾಡೋದು ನಿನ್ನ ಜೊತೆ ಮಾಡಿದ ಒಪ್ಪಂದದಿಂದ ಅಲ್ಲ.’
62 ‘ನಾನು ನಿನ್ನ ಜೊತೆ ಒಪ್ಪಂದ ಮಾಡ್ಕೊತೀನಿ. ಆಗ, ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ. 63 ನೀನು ಇಷ್ಟೆಲ್ಲ ಮಾಡಿದ್ರೂ ನಾನು ನಿನ್ನನ್ನ ಕ್ಷಮಿಸ್ತೀನಿ.*+ ಆಗ ಹಿಂದೆ ಮಾಡಿದ್ದೆಲ್ಲ ನಿನ್ನ ನೆನಪಿಗೆ ಬರುತ್ತೆ ಮತ್ತು ನಿನಗೆಷ್ಟು ನಾಚಿಕೆ ಆಗುತ್ತೆ ಅಂದ್ರೆ ನಿನ್ನ ಬಾಯಿಂದ ಒಂದು ಮಾತೂ ಬರಲ್ಲ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
17 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲ್ಯರ ವಿಷ್ಯದಲ್ಲಿ ಒಂದು ಒಗಟನ್ನ, ಒಂದು ಗಾದೆಮಾತನ್ನ ಹೇಳು.+ 3 ನೀನು ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಒಂದು ದೊಡ್ಡ ಹದ್ದು+ ಲೆಬನೋನಿಗೆ+ ಹಾರಿ ಬಂತು. ದೊಡ್ಡ ರೆಕ್ಕೆಗಳು, ಉದ್ದುದ್ದ ಗರಿಗಳು ಇದ್ದ ಮತ್ತು ಎಷ್ಟೋ ಬಣ್ಣದ ಪುಕ್ಕಗಳಿಂದ ತುಂಬಿದ್ದ ಆ ಹದ್ದು ದೇವದಾರು ಮರದ ತುದಿಯನ್ನ ಹಿಡ್ಕೊಳ್ತು.+ 4 ಅದು ತುದಿಯ ಚಿಗುರನ್ನ ಕಿತ್ಕೊಂಡು ವ್ಯಾಪಾರಿಗಳ ದೇಶಕ್ಕೆ* ತಗೊಂಡು ಹೋಯ್ತು. ಅದನ್ನ ವ್ಯಾಪಾರಿಗಳ ಒಂದು ಪಟ್ಟಣದಲ್ಲಿ ಇಡ್ತು.+ 5 ಆಮೇಲೆ ಅದು ದೇಶದ ಸ್ವಲ್ಪ ಬೀಜ ತಗೊಂಡು+ ಚೆನ್ನಾಗಿ ಬೆಳೆ ಕೊಡೋ ಹೊಲದಲ್ಲಿ ಬಿತ್ತಿತು. ನೀರುಹಬ್ಬೆ ಗಿಡದ ಹಾಗೆ ಅದು ಬೆಳಿಬೇಕು ಅಂತ ಅದನ್ನ ತುಂಬ ನೀರಿರೋ ಜಾಗದ ಪಕ್ಕದಲ್ಲಿ ಬಿತ್ತಿತು. 6 ಆ ಬೀಜ ಮೊಳಕೆ ಒಡೆದು ದ್ರಾಕ್ಷಿಬಳ್ಳಿ ಬೆಳೆಯೋಕೆ ಶುರುವಾಯ್ತು.+ ಆ ಬಳ್ಳಿ ನೆಲದಲ್ಲೇ ಹರಡ್ಕೊಳ್ತು. ಅದ್ರ ಎಲೆಗಳು ನೆಲಕ್ಕೆ ಮುಖ ಮಾಡಿದ್ವು. ಅದ್ರ ಬೇರುಗಳು ನೆಲದೊಳಗೆ ಇಳೀತಾ ಹೋದ್ವು. ಆ ಬಳ್ಳಿಗೆ ಚಿಗುರುಗಳು ಬಂದು ಕೊಂಬೆಗಳು ಬೆಳೆದ್ವು. ಹೀಗೆ ಒಂದು ದ್ರಾಕ್ಷಿಬಳ್ಳಿ ಬೆಳೀತು.+
7 ಆಮೇಲೆ ಅಲ್ಲಿ ಇನ್ನೊಂದು ದೊಡ್ಡ ಹದ್ದು+ ಬಂತು. ಅದಕ್ಕೂ ದೊಡ್ಡ ರೆಕ್ಕೆ, ಉದ್ದುದ್ದ ಗರಿಗಳು ಇದ್ವು.+ ಆಗ ಈ ದ್ರಾಕ್ಷಿಬಳ್ಳಿ ಆತುರದಿಂದ ತನ್ನ ಬೇರುಗಳನ್ನ, ತನ್ನನ್ನ ನೆಟ್ಟಿದ್ದ ತೋಟದಿಂದ ದೂರಕ್ಕೆ ಅಂದ್ರೆ ಆ ಹದ್ದಿನ ಕಡೆಗೆ ಚಾಚ್ತು. ತನಗೆ ಆ ಹದ್ದು ನೀರು ಕೊಡಬೇಕು ಅಂತ ಈ ದ್ರಾಕ್ಷಿಬಳ್ಳಿ ತನ್ನ ಎಲೆ, ಕೊಂಬೆಗಳನ್ನ ಅದ್ರ ಕಡೆ ಚಾಚ್ತು.+ 8 ಆದ್ರೆ, ಅದನ್ನ ಈಗಾಗ್ಲೇ ಒಳ್ಳೇ ನೆಲದಲ್ಲಿ, ತುಂಬ ನೀರಿರೋ ಜಾಗದಲ್ಲಿ, ಕೊಂಬೆಗಳು ಬೆಳೆದು, ಹಣ್ಣು ಕೊಟ್ಟು ದೊಡ್ಡ ದ್ರಾಕ್ಷಿಬಳ್ಳಿಯಾಗಿ ಬೆಳಿಬೇಕು ಅಂತಾನೇ ನೆಡಲಾಗಿತ್ತು.”’+
9 ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಹೀಗೆ ಮಾಡಿದ ಮೇಲೆ ಆ ದ್ರಾಕ್ಷಿಬಳ್ಳಿ ಚೆನ್ನಾಗಿ ಬೆಳೆಯೋಕೆ ಆಗುತ್ತಾ? ಅದನ್ನ ಯಾರಾದ್ರೂ ಬೇರುಸಮೇತ ಕಿತ್ತು ಹಾಕಲ್ವಾ?+ ಆಗ ಅದ್ರ ಹಣ್ಣು ಕೊಳೆತುಹೋಗಿ, ಅದ್ರ ಚಿಗುರು ಒಣಗಿ ಹೋಗಲ್ವಾ?+ ಅದು ಎಷ್ಟು ಒಣಗಿ ಹೋಗುತ್ತೆ ಅಂದ್ರೆ ಅದನ್ನ ಬೇರು ಸಮೇತ ಕಿತ್ತುಹಾಕೋಕೆ ಬಲಿಷ್ಠ ವ್ಯಕ್ತಿನೇ ಬೇಕಂತೇನಿಲ್ಲ, ತುಂಬ ಜನನೂ ಬೇಕಾಗಲ್ಲ. 10 ಅದನ್ನ ಬೇರೆ ಕಡೆ ಮತ್ತೆ ನೆಟ್ಟರೂ ಅದು ಚೆನ್ನಾಗಿ ಬೆಳಿಯುತ್ತಾ? ಪೂರ್ವದಿಂದ ಬೀಸೋ ಗಾಳಿ ಅದಕ್ಕೆ ಬಡಿದಾಗ ಅದು ಪೂರ್ತಿ ಒಣಗಿ ಹೋಗಲ್ವಾ? ಅದು ಚಿಗುರು ಒಡೆದ ತೋಟದಲ್ಲೇ ಒಣಗಿಹೋಗುತ್ತೆ.”’”
11 ಯೆಹೋವ ಮತ್ತೆ ನನಗೆ ಹೀಗಂದನು: 12 “ನೀನು ದಂಗೆಕೋರ ಜನ್ರಿಗೆ ‘ಈ ಮಾತುಗಳ ಅರ್ಥ ಏನಂತ ನಿಮಗೆ ಗೊತ್ತಾಯ್ತಾ?’ ಅಂತ ದಯವಿಟ್ಟು ಕೇಳು. ನೀನು ಅವ್ರಿಗೆ ‘ನೋಡಿ! ಬಾಬೆಲಿನ ರಾಜ ಯೆರೂಸಲೇಮಿಗೆ ಬಂದು ಅಲ್ಲಿನ ರಾಜನನ್ನೂ ಅಧಿಕಾರಿಗಳನ್ನೂ ಹಿಡ್ಕೊಂಡು ಬಾಬೆಲಿಗೆ ಹೋದ.+ 13 ಅಷ್ಟೇ ಅಲ್ಲ, ಅವನು ರಾಜವಂಶದ ಒಬ್ಬನ+ ಜೊತೆ ಒಪ್ಪಂದ ಮಾಡ್ಕೊಂಡು ಅವನಿಂದ ಆಣೆ ಮಾಡಿಸ್ಕೊಂಡ.+ ಆಮೇಲೆ ಅವನು ದೇಶದಲ್ಲಿರೋ ಅಧಿಕಾರಿಗಳನ್ನೂ ಹಿಡ್ಕೊಂಡು ಹೋದ.+ 14 ಆ ರಾಜ್ಯವನ್ನ ತಗ್ಗಿಸಬೇಕು, ಅದು ಎತ್ತರಕ್ಕೆ ಬೆಳಿಯೋಕೆ ಬಿಡಬಾರದು ಅಂತ ಅವನು ಹಾಗೆ ಮಾಡಿದ. ಜನ ಆ ಒಪ್ಪಂದದ ಪ್ರಕಾರ ನಡೆದ್ರೆ ಮಾತ್ರ ಆ ರಾಜ್ಯ ಉಳಿತಿತ್ತು.+ 15 ಆದ್ರೆ ಕೊನೆಗೆ ಯೆಹೂದದ ರಾಜ ಬಾಬೆಲಿನ ರಾಜನ ವಿರುದ್ಧ ದಂಗೆ ಎದ್ದ.+ ಹೇಗಂದ್ರೆ, ಈಜಿಪ್ಟಿಂದ ಒಂದು ದೊಡ್ಡ ಸೈನ್ಯವನ್ನ+ ಮತ್ತು ಕುದುರೆಗಳನ್ನ ತರಿಸ್ಕೊಳ್ಳೋಕೆ+ ಸಂದೇಶವಾಹಕರನ್ನ ಕಳಿಸಿದ. ಅವನ ಉಪಾಯಕ್ಕೆ ಯಶಸ್ಸು ಸಿಗುತ್ತಾ? ಇಷ್ಟೆಲ್ಲ ಮಾಡಿದ ಮೇಲೆ ಶಿಕ್ಷೆಯಿಂದ ತಪ್ಪಿಸ್ಕೊಳ್ತಾನಾ? ಒಪ್ಪಂದ ಮುರಿದ ಮೇಲೂ ಅವನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗುತ್ತಾ?’+
16 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನನ್ನ* ಯಾರು ರಾಜನನ್ನಾಗಿ ಮಾಡಿದ್ನೋ, ಯಾರಿಗೆ ಕೊಟ್ಟ ಮಾತನ್ನ ಅವನು ಮೀರಿದ್ನೋ, ಯಾರ ಜೊತೆ ಮಾಡಿದ ಒಪ್ಪಂದವನ್ನ ಅವನು ಮುರಿದ್ನೋ ಆ ರಾಜ* ವಾಸಿಸೋ ದೇಶದಲ್ಲೇ ಅಂದ್ರೆ ಬಾಬೆಲಲ್ಲೇ ಅವನು ಸಾಯ್ತಾನೆ.+ 17 ಪಟ್ಟಣದ ಮೇಲೆ ದಾಳಿ ಮಾಡಿ ತುಂಬ ಜನ್ರನ್ನ ನಾಶಮಾಡೋಕೆ ಶತ್ರುಗಳು ಇಳಿಜಾರು ದಿಬ್ಬಗಳನ್ನ ಮತ್ತು ಗೋಡೆಗಳನ್ನ ಕಟ್ಟಿ ಯುದ್ಧ ಮಾಡೋವಾಗ ಫರೋಹನ ದೊಡ್ಡ ಸೈನ್ಯವಾಗಲಿ ಲೆಕ್ಕ ಇಲ್ಲದಷ್ಟು ಸೈನಿಕರಾಗಲಿ ಯೆಹೂದದ ರಾಜನಿಗೆ ಯಾವ ಸಹಾಯನೂ ಮಾಡಕ್ಕಾಗಲ್ಲ.+ 18 ಅವನು ಕೊಟ್ಟ ಮಾತನ್ನ ಮೀರಿ ಒಂದು ಒಪ್ಪಂದವನ್ನ ಮುರಿದಿದ್ದಾನೆ. ಮಾತು ಕೊಟ್ಟ ಮೇಲೂ ಅದ್ರ ಪ್ರಕಾರ ನಡೀದೇ ಇದನ್ನೆಲ್ಲ ಮಾಡಿದ್ದಾನೆ, ಹಾಗಾಗಿ ಅವನು ಶಿಕ್ಷೆಯಿಂದ ತಪ್ಪಿಸ್ಕೊಳ್ಳೋಕೆ ಆಗಲ್ಲ.”’
19 ‘ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಅವನು ನನಗೆ ಕೊಟ್ಟ ಮಾತನ್ನ ಮೀರಿದ್ರಿಂದ ಮತ್ತು ನನ್ನ ಜೊತೆ ಮಾಡಿದ ಒಪ್ಪಂದವನ್ನ* ಮುರಿದಿದ್ರಿಂದ ಅದ್ರ ಪರಿಣಾಮಗಳನ್ನ ಅವನೇ ಅನುಭವಿಸೋ ತರ ಮಾಡ್ತೀನಿ.+ 20 ಅವನನ್ನ ಬೇಟೆಯಾಡೋಕೆ ನನ್ನ ಬಲೆಯನ್ನ ಅವನ ಮೇಲೆ ಬೀಸ್ತಿನಿ. ನಾನು ಬೀಸೋ ಬಲೆಯಲ್ಲಿ ಅವನು ಸಿಕ್ಕಿಹಾಕೊಳ್ತಾನೆ.+ ಅವನು ನನಗೆ ನಂಬಿಕೆದ್ರೋಹ ಮಾಡಿದ್ರಿಂದ ನಾನು ಅವನನ್ನ ಬಾಬೆಲಿಗೆ ಕರ್ಕೊಂಡು ಹೋಗಿ ಅವನ ಜೊತೆ ವಾದ ಮಾಡ್ತೀನಿ.+ 21 ತಪ್ಪಿಸ್ಕೊಂಡು ಓಡೋ ಅವನ ಸೈನಿಕರೆಲ್ಲ ಕತ್ತಿಗೆ ತುತ್ತಾಗಿ ಸಾಯ್ತಾರೆ. ಉಳಿದವರು ಚೆದರಿ ದಿಕ್ಕಾಪಾಲಾಗಿ ಹೋಗ್ತಾರೆ.+ ಆಗ, ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಅಂತ ನಿಮಗೆ ಗೊತ್ತಾಗುತ್ತೆ.”’+
22 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ತುಂಬ ಎತ್ತರವಾದ ದೇವದಾರು ಮರದ ತುದಿಯಿಂದ ನಾನು ಒಂದು ಚಿಗುರನ್ನ ತೆಗೆದು ನೆಡ್ತೀನಿ.+ ಅದ್ರ ಕೊಂಬೆಗಳ ತುದಿಯಿಂದ ಒಂದು ಎಳೇ ಚಿಗುರನ್ನ ತಗೊಂಡು+ ತುಂಬ ಎತ್ತರವಾದ ಬೆಟ್ಟದ ಮೇಲೆ ನೆಡ್ತೀನಿ.+ 23 ಇಸ್ರಾಯೇಲಿನ ಎತ್ತರವಾದ ಒಂದು ಬೆಟ್ಟದ ಮೇಲೆ ಅದನ್ನ ನೆಡ್ತೀನಿ. ಅದ್ರ ಕೊಂಬೆಗಳು ಬೆಳೆದು ಹಣ್ಣು ಬಿಡುತ್ತೆ. ಅದು ದೊಡ್ಡ ದೇವದಾರು ಮರ ಆಗುತ್ತೆ. ಅದ್ರ ಕೆಳಗೆ, ಅದ್ರ ಕೊಂಬೆಗಳ ಎಲೆಗಳ ನೆರಳಲ್ಲಿ ಎಲ್ಲ ಜಾತಿಯ ಪಕ್ಷಿಗಳು ವಾಸ ಮಾಡುತ್ತೆ. 24 ಆಗ, ದೇಶದಲ್ಲಿರೋ ಎಲ್ಲ ಮರಗಳಿಗೆ ಯೆಹೋವನಾದ ನಾನೇ ಎತ್ತರವಾದ ಮರವನ್ನ ತಗ್ಗಿಸಿದ್ದೀನಿ, ತಗ್ಗಾಗಿರೋ ಮರವನ್ನ ಮೇಲಕ್ಕೆ ಏರಿಸಿದ್ದೀನಿ,+ ಹಸಿರು ಮರವನ್ನ ಒಣಗಿಸಿ, ಒಣಗಿದ ಮರ ಮತ್ತೆ ಹಸಿರಾಗಿ ಹೂಗಳಿಂದ ನಳನಳಿಸೋ ಹಾಗೆ ಮಾಡಿದ್ದೀನಿ+ ಅಂತ ಗೊತ್ತಾಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಮತ್ತು ನಿಜ ಮಾಡಿದ್ದೀನಿ.”’”
18 ಯೆಹೋವ ಮತ್ತೆ ನನಗೆ ಹೀಗಂದನು: 2 “‘ಅಪ್ಪಂದಿರು ಹುಳಿದ್ರಾಕ್ಷಿ ತಿಂದಿದ್ದಾರೆ, ಆದ್ರೆ ಮಕ್ಕಳ ಹಲ್ಲು ಜುಮ್ ಅಂತಿವೆ’+ ಅನ್ನೋ ಗಾದೆಯನ್ನ ನೀವು ಇಸ್ರಾಯೇಲಲ್ಲಿ ಹೇಳ್ತಿರಲ್ಲಾ, ಅದ್ರ ಅರ್ಥ ಏನು?
3 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀವು ಇನ್ಮುಂದೆ ಇಸ್ರಾಯೇಲಲ್ಲಿ ಈ ಗಾದೆ ಹೇಳಲ್ಲ. 4 ನೋಡಿ, ಎಲ್ರ ಜೀವ* ನನಗೆ ಸೇರಿದ್ದು. ಅಪ್ಪನ ಜೀವ ಮಗನ ಜೀವ ಎರಡೂ ನನಗೆ ಸೇರಿದ್ದು. ಪಾಪ ಮಾಡೋ ವ್ಯಕ್ತಿನೇ* ಸಾಯ್ತಾನೆ.
5 ಹೀಗೆ ನೆನಸಿ, ಒಬ್ಬ ವ್ಯಕ್ತಿ ನೀತಿವಂತನಾಗಿದ್ದು ನ್ಯಾಯವಾಗಿ ಇರೋದನ್ನೇ ಮಾಡ್ತಾನೆ. 6 ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿಯಾಗಿ ಕೊಟ್ಟಿದ್ದನ್ನ ಅವನು ತಿನ್ನಲ್ಲ.+ ಇಸ್ರಾಯೇಲ್ಯರ ಅಸಹ್ಯ* ಮೂರ್ತಿಗಳ ಮೇಲೆ ಭರವಸೆ ಇಡಲ್ಲ. ಅವನು ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಲ್ಲ,*+ ತನ್ನ ಹೆಂಡತಿಗೆ ಮುಟ್ಟು ಆಗಿರೋವಾಗ ಅವಳ ಜೊತೆ ಲೈಂಗಿಕ ಸಂಪರ್ಕ ಇಟ್ಕೊಳ್ಳಲ್ಲ.+ 7 ಅವನು ಯಾರ ಜೊತೆನೂ ಕೆಟ್ಟದ್ದಾಗಿ ನಡ್ಕೊಳ್ಳಲ್ಲ,+ ಬದಲಿಗೆ ಸಾಲಗಾರ ಅಡ ಇಟ್ಟಿದ್ದನ್ನ ವಾಪಸ್ ಕೊಡ್ತಾನೆ.+ ಅವನು ಯಾರಿಂದಾನೂ ದೋಚಲ್ಲ,+ ಬದ್ಲಾಗಿ ಊಟ ಇಲ್ಲದವ್ರಿಗೆ ತನ್ನ ಊಟ ಕೊಡ್ತಾನೆ,+ ಮೈಮುಚ್ಚೋಕೆ ಬಟ್ಟೆ ಇಲ್ಲದವನಿಗೆ ಬಟ್ಟೆ ಕೊಡ್ತಾನೆ.+ 8 ಸಾಲ ಕೊಟ್ಟು ಬಡ್ಡಿ ಕೇಳಲ್ಲ, ಚಕ್ರ ಬಡ್ಡಿನೂ ಕೇಳಲ್ಲ,+ ಯಾರಿಗೂ ಅನ್ಯಾಯ ಮಾಡಲ್ಲ.+ ಇಬ್ರ ಮಧ್ಯ ಜಗಳ ಆಗಿದ್ದನ್ನ ವಿಚಾರಿಸುವಾಗ ನ್ಯಾಯವಾಗಿ ತೀರ್ಪು ಕೊಡ್ತಾನೆ.+ 9 ಅವನು ಯಾವಾಗ್ಲೂ ನನ್ನ ನಿಯಮಗಳಿಗೆ ತಕ್ಕ ಹಾಗೆ ನಡೀತಾ, ನನ್ನ ತೀರ್ಪುಗಳನ್ನ ಪಾಲಿಸ್ತಾ ನಂಬಿಗಸ್ತನಾಗಿ ಇರ್ತಾನೆ. ಅಂಥ ವ್ಯಕ್ತಿ ನೀತಿವಂತ. ಅವನು ನಿಜವಾಗ್ಲೂ ಬಾಳ್ತಾನೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
10 ‘ಆದ್ರೆ ನೆನಸಿ, ಆ ನೀತಿವಂತನಿಗೆ ಒಬ್ಬ ಮಗ ಇದ್ದಾನೆ. ಅವನು ದರೋಡೆಕೋರ+ ಅಥವಾ ಕೊಲೆಗಾರ+ ಅಥವಾ ಈ ಕೆಟ್ಟ ವಿಷ್ಯಗಳಲ್ಲಿ ಯಾವುದಾದ್ರೂ ಮಾಡ್ತಾನೆ. 11 (ಅಪ್ಪ ಈ ಕೆಟ್ಟ ವಿಷ್ಯಗಳಲ್ಲಿ ಯಾವದನ್ನೂ ಮಾಡದಿದ್ರೂ) ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ಮಗ ತಿಂತಾನೆ, ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡ್ತಾನೆ,* 12 ಗತಿ ಇಲ್ಲದವ್ರಿಗೆ, ಬಡವ್ರಿಗೆ ಕಾಟ ಕೊಡ್ತಾನೆ,+ ಬೇರೆಯವ್ರ ವಸ್ತುಗಳನ್ನ ದರೋಡೆ ಮಾಡ್ತಾನೆ, ಸಾಲಗಾರ ಅಡ ಇಟ್ಟಿದ್ದನ್ನ ವಾಪಸ್ ಕೊಡಲ್ಲ, ಅಸಹ್ಯ ಮೂರ್ತಿಗಳಲ್ಲಿ ಭರವಸೆ ಇಡ್ತಾನೆ,+ ಗಲೀಜು ಕೆಲಸಗಳನ್ನ ಮಾಡ್ತಾನೆ,+ 13 ಬಡ್ಡಿ, ಚಕ್ರಬಡ್ಡಿ ಕೇಳ್ತಾನೆ.+ ಈ ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ ಆ ಮಗ ಬಾಳಲ್ಲ. ಅವನು ನಿಜವಾಗ್ಲೂ ಸಾಯ್ತಾನೆ. ಅವನ ಸಾವಿಗೆ ಅವನೇ ಕಾರಣ.
14 ಆದ್ರೆ ನೆನಸಿ, ಒಬ್ಬ ಮಗ ಇದ್ದಾನೆ. ಅಪ್ಪ ಮಾಡೋ ಎಲ್ಲ ಪಾಪಗಳನ್ನ ಅವನು ನೋಡ್ತಾನೆ. ಆದ್ರೂ ಅವನು ಅಂಥ ವಿಷ್ಯಗಳನ್ನ ಮಾಡಲ್ಲ. 15 ಬೆಟ್ಟಗಳ ಮೇಲೆ ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ತಿನ್ನಲ್ಲ, ಇಸ್ರಾಯೇಲ್ಯರ ಅಸಹ್ಯ ಮೂರ್ತಿಗಳ ಮೇಲೆ ಭರವಸೆ ಇಡಲ್ಲ, ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಲ್ಲ, 16 ಯಾರ ಜೊತೆನೂ ಕೆಟ್ಟದಾಗಿ ನಡ್ಕೊಳ್ಳಲ್ಲ, ಸಾಲಗಾರ ಅಡ ಇಟ್ಟಿದ್ದನ್ನ ತನ್ನ ಹತ್ರಾನೇ ಇಟ್ಕೊಳ್ಳಲ್ಲ, ಸುಲಿಗೆ ಮಾಡಲ್ಲ, ಊಟ ಇಲ್ಲದವ್ರಿಗೆ ತನ್ನ ಊಟ ಕೊಡ್ತಾನೆ, ಮೈಮುಚ್ಚೋಕೆ ಬಟ್ಟೆ ಇಲ್ಲದವನಿಗೆ ಬಟ್ಟೆ ಕೊಡ್ತಾನೆ. 17 ಅವನು ಬಡವರ ಮೇಲೆ ದಬ್ಬಾಳಿಕೆ ಮಾಡಲ್ಲ, ಸಾಲ ಕೊಡುವಾಗ ಬಡ್ಡಿ, ಚಕ್ರ ಬಡ್ಡಿ ಕೇಳಲ್ಲ, ನನ್ನ ತೀರ್ಪುಗಳನ್ನ ಪಾಲಿಸ್ತಾನೆ, ನನ್ನ ನಿಯಮಗಳ ಪ್ರಕಾರ ನಡೀತಾನೆ. ಅಂಥ ವ್ಯಕ್ತಿ ನಿಜವಾಗ್ಲೂ ಬಾಳ್ತಾನೆ. ಅವನ ಅಪ್ಪ ಮಾಡಿದ ಪಾಪದಿಂದ ಅವನು ಸಾಯಲ್ಲ. 18 ಆದ್ರೆ ಅವನ ಅಪ್ಪ ತಾನು ಮಾಡಿದ ತಪ್ಪಿಗಾಗಿ ಸಾಯ್ತಾನೆ. ಯಾಕಂದ್ರೆ ಅವನು ಮೋಸಗಾರ, ತನ್ನ ಸಹೋದರನಿಂದ ಸುಲಿಗೆ ಮಾಡಿದ್ದಾನೆ ಮತ್ತು ತನ್ನ ಜನ್ರ ಮಧ್ಯ ಕೆಟ್ಟದ್ದನ್ನ ಮಾಡಿದ್ದಾನೆ.
19 ಆದ್ರೆ ನೀವು “ಅಪ್ಪ ತಪ್ಪು ಮಾಡಿದ್ರೆ ಆ ಅಪರಾಧ ಮಗನ ಮೇಲೆ ಯಾಕೆ ಬರಲ್ಲ?” ಅಂತ ಕೇಳ್ತೀರ. ಮಗ ನ್ಯಾಯನೀತಿಯ ಪ್ರಕಾರ ನಡಿದಿದ್ರಿಂದ, ನನ್ನ ಎಲ್ಲ ನಿಯಮಗಳನ್ನ ಪಾಲಿಸಿದ್ರಿಂದ ಅವನು ನಿಜವಾಗ್ಲೂ ಬಾಳ್ತಾನೆ.+ 20 ಪಾಪ ಮಾಡಿದ ವ್ಯಕ್ತಿನೇ ಸಾಯ್ತಾನೆ.+ ಅಪ್ಪ ಮಾಡಿದ ತಪ್ಪಿಗಾಗಿ ಮಗ ಅಪರಾಧಿ ಆಗಲ್ಲ, ಮಗ ಮಾಡಿದ ತಪ್ಪಿಗಾಗಿ ಅಪ್ಪ ಅಪರಾಧಿ ಆಗಲ್ಲ. ನೀತಿವಂತ ನೀತಿಯಿಂದ ನಡಿದದ್ದಕ್ಕೆ ಅವನೇ ಪ್ರತಿಫಲ ಪಡಿತಾನೆ. ಕೆಟ್ಟವ ಕೆಟ್ಟತನ ನಡಿಸಿದ್ದಕ್ಕೆ ಅವನೇ ಶಿಕ್ಷೆ ಅನುಭವಿಸ್ತಾನೆ.+
21 ಒಬ್ಬ ಕೆಟ್ಟವ ಅವನು ಮಾಡ್ತಿದ್ದ ಎಲ್ಲ ಪಾಪಗಳನ್ನ ಬಿಟ್ಟು ನನ್ನ ನಿಯಮಗಳ ಪ್ರಕಾರ ನಡಿದ್ರೆ ಮತ್ತು ನ್ಯಾಯನೀತಿಯ ಪ್ರಕಾರ ನಡಿದ್ರೆ ಅವನು ನಿಜವಾಗ್ಲೂ ಬಾಳ್ತಾನೆ. ಅವನು ಸಾಯಲ್ಲ.+ 22 ಅವನು ಹಿಂದೆ ಮಾಡಿದ ಯಾವ ತಪ್ಪಿಗೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.+ ಅವನು ನೀತಿಗೆ ತಕ್ಕ ಹಾಗೆ ನಡಿಯೋದ್ರಿಂದ ಬಾಳ್ತಾನೆ.’+
23 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ, ‘ಒಬ್ಬ ದುಷ್ಟ ಸತ್ತರೆ ನನಗೆ ಸ್ವಲ್ಪಾನೂ ಖುಷಿ ಆಗಲ್ಲ.+ ಅವನು ಕೆಟ್ಟ ದಾರಿ ಬಿಟ್ಟು ಬಾಳಬೇಕು ಅನ್ನೋದೇ ನನ್ನಾಸೆ.’+
24 ‘ಆದ್ರೆ ಒಬ್ಬ ನೀತಿವಂತ ನೀತಿಯಿಂದ ಜೀವಿಸೋದನ್ನ ಬಿಟ್ಟು ಕೆಟ್ಟದ್ದನ್ನ ಮಾಡಿದ್ರೆ, ಕೆಟ್ಟವನು ಮಾಡೋ ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರೆ ಅವನು ಉಳಿತಾನಾ? ಇಲ್ಲ. ಅವನು ಮಾಡಿದ ಯಾವ ಒಳ್ಳೇ ಕೆಲಸಗಳನ್ನೂ ನಾನು ನೆನಪಿಸ್ಕೊಳ್ಳಲ್ಲ.+ ಅವನು ನಂಬಿಕೆ ದ್ರೋಹ ಮಾಡಿದ್ರಿಂದ ಮತ್ತು ಪಾಪ ಮಾಡಿದ್ರಿಂದ ಸತ್ತು ಹೋಗ್ತಾನೆ.+
25 ಆದ್ರೆ ನೀವು “ಯೆಹೋವ ಮಾಡೋದು ಅನ್ಯಾಯ”+ ಅಂತೀರ. ಇಸ್ರಾಯೇಲ್ಯರೇ, ದಯವಿಟ್ಟು ಕೇಳಿಸ್ಕೊಳ್ಳಿ. ನಾನು ಮಾಡ್ತಿರೋದು ಅನ್ಯಾಯನಾ?+ ಇಲ್ಲ, ನೀವು ಮಾಡ್ತಿರೋದು ಅನ್ಯಾಯ.+
26 ನೀತಿವಂತ ನೀತಿಯಿಂದ ಜೀವಿಸೋದನ್ನ ಬಿಟ್ಟು ಕೆಟ್ಟದ್ದನ್ನ ಮಾಡಿದ್ರೆ ಅದಕ್ಕಾಗಿ ಅವನು ಸಾಯ್ತಾನೆ. ಅವನು ಕೆಟ್ಟದ್ದನ್ನ ಮಾಡಿದ್ರಿಂದಾನೇ ಅವನು ಸಾಯ್ತಾನೆ.
27 ಕೆಟ್ಟವನು ಕೆಟ್ಟದ್ದನ್ನ ಬಿಟ್ಟು ನ್ಯಾಯನೀತಿಯ ಪ್ರಕಾರ ನಡಿಯೋಕೆ ಶುರುಮಾಡಿದ್ರೆ ತನ್ನ ಜೀವ ಉಳಿಸ್ಕೊಳ್ತಾನೆ.+ 28 ಅವನು ಮಾಡ್ತಾ ಇರೋದು ಕೆಟ್ಟದು ಅಂತ ಅರ್ಥ ಮಾಡ್ಕೊಂಡು ಬಿಟ್ಟುಬಿಟ್ರೆ ಅವನು ಸಾಯಲ್ಲ, ನಿಜವಾಗ್ಲೂ ಬಾಳ್ತಾನೆ.
29 ಆದ್ರೆ ಇಸ್ರಾಯೇಲ್ಯರು “ಯೆಹೋವ ಮಾಡೋದು ಅನ್ಯಾಯ” ಅಂತಾರೆ. ಇಸ್ರಾಯೇಲ್ಯರೇ, ಸ್ವಲ್ಪ ಯೋಚ್ನೆ ಮಾಡಿ ನೋಡಿ, ನಾನು ಮಾಡ್ತಿರೋದು ಅನ್ಯಾಯನಾ?+ ಇಲ್ಲ, ನೀವು ಮಾಡ್ತಿರೋದೇ ಅನ್ಯಾಯ.’
30 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹಾಗಾಗಿ ಇಸ್ರಾಯೇಲ್ಯರೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮ ನಿಮ್ಮ ನಡತೆಗೆ ತಕ್ಕ ಹಾಗೆ ನ್ಯಾಯ ತೀರಿಸ್ತಿನಿ.+ ಹಾಗಾಗಿ ನೀವು ಮಾಡೋ ಎಲ್ಲ ಕೆಟ್ಟ ಕೆಲಸಗಳನ್ನ ಬಿಟ್ಟುಬಿಡಿ. ವಾಪಸ್ ಬನ್ನಿ, ಹಾಗೆ ಮಾಡಿದ್ರೆ, ಎಡವಿಸೋ ಕಲ್ಲಿನ ತರ ಇರೋ ನಿಮ್ಮ ತಪ್ಪುಗಳು ನಿಮ್ಮನ್ನ ಅಪರಾಧಿಯಾಗಿ ಮಾಡಲ್ಲ. 31 ಇಸ್ರಾಯೇಲ್ಯರೇ, ಯಾಕೆ ಸುಮ್ಮನೆ ಜೀವ ಕಳ್ಕೊತೀರಾ?+ ನೀವು ಮಾಡ್ತಿದ್ದ ತಪ್ಪುಗಳನ್ನೆಲ್ಲ ಬಿಟ್ಟುಬಿಡಿ.+ ನಿಮ್ಮ ಹೃದಯದಲ್ಲಿ ಬದಲಾವಣೆ ಮಾಡ್ಕೊಳ್ಳಿ, ನೀವು ಯೋಚಿಸೋ ರೀತಿಯನ್ನ ಬದಲಾಯಿಸ್ಕೊಳ್ಳಿ.’+
32 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಯಾರೂ ಸಾಯೋದು ನನಗೆ ಇಷ್ಟ ಇಲ್ಲ,+ ಸ್ವಲ್ಪಾನೂ ಇಷ್ಟ ಇಲ್ಲ. ಹಾಗಾಗಿ ಪಾಪ ಮಾಡೋದನ್ನ ಬಿಟ್ಟು ಬಾಳಿ.’”+
19 “ಇಸ್ರಾಯೇಲ್ಯರ ಪ್ರಧಾನರ ಬಗ್ಗೆ ನೀನು ಒಂದು ಶೋಕಗೀತೆ ಹಾಡಬೇಕು. 2 ನೀನು ಹೀಗೆ ಹೇಳು:
‘ನಿನ್ನ ಅಮ್ಮ ಸಿಂಹಗಳ ಮಧ್ಯ ಇರೋ ಸಿಂಹಿಣಿ ಆಗಿದ್ದಳು.
ಆ ಸಿಂಹಿಣಿ ಬಲಿಷ್ಠ ಸಿಂಹಗಳ ಮಧ್ಯ ಮಲಗ್ತಾ ಇತ್ತು, ಅಲ್ಲೇ ತನ್ನ ಮರಿಗಳನ್ನ ಬೆಳೆಸ್ತು.
3 ಅದು ಬೆಳೆಸಿದ ಮರಿಗಳಲ್ಲಿ ಒಂದು ಮರಿ ಬಲಿಷ್ಠ ಸಿಂಹ ಆಯ್ತು.+
ಬೇಟೆಯನ್ನ ಹಿಡಿದು ಸೀಳಿ ಹಾಕೋದು ಹೇಗೆ ಅಂತ ಕಲೀತು,
ಮನುಷ್ಯರನ್ನೂ ತಿಂದು ಹಾಕ್ತು.
4 ಜನಾಂಗಗಳಿಗೆ ಅದ್ರ ಬಗ್ಗೆ ಗೊತ್ತಾದಾಗ ಅವರು ಗುಂಡಿ ತೋಡಿ ಅದನ್ನ ಹಿಡಿದ್ರು,
ಕೊಂಡಿಗಳನ್ನ ಹಾಕಿ ಅದನ್ನ ಈಜಿಪ್ಪಿಗೆ ಹಿಡ್ಕೊಂಡು ಹೋದ್ರು.+
5 ಅದು ವಾಪಸ್ ಬರುತ್ತೆ ಅಂತ ಆ ಸಿಂಹಿಣಿ ಕಾಯ್ತಾ ಇತ್ತು, ಕೊನೆಗೆ ಅದು ಬರಲ್ಲ ಅಂತ ಸಿಂಹಿಣಿಗೆ ಗೊತ್ತಾಯ್ತು.
ಹಾಗಾಗಿ ತನ್ನ ಇನ್ನೊಂದು ಮರಿನ ಬೆಳಿಸಿ ಅದನ್ನ ಬಲಿಷ್ಠ ಸಿಂಹವಾಗಿ ಮಾಡಿ ಕಳಿಸ್ತು.
6 ಅಷ್ಟೇ ಅಲ್ಲ ಆ ಸಿಂಹ ಬೇರೆ ಸಿಂಹಗಳ ಮಧ್ಯ ತಿರುಗಾಡ್ತಾ ಬಲಿಷ್ಠ ಸಿಂಹ ಆಯ್ತು.
ಬೇಟೆಯನ್ನ ಹಿಡಿದು ಸೀಳಿಹಾಕೋದು ಹೇಗೆ ಅಂತ ಅದು ಕಲೀತು, ಮನುಷ್ಯರನ್ನೂ ತಿಂದುಹಾಕ್ತು.+
7 ಅದು ಅವ್ರ ಭದ್ರ ಕೋಟೆಗಳ ಒಳಗೆ ತಿರುಗ್ತಾ ಅವ್ರ ಪಟ್ಟಣಗಳನ್ನ ಹಾಳುಮಾಡ್ತು,
ಹಾಗಾಗಿ ಖಾಲಿಖಾಲಿ ಹೊಡೀತಿದ್ದ ದೇಶದಲ್ಲೆಲ್ಲ ಅದ್ರ ಗರ್ಜನೆನೇ ಕೇಳಿಸ್ತಿತ್ತು.+
8 ಸುತ್ತಮುತ್ತ ಇರೋ ಪ್ರದೇಶದಲ್ಲಿದ್ದ ಜನ್ರು ಅದನ್ನ ಹಿಡಿಯೋಕೆ ಬಲೆ ಬೀಸಿದ್ರು,
ಅವರು ತೋಡಿದ ಗುಂಡಿಗೆ ಅದು ಬಿತ್ತು.
9 ಅವರು ಅದಕ್ಕೆ ಕೊಂಡಿಗಳನ್ನ ಸಿಕ್ಕಿಸಿ ಪಂಜರದಲ್ಲಿ ಹಾಕಿ ಬಾಬೆಲಿನ ರಾಜನ ಹತ್ರ ಕರ್ಕೊಂಡು ಹೋದ್ರು.
ಇನ್ಮುಂದೆ ಅದ್ರ ಗರ್ಜನೆ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕೇಳಿಸದ ಹಾಗೆ ಮಾಡೋಕೆ ಅವರು ಅದನ್ನ ಬಂಧಿಸಿ ಇಟ್ರು.
10 ನಿನ್ನ ಅಮ್ಮ ನೀರಿನ ಪಕ್ಕದಲ್ಲಿ ನೆಟ್ಟ ದ್ರಾಕ್ಷಿಬಳ್ಳಿ* ತರ ಇದ್ದಳು.+
ಅದ್ರ ಪಕ್ಕದಲ್ಲಿ ತುಂಬ ನೀರು ಇದ್ದಿದ್ರಿಂದ ಅದು ಹಣ್ಣು ಕೊಡ್ತು ಮತ್ತು ಅದಕ್ಕೆ ತುಂಬ ಕೊಂಬೆಗಳು ಬೆಳೆದ್ವು.
11 ಅದ್ರ ಕೊಂಬೆಗಳು ರಾಜದಂಡಗಳನ್ನ ಮಾಡುವಷ್ಟು ಗಟ್ಟಿಮುಟ್ಟಾಗಿ ಬೆಳೆದ್ವು.
ಅದು ಬೇರೆ ಮರಗಳಿಗಿಂತ ಎತ್ತರಕ್ಕೆ ಬೆಳೀತು,
ಅದೆಷ್ಟು ಎತ್ತರವಾಗಿ ಮತ್ತು ದಟ್ಟವಾಗಿ ಬೆಳೀತು ಅಂದ್ರೆ ದೂರದಿಂದಾನೂ ಅದು ಕಾಣ್ತಿತ್ತು.
12 ಆದ್ರೆ ಅದ್ರ ಮೇಲೆ ದೇವರಿಗೆ ಕೋಪ ಬಂದಿದ್ರಿಂದ ಆತನು ಅದನ್ನ ಬೇರು ಸಮೇತ ಕಿತ್ತು+ ನೆಲಕ್ಕೆ ಬಿಸಾಡಿದನು,
ಪೂರ್ವದ ಗಾಳಿ ಬೀಸಿದಾಗ ಅದ್ರ ಹಣ್ಣುಗಳು ಒಣಗಿಹೋದ್ವು.
ಅದ್ರ ಗಟ್ಟಿಮುಟ್ಟಾದ ಕೊಂಬೆಗಳು ಮುರಿದು ಹೋದ್ವು, ಆಮೇಲೆ ಅವು ಒಣಗಿಹೋಗಿ+ ಬೆಂಕಿಯಲ್ಲಿ ಬೂದಿಯಾದ್ವು.+
13 ಈಗ ಆ ದ್ರಾಕ್ಷಿಬಳ್ಳಿಯನ್ನ ಕಾಡಲ್ಲಿ,
ನೀರಿಲ್ಲದ ಒಣ ಪ್ರದೇಶದಲ್ಲಿ ನೆಟ್ರು.+
14 ಅದ್ರ ಕೊಂಬೆಗಳಿಂದ ಬೆಂಕಿ ಹರಡಿ ಅದ್ರ ಚಿಗುರುಗಳನ್ನೂ ಹಣ್ಣುಗಳನ್ನೂ ಸುಟ್ಟುಬಿಡ್ತು,
ಅದ್ರಲ್ಲಿ ಒಂದೇ ಒಂದು ಗಟ್ಟಿಯಾದ ಕೊಂಬೆನೂ ಉಳಿಲಿಲ್ಲ, ಆಳ್ವಿಕೆ ಮಾಡೋಕೆ ಒಂದು ರಾಜದಂಡನೂ ಇಲ್ಲದ ಹಾಗಾಯ್ತು.+
“‘ಇದು ಒಂದು ಶೋಕಗೀತೆ, ಇದು ಶೋಕಗೀತೆಯಾಗೇ ಇರುತ್ತೆ.’”
20 ಏಳನೇ ವರ್ಷದ* ಐದನೇ ತಿಂಗಳ ಹತ್ತನೇ ದಿನ ಇಸ್ರಾಯೇಲಿನ ಕೆಲವು ಹಿರಿಯರು ಯೆಹೋವನ ಇಷ್ಟ ಏನಂತ ವಿಚಾರಿಸೋಕೆ ನನ್ನ ಮುಂದೆ ಬಂದು ಕೂತ್ಕೊಂಡ್ರು. 2 ಆಗ ಯೆಹೋವ ನನಗೆ ಹೀಗಂದನು: 3 “ಮನುಷ್ಯಕುಮಾರನೇ, ನೀನು ಇಸ್ರಾಯೇಲಿನ ಹಿರಿಯರಿಗೆ ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವು ನನ್ನ ಇಷ್ಟ ಏನಂತ ವಿಚಾರಿಸೋಕೆ ಬಂದಿದ್ದೀರಾ? ‘ನನ್ನಾಣೆ ನಾನು ನಿಮಗೆ ಉತ್ತರ ಕೊಡಲ್ಲ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ”’ ಅಂತ ಹೇಳು.
4 “ಅವ್ರಿಗೆ ತೀರ್ಪು ಕೊಡೋಕೆ* ನೀನು ತಯಾರಾಗಿ ಇದ್ದೀಯಾ? ಮನುಷ್ಯಕುಮಾರನೇ, ನೀನು ಸಿದ್ಧನಾಗಿ ಇದ್ದೀಯಾ? ಅವ್ರ ಪೂರ್ವಜರು ಯಾವೆಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ದಾರೆ ಅಂತ ಅವ್ರಿಗೆ ಹೇಳು.+ 5 ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಯಾಕೋಬನ ವಂಶದ ಇಸ್ರಾಯೇಲ್ಯರನ್ನ ಆರಿಸ್ಕೊಂಡ ದಿನಾನೇ+ ಅವ್ರಿಗೆ ಮಾತು ಕೊಟ್ಟಿದ್ದೆ. ಅಷ್ಟೇ ಅಲ್ಲ, ಈಜಿಪ್ಟಲ್ಲಿ ನಾನು ನನ್ನ ಬಗ್ಗೆ ಅವ್ರಿಗೆ ಹೇಳಿದ್ದೆ.+ ಹೌದು, ನಾನು ಅವ್ರಿಗೆ ಮಾತು ಕೊಟ್ಟು ‘ನಾನೇ ನಿಮ್ಮ ದೇವರಾದ ಯೆಹೋವ’ ಅಂತ ಹೇಳಿದ್ದೆ. 6 ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರ್ತಿನಿ ಮತ್ತು ನಾನು ಅವ್ರಿಗಾಗಿ ಹುಡುಕಿಟ್ಟಿದ್ದ ಹಾಲೂ ಜೇನೂ ಹರಿಯೋ ದೇಶಕ್ಕೆ ಅವ್ರನ್ನ ಕರ್ಕೊಂಡು ಬರ್ತಿನಿ ಅಂತ ಆ ದಿನ ಮಾತು ಕೊಟ್ಟಿದ್ದೆ.+ ಅದು ಎಲ್ಲ ದೇಶಗಳಿಗಿಂತ ತುಂಬ ಸುಂದರವಾಗಿತ್ತು.* 7 ಆಮೇಲೆ ನಾನು ಅವ್ರಿಗೆ ‘ನೀವು ಆರಾಧಿಸ್ತಿರೋ ಅಸಹ್ಯ ಮೂರ್ತಿಗಳನ್ನ ಬಿಸಾಕಬೇಕು. ಈಜಿಪ್ಟಿನ ಹೊಲಸು ಮೂರ್ತಿಗಳಿಂದ* ನಿಮ್ಮನ್ನ ಅಶುದ್ಧ ಮಾಡ್ಕೊಬೇಡಿ.+ ನಾನೇ ನಿಮ್ಮ ದೇವರಾದ ಯೆಹೋವ’+ ಅಂತ ಹೇಳಿದ್ದೆ.
8 ಆದ್ರೆ ಅವರು ನನ್ನ ವಿರುದ್ಧ ದಂಗೆ ಎದ್ರು, ನನ್ನ ಮಾತನ್ನ ಕೇಳೋಕೆ ಅವ್ರಿಗೆ ಮನಸ್ಸಿರಲಿಲ್ಲ. ಅವರು ಆರಾಧಿಸ್ತಿದ್ದ ಅಸಹ್ಯ ಮೂರ್ತಿಗಳನ್ನ ಬಿಸಾಕಲಿಲ್ಲ. ಈಜಿಪ್ಟಿನ ಹೊಲಸು ಮೂರ್ತಿಗಳನ್ನ ಬಿಟ್ಟುಬಿಡಲಿಲ್ಲ.+ ಹಾಗಾಗಿ ನಾನು ಈಜಿಪ್ಟಲ್ಲಿ ಅವ್ರ ಮೇಲೆ ನನ್ನ ಕ್ರೋಧವನ್ನ, ಕೋಪಾಗ್ನಿಯನ್ನ ಪೂರ್ತಿ ಸುರಿಬೇಕು ಅಂತ ತೀರ್ಮಾನ ಮಾಡ್ದೆ. 9 ಆದ್ರೆ ಅವರು ಯಾವ ಜನಾಂಗಗಳ ಮಧ್ಯ ಜೀವಿಸ್ತಿದ್ರೋ ಆ ಜನಾಂಗಗಳ ಮುಂದೆ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಹೊರಗೆ ಕರ್ಕೊಂಡು ಬರುವಾಗ ಆ ಜನಾಂಗಗಳ ಮುಂದೆ ಇಸ್ರಾಯೇಲ್ಯರಿಗೆ ನನ್ನ ಬಗ್ಗೆ ಹೇಳಿದೆ.+ 10 ಹೀಗೆ ನಾನು ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದು ಕಾಡು ಪ್ರದೇಶಕ್ಕೆ ಕರ್ಕೊಂಡು ಹೋದೆ.+
11 ಆಮೇಲೆ ಅವ್ರಿಗೆ ನನ್ನ ನಿಯಮಗಳನ್ನ ಕೊಟ್ಟೆ ಮತ್ತು ನನ್ನ ತೀರ್ಪುಗಳನ್ನ ಹೇಳಿದೆ.+ ಅವನ್ನ ಪಾಲಿಸಿ ಅವರು ಬದುಕಿ ಉಳಿಬೇಕು ಅಂತ ನಾನು ಅವನ್ನ ಅವ್ರಿಗೆ ಕೊಟ್ಟೆ.+ 12 ಯೆಹೋವನಾದ ನಾನೇ ಅವ್ರನ್ನ ಪವಿತ್ರ ಜನ್ರಾಗಿ ಆರಿಸ್ಕೊಂಡಿದ್ದೀನಿ ಅಂತ ಅವ್ರಿಗೆ ಗೊತ್ತಾಗೋಕೆ ನನ್ನ ಮತ್ತು ಅವ್ರ ಮಧ್ಯ ಗುರುತಾಗಿ+ ಸಬ್ಬತ್‌ಗಳ ನಿಯಮವನ್ನೂ ಕೊಟ್ಟೆ.+
13 ಆದ್ರೆ ಇಸ್ರಾಯೇಲ್ ಜನ್ರು ಕಾಡಲ್ಲಿ ನನ್ನ ವಿರುದ್ಧ ದಂಗೆ ಎದ್ರು.+ ಬದುಕಿ ಉಳಿಯೋಕೆ ನಾನು ಕೊಟ್ಟಿದ್ದ ನಿಯಮಗಳನ್ನ ಅವರು ಪಾಲಿಸಲಿಲ್ಲ ಮತ್ತು ನನ್ನ ತೀರ್ಪುಗಳನ್ನ ಬೇಡ ಅಂದ್ರು. ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಹಾಗಾಗಿ ಕಾಡಲ್ಲಿ ಅವ್ರನ್ನ ನಾಶ ಮಾಡೋಕೆ ನನ್ನ ಕೋಪಾಗ್ನಿಯನ್ನ ಅವ್ರ ಮೇಲೆ ಸುರಿಬೇಕು ಅಂದ್ಕೊಂಡೆ.+ 14 ಆದ್ರೆ ನಾನು ಯಾವ ಜನಾಂಗಗಳ ಕಣ್ಮುಂದೆ ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ್ನೋ ಆ ಜನಾಂಗಗಳ ಮುಂದೆನೇ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+ 15 ಅಷ್ಟೇ ಅಲ್ಲ, ನಾನು ಅವ್ರಿಗೆ ಕೊಡಬೇಕು ಅಂತಿದ್ದ ಹಾಲೂ ಜೇನೂ ಹರಿಯೋ ದೇಶಕ್ಕೆ+ ಅಂದ್ರೆ ಎಲ್ಲ ದೇಶಗಳಿಗಿಂತ ತುಂಬ ಸುಂದರವಾದ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗಲ್ಲ+ ಅಂತ ಆ ಕಾಡಲ್ಲಿ ಅವ್ರಿಗೆ ಮಾತು ಕೊಟ್ಟೆ. 16 ಯಾಕಂದ್ರೆ ಅವರು ನನ್ನ ತೀರ್ಪುಗಳನ್ನ ಬೇಡ ಅಂದ್ರು, ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಅವ್ರ ಮನಸ್ಸು ಹೊಲಸು ಮೂರ್ತಿಗಳ ಮೇಲೆನೇ ಇತ್ತು.+
17 “‘“ಆದ್ರೆ ನನಗೆ ಅವ್ರನ್ನ ನೋಡಿ ಅಯ್ಯೋ ಪಾಪ ಅನಿಸ್ತು. ಅದಕ್ಕೆ ನಾನು ಅವ್ರನ್ನ ನಾಶ ಮಾಡಲಿಲ್ಲ, ಕಾಡಲ್ಲಿ ಅವ್ರನ್ನ ನಿರ್ನಾಮ ಮಾಡಲಿಲ್ಲ. 18 ನಾನು ಅವ್ರ ಮಕ್ಕಳಿಗೆ+ ‘ನಿಮ್ಮ ಅಪ್ಪಂದಿರು ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ಪಾಲಿಸಬೇಡಿ,+ ಅವ್ರ ಹೊಲಸು ಮೂರ್ತಿಗಳಿಂದ ನಿಮ್ಮನ್ನ ಅಶುದ್ಧ ಮಾಡ್ಕೊಬೇಡಿ. 19 ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನ ನಿಯಮಗಳನ್ನ ಪಾಲಿಸಿ, ನನ್ನ ತೀರ್ಪುಗಳ ಪ್ರಕಾರ ನಡಿರಿ.+ 20 ನನ್ನ ಸಬ್ಬತ್‌ಗಳನ್ನ ಪವಿತ್ರವಾಗಿ ನೋಡಿ.+ ನಾನೇ ನಿಮ್ಮ ದೇವರಾದ ಯೆಹೋವ ಅಂತ ಗೊತ್ತಾಗೋಕೆ ಅವು ನನ್ನ ಮತ್ತು ನಿಮ್ಮ ಮಧ್ಯ ಗುರುತಾಗಿ ಇರುತ್ತೆ’ ಅಂತ ಹೇಳಿದೆ.+
21 “‘“ಆದ್ರೆ ಆ ಮಕ್ಕಳು ನನ್ನ ವಿರುದ್ಧ ದಂಗೆ ಏಳೋಕೆ ಶುರುಮಾಡಿದ್ರು.+ ಬದುಕಿ ಉಳಿಯೋಕೆ ನಾನು ಕೊಟ್ಟಿದ್ದ ನಿಯಮಗಳನ್ನ ಅವರು ಪಾಲಿಸಲಿಲ್ಲ, ನನ್ನ ತೀರ್ಪುಗಳನ್ನ ಬೇಡ ಅಂದ್ರು. ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಹಾಗಾಗಿ ಕಾಡಲ್ಲಿ ನನ್ನ ಕ್ರೋಧವನ್ನ, ಕೋಪಾಗ್ನಿಯನ್ನ ಪೂರ್ತಿ ಸುರಿಬೇಕು ಅಂತ ನಿರ್ಧಾರ ಮಾಡ್ದೆ.+ 22 ಆದ್ರೆ ನಾನು ಹಾಗೆ ಮಾಡಲಿಲ್ಲ.+ ಯಾವ ಜನಾಂಗಗಳ ಕಣ್ಮುಂದೆ ನಾನು ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ್ನೋ ಆ ಜನಾಂಗಗಳ ಮುಂದೆ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತೆಗೊಂಡೆ.+ 23 ಅಷ್ಟೇ ಅಲ್ಲ, ಅವ್ರನ್ನ ಬೇರೆ ಜನಾಂಗಗಳ ಮಧ್ಯ ಚೆಲ್ಲಾಪಿಲ್ಲಿ ಮಾಡ್ತೀನಿ ಮತ್ತು ಬೇರೆ ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ ಅಂತ ಕಾಡಲ್ಲಿ ಅವ್ರಿಗೆ ಮಾತು ಕೊಟ್ಟೆ.+ 24 ಯಾಕಂದ್ರೆ ಅವರು ನನ್ನ ತೀರ್ಪುಗಳನ್ನ ಪಾಲಿಸಲಿಲ್ಲ. ನನ್ನ ನಿಯಮಗಳನ್ನ ಬೇಡ ಅಂದ್ರು.+ ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಅವ್ರ ಪೂರ್ವಜರು ಆರಾಧಿಸ್ತಿದ್ದ ಹೊಲಸು ಮೂರ್ತಿಗಳನ್ನ ಆರಾಧಿಸಿದ್ರು.+ 25 ತಪ್ಪಾದ ಆಚಾರ-ವಿಚಾರಗಳನ್ನ ಪಾಲಿಸೋಕೆ ಮತ್ತು ಜೀವ ಕೊಡದ ತೀರ್ಪುಗಳ ಪ್ರಕಾರ ನಡಿಯೋಕೆ ಅವ್ರನ್ನ ಬಿಟ್ಟುಬಿಟ್ಟೆ.+ 26 ತಮ್ಮ ಮೊದಲ ಗಂಡು ಮಕ್ಕಳನ್ನೆಲ್ಲ ಬೆಂಕಿಯಲ್ಲಿ ಆಹುತಿ ಕೊಟ್ಟಾಗ+ ಅವರು ತಮ್ಮ ಬಲಿಗಳಿಂದಾನೇ ಅಶುದ್ಧರಾಗೋಕೆ ನಾನು ಬಿಟ್ಟೆ. ನಾನು ಅವ್ರನ್ನ ನಾಶಮಾಡೋಕೆ ಮತ್ತು ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗಲಿ ಅಂತ ಅದನ್ನ ಅನುಮತಿಸಿದೆ.”’
27 “ಹಾಗಾಗಿ ಮನುಷ್ಯಕುಮಾರನೇ, ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮ ಪೂರ್ವಜರು ಈ ತರ ನನಗೆ ನಂಬಿಕೆ ದ್ರೋಹ ಮಾಡಿ ಅವಮಾನ ಮಾಡಿದ್ರು. 28 ನಾನು ಅವ್ರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ದೇಶಕ್ಕೆ ಅವ್ರನ್ನ ಕರ್ಕೊಂಡು ಬಂದೆ.+ ಅಲ್ಲಿ ಅವರು ಎತ್ತರವಾದ ಬೆಟ್ಟಗಳನ್ನ, ಚೆನ್ನಾಗಿ ಬೆಳಿದಿರೋ ಮರಗಳನ್ನ+ ನೋಡಿದಾಗ ಬಲಿಗಳನ್ನ, ಅರ್ಪಣೆಗಳನ್ನ ಕೊಟ್ಟು ನನಗೆ ಕೋಪ ಬರಿಸಿದ್ರು. ಅವರು ಸಮಾಧಾನ ಬಲಿಗಳನ್ನ ಕೊಟ್ಟು, ಪಾನ ಅರ್ಪಣೆಗಳನ್ನ ಸುರಿದ್ರು. 29 ಆಗ ನಾನು ಅವ್ರಿಗೆ ‘ಈ ಎತ್ತರವಾದ ಸ್ಥಳಕ್ಕೆ ನೀವು ಯಾಕೆ ಹೋಗ್ತಿರಾ? ಅಂತ ಕೇಳ್ದೆ. (ಇವತ್ತಿನ ತನಕ ಅದಕ್ಕೆ ‘ಎತ್ತರವಾದ ಸ್ಥಳ’ ಅನ್ನೋ ಹೆಸ್ರಿದೆ.)’”’+
30 “ಈಗ ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವೂ ನಿಮ್ಮ ಪೂರ್ವಜರ ತರ ಹೊಲಸು ಮೂರ್ತಿಗಳ ಹಿಂದೆ ಹೋಗಿ ನನಗೆ ದ್ರೋಹ ಮಾಡಿ* ನಿಮ್ಮನ್ನ ಯಾಕೆ ಅಶುದ್ಧ ಮಾಡ್ಕೊಳ್ತಿದ್ದೀರ?+ 31 ನೀವು ಎಲ್ಲ ಹೊಲಸು ಮೂರ್ತಿಗಳಿಗೆ ಬಲಿ ಕೊಟ್ಟು, ನಿಮ್ಮ ಮಕ್ಕಳನ್ನ ಬೆಂಕಿಯಲ್ಲಿ ಆಹುತಿ ಕೊಟ್ಟು ಇವತ್ತಿನ ತನಕ ನಿಮ್ಮನ್ನ ಅಶುದ್ಧ ಮಾಡ್ಕೊಳ್ತಾ ಇದ್ದೀರಲ್ಲಾ.+ ಹಾಗಿದ್ದ ಮೇಲೆ, ಇಸ್ರಾಯೇಲ್ಯರೇ, ನೀವು ನನ್ನ ಇಷ್ಟ ಏನಂತ ವಿಚಾರಿಸೋವಾಗ ನಾನ್ಯಾಕೆ ಉತ್ತರ ಕೊಡಬೇಕು?”’+
“ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ ನಾನು ನಿಮಗೆ ಉತ್ತರ ಕೊಡಲ್ಲ.+ 32 ನೀವು ಏನನ್ನ ಮನಸ್ಸಿನಲ್ಲಿ ಇಟ್ಕೊಂಡು “ಬೇರೆ ಜನಾಂಗಗಳ ತರ, ಬೇರೆ ದೇಶಗಳ ಜನ್ರ ತರ ನಾವೂ ಮರ, ಕಲ್ಲುಗಳನ್ನ ಆರಾಧಿಸೋಣ”*+ ಅಂತ ಹೇಳ್ತಿರ, ಅದು ಯಾವತ್ತೂ ನಡಿಯಲ್ಲ.’”
33 “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನಾನು ನಿಮ್ಮ ಮೇಲೆ ರಾಜನಾಗಿ ಆಳ್ತೀನಿ. ನನ್ನ ಮಹಾ ಶಕ್ತಿ ಮತ್ತು ಬಲದಿಂದ* ನಿಮ್ಮನ್ನ ಶಿಕ್ಷಿಸ್ತೀನಿ. ನನ್ನ ಕೋಪವನ್ನ ನಿಮ್ಮ ಮೇಲೆ ಸುರೀತಿನಿ.+ 34 ನನ್ನ ಮಹಾ ಶಕ್ತಿ, ಬಲ ತೋರಿಸಿ,* ನನ್ನ ಕ್ರೋಧವನ್ನ ಸುರಿಸಿ ಜನಾಂಗಗಳಲ್ಲಿ ಮತ್ತು ದೇಶಗಳಲ್ಲಿ ಚೆಲ್ಲಾಪಿಲ್ಲಿ ಆಗಿರೋ ನಿಮ್ಮನ್ನ ಕರ್ಕೊಂಡು ಬಂದು ಒಟ್ಟುಸೇರಿಸ್ತಿನಿ.+ 35 ನಿಮ್ಮನ್ನ ಜನಾಂಗಗಳ ಕಾಡಿಗೆ ಕರ್ಕೊಂಡು ಬಂದು ಅಲ್ಲಿ ನಿಮ್ಮ ಜೊತೆ ಮುಖಾಮುಖಿ ವಾದ ಮಾಡ್ತೀನಿ.+
36 “‘ಈಜಿಪ್ಟಿನ ಕಾಡಲ್ಲಿ ನಾನು ನಿಮ್ಮ ಪೂರ್ವಜರ ಜೊತೆ ವಾದ ಮಾಡಿದ ತರಾನೇ ನಿಮ್ಮ ಜೊತೆನೂ ವಾದ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 37 ‘ನಾನು ನಿಮ್ಮನ್ನ ಕುರುಬನ ಕೋಲಿನ ಕೆಳಗಿಂದ ಹೋಗೋ ಹಾಗೆ+ ಮತ್ತು ಒಪ್ಪಂದದ ಪ್ರಕಾರ ನಡಿಯೋ ಹಾಗೆ ಮಾಡ್ತೀನಿ. 38 ಆದ್ರೆ ನಿಮ್ಮಲ್ಲಿರೋ ದಂಗೆಕೋರರನ್ನ, ನನ್ನ ವಿರುದ್ಧ ಅಪರಾಧ ಮಾಡ್ತಿರೋ ಜನ್ರನ್ನ ನಿಮ್ಮಿಂದ ಬೇರೆ ಮಾಡ್ತೀನಿ.+ ಅವರು ಎಲ್ಲಿ ವಿದೇಶಿಯರಾಗಿ ಜೀವಿಸ್ತಾ ಇದ್ದಾರೋ ಅಲ್ಲಿಂದ ಅವ್ರನ್ನ ಹೊರಗೆ ಕರ್ಕೊಂಡು ಬರ್ತಿನಿ, ಆದ್ರೂ ಅವರು ಇಸ್ರಾಯೇಲಿನ ಒಳಗೆ ಕಾಲಿಡಲ್ಲ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’
39 “ಇಸ್ರಾಯೇಲ್ಯರೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೋಗಿ, ನೀವೆಲ್ಲ ಹೋಗಿ ಹೊಲಸು ಮೂರ್ತಿಗಳ ಸೇವೆ ಮಾಡಿ.+ ಆಮೇಲೆ ನೀವು ನನ್ನ ಮಾತನ್ನ ಕೇಳದೇ ಹೋದ್ರೂ ನಿಮ್ಮ ಬಲಿಗಳಿಂದ ಮತ್ತು ಹೊಲಸು ಮೂರ್ತಿಗಳಿಂದ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡೋಕೆ ಆಗಲ್ಲ.’+
40 “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಪವಿತ್ರ ಬೆಟ್ಟದ ಮೇಲೆ, ಇಸ್ರಾಯೇಲ್ ದೇಶದ ದೊಡ್ಡ ಬೆಟ್ಟದ ಮೇಲೆ+ ಇಸ್ರಾಯೇಲ್ಯರೆಲ್ಲ ನನ್ನ ಸೇವೆ ಮಾಡ್ತಾರೆ.+ ಅಲ್ಲಿ ನಿಮ್ಮಿಂದ ನನಗೆ ಖುಷಿ ಆಗುತ್ತೆ. ನಾನು ಕಾಣಿಕೆಗಳನ್ನ, ಒಳ್ಳೇ ಅರ್ಪಣೆಗಳನ್ನ, ಎಲ್ಲ ಪವಿತ್ರ ಅರ್ಪಣೆಗಳನ್ನ ನಿಮ್ಮಿಂದ ತಗೊತೀನಿ.+ 41 ನಾನು ನಿಮ್ಮನ್ನ ಜನಾಂಗಗಳಿಂದ ಹೊರಗೆ ತರ್ತಿನಿ, ನೀವು ಚೆಲ್ಲಾಪಿಲ್ಲಿ ಆಗಿರೋ ದೇಶಗಳಿಂದ ಒಟ್ಟುಸೇರಿಸ್ತಿನಿ.+ ಆಗ ನೀವು ಕೊಡೋ ಬಲಿಯ ಸುವಾಸನೆಯಿಂದ ನನಗೆ ಖುಷಿ ಆಗುತ್ತೆ.* ನಿಮ್ಮ ಮಧ್ಯ ಇದ್ದು ಬೇರೆ ಎಲ್ಲ ಜನಾಂಗಗಳ ಕಣ್ಮುಂದೆ ನಾನು ಪವಿತ್ರ ದೇವರು ಅಂತ ತೋರಿಸ್ತೀನಿ.’+
42 “‘ನಿಮ್ಮ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ಇಸ್ರಾಯೇಲ್ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಬಂದಾಗ+ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 43 ನೀವು ನಿಮ್ಮ ನಡತೆ ಮತ್ತು ಕೆಲಸಗಳಿಂದ ಹೇಗೆ ನಿಮ್ಮನ್ನೇ ಅಶುದ್ಧ ಮಾಡ್ಕೊಂಡ್ರಿ ಅಂತ ಅಲ್ಲಿ ನೆನಪಿಸ್ಕೊಳ್ತೀರ.+ ನೀವು ಮಾಡಿದ ಎಲ್ಲ ಕೆಟ್ಟ ವಿಷ್ಯಗಳನ್ನ ನೆನಸಿ ನಿಮ್ಮ ಮೇಲೆ ನಿಮಗೇ ಹೇಸಿಗೆ ಆಗುತ್ತೆ.+ 44 ಇಸ್ರಾಯೇಲ್ಯರೇ, ನಿಮ್ಮ ಕೆಟ್ಟ ನಡತೆ ಮತ್ತು ಭ್ರಷ್ಟ ಕೆಲಸಗಳಿಗೆ ತಕ್ಕ ಹಾಗೆ ನಾನು ನಿಮ್ಮ ಜೊತೆ ನಡ್ಕೊಳ್ಳದೆ ನನ್ನ ಹೆಸ್ರಿಗೋಸ್ಕರ ನಾನು ಇದನ್ನೆಲ್ಲ ಮಾಡಿದಾಗ+ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
45 ಯೆಹೋವ ಮತ್ತೆ ನನಗೆ ಹೀಗಂದನು: 46 “ಮನುಷ್ಯಕುಮಾರನೇ, ನೀನು ದಕ್ಷಿಣಕ್ಕೆ ಮುಖಮಾಡಿ ಜೋರಾಗಿ ಹೇಳು ಮತ್ತು ದಕ್ಷಿಣದಲ್ಲಿರೋ ಕಾಡಿಗೆ ಭವಿಷ್ಯ ಹೇಳು. 47 ದಕ್ಷಿಣದಲ್ಲಿರೋ ಕಾಡಿಗೆ ಹೀಗೆ ಹೇಳು: ‘ಯೆಹೋವನ ಮಾತನ್ನ ಕೇಳು. ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ನಿನಗೆ ಬೆಂಕಿ ಹಚ್ಚಿ ಧಗಧಗ ಅಂತ ಉರಿಯೋ ಹಾಗೆ ಮಾಡ್ತೀನಿ.+ ಅದು ನಿನ್ನಲ್ಲಿರೋ ಎಲ್ಲ ಹಸಿರು ಮರಗಳನ್ನ, ಎಲ್ಲ ಒಣ ಮರಗಳನ್ನ ಸುಟ್ಟುಬಿಡುತ್ತೆ. ಉರಿತಿರೋ ಆ ಜ್ವಾಲೆ ಆರಿಹೋಗಲ್ಲ.+ ಅದ್ರಿಂದಾಗಿ ದಕ್ಷಿಣದಿಂದ ಉತ್ತರದ ತನಕ ಇರೋ ಎಲ್ಲ ಮುಖಗಳು ಸುಟ್ಟುಹೋಗುತ್ತೆ. 48 ಆಗ, ಆರಿ ಹೋಗದ ಆ ಬೆಂಕಿಯನ್ನ ಹಚ್ಚಿದವನು ಯೆಹೋವನಾದ ನಾನೇ ಅಂತ ಎಲ್ರಿಗೆ ಗೊತ್ತಾಗುತ್ತೆ.”’”+
49 ಆಗ ನಾನು “ಅಯ್ಯೋ, ವಿಶ್ವದ ರಾಜ ಯೆಹೋವನೇ, ನಾನು ಒಗಟು ಹೇಳ್ತಾ ಇದ್ದೀನಿ ಅಂತ ಅವರು ಹೇಳ್ತಿದ್ದಾರೆ” ಅಂದೆ.
21 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಯೆರೂಸಲೇಮ್ ಕಡೆ ಮುಖಮಾಡಿ ಪವಿತ್ರ ಸ್ಥಳಗಳ ವಿರುದ್ಧ ಒಂದು ಪ್ರಕಟಣೆ ಮಾಡು ಮತ್ತು ಇಸ್ರಾಯೇಲ್ ದೇಶದ ವಿರುದ್ಧ ಭವಿಷ್ಯ ಹೇಳು. 3 ಇಸ್ರಾಯೇಲ್ ದೇಶಕ್ಕೆ ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ, “ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ನಾನು ನನ್ನ ಕತ್ತಿಯನ್ನ ತೆಗೆದು+ ನಿನ್ನಲ್ಲಿರೋ ನೀತಿವಂತರನ್ನ, ದುಷ್ಟರನ್ನ ಸಾಯಿಸ್ತೀನಿ. 4 ನಾನು ನಿನ್ನಲ್ಲಿರೋ ನೀತಿವಂತರನ್ನ, ಕೆಟ್ಟವ್ರನ್ನ ಸಾಯಿಸೋದ್ರಿಂದ ನನ್ನ ಕತ್ತಿಯನ್ನ ತೆಗೆದು ದಕ್ಷಿಣದಿಂದ ಉತ್ತರದ ತನಕ ಇರೋ ಎಲ್ಲರ ಮೇಲೂ ಬೀಸ್ತೀನಿ. 5 ಯೆಹೋವನಾದ ನಾನೇ ನನ್ನ ಕತ್ತಿಯನ್ನ ತೆಗೆದಿದ್ದೀನಿ ಅಂತ ಆಗ ಎಲ್ರಿಗೂ ಗೊತ್ತಾಗುತ್ತೆ. ತೆಗೆದಿರೋ ಕತ್ತಿನ ನಾನು ವಾಪಸ್ ಇಡಲ್ಲ.”’+
6 ಮನುಷ್ಯಕುಮಾರನೇ, ನೀನು ಗಡಗಡ ನಡುಗ್ತಾ ನಿಟ್ಟುಸಿರು ಬಿಡು. ಹೌದು, ಅವರ ಮುಂದೆ ತುಂಬ ದುಃಖದಿಂದ ನಿಟ್ಟುಸಿರು ಬಿಡು.+ 7 ಆಗ ಅವರು ನಿನಗೆ, ‘ನೀನು ಯಾಕೆ ನಿಟ್ಟುಸಿರು ಬಿಡ್ತಾ ಇದ್ದೀಯಾ?’ ಅಂತ ಕೇಳಿದ್ರೆ ‘ಒಂದು ಸುದ್ದಿ ಬರ್ತಾ ಇದೆ, ಅದಕ್ಕೇ ನಿಟ್ಟುಸಿರು ಬಿಡ್ತಿದ್ದೀನಿ’ ಅಂತ ಹೇಳು. ಯಾಕಂದ್ರೆ ಅದು ಬಂದೇ ಬರುತ್ತೆ. ಆಗ ಭಯದಿಂದ ಎಲ್ಲರ ಹೃದಯ ಜೋರಾಗಿ ಬಡಕೊಳ್ಳುತ್ತೆ, ಎಲ್ಲರ ಕೈಗಳು ಬಿದ್ದುಹೋಗುತ್ತೆ. ಎಲ್ಲರೂ ಹೆದರಿಕೊಂಡು ಅವ್ರ ಮೊಣಕಾಲಿಂದ ನೀರು ಸೋರುತ್ತೆ.*+ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ, ‘ನೋಡು, ಅದು ನಿಜ ಆಗುತ್ತೆ, ನಡೆದೇ ನಡೆಯುತ್ತೆ!’”
8 ಯೆಹೋವ ಮತ್ತೆ ನನಗೆ ಹೀಗಂದನು: 9 “ಮನುಷ್ಯಕುಮಾರನೇ, ನೀನು ಹೀಗೆ ಭವಿಷ್ಯ ಹೇಳು: ‘ಯೆಹೋವ ಹೇಳೋದು ಏನಂದ್ರೆ “ಒಂದು ಕತ್ತಿ! ಒಂದು ಕತ್ತಿ+ ಚೂಪಾಗಿದೆ, ಪಳಪಳ ಅಂತ ಹೊಳೀತಿದೆ. 10 ಕ್ರೂರವಾಗಿ ಸಾಯಿಸೋಕೆ ಕತ್ತಿ ಚೂಪಾಗಿದೆ. ಉಜ್ಜಿರೋದ್ರಿಂದ ಮಿಂಚಿನ ಹಾಗೆ ಹೊಳೀತಿದೆ.”’”
ಆಗ ಜನ, “ಇದು ನಾವು ಖುಷಿಪಡಬೇಕಾದ ಸಮಯ ಅಲ್ವಾ?” ಅಂದ್ರು.
ಆದ್ರೆ ದೇವರು, “‘ನನ್ನ ಕತ್ತಿ ಎಲ್ಲ ಕೋಲುಗಳನ್ನ ತಳ್ಳಿಹಾಕೋ ತರ ನನ್ನ ಮಗನ ರಾಜದಂಡವನ್ನ ತಳ್ಳಿಹಾಕುತ್ತಾ?+
11 ಆ ಕತ್ತಿಯನ್ನ ಉಜ್ಜಿ ಪಳಪಳ ಅಂತ ಹೊಳಿಯೋ ಹಾಗೆ ಮಾಡೋಕೆ, ಜನರನ್ನ ಕೊಲ್ಲೋಕೆ ಕೊಡಲಾಗಿದೆ. ಕೊಲ್ಲುವವನ ಕೈಗೆ ಕೊಡೋಕೆ ಅದನ್ನ ಚೂಪು ಮಾಡಲಾಗಿದೆ ಮತ್ತು ಉಜ್ಜಿ ಹೊಳಿಯೋ ಹಾಗೆ ಮಾಡಲಾಗಿದೆ.+
12 ಮನುಷ್ಯಕುಮಾರನೇ, ಕೂಗು, ಗೋಳಾಡು.+ ಯಾಕಂದ್ರೆ ಕತ್ತಿ ನನ್ನ ಜನರ ವಿರುದ್ಧ ಬಂದಿದೆ. ಇಸ್ರಾಯೇಲ್ಯರ ಎಲ್ಲ ಪ್ರಧಾನರ ವಿರುದ್ಧ ಅದು ಬಂದಿದೆ.+ ಅವರು ಮತ್ತು ನನ್ನ ಜನರು ಎಲ್ಲರೂ ಕತ್ತಿಗೆ ಬಲಿ ಆಗ್ತಾರೆ. ಹಾಗಾಗಿ ನೀನು ದುಃಖದಿಂದ ತೊಡೆ ಚಚ್ಚಿಕೊ. 13 ನಾನು ಒಂದು ಪರೀಕ್ಷೆ ಮಾಡಿದ್ದೀನಿ.+ ನನ್ನ ಕತ್ತಿ ರಾಜದಂಡವನ್ನ ತಳ್ಳಿದ್ರೆ ಏನಾಗುತ್ತೆ? ರಾಜದಂಡ ಇಲ್ಲದೆ ಹೋಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
14 ಮನುಷ್ಯಕುಮಾರನೇ, ನೀನು ಭವಿಷ್ಯ ಹೇಳು ಮತ್ತು ಚಪ್ಪಾಳೆ ಹೊಡೀತಾ ‘ಕತ್ತಿ’ ಅಂತ ಮೂರು ಸಲ ಹೇಳು. ಎಲ್ಲರನ್ನೂ ಕೊಚ್ಚಿಹಾಕೋ ಕತ್ತಿ ಅದು, ಅವರ ಸುತ್ತಮುತ್ತ ಇರೋ ಜನರನ್ನ ಗುಂಪುಗುಂಪಾಗಿ ಕೊಲ್ಲೋ ಕತ್ತಿ ಅದು.+ 15 ಅವ್ರ ಹೃದಯ ಭಯದಿಂದ ನಡುಗುತ್ತೆ,+ ಅವರ ಪಟ್ಟಣದ ಬಾಗಿಲುಗಳ ಹತ್ರ ತುಂಬ ಜನ ಸತ್ತುಬೀಳ್ತಾರೆ. ನಾನು ಕತ್ತಿಯಿಂದ ಜನ್ರನ್ನ ಸಾಯಿಸ್ತೀನಿ. ಕತ್ತಿ ಮಿಂಚಿನ ಹಾಗೆ ಹೊಳೀತಿದೆ, ಉಜ್ಜಿ ಸಂಹಾರಕ್ಕಾಗಿ ಅದನ್ನ ತಯಾರು ಮಾಡಲಾಗಿದೆ! 16 ಕತ್ತಿಯೇ, ನೀನು ನಿನ್ನ ಬಲಗಡೆ ಇರೋರನ್ನ ಕಡಿದು ಹಾಕು, ನಿನ್ನ ಎಡಗಡೆ ಇರೋರನ್ನ ಬೀಸಿ ಕೊಲ್ಲು. ನಿನಗೆ ಎಲ್ಲಿ ಹೋಗೋಕೆ ಆಜ್ಞೆ ಸಿಕ್ಕಿದಿಯೋ ಅಲ್ಲೆಲ್ಲ ಹೋಗು! 17 ನಾನೂ ಚಪ್ಪಾಳೆ ಹೊಡಿತೀನಿ ಮತ್ತು ನನ್ನ ಕೋಪವನ್ನ ತೀರಿಸ್ಕೊಳ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.”
18 ಯೆಹೋವ ಮತ್ತೆ ನನಗೆ ಹೀಗಂದನು: 19 “ಮನುಷ್ಯಕುಮಾರನೇ, ಒಂದು ದೇಶದಿಂದ ಹೋಗೋ ದಾರಿಯನ್ನ ಗುರುತಿಸು. ಆ ದಾರಿ ಒಂದು ಕಡೆ ಎರಡು ದಾರಿಗಳಾಗಿ ಕವಲು ಒಡೆಯುತ್ತೆ. ಕತ್ತಿ ಹಿಡ್ಕೊಂಡು ಬರ್ತಿರೋ ಬಾಬೆಲಿನ ರಾಜ ಯಾವ ದಾರಿಯಲ್ಲಿ ಹೋಗಬೇಕು ಅಂತ ಆರಿಸ್ಕೊಬೇಕಾಗುತ್ತೆ. ದಾರಿ ಕವಲೊಡೆಯೋ ಆ ಜಾಗದಲ್ಲಿ ನೀನು ಒಂದು ದಾರಿ ಫಲಕ ಇಡಬೇಕು. 20 ಕತ್ತಿ ಹಿಡ್ಕೊಂಡು ಬರೋ ಆ ರಾಜ ಅಮ್ಮೋನ್ಯರ ಪಟ್ಟಣವಾದ ರಬ್ಬಾಕ್ಕೆ+ ಹೋಗೋಕೆ ಯಾವ ದಾರಿ ಹಿಡೀಬೇಕಂತ, ಯೆಹೂದದ ಭದ್ರ ಕೋಟೆಗಳಿರೋ ಯೆರೂಸಲೇಮ್+ ಪಟ್ಟಣಕ್ಕೆ ಹೋಗೋಕೆ ಯಾವ ದಾರಿ ಹಿಡೀಬೇಕಂತ ನೀನು ಗುರುತು ಹಾಕಿ ತೋರಿಸಬೇಕು. 21 ಯಾಕಂದ್ರೆ ಬಾಬೆಲಿನ ರಾಜ ದಾರಿ ಕವಲೊಡೆಯೋ ಜಾಗಕ್ಕೆ ಬಂದಾಗ ಅಲ್ಲಿ ನಿಂತು ಯಾವ ದಾರಿಯಲ್ಲಿ ಹೋಗಬೇಕಂತ ಶಕುನ ನೋಡ್ತಾನೆ. ಅವನು ಬಾಣಗಳನ್ನ ಕುಲುಕ್ತಾನೆ, ತನ್ನ ಮೂರ್ತಿಗಳನ್ನ* ವಿಚಾರಿಸ್ತಾನೆ, ಒಂದು ಪ್ರಾಣಿಯ ಪಿತ್ತಜನಕಾಂಗವನ್ನ ಪರೀಕ್ಷಿಸ್ತಾನೆ. 22 ಶಕುನ ನೋಡಿದಾಗ ಅವನ ಬಲಗೈ ಯೆರೂಸಲೇಮಿಗೆ ಹೋಗೋಕೆ ಸೂಚಿಸುತ್ತೆ. ಅಷ್ಟೇ ಅಲ್ಲ, ಗೋಡೆ ಒಡೆಯೋ ಯಂತ್ರ ಇಡೋಕೆ, ಸಾಯಿಸೋಕೆ, ಯುದ್ಧಘೋಷಣೆ ಮಾಡೋಕೆ, ಬಾಗಿಲುಗಳನ್ನ ಒಡೆಯೋ ದಿಮ್ಮಿಗಳನ್ನ ಇಡೋಕೆ, ಮಣ್ಣಿನ ದಿಬ್ಬಗಳನ್ನ, ಮುತ್ತಿಗೆ ಗೋಡೆಗಳನ್ನ ಕಟ್ಟೋಕೆ ಅದು ಸೂಚಿಸುತ್ತೆ.+ 23 ಆದ್ರೆ ಅವರ ಜೊತೆ* ಪ್ರಮಾಣಗಳನ್ನ ಮಾಡಿದ್ದವರಿಗೆ* ಈ ಶಕುನ ಸುಳ್ಳು ಅಂತ ಅನಿಸುತ್ತೆ.+ ಆದ್ರೆ ಅವನು ಅವರು ಮಾಡಿದ ತಪ್ಪುಗಳನ್ನ ನೆನಪಿಸ್ಕೊಳ್ತಾನೆ ಮತ್ತು ಬಂದು ಅವರನ್ನ ಕೈದಿಗಳಾಗಿ ವಶ ಮಾಡ್ಕೋತಾನೆ.+
24 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀವು ನಿಮ್ಮ ಅಪರಾಧಗಳನ್ನ ಬಯಲಿಗೆ ತರೋ ಮೂಲಕ ಮತ್ತು ನಿಮ್ಮೆಲ್ಲ ಕೆಲಸಗಳಲ್ಲಿ ನಿಮ್ಮ ಪಾಪಗಳನ್ನ ತೋರಿಸೋ ಮೂಲಕ ಅಪರಾಧಿಗಳು ಅಂತ ನೆನಪಿಸಿದ್ದೀರ. ಹೀಗೆ ನೀವು ನೆನಪಿಗೆ ಬಂದಿರೋದ್ರಿಂದ ನಿಮ್ಮನ್ನ ಬಲವಂತವಾಗಿ ಹಿಡ್ಕೊಂಡು ಹೋಗಲಾಗುತ್ತೆ.’
25 ತುಂಬ ಗಾಯ ಆಗಿರೋ ಇಸ್ರಾಯೇಲಿನ ದುಷ್ಟ ಪ್ರಧಾನನೇ, ನಿನ್ನ ದಿನ ಬಂದಿದೆ,+ ನಿನಗೆ ಕೊನೆ ಶಿಕ್ಷೆ ಕೊಡೋ ಸಮಯ ಬಂದಿದೆ. 26 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ನಿನ್ನ ಪೇಟ ಮತ್ತು ಕಿರೀಟ ತೆಗೆದುಬಿಡು.+ ಇದೆಲ್ಲ ಈಗ ಇರೋ ಹಾಗೆ ಇರಲ್ಲ.+ ಕೆಳಗಿರುವ ವ್ಯಕ್ತಿನ ಮೇಲೆ ಏರಿಸು,+ ಮೇಲಿರೋ ವ್ಯಕ್ತಿನ ಕೆಳಗೆ ಇಳಿಸು.+ 27 ನಾನು ಈ ಆಳ್ವಿಕೆನ ಕೊನೆ ಮಾಡ್ತೀನಿ, ಹೌದು ಕೊನೆ ಮಾಡ್ತೀನಿ, ಇಲ್ಲಿಗೇ ಕೊನೆ ಮಾಡ್ತೀನಿ. ಆಳೋ ಹಕ್ಕಿರೋನು ಬರೋ ತನಕ ಆಳ್ವಿಕೆ ಯಾರ ಕೈಗೂ ಹೋಗಲ್ಲ.+ ಆಳೋ ಹಕ್ಕಿರೋ ವ್ಯಕ್ತಿಯನ್ನ ನಾನು ರಾಜ ಮಾಡ್ತೀನಿ.’+
28 ಮನುಷ್ಯಕುಮಾರನೇ, ನೀನು ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಅಮ್ಮೋನ್ಯರ ಬಗ್ಗೆ ಮತ್ತು ಅವರು ಅಣಕಿಸಿ ಮಾತಾಡಿದ್ರ ಬಗ್ಗೆ ಹೀಗೆ ಹೇಳ್ತಾನೆ. ಒಂದು ಕತ್ತಿಯನ್ನ ಹೊರಗೆ ತೆಗೆಯಲಾಗಿದೆ! ಜನರನ್ನ ಕೊಲ್ಲೋಕೆ ಒಂದು ಕತ್ತಿಯನ್ನ ಹೊರಗೆ ತೆಗೆಯಲಾಗಿದೆ. ಎಲ್ಲರನ್ನ ಸಾಯಿಸೋಕೆ, ಮಿಂಚಿನ ಹಾಗೆ ಹೊಳಿಯೋ ತರ ಮಾಡೋಕೆ ಅದನ್ನ ಉಜ್ಜಲಾಗಿದೆ. 29 ನಿನ್ನ ಬಗ್ಗೆ ಸುಳ್ಳು ದರ್ಶನಗಳನ್ನ ನೋಡಿ, ಸುಳ್ಳು ಕಣಿಗಳನ್ನ ಹೇಳಲಾಗಿದೆ. ಆದ್ರೂ ಯಾರ ದಿನ ಬಂದಿದೆಯೋ, ಯಾರು ಕೊನೆ ಶಿಕ್ಷೆಯನ್ನ ಅನುಭವಿಸೋ ಸಮಯ ಬಂದಿದೆಯೋ ಆ ದುಷ್ಟರು ಸತ್ತಾಗ ಅವರ ಹೆಣಗಳ ಮೇಲೆ ನಿನ್ನನ್ನ ಗುಡ್ಡೆ ಹಾಕಲಾಗುತ್ತೆ. 30 ಕತ್ತಿಯನ್ನ ಒಳಗೆ ಇಡು. ನಿನ್ನನ್ನ ಸೃಷ್ಟಿ ಮಾಡಿದ ಜಾಗದಲ್ಲಿ, ನೀನು ಹುಟ್ಟಿದ ದೇಶದಲ್ಲಿ ನಿನಗೆ ನಾನು ತೀರ್ಪು ಕೊಡ್ತೀನಿ. 31 ನಾನು ನನ್ನ ಕ್ರೋಧವನ್ನ ನಿನ್ನ ಮೇಲೆ ಸುರಿತೀನಿ. ನನ್ನ ರೋಷದ ಜ್ವಾಲೆಯನ್ನ ನಿನ್ನ ಮೇಲೆ ಊದ್ತೀನಿ. ನಾನು ನಿನ್ನನ್ನ ಕ್ರೂರಿಗಳ ಕೈಗೆ, ನಾಶಮಾಡೋದರಲ್ಲಿ ನಿಪುಣರಾಗಿರೋ ಜನರ ಕೈಗೆ ಒಪ್ಪಿಸ್ತೀನಿ.+ 32 ನೀನು ಬೆಂಕಿ ಉರಿಸೋ ಕಟ್ಟಿಗೆ ಆಗ್ತೀಯ.+ ನಿನ್ನ ರಕ್ತ ದೇಶದಲ್ಲಿ ಹರಿಯುತ್ತೆ. ನಿನ್ನನ್ನ ಇನ್ಮುಂದೆ ಯಾರೂ ನೆನಪಿಸಿಕೊಳ್ಳಲ್ಲ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.’”
22 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನಿರಪರಾಧಿಗಳ ರಕ್ತ ಸುರಿಸಿ ಅಪರಾಧಿಯಾಗಿರೋ ಪಟ್ಟಣಕ್ಕೆ+ ನೀನು ತೀರ್ಪು ಕೊಡೋಕೆ ತಯಾರಾಗಿದ್ದೀಯಾ? ಅವಳು ನಡಿಸೋ ಎಲ್ಲ ಅಸಹ್ಯ ಕೆಲಸಗಳನ್ನ ಅವಳಿಗೆ ಹೇಳೋಕೆ ನೀನು ಸಿದ್ಧನಿದ್ದೀಯಾ?+ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ತನ್ನ ಜನ್ರ ರಕ್ತವನ್ನ ಸುರಿಸೋ ಪಟ್ಟಣವೇ,+ ನಿನ್ನ ಕೊನೆಗಾಲ ಬಂದಿದೆ,+ ನೀನು ಹೊಲಸು ಮೂರ್ತಿಗಳನ್ನ* ಮಾಡ್ಕೊಂಡು ನಿನ್ನನ್ನೇ ಅಶುದ್ಧಳಾಗಿ ಮಾಡ್ಕೊಂಡಿದ್ದೀಯ.+ 4 ನಿರಪರಾಧಿಗಳ ರಕ್ತ ಸುರಿಸಿ ಅಪರಾಧಿ ಆಗಿದ್ದೀಯ,+ ಹೊಲಸು ಮೂರ್ತಿಗಳು ನಿನ್ನನ್ನ ಅಶುದ್ಧ ಮಾಡಿವೆ.+ ನಿನ್ನ ದಿನಗಳು ಬೇಗ ಮುಗಿಯೋ ಹಾಗೆ ನೀನು ಮಾಡ್ಕೊಂಡಿದ್ದೀಯ. ನೀನು ಶಿಕ್ಷೆ ಅನುಭವಿಸೋ ವರ್ಷಗಳು ಬಂದಿವೆ. ಹಾಗಾಗಿ ಜನಾಂಗಗಳು ನಿನ್ನನ್ನ ಬಯ್ಯೋ ಹಾಗೆ, ಎಲ್ಲ ದೇಶಗಳು ಅಣಕಿಸೋ ಹಾಗೆ ಮಾಡ್ತೀನಿ.+ 5 ಕೆಟ್ಟ ಹೆಸ್ರು ಮಾಡಿರೋ ಮತ್ತು ಎಲ್ಲ ಕಡೆ ಗದ್ದಲ ಇರೋ ಪಟ್ಟಣವೇ, ನಿನ್ನ ಅಕ್ಕಪಕ್ಕದ ಮತ್ತು ದೂರದೂರದ ಎಲ್ಲ ದೇಶಗಳು ನಿನ್ನನ್ನ ನೋಡಿ ತಮಾಷೆ ಮಾಡುತ್ತೆ.+ 6 ನೋಡು! ನಿನ್ನಲ್ಲಿರೋ ಇಸ್ರಾಯೇಲಿನ ಪ್ರತಿಯೊಬ್ಬ ಪ್ರಧಾನ ತನ್ನ ಅಧಿಕಾರವನ್ನ ತಪ್ಪಾಗಿ ಬಳಸ್ಕೊಂಡು ಕೊಲೆ ಮಾಡ್ತಿದ್ದಾನೆ.+ 7 ನಿನ್ನಲ್ಲಿರೋ ಜನ್ರು ಅವ್ರ ಅಪ್ಪಅಮ್ಮಂದಿರನ್ನ ಕೀಳಾಗಿ ನೋಡ್ತಿದ್ದಾರೆ.+ ವಿದೇಶಿಯರಿಗೆ ಮೋಸ ಮಾಡ್ತಿದ್ದಾರೆ. ಅನಾಥರಿಗೆ,* ವಿಧವೆಯರಿಗೆ ಕಾಟ ಕೊಡ್ತಿದ್ದಾರೆ.”’”+
8 “‘ನೀನು ನನ್ನ ಪವಿತ್ರ ಸ್ಥಳಗಳನ್ನ ಕೀಳಾಗಿ ನೋಡಿದ್ದೀಯ, ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ದೀಯ.+ 9 ನಿನ್ನ ಜನ್ರು ಬೇರೆಯವರ ಜೀವ ತೆಗೆಯೋಕೆ ಅವ್ರ ಬಗ್ಗೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನ ಹಬ್ಬಿಸ್ತಾ ಇದ್ದಾರೆ.+ ನಿನ್ನಲ್ಲಿರೋ ಬೆಟ್ಟಗಳ ಮೇಲೆ ಅವರು ಮೂರ್ತಿಗಳಿಗೆ ಕೊಟ್ಟ ಬಲಿಗಳನ್ನ ತಿಂತಿದ್ದಾರೆ, ಅಶ್ಲೀಲವಾಗಿ ನಡ್ಕೊತಿದ್ದಾರೆ.+ 10 ಅವರು ಅವ್ರ ಅಪ್ಪನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟಿದ್ದಾರೆ,+ ಮುಟ್ಟಿನಿಂದ ಅಶುದ್ಧಳಾದ ಸ್ತ್ರೀ ಮೇಲೆ ಬಲಾತ್ಕಾರ ಮಾಡ್ತಿದ್ದಾರೆ.+ 11 ಬೇರೆಯವನ ಹೆಂಡತಿ ಜೊತೆ ಅಸಹ್ಯವಾಗಿ ನಡ್ಕೊಳ್ತಿದ್ದಾರೆ,+ ಸೊಸೆ ಜೊತೆ ಅಶ್ಲೀಲವಾಗಿ ನಡ್ಕೊಂಡು ಅವಳನ್ನ ಕೆಡಿಸ್ತಿದ್ದಾರೆ,+ ಅಕ್ಕತಂಗಿಯರನ್ನೇ ಬಲಾತ್ಕಾರ ಮಾಡ್ತಿದ್ದಾರೆ.+ 12 ಅವರು ಕೊಲೆ ಮಾಡೋಕೆ ಲಂಚ ತಗೊತಿದ್ದಾರೆ.+ ಬಡ್ಡಿಗಾಗಿ,+ ಲಾಭಕ್ಕಾಗಿ* ಬೇರೆಯವರಿಗೆ ಸಾಲ ಕೊಡ್ತಿದ್ದಾರೆ. ಬೇರೆಯವ್ರಿಂದ ಹಣ ಸುಲ್ಕೊಳ್ತಿದ್ದಾರೆ.+ ಹೌದು, ನೀನು ನನ್ನನ್ನ ಪೂರ್ತಿ ಮರೆತುಬಿಟ್ಟಿದ್ದೀಯ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
13 ‘ನೋಡು! ನೀನು ಅನ್ಯಾಯವಾಗಿ ಮಾಡಿರೋ ಲಾಭವನ್ನ ಮತ್ತು ಮಾಡ್ತಿರೋ ಕೊಲೆಗಳನ್ನ ನೋಡಿ ನೋಡಿ ನಾನು ರೋಸಿಹೋಗಿ ಚಪ್ಪಾಳೆ ಹೊಡಿತೀನಿ. 14 ನಾನು ನಿನ್ನ ವಿರುದ್ಧ ಕ್ರಮ ತಗೊಳ್ಳೋ ದಿನಗಳಲ್ಲಿ ಧೈರ್ಯವಾಗಿ, ಸ್ಥಿರವಾಗಿ ಇರೋಕೆ ನಿನ್ನಿಂದ ಆಗುತ್ತಾ?+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ, ನಾನು ಕ್ರಮ ತಗೊಳ್ತೀನಿ. 15 ನಾನು ನಿನ್ನನ್ನ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡ್ತೀನಿ, ಬೇರೆಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ,+ ನಿನ್ನ ಅಶುದ್ಧ ನಡತೆಗೆ ಒಂದು ಅಂತ್ಯ ಕಾಣಿಸ್ತೀನಿ.+ 16 ಜನಾಂಗಗಳ ಮುಂದೆ ನಿನಗೆ ಅವಮಾನ ಆಗುತ್ತೆ. ಆಗ ನಾನೇ ಯೆಹೋವ ಅಂತ ನಿನಗೆ ಗೊತ್ತಾಗುತ್ತೆ.’”+
17 ಯೆಹೋವ ಮತ್ತೆ ನನಗೆ ಹೀಗಂದನು: 18 “ಮನುಷ್ಯಕುಮಾರನೇ, ಇಸ್ರಾಯೇಲ್ಯರು ನನಗೆ ಯಾವ ಪ್ರಯೋಜನಕ್ಕೂ ಬಾರದ ಕಸದ* ತರ ಆಗಿದ್ದಾರೆ. ಅವ್ರೆಲ್ಲ ಕುಲುಮೆಯಲ್ಲಿರೋ ತಾಮ್ರ, ತವರ, ಕಬ್ಬಿಣ ಮತ್ತು ಸೀಸದ ತರ ಇದ್ದಾರೆ. ಬೆಳ್ಳಿ ಕರಗಿಸಿದಾಗ ಉಳಿಯೋ ಕಸದ ತರ ಆಗಿದ್ದಾರೆ.+
19 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವೆಲ್ಲ ಪ್ರಯೋಜನಕ್ಕೆ ಬಾರದ ಕಸ ಆಗಿರೋದ್ರಿಂದ+ ನಾನು ನಿಮ್ಮನ್ನ ಯೆರೂಸಲೇಮ್ ಒಳಗೆ ಒಟ್ಟುಸೇರಿಸ್ತೀನಿ. 20 ಬೆಳ್ಳಿ, ತಾಮ್ರ, ಕಬ್ಬಿಣ, ಸೀಸ, ತವರ ಇವನ್ನ ಕುಲುಮೆ ಒಳಗೆ ಕೂಡಿಸಿ ಬೆಂಕಿ ಉರಿಸಿ ಅವನ್ನ ಕರಗಿಸೋ ಹಾಗೆ ನನ್ನ ಕೋಪ ಕ್ರೋಧದಿಂದ ನಿಮ್ಮನ್ನ ಒಟ್ಟುಸೇರಿಸ್ತೀನಿ. ಬೆಂಕಿಯಿಂದ ನಿಮ್ಮನ್ನ ಕರಗಿಸ್ತೀನಿ.+ 21 ನಾನು ನಿಮ್ಮನ್ನ ಒಟ್ಟುಸೇರಿಸಿ ನನ್ನ ಕೋಪಾಗ್ನಿಯನ್ನ ನಿಮ್ಮ ಮೇಲೆ ಊದ್ತೀನಿ.+ ಆಗ ನೀವು ಪಟ್ಟಣದ ಒಳಗೆ ಕರಗಿ ಹೋಗ್ತಿರ.+ 22 ಬೆಳ್ಳಿ ಕುಲುಮೆ ಒಳಗೆ ಕರಗಿ ಹೋಗೋ ತರ ನೀವು ಪಟ್ಟಣದಲ್ಲಿ ಕರಗಿಹೋಗ್ತಿರ. ಯೆಹೋವನಾದ ನಾನೇ ನಿಮ್ಮ ಮೇಲೆ ಕ್ರೋಧ ಸುರಿಸಿದೆ ಅಂತ ಆಗ ನಿಮಗೆ ಗೊತ್ತಾಗುತ್ತೆ.’”
23 ಯೆಹೋವ ಮತ್ತೆ ನನಗೆ ಹೀಗಂದನು: 24 “ಮನುಷ್ಯಕುಮಾರನೇ, ನೀನು ಆ ದೇಶಕ್ಕೆ ಹೀಗೆ ಹೇಳು ‘ಕ್ರೋಧದ ದಿನದಲ್ಲಿ ನಿನ್ನನ್ನ ಶುದ್ಧ ಮಾಡಲ್ಲ ಮತ್ತು ನಿನ್ನ ಮೇಲೆ ಮಳೆ ಬೀಳಲ್ಲ. 25 ದೇಶದಲ್ಲಿರೋ ಪ್ರವಾದಿಗಳು ಸಂಚು ಮಾಡ್ತಿದ್ದಾರೆ,+ ಬೇಟೆಯನ್ನ ಸೀಳಿಹಾಕ್ತಾ ಗರ್ಜಿಸೋ ಸಿಂಹದ ತರ ಇದ್ದಾರೆ,+ ಅವರು ಜನ್ರನ್ನ ನುಂಗಿಹಾಕ್ತಿದ್ದಾರೆ, ಜನ್ರ ಸಿರಿಸಂಪತ್ತನ್ನ, ಬೆಲೆಬಾಳೋ ವಸ್ತುಗಳನ್ನ ಕಿತ್ಕೊಳ್ತಿದ್ದಾರೆ. ದೇಶದಲ್ಲಿರೋ ತುಂಬ ಹೆಂಗಸರನ್ನ ವಿಧವೆಯರಾಗಿ ಮಾಡಿದ್ದಾರೆ. 26 ದೇಶದಲ್ಲಿರೋ ಪುರೋಹಿತರು ನನ್ನ ನಿಯಮಗಳನ್ನ ಮೀರಿ ನಡೆದಿದ್ದಾರೆ,+ ನನ್ನ ಪವಿತ್ರ ಸ್ಥಳಗಳನ್ನ ಅಪವಿತ್ರ ಮಾಡ್ತಾ ಇದ್ದಾರೆ.+ ಇದು ಪವಿತ್ರ, ಇದು ಸಾಧಾರಣ ಅಂತ ಅವರು ವ್ಯತ್ಯಾಸ ಮಾಡ್ತಿಲ್ಲ.+ ಯಾವುದು ಶುದ್ಧ, ಯಾವುದು ಅಶುದ್ಧ ಅಂತ ಹೇಳ್ತಿಲ್ಲ.+ ನಾನು ಮಾಡಿದ ಸಬ್ಬತ್‌ಗಳನ್ನ ಆಚರಿಸ್ತಿಲ್ಲ. ಅವರು ನನಗೆ ಅವಮಾನ ಮಾಡಿದ್ದಾರೆ. 27 ದೇಶದಲ್ಲಿರೋ ಅಧಿಕಾರಿಗಳು ಬೇಟೆಯನ್ನ ಸೀಳಿಹಾಕೋ ತೋಳಗಳ ತರ ಇದ್ದಾರೆ. ಅನ್ಯಾಯವಾಗಿ ಲಾಭ ಮಾಡೋಕೆ ಜನ್ರಿಗೆ ಗಾಯ ಮಾಡ್ತಿದ್ದಾರೆ, ಕೊಲ್ತಿದ್ದಾರೆ.+ 28 ಸುಣ್ಣ ಹಚ್ಚಿ ಗೋಡೆ ಬಿರುಕನ್ನ ಮುಚ್ಚೋ ಹಾಗೆ ಪ್ರವಾದಿಗಳು ಅವ್ರ ಕೆಟ್ಟ ಕೆಲಸಗಳನ್ನ ಮುಚ್ಚಿಹಾಕ್ತಿದ್ದಾರೆ. ಅವರು ಸುಳ್ಳು ದರ್ಶನಗಳನ್ನ ನೋಡ್ತಿದ್ದಾರೆ, ಸುಳ್ಳು ಕಣಿಗಳನ್ನ ಹೇಳ್ತಿದ್ದಾರೆ.+ ಅಷ್ಟೇ ಅಲ್ಲ, ಯೆಹೋವನಾದ ನಾನು ಅವ್ರ ಜೊತೆ ಮಾತಾಡಿಲ್ಲ ಅಂದ್ರೂ “ವಿಶ್ವದ ರಾಜ ಯೆಹೋವ ಹೀಗಂತಾನೆ” ಅಂತ ಹೇಳ್ತಿದ್ದಾರೆ. 29 ದೇಶದಲ್ಲಿರೋ ಜನ್ರು ಮೋಸ ಮಾಡಿದ್ದಾರೆ, ದರೋಡೆ ಮಾಡಿದ್ದಾರೆ.+ ಕಷ್ಟದಲ್ಲಿ ಇರುವವರಿಗೆ, ಬಡವರಿಗೆ ಕಾಟ ಕೊಡ್ತಿದ್ದಾರೆ. ವಿದೇಶಿಯರಿಗೆ ಮೋಸ ಮಾಡಿ ಅವ್ರಿಗೆ ನ್ಯಾಯ ಸಿಗದ ಹಾಗೆ ಮಾಡಿದ್ದಾರೆ.’
30 ‘ದೇಶದ ಸುರಕ್ಷತೆಗಾಗಿ ಕಲ್ಲಿನ ಗೋಡೆಯನ್ನ ಸರಿಪಡಿಸೋಕೆ ಅಥವಾ ನಾನು ಪಟ್ಟಣವನ್ನ ನಾಶಮಾಡದೆ ಇರೋ ಹಾಗೆ ಪಟ್ಟಣದ ಗೋಡೆ ಒಡೆದುಹೋಗಿರೋ ಕಡೆ ನಿಲ್ಲೋಕೆ ಒಬ್ಬನಾದ್ರೂ ಸಿಗ್ತಾನಾ ಅಂತ ಅವ್ರ ಮಧ್ಯ ಹುಡುಕ್ತಿದ್ದೆ,+ ಆದ್ರೆ ನನಗೆ ಯಾರೂ ಸಿಗಲಿಲ್ಲ. 31 ಹಾಗಾಗಿ ನಾನು ನನ್ನ ಕ್ರೋಧವನ್ನ ಅವ್ರ ಮೇಲೆ ಸುರೀತಿನಿ, ನನ್ನ ಕೋಪಾಗ್ನಿಯಿಂದ ಅವ್ರನ್ನ ನಾಶ ಮಾಡ್ತೀನಿ. ಅವ್ರ ನಡತೆಯ ಪರಿಣಾಮಗಳನ್ನ ಅವ್ರೇ ಅನುಭವಿಸೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
23 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಒಬ್ಬ ತಾಯಿಗೆ ಇಬ್ರು ಹೆಣ್ಣುಮಕ್ಕಳು ಇದ್ರು.+ 3 ಅವ್ರಿಬ್ಬರು ಯೌವನದಿಂದಲೇ ಈಜಿಪ್ಟಲ್ಲಿ ವೇಶ್ಯೆಯರಾದ್ರು.+ ಅಲ್ಲಿ ಅವರು ತಮ್ಮ ಕಾಮದಾಸೆಯನ್ನ ತೀರಿಸ್ಕೊಳ್ತಾ ಶೀಲ ಕಳ್ಕೊಂಡ್ರು. 4 ದೊಡ್ಡವಳ ಹೆಸ್ರು ಒಹೊಲ.* ಅವಳ ತಂಗಿ ಹೆಸ್ರು ಒಹೊಲೀಬ.* ಅವರಿಬ್ರು ನನ್ನವರಾದ್ರು ಮತ್ತು ಅವ್ರಿಗೆ ಮಕ್ಕಳು ಹುಟ್ಟಿದ್ರು. ಒಹೊಲ ಸಮಾರ್ಯವನ್ನ+ ಮತ್ತು ಒಹೊಲೀಬ ಯೆರೂಸಲೇಮನ್ನ ಸೂಚಿಸ್ತಾಳೆ.
5 ಒಹೊಲ ನನ್ನವಳಾಗಿ ಇದ್ದಾಗಲೇ ವೇಶ್ಯೆ ಆದಳು.+ ಅವಳು ಕಾಮಾತುರದಿಂದ ಗಂಡಸ್ರ ಹಿಂದೆ ಹೋದಳು+ ಅಂದ್ರೆ ತನ್ನ ನೆರೆಯವರಾದ ಅಶ್ಶೂರ್ಯರ ಹಿಂದೆ ಹೋದಳು.+ 6 ಅವರು ನೀಲಿ ಬಟ್ಟೆ ಹಾಕಿದ್ದ ರಾಜ್ಯಪಾಲರು ಮತ್ತು ಉಪ ಅಧಿಪತಿಗಳು ಆಗಿದ್ರು. ಅವ್ರೆಲ್ಲ ತಮ್ಮ ತಮ್ಮ ಕುದುರೆಗಳ ಮೇಲೆ ಸವಾರಿ ಮಾಡ್ತಿದ್ದ ಮೋಹಕ ಯುವಕರಾಗಿದ್ರು. 7 ಅವಳು ಕಾಮಾತುರದಿಂದ ಯಾರ ಹಿಂದೆ ಹೋದಳೋ ಆ ಅಶ್ಶೂರದ ಗಣ್ಯರೆಲ್ಲರ ಜೊತೆ ಮತ್ತು ಅವ್ರ ಹೊಲಸು* ಮೂರ್ತಿಗಳ ಜೊತೆ ವೇಶ್ಯಾವಾಟಿಕೆ ಮಾಡ್ತಾ ತನ್ನನ್ನ ಅಪವಿತ್ರ ಮಾಡ್ಕೊಂಡಳು.+ 8 ಅವಳು ಈಜಿಪ್ಟಲ್ಲಿ ರೂಢಿ ಮಾಡ್ಕೊಂಡ ವೇಶ್ಯಾವಾಟಿಕೆಯನ್ನ ಬಿಡಲಿಲ್ಲ. ಅವಳ ಯೌವನದಲ್ಲಿ ಈಜಿಪ್ಟಿನವರು ಅವಳ ಜೊತೆ ಮಲಗಿದ್ರು, ಅವರು ಅವಳನ್ನ ಪೂರ್ತಿ ಕೆಡಿಸಿದ್ರು. ಅವರು ಅವಳ ಹತ್ರ ಹೋಗಿ ತಮ್ಮ ಕಾಮದಾಹ ತೀರಿಸ್ಕೊಂಡ್ರು.+ 9 ಹಾಗಾಗಿ ಅವಳು ಕಾಮಾತುರದಿಂದ ಯಾರನ್ನ ಬಯಸಿದಳೋ ಆ ಗಂಡಸರ ಕೈಗೆ ಅಂದ್ರೆ ಅಶ್ಶೂರ್ಯರ ಕೈಗೆ ನಾನು ಅವಳನ್ನ ಕೊಟ್ಟೆ.+ 10 ಅವರು ಅವಳನ್ನ ಬೆತ್ತಲೆ ಮಾಡಿದ್ರು,+ ಅವಳ ಮಕ್ಕಳನ್ನ ಹಿಡ್ಕೊಂಡು ಹೋದ್ರು.+ ನಡತೆಗೆಟ್ಟವಳು ಅನ್ನೋ ಹೆಸ್ರಿಂದ ಸ್ತ್ರೀಯರಲ್ಲಿ ಪ್ರಸಿದ್ಧಳಾದ ಅವಳಿಗೆ ಶಿಕ್ಷೆ ಕೊಟ್ಟು ಕತ್ತಿಯಿಂದ ಕೊಂದ್ರು.
11 ಇದನ್ನ ಅವಳ ತಂಗಿ ಒಹೊಲೀಬ ನೋಡಿದ ಮೇಲೆ ಇನ್ನೂ ಜಾಸ್ತಿ ನೀಚತನಕ್ಕೆ ಇಳಿದಳು. ವೇಶ್ಯಾವಾಟಿಕೆ ಮಾಡೋದ್ರಲ್ಲಿ ಅವಳು ಅಕ್ಕನನ್ನೂ ಮೀರಿಸಿದಳು.+ 12 ಅವಳು ಕಾಮಾತುರದಿಂದ ನೆರೆಯವರಾದ ಅಶ್ಶೂರ್ಯರ ಹಿಂದೆ ಹೋದಳು+ ಅಂದ್ರೆ ಅಶ್ಶೂರದ ರಾಜ್ಯಪಾಲರೂ ಉಪ ಅಧಿಪತಿಗಳೂ ಆಗಿದ್ದು ಒಳ್ಳೊಳ್ಳೇ ಬಟ್ಟೆಗಳನ್ನ ಹಾಕೊಂಡಿದ್ದ ಮತ್ತು ಕುದುರೆಗಳ ಮೇಲೆ ಸವಾರಿ ಮಾಡ್ತಿದ್ದ ಮೋಹಕ ಯುವಕರ ಹಿಂದೆ ಹೋದಳು. 13 ಹೀಗೆ ತನ್ನನ್ನ ಅಪವಿತ್ರ ಮಾಡ್ಕೊಂಡಳು. ಆಗ, ಅಕ್ಕತಂಗಿ ಇಬ್ರೂ ಒಂದೇ ದಾರಿ ಹಿಡಿದಿದ್ದಾರೆ ಅಂತ ನನಗೆ ಗೊತ್ತಾಯ್ತು.+ 14 ಆದ್ರೆ ಒಹೊಲೀಬ ಇನ್ನೂ ಜಾಸ್ತಿ ವೇಶ್ಯಾವಾಟಿಕೆ ಮಾಡ್ತಾ ಹೋದಳು. ಅವಳು ಗೋಡೆ ಮೇಲೆ ಕಸ್ದೀಯ ಗಂಡಸ್ರ ಕೆತ್ತನೆಗಳು ಇರೋದನ್ನ, ಆ ಕೆತ್ತನೆಗಳಿಗೆ ಗಾಢ ಕೆಂಪು* ಬಣ್ಣ ಬಳಿದಿರೋದನ್ನ ನೋಡಿದಳು. 15 ಅಷ್ಟೇ ಅಲ್ಲ, ಆ ಕೆತ್ತನೆಯಲ್ಲಿದ್ದ ಗಂಡಸರು ಸೊಂಟಪಟ್ಟಿ ಕಟ್ಕೊಂಡಿರೋದನ್ನ, ತಲೆ ಮೇಲೆ ರುಮಾಲು ಹಾಕಿ ಜೋಲು ಬಿಟ್ಟಿರೋದನ್ನ, ಅವ್ರೆಲ್ಲರ ವೇಷಭೂಷಣ ವೀರರ ವೇಷಭೂಷಣದ ತರ ಇರೋದನ್ನ, ಅವರು ಕಸ್ದೀಯರ ದೇಶದಲ್ಲಿ ಹುಟ್ಟಿದ ಬಾಬೆಲಿನ ಗಂಡಸರ ತರ ಇರೋದನ್ನ ಅವಳು ನೋಡಿದಳು. 16 ಆ ಕೆತ್ತನೆಗಳನ್ನ ನೋಡಿದ ತಕ್ಷಣ ಅವಳು ಕಾಮಾತುರದಿಂದ ಕಸ್ದೀಯ ಗಂಡಸ್ರನ್ನ ಇಷ್ಟಪಟ್ಟಳು. ಕಸ್ದೀಯ ದೇಶದಲ್ಲಿದ್ದ ಗಂಡಸರ ಹತ್ರ ಸಂದೇಶವಾಹಕರನ್ನ ಕಳಿಸಿದಳು.+ 17 ಹಾಗಾಗಿ ಬಾಬೆಲಿನ ಗಂಡಸರು ಕಾಮವಿಲಾಸಕ್ಕಾಗಿ ಅವಳ ಹಾಸಿಗೆಗೆ ಬರ್ತಾ ಇದ್ರು. ತಮ್ಮ ಕಾಮದಾಹ ತೀರಿಸ್ಕೊಳ್ತಾ ಅವಳನ್ನ ಅಪವಿತ್ರ ಮಾಡಿದ್ರು. ಅವ್ರಿಂದ ಅಪವಿತ್ರಳಾದ ಮೇಲೆ ಅವಳಿಗೆ ಅವ್ರ ಮೇಲೆ ಹೇಸಿಕೆ ಹುಟ್ತು. ಹಾಗಾಗಿ ಅವ್ರಿಂದ ಅವಳು ದೂರ ಆದಳು.
18 ಅವಳು ಭಂಡತನದಿಂದ ವೇಶ್ಯಾವಾಟಿಕೆ ಮಾಡ್ತಾ ಹೋಗಿದ್ರಿಂದ ಮತ್ತು ತನ್ನ ಬೆತ್ತಲೆತನವನ್ನ ಬೇರೆಯವ್ರಿಗೆ ತೋರಿಸಿದ್ರಿಂದ+ ನನಗೆ ಅವಳಂದ್ರೆ ಅಸಹ್ಯ ಅನಿಸಿತು. ಹಾಗಾಗಿ ಅವಳ ಅಕ್ಕನ ಮೇಲೆ ನನಗೆ ಹೇಸಿಗೆ ಹುಟ್ಟಿದಾಗ ನಾನು ಅವಳನ್ನ ಹೇಗೆ ತಳ್ಳಿಬಿಟ್ಟೆನೋ ಅದೇ ತರ ಇವಳನ್ನೂ ತಳ್ಳಿಬಿಟ್ಟೆ.+ 19 ಅವಳು ಈಜಿಪ್ಟಲ್ಲಿ ಇದ್ದಾಗ ತನ್ನ ಯೌವನದಲ್ಲಿ ಮಾಡಿದ ವೇಶ್ಯಾವಾಟಿಕೆಯನ್ನ ನೆನಪು ಮಾಡ್ಕೊಳ್ತಾ+ ಇನ್ನೂ ಜಾಸ್ತಿ ವೇಶ್ಯಾವಾಟಿಕೆ ಮಾಡಿದಳು.+ 20 ಅವಳ ಹತ್ರ ಬರ್ತಿದ್ದ ಗಂಡಸರು ಕತ್ತೆ, ಕುದುರೆ ತರ ವಿಪರೀತ ಕಾಮುಕರಾಗಿದ್ರು. ಅವಳು ಅವ್ರ ಉಪಪತ್ನಿಯರ ಹಾಗೆ ಕಾಮಾತುರದಿಂದ ಅವ್ರನ್ನ ಇಷ್ಟಪಟ್ಟಳು. 21 ಈಜಿಪ್ಟಲ್ಲಿ ಇದ್ದಾಗ ನೀನು ನಿನ್ನ ಯೌವನದಲ್ಲಿ ನಿನ್ನ ಲೈಂಗಿಕ ದಾಹವನ್ನ ತೀರಿಸ್ಕೊಳ್ಳೋಕೆ+ ಅಲ್ಲಿನ ಗಂಡಸ್ರ ಜೊತೆ ಇಟ್ಕೊಂಡ ಅಶ್ಲೀಲ ಸಂಬಂಧಕ್ಕಾಗಿ ಈಗಲೂ ಹಾತೊರೆದೆ.+
22 ಹಾಗಾಗಿ ಒಹೊಲೀಬ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಅಸಹ್ಯಪಟ್ಟು ಯಾರಿಂದ ದೂರ ಆದೆಯೋ ಆ ಗಂಡಸರನ್ನ ನಾನು ನಿನ್ನ ವಿರುದ್ಧ ಎಬ್ಬಿಸ್ತೀನಿ.+ ಎಲ್ಲ ದಿಕ್ಕಿಂದ ನಿನ್ನ ಮೇಲೆ ದಾಳಿ ಮಾಡೋಕೆ ಅವ್ರನ್ನ ಕರ್ಕೊಂಡು ಬರ್ತಿನಿ.+ 23 ಬಾಬೆಲಿನವರು,+ ಎಲ್ಲ ಕಸ್ದೀಯರು,+ ಪೆಕೋದದವರು,+ ಷೋಯದವರು, ಕೋಯದವರು ಮತ್ತು ಎಲ್ಲ ಅಶ್ಶೂರ್ಯರು ನಿನ್ನ ಮೇಲೆ ದಾಳಿ ಮಾಡ್ತಾರೆ. ಅವ್ರೆಲ್ಲ ಕುದುರೆ ಸವಾರಿ ಮಾಡ್ತಾ ಬರೋ ಮೋಹಕ ಯುವಕರು. ಅವರು ರಾಜ್ಯಪಾಲರು, ಉಪ ಅಧಿಪತಿಗಳು, ಯುದ್ಧಶೂರರು ಮತ್ತು ಗಣ್ಯ ವ್ಯಕ್ತಿಗಳು.* 24 ಅವರು ಎಷ್ಟೋ ಯುದ್ಧ ರಥಗಳ ಜೊತೆ, ದೊಡ್ಡ ದೊಡ್ಡ ಸೈನ್ಯದ ಜೊತೆ, ತುಂಬ ದೊಡ್ಡ ಮತ್ತು ಚಿಕ್ಕ ಗುರಾಣಿಗಳ ಜೊತೆ* ಹಾಗೂ ಶಿರಸ್ತ್ರಾಣಗಳ ಜೊತೆ ಬಂದು ನಿನ್ನ ಮೇಲೆ ದಾಳಿ ಮಾಡ್ತಾರೆ. ಅವರು ನಿನ್ನ ಸುತ್ತ ನಿಂತ್ಕೊಳ್ತಾರೆ. ನಿನಗೆ ತೀರ್ಪು ಕೊಡೋ ಅಧಿಕಾರವನ್ನ ನಾನು ಅವ್ರಿಗೆ ಕೊಡ್ತೀನಿ. ಅವ್ರಿಗೆ ಇಷ್ಟಬಂದ ಹಾಗೆ ನಿನಗೆ ಶಿಕ್ಷೆ ಕೊಡ್ತಾರೆ.+ 25 ನನ್ನ ಕೋಪವನ್ನ ನಿನ್ನ ಮೇಲೆ ತೋರಿಸ್ತೀನಿ, ಅವರು ನಿನ್ನ ಜೊತೆ ಕ್ರೋಧದಿಂದ ನಡ್ಕೊತಾರೆ. ನಿನ್ನ ಮೂಗು ಕೊಯ್ದು, ಕಿವಿ ಕತ್ತರಿಸ್ತಾರೆ. ನಿನ್ನಲ್ಲಿ ಉಳಿದವರು ಕತ್ತಿಯಿಂದ ಸಾಯ್ತಾರೆ. ನಿನ್ನ ಮಕ್ಕಳನ್ನ ಹಿಡ್ಕೊಂಡು ಹೋಗ್ತಾರೆ. ಇವುಗಳಿಂದ ಪಾರಾದವರು ಬೆಂಕಿಯಲ್ಲಿ ಸತ್ತುಹೋಗ್ತಾರೆ.+ 26 ಅವರು ನಿನ್ನ ಬಟ್ಟೆಗಳನ್ನ ಕಿತ್ತುಹಾಕ್ತಾರೆ,+ ನಿನ್ನ ಅಂದವಾದ ಒಡವೆಗಳನ್ನ ಕಿತ್ಕೊತಾರೆ.+ 27 ನೀನು ಈಜಿಪ್ಟಲ್ಲಿ ಶುರುಮಾಡಿದ+ ಅಶ್ಲೀಲ ನಡತೆಗೆ ಮತ್ತು ನಿನ್ನ ವೇಶ್ಯಾವಾಟಿಕೆಗೆ ನಾನು ಒಂದು ಅಂತ್ಯ ಹಾಡ್ತೀನಿ.+ ಇನ್ಮುಂದೆ ನೀನು ಅವ್ರನ್ನ ಕಣ್ಣೆತ್ತಿ ನೋಡಲ್ಲ, ಈಜಿಪ್ಟನ್ನ ನೆನಪಿಸ್ಕೊಳ್ಳೋದೂ ಇಲ್ಲ.’
28 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಯಾರನ್ನ ದ್ವೇಷಿಸ್ತಿಯೋ, ಅಸಹ್ಯಪಟ್ಟು ಯಾರಿಂದ ದೂರ ಆದೆಯೋ ಅವ್ರ ಕೈಗೇ ನಾನು ನಿನ್ನನ್ನ ಕೊಡ್ತೀನಿ.+ 29 ಅವರು ನಿನ್ನನ್ನ ದ್ವೇಷಿಸ್ತಾರೆ, ನೀನು ಬೆವರು ಸುರಿಸಿ ದುಡಿದದ್ದನ್ನೆಲ್ಲ ಕಿತ್ಕೊತಾರೆ,+ ನಿನ್ನನ್ನ ಬೆತ್ತಲೆಯಾಗಿ ಮಾಡಿ ಹೋಗ್ತಾರೆ, ಎಲ್ಲರೂ ನೋಡ್ತಾರೆ. ನಿನ್ನ ನಾಚಿಗೆಗೆಟ್ಟ ಅನೈತಿಕತೆ, ನಿನ್ನ ಅಶ್ಲೀಲ ನಡತೆ ಮತ್ತು ನಿನ್ನ ವೇಶ್ಯಾವಾಟಿಕೆ ಬಟ್ಟಬಯಲಾಗುತ್ತೆ.+ 30 ನಿನಗೆ ಹೀಗೆಲ್ಲ ಯಾಕೆ ಆಗುತ್ತೆ ಅಂದ್ರೆ ನೀನು ವೇಶ್ಯೆ ತರ ಜನಾಂಗಗಳ ಹಿಂದೆ ಓಡಿದೆ,+ ಅವ್ರ ಹೊಲಸು ಮೂರ್ತಿಗಳಿಂದ ನಿನ್ನನ್ನ ಅಶುದ್ಧ ಮಾಡ್ಕೊಂಡೆ.+ 31 ನೀನು ನಿನ್ನ ಅಕ್ಕನ ಹಾಗೇ ನಡ್ಕೊಂಡೆ.+ ಹಾಗಾಗಿ ನಾನು ಅವಳ ಬಟ್ಟಲನ್ನ ನಿನ್ನ ಕೈಗೆ ಕೊಡ್ತೀನಿ.’+
32 ವಿಶ್ವದ ರಾಜ ಯೆಹೋವ ಹೀಗಂತಾನೆ:
‘ನಿನ್ನ ಅಕ್ಕನ ಕೈಯಲ್ಲಿರೋ ಉದ್ದವಾದ, ಅಗಲವಾದ ಬಟ್ಟಲಿಂದ ನೀನು ದ್ರಾಕ್ಷಾಮದ್ಯ ಕುಡಿತಿಯ,+
ಆ ಬಟ್ಟಲಲ್ಲಿ ಅವಮಾನ ತುಂಬಿರುತ್ತೆ, ಹಾಗಾಗಿ ಜನ ನಿನ್ನನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.+
33 ಸಮಾರ್ಯ ಅನ್ನೋ ನಿನ್ನ ಅಕ್ಕನ ಬಟ್ಟಲಲ್ಲಿ
ಭಯ, ನಾಶ ತುಂಬಿದೆ,
ನೀನು ಅದ್ರಲ್ಲಿರೋದನ್ನ ಕುಡಿದು ಮತ್ತಳಾಗಿ ದುಃಖದಲ್ಲಿ ಮುಳುಗಿಹೋಗ್ತೀಯ.
34 ನೀನು ಅದ್ರಲ್ಲಿ ಇರೋದನ್ನ ಒಂದು ತೊಟ್ಟೂ ಬಿಡದೆ ಕುಡಿಲೇಬೇಕಾಗುತ್ತೆ,+ ಆ ಬಟ್ಟಲು ಒಡೆದು ಹೋದ ಮೇಲೆ ಅದ್ರ ಚೂರುಗಳನ್ನ ಅಗಿತಿಯ.
ಅಷ್ಟೇ ಅಲ್ಲ, ದುಃಖದಿಂದ ನಿನ್ನ ಸ್ತನಗಳನ್ನ ಕೊಯ್ದುಕೊಳ್ತೀಯ.
“ನಾನೇ ಇದನ್ನ ಹೇಳಿದ್ದೀನಿ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.’
35 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ನನ್ನನ್ನ ಮರೆತು, ನನ್ನನ್ನ ಪೂರ್ತಿ ಬಿಟ್ಟು+ ಅಶ್ಲೀಲವಾಗಿ, ವೇಶ್ಯೆಯಾಗಿ ನಡ್ಕೊಂಡೆ. ಹಾಗಾಗಿ ನಿನ್ನ ನಡತೆಯ ಪರಿಣಾಮಗಳನ್ನ ನೀನು ಅನುಭವಿಸಲೇಬೇಕು.’”
36 ಆಮೇಲೆ ಯೆಹೋವ ನನಗೆ ಹೀಗಂದನು: “ಮನುಷ್ಯಕುಮಾರನೇ, ನೀನು ಒಹೊಲ ಮತ್ತು ಒಹೊಲೀಬಳಿಗೆ ತೀರ್ಪನ್ನ ಹೇಳ್ತೀಯಾ?+ ಅವರಿಬ್ರ ಅಸಹ್ಯ ಕೆಲಸಗಳನ್ನ ಅವ್ರ ಮುಂದೆನೇ ಹೇಳ್ತಿಯಾ? 37 ಅವರು ವ್ಯಭಿಚಾರ ಮಾಡಿದ್ದಾರೆ.*+ ಅವ್ರ ಕೈಯಲ್ಲಿ ರಕ್ತದ ಕಲೆ ಇದೆ. ಅವರು ಹೊಲಸು ಮೂರ್ತಿಗಳ ಜೊತೆ ವ್ಯಭಿಚಾರ ಮಾಡಿದ್ದಷ್ಟೇ ಅಲ್ಲ ನನ್ನ ಮಕ್ಕಳನ್ನ ಬೆಂಕಿಯಲ್ಲಿ ಬಲಿ ಕೊಟ್ಟಿದ್ದಾರೆ.+ 38 ಅದೇ ದಿನ ಅವರು ನನ್ನ ಆರಾಧನಾ ಸ್ಥಳವನ್ನ ಅಶುದ್ಧ ಮಾಡಿದ್ರು ಮತ್ತು ನಾನು ಕೊಟ್ಟ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. 39 ತಮ್ಮ ತಮ್ಮ ಮಕ್ಕಳನ್ನ ಸಾಯಿಸಿ ಹೊಲಸು ಮೂರ್ತಿಗಳಿಗೆ ಬಲಿ ಕೊಟ್ಟ ಮೇಲೆ+ ಅದೇ ದಿನ ನನ್ನ ಪವಿತ್ರ ಸ್ಥಳಕ್ಕೆ ಬಂದು ಅದನ್ನ ಅಪವಿತ್ರ ಮಾಡಿದ್ರು.+ ಅವರು ನನ್ನ ಆಲಯದ ಒಳಗೇ ಬಂದು ಅದನ್ನ ಅಪವಿತ್ರ ಮಾಡಿದ್ರು. 40 ಸಂದೇಶವಾಹಕನನ್ನ ಕಳಿಸಿ ದೂರ ದೂರದಿಂದ ಗಂಡಸ್ರನ್ನ ಬರೋಕೆ ಹೇಳಿದ್ರು.+ ಒಹೊಲೀಬಳೇ, ಆ ಗಂಡಸರು ಇನ್ನೂ ದಾರಿಯಲ್ಲಿ ಬರ್ತಿರ್ವಾಗ ನೀನಿಲ್ಲಿ ಸ್ನಾನ ಮಾಡ್ಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿ, ಆಭರಣಗಳಿಂದ ಸಿಂಗಾರ ಮಾಡ್ಕೊಂಡೆ.+ 41 ಮೇಜಿನ ಮುಂದೆ+ ಆಡಂಬರದ ಮಂಚದ ಮೇಲೆ ಒರಗಿ ಕೂತ್ಕೊಂಡೆ.+ ಆ ಮೇಜಿನ ಮೇಲೆ ನೀನು ನನ್ನ ಧೂಪ+ ಮತ್ತು ನನ್ನ ಎಣ್ಣೆಯನ್ನ ಇಟ್ಟೆ.+ 42 ಮೋಜಿನಲ್ಲಿ ತೇಲಾಡ್ತಿರೋ ಜನ್ರ ಗುಂಪಿನ ಶಬ್ದ ಅಲ್ಲಿ ಕೇಳಿಸ್ತು. ಕಾಡಿಂದ ಕರ್ಕೊಂಡು ಬಂದಿದ್ದ ಕುಡುಕರೂ ಆ ಗುಂಪಲ್ಲಿದ್ರು. ಅವರು ಆ ಅಕ್ಕತಂಗಿಯರಿಬ್ಬರ ಕೈಗಳಿಗೆ ಬಳೆಗಳನ್ನ, ತಲೆಗೆ ಸುಂದರ ಕಿರೀಟವನ್ನ ಹಾಕಿದ್ರು.
43 ವ್ಯಭಿಚಾರ ಮಾಡಿ ಮಾಡಿ ದಣಿದು ಹೋದವಳ ಬಗ್ಗೆ ‘ಅವಳು ಇನ್ನೂ ವೇಶ್ಯಾವಾಟಿಕೆ ಮಾಡ್ತಾ ಇರೋಳು’ ಅಂತ ನಾನು ಹೇಳಿದೆ. 44 ವೇಶ್ಯೆಯ ಹತ್ರ ಹೋಗ್ತಾ ಇರೋ ಹಾಗೆ ಅವರು ಅವಳ ಹತ್ರ ಹೋಗ್ತಾ ಇದ್ರು. ಅಶ್ಲೀಲವಾಗಿ ನಡ್ಕೊಳ್ತಿದ್ದ ಒಹೊಲ ಮತ್ತು ಒಹೊಲೀಬಳ ಹತ್ರ ಅವರು ಹೀಗೇ ಹೋಗ್ತಿದ್ರು. 45 ಆದ್ರೆ ಅವಳು ವ್ಯಭಿಚಾರ ಮಾಡಿದ್ದಕ್ಕಾಗಿ+ ಮತ್ತು ರಕ್ತಸುರಿಸಿದ್ದಕ್ಕಾಗಿ ನೀತಿವಂತರು ಅವಳಿಗೆ ತಕ್ಕ ಶಿಕ್ಷೆ ಕೊಡ್ತಾರೆ.+ ಅವ್ರಿಬ್ಬರೂ ವ್ಯಭಿಚಾರಿಣಿಯರು ಮತ್ತು ಅವ್ರ ಕೈಯಲ್ಲಿ ರಕ್ತದ ಕಲೆಯಿದೆ.+
46 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಆ ಅಕ್ಕತಂಗಿಯ ವಿರುದ್ಧ ಒಂದು ಸೈನ್ಯ ಬರುತ್ತೆ. ಆ ಸೈನ್ಯ ಅವ್ರಿಗೆ ಎಂಥ ಗತಿ ಕಾಣಿಸುತ್ತೆ ಅಂದ್ರೆ ಅದನ್ನ ನೋಡಿದವ್ರ ಎದೆ ಧಸಕ್ಕನ್ನುತ್ತೆ, ಆ ಸೈನ್ಯ ಅವ್ರಿಬ್ಬರ ಹತ್ರ ಇರೋದನ್ನೆಲ್ಲ ಲೂಟಿ ಮಾಡುತ್ತೆ.+ 47 ಅವ್ರ ಮೇಲೆ ಕಲ್ಲುಗಳನ್ನ ಎಸೆದು+ ಅವ್ರನ್ನ ಕತ್ತಿಯಿಂದ ಕಡಿದುಹಾಕುತ್ತೆ, ಅವ್ರ ಮಕ್ಕಳನ್ನ ಕೊಲ್ಲುತ್ತೆ,+ ಅವ್ರ ಮನೆಗಳನ್ನ ಬೆಂಕಿಯಿಂದ ಸುಟ್ಟುಹಾಕುತ್ತೆ.+ 48 ದೇಶದಲ್ಲಿರೋ ಅಶ್ಲೀಲ ನಡತೆಗೆ ನಾನು ಒಂದು ಅಂತ್ಯ ಕಾಣಿಸ್ತೀನಿ. ಎಲ್ಲ ಹೆಂಗಸರು ನಿಮ್ಮಿಂದ ಒಂದು ಪಾಠ ಕಲಿತು ನಿಮ್ಮ ತರ ಅಶ್ಲೀಲವಾಗಿ ನಡ್ಕೊಳ್ಳಲ್ಲ.+ 49 ಆ ಸೈನ್ಯ ನಿಮ್ಮ ಅಶ್ಲೀಲ ನಡತೆಗಾಗಿ ಮತ್ತು ಹೊಲಸು ಮೂರ್ತಿಗಳ ಜೊತೆ ನೀವು ಮಾಡಿದ ಪಾಪಗಳಿಗಾಗಿ ನಿಮಗೆ ಶಿಕ್ಷೆ ಕೊಡುತ್ತೆ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”+
24 ಒಂಬತ್ತನೇ ವರ್ಷದ* ಹತ್ತನೇ ತಿಂಗಳ ಹತ್ತನೇ ದಿನ ಯೆಹೋವ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇವತ್ತಿನ ತಾರೀಕನ್ನ, ಈ ದಿನವನ್ನ ಬರೆದಿಡು. ಯಾಕಂದ್ರೆ ಇವತ್ತೇ ಬಾಬೆಲಿನ ರಾಜ ಯೆರೂಸಲೇಮ್ ವಿರುದ್ಧ ದಾಳಿ ಮಾಡೋಕೆ ಶುರುಮಾಡಿದ್ದಾನೆ.+ 3 ದಂಗೆಕೋರ ಜನ್ರ ಬಗ್ಗೆ ನೀನು ಒಂದು ಗಾದೆ* ಹೇಳು. ನೀನು ಅವ್ರ ಬಗ್ಗೆ ಹೀಗೆ ಹೇಳು:
4 ಅದ್ರಲ್ಲಿ ಒಳ್ಳೊಳ್ಳೆ ಮಾಂಸದ ತುಂಡುಗಳನ್ನ ಹಾಕು,+
ತೊಡೆಗಳನ್ನ, ಒಳ್ಳೊಳ್ಳೆ ಮೂಳೆಗಳನ್ನ ಅದ್ರಲ್ಲಿ ತುಂಬಿಸು.
5 ಇರೋ ಕುರಿಗಳಲ್ಲೇ ಒಳ್ಳೇ ಕುರಿಯನ್ನ ತಗೊ,+
ಆ ಪಾತ್ರೆ ಕೆಳಗೆ ಸುತ್ತ ಸೌದೆ ಜೋಡಿಸು.
ಅದ್ರಲ್ಲಿರೋ ತುಂಡುಗಳನ್ನ, ಮೂಳೆಗಳನ್ನ ಬೇಯಿಸು.”’
ಅದು ತುಕ್ಕು ಹಿಡಿದಿರೋ ಪಾತ್ರೆ ತರ ಇದೆ, ಅದ್ರ ತುಕ್ಕು ಹಾಗೇ ಇದೆ.
ಒಂದೊಂದೇ ತುಂಡನ್ನ ಹೊರಗೆ ತೆಗಿತಾ ಖಾಲಿ ಮಾಡು,+ ಆ ತುಂಡುಗಳಿಗಾಗಿ ಚೀಟಿ ಹಾಕಬೇಡ.
7 ಯಾಕಂದ್ರೆ ಆ ಪಟ್ಟಣ ಸುರಿಸಿದ ರಕ್ತ ಇನ್ನೂ ಆ ಪಟ್ಟಣದಲ್ಲೇ ಇದೆ.+
ಅವಳು ರಕ್ತವನ್ನ ನೆಲದ ಮೇಲೆ ಚೆಲ್ಲಿ ಮಣ್ಣು ಹಾಕಿ ಮುಚ್ಚದೆ,
ಆ ರಕ್ತವನ್ನ ಬಂಡೆ ಮೇಲೆ ಸುರಿದಳು.+
8 ನಾನು ಕೋಪದಿಂದ ಬಂದು ಆ ಪಟ್ಟಣಕ್ಕೆ ಸೇಡು ತೀರಿಸ್ತೀನಿ.
ಅಲ್ಲಿ ತನಕ ಆ ಪಟ್ಟಣ ಸುರಿಸಿದ ರಕ್ತ ಮುಚ್ಚಿಹೋಗದ ಹಾಗೆ
ಹೊಳೆಯೋ ಬಂಡೆ ಮೇಲೆನೇ ಇರೋಕೆ ನಾನು ಬಿಟ್ಟಿದ್ದೀನಿ.’+
9 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ
‘ರಕ್ತವನ್ನ ಸುರಿಸಿದ ಪಟ್ಟಣಕ್ಕೆ ಬರೋ ಗತಿಯನ್ನ ಏನಂತ ಹೇಳಲಿ!+
ನಾನು ಅದ್ರ ಸುತ್ತ ರಾಶಿರಾಶಿ ಸೌದೆ ಜೋಡಿಸ್ತೀನಿ.
10 ನೀನು ಸೌದೆಗಳನ್ನ ರಾಶಿ ಹಾಕು, ಬೆಂಕಿ ಹಚ್ಚು,
ಮಾಂಸವನ್ನ ಚೆನ್ನಾಗಿ ಬೇಯಿಸು, ಅದ್ರಲ್ಲಿರೋ ಸಾರನ್ನ ಹೊರಗೆ ಸುರಿ, ಮೂಳೆಗಳೆಲ್ಲ ಸೀದುಹೋಗಲಿ.
11 ತಾಮ್ರದ ಖಾಲಿ ಪಾತ್ರೆಯನ್ನ ಕೆಂಡದ ಮೇಲಿಡು, ಅದು ಬಿಸಿ ಆಗಲಿ,
ಬಿಸಿ ಆಗಿ ಆಗಿ ಪಾತ್ರೆ ಪೂರ್ತಿ ಕೆಂಪಗಾಗಲಿ.
ಆಗ ಅದ್ರಲ್ಲಿರೋ ಕಸ ಕರಗಿ ಹೋಗುತ್ತೆ,+ ತುಕ್ಕು ಸುಟ್ಟುಹೋಗುತ್ತೆ.
12 ಆ ಪಾತ್ರೆಗೆ ಎಷ್ಟೊಂದು ತುಕ್ಕು ಹಿಡಿದಿದೆ ಅಂದ್ರೆ ಅದು ಹೋಗೋದೇ ಇಲ್ಲ,
ಅದನ್ನ ತೆಗಿಯೋಕೆ ಎಷ್ಟೇ ಕಷ್ಟಪಟ್ರೂ ವ್ಯರ್ಥ, ಆಯಾಸ ಆಗುತ್ತಷ್ಟೇ.+
ಹಾಗಾಗಿ ತುಕ್ಕುಹಿಡಿದಿರೋ ಆ ಪಾತ್ರೆನ ಬೆಂಕಿಗೆ ಹಾಕು!’
13 ‘ನಿನ್ನ ಅಶ್ಲೀಲ ನಡತೆಯಿಂದಾಗಿ ನೀನು ಅಶುದ್ಧ ಆಗಿದ್ದೀಯ.+ ನಾನು ನಿನ್ನನ್ನ ಶುದ್ಧ ಮಾಡೋಕೆ ತುಂಬ ಪ್ರಯತ್ನಪಟ್ಟೆ, ಆದ್ರೆ ನೀನು ಶುದ್ಧ ಆಗಲಿಲ್ಲ. ನನಗೆ ನಿನ್ನ ಮೇಲಿರೋ ಕೋಪ ಇಳಿಯೋ ತನಕ ನೀನು ಶುದ್ಧ ಆಗಲ್ಲ.+ 14 ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ. ಇದು ನಡೆದೇ ನಡೆಯುತ್ತೆ. ನಿನಗೆ ಶಿಕ್ಷೆ ಸಿಗುವಾಗ ನಾನು ಮಧ್ಯ ಬಂದು ತಡಿಯಲ್ಲ. ಅದಕ್ಕಾಗಿ ನಾನು ಬೇಜಾರು ಮಾಡ್ಕೊಳಲ್ಲ, ನನ್ನ ಮನಸ್ಸನ್ನ ಬದಲಾಯಿಸೋದೂ ಇಲ್ಲ.+ ನಿನ್ನ ನಡತೆ, ವರ್ತನೆಗೆ ತಕ್ಕ ಹಾಗೆ ನಿನಗೆ ತೀರ್ಪು ಆಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
15 ಯೆಹೋವ ಮತ್ತೆ ನನಗೆ 16 “ಮನುಷ್ಯಕುಮಾರನೇ, ನೀನು ತುಂಬ ಪ್ರೀತಿಸೋ ವ್ಯಕ್ತಿಯನ್ನ ನಾನು ಇದ್ದಕ್ಕಿದ್ದ ಹಾಗೆ ಸಾಯಿಸಿಬಿಡ್ತೀನಿ.+ ಆಗ ನೀನು ಎದೆ ಬಡ್ಕೊಬಾರದು. ಅಳಬಾರದು, ಕಣ್ಣೀರು ಸುರಿಸಬಾರದು. 17 ನೀನು ಮನಸ್ಸಲ್ಲೇ ದುಃಖಪಡಬೇಕು, ಸತ್ತ ವ್ಯಕ್ತಿಗಾಗಿ ಶೋಕಾಚರಣೆ ಮಾಡಬೇಡ.+ ಪೇಟ ಸುತ್ಕೊ.+ ಚಪ್ಪಲಿ ಹಾಕೊ.+ ನಿನ್ನ ಮೀಸೆ ಮುಚ್ಕೊಬೇಡ.+ ಬೇರೆಯವರು ತಂದ್ಕೊಡೋ ಊಟ ತಿನ್ನಬೇಡ”+ ಅಂದನು.
18 ದೇವರು ಹೇಳಿದ ವಿಷ್ಯಗಳನ್ನ ನಾನು ಬೆಳಿಗ್ಗೆ ಜನ್ರಿಗೆ ಹೇಳಿದೆ. ಸಂಜೆ ನನ್ನ ಹೆಂಡತಿ ತೀರಿಕೊಂಡಳು. ದೇವರು ನನಗೆ ಆಜ್ಞೆ ಕೊಟ್ಟ ಹಾಗೇ ಬೆಳಿಗ್ಗೆ ನಾನು ಮಾಡಿದೆ. 19 ಆಗ ಜನ್ರು ನನಗೆ “ಯಾಕೆ ಹೀಗೆಲ್ಲ ಮಾಡ್ತಿದ್ದೀಯಾ? ಇದ್ರಿಂದ ನಮಗೆ ಏನು ಹೇಳಬೇಕು ಅಂತಿದ್ದೀಯಾ?” ಅಂದ್ರು. 20 ಅದಕ್ಕೆ ಹೀಗೆ ಹೇಳಿದೆ: “ಯೆಹೋವ ನನಗೆ ಹೇಳಿದ್ದು ಏನಂದ್ರೆ 21 ‘ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವು ತುಂಬ ಹೆಮ್ಮೆಪಡೋ, ಪ್ರೀತಿಸೋ, ನಿಮ್ಮ ಹೃದಯಕ್ಕೆ ಹತ್ರ ಇರೋ ನನ್ನ ಆರಾಧನಾ ಸ್ಥಳವನ್ನ ನಾನು ಅಪವಿತ್ರ ಮಾಡ್ತೀನಿ.+ ನೀವು ಬಿಟ್ಟುಬಂದಿರೋ ನಿಮ್ಮ ಮಕ್ಕಳು ಕತ್ತಿಗೆ ತುತ್ತಾಗಿ ಸಾಯ್ತಾರೆ.+ 22 ಆಗ ನೀವು ಈಗ ಯೆಹೆಜ್ಕೇಲ ಮಾಡ್ತಿರೋ ಹಾಗೇ ಮಾಡಬೇಕಾಗುತ್ತೆ. ನೀವು ನಿಮ್ಮ ಮೀಸೆಯನ್ನ ಮುಚ್ಕೊಳಲ್ಲ, ಬೇರೆಯವರು ತಂದ್ಕೊಟ್ಟ ಊಟ ತಿನ್ನಲ್ಲ.+ 23 ಪೇಟ ಸುತ್ಕೊತೀರ, ಚಪ್ಪಲಿ ಹಾಕೊತೀರ. ನೀವು ಎದೆ ಬಡ್ಕೊಳಲ್ಲ, ಅಳೋದೂ ಇಲ್ಲ. ನೀವು ಪಾಪಗಳನ್ನ ಮಾಡಿರೋದ್ರಿಂದ ನಿಮ್ಮ ಜೀವನ ಹಾಳಾಗಿ ಹೋಗುತ್ತೆ, ನೀವು ಬಳಲಿ ಬೆಂಡಾಗಿ ಹೋಗ್ತಿರ.+ ಒಬ್ಬರನ್ನೊಬ್ಬರು ನೋಡ್ತಾ ದುಃಖಪಡ್ತೀರ. 24 ಯೆಹೆಜ್ಕೇಲ ನಿಮಗೆ ಒಂದು ಗುರುತಾಗಿ ಇದ್ದಾನೆ.+ ಅವನು ಮಾಡಿದ ಹಾಗೇ ನೀವೂ ಮಾಡ್ತೀರ. ಇದೆಲ್ಲ ನಡೆದಾಗ ನಾನೇ ವಿಶ್ವದ ರಾಜ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’”’”
25 “ಮನುಷ್ಯಕುಮಾರನೇ, ಈ ಜನ ತಮ್ಮ ಈ ಸುಂದರ ಕೋಟೆಯನ್ನ ನೋಡಿ ತುಂಬ ಖುಷಿಪಡ್ತಾರೆ, ಅದು ಅಂದ್ರೆ ಅವ್ರಿಗೆ ಪ್ರಾಣ, ಅದು ಅವ್ರ ಹೃದಯಕ್ಕೆ ಹತ್ರ ಇದೆ. ಆದ್ರೆ ನಾನು ಆ ಕೋಟೆಯನ್ನ ನಾಶಮಾಡ್ತೀನಿ. ಅವ್ರ ಮಕ್ಕಳನ್ನೂ ಸಾಯಿಸ್ತೀನಿ.+ 26 ಅದ್ರಿಂದ ತಪ್ಪಿಸ್ಕೊಂಡು ಬಂದವನು ನಿನಗೆ ಈ ಸುದ್ದಿ ಹೇಳ್ತಾನೆ.+ 27 ಆ ದಿನ ತಪ್ಪಿಸ್ಕೊಂಡು ಬಂದವನ ಜೊತೆ ಬಾಯಿ ತೆಗೆದು ಮಾತಾಡ್ತೀಯ. ಇನ್ಮೇಲೆ ನೀನು ಮೂಕನ ತರ ಇರಲ್ಲ.+ ನೀನು ಅವ್ರಿಗೆ ಒಂದು ಗುರುತಾಗ್ತೀಯ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”
25 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಅಮ್ಮೋನಿಯರ ಕಡೆ ಮುಖಮಾಡಿ+ ಅವ್ರ ವಿರುದ್ಧ ಭವಿಷ್ಯ ಹೇಳು.+ 3 ನೀನು ಅಮ್ಮೋನಿಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವನ ಮಾತು ಕೇಳಿ. ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಆರಾಧನಾ ಸ್ಥಳ ಅಪವಿತ್ರ ಆದಾಗ, ಇಸ್ರಾಯೇಲ್ ದೇಶ ಹಾಳಾದಾಗ ಮತ್ತು ಯೆಹೂದದ ಜನ ಕೈದಿಗಳಾಗಿ ಹೋದಾಗ ನೀವು ಅಣಕಿಸ್ತಾ ‘ಹೀಗೇ ಆಗಬೇಕಿತ್ತು!’ ಅಂತ ಹೇಳಿದ್ರಿ. 4 ಹಾಗಾಗಿ ನಾನು ನಿಮ್ಮನ್ನ ಪೂರ್ವ ದಿಕ್ಕಲ್ಲಿರೋ ಜನ್ರ ಕೈಗೆ ಕೊಡ್ತೀನಿ. ಅವರು ನಿಮ್ಮ ದೇಶದಲ್ಲಿ ಪಾಳೆಯಗಳನ್ನ* ಹಾಕ್ತಾರೆ ಮತ್ತು ಡೇರೆಗಳನ್ನ ಹಾಕೊಳ್ತಾರೆ. ನಿಮ್ಮ ದೇಶದ ಬೆಳೆಯನ್ನ ಅವರು ತಿಂತಾರೆ ಮತ್ತು ನಿಮ್ಮ ದನಕುರಿಗಳ ಹಾಲನ್ನ ಕುಡಿತಾರೆ. 5 ನಾನು ರಬ್ಬಾ+ ಪಟ್ಟಣವನ್ನ ಒಂಟೆಗಳಿಗೆ ಹುಲ್ಲುಗಾವಲಾಗಿ ಮಾಡ್ತೀನಿ. ಅಮ್ಮೋನಿಯರ ದೇಶವನ್ನ ದನಕುರಿಗಳ ದೊಡ್ಡಿ ಮಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’”
6 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀವು ಇಸ್ರಾಯೇಲ್ ದೇಶಕ್ಕೆ ಬಂದ ಗತಿಯನ್ನ ನೋಡಿ ಖುಷಿಯಿಂದ ಚಪ್ಪಾಳೆ ಹೊಡೆದು,+ ಕಾಲನ್ನ ನೆಲಕ್ಕೆ ಬಡಿದ್ರಿ. ಸಿಕ್ಕಾಪಟ್ಟೆ ಅಣಕಿಸಿದ್ರಿ.+ 7 ಹಾಗಾಗಿ ನಾನು ನನ್ನ ಕೈಯನ್ನ ಚಾಚಿ ನಿಮ್ಮನ್ನ ಬೇರೆ ಜನಾಂಗಗಳ ವಶಕ್ಕೆ ಕೊಡ್ತೀನಿ. ನಿಮ್ಮ ಹತ್ರ ಇರೋದನ್ನೆಲ್ಲಾ ಅವರು ಲೂಟಿ ಮಾಡ್ತಾರೆ. ನಾನು ನಿಮ್ಮನ್ನ ಜನಾಂಗಗಳ ಪಟ್ಟಿಯಲ್ಲಿ ಇಲ್ಲದ ಹಾಗೆ ಮಾಡಿ ದೇಶಗಳ ಮಧ್ಯದಿಂದ ತೆಗೆದುಬಿಡ್ತೀನಿ.+ ನಿಮ್ಮನ್ನ ನಾಶ ಮಾಡ್ತೀನಿ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’
8 ವಿಶ್ವದ ರಾಜ ಯೆಹೋವ ಹೀಗಂದನು: ‘ಮೋವಾಬ್+ ಮತ್ತು ಸೇಯೀರ್+ ಯೆಹೂದದ ಜನ್ರ ಬಗ್ಗೆ “ನೋಡಿ, ಇವರೂ ಬೇರೆ ಜನಾಂಗಗಳ ತರಾನೇ” ಅಂತ ಹೇಳಿವೆ. 9 ಹಾಗಾಗಿ ನಾನು ಮೋವಾಬಿನ ಗಡಿಯಲ್ಲಿರೋ ಪಟ್ಟಣಗಳ ಜೊತೆಗೆ ಮೋವಾಬಿನ ಸೌಂದರ್ಯ ಆಗಿರೋ* ಬೇತ್-ಯೆಷಿಮೋತ್, ಬಾಳ್-ಮೆಯೋನ್ ಮತ್ತು ಕಿರ್ಯಾತಯಿಮ್+ ಪಟ್ಟಣಗಳ ಮೇಲೂ ದಾಳಿ ಆಗೋ ಹಾಗೆ ಮಾಡ್ತೀನಿ. 10 ನಾನು ಮೋವಾಬ್ಯರನ್ನ ಮತ್ತು ಅಮ್ಮೋನಿಯರನ್ನ ಪೂರ್ವದಲ್ಲಿ ವಾಸಿಸ್ತಿರೋ ಜನ್ರ ಕೈಗೆ ಕೊಡ್ತೀನಿ.+ ಅದಾದ್ಮೇಲೆ ಅಮ್ಮೋನಿಯರನ್ನ ಯಾವ ಜನಾಂಗಗಳೂ ನೆನಪಿಸ್ಕೊಳ್ಳಲ್ಲ.+ 11 ನಾನು ಮೋವಾಬಿಗೆ ಶಿಕ್ಷೆ ಕೊಡ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’
12 ವಿಶ್ವದ ರಾಜ ಯೆಹೋವ ಹೀಗಂದನು: ‘ಎದೋಮ್ ಯೆಹೂದದ ಜನ್ರಿಗೆ ಸೇಡು ತೀರಿಸಿದೆ, ಪ್ರತೀಕಾರ ತಗೊಂಡು ದೊಡ್ಡ ಅಪರಾಧವನ್ನ ಮಾಡಿದೆ.+ 13 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಎದೋಮಿನ ವಿರುದ್ಧ ಕೈಚಾಚಿ ಅದ್ರಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ನಾಶಮಾಡ್ತೀನಿ ಮತ್ತು ಅದು ಹಾಳುಬೀಳೋ ಹಾಗೆ ಮಾಡ್ತೀನಿ.+ ತೇಮಾನಿನಿಂದ ದೆದಾನಿನ ತನಕ ಇರೋ ಜನ್ರೆಲ್ಲ ಕತ್ತಿಯಿಂದ ಸಾಯ್ತಾರೆ.+ 14 ‘ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಕೈಯಿಂದ ಎದೋಮಿಗೆ ಸೇಡು ತೀರಿಸ್ತೀನಿ.+ ಅವ್ರ ಮೂಲಕ ಎದೋಮಿನ ಮೇಲೆ ನನ್ನ ಕೋಪ, ಕ್ರೋಧವನ್ನ ತೋರಿಸ್ತೀನಿ. ನಾನು ಹೇಗೆ ಸೇಡು ತೀರಿಸ್ತೀನಿ ಅಂತ ಆಗ ಎದೋಮಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’
15 ವಿಶ್ವದ ರಾಜ ಯೆಹೋವ ಹೀಗಂದನು: ‘ಫಿಲಿಷ್ಟಿಯರು ಮುಂಚಿಂದಾನೂ ಇರೋ ದ್ವೇಷದಿಂದ ಇಸ್ರಾಯೇಲ್ಯರಿಗೆ ಸೇಡು ತೀರಿಸಿ ಸರ್ವನಾಶ ಮಾಡಬೇಕು ಅಂತ ಪ್ರಯತ್ನಿಸ್ತಾ ಕೆಟ್ಟ ಬುದ್ಧಿ ತೋರಿಸಿದ್ದಾರೆ.+ 16 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಫಿಲಿಷ್ಟಿಯರಿಗೆ ಶಿಕ್ಷೆ ಕೊಡ್ತೀನಿ,+ ಕೆರೇತ್ಯರನ್ನ ನಾಶ ಮಾಡ್ತೀನಿ.+ ಸಮುದ್ರ ತೀರದಲ್ಲಿ ವಾಸಿಸೋ ಜನ್ರಲ್ಲಿ ಉಳಿದವ್ರನ್ನ ನಾಶ ಮಾಡ್ತೀನಿ.+ 17 ಹಾಗೇ ಕಠಿಣ ಶಿಕ್ಷೆಗಳನ್ನ ಕೊಟ್ಟು ಭಯಂಕರವಾಗಿ ಸೇಡು ತೀರಿಸ್ತೀನಿ. ನಾನು ಅವ್ರಿಗೆ ಸೇಡು ತೀರಿಸುವಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’”
26 ಹನ್ನೊಂದನೇ ವರ್ಷದ* ಮೊದಲನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ತೂರ್ ಅನ್ನೋಳು ಯೆರೂಸಲೇಮನ್ನ ಅಣಕಿಸ್ತಾ,+ ‘ಆ ಪಟ್ಟಣ ಜನಾಂಗಗಳಿಗೆ ಬಾಗಿಲ ಹಾಗೆ ಇತ್ತು. ಈಗ ಅದು ನಾಶವಾಗಿದೆ.+ ಅದಕ್ಕೆ ಹಾಗೇ ಆಗಬೇಕಿತ್ತು! ಆ ಪಟ್ಟಣ ನಾಶ ಆಗಿರೋದ್ರಿಂದ ಈಗ ಎಲ್ಲ ಜನ ನನ್ನ ಹತ್ರ ಬರ್ತಾರೆ. ನಾನೀಗ ಶ್ರೀಮಂತಳಾಗ್ತೀನಿ’ ಅಂತ ಹೇಳಿದ್ದಾಳೆ. 3 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ತೂರ್ ಅನ್ನೋಳೇ, ನಾನು ನಿನಗೆ ವಿರುದ್ಧವಾಗಿ ಇದ್ದೀನಿ. ಸಮುದ್ರ ಅಲೆಗಳನ್ನ ಎಬ್ಬಿಸೋ ಹಾಗೆ ನಿನ್ನ ಮೇಲೆ ದಾಳಿ ಮಾಡೋಕೆ ನಾನು ತುಂಬ ಜನಾಂಗಗಳನ್ನ ಎಬ್ಬಿಸ್ತೀನಿ. 4 ಅವರು ನಿನ್ನ ಗೋಡೆಗಳನ್ನ ನೆಲಸಮ ಮಾಡ್ತಾರೆ, ನಿನ್ನ ಗೋಪುರಗಳನ್ನ ನಾಶ ಮಾಡ್ತಾರೆ.+ ನಾನು ನಿನ್ನಲ್ಲಿರೋ ಮಣ್ಣನ್ನ ಕೆರೆದು ನಿನ್ನನ್ನ ಹೊಳೆಯೋ ಬೋಳು ಬಂಡೆಯಾಗಿ ಮಾಡ್ತೀನಿ. 5 ನೀನು ಸಮುದ್ರದ ಮಧ್ಯ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.’+
ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನೇ ಹೇಳಿದ್ದೀನಿ, ಹಾಗಾಗಿ ಜನಾಂಗಗಳು ನಿನ್ನನ್ನ ಲೂಟಿ ಮಾಡ್ತವೆ. 6 ನಿನ್ನ ಸುತ್ತಮುತ್ತ ಇರೋ ಊರಲ್ಲಿರೋ ಜನ ಕತ್ತಿಯಿಂದ ಸಾಯ್ತಾರೆ. ಆಗ, ನಾನೇ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.’
7 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ತೂರಿನ ಮೇಲೆ ದಾಳಿ ಮಾಡೋಕೆ ನಾನು ಉತ್ತರದಿಂದ ಬಾಬೆಲಿನ ರಾಜ ನೆಬೂಕದ್ನೆಚ್ಚರನನ್ನ* ಕರ್ಕೊಂಡು ಬರ್ತಿದ್ದೀನಿ.+ ಅವನು ರಾಜರ ರಾಜ.+ ಅವನ ಹತ್ರ ಕುದುರೆಗಳು,+ ಯುದ್ಧರಥಗಳು,+ ಕುದುರೆ ಸವಾರರು, ತುಂಬ ಸೈನಿಕರಿರೋ ಸೈನ್ಯ ಇದೆ. 8 ನಿನ್ನ ಊರಲ್ಲಿರೋ ಜನ್ರನ್ನ ಅವನು ಕತ್ತಿಯಿಂದ ಸಾಯಿಸ್ತಾನೆ. ಅವನು ನಿನ್ನ ವಿರುದ್ಧ ದಾಳಿ ಮಾಡೋಕೆ ಇಳಿಜಾರು ದಿಬ್ಬವನ್ನೂ ಗೋಡೆಯನ್ನೂ ಕಟ್ತಾನೆ. ಅಷ್ಟೇ ಅಲ್ಲ, ಅವನು ದೊಡ್ಡ ಗುರಾಣಿ ಮಾಡ್ತಾನೆ. 9 ಅವನು ಗೋಡೆ ಒಡಿಯೋ ಯಂತ್ರದಿಂದ* ನಿನ್ನ ಗೋಡೆಗಳನ್ನ ಗುದ್ದಿ ಗುದ್ದಿ ಒಡೆದು ಹಾಕ್ತಾನೆ, ಕೊಡಲಿಗಳಿಂದ* ನಿನ್ನ ಗೋಪುರಗಳನ್ನ ಬೀಳಿಸ್ತಾನೆ. 10 ಅವನ ಹತ್ರ ಎಷ್ಟು ಕುದುರೆ ಇದೆ ಅಂದ್ರೆ ಅವು ಓಡುವಾಗ ಧೂಳಿನ ಮೋಡ ಎದ್ದು ನಿನ್ನನ್ನ ಮುಚ್ಕೊಳುತ್ತೆ. ಅವನು ನಿನ್ನ ಬಾಗಿಲ ಹತ್ರ ಬರೋವಾಗ ಕುದುರೆ ಸವಾರರ, ರಥಗಳ ಮತ್ತು ಚಕ್ರಗಳ ಶಬ್ದಕ್ಕೆ ನಿನ್ನ ಗೋಡೆಗಳೇ ನಡುಗುತ್ತವೆ. ಗೋಡೆಗಳು ಬಿದ್ದುಹೋಗಿರೋ ಪಟ್ಟಣದ ಒಳಗೆ ಜನ್ರು ನುಗ್ಗೋ ಹಾಗೆ ಅವನು ನಿನ್ನ ಬಾಗಿಲ ಒಳಗೆ ನುಗ್ತಾನೆ. 11 ಅವನ ಕುದುರೆಗಳು ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲ ತುಳಿದುಬಿಡ್ತವೆ.+ ಅವನು ನಿನ್ನ ಜನ್ರನ್ನ ಕತ್ತಿಯಿಂದ ಸಾಯಿಸ್ತಾನೆ. ನಿನ್ನ ದೊಡ್ಡ ದೊಡ್ಡ ಸ್ತಂಭಗಳು ನೆಲಕ್ಕೆ ಬಿದ್ದು ಪುಡಿಪುಡಿಯಾಗ್ತವೆ. 12 ಸೈನ್ಯಗಳು ನಿನ್ನ ಸಂಪತ್ತನ್ನೆಲ್ಲ ಲೂಟಿ ಮಾಡ್ತವೆ, ನಿನ್ನ ಸರಕುಗಳನ್ನ ಕೊಳ್ಳೆ ಹೊಡೀತವೆ,+ ನಿನ್ನ ಗೋಡೆಗಳನ್ನ ಒಡೆದು ಹಾಕ್ತವೆ, ನಿನ್ನ ಒಳ್ಳೊಳ್ಳೆ ಮನೆಗಳನ್ನ ನೆಲಸಮ ಮಾಡಿಬಿಡ್ತವೆ. ಆಮೇಲೆ ನಿನ್ನಲ್ಲಿರೋ ಕಲ್ಲುಗಳನ್ನ, ಮರದ ವಸ್ತುಗಳನ್ನ, ಮಣ್ಣನ್ನ ಸಮುದ್ರಕ್ಕೆ ಬಿಸಾಕ್ತವೆ.’
13 ‘ನಾನು ನಿನ್ನ ಹಾಡುಗಳನ್ನ ನಿಲ್ಲಿಸಿಬಿಡ್ತೀನಿ, ನಿನ್ನಲ್ಲಿ ತಂತಿವಾದ್ಯಗಳ ಸಂಗೀತ ಇನ್ಮುಂದೆ ಕೇಳಿಸಲ್ಲ.+ 14 ನಾನು ನಿನ್ನನ್ನ ಹೊಳಿಯೋ ಬಂಡೆ ತರ ಮಾಡ್ತೀನಿ. ನೀನು ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಆಗ್ತೀಯ.+ ನಿನ್ನನ್ನ ಮತ್ತೆ ಯಾವತ್ತೂ ಯಾರೂ ಕಟ್ಟಲ್ಲ. ಯಾಕಂದ್ರೆ, ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
15 ವಿಶ್ವದ ರಾಜ ಯೆಹೋವ ತೂರಿಗೆ ಹೇಳೋದು ಏನಂದ್ರೆ ‘ನೀನು ಬೀಳೋ ಶಬ್ದಕ್ಕೆ, ಜೀವ ಹೋಗೋ ಸ್ಥಿತಿಯಲ್ಲಿರೋ ನಿನ್ನ ಜನ್ರ ನರಳಾಟಕ್ಕೆ, ನಿನ್ನ ಮಧ್ಯ ಆಗೋ ಯುದ್ಧಕ್ಕೆ ದ್ವೀಪಗಳು ಗಡಗಡ ಅಂತ ನಡುಗ್ತವೆ.+ 16 ಸಮುದ್ರದ ಎಲ್ಲ ಅಧಿಕಾರಿಗಳು* ಅವ್ರ ಸಿಂಹಾಸನದಿಂದ ಇಳಿದು ಬರ್ತಾರೆ. ಅವ್ರ ಉದ್ದ ಅಂಗಿಗಳನ್ನ* ತೆಗೆದು ಹಾಕ್ತಾರೆ, ಕಸೂತಿಹಾಕಿರೋ ಅವ್ರ ಬಟ್ಟೆಗಳನ್ನ ಬಿಚ್ಚಿಡ್ತಾರೆ. ಅವರು ಭಯದಿಂದ ಬಿದ್ದು ಹೋಗ್ತಾರೆ. ನೆಲದ ಮೇಲೆ ಕೂತು ಒಂದೇ ಸಮ ನಡುಗ್ತಾರೆ ಮತ್ತು ತುಂಬ ಆಶ್ಚರ್ಯದಿಂದ ನಿನ್ನನ್ನೇ ಕಣ್ಣು ಮಿಟುಕಿಸದೆ ನೋಡ್ತಾರೆ.+ 17 ಅವರು ನಿನ್ನ ಬಗ್ಗೆ ಶೋಕಗೀತೆ ಹಾಡ್ತಾ+ ಹೀಗೆ ಹೇಳ್ತಾರೆ:
“ಎಲ್ರೂ ಹೊಗಳ್ತಿದ್ದ ಪಟ್ಟಣ ನೀನಾಗಿದ್ದೆ, ಸಮುದ್ರದಿಂದ ಜನ ಬಂದು ನಿನ್ನಲ್ಲಿ ವಾಸಿಸ್ತಿದ್ರು.
ಸಮುದ್ರದ ಮೇಲೆ ನೀನು, ನಿನ್ನ ಜನ್ರು ತುಂಬ ಶಕ್ತಿಶಾಲಿಗಳಾಗಿದ್ರಿ.+
ಭೂಮಿಯ ಎಲ್ಲ ಜನ್ರ ಎದೆಯಲ್ಲಿ ಭಯ ಹುಟ್ಟಿಸಿದ್ರಿ.
ಆದ್ರೆ ತೂರ್ ಪಟ್ಟಣವೇ, ನೀನೀಗ ನಾಶವಾಗಿ ಹೋಗಿದ್ದಿಯಲ್ಲಾ!+
18 ನೀನು ನಾಶವಾಗೋ ದಿನ ದ್ವೀಪಗಳು ನಡುಗ್ತವೆ,
ನೀನು ಇಲ್ಲದೇ ಹೋದ ಮೇಲೆ ಸಮುದ್ರದ ದ್ವೀಪಗಳು ಆತಂಕ ಪಡ್ತವೆ.”’+
19 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ನಿನ್ನನ್ನ ಹಾಳು ಮಾಡಿ ನಿರ್ಜನ ಪಟ್ಟಣಗಳ ಸ್ಥಿತಿಗೆ ತರ್ತಿನಿ. ನಾನು ಉಕ್ಕೇರೋ ನೀರಲ್ಲಿ ನಿನ್ನನ್ನ ಹಾಕ್ತೀನಿ, ಆಗ ನೀನು ವಿಶಾಲ ಸಮುದ್ರದಲ್ಲಿ ಮುಳುಗಿಹೋಗ್ತಿಯ.+ 20 ತುಂಬ ಕಾಲದ ಹಿಂದೆ ಸತ್ತವರು ಎಲ್ಲಿದ್ದಾರೋ ಆ ಗುಂಡಿಯಲ್ಲಿ* ನಾನು ಬೇರೆ ಜನ್ರನ್ನ ಸೇರಿಸೋ ತರ ನಿನ್ನನ್ನೂ ಸೇರಿಸ್ತೀನಿ. ಹಿಂದಿನ ಕಾಲದಲ್ಲಿ ನಾಶವಾದ ಪಟ್ಟಣಗಳು ಎಲ್ಲಿದ್ವೋ ಆ ತಗ್ಗಾದ ಜಾಗಕ್ಕೆ ನೀನೂ ಹೋಗೋ ತರ ಮಾಡ್ತೀನಿ. ಬೇರೆ ಜನ್ರನ್ನ ಹಾಕೋ ಗುಂಡಿಗೆ ನಿನ್ನನ್ನೂ ಹಾಕ್ತೀನಿ.+ ನಿನ್ನಲ್ಲಿ ಯಾರೂ ವಾಸಿಸದ ಹಾಗೆ ಮಾಡ್ತೀನಿ. ಆಮೇಲೆ ನಾನು ಜೀವಿಸೋರ ದೇಶಕ್ಕೆ ಗೌರವ ತರ್ತಿನಿ.*
21 ನೀನು ಥಟ್ಟಂತ ನಾಶ ಆಗೋ ಹಾಗೆ ನಾನು ಮಾಡ್ತೀನಿ. ಆಗ ನೀನು ಇಲ್ಲದೆ ಹೋಗ್ತೀಯ.+ ಅವರು ನಿನ್ನನ್ನ ಹುಡುಕ್ತಾರೆ. ಆದ್ರೆ ನೀನು ಯಾವತ್ತೂ ಸಿಗಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
27 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ತೂರಿನ ಬಗ್ಗೆ ಒಂದು ಶೋಕಗೀತೆ ಹಾಡು.+ 3 ನೀನು ತೂರಿಗೆ ಏನು ಹೇಳಬೇಕಂದ್ರೆ
‘ಸಮುದ್ರದ ಬಾಗಿಲ ಹತ್ರ ಇರೋಳೇ,
ಎಷ್ಟೋ ದ್ವೀಪಗಳಲ್ಲಿರೋ ಜನಾಂಗಗಳ ಜೊತೆ ವ್ಯಾಪಾರ ಮಾಡೋಳೇ,
ವಿಶ್ವದ ರಾಜ ಯೆಹೋವ ಹೀಗಂತಾನೆ:
“ತೂರೇ, ನೀನು ನಿನ್ನ ಬಗ್ಗೆ, ‘ನನ್ನ ಸೌಂದರ್ಯಕ್ಕೆ ಸರಿಸಾಟಿ ಇಲ್ಲ’ ಅಂತ ಹೇಳಿದ್ದೀಯ.+
4 ನಿನ್ನ ಪ್ರದೇಶಗಳು ಸಮುದ್ರದ ಮಧ್ಯ ಇವೆ,
ನಿನ್ನನ್ನ ಮಾಡಿದವರು ನಿನ್ನನ್ನ ಸೌಂದರ್ಯದ ಗಣಿಯಾಗಿ ಮಾಡಿದ್ದಾರೆ.
5 ಹಡಗನ್ನ ಮಾಡೋ ಹಾಗೆ ನಿನ್ನನ್ನ ಮಾಡ್ತಾ ನಿನ್ನ ಹಲಗೆಗಳನ್ನೆಲ್ಲ ಸೆನೀರಿನ ಜುನಿಪರ್ ಮರಗಳಿಂದ ಮಾಡಿದ್ರು.+
ಅವರು ನಿನ್ನ ಪಟ ಕಟ್ಟೋ ಕಂಬವನ್ನ ಲೆಬನೋನಿನ ದೇವದಾರು ಮರದಿಂದ ಮಾಡಿದ್ರು.
6 ಬಾಷಾನಿನ ಓಕ್ ಮರಗಳಿಂದ ಹುಟ್ಟು ಹಾಕೋ ಕೋಲುಗಳನ್ನ ಮಾಡಿದ್ರು.
ದಂತ ಕೂರಿಸಿರೋ ಶಂಕುಮರದ ಹಲಗೆಗಳನ್ನ ಕಿತ್ತೀಮ್+ ದ್ವೀಪಗಳಿಂದ ತರಿಸಿ ನಿನ್ನ ಮುಂಭಾಗವನ್ನ ನಿರ್ಮಿಸಿದ್ರು.
7 ಈಜಿಪ್ಟಿನ ಬಣ್ಣಬಣ್ಣದ ನಾರುಬಟ್ಟೆಯಿಂದ ನಿನ್ನ ಹಾಯಿಯನ್ನ ಮಾಡಿದ್ರು,
ಎಲೀಷಾ+ ದ್ವೀಪಗಳಿಂದ ತರಿಸಿದ ನೀಲಿ ದಾರ ಮತ್ತು ನೇರಳೆ ಬಣ್ಣದ ಉಣ್ಣೆಯಿಂದ ನಿನ್ನ ಅಟ್ಟದ ಚಾವಣಿಗಳನ್ನ ಮಾಡಿದ್ರು.
8 ಸೀದೋನ್ ಮತ್ತು ಅರ್ವಾದಿನ ಜನ+ ನಿನ್ನ ನಾವಿಕರಾಗಿದ್ರು.
ತೂರೇ, ನಿನ್ನಲ್ಲಿದ್ದ ನಿಪುಣ ಗಂಡಸರು ನಿನ್ನ ಹಡಗನ್ನ ನಡಿಸ್ತಿದ್ರು.+
9 ಗೆಬಲಿನ+ ಅನುಭವ ಇರೋ ನಿಪುಣರು ನಿನ್ನ ಹಲಗೆಗಳ ಸಂದಿಗಳನ್ನ ಮುಚ್ಚಿದ್ರು.+
ಸಮುದ್ರದ ಎಲ್ಲ ಹಡಗುಗಳು ಮತ್ತು ಅದ್ರ ನಾವಿಕರು ಸರಕುಗಳನ್ನ ಕೊಂಡ್ಕೊಳ್ಳೋಕೆ, ಮಾರೋಕೆ ನಿನ್ನ ಹತ್ರ ಬಂದ್ರು.
10 ಪರ್ಶಿಯ, ಲೂದ್ಯ ಮತ್ತು ಪೂಟಿನ+ ಗಂಡಸರು ನಿನ್ನ ಸೈನ್ಯದಲ್ಲಿ ವೀರ ಸೈನಿಕರಾಗಿದ್ರು.
ಅವರು ತಮ್ಮ ಗುರಾಣಿಗಳನ್ನ, ಶಿರಸ್ತ್ರಾಣಗಳನ್ನ ನಿನ್ನಲ್ಲಿ ನೇತುಹಾಕಿ ನಿನಗೆ ಕಳೆ ತಂದ್ರು.
11 ನಿನ್ನ ಸೈನ್ಯದಲ್ಲಿರೋ ಅರ್ವಾದಿನ ಗಂಡಸರು ನಿನ್ನ ಸುತ್ತ ಇದ್ದ ಗೋಡೆಗಳ ಮೇಲೆ ನಿಂತಿದ್ರು.
ಕೆಚ್ಚೆದೆಯ ಗಂಡಸರು ನಿನ್ನ ಗೋಪುರಗಳಲ್ಲಿ ನಿಂತು ಕಾವಲು ಕಾಯ್ತಿದ್ರು.
ಅವರು ನಿನ್ನ ಗೋಡೆಗಳ ಸುತ್ತ ವೃತ್ತಾಕಾರದ ಗುರಾಣಿಗಳನ್ನ ನೇತುಹಾಕಿದ್ರು.
ಹೀಗೆ ಅವರು ನಿನ್ನನ್ನ ಸೌಂದರ್ಯದ ಗಣಿಯಾಗಿ ಮಾಡಿದ್ರು.
12 ನಿನ್ನ ಹತ್ರ ಜಾಸ್ತಿ ಸಂಪತ್ತು ಇದ್ದಿದ್ರಿಂದ ತಾರ್ಷೀಷ್+ ನಿನ್ನ ಜೊತೆ ವ್ಯಾಪಾರ ನಡಿಸ್ತಿತ್ತು.+ ಬೆಳ್ಳಿ, ಕಬ್ಬಿಣ, ತವರ ಮತ್ತು ಸೀಸವನ್ನ ಕೊಟ್ಟು ನಿನ್ನ ಹತ್ರ ಇದ್ದ ಸಾಮಾನುಗಳನ್ನ ಪಡ್ಕೊಳ್ತಿತ್ತು.+ 13 ಯಾವಾನ್, ತೂಬಲ್+ ಮತ್ತು ಮೇಷೆಕ್+ ನಿನ್ನ ಜೊತೆ ವ್ಯಾಪಾರ ನಡಿಸ್ತಿದ್ವು. ದಾಸರನ್ನ+ ಮತ್ತು ತಾಮ್ರದ ಸಾಮಗ್ರಿಗಳನ್ನ ಕೊಟ್ಟು ನಿನ್ನಿಂದ ಸರಕುಗಳನ್ನ ಪಡ್ಕೊಳ್ತಿದ್ವು. 14 ತೋಗರ್ಮನ+ ವಂಶದವರು ಕುದುರೆಗಳನ್ನೂ ಹೇಸರಗತ್ತೆಗಳನ್ನೂ ಕೊಟ್ಟು ನಿನ್ನಿಂದ ಸಾಮಾನುಗಳನ್ನ ಪಡ್ಕೊಳ್ತಿದ್ರು. 15 ದೆದಾನಿನ+ ಜನ ನಿನ್ನ ಜೊತೆ ವ್ಯಾಪಾರ ಮಾಡ್ತಿದ್ರು. ನೀನು ಎಷ್ಟೋ ದ್ವೀಪಗಳಲ್ಲಿ ವ್ಯಾಪಾರಿಗಳನ್ನ ಕೆಲಸಕ್ಕೆ ಇಟ್ಕೊಂಡೆ. ಅವರು ನಿನಗೆ ದಂತಗಳನ್ನೂ+ ಕರೀಮರಗಳನ್ನೂ ಕಪ್ಪವಾಗಿ ಕೊಡ್ತಿದ್ರು. 16 ನಿನ್ನ ಹತ್ರ ತುಂಬ ವಸ್ತುಗಳು ಇದ್ದಿದ್ರಿಂದ ಎದೋಮ್ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅದು ವೈಢೂರ್ಯ, ನೇರಳೆ ಬಣ್ಣದ ಉಣ್ಣೆ, ಬಣ್ಣಬಣ್ಣದ ಕಸೂತಿ ಹಾಕಿರೋ ಬಟ್ಟೆ, ಒಳ್ಳೊಳ್ಳೇ ಬಟ್ಟೆ, ಹವಳ ಮತ್ತು ಮಾಣಿಕ್ಯವನ್ನ ಕೊಟ್ಟು ನಿನ್ನ ಹತ್ರ ಇರೋ ಸರಕುಗಳನ್ನ ತಗೋತಿತ್ತು.
17 ಯೆಹೂದ ಮತ್ತು ಇಸ್ರಾಯೇಲ್ ದೇಶ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅವು ಮಿನ್ನೀತಿನ+ ಗೋದಿಯನ್ನ, ವಿಶೇಷ ಆಹಾರಗಳನ್ನ, ಜೇನು,+ ಎಣ್ಣೆ ಮತ್ತು ಸುಗಂಧ ತೈಲವನ್ನ+ ಕೊಟ್ಟು ನಿನ್ನ ಹತ್ರ ಇದ್ದ ಸಾಮಾನುಗಳನ್ನ ಪಡ್ಕೊಳ್ತಿತ್ತು.+
18 ನಿನ್ನ ಹತ್ರ ಇರೋ ಇಷ್ಟೊಂದು ವಸ್ತುಗಳನ್ನ, ನಿನ್ನ ಎಲ್ಲ ಸಂಪತ್ತನ್ನ ನೋಡಿ ದಮಸ್ಕ+ ನಿನ್ನ ಜೊತೆ ವ್ಯಾಪಾರ ಮಾಡ್ತಿತ್ತು. ಅದು ಹೆಲ್ಬೋನಿನ ದ್ರಾಕ್ಷಾಮದ್ಯ ಮತ್ತು ಚಾಹರಿನ ಉಣ್ಣೆಯನ್ನ* ಕೊಟ್ಟು ನಿನ್ನಿಂದ ವಸ್ತುಗಳನ್ನ ಪಡ್ಕೊಳ್ತಿತ್ತು. 19 ವೆದಾನ್, ಊಜಾಲಿನ ಯಾವಾನ್ ನಿನಗೆ ಕಬ್ಬಿಣದ ವಸ್ತುಗಳನ್ನ, ದಾಲ್ಚಿನ್ನಿ ಚಕ್ಕೆ* ಮತ್ತು ಪರಿಮಳ ತುಂಬಿರೋ ಹುಲ್ಲನ್ನ ಕೊಟ್ಟು ನಿನ್ನ ಹತ್ರ ಇರೋ ಸಾಮಗ್ರಿಗಳನ್ನ ಪಡ್ಕೊಳ್ತಿದ್ವು. 20 ದೆದಾನ್+ ನಿನ್ನ ಸವಾರಿಗಾಗಿ ತಡಿಬಟ್ಟೆಗಳನ್ನ ಕೊಡ್ತಿತ್ತು. 21 ನೀನು ಕುರಿಮರಿ, ಟಗರು, ಆಡುಗಳ ವ್ಯಾಪಾರಿಗಳಾಗಿದ್ದ ಅರೇಬಿಯರನ್ನ ಮತ್ತು ಕೇದಾರಿನ+ ಎಲ್ಲ ಪ್ರಧಾನರನ್ನ ಕೆಲಸಕ್ಕೆ ಇಟ್ಕೊಂಡೆ.+ 22 ಶೆಬ ಮತ್ತು ರಮ್ಮದ+ ವ್ಯಾಪಾರಿಗಳು ನಿನ್ನ ಜೊತೆ ವ್ಯಾಪಾರ ಮಾಡಿದ್ರು. ಅವರು ಎಲ್ಲ ತರದ ಅತ್ಯುತ್ತಮ ಸುಗಂಧ ದ್ರವ್ಯಗಳನ್ನ, ಅಮೂಲ್ಯ ರತ್ನಗಳನ್ನ ಮತ್ತು ಚಿನ್ನವನ್ನ ಕೊಟ್ಟು ನಿನ್ನ ಸಾಮಗ್ರಿಗಳನ್ನ ಕೊಂಡ್ಕೊಳ್ತಿದ್ರು.+ 23 ಖಾರಾನ್,+ ಕನ್ನೆ ಮತ್ತು ಎದೆನ್+ ನಿನ್ನ ಜೊತೆ ವ್ಯಾಪಾರ ಮಾಡಿದ್ವು. ಶೆಬ,+ ಅಶ್ಶೂರ್,+ ಕಿಲ್ಮದಿನ ವ್ಯಾಪಾರಿಗಳು ನಿನ್ನ ಜೊತೆ ವ್ಯಾಪಾರ ಮಾಡಿದ್ರು. 24 ಅವರು ಚೆನ್ನಾಗಿರೋ ಬಟ್ಟೆಗಳನ್ನ, ನೀಲಿ ಬಟ್ಟೆಯಿಂದ ಮಾಡಿದ ಮತ್ತು ಬಣ್ಣಬಣ್ಣದ ಕಸೂತಿ ಇರೋ ಮೇಲಂಗಿಗಳನ್ನ, ಬೇರೆ ಬೇರೆ ಬಣ್ಣದ ಜಮಖಾನೆಗಳನ್ನ ಹಗ್ಗಗಳಿಂದ ಗಟ್ಟಿಯಾಗಿ ಕಟ್ಟಿ ನಿನ್ನ ಮಾರುಕಟ್ಟೆಯಲ್ಲಿ ಮಾರ್ತಿದ್ರು.
25 ನಿನ್ನ ಸರಕುಗಳಿಗೆ ತಾರ್ಷೀಷಿನ+ ಹಡಗುಗಳೇ ವಾಹನ ಆಗಿದ್ವು,
ಹಾಗಾಗಿ ಸಮುದ್ರ ಮಧ್ಯ ನಿನ್ನಲ್ಲಿ ರಾಶಿ ರಾಶಿ ವಸ್ತುಗಳು ಇರ್ತಿದ್ವು.*
26 ನಿನ್ನ ನಾವಿಕರು ನಿನ್ನನ್ನ ಸಮುದ್ರದಲ್ಲಿ ಅಲ್ಲೋಲಕಲ್ಲೋಲ ಆಗಿರೋ ಜಾಗಕ್ಕೆ ಕರ್ಕೊಂಡು ಬಂದಿದ್ದಾರೆ.
ಪೂರ್ವದ ಗಾಳಿ ನಿನ್ನನ್ನ ಸಮುದ್ರದ ಮಧ್ಯ ಒಡೆದು ಬಿಟ್ಟಿದೆ.
27 ನೀನು ನಾಶ ಆಗೋ ದಿನದಲ್ಲಿ ನಿನ್ನ ಸಿರಿಸಂಪತ್ತು, ಸಾಮಗ್ರಿಗಳು, ಸರಕುಗಳು, ನಾವಿಕರು,
ನಿನ್ನ ಹಲಗೆಗಳ ಸಂದಿಗಳನ್ನ ಮುಚ್ಚೋರು, ಸರಕುಗಳನ್ನ ವ್ಯಾಪಾರ ಮಾಡೋರು,+ ಎಲ್ಲ ವೀರ ಸೈನಿಕರು,+
ಹೀಗೆ ನಿನ್ನಲ್ಲಿರೋ ಎಲ್ಲರ ಗುಂಪು
ಸಮುದ್ರದ ಮಧ್ಯ ಮುಳುಗಿಹೋಗುತ್ತೆ.+
28 ನಿನ್ನ ನಾವಿಕರ ಕಿರಿಚಾಟಕ್ಕೆ ಕರಾವಳಿ ಪ್ರದೇಶಗಳು ನಡುಗುತ್ತೆ.
29 ಹುಟ್ಟುಹಾಕೋರು, ನಾವಿಕರು, ಹಡಗುಪಡೆಯವರು
ಅವ್ರ ಹಡಗುಗಳಿಂದ ಇಳಿದು ಬಂದು ನೆಲದ ಮೇಲೆ ನಿಲ್ತಾರೆ.
30 ಅವರು ನಿನಗಾಗಿ ಗಟ್ಟಿಯಾಗಿ ಕೂಗ್ತಾ ಕಿರಿಚ್ತಾರೆ,+
ತಲೆ ಮೇಲೆ ಮಣ್ಣು ಸುರ್ಕೊಂಡು ಬೂದಿಯಲ್ಲಿ ಬಿದ್ಕೊಂಡು ಒದ್ದಾಡ್ತಾರೆ.
31 ಅವರು ತಲೆ ಬೋಳಿಸ್ಕೊಂಡು ಗೋಣಿ ಬಟ್ಟೆ ಹಾಕ್ಕೋತಾರೆ,
ಬಿಕ್ಕಿಬಿಕ್ಕಿ ಅಳ್ತಾ ನಿನಗಾಗಿ ಗೋಳಾಡ್ತಾರೆ.
32 ಅವರು ಯಾತನೆ ಪಡ್ತಾ ಒಂದು ಶೋಕಗೀತೆಯನ್ನ ಹಾಡ್ತಾ ಹೀಗೆ ಗೋಳಾಡ್ತಾರೆ:
‘ತೂರಿನ ತರ ಯಾರಿದ್ದಾರೆ? ಆದ್ರೆ ಈಗ ಅವಳು ಸಮುದ್ರದ ನಟ್ಟನಡುವೆ ಜಲಸಮಾಧಿ ಆಗಿದ್ದಾಳೆ.+
33 ವಿಶಾಲ ಸಮುದ್ರದಿಂದ ನಿನ್ನ ಸಾಮಗ್ರಿಗಳು ಬರ್ತಿದ್ದಾಗ ನೀನು ಎಷ್ಟೋ ಜನಾಂಗಗಳಿಗೆ ಖುಷಿ ಕೊಟ್ಟೆ.+
ನಿನ್ನ ಸಂಪತ್ತು ಮತ್ತು ನಿನ್ನ ಸರಕು ಭೂಮಿಯ ರಾಜರನ್ನ ಶ್ರೀಮಂತರಾಗಿ ಮಾಡಿದ್ವು.+
34 ಆದ್ರೆ ನೀನೀಗ ವಿಶಾಲ ಸಮುದ್ರದಲ್ಲಿ, ಆಳವಾದ ನೀರಲ್ಲಿ ಒಡೆದು ಚೂರುಚೂರಾಗಿದ್ದೀಯ,+
ನಿನ್ನ ಜೊತೆ ನಿನ್ನ ಸರಕುಗಳೆಲ್ಲ, ನಿನ್ನ ಜನ್ರೆಲ್ಲ ಮುಳುಗಿ ಸಮುದ್ರ ತಳ ಸೇರಿದ್ದಾರೆ.+
35 ದ್ವೀಪಗಳ ಜನ್ರೆಲ್ಲ ಕಣ್ಣುಬಾಯಿ ಬಿಟ್ಕೊಂಡು ನಿನ್ನನ್ನ ನೋಡ್ತಾರೆ,+
ಅವುಗಳ ರಾಜರು ಭಯದಿಂದ ನಡುಗ್ತಾರೆ,+ ಅವ್ರ ಮುಖ ಭಯದಿಂದ ಬಿಳುಚ್ಕೊಳ್ಳುತ್ತೆ.
36 ಜನಾಂಗಗಳಲ್ಲಿರೋ ವ್ಯಾಪಾರಿಗಳು ನಿನಗೆ ಬಂದ ಗತಿ ನೋಡಿ ಸೀಟಿ ಹೊಡಿತಾರೆ.
ನೀನು ದಿಢೀರ್ ಅಂತ ಭಯಂಕರವಾಗಿ ನಾಶ ಆಗ್ತೀಯ,
ನೀನು ಇಲ್ಲದ ಹಾಗೆ ಅಳಿದು ಹೋಗ್ತೀಯ.’”’”+
28 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ತೂರಿನ ಮುಖಂಡನಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:
“ನೀನು ಜಂಬದಿಂದ ಉಬ್ಬಿಕೊಂಡಿರೋದ್ರಿಂದ,+ ‘ನಾನೇ ದೇವರು.
ನಾನು ಸಮುದ್ರದ ಮಧ್ಯ ದೇವರ ಸಿಂಹಾಸನದಲ್ಲಿ ಕೂತಿದ್ದೀನಿ’+ ಅಂತ ಹೇಳ್ತಿದ್ದೀಯ.
ನೀನೇ ದೇವರು ಅಂತ ಮನಸ್ಸಲ್ಲಿ ಅಂದ್ಕೊಳ್ತೀಯ,
ಆದ್ರೆ ನೀನು ದೇವರಲ್ಲ, ಒಬ್ಬ ಮನುಷ್ಯ ಅಷ್ಟೆ.
3 ನೋಡು! ನೀನು ದಾನಿಯೇಲನಿಗಿಂತ ಬುದ್ಧಿವಂತ,+
ಎಲ್ಲ ರಹಸ್ಯಗಳು ನಿನಗೆ ಗೊತ್ತು.
4 ನೀನು ನಿನ್ನ ವಿವೇಕ, ವಿವೇಚನೆಯಿಂದ ಶ್ರೀಮಂತನಾದೆ,
ನಿನ್ನ ಖಜಾನೆಗಳಿಗೆ ಚಿನ್ನ ಬೆಳ್ಳಿಯನ್ನ ತುಂಬಿಸ್ತಾ ಹೋಗ್ತಿದ್ದೀಯ.+
5 ವ್ಯಾಪಾರದಲ್ಲಿ ನಿನಗಿರೋ ಬುದ್ಧಿವಂತಿಕೆಯಿಂದ ನೀನು ತುಂಬ ಆಸ್ತಿ ಮಾಡಿದ್ದೀಯ,+
ನಿನ್ನ ಐಶ್ವರ್ಯದಿಂದಾಗಿ ನಿನ್ನ ಹೃದಯದಲ್ಲಿ ಜಂಬ ಬೆಳೀತು.”’
6 ‘ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ
“ನೀನು ದೇವರು ಅಂತ ನಿನ್ನ ಮನಸ್ಸಲ್ಲಿ ಅಂದ್ಕೊಳ್ಳೋದ್ರಿಂದ
7 ನಿನ್ನ ಮೇಲೆ ದಾಳಿ ಮಾಡೋಕೆ ವಿದೇಶಿಯರನ್ನ ನಾನು ಕರ್ಕೊಂಡು ಬರ್ತಿನಿ, ಜನಾಂಗಗಳಲ್ಲೇ ಅವ್ರಷ್ಟು ಕ್ರೂರಿಗಳು ಯಾರೂ ಇಲ್ಲ.+
ಅವರು ತಮ್ಮ ಕತ್ತಿ ಬೀಸಿ ನೀನು ವಿವೇಕದಿಂದ ಸಂಪಾದಿಸಿದ ಎಲ್ಲ ಸುಂದರ ವಸ್ತುಗಳನ್ನ ನಾಶ ಮಾಡ್ತಾರೆ,
ನಿನಗೆ ಗೌರವ ತಂದ ವೈಭವವನ್ನ ಹಾಳುಮಾಡ್ತಾರೆ.+
9 ಆಗಲೂ ನೀನು ನಿನ್ನನ್ನ ಸಾಯಿಸೋನಿಗೆ ‘ನಾನು ದೇವರು’ ಅಂತ ಹೇಳ್ತಿಯಾ?
ನಿನ್ನನ್ನ ಅಶುದ್ಧ ಮಾಡೋರ ಕೈಗೆ ಸಿಕ್ಕಿಬಿದ್ದಾಗ ನೀನೇನು ಒಬ್ಬ ದೇವರಾಗಿ ಇರ್ತಿಯಾ? ಬರೀ ಒಬ್ಬ ಮನುಷ್ಯನಾಗಿ ಇರ್ತಿಯ ಅಷ್ಟೇ.”’
10 ‘ಸುನ್ನತಿಯಾಗಿರದ* ಜನ್ರ ತರ ನೀನು ವಿದೇಶಿಯರ ಕೈಯಿಂದ ಸಾಯ್ತೀಯ,
ಯಾಕಂದ್ರೆ ನಾನೇ ಇದನ್ನ ಹೇಳಿದ್ದೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
11 ಯೆಹೋವ ನನಗೆ ಮತ್ತೆ ಹೀಗಂದನು: 12 “ಮನುಷ್ಯಕುಮಾರನೇ, ತೂರಿನ ರಾಜನ ಬಗ್ಗೆ ಒಂದು ಶೋಕಗೀತೆ ಹಾಡು. ಅವನಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ
“ನಿನ್ನಲ್ಲಿ ಒಂದೇ ಒಂದು ಅಪರಾಧನೂ ಇರಲಿಲ್ಲ,
13 ನೀನು ದೇವರ ತೋಟವಾದ ಏದೆನಲ್ಲಿ ಇದ್ದೆ.
ಮಾಣಿಕ್ಯ, ಪುಷ್ಯರಾಗ, ಸೂರ್ಯಕಾಂತ ಶಿಲೆ, ಕ್ರಿಸಲೈಟ್ ರತ್ನ, ಗೋಮೇದಕ ರತ್ನ, ಜೇಡ್ ರತ್ನ, ನೀಲಮಣಿ, ವೈಢೂರ್ಯ,+ ಪಚ್ಚೆ,
ಹೀಗೆ ಎಲ್ಲ ಅಮೂಲ್ಯ ರತ್ನಗಳಿಂದ ನಿನ್ನನ್ನ ಅಲಂಕರಿಸಿದ್ದೆ.
ಆ ಒಂದೊಂದು ರತ್ನವನ್ನೂ ಚಿನ್ನದ ಕುಂದಣಗಳಲ್ಲಿ ಕೂರಿಸಿದ್ದೆ.
ನಾನು ನಿನ್ನನ್ನ ಸೃಷ್ಟಿಸಿದ ದಿನಾನೇ ಅವನ್ನ ಮಾಡಿದೆ.
14 ನಾನು ನಿನ್ನನ್ನ ಅಭಿಷೇಕಿಸಿ ಸಂರಕ್ಷಣೆ ಕೊಡೋ ಕೆರೂಬಿಯ ಸ್ಥಾನದಲ್ಲಿಟ್ಟೆ.
ದೇವರ ಪವಿತ್ರ ಬೆಟ್ಟದ ಮೇಲೆ ನೀನಿದ್ದೆ,+ ಬೆಂಕಿಯ ಕಲ್ಲುಗಳ ಮಧ್ಯ ನೀನು ನಡೀತಿದ್ದೆ.
ಹಾಗಾಗಿ ಅಪವಿತ್ರನನ್ನ ತಳ್ಳೋ ಹಾಗೆ ನಾನು ನಿನ್ನನ್ನ ದೇವರ ಬೆಟ್ಟದಿಂದ ತಳ್ಳಿ ನಾಶಮಾಡ್ತೀನಿ,+
ಸಂರಕ್ಷಣೆ ಕೊಡೋ ಕೆರೂಬಿಯೇ, ಬೆಂಕಿಯ ಕಲ್ಲುಗಳ ಮಧ್ಯದಿಂದ ನಾನು ನಿನ್ನನ್ನ ಓಡಿಸಿಬಿಡ್ತೀನಿ.
17 ನಿನ್ನ ಸೌಂದರ್ಯದಿಂದ ನಿನಗೆ ಜಂಬ ಬಂತು.+
ನಿನಗೆ ಗೌರವ ತಂದ ವೈಭವದಿಂದ ನೀನು ನಿನ್ನ ವಿವೇಕವನ್ನ ಹಾಳುಮಾಡ್ಕೊಂಡೆ.+
ನಾನು ನಿನ್ನನ್ನ ಭೂಮಿಗೆ ಎಸೆದುಬಿಡ್ತೀನಿ.+
ರಾಜರು ನಿನ್ನನ್ನ ನೋಡೋ ಹಾಗೆ ಮಾಡ್ತೀನಿ.
18 ನಿನ್ನ ದೊಡ್ಡ ದೊಡ್ಡ ಅಪರಾಧಗಳಿಂದ ಮತ್ತು ಮೋಸದ ವ್ಯಾಪಾರದಿಂದ ನಿನ್ನ ಆರಾಧನಾ ಸ್ಥಳಗಳನ್ನ ಅಪವಿತ್ರ ಮಾಡಿದ್ದೀಯ.
ನಿನ್ನ ಮಧ್ಯ ಬೆಂಕಿ ಹೊತ್ಕೊಳ್ಳೋ ಹಾಗೆ ಮಾಡ್ತೀನಿ, ಅದು ನಿನ್ನನ್ನ ಸುಟ್ಟುಬಿಡುತ್ತೆ.+
ಭೂಮಿ ಮೇಲೆ ನಿನ್ನನ್ನ ನೋಡ್ತಾ ಇರೋರ ಕಣ್ಮುಂದೆನೇ ನಾನು ನಿನ್ನನ್ನ ಬೂದಿ ಮಾಡ್ತೀನಿ.
19 ನಿನ್ನ ಬಗ್ಗೆ ಗೊತ್ತಿದ್ದ ಎಲ್ಲ ಜನಾಂಗದವರು ನಿನಗೆ ಬಂದಿರೋ ಗತಿಯನ್ನ ನೋಡಿ ಬೆಚ್ಚಿ ಬೆರಗಾಗ್ತಾರೆ.+
ನೀನು ದಿಢೀರಂತ ಭಯಂಕರವಾಗಿ ನಾಶ ಆಗ್ತಿಯ,
ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದು ಹೋಗ್ತಿಯ.”’”+
20 ಯೆಹೋವ ಮತ್ತೆ ನನಗೆ ಹೀಗಂದನು: 21 “ಮನುಷ್ಯಕುಮಾರನೇ, ನೀನು ಸೀದೋನಿನ ಕಡೆ ಮುಖಮಾಡಿ+ ಅವಳ ವಿರುದ್ಧ ಭವಿಷ್ಯ ಹೇಳು. 22 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:
“ಸೀದೋನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. ನಾನು ನಿನಗೆ ಒಂದು ಗತಿ ಕಾಣಿಸಿ ಗೌರವ ಪಡ್ಕೊತೀನಿ.
ನಿನ್ನನ್ನ ಶಿಕ್ಷಿಸಿ ನಾನು ಪವಿತ್ರ ದೇವರು ಅಂತ ತೋರಿಸಿದಾಗ ನಾನೇ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.
23 ನಾನು ಸೀದೋನಿನಲ್ಲಿ ಅಂಟುರೋಗ ತರ್ತಿನಿ, ಅವಳ ಬೀದಿಯಲ್ಲಿ ರಕ್ತದ ಪ್ರವಾಹ ಹರಿಯುತ್ತೆ.
ಎಲ್ಲ ಕಡೆಗಳಿಂದ ಕತ್ತಿ ಅವಳ ಮೇಲೆ ದಾಳಿ ಮಾಡಿದಾಗ ಅವಳ ಎಷ್ಟೋ ಜನ ಸತ್ತು ಬೀಳ್ತಾರೆ,
ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.+
24 ಅದಾದ್ಮೇಲೆ ಇಸ್ರಾಯೇಲ್ಯರನ್ನ ಕೀಳಾಗಿ ನೋಡೋ, ಹಾನಿ ಮಾಡೋ ಮುಳ್ಳುಪೊದೆಗಳಾಗಲಿ ಮುಳ್ಳುಗಳಾಗಲಿ ಅವ್ರ ಸುತ್ತಮುತ್ತ ಎಲ್ಲೂ ಇರಲ್ಲ.+ ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.”’
25 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಇಸ್ರಾಯೇಲ್ ಜನ್ರನ್ನ ಅವರು ಚೆಲ್ಲಾಪಿಲ್ಲಿ ಆಗಿರೋ ಜನಾಂಗಗಳಿಂದ ಮತ್ತೆ ಒಟ್ಟುಸೇರಿಸಿದಾಗ+ ನಾನೇ ಪವಿತ್ರ ದೇವರು ಅಂತ ಅವ್ರ ಮೂಲಕ ಜನಾಂಗಗಳಿಗೆ ಗೊತ್ತಾಗುತ್ತೆ.+ ಅಷ್ಟೇ ಅಲ್ಲ, ಇಸ್ರಾಯೇಲ್ಯರು ಅವ್ರ ದೇಶದಲ್ಲಿ+ ಅಂದ್ರೆ ನನ್ನ ಸೇವಕ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ವಾಸಿಸ್ತಾರೆ.+ 26 ಅಲ್ಲಿ ಅವರು ಸುರಕ್ಷಿತವಾಗಿ ವಾಸಿಸ್ತಾರೆ,+ ಮನೆಗಳನ್ನ ಕಟ್ಕೊಂಡು ದ್ರಾಕ್ಷಿ ತೋಟಗಳನ್ನ ಮಾಡ್ಕೊಳ್ತಾರೆ.+ ಅವ್ರನ್ನ ಕೀಳಾಗಿ ನೋಡಿದ ಎಲ್ಲ ಜನ್ರಿಗೆ ನಾನು ಶಿಕ್ಷೆ ಕೊಟ್ಟಾಗ ಅವರು ಸುರಕ್ಷಿತವಾಗಿ ವಾಸಿಸ್ತಾರೆ.+ ಆಗ, ನಾನೇ ಅವ್ರ ದೇವರಾದ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’”
29 ಹತ್ತನೇ ವರ್ಷದ* ಹತ್ತನೇ ತಿಂಗಳಿನ 12ನೇ ದಿನ ಯೆಹೋವ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಈಜಿಪ್ಟಿನ ರಾಜ ಫರೋಹನ ಕಡೆ ಮುಖಮಾಡಿ ಅವನ ವಿರುದ್ಧ ಮತ್ತು ಇಡೀ ಈಜಿಪ್ಟಿನ ವಿರುದ್ಧ ಭವಿಷ್ಯ ಹೇಳು.+ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:
“ಈಜಿಪ್ಟಿನ ರಾಜ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೀನಿ.+
ನಾನದನ್ನ ನನಗೋಸ್ಕರ ಮಾಡ್ಕೊಂಡೆ’ ಅಂತ ಹೇಳಿದೆ.+
4 ಆದ್ರೆ ನಾನು ನಿನ್ನ ದವಡೆಗಳಿಗೆ ಕೊಕ್ಕೆಗಳನ್ನ ಹಾಕಿ, ಚಿಪ್ಪುಗಳ ತರ ಇರೋ ನಿನ್ನ ಚರ್ಮಕ್ಕೆ ನೈಲ್ ನದಿಯ ಮೀನುಗಳು ಅಂಟ್ಕೊಳ್ಳೋ ಹಾಗೆ ಮಾಡ್ತೀನಿ.
ನಿನ್ನನ್ನ ನಿನ್ನ ಚರ್ಮಕ್ಕೆ ಅಂಟ್ಕೊಂಡಿರೋ ಎಲ್ಲ ಮೀನುಗಳ ಸಮೇತ ನೈಲ್ ನದಿಯಿಂದ ಹೊರಗೆ ಎಳಿತೀನಿ.
5 ನಾನು ನಿನ್ನನ್ನ ಮತ್ತು ನಿನ್ನ ನೈಲ್ ನದಿಯ ಎಲ್ಲ ಮೀನುಗಳನ್ನ ಮರುಭೂಮಿಯಲ್ಲಿ ಹಾಕಿ ಬಿಡ್ತೀನಿ.
ನೀನು ಬಟ್ಟಬಯಲಲ್ಲಿ ಬೀಳ್ತಿಯ, ಚೆಲ್ಲಾಪಿಲ್ಲಿಯಾದ ನಿನ್ನ ದೇಹದ ಭಾಗಗಳನ್ನ ಯಾರೂ ಒಟ್ಟುಸೇರಿಸಲ್ಲ, ಹೂಳಿಡೋದೂ ಇಲ್ಲ.+
ನಾನು ನಿನ್ನನ್ನ ಭೂಮಿಯಲ್ಲಿರೋ ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಆಹಾರವಾಗಿ ಕೊಡ್ತೀನಿ.+
6 ಆಗ, ನಾನೇ ಯೆಹೋವ ಅಂತ ಈಜಿಪ್ಟಿನ ಜನ್ರಿಗೆಲ್ಲ ಗೊತ್ತಾಗುತ್ತೆ,
ಯಾಕಂದ್ರೆ, ಅವರು ಇಸ್ರಾಯೇಲ್ಯರಿಗೆ ಒಣಗಿದ ಹುಲ್ಲುಕಡ್ಡಿಯ ಆಸರೆ ತರ ಇದ್ದರೇ ವಿನಃ ಯಾವ ಸಹಾಯನೂ ಮಾಡಲಿಲ್ಲ.+
7 ಇಸ್ರಾಯೇಲ್ಯರು ನಿನ್ನ ಕೈಯನ್ನ ಹಿಡಿದಾಗ ನೀನು ನಜ್ಜುಗುಜ್ಜಾದೆ,
ನಿನ್ನಿಂದ ಅವ್ರ ಹೆಗಲಿನ ಚರ್ಮ ಕಿತ್ತು ಬಂತು.
8 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನೀಗ ನಿನ್ನ ಮೇಲೆ ಕತ್ತಿ ಬೀಸ್ತಿನಿ,+ ನಿನ್ನಲ್ಲಿರೋ ಮನುಷ್ಯರನ್ನೂ ಪ್ರಾಣಿಗಳನ್ನೂ ಸಾಯಿಸ್ತೀನಿ. 9 ಈಜಿಪ್ಟ್ ಜನ್ರಿಲ್ಲದೆ ಹಾಳು ಬೀಳುತ್ತೆ.+ ಆಗ, ನಾನೇ ಯೆಹೋವ ಅಂತ ಈಜಿಪ್ಟಿನ ಜನ್ರಿಗೆ ಗೊತ್ತಾಗುತ್ತೆ. ಯಾಕಂದ್ರೆ ನೀನು ‘ನೈಲ್ ನದಿ ನಂದು, ಅದನ್ನ ಮಾಡಿದ್ದು ನಾನೇ’ ಅಂತ ಹೇಳ್ದೆ.+ 10 ಹಾಗಾಗಿ ನಾನು ನಿನಗೂ ನಿನ್ನ ನೈಲ್ ನದಿಗೂ ವಿರುದ್ಧವಾಗಿದ್ದೀನಿ. ನಾನು ಈಜಿಪ್ಟನ್ನ ಹಾಳುಮಾಡಿ, ಅದು ಒಣಗಿ ಹೋಗೋ ಹಾಗೆ ಮಾಡ್ತೀನಿ.+ ಮಿಗ್ದೋಲಿಂದ+ ಹಿಡಿದು ಸೆವೇನೆಯ+ ತನಕ, ಇಥಿಯೋಪ್ಯದ ಗಡಿ ತನಕ ಇಡೀ ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ. 11 ಅಲ್ಲಿ ಯಾವ ಮನುಷ್ಯನೂ ಹೆಜ್ಜೆ ಇಡಲ್ಲ, ಯಾವ ಪ್ರಾಣಿನೂ ಆ ಕಡೆಯಿಂದ ಹೋಗಲ್ಲ.+ 40 ವರ್ಷ ಆ ದೇಶದಲ್ಲಿ ಯಾರೂ ಯಾವುದೂ ವಾಸಿಸಲ್ಲ. 12 ನಾನು ಈಜಿಪ್ಟನ್ನ ಯಾವ ಸ್ಥಿತಿಗೆ ತರ್ತಿನಿ ಅಂದ್ರೆ ಅದ್ರಷ್ಟು ಹಾಳುಬಿದ್ದಿರೋ ದೇಶ ಇನ್ನೊಂದು ಇರಲ್ಲ, ಅದ್ರ ಪಟ್ಟಣಗಳಷ್ಟು ಹಾಳುಬಿದ್ದಿರೋ ಪಟ್ಟಣ ಬೇರೆ ಯಾವುದೂ ಇರಲ್ಲ. 40 ವರ್ಷ ಅದು ಹಾಗೇ ಇರುತ್ತೆ.+ ನಾನು ಈಜಿಪ್ಟಿನ ಜನ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ, ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ.”+
13 ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಬೇರೆ ಜನಾಂಗಗಳಿಗೆ ಚೆಲ್ಲಾಪಿಲ್ಲಿ ಮಾಡಿದ ಈಜಿಪ್ಟಿನ ಜನ್ರನ್ನ 40 ವರ್ಷ ಆದ್ಮೇಲೆ ಒಟ್ಟುಸೇರಿಸ್ತಿನಿ.+ 14 ಕೈದಿಗಳಾಗಿ ಹೋದ ಈಜಿಪ್ಟಿನ ಜನ್ರನ್ನ ಮತ್ತೆ ಅವರು ಹುಟ್ಟಿದ ಜಾಗ ಪತ್ರೋಸ್‌ಗೆ+ ಕರ್ಕೊಂಡು ಬರ್ತಿನಿ. ಅಲ್ಲಿ ಅವರು ಒಂದು ಚಿಕ್ಕ ರಾಜ್ಯ ಆಗ್ತಾರೆ. 15 ಈಜಿಪ್ಟ್ ಬೇರೆ ರಾಜ್ಯಗಳಿಗಿಂತ ಚಿಕ್ಕ ರಾಜ್ಯ ಆಗುತ್ತೆ. ಆಮೇಲೆ ಅದು ಬೇರೆ ಜನಾಂಗಗಳ ಮೇಲೆ ಅಧಿಕಾರ ನಡಿಸಲ್ಲ.+ ನಾನು ಅದನ್ನ ಎಷ್ಟು ಚಿಕ್ಕ ರಾಜ್ಯವಾಗಿ ಮಾಡ್ತೀನಿ ಅಂದ್ರೆ ಬೇರೆ ಜನಾಂಗಗಳನ್ನ ಸೋಲಿಸೋಕೆ ಅದಕ್ಕೆ ಆಗಲ್ಲ.+ 16 ಇಸ್ರಾಯೇಲ್ಯರು ಇನ್ಯಾವತ್ತೂ ಈಜಿಪ್ಟ್ ಮೇಲೆ ಭರವಸೆ ಇಡಲ್ಲ.+ ಈಜಿಪ್ಟನ್ನ ನೋಡುವಾಗೆಲ್ಲ, ತಾವು ಸಹಾಯಕ್ಕಾಗಿ ಅವ್ರನ್ನ ಕೇಳ್ಕೊಂಡು ಹೋಗಿದ್ದು ಎಷ್ಟು ದೊಡ್ಡ ತಪ್ಪು ಅಂತ ಅವ್ರಿಗೆ ನೆನಪಾಗುತ್ತೆ. ಆಗ, ನಾನೇ ವಿಶ್ವದ ರಾಜ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’”
17 ಇಪ್ಪತ್ತೇಳನೇ ವರ್ಷದ* ಮೊದಲನೇ ತಿಂಗಳ ಮೊದಲನೇ ದಿನದಂದು ಯೆಹೋವ ನನಗೆ ಹೀಗಂದನು: 18 “ಮನುಷ್ಯಕುಮಾರನೇ, ಬಾಬೆಲಿನ ರಾಜ ನೆಬೂಕದ್ನೆಚ್ಚರ*+ ತೂರಿನ ಮೇಲೆ ದಾಳಿ ಮಾಡುವಾಗ ತನ್ನ ಸೈನಿಕರನ್ನ ತುಂಬ ದುಡಿಸಿದ.+ ಎಷ್ಟರ ಮಟ್ಟಿಗೆ ಅಂದ್ರೆ ಅವ್ರೆಲ್ಲರ ತಲೆ ಬೋಳಾಯ್ತು. ಎಲ್ಲರ ಹೆಗಲ ಚರ್ಮ ಕಿತ್ಕೊಂಡು ಬಂತು. ಆದ್ರೆ ತೂರನ್ನ ಸೋಲಿಸೋಕೆ ಅವನು ಮತ್ತು ಅವನ ಸೈನಿಕರು ಪಟ್ಟ ಕಷ್ಟಕ್ಕೆ ಅವ್ರಿಗೆ ಯಾವ ಸಂಬಳಾನೂ ಸಿಗಲಿಲ್ಲ.
19 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರನಿಗೆ* ಈಜಿಪ್ಟನ್ನ ಕೊಡ್ತೀನಿ.+ ಅವನು ಆ ದೇಶದ ಸಿರಿಸಂಪತ್ತನ್ನ ಬಾಚ್ಕೊಂಡು ಹೋಗ್ತಾನೆ, ಅಲ್ಲಿರೋದನ್ನೆಲ್ಲ ಲೂಟಿ ಮಾಡ್ತಾನೆ. ಅದೇ ಅವನ ಸೈನಿಕರಿಗೆ ಸಿಗೋ ಸಂಬಳ.
20 ಅವನು ತೂರಿನ ವಿರುದ್ಧ ಹೋರಾಡೋಕೆ ಪಟ್ಟ ಪರಿಶ್ರಮಕ್ಕೆ ಸಂಬಳವಾಗಿ ನಾನು ಅವನಿಗೆ ಈಜಿಪ್ಟನ್ನ ಕೊಡ್ತೀನಿ. ಯಾಕಂದ್ರೆ ಅವನು ಮತ್ತು ಅವನ ಸೈನಿಕರು ನನಗೋಸ್ಕರ ಕೆಲಸ ಮಾಡಿದ್ರು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
21 ನಾನು ಆ ದಿನದಲ್ಲಿ ಇಸ್ರಾಯೇಲ್ಯರಿಗಾಗಿ ಒಂದು ಕೊಂಬು ಮೊಳಕೆ ಒಡೆಯೋ ತರ ಮಾಡ್ತೀನಿ.*+ ಅಷ್ಟೇ ಅಲ್ಲ, ನೀನು ಅವ್ರ ಮಧ್ಯ ಇದ್ದು ಮಾತಾಡೋಕೆ ನಿನಗೊಂದು ಅವಕಾಶ ಕೊಡ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”
30 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಏನಂತ ಭವಿಷ್ಯ ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ:
“ಜನ್ರೇ ಗೋಳಾಡಿ ‘ಅಯ್ಯೋ, ಆ ದಿನ ಬರ್ತಿದೆ!’ ಅಂತ ಗೋಳಾಡಿ.
3 ಯಾಕಂದ್ರೆ ಆ ದಿನ ಹತ್ರ ಇದೆ, ಯೆಹೋವನ ಆ ದಿನ ಹತ್ರಾನೇ ಇದೆ.+
ಅದು ಕಪ್ಪು ಮೋಡಗಳು ಕವಿಯೋ ದಿನ,+ ಜನಾಂಗಗಳಿಗೆ ತೀರ್ಪು ಕೊಡೋ ಸಮಯ.+
4 ಒಂದು ಕತ್ತಿ ಈಜಿಪ್ಟಿನ ಮೇಲೆ ದಾಳಿ ಮಾಡುತ್ತೆ. ಅಲ್ಲಿನ ಜನ ಸತ್ತು ಬಿದ್ದಾಗ ಇಥಿಯೋಪ್ಯಕ್ಕೆ ದಿಗಿಲು ಹತ್ತುತ್ತೆ.
ಈಜಿಪ್ಟಿನ ಸಿರಿಸಂಪತ್ತನ್ನ ಬಾಚ್ಕೊಂಡು ಹೋಗಿದ್ದಾರೆ, ಅದ್ರ ಅಡಿಪಾಯವನ್ನ ಬೀಳಿಸಿದ್ದಾರೆ.+
5 ಇಥಿಯೋಪ್ಯ,+ ಪೂಟ್+ ಮತ್ತು ಲೂದಿನ ಜನ್ರು, ಬೇರೆ ಬೇರೆ ದೇಶದ ಜನ್ರು,*
ಕೂಬ್ಯರು ಮತ್ತು ಒಪ್ಪಂದ ಮಾಡ್ಕೊಂಡಿರೋ ದೇಶದ ಜನ್ರು,*
ಎಲ್ರೂ ಕತ್ತಿಯಿಂದ ಸಾಯ್ತಾರೆ.”’
6 ಯೆಹೋವ ಹೇಳೋದು ಏನಂದ್ರೆ
‘ಈಜಿಪ್ಟಿಗೆ ಸಹಕಾರ ಕೊಡೋರೂ ಬಿದ್ದುಹೋಗ್ತಾರೆ,
ಈಜಿಪ್ಟಿನ ದರ್ಪದ ಅಧಿಕಾರ ಮಣ್ಣು ಮುಕ್ಕುತ್ತೆ.’+
ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಮಿಗ್ದೋಲಿಂದ+ ಸೆವೇನೆಯ+ ತನಕ ಈಜಿಪ್ಟ್ ದೇಶದಲ್ಲೆಲ್ಲ ಜನ ಕತ್ತಿಯಿಂದ ಸತ್ತು ಬೀಳ್ತಾರೆ. 7 ಅವ್ರ ದೇಶ ಎಷ್ಟರ ಮಟ್ಟಿಗೆ ಖಾಲಿಖಾಲಿ ಹೊಡಿಯುತ್ತೆ ಅಂದ್ರೆ ಅಂಥ ದೇಶ ಇನ್ನೊಂದಿರಲ್ಲ. ಅದ್ರ ಪಟ್ಟಣಗಳಷ್ಟು ಹಾಳುಬಿದ್ದಿರೋ ಪಟ್ಟಣ ಬೇರೆ ಯಾವುದೂ ಇರಲ್ಲ.+ 8 ನಾನು ಈಜಿಪ್ಟಿಗೆ ಬೆಂಕಿ ಹಚ್ಚಿದಾಗ, ಅದ್ರ ಮಿತ್ರ ರಾಷ್ಟ್ರಗಳನ್ನೆಲ್ಲ ನಾಶಮಾಡಿದಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. 9 ಆ ದಿನ ನಾನು ಸಂದೇಶವಾಹಕರನ್ನ ಹಡಗಲ್ಲಿ ಕಳಿಸಿ ಅತಿಯಾದ ಆತ್ಮವಿಶ್ವಾಸ ಇರೋ ಇಥಿಯೋಪ್ಯ ಗಡಗಡ ಅಂತ ನಡುಗೋ ಹಾಗೆ ಮಾಡ್ತೀನಿ. ಈಜಿಪ್ಟ್ ನಾಶ ಆಗೋ ದಿನ ಇಥಿಯೋಪ್ಯದವ್ರನ್ನ ಭಯ ಮುಚ್ಚಿಬಿಡುತ್ತೆ. ಆ ದಿನ ಬಂದೇ ಬರುತ್ತೆ.’
10 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಯಿಂದ ಈಜಿಪ್ಟಿನ ಜನ್ರನ್ನ ನಾಶ ಮಾಡ್ತೀನಿ.+ 11 ಈಜಿಪ್ಟನ್ನ ನಾಶಮಾಡೋಕೆ ಆ ರಾಜನನ್ನೂ ಅವನ ಸೈನ್ಯಗಳನ್ನೂ ಕರ್ಕೊಂಡು ಬರ್ತಿನಿ. ಜನಾಂಗಗಳಲ್ಲಿ ಅವ್ರಷ್ಟು ಕ್ರೂರಿಗಳು ಯಾರೂ ಇಲ್ಲ.+ ಅವರು ತಮ್ಮ ಕತ್ತಿಗಳನ್ನ ಈಜಿಪ್ಟಿನ ಮೇಲೆ ಬೀಸ್ತಾರೆ, ಸತ್ತವರು ದೇಶದಲ್ಲೆಲ್ಲ ಬಿದ್ದಿರ್ತಾರೆ.+ 12 ನಾನು ನೈಲ್ ನದಿಯ+ ಕಾಲುವೆಗಳನ್ನ ಒಣಗಿಸಿ ಬಿಡ್ತೀನಿ. ದೇಶವನ್ನ ಕೆಟ್ಟ ಜನ್ರಿಗೆ ಮಾರಿಬಿಡ್ತೀನಿ. ಆ ದೇಶವನ್ನೂ ಅದ್ರಲ್ಲಿರೋ ಎಲ್ಲವನ್ನೂ ವಿದೇಶಿಯರ ಕೈಯಿಂದ ಹಾಳು ಮಾಡಿಸ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.’
13 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ನೋಫ್* ಪಟ್ಟಣದ ಅಸಹ್ಯ* ಮೂರ್ತಿಗಳನ್ನೂ ನಾಶ ಮಾಡ್ತೀನಿ ಮತ್ತು ಪ್ರಯೋಜನಕ್ಕೆ ಬಾರದ ಅಲ್ಲಿನ ದೇವರುಗಳಿಗೆ ಅಂತ್ಯ ಹಾಡ್ತೀನಿ.+ ಅದಾದ್ಮೇಲೆ ಈಜಿಪ್ಟಲ್ಲಿ ಆ ದೇಶದ ಯಾವ ಅಧಿಕಾರಿನೂ* ಆಳ್ವಿಕೆ ಮಾಡಲ್ಲ. ಈಜಿಪ್ಟಲ್ಲಿ ಭಯ ಮನೆ ಮಾಡೋ ಹಾಗೆ ಮಾಡ್ತೀನಿ.+ 14 ನಾನು ಪತ್ರೋಸನ್ನ+ ಜನ್ರಿಲ್ಲದ ಹಾಗೆ ಮಾಡ್ತೀನಿ, ಸೋನ್ ಪಟ್ಟಣಕ್ಕೆ ಬೆಂಕಿ ಹಚ್ತೀನಿ, ನೋ*+ ಪಟ್ಟಣಕ್ಕೆ ಶಿಕ್ಷೆ ಕೊಡ್ತೀನಿ. 15 ಈಜಿಪ್ಟಿನ ಭದ್ರ ಕೋಟೆಯಾದ ಸೀನ್ ಪಟ್ಟಣದ ಮೇಲೆ ನನ್ನ ಕ್ರೋಧವನ್ನ ಸುರಿಸ್ತೀನಿ ಮತ್ತು ನೋ ಪಟ್ಟಣದ ಜನ್ರನ್ನೆಲ್ಲ ಅಳಿಸಿಬಿಡ್ತೀನಿ. 16 ಈಜಿಪ್ಟಿಗೆ ಬೆಂಕಿ ಹಚ್ತೀನಿ, ಆಗ ಸೀನ್ ಪಟ್ಟಣ ಭಯದಿಂದ ಕಂಗೆಡುತ್ತೆ, ನೋ ಪಟ್ಟಣವನ್ನ ದಾಳಿ ಮಾಡ್ತಾರೆ, ನೋಫ್* ಪಟ್ಟಣನ ಹಾಡಹಗಲಲ್ಲೇ ದಾಳಿ ಮಾಡ್ತಾರೆ! 17 ಓನ್* ಮತ್ತು ಪೀಬೆಸೆತ್ ಪಟ್ಟಣಗಳ ಯುವಕರು ಕತ್ತಿಯಿಂದ ಸಾಯ್ತಾರೆ. ಆ ಪಟ್ಟಣಗಳಲ್ಲಿ ಇರೋರು ಕೈದಿಗಳಾಗಿ ಹೋಗ್ತಾರೆ. 18 ನಾನು ಈಜಿಪ್ಟಿನ ನೊಗಗಳನ್ನ ತಹಪನೇಸ್ ಪಟ್ಟಣದಲ್ಲಿ ಮುರಿವಾಗ ಅಲ್ಲಿ ಹಗಲಲ್ಲೇ ಕತ್ತಲು ಕವಿಯುತ್ತೆ.+ ಅದ್ರ ದರ್ಪದ ಅಧಿಕಾರ ಕೊನೆಯಾಗುತ್ತೆ.+ ಮೋಡ ಅದನ್ನ ಮುಚ್ಚುತ್ತೆ, ಅದ್ರ ಊರುಗಳಲ್ಲಿ ವಾಸಿಸೋರು ಕೈದಿಗಳಾಗಿ ಹೋಗ್ತಾರೆ.+ 19 ನಾನು ಈಜಿಪ್ಟಿಗೆ ಶಿಕ್ಷೆ ಕೊಡ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”
20 ಹನ್ನೊಂದನೇ ವರ್ಷದ* ಮೊದಲನೇ ತಿಂಗಳ ಏಳನೇ ದಿನದಂದು ಯೆಹೋವ ನನಗೆ ಹೀಗಂದನು: 21 “ಮನುಷ್ಯಕುಮಾರನೇ, ನಾನು ಈಜಿಪ್ಟಿನ ರಾಜ ಫರೋಹನ ಕೈ ಮುರಿದಿದ್ದೀನಿ. ಮುರಿದಿರೋ ಮೂಳೆ ಸರಿ ಆಗೋಕೆ ಯಾರೂ ಕೈಗೆ ಪಟ್ಟಿ ಸುತ್ತಲ್ಲ. ಅವನಿಗೆ ಇನ್ಯಾವತ್ತೂ ಕತ್ತಿ ಹಿಡಿಯೋಕೆ ಆಗಲ್ಲ.”
22 “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಈಜಿಪ್ಟಿನ ರಾಜ ಫರೋಹನ ಶತ್ರು ಆಗಿದ್ದೀನಿ.+ ನಾನು ಅವನ ಎರಡೂ ಕೈಗಳನ್ನ ಅಂದ್ರೆ ಬಲಿಷ್ಠ ಕೈಯನ್ನೂ ಈಗಾಗಲೇ ಮುರಿದಿರೋ ಕೈಯನ್ನೂ ಮುರಿದು+ ಅವನು ಹಿಡಿದಿರೋ ಕತ್ತಿ ಕೆಳಗೆ ಬೀಳೋ ಹಾಗೆ ಮಾಡ್ತೀನಿ.+ 23 ಆಮೇಲೆ ನಾನು ಈಜಿಪ್ಟಿನ ಜನ್ರನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ, ಅವ್ರನ್ನ ಓಡಿಸಿಬಿಡ್ತೀನಿ.+ 24 ನಾನು ಬಾಬೆಲಿನ ರಾಜನ ಕೈಗಳನ್ನ ಬಲಪಡಿಸಿ*+ ನನ್ನ ಕತ್ತಿಯನ್ನ ಅವನ ಕೈಗೆ ಕೊಡ್ತೀನಿ.+ ನಾನು ಫರೋಹನ ಕೈಗಳನ್ನ ಮುರಿತೀನಿ, ಅವನು ಪ್ರಾಣ ಹೋಗ್ತಿರೋ ವ್ಯಕ್ತಿ ತರ ಬಾಬೆಲಿನ ರಾಜನ ಮುಂದೆ ನರಳ್ತಾ ಜೋರಾಗಿ ಕೂಗ್ತಾನೆ. 25 ನಾನು ಬಾಬೆಲಿನ ರಾಜನ ಕೈಗಳಿಗೆ ಶಕ್ತಿ ತುಂಬ್ತೀನಿ, ಆದ್ರೆ ಫರೋಹನ ಕೈಗಳು ಬಿದ್ದುಹೋಗುತ್ತೆ. ನಾನು ನನ್ನ ಕತ್ತಿಯನ್ನ ಬಾಬೆಲಿನ ರಾಜನ ಕೈಗೆ ಕೊಟ್ಟಾಗ ಮತ್ತು ಅವನು ಅದ್ರಿಂದ ಈಜಿಪ್ಟ್ ದೇಶದವ್ರನ್ನ ಸಾಯಿಸಿದಾಗ ನಾನು ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.+ 26 ನಾನು ಈಜಿಪ್ಟಿನ ಜನ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ, ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”
31 ಹನ್ನೊಂದನೇ ವರ್ಷದ* ಮೂರನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಈಜಿಪ್ಟಿನ ರಾಜ ಫರೋಹಗೆ ಮತ್ತು ಅವನ ಜನ್ರಿಗೆ ಏನು ಹೇಳಬೇಕಂದ್ರೆ+
‘ನಿನ್ನಷ್ಟು ದೊಡ್ಡಸ್ತಿಕೆ ಯಾರಿಗೆ ತಾನೇ ಇದೆ?
3 ನೀನು ಅಶ್ಶೂರ್ಯದವನ ತರ ಇದ್ದೆ, ಲೆಬನೋನಿನ ದೇವದಾರು ಮರದ ತರ ಇದ್ದೆ,
ಆ ಮರದ ಕೊಂಬೆಗಳು ತುಂಬ ಸುಂದರವಾಗಿದ್ವು, ಒತ್ತೊತ್ತಾಗಿ ಬೆಳೆದ ಅದ್ರ ರೆಂಬೆಗಳು ನೆರಳು ಕೊಡ್ತಿದ್ವು,
ಆ ಮರ ಎಷ್ಟು ಉದ್ದ ಇತ್ತಂದ್ರೆ ಅದು ಮೋಡಗಳನ್ನೇ ಮುಟ್ತಿತ್ತು.
4 ಅಲ್ಲಿ ಜಾಸ್ತಿ ನೀರು ಇದ್ದಿದ್ರಿಂದ ಅದು ದೊಡ್ಡದಾಗಿ ಬೆಳೀತು, ಆಳವಾದ ಬುಗ್ಗೆಗಳು ಇದ್ದಿದ್ರಿಂದ ಎತ್ತರವಾಗಿ ಬೆಳೀತು.
ಆ ಮರದ ಸುತ್ತ ತೊರೆಗಳು ಹರೀತಿದ್ವು,
ಅವುಗಳ ಕಾಲುವೆಗಳು ಬಯಲಿನ ಎಲ್ಲ ಮರಗಳಿಗೆ ನೀರು ಕೊಡ್ತಿದ್ವು.
5 ಹಾಗಾಗಿ ಬಯಲಿನ ಬೇರೆ ಎಲ್ಲ ಮರಗಳಿಗಿಂತ ಆ ಮರ ತುಂಬ ದೊಡ್ಡದಾಗಿ ಬೆಳೀತು.
ತುಂಬಿ ಹರೀತಿದ್ದ ತೊರೆಗಳಿಂದ
ಅದ್ರ ಕೊಂಬೆಗಳು ಚೆನ್ನಾಗಿ ಬೆಳೆದ್ವು, ರೆಂಬೆಗಳು ಉದ್ದುದ್ದ ಬೆಳೆದ್ವು.
6 ಆಕಾಶದ ಪಕ್ಷಿಗಳೆಲ್ಲ ಅದ್ರ ಕೊಂಬೆಗಳಲ್ಲಿ ಗೂಡು ಕಟ್ಟಿದ್ವು,
ಕಾಡು ಪ್ರಾಣಿಗಳೆಲ್ಲ ಅದ್ರ ರೆಂಬೆಗಳ ಕೆಳಗೆ ಮರಿ ಹಾಕಿದ್ವು,
ದೊಡ್ಡ ದೊಡ್ಡ ಜನಾಂಗಗಳೆಲ್ಲ ಅದ್ರ ನೆರಳಲ್ಲಿ ವಾಸಿಸ್ತಿದ್ವು.
7 ಅದ್ರ ಸೌಂದರ್ಯವನ್ನ, ಉದ್ದುದ್ದ ರೆಂಬೆಗಳನ್ನ ನೋಡೋದೇ ಕಣ್ಣಿಗೆ ಹಬ್ಬವಾಗಿತ್ತು.
ಯಾಕಂದ್ರೆ ಅದ್ರ ಬೇರುಗಳು ಸಮೃದ್ಧ ನೀರಲ್ಲಿ ಇಳಿದು ಹೋಗಿದ್ವು.
8 ದೇವರ ತೋಟದಲ್ಲಿದ್ದ+ ಬೇರೆ ಯಾವ ದೇವದಾರು ಮರವನ್ನೂ ಅದಕ್ಕೆ ಹೋಲಿಸೋಕೆ ಆಗ್ತಿರಲಿಲ್ಲ.
ಯಾವ ಜುನಿಪರ್ ಮರದ ಕೊಂಬೆಗಳೂ ಅದ್ರ ಕೊಂಬೆಗಳಿಗೆ ಸರಿಸಾಟಿ ಆಗಿರಲಿಲ್ಲ,
ಯಾವ ಪ್ಲೇನ್ ಮರದ ರೆಂಬೆಗಳೂ ಅದಕ್ಕೆ ಸಮವಲ್ಲ.
ಅದ್ರ ಸೌಂದರ್ಯಕ್ಕೆ ದೇವರ ತೋಟದಲ್ಲಿದ್ದ ಬೇರೆಲ್ಲ ಮರಗಳು ನಾಚ್ಕೊಳ್ತಿದ್ವು.
9 ನಾನೇ ಅದಕ್ಕೆ ಎಲೆಗಳನ್ನ ದಟ್ಟವಾಗಿ ಹೊದಿಸಿ ಸೊಬಗು ಕೊಟ್ಟೆ,
ಸತ್ಯ ದೇವರ ತೋಟವಾದ ಏದೆನಿನ ಬೇರೆಲ್ಲ ಮರಗಳು ಅದ್ರ ಚೆಲುವನ್ನ ನೋಡಿ ಹೊಟ್ಟೆಕಿಚ್ಚು ಪಟ್ವು.’
10 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಅದು ಎಷ್ಟು ಉದ್ದ ಬೆಳೀತಂದ್ರೆ ಅದ್ರ ತುದಿ ಮೋಡಗಳನ್ನ ಮುಟ್ತು. ಅದ್ರ ಎತ್ರ ನೋಡಿ ಅದಕ್ಕೆ ದುರಹಂಕಾರ ಬಂತು. 11 ಹಾಗಾಗಿ ನಾನು ಅದನ್ನ ಜನಾಂಗಗಳ ಶಕ್ತಿಶಾಲಿ ಅಧಿಪತಿಯ ಕೈಗೆ ಕೊಟ್ಟು ಬಿಡ್ತೀನಿ.+ ಅವನು ಅದಕ್ಕೆ ಶಿಕ್ಷೆ ಕೊಡದೇ ಬಿಡಲ್ಲ, ಅದ್ರ ಕೆಟ್ಟತನದಿಂದಾಗಿ ಅದನ್ನ ಬಿಟ್ಟುಬಿಟ್ಟೆ. 12 ಜನಾಂಗಗಳಲ್ಲೇ ಅತಿ ಕ್ರೂರಿಗಳಾದ ವಿದೇಶಿಯರು ಅದನ್ನ ಕಡಿದುಹಾಕ್ತಾರೆ. ಬೆಟ್ಟಗಳ ಮೇಲೆ ಅದನ್ನ ಬಿಟ್ಟುಬಿಡ್ತಾರೆ, ಅದ್ರ ಎಲೆಗಳು ಕಣಿವೆಗಳಲ್ಲೆಲ್ಲ ಬೀಳುತ್ತೆ. ದೇಶದ ಎಲ್ಲ ತೊರೆಗಳಲ್ಲಿ ಅದರ ಮುರಿದ ರೆಂಬೆಗಳು ಬಿದ್ದಿರುತ್ತೆ.+ ಅದ್ರ ನೆರಳಲ್ಲಿ ಆಸರೆ ಪಡೆದಿದ್ದ ಭೂಮಿಯ ಎಲ್ಲ ಜನಾಂಗಗಳು ಅದನ್ನ ಬಿಟ್ಟು ಹೋಗುತ್ತೆ. 13 ಮುರಿದು ಬಿದ್ದಿರೋ ಅದ್ರ ಕಾಂಡದ ಮೇಲೆ ಆಕಾಶದ ಪಕ್ಷಿಗಳೆಲ್ಲ ವಾಸಿಸುತ್ತೆ. ಅದ್ರ ರೆಂಬೆಗಳ ಮೇಲೆ ಕಾಡು ಪ್ರಾಣಿಗಳೆಲ್ಲ ವಾಸಿಸುತ್ತೆ.+ 14 ಈ ರೀತಿ ಯಾಕೆ ನಡಿಯುತ್ತಂದ್ರೆ, ಇನ್ಮುಂದೆ ತುಂಬ ನೀರಿರೋ ಕಡೆ ಬೆಳೆದಿರೋ ಯಾವ ಮರನೂ ತುಂಬ ಉದ್ದ ಬೆಳೀಬಾರದು, ಮೋಡಗಳನ್ನ ಮುಟ್ಟುವಷ್ಟು ತಲೆ ಎತ್ತಬಾರದು. ಅಷ್ಟೇ ಅಲ್ಲ ಚೆನ್ನಾಗಿ ನೀರು ಹೀರಿಕೊಂಡು ಬೆಳೆದ ಮರ ಮೋಡಗಳನ್ನ ಮುಟ್ಟುವಷ್ಟು ಎತ್ತರಕ್ಕೆ ಹೋಗಬಾರದು. ಸತ್ತ ಮೇಲೆ ಗುಂಡಿಗೆ* ಸೇರೋ ಮನುಷ್ಯರ ಜೊತೆ ಈ ಮರಗಳನ್ನ ಸಾವಿಗೆ ಒಪ್ಪಿಸಲಾಗುತ್ತೆ. ಅವು ಭೂಮಿಯ ತಳ ಸೇರುತ್ತೆ.’
15 ವಿಶ್ವದ ರಾಜ ಯೆಹೋವ ಹೀಗಂತಾನೆ ‘ಆ ಮರ ಸಮಾಧಿ* ಸೇರೋ ದಿನ ಜನ ಶೋಕಿಸೋ ಹಾಗೆ ನಾನು ಮಾಡ್ತೀನಿ. ತುಂಬ ನೀರಿರೋ ಜಾಗಗಳನ್ನ ಮುಚ್ಚಿ, ತೊರೆಗಳಿಗೆ ಅಡ್ಡ ಇಟ್ಟು ನೀರು ತುಂಬಿ ಹರಿಯೋದನ್ನ ತಡೀತೀನಿ. ಆ ಮರದಿಂದಾಗಿ ಲೆಬನೋನಿನಲ್ಲಿ ಕತ್ತಲೆ ಕವಿಯೋ ಹಾಗೆ, ಬಯಲಿನ ಮರಗಳು ಒಣಗಿ ಹೋಗೋ ಹಾಗೆ ಮಾಡ್ತೀನಿ. 16 ಆ ಮರ ಬೀಳೋ ಶಬ್ದಕ್ಕೆ ಜನಾಂಗಗಳು ಗಡಗಡ ನಡುಗೋ ತರ ಮಾಡ್ತೀನಿ. ಗುಂಡಿಗೆ* ಸೇರೋ ಎಲ್ರ ಜೊತೆ ಆ ಮರವನ್ನೂ ಸಮಾಧಿಗೆ* ಸೇರಿಸ್ತೀನಿ. ಏದೆನಿನ ಮರಗಳು,+ ಲೆಬನೋನಿನ ಒಳ್ಳೇ ಮತ್ತು ಶ್ರೇಷ್ಠ ಮರಗಳು, ಚೆನ್ನಾಗಿ ನೀರು ಹೀರಿಕೊಂಡು ಬೆಳೆದ ಮರಗಳೆಲ್ಲ ಭೂಮಿಯ ಅಡಿ ಸಮಾಧಾನ ಪಡ್ಕೊಳ್ಳುತ್ತೆ. 17 ಅವೆಲ್ಲ ಅವನ ಜೊತೆ* ಸಮಾಧಿ* ಸೇರಿವೆ. ಅವನ ನೆರಳಲ್ಲಿ ವಾಸಿಸ್ತಾ ಅವನಿಗೆ ಸಹಕಾರ ಕೊಟ್ಟಿದ್ದ ಜನಾಂಗಗಳು ಮತ್ತು ಕತ್ತಿಯಿಂದ ಸತ್ತವರು+ ಎಲ್ಲಿದ್ದಾರೋ ಅಲ್ಲಿಗೆ ಅವು ಹೋಗಿ ಸೇರಿವೆ.+
18 ಮಹಿಮೆಯಲ್ಲೂ ದೊಡ್ಡಸ್ತಿಕೆಯಲ್ಲೂ ನಿನಗೆ ಸರಿಸಾಟಿಯಾದ ಮರ ಏದೆನಿನಲ್ಲಿ ಯಾವುದೂ ಇರಲಿಲ್ಲ.+ ಆದ್ರೆ ಏದೆನಿನ ಆ ಮರಗಳ ಜೊತೆಗೇ ನಿನ್ನನ್ನ ನಿಜವಾಗ್ಲೂ ಭೂಮಿಯ ಅಡಿಗೆ ಸೇರಿಸಲಾಗುತ್ತೆ. ಸುನ್ನತಿ ಆಗಿರದ ಜನ್ರ ಮಧ್ಯ, ಕತ್ತಿಯಿಂದ ಸತ್ತವರ ಜೊತೆ ನೀನು ಬಿದ್ದಿರ್ತೀಯ. ಫರೋಹನಿಗೂ ಅವನ ಎಲ್ಲ ಜನ್ರಿಗೂ ಇದೇ ಗತಿ ಆಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
32 ಹನ್ನೆರಡನೇ* ವರ್ಷದ 12ನೇ ತಿಂಗಳ ಮೊದಲನೇ ದಿನ ಯೆಹೋವ ನನಗೆ ಮತ್ತೆ ಹೀಗಂದನು: 2 “ಮನುಷ್ಯಕುಮಾರನೇ, ಈಜಿಪ್ಟಿನ ರಾಜ ಫರೋಹನ ಬಗ್ಗೆ ಒಂದು ಶೋಕಗೀತೆ ಹಾಡು. ನೀನು ಅವನಿಗೆ ಏನು ಹೇಳಬೇಕಂದ್ರೆ,
‘ನೀನು ಜನಾಂಗಗಳ ಮಧ್ಯ ಶಕ್ತಿಶಾಲಿ ಸಿಂಹದ ತರ ಇದ್ದೆ.
ಆದ್ರೆ ನಿನ್ನ ಸದ್ದು ಅಡಗಿದೆ.
ನೀನು ಸಮುದ್ರದ ದೊಡ್ಡ ಪ್ರಾಣಿ ತರ ಇದ್ದೆ,+ ನಿನ್ನ ನದಿಗಳಲ್ಲಿ ಬಾಲವನ್ನ ಜೋರಾಗಿ ಬಡೀತಿದ್ದೆ,
ಕಾಲುಗಳಿಂದ ನೀರು ಕಲಕುತ್ತಾ ನದಿಗಳನ್ನ* ಗಬ್ಬೆಬ್ಬಿಸುತ್ತಿದ್ದೆ.’
3 ವಿಶ್ವದ ರಾಜ ಯೆಹೋವ ಹೀಗಂತಾನೆ:
‘ಗುಂಪಾಗಿರೋ ಎಷ್ಟೋ ಜನಾಂಗಗಳ ಕೈಯಿಂದ ನನ್ನ ಬಲೆಯನ್ನ ನಿನ್ನ ಮೇಲೆ ಬೀಸ್ತೀನಿ,
ಅವರು ನನ್ನ ಬಲೆಯಲ್ಲಿ ನಿನ್ನನ್ನ ಹಿಡಿದು ಮೇಲೆ ಎಳೀತಾರೆ.
4 ನಾನು ನಿನ್ನನ್ನ ನೆಲದ ಮೇಲೆ ಹಾಕಿಬಿಡ್ತೀನಿ,
ಬಟ್ಟಬಯಲಲ್ಲಿ ಎಸೆದುಬಿಡ್ತೀನಿ.
ಪಕ್ಷಿಗಳೆಲ್ಲ ನಿನ್ನ ಮೇಲೆ ಬಂದು ಕೂತ್ಕೊಳ್ಳೋ ಹಾಗೆ ಮಾಡ್ತೀನಿ.
ನಿನ್ನ ಮಾಂಸದಿಂದ ಇಡೀ ಭೂಮಿಯಲ್ಲಿರೋ ಕಾಡುಪ್ರಾಣಿಗಳ ಹೊಟ್ಟೆ ತುಂಬಿಸ್ತೀನಿ.+
5 ನಿನ್ನ ಮಾಂಸವನ್ನ ಬೆಟ್ಟಗಳ ಮೇಲೆ ಬಿಸಾಕ್ತೀನಿ.
ನಿನ್ನ ದೇಹದ ಉಳಿದ ಭಾಗಗಳನ್ನ ಕಣಿವೆಗಳಲ್ಲಿ ತುಂಬಿಸ್ತೀನಿ.+
6 ನಿನ್ನ ರಕ್ತದಿಂದ ನೆಲವನ್ನ ಬೆಟ್ಟಗಳ ತುದಿ ತನಕ ಒದ್ದೆ ಮಾಡ್ತೀನಿ,
ತೊರೆಗಳಲ್ಲೆಲ್ಲಾ ನಿನ್ನ ರಕ್ತಾನೇ ತುಂಬಿರುತ್ತೆ.’*
7 ‘ನಾನು ನಿನ್ನನ್ನ ನಿರ್ನಾಮ ಮಾಡಿದ ಮೇಲೆ ಆಕಾಶವನ್ನ ಮುಚ್ತೀನಿ, ಅದ್ರಲ್ಲಿರೋ ನಕ್ಷತ್ರಗಳನ್ನ ಕಪ್ಪು ಮಾಡ್ತೀನಿ.
ಮೋಡಗಳಿಂದ ಸೂರ್ಯನನ್ನ ಮರೆ ಮಾಡ್ತೀನಿ.
ಚಂದ್ರ ಕಾಂತಿ ಕಳ್ಕೊತಾನೆ.+
8 ನಿನ್ನಿಂದಾಗಿ ಆಕಾಶದಲ್ಲಿ ಮಿನುಗೋ ಬೆಳಕುಗಳನ್ನೆಲ್ಲ ಕಪ್ಪು ಮಾಡ್ತೀನಿ,
ನಿನ್ನ ದೇಶದಲ್ಲಿ ಕತ್ತಲು ಕವಿಯೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
9 ‘ಬೇರೆ ಜನಾಂಗಗಳಿಗೆ ಅಂದ್ರೆ ನಿನಗೆ ಗೊತ್ತಿಲ್ಲದ ದೇಶಗಳಿಗೆ ನಿನ್ನ ಜನ್ರು ಕೈದಿಗಳಾಗಿ ಹೋಗೋ ಹಾಗೆ ಮಾಡ್ತೀನಿ,+
ಆಗ ತುಂಬ ದೇಶದ ಜನ್ರ ಮನಸ್ಸಲ್ಲಿ ಭಯ ಹುಟ್ಟಿಸ್ತೀನಿ.
10 ನಾನು ಜನಾಂಗಗಳ ರಾಜರ ಕಣ್ಮುಂದೆನೇ ನಿನ್ನ ಮೇಲೆ ನನ್ನ ಕತ್ತಿ ಬೀಸುವಾಗ
ನಿನಗೆ ಬಂದಿರೋ ಗತಿ ನೋಡಿ ಆ ರಾಜರು ಭಯದಿಂದ ನಡುಗ್ತಾರೆ,
ಅಷ್ಟೇ ಅಲ್ಲ ಎಷ್ಟೋ ಜನಾಂಗಗಳು ಬೆಚ್ಚಿ ಬೆರಗಾಗೋ ತರ ಮಾಡ್ತೀನಿ.
ನೀನು ನಾಶವಾಗೋ ದಿನ
ಆ ರಾಜರಲ್ಲಿ ಪ್ರತಿಯೊಬ್ಬರು ಜೀವಭಯದಿಂದ ಒಂದೇ ಸಮ ನಡುಗ್ತಾರೆ.’
11 ವಿಶ್ವದ ರಾಜ ಯೆಹೋವ ಹೀಗಂತಾನೆ:
‘ಬಾಬೆಲಿನ ರಾಜ ತನ್ನ ಕತ್ತಿಯನ್ನ ನಿನ್ನ ಮೇಲೆ ಬೀಸ್ತಾನೆ.+
12 ನಿನ್ನ ಜನ್ರು ರಣವೀರರ ಕತ್ತಿಗೆ ತುತ್ತಾಗಿ ಸಾಯೋ ಹಾಗೆ ಮಾಡ್ತೀನಿ.
ಆ ರಣವೀರರೆಲ್ಲ ಜನ್ರಲ್ಲೇ ತುಂಬ ಕ್ರೂರಿಗಳು.+
ಅವರು ಈಜಿಪ್ಟಿನ ಜಂಬ ಅಡಗಿಸ್ತಾರೆ, ಅದ್ರ ಜನ್ರನ್ನ ನಾಶ ಮಾಡ್ತಾರೆ.+
13 ಅದ್ರ ಸಮೃದ್ಧ ನೀರಿನ ಹತ್ರ ಇರೋ ಎಲ್ಲ ಪ್ರಾಣಿಗಳನ್ನ ನಾಶಮಾಡ್ತೀನಿ.+
ಯಾವ ಮನುಷ್ಯ ಅಥವಾ ಪ್ರಾಣಿಯ ಕಾಲೂ ಅಲ್ಲಿನ ನೀರನ್ನ ಇನ್ಮುಂದೆ ಕಲಕೋದಿಲ್ಲ.’+
14 ‘ನಾನು ಆಗ ಆ ದೇಶದ ನೀರನ್ನ ಶುದ್ಧ ಮಾಡ್ತೀನಿ,
ಅಲ್ಲಿನ ನದಿಗಳು ಎಣ್ಣೆ ತರ ಹರಿಯೋ ಹಾಗೆ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
15 ‘ನಾನು ಈಜಿಪ್ಟನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡಿದಾಗ, ಆ ದೇಶದಲ್ಲಿ ತುಂಬಿರೋದನ್ನೆಲ್ಲ ನಾಶಮಾಡಿದಾಗ+
ಮತ್ತು ಅಲ್ಲಿನ ಜನ್ರನ್ನೆಲ್ಲ ಕೊಂದಾಗ
ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.+
16 ಇದೊಂದು ಶೋಕಗೀತೆ. ಜನ್ರು ಇದನ್ನ ನಿಜವಾಗ್ಲೂ ಹಾಡ್ತಾರೆ,
ಹೆಂಗಸ್ರು ಹಾಡ್ತಾರೆ.
ಈಜಿಪ್ಟ್ ಮತ್ತು ಅದ್ರ ಎಲ್ಲ ಸೈನ್ಯದ ಬಗ್ಗೆ ಅವರು ಇದನ್ನ ಹಾಡ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
17 ಹನ್ನೆರಡನೇ ವರ್ಷದಲ್ಲಿ, ತಿಂಗಳ* 15ನೇ ದಿನ ಯೆಹೋವ ನನಗೆ ಹೀಗಂದನು: 18 “ಮನುಷ್ಯಕುಮಾರನೇ, ನೀನು ಈಜಿಪ್ಟಿನ ಸೈನ್ಯಕ್ಕಾಗಿ ಗೋಳಾಡು. ಗುಂಡಿ* ಸೇರುವವರ ಜೊತೆ ಆ ದೇಶಾನೂ ಬಲಿಷ್ಠ ಜನಾಂಗಗಳೂ ಮಣ್ಣಿಗೆ ಸೇರುತ್ತೆ ಅಂತ ಸಾರು.
19 ‘ಈಜಿಪ್ಟೇ, ನಿನ್ನಷ್ಟು ಸೌಂದರ್ಯವತಿ ಯಾರೂ ಇಲ್ಲ ಅಂದ್ಕೊಂಡಿದ್ದೀಯಾ? ನೀನು ಸಮಾಧಿಗೆ ಹೋಗಿ ಸುನ್ನತಿ ಆಗಿಲ್ಲದವ್ರ ಜೊತೆ ಬಿದ್ಕೊ!’
20 ‘ಈಜಿಪ್ಟಿನವರು ಕತ್ತಿಯಿಂದ ಸತ್ತವ್ರ ಮಧ್ಯ ಹೆಣವಾಗಿ ಬೀಳ್ತಾರೆ.+ ಅವ್ರ ದೇಶವನ್ನ ಕತ್ತಿಯ ವಶಕ್ಕೆ ಕೊಡಲಾಗಿದೆ, ಅವ್ರ ಸೈನಿಕರ ಜೊತೆ ಅದನ್ನೂ ಎಳ್ಕೊಂಡು ಹೋಗಿ.
21 ಶೂರಾಧಿಶೂರರು ಸಮಾಧಿಯ* ಆಳದಿಂದ ಅವನ ಜೊತೆ* ಅವನ ಸಹಾಯಕರ ಜೊತೆ ಮಾತಾಡ್ತಾರೆ. ಅವ್ರೆಲ್ಲ ನಿಜವಾಗ್ಲೂ ಮಣ್ಣಿಗೆ ಸೇರ್ತಾರೆ, ಸುನ್ನತಿ ಆಗಿರದ ಜನ್ರು ಕತ್ತಿಯಿಂದ ಸತ್ತು ಬಿದ್ದಿರೋ ಹಾಗೆ ಅವರೂ ಬಿದ್ದಿರ್ತಾರೆ. 22 ಅಶ್ಶೂರ ಅನ್ನೋ ಸ್ತ್ರೀ ತನ್ನ ಇಡೀ ಸಮೂಹದ ಜೊತೆ ಅಲ್ಲಿದ್ದಾಳೆ. ಅಶ್ಶೂರ್ಯರ ಸಮಾಧಿಗಳು ಅವ್ರ ರಾಜನ ಸುತ್ತ ಇವೆ. ಅವ್ರೆಲ್ಲ ಕತ್ತಿಯಿಂದ ಸತ್ತವರು.+ 23 ಅವಳ ಸಮಾಧಿಗಳು ಗುಂಡಿಯ* ಆಳದಲ್ಲಿವೆ. ಅವಳ ಜನ್ರ ಗುಂಪು ಅವಳ ಸಮಾಧಿ ಸುತ್ತ ಇದೆ. ಅವ್ರೆಲ್ಲ ಕತ್ತಿಯಿಂದ ಸತ್ತಿದ್ದಾರೆ. ಯಾಕಂದ್ರೆ ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು.
24 ಏಲಾಮ್+ ಅನ್ನುವವಳು ಅಲ್ಲಿದ್ದಾಳೆ. ಅವಳ ಸಮಾಧಿ ಸುತ್ತ ಅವಳ ಇಡೀ ಸೈನ್ಯದ ಸಮಾಧಿ ಇದೆ. ಅವ್ರೆಲ್ಲ ಕತ್ತಿಯಿಂದ ಸತ್ತವರು. ಸುನ್ನತಿ ಆಗದೆ ಅವರು ಮಣ್ಣಿಗೆ ಸೇರಿದ್ದಾರೆ. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು. ಗುಂಡಿ* ಸೇರುವವರ ಜೊತೆ ಅವರೂ ಈಗ ತಲೆ ತಗ್ಗಿಸ್ತಾರೆ. 25 ಸತ್ತವ್ರ ಮಧ್ಯ ಅವರು ಅವಳಿಗಾಗಿ ಹಾಸಿಗೆ ಹಾಸಿದ್ದಾರೆ. ಅವಳ ಸಮಾಧಿಗಳ ಸುತ್ತ ಅವಳ ಸೈನ್ಯದ ಸಮಾಧಿ ಇದೆ. ಅವ್ರೆಲ್ಲ ಸುನ್ನತಿ ಆಗಿಲ್ಲದವರು. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಕತ್ತಿಯಿಂದ ಸತ್ರು. ಗುಂಡಿ* ಸೇರುವವರ ಜೊತೆ ಅವರೂ ತಲೆ ತಗ್ಗಿಸ್ತಾರೆ. ಅವರು ಸತ್ತವ್ರ ಮಧ್ಯ ಬಿದ್ದಿದ್ದಾರೆ.
26 ಮೇಷೆಕ್, ತೂಬಲ್+ ಮತ್ತು ಅವ್ರ* ಸೈನ್ಯ ಇರೋದು ಅಲ್ಲೇ. ರಾಜನ ಸುತ್ತ ಅವ್ರ* ಸಮಾಧಿಗಳಿವೆ. ಅವ್ರೆಲ್ಲ ಸುನ್ನತಿ ಆಗಿಲ್ಲದವರು. ಅವರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಅವ್ರನ್ನ ಕತ್ತಿಯಿಂದ ಚುಚ್ಚಿ ಕೊಲ್ಲಲಾಗಿದೆ. 27 ಸತ್ತು ಬಿದ್ದು ಅವ್ರ ಯುದ್ಧದ ಆಯುಧಗಳ ಜೊತೆ ಸಮಾಧಿ* ಸೇರಿರೋ ಸುನ್ನತಿ ಆಗಿಲ್ಲದ ರಣವೀರರ ಜೊತೆ ಅವರು ಬಿದ್ದಿರ್ತಾರೆ. ಅವ್ರ ಕತ್ತಿಗಳನ್ನ ಅವ್ರ ತಲೆ ಕೆಳಗೆ ಇಡಲಾಗುತ್ತೆ.* ಅವರು ಮಾಡಿದ ಪಾಪಗಳಿಗೆ ಶಿಕ್ಷೆಯನ್ನ ಅವ್ರ ಮೂಳೆಗಳು ಅನುಭವಿಸುತ್ತೆ. ಯಾಕಂದ್ರೆ ಈ ಯುದ್ಧ ಶೂರರು ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರು. 28 ಆದ್ರೆ ನಿನ್ನನ್ನ ಸುನ್ನತಿ ಆಗಿಲ್ಲದವ್ರ ಜೊತೆ ಜಜ್ಜಲಾಗುತ್ತೆ. ಕತ್ತಿಯಿಂದ ಸತ್ತವ್ರ ಜೊತೆ ನೀನು ಬಿದ್ದಿರ್ತೀಯ.
29 ಎದೋಮ್+ ಸಹ ಅಲ್ಲಿದೆ. ಅವಳ ರಾಜರು, ಅವಳ ಎಲ್ಲ ಪ್ರಧಾನರು ಶೂರರಾಗಿದ್ರೂ ಅವರೂ ಕತ್ತಿಯಿಂದ ಸತ್ತವ್ರ ಪಕ್ಕದಲ್ಲಿ ಬಿದ್ದಿದ್ದಾರೆ. ಸುನ್ನತಿ ಆಗಿಲ್ಲದೆ+ ಗುಂಡಿ* ಸೇರುವವರ ಜೊತೆ ಅವರೂ ಬಿದ್ದಿರ್ತಾರೆ.
30 ಅಲ್ಲಿ ಎಲ್ಲ ಸೀದೋನ್ಯರ+ ಜೊತೆ ಉತ್ತರದ ಅಧಿಕಾರಿಗಳೆಲ್ಲ* ಇದ್ದಾರೆ. ಅವರು ತಮ್ಮ ಶೌರ್ಯದಿಂದ ಜನ್ರಲ್ಲಿ ಭಯ ಹುಟ್ಟಿಸಿದ್ರೂ ಸತ್ತವ್ರ ಜೊತೆ ಅವಮಾನದಿಂದ ಸಮಾಧಿ ಸೇರಿದ್ದಾರೆ. ಸುನ್ನತಿ ಆಗಿಲ್ಲದೆ ಅವರು ಸತ್ತವ್ರ ಜೊತೆ ಬಿದ್ದಿರ್ತಾರೆ. ಗುಂಡಿ* ಸೇರುವವರ ಜೊತೆ ಅವರು ತಲೆ ತಗ್ಗಿಸ್ತಾರೆ.
31 ಇದನ್ನೆಲ್ಲ ಫರೋಹ ನೋಡ್ತಾನೆ. ಅವನ ಸೈನ್ಯಕ್ಕೆ ಬಂದ ಗತಿಯನ್ನ ನೋಡಿ ಅವನಿಗೆ ನೆಮ್ಮದಿ ಆಗುತ್ತೆ.+ ಫರೋಹನನ್ನ ಮತ್ತು ಅವನ ಇಡೀ ಸೈನ್ಯವನ್ನ ಕತ್ತಿಯಿಂದ ಕೊಲ್ಲಲಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
32 ‘ಫರೋಹ ಬದುಕಿದ್ದಾಗ ಜನ್ರಲ್ಲಿ ಭಯ ಹುಟ್ಟಿಸಿದ್ರಿಂದ ಅವನನ್ನ ಮತ್ತು ಅವನ ಸೈನ್ಯಗಳನ್ನ ಸುನ್ನತಿ ಆಗಿಲ್ಲದೆ ಕತ್ತಿಯಿಂದ ಸತ್ತವ್ರ ಜೊತೆ ಸಮಾಧಿ ಮಾಡಲಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
33 ಯೆಹೋವ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ನಿನ್ನ ಜನ್ರಿಗೆ ಏನು ಹೇಳಬೇಕಂದ್ರೆ,+
‘ಜನ್ರೇ ಹೀಗೆ ನೆನಸಿ, ಒಂದು ದೇಶದ ಮೇಲೆ ದಾಳಿ ಮಾಡೋಕೆ ನಾನು ಶತ್ರುಗಳನ್ನ ಕಳಿಸ್ತೀನಿ.+ ಆ ದೇಶದ ಜನ್ರೆಲ್ಲ ಅವ್ರಿಗಾಗಿ ಒಬ್ಬ ಕಾವಲುಗಾರನನ್ನ ಇಟ್ಕೊಳ್ತಾರೆ. 3 ಶತ್ರುಗಳು ಆ ದೇಶದ ಮೇಲೆ ದಾಳಿ ಮಾಡೋಕೆ ಬರೋದನ್ನ ಆ ಕಾವಲುಗಾರ ನೋಡ್ತಾನೆ. ತಕ್ಷಣ ಕೊಂಬೂದಿ ಜನ್ರನ್ನ ಎಚ್ಚರಿಸ್ತಾನೆ.+ 4 ಕೊಂಬೂದಿದ ಶಬ್ದವನ್ನ ಒಬ್ಬ ಕೇಳಿಸ್ಕೊಂಡ ಮೇಲೂ ಎಚ್ಚರವಾಗದಿದ್ರೆ+ ಶತ್ರುಗಳು ಬಂದು ಅವನನ್ನ ಕೊಂದುಹಾಕ್ತಾರೆ. ಆಗ ಅವನ ಸಾವಿಗೆ ಅವನೇ ಕಾರಣ.+ 5 ಕೊಂಬೂದಿದ ಶಬ್ದ ಕಿವಿಗೆ ಬಿದ್ರೂ ಅವನು ಎಚ್ಚರ ಆಗಲಿಲ್ಲ. ಹಾಗಾಗಿ ಅವನ ಸಾವಿಗೆ ಅವನೇ ಕಾರಣ. ಒಂದುವೇಳೆ ಅವನು ಎಚ್ಚರ ಆಗಿದ್ರೆ ಅವನ ಜೀವ ಉಳೀತಿತ್ತು.
6 ಆದ್ರೆ ನೆನಸಿ, ಶತ್ರುಗಳು ಬರೋದನ್ನ ಕಾವಲುಗಾರ ನೋಡಿದ್ರೂ ಕೊಂಬೂದಿ ಜನ್ರನ್ನ ಎಚ್ಚರಿಸಲ್ಲ.+ ಆಗ ಶತ್ರುಗಳು ಬಂದು ಜನ್ರನ್ನ ಕೊಂದುಹಾಕ್ತಾರೆ. ಅವರೇನೋ ತಾವು ಮಾಡಿದ ತಪ್ಪಿಗಾಗಿ ಸಾಯ್ತಾರೆ ನಿಜ. ಆದ್ರೆ ಅವ್ರ ಸಾವಿಗೆ ನಾನು ಕಾವಲುಗಾರನನ್ನ ಹೊಣೆಗಾರನಾಗಿ ಮಾಡ್ತೀನಿ.’+
7 ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್ ಜನ್ರಿಗೆ ಕಾವಲುಗಾರನಾಗಿ ಇಟ್ಟಿದ್ದೀನಿ. ನಾನು ನಿನಗೆ ಹೇಳೋದನ್ನ ನೀನು ನನ್ನ ಪರವಾಗಿ ಅವ್ರಿಗೆ ತಿಳಿಸಿ ಅವ್ರನ್ನ ಎಚ್ಚರಿಸಬೇಕು.+ 8 ನಾನು ಕೆಟ್ಟವನಿಗೆ ‘ನೀನು ಸತ್ತೇ ಸಾಯ್ತೀಯ’+ ಅಂತ ಹೇಳಿದಾಗ, ನೀನು ಹೋಗಿ ಆ ಕೆಟ್ಟವನಿಗೆ ಕೆಟ್ಟತನವನ್ನ ಬಿಟ್ಟುಬಿಡಬೇಕು ಅಂತ ಎಚ್ಚರಿಕೆ ಕೊಡದಿದ್ರೆ ಆ ಕೆಟ್ಟವನಂತೂ ಅವನು ಮಾಡಿದ ತಪ್ಪಿಗಾಗಿ ಸಾಯ್ತಾನೆ.+ ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ. 9 ಒಂದುವೇಳೆ ನೀನು ಕೆಟ್ಟವನಿಗೆ ಕೆಟ್ಟ ದಾರಿ ಬಿಡು ಅಂತ ಹೇಳಿದ್ರೂ ಅವನು ತಿದ್ಕೊಂಡು ನಡಿಯದಿದ್ರೆ ಅವನು ಅವನ ತಪ್ಪಿಗಾಗಿ ಸಾಯ್ತಾನೆ,+ ಆದ್ರೆ ನೀನು ನಿನ್ನ ಜೀವವನ್ನ ಉಳಿಸ್ಕೊಳ್ತೀಯ.+
10 ಮನುಷ್ಯಕುಮಾರನೇ, ನೀನು ಇಸ್ರಾಯೇಲ್ ಜನ್ರಿಗೆ ಹೀಗೆ ಹೇಳು: ‘“ನಮ್ಮ ದಂಗೆ, ಪಾಪಗಳ ಭಾರದಿಂದ ನಾವು ಕುಗ್ಗಿ ಹೋಗಿದ್ದೀವಿ, ಬಾಡಿ ಸೊರಗಿ ಹೋಗಿದ್ದೀವಿ.+ ಇಷ್ಟಾದ ಮೇಲೂ ನಾವು ಬದುಕಿರೋಕೆ ಆಗುತ್ತಾ?”+ ಅಂತ ನೀವು ಹೇಳಿದ್ರಿ.’ 11 ಆದ್ರೆ ನೀನು ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಕೆಟ್ಟವನೊಬ್ಬ ಸತ್ರೆ ನನಗೆ ಸ್ವಲ್ಪನೂ ಖುಷಿ ಆಗಲ್ಲ.+ ಅವನು ಕೆಟ್ಟ ದಾರಿ ಬಿಟ್ಟುಬಿಡಬೇಕು,+ ಜಾಸ್ತಿ ದಿನ ಬದುಕಬೇಕು+ ಅನ್ನೋದೇ ನನ್ನಾಸೆ. ಇಸ್ರಾಯೇಲ್ಯರೇ, ನನ್ನ ಹತ್ರ ಬನ್ನಿ, ಕೆಟ್ಟ ದಾರಿ ಬಿಟ್ಟು ಬನ್ನಿ.+ ನೀವು ಯಾಕೆ ಸುಮ್ನೆ ಜೀವ ಕಳ್ಕೊಬೇಕು?”’+
12 ಮನುಷ್ಯಕುಮಾರನೇ, ನಿನ್ನ ಜನ್ರಿಗೆ ಹೀಗೆ ಹೇಳು: ‘ಒಬ್ಬ ನೀತಿವಂತ ದಂಗೆ ಎದ್ರೆ ಅವನು ಈ ಹಿಂದೆ ಮಾಡಿದ ಒಳ್ಳೇ ಕೆಲಸಗಳು ಅವನನ್ನ ಕಾಪಾಡಲ್ಲ.+ ಕೆಟ್ಟವನು ತನ್ನ ಕೆಟ್ಟತನವನ್ನ ಬಿಟ್ಟುಬಿಟ್ರೆ ಈ ಹಿಂದೆ ಮಾಡಿದ ಕೆಟ್ಟ ಕೆಲಸದಿಂದ ಅವನು ಸಾಯಲ್ಲ.+ ನೀತಿವಂತ ಪಾಪ ಮಾಡೋಕೆ ಶುರುಮಾಡಿದ್ರೆ ಹಿಂದೆ ಮಾಡಿರೋ ಒಳ್ಳೇ ಕೆಲಸಗಳಿಂದಾಗಿ ಅವನು ಬಾಳಲ್ಲ.+ 13 ನಾನು ನೀತಿವಂತನಿಗೆ “ನೀನು ನಿಜವಾಗ್ಲೂ ಬಾಳ್ತೀಯ” ಅಂದಾಗ, ಅವನು ಮಾಡಿದ ಒಳ್ಳೇ ಕೆಲಸಗಳ ಮೇಲೆ ಭರವಸೆ ಇಟ್ಟು ಕೆಟ್ಟದ್ದನ್ನ* ಮಾಡಿದ್ರೆ+ ಅವನು ಮಾಡಿದ ಒಳ್ಳೇ ಕೆಲಸಗಳಲ್ಲಿ ಯಾವದನ್ನೂ ನಾನು ನೆನಪಿಸ್ಕೊಳ್ಳಲ್ಲ. ತಪ್ಪು ಮಾಡಿದ್ದಕ್ಕಾಗಿ ಅವನು ಸಾಯ್ತಾನೆ.+
14 ನಾನು ಕೆಟ್ಟವನಿಗೆ “ನೀನು ಸತ್ತೇ ಸಾಯ್ತೀಯ” ಅಂತ ಹೇಳಿದಾಗ ಅವನು ಪಾಪ ಮಾಡೋದನ್ನ ಬಿಟ್ಟು ನ್ಯಾಯನೀತಿ ಪ್ರಕಾರ ನಡಿದ್ರೆ,+ 15 ಒತ್ತೆ ಇಟ್ಕೊಂಡಿದ್ದನ್ನ ವಾಪಸ್ ಕೊಟ್ರೆ,+ ದರೋಡೆ ಮಾಡಿದ್ದನ್ನ ಹಿಂದೆ ಕೊಟ್ರೆ,+ ಕೆಟ್ಟ ಕೆಲಸಗಳನ್ನ ಬಿಟ್ಟು ಜೀವ ಕೊಡೋ ನಿಯಮಗಳ ಪ್ರಕಾರ ನಡಿದ್ರೆ ಅವನು ನಿಜವಾಗ್ಲೂ ಬಾಳ್ತಾನೆ,+ ಸಾಯಲ್ಲ. 16 ಅವನು ಮಾಡಿದ ಯಾವ ಪಾಪಕ್ಕೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.+ ಅವನು ನ್ಯಾಯನೀತಿಯ ಪ್ರಕಾರ ನಡ್ಕೊಂಡಿದ್ರಿಂದ ನಿಜವಾಗ್ಲೂ ಬಾಳ್ತಾನೆ.’+
17 ಆದ್ರೆ ನಿನ್ನ ಜನ ‘ಯೆಹೋವ ಮಾಡೋದು ಅನ್ಯಾಯ’ ಅಂತಾರೆ. ನಿಜ ಏನಂದ್ರೆ ಅವರು ಮಾಡ್ತಿರೋದೇ ಅನ್ಯಾಯ.
18 ಒಬ್ಬ ನೀತಿವಂತ ನೀತಿಯ ಪ್ರಕಾರ ನಡಿಯೋದನ್ನ ಬಿಟ್ಟು ಕೆಟ್ಟ ಕೆಲಸಗಳನ್ನ ಮಾಡಿದ್ರೆ ಅದಕ್ಕಾಗಿ ಅವನು ಸಾಯ್ಲೇಬೇಕು.+ 19 ಆದ್ರೆ ಕೆಟ್ಟವನೊಬ್ಬ ಕೆಟ್ಟತನ ಬಿಟ್ಟು ನ್ಯಾಯನೀತಿ ಪ್ರಕಾರ ನಡಿದ್ರೆ ಅವನು ಬಾಳ್ತಾನೆ.+
20 ಆದ್ರೆ ನೀವು ‘ಯೆಹೋವ ಮಾಡೋದು ಅನ್ಯಾಯ’ ಅಂತ ಹೇಳಿದ್ರಿ.+ ಇಸ್ರಾಯೇಲ್ಯರೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೆಲಸಕ್ಕೆ ತಕ್ಕ ಹಾಗೆ ತೀರ್ಪು ಕೊಡ್ತೀನಿ.”
21 ನಾವು ಕೈದಿಗಳಾಗಿ ಬಂದು 12ನೇ ವರ್ಷದ ಹತ್ತನೇ ತಿಂಗಳಿನ 5ನೇ ದಿನ ಯೆರೂಸಲೇಮಿಂದ ತಪ್ಪಿಸ್ಕೊಂಡು ಬಂದಿದ್ದ ಒಬ್ಬ ವ್ಯಕ್ತಿ ನನ್ನ ಹತ್ರ ಬಂದು+ “ಪಟ್ಟಣ ಶತ್ರುಗಳ ವಶವಾಗಿದೆ!”+ ಅಂದ.
22 ಆ ವ್ಯಕ್ತಿ ನನ್ನ ಹತ್ರ ಬಂದಿದ್ದು ಬೆಳಿಗ್ಗೆ. ಅವನು ಬರೋಕೆ ಮುಂಚೆ ಹಿಂದಿನ ಸಂಜೆ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂದಿತ್ತು. ನನಗೆ ಮತ್ತೆ ಮಾತಾಡೋಕೆ ಆಗೋ ಹಾಗೆ ದೇವರು ಮಾಡಿದ್ದನು. ಹಾಗಾಗಿ ನನ್ನಿಂದ ಮಾತಾಡೋಕೆ ಆಯ್ತು. ಅದಾದ್ಮೇಲೆ ನಾನು ಮೂಕನ ತರ ಇರಲಿಲ್ಲ.+
23 ಆಮೇಲೆ ಯೆಹೋವ ನನಗೆ ಹೀಗಂದನು: 24 “ಮನುಷ್ಯಕುಮಾರನೇ, ನಾಶವಾಗಿ ಹೋದ ಪಟ್ಟಣಗಳ ಜನ್ರು+ ಇಸ್ರಾಯೇಲ್ ದೇಶದ ಬಗ್ಗೆ ‘ಅಬ್ರಹಾಮ ಒಬ್ಬನೇ ಇದ್ದ, ಆದ್ರೂ ಅವನು ಈ ದೇಶವನ್ನ ಆಸ್ತಿಯಾಗಿ ಮಾಡ್ಕೊಂಡ.+ ಈಗ ನಾವು ಎಷ್ಟೋ ಜನ್ರಿದ್ದೀವಿ ಅಲ್ವಾ, ನಿಜವಾಗ್ಲೂ ಇದು ಆಸ್ತಿಯಾಗಿ ನಮಗೇ ಸಿಗುತ್ತೆ’ ಅಂತ ಹೇಳ್ತಿದ್ದಾರೆ.
25 ಹಾಗಾಗಿ ನೀನು ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವು ರಕ್ತ ಇರೋ ಆಹಾರ ತಿಂತಿದ್ದೀರ,+ ಅಸಹ್ಯ* ಮೂರ್ತಿಗಳಲ್ಲಿ ಭರವಸೆ ಇಡ್ತಿದ್ದೀರ, ರಕ್ತ ಸುರಿಸ್ತಾ ಇದ್ದೀರ.+ ಇದನ್ನೆಲ್ಲ ಮಾಡ್ತಿರೋ ನಿಮಗೆ ಈ ದೇಶ ಯಾಕೆ ಸಿಗಬೇಕು? 26 ನೀವು ನಿಮ್ಮ ಕತ್ತಿ ಮೇಲೆನೇ ಭರವಸೆ ಇಟ್ಟಿದ್ದೀರ,+ ಅಸಹ್ಯ ಕೆಲಸಗಳನ್ನ ಮಾಡ್ತಿದ್ದೀರ, ನೀವೆಲ್ಲ ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಿದ್ದೀರ.*+ ಹಾಗಿರುವಾಗ ಈ ದೇಶ ನಿಮಗೆ ಯಾಕೆ ಸಿಗಬೇಕು?”’+
27 ನೀನು ಅವ್ರಿಗೆ ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ನಾಶವಾಗಿ ಹೋದ ಪಟ್ಟಣಗಳಲ್ಲಿ ವಾಸ ಮಾಡ್ತಿರೋರು ಕತ್ತಿಯಿಂದ ಸಾಯ್ತಾರೆ. ಬಯಲಲ್ಲಿ ಇರುವವ್ರನ್ನ ನಾನು ಕಾಡುಪ್ರಾಣಿಗಳಿಗೆ ಊಟವಾಗಿ ಕೊಡ್ತೀನಿ. ಭದ್ರ ಕೋಟೆಗಳಲ್ಲಿ ಮತ್ತು ಗುಹೆಗಳಲ್ಲಿ ಇರುವವರು ಕಾಯಿಲೆ ಬಿದ್ದು ಸಾಯ್ತಾರೆ.+ 28 ನಾನು ದೇಶವನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ.+ ಅದ್ರ ಅಹಂಕಾರ, ಜಂಬವನ್ನ ಅಡಗಿಸ್ತೀನಿ. ಇಸ್ರಾಯೇಲಿನ ಬೆಟ್ಟಗಳು ಖಾಲಿಖಾಲಿ ಹೊಡಿಯೋ ಹಾಗೆ ಮಾಡ್ತೀನಿ,+ ಅಲ್ಲಿ ಒಬ್ರೂ ಓಡಾಡಲ್ಲ. 29 ಅವರು ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ+ ನಾನು ದೇಶವನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ.+ ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’
30 ಮನುಷ್ಯಕುಮಾರನೇ, ನಿನ್ನ ಜನ್ರು ಗೋಡೆಗಳ ಪಕ್ಕದಲ್ಲಿ, ತಮ್ಮ ಮನೇ ಬಾಗಿಲುಗಳ ಹತ್ರ ನಿಂತು ನಿನ್ನ ಬಗ್ಗೆ ಮಾತಾಡ್ಕೊಳ್ತಿದ್ದಾರೆ.+ ಪ್ರತಿಯೊಬ್ಬನೂ ಅವನ ಸಹೋದರನಿಗೆ ‘ಬಾ, ನಾವು ಹೋಗಿ ಯೆಹೋವ ಏನು ಹೇಳ್ತಾನೆ ಅಂತ ಕೇಳಿಸ್ಕೊಳ್ಳೋಣ’ ಅಂತ ಹೇಳ್ತಿದ್ರು. 31 ಅವರು ಗುಂಪು ಕಟ್ಕೊಂಡು ಬಂದು ನನ್ನ ಜನ್ರ ಹಾಗೆ ನಿನ್ನ ಮುಂದೆ ಕೂತ್ಕೊಳ್ತಾರೆ. ನೀನು ಹೇಳೋದನ್ನೆಲ್ಲ ಕೇಳಿಸ್ಕೊಳ್ತಾರೆ, ಆದ್ರೆ ಅದ್ರ ಪ್ರಕಾರ ನಡಿಯಲ್ಲ.+ ಅವರು ಬಾಯಿತುಂಬ ನಿನ್ನನ್ನ ಹೊಗಳ್ತಾರೆ, ಆದ್ರೆ ಅವ್ರ ಮನಸ್ಸೆಲ್ಲ ಮೋಸ ಮಾಡಿ ಲಾಭ ಗಳಿಸೋದ್ರ ಮೇಲೆನೇ ಇರುತ್ತೆ. 32 ನೋಡು! ನೀನು ಅವ್ರಿಗೆ ತಂತಿವಾದ್ಯವನ್ನ ಮಧುರವಾಗಿ ನುಡಿಸ್ತಾ ಇಂಪಾಗಿ ಪ್ರೇಮಗೀತೆ ಹಾಡೋನ ತರ ಇದ್ದೀಯ. ಅವರು ನಿನ್ನ ಮಾತನ್ನ ಕೇಳಿಸ್ಕೊಳ್ತಾರೆ, ಆದ್ರೆ ಒಬ್ರೂ ಅದ್ರ ಪ್ರಕಾರ ನಡಿಯಲ್ಲ. 33 ನೀನು ಹೇಳೋ ಮಾತು ನಿಜ ಆಗೇ ಆಗುತ್ತೆ. ಅದು ನಿಜ ಆಗುವಾಗ ಅವ್ರ ಮಧ್ಯ ಒಬ್ಬ ಪ್ರವಾದಿ ಇದ್ದಾನೆ ಅಂತ ಅವ್ರಿಗೆ ಗೊತ್ತಾಗುತ್ತೆ.”+
34 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ಇಸ್ರಾಯೇಲ್ಯರ ಕುರುಬರ ವಿರುದ್ಧ ಭವಿಷ್ಯ ಹೇಳು. ನೀನು ಆ ಕುರುಬರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಿಮ್ಮ ಹೊಟ್ಟೆಯನ್ನೇ ತುಂಬಿಸ್ಕೊಳ್ತಿರೋ ಇಸ್ರಾಯೇಲ್ಯರ ಕುರುಬರೇ, ನಿಮಗೆ ಬರೋ ಗತಿಯನ್ನ ಏನು ಹೇಳಲಿ!+ ಕುರುಬರ ಕೆಲಸ ಕುರಿಗಳ ಹೊಟ್ಟೆಯನ್ನ ತುಂಬಿಸೋದು ಅಲ್ವಾ?+ 3 ನೀವು ಕೊಬ್ಬನ್ನ ತಿಂತೀರ, ಉಣ್ಣೆಬಟ್ಟೆಗಳನ್ನ ಹಾಕ್ಕೊಳ್ತೀರ, ಚೆನ್ನಾಗಿ ಕೊಬ್ಬಿದ ಪ್ರಾಣಿಯನ್ನ ಕಡಿತೀರ,+ ಆದ್ರೆ ನೀವು ಕುರಿಗಳನ್ನ ಮೇಯಿಸಲ್ಲ.+ 4 ಬಡಕಲು ಕುರಿಗಳನ್ನ ನೀವು ಬಲಪಡಿಸಲಿಲ್ಲ, ಕಾಯಿಲೆ ಬಿದ್ದಾಗ ವಾಸಿಮಾಡ್ಲಿಲ್ಲ, ಗಾಯ ಆದಾಗ ಪಟ್ಟಿ ಕಟ್ಟಲಿಲ್ಲ, ತಪ್ಪಿಸ್ಕೊಂಡು ಹೋಗಿ ಅಲೆದಾಡ್ತಿದ್ದ ಕುರಿಗಳನ್ನ ವಾಪಾಸ್ ತರಲಿಲ್ಲ, ಅವು ಕಳೆದು ಹೋದಾಗ ಹುಡುಕಲಿಲ್ಲ.+ ಇದನ್ನ ಮಾಡದೆ ಅವುಗಳ ಮೇಲೆ ಒಂಚೂರು ಕನಿಕರ ಇಲ್ಲದೆ ದಬ್ಬಾಳಿಕೆಯಿಂದ ಅಧಿಕಾರ ನಡಿಸಿದ್ದೀರ.+ 5 ಕುರುಬ ಇಲ್ಲದೆ ಕುರಿಗಳು ಓಡಿ ಹೋದ್ವು.+ ಹೀಗೆ ಚೆಲ್ಲಾಪಿಲ್ಲಿಯಾಗಿ ಹೋಗಿ ಎಲ್ಲ ಕಾಡುಪ್ರಾಣಿಗಳಿಗೆ ಆಹಾರ ಆದ್ವು. 6 ನನ್ನ ಕುರಿಗಳು ಎಲ್ಲ ಪರ್ವತಗಳ ಮೇಲೆ, ಎತ್ತರವಾದ ಎಲ್ಲ ಬೆಟ್ಟಗಳ ಮೇಲೆ ಅಲೆದಾಡ್ತಿದ್ವು. ಭೂಮಿ ಮೇಲೆಲ್ಲ ನನ್ನ ಕುರಿಗಳು ಚೆಲ್ಲಾಪಿಲ್ಲಿಯಾಗಿ ಹೋಗಿದ್ವು. ಅವನ್ನ ಯಾರೂ ಹುಡುಕಲಿಲ್ಲ, ಅವು ಎಲ್ಲಿವೆ ಅಂತಾನೂ ಕಂಡುಹಿಡಿಲಿಲ್ಲ.
7 ಹಾಗಾಗಿ ಕುರುಬರೇ, ಯೆಹೋವನ ಈ ಮಾತನ್ನ ಕೇಳಿ: 8 ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ನಾನು ಹೆಜ್ಜೆ ತಗೊಳ್ತೀನಿ. ಕುರುಬ ಇಲ್ಲದ್ರಿಂದ ನನ್ನ ಕುರಿಗಳು ಬೇಟೆಗೆ ಬಲಿಯಾಗಿವೆ, ಎಲ್ಲ ಕಾಡುಪ್ರಾಣಿಗಳಿಗೆ ಆಹಾರವಾಗಿವೆ. ನನ್ನ ಕುರುಬರು ನನ್ನ ಕುರಿಗಳನ್ನ ಹುಡುಕಲಿಲ್ಲ. ಅವರು ತಮ್ಮ ಹೊಟ್ಟೆ ತುಂಬಿಸ್ಕೊಳ್ತಿದ್ರೇ ವಿನಃ ಕುರಿಗಳ ಹೊಟ್ಟೆಯನ್ನ ತುಂಬಿಸಲಿಲ್ಲ.”’ 9 ಹಾಗಾಗಿ ಕುರುಬರೇ, ಯೆಹೋವನ ಮಾತನ್ನ ಕೇಳಿ. 10 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಕುರುಬರ ವಿರುದ್ಧ ನಿಲ್ತೀನಿ. ನನ್ನ ಕುರಿಗಳಿಗೆ ಅವರೇನು ಮಾಡಿದ್ರೋ ಅದಕ್ಕಾಗಿ ನಾನು ಅವ್ರಿಂದ ಲೆಕ್ಕ ಕೇಳ್ತೀನಿ.* ನನ್ನ ಕುರಿಗಳನ್ನ ಮೇಯಿಸೋ* ಕೆಲಸದಿಂದ ಅವ್ರನ್ನ ತೆಗೆದುಹಾಕ್ತೀನಿ.+ ಅವರು ಇನ್ಮುಂದೆ ಅವ್ರ ಹೊಟ್ಟೆ ತುಂಬಿಸ್ಕೊಳ್ಳೋಕೆ ಆಗಲ್ಲ. ನನ್ನ ಕುರಿಗಳು ಅವ್ರ ಬಾಯಿಗೆ ತುತ್ತಾಗದ ಹಾಗೆ ಕಾಪಾಡ್ತೀನಿ. ಇನ್ಮುಂದೆ ನನ್ನ ಕುರಿಗಳು ಅವ್ರಿಗೆ ಆಹಾರ ಆಗಲ್ಲ.’”
11 ವಿಶ್ವದ ರಾಜ ಯೆಹೋವ ಹೀಗಂತಾನೆ: “ನೋಡಿ, ನನ್ನ ಕುರಿಗಳನ್ನ ನಾನೇ ಹುಡುಕ್ತೀನಿ, ನಾನೇ ಅವುಗಳ ಆರೈಕೆ ಮಾಡ್ತೀನಿ.+ 12 ಚೆಲ್ಲಾಪಿಲ್ಲಿ ಆಗಿರೋ ಕುರಿಗಳನ್ನ ಹುಡುಕಿ ಅವನ್ನ ಕರ್ಕೊಂಡು ಬಂದು ಒಬ್ಬ ಕುರುಬನ ತರ ನಾನು ನನ್ನ ಕುರಿಗಳ ಆರೈಕೆ ಮಾಡ್ತೀನಿ.+ ಮೋಡ ಮುಚ್ಚಿ ಕಾರ್ಗತ್ತಲು ಕವಿದ ದಿನ+ ಅವು ಎಲ್ಲೆಲ್ಲ ಚೆಲ್ಲಾಪಿಲ್ಲಿ ಆದ್ವೋ ಆ ಜಾಗಗಳಿಂದ ನಾನು ಅವುಗಳನ್ನ ಕಾಪಾಡಿ ಕರ್ಕೊಂಡು ಬರ್ತಿನಿ. 13 ಅವುಗಳನ್ನ ಜನಾಂಗಗಳಿಂದ ಬಿಡಿಸಿ, ದೇಶ ದೇಶಗಳಿಂದ ಒಟ್ಟುಸೇರಿಸಿ ಅವುಗಳ ಸ್ವದೇಶಕ್ಕೆ ಕರ್ಕೊಂಡು ಬರ್ತಿನಿ. ಇಸ್ರಾಯೇಲಿನ ಬೆಟ್ಟಗಳ ಮೇಲೆ,+ ತೊರೆಗಳ ಹತ್ರ, ದೇಶದ ಎಲ್ಲ ಕಡೆ ಅವುಗಳನ್ನ ಮೇಯಿಸ್ತೀನಿ. 14 ಹಸಿರು ಹುಲ್ಲುಗಾವಲಲ್ಲಿ ಅವುಗಳನ್ನ ಮೇಯಿಸ್ತೀನಿ. ಇಸ್ರಾಯೇಲಿನ ಎತ್ತರವಾದ ಬೆಟ್ಟಗಳ ಮೇಲೆ ಅವು ಮೇಯುತ್ತೆ.+ ಅಲ್ಲಿ ಒಳ್ಳೇ ಮೇವಿರೋ ಜಾಗದಲ್ಲಿ ಅವು ಮಲಗುತ್ತೆ.+ ಇಸ್ರಾಯೇಲಿನ ಬೆಟ್ಟಗಳಲ್ಲಿ ತುಂಬ ಒಳ್ಳೇ ಹುಲ್ಲುಗಾವಲುಗಳಲ್ಲಿ ಅವು ಮೇಯುತ್ತೆ.”
15 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಕುರಿಗಳನ್ನ ನಾನೇ ಮೇಯಿಸ್ತೀನಿ,+ ಅವು ಹಾಯಾಗಿ ಮಲಗೋ ಹಾಗೆ ಮಾಡ್ತೀನಿ.+ 16 ಕಳೆದು ಹೋಗಿದ್ದನ್ನ ಹುಡುಕ್ತೀನಿ,+ ತಪ್ಪಿಸ್ಕೊಂಡು ಹೋಗಿದ್ದನ್ನ ವಾಪಸ್ ತರ್ತಿನಿ, ಗಾಯ ಆಗಿದ್ರೆ ಪಟ್ಟಿ ಕಟ್ತೀನಿ, ಬಡಕಲಾಗಿದ್ರೆ ಬಲಪಡಿಸ್ತೀನಿ. ಆದ್ರೆ ಕೊಬ್ಬಿರೋದನ್ನ, ಬಲಿಷ್ಠವಾದದ್ದನ್ನ ನಾಶಮಾಡ್ತೀನಿ. ಅದಕ್ಕೆ ತಕ್ಕ ಶಿಕ್ಷೆ ಕೊಡ್ತೀನಿ.”
17 ನನ್ನ ಕುರಿಗಳೇ, ವಿಶ್ವದ ರಾಜ ಯೆಹೋವ ನಿಮಗೆ ಹೀಗಂತಾನೆ: “ನಾನು ನನ್ನ ಕುರಿಗಳಿಗೆ ನ್ಯಾಯತೀರಿಸ್ತೀನಿ, ಟಗರುಗಳಿಗೆ ಮತ್ತು ಹೋತಗಳಿಗೆ ನ್ಯಾಯತೀರಿಸ್ತೀನಿ.+ 18 ಒಳ್ಳೇ ಹುಲ್ಲುಗಾವಲುಗಳಲ್ಲಿ ನೀವು* ಮೇದಿದ್ದು ಸಾಕಾಗಿಲ್ವಾ? ಹುಲ್ಲುಗಾವಲುಗಳಲ್ಲಿ ಉಳಿದದ್ದನ್ನೂ ಕಾಲಿಂದ ತುಳಿದು ಹಾಕ್ತಿದ್ದೀರಲ್ಲಾ? ಶುದ್ಧ ನೀರು ಕುಡಿದ ಮೇಲೆ ಆ ನೀರಲ್ಲಿ ಕಾಲು ಹಾಕಿ ಅದನ್ನ ಗಬ್ಬೆಬ್ಬಿಸ್ತಿದ್ದೀರಲ್ಲಾ? 19 ನೀವು ತುಳಿದು ಹಾಳುಮಾಡಿದ ಹುಲ್ಲುಗಾವಲಲ್ಲಿ ನನ್ನ ಕುರಿಗಳು ಮೇಯಬೇಕಾ? ನೀವು ಕಾಲಿಟ್ಟು ಗಲೀಜು ಮಾಡಿದ ನೀರನ್ನ ಅವು ಕುಡೀಬೇಕಾ?”
20 ಹಾಗಾಗಿ ವಿಶ್ವದ ರಾಜ ಯೆಹೋವ ಅವ್ರಿಗೆ ಹೇಳೋದು ಏನಂದ್ರೆ “ನೋಡಿ, ಕೊಬ್ಬಿದ ಕುರಿಗೆ ಮತ್ತು ಬಡಕಲು ಕುರಿಗೆ ನಾನೇ ನ್ಯಾಯತೀರಿಸ್ತೀನಿ. 21 ಯಾಕಂದ್ರೆ ನೀವು ಕಾಯಿಲೆಬಿದ್ದ ಕುರಿಗಳನ್ನೆಲ್ಲ ನಿಮ್ಮ ಪಕ್ಕೆ, ಮುಂಗಾಲಿಂದ ನೂಕ್ತಾ, ಕೊಂಬುಗಳಿಂದ ಹಾಯುತ್ತಾ ತಳ್ತಿದ್ದೀರ. ಅವು ದೂರದೂರಕ್ಕೆ ಚದರಿ ಹೋಗೋ ತನಕ ನೀವು ಹಾಗೆ ಮಾಡ್ತಿದ್ದೀರ. 22 ಹಾಗಾಗಿ ನಾನು ನನ್ನ ಕುರಿಗಳನ್ನ ಕಾಪಾಡ್ತೀನಿ. ಅವು ಇನ್ಮುಂದೆ ಬೇಟೆಗೆ ಬಲಿಯಾಗಲ್ಲ.+ ನಾನು ಎಲ್ಲಾ ಕುರಿಗೂ ನ್ಯಾಯತೀರಿಸ್ತೀನಿ. 23 ಅವುಗಳನ್ನ ನೋಡ್ಕೊಳ್ಳೋಕೆ ನಾನು ಒಬ್ಬ ಕುರುಬನನ್ನ ನೇಮಿಸ್ತೀನಿ.+ ನನ್ನ ಸೇವಕ ದಾವೀದನೇ+ ಆ ಕುರುಬ. ಅವನು ಅವುಗಳನ್ನ ಮೇಯಿಸ್ತಾನೆ. ಅವನೇ ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ.+ 24 ಯೆಹೋವನಾದ ನಾನು ಅವುಗಳ ದೇವರಾಗಿ ಇರ್ತಿನಿ.+ ನನ್ನ ಸೇವಕ ದಾವೀದ ಅವುಗಳ ಪ್ರಧಾನನಾಗಿ ಇರ್ತಾನೆ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.
25 ನಾನು ಅವುಗಳ ಜೊತೆ ಶಾಂತಿಯ ಒಪ್ಪಂದ ಮಾಡ್ಕೊತೀನಿ.+ ಕ್ರೂರ ಕಾಡುಪ್ರಾಣಿಗಳನ್ನ ದೇಶದಿಂದ ಓಡಿಸಿಬಿಡ್ತೀನಿ.+ ಆಗ ನನ್ನ ಕುರಿಗಳು ಕಾಡಲ್ಲಿ ಸುರಕ್ಷಿತವಾಗಿ ಇರುತ್ತೆ. ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತೆ.+ 26 ನಾನು ಅವುಗಳನ್ನ ಮತ್ತು ನನ್ನ ಬೆಟ್ಟದ ಸುತ್ತಮುತ್ತ ಇರೋ ಪ್ರದೇಶವನ್ನ ಒಂದು ಆಶೀರ್ವಾದವಾಗಿ ಮಾಡ್ತೀನಿ.+ ಕಾಲಕಾಲಕ್ಕೆ ಮಳೆ ಸುರಿಸ್ತೀನಿ. ಆಶೀರ್ವಾದಗಳ ಸುರಿಮಳೆಯನ್ನ ಸುರಿಸ್ತೀನಿ.+ 27 ದೇಶದಲ್ಲಿರೋ ಮರಗಳು ಹಣ್ಣುಬಿಡುತ್ತೆ. ನೆಲ ಬೆಳೆ ಕೊಡುತ್ತೆ,+ ನನ್ನ ಕುರಿಗಳು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುತ್ತೆ. ನಾನು ಅವುಗಳ ನೊಗಗಳನ್ನ ಮುರಿದು+ ಅವುಗಳನ್ನ ದಾಸರಾಗಿ ಮಾಡಿದವ್ರಿಂದ ಬಿಡಿಸಿ ಕರ್ಕೊಂಡು ಬರುವಾಗ ನಾನೇ ಯೆಹೋವ ಅಂತ ಅವಕ್ಕೆ ಗೊತ್ತಾಗುತ್ತೆ. 28 ಇನ್ಮುಂದೆ ಜನಾಂಗಗಳು ಅವುಗಳನ್ನ ಬೇಟೆಯಾಡಲ್ಲ, ಕಾಡುಪ್ರಾಣಿಗಳು ಅವುಗಳನ್ನ ತಿಂದುಹಾಕಲ್ಲ. ಅವು ಸುರಕ್ಷಿತವಾಗಿ ಇರುತ್ತೆ. ಅವುಗಳನ್ನ ಯಾರೂ ಹೆದರಿಸಲ್ಲ.+
29 ನಾನು ಅವುಗಳಿಗಾಗಿ ಒಂದು ತೋಟ ಕೊಡ್ತೀನಿ. ಅದು ತುಂಬ ಹೆಸರುವಾಸಿ ಆಗುತ್ತೆ. ಅದಾದ್ಮೇಲೆ ಅವು ದೇಶದಲ್ಲಿ ಬರಗಾಲದಿಂದ ಸಾಯಲ್ಲ,+ ಜನಾಂಗಗಳಿಂದ ತಲೆ ತಗ್ಗಿಸಲ್ಲ.+ 30 ‘ಆಗ ಅವರ ದೇವರಾಗಿರೋ ಯೆಹೋವನಾದ ನಾನು ಅವ್ರ ಜೊತೆ ಇದ್ದೀನಿ ಮತ್ತು ಇಸ್ರಾಯೇಲ್ಯರಾದ ಅವರು ನನ್ನ ಜನ್ರಾಗಿದ್ದಾರೆ ಅಂತ ಅವ್ರಿಗೆ ಗೊತ್ತಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”’
31 ‘ನನ್ನ ಕುರಿಗಳೇ,+ ನಾನು ಆರೈಕೆ ಮಾಡೋ ಕುರಿಗಳೇ ನೀವು ಸಾಮಾನ್ಯ ಮನುಷ್ಯರು, ನಾನು ನಿಮ್ಮ ದೇವರು’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
35 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಸೇಯೀರ್+ ಬೆಟ್ಟದ ಕಡೆ ಮುಖಮಾಡಿ ಅದ್ರ ವಿರುದ್ಧ ಭವಿಷ್ಯ ಹೇಳು.+ 3 ಅದಕ್ಕೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಸೇಯೀರ್ ಬೆಟ್ಟವೇ, ನಾನು ನಿನಗೆ ವಿರುದ್ಧವಾಗಿದ್ದೀನಿ. ನಾನು ನಿನ್ನ ವಿರುದ್ಧ ಕೈಚಾಚಿ ನಿನ್ನನ್ನ ಯಾರೂ ವಾಸ ಮಾಡದ ಬಂಜರು ಭೂಮಿಯಾಗಿ ಮಾಡ್ತೀನಿ.+ 4 ನಿನ್ನ ಪಟ್ಟಣಗಳು ಹಾಳು ಬೀಳೋ ತರ ಮಾಡ್ತೀನಿ. ನೀನು ಬಂಜರು ಭೂಮಿ ಆಗ್ತೀಯ, ಖಾಲಿಖಾಲಿ ಹೊಡಿತೀಯ.+ ಆಗ, ನಾನೇ ಯೆಹೋವ ಅಂತ ನಿಂಗೆ ಗೊತ್ತಾಗುತ್ತೆ. 5 ನೀನು ಇಸ್ರಾಯೇಲ್ಯರ ಮೇಲೆ ಶಾಶ್ವತ ಹಗೆ ಸಾಧಿಸಿದೆ.+ ಅಷ್ಟೇ ಅಲ್ಲ ಅವ್ರ ಆಪತ್ತಿನ ಕಾಲದಲ್ಲಿ, ಅವ್ರಿಗೆ ಕೊನೆ ಶಿಕ್ಷೆ ಸಿಕ್ಕಿದಾಗ ನೀನು ಅವ್ರನ್ನ ಕತ್ತಿಯ ಬಾಯಿಗೆ ಒಪ್ಪಿಸಿದೆ.”’+
6 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನಾನು ನಿನ್ನನ್ನ ಮರಣಕ್ಕೆ ಒಪ್ಪಿಸ್ತೀನಿ, ನೀನು ಸಾವಿನ ಬಾಯಿಂದ ತಪ್ಪಿಸ್ಕೊಳ್ಳೋಕೆ ಸಾಧ್ಯನೇ ಇಲ್ಲ.+ ನೀನು ಯಾರನ್ನ ದ್ವೇಷಿಸಿದ್ಯೋ ಅವ್ರನ್ನ ಸಾಯಿಸಿದ್ರಿಂದ ನೀನು ಸತ್ತೇ ಸಾಯ್ತೀಯ.+ 7 ನಾನು ಸೇಯೀರ್ ಬೆಟ್ಟವನ್ನ ಯಾರೂ ವಾಸಿಸದ ಹಾಗೆ ಬಂಜರು ಭೂಮಿಯಾಗಿ ಮಾಡ್ತೀನಿ.+ ಅಲ್ಲಿ ಹೋಗುವವ್ರನ್ನ, ಬರುವವ್ರನ್ನ ಸಾಯಿಸ್ತೀನಿ. 8 ನಾನು ಅದ್ರ ಬೆಟ್ಟಗಳನ್ನ ಸತ್ತವ್ರ ಶವಗಳಿಂದ ತುಂಬಿಸ್ತೀನಿ. ಕತ್ತಿಯಿಂದ ಸತ್ತವರು ನಿನ್ನ ಬೆಟ್ಟಗಳ ಮೇಲೆ, ನಿನ್ನ ಕಣಿವೆಗಳಲ್ಲಿ, ನಿನ್ನ ಎಲ್ಲ ತೊರೆಗಳಲ್ಲಿ ಬಿದ್ದಿರ್ತಾರೆ. 9 ನೀನು ಇನ್ಮುಂದೆ ಹಾಳುಬೀಳೋ ಹಾಗೆ ನಾನು ಮಾಡ್ತೀನಿ. ನಿನ್ನ ಪಟ್ಟಣಗಳಲ್ಲಿ ಯಾರೂ ವಾಸಿಸಲ್ಲ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’
10 ಯೆಹೋವನಾದ ನಾನೇ ಇಲ್ಲಿರುವಾಗ ‘ಆ ಎರಡು ದೇಶಗಳು, ಜನಾಂಗಗಳು ನನ್ನದಾಗುತ್ತೆ, ನಾವು ಅವನ್ನ ವಶ ಮಾಡ್ಕೊಳ್ತೀವಿ’+ ಅಂತ ನೀನು ಹೇಳ್ದೆ. 11 ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನೀನು ನನ್ನ ಜನ್ರನ್ನ ದ್ವೇಷಿಸಿ ಕಿಡಿಕಾರಿ ಅವ್ರ ಮೇಲೆ ಉರಿದುಬಿದ್ದ ಹಾಗೇ ನಾನು ನಿನ್ನ ಜೊತೆ ನಡ್ಕೊತೀನಿ.+ ನಾನು ನಿನಗೆ ತೀರ್ಪು ಕೊಡುವಾಗ ನಾನು ಯಾರಂತ ನನ್ನ ಜನ್ರಿಗೆ ತೋರಿಸ್ತೀನಿ. 12 ಆಗ, ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ನೀನು ಆಡಿದ ಕೀಳು ಮಾತುಗಳನ್ನೆಲ್ಲ ಯೆಹೋವನಾದ ನಾನು ಕಿವಿಯಾರೆ ಕೇಳಿಸ್ಕೊಂಡಿದ್ದೀನಿ ಅಂತ ನಿನಗೆ ಗೊತ್ತಾಗುತ್ತೆ. ನೀನು “ಅವು ಹಾಳುಬಿದ್ದಿವೆ. ಅವನ್ನ ನಾಶ ಮಾಡೋಕೆ ನಮಗೆ ಇದೇ ಒಳ್ಳೇ ಅವಕಾಶ” ಅಂತ ಹೇಳಿದ್ಯಲ್ಲಾ. 13 ನೀನು ನನ್ನ ವಿರುದ್ಧ ಜಂಬದ ಮಾತುಗಳನ್ನಾಡಿದೆ. ನೀನು ನನಗೆ ಅವಮಾನ ತರೋ ಮಾತುಗಳನ್ನ ಆಡಿದ್ದು ಅಷ್ಟಿಷ್ಟಲ್ಲ.+ ಅವನ್ನೆಲ್ಲ ನಾನು ಕೇಳಿಸ್ಕೊಂಡಿದ್ದೀನಿ.’
14 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ನಿನ್ನಲ್ಲಿ ಜನ್ರೇ ಇಲ್ಲದ ಹಾಗೆ ಮಾಡ್ತೀನಿ, ನಿನ್ನನ್ನ ಬಂಜರು ಭೂಮಿಯಾಗಿ ಮಾಡಿದಾಗ ಇಡೀ ಭೂಮಿ ಖುಷಿಪಡುತ್ತೆ. 15 ಇಸ್ರಾಯೇಲ್ಯರ ಆಸ್ತಿಯೆಲ್ಲ ಹಾಳುಬಿದ್ದಾಗ ನೀನು ಖುಷಿಪಟ್ಟೆ ತಾನೇ? ನಿನಗೂ ಅದೇ ಗತಿ ಬರೋ ತರ ಮಾಡ್ತೀನಿ.+ ಸೇಯೀರ್ ಬೆಟ್ಟವೇ, ಇಡೀ ಎದೋಮೇ, ನೀನು ಹಾಳುಬೀಳ್ತಿಯ.+ ಆಗ, ನಾನೇ ಯೆಹೋವ ಅಂತ ಎಲ್ರಿಗೂ ಗೊತ್ತಾಗುತ್ತೆ.’”
36 “ಮನುಷ್ಯಕುಮಾರನೇ, ನೀನು ಇಸ್ರಾಯೇಲಿನ ಬೆಟ್ಟಗಳ ಬಗ್ಗೆ ಏನಂತ ಭವಿಷ್ಯ ಹೇಳಬೇಕಂದ್ರೆ ‘ಇಸ್ರಾಯೇಲಿನ ಬೆಟ್ಟಗಳೇ, ಯೆಹೋವನ ಮಾತನ್ನ ಕೇಳಿ. 2 ವಿಶ್ವದ ರಾಜ ಯೆಹೋವ ಹೀಗಂತಾನೆ: “ಶತ್ರು ನಿಮ್ಮ ಬಗ್ಗೆ, ‘ಆಹಾ! ಹಳೇ ಕಾಲದ ಎತ್ತರ ಪ್ರದೇಶಗಳೂ ನಮ್ಮದಾಗಿವೆ!’ ಅಂತ ಹೇಳಿದ್ದಾನೆ.”’+
3 ಹಾಗಾಗಿ ನೀನು ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ಶತ್ರುಗಳು ನಿಮ್ಮನ್ನ ಹಾಳು ಮಾಡಿ ಎಲ್ಲ ಕಡೆಯಿಂದ ನಿಮ್ಮ ಮೇಲೆ ದಾಳಿ ಮಾಡಿದ್ದಾರೆ. ನೀವು ಜನಾಂಗಗಳಲ್ಲಿ ಉಳಿದವ್ರ ಕೈಗೆ ಸೇರಬೇಕು, ಜನ ನಿಮ್ಮ ಬಗ್ಗೆ ಇಲ್ಲಸಲ್ಲದ್ದನ್ನ ಮಾತಾಡ್ತಿರಬೇಕು, ನಿಮ್ಮ ಹೆಸ್ರು ಹಾಳು ಮಾಡೋಕೆ ಸುಳ್ಳು ಸುದ್ದಿ ಹಬ್ಬಿಸ್ತಿರಬೇಕು ಅನ್ನೋದೇ ಅವ್ರ ಉದ್ದೇಶ.+ 4 ಹಾಗಾಗಿ ಇಸ್ರಾಯೇಲಿನ ಬೆಟ್ಟಗಳೇ, ವಿಶ್ವದ ರಾಜ ಯೆಹೋವನ ಮಾತನ್ನ ಕೇಳಿ! ವಿಶ್ವದ ರಾಜ ಯೆಹೋವ ಪರ್ವತಗಳಿಗೆ, ಬೆಟ್ಟಗಳಿಗೆ, ತೊರೆಗಳಿಗೆ, ಕಣಿವೆಗಳಿಗೆ, ಹಾಳುಬಿದ್ದಿರೋ ಅವಶೇಷಗಳಿಗೆ+ ಮತ್ತು ಅಕ್ಕಪಕ್ಕ ಇರೋ ಜನಾಂಗಗಳಲ್ಲಿ ಉಳಿದವರು ಲೂಟಿ ಮಾಡಿ ಅಪಹಾಸ್ಯ ಮಾಡಿ ಬಿಟ್ಟು ಹೋಗಿರೋ ಪಟ್ಟಣಗಳಿಗೆ ಹೇಳೋ ಮಾತಿದು.+ 5 ಅವೆಲ್ಲಕ್ಕೂ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಜನಾಂಗಗಳಲ್ಲಿ ಉಳಿದವ್ರ ವಿರುದ್ಧ ಮತ್ತು ಇಡೀ ಎದೋಮಿನ ವಿರುದ್ಧ ರೋಷಾವೇಶದಿಂದ+ ಮಾತಾಡ್ತೀನಿ. ಯಾಕಂದ್ರೆ ಅವರು ನನ್ನ ದೇಶವನ್ನ ತಮ್ಮದು ಅಂತ ಹೇಳ್ಕೊಂಡು ನನ್ನ ಜನ್ರನ್ನ ಹೀನಾಯವಾಗಿ ಅವಮಾನ ಮಾಡ್ತಾ ಖುಷಿಪಡ್ತಿದ್ದಾರೆ.+ ಅದ್ರಲ್ಲಿರೋ ಹುಲ್ಲುಗಾವಲುಗಳನ್ನ ವಶ ಮಾಡ್ಕೊಳ್ಳೋಕೆ ಮತ್ತು ದೇಶದಲ್ಲಿ ಇರೋದನ್ನೆಲ್ಲ ಕೊಳ್ಳೆ ಹೊಡೆಯೋಕೆ ಅವರು ಹೀಗೆ ಮಾಡ್ತಿದ್ದಾರೆ.’”’+
6 ಹಾಗಾಗಿ ನೀನು ಇಸ್ರಾಯೇಲ್ ದೇಶದ ಬಗ್ಗೆ ಭವಿಷ್ಯ ಹೇಳು. ನೀನು ಅಲ್ಲಿನ ಪರ್ವತಗಳಿಗೆ, ಬೆಟ್ಟಗಳಿಗೆ, ತೊರೆಗಳಿಗೆ ಮತ್ತು ಕಣಿವೆಗಳಿಗೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನೋಡಿ! ಜನಾಂಗಗಳು ನಿಮ್ಮನ್ನ ಅವಮಾನಿಸಿವೆ. ಹಾಗಾಗಿ ನಾನು ರೋಷಾವೇಶದಿಂದ ಆ ಜನಾಂಗಗಳಿಗೆ ಬರೋ ಗತಿಯನ್ನ ಹೇಳ್ತೀನಿ”’+ ಅಂತ ಹೇಳು.
7 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಕೈಯೆತ್ತಿ ಆಣೆ ಮಾಡಿ ಹೇಳ್ತಿದ್ದೀನಿ, ಏನಂದ್ರೆ ನಿಮ್ಮ ಸುತ್ತ ಇರೋ ಜನಾಂಗಗಳು ನಿಮ್ಮನ್ನ ಅವಮಾನ ಮಾಡಿದ ಹಾಗೆ ಅವಕ್ಕೂ ಅವಮಾನ ಆಗುತ್ತೆ.+ 8 ಆದ್ರೆ ಇಸ್ರಾಯೇಲಿನ ಬೆಟ್ಟಗಳೇ, ನಿಮ್ಮ ಮೇಲೆ ತುಂಬ ರೆಂಬೆಕೊಂಬೆಗಳಿರೋ ಮರಗಳು ಬೆಳೆಯುತ್ತೆ. ಅವು ನನ್ನ ಜನ್ರಾದ ಇಸ್ರಾಯೇಲ್ಯರಿಗೋಸ್ಕರ ತುಂಬ ಹಣ್ಣುಗಳನ್ನ ಕೊಡುತ್ತೆ.+ ಯಾಕಂದ್ರೆ ಅವರು ಬೇಗ ವಾಪಸ್ ಬರ್ತಾರೆ. 9 ನಾನು ನಿಮ್ಮ ಜೊತೆ ಇದ್ದೀನಿ ಮತ್ತು ನಾನು ನಿಮ್ಮ ಕಡೆ ಗಮನ ಕೊಡ್ತೀನಿ. ನಿಮ್ಮ ಮೇಲೆ ವ್ಯವಸಾಯ ಮಾಡಲಾಗುತ್ತೆ, ಬೀಜ ಬಿತ್ತಲಾಗುತ್ತೆ. 10 ನಾನು ನಿಮ್ಮ ಜನ್ರ ಅಂದ್ರೆ ಇಸ್ರಾಯೇಲ್ಯರ ಸಂಖ್ಯೆಯನ್ನ ಜಾಸ್ತಿ ಮಾಡ್ತೀನಿ. ಪಟ್ಟಣಗಳಲ್ಲಿ ಮತ್ತೆ ಜನ ವಾಸಿಸ್ತಾರೆ,+ ಹಾಳುಬಿದ್ದಿದ್ದನ್ನ ಮತ್ತೆ ಕಟ್ಟಲಾಗುತ್ತೆ.+ 11 ನಾನು ನಿಜವಾಗ್ಲೂ ನಿಮ್ಮ ಜನ್ರ ಸಂಖ್ಯೆಯನ್ನ ತುಂಬ ಹೆಚ್ಚಿಸ್ತೀನಿ. ಅವ್ರಿಗೆ ಮಕ್ಕಳಾಗಿ ಸಂಖ್ಯೆಯಲ್ಲಿ ಜಾಸ್ತಿ ಆಗ್ತಾ ಹೋಗ್ತಾರೆ. ಅವ್ರ ಪ್ರಾಣಿಗಳ ಸಂಖ್ಯೆಯನ್ನೂ ಜಾಸ್ತಿ ಮಾಡ್ತೀನಿ.+ ಮೊದಲಿದ್ದ ಹಾಗೆ ನಿಮ್ಮಲ್ಲಿ ಜನ ವಾಸಿಸೋ ತರ ಮಾಡ್ತೀನಿ.+ ನೀವು ಮೊದಲಿಗಿಂತ ಜಾಸ್ತಿ ಅಭಿವೃದ್ಧಿ ಆಗೋ ಹಾಗೆ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 12 ನನ್ನ ಜನ್ರಾದ ಇಸ್ರಾಯೇಲ್ಯರು ನಿಮ್ಮ ಮೇಲೆ ನಡಿಯೋ ತರ ಮಾಡ್ತೀನಿ. ಅವರು ನಿಮ್ಮನ್ನ ವಶ ಮಾಡ್ಕೊಳ್ತಾರೆ,+ ನೀವು ಅವ್ರ ಆಸ್ತಿ ಆಗ್ತೀರ. ನೀವು ಇನ್ಯಾವತ್ತೂ ಅವ್ರನ್ನ ಮಕ್ಕಳಿಲ್ಲದವ್ರ ತರ ಮಾಡಲ್ಲ.’”+
13 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಅವರು ನಿನ್ನ ಬಗ್ಗೆ, “ನೀನು ಜನ್ರನ್ನ ಕೊಲ್ಲೋ ದೇಶ, ನಿನ್ನಲ್ಲಿರೋ ಜನಾಂಗಗಳ ಮಕ್ಕಳನ್ನ ಕಿತ್ತುಕೊಳ್ಳೋ ದೇಶ” ಅಂತ ಹೇಳ್ತಿದ್ದಾರೆ.’ 14 ‘ಹಾಗಾಗಿ ನೀನು ಇನ್ಮುಂದೆ ಜನ್ರನ್ನ ಕೊಲ್ಲಲ್ಲ, ನಿನ್ನಲ್ಲಿರೋ ಜನಾಂಗಗಳ ಜನ್ರನ್ನ ಮಕ್ಕಳಿಲ್ಲದ ಹಾಗೆ ಮಾಡಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 15 ‘ಇನ್ಮುಂದೆ ಬೇರೆ ಜನಾಂಗಗಳು ನಿನ್ನನ್ನ ಅವಮಾನ ಮಾಡೋಕೆ ಅಥವಾ ಜನ ನಿನ್ನನ್ನ ಹಂಗಿಸೋಕೆ ನಾನು ಬಿಡಲ್ಲ.+ ನೀನು ಇನ್ಮುಂದೆ ನಿನ್ನಲ್ಲಿರೋ ಜನಾಂಗಗಳ ಮೇಲೆ ಕಷ್ಟ ತರಲ್ಲ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
16 ಯೆಹೋವ ಮತ್ತೆ ನನಗೆ ಹೀಗಂದನು: 17 “ಮನುಷ್ಯಕುಮಾರನೇ, ಇಸ್ರಾಯೇಲ್ಯರು ತಮ್ಮ ದೇಶದಲ್ಲಿ ಇದ್ದಾಗ ತಮ್ಮ ನಡತೆಯಿಂದ ಆ ದೇಶವನ್ನ ಅಶುದ್ಧ ಮಾಡಿದ್ರು.+ ನನ್ನ ದೃಷ್ಟಿಯಲ್ಲಿ ಅವ್ರ ನಡತೆ ಮುಟ್ಟಿನಿಂದಾಗೋ ಅಶುದ್ಧತೆ ತರ ಇತ್ತು.+ 18 ಅವರು ದೇಶದಲ್ಲಿ ರಕ್ತ ಸುರಿಸಿದ್ರಿಂದ ಮತ್ತು ತಮ್ಮ ಅಸಹ್ಯ* ಮೂರ್ತಿಗಳನ್ನ ಆರಾಧಿಸಿ+ ದೇಶವನ್ನ ಅಶುದ್ಧ ಮಾಡಿದ್ರಿಂದ ನಾನು ನನ್ನ ಕ್ರೋಧವನ್ನ ಅವ್ರ ಮೇಲೆ ಸುರಿದೆ.+ 19 ಹಾಗಾಗಿ ನಾನು ಅವ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡ್ದೆ, ದೇಶ ದೇಶಗಳಿಗೆ ಓಡಿಸಿಬಿಟ್ಟೆ.+ ಅವ್ರ ನಡತೆಗೆ ತಕ್ಕ ಹಾಗೆ ಅವ್ರಿಗೆ ನ್ಯಾಯತೀರಿಸಿದೆ. 20 ಆದ್ರೆ ಅವರು ಆ ಜನಾಂಗಗಳ ಮಧ್ಯ ಇದ್ದಾಗ ಅಲ್ಲಿನ ಜನ್ರು ‘ಇವರು ಯೆಹೋವನ ಜನ್ರು. ಈಗ ನೋಡಿ, ಆತನ ದೇಶವನ್ನ ಬಿಟ್ಟು ಬರಬೇಕಾದ ಪರಿಸ್ಥಿತಿ ಬಂದಿದೆ’ ಅಂತ ಹೇಳಿ ನನ್ನ ಪವಿತ್ರ ಹೆಸ್ರಿಗೆ ಅವಮಾನ ಮಾಡಿದ್ರು.+ 21 ಹಾಗಾಗಿ ಇಸ್ರಾಯೇಲ್ಯರು ತಾವು ಹೋಗಿರೋ ಜನಾಂಗಗಳ ಮುಂದೆ ಯಾವ ಹೆಸ್ರಿಗೆ ಅವಮಾನ ಮಾಡಿದ್ರೋ ಆ ನನ್ನ ಪವಿತ್ರ ಹೆಸ್ರಿನ ಬಗ್ಗೆ ನನಗೆಷ್ಟು ಚಿಂತೆಯಿದೆ ಅಂತ ನಾನು ತೋರಿಸ್ತೀನಿ.”+
22 “ಹಾಗಾಗಿ ನೀನು ಇಸ್ರಾಯೇಲ್ಯರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲ್ಯರೇ, ನಾನು ನಿಮಗೋಸ್ಕರ ಹೆಜ್ಜೆ ತಗೋಳ್ತಿಲ್ಲ. ನೀವು ಹೋಗಿರೋ ಜನಾಂಗಗಳ ಮುಂದೆ ಅವಮಾನ ಮಾಡಿದ ನನ್ನ ಪವಿತ್ರ ಹೆಸ್ರಿಗೋಸ್ಕರ ಹೆಜ್ಜೆ ತಗೋಳ್ತಾ ಇದ್ದೀನಿ.”’+ 23 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಜನಾಂಗಗಳ ಮಧ್ಯ ಅಪವಿತ್ರವಾದ ಅಂದ್ರೆ ನೀವು ಅಪವಿತ್ರ ಮಾಡಿದ ನನ್ನ ಮಹಾ ಹೆಸ್ರನ್ನ ನಾನು ಪವಿತ್ರ ಮಾಡೇ ಮಾಡ್ತೀನಿ.+ ಆಗ, ನಾನೇ ಯೆಹೋವ ಅಂತ ಆ ಜನಾಂಗಗಳಿಗೆ ಗೊತ್ತಾಗುತ್ತೆ.+ ನಾನು ನಿಮಗೆ ಏನು ಮಾಡ್ತೀನೋ ಅದ್ರಿಂದ ನಾನು ಪವಿತ್ರ ದೇವರು ಅಂತ ಆ ಜನಾಂಗಗಳಿಗೆ ತೋರಿಸ್ತೀನಿ. 24 ನಾನು ನಿಮ್ಮನ್ನ ಬೇರೆ ಜನಾಂಗಗಳಿಂದ, ಬೇರೆಲ್ಲ ದೇಶಗಳಿಂದ ಒಟ್ಟುಸೇರಿಸಿ ನಿಮ್ಮ ದೇಶಕ್ಕೆ ಕರ್ಕೊಂಡು ಬರ್ತಿನಿ.+ 25 ಶುದ್ಧ ನೀರನ್ನ ನಿಮ್ಮ ಮೇಲೆ ಚಿಮಿಕಿಸ್ತೀನಿ, ಆಗ ನೀವು ಶುದ್ಧ ಆಗ್ತೀರ.+ ನಿಮ್ಮ ಎಲ್ಲ ಅಶುದ್ಧತೆಯನ್ನೂ ನಿಮ್ಮ ಎಲ್ಲ ಅಸಹ್ಯ ಮೂರ್ತಿಗಳನ್ನೂ ತೆಗೆದು+ ನಿಮ್ಮನ್ನ ಶುದ್ಧಮಾಡ್ತೀನಿ.+ 26 ನಾನು ನಿಮ್ಮ ಹೃದಯದಲ್ಲಿ ಬದಲಾವಣೆ ಮಾಡ್ತೀನಿ.+ ನೀವು ಯೋಚಿಸೋ ರೀತಿಯನ್ನ ಬದಲಾಯಿಸ್ತೀನಿ.+ ನಾನು ನಿಮ್ಮೊಳಗಿರೋ ಕಲ್ಲುಹೃದಯ ತೆಗೆದುಹಾಕಿ+ ಮೃದು ಹೃದಯ* ಇಡ್ತೀನಿ. 27 ನಾನು ನನ್ನ ಪವಿತ್ರಶಕ್ತಿಯಿಂದ ನೀವು ಆಲೋಚಿಸೋ ರೀತಿಯನ್ನ ಬದಲಾಯಿಸ್ತೀನಿ. ನೀವು ನನ್ನ ನಿಯಮಗಳನ್ನ ಪಾಲಿಸಿ ನಡಿಯೋ ಹಾಗೆ ಮಾಡ್ತೀನಿ.+ ಆಗ ನೀವು ನನ್ನ ತೀರ್ಪುಗಳನ್ನ ಕೇಳಿ ಅದ್ರ ಪ್ರಕಾರ ನಡಿತೀರ. 28 ನಾನು ನಿಮ್ಮ ಪೂರ್ವಜರಿಗೆ ಕೊಟ್ಟ ದೇಶದಲ್ಲಿ ನೀವು ವಾಸಿಸ್ತೀರ. ನೀವು ನನ್ನ ಜನ್ರಾಗಿ ಇರ್ತಿರ ಮತ್ತು ನಾನು ನಿಮ್ಮ ದೇವರಾಗಿ ಇರ್ತಿನಿ.’+
29 ‘ನಾನು ನಿಮ್ಮ ಎಲ್ಲ ಅಶುದ್ಧತೆಯನ್ನ ತೊಲಗಿಸಿ ನಿಮ್ಮನ್ನ ರಕ್ಷಿಸ್ತೀನಿ. ಧಾನ್ಯಕ್ಕೆ ಸಮೃದ್ಧ ಬೆಳೆ ಕೊಡು ಅಂತ ಹೇಳ್ತೀನಿ. ನಾನು ನಿಮ್ಮ ದೇಶಕ್ಕೆ ಬರಗಾಲ ತರಲ್ಲ.+ 30 ಮರಗಳು ಜಾಸ್ತಿ ಹಣ್ಣು ಕೊಡೋ ಹಾಗೆ, ಹೊಲಗಳು ಭರ್ಜರಿ ಫಸಲು ಕೊಡೋ ಹಾಗೆ ಮಾಡ್ತೀನಿ. ಆಗ ನೀವು ಮತ್ತೆ ಯಾವತ್ತೂ ಬರಗಾಲದಿಂದ ನರಳಿ ಜನಾಂಗಗಳ ಮಧ್ಯ ಅವಮಾನ ಪಡಲ್ಲ.+ 31 ಆಗ ನೀವು ನಿಮ್ಮ ಕೆಟ್ಟ ನಡತೆಯನ್ನ, ಕೆಟ್ಟ ಕೆಲಸಗಳನ್ನ ನೆನಪಿಸ್ಕೊಳ್ತೀರ. ನೀವು ಮಾಡಿದ ಪಾಪಗಳನ್ನೂ ಅಸಹ್ಯ ಕೆಲಸಗಳನ್ನೂ ನೆನಸಿ ನಿಮ್ಮ ಬಗ್ಗೆ ನಿಮಗೇ ಅಸಹ್ಯ ಆಗುತ್ತೆ.+ 32 ಆದ್ರೆ ಇಸ್ರಾಯೇಲ್ಯರೇ, ನಾನು ಇದನ್ನೆಲ್ಲ ನಿಮಗೋಸ್ಕರ ಮಾಡ್ತಿಲ್ಲ+ ಅಂತ ನೆನಪಿಟ್ಕೊಳ್ಳಿ. ನೀವು ಮಾಡಿರೋ ಕೆಲಸಕ್ಕೆ ನಾಚಿಕೆಪಡಿ, ತಲೆತಗ್ಗಿಸಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
33 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಿಮ್ಮ ಎಲ್ಲ ಪಾಪಗಳನ್ನ ನಾನು ತೊಲಗಿಸಿ ನಿಮ್ಮನ್ನ ಶುದ್ಧ ಮಾಡೋ ದಿನ ಪಟ್ಟಣಗಳಲ್ಲಿ ಜನ್ರು ವಾಸಿಸೋ ಹಾಗೆ ಮಾಡ್ತೀನಿ,+ ಹಾಳಾಗಿ ಬಿದ್ದಿರೋದನ್ನ ಮತ್ತೆ ಕಟ್ಟೋ ಹಾಗೆ ಮಾಡ್ತೀನಿ.+ 34 ಹೋಗಿ ಬರುವವ್ರ ಕಣ್ಮುಂದೆ ಹಾಳುಬಿದ್ದಿದ್ದ ದೇಶದಲ್ಲಿ ವ್ಯವಸಾಯ ಮಾಡಲಾಗುತ್ತೆ. 35 ಆಗ ಜನ “ಹಾಳುಬಿದ್ದಿದ್ದ ದೇಶ ಈಗ ಏದೆನ್ ತೋಟದ+ ತರ ಕಂಗೊಳಿಸ್ತಿದೆ. ಜನ್ರೇ ಇಲ್ಲದೆ ಹಾಳಾಗಿ ಕೆಡವಿ ಹಾಕಲಾಗಿದ್ದ ಪಟ್ಟಣಗಳಿಗೆ ಈಗ ಭದ್ರ ಕೋಟೆಗಳನ್ನ ಕಟ್ಟಲಾಗಿದೆ. ಜನ ಅಲ್ಲಿ ವಾಸಿಸ್ತಿದ್ದಾರೆ”+ ಅಂತ ಹೇಳ್ತಾರೆ. 36 ಕೆಡವಿ ಹಾಕಿದ್ದನ್ನ ಯೆಹೋವನಾದ ನಾನೇ ಮತ್ತೆ ಕಟ್ಟಿದ್ದೀನಿ, ಹಾಳುಬಿದ್ದ ದೇಶ ಹಚ್ಚಹಸಿರಾಗೋ ತರ ಮಾಡಿದ್ದೀನಿ ಅಂತ ನಿಮ್ಮ ಅಕ್ಕಪಕ್ಕದ ಜನಾಂಗಗಳಿಗೆ ಗೊತ್ತಾಗುತ್ತೆ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ ಮತ್ತು ನಿಜ ಮಾಡಿದ್ದೀನಿ.’+
37 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನನ್ನ ಹತ್ರ ಇಸ್ರಾಯೇಲ್ಯರು ತಮ್ಮ ಸಂಖ್ಯೆಯನ್ನ ಕುರಿಗಳ ಹಾಗೆ ಹೆಚ್ಚಿಸು ಅಂತ ಕೇಳ್ಕೊಳ್ಳೋಕೆ ಬಿಡ್ತೀನಿ ಮತ್ತು ಅವ್ರ ಕೋರಿಕೆಯನ್ನ ನಾನು ನೆರವೇರಿಸ್ತೀನಿ. 38 ಹಾಳುಬಿದ್ದಿದ್ದ ಪಟ್ಟಣಗಳು ಜನ್ರಿಂದ ತುಂಬುತ್ತೆ. ಪವಿತ್ರ ಜನ್ರ ಗುಂಪಿನ ಹಾಗೆ, ಹಬ್ಬಗಳ ಸಮಯದಲ್ಲಿ+ ಯೆರೂಸಲೇಮಲ್ಲಿ ಹಿಂಡುಹಿಂಡಾಗಿ ತುಂಬೋ ಕುರಿಗಳ ಹಾಗೆ* ಅಲ್ಲಿ ಜನ ತುಂಬಿರ್ತಾರೆ.+ ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”
37 ಯೆಹೋವನ ಪವಿತ್ರಶಕ್ತಿ* ನನ್ನ ಮೇಲಿತ್ತು. ಯೆಹೋವ ತನ್ನ ಪವಿತ್ರಶಕ್ತಿಯಿಂದ ನನ್ನನ್ನ ಎತ್ಕೊಂಡು ಹೋಗಿ ಕಣಿವೆ ಬಯಲಿನ ಮಧ್ಯ ಇಟ್ಟ.+ ಅಲ್ಲಿ ಬರೀ ಮೂಳೆಗಳು ತುಂಬಿದ್ವು. 2 ಆತನು ನನ್ನನ್ನ ಆ ಮೂಳೆಗಳ ಮಧ್ಯ ತಿರುಗಾಡಿಸಿದನು. ಆ ಕಣಿವೆ ಬಯಲಲ್ಲಿ ಲೆಕ್ಕ ಇಲ್ಲದಷ್ಟು ಮೂಳೆಗಳು ಬಿದ್ದಿರೋದನ್ನ ನೋಡ್ದೆ. ಅವು ತುಂಬ ಒಣಗಿಹೋಗಿದ್ವು.+ 3 ಆತನು ನನಗೆ “ಮನುಷ್ಯಕುಮಾರನೇ, ಈ ಮೂಳೆಗಳಿಗೆ ಜೀವ ಬರೋಕೆ ಸಾಧ್ಯನಾ?” ಅಂತ ಕೇಳಿದನು. ಅದಕ್ಕೆ ನಾನು “ವಿಶ್ವದ ರಾಜ ಯೆಹೋವನೇ, ಅದು ನಿನಗೇ ಗೊತ್ತು”+ ಅಂದೆ. 4 ಅದಕ್ಕೆ ಆತನು “ನೀನು ಈ ಮೂಳೆಗಳ ಬಗ್ಗೆ ಭವಿಷ್ಯ ಹೇಳು. ಅವಕ್ಕೆ ನೀನು ಏನು ಹೇಳಬೇಕಂದ್ರೆ ‘ಒಣಗಿ ಹೋಗಿರೋ ಮೂಳೆಗಳೇ, ಯೆಹೋವನ ಈ ಮಾತನ್ನ ಕೇಳಿಸಿಕೊಳ್ಳಿ:
5 ವಿಶ್ವದ ರಾಜ ಯೆಹೋವ ನಿಮಗೆ ಹೀಗಂತಾನೆ: “ನಿಮ್ಮೊಳಗೆ ಉಸಿರು ಸೇರೋ ಹಾಗೆ ಮಾಡ್ತೀನಿ. ಆಗ ನಿಮಗೆ ಜೀವ ಬರುತ್ತೆ.+ 6 ನಾನು ನಿಮ್ಮ ಮೇಲೆ ಸ್ನಾಯುಗಳನ್ನ ಇಟ್ಟು, ಮಾಂಸದಿಂದ ಮುಚ್ಚಿ, ಅದ್ರ ಮೇಲೆ ಚರ್ಮ ಹೊದಿಸ್ತೀನಿ. ಆಮೇಲೆ ಉಸಿರು ಕೊಡ್ತೀನಿ. ನಿಮಗೆ ಜೀವ ಬರುತ್ತೆ. ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’”
7 ಆತನು ಆಜ್ಞೆ ಕೊಟ್ಟ ತರಾನೇ ನಾನು ಭವಿಷ್ಯ ಹೇಳಿದೆ. ತಕ್ಷಣ ಟಕಟಕ ಅನ್ನೋ ಶಬ್ದ ಕೇಳಿಸ್ತು. ಮೂಳೆಗಳು ಒಂದ್ರ ಹತ್ರ ಒಂದು ಬಂದು ಕೂಡಿಕೊಳ್ಳೋಕೆ ಶುರು ಆಯ್ತು. 8 ಆಮೇಲೆ ಸ್ನಾಯುಗಳು ಮತ್ತು ಮಾಂಸ ಬಂದು ಮುಚ್ಕೊಂಡಿತು. ಅದ್ರ ಮೇಲೆ ಚರ್ಮದ ಹೊದಿಕೆ ಬಂತು. ಆದ್ರೆ ಅದ್ರಲ್ಲಿ ಇನ್ನೂ ಉಸಿರು ಇರಲಿಲ್ಲ.
9 ಆಮೇಲೆ ಆತನು ನನಗೆ “ನೀನು ಗಾಳಿಗೆ ಭವಿಷ್ಯ ಹೇಳು. ಮನುಷ್ಯಕುಮಾರನೇ, ನೀನು ಗಾಳಿಗೆ ಭವಿಷ್ಯ ಹೇಳ್ತಾ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಗಾಳಿಯೇ,* ನೀನು ನಾಲ್ಕು ದಿಕ್ಕುಗಳಿಂದ ಬಾ. ಸತ್ತ ಈ ಜನ್ರ ಮೇಲೆ ಬೀಸು, ಅವರು ಬದುಕ್ಲಿ”’” ಅಂದನು.
10 ಆತನು ಆಜ್ಞೆ ಕೊಟ್ಟ ತರಾನೇ ನಾನು ಭವಿಷ್ಯ ಹೇಳ್ದೆ. ಆಗ ಅವರೊಳಗೆ ಉಸಿರು ಸೇರಿತು. ಅವ್ರಿಗೆ ಜೀವ ಬಂದು ನಿಂತ್ಕೊಂಡ್ರು.+ ಅವರು ಅತಿ ದೊಡ್ಡ ಸೈನ್ಯವಾದ್ರು.
11 ಆಮೇಲೆ ಆತನು ನನಗೆ ಹೀಗಂದನು: “ಮನುಷ್ಯಕುಮಾರನೇ, ಈ ಮೂಳೆಗಳು ಎಲ್ಲ ಇಸ್ರಾಯೇಲ್ಯರನ್ನ ಸೂಚಿಸುತ್ತೆ.+ ಅವರು ‘ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ.+ ಎಲ್ರಿಂದ ನಮ್ಮನ್ನ ದೂರ ಮಾಡಲಾಗಿದೆ’ ಅಂತ ಹೇಳ್ತಿದ್ದಾರೆ. 12 ಹಾಗಾಗಿ ನೀನು ಅವ್ರಿಗೆ ಏನು ಭವಿಷ್ಯ ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನನ್ನ ಜನ್ರೇ, ನಾನು ನಿಮ್ಮ ಸಮಾಧಿಗಳನ್ನ ತೆಗೆದು+ ನಿಮ್ಮನ್ನ ಎಬ್ಬಿಸ್ತೀನಿ. ನಿಮ್ಮನ್ನ ಇಸ್ರಾಯೇಲ್ ದೇಶಕ್ಕೆ ಕರ್ಕೊಂಡು ಬರ್ತಿನಿ.+ 13 ನನ್ನ ಜನರೇ, ನಾನು ನಿಮ್ಮ ಸಮಾಧಿಗಳನ್ನ ತೆಗೆದು ಅಲ್ಲಿಂದ ನಿಮ್ಮನ್ನ ಎಬ್ಬಿಸುವಾಗ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.”’+ 14 ಯೆಹೋವ ಹೇಳೋದು ಏನಂದ್ರೆ ‘ನಾನು ನನ್ನ ಪವಿತ್ರಶಕ್ತಿಯನ್ನ ನಿಮಗೆ ಕೊಡ್ತೀನಿ. ನಿಮಗೆ ಜೀವ ಬರುತ್ತೆ.+ ನಾನು ನಿಮ್ಮನ್ನ ನಿಮ್ಮ ದೇಶದಲ್ಲಿ ಸ್ಥಿರ ಮಾಡ್ತೀನಿ. ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ, ನಾನೇ ಇದನ್ನ ನಿಜ ಮಾಡಿದ್ದೀನಿ ಅಂತ ನಿಮಗೆ ಗೊತ್ತಾಗುತ್ತೆ.’”
15 ಯೆಹೋವ ಮತ್ತೆ ನನಗೆ ಹೀಗಂದನು: 16 “ಮನುಷ್ಯಕುಮಾರನೇ, ನೀನು ಒಂದು ಕೋಲನ್ನ ತಗೊಂಡು ಅದ್ರ ಮೇಲೆ ‘ಯೆಹೂದನದ್ದು ಮತ್ತು ಅವನ ಜೊತೆ ಇರೋ ಇಸ್ರಾಯೇಲ್ ಜನ್ರದ್ದು’+ ಅಂತ ಬರಿ. ಆಮೇಲೆ ಇನ್ನೊಂದು ಕೋಲು ತಗೊಂಡು ಅದ್ರ ಮೇಲೆ ‘ಎಫ್ರಾಯೀಮನ ಕೋಲು ಅಂದ್ರೆ ಯೋಸೇಫನದ್ದು ಮತ್ತು ಅವನ ಜೊತೆ ಇರೋ ಎಲ್ಲ ಇಸ್ರಾಯೇಲ್ ಜನ್ರದ್ದು’+ ಅಂತ ಬರಿ. 17 ಆಮೇಲೆ ಆ ಎರಡೂ ಕೋಲುಗಳು ಒಂದಾಗೋ ಹಾಗೆ ಅವನ್ನ ಒಟ್ಟಿಗೆ ಸೇರಿಸಿ ಹಿಡಿ.+ 18 ನಿನ್ನ ಜನ್ರು ನಿನಗೆ ‘ಇದ್ರ ಅರ್ಥ ಏನಂತ ನಮಗೆ ಹೇಳು’ ಅಂತ ಕೇಳಿದಾಗ 19 ಅವ್ರಿಗೆ, ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಎಫ್ರಾಯೀಮನ ಕೈಯಲ್ಲಿರೋ ಯೋಸೇಫನ ಕೋಲನ್ನ ತಗೊಳ್ತೀನಿ. ಈ ಕೋಲು ಎಫ್ರಾಯೀಮನ ಜೊತೆ ಇರೋ ಇಸ್ರಾಯೇಲ್ ಕುಲಗಳನ್ನೂ ಸೂಚಿಸುತ್ತೆ. ನಾನು ಈ ಕೋಲನ್ನ ಯೆಹೂದನ ಕೋಲಿಗೆ ಸೇರಿಸ್ತೀನಿ. ಆ ಎರಡೂ ಕೋಲುಗಳನ್ನ ಒಂದೇ ಕೋಲಾಗಿ ಮಾಡ್ತೀನಿ.+ ಅವೆರಡು ನನ್ನ ಕೈಯಲ್ಲಿ ಒಂದೇ ಕೋಲಾಗುತ್ತೆ”’ ಅಂತ ಹೇಳು. 20 ನೀನು ಹೆಸ್ರುಗಳನ್ನ ಬರೆದಿರೋ ಕೋಲುಗಳು ಅವ್ರಿಗೆ ಕಾಣೋ ಹಾಗೆ ಅವನ್ನ ನಿನ್ನ ಕೈಯಲ್ಲಿ ಹಿಡ್ಕೊಬೇಕು.
21 ನೀನು ಅವ್ರಿಗೆ ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ನಾನು ಇಸ್ರಾಯೇಲ್ಯರನ್ನ ಅವರು ಚೆಲ್ಲಾಪಿಲ್ಲಿ ಆಗಿರೋ ಜನಾಂಗಗಳಿಂದ, ಎಲ್ಲ ದಿಕ್ಕಿಂದ ಒಟ್ಟುಸೇರಿಸಿ ಅವ್ರ ದೇಶಕ್ಕೆ ಕರ್ಕೊಂಡು ಬರ್ತಿನಿ.+ 22 ನಾನು ಅವ್ರನ್ನ ಅವ್ರ ದೇಶದಲ್ಲಿ, ಇಸ್ರಾಯೇಲಿನ ಬೆಟ್ಟಗಳ ಮೇಲೆ ಒಂದೇ ಜನಾಂಗವಾಗಿ ಮಾಡ್ತೀನಿ.+ ಅವ್ರೆಲ್ಲರನ್ನ ಒಬ್ಬನೇ ರಾಜ ಆಳ್ತಾನೆ.+ ಅದಾದ ಮೇಲೆ ಅವರು ಎರಡು ಜನಾಂಗಗಳಾಗಿ ಇರಲ್ಲ, ಎರಡು ರಾಜ್ಯಗಳಾಗಿ ಭಾಗ ಆಗಿರಲ್ಲ.+ 23 ಅವರು ಮುಂದೆ ಯಾವತ್ತೂ ತಮ್ಮ ಹೊಲಸು ಮೂರ್ತಿಗಳಿಂದ,* ಅಸಹ್ಯ ಕೆಲಸಗಳಿಂದ, ಎಲ್ಲ ಅಪರಾಧಗಳಿಂದ ತಮ್ಮನ್ನ ಅಶುದ್ಧ ಮಾಡ್ಕೊಳ್ಳಲ್ಲ.+ ಅವರು ನಂಬಿಕೆ ದ್ರೋಹ ಮಾಡಿ ಯಾವೆಲ್ಲ ಪಾಪಗಳನ್ನ ಮಾಡಿದ್ರೋ ಅವನ್ನ ಅವ್ರಿಂದ ತೊಲಗಿಸಿ ಅವ್ರನ್ನ ಶುದ್ಧ ಮಾಡ್ತೀನಿ. ಅವರು ನನ್ನ ಜನ್ರಾಗಿ ಇರ್ತಾರೆ, ನಾನೇ ಅವ್ರ ದೇವರಾಗಿ ಇರ್ತಿನಿ.+
24 ನನ್ನ ಸೇವಕ ದಾವೀದ ಅವರ ರಾಜನಾಗಿ ಇರ್ತಾನೆ.+ ಅವ್ರಿಗೆಲ್ಲ ಒಬ್ಬನೇ ಕುರುಬ ಇರ್ತಾನೆ.+ ಅವರು ನನ್ನ ತೀರ್ಪುಗಳ ಪ್ರಕಾರ ನಡೀತಾರೆ, ನನ್ನ ನಿಯಮಗಳನ್ನ ಚಾಚೂತಪ್ಪದೆ ಪಾಲಿಸ್ತಾರೆ.+ 25 ನನ್ನ ಸೇವಕ ಯಾಕೋಬನಿಗೆ ನಾನು ಕೊಟ್ಟ ದೇಶದಲ್ಲಿ ಅಂದ್ರೆ ನಿಮ್ಮ ಪೂರ್ವಜರು ವಾಸಿಸಿದ ದೇಶದಲ್ಲಿ ಅವರು ವಾಸಿಸ್ತಾರೆ.+ ಅವರೂ ಅವ್ರ ಮಕ್ಕಳೂ ಮೊಮ್ಮಕ್ಕಳೂ+ ಶಾಶ್ವತವಾಗಿ ಅಲ್ಲಿ ಇರ್ತಾರೆ.+ ನನ್ನ ಸೇವಕ ದಾವೀದ ಶಾಶ್ವತಕ್ಕೂ ಅವ್ರ ಪ್ರಧಾನನಾಗಿ ಇರ್ತಾನೆ.*+
26 ನಾನು ಅವ್ರ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ.+ ಅದು ಅವ್ರ ಜೊತೆ ನಾನು ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ. ಅವರು ತಮ್ಮ ದೇಶದಲ್ಲಿ ವಾಸಿಸೋ ಹಾಗೆ ಮತ್ತು ಅವ್ರ ಸಂಖ್ಯೆ ಜಾಸ್ತಿ ಆಗೋ ಹಾಗೆ ಮಾಡ್ತೀನಿ.+ ನನ್ನ ಆರಾಧನಾ ಸ್ಥಳ ಯಾವಾಗ್ಲೂ ಅವ್ರ ಮಧ್ಯ ಇರೋ ತರ ಮಾಡ್ತೀನಿ. 27 ನನ್ನ ಡೇರೆ* ಅವ್ರ ಮಧ್ಯ* ಇರುತ್ತೆ. ನಾನು ಅವ್ರ ದೇವರಾಗಿ ಇರ್ತಿನಿ, ಅವರು ನನ್ನ ಜನ್ರಾಗಿ ಇರ್ತಾರೆ.+ 28 ನನ್ನ ಆರಾಧನಾ ಸ್ಥಳ ಇಸ್ರಾಯೇಲ್ಯರ ಮಧ್ಯ ಶಾಶ್ವತಕ್ಕೂ ಇರುವಾಗ ಯೆಹೋವನಾದ ನಾನೇ ಅವ್ರನ್ನ ಪವಿತ್ರ ಜನ್ರಾಗಿ ಆರಿಸ್ಕೊಂಡಿದ್ದೀನಿ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ.”’”+
38 ಯೆಹೋವ ಮತ್ತೆ ನನಗೆ ಹೀಗಂದನು: 2 “ಮನುಷ್ಯಕುಮಾರನೇ, ನೀನು ಮಾಗೋಗ್ ದೇಶದ ಗೋಗನ+ ಕಡೆ ಅಂದ್ರೆ ಮೇಷೆಕ್ ಮತ್ತು ತೂಬಲಿನ+ ಮುಖ್ಯ ಪ್ರಧಾನನ* ಕಡೆ ಮುಖಮಾಡಿ ಅವನ ವಿರುದ್ಧ ಭವಿಷ್ಯ ಹೇಳು.+ 3 ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಮೇಷೆಕ್ ಮತ್ತು ತೂಬಲಿನ ಮುಖ್ಯ ಪ್ರಧಾನನಾದ* ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. 4 ನಾನು ನಿನ್ನನ್ನ ಬೇರೆ ದಿಕ್ಕಿಗೆ ತಿರುಗಿಸ್ತೀನಿ, ನಿನ್ನ ದವಡೆಗೆ ಕೊಕ್ಕೆಗಳನ್ನ ಹಾಕಿ+ ನಿನ್ನನ್ನ, ನಿನ್ನ ಇಡೀ ಸೈನ್ಯ+ ಮತ್ತು ಕುದುರೆಗಳನ್ನ ಹೊರಗೆ ಎಳಿತೀನಿ. ಅಷ್ಟೇ ಅಲ್ಲ ವೈಭವದ ಬಟ್ಟೆ ಹಾಕೊಂಡು ದೊಡ್ಡ ಗುರಾಣಿ, ಚಿಕ್ಕ ಗುರಾಣಿ,* ಕತ್ತಿ ಹಿಡಿದಿರೋ ಎಲ್ಲ ಕುದುರೆ ಸವಾರರ ದೊಡ್ಡ ಗುಂಪನ್ನ ಹೊರಗೆ ಎಳಿತೀನಿ. 5 ಅವ್ರ ಜೊತೆ ಪರ್ಶಿಯನ್ನರು, ಇಥಿಯೋಪ್ಯದವರು, ಪೂಟ್ಯರು+ ಇದ್ದಾರೆ. ಅವ್ರೆಲ್ಲ ಚಿಕ್ಕ ಗುರಾಣಿ ಹಿಡಿದಿದ್ದಾರೆ, ಶಿರಸ್ತ್ರಾಣ ಹಾಕೊಂಡಿದ್ದಾರೆ. 6 ನಿನ್ನ ಜೊತೆ ತುಂಬ ಜನಾಂಗಗಳು ಅಂದ್ರೆ ಗೋಮೆರ್ ಮತ್ತು ಅದ್ರ ಎಲ್ಲ ಸೈನ್ಯಗಳು, ಉತ್ತರದಲ್ಲಿ ತುಂಬ ದೂರದಲ್ಲಿರೋ ತೋಗರ್ಮನ+ ವಂಶದವರು ಮತ್ತು ಅವ್ರ ಎಲ್ಲ ಸೈನ್ಯಗಳು ಇವೆ.+
7 ನೀನು ತಯಾರಾಗು. ನೀನೂ ನಿನ್ನ ಜೊತೆ ಸೇರಿಬಂದಿರೋ ಎಲ್ಲ ಸೈನ್ಯಗಳೂ ತಯಾರಾಗಿ. ನೀನು ಅವ್ರೆಲ್ಲರ ನಾಯಕನಾಗಿ ಇರ್ತಿಯ.
8 ತುಂಬ ದಿನಗಳಾದ್ಮೇಲೆ ನಾನು ನಿನಗೆ ಗಮನ ಕೊಡ್ತೀನಿ.* ಕತ್ತಿಯಿಂದ ನಾಶ ಆಗೋದನ್ನ ತಪ್ಪಿಸಿ ಹಿಂದೆ ಕರ್ಕೊಂಡು ಬಂದ ಜನ್ರ ದೇಶದ ಮೇಲೆ ನೀನು ಕೊನೇ ವರ್ಷಗಳಲ್ಲಿ ದಾಳಿ ಮಾಡ್ತೀಯ. ಆ ಜನ್ರನ್ನ ಎಷ್ಟೋ ಜನಾಂಗಗಳಿಂದ ಒಟ್ಟುಸೇರಿಸಿ ತುಂಬಕಾಲದಿಂದ ಹಾಳುಬಿದ್ದಿದ್ದ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕರ್ಕೊಂಡು ಬರಲಾಗಿತ್ತು. ಈ ದೇಶದ ಜನ್ರನ್ನ ಬೇರೆ ದೇಶಗಳಿಂದ ಕರ್ಕೊಂಡು ಬರಲಾಗಿತ್ತು. ಈಗ ಅವ್ರೆಲ್ಲ ಸುರಕ್ಷಿತವಾಗಿ ಇದ್ದಾರೆ.+ 9 ಬಿರುಗಾಳಿ ತರ ನೀನು ಆ ಜನ್ರ ಮೇಲೆ ಬೀಳ್ತಿಯ. ನೀನು, ನಿನ್ನ ಎಲ್ಲ ಸೈನ್ಯಗಳು ಮತ್ತು ನಿನ್ನ ಜೊತೆ ಇರೋ ಎಲ್ಲ ಜನಾಂಗಗಳು ಅವ್ರ ದೇಶವನ್ನ ಮೋಡದ ತರ ಮುಚ್ಚಿಬಿಡ್ತೀರ.”’
10 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಆ ದಿನ ನಿನ್ನ ಹೃದಯದಲ್ಲಿ ಬೇರೆ ಬೇರೆ ಆಲೋಚನೆಗಳು ಬರುತ್ತೆ. ನೀನು ಒಂದು ಕೆಟ್ಟ ಸಂಚು ಮಾಡ್ತಿಯ. 11 ಆಗ “ಗೋಡೆಗಳಿಲ್ಲದ ಹಳ್ಳಿಗಳಿರೋ ದೇಶದ ಮೇಲೆ ನಾನು ದಾಳಿ ಮಾಡ್ತೀನಿ.+ ನೆಮ್ಮದಿಯಿಂದ ಸುರಕ್ಷಿತವಾಗಿ ವಾಸಿಸ್ತಾ ಇರೋರ ಮೇಲೆ ಆಕ್ರಮಣ ಮಾಡ್ತೀನಿ. ಗೋಡೆ, ಕಂಬಿ, ಬಾಗಿಲುಗಳು ಇಲ್ಲದ ಹಳ್ಳಿಗಳಲ್ಲಿ ಅವ್ರೆಲ್ಲ ವಾಸಿಸ್ತಿದ್ದಾರೆ” ಅಂತ ನೀನು ಹೇಳ್ತೀಯ. 12 ತುಂಬ ಕೊಳ್ಳೆ ಹೊಡೀಬೇಕು, ಲೂಟಿ ಮಾಡ್ಬೇಕು, ಒಂದ್ ಕಾಲದಲ್ಲಿ ಹಾಳುಬಿದ್ದು ಈಗ ಜನ ವಾಸಿಸ್ತಿರೋ+ ಜಾಗಗಳ ಮೇಲೆ ದಾಳಿ ಮಾಡಬೇಕು, ಬೇರೆ ಜನಾಂಗಗಳಿಂದ ಒಟ್ಟಾಗಿ ಬಂದು+ ಸಂಪತ್ತನ್ನೂ ಆಸ್ತಿಯನ್ನೂ ಕೂಡಿಸ್ಕೊಳ್ತಿರೋ+ ಮತ್ತು ಭೂಮಿ ಮಧ್ಯ ವಾಸಿಸ್ತಿರೋ ಜನ್ರ ಮೇಲೆ ದಾಳಿ ಮಾಡಬೇಕು ಅಂತ ನೀನು ಯೋಚಿಸ್ತೀಯ.
13 ಶೆಬ+ ಮತ್ತು ದೆದಾನ್+ ಹಾಗೂ ತಾರ್ಷೀಷಿನ+ ವ್ಯಾಪಾರಿಗಳು, ಅದ್ರ ಎಲ್ಲ ವೀರ ಸೈನಿಕರು ನಿನಗೆ “ನೀನು ತುಂಬ ಕೊಳ್ಳೆ ಹೊಡೀಬೇಕಂತ, ಲೂಟಿ ಮಾಡ್ಬೇಕಂತ ಈ ದೇಶದ ಮೇಲೆ ದಾಳಿ ಮಾಡ್ತಿದ್ದೀಯಾ? ಚಿನ್ನಬೆಳ್ಳಿಯನ್ನ ತಗೊಂಡು ಹೋಗೋಕೆ, ಸಂಪತ್ತನ್ನೂ ಆಸ್ತಿಯನ್ನೂ ದೋಚೋಕೆ, ರಾಶಿರಾಶಿ ಕೊಳ್ಳೆ ಬಾಚ್ಕೊಳ್ಳೋಕೆ ನೀನು ನಿನ್ನ ಸೈನ್ಯ ಕಟ್ಕೊಂಡು ಬಂದಿದ್ದೀಯಾ?” ಅಂತ ಕೇಳ್ತಾರೆ.’
14 ಹಾಗಾಗಿ ಮನುಷ್ಯಕುಮಾರನೇ, ಗೋಗನಿಗೆ ಹೀಗೆ ಭವಿಷ್ಯ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನ ಜನ್ರಾದ ಇಸ್ರಾಯೇಲ್ಯರು ಸುರಕ್ಷಿತವಾಗಿ ವಾಸಿಸೋದನ್ನ ನೀನು ನಿಜವಾಗ್ಲೂ ಗಮನಿಸ್ತೀಯ.+ 15 ನೀನು ನಿನ್ನ ಜಾಗದಿಂದ ಅಂದ್ರೆ ಉತ್ತರದ ತುಂಬ ದೂರದ ಜಾಗಗಳಿಂದ ಬರ್ತಿಯ,+ ನಿನ್ನ ಜೊತೆ ತುಂಬ ಜನಾಂಗಗಳು ಇರುತ್ತೆ. ಮಹಾ ಸೈನ್ಯವೂ ದೊಡ್ಡ ಗುಂಪೂ ಆಗಿರೋ ಆ ಜನಾಂಗಗಳು ಕುದುರೆಗಳ ಮೇಲೆ ಸವಾರಿ ಮಾಡ್ತಾ ಬರುತ್ತೆ.+ 16 ಮೋಡಗಳು ದೇಶ ಮುಚ್ಚಿಬಿಡೋ ತರ ನೀನು ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ದಾಳಿ ಮಾಡ್ತೀಯ. ಗೋಗನೇ, ಕೊನೇ ದಿನಗಳಲ್ಲಿ ನನ್ನ ದೇಶದ ಮೇಲೆ ದಾಳಿ ಮಾಡೋಕೆ ನಾನು ನಿನ್ನನ್ನ ಕರ್ಕೊಂಡು ಬರ್ತಿನಿ.+ ನಾನು ನಿನಗೆ ಏನು ಮಾಡ್ತಿನೋ ಅದ್ರ ಮೂಲಕ ನಾನು ಪವಿತ್ರನು ಅಂತ ಜನಾಂಗಗಳಿಗೆ ತೋರಿಸ್ತೀನಿ. ಇದ್ರಿಂದ ನಾನು ಯಾರಂತ ಆ ಜನಾಂಗಗಳಿಗೆ ಗೊತ್ತಾಗುತ್ತೆ.”’+
17 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ತುಂಬ ಹಿಂದೆ ನನ್ನ ಸೇವಕರ ಮೂಲಕ ಅಂದ್ರೆ ಇಸ್ರಾಯೇಲಿನ ಪ್ರವಾದಿಗಳ ಮೂಲಕ ನಿನ್ನ ಬಗ್ಗೆ ಹೇಳಿದ್ನಲ್ಲಾ. ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ನಿನ್ನನ್ನ ಕರ್ಕೊಂಡು ಬರಲಾಗುತ್ತೆ ಅಂತ ಆ ಪ್ರವಾದಿಗಳು ವರ್ಷಗಟ್ಟಲೆ ಭವಿಷ್ಯ ಹೇಳಿದ್ರು.’
18 ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಗೋಗನು ಇಸ್ರಾಯೇಲ್ ದೇಶದ ಮೇಲೆ ದಾಳಿ ಮಾಡೋ ದಿನ ನನ್ನ ರೋಷಾವೇಶ ಭಗ್ಗಂತ ಉರಿಯುತ್ತೆ.+ 19 ನಾನು ಕೋಪದಿಂದ, ರೋಷಾಗ್ನಿಯಿಂದ ಉರೀತಾ ಮಾತಾಡ್ತೀನಿ. ಆ ದಿನ ಇಸ್ರಾಯೇಲ್ ದೇಶದಲ್ಲಿ ಒಂದು ದೊಡ್ಡ ಭೂಕಂಪ ಆಗುತ್ತೆ. 20 ಹಾಗಾಗಿ ಸಮುದ್ರದಲ್ಲಿರೋ ಮೀನುಗಳು, ಪಕ್ಷಿಗಳು, ಕಾಡುಪ್ರಾಣಿಗಳು, ನೆಲದ ಮೇಲೆ ಹರಿದಾಡೋ ಎಲ್ಲ ಸರೀಸೃಪಗಳು ಮತ್ತು ಭೂಮಿ ಮೇಲಿರೋ ಎಲ್ಲ ಮನುಷ್ಯರು ನನ್ನ ಮುಂದೆ ಗಡಗಡ ಅಂತ ನಡುಗ್ತಾರೆ. ಬೆಟ್ಟಗಳು ಕೆಳಗೆ ಉರುಳುತ್ತೆ,+ ಕಡಿದಾದ ಬಂಡೆಗಳು ಬೀಳುತ್ತೆ, ಗೋಡೆಗಳೆಲ್ಲ ನೆಲಸಮ ಆಗುತ್ತೆ.’
21 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಎಲ್ಲ ಬೆಟ್ಟಗಳ ಮೇಲೆ ಗೋಗನ ವಿರುದ್ಧ ನಾನು ಒಂದು ಕತ್ತಿ ಕಳಿಸ್ತೀನಿ. ಆಗ ಸೈನಿಕರೆಲ್ಲ ಒಬ್ರು ಇನ್ನೊಬ್ರ ವಿರುದ್ಧ ಕತ್ತಿ ಎತ್ತುತ್ತಾರೆ.+ 22 ನಾನು ಅವನಿಗೆ ನ್ಯಾಯತೀರಿಸ್ತೀನಿ. ಅವನಿಗೆ ಅಂಟುರೋಗ ಬರೋ ತರ ಮಾಡ್ತೀನಿ,+ ರಕ್ತದ ಕೋಡಿ ಹರಿಸ್ತೀನಿ. ಅವನ ಮೇಲೆ, ಅವನ ಸೈನ್ಯಗಳ ಮೇಲೆ ಮತ್ತು ಅವನ ಜೊತೆ ಇರೋ ಎಷ್ಟೋ ಜನಾಂಗಗಳ ಮೇಲೆ ಧಾರಾಕಾರ ಮಳೆ, ಆಲಿಕಲ್ಲುಗಳು,+ ಬೆಂಕಿ+ ಮತ್ತು ಗಂಧಕವನ್ನ+ ಸುರಿಸ್ತೀನಿ.+ 23 ನಾನು ನಿಜವಾಗ್ಲೂ ತುಂಬ ಜನಾಂಗಗಳ ಕಣ್ಮುಂದೆ ನನ್ನನ್ನೇ ಮಹಿಮೆ ಪಡಿಸ್ಕೊಳ್ತೀನಿ, ನಾನು ಪವಿತ್ರ ಅಂತ ತೋರಿಸ್ತೀನಿ, ನಾನು ಯಾರಂತ ಅರ್ಥ ಮಾಡಿಸ್ತೀನಿ. ಆಗ, ನಾನೇ ಯೆಹೋವ ಅಂತ ಅವುಗಳಿಗೆ ಗೊತ್ತಾಗುತ್ತೆ.’
39 ಮನುಷ್ಯಕುಮಾರನೇ, ಗೋಗನ ವಿರುದ್ಧ ಭವಿಷ್ಯ ಹೇಳು.+ ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಮೇಷೆಕ್ ಮತ್ತು ತೂಬಲಿನ+ ಮುಖ್ಯ ಪ್ರಧಾನನಾದ* ಗೋಗನೇ, ನಾನು ನಿನಗೆ ವಿರುದ್ಧವಾಗಿದ್ದೀನಿ. 2 ನೀನು ಬೇರೆ ದಿಕ್ಕಿಗೆ ಹೋಗೋ ಹಾಗೆ ನಾನು ಮಾಡ್ತೀನಿ. ನಿನ್ನನ್ನ ಉತ್ತರದ ತುಂಬ ದೂರದಿಂದ ಬರೋ ತರ ಮಾಡಿ+ ಇಸ್ರಾಯೇಲಿನ ಬೆಟ್ಟಗಳ ಮೇಲೆ ಕರ್ಕೊಂಡು ಬರ್ತಿನಿ. 3 ನಾನು ನಿನ್ನ ಎಡಗೈಯಲ್ಲಿರೋ ಬಿಲ್ಲಿಗೆ ಹೊಡೆದು ಬಲಗೈಯಲ್ಲಿರೋ ಬಾಣಗಳನ್ನ ಕೆಳಗೆ ಬೀಳಿಸ್ತೀನಿ. 4 ನೀನು, ನಿನ್ನ ಎಲ್ಲ ಸೈನ್ಯಗಳು ಮತ್ತು ನಿನ್ನ ಜೊತೆ ಇರೋ ಜನಾಂಗಗಳು ಎಲ್ರೂ ಇಸ್ರಾಯೇಲಿನ ಬೆಟ್ಟಗಳ ಮೇಲೆ ಬೀಳ್ತೀರ.+ ನಾನು ನಿನ್ನನ್ನ ಎಲ್ಲ ಜಾತಿಯ ಬೇಟೆ ಹಕ್ಕಿಗಳಿಗೆ, ಕಾಡುಪ್ರಾಣಿಗಳಿಗೆ ಆಹಾರವಾಗಿ ಕೊಡ್ತೀನಿ.”’+
5 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಹೇಳ್ತಿದ್ದೀನಿ, ನೀನು ಬಟ್ಟಬಯಲಲ್ಲಿ ಬೀಳ್ತೀಯ.’+
6 ‘ನಾನು ಮಾಗೋಗ್ ದೇಶದ ಮೇಲೆ, ದ್ವೀಪಗಳಲ್ಲಿ ಸುರಕ್ಷಿತವಾಗಿ ವಾಸಿಸ್ತಾ ಇರುವವ್ರ ಮೇಲೆ ಬೆಂಕಿ ಕಳಿಸ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ. 7 ನನ್ನ ಜನ್ರಾದ ಇಸ್ರಾಯೇಲ್ಯರು ನನ್ನ ಪವಿತ್ರ ಹೆಸ್ರನ್ನ ತಿಳ್ಕೊಳ್ಳೋ ಹಾಗೆ ಮಾಡ್ತೀನಿ. ನನ್ನ ಪವಿತ್ರ ಹೆಸ್ರು ಅಪವಿತ್ರ ಆಗೋಕೆ ನಾನಿನ್ನು ಬಿಡಲ್ಲ. ಆಗ, ನಾನೇ ಯೆಹೋವ, ನಾನು ಇಸ್ರಾಯೇಲಲ್ಲಿ ಪವಿತ್ರ ದೇವರು+ ಅಂತ ಜನಾಂಗಗಳಿಗೆ ಗೊತ್ತಾಗುತ್ತೆ.’+
8 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇದು ಬೇಗ ನಿಜ ಆಗುತ್ತೆ. ಇದು ನಡೆದೇ ನಡಿಯುತ್ತೆ. ನಾನು ಹೇಳಿದ ಆ ದಿನ ಇದೇ. 9 ಇಸ್ರಾಯೇಲ್ಯರು ಹೊರಗೆ ಹೋಗಿ ಆಯುಧಗಳಿಂದ ಅಂದ್ರೆ ಚಿಕ್ಕ ಗುರಾಣಿಗಳು,* ದೊಡ್ಡ ಗುರಾಣಿಗಳು, ಬಿಲ್ಲುಗಳು, ಬಾಣಗಳು, ಯುದ್ಧದ ದೊಣ್ಣೆಗಳು,* ಈಟಿಗಳು ಇದೆಲ್ಲದ್ರಿಂದ ಬೆಂಕಿ ಉರಿಸ್ತಾರೆ. ಅವರು ಬೆಂಕಿ ಉರಿಸೋಕೆ ಏಳು ವರ್ಷ ಇವನ್ನೇ ಬಳಸ್ತಾರೆ.+ 10 ಅವರು ಬಯಲಿಂದ ಕಟ್ಟಿಗೆ ತರಬೇಕಾಗಿರಲ್ಲ, ಕಾಡಿಗೆ ಹೋಗಿ ಸೌದೆ ಕೂಡಿಸಬೇಕಾಗಿರಲ್ಲ. ಯಾಕಂದ್ರೆ ಅವರು ಆ ಆಯುಧಗಳಿಂದಾನೇ ಬೆಂಕಿ ಉರಿಸ್ತಾರೆ.’
‘ತಮ್ಮನ್ನ ಕೊಳ್ಳೆ ಹೊಡೆದವ್ರನ್ನೇ ಅವರು ಕೊಳ್ಳೆ ಹೊಡಿತಾರೆ. ತಮ್ಮನ್ನ ಲೂಟಿ ಮಾಡಿದವ್ರನ್ನೇ ಲೂಟಿ ಮಾಡ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
11 ‘ಆ ದಿನ ಇಸ್ರಾಯೇಲಲ್ಲಿ ಅಂದ್ರೆ ಸಮುದ್ರದ ಪೂರ್ವಕ್ಕೆ ಪ್ರಯಾಣಿಕರು ಹಾದುಹೋಗೋ ಒಂದು ಕಣಿವೆಯಲ್ಲಿ ನಾನು ಗೋಗನಿಗೆ+ ಹೂಳೋ ಜಾಗವನ್ನ ಕೊಡ್ತೀನಿ. ಇದ್ರಿಂದಾಗಿ ಆ ದಾರಿ ಮುಚ್ಚಿಹೋಗುತ್ತೆ. ಅಲ್ಲೇ ಅವರು ಗೋಗನನ್ನ ಮತ್ತು ಅವನ ಎಲ್ಲ ಜನಸಮೂಹಗಳನ್ನ ಹೂಳ್ತಾರೆ. ಆ ಕಣಿವೆಗೆ ಹಾಮೋನ್-ಗೋಗನ ಕಣಿವೆ*+ ಅನ್ನೋ ಹೆಸ್ರಿಡ್ತಾರೆ. 12 ಅವ್ರನ್ನೆಲ್ಲ ಹೂಳಿಟ್ಟು ದೇಶವನ್ನ ಶುದ್ಧ ಮಾಡೋಕೆ ಇಸ್ರಾಯೇಲ್ಯರಿಗೆ ಏಳು ತಿಂಗಳು ಹಿಡಿಯುತ್ತೆ.+ 13 ಅವ್ರನ್ನ ಹೂಳಿಡೋ ಕೆಲಸವನ್ನ ದೇಶದಲ್ಲಿರೋ ಜನ್ರೆಲ್ಲ ಮಾಡ್ತಾರೆ. ಇದ್ರಿಂದಾಗಿ ನಾನು ನನ್ನನ್ನೇ ಮಹಿಮೆ ಪಡಿಸ್ಕೊಳ್ಳೋ ದಿನದಲ್ಲಿ ಅವ್ರಿಗೆ ಒಳ್ಳೇ ಹೆಸ್ರು ಬರುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
14 ‘ಶವಗಳು ಎಲ್ಲಿ ಬಿದ್ದಿವೆ ಅಂತ ಹುಡುಕೋಕೆ ದೇಶದಲ್ಲೆಲ್ಲ ಯಾವಾಗ್ಲೂ ತಿರುಗಾಡೋಕೆ ಮತ್ತು ಭೂಮಿ ಮೇಲೆ ಉಳಿದಿರೋ ಶವಗಳನ್ನ ಹೂಳಿಟ್ಟು ದೇಶವನ್ನ ಶುದ್ಧಮಾಡೋಕೆ ಜನ್ರನ್ನ ನೇಮಿಸಲಾಗುತ್ತೆ. ಹೀಗೆ ಅವರು ಏಳು ತಿಂಗಳು ದೇಶದಲ್ಲೆಲ್ಲಾ ಹುಡುಕ್ತಾರೆ. 15 ದೇಶದಲ್ಲಿ ತಿರುಗಾಡೋರು ಎಲ್ಲಾದ್ರೂ ಮನುಷ್ಯನ ಮೂಳೆ ನೋಡಿದ್ರೆ ಅದ್ರ ಪಕ್ಕದಲ್ಲಿ ಒಂದು ಗುರುತನ್ನ ನಿಲ್ಲಿಸ್ತಾರೆ. ಆಮೇಲೆ ಹೂಳಿಡೋ ಕೆಲಸಕ್ಕೆ ನೇಮಕ ಆದವರು ಬಂದು ಅದನ್ನ ಹಾಮೋನ್-ಗೋಗನ ಕಣಿವೆಯಲ್ಲಿ ಹೂಳಿಡ್ತಾರೆ.+ 16 ಅಲ್ಲಿ ಹಮೋನ* ಅನ್ನೋ ಪಟ್ಟಣನೂ ಇರುತ್ತೆ. ಅವರು ದೇಶವನ್ನ ಶುದ್ಧಮಾಡ್ತಾರೆ.’+
17 ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀನು ಎಲ್ಲ ತರದ ಪಕ್ಷಿಗಳಿಗೆ, ಎಲ್ಲ ಕಾಡುಪ್ರಾಣಿಗಳಿಗೆ ಹೀಗೆ ಹೇಳು: “ನೀವೆಲ್ಲ ಒಟ್ಟಾಗಿ ಬನ್ನಿ. ನಾನು ನಿಮಗಾಗಿ ಸಿದ್ಧ ಮಾಡ್ತಿರೋ ಬಲಿಯ ಸುತ್ತ ಬನ್ನಿ. ಇದು ಇಸ್ರಾಯೇಲಿನ ಬೆಟ್ಟಗಳ ಮೇಲೆ ನಾನು ಸಿದ್ಧ ಮಾಡ್ತಿರೋ ಮಹಾ ಬಲಿಯಾಗಿದೆ.+ ಅಲ್ಲಿ ನೀವು ಮಾಂಸ ತಿಂದು ರಕ್ತ ಕುಡಿತೀರ.+ 18 ನೀವು ಶಕ್ತಿಶಾಲಿಗಳ ಮಾಂಸ ತಿಂತೀರ, ಭೂಮಿಯ ಪ್ರಧಾನರ ರಕ್ತ ಕುಡೀತೀರ. ಅವ್ರೆಲ್ಲ ಬಾಷಾನಿನ ಕೊಬ್ಬಿದ ಪ್ರಾಣಿಗಳಾದ ಟಗರು, ಕುರಿ, ಆಡು ಮತ್ತು ಹೋರಿಗಳ ತರ ಇದ್ದಾರೆ. 19 ನಾನು ನಿಮಗಾಗಿ ಸಿದ್ಧ ಮಾಡಿರೋ ಬಲಿಯ ಕೊಬ್ಬನ್ನ ನೀವು ಕಂಠಪೂರ್ತಿ ತಿಂದು, ರಕ್ತವನ್ನ ಮತ್ತೇರೋ ತನಕ ಕುಡಿತೀರ.”’
20 ‘ಕುದುರೆಗಳ, ಸಾರಥಿಗಳ, ಶಕ್ತಿಶಾಲಿಗಳ ಮತ್ತು ಎಲ್ಲ ತರದ ವೀರರ ಮಾಂಸ ನನ್ನ ಮೇಜಿನ ಮೇಲೆ ತುಂಬಿರುತ್ತೆ. ನೀವು ಅದನ್ನ ಹೊಟ್ಟೆ ತುಂಬ ತಿಂತೀರ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
21 ‘ನಾನು ಜನಾಂಗಗಳಿಗೆ ನನ್ನ ಮಹಿಮೆಯನ್ನ ತೋರಿಸ್ತೀನಿ. ನಾನು ಎಲ್ಲ ಜನಾಂಗಗಳಿಗೆ ಕೊಟ್ಟಿರೋ ತೀರ್ಪನ್ನ ಹೇಗೆ ಜಾರಿ ಮಾಡಿದ್ದೀನಿ ಅಂತ ಮತ್ತು ನನ್ನ ಶಕ್ತಿಯನ್ನ ಹೇಗೆ ತೋರಿಸಿದ್ದೀನಿ ಅಂತ ಆ ಜನಾಂಗಗಳು ನೋಡುತ್ತೆ.+ 22 ಆ ದಿನ ಇಸ್ರಾಯೇಲ್ಯರಿಗೆ ಯೆಹೋವನಾದ ನಾನೇ ಅವ್ರ ದೇವರು ಅಂತ ಗೊತ್ತಾಗುತ್ತೆ. 23 ಜನಾಂಗಗಳು ಈ ವಿಷ್ಯವನ್ನ ತಿಳ್ಕೊಬೇಕಾಗುತ್ತೆ, ಏನಂದ್ರೆ ಇಸ್ರಾಯೇಲ್ಯರು ಪಾಪ ಮಾಡಿದ್ರಿಂದ, ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ ಕೈದಿಗಳಾಗಿ ಹೋದ್ರು.+ ನಾನು ಅವ್ರನ್ನ ಬಿಟ್ಟುಬಿಟ್ಟೆ,*+ ಶತ್ರುಗಳ ಕೈಗೆ ಕೊಟ್ಟೆ.+ ಹಾಗಾಗಿ ಅವರು ಕತ್ತಿಯಿಂದ ಸತ್ತುಹೋದ್ರು. 24 ಅವ್ರ ಅಶುದ್ಧತೆ ಮತ್ತು ಅಪರಾಧಗಳಿಗೆ ತಕ್ಕ ಹಾಗೆ ನಾನು ಅವ್ರಿಗೆ ಶಿಕ್ಷೆ ಕೊಟ್ಟೆ ಮತ್ತು ನಾನು ಅವ್ರನ್ನ ಕೈಬಿಟ್ಟುಬಿಟ್ಟೆ.’
25 ಹಾಗಾಗಿ ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಕೈದಿಗಳಾಗಿ ಹೋದ ಯಾಕೋಬನ ಜನ ಅವ್ರ ದೇಶಕ್ಕೆ ವಾಪಸ್ ಬರೋ ಹಾಗೆ ನಾನು ಮಾಡ್ತೀನಿ.+ ಇಸ್ರಾಯೇಲ್ಯರಿಗೆ ಕರುಣೆ ತೋರಿಸ್ತೀನಿ.+ ನಾನು ತುಂಬ ಉತ್ಸಾಹದಿಂದ ನನ್ನ ಪವಿತ್ರ ಹೆಸ್ರನ್ನ ಕಾಪಾಡ್ತೀನಿ.+ 26 ಅವರು ನನಗೆ ನಂಬಿಕೆ ದ್ರೋಹ ಮಾಡಿದ್ರಿಂದ ಅವಮಾನ ಅನುಭವಿಸಿ+ ಆಮೇಲೆ ತಮ್ಮ ದೇಶದಲ್ಲಿ ಸುರಕ್ಷಿತವಾಗಿ ವಾಸಿಸ್ತಾರೆ. ಅವ್ರನ್ನ ಹೆದರಿಸೋರು ಯಾರೂ ಇರಲ್ಲ.+ 27 ಬೇರೆ ಜನಾಂಗಗಳಿಂದ, ಶತ್ರುಗಳ ದೇಶಗಳಿಂದ ನಾನು ಅವ್ರನ್ನ ಒಟ್ಟುಸೇರಿಸಿ ಅವ್ರ ದೇಶಕ್ಕೆ ವಾಪಸ್ ಕರ್ಕೊಂಡು ಬರ್ತಿನಿ.+ ನಾನು ಅವ್ರಿಗೆ ಏನು ಮಾಡ್ತೀನೋ ಅದ್ರ ಮೂಲಕ ನಾನು ಪವಿತ್ರನು ಅಂತ ತುಂಬ ಜನಾಂಗಗಳಿಗೆ ತೋರಿಸ್ತೀನಿ.’+
28 ‘ನಾನು ಅವ್ರನ್ನ ಬೇರೆ ದೇಶಗಳಿಗೆ ಕೈದಿಗಳಾಗಿ ಕಳಿಸಿ, ಆಮೇಲೆ ಅವ್ರಲ್ಲಿ ಒಬ್ಬರನ್ನೂ ಬಿಡದೆ ಎಲ್ಲರನ್ನೂ ಒಟ್ಟುಸೇರಿಸಿ ಅವ್ರ ದೇಶಕ್ಕೆ ಕರ್ಕೊಂಡು ಬಂದಾಗ ಯೆಹೋವನಾದ ನಾನೇ ಅವ್ರ ದೇವರು ಅಂತ ಅವ್ರಿಗೆ ಗೊತ್ತಾಗುತ್ತೆ.+ 29 ಅದಾದ್ಮೇಲೆ ನಾನು ಅವ್ರನ್ನ ಇನ್ಯಾವತ್ತೂ ಬಿಟ್ಟುಬಿಡಲ್ಲ.*+ ಯಾಕಂದ್ರೆ ಇಸ್ರಾಯೇಲ್ಯರ ಮೇಲೆ ನಾನು ನನ್ನ ಪವಿತ್ರಶಕ್ತಿಯನ್ನ ಸುರಿತೀನಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
40 ಅದು ನಾವು ಕೈದಿಗಳಾಗಿ ಹೋದ 25ನೇ ವರ್ಷ+ ಅಂದ್ರೆ ಯೆರೂಸಲೇಮ್ ಪಟ್ಟಣ ಶತ್ರುಗಳ ವಶವಾದ 14ನೇ ವರ್ಷ. ಆ ವರ್ಷದ ಮೊದಲ್ನೇ ತಿಂಗಳಿನ ಹತ್ತನೇ ದಿನ+ ಯೆಹೋವನ ಪವಿತ್ರಶಕ್ತಿ ನನ್ನ ಮೇಲೆ ಬಂತು. ಆತನು ನನ್ನನ್ನ ಪಟ್ಟಣಕ್ಕೆ ಕರ್ಕೊಂಡು ಹೋದನು.+ 2 ದೇವರು ನನಗೆ ದರ್ಶನಗಳನ್ನ ತೋರಿಸ್ತಾ ಇಸ್ರಾಯೇಲ್ ದೇಶಕ್ಕೆ ಕರ್ಕೊಂಡು ಹೋಗಿ ಅತೀ ಎತ್ತರದ ಒಂದು ಬೆಟ್ಟದ ಮೇಲೆ ಇಟ್ಟನು.+ ಆ ಬೆಟ್ಟದ ಮೇಲೆ ದಕ್ಷಿಣಕ್ಕೆ ಪಟ್ಟಣದ ತರ ಇದ್ದ ಏನೋ ಕಾಣಿಸ್ತು.
3 ಆತನು ನನ್ನನ್ನ ಅಲ್ಲಿಗೆ ಕರ್ಕೊಂಡು ಬಂದಾಗ ನಾನಲ್ಲಿ ಒಬ್ಬ ಪುರುಷನನ್ನ ನೋಡಿದೆ. ಅವನು ತಾಮ್ರದ ತರ ಹೊಳಿತಿದ್ದ.+ ಅವನ ಕೈಯಲ್ಲಿ ಅಗಸೆಯ ಒಂದು ಹಗ್ಗ ಮತ್ತು ಒಂದು ಅಳತೆ ಕೋಲು* ಇತ್ತು.+ ಅವನು ಬಾಗಿಲಲ್ಲಿ ನಿಂತಿದ್ದ. 4 ಅವನು ನನಗೆ “ಮನುಷ್ಯಕುಮಾರನೇ, ನಾನು ನಿನಗೆ ತೋರಿಸೋದನ್ನೆಲ್ಲ ಗಮನಕೊಟ್ಟು ನೋಡು, ನಾನು ಹೇಳೋದನ್ನ ಕೇಳಿಸ್ಕೊ. ನಿನ್ನನ್ನ ಇಲ್ಲಿ ಕರ್ಕೊಂಡು ಬಂದಿರೋದು ಅದಕ್ಕೇ. ನೀನು ಏನೇನು ನೋಡ್ತಿಯೋ ಅದನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳು”+ ಅಂದ.
5 ದೇವಾಲಯದ* ಹೊರಗೆ ಸುತ್ತ ಒಂದು ಗೋಡೆ ಇರೋದನ್ನ ನಾನು ನೋಡ್ದೆ. ಆ ಪುರುಷನ ಕೈಯಲ್ಲಿದ್ದ ಅಳತೆ ಕೋಲು ಆರು ಮೊಳ ಉದ್ದ ಇತ್ತು. (ಇಲ್ಲಿ ಹೇಳಿರೋ ಮೊಳಕ್ಕೆ ಒಂದು ಕೈಯಗಲ ಜಾಸ್ತಿ ಸೇರಿಸಲಾಗಿತ್ತು.)* ಅವನು ಗೋಡೆಯನ್ನ ಅಳತೆ ಮಾಡೋಕೆ ಶುರುಮಾಡಿದ. ಆ ಗೋಡೆಯ ದಪ್ಪ ಮತ್ತು ಎತ್ತರ ಒಂದು ಅಳತೆ ಕೋಲಿನಷ್ಟಿತ್ತು.
6 ಆಮೇಲೆ ಅವನು ಪೂರ್ವಕ್ಕೆ ಮುಖ ಮಾಡಿದ್ದ ಬಾಗಿಲಿಗೆ ಬಂದು+ ಅದ್ರ ಮೆಟ್ಟಿಲು ಹತ್ತಿದ. ಆ ಬಾಗಿಲ ಹೊಸ್ತಿಲನ್ನ ಅಳತೆ ಮಾಡಿದ. ಅದ್ರ ಅಗಲ ಒಂದು ಅಳತೆ ಕೋಲಿನಷ್ಟಿತ್ತು. ಇನ್ನೊಂದು ಹೊಸ್ತಿಲ ಅಗಲನೂ ಅಷ್ಟೇ ಇತ್ತು. 7 ಅಲ್ಲಿದ್ದ ಬಾಗಿಲು ಕಾಯುವವ್ರ ಪ್ರತಿಯೊಂದು ಕೋಣೆಯ ಉದ್ದ ಮತ್ತು ಅಗಲ ಒಂದು ಅಳತೆ ಕೋಲಿನಷ್ಟಿತ್ತು. ಬಾಗಿಲು ಕಾಯುವವ್ರ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಐದು ಮೊಳ ಅಂತರ ಇತ್ತು.+ ದೇವಾಲಯಕ್ಕೆ ಮುಖಮಾಡಿದ್ದ ದ್ವಾರಮಂಟಪದ ಪಕ್ಕದಲ್ಲಿದ್ದ ಬಾಗಿಲ ಹೊಸ್ತಿಲಿನ ಅಳತೆ ಒಂದು ಅಳತೆ ಕೋಲಿನಷ್ಟಿತ್ತು.
8 ದೇವಾಲಯಕ್ಕೆ ಮುಖ ಮಾಡಿದ್ದ ದ್ವಾರಮಂಟಪವನ್ನ ಅವನು ಅಳತೆ ಮಾಡಿದ. ಅದ್ರ ಅಳತೆ ಒಂದು ಅಳತೆ ಕೋಲಿನಷ್ಟಿತ್ತು. 9 ಅವನು ದ್ವಾರಮಂಟಪವನ್ನ ಅಳತೆ ಮಾಡಿದ. ಅದು ಎಂಟು ಮೊಳ ಇತ್ತು. ಅದ್ರ ಎರಡೂ ಪಕ್ಕದಲ್ಲಿದ್ದ ಕಂಬಗಳನ್ನ ಅವನು ಅಳತೆ ಮಾಡಿದ. ಅವು ಎರಡು ಮೊಳ ಇದ್ವು. ದ್ವಾರಮಂಟಪ ದೇವಾಲಯಕ್ಕೆ ಮುಖ ಮಾಡಿತ್ತು.
10 ಪೂರ್ವ ಬಾಗಿಲಿನ ಅಕ್ಕಪಕ್ಕ ಬಾಗಿಲು ಕಾಯುವವ್ರ ಮೂರು ಕೋಣೆಗಳಿದ್ವು. ಅವುಗಳ ಅಳತೆ ಒಂದೇ ಆಗಿತ್ತು. ಅದ್ರ ಪಕ್ಕದಲ್ಲಿದ್ದ ಕಂಬಗಳ ಅಳತೆನೂ ಒಂದೇ ಆಗಿತ್ತು.
11 ಆಮೇಲೆ ಅವನು ಬಾಗಿಲನ್ನ ಅಳತೆ ಮಾಡಿದ. ಅದ್ರ ಅಗಲ 10 ಮೊಳ. ಉದ್ದ 13 ಮೊಳ ಇತ್ತು.
12 ಎರಡೂ ಕಡೆ ಇದ್ದ ಬಾಗಿಲು ಕಾಯುವವ್ರ ಕೋಣೆಗಳ ಮುಂದೆ ಸ್ವಲ್ಪ ಖಾಲಿ ಜಾಗ ಇತ್ತು. ಅದನ್ನ ತಗ್ಗುಗೋಡೆ ಕಟ್ಟಿ ಮುಚ್ಚಲಾಗಿತ್ತು. ಆ ಜಾಗದ ಅಳತೆ ಒಂದು ಮೊಳ ಇತ್ತು. ಆ ಕೋಣೆಗಳ ಅಳತೆ ಆರು ಮೊಳ ಇತ್ತು.
13 ಆಮೇಲೆ ಅವನು ಬಾಗಿಲ ಅಗಲವನ್ನ ಅಳತೆ ಮಾಡೋಕೆ ಬಾಗಿಲು ಕಾಯುವವ್ರ ಒಂದು ಕಡೆಯಿದ್ದ ಕೋಣೆಯ ಚಾವಣಿಯಿಂದ* ಇನ್ನೊಂದು ಕಡೆಯಿದ್ದ ಕೋಣೆಯ ಚಾವಣಿ ತನಕ ಅಳತೆ ಮಾಡಿದ. ಅದು 25 ಮೊಳ ಅಗಲ ಇತ್ತು. ಒಂದು ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳು ಮತ್ತು ಇನ್ನೊಂದು ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳು ಎದುರುಬದುರಾಗಿ ಇದ್ವು.+ 14 ಆಮೇಲೆ ಅವನು ಎರಡೂ ಕಡೆಯಿದ್ದ ಕಂಬಗಳನ್ನ ಅಳತೆ ಮಾಡಿದ. ಅಷ್ಟೇ ಅಲ್ಲ ಅಂಗಳದ ಸುತ್ತ ಇದ್ದ ಬೇರೆಲ್ಲ ಬಾಗಿಲುಗಳ ಎರಡು ಕಡೆಯಿದ್ದ ಕಂಬಗಳನ್ನ ಅಳತೆ ಮಾಡಿದ. ಆ ಕಂಬಗಳು 60 ಮೊಳ ಎತ್ತರ ಇದ್ವು. 15 ಬಾಗಿಲ ಮುಂಭಾಗದಿಂದ ಒಳಗಿನ ದ್ವಾರಮಂಟಪದ ಮುಂಭಾಗದ ತನಕ 50 ಮೊಳ ಇತ್ತು.
16 ಬಾಗಿಲ ಒಳಗೆ ಎರಡೂ ಕಡೆಯಿದ್ದ ಬಾಗಿಲು ಕಾಯುವವ್ರ ಕೋಣೆಗಳಿಗೆ ಮತ್ತು ಅದ್ರ ಪಕ್ಕದಲ್ಲಿದ್ದ ಕಂಬಗಳಿಗೆ ಕಿಟಕಿಗಳಿದ್ವು.* ಅವು ಒಳಗೆ ಅಗಲವಾಗಿ ಹೊರಗೆ ಚಿಕ್ಕದಾಗಿ ಇದ್ವು.+ ಮಂಟಪಗಳ ಒಳಗೆ ಎಲ್ಲ ಕಡೆನೂ ಕಿಟಕಿಗಳು ಇದ್ವು. ಪಕ್ಕದಲ್ಲಿದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು.+
17 ಆಮೇಲೆ ಆ ಪುರುಷ ನನ್ನನ್ನ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅಲ್ಲಿ ನಾನು ಊಟದ ಕೋಣೆಗಳನ್ನ ನೋಡಿದೆ*+ ಮತ್ತು ಅಂಗಳದ ಸುತ್ತ ಕಲ್ಲಿನ ನೆಲ ಇರೋದನ್ನ ನೋಡ್ದೆ. ಆ ನೆಲದ ಮೇಲೆ 30 ಊಟದ ಕೋಣೆಗಳು ಇದ್ವು. 18 ಬಾಗಿಲುಗಳ ಪಕ್ಕದಲ್ಲಿದ್ದ ಕಲ್ಲಿನ ನೆಲದ ಅಗಲ ಬಾಗಿಲುಗಳ ಉದ್ದಕ್ಕೆ ಸಮವಾಗಿತ್ತು. ಈ ನೆಲ ಒಳಗಿನ ಅಂಗಳಕ್ಕಿಂತ ತಗ್ಗಾಗಿತ್ತು.
19 ಆಮೇಲೆ ಅವನು ಕೆಳಗಿನ ಬಾಗಿಲ ಮುಂಭಾಗದಿಂದ ಒಳಗಿನ ಅಂಗಳದ ಅಂಚಿನ ತನಕ ಅಳತೆ ಮಾಡಿದ. ಪೂರ್ವದಲ್ಲೂ ಉತ್ತರದಲ್ಲೂ ಅದು 100 ಮೊಳ ಇತ್ತು.
20 ಹೊರಗಿನ ಅಂಗಳಕ್ಕೆ ಉತ್ತರದ ಕಡೆಗೆ ಮುಖ ಮಾಡಿರೋ ಒಂದು ಬಾಗಿಲಿತ್ತು. ಅವನು ಅದ್ರ ಉದ್ದ-ಅಗಲವನ್ನೂ ಅಳೆದ. 21 ಎರಡೂ ಕಡೆ ಬಾಗಿಲು ಕಾಯುವವ್ರ ಮೂರು ಮೂರು ಕೋಣೆಗಳಿದ್ವು. ಆ ಬಾಗಿಲ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆ ಮೊದಲ್ನೇ ಬಾಗಿಲ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆಯಷ್ಟೇ ಇತ್ತು. ಅದು 50 ಮೊಳ ಉದ್ದ 25 ಮೊಳ ಅಗಲ ಇತ್ತು. 22 ಅದ್ರ ಕಿಟಕಿಗಳು, ಮಂಟಪ, ಖರ್ಜೂರ ಮರದ ಚಿತ್ರಗಳ+ ಅಳತೆ ಪೂರ್ವದ ಬಾಗಿಲಲ್ಲಿದ್ದ ಕಿಟಕಿಗಳು, ಮಂಟಪ, ಖರ್ಜೂರ ಮರದ ಚಿತ್ರಗಳ ಅಳತೆಯಷ್ಟೇ ಇತ್ತು. ಉತ್ತರದ ಬಾಗಿಲಿಗೆ ಹೋಗೋಕೆ ಜನರು ಏಳು ಮೆಟ್ಟಿಲು ಹತ್ತಬೇಕಿತ್ತು. ಅವುಗಳ ಮುಂದೆ ಮಂಟಪ ಇತ್ತು.
23 ಉತ್ತರದ ಬಾಗಿಲ ಮುಂದೆ ಒಳಗಿನ ಅಂಗಳದಲ್ಲಿ ಒಂದು ಬಾಗಿಲಿತ್ತು ಮತ್ತು ಪೂರ್ವ ಬಾಗಿಲ ಮುಂದೆನೂ ಒಂದು ಬಾಗಿಲಿತ್ತು. ಎದುರುಬದುರಾಗಿದ್ದ ಆ ಬಾಗಿಲುಗಳ ಮಧ್ಯ ಇದ್ದ ಅಂತರವನ್ನ ಅವನು ಅಳತೆ ಮಾಡಿದ. ಅದು 100 ಮೊಳ ಇತ್ತು.
24 ಆಮೇಲೆ ಅವನು ನನ್ನನ್ನ ದಕ್ಷಿಣದ ಕಡೆಗೆ ಕರ್ಕೊಂಡು ಬಂದ. ಅಲ್ಲೂ ಒಂದು ಬಾಗಿಲು ಇರೋದನ್ನ ನೋಡ್ದೆ.+ ಅದ್ರ ಪಕ್ಕದಲ್ಲಿದ್ದ ಕಂಬಗಳನ್ನ ಮತ್ತು ಅದ್ರ ಮಂಟಪವನ್ನ ಅವನು ಅಳತೆ ಮಾಡಿದ. ಅವುಗಳ ಅಳತೆ ಬೇರೆ ಬಾಗಿಲುಗಳ ಪಕ್ಕದಲ್ಲಿದ್ದ ಕಂಬಗಳ ಅಳತೆ ಮತ್ತು ಮಂಟಪದ ಅಳತೆಯಷ್ಟೇ ಇತ್ತು. 25 ಬೇರೆ ಬಾಗಿಲುಗಳಲ್ಲಿ ಇದ್ದ ಹಾಗೆ ಈ ಬಾಗಿಲ ಎರಡೂ ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳು ಇದ್ವು. ಈ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 26 ದಕ್ಷಿಣ ಬಾಗಿಲಿಗೆ ಹೋಗೋಕೆ ಜನ ಏಳು ಮೆಟ್ಟಿಲು ಹತ್ತಬೇಕಿತ್ತು.+ ಅವುಗಳ ಮುಂದೆ ಮಂಟಪ ಇತ್ತು. ಅದ್ರ ಅಕ್ಕಪಕ್ಕ ಒಂದೊಂದು ಕಂಬ ಇತ್ತು. ಅವುಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು.
27 ಒಳಗಿನ ಅಂಗಳದಲ್ಲಿ ದಕ್ಷಿಣಕ್ಕೆ ಮುಖಮಾಡಿರೋ ಒಂದು ಬಾಗಿಲಿತ್ತು. ಈ ಬಾಗಿಲು ಮತ್ತು ದಕ್ಷಿಣದ ಕಡೆಗಿದ್ದ ಇನ್ನೊಂದು ಬಾಗಿಲ ಮಧ್ಯ ಇದ್ದ ಅಂತರವನ್ನ ಅವನು ಅಳೆದ. ಅದು 100 ಮೊಳ ಇತ್ತು. 28 ಆಮೇಲೆ ಅವನು ನನ್ನನ್ನ ದಕ್ಷಿಣದ ಬಾಗಿಲಿಂದ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅವನು ದಕ್ಷಿಣದ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆ ಬೇರೆ ಬಾಗಿಲುಗಳ ಅಳತೆಯಷ್ಟೇ ಇತ್ತು. 29 ಅದ್ರ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡೂ ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು.+ 30 ಒಳಗಿನ ಅಂಗಳಕ್ಕೆ ನಡೆಸೋ ಎಲ್ಲ ಬಾಗಿಲುಗಳಿಗೂ ಮಂಟಪಗಳಿದ್ವು. ಪ್ರತಿಯೊಂದು ಮಂಟಪ 25 ಮೊಳ ಉದ್ದ, 5 ಮೊಳ ಅಗಲ ಇತ್ತು. 31 ಆ ದಕ್ಷಿಣ ಬಾಗಿಲ ಮಂಟಪ ಹೊರಗಿನ ಅಂಗಳಕ್ಕೆ ಮುಖಮಾಡಿತ್ತು. ಅದ್ರ ಅಕ್ಕಪಕ್ಕ ಇದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು.+ ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು.+
32 ಅವನು ನನ್ನನ್ನ ಪೂರ್ವದ ಕಡೆಯಿಂದ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂದ. ಅಲ್ಲಿನ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆನೂ ಬೇರೆ ಬಾಗಿಲ ಅಳತೆಯಷ್ಟೇ ಇತ್ತು. 33 ಅದ್ರ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡು ಕಡೆಗಳಲ್ಲಿ ಮತ್ತು ಮಂಟಪದಲ್ಲಿ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 34 ಅದ್ರ ಮಂಟಪ ಹೊರಗಿನ ಅಂಗಳಕ್ಕೆ ಮುಖಮಾಡಿತ್ತು. ಅದ್ರ ಅಕ್ಕಪಕ್ಕ ಇದ್ದ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು. ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು.
35 ಆಮೇಲೆ ಅವನು ನನ್ನನ್ನ ಉತ್ತರದ ಬಾಗಿಲ ಒಳಗೆ ಕರ್ಕೊಂಡು ಬಂದು+ ಆ ಬಾಗಿಲನ್ನ ಅಳತೆ ಮಾಡಿದ. ಅದ್ರ ಅಳತೆ ಬೇರೆ ಬಾಗಿಲುಗಳ ಅಳತೆಯಷ್ಟೇ ಇತ್ತು. 36 ಅದ್ರ ಬಾಗಿಲು ಕಾಯೋರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪದ ಅಳತೆ ಬೇರೆ ಬಾಗಿಲುಗಳಲ್ಲಿದ್ದ ಬಾಗಿಲು ಕಾಯುವವ್ರ ಕೋಣೆಗಳು, ಪಕ್ಕದಲ್ಲಿದ್ದ ಕಂಬಗಳು ಮತ್ತು ಮಂಟಪಗಳ ಅಳತೆಯಷ್ಟೇ ಇತ್ತು. ಆ ಬಾಗಿಲ ಎರಡೂ ಕಡೆ ಕಿಟಕಿಗಳಿದ್ವು. ಆ ಬಾಗಿಲು 50 ಮೊಳ ಉದ್ದ, 25 ಮೊಳ ಅಗಲ ಇತ್ತು. 37 ಅದ್ರ ಅಕ್ಕಪಕ್ಕದಲ್ಲಿದ್ದ ಕಂಬಗಳು ಹೊರಗಿನ ಅಂಗಳಕ್ಕೆ ಮುಖಮಾಡಿದ್ವು. ಆ ಕಂಬಗಳ ಮೇಲೆ ಖರ್ಜೂರ ಮರದ ಚಿತ್ರಗಳಿದ್ವು. ಆ ಬಾಗಿಲ ಒಳಗೆ ಬರೋಕೆ ಎಂಟು ಮೆಟ್ಟಿಲು ಹತ್ತಬೇಕಿತ್ತು.
38 ಒಳಗಿನ ಅಂಗಳದ ಬಾಗಿಲುಗಳ ಪಕ್ಕದಲ್ಲಿದ್ದ ಕಂಬಗಳ ಹತ್ರ ಒಂದು ಊಟದ ಕೋಣೆ ಇತ್ತು. ಅದಕ್ಕೊಂದು ಬಾಗಿಲಿತ್ತು. ಸರ್ವಾಂಗಹೋಮ ಬಲಿಯಾಗಿ ಕೊಟ್ಟಿದ್ದನ್ನ ಅಲ್ಲಿ ತೊಳೀತಿದ್ರು.+
39 ಉತ್ತರದ ಬಾಗಿಲ ಮಂಟಪದ ಅಕ್ಕಪಕ್ಕ ಎರಡೆರಡು ಮೇಜುಗಳಿದ್ವು. ಆ ಮೇಜುಗಳ ಮೇಲೆ ಸರ್ವಾಂಗಹೋಮ ಬಲಿಗಳು,+ ಪಾಪಪರಿಹಾರಕ ಬಲಿಗಳು+ ಮತ್ತು ದೋಷಪರಿಹಾರಕ ಬಲಿಗಳಾಗಿ+ ಕೊಡ್ತಿದ್ದ ಪ್ರಾಣಿಗಳನ್ನ ಕಡಿತಿದ್ರು. 40 ಉತ್ತರದ ಬಾಗಿಲ ಮೆಟ್ಟಿಲುಗಳ ಅಕ್ಕಪಕ್ಕ ಅಂದ್ರೆ ದ್ವಾರಮಂಟಪದ ಹತ್ರ ಎರಡೆರಡು ಮೇಜುಗಳಿದ್ವು. 41 ಬಾಗಿಲ ಒಂದು ಕಡೆ ನಾಲ್ಕು, ಇನ್ನೊಂದು ಕಡೆ ನಾಲ್ಕು ಹೀಗೆ ಒಟ್ಟು ಎಂಟು ಮೇಜುಗಳು ಇದ್ವು. ಅವುಗಳ ಮೇಲೆ ಬಲಿಪ್ರಾಣಿಗಳನ್ನ ಕಡಿತಿದ್ರು. 42 ಸರ್ವಾಂಗಹೋಮ ಬಲಿಗಾಗಿ ನಾಲ್ಕು ಮೇಜುಗಳನ್ನ ಕತ್ತರಿಸಿದ ಕಲ್ಲಿಂದ ಮಾಡಿದ್ರು. ಅವು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದು ಮೊಳ ಎತ್ತರ ಇದ್ವು. ಸರ್ವಾಂಗಹೋಮ ಬಲಿಗಳ ಮತ್ತು ಬೇರೆ ಬಲಿಗಳ ಪ್ರಾಣಿಗಳನ್ನ ಕಡಿಯೋಕೆ ಬಳಸೋ ವಸ್ತುಗಳನ್ನ ಆ ಮೇಜುಗಳ ಮೇಲೆ ಇಟ್ಟಿದ್ರು. 43 ಒಳಗಿನ ಗೋಡೆಗಳ ಸುತ್ತ ಗೋಡೆಗೆ ಜೋಡಿಸಿದ್ದ ಕಪಾಟುಗಳು ಇದ್ವು. ಅವು ಕೈಯಗಲದಷ್ಟು ಅಗಲ ಇದ್ವು. ಉಡುಗೊರೆ ಅರ್ಪಣೆಗಳ ಮಾಂಸವನ್ನ ಮೇಜುಗಳ ಮೇಲೆ ಇಡ್ತಿದ್ರು.
44 ಒಳಗಿನ ಬಾಗಿಲ ಆಚೆ ಗಾಯಕರ ಊಟದ ಕೋಣೆಗಳಿದ್ವು.+ ಅವು ಒಳಗಿನ ಅಂಗಳದ ಒಳಗೆ ಉತ್ತರದ ಬಾಗಿಲ ಹತ್ರ ಇದ್ವು ಮತ್ತು ದಕ್ಷಿಣಕ್ಕೆ ಮುಖಮಾಡಿದ್ವು. ಇನ್ನೊಂದು ಊಟದ ಕೋಣೆ ಪೂರ್ವದ ಬಾಗಿಲ ಹತ್ರ ಇತ್ತು ಮತ್ತು ಉತ್ತರಕ್ಕೆ ಮುಖಮಾಡಿತ್ತು.
45 ಅವನು ನನಗೆ “ದಕ್ಷಿಣಕ್ಕೆ ಮುಖಮಾಡಿರೋ ಈ ಊಟದ ಕೋಣೆ ದೇವಾಲಯದಲ್ಲಿ ಸೇವೆ ಮಾಡೋ ಪುರೋಹಿತರದ್ದು.+ 46 ಉತ್ತರಕ್ಕೆ ಮುಖಮಾಡಿರೋ ಊಟದ ಕೋಣೆ ಯಜ್ಞವೇದಿಗೆ ಸಂಬಂಧಿಸಿದ ಸೇವೆಮಾಡೋ ಪುರೋಹಿತರದ್ದು.+ ಅವರು ಚಾದೋಕನ ವಂಶದವರು.+ ಲೇವಿಯರಲ್ಲಿ ಯೆಹೋವನ ಮುಂದೆ ಹೋಗಿ ಆತನ ಸೇವೆಮಾಡೋ ನೇಮಕ ಇರೋ ಪುರೋಹಿತರು ಇವರೇ”+ ಅಂದ.
47 ಆಮೇಲೆ ಅವನು ಒಳಗಿನ ಅಂಗಳವನ್ನ ಅಳತೆ ಮಾಡಿದ. ಅದು ಚೌಕದ ಆಕಾರದಲ್ಲಿತ್ತು, 100 ಮೊಳ ಉದ್ದ, 100 ಮೊಳ ಅಗಲ ಇತ್ತು. ದೇವಾಲಯದ ಮುಂದೆ ಯಜ್ಞವೇದಿ ಇತ್ತು.
48 ಆಮೇಲೆ ಅವನು ನನ್ನನ್ನ ದೇವಾಲಯದ ಮಂಟಪದ ಒಳಗೆ ಕರ್ಕೊಂಡು ಬಂದ.+ ಆ ಮಂಟಪದ ಅಕ್ಕಪಕ್ಕ ಇದ್ದ ಕಂಬಗಳನ್ನ ಅಳತೆಮಾಡಿದ. ಅವೆರಡರ ಅಳತೆನೂ ಐದೈದು ಮೊಳ ಇತ್ತು. ಬಾಗಿಲ ಅಗಲ ಒಂದು ಕಡೆ ಮೂರು ಮೊಳ ಮತ್ತು ಇನ್ನೊಂದು ಕಡೆ ಮೂರು ಮೊಳ ಇತ್ತು.
49 ಮಂಟಪವು 20 ಮೊಳ ಉದ್ದ, 11* ಮೊಳ ಅಗಲ ಇತ್ತು. ಜನ್ರು ಮೆಟ್ಟಿಲು ಹತ್ತಿ ಮಂಟಪದ ಒಳಗೆ ಹೋಗ್ತಿದ್ರು. ಮಂಟಪದ ಎರಡೂ ಕಡೆ ನಿಲುವು ಕಂಬಗಳ ಹತ್ರ ಒಂದೊಂದು ಕಂಬ ಇತ್ತು.+
41 ಆಮೇಲೆ ಅವನು ನನ್ನನ್ನ ಆಲಯದ ಪವಿತ್ರ ಸ್ಥಳದ ಒಳಗೆ* ಕರ್ಕೊಂಡು ಬಂದ. ಅದ್ರ ಅಕ್ಕಪಕ್ಕ ಇದ್ದ ಎರಡು ಕಂಬಗಳನ್ನ ಅಳತೆ ಮಾಡಿದ. ಒಂದೊಂದು ಕಂಬದ ಅಗಲ ಆರು ಮೊಳ ಇತ್ತು.* 2 ಅದ್ರ ಬಾಗಿಲು ಹತ್ತು ಮೊಳ ಅಗಲ ಇತ್ತು. ಬಾಗಿಲ ಅಕ್ಕಪಕ್ಕ ಇದ್ದ ಗೋಡೆಗಳ ಅಳತೆ ಐದೈದು ಮೊಳ ಇತ್ತು. ಆಮೇಲೆ ಅವನು ಪವಿತ್ರ ಸ್ಥಳವನ್ನ ಅಳತೆ ಮಾಡಿದ. ಅದು 40 ಮೊಳ ಉದ್ದ, 20 ಮೊಳ ಅಗಲ ಇತ್ತು.
3 ಆಮೇಲೆ ಅವನು ಒಳಗೆ* ಹೋಗಿ ಅಲ್ಲಿನ ಬಾಗಿಲ ಅಕ್ಕಪಕ್ಕ ಇದ್ದ ಕಂಬಗಳನ್ನ ಅಳತೆ ಮಾಡಿದ. ಆ ಕಂಬಗಳು ಎರಡು ಮೊಳ ದಪ್ಪ ಇತ್ತು. ಬಾಗಿಲು ಆರು ಮೊಳ ಅಗಲ ಇತ್ತು. ಅದ್ರ ಎರಡು ಕಡೆ ಇದ್ದ ಗೋಡೆಗಳ ಅಳತೆ ಏಳು ಮೊಳ ಇತ್ತು. 4 ಆಮೇಲೆ ಅವನು ಪವಿತ್ರ ಸ್ಥಳಕ್ಕೆ ಮುಖ ಮಾಡಿರೋ ಒಳಗಿದ್ದ ಕೋಣೆಯನ್ನ ಅಳತೆ ಮಾಡಿದ. ಅದು 20 ಮೊಳ ಉದ್ದ ಮತ್ತು 20 ಮೊಳ ಅಗಲ ಇತ್ತು.+ ಆಗ ಅವನು ನನಗೆ “ಇದು ಅತಿ ಪವಿತ್ರ ಸ್ಥಳ” ಅಂದ.+
5 ಆಮೇಲೆ ಅವನು ದೇವಾಲಯದ ಗೋಡೆಯನ್ನ ಅಳತೆ ಮಾಡಿದ. ಅದು ಆರು ಮೊಳ ದಪ್ಪ ಇತ್ತು. ದೇವಾಲಯದ ಸುತ್ತ ಇದ್ದ ಕೋಣೆಗಳು ನಾಲ್ಕು ಮೊಳ ಅಗಲ ಇದ್ವು.+ 6 ಈ ಕೋಣೆಗಳು ಒಂದ್ರ ಮೇಲೆ ಒಂದ್ರ ಹಾಗೆ ಮೂರು ಅಂತಸ್ತು ಇದ್ವು. ಒಂದೊಂದು ಅಂತಸ್ತಲ್ಲಿ 30 ಕೋಣೆಗಳಿದ್ವು. ಈ ಕೋಣೆಗಳನ್ನ ದೇವಾಲಯದ ಗೋಡೆಯ ಸುತ್ತ ಇದ್ದ ಅಂಚುಗಳ ಮೇಲೆ ಕೂರೋ ತರ ಮಾಡಲಾಗಿತ್ತು. ಹಾಗಾಗಿ ಕೋಣೆಯ ಅಡ್ಡತೊಲೆಗಳನ್ನ ಇಡೋಕೆ ಗೋಡೆಗೆ ತೂತುಮಾಡೋ ಅಗತ್ಯ ಇರಲಿಲ್ಲ.+ 7 ದೇವಾಲಯದ ಎರಡೂ ಕಡೆ ಸುರುಳಿ ಆಕಾರದಲ್ಲಿ ಮೆಟ್ಟಿಲುಗಳು ಇದ್ವು. ಕೆಳಗಿನ ಅಂತಸ್ತಿನ ಕೋಣೆಗಳಿಗಿಂತ ಮಧ್ಯದ ಅಂತಸ್ತಿನ ಕೋಣೆಗಳು ತುಂಬ ಅಗಲವಾಗಿದ್ವು.+ ಮಧ್ಯದ ಅಂತಸ್ತಿನ ಕೋಣೆಗಳಿಗಿಂತ ಅದ್ರ ಮೇಲಿನ ಅಂತಸ್ತಿನ ಕೋಣೆಗಳು ಇನ್ನೂ ಅಗಲವಾಗಿದ್ವು.
8 ದೇವಾಲಯದ ಸುತ್ತ ಎತ್ತರವಾದ ಕಟ್ಟೆ ಇರೋದನ್ನ ನಾನು ನೋಡ್ದೆ. ಪಕ್ಕದಲ್ಲಿದ್ದ ಕೋಣೆಗಳ ಅಡಿಪಾಯದ ಅಳತೆ ನೆಲದಿಂದ ಮೇಲಿನ ಅಂಚಿನ ತನಕ ಆರು ಮೊಳ ಇತ್ತು. 9 ಅವುಗಳ ಹೊರಗಿನ ಗೋಡೆ ಐದು ಮೊಳ ಅಗಲ ಇತ್ತು. ಕೋಣೆಗಳ ಕಟ್ಟಡದ ಪಕ್ಕದಲ್ಲಿ ಉದ್ದವಾದ ಖಾಲಿ ಜಾಗ* ಇತ್ತು. ಇದೂ ದೇವಾಲಯಕ್ಕೆ ಸೇರಿತ್ತು.
10 ದೇವಾಲಯ ಮತ್ತು ಊಟದ ಕೋಣೆಗಳ+ ಮಧ್ಯ 20 ಮೊಳ ಅಗಲವಾದ ಜಾಗ ಇತ್ತು. ಎರಡೂ ಕಡೆ ಹೀಗೇ ಇತ್ತು. 11 ಪಕ್ಕದಲ್ಲಿದ್ದ ಕೋಣೆಗಳ ಮತ್ತು ಖಾಲಿ ಜಾಗದ ಮಧ್ಯ ಒಂದು ಬಾಗಿಲಿತ್ತು. ಉತ್ತರದ ಕಡೆಗೊಂದು, ದಕ್ಷಿಣದ ಕಡೆಗೊಂದು, ಹೀಗೆ ಎರಡು ಬಾಗಿಲಿದ್ವು. ಸುತ್ತ ಇರೋ ಖಾಲಿ ಜಾಗದ ಅಗಲ ಐದು ಮೊಳ ಇತ್ತು.
12 ಪಶ್ಚಿಮಕ್ಕೆ, ಖಾಲಿ ಜಾಗದ ಮುಂದೆ ಇರೋ ಕಟ್ಟಡ 70 ಮೊಳ ಅಗಲ, 90 ಮೊಳ ಉದ್ದ ಇತ್ತು. ಆ ಕಟ್ಟಡದ ಸುತ್ತ ಇದ್ದ ಗೋಡೆ ಐದು ಮೊಳ ದಪ್ಪ ಇತ್ತು.
13 ಅವನು ದೇವಾಲಯವನ್ನ ಅಳತೆ ಮಾಡಿದ. ಅದು 100 ಮೊಳ ಉದ್ದ ಇತ್ತು. ಖಾಲಿ ಜಾಗ, ಕಟ್ಟಡ* ಮತ್ತು ಅದ್ರ ಗೋಡೆಗಳು ಇವೆಲ್ಲದ್ರ ಒಟ್ಟು ಉದ್ದ 100 ಮೊಳ ಇತ್ತು. 14 ಪೂರ್ವಕ್ಕೆ ಮುಖ ಮಾಡಿರೋ ದೇವಾಲಯದ ಮುಂಭಾಗ ಮತ್ತು ಖಾಲಿ ಜಾಗ ಒಟ್ಟು 100 ಮೊಳ ಅಗಲ ಇತ್ತು.
15 ಹಿಂದೆ ಇದ್ದ ಖಾಲಿ ಜಾಗದ ಎದುರಿಗಿದ್ದ ಕಟ್ಟಡವನ್ನ ಅದ್ರ ಎರಡೂ ಕಡೆ ಇದ್ದ ವರಾಂಡದ ಸಮೇತ ಅವನು ಅಳತೆ ಮಾಡಿದ. ಅದು 100 ಮೊಳ ಉದ್ದ ಇತ್ತು.
ಅಷ್ಟೇ ಅಲ್ಲ, ಅವನು ಪವಿತ್ರ ಸ್ಥಳ, ಅತಿ ಪವಿತ್ರ ಸ್ಥಳ,+ ಅಂಗಳದಲ್ಲಿದ್ದ ಮಂಟಪಗಳು, 16 ಹೊಸ್ತಿಲುಗಳು, ಒಳಭಾಗಕ್ಕೆ ಅಗಲವಾಗಿದ್ದು ಹೊರಭಾಗಕ್ಕೆ ಕಿರಿದಾಗಿದ್ದ ಕಿಟಕಿಗಳು,+ ಆ ಮೂರು ಕಡೆ ಇದ್ದ ವರಾಂಡಗಳು, ಇವೆಲ್ಲವನ್ನ ಅಳತೆ ಮಾಡಿದ. ಹೊಸ್ತಿಲ ಹತ್ರ ನೆಲದಿಂದ ಕಿಟಕಿಗಳ ತನಕ ಮರದ ಹಲಗೆಗಳನ್ನ ಹೊದಿಸಿದ್ರು.+ ಕಿಟಕಿಗಳ ಸುತ್ತ ಹಲಗೆಯ ಚೌಕಟ್ಟುಗಳಿದ್ವು. 17 ಬಾಗಿಲ ಮೇಲೆ, ದೇವಾಲಯದ ಒಳಗೆ, ಹೊರಗೆ ಮತ್ತು ಸುತ್ತ ಇದ್ದ ಗೋಡೆಯನ್ನ ಅಳತೆ ಮಾಡಿದ. 18 ಗೋಡೆ ಮೇಲೆ ಕೆರೂಬಿಯರ ಕೆತ್ತನೆ+ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಇಬ್ಬಿಬ್ಬರು ಕೆರೂಬಿಯರ ಮಧ್ಯ ಒಂದೊಂದು ಖರ್ಜೂರ ಮರದ ಚಿತ್ರ ಇತ್ತು. ಪ್ರತಿಯೊಬ್ಬ ಕೆರೂಬಿಗೆ ಎರಡೆರಡು ಮುಖಗಳಿದ್ವು. 19 ಒಂದು ಮುಖ ಮನುಷ್ಯನದ್ದು, ಇನ್ನೊಂದು ಸಿಂಹದ್ದು. ಮನುಷ್ಯನ ಮುಖ ಒಂದು ಕಡೆಯಿದ್ದ ಖರ್ಜೂರ ಮರದ ಕಡೆಗಿತ್ತು. ಸಿಂಹದ ಮುಖ ಇನ್ನೊಂದು ಕಡೆಯಿದ್ದ ಖರ್ಜೂರ ಮರದ ಕಡೆಗಿತ್ತು.+ ಇಡೀ ದೇವಾಲಯದಲ್ಲಿ ಇದೇ ತರದ ಕೆತ್ತನೆ ಇತ್ತು. 20 ದೇವಾಲಯದ ಗೋಡೆ ಮೇಲೆ ಅಂದ್ರೆ ನೆಲದಿಂದ ಹಿಡಿದು ಬಾಗಿಲ ಮೇಲಿನ ತನಕ ಕೆರೂಬಿಯರ ಕೆತ್ತನೆ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.
21 ದೇವಾಲಯದ ಬಾಗಿಲುಗಳ ಚೌಕಟ್ಟುಗಳು* ಚೌಕಾಕಾರವಾಗಿದ್ವು.+ ಪವಿತ್ರವಾದ ಸ್ಥಳದ* ಮುಂದೆ 22 ಮರದ ಯಜ್ಞವೇದಿ+ ತರ ಕಾಣ್ತಿದ್ದ ಏನೋ ಒಂದು ಇತ್ತು. ಅದು ಮೂರು ಮೊಳ ಎತ್ತರ, ಎರಡು ಮೊಳ ಉದ್ದ ಇತ್ತು. ಅದಕ್ಕೆ ನಾಲ್ಕು ಮೂಲೆ ಇತ್ತು. ಅದನ್ನ ಮರದಿಂದ ಮಾಡಿದ್ರು. ಆಮೇಲೆ ಅವನು ನನಗೆ “ಯೆಹೋವನ ಮುಂದೆ ಇರೋ ಮೇಜು ಇದೇ” ಅಂದ.+
23 ದೇವಾಲಯದ ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ ಎರಡಕ್ಕೂ ಎರಡು ಕದಗಳಿರೋ ಬಾಗಿಲಿತ್ತು.+ 24 ಪ್ರತಿಯೊಂದು ಬಾಗಿಲಿನ ಎರಡೂ ಕದಗಳಿಗೆ ಮಡಚೋ ಎರಡೆರಡು ಭಾಗಗಳಿದ್ವು. 25 ಗೋಡೆಗಳ ಮೇಲೆ ಇದ್ದ ಹಾಗೇ ದೇವಾಲಯದ ಬಾಗಿಲುಗಳ ಮೇಲೂ ಕೆರೂಬಿಯರ ಕೆತ್ತನೆ ಮತ್ತು ಖರ್ಜೂರ ಮರಗಳ ಚಿತ್ರಗಳು ಇದ್ವು.+ ಮಂಟಪದ ಹೊರಗೆ ಮುಂಭಾಗದಲ್ಲಿ ಮರದ ಚಪ್ಪರನೂ ಇತ್ತು. 26 ಮಂಟಪದ ಎರಡೂ ಕಡೆ ದೇವಾಲಯದ ಅಕ್ಕಪಕ್ಕ ಇರೋ ಕೋಣೆಗಳ ಪಕ್ಕದಲ್ಲಿ ಮತ್ತು ಚಪ್ಪರಗಳ ಹತ್ರ ಕಿಟಕಿಗಳಿದ್ವು.+ ಅಷ್ಟೇ ಅಲ್ಲ, ಖರ್ಜೂರ ಮರಗಳ ಚಿತ್ರಗಳೂ ಇದ್ವು. ಆ ಕಿಟಕಿಗಳು ಒಳಗೆ ಅಗಲವಾಗಿ ಹೊರಗೆ ಚಿಕ್ಕದಾಗಿ ಇದ್ವು.
42 ಆಮೇಲೆ ಅವನು ನನ್ನನ್ನ ಉತ್ತರದ ಕಡೆಯಿಂದ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದ.+ ಅವನು ನನ್ನನ್ನ ಖಾಲಿ ಜಾಗದ ಪಕ್ಕದಲ್ಲಿದ್ದ ಊಟದ ಕೋಣೆಗಳ ಕಟ್ಟಡಕ್ಕೆ ಕರ್ಕೊಂಡು ಬಂದ.+ ಈ ಕಟ್ಟಡ ದೇವಾಲಯದ ಪಕ್ಕದಲ್ಲಿದ್ದ ಕಟ್ಟಡದ ಉತ್ತರಕ್ಕೆ ಅಂಟ್ಕೊಂಡಿತ್ತು.+ 2 ಉತ್ತರದ ಬಾಗಿಲ ಕಡೆಯಿಂದ ಊಟದ ಕೋಣೆಗಳ ಕಟ್ಟಡವನ್ನ ಅಳತೆ ಮಾಡಿದಾಗ ಅದ್ರ ಉದ್ದ 100 ಮೊಳ,* ಅಗಲ 50 ಮೊಳ ಇತ್ತು. 3 ಇದು 20 ಮೊಳ ಅಗಲ ಇದ್ದ+ ಒಳಗಿನ ಅಂಗಳಕ್ಕೂ ಹೊರಗಿನ ಅಂಗಳದ ಕಲ್ಲಿನ ನೆಲಕ್ಕೂ ಮಧ್ಯ ಇತ್ತು. ಇದ್ರಲ್ಲಿ ಮೂರು ಅಂತಸ್ತಿನ ಎರಡು ಭಾಗಗಳಿದ್ವು. ಅವುಗಳ ವರಾಂಡಗಳು ಎದುರುಬದುರಾಗಿ ಇದ್ವು. 4 ಕಟ್ಟಡದ ಒಳಗೆ, ಊಟದ ಕೋಣೆಗಳ ಮುಂದೆ ನಡೆದಾಡೋಕೆ ಜಾಗ ಇತ್ತು.+ ಅದು 10 ಮೊಳ ಅಗಲ ಮತ್ತು 100 ಮೊಳ ಉದ್ದ ಇತ್ತು.* ಊಟದ ಕೋಣೆಗಳ ಬಾಗಿಲುಗಳು ಉತ್ತರದ ಕಡೆಗಿದ್ವು. 5 ಕೆಳಗಿನ ಮತ್ತು ಮಧ್ಯದ ಅಂತಸ್ತಿನ ಕೋಣೆಗಳಿಗಿಂತ ಮೇಲಿನ ಅಂತಸ್ತಿನ ಕೋಣೆಗಳು ಚಿಕ್ಕದಾಗಿದ್ವು. ಯಾಕಂದ್ರೆ ಆ ಅಂತಸ್ತಲ್ಲಿ ವರಾಂಡಗಳಿಗೇ ಜಾಸ್ತಿ ಜಾಗ ಹಿಡಿದಿತ್ತು. 6 ಅವು ಮೂರು ಅಂತಸ್ತಲ್ಲಿ ಇದ್ವು, ಆದ್ರೆ ಅಂಗಳಗಳಿಗೆ ಇದ್ದ ಹಾಗೆ ಅವಕ್ಕೆ ಕಂಬಗಳು ಇರಲಿಲ್ಲ. ಹಾಗಾಗಿ ಕೆಳಗಿನ ಮತ್ತು ಮಧ್ಯದ ಅಂತಸ್ತಿಗಿಂತ ಮೇಲಿನ ಅಂತಸ್ತು ಚಿಕ್ಕದಾಗಿತ್ತು.
7 ಹೊರಗಿನ ಅಂಗಳದ ಕಡೆಗಿದ್ದ ಊಟದ ಕೋಣೆಗಳ ಹತ್ರ ಕಲ್ಲಿನ ಗೋಡೆ ಇತ್ತು. ಈ ಗೋಡೆ ಊಟದ ಕೋಣೆಗಳ ಕಟ್ಟಡದ ಇನ್ನೊಂದು ಭಾಗದ ಎದುರಿಗಿತ್ತು. ಅದ್ರ ಉದ್ದ 50 ಮೊಳ. 8 ಹೊರಗಿನ ಅಂಗಳದ ಕಡೆಗಿದ್ದ ಊಟದ ಕೋಣೆಗಳ ಉದ್ದ 50 ಮೊಳ ಇತ್ತು. ಆದ್ರೆ ದೇವಾಲಯದ ಕಡೆಗಿದ್ದ ಊಟದ ಕೋಣೆಗಳ ಉದ್ದ 100 ಮೊಳ ಇತ್ತು. 9 ಊಟದ ಕೋಣೆಗಳ ಪೂರ್ವಕ್ಕೆ ಒಂದು ಬಾಗಿಲಿತ್ತು. ಇದ್ರ ಮೂಲಕ ಹೊರಗಿನ ಅಂಗಳದಿಂದ ಊಟದ ಕೋಣೆಗಳಿಗೆ ಬರೋಕೆ ಆಗುತ್ತಿತ್ತು.
10 ದಕ್ಷಿಣ ಭಾಗದಲ್ಲೂ ಊಟದ ಕೋಣೆಗಳಿದ್ವು. ಅವುಗಳ ಪೂರ್ವಕ್ಕೆ ಅಂಗಳದ ಕಲ್ಲಿನ ಗೋಡೆ ಇತ್ತು. ಆ ಊಟದ ಕೋಣೆಗಳು ಖಾಲಿ ಜಾಗದ ಮತ್ತು ದೇವಾಲಯದ ಪಕ್ಕದಲ್ಲಿದ್ದ ಕಟ್ಟಡದ ಹತ್ರ ಇದ್ವು.+ 11 ಈ ಕೋಣೆಗಳ ಮುಂದೆನೂ ಉತ್ತರದ ಊಟದ ಕೋಣೆಗಳ ಮುಂದೆ ಇದ್ದ ಹಾಗೆ ನಡಿಯೋಕೆ ದಾರಿ ಇತ್ತು.+ ಕೋಣೆಗಳ ಉದ್ದ, ಅಗಲ, ಬಾಗಿಲುಗಳು, ವಿನ್ಯಾಸ ಎಲ್ಲ ಉತ್ತರದ ಕೋಣೆಗಳ ತರಾನೇ ಇತ್ತು. ಉತ್ತರದ ಬಾಗಿಲುಗಳು 12 ದಕ್ಷಿಣ ಕಡೆಯಲ್ಲಿದ್ದ ಊಟದ ಕೋಣೆಗಳ ಬಾಗಿಲುಗಳ ಹಾಗೇ ಇದ್ವು. ನಡೆದಾಡೋ ಜಾಗದಲ್ಲಿ ಒಂದು ಬಾಗಿಲಿತ್ತು. ಇಲ್ಲಿಂದ ಊಟದ ಕೋಣೆಗಳಿಗೆ ಹೋಗೋಕೆ ಆಗ್ತಿತ್ತು.+ ಈ ಬಾಗಿಲು ಪೂರ್ವದಲ್ಲಿದ್ದ ಕಲ್ಲಿನ ಗೋಡೆ ಮುಂದೆ ಇತ್ತು. ಆ ಗೋಡೆ ಬಾಗಿಲ ಹತ್ರ ಇತ್ತು.
13 ಆಮೇಲೆ ಅವನು ನನಗೆ “ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಖಾಲಿ ಜಾಗದ ಪಕ್ಕದಲ್ಲಿರೋ ಊಟದ ಕೋಣೆಗಳು+ ಪವಿತ್ರ ಕೋಣೆಗಳಾಗಿವೆ. ಯೆಹೋವನ ಮುಂದೆ ಹೋಗೋ ಪುರೋಹಿತರು ಅತಿ ಪವಿತ್ರವಾದ ಅರ್ಪಣೆಗಳನ್ನ ತಿನ್ನೋದು ಆ ಕೋಣೆಗಳಲ್ಲೇ.+ ಆ ಜಾಗ ಪವಿತ್ರ ಆಗಿರೋದ್ರಿಂದ ಅಲ್ಲಿ ಅವರು ಅತಿ ಪವಿತ್ರವಾದ ಅರ್ಪಣೆಗಳನ್ನ ಇಡ್ತಾರೆ. ಧಾನ್ಯ ಅರ್ಪಣೆ, ಪಾಪಪರಿಹಾರಕ ಬಲಿ ಮತ್ತು ದೋಷಪರಿಹಾರಕ ಬಲಿಯಾಗಿ ಏನನ್ನ ಕೊಡ್ತಿದ್ರೋ ಅದನ್ನೂ ಅಲ್ಲಿ ಇಡ್ತಾರೆ.+ 14 ಪುರೋಹಿತರು ಪವಿತ್ರ ಸ್ಥಳದ ಒಳಗಿಂದ ಹೊರಗಿನ ಅಂಗಳಕ್ಕೆ ಹೋಗಬೇಕಾದ್ರೆ ಅವರು ಸೇವೆ ಮಾಡುವಾಗ ಹಾಕೊಂಡಿದ್ದ ಬಟ್ಟೆಗಳನ್ನ ಬದಲಾಯಿಸಬೇಕು.+ ಯಾಕಂದ್ರೆ ಆ ಬಟ್ಟೆಗಳು ಪವಿತ್ರವಾಗಿವೆ. ಆ ಬಟ್ಟೆಗಳನ್ನ ಬದಲಾಯಿಸದೆ ಅವರು ಹೊರಗಿನ ಅಂಗಳಕ್ಕೆ ಹೋಗಬಾರದು. ಜನ ಪ್ರವೇಶಕ್ಕೆ ಅನುಮತಿ ಇರೋ ಜಾಗಗಳಿಗೆ ಹೋಗೋಕೆ ಮುಂಚೆ ಪುರೋಹಿತರು ಬೇರೆ ಬಟ್ಟೆ ಹಾಕೊಬೇಕು” ಅಂದ.
15 ದೇವಾಲಯದ ಒಳಗಿನ ಸ್ಥಳವನ್ನ ಅವನು ಅಳತೆ ಮಾಡಿ ಮುಗಿಸಿದ ಮೇಲೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲ+ ಮೂಲಕ ನನ್ನನ್ನ ಹೊರಗೆ ಕರ್ಕೊಂಡು ಬಂದ. ಆಮೇಲೆ ಇಡೀ ಜಾಗವನ್ನ ಅಳತೆ ಮಾಡಿದ.
16 ಅವನು ಅಳತೆ ಕೋಲಿಂದ* ಪೂರ್ವ ಭಾಗವನ್ನ ಅಳೆದ. ಒಂದು ಕಡೆಯಿಂದ ಇನ್ನೊಂದು ಕಡೆ ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು.
17 ಅವನು ಅಳತೆ ಕೋಲಿಂದ ಉತ್ತರ ಭಾಗವನ್ನ ಅಳೆದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು.
18 ಅವನು ಅಳತೆ ಕೋಲಿಂದ ದಕ್ಷಿಣ ಭಾಗವನ್ನ ಅಳೆದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು.
19 ಆಮೇಲೆ ಅವನು ಪಶ್ಚಿಮ ಭಾಗಕ್ಕೆ ಹೋಗಿ ಆ ಭಾಗವನ್ನ ಅಳತೆ ಮಾಡಿದ. ಅದ್ರ ಉದ್ದ 500 ಅಳತೆ ಕೋಲಿನಷ್ಟಿತ್ತು.
20 ಅವನು ಅದ್ರ ನಾಲ್ಕು ಭಾಗಗಳನ್ನೂ ಅಳೆದ. ಅದ್ರ ಸುತ್ತ ಒಂದು ಗೋಡೆ ಇತ್ತು.+ ಅದ್ರ ಉದ್ದ ಮತ್ತು ಅಗಲ 500 ಅಳತೆ ಕೋಲಿನಷ್ಟಿತ್ತು.+ ಪವಿತ್ರವಾದ ಸ್ಥಳವನ್ನ ಮತ್ತು ಸಾಮಾನ್ಯ ಬಳಕೆಗಾಗಿದ್ದ ಸ್ಥಳವನ್ನ ಬೇರೆಬೇರೆ ಮಾಡೋಕೆ ಈ ಗೋಡೆ ಇತ್ತು.+
43 ಆಮೇಲೆ ಅವನು ನನ್ನನ್ನ ಪೂರ್ವಕ್ಕೆ ಮುಖಮಾಡಿರೋ ಬಾಗಿಲ ಹತ್ರ ಕರ್ಕೊಂಡು ಹೋದ.+ 2 ಅಲ್ಲಿ ಇಸ್ರಾಯೇಲಿನ ದೇವರ ಮಹಿಮೆ ಪೂರ್ವದಿಂದ ಬರೋದನ್ನ ನಾನು ನೋಡಿದೆ.+ ಆತನ ಧ್ವನಿ ಪ್ರವಾಹದ ತರ ನುಗ್ಗಿಬರೋ ನೀರಿನ ಶಬ್ದದ ಹಾಗಿತ್ತು.+ ಆತನ ಮಹಿಮೆಯಿಂದ ಭೂಮಿ ಪ್ರಜ್ವಲಿಸ್ತು.+ 3 ನಾನು* ಪಟ್ಟಣವನ್ನ ಹಾಳುಮಾಡೋಕೆ ಬಂದಾಗ ನೋಡಿದಂಥ ದರ್ಶನವನ್ನೇ ಈಗಲೂ ನೋಡಿದೆ. ಅದು ಕೆಬಾರ್ ನದಿ ಹತ್ರ ನಾನು ನೋಡಿದ್ದ ದರ್ಶನದ ತರಾನೇ ಇತ್ತು.+ ಅದನ್ನ ನೋಡಿ ನಾನು ನೆಲದ ಮೇಲೆ ಅಡ್ಡಬಿದ್ದೆ.
4 ಆಗ ಯೆಹೋವನ ಮಹಿಮೆ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಂದ ಆಲಯಕ್ಕೆ ಬಂತು.+ 5 ಆಮೇಲೆ ಪವಿತ್ರಶಕ್ತಿ* ನನ್ನನ್ನ ಮೇಲಕ್ಕೆತ್ತಿ ಒಳಗಿನ ಅಂಗಳಕ್ಕೆ ಕರ್ಕೊಂಡು ಬಂತು. ಯೆಹೋವನ ಮಹಿಮೆ ಇಡೀ ದೇವಾಲಯದಲ್ಲಿ ತುಂಬಿರೋದನ್ನ ನಾನು ನೋಡಿದೆ.+ 6 ಆಮೇಲೆ ದೇವಾಲಯದ ಒಳಗಿಂದ ನನ್ನ ಜೊತೆ ಯಾರೋ ಮಾತಾಡಿದ್ದು ಕೇಳಿಸ್ತು. ಅವನು ಬಂದು ನನ್ನ ಪಕ್ಕದಲ್ಲಿ ನಿಂತು,+ 7 ನನಗೆ ಹೀಗಂದ:
“ಮನುಷ್ಯಕುಮಾರನೇ, ಇದು ನನ್ನ ಸಿಂಹಾಸನ ಇರೋ ಜಾಗ,+ ನನ್ನ ಪಾದಗಳನ್ನ ಇಡೋ ಜಾಗ.+ ಇಲ್ಲಿ ನಾನು ಇಸ್ರಾಯೇಲ್ಯರ ಜೊತೆ ಶಾಶ್ವತವಾಗಿ ವಾಸಿಸ್ತೀನಿ.+ ಇನ್ಮುಂದೆ ಇಸ್ರಾಯೇಲ್ಯರು ಮತ್ತು ಅವ್ರ ರಾಜರು ನಂಬಿಕೆ ದ್ರೋಹ ಮಾಡಿ* ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಲ್ಲ.+ ಅವ್ರ ರಾಜರು ಸತ್ತಾಗ ಆ ಶವಗಳಿಂದಾನೂ ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಲ್ಲ. 8 ಈ ಹಿಂದೆ ಅವರು ನನ್ನ ಆಲಯದ ಹೊಸ್ತಿಲ ಪಕ್ಕದಲ್ಲಿ ಅವ್ರ ಮಂದಿರದ ಹೊಸ್ತಿಲನ್ನ ಇಟ್ರು, ನನ್ನ ಆಲಯದ ಬಾಗಿಲಿನ ಚೌಕಟ್ಟಿನ ಪಕ್ಕದಲ್ಲಿ ಅವ್ರ ಮಂದಿರದ ಬಾಗಿಲಿನ ಚೌಕಟ್ಟನ್ನ ಇಟ್ರು. ನನ್ನ ಮತ್ತು ಅವ್ರ ಮಧ್ಯ ಗೋಡೆ ಮಾತ್ರ ಅಡ್ಡ ಇತ್ತು.+ ಇಂಥ ಅಸಹ್ಯ ಕೆಲಸಗಳನ್ನ ಮಾಡಿ ಅವರು ನನ್ನ ಪವಿತ್ರ ಹೆಸ್ರನ್ನ ಅಶುದ್ಧ ಮಾಡಿದ್ರು. ಹಾಗಾಗಿ ನಾನು ಕೋಪದಿಂದ ಅವ್ರನ್ನ ನಾಶ ಮಾಡಿದೆ.+ 9 ಈಗ ಅವರು ನನಗೆ ನಂಬಿಕೆ ದ್ರೋಹ ಮಾಡದಿರಲಿ ಮತ್ತು ಅವ್ರ ರಾಜರ ಶವಗಳನ್ನ ನನ್ನ ಮುಂದಿಂದ ತೆಗೆದು ದೂರ ಬಿಸಾಡಲಿ. ಆಗ ನಾನು ಅವ್ರ ಜೊತೆ ಶಾಶ್ವತವಾಗಿ ವಾಸಿಸ್ತೀನಿ.+
10 ಮನುಷ್ಯಕುಮಾರನೇ, ಇಸ್ರಾಯೇಲ್ಯರು ತಾವು ಮಾಡಿದ ಪಾಪಗಳನ್ನ ನೆನಸಿ ನಾಚಿಕೆಪಡಬೇಕು.+ ಹಾಗಾಗಿ ನೀನು ನೋಡಿದ ಆಲಯದ ಬಗ್ಗೆ ಅವ್ರಿಗೆ ವರ್ಣಿಸು.+ ಅದ್ರ ನಕ್ಷೆಯನ್ನ ಅವರು ಚೆನ್ನಾಗಿ ನೋಡಬೇಕು. 11 ಅವ್ರ ಪಾಪಗಳನ್ನ ನೆನಸಿ ನಾಚಿಕೆಪಟ್ರೆ ನೀನು ಅವ್ರಿಗೆ ಆಲಯದ ನಕ್ಷೆ, ಅದ್ರ ಯೋಜನೆ, ಅದ್ರ ಬಾಗಿಲುಗಳು ಇರೋ ಜಾಗಗಳ ಬಗ್ಗೆ ಹೇಳಬೇಕು.+ ಅದ್ರ ಎಲ್ಲ ನಕ್ಷೆಗಳನ್ನ, ಅದ್ರ ಶಾಸನ ಮತ್ತು ನಿಯಮಗಳನ್ನ ಅವ್ರಿಗೆ ತೋರಿಸು. ಅವ್ರ ಕಣ್ಮುಂದೆ ಅವುಗಳನ್ನ ಬರಿ. ಅವರು ಅದ್ರ ಎಲ್ಲ ನಕ್ಷೆಗಳನ್ನ ಗಮನಿಸಿ, ಅದ್ರ ನಿಯಮಗಳನ್ನ ಪಾಲಿಸಿ ನಡಿಯೋಕೆ ನೀನು ಹಾಗೆ ಮಾಡು.+ 12 ಆಲಯದ ನಿಯಮ ಏನಂದ್ರೆ, ಬೆಟ್ಟದ ಮೇಲೆ ಸುತ್ತ ಇರೋ ಜಾಗ ಎಲ್ಲ ಅತಿ ಪವಿತ್ರವಾಗಿದೆ.+ ನೋಡು! ಇದೇ ಆಲಯದ ನಿಯಮ.
13 ಮೊಳದ ಲೆಕ್ಕದಲ್ಲಿ ಯಜ್ಞವೇದಿಯ ಅಳತೆ ಹೀಗಿದೆ:+ (ಇಲ್ಲಿ ಹೇಳಿರೋ ಮೊಳಕ್ಕೆ ಒಂದು ಕೈಯಗಲ ಜಾಸ್ತಿ ಸೇರಿಸಲಾಗಿದೆ.)* ಯಜ್ಞವೇದಿಯ ತಳ ಒಂದು ಮೊಳ, ಅದ್ರ ಅಗಲ ಒಂದು ಮೊಳ. ಅದ್ರ ತಳದ ಸುತ್ತ ಒಂದು ಅಂಚು ಇದೆ. ಅದು ಒಂದು ಗೇಣು* ಅಗಲ ಇದೆ. ಇದು ಯಜ್ಞವೇದಿಯ ತಳ. 14 ಯಜ್ಞವೇದಿಯ ತಳದಿಂದ ಸುತ್ತ ಇರೋ ಚಿಕ್ಕ ಅಂಚಿನ ತನಕ 2 ಮೊಳ, ಆ ಅಂಚಿನ ಅಗಲ ಒಂದು ಮೊಳ. ಸುತ್ತ ಇರೋ ಚಿಕ್ಕ ಅಂಚಿನಿಂದ ದೊಡ್ಡ ಅಂಚಿನ ತನಕ 4 ಮೊಳ, ದೊಡ್ಡ ಅಂಚಿನ ಅಗಲ ಒಂದು ಮೊಳ. 15 ಯಜ್ಞವೇದಿಯ ಅಗ್ನಿಕುಂಡ ನಾಲ್ಕು ಮೊಳ ಎತ್ತರ ಇದೆ. ಈ ಅಗ್ನಿಕುಂಡದ ನಾಲ್ಕು ಮೂಲೆಗಳಲ್ಲಿ ನಾಲ್ಕು ಕೊಂಬುಗಳು+ ಮೇಲೆ ಮುಖ ಮಾಡಿವೆ. 16 ಯಜ್ಞವೇದಿಯ ಅಗ್ನಿಕುಂಡ ಚೌಕಾಕಾರವಾಗಿದೆ. ಅದು 12 ಮೊಳ ಉದ್ದ, 12 ಮೊಳ ಅಗಲ.+ 17 ಸುತ್ತ ಇರೋ ಅಂಚಿನ ಬದಿ 14 ಮೊಳ ಉದ್ದ, 14 ಮೊಳ ಅಗಲ. ಆ ಅಂಚಿನ ಸುತ್ತ ಇರೋ ಅಂಚು ಅರ್ಧ ಮೊಳ ಇದೆ. ಯಜ್ಞವೇದಿಯ ತಳ ಎಲ್ಲ ಬದಿಗಳಲ್ಲಿ ಒಂದು ಮೊಳ ಇದೆ.
ಯಜ್ಞವೇದಿಯ ಮೆಟ್ಟಿಲುಗಳು ಪೂರ್ವ ಭಾಗದಲ್ಲಿವೆ.”
18 ಆಮೇಲೆ ಅವನು ನನಗೆ “ಮನುಷ್ಯಕುಮಾರನೇ, ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಯಜ್ಞವೇದಿಯನ್ನ ಕಟ್ಟುವಾಗ ಈ ನಿರ್ದೇಶನಗಳನ್ನ ಪಾಲಿಸಬೇಕು. ಇದ್ರಿಂದ ಅದ್ರ ಮೇಲೆ ಸರ್ವಾಂಗಹೋಮ ಬಲಿಗಳನ್ನ ಕೊಡುವಾಗ ರಕ್ತ ಚಿಮಿಕಿಸೋಕೆ ಆಗುತ್ತೆ.’+
19 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಪಾಪಪರಿಹಾರಕ ಬಲಿ ಕೊಡೋಕೆ ನೀನು ಹಿಂಡಿಂದ ಒಂದು ಎಳೇ ಹೋರಿಯನ್ನ ತಂದು ಕೊಡು.+ ನನ್ನ ಮುಂದೆ ಬಂದು ಸೇವೆಮಾಡೋ ಲೇವಿಯರಿಗೆ ಅಂದ್ರೆ ಚಾದೋಕನ ವಂಶದ ಪುರೋಹಿತರಿಗೆ ನೀನು ಅದನ್ನ ಕೊಡಬೇಕು.+ 20 ನೀನು ಅದ್ರ ರಕ್ತದಲ್ಲಿ ಸ್ವಲ್ಪವನ್ನ ತಗೊಂಡು ಯಜ್ಞವೇದಿಯ ನಾಲ್ಕು ಕೊಂಬುಗಳಿಗೆ, ಸುತ್ತ ಇರೋ ಅಂಚಿಗೆ ಮತ್ತು ಅದ್ರ ನಾಲ್ಕು ಮೂಲೆಗಳಿಗೆ ಹಚ್ಚಬೇಕು. ಹೀಗೆ ಮಾಡಿ ಯಜ್ಞವೇದಿಯನ್ನ ಪರಿಶುದ್ಧ ಮಾಡಬೇಕು ಮತ್ತು ಅದಕ್ಕಾಗಿ ಪ್ರಾಯಶ್ಚಿತ್ತವನ್ನ ಮಾಡಬೇಕು.+ 21 ಆಮೇಲೆ ಪಾಪಪರಿಹಾರಕ ಬಲಿಯಾಗಿ ಕೊಟ್ಟ ಎಳೇ ಹೋರಿಯನ್ನ ತಗೊಂಡು ಹೋಗಿ ದೇವಾಲಯದ ನೇಮಿತ ಜಾಗದಲ್ಲಿ ಅಂದ್ರೆ ಆರಾಧನಾ ಸ್ಥಳದ ಹೊರಗೆ ಸುಟ್ಟುಬಿಡಬೇಕು.+ 22 ಎರಡನೇ ದಿನ ನೀನು ಪಾಪಪರಿಹಾರಕ ಬಲಿ ಕೊಡೋಕೆ ಯಾವ ದೋಷನೂ ಇಲ್ಲದ ಒಂದು ಹೋತ ತರಬೇಕು. ಅವರು ಎಳೇ ಹೋರಿಯನ್ನ ಕೊಟ್ಟು ಯಜ್ಞವೇದಿಯನ್ನ ಪರಿಶುದ್ಧ ಮಾಡಿದ ಹಾಗೆ ಹೋತವನ್ನ ಕೊಟ್ಟು ಯಜ್ಞವೇದಿಯನ್ನ ಪರಿಶುದ್ಧ ಮಾಡಬೇಕು.’
23 ‘ನೀನು ಯಜ್ಞವೇದಿಯನ್ನ ಪರಿಶುದ್ಧ ಮಾಡಿದ ಮೇಲೆ ಹಿಂಡಿಂದ ಒಂದು ಎಳೇ ಹೋರಿಯನ್ನ ಮತ್ತು ಮಂದೆಯಿಂದ ಒಂದು ಟಗರನ್ನ ತಂದು ಕೊಡಬೇಕು. ಅವುಗಳಲ್ಲಿ ಯಾವ ದೋಷನೂ ಇರಬಾರದು. 24 ನೀನು ಅವುಗಳನ್ನ ಯೆಹೋವನಿಗೆ ಕೊಡಬೇಕು. ಪುರೋಹಿತರು ಅವುಗಳ ಮೇಲೆ ಉಪ್ಪನ್ನ ಎರಚಬೇಕು+ ಮತ್ತು ಅವುಗಳನ್ನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. 25 ಪಾಪಪರಿಹಾರಕ ಬಲಿಗಾಗಿ ನೀನು ಪ್ರತಿದಿನ ಒಂದು ಹೋತ, ಒಂದು ಎಳೇ ಹೋರಿ ಮತ್ತು ಒಂದು ಟಗರನ್ನ ತಂದು ಕೊಡಬೇಕು. ಹೀಗೆ ಏಳು ದಿನ ತರಬೇಕು.+ ಆ ಪ್ರಾಣಿಗಳಲ್ಲಿ ಯಾವ ದೋಷನೂ ಇರಬಾರದು. 26 ಏಳು ದಿನ ಅವರು ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಅವರು ಅದನ್ನ ಶುದ್ಧಮಾಡಿ ಉದ್ಘಾಟಿಸಬೇಕು. 27 ಏಳು ದಿನ ಆದ್ಮೇಲೆ ಎಂಟನೇ ದಿನ+ ಸರ್ವಾಂಗಹೋಮ ಬಲಿ ಮತ್ತು ಸಮಾಧಾನ ಬಲಿಗಾಗಿ ನೀವು* ತಂದು ಕೊಡೋ ಪ್ರಾಣಿಗಳನ್ನ ಯಜ್ಞವೇದಿಯ ಮೇಲೆ ಪುರೋಹಿತರು ಅರ್ಪಿಸಬೇಕು. ಆಗ ನಿಮ್ಮಿಂದ ನನಗೆ ಖುಷಿ ಆಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.”
44 ಅವನು ಮತ್ತೆ ನನ್ನನ್ನ ಆರಾಧನಾ ಸ್ಥಳದ ಹೊರಗಿನ ಬಾಗಿಲಿಗೆ ಅಂದ್ರೆ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಗೆ ಕರ್ಕೊಂಡು ಹೋದ.+ ಆ ಬಾಗಿಲು ಮುಚ್ಚಿತ್ತು.+ 2 ಆಗ ಯೆಹೋವ ನನಗೆ ಹೀಗಂದನು: “ಈ ಬಾಗಿಲು ಯಾವಾಗ್ಲೂ ಮುಚ್ಚಿರಬೇಕು, ಇದನ್ನ ತೆಗೀಬಾರದು. ಯಾರೂ ಇದ್ರೊಳಗಿಂದ ಬರಬಾರದು. ಯಾಕಂದ್ರೆ ಇಸ್ರಾಯೇಲಿನ ದೇವರಾದ ಯೆಹೋವ ಈ ಬಾಗಿಲಿಂದ ಬಂದಿದ್ದಾನೆ.+ ಹಾಗಾಗಿ ಇದು ಮುಚ್ಚೇ ಇರಬೇಕು. 3 ಆದ್ರೆ ಯೆಹೋವನ ಮುಂದೆ ಆಹಾರ ತಿನ್ನೋಕೆ ಪ್ರಧಾನ ಅಲ್ಲಿ ಕೂತ್ಕೊತಾನೆ.+ ಯಾಕಂದ್ರೆ ಅವನು ಪ್ರಧಾನ. ಅವನು ಆ ಬಾಗಿಲಿನ ಮಂಟಪದ ಒಳಗಿಂದ ಬಂದು ಅಲ್ಲಿಂದಾನೇ ಹೊರಗೆ ಹೋಗ್ತಾನೆ.”+
4 ಆಮೇಲೆ ಆ ಪುರುಷ ನನ್ನನ್ನ ಉತ್ತರ ಬಾಗಿಲಿಂದ ದೇವಾಲಯದ ಮುಂದೆ ಕರ್ಕೊಂಡು ಬಂದ. ಯೆಹೋವನ ಆಲಯದಲ್ಲೆಲ್ಲ ಯೆಹೋವನ ಮಹಿಮೆ ತುಂಬ್ಕೊಂಡಿತ್ತು.+ ನಾನು ಅದನ್ನ ನೋಡಿ ನೆಲದ ಮೇಲೆ ಅಡ್ಡಬಿದ್ದೆ.+ 5 ಆಗ ಯೆಹೋವ ನನಗೆ ಹೀಗಂದನು: “ಮನುಷ್ಯಕುಮಾರನೇ, ನಾನು ನಿನಗೆ ಯೆಹೋವನ ಆಲಯದ ಶಾಸನಗಳ ಬಗ್ಗೆ ಮತ್ತು ನಿಯಮಗಳ ಬಗ್ಗೆ ಹೇಳೋ ಪ್ರತಿಯೊಂದು ಮಾತಿಗೆ ಗಮನಕೊಡು, ಅದನ್ನ ಚೆನ್ನಾಗಿ ಕೇಳಿಸ್ಕೊ. ನಾನು ತೋರಿಸೋದನ್ನೆಲ್ಲ ಜಾಗ್ರತೆಯಿಂದ ನೋಡು. ದೇವಾಲಯದ ಬಾಗಿಲಿಗೆ ಮತ್ತು ಆರಾಧನಾ ಸ್ಥಳದಿಂದ ಹೊರಗೆ ಹೋಗೋ ಬಾಗಿಲುಗಳಿಗೆ ಜಾಗ್ರತೆಯಿಂದ ಗಮನಕೊಡು.+ 6 ದಂಗೆಕೋರ ಇಸ್ರಾಯೇಲ್ಯರಿಗೆ ನೀನು ಏನು ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲ್ಯರೇ, ನಿಮ್ಮದು ತುಂಬ ಅತಿಯಾಯ್ತು, ತುಂಬ ಅಸಹ್ಯ ಕೆಲಸಗಳನ್ನ ಮಾಡ್ತಿದ್ದೀರ. 7 ಹೃದಯದಲ್ಲೂ ದೇಹದಲ್ಲೂ ಸುನ್ನತಿ ಆಗಿರದ ವಿದೇಶಿಯರನ್ನ ನನ್ನ ಆರಾಧನಾ ಸ್ಥಳದ ಒಳಗೆ ಕರ್ಕೊಂಡು ಬರ್ತಿದ್ದೀರ. ಅವರು ನನ್ನ ಆರಾಧನಾ ಸ್ಥಳವನ್ನ ಅಪವಿತ್ರ ಮಾಡ್ತಿದ್ದಾರೆ. ನೀವು ನನಗೆ ರೊಟ್ಟಿ, ಕೊಬ್ಬು, ರಕ್ತವನ್ನ ಕೊಡ್ತಿದ್ದೀರ. ಅದೇ ಸಮಯದಲ್ಲಿ ಅಸಹ್ಯ ಕೆಲಸಗಳನ್ನ ಮಾಡಿ ನನ್ನ ಒಪ್ಪಂದವನ್ನ ಮುರೀತಾ ಇದ್ದೀರ. 8 ನೀವು ನನ್ನ ಆಲಯದ ಪವಿತ್ರ ವಸ್ತುಗಳನ್ನ ನೋಡ್ಕೊಳ್ಳಿಲ್ಲ.+ ನನ್ನ ಆರಾಧನಾ ಸ್ಥಳದಲ್ಲಿ ನೀವು ಮಾಡಬೇಕಾದ ಕರ್ತವ್ಯಗಳನ್ನ ಬೇರೆಯವ್ರಿಗೆ ಹೇಳ್ತಿದ್ದೀರ.”’
9 ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಇಸ್ರಾಯೇಲಲ್ಲಿ ವಾಸ ಮಾಡ್ತಾ ಹೃದಯದಲ್ಲೂ ದೇಹದಲ್ಲೂ ಸುನ್ನತಿ ಆಗಿರದ ಯಾವ ವಿದೇಶಿನೂ ನನ್ನ ಆರಾಧನಾ ಸ್ಥಳದ ಒಳಗೆ ಬರಬಾರದು.”’
10 ‘ಇಸ್ರಾಯೇಲ್ಯರು ನನ್ನಿಂದ ದೂರ ಹೋಗಿ ಅಸಹ್ಯ ಮೂರ್ತಿಗಳನ್ನ* ಆರಾಧಿಸಿದಾಗ ನನ್ನನ್ನ ಬಿಟ್ಟು ದೂರ ಹೋದ ಲೇವಿಯರು+ ತಾವು ಮಾಡಿದ ಪಾಪದ ಪರಿಣಾಮಗಳನ್ನ ಅನುಭವಿಸ್ತಾರೆ. 11 ಆಮೇಲೆ ಅವರು ನನ್ನ ಆರಾಧನಾ ಸ್ಥಳದ ಸೇವಕರಾಗಿ ಆಲಯದ ಬಾಗಿಲುಗಳನ್ನ ನೋಡ್ಕೊಳ್ತಾರೆ,+ ಆಲಯದಲ್ಲಿ ಸೇವೆ ಮಾಡ್ತಾರೆ. ಅವರು ಜನ್ರಿಗೋಸ್ಕರ ಸರ್ವಾಂಗಹೋಮ ಬಲಿ ಮತ್ತು ಬೇರೆ ಬಲಿಗಳ ಪ್ರಾಣಿಗಳನ್ನ ಕಡೀತಾರೆ. ಅವರು ಜನ್ರ ಮುಂದೆ ನಿಂತು ಜನ್ರ ಸೇವೆ ಮಾಡ್ತಾರೆ. 12 ಈ ಹಿಂದೆ ಅವರು ಜನ್ರ ಹೊಲಸು ಮೂರ್ತಿಗಳ ಮುಂದೆ ನಿಂತು ಜನ್ರ ಸೇವೆ ಮಾಡಿದ್ರು. ಇಸ್ರಾಯೇಲ್ಯರು ಪಾಪ ಮಾಡಿದ್ರಿಂದ ಆ ಲೇವಿಯರು ಅವ್ರಿಗೆ ಎಡವಿಸೋ ಕಲ್ಲಾದ್ರು.+ ಹಾಗಾಗಿ ನಾನು ಕೈಯೆತ್ತಿ ಅವ್ರ ವಿರುದ್ಧ ಪ್ರಮಾಣ ಮಾಡಿ ಹೇಳ್ತಿದ್ದೀನಿ, ಅವರು ಮಾಡಿದ ಪಾಪದ ಪರಿಣಾಮಗಳನ್ನ ಅನುಭವಿಸ್ತಾರೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 13 ‘ಅವರು ನನ್ನ ಮುಂದೆ ಬಂದು ನನ್ನ ಪುರೋಹಿತರಾಗಿ ಸೇವೆ ಮಾಡೋಕೆ ಆಗಲ್ಲ. ನನ್ನ ಪವಿತ್ರವಾದ ಮತ್ತು ಅತಿ ಪವಿತ್ರವಾದ ಯಾವ ವಸ್ತುಗಳ ಹತ್ರ ಹೋಗೋಕೂ ಅವ್ರಿಗೆ ಆಗಲ್ಲ. ಅವರು ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ ನಾಚಿಕೆಪಡಬೇಕಾಗುತ್ತೆ. 14 ಆದ್ರೆ ದೇವಾಲಯದ ಜವಾಬ್ದಾರಿಗಳನ್ನ ಅಂದ್ರೆ ಅಲ್ಲಿ ನಡೀಬೇಕಾದ ಸೇವೆ, ಎಲ್ಲ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿಗಳನ್ನ ನಾನು ಅವ್ರಿಗೆ ಕೊಡ್ತೀನಿ.’+
15 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್ಯರು ನನ್ನಿಂದ ದೂರ ಹೋಗಿದ್ದಾಗ ಲೇವಿಯರೂ ಚಾದೋಕನ+ ವಂಶದವರೂ ಆದ ಪುರೋಹಿತರು ಹಾಗೆ ಮಾಡದೆ ನನ್ನ ಆರಾಧನಾ ಸ್ಥಳದ ಜವಾಬ್ದಾರಿಗಳನ್ನ ನೋಡ್ಕೊಂಡ್ರು.+ ಹಾಗಾಗಿ ಅವರು ನನ್ನ ಮುಂದೆ ಬಂದು ನನ್ನ ಸೇವೆ ಮಾಡ್ತಾರೆ. ನನ್ನ ಮುಂದೆ ನಿಂತು ನನಗೆ ಕೊಬ್ಬು+ ಮತ್ತು ರಕ್ತವನ್ನ ಕೊಡ್ತಾರೆ.+ 16 ನನ್ನ ಆರಾಧನಾ ಸ್ಥಳದ ಒಳಗೆ ಬರೋರು ಅವ್ರೇ. ಅವರು ನನ್ನ ಮೇಜಿನ* ಹತ್ರ ಬಂದು ನನ್ನ ಸೇವೆ ಮಾಡ್ತಾರೆ.+ ಅವ್ರಿಗೆ ನಾನು ಕೊಟ್ಟ ಜವಾಬ್ದಾರಿಗಳನ್ನ ನೋಡ್ಕೊಳ್ತಾರೆ.+
17 ಅವರು ಒಳಗಿನ ಅಂಗಳಕ್ಕೆ ಬರುವಾಗ ನಾರಿನ ಬಟ್ಟೆಗಳನ್ನ ಹಾಕೊಬೇಕು.+ ಒಳಗಿನ ಅಂಗಳದಲ್ಲಿ ಅಥವಾ ಅದ್ರ ಬಾಗಿಲಲ್ಲಿ ಸೇವೆಮಾಡುವಾಗ ಅವರು ಯಾವ ಉಣ್ಣೆ ಬಟ್ಟೆಯನ್ನೂ ಹಾಕಿರಬಾರದು. 18 ಅವರು ನಾರುಬಟ್ಟೆಯ ಪೇಟ, ನಾರುಬಟ್ಟೆಯ ಚಡ್ಡಿಯನ್ನ ಹಾಕಿರಬೇಕು.+ ಬೆವರು ಬರಿಸೋ ಯಾವ ಬಟ್ಟೆಯನ್ನೂ ಅವರು ಹಾಕಿರಬಾರದು. 19 ಜನ ಇರೋ ಹೊರಗಿನ ಅಂಗಳಕ್ಕೆ ಹೋಗೋ ಮುಂಚೆ ಆ ಪುರೋಹಿತರು ಬೇರೆ ಬಟ್ಟೆಗಳನ್ನ ಹಾಕೊಬೇಕು. ಒಳಗೆ ಸೇವೆ ಮಾಡುವಾಗ ಹಾಕಿದ್ದ ಬಟ್ಟೆಗಳನ್ನ ಪವಿತ್ರ ಊಟದ ಕೋಣೆಗಳಲ್ಲಿ ತೆಗೆದು ಇಡಬೇಕು.+ ಆ ಬಟ್ಟೆಗಳಿಂದ ಪವಿತ್ರತೆಯನ್ನ ಬೇರೆಯವ್ರಿಗೆ ದಾಟಿಸದೆ ಇರೋಕೆ ಪುರೋಹಿತರು ಹಾಗೆ ಮಾಡಬೇಕು. 20 ಅವರು ತಮ್ಮ ತಲೆ ಬೋಳಿಸಬಾರದು.+ ಅವರು ತಮ್ಮ ತಲೆ ಕೂದಲನ್ನ ಉದ್ದ ಬೆಳೆಸದೆ ನೀಟಾಗಿ ಕತ್ತರಿಸಬೇಕು. 21 ಪುರೋಹಿತರು ಒಳಗಿನ ಅಂಗಳಕ್ಕೆ ಹೋಗುವಾಗ ದ್ರಾಕ್ಷಾಮದ್ಯ ಕುಡಿದಿರಬಾರದು.+ 22 ಅವರು ವಿಧವೆಯನ್ನಾಗಲಿ ವಿಚ್ಛೇದನ ಆಗಿರೋ ಹೆಂಗಸನ್ನಾಗಲಿ ಮದುವೆ ಆಗಬಾರದು.+ ಆದ್ರೆ ಇಸ್ರಾಯೇಲ್ಯರ ಕನ್ಯೆಯನ್ನ ಅಥವಾ ಪುರೋಹಿತನ ಹೆಂಡತಿಯಾಗಿದ್ದು ವಿಧವೆ ಆದವಳನ್ನ ಮದುವೆ ಆಗಬಹುದು.’+
23 ‘ಅವರು ನನ್ನ ಜನ್ರಿಗೆ ಪವಿತ್ರ ಮತ್ತು ಸಾಮಾನ್ಯ ವಿಷ್ಯಗಳ, ಶುದ್ಧ ಮತ್ತು ಅಶುದ್ಧ ವಿಷ್ಯಗಳ ಮಧ್ಯ ಇರೋ ವ್ಯತ್ಯಾಸವನ್ನ ಕಲಿಸಬೇಕು.+ 24 ಅವರು ನ್ಯಾಯಾಧೀಶರಾಗಿದ್ದು ಮೊಕದ್ದಮೆಯನ್ನ ವಿಚಾರಿಸಬೇಕು.+ ನನ್ನ ತೀರ್ಪುಗಳ ಪ್ರಕಾರ ತೀರ್ಪು ಕೊಡಬೇಕು.+ ನನ್ನ ಎಲ್ಲ ಹಬ್ಬಗಳ ವಿಷ್ಯದಲ್ಲಿ ನಾನು ಕೊಟ್ಟ ನಿಯಮಗಳನ್ನ, ಶಾಸನಗಳನ್ನ ಪಾಲಿಸಬೇಕು.+ ನನ್ನ ಸಬ್ಬತ್‌ಗಳನ್ನ ಪವಿತ್ರವಾಗಿ ನೋಡಬೇಕು. 25 ಯಾವ ಮನುಷ್ಯನ ಶವದ ಹತ್ರಾನೂ ಅವರು ಹೋಗಬಾರದು, ಹೋದ್ರೆ ಅಶುದ್ಧರಾಗ್ತಾರೆ. ಆದ್ರೆ ಅವ್ರ ಅಪ್ಪ, ಅಮ್ಮ, ಮಗ, ಮಗಳು, ಅಣ್ಣ, ತಮ್ಮ ಅಥವಾ ಮದುವೆ ಆಗಿರದ ಅಕ್ಕ, ತಂಗಿ ತೀರಿ ಹೋದ್ರೆ ಅವ್ರ ಶವದ ಹತ್ರ ಹೋಗಬಹುದು, ತಮ್ಮನ್ನ ಅಶುದ್ಧ ಮಾಡ್ಕೊಬಹುದು.+ 26 ಒಬ್ಬ ಪುರೋಹಿತ ಶುದ್ಧ ಆದಮೇಲೆ ಸೇವೆ ಮಾಡೋಕೆ ಏಳು ದಿನ ಕಾಯಬೇಕು. 27 ಅವನು ಸೇವೆ ಮಾಡೋಕೆ ಪವಿತ್ರವಾದ ಸ್ಥಳದ ಒಳಗೆ ಅಂದ್ರೆ ಒಳಗಿನ ಅಂಗಳದ ಒಳಗೆ ಹೋದ ದಿನ ಅವನಿಗಾಗಿ ಪಾಪಪರಿಹಾರಕ ಬಲಿಯನ್ನ ಕೊಡಬೇಕು’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
28 ‘ನಾನೇ ಪುರೋಹಿತರ ಆಸ್ತಿ. ನೀವು ಇಸ್ರಾಯೇಲಲ್ಲಿ ಅವ್ರಿಗೆ ಯಾವ ಸೊತ್ತನ್ನೂ ಕೊಡಬಾರದು. ಯಾಕಂದ್ರೆ ನಾನೇ ಅವ್ರ ಸೊತ್ತು.+ 29 ಧಾನ್ಯ ಅರ್ಪಣೆ,+ ಪಾಪಪರಿಹಾರಕ ಬಲಿ ಮತ್ತು ದೋಷಪರಿಹಾರಕ ಬಲಿಯಾಗಿ ಕೊಟ್ಟಿದ್ದನ್ನ ಅವರು ತಿಂತಾರೆ.+ ಅಷ್ಟೇ ಅಲ್ಲ ಇಸ್ರಾಯೇಲಲ್ಲಿ ದೇವರಿಗೆ ಅಂತ ಇಟ್ಟಿರೋದೆಲ್ಲ ಅವ್ರಿಗೆ ಸೇರಬೇಕು.+ 30 ಎಲ್ಲ ಮೊದಲ ಬೆಳೆಗಳಲ್ಲಿ ತುಂಬ ಚೆನ್ನಾಗಿರೋದನ್ನ ಮತ್ತು ನೀವು ಕೊಡೋ ಎಲ್ಲ ತರದ ಕಾಣಿಕೆಗಳು ಪುರೋಹಿತರದ್ದಾಗುತ್ತೆ.+ ನೀವು ದವಸಧಾನ್ಯದ ಮೊದಲ ಬೆಳೆಯಲ್ಲಿ ಸ್ವಲ್ಪವನ್ನ ಕುಟ್ಟಿ ನುಚ್ಚು ಮಾಡಿ ಪುರೋಹಿತನಿಗೆ ಕೊಡಬೇಕು.+ ಇದ್ರಿಂದ ನಿಮ್ಮ ಕುಟುಂಬದವ್ರ ಮೇಲೆ ಆಶೀರ್ವಾದ ಇರುತ್ತೆ.+ 31 ಸತ್ತುಬಿದ್ದ ಮತ್ತು ಬೇರೆ ಪ್ರಾಣಿ ಸೀಳಿಹಾಕಿದ ಯಾವ ಪ್ರಾಣಿಪಕ್ಷಿಯನ್ನೂ ಪುರೋಹಿತರು ತಿನ್ನಬಾರದು.’+
45 ‘ನೀವು ದೇಶವನ್ನ ಆಸ್ತಿಯಾಗಿ ಹಂಚಿಕೊಡುವಾಗ+ ದೇಶದ ಒಂದು ಭಾಗವನ್ನ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು.+ ದೇಶದಲ್ಲಿ ಈ ಭಾಗ ಪವಿತ್ರವಾಗಿರುತ್ತೆ. ಅದ್ರ ಉದ್ದ 25,000 ಮೊಳ,* ಅಗಲ 10,000 ಮೊಳ ಇರಬೇಕು.+ ಆ ಇಡೀ ಜಾಗ ಪವಿತ್ರ ಆಗಿರುತ್ತೆ. 2 ಈ ಭಾಗದೊಳಗೆ ದೇವಾಲಯಕ್ಕಾಗಿ ಚೌಕಾಕಾರವಾದ ಒಂದು ಜಾಗ ಇರಬೇಕು. ಅದರ ಉದ್ದ 500 ಮೊಳ, ಅಗಲ 500 ಮೊಳ ಆಗಿರಬೇಕು.+ ಅದ್ರ ಪ್ರತಿಯೊಂದು ಕಡೆಗಳಲ್ಲಿ 50 ಮೊಳ ಅಗಲ ಹುಲ್ಲುಗಾವಲು ಇರಬೇಕು.+ 3 ಇದ್ರಲ್ಲಿ 25,000 ಮೊಳ ಉದ್ದ ಮತ್ತು 10,000 ಮೊಳ ಅಗಲವಾದ ಜಾಗವನ್ನ ಅಳತೆ ಮಾಡಬೇಕು. ಅದ್ರೊಳಗೆ ಅತಿ ಪವಿತ್ರವಾದ ಆರಾಧನಾ ಸ್ಥಳ ಇರಬೇಕು. 4 ದೇಶದ ಈ ಭಾಗ ಯೆಹೋವನ ಮುಂದೆ ಬಂದು ಸೇವೆ ಮಾಡೋ ಆರಾಧನಾ ಸ್ಥಳದ ಸೇವಕರಾಗಿರೋ+ ಪುರೋಹಿತರಿಗಾಗಿ ಇರೋ ಒಂದು ಪವಿತ್ರ ಭಾಗವಾಗಿರುತ್ತೆ.+ ಆ ಪುರೋಹಿತರ ಮನೆಗಳು ಮತ್ತು ಆರಾಧನಾ ಸ್ಥಳಕ್ಕಾಗಿ ಒಂದು ಪವಿತ್ರ ಸ್ಥಳ ಇಲ್ಲಿ ಇರುತ್ತೆ.
5 ದೇವಾಲಯದ ಸೇವಕರಾದ ಲೇವಿಯರಿಗಾಗಿ 25,000 ಮೊಳ ಉದ್ದ, 10,000 ಮೊಳ ಅಗಲ ಇರೋ ಒಂದು ಭಾಗ ಇರುತ್ತೆ+ ಮತ್ತು 20 ಊಟದ ಕೋಣೆಗಳು+ ಅವ್ರ ಆಸ್ತಿಯಾಗಿರುತ್ತೆ.
6 ನೀವು 25,000 ಮೊಳ ಉದ್ದ (ಪವಿತ್ರ ಕಾಣಿಕೆಯಾಗಿ ಕೊಟ್ಟ ಭಾಗದ ಉದ್ದಕ್ಕೆ ಸಮ) ಮತ್ತು 5,000 ಮೊಳ ಅಗಲ ಇರೋ ಜಾಗವನ್ನ ಪಟ್ಟಣಕ್ಕೆ ಸೇರಿದ ಆಸ್ತಿಯಾಗಿ ಕೊಡಬೇಕು.+ ಇದು ಎಲ್ಲ ಇಸ್ರಾಯೇಲ್ಯರಿಗೆ ಸ್ವಂತವಾಗುತ್ತೆ.
7 ಪವಿತ್ರ ಕಾಣಿಕೆ ಮತ್ತು ಪಟ್ಟಣಕ್ಕಾಗಿ ಆರಿಸಿದ ಜಾಗದ ಎರಡು ಕಡೆಗಳಲ್ಲಿ ಪ್ರಧಾನನ ಪ್ರದೇಶವಿರುತ್ತೆ. ಆ ಪ್ರದೇಶ ಪವಿತ್ರ ಕಾಣಿಕೆ ಮತ್ತು ಪಟ್ಟಣಕ್ಕೆ ಸೇರಿದ ಆಸ್ತಿಯ ಪಕ್ಕದಲ್ಲಿ ಅಂದ್ರೆ ಅವುಗಳ ಪೂರ್ವಕ್ಕೂ ಪಶ್ಚಿಮಕ್ಕೂ ಇರುತ್ತೆ. ಪಶ್ಚಿಮದಿಂದ ಪೂರ್ವದ ತನಕ ಆ ಪ್ರದೇಶದ ಉದ್ದ ಅದ್ರ ಪಕ್ಕದಲ್ಲಿರೋ ಕುಲಗಳ ಪ್ರದೇಶದ ಉದ್ದದಷ್ಟೇ ಇರುತ್ತೆ.+ 8 ಅದು ಇಸ್ರಾಯೇಲಿನಲ್ಲಿ ಪ್ರಧಾನನ ಆಸ್ತಿಯಾಗುತ್ತೆ. ಇನ್ಮುಂದೆ ನನ್ನ ಪ್ರಧಾನರು ನನ್ನ ಜನ್ರಿಗೆ ಕಷ್ಟ ಕೊಡಲ್ಲ.+ ಅವರು ಉಳಿದ ಪ್ರದೇಶವನ್ನ ಇಸ್ರಾಯೇಲ್ಯರಿಗೆ ಹಂಚ್ಕೊಡ್ತಾರೆ. ಪ್ರತಿಯೊಂದು ಕುಲಕ್ಕೂ ಒಂದೊಂದು ಭಾಗ ಸಿಗುತ್ತೆ.’+
9 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಇಸ್ರಾಯೇಲ್ಯರ ಪ್ರಧಾನರೇ, ನಿಮ್ಮದು ಅತಿಯಾಯ್ತು.’
‘ಸಾಕು ನಿಲ್ಲಿಸಿ ನಿಮ್ಮ ಹಿಂಸಾಚಾರ. ದಬ್ಬಾಳಿಕೆ ಮಾಡೋದನ್ನ ಬಿಟ್ಟು, ನ್ಯಾಯನೀತಿಯಿಂದ ನಡೀರಿ.+ ನನ್ನ ಜನ್ರ ಆಸ್ತಿ ಕಿತ್ಕೊಳ್ಳೋದನ್ನ ನಿಲ್ಲಿಸಿ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 10 ‘ನೀವು ಸರಿಯಾದ ತಕ್ಕಡಿಯನ್ನ, ಸರಿಯಾದ ಏಫಾ* ಅಳತೆಯನ್ನ ಮತ್ತು ಬತ್* ಅಳತೆಯನ್ನ ಬಳಸಬೇಕು.+ 11 ಏಫಾ ಮತ್ತು ಬತ್ ಅಳತೆಗೆ ನಿಗದಿತವಾದ ಅಳತೆ ಇರಬೇಕು. ಒಂದು ಬತ್ ಅಳತೆ ಅಂದ್ರೆ ಹೋಮೆರಿನ* ಹತ್ತನೇ ಒಂದು ಭಾಗ ಆಗಿರಬೇಕು. ಅಲ್ಲದೆ, ಒಂದು ಏಫಾ ಅಳತೆ ಅಂದ್ರೆ ಒಂದು ಹೋಮೆರಿನ ಹತ್ತನೇ ಒಂದು ಭಾಗ ಆಗಿರಬೇಕು. ಹೋಮೆರ್ ಅಳತೆ ಎಲ್ಲ ಅಳತೆಗಳ ಮಾಪಕವಾಗಿರಬೇಕು. 12 ನೀವು ಬಳಸೋ ಒಂದು ಶೆಕೆಲ್*+ 20 ಗೇರಾ* ಆಗಿರಬೇಕು. 20 ಶೆಕೆಲ್ ಮತ್ತು 25 ಶೆಕೆಲ್ ಮತ್ತು 15 ಶೆಕೆಲ್ ಇವಿಷ್ಟೂ ಒಟ್ಟಿಗೆ ಒಂದು ಮಾನೆ* ಆಗುತ್ತೆ.’
13 ‘ನೀವು ಕೊಡಬೇಕಾದ ಕಾಣಿಕೆ ಏನಂದ್ರೆ, ಪ್ರತಿ ಹೋಮೆರ್ ಅಳತೆಯ ಗೋದಿಯಿಂದ ಒಂದು ಏಫಾ ಅಳತೆಯ ಆರನೇ ಒಂದು ಭಾಗವನ್ನ ಕೊಡಬೇಕು. ಪ್ರತಿ ಹೋಮೆರ್ ಅಳತೆಯ ಬಾರ್ಲಿಯಿಂದ* ಒಂದು ಏಫಾ ಅಳತೆಯ ಆರನೇ ಒಂದು ಭಾಗವನ್ನ ಕೊಡಬೇಕು. 14 ನೀವು ಎಣ್ಣೆಯನ್ನ ಬತ್ ಅಳತೆಯಲ್ಲಿ ಅಳೆದು ಕೊಡಬೇಕು. ಒಂದು ಬತ್ ಅಂದ್ರೆ ಒಂದು ಕೋರ್* ಅಳತೆಯ ಹತ್ತನೇ ಒಂದು ಭಾಗ. ಒಂದು ಹೋಮೆರ್ ಅಂದ್ರೆ ಹತ್ತು ಬತ್. ಹತ್ತು ಬತ್ ಒಂದು ಹೋಮೆರಿಗೆ ಸಮ. 15 ಇಸ್ರಾಯೇಲ್ಯರು 200 ಕುರಿಗಳಿಗೆ ಒಂದು ಕುರಿಯಂತೆ ತಮ್ಮ ಮಂದೆಯಿಂದ ಕುರಿಗಳನ್ನ ಕೊಡಬೇಕು. ಇವೆಲ್ಲವನ್ನ ಧಾನ್ಯ ಅರ್ಪಣೆ,+ ಸರ್ವಾಂಗಹೋಮ ಬಲಿ+ ಮತ್ತು ಸಮಾಧಾನ ಬಲಿಯಾಗಿ+ ಕೊಡಬೇಕು. ಇದ್ರಿಂದ ಜನ್ರಿಗೋಸ್ಕರ ಪ್ರಾಯಶ್ಚಿತ್ತ ಮಾಡಲಾಗುತ್ತೆ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
16 ‘ದೇಶದ ಎಲ್ಲ ಜನ್ರು ಈ ಕಾಣಿಕೆಯನ್ನ ತಂದು ಇಸ್ರಾಯೇಲಿನ ಪ್ರಧಾನನಿಗೆ ಕೊಡಬೇಕು.+ 17 ಹಬ್ಬ, ಅಮಾವಾಸ್ಯೆ, ಸಬ್ಬತ್+ ಮತ್ತು ಇಸ್ರಾಯೇಲ್ಯರಿಗೆ ಆಚರಿಸೋಕೆ ಹೇಳಿದ ಎಲ್ಲ ಹಬ್ಬಗಳ+ ಸಮಯದಲ್ಲಿ ಸರ್ವಾಂಗಹೋಮ ಬಲಿಗಳು,+ ಧಾನ್ಯ ಅರ್ಪಣೆ+ ಮತ್ತು ಪಾನ ಅರ್ಪಣೆಗಳಿಗೆ ಬೇಕಾಗಿದ್ದನ್ನ ಪ್ರಧಾನ ಕೊಡ್ತಾನೆ.+ ಇಸ್ರಾಯೇಲ್ಯರ ಸಲುವಾಗಿ ಪ್ರಾಯಶ್ಚಿತ್ತ ಮಾಡೋಕೆ ಪಾಪಪರಿಹಾರಕ ಬಲಿ, ಧಾನ್ಯ ಅರ್ಪಣೆ, ಸರ್ವಾಂಗಹೋಮ ಬಲಿ ಮತ್ತು ಸಮಾಧಾನ ಬಲಿಗಳಿಗೆ ಬೇಕಾಗಿದ್ದನ್ನ ಕೊಡೋದು ಅವನ ಜವಾಬ್ದಾರಿ.’
18 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನೀನು ಮೊದಲ್ನೇ ತಿಂಗಳಿನ ಮೊದಲ್ನೇ ದಿನ ಯಾವ ದೋಷನೂ ಇರದ ಒಂದು ಎಳೇ ಹೋರಿಯನ್ನ ತಗೊಬೇಕು ಮತ್ತು ಆರಾಧನಾ ಸ್ಥಳವನ್ನ ಪರಿಶುದ್ಧ ಮಾಡಬೇಕು.+ 19 ಪಾಪಪರಿಹಾರಕ ಬಲಿಯಾಗಿ ಅರ್ಪಿಸಿದ ಪ್ರಾಣಿಯ ರಕ್ತದಲ್ಲಿ ಸ್ವಲ್ಪವನ್ನ ಪುರೋಹಿತ ತಗೊಂಡು ಆಲಯದ ಬಾಗಿಲ ಚೌಕಟ್ಟಿಗೆ,+ ಯಜ್ಞವೇದಿಯ ಸುತ್ತ ಇರೋ ಅಂಚಿನ ನಾಲ್ಕು ಮೂಲೆಗಳಿಗೆ, ಒಳಗಿನ ಅಂಗಳದ ಬಾಗಿಲ ಚೌಕಟ್ಟಿಗೆ ಹಚ್ಚಬೇಕು. 20 ಆ ತಿಂಗಳ ಏಳನೇ ದಿನಾನೂ ನೀನು ಇದೇ ತರ ಮಾಡಬೇಕು. ಯಾಕಂದ್ರೆ ಯಾರಾದ್ರೂ ಆಕಸ್ಮಿಕವಾಗಿ ಅಥವಾ ಗೊತ್ತಿಲ್ಲದೆ ಪಾಪ ಮಾಡಿರಬಹುದು.+ ನೀನು ಆಲಯಕ್ಕಾಗಿ ಪ್ರಾಯಶ್ಚಿತ್ತವನ್ನೂ ಮಾಡಬೇಕು.+
21 ಮೊದಲ್ನೇ ತಿಂಗಳಿನ 14ನೇ ದಿನ ನೀವು ಪಸ್ಕ ಹಬ್ಬ ಆಚರಿಸಬೇಕು.+ ಏಳು ದಿನ ಹುಳಿ ಇಲ್ಲದ ರೊಟ್ಟಿ ತಿನ್ನಬೇಕು.+ 22 ಆ ದಿನ ಪ್ರಧಾನ ತನಗೋಸ್ಕರ ಮತ್ತು ದೇಶದ ಎಲ್ಲ ಜನ್ರಿಗೋಸ್ಕರ ಪಾಪಪರಿಹಾರಕ ಬಲಿಯಾಗಿ ಒಂದು ಎಳೇ ಹೋರಿಯನ್ನ ಕೊಡಬೇಕು.+ 23 ಅವನು ಹಬ್ಬದ ಏಳೂ ದಿನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ದಿನಕ್ಕೆ ಒಂದ್ರಂತೆ ಏಳು ಎಳೇ ಹೋರಿಗಳನ್ನ ಮತ್ತು ಏಳು ಟಗರುಗಳನ್ನ ಕೊಡಬೇಕು.+ ಅವುಗಳಲ್ಲಿ ಯಾವ ದೋಷನೂ ಇರಬಾರದು. ಪಾಪಪರಿಹಾರಕ ಬಲಿಗಾಗಿ ಪ್ರತಿದಿನ ಒಂದೊಂದು ಹೋತವನ್ನೂ ಕೊಡಬೇಕು. 24 ಪ್ರತಿಯೊಂದು ಎಳೇ ಹೋರಿಯ ಜೊತೆ ಒಂದು ಏಫಾ ಅಳತೆಯ ಧಾನ್ಯ ಅರ್ಪಣೆಯನ್ನ ಮತ್ತು ಒಂದು ಹಿನ್* ಅಳತೆಯ ಎಣ್ಣೆಯನ್ನೂ ಅವನು ಕೊಡಬೇಕು. ಪ್ರತಿಯೊಂದು ಟಗರಿನ ಜೊತೆ ಒಂದು ಏಫಾ ಅಳತೆಯ ಧಾನ್ಯ ಅರ್ಪಣೆಯನ್ನ ಮತ್ತು ಒಂದು ಹಿನ್ ಅಳತೆಯ ಎಣ್ಣೆಯನ್ನ ಅವನು ಕೊಡಬೇಕು.
25 ಏಳನೇ ತಿಂಗಳಿನ 15ನೇ ದಿನದಿಂದ ಶುರುಮಾಡಿ ಹಬ್ಬದ ಏಳು ದಿನ+ ಅವನು ಇದೇ ತರ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ ಮತ್ತು ಧಾನ್ಯ ಅರ್ಪಣೆಗೆ ಬೇಕಾಗಿದ್ದನ್ನ ಹಾಗೂ ಎಣ್ಣೆಯನ್ನ ಕೊಡಬೇಕು.’”
46 “ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಒಳಗಿನ ಅಂಗಳದಲ್ಲಿ ಪೂರ್ವಕ್ಕೆ ಮುಖಮಾಡಿರೋ ಬಾಗಿಲು+ ಕೆಲಸದ ಆರೂ ದಿನ+ ಮುಚ್ಚೇ ಇರಬೇಕು.+ ಆದ್ರೆ ಸಬ್ಬತ್ ಮತ್ತು ಅಮಾವಾಸ್ಯೆ ದಿನ ಅದನ್ನ ತೆಗೀಬೇಕು. 2 ಆ ದಿನಗಳಲ್ಲಿ ಪ್ರಧಾನನು ದ್ವಾರಮಂಟಪದಿಂದ ಒಳಗೆ ಬರಬೇಕು. ಅವನು ಬಾಗಿಲಿನ ಚೌಕಟ್ಟಿನ ಹತ್ರ ನಿಲ್ಲಬೇಕು.+ ಅವನು ಸರ್ವಾಂಗಹೋಮ ಬಲಿಗಾಗಿ, ಸಮಾಧಾನ ಬಲಿಗಳಿಗಾಗಿ ಕೊಟ್ಟ ಪ್ರಾಣಿಗಳನ್ನ ಪುರೋಹಿತರು ಅರ್ಪಿಸಬೇಕು. ಅವನು ಬಾಗಿಲಿನ ಹೊಸ್ತಿಲಲ್ಲಿ ಅಡ್ಡಬಿದ್ದು, ಆಮೇಲೆ ಹೊರಗೆ ಹೋಗಬೇಕು. ಆದ್ರೆ ಸಂಜೆ ತನಕ ಬಾಗಿಲು ಮುಚ್ಚಬಾರದು. 3 ಸಬ್ಬತ್ ಮತ್ತು ಅಮಾವಾಸ್ಯೆ ದಿನ ಜನ್ರೂ ಬಾಗಿಲಲ್ಲಿ ಯೆಹೋವನ ಮುಂದೆ ಅಡ್ಡಬೀಳಬೇಕು.+
4 ಸಬ್ಬತ್ ದಿನ ಪ್ರಧಾನನು ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಯಾವ ದೋಷಾನೂ ಇಲ್ಲದ ಆರು ಗಂಡು ಕುರಿಮರಿಗಳನ್ನ ಮತ್ತು ಒಂದು ಟಗರನ್ನ ತಂದು ಕೊಡಬೇಕು.+ 5 ಟಗರಿನ ಜೊತೆ ಒಂದು ಏಫಾ* ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆ ಜೊತೆ ಒಂದು ಹಿನ್* ಎಣ್ಣೆಯನ್ನ ಕೊಡಬೇಕು.+ 6 ಅಮಾವಾಸ್ಯೆ ದಿನ ಬಲಿಯಾಗಿ ಒಂದು ಎಳೇ ಹೋರಿ, ಆರು ಗಂಡು ಕುರಿಮರಿಗಳು ಮತ್ತು ಒಂದು ಟಗರನ್ನ ತಂದು ಕೊಡಬೇಕು. ಅವುಗಳಲ್ಲಿ ಯಾವ ದೋಷಾನೂ ಇರಬಾರದು.+ 7 ಎಳೇ ಹೋರಿ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ, ಟಗರಿನ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆಯ ಜೊತೆ ಒಂದು ಹಿನ್ ಎಣ್ಣೆಯನ್ನ ಕೊಡಬೇಕು.
8 ಪ್ರಧಾನನು ದ್ವಾರಮಂಟಪದಿಂದ ಬರಬೇಕು, ಅಲ್ಲಿಂದಾನೇ ಹೊರಗೆ ಹೋಗಬೇಕು.+ 9 ದೇಶದ ಜನ ಹಬ್ಬಗಳ ಸಮಯದಲ್ಲಿ ಯೆಹೋವನನ್ನ ಆರಾಧಿಸೋಕೆ ಆತನ ಮುಂದೆ ಬರುವಾಗ+ ಉತ್ತರ ಬಾಗಿಲಿಂದ ಒಳಗೆ ಬರುವವರು+ ದಕ್ಷಿಣ ಬಾಗಿಲಿಂದ ಹೊರಗೆ ಹೋಗಬೇಕು.+ ದಕ್ಷಿಣ ಬಾಗಿಲಿಂದ ಒಳಗೆ ಬರೋರು ಉತ್ತರ ಬಾಗಿಲಿಂದ ಹೊರಗೆ ಹೋಗಬೇಕು. ಬಂದ ಬಾಗಿಲಿಂದಾನೇ ಯಾರೂ ವಾಪಸ್ ಹೊಗಬಾರದು. ಅವರು ಯಾವ ಬಾಗಿಲಿಂದ ಒಳಗೆ ಬರ್ತಾರೋ ಅದರ ಎದುರಿಗಿರೋ ಬಾಗಿಲಿಂದಾನೇ ಹೊರಗೆ ಹೋಗಬೇಕು. 10 ಜನ ಒಳಗೆ ಬರುವಾಗ ಪ್ರಧಾನನೂ ಒಳಗೆ ಬರಬೇಕು, ಅವರು ಹೊರಗೆ ಹೋಗುವಾಗ ಅವನೂ ಹೊರಗೆ ಹೋಗಬೇಕು. 11 ಹಬ್ಬಗಳ ದಿನಗಳಲ್ಲಿ ಮತ್ತು ಹಬ್ಬಗಳ ಕಾಲದಲ್ಲಿ ಎಳೇ ಹೋರಿಯ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ, ಟಗರಿನ ಜೊತೆ ಒಂದು ಏಫಾ ಧಾನ್ಯ ಅರ್ಪಣೆಯನ್ನ ಮತ್ತು ಗಂಡು ಕುರಿಮರಿಗಳ ಜೊತೆ ಅವನ ಕೈಲಾದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಪ್ರತಿ ಒಂದು ಏಫಾ ಧಾನ್ಯ ಅರ್ಪಣೆಯ ಜೊತೆ ಒಂದು ಹಿನ್ ಎಣ್ಣೆಯನ್ನ ಕೊಡಬೇಕು.+
12 ಪ್ರಧಾನನು ಸರ್ವಾಂಗಹೋಮ ಬಲಿಯನ್ನ+ ಅಥವಾ ಸಮಾಧಾನ ಬಲಿಗಳನ್ನ ಸ್ವಇಷ್ಟದ ಕಾಣಿಕೆಯಾಗಿ ಯೆಹೋವನಿಗೆ ಕೊಡೋಕೆ ಬರೋದಾದ್ರೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲನ್ನ ಅವನಿಗಾಗಿ ತೆಗಿಬೇಕು. ಅವನು ಸಬ್ಬತ್ ದಿನದಲ್ಲಿ ಕೊಡೋ ತರಾನೇ ಸರ್ವಾಂಗಹೋಮ ಬಲಿಗಾಗಿ ಮತ್ತು ಸಮಾಧಾನ ಬಲಿಗಳಿಗಾಗಿ ಬೇಕಾಗಿರೋದನ್ನ ಕೊಡಬೇಕು.+ ಅವನು ಹೊರಗೆ ಹೋದ ಮೇಲೆ ಬಾಗಿಲನ್ನ ಮುಚ್ಚಬೇಕು.+
13 ಪ್ರತಿ ದಿನ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ಒಂದು ವರ್ಷದೊಳಗಿನ ಗಂಡು ಕುರಿಮರಿಯನ್ನ ಕೊಡಬೇಕು.+ ಅದರಲ್ಲಿ ಯಾವ ದೋಷಾನೂ ಇರಬಾರದು. ಪ್ರತಿದಿನ ಬೆಳಿಗ್ಗೆ ಅದನ್ನ ಕೊಡಬೇಕು. 14 ಅಷ್ಟೇ ಅಲ್ಲ, ಪ್ರತಿದಿನ ಬೆಳಿಗ್ಗೆ ಒಂದು ಏಫಾದ ಆರನೇ ಒಂದು ಭಾಗದಷ್ಟು ಧಾನ್ಯ ಅರ್ಪಣೆಯನ್ನ ಕೊಡಬೇಕು. ಅದ್ರ ಜೊತೆ ನುಣ್ಣಗಿನ ಹಿಟ್ಟಿನ ಮೇಲೆ ಚಿಮಿಕಿಸೋಕೆ ಒಂದು ಹಿನ್ ಅಳತೆಯ ಮೂರನೇ ಒಂದು ಭಾಗದಷ್ಟು ಎಣ್ಣೆ ಕೊಡಬೇಕು. ಹೀಗೆ ಯೆಹೋವನಿಗೆ ಧಾನ್ಯ ಅರ್ಪಣೆಯನ್ನ ಕ್ರಮವಾಗಿ ಕೊಡಬೇಕು. ಇದು ಶಾಶ್ವತ ನಿಯಮ. 15 ಹೀಗೆ ಅವರು ಪ್ರತಿದಿನ ಬೆಳಿಗ್ಗೆ ತಪ್ಪದೆ ಸರ್ವಾಂಗಹೋಮ ಬಲಿಯಾಗಿ ಒಂದು ಗಂಡು ಕುರಿಮರಿಯನ್ನ, ಧಾನ್ಯ ಅರ್ಪಣೆಯನ್ನ, ಎಣ್ಣೆಯನ್ನ ಕೊಡಬೇಕು.’
16 ವಿಶ್ವದ ರಾಜ ಯೆಹೋವ ಹೀಗಂತಾನೆ: ‘ಪ್ರಧಾನನು ತನ್ನ ಗಂಡು ಮಕ್ಕಳಲ್ಲಿ ಪ್ರತಿಯೊಬ್ಬನಿಗೆ ಆಸ್ತಿಯಾಗಿ ಜಮೀನನ್ನ ಕಾಣಿಕೆಯಾಗಿ ಕೊಡೋದಾದ್ರೆ ಅದು ಅವನ ಗಂಡು ಮಕ್ಕಳ ಸೊತ್ತಾಗುತ್ತೆ. ಅದು ಅವ್ರ ಪಿತ್ರಾರ್ಜಿತ ಸೊತ್ತು. 17 ಆದ್ರೆ ಅವನು ತನ್ನ ಸೇವಕನಿಗೆ ತನ್ನ ಆಸ್ತಿಯಿಂದ ಜಮೀನನ್ನ ಉಡುಗೊರೆಯಾಗಿ ಕೊಡೋದಾದ್ರೆ ಅದು ಬಿಡುಗಡೆಯ ವರ್ಷದ ತನಕ ಆ ಸೇವಕನದ್ದಾಗಿರುತ್ತೆ.+ ಆಮೇಲೆ ಅದು ಮತ್ತೆ ಪ್ರಧಾನನಿಗೆ ಸೇರುತ್ತೆ. ಪ್ರಧಾನನ ಗಂಡು ಮಕ್ಕಳಿಗೆ ಸಿಕ್ಕಿದ ಆಸ್ತಿ ಮಾತ್ರ ಶಾಶ್ವತಕ್ಕೂ ಅವ್ರದ್ದಾಗಿರುತ್ತೆ. 18 ಪ್ರಧಾನನು ಜನ್ರನ್ನ ಅವ್ರ ಜಮೀನಿಂದ ಬಲವಂತವಾಗಿ ಓಡಿಸಿ ಅವ್ರ ಆಸ್ತಿಯನ್ನ ಕಿತ್ಕೊಬಾರದು. ಅವನು ತನ್ನ ಸ್ವಂತ ಸೊತ್ತಿಂದಾನೇ ತನ್ನ ಗಂಡು ಮಕ್ಕಳಿಗೆ ಆಸ್ತಿಯನ್ನ ಕೊಡಬೇಕು. ಹೀಗೆ ಮಾಡೋದಾದ್ರೆ ನನ್ನ ಜನ್ರನ್ನ ಅವ್ರ ಆಸ್ತಿಯಿಂದ ಯಾರೂ ಓಡಿಸಲ್ಲ.’”
19 ಆಮೇಲೆ ಅವನು ನನ್ನನ್ನ ಉತ್ತರಕ್ಕೆ ಮುಖಮಾಡಿದ್ದ+ ಬಾಗಿಲಿನ ಪಕ್ಕದಲ್ಲಿದ್ದ ಒಂದು ಬಾಗಿಲಿಂದ ಒಳಗೆ ಕರ್ಕೊಂಡು ಹೋದ.+ ಆ ಬಾಗಿಲಿಂದ ಪುರೋಹಿತರ ಪವಿತ್ರ ಊಟದ ಕೋಣೆಗಳಿಗೆ ಹೋಗೋಕೆ ಆಗ್ತಿತ್ತು. ಆ ಕೋಣೆಗಳ ಹಿಂಬದಿಯಲ್ಲಿ ಪಶ್ಚಿಮದ ಕಡೆಗೆ ನಾನು ಒಂದು ಜಾಗ ನೋಡ್ದೆ. 20 ಅವನು “ಪುರೋಹಿತರು ದೋಷಪರಿಹಾರಕ ಬಲಿ, ಪಾಪಪರಿಹಾರಕ ಬಲಿಯ ಮಾಂಸವನ್ನ ಇಲ್ಲೇ ಬೇಯಿಸಬೇಕು ಮತ್ತು ಧಾನ್ಯ ಅರ್ಪಣೆಯನ್ನ ಇಲ್ಲೇ ಸುಡಬೇಕು.+ ಇದ್ರಿಂದಾಗಿ ಏನನ್ನೂ ಅವರು ಹೊರಗಿನ ಅಂಗಳಕ್ಕೆ ತಗೊಂಡು ಹೋಗೋದೂ ಇಲ್ಲ, ಜನ್ರಿಗೆ ಪವಿತ್ರತೆಯನ್ನ ದಾಟಿಸೋದೂ ಇಲ್ಲ”+ ಅಂದ.
21 ಅವನು ನನ್ನನ್ನ ಹೊರಗಿನ ಅಂಗಳಕ್ಕೆ ಕರ್ಕೊಂಡು ಬಂದು ಅದರ ನಾಲ್ಕೂ ಮೂಲೆಗಳ ಹತ್ರ ನಡಿಸಿದ. ಹೊರಗಿನ ಅಂಗಳದ ನಾಲ್ಕು ಮೂಲೆಗಳ ಹತ್ರಾನೂ ಒಂದೊಂದು ಅಂಗಳ ಇರೋದನ್ನ ನಾನು ನೋಡ್ದೆ. 22 ಹೊರಗಿನ ಅಂಗಳದ ನಾಲ್ಕು ಮೂಲೆಗಳಲ್ಲಿದ್ದ ಚಿಕ್ಕ ಚಿಕ್ಕ ಅಂಗಳಗಳು 40 ಮೊಳ* ಉದ್ದ, 30 ಮೊಳ ಅಗಲ ಇದ್ವು. ನಾಲ್ಕು ಅಂಗಳಗಳ ಅಳತೆ ಒಂದೇ ಆಗಿತ್ತು. 23 ಆ ನಾಲ್ಕು ಅಂಗಳಗಳ ಒಳಗೆ ಸುತ್ತ ಅಂಚುಗಳಿದ್ವು. ಅದ್ರ ಕೆಳಗೆ ಅರ್ಪಣೆಗಳ ಮಾಂಸವನ್ನ ಬೇಯಿಸೋಕೆ ಜಾಗ ಇತ್ತು. 24 ಆಮೇಲೆ ಅವನು ನನಗೆ “ಜನ ಕೊಟ್ಟ ಬಲಿಯ ಮಾಂಸವನ್ನ ಆಲಯದಲ್ಲಿ ಸೇವೆ ಮಾಡುವವರು ಬೇಯಿಸೋದು ಇಲ್ಲೇ”+ ಅಂದ.
47 ಆಮೇಲೆ ಅವನು ನನ್ನನ್ನ ಮತ್ತೆ ದೇವಾಲಯದ ಬಾಗಿಲಿಗೆ+ ಕರ್ಕೊಂಡು ಬಂದ. ಆಲಯದ ಮುಖ ಪೂರ್ವದ ಕಡೆಗಿತ್ತು. ಅಲ್ಲಿ ಆಲಯದ ಹೊಸ್ತಿಲಿನ ಕೆಳಗಿಂದ ನೀರು ಹರೀತಾ ಪೂರ್ವದ ಕಡೆಗೆ ಹೋಗ್ತಿರೋದನ್ನ+ ನಾನು ನೋಡ್ದೆ. ನೀರು ಆಲಯದ ಬಾಗಿಲ ಬಲಗಡೆಯಿಂದ ಯಜ್ಞವೇದಿಯ ದಕ್ಷಿಣಕ್ಕೆ ಹರೀತಿತ್ತು.
2 ಅವನು ನನ್ನನ್ನ ಉತ್ತರದ ಬಾಗಿಲಿಂದ+ ಹೊರಗೆ ಕರ್ಕೊಂಡು ಹೋದ. ಅಲ್ಲಿಂದ ಸುತ್ತುಹಾಕಿ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಗೆ+ ಕರ್ಕೊಂಡು ಬಂದ. ಅದ್ರ ಬಲಗಡೆ ನೀರು ಸಣ್ಣಗೆ ಹರಿದು ಹೋಗ್ತಿರೋದನ್ನ ನಾನು ನೋಡ್ದೆ.
3 ಅವನು ಅಳತೆ ದಾರವನ್ನ ಕೈಯಲ್ಲಿ ಹಿಡ್ಕೊಂಡು ಪೂರ್ವದ ಕಡೆಗೆ ಹೋದ.+ ಅವನು ಬಾಗಿಲ ಹತ್ರ ತೊರೆಯನ್ನ 1,000 ಮೊಳ* ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ತೊರೆ ದಾಟೋಕೆ ಹೇಳಿದ. ಆಗ ನೀರು ಪಾದಗಳು ಮುಳುಗುವಷ್ಟು ಇತ್ತು.
4 ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಮಂಡಿ ತನಕ ಇತ್ತು.
ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಸೊಂಟದ ತನಕ ಇತ್ತು.
5 ಅಲ್ಲಿಂದ ಅವನು ಇನ್ನೂ 1,000 ಮೊಳ ದೂರ ಅಳತೆ ಮಾಡಿದ. ಅಲ್ಲಿ ತೊರೆ ಪ್ರವಾಹದ ತರ ಹರೀತಿತ್ತು. ಅದನ್ನ ದಾಟೋಕೆ ನನ್ನಿಂದ ಆಗಲಿಲ್ಲ. ತೊರೆ ಎಷ್ಟು ಆಳ ಇತ್ತಂದ್ರೆ ಅದನ್ನ ಈಜಿ ದಾಟಬೇಕಾಗಿತ್ತು. ಆ ಪ್ರವಾಹವನ್ನ ನಡೆದು ದಾಟೋಕೆ ಆಗ್ತಿರಲಿಲ್ಲ.
6 ಅವನು ನನಗೆ “ಮನುಷ್ಯಕುಮಾರನೇ, ಇದನ್ನ ನೋಡಿದ್ಯಾ?” ಅಂತ ಕೇಳಿದ.
ಆಮೇಲೆ ಅವನು ನನ್ನನ್ನ ನಡಿಸ್ಕೊಂಡು ತೊರೆಯ ದಡಕ್ಕೆ ಕರ್ಕೊಂಡು ಬಂದ. 7 ದಡಕ್ಕೆ ಬಂದಾಗ ದಡದ ಎರಡೂ ಕಡೆ ತುಂಬ ಮರಗಳು ಇರೋದನ್ನ+ ನೋಡ್ದೆ. 8 ಅವನು ನನಗೆ ಹೀಗಂದ: “ಈ ನೀರು ಪೂರ್ವ ಪ್ರದೇಶದ ಕಡೆಗೆ ಹರೀತಾ ಅರಾಬಾದಿಂದ*+ ಹೋಗಿ ಸಮುದ್ರ* ಸೇರುತ್ತೆ. ಅದು ಸಮುದ್ರ ಸೇರಿದಾಗ+ ಸಮುದ್ರದ ನೀರು ಸಿಹಿ ಆಗುತ್ತೆ.* 9 ಆ ನೀರು ಹರಿದಲ್ಲೆಲ್ಲ ತುಂಬ ಜೀವಿಗಳು ಬದುಕೋಕೆ ಆಗುತ್ತೆ. ಆ ನೀರು ಅಲ್ಲಿ ಹರಿಯೋದ್ರಿಂದ ಅಲ್ಲಿ ತುಂಬ ಮೀನುಗಳು ಇರುತ್ತೆ. ಸಮುದ್ರದ ನೀರು ಸಿಹಿ ಆಗುತ್ತೆ. ಆ ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ.
10 ಏಂಗೆದಿಯಿಂದ+ ಏನ್-ಎಗ್ಲಯಿಮ್ ತನಕ ಮೀನುಗಾರರು ಸಮುದ್ರದ ತೀರದಲ್ಲಿ ನಿಲ್ತಾರೆ. ಅಲ್ಲಿ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಇರುತ್ತೆ. ಮಹಾ ಸಮುದ್ರದಲ್ಲಿ*+ ಇರೋ ತರ ಇಲ್ಲಿ ವಿಧವಿಧವಾದ ಮೀನುಗಳು ತುಂಬ ಇರುತ್ತೆ.
11 ಅಲ್ಲಿ ಕೆಸರು ಕೆಸರಾಗಿರೋ ಜಾಗಗಳು, ಜವುಗು ಸ್ಥಳಗಳು ಇರುತ್ತೆ. ಅವು ಇದ್ದ ಹಾಗೇ ಇರುತ್ತೆ. ಉಪ್ಪು ಪ್ರದೇಶವಾಗಿಯೇ ಉಳಿಯುತ್ತೆ.+
12 ಆ ತೊರೆಯ ಎರಡು ದಡಗಳಲ್ಲೂ ಎಲ್ಲ ತರದ ಹಣ್ಣು* ಕೊಡೋ ಮರಗಳು ಬೆಳೆಯುತ್ತೆ. ಅವುಗಳ ಎಲೆ ಬಾಡಲ್ಲ. ಅವು ಹಣ್ಣು ಕೊಡೋದನ್ನ ನಿಲ್ಲಿಸಲ್ಲ, ಪ್ರತಿ ತಿಂಗಳು ಹಣ್ಣುಗಳನ್ನ ಕೊಡ್ತಾನೇ ಇರುತ್ತೆ. ಯಾಕಂದ್ರೆ ಅವಕ್ಕೆ ಸಿಗೋ ನೀರು ಆರಾಧನಾ ಸ್ಥಳದಿಂದ ಹರಿದು ಬರೋ ನೀರು.+ ಅವುಗಳ ಹಣ್ಣುಗಳನ್ನ ಊಟವಾಗಿ, ಎಲೆಗಳನ್ನ ಔಷಧಿಯಾಗಿ ಬಳಸಲಾಗುತ್ತೆ.”+
13 ವಿಶ್ವದ ರಾಜ ಯೆಹೋವ ಹೀಗಂತಾನೆ: “ನೀವು ಈ ಪ್ರದೇಶವನ್ನ ಇಸ್ರಾಯೇಲಿನ 12 ಕುಲಗಳಿಗೆ ಆಸ್ತಿಯಾಗಿ ಹಂಚ್ಕೊಡ್ತೀರ ಮತ್ತು ಯೋಸೇಫನಿಗೆ ಎರಡು ಪಾಲು ಸಿಗುತ್ತೆ.+ 14 ನೀವು ಈ ಪ್ರದೇಶವನ್ನ ನಿಮ್ಮ ಆಸ್ತಿಯಾಗಿ ಪಡ್ಕೊಳ್ತೀರ. ನಿಮಗೆಲ್ಲ ಸಮ ಪಾಲು ಸಿಗುತ್ತೆ. ನಾನು ಈ ದೇಶವನ್ನ ನಿಮ್ಮ ಪೂರ್ವಜರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟಿದ್ದೆ. ಈಗ ಇದನ್ನ ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ.
15 ದೇಶದ ಉತ್ತರ ಗಡಿ: ಇದು ಮಹಾ ಸಮುದ್ರದಿಂದ ಹೆತ್ಲೋನಿಗೆ+ ಹೋಗೋ ದಾರಿಯನ್ನ ದಾಟಿ ಚೆದಾದ್,+ 16 ಹಾಮಾತ್,+ ಬೇರೋತ,+ ದಮಸ್ಕದ ಮತ್ತು ಹಾಮಾತಿನ ಪ್ರದೇಶದ ಮಧ್ಯ ಇರೋ ಸಿಬ್ರಯಿಮ್ ಕಡೆ ಹೋಗಿ, ಹವ್ರಾನಿನ+ ಗಡಿಯ ಪಕ್ಕದಲ್ಲಿರೋ ಹಾಚೇರ್-ಹತ್ತೀಕೋನಿಗೆ ಹೋಗುತ್ತೆ. 17 ಹೀಗೆ ಈ ಗಡಿ ಸಮುದ್ರದಿಂದ ಶುರುವಾಗಿ ಹಚರ್-ಐನೋನಿನ+ ತನಕ ಹೋಗುತ್ತೆ. ಇದು ದಮಸ್ಕದ ಉತ್ತರ ಗಡಿ ತನಕ, ಹಾಮಾತಿನ ಗಡಿಯ ತನಕ ಹೋಗುತ್ತೆ.+ ಇದು ದೇಶದ ಉತ್ತರ ಗಡಿ.
18 ಪೂರ್ವ ಗಡಿಯು ಹವ್ರಾನ್ ಮತ್ತು ದಮಸ್ಕದ ಮಧ್ಯದಿಂದ ಗಿಲ್ಯಾದ್+ ಮತ್ತು ಇಸ್ರಾಯೇಲ್ ದೇಶದ ಮಧ್ಯದಲ್ಲಿರೋ ಯೋರ್ದನ್ ನದಿ ತನಕ ಹೋಗುತ್ತೆ. ನೀವು ಉತ್ತರ ಗಡಿಯಿಂದ ಪೂರ್ವದ ಸಮುದ್ರ* ತನಕ ಅಳೆಯಬೇಕು. ಇದು ದೇಶದ ಪೂರ್ವ ಗಡಿ.
19 ದಕ್ಷಿಣ ಗಡಿ ತಾಮಾರದಿಂದ ಮೆರೀಬೋತ್-ಕಾದೇಶಿನ+ ನೀರಿನ ತನಕ, ಅಲ್ಲಿಂದ ನಾಲೆ* ತನಕ ಆಮೇಲೆ ಮಹಾ ಸಮುದ್ರದ ತನಕ ಹೋಗುತ್ತೆ.+ ಇದು ದೇಶದ ದಕ್ಷಿಣ ಗಡಿ.
20 ಪಶ್ಚಿಮ ಬದಿಯಲ್ಲಿ ಮಹಾ ಸಮುದ್ರ ಇದೆ. ಪಶ್ಚಿಮ ಗಡಿಯು ದಕ್ಷಿಣ ಗಡಿಯಿಂದ ಲೆಬೋ-ಹಾಮಾತಿನ*+ ಮುಂದೆ ಇರೋ ಜಾಗದ ತನಕ ಇದೆ. ಇದು ದೇಶದ ಪಶ್ಚಿಮ ಗಡಿ.”
21 “ಈ ದೇಶವನ್ನ ನೀವು ಅಂದ್ರೆ ಇಸ್ರಾಯೇಲಿನ 12 ಕುಲಗಳು ಹಂಚ್ಕೊಬೇಕು. 22 ಈ ದೇಶವನ್ನ ನಿಮ್ಮ ಜನ್ರಿಗೂ ನಿಮ್ಮ ದೇಶದಲ್ಲಿ ವಾಸಿಸ್ತಾ ಮಕ್ಕಳನ್ನ ಪಡೆದ ವಿದೇಶಿಯರಿಗೂ ಆಸ್ತಿಯಾಗಿ ಹಂಚಿ ಕೊಡಬೇಕು. ಇಸ್ರಾಯೇಲಲ್ಲಿ ಹುಟ್ಟಿದವ್ರ ತರಾನೇ ನೀವು ಆ ವಿದೇಶಿಯರನ್ನೂ ನೋಡಬೇಕು. ಇಸ್ರಾಯೇಲ್ ಕುಲಗಳ ಮಧ್ಯ ಅವ್ರಿಗೂ ಆಸ್ತಿ ಸಿಗಬೇಕು. 23 ಆ ವಿದೇಶಿಯರು ಯಾವ ಕುಲದ ಪ್ರದೇಶದಲ್ಲಿ ಇರ್ತಾರೋ ಆ ಪ್ರದೇಶದಲ್ಲೇ ಅವ್ರಿಗೆ ಆಸ್ತಿಯನ್ನ ಕೊಡಬೇಕು” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
48 “ಉತ್ತರದ ಗಡಿಯ ಕೊನೆಯಿಂದ ಶುರುವಾಗೋ ಪಾಲುಗಳು. ಇವು ಕುಲಗಳ ಹೆಸ್ರಿನ ಪ್ರಕಾರ ಪಟ್ಟಿ ಆಗಿವೆ. ದಾನಿನ ಪಾಲು+ ಹೆತ್ಲೋನಿಗೆ ಹೋಗೋ ದಾರಿಯಿಂದ ಲೆಬೋ-ಹಾಮಾತಿನ+ ತನಕ* ಆಮೇಲೆ ಹಚರ್-ಏನಾನಿನ ತನಕ ಹಾಮಾತಿನ+ ಪಕ್ಕದಲ್ಲಿರೋ ದಮಸ್ಕದ ಉತ್ತರ ಗಡಿಯ ತನಕ ಇದೆ. ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 2 ದಾನಿನ ಪಾಲಿನ ದಕ್ಷಿಣಕ್ಕೆ ಅಶೇರಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 3 ಅಶೇರಿನ ಪಾಲಿನ ದಕ್ಷಿಣಕ್ಕೆ ನಫ್ತಾಲಿಯ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 4 ನಫ್ತಾಲಿಯ ಪಾಲಿನ ದಕ್ಷಿಣಕ್ಕೆ ಮನಸ್ಸೆಯ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 5 ಮನಸ್ಸೆಯ ಪಾಲಿನ ದಕ್ಷಿಣಕ್ಕೆ ಎಫ್ರಾಯೀಮಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 6 ಎಫ್ರಾಯೀಮಿನ ಪಾಲಿನ ದಕ್ಷಿಣಕ್ಕೆ ರೂಬೇನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 7 ರೂಬೇನಿನ ಪಾಲಿನ ದಕ್ಷಿಣಕ್ಕೆ ಯೆಹೂದದ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿ ತನಕ ಇದೆ. 8 ಯೆಹೂದದ ಪಾಲಿನ ದಕ್ಷಿಣಕ್ಕೆ 25,000 ಮೊಳ* ಅಗಲ ಇರೋ ಭಾಗವನ್ನ ಕಾಣಿಕೆಯಾಗಿ ಪ್ರತ್ಯೇಕಿಸಬೇಕು.+ ಈ ಭಾಗ ಇರೋ ಜಮೀನಿನ ಪೂರ್ವದಿಂದ ಪಶ್ಚಿಮಕ್ಕಿರೋ ಉದ್ದ ಬೇರೆ ಕುಲಗಳ ಜಮೀನಿನ ಪೂರ್ವದಿಂದ ಪಶ್ಚಿಮಕ್ಕಿರೋ ಉದ್ದದಷ್ಟೇ ಇರಬೇಕು. ಕಾಣಿಕೆಯಾಗಿ ಪ್ರತ್ಯೇಕಿಸೋ ಈ ಭಾಗದ ಮಧ್ಯ ಆರಾಧನಾ ಸ್ಥಳ ಇರುತ್ತೆ.
9 ನೀವು ಯೆಹೋವನಿಗೆ ಕಾಣಿಕೆಯಾಗಿ ಪ್ರತ್ಯೇಕಿಸಬೇಕಾದ ಪ್ರದೇಶದ ಉದ್ದ 25,000 ಮೊಳ ಮತ್ತು ಅಗಲ 10,000 ಮೊಳ ಇರಬೇಕು. 10 ಇದು ಪುರೋಹಿತರಿಗಾಗಿರೋ ಪವಿತ್ರ ಕಾಣಿಕೆಯಾಗಿ ಇರುತ್ತೆ.+ ಇದು ಉತ್ತರಕ್ಕೆ 25,000 ಮೊಳ, ಪಶ್ಚಿಮಕ್ಕೆ 10,000 ಮೊಳ, ಪೂರ್ವಕ್ಕೆ 10,000 ಮೊಳ ಮತ್ತು ದಕ್ಷಿಣಕ್ಕೆ 25,000 ಮೊಳ ಇರಬೇಕು. ಅದ್ರ ಮಧ್ಯ ಯೆಹೋವನ ಆರಾಧನಾ ಸ್ಥಳ ಇರಬೇಕು. 11 ಪವಿತ್ರ ಕಾಣಿಕೆ ಆಗಿರೋ ಆ ಪ್ರದೇಶ ಪವಿತ್ರ ಸೇವೆಗಾಗಿ ಆರಿಸಿರೋ ಚಾದೋಕನ ವಂಶದ ಪುರೋಹಿತರಿಗಾಗಿ ಇರುತ್ತೆ.+ ಯಾಕಂದ್ರೆ, ಇಸ್ರಾಯೇಲ್ಯರು ಮತ್ತು ಲೇವಿಯರು ನನ್ನನ್ನ ಬಿಟ್ಟು ದೂರ ಹೋದಾಗ ಈ ಪುರೋಹಿತರು ನನ್ನನ್ನ ಬಿಟ್ಟು ಹೋಗಲಿಲ್ಲ.+ ನಾನು ಕೊಟ್ಟ ಜವಾಬ್ದಾರಿಗಳನ್ನ ನೋಡ್ಕೊಂಡ್ರು. 12 ಅತಿ ಪವಿತ್ರ ಅಂತ ಪ್ರತ್ಯೇಕಿಸಿದ ಕಾಣಿಕೆಯಾಗಿರೋ ಪ್ರದೇಶದ ಒಂದು ಭಾಗವನ್ನ ಆ ಪುರೋಹಿತರಿಗೆ ಕೊಡಲಾಗುತ್ತೆ. ಆ ಭಾಗ ಲೇವಿಯರ ಪ್ರದೇಶದ ದಕ್ಷಿಣಕ್ಕಿರುತ್ತೆ.
13 ಪುರೋಹಿತರ ಪ್ರದೇಶದ ಪಕ್ಕದಲ್ಲೇ ಲೇವಿಯರಿಗಾಗಿ ಒಂದು ಪಾಲು ಇರುತ್ತೆ. ಅದ್ರ ಉದ್ದ 25,000 ಮೊಳ ಮತ್ತು ಅಗಲ 10,000 ಮೊಳ ಇರುತ್ತೆ. (ಇಡೀ ಪ್ರದೇಶದ ಅಳತೆ 25,000 ಮೊಳ ಉದ್ದ, 10,000 ಮೊಳ ಅಗಲ.) 14 ದೇಶದ ಅತಿ ಶ್ರೇಷ್ಠವಾದ ಈ ಭಾಗದಲ್ಲಿ ಸ್ವಲ್ಪವನ್ನೂ ಅವರು ಮಾರಬಾರದು, ಅದಲುಬದಲು ಮಾಡಬಾರದು ಅಥವಾ ಬೇರೆಯವರಿಗೆ ಕೊಡಬಾರದು. ಯಾಕಂದ್ರೆ ಇದು ಯೆಹೋವನಿಗೆ ಪವಿತ್ರ ಭಾಗವಾಗಿದೆ.
15 25,000 ಮೊಳ ಉದ್ದ ಇರೋ ಗಡಿಯ ಪಕ್ಕದಲ್ಲಿ 5,000 ಮೊಳ ಅಗಲ ಪ್ರದೇಶ ಉಳಿದಿರುತ್ತೆ. ಈ ಉಳಿದ ಪ್ರದೇಶ ಪಟ್ಟಣದ ಸಾಮಾನ್ಯ ಉಪಯೋಗಕ್ಕಾಗಿದೆ.+ ಅಲ್ಲಿ ಮನೆಗಳು, ಹುಲ್ಲುಗಾವಲುಗಳು ಇರುತ್ತೆ. ಆ ಪ್ರದೇಶದ ಮಧ್ಯ ಪಟ್ಟಣ ಇರುತ್ತೆ.+ 16 ಪಟ್ಟಣದ ಅಳತೆ ಎಷ್ಟಂದ್ರೆ, ಉತ್ತರ ಗಡಿ 4,500 ಮೊಳ, ದಕ್ಷಿಣ ಗಡಿ 4,500 ಮೊಳ, ಪೂರ್ವ ಗಡಿ 4,500 ಮೊಳ ಮತ್ತು ಪಶ್ಚಿಮ ಗಡಿ 4,500 ಮೊಳ. 17 ಪಟ್ಟಣದ ಹುಲ್ಲುಗಾವಲು ಉತ್ತರಕ್ಕೆ 250 ಮೊಳ, ದಕ್ಷಿಣಕ್ಕೆ 250 ಮೊಳ, ಪೂರ್ವಕ್ಕೆ 250 ಮೊಳ ಮತ್ತು ಪಶ್ಚಿಮಕ್ಕೆ 250 ಮೊಳ ಇರುತ್ತೆ.
18 ಉಳಿದ ಪ್ರದೇಶದ ಉದ್ದ ಪವಿತ್ರ ಕಾಣಿಕೆಯಾಗಿ ಪ್ರತ್ಯೇಕಿಸೋ ಪ್ರದೇಶದ ಉದ್ದದಷ್ಟೇ ಇರುತ್ತೆ.+ ಅದು ಪೂರ್ವದಲ್ಲಿ 10,000 ಮೊಳ, ಪಶ್ಚಿಮದಲ್ಲಿ 10,000 ಮೊಳ ಇರುತ್ತೆ. ಈ ಪ್ರದೇಶದ ಉದ್ದ ಪವಿತ್ರ ಕಾಣಿಕೆಯಾಗಿ ಇರೋ ಪ್ರದೇಶದ ಉದ್ದಕ್ಕೆ ಸಮವಾಗಿರುತ್ತೆ. ಆ ಉಳಿದ ಪ್ರದೇಶದಲ್ಲಿ ಬೆಳೆದ ಬೆಳೆ ಪಟ್ಟಣಕ್ಕಾಗಿ ಕೆಲಸ ಮಾಡುವವ್ರಿಗೆ ಆಹಾರ ಆಗಿರುತ್ತೆ. 19 ಪಟ್ಟಣಕ್ಕಾಗಿ ಕೆಲಸಮಾಡೋ ಇಸ್ರಾಯೇಲಿನ ಎಲ್ಲ ಕುಲಗಳ ಜನ ಅಲ್ಲಿ ವ್ಯವಸಾಯ ಮಾಡ್ತಾರೆ.+
20 ಕಾಣಿಕೆಯಾಗಿ ಪ್ರತ್ಯೇಕಿಸೋ ಇಡೀ ಪ್ರದೇಶ ಚೌಕಾಕಾರವಾಗಿ ಇರುತ್ತೆ. ಅದ್ರ ಉದ್ದ 25,000 ಮೊಳ, ಅಗಲ 25,000 ಮೊಳ. ಇದನ್ನ ಪವಿತ್ರ ಕಾಣಿಕೆಯಾಗಿ ಇಡಬೇಕು. ಇದ್ರಲ್ಲಿ ಪಟ್ಟಣಕ್ಕೆ ಸೇರಿದ ಆಸ್ತಿನೂ ಒಳಗೂಡಿದೆ.
21 ಪವಿತ್ರ ಕಾಣಿಕೆಯ ಮತ್ತು ಪಟ್ಟಣಕ್ಕೆ ಸೇರಿದ ಆಸ್ತಿಯ ಎರಡೂ ಕಡೆ ಇರೋ ಪ್ರದೇಶ ಪ್ರಧಾನನಿಗೆ ಸೇರುತ್ತೆ.+ ಇದು ಪವಿತ್ರ ಕಾಣಿಕೆಯಾಗಿರೋ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಗಡಿಗಳ ಪಕ್ಕದಲ್ಲಿರುತ್ತೆ. ಆ ಎರಡೂ ಗಡಿಗಳ ಅಳತೆ 25,000 ಮೊಳ. ಪ್ರಧಾನನ ಪ್ರದೇಶದ ಗಡಿ ಮತ್ತು ಅದ್ರ ಅಕ್ಕಪಕ್ಕ ಇರೋ ಎರಡು ಕುಲಗಳ ಪ್ರದೇಶಗಳ ಗಡಿಗಳು ಒಂದೇ ಆಗಿರುತ್ತವೆ. ಆ ಪ್ರದೇಶ ಪ್ರಧಾನನಿಗಾಗಿ ಇರುತ್ತೆ. ಇದರ ಮಧ್ಯದಲ್ಲಿ ಪವಿತ್ರ ಕಾಣಿಕೆಯಾಗಿ ಪ್ರತ್ಯೇಕಿಸಿರೋ ಪ್ರದೇಶ ಮತ್ತು ಆರಾಧನಾ ಸ್ಥಳ ಇರುತ್ತೆ.
22 ಲೇವಿಯರ ಪ್ರದೇಶ ಮತ್ತು ಪಟ್ಟಣಕ್ಕೆ ಸೇರಿದ ಪ್ರದೇಶ ಪ್ರಧಾನನ ಪ್ರದೇಶದ ಮಧ್ಯ ಇರುತ್ತೆ. ಪ್ರಧಾನನ ಪ್ರದೇಶವು ಯೆಹೂದದ ಪ್ರದೇಶದ ಗಡಿ+ ಮತ್ತು ಬೆನ್ಯಾಮೀನಿನ ಪ್ರದೇಶದ ಗಡಿಯ ಮಧ್ಯ ಇರುತ್ತೆ.
23 ಉಳಿದ ಕುಲಗಳ ಪಾಲು ಯಾವುದಂದ್ರೆ, ಬೆನ್ಯಾಮೀನಿನ ಪಾಲು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ.+ 24 ಬೆನ್ಯಾಮೀನಿನ ಪಾಲಿನ ದಕ್ಷಿಣಕ್ಕೆ ಸಿಮೆಯೋನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 25 ಸಿಮೆಯೋನಿನ ಪಾಲಿನ ದಕ್ಷಿಣಕ್ಕೆ ಇಸ್ಸಾಕಾರಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 26 ಇಸ್ಸಾಕಾರಿನ ಪಾಲಿನ ದಕ್ಷಿಣಕ್ಕೆ ಜೆಬುಲೂನಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ.+ 27 ಜೆಬುಲೂನಿನ ಪಾಲಿನ ದಕ್ಷಿಣಕ್ಕೆ ಗಾದಿನ ಪಾಲಿದೆ.+ ಇದು ಪೂರ್ವ ಗಡಿಯಿಂದ ಪಶ್ಚಿಮದ ಗಡಿಯ ತನಕ ಇರುತ್ತೆ. 28 ಗಾದಿನ ಗಡಿಗೆ ಅಂಟ್ಕೊಂಡಿರೋ ದಕ್ಷಿಣ ಗಡಿ ತಾಮಾರದಿಂದ+ ಹೊರಟು ಮೆರೀಬೋತ್-ಕಾದೇಶಿನ+ ನೀರಿನ ಹತ್ರದಿಂದ ನಾಲೆ*+ ತನಕ ಹೋಗಿ ಅಲ್ಲಿಂದ ಮಹಾ ಸಮುದ್ರದ ತನಕ* ಹೋಗುತ್ತೆ.
29 ನೀವು ಇಸ್ರಾಯೇಲ್ ಕುಲಗಳಿಗೆ ಆಸ್ತಿಯಾಗಿ ಹಂಚಬೇಕಾದ ದೇಶ ಇದೇ.+ ಇದು ಅವ್ರಿಗೆ ಸಿಗೋ ಪಾಲು”+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.
30 “ಪಟ್ಟಣದ ಹೊರಗೆ ಹೋಗೋಕೆ ಈ ದಾರಿಗಳಿರುತ್ತೆ: ಪಟ್ಟಣದ ಉತ್ತರ ಗಡಿ 4,500 ಮೊಳ ಉದ್ದ ಇರುತ್ತೆ.+
31 ಪಟ್ಟಣದ ಬಾಗಿಲುಗಳಿಗೆ ಇಸ್ರಾಯೇಲಿನ ಕುಲಗಳ ಹೆಸ್ರನ್ನೇ ಇಡಲಾಗುತ್ತೆ. ಉತ್ತರದಲ್ಲಿ ರೂಬೇನ್ ಬಾಗಿಲು, ಯೆಹೂದ ಬಾಗಿಲು, ಲೇವಿ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ.
32 ಪಟ್ಟಣದ ಪೂರ್ವ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಯೋಸೇಫ್ ಬಾಗಿಲು, ಬೆನ್ಯಾಮೀನ್ ಬಾಗಿಲು, ದಾನ್ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ.
33 ಪಟ್ಟಣದ ದಕ್ಷಿಣ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಸಿಮೆಯೋನ್ ಬಾಗಿಲು, ಇಸ್ಸಾಕಾರ್ ಬಾಗಿಲು, ಜೆಬುಲೂನ್ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ.
34 ಪಟ್ಟಣದ ಪಶ್ಚಿಮ ಗಡಿ 4,500 ಮೊಳ ಉದ್ದ ಇರುತ್ತೆ. ಅಲ್ಲಿ ಗಾದ್ ಬಾಗಿಲು, ಅಶೇರ್ ಬಾಗಿಲು, ನಫ್ತಾಲಿ ಬಾಗಿಲು, ಹೀಗೆ ಮೂರು ಬಾಗಿಲು ಇರುತ್ತೆ.
35 ಪಟ್ಟಣದ ಸುತ್ತಳತೆ 18,000 ಮೊಳ. ಅವತ್ತಿಂದ ಆ ಪಟ್ಟಣದ ಹೆಸ್ರು, ‘ಯೆಹೋವ ಅಲ್ಲಿದ್ದಾನೆ’+ ಅಂತ ಆಗುತ್ತೆ.”
ಇದು ಯೆಹೆಜ್ಕೇಲನ ವಯಸ್ಸಿಗೆ ಸೂಚಿಸುತ್ತಿರಬಹುದು.
ಪದವಿವರಣೆ ನೋಡಿ.
ಈ ಹೆಸ್ರಿನ ಅರ್ಥ “ದೇವರು ಬಲಪಡಿಸ್ತಾನೆ.”
ಅಕ್ಷ. “ಕೈ.”
ಅಥವಾ “ಮತ್ತು ಮಿಂಚು.”
ಬಹುಶಃ ಈ ಚಕ್ರಗಳ ಅಳತೆ ಒಂದೇ ಆಗಿತ್ತು.
ಬಹುಶಃ, “ನೇರವಾಗಿ ಹೊರಗೆ ಚಾಚ್ಕೊಂಡಿದ್ವು.”
“ಮನುಷ್ಯಕುಮಾರ” ಅನ್ನೋ ಪದ ಈ ಪುಸ್ತಕದಲ್ಲಿ 93 ಸಲ ಇದೆ. ಮೊದಲ್ನೇ ಸಲ ಬಂದಿರೋದು ಈ ವಚನದಲ್ಲಿ.
ಇಸ್ರಾಯೇಲ್ ಮತ್ತು ಯೆಹೂದದ ಜನ್ರನ್ನ ಸೂಚಿಸ್ತಿರಬೇಕು.
ಬಹುಶಃ, “ಜನ್ರು ಹಠಮಾರಿಗಳಾಗಿದ್ರೂ ನಿನ್ನನ್ನ ಚುಚ್ಚೋ ವಸ್ತುಗಳ ಹಾಗಿದ್ರೂ.”
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
ಅಕ್ಷ. “ಕೈ.”
ಅಥವಾ “ಅನ್ಯಾಯ.”
ಅಕ್ಷ. “ಕೈ.”
ಅಥವಾ “ಜವೆಗೋದಿ.”
ಇದಕ್ಕಿರೋ ಹೀಬ್ರು ಪದ ಮುಂಚೆ ಈಜಿಪ್ಟಲ್ಲಿ ಬೆಳಿಸ್ತಿದ್ದ ಕಮ್ಮಿ ಬೆಲೆಯ ಗೋದಿಯನ್ನ ಸೂಚಿಸುತ್ತೆ.
ಸುಮಾರು 230 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಸುಮಾರು 0.6 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.
ಅಥವಾ “ಕಾಯಿಲೆಯಿಂದ.”
ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”
ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.
ಅಕ್ಷ. “ಎತ್ತರ ಸ್ಥಳಗಳನ್ನ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅನೈತಿಕವಾಗಿ ನಡೆದು”
ಅಥವಾ “ಅನೈತಿಕವಾಗಿ.”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಬಹುಶಃ, “ಮಾಲೆ.”
ಬಹುಶಃ, “ಮಾಲೆ.”
ಅಕ್ಷ. “ಕೋಲು ಹೂಬಿಟ್ಟಿದೆ, ದುರಹಂಕಾರ ಚಿಗುರಿದೆ.”
ನಾಶನ ಎಲ್ಲರ ಮೇಲೆ ಬರೋದ್ರಿಂದ ಆಸ್ತಿ ತಗೊಳ್ಳೋನಿಗೂ ಮಾರೋನಿಗೂ ಯಾವ ಪ್ರಯೋಜನನೂ ಆಗಲ್ಲ.
ಬಹುಶಃ, “ತಪ್ಪು ದಾರಿ ಹಿಡಿದಿದ್ರಿಂದ.”
ಅಂದ್ರೆ, ಭಯದಲ್ಲಿ ಉಚ್ಚೆ ಹೊಯ್ಕೊಳ್ತಾರೆ.
ಅಂದ್ರೆ, ಶೋಕದಿಂದಾಗಿ ಅವ್ರ ತಲೆ ಬೋಳಿಸಲಾಗುತ್ತೆ.
ಅದು, ಮೂರ್ತಿಗಳನ್ನ ಮಾಡೋಕೆ ಬಳಸಿದ.
ಅಂದ್ರೆ, ದೇವಜನರ.
ಯೆಹೋವನ ಆಲಯದ ಅತಿ ಪವಿತ್ರ ಸ್ಥಳಕ್ಕೆ ಸೂಚಿಸಬಹುದು.
ಅಂದ್ರೆ, ಶತ್ರುಗಳು.
ಅದು, ಜೈಲಿನ ಬೇಡಿ.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಆರನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ಕೈ.”
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದವು ದೇವದೂತನಿಗೆ ಸಹ ಸೂಚಿಸಬಹುದು.
ಅಕ್ಷ. “ಭೂಮಿ ಆಕಾಶದ ಮಧ್ಯ.”
ತನ್ನನ್ನ ಬಿಟ್ಟು ಬೇರೆ ದೇವರನ್ನ ಆರಾಧಿಸಿದಾಗ ಯೆಹೋವನಿಗೆ ಬರೋ ಕೋಪವನ್ನ ಇದು ಸೂಚಿಸುತ್ತೆ. (ವಿಮೋ 20:5)
ತನ್ನನ್ನ ಬಿಟ್ಟು ಬೇರೆ ದೇವರನ್ನ ಆರಾಧಿಸಿದಾಗ ಯೆಹೋವನಿಗೆ ಬರೋ ಕೋಪವನ್ನ ಇದು ಸೂಚಿಸುತ್ತೆ. (ವಿಮೋ 20:5)
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಇದು ಮೂರ್ತಿಪೂಜೆಯಲ್ಲಿ ಬಳಸ್ತಿದ್ದ ಕೊಂಬೆ ಆಗಿರಬಹುದು.
ಅಥವಾ “ಬರಹಗಾರನ.”
ಲೇಖನಿ ಮತ್ತು ಶಾಯಿ ಇಡೋ ಡಬ್ಬಿ.
ಅಥವಾ “ಗಂಡಸಿನ.”
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
ಅಥವಾ “ಪಟ್ಟಣದ ವಿರುದ್ಧ.”
ಇದು ಯೆರೂಸಲೇಮ್ ಪಟ್ಟಣ. ಯೆಹೂದ್ಯರು ತಾವು ಅಲ್ಲಿ ಸುರಕ್ಷಿತರಾಗಿದ್ದೀವಿ ಅಂತ ನೆನಸಿದ್ರು.
ಅಥವಾ “ಅಗಲ ಬಾಯಿರೋ ಪಾತ್ರೆ.”
ಅಥವಾ “ಪಿತ್ರಾರ್ಜಿತ ಆಸ್ತಿಯನ್ನ ಬಿಡಿಸೋ ಹಕ್ಕಿರೋ.”
ಅಕ್ಷ. “ಹೃದಯ.”
ಅದು, ದೇವರ ಮಾತಿಗೆ ಬೇಗ ಪ್ರತಿಕ್ರಿಯಿಸೋ ಹೃದಯ.
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
ಅಥವಾ “ಮೋಸ ಮಾಡೋಕೆ.”
ಅಂದ್ರೆ, ಗಟ್ಟಿ ಇಲ್ಲದ ಗೋಡೆ ಕಟ್ಟಿ ಅದು ಗಟ್ಟಿ ಇದೆ ಅನ್ನೋ ತರ ಕಾಣೋಕೆ ಸುಣ್ಣ ಬಳೀತಾರೆ.
ಅಂದ್ರೆ, ಮೊಣಕೈ ಅಥವಾ ಮಣಿಕಟ್ಟಿಗೆ ಸುತ್ತೋ ಮಂತ್ರಿಸಿದ ಪಟ್ಟಿ.
ಅಥವಾ “ನೋವು ಅನುಭವಿಸೋ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ರೊಟ್ಟಿ ಕೋಲುಗಳನ್ನ ಮುರಿತೀನಿ.” ಬಹುಶಃ ರೊಟ್ಟಿ ಇಡೋಕೆ ಬಳಸ್ತಿದ್ದ ಕೋಲನ್ನ ಸೂಚಿಸುತ್ತೆ.
ಅಥವಾ “ಒಡಂಬಡಿಕೆ.”
ಅಥವಾ “ಸೀಲ್ ಪ್ರಾಣಿಯ ಚರ್ಮದ.”
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅಲಂಕಾರಿಕ ವಸ್ತುಗಳನ್ನ.”
ಅಥವಾ “ಸಮಾಧಾನ ಮಾಡೋಕೆ.”
ಪದವಿವರಣೆ ನೋಡಿ.
ಅಕ್ಷ. “ಎತ್ತರ ಸ್ಥಳಗಳನ್ನ.”
ಅಕ್ಷ. “ಕಾನಾನ್ ದೇಶ.”
ಬಹುಶಃ, “ನಿನ್ನ ಮೇಲೆ ನಾನು ಕೋಪದಿಂದ ಕುದಿತಿದ್ದೆ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ತನ್ನನ್ನ ಬಿಟ್ಟು ಬೇರೆ ದೇವರನ್ನ ಆರಾಧಿಸಿದಾಗ ಯೆಹೋವನಿಗೆ ಬರೋ ಕೋಪವನ್ನ ಇದು ಸೂಚಿಸುತ್ತೆ. (ವಿಮೋ 20:5)
ಅಕ್ಷ. “ಎತ್ತರ ಸ್ಥಳಗಳನ್ನ.”
ಅಥವಾ “ಅಲಂಕಾರಿಕ ವಸ್ತುಗಳನ್ನ.”
ಅಥವಾ “ಉತ್ತರಕ್ಕೆ.”
ಇದು ಸೋದೋಮಿಗೆ ಸೇರಿದ ಊರುಗಳನ್ನ ಸೂಚಿಸುತ್ತಿರಬಹುದು.
ಅಥವಾ “ದಕ್ಷಿಣಕ್ಕೆ.”
ಅಕ್ಷ. “ಪ್ರಾಯಶ್ಚಿತ್ತ ಮಾಡ್ತೀನಿ.”
ಅಕ್ಷ. “ಕಾನಾನ್ ದೇಶ.”
ಅಂದ್ರೆ, ಚಿದ್ಕೀಯನನ್ನ.
ಅಂದ್ರೆ, ನೆಬೂಕದ್ನೆಚ್ಚರ.
ಅಂದ್ರೆ, ಯೆಹೋವನ ಮುಂದೆ ಮಾಡಿದ ಆಣೆ.
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ಕೆಡಿಸಲ್ಲ.”
ಅಕ್ಷ. “ಕೆಡಿಸ್ತಾನೆ.”
ಅಕ್ಷ. “ನಿನ್ನ ರಕ್ತದಲ್ಲಿರೋ ದ್ರಾಕ್ಷಿಬಳ್ಳಿ.”
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಏಳನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ನ್ಯಾಯ ತೀರಿಸೋಕೆ.”
ಅಥವಾ “ದೇಶಗಳಿಗೆ ಅಲಂಕಾರವಾಗಿತ್ತು.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ವೇಶ್ಯೆ ತರ ನಡ್ಕೊಂಡು.”
ಅಥವಾ “ಸೇವೆ ಮಾಡೋಣ.”
ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”
ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”
ಅಥವಾ “ಸಮಾಧಾನ ಆಗುತ್ತೆ.”
ಅಂದ್ರೆ, ಭಯದಲ್ಲಿ ಉಚ್ಚೆ ಹೊಯ್ಕೊಳ್ತಾರೆ.
ಅಕ್ಷ. “ಮನೆದೇವರುಗಳನ್ನ.”
ಹೆಚ್ಚಿನಾಂಶ ಬಾಬೆಲಿನವರು.
ಅಂದ್ರೆ, ಯೆರೂಸಲೇಮಿನ ನಿವಾಸಿಗಳು.
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ತಂದೆಯಿಲ್ಲದ ಮಕ್ಕಳಿಗೆ.”
ಅಥವಾ “ಚಕ್ರ ಬಡ್ಡಿಗಾಗಿ.”
ಅಂದ್ರೆ, ಲೋಹಗಳನ್ನ ಕರಗಿಸಿದಾಗ ಉಳಿಯೋ ಕಸ.
ಅರ್ಥ “ಅವಳ ಡೇರೆ.”
ಅರ್ಥ “ನನ್ನ ಡೇರೆ ಅವಳಲ್ಲಿದೆ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ರಸಸಿಂಧೂರ.”
ಅಕ್ಷ. “ಶ್ರೇಷ್ಠ ಸಲಹೆಗಾರರು.”
ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊತಿದ್ರು.
ಅಂದ್ರೆ, ವೇಶ್ಯೆ ತರ ನಡ್ಕೊಂಡಿದ್ದಾರೆ.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಒಂಬತ್ತನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಥವಾ “ಸಾಂಕೇತಿಕ ಕಥೆ.”
ಅಥವಾ “ಅಗಲವಾದ ಬಾಯಿ ಇರೋ ಪಾತ್ರೆಯನ್ನ.”
ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯಗಳನ್ನ.”
ಅಥವಾ “ಅಲಂಕಾರವಾಗಿರೋ.”
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಆಕ್ರಮಣ ಮಾಡೋಕೆ ಬಳಸೋ ಯಂತ್ರದಿಂದ.”
ಅಥವಾ “ಕತ್ತಿಯಿಂದ.”
ಅಥವಾ “ಪ್ರಧಾನರು.”
ಅಥವಾ “ತೋಳಿಲ್ಲದ ಅಂಗಿಗಳನ್ನ.”
ಅಥವಾ “ಸಮಾಧಿಯಲ್ಲಿ.”
ಅಥವಾ “ಅಲಂಕಾರ ಮಾಡ್ತೀನಿ.”
ಅಥವಾ “ನಸುಗೆಂಪು ಬೂದುಬಣ್ಣ ಮಿಶ್ರಿತ ಉಣ್ಣೆ.”
ಅಕ್ಷ., “ಕ್ಯಾಸಿಯ.” ಪದವಿವರಣೆಯಲ್ಲಿ “ಕ್ಯಾಸಿಯ” ನೋಡಿ.
ಬಹುಶಃ, “ತುಂಬಿ ವೈಭವದಿಂದ ಇದ್ದೆ.”
ಅಥವಾ “ಸಮಾಧಿಗೆ.”
ಪದವಿವರಣೆ ನೋಡಿ.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 10ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಇಲ್ಲಿ ಮತ್ತು ಮುಂದಿನ ವಚನಗಳಲ್ಲಿ “ನೈಲ್ ನದಿ” ಅನ್ನೋದು ಅದರ ಕಾಲುವೆಗಳನ್ನೂ ಸೂಚಿಸುತ್ತೆ.
ಅಕ್ಷ. “ಸೊಂಟ.”
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 27ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಇಸ್ರಾಯೇಲ್ಯರಿಗೆ ಬಲ ಕೊಡ್ತೀನಿ.”
ಅಂದ್ರೆ, ಇಸ್ರಾಯೇಲ್ಯರಲ್ಲದ ಬೇರೆ ಜನ್ರು ಮತ್ತು ಈಜಿಪ್ಟಿನವರು.
ಈಜಿಪ್ಟ್ ಜೊತೆ ಮೈತ್ರಿ ಮಾಡ್ಕೊಂಡಿದ್ದ ಇಸ್ರಾಯೇಲ್ಯರನ್ನ ಸೂಚಿಸುತ್ತಿರಬಹುದು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಮೋಫ್.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ಪ್ರಧಾನನೂ.”
ಅದು, ಥೀಬ್ಸ್.
ಅಥವಾ “ಮೋಫ್.”
ಅದು, ಹಿಲಿಯೋಪೊಲಿಸ್.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಥವಾ “ತುಂಬ ಅಧಿಕಾರ ಕೊಟ್ಟು.”
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಥವಾ “ಸಮಾಧಿಗೆ.”
ಪದವಿವರಣೆ ನೋಡಿ.
ಅಥವಾ “ಸಮಾಧಿಗೆ.”
ಪದವಿವರಣೆ ನೋಡಿ.
ಅಂದ್ರೆ ಲೆಬನೋನಿನ ದೇವದಾರು ಮರ.
ಪದವಿವರಣೆ ನೋಡಿ.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 12ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ಅವ್ರ ನದಿಗಳನ್ನ.”
ಅಕ್ಷ. “ತೊರೆಗಳೆಲ್ಲ ನಿನ್ನಿಂದ ತುಂಬಿರುತ್ತೆ.”
ಇದು 12ನೇ ತಿಂಗಳಾಗಿರಬಹುದು. ವಚನ 1 ನೋಡಿ.
ಅಥವಾ “ಸಮಾಧಿ.”
ಪದವಿವರಣೆ ನೋಡಿ.
ಬಹುಶಃ ಫರೋಹನನ್ನ ಸೂಚಿಸುತ್ತೆ.
ಅಥವಾ “ಸಮಾಧಿಯ.”
ಅಥವಾ “ಸಮಾಧಿ.”
ಅಥವಾ “ಸಮಾಧಿ.”
ಅಕ್ಷ. “ಅವಳ.”
ಅಕ್ಷ. “ಅವಳ.”
ಪದವಿವರಣೆ ನೋಡಿ.
ಇದು, ವೀರ ಸೈನಿಕರ ಶವದ ಜೊತೆ ಅವ್ರ ಕತ್ತಿಗಳನ್ನ ಇಟ್ಟು ಮಿಲಿಟರಿ ಗೌರವ ಕೊಟ್ಟು ಮಾಡೋ ಅಂತ್ಯಕ್ರಿಯೆಯನ್ನ ಸೂಚಿಸುತ್ತಿರಬಹುದು.
ಅಥವಾ “ಸಮಾಧಿ.”
ಅಥವಾ “ನಾಯಕರೆಲ್ಲ.”
ಅಥವಾ “ಸಮಾಧಿ.”
ಅಥವಾ “ಅನ್ಯಾಯ.”
ಅಕ್ಷ. “ಕೈ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ಕೆಡಿಸಿದ್ದೀರ.”
ಅಥವಾ “ನನ್ನ ಕುರಿಗಳನ್ನ ನನಗೆ ಒಪ್ಪಿಸೋಕೆ ಹೇಳ್ತೀನಿ.”
ಅಥವಾ “ಕಾಯೋ.”
ಅಂದ್ರೆ, ಟಗರುಗಳು, ಹೋತಗಳು, ಕೊಬ್ಬಿದ ಕುರಿಗಳು ಯಾರನ್ನ ಸೂಚಿಸುತ್ತೋ ಆ ಗಂಡಸ್ರು.
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅದು, ದೇವರ ಮಾತಿಗೆ ಬೇಗ ಪ್ರತಿಕ್ರಿಯಿಸೋ ಹೃದಯ.
ಬಹುಶಃ, “ಯೆರೂಸಲೇಮಲ್ಲಿ ಬಲಿ ಕೊಡೋಕೆ ತಂದಿರೋ ಕುರಿಗಳ ಹಾಗೆ.”
ಅಥವಾ “ಕೈ.”
ಅಥವಾ “ಉಸಿರೇ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ಅಧಿಕಾರಿಯಾಗಿ ಇರ್ತಾನೆ.”
ಅಥವಾ “ವಾಸಸ್ಥಳ; ಮನೆ.”
ಅಥವಾ “ಮೇಲೆ.”
ಅಥವಾ “ಮುಖ್ಯ ಅಧಿಕಾರಿ.”
ಅಥವಾ “ಮುಖ್ಯ ಅಧಿಕಾರಿ.”
ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊತಿದ್ರು.
ಅಥವಾ “ನಿನಗೆ ಬರೋಕೆ ಆಜ್ಞೆ ಕೊಡ್ತೀನಿ.”
ಅಥವಾ “ಮುಖ್ಯ ಅಧಿಕಾರಿಯಾದ.”
ಇದನ್ನ ಹೆಚ್ಚಾಗಿ ಬಿಲ್ಲುಗಾರರು ಹಿಡ್ಕೊಳ್ತಿದ್ರು.
ಬಹುಶಃ, “ಕೈಮೇಕುಗಳು.” ಅಂದ್ರೆ ಚೂಪಾದ ಮೊನೆಯುಳ್ಳ ಆಯುಧಗಳು.
ಅಥವಾ “ಗೋಗನ ಸಮೂಹಗಳ ಕಣಿವೆ.”
ಅರ್ಥ “ಜನಸಮೂಹಗಳು.”
ಅಕ್ಷ. “ನಾನು ನನ್ನ ಮುಖವನ್ನ ಅವ್ರಿಂದ ಮರೆಮಾಡ್ಕೊಂಡೆ.”
ಅಥವಾ “ಅವ್ರಿಂದ ನನ್ನ ಮುಖ ಮರೆಮಾಡ್ಕೊಳ್ಳಲ್ಲ.”
ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಮನೆ.” ಅಧ್ಯಾಯ 40-48ರಲ್ಲಿ ಎಲ್ಲೆಲ್ಲಿ “ಮನೆ” ಅಂತ ಇದ್ದು ಅದು ದೇವಾಲಯವನ್ನ ಅಥವಾ ದೇವಾಲಯದ ಕಟ್ಟಡವನ್ನ ಸೂಚಿಸುತ್ತೋ ಅಲ್ಲೆಲ್ಲ ಅದನ್ನ “ದೇವಾಲಯ” ಅಂತ ಹೇಳಲಾಗಿದೆ.
ಇದು ಉದ್ದ ಮೊಳವನ್ನ ಸೂಚಿಸುತ್ತೆ. ಪರಿಶಿಷ್ಟ ಬಿ14 ನೋಡಿ.
ಬಹುಶಃ ಇದು ಬಾಗಿಲು ಕಾಯುವವ್ರ ಕೋಣೆಯ ಗೋಡೆಯ ಮೇಲಿನ ಭಾಗವನ್ನ ಸೂಚಿಸುತ್ತೆ.
ಅಥವಾ “ಇಳಿಜಾರಿನಂತೆ ಇರೋ (ಓರೆಯಾಗಿರೋ) ಕಿಟಕಿಗಳು ಇದ್ವು.”
ಅಥವಾ “ನಾನು ಕೊಠಡಿಗಳನ್ನ ನೋಡಿದೆ.”
ಬಹುಶಃ, “12.”
ಅಕ್ಷ. “ದೇವಾಲಯ.” ಈ ಪದ ಅಧ್ಯಾಯ 41, 42ರಲ್ಲಿ ಪವಿತ್ರ ಸ್ಥಳವನ್ನ ಮಾತ್ರ ಅಥವಾ ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳ ಎರಡೂ ಸೇರಿರೋ ದೇವಾಲಯವನ್ನ ಸೂಚಿಸುತ್ತೆ.
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅಂದ್ರೆ, ಅತಿ ಪವಿತ್ರ ಸ್ಥಳ.
ಇದು ದೇವಾಲಯದ ಸುತ್ತ ಇರೋ ಚಿಕ್ಕ ಮೊಗಸಾಲೆ ಆಗಿರಬಹುದು.
ಇದು ದೇವಾಲಯದ ಪಶ್ಚಿಮಕ್ಕಿರೋ ಕಟ್ಟಡ.
ಅಕ್ಷ. “ಬಾಗಿಲಿನ ಚೌಕಟ್ಟು.” ಇದು ಪವಿತ್ರ ಸ್ಥಳದ ಬಾಗಿಲನ್ನ ಸೂಚಿಸುತ್ತಿರಬಹುದು.
ಇದು ಅತಿ ಪವಿತ್ರ ಸ್ಥಳವನ್ನ ಸೂಚಿಸುತ್ತಿರಬಹುದು.
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಗ್ರೀಕ್ ಸೆಪ್ಟೂಅಜಂಟ್ ಪ್ರಕಾರ “100 ಮೊಳ ಉದ್ದ.” ಪ್ರಾಚೀನ ಹೀಬ್ರು ಪ್ರತಿಗಳಲ್ಲಿ “ಒಂದು ಮೊಳ ದಾರಿ” ಅಂತ ಇದೆ. ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಬಹುಶಃ, “ಅವನು.”
ಹೀಬ್ರು ಭಾಷೆಯಲ್ಲಿ ರೂಆಖ್. ಇಲ್ಲಿ ಈ ಪದವು ದೇವದೂತನಿಗೂ ಸೂಚಿಸಬಹುದು.
ಅಥವಾ “ವೇಶ್ಯೆ ತರ ನಡ್ಕೊಂಡು.”
ಇದು ಉದ್ದ ಮೊಳವನ್ನ ಸೂಚಿಸುತ್ತೆ. ಪರಿಶಿಷ್ಟ ಬಿ14 ನೋಡಿ.
ಸುಮಾರು 22.2 ಸೆಂ.ಮೀ. (8.75 ಇಂಚು). ಪರಿಶಿಷ್ಟ ಬಿ14 ನೋಡಿ.
ಅಂದ್ರೆ, ಜನ.
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ಯಜ್ಞವೇದಿ.”
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಅಥವಾ “ಮೈನಾ.” ಪರಿಶಿಷ್ಟ ಬಿ14 ನೋಡಿ.
ಅಥವಾ “ಜವೆಗೋದಿಯಿಂದ.”
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಪರಿಶಿಷ್ಟ ಬಿ14 ನೋಡಿ.
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅಥವಾ “ಬಯಲು ಪ್ರದೇಶದಿಂದ.”
ಅದು, ಮೃತ ಸಮುದ್ರ.
ಅಕ್ಷ. “ನೀರು ವಾಸಿ ಆಗುತ್ತೆ.”
ಅದು, ಮೆಡಿಟರೇನಿಯನ್ ಸಮುದ್ರ.
ಅಕ್ಷ. “ಆಹಾರ.”
ಅದು, ಮೃತ ಸಮುದ್ರ.
ಅದು, ಈಜಿಪ್ಟಿನ ನಾಲೆ. ಪದವಿವರಣೆ ನೋಡಿ.
ಅಥವಾ “ಹಾಮಾತಿನ ಬಾಗಿಲ.”
ಅಥವಾ “ಹಾಮಾತಿನ ಗಡಿ ತನಕ.”
ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅದು, ಈಜಿಪ್ಟಿನ ನಾಲೆ. ಪದವಿವರಣೆ ನೋಡಿ.
ಅದು, ಮೆಡಿಟರೇನಿಯನ್ ಸಮುದ್ರ.