ಅರಣ್ಯಕಾಂಡ
1 ಇಸ್ರಾಯೇಲ್ಯರು ಈಜಿಪ್ಟಿಂದ* ಹೊರಟ ಎರಡನೇ ವರ್ಷದ ಎರಡನೇ ತಿಂಗಳ ಮೊದಲನೇ ದಿನ+ ಸಿನಾಯಿ ಕಾಡಲ್ಲಿದ್ದಾಗ*+ ದೇವದರ್ಶನ ಡೇರೆಯಲ್ಲಿ+ ಯೆಹೋವ ಮೋಶೆಗೆ ಹೀಗೆ ಹೇಳಿದನು: 2 “ನೀನು ಮತ್ತು ಆರೋನ ಇಸ್ರಾಯೇಲ್ಯರ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿಮಾಡಿ.+ ಅವರವರ ಕುಟುಂಬಕ್ಕೆ, ತಂದೆಯ ಮನೆತನಕ್ಕೆ ತಕ್ಕ ಹಾಗೆ ಪಟ್ಟಿಮಾಡಿ. 3 ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾಗಿರೋ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರು ಬರೀರಿ.+ ಹೆಸ್ರನ್ನ ಆಯಾ ದಳದ* ಪ್ರಕಾರ* ಬರೀರಿ.
4 ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನ ಆರಿಸಿ.+ 5 ಅವರು ನಿಮಗೆ ಸಹಾಯಕರಾಗಿ ಇರ್ತಾರೆ. ನೀವು ಯಾರನ್ನ ಆರಿಸ್ಕೊಳ್ಳಬೇಕಂದ್ರೆ, ರೂಬೇನ್ ಕುಲದಿಂದ ಶೆದೇಯೂರನ ಮಗ ಎಲೀಚೂರ್,+ 6 ಸಿಮೆಯೋನ್ ಕುಲದಿಂದ ಚೂರೀಷದೈಯ ಮಗ ಶೆಲುಮೀಯೇಲ್,+ 7 ಯೆಹೂದ ಕುಲದಿಂದ ಅಮ್ಮೀನಾದಾಬನ ಮಗ ನಹಶೋನ್,+ 8 ಇಸ್ಸಾಕಾರ್ ಕುಲದಿಂದ ಚೂವಾರನ ಮಗ ನೆತನೇಲ್,+ 9 ಜೆಬುಲೂನ್ ಕುಲದಿಂದ ಹೇಲೋನನ ಮಗ ಎಲೀಯಾಬ್,+ 10 ಯೋಸೇಫನ ಮಕ್ಕಳಲ್ಲಿ: ಎಫ್ರಾಯೀಮನ+ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮ, ಮನಸ್ಸೆ ಕುಲದಿಂದ ಪೆದಾಚೂರನ ಮಗ ಗಮ್ಲೀಯೇಲ್, 11 ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗ ಅಬೀದಾನ್,+ 12 ದಾನ್ ಕುಲದಿಂದ ಅಮ್ಮೀಷದೈಯ ಮಗ ಅಹೀಗೆಜೆರ್,+ 13 ಅಶೇರ್ ಕುಲದಿಂದ ಓಕ್ರಾನನ ಮಗ ಪಗೀಯೇಲ್,+ 14 ಗಾದ್ ಕುಲದಿಂದ ದೆಗೂವೇಲನ ಮಗ ಎಲ್ಯಾಸಾಫ್,+ 15 ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ.+ 16 ಇವರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಂಡಸರು. ಇವರು ತಮ್ಮ ತಂದೆಯ ಕುಲಕ್ಕೆ ಪ್ರಧಾನರು.+ ಸಾವಿರಾರು ಇಸ್ರಾಯೇಲ್ಯರ ದಳಗಳಿಗೆ* ಮುಖ್ಯಸ್ಥರು.”+
17 ದೇವರು ಆರಿಸಿದ ಈ ಗಂಡಸರನ್ನ ಮೋಶೆ ಆರೋನ ತಮ್ಮ ಸಹಾಯಕರಾಗಿ ತಗೊಂಡ್ರು. 18 ಅವರು ಎರಡನೇ ತಿಂಗಳ ಮೊದಲನೇ ದಿನ ಎಲ್ಲ ಇಸ್ರಾಯೇಲ್ಯರನ್ನ ಸೇರಿಸಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ+ ಹೆಸ್ರನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. 19 ಹೀಗೆ ಯೆಹೋವ ಹೇಳಿದ ಹಾಗೆ ಮೋಶೆ ಸಿನಾಯಿ ಕಾಡಲ್ಲಿ ಹೆಸ್ರನ್ನ ಬರ್ಕೊಂಡ.+
20 ಇಸ್ರಾಯೇಲನ ಮೊದಲ ಮಗ ರೂಬೇನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಬರ್ಕೊಂಡ್ರು. 21 ರೂಬೇನ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 46,500.
22 ಸಿಮೆಯೋನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 23 ಸಿಮೆಯೋನ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 59,300.
24 ಗಾದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 25 ಗಾದ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 45,650.
26 ಯೆಹೂದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 27 ಯೆಹೂದ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 74,600.
28 ಇಸ್ಸಾಕಾರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 29 ಇಸ್ಸಾಕಾರ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 54,400.
30 ಜೆಬುಲೂನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 31 ಜೆಬುಲೂನ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 57,400.
32 ಎಫ್ರಾಯೀಮನ+ ಮೂಲಕ ಬಂದ ಯೋಸೇಫನ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 33 ಎಫ್ರಾಯೀಮ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 40,500.
34 ಮನಸ್ಸೆಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 35 ಮನಸ್ಸೆ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 32,200.
36 ಬೆನ್ಯಾಮೀನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 37 ಬೆನ್ಯಾಮೀನ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 35,400.
38 ದಾನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 39 ದಾನ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 62,700.
40 ಅಶೇರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 41 ಅಶೇರ್ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 41,500.
42 ನಫ್ತಾಲಿಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 43 ನಫ್ತಾಲಿ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 53,400.
44 ಈ ಎಲ್ಲ ಹೆಸ್ರನ್ನ ಆರೋನ ಮತ್ತು ಇಸ್ರಾಯೇಲ್ಯರ 12 ಪ್ರಧಾನರ ಸಹಾಯದಿಂದ ಮೋಶೆ ಪಟ್ಟಿಮಾಡಿದ. ಆ ಪ್ರಧಾನರು ಅವರವರ ಕುಲಗಳಿಗೆ ಮುಖ್ಯಸ್ಥರು ಆಗಿದ್ರು. 45 ಇಸ್ರಾಯೇಲ್ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಅವರವರ ತಂದೆಯ ಮನೆತನದ ಪ್ರಕಾರ ಬರ್ಕೊಂಡ್ರು. 46 ಇಸ್ರಾಯೇಲ್ಯರಲ್ಲಿ ಬರ್ಕೊಂಡ ಗಂಡಸರ ಒಟ್ಟು ಸಂಖ್ಯೆ 6,03,550.+
47 ಆದ್ರೆ ಅವ್ರ ಜೊತೆ ಲೇವಿ+ ಕುಲದ ಕುಟುಂಬಗಳನ್ನ ಸೇರಿಸ್ಕೊಳ್ಳಲಿಲ್ಲ.+ 48 ಮೋಶೆಗೆ ಯೆಹೋವ ಹೀಗೆ ಹೇಳಿದನು: 49 “ನೀನು ಲೇವಿ ಕುಲದ ಗಂಡಸರ ಹೆಸ್ರನ್ನ ಮಾತ್ರ ಸೇರಿಸ್ಕೊಳ್ಳಬಾರದು. ಅವ್ರ ಸಂಖ್ಯೆಯನ್ನ ಬೇರೆ ಇಸ್ರಾಯೇಲ್ಯರ ಸಂಖ್ಯೆ ಜೊತೆ ಸೇರಿಸಬಾರದು.+ 50 ಸಾಕ್ಷಿ ಮಂಜೂಷ+ ಇರೋ ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ, ಪವಿತ್ರ ಡೇರೆಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನ+ ನೋಡ್ಕೊಳ್ಳೋಕೆ ನೀನು ಲೇವಿಯರನ್ನ ನೇಮಿಸಬೇಕು. ಅವರು ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ ಹೊತ್ಕೊಂಡು ಹೋಗಬೇಕು.+ ಅವರೇ ಆ ಡೇರೆಯ ಕೆಲಸಗಳನ್ನ ಮಾಡಬೇಕು.+ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆಗಳನ್ನ ಹಾಕ್ಬೇಕು.+ 51 ಪವಿತ್ರ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗೆಲ್ಲ ಲೇವಿಯರು ಆ ಡೇರೆಯ ಭಾಗಗಳನ್ನ ಬಿಡಿಸಬೇಕು.+ ಒಂದು ಜಾಗದಲ್ಲಿ ಪವಿತ್ರ ಡೇರೆ ಹಾಕುವಾಗ ಲೇವಿಯರೇ ಆ ಡೇರೆ ಭಾಗಗಳನ್ನ ಜೋಡಿಸಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಅದ್ರ ಹತ್ರ ಬಂದ್ರೆ ಅವರನ್ನ ಸಾಯಿಸಬೇಕು.+
52 ಯಾವ ದಳ* ಎಲ್ಲಿ ಡೇರೆ ಹಾಕಬೇಕು ಅಂತ ಹೇಳಿದ್ರೋ ಅಲ್ಲೇ ಪ್ರತಿಯೊಬ್ಬ ಇಸ್ರಾಯೇಲ್ಯ ತನ್ನ* ಡೇರೆ ಹಾಕಬೇಕು.+ 53 ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆ ಹಾಕೊಬೇಕು. ಹೀಗೆ ಮಾಡಿದ್ರೆ ನಾನು ಇಸ್ರಾಯೇಲ್ಯರ ಮೇಲೆ ಕೋಪ ಮಾಡ್ಕೊಳ್ಳಲ್ಲ.+ ಆ ಪವಿತ್ರ ಡೇರೆಯನ್ನ ನೋಡ್ಕೊಳ್ಳೋ* ಜವಾಬ್ದಾರಿ ಲೇವಿಯರದ್ದು.”+
54 ಯೆಹೋವ ಮೋಶೆ ಮೂಲಕ ಕೊಟ್ಟ ಎಲ್ಲ ಆಜ್ಞೆಯನ್ನ ಇಸ್ರಾಯೇಲ್ಯರು ಪಾಲಿಸಿದ್ರು. ದೇವರು ಹೇಳಿದ ಹಾಗೆ ಅವರು ಮಾಡಿದ್ರು.
2 ಮೋಶೆ, ಆರೋನನಿಗೆ ಯೆಹೋವ ಹೇಳಿದ್ದು ಏನಂದ್ರೆ 2 “ಇಸ್ರಾಯೇಲ್ಯರ ಪ್ರತಿಯೊಂದು ದಳ*+ ದೇವದರ್ಶನ ಡೇರೆಯ ನಾಲ್ಕು ದಿಕ್ಕಲ್ಲಿ ಡೇರೆ ಹಾಕಬೇಕು. ಪ್ರತಿಯೊಬ್ಬ ಗಂಡಸು ತಾನು ಇರಬೇಕಾದ ದಳದಲ್ಲಿ, ತನ್ನ ತಂದೆಯ ಮನೆತನದ ಗುರುತುಚಿಹ್ನೆ ಇರೋ ಹತ್ರಾನೇ ಡೇರೆ ಹಾಕಬೇಕು. ಪ್ರತಿಯೊಬ್ರ ಡೇರೆ ದೇವದರ್ಶನ ಡೇರೆಯ ಕಡೆ ಮುಖ ಮಾಡಿರಬೇಕು.
3 ದೇವದರ್ಶನ ಡೇರೆಯ ಪೂರ್ವ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಯೆಹೂದ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀನಾದಾಬನ ಮಗ ನಹಶೋನ+ ಯೆಹೂದ ಕುಲದ ಪ್ರಧಾನ. 4 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 74,600.+ 5 ಯೆಹೂದ ಕುಲದ ಒಂದು ಪಕ್ಕದಲ್ಲಿ ಇಸ್ಸಾಕಾರ್ ಕುಲದವರು ಡೇರೆ ಹಾಕಬೇಕು. ಚೂವಾರನ ಮಗ ನೆತನೇಲ್+ ಇಸ್ಸಾಕಾರ್ ಕುಲದ ಪ್ರಧಾನ. 6 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 54,400.+ 7 ಯೆಹೂದ ಕುಲದ ಇನ್ನೊಂದು ಪಕ್ಕದಲ್ಲಿ ಜೆಬುಲೂನ್ ಕುಲದವರು ಡೇರೆ ಹಾಕಬೇಕು. ಹೇಲೋನನ ಮಗ ಎಲೀಯಾಬ್+ ಜೆಬುಲೂನ್ ಕುಲದ ಪ್ರಧಾನ. 8 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 57,400.+
9 ಯೆಹೂದ ಕುಲದ ದಳಕ್ಕೆ ಸೇರಿದ ಗಂಡಸರ ಸಂಖ್ಯೆ 1,86,400. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಮೊದ್ಲು ಡೇರೆ ತೆಗಿಬೇಕಾದವರು ಇವರೇ.+
10 ದೇವದರ್ಶನ ಡೇರೆಯ ದಕ್ಷಿಣಕ್ಕೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ರೂಬೇನ್+ ಕುಲ ಮುಂದಾಳತ್ವ ವಹಿಸುತ್ತೆ. ಶೆದೇಯೂರನ ಮಗ ಎಲೀಚೂರ್+ ರೂಬೇನ್ ಕುಲದ ಪ್ರಧಾನ. 11 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 46,500.+ 12 ರೂಬೇನ್ ಕುಲದ ಪಕ್ಕ ಸಿಮೆಯೋನ್ ಕುಲದವರು ಡೇರೆ ಹಾಕಬೇಕು. ಚೂರೀಷದೈಯ ಮಗ ಶೆಲುಮೀಯೇಲ್+ ಸಿಮೆಯೋನ್ ಕುಲದ ಪ್ರಧಾನ. 13 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 59,300.+ 14 ರೂಬೇನ್ ಕುಲದ ಇನ್ನೊಂದು ಕಡೆ ಗಾದ್ ಕುಲದವರು ಡೇರೆ ಹಾಕಬೇಕು. ರೆಗೂವೇಲನ* ಮಗ ಎಲ್ಯಾಸಾಫ್+ ಗಾದ್ ಕುಲದ ಪ್ರಧಾನ. 15 ಅವನ ಸೈನ್ಯದಲ್ಲಿರೋ ಸೈನಿಕರ ಸಂಖ್ಯೆ 45,650.+
16 ರೂಬೇನ್ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,51,450. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆ ತೆಗಿಬೇಕಾದ ಎರಡನೇ ದಳ ಇವರದ್ದೇ.+
17 ದೇವದರ್ಶನ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗ+ ಲೇವಿಯರ ದಳ ಬೇರೆಲ್ಲ ದಳಗಳ ಮಧ್ಯ ಇರಬೇಕು.
ಇಸ್ರಾಯೇಲ್ಯರು ಒಂದೊಂದು ದಳವಾಗಿ ಡೇರೆ ಹಾಕೊಂಡ ಅದೇ ಕ್ರಮದಲ್ಲಿ ಪ್ರಯಾಣ ಮಾಡಬೇಕು.+ ಅವ್ರವರಿಗೆ ನೇಮಿತವಾದ ಜಾಗವನ್ನ ಯಾರೂ ಬಿಟ್ಟು ಹೋಗಬಾರದು.
18 ದೇವದರ್ಶನ ಡೇರೆಯ ಪಶ್ಚಿಮ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಎಫ್ರಾಯೀಮ್ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಹೂದನ ಮಗ ಎಲೀಷಾಮ+ ಎಫ್ರಾಯೀಮ್ ಕುಲದ ಪ್ರಧಾನ. 19 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 40,500.+ 20 ಎಫ್ರಾಯೀಮ್ ಕುಲದ ಪಕ್ಕದಲ್ಲಿ ಮನಸ್ಸೆ+ ಕುಲದವರು ಡೇರೆ ಹಾಕಬೇಕು. ಪೆದಾಚೂರನ ಮಗ ಗಮ್ಲೀಯೇಲ್+ ಮನಸ್ಸೆ ಕುಲದ ಪ್ರಧಾನ. 21 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 32,200.+ 22 ಎಫ್ರಾಯೀಮ್ ಕುಲದ ಇನ್ನೊಂದು ಪಕ್ಕದಲ್ಲಿ ಬೆನ್ಯಾಮೀನ್ ಕುಲದವರು ಡೇರೆ ಹಾಕಬೇಕು. ಗಿದ್ಯೋನಿಯ ಮಗ ಅಬೀದಾನ್+ ಬೆನ್ಯಾಮೀನ್ ಕುಲದ ಪ್ರಧಾನ. 23 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 35,400.+
24 ಎಫ್ರಾಯೀಮ್ ಕುಲದಲ್ಲಿರೋ ಸೈನಿಕರ ಸಂಖ್ಯೆ 1,08,100. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆಗಳನ್ನ ತೆಗಿಬೇಕಾದ ಮೂರನೇ ದಳ ಇವರದ್ದೇ.+
25 ದೇವದರ್ಶನ ಡೇರೆಯ ಉತ್ತರ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ದಾನ್ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಷದೈಯ ಮಗ ಅಹೀಗೆಜೆರ್+ ದಾನ್ ಕುಲದ ಪ್ರಧಾನ. 26 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 62,700.+ 27 ದಾನ್ ಕುಲದ ಪಕ್ಕದಲ್ಲಿ ಅಶೇರ್ ಕುಲದವರು ಡೇರೆ ಹಾಕಬೇಕು. ಓಕ್ರಾನನ ಮಗ ಪಗೀಯೇಲ್+ ಅಶೇರ್ ಕುಲದ ಪ್ರಧಾನ. 28 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 41,500.+ 29 ದಾನ್ ಕುಲದ ಇನ್ನೊಂದು ಪಕ್ಕದಲ್ಲಿ ನಫ್ತಾಲಿ ಕುಲದವರು ಡೇರೆ ಹಾಕಬೇಕು. ಏನಾನನ ಮಗ ಅಹೀರ+ ನಫ್ತಾಲಿ ಕುಲದ ಪ್ರಧಾನ. 30 ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 53,400.+
31 ದಾನ್ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,57,600. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಒಂದು ದಳವಾಗಿ ಹೋಗುವಾಗ ಕೊನೇಲಿ ಡೇರೆಗಳನ್ನ ತೆಗಿಬೇಕಾದ ದಳ ಇವರದ್ದೇ.”+
32 ಈ ಎಲ್ಲ ಇಸ್ರಾಯೇಲ್ಯರ ಹೆಸ್ರುಗಳನ್ನ ಅವರವ್ರ ತಂದೆಯ ಮನೆತನಗಳ ಪ್ರಕಾರ ಬರ್ಕೊಂಡ್ರು. ಎಲ್ಲ ದಳಗಳಿಂದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 6,03,550.+ 33 ಆದ್ರೆ ಯೆಹೋವ ಮೋಶೆಗೆ ಹೇಳಿದ ಹಾಗೆ ಲೇವಿಯರ ಹೆಸ್ರುಗಳನ್ನ ಬೇರೆ ಇಸ್ರಾಯೇಲ್ಯರ ಹೆಸ್ರು ಜೊತೆ+ ಬರೀಲಿಲ್ಲ.+ 34 ಯೆಹೋವ ಮೋಶೆಗೆ ಹೇಳಿದನ್ನೆಲ್ಲ ಇಸ್ರಾಯೇಲ್ಯರು ಮಾಡಿದ್ರು. ಈ ರೀತಿ ಇಸ್ರಾಯೇಲ್ಯರು ದಳಗಳಿಗೆ+ ತಕ್ಕ ಹಾಗೆ ತಮ್ಮ ಕುಟುಂಬದ, ತಂದೆಯ ಮನೆತನಗಳ ಪ್ರಕಾರ ಡೇರೆ ಹಾಕ್ತಾ ಇದ್ರು ತೆಗಿತಾ ಇದ್ರು.+
3 ಆರೋನ ಮತ್ತು ಮೋಶೆ ವಂಶದವರ ವಿವರ. ಈ ವಂಶದವರು, ಸಿನಾಯಿ ಬೆಟ್ಟದ+ ಮೇಲೆ ಯೆಹೋವ ಮೋಶೆ ಜೊತೆ ಮಾತಾಡಿದ ಸಮಯದಲ್ಲಿ ಇದ್ದವರು. 2 ಆರೋನನ ಮಕ್ಕಳ ಹೆಸ್ರು: ಮೊದಲ ಮಗ ನಾದಾಬ್, ಅವನಾದ ಮೇಲೆ ಅಬೀಹೂ,+ ಎಲ್ಲಾಜಾರ್,+ ಈತಾಮಾರ್.+ 3 ಆರೋನನ ಈ ಮಕ್ಕಳನ್ನ ಪುರೋಹಿತರಾಗಿ* ಸೇವೆ ಮಾಡೋಕೆ ಅಭಿಷೇಕಿಸಿ ನೇಮಿಸಿದ್ರು.+ 4 ಆದ್ರೆ ಇವರಲ್ಲಿ ನಾದಾಬ್, ಅಬೀಹೂ ಸಿನಾಯಿ ಕಾಡಲ್ಲಿ ಯೆಹೋವನ ಮುಂದೆ ನಿಯಮಕ್ಕೆ ವಿರುದ್ಧವಾದ ಬೆಂಕಿ ಅರ್ಪಿಸಿದ್ರಿಂದ ಯೆಹೋವನ ಮುಂದೆನೇ ಸತ್ತುಹೋದ್ರು.+ ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಎಲ್ಲಾಜಾರ್,+ ಈತಾಮಾರ+ ಆರೋನನ ಜೊತೆ ಪುರೋಹಿತರಾಗಿ ಸೇವೆ ಮಾಡೋದನ್ನ ಮುಂದುವರಿಸಿದ್ರು.
5 ಯೆಹೋವ ಮೋಶೆಗೆ ಹೀಗಂದನು: 6 “ಲೇವಿ ಕುಲದವರನ್ನ+ ಕರೆದು ಪುರೋಹಿತನಾದ ಆರೋನನ ಮುಂದೆ ನಿಲ್ಲಿಸು. ಅವರು ಆರೋನನಿಗೆ ಸಹಾಯ ಮಾಡಬೇಕು.+ 7 ಅವರು ಪವಿತ್ರ ಡೇರೆಗೆ ಸಂಬಂಧಿಸಿದ ಸೇವೆ ಮಾಡಬೇಕು. ಹೀಗೆ ಅವರು ದೇವದರ್ಶನ ಡೇರೆಯಲ್ಲಿ ಸೇವೆ ಮಾಡೋ ಮೂಲಕ ಆರೋನನ, ಎಲ್ಲ ಇಸ್ರಾಯೇಲ್ಯರ ವಿಷ್ಯದಲ್ಲಿ ತಮಗಿರೋ ಜವಾಬ್ದಾರಿಗಳನ್ನ ಮಾಡಬೇಕು. 8 ದೇವದರ್ಶನ ಡೇರೆಯ ಎಲ್ಲ ಉಪಕರಣಗಳನ್ನ ಚೆನ್ನಾಗಿ ನೋಡ್ಕೊಬೇಕು.+ ಪವಿತ್ರ ಡೇರೆಗೆ ಸಂಬಂಧಿಸಿದ ಎಲ್ಲ ಸೇವೆ ಮಾಡಿ ಇಸ್ರಾಯೇಲ್ಯರ ವಿಷ್ಯದಲ್ಲಿ ತಮಗಿರೋ ಜವಾಬ್ದಾರಿಗಳನ್ನ ಮಾಡಬೇಕು.+ 9 ಆರೋನನಿಗೆ, ಅವನ ಮಕ್ಕಳಿಗೆ ನೀನು ಲೇವಿಯರನ್ನ ಒಪ್ಪಿಸಬೇಕು. ಅವರನ್ನ ಇಸ್ರಾಯೇಲ್ಯರಿಂದ ಆಯ್ಕೆ ಮಾಡಿ ಆರೋನನಿಗೆ ಸಹಾಯ ಮಾಡೋಕೆ ನೇಮಿಸಬೇಕು.+ 10 ನೀನು ಆರೋನನನ್ನ, ಅವನ ಮಕ್ಕಳನ್ನ ಪುರೋಹಿತರಾಗಿ ನೇಮಿಸಬೇಕು. ಅವರು ಪುರೋಹಿತರಾಗಿ ತಮ್ಮ ಜವಾಬ್ದಾರಿ ಮಾಡಬೇಕು.+ ಆರೋನನ ಕುಟುಂಬಕ್ಕೆ ಸೇರದ ಯಾರೂ ಆರಾಧನಾ ಸ್ಥಳದ ಹತ್ರ ಬರಬಾರದು. ಬಂದ್ರೆ ಅವನನ್ನ ಸಾಯಿಸಬೇಕು.”+
11 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 12 “ಇಸ್ರಾಯೇಲ್ಯರಿಗೆ ಹುಟ್ಟಿದ ಮೊದಲ ಗಂಡು ಮಕ್ಕಳ ಬದ್ಲು ಲೇವಿಯರನ್ನ ತಗೊಂಡಿದ್ದೀನಿ.+ ಅವರು ನನ್ನವರಾಗ್ತಾರೆ. 13 ಯಾಕಂದ್ರೆ ಪ್ರತಿಯೊಬ್ಬನ ಮೊದಲನೇ ಮಗ ನನಗೆ ಸೇರಿದ್ದಾನೆ.+ ನಾನು ಈಜಿಪ್ಟ್ ದೇಶದಲ್ಲಿ ಮೊದಲ ಗಂಡು ಮಕ್ಕಳನ್ನೆಲ್ಲ ಸಾಯಿಸಿದಾಗ+ ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳನ್ನ ನನಗಾಗಿ ಆರಿಸ್ಕೊಂಡೆ. ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳು, ಅವ್ರ ಪ್ರಾಣಿಗಳಿಗೆ ಹುಟ್ಟಿದ ಎಲ್ಲ ಮೊದಲ ಗಂಡುಮರಿಗಳು ನನಗೆ ಸೇರಿವೆ.+ ನಾನು ಯೆಹೋವ.”
14 ಸಿನಾಯಿ ಕಾಡಲ್ಲಿ+ ಯೆಹೋವ ಮೋಶೆ ಜೊತೆ ಮಾತಾಡ್ತಾ 15 “ಲೇವಿಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಬರಿಬೇಕು”+ ಅಂದನು. 16 ಯೆಹೋವ ಹೇಳಿದ ಹಾಗೇ ಮೋಶೆ ಹೆಸ್ರುಗಳನ್ನ ಬರೆದ. 17 ಲೇವಿಯ ಮಕ್ಕಳು ಯಾರಂದ್ರೆ ಗೇರ್ಷೋನ್, ಕೆಹಾತ್, ಮೆರಾರೀ.+
18 ಗೇರ್ಷೋನನ ಮಕ್ಕಳು ಲಿಬ್ನಿ ಮತ್ತು ಶಿಮ್ಮಿ.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು.
19 ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು.
20 ಮೆರಾರೀಯ ಮಕ್ಕಳು ಮಹ್ಲಿ+ ಮತ್ತು ಮೂಷಿ.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು.
ಇವು ಲೇವಿಯರ ಕುಟುಂಬಗಳು. ಈ ಕುಟುಂಬಗಳನ್ನ ಅವರವರ ತಂದೆ ಕಡೆಯಿಂದ* ಪಟ್ಟಿ ಮಾಡಿದ್ರು.
21 ಗೇರ್ಷೋನನಿಂದ ಲಿಬ್ನಿಯರ,+ ಶಿಮ್ಮಿಯರ ಕುಟುಂಬ ಬಂತು. ಇವು ಗೇರ್ಷೋನ್ಯರ ಕುಟುಂಬಗಳು. 22 ಇವ್ರಲ್ಲಿ ಒಂದು ತಿಂಗಳ ಮಗುವಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 7,500.+ 23 ಗೇರ್ಷೋನ್ಯರ ಕುಟುಂಬಗಳವರು ಪವಿತ್ರ ಡೇರೆಯ ಹಿಂಭಾಗದಲ್ಲಿ+ ಅಂದ್ರೆ ಪಶ್ಚಿಮ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು. 24 ಗೇರ್ಷೋನ್ಯರ ತಂದೆ ಮನೆತನದ ಪ್ರಧಾನ ಲಾಯೇಲನ ಮಗ ಎಲ್ಯಾಸಾಫ್. 25 ದೇವದರ್ಶನ ಡೇರೆಯಲ್ಲಿ ಗೇರ್ಷೋನ್ಯರಿಗೆ+ ಕೆಲವು ಜವಾಬ್ದಾರಿ ಇತ್ತು. ಪವಿತ್ರ ಡೇರೆ+ ಮತ್ತೆ ಅದಕ್ಕೆ ಹಾಕೋ ಬೇರೆ ಬೇರೆ ಹೊದಿಕೆಗಳು,+ ದೇವದರ್ಶನ ಡೇರೆಯ ಬಾಗಿಲಲ್ಲಿರೋ ಪರದೆ,+ 26 ಅಂಗಳದಲ್ಲಿ ತೂಗುಬಿಟ್ಟ ಪರದೆಗಳು,+ ಪವಿತ್ರ ಡೇರೆ ಮತ್ತೆ ಯಜ್ಞವೇದಿ ಸುತ್ತ ಇರೋ ಅಂಗಳದ ಬಾಗಿಲಲ್ಲಿರೋ ಪರದೆ,+ ಅಂಗಳದ ಹಗ್ಗಗಳು ಇದನ್ನೆಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನ ಅವರು ನೋಡ್ಕೊಬೇಕಿತ್ತು.
27 ಕೆಹಾತ್‌ನಿಂದ ಅಮ್ರಾಮ್ಯರ, ಇಚ್ಹಾರ್ಯರ, ಹೆಬ್ರೋನ್ಯರ, ಉಜ್ಜೀಯೇಲ್ಯರ ಕುಟುಂಬ ಬಂತು. ಇವು ಕೆಹಾತ್ಯರ ಕುಟುಂಬಗಳು.+ 28 ಇವರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 8,600. ಇವರಿಗೆ ಆರಾಧನಾ ಸ್ಥಳ ನೋಡ್ಕೊಳ್ಳೋ ಜವಾಬ್ದಾರಿ ಇತ್ತು.+ 29 ಕೆಹಾತನ ಗಂಡುಮಕ್ಕಳ ಕುಟುಂಬಗಳವರು ಪವಿತ್ರ ಡೇರೆಯ ದಕ್ಷಿಣ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು.+ 30 ಕೆಹಾತ್ಯರ ಕುಟುಂಬಗಳ ಪ್ರಧಾನ ಉಜ್ಜೀಯೇಲನ+ ಮಗ ಎಲೀಚಾಫಾನ್. 31 ಮಂಜೂಷ,+ ಮೇಜು,+ ದೀಪಸ್ತಂಭ,+ ಯಜ್ಞವೇದಿ,+ ಧೂಪವೇದಿ, ಪವಿತ್ರ ಸ್ಥಳದಲ್ಲಿ ಸೇವೆ ಮಾಡುವಾಗ ಬಳಸೋ ಉಪಕರಣಗಳನ್ನ,+ ಪರದೆಯನ್ನ,+ ಇದಕ್ಕೆ ಸಂಬಂಧಿಸಿದ ಕೆಲಸಗಳನ್ನ ಅವರು ನೋಡ್ಕೊಬೇಕಿತ್ತು.+
32 ಪುರೋಹಿತನಾದ ಆರೋನನ ಮಗ ಎಲ್ಲಾಜಾರ್+ ಲೇವಿಯರ ಮುಖ್ಯ ಪ್ರಧಾನ. ಇವನು ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಇದ್ದವರ ಮೇಲ್ವಿಚಾರಕ.
33 ಮೆರಾರೀಯಿಂದ ಮಹ್ಲಿಯರ, ಮೂಷೀಯರ ಕುಟುಂಬ ಬಂತು. ಇವು ಮೆರಾರೀಯ+ ಕುಟುಂಬಗಳು. 34 ಇವರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 6,200.+ 35 ಅಬೀಹೈಲನ ಮಗ ಚೂರೀಯೇಲ್ ಮೆರಾರೀಯ ಕುಟುಂಬಗಳ ಪ್ರಧಾನ. ಈ ಕುಟುಂಬಗಳವರು ಪವಿತ್ರ ಡೇರೆಯ ಉತ್ತರ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು.+ 36 ಮೆರಾರೀಯರು ಪವಿತ್ರ ಡೇರೆಯ ಚೌಕಟ್ಟುಗಳನ್ನ+ ಕೋಲುಗಳನ್ನ+ ಕಂಬಗಳನ್ನ+ ಅಡಿಗಲ್ಲುಗಳನ್ನ ಎಲ್ಲ ಉಪಕರಣಗಳನ್ನ+ ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ+ 37 ಅಂಗಳದ ಸುತ್ತ ಇದ್ದ ಕಂಬಗಳನ್ನ ಅವುಗಳ ಅಡಿಗಲ್ಲುಗಳನ್ನ+ ಗೂಟಗಳನ್ನ ಹಗ್ಗಗಳನ್ನ ನೋಡ್ಕೊಬೇಕಿತ್ತು.
38 ಪವಿತ್ರ ಡೇರೆಯ ಮುಂಭಾಗದಲ್ಲಿ, ಪೂರ್ವ ದಿಕ್ಕಲ್ಲಿ ಅಂದ್ರೆ ದೇವದರ್ಶನ ಡೇರೆಯ ಎದುರಿಗೆ ಮೋಶೆ, ಆರೋನ, ಅವನ ಮಕ್ಕಳು ಡೇರೆ ಹಾಕೊಂಡ್ರು. ಇವ್ರಿಗೆ ಆರಾಧನಾ ಸ್ಥಳವನ್ನ ನೋಡ್ಕೊಳ್ಳೋ ಜವಾಬ್ದಾರಿ ಇತ್ತು. ಇವರು ಇಸ್ರಾಯೇಲ್ಯರ ಪರವಾಗಿ ಈ ಜವಾಬ್ದಾರಿಯನ್ನ ಮಾಡಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಆರಾಧನಾ ಸ್ಥಳದ ಹತ್ರ ಬಂದ್ರೆ ಜೀವ ಕಳ್ಕೊಬೇಕಾಗುತ್ತೆ.+
39 ಯೆಹೋವ ಹೇಳಿದ ಹಾಗೆ ಮೋಶೆ ಆರೋನರು ಲೇವಿಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರನ್ನ ಅವರವರ ಕುಟುಂಬಗಳ ಪ್ರಕಾರ ಬರೆದ್ರು. ಆ ಕುಲದವರ ಸಂಖ್ಯೆ 22,000.
40 ಆಮೇಲೆ ಯೆಹೋವ ಮೋಶೆಗೆ “ಇಸ್ರಾಯೇಲ್ಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಮೊದಲ ಗಂಡು ಮಕ್ಕಳ ಹೆಸ್ರನ್ನ ಬರೆದು ಪಟ್ಟಿಮಾಡು.+ 41 ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳ ಬದ್ಲು ಲೇವಿಯರನ್ನ,+ ಇಸ್ರಾಯೇಲ್ಯರ ಎಲ್ಲ ಸಾಕುಪ್ರಾಣಿಗಳಿಗೆ ಹುಟ್ಟಿದ ಮೊದಲ ಗಂಡು ಮರಿಗಳಿಗೆ ಬದ್ಲು ಲೇವಿಯರ ಸಾಕುಪ್ರಾಣಿಗಳನ್ನ ನೀನು ನನಗೋಸ್ಕರ ತಗೊಬೇಕು.+ ನಾನು ಯೆಹೋವ” ಅಂದನು. 42 ಯೆಹೋವ ಹೇಳಿದ ಹಾಗೇ ಮೋಶೆ ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳ ಹೆಸ್ರುಗಳನ್ನ ಬರೆದ. 43 ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಮೊದಲ ಗಂಡು ಮಕ್ಕಳು 22,273.
44 ಯೆಹೋವ ಮುಂದುವರಿಸಿ ಮೋಶೆಗೆ 45 “ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳಿಗೆ ಬದ್ಲು ಲೇವಿಯರನ್ನ, ಇಸ್ರಾಯೇಲ್ಯರ ಎಲ್ಲ ಸಾಕುಪ್ರಾಣಿಗಳಿಗೆ ಹುಟ್ಟಿದ ಮೊದಲ ಗಂಡು ಮರಿಗಳಿಗೆ ಬದ್ಲು ಲೇವಿಯರ ಸಾಕುಪ್ರಾಣಿಗಳನ್ನ ನೀನು ತಗೊಬೇಕು. ಲೇವಿಯರು ನನ್ನವರು. ನಾನು ಯೆಹೋವ. 46 ಲೇವಿಯರ ಸಂಖ್ಯೆಗಿಂತ ಇಸ್ರಾಯೇಲ್ಯರಲ್ಲಿ 273 ಗಂಡು ಮಕ್ಕಳು ಜಾಸ್ತಿ ಇದ್ದಾರೆ.+ ಇವರನ್ನ ಬಿಡಿಸೋಕೆ ಬಿಡುಗಡೆ ಬೆಲೆಯನ್ನ+ 47 ನೀನು ತಗೊಬೇಕು. ಆ ಬೆಲೆ ಎಷ್ಟಂದ್ರೆ ಒಬ್ಬೊಬ್ಬನಿಗೆ ಐದೈದು ಶೆಕೆಲ್.*+ ಆ ಶೆಕೆಲ್ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ* ಇರಬೇಕು. ಒಂದು ಶೆಕೆಲ್ ಅಂದ್ರೆ 20 ಗೇರಾ.*+ 48 ಆ ಹಣವನ್ನ ಜಾಸ್ತಿ ಇರೋ ಗಂಡು ಮಕ್ಕಳನ್ನ ಬಿಡಿಸೋಕೆ ಆರೋನನಿಗೆ, ಅವನ ಗಂಡು ಮಕ್ಕಳಿಗೆ ಕೊಡಬೇಕು” ಅಂದನು. 49 ಹಾಗಾಗಿ ಮೋಶೆ ಲೇವಿಯರಿಗಿಂತ ಜಾಸ್ತಿ ಇದ್ದ ಆ ಗಂಡು ಮಕ್ಕಳನ್ನ ಬಿಡಿಸೋಕೆ ಕೊಡೋ ಬಿಡುಗಡೆ ಬೆಲೆಯನ್ನ ತಗೊಂಡ. 50 ಅವನು ಇಸ್ರಾಯೇಲ್ಯರ ಆ ಗಂಡು ಮಕ್ಕಳಿಂದ ತಗೊಂಡ ಹಣ 1,365 ಶೆಕೆಲ್‌ಗಳು. ಅದ್ರ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ ಇತ್ತು. 51 ಮೋಶೆ ಯೆಹೋವ ಹೇಳಿದ ಹಾಗೆ ಆ ಬಿಡುಗಡೆ ಬೆಲೆಯನ್ನ ಆರೋನನಿಗೆ, ಅವನ ಮಕ್ಕಳಿಗೆ ಕೊಟ್ಟ. ಯೆಹೋವ ಹೇಳಿದ ಹಾಗೇ ಮೋಶೆ ಮಾಡಿದ.
4 ಮೋಶೆ, ಆರೋನಗೆ ಯೆಹೋವ ಹೀಗೆ ಹೇಳಿದನು: 2 “ಲೇವಿಯ ಮಕ್ಕಳಲ್ಲಿ ಕೆಹಾತನ+ ವಂಶದವರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನಗಳ ಪ್ರಕಾರ ಬರೆದು ಲೆಕ್ಕ ಮಾಡಬೇಕು. 3 ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ+ ಗುಂಪಲ್ಲಿ 30 ರಿಂದ+ 50 ವರ್ಷದ+ ಒಳಗಿರೋ ಎಲ್ರ ಲೆಕ್ಕ ತಗೋಬೇಕು.
4 ದೇವದರ್ಶನ ಡೇರೆಯಲ್ಲಿ ಕೆಹಾತ್ಯರಿಗೆ ಕೊಟ್ಟ ಅತಿ ಪವಿತ್ರ ಕೆಲಸ+ ಏನಂದ್ರೆ 5 ಇಸ್ರಾಯೇಲ್ಯರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೊರಡೋ ಮುಂಚೆ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ ಬಂದು ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ+ ತೆಗೆದು ಅದ್ರಿಂದ ಮಂಜೂಷವನ್ನ ಮುಚ್ಚಬೇಕು.+ 6 ಅದ್ರ ಮೇಲೆ ಸೀಲ್ ಪ್ರಾಣಿಯ* ಚರ್ಮದ ಒಂದು ಹೊದಿಕೆ ಹಾಕಿ, ಕಡುನೀಲಿ ಬಣ್ಣದ ಬಟ್ಟೆ ಮುಚ್ಚಬೇಕು. ಆಮೇಲೆ ಮಂಜೂಷದ ಬಳೆಗಳಲ್ಲಿ ಅದ್ರ ಕೋಲುಗಳನ್ನ+ ಹಾಕಬೇಕು.
7 ಅರ್ಪಣೆಯ ರೊಟ್ಟಿಗಳನ್ನ ಇಡೋ ಮೇಜಿನ+ ಮೇಲೆ ಒಂದು ನೀಲಿ ಬಟ್ಟೆ ಹಾಕಿ ಅದ್ರ ಮೇಲೆ ತಟ್ಟೆಗಳನ್ನ, ಲೋಟಗಳನ್ನ, ಪಾನ ಅರ್ಪಣೆ ಸುರಿಯೋಕೆ ಬಳಸೋ ಹೂಜಿಗಳನ್ನ,+ ಬೋಗುಣಿಗಳನ್ನ ಇಡಬೇಕು. ಯಾವಾಗ್ಲೂ ಅರ್ಪಿಸೋ ರೊಟ್ಟಿಗಳು+ ಮೇಜಿನ ಮೇಲೆನೇ ಇರಬೇಕು. 8 ಅವುಗಳ ಮೇಲೆ ಕಡುಗೆಂಪು ಬಣ್ಣದ ಬಟ್ಟೆ ಹಾಕಿ, ಅದ್ರ ಮೇಲೆ ಸೀಲ್ ಪ್ರಾಣಿಯ ಚರ್ಮದ ಒಂದು ಹೊದಿಕೆ ಮುಚ್ಚಬೇಕು. ಕೋಲುಗಳನ್ನ ಮೇಜಿನ ಬಳೆಗಳಲ್ಲಿ ಹಾಕಬೇಕು.+ 9 ಆಮೇಲೆ ಆರೋನ, ಅವನ ಮಕ್ಕಳು ಒಂದು ನೀಲಿ ಬಟ್ಟೆಯಿಂದ ದೀಪಸ್ತಂಭವನ್ನ,+ ಅದ್ರ ದೀಪಗಳನ್ನ,+ ಚಿಮುಟಗಳನ್ನ,* ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನ,+ ದೀಪದ ಎಣ್ಣೆ ಇಡೋ ಎಲ್ಲ ಪಾತ್ರೆಗಳನ್ನ ಮುಚ್ಚಬೇಕು. 10 ದೀಪಸ್ತಂಭವನ್ನ, ಅದ್ರ ಎಲ್ಲ ಉಪಕರಣಗಳನ್ನ ಸೀಲ್ ಪ್ರಾಣಿಯ ಚರ್ಮದ ಹೊದಿಕೆಯಿಂದ ಸುತ್ತಿ ಅವುಗಳನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲಿನ ಮೇಲೆ ಇಡಬೇಕು. 11 ಆಮೇಲೆ ಅವರು ಚಿನ್ನದ ಧೂಪವೇದಿ+ ಮೇಲೆ ಒಂದು ನೀಲಿ ಬಟ್ಟೆ ಹಾಕಿ, ಸೀಲ್ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಬೇಕು. ಧೂಪವೇದಿಯ ಕೋಲುಗಳನ್ನ+ ಅದ್ರ ಬಳೆಗಳಲ್ಲಿ ಹಾಕಬೇಕು. 12 ಪವಿತ್ರ ಸ್ಥಳದಲ್ಲಿ ಸೇವೆ ಮಾಡುವಾಗೆಲ್ಲ ಬಳಸೋ ಬೇರೆ ಎಲ್ಲ ಉಪಕರಣಗಳನ್ನ+ ಅವರು ತಗೊಂಡು ನೀಲಿ ಬಟ್ಟೆಯಲ್ಲಿ ಹಾಕಿ, ಸೀಲ್ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಿ, ಅವುಗಳನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲಿನ ಮೇಲೆ ಇಡಬೇಕು.
13 ಅವರು ಯಜ್ಞವೇದಿಯಿಂದ ಬೂದಿ* ತೆಗಿಬೇಕು,+ ನೇರಳೆ ಬಣ್ಣದ ಒಂದು ಉಣ್ಣೆ ಬಟ್ಟೆಯನ್ನ ಯಜ್ಞವೇದಿ ಮೇಲೆ ಹಾಸಬೇಕು. 14 ಯಜ್ಞವೇದಿ ಹತ್ರ ಅವರು ಸೇವೆ ಮಾಡುವಾಗ ಬಳಸೋ ಎಲ್ಲ ಉಪಕರಣಗಳನ್ನ+ ಅಂದ್ರೆ ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆ, ಕವಲುಗೋಲು, ಸಲಿಕೆ, ಬೋಗುಣಿಗಳನ್ನ ಆ ಬಟ್ಟೆ ಮೇಲೆ ಇಡಬೇಕು. ಆಮೇಲೆ ಇದನ್ನೆಲ್ಲ ಸೀಲ್ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಬೇಕು. ಯಜ್ಞವೇದಿಯ ಬಳೆಗಳಲ್ಲಿ ಕೋಲುಗಳನ್ನ ಹಾಕಬೇಕು.+
15 ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗೋ ಮುಂಚೆ ಆರೋನ, ಅವನ ಮಕ್ಕಳು ಆರಾಧನಾ ಸ್ಥಳದ ಎಲ್ಲ ಉಪಕರಣಗಳನ್ನ ಬಟ್ಟೆಗಳಿಂದ ಮುಚ್ಚಿಡಬೇಕು.+ ಇದಾದ ಮೇಲೆನೇ ಕೆಹಾತ್ಯರು ದೇವದರ್ಶನ ಡೇರೆ ಒಳಗೆ ಬಂದು ಅವುಗಳನ್ನ ಹೊತ್ಕೊಂಡು ಹೋಗಬೇಕು.+ ಆದ್ರೆ ಆರಾಧನಾ ಸ್ಥಳದ ಉಪಕರಣಗಳನ್ನ ಮುಟ್ಟಬಾರದು, ಮುಟ್ಟಿದ್ರೆ ಸಾಯ್ತಾರೆ.+ ಇದಿಷ್ಟು ದೇವದರ್ಶನ ಡೇರೆ ವಿಷ್ಯದಲ್ಲಿ ಕೆಹಾತ್ಯರಿಗೆ ಕೊಟ್ಟ ಜವಾಬ್ದಾರಿ.
16 ದೀಪಗಳಿಗೆ ಬೇಕಾದ ಎಣ್ಣೆ,+ ಪರಿಮಳ ಧೂಪ,+ ತಪ್ಪದೆ ಅರ್ಪಿಸೋ ಧಾನ್ಯ ಅರ್ಪಣೆ, ಅಭಿಷೇಕ ತೈಲ+ ಇದನ್ನೆಲ್ಲ ನೋಡ್ಕೊಳ್ಳೋ ಜವಾಬ್ದಾರಿ ಪುರೋಹಿತನಾದ ಆರೋನನ ಮಗ ಎಲ್ಲಾಜಾರನದ್ದು.+ ಅವನು ಪವಿತ್ರ ಡೇರೆ, ಅದ್ರೊಳಗೆ ಇರೋ ಎಲ್ಲ ಅಂದ್ರೆ ಪವಿತ್ರ ಸ್ಥಳ, ಅದ್ರಲ್ಲಿರೋ ಉಪಕರಣಗಳನ್ನ ನೋಡ್ಕೊಬೇಕು.”
17 ಮೋಶೆ ಮತ್ತು ಆರೋನನಿಗೆ ಯೆಹೋವ ಇನ್ನೂ ಹೇಳೋದು ಏನಂದ್ರೆ 18 “ಲೇವಿ ಕುಲದಲ್ಲಿ ಕೆಹಾತ್ಯರ ಕುಟುಂಬಗಳು+ ನಾಶ ಆಗದ ಹಾಗೆ ನೋಡ್ಕೊಳ್ಳಿ. 19 ಕೆಹಾತ್ಯರು ಅತಿ ಪವಿತ್ರವಾದ ವಸ್ತುಗಳ ಹತ್ರ ಹೋಗುವಾಗ+ ಸಾಯದೇ ಇರಬೇಕಂದ್ರೆ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ ಹೋಗಿ ಅವ್ರಲ್ಲಿ ಪ್ರತಿಯೊಬ್ಬ ಯಾವ್ಯಾವ ಕೆಲಸ ಮಾಡಬೇಕು, ಯಾವುದನ್ನ ಹೊತ್ಕೊಂಡು ಹೋಗಬೇಕು ಅಂತ ಹೇಳಬೇಕು. 20 ಕೆಹಾತ್ಯರು ಒಳಗೆ ಹೋಗಿ ಪವಿತ್ರ ವಸ್ತುಗಳನ್ನ ಒಂದೇ ಒಂದು ಕ್ಷಣ ಕೂಡ ನೋಡಬಾರದು. ನೋಡಿದ್ರೆ ಸತ್ತು ಹೋಗ್ತಾರೆ.”+
21 ಆಮೇಲೆ ಯೆಹೋವ ಮೋಶೆಗೆ ಹೀಗೆ ಹೇಳಿದನು: 22 “ಗೇರ್ಷೋನನ ವಂಶದವರನ್ನ ಅವ್ರವರ ಕುಟುಂಬ,+ ತಂದೆಯ ಮನೆತನಗಳ ಪ್ರಕಾರ ಲೆಕ್ಕ ಮಾಡಬೇಕು. 23 ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ 30 ರಿಂದ 50 ವರ್ಷದ ಒಳಗಿರೋ ಎಲ್ರ ಹೆಸ್ರನ್ನ ಬರೀಬೇಕು. 24 ಗೇರ್ಷೋನ್ಯರ ಕುಟುಂಬ ನೋಡ್ಕೊಬೇಕಾದ, ಹೊತ್ಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ:+ 25 ಅವರು ಹೊತ್ಕೊಂಡು ಹೋಗಬೇಕಾದ ವಸ್ತುಗಳು ಯಾವುದಂದ್ರೆ ಪವಿತ್ರ ಡೇರೆಯ ಬಟ್ಟೆಗಳು,+ ದೇವದರ್ಶನ ಡೇರೆ ಮೇಲೆ ಹಾಕಿರೋ ಇನ್ನೆರಡು ಹೊದಿಕೆಗಳು, ಅದ್ರ ಮೇಲಿರೋ ಸೀಲ್ ಪ್ರಾಣಿಯ ಚರ್ಮದ ಹೊದಿಕೆ,+ ದೇವದರ್ಶನ ಡೇರೆಯ ಬಾಗಿಲಲ್ಲಿರೋ ಪರದೆ,+ 26 ಅಂಗಳದಲ್ಲಿ ತೂಗುಬಿಟ್ಟಿರೋ ಪರದೆಗಳು,+ ಪವಿತ್ರ ಡೇರೆ, ಯಜ್ಞವೇದಿ ಸುತ್ತ ಇರೋ ಅಂಗಳದ ಬಾಗಿಲಲ್ಲಿರೋ ಪರದೆ,+ ಡೇರೆಯ ಹಗ್ಗಗಳು, ಪವಿತ್ರ ಡೇರೆಯ ಕೆಲಸಕ್ಕಾಗಿ ಉಪಯೋಗಿಸೋ ಎಲ್ಲ ವಸ್ತುಗಳು ಮತ್ತು ಸಾಧನಗಳು. ಇದನ್ನೆಲ್ಲ ನೋಡ್ಕೊಳ್ಳೋ ಜವಾಬ್ದಾರಿ ಗೇರ್ಷೋನ್ಯರದ್ದು. 27 ಆರೋನ, ಅವನ ಮಕ್ಕಳ ಮೇಲ್ವಿಚಾರಣೆಯಲ್ಲಿ ಗೇರ್ಷೋನ್ಯರು+ ಎಲ್ಲ ಸೇವೆ ಮಾಡಬೇಕು, ಹೊರೆಗಳನ್ನ ಹೊರಬೇಕು. ಈ ಎಲ್ಲ ಹೊರೆಗಳನ್ನ ಹೊರೋ ಜವಾಬ್ದಾರಿಯನ್ನ ನೀವು ಗೇರ್ಷೋನ್ಯರಿಗೆ ಕೊಡಬೇಕು. 28 ದೇವದರ್ಶನ ಡೇರೆಯಲ್ಲಿ ಗೇರ್ಷೋನ್ಯರ ಕುಟುಂಬ ಮಾಡಬೇಕಾದ ಸೇವೆ ಇದು.+ ಪುರೋಹಿತನಾದ ಆರೋನನ ಮಗ ಈತಾಮಾರ+ ಹೇಳಿದ ಹಾಗೆ ಅವರು ತಮ್ಮ ಜವಾಬ್ದಾರಿ ಮಾಡಬೇಕು.
29 ಮೆರಾರೀಯ ವಂಶದವರನ್ನ ಅವ್ರವರ ಕುಟುಂಬ,+ ತಂದೆಯ ಮನೆತನದ ಪ್ರಕಾರ ನೀನು ಲೆಕ್ಕ ಮಾಡಬೇಕು. 30 ದೇವದರ್ಶನ ಡೇರೆಯ ಕೆಲಸಗಳನ್ನ ಮಾಡೋ ಗುಂಪಲ್ಲಿ 30 ರಿಂದ 50 ವರ್ಷದ ಒಳಗಿರೋ ಎಲ್ರ ಹೆಸ್ರನ್ನ ಬರಿಬೇಕು. 31 ದೇವದರ್ಶನ ಡೇರೆಯಲ್ಲಿನ ಸೇವೆಗೆ ಸಂಬಂಧಿಸಿ ಅವರು ಹೊತ್ಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ:+ ಪವಿತ್ರ ಡೇರೆಯ ಎಲ್ಲ ಚೌಕಟ್ಟು,+ ಕೋಲು,+ ಕಂಬ,+ ಅಡಿಗಲ್ಲು.+ 32 ಸುತ್ತ ಇರೋ ಅಂಗಳದ ಎಲ್ಲ ಕಂಬ,+ ಅಡಿಗಲ್ಲು,+ ಡೇರೆಯ ಗೂಟ,+ ಡೇರೆಯ ಹಗ್ಗ ಮತ್ತು ಎಲ್ಲ ಸಾಧನಗಳು. ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ಅವರು ಮಾಡಬೇಕು. ಪ್ರತಿಯೊಬ್ಬ ಇವುಗಳಲ್ಲಿ ಯಾವುದನ್ನ ಹೊತ್ಕೊಂಡು ಹೋಗಬೇಕು ಅಂತ ನೀವು ಹೇಳಬೇಕು. 33 ದೇವದರ್ಶನ ಡೇರೆಯಲ್ಲಿ ಮೆರಾರೀಯರ ಕುಟುಂಬಗಳವರು+ ಈ ಸೇವೆ ಮಾಡಬೇಕು. ಅವರು ಪುರೋಹಿತನಾದ ಆರೋನನ ಮಗ ಈತಾಮಾರ ಹೇಳಿದ ಹಾಗೆ ತಮ್ಮ ಕೆಲಸ ಮಾಡಬೇಕು.”+
34 ಮೋಶೆ, ಆರೋನ, ಇಸ್ರಾಯೇಲ್ಯರ ಪ್ರಧಾನರು+ ಕೆಹಾತ್ಯರ+ ಹೆಸ್ರುಗಳನ್ನ ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಬರೆದ್ರು. 35 ಇವರ ವಯಸ್ಸು 30 ರಿಂದ 50 ವರ್ಷ. ಇವರು ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿದ್ರು.+ 36 ಅವ್ರವರ ಕುಟುಂಬಗಳ ಪ್ರಕಾರ ಒಟ್ಟು 2,750 ಜನ ಇದ್ರು.+ 37 ಕೆಹಾತ್ಯರ ಕುಟುಂಬಗಳಲ್ಲಿ ಇವ್ರೆಲ್ರ ಹೆಸ್ರುಗಳನ್ನ ಲೆಕ್ಕ ಮಾಡಿದ್ರು. ಇವ್ರೆಲ್ಲ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ರು. ಯೆಹೋವ ಹೇಳಿದ್ರಿಂದ ಇವ್ರೆಲ್ರ ಹೆಸ್ರುಗಳನ್ನ ಮೋಶೆ, ಆರೋನ ಬರೆದ್ರು.+
38 ಗೇರ್ಷೋನನ ವಂಶದವರ ಹೆಸ್ರುಗಳನ್ನ ಅವ್ರವರ ಕುಟುಂಬ,+ ತಂದೆಯ ಮನೆತನದ ಪ್ರಕಾರ ಬರೆದ್ರು. 39 ಇವರ ವಯಸ್ಸು 30 ರಿಂದ 50 ವರ್ಷ, ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ ಇವರಿದ್ರು. 40 ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಒಟ್ಟು 2,630 ಜನ ಇದ್ರು.+ 41 ಇದು ಗೇರ್ಷೋನ್ಯರ ಕುಟುಂಬದಲ್ಲಿ ಇದ್ದವರ ಲೆಕ್ಕ. ಇವರೆಲ್ಲ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ರು. ಯೆಹೋವ ಹೇಳಿದ್ರಿಂದ ಇವ್ರೆಲ್ರ ಹೆಸ್ರನ್ನ ಮೋಶೆ, ಆರೋನ ಬರೆದ್ರು.+
42 ಮೆರಾರೀಯ ವಂಶದವರ ಹೆಸ್ರುಗಳನ್ನ ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಲೆಕ್ಕ ಮಾಡಿದ್ರು. 43 ಇವರ ವಯಸ್ಸು 30 ರಿಂದ 50 ವರ್ಷ, ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ ಇವರಿದ್ರು.+ 44 ಅವ್ರವರ ಕುಟುಂಬಗಳ ಪ್ರಕಾರ ಒಟ್ಟು 3,200 ಜನ ಇದ್ರು.+ 45 ಇದು ಮೆರಾರೀಯರ ಕುಟುಂಬದಲ್ಲಿ ಇದ್ದವರ ಲೆಕ್ಕ. ಯೆಹೋವ ಮೋಶೆಗೆ ಹೇಳಿದ ಹಾಗೆ ಮೋಶೆ, ಆರೋನ ಇವ್ರೆಲ್ರ ಹೆಸ್ರುಗಳನ್ನ ಬರೆದ್ರು.+
46 ಮೋಶೆ, ಆರೋನ, ಇಸ್ರಾಯೇಲ್ಯರ ಪ್ರಧಾನರು ಲೇವಿಯರೆಲ್ಲರ ಹೆಸ್ರುಗಳನ್ನ ಅವ್ರವರ ಕುಟುಂಬಗಳಿಗೆ, ತಂದೆಯ ಮನೆತನಗಳ ಪ್ರಕಾರ ಲೆಕ್ಕ ಮಾಡಿದ್ರು. 47 ಅವರ ವಯಸ್ಸು 30 ರಿಂದ 50 ವರ್ಷ. ದೇವದರ್ಶನ ಡೇರೆಗೆ ಸಂಬಂಧಿಸಿದ ಸೇವೆ ಮಾಡೋದು, ಹೊರೆಗಳನ್ನ ಹೊರೋದು ಅವ್ರ ಕೆಲಸ.+ 48 ಲೆಕ್ಕ ಮಾಡಿದ ಲೇವಿಯರ ಒಟ್ಟು ಸಂಖ್ಯೆ 8,580.+ 49 ಯೆಹೋವ ಮೋಶೆಗೆ ಹೇಳಿದ್ರಿಂದ ಎಲ್ರನ್ನ ಲೆಕ್ಕ ಮಾಡಿದ್ರು. ಪ್ರತಿಯೊಬ್ರ ಹೆಸ್ರನ್ನ ಅವರು ಮಾಡಬೇಕಾದ ಕೆಲಸಕ್ಕೆ, ಹೊರಬೇಕಾದ ಹೊರೆಗೆ ತಕ್ಕ ಹಾಗೆ ಬರೆದ್ರು. ಯೆಹೋವ ಮೋಶೆಗೆ ಹೇಳಿದ ಪ್ರಕಾರನೇ ಲೆಕ್ಕ ಮಾಡಿದ್ರು.
5 ಯೆಹೋವ ಮೋಶೆಗೆ 2 “ಎಲ್ಲ ಕುಷ್ಠರೋಗಿಗಳನ್ನ,+ ಸ್ರಾವ ಇರೋರನ್ನ,+ ಶವ ಮುಟ್ಟಿ ಅಶುದ್ಧ ಆದವರನ್ನ+ ಪಾಳೆಯದಿಂದ ಹೊರಗೆ ಕಳಿಸಬೇಕು ಅಂತ ಇಸ್ರಾಯೇಲ್ಯರಿಗೆ ಹೇಳು. 3 ಗಂಡಸರಾಗ್ಲಿ ಹೆಂಗಸರಾಗ್ಲಿ ಪಾಳೆಯದಿಂದ ಹೊರಗೆ ಕಳಿಸಬೇಕು. ನಾನು ನಿಮ್ಮ ಮಧ್ಯ ವಾಸ ಮಾಡೋದ್ರಿಂದ+ ಅಂಥವರು ನಿಮ್ಮ ಮಧ್ಯ ಇದ್ದು ಪಾಳೆಯವನ್ನ ಅಶುದ್ಧ ಮಾಡಬಾರದು.+ ಹಾಗಾಗಿ ಅವರನ್ನ ಪಾಳೆಯದಿಂದ ಹೊರಗೆ ಕಳಿಸಬೇಕು” ಅಂದನು. 4 ಆಗ ಇಸ್ರಾಯೇಲ್ಯರು ಅಂಥವರನ್ನೆಲ್ಲ ಪಾಳೆಯದಿಂದ ಹೊರಗೆ ಕಳಿಸಿದ್ರು. ಹೀಗೆ ಯೆಹೋವ ಮೋಶೆಗೆ ಹೇಳಿದ ಹಾಗೆನೇ ಮಾಡಿದ್ರು.
5 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 6 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಹೆಂಗಸರಾಗ್ಲಿ ಗಂಡಸರಾಗ್ಲಿ ಏನಾದ್ರೂ ಪಾಪ ಮಾಡಿ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿದ್ರೆ ಅವರು ಅಪರಾಧಿಗಳು.+ 7 ಅವರೇ ಬಂದು ತಮ್ಮ ತಪ್ಪನ್ನ ಒಪ್ಕೊಳ್ಳಬೇಕು.+ ಅವರು ಯಾರ ವಿರುದ್ಧ ಪಾಪ ಮಾಡಿದ್ದಾರೋ ಅವರಿಗೆ ಪೂರ್ತಿ ನಷ್ಟಭರ್ತಿ ಮಾಡಬೇಕು. ಜೊತೆಗೆ ನಷ್ಟಭರ್ತಿ ಮಾಡೋ ವಸ್ತುವಿನ ಬೆಲೆಯ ಐದನೇ ಒಂದು ಭಾಗ ಸೇರಿಸಿ ಕೊಡಬೇಕು.+ 8 ಅದನ್ನ ತಗೊಬೇಕಾದ ವ್ಯಕ್ತಿ ಸತ್ತುಹೋಗಿದ್ರೆ, ಅವನಿಗೆ ಹತ್ರದ ಸಂಬಂಧಿಕರು ಯಾರೂ ಇಲ್ಲದಿದ್ರೆ ಅವನು ಆ ನಷ್ಟಭರ್ತಿಯನ್ನ ಯೆಹೋವನಿಗೆ ಕೊಡಬೇಕು. ಅದು ಪುರೋಹಿತನಿಗೆ ಸೇರಬೇಕು. ಪಾಪ ಮಾಡಿದವರು ತಮ್ಮ ಪ್ರಾಯಶ್ಚಿತ್ತಕ್ಕಾಗಿ ಕೊಡೋ ಟಗರೂ ಪುರೋಹಿತನಿಗೆ ಸೇರಬೇಕು.+
9 ಇಸ್ರಾಯೇಲ್ಯರು ಪುರೋಹಿತನಿಗೆ ತಂದು ಕೊಡೋ ಎಲ್ಲ ಪವಿತ್ರ ಕಾಣಿಕೆಗಳು+ ಅವನಿಗೇ ಸೇರಬೇಕು.+ 10 ಪ್ರತಿಯೊಬ್ಬ ಇಸ್ರಾಯೇಲ್ಯ ತಂದು ಕೊಡೋ ಪವಿತ್ರ ವಸ್ತುಗಳು ಪುರೋಹಿತನಿಗೇ ಸೇರಬೇಕು. ಕಾಣಿಕೆಯಾಗಿ ಏನನ್ನೇ ತಂದು ಕೊಟ್ರೂ ಅದು ಪುರೋಹಿತನಿಗೆ ಸೇರುತ್ತೆ.’”
11 ಯೆಹೋವ ಮೋಶೆಗೆ ಮತ್ತೂ ಹೇಳೋದು ಏನಂದ್ರೆ 12 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬನ ಹೆಂಡತಿ ಅಡ್ಡದಾರಿ ಹಿಡಿದು ಗಂಡನಿಗೆ ದ್ರೋಹ ಮಾಡಿದ್ರೆ ನೀವು ಹೀಗೆ ಮಾಡಬೇಕು. 13 ಅವಳಿಗೆ ಇನ್ನೊಬ್ಬನ ಜೊತೆ ಲೈಂಗಿಕ ಸಂಬಂಧ ಇರಬಹುದು.+ ಈ ವಿಷ್ಯ ಅವಳ ಗಂಡನಿಗೆ ಗೊತ್ತಾಗದೆ ಗುಟ್ಟಾಗಿ ಇರಬಹುದು. ಅವಳು ಅಪವಿತ್ರ ಆಗಿದ್ರೂ ಅವಳ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೆ ಅವಳು ಸಿಕ್ಕಿಬೀಳದೇನೂ ಇರಬಹುದು. 14 ಅವಳ ಗಂಡನಿಗೆ ಅವಳ ಮೇಲೆ ಕೋಪ ಬಂದು ಅವಳ ನಡತೆ ಮೇಲೆ ಸಂಶಯ ಬಂದ್ರೆ ಅಥವಾ ಒಬ್ಬ ಸ್ತ್ರೀ ವ್ಯಭಿಚಾರ ಮಾಡದಿದ್ರೂ ಅವಳ ಗಂಡನಿಗೆ ಸಂಶಯ ಬಂದ್ರೆ ಅಂಥ ಸಂದರ್ಭದಲ್ಲಿ ಹೀಗೆ ಮಾಡಬೇಕು: 15 ಅವನು ತನ್ನ ಹೆಂಡತಿಯನ್ನ ಪುರೋಹಿತನ ಹತ್ರ ಕರ್ಕೊಂಡು ಬರಬೇಕು. ಅವಳಿಗಾಗಿ ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗ ಬಾರ್ಲಿ* ಹಿಟ್ಟೂ ತಗೊಂಡು ಬರಬೇಕು. ಅವನು ಕೋಪದಿಂದಾಗಿ ತಪ್ಪನ್ನ ಗಮನಕ್ಕೆ ತರೋಕೆ ಆ ಹಿಟ್ಟನ್ನ ಧಾನ್ಯ ಅರ್ಪಣೆಯಾಗಿ ಕೊಡೋದ್ರಿಂದ ಅದ್ರ ಮೇಲೆ ಎಣ್ಣೆ ಸುರಿಬಾರದು, ಸಾಂಬ್ರಾಣಿ ಇಡಬಾರದು.
16 ಪುರೋಹಿತ ಅವಳನ್ನ ಕರ್ಕೊಂಡು ಬಂದು ಯೆಹೋವನ ಮುಂದೆ ನಿಲ್ಲಿಸಬೇಕು.+ 17 ಪುರೋಹಿತ ಒಂದು ಮಣ್ಣಿನ ಪಾತ್ರೆಯಲ್ಲಿ ಶುದ್ಧವಾದ ನೀರು ತಗೊಂಡು ಅದ್ರಲ್ಲಿ ಪವಿತ್ರ ಡೇರೆಯ ನೆಲದಲ್ಲಿ ಇರೋ ಸ್ವಲ್ಪ ಧೂಳು ಹಾಕಬೇಕು. 18 ಅವಳನ್ನ ಯೆಹೋವನ ಮುಂದೆ ನಿಲ್ಲಿಸಿ ಅವಳ ಕೂದಲು ಬಿಚ್ಚಬೇಕು. ತಪ್ಪನ್ನ ಗಮನಕ್ಕೆ ತರೋಕೆ ಅಂದ್ರೆ ಕೋಪ ಇರೋದ್ರಿಂದಾಗಿ ಕೊಟ್ಟ ಧಾನ್ಯ ಅರ್ಪಣೆಯನ್ನ ಅವಳ ಕೈಯಲ್ಲಿ ಇಡಬೇಕು.+ ಶಾಪವನ್ನ ತರೋ ಕಹಿ ನೀರನ್ನ ಪುರೋಹಿತ ತನ್ನ ಕೈಯಲ್ಲಿ ಹಿಡ್ಕೋಬೇಕು.+
19 ಪುರೋಹಿತ ಅವಳಿಂದ ಆಣೆ ಮಾಡಿಸೋಕೆ ಮುಂಚೆ “ನೀನು ಮದುವೆಯಾದ*+ ಸಮಯದಿಂದ ಬೇರೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಲ್ಲಾಂದ್ರೆ ನೀನು ಅಡ್ಡದಾರಿ ಹಿಡಿದು ಅಪವಿತ್ರ ಆಗಿಲ್ಲಾಂದ್ರೆ ಶಾಪವನ್ನ ತರೋ ಈ ಕಹಿ ನೀರಿಂದ ನಿನಗೇನೂ ಹಾನಿ ಆಗದಿರಲಿ. 20 ಆದ್ರೆ ನೀನು ಮದುವೆ ಆದ್ಮೇಲೆ* ಅಡ್ಡದಾರಿ ಹಿಡಿದು ಗಂಡನನ್ನ ಬಿಟ್ಟು ಬೇರೊಬ್ಬ ಗಂಡಸಿನ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡು+ ನೀನು ಅಪವಿತ್ರ ಆಗಿದ್ರೆ—” ಅಂತ ಹೇಳಿ 21 ಪುರೋಹಿತ ಆ ಸ್ತ್ರೀಯಿಂದ ಆಣೆ ಮಾಡಿಸಬೇಕು. ಆಗ ಅವಳು, ತಾನು ನಿಜವಾಗ್ಲೂ ಪಾಪ ಮಾಡಿದ್ರೆ ಪುರೋಹಿತ ಹೇಳೋ ಶಾಪ ತನ್ನ ಮೇಲೆ ಬರಲಿ ಅಂತ ಆಣೆ ಮಾಡಬೇಕು. ಆಗ ಪುರೋಹಿತ ಅವಳಿಗೆ “ಇಸ್ರಾಯೇಲ್ಯರು ಶಾಪ ಹಾಕುವಾಗ, ಶಪಥ ಮಾಡುವಾಗ ನಿನ್ನ ಹೆಸ್ರನ್ನ ಉಪಯೋಗಿಸೋ ತರ ಯೆಹೋವ ಮಾಡ್ಲಿ. ನಿನ್ನ ತೊಡೆ* ಕ್ಷೀಣಿಸೋ ತರ,* ನಿನ್ನ ಹೊಟ್ಟೆ ಉಬ್ಬೋ ತರ ಯೆಹೋವ ಮಾಡ್ಲಿ. 22 ಶಾಪ ತರೋ ಈ ನೀರು ನಿನ್ನ ಕರುಳ ಒಳಗೆ ಹೋಗಿ ಹೊಟ್ಟೆ ಉಬ್ಬೋ ತರ, ನಿನ್ನ ತೊಡೆ* ಕ್ಷೀಣಿಸೋ ತರ* ಮಾಡ್ಲಿ” ಅಂತ ಹೇಳಬೇಕು. ಅದಕ್ಕೆ ಅವಳು “ಹಾಗೇ ಆಗ್ಲಿ, ಹಾಗೇ ಆಗ್ಲಿ”* ಅನ್ನಬೇಕು.
23 ಆಮೇಲೆ ಪುರೋಹಿತ ಆ ಶಾಪಗಳನ್ನ ಪುಸ್ತಕದಲ್ಲಿ ಬರೆದು ಅದನ್ನ ಕಹಿ ನೀರಲ್ಲಿ ತೊಳಿಬೇಕು. 24 ಆ ಕಹಿ ನೀರನ್ನ ಅವಳಿಗೆ ಕುಡಿಸಬೇಕು. ಆಗ ಶಾಪ ತರೋ ಆ ನೀರು ಅವಳೊಳಗೆ ಹೋಗಿ ನೋವು ಶುರು ಆಗುತ್ತೆ. 25 ಕೋಪ ಇರೋದ್ರಿಂದಾಗಿ ಕೊಟ್ಟ ಧಾನ್ಯ ಅರ್ಪಣೆಯನ್ನ+ ಪುರೋಹಿತ ಅವಳ ಕೈಯಿಂದ ತಗೊಂಡು ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಿ ಯಜ್ಞವೇದಿ ಹತ್ರ ತರಬೇಕು. 26 ಆ ಅರ್ಪಣೆಯ ಹಿಟ್ಟನ್ನ ಒಂದು ಹಿಡಿತುಂಬ ತಗೊಂಡು ಯಜ್ಞವೇದಿ ಮೇಲೆ ಅರ್ಪಿಸಬೇಕು. ಅದ್ರಿಂದ ಹೊಗೆ ಮೇಲೆ ಹೋಗಬೇಕು.+ ಇದು ಧಾನ್ಯ ಅರ್ಪಣೆಯನ್ನ ಪೂರ್ತಿಯಾಗಿ ಅರ್ಪಿಸಲಾಗಿದೆ ಅಂತ ಸೂಚಿಸುತ್ತೆ. ಪುರೋಹಿತ ಅವಳಿಗೆ ನೀರು ಕುಡಿಸಿದ ಮೇಲೆ 27 ನಿಜವಾಗ್ಲೂ ಅವಳು ಗಂಡನಿಗೆ ದ್ರೋಹ ಮಾಡಿದ್ರೆ ತನ್ನನ್ನ ಅಪವಿತ್ರ ಮಾಡ್ಕೊಂಡಿದ್ರೆ ಶಾಪ ತರೋ ಆ ನೀರು ಅವಳೊಳಗೆ ಹೋಗಿ ಅವಳಿಗೆ ನೋವು ಶುರು ಆಗುತ್ತೆ. ಇದ್ರಿಂದ ಅವಳ ಹೊಟ್ಟೆ ಉಬ್ಬುತ್ತೆ, ತೊಡೆ* ಕ್ಷೀಣಿಸುತ್ತೆ.* ಅದಾದ ಮೇಲೆ ಇಸ್ರಾಯೇಲ್ಯರು ಶಾಪ ಹಾಕುವಾಗ ಅವಳ ಹೆಸ್ರನ್ನ ಉಪಯೋಗಿಸ್ತಾರೆ. 28 ಆದ್ರೆ ಅವಳು ಅಪವಿತ್ರ ಆಗಿಲ್ಲಾಂದ್ರೆ ಗಂಡನಿಗೆ ದ್ರೋಹ ಮಾಡಿಲ್ಲಾಂದ್ರೆ ಆ ಶಿಕ್ಷೆ ಸಿಗಲ್ಲ. ಅವಳು ಗರ್ಭಿಣಿಯಾಗಿ ಮಕ್ಕಳು ಹುಟ್ತಾರೆ.
29 ಗಂಡನ ಅಧಿಕಾರದ ಕೆಳಗಿರೋ ಒಬ್ಬ ಸ್ತ್ರೀ ಅಡ್ಡದಾರಿ ಹಿಡಿದು ತನ್ನನ್ನ ಅಪವಿತ್ರ ಮಾಡ್ಕೊಂಡಿದ್ರಿಂದ+ ಅವಳ ಗಂಡ ಕೋಪ ಮಾಡ್ಕೊಂಡ್ರೆ 30 ಅಥವಾ ಒಬ್ಬ ಗಂಡಸಿಗೆ ತನ್ನ ಹೆಂಡತಿ ನಡತೆ ಮೇಲೆ ಸಂಶಯ ಬಂದು ಕೋಪ ಮಾಡ್ಕೊಂಡ್ರೆ ಈ ನಿಯಮ ಪಾಲಿಸಬೇಕು. ಅವನು ತನ್ನ ಹೆಂಡತಿನ ಯೆಹೋವನ ಮುಂದೆ ನಿಲ್ಲಿಸಬೇಕು. ಪುರೋಹಿತ ಈ ನಿಯಮದ ಪ್ರಕಾರ ಎಲ್ಲ ಮಾಡಬೇಕು. 31 ಇಂಥ ಸಂದರ್ಭದಲ್ಲಿ ಗಂಡ ಅಪರಾಧಿ ಅಲ್ಲ. ಹೆಂಡತಿ ತಪ್ಪು ಮಾಡಿದ್ರೆ ಖಂಡಿತ ಅವಳಿಗೆ ಶಿಕ್ಷೆ ಆಗುತ್ತೆ.’”
6 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಗಂಡಸರಾಗ್ಲಿ ಹೆಂಗಸರಾಗ್ಲಿ ಯೆಹೋವನಿಗಾಗಿ ನಾಜೀರನಾಗೋ*+ ಒಂದು ವಿಶೇಷ ಹರಕೆ ಹೊತ್ಕೊಂಡ್ರೆ 3 ಅವನು ಯಾವುದೇ ತರದ ದ್ರಾಕ್ಷಾಮದ್ಯ ಆಗ್ಲಿ ಹುಳಿರಸ ಆಗ್ಲಿ ಕುಡಿಬಾರದು.+ ದ್ರಾಕ್ಷಿಯಿಂದ ಮಾಡಿದ ಪಾನ ಕುಡಿಬಾರದು. ತಾಜಾ ದ್ರಾಕ್ಷಿ ಒಣ ದ್ರಾಕ್ಷಿ ತಿನ್ನಬಾರದು. 4 ಅವರು ನಾಜೀರರಾಗಿ ಇರೋ ಎಲ್ಲ ದಿನ ದ್ರಾಕ್ಷಾಮದ್ಯದಿಂದ, ಕಾಯಿ ದ್ರಾಕ್ಷಿಯಿಂದ, ಅದ್ರ ಸಿಪ್ಪೆಯಿಂದ ಮಾಡಿದ ಯಾವುದನ್ನೂ ತಿನ್ನಬಾರದು.
5 ನಾಜೀರರಾಗಿ ಇರೋ ತನಕ ತಮ್ಮ ತಲೆಕೂದಲನ್ನ ಕತ್ತರಿಸಬಾರದು.+ ಎಲ್ಲಿ ತನಕ ಯೆಹೋವನ ಸೇವೆ ಮಾಡ್ತೀನಿ ಅಂತ ಮಾತು ಕೊಟ್ರೋ ಅಲ್ಲಿ ತನಕ ಕೂದಲು ತೆಗಿಬಾರದು. ಹೀಗೆ ಪವಿತ್ರರಾಗಿ ಉಳಿಬೇಕು. 6 ಯೆಹೋವನಿಗೆ ಸೇವೆ ಮಾಡೋ ಆ ಸಮಯದಲ್ಲಿ ಯಾರ ಶವದ ಹತ್ರನೂ ಹೋಗಬಾರದು. 7 ಅಪ್ಪಅಮ್ಮ ಅಣ್ಣತಮ್ಮ ಅಕ್ಕತಂಗಿ ಯಾರೇ ಸತ್ರೂ ಅವ್ರ ಶವದ ಹತ್ರ ಹೋಗಿ ಅಶುದ್ಧ ಆಗಬಾರದು.+ ಯಾಕಂದ್ರೆ ದೇವರಿಗಾಗಿ ನಾಜೀರರಾಗಿ ಇದ್ದಾರೆ ಅಂತ ಸೂಚಿಸೋ ಕೂದಲು ಅವ್ರ ತಲೆ ಮೇಲಿದೆ.
8 ನಾಜೀರರಾಗಿ ಇರೋ ದಿನ ತನಕ ಅವರು ಯೆಹೋವನ ದೃಷ್ಟಿಯಲ್ಲಿ ಪವಿತ್ರ. 9 ಯಾರಾದ್ರೂ ಆಕಸ್ಮಿಕವಾಗಿ ಅವ್ರ ಪಕ್ಕದಲ್ಲೇ ಸತ್ರೆ+ ನಾಜೀರರಾಗಿ ಇದ್ದಾರೆ ಅಂತ ಸೂಚಿಸೋ ತಲೆಕೂದಲು ಅಶುದ್ಧ ಆಗುತ್ತೆ. ಆಗ ಅವರು ಶುದ್ಧೀಕರಣದ ದಿನ ಅಂದ್ರೆ ಏಳನೇ ದಿನ ತಮ್ಮ ಕೂದಲು ತೆಗಿಬೇಕು.+ 10 ಎಂಟನೇ ದಿನ ಅವರು ದೇವದರ್ಶನ ಡೇರೆಯ ಬಾಗಿಲ ಹತ್ರ ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿ ತಂದು ಪುರೋಹಿತನಿಗೆ ಕೊಡಬೇಕು. 11 ಪುರೋಹಿತ ಒಂದು ಪಕ್ಷಿಯನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದು ಪಕ್ಷಿಯನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಸತ್ತ ವ್ಯಕ್ತಿಯಿಂದಾಗಿ ಹರಕೆ ಹೊತ್ತವನ ಮೇಲೆ ಪಾಪದ ದೋಷ ಬಂದದ್ದರಿಂದ ಅವನಿಗಾಗಿ ಪ್ರಾಯಶ್ಚಿತ್ತ ಮಾಡಬೇಕು.+ ಆಮೇಲೆ ಹರಕೆ ಹೊತ್ತವನು ಆ ದಿನ ತನ್ನನ್ನ* ಪವಿತ್ರ ಮಾಡ್ಕೊಂಡು ತನ್ನ ಕೂದಲನ್ನ ಬೆಳೆಯೋಕೆ ಬಿಡಬೇಕು. 12 ಒಂದು ವರ್ಷದೊಳಗಿನ ಟಗರನ್ನ ದೋಷಪರಿಹಾರಕ ಬಲಿಯಾಗಿ ಕೊಡಬೇಕು. ಯೆಹೋವನಿಗಾಗಿ ನಾಜೀರನಾಗೋ ವಿಶೇಷ ಹರಕೆಯನ್ನ ಮತ್ತೆ ಮಾಡಬೇಕು. ಆದ್ರೆ ಅವನು ಅಶುದ್ಧನಾದ ಕಾರಣ ಈ ಮುಂಚೆ ನಾಜೀರನಾಗಿದ್ದ ದಿನಗಳನ್ನ ಲೆಕ್ಕಕ್ಕೆ ತಗೊಳ್ಳಬಾರದು.
13 ನಾಜೀರನಾಗಿ+ ಇರೋ ಹರಕೆಯ ದಿನಗಳು ಮುಗಿದ ಮೇಲೆ ಹೀಗೆ ಮಾಡಬೇಕು: ಅವನನ್ನ ದೇವದರ್ಶನ ಡೇರೆಯ ಬಾಗಿಲಿಗೆ ಕರ್ಕೊಂಡು ಬರಬೇಕು. 14 ದೋಷ ಇಲ್ಲದ ಒಂದು ವರ್ಷದೊಳಗಿನ ಟಗರನ್ನ ಸರ್ವಾಂಗಹೋಮ ಬಲಿಯಾಗಿ,+ ದೋಷ ಇಲ್ಲದ ಒಂದು ವರ್ಷದೊಳಗಿನ ಹೆಣ್ಣು ಕುರಿಮರಿಯನ್ನ ಪಾಪಪರಿಹಾರಕ ಬಲಿಯಾಗಿ,+ ದೋಷ ಇಲ್ಲದ ಟಗರನ್ನ ಸಮಾಧಾನ ಬಲಿಯಾಗಿ+ ಯೆಹೋವನಿಗೆ ಅರ್ಪಿಸೋಕೆ ಕೊಡಬೇಕು. 15 ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟಿಂದ ಮಾಡಿದ ಬಳೆ ಆಕಾರದ ಹುಳಿ ಇಲ್ಲದ ರೊಟ್ಟಿಗಳನ್ನ, ಎಣ್ಣೆ ಸವರಿದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಒಂದು ಬುಟ್ಟಿ ತುಂಬ ಕೊಡಬೇಕು. ಜೊತೆಗೆ ಧಾನ್ಯ ಅರ್ಪಣೆಯನ್ನ,+ ಪಾನ ಅರ್ಪಣೆಯನ್ನ+ ಕೊಡಬೇಕು. 16 ಪುರೋಹಿತ ಅದನ್ನೆಲ್ಲ ಯೆಹೋವನ ಮುಂದೆ ತಂದು ಹರಕೆ ಹೊತ್ತವನಿಗಾಗಿ ಪಾಪಪರಿಹಾರಕ ಬಲಿ, ಸರ್ವಾಂಗಹೋಮ ಬಲಿ ಅರ್ಪಿಸಬೇಕು. 17 ಆಮೇಲೆ ಬುಟ್ಟಿಯಲ್ಲಿರೋ ಹುಳಿ ಇಲ್ಲದ ರೊಟ್ಟಿಗಳ ಜೊತೆ ಟಗರನ್ನ ಯೆಹೋವನಿಗೆ ಸಮಾಧಾನ ಬಲಿಯಾಗಿ ಅರ್ಪಿಸಬೇಕು. ಜೊತೆಗೆ ಧಾನ್ಯ ಅರ್ಪಣೆಯನ್ನ,+ ಪಾನ ಅರ್ಪಣೆಯನ್ನ ಅರ್ಪಿಸಬೇಕು.
18 ಆಮೇಲೆ ಅವನು ನಾಜೀರನಾಗಿದ್ದ ದಿನಗಳಲ್ಲಿ ಬೆಳೆಸ್ಕೊಂಡಿದ್ದ ತಲೆಕೂದಲನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತೆಗಿಸ್ಕೊಳ್ಳಬೇಕು.+ ಆ ಕೂದಲನ್ನ ಸಮಾಧಾನ ಬಲಿಯ ಕೆಳಗಿರೋ ಬೆಂಕಿಗೆ ಹಾಕಬೇಕು. 19 ಅವನು ನಾಜೀರ ಅಂತ ಸೂಚಿಸೋ ತನ್ನ ತಲೆಕೂದಲನ್ನ ತೆಗಿಸ್ಕೊಂಡ ಮೇಲೆ ಪುರೋಹಿತ ಬೆಂದ ಟಗರಿನ+ ಮುಂದೊಡೆಯನ್ನ, ಬುಟ್ಟಿಯಿಂದ ಬಳೆ ಆಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ, ಹುಳಿ ಇಲ್ಲದ ಒಂದು ತೆಳುವಾದ ರೊಟ್ಟಿಯನ್ನ ತಗೊಂಡು ಅವನ ಕೈಯಲ್ಲಿ ಇಡಬೇಕು. 20 ಪುರೋಹಿತ ಅದನ್ನೆಲ್ಲ ಓಲಾಡಿಸೋ ಅರ್ಪಣೆಯಾಗಿ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು.+ ಅಷ್ಟೇ ಅಲ್ಲ ಓಲಾಡಿಸೋ ಅರ್ಪಣೆಯ ಎದೆಭಾಗ, ಕಾಣಿಕೆಯಾಗಿ ಕೊಟ್ಟಿರೋ ಕಾಲು ಪುರೋಹಿತನಿಗೆ ಸಿಗೋ ಪವಿತ್ರ ಪಾಲು.+ ಇದಾದ ಮೇಲೆ ಆ ನಾಜೀರ ದ್ರಾಕ್ಷಾಮದ್ಯ ಕುಡಿಬಹುದು.
21 ಇದಿಷ್ಟು ನಾಜೀರ+ ಕೊಡಬೇಕಾದ ಅರ್ಪಣೆಗಳು. ಯೆಹೋವನಿಗೋಸ್ಕರ ಇದಕ್ಕಿಂತ ಜಾಸ್ತಿ ಅರ್ಪಿಸೋಕೆ ಅವನಿಗೆ ಆಗೋದಾದ್ರೆ, ಕೊಡ್ತೀನಿ ಅಂತ ಮಾತು ಕೊಟ್ರೆ ಹೇಳಿದ ಹಾಗೆ ಕೊಡ್ಲೇಬೇಕು.’”
22 ಯೆಹೋವ ಮೋಶೆಗೆ ಹೀಗಂದನು: 23 “ನೀನು ಆರೋನನಿಗೆ, ಅವನ ಮಕ್ಕಳಿಗೆ ಇದನ್ನ ಹೇಳು: ‘ನೀವು ಇಸ್ರಾಯೇಲ್ಯರನ್ನ ಆಶೀರ್ವದಿಸುವಾಗ+ ಏನು ಹೇಳಬೇಕಂದ್ರೆ
24 “ಯೆಹೋವ ನಿಮ್ಮನ್ನ ಆಶೀರ್ವದಿಸಿ+ ಕಾಪಾಡ್ಲಿ.
25 ಯೆಹೋವನ ಮುಖದ ಬೆಳಕು ನಿಮ್ಮ ಮೇಲೆ ಬೀಳಲಿ,+ ನಿಮಗೆ ದಯೆ ತೋರಿಸ್ಲಿ.
26 ಯೆಹೋವ ನಿಮಗೆ ಅನುಗ್ರಹ ತೋರಿಸಿ ಶಾಂತಿ ಕೊಡ್ಲಿ.”’+
27 ಹೀಗೆ ಪುರೋಹಿತರು ನನ್ನ ಹೆಸ್ರು ಹೇಳಿ+ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡಬೇಕು. ಆಗ ನಾನು ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತೀನಿ.”+
7 ಮೋಶೆ ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿ+ ಮುಗಿಸಿದ ದಿನ ಆ ಡೇರೆಯನ್ನ ಅಭಿಷೇಕಿಸಿ+ ದೇವರ ಸೇವೆಗಾಗಿ ಪ್ರತ್ಯೇಕಿಸಿದ. ಪವಿತ್ರ ಡೇರೆಯ ಎಲ್ಲ ಸಾಮಗ್ರಿ, ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ+ ಅಭಿಷೇಕಿಸಿ ದೇವರ ಸೇವೆಗಾಗಿ ಪ್ರತ್ಯೇಕಿಸಿದ.+ ಇದಾದ ಮೇಲೆ 2 ಇಸ್ರಾಯೇಲ್ಯರ ಪ್ರಧಾನರು+ ಅಂದ್ರೆ ಇಸ್ರಾಯೇಲ್ಯರ ಕುಲಗಳ ಮುಖ್ಯಸ್ಥರು ತಮ್ಮ ಅರ್ಪಣೆಗಳನ್ನ ತಂದ್ರು. ಇವರು ಹೆಸ್ರು ಬರಿಯೋ ಕೆಲಸದ ಮೇಲೆ ಮೇಲ್ವಿಚಾರಣೆ ಮಾಡಿದ್ದರು. ಈ ಪ್ರಧಾನರು 3 ಆರು ಕಮಾನು ಬಂಡಿಗಳನ್ನ, 12 ಹೋರಿಗಳನ್ನ ಯೆಹೋವನ ಮುಂದೆ ತಂದ್ರು. ಇಬ್ಬಿಬ್ರು ಒಂದೊಂದು ಕಮಾನು ಬಂಡಿ, ಒಬ್ಬೊಬ್ರು ಒಂದೊಂದು ಹೋರಿಯನ್ನ ಪವಿತ್ರ ಡೇರೆ ಮುಂದೆ ತಂದ್ರು. 4 ಯೆಹೋವ ಮೋಶೆಗೆ 5 “ಪ್ರಧಾನರು ತಂದಿರೋದನ್ನ ತಗೋ. ದೇವದರ್ಶನ ಡೇರೆಯ ಸೇವೆಗಾಗಿ ಉಪಯೋಗಿಸೋಕೆ ಅವುಗಳನ್ನ ಲೇವಿಯರಿಗೆ ಕೊಡು. ಅವ್ರವರ ಕೆಲಸಕ್ಕೆ ಎಷ್ಟು ಬೇಕೋ ಅಷ್ಟು ಕೊಡು” ಅಂದನು.
6 ಆಗ ಮೋಶೆ ಆ ಬಂಡಿಗಳನ್ನ ಹೋರಿಗಳನ್ನ ತಗೊಂಡು ಲೇವಿಯರಿಗೆ ಕೊಟ್ಟ. 7 ಮೋಶೆ ಗೇರ್ಷೋನ್ಯರಿಗೆ ಅವ್ರ ಕೆಲಸಕ್ಕೆ ಬೇಕಾದ+ ಎರಡು ಬಂಡಿಗಳನ್ನ ನಾಲ್ಕು ಹೋರಿಗಳನ್ನ ಕೊಟ್ಟ. 8 ಮೆರಾರೀಯರಿಗೆ ಅವ್ರ ಕೆಲಸಕ್ಕೆ ಬೇಕಾದ ನಾಲ್ಕು ಬಂಡಿಗಳನ್ನ ಎಂಟು ಹೋರಿಗಳನ್ನ ಕೊಟ್ಟ. ಇದನ್ನೆಲ್ಲ ಪುರೋಹಿತನಾದ ಆರೋನನ ಮಗ ಈತಾಮಾರ ಹೇಳಿದ ಹಾಗೆ ಮಾಡಿದ್ರು.+ 9 ಆದ್ರೆ ಮೋಶೆ ಕೆಹಾತ್ಯರಿಗೆ ಏನೂ ಕೊಡಲಿಲ್ಲ. ಯಾಕಂದ್ರೆ ಅವರು ಆರಾಧನಾ ಸ್ಥಳದಲ್ಲಿ+ ಬಳಸೋ ಪವಿತ್ರ ವಸ್ತುಗಳನ್ನ ತಮ್ಮ ಹೆಗಲ ಮೇಲೆ ಹೊತ್ಕೊಂಡು ಹೋಗ್ತಿದ್ರು.+
10 ಯಜ್ಞವೇದಿಯನ್ನ ಅಭಿಷೇಕಿಸಿದ ದಿನ ಅದ್ರ ಉದ್ಘಾಟನೆ* ಮಾಡಿದ್ರು.+ ಆಗ ಇಸ್ರಾಯೇಲ್ಯರ ಪ್ರಧಾನರು ತಮ್ಮ ತಮ್ಮ ಅರ್ಪಣೆಗಳನ್ನ ಯಜ್ಞವೇದಿ ಮುಂದೆ ತಂದಾಗ 11 ಯೆಹೋವ ಮೋಶೆಗೆ “ಯಜ್ಞವೇದಿಯ ಉದ್ಘಾಟನೆಗಾಗಿ ಪ್ರತಿದಿನ ಒಬ್ಬೊಬ್ಬ ಪ್ರಧಾನ ತನ್ನ ಅರ್ಪಣೆಯನ್ನ ತಂದು ಕೊಡಬೇಕು” ಅಂದನು.
12 ಮೊದಲನೇ ದಿನ ಅರ್ಪಣೆ ತಂದು ಕೊಟ್ಟವನು ಯೆಹೂದ ಕುಲದ ಅಮ್ಮೀನಾದಾಬನ ಮಗ ನಹಶೋನ.+ 13 ಅವನು ಕೊಟ್ಟ ಅರ್ಪಣೆ ಯಾವುದಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ*+ 130 ಶೆಕೆಲ್* ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 14 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ,* ಅದ್ರ ತುಂಬ ಧೂಪ, 15 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 16 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 17 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀನಾದಾಬನ ಮಗ ನಹಶೋನ+ ಕೊಟ್ಟ ಅರ್ಪಣೆ.
18 ಎರಡನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಇಸ್ಸಾಕಾರ್ ಕುಲದ ಪ್ರಧಾನ ನೆತನೇಲ್.+ ಇವನು ಚೂವಾರನ ಮಗ. 19 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 20 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 21 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 22 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 23 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಚೂವಾರನ ಮಗ ನೆತನೇಲ ಕೊಟ್ಟ ಅರ್ಪಣೆ.
24 ಮೂರನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಜೆಬುಲೂನ್ ಕುಲದ ಪ್ರಧಾನ ಎಲೀಯಾಬ್.+ ಇವನು ಹೇಲೋನನ ಮಗ. 25 ಇವನು ಕೊಟ್ಟ ಅರ್ಪಣೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 26 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 27 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 28 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 29 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬ+ ಕೊಟ್ಟ ಅರ್ಪಣೆ.
30 ನಾಲ್ಕನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ರೂಬೇನ್ ಕುಲದ ಪ್ರಧಾನ ಎಲೀಚೂರ್.+ ಇವನು ಶೆದೇಯೂರನ ಮಗ. 31 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 32 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 33 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 34 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 35 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರ+ ಕೊಟ್ಟ ಅರ್ಪಣೆ.
36 ಐದನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಸಿಮೆಯೋನ್ ಕುಲದ ಪ್ರಧಾನ ಶೆಲುಮೀಯೇಲ್.+ ಇವನು ಚೂರೀಷದೈಯ ಮಗ. 37 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 38 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 39 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 40 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 41 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಚೂರೀಷದೈಯ ಮಗ ಶೆಲುಮೀಯೇಲ+ ಕೊಟ್ಟ ಅರ್ಪಣೆ.
42 ಆರನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಗಾದ್ ಕುಲದ ಪ್ರಧಾನ ಎಲ್ಯಾಸಾಫ್.+ ಇವನು ದೆಗೂವೇಲನ ಮಗ. 43 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 44 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 45 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 46 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 47 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ದೆಗೂವೇಲನ ಮಗ ಎಲ್ಯಾಸಾಫ+ ಕೊಟ್ಟ ಅರ್ಪಣೆ.
48 ಏಳನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಎಫ್ರಾಯೀಮ್ ಕುಲದ ಪ್ರಧಾನ ಎಲೀಷಾಮ.+ ಇವನು ಅಮ್ಮೀಹೂದನ ಮಗ. 49 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 50 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 51 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 52 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 53 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮ+ ಕೊಟ್ಟ ಅರ್ಪಣೆ.
54 ಎಂಟನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಮನಸ್ಸೆ ಕುಲದ ಪ್ರಧಾನ ಗಮ್ಲೀಯೇಲ.+ ಇವನು ಪೆದಾಚೂರನ ಮಗ. 55 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 56 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 57 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 58 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 59 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಪೆದಾಚೂರನ ಮಗ ಗಮ್ಲೀಯೇಲ+ ಕೊಟ್ಟ ಅರ್ಪಣೆ.
60 ಒಂಬತ್ತನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಬೆನ್ಯಾಮೀನ್ ಕುಲದ ಪ್ರಧಾನ+ ಅಬೀದಾನ್.+ ಇವನು ಗಿದ್ಯೋನಿಯ ಮಗ. 61 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 62 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 63 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 64 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 65 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನ+ ಕೊಟ್ಟ ಅರ್ಪಣೆ.
66 ಹತ್ತನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ದಾನ್ ಕುಲದ ಪ್ರಧಾನ ಅಹೀಗೆಜೆರ್.+ ಇವನು ಅಮ್ಮೀಷದೈಯ ಮಗ. 67 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 68 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದ್ರ ತುಂಬ ಧೂಪ, 69 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 70 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 71 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಅಮ್ಮೀಷದೈಯ ಮಗ ಅಹೀಗೆಜೆರ+ ಕೊಟ್ಟ ಅರ್ಪಣೆ.
72 ಹನ್ನೊಂದನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ಅಶೇರ್ ಕುಲದ ಪ್ರಧಾನ ಪಗೀಯೇಲ್.+ ಇವನು ಓಕ್ರಾನನ ಮಗ. 73 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 74 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 75 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 76 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 77 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಓಕ್ರಾನನ ಮಗ ಪಗೀಯೇಲ+ ಕೊಟ್ಟ ಅರ್ಪಣೆ.
78 ಹನ್ನೆರಡನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ನಫ್ತಾಲಿ ಕುಲದ ಪ್ರಧಾನ ಅಹೀರ.+ ಇವನು ಏನಾನನ ಮಗ. 79 ಇವನು ಕೊಟ್ಟ ಅರ್ಪಣೆ ಏನಂದ್ರೆ ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ 130 ಶೆಕೆಲ್ ತೂಕದ ಒಂದು ಬೆಳ್ಳಿ ಪಾತ್ರೆ, 70 ಶೆಕೆಲ್ ತೂಕದ ಒಂದು ಬೆಳ್ಳಿ ಬೋಗುಣಿ, ಆ ಎರಡೂ ಪಾತ್ರೆಗಳ ತುಂಬ ಧಾನ್ಯ ಅರ್ಪಣೆಗಾಗಿ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು,+ 80 10 ಶೆಕೆಲ್ ತೂಕದ ಒಂದು ಚಿನ್ನದ ಲೋಟ, ಅದರ ತುಂಬ ಧೂಪ, 81 ಸರ್ವಾಂಗಹೋಮ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದೊಳಗಿನ ಗಂಡು ಕುರಿಮರಿ,+ 82 ಪಾಪಪರಿಹಾರಕ ಬಲಿಗಾಗಿ ಒಂದು ಆಡುಮರಿ,+ 83 ಸಮಾಧಾನ ಬಲಿಗಾಗಿ+ ಎರಡು ಹೋರಿ, ಐದು ಟಗರು, ಐದು ಹೋತ, ಒಂದು ವರ್ಷದ ಐದು ಗಂಡು ಕುರಿಮರಿಗಳು. ಇದು ಏನಾನನ ಮಗ ಅಹೀರ+ ಕೊಟ್ಟ ಅರ್ಪಣೆ.
84 ಯಜ್ಞವೇದಿಯನ್ನ ಅಭಿಷೇಕಿಸಿ ಉದ್ಘಾಟನೆ ಮಾಡಿದ ಸಮಯದಲ್ಲಿ ಇಸ್ರಾಯೇಲ್ಯರ ಪ್ರಧಾನರು ಕೊಟ್ಟ ಒಟ್ಟು ಅರ್ಪಣೆ:+ 12 ಬೆಳ್ಳಿ ಪಾತ್ರೆ, 12 ಬೆಳ್ಳಿ ಬೋಗುಣಿ, 12 ಚಿನ್ನದ ಲೋಟ.+ 85 ಪ್ರತಿಯೊಂದು ಬೆಳ್ಳಿ ಪಾತ್ರೆ ತೂಕ 130 ಶೆಕೆಲ್, ಪ್ರತಿಯೊಂದು ಬೋಗುಣಿಯ ತೂಕ 70 ಶೆಕೆಲ್. ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ+ ಎಲ್ಲ ಬೆಳ್ಳಿ ಪಾತ್ರೆಗಳ ಒಟ್ಟು ತೂಕ 2,400 ಶೆಕೆಲ್. 86 ಧೂಪ ತುಂಬಿಸಿ ಕೊಟ್ಟ ಪ್ರತಿಯೊಂದು ಚಿನ್ನದ ಲೋಟದ ತೂಕ 10 ಶೆಕೆಲ್. ಆರಾಧನಾ ಸ್ಥಳದ ತೂಕಕ್ಕೆ ತಕ್ಕ ಹಾಗೆ ಆ 12 ಚಿನ್ನದ ಲೋಟಗಳ ಒಟ್ಟು ತೂಕ 120 ಶೆಕೆಲ್. 87 ಸರ್ವಾಂಗಹೋಮ ಬಲಿಗಾಗಿ 12 ಹೋರಿ, 12 ಟಗರು, ಒಂದು ವರ್ಷದ 12 ಗಂಡು ಕುರಿಮರಿ ತಂದ್ರು. ಅವುಗಳ ಜೊತೆ ಧಾನ್ಯ ಅರ್ಪಣೆಗಳನ್ನ ತಂದ್ರು. ಪಾಪಪರಿಹಾರಕ ಬಲಿಗಾಗಿ 12 ಆಡುಮರಿ ತಂದ್ರು. 88 ಸಮಾಧಾನ ಬಲಿಗಾಗಿ 24 ಹೋರಿ, 60 ಟಗರು, 60 ಹೋತ, ಒಂದು ವರ್ಷದ 60 ಗಂಡು ಕುರಿಮರಿ ತಂದ್ರು. ಇದು ಯಜ್ಞವೇದಿಯನ್ನ ಅಭಿಷೇಕಿಸಿದ ಮೇಲೆ+ ಅದ್ರ ಉದ್ಘಾಟನೆ ಸಮಯದಲ್ಲಿ ಕೊಟ್ಟ ಅರ್ಪಣೆ.+
89 ಮೋಶೆ ದೇವರ ಜೊತೆ ಮಾತಾಡೋಕೆ+ ದೇವದರ್ಶನ ಡೇರೆ ಒಳಗೆ ಹೋದಾಗೆಲ್ಲ ಸಾಕ್ಷಿ ಮಂಜೂಷದ ಮುಚ್ಚಳದ+ ಮೇಲಿರೋ ಇಬ್ರು ಕೆರೂಬಿಯರ ಮಧ್ಯದಿಂದ+ ದೇವರ ಧ್ವನಿ ಅವನಿಗೆ ಕೇಳಿಸ್ತಿತ್ತು. ಅಲ್ಲಿಂದ ದೇವರು ಅವನ ಜೊತೆ ಮಾತಾಡ್ತಾ ಇದ್ದನು.
8 ಯೆಹೋವ ಮೋಶೆಗೆ 2 “ಆರೋನ ದೀಪಸ್ತಂಭದ ಏಳು ದೀಪ ಹಚ್ಚುವಾಗ ದೀಪಸ್ತಂಭದ+ ಮುಂದೆ ಬೆಳಕು ಬೀಳೋ ಹಾಗೆ ಅವುಗಳನ್ನ ಇಡಬೇಕು ಅಂತ ಅವನಿಗೆ ಹೇಳು” ಅಂದನು. 3 ಯೆಹೋವ ಮೋಶೆಗೆ ಹೇಳಿದ ಹಾಗೇ ಆರೋನ ದೀಪಸ್ತಂಭದ+ ಮುಂದೆ ಬೆಳಕು ಬೀಳೋ ಹಾಗೆ ದೀಪಗಳನ್ನ ಇಟ್ಟು ಹಚ್ಚಿದ. 4 ದೀಪಸ್ತಂಭವನ್ನ ಪೂರ್ತಿಯಾಗಿ ಅಂದ್ರೆ ದೀಪಸ್ತಂಭದ ದಿಂಡಿಂದ ಹಿಡಿದು ಹೂಗಳ ತನಕ ಚಿನ್ನವನ್ನ ಸುತ್ತಿಗೆಯಿಂದ ಬಡಿದು ಮಾಡಿದ್ರು.+ ಯೆಹೋವ ಮೋಶೆಗೆ ತೋರಿಸಿದ ತರಾನೇ ದೀಪಸ್ತಂಭ ಮಾಡಿದ್ರು.+
5 ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 6 “ನೀನು ಇಸ್ರಾಯೇಲ್ಯರಿಂದ ಲೇವಿಯರನ್ನ ಬೇರೆ ಮಾಡಿ ಅವರನ್ನ ಶುದ್ಧ ಮಾಡು.+ 7 ಅವರನ್ನ ಹೇಗೆ ಶುದ್ಧ ಮಾಡಬೇಕಂದ್ರೆ, ಪಾಪ ಶುದ್ಧೀಕರಣದ ನೀರನ್ನ ಅವ್ರ ಮೇಲೆ ಚಿಮಿಕಿಸಬೇಕು. ಆಮೇಲೆ ಅವರು ತಮ್ಮ ಇಡೀ ದೇಹದ ಕೂದಲು ತೆಗೆದು, ತಮ್ಮ ಬಟ್ಟೆ ಒಗೆದು, ತಮ್ಮನ್ನ ಶುದ್ಧ ಮಾಡ್ಕೊಬೇಕು.+ 8 ಆಮೇಲೆ ಒಂದು ಹೋರಿ,+ ಜೊತೆಗೆ ಧಾನ್ಯ ಅರ್ಪಣೆಗಾಗಿ+ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು ತಗೊಬೇಕು. ನೀನು ಪಾಪಪರಿಹಾರಕ ಬಲಿಗಾಗಿ ಇನ್ನೊಂದು ಹೋರಿ ತಗೊಬೇಕು.+ 9 ನೀನು ಲೇವಿಯರನ್ನ ದೇವದರ್ಶನ ಡೇರೆ ಮುಂದೆ ಕರ್ಕೊಂಡು ಬರಬೇಕು. ಎಲ್ಲಾ ಇಸ್ರಾಯೇಲ್ಯರನ್ನ ಸಹ ಕೂಡಿಸಬೇಕು.+ 10 ಲೇವಿಯರನ್ನ ಯೆಹೋವನ ಮುಂದೆ ನಿಲ್ಲಿಸಿದಾಗ ಇಸ್ರಾಯೇಲ್ಯರು ತಮ್ಮ ಕೈಗಳನ್ನ ಲೇವಿಯರ ತಲೆ ಮೇಲೆ ಇಡಬೇಕು.+ 11 ಆರೋನ ಲೇವಿಯರನ್ನ ಇಸ್ರಾಯೇಲ್ಯರ ಪರವಾಗಿ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು.+ ಆಗ ಲೇವಿಯರು ಯೆಹೋವನ ಸೇವೆ ಮಾಡ್ತಾರೆ.+
12 ಆಮೇಲೆ ಲೇವಿಯರು ಹೋರಿಗಳ ತಲೆ ಮೇಲೆ ತಮ್ಮ ಕೈಗಳನ್ನ ಇಡಬೇಕು.+ ಲೇವಿಯರಿಗಾಗಿ ಪ್ರಾಯಶ್ಚಿತ್ತ ಮಾಡೋಕೆ ಅವುಗಳಲ್ಲಿ ಒಂದು ಹೋರಿಯನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಅರ್ಪಿಸಬೇಕು.+ 13 ನೀನು ಲೇವಿಯರನ್ನ ಆರೋನ ಮತ್ತು ಅವನ ಮಕ್ಕಳ ಮುಂದೆ ನಿಲ್ಲಿಸಿ ಅವ್ರನ್ನ ಓಲಾಡಿಸೋ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು. 14 ನೀನು ಇಸ್ರಾಯೇಲ್ಯರಿಂದ ಲೇವಿಯರನ್ನ ಬೇರೆ ಮಾಡಬೇಕು. ಅವರು ನನ್ನವರು ಆಗ್ತಾರೆ.+ 15 ಲೇವಿಯರು ದೇವದರ್ಶನ ಡೇರೆಯಲ್ಲಿ ಸೇವೆಮಾಡೋಕೆ ಬರಬೇಕು. ಈ ರೀತಿಯಲ್ಲೇ ನೀನು ಅವರನ್ನ ಶುದ್ಧ ಮಾಡಿ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು. 16 ಯಾಕಂದ್ರೆ ಅವರು ಇಸ್ರಾಯೇಲ್ಯರಿಂದ ನನಗಾಗಿ ಆರಿಸಿ ಕೊಟ್ಟ ಜನ. ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳ ಬದಲು ನಾನು ಲೇವಿಯರನ್ನ ನನಗೋಸ್ಕರ ತಗೊಳ್ತೀನಿ.+ 17 ಯಾಕಂದ್ರೆ ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳು, ಅವ್ರ ಪ್ರಾಣಿಗಳ ಎಲ್ಲ ಮೊದ್ಲ ಗಂಡುಮರಿಗಳು ನನಗೆ ಸೇರಿವೆ.+ ನಾನು ಈಜಿಪ್ಟ್ ದೇಶದಲ್ಲಿದ್ದ ಮೊದ್ಲು ಹುಟ್ಟಿದ ಎಲ್ಲ ಮಕ್ಕಳು, ಪ್ರಾಣಿಗಳನ್ನ ಸಾಯಿಸಿದ+ ದಿನ ಇಸ್ರಾಯೇಲ್ಯರಿಗೆ ಮೊದ್ಲು ಹುಟ್ಟಿದ ಎಲ್ಲ ಮಕ್ಕಳು, ಪ್ರಾಣಿಗಳನ್ನ ನನಗಾಗಿ ತಗೊಂಡೆ. 18 ನಾನು ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳ ಬದ್ಲು ಲೇವಿಯರನ್ನ ತಗೊಳ್ತೀನಿ. 19 ನಾನು ಲೇವಿಯರನ್ನ ಇಸ್ರಾಯೇಲ್ಯರಿಂದ ಬೇರೆ ಮಾಡಿ ಆರೋನನಿಗೆ, ಅವನ ಮಕ್ಕಳಿಗೆ ಕೊಡ್ತೀನಿ. ಲೇವಿಯರು ಇಸ್ರಾಯೇಲ್ಯರ ಪರವಾಗಿ ದೇವದರ್ಶನ ಡೇರೆಯಲ್ಲಿ ಸೇವೆ ಮಾಡಬೇಕು.+ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡೋ ಕೆಲಸದಲ್ಲಿ ಸಹಾಯ ಮಾಡಬೇಕು. ಇಸ್ರಾಯೇಲ್ಯರು ಆರಾಧನಾ ಸ್ಥಳದ ಹತ್ರ ಬಂದು ಕಾಯಿಲೆಗೆ ತುತ್ತಾಗದ ಹಾಗೇ ಲೇವಿಯರು ಈ ಸೇವೆ ಮಾಡಬೇಕು.”+
20 ಯೆಹೋವ ಲೇವಿಯರ ವಿಷ್ಯದಲ್ಲಿ ಮೋಶೆಗೆ ಹೇಳಿದ್ದನ್ನೆಲ್ಲ ಅವನು, ಆರೋನ, ಎಲ್ಲ ಇಸ್ರಾಯೇಲ್ಯರು ಮಾಡಿದ್ರು. 21 ಲೇವಿಯರು ತಮ್ಮನ್ನ ಶುದ್ಧ ಮಾಡ್ಕೊಂಡು ಬಟ್ಟೆ ಒಗೆದ್ಕೊಂಡ್ರು.+ ಆಮೇಲೆ ಆರೋನ ಅವರನ್ನ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಕೊಟ್ಟ.+ ಆರೋನ ಅವರನ್ನ ಶುದ್ಧ ಮಾಡೋಕೆ ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದ.+ 22 ಆಮೇಲೆ ಲೇವಿಯರು ಹೋಗಿ ದೇವದರ್ಶನ ಡೇರೆಯಲ್ಲಿ ತಮಗೆ ಕೊಟ್ಟ ಸೇವೆ ಮಾಡಿದ್ರು. ತಮ್ಮ ಸೇವೆಯನ್ನ ಆರೋನ, ಅವನ ಮಕ್ಕಳ ಉಸ್ತುವಾರಿಯಲ್ಲಿ ಮಾಡಿದ್ರು. ಲೇವಿಯರ ವಿಷ್ಯದಲ್ಲಿ ಯೆಹೋವ ಮೋಶೆಗೆ ಹೇಳಿದ ಹಾಗೇ ಜನ್ರು ಮಾಡಿದ್ರು.
23 ಯೆಹೋವ ಮೋಶೆಗೆ 24 “ಲೇವಿಯರಿಗಾಗಿ ಇರೋ ನಿಯಮ ಏನಂದ್ರೆ, 25 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರು ದೇವದರ್ಶನ ಡೇರೆಯ ಸೇವೆ ಮಾಡೋ ಗುಂಪಿಗೆ ಸೇರಬೇಕು. 25 ಆದ್ರೆ ಅವರಿಗೆ 50 ವರ್ಷ ಆದ್ಮೇಲೆ ಆ ಸೇವೆಯಿಂದ ನಿವೃತ್ತಿ ಆಗಬೇಕು. ದೇವದರ್ಶನ ಡೇರೆಯ ಸೇವೆ ಮಾಡಬಾರದು. 26 ಬೇಕಾದ್ರೆ ದೇವದರ್ಶನ ಡೇರೆಯಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸೋ ತಮ್ಮ ಲೇವಿ ಸಹೋದರರಿಗೆ ಸಹಾಯ ಮಾಡಬಹುದು. ಆದ್ರೆ ಅವರಿಗೆ ಅಲ್ಲಿ ಮಾಡೋಕೆ ಯಾವುದೇ ಸೇವೆಯನ್ನ ಕೊಡಲ್ಲ. ನೀನು ಲೇವಿಯರ ಜವಾಬ್ದಾರಿಗಳ ವಿಷ್ಯದಲ್ಲಿ ಈ ನಿಯಮ ಪಾಲಿಸಬೇಕು”+ ಅಂದನು.
9 ಇಸ್ರಾಯೇಲ್ಯರು ಈಜಿಪ್ಟ್ ದೇಶ ಬಿಟ್ಟು ಬಂದ ಎರಡನೇ ವರ್ಷದ ಮೊದಲನೇ ತಿಂಗಳಲ್ಲಿ+ ಯೆಹೋವ ಮೋಶೆ ಜೊತೆ ಸಿನಾಯಿ ಕಾಡಲ್ಲಿ ಮಾತಾಡಿದನು. ಆತನು ಮೋಶೆಗೆ 2 ”ಇಸ್ರಾಯೇಲ್ಯರು ಸರಿಯಾದ ಸಮಯದಲ್ಲಿ+ ಪಸ್ಕದ ಬಲಿ+ ಸಿದ್ಧ ಮಾಡಬೇಕು. 3 ಸರಿಯಾದ ಸಮಯದಲ್ಲಿ ಅಂದ್ರೆ ಈ ತಿಂಗಳ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಅದನ್ನ ಸಿದ್ಧ ಮಾಡಬೇಕು. ಈಗಾಗ್ಲೇ ಹೇಳಿರೋ ನಿಯಮ, ವಿಧಾನಗಳ ಪ್ರಕಾರ ಅದನ್ನ ಸಿದ್ಧ ಮಾಡಬೇಕು”+ ಅಂದನು.
4 ಅದಕ್ಕೆ ಮೋಶೆ ಇಸ್ರಾಯೇಲ್ಯರಿಗೆ ಪಸ್ಕದ ಬಲಿ ಸಿದ್ಧ ಮಾಡೋಕೆ ಹೇಳಿದ. 5 ಅವರು ಸಿನಾಯಿ ಕಾಡಲ್ಲಿ ಮೊದಲನೇ ತಿಂಗಳ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಪಸ್ಕದ ಬಲಿ ಸಿದ್ಧ ಮಾಡಿದ್ರು. ಯೆಹೋವ ಮೋಶೆಗೆ ಹೇಳಿದ ಹಾಗೇ ಇಸ್ರಾಯೇಲ್ಯರು ಮಾಡಿದ್ರು.
6 ಆದ್ರೆ ಸ್ವಲ್ಪ ಜನ ಶವ ಮುಟ್ಟಿ ಅಶುದ್ಧ ಆಗಿದ್ರಿಂದ+ ಆ ದಿನ ಅವ್ರಿಗೆ ಪಸ್ಕದ ಬಲಿ ಸಿದ್ಧ ಮಾಡೋಕೆ ಆಗಲಿಲ್ಲ. ಹಾಗಾಗಿ ಅವರು ಅದೇ ದಿನ ಮೋಶೆ ಆರೋನನ ಹತ್ರ ಬಂದು+ 7 ಮೋಶೆಗೆ “ನಾವು ಶವ ಮುಟ್ಟಿ ಅಶುದ್ಧ ಆಗಿದ್ದೀವಿ. ಆದ್ರೆ ನಾವು ಸರಿಯಾದ ಸಮಯಕ್ಕೆ ಇಸ್ರಾಯೇಲ್ಯರ ಜೊತೆ ಸೇರಿ ಯೆಹೋವನಿಗೆ ಬಲಿ ಕೊಡೋಕೆ ಬಯಸ್ತೀವಿ. ನಾವು ಏನು ಮಾಡಬೇಕು ಅಂತ ಹೇಳು”+ ಅಂದ್ರು. 8 ಅದಕ್ಕೆ ಮೋಶೆ “ಸ್ವಲ್ಪ ಹೊತ್ತು ಇಲ್ಲೇ ಇರಿ. ಯೆಹೋವ ದೇವರು ಏನು ಹೇಳ್ತಾನೆ ಅಂತ ಕೇಳ್ಕೊಂಡು ಬರ್ತಿನಿ”+ ಅಂದ.
9 ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 10 “ಅವರಿಗೆ ಹೀಗೆ ಹೇಳು: ‘ನಿಮ್ಮಲ್ಲಿ ಅಥವಾ ನಿಮ್ಮ ವಂಶದವರಲ್ಲಿ ಯಾರಾದ್ರೂ ಶವ ಮುಟ್ಟಿ ಅಶುದ್ಧರಾಗಿದ್ರೆ,+ ಪ್ರಯಾಣ ಮಾಡ್ತಾ ನಿಮ್ಮ ದೇಶದಿಂದ ತುಂಬ ದೂರ ಇದ್ರೆ ಅವನು ಕೂಡ ಯೆಹೋವನಿಗೆ ಗೌರವ ಕೊಡೋಕೆ ಪಸ್ಕದ ಬಲಿ ಸಿದ್ಧ ಮಾಡ್ಲೇಬೇಕು. 11 ಅವನು ಎರಡನೇ ತಿಂಗಳ+ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಅದನ್ನ ಸಿದ್ಧ ಮಾಡಬೇಕು. ಅವನು ಆ ಬಲಿ ಪ್ರಾಣಿಯ ಮಾಂಸನ ಹುಳಿ ಇಲ್ಲದ ರೊಟ್ಟಿ, ಕಹಿಯಾದ ಸೊಪ್ಪು ಜೊತೆ ತಿನ್ನಬೇಕು.+ 12 ಅದ್ರಲ್ಲಿ ಸ್ವಲ್ಪಾನೂ ಬೆಳಿಗ್ಗೆಗೆ ಅಂತ ಉಳಿಸ್ಕೊಬಾರದು.+ ಅದ್ರ ಒಂದೇ ಒಂದು ಮೂಳೆನೂ ಮುರಿಬಾರದು.+ ಪಸ್ಕ ಹಬ್ಬದ ಎಲ್ಲ ನಿಯಮಗಳ ಪ್ರಕಾರ ಅದನ್ನ ಆಚರಿಸಬೇಕು. 13 ಆದ್ರೆ ಒಬ್ಬ ಶುದ್ಧನಾಗಿದ್ರೂ ಪ್ರಯಾಣ ಮಾಡ್ತಾ ಇಲ್ಲದಿದ್ರೂ ಪಸ್ಕ ಹಬ್ಬವನ್ನ ಅಸಡ್ಡೆ ಮಾಡಿ ಆಚರಿಸದೇ ಇದ್ರೆ ಅವನನ್ನ ಸಾಯಿಸಬೇಕು.+ ಯಾಕಂದ್ರೆ ಅವನು ಸರಿಯಾದ ಸಮಯಕ್ಕೆ ಯೆಹೋವನಿಗೆ ಬಲಿ ಅರ್ಪಿಸಲಿಲ್ಲ. ಅವನು ಮಾಡಿದ ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು.
14 ನಿಮ್ಮ ಮಧ್ಯ ಇರೋ ವಿದೇಶಿನೂ ಯೆಹೋವನಿಗೆ ಗೌರವ ಕೊಡೋಕೆ ಪಸ್ಕದ ಬಲಿ ಸಿದ್ಧ ಮಾಡಬೇಕು.+ ಈಗಾಗ್ಲೇ ತಿಳಿಸಿರೋ ನಿಯಮ, ವಿಧಾನದ ಪ್ರಕಾರ ಅವನು ಅದನ್ನ ಸಿದ್ಧ ಮಾಡಬೇಕು.+ ನಿಮಗೂ ನಿಮ್ಮ ಮಧ್ಯ ಇರೋ ವಿದೇಶಿಗೂ ಒಂದೇ ನಿಯಮ ಇರುತ್ತೆ.’”+
15 ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ+ ದಿನ ಮೋಡ ಪವಿತ್ರ ಡೇರೆ ಅಂದ್ರೆ ಸಾಕ್ಷಿ ಡೇರೆನ ಮುಚ್ಕೊಳ್ತು. ಅದು ಸಂಜೆ ಬೆಂಕಿ ತರ ಕಾಣಿಸ್ತಾ ಇತ್ತು. ಬೆಳಿಗ್ಗೆ ತನಕ ಪವಿತ್ರ ಡೇರೆ ಮೇಲೆನೇ ಇತ್ತು.+ 16 ಹೀಗೆ ಪ್ರತಿದಿನ ಹಗಲಲ್ಲಿ ಪವಿತ್ರ ಡೇರೆನ ಮೋಡ ಮುಚ್ಚಿರುತ್ತಿತ್ತು, ರಾತ್ರಿಯಲ್ಲಿ ಬೆಂಕಿ ತರ ಕಾಣಿಸ್ತಾ ಇತ್ತು.+ 17 ಪವಿತ್ರ ಡೇರೆನ ಮುಚ್ಚಿದ್ದ ಮೋಡ ಮೇಲೆದ್ದಾಗೆಲ್ಲ ಇಸ್ರಾಯೇಲ್ಯರು ತಕ್ಷಣ ತಮ್ಮ ಡೇರೆನ ಕಿತ್ತು ಅಲ್ಲಿಂದ ಮುಂದೆ ಹೋಗ್ತಾ ಇದ್ರು.+ ಎಲ್ಲಿ ಆ ಮೋಡ ನಿಲ್ತಿತ್ತೋ ಅಲ್ಲೇ ಡೇರೆ ಹಾಕೊಳ್ತಾ ಇದ್ರು.+ 18 ಯೆಹೋವ ಹೇಳಿದಾಗ ಹೋಗ್ತಿದ್ರು. ಯೆಹೋವ ಹೇಳಿದಾಗ ಡೇರೆ ಹಾಕೊಳ್ತಾ ಇದ್ರು.+ ಆ ಮೋಡ ಪವಿತ್ರ ಡೇರೆ ಮೇಲೆನೇ ಇರೋ ತನಕ ಅವರು ಇದ್ದ ಜಾಗದಲ್ಲೇ ಇರ್ತಿದ್ರು. 19 ಆ ಮೋಡ ತುಂಬ ದಿನದ ತನಕ ಪವಿತ್ರ ಡೇರೆ ಮೇಲೆನೇ ಇದ್ರೆ ಇಸ್ರಾಯೇಲ್ಯರು ಯೆಹೋವನ ಮಾತು ಕೇಳ್ತಾ ಆ ಎಲ್ಲ ದಿನ ಅಲ್ಲೇ ಇರ್ತಿದ್ರು.+ 20 ಕೆಲವೊಮ್ಮೆ ಆ ಮೋಡ ಪವಿತ್ರ ಡೇರೆ ಮೇಲೆ ಸ್ವಲ್ಪ ದಿನ ಮಾತ್ರ ಇರ್ತಿತ್ತು. ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಇಸ್ರಾಯೇಲ್ಯರು ತಮ್ಮ ಡೇರೆ ಹಾಕೊಳ್ತಾ ಇದ್ರು. ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಅವರು ಮುಂದೆ ಹೋಗ್ತಿದ್ರು. 21 ಕೆಲವೊಮ್ಮೆ ಆ ಮೋಡ ಪವಿತ್ರ ಡೇರೆ ಮೇಲೆ ಸಂಜೆಯಿಂದ ಬೆಳಿಗ್ಗೆ ತನಕ ಮಾತ್ರ ಇರ್ತಿತ್ತು. ಬೆಳಿಗ್ಗೆ ಮೋಡ ಮೇಲೆ ಎದ್ದಾಗ ಇಸ್ರಾಯೇಲ್ಯರೂ ಹೋಗ್ತಿದ್ರು. ಹಗಲಿರಲಿ ರಾತ್ರಿ ಇರಲಿ ಮೋಡ ಮೇಲೆ ಎದ್ದಾಗೆಲ್ಲ ಅವರೂ ಹೋಗ್ತಿದ್ರು.+ 22 ಮೋಡ ಪವಿತ್ರ ಡೇರೆ ಮೇಲೆ ಎರಡು ದಿನ ಇದ್ರೂ ಒಂದು ತಿಂಗಳಿದ್ರೂ ಅದಕ್ಕಿಂತ ಜಾಸ್ತಿ ಸಮಯ ಇದ್ರೂ ಇಸ್ರಾಯೇಲ್ಯರು ಇದ್ದ ಸ್ಥಳದಲ್ಲೇ ಇರ್ತಿದ್ರು. ಅದು ಪವಿತ್ರ ಡೇರೆ ಮೇಲೆ ಇದ್ದಷ್ಟು ಸಮಯ ಅವರು ಮುಂದೆ ಹೋಗ್ತಾ ಇರಲಿಲ್ಲ. ಆದ್ರೆ ಮೋಡ ಮೇಲೆ ಎದ್ದಾಗ ಹೋಗ್ತಿದ್ರು. 23 ಯೆಹೋವ ಹೇಳಿದಾಗ ಅವರು ಡೇರೆ ಹಾಕೊಳ್ತಾ ಇದ್ರು. ಯೆಹೋವ ಹೇಳಿದಾಗ ಹೋಗ್ತಿದ್ರು. ಅವರು ಯೆಹೋವ ಹೇಳಿದ್ದನ್ನೆಲ್ಲ ಮಾಡಿದ್ರು. ಯೆಹೋವ ಮೋಶೆ ಮೂಲಕ ಹೇಳಿದ ತರಾನೇ ಅವರು ಮಾಡಿದ್ರು.
10 ಯೆಹೋವ ಮೋಶೆಗೆ ಹೀಗಂದನು: 2 “ನೀನು ಬೆಳ್ಳಿಯನ್ನ ಸುತ್ತಿಗೆಯಿಂದ ಬಡಿದು ಎರಡು ತುತ್ತೂರಿಗಳನ್ನ ಮಾಡು.+ ಇಸ್ರಾಯೇಲ್ಯರೆಲ್ಲ ಒಂದು ಕಡೆ ಸೇರಿ ಬರಬೇಕಂತ ಅಥವಾ ಡೇರೆಯನ್ನ ಕಿತ್ತು ಹೋಗಬೇಕಂತ ಸೂಚನೆ ಕೊಡೋಕೆ ಈ ತುತ್ತೂರಿಗಳನ್ನ ಊದಬೇಕು. 3 ಆ ಎರಡು ತುತ್ತೂರಿ ಊದಿದಾಗ ಇಸ್ರಾಯೇಲ್ಯರೆಲ್ಲ ದೇವದರ್ಶನ ಡೇರೆಯ ಬಾಗಿಲ ಹತ್ರ ನಿನ್ನ ಮುಂದೆ ಸೇರಿ ಬರಬೇಕು.+ 4 ಒಂದು ತುತ್ತೂರಿ ಊದಿದಾಗ ಇಸ್ರಾಯೇಲ್ಯರ ಮುಖ್ಯಸ್ಥರು ಅಂದ್ರೆ ಸಾವಿರ ಜನ್ರ ಮೇಲಿರೋ ದಳದ ಪ್ರಧಾನರು ಮಾತ್ರ ನಿನ್ನ ಹತ್ರ ಸೇರಿ ಬರಬೇಕು.+
5 ಒಂದು ತುತ್ತೂರಿಯನ್ನ ಏರಿಳಿತದ ಧ್ವನಿಯಲ್ಲಿ ಊದಿದಾಗ ಪೂರ್ವ ದಿಕ್ಕಲ್ಲಿ ಡೇರೆಗಳನ್ನ ಹಾಕೊಂಡಿರೋ ಕುಲಗಳ ದಳ+ ಹೋಗಬೇಕು. 6 ಎರಡನೇ ಸಲ ತುತ್ತೂರಿಯನ್ನ ಏರಿಳಿತದ ಧ್ವನಿಯಲ್ಲಿ ಊದಿದಾಗ ದಕ್ಷಿಣ ದಿಕ್ಕಲ್ಲಿ ಡೇರೆಗಳನ್ನ ಹಾಕಿರೋ ಕುಲಗಳ ದಳ+ ಹೋಗಬೇಕು. ಪ್ರತಿಯೊಂದು ದಳ ಹೋಗಬೇಕಂತ ಸೂಚಿಸೋಕೆ ಹೀಗೆ ತುತ್ತೂರಿ ಊದಬೇಕು.
7 ಇಸ್ರಾಯೇಲ್ ಸಭೆಯವರೆಲ್ಲ ಒಂದು ಕಡೆ ಬರಬೇಕಂತ ಸೂಚಿಸುವಾಗ ಎರಡೂ ತುತ್ತೂರಿಗಳನ್ನ ಊದಬೇಕು.+ ಆದ್ರೆ ಆಗ ಏರಿಳಿತದ ಧ್ವನಿಯಲ್ಲಿ ಊದಬಾರದು. 8 ಪುರೋಹಿತರಾದ ಆರೋನನ ಮಕ್ಕಳು ತುತ್ತೂರಿಗಳನ್ನ ಊದಬೇಕು.+ ಈ ನಿಯಮವನ್ನ ಎಲ್ಲ ತಲೆಮಾರುಗಳು ಪಾಲಿಸಬೇಕು.
9 ನಿಮ್ಮನ್ನ ಪೀಡಿಸಿ ನಿಮ್ಮ ಮೇಲೆ ದಬ್ಬಾಳಿಕೆ ಮಾಡೋರ ವಿರುದ್ಧ ಯುದ್ಧ ಮಾಡಬೇಕಾಗಿ ಬಂದ್ರೆ ತುತ್ತೂರಿಗಳನ್ನ ಊದಿ ಯುದ್ಧದ ಪ್ರಕಟಣೆ ಮಾಡಬೇಕು.+ ಆಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ನೆನಪಿಸ್ಕೊಂಡು ಶತ್ರುಗಳ ಕೈಯಿಂದ ಕಾಪಾಡ್ತಾನೆ.
10 ಸಂತೋಷ ಸಂಭ್ರಮದ ಸಂದರ್ಭಗಳಲ್ಲಿ+ ಅಂದ್ರೆ ಹಬ್ಬಗಳಲ್ಲಿ+ ಮತ್ತು ಪ್ರತಿ ತಿಂಗಳ ಆರಂಭದಲ್ಲಿ ನೀವು ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸುವಾಗ ತುತ್ತೂರಿಗಳನ್ನ ಊದಬೇಕು. ಇದ್ರಿಂದ ನಿಮ್ಮ ದೇವರು ನಿಮ್ಮನ್ನ ನೆನಪಿಸ್ಕೊಳ್ತಾನೆ. ನಾನು ನಿಮ್ಮ ದೇವರಾದ ಯೆಹೋವ.”+
11 ಎರಡನೇ ವರ್ಷದ ಎರಡನೇ ತಿಂಗಳ 20ನೇ ದಿನ+ ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆಯನ್ನ ಆವರಿಸಿದ್ದ ಮೋಡ ಮೇಲೆ ಏಳ್ತು.+ 12 ಆಗ ಇಸ್ರಾಯೇಲ್ಯರು ಸಿನಾಯಿ ಕಾಡಿಂದ ಡೇರೆಗಳನ್ನ ಕಿತ್ತು ಹೋದ್ರು. ಅವ್ರಿಗೆ ಯಾವ ಕ್ರಮದಲ್ಲಿ ಹೋಗಬೇಕಂತ ಹೇಳಿತ್ತೊ ಅದೇ ಕ್ರಮದಲ್ಲಿ ಹೋದ್ರು.+ ಮೋಡ ಪಾರಾನ್ ಕಾಡಲ್ಲಿ ನಿಲ್ತು.+ 13 ಯೆಹೋವ ಮೋಶೆ ಮೂಲಕ ಅಪ್ಪಣೆ ಕೊಟ್ಟ ಹಾಗೆ ಅವರು ಪ್ರಯಾಣ ಮಾಡಿದ್ದು ಇದೇ ಮೊದ್ಲ ಸಲ.+
14 ಯೆಹೂದ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಮೊದ್ಲು ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀನಾದಾಬನ ಮಗ ನಹಶೋನ+ ಮಾಡ್ತಿದ್ದ. 15 ಇಸ್ಸಾಕಾರ್ ಕುಲದ ಮೇಲ್ವಿಚಾರಣೆಯನ್ನ ಚೂವಾರನ ಮಗ ನೆತನೇಲ+ ಮಾಡ್ತಿದ್ದ. 16 ಜೆಬುಲೂನ್ ಕುಲದ ಮೇಲ್ವಿಚಾರಣೆಯನ್ನ ಹೇಲೋನನ ಮಗ ಎಲೀಯಾಬ+ ಮಾಡ್ತಿದ್ದ.
17 ಪವಿತ್ರ ಡೇರೆಯ ಭಾಗಗಳನ್ನ ಬಿಡಿಸಿದ ಮೇಲೆ+ ಗೇರ್ಷೋನ್ಯರು+ ಮತ್ತು ಮೆರಾರೀಯರು+ ಅವುಗಳನ್ನ ತಗೊಂಡು ಹೋದ್ರು.
18 ಆಮೇಲೆ ರೂಬೇನ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಶೆದೇಯೂರನ ಮಗ ಎಲೀಚೂರ+ ಮಾಡ್ತಿದ್ದ. 19 ಸಿಮೆಯೋನ್ ಕುಲದ ಮೇಲ್ವಿಚಾರಣೆಯನ್ನ ಚೂರೀಷದೈಯ ಮಗ ಶೆಲುಮೀಯೇಲ+ ಮಾಡ್ತಿದ್ದ. 20 ಗಾದ್ ಕುಲದ ಮೇಲ್ವಿಚಾರಣೆಯನ್ನ ದೆಗೂವೇಲನ ಮಗ ಎಲ್ಯಾಸಾಫ+ ಮಾಡ್ತಿದ್ದ.
21 ಆಮೇಲೆ ಕೆಹಾತ್ಯರು ಆರಾಧನಾ ಸ್ಥಳದ ಸಾಮಾಗ್ರಿಗಳನ್ನ ಹೊತ್ಕೊಂಡು ಹೋದ್ರು.+ ಅವರು ತಲುಪುವಷ್ಟರಲ್ಲಿ ಅವರಿಗಿಂತ ಮುಂಚೆ ಹೋಗಿದ್ದ ಗೇರ್ಷೋನ್ಯರು ಮತ್ತೆ ಮೆರಾರೀಯರು ಪವಿತ್ರ ಡೇರೆಯನ್ನ ಜೋಡಿಸಬೇಕಿತ್ತು.
22 ಎಫ್ರಾಯೀಮ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀಹೂದನ ಮಗ ಎಲೀಷಾಮ+ ಮಾಡ್ತಿದ್ದ. 23 ಮನಸ್ಸೆ ಕುಲದ ಮೇಲ್ವಿಚಾರಣೆಯನ್ನ ಪೆದಾಚೂರನ ಮಗ ಗಮ್ಲೀಯೇಲ+ ಮಾಡ್ತಿದ್ದ. 24 ಬೆನ್ಯಾಮೀನ್ ಕುಲದ ಮೇಲ್ವಿಚಾರಣೆಯನ್ನ ಗಿದ್ಯೋನಿಯ ಮಗ ಅಬೀದಾನ+ ಮಾಡ್ತಿದ್ದ.
25 ಆಮೇಲೆ ದಾನ್ ಕುಲ ತನ್ನ ಮೂರು ಕುಲಗಳ ದಳದ* ಜೊತೆ ಹೋಯ್ತು. ಈ ದಳ ಎಲ್ಲ ದಳಗಳಿಗೆ ಸಂರಕ್ಷಣೆ ಕೊಡೋಕೆ ಎಲ್ರಿಗಿಂತ ಹಿಂದೆ ಹೋಗ್ತಿತ್ತು. ಈ ದಳದ ಮೇಲ್ವಿಚಾರಣೆಯನ್ನ ಅಮ್ಮೀಷದೈಯ ಮಗ ಅಹೀಗೆಜೆರ+ ಮಾಡ್ತಿದ್ದ. 26 ಅಶೇರ್ ಕುಲದ ಮೇಲ್ವಿಚಾರಣೆಯನ್ನ ಓಕ್ರಾನನ ಮಗ ಪಗೀಯೇಲ+ ಮಾಡ್ತಿದ್ದ. 27 ನಫ್ತಾಲಿ ಕುಲದ ಮೇಲ್ವಿಚಾರಣೆಯನ್ನ ಏನಾನನ ಮಗ ಅಹೀರ+ ಮಾಡ್ತಿದ್ದ. 28 ಇಸ್ರಾಯೇಲ್ಯರು ಮತ್ತು ಅವರ ದಳಗಳು* ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವಾಗ ಇದೇ ಕ್ರಮದಲ್ಲಿ ಹೋಗ್ತಿದ್ವು.+
29 ಆಮೇಲೆ ಮೋಶೆ ತನ್ನ ಮಾವನ ಮಗನಿಗೆ ಅಂದ್ರೆ ಮಿದ್ಯಾನಿನ ರೆಗೂವೇಲನ*+ ಮಗ ಹೋಬಾಬನಿಗೆ “ಯೆಹೋವ ನಮಗೆ ಕೊಡ್ತೀನಂತ ಹೇಳಿದ ದೇಶಕ್ಕೆ+ ಹೋಗ್ತಾ ಇದ್ದೀವಿ. ಯೆಹೋವ ಇಸ್ರಾಯೇಲ್ಯರಿಗೆ ತುಂಬ ಆಶೀರ್ವಾದಗಳನ್ನ ಕೊಡ್ತೀನಂತ ಮಾತು ಕೊಟ್ಟಿದ್ದಾನೆ.+ ನೀನೂ ನಮ್ಮ ಜೊತೆ ಬಾ.+ ನಿನ್ನನ್ನ ಚೆನ್ನಾಗಿ ನೋಡ್ಕೊಳ್ತೀವಿ” ಅಂದ. 30 ಅವನು “ನಾನು ಬರಲ್ಲ. ನನ್ನ ಸಂಬಂಧಿಕರು ಇರೋ ನನ್ನ ದೇಶಕ್ಕೆ ಹೋಗ್ತೀನಿ” ಅಂದ. 31 ಆಗ ಮೋಶೆ “ದಯವಿಟ್ಟು ನಮ್ಮನ್ನ ಬಿಟ್ಟು ಹೋಗಬೇಡ. ಕಾಡಲ್ಲಿ ಎಲ್ಲೆಲ್ಲಿ ಡೇರೆಗಳನ್ನ ಹಾಕಬೇಕಂತ ನಿನಗೆ ಚೆನ್ನಾಗಿ ಗೊತ್ತು. ಹಾಗಾಗಿ ನೀನು ಮುಂದೆ ಮುಂದೆ ಹೋಗಿ ನಮಗೆ ದಾರಿ ತೋರಿಸು. 32 ನೀನು ನಮ್ಮ ಜೊತೆ ಬಂದ್ರೆ+ ಯೆಹೋವ ನಮಗೆ ಒಳ್ಳೇದು ಮಾಡುವಾಗ ನಾವು ನಿನಗೂ ಒಳ್ಳೇದು ಮಾಡ್ತೀವಿ” ಅಂದ.
33 ಇಸ್ರಾಯೇಲ್ಯರು ಯೆಹೋವನ ಬೆಟ್ಟದಿಂದ+ ಹೋಗಿ ಮೂರು ದಿನ ಪ್ರಯಾಣ ಮಾಡಿದ್ರು. ಪ್ರಯಾಣ ಮಾಡುವಾಗ ಯೆಹೋವನ ಒಪ್ಪಂದದ* ಮಂಜೂಷ+ ಇಸ್ರಾಯೇಲ್ಯರ ಮುಂದೆನೇ ಇತ್ತು. ಈ ಮೂರು ದಿನಗಳ ಪ್ರಯಾಣದ ಸಮಯದಲ್ಲಿ ಇಸ್ರಾಯೇಲ್ಯರಿಗೆ ವಿಶ್ರಮಿಸೋಕೆ ಸ್ಥಳ ಹುಡುಕಿದ್ರು.+ 34 ಇಸ್ರಾಯೇಲ್ಯರು ಡೇರೆ ಕಿತ್ತು ಹೋದಾಗಿಂದ ಹಗಲಲ್ಲಿ ಯೆಹೋವನ ಮೋಡ+ ಅವರಿಗೆ ದಾರಿ ತೋರಿಸ್ತಾ ಇತ್ತು.
35 ಮಂಜೂಷ ಎತ್ಕೊಂಡು ಹೋದಾಗೆಲ್ಲ ಮೋಶೆ “ಯೆಹೋವನೇ, ಎದ್ದು+ ನಿನ್ನ ಶತ್ರುಗಳನ್ನ ಚೆದರಿಸಿಬಿಡು. ನಿನ್ನನ್ನ ದ್ವೇಷಿಸೋ ಜನ್ರನ್ನ ನಿನ್ನ ಮುಂದಿಂದ ಓಡಿಸಿಬಿಡು” ಅಂತಿದ್ದ. 36 ಮಂಜೂಷ ಕೆಳಗಿಟ್ಟಾಗೆಲ್ಲ “ಯೆಹೋವನೇ, ಲಕ್ಷ ಲಕ್ಷ ಇಸ್ರಾಯೇಲ್ಯರ+ ಹತ್ರ ವಾಪಸ್ ಬಾ” ಅಂತಿದ್ದ.
11 ಜನ ತುಂಬ ಕೋಪದಿಂದ ಯೆಹೋವನ ಮುಂದೆ ದೂರೋಕೆ ಶುರು ಮಾಡಿದ್ರು. ಇದನ್ನ ಕೇಳಿ ಯೆಹೋವನಿಗೆ ಕೋಪ ಬಂತು. ಯೆಹೋವ ಬೆಂಕಿ ಕಳಿಸಿ ಪಾಳೆಯದ ಅಂಚಲ್ಲಿದ್ದ ಜನ್ರಲ್ಲಿ ಕೆಲವರನ್ನ ಸುಟ್ಟುಬಿಟ್ಟನು. 2 ಆಗ ಜನ ಸಹಾಯಕ್ಕಾಗಿ ಮೋಶೆಯನ್ನ ಬೇಡ್ಕೊಂಡ್ರು. ಅವನು ಯೆಹೋವನಿಗೆ ಅಂಗಲಾಚಿ ಬೇಡಿದ+ ಮೇಲೆ ಬೆಂಕಿ ಆರಿಹೋಯ್ತು. 3 ಯೆಹೋವ ಬೆಂಕಿ ಕಳಿಸಿ ಅವರನ್ನ ಸುಟ್ಟುಬಿಟ್ಟಿದ್ರಿಂದ ಆ ಸ್ಥಳಕ್ಕೆ ತಬೇರಾ* ಅಂತ ಹೆಸರಿಟ್ರು.+
4 ಇಸ್ರಾಯೇಲ್ಯರ ಮಧ್ಯ ಇದ್ದ ವಿದೇಶೀ ಜನ*+ ಮಾಂಸ ತಿನ್ನೋಕೆ ಅತಿ ಆಸೆ ಪಟ್ರು.+ ಇಸ್ರಾಯೇಲ್ಯರು ಅವ್ರ ಜೊತೆ ಸೇರಿ ಮತ್ತೆ ಅಳ್ತಾ “ಅಯ್ಯೋ, ನಮಗೆ ತಿನ್ನೋಕೆ ಮಾಂಸ ಇಲ್ವಲ್ಲಾ.+ 5 ಈಜಿಪ್ಟಲ್ಲಿದ್ದಾಗ ತಿಂತಿದ್ದ ಆಹಾರ ನೆನಪಾಗ್ತಿದೆ. ಅಲ್ಲಿ ನಮಗೆ ಮೀನು ಪುಕ್ಕಟೆ ಸಿಗ್ತಿತ್ತು, ಬೇಕಾದಷ್ಟು ತಿಂತಿದ್ವಿ! ಸೌತೆಕಾಯಿ, ಕಲ್ಲಂಗಡಿ, ಈರುಳ್ಳಿ, ಬೆಳ್ಳುಳ್ಳಿ ಯಾವುದಕ್ಕೂ ಕಡಿಮೆ ಇರಲಿಲ್ಲ!+ 6 ಆದ್ರೆ ಇಲ್ಲಿ ಮನ್ನ+ ಬಿಟ್ರೆ ತಿನ್ನೋಕೆ ಬೇರೇನೂ ಇಲ್ಲ, ಸೊರಗಿ ಹೋಗ್ತಾ ಇದ್ದೀವಿ” ಅಂತ ಹೇಳೋಕೆ ಶುರು ಮಾಡಿದ್ರು.
7 ಮನ್ನ+ ಕೊತ್ತುಂಬರಿ ಬೀಜದ ತರ ಇತ್ತು.+ ಅದು ಸುಗಂಧ ಅಂಟಿನ ತರ* ಕಾಣ್ತಿತ್ತು. 8 ಜನ ಸುತ್ತಮುತ್ತ ಎಲ್ಲ ಕಡೆ ಹೋಗಿ ಅದನ್ನ ಕೂಡಿಸ್ಕೊಳ್ತಾ ಇದ್ರು. ಅದನ್ನ ಬೀಸೋ ಕಲ್ಲಲ್ಲಿ ಅರಿತಿದ್ರು ಅಥವಾ ಒರಳಲ್ಲಿ ಕುಟ್ತಿದ್ರು. ಆಮೇಲೆ ಪಾತ್ರೆಯಲ್ಲಿ ಹಾಕಿ ಬೇಯಿಸ್ತಿದ್ರು ಅಥವಾ ದುಂಡಗಿನ ರೊಟ್ಟಿಗಳನ್ನ ಮಾಡ್ತಿದ್ರು.+ ಅದ್ರ ರುಚಿ ಎಣ್ಣೆ ಬೆರೆಸಿ ಮಾಡಿದ ತೆಳುವಾದ ಸಿಹಿ ರೊಟ್ಟಿ ತರ ಇತ್ತು. 9 ರಾತ್ರಿ ಹೊತ್ತಲ್ಲಿ ಇಬ್ಬನಿ ಪಾಳೆಯದಲ್ಲಿ ಬೀಳ್ತಿದ್ದಾಗ ಅದ್ರ ಜೊತೆ ಮನ್ನನೂ ಬೀಳ್ತಿತ್ತು.+
10 ಪ್ರತಿಯೊಬ್ರೂ ಪ್ರತಿಯೊಂದು ಕುಟುಂಬನೂ ತಮ್ಮತಮ್ಮ ಡೇರೆ ಬಾಗಿಲಲ್ಲಿ ನಿಂತ್ಕೊಂಡು ಅಳ್ತಾ ಇರೋದು ಮೋಶೆಗೆ ಕೇಳಿಸ್ತು. ಜನ ಹೀಗೆ ಮಾಡೋದನ್ನ ನೋಡಿ ಯೆಹೋವನಿಗೆ ತುಂಬ ಕೋಪ ಬಂತು.+ ಮೋಶೆಗೂ ತುಂಬ ಬೇಜಾರಾಯ್ತು. 11 ಆಗ ಮೋಶೆ ಯೆಹೋವನಿಗೆ “ನಾನೇನು ಮಾಡ್ದೆ ಅಂತ ನನಗೆ ಈ ಕಷ್ಟಕೊಡ್ತಾ ಇದ್ದೀಯ? ನಾನು ನಿನ್ನ ಮೆಚ್ಚಿಗೆ ಕಳ್ಕೊಂಡಿದ್ದೀನಾ? ಅದಕ್ಕೇ ಇಷ್ಟು ಜನ್ರನ್ನ ನೋಡ್ಕೊಳ್ಳೋ ಭಾರವಾದ ಜವಾಬ್ದಾರಿನ ನನ್ನ ಮೇಲೆ ಹಾಕಿದ್ದೀಯಾ?+ 12 ಇವ್ರ ಪೂರ್ವಜರಿಗೆ ಕೊಡ್ತೀನಂತ ನೀನು ಮಾತುಕೊಟ್ಟ ದೇಶಕ್ಕೆ+ ಇವರನ್ನ ಕರ್ಕೊಂಡು ಹೋಗೋಕೆ, ‘ಹಾಲು ಕುಡಿಯೋ ಮಗುನ ಎದೆಗೆ ಎತ್ಕೊಂಡು ಹೋಗೋ ಸೇವಕನ ತರ ಇವ್ರನ್ನ ಎತ್ಕೊಂಡು ಹೋಗೋಕೆ’ ನನಗೆ ಹೇಳ್ತಾ ಇದ್ದೀಯಲ್ಲಾ. ನಾನೇನು ಇವ್ರನ್ನ ನನ್ನ ಹೊಟ್ಟೆಯಲ್ಲಿ ಹೊತ್ತು ಹೆತ್ತಿದ್ದೀನಾ? 13 ಈ ಜನ ನನ್ನ ಹತ್ರ ಬಂದು ಅಳ್ತಾ ‘ನಮಗೆ ಮಾಂಸ ಬೇಕು, ಮಾಂಸ ಬೇಕು’ ಅಂತ ಕೇಳ್ತಿದ್ದಾರೆ. ಇಷ್ಟೊಂದು ಜನ್ರಿಗೆ ಎಲ್ಲಿಂದ ಮಾಂಸ ತಂದ್ಕೊಡ್ಲಿ? 14 ಇಷ್ಟು ಜನ್ರನ್ನ ನೋಡ್ಕೊಳ್ಳೋ ಭಾರನ ನಾನೊಬ್ಬನೇ ಹೊತ್ತು ಹೊತ್ತು ಸಾಕಾಗಿ ಹೋಗಿದೆ. ಇನ್ನು ನನ್ನಿಂದಾಗಲ್ಲ.+ 15 ನನ್ನ ಮೇಲಿಂದ ಈ ಭಾರನ ನೀನು ತೆಗಿಯಲ್ಲಾಂದ್ರೆ ಈಗ್ಲೇ ನನ್ನನ್ನ ಸಾಯಿಸಿಬಿಡು.+ ನನ್ನ ಮೇಲೆ ದಯೆ ಇದ್ರೆ ನನಗೆ ಇನ್ನೂ ಕಷ್ಟ ಬರೋಕೆ ಬಿಡಬೇಡ” ಅಂದ.
16 ಅದಕ್ಕೆ ಯೆಹೋವ ಮೋಶೆಗೆ ಹೀಗಂದನು: “ಇಸ್ರಾಯೇಲ್ಯರ ಹಿರಿಯರಲ್ಲಿ ಸಮರ್ಥರೂ ಜನ್ರ ಅಧಿಕಾರಿಗಳೂ ಅಂತ ನಿನಗೆ ಗೊತ್ತಿರೋ 70 ಜನ್ರನ್ನ ಆರಿಸು.+ ಅವರನ್ನ ದೇವದರ್ಶನ ಡೇರೆಗೆ ಕರ್ಕೊಂಡು ಹೋಗು. ಅಲ್ಲಿ ಅವರು ನಿನ್ನ ಜೊತೆ ನಿಲ್ಲಲಿ. 17 ನಾನು ಅಲ್ಲಿಗೆ ಇಳಿದು ಬಂದು+ ನಿನ್ನ ಜೊತೆ ಮಾತಾಡ್ತೀನಿ.+ ನಿನಗೆ ಕೊಟ್ಟಿರೋ ನನ್ನ ಪವಿತ್ರಶಕ್ತಿಯಲ್ಲಿ+ ಸ್ವಲ್ಪ ತೆಗೆದು ಅವರಿಗೆ ಕೊಡ್ತೀನಿ. ಆಗ ಜನ್ರನ್ನ ನೋಡ್ಕೊಳ್ಳೋ ಭಾರನ ನೀನೊಬ್ಬನೇ ಹೊರಬೇಕಾಗಿಲ್ಲ.+ ಅವರು ನಿನಗೆ ಸಹಾಯ ಮಾಡ್ತಾರೆ. 18 ನೀನು ಜನ್ರಿಗೆ ‘ನಾಳೆಗಾಗಿ ನಿಮ್ಮನ್ನ ಶುದ್ಧ ಮಾಡ್ಕೊಳ್ಳಿ.+ ನಾಳೆ ನಿಮಗೆ ತಿನ್ನೋಕೆ ಖಂಡಿತ ಮಾಂಸ ಸಿಗುತ್ತೆ. ಯಾಕಂದ್ರೆ “ನಮಗೆ ತಿನ್ನೋಕೆ ಮಾಂಸ ಇಲ್ಲ, ನಾವು ಈಜಿಪ್ಟಲ್ಲಿ ಇದ್ದಾಗ್ಲೇ ಸುಖವಾಗಿದ್ವಿ”+ ಅಂತ ನೀವು ಅಳ್ತಾ ಹೇಳಿದ್ದನ್ನ ಯೆಹೋವ ಕೇಳಿಸ್ಕೊಂಡಿದ್ದಾನೆ.+ ಯೆಹೋವ ನಿಮಗೆ ಖಂಡಿತ ಮಾಂಸ ಕೊಡ್ತಾನೆ, ನೀವು ತಿಂತೀರ.+ 19 ನೀವು ಮಾಂಸನ ಒಂದು ದಿನ ಅಲ್ಲ, 2 ದಿನ ಅಲ್ಲ, 5, 10, 20 ದಿನ ಅಲ್ಲ, 20 ಒಂದು ತಿಂಗಳು ಪೂರ್ತಿ ತಿಂತೀರ. ಅದು ನಿಮ್ಮ ಮೂಗಲ್ಲಿ ಬರೋವಷ್ಟು ತಿಂತೀರ. ಅದನ್ನ ತಿಂದು ತಿಂದು ವಾಕರಿಕೆಯಾಗಿ ನಿಮಗೇ ಅಸಹ್ಯ ಆಗುತ್ತೆ.+ ಯಾಕಂದ್ರೆ ನೀವು ಅಳ್ತಾ “ಯಾಕಾದ್ರೂ ಈಜಿಪ್ಟನ್ನ ಬಿಟ್ಟುಬಂದ್ವೋ”+ ಅಂತ ಹೇಳಿದ್ದೀರ. ನಿಮ್ಮ ಮಧ್ಯ ಇದ್ದ ಯೆಹೋವನನ್ನ ತಿರಸ್ಕರಿಸಿದ್ದೀರ’ ಅಂತ ಹೇಳು.”
21 ಅದಕ್ಕೆ ಮೋಶೆ “ನನ್ನ ಜೊತೆ ಸೈನಿಕರೇ 6,00,000 ಇದ್ದಾರೆ.+ ಆದ್ರೆ ನೀನು ಎಲ್ಲ ಜನ್ರಿಗೆ ಮಾಂಸ ಕೊಡ್ತೀನಿ, ಅದೂ ಇಡೀ ತಿಂಗಳಿಗೆ ಬೇಕಾಗುವಷ್ಟು ಮಾಂಸ ಕೊಡ್ತೀನಿ ಅಂತ ಹೇಳ್ತಾ ಇದ್ದಿಯಲ್ಲಾ! 22 ಅದು ಹೇಗೆ ಸಾಧ್ಯ? ನಮ್ಮ ಹತ್ರ ಇರೋ ಎಲ್ಲ ಕುರಿದನಗಳನ್ನ ಕಡಿದ್ರೂ ಇಷ್ಟು ಜನ್ರಿಗೆ ಸಾಕಾಗಲ್ಲ. ಸಮುದ್ರದಲ್ಲಿರೋ ಎಲ್ಲ ಮೀನುಗಳನ್ನ ಹಿಡಿದ್ರೂ ಸಾಕಾಗಲ್ಲ” ಅಂದ.
23 ಆಗ ಯೆಹೋವ ಮೋಶೆಗೆ “ಯೆಹೋವನ ಕೈಯಿಂದ ಮಾಡೋಕೆ ಆಗದೇ ಇರೋ ವಿಷ್ಯ ಏನಾದ್ರೂ ಇದ್ಯಾ?*+ ನಾನು ಹೇಳಿದ ತರ ಆಗುತ್ತೋ ಇಲ್ವೋ ಅಂತ ನೀನೇ ನೋಡ್ತೀಯ” ಅಂದನು.
24 ಮೋಶೆ ಹೋಗಿ ಯೆಹೋವ ಹೇಳಿದ್ದನ್ನೆಲ್ಲ ಜನ್ರಿಗೆ ತಿಳಿಸಿದ. ಅಷ್ಟೇ ಅಲ್ಲ ಇಸ್ರಾಯೇಲ್ಯರ ಹಿರಿಯರಿಂದ 70 ಜನ್ರನ್ನ ಆರಿಸಿ ದೇವದರ್ಶನ ಡೇರೆಯ ಸುತ್ತ ನಿಲ್ಲಿಸಿದ.+ 25 ಆಗ ಯೆಹೋವ ಒಂದು ಮೋಡದಲ್ಲಿ ಇಳಿದು ಬಂದು+ ಮೋಶೆ ಜೊತೆ ಮಾತಾಡಿದ.+ ಆತನು ಅವನಿಗೆ ಕೊಟ್ಟಿದ್ದ ತನ್ನ ಪವಿತ್ರಶಕ್ತಿಯಲ್ಲಿ ಸ್ವಲ್ಪ ತೆಗೆದು+ ಆ 70 ಜನ ಹಿರಿಯರಲ್ಲಿ ಪ್ರತಿಯೊಬ್ಬನಿಗೆ ಕೊಟ್ಟನು. ಪವಿತ್ರಶಕ್ತಿ ಅವ್ರ ಮೇಲೆ ಬಂದ ಕೂಡ್ಲೇ ಅವರು ಪ್ರವಾದಿಗಳ ತರ ನಡ್ಕೊಳ್ಳೋಕೆ* ಶುರು ಮಾಡಿದ್ರು.+ ಆದ್ರೆ ಆಮೇಲೆ ಅವರು ಯಾವತ್ತೂ ಹಾಗೆ ನಡ್ಕೊಳ್ಳಲಿಲ್ಲ.
26 ಆ 70 ಹಿರಿಯರಲ್ಲಿ ಎಲ್ದಾದ್, ಮೇದಾದ್ ಅನ್ನೋ ಇಬ್ರು ದೇವದರ್ಶನ ಡೇರೆ ಹತ್ರ ಹೋಗಿರಲಿಲ್ಲ, ಪಾಳೆಯದಲ್ಲೇ ಇದ್ರು. ಅವ್ರ ಮೇಲೂ ದೇವರ ಪವಿತ್ರಶಕ್ತಿ ಬಂತು. ಹಾಗಾಗಿ ಅವರು ಪಾಳೆಯದಲ್ಲೇ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು. 27 ಅದನ್ನ ನೋಡಿ ಒಬ್ಬ ಯುವಕ ಓಡಿ ಹೋಗಿ ಮೋಶೆಗೆ “ಎಲ್ದಾದ್ ಮತ್ತೆ ಮೇದಾದ್ ಇಬ್ರೂ ಪಾಳೆಯದಲ್ಲಿ ಪ್ರವಾದಿಗಳ ತರ ನಡ್ಕೊಳ್ತಿದ್ದಾರೆ!” ಅಂದ. 28 ಆಗ ನೂನನ ಮಗನೂ ಯೌವನ ಪ್ರಾಯದಿಂದಾನೇ ಮೋಶೆಗೆ ಸೇವಕನೂ ಆಗಿದ್ದ ಯೆಹೋಶುವ+ ಕೂಡ್ಲೇ ಮೋಶೆಗೆ “ಸ್ವಾಮಿ ನೀನು ಅವರನ್ನ ತಡಿಬೇಕು!” ಅಂದ.+ 29 ಅದಕ್ಕೆ ಮೋಶೆ “ಯಾಕೆ? ನನ್ನ ಗೌರವ ಕಡಿಮೆ ಆಗುತ್ತೆ ಅಂತ ಭಯನಾ? ಹಾಗೆ ನೆನಸಬೇಡ. ಯೆಹೋವನ ಜನ್ರೆಲ್ಲ ಪ್ರವಾದಿಗಳಾಗಬೇಕು, ಯೆಹೋವ ಅವರಿಗೆಲ್ಲ ತನ್ನ ಪವಿತ್ರಶಕ್ತಿ ಕೊಡಬೇಕು ಅನ್ನೋದೇ ನನ್ನಾಸೆ” ಅಂದ. 30 ಆಮೇಲೆ ಮೋಶೆ ಇಸ್ರಾಯೇಲ್ಯರ ಹಿರಿಯರ ಜೊತೆ ಪಾಳೆಯಕ್ಕೆ ವಾಪಸ್ ಹೋದ.
31 ಆಗ ಯೆಹೋವ ಗಾಳಿ ಬೀಸೋ ತರ ಮಾಡಿದನು. ಆ ಗಾಳಿ ಸಮುದ್ರದ ಕಡೆಯಿಂದ ಲಾವಕ್ಕಿಗಳನ್ನ ಹೊತ್ಕೊಂಡು ಬಂದು ಇಸ್ರಾಯೇಲ್ಯರ ಪಾಳೆಯದ ಸುತ್ತ ಬೀಳಿಸ್ತು.+ ಪಾಳೆಯದ ಎರಡೂ ಬದಿಗಳಲ್ಲಿ ಒಂದು ದಿನದ ಪ್ರಯಾಣದಷ್ಟು ದೂರದ ತನಕ ಲಾವಕ್ಕಿಗಳು ಬಿದ್ದಿದ್ವು. ಅವು ನೆಲದಿಂದ ಎರಡು ಮೊಳ* ಎತ್ತರದಷ್ಟು ಬಿದ್ದಿದ್ವು. 32 ಜನ ಆ ಇಡೀ ದಿನ, ಇಡೀ ರಾತ್ರಿ, ಅಷ್ಟೇ ಅಲ್ಲ ಮಾರನೇ ದಿನನೂ ಲಾವಕ್ಕಿಗಳನ್ನ ಕೂಡಿಸ್ಕೊಳ್ತಾ ಇದ್ರು. ನಿದ್ದೆನೂ ಮಾಡ್ದೆ ಕೂಡಿಸ್ಕೊಳ್ತಾ ಇದ್ರು. ಒಬ್ಬೊಬ್ರೂ ಕಡಿಮೆ ಅಂದ್ರೆ ಹತ್ತು ಹೋಮೆರ್‌ನಷ್ಟು* ಲಾವಕ್ಕಿಗಳನ್ನ ಕೂಡಿಸ್ಕೊಂಡ್ರು. ಅವರು ಅವುಗಳನ್ನ ಪಾಳೆಯದ ಸುತ್ತ ಹರಡಿ ಒಣಗಿಸಿದ್ರು. 33 ಆದ್ರೆ ಮಾಂಸವನ್ನ ಅವರು ಬಾಯಲ್ಲಿಟ್ಟು ಅಗಿಯೋಕೂ ಮುಂಚೆನೇ ಅವ್ರ ಮೇಲೆ ಯೆಹೋವನ ಕೋಪ ಹೊತ್ತಿ ಉರಿತು. ಯೆಹೋವ ತುಂಬ ಜನ್ರನ್ನ ಘೋರ ವ್ಯಾಧಿಯಿಂದ ಸಾಯಿಸಿದನು.+
34 ಆ ಸ್ಥಳಕ್ಕೆ ಅವರು ಕಿಬ್ರೋತ್-ಹತಾವಾ*+ ಅಂತ ಹೆಸರಿಟ್ರು. ಯಾಕಂದ್ರೆ ಆಹಾರಕ್ಕಾಗಿ ಅತಿಯಾಸೆ ಪಟ್ಟು ನಾಶವಾದ ಜನ್ರನ್ನ ಅಲ್ಲಿ ಸಮಾಧಿ ಮಾಡಿದ್ರು.+ 35 ಆಮೇಲೆ ಜನ ಕಿಬ್ರೋತ್-ಹತಾವಾದಿಂದ ಹೊರಟು ಹಚೇರೋತಿಗೆ+ ಬಂದು ಉಳ್ಕೊಂಡ್ರು.
12 ಮೋಶೆ ಕೂಷ್ ದೇಶದ ಸ್ತ್ರೀಯನ್ನ ಮದುವೆ ಆಗಿದ್ರಿಂದ+ ಮಿರ್ಯಾಮ ಮತ್ತೆ ಆರೋನ ಮೋಶೆ ವಿರುದ್ಧ ದೂರೋಕೆ ಶುರು ಮಾಡಿದ್ರು. 2 “ಯೆಹೋವ ಮೋಶೆ ಮೂಲಕ ಮಾತ್ರ ಮಾತಾಡಿದ್ದಾನಾ? ನಮ್ಮ ಮೂಲಕನೂ ಮಾತಾಡಿದ್ದಾನಲ್ವಾ?”+ ಅಂದ್ರು. ಯೆಹೋವ ಅವರ ಮಾತನ್ನ ಕೇಳಿಸ್ಕೊಳ್ತಾ ಇದ್ದನು.+ 3 ಮೋಶೆ ಭೂಮಿಯಲ್ಲಿದ್ದ ಎಲ್ಲ ಜನ್ರಿಗಿಂತ ತುಂಬ ದೀನ* ವ್ಯಕ್ತಿಯಾಗಿದ್ದ.+
4 ಯೆಹೋವನು ತಕ್ಷಣ ಮೋಶೆ, ಆರೋನ, ಮಿರ್ಯಾಮಗೆ “ನೀವು ಮೂವರು ದೇವದರ್ಶನ ಡೇರೆ ಹತ್ರ ಹೋಗಿ” ಅಂದನು. ಅವರು ಹೋದ್ರು. 5 ಯೆಹೋವ ಮೋಡದಲ್ಲಿ ಇಳಿದು ಬಂದು+ ದೇವದರ್ಶನ ಡೇರೆ ಬಾಗಲಲ್ಲಿ ನಿಂತು ಆರೋನನನ್ನ ಮಿರ್ಯಾಮಳನ್ನ ಕರೆದನು. ಅವರಿಬ್ರು ಮುಂದೆ ಹೋಗಿ ನಿಂತ್ರು. 6 ಆಗ ಆತನು “ದಯವಿಟ್ಟು ನಾನು ಹೇಳೋದನ್ನ ಕೇಳಿ. ನಿಮ್ಮ ಮಧ್ಯ ಯೆಹೋವನ ಪ್ರವಾದಿ ಇರ್ತಿದ್ರೆ ಅವನಿಗೆ ನನ್ನ ಬಗ್ಗೆ ದರ್ಶನದಲ್ಲಿ*+ ತಿಳಿಸ್ತಿದ್ದೆ. ಅವನ ಜೊತೆ ಕನಸಲ್ಲಿ ಮಾತಾಡ್ತಿದ್ದೆ.+ 7 ನನ್ನ ಸೇವಕನಾದ ಮೋಶೆ ಜೊತೆ ಹೀಗೆ ಮಾತಾಡಲ್ಲ. ನನ್ನ ಜನ್ರನ್ನೆಲ್ಲ ಅವನ ಕೈಗೆ ಒಪ್ಪಿಸಿದ್ದೀನಿ.*+ 8 ಅವನ ಜೊತೆ ಮುಖಾಮುಖಿಯಾಗಿ, ಮುಚ್ಚುಮರೆ ಇಲ್ಲದೆ ಮಾತಾಡ್ತೀನಿ,+ ಒಗಟೊಗಟಾಗಿ ಮಾತಾಡಲ್ಲ. ಯೆಹೋವನಾದ ನನ್ನ ರೂಪವನ್ನ ಅವನು ನೋಡ್ತಾನೆ. ಹೀಗಿರುವಾಗ ನೀವು ಮೋಶೆ ವಿರುದ್ಧ ಮಾತಾಡಿದ್ದೀರ. ಹಾಗೆ ಮಾತಾಡೋಕೆ ನಿಮಗೆ ಹೇಗೆ ಧೈರ್ಯ ಬಂತು?” ಅಂದನು.
9 ಯೆಹೋವನಿಗೆ ಅವ್ರ ಮೇಲೆ ತುಂಬ ಕೋಪ ಬಂದು ಅಲ್ಲಿಂದ ಹೋದನು. 10 ದೇವದರ್ಶನ ಡೇರೆ ಮೇಲಿದ್ದ ಮೋಡ ದೂರ ಹೋಯ್ತು. ತಕ್ಷಣ ಮಿರ್ಯಾಮಗೆ ಕುಷ್ಠರೋಗ ಬಂತು! ಅವಳು ಹಿಮದ ತರ ಬೆಳ್ಳಗಾದಳು.+ ಆರೋನ ಮಿರ್ಯಾಮಳನ್ನ ನೋಡಿದಾಗ ಕುಷ್ಠ ಬಂದಿರೋದು ಕಾಣಿಸ್ತು.+ 11 ಕೂಡ್ಲೇ ಆರೋನ ಮೋಶೆ ಹತ್ರ ಹೋಗಿ “ಸ್ವಾಮಿ, ನಾವು ಬುದ್ಧಿ ಇಲ್ಲದ ಕೆಲಸ ಮಾಡಿಬಿಟ್ವಿ. ನಿನ್ನ ಹತ್ರ ಬೇಡ್ಕೊಳ್ತೀನಿ, ದಯವಿಟ್ಟು ಈ ಪಾಪಕ್ಕೆ ನಮಗೆ ಶಿಕ್ಷೆ ಆಗೋಕೆ ಬಿಡಬೇಡ. 12 ಅವಳನ್ನ ಹೀಗೇ ಬಿಟ್ರೆ, ಗರ್ಭದಲ್ಲೇ ಸತ್ತು ಅರ್ಧ ಕೊಳೆತುಹೋಗಿ ಹುಟ್ಟಿದ ಮಗು ತರ ಆಗ್ತಾಳೆ. ದಯವಿಟ್ಟು ಹಾಗಾಗೋಕೆ ಬಿಡಬೇಡ” ಅಂದ. 13 ಆಗ ಮೋಶೆ “ದೇವರೇ, ದಯವಿಟ್ಟು, ದಯವಿಟ್ಟು ಅವಳನ್ನ ವಾಸಿಮಾಡು” ಅಂತ ಯೆಹೋವನನ್ನ ಬೇಡ್ಕೊಂಡ.+
14 ಆಗ ಯೆಹೋವ ಮೋಶೆಗೆ “ಅವಳ ಮುಖದ ಮೇಲೆ ಅಪ್ಪ ಉಗುಳಿದ್ರೆ ಅವಳು ಏಳು ದಿನ ಅವಮಾನವನ್ನ ಸಹಿಸ್ಕೊಳ್ಳಲ್ವಾ? ಹಾಗೇ ಅವಳು ಈಗ ಪಾಳೆಯದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇರಲಿ.+ ಆಮೇಲೆ ಕರ್ಕೊಂಡು ಬರಬಹುದು” ಅಂದನು. 15 ಹಾಗಾಗಿ ಮಿರ್ಯಾಮ ಏಳು ದಿನ ಪಾಳೆಯದ ಹೊರಗೆ ಇದ್ದಳು.+ ಅವಳನ್ನ ಪಾಳೆಯದ ಒಳಗೆ ಸೇರಿಸ್ಕೊಳ್ಳೋ ತನಕ ಜನ ಮುಂದೆ ಪ್ರಯಾಣ ಮಾಡಲಿಲ್ಲ. 16 ಆಮೇಲೆ ಜನ ಹಚೇರೋತಿನಿಂದ+ ಪಾರಾನ್ ಕಾಡಿಗೆ+ ಬಂದು ಅಲ್ಲಿ ಡೇರೆ ಹಾಕೊಂಡ್ರು.
13 ಯೆಹೋವ ಮೋಶೆ ಜೊತೆ ಮಾತಾಡಿ 2 “ನಾನು ಇಸ್ರಾಯೇಲ್ಯರಿಗೆ ಕೊಡೋ ಕಾನಾನ್ ದೇಶವನ್ನ ನೋಡ್ಕೊಂಡು ಬರೋಕೆ ಕೆಲವು ಗೂಢಚಾರರನ್ನ ಕಳಿಸು. ಅದಕ್ಕಾಗಿ ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸ್ಕೊ”+ ಅಂದನು.
3 ಯೆಹೋವ ಹೇಳಿದ ಹಾಗೇ ಮೋಶೆ ಕೆಲವು ಗಂಡಸರನ್ನ ಪಾರಾನ್ ಕಾಡಿಂದ+ ಕಾನಾನ್ ದೇಶಕ್ಕೆ ಕಳಿಸಿದ. ಅವರೆಲ್ಲ ಇಸ್ರಾಯೇಲ್ಯರ ಮುಖ್ಯಸ್ಥರು. 4 ಅವರ ಹೆಸ್ರು: ರೂಬೇನ್ ಕುಲದಿಂದ ಜಕ್ಕೂರನ ಮಗ ಶಮ್ಮೂವ. 5 ಸಿಮೆಯೋನ್ ಕುಲದಿಂದ ಹೋರಿಯ ಮಗ ಶಾಫಾಟ. 6 ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್.+ 7 ಇಸ್ಸಾಕಾರ್ ಕುಲದಿಂದ ಯೋಸೇಫನ ಮಗ ಇಗಾಲ್. 8 ಎಫ್ರಾಯೀಮ್ ಕುಲದಿಂದ ನೂನನ ಮಗ ಹೋಷೇಯ.+ 9 ಬೆನ್ಯಾಮೀನ್ ಕುಲದಿಂದ ರಾಫೂವನ ಮಗ ಪಲ್ಟಿ. 10 ಜೆಬುಲೂನ್ ಕುಲದಿಂದ ಸೋದೀಯ ಮಗ ಗದ್ದಿಯೇಲ್. 11 ಯೋಸೇಫ ಕುಲದಿಂದ+ ಅಂದ್ರೆ ಮನಸ್ಸೆ ಕುಲದಿಂದ+ ಸೂಸೀಯ ಮಗ ಗದ್ದಿ. 12 ದಾನ್ ಕುಲದಿಂದ ಗೆಮಲ್ಲೀಯ ಮಗ ಅಮ್ಮೀಯೇಲ್. 13 ಅಶೇರ್ ಕುಲದಿಂದ ಮೀಕಾಯೇಲನ ಮಗ ಸೆತೂರ್. 14 ನಫ್ತಾಲಿ ಕುಲದಿಂದ ವಾಪೆಸೀಯ ಮಗ ನಹಬಿ. 15 ಗಾದ್ ಕುಲದಿಂದ ಮಾಕೀಯನ ಮಗ ಗೆಯೂವೇಲ್. 16 ಇದಿಷ್ಟು ಮೋಶೆ ಕಾನಾನ್ ದೇಶಕ್ಕೆ ಕಳಿಸಿದ ಗೂಢಚಾರರ ಹೆಸ್ರುಗಳು. ಮೋಶೆ ನೂನನ ಮಗ ಹೋಷೇಯನಿಗೆ ಯೆಹೋಶುವ*+ ಅಂತ ಹೆಸರಿಟ್ಟ.
17 ಮೋಶೆ ಅವರನ್ನ ಕಾನಾನ್ ದೇಶಕ್ಕೆ ಕಳಿಸುವಾಗ “ನೀವು ಮೊದ್ಲು ನೆಗೆಬ್‌ಗೆ* ಹೋಗಿ ಆಮೇಲೆ ಅಲ್ಲಿಂದ ಬೆಟ್ಟ ಪ್ರದೇಶಕ್ಕೆ ಹೋಗಿ.+ 18 ಆ ದೇಶ ಹೇಗಿದೆ,+ ಅಲ್ಲಿನ ಜನ ಬಲಶಾಲಿಗಳಾ ಬಲಹೀನರಾ, ಅಲ್ಲಿ ಜನ ಜಾಸ್ತಿ ಇದ್ದಾರಾ ಕಮ್ಮಿ ಇದ್ದಾರಾ, 19 ಆ ದೇಶ ಒಳ್ಳೇದಾ ಇಲ್ವಾ, ಅವ್ರ ಪಟ್ಟಣಗಳಿಗೆ ಕೋಟೆ ಇದ್ಯಾ ಅಂತ ನೋಡ್ಕೊಂಡು ಬನ್ನಿ. 20 ಅಲ್ಲಿನ ಜಮೀನು ಫಲವತ್ತಾಗಿದ್ಯಾ ಬಂಜರಾಗಿದ್ಯಾ,+ ಅಲ್ಲಿ ಮರಗಳು ಇದ್ಯಾ ಇಲ್ವಾ ಅಂತ ನೋಡಿ. ಧೈರ್ಯದಿಂದ+ ಹೋಗಿ, ಅಲ್ಲಿನ ಕೆಲವು ಹಣ್ಣುಗಳನ್ನ ತಗೊಂಡು ಬನ್ನಿ” ಅಂದ. ಆಗ ದ್ರಾಕ್ಷಿ ಹಣ್ಣಿನ ಮೊದ್ಲ ಬೆಳೆಯ ಕಾಲವಾಗಿತ್ತು.+
21 ಅವರು ಅಲ್ಲಿಂದ ಕಾನಾನ್ ದೇಶಕ್ಕೆ ಹೋದ್ರು. ಅವರು ಚಿನ್ ಕಾಡುಪ್ರದೇಶದಿಂದ+ ಲೆಬೋ-ಹಾಮಾತಿನ*+ ಹತ್ರ ಇರೋ ರೆಹೋಬಿನ+ ತನಕ ದೇಶ ಸುತ್ತಿ ನೋಡಿದ್ರು. 22 ಅವರು ನೆಗೆಬಿಗೆ ಹೋದ ಮೇಲೆ ಅಲ್ಲಿಂದ ಹೆಬ್ರೋನಿಗೆ+ ಹೋದ್ರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ+ ಅನ್ನೋ ಅನಾಕ್ಯ ಜನ+ ವಾಸಿಸ್ತಿದ್ರು. ಹೆಬ್ರೋನ್ ಪಟ್ಟಣವನ್ನ ಈಜಿಪ್ಟಿನ ಸೋನ್ ಪಟ್ಟಣಕ್ಕಿಂತ ಏಳು ವರ್ಷ ಮುಂಚೆ ಕಟ್ಟಲಾಗಿತ್ತು. 23 ಅವರು ಎಷ್ಕೋಲ್ ಕಣಿವೆಗೆ+ ಬಂದಾಗ ಒಂದು ದ್ರಾಕ್ಷಿ ಗೊಂಚಲಿದ್ದ ಕೊಂಬೆಯನ್ನ ಕಡಿದ್ರು. ಅದನ್ನ ಇಬ್ರು ಗಂಡಸರು ಒಂದು ಕೋಲಿನ ಮೇಲೆ ಹಾಕಿ ಎತ್ಕೊಂಡು ಹೋಗಬೇಕಾಯ್ತು. ಅದ್ರ ಜೊತೆ ಕೆಲವು ದಾಳಿಂಬೆಗಳನ್ನ ಅಂಜೂರಗಳನ್ನ ತಗೊಂಡ್ರು.+ 24 ಇಸ್ರಾಯೇಲ್ಯ ಗಂಡಸರು ಅಲ್ಲಿ ದ್ರಾಕ್ಷಿ ಗೊಂಚಲನ್ನ ಕೊಯ್ದದ್ರಿಂದ ಆ ಜಾಗಕ್ಕೆ ಎಷ್ಕೋಲ್*+ ಕಣಿವೆ ಅಂತ ಹೆಸ್ರು ಬಂತು.
25 ಆ ಗೂಢಚಾರರು 40 ದಿನ+ ಆದ್ಮೇಲೆ ವಾಪಸ್ ಬಂದ್ರು. 26 ಅವರು ಮೋಶೆ, ಆರೋನ, ಎಲ್ಲ ಇಸ್ರಾಯೇಲ್ಯರು ಇದ್ದ ಕಾದೇಶಿನ+ ಪಾರಾನ್ ಕಾಡಿಗೆ ಬಂದ್ರು. ಅವರು ಎಲ್ಲ ಇಸ್ರಾಯೇಲ್ಯರಿಗೆ ಕಾನಾನ್ ದೇಶದ ಬಗ್ಗೆ ವರದಿಯನ್ನ ಕೊಟ್ರು. ಅಲ್ಲಿನ ಹಣ್ಣುಗಳನ್ನ ತೋರಿಸಿದ್ರು. 27 ಅವರು ಮೋಶೆಗೆ “ನೀನು ಹೇಳಿದ ಹಾಗೇ ನಾವು ಕಾನಾನ್ ದೇಶಕ್ಕೆ ಹೋದ್ವಿ. ಅದು ನಿಜವಾಗ್ಲೂ ಹಾಲೂ ಜೇನೂ ಹರಿಯೋ+ ದೇಶ. ಇವೆಲ್ಲ ಆ ದೇಶದಲ್ಲಿ ಬೆಳೆದ ಹಣ್ಣುಗಳು.+ 28 ಆದ್ರೆ ಆ ದೇಶದ ಜನ ಬಲಿಷ್ಠರು. ಅಲ್ಲಿ ಭದ್ರ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳಿವೆ. ಅಷ್ಟೇ ಅಲ್ಲ ಅಲ್ಲಿ ನಾವು ಅನಾಕ್ಯರನ್ನ ನೋಡಿದ್ವಿ.+ 29 ನೆಗೆಬಿನಲ್ಲಿ+ ಅಮಾಲೇಕ್ಯರು+ ಇದ್ದಾರೆ. ಬೆಟ್ಟ ಪ್ರದೇಶದಲ್ಲಿ ಹಿತ್ತಿಯರು, ಯೆಬೂಸಿಯರು,+ ಅಮೋರಿಯರು+ ವಾಸ ಇದ್ದಾರೆ. ಸಮುದ್ರದ+ ಹತ್ರ ಯೋರ್ದನ್ ನದಿ ಹತ್ರ ಕಾನಾನ್ಯರು+ ಇದ್ದಾರೆ” ಅಂದ್ರು.
30 ಆಗ ಕಾಲೇಬ ಮೋಶೆ ಮುಂದೆ ನಿಂತಿದ್ದ ಜನ್ರನ್ನ ಶಾಂತ ಮಾಡೋಕೆ ಪ್ರಯತ್ನಿಸ್ತಾ “ಆ ದೇಶದ ವಿರುದ್ಧ ಹೋಗಿ ಅದನ್ನ ಸೋಲಿಸಿ ವಶ ಮಾಡೋಕೆ ಖಂಡಿತ ನಮ್ಮಿಂದ ಆಗುತ್ತೆ. ಬನ್ನಿ, ಈಗ್ಲೇ ಹೋಗಿ ದಾಳಿ ಮಾಡೋಣ”+ ಅಂದ. 31 ಆದ್ರೆ ಅವನ ಜೊತೆ ಹೋಗಿದ್ದ ಗಂಡಸರು “ಅವ್ರ ಜೊತೆ ಹೋರಾಡೋಕೆ ಸಾಧ್ಯಾನೇ ಇಲ್ಲ. ಅವರು ನಮಗಿಂತ ತುಂಬ ಬಲಿಷ್ಠರು”+ ಅಂದ್ರು. 32 ಅವರು ಇಸ್ರಾಯೇಲ್ಯರಿಗೆ ಕಾನಾನ್ ದೇಶದ ಬಗ್ಗೆ ಇನ್ನೂ ಕೆಟ್ಟ ಕೆಟ್ಟ ಸುದ್ದಿ ಕೊಡ್ತಾ+ “ನಾವು ಸುತ್ತಿ ನೋಡಿದ ಆ ದೇಶ ಅಪಾಯಕರ ದೇಶ, ಅಲ್ಲಿ ನಾವು ಬದುಕುಳಿಯೋಕೆ ಆಗಲ್ಲ. ನಾವು ನೋಡಿದ ಎಲ್ಲ ಜನ್ರು ತುಂಬ ಎತ್ತರವಾಗಿ, ಬಲಿಷ್ಠರಾಗಿ ಇದ್ರು.+ 33 ಅಲ್ಲಿ ನಾವು ನೆಫೀಲಿಯರನ್ನ ನೋಡಿದ್ವಿ. ಅವರು ನೆಫೀಲಿಯರ ವಂಶದವರಾದ ಅನಾಕ್ಯರು.+ ಅವ್ರ ಮುಂದೆ ನಾವು ಮಿಡತೆಗಳ ತರ ಇದ್ವಿ. ಅವ್ರ ಕಣ್ಣಿಗೂ ನಾವು ಮಿಡತೆಗಳ ತರ ಕಾಣ್ತಿದ್ವಿ” ಅಂದ್ರು.
14 ಇದನ್ನ ಕೇಳಿ ಇಸ್ರಾಯೇಲ್ಯರೆಲ್ಲ ಜೋರಾಗಿ ಕಿರುಚಿದ್ರು. ಅವರು ರಾತ್ರಿ ಇಡೀ ಅತ್ತು ಗೋಳಾಡ್ತಾ+ 2 ಮೋಶೆ, ಆರೋನರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.+ ಎಲ್ರು ಅವರಿಬ್ರ ವಿರುದ್ಧ ಮಾತಾಡ್ತಾ “ನಾವು ಈಜಿಪ್ಟ್ ದೇಶದಲ್ಲೇ ಸತ್ತಿದ್ರೆ ಚೆನ್ನಾಗಿರುತ್ತಿತ್ತು. ಈ ಕಾಡಲ್ಲಾದ್ರೂ ಸಾಯಬಾರದಿತ್ತಾ? 3 ಯೆಹೋವ ನಮ್ಮನ್ನ ಯಾಕೆ ಆ ದೇಶಕ್ಕೆ ಕರ್ಕೊಂಡು ಹೋಗ್ತಿದ್ದಾನೆ? ನಮ್ಮನ್ನ ಕತ್ತಿಯಿಂದ ಸಾಯಿಸಬೇಕಂತಾನಾ?+ ನಮ್ಮ ಹೆಂಡತಿ-ಮಕ್ಕಳು ಸೆರೆಯಾಗಿ ಹೋಗಬೇಕಂತಾನಾ?+ ಇದಕ್ಕಿಂತ ನಾವು ಈಜಿಪ್ಟಿಗೆ ವಾಪಸ್ ಹೋಗೋದೇ ಒಳ್ಳೇದು”+ ಅಂದ್ರು. 4 ಅಷ್ಟೇ ಅಲ್ಲ “ನಾವೇ ಒಬ್ಬ ನಾಯಕನನ್ನ ಆರಿಸ್ಕೊಂಡು ಈಜಿಪ್ಟ್‌ಗೆ ವಾಪಸ್ ಹೋಗೋಣ” ಅಂತ ಮಾತಾಡ್ಕೊಳ್ತಾ ಇದ್ರು!+
5 ಆಗ ಮೋಶೆ ಮತ್ತೆ ಆರೋನ ಎಲ್ಲ ಇಸ್ರಾಯೇಲ್ ಜನ್ರ ಮುಂದೆ ಮಂಡಿಯೂರಿ ನೆಲದ ತನಕ ಬಾಗಿದ್ರು. 6 ಇದನ್ನ ನೋಡಿ ಕಾನಾನ್ ದೇಶ ಸಂಚರಿಸಿ ನೋಡಿದ ಗೂಢಚಾರರಲ್ಲಿ ನೂನನ ಮಗ ಯೆಹೋಶುವ,+ ಯೆಫುನ್ನೆಯ ಮಗ ಕಾಲೇಬ+ ದುಃಖದಿಂದ ತಮ್ಮ ಬಟ್ಟೆ ಹರ್ಕೊಂಡ್ರು. 7 ಅವರು ಎಲ್ಲ ಇಸ್ರಾಯೇಲ್ಯರಿಗೆ “ನಾವು ಹೋಗಿ ನೋಡ್ಕೊಂಡು ಬಂದ ಆ ದೇಶ ತುಂಬ ಚೆನ್ನಾಗಿದೆ.+ 8 ಯೆಹೋವ ನಮ್ಮನ್ನ ಮೆಚ್ಚಿರೋದಾದ್ರೆ ಹಾಲೂ ಜೇನೂ ಹರಿಯೋ ಆ ದೇಶಕ್ಕೆ ನಮ್ಮನ್ನ ಖಂಡಿತ ಕರ್ಕೊಂಡು ಹೋಗ್ತಾನೆ. ಅದನ್ನ ನಮಗೆ ಆಸ್ತಿಯಾಗಿ ಕೊಡ್ತಾನೆ.+ 9 ಆದ್ರೆ ನೀವು ಯೆಹೋವನ ವಿರುದ್ಧ ದಂಗೆ ಏಳಬಾರದು. ಆ ದೇಶದ ಜನ್ರಿಗೆ ಹೆದರಬಾರದು.+ ಅವರನ್ನ ಸುಲಭವಾಗಿ ಸೋಲಿಸೋಕೆ ನಮ್ಮಿಂದಾಗುತ್ತೆ. ಅವರನ್ನ ಕಾಪಾಡೋಕೆ ಯಾರೂ ಇಲ್ಲ. ಆದ್ರೆ ನಮ್ಮ ಜೊತೆ ಯೆಹೋವ ಇದ್ದಾನೆ.+ ಹಾಗಾಗಿ ಅವರಿಗೆ ಹೆದರಬೇಡಿ” ಅಂದ್ರು.
10 ಆದ್ರೆ ಜನ್ರೆಲ್ಲ ಅವರಿಬ್ರನ್ನ ಕಲ್ಲು ಹೊಡೆದು ಕೊಲ್ಲಬೇಕಂತ+ ಮಾತಾಡ್ಕೊಂಡ್ರು. ಆಗ ಎಲ್ಲ ಇಸ್ರಾಯೇಲ್ಯರಿಗೆ ದೇವದರ್ಶನ ಡೇರೆ ಮೇಲೆ ಯೆಹೋವನ ಮಹಿಮೆ ಕಾಣಿಸ್ತು.+
11 ಆಮೇಲೆ ಯೆಹೋವ ಮೋಶೆಗೆ “ಈ ಜನ ಇನ್ನೆಷ್ಟು ದಿನ ನನಗೆ ಗೌರವ ಕೊಡದೆ ಇರ್ತಾರೆ?+ ನಾನು ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡಿದ್ರೂ ನನ್ನ ಮೇಲೆ ನಂಬಿಕೆ ಇಲ್ಲ.+ 12 ಅವ್ರಿಗೆ ಅಂಟುರೋಗ ಬರೋ ತರ ಮಾಡಿ ಎಲ್ರನ್ನ ನಾಶ ಮಾಡ್ತೀನಿ. ನಿನ್ನ ವಂಶದವರನ್ನ ಅವರಿಗಿಂತ ದೊಡ್ಡ, ಬಲಿಷ್ಠ ಜನಾಂಗ ಆಗೋ ತರ ಮಾಡ್ತೀನಿ”+ ಅಂದನು.
13 ಆದ್ರೆ ಮೋಶೆ ಯೆಹೋವನಿಗೆ “ನಿನ್ನ ಶಕ್ತಿನ ತೋರಿಸಿ ಈಜಿಪ್ಟಿನವರ ಮಧ್ಯದಿಂದ ಈ ನಿನ್ನ ಜನ್ರನ್ನ ಬಿಡಿಸ್ಕೊಂಡು ಬಂದೆ. ಈಗ ನೀನು ಇವರನ್ನ ನಾಶ ಮಾಡಿದ್ರೆ ಈ ಸುದ್ದಿ ಈಜಿಪ್ಟಿನವರಿಗೆ ಮುಟ್ಟುತ್ತೆ.+ 14 ಅವರು ಅದನ್ನೆಲ್ಲ ಈ ದೇಶದ ಜನ್ರಿಗೆ ಹೇಳ್ತಾರೆ. ಯೆಹೋವನಾದ ನೀನು ಈ ನಿನ್ನ ಜನ್ರ ಮಧ್ಯ ಇದ್ದೀಯ,+ ಇವ್ರಿಗೆ ಸ್ಪಷ್ಟವಾಗಿ ಕಾಣಿಸ್ಕೊಂಡಿದ್ದೀಯ+ ಅಂತ ಇಲ್ಲಿನ ಜನ ಕೂಡ ಕೇಳಿಸ್ಕೊಂಡಿದ್ದಾರೆ. ನಿನ್ನ ಹೆಸ್ರು ಯೆಹೋವ ಅಂತ, ನಿನ್ನ ಜನ್ರ ಮೇಲೆ ನಿನ್ನ ಮೋಡ ನಿಲ್ಲೋ ತರ ಮಾಡಿದ್ದೀಯ ಅಂತ, ಅಷ್ಟೇ ಅಲ್ಲ ಹಗಲಲ್ಲಿ ಮೋಡದಲ್ಲೂ ರಾತ್ರಿಯಲ್ಲಿ ಬೆಂಕಿಯಲ್ಲೂ ಇದ್ದು ಅವ್ರ ಮುಂದೆಮುಂದೆ ಹೋಗ್ತೀಯ+ ಅನ್ನೋ ವಿಷ್ಯನೂ ಅವರಿಗೆ ಗೊತ್ತು. 15 ಈಗ ನೀನು ಈ ಜನ್ರನ್ನೆಲ್ಲ ಒಂದೇ ಸಾರಿ ಸಾಯಿಸಿಬಿಟ್ರೆ ನಿನ್ನ ಪ್ರಖ್ಯಾತಿಯ ಬಗ್ಗೆ ಕೇಳಿಸ್ಕೊಂಡ ಬೇರೆ ಬೇರೆ ದೇಶದ ಜನ್ರು, 16 ‘ತಾನು ಮಾತು ಕೊಟ್ಟ ದೇಶಕ್ಕೆ ಅವರನ್ನ ಕರ್ಕೊಂಡು ಹೋಗೋಕೆ ಯೆಹೋವನ ಕೈಯಲ್ಲಿ ಆಗಲಿಲ್ಲ. ಹಾಗಾಗಿ ಅವರನ್ನ ಕಾಡಲ್ಲೇ ಸಾಯಿಸಿಬಿಟ್ಟ’ ಅಂತ ಹೇಳ್ತಾರೆ.+ 17 ಯೆಹೋವನೇ ನೀನು ಮಾತು ಕೊಟ್ಟಿರೋ ತರ ನಿನಗೆಷ್ಟು ಶಕ್ತಿ ಇದೆ ಅಂತ ದಯವಿಟ್ಟು ತೋರಿಸು. ನೀನು ಮಾತು ಕೊಟ್ಟಾಗ 18 ‘ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ+ ಧಾರಾಳವಾಗಿ ತೋರಿಸ್ತಾನೆ, ತಪ್ಪು ಅಪರಾಧಗಳನ್ನ ಕ್ಷಮಿಸ್ತಾನೆ, ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ, ತಂದೆಗಳು ಮಾಡಿದ ಪಾಪದ ಪರಿಣಾಮಗಳನ್ನ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಅನುಭವಿಸೋ ತರ ಬಿಟ್ಟುಬಿಡ್ತಾನೆ’ ಅಂತ ಹೇಳಿದ್ದೆ ಅಲ್ವಾ.+ 19 ನೀನು ಈ ಜನ್ರಿಗೆ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸಿ ದಯವಿಟ್ಟು ಅವ್ರ ಪಾಪನ ಕ್ಷಮಿಸು. ನೀನು ಈ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದಾಗಿಂದ ಇಲ್ಲಿ ತನಕ ಕ್ಷಮಿಸ್ತಾ ಬಂದ ಹಾಗೆ ಈ ಸಲಾನೂ ಕ್ಷಮಿಸು”+ ಅಂತ ಬೇಡ್ಕೊಂಡ.
20 ಅದಕ್ಕೆ ಯೆಹೋವ “ಸರಿ, ನೀನು ಹೇಳಿದ ಹಾಗೇ ಅವರನ್ನ ಕ್ಷಮಿಸ್ತೀನಿ.+ 21 ನನ್ನ ಜೀವದಾಣೆ, ಭೂಮಿ ಮೇಲೆಲ್ಲ ಯೆಹೋವನ ಮಹಿಮೆ ತುಂಬ್ಕೊಳ್ಳುತ್ತೆ.+ 22 ಆದ್ರೆ ನನ್ನ ಮಹಿಮೆಯನ್ನ ನಾನು ಈಜಿಪ್ಟಲ್ಲಿ, ಕಾಡಲ್ಲಿ ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡಿನೂ+ ನನ್ನನ್ನ ತುಂಬ* ಸಲ ಪರೀಕ್ಷಿಸ್ತಾ+ ನನ್ನ ಮಾತನ್ನ ಕೇಳದೆ+ ಹೋದ ಇವ್ರಲ್ಲಿ ಒಬ್ಬನೂ 23 ನಾನು ಅವ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶವನ್ನ ಯಾವತ್ತೂ ನೋಡಲ್ಲ. ನನಗೆ ಗೌರವ ಕೊಡದೇ ಇರೋ ಈ ಜನ್ರಲ್ಲಿ ಒಬ್ಬನೂ ಆ ದೇಶವನ್ನ ನೋಡಲ್ಲ.+ 24 ಆದ್ರೆ ನನ್ನ ಸೇವಕ ಕಾಲೇಬ+ ಅವರ ತರ ಅಲ್ಲ. ನಾನು ಹೇಳಿದ ಹಾಗೇ ಮನಸ್ಸಾರೆ* ನಡೀತಾ ಬಂದಿದ್ದಾನೆ. ಹಾಗಾಗಿ ಅವನು ನೋಡ್ಕೊಂಡು ಬಂದಿರೋ ದೇಶಕ್ಕೆ ಅವನನ್ನ ಖಂಡಿತ ಕರ್ಕೊಂಡು ಹೋಗ್ತೀನಿ. ಆ ದೇಶ ಅವನ ಸಂತತಿಯವರ ಸ್ವತ್ತಾಗುತ್ತೆ.+ 25 ಅಮಾಲೇಕ್ಯರು, ಕಾನಾನ್ಯರು+ ಈ ಕಣಿವೆಯಲ್ಲಿ ವಾಸ ಮಾಡೋದ್ರಿಂದ ನಾಳೆ ನೀವು ವಾಪಸ್ ಹೋಗಿ ಕೆಂಪು ಸಮುದ್ರದ ಕಡೆ ಹೋಗೋ ದಾರಿಯಾಗಿ ಕಾಡಿಗೆ ಹೋಗಿ” ಅಂದನು.+
26 ಆಮೇಲೆ ಯೆಹೋವ ಮೋಶೆಗೆ, ಆರೋನನಿಗೆ ಹೀಗಂದನು: 27 “ಈ ಕೆಟ್ಟ ಜನ್ರು ಇನ್ನೆಷ್ಟು ದಿನ ನನ್ನ ವಿರುದ್ಧ ಗೊಣಗ್ತಾ ಇರ್ತಾರೆ?+ ಇಸ್ರಾಯೇಲ್ಯರು ನನ್ನ ವಿರುದ್ಧ ಗೊಣಗ್ತಾ ಹೇಳ್ತಿರೋ+ ಮಾತುಗಳನ್ನ ಕೇಳಿಸ್ಕೊಂಡೆ. 28 ಅವರಿಗೆ ಹೀಗೆ ಹೇಳಿ: ‘ಯೆಹೋವ ಹೇಳೋದು ಏನಂದ್ರೆ “ನನ್ನ ಜೀವದಾಣೆ, ನೀವು ಏನು ಹೇಳಿದ್ರೋ ನಾನು ಅದನ್ನೇ ನಿಮಗೆ ಮಾಡ್ತೀನಿ.+ 29 ಈ ಕಾಡಲ್ಲೇ ನಿಮ್ಮ ಹೆಣಗಳು ಬೀಳುತ್ತೆ.+ ಪಟ್ಟಿಯಾದ 20 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ರೂ ಅಂದ್ರೆ ನನ್ನ ವಿರುದ್ಧ ಗೊಣಗಿದ ಎಲ್ರೂ ಇಲ್ಲೇ ಸಾಯ್ತೀರ.+ 30 ನಿಮಗೆ ಕೊಡ್ತೀನಿ ಅಂತ ಮಾತು ಕೊಟ್ಟ ಆ ದೇಶಕ್ಕೆ+ ಯೆಫುನ್ನೆಯ ಮಗ ಕಾಲೇಬ, ನೂನನ ಮಗ ಯೆಹೋಶುವ ಬಿಟ್ಟು ಬೇರೆ ಯಾರೂ ಹೋಗಲ್ಲ.+
31 ಕೈದಿಗಳಾಗಿ ಹೋಗ್ತಾರೆ+ ಅಂತ ನೀವು ಹೇಳಿದ ನಿಮ್ಮ ಮಕ್ಕಳನ್ನ ಆ ದೇಶಕ್ಕೆ ಕರ್ಕೊಂಡು ಹೋಗ್ತೀನಿ. ನೀವು ತಿರಸ್ಕರಿಸಿದ ಆ ದೇಶ+ ಅವ್ರಿಗೆ ಚಿರಪರಿಚಿತ ಸ್ಥಳ ಆಗುತ್ತೆ. 32 ಆದ್ರೆ ನೀವಂತೂ ಈ ಕಾಡಲ್ಲೇ ಸಾಯ್ತೀರ. 33 ನಿಮ್ಮ ಮಕ್ಕಳು ಈ ಕಾಡಲ್ಲಿ 40 ವರ್ಷ ತನಕ ಕುರುಬರಾಗಿ ಇರ್ತಾರೆ.+ ನೀವು ನನ್ನ ಮೇಲೆ ನಂಬಿಕೆ ಇಡದಿರೋ ಕಾರಣ* ನಿಮ್ಮಲ್ಲಿ ಪ್ರತಿಯೊಬ್ಬ ಸಾಯೋ ತನಕ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸಬೇಕಾಗುತ್ತೆ.+ 34 ನೀವು ಕಾನಾನ್ ದೇಶನ ಸಂಚರಿಸಿ ನೋಡಿದ್ದು 40 ದಿನ+ ಅಲ್ವಾ? ಹಾಗಾಗಿ ಒಂದು ದಿನಕ್ಕೆ ಒಂದು ವರ್ಷದ ಲೆಕ್ಕದಲ್ಲಿ ಆ 40 ದಿನಗಳಿಗೆ 40 ವರ್ಷ+ ನಿಮ್ಮ ಪಾಪಗಳಿಗೆ ಶಿಕ್ಷೆ ಅನುಭವಿಸ್ತೀರ. ನನ್ನನ್ನ ವಿರೋಧಿಸಿದ್ರೆ* ಏನಾಗುತ್ತೆ ಅಂತ ಆಗ ನಿಮಗೆ ಗೊತ್ತಾಗುತ್ತೆ.
35 ಯೆಹೋವನಾದ ನಾನು ಹೇಳ್ತಾ ಇದ್ದೀನಿ. ನನ್ನ ವಿರುದ್ಧ ಎದ್ದಿರೋ ಈ ಎಲ್ಲ ಕೆಟ್ಟವರಿಗೆ ಶಿಕ್ಷೆ ಕೊಡ್ತೀನಿ. ಈ ಕಾಡಲ್ಲೇ ಅವರು ನಾಶ ಆಗ್ತಾರೆ, ಇಲ್ಲೇ ಅವರು ಸತ್ತುಹೋಗ್ತಾರೆ.+ 36 ಕಾನಾನ್ ದೇಶನ ಸಂಚರಿಸಿ ನೋಡೋಕೆ ಮೋಶೆ ಕಳಿಸಿದ ಗಂಡಸರಲ್ಲಿ ಯಾರು ಆ ದೇಶದ ಬಗ್ಗೆ ಕೆಟ್ಟ ಸುದ್ದಿ ತಂದು+ ಎಲ್ರೂ ಮೋಶೆ ವಿರುದ್ಧ ಗೊಣಗೋ ತರ ಮಾಡಿದ್ರೋ ಅವರು 37 ಖಂಡಿತ ಶಿಕ್ಷೆ ಅನುಭವಿಸ್ತಾರೆ. ಆ ದೇಶದ ಬಗ್ಗೆ ಕೆಟ್ಟ ಸುದ್ದಿ ತಂದವರೆಲ್ಲ ಯೆಹೋವನ ಮುಂದೆ ಸಾಯ್ತಾರೆ.+ 38 ಆದ್ರೆ ಆ ದೇಶನ ಸಂಚರಿಸಿ ನೋಡೋಕೆ ಹೋದವ್ರಲ್ಲಿ ನೂನನ ಮಗ ಯೆಹೋಶುವ, ಯೆಫುನ್ನೆಯ ಮಗ ಕಾಲೇಬ ಮಾತ್ರ ಬದುಕಿ ಉಳಿತಾರೆ.”’”+
39 ಈ ಮಾತುಗಳನ್ನ ಮೋಶೆ ಎಲ್ಲಾ ಇಸ್ರಾಯೇಲ್ಯರಿಗೆ ಹೇಳಿದಾಗ ತುಂಬ ದುಃಖಪಟ್ರು. 40 ಅಷ್ಟೇ ಅಲ್ಲ ಅವರು ಬೆಳಿಗ್ಗೆ ಬೇಗ ಎದ್ದು ಬೆಟ್ಟ ಹತ್ತಿ ಹೋಗೋಕೆ ಪ್ರಯತ್ನಿಸ್ತಾ “ನಾವು ಪಾಪ ಮಾಡಿದ್ದೀವಿ. ಆದ್ರೆ ನಾವೀಗ ಯೆಹೋವ ಹೇಳಿದ ಜಾಗಕ್ಕೆ ಹೋಗೋಕೆ ತಯಾರಾಗಿದ್ದೀವಿ” ಅಂದ್ರು.+ 41 ಆಗ ಮೋಶೆ “ಯೆಹೋವನ ಅಪ್ಪಣೆನ ಮೀರಿ ಹೋಗಬೇಡಿ. ನಿಮಗೆ ಜಯ ಸಿಗಲ್ಲ. 42 ಯೆಹೋವ ನಿಮ್ಮ ಜೊತೆ ಇಲ್ಲ. ಹಾಗಾಗಿ ಬೆಟ್ಟ ಹತ್ತಬೇಡಿ. ನೀವು ಹೋದ್ರೆ ಶತ್ರುಗಳು ನಿಮ್ಮನ್ನ ಸೋಲಿಸ್ತಾರೆ.+ 43 ಅಲ್ಲಿ ಅಮಾಲೇಕ್ಯರು ಕಾನಾನ್ಯರು ಇದ್ದಾರೆ. ಅವರು ನಿಮ್ಮ ವಿರುದ್ಧ ಯುದ್ಧ ಮಾಡ್ತಾರೆ.+ ನೀವು ಯೆಹೋವನಿಗೆ ವಿಧೇಯರಾಗದ ಕಾರಣ ಯೆಹೋವ ನಿಮ್ಮ ಜೊತೆ ಇರಲ್ಲ.+ ಹಾಗಾಗಿ ಶತ್ರುಗಳು ನಿಮ್ಮನ್ನ ಕತ್ತಿಯಿಂದ ಸಾಯಿಸ್ತಾರೆ” ಅಂದ.
44 ಇಷ್ಟು ಹೇಳಿದ್ರೂ ಅವರು ಅಹಂಕಾರದಿಂದ ಬೆಟ್ಟ ಹತ್ತೋಕೆ ಶುರು ಮಾಡಿದ್ರು.+ ಆದ್ರೆ ಯೆಹೋವನ ಒಪ್ಪಂದದ ಮಂಜೂಷ ಪಾಳೆಯದ ಮಧ್ಯದಲ್ಲೇ ಇತ್ತು.+ ಮೋಶೆನೂ ಅಲ್ಲೇ ಇದ್ದ. 45 ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರು ಕಾನಾನ್ಯರು ಇಳಿದುಬಂದು ಅವ್ರನ್ನ ಹೊಡೆದು ಹೊರ್ಮಾ ಪಟ್ಟಣ ತನಕ ಅಟ್ಟಿಸ್ಕೊಂಡು ಹೋಗಿ ಚೆದರಿಸಿಬಿಟ್ರು.+
15 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ಹೋದ್ಮೇಲೆ 3 ಯೆಹೋವನಿಗೆ ದನ-ಹೋರಿ ಅಥವಾ ಆಡು-ಕುರಿಗಳನ್ನ ಸರ್ವಾಂಗಹೋಮ ಬಲಿಯಾಗಿ+ ವಿಶೇಷ ಹರಕೆ ತೀರಿಸೋ ಬಲಿಯಾಗಿ ಸ್ವಇಷ್ಟದ ಕಾಣಿಕೆಯಾಗಿ+ ಅಥವಾ ವರ್ಷದ ಬೇರೆಬೇರೆ ಕಾಲಗಳಲ್ಲಿ ಆಚರಿಸೋ ಹಬ್ಬಗಳಲ್ಲಿ+ ಬಲಿಯಾಗಿ ಬೆಂಕಿಯಲ್ಲಿ ಅರ್ಪಿಸಿ ಅದ್ರ ಸುವಾಸನೆಯಿಂದ ಯೆಹೋವನನ್ನ ಖುಷಿ* ಪಡಿಸೋಕೆ+ ಇಷ್ಟಪಟ್ರೆ 4 ನಿಮ್ಮ ಬಲಿ ಜೊತೆ ಯೆಹೋವನಿಗೆ ನುಣ್ಣಗಿನ ಹಿಟ್ಟನ್ನ ಧಾನ್ಯ ಅರ್ಪಣೆಯಾಗಿ ಕೊಡಬೇಕು.+ ಆ ಹಿಟ್ಟು ಒಂದು ಏಫಾ* ಅಳತೆಯ ಹತ್ತರಲ್ಲಿ ಒಂದು ಭಾಗದಷ್ಟು ಇರಬೇಕು. ಅದಕ್ಕೆ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು* ಎಣ್ಣೆ ಬೆರೆಸಿ ಕೊಡಬೇಕು. 5 ನೀವು ಸರ್ವಾಂಗಹೋಮ ಬಲಿ ಕೊಡುವಾಗೆಲ್ಲ ಅಥವಾ ಗಂಡು ಕುರಿಮರಿಯನ್ನ ಬಲಿಯಾಗಿ ಕೊಡುವಾಗೆಲ್ಲ ಒಂದು ಹಿನ್ ಅಳತೆಯ ನಾಲ್ಕನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು.+ 6 ಒಂದು ಟಗರನ್ನ ಕೊಡುವಾಗ ಅದ್ರ ಜೊತೆ ಧಾನ್ಯ ಅರ್ಪಣೆ ಕೊಡಬೇಕು. ಆ ಧಾನ್ಯ ಅರ್ಪಣೆಗಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಒಂದು ಹಿನ್ ಅಳತೆಯ ಮೂರನೇ ಒಂದು ಭಾಗದಷ್ಟು ಎಣ್ಣೆ ಬೆರೆಸಿ ಕೊಡಬೇಕು. 7 ಅಷ್ಟೇ ಅಲ್ಲ ಒಂದು ಹಿನ್ ಅಳತೆಯ ಮೂರನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು. ಈ ಬಲಿಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.
8 ಆದ್ರೆ ನೀವು ಒಂದು ಹೋರಿನ ಸರ್ವಾಂಗಹೋಮ ಬಲಿಯಾಗಿ+ ಅಥವಾ ವಿಶೇಷ ಹರಕೆ+ ತೀರಿಸೋ ಬಲಿಯಾಗಿ ಅಥವಾ ಸಮಾಧಾನ ಬಲಿಯಾಗಿ ಯೆಹೋವನಿಗೆ ಅರ್ಪಿಸೋದಾದ್ರೆ+ 9 ಆ ಹೋರಿ ಜೊತೆ ಧಾನ್ಯ ಅರ್ಪಣೆನೂ ಕೊಡಬೇಕು.+ ಅದಕ್ಕಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಅರ್ಧ ಹಿನ್ ಅಳತೆಯಷ್ಟು ಎಣ್ಣೆ ಬೆರೆಸಿ ಕೊಡಬೇಕು. 10 ಅಷ್ಟೇ ಅಲ್ಲ ಅರ್ಧ ಹಿನ್ ಅಳತೆಯಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು.+ ಇದು ಬೆಂಕಿಯಲ್ಲಿ ಅರ್ಪಿಸೋ ಬಲಿ. ಈ ಬಲಿಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. 11 ಎತ್ತು, ಟಗರು, ಗಂಡು ಕುರಿಮರಿ ಅಥವಾ ಆಡುಗಳನ್ನ ಅರ್ಪಿಸೋವಾಗೆಲ್ಲ ಈ ಅರ್ಪಣೆಗಳನ್ನ ಕೊಡಬೇಕು. 12 ನೀವು ಎಷ್ಟೇ ಪ್ರಾಣಿಗಳನ್ನ ಬಲಿಯಾಗಿ ಅರ್ಪಿಸಿದ್ರೂ ಪ್ರತಿಯೊಂದು ಪ್ರಾಣಿ ಜೊತೆ ಧಾನ್ಯ ಅರ್ಪಣೆನೂ ಪಾನ ಅರ್ಪಣೆನೂ ಕೊಡಬೇಕು. 13 ಇಸ್ರಾಯೇಲ್ಯರಾದ ನಿಮ್ಮಲ್ಲಿ ಪ್ರತಿಯೊಬ್ಬ ಇದೇ ತರ ಪ್ರಾಣಿಯನ್ನ ಬೆಂಕಿಯಲ್ಲಿ ಅರ್ಪಿಸಬೇಕು. ಅದ್ರ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ.
14 ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿ ಅಥವಾ ತುಂಬ ವರ್ಷಗಳಿಂದ ನಿಮ್ಮ ಮಧ್ಯ ಇರೋ ವಿದೇಶಿ ಬೆಂಕಿಯಲ್ಲಿ ಬಲಿ ಅರ್ಪಿಸಿ ಅದ್ರ ಸುವಾಸನೆಯಿಂದ ಯೆಹೋವನನ್ನ ಖುಷಿ* ಪಡಿಸೋಕೆ ಇಷ್ಟಪಟ್ರೆ ಅವನು ಕೂಡ ಬಲಿನ ನೀವು ಅರ್ಪಿಸೋ ಹಾಗೇ ಅರ್ಪಿಸಬೇಕು.+ 15 ಇಸ್ರಾಯೇಲ್ ಸಭೆಯವರಾದ ನಿಮಗೂ ನಿಮ್ಮ ಮಧ್ಯ ವಾಸ ಮಾಡ್ತಿರೋ ವಿದೇಶಿಯರಿಗೂ ಒಂದೇ ನಿಯಮ. ಇದನ್ನ ನೀವು ಎಲ್ಲ ಪೀಳಿಗೆಯವರು ಪಾಲಿಸಬೇಕು. ನೀವೂ ವಿದೇಶಿಯರೂ ಯೆಹೋವನ ದೃಷ್ಟಿಯಲ್ಲಿ ಸಮಾನರು.+ 16 ನಿಮಗೂ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಿಗೂ ಒಂದೇ ನಿಯಮ, ಒಂದೇ ತೀರ್ಪು ಇರಬೇಕು.’”
17 ಯೆಹೋವ ಮೋಶೆಗೆ ಹೀಗಂದನು: 18 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶದಲ್ಲಿ 19 ನಿಮಗಾಗಿ ಬೆಳೆ ಬೆಳೆಸಿದಾಗ+ ಅದ್ರಲ್ಲಿ ಸ್ವಲ್ಪ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. 20 ನೀವು ದವಸಧಾನ್ಯದ ಮೊದಲ ಬೆಳೆಯಲ್ಲಿ+ ಸ್ವಲ್ಪ ನುಚ್ಚು ನುಚ್ಚಾಗಿ ಕುಟ್ಟಿ ಅದ್ರಿಂದ ಬಳೆ ಆಕಾರದ ರೊಟ್ಟಿಗಳನ್ನ ಮಾಡಿ ಕಾಣಿಕೆಯಾಗಿ ಕೊಡಬೇಕು. ಕಣದಲ್ಲಿನ ಬೆಳೆಯಲ್ಲಿ ಸ್ವಲ್ಪವನ್ನ ಯಾವ ವಿಧದಲ್ಲಿ ಕಾಣಿಕೆಯಾಗಿ ಅರ್ಪಿಸ್ತೀರೋ ಅದೇ ವಿಧದಲ್ಲಿ ಆ ರೊಟ್ಟಿಗಳನ್ನ ಸಹ ಅರ್ಪಿಸಬೇಕು. 21 ದವಸಧಾನ್ಯದ ಮೊದಲ ಬೆಳೆಯಲ್ಲಿ ಮೊದ್ಲು ಕುಟ್ಟಿ ಮಾಡಿದ ನುಚ್ಚಿನಲ್ಲಿ ಸ್ವಲ್ಪ ನೀವು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ನಿಮ್ಮ ಪೀಳಿಗೆಯವರೆಲ್ಲ ಇದನ್ನ ಪಾಲಿಸಬೇಕು.
22 ನೀವು ಏನಾದ್ರೂ ತಪ್ಪು ಮಾಡಿದ್ರೆ ಯೆಹೋವ ಮೋಶೆ ಮೂಲಕ ಕೊಟ್ಟ ಈ ಆಜ್ಞೆಗಳನ್ನ ಪಾಲಿಸದೇ ಇದ್ರೆ 23 ಅಂದ್ರೆ ಯೆಹೋವ ನಿಮಗೆ ಕೊಟ್ಟಿರೋ ಮತ್ತು ಮೋಶೆ ಮೂಲಕ ಯೆಹೋವ ಆಜ್ಞೆಗಳನ್ನ ಕೊಟ್ಟ ದಿನದಿಂದ ನಿಮ್ಮ ವಂಶದವರ ಕಾಲದ ತನಕ ಅನ್ವಯವಾಗೋ ನಿಯಮಗಳನ್ನ ಪಾಲಿಸದೇ ಇದ್ರೆ ಹೀಗೆ ಮಾಡಬೇಕು: 24 ಎಲ್ಲ ಇಸ್ರಾಯೇಲ್ಯರು ಆಕಸ್ಮಿಕವಾಗಿ ತಿಳಿಯದೆ ತಪ್ಪು ಮಾಡಿದ್ರೆ, ಅದ್ರ ಬಗ್ಗೆ ಗೊತ್ತಾದಾಗ ಎಲ್ರೂ ಒಂದು ಎತ್ತನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಅದ್ರ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಅದ್ರ ಜೊತೆ ಧಾನ್ಯ ಅರ್ಪಣೆಯನ್ನ ಪಾನ ಅರ್ಪಣೆಯನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಅರ್ಪಿಸಬೇಕು.+ ಅಷ್ಟೇ ಅಲ್ಲ ಒಂದು ಆಡುಮರಿನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ 25 ಪುರೋಹಿತ ಎಲ್ಲ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವ್ರನ್ನ ದೇವರು ಕ್ಷಮಿಸ್ತಾನೆ.+ ಅವರು ಗೊತ್ತಿಲ್ಲದೆ ಪಾಪ ಮಾಡಿದ್ರಿಂದ ಯೆಹೋವನಿಗೆ ಬೆಂಕಿಯಲ್ಲಿ ಬಲಿ ಅರ್ಪಿಸಿದ್ರಿಂದ, ತಮ್ಮ ಪಾಪಕ್ಕಾಗಿ ಯೆಹೋವನಿಗೆ ಪಾಪಪರಿಹಾರಕ ಬಲಿಯನ್ನ ಅರ್ಪಿಸಿದ್ರಿಂದ ಅವ್ರಿಗೆ ಕ್ಷಮೆ ಸಿಗುತ್ತೆ. 26 ಆಕಸ್ಮಿಕವಾಗಿ ಪಾಪ ಮಾಡಿದ್ರಿಂದ ದೇವರು ಇಸ್ರಾಯೇಲ್ಯರನ್ನೂ ಅವ್ರ ಮಧ್ಯ ವಾಸಿಸ್ತಿರೋ ವಿದೇಶಿಯರನ್ನೂ ಕ್ಷಮಿಸ್ತಾನೆ.
27 ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಪಾಪ ಮಾಡಿದ್ರೆ ಒಂದು ವರ್ಷದೊಳಗಿನ ಒಂದು ಹೆಣ್ಣು ಆಡನ್ನ ಪಾಪಪರಿಹಾರಕ ಬಲಿಯಾಗಿ ಕೊಡಬೇಕು.+ 28 ಗೊತ್ತಿಲ್ಲದೆ ಪಾಪ ಮಾಡಿದ ಆ ವ್ಯಕ್ತಿಗಾಗಿ ಪುರೋಹಿತ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ಸಿಗುತ್ತೆ.+ 29 ಇಸ್ರಾಯೇಲ್ಯರಾದ ನೀವಾಗ್ಲಿ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಾಗ್ಲಿ ಗೊತ್ತಿಲ್ಲದೆ ಪಾಪ ಮಾಡಿದಾಗ ಇಬ್ರಿಗೂ ಒಂದೇ ನಿಯಮ ಅನ್ವಯ ಆಗುತ್ತೆ.+
30 ಆದ್ರೆ ಇಸ್ರಾಯೇಲ್ಯರಾದ ನಿಮ್ಮಲ್ಲಿ ಅಥವಾ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಲ್ಲಿ ಯಾರಾದ್ರೂ ಬೇಕುಬೇಕಂತಾನೇ ಪಾಪ ಮಾಡಿದ್ರೆ+ ಅವನು ಯೆಹೋವನನ್ನ ಕೆಟ್ಟದಾಗಿ ಬೈದ ಹಾಗೆ. ಅಂಥವನನ್ನ ಸಾಯಿಸಬೇಕು. 31 ಯೆಹೋವನ ಮಾತನ್ನ ಅಸಡ್ಡೆ ಮಾಡಿ ಆತನ ಆಜ್ಞೆಯನ್ನ ಪಾಲಿಸದೇ ಇದ್ದದ್ರಿಂದ ಅವನನ್ನ ಸಾಯಿಸ್ಲೇಬೇಕು.+ ಅವನು ಮಾಡಿದ ಪಾಪಕ್ಕೆ ಶಿಕ್ಷೆ ಅನುಭವಿಸ್ಲೇಬೇಕು.’”+
32 ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಸಬ್ಬತ್ ದಿನದಲ್ಲಿ ಒಬ್ಬ ಕಟ್ಟಿಗೆ ಕೂಡಿಸ್ತಿದ್ದ.+ 33 ಇದನ್ನ ನೋಡಿದವರು ಅವನನ್ನ ಮೋಶೆ, ಆರೋನ ಮತ್ತು ಎಲ್ಲ ಜನ್ರ ಹತ್ರ ಕರ್ಕೊಂಡು ಬಂದ್ರು. 34 ಇಂಥವನಿಗೆ ಏನು ಮಾಡಬೇಕಂತ ನಿಯಮದಲ್ಲಿ ವಿವರವಾಗಿ ತಿಳಿಸದೇ ಇದ್ದದ್ರಿಂದ ಅವನನ್ನ ಬಂಧಿಸಿಟ್ರು.+
35 ಆಮೇಲೆ ಯೆಹೋವ ಮೋಶೆಗೆ “ಅವನನ್ನ ಸಾಯಿಸ್ಲೇಬೇಕು.+ ಪಾಳೆಯದ ಹೊರಗೆ ಕರ್ಕೊಂಡು ಹೋಗಿ ಎಲ್ಲ ಇಸ್ರಾಯೇಲ್ಯರು ಕಲ್ಲು ಹೊಡೆದು ಕೊಲ್ಲಬೇಕು”+ ಅಂದನು. 36 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಅವನನ್ನ ಪಾಳೆಯದ ಹೊರಗೆ ಕರ್ಕೊಂಡು ಹೋಗಿ ಕಲ್ಲು ಹೊಡೆದು ಕೊಂದ್ರು.
37 ಯೆಹೋವ ಮೋಶೆಗೆ ಮತ್ತೂ ಹೇಳೋದು ಏನಂದ್ರೆ 38 “ಇಸ್ರಾಯೇಲ್ಯರು ತಮ್ಮ ಅಂಗಿಯ ಕೆಳಭಾಗದ ಅಂಚಿನ ಸುತ್ತ ನೂಲನ್ನ ಎಳೆಎಳೆಯಾಗಿ ಬಿಟ್ಟಿರಬೇಕು. ಆ ಅಂಚಿನ ಮೇಲ್ಭಾಗದಲ್ಲಿ ಸುತ್ತ ಒಂದು ನೀಲಿ ದಾರ ನೇಯ್ದಿರಬೇಕು.+ ಇದನ್ನ ಅವರು ಎಲ್ಲ ಪೀಳಿಗೆಯವರು ಪಾಲಿಸಬೇಕು ಅಂತ ಹೇಳು. 39 ‘ನೂಲನ್ನ ಎಳೆಎಳೆಯಾಗಿ ಬಿಟ್ಟಿರೋ ಅಂಚನ್ನ ನೀವು ನೋಡುವಾಗೆಲ್ಲ ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳನ್ನ ನೆನಪಿಸ್ಕೊಂಡು ಅವುಗಳನ್ನ ಪಾಲಿಸಬೇಕಂತಾನೇ ಈ ನಿಯಮ ಕೊಟ್ಟಿದ್ದೀನಿ.+ ನಿಮ್ಮ ಮನಸ್ಸಿಗೆ ತೋಚಿದ್ದನ್ನ ಕಣ್ಣಿಗೆ ಸರಿ ಕಾಣೋದನ್ನ ಮಾಡಬಾರದು. ಹಾಗೆ ಮಾಡಿದ್ರೆ ನನಗೆ ದ್ರೋಹ ಮಾಡಿದ ಹಾಗೆ.*+ 40 ಈ ನಿಯಮದಿಂದಾಗಿ ನಿಮಗೆ ನನ್ನ ಎಲ್ಲ ಆಜ್ಞೆಗಳನ್ನ ನೆನಪಲ್ಲಿಡೋಕೆ ಆಗುತ್ತೆ. ಅವುಗಳನ್ನ ಪಾಲಿಸಿದ್ರೆ ನಿಮ್ಮ ದೇವರ ದೃಷ್ಟಿಯಲ್ಲಿ ಪವಿತ್ರರಾಗಿ ಇರ್ತಿರ.+ 41 ನಾನೇ ನಿಮ್ಮ ದೇವರು ಅಂತ ನಿಮಗೆ ಗೊತ್ತಾಗೋಕೆ ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದಿರೋ ನಿಮ್ಮ ದೇವರಾದ ಯೆಹೋವ ನಾನೇ.+ ನಾನು ನಿಮ್ಮ ದೇವರಾದ ಯೆಹೋವ.’”+
16 ಆಮೇಲೆ ಕೋರಹ,+ ದಾತಾನ್, ಅಬೀರಾಮ್, ಓನ ಈ ನಾಲ್ಕು ಜನ ಸೇರ್ಕೊಂಡ್ರು. ಕೋರಹ ಇಚ್ಹಾರನ+ ಮಗ, ಕೆಹಾತನ+ ಮೊಮ್ಮಗ, ಲೇವಿಯ+ ಮರಿಮೊಮ್ಮಗ. ದಾತಾನ್ ಮತ್ತು ಅಬೀರಾಮ್ ಇಬ್ರೂ ರೂಬೇನ್ ಕುಲದ ಎಲೀಯಾಬನ+ ಮಕ್ಕಳು. ಓನ ರೂಬೇನ್+ ಕುಲದ ಪೆಲೆತನ ಮಗ. 2 ಆ ನಾಲ್ಕು ಜನ, ಇಸ್ರಾಯೇಲ್ಯರ 250 ಪ್ರಧಾನರು ಮೋಶೆ ವಿರುದ್ಧ ತಿರುಗಿಬಿದ್ರು. ಆ ಪ್ರಧಾನರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಣ್ಯ ಪುರುಷರು. 3 ಅವರೆಲ್ಲ ಸೇರ್ಕೊಂಡು ಬಂದು ಮೋಶೆ ಮತ್ತೆ ಆರೋನನ ವಿರುದ್ಧ+ ಮಾತಾಡ್ತಾ “ಸಾಕು ನಿಮ್ಮ ದರ್ಬಾರ್! ನೀವು ಮಾತ್ರ ತುಂಬ ಪವಿತ್ರರು ಅಂದ್ಕೊಂಡ್ರಾ? ಯೆಹೋವ ಎಲ್ಲಾ ಇಸ್ರಾಯೇಲ್ಯರ ಮಧ್ಯ ಇದ್ದಾನೆ.+ ಎಲ್ಲ ಇಸ್ರಾಯೇಲ್ಯರು, ಅವರಲ್ಲಿ ಒಬ್ಬೊಬ್ಬ ಇಸ್ರಾಯೇಲ್ಯನೂ ಪವಿತ್ರನಾಗಿ ಇದ್ದಾನೆ.+ ಅಂದ್ಮೇಲೆ ಯೆಹೋವನ ಸಭೆಗಿಂತ ನೀವೇ ಮಹಾನ್ ವ್ಯಕ್ತಿಗಳ ಹಾಗೆ ಯಾಕೆ ತೋರಿಸ್ಕೊಳ್ತಾ ಇದ್ದೀರಾ?” ಅಂತ ಕೇಳಿದ್ರು.
4 ಇದನ್ನ ಕೇಳಿದ ಕೂಡ್ಲೇ ಮೋಶೆ ಮಂಡಿಯೂರಿ ನೆಲದ ತನಕ ಬಗ್ಗಿದ. 5 ಆಮೇಲೆ ಕೋರಹ ಮತ್ತೆ ಅವನ ಬೆಂಬಲಿಗರಿಗೆ “ತನ್ನವರು ಯಾರು+ ಅಂತ ಯೆಹೋವ ಬೆಳಿಗ್ಗೆ ತೋರಿಸ್ತಾನೆ. ಯಾರು ಪವಿತ್ರರು, ಯಾರು ಆತನ ಹತ್ರ ಹೋಗಬೇಕು,+ ಅದಕ್ಕಾಗಿ ಆತನು ಯಾರನ್ನ ಆರಿಸ್ಕೊಂಡಿದ್ದಾನೆ+ ಅಂತ ನಿಮಗೆ ಗೊತ್ತಾಗೋ ಹಾಗೆ ಮಾಡ್ತೀನಿ. ದೇವರು ಆರಿಸ್ಕೊಂಡವನೇ ಆತನ ಹತ್ರ ಹೋಗ್ಲಿ. 6 ಕೋರಹ, ನಾಳೆ ನೀನು ಮತ್ತೆ ನಿನ್ನನ್ನ ಬೆಂಬಲಿಸೋರೆಲ್ಲ+ ಧೂಪ ಹಾಕೋ ಪಾತ್ರೆಗಳನ್ನ+ ತಗೊಂಡು 7 ಅದ್ರಲ್ಲಿ ಕೆಂಡಗಳನ್ನ ಇಟ್ಟು ಯೆಹೋವನ ಮುಂದೆ ಧೂಪ ಹಾಕಿ. ಯೆಹೋವ ಯಾರನ್ನ ಆರಿಸ್ಕೊಳ್ತಾನೋ+ ಅವನೇ ಪವಿತ್ರ. ಲೇವಿ ವಂಶದ+ ನೀವು ಹದ್ದುಮೀರಿ ವರ್ತಿಸ್ತಾ ಇದ್ದೀರ!” ಅಂದ.
8 ಆಮೇಲೆ ಮೋಶೆ ಕೋರಹನಿಗೆ “ಲೇವಿಯರೇ, ದಯವಿಟ್ಟು ನಾನು ಹೇಳೋದು ಕೇಳಿ. 9 ಇಸ್ರಾಯೇಲಿನ ದೇವರು ನಿಮ್ಮನ್ನ ಎಲ್ಲ ಇಸ್ರಾಯೇಲ್ಯರಿಂದ ಪ್ರತ್ಯೇಕಿಸಿದ್ದಾನೆ!+ ಯೆಹೋವ ದೇವರ ಪವಿತ್ರ ಡೇರೆಯ ಸೇವೆ ಮಾಡೋಕೆ ಆತನ ಹತ್ರ ಬರೋ ಅವಕಾಶನ ನಿಮಗೆ ಕೊಟ್ಟಿದ್ದಾನೆ! ಅಷ್ಟೇ ಅಲ್ಲ ಎಲ್ಲಾ ಇಸ್ರಾಯೇಲ್ಯರ ಮುಂದೆ ನಿಂತು ಅವ್ರ ಸೇವೆ ಮಾಡೋಕೆ ಆತನು ನಿಮ್ಮನ್ನ ನೇಮಿಸಿದ್ದಾನೆ!+ ಇದೆಲ್ಲ ಒಂದು ಸಾಧಾರಣ ವಿಷ್ಯನಾ? 10 ದೇವರು ನಿನಗೆ, ಲೇವಿಯರಾದ ನಿನ್ನ ಎಲ್ಲ ಸಹೋದರರಿಗೆ ತನ್ನ ಹತ್ರ ಬರೋ ಅವಕಾಶ ಕೊಟ್ಟಿದ್ದಾನಲ್ಲಾ. ಇದೇನು ಚಿಕ್ಕ ವಿಷ್ಯನಾ? ಈಗ ಪುರೋಹಿತಸೇವೆ ಕೂಡ ಸಿಗಬೇಕಂತ ಆಸೆ ಪಡ್ತೀರಲ್ಲಾ?+ 11 ನೀನೂ ನಿನ್ನ ಬೆಂಬಲಿಗರೂ ಇಂಥ ಕೆಲಸ ಮಾಡಿ ಯೆಹೋವನ ವಿರುದ್ಧ ಎದ್ದಿದ್ದೀರ. ಆರೋನ ಯಾರು ಅಂತ ಅಂದ್ಕೊಂಡು ಅವನ ವಿರುದ್ಧ ಗೊಣಗ್ತಾ ಇದ್ದೀರಾ?”+ ಅಂದ.
12 ಮೋಶೆ ಎಲೀಯಾಬನ ಮಕ್ಕಳಾದ ದಾತಾನ್, ಅಬೀರಾಮನನ್ನ+ ಕರೆಸಿದ. ಆದ್ರೆ ಅವರು “ನಾವು ಬರಲ್ಲ! 13 ನೀನು ಮಾಡಿರೋದು ಒಂದಾ ಎರಡಾ? ಹಾಲೂ ಜೇನೂ ಹರಿಯೋ ದೇಶದಿಂದ ನಮ್ಮನ್ನ ಕರ್ಕೊಂಡು ಬಂದು ಈ ಕಾಡಲ್ಲಿ ಸಾಯಿಸ್ತಿದ್ದೀಯ.+ ಇಷ್ಟೆಲ್ಲ ಮಾಡಿದ್ದು ಸಾಲದು ಅಂತ ಈಗ ನಮ್ಮ ಮೇಲೆ ಸರ್ವಾಧಿಕಾರಿಯಾಗಿ ಆಳಬೇಕಂತ ಇದ್ದೀಯಾ? 14 ನೀನು ನಮ್ಮನ್ನ ಹಾಲೂ ಜೇನೂ ಹರಿಯೋ ದೇಶಕ್ಕೆ+ ಕರ್ಕೊಂಡು ಹೋಗ್ತೀನಂತ ಹೇಳಿದ್ದೆ. ಆದ್ರೆ ಎಲ್ಲಿ ಕರ್ಕೊಂಡು ಹೋದೆ? ಹೊಲ, ದ್ರಾಕ್ಷಿತೋಟ ಯಾವುದನ್ನೂ ನಮಗೆ ಕೊಡಲಿಲ್ಲ. ಜನ ಕಣ್ಣು ಮುಚ್ಕೊಂಡು ನಿನ್ನ ಹಿಂದೆ ಬರಬೇಕಂತ ನೆನಸ್ತೀಯಾ? ನಾವು ಬರಲ್ಲ!” ಅಂದ್ರು.
15 ಮೋಶೆಗೆ ತುಂಬ ಸಿಟ್ಟು ಬಂತು. ಅವನು ಯೆಹೋವನಿಗೆ “ದೇವರೇ, ಅವರು ಕೊಟ್ಟ ಧಾನ್ಯ ಅರ್ಪಣೆನ ಮೆಚ್ಚಬೇಡ. ನಾನು ಅವ್ರಿಗೆ ಏನು ಮಾಡ್ದೆ ಅಂತ ಹೀಗೆ ಮಾಡ್ತಿದ್ದಾರೆ? ಅವ್ರಿಂದ ಒಂದು ಕತ್ತೆನೂ ತಗೊಂಡಿಲ್ಲ. ಅವ್ರಲ್ಲಿ ಒಬ್ಬರಿಗೂ ಹಾನಿ ಮಾಡಿಲ್ಲ”+ ಅಂದ.
16 ಆಮೇಲೆ ಮೋಶೆ ಕೋರಹನಿಗೆ “ನೀನೂ ನಿನ್ನ ಎಲ್ಲ ಬೆಂಬಲಿಗರೂ ನಾಳೆ ಯೆಹೋವನ ಮುಂದೆ ಬರಬೇಕು. ಆರೋನ ಕೂಡ ಬರಬೇಕು. 17 ನೀನು ಮತ್ತೆ ನಿನ್ನ ಬೆಂಬಲಿಗರಾದ 250 ಜನ್ರಲ್ಲಿ ಪ್ರತಿಯೊಬ್ಬ ಧೂಪ ಹಾಕೋ ಒಂದೊಂದು ಪಾತ್ರೆ ತಗೊಂಡು ಅದ್ರಲ್ಲಿ ಧೂಪಹಾಕಿ ಯೆಹೋವನ ಮುಂದೆ ತನ್ನಿ. ಆರೋನನೂ ಅದೇ ತರ ಮಾಡ್ಲಿ” ಅಂದ. 18 ಹಾಗಾಗಿ ಅವರೆಲ್ಲ ಧೂಪ ಹಾಕೋ ಪಾತ್ರೆಗಳನ್ನ ತಗೊಂಡು ಕೆಂಡಗಳನ್ನ ಇಟ್ಟು ಧೂಪ ಹಾಕಿದ್ರು. ಆಮೇಲೆ ಅವರು ಮೋಶೆ ಮತ್ತು ಆರೋನನ ಜೊತೆ ದೇವದರ್ಶನ ಡೇರೆಯ ಬಾಗಿಲ ಹತ್ರ ನಿಂತ್ರು. 19 ಕೋರಹ ತನ್ನ ಬೆಂಬಲಿಗರನ್ನ+ ಕರ್ಕೊಂಡು ಮೋಶೆ ಆರೋನರಿಗೆ ವಿರುದ್ಧ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದಾಗ ಯೆಹೋವನ ಮಹಿಮೆ ಎಲ್ಲ ಇಸ್ರಾಯೇಲ್ಯರಿಗೆ ಕಾಣಿಸ್ತು.+
20 ಆಗ ಯೆಹೋವ ಮೋಶೆಗೆ, ಆರೋನನಿಗೆ 21 “ನೀವು ಈ ಜನ್ರ ಗುಂಪಿಂದ ದೂರ ಹೋಗಿ. ನಾನು ಅವರನ್ನ ಒಂದೇ ಕ್ಷಣದಲ್ಲಿ ನಾಶ ಮಾಡಿಬಿಡ್ತೀನಿ”+ ಅಂದನು. 22 ಆಗ ಅವರಿಬ್ರು ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿ “ದೇವರೇ, ಎಲ್ರಿಗೆ ಜೀವ ಕೊಡೋನು ನೀನೇ.+ ಒಬ್ಬ ಪಾಪ ಮಾಡಿದ ಅನ್ನೋ ಕಾರಣಕ್ಕೆ ನೀನು ಎಲ್ರ ಮೇಲೆ ಕೋಪ ತೋರಿಸ್ತೀಯಾ?”+ ಅಂದ್ರು.
23 ಆಗ ಯೆಹೋವ ಮೋಶೆಗೆ 24 “ಕೋರಹ, ದಾತಾನ್, ಅಬೀರಾಮನ+ ಡೇರೆ ಹತ್ರ ಯಾರೂ ಇರಬಾರದು, ಅಲ್ಲಿಂದ ದೂರ ಹೋಗಬೇಕಂತ ಎಲ್ಲ ಇಸ್ರಾಯೇಲ್ಯರಿಗೆ ಹೇಳು” ಅಂದನು.
25 ಆಗ ಮೋಶೆ ದಾತಾನ್ ಮತ್ತು ಅಬೀರಾಮ ಇದ್ದಲ್ಲಿ ಹೋದ. ಅವನ ಜೊತೆ ಇಸ್ರಾಯೇಲ್ಯರ ಹಿರಿಯರೂ+ ಹೋದ್ರು. 26 ಮೋಶೆ ಎಲ್ರಿಗೆ “ದಯವಿಟ್ಟು ಈ ಕೆಟ್ಟವರ ಡೇರೆಗಳಿಂದ ದೂರ ಹೋಗಿ. ಅವ್ರಿಗೆ ಸೇರಿದ ವಸ್ತುನ ಮುಟ್ಟಬೇಡಿ. ಇಲ್ಲದಿದ್ರೆ ಅವರು ಮಾಡಿದ ಪಾಪಕ್ಕೆ ನೀವೂ ಅವ್ರ ಜೊತೆ ನಾಶ ಆಗ್ತೀರ” ಅಂದ. 27 ಕೂಡ್ಲೇ ಕೋರಹ, ದಾತಾನ್, ಅಬೀರಾಮರ ಡೇರೆಗಳ ಸುತ್ತ ಇದ್ದ ಜನ ಅಲ್ಲಿಂದ ದೂರ ಹೋದ್ರು. ದಾತಾನ್ ಮತ್ತು ಅಬೀರಾಮ್ ಇಬ್ರೂ ತಮ್ಮ ಡೇರೆಗಳಿಂದ ಹೊರಗೆ ಬಂದ್ರು. ತಮ್ಮ ಹೆಂಡತಿ, ಗಂಡು ಮಕ್ಕಳು, ಚಿಕ್ಕ ಮಕ್ಕಳ ಜೊತೆ ಬಾಗಿಲಲ್ಲಿ ನಿಂತ್ರು.
28 ಆಗ ಮೋಶೆ “ಯೆಹೋವನೇ ನನ್ನನ್ನ ಕಳಿಸಿದ್ದಾನೆ, ನಾನು ಸ್ವಂತ ಇಷ್ಟದಿಂದ ಇದನ್ನೆಲ್ಲ ಮಾಡಿಲ್ಲ, ಆತನು ಹೇಳಿದ ಹಾಗೇ ಮಾಡಿದ್ದೀನಿ ಅಂತ ನಿಮಗೀಗ ಗೊತ್ತಾಗುತ್ತೆ. 29 ಎಲ್ರಿಗೆ ಸಾವು ಬರೋ ಹಾಗೇ ಇವರಿಗೂ ಸಾವು ಬಂದ್ರೆ ಎಲ್ರಿಗೆ ಸಿಗೋ ಶಿಕ್ಷೆನೇ ಇವ್ರಿಗೂ ಸಿಕ್ಕಿದ್ರೆ ಯೆಹೋವ ನನ್ನನ್ನ ಕಳಿಸಿಲ್ಲ ಅಂತ ತಿಳ್ಕೊಳ್ಳಿ.+ 30 ಆದ್ರೆ ಇಲ್ಲಿ ತನಕ ಯಾರೂ ಕಂಡುಕೇಳಿರದ ಶಿಕ್ಷೆನ ಯೆಹೋವ ಇವರಿಗೆ ಕೊಟ್ರೆ ಅಂದ್ರೆ ಇವರು ನಿಂತಿರೋ ಭೂಮಿ ಬಾಯಿ ತೆರೆದು ಇವರನ್ನೂ ಇವ್ರಿಗೆ ಸೇರಿರೋ ಎಲ್ಲವನ್ನೂ ನುಂಗಿ ಜೀವಂತ ಸಮಾಧಿ* ಮಾಡಿದ್ರೆ ಇವರು ನಿಜವಾಗ್ಲೂ ಯೆಹೋವನಿಗೆ ಗೌರವ ಕೊಟ್ಟಿಲ್ಲ ಅಂತ ತಿಳ್ಕೊಳ್ಳಿ” ಅಂದ.
31 ಅವನು ಇದನ್ನ ಹೇಳಿ ಮುಗಿಸಿದ ಕೂಡ್ಲೇ ಅವರು ನಿಂತಿದ್ದ ನೆಲ ಸೀಳಿ ಎರಡು ಭಾಗ ಆಯ್ತು.+ 32 ಭೂಮಿ ಬಾಯಿ ತೆರೆದು ಅವರನ್ನ, ಅವ್ರ ಮನೆಯವರನ್ನ ಅಷ್ಟೇ ಅಲ್ಲ ಕೋರಹನ+ ಪಕ್ಷವಹಿಸಿದ ಎಲ್ರನ್ನ ಮತ್ತು ಅವ್ರಿಗೆ ಸೇರಿದ ಎಲ್ಲವನ್ನ ನುಂಗಿಬಿಡ್ತು. 33 ಅವರೂ ಅವ್ರ ಪಕ್ಷವಹಿಸಿದ ಎಲ್ರೂ ಜೀವಂತ ಸಮಾಧಿ* ಆದ್ರು. ಭೂಮಿ ಅವರನ್ನ ಮುಚ್ಚಿಬಿಡ್ತು. ಹೀಗೆ ಅವರು ಇಸ್ರಾಯೇಲ್ ಸಭೆ ಮಧ್ಯದಿಂದ ಹೇಳಹೆಸರಿಲ್ಲದೆ ನಾಶವಾಗಿ ಹೋದ್ರು.+ 34 ಭೂಮಿ ನುಂಗುವಾಗ ಅವ್ರ ಕಿರಿಚಾಟನ ಸುತ್ತ ಇದ್ದ ಇಸ್ರಾಯೇಲ್ಯರು ಕೇಳಿ “ಅಯ್ಯೋ, ಭೂಮಿ ನಮ್ಮನ್ನೂ ನುಂಗಿಬಿಡುತ್ತೇನೋ” ಅಂತ ಕೂಗಿ ದೂರ ಓಡಿದ್ರು. 35 ಆಗ ಯೆಹೋವನಿಂದ ಬೆಂಕಿ ಬಂದು+ ಧೂಪ ಅರ್ಪಿಸ್ತಿದ್ದ 250 ಜನ್ರನ್ನ ಸುಟ್ಟುಬಿಡ್ತು.+
36 ಆಮೇಲೆ ಯೆಹೋವ ಮೋಶೆಗೆ 37 “ಧೂಪಹಾಕೋ ಪಾತ್ರೆಗಳನ್ನ+ ಆ ಬೆಂಕಿಯಿಂದ ತೆಗಿಯೋಕೆ ಪುರೋಹಿತನಾದ ಆರೋನನ ಮಗ ಎಲ್ಲಾಜಾರನಿಗೆ ಹೇಳು. ಯಾಕಂದ್ರೆ ಅವು ಪವಿತ್ರವಾಗಿವೆ. ಕೆಂಡಗಳನ್ನ ದೂರ ತಗೊಂಡು ಹೋಗಿ ಬಿಸಾಡೋಕೆ ಹೇಳು. 38 ಪಾಪ ಮಾಡಿ ಜೀವ ಕಳ್ಕೊಂಡವರ ಹತ್ರ ಇದ್ದ ಧೂಪ ಹಾಕೋ ಪಾತ್ರೆಗಳನ್ನ ಬಡಿದು ತೆಳುವಾದ ತಗಡುಗಳಾಗಿ ಮಾಡಬೇಕು. ಅವುಗಳನ್ನ ಯಜ್ಞವೇದಿಗೆ ಹೊದಿಸಬೇಕು.+ ಯಾಕಂದ್ರೆ ಧೂಪ ಹಾಕೋ ಆ ಪಾತ್ರೆಗಳನ್ನ ಯೆಹೋವನ ಮುಂದೆ ತಂದಿದ್ರಿಂದ ಅವು ಪವಿತ್ರವಾಗಿವೆ. ಆ ತಗಡುಗಳು ಇಸ್ರಾಯೇಲ್ಯರಿಗೆ ಎಚ್ಚರಿಕೆ ಕೊಡೋ ಗುರುತಾಗಿರುತ್ತೆ”+ ಅಂದನು. 39 ಬೆಂಕಿಯಿಂದ ಸತ್ತವರು ತಂದಿದ್ದ ಧೂಪ ಹಾಕೋ ತಾಮ್ರದ ಪಾತ್ರೆಗಳನ್ನ ಪುರೋಹಿತ ಎಲ್ಲಾಜಾರ ತಗೊಂಡು ಅವುಗಳನ್ನ ಬಡಿದು ಯಜ್ಞವೇದಿಗೆ ಹೊದಿಸಿದ. 40 ಮೋಶೆ ಮೂಲಕ ಯೆಹೋವ ಹೇಳಿದ ಹಾಗೇ ಅವನು ಮಾಡಿದ. ಇದು ಆರೋನನ ವಂಶದವರನ್ನ ಬಿಟ್ಟು ಬೇರೆ ಯಾರೂ ಯೆಹೋವನ ಮುಂದೆ ಧೂಪ ಹಾಕಬಾರದು,+ ಯಾರೂ ಕೋರಹ ಮತ್ತೆ ಅವನ ಬೆಂಬಲಿಗರ ತರ ನಾಶ ಆಗಬಾರದು+ ಅಂತ ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸ್ತಾ ಇತ್ತು.
41 ಮಾರನೇ ದಿನಾನೇ ಎಲ್ಲ ಇಸ್ರಾಯೇಲ್ಯರು ಮೋಶೆ ಆರೋನರಿಗೆ “ನೀವು ಯೆಹೋವನ ಜನ್ರನ್ನ ಸಾಯಿಸಿಬಿಟ್ರಿ” ಅಂತ ಅವ್ರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.+ 42 ಎಲ್ರೂ ಮೋಶೆ ಮತ್ತೆ ಆರೋನನ ವಿರುದ್ಧ ಕೂಡಿಬಂದ್ರು. ಅವ್ರೆಲ್ಲ ದೇವದರ್ಶನ ಡೇರೆ ಕಡೆ ನೋಡಿದಾಗ ಮೋಡ ದೇವದರ್ಶನ ಡೇರೆನ ಮುಚ್ಕೊಳ್ತು! ಯೆಹೋವನ ಮಹಿಮೆ ಅವರಿಗೆ ಕಾಣಿಸ್ತು.+
43 ಮೋಶೆ ಮತ್ತು ಆರೋನ ದೇವದರ್ಶನ ಡೇರೆ ಮುಂದೆ ಹೋದ್ರು.+ 44 ಯೆಹೋವ ಮೋಶೆಗೆ 45 “ನೀವು ಈ ಜನ್ರಿಂದ ದೂರ ಹೋಗಿ. ನಾನು ಒಂದೇ ಕ್ಷಣದಲ್ಲಿ ಇವರನ್ನ ನಾಶ ಮಾಡಿಬಿಡ್ತೀನಿ”+ ಅಂದನು. ಆಗ ಅವರಿಬ್ರೂ ಮಂಡಿಯೂರಿ ನೆಲದ ತನಕ ಬಗ್ಗಿದ್ರು.+ 46 ಆಗ ಮೋಶೆ ಆರೋನನಿಗೆ “ನೀನು ಧೂಪ ಹಾಕೋ ಪಾತ್ರೆಯನ್ನ ಬೇಗ ತಗೊಂಡು ಯಜ್ಞವೇದಿಯಿಂದ ಕೆಂಡಗಳನ್ನ ತೆಗೆದು ಅದ್ರಲ್ಲಿಟ್ಟು+ ಅದ್ರ ಮೇಲೆ ಧೂಪ ಹಾಕಿ ಇಸ್ರಾಯೇಲ್ಯರ ಹತ್ರ ಹೋಗು, ಅವರಿಗಾಗಿ ಪ್ರಾಯಶ್ಚಿತ್ತ ಮಾಡು.+ ಯಾಕಂದ್ರೆ ಯೆಹೋವನಿಗೆ ಜನ್ರ ಮೇಲೆ ತುಂಬ ಕೋಪ ಬಂದಿದೆ. ಜನ್ರಲ್ಲಿ ಕಾಯಿಲೆ ಹರಡೋಕೆ ಶುರು ಆಗಿದೆ!” ಅಂದ. 47 ತಕ್ಷಣ ಆರೋನ ಮೋಶೆ ಹೇಳಿದ ಹಾಗೇ ಧೂಪ ಹಾಕೋ ಪಾತ್ರೆ ತಗೊಂಡು ಇಸ್ರಾಯೇಲ್ ಜನ್ರ ಮಧ್ಯದಲ್ಲಿ ಓಡಿದ. ಕಾಯಿಲೆ ಜನ್ರಲ್ಲಿ ಹರಡೋಕೆ ಶುರು ಆಗಿತ್ತು. ಹಾಗಾಗಿ ಅವನು ಧೂಪ ಹಾಕಿ ಜನರಿಗಾಗಿ ಪ್ರಾಯಶ್ಚಿತ್ತ ಮಾಡೋಕೆ ಶುರು ಮಾಡಿದ. 48 ಸತ್ತವರ ಮತ್ತು ಬದುಕಿದ್ದವರ ಮಧ್ಯ ಆರೋನ ನಿಂತೇ ಇದ್ದ. ಕೊನೆಗೆ ಆ ಕಾಯಿಲೆ ನಿಂತುಹೋಯ್ತು. 49 ಕೋರಹನ ಜೊತೆ ಸೇರಿ ಸತ್ತವರಲ್ಲದೆ ಈ ಕಾಯಿಲೆಯಿಂದ ಸತ್ತವರು 14,700 ಜನ. 50 ಕಾಯಿಲೆ ನಿಂತ ಮೇಲೆ ಆರೋನ ದೇವದರ್ಶನ ಡೇರೆಯ ಬಾಗಿಲ ಹತ್ರ ಮೋಶೆ ಇದ್ದ ಜಾಗಕ್ಕೆ ವಾಪಸ್ ಹೋದ.
17 ಯೆಹೋವ ಮೋಶೆಗೆ 2 “ಇಸ್ರಾಯೇಲ್ಯರ ಪ್ರತಿಯೊಂದು ಕುಲದ ಪ್ರಧಾನ+ ಒಂದೊಂದು ಕೋಲನ್ನ ನಿನಗೆ ಕೊಡಬೇಕಂತ ಹೇಳು. ಹೀಗೆ ಅವರಿಂದ ಒಟ್ಟು 12 ಕೋಲು ತಗೊ. ಪ್ರತಿಯೊಬ್ಬ ಪ್ರಧಾನನ ಕೋಲಿನ ಮೇಲೆ ಅವನವನ ಹೆಸ್ರು ಬರಿ. 3 ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸ್ರು ಬರಿ. ಪ್ರತಿಯೊಂದು ಕುಲದ ಮುಖ್ಯಸ್ಥನಿಗಾಗಿ ಒಂದೊಂದು ಕೋಲು ಇರಬೇಕು. 4 ಆ ಕೋಲುಗಳನ್ನ ದೇವದರ್ಶನ ಡೇರೆಯಲ್ಲಿ ನಾನು ನಿನಗೆ ಯಾವಾಗ್ಲೂ ಕಾಣಿಸ್ಕೊಳ್ಳೋ+ ಸಾಕ್ಷಿ ಮಂಜೂಷದ ಮುಂದೆ ಇಡು.+ 5 ನಾನು ಯಾರನ್ನ ಆರಿಸ್ಕೊಳ್ತೀನೋ+ ಅವನ ಕೋಲು ಮೊಗ್ಗು ಬಿಡೋ ತರ ಮಾಡ್ತೀನಿ. ಹೀಗೆ, ಇಸ್ರಾಯೇಲ್ಯರು ನನ್ನ ವಿರುದ್ಧ+ ನಿನ್ನ ವಿರುದ್ಧ ಗೊಣಗೋದನ್ನ+ ನಿಲ್ಲಿಸ್ತೀನಿ” ಅಂದನು.
6 ಈ ಮಾತುಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ. ಆಗ ಪ್ರತಿಯೊಂದು ಕುಲದ ಪ್ರಧಾನ ಒಂದೊಂದು ಕೋಲನ್ನ ಕೊಟ್ಟ. ಹೀಗೆ ಮೋಶೆ 12 ಕೋಲು ತಗೊಂಡ. ಅವುಗಳಲ್ಲಿ ಆರೋನನ ಕೋಲೂ ಇತ್ತು. 7 ಆಮೇಲೆ ಮೋಶೆ ಆ ಕೋಲುಗಳನ್ನ ಸಾಕ್ಷಿ ಡೇರೆಯಲ್ಲಿ ಯೆಹೋವನ ಮುಂದೆ ಇಟ್ಟ.
8 ಮಾರನೇ ದಿನ ಮೋಶೆ ಸಾಕ್ಷಿ ಡೇರೆಯಲ್ಲಿ ಹೋಗಿ ನೋಡಿದಾಗ ಆಹಾ! ಲೇವಿ ಕುಲದ ಆರೋನನ ಕೋಲು ಮೊಗ್ಗು ಬಿಟ್ಟಿತ್ತು. ಅದ್ರಲ್ಲಿ ಮೊಗ್ಗುಗಳು ಇತ್ತು, ಹೂಗಳು ಅರಳಿತ್ತು, ಬಾದಾಮಿ ಹಣ್ಣುಗಳು ಇತ್ತು. 9 ಮೋಶೆ ಯೆಹೋವನ ಮುಂದೆ ಇದ್ದ ಆ ಎಲ್ಲ ಕೋಲು ತಗೊಂಡು ಇಸ್ರಾಯೇಲ್ಯರ ಹತ್ರ ಹೋದ. ಅವರು ಅವುಗಳನ್ನ ನೋಡಿ ಪ್ರತಿಯೊಬ್ಬ ತನ್ನ ತನ್ನ ಕೋಲನ್ನ ತಗೊಂಡ.
10 ಆಮೇಲೆ ಯೆಹೋವ ಮೋಶೆಗೆ “ಆರೋನನ ಕೋಲನ್ನ+ ತಗೊಂಡು ಹೋಗಿ ಮತ್ತೆ ಸಾಕ್ಷಿ ಮಂಜೂಷದ ಮುಂದೆ ಇಡು. ದಂಗೆ ಏಳೋ ಸ್ವಭಾವ ಇರೋ ಜನ+ ಇನ್ನು ಮುಂದೆ ನನ್ನ ವಿರುದ್ಧ ಗೊಣಗಿ ನಾಶ ಆಗದೇ ಇರೋ ತರ ಆ ಕೋಲು ಎಚ್ಚರಿಕೆಯ ಗುರುತಾಗಿರಲಿ”+ ಅಂದನು. 11 ತಕ್ಷಣ ಮೋಶೆ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ.
12 ಆಗ ಇಸ್ರಾಯೇಲ್ಯರು ಮೋಶೆಗೆ “ಈಗ ನಾವು ಯಾರೂ ಬದುಕಿ ಉಳಿಯಲ್ಲ ಅನಿಸುತ್ತೆ. ನಾವೆಲ್ಲ ಖಂಡಿತ ನಾಶ ಆಗಿ ಹೋಗ್ತೀವಿ, ಒಬ್ರೂ ಉಳಿಯಲ್ಲ. 13 ಯೆಹೋವನ ಪವಿತ್ರ ಡೇರೆ ಹತ್ರ ಹೋದ್ರೆ ಸಾಕು ಸತ್ತು ಹೋಗ್ತೀವಿ.+ ನಾವೆಲ್ಲ ಹೀಗೇ ಸಾಯಬೇಕಾ?”+ ಅಂದ್ರು.
18 ಆಮೇಲೆ ಯೆಹೋವ ಆರೋನನಿಗೆ “ಆರಾಧನಾ ಸ್ಥಳದ ವಿಷ್ಯದಲ್ಲಿರೋ ನಿಯಮಗಳನ್ನ ಯಾರಾದ್ರೂ ಮುರಿದ್ರೆ ಅದಕ್ಕೆ ನೀನು, ನಿನ್ನ ಮಕ್ಕಳು, ನಿನ್ನ ವಂಶದವರೇ ಜವಾಬ್ದಾರಿ.+ ಪುರೋಹಿತ ಸೇವೆಗೆ ಸಂಬಂಧಿಸಿದ ನಿಯಮಗಳನ್ನ ಯಾರಾದ್ರೂ ಮುರಿದ್ರೆ ಅದಕ್ಕೆ ನೀನೂ ನಿನ್ನ ಮಕ್ಕಳೇ ಜವಾಬ್ದಾರಿ.+ 2 ನಿನ್ನ ತಂದೆಯ ಕುಲದಿಂದ ಅಂದ್ರೆ ಲೇವಿ ಕುಲದಿಂದ ನಿನ್ನ ಸಹೋದರರನ್ನ ಕರ್ಕೊಂಡು ಬಾ. ಅವರು ಸಾಕ್ಷಿ ಡೇರೆ ಮುಂದೆ ನಿನ್ನ ಜೊತೆ ಇದ್ದು+ ನಿನಗೂ ನಿನ್ನ ಮಕ್ಕಳಿಗೂ ಸಹಾಯಕರಾಗಿ ಇರಲಿ.+ 3 ನೀನು ಅವರಿಗೆ ಕೊಡೋ ಕೆಲಸಗಳನ್ನ ಡೇರೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ಅವರು ಮಾಡಬೇಕು.+ ಆದ್ರೆ ಅವರು ಪವಿತ್ರ ಡೇರೆಯ ಉಪಕರಣಗಳ ಹತ್ರ ಆಗ್ಲಿ ಯಜ್ಞವೇದಿ ಹತ್ರ ಆಗಲಿ ಬರಬಾರದು. ಬಂದ್ರೆ ಸಾಯ್ತಾರೆ, ಜೊತೆಗೆ ನೀನೂ ಸಾಯ್ತೀಯ.+ 4 ಅವರು ನಿನ್ನ ಜೊತೆ ಇದ್ದು ದೇವದರ್ಶನ ಡೇರೆಗೆ ಸಂಬಂಧಿಸಿದ ತಮ್ಮ ಎಲ್ಲ ಜವಾಬ್ದಾರಿಗಳನ್ನ ಮಾಡಬೇಕು. ಆ ಡೇರೆಯ ಎಲ್ಲ ಕೆಲಸಗಳನ್ನ ಮಾಡಬೇಕು. ಬೇರೆಯವರು* ಯಾರೂ ನಿಮ್ಮ ಜೊತೆ ಸೇವೆ ಮಾಡಬಾರದು.+ 5 ಇಸ್ರಾಯೇಲ್ಯರ ಮೇಲೆ ನಾನು ಮತ್ತೆ ಕೋಪ ಮಾಡ್ಕೊಬಾರದು ಅಂದ್ರೆ+ ಪವಿತ್ರ ಡೇರೆ ಮತ್ತೆ ಯಜ್ಞವೇದಿ ವಿಷ್ಯದಲ್ಲಿ ನಿಮಗೆ ಕೊಟ್ಟಿರೋ ಜವಾಬ್ದಾರಿನ ಚೆನ್ನಾಗಿ ಮಾಡಬೇಕು.+ 6 ನಿಮ್ಮ ಸಹೋದರರಾದ ಲೇವಿಯರನ್ನ ನಾನು ಇಸ್ರಾಯೇಲ್ಯರಿಂದ ಆರಿಸ್ಕೊಂಡು ನಿಮಗೆ ಉಡುಗೊರೆಯಾಗಿ ಕೊಟ್ಟಿದ್ದೀನಿ.+ ಅವರು ಯೆಹೋವನಾದ ನನಗೆ ಸೇರಿದವರು. ಅವರು ದೇವದರ್ಶನ ಡೇರೆಯ ಕೆಲಸ ಮಾಡ್ತಾರೆ.+ 7 ಯಜ್ಞವೇದಿ ಮತ್ತೆ ಪರದೆ ಒಳಗಿರೋ ಎಲ್ಲ ವಸ್ತುಗಳಿಗೆ ಸಂಬಂಧಿಸಿದ ಪುರೋಹಿತ ಸೇವೆ ಮಾಡೋ ಜವಾಬ್ದಾರಿ ನಿನಗೂ ನಿನ್ನ ಮಕ್ಕಳಿಗೂ ಇದೆ.+ ಹಾಗಾಗಿ ಈ ಸೇವೆನ ನೀವು ಮಾಡಬೇಕು.+ ಪುರೋಹಿತ ಸೇವೆನ ನಿಮಗೆ ಉಡುಗೊರೆಯಾಗಿ ಕೊಟ್ಟಿದ್ದೀನಿ. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಪವಿತ್ರ ಡೇರೆ ಹತ್ರ ಬಂದ್ರೆ ಸಾಯಿಸಬೇಕು”+ ಅಂದನು.
8 ಯೆಹೋವ ಆರೋನನಿಗೆ ಮತ್ತೂ ಹೇಳಿದ್ದು ಏನಂದ್ರೆ “ಇಸ್ರಾಯೇಲ್ಯರು ನನಗೆ ಕೊಡೋ ಕಾಣಿಕೆಗಳ ಜವಾಬ್ದಾರಿಯನ್ನ ನಾನು ನಿನಗೆ ವಹಿಸಿದ್ದೀನಿ.+ ಅವರು ಕಾಣಿಕೆಯಾಗಿ ಕೊಡೋ ಎಲ್ಲ ಪವಿತ್ರ ವಸ್ತುಗಳಲ್ಲಿ ಒಂದು ಪಾಲನ್ನ ನಿನಗೂ ನಿನ್ನ ಮಕ್ಕಳಿಗೂ ಕೊಟ್ಟಿದ್ದೀನಿ. ಇದು ನಿಮಗೆ ಸದಾಕಾಲ ಸಿಗೋ ಪಾಲು.+ 9 ಬೆಂಕಿಯಲ್ಲಿ ಅರ್ಪಿಸೋ ಅತಿ ಪವಿತ್ರ ಅರ್ಪಣೆಗಳಲ್ಲಿ ಅಂದ್ರೆ ಧಾನ್ಯ ಅರ್ಪಣೆಗಳು,+ ಪಾಪಪರಿಹಾರಕ ಬಲಿಗಳು,+ ದೋಷಪರಿಹಾರಕ ಬಲಿಗಳು+ ಹೀಗೆ ಜನ ನನಗೆ ತಂದು ಕೊಡೋ ಎಲ್ಲ ಅರ್ಪಣೆಗಳಿಂದ ಒಂದು ಪಾಲು ನಿಮಗೆ ಸಿಗುತ್ತೆ. ಅದು ನಿನಗೂ ನಿನ್ನ ಮಕ್ಕಳಿಗೂ ಅತಿ ಪವಿತ್ರವಾಗಿದೆ. 10 ತುಂಬ ಪವಿತ್ರವಾದ ಒಂದು ಜಾಗದಲ್ಲಿ ನೀವು ಅದನ್ನ ತಿನ್ನಬೇಕು.+ ನಿಮ್ಮಲ್ಲಿರೋ ಪ್ರತಿಯೊಬ್ಬ ಪುರುಷ ಅದನ್ನ ತಿನ್ನಬಹುದು. ಅದು ನಿಮಗೆ ಪವಿತ್ರವಾಗಿ ಇರಬೇಕು.+ 11 ಇಸ್ರಾಯೇಲ್ಯರು ಕಾಣಿಕೆಯಾಗಿ ತಂದು ಕೊಡೋ ಎಲ್ಲ ಉಡುಗೊರೆಗಳನ್ನ+ ಓಲಾಡಿಸೋ ಎಲ್ಲ ಅರ್ಪಣೆಗಳನ್ನ+ ನಾನು ನಿನಗೆ, ನಿನ್ನ ಗಂಡು ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಕೊಟ್ಟಿದ್ದೀನಿ. ಅದೆಲ್ಲ ನಿಮಗೆ ಸೇರಿದೆ. ಅವು ನಿಮಗೆ ಸದಾಕಾಲ ಸಿಗೋ ಪಾಲು.+ ನಿನ್ನ ಕುಟುಂಬದಲ್ಲಿ ಶುದ್ಧರಾಗಿ ಇರೋರೆಲ್ಲ ಅದನ್ನ ತಿನ್ನಬಹುದು.+
12 ಇಸ್ರಾಯೇಲ್ಯರು ಯೆಹೋವನಾದ ನನಗೆ ತಂದು ಕೊಡೋ ಮೊದಲ ಬೆಳೆನ+ ಅಂದ್ರೆ ಅತಿ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾಮದ್ಯ, ಧಾನ್ಯ ಇದನ್ನೆಲ್ಲ ನಿನಗೆ ಕೊಟ್ಟಿದ್ದೀನಿ.+ 13 ಅವರು ತಮ್ಮ ಜಮೀನಲ್ಲಿ ಬೆಳೆದ ಎಲ್ಲ ಬೆಳೆಗಳಲ್ಲಿ ಯೆಹೋವನಾದ ನನಗಾಗಿ ತಂದು ಕೊಡೋ ಮೊದಲ ಬೆಳೆ ನಿನಗೆ ಸೇರಬೇಕು.+ ನಿನ್ನ ಕುಟುಂಬದಲ್ಲಿ ಶುದ್ಧರಾಗಿ ಇರೋರೆಲ್ಲ ಅದನ್ನ ತಿನ್ನಬಹುದು.
14 ಇಸ್ರಾಯೇಲಿನಲ್ಲಿ ದೇವರಿಗೆ ಮೀಸಲಾಗಿಟ್ಟ ಎಲ್ಲ ವಸ್ತುಗಳು* ನಿನಗೆ ಸೇರಬೇಕು.+
15 ಅವರು ಯೆಹೋವನಿಗೆ ಕೊಡೋ ತಮ್ಮ ಮೊದಲ ಗಂಡು ಮಕ್ಕಳು, ಪ್ರಾಣಿಗಳ ಮೊದಲ ಗಂಡು ಮರಿಗಳು+ ನಿನಗೆ ಸೇರಬೇಕು. ಆದ್ರೆ ಮೊದಲ ಗಂಡು ಮಕ್ಕಳನ್ನ ಅಶುದ್ಧ ಪ್ರಾಣಿಗಳ ಮೊದಲ ಮರಿಗಳನ್ನ ನೀನು ಬಿಡುಗಡೆ ಮಾಡ್ಲೇಬೇಕು.+ 16 ಒಂದು ತಿಂಗಳ ಮತ್ತು ಅದಕ್ತಿಂತ ಜಾಸ್ತಿ ವಯಸ್ಸಿನ ಮೊದಲ ಗಂಡು ಮಕ್ಕಳನ್ನ ಗಂಡುಮರಿಗಳನ್ನ ನೀನು ಬಿಡುಗಡೆ ಬೆಲೆ ತಗೊಂಡು ಬಿಟ್ಟುಬಿಡಬೇಕು. ನಿರ್ಧರಿಸಿದ ಆ ಬೆಲೆ ಆರಾಧನಾ ಸ್ಥಳದ ತೂಕದ ಪ್ರಕಾರ* ಐದು ಬೆಳ್ಳಿ ಶೆಕೆಲ್‌ಗಳು.*+ ಒಂದು ಶೆಕೆಲ್ ಅಂದ್ರೆ 20 ಗೇರಾ.* 17 ಮೊದಲ ಗಂಡು ಕರುವನ್ನ, ಮೊದಲ ಗಂಡು ಕುರಿಮರಿಯನ್ನ ಮೊದಲ ಆಡುಮರಿಯನ್ನ ಮಾತ್ರ ಬಿಡುಗಡೆ ಮಾಡಬಾರದು.+ ಅವು ಪವಿತ್ರವಾಗಿವೆ. ಅವುಗಳ ರಕ್ತನ ಯಜ್ಞವೇದಿ ಮೇಲೆ ಚಿಮಿಕಿಸಬೇಕು.+ ಅವುಗಳ ಕೊಬ್ಬನ್ನ ಬೆಂಕಿಯಲ್ಲಿ ಅರ್ಪಿಸಬೇಕು. ಅದ್ರಿಂದ ಮೇಲೇರೋ ಹೊಗೆಯ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ.+ 18 ಅವುಗಳ ಮಾಂಸ ನಿನಗೆ ಸೇರಬೇಕು. ಓಲಾಡಿಸೋ ಅರ್ಪಣೆಯಾಗಿ ಕೊಡೋ ಎದೆ ಭಾಗ, ಬಲಗಾಲು ನಿನಗೆ ಸೇರೋ ತರ ಇದು ಸಹ ನಿನಗೆ ಸೇರಬೇಕು.+ 19 ಇಸ್ರಾಯೇಲ್ಯರು ಯೆಹೋವನಾದ ನನಗೆ ಕೊಡೋ ಎಲ್ಲ ಪವಿತ್ರ ಕಾಣಿಕೆಗಳನ್ನ+ ನಾನು ನಿನಗೂ ನಿನ್ನ ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಕೊಟ್ಟಿದ್ದೀನಿ. ಅವು ನಿಮಗೆ ಸದಾಕಾಲ ಸಿಗೋ ಪಾಲು.+ ಇದು ಯೆಹೋವನಾದ ನಾನು ನಿನ್ನ ಜೊತೆ, ನಿನ್ನ ವಂಶದವರ ಜೊತೆ ಸದಾಕಾಲಕ್ಕೂ ಮಾಡ್ಕೊಳ್ಳೋ ಉಪ್ಪಿನ* ಒಪ್ಪಂದ.”
20 ಯೆಹೋವ ಆರೋನನಿಗೆ ಇನ್ನೂ ಹೇಳಿದ್ದು ಏನಂದ್ರೆ “ಇಸ್ರಾಯೇಲ್ಯರ ದೇಶದಲ್ಲಿ ನಿನಗೆ ಆಸ್ತಿ ಸಿಗಲ್ಲ. ಅಲ್ಲಿನ ಜಮೀನಲ್ಲಿ ನಿನಗೆ ಯಾವುದೇ ಪಾಲು ಸಿಗಲ್ಲ.+ ಇಸ್ರಾಯೇಲ್ಯರ ಮಧ್ಯದಲ್ಲಿ ನಿನಗೆ ಸಿಗೋ ಪಾಲು, ಆಸ್ತಿ ನಾನೇ.+
21 ಲೇವಿಯರು ದೇವದರ್ಶನ ಡೇರೆಯಲ್ಲಿ ಮಾಡೋ ಸೇವೆಗಾಗಿ ಅವ್ರಿಗೆ ಇಸ್ರಾಯೇಲಲ್ಲಿರೋ ಪ್ರತಿಯೊಂದ್ರಿಂದ ಹತ್ತರಲ್ಲಿ ಒಂದು ಭಾಗ* ಕೊಡ್ತೀನಿ.+ 22 ಇನ್ನು ಮುಂದೆ ಇಸ್ರಾಯೇಲ್ಯರು ದೇವದರ್ಶನ ಡೇರೆ ಹತ್ರ ಬರಬಾರದು. ಬಂದ್ರೆ ಅವ್ರ ಮೇಲೆ ಪಾಪದ ದೋಷ ಬರುತ್ತೆ. ಅವರು ಸಾಯ್ತಾರೆ. 23 ದೇವದರ್ಶನ ಡೇರೆಯ ಕೆಲಸಗಳನ್ನ ಲೇವಿಯರೇ ಮಾಡಬೇಕು. ಜನ ಪವಿತ್ರ ಡೇರೆಯ ವಿಷ್ಯದಲ್ಲಿ ಪಾಪ ಮಾಡಿದ್ರೆ ಅದಕ್ಕೆ ಲೇವಿಯರೇ ಶಿಕ್ಷೆ ಅನುಭವಿಸಬೇಕು.+ ಇಸ್ರಾಯೇಲ್ಯರ ಮಧ್ಯದಲ್ಲಿ ಲೇವಿಯರು ಆಸ್ತಿ ಪಡ್ಕೊಬಾರದು+ ಅನ್ನೋ ನಿಯಮವನ್ನ ನೀವು ಎಲ್ಲ ಪೀಳಿಗೆಯವರು ಪಾಲಿಸಬೇಕು. 24 ಯೆಹೋವನಾದ ನನಗೆ ಇಸ್ರಾಯೇಲ್ಯರು ಕಾಣಿಕೆಯಾಗಿ ಕೊಡೋ ಹತ್ತನೇ ಒಂದು ಭಾಗವನ್ನ ನಾನು ಲೇವಿಯರಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ. ಅದಕ್ಕೇ ‘ಇಸ್ರಾಯೇಲ್ಯರ ಮಧ್ಯದಲ್ಲಿ ಲೇವಿಯರು ಆಸ್ತಿಯನ್ನ ಪಡ್ಕೊಬಾರದು’ + ಅಂತ ಹೇಳ್ದೆ.”
25 ಯೆಹೋವ ಮೋಶೆಗೆ ಹೀಗಂದನು 26 “ನೀನು ಲೇವಿಯರಿಗೆ ನನ್ನ ಈ ಮಾತನ್ನ ತಿಳಿಸು: ‘ನನಗೆ ಇಸ್ರಾಯೇಲ್ಯರು ಕೊಡೋ ಹತ್ತರಲ್ಲಿ ಒಂದು ಭಾಗನ ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಅದ್ರಲ್ಲಿ ಹತ್ತನೇ ಒಂದು ಭಾಗವನ್ನ ನೀವು ಯೆಹೋವನಾದ ನನಗೆ ಕಾಣಿಕೆಯಾಗಿ ಕೊಡಬೇಕು.+ 27 ಇದನ್ನ ನೀವು ನಿಮ್ಮ ಸ್ವಂತ ಕಣದಿಂದ,+ ತುಂಬಿತುಳುಕೋ ದಾಕ್ಷಿತೊಟ್ಟಿಯಿಂದ ತಂದು ಕೊಡೋ ಕಾಣಿಕೆ ಅಂತ ನೆನಸ್ತೀನಿ. 28 ಹೀಗೆ ಯೆಹೋವನಿಗೆ ಕಾಣಿಕೆಗಳನ್ನ ಕೊಡೋಕೆ ನಿಮಗೂ ಸಾಧ್ಯ ಆಗುತ್ತೆ. ಇಸ್ರಾಯೇಲ್ಯರಿಂದ ಸಿಗೋ ಎಲ್ಲ ಹತ್ತರಲ್ಲಿ ಒಂದು ಭಾಗಗಳಿಂದ ನೀವು ಯೆಹೋವನಿಗೆ ಅರ್ಪಿಸೋ ಈ ಕಾಣಿಕೆಯನ್ನ ಪುರೋಹಿತನಾದ ಆರೋನನಿಗೆ ಕೊಡಬೇಕು. 29 ನಿಮಗೆ ಕೊಡೋ ಪ್ರತಿಯೊಂದು ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ+ ನೀವು ಯೆಹೋವನಿಗೆ ಪವಿತ್ರ ಕಾಣಿಕೆಯಾಗಿ ಕೊಡಬೇಕು.’
30 ನೀನು ಲೇವಿಯರಿಗೆ ಇದನ್ನೂ ಹೇಳು: ‘ನಿಮಗೆ ಸಿಕ್ಕಿದ ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ ನೀವು ಕಾಣಿಕೆಯಾಗಿ ಕೊಡುವಾಗ ಅದನ್ನ ನಿಮ್ಮ ಸ್ವಂತ ಕಣದಿಂದ, ದಾಕ್ಷಿತೊಟ್ಟಿಯಿಂದ ತಂದು ಕೊಡೋ ಕಾಣಿಕೆ ಅಂತ ನೆನಸ್ತೀನಿ. 31 ಹೀಗೆ ಕಾಣಿಕೆ ಕೊಟ್ಟ ಮೇಲೆ ಉಳಿದಿದ್ದನ್ನ ನೀವು ಮತ್ತೆ ನಿಮ್ಮ ಮನೆಯವರೆಲ್ಲ ಎಲ್ಲಿ ಬೇಕಾದ್ರೂ ತಿನ್ನಬಹುದು. ಯಾಕಂದ್ರೆ ಅದು ದೇವದರ್ಶನ ಡೇರೆಯಲ್ಲಿ ನೀವು ಮಾಡೋ ಸೇವೆಗೆ ನಿಮಗೆ ಸಿಗೋ ಸಂಬಳ.+ 32 ಎಲ್ಲಿ ತನಕ ನೀವು ಆ ಉಡುಗೊರೆಗಳಲ್ಲಿ ತುಂಬ ಚೆನ್ನಾಗಿರೋದನ್ನ ಕಾಣಿಕೆಯಾಗಿ ಕೊಡ್ತಿರೋ ಅಲ್ಲಿ ತನಕ ನಿಮ್ಮ ಮೇಲೆ ಪಾಪದ ದೋಷ ಬರಲ್ಲ. ಇಸ್ರಾಯೇಲ್ಯರು ಕೊಡೋ ಪವಿತ್ರ ವಸ್ತುಗಳನ್ನ ನೀವು ಅಪವಿತ್ರ ಮಾಡಬಾರದು. ಒಂದುವೇಳೆ ಅಪವಿತ್ರ ಮಾಡಿದ್ರೆ ಸಾಯ್ತೀರ.’”+
19 ಮೋಶೆ ಮತ್ತು ಆರೋನನ ಜೊತೆ ಯೆಹೋವ ಮತ್ತೆ ಮಾತಾಡ್ತಾ ಹೇಳಿದ್ದು ಏನಂದ್ರೆ 2 “ಯೆಹೋವನ ನಿಯಮ ಹೀಗಿದೆ: ‘ದೋಷ ಇಲ್ಲದ,+ ಯಾವತ್ತೂ ನೊಗ ಹೊರದಿದ್ದ ಒಂದು ಕೆಂಪು ಹಸುವನ್ನ ತಂದು ಕೊಡೋಕೆ ಇಸ್ರಾಯೇಲ್ಯರ ಹತ್ರ ಹೇಳಿ. 3 ನೀವು ಆ ಹಸುನ ಪುರೋಹಿತ ಎಲ್ಲಾಜಾರನಿಗೆ ಕೊಡಬೇಕು. ಅವನು ಅದನ್ನ ಪಾಳೆಯದ ಹೊರಗೆ ತಗೊಂಡು ಹೋಗಬೇಕು. ಅಲ್ಲಿ ಅವನ ಮುಂದೆ ಒಬ್ಬ ಅದನ್ನ ಕಡಿಬೇಕು. 4 ಆಮೇಲೆ ಪುರೋಹಿತನಾದ ಎಲ್ಲಾಜಾರ ಅದ್ರ ರಕ್ತದಲ್ಲಿ ಸ್ವಲ್ಪ ಬೆರಳಿಂದ ತಗೊಂಡು ದೇವದರ್ಶನ ಡೇರೆಯ ಬಾಗಿಲ ಕಡೆ ಏಳು ಸಲ ಚಿಮಿಕಿಸಬೇಕು.+ 5 ಆಮೇಲೆ ಆ ಹಸುನ ಅವನ ಕಣ್ಣ ಮುಂದೆನೇ ಬೆಂಕಿಯಲ್ಲಿ ಸುಡಬೇಕು. ಹಸುವಿನ ಚರ್ಮ, ಮಾಂಸ, ರಕ್ತ, ಸಗಣಿ ಎಲ್ಲವನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ 6 ಪುರೋಹಿತ ದೇವದಾರು ಮರದ ಕಟ್ಟಿಗೆ, ಹಿಸ್ಸೋಪ್* ಗಿಡ,+ ಕಡುಗೆಂಪು ಬಣ್ಣದ ಬಟ್ಟೆ ತಗೊಂಡು ಆ ಬೆಂಕಿಯಲ್ಲಿ ಹಾಕಬೇಕು. 7 ಆಮೇಲೆ ಪುರೋಹಿತ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡಿದ ಮೇಲೆ ಪಾಳೆಯದ ಒಳಗೆ ಬರಬಹುದು. ಆದ್ರೆ ಸಂಜೆ ತನಕ ಅಶುದ್ಧ ಆಗಿರ್ತಾನೆ.
8 ಆ ಹಸುನ ಸುಟ್ಟ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ ಆಗಿರ್ತಾನೆ.
9 ಶುದ್ಧನಾಗಿರೋ ಒಬ್ಬ ವ್ಯಕ್ತಿ ಆ ಹಸುವಿನ ಬೂದಿ+ ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಒಂದು ಸ್ಥಳದಲ್ಲಿ ಇಡಬೇಕು. ಶುದ್ಧೀಕರಣದ ನೀರನ್ನ ತಯಾರಿಸೋಕೆ ಇಸ್ರಾಯೇಲ್ಯರು ಆ ಬೂದಿನ ಉಪಯೋಗಿಸಬಹುದು.+ ಇದು ಪಾಪಪರಿಹಾರಕ ಬಲಿ. 10 ಆ ಹಸುವಿನ ಬೂದಿನ ಕೂಡಿಸಿ ತೆಗೆದಿಟ್ಟವನು ತನ್ನ ಬಟ್ಟೆಗಳನ್ನ ಒಗಿಬೇಕು. ಅವನು ಸಂಜೆ ತನಕ ಅಶುದ್ಧ ಆಗಿರ್ತಾನೆ.
ಇಸ್ರಾಯೇಲ್ಯರು, ಅವರ ಮಧ್ಯ ಇರೋ ವಿದೇಶಿಯರು ಯಾವಾಗ್ಲೂ ಪಾಲಿಸಬೇಕಾದ ನಿಯಮ+ ಏನಂದ್ರೆ 11 ಹೆಣ ಮುಟ್ಟಿದವನು ಏಳು ದಿನ ಅಶುದ್ಧ ಆಗಿರ್ತಾನೆ.+ 12 ಅಂಥವನು ಮೂರನೇ ದಿನ ಶುದ್ಧೀಕರಣದ ನೀರಿಂದ ತನ್ನನ್ನ ಶುದ್ಧ ಮಾಡ್ಕೊಬೇಕು. ಹೀಗೆ ಮಾಡಿದಾಗ ಏಳನೇ ದಿನ ಶುದ್ಧ ಆಗ್ತಾನೆ. ಅವನು ಮೂರನೇ ದಿನ ತನ್ನನ್ನ ಶುದ್ಧ ಮಾಡ್ಕೊಳ್ಳದಿದ್ರೆ ಏಳನೇ ದಿನನೂ ಅವನು ಶುದ್ಧ ಆಗಲ್ಲ. 13 ಹೆಣ ಮುಟ್ಟಿದ ಮೇಲೆ ತನ್ನನ್ನ ಶುದ್ಧ ಮಾಡ್ಕೊಳ್ಳದ ವ್ಯಕ್ತಿ ಯೆಹೋವನ ಪವಿತ್ರ ಡೇರೆಯನ್ನ ಅಶುದ್ಧ ಮಾಡಿದ್ದಾನೆ.+ ಹಾಗಾಗಿ ಅವನನ್ನ ಸಾಯಿಸಬೇಕು.+ ಶುದ್ಧೀಕರಣದ ನೀರನ್ನ+ ಅವನ ಮೇಲೆ ಚಿಮಿಕಿಸದೇ ಇರೋದ್ರಿಂದ ಅವನು ಅಶುದ್ಧನಾಗಿಯೇ ಇರ್ತಾನೆ.
14 ಡೇರೆ ಒಳಗೆ ಯಾರಾದ್ರೂ ಸತ್ರೆ ಪಾಲಿಸಬೇಕಾದ ನಿಯಮ: ಆ ಸಮಯದಲ್ಲಿ ಡೇರೆಯಲ್ಲಿ ಇದ್ದ, ಡೇರೆಗೆ ಹೋದ ಎಲ್ರೂ ಏಳು ದಿನ ಅಶುದ್ಧ. 15 ಅಷ್ಟೇ ಅಲ್ಲ ಆ ಡೇರೆಯೊಳಗೆ ಮುಚ್ಚಳ ಹಾಕಿ ಕಟ್ಟಿರದ ಎಲ್ಲ ಪಾತ್ರೆಗಳು ಅಶುದ್ಧ.+ 16 ಬಯಲಲ್ಲಿ ಕತ್ತಿಯಿಂದ ಸತ್ತವನನ್ನ ಮುಟ್ಟಿದವನು, ಹೆಣವನ್ನ ಮನುಷ್ಯನ ಮೂಳೆಯನ್ನ, ಸಮಾಧಿಯನ್ನ ಮುಟ್ಟಿದವನು ಏಳು ದಿನ ಅಶುದ್ಧ.+ 17 ಅವರು ಅಂಥವನಿಗಾಗಿ ಪಾಪಪರಿಹಾರಕ ಬಲಿಯ ಹಸುವಿನ ಸ್ವಲ್ಪ ಬೂದಿ ತಗೊಂಡು ಒಂದು ಪಾತ್ರೆಯಲ್ಲಿ ಹಾಕಬೇಕು. ಹರಿಯೋ ನೀರು ತಂದು ಅದ್ರಲ್ಲಿ ಸುರಿಬೇಕು. 18 ಶುದ್ಧನಾಗಿರೋ ಒಬ್ಬ ಬಂದು+ ಹಿಸ್ಸೋಪ್ ಗಿಡವನ್ನ+ ಆ ನೀರಲ್ಲಿ ಅದ್ದಿ ಆ ಡೇರೆ ಮೇಲೆ, ಡೇರೆಯಲ್ಲಿದ್ದ ಎಲ್ಲ ಜನ್ರ ಮೇಲೆ ಪಾತ್ರೆಗಳ ಮೇಲೆ ಚಿಮಿಕಿಸಬೇಕು. ಮನುಷ್ಯನ ಮೂಳೆಯನ್ನ, ಹತನಾದವನನ್ನ, ಹೆಣ ಅಥವಾ ಸಮಾಧಿಯನ್ನ ಮುಟ್ಟಿದವನ ಮೇಲೂ ಅದೇ ತರ ಆ ನೀರು ಚಿಮಿಕಿಸಬೇಕು. 19 ಶುದ್ಧನಾಗಿರೋ ವ್ಯಕ್ತಿ ಅಶುದ್ಧನಾಗಿರೋ ವ್ಯಕ್ತಿ ಮೇಲೆ ಮೂರನೇ ದಿನ ಮತ್ತೆ ಏಳನೇ ದಿನ ಆ ನೀರನ್ನ ಚಿಮಿಕಿಸಬೇಕು. ಶುದ್ಧ ವ್ಯಕ್ತಿ ಏಳನೇ ದಿನ ಆ ಅಶುದ್ಧ ವ್ಯಕ್ತಿಯ ಪಾಪವನ್ನ ಶುದ್ಧ ಮಾಡಬೇಕು.+ ಆಮೇಲೆ ಅಶುದ್ಧ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿದು ಸ್ನಾನ ಮಾಡಬೇಕು. ಅವನು ಆ ಸಂಜೆ ಶುದ್ಧನಾಗ್ತಾನೆ.
20 ಆದ್ರೆ ಅಶುದ್ಧನಾದ ವ್ಯಕ್ತಿ ತನ್ನನ್ನ ಶುದ್ಧ ಮಾಡ್ಕೊಳ್ಳದಿದ್ರೆ ಯೆಹೋವನ ಆರಾಧನಾ ಸ್ಥಳವನ್ನ ಅಶುದ್ಧ ಮಾಡಿದ್ದಾನೆ. ಹಾಗಾಗಿ ಅವನನ್ನ ಸಾಯಿಸಬೇಕು.+ ಶುದ್ಧೀಕರಣದ ನೀರನ್ನ ಅವನ ಮೇಲೆ ಚಿಮಿಕಿಸದೇ ಇರೋದ್ರಿಂದ ಅವನು ಅಶುದ್ಧನಾಗೇ ಇರ್ತಾನೆ.
21 ಇಸ್ರಾಯೇಲ್ ಜನ್ರು ಯಾವಾಗ್ಲೂ ಪಾಲಿಸಬೇಕಾದ ನಿಯಮ ಏನಂದ್ರೆ ಶುದ್ಧೀಕರಣದ ನೀರನ್ನ+ ಚಿಮಿಕಿಸಿದ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗಿಬೇಕು. ಶುದ್ಧೀಕರಣದ ನೀರನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. 22 ಅಶುದ್ಧ ಆಗಿರೋನು ಮುಟ್ಟಿದ್ದೆಲ್ಲ ಅಶುದ್ಧ ಆಗುತ್ತೆ. ಅಶುದ್ಧವಾದ ಆ ವಸ್ತುವನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ.’”+
20 ಮೊದಲನೇ ತಿಂಗಳಲ್ಲಿ ಎಲ್ಲ ಇಸ್ರಾಯೇಲ್ಯರು ಚಿನ್ ಕಾಡಿಗೆ ಬಂದು ಕಾದೇಶಲ್ಲಿ ಇದ್ರು.+ ಅಲ್ಲಿ ಮಿರ್ಯಾಮ+ ತೀರಿಹೋದಳು. ಅವಳನ್ನ ಸಮಾಧಿ ಮಾಡಿದ್ರು.
2 ಅಲ್ಲಿ ಇಸ್ರಾಯೇಲ್ಯರಿಗೆ ಕುಡಿಯೋಕೆ ನೀರು ಇರಲಿಲ್ಲ.+ ಹಾಗಾಗಿ ಅವರೆಲ್ಲ ಮೋಶೆ ಆರೋನನ ವಿರುದ್ಧ ಸೇರಿ ಬಂದ್ರು. 3 ಅವರು ಮೋಶೆ ಜೊತೆ ಜಗಳ ಮಾಡ್ತಾ+ “ನಾವೂ ನಮ್ಮ ಸಹೋದರರ ಜೊತೆ ಯೆಹೋವನ ಮುಂದೆ ಸತ್ತಿದ್ರೆ ತುಂಬ ಚೆನ್ನಾಗಿ ಇರ್ತಿತ್ತು! 4 ನೀವು ಯೆಹೋವನ ಜನರಾದ ನಮ್ಮನ್ನ ನಮ್ಮ ಪ್ರಾಣಿಗಳನ್ನ ಈ ಕಾಡಿಗೆ ತಂದು ಯಾಕೆ ಸಾಯಿಸ್ತಾ ಇದ್ದೀರ?+ 5 ನಮ್ಮನ್ನ ಈಜಿಪ್ಟಿಂದ ಈ ಹಾಳಾದ ಜಾಗಕ್ಕೆ ಯಾಕೆ ಕರ್ಕೊಂಡು ಬಂದ್ರಿ?+ ಇಲ್ಲಿ ಬಿತ್ತನೆ ಮಾಡೋಕೆ ಆಗಲ್ಲ. ಅಂಜೂರ, ದ್ರಾಕ್ಷಿ, ದಾಳಿಂಬೆ ಬೆಳೆಸೋಕೆ ಆಗಲ್ಲ. ಹೋಗ್ಲಿ, ಕುಡಿಯೋಕೆ ನೀರಾದ್ರೂ ಇದ್ಯಾ? ಅದೂ ಇಲ್ಲ!”+ ಅಂತ ಹೇಳ್ತಾ ಇದ್ರು. 6 ಆಗ ಆ ಸಭೆ ಮುಂದೆ ಇದ್ದ ಮೋಶೆ ಆರೋನ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದು ಮಂಡಿಯೂರಿ ನೆಲದ ತನಕ ಬಗ್ಗಿದ್ರು. ಆಗ ಯೆಹೋವನ ಮಹಿಮೆ ಅವರಿಗೆ ಕಾಣಿಸ್ತು.+
7 ಆಗ ಯೆಹೋವ ಮೋಶೆಗೆ 8 “ನೀನು ಕೋಲನ್ನ ತಗೊಂಡು ಆರೋನನನ್ನ ಕರ್ಕೊಂಡು ಕಡಿದಾದ ಬಂಡೆಯ ಮುಂದೆ ಎಲ್ರನ್ನ ಸೇರಿಸು. ಆಮೇಲೆ ಅವ್ರ ಕಣ್ಮುಂದೆ ಆ ಬಂಡೆಗೆ ನೀರು ಕೊಡೋಕೆ ಹೇಳು. ಆಗ ಬಂಡೆಯಿಂದ ನೀರು ಬರುತ್ತೆ. ಆ ನೀರನ್ನ ಎಲ್ಲ ಜನ್ರಿಗೂ ಪ್ರಾಣಿಗಳಿಗೂ ಕುಡಿಯೋಕೆ ಕೊಡು”+ ಅಂದನು.
9 ಈ ಆಜ್ಞೆ ತರಾನೇ ಮೋಶೆ ಯೆಹೋವನ ಮುಂದಿದ್ದ ಕೋಲನ್ನ ತಗೊಂಡ.+ 10 ಆಮೇಲೆ ಮೋಶೆ ಮತ್ತು ಆರೋನ ಕಡಿದಾದ ಬಂಡೆ ಮುಂದೆ ಎಲ್ಲ ಇಸ್ರಾಯೇಲ್ಯರನ್ನ ಸೇರಿಸಿದ್ರು. ಮೋಶೆ ಅವರಿಗೆ “ದಂಗೆಕೋರರೇ ಕೇಳಿಸ್ಕೊಳ್ಳಿ, ನಿಮಗೋಸ್ಕರ ನಾವು ಈ ಬಂಡೆಯಿಂದ ನೀರು ಬರೋ ತರ ಮಾಡಬೇಕಾ?”+ ಅಂದ. 11 ಹಾಗೆ ಹೇಳಿ ಮೋಶೆ ಕೈ ಎತ್ತಿ ಕೋಲಿಂದ ಆ ಬಂಡೆಗೆ ಎರಡು ಸಲ ಹೊಡೆದ. ಆಗ ಬಂಡೆಯಿಂದ ನೀರು ರಭಸವಾಗಿ ಹೊರಗೆ ಬಂತು. ಎಲ್ಲ ಜನ ನೀರನ್ನ ಕುಡಿದ್ರು, ಪ್ರಾಣಿಗಳಿಗೂ ಕುಡಿಸಿದ್ರು.+
12 ಆಮೇಲೆ ಯೆಹೋವ ಮೋಶೆ ಆರೋನಗೆ “ನೀವು ಇಸ್ರಾಯೇಲ್ಯರ ಮುಂದೆ ನನ್ನ ಮೇಲೆ ನಂಬಿಕೆ ಇಡಲಿಲ್ಲ, ನನಗೆ ಗೌರವ ಕೊಡಲಿಲ್ಲ. ಅದಕ್ಕೆ ನಾನು ಈ ಜನ್ರಿಗೆ ಕೊಡೋ ದೇಶಕ್ಕೆ ನೀವು ಅವರನ್ನ ಕರ್ಕೊಂಡು ಹೋಗಲ್ಲ”+ ಅಂದನು. 13 ಆ ನೀರಿಗೆ ಮೆರೀಬಾದ* ನೀರು+ ಅನ್ನೋ ಹೆಸ್ರು ಬಂತು. ಯಾಕಂದ್ರೆ ಇಸ್ರಾಯೇಲ್ಯರು ಅಲ್ಲಿ ಯೆಹೋವನ ಜೊತೆ ಜಗಳ ಮಾಡಿದ್ರು. ಆಗ ಆತನು ಪವಿತ್ರನು ಅಂತ ತೋರಿಸ್ಕೊಟ್ಟನು.
14 ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು. 15 ನಮ್ಮ ಪೂರ್ವಜರು ಈಜಿಪ್ಟ್ ದೇಶಕ್ಕೆ ಹೋಗಿದ್ರಿಂದ+ ನಾವು ತುಂಬ ವರ್ಷ ಅಲ್ಲೇ ಇದ್ವಿ.+ ಈಜಿಪ್ಟಿನವರು ನಮ್ಮ ಪೂರ್ವಜರಿಗೂ ನಮಗೂ ತುಂಬ ಕಷ್ಟ ಕೊಟ್ರು.+ 16 ನಾವು ಯೆಹೋವನಿಗೆ ಪ್ರಾರ್ಥಿಸಿದಾಗ+ ಆತನು ನಮ್ಮ ಪ್ರಾರ್ಥನೆ ಕೇಳಿ ಒಬ್ಬ ದೇವದೂತನನ್ನ ಕಳಿಸಿ+ ನಮ್ಮನ್ನ ಈಜಿಪ್ಟಿಂದ ಬಿಡಿಸಿ ಕರ್ಕೊಂಡು ಬಂದನು. ನಾವೀಗ ನಿನ್ನ ಪ್ರದೇಶದ ಗಡಿಯಲ್ಲಿರೋ ಕಾದೇಶ್ ಪಟ್ಟಣದಲ್ಲಿ ಇದ್ದೀವಿ. 17 ನಮಗೆ ನಿನ್ನ ದೇಶ ದಾಟಿ ಹೋಗೋಕೆ ದಯವಿಟ್ಟು ಅನುಮತಿ ಕೊಡು. ನಾವು ಹೊಲಗದ್ದೆ, ದಾಕ್ಷಿತೋಟದ ಮಧ್ಯ ಹೋಗಲ್ಲ. ಬಾವಿ ನೀರು ಕುಡಿಯಲ್ಲ. ನಾವು ರಾಜಮಾರ್ಗದಲ್ಲಿ ನಡೆದು ನಿನ್ನ ಪ್ರದೇಶ ದಾಟಿ ಹೋಗ್ತೀವಿ, ಬಲಕ್ಕಾಗ್ಲಿ ಎಡಕ್ಕಾಗ್ಲಿ ತಿರುಗಲ್ಲ.’”+
18 ಆದ್ರೆ ಎದೋಮಿನ ರಾಜ ಮೋಶೆಗೆ “ನೀವು ನಮ್ಮ ಪ್ರದೇಶ ದಾಟಿ ಹೋಗಬಾರದು. ಹೋಗೋಕೆ ಪ್ರಯತ್ನ ಮಾಡಿದ್ರೆ ನಿಮ್ಮ ವಿರುದ್ಧ ಯುದ್ಧಕ್ಕೆ ಬರ್ತಿನಿ” ಅಂದ. 19 ಆಗ ಇಸ್ರಾಯೇಲ್ಯರು ರಾಜನಿಗೆ “ನಮಗೆ ಹೆದ್ದಾರಿಯಲ್ಲಿ ಹೋಗೋಕ್ಕಷ್ಟೇ ಅನುಮತಿ ಕೊಡು. ನಾವಾಗ್ಲಿ ನಮ್ಮ ಪ್ರಾಣಿಗಳಾಗ್ಲಿ ನಿನ್ನ ಪ್ರದೇಶದಲ್ಲಿ ನೀರು ಕುಡಿದ್ರೆ ಅದ್ರ ಬೆಲೆ ಕೊಡ್ತೀವಿ.+ ನಾವು ನಡ್ಕೊಂಡು ನಿನ್ನ ಪ್ರದೇಶ ದಾಟಿ ಹೋಗೋಕೆ ಬಿಟ್ರೆ ಅಷ್ಟೇ ಸಾಕು,+ ನಮಗೆ ಬೇರೆ ಏನೂ ಬೇಡ” ಅಂದ್ರು. 20 ಅವನು ಒಪ್ಪದೆ “ನೀವು ನನ್ನ ಪ್ರದೇಶ ದಾಟಿ ಹೋಗ್ಲೇಬಾರದು”+ ಅಂದ. ಅಷ್ಟೇ ಅಲ್ಲ ಇಸ್ರಾಯೇಲ್ಯರನ್ನ ತಡಿಯೋಕೆ ತುಂಬ ಜನ್ರನ್ನ ಬಲಿಷ್ಠ ಸೈನ್ಯವನ್ನ ಕರ್ಕೊಂಡು ಬಂದ. 21 ಹೀಗೆ ಎದೋಮಿನ ರಾಜ ಇಸ್ರಾಯೇಲ್ಯರಿಗೆ ತನ್ನ ಪ್ರದೇಶ ದಾಟಿ ಹೋಗೋಕೆ ಬಿಡಲಿಲ್ಲ. ಹಾಗಾಗಿ ಅವರು ಬೇರೆ ದಾರಿ ಹಿಡಿದ್ರು.+
22 ಎಲ್ಲ ಇಸ್ರಾಯೇಲ್ಯರು ಕಾದೇಶಿಂದ ಹೊರಟು ಹೋರ್ ಬೆಟ್ಟ ಹತ್ರ ಬಂದ್ರು.+ 23 ಈ ಹೋರ್ ಬೆಟ್ಟ ಎದೋಮ್ಯರ ದೇಶದ ಗಡಿ ಹತ್ರ ಇತ್ತು. ಅಲ್ಲಿ ಯೆಹೋವ ಮೋಶೆ ಮತ್ತು ಆರೋನನ ಜೊತೆ ಮಾತಾಡ್ತಾ 24 “ಆರೋನ ಸಾಯ್ತಾನೆ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಆಗುತ್ತೆ.+ ನಾನು ಇಸ್ರಾಯೇಲ್ಯರಿಗೆ ಕೊಡೋ ದೇಶಕ್ಕೆ ಅವನು ಹೋಗಲ್ಲ. ಯಾಕಂದ್ರೆ ನೀವಿಬ್ರೂ ಮೆರೀಬಾದ ನೀರಿನ ವಿಷ್ಯದಲ್ಲಿ ಕೊಟ್ಟ ಅಪ್ಪಣೆ ಪಾಲಿಸಲಿಲ್ಲ.+ 25 ನೀನು ಆರೋನನನ್ನ ಅವನ ಮಗ ಎಲ್ಲಾಜಾರನನ್ನ ಕರ್ಕೊಂಡು ಹೋರ್ ಬೆಟ್ಟದ ಮೇಲೆ ಬಾ. 26 ಆರೋನನ ಪುರೋಹಿತ ಬಟ್ಟೆಗಳನ್ನ+ ತೆಗೆದು ಅವನ ಮಗನಾದ ಎಲ್ಲಾಜಾರನಿಗೆ+ ಹಾಕು. ಆರೋನ ಅಲ್ಲೇ ಸಾಯ್ತಾನೆ” ಅಂದನು.
27 ಯೆಹೋವ ಆಜ್ಞೆ ಕೊಟ್ಟ ಪ್ರಕಾರನೇ ಮೋಶೆ ಮಾಡಿದ. ಎಲ್ಲ ಇಸ್ರಾಯೇಲ್ಯರ ಕಣ್ಮುಂದೆ ಮೂರೂ ಜನ ಬೆಟ್ಟ ಹತ್ತಿದ್ರು. 28 ಆಮೇಲೆ ಮೋಶೆ ಆರೋನನ ಪುರೋಹಿತ ಬಟ್ಟೆಗಳನ್ನ ತೆಗೆದು ಮಗ ಎಲ್ಲಾಜಾರನಿಗೆ ಹಾಕಿದ. ಆಮೇಲೆ ಆ ಬೆಟ್ಟದ ತುದಿಯಲ್ಲಿ ಆರೋನ ಸತ್ತನು.+ ಮೋಶೆ ಮತ್ತೆ ಎಲ್ಲಾಜಾರ ಬೆಟ್ಟದಿಂದ ಇಳಿದು ಬಂದ್ರು. 29 ಆರೋನ ಸತ್ತುಹೋದ ಅಂತ ಎಲ್ಲ ಇಸ್ರಾಯೇಲ್ಯರಿಗೆ ಗೊತ್ತಾದಾಗ ಅವರೆಲ್ಲ ಆರೋನನಿಗಾಗಿ 30 ದಿನ ಅತ್ರು.+
21 ಕಾನಾನಿಗೆ ಸೇರಿದ ಅರಾದ್ ಪಟ್ಟಣದ ರಾಜ+ ನೆಗೆಬಿನಲ್ಲಿ ವಾಸಿಸ್ತಿದ್ದ. ಇಸ್ರಾಯೇಲ್ಯರು ಅತಾರೀಮಿನ ದಾರಿಲಿ ಬಂದಿದ್ದಾರೆ ಅನ್ನೋ ಸುದ್ದಿ ಅವನಿಗೆ ಸಿಕ್ತು. ಆಗ ಅವನು ಇಸ್ರಾಯೇಲ್ಯರ ಮೇಲೆ ದಾಳಿ ಮಾಡಿ ಸ್ವಲ್ಪ ಜನ್ರನ್ನ ಹಿಡ್ಕೊಂಡು ಹೋದ. 2 ಇಸ್ರಾಯೇಲ್ಯರು ಯೆಹೋವನಿಗೆ ಹರಕೆ ಮಾಡಿ “ಈ ಜನ್ರನ್ನ ಸೋಲಿಸೋಕೆ ನೀನು ನಮಗೆ ಸಹಾಯ ಮಾಡಿದ್ರೆ ನಾವು ಖಂಡಿತ ಅವ್ರ ಪಟ್ಟಣಗಳನ್ನೆಲ್ಲ ಸಂಪೂರ್ಣ ನಾಶ ಮಾಡ್ತೀವಿ” ಅಂದ್ರು. 3 ಯೆಹೋವ ಅವ್ರ ವಿನಂತಿ ಕೇಳಿ ಕಾನಾನ್ಯರ ವಿರುದ್ಧ ಜಯಿಸೋಕೆ ಸಹಾಯ ಮಾಡಿದನು. ಇಸ್ರಾಯೇಲ್ಯರು ಆ ಜನ್ರನ್ನೂ ಪಟ್ಟಣಗಳನ್ನೂ ಸಂಪೂರ್ಣ ನಾಶ ಮಾಡಿದ್ರು. ಹಾಗಾಗಿ ಇಸ್ರಾಯೇಲ್ಯರು ಆ ಜಾಗಕ್ಕೆ ಹೊರ್ಮಾ*+ ಅಂತ ಹೆಸರಿಟ್ರು.
4 ಇಸ್ರಾಯೇಲ್ಯರು ಹೋರ್ ಬೆಟ್ಟದಿಂದ ಹೊರಟ್ರು.+ ಅವರು ಎದೋಮ್ಯರ ದೇಶನ+ ಸುತ್ಕೊಂಡು ಹೋಗೋಕೆ ಕೆಂಪು ಸಮುದ್ರದ ಕಡೆಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಪ್ರಯಾಣ ಮಾಡಿಮಾಡಿ ಸುಸ್ತಾಗಿ ಹೋದ್ರು. 5 ಆಗ ಅವರು ದೇವರ ವಿರುದ್ಧ ಮೋಶೆ ವಿರುದ್ಧ ಮಾತಾಡ್ತಾ+ “ನೀವು ನಮ್ಮನ್ನ ಈಜಿಪ್ಟಿಂದ ಈ ಕಾಡಿಗೆ ಕರ್ಕೊಂಡು ಬಂದು ಯಾಕೆ ಸಾಯಿಸ್ತಿದ್ದೀರ? ಇಲ್ಲಿ ತಿನ್ನೋಕೆ ಊಟ ಇಲ್ಲ, ಕುಡಿಯೋಕೆ ನೀರಿಲ್ಲ.+ ರುಚಿಯಿಲ್ಲದ ಈ ಮನ್ನ ನೋಡಿದ್ರೇ ವಾಕರಿಕೆ* ಬರುತ್ತೆ”+ ಅನ್ನುತ್ತಾ ಇದ್ರು. 6 ಹಾಗಾಗಿ ಯೆಹೋವ ಇಸ್ರಾಯೇಲ್ಯರ ಮಧ್ಯ ವಿಷಹಾವುಗಳನ್ನ ಕಳಿಸಿದನು. ಅವು ಜನ್ರನ್ನ ಕಚ್ಚಿದ್ರಿಂದ ತುಂಬ ಜನ ಸತ್ತು ಹೋದ್ರು.+
7 ಆಗ ಜನ ಮೋಶೆ ಹತ್ರ ಬಂದು “ನಾವು ಯೆಹೋವನ ವಿರುದ್ಧ ನಿನ್ನ ವಿರುದ್ಧ ಮಾತಾಡಬಾರದಿತ್ತು. ನಾವು ಮಾಡಿದ್ದು ಪಾಪನೇ.+ ಆ ಪಾಪನ ಕ್ಷಮಿಸಿ ಈ ಹಾವುಗಳು ನಮ್ಮನ್ನ ಬಿಟ್ಟು ಹೋಗೋ ತರ ಮಾಡು ಅಂತ ಯೆಹೋವನ ಹತ್ರ ಬೇಡ್ಕೊ” ಅಂದ್ರು. ಆಗ ಮೋಶೆ ಜನ್ರಿಗಾಗಿ ದೇವರ ಹತ್ರ ಬೇಡ್ಕೊಂಡ.+ 8 ಯೆಹೋವ ಮೋಶೆಗೆ “ವಿಷಹಾವಿನ ಒಂದು ಆಕಾರ ಮಾಡಿ ಕಂಬದ ಮೇಲಿಡು. ಹಾವು ಕಚ್ಚಿದವರು ಅದನ್ನ ನೋಡಬೇಕು. ಆಗ ಅವ್ರ ಜೀವ ಉಳಿಯುತ್ತೆ” ಅಂದನು. 9 ತಕ್ಷಣ ಮೋಶೆ ತಾಮ್ರದಿಂದ ಒಂದು ಹಾವನ್ನ+ ಮಾಡಿ ಕಂಬದ ಮೇಲಿಟ್ಟ.+ ಹಾವು ಜನ್ರನ್ನ ಕಚ್ಚಿದಾಗ ಯಾರೆಲ್ಲ ಆ ತಾಮ್ರದ ಹಾವನ್ನ ನೋಡಿದ್ರೋ ಅವರೆಲ್ಲ ಬದುಕಿ ಉಳಿದ್ರು.+
10 ಆಮೇಲೆ ಇಸ್ರಾಯೇಲ್ಯರು ಅಲ್ಲಿಂದ ಓಬೋತಿಗೆ ಹೋಗಿ ಡೇರೆ ಹಾಕೊಂಡ್ರು.+ 11 ಆಮೇಲೆ ಓಬೋತಿನಿಂದ ಇಯ್ಯೇ-ಅಬಾರೀಮಿಗೆ ಹೋಗಿ ಅಲ್ಲಿ ಡೇರೆ ಹಾಕೊಂಡ್ರು.+ ಇದು ಮೋವಾಬಿನ ಮುಂದೆ, ಪೂರ್ವದಲ್ಲಿರೋ ಕಾಡಲ್ಲಿದೆ. 12 ಅವರು ಅಲ್ಲಿಂದ ಜೆರೆದ್ ಕಣಿವೆ+ ಹತ್ರ ಬಂದು ಡೇರೆ ಹಾಕೊಂಡ್ರು. 13 ಅಲ್ಲಿಂದ ಅರ್ನೋನ್ ಕಣಿವೆ ಪ್ರದೇಶಕ್ಕೆ+ ಬಂದು ಡೇರೆ ಹಾಕೊಂಡ್ರು. ಈ ಪ್ರದೇಶ ಅಮೋರಿಯರ ಗಡಿಯಿಂದ ಆಚೆ ಇರೋ ಕಾಡಲ್ಲಿ ಮೋವಾಬ್ಯರ, ಅಮೋರಿಯರ ಪ್ರದೇಶದ ಮಧ್ಯ ಇತ್ತು. 14 ಹಾಗಾಗಿ ಯೆಹೋವನ ಯುದ್ಧಗಳ ಪುಸ್ತಕದಲ್ಲಿ “ಸೂಫದಲ್ಲಿರೋ ವಾಹೇಬ, ಅರ್ನೋನಿನ ಕಣಿವೆಗಳು, 15 ಆರ್ ಪಟ್ಟಣದ ಕಡೆಗೆ ವಿಸ್ತರಿಸ್ತಾ ಮೋವಾಬಿನ ಗಡಿ ಸೇರೋ ಆ ಕಣಿವೆಗಳ ಇಳಿಜಾರು” ಈ ಜಾಗಗಳ ಬಗ್ಗೆ ಇದೆ.
16 ಅಲ್ಲಿಂದ ಅವರು ಬೇರ್ ಅನ್ನೋ ಜಾಗಕ್ಕೆ ಬಂದ್ರು. ಅಲ್ಲಿ ಒಂದು ಬಾವಿ ಇತ್ತು. ಈ ಮುಂಚೆ ಯೆಹೋವ ಮೋಶೆಗೆ “ಜನ್ರನ್ನ ಸೇರಿಸು. ನಾನು ಅವ್ರಿಗೆ ಕುಡಿಯೋಕೆ ನೀರು ಕೊಡ್ತೀನಿ” ಅಂತ ಹೇಳಿದ್ದು ಇಲ್ಲೇ.
17 ಆಗ ಇಸ್ರಾಯೇಲ್ಯರು ಈ ಹಾಡನ್ನ ಹಾಡಿದ್ರು:
“ಬಾವಿಯೇ, ನಿನ್ನಿಂದ ನೀರು ಉಕ್ಕಲಿ!
ಜನರೇ, ಹಾಡಿರಿ!
18 ಇದು ಪ್ರಧಾನರು ಅಗೆದ ಬಾವಿ, ಆದರ್ಶರು ತೋಡಿದ ಬಾವಿ,
ಅವರು ರಾಜನ ಕೋಲಿಂದ, ತಮ್ಮ ಕೋಲುಗಳಿಂದ ತೋಡಿದ ಬಾವಿ.”
ಆಮೇಲೆ ಅವರು ಆ ಕಾಡಿಂದ ಮತ್ತಾನಾಕ್ಕೆ ಬಂದ್ರು. 19 ಮತ್ತಾನಾದಿಂದ ನಹಲೀಯೇಲಿಗೆ, ನಹಲೀಯೇಲಿನಿಂದ ಬಾಮೋತಿಗೆ+ ಬಂದ್ರು. 20 ಬಾಮೋತಿನಿಂದ ಮೋವಾಬ್ ಪ್ರದೇಶದಲ್ಲಿರೋ+ ಕಣಿವೆಗೆ ಬಂದ್ರು. ಆ ಕಣಿವೆಯಿಂದ ಪಿಸ್ಗಾ ಬೆಟ್ಟದ ತುದಿಗೆ ಬಂದ್ರು.+ ಅಲ್ಲಿಂದ ಯೆಷೀಮೋನ್* ಕಾಣಿಸುತ್ತೆ.+
21 ಇಸ್ರಾಯೇಲ್ಯರು ಅಮೋರಿಯರ ರಾಜ ಸೀಹೋನನ ಹತ್ರ ಸಂದೇಶವಾಹಕರನ್ನ ಕಳಿಸಿ+ 22 “ನಾವು ನಿನ್ನ ದೇಶ ದಾಟಿ ಹೋಗೋಕೆ ಅನುಮತಿ ಕೊಡು. ನಾವು ಹೊಲಗದ್ದೆ, ದಾಕ್ಷಿತೋಟದ ಮಧ್ಯದಿಂದ ಹೋಗಲ್ಲ. ಬಾವಿ ನೀರು ಕುಡಿಯಲ್ಲ. ನಾವು ರಾಜಮಾರ್ಗದಲ್ಲಿ ನಡೆದು ನಿನ್ನ ಪ್ರದೇಶ ದಾಟಿ ಹೋಗ್ತೀವಿ” ಅಂದ್ರು.+ 23 ಆದ್ರೆ ಸೀಹೋನ ತನ್ನ ಪ್ರದೇಶ ದಾಟಿ ಹೋಗೋಕೆ ಇಸ್ರಾಯೇಲ್ಯರಿಗೆ ಅನುಮತಿ ಕೊಡಲಿಲ್ಲ. ಅಷ್ಟೇ ಅಲ್ಲ ತನ್ನ ಎಲ್ಲ ಜನ್ರನ್ನ ಕೂಡಿಸ್ಕೊಂಡು ಕಾಡಲ್ಲಿ ಇಸ್ರಾಯೇಲ್ಯರ ಮೇಲೆ ದಾಳಿ ಮಾಡೋಕೆ ಹೋದ. ಯಹಜ ಅನ್ನೋ ಪಟ್ಟಣಕ್ಕೆ ಬಂದು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಿದ.+ 24 ಆದ್ರೆ ಇಸ್ರಾಯೇಲ್ಯರು ಅವನನ್ನ ಯುದ್ಧದಲ್ಲಿ ಸೋಲಿಸಿ+ ಅವನ ದೇಶವನ್ನ ವಶ ಮಾಡ್ಕೊಂಡ್ರು.+ ಅವನ ದೇಶ ಅರ್ನೋನ್ ಕಣಿವೆಯಿಂದ+ ಅಮ್ಮೋನಿಯರ ದೇಶದ ಹತ್ರ ಇದ್ದ ಯಬ್ಬೋಕ್ ಕಣಿವೆ ತನಕ+ ಇತ್ತು. ಇಸ್ರಾಯೇಲ್ಯರು ಯಜ್ಜೇರ್ ಪಟ್ಟಣಕ್ಕಿಂತ+ ಮುಂದೆ ಹೋಗಲಿಲ್ಲ. ಯಾಕಂದ್ರೆ ಯಜ್ಜೇರ್ ಪಟ್ಟಣ ಆದ್ಮೇಲೆ ಅಮ್ಮೋನಿಯರ ಪ್ರದೇಶ ಇತ್ತು.+
25 ಹೀಗೆ ಇಸ್ರಾಯೇಲ್ಯರು ಅಮೋರಿಯರ+ ಎಲ್ಲ ಪಟ್ಟಣಗಳನ್ನ ವಶ ಮಾಡ್ಕೊಂಡ್ರು. ಅವರು ಹೆಷ್ಬೋನಿನಲ್ಲಿ, ಅದಕ್ಕೆ ಸೇರಿದ* ಊರುಗಳಲ್ಲಿ ಅಮೋರಿಯರ ಬೇರೆ ಎಲ್ಲ ಪಟ್ಟಣಗಳಲ್ಲಿ ವಾಸಿಸೋಕೆ ಶುರು ಮಾಡಿದ್ರು. 26 ಅಮೋರಿಯರ ರಾಜನಾದ ಸೀಹೋನ ಮೋವಾಬ್ಯರ ರಾಜನ ವಿರುದ್ಧ ಯುದ್ಧ ಮಾಡಿ ಅರ್ನೋನ್ ಕಣಿವೆ ತನಕ ಇದ್ದ ಅವನ ಇಡೀ ದೇಶನ ವಶ ಮಾಡ್ಕೊಂಡಿದ್ದ. ಹಾಗಾಗಿ ಹೆಷ್ಬೋನ್ ಪಟ್ಟಣ ಸೀಹೋನನ ಪಟ್ಟಣ ಆಗಿತ್ತು. 27 ಹಾಗಾಗಿ ಹಂಗಿಸೋ ಈ ಗಾದೆ ಮಾತು ಬಂತು:
“ಹೆಷ್ಬೋನಿಗೆ ಬನ್ನಿ.
ಸೀಹೋನನ ಪಟ್ಟಣ ನಿರ್ಮಾಣ ಆಗಲಿ, ಅದು ಯಾವಾಗ್ಲೂ ಇರಲಿ.
28 ಹೆಷ್ಬೋನಿನಿಂದ ಬೆಂಕಿ ಬಂತು, ಹೌದು ಸೀಹೋನನ ಪಟ್ಟಣದಿಂದ ಜ್ವಾಲೆ ಬಂತು.
ಅದು ಮೋವಾಬಿನ ಆರ್ ಪಟ್ಟಣವನ್ನ ಅರ್ನೋನಿನ ಎತ್ತರದ ಸ್ಥಳಗಳ ಪ್ರಭುಗಳನ್ನ ಸುಟ್ಟುಬಿಡ್ತು.
29 ಅಯ್ಯೋ ಮೋವಾಬೇ, ನಿನಗೆಂಥ ಗತಿ ಬಂತು! ಅಯ್ಯೋ ಕೆಮೋಷನ+ ಜನ್ರೇ, ನೀವು ನಾಶ ಆಗ್ತಿರಲ್ಲಾ!
ಅವನು ತನ್ನ ಗಂಡು ಮಕ್ಕಳನ್ನ ಅಲೆಮಾರಿಗಳನ್ನಾಗಿ ತನ್ನ ಹೆಣ್ಣು ಮಕ್ಕಳನ್ನ ಅಮೋರಿಯರ ರಾಜನಾದ ಸೀಹೋನನ ಕೈದಿಗಳಾಗಿ ಮಾಡ್ತಾನೆ.
30 ಅವ್ರ ಮೇಲೆ ದಾಳಿ ಮಾಡೋಣ,
ದೀಬೋನಿನ+ ತನಕ ಹೆಷ್ಬೋನ್ ನಾಶವಾಗಿ ಹೋಗುತ್ತೆ,
ನೋಫಹದ ತನಕ ಅದನ್ನ ಹಾಳುಮಾಡಿ ಬಿಡೋಣ,
ಮೇದೆಬದ ತನಕ+ ಬೆಂಕಿ ಹೊತ್ತಿ ಉರಿಯುತ್ತೆ.”
31 ಇಸ್ರಾಯೇಲ್ಯರು ಅಮೋರಿಯರ ದೇಶದಲ್ಲಿ ವಾಸ ಮಾಡ್ತಾ ಇದ್ರು. 32 ಯಜ್ಜೇರ್+ ಪಟ್ಟಣ ಸಂಚರಿಸಿ ನೋಡೋಕೆ ಮೋಶೆ ಸ್ವಲ್ಪ ಗಂಡಸರನ್ನ ಕಳಿಸಿದ. ಅವರು ಯಜ್ಜೇರಿಗೆ ಸೇರಿದ* ಊರುಗಳನ್ನ ವಶ ಮಾಡ್ಕೊಂಡು ಅಲ್ಲಿದ್ದ ಅಮೋರಿಯರನ್ನ ಓಡಿಸಿಬಿಟ್ರು. 33 ಆಮೇಲೆ ಅವರು ಅಲ್ಲಿಂದ ತಿರುಗಿ ಬಾಷಾನಿಗೆ ಹೋಗೋ ದಾರಿಲಿ ಪ್ರಯಾಣಿಸಿದ್ರು. ಬಾಷಾನಿನ ರಾಜ ಓಗ+ ತನ್ನೆಲ್ಲ ಜನ್ರನ್ನ ಕರ್ಕೊಂಡು ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡೋಕೆ ಎದ್ರೈಗೆ+ ಬಂದ. 34 ಆಗ ಯೆಹೋವ ಮೋಶೆಗೆ “ನೀನು ಅವನಿಗೆ ಹೆದರಬೇಡ.+ ಅವನನ್ನ ಅವನ ಎಲ್ಲ ಜನ್ರನ್ನ ಅವನ ದೇಶವನ್ನ ನಿನ್ನ ಕೈಗೆ ಕೊಡ್ತೀನಿ.+ ಹೆಷ್ಬೋನಿನಲ್ಲಿ+ ಇರೋ ಅಮೋರಿಯರ ರಾಜ ಸೀಹೋನನಿಗೆ ಮಾಡಿದ ತರಾನೇ ನೀನು ಇವನಿಗೂ ಮಾಡ್ತೀಯ” ಅಂದನು. 35 ಇಸ್ರಾಯೇಲ್ಯರು ಅವನನ್ನ, ಅವನ ಗಂಡು ಮಕ್ಕಳನ್ನ ಅವನ ಎಲ್ಲ ಜನ್ರನ್ನ ಕೊಲ್ತಾ ಹೋದ್ರು, ಒಬ್ರನ್ನೂ ಉಳಿಸಲಿಲ್ಲ.+ ಆಮೇಲೆ ಅವರು ಆ ದೇಶನ ವಶ ಮಾಡ್ಕೊಂಡ್ರು.+
22 ಇಸ್ರಾಯೇಲ್ಯರು ಅಲ್ಲಿಂದ ಮೋವಾಬಿನ ಬಯಲು ಪ್ರದೇಶಕ್ಕೆ ಬಂದು ಅಲ್ಲಿ ಡೇರೆ ಹಾಕೊಂಡ್ರು. ಅದು ಯೆರಿಕೋ ಪಟ್ಟಣದ ಮುಂದೆ, ಯೋರ್ದನ್ ನದಿ ಪಕ್ಕದಲ್ಲಿ ಇತ್ತು.+ 2 ಇಸ್ರಾಯೇಲ್ಯರು ಅಮೋರಿಯರಿಗೆ ಮಾಡಿದ್ದೆಲ್ಲ ಚಿಪ್ಪೋರನ ಮಗ ಬಾಲಾಕನಿಗೆ ಗೊತ್ತಾಯ್ತು.+ 3 ಇಸ್ರಾಯೇಲ್ಯರ ಸಂಖ್ಯೆ ತುಂಬ ಜಾಸ್ತಿಯಾಗ್ತಾ ಇದ್ದದ್ದಕ್ಕೆ ಮೋವಾಬ್ಯರು ಭಯಪಟ್ರು. ಇಸ್ರಾಯೇಲ್ಯರನ್ನ ನೆನಸ್ಕೊಂಡ್ರೆ ಅವ್ರಿಗೆ ನಡುಕ ಬರ್ತಿತ್ತು.+ 4 ಅದಕ್ಕೆ ಮೋವಾಬ್ಯರು ಮಿದ್ಯಾನಿನ+ ಹಿರಿಯರಿಗೆ “ಹೋರಿ ಹೊಲದ ಹುಲ್ಲನ್ನೆಲ್ಲ ಮೇಯ್ದು ಬಿಡೋ ತರ ಈ ಜನ ನಮ್ಮ ಪ್ರದೇಶಗಳನ್ನ ನಾಶ ಮಾಡಿಬಿಡ್ತಾರೆ” ಅಂದ್ರು.
ಆಗ ಚಿಪ್ಪೋರನ ಮಗ ಬಾಲಾಕ ಮೋವಾಬಿನ ರಾಜನಾಗಿದ್ದ. 5 ಅವನು ಬೆಯೋರನ ಮಗ ಬಿಳಾಮನನ್ನ ಬರೋಕೆ ಹೇಳ್ತಾ ಸಂದೇಶವಾಹಕರನ್ನ ಕಳಿಸಿದ. ಬಿಳಾಮ ಯೂಫ್ರೆಟಿಸ್ ನದಿ ಹತ್ರ ಇರೋ ತನ್ನ ಹುಟ್ಟೂರಾದ ಪೆತೋರಿನಲ್ಲಿ ಇದ್ದ.+ ಬಾಲಾಕ ಅವನಿಗೆ “ಈಜಿಪ್ಟ್ ದೇಶದಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ!+ ಅವರು ನನ್ನ ಪ್ರದೇಶದ ಹತ್ರಾನೇ ವಾಸ ಮಾಡ್ತಾರೆ. 6 ಅವರು ನಮಗಿಂತ ತುಂಬ ಶಕ್ತಿಶಾಲಿ. ಅದಕ್ಕೆ ದಯವಿಟ್ಟು ನೀನು ಬಂದು ಅವರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ. ನೀನು ಯಾರಿಗೆ ಆಶೀರ್ವಾದ ಮಾಡ್ತೀಯೋ ಅವ್ರಿಗೆ ಒಳ್ಳೇದಾಗುತ್ತೆ. ಯಾರಿಗೆ ಶಾಪ ಕೊಡ್ತೀಯೋ ಅವ್ರಿಗೆ ಕೆಟ್ಟದಾಗುತ್ತೆ ಅಂತ ನನಗೆ ಚೆನ್ನಾಗಿ ಗೊತ್ತು” ಅಂತ ಹೇಳಿ ಕಳಿಸಿದ.
7 ಹಾಗಾಗಿ ಮೋವಾಬಿನ ಹಿರಿಯರು, ಮಿದ್ಯಾನಿನ ಹಿರಿಯರು ಹಣ ಕೊಟ್ಟು ಶಾಪ ಹಾಕಿಸೋಕೆ ಬಿಳಾಮ+ ಇದ್ದ ಊರಿಗೆ ಹೋದ್ರು. ಬಾಲಾಕ ಹೇಳಿದ್ದನ್ನ ಅವನಿಗೆ ಹೇಳಿದ್ರು. 8 ಆಗ ಬಿಳಾಮ ಅವರಿಗೆ “ಇವತ್ತು ರಾತ್ರಿ ಇಲ್ಲೇ ಇರಿ. ಯೆಹೋವ ಏನು ಹೇಳ್ತಾನೋ ನೋಡಿ ನಿಮ್ಗೆ ಹೇಳ್ತೀನಿ” ಅಂದ. ಅದಕ್ಕೆ ಮೋವಾಬಿನ ಅಧಿಕಾರಿಗಳು ಅಲ್ಲೇ ಉಳ್ಕೊಂಡ್ರು.
9 ಆಮೇಲೆ ದೇವರು ಬಿಳಾಮನ ಹತ್ರ ಬಂದು+ “ನಿನ್ನ ಜೊತೆ ಇರೋ ಈ ಗಂಡಸರು ಯಾರು?” ಅಂತ ಕೇಳಿದನು. 10 ಆಗ ಬಿಳಾಮ ಸತ್ಯ ದೇವರಿಗೆ “ಚಿಪ್ಪೋರನ ಮಗ, ಮೋವಾಬಿನ ರಾಜ ಬಾಲಾಕ ಇವರನ್ನ ಕಳಿಸಿದ್ದಾನೆ. ಬಾಲಾಕ ನನಗೆ 11 ‘ಈಜಿಪ್ಟಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ! ನೀನು ಬಂದು ಅವ್ರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ’ ಅಂತ ಹೇಳಿ ಕಳಿಸಿದ್ದಾನೆ” ಅಂದ. 12 ಅದಕ್ಕೆ ದೇವರು “ನೀನು ಅವ್ರ ಜೊತೆ ಹೋಗಬಾರದು. ಆ ಜನ್ರಿಗೆ ಶಾಪ ಹಾಕಬಾರದು. ಯಾಕಂದ್ರೆ ನಾನು ಅವರಿಗೆ ಆಶೀರ್ವಾದ ಮಾಡ್ತೀನಿ”+ ಅಂದನು.
13 ಬಿಳಾಮ ಬೆಳಗ್ಗೆ ಎದ್ದು ಬಾಲಾಕನ ಅಧಿಕಾರಿಗಳಿಗೆ “ನಿಮ್ಮ ದೇಶಕ್ಕೆ ವಾಪಸ್ ಹೋಗಿ. ನಾನು ನಿಮ್ಮ ಜೊತೆ ಬರಕ್ಕಾಗಲ್ಲ, ಯಾಕಂದ್ರೆ ಯೆಹೋವ ನನಗೆ ಒಪ್ಪಿಗೆ ಕೊಡಲಿಲ್ಲ” ಅಂದ. 14 ಹಾಗಾಗಿ ಮೋವಾಬಿನ ಅಧಿಕಾರಿಗಳು ಅಲ್ಲಿಂದ ಬಾಲಾಕನ ಹತ್ರ ವಾಪಸ್ ಬಂದು “ಬಿಳಾಮ ಬರೋಕೆ ಒಪ್ಪಲಿಲ್ಲ” ಅಂದ್ರು.
15 ಆದ್ರೆ ಬಾಲಾಕ ಇನ್ನೂ ಹೆಚ್ಚು ಅಧಿಕಾರಿಗಳನ್ನ ಬಿಳಾಮನ ಹತ್ರ ಕಳಿಸಿದ. ಅವರು ಮೊದ್ಲು ಬಂದವರಿಗಿಂತ ಹೆಸರುವಾಸಿ ಆದ ವ್ಯಕ್ತಿಗಳಾಗಿದ್ರು. 16 ಅವರು ಬಿಳಾಮನ ಹತ್ರ ಬಂದು “ಚಿಪ್ಪೋರನ ಮಗ ಬಾಲಾಕ ಹೀಗೆ ಹೇಳ್ತಿದ್ದಾನೆ, ‘ನೀನು ದಯವಿಟ್ಟು ನನ್ನ ಹತ್ರ ಬಾ. ಏನೇ ಆದ್ರೂ ಬರಲೇಬೇಕು. 17 ನಾನು ನಿನಗೆ ದೊಡ್ಡ ಸನ್ಮಾನ ಮಾಡ್ತೀನಿ. ನೀನು ಏನೇ ಹೇಳಿದ್ರೂ ನಾನದನ್ನ ಮಾಡ್ತೀನಿ. ದಯವಿಟ್ಟು ನನಗೋಸ್ಕರ ಇಲ್ಲಿಗೆ ಬಂದು ಈ ಜನ್ರಿಗೆ ಶಾಪ ಹಾಕು’” ಅಂದ್ರು. 18 ಅದಕ್ಕೆ ಬಿಳಾಮ “ಬಾಲಾಕ ಅವನ ಹತ್ರ ಇರೋ ಚಿನ್ನಬೆಳ್ಳಿ ತುಂಬಿಸಿ ಕೊಟ್ರೂ ನನ್ನ ದೇವರಾದ ಯೆಹೋವನ ಅಪ್ಪಣೆನ ಮೀರಿ ನನ್ನಿಂದ ಏನೂ ಮಾಡಕ್ಕಾಗಲ್ಲ. ಅದು ಚಿಕ್ಕದಿರಲಿ ದೊಡ್ಡದಿರಲಿ ನನ್ನಿಂದಾಗಲ್ಲ.+ 19 ಆದ್ರೆ ನೀವು ಒಂದು ಕೆಲಸ ಮಾಡಿ. ದಯವಿಟ್ಟು ಇವತ್ತು ರಾತ್ರಿನೂ ಇಲ್ಲೇ ಇರಿ. ಯೆಹೋವ ಬೇರೆ ಏನಾದ್ರೂ ಉತ್ರ ಕೊಡ್ತಾನಾ ಅಂತ ನೋಡೋಣ”+ ಅಂದ.
20 ಆ ರಾತ್ರಿ ದೇವರು ಬಿಳಾಮನ ಹತ್ರ ಬಂದು “ಈ ಗಂಡಸರು ನಿನ್ನ ಕರಿಯೋಕೆ ಬಂದಿರೋದಾದ್ರೆ ನೀನು ಅವ್ರ ಜೊತೆ ಹೋಗು. ಆದ್ರೆ ನಾನು ನಿನಗೆ ತಿಳಿಸೋ ಮಾತುಗಳನ್ನ ಬಿಟ್ಟು ಬೇರೇನೂ ಹೇಳ್ಬಾರದು”+ ಅಂದ. 21 ಅದಕ್ಕೆ ಬಿಳಾಮ ಬೆಳಗ್ಗೆ ಎದ್ದು ಕತ್ತೆನ ಸಿದ್ಧಮಾಡಿ ಮೋವಾಬಿನ ಅಧಿಕಾರಿಗಳ ಜೊತೆ ಹೊರಟ.+
22 ಆದ್ರೆ ಬಿಳಾಮ ಹೋಗಿದ್ದಕ್ಕೆ ದೇವರಿಗೆ ಅವನ ಮೇಲೆ ತುಂಬ ಕೋಪ ಬಂತು. ಅದಕ್ಕೆ ಅವನನ್ನ ತಡಿಯೋಕೆ ಯೆಹೋವನ ದೂತ ದಾರಿಲಿ ನಿಂತ. ಬಿಳಾಮ ಕತ್ತೆ ಮೇಲೆ ಸವಾರಿ ಮಾಡ್ತಿದ್ದ. ಅವನ ಜೊತೆ ಅವನ ಇಬ್ರು ಸೇವಕರು ಇದ್ರು. 23 ಯೆಹೋವನ ದೂತ ಕತ್ತಿ ಹಿಡ್ಕೊಂಡು ದಾರಿಲಿ ನಿಂತಿರೋದನ್ನ ಬಿಳಾಮನ ಕತ್ತೆ ನೋಡಿ ದಾರಿ ಬಿಟ್ಟು ಬಯಲಿನ ಕಡೆ ಹೋಗೋಕೆ ಪ್ರಯತ್ನಿಸ್ತು. ಆಗ ಬಿಳಾಮ ಕತ್ತೆನ ದಾರಿ ಕಡೆ ತಿರುಗಿಸೋಕೆ ರಪರಪ ಅಂತ ಹೊಡಿಯೋಕೆ ಶುರು ಮಾಡ್ದ. 24 ಆಮೇಲೆ ಯೆಹೋವನ ದೂತ ಎರಡು ದ್ರಾಕ್ಷಿತೋಟಗಳ ಮಧ್ಯದಲ್ಲಿದ್ದ ಚಿಕ್ಕ ದಾರಿಲಿ ನಿಂತ. ಆ ದಾರಿಯ ಎರಡೂ ಬದಿಗಳಲ್ಲಿ ಕಲ್ಲಿನ ಗೋಡೆ ಇತ್ತು. 25 ಕತ್ತೆ ಯೆಹೋವನ ದೂತನನ್ನ ನೋಡಿ ಗೋಡೆಗೆ ಒರಗಿ ನಿಲ್ಲೋಕೆ ಪ್ರಯತ್ನಿಸ್ತಾ ಬಿಳಾಮನ ಕಾಲನ್ನ ಗೋಡೆಗೆ ಒತ್ತಿತು. ಆಗ ಬಿಳಾಮ ಮತ್ತೆ ಕತ್ತೆಗೆ ಜೋರಾಗಿ ಹೊಡಿಯೋಕೆ ಶುರು ಮಾಡಿದ.
26 ಯೆಹೋವನ ದೂತ ಮತ್ತೆ ಮುಂದೆ ಹೋಗಿ ಎಡಕ್ಕಾಗ್ಲಿ ಬಲಕ್ಕಾಗ್ಲಿ ತಿರುಗೋಕೆ ಆಗದಷ್ಟು ಇಕ್ಕಟ್ಟಾದ ಜಾಗದಲ್ಲಿ ನಿಂತ. 27 ಕತ್ತೆ ಯೆಹೋವನ ದೂತನನ್ನ ನೋಡಿದ ತಕ್ಷಣ ನೆಲದ ಮೇಲೆ ಕೂತ್ಕೊಳ್ತು. ಆಗ ಬಿಳಾಮನಿಗೆ ಕೋಪ ನೆತ್ತಿಗೇರಿ ಕೋಲಿಂದ ಕತ್ತೆಗೆ ಹೊಡಿಯೋಕೆ ಶುರು ಮಾಡ್ದ. 28 ಆಗ ಕತ್ತೆ ಮಾತಾಡೊ ತರ ಯೆಹೋವ ಮಾಡಿದನು.+ ಕತ್ತೆ ಬಿಳಾಮನಿಗೆ “ನಾನೇನ್ ಮಾಡ್ದೆ ಅಂತ ನೀನು ನನ್ನ ಮೂರು ಸಲ ಹೊಡ್ದೆ?”+ ಅಂತ ಕೇಳ್ತು. 29 ಆಗ ಬಿಳಾಮ ಕತ್ತೆಗೆ “ನೀನು ನನಗೆ ಕಾಟ ಕೊಡ್ತಾ ಇದ್ದೀಯ. ನನ್ನ ಕೈಯಲ್ಲೇನಾದ್ರೂ ಕತ್ತಿ ಇದ್ದಿದ್ರೆ ನಿನ್ನ ಕೊಂದೇ ಹಾಕ್ತಿದ್ದೆ!” ಅಂದ. 30 ಅದಕ್ಕೆ ಕತ್ತೆ “ನೀನು ಜೀವನಪೂರ್ತಿ ನನ್ನ ಮೇಲೆ ಸವಾರಿ ಮಾಡಿದ್ದೀಯ ತಾನೇ. ಯಾವತ್ತಾದ್ರೂ ಈ ತರ ಮಾಡಿದ್ದೀನಾ?” ಅಂತು. ಬಿಳಾಮ “ಇಲ್ಲ” ಅಂದ. 31 ಆಗ ಯೆಹೋವ ಬಿಳಾಮನ ಕಣ್ಣು ತೆರೆದನು.+ ಅವನಿಗೆ ಯೆಹೋವನ ದೂತ ಕೈಯಲ್ಲಿ ಕತ್ತಿ ಹಿಡಿದು ದಾರಿಲಿ ನಿಂತಿರೋದು ಕಾಣಿಸ್ತು. ತಕ್ಷಣ ಅವನು ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.
32 ಆಗ ಯೆಹೋವನ ದೂತ “ಕತ್ತೆಗೆ ಮೂರು ಸಲ ಯಾಕೆ ಹೊಡ್ದೆ? ನನ್ನ ಇಷ್ಟಕ್ಕೆ ವಿರುದ್ಧವಾದ ದಾರಿ ಹಿಡಿದಿದ್ದಕ್ಕೆ ತಡಿಯೋಕೆ ಬಂದೆ.+ 33 ಮೂರು ಸಲ ನಿನ್ನನ್ನ ತಡ್ದೆ. ಆ ಮೂರೂ ಸಲ ನಿನ್ನ ಕತ್ತೆ ನನ್ನ ನೋಡಿ ದಾರಿಯಿಂದ ಪಕ್ಕಕ್ಕೆ ಸರಿಯೋಕೆ ನೋಡ್ತು.+ ಒಂದುವೇಳೆ ಅದು ಹಾಗೆ ಮಾಡದೇ ಇದ್ದಿದ್ರೆ ನಾನು ನಿನ್ನ ಕೊಂದು ಕತ್ತೆನ ಉಳಿಸ್ತಿದ್ದೆ” ಅಂದ. 34 ಬಿಳಾಮ ಯೆಹೋವನ ದೂತನಿಗೆ “ನಾನು ಪಾಪ ಮಾಡ್ದೆ. ನನ್ನ ಭೇಟಿ ಮಾಡೋಕೆ ನೀನು ದಾರಿಲಿ ನಿಂತಿರೋದು ನನಗೆ ಗೊತ್ತಾಗಲಿಲ್ಲ. ನಾನು ಹೋಗೋದು ನಿನಗಿಷ್ಟ ಇಲ್ಲಾಂದ್ರೆ ವಾಪಸ್ ಹೋಗ್ತೀನಿ” ಅಂದ. 35 ಯೆಹೋವನ ದೂತ ಬಿಳಾಮನಿಗೆ “ಅವರ ಜೊತೆ ನೀನು ಹೋಗು. ಆದ್ರೆ ನಾನು ಹೇಳೋ ಮಾತುಗಳನ್ನ ಬಿಟ್ಟು ಬೇರೇನೂ ಹೇಳಬಾರದು” ಅಂದ. ಹಾಗಾಗಿ ಬಿಳಾಮ ಬಾಲಾಕನ ಅಧಿಕಾರಿಗಳ ಜೊತೆ ಹೋದ.
36 ಬಿಳಾಮ ಬಂದಿದ್ದಾನೆ ಅನ್ನೋ ಸುದ್ದಿ ಸಿಕ್ಕಿದ ತಕ್ಷಣ ಬಾಲಾಕ ಅವನನ್ನ ಭೇಟಿ ಮಾಡೋಕೆ ಮೋವಾಬ್ ಪಟ್ಟಣಕ್ಕೆ ಹೋದ. ಈ ಪಟ್ಟಣ ಅವನ ಪ್ರದೇಶದ ಗಡಿಯಲ್ಲಿರೋ ಅರ್ನೋನ್ ಕಣಿವೆ ದಡದಲ್ಲಿದೆ. 37 ಬಾಲಾಕ ಬಿಳಾಮನಿಗೆ “ನಾನು ಮುಂಚೆ ಹೇಳಿ ಕಳಿಸಿದಾಗ ನೀನ್ಯಾಕೆ ಬರಲಿಲ್ಲ? ನಿನಗೆ ದೊಡ್ಡ ಸನ್ಮಾನ ಮಾಡೋಕೆ ನನ್ನಿಂದ ಆಗಲ್ಲ ಅಂತ ನೆನಿಸಿದ್ಯಾ?”+ ಅಂತ ಕೇಳ್ದ. 38 ಅದಕ್ಕೆ ಬಿಳಾಮ “ಈಗ ಬಂದಿದ್ದೀನಲ್ಲಾ. ಆದ್ರೂ ನನ್ನ ಮನಸ್ಸಿಗೆ ಬಂದ ಹಾಗೆ ಮಾತಾಡೋಕೆ ನನಗೆ ಅನುಮತಿ ಇಲ್ಲ. ದೇವರು ನನಗೆ ತಿಳಿಸೋ ಮಾತುಗಳಷ್ಟೇ ನನ್ನಿಂದ ಹೇಳೋಕೆ ಆಗೋದು”+ ಅಂದ.
39 ಆಮೇಲೆ ಬಿಳಾಮ ಬಾಲಾಕನ ಜೊತೆ ಕಿರ್ಯತ್-ಹುಚೋತಿಗೆ ಹೋದ. 40 ಅಲ್ಲಿ ಬಾಲಾಕ ಹೋರಿಗಳನ್ನ ಕುರಿಗಳನ್ನ ಬಲಿ ಕೊಟ್ಟ. ಬಲಿಯ ಮಾಂಸದಲ್ಲಿ ಸ್ವಲ್ಪನ ಬಿಳಾಮನಿಗೂ ಅವನ ಜೊತೆ ಇದ್ದ ಅಧಿಕಾರಿಗಳಿಗೂ ಕಳಿಸಿಕೊಟ್ಟ. 41 ಬೆಳಿಗ್ಗೆ ಬಾಲಾಕ ಬಿಳಾಮನನ್ನ ಬಾಮೋತ್-ಬಾಳ್ ಅನ್ನೋ ಜಾಗಕ್ಕೆ ಕರ್ಕೊಂಡು ಹೋದ. ಅಲ್ಲಿಂದ ಅವನಿಗೆ ಎಲ್ಲ ಇಸ್ರಾಯೇಲ್ಯರನ್ನ ನೋಡೋಕೆ ಆಗ್ತಿತ್ತು.+
23 ಬಿಳಾಮ ಬಾಲಾಕನಿಗೆ “ಈ ಜಾಗದಲ್ಲಿ ಏಳು ಯಜ್ಞವೇದಿಗಳನ್ನ ಕಟ್ಟು.+ ಬಲಿ ಕೊಡೋಕೆ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತಗೊಂಡು ಬಾ” ಅಂದನು. 2 ಬಾಲಾಕ ತಕ್ಷಣ ಬಿಳಾಮ ಹೇಳಿದ ತರಾನೇ ಮಾಡಿದ. ಆಮೇಲೆ ಅವರಿಬ್ರೂ ಪ್ರತಿಯೊಂದು ಯಜ್ಞವೇದಿ ಮೇಲೆ ಒಂದು ಹೋರಿ, ಒಂದು ಟಗರು ಅರ್ಪಿಸಿದ್ರು.+ 3 ಆಮೇಲೆ ಬಿಳಾಮ ಬಾಲಾಕನಿಗೆ “ನೀನು ಸರ್ವಾಂಗಹೋಮ ಬಲಿ ಕೊಟ್ಟ ಜಾಗದಲ್ಲೇ ಇರು. ನಾನು ಹೋಗಿ ಬರ್ತಿನಿ. ಯೆಹೋವ ಬಂದು ನನ್ನ ಜೊತೆ ಮಾತಾಡಬಹುದು. ಆತನು ಏನು ಹೇಳ್ತಾನೋ ಅದನ್ನ ನಾನು ಬಂದು ನಿನಗೆ ಹೇಳ್ತೀನಿ” ಅಂತ ಹೇಳಿ ಒಂದು ಬೆಟ್ಟ ಹತ್ತಿದ.
4 ಆಮೇಲೆ ದೇವರು ಬಿಳಾಮನ ಹತ್ರ ಮಾತಾಡೋಕೆ ಬಂದನು.+ ಆಗ ಬಿಳಾಮ “ನಾನು ಸಾಲಾಗಿ ಏಳು ಯಜ್ಞವೇದಿ ಕಟ್ಟಿದ್ದೀನಿ. ಪ್ರತಿಯೊಂದ್ರ ಮೇಲೆ ಒಂದು ಹೋರಿ, ಒಂದು ಟಗರು ಬಲಿ ಕೊಟ್ಟಿದ್ದೀನಿ” ಅಂದ. 5 ಬಿಳಾಮ ಏನೇನು ಮಾತಾಡಬೇಕು ಅಂತ ಯೆಹೋವ ಹೇಳ್ಕೊಟ್ಟು+ “ನೀನು ಬಾಲಾಕನ ಹತ್ರ ಹೋಗಿ ಇದನ್ನೆಲ್ಲ ಹೇಳು” ಅಂದನು. 6 ಅದಕ್ಕೆ ಅವನು ವಾಪಸ್ ಹೋದ. ಅಲ್ಲಿ ಬಾಲಾಕ, ಮೋವಾಬಿನ ಎಲ್ಲ ಅಧಿಕಾರಿಗಳು ಸರ್ವಾಂಗಹೋಮ ಬಲಿ ಕೊಟ್ಟ ಜಾಗದಲ್ಲಿ ನಿಂತಿದ್ರು. 7 ಆಗ ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+
“ಮೋವಾಬಿನ ರಾಜ ಬಾಲಾಕ ನನ್ನನ್ನ ಅರಾಮಿಂದ+ ಕರೆಸಿದ,
ಪೂರ್ವದ ಬೆಟ್ಟದಿಂದ ನನ್ನನ್ನ ಬರೋಕೆ ಹೇಳಿದ,
‘ನನಗಾಗಿ ಬಂದು ಯಾಕೋಬನಿಗೆ ಶಾಪ ಹಾಕು,
ಹೌದು, ಇಸ್ರಾಯೇಲನನ್ನ ದೂಷಿಸು’ ಅಂದ.+
8 ಆ ಜನ್ರಿಗೆ ದೇವರೇ ಶಾಪ ಹಾಕದಿದ್ದ ಮೇಲೆ ನಾನು ಹೇಗೆ ಶಾಪ ಹಾಕ್ಲಿ?
ಅವ್ರನ್ನ ಯೆಹೋವನೇ ದೂಷಿಸದಿದ್ದ ಮೇಲೆ ನಾನು ಹೇಗೆ ದೂಷಿಸ್ಲಿ?+
9 ಬಂಡೆಗಳ ಮೇಲಿಂದ ನಾನು ಅವ್ರನ್ನ ನೋಡ್ತಾ ಇದ್ದೀನಿ,
ಬೆಟ್ಟದ ಮೇಲಿಂದ ನನಗೆ ಅವರು ಕಾಣಿಸ್ತಿದ್ದಾರೆ.
10 ಧೂಳಿನ ಕಣಗಳ ತರ ಇರೋ ಯಾಕೋಬನ ವಂಶದವರನ್ನ ಯಾರಿಗಾದ್ರೂ ಲೆಕ್ಕ ಮಾಡೋಕೆ ಆಗುತ್ತಾ?+
ಇಸ್ರಾಯೇಲ್ಯರಲ್ಲಿ ಒಂದು ಭಾಗನಾದ್ರೂ ಯಾರಿಗಾದ್ರೂ ಲೆಕ್ಕ ಮಾಡೋಕೆ ಆಗುತ್ತಾ?
ನನಗೆ ನೀತಿವಂತರಿಗೆ ಸಿಗೋ ಸಾವು ಸಿಗ್ಲಿ,
ಅವರಿಗಾಗೋ ಅಂತ್ಯ ಆಗ್ಲಿ.”
11 ಆಗ ಬಾಲಾಕ ಬಿಳಾಮನಿಗೆ “ನೀನು ಎಂಥ ಕೆಲಸ ಮಾಡ್ದೆ? ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನನ್ನ ಕರ್ಕೊಂಡು ಬಂದ್ರೆ ನೀನು ಅವರಿಗೇ ಆಶೀರ್ವಾದ ಮಾಡ್ತಾ ಇದ್ದೀಯ” ಅಂದ.+ 12 ಅದಕ್ಕೆ “ಯೆಹೋವ ಹೇಳೋ ಮಾತನ್ನೇ ನಾನು ಹೇಳಬೇಕಲ್ವಾ?” ಅಂದ.+
13 ಬಾಲಾಕ “ದಯವಿಟ್ಟು ನನ್ನ ಜೊತೆ ಇನ್ನೊಂದು ಕಡೆ ಬಾ. ಅಲ್ಲಿಂದಾನೂ ಅವರು ನಿನಗೆ ಕಾಣ್ತಾರೆ. ಆದ್ರೆ ಎಲ್ರೂ ಕಾಣಿಸಲ್ಲ, ಸ್ವಲ್ಪ ಜನ ಮಾತ್ರ ಕಾಣಿಸ್ತಾರೆ. ಅಲ್ಲಿಂದಾದ್ರೂ ನೀನು ಅವ್ರಿಗೆ ಶಾಪ ಹಾಕು” ಅಂದ.+ 14 ಆಮೇಲೆ ಬಾಲಾಕ ಅವನನ್ನ ಪಿಸ್ಗಾ ಬೆಟ್ಟದ+ ಮೇಲಿರೋ ಚೋಫೀಮ್ ಬಯಲಿಗೆ ಕರ್ಕೊಂಡು ಹೋದ. ಅಲ್ಲೂ ಏಳು ಯಜ್ಞವೇದಿ ಕಟ್ಟಿ ಒಂದು ಹೋರಿ, ಒಂದು ಟಗರು ಅರ್ಪಿಸಿದ.+ 15 ಬಿಳಾಮ ಬಾಲಾಕನಿಗೆ “ನೀನು ಸರ್ವಾಂಗಹೋಮ ಬಲಿ ಕೊಟ್ಟ ಜಾಗದಲ್ಲೇ ಇರು. ನಾನು ಹೋಗಿ ದೇವರು ಏನು ಹೇಳ್ತಾನೆ ಅಂತ ಕೇಳ್ಕೊಂಡು ಬರ್ತಿನಿ” ಅಂದ. 16 ಯೆಹೋವ ಬಿಳಾಮನ ಹತ್ರ ಮಾತಾಡೋಕೆ ಬಂದನು. ಏನೇನು ಹೇಳಬೇಕು ಅಂತ ಆತನು ಅವನಿಗೆ ಹೇಳ್ಕೊಟ್ಟು+ “ನೀನು ಬಾಲಾಕನ ಹತ್ರ ಹೋಗಿ ಇದನ್ನೆಲ್ಲ ಹೇಳು” ಅಂದ. 17 ಅವನು ವಾಪಸ್ ಬಂದಾಗ ಬಾಲಾಕ ಸರ್ವಾಂಗಹೋಮ ಬಲಿ ಕೊಟ್ಟ ಜಾಗದಲ್ಲೇ ಅವನಿಗಾಗಿ ಕಾಯ್ತಾ ಇದ್ದ. ಮೋವಾಬಿನ ಅಧಿಕಾರಿಗಳೂ ಅವನ ಜೊತೆ ಇದ್ರು. “ಯೆಹೋವ ನಿನಗೆ ಏನು ಹೇಳಿದ?” ಅಂತ ಬಾಲಾಕ ಬಿಳಾಮನಿಗೆ ಕೇಳಿದಾಗ 18 ಅವನು ಕಾವ್ಯರೂಪವಾಗಿ ಹೀಗಂದ:+
“ಬಾಲಾಕನೇ, ನನ್ನ ಮಾತು ಕೇಳು.
ಚಿಪ್ಪೋರನ ಮಗನೇ, ಗಮನಕೊಟ್ಟು ಕೇಳು.
ತಾನು ಹೇಳಿದ ಹಾಗೇ ನಡೀತಾನೆ,
ತಾನು ಕೊಟ್ಟ ಮಾತನ್ನ ನಿಜ ಮಾಡೇ ಮಾಡ್ತಾನೆ.+
20 ಆ ಜನ್ರಿಗೆ ಆಶೀರ್ವಾದ ಮಾಡಬೇಕು ಅಂತ ದೇವರು ನಂಗೆ ಅಪ್ಪಣೆ ಕೊಟ್ಟಿದ್ದಾನೆ,
ಆತನು ಅವ್ರಿಗೆ ಆಶೀರ್ವಾದ ಮಾಡಿದ+ ಮೇಲೆ ಅದನ್ನ ಬದಲಾಯಿಸೋಕೆ ನನ್ನಿಂದಾಗಲ್ಲ.+
21 ಯಾಕೋಬನಿಗೆ ವಿರುದ್ಧವಾಗಿ ಮಂತ್ರತಂತ್ರ ಮಾಡಿದ್ರೆ ಆತನು ಸಹಿಸಲ್ಲ,
ಇಸ್ರಾಯೇಲನಿಗೆ ಏನೂ ಕೆಟ್ಟದಾಗೋಕೆ ಆತನು ಬಿಡಲ್ಲ.
ಅವನ ದೇವರಾದ ಯೆಹೋವ ಆ ಜನ್ರ ಜೊತೆ ಇದ್ದಾನೆ,+
ಆತನೇ ನಮ್ಮ ರಾಜ ಅಂತ ಅವರು ಜೈಕಾರ ಹಾಕ್ತಾರೆ.
22 ದೇವರೇ ಅವರನ್ನ ಈಜಿಪ್ಟಿಂದ ಕರ್ಕೊಂಡು ಬರ್ತಿದ್ದಾನೆ.+
ಆತನು ಅವ್ರಿಗೆ ಕಾಡುಕೋಣದ ಕೊಂಬಿನ ತರ ಇದ್ದಾನೆ.+
ಜನ ಯಾಕೋಬನನ್ನ ಇಸ್ರಾಯೇಲನ್ನ ನೋಡಿ
‘ದೇವರು ಎಂಥ ಅದ್ಭುತ ಮಾಡಿದ್ದಾನೆ!’ ಅಂತ ಮಾತಾಡ್ಕೊಳ್ತಾರೆ.
24 ಈ ಜನ ಸಿಂಹದ ತರ ಏಳ್ತಾರೆ,
ಇವರು ಸಿಂಹದ ತರ ಎದ್ದು ನಿಲ್ತಾರೆ.+
ಆ ಸಿಂಹ ಬೇಟೆನ ತಿಂದು ಮುಗಿಸೋ ತನಕ ಹಿಂದೆಜ್ಜೆ ಹಾಕಲ್ಲ,
ಬೇಟೆ ರಕ್ತ ಕುಡಿಯೋ ತನಕ ಮಲಗಲ್ಲ.”
25 ಆಗ ಬಾಲಾಕ “ಅವ್ರಿಗೆ ಶಾಪ ಹಾಕಕ್ಕೆ ನಿನ್ನಿಂದ ಆಗಿಲ್ಲ ಅಂದ್ರೆ ಬಿಡು. ಆದ್ರೆ ಅವ್ರಿಗೆ ಆಶೀರ್ವಾದ ಮಾತ್ರ ಕೊಡಬೇಡ” ಅಂತ ಬಿಳಾಮನಿಗೆ ಹೇಳಿದ. 26 ಅದಕ್ಕೆ ಬಿಳಾಮ “‘ನಾನು ಯೆಹೋವ ಹೇಳಿದ್ದನ್ನೇ ಮಾಡ್ತೀನಿ’ ಅಂತ ಮೊದ್ಲೇ ಹೇಳಲಿಲ್ವಾ?” ಅಂದ.+
27 ಬಾಲಾಕ ಬಿಳಾಮನಿಗೆ “ದಯವಿಟ್ಟು ನನ್ನ ಜೊತೆ ಇನ್ನೊಂದು ಕಡೆ ಬಾ. ಅಲ್ಲಿಂದಾದ್ರೂ ನೀನು ಅವ್ರಿಗೆ ಶಾಪ ಹಾಕೋಕೆ ಸತ್ಯ ದೇವರು ಅನುಮತಿ ಕೊಡಬಹುದು” ಅಂದ.+ 28 ಆಮೇಲೆ ಬಾಲಾಕ ಅವನನ್ನ ಪೆಗೋರ್ ಬೆಟ್ಟದ ತುದಿಗೆ ಕರ್ಕೊಂಡು ಹೋದ. ಅಲ್ಲಿಂದ ಯೆಷೀಮೋನ್* ಕಾಣಿಸುತ್ತೆ.+ 29 ಆಮೇಲೆ ಬಿಳಾಮ ಬಾಲಾಕನಿಗೆ “ಈ ಜಾಗದಲ್ಲಿ ಏಳು ಯಜ್ಞವೇದಿ ಕಟ್ಟು. ಬಲಿ ಕೊಡೋಕೆ ಏಳು ಹೋರಿ ಏಳು ಟಗರುಗಳನ್ನ ತಗೊಂಡು ಬಾ”+ ಅಂದ. 30 ಬಿಳಾಮ ಹೇಳಿದ ತರಾನೇ ಬಾಲಾಕ ಮಾಡಿದ. ಆಮೇಲೆ ಅವನು ಎಲ್ಲ ಯಜ್ಞವೇದಿ ಮೇಲೆ ಒಂದು ಹೋರಿ, ಒಂದು ಟಗರು ಬಲಿ ಕೊಟ್ಟ.
24 ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡೋದೇ ಯೆಹೋವನ ಇಷ್ಟ ಅಂತ ಬಿಳಾಮನಿಗೆ ಗೊತ್ತಾಯ್ತು. ಹಾಗಾಗಿ ಅವನು ಮತ್ತೆ ಭವಿಷ್ಯ ನೋಡೋಕೆ ಹೋಗಲಿಲ್ಲ.+ ಆದ್ರೆ ಅವನು ಕಾಡಿಗೆ ಮುಖ ಮಾಡಿ ನಿಂತ. 2 ಅವನು ಅಲ್ಲಿ ನೋಡಿದಾಗ ಇಸ್ರಾಯೇಲ್ಯರು ತಮ್ಮ ಕುಲದ ಪ್ರಕಾರ ಡೇರೆ ಹಾಕಿದ್ದು ಕಾಣಿಸ್ತು.+ ಆಮೇಲೆ ದೇವರ ಪವಿತ್ರಶಕ್ತಿ ಅವನ ಮೇಲೆ ಬಂತು.+ 3 ಆಗ ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+
“ಇವು ಬೆಯೋರನ ಮಗ ಬಿಳಾಮನ ಮಾತುಗಳು,
ಯಾರ ಕಣ್ಣು ತೆರಿತೋ ಅವನ ಮಾತುಗಳು,
4 ದೇವರ ಮಾತನ್ನ ಕೇಳಿಸ್ಕೊಂಡವನ,
ಸರ್ವಶಕ್ತನ ದರ್ಶನ ನೋಡಿದವನ
ಕಣ್ತೆರೆದು ಕೆಳಗೆ ಬಿದ್ದವನ ಮಾತುಗಳು:+
5 ಯಾಕೋಬನೇ, ನಿನ್ನ ಡೇರೆಗಳು ಎಷ್ಟೋ ಸುಂದರ!
ಇಸ್ರಾಯೇಲನೇ, ನಿನ್ನ ಜಾಗಗಳು ಎಷ್ಟೋ ಮನೋಹರ!+
6 ಅವು ಕಣಿವೆಗಳ ತರ ದೂರದ ತನಕ ಇದೆ,+
ನದಿತೀರದಲ್ಲಿರೋ ತೋಟಗಳ ತರ ಇದೆ,
ಯೆಹೋವ ನೆಟ್ಟ ಅಗರು* ಗಿಡಗಳ ತರ ಇದೆ,
ನೀರಿನ ಹತ್ರ ಇರೋ ದೇವದಾರು ಮರಗಳ ತರ ಇದೆ.
8 ದೇವರು ಅವನನ್ನ ಈಜಿಪ್ಟಿಂದ ಕರ್ಕೊಂಡು ಬರ್ತಿದ್ದಾನೆ,
ಆತನು ಅವ್ರಿಗೆ ಕಾಡುಕೋಣದ ಕೊಂಬಿನ ತರ ಇದ್ದಾನೆ.
ಇಸ್ರಾಯೇಲನ್ನ ದಬ್ಬಾಳಿಕೆ ಮಾಡೋ ಜನ್ರನ್ನ ನಾಶ ಮಾಡಿಬಿಡ್ತಾನೆ,+
ಬಾಣಗಳಿಂದ ಅವ್ರನ್ನ ಚೂರುಚೂರು ಮಾಡ್ತಾನೆ, ಅವ್ರ ಎಲುಬುಗಳನ್ನ ಅಗಿತಾನೆ.
9 ಸಿಂಹದ ತರ ಅವನು ಕಾಲು ಮುದುರಿ ಕೂತಿದ್ದಾನೆ, ಸಿಂಹದ ತರ ಅವನು ಮಲಗಿದ್ದಾನೆ,
ಸಿಂಹದ ತರ ಇರೋ ಅವನನ್ನ ಕೆಣಕೋ ಧೈರ್ಯ ಯಾರಿಗಿದೆ?
ನಿನ್ನನ್ನ ಆಶೀರ್ವದಿಸೋ ಜನ್ರಿಗೆ ಆಶೀರ್ವಾದ ಸಿಗುತ್ತೆ,
ನಿನ್ನನ್ನ ಶಪಿಸೋ ಜನ್ರಿಗೆ ಶಾಪ ತಟ್ಟುತ್ತೆ.”+
10 ಬಿಳಾಮನ ಮಾತುಗಳನ್ನ ಕೇಳಿ ಬಾಲಾಕನಿಗೆ ವಿಪರೀತ ಕೋಪ ಬಂತು. ಅವನು ಚಪ್ಪಾಳೆ ಹೊಡೆದು ಅಣಕಿಸ್ತಾ “ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನ ಕರೆದೆ.+ ಆದ್ರೆ ನೀನು ಮೂರು ಸಲನೂ ಅವ್ರಿಗೆ ಆಶೀರ್ವಾದ ಮಾಡ್ದೆ. 11 ಹೋಗು ಇಲ್ಲಿಂದ, ಒಂದು ಕ್ಷಣಾನೂ ಇಲ್ಲಿ ಇರ್ಬೇಡ. ನಿನಗೆ ದೊಡ್ಡ ಸನ್ಮಾನ ಮಾಡಬೇಕಂತ ಇದ್ದೆ.+ ಆದ್ರೆ ಆ ಸನ್ಮಾನ ನಿನಗೆ ಸಿಗ್ದೇ ಇರೋ ತರ ಯೆಹೋವ ತಡಿದಿದ್ದಾನೆ” ಅಂದ.
12 ಅದಕ್ಕೆ ಬಿಳಾಮ “ನಾನು ನಿನ್ನ ಅಧಿಕಾರಿಗಳ ಹತ್ರ 13 ‘ಬಾಲಾಕ ಅವನ ಹತ್ರ ಇರೋ ಚಿನ್ನಬೆಳ್ಳಿ ತುಂಬಿಸ್ಕೊಟ್ರೂ ಯೆಹೋವನ ಅಪ್ಪಣೆ ಮೀರಿ ನನ್ನಿಂದ ಏನೂ ಮಾಡೋಕೆ ಆಗಲ್ಲ. ಒಳ್ಳೇದಾಗ್ಲಿ ಕೆಟ್ಟದ್ದಾಗ್ಲಿ ನನ್ನ ಇಷ್ಟದ ಪ್ರಕಾರ ಏನೂ ಮಾಡೋಕಾಗಲ್ಲ. ಯೆಹೋವ ನನಗೆ ಹೇಳೋ ಮಾತುಗಳನ್ನೇ ಹೇಳ್ತೀನಿ’ ಅಂತ ಮೊದಲೇ ಹೇಳಿದ್ದೆ ತಾನೇ?+ 14 ಈಗ ನಾನು ನನ್ನ ಜನ್ರ ಹತ್ರ ಹೋಗ್ತೀನಿ. ಆದ್ರೆ ಅದಕ್ಕೆ ಮುಂಚೆ, ಈ ಜನ ನಿನ್ನ ಜನ್ರಿಗೆ ಮುಂದೇನು ಮಾಡ್ತಾರೆ ಅಂತ ಹೇಳಿ ಹೋಗ್ತೀನಿ” ಅಂದ. 15 ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+
“ಇವು ಬೆಯೋರನ ಮಗ ಬಿಳಾಮನ ಮಾತುಗಳು,
ಯಾರ ಕಣ್ಣು ತೆರಿತೋ ಅವನ ಮಾತುಗಳು,+
16 ದೇವರ ಮಾತನ್ನ ಕೇಳಿಸ್ಕೊಂಡವನ,
ಸರ್ವೋನ್ನತನ ಜ್ಞಾನವನ್ನ ಪಡೆದಿರುವವನ,
ಸರ್ವಶಕ್ತನ ದರ್ಶನವನ್ನ ನೋಡಿದವನ
ಕಣ್ತೆರೆದು ಕೆಳಗೆ ಬಿದ್ದವನ ಮಾತುಗಳು:
17 ನಾನು ಅವನನ್ನ ನೋಡ್ತೀನಿ, ಆದ್ರೆ ಈಗ ಅಲ್ಲ,
ನಾನು ಅವನನ್ನ ಕಣ್ಣಾರೆ ನೋಡ್ತೀನಿ, ಆದ್ರೆ ಬೇಗ ಅಲ್ಲ.
ಅವನು ಮೋವಾಬಿನ ಹಣೆನ ಒಡೆದುಬಿಡ್ತಾನೆ+
ಯುದ್ಧದ ಹುಚ್ಚಿರೋ ಎಲ್ಲ ಜನ್ರ ತಲೆಬುರುಡೆಗಳನ್ನ ಚೂರುಚೂರು ಮಾಡ್ತಾನೆ.
18 ಇಸ್ರಾಯೇಲ ತನ್ನ ಶೌರ್ಯನ ತೋರಿಸ್ತಿರೋವಾಗ
ಎದೋಮ್ ಪ್ರದೇಶ ಅವನ ಆಸ್ತಿಯಾಗುತ್ತೆ,+
19 ಯಾಕೋಬನ ವಂಶದಿಂದ ಒಬ್ಬ ಶತ್ರುಗಳ ಮೇಲೆ ಜಯ ಸಾಧಿಸ್ತಾ ಹೋಗ್ತಾನೆ,+
ಪಟ್ಟಣದಿಂದ ತಪ್ಪಿಸ್ಕೊಂಡವರನ್ನೆಲ್ಲ ಅವನು ನಾಶಮಾಡ್ತಾನೆ.”
20 ಬಿಳಾಮ ಅಮಾಲೇಕ್ಯರನ್ನ ನೋಡಿದಾಗ ಮತ್ತೆ ಕಾವ್ಯರೂಪವಾಗಿ ಹೀಗಂದ:
21 ಅವನು ಕೇನ್ಯರನ್ನ+ ನೋಡಿದಾಗ ಮತ್ತೆ ಕಾವ್ಯರೂಪವಾಗಿ ಹೀಗಂದ:
“ನಿಮ್ಮ ವಾಸಸ್ಥಳ ಸುರಕ್ಷಿತ, ನಿಮ್ಮ ಮನೆ ಬಂಡೆ ಮೇಲೆ ಭದ್ರ.
22 ಆದ್ರೆ ಕೇನ್ಯರನ್ನ ಒಬ್ಬ ಸುಟ್ಟುಬಿಡ್ತಾನೆ.
ಅಶ್ಶೂರ್ಯ ನಿಮ್ಮನ್ನ ಹಿಡ್ಕೊಂಡು ಹೋಗೋ ಸಮಯ ಹತ್ರ ಆಯ್ತು.”
23 ಬಿಳಾಮ ಕಾವ್ಯರೂಪವಾಗಿ ಇನ್ನೂ ಹೇಳಿದ್ದು:
“ಅಯ್ಯೋ! ದೇವರು ಹೀಗೆ ಮಾಡೋವಾಗ ಯಾರು ಉಳಿತಾರೆ?
ಆದ್ರೆ ಅವನು ಕೂಡ ಸಂಪೂರ್ಣ ನಾಶ ಆಗ್ತಾನೆ.”
25 ಆಮೇಲೆ ಬಿಳಾಮ+ ತನ್ನ ಜಾಗಕ್ಕೆ ವಾಪಸ್ ಹೋದ. ಬಾಲಾಕನೂ ತನ್ನ ದಾರಿಹಿಡಿದ.
25 ಇಸ್ರಾಯೇಲ್ಯರು ಶಿಟ್ಟೀಮಿನಲ್ಲಿ+ ಇದ್ದಾಗ ಮೋವಾಬಿನ ಸ್ತ್ರೀಯರ ಜೊತೆ ಸಂಬಂಧ ಇಟ್ಕೊಂಡ್ರು.+ 2 ಆ ಸ್ತ್ರೀಯರು ತಮ್ಮ ದೇವರುಗಳಿಗೆ ಬಲಿ ಕೊಡೋ ಸಮಾರಂಭಕ್ಕೆ ಇಸ್ರಾಯೇಲ್ಯರನ್ನ ಕರೆದ್ರು.+ ಇಸ್ರಾಯೇಲ್ಯರು ಅಲ್ಲಿ ಹೋಗಿ ಬಲಿ ಅರ್ಪಿಸಿದ್ದನ್ನ ತಿಂದ್ರು. ಅವ್ರ ದೇವರುಗಳಿಗೆ ಅಡ್ಡಬಿದ್ರು.+ 3 ಹೀಗೆ ಇಸ್ರಾಯೇಲ್ಯರು ಪೆಗೋರದ ಬಾಳನನ್ನ ಆರಾಧಿಸಿದ್ರು.*+ ಹಾಗಾಗಿ ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. 4 ಯೆಹೋವ ಮೋಶೆಗೆ “ಇದಕ್ಕೆ ಕಾರಣ ಆಗಿರೋ ಮುಖ್ಯಸ್ಥರನ್ನ* ಸಾಯಿಸಿ ಅವ್ರ ಶವಗಳನ್ನ ಯೆಹೋವನ ಮುಂದೆ ಎಲ್ರಿಗೂ ಕಾಣೋ ತರ ನೇತುಹಾಕು. ಆಗ ಇಸ್ರಾಯೇಲ್ಯರ ಮೇಲೆ ಯೆಹೋವನಿಗೆ ಬಂದಿರೋ ಕೋಪ ತಣ್ಣಗಾಗುತ್ತೆ” ಅಂದನು. 5 ಆಮೇಲೆ ಮೋಶೆ ಇಸ್ರಾಯೇಲ್ಯರ ನ್ಯಾಯಾಧೀಶರಿಗೆ+ “ನಿಮ್ಮಲ್ಲಿ ಪ್ರತಿಯೊಬ್ಬ ನಿಮ್ಮನಿಮ್ಮ ಜನ್ರಲ್ಲಿ ಯಾರು ಪೆಗೋರದ ಬಾಳನಿಗೆ ಆರಾಧನೆ ಮಾಡಿದ್ದಾರೋ ಅವ್ರನ್ನೆಲ್ಲ ಸಾಯಿಸಬೇಕು”+ ಅಂದ.
6 ಎಲ್ಲ ಇಸ್ರಾಯೇಲ್ಯರು ದೇವದರ್ಶನ ಡೇರೆಯ ಬಾಗಿಲ ಹತ್ರ ಅಳ್ತಾ ಇದ್ರು. ಆಗ್ಲೇ ಒಬ್ಬ ಇಸ್ರಾಯೇಲ್ಯ ಮಿದ್ಯಾನ್ ಹುಡುಗಿನ+ ಮೋಶೆ ಮುಂದೆ, ಎಲ್ಲ ಇಸ್ರಾಯೇಲ್ಯರ ಮುಂದೆನೇ ಪಾಳೆಯದ ಒಳಗೆ ಕರ್ಕೊಂಡು ಬಂದ. 7 ಪುರೋಹಿತನಾಗಿದ್ದ ಆರೋನನ ಮೊಮ್ಮಗನೂ ಎಲ್ಲಾಜಾರನ ಮಗನೂ ಆದ ಫೀನೆಹಾಸ+ ಅವರು ಬರೋದನ್ನ ನೋಡಿದ ಕೂಡ್ಲೇ ಎಲ್ಲ ಇಸ್ರಾಯೇಲ್ಯರ ಮಧ್ಯದಿಂದ ಬಂದು ಕೈಯಲ್ಲಿ ಈಟಿ ತಗೊಂಡು 8 ಆ ಇಸ್ರಾಯೇಲ್ಯನ ಹಿಂದೆನೇ ಅವನ ಡೇರೆ ಒಳಗೆ ಹೋಗಿ ಅವನನ್ನೂ ಆ ಹುಡುಗಿಯನ್ನೂ ಒಂದೇ ಏಟಿಗೆ ಈಟಿಯಿಂದ ತಿವಿದು ಕೊಂದುಹಾಕಿದ. ಈಟಿ ಅವಳ ಹೊಟ್ಟೆಯಲ್ಲಿ* ತೂರ್ಕೊಂಡು ಹೋಗಿತ್ತು. ಆಗ ಇಸ್ರಾಯೇಲ್ಯರಿಗೆ ಬಂದಿದ್ದ ಕಾಯಿಲೆ ನಿಂತು ಹೋಯ್ತು.+ 9 ಆ ಕಾಯಿಲೆಯಿಂದ 24,000 ಇಸ್ರಾಯೇಲ್ಯರು ಸತ್ರು.+
10 ಆಮೇಲೆ ಯೆಹೋವ ಮೋಶೆಗೆ 11 “ಪುರೋಹಿತನಾಗಿದ್ದ ಆರೋನನ ಮೊಮ್ಮಗ, ಎಲ್ಲಾಜಾರನ ಮಗ ಫೀನೆಹಾಸ+ ಇಸ್ರಾಯೇಲ್ಯರ ಮೇಲೆ ನನಗಿದ್ದ ಕೋಪನ ಕಮ್ಮಿ ಆಗೋ ತರ ಮಾಡಿದ್ದಾನೆ. ಇಸ್ರಾಯೇಲ್ಯರು ನನಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸಲಿಲ್ಲ.+ ಅವನು ಹಾಗೆ ಮಾಡದೇ ಇದ್ದಿದ್ರೆ ಇಸ್ರಾಯೇಲ್ಯರನ್ನ ಪೂರ್ತಿ ನಾಶ ಮಾಡಿಬಿಡ್ತಿದ್ದೆ. ಯಾಕಂದ್ರೆ ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರು ನಾನು.+ 12 ಹಾಗಾಗಿ ‘ನಾನು ಫೀನೆಹಾಸನ ಜೊತೆ ಶಾಂತಿಯ ಒಪ್ಪಂದ ಮಾಡ್ಕೊಳ್ತೀನಿ. 13 ಈ ಒಪ್ಪಂದದಿಂದ ಅವನು ಮತ್ತೆ ಅವನ ವಂಶದವರು ಯಾವಾಗ್ಲೂ ಪುರೋಹಿತರಾಗಿ ಸೇವೆ ಮಾಡ್ತಾರೆ.+ ಬೇರೆಯವರು ತನ್ನ ದೇವರಿಗೆ ನಂಬಿಕೆ ದ್ರೋಹ ಮಾಡೋದನ್ನ ಅವನು ಸಹಿಸದಿದ್ದ ಕಾರಣ,+ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಿರೋ ಕಾರಣ ನಾನು ಅವನ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ’ ಅಂತ ನೀನು ಫೀನೆಹಾಸನಿಗೆ ಹೇಳು” ಅಂದನು.
14 ಆ ಮಿದ್ಯಾನ್ಯ ಹುಡುಗಿ ಜೊತೆ ಸತ್ತ ಇಸ್ರಾಯೇಲ್ಯ ಪುರುಷನ ಹೆಸ್ರು ಜಿಮ್ರಿ. ಅವನ ತಂದೆ ಹೆಸ್ರು ಸಾಲೂ. ಜಿಮ್ರಿ ಸಿಮೆಯೋನ್ ಕುಲದಲ್ಲಿ ಪ್ರಧಾನನಾಗಿದ್ದ. 15 ಆ ಮಿದ್ಯಾನ್ಯ+ ಹುಡುಗಿ ಹೆಸ್ರು ಕೊಜ್ಬಿ. ಅವಳು ಮಿದ್ಯಾನಿನ ಚೂರನ+ ಮಗಳು. ಚೂರ ಅವನ ತಂದೆ ಕುಟುಂಬದಲ್ಲಿ ಮುಖ್ಯಸ್ಥ.
16 ಆಮೇಲೆ ಯೆಹೋವ ಮೋಶೆಗೆ 17 “ನೀವು ಮಿದ್ಯಾನ್ಯರ ಮೇಲೆ ದಾಳಿ ಮಾಡಿ ಅವ್ರನ್ನ ಕೊಂದುಹಾಕಿ.+ 18 ಯಾಕಂದ್ರೆ ಅವರು ನಿಮ್ಮ ಮೇಲೆ ಕಷ್ಟ ತಂದ್ರು. ಪೆಗೋರನ+ ವಿಷ್ಯದಲ್ಲಿ ನೀವು ಪಾಪ ಮಾಡೋ ತರ ಕುತಂತ್ರ ನಡಿಸಿ ನಿಮ್ಮನ್ನ ಮರುಳು ಮಾಡಿದ್ರು, ಮಿದ್ಯಾನಿನ ಪ್ರಧಾನನ ಮಗಳಾದ ಕೊಜ್ಬಿಯನ್ನ ಮುಂದಿಟ್ಟು ನಿಮ್ಮಿಂದ ಪಾಪ ಮಾಡಿಸಿದ್ರು. ಪೆಗೋರನ ವಿಷ್ಯದಲ್ಲಿ ನಿಮ್ಮ ಮೇಲೆ ಕಷ್ಟ ಬಂದ ದಿನಾನೇ+ ಅವಳನ್ನ ಕೊಂದುಬಿಟ್ರು”+ ಅಂದನು.
26 ಆ ವಿಪತ್ತು+ ನಿಂತ ಮೇಲೆ ಯೆಹೋವ ಮೋಶೆಗೆ, ಪುರೋಹಿತನಾಗಿದ್ದ ಆರೋನನ ಮಗ ಎಲ್ಲಾಜಾರನಿಗೆ, 2 “ಎಲ್ಲ ಇಸ್ರಾಯೇಲ್ಯರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರನ್ನ ಲೆಕ್ಕ ಮಾಡಿ. ಅವರಿಗೆ ಸೈನ್ಯದಲ್ಲಿ ಕೆಲಸ ಮಾಡೋ ಯೋಗ್ಯತೆ ಇರಬೇಕು. ಅವರನ್ನ ಅವನವನ ತಂದೆ ಮನೆತನದ ಪ್ರಕಾರ ಪಟ್ಟಿಮಾಡಿ”+ ಅಂದನು. 3 ಹಾಗಾಗಿ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ+ ಯೆರಿಕೋ ಪಟ್ಟಣದ+ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ+ ಜನ್ರ ಹತ್ರ ಮಾತಾಡಿ 4 “ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೆ ನೀವು 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರನ್ನ ಲೆಕ್ಕ ಮಾಡಿ”+ ಅಂದ್ರು.
ಈಜಿಪ್ಟ್ ದೇಶದಿಂದ ಬಂದ ಇಸ್ರಾಯೇಲ್ಯರು: 5 ಇಸ್ರಾಯೇಲನ ಮೊದಲ ಮಗ ರೂಬೇನನ+ ವಂಶದವರು+ ಯಾರಂದ್ರೆ ಹನೋಕನಿಂದ ಹನೋಕ್ಯರ ಕುಟುಂಬ, ಪಲ್ಲೂನಿಂದ ಪಲ್ಲೂವಿನವರ ಕುಟುಂಬ, 6 ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ, ಕರ್ಮೀಯಿಂದ ಕರ್ಮೀಯರ ಕುಟುಂಬ. 7 ಇವು ರೂಬೇನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 43,730.+
8 ಪಲ್ಲೂನ ಮಗ ಎಲೀಯಾಬ್. 9 ಎಲೀಯಾಬನ ಮಕ್ಕಳು ನೆಮೂವೇಲ್, ದಾತಾನ್, ಅಬೀರಾಮ್. ದಾತಾನ್, ಅಬೀರಾಮ್ ಇಸ್ರಾಯೇಲ್ಯರಲ್ಲಿ ಆಯ್ಕೆಯಾದ ಗಣ್ಯರು. ಅವರು ಕೋರಹ ಮತ್ತೆ ಅವನ ಗುಂಪಿನ+ ಜೊತೆ ಸೇರಿ ಮೋಶೆ ಆರೋನ ವಿರುದ್ಧ ದಂಗೆ ಎದ್ರು.+ ಅವರು ಯೆಹೋವನ ಜೊತೆ ಜಗಳ ಮಾಡಿದ್ರು.+
10 ಆಗ ಭೂಮಿ ಬಾಯಿಬಿಟ್ಟು ಅವರನ್ನ ನುಂಗಿಬಿಡ್ತು. ಆದ್ರೆ ಕೋರಹ ಮತ್ತು ಅವನ ಜೊತೆ ಕೈ ಜೋಡಿಸಿದ್ದ 250 ಜನ ಬೆಂಕಿಯಲ್ಲಿ ಭಸ್ಮ ಆಗಿ+ ಬೇರೆಯವರಿಗೆ ಎಚ್ಚರಿಕೆಯ ಪಾಠ ಆದ್ರು.+ 11 ಆದ್ರೆ ಕೋರಹನ ಮಕ್ಕಳು ಸಾಯಲಿಲ್ಲ.+
12 ಸಿಮೆಯೋನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ನೆಮೂವೇಲನಿಂದ ನೆಮೂವೇಲ್ಯರ ಕುಟುಂಬ, ಯಾಮೀನನಿಂದ ಯಾಮೀನ್ಯರ ಕುಟುಂಬ, ಯಾಕೀನನಿಂದ ಯಾಕೀನ್ಯರ ಕುಟುಂಬ, 13 ಜೆರಹನಿಂದ ಜೆರಹೀಯರ ಕುಟುಂಬ, ಶೌಲನಿಂದ ಶೌಲ್ಯರ ಕುಟುಂಬ. 14 ಇವು ಸಿಮೆಯೋನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 22,200.+
15 ಗಾದನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಚೆಫೋನನಿಂದ ಚೆಫೋನ್ಯರ ಕುಟುಂಬ, ಹಗ್ಗಿಯಿಂದ ಹಗ್ಗಿಯರ ಕುಟುಂಬ, ಶೂನಿಯಿಂದ ಶೂನಿಯರ ಕುಟುಂಬ, 16 ಒಜ್ನಿಯಿಂದ ಒಜ್ನಿಯರ ಕುಟುಂಬ, ಏರಿಯಿಂದ ಏರಿಯರ ಕುಟುಂಬ, 17 ಅರೋದನಿಂದ ಅರೋದ್ಯರ ಕುಟುಂಬ, ಅರೇಲಿಯಿಂದ ಅರೇಲಿಯರ ಕುಟುಂಬ. 18 ಇವು ಗಾದನ ಮಕ್ಕಳಿಂದ ಬಂದ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 40,500.+
19 ಯೆಹೂದನ+ ಮಕ್ಕಳು ಏರ್, ಓನಾನ್.+ ಇವರಿಬ್ರೂ ಕಾನಾನ್ ದೇಶದಲ್ಲೇ ತೀರ್ಕೊಂಡ್ರು.+ 20 ಯೆಹೂದನ ಬೇರೆ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಶೇಲಹನಿಂದ+ ಶೇಲಾಲ್ಯರ ಕುಟುಂಬ, ಪೆರೆಚನಿಂದ+ ಪೆರೆಚ್ಯರ ಕುಟುಂಬ, ಜೆರಹನಿಂದ+ ಜೆರಹೀಯರ ಕುಟುಂಬ. 21 ಪೆರೆಚನ ವಂಶದವರು ಯಾರಂದ್ರೆ, ಹೆಚ್ರೋನನಿಂದ+ ಹೆಚ್ರೋನ್ಯರ ಕುಟುಂಬ, ಹಾಮೂಲನಿಂದ+ ಹಾಮೂಲ್ಯರ ಕುಟುಂಬ. 22 ಇವು ಯೆಹೂದನಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 76,500.+
23 ಇಸ್ಸಾಕಾರನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ತೋಲಾನಿಂದ+ ತೋಲಾಯರ ಕುಟುಂಬ, ಪುವ್ವಾನಿಂದ ಪೂನ್ಯರ ಕುಟುಂಬ, 24 ಯಾಶೂಬನಿಂದ ಯಾಶೂಬ್ಯರ ಕುಟುಂಬ, ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ. 25 ಇವು ಇಸ್ಸಾಕಾರನಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 64,300.+
26 ಜೆಬುಲೂನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಸೆರೆದನಿಂದ ಸೆರೆದ್ಯರ ಕುಟುಂಬ, ಏಲೋನನಿಂದ ಏಲೋನ್ಯರ ಕುಟುಂಬ, ಯಹ್ಲೇಲನಿಂದ ಯಹ್ಲೇಲ್ಯರ ಕುಟುಂಬ. 27 ಇವು ಜೆಬುಲೂನ್ಯರ ಕುಟುಂಬಗಳು. ಅವರಲ್ಲಿ ಪಟ್ಟಿ ಆದವರ ಸಂಖ್ಯೆ 60,500.+
28 ಯೋಸೇಫನ+ ಮಕ್ಕಳು ಮನಸ್ಸೆ ಮತ್ತು ಎಫ್ರಾಯೀಮ್.+ ಅವ್ರ ಹೆಸ್ರಲ್ಲಿ ಅವ್ರ ಕುಟುಂಬಗಳು ಬಂದ್ವು. 29 ಮನಸ್ಸೆಯ+ ವಂಶದವರು ಯಾರಂದ್ರೆ, ಮಾಕೀರನಿಂದ+ ಮಾಕೀರ್ಯರ ಕುಟುಂಬ ಬಂತು. ಮಾಕೀರನಿಗೆ ಗಿಲ್ಯಾದ+ ಹುಟ್ಟಿದ. ಗಿಲ್ಯಾದನಿಂದ ಗಿಲ್ಯಾದ್ಯರ ಕುಟುಂಬ ಬಂತು. 30 ಗಿಲ್ಯಾದನ ವಂಶದವರು ಯಾರಂದ್ರೆ, ಈಯೆಜೆರನಿಂದ ಈಯೆಜೆರ್ಯರ ಕುಟುಂಬ, ಹೇಲೆಕನಿಂದ ಹೇಲೆಕ್ಯರ ಕುಟುಂಬ, 31 ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ, ಶೆಕೆಮನಿಂದ ಶೆಕೆಮ್ಯರ ಕುಟುಂಬ, 32 ಶೆಮೀದಾನಿಂದ ಶೆಮೀದಾಯರ ಕುಟುಂಬ, ಹೇಫೆರನಿಂದ ಹೇಫೆರ್ಯರ ಕುಟುಂಬ. 33 ಹೇಫೆರನ ಮಗನಾದ ಚಲ್ಪಹಾದನಿಗೆ ಗಂಡು ಮಕ್ಕಳಿರಲಿಲ್ಲ, ಹೆಣ್ಣು ಮಕ್ಕಳು ಮಾತ್ರ ಇದ್ರು.+ ಆ ಹೆಣ್ಣುಮಕ್ಕಳ ಹೆಸ್ರು+ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ. 34 ಇವು ಮನಸ್ಸೆಯಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 52,700.+
35 ಎಫ್ರಾಯೀಮನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಶೂತೆಲಹನಿಂದ+ ಶೂತೆಲಹ್ಯರ ಕುಟುಂಬ, ಬೆಕೆರನಿಂದ ಬೆಕೆರ್ಯರ ಕುಟುಂಬ, ತಹನನಿಂದ ತಹನಿಯರ ಕುಟುಂಬ. 36 ಶೂತೆಲಹನ ವಂಶದವರು ಯಾರಂದ್ರೆ, ಏರಾನನಿಂದ ಏರಾನ್ಯರ ಕುಟುಂಬ. 37 ಇವು ಎಫ್ರಾಯೀಮನ ಮಕ್ಕಳಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 32,500.+ ಇವು ಯೋಸೇಫನ ಮಕ್ಕಳಿಂದ ಬಂದ ಕುಟುಂಬಗಳು.
38 ಬೆನ್ಯಾಮೀನನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಬೆಳನಿಂದ+ ಬೆಳ್ಯರ ಕುಟುಂಬ, ಅಷ್ಬೇಲನಿಂದ ಅಷ್ಬೇಲ್ಯರ ಕುಟುಂಬ, ಅಹೀರಾಮನಿಂದ ಅಹೀರಾಮ್ಯರ ಕುಟುಂಬ, 39 ಶೂಫಾಮನಿಂದ ಶೂಫಾಮ್ಯರ ಕುಟುಂಬ, ಹೂಫಾಮನಿಂದ ಹೂಫಾಮ್ಯರ ಕುಟುಂಬ. 40 ಬೆಳನ ಮಕ್ಕಳು ಅರ್ದ್, ನಾಮಾನ್.+ ಅರ್ದನಿಂದ ಅರ್ದ್ಯರ ಕುಟುಂಬ, ನಾಮಾನನಿಂದ ನಾಮಾನ್ಯರ ಕುಟುಂಬ. 41 ಇವು ಬೆನ್ಯಾಮೀನನ ಮಕ್ಕಳಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 45,600.+
42 ದಾನನ+ ಮಗನ ಹೆಸ್ರು ಶೂಹಾಮ. ಶೂಹಾಮನಿಂದ ಶೂಹಾಮ್ಯರ ಕುಟುಂಬ ಬಂತು. ಇದು ದಾನನ ವಂಶದಿಂದ ಬಂದ ಕುಟುಂಬ. 43 ಶೂಹಾಮ್ಯರ ಕುಟುಂಬದವರಲ್ಲಿ ಪಟ್ಟಿ ಆದವರ ಸಂಖ್ಯೆ 64,400.+
44 ಅಶೇರನ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಇಮ್ನಾನಿಂದ ಇಮ್ನಾಹ್ಯರ ಕುಟುಂಬ, ಇಷ್ವೀಯಿಂದ ಇಷ್ವೀಯರ ಕುಟುಂಬ, ಬೆರೀಯನಿಂದ ಬೆರೀಯರ ಕುಟುಂಬ. 45 ಬೆರೀಯನ ವಂಶದವರು ಯಾರಂದ್ರೆ, ಹೆಬೆರನಿಂದ ಹೇಬೆರ್ಯರ ಕುಟುಂಬ, ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ. 46 ಅಶೇರನ ಮಗಳ ಹೆಸ್ರು ಸೆರಹ. 47 ಇವು ಅಶೇರನ ವಂಶದವರಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 53,400.+
48 ನಫ್ತಾಲಿಯ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಯಹಚೇಲನಿಂದ ಯಹಚೇಲ್ಯರ ಕುಟುಂಬ, ಗೂನೀಯಿಂದ ಗೂನೀಯರ ಕುಟುಂಬ, 49 ಯೇಜೆರನಿಂದ ಯೇಜೆರ್ಯರ ಕುಟುಂಬ, ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ. 50 ಇವು ನಫ್ತಾಲಿಯಿಂದ ಬಂದ ಕುಟುಂಬಗಳು. ಅವ್ರಲ್ಲಿ ಪಟ್ಟಿ ಆದವರ ಸಂಖ್ಯೆ 45,400.+
51 ಇಸ್ರಾಯೇಲ್ಯರಲ್ಲಿ ಪಟ್ಟಿ ಆದವರ ಸಂಖ್ಯೆ 6,01,730.+
52 ಆಮೇಲೆ ಯೆಹೋವ ಮೋಶೆಗೆ, 53 “ಈ ಹೆಸ್ರುಗಳ ಪಟ್ಟಿನ ನೋಡಿ ಪ್ರತಿಯೊಂದು ಕುಲದಲ್ಲಿ ಎಷ್ಟೆಷ್ಟು ಜನ್ರಿದ್ದಾರೆ ಅಂತ ತಿಳ್ಕೊಂಡು ಅದಕ್ಕೆ ತಕ್ಕ ಹಾಗೆ ದೇಶದ ಜಮೀನನ್ನ ಎಲ್ಲ ಕುಲಗಳಿಗೆ ಪಾಲು ಮಾಡಿ ಆಸ್ತಿಯಾಗಿ ಕೊಡು.+ 54 ತುಂಬ ಜನ್ರಿರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ್ರಿರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡು.+ ಪ್ರತಿಯೊಂದು ಕುಲದಲ್ಲಿ ಪಟ್ಟಿ ಆದವರ ಸಂಖ್ಯೆ ಎಷ್ಟು ಅಂತ ನೋಡಿ ಅದಕ್ಕೆ ತಕ್ಕ ಹಾಗೆ ಜಮೀನನ್ನ ಪಾಲು ಮಾಡಿ ಕೊಡು. 55 ಆದ್ರೆ ಚೀಟಿ ಹಾಕಿ ಜಮೀನನ್ನ ಪಾಲು ಮಾಡಿ ಕೊಡಬೇಕು.+ ಪ್ರತಿಯೊಂದು ಕುಟುಂಬಕ್ಕೆ ಅದ್ರದ್ರ ಕುಲಕ್ಕೆ ಸಿಕ್ಕಿರೋ ಜಮೀನನ್ನೇ ಪಾಲು ಮಾಡಿ ಆಸ್ತಿಯಾಗಿ ಕೊಡಬೇಕು. 56 ಪ್ರತಿಯೊಂದು ಕುಲಕ್ಕೆ, ಅದು ದೊಡ್ಡದಿರಲಿ ಚಿಕ್ಕದಿರಲಿ, ಕೊಡಬೇಕಾದ ಆಸ್ತಿನ ಚೀಟಿ ಹಾಕಿನೇ ನಿರ್ಧಾರ ಮಾಡಬೇಕು” ಅಂದನು.
57 ಲೇವಿಯರಲ್ಲಿ+ ಅವ್ರವ್ರ ಕುಟುಂಬಗಳ ಪ್ರಕಾರ ಪಟ್ಟಿ ಆದವರು ಯಾರಂದ್ರೆ, ಗೇರ್ಷೋನನಿಂದ ಗೇರ್ಷೋನ್ಯರ ಕುಟುಂಬ, ಕೆಹಾತನಿಂದ+ ಕೆಹಾತ್ಯರ ಕುಟುಂಬ, ಮೆರಾರೀಯಿಂದ ಮೆರಾರೀಯರ ಕುಟುಂಬ. 58 ಲೇವಿಯ ವಂಶದವರಿಂದ ಬಂದ ಕುಟುಂಬಗಳು ಯಾವದಂದ್ರೆ, ಲಿಬ್ನಿಯರ+ ಕುಟುಂಬ, ಹೆಬ್ರೋನ್ಯರ+ ಕುಟುಂಬ, ಮಹ್ಲಿಯರ+ ಕುಟುಂಬ, ಮೂಷಿಯರ+ ಕುಟುಂಬ, ಕೋರಹಿಯರ+ ಕುಟುಂಬ.
ಕೆಹಾತನಿಗೆ ಅಮ್ರಾಮ+ ಹುಟ್ಟಿದ. 59 ಅಮ್ರಾಮನ ಹೆಂಡತಿ ಹೆಸ್ರು ಯೋಕೆಬೆದ್.+ ಇವಳು ಒಬ್ಬ ಲೇವಿಯ ಮಗಳು. ಇವಳು ಈಜಿಪ್ಟ್ ದೇಶದಲ್ಲಿ ಹುಟ್ಟಿದ್ದಳು. ಅಮ್ರಾಮನಿಗೆ ಯೋಕೆಬೆದಳಿಂದ ಆರೋನ, ಮೋಶೆ, ಅವ್ರ ಅಕ್ಕ ಮಿರ್ಯಾಮ+ ಹುಟ್ಟಿದ್ರು. 60 ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು. 61 ಆದ್ರೆ ನಾದಾಬ್ ಮತ್ತೆ ಅಬೀಹೂ ಯೆಹೋವನ ನಿಯಮಕ್ಕೆ ವಿರುದ್ಧವಾಗಿ ಬೆಂಕಿ ಹಚ್ಚಿದ್ರಿಂದ ಸತ್ತು ಹೋದ್ರು.+
62 ಲೇವಿಯರಲ್ಲಿ ಒಂದು ತಿಂಗಳಿನ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿ ಮಾಡಿದ್ರು.+ ಅವ್ರ ಸಂಖ್ಯೆ 23,000. ಇವರ ಹೆಸ್ರನ್ನ ಎಲ್ಲ ಇಸ್ರಾಯೇಲ್ಯರ ಹೆಸ್ರಿನ ಜೊತೆ ಪಟ್ಟಿ ಮಾಡಲಿಲ್ಲ.+ ಯಾಕಂದ್ರೆ ಇಸ್ರಾಯೇಲ್ಯರ ಮಧ್ಯ ಲೇವಿಯರಿಗೆ ಆಸ್ತಿ ಕೊಡೋ ಹಾಗಿರಲಿಲ್ಲ.+
63 ಈ ಎಲ್ಲ ಇಸ್ರಾಯೇಲ್ಯರ ಹೆಸ್ರನ್ನ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ ಪಟ್ಟಿ ಮಾಡಿದ್ರು. 64 ಆದ್ರೆ ಮೋಶೆ ಮತ್ತೆ ಪುರೋಹಿತ ಆರೋನ ಸಿನಾಯಿ ಕಾಡಲ್ಲಿ ಪಟ್ಟಿ ಮಾಡಿದ್ದ ಇಸ್ರಾಯೇಲ್ಯರಲ್ಲಿ ಒಬ್ಬನೂ ಈಗ ಪಟ್ಟಿ ಆದವರಲ್ಲಿ ಇರಲಿಲ್ಲ.+ 65 ಯಾಕಂದ್ರೆ ಯೆಹೋವ “ಅವರು ಕಾಡಲ್ಲೇ ಸತ್ತು ಹೋಗ್ತಾರೆ”+ ಅಂತ ಹೇಳಿದ್ದನು. ಹಾಗಾಗಿ ಅವ್ರಲ್ಲಿ ಯೆಫುನ್ನೆಯ ಮಗ ಕಾಲೇಬ್, ನೂನನ ಮಗ ಯೆಹೋಶುವನನ್ನ ಬಿಟ್ಟು ಒಬ್ಬನೂ ಜೀವಂತ ಇರಲಿಲ್ಲ.+
27 ಚಲ್ಪಹಾದನ+ ಹೆಣ್ಣು ಮಕ್ಕಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ ಇವರೆಲ್ಲ ಮೋಶೆ ಹತ್ರ ಹೋದ್ರು. ಚಲ್ಪಹಾದ ಹೇಫೆರನ ಮಗ. ಹೇಫೆರ ಗಿಲ್ಯಾದನ ಮಗ. ಗಿಲ್ಯಾದ ಮಾಕೀರನ ಮಗ. ಮಾಕೀರ ಮನಸ್ಸೆಯ ಮಗ. ಮನಸ್ಸೆ ಯೋಸೇಫನ ಮಗ. ಹೀಗೆ ಚಲ್ಪಹಾದನ ಕುಟುಂಬ ಮನಸ್ಸೆ ಕುಲದಿಂದ ಬಂದ ಕುಟುಂಬಗಳಿಗೆ ಸೇರಿತ್ತು. 2 ಚಲ್ಪಹಾದನ ಹೆಣ್ಣು ಮಕ್ಕಳು ದೇವದರ್ಶನ ಡೇರೆ ಬಾಗಿಲ ಹತ್ರ ಹೋದ್ರು. ಅಲ್ಲಿ ಮೋಶೆ, ಪುರೋಹಿತ ಎಲ್ಲಾಜಾರ್, ಪ್ರಧಾನರು+ ಮತ್ತೆ ಇಡೀ ಇಸ್ರಾಯೇಲ್ಯರ ಮುಂದೆ ನಿಂತು 3 “ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ. ಅವನು ಕಾಡಲ್ಲಿ ತೀರಿಹೋದ. ಆದ್ರೆ ಅವನು ಯೆಹೋವನ ವಿರುದ್ಧ ಗುಂಪು ಕಟ್ಕೊಂಡ ಕೋರಹನ ಜನ್ರ ಜೊತೆ ಇರಲಿಲ್ಲ.+ ಅವನು ತನ್ನ ಪಾಪದಿಂದ ಸತ್ತ. 4 ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಅವನ ಹೆಸ್ರನ್ನ ಕುಟುಂಬದಿಂದ ತೆಗೆದುಬಿಡಬೇಕಾ? ಹಾಗೆ ಆಗಬಾರ್ದು ಅಂದ್ರೆ ನಮ್ಮ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ನಮಗೂ ಒಂದು ಪಾಲು ಕೊಡಬೇಕು ಅಂತ ಕೇಳ್ಕೊಳ್ತೀವಿ” ಅಂದ್ರು. 5 ಆಗ ಮೋಶೆ ಆ ವಿಷ್ಯಾನ ಯೆಹೋವನ ಮುಂದೆ ಇಟ್ಟ.+
6 ಯೆಹೋವ ಮೋಶೆಗೆ 7 “ಚಲ್ಪಹಾದನ ಹೆಣ್ಣು ಮಕ್ಕಳು ಹೇಳ್ತಿರೋದು ಸರಿ. ಅವ್ರ ಅಪ್ಪಾಗೆ ಸಿಗಬೇಕಾದ ಆಸ್ತಿ ಅವರಿಗೆ ಸಿಗಬೇಕು. ಹಾಗಾಗಿ ನೀನು ಅವ್ರ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ಈ ಹೆಣ್ಣು ಮಕ್ಕಳಿಗೂ ಒಂದು ಪಾಲು ಕೊಡ್ಲೇಬೇಕು.+ 8 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬ ಸತ್ತಾಗ ಅವನ ಆಸ್ತಿ ಪಡಿಯೋಕೆ ಮಗ ಇಲ್ಲದಿದ್ರೆ ಅದನ್ನ ಮಗಳಿಗೆ ಕೊಡಬೇಕು. 9 ಮಗಳೂ ಇಲ್ಲದಿದ್ರೆ ಅವನ ಅಣ್ಣತಮ್ಮಂದಿರಿಗೆ ಕೊಡಬೇಕು. 10 ಅಣ್ಣತಮ್ಮಂದಿರೂ ಇಲ್ಲದಿದ್ರೆ ಅವನ ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು. 11 ಒಂದುವೇಳೆ ಅವನ ತಂದೆಗೂ ಅಣ್ಣತಮ್ಮಂದಿರು ಇಲ್ಲದಿದ್ರೆ ಕುಟುಂಬದಲ್ಲಿರೋ ಹತ್ರದ ರಕ್ತಸಂಬಂಧಿಗೆ ಕೊಡಬೇಕು. ಆ ಆಸ್ತಿ ಆ ರಕ್ತಸಂಬಂಧಿಗೆ ಸೇರುತ್ತೆ. ಯೆಹೋವ ಮೋಶೆಗೆ ಆಜ್ಞಾಪಿಸಿರೋ ಹಾಗೇ ಈ ತೀರ್ಪು ಇಸ್ರಾಯೇಲ್ಯರು ಪಾಲಿಸಬೇಕಾದ ಒಂದು ನಿಯಮ” ಅಂದನು.
12 ಆಮೇಲೆ ಯೆಹೋವ ಮೋಶೆಗೆ “ನೀನು ಅಬಾರೀಮಿನ ಈ ಬೆಟ್ಟ+ ಹತ್ತಿ ಇಸ್ರಾಯೇಲ್ಯರಿಗೆ ನಾನು ಕೊಡೋ ದೇಶ ನೋಡು.+ 13 ಅದನ್ನ ನೋಡಿದ ಮೇಲೆ ನಿನ್ನ ಅಣ್ಣ ಆರೋನನ ತರ ನೀನೂ ಸಾಯ್ತೀಯ. ನಿನ್ನ ಪೂರ್ವಜರ ತರ ನಿನಗೂ ಸಮಾಧಿ ಆಗುತ್ತೆ.+ 14 ಯಾಕಂದ್ರೆ ಚಿನ್ ಕಾಡಲ್ಲಿ ಇಸ್ರಾಯೇಲ್ಯರು ನನ್ನ ಜೊತೆ ಜಗಳ ಮಾಡಿದಾಗ ನಾನು ಅವರಿಗೆ ನೀರು ಕೊಟ್ಟೆ. ಆಗ ನೀವಿಬ್ರೂ ಜನ್ರ ಮುಂದೆ ನನ್ನನ್ನ ಪವಿತ್ರ ಅಂತ ತೋರಿಸ್ಕೊಟ್ಟು ಗೌರವ ಕೊಡಬೇಕಿತ್ತು.+ ಆದ್ರೆ ನೀವು ನಾನು ಹೇಳಿದ್ದನ್ನ ಕೇಳದೆ ನನ್ನ ವಿರುದ್ಧ ದಂಗೆ ಎದ್ರಿ” ಅಂದನು. ಆತನು ಚಿನ್ ಕಾಡಿನ+ ಕಾದೇಶಿನಲ್ಲಿರೋ+ ಮೆರೀಬಾದ ನೀರಿನ ಹತ್ರ+ ನಡೆದ ಘಟನೆ ಬಗ್ಗೆ ಹೇಳ್ತಿದ್ದನು.
15 ಆಗ ಮೋಶೆ ಯೆಹೋವನಿಗೆ 16 “ಯೆಹೋವನೇ ಎಲ್ಲ ಜನ್ರಿಗೆ ಜೀವ ಕೊಡೋ ದೇವರೇ, ಈ ಜನ್ರ ಮೇಲೆ ಒಬ್ಬ ನಾಯಕನನ್ನ ನೇಮಿಸು. 17 ಯೆಹೋವನ ಜನ್ರು ಕುರುಬನಿಲ್ಲದ ಕುರಿಗಳ ತರ ಆಗಬಾರದು. ಹಾಗಾಗಿ ಮುಂದೆ ನಿಂತು ನಡಿಸೋಕೆ ಒಬ್ಬನನ್ನ ನೇಮಿಸು. ಎಲ್ಲ ವಿಷ್ಯಗಳಲ್ಲಿ ಅವನು ಅವರಿಗೆ ದಾರಿ ತೋರಿಸ್ಲಿ. ಏನೆಲ್ಲ ಮಾಡಬೇಕು ಅಂತ ಹೇಳ್ಕೊಡ್ಲಿ” ಅಂದನು. 18 ಆಗ ಯೆಹೋವ ಮೋಶೆಗೆ “ನೂನನ ಮಗ ಯೆಹೋಶುವ ಅದಕ್ಕೆ ಸರಿಯಾದ ವ್ಯಕ್ತಿ. ಅವನನ್ನ ಕರ್ಕೊಂಡು ಬಂದು ಅವನ ಮೇಲೆ ನಿನ್ನ ಕೈಯಿಡು.+ 19 ಅವನನ್ನ ಪುರೋಹಿತ ಎಲ್ಲಾಜಾರನ ಮುಂದೆ, ಎಲ್ಲ ಜನ್ರ ಮುಂದೆ ನಿಲ್ಲಿಸಿ ಅವ್ರ ಕಣ್ಮುಂದೆನೇ ನಾಯಕನಾಗಿ ನೇಮಿಸು.+ 20 ನಿನಗಿರೋ ಅಧಿಕಾರದಲ್ಲಿ* ಸ್ವಲ್ಪ ಅವನಿಗೆ ಕೊಡು.+ ಆಗ ಎಲ್ಲ ಇಸ್ರಾಯೇಲ್ಯರು ಅವನ ಮಾತು ಕೇಳ್ತಾರೆ.+ 21 ಯೆಹೋಶುವನಿಗೆ ಯಾವುದೇ ವಿಷ್ಯದಲ್ಲಿ ದೇವರ ತೀರ್ಮಾನ ಏನಂತ ಗೊತ್ತಾಗಬೇಕಂದ್ರೆ ಪುರೋಹಿತ ಎಲ್ಲಾಜಾರನ ಹತ್ರ ಹೋಗಬೇಕು. ಅವನ ಪರವಾಗಿ ಎಲ್ಲಾಜಾರ ಯೆಹೋವನ ಮುಂದೆ ಹೋಗಿ ಊರೀಮ್‌ನ*+ ಮೂಲಕ ಆತನ ತೀರ್ಮಾನ ಏನಂತ ತಿಳ್ಕೊಬೇಕು. ಆಗ ಏನು ಅಪ್ಪಣೆ ಸಿಗುತ್ತೋ ಅದನ್ನ ಯೆಹೋಶುವ, ಎಲ್ಲ ಇಸ್ರಾಯೇಲ್ಯರು, ಬೇರೆಯವರು ಪಾಲಿಸಬೇಕು” ಅಂದನು.
22 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ. ಅವನು ಯೆಹೋಶುವನನ್ನ ಕರ್ಕೊಂಡು ಬಂದು ಪುರೋಹಿತ ಎಲ್ಲಾಜಾರನ ಮುಂದೆ ಎಲ್ಲ ಜನ್ರ ಮುಂದೆ ನಿಲ್ಲಿಸಿದ. 23 ಅವನು ಯೆಹೋಶುವನ ಮೇಲೆ ಕೈಯಿಟ್ಟು ನಾಯಕನಾಗಿ ನೇಮಿಸಿದ.+ ಹೀಗೆ ಮೋಶೆ ಯೆಹೋವ ಹೇಳಿದ ಹಾಗೇ ಮಾಡಿದ.+
28 ಆಮೇಲೆ ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 2 “ನೀನು ಈ ಆಜ್ಞೆಗಳನ್ನ ಇಸ್ರಾಯೇಲ್ಯರಿಗೆ ಹೇಳು: ‘ನೀವು ನನ್ನ ಆಹಾರನ ಅಂದ್ರೆ ನನಗೆ ಅರ್ಪಣೆ ಕೊಡೋದನ್ನ ಮರೀಬಾರದು. ನೀವು ಬೆಂಕಿಯಲ್ಲಿ ಕೊಡೋ ಅರ್ಪಣೆಗಳನ್ನ ನಾನು ಹೇಳೋ ಸಮಯದಲ್ಲೇ ಕೊಡಬೇಕು.+ ಅದ್ರ ಸುವಾಸನೆ ನನಗೆ ಖುಷಿ* ತರುತ್ತೆ.’
3 ನೀನು ಅವ್ರಿಗೆ ಹೀಗೆ ಹೇಳು: ‘ಬೆಂಕಿಲಿ ಯೆಹೋವನಿಗೆ ಕೊಡಬೇಕಾದ ಅರ್ಪಣೆ ಯಾವುದಂದ್ರೆ, ನೀವು ಪ್ರತಿ ದಿನ ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು.+ ಅದ್ರಲ್ಲಿ ಯಾವ ದೋಷಾನೂ ಇರಬಾರದು. 4 ಒಂದು ಕುರಿಮರಿನ ಬೆಳಿಗ್ಗೆ, ಇನ್ನೊಂದನ್ನ ಸೂರ್ಯ ಮುಳುಗಿದ ಮೇಲೆ* ಕೊಡಬೇಕು.+ 5 ಪ್ರತಿಯೊಂದು ಕುರಿಮರಿ ಜೊತೆ ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗ ನುಣ್ಣಗಿನ ಹಿಟ್ಟಿಗೆ ಕಾಲು ಹಿನ್* ಅಳತೆಯ ಶುದ್ಧ ಆಲಿವ್ ಎಣ್ಣೆ ಹಾಕಿ ಧಾನ್ಯ ಅರ್ಪಣೆ ಮಾಡಬೇಕು.+ 6 ಸಿನಾಯಿ ಬೆಟ್ಟ ಹತ್ರ ಕೊಟ್ಟಿರೋ ನಿಯಮದ ಪ್ರಕಾರ ನೀವು ಈ ತರ ಪ್ರತಿದಿನ ಸರ್ವಾಂಗಹೋಮ ಬಲಿನ ಕೊಡಬೇಕು.+ ಬೆಂಕಿಲಿ ಕೊಡೋ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 7 ಪ್ರತಿಯೊಂದು ಗಂಡು ಕುರಿಮರಿ ಜೊತೆ ಕಾಲು ಹಿನ್ ಅಳತೆಯ ಮದ್ಯನ ಪಾನ ಅರ್ಪಣೆಯಾಗಿ ಕೊಡಬೇಕು.+ ಅದನ್ನ ಯೆಹೋವನಿಗಾಗಿ ಯಜ್ಞವೇದಿ ಮೇಲೆ ಸುರಿಬೇಕು. 8 ಬೆಳಿಗ್ಗೆ ಕುರಿಮರಿನ ಕೊಡೋವಾಗ ಅದ್ರ ಜೊತೆ ಮಾಡೋ ಧಾನ್ಯ ಅರ್ಪಣೆ, ಪಾನ ಅರ್ಪಣೆನ ಸೂರ್ಯ ಮುಳುಗಿದ ಮೇಲೆ* ಕುರಿಮರಿನ ಕೊಡುವಾಗ್ಲೂ ಮಾಡಬೇಕು. ಬೆಂಕಿಲಿ ನೀವು ಕೊಡೋ ಈ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+
9 ಸಬ್ಬತ್ ದಿನ+ ನೀವು ಒಂದು ವರ್ಷದ ಎರಡು ಗಂಡು ಕುರಿಮರಿಗಳನ್ನ ಕೊಡಬೇಕು. ಅದ್ರಲ್ಲಿ ಯಾವ ದೋಷಾನೂ ಇರಬಾರದು. ಅವುಗಳ ಜೊತೆ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ಜೊತೆಗೆ ಪಾನ ಅರ್ಪಣೆ ಕೊಡಬೇಕು. 10 ಇದು ಸಬ್ಬತ್ ದಿನ ಕೊಡಬೇಕಾದ ಸರ್ವಾಂಗಹೋಮ ಬಲಿ. ಸಬ್ಬತ್ ದಿನದಲ್ಲಿ ನೀವು ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಪಾನ ಅರ್ಪಣೆ, ಜೊತೆಗೆ ಇದನ್ನೂ ಕೊಡಬೇಕು.+
11 ಪ್ರತಿ ತಿಂಗಳ ಮೊದಲನೇ ದಿನ ನೀವು ಎರಡು ಹೋರಿಗಳನ್ನ, ಒಂದು ಟಗರನ್ನ, ಯಾವ ದೋಷಾನೂ ಇಲ್ಲದ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು.+ 12 ಪ್ರತಿಯೊಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು.+ ಟಗರಿನ+ ಜೊತೆ ಒಂದು ಏಫಾ ಅಳತೆಯ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. 13 ಪ್ರತಿಯೊಂದು ಗಂಡು ಕುರಿಮರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಧಾನ್ಯ ಅರ್ಪಣೆಯಾಗಿ ಕೊಡಬೇಕು. ನೀವು ಬೆಂಕಿಲಿ ಕೊಡೋ ಈ ಸರ್ವಾಂಗಹೋಮ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+ 14 ಹೋರಿ ಜೊತೆ ಅರ್ಧ ಹಿನ್ ದ್ರಾಕ್ಷಾಮದ್ಯನ ಪಾನ ಅರ್ಪಣೆಯಾಗಿ ಕೊಡಬೇಕು.+ ಟಗರಿನ ಜೊತೆ ಒಂದು ಹಿನ್ ಅಳತೆಯ ಮೂರನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ,+ ಗಂಡು ಕುರಿಮರಿಯ ಜೊತೆ ಒಂದು ಹಿನ್‌ನಲ್ಲಿ ಕಾಲು ಭಾಗದಷ್ಟು ದ್ರಾಕ್ಷಾಮದ್ಯವನ್ನ+ ಪಾನ ಅರ್ಪಣೆಯಾಗಿ ಕೊಡಬೇಕು. ವರ್ಷದ ಪ್ರತಿ ತಿಂಗಳಿನ ಮೊದಲನೇ ದಿನ ನೀವು ಈ ಸರ್ವಾಂಗಹೋಮ ಬಲಿಗಳನ್ನ ಕೊಡಬೇಕು. 15 ಪ್ರತಿದಿನ ಸರ್ವಾಂಗಹೋಮ ಬಲಿ ಮತ್ತೆ ಪಾನ ಅರ್ಪಣೆ ಕೊಡೋದ್ರ ಜೊತೆ ಒಂದು ಆಡುಮರಿನ ಪಾಪ ಪರಿಹರಿಸೋ ಬಲಿಯಾಗಿ ಯೆಹೋವನಿಗೆ ಕೊಡಬೇಕು.
16 ಮೊದಲನೇ ತಿಂಗಳಿನ 14ನೇ ದಿನ ನೀವು ಯೆಹೋವನಿಗೆ ಗೌರವ ಕೊಡೋಕೆ ಪಸ್ಕ ಹಬ್ಬ ಆಚರಿಸಬೇಕು.+ 17 ಅದೇ ತಿಂಗಳಿನ 15ನೇ ದಿನ ಒಂದು ಹಬ್ಬ ಆಚರಿಸಬೇಕು. ನೀವು ಆ ಹಬ್ಬದ ಏಳೂ ದಿನ ಹುಳಿ ಇಲ್ಲದ ರೊಟ್ಟಿಗಳನ್ನ ತಿನ್ನಬೇಕು.+ 18 ಆ ಹಬ್ಬದ ಮೊದಲನೇ ದಿನ ಎಲ್ರೂ ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು. 19 ನೀವು ಎರಡು ಹೋರಿಗಳನ್ನ, ಒಂದು ಟಗರನ್ನ, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 20 ನೀವು ಆ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು.+ ಒಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 21 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದು ಕುರಿ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 22 ಅಷ್ಟೇ ಅಲ್ಲ, ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಕೊಡಬೇಕು. 23 ಪ್ರತಿದಿನ ಬೆಳಗ್ಗೆ ಕೊಡೋ ಸರ್ವಾಂಗಹೋಮ ಬಲಿ ಜೊತೆ ನೀವು ಇದನ್ನೂ ಕೊಡಬೇಕು. 24 ಹಬ್ಬದ ಏಳೂ ದಿನ ನೀವು ಇದೇ ತರ ಬಲಿ ಕೊಡಬೇಕು. ಇದು ನೀವು ಬೆಂಕಿಲಿ ಯೆಹೋವನಿಗೆ ಕೊಡೋ ಅರ್ಪಣೆ. ಇದರ ಸುವಾಸನೆ ಆತನಿಗೆ ಖುಷಿ* ತರುತ್ತೆ. ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಪಾನ ಅರ್ಪಣೆ ಜೊತೆ ಇದನ್ನ ಕೊಡಬೇಕು. 25 ಹಬ್ಬದ ಏಳನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು.+
26 ಮೊದಲ ಫಸಲಿನ ದಿನ+ ಅಂದ್ರೆ ವಾರಗಳ ಹಬ್ಬದ+ ಸಮಯದಲ್ಲಿ ಯೆಹೋವನಿಗೆ ಹೊಸ ಬೆಳೆನ ಕೊಡೋ ದಿನ+ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಯಾವುದೇ ಕಷ್ಟದ ಕೆಲಸ ಮಾಡಬಾರದು.+ 27 ನೀವು ಎರಡು ಹೋರಿಗಳನ್ನ ಒಂದು ಟಗರನ್ನ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಕೊಡಬೇಕು. ಅದ್ರ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.+ 28 ಆ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು. ಒಂದು ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ 29 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದು ಕುರಿ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 30 ಅಷ್ಟೇ ಅಲ್ಲ ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಆಡುಮರಿನ ಕೊಡಬೇಕು.+ 31 ಪ್ರತಿ ದಿನ ಕೊಡೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆಯ ಜೊತೆ ಇದನ್ನ ಅರ್ಪಿಸಬೇಕು. ನೀವು ಕೊಡೋ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಜೊತೆಗೆ ಪಾನ ಅರ್ಪಣೆಗಳನ್ನೂ ಕೊಡಬೇಕು.’”
29 “‘ಏಳನೇ ತಿಂಗಳ ಮೊದಲನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು.+ ಅವತ್ತು ತುತ್ತೂರಿ ಊದಬೇಕು.+ 2 ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು. ಆ ಬಲಿಯ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ. 3 ಜೊತೆಗೆ ಧಾನ್ಯ ಅರ್ಪಣೆಗಳನ್ನ ಸಹ ಕೊಡಬೇಕು. ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 4 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದ್ರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 5 ಅಷ್ಟೇ ಅಲ್ಲ ನಿಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಒಂದು ಗಂಡು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು. 6 ನೀವು ಪ್ರತಿ ತಿಂಗಳು ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ,+ ಪಾನ ಅರ್ಪಣೆ, ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ,+ ಪಾನ ಅರ್ಪಣೆ ಜೊತೆ ಈ ಅರ್ಪಣೆಗಳನ್ನ ಕೊಡಬೇಕು.+ ಈ ಸರ್ವಾಂಗಹೋಮ ಬಲಿಗಳನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಅರ್ಪಿಸಬೇಕು. ಬೆಂಕಿಯಲ್ಲಿ ಅರ್ಪಿಸೋ ಈ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ.
7 ಏಳನೇ ತಿಂಗಳ ಹತ್ತನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು.+ ಆ ದಿನ ನಿಮ್ಮ ಪಾಪಗಳಿಗಾಗಿ ದುಃಖ ಪಡಬೇಕು.* ಅವತ್ತು ಯಾವ ಕೆಲಸನೂ ಮಾಡಬಾರದು.+ 8 ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 9 ಈ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆಗಳನ್ನೂ ಕೊಡಬೇಕು. ಹೋರಿ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, ಟಗರಿನ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 10 ಏಳು ಗಂಡು ಕುರಿಮರಿಗಳಲ್ಲಿ ಒಂದೊಂದರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 11 ಪ್ರಾಯಶ್ಚಿತ್ತ ಮಾಡೋಕೆ ಅರ್ಪಿಸೋ ಪಾಪಪರಿಹಾರಕ ಬಲಿ,+ ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆಗಳ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.
12 ಏಳನೇ ತಿಂಗಳ 15ನೇ ದಿನ ನೀವು ದೇವರ ಆರಾಧನೆಗೆ ಸೇರಿಬರಬೇಕು. ಆ ದಿನ ನೀವು ಕಷ್ಟದ ಕೆಲಸ ಮಾಡಬಾರದು. ಅವತ್ತಿಂದ ಏಳು ದಿನ ನೀವು ಯೆಹೋವನ ಘನತೆಗಾಗಿ ಹಬ್ಬ ಆಚರಿಸಬೇಕು.+ 13 ಸರ್ವಾಂಗಹೋಮ ಬಲಿಯಾಗಿ 13 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು.+ ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 14 ಈ ಪ್ರಾಣಿಗಳ ಜೊತೆ ಧಾನ್ಯ ಅರ್ಪಣೆ ಸಹ ಕೊಡಬೇಕು. 13 ಹೋರಿಗಳನ್ನ ಕೊಡುವಾಗ ಪ್ರತಿಯೊಂದ್ರ ಜೊತೆ ಒಂದು ಏಫಾ ಅಳತೆಯ ಹತ್ತನೇ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 2 ಟಗರುಗಳಲ್ಲಿ ಒಂದೊಂದ್ರ ಜೊತೆ ಹತ್ತನೇ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟನ್ನ, 15 ಕುರಿಮರಿಗಳನ್ನ ಕೊಡುವಾಗ ಒಂದೊಂದ್ರ ಜೊತೆನೂ ಹತ್ತನೇ ಒಂದು ಭಾಗದಷ್ಟು ನುಣ್ಣಗಿನ ಹಿಟ್ಟನ್ನ ಎಣ್ಣೆ ಹಾಕಿ ಕೊಡಬೇಕು. 16 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
17 ಹಬ್ಬದ ಎರಡನೇ ದಿನ 12 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 18 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 19 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
20 ಹಬ್ಬದ ಮೂರನೇ ದಿನ 11 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 21 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 22 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
23 ಹಬ್ಬದ ನಾಲ್ಕನೇ ದಿನ 10 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 24 ಯಾವಾಗ್ಲೂ ಕೊಡೋ ತರ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 25 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡುಮರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
26 ಹಬ್ಬದ ಐದನೇ ದಿನ 9 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 27 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 28 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
29 ಹಬ್ಬದ ಆರನೇ ದಿನ 8 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 30 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 31 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
32 ಹಬ್ಬದ ಏಳನೇ ದಿನ 7 ಹೋರಿ, 2 ಟಗರು, ಒಂದು ವರ್ಷದ 14 ಗಂಡು ಕುರಿಮರಿಗಳನ್ನ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ 33 ಯಾವಾಗ್ಲೂ ಕೊಡೋ ಕ್ರಮದಲ್ಲೇ ಪ್ರತಿಯೊಂದು ಹೋರಿ, ಪ್ರತಿಯೊಂದು ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 34 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
35 ಎಂಟನೇ ದಿನ ನೀವು ದೇವರ ಆರಾಧನೆಗಾಗಿ ಸೇರಬೇಕಾದ ಒಂದು ವಿಶೇಷ ದಿನ. ಅವತ್ತು ನೀವು ಕಷ್ಟದ ಕೆಲಸ ಮಾಡಬಾರದು.+ 36 ಆ ದಿನ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಈ ಪ್ರಾಣಿಗಳಲ್ಲಿ ಯಾವ ದೋಷಾನೂ ಇರಬಾರದು.+ ಆ ಬಲಿಯ ಸುವಾಸನೆ ಯೆಹೋವನಿಗೆ ಖುಷಿ* ತರುತ್ತೆ. 37 ಯಾವಾಗ್ಲೂ ಕೊಡೋ ಕ್ರಮದಲ್ಲೇ ಹೋರಿ, ಟಗರು, ಪ್ರತಿಯೊಂದು ಗಂಡು ಕುರಿಮರಿ ಜೊತೆ ಅರ್ಪಿಸಬೇಕಾದ ಧಾನ್ಯ ಅರ್ಪಣೆ, ಪಾನ ಅರ್ಪಣೆ ಕೊಡಬೇಕು. 38 ಪ್ರತಿ ದಿನ ಅರ್ಪಿಸೋ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ, ಪಾನ ಅರ್ಪಣೆ ಜೊತೆ ಒಂದು ಆಡನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+
39 ವರ್ಷದ ಬೇರೆ ಬೇರೆ ಕಾಲಗಳಲ್ಲಿ ಹಬ್ಬಗಳನ್ನ+ ಆಚರಿಸುವಾಗ ಈ ಎಲ್ಲ ಬಲಿಗಳನ್ನ ನೀವು ಯೆಹೋವನಿಗೆ ಅರ್ಪಿಸಬೇಕು. ಹರಕೆ ಕಾಣಿಕೆಗಳನ್ನ,+ ಸ್ವಇಷ್ಟದ+ ಸರ್ವಾಂಗಹೋಮ ಬಲಿಗಳನ್ನ,+ ಧಾನ್ಯ ಅರ್ಪಣೆಗಳನ್ನ,+ ಪಾನ ಅರ್ಪಣೆಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸೋದ್ರ ಜೊತೆ ಈ ಅರ್ಪಣೆಗಳನ್ನೂ ಕೊಡಬೇಕು.’” 40 ಯೆಹೋವ ಕೊಟ್ಟ ಎಲ್ಲ ಆಜ್ಞೆಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ.
30 ಮೋಶೆ ಇಸ್ರಾಯೇಲ್ಯರ ಕುಲಗಳ ಮುಖ್ಯಸ್ಥರಿಗೆ+ ಹೀಗೆ ಹೇಳಿದ: “ಯೆಹೋವನ ಆಜ್ಞೆ ಏನಂದ್ರೆ 2 ಒಬ್ಬ ಗಂಡಸು ಯೆಹೋವನಿಗೆ ಹರಕೆ ಹೊತ್ರೆ+ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ+ ಮಾತಿಗೆ ತಪ್ಪಬಾರದು.+ ಏನೇ ಹರಕೆ ಮಾಡಿದ್ರೂ ತೀರಿಸಬೇಕು.+
3 ತಂದೆ ಮನೇಲಿ ಇರೋ ಯುವತಿ ಯೆಹೋವನಿಗೆ ಒಂದು ಹರಕೆ ಮಾಡಿದ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ 4 ತಂದೆಗೆ ವಿಷ್ಯ ಗೊತ್ತಾಗಿ ಅದನ್ನ ಬೇಡ ಅಂತ ಹೇಳದಿದ್ರೆ ಅವಳು ತನ್ನ ಹರಕೆ ತೀರಿಸ್ಲೇಬೇಕು. ಏನೇ ಆದ್ರೂ ಕೊಟ್ಟ ಮಾತಿನ ಪ್ರಕಾರ ನಡಿಬೇಕು. 5 ಆದ್ರೆ ಮಗಳು ಮಾಡ್ಕೊಂಡಿರೋ ಹರಕೆಗಳ ಬಗ್ಗೆ ಅಥವಾ ಆಣೆಗಳ ಬಗ್ಗೆ ತಂದೆ ಕೇಳಿಸ್ಕೊಂಡಾಗ ಬೇಡ ಅಂತ ಹೇಳಿದ್ರೆ ಅವಳು ಕೊಟ್ಟ ಮಾತಿನ ಪ್ರಕಾರ ನಡಿಬೇಕಾಗಿಲ್ಲ. ತಂದೆ ಬೇಡ ಅಂತ ಹೇಳಿದ್ರಿಂದ ಯೆಹೋವ ಅವಳನ್ನ ಕ್ಷಮಿಸ್ತಾನೆ.+
6 ಯುವತಿ ಹರಕೆ ಹೊತ್ತ ಮೇಲೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ದುಡುಕಿ ಮಾತು ಕೊಟ್ಟ ಮೇಲೆ ಮದುವೆ ಆದ್ರೆ, 7 ಅವಳ ಗಂಡ ಆ ವಿಷ್ಯ ಕೇಳಿಸ್ಕೊಂಡ ದಿನ ಅದನ್ನ ಬೇಡ ಅಂತ ಹೇಳದಿದ್ರೆ ಅವಳು ತನ್ನ ಹರಕೆ ತೀರಿಸ್ಲೇಬೇಕು. ಏನೇ ಆದ್ರೂ ಕೊಟ್ಟ ಮಾತಿನ ಪ್ರಕಾರ ನಡಿಬೇಕು. 8 ಆದ್ರೆ ಆ ವಿಷ್ಯ ಗಂಡ ಕೇಳಿಸ್ಕೊಂಡ ಮೇಲೆ ಅವನಿಗೆ ಇಷ್ಟ ಆಗದಿದ್ರೆ ಅವನು ಆ ದಿನನೇ ಅವಳ ಹರಕೆಯನ್ನ ದುಡುಕಿ ಕೊಟ್ಟ ಮಾತನ್ನ ರದ್ದು ಮಾಡಬಹುದು.+ ಯೆಹೋವ ಅವಳನ್ನ ಕ್ಷಮಿಸ್ತಾನೆ.
9 ಆದ್ರೆ ಒಬ್ಬ ವಿಧವೆ ಅಥವಾ ವಿಚ್ಛೇದನ ಆಗಿರೋ ಸ್ತ್ರೀ ಹರಕೆ ಹೊತ್ತ ಮೇಲೆ ಮಾಡ್ತೀನಿ ಅಂತ ಮಾತು ಕೊಟ್ಟಿರೋದನ್ನ ಮಾಡ್ಲೇಬೇಕು.
10 ಮದುವೆ ಆಗಿರೋ ಒಬ್ಬ ಸ್ತ್ರೀ ಹರಕೆ ಹೊತ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ಟಿದ್ರೆ 11 ಅವಳ ಗಂಡ ಅದನ್ನ ಕೇಳಿಸ್ಕೊಂಡಾಗ ಬೇಡ ಅಂತ ಹೇಳದಿದ್ರೆ ಅವಳು ಮಾಡಿದ ಎಲ್ಲ ಹರಕೆಗಳನ್ನ ತೀರಿಸ್ಲೇಬೇಕು. ಅವಳು ಏನೇ ತ್ಯಾಗ ಮಾಡ್ತೀನಿ ಅಂತ ಹೇಳಿರಲಿ ಅದನ್ನ ಮಾಡ್ಲೇಬೇಕು. 12 ಆದ್ರೆ ಆ ವಿಷ್ಯ ಕೇಳಿಸ್ಕೊಂಡ ದಿನಾನೇ ಗಂಡ ಅವಳ ಹರಕೆ ಅಥವಾ ಕೊಟ್ಟ ಮಾತನ್ನ ಪೂರ್ತಿ ರದ್ದು ಮಾಡಿದ್ರೆ ಅವಳು ಅದನ್ನ ಮಾಡಬೇಕಾಗಿಲ್ಲ.+ ಗಂಡ ರದ್ದು ಮಾಡಿದ್ರಿಂದ ಯೆಹೋವ ಅವಳನ್ನ ಕ್ಷಮಿಸ್ತಾನೆ. 13 ಹೆಂಡತಿ ಹರಕೆ ಹೊತ್ರೆ ಅಥವಾ ಒಂದು ವಿಷ್ಯ ತ್ಯಾಗ ಮಾಡ್ತೀನಿ ಅಂತ ಮಾತು ಕೊಟ್ರೆ ಅದನ್ನ ಅವಳು ಮಾಡಬೇಕಾ, ಬೇಡ್ವಾ ಅಂತ ಗಂಡ ನಿರ್ಧಾರ ಮಾಡಬೇಕು. 14 ಆದ್ರೆ ಆ ವಿಷ್ಯ ಗೊತ್ತಾದ ಮೇಲೆ ಗಂಡ ತುಂಬ ದಿನದ ತನಕ ಏನೂ ಹೇಳದಿದ್ರೆ ಎಲ್ಲ ಹರಕೆಗಳನ್ನ, ತ್ಯಾಗ ಮಾಡ್ತೀನಿ ಅಂತ ಕೊಟ್ಟ ಮಾತನ್ನ ಮಾಡೋಕೆ ಅವನು ಹೆಂಡತಿಗೆ ಒಪ್ಪಿಗೆ ಕೊಟ್ಟಿದ್ದಾನೆ ಅಂತರ್ಥ. ತನ್ನ ಹೆಂಡತಿಯ ಹರಕೆ ಅಥವಾ ಕೊಟ್ಟ ಮಾತಿನ ಬಗ್ಗೆ ಗೊತ್ತಾದ ದಿನಾನೇ ಬೇಡ ಅಂತ ಹೇಳದಿದ್ರೆ ಅದ್ರ ಪ್ರಕಾರ ಮಾಡೋಕೆ ಅವಳಿಗೆ ಒಪ್ಪಿಗೆ ಕೊಟ್ಟಿದ್ದಾನೆ ಅಂತರ್ಥ. 15 ಆದ್ರೆ ಅವನಿಗೆ ಆ ವಿಷ್ಯ ಗೊತ್ತಾದ ದಿನಾನೇ ಏನೂ ಅಡ್ಡಿ ಮಾಡದೆ ಆಮೇಲೆ ಬೇಡ ಅಂತ ಹೇಳಿದ್ರೆ ಅವಳ ತಪ್ಪಿನ ಪರಿಣಾಮಗಳನ್ನ ಗಂಡ ಅನುಭವಿಸಬೇಕು.+
16 ಮದುವೆ ಆದ ಸ್ತ್ರೀ ಹರಕೆ ಹೊತ್ತಾಗ ಅವಳು, ಅವಳ ಗಂಡ ಏನು ಮಾಡಬೇಕು, ತಂದೆ ಮನೇಲಿ ಇರೋ ಯುವತಿ ಹರಕೆ ಹೊತ್ತಾಗ ಅವಳು, ಅವಳ ತಂದೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಈ ನಿಯಮಗಳನ್ನ ಯೆಹೋವ ಮೋಶೆ ಮೂಲಕ ಕೊಟ್ಟನು.”
31 ಆಮೇಲೆ ಯೆಹೋವ ಮೋಶೆಗೆ 2 “ಮಿದ್ಯಾನ್ಯರು+ ಇಸ್ರಾಯೇಲ್ಯರಿಗೆ ಮಾಡಿದ್ದಕ್ಕೆ ಸೇಡು ತೀರಿಸು.+ ಇದಾದ ಮೇಲೆ ನೀನು ಸಾಯ್ತೀಯ”+ ಅಂದನು.
3 ಹಾಗಾಗಿ ಮೋಶೆ ಜನ್ರಿಗೆ “ನಿಮ್ಮಲ್ಲಿ ಸ್ವಲ್ಪ ಗಂಡಸರನ್ನ ಯುದ್ಧಕ್ಕೆ ಕಳಿಸೋಕೆ ಸಿದ್ಧಮಾಡಿ. ಅವರು ಮಿದ್ಯಾನ್ಯರ ವಿರುದ್ಧ ಯುದ್ಧ ಮಾಡಿ ಯೆಹೋವನ ಪರವಾಗಿ ಸೇಡು ತೀರಿಸ್ಲಿ. 4 ಇಸ್ರಾಯೇಲ್ಯರ ಪ್ರತಿಯೊಂದು ಕುಲದಿಂದ 1,000 ಗಂಡಸರನ್ನ ಯುದ್ಧಕ್ಕೆ ಕಳಿಸಬೇಕು” ಅಂದ. 5 ಇಸ್ರಾಯೇಲ್ಯರು ಲಕ್ಷಗಟ್ಲೆ ಇದ್ರು.+ ಪ್ರತಿ ಕುಲದಿಂದ 1,000 ಗಂಡಸರಂತೆ ಒಟ್ಟು 12,000 ಗಂಡಸರನ್ನ ಆರಿಸ್ಕೊಂಡ್ರು. ಅವರೆಲ್ಲ ಯುದ್ಧಕ್ಕೆ ತಯಾರಾದ್ರು.
6 ಇಸ್ರಾಯೇಲ್ಯರ ಎಲ್ಲ ಕುಲದಿಂದ ಆರಿಸ್ಕೊಂಡ ಒಟ್ಟು 12,000 ಗಂಡಸರನ್ನ ಮೋಶೆ ಯುದ್ಧಕ್ಕೆ ಕಳಿಸಿದ. ಅವರ ಜೊತೆ ಪುರೋಹಿತ ಎಲ್ಲಾಜಾರನ ಮಗ ಫೀನೆಹಾಸನನ್ನ+ ಕೂಡ ಕಳಿಸಿದ. ಫೀನೆಹಾಸ ಪವಿತ್ರ ಉಪಕರಣಗಳನ್ನ, ಯುದ್ಧದ ತುತ್ತೂರಿಗಳನ್ನ+ ತಗೊಂಡು ಹೋದ. 7 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೆ ಅವರು ಮಿದ್ಯಾನ್ಯರ ವಿರುದ್ಧ ಯುದ್ಧ ಮಾಡಿದ್ರು. ಅಲ್ಲಿರೋ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು. 8 ಎವೀ, ರೆಕೆಮ್, ಚೂರ್, ಹೂರ್, ರೆಬಾ ಅನ್ನೋ ಮಿದ್ಯಾನಿನ ಐದು ರಾಜರನ್ನ ಕೊಂದ್ರು. ಬೆಯೋರನ ಮಗ ಬಿಳಾಮನನ್ನ+ ಸಹ ಕತ್ತಿಯಿಂದ ಕೊಂದ್ರು. 9 ಆದ್ರೆ ಇಸ್ರಾಯೇಲ್ಯರು ಅಲ್ಲಿನ ಸ್ತ್ರೀಯರನ್ನ, ಮಕ್ಕಳನ್ನ ಕೊಲ್ಲದೆ ಸೆರೆಹಿಡಿದ್ರು. ಅವರ ಸಾಕುಪ್ರಾಣಿ, ಬೇರೆ ಪ್ರಾಣಿ, ಸೊತ್ತುಗಳನ್ನೆಲ್ಲ ಸೂರೆಮಾಡಿದ್ರು. 10 ಮಿದ್ಯಾನ್ಯರು ವಾಸವಾಗಿದ್ದ ಎಲ್ಲ ಪಟ್ಟಣಗಳನ್ನ ಪಾಳೆಯಗಳನ್ನ* ಬೆಂಕಿ ಹಾಕಿ ಸುಟ್ಟುಬಿಟ್ರು. 11 ಆಮೇಲೆ ಅವರು ಸೆರೆಹಿಡಿದ ಎಲ್ರನ್ನ ಕೊಳ್ಳೆಹೊಡೆದ ಸೊತ್ತುಗಳನ್ನ ಪ್ರಾಣಿಗಳನ್ನ ತಗೊಂಡು 12 ಮೋಶೆ, ಪುರೋಹಿತ ಎಲ್ಲಾಜಾರ್, ಎಲ್ಲ ಇಸ್ರಾಯೇಲ್ಯರು ಇದ್ದ ಪಾಳೆಯದ ಹತ್ರ ಬಂದ್ರು. ಇಸ್ರಾಯೇಲ್ಯರ ಪಾಳೆಯ ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶಗಳಲ್ಲಿ+ ಇತ್ತು.
13 ಆಗ ಮೋಶೆ, ಪುರೋಹಿತ ಎಲ್ಲಾಜಾರ್, ಎಲ್ಲ ಪ್ರಧಾನರು ಅವರನ್ನ ಭೇಟಿಯಾಗೋಕೆ ಪಾಳೆಯದ ಹೊರಗೆ ಹೋದ್ರು. 14 ಯುದ್ಧ ಮುಗಿಸಿ ಬಂದಿದ್ದ ಸೈನ್ಯದ ಅಧಿಕಾರಿಗಳನ್ನ ಅಂದ್ರೆ ಸಾವಿರ ಸಾವಿರ ಸೈನಿಕರ ಮೇಲೆ, ನೂರು ನೂರು ಸೈನಿಕರ ಮೇಲೆ ಅಧಿಕಾರಿಗಳಾಗಿದ್ದ ಗಂಡಸರನ್ನ ನೋಡಿ ಮೋಶೆಗೆ ತುಂಬ ಕೋಪ ಬಂತು. 15 ಮೋಶೆ ಅವರಿಗೆ “ಸ್ತ್ರೀಯರನ್ನೆಲ್ಲ ಯಾಕೆ ಉಳಿಸಿದ್ದೀರ? 16 ಬಿಳಾಮನ ಮಾತು ಕೇಳಿ ಇಸ್ರಾಯೇಲ್ಯರನ್ನ ಬುಟ್ಟಿಗೆ ಹಾಕೊಂಡಿದ್ದು ಈ ಸ್ತ್ರೀಯರಲ್ವಾ? ಇವರಿಂದಾನೇ ಇಸ್ರಾಯೇಲ್ಯರು ಪೆಗೋರನ ವಿಷ್ಯದಲ್ಲಿ+ ಯೆಹೋವನಿಗೆ ನಂಬಿಕೆ ದ್ರೋಹ ಮಾಡಿದ್ರು.+ ಅದಕ್ಕೇ ಯೆಹೋವನ ಜನ್ರ ಮೇಲೆ ಕಷ್ಟ ಬಂತು.+ 17 ಹಾಗಾಗಿ ಗಂಡಸರ ಜೊತೆ ಲೈಂಗಿಕ ಸಂಬಂಧ ಇಟ್ಟ ಎಲ್ಲ ಸ್ತ್ರೀಯರನ್ನ, ಅವರ ಎಲ್ಲ ಗಂಡು ಮಕ್ಕಳನ್ನ ಸಾಯಿಸಿ. 18 ಆದ್ರೆ ಲೈಂಗಿಕ ಸಂಬಂಧ ಇಡದ ಹುಡುಗಿಯರನ್ನ+ ಸಾಯಿಸಬೇಡಿ. 19 ಏಳು ದಿನ ಪಾಳೆಯದ ಹೊರಗೆ ಡೇರೆ ಹಾಕೊಳ್ಳಿ. ಕೊಲೆಗಾರರು, ಶವ ಮುಟ್ಟಿದವರು+ ಮೂರನೇ ದಿನ ಮತ್ತೆ ಏಳನೇ ದಿನ ತಮ್ಮನ್ನ ಶುದ್ಧ ಮಾಡ್ಕೊಬೇಕು.+ ನೀವು, ನೀವು ಸೆರೆಹಿಡಿದು ತಂದ ಎಲ್ರೂ ತಮ್ಮನ್ನ ಶುದ್ಧ ಮಾಡ್ಕೊಬೇಕು. 20 ನಿಮ್ಮೆಲ್ಲ ಬಟ್ಟೆಗಳನ್ನ ಚರ್ಮದ ವಸ್ತುಗಳನ್ನ ಆಡುಕೂದಲಿಂದ ಮಾಡಿದ ಎಲ್ಲ ವಸ್ತುಗಳನ್ನ ಮರದ ವಸ್ತುಗಳನ್ನ ಶುದ್ಧ ಮಾಡಬೇಕು” ಅಂದ.
21 ಆಮೇಲೆ ಪುರೋಹಿತ ಎಲ್ಲಾಜಾರ ಯುದ್ಧದಿಂದ ಬಂದ ಗಂಡಸರಿಗೆ “ಯೆಹೋವ ಮೋಶೆ ಮೂಲಕ ಕೊಟ್ಟ ನಿಯಮ ಏನಂದ್ರೆ 22 ‘ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸವನ್ನ 23 ಅಂದ್ರೆ ಬೆಂಕಿಯಲ್ಲಿ ಸುಟ್ಟುಹೋಗದ ಎಲ್ಲವನ್ನ ಬೆಂಕಿಗೆ ಹಾಕಿ ಶುದ್ಧ ಮಾಡಬೇಕು. ಅವುಗಳನ್ನ ಶುದ್ಧೀಕರಣದ ನೀರಿಂದ+ ಸಹ ಶುದ್ಧ ಮಾಡಬೇಕು. ಬೆಂಕಿಯಲ್ಲಿ ಸುಟ್ಟುಹೋಗೋ ವಸ್ತುಗಳನ್ನ ನೀರಿಂದ ತೊಳಿಬೇಕು. 24 ಏಳನೇ ದಿನ ನಿಮ್ಮ ಬಟ್ಟೆಗಳನ್ನ ಒಗಿಬೇಕು. ಆಗ ಶುದ್ಧ ಆಗ್ತೀರ. ಆಮೇಲೆ ನೀವು ಪಾಳೆಯದ ಒಳಗೆ ಬರಬಹುದು’”+ ಅಂದನು.
25 ಯೆಹೋವ ಮೋಶೆಗೆ 26 “ನೀನು ಪುರೋಹಿತ ಎಲ್ಲಾಜಾರನ ಜೊತೆ, ಇಸ್ರಾಯೇಲ್ಯರ ಕುಟುಂಬಗಳ ಮುಖ್ಯಸ್ಥರ ಜೊತೆ ಸೇರಿ ಕೊಳ್ಳೆಯ ಎಲ್ಲ ಸಾಮಾನು, ಪ್ರಾಣಿ, ಸೆರೆಹಿಡಿದು ತಂದ ಜನ್ರನ್ನ ಲೆಕ್ಕ ಮಾಡು. 27 ಆಮೇಲೆ ಎಲ್ಲ ಕೊಳ್ಳೆಯನ್ನ ಎರಡು ಪಾಲು ಮಾಡು. ಒಂದು ಪಾಲನ್ನ ಯುದ್ಧಮಾಡಿ ಬಂದ ಸೈನಿಕರಿಗೆ, ಇನ್ನೊಂದನ್ನ ಜನ್ರಲ್ಲಿ ಉಳಿದವರಿಗೆ ಕೊಡು.+ 28 ಯುದ್ಧಕ್ಕೆ ಹೋದ ಸೈನಿಕರು ತಮಗೆ ಸಿಕ್ಕಿದ ಪಾಲಿಂದ 500 ಜನ್ರಲ್ಲಿ ಒಬ್ರನ್ನ* ಮತ್ತು ಹಸು, ಕತ್ತೆ, ಆಡು-ಕುರಿ ಪ್ರತಿಯೊಂದ್ರಲ್ಲೂ 500ರಲ್ಲಿ ಒಂದೊಂದನ್ನ* ಯೆಹೋವನಿಗೋಸ್ಕರ ತೆರಿಗೆ ಕೊಡಬೇಕು. 29 ನೀನು ಆ ತೆರಿಗೆ ತಗೊಂಡು ಪುರೋಹಿತ ಎಲ್ಲಾಜಾರನಿಗೆ ಕೊಡಬೇಕು. ಅದು ಯೆಹೋವನಿಗೆ ಕೊಡೋ ಕಾಣಿಕೆ.+ 30 ಇಸ್ರಾಯೇಲ್ಯರು ತಮಗೆ ಸಿಕ್ಕಿದ ಪಾಲಿಂದ 50 ಜನ್ರಲ್ಲಿ ಒಬ್ರನ್ನ ಮತ್ತು ಹಸು, ಕತ್ತೆ, ಆಡು-ಕುರಿ, ಎಲ್ಲ ರೀತಿಯ ಸಾಕುಪ್ರಾಣಿಗಳಲ್ಲಿ ಪ್ರತಿಯೊಂದ್ರಿಂದ 50ರಲ್ಲಿ ಒಂದೊಂದನ್ನ ಕೊಡಬೇಕು. ನೀನು ಅದನ್ನ ತಗೊಂಡು ಯೆಹೋವನ ಪವಿತ್ರ ಡೇರೆಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸೋ+ ಲೇವಿಯರಿಗೆ ಕೊಡಬೇಕು”+ ಅಂದನು.
31 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಮೋಶೆ, ಪುರೋಹಿತ ಎಲ್ಲಾಜಾರ ಮಾಡಿದ್ರು. 32 ಕೊಳ್ಳೆಹೊಡೆದು ತಂದದ್ರಲ್ಲಿ ಸೈನಿಕರು ತಿಂದು ಉಳಿದಿದ್ದನ್ನ ಲೆಕ್ಕ ಮಾಡಿದಾಗ 6,75,000 ಆಡು-ಕುರಿ, 33 72,000 ಹಸು, 34 61,000 ಕತ್ತೆ ಇತ್ತು. 35 ಗಂಡಸರ ಜೊತೆ ಲೈಂಗಿಕ ಸಂಬಂಧ ಇಡದ ಸ್ತ್ರೀಯರು 32,000 ಇದ್ರು.+ 36 ಯುದ್ಧಕ್ಕೆ ಹೋದವರಿಗೆ ಸಿಕ್ಕಿದ ಪಾಲಲ್ಲಿ 3,37,500 ಆಡು-ಕುರಿ ಇತ್ತು. 37 ಇದ್ರಲ್ಲಿ ಯೆಹೋವನಿಗೆ ತೆರಿಗೆಯಾಗಿ ಕೊಟ್ಟ ಆಡು-ಕುರಿ 675. 38 ಅವರಿಗೆ 36,000 ಹಸುಗಳು ಸಿಕ್ತು. ಅದ್ರಲ್ಲಿ ಯೆಹೋವನಿಗೆ 72 ಹಸುಗಳನ್ನ ತೆರಿಗೆಯಾಗಿ ಕೊಟ್ರು. 39 ಅವರಿಗೆ 30,500 ಕತ್ತೆಗಳು ಸಿಕ್ತು. ಅದ್ರಲ್ಲಿ ಯೆಹೋವನಿಗೆ 61 ಕತ್ತೆಗಳನ್ನ ತೆರಿಗೆಯಾಗಿ ಕೊಟ್ರು. 40 ಅವರಿಗೆ 16,000 ಕನ್ಯೆಯರು ಸಿಕ್ಕಿದ್ರು. ಅವ್ರಲ್ಲಿ 32 ಕನ್ಯೆಯರನ್ನ ಯೆಹೋವನಿಗೆ ತೆರಿಗೆಯಾಗಿ ಕೊಟ್ರು. 41 ಯೆಹೋವ ಆಜ್ಞೆ ಕೊಟ್ಟ ಪ್ರಕಾರ ಮೋಶೆ ಆ ತೆರಿಗೆ ತಗೊಂಡು ಪುರೋಹಿತ ಎಲ್ಲಾಜಾರನಿಗೆ ಕೊಟ್ಟ.+ ಅದು ಯೆಹೋವನಿಗೆ ಕೊಟ್ಟ ಕಾಣಿಕೆ.
42 ಮೋಶೆ ಕೊಳ್ಳೆಯಲ್ಲಿ ಅರ್ಧ ಭಾಗವನ್ನ ಯುದ್ಧಕ್ಕೆ ಹೋದವರಿಗೆ ಕೊಟ್ಟ ಮೇಲೆ ಉಳಿದ ಇನ್ನರ್ಧ ಭಾಗವನ್ನ ಇಸ್ರಾಯೇಲ್ಯರಿಗೆ ಕೊಟ್ಟ. 43 ಅದ್ರಲ್ಲಿ 3,37,500 ಆಡು-ಕುರಿ, 44 36,000 ಹಸು, 45 30,500 ಕತ್ತೆ ಇತ್ತು. 46 16,000 ಕನ್ಯೆಯರು ಇದ್ರು. 47 ಇಸ್ರಾಯೇಲ್ಯರಿಗೆ ಸಿಕ್ಕಿದ ಭಾಗದಿಂದ 50 ಜನ್ರಲ್ಲಿ ಒಬ್ರನ್ನ, ಪ್ರಾಣಿಗಳಲ್ಲಿ 50ರಲ್ಲಿ ಒಂದೊಂದನ್ನ ತಗೊಂಡು ಯೆಹೋವನ ಪವಿತ್ರ ಡೇರೆಗೆ ಸಂಬಂಧಿಸಿದ ಜವಾಬ್ದಾರಿ ನಿರ್ವಹಿಸೋ+ ಲೇವಿಯರಿಗೆ ಕೊಟ್ಟ.+ ಹೀಗೆ ಯೆಹೋವ ಹೇಳಿದ ಹಾಗೇ ಮೋಶೆ ಮಾಡಿದ.
48 ಆಮೇಲೆ ಸೇನಾ ವಿಭಾಗಗಳ ಅಧಿಪತಿಗಳು ಅಂದ್ರೆ ಸಾವಿರ ಸೈನಿಕರ ಮೇಲೆ,+ ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಮೋಶೆ ಹತ್ರ ಬಂದು 49 “ಸ್ವಾಮಿ, ನಿನ್ನ ಸೇವಕರಾದ ನಾವು ನಮ್ಮ ಕೈಕೆಳಗಿರೋ ಸೈನಿಕರನ್ನ ಲೆಕ್ಕ ಮಾಡಿದ್ವಿ. ನಮ್ಮಲ್ಲಿ ಒಬ್ರೂ ಕಡಿಮೆ ಆಗಿಲ್ಲ, ಎಲ್ರೂ ಇದ್ದಾರೆ.+ 50 ಹಾಗಾಗಿ ನಮಗೆ ಸಿಕ್ಕಿದ ಚಿನ್ನದ ಆಭರಣಗಳನ್ನ ಅಂದ್ರೆ ಕಡಗ, ಬಳೆ, ಮುದ್ರೆ ಉಂಗುರ, ಕಿವಿಯೋಲೆ, ಬೇರೆ ಆಭರಣಗಳನ್ನ ಯೆಹೋವನಿಗೆ ಅರ್ಪಿಸೋಕೆ ನಮ್ಮಲ್ಲಿ ಪ್ರತಿಯೊಬ್ರು ಬಯಸ್ತೀವಿ. ಯೆಹೋವನ ಮುಂದೆ ನಮಗಾಗಿ ಪ್ರಾಯಶ್ಚಿತ್ತ ಮಾಡೋಕೆ ಇವುಗಳನ್ನ ಕೊಡ್ತೀವಿ” ಅಂದ್ರು.
51 ಅವರು ಕೊಟ್ಟ ಚಿನ್ನದ ಎಲ್ಲ ಆಭರಣಗಳನ್ನ ಮೋಶೆ, ಪುರೋಹಿತ ಎಲ್ಲಾಜಾರ್ ತಗೊಂಡ್ರು. 52 ಸಾವಿರ ಸೈನಿಕರ ಮೇಲೆ, ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಯೆಹೋವನಿಗೆ ಕಾಣಿಕೆಯಾಗಿ ಕೊಟ್ಟ ಚಿನ್ನದ ಒಟ್ಟು ತೂಕ 16,750 ಶೆಕೆಲ್.* 53 ಯುದ್ಧಕ್ಕೆ ಹೋದ ಪ್ರತಿಯೊಬ್ಬ ಸೈನಿಕನಿಗೂ ಕೊಳ್ಳೆಯಲ್ಲಿ ಪಾಲು ಸಿಕ್ತು. 54 ಸಾವಿರ ಸೈನಿಕರ ಮೇಲೆ, ನೂರು ಸೈನಿಕರ ಮೇಲೆ ಅಧಿಪತಿಗಳಾಗಿದ್ದ ಗಂಡಸರು ಕೊಟ್ಟ ಚಿನ್ನವನ್ನ ಮೋಶೆ, ಪುರೋಹಿತ ಎಲ್ಲಾಜಾರ್ ದೇವದರ್ಶನ ಡೇರೆ ಒಳಗೆ ತಂದ್ರು. ಯುದ್ಧದಲ್ಲಿ ದೇವರು ಹೇಗೆಲ್ಲ ಸಹಾಯ ಮಾಡಿದನು ಅಂತ ನೆನಪಿಸೋಕೆ ಇಸ್ರಾಯೇಲ್ಯರು ಅದನ್ನ ಯೆಹೋವನ ಮುಂದೆ ಇಟ್ರು.
32 ರೂಬೇನ್+ ಮತ್ತು ಗಾದ್+ ಕುಲದವರ ಹತ್ರ ಪ್ರಾಣಿಗಳ ದೊಡ್ಡ ದೊಡ್ಡ ಹಿಂಡು ಇತ್ತು. ಯಜ್ಜೇರ್,+ ಗಿಲ್ಯಾದ್ ಅನ್ನೋ ಪ್ರದೇಶಗಳನ್ನ ನೋಡಿ ಪ್ರಾಣಿ ಸಾಕೋಕೆ ಒಳ್ಳೇ ಜಾಗ ಅಂತ ಅವರಿಗೆ ಅನಿಸ್ತು. 2 ಹಾಗಾಗಿ ಮೋಶೆ, ಪುರೋಹಿತ ಎಲ್ಲಾಜಾರ್ ಮತ್ತು ಎಲ್ಲ ಇಸ್ರಾಯೇಲ್ ಪ್ರಧಾನರ ಹತ್ರ ಗಾದ್, ರೂಬೇನ್ ಕುಲದವರು ಬಂದು 3 “ಯೆಹೋವ ಇಸ್ರಾಯೇಲ್ಯರಿಗಾಗಿ ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್,+ ಎಲೆಯಾಲೆ, ಸೆಬಾಮ್, ನೆಬೋ,+ ಬೆಯೋನ್+ 4 ಅನ್ನೋ ಪ್ರದೇಶಗಳನ್ನ ಗೆದ್ದಿದಾನಲ್ಲಾ,+ ಆ ಪ್ರದೇಶಗಳು ಪ್ರಾಣಿಗಳನ್ನ ಸಾಕೋಕೆ ಒಳ್ಳೇ ಜಾಗ. ನಿನ್ನ ಸೇವಕರಾದ ನಮ್ಮ ಹತ್ರ ತುಂಬ ಪ್ರಾಣಿಗಳಿವೆ”+ ಅಂದ್ರು. 5 “ನೀನು ಒಪ್ಪಿದ್ರೆ ನಿನ್ನ ಸೇವಕರಾದ ನಮಗೆ ಈ ಪ್ರದೇಶಗಳನ್ನೇ ಆಸ್ತಿಯಾಗಿ ಕೊಡು. ಯೋರ್ದನ್ ನದಿಯಾಚೆ ಬನ್ನಿ ಅಂತ ದಯವಿಟ್ಟು ನಮಗೆ ಹೇಳಬೇಡ” ಅಂದ್ರು.
6 ಆಗ ಮೋಶೆ ಗಾದ್ ಮತ್ತು ರೂಬೇನ್ ಕುಲದವರಿಗೆ “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಮಾತ್ರ ಇಲ್ಲಿ ಆರಾಮವಾಗಿ ಇರಬೇಕಂತ ನಿಮ್ಮ ಆಸೆನಾ? 7 ಆ ದೇಶವನ್ನ ಅವರಿಗೆ ಖಂಡಿತ ಕೊಡ್ತೀನಿ ಅಂತ ಯೆಹೋವ ಹೇಳಿದ್ದಾನೆ. ಯೋರ್ದನ್ ನದಿ ದಾಟಿ ಆ ದೇಶಕ್ಕೆ ಹೋಗಬೇಕು ಅನ್ನೋ ಅವರ ಆಸೆಗೆ ನೀವ್ಯಾಕೆ ಕಲ್ಲು ಹಾಕ್ತೀರಾ? 8 ಆ ದೇಶ ನೋಡ್ಕೊಂಡು ಬನ್ನಿ ಅಂತ ನಾನು ನಿಮ್ಮ ತಂದೆಯಂದಿರನ್ನ ಕಾದೇಶ್-ಬರ್ನೇಯದಿಂದ ಕಳಿಸಿದಾಗ ಅವರೂ ಹೀಗೇ ಮಾಡಿದ್ರು.+ 9 ಅವರು ಎಷ್ಕೋಲ್ ಕಣಿವೆಗೆ+ ಹೋಗಿ ಆ ದೇಶ ನೋಡ್ಕೊಂಡು ಬಂದ ಮೇಲೆ ಇಸ್ರಾಯೇಲ್ಯರಲ್ಲಿ ಭಯ ಹುಟ್ಟಿಸಿದ್ರು. ಯೆಹೋವ ಕೊಡೋ ದೇಶಕ್ಕೆ ಹೋಗೋಕೆ ಇಸ್ರಾಯೇಲ್ಯರಿಗೆ ಧೈರ್ಯ ಬರಲಿಲ್ಲ.+ 10 ಆ ದಿನ ಯೆಹೋವನಿಗೆ ಅವರ ಮೇಲೆ ತುಂಬ ಕೋಪ ಬಂತು. ಆತನು ಪ್ರಮಾಣ ಮಾಡಿ+ 11 ‘ಈಜಿಪ್ಟಿಂದ ಬಂದ ಜನ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಲ್ಲಿ ಒಬ್ಬನೂ ಅಬ್ರಹಾಮ, ಇಸಾಕ, ಯಾಕೋಬರಿಗೆ+ ಕೊಡ್ತೀನಿ ಅಂತ ನಾನು ಮಾತುಕೊಟ್ಟ ದೇಶಕ್ಕೆ ಹೋಗಲ್ಲ.+ ಯಾಕಂದ್ರೆ ನಾನು ಹೇಳಿದ ಮಾತನ್ನ ಅವರು ಮನಸಾರೆ* ಪಾಲಿಸಲಿಲ್ಲ. 12 ಆದ್ರೆ ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬ,+ ನೂನನ ಮಗ ಯೆಹೋಶುವ+ ಇವರಿಬ್ರು ಮಾತ್ರ ಯೆಹೋವನ ಮಾತನ್ನ ಮನಸಾರೆ ಪಾಲಿಸಿದ ಕಾರಣ ಆ ದೇಶಕ್ಕೆ ಹೋಗ್ತಾರೆ’ + ಅಂದನು. 13 ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. ಅದಕ್ಕೆ ಯೆಹೋವ ತನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡಿದ ಆ ತಲೆಮಾರಿನವರೆಲ್ಲ ಸಾಯೋ ತನಕ 40 ವರ್ಷ+ ಕಾಡಲ್ಲಿ ಅಲೆಯೋ ತರ ಮಾಡಿದನು.+ 14 ನೀವೀಗ ನಿಮ್ಮ ತಂದೆಯಂದಿರು ಮಾಡಿದ ಅದೇ ಪಾಪ ಮಾಡ್ತಾ ಇದ್ದೀರ. ಇಸ್ರಾಯೇಲ್ಯರ ಮೇಲೆ ಯೆಹೋವನ ಕೋಪ ಇನ್ನೂ ಹೊತ್ತಿ ಉರಿಯೋ ಹಾಗೆ ಮಾಡ್ತಾ ಇದ್ದೀರ. 15 ದೇವರ ಮಾತು ಕೇಳೋದನ್ನ ನೀವೀಗ ಬಿಟ್ಟುಬಿಟ್ರೆ ಆತನು ಮತ್ತೆ ಇಸ್ರಾಯೇಲ್ಯರನ್ನ ಕಾಡಲ್ಲಿ ಅಲೆಯೋ ತರ ಬಿಡೋದ್ರಲ್ಲಿ ಸಂಶಯನೇ ಇಲ್ಲ. ನಿಮ್ಮಿಂದಾಗಿ ಈ ಜನ್ರೆಲ್ಲ ನಾಶ ಆಗ್ತಾರೆ” ಅಂದನು.
16 ಅವರು ಮೋಶೆಗೆ “ಪ್ರಾಣಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ, ಮಕ್ಕಳಿಗೆ ಪಟ್ಟಣಗಳನ್ನ ಕಟ್ಟೋಕೆ ಅನುಮತಿ ಕೊಡು. 17 ಅವರು ಕೋಟೆಗಳು ಇರೋ ಪಟ್ಟಣಗಳಲ್ಲಿ ವಾಸ ಮಾಡ್ಲಿ. ಆಗ ಈ ದೇಶದ ಜನ್ರಿಂದ ನಮ್ಮ ಮಕ್ಕಳಿಗೆ ಏನೂ ಹಾನಿ ಆಗಲ್ಲ. ಆದ್ರೆ ಇಸ್ರಾಯೇಲ್ಯರನ್ನ ಅವರವರ ಜಾಗಗಳಿಗೆ ಮುಟ್ಟಿಸೋ ತನಕ ಅವರ ಮುಂದೆ ಮುಂದೆ ಹೋಗಿ ಅವರ ಜೊತೆ ಸೇರಿ ಯುದ್ಧ ಮಾಡ್ತೀವಿ.+ 18 ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬನಿಗೆ ಆ ದೇಶದಲ್ಲಿ ಆಸ್ತಿ ಸಿಗೋ ತನಕ ಮನೆಗೆ ವಾಪಸ್ ಹೋಗಲ್ಲ.+ 19 ಯೋರ್ದನಿನ ಪೂರ್ವದಲ್ಲಿ+ ನಮಗೆ ಆಸ್ತಿ ಸಿಕ್ಕಿರೋದ್ರಿಂದ ಯೋರ್ದನ್ ದಾಟಿ ಆಕಡೆ ಎಲ್ಲೂ ನಮಗೆ ಆಸ್ತಿ ಸಿಗಲ್ಲ” ಅಂದ್ರು.
20 ಅದಕ್ಕೆ ಮೋಶೆ “ಹಾಗಾದ್ರೆ ನಿಮ್ಮಲ್ಲಿ ಪ್ರತಿಯೊಬ್ಬ ಯುದ್ಧ ಮಾಡೋಕೆ ಯೆಹೋವನ ಮುಂದೆ ಆಯುಧಗಳನ್ನ ತಗೊಳ್ಳಲಿ.+ 21 ಯೆಹೋವನ ಮುಂದೆ ಯೋರ್ದನ್ ನದಿ ದಾಟಿ. ಆತನ ಶತ್ರುಗಳನ್ನ ಓಡಿಸಿಬಿಟ್ಟ ಮೇಲೆ,+ 22 ಯೆಹೋವನ ಮುಂದೆ ನೀವು ಆ ದೇಶ ವಶಪಡಿಸಿಕೊಂಡ ಮೇಲೆ+ ನಿಮ್ಮ ಪ್ರದೇಶಕ್ಕೆ ವಾಪಸ್ ಹೋಗಬಹುದು.+ ಆಗ ಯೆಹೋವನ ಮುಂದೆ, ಇಸ್ರಾಯೇಲ್ಯರ ಮುಂದೆ ನೀವು ಅಪರಾಧಿಗಳಲ್ಲ. ಆಮೇಲೆ ಯೆಹೋವನ ಮುಂದೆ ಈ ದೇಶ ನಿಮ್ಮದಾಗುತ್ತೆ.+ 23 ನೀವು ಹಾಗೆ ಮಾಡದೆ ಹೋದ್ರೆ ಯೆಹೋವನ ವಿರುದ್ಧ ಪಾಪ ಮಾಡಿದ ಹಾಗಾಗುತ್ತೆ. ಆ ಪಾಪಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತೆ. 24 ಈಗ ನೀವು ಹೋಗಿ ನಿಮ್ಮ ಮಕ್ಕಳಿಗೆ ಪಟ್ಟಣಗಳನ್ನ ಆಡು-ಕುರಿಗಳಿಗೆ ಕೊಟ್ಟಿಗೆಗಳನ್ನ ಕಟ್ಟಬಹುದು.+ ಆದ್ರೆ ನೀವು ಕೊಟ್ಟ ಮಾತಿಗೆ ತಪ್ಪಬಾರದು” ಅಂದನು.
25 ಆಗ ಗಾದ್ ಮತ್ತು ರೂಬೇನ್ ಕುಲದವರು ಮೋಶೆಗೆ “ಸ್ವಾಮಿ, ನೀನು ಹೇಳಿದ ಹಾಗೇ ನಿನ್ನ ಸೇವಕರಾದ ನಾವು ಮಾಡ್ತೀವಿ. 26 ನಮ್ಮ ಹೆಂಡತಿ ಮಕ್ಕಳು, ಎಲ್ಲ ಸಾಕುಪ್ರಾಣಿಗಳು ಗಿಲ್ಯಾದಿನ ಪಟ್ಟಣಗಳಲ್ಲೇ ವಾಸ ಮಾಡ್ಲಿ.+ 27 ನಮ್ಮಲ್ಲಿ ಪ್ರತಿಯೊಬ್ರು ನೀನು ಹೇಳಿದ ಹಾಗೇ ಆಯುಧ ತಗೊಂಡು ಯೋರ್ದನ್ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡ್ತೀವಿ”+ ಅಂದ್ರು.
28 ಆಗ ಮೋಶೆ ಅವರ ವಿಷ್ಯದಲ್ಲಿ ಪುರೋಹಿತ ಎಲ್ಲಾಜಾರನಿಗೆ, ನೂನನ ಮಗ ಯೆಹೋಶುವನಿಗೆ, ಇಸ್ರಾಯೇಲ್ ಕುಲಗಳ ಮುಖ್ಯಸ್ಥರಿಗೆ 29 “ಗಾದ್ ಮತ್ತು ರೂಬೇನ್ ಕುಲದಲ್ಲಿ ಗಂಡಸರೆಲ್ಲ ಆಯುಧ ತಗೊಂಡು ನಿಮ್ಮ ಜೊತೆ ಯೋರ್ದನ್ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡಿದ್ರೆ ಆ ದೇಶವನ್ನ ನೀವೆಲ್ಲ ವಶಪಡಿಸಿಕೊಂಡ್ರೆ ನೀವು ಅವರಿಗೆ ಗಿಲ್ಯಾದ್ ಪ್ರದೇಶವನ್ನ ಆಸ್ತಿಯಾಗಿ ಕೊಡಬೇಕು.+ 30 ಅವರು ನಿಮ್ಮ ಜೊತೆ ಯೋರ್ದನ್ ದಾಟದಿದ್ರೆ ನಿಮ್ಮ ಜೊತೆ ಕಾನಾನ್ ದೇಶದಲ್ಲೇ ಇರಬೇಕು” ಅಂದ.
31 ಅದಕ್ಕೆ ಗಾದ್ ಮತ್ತು ರೂಬೇನ್ ಕುಲದವರು “ನಿನ್ನ ಸೇವಕರಾದ ನಮಗೆ ಯೆಹೋವ ಏನು ಆಜ್ಞೆ ಕೊಟ್ಟಿದ್ದಾನೋ ಅದನ್ನೆಲ್ಲ ಮಾಡ್ತೀವಿ. 32 ಆಯುಧ ತಗೊಂಡು ಯೆಹೋವನ ಮುಂದೆ ಯೋರ್ದನ್ ದಾಟಿ ಕಾನಾನ್ ದೇಶಕ್ಕೆ ಹೋಗ್ತೀವಿ.+ ಆದ್ರೆ ಯೋರ್ದನಿನ ಈ ಕಡೆಯಲ್ಲೇ ನಮಗೆ ಆಸ್ತಿ ಕೊಡಬೇಕು” ಅಂದ್ರು. 33 ಹಾಗಾಗಿ ಗಾದ್ ಕುಲದವರಿಗೆ, ರೂಬೇನ್ ಕುಲದವರಿಗೆ,+ ಯೋಸೇಫನ ಮಗ ಮನಸ್ಸೆಯ ಕುಲದ ಅರ್ಧ ಜನ್ರಿಗೆ+ ಮೋಶೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನ+ ಬಾಷಾನಿನ ರಾಜನಾದ ಓಗನ ರಾಜ್ಯವನ್ನ+ ಆಸ್ತಿಯಾಗಿ ಕೊಟ್ಟ. ಅದ್ರಲ್ಲಿ ಆ ರಾಜ್ಯಗಳ ಪಟ್ಟಣಗಳು, ಅವುಗಳಿಗೆ ಸೇರಿದ ಪ್ರದೇಶಗಳು, ಆ ಪ್ರದೇಶಗಳ ಸುತ್ತ ಇರೋ ಪಟ್ಟಣಗಳು ಇದ್ವು.
34 ಗಾದ್ ಕುಲದವರು ದೀಬೋನ್,+ ಅಟಾರೋತ್,+ ಅರೋಯೇರ್,+ 35 ಅಟ್ರೋತ್-ಷೋಫಾನ್, ಯಜ್ಜೇರ್,+ ಯೊಗ್ಬೆಹಾ,+ 36 ಬೇತ್ -ನಿಮ್ರಾ,+ ಬೇತ್-ಹಾರಾನ್+ ಅನ್ನೋ ಕೋಟೆಗಳು ಇರೋ ಪಟ್ಟಣಗಳನ್ನ ಕಟ್ಟಿದ್ರು.* ಆಡು-ಕುರಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ ಕಟ್ಟಿದ್ರು. 37 ರೂಬೇನ್ ಕುಲದವರು ಹೆಷ್ಬೋನ್,+ ಎಲೆಯಾಲೆ,+ ಕಿರ್ಯಾತಯಿಮ್,+ 38 ನೆಬೋ,+ ಬಾಳ್-ಮೆಯೋನ್,+ (ಈ ಎರಡು ಪಟ್ಟಣಗಳ ಹೆಸ್ರನ್ನ ಬದಲಿಸಲಾಗಿದೆ) ಸಿಬ್ಮ ಅನ್ನೋ ಪಟ್ಟಣಗಳನ್ನ ಕಟ್ಟಿದ್ರು. ಅವರು ಮತ್ತೆ ಕಟ್ಟಿದ ಪಟ್ಟಣಗಳಿಗೆ ಹೊಸ ಹೆಸ್ರು ಇಟ್ರು.
39 ಮನಸ್ಸೆಯ ಮಗ ಮಾಕೀರನ ವಂಶದವರು+ ಗಿಲ್ಯಾದ್ ಅನ್ನೋ ಪ್ರದೇಶನ ವಶ ಮಾಡ್ಕೊಂಡು ಅಲ್ಲಿದ್ದ ಅಮೋರಿಯರನ್ನ ಓಡಿಸಿಬಿಟ್ರು. 40 ಹಾಗಾಗಿ ಮೋಶೆ ಗಿಲ್ಯಾದನ್ನ ಮನಸ್ಸೆಯ ಮಗ ಮಾಕೀರನ ವಂಶದವರಿಗೆ ಕೊಟ್ಟ. ಅವರು ಅಲ್ಲಿ ವಾಸ ಮಾಡೋಕೆ ಶುರು ಮಾಡಿದ್ರು.+ 41 ಮನಸ್ಸೆ ಕುಲದ ಯಾಯೀರ ಅಮೋರಿಯರ ಮೇಲೆ ದಾಳಿ ಮಾಡಿ ಗಿಲ್ಯಾದಿನ ಡೇರೆಗಳು ಇರೋ ಹಳ್ಳಿಗಳನ್ನ ವಶ ಮಾಡ್ಕೊಂಡ. ಅವನು ಅವುಗಳಿಗೆ ಹವತ್-ಯಾಯೀರ್*+ ಅಂತ ಹೆಸರಿಟ್ಟ. 42 ಕೆನತ್ ಅನ್ನೋ ಜಾಗ, ಅದಕ್ಕೆ ಸೇರಿದ* ಊರುಗಳನ್ನ ನೋಬಹ ದಾಳಿ ಮಾಡಿ ವಶ ಮಾಡ್ಕೊಂಡ. ಕೆನತಿಗೆ ಅವನು ನೋಬಹ ಅಂತ ತನ್ನ ಹೆಸ್ರನ್ನೇ ಇಟ್ಟ.
33 ಇಸ್ರಾಯೇಲ್ಯರು ಮೋಶೆ, ಆರೋನ ಹೇಳಿದ ಹಾಗೇ+ ತಮ್ಮ ತಮ್ಮ ದಳದ ಪ್ರಕಾರ*+ ಈಜಿಪ್ಟಿಂದ ಬಂದ ಮೇಲೆ+ ಪ್ರಯಾಣದ ಉದ್ದಕ್ಕೂ ಬೇರೆ ಬೇರೆ ಜಾಗಗಳಲ್ಲಿ ಉಳ್ಕೊಂಡ್ರು. 2 ಇಸ್ರಾಯೇಲ್ಯರು ಎಲ್ಲಿಂದ ಎಲ್ಲಿಗೆ ಹೋದ್ರು, ಎಲ್ಲೆಲ್ಲಿ ಉಳ್ಕೊಂಡ್ರು ಅನ್ನೋ ಮಾಹಿತಿಯನ್ನ ಯೆಹೋವ ಹೇಳಿದ ಹಾಗೆ ಮೋಶೆ ಬರೆದಿಡ್ತಾ ಇದ್ದ. ಅವನು ಬರೆದ ಆ ಜಾಗಗಳ ಹೆಸ್ರು ಏನಂದ್ರೆ+ 3 ಇಸ್ರಾಯೇಲ್ಯರು ಮೊದಲನೇ ತಿಂಗಳ 15ನೇ ದಿನದಲ್ಲಿ+ ರಮ್ಸೇಸಿನಿಂದ+ ಹೊರಟ್ರು. ಪಸ್ಕ ಹಬ್ಬದ ಮಾರನೇ ದಿನಾನೇ+ ಅವರು ಎಲ್ಲ ಈಜಿಪ್ಟ್ ಜನ್ರ ಕಣ್ಮುಂದೆ ಧೈರ್ಯವಾಗಿ ಹೊರಟ್ರು. 4 ಆ ಸಮಯದಲ್ಲಿ ಈಜಿಪ್ಟ್ ಜನ್ರು ತಮ್ಮ ಮೊದಲ ಗಂಡು ಮಕ್ಕಳ ಶವಗಳನ್ನ ಹೂಣಿಡ್ತಾ ಇದ್ರು. ಯಾಕಂದ್ರೆ ಯೆಹೋವ ಈಜಿಪ್ಟ್ ಜನ್ರ ದೇವರುಗಳಿಗೆ ಶಿಕ್ಷೆ ಕೊಟ್ಟಿದ್ದನು,+ ಯೆಹೋವ ಈಜಿಪ್ಟ್ ಜನ್ರ ಎಲ್ಲ ಮೊದಲ ಗಂಡು ಮಕ್ಕಳನ್ನ ಸಾಯಿಸಿದ್ದನು.+
5 ಇಸ್ರಾಯೇಲ್ಯರು ರಮ್ಸೇಸಿಂದ ಹೋಗಿ ಸುಕ್ಕೋತಲ್ಲಿ ಉಳ್ಕೊಂಡ್ರು.+ 6 ಸುಕ್ಕೋತಿಂದ ಹೋಗಿ ಕಾಡಿನ ಅಂಚಲ್ಲಿರೋ ಏತಾಮಲ್ಲಿ ಉಳ್ಕೊಂಡ್ರು.+ 7 ಏತಾಮಿಂದ ಹಿಂದೆ ಪ್ರಯಾಣ ಮಾಡಿ ಪೀಹಹೀರೋತಿನ ಕಡೆಗೆ ಬಂದ್ರು. ಅಲ್ಲಿಂದ ಬಾಳ್ಚೆಫೋನ್ ಕಾಣ್ತಾ ಇತ್ತು.+ ಅವರು ಮಿಗ್ದೋಲಿನ ಮುಂದೆ ಉಳ್ಕೊಂಡ್ರು.+ 8 ಆಮೇಲೆ ಪೀಹಹೀರೋತಿಂದ ಸಮುದ್ರದ ಮಧ್ಯದಲ್ಲಿ ನಡೆದು+ ಕಾಡಿಗೆ ಹೋದ್ರು.+ ಏತಾಮಿನ ಕಾಡಲ್ಲಿ+ ಮೂರು ದಿನ ಪ್ರಯಾಣ ಮಾಡಿ ಮಾರಾ ಅನ್ನೋ ಜಾಗದಲ್ಲಿ ಉಳ್ಕೊಂಡ್ರು.+
9 ಮಾರಾದಿಂದ ಏಲೀಮಿಗೆ ಬಂದ್ರು. ಅಲ್ಲಿ 12 ನೀರಿನ ಬುಗ್ಗೆ, 70 ಖರ್ಜೂರ ಮರ ಇತ್ತು. ಹಾಗಾಗಿ ಅಲ್ಲಿ ಉಳ್ಕೊಂಡ್ರು.+ 10 ಏಲೀಮಿಂದ ಹೋಗಿ ಕೆಂಪು ಸಮುದ್ರದ ಹತ್ರ ಉಳ್ಕೊಂಡ್ರು. 11 ಆಮೇಲೆ ಕೆಂಪು ಸಮುದ್ರದ ಹತ್ರದಿಂದ ಹೋಗಿ ಸೀನ್ ಕಾಡಲ್ಲಿ ಉಳ್ಕೊಂಡ್ರು.+ 12 ಸೀನ್ ಕಾಡಿಂದ ಹೋಗಿ ದೊಪ್ಕದಲ್ಲಿ ಉಳ್ಕೊಂಡ್ರು. 13 ದೊಪ್ಕದಿಂದ ಹೋಗಿ ಆಲೂಷಲ್ಲಿ ಉಳ್ಕೊಂಡ್ರು. 14 ಆಲೂಷಿಂದ ಹೋಗಿ ರೆಫೀದೀಮಲ್ಲಿ ಉಳ್ಕೊಂಡ್ರು.+ ಅಲ್ಲಿ ಜನ್ರಿಗೆ ಕುಡಿಯೋ ನೀರು ಇರಲಿಲ್ಲ. 15 ರೆಫೀದೀಮಿಂದ ಹೋಗಿ ಸಿನಾಯಿ ಕಾಡಲ್ಲಿ ಉಳ್ಕೊಂಡ್ರು.+
16 ಅವರು ಸಿನಾಯಿ ಕಾಡಿಂದ ಹೋಗಿ ಕಿಬ್ರೋತ್-ಹತಾವಾದಲ್ಲಿ ಉಳ್ಕೊಂಡ್ರು.+ 17 ಕಿಬ್ರೋತ್-ಹತಾವಾದಿಂದ ಹೋಗಿ ಹಚೇರೋತಲ್ಲಿ ಉಳ್ಕೊಂಡ್ರು.+ 18 ಹಚೇರೋತಿಂದ ಹೋಗಿ ರಿತ್ಮದಲ್ಲಿ ಉಳ್ಕೊಂಡ್ರು. 19 ರಿತ್ಮದಿಂದ ಹೋಗಿ ರಿಮ್ಮೋನ್-ಪೆರೆಚಿನಲ್ಲಿ ಉಳ್ಕೊಂಡ್ರು. 20 ರಿಮ್ಮೋನ್-ಪೆರೆಚಿಂದ ಹೋಗಿ ಲಿಬ್ನದಲ್ಲಿ ಉಳ್ಕೊಂಡ್ರು. 21 ಲಿಬ್ನದಿಂದ ಹೋಗಿ ರಿಸ್ಸದಲ್ಲಿ ಉಳ್ಕೊಂಡ್ರು. 22 ರಿಸ್ಸದಿಂದ ಹೋಗಿ ಕೆಹೇಲಾತದಲ್ಲಿ ಉಳ್ಕೊಂಡ್ರು. 23 ಕೆಹೇಲಾತದಿಂದ ಹೋಗಿ ಶೆಫೆರ್ ಬೆಟ್ಟದ ಹತ್ರ ಉಳ್ಕೊಂಡ್ರು.
24 ಆಮೇಲೆ ಶೆಫೆರ್ ಬೆಟ್ಟದಿಂದ ಹೋಗಿ ಹರಾದದಲ್ಲಿ ಉಳ್ಕೊಂಡ್ರು. 25 ಹರಾದದಿಂದ ಹೋಗಿ ಮಖೇಲೋತಲ್ಲಿ ಉಳ್ಕೊಂಡ್ರು. 26 ಮಖೇಲೋತಿಂದ ಹೋಗಿ+ ತಹತಿನಲ್ಲಿ ಉಳ್ಕೊಂಡ್ರು. 27 ತಹತಿಂದ ಹೋಗಿ ತೆರಹದಲ್ಲಿ ಉಳ್ಕೊಂಡ್ರು. 28 ತೆರಹದಿಂದ ಹೋಗಿ ಮಿತ್ಕದಲ್ಲಿ ಉಳ್ಕೊಂಡ್ರು. 29 ಮಿತ್ಕದಿಂದ ಹೋಗಿ ಹಷ್ಮೋನದಲ್ಲಿ ಉಳ್ಕೊಂಡ್ರು. 30 ಹಷ್ಮೋನದಿಂದ ಹೋಗಿ ಮೋಸೇರೋತಲ್ಲಿ ಉಳ್ಕೊಂಡ್ರು.31 ಮೋಸೇರೋತಿಂದ ಹೋಗಿ ಬೆನೇ-ಯಾಕಾನಲ್ಲಿ ಉಳ್ಕೊಂಡ್ರು.+ 32 ಬೆನೇ-ಯಾಕಾನಿಂದ ಹೋಗಿ ಹೋರ್-ಹಗಿದ್ಗಾದಿನಲ್ಲಿ ಉಳ್ಕೊಂಡ್ರು. 33 ಹೋರ್-ಹಗಿದ್ಗಾದಿನಿಂದ ಹೋಗಿ ಯೊಟ್ಬಾತದಲ್ಲಿ ಉಳ್ಕೊಂಡ್ರು.+ 34 ಯೊಟ್ಬಾತದಿಂದ ಹೋಗಿ ಅಬ್ರೋನದಲ್ಲಿ ಉಳ್ಕೊಂಡ್ರು. 35 ಅಬ್ರೋನದಿಂದ ಹೋಗಿ ಎಚ್ಯೋನ್-ಗೆಬೆರಿನಲ್ಲಿ ಉಳ್ಕೊಂಡ್ರು.+ 36 ಎಚ್ಯೋನ್-ಗೆಬೆರಿಂದ ಹೋಗಿ ಚಿನ್ ಕಾಡಲ್ಲಿರೋ+ ಕಾದೇಶಲ್ಲಿ ಉಳ್ಕೊಂಡ್ರು.
37 ಕಾದೇಶಿಂದ ಹೋಗಿ ಎದೋಮ್ ದೇಶದ ಮೇರೆಯಲ್ಲಿ ಇರೋ ಹೋರ್ ಬೆಟ್ಟದ ಹತ್ರ ಉಳ್ಕೊಂಡ್ರು.+ 38 ಯೆಹೋವ ಹೇಳಿದ ಹಾಗೇ ಪುರೋಹಿತ ಆರೋನ ಆ ಬೆಟ್ಟ ಹತ್ತಿದ, ಅಲ್ಲೇ ತೀರಿಹೋದ. ಇಸ್ರಾಯೇಲ್ಯರು ಈಜಿಪ್ಟ್ ದೇಶ ಬಿಟ್ಟು ಬಂದ 40ನೇ ವರ್ಷದ ಐದನೇ ತಿಂಗಳ ಮೊದಲನೇ ದಿನದಲ್ಲಿ ಅವನು ತೀರಿಹೋದ.+ 39 ಹೋರ್ ಬೆಟ್ಟದ ಮೇಲೆ ಆರೋನ ತೀರಿಕೊಂಡಾಗ ಅವನಿಗೆ 123 ವರ್ಷ.
40 ಕಾನಾನ್ ದೇಶಕ್ಕೆ ಸೇರಿದ ಅರಾದ್ ಪಟ್ಟಣದ ರಾಜ+ ಆ ದೇಶದ ನೆಗೆಬಲ್ಲಿ ವಾಸ ಮಾಡ್ತಿದ್ದ. ಅವನಿಗೆ ಇಸ್ರಾಯೇಲ್ಯರು ಬರ್ತಾ ಇದ್ದಾರೆ ಅನ್ನೋ ಸುದ್ದಿ ಸಿಕ್ತು.
41 ಆಮೇಲೆ ಇಸ್ರಾಯೇಲ್ಯರು ಹೋರ್ ಬೆಟ್ಟದಿಂದ ಹೋಗಿ+ ಚಲ್ಮೋನದಲ್ಲಿ ಉಳ್ಕೊಂಡ್ರು. 42 ಚಲ್ಮೋನದಿಂದ ಹೋಗಿ ಪೂನೋನಲ್ಲಿ ಉಳ್ಕೊಂಡ್ರು. 43 ಪೂನೋನಿಂದ ಹೋಗಿ ಓಬೋತಿನಲ್ಲಿ ಉಳ್ಕೊಂಡ್ರು.+ 44 ಓಬೋತಿಂದ ಹೋಗಿ ಮೋವಾಬ್ ಗಡಿಯಲ್ಲಿರೋ ಇಯ್ಯೇ-ಅಬಾರೀಮಲ್ಲಿ ಉಳ್ಕೊಂಡ್ರು.+ 45 ಇಯ್ಯೀಮಿಂದ* ಹೋಗಿ ದೀಬೋನ್-ಗಾದಲ್ಲಿ+ ಉಳ್ಕೊಂಡ್ರು. 46 ದೀಬೋನ್-ಗಾದಿಂದ ಹೋಗಿ ಅಲ್ಮೋನ್-ದಿಬ್ಲಾತಯಿಮಲ್ಲಿ ಉಳ್ಕೊಂಡ್ರು. 47 ಅಲ್ಮೋನ್-ದಿಬ್ಲಾತಯಿಮಿಂದ ಹೋಗಿ ನೆಬೋ ಮುಂದೆ+ ಅಬಾರೀಮ್ ಬೆಟ್ಟಗಳಲ್ಲಿ+ ಉಳ್ಕೊಂಡ್ರು. 48 ಕೊನೆಗೆ ಅವರು ಅಬಾರೀಮ್ ಬೆಟ್ಟಗಳಿಂದ ಹೋಗಿ ಯೆರಿಕೋ ಪಟ್ಟಣದ ಹತ್ರ ಯೋರ್ದನ್ ನದಿ ಪಕ್ಕದಲ್ಲಿ+ ಇರೋ ಮೋವಾಬ್ ಬಯಲು ಪ್ರದೇಶಗಳಲ್ಲಿ ಉಳ್ಕೊಂಡ್ರು. 49 ಅವರು ಮೋವಾಬ್ ಬಯಲು ಪ್ರದೇಶಗಳಲ್ಲಿ ಯೋರ್ದನ್ ತೀರದುದ್ದಕ್ಕೂ ಅಂದ್ರೆ ಬೇತ್-ಯೆಷಿಮೋತಿಂದ ಹಿಡಿದು ಆಬೇಲ್-ಶಿಟ್ಟೀಮಿನ+ ತನಕ ಉಳ್ಕೊಂಡ್ರು.
50 ಯೆರಿಕೋ ಪಟ್ಟಣದ ಹತ್ರ ಯೋರ್ದನ್ ನದಿ ಪಕ್ಕದಲ್ಲಿರೋ ಮೋವಾಬ್ ಬಯಲು ಪ್ರದೇಶಗಳಲ್ಲಿ ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 51 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಯೋರ್ದನ್ ನದಿ ದಾಟಿ ಕಾನಾನ್ ದೇಶಕ್ಕೆ ಹೋಗ್ತೀರ.+ 52 ಹೋದ್ಮೇಲೆ ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು. ಅವರ ಹತ್ರ ಇರೋ ಕಲ್ಲಲ್ಲಿ ಕೆತ್ತಿದ ಎಲ್ಲ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ+ ನಾಶಮಾಡಬೇಕು. ಅವರು ತಮ್ಮ ದೇವರುಗಳನ್ನ ಆರಾಧಿಸೋ ಎಲ್ಲ ಜಾಗಗಳನ್ನ* ನೆಲಸಮ ಮಾಡಬೇಕು.+ 53 ಆ ದೇಶವನ್ನ ಆಸ್ತಿಯಾಗಿ ಮಾಡ್ಕೊಂಡು ಅದ್ರಲ್ಲಿ ನೀವು ವಾಸ ಮಾಡ್ತೀರ. ಯಾಕಂದ್ರೆ ಆ ದೇಶವನ್ನ ಖಂಡಿತ ನಿಮ್ಮ ಕೈಗೆ ಕೊಡ್ತೀನಿ.+ 54 ನೀವು ಚೀಟು ಹಾಕಿ+ ದೇಶವನ್ನ ಪ್ರತಿಯೊಂದು ಕುಲಕ್ಕೆ, ಕುಟುಂಬಕ್ಕೆ ಹಂಚಿಕೊಡಬೇಕು. ಜಾಸ್ತಿ ಜನ ಇರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ ಇರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡಬೇಕು.+ ಚೀಟು ಹಾಕಿದಾಗ ಯಾವ ಕುಟುಂಬಕ್ಕೆ ಯಾವ ಜಮೀನು ಬರುತ್ತೋ ಅದೇ ಜಮೀನನ್ನ ಕೊಡಬೇಕು. ಪ್ರತಿಯೊಂದು ಕುಟುಂಬಕ್ಕೆ ಅವನವನ ಕುಲಕ್ಕೆ ಸಿಕ್ಕಿರೋ ಜಮೀನಿಂದಾನೇ ಆಸ್ತಿ ಕೊಡಬೇಕು.+
55 ನೀವು ಆ ದೇಶದ ಜನ್ರನ್ನ ಅಲ್ಲಿಂದ ಓಡಿಸಿ ಬಿಡದೆ ನಿಮ್ಮ ಜೊತೆ ವಾಸ ಮಾಡೋಕೆ ಬಿಟ್ರೆ+ ಅವರು ನಿಮ್ಮ ದೇಶದಲ್ಲಿ ಇದ್ದು ನಿಮ್ಮನ್ನೇ ಪೀಡಿಸ್ತಾರೆ. ಅವರು ಕಣ್ಣಿಗೆ ಬಿದ್ದು ಕಿರಿಕಿರಿ ಮಾಡೋ ಮರದ ಚೂರು ತರ, ದೇಹಕ್ಕೆ* ಚುಚ್ಚೋ ಮುಳ್ಳು ತರ ಇರ್ತಾರೆ.+ 56 ಅಷ್ಟೇ ಅಲ್ಲ ನಾನು ಅವ್ರಿಗೆ ಏನು ಮಾಡಬೇಕಂತ ಅಂದ್ಕೊಂಡಿದ್ದೀನೋ ಅದನ್ನ ನಿಮಗೆ ಮಾಡ್ತೀನಿ.’”+
34 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞೆ ಕೊಡು: ‘ನಿಮಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶದ+ ಗಡಿಗಳು+ ಯಾವುದಂದ್ರೆ,
3 ನಿಮ್ಮ ದೇಶದ ದಕ್ಷಿಣ ಗಡಿ, ಎದೋಮ್ ಹತ್ರ ಇರೋ ಚಿನ್ ಕಾಡಿಂದ ಶುರು ಆಗುತ್ತೆ. ದಕ್ಷಿಣ ಮತ್ತೆ ಪೂರ್ವದ ಮಧ್ಯ ಇರೋ* ಗಡಿ ಲವಣ ಸಮುದ್ರದ* ಕೊನೆಯಿಂದ ಶುರು ಆಗುತ್ತೆ.+ 4 ಆ ಗಡಿ ಅಕ್ರಬ್ಬೀಮಿನ+ ಇಳಿಜಾರಿನ ದಕ್ಷಿಣ ದಿಕ್ಕಿಗೆ ತಿರುಗುತ್ತೆ. ಅಲ್ಲಿಂದ ಚಿನ್ ತನಕ ಹೋಗುತ್ತೆ. ಅಲ್ಲಿಂದ ಕಾದೇಶ್-ಬರ್ನೇಯದ+ ದಕ್ಷಿಣದಲ್ಲಿ ಕೊನೆ ಆಗುತ್ತೆ. ಆಮೇಲೆ ಆ ಗಡಿ ಹಚರದ್ದಾರಿಗೆ,+ ಅಲ್ಲಿಂದ ಅಚ್ಮೋನಿನ ತನಕ ಹೋಗುತ್ತೆ. 5 ಅದು ಈಜಿಪ್ಟಿನ ನಾಲೆ* ಕಡೆಗೆ ತಿರುಗಿ ಮಹಾ ಸಮುದ್ರದ* ಹತ್ರ ಕೊನೆ ಆಗುತ್ತೆ.+
6 ಪಶ್ಚಿಮ ಗಡಿ, ಮಹಾ ಸಮುದ್ರ* ಮತ್ತೆ ಅದ್ರ ಕರಾವಳಿ. ಇದೇ ನಿಮ್ಮ ದೇಶದ ಪಶ್ಚಿಮ ಗಡಿ.+
7 ಮಹಾ ಸಮುದ್ರದಿಂದ ಹೋರ್ ಬೆಟ್ಟದ+ ತನಕ ಉತ್ತರದ ಗಡಿಯನ್ನ ಗುರುತು ಮಾಡಬೇಕು. 8 ಹೋರ್ ಬೆಟ್ಟದಿಂದ ಲೆಬೋ-ಹಾಮಾತಿನ ತನಕ* ಗಡಿಯನ್ನ+ ಗುರುತು ಮಾಡಬೇಕು. ಅದು ಚೆದಾದಿನಲ್ಲಿ ಕೊನೆ ಆಗುತ್ತೆ.+ 9 ಆ ಗಡಿ ಜಿಫ್ರೋನ್ ತನಕ ಹೋಗಿ ಹಚರ್-ಏನಾನಿನಲ್ಲಿ ಕೊನೆ ಆಗುತ್ತೆ.+ ಇದು ನಿಮ್ಮ ದೇಶದ ಉತ್ತರ ಗಡಿ.
10 ನಿಮ್ಮ ದೇಶದ ಪೂರ್ವ ಗಡಿಯನ್ನ ಹಚರ್-ಏನಾನಿಂದ ಶೆಫಾಮ್ ತನಕ ಗುರುತು ಮಾಡಬೇಕು. 11 ಆ ಗಡಿ ಶೆಫಾಮಿಂದ ಅಯಿನಿನ ಪೂರ್ವಕ್ಕೆ ಇರೋ ರಿಬ್ಲ ತನಕ ಇದೆ. ಆ ಗಡಿ ಕೆಳಗೆ ಕಿನ್ನೆರೆತ್ ಸಮುದ್ರದ*+ ಪೂರ್ವದ ಇಳಿಜಾರನ್ನ ಹಾದುಹೋಗುತ್ತೆ. 12 ಯೋರ್ದನ್ ತನಕ ಹೋಗಿ ಲವಣ ಸಮುದ್ರದ+ ಹತ್ರ ಕೊನೆ ಆಗುತ್ತೆ. ಇದೇ ನಿಮ್ಮ ದೇಶ,+ ಅದ್ರ ಸುತ್ತ ಇರೋ ಗಡಿಗಳು.’”
13 ಮೋಶೆ ಇಸ್ರಾಯೇಲ್ಯರಿಗೆ “ನೀವು ಚೀಟು ಹಾಕಿ ಆಸ್ತಿಯಾಗಿ ಹಂಚ್ಕೊಳ್ಳಬೇಕಾದ ದೇಶ ಇದೇ.+ ಯೆಹೋವನ ಆಜ್ಞೆ ಪ್ರಕಾರ ನೀವು ಈ ದೇಶವನ್ನ ಒಂಬತ್ತುವರೆ ಕುಲಗಳಿಗೆ ಹಂಚ್ಕೊಡಬೇಕು. 14 ರೂಬೇನ್ ಕುಲದವರು, ಗಾದ್ ಕುಲದವರು ಮತ್ತೆ ಮನಸ್ಸೆ ಕುಲದಲ್ಲಿ ಅರ್ಧ ಜನ್ರು ಈಗಾಗ್ಲೇ ತಮ್ಮ ಆಸ್ತಿ ಪಡ್ಕೊಂಡಿದ್ದಾರೆ.+ 15 ಈ ಎರಡೂವರೆ ಕುಲದವರು ಯೆರಿಕೋವಿನ ಮುಂದೆ, ಯೋರ್ದನ್ ಪ್ರದೇಶದ ಪೂರ್ವ ದಿಕ್ಕಲ್ಲಿ ಆಸ್ತಿ ಪಡ್ಕೊಂಡಿದ್ದಾರೆ”+ ಅಂದ.
16 ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 17 “ಪುರೋಹಿತ ಎಲ್ಲಾಜಾರ್,+ ನೂನನ ಮಗ ಯೆಹೋಶುವ+ ನಿಮಗೆ ದೇಶ ಹಂಚ್ಕೊಡ್ತಾರೆ. 18 ಇದಕ್ಕಾಗಿ ಅವರಿಗೆ ಸಹಾಯ ಮಾಡೋಕೆ ನೀವು ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸ್ಕೊಳ್ಳಬೇಕು.+ 19 ಆರಿಸ್ಕೊಳ್ಳಬೇಕಾದ ಗಂಡಸರು ಯಾರಂದ್ರೆ, ಯೆಹೂದ ಕುಲದಿಂದ+ ಯೆಫುನ್ನೆಯ ಮಗ ಕಾಲೇಬ್,+ 20 ಸಿಮೆಯೋನ್ ಕುಲದಿಂದ+ ಅಮ್ಮೀಹೂದನ ಮಗ ಶೆಮೂವೇಲ್, 21 ಬೆನ್ಯಾಮೀನ್ ಕುಲದಿಂದ+ ಕಿಸ್ಲೋನನ ಮಗ ಎಲೀದಾದ್, 22 ದಾನ್ ಕುಲದಿಂದ+ ಯೊಗ್ಲೀಯ ಮಗನೂ ಪ್ರಧಾನನೂ ಆದ ಬುಕ್ಕಿ, 23 ಯೋಸೇಫನ+ ಮಗನಾದ ಮನಸ್ಸೆ+ ಕುಲದಿಂದ ಏಫೋದನ ಮಗನೂ ಪ್ರಧಾನನೂ ಆದ ಹನ್ನೀಯೇಲ್, 24 ಎಫ್ರಾಯೀಮ್ ಕುಲದಿಂದ+ ಶಿಫ್ಟಾನನ ಮಗನೂ ಪ್ರಧಾನನೂ ಆದ ಕೆಮೂವೇಲ್, 25 ಜೆಬುಲೂನ್ ಕುಲದಿಂದ+ ಪರ್ನಾಕನ ಮಗನೂ ಪ್ರಧಾನನೂ ಆದ ಎಲೀಚಾಫಾನ್, 26 ಇಸ್ಸಾಕಾರ್ ಕುಲದಿಂದ+ ಅಜ್ಜಾನನ ಮಗನೂ ಪ್ರಧಾನನೂ ಆದ ಪಲ್ಟೀಯೇಲ್, 27 ಅಶೇರ್ ಕುಲದಿಂದ+ ಶೆಲೋಮಿಯ ಮಗನೂ ಪ್ರಧಾನನೂ ಆದ ಅಹೀಹೂದ್, 28 ನಫ್ತಾಲಿ ಕುಲದಿಂದ+ ಅಮ್ಮೀಹೂದನ ಮಗನೂ ಪ್ರಧಾನನೂ ಆದ ಪೆದಹೇಲ್.” 29 ಕಾನಾನ್ ದೇಶದಲ್ಲಿ ಇಸ್ರಾಯೇಲ್ಯರಿಗೆ ಜಮೀನು ಹಂಚ್ಕೊಡಬೇಕು+ ಅಂತ ಯೆಹೋವ ಈ ಗಂಡಸರಿಗೆ ಆಜ್ಞೆ ಕೊಟ್ಟನು.
35 ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬ್ ಬಯಲು ಪ್ರದೇಶಗಳಲ್ಲಿ+ ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 2 “ಇಸ್ರಾಯೇಲ್ಯರು ತಮಗೆ ಆಸ್ತಿಯಾಗಿ ಸಿಗೋ ಭೂಪ್ರದೇಶದಿಂದ ಲೇವಿಯರ ವಾಸಕ್ಕಾಗಿ ಕೆಲವು ಪಟ್ಟಣಗಳನ್ನ ಕೊಡಬೇಕಂತ ಹೇಳು.+ ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲುಗಳನ್ನ ಸಹ ಇಸ್ರಾಯೇಲ್ಯರು ಲೇವಿಯರಿಗೆ ಕೊಡಬೇಕು.+ 3 ಲೇವಿಯರು ಆ ಪಟ್ಟಣಗಳಲ್ಲಿ ವಾಸ ಮಾಡ್ಲಿ. ಅವರು ತಮ್ಮ ಸಾಕುಪ್ರಾಣಿಗಳಿಗೆ, ಬೇರೆ ಪ್ರಾಣಿಗಳಿಗೆ, ಅವಕ್ಕೆ ಬೇಕಾಗಿರೋ ಸಾಮಾನುಗಳನ್ನ ಇಡೋಕೆ ಆ ಹುಲ್ಲುಗಾವಲುಗಳನ್ನ ಉಪಯೋಗಿಸ್ಲಿ. 4 ನೀವು ಲೇವಿಯರಿಗೆ ಕೊಡೋ ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲುಗಳು ಪಟ್ಟಣದ ಗೋಡೆಯಿಂದ 1,000 ಮೊಳ* ದೊಡ್ಡದಾಗಿ ಇರಬೇಕು. 5 ನೀವು ಪಟ್ಟಣದ ಹೊರಗೆ ಪೂರ್ವ ದಿಕ್ಕಲ್ಲಿ 2,000 ಮೊಳ, ದಕ್ಷಿಣ ದಿಕ್ಕಲ್ಲಿ 2,000 ಮೊಳ, ಪಶ್ಚಿಮ ದಿಕ್ಕಲ್ಲಿ 2,000 ಮೊಳ, ಉತ್ತರ ದಿಕ್ಕಲ್ಲಿ 2,000 ಮೊಳ ಅಳತೆ ಮಾಡಬೇಕು. ಪಟ್ಟಣ ಮಧ್ಯದಲ್ಲಿ ಇರಬೇಕು. ಅದೆಲ್ಲ ಲೇವಿಯರಿಗೆ ಕೊಡಬೇಕಾದ ಪಟ್ಟಣಗಳ ಹುಲ್ಲುಗಾವಲು.
6 ನೀವು ಲೇವಿಯರಿಗೆ 6 ಪಟ್ಟಣಗಳನ್ನ ಆಶ್ರಯನಗರಗಳಾಗಿ ಕೊಡಬೇಕು.+ ಯಾರನ್ನಾದ್ರೂ ಕೊಂದವನು ಅಲ್ಲಿಗೆ ಓಡಿ ಹೋಗಿ ತಪ್ಪಿಸ್ಕೊಳ್ಳಬಹುದು.+ ಆ ಪಟ್ಟಣಗಳಲ್ಲದೆ ಲೇವಿಯರಿಗೆ ನೀವು ಇನ್ನೂ 42 ಪಟ್ಟಣ ಕೊಡಬೇಕು. 7 ಒಟ್ಟು 48 ಪಟ್ಟಣಗಳನ್ನ, ಅವುಗಳ ಹುಲ್ಲುಗಾವಲುಗಳನ್ನ ಲೇವಿಯರಿಗೆ ಕೊಡಬೇಕು.+ 8 ನಿಮಗೆ ಆಸ್ತಿಯಾಗಿ ಸಿಗೋ ಪ್ರದೇಶದಿಂದ ಲೇವಿಯರಿಗೆ ಆ ಪಟ್ಟಣಗಳನ್ನ ಕೊಡಬೇಕು.+ ಜಾಸ್ತಿ ಜನ ಇರೋ ಕುಲದವರು ಜಾಸ್ತಿ ಪಟ್ಟಣಗಳನ್ನ ಕೊಡಬೇಕು, ಕಮ್ಮಿ ಜನ ಇರೋ ಕುಲದವರು ಕಮ್ಮಿ ಪಟ್ಟಣಗಳನ್ನ ಕೊಡಬೇಕು.+ ಪ್ರತಿಯೊಂದು ಕುಲದವರು ತಮ್ಮ ಕುಲಕ್ಕೆ ಸಿಗೋ ಆಸ್ತಿಗೆ ತಕ್ಕ ಹಾಗೆ ಪಟ್ಟಣಗಳನ್ನ ಕೊಡಬೇಕು.”
9 ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 10 “ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಯೋರ್ದನ್ ನದಿ ದಾಟಿ ಕಾನಾನ್ ದೇಶಕ್ಕೆ ಹೋಗ್ತೀರ.+ 11 ಅಪ್ಪಿತಪ್ಪಿ ಒಬ್ಬನನ್ನ ಕೊಂದವನಿಗೆ ಓಡಿಹೋಗೋಕೆ ಸುಲಭ ಆಗುವಂಥ ಪಟ್ಟಣಗಳನ್ನ ನೀವು ಆಶ್ರಯನಗರಗಳಾಗಿ ಆರಿಸ್ಕೊಳ್ಳಬೇಕು.+ 12 ಜನ್ರಿಂದ ತೀರ್ಪು ಸಿಗೋ ಮುಂಚೆನೇ, ಸೇಡು ತೀರಿಸಬೇಕಾದ ವ್ಯಕ್ತಿ+ ಕೈಯಿಂದ* ಸಾಯದೆ ಇರೋಕೆ ಅವನು ಆ ಆಶ್ರಯನಗರಕ್ಕೆ ಓಡಿಹೋಗಬೇಕು.+ 13 ನೀವು ಕೊಡೋ ಆರು ಆಶ್ರಯನಗರಗಳು ಈ ಉದ್ದೇಶಕ್ಕಾಗಿ ಇರುತ್ತೆ. 14 ಯೋರ್ದನಿನ ಈ ಕಡೆಯಲ್ಲಿ ಮೂರು ಪಟ್ಟಣಗಳನ್ನ+ ಕಾನಾನ್ ದೇಶದಲ್ಲಿ ಮೂರು ಪಟ್ಟಣಗಳನ್ನ+ ಆಶ್ರಯನಗರಗಳಾಗಿ ಕೊಡಬೇಕು. 15 ಇಸ್ರಾಯೇಲ್ಯರ ಜೊತೆ ವಾಸ ಮಾಡೋ ವಿದೇಶಿಯರಲ್ಲಿ+ ಪ್ರವಾಸಿಗರಲ್ಲಿ ಯಾರಾದ್ರೂ ಅಪ್ಪಿತಪ್ಪಿ ಒಬ್ಬನನ್ನ ಕೊಂದ್ರೆ ಅವನು ಆ ಆರು ಆಶ್ರಯನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಆಶ್ರಯ ಪಡಿಬಹುದು.+
16 ಆದ್ರೆ ಕಬ್ಬಿಣದ ವಸ್ತುವಿನಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು.+ 17 ಜೀವಕ್ಕೆ ಹಾನಿ ಮಾಡುವಂಥ ಕಲ್ಲಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು. 18 ಜೀವಕ್ಕೆ ಹಾನಿ ಮಾಡುವಂಥ ಮರದ ವಸ್ತುವಿನಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು.
19 ಸೇಡು ತೀರಿಸಬೇಕಾದ ವ್ಯಕ್ತಿನೇ ಕೊಲೆಗಾರನನ್ನ ಸಾಯಿಸಬೇಕು. ಕೊಲೆಗಾರ ಸಿಕ್ಕಿದಾಗ ಕೊಲ್ಲಬಹುದು. 20 ಒಬ್ಬನನ್ನ ದ್ವೇಷದಿಂದ ನೂಕಿದಾಗ ಅಥವಾ ಕೆಟ್ಟದು ಮಾಡೋ ಉದ್ದೇಶದಿಂದ ಅವನ ಮೇಲೆ ಏನೋ ಎಸೆದಾಗ ಅವನು ಸತ್ರೆ+ 21 ಅಥವಾ ದ್ವೇಷದಿಂದ ತನ್ನ ಕೈಯಿಂದ ಹೊಡೆದಾಗ ಅವನು ಸತ್ರೆ, ಹೊಡೆದವನನ್ನ ಸಾಯಿಸ್ಲೇಬೇಕು. ಅವನು ಕೊಲೆಗಾರ ಆಗ್ತಾನೆ. ಸೇಡು ತೀರಿಸಬೇಕಾದ ವ್ಯಕ್ತಿಗೆ ಕೊಲೆಗಾರ ಸಿಕ್ಕಿದಾಗ ಕೊಲ್ಲಬಹುದು.
22 ದ್ವೇಷ ಇಲ್ಲದೆ, ಕೆಟ್ಟದು ಮಾಡೋ ಉದ್ದೇಶ ಇಲ್ಲದೆ ಅಪ್ಪಿತಪ್ಪಿ ಒಬ್ಬನನ್ನ ನೂಕಿದಾಗ ಅಥವಾ ಅವನ ಮೇಲೆ ಏನೋ ಎಸೆದಾಗ ಅವನು ಸತ್ರೆ+ 23 ಅಥವಾ ಕಲ್ಲನ್ನ ಕೆಳಗೆ ಹಾಕಿದಾಗ ಕೆಳಗಿದ್ದ ವ್ಯಕ್ತಿ ಮೇಲೆ ಬಿದ್ದು ಅವನು ಸತ್ರೆ, ಕೆಳಗೆ ಅವನಿರೋದು ಗೊತ್ತಿಲ್ಲದೇ ಇದ್ರೆ, ಸತ್ತವನು ಸಾಯಿಸಿದವನ ಶತ್ರು ಅಲ್ಲದಿದ್ರೆ, ಹಾನಿಮಾಡೋ ಉದ್ದೇಶ ಇರದೇ ಇದ್ರೆ 24 ಸಾಯಿಸಿದ ವ್ಯಕ್ತಿಯ ಮತ್ತು ಸೇಡು ತೀರಿಸಬೇಕಾದ ವ್ಯಕ್ತಿಯ ವಿಚಾರಣೆ ಮಾಡುವಾಗ ಈ ನಿಯಮಗಳ ಪ್ರಕಾರ ತೀರ್ಪು ಕೊಡಬೇಕು.+ 25 ಕೊಂದವನನ್ನ ಸೇಡು ತೀರಿಸಬೇಕಾದ ವ್ಯಕ್ತಿ ಕೈಯಿಂದ ತಪ್ಪಿಸಿ ಅವನು ಈಗಾಗ್ಲೇ ಓಡಿಹೋಗಿದ್ದ ಆಶ್ರಯನಗರಕ್ಕೆ ಮತ್ತೆ ಸೇರಿಸಬೇಕು. ಪವಿತ್ರ ತೈಲದಿಂದ ಅಭಿಷೇಕ ಆಗಿದ್ದ ಮಹಾ ಪುರೋಹಿತ+ ಬದುಕಿರೋ ತನಕ ಅವನು ಆ ಆಶ್ರಯನಗರದಲ್ಲೇ ಇರಬೇಕು.
26 ಒಂದುವೇಳೆ ಕೊಂದವನು ಅವನಿರೋ ಆಶ್ರಯನಗರದ ಗಡಿ ದಾಟಿ ಬಂದ್ರೆ 27 ಅವನು ಆಶ್ರಯನಗರದ ಹೊರಗೆ ಇರೋದನ್ನ ಸೇಡು ತೀರಿಸಬೇಕಾದ ವ್ಯಕ್ತಿ ನೋಡಿ ಅವನನ್ನ ಕೊಂದುಬಿಟ್ರೆ ಕೊಂದವನ ಮೇಲೆ ಯಾವ ಅಪರಾಧನೂ ಇರಲ್ಲ. 28 ಯಾಕಂದ್ರೆ ಅಪ್ಪಿತಪ್ಪಿ ಕೊಂದವನು ಮಹಾ ಪುರೋಹಿತ ಬದುಕಿರೋ ತನಕ ಆಶ್ರಯನಗರದ ಒಳಗೆ ಇರಬೇಕು. ಮಹಾ ಪುರೋಹಿತ ತೀರಿಹೋದ ಮೇಲೆ ಅವನು ತನ್ನ ಊರಿಗೆ ವಾಪಸ್ ಹೋಗಬಹುದು.+ 29 ನೀವು ಎಲ್ಲೇ ಇದ್ರೂ ವಿಚಾರಣೆ ಮಾಡುವಾಗ ಈ ನಿಯಮಗಳಿಗೆ ತಕ್ಕ ಹಾಗೆ ತೀರ್ಪು ಕೊಡಬೇಕು. ಇದು ಎಲ್ಲ ತಲೆಮಾರುಗಳು ಪಾಲಿಸಬೇಕಾದ ನಿಯಮ.
30 ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು. 31 ಮರಣಕ್ಕೆ ಅರ್ಹನಾದ ಕೊಲೆಗಾರನ ಜೀವ ಉಳಿಸೋಕೆ ಬಿಡುಗಡೆ ಬೆಲೆ ತಗೊಳ್ಳಬಾರದು. ಅವನಿಗೆ ಮರಣಶಿಕ್ಷೆ ಆಗ್ಲೇಬೇಕು.+ 32 ಮಹಾ ಪುರೋಹಿತ ಸಾಯೋ ಮುಂಚೆನೇ ತನ್ನ ಊರಿಗೆ ವಾಪಸ್ ಹೋಗೋಕೆ ಆಶ್ರಯನಗರಕ್ಕೆ ಓಡಿಹೋದವನಿಂದ ಬಿಡುಗಡೆ ಬೆಲೆ ತಗೊಳ್ಳಬಾರದು.
33 ರಕ್ತ ಸುರಿಸಿದಾಗ ದೇಶ ಅಶುದ್ಧ ಆಗುತ್ತೆ.+ ನೀವು ವಾಸಿಸೋ ದೇಶವನ್ನ ಈ ರೀತಿ ಅಶುದ್ಧ ಮಾಡಬಾರದು. ಕೊಂದವನ ರಕ್ತ ಸುರಿಸಿದಾಗ್ಲೇ ಕೊಲೆಯಾದವನ ರಕ್ತಕ್ಕೆ ಪ್ರಾಯಶ್ಚಿತ್ತ ಆಗುತ್ತೆ,+ ಬೇರೆ ಯಾವುದರಿಂದಲೂ ಪ್ರಾಯಶ್ಚಿತ್ತ ಆಗಲ್ಲ. 34 ನೀವು ವಾಸಿಸೋ ದೇಶವನ್ನ ಅಶುದ್ಧ ಮಾಡಬಾರದು. ಯಾಕಂದ್ರೆ ನಾನು ಅಲ್ಲಿ ವಾಸ ಮಾಡ್ತಾ ಇದ್ದೀನಿ. ಯೆಹೋವನಾದ ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ವಾಸ ಮಾಡ್ತಾ ಇದ್ದೀನಿ.’”+
36 ಯೋಸೇಫನ ಮರಿಮೊಮ್ಮಗನೂ ಮನಸ್ಸೆಯ ಮೊಮ್ಮಗನೂ ಮಾಕೀರನ+ ಮಗನೂ ಆದ ಗಿಲ್ಯಾದನ ವಂಶದವರ ಮುಖ್ಯಸ್ಥರು ಮೋಶೆ ಮತ್ತು ಇಸ್ರಾಯೇಲ್ಯರ ಪ್ರಧಾನರ ಹತ್ರ ಬಂದು 2 “ಸ್ವಾಮಿ, ದೇಶವನ್ನ ಚೀಟು ಹಾಕಿ ಹಂಚಿ+ ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡು ಅಂತ ಯೆಹೋವ ನಿನಗೆ ಹೇಳಿದ್ದನು. ನಮ್ಮ ಸಹೋದರನಾದ ಚಲ್ಪಹಾದನ ಆಸ್ತಿಯನ್ನ ಅವನ ಹೆಣ್ಣು ಮಕ್ಕಳಿಗೆ ಕೊಡಬೇಕು ಅಂತ ಯೆಹೋವ ನಿನಗೆ ಹೇಳಿದ್ದನು.+ 3 ಆ ಹೆಣ್ಣು ಮಕ್ಕಳು ಇಸ್ರಾಯೇಲ್ಯರ ಬೇರೆ ಕುಲದ ಗಂಡಸರನ್ನ ಮದುವೆ ಆದ್ರೆ ಅವರು ಮದುವೆಯಾಗಿ ಹೋಗೋ ಕುಲಕ್ಕೆ ಅವ್ರ ಆಸ್ತಿ ಸೇರುತ್ತೆ. ಆಗ ನಮ್ಮ ಪೂರ್ವಜರಿಗೆ ಸೇರಿದ ಆಸ್ತಿಯನ್ನ ಅಂದ್ರೆ ನಮ್ಮ ಕುಲಕ್ಕೆ ಕೊಟ್ಟ ಜಮೀನನ್ನ ನಾವು ಕಳ್ಕೊತೀವಿ. 4 ಬಿಡುಗಡೆಯ ವರ್ಷದಲ್ಲೂ*+ ಆ ಆಸ್ತಿ ನಮ್ಮ ಕುಲಕ್ಕೆ ವಾಪಸ್ ಸಿಗಲ್ಲ. ಅವರು ಮದುವೆಯಾಗಿ ಹೋಗಿರೋ ಕುಲಕ್ಕೇ ಅದು ಸೇರುತ್ತೆ. ಇದ್ರಿಂದ ನಮ್ಮ ಪೂರ್ವಜರ ಕುಲಕ್ಕೆ ಸಿಕ್ಕಿದ ಆಸ್ತಿ ಕಳ್ಕೊತೀವಿ” ಅಂದ್ರು.
5 ಮೋಶೆ ಆ ವಿಷ್ಯದಲ್ಲಿ ಯೆಹೋವ ಹೇಳೋದು ಏನಂತ ತಿಳ್ಕೊಂಡ. ಆಮೇಲೆ ಇಸ್ರಾಯೇಲ್ಯರಿಗೆ “ಯೋಸೇಫ ವಂಶದ ಕುಲದವರು ಹೇಳ್ತಿರೋದು ಸರಿ. 6 ಯೆಹೋವ ಚಲ್ಪಹಾದನ ಹೆಣ್ಣು ಮಕ್ಕಳ ವಿಷ್ಯದಲ್ಲಿ ‘ಅವರು ತಮ್ಮ ತಂದೆ ಕುಲದ ಕುಟುಂಬಗಳಲ್ಲಿ ಇರೋ ಗಂಡಸರನ್ನೇ ಮದುವೆ ಆಗಬೇಕು. ಅವ್ರಲ್ಲಿ ತಮಗಿಷ್ಟ ಆದವರನ್ನ ಆ ಹೆಣ್ಣು ಮಕ್ಕಳು ಮದುವೆ ಆಗಬಹುದು. 7 ಇಸ್ರಾಯೇಲ್ಯರು ತಮ್ಮ ಪೂರ್ವಜರ ಕುಲಕ್ಕೆ ಸೇರಿದ ಆಸ್ತಿಯನ್ನ ತಮ್ಮಲ್ಲೇ ಉಳಿಸ್ಕೊಳ್ಳಬೇಕು. ಹಾಗಾಗಿ ಒಂದು ಕುಲಕ್ಕೆ ಸೇರಿದ ಆಸ್ತಿ ಇನ್ನೊಂದು ಕುಲಕ್ಕೆ ಹೋಗಬಾರದು. 8 ಇಸ್ರಾಯೇಲ್ಯರಲ್ಲಿ ಯಾವ ಹೆಣ್ಣುಮಕ್ಕಳಿಗೆ ತಮ್ಮ ತಂದೆ ಆಸ್ತಿ ಸಿಗುತ್ತೋ ಅವರು ತಮ್ಮ ತಂದೆ ಕುಲದವರನ್ನೇ ಮದುವೆ ಆಗಬೇಕು.+ ಇದ್ರಿಂದ ಇಸ್ರಾಯೇಲ್ಯರು ತಮ್ಮ ಪೂರ್ವಜರ ಆಸ್ತಿ ತಮ್ಮ ಕುಲದಲ್ಲೇ ಉಳಿಸ್ಕೊಳ್ಳೋಕೆ ಆಗುತ್ತೆ. 9 ಇಸ್ರಾಯೇಲ್ಯರ ಪ್ರತಿಯೊಂದು ಕುಲದವರು ತಮಗೆ ಸೇರಿದ ಆಸ್ತಿಯನ್ನ ತಮ್ಮಲ್ಲೇ ಉಳಿಸ್ಕೊಳ್ಳಬೇಕು. ಯಾಕಂದ್ರೆ ಒಂದು ಕುಲಕ್ಕೆ ಸೇರಿದ ಆಸ್ತಿ ಇನ್ನೊಂದು ಕುಲಕ್ಕೆ ಹೋಗಬಾರದು’ ಅಂತ ಆಜ್ಞೆ ಕೊಟ್ಟಿದ್ದಾನೆ” ಅಂದ.
10 ಯೆಹೋವ ಮೋಶೆಗೆ ಹೇಳಿದ ಹಾಗೇ ಚಲ್ಪಹಾದನ ಹೆಣ್ಣು ಮಕ್ಕಳು ಮಾಡಿದ್ರು.+ 11 ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕ, ನೋವಾ+ ತಮ್ಮ ತಂದೆಯ ಅಣ್ಣತಮ್ಮಂದಿರ ಗಂಡು ಮಕ್ಕಳನ್ನ ಮದುವೆ ಆದ್ರು. 12 ತಮ್ಮ ಆಸ್ತಿ ತಮ್ಮ ತಂದೆಯ ಕುಲದಲ್ಲೇ ಇರೋ ಹಾಗೆ ಅವರು ಯೋಸೇಫನ ಮಗ ಮನಸ್ಸೆಯ ಕುಟುಂಬಗಳಿಗೆ ಸೇರಿದವರನ್ನೇ ಮದುವೆ ಆದ್ರು.
13 ಯೆರಿಕೋ ಪಟ್ಟಣದ ಹತ್ರ ಯೋರ್ದನ್ ನದಿ ಪಕ್ಕ ಇರೋ ಮೋವಾಬ್ ಬಯಲು ಪ್ರದೇಶಗಳಲ್ಲಿ+ ಯೆಹೋವ ಮೋಶೆ ಮೂಲಕ ಇಸ್ರಾಯೇಲ್ಯರಿಗೆ ಈ ತೀರ್ಪುಗಳನ್ನ, ಆಜ್ಞೆಗಳನ್ನ ಕೊಟ್ಟನು.
ಅಥವಾ “ಐಗುಪ್ತದಿಂದ.”
ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯಗಳಿಗೆ.”
ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅಥವಾ “ಅವರವರ ಗುರುತುಚಿಹ್ನೆಗಳಿರೋ ಸ್ಥಳಗಳ ಹತ್ರ.”
ಅಥವಾ “ಕಾವಲು ಕಾಯೋ, ಡೇರೆ ಕೆಲಸಗಳನ್ನ ಮಾಡೋ.”
ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅಕ್ಷ. “ಯಾಜಕರಾಗಿ.”
ಅಕ್ಷ. “ತಂದೆಯ ಮನೆತನಗಳ ಪ್ರಕಾರ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಇದೊಂದು ಕಡಲ ಪ್ರಾಣಿ.
ಅಥವಾ “ದೀಪಶಾಮಕಗಳನ್ನ.”
ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.
ಪರಿಶಿಷ್ಟ ಬಿ14 ನೋಡಿ.
ಅಥವಾ “ಜವೆಗೋದಿ.”
ಅಥವಾ “ನೀನು ಗಂಡನ ಅಧಿಕಾರದ ಕೆಳಗಿದ್ದ.”
ಅಥವಾ “ನೀನು ಗಂಡನ ಅಧಿಕಾರದ ಕೆಳಗಿರುವಾಗ.”
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.
ಹೀಬ್ರು ಭಾಷೆಯಲ್ಲಿ “ಆಮೆನ್, ಆಮೆನ್.”
ಇದು ಸಂತಾನೋತ್ಪತ್ತಿಯ ಅಂಗಗಳನ್ನ ಸೂಚಿಸ್ತಿರಬೇಕು.
ಇದು ಸಂತಾನ ಶಕ್ತಿ ಕಳ್ಕೊಳ್ಳೋದಕ್ಕೆ ಸೂಚಿಸ್ತಿರಬೇಕು.
ಹೀಬ್ರು ಭಾಷೆಯಲ್ಲಿ ನಾಜೀರ್. ಪದವಿವರಣೆಯಲ್ಲಿ “ನಾಜೀರ” ನೋಡಿ.
ಅಕ್ಷ. “ತನ್ನ ತಲೆಯನ್ನ.”
ಅಥವಾ “ಸಮರ್ಪಣೆ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಚಿಕ್ಕ ಬೋಗುಣಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಕ್ಷ. “ಎರಡು ಸಂಜೆಗಳ ಮಧ್ಯ.” ಹೆಚ್ಚಿನಾಂಶ ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ.
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯವಾಗಿ.”
ಇವನು ಇತ್ರೋ.
ಅಥವಾ “ಒಡಂಬಡಿಕೆಯ.”
ಅರ್ಥ “ಸುಡೋದು” ಅಂದ್ರೆ ದೊಡ್ಡ ಬೆಂಕಿ; ಧಗಧಗನೆ ಉರಿಯೋ ಬೆಂಕಿ.
ಇವರು ಇಸ್ರಾಯೇಲ್ಯರಲ್ಲದ ಜನರಾಗಿರಬಹುದು.
ಈ ಅಂಟು ಪಾರದರ್ಶಕ. ಮುತ್ತಿನ ತರ ಕಾಣುತ್ತೆ.
ಅಕ್ಷ. “ಯೆಹೋವನ ಕೈ ಮೋಟುಗೈನಾ?”
ಅಥವಾ “ಪ್ರವಾದಿಸೋಕೆ.”
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಒಂದು ಹೋಮೆರ್ ಅಂದ್ರೆ 220 ಲೀ. ಪರಿಶಿಷ್ಟ ಬಿ14 ನೋಡಿ.
ಅರ್ಥ “ಅತಿಯಾಸೆ ಪಟ್ಟವರ ಸಮಾಧಿಗಳು.”
ಅಥವಾ “ಎಲ್ಲ ಜನ್ರಿಗಿಂತ ಹೆಚ್ಚು ಸೌಮ್ಯ (ಶಾಂತ).”
ಪದವಿವರಣೆ ನೋಡಿ.
ಅಕ್ಷ. “ನನ್ನ ಮನೆಯವರಲ್ಲೇ ಅವನು ನಂಬಿಗಸ್ತ.”
ಅರ್ಥ “ಯೆಹೋವ ರಕ್ಷಣೆ ಆಗಿದ್ದಾನೆ.”
ಅಥವಾ “‘ದಕ್ಷಿಣಕ್ಕೆ’ ಅಂದ್ರೆ ಕಾನಾನ್ ದೇಶದ ದಕ್ಷಿಣ ದಿಕ್ಕಿಗೆ.”
ಅಥವಾ “ಹಾಮಾತಿನ ಬಾಗಿಲ.”
ಅರ್ಥ “ದ್ರಾಕ್ಷಿ ಗೊಂಚಲು.”
ಅಕ್ಷ. “ಹತ್ತು.”
ಅಥವಾ “ಪೂರ್ಣ ಹೃದಯದಿಂದ.”
ಅಕ್ಷ. “ವೇಶ್ಯೆ ತರ ನಡ್ಕೊಂಡಿದ್ರಿಂದ.”
ಅಥವಾ “ನನ್ನನ್ನ ಶತ್ರು ತರ ನೋಡೋ ಜನ್ರಿಗೆ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಪರಿಶಿಷ್ಟ ಬಿ14 ನೋಡಿ.
ಒಂದು ಹಿನ್ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಒಂದು ಹಿನ್‌ನ ನಾಲ್ಕನೇ ಒಂದು ಭಾಗ.” ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ವೇಶ್ಯೆ ತರ ನಡ್ಕೊಂಡ ಹಾಗೆ.”
ಪದವಿವರಣೆ ನೋಡಿ.
ಪದವಿವರಣೆ ನೋಡಿ.
ಅಕ್ಷ. “ಅಪರಿಚಿತರು.” ಅಂದ್ರೆ, ಆರೋನನ ಕುಟುಂಬಕ್ಕೆ ಸೇರದವರು.
ಅಂದ್ರೆ, ದೇವರಿಗೆ ಮೀಸಲಾಗಿಟ್ಟ ಮೇಲೆ ಹಿಂದೆ ಪಡ್ಕೊಳ್ಳೋಕೆ ಅಥವಾ ಬಿಡಿಸಿಕೊಳ್ಳೋಕೆ ಸಾಧ್ಯ ಇಲ್ಲದ ವಸ್ತುಗಳು. ಅವು ದೇವರಿಗಾಗಿ ಪ್ರತ್ಯೇಕಿಸಲಾದ ವಸ್ತುಗಳಾಗಿವೆ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸ್ಥಿರವಾದ, ಯಾವತ್ತೂ ಬದಲಾಗದ.”
ಅಥವಾ, “ದಶಮಾಂಶ.”
ಪದವಿವರಣೆ ನೋಡಿ.
ಅರ್ಥ “ಜಗಳ.”
ಅರ್ಥ “ಸಂಪೂರ್ಣ ನಾಶ.”
ಅಥವಾ “ದ್ವೇಷ.”
ಬಹುಶಃ, “ಮರುಭೂಮಿ; ಕಾಡು.”
ಅಥವಾ “ಸುತ್ತಮುತ್ತಲಿನ.”
ಅಥವಾ “ಸುತ್ತಮುತ್ತಲಿನ.”
ಬಹುಶಃ “ಮರುಭೂಮಿ; ಅರಣ್ಯಪ್ರದೇಶ.”
ಅಗರು ಮರಗಳು ರಾಳ, ಎಣ್ಣೆ ಉತ್ಪಾದಿಸುತ್ತೆ. ಈ ರಾಳ, ಎಣ್ಣೆಯನ್ನ ಸುಗಂಧ ದ್ರವ್ಯದ ತಯಾರಿಕೆಯಲ್ಲಿ ಬಳಸ್ತಿದ್ರು.
ಅಥವಾ “ಅವನ ಸಂತಾನ ಇರುತ್ತೆ.”
ಅಂದ್ರೆ, ಇಸ್ರಾಯೇಲ್ಯರು ಈಜಿಪ್ಟ್ ಬಿಟ್ಟು ಬಂದಾಗ ಸುಮ್ಮಸುಮ್ಮನೆ ಅವರ ಮೇಲೆ ಯುದ್ಧಕ್ಕೆ ಹೋದ ಮೊದಲನೇ ಜನಾಂಗ.
ಅಥವಾ “ಬಾಳನಿಗೆ ಅಂಟ್ಕೊಂಡ್ರು.”
ಅಥವಾ “ನಾಯಕರನ್ನ.”
ಅಥವಾ “ಜನನಾಂಗದಲ್ಲಿ.”
ಅಥವಾ “ಹಕ್ಕಿಂದ ಕೇಳ್ಕೊಳ್ಳೋ.”
ಅಥವಾ “ಗೌರವದಲ್ಲಿ.”
ಪದವಿವರಣೆ ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಪರಿಶಿಷ್ಟ ಬಿ14 ನೋಡಿ.
ಒಂದು ಹಿನ್ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಇದು ಸಾಮಾನ್ಯವಾಗಿ, ಉಪವಾಸ ಇರೋದನ್ನ ಬೇರೆ ಅನೇಕ ವಿಷ್ಯಗಳನ್ನ ಮಾಡದೇ ಇರೋದನ್ನ ಸೂಚಿಸುತ್ತೆ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯಗಳನ್ನ.”
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಪದವಿವರಣೆಯಲ್ಲಿ “ಪ್ರಾಣ” ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪೂರ್ಣ ಹೃದಯದಿಂದ.”
ಅಥವಾ “ಮತ್ತೆ ಕಟ್ಟಿದ್ರು.”
ಅರ್ಥ “ಡೇರೆಗಳು ಇರೋ ಯಾಯೀರನ ಹಳ್ಳಿಗಳು.”
ಅಥವಾ “ಸುತ್ತಮುತ್ತಲಿನ.”
ಅಕ್ಷ. “ಸೈನ್ಯಸೈನ್ಯವಾಗಿ.”
ಇದು ಇಯ್ಯೇ-ಅಬಾರೀಮಿನ ಸಂಕ್ಷಿಪ್ತ ರೂಪ ಆಗಿರಬಹುದು.
ಅಕ್ಷ. “ಎತ್ತರ ಸ್ಥಳಗಳನ್ನ.”
ಅಕ್ಷ. “ನಿಮ್ಮ ಪಕ್ಕೆಗಳಲ್ಲಿ.”
ಅಥವಾ “ಆಗ್ನೇಯದ.”
ಅಂದ್ರೆ, ಮೃತ ಸಮುದ್ರ.
ಪದವಿವರಣೆ ನೋಡಿ.
ಅದು, ಮೆಡಿಟರೇನಿಯನ್ ಸಮುದ್ರ.
ಅದು, ಮೆಡಿಟರೇನಿಯನ್ ಸಮುದ್ರ.
ಅಥವಾ “ಹಾಮಾತಿನ ಬಾಗಿಲ ತನಕ.”
ಅದು ಗೆನೆಜರೇತ್ ಸರೋವರ ಅಥವಾ ಗಲಿಲಾಯ ಸಮುದ್ರ.
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಂದ್ರೆ, “ಕೊಲೆಯಾದವನ ಹತ್ರದ ಸಂಬಂಧಿಕ.”
ಅಥವಾ “ಜೂಬಿಲಿ ವರ್ಷದಲ್ಲೂ.” ಪದವಿವರಣೆ ನೋಡಿ.