ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • bi7 ಪು. 624-639
  • ಚರ್ಚೆಗಾಗಿ ಬೈಬಲ್‌ ವಿಷಯಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಚರ್ಚೆಗಾಗಿ ಬೈಬಲ್‌ ವಿಷಯಗಳು
  • ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
  • ಉಪಶೀರ್ಷಿಕೆಗಳು
  • 1. ಅಮರ ಆತ್ಮ
  • 2. ಅರ್ಮಗೆದೋನ್‌
  • 3. ಕಡೇ ದಿವಸಗಳು
  • 5. ಕ್ರಿಸ್ತನ ಹಿಂದಿರುಗುವಿಕೆ
  • 6. ಚರ್ಚು
  • 7. ಜೀವ
  • 8. ಜ್ಞಾಪಕಾಚರಣೆ, ಮಾಸ್‌ (ದಿವ್ಯಪೂಜೆ)
  • 9. ತ್ರಯೈಕ್ಯ
  • 10. ದೀಕ್ಷಾಸ್ನಾನ
  • 11. ದುಷ್ಟತನ, ಲೋಕಸಂಕಟ
  • 13. ಪವಿತ್ರಾತ್ಮ
  • 14. ನರಕ (ಹೇಡೀಸ್‌, ಷೀಓಲ್‌)
  • 15. ಪಾಪ
  • 16. ಪಿಶಾಚ, ದೆವ್ವಗಳು
  • 17. ಪುನರುತ್ಥಾನ
  • 18. ಪೂರ್ವಜರ ಆರಾಧನೆ
  • 19. ಪೂರ್ವನಿರ್ಧರಿತ
  • 20. ಪ್ರಾರ್ಥನೆ
  • 21. ಪ್ರೇತಾತ್ಮವಾದ
  • 22. ಬೈಬಲ್‌
  • 23. ಭೂಮಿ
  • 25. ಮರಿಯಳ ಆರಾಧನೆ
  • 26. ಮಿಶ್ರನಂಬಿಕೆ
  • 27. ಯೆಹೋವ, ದೇವರು
  • 28. ಯೆಹೋವನ ಸಾಕ್ಷಿಗಳು
  • 29. ಯೇಸು
  • 30. ರಕ್ತ
  • 31. ರಕ್ಷಣೆ
  • 32. ಹಬ್ಬಗಳು, ಜನ್ಮದಿನಗಳು
  • 33. ರಾಜ್ಯ
  • 34. ವಾಸಿಮಾಡುವಿಕೆ, ಭಾಷೆಗಳು
  • 35. ವಿಗ್ರಹಗಳು
  • 36. ವಿಮೋಚನಾ ಮೌಲ್ಯ
  • 37. ವಿರೋಧ, ಹಿಂಸೆ
  • 39. ಶಿಲುಬೆ
  • 40. ಶುಶ್ರೂಷಕ (ಸೇವಕ)
  • 42. ಸಾಕ್ಷಿಕಾರ್ಯ
  • 43. ಸುಳ್ಳು ಪ್ರವಾದಿಗಳು
  • 45. ಸ್ವರ್ಗ
ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
ಚರ್ಚೆಗಾಗಿ ಬೈಬಲ್‌ ವಿಷಯಗಳು

ಚರ್ಚೆಗಾಗಿ ಬೈಬಲ್‌ ವಿಷಯಗಳು

(ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಹೀಬ್ರು ಶಾಸ್ತ್ರಗ್ರಂಥದ ಉಲ್ಲೇಖಗಳು ‘ಸತ್ಯವೇದವು’ ಬೈಬಲಿನ ವಚನಗಳಿಗೆ ಸೂಚಿಸುತ್ತವೆ. ಹೀಬ್ರು ಶಾಸ್ತ್ರಗ್ರಂಥದಲ್ಲಿನ ಬೈಬಲ್‌ ಪುಸ್ತಕಗಳ ಹೆಸರುಗಳ ಸಂಕ್ಷಿಪ್ತರೂಪಗಳಿಗಾಗಿ 639ನೆಯ ಪುಟವನ್ನು ನೋಡಿರಿ.)

1. ಅಮರ ಆತ್ಮ

ಎ. ಮನುಷ್ಯನೊಳಗೆ ಅಮರವಾದದ್ದೇನೂ ಇಲ್ಲ

ಮನುಷ್ಯನಲ್ಲಿ ಅಮರ ಆತ್ಮವಿಲ್ಲ. ಆದಿ 2:7; 3:19

ಮರಣಾನಂತರ ಏನೂ ಬದುಕಿ ಉಳಿಯುವುದಿಲ್ಲ. ಕೀರ್ತ 146:3, 4; ಪ್ರಸಂ 9:5, 10; 3:20

ಮರಣಾನಂತರ ಏನಾದರೂ ಬದುಕಿ ಉಳಿಯುತ್ತದೆ ಎಂದು ದೇವರ ಸೇವಕರು ನಂಬಲಿಲ್ಲ. ಕೀರ್ತ 6:4, 5; ಯೆಶಾ 38:18; ಯೋಹಾ 11:11-14

2. ಅರ್ಮಗೆದೋನ್‌

ಎ. ದುಷ್ಟತನವನ್ನು ಅಂತ್ಯಗೊಳಿಸುವುದಕ್ಕಾಗಿ ದೇವರ ಯುದ್ಧ

ಅರ್ಮಗೆದೋನ್‌ ಯುದ್ಧಕ್ಕಾಗಿ ರಾಷ್ಟ್ರಗಳು ಒಟ್ಟುಗೂಡಿಸಲ್ಪಡುವವು. ಪ್ರಕ 16:14, 16

ಮಗನ ಮತ್ತು ದೂತರ ಮೂಲಕ ದೇವರು ಹೋರಾಡುತ್ತಾನೆ. 2ಥೆಸ 1:6-9; ಪ್ರಕ 19:11-16

ನಾವು ಪಾರಾಗಬಹುದಾದ ವಿಧ. ಚೆಫ 2:2, 3; ಪ್ರಕ 7:14

ಬಿ. ದೇವರ ಪ್ರೀತಿಯು ಭಂಗಗೊಂಡಿಲ್ಲ

ಲೋಕವು ತೀರ ಭ್ರಷ್ಟಗೊಂಡಿದೆ. 2ತಿಮೊ 3:1-5

ದೇವರು ತಾಳ್ಮೆಯುಳ್ಳವನಾದರೂ ನ್ಯಾಯವನ್ನು ಸ್ಥಾಪಿಸಲು ಕ್ರಿಯೆಗೈಯುವ ಆವಶ್ಯಕತೆಯಿದೆ. 2ಪೇತ್ರ 3:9, 15; ಲೂಕ 18:7, 8

ನೀತಿವಂತರು ಏಳಿಗೆ ಹೊಂದಬೇಕಾದರೆ, ದುಷ್ಟರು ನಾಶವಾಗಬೇಕು. ಜ್ಞಾನೋ 21:18; ಪ್ರಕ 11:18

3. ಕಡೇ ದಿವಸಗಳು

ಎ. “ಲೋಕದ ಅಂತ್ಯದ” ಅರ್ಥ

ವಿಷಯಗಳ ವ್ಯವಸ್ಥೆಯ ಅಂತ್ಯ. ಮತ್ತಾ 24:3; 2ಪೇತ್ರ 3:5-7; ಮಾರ್ಕ 13:4

ಭೂಮಿಯ ಅಂತ್ಯವಲ್ಲ, ದುಷ್ಟ ವ್ಯವಸ್ಥೆಯ ಅಂತ್ಯ. 1ಯೋಹಾ 2:17

ನಾಶನಕ್ಕೆ ಮುಂಚೆ ಅಂತ್ಯಕಾಲವು ಬರುತ್ತದೆ. ಮತ್ತಾ 24:14

ನೀತಿವಂತರು ಪಾರಾಗುವರು; ತದನಂತರ ಹೊಸ ಲೋಕವು ಬರುತ್ತದೆ. 2ಪೇತ್ರ 2:9; ಪ್ರಕ 7:14-17

ಬಿ. ಕಡೇ ದಿವಸಗಳ ಸೂಚನೆಗಳ ಕುರಿತು ಎಚ್ಚರದಿಂದಿರುವುದು ಆವಶ್ಯಕ

ಸೂಚನೆಗಳು ನಮ್ಮ ಮಾರ್ಗದರ್ಶನಕ್ಕಾಗಿ ದೇವರಿಂದ ಕೊಡಲ್ಪಟ್ಟಿವೆ. 2ತಿಮೊ 3:1-5; 1ಥೆಸ 5:1-4

ಗಂಭೀರತೆಯನ್ನು ಗ್ರಹಿಸಲು ಲೋಕವು ತಪ್ಪಿಹೋಗಿದೆ. 2ಪೇತ್ರ 3:3, 4, 7; ಮತ್ತಾ 24:39

ದೇವರು ತಡಮಾಡುವುದಿಲ್ಲ, ಆದರೆ ಎಚ್ಚರಿಸುತ್ತಾನೆ. 2ಪೇತ್ರ 3:9

ಎಚ್ಚರದಿಂದಿದ್ದು, ಆಸಕ್ತಿವಹಿಸುವವರಿಗೆ ಪ್ರತಿಫಲ ಸಿಗುವುದು. ಲೂಕ 21:34-36

4. ಕಾಲಗಣನಶಾಸ್ತ್ರ

ಎ. ಅನ್ಯಜನಾಂಗಗಳ ಕಾಲಗಳು (ಸಾ.ಶ.) 1914ರಲ್ಲಿ ಮುಕ್ತಾಯಗೊಳ್ಳುತ್ತವೆ

ಸಾ.ಶ.ಪೂ. 607ರಲ್ಲಿ ರಾಜ್ಯಾಡಳಿತಗಾರರ ವಂಶಕ್ಕೆ ತಡೆಯನ್ನೊಡ್ಡಲಾಯಿತು. ಯೆಹೆ 21:25-27

ಆಳ್ವಿಕೆಯು ಪುನಸ್ಸ್ಥಾಪಿಸಲ್ಪಡುವ ತನಕ “ಏಳು ಕಾಲಗಳು” (NW) ಗತಿಸಬೇಕು. ದಾನಿ 4:32, 16, 17

ಏಳು = 2 × 31/2 ಕಾಲಗಳು, ಅಥವಾ 2 × 1,260 ದಿನಗಳು. ಪ್ರಕ 12:6, 14; 11:2, 3

ಒಂದು ವರ್ಷಕ್ಕೆ ಒಂದು ದಿನ. [2,520 ವರ್ಷಗಳಾಗುತ್ತದೆ] ಯೆಹೆ 4:6; ಅರ 14:34

ರಾಜ್ಯದ ಸ್ಥಾಪನೆಯ ವರೆಗೂ ಮುಂದುವರಿಯುತ್ತದೆ. ಲೂಕ 21:24; ದಾನಿ 7:13, 14

5. ಕ್ರಿಸ್ತನ ಹಿಂದಿರುಗುವಿಕೆ

ಎ. ಹಿಂದಿರುಗುವಿಕೆಯು ಮಾನವರ ಕಣ್ಣಿಗೆ ಅದೃಶ್ಯವಾಗಿರುತ್ತದೆ

ಲೋಕವು ತನ್ನನ್ನು ಇನ್ನೆಂದೂ ನೋಡಲಾರದೆಂದು ಶಿಷ್ಯರಿಗೆ ಹೇಳಿದನು. ಯೋಹಾ 14:19

ಕೇವಲ ಶಿಷ್ಯರು ಸ್ವರ್ಗಾರೋಹಣವನ್ನು ನೋಡಿದರು; ಅದೇ ರೀತಿಯಲ್ಲಿ ಹಿಂದಿರುಗುವನು. ಅಕಾ 1:6, 10, 11

ಸ್ವರ್ಗದಲ್ಲಿ ಒಬ್ಬ ಅದೃಶ್ಯ ಆತ್ಮಜೀವಿ. 1ತಿಮೊ 6:14-16; ಇಬ್ರಿ 1:3

ಸ್ವರ್ಗೀಯ ರಾಜ್ಯಾಧಿಕಾರದಲ್ಲಿ ಹಿಂದಿರುಗಿ ಬರುವನು. ದಾನಿ 7:13, 14

ಬಿ. ಪ್ರಾಕೃತಿಕ ವಾಸ್ತವಾಂಶಗಳಿಂದ ಗುರುತಿಸಲ್ಪಡುವುದು

ಶಿಷ್ಯರು ಸಾನ್ನಿಧ್ಯದ ಸೂಚನೆಗಾಗಿ ಕೇಳಿಕೊಂಡರು. ಮತ್ತಾ 24:3

ಕ್ರೈಸ್ತರು ಸಾನ್ನಿಧ್ಯವನ್ನು ತಿಳಿವಳಿಕೆಯ ಕಣ್ಣುಗಳಿಂದ “ನೋಡುತ್ತಾರೆ.” ಎಫೆ 1:18

ಅನೇಕ ಘಟನೆಗಳು ಸಾನ್ನಿಧ್ಯದ ರುಜುವಾತನ್ನು ಕೊಡುತ್ತವೆ. ಲೂಕ 21:10, 11

ಹಠಾತ್ತಾಗಿ ಶುರುವಾಗುವ ನಾಶನವನ್ನು ವೈರಿಗಳು “ಕಾಣುವರು.” ಪ್ರಕ 1:7

6. ಚರ್ಚು

ಎ. ಆಧ್ಯಾತ್ಮಿಕ ಚರ್ಚು ಕ್ರಿಸ್ತನ ಮೇಲೆ ಕಟ್ಟಲ್ಪಟ್ಟಿದೆ

ದೇವರು ಮಾನವ-ನಿರ್ಮಿತ ಗುಡಿಗಳಲ್ಲಿ ವಾಸಮಾಡುವವನಲ್ಲ. ಅಕಾ 17:24, 25; 7:48

ನಿಜ ಚರ್ಚು ಜೀವವುಳ್ಳ ಕಲ್ಲುಗಳಿಂದ ಕಟ್ಟಲ್ಪಟ್ಟಿರುವ ಆಧ್ಯಾತ್ಮಿಕ ಮಂದಿರವಾಗಿದೆ. 1ಪೇತ್ರ 2:5, 6

ಕ್ರಿಸ್ತನು ಮೂಲೆಗಲ್ಲಾಗಿದ್ದಾನೆ; ಅಪೊಸ್ತಲರು ದ್ವಿತೀಯ ಅಸ್ತಿವಾರವಾಗಿದ್ದಾರೆ. ಎಫೆ 2:20

ದೇವರನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು. ಯೋಹಾ 4:24

ಬಿ. ಚರ್ಚು ಪೇತ್ರನ ಮೇಲೆ ಕಟ್ಟಲ್ಪಡಲಿಲ್ಲ

ಚರ್ಚು ಪೇತ್ರನ ಮೇಲೆ ಕಟ್ಟಲ್ಪಟ್ಟಿದೆಯೆಂದು ಯೇಸು ಹೇಳಲಿಲ್ಲ. ಮತ್ತಾ 16:18

ಯೇಸು “ಬಂಡೆ”ಯಾಗಿ ಗುರುತಿಸಲ್ಪಟ್ಟನು. 1ಕೊರಿಂ 10:4

ಪೇತ್ರನು ಯೇಸುವನ್ನು ಅಸ್ತಿವಾರವಾಗಿ ಗುರುತಿಸಿದನು. 1ಪೇತ್ರ 2:4, 6-8; ಅಕಾ 4:8-12

7. ಜೀವ

ಎ. ವಿಧೇಯ ಮಾನವಕುಲಕ್ಕೆ ನಿತ್ಯಜೀವದ ಆಶ್ವಾಸನೆಯು ಕೊಡಲ್ಪಟ್ಟಿದೆ

ಸುಳ್ಳಾಡಲು ಸಾಧ್ಯವಿಲ್ಲದ ದೇವರು ಜೀವವನ್ನು ವಾಗ್ದಾನಿಸಿದ್ದಾನೆ. ತೀತ 1:2; ಯೋಹಾ 10:27, 28

ನಂಬಿಕೆಯಿಡುವವರಿಗೆ ನಿತ್ಯಜೀವದ ಆಶ್ವಾಸನೆಯು ಕೊಡಲ್ಪಟ್ಟಿದೆ. ಯೋಹಾ 11:25, 26

ಮರಣವು ತೆಗೆದುಹಾಕಲ್ಪಡುವುದು. 1ಕೊರಿಂ 15:26; ಪ್ರಕ 21:4; 20:14; ಯೆಶಾ 25:8

ಬಿ. ಕ್ರಿಸ್ತನ ದೇಹದಲ್ಲಿರುವವರಿಗೆ ಮಾತ್ರ ಸ್ವರ್ಗೀಯ ನಿರೀಕ್ಷೆಯಿದೆ

ದೇವರು ತನಗೆ ಇಷ್ಟಬಂದ ರೀತಿಯಲ್ಲಿ ಸದಸ್ಯರನ್ನು ಆರಿಸುತ್ತಾನೆ. ಮತ್ತಾ 20:23; 1ಕೊರಿಂ 12:18

ಕೇವಲ 1,44,000 ಮಂದಿಯನ್ನು ಭೂಮಿಯಿಂದ ಆರಿಸಿಕೊಳ್ಳಲಾಗಿದೆ. ಪ್ರಕ 14:1,4; 7:2-4; 5:9,10

ಸ್ನಾನಿಕನಾದ ಯೋಹಾನನು ಸಹ ಸ್ವರ್ಗೀಯ ರಾಜ್ಯಕ್ಕೆ ಬಾಧ್ಯನಲ್ಲ. ಮತ್ತಾ 11:11

ಸಿ. ಭೂಜೀವಿತವು ಅಪಾರ ಸಂಖ್ಯೆಯಲ್ಲಿರುವ “ಬೇರೆ ಕುರಿ”ಗಳಿಗೆ ವಾಗ್ದಾನಿಸಲ್ಪಟ್ಟಿದೆ

ಸೀಮಿತ ಸಂಖ್ಯೆಯು ಯೇಸುವಿನೊಂದಿಗೆ ಸ್ವರ್ಗದಲ್ಲಿರುತ್ತದೆ. ಪ್ರಕ 14:1, 4; 7:2-4

“ಬೇರೆ ಕುರಿಗಳು” ಕ್ರಿಸ್ತನ ಸಹೋದರರಲ್ಲ. ಯೋಹಾ 10:16; ಮತ್ತಾ 25:32, 40

ಭೂಮಿಯಲ್ಲಿ ಪಾರಾಗಿ ಉಳಿಯಲು ಅನೇಕರು ಈಗ ಒಟ್ಟುಗೂಡಿಸಲ್ಪಡುತ್ತಿದ್ದಾರೆ. ಪ್ರಕ 7:9, 15-17

ಇನ್ನಿತರರು ಭೂಜೀವಿತಕ್ಕಾಗಿ ಎಬ್ಬಿಸಲ್ಪಡುವರು. ಪ್ರಕ 20:12; 21:4

8. ಜ್ಞಾಪಕಾಚರಣೆ, ಮಾಸ್‌ (ದಿವ್ಯಪೂಜೆ)

ಎ. ಕರ್ತನ ಸಂಧ್ಯಾ ಭೋಜನದ ಆಚರಣೆ

ವರ್ಷಕ್ಕೊಮ್ಮೆ ಪಸ್ಕ ಹಬ್ಬದ ತಾರೀಖಿನಂದು ಆಚರಿಸಲಾಗುತ್ತದೆ. ಲೂಕ 22:1, 17-20; ವಿಮೋ 12:14

ಕ್ರಿಸ್ತನ ಯಜ್ಞಾರ್ಪಿತ ಮರಣದ ಆಚರಣೆಯಾಗಿದೆ. 1ಕೊರಿಂ 11:26; ಮತ್ತಾ 26:28

ಸ್ವರ್ಗೀಯ ನಿರೀಕ್ಷೆಯುಳ್ಳವರು ಪಾಲುತೆಗೆದುಕೊಳ್ಳುವರು. ಲೂಕ 22:29, 30; 12:32, 37

ಅಂತಹ ನಿರೀಕ್ಷೆಯಿದೆ ಎಂದು ವ್ಯಕ್ತಿಯೊಬ್ಬನಿಗೆ ತಿಳಿಯುವ ವಿಧ. ರೋಮ 8:15-17

ಬಿ. ಮಾಸ್‌ ಅಶಾಸ್ತ್ರೀಯವಾಗಿದೆ

ಪಾಪಗಳ ಕ್ಷಮಾಪಣೆಗಾಗಿ ರಕ್ತದ ಸುರಿಸುವಿಕೆ ಅಗತ್ಯ. ಇಬ್ರಿ 9:22

ಕ್ರಿಸ್ತನು ಹೊಸ ಒಡಂಬಡಿಕೆಯ ಏಕಮಾತ್ರ ಮಧ್ಯಸ್ಥನಾಗಿದ್ದಾನೆ. 1ತಿಮೊ 2:5, 6; ಯೋಹಾ 14:6

ಕ್ರಿಸ್ತನು ಸ್ವರ್ಗದಲ್ಲಿದ್ದಾನೆ; ಪಾದ್ರಿಗಳಿಂದ ಕೆಳಗೆ ತರಲ್ಪಡುವದಿಲ್ಲ. ಅಕಾ 3:20, 21

ಕ್ರಿಸ್ತನ ಯಜ್ಞವನ್ನು ಪುನರಾವರ್ತಿಸುವ ಅಗತ್ಯವಿಲ್ಲ. ಇಬ್ರಿ 9:24-26; 10:11-14

9. ತ್ರಯೈಕ್ಯ

ಎ. ದೇವರು, ತಂದೆ, ಏಕ ವ್ಯಕ್ತಿ, ವಿಶ್ವದಲ್ಲಿ ಪರಮಶ್ರೇಷ್ಠನು

ದೇವರು ಮೂರು ವ್ಯಕ್ತಿಗಳಲ್ಲ. ಧರ್ಮೋ 6:4; ಮಲಾ 2:10; ಮಾರ್ಕ 10:18; ರೋಮ 3:29, 30

ಮಗನು ಸೃಷ್ಟಿಸಲ್ಪಟ್ಟನು; ಮೊದಲು ದೇವರೊಬ್ಬನೇ ಇದ್ದನು. ಪ್ರಕ 3:14; ಕೊಲೊ 1:15; ಯೆಶಾ 44:6

ಎಲ್ಲಾ ಸಮಯಗಳಲ್ಲೂ ದೇವರು ವಿಶ್ವದ ಪ್ರಭುವಾಗಿದ್ದಾನೆ. ಫಿಲಿ 2:5, 6; ದಾನಿ 4:35

ಎಲ್ಲರಿಗಿಂತಲೂ ಮಿಗಿಲಾಗಿ ದೇವರನ್ನು ಘನತೆಗೇರಿಸಬೇಕು. ಫಿಲಿ 2:10, 11

ಬಿ. ಭೂಮಿಗೆ ಬರುವ ಮೊದಲೂ ಬಂದ ಬಳಿಕವೂ ಮಗನು ತಂದೆಗಿಂತ ಕೆಳಸ್ಥಾನದಲ್ಲಿದ್ದಾನೆ

ಸ್ವರ್ಗದಲ್ಲಿ ಮಗನು ವಿಧೇಯನಾಗಿದ್ದನು, ತಂದೆಯಿಂದ ಕಳುಹಿಸಲ್ಪಟ್ಟನು. ಯೋಹಾ 8:42; 12:49

ಭೂಮಿಯಲ್ಲಿ ವಿಧೇಯನು, ತಂದೆಯು ದೊಡ್ಡವನು. ಯೋಹಾ 14:28; 5:19; ಇಬ್ರಿ 5:8

ಸ್ವರ್ಗದಲ್ಲಿ ಮಹಿಮೆಗೇರಿಸಲ್ಪಟ್ಟನು, ಇನ್ನೂ ಅಧೀನನಾಗಿದ್ದಾನೆ. ಫಿಲಿ 2:9; 1ಕೊರಿಂ 15:28; ಮತ್ತಾ 20:23

ಯೆಹೋವನು ಕ್ರಿಸ್ತನಿಗೆ ತಲೆಯೂ ದೇವರೂ ಆಗಿದ್ದಾನೆ. 1ಕೊರಿಂ 11:3; ಯೋಹಾ 20:17; ಪ್ರಕ 1:6

ಸಿ. ದೇವರು ಮತ್ತು ಕ್ರಿಸ್ತನು ಒಂದಾಗಿದ್ದಾರೆ

ಯಾವಾಗಲೂ ಸಂಪೂರ್ಣ ಹೊಂದಾಣಿಕೆಯಲ್ಲಿದ್ದಾರೆ. ಯೋಹಾ 8:28, 29; 14:10

ಪತಿಪತ್ನಿಯರು ಒಂದಾಗಿರುವಂಥ ರೀತಿಯಲ್ಲಿ ಅವರು ಒಂದಾಗಿದ್ದಾರೆ. ಯೋಹಾ 10:30; ಮತ್ತಾ 19:4-6

ನಂಬಿಕೆಯಿಡುವವರೆಲ್ಲರೂ ಅದೇ ರೀತಿಯಲ್ಲಿ ಒಂದಾಗಿರಬೇಕು. ಯೋಹಾ 17:20-22; 1ಕೊರಿಂ 1:10

ಕ್ರಿಸ್ತನ ಮೂಲಕ ಯೆಹೋವನಿಗೆ ಸಲ್ಲಿಸುವಂತಹ ಒಂದೇ ಆರಾಧನೆಯು ಎಂದೆಂದಿಗೂ ಇರುವುದು. ಯೋಹಾ 4:23, 24

ಡಿ. ದೇವರ ಪವಿತ್ರಾತ್ಮವು ಆತನ ಕಾರ್ಯಕಾರಿ ಶಕ್ತಿಯಾಗಿದೆ

ವ್ಯಕ್ತಿಯಲ್ಲ, ಒಂದು ಶಕ್ತಿ. ಮತ್ತಾ 3:16; ಯೋಹಾ 20:22; ಅಕಾ 2:4, 17, 33

ಸ್ವರ್ಗದಲ್ಲಿ ದೇವರು ಮತ್ತು ಕ್ರಿಸ್ತನೊಂದಿಗಿರುವ ಒಬ್ಬ ವ್ಯಕ್ತಿಯಲ್ಲ. ಅಕಾ 7:55, 56; ಪ್ರಕ 7:10

ಉದ್ದೇಶಗಳನ್ನು ನೆರವೇರಿಸಲು ದೇವರಿಂದ ಮಾರ್ಗದರ್ಶಿಸಲ್ಪಡುತ್ತದೆ. 1ಕೊರಿಂ 12:4-11

ದೇವರಿಗೆ ಸೇವೆಸಲ್ಲಿಸುತ್ತಿರುವವರು ಅದನ್ನು ಪಡೆದುಕೊಳ್ಳುವರು ಮತ್ತು ಅದರಿಂದ ಮಾರ್ಗದರ್ಶಿಸಲ್ಪಡುವರು. 1ಕೊರಿಂ 2:12, 13; ಗಲಾ 5:16

10. ದೀಕ್ಷಾಸ್ನಾನ

ಎ. ಒಂದು ಕ್ರಿಸ್ತೀಯ ಆವಶ್ಯಕತೆ

ಯೇಸು ಮಾದರಿಯನ್ನಿಟ್ಟನು. ಮತ್ತಾ 3:13-15; ಇಬ್ರಿ 10:7

ತನ್ನನ್ನು ನಿರಾಕರಿಸಿಕೊಳ್ಳುವುದರ ಇಲ್ಲವೆ ಸಮರ್ಪಿಸಿಕೊಳ್ಳುವುದರ ಒಂದು ಸಂಕೇತ. ಮತ್ತಾ 16:24; 1ಪೇತ್ರ 3:21

ಕಲಿತುಕೊಳ್ಳುವಷ್ಟು ದೊಡ್ಡವರಾಗಿರುವವರಿಗೆ ಮಾತ್ರ. ಮತ್ತಾ 28:19, 20; ಅಕಾ 2:41

ನಿಮಜ್ಜನವೇ ತಕ್ಕ ವಿಧಾನವಾಗಿದೆ. ಅಕಾ 8:38, 39; ಯೋಹಾ 3:23

ಬಿ. ಪಾಪಗಳನ್ನು ತೊಳೆಯುವುದಿಲ್ಲ

ಪಾಪಗಳನ್ನು ತೊಳೆಯಲಿಕ್ಕಾಗಿ ಯೇಸು ದೀಕ್ಷಾಸ್ನಾನ ಪಡೆದುಕೊಳ್ಳಲಿಲ್ಲ. 1ಪೇತ್ರ 2:22; 3:18

ಯೇಸುವಿನ ರಕ್ತವು ಪಾಪಗಳನ್ನು ತೊಳೆಯುತ್ತದೆ. 1ಯೋಹಾ 1:7

11. ದುಷ್ಟತನ, ಲೋಕಸಂಕಟ

ಎ. ಲೋಕಸಂಕಟಕ್ಕೆ ಕಾರಣರು

ಇಂದಿರುವ ಕೆಟ್ಟತನಕ್ಕೆ ದುಷ್ಟ ಆಳ್ವಿಕೆಯು ಕಾರಣವಾಗಿದೆ. ಜ್ಞಾನೋ 29:2; 28:28

ಲೋಕದ ಅಧಿಪತಿಯು ದೇವರ ವೈರಿಯಾಗಿದ್ದಾನೆ. 2ಕೊರಿಂ 4:4; 1ಯೋಹಾ 5:19; ಯೋಹಾ 12:31

ಪಿಶಾಚನಿಂದ ವಿಪತ್ತುಗಳು ತರಲ್ಪಡುತ್ತವೆ, ಅವನಿಗಿರುವ ಸಮಯವು ಸ್ವಲ್ಪವೇ. ಪ್ರಕ 12:9, 12

ಪಿಶಾಚನು ಬಂಧನದಲ್ಲಿಡಲ್ಪಡುವನು, ಅನಂತರ ಮಹಿಮಾಭರಿತ ಶಾಂತಿಯು ಇರುವುದು. ಪ್ರಕ 20:1-3; 21:3, 4

ಬಿ. ದುಷ್ಟತನವು ಅನುಮತಿಸಲ್ಪಟ್ಟಿರುವ ಕಾರಣ

ಸೃಷ್ಟಿಜೀವಿಗಳ ನಿಷ್ಠೆಯ ಬಗ್ಗೆ ಪಿಶಾಚನು ದೇವರಿಗೆ ಸವಾಲನ್ನೊಡ್ಡಿದನು. ಯೋಬ 1:11, 12

ನಿಷ್ಠೆಯನ್ನು ರುಜುಪಡಿಸಲು ನಂಬಿಗಸ್ತರಿಗೆ ಅವಕಾಶವು ನೀಡಲ್ಪಟ್ಟಿದೆ. ರೋಮ 9:17; ಜ್ಞಾನೋ 27:11

ಪಿಶಾಚನು ಒಬ್ಬ ಸುಳ್ಳುಗಾರನಾಗಿ ರುಜುಪಡಿಸಲ್ಪಟ್ಟನು, ವಿವಾದಾಂಶವು ಇತ್ಯರ್ಥವಾಗಲಿದೆ. ಯೋಹಾ 12:31

ನಂಬಿಗಸ್ತರಿಗೆ ನಿತ್ಯಜೀವದ ಬಹುಮಾನವು ಕೊಡಲ್ಪಡುವುದು. ರೋಮ 2:6, 7; ಪ್ರಕ 21:3-5

ಸಿ. ಅಂತ್ಯ ಸಮಯವು ದೀರ್ಘಗೊಳಿಸಲ್ಪಟ್ಟಿರುವುದು ಕರುಣಾಭರಿತ ಒದಗಿಸುವಿಕೆಯಾಗಿದೆ

ನೋಹನ ದಿನಗಳಂತೆಯೇ, ಎಚ್ಚರಿಕೆಯನ್ನು ಕೊಡಲು ಸಮಯ ಹಿಡಿಯುತ್ತದೆ. ಮತ್ತಾ 24:14, 37-39

ದೇವರು ತಡಮಾಡುವವನಲ್ಲ, ಆದರೆ ಕರುಣಾಮಯಿ. 2ಪೇತ್ರ 3:9; ಯೆಶಾ 30:18

ಅನಿರೀಕ್ಷಿತವಾಗಿ ಸಿಕ್ಕಿಬೀಳುವ ಅಪಾಯದಿಂದ ದೂರವಿರಲು ಬೈಬಲ್‌ ನಮಗೆ ಸಹಾಯಮಾಡುತ್ತದೆ. ಲೂಕ 21:36; 1ಥೆಸ 5:4

ರಕ್ಷಣೆಗಾಗಿರುವ ದೇವರ ಒದಗಿಸುವಿಕೆಯನ್ನು ಈಗಲೇ ಹುಡುಕಿರಿ. ಯೆಶಾ 2:2-4; ಚೆಫ 2:3

ಡಿ. ಲೋಕಸಂಕಟಕ್ಕೆ ಪರಿಹಾರವು ಮನುಷ್ಯರಿಂದ ಸಿಗುವುದಿಲ್ಲ

ಮನುಷ್ಯರು ಭಯಭೀತರಾಗಿದ್ದಾರೆ, ಕಂಗೆಟ್ಟವರಾಗಿದ್ದಾರೆ. ಲೂಕ 21:10, 11; 2ತಿಮೊ 3:1-5

ಮನುಷ್ಯರಲ್ಲ, ದೇವರ ರಾಜ್ಯವು ಯಶಸ್ವಿಯಾಗುವುದು. ದಾನಿ 2:44; ಮತ್ತಾ 6:10

ಜೀವಿಸಬೇಕಾದರೆ ಈಗಲೇ ರಾಜನೊಂದಿಗೆ ಸಮಾಧಾನವನ್ನು ಮಾಡಿಕೊಳ್ಳಿರಿ. ಕೀರ್ತ 2:9, 11, 12

12. ಧರ್ಮ

ಎ. ಒಂದೇ ಒಂದು ಸತ್ಯ ಧರ್ಮ

ಒಂದೇ ನಿರೀಕ್ಷೆ, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. ಎಫೆ 4:5, 13

ಶಿಷ್ಯರನ್ನಾಗಿ ಮಾಡುವ ಆಜ್ಞೆ ಕೊಡಲ್ಪಟ್ಟಿದೆ. ಮತ್ತಾ 28:19; ಅಕಾ 8:12; 14:21

ಅದರ ಫಲಗಳಿಂದ ಗುರುತಿಸಲ್ಪಡುವುದು. ಮತ್ತಾ 7:19, 20; ಲೂಕ 6:43, 44; ಯೋಹಾ 15:8

ಪ್ರೀತಿ, ಸದಸ್ಯರಲ್ಲಿ ಒಮ್ಮತ. ಯೋಹಾ 13:35; 1ಕೊರಿಂ 1:10; 1ಯೋಹಾ 4:20

ಬಿ. ಸುಳ್ಳು ಬೋಧನೆಯು ಸೂಕ್ತವಾಗಿಯೇ ಖಂಡಿಸಲ್ಪಟ್ಟಿದೆ

ಯೇಸು ಸುಳ್ಳು ಬೋಧನೆಯನ್ನು ಖಂಡಿಸಿದನು. ಮತ್ತಾ 23:15, 23, 24; 15:4-9

ಕುರುಡುಗೊಳಿಸಲ್ಪಟ್ಟಿರುವವರ ಸಂರಕ್ಷಣೆಗಾಗಿ ಹಾಗೆ ಖಂಡಿಸಿದನು. ಮತ್ತಾ 15:14

ಯೇಸುವಿನ ಶಿಷ್ಯರಾಗಲಿಕ್ಕಾಗಿ ಸತ್ಯವು ಅವರನ್ನು ಬಿಡುಗಡೆಮಾಡಿತು. ಯೋಹಾ 8:31, 32

ಸಿ. ಒಬ್ಬನ ಧರ್ಮವು ತಪ್ಪೆಂದು ರುಜುವಾದರೆ, ಅದನ್ನು ಬದಲಾಯಿಸುವುದು ಅವಶ್ಯ

ಸತ್ಯವು ಬಿಡುಗಡೆಮಾಡುತ್ತದೆ; ಅನೇಕರು ತಪ್ಪಾದ ಮಾರ್ಗದಲ್ಲಿದ್ದಾರೆಂದು ರುಜುಪಡಿಸುತ್ತದೆ. ಯೋಹಾ 8:31, 32

ಇಸ್ರಾಯೇಲ್ಯರು ಮತ್ತು ಇನ್ನಿತರರು ತಮ್ಮ ಹಿಂದಿನ ಆರಾಧನೆಯನ್ನು ತೊರೆದರು. ಯೆಹೋ 24:15; 2ಅರ 5:17

ಆದಿಕ್ರೈಸ್ತರು ತಮ್ಮ ದೃಷಿಕೋನಗಳನ್ನು ಬದಲಾಯಿಸಿಕೊಂಡರು. ಗಲಾ 1:13, 14; ಅಕಾ 3:17, 19

ಪೌಲನು ತನ್ನ ಧರ್ಮವನ್ನು ಬದಲಾಯಿಸಿದನು. ಅಕಾ 26:4-6

ಇಡೀ ಲೋಕವೇ ಮೋಸಕ್ಕೊಳಗಾಗಿದೆ; ಮನಸ್ಸನ್ನು ಪರಿವರ್ತಿಸಿಕೊಳ್ಳಬೇಕು. ಪ್ರಕ 12:9; ರೋಮ 12:2

ಡಿ. “ಎಲ್ಲಾ ಧರ್ಮಗಳಲ್ಲಿ ಒಳ್ಳೇದಿದೆ” ಎಂದಮಾತ್ರಕ್ಕೆ, ಅದು ದೇವರ ಅನುಗ್ರಹವನ್ನು ಖಾತ್ರಿಪಡಿಸುವುದಿಲ್ಲ

ಆರಾಧನೆಗಾಗಿ ಮಟ್ಟವನ್ನಿಡುವಾತನು ದೇವರೇ. ಯೋಹಾ 4:23, 24; ಯಾಕೋ 1:27

ದೇವರ ಚಿತ್ತಕ್ಕನುಸಾರವಿರದಿದ್ದಲ್ಲಿ, ಅದು ಒಳ್ಳೆಯ ಧರ್ಮವಲ್ಲ. ರೋಮ 10:2, 3

“ಒಳ್ಳೆಯ ಕೆಲಸಗಳು” ತಿರಸ್ಕರಿಸಲ್ಪಡಸಾಧ್ಯವಿದೆ. ಮತ್ತಾ 7:21-23

ಫಲಗಳಿಂದಲೇ ಗುರುತಿಸಲ್ಪಡುವುದು. ಮತ್ತಾ 7:20

13. ಪವಿತ್ರಾತ್ಮ

ಎ. ಪವಿತ್ರಾತ್ಮವು ಏನಾಗಿದೆ?

ದೇವರ ಕಾರ್ಯಕಾರಿ ಶಕ್ತಿ, ಒಬ್ಬ ವ್ಯಕ್ತಿಯಲ್ಲ. ಅಕಾ 2:2, 3, 33; ಯೋಹಾ 14:17

ಸೃಷ್ಟಿಯಲ್ಲಿ, ಬೈಬಲಿನ ಪ್ರೇರಣೆ ಮುಂತಾದವುಗಳಲ್ಲಿ ಉಪಯೋಗಿಸಲ್ಪಟ್ಟಿತು. ಆದಿ 1:2; ಯೆಹೆ 11:5

ಕ್ರಿಸ್ತನ ದೇಹದ ಸದಸ್ಯರನ್ನು ಹುಟ್ಟಿಸುತ್ತದೆ, ಅಭಿಷೇಕಿಸುತ್ತದೆ. ಯೋಹಾ 3:5-8; 2ಕೊರಿಂ 1:21, 22

ಇಂದು ದೇವಜನರನ್ನು ಬಲಪಡಿಸಿ, ಮಾರ್ಗದರ್ಶಿಸುತ್ತದೆ. ಗಲಾ 5:16, 18

14. ನರಕ (ಹೇಡೀಸ್‌, ಷೀಓಲ್‌)

ಎ. ಬೆಂಕಿಯ ಯಾತನೆಯ ಒಂದು ಅಕ್ಷರಾರ್ಥ ಸ್ಥಳವಲ್ಲ

ಕಷ್ಟಾನುಭವಿಸುತ್ತಿದ್ದ ಯೋಬನು ಅಲ್ಲಿಗೆ ಹೋಗಲು ಪ್ರಾರ್ಥಿಸಿದನು. ಯೋಬ 14:13

ನಿಷ್ಕ್ರಿಯತೆಯ ಸ್ಥಳ. ಕೀರ್ತ 6:5; ಪ್ರಸಂ 9:10; ಯೆಶಾ 38:18, 19

ಯೇಸುವು ನರಕದಿಂದ, ಅಂದರೆ ಗೋರಿಯೊಳಗಿಂದ ಎಬ್ಬಿಸಲ್ಪಟ್ಟನು. ಅಕಾ 2:27, 31, 32; ಕೀರ್ತ 16:10

ನರಕವು ಇತರ ಮೃತ ಜನರನ್ನು ಒಪ್ಪಿಸುವುದು, ಬಳಿಕ ಅದು ನಾಶಗೊಳಿಸಲ್ಪಡುವುದು. ಪ್ರಕ 20:13, 14

ಬಿ. ಬೆಂಕಿಯು ಸರ್ವನಾಶದ ಒಂದು ಸಂಕೇತವಾಗಿದೆ

ಮರಣದಲ್ಲಿ ಛೇದಿಸಲ್ಪಡುವುದನ್ನು ಬೆಂಕಿಯಿಂದ ಸೂಚಿಸಲಾಗಿದೆ. ಮತ್ತಾ 25:41, 46; 13:30

ಪಶ್ಚಾತ್ತಾಪಪಡದ ದುಷ್ಟರು ಬೆಂಕಿಯಿಂದಲೋ ಎಂಬಂತೆ ಶಾಶ್ವತವಾಗಿ ನಾಶಮಾಡಲ್ಪಡುವರು. ಇಬ್ರಿ 10:26, 27

ಸೈತಾನನಿಗೆ ಬೆಂಕಿಯ “ಯಾತನೆಯು” ನಿತ್ಯಮರಣವಾಗಿದೆ. ಪ್ರಕ 20:10, 14, 15

ಸಿ. ಐಶ್ವರ್ಯವಂತನು ಮತ್ತು ಲಾಜರನ ವೃತ್ತಾಂತವು, ನಿತ್ಯಯಾತನೆಯ ರುಜುವಾತನ್ನು ಕೊಡುವುದಿಲ್ಲ

ಅಬ್ರಹಾಮನ ಎದೆಯು ಹೇಗೆ ಅಕ್ಷರಾರ್ಥವಲ್ಲವೊ ಹಾಗೆಯೇ ಬೆಂಕಿಯು ಸಹ ಅಕ್ಷರಾರ್ಥವಲ್ಲ. ಲೂಕ 16:22-24

ಅಬ್ರಹಾಮನ ಅನುಗ್ರಹವನ್ನು ಪಡೆಯದೇ ಇರುವದನ್ನೂ ಕತ್ತಲೆಗೆ ಹೋಲಿಸಲಾಗಿದೆ. ಮತ್ತಾ 8:11, 12

ಬಾಬೆಲಿನ ಸರ್ವನಾಶವನ್ನು ಬೆಂಕಿಯ ಯಾತನೆಯೆಂದು ಕರೆಯಲಾಗಿದೆ. ಪ್ರಕ 18:8-10, 21

15. ಪಾಪ

ಎ. ಪಾಪ ಎಂದರೇನು?

ದೇವರ ನಿಯಮ ಮತ್ತು ಆತನ ಪರಿಪೂರ್ಣ ಮಟ್ಟದ ಉಲ್ಲಂಘನೆಯಾಗಿದೆ. 1ಯೋಹಾ 3:4; 5:17

ದೇವರ ಸೃಷ್ಟಿಯಾಗಿರುವ ಮನುಷ್ಯನು ಆತನಿಗೆ ಲೆಕ್ಕವೊಪ್ಪಿಸಬೇಕಾಗಿದೆ. ರೋಮ 14:12; 2:12-15

ಧರ್ಮಶಾಸ್ತ್ರವು ಪಾಪದ ಅರ್ಥವನ್ನು ತಿಳಿಸಿ, ಜನರಿಗೆ ಅದರ ಅರುಹನ್ನು ಹುಟ್ಟಿಸಿತು. ಗಲಾ 3:19; ರೋಮ 3:20

ಎಲ್ಲರೂ ಪಾಪಿಗಳಾಗಿರುವುದರಿಂದ ದೇವರ ಪರಿಪೂರ್ಣ ಮಟ್ಟವನ್ನು ತಲಪಲು ತಪ್ಪಿಹೋಗಿದ್ದಾರೆ. ರೋಮ 3:23; ಕೀರ್ತ 51:5

ಬಿ. ಆದಾಮನ ಪಾಪದಿಂದ ಎಲ್ಲರೂ ಕಷ್ಟಾನುಭವಿಸಿರುವ ಕಾರಣ

ಆದಾಮನು ಅಪರಿಪೂರ್ಣತೆ ಮತ್ತು ಮರಣವನ್ನು ಎಲ್ಲರಿಗೂ ದಾಟಿಸಿದನು. ರೋಮ 5:12, 18

ಮಾನವಕುಲವನ್ನು ಸಹಿಸಿಕೊಂಡಿರುವ ಮೂಲಕ ದೇವರು ತನ್ನ ಕರುಣೆಯನ್ನು ತೋರಿಸಿದ್ದಾನೆ. ಕೀರ್ತ 103:8, 10, 14, 17

ಯೇಸುವಿನ ಯಜ್ಞವು ಪಾಪಗಳಿಗಾಗಿ ಪರಿಹಾರ ನೀಡುತ್ತದೆ. 1ಯೋಹಾ 2:2

ಪಾಪ ಮತ್ತು ಪಿಶಾಚನ ಬೇರೆಲ್ಲಾ ಕೆಲಸಗಳು ಅಳಿಸಿಹಾಕಲ್ಪಡುವವು. 1ಯೋಹಾ 3:8

ಸಿ. ನಿಷೇಧಿಸಲ್ಪಟ್ಟ ಹಣ್ಣು ಅವಿಧೇಯತೆಯಾಗಿತ್ತೇ ಹೊರತು ಲೈಂಗಿಕ ಕಾರ್ಯವಾಗಿರಲಿಲ್ಲ

ಹವ್ವಳು ಸೃಷ್ಟಿಸಲ್ಪಡುವುದಕ್ಕಿಂತ ಮುಂಚೆಯೇ ಮರದ ನಿಷೇಧವು ಮಾಡಲ್ಪಟ್ಟಿತ್ತು. ಆದಿ 2:17, 18

ಮಕ್ಕಳನ್ನು ಪಡೆಯುವಂತೆ ಆದಾಮಹವ್ವರಿಗೆ ಹೇಳಲಾಯಿತು. ಆದಿ 1:28

ಮಕ್ಕಳು ಪಾಪದ ಫಲವಲ್ಲ, ದೇವರ ಆಶೀರ್ವಾದದ ಫಲವಾಗಿದ್ದಾರೆ. ಕೀರ್ತ 127:3-5

ಗಂಡನ ಗೈರುಹಾಜರಿಯಲ್ಲಿ ಹವ್ವಳು ಪಾಪಗೈದಳು; ಗಂಡನಿಗಿಂತಲೂ ಮುಂದೆ ಹೆಜ್ಜೆಯಿಟ್ಟಳು. ಆದಿ 3:6; 1ತಿಮೊ 2:11-14

ತಲೆಯಾಗಿದ್ದ ಆದಾಮನು ದೇವರ ನಿಯಮದ ವಿರುದ್ಧ ದಂಗೆಯೆದ್ದನು. ರೋಮ 5:12, 19

ಡಿ. ಪವಿತ್ರಾತ್ಮದ ವಿರುದ್ಧ ಪಾಪಮಾಡುವುದರ ಅರ್ಥ (ಮತ್ತಾ 12:32; ಮಾರ್ಕ 3:28, 29)

ಬಾಧ್ಯತೆಯಾಗಿ ಬಂದ ಪಾಪವು ಆ ವಿಧದ್ದಲ್ಲ. ರೋಮ 5:8, 12, 18; 1ಯೋಹಾ 5:17

ಪವಿತ್ರಾತ್ಮವನ್ನು ಒಬ್ಬನು ದುಃಖಪಡಿಸಿದರೂ, ಪುನಃ ಸರಿಯಾದ ದಾರಿಗೆ ತಿರುಗಬಹುದು. ಎಫೆ 4:30; ಯಾಕೋ 5:19, 20

ಉದ್ದೇಶಪೂರ್ವಕವಾಗಿ ಪಾಪವನ್ನು ಮಾಡುತ್ತಾ ಇರುವುದು ಮರಣಕ್ಕೆ ನಡೆಸುತ್ತದೆ. 1ಯೋಹಾ 3:6-9

ದೇವರು ಅಂಥವರಿಗೆ ತೀರ್ಪು ನೀಡಿ, ತನ್ನ ಪವಿತ್ರಾತ್ಮವನ್ನು ಅಂಥವರಿಂದ ತೆಗೆದುಬಿಡುತ್ತಾನೆ. ಇಬ್ರಿ 6:4-8

ಪಶ್ಚಾತ್ತಾಪಪಡದ ಅಂಥ ಜನರಿಗಾಗಿ ನಾವು ಪ್ರಾರ್ಥಿಸಬಾರದು. 1ಯೋಹಾ 5:16, 17

16. ಪಿಶಾಚ, ದೆವ್ವಗಳು

ಎ. ಪಿಶಾಚನು ಒಬ್ಬ ಆತ್ಮ ವ್ಯಕ್ತಿಯಾಗಿದ್ದಾನೆ

ಒಬ್ಬನಲ್ಲಿರುವ ಕೆಟ್ಟತನವಲ್ಲ, ಬದಲಿಗೆ ಒಬ್ಬ ಆತ್ಮ ವ್ಯಕ್ತಿ. 2ತಿಮೊ 2:26

ಪಿಶಾಚನು ದೇವದೂತರಂತೆಯೇ ಒಬ್ಬ ವ್ಯಕ್ತಿ. ಮತ್ತಾ 4:1, 11; ಯೋಬ 1:6

ತಪ್ಪಾದ ಬಯಕೆಯಿಂದ ತನ್ನನ್ನೇ ಪಿಶಾಚನನ್ನಾಗಿ ಮಾಡಿಕೊಂಡನು. ಯಾಕೋ 1:13-15

ಬಿ. ಪಿಶಾಚನು ಈ ಲೋಕದ ಅದೃಶ್ಯ ಅಧಿಪತಿಯಾಗಿದ್ದಾನೆ

ಅವನು ಈ ಲೋಕದ ದೇವನಾಗಿದ್ದು, ಲೋಕವು ಅವನ ನಿಯಂತ್ರಣದಲ್ಲಿದೆ. 2ಕೊರಿಂ 4:4; 1ಯೋಹಾ 5:19; ಪ್ರಕ 12:9

ವಿವಾದಾಂಶವು ಇತ್ಯರ್ಥವಾಗುವ ವರೆಗೂ ಉಳಿಯಲು ಅನುಮತಿಸಲ್ಪಟ್ಟಿದ್ದಾನೆ. ವಿಮೋ 9:16; ಯೋಹಾ 12:31

ಅಗಾಧ ಸ್ಥಳಕ್ಕೆ ದೊಬ್ಬಲ್ಪಟ್ಟು, ನಂತರ ನಾಶಗೊಳಿಸಲ್ಪಡುವನು. ಪ್ರಕ 20:2, 3, 10

ಸಿ. ದೆವ್ವಗಳು ದಂಗೆಕೋರ ದೇವದೂತರಾಗಿದ್ದಾರೆ

ಜಲಪ್ರಳಯಕ್ಕೂ ಮುಂಚೆ ಸೈತಾನನೊಂದಿಗೆ ಜೊತೆಗೂಡಿದವು. ಆದಿ 6:1, 2; 1ಪೇತ್ರ 3:19, 20

ಹೀನಸ್ಥಿತಿಗೆ ತರಲ್ಪಟ್ಟು, ಎಲ್ಲಾ ರೀತಿಯ ಜ್ಞಾನೋದಯದಿಂದ ಕಡಿದುಹಾಕಲ್ಪಡುವವು. 2ಪೇತ್ರ 2:4; ಯೂದ 6

ದೇವರ ವಿರುದ್ಧವಾಗಿ ಹೋರಾಡುತ್ತವೆ, ಮಾನವಕುಲದ ಮೇಲೆ ದಬ್ಬಾಳಿಕೆ ನಡೆಸುತ್ತವೆ. ಲೂಕ 8:27-29; ಪ್ರಕ 16:13, 14

ಸೈತಾನನೊಂದಿಗೆ ನಾಶಗೊಳಿಸಲ್ಪಡುತ್ತವೆ. ಮತ್ತಾ 25:41; ಲೂಕ 8:31; ಪ್ರಕ 20:2, 3, 10

17. ಪುನರುತ್ಥಾನ

ಎ. ಸತ್ತವರಿಗಾಗಿ ನಿರೀಕ್ಷೆ

ಸಮಾಧಿಗಳಲ್ಲಿರುವವರೆಲ್ಲರೂ ಎಬ್ಬಿಸಲ್ಪಡುವರು. ಯೋಹಾ 5:28, 29

ಯೇಸುವಿನ ಪುನರುತ್ಥಾನವು ಒಂದು ಖಾತ್ರಿಯಾಗಿದೆ. 1ಕೊರಿಂ 15:20-22; ಅಕಾ 17:31

ಪವಿತ್ರಾತ್ಮದ ವಿರುದ್ಧ ಪಾಪಮಾಡಿರುವವರು ಪುನರುತ್ಥಾನವನ್ನು ಹೊಂದುವುದಿಲ್ಲ. ಮತ್ತಾ 12:31, 32

ನಂಬಿಕೆಯನ್ನಿಡುವವರಿಗೆ ಇದರ ಭರವಸೆ ಕೊಡಲಾಗಿದೆ. ಯೋಹಾ 11:25

ಬಿ. ಸ್ವರ್ಗ ಅಥವಾ ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನ

ಆದಾಮನಿಂದಾಗಿ ಎಲ್ಲರೂ ಸಾಯುತ್ತಾರೆ; ಯೇಸುವಿನಿಂದಾಗಿ ಜೀವವನ್ನು ಪಡೆದುಕೊಳ್ಳುತ್ತಾರೆ. 1ಕೊರಿಂ 15:20-22; ರೋಮ 5:19

ಎಬ್ಬಿಸಲ್ಪಡುವ ವಿಧಗಳಲ್ಲಿ ವ್ಯತ್ಯಾಸವಿದೆ. 1ಕೊರಿಂ 15:40, 42, 44

ಯೇಸುವಿನೊಂದಿಗಿರುವವರು ಅವನಂತೆಯೇ ಇರುವರು. 1ಕೊರಿಂ 15:49; ಫಿಲಿ 3:20, 21

ಆಳ್ವಿಕೆ ನಡೆಸುವ ವರ್ಗದಲ್ಲಿಲ್ಲದವರು ಭೂಮಿಯ ಮೇಲೆ ಜೀವಿಸುವರು. ಪ್ರಕ 20:4ಬಿ, 5, 13; 21:3, 4

18. ಪೂರ್ವಜರ ಆರಾಧನೆ

ಎ. ಪೂರ್ವಜರ ಆರಾಧನೆಯು ವ್ಯರ್ಥವಾಗಿದೆ

ಪೂರ್ವಜರು ಸತ್ತಿದ್ದಾರೆ, ಪ್ರಜ್ಞಾರಹಿತರಾಗಿದ್ದಾರೆ. ಪ್ರಸಂ 9:5, 10

ಮೂಲ ಪೂರ್ವಜರು ಆರಾಧನೆಗೆ ಅನರ್ಹರು. ರೋಮ 5:12, 14; 1ತಿಮೊ 2:14

ಅಂಥ ಆರಾಧನೆಯನ್ನು ದೇವರು ನಿಷೇಧಿಸುತ್ತಾನೆ. ವಿಮೋ 34:14; ಮತ್ತಾ 4:10

ಬಿ. ಮಾನವರನ್ನು ಗೌರವಿಸಬಹುದು, ಆದರೆ ದೇವರೊಬ್ಬನನ್ನೇ ಆರಾಧಿಸಬೇಕು

ಯುವ ಜನರು ವೃದ್ಧರನ್ನು ಗೌರವಿಸಬೇಕು. 1ತಿಮೊ 5:1, 2, 17; ಎಫೆ 6:1-3

ಆದರೆ ದೇವರೊಬ್ಬನನ್ನೇ ಆರಾಧಿಸಬೇಕು. ಅಕಾ 10:25, 26; ಪ್ರಕ 22:8, 9

19. ಪೂರ್ವನಿರ್ಧರಿತ

ಎ. ಮಾನವನ ಭವಿಷ್ಯ ಪೂರ್ವನಿರ್ಧರಿತವಲ್ಲ

ದೇವರ ಉದ್ದೇಶವು ಖಚಿತವಾದದ್ದಾಗಿದೆ. ಯೆಶಾ 55:11; ಆದಿ 1:28

ದೇವರಿಗೆ ಸೇವೆಸಲ್ಲಿಸುವ ಆಯ್ಕೆಯು ಪ್ರತಿಯೊಬ್ಬರಿಗೂ ಕೊಡಲ್ಪಟ್ಟಿದೆ. ಯೋಹಾ 3:16; ಫಿಲಿ 2:12

20. ಪ್ರಾರ್ಥನೆ

ಎ. ದೇವರು ಕೇಳುವಂಥ ಪ್ರಾರ್ಥನೆಗಳು

ಮನುಷ್ಯರ ಪ್ರಾರ್ಥನೆಗಳನ್ನು ದೇವರು ಖಂಡಿತವಾಗಿಯೂ ಕೇಳಿಸಿಕೊಳ್ಳುತ್ತಾನೆ. ಕೀರ್ತ 145:18; 1ಪೇತ್ರ 3:12

ಅನೀತಿವಂತರ ಮಾರ್ಗಕ್ರಮವು ಬದಲಾಯಿಸಲ್ಪಡದ ಹೊರತು ಅವರ ಪ್ರಾರ್ಥನೆಗಳು ಕೇಳಲ್ಪಡುವದಿಲ್ಲ. ಯೆಶಾ 1:15-17

ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸಬೇಕು. ಯೋಹಾ 14:13, 14; 2ಕೊರಿಂ 1:20

ದೇವರ ಚಿತ್ತಕ್ಕನುಸಾರವಾಗಿ ಪ್ರಾರ್ಥಿಸಬೇಕು. 1ಯೋಹಾ 5:14, 15

ನಂಬಿಕೆಯು ಅತ್ಯಾವಶ್ಯಕ. ಯಾಕೋ 1:6-8

ಬಿ. ವ್ಯರ್ಥ ಪುನರುಚ್ಚರಣೆ, ಮರಿಯಳಿಗೆ ಅಥವಾ “ಸಂತರಿಗೆ” ಮಾಡಲ್ಪಡುವ ಪ್ರಾರ್ಥನೆಗಳು ಸಮ್ಮತವಾದದ್ದಲ್ಲ

ಯೇಸುವಿನ ಹೆಸರಿನಲ್ಲಿ ದೇವರಿಗೆ ಪ್ರಾರ್ಥಿಸಬೇಕು. ಯೋಹಾ 14:6, 14; 16:23, 24

ಪುನರುಚ್ಚರಿಸಲ್ಪಡುವ ಪ್ರಾರ್ಥನೆಗಳು ಕೇಳಲ್ಪಡುವುದಿಲ್ಲ. ಮತ್ತಾ 6:7

21. ಪ್ರೇತಾತ್ಮವಾದ

ಎ. ಪ್ರೇತಾರಾಧನೆಯು ದೆವ್ವಗಳ ಕೆಲಸವೆಂದು ತಿಳಿದು, ಅದರಿಂದ ದೂರವಿರಬೇಕು

ದೇವರ ವಾಕ್ಯವು ಅದನ್ನು ನಿಷೇಧಿಸುತ್ತದೆ. ಯೆಶಾ 8:19, 20; ಯಾಜ 19:31; 20:6, 27

ಭವಿಷ್ಯ ನುಡಿಯುವುದು ಪೈಶಾಚಿಕವಾಗಿದೆ; ಖಂಡಿಸಲ್ಪಟ್ಟಿದೆ. ಅಕಾ 16:16-18

ನಾಶನಕ್ಕೆ ನಡೆಸುತ್ತದೆ. ಗಲಾ 5:19-21; ಪ್ರಕ 21:8; 22:15

ಜ್ಯೋತಿಷ್ಯವು ನಿಷೇಧಿಸಲ್ಪಟ್ಟಿದೆ. ಧರ್ಮೋ 18:10-12; ಯೆರೆ 10:2

22. ಬೈಬಲ್‌

ಎ. ದೇವರ ವಾಕ್ಯವು ದೈವಪ್ರೇರಿತವಾಗಿದೆ

ವಾಕ್ಯವನ್ನು ಬರೆಯಲಿಕ್ಕಾಗಿ ವ್ಯಕ್ತಿಗಳು ದೇವರ ಆತ್ಮದಿಂದ ಪ್ರೇರಿಸಲ್ಪಟ್ಟರು. 2ಪೇತ್ರ 1:20, 21

ಪ್ರವಾದನೆಯನ್ನು ಒಳಗೊಂಡಿದೆ: ದಾನಿ 8:5, 6, 20-22; ಲೂಕ 21:5, 6, 20-22; ಯೆಶಾ 45:1-4

ಇಡೀ ಬೈಬಲ್‌ ದೇವರಿಂದ ಪ್ರೇರಿತವಾಗಿದೆ ಮತ್ತು ಉಪಯುಕ್ತವಾಗಿದೆ. 2ತಿಮೊ 3:16, 17; ರೋಮ 15:4

ಬಿ. ನಮ್ಮ ದಿನಕ್ಕೆ ಒಂದು ಪ್ರಾಯೋಗಿಕ ಮಾರ್ಗದರ್ಶಕವಾಗಿದೆ

ಬೈಬಲ್‌ ಮೂಲತತ್ತ್ವಗಳನ್ನು ಕಡೆಗಣಿಸುವುದು ವಿನಾಶಕಾರಿಯಾಗಿದೆ. ರೋಮ 1:28-32

ಮಾನವನ ವಿವೇಕವು ಅದಕ್ಕೆ ಬದಲಿಯಲ್ಲ. 1ಕೊರಿಂ 1:21, 25; 1ತಿಮೊ 6:20

ಶಕ್ತಿಶಾಲಿ ವೈರಿಯ ವಿರುದ್ಧ ಒಂದು ರಕ್ಷಣೆಯ ಸಾಧನದಂತಿದೆ. ಎಫೆ 6:11, 12, 17

ಮಾನವನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ. ಕೀರ್ತ 119:105; 2ಪೇತ್ರ 1:19; ಜ್ಞಾನೋ 3:5, 6

ಸಿ. ಸಕಲ ರಾಷ್ಟ್ರ ಮತ್ತು ಕುಲಗಳ ಜನರಿಗಾಗಿ ಬರೆಯಲ್ಪಟ್ಟಿದೆ

ಬೈಬಲನ್ನು ಮೊದಲು ಪೂರ್ವ ದೇಶಗಳಲ್ಲಿ ಬರೆಯಲು ಆರಂಭಿಸಲಾಯಿತು. ವಿಮೋ 17:14; 24:12, 16; 34:27

ದೇವರ ಒದಗಿಸುವಿಕೆಯು ಕೇವಲ ಯೂರೋಪಿಯನ್ನರಿಗಲ್ಲ. ರೋಮ 10:11-13; ಗಲಾ 3:28

ಎಲ್ಲ ರೀತಿಯ ಜನರನ್ನು ದೇವರು ಸ್ವೀಕರಿಸುತ್ತಾನೆ. ಅಕಾ 10:34, 35; ರೋಮ 5:18; ಪ್ರಕ 7:9, 10

23. ಭೂಮಿ

ಎ. ಭೂಮಿಗಾಗಿ ದೇವರ ಉದ್ದೇಶ

ಪರಿಪೂರ್ಣ ಮಾನವರಿಗಾಗಿ ಭೂಮಿಯ ಮೇಲೆ ಪರದೈಸವು ನಿರ್ಮಿಸಲ್ಪಟ್ಟಿತು. ಆದಿ 1:28; 2:8-15

ದೇವರ ಉದ್ದೇಶವು ಖಚಿತವಾದದ್ದು. ಯೆಶಾ 55:11; 46:10, 11

ಶಾಂತಿಭರಿತ, ಪರಿಪೂರ್ಣ ಮಾನವರಿಂದ ಈ ಭೂಮಿಯು ತುಂಬಲಿಕ್ಕಿದೆ. ಕೀರ್ತ 72:7; ಯೆಶಾ 45:18; ಯೆಶಾ 9:6, 7

ಪರದೈಸವು ರಾಜ್ಯದ ಮೂಲಕ ಪುನಃಸ್ಥಾಪಿಸಲ್ಪಡಲಿದೆ. ಮತ್ತಾ 6:9, 10; ಪ್ರಕ 21:3-5

ಬಿ. ಎಂದಿಗೂ ನಾಶಗೊಳಿಸಲ್ಪಡುವುದಿಲ್ಲ ಇಲ್ಲವೆ ನಿರ್ಜನಗೊಳಿಸಲ್ಪಡುವುದಿಲ್ಲ

ಅಕ್ಷರಾರ್ಥವಾದ ಭೂಮಿಯು ಶಾಶ್ವತವಾಗಿರುವುದು. ಪ್ರಸಂ 1:4; ಕೀರ್ತ 104:5

ನೋಹನ ಸಮಯದಲ್ಲಿದ್ದ ಮಾನವಕುಲವು ನಾಶವಾಯಿತೆ ಹೊರತು, ಭೂಮಿಯಲ್ಲ. 2ಪೇತ್ರ 3:5-7; ಆದಿ 7:23

ಈ ಉದಾಹರಣೆಯು ನಮ್ಮ ಸಮಯದಲ್ಲಿ ಪಾರಾಗುವ ನಿರೀಕ್ಷೆಯನ್ನು ಕೊಡುತ್ತದೆ. ಮತ್ತಾ 24:37-39

ದುಷ್ಟರು ನಾಶಗೊಳಿಸಲ್ಪಡುವರು; “ಮಹಾ ಸಮೂಹವು” ಪಾರಾಗುವುದು. 2ಥೆಸ 1:6-9; ಪ್ರಕ 7:9, 14

24. ಮರಣ

ಎ. ಮರಣದ ಕಾರಣ

ಮನುಷ್ಯನಿಗೆ ಪರಿಪೂರ್ಣ ಆರಂಭವಿತ್ತು, ಅಂದರೆ ಕೊನೆಯಿಲ್ಲದ ಜೀವಿತದ ಪ್ರತೀಕ್ಷೆಯಿತ್ತು. ಆದಿ 1:28, 31

ಅವಿಧೇಯತೆಯು ಮರಣಶಿಕ್ಷೆಯನ್ನು ತಂದಿತು. ಆದಿ 2:16, 17; 3:17, 19

ಪಾಪ ಮತ್ತು ಮರಣವು ಆದಾಮನ ಮಕ್ಕಳಿಗೆಲ್ಲ ದಾಟಿಸಲ್ಪಟ್ಟಿತು. ರೋಮ 5:12

ಬಿ. ಸತ್ತವರ ಸ್ಥಿತಿ

ಆದಾಮನು ಜೀವಿಸುವ ಪ್ರಾಣವಾಗಿ ಸೃಷ್ಟಿಸಲ್ಪಟ್ಟನು, ಆದರೆ ಒಂದು ಆತ್ಮವು ಕೊಡಲ್ಪಡಲಿಲ್ಲ. ಆದಿ 2:7; 1ಕೊರಿಂ 15:45

ಸಾಯುವುದು ಸ್ವತಃ ಆತ್ಮವಾಗಿರುವ ಮನುಷ್ಯನೇ. ಯೆಹೆ 18:4; ಯೆಶಾ 53:12; ಯೋಬ 11:20

ಸತ್ತವರು ಪ್ರಜ್ಞಾಹೀನರಾಗಿದ್ದು, ಏನೂ ತಿಳಿಯದವರಾಗಿದ್ದಾರೆ. ಪ್ರಸಂ 9:5, 10; ಕೀರ್ತ 146:3, 4

ಸತ್ತವರು ಪುನರುತ್ಥಾನಕ್ಕಾಗಿ ಎದುರುನೋಡುತ್ತಾ ಗಾಢನಿದ್ರೆಯಲ್ಲಿದ್ದಾರೆ. ಯೋಹಾ 11:11-14, 23-26; ಅಕಾ 7:60

ಸಿ. ಸತ್ತವರೊಂದಿಗೆ ಮಾತಾಡುವುದು ಅಸಾಧ್ಯ

ಸತ್ತವರು ಜೀವಿತರಾಗಿ ಆತ್ಮಜೀವಿಗಳಂತೆ ದೇವರೊಂದಿಗಿಲ್ಲ. ಕೀರ್ತ 115:17; ಯೆಶಾ 38:18

ಸತ್ತವರೊಂದಿಗೆ ಮಾತಾಡಲು ಪ್ರಯತ್ನಿಸುವುದರ ಕುರಿತು ಎಚ್ಚರಿಸಲಾಗಿದೆ. ಯೆಶಾ 8:19; ಯಾಜ 19:31

ಪ್ರೇತಮಾಧ್ಯಮಗಳು, ಕಣಿಹೇಳುವವರು ಖಂಡಿಸಲ್ಪಟ್ಟಿದ್ದಾರೆ. ಧರ್ಮೋ 18:10-12; ಗಲಾ 5:19-21

25. ಮರಿಯಳ ಆರಾಧನೆ

ಎ. ಮರಿಯಳು ಯೇಸುವಿನ ತಾಯಿ, “ದೇವರ ತಾಯಿ” ಅಲ್ಲ

ದೇವರಿಗೆ ಆದಿಯಿಲ್ಲ. ಕೀರ್ತ 90:2; 1ತಿಮೊ 1:17

ಮರಿಯಳು ದೇವರ ಮಗನ ತಾಯಿಯಾಗಿದ್ದಳು, ಅವನು ಭೂಮಿಯಲ್ಲಿದ್ದಾಗ. ಲೂಕ 1:35

ಬಿ. ಮರಿಯಳು “ಯಾವಾಗಲೂ ಕನ್ಯೆ”ಯಾಗಿಯೇ ಇರಲಿಲ್ಲ

ಅವಳು ಯೋಸೇಫನನ್ನು ಮದುವೆಯಾದಳು. ಮತ್ತಾ 1:19, 20, 24, 25

ಯೇಸುವಲ್ಲದೆ ಇನ್ನಿತರ ಮಕ್ಕಳೂ ಇದ್ದರು. ಮತ್ತಾ 13:55, 56; ಲೂಕ 8:19-21

ಅವರು ಆಗ ಅವನ “ಆಧ್ಯಾತ್ಮಿಕ ಸಹೋದರ”ರಾಗಿರಲಿಲ್ಲ. ಯೋಹಾ 7:3, 5

26. ಮಿಶ್ರನಂಬಿಕೆ

ಎ. ಇತರ ಧರ್ಮಗಳೊಂದಿಗೆ ಸೇರುವುದು ದೇವರ ಮಾರ್ಗವಲ್ಲ

ಒಂದೇ ಒಂದು ಮಾರ್ಗವಿದೆ, ಅದು ಇಕ್ಕಟ್ಟಾಗಿದೆ, ಅದನ್ನು ಕಂಡುಕೊಳ್ಳುವವರು ಕೊಂಚವೇ ಜನ. ಎಫೆ 4:4-6; ಮತ್ತಾ 7:13, 14

ಸುಳ್ಳು ಬೋಧನೆ ಕಲುಷಿತಗೊಳಿಸುತ್ತದೆ ಎಂಬುದರ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಮತ್ತಾ 16:6, 12; ಗಲಾ 5:9

ಅದರಿಂದ ಪ್ರತ್ಯೇಕವಾಗಿರುವಂತೆ ಆಜ್ಞಾಪಿಸಲಾಗಿದೆ. 2ತಿಮೊ 3:5; 2ಕೊರಿಂ 6:14-17; ಪ್ರಕ 18:4

ಬಿ. “ಎಲ್ಲಾ ಧರ್ಮಗಳಲ್ಲಿ ಒಳ್ಳೇದಿದೆ” ಎಂಬುದು ನಿಜವಲ್ಲ

ಕೆಲವರಿಗೆ ಹುರುಪಿದೆ, ಆದರೆ ಅದು ದೇವರಿಗೆ ಅನುಸಾರವಾಗಿ ಅಲ್ಲ. ರೋಮ 10:2, 3

ಕೆಟ್ಟತನವು ಬೇರೆಲ್ಲಾ ಒಳ್ಳೆಯತನವನ್ನು ಹಾಳುಮಾಡಿಬಿಡುತ್ತದೆ. 1ಕೊರಿಂ 5:6; ಮತ್ತಾ 7:15-17

ಸುಳ್ಳು ಬೋಧಕರು ನಾಶನವನ್ನು ಬರಮಾಡಿಕೊಳ್ಳುತ್ತಾರೆ. 2ಪೇತ್ರ 2:1; ಮತ್ತಾ 12:30; 15:14

ಶುದ್ಧಾರಾಧನೆಯು ಅನನ್ಯ ಭಕ್ತಿಯನ್ನು ಕೇಳಿಕೊಳ್ಳುತ್ತದೆ. ಧರ್ಮೋ 6:5, 14, 15

27. ಯೆಹೋವ, ದೇವರು

ಎ. ದೇವರ ಹೆಸರು

“ದೇವರು” ಎಂಬುದು ಅನಿರ್ದೇಶಕ ಪದ; ನಮ್ಮ ಕರ್ತನಿಗೆ ಒಂದು ವೈಯಕ್ತಿಕ ಹೆಸರಿದೆ. 1ಕೊರಿಂ 8:5, 6

ಆತನ ನಾಮವು ಪವಿತ್ರೀಕರಿಸಲ್ಪಡುವಂತೆ ನಾವು ಪ್ರಾರ್ಥಿಸುತ್ತೇವೆ. ಮತ್ತಾ 6:9, 10

ಯೆಹೋವ ಎಂಬುದು ದೇವರ ಹೆಸರಾಗಿದೆ. ಕೀರ್ತ 83:18; ವಿಮೋ 6:2, 3; 3:15; ಯೆಶಾ 42:8

ಯೇಸು ಆ ಹೆಸರನ್ನು ತಿಳಿಯಪಡಿಸಿದನು. ಯೋಹಾ 17:6, 26; 5:43; 12:12, 13, 28

ಬಿ. ದೇವರ ಅಸ್ತಿತ್ವ

ದೇವರನ್ನು ನೋಡಿ, ಬದುಕಿ ಉಳಿಯಸಾಧ್ಯವಿಲ್ಲ. ವಿಮೋ 33:20; ಯೋಹಾ 1:18; 1ಯೋಹಾ 4:12

ನಂಬಿಕೆಯಿಡಲಿಕ್ಕಾಗಿ ದೇವರನ್ನು ನೋಡುವ ಅಗತ್ಯವಿಲ್ಲ. ಇಬ್ರಿ 11:1; ರೋಮ 8:24, 25; 10:17

ಕಣ್ಣಿಗೆ ಕಾಣುವ ಆತನ ಕೆಲಸಗಳಿಂದ, ದೇವರನ್ನು ತಿಳಿಯಬಹುದು. ರೋಮ 1:20; ಕೀರ್ತ 19:1, 2

ಪ್ರವಾದನೆಯ ನೆರವೇರಿಕೆಯು ದೇವರ ಅಸ್ತಿತ್ವವನ್ನು ರುಜುಪಡಿಸುತ್ತದೆ. ಯೆಶಾ 46:8-11

ಸಿ. ದೇವರ ಗುಣಲಕ್ಷಣಗಳು

ದೇವರು ಪ್ರೀತಿಯಾಗಿದ್ದಾನೆ. 1ಯೋಹಾ 4:8, 16; ವಿಮೋ 34:6; 2ಕೊರಿಂ 13:11

ವಿವೇಕದಲ್ಲಿ ಮಹೋನ್ನತನಾಗಿದ್ದಾನೆ. ಯೋಬ 12:13; ರೋಮ 11:33

ನ್ಯಾಯವಂತನಾಗಿದ್ದು, ನ್ಯಾಯವನ್ನೇ ತೋರಿಸುತ್ತಾನೆ. ಧರ್ಮೋ 32:4; ಕೀರ್ತ 37:28

ಸರ್ವಶಕ್ತನೂ, ಎಲ್ಲಾ ಶಕ್ತಿಯನ್ನು ಹೊಂದಿರುವವನೂ ಆಗಿದ್ದಾನೆ. ಯೋಬ 37:23; ಪ್ರಕ 7:12; 4:11

ಡಿ. ಎಲ್ಲರೂ ಈ ದೇವರನ್ನೇ ಆರಾಧಿಸುತ್ತಿಲ್ಲ

ಒಳ್ಳೆಯದೆಂದು ತೋರುವ ಮಾರ್ಗವು ಯಾವಾಗಲೂ ಸರಿಯಾದದ್ದಾಗಿರುವುದಿಲ್ಲ. ಜ್ಞಾನೋ 16:25; ಮತ್ತಾ 7:21

ಎರಡು ದಾರಿಗಳಿವೆ, ಆದರೆ ಒಂದು ಮಾತ್ರ ಜೀವಕ್ಕೆ ನಡೆಸುತ್ತದೆ. ಮತ್ತಾ 7:13, 14; ಧರ್ಮೋ 30:19

ದೇವರುಗಳು ಹಲವರಿದ್ದಾರೆ, ಆದರೆ ಸತ್ಯ ದೇವರು ಒಬ್ಬನೇ. 1ಕೊರಿಂ 8:5, 6; ಕೀರ್ತ 82:1

ಜೀವಕ್ಕಾಗಿ ಸತ್ಯ ದೇವರನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ. ಯೋಹಾ 17:3; 1ಯೋಹಾ 5:20

28. ಯೆಹೋವನ ಸಾಕ್ಷಿಗಳು

ಎ. ಯೆಹೋವನ ಸಾಕ್ಷಿಗಳ ಆರಂಭ

ಯೆಹೋವನು ತನ್ನ ಸ್ವಂತ ಸಾಕ್ಷಿಗಳನ್ನು ಗುರುತಿಸುತ್ತಾನೆ. ಯೆಶಾ 43:10-12; ಯೆರೆ 15:16

ನಂಬಿಗಸ್ತ ಸಾಕ್ಷಿಗಳ ಸಾಲು ಹೇಬೆಲನಿಂದ ಆರಂಭವಾಯಿತು. ಇಬ್ರಿ 11:4, 39; 12:1

ಯೇಸುವು ನಂಬಿಗಸ್ತನೂ ಸತ್ಯ ಸಾಕ್ಷಿಯೂ ಆಗಿದ್ದಾನೆ. ಯೋಹಾ 18:37; ಪ್ರಕ 1:5; 3:14

29. ಯೇಸು

ಎ. ಯೇಸು ದೇವರ ಮಗನೂ ನೇಮಿತ ಅರಸನೂ ಆಗಿದ್ದಾನೆ

ದೇವರ ಜೇಷ್ಠಪುತ್ರನಾಗಿದ್ದು, ಬೇರೆಲ್ಲವನ್ನು ಸೃಷ್ಟಿಸುವುದರಲ್ಲಿ ಉಪಯೋಗಿಸಲ್ಪಟ್ಟನು. ಪ್ರಕ 3:14; ಕೊಲೊ 1:15-17

ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನಾಗಿ, ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟನು. ಗಲಾ 4:4; ಇಬ್ರಿ 2:9

ದೇವರಾತ್ಮದಿಂದ ಹುಟ್ಟಿದವನಾಗಿದ್ದು, ಸ್ವರ್ಗಕ್ಕೆ ಬಾಧ್ಯನು. ಮತ್ತಾ 3:16, 17

ಮಾನವಪೂರ್ವ ಅಸ್ತಿತ್ವದ ಸಮಯದಲ್ಲಿದ್ದದ್ದಕ್ಕಿಂತಲೂ ಉನ್ನತವಾದ ಸ್ಥಾನಕ್ಕೆ ಏರಿಸಲ್ಪಟ್ಟನು. ಫಿಲಿ 2:9, 10

ಬಿ. ರಕ್ಷಣೆಗಾಗಿ ಯೇಸುವಿನಲ್ಲಿ ನಂಬಿಕೆಯನ್ನಿಡುವುದು ಆವಶ್ಯಕ

ಕ್ರಿಸ್ತನು ಅಬ್ರಹಾಮನ ವಾಗ್ದತ್ತ ಸಂತತಿಯಾಗಿದ್ದಾನೆ. ಆದಿ 22:18; ಗಲಾ 3:16

ಯೇಸು ಒಬ್ಬನೇ ಮಹಾ ಯಾಜಕನೂ,ವಿಮೋಚನಾ ಮೌಲ್ಯವೂ ಆಗಿದ್ದಾನೆ. 1ಯೋಹಾ 2:1, 2; ಇಬ್ರಿ 7:25, 26; ಮತ್ತಾ 20:28

ದೇವರನ್ನೂ ಕ್ರಿಸ್ತನನ್ನೂ ತಿಳಿದು ಅವರಿಗೆ ವಿಧೇಯರಾಗುವುದರಿಂದ ಜೀವ ಲಭ್ಯ. ಯೋಹಾ 17:3; ಅಕಾ 4:12

ಸಿ. ಯೇಸುವಿನಲ್ಲಿ ನಂಬಿಕೆಯಿಡುವುದಕ್ಕಿಂತಲೂ ಹೆಚ್ಚಿನದ್ದರ ಅಗತ್ಯವಿದೆ

ನಂಬಿಕೆಯು ಕ್ರಿಯೆಗಳಿಂದ ಜೊತೆಗೂಡಿರಬೇಕು. ಯಾಕೋ 2:17-26; 1:22-25

ಅವನ ಆಜ್ಞೆಗಳಿಗೆ ವಿಧೇಯರಾಗಬೇಕು, ಅವನು ನಡಿಸಿದ ಕ್ರಿಯೆಯನ್ನು ನಡಿಸಬೇಕು. ಯೋಹಾ 14:12, 15; 1ಯೋಹಾ 2:3

ಕರ್ತನ ನಾಮವನ್ನು ಉಪಯೋಗಿಸುವವರೆಲ್ಲರೂ ದೇವರ ರಾಜ್ಯವನ್ನು ಪ್ರವೇಶಿಸುವುದಿಲ್ಲ. ಮತ್ತಾ 7:21-23

30. ರಕ್ತ

ಎ. ರಕ್ತಪೂರಣಗಳು ರಕ್ತದ ಪಾವಿತ್ರ್ಯವನ್ನು ಕೆಡಿಸುತ್ತವೆ

ರಕ್ತವು ಪವಿತ್ರವೂ ಜೀವವೂ ಆಗಿದೆ ಎಂದು ನೋಹನಿಗೆ ಹೇಳಲಾಗಿತ್ತು. ಆದಿ 9:4, 16

ಧರ್ಮಶಾಸ್ತ್ರದ ಒಡಂಬಡಿಕೆಯು ರಕ್ತಸೇವನೆಯನ್ನು ನಿಷೇಧಿಸಿತು. ಯಾಜ 17:14; 7:26, 27

ಈ ನಿಷೇಧಾಜ್ಞೆಯನ್ನು ಕ್ರೈಸ್ತರಿಗೂ ಕೊಡಲಾಯಿತು. ಅಕಾ 15:28, 29; 21:25

ಬಿ. ಜೀವವನ್ನು ಉಳಿಸಲಿಕ್ಕಾಗಿ ದೇವರ ನಿಯಮವನ್ನು ಉಲ್ಲಂಘಿಸುವುದು ನ್ಯಾಯವಾದದ್ದಲ್ಲ

ಯಜ್ಞವನ್ನು ಅರ್ಪಿಸುವುದಕ್ಕಿಂತ ವಿಧೇಯತೆಯು ಉತ್ತಮ. 1ಸಮು 15:22; ಮಾರ್ಕ 12:33

ದೇವರ ನಿಯಮಕ್ಕಿಂತ ಒಬ್ಬನ ಜೀವಕ್ಕೆ ಪ್ರಥಮಸ್ಥಾನವನ್ನು ಕೊಡುವುದು ಮಾರಕ. ಮಾರ್ಕ 8:35, 36

31. ರಕ್ಷಣೆ

ಎ. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದ ಮೂಲಕ ದೇವರಿಂದ ರಕ್ಷಣೆ ದೊರಕುತ್ತದೆ

ಜೀವವು ದೇವರು ತನ್ನ ಮಗನ ಮೂಲಕ ಕೊಟ್ಟಿರುವ ಕೊಡುಗೆಯಾಗಿದೆ. 1ಯೋಹಾ 4:9, 14; ರೋಮ 6:23

ಯೇಸುವಿನ ಯಜ್ಞದ ಮೂಲಕ ಮಾತ್ರವೇ ರಕ್ಷಣೆ ಸಾಧ್ಯ. ಅಕಾ 4:12

“ಮರಣಶಯ್ಯೆಯ ಪಶ್ಚಾತ್ತಾಪದಲ್ಲಿ” ಯಾವುದೇ ಕ್ರಿಯೆ ಸಾಧ್ಯವಿಲ್ಲ. ಯಾಕೋ 2:14, 26

ರಕ್ಷಣೆಯನ್ನು ಪಡೆಯಲು ಹೆಣಗಾಡಬೇಕು. ಲೂಕ 13:23, 24; 1ತಿಮೊ 4:10

ಬಿ. “ಒಮ್ಮೆ ರಕ್ಷಿಸಲ್ಪಟ್ಟರೆ ಯಾವಾಗಲೂ ರಕ್ಷಿಸಲ್ಪಟ್ಟಂತೆ” ಎಂಬುದು ಶಾಸ್ತ್ರಗ್ರಂಥಕ್ಕೆ ಅನುಸಾರವಾದದ್ದಲ್ಲ

ಪವಿತ್ರಾತ್ಮದಲ್ಲಿ ಪಾಲುಗಾರರಾಗಿರುವವರು ಬಿದ್ದುಹೋಗಸಾಧ್ಯವಿದೆ. ಇಬ್ರಿ 6:4, 6; 1ಕೊರಿಂ 9:27

ಐಗುಪ್ತದಿಂದ ರಕ್ಷಿಸಲ್ಪಟ್ಟರೂ ಅನಂತರ ಅನೇಕ ಇಸ್ರಾಯೇಲ್ಯರು ನಾಶಮಾಡಲ್ಪಟ್ಟರು. ಯೂದ 5

ರಕ್ಷಣೆಯು ಕ್ಷಣಮಾತ್ರದಲ್ಲಿ ಆಗುವಂಥದ್ದಲ್ಲ. ಫಿಲಿ 2:12; 3:12-14; ಮತ್ತಾ 10:22

ಹಿಂದಿನ ಸ್ಥಿತಿಗೆ ಮರಳುವವರ ಅಂತ್ಯಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. 2ಪೇತ್ರ 2:20, 21

ಸಿ. “ಸಾರ್ವತ್ರಿಕ ರಕ್ಷಣೆಯು” ಶಾಸ್ತ್ರಗ್ರಂಥಕ್ಕೆ ಅನುಸಾರವಾದದ್ದಲ್ಲ

ಪಶ್ಚಾತ್ತಾಪಪಡುವುದು ಕೆಲವರಿಗೆ ಅಸಾಧ್ಯ. ಇಬ್ರಿ 6:4-6

ದುಷ್ಟರ ಸಾವಿನಲ್ಲಿ ದೇವರಿಗೆ ಸ್ವಲ್ಪವೂ ಸಂತೋಷವಿಲ್ಲ. ಯೆಹೆ 33:11; 18:32

ಪ್ರೀತಿಯು ಅನೀತಿಯನ್ನು ಮನ್ನಿಸಲಾರದು. ಇಬ್ರಿ 1:9

ದುಷ್ಟರು ನಾಶಮಾಡಲ್ಪಡುವರು. ಇಬ್ರಿ 10:26-29; ಪ್ರಕ 20:7-15

32. ಹಬ್ಬಗಳು, ಜನ್ಮದಿನಗಳು

ಎ. ಆದಿಕ್ರೈಸ್ತರು ಜನ್ಮದಿನಗಳನ್ನು, ಕ್ರಿಸ್ಮಸನ್ನು ಆಚರಿಸಲಿಲ್ಲ

ಸತ್ಯಾರಾಧಕರಲ್ಲದವರು ಆಚರಿಸಿದರು. ಆದಿ 40:20; ಮತ್ತಾ 14:6

ಯೇಸುವಿನ ಮರಣದ ದಿನವನ್ನು ಜ್ಞಾಪಕಾರ್ಥವಾಗಿ ಆಚರಿಸಬೇಕು. ಲೂಕ 22:19, 20; 1ಕೊರಿಂ 11:25, 26

ದುಂದೌತಣದ ಗೋಷ್ಠಿಗಳನ್ನು ಆಚರಿಸುವುದು ಸರಿಯಲ್ಲ. ರೋಮ 13:13; ಗಲಾ 5:21; 1ಪೇತ್ರ 4:3

33. ರಾಜ್ಯ

ಎ. ದೇವರ ರಾಜ್ಯವು ಮಾನವಕುಲಕ್ಕೆ ತರುವ ಪ್ರಯೋಜನಗಳು

ದೇವರ ಚಿತ್ತವನ್ನು ಪೂರೈಸುವುದು. ಮತ್ತಾ 6:9, 10; ಕೀರ್ತ 45:6; ಪ್ರಕ 4:11

ಅರಸ ಹಾಗೂ ನಿಯಮಗಳಿರುವ ಒಂದು ಸರಕಾರ. ಯೆಶಾ 9:6, 7; 2:3; ಕೀರ್ತ 72:1, 8

ದುಷ್ಟತನವನ್ನು ನಾಶಗೊಳಿಸಿ, ಇಡೀ ಭೂಮಿಯನ್ನು ಆಳುವುದು. ದಾನಿ 2:44; ಕೀರ್ತ 72:8

ಮಾನವಕುಲವನ್ನು ಪುನಸ್ಸ್ಥಾಪಿಸುವ 1000 ವರ್ಷದಾಳಿಕೆ, ಪರದೈಸ್‌. ಪ್ರಕ 21:2-4; 20:6

ಬಿ. ಕ್ರಿಸ್ತನ ವೈರಿಗಳು ಇನ್ನೂ ಕ್ರಿಯಾಶೀಲರಾಗಿರುವಾಗಲೇ ಕಾರ್ಯಾಚರಣೆಯು ಆರಂಭವಾಗುತ್ತದೆ

ಕ್ರಿಸ್ತನ ಪುನರುತ್ಥಾನದ ಬಳಿಕ, ಅವನು ದೀರ್ಘ ಸಮಯದ ವರೆಗೆ ಕಾಯಬೇಕಿತ್ತು. ಕೀರ್ತ 110:1; ಇಬ್ರಿ 10:12, 13

ಅಧಿಕಾರವನ್ನು ಪಡೆದು, ಸೈತಾನನ ವಿರುದ್ಧ ಯುದ್ಧಮಾಡುತ್ತಾನೆ. ಕೀರ್ತ 110:2; ಪ್ರಕ 12:7-9; ಲೂಕ 10:18

ಆಗ ರಾಜ್ಯದ ಸ್ಥಾಪನೆ, ಭೂಮಿಗೆ ವಿಪತ್ತುಗಳು ಉಂಟಾಗಲಾರಂಭಿಸುತ್ತವೆ. ಪ್ರಕ 12:10, 12

ಈಗಿರುವ ತೊಂದರೆಗಳು ರಾಜ್ಯಕ್ಕಾಗಿ ನಿಲುವನ್ನು ತೆಗೆದುಕೊಳ್ಳುವ ಸಮಯವನ್ನು ಸೂಚಿಸುತ್ತವೆ. ಪ್ರಕ 11:15-18

ಸಿ. ‘ಹೃದಯಗಳಲ್ಲಿ’ ಅಲ್ಲ, ಮಾನವರ ಪ್ರಯತ್ನಗಳಿಂದಲೂ ಅಲ್ಲ

ರಾಜ್ಯವು ಸ್ವರ್ಗದಲ್ಲಿದೆ, ಭೂಮಿಯ ಮೇಲಲ್ಲ. 2ತಿಮೊ 4:18; 1ಕೊರಿಂ 15:50; ಕೀರ್ತ 11:4

‘ಹೃದಯಗಳಲ್ಲಿ’ ಅಲ್ಲ; ಯೇಸು ಫರಿಸಾಯರಿಗೆ ಸೂಚಿಸಿ ಹೇಳುತ್ತಿದ್ದನು. ಲೂಕ 17:20, 21

ಈ ಲೋಕದ ಯಾವುದೇ ಭಾಗವಾಗಿಲ್ಲ. ಯೋಹಾ 18:36; ಲೂಕ 4:5-8; ದಾನಿ 2:44

ಸರಕಾರಗಳು ಮತ್ತು ಲೋಕದ ಮಟ್ಟಗಳು ಸ್ಥಾನಪಲ್ಲಟಗೊಳಿಸಲ್ಪಡುತ್ತವೆ. ದಾನಿ 2:44

34. ವಾಸಿಮಾಡುವಿಕೆ, ಭಾಷೆಗಳು

ಎ. ಆಧ್ಯಾತ್ಮಿಕ ವಾಸಿಮಾಡುವಿಕೆಯಲ್ಲಿ ಶಾಶ್ವತ ಪ್ರಯೋಜನಗಳಿವೆ

ಆಧ್ಯಾತ್ಮಿಕ ಅಸ್ವಸ್ಥತೆಯು ವಿನಾಶಕಾರಿಯಾಗಿದೆ. ಯೆಶಾ 1:4-6; 6:10; ಹೋಶೇ 4:6

ಆಧ್ಯಾತ್ಮಿಕ ವಾಸಿಮಾಡುವಿಕೆಯೇ ಪ್ರಪ್ರಥಮ ಆಜ್ಞೆಯಾಗಿದೆ. ಯೋಹಾ 6:63; ಲೂಕ 4:18, 19

ಪಾಪಗಳನ್ನು ತೆಗೆದುಹಾಕುತ್ತದೆ; ಸಂತೋಷವನ್ನು ಮತ್ತು ಜೀವವನ್ನು ಕೊಡುತ್ತದೆ. ಯಾಕೋ 5:19, 20; ಪ್ರಕ 7:14-17

ಬಿ. ದೇವರ ರಾಜ್ಯವು ಶಾರೀರಿಕ ರೋಗಗಳನ್ನು ಶಾಶ್ವತವಾಗಿ ಗುಣಪಡಿಸುವುದು

ಯೇಸು ದೇಹದೌರ್ಬಲ್ಯಗಳನ್ನು ಗುಣಪಡಿಸಿದನು, ರಾಜ್ಯದ ಆಶೀರ್ವಾದಗಳ ಕುರಿತು ಸಾರಿದನು. ಮತ್ತಾ 4:23

ಶಾಶ್ವತ ಗುಣಪಡಿಸುವಿಕೆಯ ಮಾಧ್ಯಮವಾಗಿ ರಾಜ್ಯವು ವಾಗ್ದಾನಿಸಲ್ಪಟ್ಟಿದೆ. ಮತ್ತಾ 6:10; ಯೆಶಾ 9:7

ಮರಣವು ಸಹ ತೆಗೆದುಹಾಕಲ್ಪಡುವುದು. 1ಕೊರಿಂ 15:25, 26; ಪ್ರಕ 21:4; 20:14

ಸಿ. ಆಧುನಿಕ ದಿನದ ಶ್ರದ್ಧಾಚಿಕಿತ್ಸೆಯಲ್ಲಿfaith healing ದೈವಿಕ ಅನುಗ್ರಹವಿರುವುದಿಲ್ಲ

ಶಿಷ್ಯರು ತಮ್ಮನ್ನು ತಾವೇ ಅದ್ಭುತಕರವಾಗಿ ಗುಣಪಡಿಸಿಕೊಳ್ಳಲಿಲ್ಲ. 2ಕೊರಿಂ 12:7-9; 1ತಿಮೊ 5:23

ಅಪೊಸ್ತಲರ ದಿನಗಳ ಅನಂತರ ಅದ್ಭುತಕರ ವರಗಳು ನಿಂತುಹೋದವು. 1ಕೊರಿಂ 13:8-11

ವಾಸಿಮಾಡುವಿಕೆಯು ದೇವರ ಅನುಗ್ರಹದ ಖಚಿತ ರುಜುವಾತಲ್ಲ. ಮತ್ತಾ 7:22, 23; 2ಥೆಸ 2:9-11

ಡಿ. ವಿವಿಧ ಭಾಷೆಗಳಲ್ಲಿ ಮಾತಾಡುವುದು ಕೇವಲ ತಾತ್ಕಾಲಿಕ ಒದಗಿಸುವಿಕೆಯಾಗಿತ್ತು

ಒಂದು ಸೂಚನೆಯಾಗಿತ್ತು; ಇದಕ್ಕೂ ಶ್ರೇಷ್ಠವಾದ ವರಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕಿತ್ತು. 1ಕೊರಿಂ 14:22; 12:30, 31

ಪವಿತ್ರಾತ್ಮದ ಅದ್ಭುತಕರ ವರಗಳು ಇಲ್ಲವಾಗುವವು ಎಂದು ಮುಂತಿಳಿಸಲಾಗಿದೆ. 1ಕೊರಿಂ 13:8-10

ಅದ್ಭುತಕಾರ್ಯಗಳು ದೇವರ ಅನುಗ್ರಹದ ಖಚಿತ ರುಜುವಾತಲ್ಲ. ಮತ್ತಾ 7:22, 23; 24:24

35. ವಿಗ್ರಹಗಳು

ಎ. ಆರಾಧನೆಯಲ್ಲಿ ವಿಗ್ರಹಗಳು, ಮೂರ್ತಿಗಳ ಉಪಯೋಗವು ದೇವರಿಗೆ ನಿಂದೆಯನ್ನು ತರುತ್ತದೆ

ದೇವರ ಯಾವುದೇ ವಿಗ್ರಹವನ್ನು ಮಾಡುವುದು ಅಸಾಧ್ಯ. 1ಯೋಹಾ 4:12; ಯೆಶಾ 40:18; 46:5; ಅಕಾ 17:29

ಕ್ರೈಸ್ತರು ವಿಗ್ರಹಗಳ ವಿರುದ್ಧ ಎಚ್ಚರಿಸಲ್ಪಟ್ಟಿದ್ದಾರೆ. 1ಕೊರಿಂ 10:14; 1 ಯೊಹಾ 5:21

ದೇವರನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು. ಯೋಹಾ 4:24

ಬಿ. ವಿಗ್ರಹಾರಾಧನೆಯು ಇಸ್ರಾಯೇಲ್‌ ಜನಾಂಗಕ್ಕೆ ವಿನಾಶವನ್ನು ತಂದಿತು

ಯೆಹೂದ್ಯರಿಗೆ ವಿಗ್ರಹಾರಾಧನೆಯು ನಿಷೇಧಿಸಲ್ಪಟ್ಟಿತ್ತು. ವಿಮೋ 20:4, 5

ಅವುಗಳು ಕೇಳಿಸಿಕೊಳ್ಳಸಾಧ್ಯವಿಲ್ಲ, ಮಾತಾಡಸಾಧ್ಯವಿಲ್ಲ; ಅವುಗಳನ್ನು ಮಾಡುವವರೂ ಅವುಗಳಂತೆಯೇ. ಕೀರ್ತ 115:4-8

ಉರುಲನ್ನು, ಅಂದರೆ ನಾಶನವನ್ನು ತಂದಿತು. ಕೀರ್ತ 106:36, 40-42; ಯೆರೆ 22:8, 9

ಸಿ. “ಸಂಬಂಧಿತ” ಆರಾಧನೆಯು ಅನಧಿಕೃತವಾದದ್ದು

ತನಗೆ “ಸಂಬಂಧಿತ” ಆರಾಧನೆ ಕೊಡುವುದನ್ನು ದೇವರು ನಿರಾಕರಿಸಿದನು. ಯೆಶಾ 42:8

ದೇವರು ಮಾತ್ರವೇ ‘ಪ್ರಾರ್ಥನೆಯನ್ನು ಕೇಳುವವನು.’ ಕೀರ್ತ 65:1, 2

36. ವಿಮೋಚನಾ ಮೌಲ್ಯ

ಎ. ಯೇಸುವಿನ ಮಾನವ ಜೀವವು ‘ಎಲ್ಲರಿಗೋಸ್ಕರ ವಿಮೋಚನಾ ಮೌಲ್ಯವಾಗಿ’ ಕೊಡಲ್ಪಟ್ಟಿತು

ಯೇಸು ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟನು. ಮತ್ತಾ 20:28

ಸುರಿಸಲ್ಪಟ್ಟ ರಕ್ತದ ಮೌಲ್ಯವು ಪಾಪದ ಕ್ಷಮಾಪಣೆಯನ್ನು ಒದಗಿಸುತ್ತದೆ. ಇಬ್ರಿ 9:14, 22

ಎಲ್ಲ ಕಾಲಕ್ಕಾಗಿ ಒಂದೇ ಒಂದು ಯಜ್ಞವು ಸಾಕಾಗಿತ್ತು. ರೋಮ 6:10; ಇಬ್ರಿ 9:26

ಯಾವುದೇ ಪ್ರಯತ್ನವಿಲ್ಲದೆಯೇ ಪ್ರಯೋಜನಗಳು ಸಿಗುವುದಿಲ್ಲ; ಅವುಗಳನ್ನು ತಿಳಿದುಕೊಂಡು ಅಂಗೀಕರಿಸಬೇಕು. ಯೋಹಾ 3:16

ಬಿ. ಅನುರೂಪವಾದ ಬೆಲೆಯಾಗಿತ್ತು

ಆದಾಮನು ಪರಿಪೂರ್ಣನಾಗಿ ಸೃಷ್ಟಿಸಲ್ಪಟ್ಟನು. ಧರ್ಮೋ 32:4; ಪ್ರಸಂ 7:29; ಆದಿ 1:31

ಪಾಪದಿಂದಾಗಿ ತನ್ನ ಮತ್ತು ತನ್ನ ಮಕ್ಕಳ ಪರಿಪೂರ್ಣತೆಯನ್ನು ಕಳೆದುಕೊಂಡನು. ರೋಮ 5:12, 18

ಮಕ್ಕಳು ನಿಸ್ಸಹಾಯಕರು; ಆದಾಮನಿಗೆ ಸರಿಸಮಾನನಾದವನು ಬೇಕಾಗಿತ್ತು. ಕೀರ್ತ 49:7, 8; ಧರ್ಮೋ 19:21

ಯೇಸುವಿನ ಪರಿಪೂರ್ಣ ಮಾನವ ಜೀವವು ಒಂದು ವಿಮೋಚನಾ ಮೌಲ್ಯವಾಗಿತ್ತು. 1ತಿಮೊ 2:5, 6; 1ಪೇತ್ರ 1:18, 19

37. ವಿರೋಧ, ಹಿಂಸೆ

ಎ. ಕ್ರೈಸ್ತರಿಗೆ ಬರುವ ವಿರೋಧಕ್ಕೆ ಕಾರಣ

ಯೇಸು ದ್ವೇಷಿಸಲ್ಪಟ್ಟನು, ವಿರೋಧದ ಕುರಿತು ಮುಂತಿಳಿಸಿದನು. ಯೋಹಾ 15:18-20; ಮತ್ತಾ 10:22

ಸರಿಯಾದ ನಿಯಮಗಳನ್ನು ಪಾಲಿಸುವಾಗ ಲೋಕವು ದೂಷಿಸುತ್ತದೆ. 1ಪೇತ್ರ 4:1, 4, 12, 13

ಈ ವ್ಯವಸ್ಥೆಯ ದೇವರಾದ ಸೈತಾನನು ರಾಜ್ಯವನ್ನು ವಿರೋಧಿಸುತ್ತಾನೆ. 2ಕೊರಿಂ 4:4; 1ಪೇತ್ರ 5:8

ಕ್ರೈಸ್ತನು ಹೆದರುವುದಿಲ್ಲ, ಏಕೆಂದರೆ ದೇವರು ಸಂರಕ್ಷಿಸುತ್ತಾನೆ. ರೋಮ 8:38, 39; ಯಾಕೋ 4:8

ಬಿ. ದೇವರಿಂದ ತನ್ನನ್ನು ಪ್ರತ್ಯೇಕಿಸುವಂತೆ ಹೆಂಡತಿಯು ಗಂಡನಿಗೆ ಅನುಮತಿಸಬಾರದು

ಮುನ್ನೆಚ್ಚರಿಸಲಾಗಿದೆ; ಇತರರು ಅವನಿಗೆ ತಪ್ಪು ಮಾಹಿತಿಯನ್ನು ನೀಡಬಹುದು. ಮತ್ತಾ 10:34-38; ಅಕಾ 28:22

ಅವಳು ದೇವರ ಕಡೆಗೂ ಕ್ರಿಸ್ತನ ಕಡೆಗೂ ನೋಡತಕ್ಕದ್ದು. ಯೋಹಾ 6:68; 17:3

ನಂಬಿಗಸ್ತಿಕೆಯಿಂದಿರುವ ಮೂಲಕ ಅವನನ್ನು ಸಹ ರಕ್ಷಿಸಬಹುದು. 1ಕೊರಿಂ 7:16; 1ಪೇತ್ರ 3:1-6

ಗಂಡನು ತಲೆಯಾಗಿದ್ದಾನೆ, ಆದರೆ ಆರಾಧನೆಯ ಕುರಿತು ಆದೇಶ ನೀಡಲು ಅವನಿಗೆ ಅಧಿಕಾರವಿಲ್ಲ. 1ಕೊರಿಂ 11:3; ಅಕಾ 5:29

ಸಿ. ದೇವರಿಗೆ ಸೇವೆಸಲ್ಲಿಸುವುದರಿಂದ ತನ್ನನ್ನು ತಡೆಯುವಂತೆ ಗಂಡನು ಹೆಂಡತಿಗೆ ಅನುಮತಿ ನೀಡಬಾರದು

ಹೆಂಡತಿ ಮತ್ತು ಕುಟುಂಬವನ್ನು ಪ್ರೀತಿಸಬೇಕು, ಅವರಿಗೆ ಜೀವವು ಸಿಗುವಂತೆ ಬಯಸಬೇಕು. 1ಕೊರಿಂ 7:16

ನಿರ್ಣಯ ಮಾಡಲು ಮತ್ತು ಅಗತ್ಯವಿರುವುದನ್ನು ಒದಗಿಸಲು ಜವಾಬ್ದಾರನು. 1ಕೊರಿಂ 11:3; 1ತಿಮೊ 5:8

ಸತ್ಯಕ್ಕಾಗಿ ಸ್ಥಿರವಾಗಿ ನಿಲ್ಲುವ ಪುರುಷನನ್ನು ದೇವರು ಪ್ರೀತಿಸುತ್ತಾನೆ. ಯಾಕೋ 1:12; 5:10, 11

ಶಾಂತಿಗಾಗಿ ರಾಜಿಮಾಡಿಕೊಳ್ಳುವುದು ದೇವರ ಅಪ್ರಸನ್ನತೆಯನ್ನು ತರುತ್ತದೆ. ಇಬ್ರಿ. 10:38

ಕುಟುಂಬವನ್ನು ಹೊಸ ವ್ಯವಸ್ಥೆಯಲ್ಲಿನ ಸಂತೋಷಕ್ಕೆ ನಡಿಸುವುದು. ಪ್ರಕ 21:3, 4

38. ವಿವಾಹ

ಎ. ವಿವಾಹ ಬಂಧವು ಗೌರವಾರ್ಹವಾಗಿರಬೇಕು

ಕ್ರಿಸ್ತನಿಗೂ ಮದಲಗಿತ್ತಿಗೂ ಹೋಲಿಸಲಾಗಿದೆ. ಎಫೆ 5:22, 23

ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಬೇಕು. ಇಬ್ರಿ 13:4

ಪ್ರತ್ಯೇಕವಾಗದಿರುವಂತೆ ದಂಪತಿಗಳಿಗೆ ಬುದ್ಧಿವಾದವನ್ನು ನೀಡಲಾಗಿದೆ. 1ಕೊರಿಂ 7:10-16

ವಿಚ್ಛೇದನಕ್ಕೆ ಏಕಮಾತ್ರ ಶಾಸ್ತ್ರೀಯ ಆಧಾರವು ಪೋರ್ನಿಯ ಆಗಿದೆ. ಮತ್ತಾ 19:9

ಬಿ. ಶಿರಸ್ಸುತನದ ಮೂಲತತ್ತ್ವವನ್ನು ಕ್ರೈಸ್ತರು ಗೌರವಿಸಬೇಕು

ಶಿರಸ್ಸಾಗಿರುವ ಗಂಡನು ಕುಟುಂಬವನ್ನು ಪ್ರೀತಿಸಿ, ಅದರ ಕಾಳಜಿವಹಿಸಬೇಕು. ಎಫೆ 5:23-31

ಹೆಂಡತಿಯು ಗಂಡನಿಗೆ ಅಧೀನಳಾಗಿ, ಪ್ರೀತಿ ಮತ್ತು ವಿಧೇಯತೆಯನ್ನು ತೋರಿಸಬೇಕು. 1ಪೇತ್ರ 3:1-7; ಎಫೆ 5:22

ಮಕ್ಕಳು ವಿಧೇಯರಾಗಿರಬೇಕು. ಎಫೆ 6:1-3; ಕೊಲೊ 3:20

ಸಿ. ಮಕ್ಕಳ ಕಡೆಗೆ ಕ್ರೈಸ್ತ ಹೆತ್ತವರಿಗಿರುವ ಜವಾಬ್ದಾರಿ

ಸಮಯ ಮತ್ತು ಗಮನವನ್ನು ನೀಡುವ ಮೂಲಕ ಪ್ರೀತಿಯನ್ನು ತೋರಿಸಬೇಕು. ತೀತ 2:4

ಅವರಿಗೆ ಕಿರಿಕಿರಿಮಾಡಬೇಡಿರಿ. ಕೊಲೊ 3:21

ಆಧ್ಯಾತ್ಮಿಕ ವಿಷಯಗಳನ್ನು ಸೇರಿಸಿ, ಎಲ್ಲವನ್ನೂ ಒದಗಿಸಿರಿ. 2ಕೊರಿಂ 12:14; 1ತಿಮೊ 5:8

ಜೀವಕ್ಕಾಗಿ ಅವರಿಗೆ ತರಬೇತಿಯನ್ನು ನೀಡಿರಿ. ಎಫೆ 6:4; ಜ್ಞಾನೋ 22:6, 15; 23:13, 14

ಡಿ. ಕ್ರೈಸ್ತರು ಕೇವಲ ಕ್ರೈಸ್ತರನ್ನೇ ವಿವಾಹವಾಗಬೇಕು

“ಕರ್ತನಲ್ಲಿರುವವರನ್ನು” ಮಾತ್ರ ವಿವಾಹವಾಗಬೇಕು. 1ಕೊರಿಂ 7:39; ಧರ್ಮೋ 7:3, 4; ನೆಹೆ 13:26

ಇ. ಬಹುಪತ್ನೀತ್ವವು ಶಾಸ್ತ್ರಾಧಾರಿತವಲ್ಲ

ಮೂಲತಃ ಒಬ್ಬ ಪುರುಷನು ಒಬ್ಬಳೇ ಪತ್ನಿಯನ್ನು ಹೊಂದಿರಬೇಕಿತ್ತು. ಆದಿ 2:18, 22-25

ಯೇಸುವು ಕ್ರೈಸ್ತರಿಗೆ ಮಟ್ಟವನ್ನು ಪುನಃಸ್ಥಾಪಿಸಿದನು. ಮತ್ತಾ 19:3-9

ಆದಿಕ್ರೈಸ್ತರು ಬಹುಪತ್ನೀತ್ವವನ್ನು ಪಾಲಿಸುತ್ತಿರಲಿಲ್ಲ. 1ಕೊರಿಂ 7:2, 12-16; ಎಫೆ 5:28-31

39. ಶಿಲುಬೆ

ಎ. ನಿಂದೆಯಾಗಿ ಯೇಸುವನ್ನು ವಧಾಕಂಬದ ಮೇಲೆ ತೂಗುಹಾಕಲಾಯಿತು

ಯೇಸು ವಧಾಕಂಬದ ಮೇಲೆ ಅಥವಾ ಮರದ ಕಂಬದ ಮೇಲೆ ತೂಗುಹಾಕಲ್ಪಟ್ಟನು. ಅಕಾ 5:30; 10:40; ಗಲಾ 3:14

ಕ್ರೈಸ್ತರು ನಿಂದೆಯೆಂಬ ಕಂಬವನ್ನು ಹೊರಬೇಕು. ಮತ್ತಾ 10:38; ಲೂಕ 9:23

ಬಿ. ಇದನ್ನು ಆರಾಧಿಸಬಾರದು

ಯೇಸುವಿನ ಕಂಬವನ್ನು ಪ್ರದರ್ಶನಕ್ಕಾಗಿ ಧರಿಸುವುದು ಒಂದು ಅವಮಾನವಾಗಿದೆ. ಇಬ್ರಿ 6:6; ಮತ್ತಾ 27:41, 42

ಆರಾಧನೆಯಲ್ಲಿ ಶಿಲುಬೆಯನ್ನು ಉಪಯೋಗಿಸುವುದು ವಿಗ್ರಹಾರಾಧನೆಯಾಗಿದೆ. ವಿಮೋ 20:4, 5; ಯೆರೆ 10:3-5

ಯೇಸು ಒಬ್ಬ ಆತ್ಮಜೀವಿಯಾಗಿದ್ದಾನೆ, ಇನ್ನೂ ಕಂಬದ ಮೇಲಿಲ್ಲ. 1ತಿಮೊ 3:16; 1ಪೇತ್ರ 3:18

40. ಶುಶ್ರೂಷಕ (ಸೇವಕ)

ಎ. ಕ್ರೈಸ್ತರೆಲ್ಲರೂ ಶುಶ್ರೂಷಕರಾಗಿರಬೇಕು

ಯೇಸು, ದೇವರ ಸೇವಕನಾಗಿದ್ದನು. ಅಕಾ 3:26; ಮತ್ತಾ 20:28

ಕ್ರೈಸ್ತರು ಅವನ ಮಾದರಿಯನ್ನು ಅನುಸರಿಸುತ್ತಾರೆ. 1ಪೇತ್ರ 2:21; 1ಕೊರಿಂ 11:1

ಶುಶ್ರೂಷೆಯನ್ನು ನೆರವೇರಿಸಲಿಕ್ಕಾಗಿ ಸಾರಲೇಬೇಕು. 2ತಿಮೊ 4:2, 5; 1ಕೊರಿಂ 9:16

ಬಿ. ಶುಶ್ರೂಷೆಗಾಗಿರುವ ಅರ್ಹತೆಗಳು

ದೇವರ ಪವಿತ್ರಾತ್ಮ ಮತ್ತು ಆತನ ವಾಕ್ಯದ ಜ್ಞಾನ. 2ತಿಮೊ 2:15; ಯೆಶಾ 61:1-3

ಸಾರುವಿಕೆಯಲ್ಲಿ ಕ್ರಿಸ್ತನ ಮಾದರಿಯನ್ನು ಅನುಸರಿಸಿರಿ. 1ಪೇತ್ರ 2:21; 2ತಿಮೊ 4:2, 5

ದೇವರು ಪವಿತ್ರಾತ್ಮ ಮತ್ತು ಸಂಘಟನೆಯ ಮೂಲಕ ತರಬೇತಿಯನ್ನು ನೀಡುತ್ತಾನೆ. ಯೋಹಾ 14:26; 2ಕೊರಿಂ 3:1-3

41. ಸಬ್ಬತ್‌

ಎ. ಸಬ್ಬತ್‌ ದಿನವನ್ನು ಆಚರಿಸುವಂತೆ ಕ್ರೈಸ್ತರು ನಿರ್ಬಂಧಿಸಲ್ಪಟ್ಟಿಲ್ಲ

ಯೇಸುವಿನ ಮರಣದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ತೆಗೆದುಹಾಕಲಾಯಿತು. ಎಫೆ 2:14

ಸಬ್ಬತ್ತನ್ನು ಕ್ರೈಸ್ತರು ಆಚರಿಸುವ ಅಗತ್ಯವಿಲ್ಲ. ಕೊಲೊ 2:16, 17; ರೋಮ 14:5, 10

ಸಬ್ಬತ್‌ ಮುಂತಾದವುಗಳನ್ನು ಆಚರಿಸಿದ್ದಕ್ಕಾಗಿ ಗದರಿಸಲಾಯಿತು. ಗಲಾ 4:9-11; ರೋಮ 10:2-4

ನಂಬಿಕೆ ಮತ್ತು ವಿಧೇಯತೆಯ ಮೂಲಕ ದೇವರ ವಿಶ್ರಾಂತಿಯಲ್ಲಿ ಸೇರಿರಿ. ಇಬ್ರಿ 4:9-11

ಬಿ. ಪುರಾತನ ಇಸ್ರಾಯೇಲಿನಲ್ಲಿ ಮಾತ್ರ ಸಬ್ಬತ್‌ ಆಚರಣೆಯು ಅವಶ್ಯವಿತ್ತು

ಸಬ್ಬತ್‌ ಮೊದಲಾಗಿ ಆಚರಿಸಲ್ಪಟ್ಟದ್ದು ಈಜಿಪ್ಟ್‌ನಿಂದ ಬಿಡುಗಡೆಮಾಡಲ್ಪಟ್ಟ ಬಳಿಕವೇ. ವಿಮೋ 16:26, 27, 29, 30

ಮಾಂಸಿಕ ಇಸ್ರಾಯೇಲ್ಯರಿಗೆ ಒಂದು ಗುರುತಾಗಿದ್ದು ವಿಶಿಷ್ಟವಾಗಿತ್ತು. ವಿಮೋ 31:16, 17; ಕೀರ್ತ 147:19, 20

ಸಬ್ಬತ್‌ ವರ್ಷಗಳು ಸಹ ಧರ್ಮಶಾಸ್ತ್ರದಿಂದ ಅಗತ್ಯಪಡಿಸಲ್ಪಟ್ಟಿದ್ದವು. ವಿಮೋ 23:10, 11; ಯಾಜ 25:3, 4

ಸಬ್ಬತ್ತನ್ನು ಕ್ರೈಸ್ತರು ಆಚರಿಸುವ ಅಗತ್ಯವಿಲ್ಲ. ರೋಮ 14:5, 10; ಗಲಾ 4:9-11

ಸಿ. ದೇವರ ಸಬ್ಬತ್‌ ವಿಶ್ರಾಂತಿ (ಸೃಷ್ಟಿಯ “ವಾರದ” 7ನೆಯ ದಿನ)

ಭೂಸೃಷ್ಟಿಯು ಅಂತ್ಯಗೊಂಡಾಗ ಆರಂಭಗೊಂಡಿತು. ಆದಿ 2:2, 3; ಇಬ್ರಿ 4:3-5

ಯೇಸು ಭೂಮಿಯಲ್ಲಿದ್ದ ದಿನಗಳನ್ನು ದಾಟಿ, ಮುಂದುವರಿಯಿತು. ಇಬ್ರಿ 4:6-8; ಕೀರ್ತ 95:7-9, 11

ಕ್ರೈಸ್ತರು ಸ್ವಹಿತಾಸಕ್ತಿಯ ಕೆಲಸಗಳಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಇಬ್ರಿ 4:9, 10

ಭೂಮಿಯೆಡೆಗೆ ರಾಜ್ಯವು ಕೆಲಸವನ್ನು ಪೂರ್ಣಗೊಳಿಸುವಾಗ ಕೊನೆಗೊಳ್ಳುತ್ತದೆ. 1ಕೊರಿಂ 15:24, 28

42. ಸಾಕ್ಷಿಕಾರ್ಯ

ಎ. ಎಲ್ಲಾ ಕ್ರೈಸ್ತರು ಸಾಕ್ಷಿ ನೀಡಬೇಕು, ಸುವಾರ್ತೆಯನ್ನು ಸಾರಬೇಕು

ಒಪ್ಪಲ್ಪಡಬೇಕಾದರೆ, ಯೇಸುವನ್ನು ಜನರ ಮುಂದೆ ಅಂಗೀಕರಿಸಲೇಬೇಕು. ಮತ್ತಾ 10:32

ನಂಬಿಕೆಯನ್ನು ಪ್ರದರ್ಶಿಸುತ್ತಾ, ವಾಕ್ಯದ ಪ್ರಕಾರ ಮಾಡುವವರಾಗಿರಬೇಕು. ಯಾಕೋ 1:22-24; 2:24

ಹೊಸಬರು ಸಹ ಬೋಧಕರಾಗಬೇಕು. ಮತ್ತಾ 28:19, 20

ಬಹಿರಂಗ ಅರಿಕೆಯು ರಕ್ಷಣೆಯನ್ನು ತರುತ್ತದೆ. ರೋಮ 10:10

ಬಿ. ಪುನಃ ಪುನಃ ಭೇಟಿಮಾಡುವ, ಸಾಕ್ಷಿನೀಡುತ್ತಾ ಇರುವ ಅಗತ್ಯವಿದೆ

ಅಂತ್ಯದ ಎಚ್ಚರಿಕೆಯು ಕೊಡಲ್ಪಡಬೇಕು. ಮತ್ತಾ 24:14

ಅನೇಕ ವರ್ಷಗಳ ವರೆಗೆ ಯೆರೆಮೀಯನು ಯೆರೂಸಲೇಮಿನ ಅಂತ್ಯದ ಕುರಿತು ಘೋಷಿಸಿದನು. ಯೆರೆ 25:3

ಆದಿಕ್ರೈಸ್ತರಂತೆಯೇ ಸಾಕ್ಷಿ ನೀಡುವುದನ್ನು ನಿಲ್ಲಿಸಸಾಧ್ಯವಿಲ್ಲ. ಅಕಾ 4:18-20; 5:28, 29

ಸಿ. ರಕ್ತಾಪರಾಧದಿಂದ ಮುಕ್ತರಾಗಿರಲು ಸಾಕ್ಷಿಯನ್ನು ನೀಡಲೇಬೇಕು

ಸಮೀಪಿಸುತ್ತಿರುವ ಅಂತ್ಯದ ಬಗ್ಗೆ ಎಚ್ಚರಿಕೆಯನ್ನು ಕೊಡಬೇಕು. ಯೆಹೆ 33:7; ಮತ್ತಾ 24:14

ಹಾಗೆ ಮಾಡಲು ತಪ್ಪುವುದು ರಕ್ತಾಪರಾಧವಾಗಿರುತ್ತದೆ. ಯೆಹೆ 33:8, 9; 3:18, 19

ಪೌಲನು ರಕ್ತಾಪರಾಧದಿಂದ ಮುಕ್ತನಾದನು; ಸಂಪೂರ್ಣವಾದ ಸತ್ಯವನ್ನು ನುಡಿದನು. ಅಕಾ 20:26, 27; 1ಕೊರಿಂ 9:16

ಸಾಕ್ಷಿನೀಡುವವನನ್ನೂ, ಅದಕ್ಕೆ ಕಿವಿಗೊಡುವವನನ್ನೂ ರಕ್ಷಿಸುತ್ತದೆ. 1ತಿಮೊ 4:16; 1ಕೊರಿಂ 9:22

43. ಸುಳ್ಳು ಪ್ರವಾದಿಗಳು

ಎ. ಸುಳ್ಳು ಪ್ರವಾದಿಗಳ ಬಗ್ಗೆ ಮುಂತಿಳಿಸಲಾಗಿದೆ; ಅಪೊಸ್ತಲರ ದಿನಗಳಲ್ಲಿ ಇದ್ದರು

ಸುಳ್ಳು ಪ್ರವಾದಿಗಳನ್ನು ಗುರುತಿಸುವ ನಿಯಮ. ಧರ್ಮೋ 18:20-22; ಲೂಕ 6:26

ಅವರ ಬಗ್ಗೆ ಮುಂತಿಳಿಸಲಾಗಿತ್ತು; ತಮ್ಮ ಫಲಗಳಿಂದ ಗುರುತಿಸಲ್ಪಡುವರು. ಮತ್ತಾ 24:23-26; 7:15-23

44. ಸೃಷ್ಟಿ

ಎ. ರುಜುಪಡಿಸಲ್ಪಟ್ಟ ವಿಜ್ಞಾನದೊಂದಿಗೆ ಒಪ್ಪುತ್ತದೆ; ವಿಕಾಸವಾದವನ್ನು ತಪ್ಪೆಂದು ರುಜುಪಡಿಸುತ್ತದೆ

ವಿಜ್ಞಾನವು ಸೃಷ್ಟಿಯ ಅನುಕ್ರಮದೊಂದಿಗೆ ಸಹಮತದಲ್ಲಿದೆ. ಆದಿ 1:11, 12, 21, 24, 25

“ಜಾತಿ”ಗನುಸಾರವಾದ ದೇವರ ನಿಯಮವು ನಿಜವೆಂದು ರುಜುವಾಗುತ್ತದೆ. ಆದಿ 1:11, 12; ಯಾಕೋ 3:12

ಬಿ. ಸೃಷ್ಟಿಯ ದಿನಗಳು 24 ತಾಸುಗಳ ದಿನಗಳಲ್ಲ

‘ದಿನ’ ಎಂಬುದು ಸಮಯಾವಧಿಯನ್ನಷ್ಟೇ ಸೂಚಿಸಸಾಧ್ಯವಿದೆ. ಆದಿ 5:1, 2

ದೇವರಿಗೆ ಒಂದು ದಿನವು ದೀರ್ಘ ಸಮಯದ್ದಾಗಿರಸಾಧ್ಯವಿದೆ. ಕೀರ್ತ 90:4; 2ಪೇತ್ರ 3:8

45. ಸ್ವರ್ಗ

ಎ. ಸ್ವರ್ಗಕ್ಕೆ 1,44,000 ಮಂದಿ ಮಾತ್ರ ಹೋಗುತ್ತಾರೆ

ಒಂದು ಸೀಮಿತ ಸಂಖ್ಯೆ; ಕ್ರಿಸ್ತನೊಂದಿಗೆ ರಾಜರಾಗುತ್ತಾರೆ. ಪ್ರಕ 5:9, 10; 20:4

ಯೇಸು ಮುನ್‌ಸೂಚಕನಾಗಿದ್ದನು; ಅಂದಿನಿಂದ ಇತರರು ಆಯ್ಕೆಮಾಡಲ್ಪಟ್ಟಿದ್ದಾರೆ. ಕೊಲೊ 1:18; 1ಪೇತ್ರ 2:21

ಇತರ ಅನೇಕರು ಭೂಮಿಯ ಮೇಲೆ ಜೀವಿಸುವರು. ಕೀರ್ತ 37:29; ಪ್ರಕ 21:3, 4

1,44,000 ಮಂದಿಗಿರುವ ವಿಶೇಷ ಸ್ಥಾನವು ಬೇರೆ ಯಾರಿಗೂ ಇಲ್ಲ. ಪ್ರಕ 14:1, 3; 7:4, 9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ