ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಕೀರ್ತನೆ 1: 1-150: 6
  • ಕೀರ್ತನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೀರ್ತನೆ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ

ಕೀರ್ತನೆ

ಒಂದನೇ ಪುಸ್ತಕ

(ಕೀರ್ತನೆ 1-41)

1 ಕೆಟ್ಟವನ ಮಾತು ಕೇಳದೆ,

ಪಾಪಿಗಳ ದಾರಿಯಲ್ಲಿ ಹೋಗದೆ,+

ಗೇಲಿ ಮಾಡೋರ ಜೊತೆ ಕೂತುಕೊಳ್ಳದೆ+ ಇರೋನು ಸಂತೋಷವಾಗಿ ಇರ್ತಾನೆ.

 2 ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ,+

ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ.*+

 3 ಅವನು ನೀರಿನ ಕಾಲುವೆಗಳ ಹತ್ರ ಇರೋ ಮರದ ತರ ಇದ್ದಾನೆ,

ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ,

ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ.

ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.+

 4 ಆದ್ರೆ ದುಷ್ಟರು ಹಾಗಿರಲ್ಲ,

ಅವರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ.

 5 ಹಾಗಾಗಿ ತೀರ್ಪಿನ ದಿನ ಬಂದಾಗ ದುಷ್ಟರಿಗೆ ನಿಲ್ಲಕ್ಕಾಗಲ್ಲ,+

ಪಾಪಿಗಳು ನೀತಿವಂತರ ಗುಂಪಲ್ಲಿ ಇರಕ್ಕಾಗಲ್ಲ.+

 6 ಯಾಕಂದ್ರೆ ನೀತಿವಂತನ ದಾರಿ ಬಗ್ಗೆ ಯೆಹೋವಗೆ ಚೆನ್ನಾಗಿ ಗೊತ್ತು.+

ಆದ್ರೆ ದುಷ್ಟನ ದಾರಿ ನಾಶವಾಗಿ ಹೋಗುತ್ತೆ.+

2 ದೇಶಗಳು ಯಾಕಷ್ಟು ಕೋಪ ಮಾಡ್ಕೊಂಡಿವೆ?

ಜನ ಕೆಟ್ಟ ವಿಷ್ಯಗಳ ಬಗ್ಗೆ ಯಾಕಷ್ಟು ಗೊಣಗ್ತಿದ್ದಾರೆ?*+

 2 ರಾಜರು ಯೆಹೋವನ ಮತ್ತು ಆತನ ಅಭಿಷಿಕ್ತನ* ವಿರುದ್ಧ ನಿಂತಿದ್ದಾರೆ,+

ದೊಡ್ಡ ಅಧಿಕಾರಿಗಳು ಅವರ ವಿರುದ್ಧ ಒಟ್ಟುಸೇರಿದ್ದಾರೆ.*+

 3 “ಹಾಕಿರೋ ಬೇಡಿಗಳನ್ನ ಮುರಿದು ಹಾಕೋಣ,

ಕಟ್ಟಿರೋ ಹಗ್ಗಗಳನ್ನ ಕಿತ್ತು ಬಿಸಾಡೋಣ” ಅಂತ ಹೇಳ್ತಿದ್ದಾರೆ.

 4 ಸ್ವರ್ಗದಲ್ಲಿರೋ ದೇವರು ಅವರನ್ನ ನೋಡಿ ನಗ್ತಾನೆ,

ಯೆಹೋವ ಅವರನ್ನ ಅಣಕಿಸ್ತಾನೆ.

 5 ಆಗ ಆತನು ಅವರ ಜೊತೆ ಕೋಪದಿಂದ ಮಾತಾಡ್ತಾನೆ,

ಅವರನ್ನ ತನ್ನ ರೋಷಾಗ್ನಿಯಿಂದ ಹೆದರಿಸ್ತಾನೆ.

 6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+

ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ.

 7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ.

ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+

ಇವತ್ತಿಂದ ನಾನು ನಿನ್ನ ಅಪ್ಪ.+

 8 ನನ್ನ ಕೇಳು, ದೇಶಗಳನ್ನ ಆಸ್ತಿಯಾಗಿ ಕೊಡ್ತೀನಿ,

ಇಡೀ ಭೂಮಿಯನ್ನ ನಿನ್ನ ಸೊತ್ತಾಗಿ ಮಾಡ್ತೀನಿ.+

 9 ನೀನು ಅವರನ್ನ ಕಬ್ಬಿಣದ ರಾಜದಂಡದಿಂದ ಚೂರುಚೂರು ಮಾಡ್ತೀಯ,+

ಮಣ್ಣಿನ ಮಡಿಕೆ ಒಡೆಯೋ ತರ ಅವರನ್ನ ಒಡೆದು ಹಾಕ್ತೀಯ.”+

10 ಹಾಗಾಗಿ ರಾಜರೇ, ಚೆನ್ನಾಗಿ ಯೋಚಿಸಿ ನಡ್ಕೊಳ್ಳಿ,

ಭೂಮಿಯ ನ್ಯಾಯಾಧೀಶರೇ, ಎಚ್ಚರಿಕೆನ ಕೇಳಿಸ್ಕೊಳ್ಳಿ.*

11 ಭಯಭಕ್ತಿಯಿಂದ ಯೆಹೋವನ ಸೇವೆಮಾಡಿ,

ಆತನಿಗೆ ತುಂಬ ಗೌರವ ಕೊಡ್ತಾ ಖುಷಿಪಡಿ.

12 ದೇವರ ಮಗನಿಗೆ ಗೌರವಕೊಡಿ,*+ ಇಲ್ಲದಿದ್ರೆ ದೇವರಿಗೆ ಕೋಪ ಬಂದು,

ನೀವು ನಿಮ್ಮ ಪ್ರಾಣ ಕಳ್ಕೊಳ್ತೀರ.+

ಯಾಕಂದ್ರೆ ಆತನ ಕೋಪ ಯಾವಾಗ ಬೇಕಾದ್ರೂ ಹೊತ್ತಿ ಉರಿಬಹುದು.

ಆತನಲ್ಲಿ ಆಶ್ರಯ ಪಡ್ಕೊಳ್ಳೋ ಜನ ಖುಷಿಯಾಗಿ ಇರ್ತಾರೆ.

ದಾವೀದ ತನ್ನ ಮಗ ಅಬ್ಷಾಲೋಮನಿಂದ ಓಡಿಹೋಗ್ತಿದ್ದಾಗ ಬರೆದ ಮಧುರ ಗೀತೆ.+

3 ಯೆಹೋವನೇ, ಯಾಕೆ ನನಗೆ ಇಷ್ಟೊಂದು ಶತ್ರುಗಳಿದ್ದಾರೆ?+

ಯಾಕೆ ಇಷ್ಟೊಂದು ಜನ ನನ್ನ ವಿರುದ್ಧ ಎದ್ದಿದ್ದಾರೆ?+

 2 “ದೇವರು ಅವನನ್ನ ಕಾಪಾಡಲ್ಲ”

ಅಂತ ತುಂಬ ಜನ ನನ್ನ ಬಗ್ಗೆ ಹೇಳ್ತಿದ್ದಾರೆ.+ (ಸೆಲಾ)*

 3 ಆದ್ರೆ ಯೆಹೋವನೇ ನೀನು ನನ್ನ ಸುತ್ತ ಇರೋ ಗುರಾಣಿ,+

ನಿನ್ನಿಂದಾನೇ ನನಗೆ ಗೌರವ,+ ನಾನು ತಲೆ ಎತ್ತಿ ನಡಿಯೋಕೆ ಕಾರಣ ನೀನೇ.+

 4 ನಾನು ಯೆಹೋವನನ್ನ ಜೋರಾಗಿ ಕೂಗಿ ಕರೀತೀನಿ.

ಆತನು ತನ್ನ ಪವಿತ್ರ ಬೆಟ್ಟದಿಂದ+ ನನಗೆ ಉತ್ತರ ಕೊಡ್ತಾನೆ. (ಸೆಲಾ)

 5 ನಾನು ಯಾವ ಚಿಂತೆನೂ ಮಾಡದೆ ನೆಮ್ಮದಿಯಿಂದ ಮಲಗ್ತೀನಿ.

ಯೆಹೋವ ನನಗೆ ಯಾವಾಗ್ಲೂ ಸಹಾಯ ಮಾಡೋದ್ರಿಂದ,

ಸುರಕ್ಷಿತವಾಗಿ ಎದ್ದೇಳ್ತೀನಿ.+

 6 ಲಕ್ಷಾಂತರ ಶತ್ರುಗಳು ನನ್ನ ಸುತ್ತ ನಿಂತ್ರೂ,

ನಾನು ಹೆದರಲ್ಲ.+

 7 ಯೆಹೋವನೇ, ದಯವಿಟ್ಟು ಸಹಾಯಮಾಡು! ನನ್ನ ದೇವರೇ, ನನ್ನನ್ನ ಕಾಪಾಡು!+

ನೀನು ನನ್ನ ಶತ್ರುಗಳ ದವಡೆಗೆ ಹೊಡಿತೀಯ,

ಆ ದುಷ್ಟರ ಹಲ್ಲು ಉದುರಿಸ್ತೀಯ.+

 8 ಯೆಹೋವನೇ, ನಿನ್ನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+

ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಇದೆ. (ಸೆಲಾ)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ತಂತಿವಾದ್ಯಗಳ ಜೊತೆ ಹಾಡಬೇಕು.

4 ನೀತಿವಂತನಾಗಿರೋ ನನ್ನ ದೇವರೇ,+ ನಾನು ಕರೆದಾಗ ನನಗೆ ಉತ್ತರ ಕೊಡು.

ನಾನು ಕಷ್ಟದಲ್ಲಿ ಇರೋವಾಗ ತಪ್ಪಿಸಿಕೊಳ್ಳೋಕೆ ದಾರಿ ತೋರಿಸು.*

ನನಗೆ ದಯೆ ತೋರಿಸು, ನನ್ನ ಪ್ರಾರ್ಥನೆ ಕೇಳು.

 2 ಜನರೇ, ಎಲ್ಲಿ ತನಕ ನೀವು ನನಗೆ ಗೌರವ ಕೊಡೋ ಬದಲು ಅವಮಾನ ಮಾಡ್ತಾ ಇರ್ತಿರಾ?

ಎಲ್ಲಿ ತನಕ ಪ್ರಯೋಜನಕ್ಕೆ ಬರದೆ ಇರೋದನ್ನ ಪ್ರೀತಿಸ್ತಾ, ಸುಳ್ಳನ್ನ ಹುಡುಕ್ತಾ ಇರ್ತಿರಾ? (ಸೆಲಾ)

 3 ನಿಮಗೆ ಗೊತ್ತಿರಲಿ, ನಿಷ್ಠಾವಂತರನ್ನ ಯೆಹೋವ ವಿಶೇಷವಾಗಿ ನೋಡ್ಕೊಳ್ತಾನೆ.*

ನಾನು ಕರೆದಾಗ ಯೆಹೋವ ಕೇಳಿಸ್ಕೊಳ್ತಾನೆ.

 4 ಕೋಪ ಬಂದ್ರೂ ಪಾಪ ಮಾಡಬೇಡಿ.+

ನೀವು ಹೇಳಬೇಕು ಅಂತಿರೋದನ್ನ ಹಾಸಿಗೆ ಮೇಲೆ ನಿಮ್ಮ ಮನಸ್ಸಲ್ಲೇ ಹೇಳ್ಕೊಂಡು ನೆಮ್ಮದಿಯಿಂದ ಮಲ್ಕೊಳ್ಳಿ. (ಸೆಲಾ)

 5 ದೇವರಿಗೆ ಏನೇ ಕೊಟ್ಟರೂ ಒಳ್ಳೇ ಮನಸ್ಸಿಂದ ಕೊಡಿ.

ಯೆಹೋವನ ಮೇಲೆ ಭರವಸೆ ಇಡಿ.+

 6 ಎಷ್ಟೋ ಜನ, “ಒಳ್ಳೇ ದಿನ ಯಾರಿಂದ ತರಕ್ಕಾಗುತ್ತೆ?” ಅಂತಾರೆ.

ಯೆಹೋವನೇ, ನಿನ್ನ ಮುಖದ ಕಾಂತಿ ನಮ್ಮ ಮೇಲೆ ಹೊಳೆಯಲಿ.+

 7 ಒಳ್ಳೇ ಬೆಳೆ ಮತ್ತು ದ್ರಾಕ್ಷಾಮದ್ಯ ಸಿಕ್ಕಾಗ ಸಿಗೋ ಖುಷಿಗಿಂತ,

ಎಷ್ಟೋ ಜಾಸ್ತಿ ಖುಷಿನ ನೀನು ನನ್ನ ಮನಸ್ಸಲ್ಲಿ ತುಂಬಿಸಿದ್ದೀಯ.

 8 ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ,+

ಯಾಕಂದ್ರೆ ಯೆಹೋವನೇ, ನನ್ನನ್ನ ಕಾಪಾಡೋನು ನೀನೊಬ್ಬನೇ.+

ದಾವೀದನ ಮಧುರ ಗೀತೆ. ನೆಹಿಲೋತಿಗಾಗಿ* ನಿರ್ದೇಶಕನಿಗೆ ಸೂಚನೆ.

5 ಯೆಹೋವನೇ, ನನ್ನ ಮಾತನ್ನ ಕೇಳಿಸ್ಕೊ.+

ನನ್ನ ದುಃಖ ನೋಡು.

 2 ಸಹಾಯ ಕೇಳ್ತಾ ಗೋಳಾಡುವಾಗ ನನಗೆ ಗಮನಕೊಡು,

ಯಾಕಂದ್ರೆ ನನ್ನ ರಾಜನೇ, ನನ್ನ ದೇವರೇ ನಾನು ನಿನಗೇ ಪ್ರಾರ್ಥಿಸ್ತೀನಿ.

 3 ಯೆಹೋವನೇ, ನೀನು ಮುಂಜಾನೆನೇ ನನ್ನ ಧ್ವನಿ ಕೇಳಿಸ್ಕೊಳ್ತೀಯ,+

ನಾನು ಬೆಳಿಗ್ಗೆನೇ ನನ್ನ ಚಿಂತೆನ ನಿನ್ನ ಹತ್ರ ತೋಡ್ಕೊಂಡು+ ನಿನ್ನ ಉತ್ರಕ್ಕಾಗಿ ಕಾಯ್ತೀನಿ.

 4 ಯಾಕಂದ್ರೆ ಕೆಟ್ಟತನದಲ್ಲಿ ಖುಷಿಪಡೋ ದೇವರು ನೀನಲ್ಲ.+

ಕೆಟ್ಟವರು ನಿನ್ನ ಹತ್ರ ಇರಕ್ಕಾಗಲ್ಲ.+

 5 ಅಹಂಕಾರಿಗಳು ನಿನ್ನ ಮುಂದೆ ನಿಲ್ಲಕ್ಕಾಗಲ್ಲ,

ದುಷ್ಟರನ್ನ ನೀನು ದ್ವೇಷಿಸ್ತೀಯ.+

 6 ಸುಳ್ಳು ಹೇಳೋರನ್ನ ಸರ್ವನಾಶ ಮಾಡ್ತೀಯ.+

ಹಿಂಸೆ ಕೊಡೋರು* ಮತ್ತು ಮೋಸ ಮಾಡೋರು ಯೆಹೋವನಿಗೆ ಅಸಹ್ಯ.+

 7 ನಾನು ನಿನ್ನ ಆಲಯಕ್ಕೆ+ ಬರೋಕೆ ನಿನ್ನ ಶಾಶ್ವತ ಪ್ರೀತಿನೇ+ ಕಾರಣ.

ನಿನ್ನ ಮೇಲಿನ ಭಯಭಕ್ತಿಯಿಂದ ನಿನ್ನ ಪವಿತ್ರ ಆಲಯದ* ಕಡೆ ತಿರುಗಿ ಬಗ್ಗಿ ನಮಸ್ಕರಿಸ್ತೀನಿ.+

 8 ಯೆಹೋವನೇ, ನನ್ನ ಸುತ್ತ ಶತ್ರುಗಳು ಇರೋದ್ರಿಂದ ನನ್ನನ್ನ ನಿನ್ನ ನೀತಿಯ ದಾರಿಯಲ್ಲಿ ನಡೆಸು.

ಹಾಗೆ ನಡಿವಾಗ ಎಡವಿ ಬೀಳದ ಹಾಗೆ ನನಗೆ ಸಹಾಯಮಾಡು.+

 9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ.

ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,

ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ.

ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+

10 ಆದ್ರೆ ದೇವರು ಅವರನ್ನ ಅಪರಾಧಿಗಳು ಅಂತ ಖಂಡಿಸ್ತಾನೆ.

ಅವರು ತೋಡಿದ ಗುಂಡಿಯಲ್ಲಿ ಅವರೇ ಬೀಳ್ತಾರೆ.+

ಅವರು ತುಂಬ ಅಪರಾಧಗಳನ್ನ ಮಾಡಿರೋದ್ರಿಂದ ದಯವಿಟ್ಟು ಅವರನ್ನ ಹೊಡೆದೋಡಿಸು.

ಯಾಕಂದ್ರೆ ಅವರು ನಿನ್ನ ವಿರುದ್ಧ ದಂಗೆ ಎದ್ದಿದ್ದಾರೆ.

11 ಆದ್ರೆ ನಿನ್ನಲ್ಲಿ ಆಶ್ರಯ ಪಡಿಯೋರೆಲ್ಲ ಖುಷಿಪಡ್ತಾರೆ,+

ಅವರು ಯಾವಾಗ್ಲೂ ಆನಂದದಿಂದ ಜೈಕಾರ ಹಾಕ್ತಾರೆ.

ತೊಂದರೆ ಕೊಡೋರಿಂದ ನೀನು ಅವರನ್ನ ಕಾಪಾಡ್ತೀಯ.

ನಿನ್ನ ಹೆಸ್ರನ್ನ ಪ್ರೀತಿಸೋರು ನಿನ್ನಿಂದ ಸಂತೋಷಪಡ್ತಾರೆ.

12 ಯಾಕಂದ್ರೆ ಯೆಹೋವನೇ, ನೀತಿವಂತನನ್ನ ನೀನು ಆಶೀರ್ವದಿಸ್ತೀಯ.

ನಿನ್ನ ದಯೆ ಅವನ ಸುತ್ತ ದೊಡ್ಡ ಗುರಾಣಿ ತರ ಇದ್ದು ಕಾಪಾಡುತ್ತೆ.+

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಹಾಡನ್ನ ಶೆಮಿನಿತ್‌* ಸ್ವರಕ್ಕೆ ತಂತಿವಾದ್ಯಗಳನ್ನ ಹೊಂದಿಸ್ಕೊಂಡು ಹಾಡಬೇಕು.

6 ಯೆಹೋವನೇ, ಕೋಪದಿಂದ ನನ್ನ ಬೈಬೇಡ,

ಸಿಟ್ಟಿಂದ ನನ್ನನ್ನ ತಿದ್ದಬೇಡ.+

 2 ಯೆಹೋವನೇ, ನನಗೆ ದಯೆ* ತೋರಿಸು. ನನ್ನಲ್ಲಿ ಅಷ್ಟು ಶಕ್ತಿ ಇಲ್ಲ.

ಯೆಹೋವನೇ, ನನ್ನನ್ನ ವಾಸಿಮಾಡು.+ ನನ್ನ ಮೂಳೆ ನಡುಗ್ತಿದೆ.

 3 ನಿಜವಾಗ್ಲೂ ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ.+

ಯೆಹೋವನೇ, ನಾನು ಇನ್ನೂ ಎಲ್ಲಿ ತನಕ ಹೀಗೇ ಕಷ್ಟಪಡಬೇಕು?+

 4 ಯೆಹೋವನೇ, ಬಂದು ನನ್ನ ಕಾಪಾಡು,+

ಶಾಶ್ವತ ಪ್ರೀತಿ ತೋರಿಸಿ ನನ್ನನ್ನ ರಕ್ಷಿಸು.+

 5 ಯಾಕಂದ್ರೆ ಸತ್ತವರು ನಿನ್ನ ಬಗ್ಗೆ ಮಾತಾಡಲ್ಲ.*

ಸಮಾಧಿಯಲ್ಲಿ* ನಿನ್ನನ್ನ ಹೊಗಳೋರು ಯಾರು?+

 6 ಗೋಳಾಡಿ ಗೋಳಾಡಿ ಸುಸ್ತಾಗಿ ಹೋಗಿದ್ದೀನಿ,+

ರಾತ್ರಿಯಿಡೀ ಅತ್ತುಅತ್ತು ಕಣ್ಣೀರಿಂದ ನನ್ನ ಹಾಸಿಗೆ ಒದ್ದೆ ಆಗಿದೆ,*

ಕಣ್ಣೀರಲ್ಲೇ ನನ್ನ ಮಂಚ ಮುಳುಗಿ ಹೋಗಿದೆ.+

 7 ದುಃಖದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+

ಕಿರುಕುಳ ಕೊಡೋರಿಂದ ನನ್ನ ದೃಷ್ಟಿ ಮಂಜಾಗಿದೆ.

 8 ದುಷ್ಟರೇ, ನನ್ನಿಂದ ದೂರ ತೊಲಗಿ.

ಯಾಕಂದ್ರೆ ಯೆಹೋವ ನನ್ನ ವೇದನೆಯನ್ನ ಕೇಳಿಸ್ಕೊಳ್ತಾನೆ.+

 9 ದಯೆಗಾಗಿ ನಾನು ಬೇಡೋದನ್ನ ಯೆಹೋವ ಕೇಳಿಸ್ಕೊಳ್ತಾನೆ.+

ನನ್ನ ಪ್ರಾರ್ಥನೆಗೆ ಯೆಹೋವ ಉತ್ತರ ಕೊಡ್ತಾನೆ.

10 ನನ್ನ ಶತ್ರುಗಳೆಲ್ಲ ಅವಮಾನದಿಂದ ಭಯಪಡ್ತಾರೆ.

ತಟ್ಟಂತ ಮಾನಮರ್ಯಾದೆ ಕಳ್ಕೊಂಡು ಓಡಿಹೋಗ್ತಾರೆ.+

ದಾವೀದನ ಶೋಕಗೀತೆ. ಈ ಹಾಡಲ್ಲಿ ದಾವೀದ ಬೆನ್ಯಾಮೀನ್ಯನಾದ ಕೂಷ ಹೇಳಿದ ಮಾತುಗಳ ಬಗ್ಗೆ ಯೆಹೋವನಿಗೆ ತಿಳಿಸ್ತಾನೆ.

7 ಯೆಹೋವನೇ, ನನ್ನ ದೇವರೇ, ನನ್ನ ಆಶ್ರಯ ನೀನೇ.+

ಹಿಂಸೆ ಕೊಡೋರಿಂದ ನನ್ನ ಕಾಪಾಡು, ರಕ್ಷಿಸು.+

 2 ಇಲ್ಲದಿದ್ರೆ ಅವರು ಸಿಂಹದ ತರ ನನ್ನನ್ನ ಸೀಳಿ ತುಂಡುತುಂಡು ಮಾಡಿಬಿಡ್ತಾರೆ.+

ನನ್ನನ್ನ ಹೊತ್ಕೊಂಡು ಹೋಗ್ತಾರೆ, ನನ್ನನ್ನ ಕಾಪಾಡೋಕೆ ಯಾರೂ ಇರಲ್ಲ.

 3 ಯೆಹೋವನೇ, ನನ್ನ ದೇವರೇ, ಒಂದುವೇಳೆ ತಪ್ಪು ನಂದಾಗಿದ್ರೆ,

ನಾನು ಅನ್ಯಾಯವಾಗಿ ನಡ್ಕೊಂಡಿದ್ರೆ,

 4 ನನಗೆ ಒಳ್ಳೇದನ್ನ ಮಾಡಿದವರಿಗೆ ನಾನು ಕೆಟ್ಟದ್ದನ್ನ ಮಾಡಿದ್ರೆ,+

ಯಾವ ಕಾರಣನೂ ಇಲ್ಲದೆ ನಾನು ನನ್ನ ಶತ್ರುನ ಕೊಳ್ಳೆ ಹೊಡೆದಿದ್ರೆ,*

 5 ನನ್ನ ಶತ್ರುವನ್ನ ತಡಿಬೇಡ,

ಅವನು ನನ್ನನ್ನ ಅಟ್ಟಿಸ್ಕೊಂಡು ಬಂದು ಹಿಡೀಲಿ,

ನನ್ನನ್ನ ನೆಲಕ್ಕೆ ಹಾಕಿ ತುಳೀಲಿ,

ನನ್ನ ಹೆಸ್ರನ್ನ ಮಣ್ಣುಪಾಲು ಮಾಡಲಿ. (ಸೆಲಾ)

 6 ಯೆಹೋವನೇ, ನಿನ್ನ ಕೋಪ ತೋರಿಸು,

ನನ್ನ ಶತ್ರುಗಳ ಉಗ್ರಕೋಪದ ವಿರುದ್ಧ ನಿಂತ್ಕೋ,+

ನ್ಯಾಯ ಸಿಗೋ ತರ ನನಗೆ ಸಹಾಯ ಮಾಡು.+

 7 ದೇಶಗಳೇ ನಿನ್ನನ್ನ ಸುತ್ತುವರಿದ್ರೂ,

ನೀನು ಅವುಗಳಿಗೆ ಸ್ವರ್ಗದಿಂದ ತಕ್ಕ ಶಿಕ್ಷೆ ಕೊಡು.

 8 ಯೆಹೋವ ಜನಾಂಗಗಳಿಗೆ ತೀರ್ಪು ಕೊಡ್ತಾನೆ.+

ಯೆಹೋವನೇ, ನನ್ನ ನೀತಿಗೆ ತಕ್ಕ ಹಾಗೆ,

ನನ್ನ ನಿಯತ್ತಿಗೆ ತಕ್ಕ ಹಾಗೆ ನನಗೆ ನ್ಯಾಯ ತೀರಿಸು.+

 9 ದಯವಿಟ್ಟು ದುಷ್ಟರ ಕೆಟ್ಟ ಕೆಲಸಗಳಿಗೆ ಅಂತ್ಯ ಹಾಡು.

ಆದ್ರೆ ನೀತಿವಂತರು ಕದಲದೆ ನಿಲ್ಲೋ ಹಾಗೆ ಮಾಡು,+

ಯಾಕಂದ್ರೆ ನೀನು ಹೃದಯಗಳನ್ನ ಮತ್ತು ಮನಸ್ಸಿನ ಭಾವನೆಗಳನ್ನ* ಪರೀಕ್ಷಿಸೋ+ ನೀತಿವಂತ ದೇವರು.+

10 ದೇವರು ನನ್ನ ಗುರಾಣಿ.+ ಆತನು ಪ್ರಾಮಾಣಿಕ ಹೃದಯದವರಿಗೆ ರಕ್ಷಕ.+

11 ದೇವರು ನೀತಿಯಿಂದ ತೀರ್ಪು ಮಾಡ್ತಾನೆ,+

ಪ್ರತಿದಿನ ತನ್ನ ತೀರ್ಪನ್ನ ಹೇಳ್ತಾನೆ.*

12 ಯಾರಾದ್ರೂ ಪಶ್ಚಾತ್ತಾಪ ಪಡದಿದ್ರೆ+ ಆತನು ತನ್ನ ಕತ್ತಿನ ಚೂಪಾಗಿಸ್ತಾನೆ,+

ತನ್ನ ಬಿಲ್ಲನ್ನ ಬಾಗಿಸಿ ಗುರಿಯಿಟ್ಟು ಹೊಡೆಯೋಕೆ ತಯಾರಾಗ್ತಾನೆ.+

13 ಪ್ರಾಣ ತೆಗಿಯೋ ಆಯುಧಗಳನ್ನ ತಯಾರು ಮಾಡ್ತಾನೆ,

ಉರಿತಾ ಇರೋ ಬಾಣಗಳನ್ನ ಸಿದ್ಧ ಮಾಡ್ತಾನೆ.+

14 ಕೆಟ್ಟತನವನ್ನ ತನ್ನ ಹೊಟ್ಟೆಯಲ್ಲೇ ಇಟ್ಟು ಬೆಳೆಸೋನನ್ನ ನೋಡು,

ಅವನು ಸಮಸ್ಯೆಗಳನ್ನ ಹೊರ್ತಾನೆ, ಸುಳ್ಳುಗಳನ್ನ ಹೆರ್ತಾನೆ.+

15 ತಾನು ತೋಡಿದ ಗುಂಡಿಯನ್ನ ಇನ್ನೂ ಆಳ ಮಾಡ್ತಾನೆ,

ಆದ್ರೆ ಆ ಗುಂಡಿಯಲ್ಲಿ ಅವನೇ ಬೀಳ್ತಾನೆ.+

16 ಅವನು ತಂದ ಸಮಸ್ಯೆ ಅವನ ತಲೆ ಮೇಲೆನೇ ಬೀಳುತ್ತೆ,+

ಅವನು ಕೊಟ್ಟ ಹಿಂಸೆ ಅವನನ್ನೇ ಬಲಿ ತಗೊಳ್ಳುತ್ತೆ.

17 ಯೆಹೋವ ನ್ಯಾಯದಿಂದ ತೀರ್ಪು ಮಾಡಿದ್ದಕ್ಕೆ ನಾನು ಆತನನ್ನ ಹೊಗಳ್ತೀನಿ,+

ಸರ್ವೋನ್ನತ+ ಯೆಹೋವನ ಹೆಸ್ರನ್ನ ಹೊಗಳೋಕೆ ನಾನು ಹಾಡ್ತೀನಿ.*+

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಗಿತ್ತೀತ್‌* ರಾಗದಲ್ಲಿದೆ.

8 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರು ತುಂಬ ಶ್ರೇಷ್ಠ.

ನಿನ್ನ ವೈಭವ ಆಕಾಶಕ್ಕಿಂತ ಎತ್ತರ!+

 2 ಶತ್ರುಗಳ ಮತ್ತು ಸೇಡು ತೀರಿಸುವವರ ಬಾಯಿಗೆ ಬೀಗ ಹಾಕೋಕೆ,

ನೀನು ಚಿಕ್ಕಮಕ್ಕಳ ಮತ್ತು ಕೂಸುಗಳ ಬಾಯಿಂದ+ ನಿನ್ನ ಶಕ್ತಿಯನ್ನ ತೋರಿಸಿದ್ದೀಯ.

 3 ನೀನು ಸೃಷ್ಟಿಸಿರೋ* ಆಕಾಶವನ್ನ,

ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ,+

 4 ನಾನು ಹೀಗೆ ಯೋಚಿಸಿದೆ,

‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ?

ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?+

 5 ನೀನು ಅವನನ್ನ ದೇವದೂತರಿಗಿಂತ* ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ,

ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.

 6 ನಿನ್ನ ಸೃಷ್ಟಿಯ ಮೇಲೆ ಅವನಿಗೆ ಅಧಿಕಾರ ಕೊಟ್ಟೆ,+

ಎಲ್ಲವನ್ನ ಅವನ ಕಾಲಡಿಯಲ್ಲಿ ಇಟ್ಟೆ.

 7 ಎಲ್ಲ ಆಡುಕುರಿಗಳ ಮೇಲೆ, ದನಎತ್ತುಗಳ ಮೇಲೆ

ಕಾಡುಪ್ರಾಣಿಗಳ*+ ಮೇಲೆ,

 8 ಆಕಾಶದ ಪಕ್ಷಿಗಳ ಮೇಲೆ ಮತ್ತು ಸಮುದ್ರದ ಮೀನುಗಳ ಮೇಲೆ

ಅದರಲ್ಲಿ ಈಜುವ ಎಲ್ಲದರ ಮೇಲೆ ಅವನಿಗೆ ಅಧಿಕಾರ ಕೊಟ್ಟೆ.

 9 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರಿಗೆ ತುಂಬ ಗೌರವ ಇದೆ.

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಮೂತ್‌-ಲಾಬ್ಬೆನ್‌* ರಾಗದಲ್ಲಿದೆ.

א [ಆಲೆಫ್‌]

9 ಯೆಹೋವನೇ, ನಾನು ಪೂರ್ಣಹೃದಯದಿಂದ ನಿನ್ನನ್ನ ಹೊಗಳ್ತೀನಿ,

ನಿನ್ನ ಎಲ್ಲ ಅದ್ಭುತ ಕೆಲಸಗಳನ್ನ ವರ್ಣಿಸ್ತೀನಿ.+

 2 ನಾನು ನಿನ್ನಲ್ಲಿ ಖುಷಿಪಡ್ತೀನಿ, ಸಂತೋಷಪಡ್ತೀನಿ.

ಸರ್ವೋನ್ನತನೇ, ನಿನ್ನ ಹೆಸ್ರನ್ನ ಸ್ತುತಿಸ್ತೀನಿ.*+

ב [ಬೆತ್‌]

 3 ನನ್ನ ಶತ್ರುಗಳು ವಾಪಸ್‌ ಹೋಗುವಾಗ,+

ನಿನ್ನ ಮುಂದೆ ಎಡವಿಬಿದ್ದು ನಾಶವಾಗಿ ಹೋಗ್ತಾರೆ.

 4 ಯಾಕಂದ್ರೆ ನೀನು ನನ್ನ ಪರ ವಾದಿಸಿ ನನಗೆ ನ್ಯಾಯ ಸಿಗೋ ತರ ಮಾಡ್ತೀಯ.

ನಿನ್ನ ಸಿಂಹಾಸನದ ಮೇಲೆ ಕೂತು ನ್ಯಾಯವಾಗಿ ತೀರ್ಪು ಕೊಡ್ತೀಯ.+

ג [ಗಿಮೆಲ್‌]

 5 ನೀನು ಜನ್ರನ್ನ ಗದರಿಸಿ+ ಕೆಟ್ಟವರನ್ನ ನಾಶಮಾಡಿದೆ.

ಅವ್ರ ಹೆಸ್ರನ್ನ ಶಾಶ್ವತವಾಗಿ ಅಳಿಸಿಹಾಕಿದೆ.

 6 ಶತ್ರುಗಳು ಶಾಶ್ವತವಾಗಿ ನಿರ್ನಾಮ ಆದ್ರು,

ನೀನು ಅವ್ರ ಪಟ್ಟಣಗಳನ್ನ ಬೇರುಸಹಿತ ಕಿತ್ತುಹಾಕಿದೆ,

ಅವ್ರ ನೆನಪುಗಳೂ ಇಲ್ಲದ ಹಾಗೆ ಮಾಡಿದೆ.+

ה [ಹೆ]

 7 ಆದ್ರೆ ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ,+

ನ್ಯಾಯ ತೀರಿಸೋಕೆ ಆತನು ತನ್ನ ಸಿಂಹಾಸನವನ್ನ ದೃಢವಾಗಿ ಸ್ಥಾಪಿಸಿದ್ದಾನೆ.+

 8 ಆತನು ಇಡೀ ಭೂಮಿಗೆ* ನ್ಯಾಯವಾಗಿ ತೀರ್ಪು ಕೊಡ್ತಾನೆ,+

ಜನ್ರಿಗೆ ನೀತಿಯಿಂದ ತೀರ್ಪನ್ನ ಹೇಳ್ತಾನೆ.+

ו [ವಾವ್‌]

 9 ಯೆಹೋವ ದಬ್ಬಾಳಿಕೆಯಿಂದ ಕುಗ್ಗಿದವರಿಗೆ ಸುರಕ್ಷಿತವಾದ ಆಶ್ರಯ ಆಗ್ತಾನೆ,+

ಕಷ್ಟದ ಸಮಯದಲ್ಲಿ ಭದ್ರಕೋಟೆಯಾಗಿ ಇರ್ತಾನೆ.+

10 ನಿನ್ನ ಹೆಸ್ರನ್ನ ತಿಳ್ಕೊಳ್ಳೋರು ನಿನ್ನ ಮೇಲೆ ಭರವಸೆ ಇಡ್ತಾರೆ.+

ಯೆಹೋವನೇ, ನಿನ್ನನ್ನ ಹುಡುಕೋರ ಕೈಯನ್ನ ನೀನು ಯಾವತ್ತೂ ಬಿಡಲ್ಲ.+

ז [ಜಯಿನ್‌]

11 ಚೀಯೋನಿನಲ್ಲಿರೋ ಯೆಹೋವನಿಗೆ ಹಾಡಿ ಹೊಗಳಿ.

ಆತನ ಕೆಲಸಗಳ ಬಗ್ಗೆ ಜನರಿಗೆ ಹೋಗಿ ಹೇಳಿ.+

12 ಯಾಕಂದ್ರೆ ಆತನು ನೊಂದವರನ್ನ ನೆನಪು ಮಾಡ್ಕೊತ್ತಾನೆ, ಅವ್ರ ರಕ್ತ ಸುರಿಸಿದವರನ್ನ ಸುಮ್ಮನೆ ಬಿಡಲ್ಲ.+

ನೊಂದವರ ಗೋಳಾಟವನ್ನ ಯಾವ ಕಾರಣಕ್ಕೂ ಆತನು ಮರಿಯಲ್ಲ.+

ח [ಹೆತ್‌]

13 ಯೆಹೋವನೇ, ನನಗೆ ದಯೆ ತೋರಿಸು. ಸಾವಿನ ದವಡೆಯಿಂದ ನನ್ನನ್ನ ಎತ್ತುವವನೇ,+

ಶತ್ರುಗಳಿಂದ ನಾನು ಅನುಭವಿಸ್ತಿರೋ ಯಾತನೆಯನ್ನ ನೋಡು.

14 ಆಗ ನಾನು ನಿನ್ನ ಕೆಲಸಗಳ ಬಗ್ಗೆ ಚೀಯೋನಿನ ಮಗಳ ಬಾಗಿಲ ಹತ್ರ ಹೊಗಳೋಕೆ ಆಗುತ್ತೆ.+

ನಿನ್ನ ರಕ್ಷಣೆಯ ಕೆಲಸಗಳನ್ನ ನೋಡಿ ಖುಷಿಪಡೋಕೆ ಆಗುತ್ತೆ.+

ט [ಟೆತ್‌]

15 ಜನಾಂಗಗಳು ತೋಡಿದ ಗುಂಡಿಗಳಲ್ಲಿ ಅವೇ ಬಿದ್ದು ಮುಳುಗಿದ್ವು.

ಅವರು ರಹಸ್ಯವಾಗಿ ಬಚ್ಚಿಟ್ಟಿದ್ದ ಬಲೆಗೆ ಅವ್ರ ಕಾಲೇ ಸಿಕ್ಕಿಹಾಕೊಳ್ತು.+

16 ಯೆಹೋವ ಕೊಡೋ ತೀರ್ಪುಗಳಿಂದ ಆತನು ಎಂಥ ದೇವರು ಅಂತ ಗೊತ್ತಾಗುತ್ತೆ.+

ಕೆಟ್ಟವನ ಕುಯುಕ್ತಿ ಅವನನ್ನೇ ಸಿಕ್ಕಿಕೊಳ್ಳೋ ತರ ಮಾಡುತ್ತೆ.+

ಹಿಗ್ಗಯಾನ್‌* (ಸೆಲಾ)

י [ಯೋದ್‌]

17 ದುಷ್ಟರು ಸಮಾಧಿಗೆ* ಹೋಗ್ತಾರೆ,

ದೇವರನ್ನ ಮರೆತು ಹೋಗೋ ದೇಶಗಳೆಲ್ಲ ಅಲ್ಲಿಗೇ ಹೋಗುತ್ತೆ.

18 ಆದ್ರೆ ಬಡವರನ್ನ ದೇವರು ಯಾವತ್ತೂ ಮರಿಯಲ್ಲ,+

ದೀನರ ನಿರೀಕ್ಷೆ ನೀರುಪಾಲು ಆಗಲ್ಲ.+

כ [ಕಾಫ್‌]

19 ಯೆಹೋವನೇ, ಒಬ್ಬ ಮನುಷ್ಯ ಜಯ ಸಾಧಿಸೋಕೆ ಬಿಡಬೇಡ.

ದೇಶಗಳಿಗೆ ನಿನ್ನ ಮುಂದೆ ತೀರ್ಪು ಆಗಲಿ.+

20 ಯೆಹೋವನೇ, ಅವರಲ್ಲಿ ಭಯ ಹುಟ್ಟಿಸು.+

ಅವರು ಬರೀ ಮನುಷ್ಯರು ಅಂತ ಅವರಿಗೆ ಗೊತ್ತಾಗಲಿ. (ಸೆಲಾ)

ל [ಲಾಮೆದ್‌]

10 ಯೆಹೋವನೇ, ಯಾಕೆ ನೀನು ಅಷ್ಟು ದೂರ ಇದ್ದೀಯ?

ಕಷ್ಟಕಾಲದಲ್ಲಿ ಯಾಕೆ ನನ್ನ ಜೊತೆ ಕಣ್ಣಾಮುಚ್ಚಾಲೆ ಆಡ್ತೀಯ?+

 2 ದುಷ್ಟ ಅಹಂಕಾರದಿಂದ ನಿಸ್ಸಹಾಯಕನನ್ನ ಅಟ್ಟಿಸ್ಕೊಂಡು ಹೋಗ್ತಾನೆ,+

ಆದ್ರೆ ಅವನ ಸಂಚಿಗೆ ಅವನೇ ಸಿಕ್ಕಿಹಾಕೊಳ್ತಾನೆ.+

 3 ದುಷ್ಟನು ಅವನ ಕೆಟ್ಟ ಆಸೆಗಳ ಬಗ್ಗೆ ಕೊಚ್ಚಿಕೊಳ್ತಾನೆ,+

ದುರಾಸೆಪಡೋ ಜನರಿಗೆ ಆಶೀರ್ವಾದ ಮಾಡ್ತಾನೆ.*

נ [ನೂನ್‌]

ಅವನು ಯೆಹೋವನಿಗೆ ಗೌರವ ಕೊಡಲ್ಲ.

 4 ದುಷ್ಟನು ಗರ್ವದಿಂದಾಗಿ ದೇವರನ್ನ ಹುಡುಕಲ್ಲ,

ಅವನ ಮನಸ್ಸಲ್ಲಿ ಯಾವಾಗ್ಲೂ “ದೇವರಿಲ್ಲ” ಅನ್ನೋ ಯೋಚನೆನೇ ಓಡ್ತಿರುತ್ತೆ.+

 5 ಅವನು ಮಾಡೋ ಕೆಲಸ ಎಲ್ಲ ಚೆನ್ನಾಗಿ ಆಗುತ್ತೆ,+

ಆದ್ರೆ ನಿನ್ನ ತೀರ್ಪುಗಳು ಅವನ ಯೋಚನೆಗಿಂತ ದೊಡ್ಡದು.+

ಅವನು ತನ್ನ ಶತ್ರುಗಳನ್ನೆಲ್ಲ ಅಣಕಿಸ್ತಾನೆ.

 6 ಅವನು ಮನಸ್ಸಲ್ಲಿ, “ನನ್ನನ್ನ ಯಾರೂ ಅಲ್ಲಾಡಿಸಕ್ಕಾಗಲ್ಲ,

ತೊಂದರೆ ನನ್ನ ಹತ್ರ ಯಾವತ್ತೂ ಸುಳಿಯಲ್ಲ” ಅಂದುಕೊಳ್ತಾನೆ.+

פ [ಪೇ]

 7 ಅವನ ಬಾಯಲ್ಲಿ ಶಾಪ, ಸುಳ್ಳು ಮತ್ತು ಬೆದರಿಕೆನೇ ತುಂಬಿದೆ.+

ಅವನ ನಾಲಿಗೆಯ ಕೆಳಗೆ ತೊಂದ್ರೆ ಮತ್ತು ಹಾನಿ ಬಚ್ಚಿಟ್ಕೊಂಡಿದೆ.+

 8 ಅವನು ಹಳ್ಳಿಗಳ ಹತ್ರ ಹೊಂಚುಹಾಕಿ ಕೂತಿರ್ತಾನೆ,

ಅಮಾಯಕನನ್ನ ಕೊಲ್ಲೋಕೆ ಅಲ್ಲಿಂದ ಎದ್ದುಬರ್ತಾನೆ.+

ע [ಅಯಿನ್‌]

ಅವನ ಕಣ್ಣು ಮುಗ್ಧನನ್ನ ಬಲಿ ತಗೊಳ್ಳೋಕೇ ನೋಡ್ತಾ ಇರುತ್ತೆ.+

 9 ಅವನು ಗುಹೆಯಲ್ಲಿ* ಬಚ್ಚಿಟ್ಕೊಂಡಿರೋ ಸಿಂಹದ ತರ ಕಾಯ್ತಾ ಕೂತಿರ್ತಾನೆ.+

ನಿಸ್ಸಹಾಯಕನನ್ನ ಹಿಡಿಯೋಕೆ ಅವನು ಹೊಂಚುಹಾಕ್ತಾನೆ.

ಆ ನಿಸ್ಸಹಾಯಕ ಬಲೆಗೆ ಬಿದ್ದ ತಕ್ಷಣ ಅವನನ್ನ ಹಿಡೀತಾನೆ.+

10 ಆ ಅಮಾಯಕನನ್ನ ಜಜ್ಜಿ ಕೆಳಗೆ ಬೀಳಿಸ್ತಾನೆ,

ನಿಸ್ಸಹಾಯಕರು ಅವನ ಬಿಗಿ ಮುಷ್ಟಿಯಲ್ಲಿ* ಸಿಕ್ಕಿಹಾಕೊಳ್ತಾರೆ.

11 “ದೇವರು ಮರೆತುಹೋಗಿದ್ದಾನೆ.+

ಆತನು ತನ್ನ ಮುಖನ ತಿರುಗಿಸಿಕೊಂಡಿದ್ದಾನೆ.

ಆತನು ಯಾವತ್ತೂ ನೋಡಲ್ಲ” ಅಂತ ದುಷ್ಟ ತನ್ನ ಮನಸ್ಸಲ್ಲಿ ಅಂದುಕೊಳ್ತಾನೆ.+

ק [ಕೊಫ್‌]

12 ಯೆಹೋವನೇ, ದಯವಿಟ್ಟು ನಿನ್ನ ಶಕ್ತಿಯನ್ನ ತೋರಿಸು.+

ನಿಸ್ಸಹಾಯಕರನ್ನ ಮರೀಬೇಡ.+

13 ದುಷ್ಟನು ಯಾಕೆ ದೇವರಿಗೆ ಗೌರವ ಕೊಡಲ್ಲ?

“ದೇವರು ನನ್ನಿಂದ ಲೆಕ್ಕಕೇಳಲ್ಲ” ಅಂತ ಅವನು ಮನಸ್ಸಲ್ಲಿ ಅಂದುಕೊಳ್ತಾನೆ.

ר [ರೆಶ್‌]

14 ಆದ್ರೆ ನೀನು ಕಷ್ಟಗಳನ್ನ ಬಾಧೆಗಳನ್ನ ನಿಜವಾಗ್ಲೂ ನೋಡ್ತೀಯ.

ನೀನು ಎಲ್ಲ ಗಮನಿಸ್ತೀಯ, ಆಮೇಲೆ ವಿಷ್ಯಗಳನ್ನ ನಿನ್ನ ಕೈಗೆ ತಗೊತೀಯ.+

ನಿಸ್ಸಹಾಯಕ ನಿನ್ನ ಕಡೆ ನೋಡ್ತಾನೆ,+

ಅನಾಥನಿಗೆ* ನೀನೇ ಸಹಾಯಕ.+

ש [ಶಿನ್‌]

15 ದುಷ್ಟನ ಮತ್ತು ಕೆಡುಕನ ಕೈಯನ್ನ ಮುರಿ,+

ಅವನ ದುಷ್ಟತನವನ್ನ ಬೇರುಸಮೇತ ಕಿತ್ತುಹಾಕು.

16 ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ.+

ದುಷ್ಟ ಜನಾಂಗಗಳು ಭೂಮಿ ಮೇಲೆ ಇಲ್ಲದೆ ಹೋಗಿವೆ.+

ת [ಟಾವ್‌]

17 ಆದ್ರೆ ಯೆಹೋವನೇ, ನೀನು ದೀನರ ಕೋರಿಕೆಯನ್ನ ಕೇಳಿಸಿಕೊಳ್ತೀಯ.+

ಅವ್ರ ಹೃದಯಗಳನ್ನ ಬಲಪಡಿಸಿ+ ಅವ್ರ ಪ್ರಾರ್ಥನೆಗೆ ಗಮನ ಕೊಡ್ತೀಯ.+

18 ಅನಾಥರಿಗೂ ಜಜ್ಜಿಹೋದವರಿಗೂ ನ್ಯಾಯ ಕೊಡ್ತೀಯ.+

ಆಗ ಮಣ್ಣಿಂದ ಆದ ಮಾಮೂಲಿ ಮನುಷ್ಯ ಅವ್ರನ್ನ ಹೆದರಿಸೋಕೆ ಆಗಲ್ಲ.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ.

11 ನಾನು ಯೆಹೋವನನ್ನೇ ಆಶ್ರಯಿಸಿದ್ದೀನಿ.+

ಹಾಗಿರುವಾಗ ನೀವು ನನಗೆ ಯಾಕೆ ಹೀಗೆ ಹೇಳ್ತೀರ:

“ಹಕ್ಕಿ ತರ ನಿನ್ನ ಬೆಟ್ಟಕ್ಕೆ ಓಡಿಹೋಗು!

 2 ಕತ್ತಲೆಯಲ್ಲಿ ಬಚ್ಚಿಟ್ಕೊಂಡು ಪ್ರಾಮಾಣಿಕ ಹೃದಯದ ಜನ್ರ ಮೇಲೆ ಬಾಣ ಬಿಡೋಕೆ,

ಕೆಟ್ಟವರು ಹೇಗೆ ಬಿಲ್ಲನ್ನ ಬಗ್ಗಿಸಿದ್ದಾರೆ ನೋಡು,

ಹೇಗೆ ತಮ್ಮ ಬಾಣಗಳನ್ನ ಗುರಿಯಿಟ್ಟಿದ್ದಾರೆ ನೋಡು.

 3 ಅಸ್ತಿವಾರನೇ* ಅಲ್ಲಾಡಿದಾಗ,

ನೀತಿವಂತನಿಗೆ ಏನು ಮಾಡೋಕೆ ಆಗುತ್ತೆ?”

 4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+

ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+

ಆತನ ಕಣ್ಣು ಮನುಷ್ಯರನ್ನ ನೋಡುತ್ತೆ.

ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+

 5 ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ,+

ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.+

 6 ಕೆಟ್ಟವನ ಮೇಲೆ ಪಾಶಗಳ* ಮಳೆಯನ್ನೇ ಸುರಿಸ್ತಾನೆ,

ಅವ್ರಿಗೆ ಬೆಂಕಿ, ಗಂಧಕ+ ಮತ್ತು ಬಿಸಿಗಾಳಿಯಿಂದ ಶಿಕ್ಷೆ ಕೊಡ್ತಾನೆ.

 7 ಯೆಹೋವ ನೀತಿವಂತನು.+ ಹಾಗಾಗಿ ಆತನು ಒಳ್ಳೇದನ್ನೇ ಪ್ರೀತಿಸ್ತಾನೆ.+

ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ.*+

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ಶೆಮಿನಿತ್‌* ಸ್ವರಕ್ಕೆ ತಂತಿವಾದ್ಯನ ಹೊಂದಿಸ್ಕೊಂಡು ಹಾಡಬೇಕು.

12 ಯೆಹೋವನೇ, ನಿಷ್ಠಾವಂತರೇ ಇಲ್ಲ.

ನಂಬಿಗಸ್ತರು ಒಬ್ರೂ ಕಾಣಿಸ್ತಿಲ್ಲ. ಹಾಗಾಗಿ ನನ್ನನ್ನ ಕಾಪಾಡು.

 2 ಅವರು ಒಬ್ಬರಿಗೊಬ್ರು ಸುಳ್ಳು ಹೇಳ್ತಾರೆ,

ಬೆಣ್ಣೆ ಹಚ್ಚಿ ಮಾತಾಡ್ತಾ* ಬೇರೆಯವರಿಗೆ ಮೋಸ ಮಾಡ್ತಾರೆ.+

 3 ಒಳಗೊಂದು ಹೊರಗೊಂದು ಮಾತಾಡೋ ತುಟಿಗಳನ್ನ,

ದೊಡ್ಡದಾಗಿ ಕೊಚ್ಚಿಕೊಳ್ಳೋ ನಾಲಿಗೆನ ಯೆಹೋವ ಕತ್ತರಿಸಿ ಹಾಕ್ತಾನೆ.+

 4 ಅವರು ಹೀಗಂತಾರೆ: “ನಮ್ಮ ನಾಲಿಗೆಯಿಂದ ನಾವು ಗೆಲ್ತೀವಿ.

ನಮಗೆ ಇಷ್ಟಬಂದಂಗೆ ಮಾತಾಡ್ತೀವಿ,

ನಮ್ಮ ಮೇಲೆ ಯಾರಿಗೂ ಅಧಿಕಾರ ಚಲಾಯಿಸೋಕೆ ಆಗಲ್ಲ.”+

 5 ಯೆಹೋವ ಹೀಗಂತಾನೆ: “ಜನರ ಮೇಲೆ ದಬ್ಬಾಳಿಕೆ ಆಗ್ತಿದೆ,

ಬಡವರು ನರಳ್ತಿದ್ದಾರೆ,+

ನಾನು ಈಗ ಎದ್ದೇಳ್ತೀನಿ, ಅವರನ್ನ ಕೀಳಾಗಿ ನೋಡೋರ ಕೈಯಿಂದ ಅವರನ್ನ ಕಾಪಾಡ್ತೀನಿ.”

 6 ಯೆಹೋವನ ಮಾತುಗಳು ಶುದ್ಧ.+

ಅವು ಮಣ್ಣಿನ ಕುಲುಮೆಯಲ್ಲಿ* ಬೆಂಕಿಗೆ ಹಾಕಿ ಏಳು ಸಲ ಶುದ್ಧಮಾಡಿದ ಬೆಳ್ಳಿ ತರ ಇವೆ.

 7 ಯೆಹೋವನೇ, ದಬ್ಬಾಳಿಕೆ ಆದವರಿಗೆ, ಬಡವರಿಗೆ ನೀನು ಕಾವಲಾಗಿ ಇರ್ತಿಯ.+

ಅವರೆಲ್ಲರನ್ನೂ ಈ ಪೀಳಿಗೆಯಿಂದ ಶಾಶ್ವತವಾಗಿ ಕಾಪಾಡ್ತೀಯ.

 8 ಜನರು ಕೆಟ್ಟತನಕ್ಕೆ ಸಹಕಾರ ಕೊಡ್ತಿದ್ದಾರೆ.

ಹಾಗಾಗಿ ದುಷ್ಟರು ಹತೋಟಿ ಇಲ್ಲದೆ ಎಲ್ಲ ಕಡೆ ತಿರುಗಾಡ್ತಿದ್ದಾರೆ.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ?

ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+

 2 ನಾನೂ ಎಲ್ಲಿ ತನಕ ಚಿಂತೆಯಲ್ಲೇ ಮುಳುಗಿರಬೇಕು?

ಪ್ರತಿದಿನ ಯಾತನೆಪಡೋ ನನ್ನ ಹೃದಯ ಎಲ್ಲಿ ತನಕ ದುಃಖದ ಭಾರನ ಸಹಿಸ್ಕೊಬೇಕು?

ನನ್ನ ವೈರಿ ನನ್ನ ಮೇಲೆ ಎಲ್ಲಿ ತನಕ ಜಯ ಸಾಧಿಸಬೇಕು?+

 3 ಯೆಹೋವನೇ, ನನ್ನ ದೇವರೇ, ನನ್ನ ಕಡೆ ನೋಡು. ನನಗೆ ಉತ್ತರ ಕೊಡು.

ನಾನು ಸಾವಿನ ನಿದ್ದೆಗೆ ಜಾರದ ಹಾಗೆ ನನ್ನ ಕಣ್ಣುಗಳಿಗೆ ಬೆಳಕು ಕೊಡು.

 4 ನನ್ನ ಶತ್ರು, “ನಾನು ಅವನನ್ನ ಸೋಲಿಸಿಬಿಟ್ಟೆ!” ಅಂತ ಹೇಳಬಾರದು.

ನಾನು ಬಿದ್ದುಹೋಗಿದ್ದನ್ನ ನೋಡಿ ಖುಷಿಪಡಬಾರದು.+

 5 ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+

ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+

 6 ನಾನು ಯೆಹೋವನಿಗಾಗಿ ಹಾಡ್ತೀನಿ, ಆತನು ನನ್ನನ್ನ ತುಂಬ ಆಶೀರ್ವದಿಸಿದ್ದಾನೆ.*+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ.

14 ಮೂರ್ಖ ತನ್ನ ಹೃದಯದಲ್ಲಿ,

“ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+

ಅಂಥ ಜನ್ರು ಭ್ರಷ್ಟರು, ಅವರ ಕೆಲಸ ಅಸಹ್ಯ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ.+

 2 ಆದ್ರೆ ಯಾರಿಗೆ ತಿಳುವಳಿಕೆ ಇದೆ,

ಯಾರು ಯೆಹೋವನನ್ನ ಹುಡುಕ್ತಿದ್ದಾರೆ,

ಅಂತ ತಿಳ್ಕೊಳ್ಳೋಕೆ ಯೆಹೋವ ಸ್ವರ್ಗದಿಂದ ನೋಡ್ತಾನೆ.+

 3 ಅವ್ರೆಲ್ಲ ದಾರಿತಪ್ಪಿದ್ದಾರೆ,+

ಭ್ರಷ್ಟಾಚಾರ ಮಾಡದಿರೋರು ಒಬ್ರೂ ಇಲ್ಲ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ,

ಒಬ್ಬನೂ ಮಾಡ್ತಿಲ್ಲ.

 4 ಕೆಟ್ಟದನ್ನ ಮಾಡೋರಿಗೆ ಗೊತ್ತಾಗಲ್ವಾ?

ಅವರು ನನ್ನ ಜನ್ರನ್ನ ರೊಟ್ಟಿ ತರ ನುಂಗ್ತಾರೆ.

ಅವರು ಯೆಹೋವನಿಗೆ ಪ್ರಾರ್ಥನೆ ಮಾಡಲ್ಲ.

 5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.+

ಯಾಕಂದ್ರೆ ಒಳ್ಳೇ ಪೀಳಿಗೆ ಜೊತೆ ಯೆಹೋವ ಇದ್ದಾನೆ.

 6 ಕೆಟ್ಟದನ್ನ ಮಾಡೋರೇ, ನೀವು ದೀನರ ಕೆಲಸಗಳನ್ನ ಹಾಳುಮಾಡೋಕೆ ಪ್ರಯತ್ನಿಸ್ತೀರ.

ಆದ್ರೆ ಯೆಹೋವ ಅವ್ರ ಆಶ್ರಯವಾಗಿದ್ದಾನೆ.+

 7 ಚೀಯೋನಿಂದ ಇಸ್ರಾಯೇಲ್ಯರಿಗೆ ರಕ್ಷಣೆ ಬರಲಿ!+

ಜೈಲಲ್ಲಿರೋ ಜನ್ರನ್ನ ಯೆಹೋವ ಒಟ್ಟುಸೇರಿಸುವಾಗ,

ಯಾಕೋಬ ಖುಷಿಪಡಲಿ, ಇಸ್ರಾಯೇಲ್‌ ಉಲ್ಲಾಸಪಡಲಿ.

ದಾವೀದನ ಮಧುರ ಗೀತೆ.

15 ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು?

ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?+

 2 ಅವರು ಯಾರಂದ್ರೆ, ಯಾವ ಆರೋಪನೂ ಇಲ್ಲದೆ ಜೀವನ ಮಾಡ್ತಿರೋರು,+

ಸರಿಯಾಗಿ ಇರೋದನ್ನೇ ಮಾಡ್ತಿರೋರು,+

ಹೃದಯದಲ್ಲೂ ಸತ್ಯವನ್ನೇ ಹೇಳೋರು.+

 3 ಅಂಥವರು ಯಾರ ಮೇಲೂ ಸುಳ್ಳು ಅಪವಾದ ಹಾಕಲ್ಲ,+

ಬೇರೆಯವರಿಗೆ ಯಾವ ತೊಂದ್ರೆನೂ ಕೊಡಲ್ಲ,+

ಸ್ನೇಹಿತರ ಹೆಸ್ರನ್ನ ಹಾಳುಮಾಡಲ್ಲ.*+

 4 ನೀಚರ ಜೊತೆ ಸೇರಲ್ಲ,+

ಆದ್ರೆ ಯೆಹೋವನ ಭಯಭಕ್ತಿ ಇರೋರಿಗೆ ಗೌರವ ಕೊಡೋದನ್ನ ತಪ್ಸಲ್ಲ.

ನಷ್ಟ ಆದ್ರೂ ಕೊಟ್ಟ ಮಾತನ್ನ* ತಪ್ಪಲ್ಲ.+

 5 ಸಾಲ ಕೊಟ್ಟು ಬಡ್ಡಿಗಾಗಿ ಆಸೆಪಡಲ್ಲ,+

ನಿರಪರಾಧಿನ ಅಪರಾಧಿ ಮಾಡೋಕೆ ಲಂಚ ತಗೊಳಲ್ಲ.+

ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ.+

ದಾವೀದನ ಮಿಕ್ತಾಮ್‌.*

16 ದೇವರೇ, ನಿನ್ನಲ್ಲಿ ನಾನು ಆಶ್ರಯ ಪಡೆದಿದ್ದೀನಿ. ನನ್ನನ್ನ ಕಾಪಾಡು.+

 2 ಯೆಹೋವನಿಗೆ ನಾನು ಹೀಗೆ ಹೇಳಿದೆ “ಯೆಹೋವನೇ ಎಲ್ಲ ಒಳ್ಳೇ ವಿಷ್ಯಗಳು ನಿನ್ನಿಂದಾನೇ ಬರುತ್ತೆ.

 3 ಭೂಮಿಯಲ್ಲಿರೋ ಪವಿತ್ರರು, ಪ್ರಮುಖರು,

ನನಗೆ ತುಂಬ ಖುಷಿ ತಂದಿದ್ದಾರೆ.”+

 4 ಬೇರೆ ದೇವರುಗಳ ಹಿಂದೆ ಹೋಗೋರು ತಮ್ಮ ದುಃಖನ ಜಾಸ್ತಿ ಮಾಡ್ಕೊಳ್ತಾರೆ.+

ನಾನು ಯಾವತ್ತೂ ಆ ದೇವರುಗಳಿಗೆ ರಕ್ತವನ್ನ ಪಾನ ಅರ್ಪಣೆಯಾಗಿ ಸಲ್ಲಿಸಲ್ಲ,

ನನ್ನ ಬಾಯಲ್ಲಿ ಅವುಗಳ ಹೆಸ್ರೂ ಬರಲ್ಲ.+

 5 ಯೆಹೋವನೇ ನನ್ನ ಪಾಲು, ನನಗೆ ಸೇರಿದ ಆಸ್ತಿ,+

ಆತನೇ ನನ್ನ ಪಾನಪಾತ್ರೆಯನ್ನ ತುಂಬಿಸ್ತಾನೆ.+

ನನ್ನ ಆಸ್ತಿಯನ್ನ ಕಾದುಕಾಪಾಡ್ತಾನೆ.

 6 ನನಗೆ ಆಸ್ತಿಯಾಗಿ ಒಳ್ಳೇ ಜಾಗಗಳು ಸಿಕ್ಕಿವೆ.

ನನ್ನ ಆಸ್ತಿಯಲ್ಲಿ ನನಗೆ ನಿಜವಾಗ್ಲೂ ತೃಪ್ತಿ ಇದೆ.+

 7 ನನಗೆ ಸಲಹೆ ಕೊಟ್ಟ ಯೆಹೋವನನ್ನ ನಾನು ಹೊಗಳ್ತೀನಿ.+

ರಾತ್ರಿಯಲ್ಲೂ ನನ್ನ ಮನದಾಳದ ಭಾವನೆಗಳು* ನನ್ನನ್ನ ತಿದ್ದುತ್ತವೆ.+

 8 ಯಾವಾಗ್ಲೂ ಯೆಹೋವನನ್ನ ನನ್ನ ಮುಂದೆನೇ ಇಟ್ಕೊಂಡಿರ್ತಿನಿ.+

ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ.*+

 9 ಹಾಗಾಗಿ ನನ್ನ ಹೃದಯ ಖುಷಿಪಡುತ್ತೆ, ರೋಮ ರೋಮದಲ್ಲೂ ಸಂತೋಷ ಹರಿದಾಡುತ್ತೆ.

ನನ್ನ ಜೀವ* ಸುರಕ್ಷಿತವಾಗಿರುತ್ತೆ.

10 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ.+

ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ* ಬಿಡಲ್ಲ.+

11 ನೀನು ನನಗೆ ಜೀವನದ ದಾರಿಯನ್ನ ತೋರಿಸ್ಕೊಡ್ತೀಯ.+

ನೀನು ಇರೋ ಕಡೆ* ತುಂಬ ಖುಷಿ ಇರುತ್ತೆ.+

ನಿನ್ನ ಬಲಗಡೆ ಯಾವಾಗ್ಲೂ ಸಂತೋಷ ಇರುತ್ತೆ.

ದಾವೀದನ ಪ್ರಾರ್ಥನೆ.

17 ಯೆಹೋವನೇ ನ್ಯಾಯಕ್ಕಾಗಿ ನಾನು ಮಾಡೋ ಪ್ರಾರ್ಥನೆ ಕೇಳು,

ಸಹಾಯಕ್ಕಾಗಿ ನಾನು ಕೂಗುವಾಗ ಗಮನಿಸು,

ಕಪಟ ಇಲ್ಲದ ನನ್ನ ಪ್ರಾರ್ಥನೆನ ಕೇಳು.+

 2 ನೀನು ಸರಿಯಾದ ತೀರ್ಪನ್ನ ಕೊಟ್ಟು ನನಗೆ ನ್ಯಾಯ ಸಿಗೋ ತರ ಮಾಡು,+

ನಾನು ಸರಿಯಾಗಿ ಇರೋದನ್ನ ಮಾಡ್ತಿದ್ದೀನಾ ಅಂತ ನಿನ್ನ ಕಣ್ಣು ನೋಡಿ ಹೇಳಲಿ.

 3 ನೀನು ನನ್ನ ಹೃದಯನ ಪರೀಕ್ಷಿಸಿದೆ, ರಾತ್ರಿ ಸಮಯದಲ್ಲೂ ನನ್ನನ್ನ ಪರಿಶೀಲಿಸಿದೆ,+

ನೀನು ನನ್ನನ್ನ ಪರಿಷ್ಕರಿಸಿದೆ,+

ನಾನು ಯಾವ ಕೆಟ್ಟ ಸಂಚನ್ನೂ ಮಾಡಿಲ್ಲ ಅಂತ,

ನನ್ನ ಬಾಯಿ ಯಾವ ಪಾಪವನ್ನೂ ಮಾಡಿಲ್ಲ ಅಂತ ನಿನಗೆ ಗೊತ್ತಾಗುತ್ತೆ.

 4 ಮನುಷ್ಯರು ಏನೇ ಮಾಡ್ಲಿ,

ನಾನು ಮಾತ್ರ ನೀನು ಹೇಳಿದ ಹಾಗೆ ಕಳ್ಳರ ದಾರಿಯಿಂದ ದೂರ ಇರ್ತಿನಿ.+

 5 ನನ್ನ ಕಾಲು ಎಡವಿ ಬೀಳದ ಹಾಗೆ,

ನನ್ನ ಹೆಜ್ಜೆಗಳು ನಿನ್ನ ದಾರಿಯಲ್ಲೇ ಇರಲಿ.+

 6 ದೇವರೇ, ನಾನು ನಿನಗೆ ಮೊರೆ ಇಡ್ತೀನಿ. ಯಾಕಂದ್ರೆ ನೀನು ಉತ್ತರ ಕೊಡ್ತೀಯ.+

ನಾನು ಹೇಳೋದನ್ನ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ.*+

 7 ದೇವರೇ, ನಿನ್ನ ವಿರುದ್ಧ ದಂಗೆ ಏಳೋರ ಕೈಯಿಂದ ತಪ್ಪಿಸ್ಕೊಂಡು

ನಿನ್ನ ಬಲಗೈಯಲ್ಲಿ ಆಶ್ರಯ ಪಡ್ಕೊಳ್ಳೋಕೆ ಬರೋರನ್ನ ರಕ್ಷಿಸು,

ಅದ್ಭುತವಾಗಿ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು.+

 8 ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು,+

ನಿನ್ನ ರೆಕ್ಕೆಗಳ ನೆರಳಲ್ಲಿ ನನ್ನನ್ನ ಬಚ್ಚಿಡು.+

 9 ನನ್ನ ಮೇಲೆ ದಾಳಿ ಮಾಡೋ ಕೆಟ್ಟವರಿಂದ,

ನನ್ನ ಹಿಂದೆ ಬಿದ್ದು ನನ್ನ ಪ್ರಾಣ ಕೇಳೋರಿಂದ ನನ್ನನ್ನ ರಕ್ಷಿಸು.+

10 ಅವರು ತಮ್ಮ ಹೃದಯಗಳನ್ನ ಕಲ್ಲಿನ ತರ ಮಾಡ್ಕೊಂಡಿದ್ದಾರೆ,*

ಅವರು ಅಹಂಕಾರದಿಂದ ಮಾತಾಡ್ತಾರೆ.

11 ಈಗ ಅವರು ನಮ್ಮ ಸುತ್ತ ಸುತ್ಕೊಂಡಿದ್ದಾರೆ,+

ನಮ್ಮನ್ನ ಕೆಳಗೆ ಬೀಳಿಸೋಕೆ* ಕಾಯ್ತಿದ್ದಾರೆ.

12 ನನ್ನ ಶತ್ರು, ಬೇಟೆನ ಸೀಳಿ ತುಂಡುತುಂಡು ಮಾಡೋಕೆ ಹಾತೊರೆಯೋ ಸಿಂಹದ ತರ ಇದ್ದಾನೆ,

ಹೊಂಚುಹಾಕ್ತಾ ಮುದುರಿಕೊಂಡು ಕೂತಿರೋ ಎಳೇ ಸಿಂಹದ ತರ ಇದ್ದಾನೆ.

13 ಯೆಹೋವನೇ, ದಯವಿಟ್ಟು ಅವನ ವಿರುದ್ಧ ಹೋರಾಡಿ,+ ಅವನನ್ನ ಸೋಲಿಸು.

ನಿನ್ನ ಕತ್ತಿ ತಗೊಂಡು, ನನ್ನನ್ನ ಆ ಕೆಟ್ಟವನಿಂದ ಕಾಪಾಡು.

14 ಯೆಹೋವನೇ, ಕೈ ಚಾಚಿ ನನ್ನನ್ನ ರಕ್ಷಿಸು,

ಈ ಲೋಕದ ಜನ್ರಿಂದ ನನ್ನನ್ನ ಕಾಪಾಡು, ಅವರು ಬರೀ ಇವತ್ತಿಗಾಗಿ ಬದುಕ್ತಾರೆ.+

ನಿನ್ನ ಖಜಾನೆಯಿಂದ ಅವರು ಹೊಟ್ಟೆ ತುಂಬಿಸ್ಕೊಳ್ತಿದ್ದಾರೆ,+

ತಮ್ಮ ಮಕ್ಕಳಿಗೆ ಆಸ್ತಿನ ಬಿಟ್ಟುಹೋಗ್ತಾರೆ, ಅವ್ರಿಂದ ನನ್ನನ್ನ ಕಾಪಾಡು.

15 ಆದ್ರೆ ನಾನು ನೀತಿವಂತನಾಗಿ ಇರ್ತಿನಿ. ಯಾಕಂದ್ರೆ ನನಗೆ ನಿನ್ನ ಮುಖ ನೋಡಬೇಕು.

ಬೆಳಿಗ್ಗೆ ಎದ್ದು ನಿನ್ನ ಮುಂದೆ ನಿಂತ್ಕೊಳ್ಳೋದ್ರಲ್ಲೇ ನನಗೆ ಖುಷಿ ಸಿಗುತ್ತೆ.+

ಗಾಯಕರ ನಿರ್ದೇಶಕನಿಗೆ ಸೂಚನೆ: ಇದು ಯೆಹೋವನ ಸೇವಕ ದಾವೀದನ ಗೀತೆ. ಯೆಹೋವ ದಾವೀದನನ್ನ ಅವನ ಶತ್ರುಗಳ ಮತ್ತು ಸೌಲನ ಕೈಯಿಂದ ಬಿಡಿಸಿದನು. ಆ ದಿನ ದಾವೀದ ಈ ಹಾಡನ್ನ ಯೆಹೋವನಿಗಾಗಿ ಹಾಡಿದ:+

18 ಯೆಹೋವನೇ, ನನ್ನ ಬಲವೇ,+ ನೀನಂದ್ರೆ ನನಗೆ ತುಂಬ ಪ್ರೀತಿ.

 2 ಯೆಹೋವ ನನ್ನ ಕಡಿದಾದ ಬಂಡೆ, ನನ್ನ ಭದ್ರ ಕೋಟೆ, ಆತನೇ ನನ್ನ ರಕ್ಷಕ.+

ನನ್ನ ದೇವರೇ ನನ್ನ ಬಂಡೆ,+ ಆತನಲ್ಲೇ ನಾನು ಆಶ್ರಯಿಸ್ತೀನಿ,

ನನ್ನ ಗುರಾಣಿ, ನನ್ನ ರಕ್ಷಣೆಯ ಕೊಂಬು,* ನನ್ನ ಸುರಕ್ಷಿತ ಆಶ್ರಯ ಆತನೇ.+

 3 ಹೊಗಳಿಕೆಗೆ ಯೋಗ್ಯನಾಗಿರೋ ಯೆಹೋವನನ್ನ ನಾನು ಕೂಗಿ ಕರಿತೀನಿ,

ಆತನು ಶತ್ರುಗಳಿಂದ ನನ್ನನ್ನ ಬಿಡಿಸ್ತಾನೆ.+

 4 ಸಾವಿನ ಹಗ್ಗಗಳು ನನ್ನನ್ನ ಸುತ್ಕೊಂಡಿವೆ,+

ಅಯೋಗ್ಯ ಜನ್ರು ತಟ್ಟಂತ ಪ್ರವಾಹದ ತರ ಬಂದು ನನ್ನನ್ನ ಹೆದರಿಸಿದ್ರು.+

 5 ಸಮಾಧಿಯ ಹಗ್ಗಗಳು ನನ್ನನ್ನ ಸುತ್ಕೊಂಡಿವೆ,

ಸಾವಿನ ಉರುಲು ನನ್ನ ಮುಂದಿದೆ.+

 6 ನಾನು ಸಂಕಟದಲ್ಲಿ ಇರುವಾಗ ಯೆಹೋವನನ್ನ ಕರೆದೆ,

ಸಹಾಯಕ್ಕಾಗಿ ನಾನು ನನ್ನ ದೇವರಿಗೆ ಮೊರೆಯಿಡ್ತಾನೇ ಇದ್ದೆ.

ಆತನು ನನ್ನ ಕೂಗನ್ನ ತನ್ನ ಆಲಯದಿಂದಾನೇ ಕೇಳಿಸ್ಕೊಂಡ,+

ಸಹಾಯಕ್ಕಾಗಿ ನಾನಿಟ್ಟ ಮೊರೆ ಆತನ ಕಿವಿ ಮುಟ್ತು.+

 7 ಆಗ ಭೂಮಿ ಕಂಪಿಸ್ತು, ಗಡಗಡ ಅಂತ ನಡುಗ್ತು,+

ಬೆಟ್ಟಗಳ ತಳಪಾಯ ಅಲುಗಾಡ್ತು,

ಆತನಿಗೆ ಕೋಪ ಬಂದಿದ್ರಿಂದ ಅವು ಹಿಂದೆಮುಂದೆ ಅಲುಗಾಡಿದ್ವು.+

 8 ಆತನ ಮೂಗಿನಿಂದ ಹೊಗೆ ಬಂತು,

ಆತನ ಬಾಯಿಂದ ಜ್ವಲಿಸೋ ಬೆಂಕಿ ಬಂತು,+

ಆತನಿಂದ ಉರಿಯೋ ಕೆಂಡ ಬಂತು.

 9 ಆತನು ಇಳಿದು ಬರೋವಾಗ ಆಕಾಶನ ಬಗ್ಗಿಸಿದ,+

ಆತನ ಪಾದಗಳ ಕೆಳಗೆ ಕಪ್ಪು ಮೋಡ ಇತ್ತು.+

10 ಆತನು ಕೆರೂಬಿಯ ಮೇಲೆ ಹತ್ತಿ, ಹಾರುತ್ತಾ ಬಂದ.+

ದೇವದೂತನ ರೆಕ್ಕೆಗಳ* ಮೇಲೆ ಸವಾರಿ ಮಾಡ್ತಾ ತಟ್ಟನೆ ಕೆಳಗಿಳಿದು ಬಂದ.+

11 ಆಮೇಲೆ ಆತನು ದಟ್ಟ ಕಪ್ಪು ಮೋಡಗಳಲ್ಲಿ,+

ಕತ್ತಲನ್ನ ಡೇರೆ ತರ ತನ್ನ ಸುತ್ತ ಸುತ್ಕೊಂಡ.+

12 ಆತನ ಮುಂದೆ ಇದ್ದ ಉಜ್ವಲ ಬೆಳಕಿನಿಂದ ಮೋಡಗಳು ಸೀಳಿ,

ಉರಿಯೋ ಕೆಂಡಗಳು ಮತ್ತು ಆಲಿಕಲ್ಲುಗಳು ಹೊರಗೆ ಬಂದ್ವು.

13 ಆಮೇಲೆ ಯೆಹೋವ ಆಕಾಶದಲ್ಲಿ ಗುಡುಗಿದ,+

ಆಲಿಕಲ್ಲುಗಳಿಂದ ಮತ್ತು ಉರಿಯೋ ಕೆಂಡಗಳಿಂದ,

ಸರ್ವೋನ್ನತ ತನ್ನ ಧ್ವನಿ ಕೇಳೋ ಹಾಗೆ ಮಾಡಿದ.+

14 ಆತನು ತನ್ನ ಬಾಣಗಳನ್ನ ಬಿಟ್ಟು ಶತ್ರುಗಳು ದಿಕ್ಕಾಪಾಲಾಗೋ ಹಾಗೆ ಮಾಡಿದ,+

ತನ್ನ ಸಿಡಿಲನ್ನ ಹೊಡೆದು ಅವರು ಗಲಿಬಿಲಿ ಆಗೋ ತರ ಮಾಡಿದ.+

15 ಯೆಹೋವನೇ, ನಿನ್ನ ಗದರಿಕೆ ಮತ್ತು ನಿನ್ನ ಮೂಗಿಂದ ಬಂದ ರಭಸವಾದ ಉಸಿರಿಂದ+

ಸಮುದ್ರ ಮತ್ತು ಭೂಮಿಯ ತಳ ಕಾಣಿಸ್ತು.+

16 ಆತನು ಸ್ವರ್ಗದಿಂದ ಕೈಚಾಚಿ,

ನನ್ನನ್ನ ಹಿಡಿದು ಆಳವಾದ ನೀರಿಂದ ಮೇಲಕ್ಕೆ ಎತ್ತಿದ.+

17 ನನ್ನ ಬಲಿಷ್ಠ ಶತ್ರುವಿನಿಂದ ನನ್ನನ್ನ ಕಾಪಾಡಿದ+

ನನ್ನನ್ನ ದ್ವೇಷಿಸೋರ ಕೈಯಿಂದ, ನನಗಿಂತ ಶಕ್ತಿಶಾಲಿಗಳಾಗಿ ಇರೋರ ಕೈಯಿಂದ ನನ್ನನ್ನ ರಕ್ಷಿಸಿದ.+

18 ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ವಿರುದ್ಧ ನಿಂತ್ಕೊಂಡ್ರು,+

ಆದ್ರೆ ಯೆಹೋವ ನನಗೆ ಬೆಂಬಲವಾಗಿ ನಿಂತ.

19 ಆತನು ನನ್ನನ್ನ ಸುರಕ್ಷಿತ ಜಾಗಕ್ಕೆ* ಕರ್ಕೊಂಡು ಹೋದ,

ಆತನಿಗೆ ನಾನಂದ್ರೆ ಇಷ್ಟ, ಅದಕ್ಕೇ ನನ್ನನ್ನ ಕಾಪಾಡಿದ.+

20 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ತಾನೆ,+

ನನ್ನ ಮುಗ್ಧತೆಗೆ* ತಕ್ಕ ಬಹುಮಾನ ಕೊಡ್ತಾನೆ.+

21 ಯಾಕಂದ್ರೆ ನಾನು ಯೆಹೋವನ ದಾರಿಯಲ್ಲೇ ನಡೆದಿದ್ದೀನಿ,

ನಾನು ಕೆಟ್ಟದ್ದನ್ನ ಮಾಡಿ ನನ್ನ ದೇವರನ್ನ ಬಿಟ್ಟುಬಿಡಲಿಲ್ಲ.

22 ಆತನ ಎಲ್ಲ ತೀರ್ಪುಗಳು ನನ್ನ ಮುಂದಿವೆ,

ಆತನ ನಿಯಮಗಳನ್ನ ನಾನು ಗಾಳಿಗೆ ತೂರಲ್ಲ.

23 ನಾನು ಅವನ ಮುಂದೆ ಯಾವ ತಪ್ಪೂ ಇಲ್ಲದವನಾಗಿ ಇರ್ತಿನಿ,+

ಕೆಟ್ಟದ್ದರಿಂದ ದೂರ ಇರ್ತಿನಿ.+

24 ಯೆಹೋವ ನನ್ನ ನೀತಿಗೆ ತಕ್ಕ ಪ್ರತಿಫಲ ಕೊಡ್ಲಿ,+

ಆತನೇ ನನ್ನ ಮುಗ್ಧತೆಯನ್ನ ಕಣ್ಣಾರೆ ನೋಡಿ ತಕ್ಕ ಬಹುಮಾನ ಕೊಡ್ಲಿ.+

25 ನಿಷ್ಠಾವಂತನಿಗೆ ನೀನು ನಿಷ್ಠಾವಂತನಾಗಿ,+

ನಿಷ್ಕಳಂಕನಿಗೆ ನೀನು ನಿಷ್ಕಳಂಕನಾಗಿ ಇರ್ತಿಯ.+

26 ಶುದ್ಧನಿಗೆ ನೀನು ಪರಿಶುದ್ಧನಾಗಿ,+

ವಕ್ರನಿಗೆ ನೀನು ಜಾಣನಾಗಿ ಇರ್ತಿಯ.+

27 ದೀನರನ್ನ ನೀನು ರಕ್ಷಿಸ್ತೀಯ,+

ಆದ್ರೆ ದುರಹಂಕಾರಿಗಳ ಕೈ ಬಿಟ್ಟುಬಿಡ್ತೀಯ.+

28 ಯಾಕಂದ್ರೆ ಯೆಹೋವನೇ, ನನ್ನ ದೀಪವನ್ನ ಬೆಳಗುವವನು ನೀನೇ.

ನನ್ನ ದೇವರು ಕತ್ತಲನ್ನ ಬೆಳಕಾಗಿ ಬದಲಾಯಿಸ್ತಾನೆ.+

29 ನಿನ್ನ ಸಹಾಯದಿಂದ ನಾನು ಲೂಟಿಗಾರರ ಗುಂಪಿನ ಮೇಲೆ ದಾಳಿಮಾಡ್ತೀನಿ,+

ದೇವರ ಬಲದಿಂದ ನಾನು ಗೋಡೆಯನ್ನೂ ಜಿಗಿತೀನಿ.+

30 ಸತ್ಯ ದೇವರ ದಾರಿ ಪರಿಪೂರ್ಣವಾಗಿದೆ,+

ಯೆಹೋವನ ಮಾತುಗಳು ಶುದ್ಧವಾಗಿವೆ.+

ಆತನಲ್ಲಿ ಆಶ್ರಯ ಪಡೆಯೋ ಜನ್ರಿಗೆ ಆತನೇ ಗುರಾಣಿ.+

31 ಯೆಹೋವನನ್ನ ಬಿಟ್ಟು ಬೇರೆ ದೇವರಿದ್ದಾನಾ?+

ನಮ್ಮ ದೇವರನ್ನು ಬಿಟ್ಟು ಬೇರೆ ಆಶ್ರಯ* ಇದ್ಯಾ?+

32 ನನಗೆ ಸತ್ಯ ದೇವರೇ ಬಲವನ್ನ ಬಟ್ಟೆ ತರ ತೊಡಿಸ್ತಾನೆ,+

ಆತನೇ ನನ್ನ ದಾರಿನ ಸುಗಮ ಮಾಡ್ತಾನೆ.+

33 ಆತನು ನನ್ನ ಕಾಲುಗಳನ್ನ ಜಿಂಕೆ ಕಾಲಿನ ತರ ಮಾಡ್ತಾನೆ,

ಆತನು ನನ್ನನ್ನ ಎತ್ತರವಾದ ಜಾಗದಲ್ಲಿ ನಿಲ್ಲಿಸ್ತಾನೆ.+

34 ಯುದ್ಧ ಮಾಡೋಕೆ ಆತನು ನನ್ನ ಕೈಗಳಿಗೆ ತರಬೇತಿ ಕೊಡ್ತಾನೆ,

ಹಾಗಾಗಿ ನನ್ನ ತೋಳು ತಾಮ್ರದ ಬಿಲ್ಲನ್ನೂ ಬಗ್ಗಿಸುತ್ತೆ.

35 ನೀನು ನಿನ್ನ ರಕ್ಷಣೆಯ ಗುರಾಣಿಯನ್ನ ನನಗೆ ಕೊಡ್ತೀಯ,+

ನಿನ್ನ ಬಲಗೈ ನನಗೆ ಆಸರೆಯಾಗಿದೆ.*

ನಿನ್ನ ದೀನತೆ ನನಗೆ ಹೆಸ್ರು ತರುತ್ತೆ.+

36 ನನ್ನ ಪಾದಗಳು* ಜಾರದ ಹಾಗೆ,

ನೀನು ದಾರಿಯನ್ನ ನನಗಾಗಿ ಅಗಲ ಮಾಡ್ತೀಯ.+

37 ನಾನು ನನ್ನ ಶತ್ರುಗಳನ್ನ ಅಟ್ಟಿಸ್ಕೊಂಡು ಅವ್ರನ್ನ ನಾಶ ಮಾಡ್ತೀನಿ,

ಅವರು ನಿರ್ನಾಮ ಆಗೋ ತನಕ ನಾನು ವಾಪಸ್‌ ಬರಲ್ಲ.

38 ಅವರು ಎದ್ದೇಳದ ಹಾಗೆ ನಾನು ಅವ್ರನ್ನ ತುಳಿದುಬಿಡ್ತಿನಿ.+

ಅವರು ನನ್ನ ಪಾದಗಳ ಕೆಳಗೆ ಬೀಳ್ತಾರೆ.

39 ಯುದ್ಧಕ್ಕೆ ಬೇಕಾಗಿರೋ ಬಲನ ಕೊಟ್ಟು ನೀನು ನನ್ನನ್ನ ಸಿದ್ಧಮಾಡ್ತೀಯ,

ಶತ್ರುಗಳು ಕುಸಿದು ನನ್ನ ಕೆಳಗೆ ಬೀಳೋ ತರ ಮಾಡ್ತೀಯ.+

40 ನನ್ನ ಶತ್ರುಗಳು ನನ್ನನ್ನ ಬಿಟ್ಟು ಓಡಿ ಹೋಗೋ ಹಾಗೆ ಮಾಡ್ತೀಯ,

ನನ್ನನ್ನ ದ್ವೇಷಿಸೋರನ್ನ ನಾನು ಕೊನೆಗಾಣಿಸ್ತೀನಿ.*+

41 ಅವರು ಸಹಾಯಕ್ಕಾಗಿ ಕೂಗ್ತಾರೆ ಆದ್ರೆ ಯಾರೂ ಬರಲ್ಲ,

ಅವರು ಯೆಹೋವನನ್ನ ಕೂಗಿದ್ರೂ ಆತನು ಅವ್ರಿಗೆ ಉತ್ತರ ಕೊಡಲ್ಲ.

42 ನಾನು ಅವ್ರನ್ನ ಕುಟ್ಟಿ, ಗಾಳಿಯಲ್ಲಿ ಹಾರಿಹೋಗೋ ಧೂಳಿನ ತರ ಮಾಡ್ತೀನಿ,

ನಾನು ಅವ್ರನ್ನ ಬೀದಿಯ ಮಣ್ಣಿನ ತರ ಎಸೆದುಬಿಡ್ತಿನಿ.

43 ತಪ್ಪು ಹುಡುಕೋ ಜನ್ರಿಂದ ನೀನು ನನ್ನನ್ನ ಕಾಪಾಡ್ತೀಯ,+

ನೀನು ನನ್ನನ್ನ ದೇಶದ ಅಧಿಪತಿಯಾಗಿ ನೇಮಿಸ್ತೀಯ,+

ನನಗೆ ಪರಿಚಯನೇ ಇಲ್ಲದ ಜನ್ರು ನನ್ನ ಸೇವೆ ಮಾಡ್ತಾರೆ.+

44 ವಿದೇಶಿಯರು ನನ್ನ ಬಗ್ಗೆ ಬರೀ ಕೇಳಿಸ್ಕೊಂಡೇ ನನಗೆ ಅಧೀನರಾಗ್ತಾರೆ.

ಅವರು ನನ್ನ ಮುಂದೆ ಅಂಗಲಾಚ್ತಾರೆ.+

45 ವಿದೇಶಿಯರು ತಮ್ಮ ಧೈರ್ಯ ಕಳ್ಕೊಳ್ತಾರೆ,

ಅವರು ತಮ್ಮ ಕೋಟೆಯಿಂದ ನಡುಗ್ತಾ ಹೊರಗೆ ಬರ್ತಾರೆ.

46 ಯೆಹೋವ ಜೀವ ಇರೋ ದೇವರು! ನನ್ನ ಆಶ್ರಯ ಕೋಟೆಗೆ ಹೊಗಳಿಕೆ ಸಿಗಲಿ!+

ನನ್ನ ರಕ್ಷಣೆಯ ದೇವರಿಗೆ ಗೌರವ ಸಲ್ಲಲಿ.+

47 ಸತ್ಯ ದೇವರು ನನ್ನ ಪರವಾಗಿ ಸೇಡು ತೀರಿಸ್ತಾನೆ,+

ಜನಾಂಗಗಳ ಜನರನ್ನ ನನ್ನ ಕೈಕೆಳಗೆ ಹಾಕ್ತಾನೆ.

48 ಕೋಪದಿಂದ ಉರಿತಿರೋ ನನ್ನ ಶತ್ರುಗಳಿಂದ ಆತನು ನನ್ನನ್ನ ಕಾಪಾಡ್ತಾನೆ.

ನನ್ನ ಮೇಲೆ ದಾಳಿ ಮಾಡೋರಿಂದ ನೀನು ನನ್ನನ್ನ ಮೇಲೆಕ್ಕೆ ಎತ್ತುತ್ತೀಯ,+

ಹಿಂಸೆ ಕೊಡೋರಿಂದ ನೀನು ನನ್ನನ್ನ ರಕ್ಷಿಸ್ತೀಯ.

49 ಹಾಗಾಗಿ ಯೆಹೋವನೇ, ನಾನು ಎಲ್ಲ ಜನ್ರ ಮುಂದೆ ಗೌರವ ಕೊಡ್ತೀನಿ,+

ನಿನ್ನ ಹೆಸ್ರಿಗೆ ಘನತೆ ಬರೋ ತರ ಹಾಡು ಹಾಡ್ತೀನಿ.*+

50 ಆತನು ತನ್ನ ರಾಜನಿಗಾಗಿ ಭಾರೀ ಜಯ ಕೊಡ್ತಾನೆ,+

ಆತನು ತನ್ನ ಅಭಿಷಿಕ್ತ ದಾವೀದನ ಕಡೆ,+

ಅವನ ಸಂತತಿಯ ಕಡೆ ಶಾಶ್ವತ ಪ್ರೀತಿ ತೋರಿಸ್ತಾನೆ.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

19 ಆಕಾಶ ದೇವರ ಮಹಿಮೆಯನ್ನ ಸಾರಿ ಹೇಳುತ್ತೆ,+

ಗಗನ ಆತನ ಸೃಷ್ಟಿಯನ್ನ ವಿವರಿಸುತ್ತೆ.+

 2 ಪ್ರತಿದಿನ ಅವುಗಳ ಬಾಯಿಂದ ಆತನನ್ನ ಹೊಗಳೋ ಮಾತುಗಳು ಉಕ್ಕಿಹರಿಯುತ್ತೆ,

ಪ್ರತಿರಾತ್ರಿ ಅವು ಜ್ಞಾನವನ್ನ ತೋರಿಸುತ್ತೆ.

 3 ಮಾತಿಲ್ಲ, ಪದಗಳಿಲ್ಲ,

ಅವುಗಳ ಧ್ವನಿನೂ ಕೇಳಿಸಲ್ಲ.

 4 ಆದ್ರೂ ಇಡೀ ಭೂಮಿಯಲ್ಲಿ ಅವುಗಳ ಶಬ್ದ ಪ್ರತಿಧ್ವನಿಸುತ್ತೆ,

ಭೂಮಿಯ* ಮೂಲೆಮೂಲೆಗೂ ಅವುಗಳ ಸಂದೇಶ ತಲುಪುತ್ತೆ.+

ಆತನು ಆಕಾಶದಲ್ಲಿ ಸೂರ್ಯನಿಗಾಗಿ ಡೇರೆ ಹಾಕಿದ್ದಾನೆ,

 5 ಸೂರ್ಯ ತನ್ನ ಕೋಣೆಯಿಂದ ಹೊರಗೆ ಬರೋ ಮದುಮಗನ ತರ ಇದ್ದಾನೆ.

ತನ್ನ ದಾರಿಯಲ್ಲಿ ಬೀಗುತ್ತಾ ಓಡೋ ವೀರ ಸೈನಿಕನ ತರ ಇದ್ದಾನೆ.

 6 ಸೂರ್ಯ ಆಕಾಶದ ಒಂದು ತುದಿಯಿಂದ,

ಇನ್ನೊಂದು ತುದಿಗೆ ಸುತ್ತುತ್ತಾನೆ.+

ಅವನ ಶಾಖ ತಲುಪದ ಸ್ಥಳ ಒಂದೂ ಇಲ್ಲ.

 7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+

ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+

 8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+

ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+

 9 ಯೆಹೋವನ ಭಯ+ ಪವಿತ್ರ. ಅದು ಯಾವಾಗ್ಲೂ ಇರುತ್ತೆ.

ಯೆಹೋವನ ತೀರ್ಪುಗಳು ಸತ್ಯ, ಅವೆಲ್ಲ ನ್ಯಾಯವಾಗಿರುತ್ತೆ.+

10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,

ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+

ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+

11 ನಿನ್ನ ಸೇವಕನಿಗೆ ಅದ್ರಿಂದ ಎಚ್ಚರಿಕೆ ಸಿಗುತ್ತೆ,+

ಅವನ್ನ ಪಾಲಿಸಿದ್ರೆ ದೊಡ್ಡ ಬಹುಮಾನ ಸಿಗುತ್ತೆ.+

12 ತಮ್ಮ ಸ್ವಂತ ತಪ್ಪನ್ನ ಯಾರು ಅರ್ಥಮಾಡ್ಕೊಳ್ತಾರೆ?+

ಗೊತ್ತಿಲ್ಲದೆ ನಾನು ಮಾಡೋ ಪಾಪಗಳನ್ನ ಕ್ಷಮಿಸಿ ನನಗೆ ನಿರ್ದೋಷಿ ಅಂತ ತೀರ್ಪು ಕೊಡು.

13 ಅಹಂಕಾರದ ಕೆಲಸಗಳನ್ನ ಮಾಡದ ಹಾಗೆ ನಿನ್ನ ಸೇವಕನನ್ನ ತಡಿ,+

ಅವು ನನ್ನ ಮೇಲೆ ದಬ್ಬಾಳಿಕೆ ಮಾಡೋಕೆ ಬಿಡಬೇಡ.+

ಆಗ ದೊಡ್ಡ ಪಾಪಗಳನ್ನ* ಮಾಡಲ್ಲ,+

ನನ್ನ ಮೇಲೆ ಯಾವ ಆರೋಪನೂ ಇರಲ್ಲ.

14 ಯೆಹೋವನೇ, ನನ್ನ ಬಂಡೆಯೇ,+ ನನ್ನನ್ನ ಬಿಡಿಸುವವನೇ,+

ನನ್ನ ಮಾತು ಮತ್ತು ನನ್ನ ಹೃದಯದ ಧ್ಯಾನ ನಿನ್ನನ್ನ ಮೆಚ್ಚಿಸಲಿ.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

20 ಕಷ್ಟದ ದಿನಗಳಲ್ಲಿ ಯೆಹೋವ ನಿನ್ನ ಪ್ರಾರ್ಥನೆಗೆ ಉತ್ತರ ಕೊಡಲಿ.

ಯಾಕೋಬನ ದೇವರ ಹೆಸ್ರು ನಿನ್ನನ್ನ ಕಾಪಾಡಲಿ.+

 2 ಸ್ವರ್ಗದಿಂದ ಆತನು ನಿನಗೆ ಸಹಾಯಮಾಡಲಿ,+

ಚೀಯೋನಿಂದ ಆತನು ನಿನಗೆ ಆಸರೆ ನೀಡಲಿ.+

 3 ನೀನು ಕೊಟ್ಟ ಎಲ್ಲ ಉಡುಗೊರೆ ಅರ್ಪಣೆಗಳನ್ನ ಆತನು ನೆನಪಲ್ಲಿ ಇಟ್ಕೊಳ್ಳಲಿ,

ಆತನು ನಿನ್ನ ಸರ್ವಾಂಗಹೋಮ ಬಲಿನ ಸಂತೋಷದಿಂದ ಸ್ವೀಕರಿಸಲಿ. (ಸೆಲಾ)

 4 ನಿನ್ನ ಹೃದಯದ ಆಸೆಗಳನ್ನ ಆತನು ನಿಜಮಾಡ್ಲಿ.+

ನಿನ್ನ ಎಲ್ಲಾ ಯೋಜನೆಗಳನ್ನ* ಆತನು ಸಫಲಮಾಡ್ಲಿ.

 5 ನೀನು ನಮ್ಮನ್ನ ಬಿಡಿಸೋದನ್ನ ನೋಡಿ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ,+

ನಾವು ನಮ್ಮ ದೇವರ ಹೆಸ್ರಲ್ಲಿ ಧ್ವಜಗಳನ್ನ ಎತ್ತಿ ಹಿಡಿತೀವಿ.+

ಯೆಹೋವ ನಿನ್ನೆಲ್ಲ ಕೋರಿಕೆಗಳನ್ನ ಈಡೇರಿಸಲಿ.

 6 ಯೆಹೋವ ತಾನು ಅಭಿಷೇಕ ಮಾಡಿದವ್ರನ್ನ ಕಾಪಾಡ್ತಾನೆ ಅಂತ ಈಗ ನನಗೆ ಗೊತ್ತಾಯ್ತು.+

ತನ್ನ ಪವಿತ್ರ ಸ್ವರ್ಗದಿಂದ ಅವನ ಪ್ರಾರ್ಥನೆಗೆ ಉತ್ತರ ಕೊಡ್ತಾನೆ.

ತನ್ನ ಬಲಗೈಯಿಂದ ಭಾರೀ ಜಯವನ್ನ* ಕೊಡ್ತಾನೆ.+

 7 ಸ್ವಲ್ಪ ಜನ ರಥಗಳನ್ನ, ಇನ್ನೂ ಸ್ವಲ್ಪ ಜನ ಕುದುರೆಗಳನ್ನ ನಂಬ್ಕೊಂಡಿದ್ದಾರೆ.+

ಆದ್ರೆ ನಾವು ನಮ್ಮ ದೇವರಾದ ಯೆಹೋವನ ಹೆಸ್ರನ್ನ ನಂಬ್ಕೊಂಡಿದ್ದೀವಿ.+

 8 ಅವರು ಸೋತು ಹೋಗ್ತಾರೆ, ಬಿದ್ದು ಹೋಗ್ತಾರೆ.

ಆದ್ರೆ ನಾವು ಎದ್ದು ನೆಟ್ಟಗೆ ನಿಂತಿದ್ದೀವಿ.+

 9 ಯೆಹೋವನೇ, ರಾಜನನ್ನ ಕಾಪಾಡು!+

ನಾವು ಕರೆಯೋ ದಿನ ನಮಗೆ ಉತ್ತರ ಕೊಡು.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

21 ಯೆಹೋವನೇ! ನಿನ್ನ ಶಕ್ತಿಯಿಂದ ರಾಜ ಖುಷಿಪಡ್ತಾನೆ,+

ನಿನ್ನ ರಕ್ಷಣೆಯಿಂದ ತುಂಬ ಸಂತೋಷಪಡ್ತಾನೆ!+

 2 ನೀನು ಅವನ ಮನಸ್ಸಲ್ಲಿರೋ ಬಯಕೆಯನ್ನ ನಿಜ ಮಾಡ್ತೀಯ,+

ಅವನ ತುಟಿಗಳ ಕೋರಿಕೆಯನ್ನ ನೆರವೇರಿಸ್ತೀಯ. (ಸೆಲಾ)

 3 ತುಂಬ ಆಶೀರ್ವಾದಗಳ ಜೊತೆ ನೀನು ಅವನನ್ನ ಭೇಟಿಮಾಡ್ತೀಯ,

ಅವನ ತಲೆ ಮೇಲೆ ಅಪ್ಪಟ* ಚಿನ್ನದ ಕಿರೀಟ ಇಡ್ತೀಯ.+

 4 ಅವನು ನಿನ್ನ ಹತ್ರ ಜೀವ ಕೇಳಿಕೊಂಡ, ನೀನು ಅದನ್ನ ಅವನಿಗೆ ಕೊಟ್ಟೆ,+

ಅವನಿಗೆ ದೀರ್ಘ ಆಯುಷ್ಯವನ್ನ, ಶಾಶ್ವತ ಜೀವವನ್ನ ಕೊಟ್ಟೆ.

 5 ಅವನನ್ನ ಬಿಡಿಸೋಕೆ ನೀನು ಮಾಡೋ ಕೆಲಸಗಳು ಅವನಿಗೆ ಗೌರವ ತರುತ್ತೆ,+

ಘನತೆ, ವೈಭವವನ್ನ ನೀನು ಅವನಿಗೆ ಕೊಡ್ತೀಯ.

 6 ಯಾವಾಗ್ಲೂ ಅವನಿಗೆ ಆಶೀರ್ವಾದ ಸಿಗೋ ತರ ಮಾಡ್ತೀಯ,+

ನೀನು ಅವನ ಜೊತೆ ಇದ್ದು ಅವನಿಗೆ ಖುಷಿ ಕೊಡ್ತೀಯ.+

 7 ಯಾಕಂದ್ರೆ ರಾಜ ಯೆಹೋವನಲ್ಲಿ ಭರವಸೆ ಇಟ್ಟಿದ್ದಾನೆ.+

ಸರ್ವೋನ್ನತನ ಶಾಶ್ವತ ಪ್ರೀತಿಯಿಂದಾಗಿ ಅವನು ಯಾವತ್ತೂ ಕದಲಲ್ಲ.+

 8 ನಿನ್ನ ಶತ್ರುಗಳನ್ನೆಲ್ಲ ನಿನ್ನ ಕೈ ಹುಡುಕುತ್ತೆ,

ನಿನ್ನನ್ನ ದ್ವೇಷಿಸೋರನ್ನ ನಿನ್ನ ಬಲಗೈ ಶೋಧಿಸುತ್ತೆ.

 9 ನೀನು ಬರೋವಾಗ ಅವರು ಉರಿಯೋ ಕುಲುಮೆಯಲ್ಲಿ ನಾಶವಾಗೋ ವಸ್ತುಗಳ ತರ ನಾಶವಾಗ್ತಾರೆ.

ಯೆಹೋವ ತನ್ನ ಕೋಪದಿಂದ ಅವರನ್ನ ನುಂಗಿಬಿಡ್ತಾನೆ. ಬೆಂಕಿ ಅವರನ್ನ ಸುಟ್ಟುಬಿಡುತ್ತೆ.+

10 ಅವರ ವಂಶದವರನ್ನ* ನೀನು ಭೂಮಿಯಿಂದ ಅಳಿಸಿಹಾಕ್ತೀಯ.

ಅವರ ಸಂತತಿಯನ್ನ ಮನುಷ್ಯರ ಮಧ್ಯದಿಂದ ತೆಗೆದುಹಾಕ್ತೀಯ.

11 ಯಾಕಂದ್ರೆ ಅವರು ನಿನಗೆ ಕೆಟ್ಟದ್ದನ್ನ ಮಾಡೋಕೆ ಬಯಸಿದ್ರು,+

ನಿನ್ನ ವಿರುದ್ಧ ಸಂಚು ಮಾಡಿದ್ರು. ಆದ್ರೆ ಅವು ನಡೀಲಿಲ್ಲ.+

12 ನೀನು ಅವರ ಕಡೆ* ಬಾಣವನ್ನ* ಗುರಿಯಿಟ್ಟು,

ಅವರು ವಾಪಸ್‌ ಹೋಗೋ ತರ ಮಾಡ್ತೀಯ.+

13 ಯೆಹೋವನೇ, ದಯವಿಟ್ಟು ನಿನ್ನ ಬಲ ತೋರಿಸು.

ನಿನ್ನ ಶಕ್ತಿ ಬಗ್ಗೆ ನಾವು ಹಾಡಿ ಹೊಗಳ್ತೀವಿ.*

ಗಾಯಕರ ನಿರ್ದೇಶಕನಿಗೆ ಸೂಚನೆ: ಇದನ್ನ “ಅರುಣೋದಯದ ಹರಿಣಿ”* ರಾಗದಲ್ಲಿ ಹಾಡಬೇಕು. ದಾವೀದನ ಮಧುರ ಗೀತೆ.

22 ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನ ಕೈಬಿಟ್ಟೆ?+

ನನ್ನನ್ನ ರಕ್ಷಿಸದೆ, ನನ್ನ ಅಳು ಕೇಳದೆ ಯಾಕೆ ದೂರವಾಗಿದ್ದೀಯ?+

 2 ನನ್ನ ದೇವರೇ, ಹಗಲೆಲ್ಲಾ ನಾನು ನಿನ್ನನ್ನ ಕರೀತಾ ಇರ್ತಿನಿ, ಆದ್ರೆ ನೀನು ಉತ್ತರ ಕೊಡಲ್ಲ.+

ರಾತ್ರಿನೂ ನನ್ನಿಂದ ಸುಮ್ಮನಿರೋಕೆ ಆಗಲ್ಲ.

 3 ಆದ್ರೆ ನೀನು ಪವಿತ್ರನು,+

ಇಸ್ರಾಯೇಲ್ಯರ ಹೊಗಳಿಕೆಗಳ ಮಧ್ಯೆ ಕೂತಿರೋನು.

 4 ನಮ್ಮ ಪೂರ್ವಜರು ನಿನ್ನ ಮೇಲೆ ಭರವಸೆ ಇಟ್ರು,+

ಹೌದು, ಅವರು ಭರವಸೆ ಇಟ್ರು, ನೀನು ಅವ್ರನ್ನ ಕಾಪಾಡ್ತಾ ಬಂದೆ.+

 5 ನಿನ್ನಲ್ಲಿ ಅವರು ಅಳಲನ್ನ ತೋಡ್ಕೊಂಡ್ರು. ನೀನು ಅವ್ರನ್ನ ರಕ್ಷಿಸಿದೆ.

ನಿನ್ನಲ್ಲಿ ಅವರು ಭರವಸೆ ಇಟ್ರು. ನಿನ್ನಿಂದ ಅವ್ರಿಗೆ ನಿರಾಶೆ ಆಗಲಿಲ್ಲ.*+

 6 ಆದ್ರೆ ಜನ್ರು ನನಗೆ ಅವಮಾನ ಮಾಡ್ತಾರೆ,* ಕೀಳಾಗಿ ನೋಡ್ತಾರೆ.+

ಅವ್ರ ದೃಷ್ಟಿಯಲ್ಲಿ ನಾನು ಒಬ್ಬ ಮನುಷ್ಯನಲ್ಲ, ಒಂದು ಹುಳ.

 7 ನನ್ನನ್ನ ನೋಡೋರೆಲ್ಲ ನನ್ನನ್ನ ಗೇಲಿ ಮಾಡ್ತಾರೆ,+

ನನ್ನ ಬಗ್ಗೆ ವ್ಯಂಗ್ಯವಾಗಿ ಮಾತಾಡ್ತಾರೆ. ತಲೆ ಅಲ್ಲಾಡಿಸಿ ಅಣಕಿಸ್ತಾ,+

 8 “ಇವನು ತನ್ನನ್ನ ಯೆಹೋವನಿಗೆ ಒಪ್ಪಿಸ್ಕೊಂಡಿದ್ದ. ಆತನೇ ಇವನನ್ನ ಕಾಪಾಡಲಿ!

ದೇವರಿಗೆ ಇವನನ್ನ ಕಂಡ್ರೆ ತುಂಬ ಇಷ್ಟ ಅಂದಮೇಲೆ ಆತನೇ ಇವನನ್ನ ರಕ್ಷಿಸಲಿ!” ಅಂತಾರೆ.+

 9 ನನ್ನನ್ನ ಅಮ್ಮನ ಹೊಟ್ಟೆಯಿಂದ ಹೊರಗೆ ತಂದವನು ನೀನೇ,+

ಅಮ್ಮನ ಎದೆಯಲ್ಲಿ ನಿಶ್ಚಿಂತೆಯಿಂದ ಇರೋ ತರ ಮಾಡಿದವನೂ ನೀನೇ.

10 ನಾನು ಹುಟ್ಟಿದ ತಕ್ಷಣ ನನ್ನ ಆರೈಕೆಯನ್ನ ನಿನಗೆ ಒಪ್ಪಿಸಿದ್ರು,

ನಾನು ನನ್ನ ಅಮ್ಮನ ಹೊಟ್ಟೆಯಲ್ಲಿ ಇದ್ದಾಗಿಂದ ನೀನೇ ನನ್ನ ದೇವರು.

11 ತೊಂದ್ರೆ ನನ್ನ ಹತ್ರಾನೇ ಇರೋದ್ರಿಂದ ನೀನು ನನ್ನಿಂದ ದೂರ ಇರಬೇಡ.+

ಬೇರೆ ಯಾವ ಸಹಾಯಕನೂ ನನಗಿಲ್ಲ.+

12 ತುಂಬ ಎಳೇ ಹೋರಿಗಳು ನನ್ನನ್ನ ಸುತ್ಕೊಂಡಿವೆ,+

ಬಾಷಾನಿನ ಬಲಿಷ್ಠ ಹೋರಿಗಳು ನನ್ನನ್ನ ಮುತ್ಕೊಂಡಿವೆ.+

13 ಗರ್ಜಿಸ್ತಾ ತನ್ನ ಬೇಟೆನ ತುಂಡುತುಂಡು ಮಾಡೋ ಸಿಂಹದ ತರ,+

ಶತ್ರುಗಳು ತಮ್ಮ ಬಾಯನ್ನ ಅಗಲವಾಗಿ ತಕ್ಕೊಂಡು ನನ್ನ ವಿರುದ್ಧ ಬಂದಿದ್ದಾರೆ.+

14 ನನ್ನನ್ನ ನೀರಿನ ತರ ಸುರೀತಿದ್ದಾರೆ,

ನನ್ನ ಎಲುಬು ಕಳಚ್ಕೊಂಡು ಬರ್ತಿದೆ.

ನನ್ನ ಹೃದಯ ಮೇಣದ ತರ,+

ನನ್ನೊಳಗೇ ಕರಗಿ ಹೋಗಿದೆ.+

15 ಮಡಿಕೆ ತುಂಡಿನ ತರ ನನ್ನ ಶಕ್ತಿ ಒಣಗಿ ಹೋಗಿದೆ,+

ನನ್ನ ನಾಲಿಗೆ ನನ್ನ ವಸಡಿಗೆ ಅಂಟ್ಕೊಂಡಿದೆ,+

ನೀನು ನನ್ನನ್ನ ಸಾವಿನ ಧೂಳಲ್ಲಿ ಬೀಳಿಸ್ತಿದ್ದೀಯ.+

16 ಅವರು ನಾಯಿಗಳ ತರ ನನ್ನನ್ನ ಸುತ್ಕೊಂಡಿದ್ದಾರೆ,+

ಎಲ್ಲ ಕಡೆಯಿಂದ ದುಷ್ಟರು ನನ್ನನ್ನ ಮುತ್ಕೊಂಡಿದ್ದಾರೆ,+

ಅವರು ಸಿಂಹದ ತರ ನನ್ನ ಕೈಕಾಲನ್ನ ಕಚ್ತಿದ್ದಾರೆ.+

17 ನಾನು ನನ್ನ ಎಲ್ಲ ಎಲುಬನ್ನ ಎಣಿಸಬಹುದು.+

ಅವರು ನನ್ನನ್ನೇ ನೋಡ್ತಾ ಗುರಾಯಿಸ್ತಿದ್ದಾರೆ.

18 ಅವರು ತಮ್ಮತಮ್ಮಲ್ಲೇ ನನ್ನ ಬಟ್ಟೆಗಳನ್ನ ಹಂಚ್ಕೊಳ್ತಾರೆ,

ನನ್ನ ಬಟ್ಟೆಗಾಗಿ ಚೀಟಿ ಹಾಕ್ತಾರೆ.+

19 ಆದ್ರೆ ಯೆಹೋವನೇ, ನನ್ನಿಂದ ದೂರ ಇರಬೇಡ.+

ನೀನೇ ನನ್ನ ಬಲ. ದಯವಿಟ್ಟು ಬೇಗ ಬಂದು ನನಗೆ ಸಹಾಯಮಾಡು.+

20 ಕತ್ತಿಯಿಂದ ನನ್ನನ್ನ ಕಾಪಾಡು,

ನನ್ನ ಅಮೂಲ್ಯ ಪ್ರಾಣವನ್ನ ನಾಯಿಗಳ ಕೈಯಿಂದ ರಕ್ಷಿಸು.+

21 ಸಿಂಹದ ಬಾಯಿಂದ, ಕಾಡುಕೋಣಗಳ ಕೊಂಬಿಂದ ಕಾಪಾಡು.+

ನನಗೆ ಉತ್ರ ಕೊಡು, ನನ್ನನ್ನ ಉಳಿಸು.

22 ನಾನು ನನ್ನ ಅಣ್ಣತಮ್ಮಂದಿರ ಮಧ್ಯ ನಿನ್ನ ಹೆಸ್ರನ್ನ ಹೇಳ್ತೀನಿ,+

ಸಭೆಯ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ.+

23 ಯೆಹೋವನಿಗೆ ಭಯಪಡುವವರೇ, ಆತನನ್ನ ಹೊಗಳಿ!

ಯಾಕೋಬನ ವಂಶದವರೇ, ನೀವೆಲ್ಲ ಆತನಿಗೆ ಗೌರವಕೊಡಿ!+

ಇಸ್ರಾಯೇಲನ ವಂಶದವರೇ, ಆತನಿಗೆ ಭಯಭಕ್ತಿ ತೋರಿಸಿ.

24 ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+

ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+

ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+

25 ಮಹಾಸಭೆಯಲ್ಲಿ ನಾನು ನಿನ್ನನ್ನ ಹೊಗಳ್ತೀನಿ,+

ನಿನಗೆ ಭಯಪಡೋರ ಮುಂದೆ ನಾನು ನನ್ನ ಹರಕೆಗಳನ್ನ ತೀರಿಸ್ತೀನಿ.

26 ದೀನರು ತಿಂದು ತೃಪ್ತರಾಗ್ತಾರೆ,+

ಯೆಹೋವನಿಗಾಗಿ ಹುಡುಕುವವರು ಆತನನ್ನ ಹೊಗಳ್ತಾರೆ.+

ನೀವು ಶಾಶ್ವತಕ್ಕೂ ಜೀವನವನ್ನ ಆನಂದಿಸಬೇಕು.*

27 ಭೂಮಿಯ ಮೂಲೆಮೂಲೆಯಲ್ಲೂ ಯೆಹೋವನನ್ನ ನೆನಪಿಸ್ಕೊಳ್ತಾರೆ, ಆತನ ಕಡೆ ತಿರುಗ್ತಾರೆ.

ದೇಶಗಳ ಎಲ್ಲ ಕುಟುಂಬಗಳು ನಿನ್ನ ಮುಂದೆ ಬಗ್ಗಿ ನಮಸ್ಕರಿಸ್ತಾರೆ.+

28 ಯಾಕಂದ್ರೆ ಆಳೋ ಅಧಿಕಾರ ಯೆಹೋವನಿಗೆ ಮಾತ್ರ ಇದೆ,+

ಆತನು ಎಲ್ಲ ದೇಶಗಳನ್ನ ಆಳ್ತಾನೆ.

29 ಭೂಮಿ ಮೇಲಿರೋ ಎಲ್ಲ ಶ್ರೀಮಂತರು* ಊಟಮಾಡಿ ಆತನಿಗೆ ಬಗ್ಗಿ ನಮಸ್ಕರಿಸ್ತಾರೆ,

ಮಣ್ಣಿಗೆ ಸೇರೋರೆಲ್ಲ ಆತನ ಮುಂದೆ ಮೊಣಕಾಲೂರಿ ಕೂತ್ಕೊತಾರೆ,

ಅವರು ಯಾರೂ ತಮ್ಮ ಜೀವನ ಕಾಪಾಡ್ಕೊಳ್ಳೋಕೆ ಆಗಲ್ಲ.

30 ಅವ್ರ ವಂಶದವರು ಆತನನ್ನ ಆರಾಧಿಸ್ತಾರೆ,

ಮುಂದೆ ಬರೋ ಪೀಳಿಗೆ ಯೆಹೋವನ ಬಗ್ಗೆ ಕಲಿಯುತ್ತೆ.

31 ಅವರು ಬಂದು ಆತನ ನೀತಿಯ ಬಗ್ಗೆ ಹೇಳ್ತಾರೆ.

ಆತನು ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸ್ತಾರೆ.

ದಾವೀದನ ಮಧುರ ಗೀತೆ.

23 ಯೆಹೋವ ನನ್ನ ಕುರುಬ.+

ನನಗೆ ಯಾವ ಕೊರತೆನೂ ಇರಲ್ಲ.+

 2 ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ ಆತನು ನನ್ನನ್ನ ಮಲಗಿಸ್ತಾನೆ,

ವಿಶ್ರಾಂತಿ ಪಡೆಯೋಕೆ ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ* ಆತನು ನನ್ನನ್ನ ನಡಿಸ್ತಾನೆ.+

 3 ಆತನು ನನಗೆ ಹೊಸಬಲ ಕೊಡ್ತಾನೆ.+

ನನ್ನನ್ನ ಒಳ್ಳೇ ದಾರಿಯಲ್ಲಿ ನಡಿಸಿ ಆತನ ಹೆಸ್ರಿಗೆ ತಕ್ಕ ಹಾಗೆ ನಡೀತಾನೆ.+

 4 ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ,+

ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ,+

ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ,+

ನಿನ್ನ ಕೋಲು, ನಿನ್ನ ಬೆತ್ತ ನನಗೆ ಧೈರ್ಯ* ಕೊಡುತ್ತೆ.

 5 ನನ್ನ ಶತ್ರುಗಳ ಮುಂದೆ ನೀನು ನನಗೆ ಹಬ್ಬದ ಊಟ ಹಾಕ್ತೀಯ,+

ನನ್ನ ತಲೆಗೆ ತೈಲ ಹಚ್ಚಿ ಚೈತನ್ಯ ಕೊಡ್ತೀಯ,+

ನನ್ನ ಪಾನಪಾತ್ರೆಯನ್ನ ತುಂಬಿತುಳುಕೋ ಹಾಗೆ ಮಾಡ್ತೀಯ.+

 6 ನಾನು ಸಾಯೋ ತನಕ ನಿನ್ನ ಒಳ್ಳೇತನ, ನಿನ್ನ ಶಾಶ್ವತ ಪ್ರೀತಿ ನನ್ನ ಹಿಂದೆನೇ ಬರುತ್ತೆ,+

ನಾನು ನನ್ನ ಜೀವನ ಪೂರ್ತಿ ಯೆಹೋವನ ಆಲಯದಲ್ಲೇ ಇರ್ತಿನಿ.+

ದಾವೀದನ ಮಧುರ ಗೀತೆ.

24 ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನ ಆಸ್ತಿ,+

ಲೋಕ ಮತ್ತು ಅದ್ರಲ್ಲಿ ಇರೋರೆಲ್ಲ ಆತನ ಸೊತ್ತು.

 2 ಯಾಕಂದ್ರೆ, ಆತನೇ ಭೂಮಿನ ಸಮುದ್ರಗಳ ಮೇಲೆ,+

ನದಿಗಳ ಮೇಲೆ ದೃಢವಾಗಿ ಭದ್ರವಾಗಿ ಇಟ್ಟಿದ್ದಾನೆ.

 3 ಯೆಹೋವನ ಬೆಟ್ಟವನ್ನ ಯಾರಿಗೆ ಹತ್ತಕ್ಕಾಗುತ್ತೆ?+

ಆತನ ಪವಿತ್ರ ಸ್ಥಳದಲ್ಲಿ ಯಾರಿಗೆ ನಿಲ್ಲಕ್ಕಾಗುತ್ತೆ?

 4 ಯಾವ ತಪ್ಪೂ ಮಾಡದವನು, ಶುದ್ಧ ಮನಸ್ಸು ಇರೋನು,+

ನನ್ನ ಜೀವದ* ಮೇಲೆ ಸುಳ್ಳಾಣೆ ಇಡದವನು,

ಆಣೆಯಿಟ್ಟು ಮೋಸ ಮಾಡದವನೇ ಅಲ್ವಾ?+

 5 ಅಂಥವನು ಯೆಹೋವನಿಂದ ಆಶೀರ್ವಾದಗಳನ್ನ,+

ತನ್ನನ್ನ ಕಾಪಾಡೋ ದೇವರಿಂದ ನ್ಯಾಯವನ್ನ ಪಡೀತಾನೆ.*+

 6 ದೇವರನ್ನ ಹುಡುಕೋ ಪೀಳಿಗೆ ಇದೇ,

ಯಾಕೋಬನ ದೇವರೇ, ನಿನ್ನ ಅನುಗ್ರಹ ಪಡೆಯೋಕೆ ಬಯಸ್ತಿರೋರು ಇವರೇ. (ಸೆಲಾ)

 7 ಬಾಗಿಲುಗಳೇ, ನಿಮ್ಮ ತಲೆಗಳನ್ನ ಎತ್ತಿ!+

ಹಳೇ ಕದಗಳೇ ತೆರೆದುಕೊಳ್ಳಿ!

ಮಹಿಮೆ ಇರೋ ರಾಜ ಬರ್ತಾನೆ.+

 8 ಮಹಿಮೆ ಇರೋ ಈ ರಾಜ ಯಾರು?

ಬಲಿಷ್ಠನೂ ಶಕ್ತಿಶಾಲಿಯೂ ಆಗಿರೋ ಯೆಹೋವನೇ,+

ಯಾರಿಗೂ ಸೋಲದ ವೀರ ಸೈನಿಕನಾಗಿರೋ ಯೆಹೋವನೇ.+

 9 ಮಹಿಮೆ ಇರೋ ರಾಜ ಬರೋಕೆ ಆಗೋ ತರ

ಬಾಗಿಲುಗಳೇ, ನಿಮ್ಮ ತಲೆಗಳನ್ನ ಎತ್ತಿ!+

ಹಳೇ ಕದಗಳೇ ತೆರೆದುಕೊಳ್ಳಿ!

10 ಮಹಿಮೆ ಇರೋ ಈ ರಾಜ ಯಾರು?

ಸೈನ್ಯಗಳ ದೇವರಾಗಿರೋ ಯೆಹೋವನೇ ಮಹಿಮೆ ಇರೋ ರಾಜ.+ (ಸೆಲಾ)

ದಾವೀದನ ಕೀರ್ತನೆ.

א [ಆಲೆಫ್‌]

25 ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.

ב [ಬೆತ್‌]

 2 ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ,+

ನಾನು ಅವಮಾನ ಪಡೋ ಹಾಗೆ ಮಾಡಬೇಡ.+

ನನ್ನ ಕಷ್ಟಗಳನ್ನ ನೋಡಿ ನನ್ನ ಶತ್ರುಗಳು ಖುಷಿಪಡೋಕೆ ಬಿಡಬೇಡ.+

ג [ಗಿಮೆಲ್‌]

 3 ನಿನ್ನಲ್ಲಿ ನಿರೀಕ್ಷೆ ಇಡೋರಿಗೆ ಯಾವತ್ತೂ ಅವಮಾನ ಆಗಲ್ಲ,+

ಆದ್ರೆ ಕಾರಣ ಇಲ್ಲದೆ ನಿನಗೆ ಮೋಸ ಮಾಡೋರಿಗೆ ಅವಮಾನ ಕಟ್ಟಿಟ್ಟ ಬುತ್ತಿ.*+

ד [ಡಾಲತ್‌]

 4 ಯೆಹೋವನೇ, ನಿನ್ನ ದಾರಿಗಳನ್ನ ನನಗೆ ಹೇಳಿಕೊಡು,+

ನಿನ್ನ ದಾರಿಗಳನ್ನ ನನಗೆ ಕಲಿಸು.+

ה [ಹೆ]

 5 ನಿನ್ನ ಸತ್ಯದ ದಾರಿಯಲ್ಲಿ ನನ್ನನ್ನ ನಡೆಸು, ಅದನ್ನ ನನಗೆ ಕಲಿಸು.+

ಯಾಕಂದ್ರೆ ನೀನೇ ನನ್ನ ರಕ್ಷಣೆಯ ದೇವರು.

ו [ವಾವ್‌]

ದಿನವಿಡೀ ನಾನು ನಿನ್ನಲ್ಲೇ ನಿರೀಕ್ಷೆ ಇಟ್ಟಿದ್ದೀನಿ.

ז [ಜಯಿನ್‌]

 6 ಯೆಹೋವನೇ, ನೀನು ಯಾವಾಗ್ಲೂ* ತೋರಿಸ್ತಾ ಬಂದಿರೋ+

ನಿನ್ನ ಕರುಣೆಯನ್ನ, ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸ್ಕೊ.+

ח [ಹೆತ್‌]

 7 ಯೆಹೋವನೇ, ನೀನು ಒಳ್ಳೆಯವನಾಗಿರೋದ್ರಿಂದ,+

ಶಾಶ್ವತ ಪ್ರೀತಿ ತೋರಿಸೋದ್ರಿಂದ ನನ್ನನ್ನ ನೆನಪಿಸ್ಕೊ,+

ನಾನು ಮಾಡಿದ ಪಾಪಗಳನ್ನ, ನನ್ನ ಅಪರಾಧಗಳನ್ನ ನೆನಪಿಸ್ಕೊಬೇಡ.

ט [ಟೆತ್‌]

 8 ಯೆಹೋವ ಒಳ್ಳೆಯವನು, ನೀತಿವಂತ.+

ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+

י [ಯೋದ್‌]

 9 ಯಾವುದು ಸರಿ* ಅಂತ ಆತನು ದೀನರಿಗೆ ತೋರಿಸಿಕೊಡ್ತಾನೆ,+

ಆತನು ಅವರಿಗೆ ತನ್ನ ದಾರಿಯನ್ನ ಬೋಧಿಸ್ತಾನೆ.+

כ [ಕಾಫ್‌]

10 ದೇವರು ಹೇಳಿದ್ದನ್ನ+ ಜನರು ಮಾಡೋವಾಗ, ಆತನ ಒಪ್ಪಂದವನ್ನ+ ಪಾಲಿಸೋವಾಗ,

ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ಅವರಿಗೆ ತೋರಿಸ್ತಾನೆ ಮತ್ತು ನಂಬಿಗಸ್ತನಾಗಿ ಇರ್ತಾನೆ.

ל [ಲಾಮೆದ್‌]

11 ಯೆಹೋವನೇ, ನನ್ನ ತಪ್ಪು ಎಷ್ಟೇ ದೊಡ್ಡದಾಗಿದ್ರೂ,

ನಿನ್ನ ಹೆಸರಿಗೋಸ್ಕರ ಅದನ್ನ ಕ್ಷಮಿಸಿಬಿಡು.+

מ [ಮೆಮ್‌]

12 ಯಾವ ಮನುಷ್ಯ ಯೆಹೋವನಿಗೆ ಭಯಪಡ್ತಾನೋ,+

ಅಂಥವನಿಗೆ ದೇವರು ಯಾವ ದಾರಿಯನ್ನ ಆರಿಸಿಕೊಳ್ಳಬೇಕು ಅಂತ ಕಲಿಸ್ತಾನೆ.+

נ [ನೂನ್‌]

13 ಆ ಮನುಷ್ಯ ಒಳ್ಳೇತನವನ್ನ ಅನುಭವಿಸಿ ನೋಡ್ತಾನೆ,+

ಅವನ ವಂಶಸ್ಥರು ಭೂಮಿಯನ್ನ ಆಸ್ತಿಯಾಗಿ ಪಡಕೊಳ್ತಾರೆ.+

ס [ಸಾಮೆಕ್‌]

14 ಯೆಹೋವನಲ್ಲಿ ಭಯಭಕ್ತಿ ಇರೋರಿಗೆ ಮಾತ್ರ ಆತನ ಆಪ್ತ ಸ್ನೇಹ ಸಿಗುತ್ತೆ,+

ಅಂಥವರಿಗೆ ಆತನು ತನ್ನ ಒಪ್ಪಂದದ ಬಗ್ಗೆ ಕಲಿಸ್ತಾನೆ.+

ע [ಅಯಿನ್‌]

15 ನನ್ನ ಕಣ್ಣು ಯಾವಾಗಲೂ ಯೆಹೋವನ ಕಡೆಗಿರುತ್ತೆ,+

ಯಾಕಂದ್ರೆ ಆತನು ನನ್ನ ಕಾಲನ್ನ ಬಲೆಯಿಂದ ಬಿಡಿಸ್ತಾನೆ.+

פ [ಪೇ]

16 ನಿನ್ನ ಮುಖವನ್ನ ನನ್ನ ಕಡೆಗೆ ತಿರುಗಿಸಿ ಸ್ವಲ್ಪ ಕೃಪೆ ತೋರಿಸು,

ಯಾಕಂದ್ರೆ ನಾನು ಏಕಾಂಗಿ ಆಗಿದ್ದೀನಿ, ಯಾವ ಸಹಾಯನೂ ನನಗಿಲ್ಲ.

צ [ಸಾದೆ]

17 ನನ್ನ ಮನಸ್ಸಲ್ಲಿ ಚಿಂತೆ ಜಾಸ್ತಿ ಆಗ್ತಾನೇ ಇದೆ,+

ನನ್ನ ಸಂಕಟಗಳಿಂದ ನನ್ನನ್ನ ಬಿಡಿಸು.

ר [ರೆಶ್‌]

18 ನನ್ನ ಕಷ್ಟ, ನನಗಿರೋ ತೊಂದರೆನ ನೋಡು,+

ನನ್ನ ಪಾಪಗಳನ್ನೆಲ್ಲ ಕ್ಷಮಿಸು.+

19 ನನಗೆ ಎಷ್ಟೊಂದು ಶತ್ರುಗಳಿದ್ದಾರೆ ಅಂತ ನೋಡು,

ಅವರು ನನ್ನನ್ನ ಎಷ್ಟು ಕ್ರೂರವಾಗಿ ದ್ವೇಷಿಸ್ತಾರೆ ಅಂತ ನೋಡು.

ש [ಶಿನ್‌]

20 ನನ್ನ ಪ್ರಾಣನ ಕಾದುಕಾಪಾಡು.+

ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿರೋದ್ರಿಂದ ನನಗೆ ಅವಮಾನ ಆಗದ ಹಾಗೆ ನೋಡ್ಕೊ.

ת [ಟಾವ್‌]

21 ನನ್ನ ನಿಯತ್ತು, ನನ್ನ ಪ್ರಾಮಾಣಿಕತೆ ನನ್ನನ್ನ ಕಾಪಾಡಲಿ.+

ಯಾಕಂದ್ರೆ ನನ್ನ ನಿರೀಕ್ಷೆ ನಿನ್ನಲ್ಲೇ.+

22 ದೇವರೇ, ಇಸ್ರಾಯೇಲನನ್ನು ಅವನ ಎಲ್ಲ ಕಷ್ಟಗಳಿಂದ ಕಾಪಾಡು.

ದಾವೀದನ ಕೀರ್ತನೆ

26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ* ನಡ್ಕೊಂಡಿದ್ದೀನಿ.+

ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+

 2 ಯೆಹೋವನೇ, ನನ್ನನ್ನ ಪರಿಶೋಧಿಸು, ಪರೀಕ್ಷಿಸು.

ನನ್ನ ಮನದಾಳದ ಯೋಚನೆಗಳನ್ನ* ಮತ್ತು ನನ್ನ ಹೃದಯವನ್ನ ಶುದ್ಧಮಾಡು.+

 3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಯಾವಾಗ್ಲೂ ನನ್ನ ಮುಂದಿದೆ,

ನಾನು ನಿನ್ನ ಸತ್ಯದಲ್ಲೇ ನಡಿತಿದ್ದೀನಿ.+

 4 ಮೋಸಗಾರರ ಸಹವಾಸ ಮಾಡಲ್ಲ,*+

ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.*

 5 ಕೆಟ್ಟವರ ಸಂಘ ನನಗೆ ಅಸಹ್ಯ,+

ಕೆಡುಕರ ಸಹವಾಸ ನನಗೆ ಬೇಕಾಗಿಲ್ಲ.+

 6 ಯೆಹೋವನೇ, ನಾನು ನನ್ನ ಕೈಗಳನ್ನ ತೊಳ್ಕೊಂಡು ನಾನು ನಿರ್ದೋಷಿ ಅಂತ ಸಾಬೀತು ಮಾಡ್ತೀನಿ.

ನಿನ್ನ ಯಜ್ಞವೇದಿ ಸುತ್ತ ತಿರುಗ್ತೀನಿ.

 7 ನಿನಗೆ ಗಟ್ಟಿಯಾಗಿ ಧನ್ಯವಾದ ಹೇಳೋಕೆ,+

ನಿನ್ನ ಎಲ್ಲ ಅದ್ಭುತಗಳ ಬಗ್ಗೆ ಪ್ರಕಟಿಸೋಕೆ ನಾನು ಹಾಗೆ ಮಾಡ್ತೀನಿ.

 8 ಯೆಹೋವನೇ ನೀನು ವಾಸಿಸೋ ಆಲಯ ನನಗಿಷ್ಟ,+

ಆ ಜಾಗದಲ್ಲಿ ನಿನ್ನ ಮಹಿಮೆ ಇರುತ್ತೆ.+

 9 ಪಾಪಿಗಳ ಜೊತೆ ನನ್ನನ್ನೂ ಗುಡಿಸಿ ಬಿಡಬೇಡ,+

ದೌರ್ಜನ್ಯ ಮಾಡೋರ* ಪ್ರಾಣಗಳ ಜೊತೆ ನನ್ನ ಪ್ರಾಣವನ್ನೂ ತೆಗಿಬೇಡ.

10 ಅವ್ರ ಕೈಗಳು ನಾಚಿಕೆಗೆಟ್ಟ ಕೆಲಸಗಳನ್ನ ಮಾಡುತ್ತೆ,

ಅವ್ರ ಬಲಗೈ ಲಂಚದಿಂದ ತುಂಬಿತುಳುಕ್ತಿದೆ.

11 ಆದ್ರೆ ನಾನು ನಿಯತ್ತನ್ನ ಕಾಪಾಡ್ಕೊಂಡಿದ್ದೀನಿ,

ನನ್ನನ್ನ ರಕ್ಷಿಸು,* ನನಗೆ ಕೃಪೆ ತೋರಿಸು.

12 ನಾನು ಸುರಕ್ಷಿತವಾಗಿರೋ ಜಾಗದಲ್ಲಿ ನಿಂತಿದ್ದೀನಿ,+

ಮಹಾ ಸಭೆಯಲ್ಲಿ* ನಾನು ಯೆಹೋವನನ್ನ ಹೊಗಳ್ತೀನಿ.+

ದಾವೀದನ ಕೀರ್ತನೆ

27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ.

ನಾನು ಯಾಕೆ ಭಯಪಡಬೇಕು?+

ಯೆಹೋವನೇ ನನ್ನ ಜೀವದ ಭದ್ರಕೋಟೆ.+

ನಾನು ಯಾಕೆ ಹೆದರಬೇಕು?

 2 ನನ್ನನ್ನ ನಾಶಮಾಡೋಕೆ ಕೆಟ್ಟವರು ನನ್ನ ಮೇಲೆ ದಾಳಿಮಾಡಿದಾಗ,+

ನನ್ನ ವಿರೋಧಿಗಳೇ ಮುಗ್ಗರಿಸಿ ಬಿದ್ರು.

 3 ಸೈನ್ಯ ಪಾಳೆಯ ಹೂಡಿ ನನ್ನನ್ನ ಮುತ್ಕೊಂಡಾಗ,

ನನ್ನ ಹೃದಯ ಭಯಪಡಲ್ಲ.+

ನನ್ನ ವಿರುದ್ಧ ಯುದ್ಧಕ್ಕೆ ಬಂದ್ರೂ,

ನಾನು ಧೈರ್ಯವಾಗೇ ಇರ್ತಿನಿ.

 4 ನಾನು ಯೆಹೋವನ ಹತ್ರ ಒಂದು ವಿಷ್ಯ ಕೇಳಿದ್ದೀನಿ,

ಅದಕ್ಕಾಗಿ ನಾನು ಕಾಯ್ತಾ ಕೂತಿದ್ದೀನಿ, ಅದೇನಂದ್ರೆ

ಯಾವಾಗ್ಲೂ ಯೆಹೋವನ ಒಳ್ಳೇತನವನ್ನ ನೋಡೋಕೆ ಆಗೋ ಹಾಗೆ,

ಆತನ ಆಲಯವನ್ನ ಗಣ್ಯತೆಯಿಂದ ಕಾಣೋ ಹಾಗೆ,+

ನಾನು ಸಾಯೋ ತನಕ ಯೆಹೋವನ ಆಲಯದಲ್ಲೇ* ಇರೋಕೆ ಆಗಲಿ ಅಂತ.+

 5 ಯಾಕಂದ್ರೆ ವಿಪತ್ತಿನ ದಿನ ಆತನು ನನ್ನನ್ನ ತನ್ನ ಆಶ್ರಯದಲ್ಲಿ ಬಚ್ಚಿಡ್ತಾನೆ,+

ನನ್ನನ್ನ ತನ್ನ ಡೇರೆಯ ರಹಸ್ಯ ಜಾಗದಲ್ಲಿ ಅಡಗಿಸಿ ಇಡ್ತಾನೆ,+

ನನ್ನನ್ನ ಎತ್ತರವಾದ ಬಂಡೆ ಮೇಲೆ ನಿಲ್ಲಿಸ್ತಾನೆ.+

 6 ಈಗ ನನ್ನ ತಲೆ ನನ್ನನ್ನ ಮುತ್ಕೊಂಡಿರೋ ಶತ್ರುಗಳಿಗಿಂತ ಎತ್ತರದಲ್ಲಿದೆ,

ಖುಷಿಯಿಂದ ಜೈಕಾರ ಹಾಕ್ತಾ ನಾನು ಆತನ ಡೇರೆಯಲ್ಲಿ ಬಲಿಗಳನ್ನ ಕೊಡ್ತೀನಿ,

ನಾನು ಯೆಹೋವನಿಗೆ ಹಾಡಿ ಹೊಗಳ್ತೀನಿ.

 7 ಯೆಹೋವನೇ, ನಾನು ಕೂಗಿದಾಗ ದಯವಿಟ್ಟು ಕೇಳು,+

ನನಗೆ ಕೃಪೆ ತೋರಿಸಿ ಉತ್ತರ ಕೊಡು.+

 8 “ನನ್ನನ್ನ ಹುಡುಕಿ” ಅನ್ನೋ ಆಜ್ಞೆ ಕೊಟ್ಟೆ ಅಂತ,

ನನ್ನ ಹೃದಯ ಹೇಳ್ತು.

ಯೆಹೋವನೇ, ನಾನು ನಿನ್ನನ್ನ ಹುಡುಕ್ತೀನಿ.+

 9 ನಿನ್ನ ಮುಖವನ್ನ ನನ್ನಿಂದ ತಿರುಗಿಸ್ಕೊಬೇಡ.+

ನಿನ್ನ ಸೇವಕನನ್ನ ಕೋಪದಿಂದ ತಳ್ಳಬೇಡ.

ನೀನೇ ನನ್ನ ಸಹಾಯಕ,+

ನನ್ನ ರಕ್ಷಣೆಯ ದೇವರೇ, ತೊರೆದು ಹೋಗಬೇಡ, ನನ್ನನ್ನ ಬಿಡಬೇಡ.

10 ಹೆತ್ತ ಅಪ್ಪಅಮ್ಮ ನನ್ನ ಕೈಬಿಟ್ರೂ,+

ಯೆಹೋವ ನನ್ನನ್ನ ಸೇರಿಸಿಕೊಳ್ತಾನೆ.+

11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+

ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು.

12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+

ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+

ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.

13 ನಾನು ಬದುಕಿದ್ದಾಗಲೇ ಯೆಹೋವನ ಒಳ್ಳೇತನ ನೋಡ್ತೀನಿ ಅಂತ

ನನಗೆ ನಂಬಿಕೆ ಇಲ್ಲದಿದ್ರೆ ನಾನು ಈಗ ಎಲ್ಲಿ ಇರ್ತಿದ್ದೆ?*+

14 ಯೆಹೋವನ ಮೇಲೆ ನಿರೀಕ್ಷೆ ಇಡು.+

ಧೈರ್ಯವಾಗಿ, ದೃಢವಾಗಿ ಇರು.+

ಹೌದು, ಯೆಹೋವನ ಮೇಲೆ ನಿರೀಕ್ಷೆ ಇಡು.

ದಾವೀದನ ಕೀರ್ತನೆ.

28 ಯೆಹೋವನೇ, ನನ್ನ ಬಂಡೆಯೇ,+ ನಾನು ನಿನಗೆ ಪ್ರಾರ್ಥಿಸ್ತಾ ಇರ್ತಿನಿ,

ನನ್ನನ್ನ ಅಲಕ್ಷಿಸಬೇಡ.

ನೀನು ಮೌನವಾಗಿದ್ರೆ,

ನನ್ನ ಪರಿಸ್ಥಿತಿ ಸತ್ತವರಿಗಿಂತ ಕಡೆ.*+

 2 ನಾನು ನಿನ್ನ ಆಲಯದ ಅತೀ ಪವಿತ್ರ ಸ್ಥಳದ ಕಡೆಗೆ ಕೈ ಎತ್ತಿ,+

ಸಹಾಯಕ್ಕಾಗಿ ಅಂಗಲಾಚುವಾಗ ನನ್ನ ಬಿನ್ನಹವನ್ನ ಕೇಳಿಸ್ಕೋ.

 3 ಕೆಟ್ಟವರ ಜೊತೆ ನನ್ನನ್ನೂ ಎಳ್ಕೊಂಡು ಹೋಗಬೇಡ,+

ಅವರು ಬೇರೆಯವರ ಜೊತೆ ಸಮಾಧಾನವಾಗಿ ಮಾತಾಡಿದ್ರೂ,

ಅವ್ರ ಹೃದಯದಲ್ಲಿ ಕೆಟ್ಟದೇ ತುಂಬಿರುತ್ತೆ.+

 4 ಅವ್ರ ಕೆಲಸಗಳಿಗೆ ತಕ್ಕ ಹಾಗೆ,

ಅವ್ರ ಕೆಟ್ಟ ಕೆಲಸಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡು,+

ಅವ್ರ ಕಾರ್ಯಗಳಿಗೆ ತಕ್ಕ ಹಾಗೆ,

ಅವರು ಮಾಡಿದಕ್ಕೆ ತಕ್ಕ ಹಾಗೆ ಪ್ರತಿಕಾರ ತೀರಿಸ್ಕೊ.+

 5 ಯಾಕಂದ್ರೆ ಅವರು ಯೆಹೋವನ ಕೆಲಸಗಳನ್ನಾಗಲಿ,+

ಆತನು ಮಾಡಿದ್ದನ್ನಾಗಲಿ ಗಮನಿಸಲ್ಲ.+

ಆತನು ಅವ್ರನ್ನ ಕೆಳಗೆ ಬೀಳಿಸ್ತಾನೇ ಬಿಟ್ರೆ ಮೇಲಕ್ಕೆ ಎತ್ತಲ್ಲ.

 6 ಯೆಹೋವನಿಗೆ ಹೊಗಳಿಕೆ ಸಿಗಲಿ,

ಯಾಕಂದ್ರೆ ಸಹಾಯಕ್ಕಾಗಿ ನಾನಿಟ್ಟ ಮೊರೆನ ಆತನು ಕೇಳಿಸ್ಕೊಂಡ.

 7 ಯೆಹೋವನೇ ನನ್ನ ಬಲ,+ ನನ್ನ ಗುರಾಣಿ,+

ನನ್ನ ಹೃದಯ ಆತನಲ್ಲೇ ಭರವಸೆ ಇಡುತ್ತೆ.+

ನನಗೆ ಆತನ ಸಹಾಯ ಸಿಕ್ಕಿದೆ, ನನ್ನ ಹೃದಯ ಖುಷಿಪಡುತ್ತೆ,

ಹಾಗಾಗಿ ನಾನು ನನ್ನ ಹಾಡಿಂದ ಆತನನ್ನ ಹೊಗಳ್ತೀನಿ.

 8 ಯೆಹೋವ ತನ್ನ ಜನ್ರಿಗೆ ಬಲ,

ತನ್ನ ಅಭಿಷಿಕ್ತನಿಗೆ ಮಹಾ ರಕ್ಷಣೆಯನ್ನ ನೀಡೋ ಭದ್ರಕೋಟೆ.+

 9 ದೇವರೇ, ನಿನ್ನ ಜನ್ರನ್ನ ಕಾಪಾಡಿ ಅವ್ರಿಗೆ ಆಶೀರ್ವಾದ ಮಾಡು.+

ಅವ್ರ ಕುರುಬ ಆಗು, ಅವ್ರನ್ನ ಸದಾಕಾಲಕ್ಕೂ ನಿನ್ನ ತೋಳಲ್ಲಿ ಎತ್ಕೊ.+

ದಾವೀದನ ಮಧುರ ಗೀತೆ

29 ಶೂರವೀರರ ಮಕ್ಕಳೇ, ಯೆಹೋವನನ್ನ ಹೊಗಳಿ,

ಯೆಹೋವನ ಮಹಿಮೆಗಾಗಿ, ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+

 2 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.

ಪವಿತ್ರ ಬಟ್ಟೆಗಳನ್ನ ಹಾಕೊಂಡು* ಯೆಹೋವನಿಗೆ ಬಗ್ಗಿ ನಮಸ್ಕರಿಸಿ.*

 3 ಮೋಡಗಳ ಮೇಲಿಂದ ಯೆಹೋವನ ಧ್ವನಿ ಕೇಳಿಸ್ತಿದೆ,

ಮಹಿಮಾಭರಿತ ದೇವರು ಗುಡುಗ್ತಿದ್ದಾನೆ.+

ಯೆಹೋವ ದಟ್ಟವಾದ ಮೋಡಗಳ ಮೇಲಿದ್ದಾನೆ.+

 4 ಯೆಹೋವನ ಧ್ವನಿಯಲ್ಲಿ ಗತ್ತಿದೆ,+

ಯೆಹೋವನ ಸ್ವರ ಅದ್ಭುತವಾಗಿದೆ.

 5 ಯೆಹೋವನ ಧ್ವನಿ ದೇವದಾರು ಮರಗಳನ್ನ ಸೀಳಿಹಾಕುತ್ತೆ,

ಯೆಹೋವ ಲೆಬನೋನಿನ ದೇವದಾರುಗಳನ್ನ ತುಂಡುತುಂಡು ಮಾಡ್ತಾನೆ.+

 6 ಆತನು ಲೆಬನೋನನ್ನ* ಜಿಗಿಯೋ ಕರುವಿನ ತರ

ಸಿರ್ಯೋನನ್ನ+ ಜಿಗಿಯೋ ಎಳೇ ಕಾಡುಹೋರಿ ತರ ಮಾಡ್ತಾನೆ.

 7 ಯೆಹೋವನ ಧ್ವನಿಯ ಜೊತೆ ಅಗ್ನಿ ಜ್ವಾಲೆ ಬರುತ್ತೆ.+

 8 ಯೆಹೋವನ ಧ್ವನಿ ಕಾಡನ್ನ ಕಂಪಿಸುತ್ತೆ,+

ಯೆಹೋವ ಕಾದೇಶ್‌+ ಕಾಡನ್ನ ನಡುಗಿಸ್ತಾನೆ.

 9 ಯೆಹೋವನ ಧ್ವನಿಗೆ ಜಿಂಕೆ ನಡುಗಿ ಮರಿ ಹಾಕುತ್ತೆ,

ಕಾಡಿಗೆ ಕಾಡೇ ಬರಿದಾಗಿ ಹೋಗುತ್ತೆ.+

ಆತನ ಆಲಯದಲ್ಲಿ ಎಲ್ರೂ “ದೇವರಿಗೆ ಮಹಿಮೆ!” ಅಂತ ಹೇಳ್ತಾರೆ.

10 ಯೆಹೋವ ನೀರಿನ ಪ್ರವಾಹದ* ಮೇಲೆ ಕೂತಿದ್ದಾನೆ,+

ಯೆಹೋವ ಶಾಶ್ವತಕ್ಕೂ ರಾಜನಾಗಿ ಸಿಂಹಾಸನದಲ್ಲಿ ಕೂತಿದ್ದಾನೆ.+

11 ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ.+

ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ.+

ದಾವೀದನ ಮಧುರ ಗೀತೆ. ಮನೆಯ ಉದ್ಘಾಟನಾ ಗೀತೆ.

30 ಯೆಹೋವನೇ, ನೀನು ನನ್ನನ್ನ ಮೇಲೆಕ್ಕೆ ಎತ್ತಿದ್ರಿಂದ* ನಾನು ನಿನ್ನನ್ನ ಹೊಗಳ್ತೀನಿ,

ನನ್ನ ಶತ್ರುಗಳು ನನ್ನ ನೋಡಿ ನಗೋಕೆ ನೀನು ಬಿಡಲಿಲ್ಲ.+

 2 ಯೆಹೋವನೇ, ನನ್ನ ದೇವರೇ, ಸಹಾಯಕ್ಕಾಗಿ ನಾನು ಮೊರೆಯಿಟ್ಟಾಗ ನೀನು ನನ್ನನ್ನ ವಾಸಿಮಾಡಿದೆ.+

 3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+

ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+

 4 ನಿಷ್ಠಾವಂತರೇ, ಯೆಹೋವನಿಗೆ ಹಾಡಿ ಹೊಗಳಿ.*+

ಆತನ ಪವಿತ್ರ ನಾಮಕ್ಕೆ ಧನ್ಯವಾದ ಹೇಳಿ.+

 5 ಯಾಕಂದ್ರೆ ಆತನ ಕೋಪ ಕ್ಷಣಮಾತ್ರ,+

ಆದ್ರೆ ಆತನ ಕೃಪೆ ಜೀವನಪರ್ಯಂತ.+

ಸಂಜೆ ದುಃಖದಿಂದ ಕಣ್ಣೀರು ಬಂದ್ರೂ, ಮುಂಜಾನೆ ಆನಂದದ ಜೈಕಾರ ಕೇಳಿಸುತ್ತೆ.+

 6 ನನಗೆ ಕಷ್ಟಗಳು ಇಲ್ಲದಿದ್ದಾಗ “ನಾನು ಯಾವತ್ತೂ ಕದಲಲ್ಲ” ಅಂದಿದ್ದೆ.

 7 ಯೆಹೋವನೇ, ನಿನ್ನ ಕೃಪೆ ನನ್ನ ಮೇಲಿದ್ದಾಗ, ನೀನು ನನಗೆ ಬೆಟ್ಟದಷ್ಟು ಬಲ ಕೊಟ್ಟಿದ್ದೆ.+

ಆದ್ರೆ ನೀನು ನಿನ್ನ ಮುಖವನ್ನ ಮರೆಮಾಡಿದಾಗ ನಾನು ನಡುಗಿಹೋದೆ.+

 8 ಯೆಹೋವನೇ, ನಾನು ನಿನಗೆ ಪ್ರಾರ್ಥಿಸ್ತಾನೇ ಇದ್ದೆ,+

ನಾನು ಯೆಹೋವನಿಗೆ ಕೇಳ್ಕೊಳ್ತಾನೇ ಇದ್ದೆ.

 9 ನಾನು ಸತ್ತುಹೋದ್ರೆ, ಸಮಾಧಿಗೆ ಇಳಿದು ಹೋದ್ರೆ ಏನು ಲಾಭ?+

ಮಣ್ಣು ನಿನ್ನನ್ನ ಹೊಗಳುತ್ತಾ?+ ಅದು ನಿನ್ನ ನಿಷ್ಠೆ ಬಗ್ಗೆ ಮಾತಾಡುತ್ತಾ?+

10 ಯೆಹೋವನೇ, ಕೇಳು, ನನಗೆ ಕೃಪೆ ತೋರಿಸು.+

ಯೆಹೋವನೇ, ನನ್ನ ಸಹಾಯಕ್ಕೆ ಬಾ.+

11 ನೀನು ನನ್ನ ಗೋಳಾಟವನ್ನ ಸಂತೋಷವಾಗಿ* ಬದಲಾಯಿಸಿದೆ,

ನೀನು ನನ್ನ ಗೋಣಿ ಬಟ್ಟೆಯನ್ನ ತೆಗೆದು ನನಗೆ ಹಬ್ಬದ ಬಟ್ಟೆಯನ್ನ ಹಾಕಿದೆ,

12 ಹಾಗಾಗಿ ನನ್ನ ಬಾಯಿ* ಸುಮ್ಮನಿರದೆ ನಿನ್ನನ್ನೇ ಹಾಡಿ ಹೊಗಳ್ತಾನೇ ಇದೆ.

ಯೆಹೋವನೇ, ನನ್ನ ದೇವರೇ, ನಾನು ನಿನ್ನನ್ನ ಶಾಶ್ವತಕ್ಕೂ ಹೊಗಳ್ತೀನಿ.

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

31 ಯೆಹೋವನೇ, ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿದ್ದೀನಿ.+

ಯಾವತ್ತೂ ನನಗೆ ಅವಮಾನ ಆಗದೆ ಇರೋ ತರ ನೋಡ್ಕೊ.+

ನಿನ್ನ ನೀತಿಯ ಕಾರಣ ನನ್ನನ್ನ ಕಾಪಾಡು.+

 2 ನಾನು ಹೇಳೋದನ್ನ ಬಗ್ಗಿ ಕೇಳಿಸ್ಕೊ.

ತಕ್ಷಣ ಬಂದು ನನ್ನನ್ನ ರಕ್ಷಿಸು.+

ನನಗಾಗಿ ಬೆಟ್ಟದ ಭದ್ರಕೋಟೆ ಆಗು,

ನನ್ನನ್ನ ರಕ್ಷಿಸೋಕೆ ಸುರಕ್ಷಿತ ಸ್ಥಳ ಆಗು.+

 3 ಯಾಕಂದ್ರೆ ನೀನು ನನ್ನ ಕಡಿದಾದ ಬಂಡೆ, ನನ್ನ ಭದ್ರಕೋಟೆ.+

ನಿನ್ನ ಹೆಸ್ರಿಗೆ ತಕ್ಕ ಹಾಗೆ+ ನೀನು ನನ್ನನ್ನ ನಡಿಸ್ತೀಯ, ಮಾರ್ಗದರ್ಶಿಸ್ತೀಯ.+

 4 ಶತ್ರುಗಳು ನನ್ನನ್ನ ಬೀಳಿಸೋಕೆ ಬಚ್ಚಿಟ್ಟಿರೋ ಬಲೆಯಿಂದ ನೀನು ನನ್ನನ್ನ ಬಿಡಿಸ್ತೀಯ,+

ಯಾಕಂದ್ರೆ ನೀನೇ ನನ್ನ ಕೋಟೆ.+

 5 ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+

ಯೆಹೋವನೇ, ಸತ್ಯದ ದೇವರೇ*+ ನೀನು ನನ್ನನ್ನ ಬಿಡಿಸಿದ್ದೀಯ.

 6 ಯಾವ ಪ್ರಯೋಜನಕ್ಕೂ ಬರದ ವ್ಯರ್ಥ ಮೂರ್ತಿಗಳನ್ನ ಆರಾಧಿಸೋರನ್ನ ನಾನು ದ್ವೇಷಿಸ್ತೀನಿ.

ಆದ್ರೆ ನಾನು ಯೆಹೋವನಲ್ಲೇ ಭರವಸೆ ಇಟ್ಟಿದ್ದೀನಿ.

 7 ನಿನ್ನ ಶಾಶ್ವತ ಪ್ರೀತಿಯಿಂದ ನನಗೆ ತುಂಬ ಖುಷಿಯಾಗುತ್ತೆ,

ಯಾಕಂದ್ರೆ ನನ್ನ ಸಂಕಟವನ್ನ ನೀನು ನೋಡಿದ್ದೀಯ,+

ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.

 8 ನೀನು ನನ್ನನ್ನ ಶತ್ರುವಿನ ಕೈಗೆ ಒಪ್ಪಿಸದೆ,

ಸುರಕ್ಷಿತ ಜಾಗದಲ್ಲಿ* ನಿಲ್ಲಿಸಿದ್ದೀಯ.

 9 ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು.

ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+

10 ದುಃಖದಿಂದ ನನ್ನ ಜೀವ ಇಂಗಿಹೋಗಿದೆ,+

ಕೊರಗ್ತಾ ಕೊರಗ್ತಾ ನನ್ನ ಆಯಸ್ಸು ಆವಿಯಾಗ್ತಿದೆ.+

ನನ್ನ ತಪ್ಪಿಂದಾಗಿ ನನ್ನ ಬಲ ಕುಗ್ಗಿಹೋಗ್ತಿದೆ,

ನನ್ನ ಎಲುಬು ಸವೆದುಹೋಗ್ತಿದೆ.+

11 ನನ್ನ ಎಲ್ಲ ಶತ್ರುಗಳು,

ವಿಶೇಷವಾಗಿ ನನ್ನ ಪರಿಚಿತರೇ ನನ್ನನ್ನ ಕೀಳಾಗಿ ನೋಡ್ತಿದ್ದಾರೆ.+

ನನ್ನ ಆಪ್ತರೇ ನನ್ನನ್ನ ನೋಡಿ ಭಯಪಡ್ತಾರೆ,

ನನ್ನನ್ನ ದಾರಿಯಲ್ಲಿ ನೋಡಿದ್ರೆ ಸಾಕು ಅವರು ನನ್ನಿಂದ ದೂರ ಓಡಿಹೋಗ್ತಾರೆ.+

12 ಸತ್ತವನನ್ನ ಮರೆಯೋ ತರ ಅವರು ನನ್ನನ್ನ ಮರೆತಿದ್ದಾರೆ, ಅವ್ರ ಹೃದಯದಿಂದ* ನನ್ನನ್ನ ತೆಗೆದುಹಾಕಿದ್ದಾರೆ.

ನಾನು ಒಡೆದ ಮಡಿಕೆ ತರ ಇದ್ದೀನಿ.

13 ನಾನು ನನ್ನ ಬಗ್ಗೆ ಸಿಕ್ಕಾಪಟ್ಟೆ ಕೆಟ್ಟ ಗಾಳಿಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,

ಆತಂಕ ನನ್ನನ್ನ ಸುತ್ಕೊಂಡಿದೆ.+

ಅವ್ರೆಲ್ಲ ನನ್ನ ವಿರುದ್ಧ ಸೇರಿದಾಗ,

ನನ್ನ ಪ್ರಾಣ ತೆಗೀಬೇಕು ಅಂತ ಹೊಂಚುಹಾಕ್ತಾರೆ.+

14 ಆದ್ರೆ ಯೆಹೋವನೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.+

“ನೀನೇ ನನ್ನ ದೇವರು” ಅಂತ ಜೋರಾಗಿ ಹೇಳ್ತೀನಿ.+

15 ನನ್ನ ಜೀವ* ನಿನ್ನ ಕೈಯಲ್ಲಿದೆ.

ನನ್ನ ಶತ್ರುಗಳ ಕೈಯಿಂದ, ನನಗೆ ಹಿಂಸೆ ಕೊಡೋರ ಕೈಯಿಂದ ನನ್ನನ್ನ ಬಿಡಿಸು.+

16 ನಿನ್ನ ಸೇವಕನ ಕಡೆ ತಿರುಗಿ ನೀನು ನಕ್ಕರೆ ಸಾಕು.+

ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು.

17 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ, ನನಗೆ ಅವಮಾನ ಆಗದ ಹಾಗೆ ನೋಡ್ಕೋ.+

ಕೆಟ್ಟವರಿಗೆ ಅವಮಾನ ಆಗಲಿ,+ ಸಮಾಧಿಯಲ್ಲಿ* ಬಾಯಿ ಮುಚ್ಕೊಂಡಿರಲಿ.+

18 ಸುಳ್ಳು ಹೇಳೋ ಬಾಯಿ* ಮೂಕ ಆಗಲಿ,+

ಅದು ಜಂಬದಿಂದ, ದ್ವೇಷಿಸ್ತಾ ನೀತಿವಂತನ ವಿರುದ್ಧ ಸೊಕ್ಕಿಂದ ಮಾತಾಡುತ್ತೆ.

19 ನಿನ್ನ ಒಳ್ಳೇತನ ಎಷ್ಟೋ ಅಪಾರ!+

ನಿನ್ನ ಮೇಲೆ ಭಯಭಕ್ತಿ ಇರೋರಿಗೆ ನೀನು ಅದನ್ನ ಕೂಡಿಸಿಟ್ಟಿದ್ದೀಯ,+

ನೀನು ಎಲ್ಲ ಜನ್ರ ಮುಂದೆ, ನಿನ್ನನ್ನ ಆಶ್ರಯ ಮಾಡ್ಕೊಂಡವ್ರಿಗೆ ಅದನ್ನ ತೋರಿಸಿದ್ದೀಯ.+

20 ಜನ್ರ ಸಂಚಿನಿಂದ ಕಾಪಾಡೋಕೆ,

ನೀನು ಅವ್ರನ್ನ ನಿನ್ನ ಸನ್ನಿಧಿಯಲ್ಲಿ ಬಚ್ಚಿಡ್ತೀಯ,+

ಪ್ರಾಣ ತೆಗಿಯೋ ದಾಳಿಯಿಂದ* ರಕ್ಷಿಸೋಕೆ,

ಅವ್ರನ್ನ ನಿನ್ನ ಆಸರೆಯಲ್ಲಿ ಮರೆಮಾಡ್ತೀಯ.+

21 ಯೆಹೋವನಿಗೆ ಹೊಗಳಿಕೆ ಸಿಗಲಿ,

ಯಾಕಂದ್ರೆ ಮುತ್ತಿಗೆ ಹಾಕಿದ್ದ ಪಟ್ಟಣದಲ್ಲಿ+ ನಾನಿದ್ದಾಗ, ಆತನು ತನ್ನ ಶಾಶ್ವತ ಪ್ರೀತಿಯನ್ನ ನನಗೆ ಅದ್ಭುತವಾಗಿ ತೋರಿಸಿದ್ದಾನೆ.+

22 ನಾನು ತುಂಬ ಹೆದರಿಹೋದೆ,

“ಅವರು ನನ್ನನ್ನ ಸಾಯಿಸಿಬಿಡ್ತಾರೆ” ಅಂದ್ಕೊಂಡೆ.+

ಆದ್ರೆ ನಾನು ಸಹಾಯಕ್ಕಾಗಿ ಮೊರೆಯಿಟ್ಟಾಗ ನೀನು ಅದನ್ನ ಕೇಳಿಸ್ಕೊಂಡೆ.+

23 ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+

ಯೆಹೋವ ನಂಬಿಗಸ್ತರನ್ನ ಕಾಪಾಡ್ತಾನೆ,+

ಆದ್ರೆ ಜಂಬದಿಂದ ಮೆರೆಯೋರನ್ನ ಕಠಿಣವಾಗಿ ಶಿಕ್ಷಿಸ್ತಾನೆ.+

24 ಯೆಹೋವನಿಗಾಗಿ ತಾಳ್ಮೆಯಿಂದ ಕಾಯ್ತಿರೋರೇ+

ನೀವೆಲ್ಲ ಧೈರ್ಯವಾಗಿರಿ, ದೃಢವಾಗಿರಿ.*+

ದಾವೀದನ ಕೀರ್ತನೆ. ಮಸ್ಕಿಲ್‌.*

32 ಯಾರ ತಪ್ಪುಗಳಿಗೆ,

ಯಾರ ಪಾಪಗಳಿಗೆ ಕ್ಷಮೆ ಸಿಕ್ಕಿದೆಯೋ* ಅಂಥವನು ಖುಷಿಯಾಗಿ ಇರ್ತಾನೆ.+

 2 ಯೆಹೋವ ಯಾರನ್ನ ಅಪರಾಧಿ ಅಂತ ಹೇಳಲ್ವೋ,+

ಯಾರ ಹೃದಯದಲ್ಲಿ ಕಪಟ ಇರಲ್ವೋ ಅಂಥವನು ಸಂತೋಷವಾಗಿ ಇರ್ತಾನೆ.

 3 ನಾನು ಮೌನವಾಗಿದ್ದಾಗ, ಇಡೀ ದಿನ ನರಳ್ತಿದ್ದೆ. ಅದ್ರಿಂದ ನನ್ನ ಮೂಳೆ ಸವೆದುಹೋದ್ವು.+

 4 ಯಾಕಂದ್ರೆ ಹಗಲೂರಾತ್ರಿ ನಿನ್ನ ಶಿಕ್ಷೆ* ನನಗೆ ಭಾರವಾಗಿತ್ತು.+

ಬಿಸಿಗೆ ಆವಿಯಾಗಿ ಹೋಗೋ ನೀರಿನ ತರ ನನ್ನ ಬಲ ಬತ್ತಿಹೋಯ್ತು.* (ಸೆಲಾ)

 5 ಕೊನೆಗೆ ನಾನು ನನ್ನ ಪಾಪವನ್ನ ನಿನ್ನ ಹತ್ರ ಒಪ್ಕೊಂಡೆ,

ನಾನು ನನ್ನ ತಪ್ಪನ್ನ ಮುಚ್ಚಿಡಲಿಲ್ಲ.+

“ನಾನು ನನ್ನ ಅಪರಾಧಗಳನ್ನ ಯೆಹೋವನ ಹತ್ರ ಒಪ್ಪಿಕೊಳ್ತೀನಿ”+ ಅಂದೆ.

ಆಗ ನೀನು ನನ್ನ ಪಾಪಗಳನ್ನ, ತಪ್ಪುಗಳನ್ನ ಕ್ಷಮಿಸಿದೆ.+ (ಸೆಲಾ)

 6 ಅದಕ್ಕೇ ನಿನ್ನ ಹತ್ರ ಬರೋ ಅವಕಾಶ ಎಲ್ಲಿ ತನಕ ಇರುತ್ತೋ,

ಅಲ್ಲಿ ತನಕ ನಿಷ್ಠಾವಂತರು ನಿನಗೆ ಪ್ರಾರ್ಥಿಸ್ತಾರೆ.+

ಆಗ ಪ್ರವಾಹನೂ ಅವರ ಹತ್ರ ಬರೋಕೆ ಆಗಲ್ಲ.

 7 ನಾನು ಬಚ್ಚಿಟ್ಟುಕೊಳ್ಳೋ ಜಾಗ ನೀನು,

ಕಷ್ಟಗಳಿಂದ ನೀನು ನನ್ನನ್ನ ಕಾಪಾಡ್ತೀಯ.+

ನೀನು ನನ್ನನ್ನ ಬಿಡಿಸಿ ನಾಲ್ಕೂ ದಿಕ್ಕಲ್ಲಿ ಖುಷಿಯನ್ನ ತುಂಬಿಸ್ತೀಯ.+ (ಸೆಲಾ)

 8 “ನಾನು ನಿನಗೆ ತಿಳುವಳಿಕೆ ಕೊಡ್ತೀನಿ. ನೀನು ಯಾವ ದಾರಿಯಲ್ಲಿ ನಡೀಬೇಕು ಅಂತ ಕಲಿಸ್ತೀನಿ.+

ನಿನ್ನ ಮೇಲೆ ಕಣ್ಣಿಟ್ಟು ಸಲಹೆ ಕೊಡ್ತೀನಿ.+

 9 ನೀನು ಬುದ್ಧಿ ಇಲ್ಲದ ಕುದುರೆ ತರ, ಹೇಸರಗತ್ತೆ ತರ ಆಗಬೇಡ,+

ಅದು ನಿನ್ನ ಹತ್ರ ಬರಬೇಕಂದ್ರೆ ನೀನು ಮೊದಲು ಅದಕ್ಕೆ ಕಡಿವಾಣ ಹಾಕಬೇಕು.”

10 ಕೆಟ್ಟವನಿಗೆ ನೂರಾರು ನೋವಿರುತ್ತೆ,

ಆದ್ರೆ ಯೆಹೋವನಲ್ಲಿ ಭರವಸೆ ಇಡೋರಿಗೆ ಆತನ ಶಾಶ್ವತ ಪ್ರೀತಿ ಜೊತೆಗಿರುತ್ತೆ.+

11 ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ, ಉಲ್ಲಾಸಪಡಿ,

ಪ್ರಾಮಾಣಿಕ ಹೃದಯದವ್ರೇ, ಸಂತೋಷದಿಂದ ಜೈಕಾರ ಹಾಕಿ.

33 ನೀತಿವಂತರೇ, ಯೆಹೋವ ಮಾಡಿದ ಒಳ್ಳೇ ಕೆಲಸಗಳಿಗೆ ಖುಷಿಯಾಗಿ ಜೈಕಾರ ಹಾಕಿ.+

ನೀತಿವಂತರು ಆತನನ್ನ ಹೊಗಳಲೇಬೇಕು.

 2 ತಂತಿವಾದ್ಯಗಳನ್ನ ನುಡಿಸಿ ಯೆಹೋವನಿಗೆ ಧನ್ಯವಾದ ಹೇಳಿ,

ಹತ್ತು ತಂತಿಗಳ ವಾದ್ಯ ನುಡಿಸ್ತಾ ಆತನನ್ನ ಹಾಡಿ ಹೊಗಳಿ.*

 3 ಆತನಿಗಾಗಿ ಹೊಸ ಹಾಡನ್ನ ಹಾಡಿ,+

ಸಂತೋಷದಿಂದ ಜೈಕಾರ ಹಾಕ್ತಾ ತಂತಿವಾದ್ಯಗಳನ್ನ ಚೆನ್ನಾಗಿ ನುಡಿಸಿ.

 4 ಯಾಕಂದ್ರೆ ಯೆಹೋವನ ಮಾತು ಸತ್ಯ,+

ಆತನು ಮಾಡೋದೆಲ್ಲ ನಂಬೋಕೆ ಯೋಗ್ಯ.

 5 ಆತನು ನೀತಿ ನ್ಯಾಯವನ್ನ ಪ್ರೀತಿಸ್ತಾನೆ.+

ಭೂಮಿ ಯೆಹೋವನ ಶಾಶ್ವತ ಪ್ರೀತಿಯಿಂದ ತುಂಬಿಹೋಗಿದೆ.+

 6 ಯೆಹೋವನ ಮಾತಿಂದ ಆಕಾಶ ಸೃಷ್ಟಿ ಆಯ್ತು,+

ಅದ್ರಲ್ಲಿರೋ ಎಲ್ಲ* ಆತನ ಬಾಯಿಯ ಉಸಿರಿಂದ ಬಂತು.

 7 ಅಣೆಕಟ್ಟಿನ ನೀರಿನ ಹಾಗೆ ಆತನು ಸಮುದ್ರದ ನೀರನ್ನ ಕೂಡಿಸ್ತಾನೆ,+

ಉಕ್ಕೇರೋ ಜಲರಾಶಿನ ಆತನು ಕಣಜದಲ್ಲಿ ಸಂಗ್ರಹಿಸ್ತಾನೆ.

 8 ಇಡೀ ಭೂಮಿ ಯೆಹೋವನಿಗೆ ಭಯಪಡಲಿ.+

ಭೂಮಿಯಲ್ಲಿ ಇರೋರೆಲ್ಲ ಆತನನ್ನ ನೋಡಿ ಆಶ್ಚರ್ಯಪಡಲಿ.

 9 ಯಾಕಂದ್ರೆ ಆತನು ಹೇಳಿದ ಹಾಗೇ ಭೂಮಿ ಅಸ್ತಿತ್ವಕ್ಕೆ ಬಂತು,+

ಆತನು ಆಜ್ಞೆ ಕೊಟ್ಟ ಹಾಗೇ ಅದು ನಿಂತುಕೊಳ್ತು.+

10 ಯೆಹೋವ ಜನ್ರ ಯೋಜನೆಗಳನ್ನ ಮಣ್ಣುಪಾಲು ಮಾಡಿದ,+

ಆತನು ಅವ್ರ ಉಪಾಯಗಳನ್ನ* ಕೆಡಿಸಿದ.+

11 ಆದ್ರೆ ಯೆಹೋವನ ನಿರ್ಣಯಗಳು* ಯಾವಾಗ್ಲೂ ಇರುತ್ತೆ,+

ಆತನ ಹೃದಯದ ಆಲೋಚನೆಗಳು ಶಾಶ್ವತವಾಗಿ ಇರುತ್ತೆ.

12 ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+

ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+

13 ಯೆಹೋವ ಸ್ವರ್ಗದಿಂದ ಕೆಳಗೆ ನೋಡ್ತಾನೆ,

ಆತನ ಕಣ್ಣು ಎಲ್ಲ ಜನ್ರ ಮೇಲಿರುತ್ತೆ.+

14 ಆತನು ತನ್ನ ಸ್ವರ್ಗದಿಂದ,

ಜನ್ರನ್ನ ದಿಟ್ಟಿಸಿ ನೋಡ್ತಾನೆ.

15 ಎಲ್ರ ಹೃದಯಗಳನ್ನ ರೂಪಿಸಿದವನು ಆತನೇ,

ಅವ್ರ ಕೆಲಸಗಳನ್ನೆಲ್ಲ ಪರೀಕ್ಷಿಸುವವನೂ ಆತನೇ.+

16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+

ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+

17 ಕುದುರೆಯಿಂದ ರಕ್ಷಣೆ* ಸಿಗುತ್ತೆ ಅನ್ನೋದು ಸುಳ್ಳು.+

ಅದಕ್ಕೆ ತುಂಬ ಶಕ್ತಿ ಇದ್ರೂ ಅದು ಕಾಪಾಡಕ್ಕಾಗಲ್ಲ.

18 ನೋಡಿ! ಯೆಹೋವನ ಕಣ್ಣು ಆತನಿಗೆ ಭಯಪಡೋರ ಮೇಲಿದೆ,+

ಆತನ ಶಾಶ್ವತ ಪ್ರೀತಿ ಮೇಲೆ ನಿರೀಕ್ಷೆ ಇಡೋರ ಮೇಲಿದೆ.

19 ಅವ್ರನ್ನ ಸಾವಿಂದ ಕಾಪಾಡೋಕೆ,

ಬರಗಾಲದ ಸಮಯದಲ್ಲಿ ಅವರು ಜೀವಂತವಾಗಿ ಇರೋಕೆ,

ಆತನು ಹೀಗೆ ಮಾಡ್ತಾನೆ.+

20 ನಾವು ಯೆಹೋವನಿಗಾಗಿ ಕಾಯ್ತಾ ಇರ್ತಿವಿ.

ಆತನೇ ನಮ್ಮ ಸಹಾಯಕ, ಆತನೇ ನಮ್ಮ ಗುರಾಣಿ.+

21 ನಮ್ಮ ಹೃದಯಗಳು ಆತನಲ್ಲಿ ಖುಷಿಪಡುತ್ತೆ,

ಯಾಕಂದ್ರೆ ಆತನ ಪವಿತ್ರ ಹೆಸ್ರಿನ ಮೇಲೆ ನಮಗೆ ಭರವಸೆ ಇದೆ.+

22 ಯೆಹೋವನೇ, ನಾವು ನಿನಗಾಗಿ ಕಾಯ್ತಾ ಇರುವಾಗ್ಲೇ,+

ನಿನ್ನ ಶಾಶ್ವತ ಪ್ರೀತಿ ನಮ್ಮ ಮೇಲಿರಲಿ.+

ಹುಚ್ಚನ ತರ ನಾಟಕ ಮಾಡಿದ್ದಕ್ಕೆ+ ಅಬೀಮೆಲೆಕ ದಾವೀದನನ್ನ ಓಡಿಸಿಬಿಟ್ಟಾಗ ಈ ಕೀರ್ತನೆ ರಚಿಸಿದ.

א [ಆಲೆಫ್‌]

34 ನಾನು ಯಾವಾಗ್ಲೂ ಯೆಹೋವನನ್ನ ಹೊಗಳ್ತೀನಿ,

ಆತನ ಸ್ತುತಿ ನನ್ನ ತುಟಿ ಮೇಲೆನೇ ಇರುತ್ತೆ.

ב [ಬೆತ್‌]

 2 ನಾನು ಯೆಹೋವನ ಬಗ್ಗೆ ಕೊಚ್ಚಿಕೊಳ್ತೀನಿ,*+

ದೀನರು ಅದನ್ನ ಕೇಳಿಸ್ಕೊಂಡು ಖುಷಿಪಡ್ತಾರೆ.

ג [ಗಿಮೆಲ್‌]

 3 ನನ್ನ ಜೊತೆ ಸೇರಿ ಯೆಹೋವನನ್ನ ಹೊಗಳಿ,+

ನಾವೆಲ್ಲ ಸೇರಿ ಆತನ ಹೆಸ್ರಿಗೆ ಕೀರ್ತಿ ತರೋಣ.

ד [ಡಾಲತ್‌]

 4 ನಾನು ಯೆಹೋವನ ಹತ್ರ ಕೇಳಿದೆ, ಆತನು ನನಗೆ ಉತ್ರ ಕೊಟ್ಟ.+

ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ.+

ה [ಹೆ]

 5 ಆತನನ್ನ ನೋಡಿದವರ ಮುಖದಲ್ಲಿ ಕಳೆ ಬಂತು.

ಅವ್ರಿಗೆ ಅವಮಾನ ಆಗಲಿಲ್ಲ.

ז [ಜಯಿನ್‌]

 6 ದೀನ ಪ್ರಾರ್ಥಿಸಿದಾಗ ಯೆಹೋವ ಅದನ್ನ ಕೇಳಿಸ್ಕೊಂಡ.

ಅವನ ಎಲ್ಲ ಕಷ್ಟಗಳಿಂದ ಅವನನ್ನ ಬಿಡಿಸಿದ.+

ח [ಹೆತ್‌]

 7 ದೇವ್ರಿಗೆ ಭಯಪಡೋರ ಸುತ್ತ ಯೆಹೋವನ ದೂತ ಪಾಳೆಯ ಹಾಕ್ತಾನೆ,+

ಅವನು ಅವ್ರನ್ನ ಕಾದು ಕಾಪಾಡ್ತಾನೆ.+

ט [ಟೆತ್‌]

 8 ಯೆಹೋವ ಒಳ್ಳೆಯವನು ಅಂತ ಸವಿದು ನೋಡಿ,+

ಆತನನ್ನ ಆಶ್ರಯಿಸುವವನು ಭಾಗ್ಯವಂತ.

י [ಯೋದ್‌]

 9 ಯೆಹೋವನ ಪವಿತ್ರ ಜನ್ರೇ, ಆತನಿಗೆ ಭಯಪಡಿ.

ಭಯಪಡೋರಿಗೆ ಯಾವ ಕೊರತೆನೂ ಇರಲ್ಲ.+

כ [ಕಾಫ್‌]

10 ಎಳೇ ಸಿಂಹಗಳು* ಹಸಿವಿಂದ ಸೊರಗಿ ಹೋಗಬಹುದು,

ಆದ್ರೆ ಯೆಹೋವನನ್ನ ಹುಡುಕೋರಿಗೆ ಒಳ್ಳೇ ವಿಷ್ಯಗಳ ಕೊರತೆನೇ ಇರಲ್ಲ.+

ל [ಲಾಮೆದ್‌]

11 ನನ್ನ ಮಕ್ಕಳೇ ಬನ್ನಿ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ,

ಯೆಹೋವನಿಗೆ ಭಯಪಡೋದು ಅಂದ್ರೆ ಏನಂತ ನಾನು ನಿಮಗೆ ಕಲಿಸ್ತೀನಿ.+

מ [ಮೆಮ್‌]

12 ಸಂತೋಷವಾಗಿ ಜೀವನ ಮಾಡೋಕೆ ಇಷ್ಟಪಡ್ತೀರಾ?

ತುಂಬಾ ದಿನ ಬದುಕಬೇಕು ಅಂತ ಆಸೆಪಡ್ತೀರಾ?+

נ [ನೂನ್‌]

13 ಹಾಗಾದ್ರೆ ನಿಮ್ಮ ನಾಲಿಗೆಯಿಂದ ಕೆಟ್ಟ ಮಾತುಗಳು ಬರದ ಹಾಗೆ,+

ನಿಮ್ಮ ತುಟಿಯಿಂದ ಕಪಟ ಮಾತುಗಳು ಬರದ ಹಾಗೆ ನೋಡ್ಕೊಳ್ಳಿ.+

ס [ಸಾಮೆಕ್‌]

14 ಕೆಟ್ಟದ್ರಿಂದ ದೂರ ಇದ್ದು, ಒಳ್ಳೇದನ್ನ ಮಾಡಿ,+

ಶಾಂತಿಯನ್ನ ಹುಡುಕಿ, ಪ್ರಯತ್ನ ಬಿಡಬೇಡಿ.+

ע [ಅಯಿನ್‌]

15 ಯೆಹೋವನ ಕಣ್ಣು ನೀತಿವಂತರ ಮೇಲಿದೆ,+

ಸಹಾಯಕ್ಕಾಗಿ ಅವರು ಕೇಳಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+

פ [ಪೇ]

16 ಆದ್ರೆ ಕೆಟ್ಟ ಕೆಲಸ ಮಾಡೋರು ಯೆಹೋವನಿಗೆ ಬೇಡ,

ಅವ್ರ ನೆನಪುಗಳನ್ನೂ ಭೂಮಿಯಿಂದ ಅಳಿಸಿಹಾಕ್ತಾನೆ.+

צ [ಸಾದೆ]

17 ನೀತಿವಂತರು ಮೊರೆಯಿಟ್ಟಾಗ ಯೆಹೋವ ಅದನ್ನ ಕೇಳಿಸ್ಕೊಂಡ,+

ಅವ್ರ ಎಲ್ಲ ಕಷ್ಟಗಳಿಂದ ಆತನು ಅವ್ರನ್ನ ಬಿಡಿಸಿದ.+

ק [ಕೊಫ್‌]

18 ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ,+

ಮನಸ್ಸು ಚೂರುಚೂರಾಗಿ ಹೋಗಿರೋರನ್ನ* ಆತನು ಕಾದು ಕಾಪಾಡ್ತಾನೆ.+

ר [ರೆಶ್‌]

19 ನೀತಿವಂತನಿಗೆ ಒಂದಲ್ಲ ಎರಡಲ್ಲ ನೂರಾರು ಕಷ್ಟಸಂಕಟಗಳು,*+

ಆದ್ರೆ ಯೆಹೋವ ಅವುಗಳಿಂದ ಅವನನ್ನ ಬಿಡಿಸ್ತಾನೆ.+

ש [ಶಿನ್‌]

20 ಅವನ ಎಲ್ಲ ಮೂಳೆಗಳನ್ನ ಆತನು ಕಾಪಾಡ್ತಿದ್ದಾನೆ,

ಅದ್ರಲ್ಲಿ ಒಂದೂ ಮುರಿದು ಹೋಗಲಿಲ್ಲ.+

ת [ಟಾವ್‌]

21 ಕಷ್ಟ ಕೆಟ್ಟವನಿಗೆ ಸಾವು ತರುತ್ತೆ,

ನೀತಿವಂತನನ್ನ ದ್ವೇಷಿಸೋ ವ್ಯಕ್ತಿ ಅಪರಾಧಿ ಆಗ್ತಾನೆ.

22 ಯೆಹೋವ ತನ್ನ ಸೇವಕರ ಜೀವ ಕಾಪಾಡ್ತಾನೆ,

ಆತನಲ್ಲಿ ಆಶ್ರಯ ಪಡ್ಕೊಳ್ಳೋ ಒಬ್ಬನೂ ಅಪರಾಧಿ ಆಗಿರಲ್ಲ.+

ದಾವೀದನ ಕೀರ್ತನೆ

35 ಯೆಹೋವನೇ, ನನ್ನ ವಿರೋಧಿಗಳ ವಿರುದ್ಧ ನನಗಿರೋ ಮೊಕದ್ದಮೆಯನ್ನ ನನ್ನ ಪಕ್ಷದಲ್ಲಿ ನಿಂತು ವಾದಿಸು.+

ನನ್ನ ಜೊತೆ ಹೋರಾಡ್ತಿರೋರ ವಿರುದ್ಧ ಹೋರಾಡು.+

 2 ನಿನ್ನ ಚಿಕ್ಕ ಗುರಾಣಿ,* ನಿನ್ನ ದೊಡ್ಡ ಗುರಾಣಿ ತಗೊಂಡು,+

ನನ್ನನ್ನ ಕಾಪಾಡೋಕೆ ಬಾ.+

 3 ನನ್ನನ್ನ ಅಟ್ಟಿಸಿಕೊಂಡು ಬರ್ತಿರೋ ಜನ್ರ ವಿರುದ್ಧ ನಿನ್ನ ಈಟಿಯನ್ನ, ಯುದ್ಧದ ಕೊಡಲಿಯನ್ನ* ಎತ್ತು.+

ನನಗೆ “ನಿನ್ನನ್ನ ರಕ್ಷಿಸ್ತೀನಿ”+ ಅಂತ ಹೇಳು.

 4 ನನ್ನ ಜೀವವನ್ನ ಬೇಟೆಯಾಡ್ತಾ ಇರೋರಿಗೆ ನಾಚಿಕೆ ಅವಮಾನ ಆಗಲಿ.+

ನನ್ನನ್ನ ನಾಶಮಾಡೋಕೆ ಪಿತೂರಿ ಮಾಡ್ತಿರೋರು ಅವಮಾನದಿಂದ ವಾಪಸ್‌ ಹೋಗ್ಲಿ.

 5 ಅವರು ಗಾಳಿಗೆ ಹಾರಿಹೋಗೋ ಹೊಟ್ಟಿನ ತರ ಆಗಲಿ,

ಯೆಹೋವನ ದೂತ ಅವ್ರನ್ನ ಓಡಿಸಿಬಿಡ್ಲಿ.+

 6 ಯೆಹೋವನ ದೂತ ಅವ್ರನ್ನ ಅಟ್ಟಿಸ್ಕೊಂಡು ಹೋಗೋವಾಗ,

ಅವ್ರ ದಾರಿ ಕತ್ತಲಿಂದ ತುಂಬಲಿ, ಜಾರಿ ಬೀಳೋ ತರ ಇರಲಿ.

 7 ಯಾಕಂದ್ರೆ ಅವರು ಕಾರಣ ಇಲ್ಲದೆ ನನ್ನನ್ನ ಸಿಕ್ಕಿಸೋಕೆ ಬಲೆ ಬೀಸಿದ್ದಾರೆ, ಕಾರಣ ಇಲ್ಲದೆ ನನಗಾಗಿ ಗುಂಡಿ ತೋಡಿದ್ದಾರೆ.

 8 ಆದ್ರೆ ಅವ್ರಿಗೇ ಗೊತ್ತಾಗದ ಹಾಗೆ ಅವ್ರ ಮೇಲೆ ವಿಪತ್ತು ಬರಲಿ,

ಅವರು ಬೀಸಿದ ಬಲೆಯಲ್ಲಿ ಅವ್ರೇ ಸಿಕ್ಕಿಹಾಕೊಳ್ಳಲಿ,

ಅವರು ತೋಡಿದ ಗುಂಡಿಗೆ ಅವ್ರೇ ಬಿದ್ದು ನಾಶವಾಗಲಿ.+

 9 ಆದ್ರೆ ನಾನು ಯೆಹೋವನಲ್ಲಿ ಖುಷಿಪಡ್ತೀನಿ,

ಆತನು ರಕ್ಷಿಸೋದನ್ನ ನೋಡಿ ಸಂತೋಷಪಡ್ತೀನಿ.

10 ನನ್ನ ಎಲುಬುಗಳೆಲ್ಲ ಹೀಗೆ ಹೇಳುತ್ತೆ

“ಯೆಹೋವನೇ, ನಿನ್ನ ಹಾಗೆ ಯಾರಿದ್ದಾರೆ?

ನೀನು ಬಲಿಷ್ಠರ ಕೈಯಿಂದ ನಿಸ್ಸಹಾಯಕರನ್ನ ಕಾಪಾಡ್ತೀಯ,+

ದೋಚುವವರ ಕೈಯಿಂದ ಮುಗ್ಧರನ್ನ ಮತ್ತು ಬಡವರನ್ನ ಬಿಡಿಸ್ತೀಯ.”+

11 ಕೆಟ್ಟವರು ಮುಂದೆ ಬಂದು ನನ್ನ ವಿರುದ್ಧ ಸಾಕ್ಷಿ ಹೇಳ್ತಾರೆ,+

ನನಗೆ ಗೊತ್ತೇ ಇಲ್ಲದಿರೋ ವಿಷ್ಯಗಳ ಬಗ್ಗೆ ನನ್ನನ್ನ ಕೇಳ್ತಾರೆ.

12 ಉಪಕಾರಕ್ಕೆ ಅಪಕಾರ ಮಾಡ್ತಾರೆ,+

ತಬ್ಬಲಿತರ ಮಾಡಿಬಿಟ್ಟಿದ್ದಾರೆ.

13 ಆದ್ರೆ ಅವ್ರಿಗೆ ಹುಷಾರಿಲ್ಲದಿದ್ದಾಗ ನಾನು ಗೋಣಿಬಟ್ಟೆ ಹಾಕೊಂಡೆ,

ಉಪವಾಸ ಮಾಡಿ ಕಷ್ಟಪಟ್ಟೆ,

ಯಾವಾಗ ನನ್ನ ಪ್ರಾರ್ಥನೆಗೆ ಉತ್ತರ ಸಿಗಲಿಲ್ವೋ,

14 ಆಗ ನನ್ನ ಒಬ್ಬ ಸ್ನೇಹಿತನಿಗಾಗಿ, ನನ್ನ ತಮ್ಮನಿಗಾಗಿ ದುಃಖಪಡೋ ಹಾಗೆ ದುಃಖಪಡ್ತಾ ಆಕಡೆ ಈಕಡೆ ತಿರುಗಾಡಿದೆ,

ಅಮ್ಮ ಸತ್ತಾಗ ಗೋಳಾಡಿದ ಹಾಗೆ ಗೋಳಾಡಿ ತಲೆತಗ್ಗಿಸಿದೆ.

15 ಆದ್ರೆ ನಾನು ಎಡವಿಬಿದ್ದಾಗ ಅವರು ಖುಷಿಪಟ್ರು,

ಒಟ್ಟಾಗಿ ಬಂದು ನನ್ನನ್ನ ಸಾಯಿಸೋಕೆ ಹೊಂಚುಹಾಕಿದ್ರು,

ಅವರು ಸುಮ್ಮನಿರಲಿಲ್ಲ, ನನ್ನನ್ನ ತುಂಡುತುಂಡಾಗಿ ಸೀಳಿಬಿಟ್ರು.

16 ದೇವ್ರ ಮೇಲೆ ಭಕ್ತಿ ಇಲ್ಲದ ಅವರು ನನ್ನನ್ನ ಕೀಳಾಗಿ ನೋಡ್ತಾ ಅಣಕಿಸಿದ್ರು,*

ಅವರು ನನ್ನ ವಿರುದ್ಧ ಹಲ್ಲು ಕಡಿದ್ರು.+

17 ಯೆಹೋವನೇ, ಎಲ್ಲಿ ತನಕ ಹೀಗೆ ನೋಡ್ತಾ ಸುಮ್ಮನೆ ಇರ್ತಿಯಾ?+

ಅವ್ರ ಆಕ್ರಮಣಗಳಿಂದ ನನ್ನನ್ನ ಕಾಪಾಡು,+

ಎಳೇ* ಸಿಂಹಗಳಿಂದ ನನ್ನ ಅಮೂಲ್ಯ ಜೀವವನ್ನ ಕಾಪಾಡು.+

18 ಆಗ ನಾನು ತುಂಬಿದ ಸಭೆಯಲ್ಲಿ ನಿನಗೆ ಧನ್ಯವಾದ ಹೇಳ್ತೀನಿ,+

ಜನ್ರ ಗುಂಪಲ್ಲಿ ನಿನ್ನನ್ನ ಹೊಗಳ್ತೀನಿ.

19 ಸುಮ್ಮಸುಮ್ಮನೆ ನನ್ನ ಶತ್ರುಗಳು ನನ್ನನ್ನ ನೋಡಿ ಹಿಗ್ಗೋಕೆ ಬಿಡಬೇಡ,

ವಿನಾಕಾರಣ ನನ್ನನ್ನ ದ್ವೇಷಿಸೋರು+ ನನ್ನನ್ನ ನೋಡಿ ದುರುದ್ದೇಶದಿಂದ ಕಣ್ಣು ಮಿಟುಕಿಸೋಕೆ+ ಬಿಡಬೇಡ.

20 ಯಾಕಂದ್ರೆ ಅವ್ರ ಮಾತಲ್ಲಿ ಶಾಂತಿ ಇಲ್ಲ,

ದೇಶದಲ್ಲಿರೋ ಶಾಂತಿಪ್ರಿಯರ ಮೇಲೆ ಮೋಸದಿಂದ ಸಂಚು ಮಾಡ್ತಾರೆ.+

21 ಅವರು ನನ್ನನ್ನ ಬೈಯೋಕೆ ತಮ್ಮ ಬಾಯಿಯನ್ನ ಊರಗಲ ತೆಗಿದು,

“ಆಹಾ! ಆಹಾ! ನಾವು ಏನು ಅಂದ್ಕೊಂಡಿದ್ವೋ ಹಾಗೇ ಆಯ್ತು” ಅಂತಾರೆ.

22 ಯೆಹೋವನೇ, ನೀನು ಇದನ್ನ ನೋಡಿದ್ದೀಯ, ಸುಮ್ಮನಿರಬೇಡ.+

ಯೆಹೋವನೇ, ನನ್ನಿಂದ ದೂರ ಇರಬೇಡ.+

23 ದಯವಿಟ್ಟು ಬಂದು ನನ್ನನ್ನ ರಕ್ಷಿಸು,

ನನ್ನ ದೇವರಾದ ಯೆಹೋವನೇ, ನನ್ನ ಪಕ್ಷದಲ್ಲಿ ನಿಂತು ನನ್ನ ಪರವಾಗಿ ವಾದಿಸು.

24 ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗೆ ತಕ್ಕ ಹಾಗೆ ನನಗೆ ತೀರ್ಪು ಕೊಡು,+

ಅವರು ನನ್ನನ್ನ ನೋಡಿ ಹಿಗ್ಗೋಕೆ ಬಿಡಬೇಡ.

25 ಯಾವತ್ತೂ ಅವರು “ಆಹಾ! ನಮಗೆ ಏನು ಬೇಕಾಗಿತ್ತೋ ಅದೇ ಸಿಕ್ತು” ಅಂದ್ಕೊಬಾರದು.

ಯಾವತ್ತೂ ಅವರು “ನಾವು ಅವನನ್ನ ನುಂಗಿಬಿಟ್ವಿ” ಅಂದ್ಕೊಬಾರದು.+

26 ನನ್ನ ಕಷ್ಟ ನೋಡಿ ಖುಷಿಪಡೋರಿಗೆ,

ನಾಚಿಕೆ, ಅವಮಾನ ಆಗಲಿ.

ನನ್ನನ್ನ ನೋಡಿ ತಮ್ಮನ್ನೇ ಅಟ್ಟಕೇರಿಸಿಕೊಳ್ಳೋ ಜನ್ರಿಗೆ ನಾಚಿಕೆ, ಅವಮಾನ ಆಗಲಿ.

27 ಆದ್ರೆ ನಾನು ನೀತಿಯಿಂದ ನಡ್ಕೊಳ್ಳೋದನ್ನ ನೋಡಿ ಖುಷಿಪಡೋರು ಆನಂದದಿಂದ ಜೈಕಾರ ಹಾಕಲಿ,

“ತನ್ನ ಸೇವಕನ ಶಾಂತಿನ ನೋಡಿ ಸಂತೋಷಪಡೋ ಯೆಹೋವನಿಗೆ ಮಹಿಮೆ ಆಗಲಿ” ಅಂತ ಅವರು ಯಾವಾಗ್ಲೂ ಹೇಳಲಿ.+

28 ಆಗ ನಾನು ನಿನ್ನ ನೀತಿಯ ಬಗ್ಗೆ ವಿವರಿಸ್ತೀನಿ,*+

ಇಡೀ ದಿನ ನಿನ್ನನ್ನ ಹಾಡಿ ಹೊಗಳ್ತೀನಿ.+

ಗಾಯಕರ ನಿರ್ದೇಶಕನಿಗೆ ಸೂಚನೆ: ಯೆಹೋವನ ಸೇವಕ ದಾವೀದನ ಕೀರ್ತನೆ.

36 ಕೆಟ್ಟವನ ಹೃದಯದಲ್ಲಿ ಅಪರಾಧ ಅವನ ಜೊತೆ ಮಾತಾಡುತ್ತೆ,

ಅವನ ಕಣ್ಣಲ್ಲಿ ದೇವರ ಭಯ ಸ್ವಲ್ಪನೂ ಇಲ್ಲ.+

 2 ಅವನು ತನ್ನ ಬಗ್ಗೆನೇ ಕೊಚ್ಕೊಳ್ತಾನೆ ಅಂದ್ರೆ,

ಅವನಿಗೆ ಅವನ ತಪ್ಪು ಕಾಣೋದೇ ಇಲ್ಲ, ಅದನ್ನ ಅವನು ದ್ವೇಷಿಸೋದೇ ಇಲ್ಲ.+

 3 ಅವನ ಬಾಯಲ್ಲಿ ಬರೋ ಮಾತು ಹಾನಿಕರ, ಮೋಸಕರ,

ಒಳ್ಳೇದನ್ನ ಮಾಡೋಕೆ ಅವನಲ್ಲಿ ಸ್ವಲ್ಪನೂ ಬುದ್ಧಿ ಇಲ್ಲ.

 4 ಹಾಸಿಗೆ ಮೇಲೆ ಇರೋವಾಗ್ಲೂ ಅವನು ಸಂಚು ಮಾಡ್ತಾನೆ.

ಅವನು ಹೋಗ್ತಿರೋ ದಾರಿ ಒಳ್ಳೇದಲ್ಲ,

ಅವನು ಕೆಟ್ಟದ್ದನ್ನ ಬಿಡೋದೇ ಇಲ್ಲ.

 5 ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ಆಕಾಶವನ್ನ,+

ನಿನ್ನ ನಂಬಿಗಸ್ತಿಕೆ ಮೋಡಗಳನ್ನ ಮುಟ್ಟುತ್ತೆ.

 6 ನಿನ್ನ ನೀತಿ ವೈಭವದಿಂದ ತುಂಬಿರೋ ಬೆಟ್ಟದ ತರ ಇದೆ,*+

ನಿನ್ನ ತೀರ್ಪುಗಳು ವಿಶಾಲವಾದ ಆಳ ಸಾಗರದ ತರ ಇದೆ.+

ಯೆಹೋವನೇ, ನೀನು ಮನುಷ್ಯನನ್ನೂ ಮೃಗಗಳನ್ನೂ ಕಾಪಾಡ್ತೀಯ.+

 7 ದೇವರೇ, ನಿನ್ನ ಶಾಶ್ವತ ಪ್ರೀತಿ ಎಷ್ಟೋ ಅಮೂಲ್ಯ!+

ನಿನ್ನ ರೆಕ್ಕೆಯ ನೆರಳಲ್ಲಿ, ಮನುಷ್ಯರು ಆಶ್ರಯ ಪಡ್ಕೊತಾರೆ.+

 8 ಅವರು ನಿನ್ನ ಆಲಯದಲ್ಲಿರೋ ಒಳ್ಳೇದನ್ನ* ತೃಪ್ತಿಯಾಗೋ ತನಕ ಕುಡಿತಾರೆ.+

ನೀನು ನಿನ್ನ ಒಳ್ಳೇತನದ ನದಿಯ ನೀರನ್ನ ಅವರಿಗೆ ಕುಡಿಸ್ತೀಯ.+

 9 ಜೀವದ ಮೂಲ* ನೀನೇ,+

ನಿನ್ನ ಬೆಳಕಿಂದಾನೇ ನಾವು ಬೆಳಕನ್ನ ನೋಡ್ತೀವಿ.+

10 ನಿನ್ನ ಬಗ್ಗೆ ತಿಳ್ಕೊಂಡಿರೋರಿಗೆ ನಿನ್ನ ಶಾಶ್ವತ ಪ್ರೀತಿಯನ್ನ,+

ಪ್ರಾಮಾಣಿಕ ಹೃದಯದವರಿಗೆ ನಿನ್ನ ನೀತಿಯನ್ನ ತೋರಿಸ್ತಾ ಇರು.+

11 ದುರಹಂಕಾರಿಯ ಕಾಲು ನನ್ನನ್ನ ತುಳಿಯೋಕೆ ಬಿಡಬೇಡ,

ಕೆಟ್ಟವನ ಕೈ ನನ್ನನ್ನ ಓಡಿಸದ ಹಾಗೆ ನೋಡ್ಕೊ.

12 ನೋಡು! ಅಪರಾಧಿಗಳು ಬಿದ್ದುಹೋಗಿದ್ದಾರೆ,

ಅವರಿಗೆ ಮೇಲೆ ಎದ್ದೇಳೋಕೆ ಆಗಲ್ಲ.+

ದಾವೀದನ ಕೀರ್ತನೆ.

א [ಆಲೆಫ್‌]

37 ಕೆಟ್ಟವರನ್ನ ನೋಡಿ ನೆಮ್ಮದಿ ಕಳ್ಕೊಬೇಡ,*

ಕೆಟ್ಟವರನ್ನ ನೋಡಿ ಹೊಟ್ಟೆಕಿಚ್ಚುಪಡಬೇಡ.+

 2 ಅವರು ಹುಲ್ಲಿನ ತರ ಬೇಗ ಒಣಗಿಹೋಗ್ತಾರೆ+

ಸೊಪ್ಪಿನ ತರ ಬಾಡಿಹೋಗ್ತಾರೆ.

ב [ಬೆತ್‌]

 3 ಯೆಹೋವನ ಮೇಲೆ ಭರವಸೆ ಇಟ್ಟು ಒಳ್ಳೇದನ್ನ ಮಾಡು,+

ಭೂಮಿಯಲ್ಲಿದ್ದು* ನಂಬಿಗಸ್ತನಾಗಿ ನಡ್ಕೊ.+

 4 ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ,

ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.

ג [ಗಿಮೆಲ್‌]

 5 ನಿನ್ನ ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+

ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.+

 6 ಆತನು ನಿನ್ನ ನೀತಿಯನ್ನ ಬೆಳಕಿನ ಹಾಗೆ,

ನಿನ್ನ ನ್ಯಾಯವನ್ನ ಮಧ್ಯಾಹ್ನದ ಸೂರ್ಯನ ಹಾಗೆ ಹೊಳಿಯೋ ತರ ಮಾಡ್ತಾನೆ.

ד [ಡಾಲತ್‌]

 7 ಯೆಹೋವನ ಮುಂದೆ ಮೌನವಾಗಿದ್ದು+

ಆತನಿಗಾಗಿ ತಾಳ್ಮೆಯಿಂದ* ಕಾದಿರು.

ಕುತಂತ್ರದಿಂದ ಗೆಲ್ಲುವವನನ್ನ ನೋಡಿ

ನಿನ್ನ ನೆಮ್ಮದಿ ಕಳ್ಕೊಬೇಡ.+

ה [ಹೆ]

 8 ಕೋಪವನ್ನ ಬಿಟ್ಟುಬಿಡು, ಕ್ರೋಧವನ್ನ ತೊರೆದುಬಿಡು.+

ನೆಮ್ಮದಿಯನ್ನ ಹಾಳುಮಾಡ್ಕೊಬೇಡ, ಕೆಟ್ಟಕೆಲಸಕ್ಕೆ ಕೈಹಾಕಬೇಡ.

 9 ಯಾಕಂದ್ರೆ ಕೆಟ್ಟವರು ನಾಶವಾಗಿ ಹೋಗ್ತಾರೆ,+

ಆದ್ರೆ ಯೆಹೋವನ ಮೇಲೆ ಭರವಸೆ ಇಡೋರು ಭೂಮಿನ ಆಸ್ತಿಯಾಗಿ ಪಡ್ಕೊತಾರೆ.+

ו [ವಾವ್‌]

10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+

ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,

ಅವರು ನಿನಗೆ ಸಿಗೋದೇ ಇಲ್ಲ.+

11 ಆದ್ರೆ ದೀನ ಜನ್ರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+

ನೆಮ್ಮದಿಯಾಗಿ ಖುಷಿಖುಷಿಯಾಗಿ ಅದನ್ನ ಅನುಭವಿಸ್ತಾರೆ.+

ז [ಜಯಿನ್‌]

12 ಕೆಟ್ಟವನು ನೀತಿವಂತನ ವಿರುದ್ಧ ಕುತಂತ್ರ ಹೆಣೆಯುತ್ತಾನೆ,+

ಅವನನ್ನ ನೋಡಿ ಹಲ್ಲು ಕಡಿತಾನೆ.

13 ಆದ್ರೆ ಕೆಟ್ಟವನನ್ನ ನೋಡಿ ಯೆಹೋವ ನಗ್ತಾನೆ,

ಯಾಕಂದ್ರೆ ದುಷ್ಟ ನಾಶವಾಗಿ ಹೋಗ್ತಾನೆ ಅಂತ ಆತನಿಗೆ ಗೊತ್ತು.+

ח [ಹೆತ್‌]

14 ಕುಗ್ಗಿಹೋದವರನ್ನ ಕೆಡವೋಕೆ, ಬಡವರನ್ನ ಬೀಳಿಸೋಕೆ,

ಸರಿಯಾದ ದಾರಿಯಲ್ಲಿ ನಡೆಯೋರನ್ನ ನಾಶಮಾಡೋಕೆ,

ಕೆಟ್ಟವರು ತಮ್ಮ ಕತ್ತಿಗಳನ್ನ ಹಿಡ್ಕೊಂಡಿದ್ದಾರೆ, ಬಿಲ್ಲುಗಳನ್ನ ಬಾಗಿಸಿದ್ದಾರೆ.

15 ಆದ್ರೆ ಅವ್ರ ಕತ್ತಿ ಅವ್ರ ಹೃದಯವನ್ನೇ ಸೀಳಿಬಿಡುತ್ತೆ,+

ಅವ್ರ ಬಿಲ್ಲುಗಳು ಮುರಿದು ಹೋಗುತ್ತೆ.

ט [ಟೆತ್‌]

16 ಕೆಟ್ಟವರಿಗಿರೋ ಸಮೃದ್ಧಿಗಿಂತ,

ನೀತಿವಂತರಿಗಿರೋ ಬಡತನವೇ ಮೇಲು.+

17 ಯಾಕಂದ್ರೆ ಕೆಟ್ಟವರ ತೋಳು ಮುರಿದು ಹೋಗುತ್ತೆ,

ಆದ್ರೆ ನೀತಿವಂತರಿಗೆ ಯೆಹೋವ ಸಹಾಯಮಾಡ್ತಾನೆ.

י [ಯೋದ್‌]

18 ಯಾವ ತಪ್ಪೂ ಮಾಡದವ್ರಿಗೆ ಬರೋ ಕಷ್ಟಗಳು* ಯೆಹೋವನಿಗೆ ಗೊತ್ತು,

ಅವ್ರ ಆಸ್ತಿ ಶಾಶ್ವತವಾಗಿ ಉಳಿಯುತ್ತೆ.+

19 ವಿಪತ್ತು ಬಂದಾಗ ಅವ್ರಿಗೆ ಅವಮಾನ ಆಗಲ್ಲ,

ಬರಗಾಲ ಬಂದಾಗ ಅವ್ರ ಹತ್ರ ಸಾಕಷ್ಟು ಊಟ ಇರುತ್ತೆ.

כ [ಕಾಫ್‌]

20 ಆದ್ರೆ ಕೆಟ್ಟವರು ಅಳಿದುಹೋಗ್ತಾರೆ,+

ಚೆನ್ನಾಗಿ ಬೆಳಿದಿರೋ ಹುಲ್ಲುಗಾವಲು ನಾಶ ಆಗೋ ತರ ಯೆಹೋವನ ಶತ್ರುಗಳು ನಾಶವಾಗ್ತಾರೆ,

ಅವರು ಹೊಗೆ ತರ ಕಾಣಿಸದ ಹಾಗೆ ಹೋಗ್ತಾರೆ.

ל [ಲಾಮೆದ್‌]

21 ದುಷ್ಟ ಸಾಲ ತಗೊಂಡು ಅದನ್ನ ವಾಪಸ್‌ ಕೊಡಲ್ಲ,

ಆದ್ರೆ ನೀತಿವಂತನ ಮನಸ್ಸು ದೊಡ್ಡದು,* ಅವನು ಧಾರಾಳವಾಗಿ ಕೊಡ್ತಾನೆ.+

22 ದೇವರಿಂದ ಆಶೀರ್ವಾದ ಪಡಿಯೋರಿಗೆ ಭೂಮಿ ಆಸ್ತಿಯಾಗಿ ಸಿಗುತ್ತೆ,

ಆತನು ಯಾರಿಗೆ ಶಾಪ ಕೊಡ್ತಾನೋ ಅವರು ನಾಶವಾಗಿ ಹೋಗ್ತಾರೆ.+

מ [ಮೆಮ್‌]

23 ಯೆಹೋವ ಒಬ್ಬ ವ್ಯಕ್ತಿಯ ನಡತೆ ನೋಡಿ ಸಂತೋಷಪಟ್ಟಾಗ,+

ಆತನು ಆ ವ್ಯಕ್ತಿಯ ಹೆಜ್ಜೆಗಳನ್ನ ಮಾರ್ಗದರ್ಶಿಸ್ತಾನೆ.*+

24 ಅವನು ಎಡವಿದ್ರೂ ಬಿದ್ದು ಹೋಗಲ್ಲ,+

ಯಾಕಂದ್ರೆ ಅವನ ಕೈಯನ್ನ ಯೆಹೋವ ಹಿಡಿತಾನೆ.+

נ [ನೂನ್‌]

25 ನಾನು ಚಿಕ್ಕವನಾಗಿದ್ದೆ, ಈಗ ಮುದುಕನಾಗಿದ್ದೀನಿ.

ಆದ್ರೂ ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ,+

ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ.+

26 ನೀತಿವಂತ ಉದಾರವಾಗಿ ಕೊಡ್ತಾನೆ,+

ಅವನ ಮಕ್ಕಳು ದೇವರ ಆಶೀರ್ವಾದ ಪಡೀತಾರೆ.

ס [ಸಾಮೆಕ್‌]

27 ಕೆಟ್ಟದ್ದನ್ನ ಬಿಟ್ಟು ಒಳ್ಳೇದನ್ನೇ ಮಾಡು,+

ಆಗ ನೀನು ಸದಾಕಾಲ ಇರ್ತಿಯ.

28 ಯಾಕಂದ್ರೆ ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ,

ಆತನು ತನ್ನ ನಿಷ್ಠಾವಂತರ ಕೈಬಿಡಲ್ಲ.+

ע [ಅಯಿನ್‌]

ಆತನು ಅವ್ರನ್ನ ಯಾವಾಗ್ಲೂ ಕಾದು ಕಾಪಾಡ್ತಾನೆ,+

ಆದ್ರೆ ಕೆಟ್ವವರ ಸಂತತಿ ಸರ್ವನಾಶ ಆಗುತ್ತೆ.+

29 ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ,+

ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.+

פ [ಪೇ]

30 ನೀತಿವಂತನ ಬಾಯಿ* ವಿವೇಕವನ್ನ ಹೇಳುತ್ತೆ.

ಅವನ ನಾಲಿಗೆ ನ್ಯಾಯದ ಬಗ್ಗೆ ಮಾತಾಡುತ್ತೆ.+

31 ದೇವರ ನಿಯಮ ಪುಸ್ತಕ ಅವನ ಹೃದಯದಲ್ಲಿದೆ,+

ಅವನ ಹೆಜ್ಜೆಗಳು ಯಾವತ್ತೂ ತಡವರಿಸಲ್ಲ.+

צ [ಸಾದೆ]

32 ನೀತಿವಂತನನ್ನ ಕೊಲ್ಲೋಕೆ,

ಕೆಟ್ಟವನು ಗಮನಿಸ್ತಾ ಇರ್ತಾನೆ.

33 ಆದ್ರೆ ಯೆಹೋವ ನೀತಿವಂತನನ್ನ ತೊರೆದುಬಿಡಲ್ಲ, ಕೆಟ್ಟವನ ಕೈಗೆ ಅವನನ್ನ ಒಪ್ಪಿಸಲ್ಲ.+

ತೀರ್ಪು ಮಾಡೋವಾಗ ಅವನನ್ನ ಅಪರಾಧಿ ಅನ್ನಲ್ಲ.+

ק [ಕೊಫ್‌]

34 ಯೆಹೋವನಲ್ಲಿ ನಿರೀಕ್ಷೆ ಇಡು, ಆತನ ದಾರಿಯಲ್ಲಿ ನಡಿ,

ನೀನು ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋ ತರ ಆತನು ನಿನ್ನನ್ನ ಮೇಲೆ ಎತ್ತುತ್ತಾನೆ.

ಕೆಟ್ಟವರು ನಾಶವಾಗಿ ಹೋಗೋದನ್ನ+ ನೀನು ಕಣ್ಣಾರೆ ನೋಡ್ತೀಯ.+

ר [ರೆಶ್‌]

35 ಕ್ರೂರಿಯನ್ನ, ಕೆಟ್ಟವನನ್ನ ನಾನು ನೋಡಿದ್ದೀನಿ,

ಅವನು ಸ್ವಂತ ನೆಲದಲ್ಲೇ ಬೇರುಬಿಟ್ಟು ಚೆನ್ನಾಗಿ ಬೆಳೆದಿರೋ ಮರದ ತರ ಇದ್ದಾನೆ.+

36 ಆದ್ರೆ ಅವನು ಇದ್ದಕ್ಕಿದ್ದ ಹಾಗೆ ಸತ್ತುಹೋದ, ಅಳಿದುಹೋದ.+

ನಾನು ಅವನನ್ನ ಹುಡುಕಿದ್ರೂ ಸಿಗಲಿಲ್ಲ.+

ש [ಶಿನ್‌]

37 ನಿರ್ದೋಷಿಯನ್ನ* ಗಮನಿಸು,

ನೀತಿವಂತನನ್ನ+ ನೋಡ್ತಾ ಇರು,

ಯಾಕಂದ್ರೆ ಅವನ ಭವಿಷ್ಯ ಶಾಂತಿಯಿಂದ ತುಂಬಿರುತ್ತೆ.+

38 ಆದ್ರೆ ಅಪರಾಧಿಗಳೆಲ್ಲ ನಾಶ ಆಗ್ತಾರೆ,

ಕೆಟ್ಟವ್ರಿಗೆ ಭವಿಷ್ಯನೇ ಇಲ್ಲ.+

ת [ಟಾವ್‌]

39 ನೀತಿವಂತರ ರಕ್ಷಣೆ ಯೆಹೋವನಿಂದಾನೇ,+

ಕಷ್ಟಕಾಲದಲ್ಲಿ ಆತನೇ ಅವ್ರ ಭದ್ರಕೋಟೆ.+

40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+

ಅವರು ಆತನನ್ನ ಆಶ್ರಯಿಸಿರೋದ್ರಿಂದ,

ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+

ನೆನಪಿನಲ್ಲಿಡೋಕೆ ದಾವೀದನ ಮಧುರ ಗೀತೆ.

38 ಯೆಹೋವನೇ ಕೋಪದಿಂದ ನನ್ನನ್ನ ತಿದ್ದಬೇಡ,

ಸಿಟ್ಟಿಂದ ನನ್ನನ್ನ ಸರಿಪಡಿಸಬೇಡ.+

 2 ಯಾಕಂದ್ರೆ ನಿನ್ನ ಬಾಣ ನನ್ನೊಳಗೆ ಆಳವಾಗಿ ಹೋಗಿದೆ,

ನಿನ್ನ ಶಿಕ್ಷೆ ನನ್ನ ಮೇಲೆ ಭಾರವಾಗಿದೆ.+

 3 ನಿನ್ನ ಕೋಪದಿಂದ ನನ್ನ ಇಡೀ ಶರೀರಕ್ಕೆ ಹುಷಾರಿಲ್ಲ,*

ನನ್ನ ಪಾಪದಿಂದಾಗಿ ನನ್ನ ಎಲುಬಲ್ಲಿ ಶಾಂತಿನೇ ಇಲ್ಲ.+

 4 ಯಾಕಂದ್ರೆ ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ,+

ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ.

 5 ನನ್ನ ದಡ್ಡತನದಿಂದ,

ನನ್ನ ಹುಣ್ಣುಗಳು ಕೀವುಗಟ್ಟಿ ಕೆಟ್ಟ ವಾಸನೆ ಬರ್ತಿದೆ.

 6 ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ,

ಇಡೀ ದಿನ ದುಃಖದಲ್ಲಿ ಮುಳುಗಿ ಹೋಗಿರ್ತಿನಿ.

 7 ನನ್ನೊಳಗೆ ಬೆಂಕಿ ಉರೀತಾ ಇದೆ,*

ನನ್ನ ಇಡೀ ದೇಹಕ್ಕೆ ರೋಗ ಬಂದಿದೆ.+

 8 ನಾನು ಮರಗಟ್ಟಿ ಹೋಗಿದ್ದೀನಿ, ಸಂಪೂರ್ಣವಾಗಿ ನಲುಗಿಹೋಗಿದ್ದೀನಿ,

ನನ್ನ ಹೃದಯದ ಯಾತನೆ ಕಿರಿಚಾಡಿ ನರಳೋ ತರ ಮಾಡ್ತಿದೆ.

 9 ಯೆಹೋವನೇ, ನನ್ನ ಬಯಕೆಗಳೆಲ್ಲ ನಿನ್ನ ಮುಂದಿದೆ,

ನನ್ನ ದುಃಖದ ನಿಟ್ಟುಸಿರು ನಿನಗೆ ಕಾಣ್ತಿದೆ.

10 ನನ್ನ ಹೃದಯ ಜೋರಾಗಿ ಬಡ್ಕೊಳ್ತಿದೆ, ನನಗೆ ಶಕ್ತಿನೇ ಇಲ್ಲದಾಗಿದೆ,

ನನ್ನ ಕಣ್ಣಿನ ದೃಷ್ಟಿ ಮೊಬ್ಬಾಗಿದೆ.+

11 ನನ್ನ ರೋಗದಿಂದಾಗಿ ನನ್ನ ಸ್ನೇಹಿತರು ನನ್ನ ದೂರ ಮಾಡಿ ಓಡಾಡ್ತಿದ್ದಾರೆ,

ನನ್ನ ಆಪ್ತಮಿತ್ರರು ನನ್ನಿಂದ ದೂರವಾಗಿದ್ದಾರೆ.

12 ನನ್ನ ಪ್ರಾಣ ತೆಗೀಬೇಕು ಅಂತಿರೋರು ಬಲೆ ಬೀಸಿದ್ದಾರೆ,

ನನಗೆ ಕೆಟ್ಟದ್ದನ್ನ ಮಾಡಬೇಕು ಅಂತಿರೋರು ನನ್ನ ವಿರುದ್ಧ ಮಾತಾಡಿದ್ದಾರೆ,+

ಅವರು ನನಗೆ ಮೋಸ ಮಾಡೋಕೆ ಇಡೀ ದಿನ ಕುತಂತ್ರ ಮಾಡ್ತಾರೆ.

13 ಆದ್ರೆ ನಾನು ಅವ್ರ ಮಾತಿಗೆ ಗಮನಕೊಡದೆ ಕಿವುಡನ ತರ ಇದ್ದುಬಿಡ್ತೀನಿ,+

ಏನೂ ಮಾತಾಡದೆ ಮೂಕನ ಹಾಗೆ ಇದ್ದುಬಿಡ್ತೀನಿ.+

14 ಏನೂ ಕೇಳದ ಕಿವುಡನ ತರ ಆಗಿದ್ದೀನಿ,

ನನ್ನ ಪರವಾಗಿ ಮಾತಾಡೋಕೆ ಆಗದ ಮೂಕನ ತರ ಆಗಿದ್ದೀನಿ.

15 ಯಾಕಂದ್ರೆ ಯೆಹೋವನೇ, ನಾನು ನಿನಗಾಗಿ ಕಾದೆ,+

ನನ್ನ ದೇವರಾದ ಯೆಹೋವನೇ, ನೀನು ನನಗೆ ಉತ್ರ ಕೊಟ್ಟೆ.+

16 ನಾನು ಹೀಗೆ ಹೇಳಿದ್ದೆ “ನನ್ನ ಕಾಲು ಜಾರಿದ್ರೆ,

ಅವರು ನನ್ನನ್ನ ನೋಡಿ ಖುಷಿಪಡಬಾರದು ಅಥವಾ ಕೊಚ್ಕೊಬಾರದು.”

17 ಯಾಕಂದ್ರೆ ನಾನು ಇನ್ನೇನು ಕುಸಿದು ಬೀಳ್ತಿದ್ದೆ,

ಯಾವಾಗ್ಲೂ ನೋವಿಂದ ನರಳ್ತಿದ್ದೆ.+

18 ನಾನು ನನ್ನ ತಪ್ಪನ್ನ ಒಪ್ಕೊಂಡೆ,+

ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ.+

19 ಆದ್ರೆ ನನ್ನ ಶತ್ರುಗಳು ಚುರುಕಾಗಿದ್ದಾರೆ,* ಬಲಿಷ್ಠರಾಗಿದ್ದಾರೆ,

ಯಾವ ಕಾರಣನೂ ಇಲ್ಲದೆ ನನ್ನನ್ನ ದ್ವೇಷಿಸೋ ಜನ ಜಾಸ್ತಿ ಆಗಿದ್ದಾರೆ.

20 ಅವರು ಉಪಕಾರಕ್ಕೆ ಅಪಕಾರ ಮಾಡಿದ್ದಾರೆ,

ಒಳ್ಳೇದನ್ನ ಮಾಡದ ಹಾಗೆ ನನ್ನನ್ನ ತಡೆದಿದ್ದಾರೆ.

21 ಯೆಹೋವನೇ, ನನ್ನನ್ನ ಬಿಟ್ಟುಬಿಡಬೇಡ.

ದೇವರೇ, ನನ್ನಿಂದ ದೂರ ಉಳೀಬೇಡ.+

22 ಯೆಹೋವನೇ, ನನ್ನ ರಕ್ಷಕನೇ,+

ಬೇಗ ಬಂದು ನನಗೆ ಸಹಾಯಮಾಡು.

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಯೆದುತೂನ್‌+ ಶೈಲಿ.*

39 ನಾನು ಹೀಗೆ ಹೇಳಿದೆ: “ನನ್ನ ನಾಲಿಗೆ ಪಾಪ ಮಾಡದ ಹಾಗೆ,+

ತುಂಬ ಹುಷಾರಾಗಿ ಇರ್ತಿನಿ.

ನನ್ನ ಹತ್ರ ಕೆಟ್ಟವನು ಇರೋ ತನಕ,

ನಾನು ಬಾಯಿಗೆ ಕಡಿವಾಣ* ಹಾಕ್ತೀನಿ.”+

 2 ನಾನು ಮೂಕನಾಗಿದ್ದೆ, ಏನೂ ಮಾತಾಡಲಿಲ್ಲ,+

ಒಳ್ಳೇದನ್ನ ಮಾತಾಡಕ್ಕೂ ನಾನು ಬಾಯನ್ನ ತೆಗೀಲಿಲ್ಲ,

ಆದ್ರೆ ನನ್ನ ನೋವು ನನ್ನ ಹೃದಯನ ಛಿದ್ರಛಿದ್ರಮಾಡ್ತು.*

 3 ನನ್ನ ಹೃದಯ ಒಳಗೊಳಗೇ ಕುದೀತು.

ನಾನು ಆಳವಾಗಿ ಚಿಂತಿಸ್ತಾನೇ* ಇದ್ದೆ, ಬೆಂಕಿ ಉರೀತಾನೇ ಇತ್ತು.

ಕೊನೆಗೆ ನಾನು ಹೀಗೆ ಹೇಳಿದೆ

 4 “ಯೆಹೋವನೇ ನನಗೆ ಹೇಳು, ನನ್ನ ಕೊನೆ ಯಾವಾಗ ಅಂತ,

ನನಗೆ ಇನ್ನೆಷ್ಟು ದಿನ ಉಳಿದಿದೆ ಅಂತ ತಿಳ್ಕೊಳ್ಳೋಕೆ ಸಹಾಯಮಾಡು,+

ಆಗ ನನ್ನ ಜೀವನ ಎಷ್ಟು ಚಿಕ್ಕದು ಅಂತ* ನನಗೆ ಗೊತ್ತಾಗುತ್ತೆ.

 5 ನಿಜವಾಗ್ಲೂ ನೀನು ನನಗೆ ತುಂಬ ಕಮ್ಮಿ* ಆಯಸ್ಸು ಕೊಟ್ಟೆ,+

ನನ್ನ ಆಯಸ್ಸು ನಿನ್ನ ಮುಂದೆ ಏನೇನೂ ಅಲ್ಲ.+

ಪ್ರತಿಯೊಬ್ಬನು ನೋಡೋಕೆ ಸುರಕ್ಷಿತವಾಗಿ ಕಂಡ್ರೂ ಅವನು ಬರೀ ಒಂದು ಉಸಿರಿಗೆ ಸಮ.+ (ಸೆಲಾ)

 6 ನಿಜ, ಪ್ರತಿಯೊಬ್ಬ ಮನುಷ್ಯನು ಒಂದು ನೆರಳಿನ ತರ.

ಅವನು ಸುಮ್ಮಸುಮ್ಮನೆ ತಿರುಗಾಡ್ತಾನೆ.*

ಆಸ್ತಿಯನ್ನ ಗುಡ್ಡೆಹಾಕ್ತಾನೆ, ಆದ್ರೆ ಅದನ್ನ ಯಾರು ಅನುಭವಿಸುತ್ತಾರೆ ಅಂತ ಅವನಿಗೇ ಗೊತ್ತಿರಲ್ಲ.+

 7 ಹಾಗಿರುವಾಗ ಯೆಹೋವನೇ, ನಾನು ಯಾವುದರ ಮೇಲೆ ನಿರೀಕ್ಷೆ ಇಡಲಿ?

ನೀನೇ ನನ್ನ ನಿರೀಕ್ಷೆ.

 8 ನನ್ನನ್ನ ನನ್ನ ಎಲ್ಲ ಅಪರಾಧಗಳಿಂದ ಬಿಡಿಸು.+

ಮೂರ್ಖ ನನ್ನನ್ನ ಅಣಕಿಸದ ಹಾಗೆ ನೋಡ್ಕೊ.

 9 ಇನ್ನೂ ನಾನು ಮೂಕನಾಗೇ ಇದ್ದೆ,

ನನಗೆ ನನ್ನ ಬಾಯನ್ನ ತೆರೆಯೋಕೆ ಆಗಲೇ ಇಲ್ಲ,+

ಯಾಕಂದ್ರೆ ಇದನ್ನ ಮಾಡಿದವನು ನೀನೇ.+

10 ನೀನು ನನ್ನ ಮೇಲೆ ತಂದಿರೋ ಬಾಧೆಯನ್ನ ನನ್ನಿಂದ ತೆಗೆದುಹಾಕು.

ನಿನ್ನ ಹೊಡೆತದಿಂದ ನಾನು ತತ್ತರಿಸಿ ಹೋಗಿದ್ದೀನಿ.

11 ತಪ್ಪು ಮಾಡಿದವನಿಗೆ ಶಿಕ್ಷೆ ಕೊಟ್ಟು ನೀನು ತಿದ್ದುತ್ತೀಯ,+

ಹುಳ ಬಟ್ಟೆನ ತಿಂದುಹಾಕೋ ತರ ಅವನು ಇಷ್ಟಪಟ್ಟು ಕೂಡಿಸಿಟ್ಟಿರೋದನ್ನೆಲ್ಲ ನೀನು ನಾಶಮಾಡ್ತೀಯ.

ನಿಜವಾಗ್ಲೂ ಮನುಷ್ಯರೆಲ್ಲ ಒಂದು ಉಸಿರಿಗೆ ಸಮ.+ (ಸೆಲಾ)

12 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳು,

ಸಹಾಯಕ್ಕಾಗಿ ನಾನಿಡೋ ಮೊರೆನ ಆಲಿಸು.+

ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ.

ಯಾಕಂದ್ರೆ ನಾನು ನಿನಗೆ ಬರೀ ಒಬ್ಬ ಅತಿಥಿ ಆಗಿದ್ದೀನಿ,+

ನನ್ನ ಪೂರ್ವಜರ ತರ ಒಬ್ಬ ತಾತ್ಕಾಲಿಕ ನಿವಾಸಿ ಆಗಿದ್ದೀನಿ.*+

13 ನಾನು ಸಾಯೋ ಮುಂಚೆ, ನಾನು ಇಲ್ಲದೇ ಹೋಗೋ ಮುಂಚೆ,

ನಿನ್ನ ಕೋಪದ ಕಣ್ಣನ್ನ ನನ್ನಿಂದ ತಿರುಗಿಸು.

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

40 ನಾನು ಯೆಹೋವನಿಗಾಗಿ ತಾಳ್ಮೆಯಿಂದ ಕಾದೆ,*

ನಾನು ಹೇಳೋದನ್ನ ಕೇಳಿಸ್ಕೊಳ್ಳೋಕೆ ಆತನು ಬಾಗಿದ,* ಸಹಾಯಕ್ಕಾಗಿ ನಾನಿಟ್ಟ ಮೊರೆಯನ್ನ ಕೇಳಿಸ್ಕೊಂಡ.+

 2 ಹರಿಯೋ ಪ್ರವಾಹದ ನೀರಿಂದ ಆತನು ನನ್ನನ್ನ ಮೇಲಕ್ಕೆತ್ತಿದ,

ಕೆಸರಿನ ಗುಂಡಿಯಿಂದ ಎಬ್ಬಿಸಿದ.

ಕಡಿದಾದ ಬಂಡೆಗಳ ಮೇಲೆ ನನ್ನನ್ನ ನಿಲ್ಲಿಸಿ,

ನನ್ನ ಪಾದಗಳನ್ನ ಸ್ಥಿರಮಾಡಿದ.

 3 ಆಮೇಲೆ ಆತನು ನನ್ನ ಬಾಯಿಗೆ ಒಂದು ಹೊಸ ಹಾಡನ್ನ,+

ನಮ್ಮ ದೇವರನ್ನ ಹೊಗಳೋ ಹಾಡನ್ನ ಹಾಕಿದ.

ಇದನ್ನ ನೋಡಿ ಎಲ್ರೂ ಆಶ್ಚರ್ಯಪಡ್ತಾರೆ,

ಯೆಹೋವನಲ್ಲಿ ಭರವಸೆ ಇಡ್ತಾರೆ.

 4 ಯೆಹೋವನ ಮೇಲೆ ಭರವಸೆ ಇಡೋ ವ್ಯಕ್ತಿ ಖುಷಿಯಾಗಿ ಇರ್ತಾನೆ,

ಪ್ರತಿಭಟಿಸೋ ಜನ್ರ ಹಿಂದೆ, ತಪ್ಪು ದಾರಿಯಲ್ಲಿ ನಡೆಯೋರ* ಹಿಂದೆ ಅವನು ಹೋಗಲ್ಲ.

 5 ಯೆಹೋವನೇ, ನನ್ನ ದೇವರೇ ನೀನು ನಮಗಾಗಿ,

ಎಷ್ಟೋ ಅದ್ಭುತಗಳನ್ನ ಮಾಡಿದ್ದೀಯ,

ನಮ್ಮ ಬಗ್ಗೆ ತುಂಬ ಯೋಚಿಸ್ತೀಯ.+

ನಿನಗೆ ಸರಿಸಾಟಿ ಯಾರೂ ಇಲ್ಲ,+

ನಾನು ಅದ್ರ ಬಗ್ಗೆ ಹೇಳೋಣ ಅಂದ್ರೆ, ಮಾತಾಡೋಣ ಅಂದ್ರೆ,

ಅವಕ್ಕೆ ಲೆಕ್ಕಾನೇ ಇಲ್ಲ!+

 6 ನೀನು ಬಲಿಯನ್ನಾಗಲಿ, ಅರ್ಪಣೆಯನ್ನಾಗಲಿ ಇಷ್ಟಪಡಲಿಲ್ಲ,+

ನಾನು ಕೇಳಿಸ್ಕೊಳ್ಳೋ ತರ ನೀನು ನನ್ನ ಕಿವಿಗಳನ್ನ ತೆರೆದೆ.+

ನೀನು ಸರ್ವಾಂಗಹೋಮ ಬಲಿಯನ್ನಾಗಲಿ ಪಾಪಪರಿಹಾರಕ ಬಲಿಯನ್ನಾಗಲಿ ಕೇಳಲಿಲ್ಲ.+

 7 ಆಮೇಲೆ ನಾನು ಹೀಗೆ ಹೇಳಿದೆ “ನೋಡು, ನಾನು ಬಂದಿದ್ದೀನಿ.

ಸುರುಳಿಯಲ್ಲಿ* ನನ್ನ ಬಗ್ಗೆ ಇದೆ.+

 8 ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ,*+

ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.+

 9 ಮಹಾ ಸಭೆಯಲ್ಲಿ ನಾನು ನಿನ್ನ ನೀತಿಯ ಸಿಹಿಸುದ್ದಿಯನ್ನ ಹೇಳ್ತೀನಿ.+

ನೋಡು! ಇದ್ರ ಬಗ್ಗೆ ಹೇಳದ ಹಾಗೆ ನಾನು ನನ್ನ ತುಟಿಗಳನ್ನ ಕಚ್ಚಿಕೊಂಡಿರಲ್ಲ,+

ಯೆಹೋವನೇ, ಇದ್ರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು.

10 ನಾನು ನಿನ್ನ ನೀತಿಯನ್ನ ನನ್ನ ಹೃದಯದಲ್ಲಿ ಮುಚ್ಚಿಡಲ್ಲ.

ನಿನ್ನ ನಂಬಿಗಸ್ತಿಕೆಯನ್ನ, ರಕ್ಷಣೆಯನ್ನ ಎಲ್ರಿಗೂ ಹೇಳ್ತೀನಿ.

ಮಹಾ ಸಭೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನ, ನಿನ್ನ ಸತ್ಯವನ್ನ ಬಚ್ಚಿಡಲ್ಲ.”+

11 ಯೆಹೋವನೇ, ನನಗೆ ಕರುಣೆಯನ್ನ ತೋರಿಸದೆ ಇರಬೇಡ.

ನಿನ್ನ ಶಾಶ್ವತ ಪ್ರೀತಿ ಮತ್ತು ನಿನ್ನ ಸತ್ಯ ಯಾವಾಗ್ಲೂ ನನ್ನನ್ನ ಕಾಪಾಡಲಿ.+

12 ನನ್ನನ್ನ ಸುತ್ಕೊಂಡಿರೋ ಕಷ್ಟಗಳಿಗೆ ಲೆಕ್ಕಾನೇ ಇಲ್ಲ.+

ಎಷ್ಟು ತಪ್ಪುಗಳನ್ನ ಮಾಡಿದ್ದೀನಿ ಅಂದ್ರೆ ನಾನು ಎಲ್ಲಿ ಹೋಗಬೇಕು ಅಂತಾನೇ ಗೊತ್ತಾಗ್ತಿಲ್ಲ,+

ಅವು ನನ್ನ ಕೂದಲಿಗಿಂತ ಜಾಸ್ತಿ ಇವೆ,

ನಾನು ಧೈರ್ಯ ಕಳ್ಕೊಂಡಿದ್ದೀನಿ.

13 ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಕಾಪಾಡು.+

ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+

14 ನನ್ನ ಪ್ರಾಣ ತೆಗೀಬೇಕು ಅಂತ ಇರೋ ಎಲ್ರಿಗೂ

ನಾಚಿಕೆ, ಅವಮಾನ ಆಗಲಿ.

ನನಗೆ ಕಷ್ಟ ಬಂದಾಗ ಖುಷಿಪಡೋರು

ಅವಮಾನದಿಂದ ವಾಪಸ್‌ ಹೋಗ್ಲಿ.

15 ಯಾರು ನನ್ನನ್ನ ನೋಡಿ “ನಿಂಗೆ ಹಂಗೆ ಆಗಬೇಕು!” ಅಂತಾರೋ,

ಅವರಿಗಾಗೋ ಅವಮಾನದಿಂದ ಅವ್ರೇ ಭಯಪಡಲಿ.

16 ಆದ್ರೆ ಯಾರು ನಿನ್ನನ್ನ ಹುಡುಕ್ತಾರೋ,+

ಅವರು ನಿನ್ನಲ್ಲಿ ಖುಷಿಪಡಲಿ, ನಿನ್ನಲ್ಲಿ ಉಲ್ಲಾಸಿಸಲಿ.+

ನಿನ್ನ ರಕ್ಷಣೆಯ ಕಾರ್ಯಗಳನ್ನ ಪ್ರೀತಿಸೋರು,

“ಯೆಹೋವನಿಗೆ ಗೌರವ ಸಿಗಲಿ”+ ಅಂತ ಯಾವಾಗ್ಲೂ ಹೇಳಲಿ.

17 ಯೆಹೋವ ನನ್ನ ಕಡೆ ಗಮನ ಕೊಡಲಿ,

ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.

ನನ್ನ ದೇವರೇ ತಡಮಾಡಬೇಡ,+

ನೀನೇ ನನ್ನ ಸಹಾಯಕ, ನನ್ನ ರಕ್ಷಕ.+

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.

41 ಬಡವನಿಗೆ ಕಾಳಜಿ ತೋರಿಸೋನು ಭಾಗ್ಯವಂತ,+

ಕಷ್ಟ ಬಂದಾಗ ಯೆಹೋವ ಅವನನ್ನ ರಕ್ಷಿಸ್ತಾನೆ.

 2 ಯೆಹೋವ ಅವನನ್ನ ಕಾದು ಕಾಪಾಡ್ತಾನೆ, ಅವನ ಜೀವವನ್ನ ಸಂರಕ್ಷಿಸ್ತಾನೆ.

ಅವನು ಭೂಮಿ ಮೇಲೆ ಭಾಗ್ಯವಂತ ಅಂತ ಕರೆಸ್ಕೊಳ್ತಾನೆ,+

ದೇವರು ಅವನನ್ನ ಯಾವತ್ತೂ ಅವನ ಶತ್ರುಗಳ ಕೈಗೆ ಒಪ್ಪಿಸಲ್ಲ.+

 3 ಅವನಿಗೆ ಹುಷಾರಿಲ್ಲದೆ ಹಾಸಿಗೆ ಹಿಡಿದಾಗ ಯೆಹೋವ ಅವನಿಗೆ ಆಸರೆಯಾಗಿ ಇರ್ತಾನೆ,+

ಅನಾರೋಗ್ಯದ ಸಮಯದಲ್ಲಿ ದೇವರು ಅವನಿಗೆ ಕಾಳಜಿ ತೋರಿಸ್ತಾನೆ.*

 4 ನಾನು ಹೀಗೆ ಹೇಳಿದ್ದೆ “ಯೆಹೋವನೇ, ನನಗೆ ದಯೆ ತೋರಿಸು.+

ನನ್ನನ್ನ ವಾಸಿಮಾಡು,+ ಯಾಕಂದ್ರೆ ನಾನು ನಿನ್ನ ವಿರುದ್ಧ ಪಾಪ ಮಾಡಿದ್ದೀನಿ.”+

 5 ಆದ್ರೆ ನನ್ನ ಶತ್ರುಗಳು “ಇವನು ಯಾವಾಗ ಸಾಯ್ತಾನೆ?

ಇವನ ಹೆಸ್ರು ಯಾವಾಗ ಅಳಿದುಹೋಗುತ್ತೆ?” ಅಂತ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ಕೊತಾರೆ.

 6 ಅವ್ರಲ್ಲಿ ಯಾವನಾದ್ರೂ ನನ್ನನ್ನ ನೋಡೋಕೆ ಬಂದ್ರೆ, ಸುಳ್ಳು ಹೇಳೋ ಉದ್ದೇಶ ಇಟ್ಕೊಂಡೇ ಬಂದಿರ್ತಾನೆ.

ಅವನು ನನ್ನನ್ನ ಬೈಯೋಕೆ ಒಂದಲ್ಲ ಒಂದು ವಿಷ್ಯ ಹುಡುಕ್ತಾನೆ,

ಆಮೇಲೆ ಹೊರಗೆ ಹೋಗಿ ಅದನ್ನ ಎಲ್ಲ ಕಡೆ ಹಬ್ಬಿಸ್ತಾನೆ.

 7 ನನ್ನನ್ನ ದ್ವೇಷಿಸೋರೆಲ್ಲ ಗುಸುಗುಸು ಅಂತ ಮಾತಾಡ್ಕೊತಾರೆ,

ನನ್ನ ವಿರುದ್ಧ ಏನೋ ಕುತಂತ್ರ ಮಾಡ್ತಿದ್ದಾರೆ.

 8 “ಅವನಿಗೆ ಯಾವುದೋ ದೊಡ್ಡ ರೋಗ ಬಂದಿದೆ,

ಅವನು ಬಿದ್ದು ಹೋಗಿದ್ದಾನೆ, ಇನ್ಯಾವತ್ತೂ ಮೇಲೆ ಏಳಲ್ಲ” ಅಂತ ಮಾತಾಡ್ಕೊತಾರೆ.+

 9 ನಾನು ಯಾರ ಜೊತೆ ಶಾಂತಿಯಿಂದ ಇದ್ದೀನೋ, ಯಾರನ್ನ ನಂಬಿದ್ದೀನೋ,+

ಯಾರು ನನ್ನ ಜೊತೆ ಊಟ ಮಾಡ್ತಿದ್ನೋ ಅವನೇ ನನ್ನ ವಿರುದ್ಧ ತಿರುಗಿಬಿದ್ದಿದ್ದಾನೆ.*+

10 ಆದ್ರೆ ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಮೇಲಕ್ಕೆತ್ತು,

ಆಗ ನಾನು, ಅವರು ಮಾಡಿದ್ದಕ್ಕೆ ಅವ್ರಿಂದ ಲೆಕ್ಕ ಕೇಳ್ತೀನಿ.

11 ಯಾವಾಗ ನನ್ನ ಶತ್ರುಗಳು ನನ್ನ ಮೇಲೆ ಜಯ ಸಾಧಿಸಲ್ವೋ,

ಆಗ ನೀನು ನನ್ನಿಂದ ಖುಷಿಯಾಗಿದ್ದೀಯ ಅಂತ ನಾನು ತಿಳ್ಕೊಳ್ತೀನಿ.+

12 ನನ್ನ ನಿಯತ್ತಿಗಾಗಿ ನೀನು ನನ್ನನ್ನ ಎತ್ತಿ ಹಿಡಿತೀಯ,+

ನಿನ್ನ ಸನ್ನಿಧಿಯಲ್ಲಿ ನನ್ನನ್ನ ಯಾವಾಗ್ಲೂ ಇಟ್ಕೊಳ್ತೀಯ.+

13 ಇಸ್ರಾಯೇಲ್‌ ದೇವರಾದ ಯೆಹೋವನಿಗೆ

ಯುಗಯುಗಾಂತರಕ್ಕೂ ಸ್ತುತಿ ಸಲ್ಲಲಿ.+

ಆಮೆನ್‌,* ಆಮೆನ್‌.

ಎರಡನೇ ಪುಸ್ತಕ

(ಕೀರ್ತನೆ 42-72)

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಸ್ಕಿಲ್‌.*

42 ದೇವರೇ, ನೀರಿಗಾಗಿ ಹಾತೊರೆಯೋ ಜಿಂಕೆ ತರ,

ನಾನು ನಿನಗಾಗಿ ಹಾತೊರೆಯುತ್ತೀನಿ.

 2 ಒಬ್ಬ ವ್ಯಕ್ತಿ ನೀರಿಗಾಗಿ ಬಾಯಾರೋ ತರ, ನಾನು ದೇವರಿಗಾಗಿ, ಜೀವ ಇರೋ ದೇವರಿಗಾಗಿ ಬಾಯಾರಿದ್ದೀನಿ.+

ದೇವರ ಸನ್ನಿಧಿಗೆ ಹೋಗಿ ನಿಂತುಕೊಳ್ಳೋ ದಿನ ನನಗೆ ಯಾವಾಗ ಬರುತ್ತೋ?+

 3 ಹಗಲೂರಾತ್ರಿ ನನ್ನ ಕಣ್ಣೀರೇ ನನ್ನ ಆಹಾರ,

“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಹೇಳಿ ಜನ್ರು ಇಡೀ ದಿನ ನನ್ನನ್ನ ಕೆಣಕ್ತಾರೆ.+

 4 ನಾನು ಇದನ್ನೆಲ್ಲ ನೆನಪಿಸ್ಕೊತೀನಿ, ನಾನು ನನ್ನ ಹೃದಯದ ಭಾವನೆಗಳನ್ನ ನಿನ್ನ ಹತ್ರ ತೋಡ್ಕೊತೀನಿ,

ಒಂದು ಕಾಲದಲ್ಲಿ ನಾನು ಜನ್ರ ಗುಂಪಲ್ಲಿ ನಡೀತಿದ್ದೆ,

ಭಕ್ತಿಪೂರ್ವಕವಾಗಿ ಅವ್ರ ಮಧ್ಯ ನಡೀತಾ ದೇವರ ಆಲಯದ ಕಡೆ ಹೋಗ್ತಿದ್ದೆ.

ಆ ಜನ್ರ ಗುಂಪು ದೇವ್ರಿಗೆ ಧನ್ಯವಾದ ಹೇಳ್ತಾ,

ಜೈಕಾರ ಹಾಕ್ತಾ ಹಬ್ಬ ಆಚರಿಸ್ತಿತ್ತು.+

 5 ನನ್ನ ಮನವೇ, ಯಾಕೆ ಇಷ್ಟೊಂದು ಬೇಜಾರಾಗಿದ್ದೀಯಾ?+

ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?

ದೇವರಿಗಾಗಿ ಕಾದಿರು,+

ಆತನು ನನ್ನ ಮಹಾ ಸಂರಕ್ಷಕನಾಗಿ ಇರೋದ್ರಿಂದ

ನಾನು ಆತನನ್ನ ಹೊಗಳ್ತಾನೇ ಇರ್ತಿನಿ.+

 6 ನನ್ನ ದೇವರೇ, ನಾನು ತುಂಬ ಕುಗ್ಗಿಹೋಗಿದ್ದೀನಿ.+

ಹಾಗಾಗಿ ಯೋರ್ದನ್‌ ಪ್ರದೇಶದಿಂದ, ಹೆರ್ಮೋನಿನ ತುದಿಯಿಂದ,

ಮಿಸಾರ್‌ ಬೆಟ್ಟದಿಂದ ನಾನು ನಿನ್ನನ್ನ ನೆನಪಿಸ್ಕೊತೀನಿ.+

 7 ನಿನ್ನ ಜಲಪಾತಗಳ ಶಬ್ದ ಕೇಳಿ,

ಆಳವಾದ ಸಮುದ್ರ ಇನ್ನೊಂದು ಆಳವಾದ ಸಮುದ್ರವನ್ನ ಕರೀತು.

ಉಕ್ಕೇರೋ ನಿನ್ನ ಸಮುದ್ರದ ಅಲೆಗಳು ನನ್ನನ್ನ ಮುಳುಗಿಸಿಬಿಟ್ವು.+

 8 ಹಗಲಲ್ಲಿ ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ನನ್ನ ಹತ್ರ ಕಳಿಸ್ತಾನೆ,

ರಾತ್ರಿಯಲ್ಲಿ ಆತನ ಹಾಡು ನನ್ನ ತುಟಿ ಮೇಲಿರುತ್ತೆ,

ನಾನು ನನಗೆ ಜೀವ ಕೊಟ್ಟ ದೇವರಿಗೆ ಪ್ರಾರ್ಥಿಸ್ತೀನಿ.+

 9 ನಾನು ನನ್ನ ದೇವರಿಗೆ, ನನ್ನ ಕಡಿದಾದ ಬಂಡೆಗೆ,

“ಯಾಕೆ ನೀನು ನನ್ನನ್ನ ಮರೆತುಬಿಟ್ಟಿದ್ದೀಯಾ?+

ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನ್ಯಾಕೆ ದುಃಖದಿಂದ ತಿರುಗಾಡಬೇಕು?” ಅಂತ ಕೇಳ್ತೀನಿ.+

10 ಹಗೆತನದಿಂದ* ನನ್ನ ಪ್ರಾಣದ ಹಿಂದೆ ಬಿದ್ದಿರೋ ನನ್ನ ಶತ್ರುಗಳು,

“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಕೇಳ್ತಾ ಇಡೀ ದಿನ ಚುಚ್ಚಿಚುಚ್ಚಿ ಮಾತಾಡ್ತಾರೆ.+

11 ನನ್ನ ಮನವೇ, ಯಾಕೆ ಇಷ್ಟೊಂದು ಬೇಜಾರಾಗಿದ್ದೀಯಾ?

ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?

ದೇವರಿಗಾಗಿ ಕಾದಿರು,+

ಆತನು ನನ್ನ ಮಹಾ ಸಂರಕ್ಷಕನಾಗಿ ಇರೋದ್ರಿಂದ

ನಾನು ಆತನನ್ನ ಹೊಗಳ್ತಾನೇ ಇರ್ತಿನಿ.+

43 ದೇವರೇ, ನನಗೆ ನ್ಯಾಯತೀರಿಸು,+

ನನ್ನ ಪರವಾಗಿ ನಿಂತು ನಿಷ್ಠೆ ಇಲ್ಲದಿರೋ ಜನ್ರ ವಿರುದ್ಧ ನ್ಯಾಯವಿಚಾರಣೆ ಮಾಡು.+

ಮೋಸಗಾರನ, ಅನೀತಿವಂತನ ಕೈಯಿಂದ ನನ್ನನ್ನ ಬಿಡಿಸು.

 2 ಯಾಕಂದ್ರೆ ನೀನು ನನ್ನ ದೇವರು, ನನ್ನ ಭದ್ರವಾದ ಕೋಟೆ.+

ನೀನು ಯಾಕೆ ನನ್ನನ್ನ ತಳ್ಳಿಬಿಟ್ಟಿದ್ದೀಯಾ?

ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನು ಯಾಕೆ ದುಃಖದಿಂದ ತಿರುಗಾಡಬೇಕು?+

 3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+

ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+

 4 ಆಗ ನಾನು ದೇವರ ಯಜ್ಞವೇದಿ ಹತ್ರ ಬರ್ತಿನಿ,+

ನನಗೆ ತುಂಬ ಖುಷಿ ಕೊಡೋ ದೇವರ ಹತ್ರ ಬರ್ತಿನಿ.

ದೇವರೇ, ನನ್ನ ದೇವರೇ, ತಂತಿವಾದ್ಯ ಬಾರಿಸ್ತಾ+ ನಾನು ನಿನ್ನನ್ನ ಹೊಗಳ್ತೀನಿ.

 5 ನನ್ನ ಮನವೇ, ಯಾಕಿಷ್ಟು ಬೇಜಾರಾಗಿ ಇದ್ದೀಯಾ?

ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?

ದೇವರಿಗಾಗಿ ಕಾಯ್ತಾ ಇರು,+

ಆತನು ನನ್ನ ಮಹಾ ಸಂರಕ್ಷಕನಾಗಿ, ನನ್ನ ದೇವರಾಗಿ ಇರೋದ್ರಿಂದ

ಆತನನ್ನ ಹೊಗಳ್ತಾನೇ ಇರ್ತಿನಿ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ರಚನೆ. ಮಸ್ಕಿಲ್‌.*

44 ದೇವರೇ, ನಮ್ಮ ಕಿವಿಯಾರೆ ನಾವು ನಿನ್ನ ಬಗ್ಗೆ ಕೇಳಿಸ್ಕೊಂಡಿದ್ದೀವಿ,

ನೀನು ಮಾಡಿದ ಕೆಲಸಗಳ ಬಗ್ಗೆ ನಮ್ಮ ಪೂರ್ವಜರಿಂದ ಕೇಳಿಸ್ಕೊಂಡಿದ್ದೀವಿ,+

ಆ ಕೆಲಸಗಳನ್ನ ನೀನು ಅವರ ಕಾಲದಲ್ಲೇ ಮಾಡಿದ್ದೆ,

ಹೌದು ತುಂಬ ಹಿಂದೆನೇ ಮಾಡಿದ್ದೆ.

 2 ನಿನ್ನ ಕೈಯಾರೆ ನೀನು ಜನಾಂಗಗಳನ್ನ ಓಡಿಸಿಬಿಟ್ಟೆ,+

ಅವರ ದೇಶದಲ್ಲಿ ನಮ್ಮ ಪೂರ್ವಜರನ್ನ ಇರೋ ಹಾಗೆ ಮಾಡಿದೆ.+

ನೀನು ಬೇರೆ ಜನಾಂಗಗಳನ್ನ ಜಜ್ಜಿ, ಅವ್ರನ್ನ ಚದರಿಸಿಬಿಟ್ಟೆ.+

 3 ನಮ್ಮ ಪೂರ್ವಜರು ಆ ದೇಶದ ಸೊತ್ತನ್ನ ವಶಮಾಡ್ಕೊಂಡಿದ್ದು ಅವ್ರ ಕತ್ತಿಯಿಂದಲ್ಲ,+

ಅವರು ಗೆದ್ದಿದ್ದು ಅವ್ರ ತೋಳಿನ ಬಲದಿಂದಲ್ಲ.+

ಅವರು ಗೆದ್ದಿದ್ದು ನಿನ್ನ ಬಲಗೈಯಿಂದ, ನಿನ್ನ ಶಕ್ತಿಯಿಂದ,+

ನಿನ್ನ ಮುಖದ ಕಾಂತಿಯಿಂದ.

ನಿನಗೆ ಅವ್ರ ಮೇಲೆ ಪ್ರೀತಿ ಇರೋದ್ರಿಂದ ಹೀಗಾಯ್ತು.+

 4 ದೇವರೇ ನೀನೇ ನನ್ನ ರಾಜ,+

ಯಾಕೋಬನಿಗೆ ಮಹಾ ಜಯ ಸಿಗಲಿ ಅಂತ ಆಜ್ಞೆ ಕೊಡು.

 5 ನಾವು ನಮ್ಮ ಶತ್ರುಗಳನ್ನ ನಿನ್ನ ಶಕ್ತಿಯಿಂದ ಓಡಿಸಿಬಿಡ್ತೀವಿ,+

ನಮ್ಮ ವಿರುದ್ಧ ಏಳೋರನ್ನ ನಿನ್ನ ಹೆಸ್ರಿಂದ ತುಳಿದುಹಾಕ್ತೀವಿ.+

 6 ಯಾಕಂದ್ರೆ ನಾನು ನನ್ನ ಬಿಲ್ಲಿನ ಮೇಲೆ ಭರವಸೆ ಇಡಲ್ಲ,

ನನ್ನ ಕತ್ತಿಗೆ ನನ್ನನ್ನ ಕಾಪಾಡೋಕೆ ಆಗಲ್ಲ.+

 7 ನಮ್ಮನ್ನ ನಮ್ಮ ಶತ್ರುಗಳಿಂದ ರಕ್ಷಿಸಿದವನು ನೀನೇ,+

ನಮ್ಮನ್ನ ದ್ವೇಷಿಸೋರ ಸೊಕ್ಕು ಮುರಿದವನು ನೀನೇ.

 8 ಇಡೀ ದಿನ ನಾವು ದೇವರನ್ನ ಹಾಡಿ ಹೊಗಳ್ತೀವಿ,

ಸದಾಕಾಲಕ್ಕೂ ನಿನ್ನ ಹೆಸ್ರನ್ನ ಸ್ತುತಿಸ್ತೀವಿ. (ಸೆಲಾ)

 9 ಆದ್ರೆ ಈಗ ನೀನು ನಮ್ಮನ್ನ ಬಿಟ್ಟುಬಿಟ್ಟಿದ್ದೀಯ, ನಮಗೆ ಅವಮಾನ ಆಗೋ ತರ ಮಾಡಿದ್ದೀಯ,

ನಮ್ಮ ಸೈನ್ಯದ ಜೊತೆ ನೀನು ಬರ್ತಾ ಇಲ್ಲ.

10 ಶತ್ರುಗೆ ಹೆದರಿ ನಾವು ಓಡಿಹೋಗೋ ತರ ಆಗಿದೆ,+

ನಮ್ಮನ್ನ ದ್ವೇಷಿಸೋರು ಅವ್ರಿಗೆ ಏನು ಬೇಕೋ ಅದೆಲ್ಲ ನಮ್ಮಿಂದ ತಗೊಂಡು ಹೋಗ್ತಿದ್ದಾರೆ.

11 ನೀನು ನಮ್ಮನ್ನ ಶತ್ರುಗಳ ಕೈಗೆ ಒಪ್ಪಿಸಿದ್ದೀಯ,

ಕುರಿಗಳನ್ನ ನುಂಗೋ ತರ ಅವರು ನಮ್ಮನ್ನ ನುಂಗಿಬಿಡ್ತಾರೆ,

ನೀನು ನಮ್ಮನ್ನ ಜನ್ರ ಮಧ್ಯ ಚದುರಿಸಿದ್ದೀಯ.+

12 ನೀನು ನಿನ್ನ ಜನ್ರನ್ನ ಕಮ್ಮಿ ಬೆಲೆಗೆ ಮಾರಿಬಿಡ್ತೀಯ,+

ಅವ್ರನ್ನ ಮಾರಿ* ನೀನು ಯಾವ ಲಾಭನೂ ಮಾಡ್ಕೊಳ್ಳಲ್ಲ.

13 ನಮ್ಮ ನೆರೆಯವರ ಮಧ್ಯೆ ನೀನು ನಮ್ಮ ಹೆಸ್ರು ಹಾಳು ಮಾಡಿದ್ದೀಯ,

ನಮ್ಮ ಸುತ್ತ ಇರೋರು ನಮ್ಮನ್ನ ಅಣಕಿಸಿ ಗೇಲಿಮಾಡೋಕೆ ಬಿಟ್ಟಿದ್ದೀಯ.

14 ಜನ್ರು ನಮ್ಮ ಬಗ್ಗೆ ವ್ಯಂಗ್ಯವಾಗಿ ಗಾದೆ ಬರಿಯೋ ತರ ಮಾಡಿದ್ದೀಯ,+

ಅವರು ನಮ್ಮನ್ನ ನೋಡಿ ತಲೆ ಆಡಿಸ್ತಾರೆ.

15 ಇಡೀ ದಿನ ನನಗೆ ಅವಮಾನ ಅನ್ಸುತ್ತೆ,

ಇದ್ರಿಂದ ನನ್ನ ಮುಖನ ಯಾರಿಗೂ ತೋರಿಸಕ್ಕಾಗ್ತಿಲ್ಲ.

16 ಯಾಕಂದ್ರೆ ಶತ್ರುಗಳು ನನಗೆ ಸೇಡು ತೀರಿಸ್ತಿದ್ದಾರೆ,

ನನ್ನನ್ನ ಕೆಣಕಿ, ನನಗೆ ಮುಖಭಂಗ ಮಾಡ್ತಿದ್ದಾರೆ.

17 ಇಷ್ಟೆಲ್ಲ ಆದ್ರೂ ನಾವು ನಿನ್ನನ್ನ ಮರೀಲಿಲ್ಲ,

ನಿನ್ನ ಒಪ್ಪಂದವನ್ನ ಮುರೀಲಿಲ್ಲ.+

18 ನಮ್ಮ ಹೃದಯ ದಾರಿ ತಪ್ಪಲಿಲ್ಲ.

ನಮ್ಮ ಹೆಜ್ಜೆಗಳು ನಿನ್ನ ದಾರಿಯನ್ನ ಬಿಟ್ಟು ಅಡ್ಡದಾರಿ ಹಿಡೀಲಿಲ್ಲ.

19 ಆದ್ರೆ ನೀನು ನಮ್ಮನ್ನ ಗುಳ್ಳೆನರಿ ವಾಸಿಸೋ ಜಾಗದಲ್ಲಿ ಜಜ್ಜಿಬಿಟ್ಟೆ,

ಕತ್ತಲಲ್ಲಿ ನಮ್ಮನ್ನ ಮುಚ್ಚಿಬಿಟ್ಟೆ.

20 ನಾವು ನಮ್ಮ ದೇವರ ಹೆಸ್ರನ್ನ ಮರೆತ್ರೆ,

ನಾವು ಬೇರೆ ದೇವರಿಗೆ ಪ್ರಾರ್ಥಿಸೋಕೆ ನಮ್ಮ ಕೈ ಚಾಚಿದ್ರೆ,

21 ಅದನ್ನ ದೇವರು ಕಂಡುಹಿಡಿಯಲ್ವಾ?

ಆತನಿಗೆ ಹೃದಯದ ಎಲ್ಲ ರಹಸ್ಯಗಳೂ ಗೊತ್ತು!+

22 ನಾವು ನಿನ್ನವರಾಗಿ ಇರೋದ್ರಿಂದ ಜನ ನಮ್ಮನ್ನ ಇಡೀ ದಿನ ಸಾವಿಗೆ ನೂಕ್ತಿದ್ದಾರೆ,

ಬಲಿ ಕೊಡೋ ಕುರಿಗಳ ತರ ನಮ್ಮನ್ನ ನೋಡ್ತಾರೆ.+

23 ಯೆಹೋವನೇ ಎದ್ದೇಳು, ಯಾಕೆ ಮಲಗಿದ್ದೀಯ?+

ದಯವಿಟ್ಟು ಸದಾಕಾಲಕ್ಕೂ ನಮ್ಮನ್ನ ತಳ್ಳಿಹಾಕ್ತಾನೇ ಇರಬೇಡ.+

24 ನೀನು ನಿನ್ನ ಮುಖ ತೋರಿಸದೆ ಯಾಕೆ ಮರೆಯಾಗಿದ್ದೀಯಾ?

ಯಾಕೆ ನೀನು ನಮ್ಮ ಕಷ್ಟಗಳನ್ನ, ನಮಗೆ ಆಗ್ತಾ ಇರೋ ಹಿಂಸೆಗಳನ್ನ ಮರೆತಿದ್ದೀಯ?

25 ನಮ್ಮನ್ನ ನೆಲಕ್ಕೆ ಹಾಕಿ ತುಳಿದಿದ್ದಾರೆ,

ಹೌದು, ನಾವು ಪೂರ್ತಿ ನೆಲದ ಮೇಲೆ ಬಿದ್ದುಹೋಗಿದ್ದೀವಿ.+

26 ನಮ್ಮ ಸಹಾಯಕನಾಗಿ ಬಾ!+

ನಿನ್ನ ಶಾಶ್ವತ ಪ್ರೀತಿಯ+ ಕಾರಣ ನಮ್ಮನ್ನ ಕಾಪಾಡು.*

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ ಹೂವುಗಳು” ಅನ್ನೋ ರಾಗದಲ್ಲಿ ಹಾಡಬೇಕು. ಕೋರಹನ+ ಮಕ್ಕಳ ರಚನೆ. ಮಸ್ಕಿಲ್‌.* ಇದು ಪ್ರೇಮ ಗೀತೆ.

45 ಒಂದು ಒಳ್ಳೇ ವಿಷ್ಯದಿಂದ ನನ್ನ ಹೃದಯ ಉಕ್ಕಿಬರ್ತಿದೆ.

ನನ್ನ ಹಾಡು* ಒಬ್ಬ ರಾಜನ ಬಗ್ಗೆ.+

ನನ್ನ ನಾಲಿಗೆ ಒಬ್ಬ ನಿಪುಣ ಲೇಖಕನ*+ ಲೇಖನಿ*+ ತರ ಇರಲಿ.

 2 ರಾಜನೇ, ಮನುಷ್ಯರಲ್ಲಿ ನಿನ್ನಂಥ ಸುರಸುಂದರಾಂಗ ಇನ್ನೊಬ್ಬ ಇಲ್ಲ.

ಒಳ್ಳೇ ಮಾತು ನಿನ್ನ ತುಟಿಯಿಂದ ಹರೀತಾ ಇರುತ್ತೆ.+

ಹಾಗಾಗಿ ದೇವರು ನಿನ್ನನ್ನ ಶಾಶ್ವತಕ್ಕೂ ಆಶೀರ್ವದಿಸ್ತಾನೆ.+

 3 ವೀರ ಸೈನಿಕನೇ,+ ನಿನ್ನ ಸೊಂಟಕ್ಕೆ ಕತ್ತಿಯನ್ನ ಕಟ್ಕೊ,+

ಗೌರವದಿಂದ, ವೈಭವದಿಂದ ಅದನ್ನ ಹಾಕಿಕೊ.+

 4 ವೈಭವದಿಂದ ಜಯವನ್ನ* ಸಾಧಿಸ್ತಾ ಹೋಗು,+

ಕುದುರೆ ಸವಾರಿ ಮಾಡ್ತಾ ದೀನರಿಗಾಗಿ, ಸತ್ಯಕ್ಕಾಗಿ ಮತ್ತು ನೀತಿಗಾಗಿ ಯುದ್ಧಮಾಡು,+

ನಿನ್ನ ಬಲಗೈ ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡುತ್ತೆ.*

 5 ನಿನ್ನ ಬಾಣಗಳು ಚೂಪಾಗಿವೆ. ಅವು ರಾಜನ ಶತ್ರುಗಳ ಹೃದಯಗಳನ್ನ ಛಿದ್ರಮಾಡುತ್ತೆ,+

ಜನಾಂಗಗಳ ಜನ್ರನ್ನ ನಿನ್ನ ಮುಂದೆ ಬೀಳಿಸುತ್ತೆ.+

 6 ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ,+

ನಿನ್ನ ರಾಜದಂಡ ನ್ಯಾಯವಾದ* ರಾಜದಂಡ ಆಗಿರುತ್ತೆ.+

 7 ನೀನು ಒಳ್ಳೇತನ ಪ್ರೀತಿಸಿದೆ,+ ಕೆಟ್ಟತನವನ್ನ ದ್ವೇಷಿಸಿದೆ.+

ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಜಾಸ್ತಿ ನಿನ್ನನ್ನ ಸಂತೋಷ ಅನ್ನೋ ತೈಲದಿಂದ+ ಅಭಿಷೇಕಿಸಿದ್ದಾನೆ.+

 8 ನಿನ್ನ ಇಡೀ ಬಟ್ಟೆ ಗಂಧರಸ,* ಅಗರುಮರ* ಮತ್ತು ದಾಲ್ಚಿನ್ನಿ ಚಕ್ಕೆಯ* ಸುವಾಸನೆ ಬರುತ್ತೆ,

ಅರಮನೆಯಲ್ಲಿರೋ ಆನೆ ದಂತದಿಂದ ಮಾಡಿರೋ ತಂತಿವಾದ್ಯ ನಿನಗೆ ಖುಷಿಕೊಡುತ್ತೆ.

 9 ಗೌರವಾನ್ವಿತ ಸ್ತ್ರೀಯರಲ್ಲಿ ನಿನ್ನ ರಾಜಕುಮಾರಿಯರೂ ಇದ್ದಾರೆ.

ರಾಣಿ ಓಫೀರಿನ ಚಿನ್ನದಿಂದ+ ಅಲಂಕರಿಸ್ಕೊಂಡು ನಿನ್ನ ಬಲಗಡೆ ನಿಂತಿದ್ದಾಳೆ.

10 ನನ್ನ ಮಗಳೇ, ನಾನು ಹೇಳೋದನ್ನ ಕೇಳಿಸ್ಕೊಂಡು ಗಮನಕೊಡು,

ನಿನ್ನ ಜನ್ರನ್ನ, ನಿನ್ನ ಅಪ್ಪನ ಮನೆಯನ್ನ ಮರೆತುಬಿಡು.

11 ರಾಜ ನಿನ್ನ ರೂಪಲಾವಣ್ಯವನ್ನ ನೋಡೋಕೆ ಹಾತೊರಿತಾನೆ,

ಯಾಕಂದ್ರೆ ಆತನು ನಿನ್ನ ಒಡೆಯ,

ಹಾಗಾಗಿ ತಲೆಬಾಗಿ ಅವನಿಗೆ ನಮಸ್ಕಾರ ಮಾಡು.

12 ತೂರಿನ ಮಗಳು ಉಡುಗೊರೆ ತಗೊಂಡು ಬರ್ತಾಳೆ,

ದೊಡ್ಡ ದೊಡ್ಡ ಶ್ರೀಮಂತರು ನಿನ್ನ ಮೆಚ್ಚಿಗೆಯನ್ನ ಇಷ್ಟಪಡ್ತಾರೆ.

13 ಅರಮನೆಯಲ್ಲಿ* ರಾಜನ ಮಗಳು ಅಂದವಾಗಿ ಕಾಣ್ತಾಳೆ,

ಅವಳ ಬಟ್ಟೆಗಳನ್ನ ಚಿನ್ನದಿಂದ ಅಲಂಕಾರ ಮಾಡಿದ್ದಾರೆ.

14 ನೇಯ್ದ ರಾಣಿಯ ಬಟ್ಟೆಗಳನ್ನ ಅವಳಿಗೆ ತೊಡಿಸಿ ರಾಜನ ಹತ್ರ ಕರ್ಕೊಂಡು ಬಂದ್ರು.

ಅವಳ ಹಿಂದೆ ಅವಳ ಸಖಿಯರಾದ ಕನ್ಯೆಯರೂ ರಾಜನ ಹತ್ರ ಬಂದ್ರು.

15 ಅವ್ರನ್ನ ಸಂತೋಷ, ಸಂಭ್ರಮದಿಂದ ಕರ್ಕೊಂಡು ಬರ್ತಾರೆ,

ಅವರು ರಾಜನ ಅರಮನೆಯನ್ನ ಪ್ರವೇಶಿಸ್ತಾರೆ.

16 ನಿನ್ನ ಮಕ್ಕಳು ನಿನ್ನ ಪೂರ್ವಜರ ಸ್ಥಾನವನ್ನ ಪಡ್ಕೊಳ್ತಾರೆ.

ನೀನು ಅವ್ರನ್ನ ಭೂಮಿಯಲ್ಲೆಲ್ಲ ಅಧಿಕಾರಿಗಳಾಗಿ ನೇಮಿಸ್ತೀಯ.+

17 ಮುಂದೆ ಬರೋ ಎಲ್ಲ ತಲೆಮಾರುಗಳಿಗೆ ನಾನು ನಿನ್ನ ಹೆಸ್ರನ್ನ ತಿಳಿಸ್ತೀನಿ.+

ಹಾಗಾಗಿ ದೇಶದ ಜನ್ರು ನಿನ್ನ ಹೆಸ್ರನ್ನ ಶಾಶ್ವತಕ್ಕೂ ಹೊಗಳ್ತಾರೆ.

ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಗೀತೆ. ಅಲಾಮೋತ್‌ ಶೈಲಿಯಲ್ಲಿ* ರಚಿಸಿದ ಗೀತೆ.

46 ದೇವರು ನಮ್ಮ ಆಶ್ರಯ, ನಮ್ಮ ಬಲ,+

ಕಷ್ಟ ಬಂದಾಗ ಸುಲಭವಾಗಿ ಸಿಗೋ ಸಹಾಯ.+

 2 ಹಾಗಾಗಿ ಭೂಮಿ ಬದಲಾದ್ರೂ

ಬೆಟ್ಟಗಳು ಉರುಳಿ ಸಮುದ್ರದ ಆಳಕ್ಕೆ ಬಿದ್ರೂ ನಾವು ಹೆದ್ರಲ್ಲ,+

 3 ಸಮುದ್ರದ ನೀರು ಪ್ರವಾಹದ ತರ ನೊರೆ ಕಾರಿದ್ರೂ+

ಸಮುದ್ರ ಅಲ್ಲೋಲಕಲ್ಲೋಲವಾಗಿ ಬೆಟ್ಟಗಳು ಅಲ್ಲಾಡಿದ್ರೂ ನಾವು ಭಯಪಡಲ್ಲ. (ಸೆಲಾ)

 4 ಒಂದು ನದಿ ಇದೆ. ಅದ್ರ ತೊರೆಗಳು ದೇವರ ಪಟ್ಟಣವನ್ನ,

ಸರ್ವೋನ್ನತನ ಮಹಾ ಪವಿತ್ರ ಡೇರೆಯನ್ನ ಖುಷಿಪಡಿಸುತ್ತೆ.+

 5 ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ.

ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+

 6 ದೇಶಗಳು ತತ್ತರಿಸಿದ್ವು, ರಾಜ್ಯಗಳು ಉರುಳಿಹೋದ್ವು,

ದೇವರು ತನ್ನ ಸ್ವರ ಎತ್ತಿದಾಗ ಭೂಮಿ ಕರಗಿಹೋಯ್ತು.+

 7 ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+

ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.* (ಸೆಲಾ)

 8 ಬಂದು ಯೆಹೋವನ ಕೆಲಸಗಳನ್ನ ನೋಡಿ,

ಆತನು ಭೂಮಿಯಲ್ಲಿರೋ ವಿಸ್ಮಯಕರ ವಿಷ್ಯಗಳನ್ನ ಹೇಗೆ ಮಾಡಿದ್ದಾನೆ ಅಂತ ನೋಡಿ.

 9 ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.+

ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ,

ಯುದ್ಧ ರಥಗಳನ್ನ* ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.

10 ಆತನು ಹೀಗೆ ಹೇಳಿದ “ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ.

ದೇಶಗಳಲ್ಲಿ ನನ್ನನ್ನ ಘನತೆಗೆ ಏರಿಸಲಾಗುತ್ತೆ,+

ಇಡೀ ಭೂಮಿ ನನ್ನನ್ನ ಮೇಲಕ್ಕೆ ಏರಿಸುತ್ತೆ.”+

11 ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+

ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.+ (ಸೆಲಾ)

ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಮಧುರ ಗೀತೆ.

47 ದೇಶಗಳ ಜನ್ರೇ, ನೀವೆಲ್ಲ ಚಪ್ಪಾಳೆ ಹೊಡಿರಿ.

ಗೆದ್ದಿರೋದಕ್ಕೆ ಖುಷಿಪಟ್ಟು ದೇವರಿಗೆ ಜೈಕಾರ ಹಾಕಿ.

 2 ಸರ್ವೋನ್ನತ ಯೆಹೋವ ವಿಸ್ಮಯಕಾರಿ ದೇವರು,+

ಇಡೀ ಭೂಮಿಗೆ ಆತನು ಮಹಾ ರಾಜ.+

 3 ಆತನು ದೇಶದ ಜನ್ರನ್ನ ನಮ್ಮ ಅಧೀನಕ್ಕೆ ಕೊಡ್ತಾನೆ,

ಅವ್ರನ್ನ ನಮ್ಮ ಕಾಲಕೆಳಗೆ ಹಾಕ್ತಾನೆ.+

 4 ಆತನು ಪ್ರೀತಿಸ್ತಿದ್ದ ಯಾಕೋಬನಿಗೆ ಯಾವ ದೇಶದ ಮೇಲೆ ಅಭಿಮಾನ ಇತ್ತೋ,+

ಅದನ್ನ ನಮ್ಮ ಆಸ್ತಿಯಾಗಿ ಆರಿಸ್ಕೊಂಡಿದ್ದಾನೆ.+ (ಸೆಲಾ)

 5 ಖುಷಿಯಿಂದ ದೇವರಿಗೆ ಜೈಕಾರ ಹಾಕ್ತಿದ್ದಾಗ ಆತನು ತನ್ನ ಸಿಂಹಾಸನ ಏರಿದ,

ಕೊಂಬಿನ* ಶಬ್ದ ಕೇಳಿಸ್ತಿದ್ದಾಗ ಯೆಹೋವ ತನ್ನ ಸಿಂಹಾಸನ ಏರಿದ.

 6 ದೇವರನ್ನ ಹಾಡಿ ಹೊಗಳಿ, ಹಾಡಿ ಹೊಗಳಿ.

ನಮ್ಮ ರಾಜನಿಗಾಗಿ ಹಾಡಿ ಹೊಗಳಿ, ಹಾಡಿ ಹೊಗಳಿ.

 7 ಯಾಕಂದ್ರೆ ದೇವರು ಇಡೀ ಭೂಮಿಯ ರಾಜ ಆಗಿದ್ದಾನೆ,+

ಹಾಗಾಗಿ ಹಾಡಿ ಹೊಗಳಿ, ವಿವೇಚನೆಯಿಂದ ನಡ್ಕೊಳ್ಳಿ.

 8 ದೇವರು ಎಲ್ಲ ಜನಾಂಗಗಳ ರಾಜ ಆಗಿದ್ದಾನೆ.+

ಆತನು ತನ್ನ ಪವಿತ್ರ ಸಿಂಹಾಸನದ ಮೇಲೆ ಕೂತಿದ್ದಾನೆ.

 9 ದೇಶದ ಪ್ರಧಾನರು ಅಬ್ರಹಾಮನ ದೇವರ ಜನ್ರ ಜೊತೆ ಒಟ್ಟುಸೇರಿದ್ದಾರೆ.

ಯಾಕಂದ್ರೆ ಭೂಮಿಯನ್ನ ಆಳೋರು* ದೇವರಿಗೆ ಸೇರಿದವರು.

ಆತನು ಮಹೋನ್ನತನಾಗಿದ್ದಾನೆ.+

ಕೋರಹನ ಮಕ್ಕಳ ಮಧುರ ಗೀತೆ.+

48 ನಮ್ಮ ದೇವರ ಪಟ್ಟಣದಲ್ಲಿ, ಆತನ ಪವಿತ್ರ ಬೆಟ್ಟದಲ್ಲಿ,

ಯೆಹೋವ ಅತಿ ಶ್ರೇಷ್ಠ, ತುಂಬ ಹೊಗಳಿಕೆಗೆ ಅರ್ಹ.

 2 ಉತ್ತರ ದಿಕ್ಕಿಗೆ ದೂರದಲ್ಲಿ ಹೆಮ್ಮೆಯಿಂದ ಚೀಯೋನ್‌ ಬೆಟ್ಟ ನಿಂತಿದೆ,

ಅದು ಮಹಾರಾಜನ ಪಟ್ಟಣವಾಗಿದೆ,+

ಆಕಾಶವನ್ನ ಮುಟ್ಟೋ ಆ ಪಟ್ಟಣ ತುಂಬ ಸುಂದರವಾಗಿದೆ.

ಇಡೀ ಭೂಮಿಯ ಸಂತೋಷಕ್ಕೆ ಅದೇ ಕಾರಣವಾಗಿದೆ.+

 3 ನಾನು ಸುರಕ್ಷಿತ ಆಶ್ರಯವಾಗಿದ್ದೀನಿ* ಅಂತ

ದೇವರು ಅದ್ರ ಭದ್ರ ಕೋಟೆಗಳಲ್ಲಿ ಹೇಳಿದ್ದಾನೆ.+

 4 ಯಾಕಂದ್ರೆ ನೋಡು! ರಾಜರು ಒಟ್ಟುಸೇರಿದ್ರು,*

ಒಟ್ಟಾಗಿ ಮುಂದೆ ಸಾಗಿದ್ರು.

 5 ಅವರು ಆ ಪಟ್ಟಣವನ್ನ ನೋಡಿ ಆಶ್ಚರ್ಯಪಟ್ರು,

ಕಂಗಾಲಾದ್ರು, ಭಯದಿಂದ ಓಡಿಹೋದ್ರು.

 6 ಅಲ್ಲಿ ಅವರು ಗಡಗಡ ನಡುಗಿದ್ರು,

ಮಗುವನ್ನ ಹೆರೋ ಸ್ತ್ರೀ ತರ ಯಾತನೆಪಟ್ರು.

 7 ಪೂರ್ವದ ಬಿರುಗಾಳಿಯಿಂದ ನೀನು ತಾರ್ಷೀಷಿನ ಹಡಗುಗಳನ್ನ ನಾಶಮಾಡಿ ಬಿಡ್ತೀಯ.

 8 ನಾವು ಯಾವುದನ್ನ ಕೇಳಿಸ್ಕೊಂಡ್ವೋ, ಈಗ ಅದನ್ನ ನಮ್ಮ ಕಣ್ಣಾರೆ ನೋಡಿದ್ದೀವಿ,

ಸೈನ್ಯಗಳ ದೇವರಾದ ಯೆಹೋವನ ಪಟ್ಟಣದಲ್ಲಿ, ನಮ್ಮ ದೇವರ ಪಟ್ಟಣದಲ್ಲಿ ಅದನ್ನ ಕಣ್ಣಾರೆ ನೋಡಿದ್ದೀವಿ.

ಶಾಶ್ವತವಾಗಿ ಆ ಪಟ್ಟಣ ಸುರಕ್ಷಿತವಾಗಿರೋ ತರ ದೇವರು ಮಾಡ್ತಾನೆ.+ (ಸೆಲಾ)

 9 ದೇವರೇ, ನಿನ್ನ ಆಲಯದಲ್ಲಿ,

ನಾವು ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸಿಕೊಳ್ತೀವಿ.+

10 ದೇವರೇ, ನಿನ್ನ ಹೆಸ್ರಿನ ಹಾಗೆ

ನಿನಗೆ ಸಿಗೋ ಹೊಗಳಿಕೆನೂ ಭೂಮಿಯ ಕಟ್ಟಕಡೆ ತನಕ ಮುಟ್ಟುತ್ತೆ.+

ನಿನ್ನ ಬಲಗೈ ನೀತಿಯಿಂದ ತುಂಬಿದೆ.+

11 ನಿನ್ನ ತೀರ್ಪುಗಳಿಂದ ಚೀಯೋನ್‌ ಬೆಟ್ಟ+ ಖುಷಿಪಡಲಿ,

ಯೆಹೂದದ ಪಟ್ಟಣಗಳು* ಸಂತೋಷಪಡಲಿ.+

12 ಚೀಯೋನಿನ ಸುತ್ತ ನಡೆದು, ಅದ್ರ ಸುತ್ತ ತಿರುಗಿ,

ಅದ್ರ ಗೋಪುರಗಳನ್ನ ಲೆಕ್ಕಹಾಕಿ.+

13 ಅದ್ರ ಭದ್ರವಾದ ಗೋಡೆಗಳ*+ ಕಡೆ ಗಮನ ಕೊಡಿ.

ಅದ್ರ ಭದ್ರ ಕೋಟೆಗಳನ್ನ ಪರೀಕ್ಷಿಸಿ ನೋಡಿ,

ಆಗ ನೀವು ಅದ್ರ ಬಗ್ಗೆ ಮುಂದಿನ ಪೀಳಿಗೆಗೆ ಹೇಳೋಕೆ ಆಗುತ್ತೆ.

14 ಯಾಕಂದ್ರೆ ಈ ದೇವರೇ ಶಾಶ್ವತಕ್ಕೂ ನಮ್ಮ ದೇವರು.+

ಸದಾಕಾಲಕ್ಕೂ* ನಮಗೆ ದಾರಿ ತೋರಿಸ್ತಾನೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಧುರ ಗೀತೆ.

49 ದೇಶಗಳ ಜನ್ರೇ, ನೀವೆಲ್ಲ ಇದನ್ನ ಕೇಳಿಸ್ಕೊಳ್ಳಿ.

ಭೂಮಿಯ ನಿವಾಸಿಗಳೇ, ನೀವೆಲ್ಲ ಇದಕ್ಕೆ ಗಮನಕೊಡಿ.

 2 ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ

ಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ರೂ ಗಮನಕೊಟ್ಟು ಕೇಳಿ.

 3 ನನ್ನ ಬಾಯಿ ವಿವೇಕದ ಮಾತುಗಳನ್ನಾಡುತ್ತೆ,

ನನ್ನ ಹೃದಯ ಆಳವಾದ ವಿಚಾರಗಳ* ಬಗ್ಗೆ ಧ್ಯಾನಿಸುತ್ತೆ.+

 4 ನಾನು ನಾಣ್ಣುಡಿಗೆ ಗಮನಕೊಡ್ತೀನಿ,

ತಂತಿವಾದ್ಯವನ್ನ ನುಡಿಸುವಾಗ ನನ್ನ ಒಗಟನ್ನ ವಿವರಿಸ್ತೀನಿ.

 5 ಸಂಕಷ್ಟದ ಸಮ್ಯದಲ್ಲಿ ನಾನು ಯಾಕೆ ಹೆದರಬೇಕು?+

ಜನ್ರು ಕೆಟ್ಟ ಕೆಲಸಗಳಿಂದ* ನನ್ನನ್ನ ಮುಗಿಸಿಬಿಡಬೇಕು ಅಂತ ನನ್ನನ್ನ ಸುತ್ಕೊಂಡಾಗ ನಾನು ಯಾಕೆ ಭಯಪಡಬೇಕು?

 6 ಯಾರು ತಮ್ಮ ಆಸ್ತಿಪಾಸ್ತಿಯಲ್ಲಿ ಭರವಸೆಯಿಡ್ತಾರೋ,+

ಯಾರು ತಮ್ಮ ಶ್ರೀಮಂತಿಕೆ ಬಗ್ಗೆ ಕೊಚ್ಚಿಕೊಳ್ತಾರೋ,+

 7 ಅವ್ರಲ್ಲಿ ಯಾರಿಗೂ ತಮ್ಮ ಸಹೋದರನನ್ನ ಬಿಡಿಸೋಕೆ ಆಗೋದೇ ಇಲ್ಲ ಅಥವಾ

ದೇವ್ರಿಗೆ ಬಿಡುಗಡೆ ಬೆಲೆ ಕೊಟ್ಟು ಅವನನ್ನ ಬಿಡಿಸೋಕೆ ಆಗಲ್ಲ,+

 8 (ತಮ್ಮ ಜೀವಕ್ಕಾಗಿ ಅವರು ಕೊಡಬೇಕಾಗಿರೋ ಬಿಡುಗಡೆ ಬೆಲೆ ತುಂಬ ಅಮೂಲ್ಯ. ಹಾಗಾಗಿ ಅವರು ಅದನ್ನ ಯಾವತ್ತೂ ಕೊಡಕ್ಕಾಗಲ್ಲ)

 9 ಅವ್ರ ಸಹೋದರ ಸಮಾಧಿಯನ್ನ* ಸೇರದೆ ಇರೋ ಹಾಗೆ ನೋಡ್ಕೊಳ್ಳೋಕೆ, ಅವನು ಶಾಶ್ವತವಾಗಿ ಜೀವಿಸೋ ಹಾಗೆ ಮಾಡೋಕೆ ಅವ್ರ ಕೈಯಲ್ಲಿ ಆಗಲ್ಲ.+

10 ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,

ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+

ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+

11 ಅವ್ರ ಮನೆಗಳು ಶಾಶ್ವತವಾಗಿ ಉಳಿಬೇಕು ಅನ್ನೋದು ಅವ್ರ ಮನದಾಳದ ಆಸೆ,

ಅವ್ರ ಡೇರೆಗಳು ತಲತಲಾಂತರಕ್ಕೂ ಇರಬೇಕು ಅನ್ನೋದು ಅವ್ರ ಹೃದಯದಾಳದ ಬಯಕೆ.

ಅವರು ತಮ್ಮ ಆಸ್ತಿಗೆ ತಮ್ಮ ಹೆಸ್ರನ್ನೇ ಇಟ್ಟಿದ್ದಾರೆ.

12 ಆದ್ರೆ ಮನುಷ್ಯನಿಗೆ ಎಷ್ಟೇ ಗೌರವ ಇದ್ರೂ, ಅವನು ಶಾಶ್ವತವಾಗಿ ಬದುಕಲ್ಲ.+

ನಾಶವಾಗಿ ಹೋಗೋ ಪ್ರಾಣಿಗಳಿಗಿಂತ ಅವನೇನೂ ದೊಡ್ಡವನಲ್ಲ.+

13 ಮೂರ್ಖರಿಗೂ ಅವ್ರ ಹಿಂದೆ ಹೋಗೋರಿಗೂ

ಅವ್ರ ಪೊಳ್ಳು ಮಾತುಗಳಲ್ಲಿ ಖುಷಿಪಡೋರಿಗೂ ಇದೇ ಗತಿ ಆಗುತ್ತೆ.+ (ಸೆಲಾ)

14 ಕುರಿಗಳನ್ನ ಕಡಿಯೋಕೆ ತಗೊಂಡು ಹೋಗೋ ತರ,

ಅವ್ರನ್ನ ಸಮಾಧಿಗೆ* ಒಪ್ಪಿಸಲಾಗುತ್ತೆ.

ಸಾವು ಅವ್ರನ್ನ ಕಾಯುತ್ತೆ.

ಬೆಳಗ್ಗೆ ನೀತಿವಂತರು ಅವ್ರ ಮೇಲೆ ಆಳ್ವಿಕೆ ಮಾಡ್ತಾರೆ.+

ಅವರು ಒಂದು ಸುಳಿವೂ ಇಲ್ಲದ ಹಾಗೇ ಹೋಗ್ತಾರೆ,+

ಅರಮನೆಯ ಬದಲು ಸಮಾಧಿನೇ*+ ಅವ್ರ ಮನೆ ಆಗಿರುತ್ತೆ.+

15 ಆದ್ರೆ ದೇವರು ನನ್ನನ್ನ ಸಮಾಧಿಯ* ಕೈಯಿಂದ* ಬಿಡಿಸ್ತಾನೆ,+

ಯಾಕಂದ್ರೆ ಆತನು ಅಲ್ಲಿಂದ ನನ್ನನ್ನ ಮೇಲಕ್ಕೆ ಎಳ್ಕೊಳ್ತಾನೆ. (ಸೆಲಾ)

16 ಒಬ್ಬ ಮನುಷ್ಯ ಶ್ರೀಮಂತನಾದ್ರೆ ಹೆದರಬೇಡ,

ಅವನ ಮನೆಯ ವೈಭವ ಹೆಚ್ಚಾದ್ರೆ ಭಯಪಡಬೇಡ,

17 ಯಾಕಂದ್ರೆ ಅವನು ಸತ್ತಾಗ ಅವನ ಜೊತೆ ಏನೂ ತಗೊಂಡು ಹೋಗಕ್ಕಾಗಲ್ಲ,+

ಅವನ ವೈಭವ ಅವನ ಜೊತೆ ಹೋಗಲ್ಲ.+

18 ಯಾಕಂದ್ರೆ, ಅವನು ಸಾಯೋ ತನಕ ಅವನನ್ನ ಅವನೇ ಹೊಗಳ್ಕೊಂಡ.+

(ಯಾರಾದ್ರೂ ಏಳಿಗೆ ಆದಾಗ ಜನ ಹೊಗಳ್ತಾರೆ.)+

19 ಆದ್ರೆ ಕೊನೆಗೆ, ಅವನೂ ಪೂರ್ವಜರ ತರ ಸತ್ತು ಹೋಗ್ತಾನೆ.

ಅವನು ಮತ್ತು ಅವನ ಪೂರ್ವಜರು ಇನ್ಯಾವತ್ತೂ ಬೆಳಕನ್ನ ನೋಡೋದಿಲ್ಲ.

20 ಆದ್ರೆ ಈ ವಿಷ್ಯವನ್ನ ಅರ್ಥಮಾಡ್ಕೊಳ್ಳದ ವ್ಯಕ್ತಿ ಎಷ್ಟೇ ಗೌರವ ಗಳಿಸಿದ್ರೂ,+

ನಾಶವಾಗಿ ಹೋಗೋ ಪ್ರಾಣಿಗಿಂತ ಅವನೇನೂ ದೊಡ್ಡವನಲ್ಲ.

ಆಸಾಫನ+ ಮಧುರ ಗೀತೆ.

50 ಎಲ್ಲ ದೇವರುಗಳಿಗಿಂತ ಮಹಾ ದೇವರಾದ* ಯೆಹೋವ*+ ಹೇಳಿದ್ದಾನೆ,

ಆತನು ಪೂರ್ವದಿಂದ ಪಶ್ಚಿಮದ ತನಕ ಇರೋ

ಜನ್ರನ್ನೆಲ್ಲ ಒಟ್ಟುಸೇರಿಸ್ತಾನೆ.

 2 ಸರಿಸಾಟಿಯಿಲ್ಲದ* ಸೌಂದರ್ಯ ಇರೋ ಚೀಯೋನಿಂದ+ ದೇವರು ಪ್ರಕಾಶಿಸ್ತಾನೆ.

 3 ನಮ್ಮ ದೇವರು ಖಂಡಿತ ಬರ್ತಾನೆ, ಆತನು ಸುಮ್ಮನೆ ಇರಲ್ಲ.+

ಆತನ ಮುಂದೆ ಸುಡೋ ಬೆಂಕಿಯಿದೆ,+

ಆತನ ಸುತ್ತ ಭಯಂಕರ ಬಿರುಗಾಳಿ ಬೀಸ್ತಿದೆ.+

 4 ತನ್ನ ಜನ್ರನ್ನ ತೀರ್ಪು ಮಾಡೋವಾಗ+

ಅದಕ್ಕೆ ಸಾಕ್ಷಿಯಾಗಿ ಆಕಾಶ ಮತ್ತು ಭೂಮಿಯನ್ನ ಬರೋಕೆ ಹೇಳ್ತಾನೆ.+

 5 “ನಿಷ್ಠಾವಂತರನ್ನ ಅಂದ್ರೆ ಬಲಿ ಕೊಟ್ಟು ನನ್ನ ಜೊತೆ ಒಪ್ಪಂದ

ಮಾಡ್ಕೊಳ್ಳೋ+ ಜನ್ರನ್ನ ನನ್ನ ಹತ್ರ ಕರ್ಕೊಂಡು ಬನ್ನಿ.”

 6 ಆಕಾಶ ದೇವರ ನೀತಿಯನ್ನ ಜೋರಾಗಿ ಹೇಳುತ್ತೆ,

ಯಾಕಂದ್ರೆ ದೇವರೇ ನ್ಯಾಯಾಧೀಶ ಆಗಿದ್ದಾನೆ.+ (ಸೆಲಾ)

 7 “ನನ್ನ ಜನ್ರೇ, ನಾನು ಹೇಳ್ತೀನಿ ಕೇಳಿ,

ಇಸ್ರಾಯೇಲೇ, ನಾನು ನಿನ್ನ ವಿರುದ್ಧ ಸಾಕ್ಷಿ ಹೇಳ್ತೀನಿ.+

ನಾನು ದೇವರು, ನಿನ್ನ ದೇವರು.+

 8 ನೀನು ಕೊಟ್ಟ ಬಲಿಯಿಂದಾಗಲಿ

ನೀನು ನನ್ನ ಮುಂದೆ ತಪ್ಪದೇ ಅರ್ಪಿಸೋ ಸರ್ವಾಂಗಹೋಮ ಬಲಿಗಳಿಂದಾಗಲಿ ನಾನು ನಿನ್ನನ್ನ ಖಂಡಿಸಲ್ಲ.+

 9 ನನಗೆ ನಿನ್ನ ಮನೆಯಿಂದ ಹೋರಿಯಾಗಲಿ,

ನಿನ್ನ ದೊಡ್ಡಿಗಳಿಂದ ಆಡುಗಳಾಗಲಿ* ಬೇಕಾಗಿಲ್ಲ.+

10 ಯಾಕಂದ್ರೆ ಕಾಡಲ್ಲಿರೋ ಎಲ್ಲ ಪ್ರಾಣಿಗಳು ನಂದೇ,+

ಸಾವಿರಾರು ಬೆಟ್ಟಗಳ ಮೇಲಿರೋ ಮೃಗಗಳೂ ನಂದೇ.

11 ಬೆಟ್ಟದಲ್ಲಿರೋ ಎಲ್ಲ ಪಕ್ಷಿಗಳ ಬಗ್ಗೆ ನಂಗೊತ್ತು,+

ಬೈಲಲ್ಲಿರೋ ಅಷ್ಟೂ ಪ್ರಾಣಿಗಳೂ ನಂದೇ.

12 ನನಗೆ ಹಸಿವಾದ್ರೆ, ನಾನು ನಿನಗೆ ಹೇಳಲ್ಲ,

ಯಾಕಂದ್ರೆ ಭೂಮಿ* ಮತ್ತು ಅದ್ರಲ್ಲಿರೋ ಎಲ್ಲ ನಂದೇ.+

13 ನಾನು ಹೋರಿಗಳ ಮಾಂಸವನ್ನ ತಿಂತೀನಾ?

ಆಡುಗಳ ರಕ್ತನ ಕುಡಿತೀನಾ?+

14 ದೇವರಿಗೆ ಧನ್ಯವಾದ ಹೊಗಳಿಕೆಯನ್ನ ನಿನ್ನ ಬಲಿಯಾಗಿ ಕೊಡು,+

ಸರ್ವೋನ್ನತನಿಗೆ ನಿನ್ನ ಹರಕೆಯನ್ನ ತೀರಿಸು.+

15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+

ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+

16 ಆದ್ರೆ ದೇವರು ಕೆಟ್ಟವನಿಗೆ ಹೀಗೆ ಹೇಳ್ತಾನೆ

“ನನ್ನ ನಿಯಮಗಳ ಬಗ್ಗೆ ಹೇಳೋಕೆ

ಅಥವಾ ನನ್ನ ಒಪ್ಪಂದದ+ ಬಗ್ಗೆ ಮಾತಾಡೋಕೆ ನಿನಗೇನು ಹಕ್ಕಿದೆ?+

17 ಯಾಕಂದ್ರೆ ನೀನು ಶಿಸ್ತನ್ನ* ದ್ವೇಷಿಸ್ತೀಯ,

ನನ್ನ ಮಾತುಗಳನ್ನ ಗಾಳಿಗೆ ತೂರುತ್ತಾನೇ ಇದ್ದೀಯ.+

18 ಒಬ್ಬ ಕಳ್ಳನನ್ನ ನೋಡಿದ್ರೆ ಅವನನ್ನ ಮೆಚ್ಚುತ್ತೀಯ,*+

ವ್ಯಭಿಚಾರಿಗಳ ಜೊತೆ ಸ್ನೇಹ ಬೆಳೆಸ್ತೀಯ.

19 ಕೆಟ್ಟದ್ದನ್ನ ಹಬ್ಬಿಸೋಕೆ ನಿನ್ನ ಬಾಯನ್ನ ಬಳಸ್ತೀಯ,

ವಂಚನೆ ನಿನ್ನ ನಾಲಿಗೆಗೆ ಅಂಟ್ಕೊಂಡಿದೆ.+

20 ನೀನು ಕೂತು ನಿನ್ನ ಸ್ವಂತ ಸಹೋದರನ ವಿರುದ್ಧ ಮಾತಾಡ್ತೀಯ,+

ನಿನ್ನ ಒಡಹುಟ್ಟಿದವನ ತಪ್ಪುಗಳನ್ನ ಬಯಲು ಮಾಡ್ತೀಯ.*

21 ನೀನು ಇದನ್ನೆಲ್ಲಾ ಮಾಡ್ತಿದ್ದಾಗ ನಾನು ಸುಮ್ನೆ ಇದ್ದೆ,

ಹಾಗಾಗಿ ನಾನೂ ನಿನ್ನ ತರಾನೇ ಅಂತ ನೀನು ಅಂದ್ಕೊಂಡೆ.

ಆದ್ರೆ ಈಗ ನಾನು ನಿನ್ನನ್ನ ಖಂಡಿಸ್ತೀನಿ,

ನಿನ್ನ ವಿರುದ್ಧ ಮೊಕದ್ದಮೆ ಹಾಕ್ತೀನಿ.+

22 ದೇವರನ್ನ ಮರೆತಿರೋರೇ, ದಯವಿಟ್ಟು ಈ ವಿಷ್ಯವನ್ನ ಗಮನದಲ್ಲಿ ಇಟ್ಕೊಳ್ಳಿ,+

ಇಲ್ಲ ಅಂದ್ರೆ ನಾನು ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ, ಆಗ ನಿಮ್ಮನ್ನ ಕಾಪಾಡೋಕೆ ಯಾರೂ ಇರಲ್ಲ.

23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+

ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,

ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದ ಬತ್ಷೆಬೆ+ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಪ್ರವಾದಿ ನಾತಾನ ದಾವೀದನ ಹತ್ರ ಬಂದಿದ್ದ. ಆಗ ದಾವೀದ ಈ ಮಧುರ ಗೀತೆಯನ್ನ ರಚಿಸಿದ.

51 ದೇವರೇ, ನಿನ್ನ ಶಾಶ್ವತ ಪ್ರೀತಿಗೆ ತಕ್ಕ ಹಾಗೆ ನನಗೆ ದಯೆ ತೋರಿಸು.+

ನಿನ್ನ ಮಹಾ ಕರುಣೆಗೆ ತಕ್ಕ ಹಾಗೆ ನನ್ನ ಅಪರಾಧಗಳನ್ನ ಅಳಿಸಿಹಾಕು.+

 2 ನನ್ನ ತಪ್ಪುಗಳನ್ನ ಸಂಪೂರ್ಣವಾಗಿ ತೊಳೆದುಬಿಡು,+

ನನ್ನ ಪಾಪಗಳನ್ನ ತೊಳೆದು ನನ್ನನ್ನ ಶುದ್ಧಮಾಡು.+

 3 ಯಾಕಂದ್ರೆ ನನ್ನ ಅಪರಾಧಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಾಗಿದೆ,

ನನ್ನ ಪಾಪ ಯಾವಾಗ್ಲೂ ನನ್ನ ಮುಂದೆನೇ ಇದೆ.*+

 4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+

ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+

ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ.

ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+

 5 ನೋಡು! ಹುಟ್ಟಿದಾಗಿಂದಾನೇ ನಾನು ಪಾಪಿ,

ಅಮ್ಮನ ಹೊಟ್ಟೆಯಲ್ಲಿ ಇದ್ದಾಗಿಂದಾನೇ ನನ್ನಲ್ಲಿ ಪಾಪ ಇದೆ.*+

 6 ಮನಸ್ಸಲ್ಲಿರೋ ಸತ್ಯನ ನೋಡಿ ನೀನು ಖುಷಿಪಡ್ತೀಯ,+

ಹಾಗಾಗಿ ನನ್ನ ಹೃದಯಕ್ಕೆ ನಿಜವಾದ ವಿವೇಕವನ್ನ ಕಲಿಸು.

 7 ನಾನು ಶುದ್ಧನಾಗೋ ಹಾಗೆ ಹಿಸ್ಸೋಪ್‌* ಗಿಡದಿಂದ ನನ್ನ ಪಾಪವನ್ನ ತೊಳೆದು ನನ್ನನ್ನ ಶುದ್ಧಮಾಡು,+

ನನ್ನನ್ನ ತೊಳಿ, ಆಗ ನಾನು ಹಿಮಕ್ಕಿಂತ ಬೆಳ್ಳಗಾಗ್ತೀನಿ.+

 8 ಸಂತೋಷ, ಸಂಭ್ರಮದ ಶಬ್ದವನ್ನ ನಾನು ಕೇಳಿಸ್ಕೊಳ್ಳೋ ತರ ಮಾಡು,

ಆಗ ನೀನು ಜಜ್ಜಿದ ಎಲುಬುಗಳು ಖುಷಿಪಡುತ್ತೆ.+

 9 ನನ್ನ ಪಾಪಗಳ ಕಡೆಯಿಂದ ನಿನ್ನ ಮುಖವನ್ನ ತಿರುಗಿಸ್ಕೊ,+

ನನ್ನ ಎಲ್ಲ ತಪ್ಪುಗಳನ್ನ ಅಳಿಸಿಬಿಡು.+

10 ದೇವರೇ, ನನ್ನೊಳಗೆ ಶುದ್ಧ ಹೃದಯವನ್ನ ಹುಟ್ಟಿಸು,+

ಸ್ಥಿರವಾಗಿರೋ ಒಂದು ಹೊಸ ಮನಸ್ಸನ್ನ+ ನನ್ನೊಳಗೆ ಇಡು.

11 ನಿನ್ನ ಸನ್ನಿಧಿಯಿಂದ ನನ್ನನ್ನ ತಳ್ಳಿಬಿಡಬೇಡ,

ನನ್ನಿಂದ ನಿನ್ನ ಪವಿತ್ರಶಕ್ತಿಯನ್ನ ತೆಗೀಬೇಡ.

12 ನನ್ನನ್ನ ರಕ್ಷಿಸಿ ಕೊಟ್ಟ ಸಂತೋಷವನ್ನ ಮತ್ತೆ ಕೊಡು,+

ನಿನ್ನ ಮಾತನ್ನ ಪಾಲಿಸಬೇಕು ಅನ್ನೋ ಆಸೆಯನ್ನ ನನ್ನಲ್ಲಿ ಎಬ್ಬಿಸು.

13 ಅಪರಾಧಿಗಳಿಗೆ ನಾನು ನಿನ್ನ ದಾರಿಯನ್ನ ಕಲಿಸ್ತೀನಿ,+

ಆಗ ಆ ಪಾಪಿಗಳು ನಿನ್ನ ಹತ್ರ ವಾಪಸ್‌ ಬರ್ತಾರೆ.

14 ದೇವರೇ, ನನ್ನ ರಕ್ಷಣೆಯ ದೇವರೇ,+ ರಕ್ತಾಪರಾಧದಿಂದ ನನ್ನನ್ನ ಕಾಪಾಡು,+

ಆಗ ನನ್ನ ನಾಲಿಗೆ ಸಂತೋಷದಿಂದ ನಿನ್ನ ನೀತಿಯನ್ನ ಜೋರಾಗಿ ಹೇಳುತ್ತೆ.+

15 ಯೆಹೋವನೇ, ನನ್ನ ಬಾಯಿ ನಿನ್ನನ್ನ ಹೊಗಳೋಕೆ ಆಗೋ ತರ,

ನನ್ನ ತುಟಿಗಳನ್ನ ಬಿಚ್ಚು.+

16 ಯಾಕಂದ್ರೆ ನಿನಗೆ ಬಲಿ ಬೇಕಾಗಿಲ್ಲ. ಬೇಕಾಗಿದ್ರೆ ನಾನು ಅದನ್ನ ನಿನಗೆ ಕೊಡ್ತಿದ್ದೆ,+

ನಿನಗೆ ಸರ್ವಾಂಗಹೋಮ ಬಲಿಯಲ್ಲಿ ಸಂತೋಷ ಸಿಗಲ್ಲ.+

17 ಮುರಿದ ಮನಸ್ಸೇ ದೇವರು ಮೆಚ್ಚೋ ಬಲಿಯಾಗಿದೆ,

ದೇವರೇ, ಜಜ್ಜಿ ಹೋಗಿರೋ, ಮುರಿದು ಹೋಗಿರೋ ಹೃದಯನ ನೀನು ತಳ್ಳಿಹಾಕಲ್ಲ.+

18 ದಯೆ ತೋರಿಸಿ* ಚೀಯೋನಿಗೆ ಒಳ್ಳೇದನ್ನ ಮಾಡು,

ಯೆರೂಸಲೇಮಿನ ಗೋಡೆಗಳನ್ನ ಕಟ್ಟು.

19 ಆಗ ನೀನು ನೀತಿಯ ಬಲಿಗಳಲ್ಲಿ,

ಸರ್ವಾಂಗಹೋಮ ಬಲಿಗಳಲ್ಲಿ, ಸಂಪೂರ್ಣವಾಗಿ ಕೊಡೋ ಹೋಮಗಳಲ್ಲಿ ಖುಷಿಪಡ್ತೀಯ,

ಆಗ ನಿನ್ನ ಯಜ್ಞವೇದಿ ಮೇಲೆ ಹೋರಿಗಳನ್ನ ಕೊಡೋಕೆ ಆಗುತ್ತೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್‌.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.

52 ದುಷ್ಟನೇ, ನೀನು ನಿನ್ನ ಕೆಟ್ಟ ಕೆಲಸಗಳ ಬಗ್ಗೆ ಯಾಕೆ ಕೊಚ್ಕೊಳ್ತೀಯ?+

ದೇವರ ಶಾಶ್ವತ ಪ್ರೀತಿ ಇಡೀ ದಿನ ಇರುತ್ತೆ ಅಂತ ನಿಂಗೆ ಗೊತ್ತಿಲ್ವಾ?+

 2 ನಿನ್ನ ನಾಲಿಗೆ ಕ್ಷೌರ ಕತ್ತಿ ತರ ಚೂಪಾಗಿ ಇದೆ,+

ಅದು ಕೇಡು ಮಾಡೋಕೆ ಸಂಚು ಮಾಡುತ್ತೆ, ಮೋಸದ ಮಾತುಗಳನ್ನ ಆಡುತ್ತೆ.+

 3 ನೀನು ಒಳ್ಳೇದಕ್ಕಿಂತ ಕೆಟ್ಟದ್ದನ್ನೇ ಜಾಸ್ತಿ ಪ್ರೀತಿಸ್ತೀಯ,

ಸತ್ಯಕ್ಕಿಂತ ಸುಳ್ಳನ್ನೇ ಜಾಸ್ತಿ ಹೇಳ್ತೀಯ. (ಸೆಲಾ)

 4 ಮೋಸದ ನಾಲಿಗೆಯೇ!

ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ.

 5 ಹಾಗಾಗಿ ದೇವರು ನಿನ್ನನ್ನ ಯಾವತ್ತೂ ಮೇಲೆ ಏಳದ ಹಾಗೆ ಕೆಳಗೆ ಬೀಳಿಸ್ತಾನೆ,+

ಆತನು ನಿನ್ನನ್ನ ಸರಕ್ಕಂತ ಎಳೆದು ನಿನ್ನ ಡೇರೆಯಿಂದ ನಿನ್ನನ್ನ ಕಿತ್ತು ಎಸೀತಾನೆ,+

ಈ ಲೋಕದಿಂದ* ಆತನು ನಿನ್ನನ್ನ ಬೇರು ಸಮೇತ ಕಿತ್ತುಹಾಕ್ತಾನೆ.+ (ಸೆಲಾ)

 6 ನೀತಿವಂತರು ಇದನ್ನ ನೋಡಿ ಆಶ್ಚರ್ಯಪಡ್ತಾರೆ,+

ಅವರು ಅವನನ್ನ ನೋಡಿ ನಗ್ತಾರೆ.+

 7 “ಈ ಮನುಷ್ಯನನ್ನ ನೋಡಿ, ಇವನು ದೇವ್ರನ್ನ ತನ್ನ ಆಶ್ರಯವಾಗಿ* ಮಾಡ್ಕೊಳ್ಳಿಲ್ಲ,+

ತನ್ನ ಸಿರಿಸಂಪತ್ತನ್ನೇ ನಂಬ್ಕೊಂಡಿದ್ದ,+

ಕೆಟ್ಟ ಯೋಜನೆಗಳನ್ನೇ* ಆಸರೆಯಾಗಿ ಮಾಡ್ಕೊಂಡಿದ್ದ.”

 8 ಆದ್ರೆ ನಾನು ದೇವರ ಆಲಯದಲ್ಲಿ ಚೆನ್ನಾಗಿ ಬೆಳೆದಿರೋ ಆಲಿವ್‌ ಮರದ ತರ ಇರ್ತಿನಿ,

ನಾನು ದೇವರ ಶಾಶ್ವತ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೀನಿ,+ ಯಾವಾಗ್ಲೂ ಹಾಗೇ ಇಟ್ಟಿರ್ತಿನಿ.

 9 ನೀನು ಹೆಜ್ಜೆ ತಗೊಂಡಿದ್ರಿಂದ ನಾನು ನಿನ್ನನ್ನ ಶಾಶ್ವತವಾಗಿ ಹೊಗಳ್ತೀನಿ,+

ನಿನ್ನ ನಿಷ್ಠಾವಂತ ಜನ್ರ ಮುಂದೆ,

ನಿನ್ನ ಹೆಸ್ರಲ್ಲಿ ನಾನು ನಿರೀಕ್ಷೆ ಇಡ್ತೀನಿ.+ ಯಾಕಂದ್ರೆ ಅದೇ ಒಳ್ಳೇದು.

ಗಾಯಕರ ನಿರ್ದೇಶಕನಿಗೆ ಸೂಚನೆ: ಮಹಾಲತ್‌* ಶೈಲಿಯಲ್ಲಿ ರಚಿಸಲಾಗಿದೆ. ಮಸ್ಕಿಲ್‌.* ದಾವೀದನ ಕೀರ್ತನೆ.

53 ಮೂರ್ಖ* ತನ್ನ ಹೃದಯದಲ್ಲಿ,

“ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+

ಅಂಥ ಜನ್ರ ಕೆಲಸ ಭ್ರಷ್ಟ, ಅಸಹ್ಯ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ.+

 2 ಆದ್ರೆ ಯಾರಿಗೆ ತಿಳುವಳಿಕೆ* ಇದೆ,

ಯಾರು ಯೆಹೋವನನ್ನ ಹುಡುಕ್ತಿದ್ದಾರೆ,+

ಅಂತ ತಿಳ್ಕೊಳ್ಳೋಕೆ ದೇವರು ಸ್ವರ್ಗದಿಂದ ನೋಡ್ತಾನೆ.+

 3 ಅವ್ರೆಲ್ಲ ದಾರಿತಪ್ಪಿದ್ದಾರೆ,

ಭ್ರಷ್ಟಾಚಾರ ಮಾಡದಿರೋರು ಒಬ್ರೂ ಇಲ್ಲ.

ಯಾರೂ ಒಳ್ಳೇದನ್ನ ಮಾಡ್ತಿಲ್ಲ,

ಒಬ್ಬನೂ ಮಾಡ್ತಿಲ್ಲ.+

 4 ಕೆಟ್ಟದನ್ನ ಮಾಡೋರಿಗೆ ಗೊತ್ತಾಗಲ್ವಾ?

ಅವರು ನನ್ನ ಜನ್ರನ್ನ ರೊಟ್ಟಿ ತರ ನುಂಗ್ತಾರೆ.

ಅವರು ಯೆಹೋವನಿಗೆ ಪ್ರಾರ್ಥನೆ ಮಾಡಲ್ಲ.+

 5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.

ಈ ಮುಂಚೆ ಆಗದಷ್ಟು ಭಯ ಈಗ ಅವರಿಗಾಗುತ್ತೆ,*

ಯಾಕಂದ್ರೆ ನಿನ್ನ ಮೇಲೆ ಆಕ್ರಮಣ ಮಾಡೋರ* ಎಲುಬುಗಳನ್ನ ದೇವರು ಚೆಲ್ಲಾಪಿಲ್ಲಿ ಮಾಡ್ತಾನೆ.

ಯೆಹೋವ ಅವ್ರನ್ನ ತಳ್ಳಿಬಿಟ್ಟಿರೋದ್ರಿಂದ ನೀನು ಅವ್ರಿಗೆ ಅವಮಾನ ಆಗೋ ತರ ಮಾಡ್ತೀಯ.

 6 ಚೀಯೋನಿಂದ ಇಸ್ರಾಯೇಲ್ಯರಿಗೆ ರಕ್ಷಣೆ ಬರಲಿ!+

ಜೈಲಲ್ಲಿರೋ ಜನ್ರನ್ನ ಯೆಹೋವ ಒಟ್ಟುಸೇರಿಸುವಾಗ,

ಯಾಕೋಬ ಖುಷಿಪಡಲಿ, ಇಸ್ರಾಯೇಲ್‌ ಉಲ್ಲಾಸಪಡಲಿ.

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್‌.* “ದಾವೀದ ಇಲ್ಲೇ ಬಚ್ಚಿಟ್ಕೊಂಡಿದ್ದಾನೆ” ಅಂತ ಜೀಫ್ಯರು ಸೌಲನಿಗೆ ಹೇಳಿದ್ರು.+ ಆಗ ದಾವೀದ ಈ ಕೀರ್ತನೆ ರಚಿಸಿದ.

54 ದೇವರೇ, ನಿನ್ನ ಹೆಸ್ರಿಂದ ನನ್ನನ್ನ ಕಾಪಾಡು,+

ನಿನ್ನ ಶಕ್ತಿಯಿಂದ ನನ್ನನ್ನ ಸಂರಕ್ಷಿಸು.+

 2 ದೇವರೇ, ನನ್ನ ಪ್ರಾರ್ಥನೆಯನ್ನ ಕೇಳು,+

ನನ್ನ ಬಿನ್ನಹಗಳಿಗೆ ಗಮನಕೊಡು.

 3 ಯಾಕಂದ್ರೆ ಅಪರಿಚಿತರು ನನ್ನ ವಿರುದ್ಧ ಬಂದಿದ್ದಾರೆ,

ಕ್ರೂರಿಗಳು ನನ್ನ ಜೀವ ತೆಗೀಬೇಕು ಅಂತಿದ್ದಾರೆ.+

ದೇವರ ಕಡೆ ಅವ್ರಿಗೆ ಒಂಚೂರು ಗೌರವ ಇಲ್ಲ.*+ (ಸೆಲಾ)

 4 ನೋಡು! ದೇವರು ನನ್ನ ಸಹಾಯಕ,+

ನನಗೆ ಸಹಕಾರ ಕೊಡೋರ ಜೊತೆ ಯೆಹೋವ ಇದ್ದಾನೆ.

 5 ನನ್ನ ಎದುರಾಳಿಗಳು ಕೊಡೋ ಕಷ್ಟಗಳನ್ನ ಆತನು ಅವ್ರಿಗೇ ವಾಪಸ್‌ ಕೊಡ್ತಾನೆ,+

ನನ್ನ ದೇವರೇ, ನೀನು ನಂಬಿಗಸ್ತನಾಗಿ ಇರೋದ್ರಿಂದ ಅವ್ರನ್ನ ನಾಶಮಾಡು.+

 6 ನಾನು ನನ್ನ ಮನಸಾರೆ ನಿನಗೆ ಬಲಿ ಕೊಡ್ತೀನಿ.+

ಯೆಹೋವನೇ, ನಾನು ನಿನ್ನ ಹೆಸ್ರನ್ನ ಹೊಗಳ್ತೀನಿ. ಯಾಕಂದ್ರೆ ಅದೇ ಒಳ್ಳೇದು.+

 7 ಆತನು ನನ್ನನ್ನ ಎಲ್ಲ ಸಂಕಷ್ಟಗಳಿಂದ ಕಾಪಾಡ್ತಾನೆ,+

ನಾನು ಶತ್ರುಗಳು ಸೋಲೋದನ್ನ ನೋಡ್ತೀನಿ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್‌.* ದಾವೀದನ ಕೀರ್ತನೆ.

55 ದೇವರೇ, ನನ್ನ ಪ್ರಾರ್ಥನೆ ಕೇಳು,+

ಕರುಣೆಗಾಗಿ ನಾನು ಮಾಡೋ ಬಿನ್ನಹವನ್ನ ಪಕ್ಕಕ್ಕೆ ಇಡಬೇಡ.*+

 2 ನನಗೆ ಗಮನಕೊಡು, ನನಗೆ ಉತ್ತರಕೊಡು.+

ನನ್ನ ಚಿಂತೆಗಳು ನಾನು ಚಡಪಡಿಸೋ ತರ ಮಾಡಿವೆ,+

ನನಗೆ ತಳಮಳ ಆಗ್ತಿದೆ.

 3 ಯಾಕಂದ್ರೆ ವೈರಿ ಜೋರು ಮಾಡ್ತಿದ್ದಾನೆ,

ಕೆಟ್ಟವನು ಒತ್ತಡ ಹಾಕ್ತಿದ್ದಾನೆ.

ಅವರು ನನ್ನ ಮೇಲೆ ಒಂದರ ಮೇಲೆ ಒಂದು ತೊಂದರೆನ ಗುಡ್ಡೆ ಹಾಕ್ತಿದ್ದಾರೆ,

ಕೋಪದಿಂದ ಅವರು ನನ್ನ ವಿರುದ್ಧ ಹಗೆತನ ಬೆಳೆಸ್ಕೊಂಡಿದ್ದಾರೆ.+

 4 ನನ್ನ ಹೃದಯ ನೋವಿಂದ ನಲುಗಿ ಹೋಗಿದೆ,+

ಸಾವಿನ ಭಯ ನನ್ನನ್ನ ಮುಳುಗಿಸಿಬಿಟ್ಟಿದೆ.+

 5 ನಾನು ಭಯದಿಂದ ನಡುಗ್ತಾ ಇದ್ದೀನಿ,

ತತ್ತರಿಸಿ ಹೋಗಿದ್ದೀನಿ.

 6 ನಾನು ಹೀಗೆ ಹೇಳ್ತಾ ಇದ್ದೆ “ನನಗೆ ಪಾರಿವಾಳದ ತರ ರೆಕ್ಕೆ ಇದ್ದಿದ್ರೆ,

ಸುರಕ್ಷಿತವಾದ ಜಾಗಕ್ಕೆ ಹಾರಿಹೋಗಿ ಅಲ್ಲೇ ಇರ್ತಿದ್ದೆ.

 7 ತುಂಬ ದೂರ ಹಾರಿಹೋಗ್ತಿದ್ದೆ.+

ಕಾಡಲ್ಲಿ ಗೂಡು ಮಾಡ್ಕೊತಿದ್ದೆ.+ (ಸೆಲಾ)

 8 ಜೋರಾಗಿ ಬೀಸೋ ಗಾಳಿಯಿಂದ, ಭಯಂಕರ ಬಿರುಗಾಳಿಯಿಂದ ತಪ್ಪಿಸ್ಕೊಂಡು,

ನಾನು ಒಂದು ಸುರಕ್ಷಿತ ತಾಣಕ್ಕೆ ಓಡಿಹೋಗ್ತಿದ್ದೆ.”

 9 ಯೆಹೋವನೇ, ಅವ್ರಿಗೆ ಗಲಿಬಿಲಿ ಮಾಡು, ಅವ್ರ ಯೋಜನೆಗಳನ್ನ ಹಾಳುಮಾಡು,*+

ಯಾಕಂದ್ರೆ ಪಟ್ಟಣದಲ್ಲಿ ನಾನು ಹಿಂಸೆ, ಹೊಡೆದಾಟ ನೋಡಿದ್ದೀನಿ.

10 ಹಗಲೂರಾತ್ರಿ ಅವರು ಪಟ್ಟಣದ ಗೋಡೆಗಳ ಮೇಲೆ ನಡೆದಾಡ್ತಾರೆ,

ಪಟ್ಟಣದಲ್ಲಿ ದ್ವೇಷ, ತೊಂದ್ರೆ ತುಂಬಿಕೊಂಡಿದೆ.+

11 ದೊಡ್ಡ ವಿಪತ್ತು ಪಟ್ಟಣದ ಮಧ್ಯದಲ್ಲಿದೆ,

ದಬ್ಬಾಳಿಕೆ ಮತ್ತು ವಂಚನೆ ಪಟ್ಟಣದ ಮುಖ್ಯಸ್ಥಳವನ್ನ* ಬಿಟ್ಟು ಹೋಗಿಲ್ಲ.+

12 ನನ್ನನ್ನ ಕೆಣಕುತ್ತಿದ್ದವನು ಶತ್ರುವಲ್ಲ,+

ಶತ್ರುವಾಗಿದ್ರೆ ನಾನು ಸಹಿಸಿಕೊಳ್ತಿದ್ದೆ.

ನನ್ನ ವಿರುದ್ಧ ಎದ್ದಿರೋನು ವೈರಿಯಲ್ಲ,

ವೈರಿಯಾಗಿದ್ರೆ ನಾನು ಅವನಿಗೆ ಸಿಗದೆ ಇರೋ ಹಾಗೆ ಬಚ್ಚಿಟ್ಕೊಳ್ತಿದ್ದೆ.

13 ಆದ್ರೆ ಇದನ್ನ ಮಾಡಿದ್ದು ನನ್ನಂಥ ಮನುಷ್ಯ,*+

ನನಗೆ ಚೆನ್ನಾಗಿ ಗೊತ್ತಿರೋ ನನ್ನ ಸ್ನೇಹಿತ.+

14 ಒಂದು ಕಾಲದಲ್ಲಿ ನಾವು ಆಪ್ತ ಸ್ನೇಹದ ಸಿಹಿ ಕ್ಷಣಗಳನ್ನ ಅನುಭವಿಸಿದ್ವಿ,

ಜನ್ರ ಜೊತೆ ದೇವರ ಆಲಯಕ್ಕೆ ಹೋಗ್ತಾ ಇದ್ವಿ.

15 ನನ್ನ ಶತ್ರುಗಳ ಮೇಲೆ ನಾಶನ ಬರಲಿ!+

ಜೀವಂತವಾಗೇ ಅವ್ರು ಸಮಾಧಿ* ಸೇರಲಿ,

ಯಾಕಂದ್ರೆ ಕೆಟ್ಟತನ ಅವ್ರ ಮಧ್ಯ, ಅವರೊಳಗೆ ಮನೆ ಮಾಡ್ಕೊಂಡಿದೆ.

16 ಆದ್ರೆ ನಾನು ಯೆಹೋವನನ್ನ ಕರೀತೀನಿ,

ಆತನು ನನ್ನನ್ನ ಕಾಪಾಡ್ತಾನೆ.+

17 ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ನಾನು ಮೂರೂ ಹೊತ್ತು ದುಃಖದಲ್ಲೇ ಮುಳುಗಿರ್ತಿನಿ, ಕೊರಗ್ತಾ ಇರ್ತಿನಿ,+

ದೇವರು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಳ್ತಾನೆ.+

18 ಜನ್ರೆಲ್ಲ ನನ್ನ ವಿರುದ್ಧ ಬಂದಿದ್ದಾರೆ,

ಹಾಗಾಗಿ ನನ್ನ ವಿರುದ್ಧ ಹೋರಾಡೋರ ಕೈಯಿಂದ ಆತನು ನನ್ನನ್ನ ತಪ್ಪಿಸಿ ಶಾಂತಿಯನ್ನ ಕೊಡ್ತಾನೆ.+

19 ಪುರಾತನ ಕಾಲದಿಂದ ಸಿಂಹಾಸನದ ಮೇಲೆ ಕೂತಿರೋ+

ದೇವರು ಕೇಳಿಸ್ಕೊಂಡು, ಅವ್ರಿಗೆ ಸ್ಪಂದಿಸ್ತಾನೆ.+ (ಸೆಲಾ)

ದೇವರಿಗೆ ಭಯಪಡದವರು,+

ಬದಲಾಗಲ್ಲ ಅಂತಾರೆ.

20 ಅವನು* ತನ್ನ ಸ್ನೇಹಿತರ ಮೇಲೆನೇ ಆಕ್ರಮಣ ಮಾಡಿದ,+

ಅವನು ಕೊಟ್ಟ ಮಾತನ್ನ ಮುರಿದುಬಿಟ್ಟ.+

21 ಅವನ ಮಾತು ಬೆಣ್ಣೆಗಿಂತ ಮೃದು,+

ಆದ್ರೆ ಅವನ ಹೃದಯದ ತುಂಬ ದ್ವೇಷ.

ಅವನ ನುಡಿ ಎಣ್ಣೆಗಿಂತ ನಯ,

ಆದ್ರೆ ಅದು ಕತ್ತಿಗಿಂತ ಚೂಪು.+

22 ನಿನಗಿರೋ ಭಾರನೆಲ್ಲ ಯೆಹೋವನ ಮೇಲೆ ಹಾಕು,+

ಆತನೇ ನಿನಗೆ ಆಧಾರವಾಗಿ ಇರ್ತಾನೆ.+

ನೀತಿವಂತ ಬಿದ್ದುಹೋಗೋಕೆ* ಆತನು ಯಾವತ್ತೂ ಬಿಡಲ್ಲ.+

23 ದೇವರೇ, ನೀನು ಅವ್ರನ್ನ ಆಳವಾದ ಗುಂಡಿಗೆ ಬೀಳಿಸ್ತೀಯ.+

ರಕ್ತಾಪರಾಧಿಗಳು, ವಂಚಕರು ತಮ್ಮ ಅರ್ಧ ಆಯಸ್ಸಲ್ಲೇ ಹೋಗಿಬಿಡ್ತಾರೆ.+

ಆದ್ರೆ ನಾನು ನಿನ್ನಲ್ಲೇ ಭರವಸೆ ಇಟ್ಟಿದ್ದೀನಿ.

ಗಾಯಕರ ನಿರ್ದೇಶಕನಿಗೆ ಸೂಚನೆ, “ದೂರದ ಮೌನ ಪಾರಿವಾಳ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.* ಗತ್‌ನಲ್ಲಿ+ ಫಿಲಿಷ್ಟಿಯರು ದಾವೀದನನ್ನ ವಶ ಮಾಡ್ಕೊಂಡಾಗ ರಚಿಸಿದ ಕೀರ್ತನೆ.

56 ದೇವರೇ, ನನಗೆ ಕೃಪೆ ತೋರಿಸು. ಯಾಕಂದ್ರೆ ನಾಶವಾಗಿ ಹೋಗೋ ಮನುಷ್ಯ ನನ್ನ ಮೇಲೆ ಆಕ್ರಮಣ ಮಾಡ್ತಿದ್ದಾನೆ.*

ಇಡೀ ದಿನ ಅವರು ನನ್ನ ಜೊತೆ ಹೋರಾಡ್ತಾರೆ, ನನ್ನ ಮೇಲೆ ದಬ್ಬಾಳಿಕೆ ಮಾಡ್ತಾರೆ.

 2 ನನ್ನ ವೈರಿಗಳು ಇಡೀ ದಿನ ನನ್ನ ಮೇಲೆ ಆಕ್ರಮಣ ಮಾಡ್ತಾರೆ,

ತುಂಬ ಜನ ಅಹಂಕಾರದಿಂದ ನನ್ನ ವಿರುದ್ಧ ಹೋರಾಡ್ತಾರೆ.

 3 ನನಗೆ ಭಯ ಆದಾಗ+ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.+

 4 ನಾನು ಯಾರ ಮಾತನ್ನ ಹೊಗಳ್ತೀನೋ, ಆ ದೇವರಲ್ಲಿ

ಹೌದು, ಆ ದೇವರಲ್ಲಿ ನಾನು ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.

ಮಾಮೂಲಿ ಮನುಷ್ಯ* ನನಗೆ ಏನು ಮಾಡಕ್ಕಾಗುತ್ತೆ?+

 5 ಇಡೀ ದಿನ ಅವರು ನನಗೆ ತೊಂದ್ರೆ ಕೊಡ್ತಾರೆ,

ನನಗೆ ಹಾನಿ ಮಾಡಬೇಕು ಅನ್ನೋ ಯೋಚನೆ ಬಿಟ್ರೆ ಬೇರೆ ಯಾವ ಯೋಚನೆನೂ ಅವ್ರಿಗಿಲ್ಲ.+

 6 ಅವರು ನನ್ನ ಮೇಲೆ ಆಕ್ರಮಣ ಮಾಡೋಕೆ ಬಚ್ಚಿಟ್ಕೊಂತಾರೆ,

ಅವಕಾಶ ಸಿಕ್ಕಿದ ತಕ್ಷಣ ನನ್ನ ಪ್ರಾಣ ತೆಗೀಬೇಕು ಅಂತ+

ಅವರು ನನ್ನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸ್ತಾರೆ.+

 7 ಅವರು ದುಷ್ಟರಾಗಿ ಇರೋದ್ರಿಂದ ಅವ್ರನ್ನ ತಳ್ಳಿಬಿಡು.

ದೇವರೇ, ನಿನ್ನ ಕೋಪದಿಂದ ಜನ್ರನ್ನ ಬೀಳಿಸು.+

 8 ಅಲೆಮಾರಿಯಾಗಿದ್ದಾಗ ನಾನು ಅನುಭವಿಸಿದ ಕಷ್ಟಗಳ ಲೆಕ್ಕವನ್ನ ನೀನು ಇಡ್ತೀಯ.+

ನಿನ್ನ ಚರ್ಮದ ಚೀಲದಲ್ಲಿ ನನ್ನ ಕಣ್ಣೀರನ್ನ ಕೂಡಿಸು.+

ಅವೆಲ್ಲ ನಿನ್ನ ಪುಸ್ತಕದಲ್ಲಿ ಇಲ್ವಾ?+

 9 ನಾನು ಸಹಾಯಕ್ಕಾಗಿ ಕೂಗೋ ದಿನ ನನ್ನ ಶತ್ರುಗಳು ವಾಪಸ್‌ ಹೋಗ್ತಾರೆ.+

ದೇವರು ನನ್ನ ಪಕ್ಷದಲ್ಲಿದ್ದಾನೆ. ಇದ್ರ ಮೇಲೆ ನನಗೆ ಯಾವ ಸಂಶಯನೂ ಇಲ್ಲ.+

10 ನಾನು ಯಾರ ಮಾತನ್ನ ಹೊಗಳ್ತೀನೋ ಆ ದೇವರಲ್ಲಿ,

ನಾನು ಯಾರ ನುಡಿಯನ್ನ ಸ್ತುತಿಸ್ತೀನೋ ಆ ಯೆಹೋವನಲ್ಲಿ

11 ಹೌದು, ಆ ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.+

ನಾಶವಾಗೋ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+

12 ದೇವರೇ, ನಾನು ಹೊತ್ತ ಹರಕೆಗಳನ್ನ ತೀರಿಸೋದು ನನ್ನ ಕರ್ತವ್ಯ,+

ನಾನು ನಿನಗೆ ಧನ್ಯವಾದ ಹೇಳ್ತೀನಿ.+

13 ಯಾಕಂದ್ರೆ ನೀನು ನನ್ನನ್ನ ಸಾವಿನ ಬಾಯಿಂದ ಬಿಡಿಸಿದೆ,+

ನಾನು ಜೀವಂತವಾಗಿ ಇರಬೇಕು, ದೇವರ ಸೇವೆ ಮಾಡಬೇಕು ಅಂತ,*+

ನನ್ನ ಕಾಲು ಎಡವಿ ಬೀಳದ ಹಾಗೆ ನೋಡ್ಕೊಂಡೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ಮಿಕ್ತಾಮ್‌.* ದಾವೀದನ ಕೀರ್ತನೆ. ಸೌಲನಿಂದ ತಪ್ಪಿಸ್ಕೊಂಡು ದಾವೀದ ಗವಿಗೆ ಓಡಿಹೋದಾಗ ಇದನ್ನ ರಚಿಸಿದ.+

57 ದೇವರೇ, ನನಗೆ ಕೃಪೆ ತೋರಿಸು, ನನಗೆ ದಯೆ ತೋರಿಸು,

ಯಾಕಂದ್ರೆ ನಾನು ನಿನ್ನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+

ಸಮಸ್ಯೆಗಳೆಲ್ಲ ಬಗೆಹರಿಯೋ ತನಕ ನಾನು ನಿನ್ನ ರೆಕ್ಕೆ ನೆರಳಲ್ಲೇ ಆಶ್ರಯ ಪಡೀತೀನಿ.+

 2 ಸರ್ವೋನ್ನತ ದೇವರನ್ನ ನಾನು ಕೂಗ್ತೀನಿ,

ನನ್ನ ಸಮಸ್ಯೆಗಳಿಗೆ ಅಂತ್ಯ ಹಾಡೋ ಸತ್ಯ ದೇವರಿಗೆ ನಾನು ಮೊರೆ ಇಡ್ತೀನಿ.

 3 ಆತನು ಸ್ವರ್ಗದಿಂದ ನನಗೆ ಸಹಾಯ ಮಾಡ್ತಾನೆ, ನನ್ನನ್ನ ರಕ್ಷಿಸ್ತಾನೆ.+

ನನ್ನ ಮೇಲೆ ಆಕ್ರಮಣ ಮಾಡೋನು ಗೆಲ್ಲದೆ ಇರೋ ತರ ನೋಡ್ಕೊಳ್ತಾನೆ. (ಸೆಲಾ)

ದೇವರು ತನ್ನ ಶಾಶ್ವತ ಪ್ರೀತಿಯನ್ನ ಮತ್ತು ನಂಬಿಗಸ್ತಿಕೆಯನ್ನ ತೋರಿಸ್ತಾನೆ.+

 4 ನನ್ನ ಸುತ್ತ ಸಿಂಹಗಳು ನಿಂತಿವೆ,+

ನನ್ನನ್ನ ನುಂಗಬೇಕು ಅಂತಿರೋರ ಮಧ್ಯ ನಾನು ಮಲಗೋ ಪರಿಸ್ಥಿತಿ ಬಂದಿದೆ,

ಅವ್ರ ಹಲ್ಲು ಈಟಿ, ಬಾಣ

ಅವ್ರ ನಾಲಿಗೆ ಚೂಪಾದ ಕತ್ತಿ.+

 5 ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,

ಮೇಲೆ ಸ್ವರ್ಗದಲ್ಲೂ ನಿನಗೆ ಘನತೆಯಾಗಲಿ.+

 6 ನನ್ನ ಕಾಲು ಸಿಕ್ಕಿಹಾಕೊಳ್ಳೋ ತರ ಅವರು ಬಲೆನ ಸಿದ್ಧಮಾಡಿದ್ದಾರೆ,+

ನಾನು ಕಡುವೇದನೆಯಿಂದ ಬಗ್ಗಿ ಹೋಗಿದ್ದೀನಿ.+

ನನ್ನ ದಾರಿಯಲ್ಲಿ ಅವರು ಗುಂಡಿ ತೋಡಿದ್ರು,

ಆದ್ರೆ ಅದರೊಳಗೆ ಅವ್ರೇ ಬಿದ್ದುಹೋದ್ರು.+ (ಸೆಲಾ)

 7 ದೇವರೇ, ನನ್ನ ಹೃದಯ ಸ್ಥಿರವಾಗಿದೆ,+

ಹೌದು ನನ್ನ ಹೃದಯ ಸ್ಥಿರವಾಗಿದೆ.

ನಾನು ಹಾಡ್ತೀನಿ, ಸಂಗೀತ ರಚಿಸ್ತೀನಿ.

 8 ನನ್ನ ಮನಸ್ಸೇ, ಎದ್ದೇಳು.

ತಂತಿವಾದ್ಯವೇ, ಎದ್ದೇಳು. ಸಂಗೀತ ವಾದ್ಯಗಳೇ, ನೀವೂ ಎದ್ದೇಳಿ.

ನಾನು ನಸುಕನ್ನ ಎಬ್ಬಿಸ್ತೀನಿ.+

 9 ಯೆಹೋವನೇ ದೇಶಗಳ ಜನ್ರ ಮಧ್ಯ ನಾನು ನಿನ್ನನ್ನ ಹೊಗಳ್ತೀನಿ+

ಅವ್ರ ಮಧ್ಯ ನಾನು ನಿನ್ನನ್ನ ಸ್ತುತಿಸ್ತೀನಿ.*+

10 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು. ಆ ಪ್ರೀತಿ ಆಕಾಶವನ್ನೂ

ನಿನ್ನ ಸತ್ಯತೆ ಗಗನವನ್ನೂ ಮುಟ್ಟುತ್ತೆ.+

11 ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,

ಮೇಲೆ ಸ್ವರ್ಗದಲ್ಲೂ ನಿನಗೆ ಗೌರವ ಸಿಗಲಿ.+

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.*

58 ಜನ್ರೇ, ನೀವು ಮೌನವಾಗಿದ್ರೆ ನೀತಿ ಬಗ್ಗೆ ಮಾತಾಡೋಕೆ ಆಗುತ್ತಾ?+ ಸರಿಯಾಗಿ ತೀರ್ಪು ಕೊಡೋಕೆ ಆಗುತ್ತಾ?+

 2 ನೀವು ಮನಸ್ಸಲ್ಲಿ ಕೆಟ್ಟದ್ದನ್ನೇ ಯೋಜನೆ ಮಾಡ್ತೀರ,+

ದೇಶದ ಮೂಲೆ ಮೂಲೆಯಲ್ಲೂ ಹಿಂಸೆ ತುಂಬಿಸ್ತೀರ.+

 3 ಕೆಟ್ಟವರು ಹುಟ್ಟಿದಾಗಿಂದಾನೇ* ಅಡ್ಡದಾರಿ ಹಿಡಿದಿದ್ದಾರೆ,*

ಮೊಂಡರಾಗಿದ್ದಾರೆ, ಸುಳ್ಳುಗಾರರಾಗಿ ಇದ್ದಾರೆ.

 4 ಅವ್ರ ಮಾತು ಹಾವಿನ ವಿಷ,+

ಕಿವಿಯನ್ನ ಮುಚ್ಕೊಳ್ಳೋ ನಾಗರದ ಹಾಗೆ ಅವರು ಕಿವುಡರಾಗಿದ್ದಾರೆ.

 5 ಹಾವಾಡಿಗರು ಎಷ್ಟೇ ಚೆನ್ನಾಗಿ ಪುಂಗಿ ಊದಿದ್ರೂ

ಅದು ಅವ್ರ ಸ್ವರನ ಕೇಳಲ್ಲ.

 6 ದೇವರೇ, ಅವ್ರ ಹಲ್ಲನ್ನ ಉದುರಿಸು!

ಯೆಹೋವನೇ, ಈ ಸಿಂಹಗಳ ದವಡೆಯನ್ನ ಮುರಿದುಬಿಡು!

 7 ಹರಿದು ಹೋಗೋ ನೀರಿನ ತರ ಅವ್ರೂ ಕಾಣದೆ ಹೋಗಲಿ.

ದೇವರು ತನ್ನ ಬಿಲ್ಲನ್ನ ಬಾಗಿಸಿ, ಬಾಣಗಳಿಂದ ಅವ್ರನ್ನ ಬೀಳಿಸಲಿ.

 8 ತೆವಳ್ತಾ ತೆವಳ್ತಾ ಕರಗಿಹೋಗೋ ಬಸವನ ಹುಳದ ತರ ಅವ್ರಾಗಲಿ,

ಅಮ್ಮನ ಹೊಟ್ಟೆಯಲ್ಲೇ ಸತ್ತು, ಸೂರ್ಯನ ಬೆಳಕನ್ನೇ ನೋಡದಿರೋ ಮಗುವಿನ ತರ ಅವ್ರಾಗಲಿ.

 9 ಮುಳ್ಳಿನ ಪೊದೆ ಸುಟ್ಟು ಅದ್ರ ಬಿಸಿ ನಿಮ್ಮ ಅಡುಗೆ ಪಾತ್ರೆನ ತಾಕೋ ಮುಂಚೆ,

ಆ ಹಸಿರಾಗಿರೋ ಉರಿದುಹೋಗ್ತಿರೋ ಕಡ್ಡಿಗಳನ್ನ ಒಂದು ಬಿರುಗಾಳಿ ಎತ್ಕೊಂಡು ಹೋಗೋ ತರ ದೇವರು ಮಾಡ್ತಾನೆ.+

10 ದೇವರು ಸೇಡು ತೀರಿಸೋದನ್ನ ನೋಡಿ ನೀತಿವಂತ ಖುಷಿಪಡ್ತಾನೆ,+

ದುಷ್ಟರ ರಕ್ತದಿಂದ ಅವನ ಕಾಲುಗಳು ನೆನೆದು ಹೋಗುತ್ತೆ.+

11 ಆಗ ಜನ್ರು “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ.+

ಭೂಮಿ ಮೇಲೆ ನ್ಯಾಯತೀರಿಸೋ ದೇವರೊಬ್ಬ ನಿಜವಾಗ್ಲೂ ಇದ್ದಾನೆ” ಅಂತಾರೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.* ದಾವೀದನನ್ನ ಕೊಲ್ಲೋಕೆ ಸೌಲ ತನ್ನ ಸೈನಿಕರನ್ನ ದಾವೀದನ ಮನೆಗೆ ಕಳಿಸಿದ.+ ಆಗ ಈ ಕೀರ್ತನೆ ರಚನೆ ಆಯ್ತು.

59 ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನ ರಕ್ಷಿಸು,+

ನನ್ನ ವಿರುದ್ಧ ಬಂದಿರೋ ಜನ್ರಿಂದ ನನ್ನನ್ನ ಕಾಪಾಡು.+

 2 ಕೆಟ್ಟವರ ತರ ನಡ್ಕೊಳ್ಳೋ ಜನ್ರಿಂದ ನನ್ನನ್ನ ರಕ್ಷಿಸು,

ಹಿಂಸೆ ಕೊಡೋರಿಂದ* ನನ್ನನ್ನ ಕಾಪಾಡು.

 3 ನೋಡು! ಅವರು ನನ್ನನ್ನ ಹಿಡಿಯೋಕೆ ಹೊಂಚುಹಾಕ್ತಾರೆ,+

ಶಕ್ತಿಶಾಲಿಗಳು ನನ್ನ ಮೇಲೆ ಆಕ್ರಮಣ ಮಾಡ್ತಾರೆ,

ಆದ್ರೆ ಯೆಹೋವನೇ, ನಾನು ತಿರುಗಿ ಬಿದ್ದಿದ್ದಕ್ಕೆ, ಪಾಪ ಮಾಡಿದ್ದಕ್ಕೆ ಹೀಗೆ ಆಗ್ತಿಲ್ಲ.+

 4 ನಾನು ಯಾವ ತಪ್ಪನ್ನೂ ಮಾಡಿಲ್ಲ,

ಆದ್ರೂ ಅವರು ನನ್ನ ಮೇಲೆ ಆಕ್ರಮಣ ಮಾಡೋಕೆ ಓಡೋಡಿ ಬರ್ತಾರೆ.

ನಾನು ಕರೆದಾಗ ಎದ್ದು ನನ್ನನ್ನ ನೋಡು.

 5 ಯಾಕಂದ್ರೆ ಸೈನ್ಯಗಳ ದೇವರಾದ ಯೆಹೋವನೇ, ನೀನು ಇಸ್ರಾಯೇಲ್ಯರ ದೇವರು ಆಗಿದ್ದೀಯ.+

ನೀನು ಎದ್ದು ಎಲ್ಲ ಜನಾಂಗಗಳ ಕಡೆ ಗಮನ ಕೊಡು.

ನಂಬಿಕೆ ದ್ರೋಹಿಗಳಾದ ಕೆಟ್ಟವರಿಗೆ ಒಂಚೂರು ಕರುಣೆ ತೋರಿಸಬೇಡ.+ (ಸೆಲಾ)

 6 ಅವರು ಪ್ರತಿ ಸಂಜೆ ವಾಪಾಸ್‌ ಬರ್ತಾರೆ,+

ನಾಯಿಗಳ ತರ ಗುರ್‌ ಅಂತಾರೆ,*+ ಪಟ್ಟಣದ ಸುತ್ತ ಸುತ್ತುತ್ತಾರೆ.+

 7 ಅವ್ರ ಬಾಯಿಂದ ಎಂಥ ಮಾತು ಬರುತ್ತೆ ನೋಡು,

ಅವ್ರ ತುಟಿಗಳು ಕತ್ತಿ ತರ ಇದೆ,+

ಯಾಕಂದ್ರೆ ಅವರು “ಇದನ್ನ ಹೇಳಿದ್ದು ನಾವೇ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಹೇಳ್ತಾರೆ.+

 8 ಆದ್ರೆ ಯೆಹೋವನೇ, ನೀನು ಅವ್ರನ್ನ ನೋಡಿ ನಗ್ತೀಯ,+

ಎಲ್ಲ ಜನಾಂಗಗಳನ್ನ ಅಣಕಿಸ್ತೀಯ.+

 9 ನನ್ನ ಬಲವೇ, ನಾನು ನಿನಗಾಗಿ ಕಾಯ್ತಾ ಇರ್ತಿನಿ,+

ಯಾಕಂದ್ರೆ ದೇವರು ನನ್ನ ಸುರಕ್ಷಿತ ಆಶ್ರಯ.*+

10 ನನಗೆ ಶಾಶ್ವತ ಪ್ರೀತಿಯನ್ನ ತೋರಿಸೋ ದೇವರು ನನ್ನ ಸಹಾಯಕ್ಕೆ ಬರ್ತಾನೆ,+

ಆತನು ನನ್ನ ಶತ್ರುಗಳ ಸೋಲನ್ನ ನನಗೆ ತೋರಿಸ್ತಾನೆ.+

11 ಅವ್ರನ್ನ ಕೊಲ್ಲಬೇಡ, ಹಾಗೆ ಮಾಡಿದ್ರೆ ನನ್ನ ಜನ್ರು ಎಲ್ಲ ಮರೆತುಹೋಗ್ತಾರೆ.

ನಿನ್ನ ಶಕ್ತಿಯಿಂದ ಅವರು ಅಲೆದಾಡೋ ತರ ಮಾಡು,

ಯೆಹೋವನೇ, ನಮ್ಮ ಗುರಾಣಿಯೇ, ನೀನು ಅವ್ರನ್ನ ಕೆಳಗೆ ಬೀಳಿಸು.+

12 ಯಾಕಂದ್ರೆ ಅವರು ತಮ್ಮ ಬಾಯಿಂದ, ತಮ್ಮ ತುಟಿಗಳಿಂದ ಪಾಪಮಾಡ್ತಾರೆ.

ತಮ್ಮ ಜಂಬದಿಂದಾನೇ ಸಿಕ್ಕಿಹಾಕೊಳ್ತಾರೆ,+

ಯಾಕಂದ್ರೆ ಅವರು ಶಾಪ ಹಾಕ್ತಾರೆ, ಮೋಸದ ಮಾತುಗಳನ್ನ ಆಡ್ತಾರೆ.

13 ನಿನ್ನ ಕ್ರೋಧದಿಂದ ಅವ್ರನ್ನ ನಾಶಮಾಡಿಬಿಡು,+

ಅವರು ಇನ್ನಿಲ್ಲ ಅಂತ ಹೇಳೋ ಹಾಗೆ ಅವ್ರ ಕಥೆ ಮುಗಿಸು,

ದೇವರು ಯಾಕೋಬನ ಮೇಲೆ ಮತ್ತು ಭೂಮಿಯ ಕಟ್ಟಕಡೆ ತನಕ ಆಳ್ತಾನೆ ಅಂತ ಅವ್ರಿಗೆ ಗೊತ್ತಾಗೋ ತರ ಮಾಡು.+ (ಸೆಲಾ)

14 ಅವರು ಪ್ರತಿ ಸಂಜೆ ವಾಪಾಸ್‌ ಬರಲಿ,

ನಾಯಿಗಳ ತರ ಗುರ್‌ ಅನ್ನಲಿ,* ಪಟ್ಟಣದ ಸುತ್ತ ಸುತ್ತಾಡಲಿ.+

15 ಒಂದೊಂದು ತುತ್ತಿಗೂ ಅವರು ಅಲೆದಾಡೋ ತರ ಆಗಲಿ,+

ಅವ್ರಿಗೆ ಹೊಟ್ಟೆ ತುಂಬ ಊಟ, ತಲೆ ಇಡೋಕೆ ಜಾಗ ಸಿಗದೆ ಇರಲಿ.

16 ಆದ್ರೆ ನಾನು, ನಿನ್ನ ಶಕ್ತಿಯ ಗುಣಗಾನ ಮಾಡ್ತೀನಿ,+

ಮುಂಜಾನೆ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ಖುಷಿಖುಷಿಯಾಗಿ ಹೇಳ್ತೀನಿ.

ಯಾಕಂದ್ರೆ ನೀನು ನನ್ನ ಸುರಕ್ಷಿತ ಆಶ್ರಯ,+

ನನಗೆ ಕಷ್ಟಗಳು ಬಂದಾಗ ಓಡಿಹೋಗೋಕೆ ಇರೋ ಒಂದು ಜಾಗ.+

17 ನನ್ನ ಬಲವೇ, ನಾನು ನಿನ್ನನ್ನ ಹಾಡಿ ಹೊಗಳ್ತೀನಿ,*+

ಯಾಕಂದ್ರೆ ನನಗೆ ಶಾಶ್ವತ ಪ್ರೀತಿಯನ್ನ ತೋರಿಸೋ ದೇವರೇ ನನ್ನ ಸುರಕ್ಷಿತ ಆಶ್ರಯ.+

ಗಾಯಕರ ನಿರ್ದೇಶಕನಿಗೆ ಸೂಚನೆ: “ನೆನಪು ಹುಟ್ಟಿಸೋ ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ಮಿಕ್ತಾಮ್‌.* ದಾವೀದನ ಕೀರ್ತನೆ. ಕಲಿಸೋಕೆ ಅಂತಾನೇ ಇರೋ ಹಾಡು. ದಾವೀದ ಅರಾಮ್‌-ನಹಾರಾಯಿಮ್‌ ಮತ್ತು ಅರಾಮ್‌-ಸೋಬ ಅನ್ನೋರ ವಿರುದ್ಧ ಯುದ್ಧಮಾಡಿದಾಗ ಯೋವಾಬ ವಾಪಸ್‌ ಹೋದ. ಆಮೇಲೆ ಉಪ್ಪಿನ ಕಣಿವೆಯಲ್ಲಿ 12,000 ಎದೋಮ್ಯರನ್ನ ಕೊಂದ.+ ಆಗ ಇದನ್ನ ರಚಿಸಿದ.

60 ದೇವರೇ, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ, ನಮ್ಮನ್ನ ಚೆದರಿಸಿಬಿಟ್ಟಿದ್ದೀಯ.+

ನೀನು ನಮ್ಮ ಜೊತೆ ಕೋಪಮಾಡ್ಕೊಂಡಿದ್ದೆ, ಆದ್ರೆ ಈಗ ಮತ್ತೆ ನಮ್ಮನ್ನ ಸ್ವೀಕರಿಸು!

 2 ನೀನು ಭೂಮಿ ನಡುಗೋ ತರ ಮಾಡಿದೆ, ಅದನ್ನ ಸೀಳಿಬಿಟ್ಟೆ.

ಅದ್ರ ಒಡಕನ್ನ ಸರಿಮಾಡು. ಯಾಕಂದ್ರೆ ಅದು ಇನ್ನೇನು ಬಿದ್ದುಹೋಗುತ್ತೆ.

 3 ನಿನ್ನ ಜನ್ರು ಕಷ್ಟ ಅನುಭವಿಸೋ ತರ ಮಾಡಿದೆ.

ನಾವು ದ್ರಾಕ್ಷಾಮದ್ಯ ಕುಡಿದು ತೂರಾಡೋ ತರ ಮಾಡಿದೆ.+

 4 ನಿನ್ನ ಭಯ ಇರೋರು ಬಾಣಗಳಿಂದ ತಪ್ಪಿಸ್ಕೊಂಡು,

ಓಡಿ ಹೋಗೋಕೆ ಅವ್ರಿಗೆ ಒಂದು ಸನ್ನೆ ಕೊಡು.* (ಸೆಲಾ)

 5 ನಿನ್ನ ಬಲಗೈಯಿಂದ ನಮ್ಮನ್ನ ಕಾಪಾಡು, ನಮಗೆ ಉತ್ತರ ಕೊಡು,

ಆಗ ನಿನ್ನ ಪ್ರೀತಿಪಾತ್ರರು ಉಳಿತಾರೆ.+

 6 ದೇವರು ಪವಿತ್ರನಾಗಿ ಇರೋದ್ರಿಂದ* ಮಾತಾಡಿದ್ದಾನೆ:

“ನಾನು ಖುಷಿಪಡ್ತೀನಿ, ಶೆಕೆಮನ್ನ ಆಸ್ತಿಯಾಗಿ ಕೊಡ್ತೀನಿ,+

ಸುಕ್ಕೋತಿನ ಕಣಿವೆಯನ್ನ ಅಳೆದು ಕೊಡ್ತೀನಿ.+

 7 ಗಿಲ್ಯಾದ್‌ ನಂದು, ಮನಸ್ಸೆಯೂ ನಂದೇ,+

ಎಫ್ರಾಯೀಮ್‌ ನನ್ನ ತಲೆಯ ಶಿರಸ್ತ್ರಾಣ,

ಯೆಹೂದ ನನ್ನ ರಾಜದಂಡ.+

 8 ಮೋವಾಬ್‌ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+

ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+

ಫಿಲಿಷ್ಟಿಯ ವಿರುದ್ಧ ಗೆದ್ದು ಖುಷಿಪಡ್ತೀನಿ.”+

 9 ಮುತ್ತಿಗೆ ಹಾಕಿರೋ* ಪಟ್ಟಣಕ್ಕೆ ನನ್ನನ್ನ ಯಾರು ಕರ್ಕೊಂಡು ಹೋಗ್ತಾರೆ?

ಎದೋಮಿನ ತನಕ ಯಾರು ನನ್ನನ್ನ ನಡಿಸ್ತಾರೆ?+

10 ದೇವರೇ, ನಿಜವಾಗ್ಲೂ ನಮ್ಮನ್ನ ಅಲ್ಲಿಗೆ ಕರ್ಕೊಂಡು ಹೋಗೋನು ನೀನೇ!

ಆದ್ರೆ ನೋಡು, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ,

ನಮ್ಮ ದೇವರಾಗಿರೋ ನೀನು ಈಗ ನಮ್ಮ ಸೈನ್ಯದ ಜೊತೆ ಬರಲ್ಲ.+

11 ಕಷ್ಟಕಾಲದಲ್ಲಿ ನಮಗೆ ಸಹಾಯಮಾಡು,

ಯಾಕಂದ್ರೆ ರಕ್ಷಣೆಗಾಗಿ ಮನುಷ್ಯರನ್ನ ನಂಬೋದು ವ್ಯರ್ಥ.+

12 ದೇವರಿಂದ ನಾವು ಬಲ ಪಡ್ಕೊತೀವಿ,+

ಆತನು ನಮ್ಮ ಶತ್ರುಗಳನ್ನ ತುಳಿದುಹಾಕ್ತಾನೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ದಾವೀದನ ಕೀರ್ತನೆ.

61 ದೇವರೇ, ಸಹಾಯಕ್ಕಾಗಿ ನಾನಿಡೋ ಮೊರೆನ ಕೇಳಿಸ್ಕೊ.

ನನ್ನ ಪ್ರಾರ್ಥನೆಗೆ ಗಮನಕೊಡು.+

 2 ನನ್ನ ಹೃದಯ ನಿರಾಶೆಯಲ್ಲಿ ಮುಳುಗಿದ್ದಾಗ,

ಭೂಮಿಯ ಕಟ್ಟಕಡೆಯಿಂದ ನಾನು ನಿನಗೆ ಮೊರೆ ಇಡ್ತೀನಿ.+

ನೀನು ನನ್ನನ್ನ ಒಂದು ಎತ್ತರವಾದ ಬಂಡೆ ಮೇಲೆ ಕರ್ಕೊಂಡು ಹೋಗು.+

 3 ಯಾಕಂದ್ರೆ ನೀನು ನನ್ನ ಆಶ್ರಯ,

ಶತ್ರುವಿಂದ ನನ್ನನ್ನ ಕಾಪಾಡೋ ದೊಡ್ಡ ಗೋಪುರ.+

 4 ನಿನ್ನ ಡೇರೆಯಲ್ಲಿ ನಾನು ಯಾವಾಗ್ಲೂ ಅತಿಥಿಯಾಗಿ ಇರ್ತಿನಿ.+

ನಿನ್ನ ರೆಕ್ಕೆ ಕೆಳಗೆ ನಾನು ಆಶ್ರಯ ಪಡೀತೀನಿ.+ (ಸೆಲಾ)

 5 ಯಾಕಂದ್ರೆ ದೇವರೇ, ನೀನು ನನ್ನ ಹರಕೆಗಳನ್ನ ಕೇಳಿಸ್ಕೊಂಡಿದ್ದೀಯ.

ನಿನ್ನ ಹೆಸ್ರಿಗೆ ಭಯಪಡೋರಿಗೆ ಸೇರಿದ ಆಸ್ತಿಯನ್ನ ನೀನು ನನಗೆ ಕೊಟ್ಟಿದ್ದೀಯ.+

 6 ನೀನು ರಾಜನ ಆಯಸ್ಸನ್ನ ಜಾಸ್ತಿ ಮಾಡ್ತೀಯ,+

ಅವನು ತಲತಲಾಂತರಕ್ಕೂ ಜೀವಿಸ್ತಾನೆ.

 7 ಅವನು ನಿನ್ನ ಮುಂದೆ ಯಾವಾಗ್ಲೂ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ,*+

ದೇವರೇ, ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಅವನನ್ನ ಕಾದುಕಾಪಾಡಲಿ.+

 8 ಆಗ ನಾನು ನಿನ್ನ ಹೆಸ್ರನ್ನ ನಿತ್ಯನಿರಂತರಕ್ಕೂ ಹೊಗಳ್ತೀನಿ,*+

ಪ್ರತಿದಿನ ನನ್ನ ಹರಕೆಯನ್ನ ತೀರಿಸ್ತೀನಿ.+

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌ ಶೈಲಿ.*

62 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.

ಆತನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+

 2 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,*+

ಬಿದ್ದು ಹೋಗುವಷ್ಟು ನಾನು ಯಾವತ್ತೂ ಅಲ್ಲಾಡಲ್ಲ.+

 3 ನೀವು ದ್ವೇಷಿಸೋ ಒಬ್ಬ ಮನುಷ್ಯನನ್ನ ಕೊಲ್ಲೋಕೆ ಎಲ್ಲಿ ತನಕ ಪ್ರಯತ್ನ ಮಾಡ್ತಾ ಇರ್ತಿರಾ?+

ವಾಲಿರೋ ಗೋಡೆ ತರ, ಇನ್ನೇನು ಕುಸಿದು ಬೀಳೋ ಕಲ್ಲಿನ ಗೋಡೆ ತರ ನೀವೆಲ್ಲ ಅಪಾಯಕಾರಿ.

 4 ಅವನನ್ನ ಮೇಲಿಂದ ಕೆಳಗೆ ಬೀಳಿಸೋಕೆ ಅವರು ಒಟ್ಟಾಗಿ ಸೇರಿ ಯೋಚಿಸ್ತಿದ್ದಾರೆ,

ಸುಳ್ಳು ಹೇಳೋದರಲ್ಲೇ ಅವ್ರಿಗೆ ಸಂತೋಷ.

ಬಾಯಿಂದ ಆಶೀರ್ವಾದ ಮಾಡಿದ್ರೂ ಒಳಗೆ ಶಾಪ ಹಾಕ್ತಾ ಇರ್ತಾರೆ.+ (ಸೆಲಾ)

 5 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.+

ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ.+

 6 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,

ನಾನು ಯಾವತ್ತೂ ಕದಲಲ್ಲ.+

 7 ನನ್ನ ರಕ್ಷಣೆ ಮತ್ತು ನನ್ನ ಗೌರವಕ್ಕೆ ದೇವರೇ ಆಧಾರ.

ದೇವರೇ ನನ್ನ ಬಲವಾದ ಬಂಡೆ, ನನ್ನ ಆಶ್ರಯ.+

 8 ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ.

ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+

ದೇವರೇ ನಮಗೆ ಆಶ್ರಯ.+ (ಸೆಲಾ)

 9 ಮನುಷ್ಯ ಬರೀ ಉಸಿರಷ್ಟೇ,

ಅವರು ಮೋಸಗಾರರು.+

ಅವ್ರನ್ನೆಲ್ಲ ಒಂದು ತಕ್ಕಡಿಗೆ ಹಾಕಿ ತೂಗಿದ್ರೆ, ಅವ್ರ ಭಾರ ಒಂದು ಉಸಿರಿಗಿಂತ ಕಮ್ಮಿನೇ.+

10 ಅನ್ಯಾಯದ ಸುಲಿಗೆ ಮೇಲೆ ಭರವಸೆ ಇಡಬೇಡಿ,

ಕಳ್ಳತನದ ಮೇಲೆ ನಿರೀಕ್ಷೆ ಇಡಬೇಡಿ.

ನಿಮ್ಮ ಸಿರಿಸಂಪತ್ತು ಜಾಸ್ತಿ ಆದ್ರೆ, ನಿಮ್ಮ ಹೃದಯನ ಅದ್ರ ಮೇಲಿಡಬೇಡಿ.+

11 ಒಂದು ಸಲ ಅಲ್ಲ ಎರಡು ಸಲ ದೇವರು ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡಿದ್ದೀನಿ

ಬಲ ದೇವರಿಗೆ ಸೇರಿದ್ದು.+

12 ಯೆಹೋವನೇ, ಶಾಶ್ವತ ಪ್ರೀತಿ ನಿಂದೇ,+

ಯಾಕಂದ್ರೆ ನೀನು ಪ್ರತಿಯೊಬ್ಬನ ಕೆಲಸಗಳಿಗೆ ತಕ್ಕಂತೆ ಪ್ರತಿಫಲ ಕೊಡ್ತೀಯ.+

ದಾವೀದನ ಮಧುರ ಗೀತೆ. ದಾವೀದ ಯೆಹೂದದ ಕಾಡಲ್ಲಿದ್ದಾಗ ಇದನ್ನ ರಚಿಸಿದ.+

63 ದೇವರೇ, ನೀನು ನನ್ನ ದೇವರು. ನಾನು ನಿನಗಾಗಿ ಹುಡುಕ್ತಾ ಇದ್ದೀನಿ.+

ನನ್ನ ಪ್ರಾಣ ನಿನಗಾಗಿ ಬಾಯಾರಿದೆ.+

ಒಣಗಿ ಹೋಗಿರೋ, ಬತ್ತಿ ಹೋಗಿರೋ ಈ ನೀರಿಲ್ಲದ ಜಾಗದಲ್ಲಿ ನಾನು* ನಿನಗಾಗಿ ಎಷ್ಟು ಹಾತೊರಿತಾ ಇದ್ದೀನಿ ಅಂದ್ರೆ ಇನ್ನೇನು ಪ್ರಜ್ಞೆ ತಪ್ಪಿ ಬಿದ್ದುಬಿಡ್ತೀನಿ.+

 2 ಹಾಗಾಗಿ ನಿನ್ನನ್ನ ನೋಡೋಕೆ ನಾನು ನಿನ್ನ ಪವಿತ್ರ ಸ್ಥಳದಲ್ಲಿ ಹುಡುಕಿದೆ,

ನಿನ್ನ ಬಲ, ನಿನ್ನ ಮಹಿಮೆಯನ್ನ ನೋಡಿದೆ.+

 3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ,+

ನನ್ನ ಸ್ವಂತ ತುಟಿ ನಿನ್ನನ್ನ ಹೊಗಳುತ್ತೆ.+

 4 ಹಾಗಾಗಿ ನಾನು ಸಾಯೋ ತನಕ ನಿನ್ನನ್ನ ಕೊಂಡಾಡ್ತೀನಿ,

ನನ್ನ ಕೈಗಳನ್ನ ಎತ್ತಿ ನಿನ್ನ ಹೆಸ್ರನ್ನ ಕೂಗ್ತೀನಿ.

 5 ಒಳ್ಳೇ ಭಾಗನ ಮತ್ತು ದೊಡ್ಡ ಭಾಗನ ಪಡ್ಕೊಂಡು ನಾನು ತೃಪ್ತಿಯಾಗಿ ಇದ್ದೀನಿ,

ಹಾಗಾಗಿ ನನ್ನ ಬಾಯಿ ಸಂತೋಷದಿಂದ ನಿನ್ನನ್ನ ಹೊಗಳುತ್ತೆ.+

 6 ಹಾಸಿಗೆ ಮೇಲಿರುವಾಗ ನಾನು ನಿನ್ನನ್ನ ನೆನಪಿಸ್ಕೊತೀನಿ,

ಮಧ್ಯರಾತ್ರಿಯಲ್ಲಿ ನಾನು ನಿನ್ನ ಬಗ್ಗೆ ಧ್ಯಾನಿಸ್ತೀನಿ.+

 7 ಯಾಕಂದ್ರೆ ನೀನು ನನ್ನ ಸಹಾಯಕ,+

ನಿನ್ನ ರೆಕ್ಕೆಗಳ ಕೆಳಗೆ ನಾನು ಸಂತೋಷದಿಂದ ಜೈಕಾರ ಹಾಕ್ತೀನಿ.+

 8 ನಾನು ನಿನಗೆ ಅಂಟ್ಕೊಂಡು ಇರ್ತಿನಿ,

ನಿನ್ನ ಬಲಗೈ ನನ್ನನ್ನ ಗಟ್ಟಿಯಾಗಿ ಹಿಡ್ಕೊಂಡಿರುತ್ತೆ.+

 9 ಆದ್ರೆ ಯಾರು ನನ್ನ ಪ್ರಾಣ ತೆಗೀಬೇಕು ಅಂತಿದ್ದಾರೋ,

ಅವರು ಭೂಮಿಯ ಆಳಕ್ಕೆ ಇಳಿದು ಹೋಗ್ತಾರೆ.

10 ಅವರು ಕತ್ತಿಯಿಂದ ನಾಶ ಆಗ್ತಾರೆ,

ಅವರು ಗುಳ್ಳೆನರಿಗಳಿಗೆ* ಆಹಾರ ಆಗ್ತಾರೆ.

11 ಆದ್ರೆ ರಾಜ ದೇವರಲ್ಲಿ ಖುಷಿಪಡ್ತಾನೆ.

ಸುಳ್ಳು ಹೇಳೋರ ಬಾಯನ್ನ ಮುಚ್ಚೊದ್ರಿಂದ,

ದೇವರ ಮೇಲೆ ಆಣೆ ಇಡೋರೆಲ್ಲ ತುಂಬ ಖುಷಿಪಡ್ತಾರೆ.*

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.

64 ದೇವರೇ, ನಾನು ಆತಂಕದಲ್ಲಿದ್ದೀನಿ, ದಯವಿಟ್ಟು ನನ್ನ ಮಾತನ್ನ ಕೇಳಿಸ್ಕೊ,+

ಶತ್ರುಗಳ ಘೋರ ಆಕ್ರಮಣಗಳಿಂದ ನನ್ನ ಜೀವವನ್ನ ರಕ್ಷಿಸು.

 2 ದುಷ್ಟನ ರಹಸ್ಯ ಸಂಚುಗಳಿಂದ ನನ್ನನ್ನ ಕಾಪಾಡು,+

ತಪ್ಪು ಮಾಡೋರ ಗುಂಪಿಂದ ನನ್ನನ್ನ ರಕ್ಷಿಸು.

 3 ಕತ್ತಿ ತರ ಅವರು ತಮ್ಮ ನಾಲಿಗೆನ ಚೂಪು ಮಾಡ್ತಾರೆ,

ಚುಚ್ಚೋ ಮಾತುಗಳನ್ನ ಬಾಣಗಳ ತರ ಗುರಿ ಇಡ್ತಾರೆ,

 4 ರಹಸ್ಯ ಜಾಗದಿಂದ ನಿರ್ದೋಷಿ ಮೇಲೆ ಆಕ್ರಮಣ ಮಾಡೋಕೆ ಹೀಗೆ ಮಾಡ್ತಾರೆ.

ಯಾವ ಭಯನೂ ಇಲ್ಲದೇ ತಕ್ಷಣ ಅವನ ಮೇಲೆ ಬಾಣ ಬಿಡ್ತಾರೆ.

 5 ಅವ್ರಿಗೆ ಅವ್ರ ಕೆಟ್ಟ ಉದ್ದೇಶಗಳು ನಿಜ ಆದ್ರೆ ಸಾಕು,

ಅವ್ರ ಬಲೆಗಳನ್ನ ಹೇಗೆ ಬಚ್ಚಿಡಬೇಕು ಅಂತ ಅವರು ತಮ್ಮಲ್ಲೇ ಮಾತಾಡ್ಕೊಳ್ತಾರೆ.

“ಈ ಬಲೆಗಳನ್ನ ಯಾರು ನೋಡ್ತಾರೆ?” ಅಂತ ಅವರು ಹೇಳ್ತಾರೆ.+

 6 ತಪ್ಪು ಮಾಡೋಕೆ ಹೊಸಹೊಸ ದಾರಿ ಹುಡುಕ್ತಾರೆ,

ಯಾರಿಗೂ ಗೊತ್ತಾಗದ ಹಾಗೆ ಬುದ್ಧಿವಂತಿಕೆಯಿಂದ ಉಪಾಯ ಮಾಡ್ತಾರೆ,+

ಅವ್ರ ಹೃದಯದ ಆಳ ತಿಳ್ಕೊಳ್ಳೋಕೆ ಆಗಲ್ಲ.

 7 ಆದ್ರೆ ದೇವರು ಅವ್ರ ಮೇಲೆ ಬಾಣಗಳನ್ನ ಬಿಡ್ತಾನೆ,+

ತಕ್ಷಣ ಅವ್ರಿಗೆ ಗಾಯ ಆಗುತ್ತೆ.

 8 ಅವರು ಬಿದ್ದುಹೋಗೋಕೆ ಅವ್ರ ಬಾಯೇ ಕಾರಣ ಆಗುತ್ತೆ,+

ಅವ್ರನ್ನ ನೋಡೋರೆಲ್ಲ ತಲೆ ಆಡಿಸ್ತಾರೆ.

 9 ಆಮೇಲೆ ಎಲ್ರೂ ಭಯಪಟ್ಟು,

ದೇವರು ಮಾಡಿದ್ದನ್ನ ನೋಡಿ ಅದನ್ನ ಎಲ್ರಿಗೂ ಹೇಳ್ತಾರೆ,

ಅವರು ಆತನ ಕೆಲಸಗಳ ಬಗ್ಗೆ ತಿಳ್ಕೊಂಡಿರ್ತಾರೆ.*+

10 ನೀತಿವಂತ ಯೆಹೋವನಲ್ಲಿ ಉಲ್ಲಾಸಪಡ್ತಾನೆ, ಆತನಲ್ಲಿ ಆಶ್ರಯ ಪಡ್ಕೊಳ್ತಾನೆ,+

ಹೃದಯದಲ್ಲಿ ಪ್ರಾಮಾಣಿಕರಾಗಿ ಇರೋರೆಲ್ಲ ಖುಷಿಪಡ್ತಾರೆ.*

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.

65 ದೇವರೇ, ಚೀಯೋನಲ್ಲಿ ನಿನಗಾಗಿ ಹೊಗಳಿಕೆ ಕಾಯ್ತಿದೆ,+

ನಾವು ನಮ್ಮ ಹರಕೆಗಳನ್ನ ನಿನಗೆ ಸಲ್ಲಿಸ್ತೀವಿ.+

 2 ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು* ನಿನ್ನ ಹತ್ರ ಬರ್ತಾರೆ.+

 3 ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿವೆ,+

ಆದ್ರೆ ನೀನು ನಮ್ಮ ದೋಷಗಳನ್ನ ಪರಿಹರಿಸಿಬಿಡ್ತೀಯ.+

 4 ನಿನ್ನ ಅಂಗಳದಲ್ಲಿ ವಾಸಿಸೋಕೆ

ನೀನು ಯಾರನ್ನ ಆರಿಸಿಕೊಳ್ತೀಯೋ

ನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ.+

ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ

ನಾವು ತೃಪ್ತರಾಗ್ತೀವಿ.+

 5 ನಮ್ಮ ರಕ್ಷಕನಾಗಿರೋ ದೇವರೇ,

ಆಶ್ಚರ್ಯ ಹುಟ್ಟಿಸೋ ನಿನ್ನ ನೀತಿಯ ಕೆಲಸಗಳಿಂದ ನೀನು ನಮಗೆ ಉತ್ರ ಕೊಡ್ತೀಯ,+

ಭೂಮಿಯ ಮೂಲೆಮೂಲೆಯಲ್ಲಿ ಇರೋರಿಗೂ ನೀನೇ ಭರವಸೆ,+

ಸಮುದ್ರದಾಚೆ ದೂರದೂರದಲ್ಲಿ ಇರೋರಿಗೂ ನೀನೇ ಭರವಸೆ.

 6 ನೀನು ನಿನ್ನ ಶಕ್ತಿಯಿಂದ ಬೆಟ್ಟಗಳನ್ನ ದೃಢವಾಗಿ ಸ್ಥಾಪಿಸಿದ್ದೀಯ,

ನೀನು ಬಲವನ್ನ ಬಟ್ಟೆ ತರ ಹಾಕ್ಕೊಂಡಿದ್ದೀಯ.+

 7 ನೀನು ಅಲ್ಲೋಲಕಲ್ಲೋಲ ಆಗಿರೋ ಸಮುದ್ರವನ್ನ,

ಅದ್ರ ಅಲೆಗಳ ಅಬ್ಬರವನ್ನ, ಜನಾಂಗಗಳ ಗದ್ದಲವನ್ನ+ ನಿಶ್ಶಬ್ದ ಮಾಡ್ತೀಯ.+

 8 ದೂರದಲ್ಲಿ ಇರೋರು ನಿನ್ನ ಕೆಲಸಗಳನ್ನ* ನೋಡಿದಾಗ ಅವ್ರಿಗೆ ಮಾತೇ ಬರಲ್ಲ,+

ಪೂರ್ವದಿಂದ ಪಶ್ಚಿಮದ ತನಕ ಇರೋ ಜನ್ರೆಲ್ಲ ಸಂತೋಷದಿಂದ ಜೈಕಾರ ಹಾಕೋ ಹಾಗೆ ನೀನು ಮಾಡ್ತೀಯ.

 9 ನೀನು ಭೂಮಿಯ ಆರೈಕೆ ಮಾಡ್ತೀಯ,

ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ,+

ನದಿಯಲ್ಲಿ ನೀರು ತುಂಬಿ ತುಳುಕೋ ಹಾಗೆ ಮಾಡ್ತೀಯ,

ನೀನು ಜನ್ರಿಗೆ ಆಹಾರ ಕೊಡ್ತೀಯ,+

ಅದಕ್ಕೇ ಭೂಮಿನ ಸಿದ್ಧಮಾಡಿದ್ದೀಯ.

10 ನೀನು ಅದ್ರ ನೇಗಿಲಸಾಲನ್ನ ತೋಯಿಸ್ತೀಯ, ಅದ್ರ ಮಣ್ಣಿನ ಗಡ್ಡೆಗಳನ್ನ* ಸಮಮಾಡ್ತೀಯ,

ನೀನು ಮಳೆ ಹನಿಗಳಿಂದ ಮಣ್ಣನ್ನ ಮೃದುಮಾಡಿ, ಅದ್ರ ಬೆಳೆಯನ್ನ ಆಶೀರ್ವಾದ ಮಾಡ್ತೀಯ.+

11 ನೀನು ಇಡೀ ವರ್ಷಕ್ಕೆ ನಿನ್ನ ಒಳ್ಳೇತನದ ಕಿರೀಟ ತೊಡಿಸ್ತೀಯ,

ನೀನು ನಡೆಯೋ ದಾರಿ ಒಳ್ಳೇತನದಿಂದ ತುಂಬಿ ತುಳುಕುತ್ತೆ.+

12 ಕಾಡಿನ ಹುಲ್ಲುಗಾವಲು ಹಸಿರು ಹುಲ್ಲಿಂದ ತುಂಬಿದೆ,+

ಬೆಟ್ಟಗುಡ್ಡಗಳನ್ನ ಸಂತೋಷ ಮುಚ್ಚಿದೆ.+

13 ಹುಲ್ಲುಗಾವಲು ಕುರಿಗಳಿಂದ ತುಂಬಿಹೋಗಿದೆ,

ಒಳ್ಳೇ ತೆನೆ ಕಣಿವೆಯಲ್ಲೆಲ್ಲ ರತ್ನದ ಕಂಬಳಿ ತರ ಹಾಸಿಕೊಂಡಿದೆ.+

ಅವು ಜೈಕಾರ ಹಾಕ್ತಾ ಹಾಡ್ತವೆ.+

ಗಾಯಕರ ನಿರ್ದೇಶಕನಿಗೆ ಸೂಚನೆ, ಇದೊಂದು ಮಧುರ ಗೀತೆ.

66 ಇಡೀ ಭೂಮಿಯ ನಿವಾಸಿಗಳೇ, ದೇವರಿಗೆ ಜೈಕಾರ ಹಾಕಿ.+

 2 ಗೌರವದಿಂದ ಕೂಡಿರೋ ಆತನ ಹೆಸ್ರನ್ನ ಹಾಡಿ ಹೊಗಳಿ.*

ಆತನನ್ನ ಕೊಂಡಾಡ್ತಾ ಮಹಿಮೆಪಡಿಸಿ.+

 3 ದೇವರಿಗೆ ಹೀಗೆ ಹೇಳಿ “ನಿನ್ನ ಕೆಲಸಗಳು ಎಷ್ಟೋ ಆಶ್ಚರ್ಯ ತರುತ್ತೆ!+

ನಿನ್ನ ಮಹಾ ಶಕ್ತಿಯಿಂದ,

ನಿನ್ನ ಶತ್ರುಗಳು ನಿನ್ನ ಹತ್ರ ಗಡಗಡ ಅಂತ ನಡುಗ್ತಾ ಬರ್ತಾರೆ.+

 4 ಭೂಮಿಯ ಎಲ್ಲ ಜನ್ರು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,+

ಅವರು ನಿನಗೆ ಹಾಡಿ ಹೊಗಳ್ತಾರೆ,

ಅವರು ನಿನ್ನ ಹೆಸ್ರಿಗೆ ಗೌರವ ಕೊಡೋಕೆ ಸ್ತುತಿ ಗೀತೆಗಳನ್ನ ಹಾಡ್ತಾರೆ.”+ (ಸೆಲಾ)

 5 ಬನ್ನಿ, ದೇವರ ಕೆಲಸಗಳನ್ನ ನೋಡಿ.

ಮನುಷ್ಯರಿಗಾಗಿ ಆತನು ಮಾಡಿರೋ ಕೆಲಸಗಳು ಭಯವಿಸ್ಮಯ ಹುಟ್ಟಿಸುತ್ತೆ.+

 6 ಆತನು ಸಮುದ್ರವನ್ನ ಒಣನೆಲದ ತರ ಮಾಡಿದ,+

ಜನ್ರು ನದಿಯನ್ನ ನಡ್ಕೊಂಡೇ ದಾಟಿದ್ರು.+

ದೇವರಿಂದಾಗಿ ನಾವು ಖುಷಿಯಲ್ಲಿ ತೇಲಾಡಿದ್ವಿ.+

 7 ಆತನು ತನ್ನ ಶಕ್ತಿಯಿಂದ ಶಾಶ್ವತವಾಗಿ ಆಳ್ತಾನೆ.+

ಆತನ ಕಣ್ಣುಗಳು ಜನ್ರನ್ನ ಗಮನಿಸ್ತಾನೇ ಇರುತ್ತೆ.+

ಹಠಮಾರಿಗಳು ತಮ್ಮನ್ನ ತಾವೇ ಹೆಚ್ಚಿಸ್ಕೊಬಾರದು.+ (ಸೆಲಾ)

 8 ದೇಶಗಳ ಜನ್ರೇ, ನಮ್ಮ ದೇವರನ್ನ ಸ್ತುತಿಸಿ,+

ಆತನನ್ನ ಹೊಗಳೋದು ಎಲ್ಲ ಕಡೆ ಕೇಳಿಸಲಿ.

 9 ಆತನು ನಮ್ಮ ಜೀವವನ್ನ ಕಾಪಾಡ್ತಾನೆ,+

ನಮ್ಮ ಕಾಲು ಎಡವಿ ಬೀಳೋಕೆ* ಆತನು ಬಿಡಲ್ಲ.+

10 ಯಾಕಂದ್ರೆ ದೇವರೇ, ನೀನು ನಮ್ಮನ್ನ ಪರೀಕ್ಷಿಸಿದ್ದೀಯ,+

ಬೆಳ್ಳಿಯನ್ನ ಪರಿಷ್ಕರಿಸೋ ಹಾಗೆ ನೀನು ನಮ್ಮನ್ನ ಪರಿಷ್ಕರಿಸಿದ್ದೀಯ.

11 ನೀನು ನಮ್ಮನ್ನ ನಿನ್ನ ಬಲೆಯಲ್ಲಿ ಸಿಕ್ಕಿಸಿದೆ,

ಜಜ್ಜಿಹಾಕೋ ಹೊರೆಯನ್ನ ನಮ್ಮ ಮೇಲೆ* ಹೊರಿಸಿದೆ.

12 ನಾಶವಾಗೋ ಮನುಷ್ಯ ನಮ್ಮ* ಮೇಲೆ ಸವಾರಿ ಮಾಡೋಕೆ ಬಿಟ್ಟೆ,

ನಾವು ಬೆಂಕಿ ಮತ್ತು ನೀರನ್ನ ದಾಟಿ ಬಂದ್ವಿ,

ಆಮೇಲೆ, ನೀನು ನಮ್ಮನ್ನ ಒಂದು ನೆಮ್ಮದಿಯ ನೆಲೆಗೆ ಕರ್ಕೊಂಡು ಬಂದೆ.

13 ಸರ್ವಾಂಗಹೋಮ ಬಲಿಗಳನ್ನ ತಗೊಂಡು ನಾನು ನಿನ್ನ ಆಲಯಕ್ಕೆ ಬರ್ತಿನಿ,+

ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸ್ತೀನಿ,+

14 ನಾನು ಕಷ್ಟದಲ್ಲಿದ್ದಾಗ ನನ್ನ ತುಟಿಗಳು ಹೊತ್ತ ಆ ಹರಕೆಗಳನ್ನ ಒಪ್ಪಿಸ್ತೀನಿ,+

ನಾನು ತೊಂದರೆಯಲ್ಲಿದ್ದಾಗ ನನ್ನ ಬಾಯಿಂದ ಕೊಟ್ಟ ಆ ಮಾತನ್ನ ತೀರಿಸ್ತೀನಿ.

15 ನಾನು ಕೊಬ್ಬಿದ ಪ್ರಾಣಿಗಳ ಸರ್ವಾಂಗಹೋಮ ಬಲಿಗಳನ್ನ ನಿನಗೆ ಕೊಡ್ತೀನಿ

ಟಗರನ್ನ ಬಲಿಕೊಟ್ಟು ಅದ್ರ ಹೊಗೆ ಮೇಲೆ ಏರೋ ತರ ಮಾಡ್ತೀನಿ.

ಆಡುಗಳ ಜೊತೆ ಹೋರಿಗಳನ್ನೂ ಬಲಿಯಾಗಿ ಕೊಡ್ತೀನಿ. (ಸೆಲಾ)

16 ದೇವರಿಗೆ ಭಯಪಡೋರೇ, ನೀವೆಲ್ಲ ಬಂದು ಕೇಳಿಸ್ಕೊಳ್ಳಿ,

ಆತನು ನನಗಾಗಿ ಏನೆಲ್ಲ ಮಾಡಿದ್ದಾನೆ ಅಂತ ನಾನು ನಿಮಗೆ ಹೇಳ್ತೀನಿ.+

17 ನಾನು ನನ್ನ ಬಾಯಿಂದ ಆತನನ್ನ ಕೂಗಿದೆ

ನನ್ನ ನಾಲಿಗೆಯಿಂದ ಆತನಿಗೆ ಗೌರವ ಕೊಟ್ಟೆ.

18 ನಾನು ನನ್ನ ಹೃದಯದಲ್ಲಿ ಯಾವ ರೀತಿ ಆದ್ರೂ ಕೆಟ್ಟ ವಿಷ್ಯಗಳನ್ನ ಇಟ್ಕೊಂಡಿದ್ರೆ,

ಯೆಹೋವ ನನ್ನ ಕೂಗನ್ನ ಕೇಳಿಸಿಕೊಳ್ತಾ ಇರಲಿಲ್ಲ.+

19 ಆದ್ರೆ ದೇವರು ನನ್ನ ಮೊರೆಯನ್ನ ಕೇಳಿಸ್ಕೊಂಡನು,+

ನನ್ನ ಪ್ರಾರ್ಥನೆಗೆ ಗಮನಕೊಟ್ಟನು.+

20 ನನ್ನ ಪ್ರಾರ್ಥನೆಯನ್ನ ತಳ್ಳಿಹಾಕದ ದೇವರಿಗೆ,

ತನ್ನ ಶಾಶ್ವತ ಪ್ರೀತಿಯನ್ನ ನನಗೆ ಕೊಡೋಕೆ ಹಿಂದೆಮುಂದೆ ನೋಡದ ದೇವರಿಗೆ ಹೊಗಳಿಕೆಯಾಗಲಿ.

ಗಾಯಕರ ನಿರ್ದೇಶಕನಿಗೆ ಸೂಚನೆ, ತಂತಿವಾದ್ಯಗಳ ಜೊತೆ ಹಾಡಬೇಕು. ಇದೊಂದು ಮಧುರ ಗೀತೆ.

67 ದೇವರು ನಮಗೆ ದಯೆ ತೋರಿಸ್ತಾನೆ, ನಮಗೆ ಆಶೀರ್ವಾದ ಮಾಡ್ತಾನೆ,

ಆತನ ಮುಖದ ಕಾಂತಿ ನಮ್ಮ ಮೇಲೆ ಬೆಳಗೋ ತರ ಮಾಡ್ತಾನೆ.+ (ಸೆಲಾ)

 2 ಆಗ ನಿನ್ನ ದಾರಿಯ ಬಗ್ಗೆ ಭೂಮಿಯಲ್ಲೆಲ್ಲ ಗೊತ್ತಾಗುತ್ತೆ.+

ನೀನು ಹೇಗೆ ರಕ್ಷಿಸ್ತೀಯ ಅಂತ ಎಲ್ಲ ಜನಾಂಗಗಳು ತಿಳ್ಕೊಳ್ಳುತ್ತೆ.+

 3 ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,

ಎಲ್ಲ ಜನ್ರು ನಿನ್ನನ್ನ ಹೊಗಳಲಿ.

 4 ಜನಾಂಗಗಳು ಉಲ್ಲಾಸಿಸ್ತಾ ಸಂತೋಷದಿಂದ ಜೈಕಾರ ಹಾಕಲಿ,+

ಯಾಕಂದ್ರೆ ನೀನು ದೇಶಗಳ ಜನ್ರಿಗೆ ಸರಿಯಾಗಿ ನ್ಯಾಯತೀರಿಸ್ತೀಯ.+

ಭೂಮಿಯಲ್ಲಿರೋ ಜನ್ರಿಗೆ ದಾರಿ ತೋರಿಸ್ತೀಯ. (ಸೆಲಾ)

 5 ದೇವರೇ, ಜನಾಂಗಗಳು ನಿನ್ನನ್ನ ಸ್ತುತಿಸಲಿ,

ಎಲ್ಲ ಜನ್ರು ನಿನ್ನನ್ನ ಹೊಗಳಲಿ.

 6 ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ,+

ದೇವರು, ನಮ್ಮ ದೇವರು ನಮ್ಮನ್ನ ಆಶೀರ್ವದಿಸ್ತಾನೆ.+

 7 ದೇವರು ನಮಗೆ ಆಶೀರ್ವಾದ ಕೊಡ್ತಾನೆ,

ಭೂಮಿಯ ಮೂಲೆಮೂಲೆಯಲ್ಲಿ ಇರೋ ಜನ್ರೆಲ್ಲ ಆತನಿಗೆ ಭಯಪಡ್ತಾರೆ.*+

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಕೀರ್ತನೆ. ಇದೊಂದು ಮಧುರ ಗೀತೆ.

68 ದೇವರು ಎದ್ದೇಳಲಿ, ಆತನ ಶತ್ರುಗಳು ಚೆಲ್ಲಾಪಿಲ್ಲಿ ಆಗಲಿ,

ಆತನನ್ನ ದ್ವೇಷಿಸೋರು ಆತನ ಮುಂದಿಂದ ಓಡಿಹೋಗಲಿ.+

 2 ಗಾಳಿ ಹೊಗೆನ ಓಡಿಸಿಬಿಡೋ ಹಾಗೆ, ನೀನು ಅವ್ರನ್ನ ಓಡಿಸಿಬಿಡು.

ಬೆಂಕಿ ಮುಂದೆ ಮೇಣ ಕರಗಿಹೋಗೋ ತರ, ಕೆಟ್ಟವರು ದೇವರ ಮುಂದೆ ಅಳಿದು ಹೋಗಲಿ.+

 3 ಆದ್ರೆ ನೀತಿವಂತರು ಖುಷಿಪಡಲಿ,+

ಅವರು ದೇವರ ಮುಂದೆ ಆನಂದಪಡಲಿ,

ಸಂತೋಷದಿಂದ ಸಂಭ್ರಮಿಸಲಿ.

 4 ದೇವರಿಗಾಗಿ ಹಾಡಿ, ಆತನ ಹೆಸ್ರಿಗಿರೋ ಗೌರವಕ್ಕಾಗಿ ಹಾಡಿ.*+

ಬಯಲು ಪ್ರದೇಶದ ಮೂಲಕ* ಸವಾರಿ ಮಾಡೋನಿಗಾಗಿ ಹಾಡಿ.

ಆತನ ಹೆಸ್ರು ಯಾಹು!*+ ಆತನ ಮುಂದೆ ಉಲ್ಲಾಸಪಡಿ.

 5 ತನ್ನ ಪವಿತ್ರ ನಿವಾಸದಲ್ಲಿರೋ ದೇವರು+

ಅಪ್ಪ ಇಲ್ಲದವನಿಗೆ ಅಪ್ಪ ಆಗ್ತಾನೆ, ವಿಧವೆಯರಿಗೆ ಸಂರಕ್ಷಕನಾಗಿ* ಇರ್ತಾನೆ.+

 6 ಒಂಟಿಯಾಗಿ ಇರೋರಿಗೆ ದೇವರು ಮನೆ ಕೊಡ್ತಾನೆ,+

ಆತನು ಜೈಲಲ್ಲಿ ಇರೋರನ್ನ ಬಿಡಿಸಿ ಅವ್ರನ್ನ ಉದ್ಧಾರ ಮಾಡ್ತಾನೆ.+

ಆದ್ರೆ ಹಠಮಾರಿ* ಬರಡು ಭೂಮಿಯಲ್ಲಿ ಇರಬೇಕಾಗುತ್ತೆ.+

 7 ದೇವರೇ, ನೀನು ನಿನ್ನ ಜನ್ರಿಗೆ ದಾರಿ ತೋರಿಸಿದಾಗ,+

ಮರುಭೂಮಿ ಮೂಲಕ ಅವ್ರನ್ನ ನಡೆಸಿದಾಗ, (ಸೆಲಾ)

 8 ಭೂಮಿ ಕಂಪಿಸ್ತು,+

ಆಕಾಶ ಮಳೆ ಸುರಿಸ್ತು,*

ಹೌದು ಇಸ್ರಾಯೇಲ್‌ ದೇವರಾದ ನಿನ್ನಿಂದ ಸಿನಾಯಿ ಬೆಟ್ಟ ನಡುಗ್ತು.+

 9 ದೇವರೇ, ಸಮೃದ್ಧವಾಗಿ ಮಳೆಯಾಗೋ ಹಾಗೆ ಮಾಡಿದೆ,

ಬಳಲಿ ಹೋಗಿರೋ ನಿನ್ನ ಜನ್ರಿಗೆ* ನೀನು ಮತ್ತೆ ಜೀವ ತುಂಬಿದೆ.

10 ಅವರು ನಿನ್ನ ಡೇರೆಗಳಲ್ಲಿ ವಾಸಿಸಿದ್ರು,+

ದೇವರೇ, ಬಡವ್ರಿಗೆ ಬೇಕಾಗಿದ್ದನ್ನೆಲ್ಲ ನೀನು ನಿನ್ನ ಒಳ್ಳೇತನದಿಂದ ಕೊಟ್ಟೆ.

11 ಯೆಹೋವ ಆಜ್ಞೆ ಕೊಡ್ತಾನೆ

ಸಿಹಿಸುದ್ದಿಯನ್ನ ಹೇಳೋ ಸ್ತ್ರೀಯರು ಒಂದು ದೊಡ್ಡ ಸೈನ್ಯದ ತರ ಇದ್ದಾರೆ.+

12 ರಾಜರು ತಮ್ಮ ಸೈನ್ಯಗಳ ಜೊತೆ ಓಡಿಹೋಗ್ತಾರೆ!+ ಹೌದು ಅವರು ಓಡಿಹೋಗ್ತಾರೆ!

ಮನೆಯಲ್ಲಿರೋ ಸ್ತ್ರೀಯರಿಗೆ ಕೊಳ್ಳೆಯಲ್ಲಿ ಪಾಲು ಸಿಗುತ್ತೆ.+

13 ಗಂಡಸರೇ, ನೀವು ಬಯಲಿನ ಬೆಂಕಿ* ಮಧ್ಯ ಮಲಗಬೇಕಾಗಿ ಬಂದ್ರೂ,

ಅಲ್ಲಿ ನಿಮಗೆ ಎಂಥ ಪಾರಿವಾಳ ಸಿಗುತ್ತೆ ಅಂದ್ರೆ,

ಅದ್ರ ರೆಕ್ಕೆ ಬೆಳ್ಳಿ, ಅದ್ರ ಗರಿ ಅಪ್ಪಟ ಚಿನ್ನ.*

14 ಸರ್ವಶಕ್ತನು ರಾಜರನ್ನ ಚೆಲ್ಲಾಪಿಲ್ಲಿ ಮಾಡಿದಾಗ,+

ಚಲ್ಮೋನಿನಲ್ಲಿ ಹಿಮ ಬಿತ್ತು.*

15 ಬಾಷಾನ್‌ ದೇವರ ಪರ್ವತ,*+

ಅದು ಶಿಖರಗಳಿರೋ ಪರ್ವತ.

16 ಶಿಖರಗಳಿರೋ ಪರ್ವತಗಳೇ,

ದೇವರು ವಾಸ ಮಾಡೋಕೆ ಆರಿಸ್ಕೊಂಡಿರೋ ಪರ್ವತವನ್ನ ನೋಡಿ ಯಾಕೆ ನೀವು ಅಸೂಯೆಪಡ್ತೀರಾ?+

ನಿಜವಾಗ್ಲೂ ಯೆಹೋವ ಶಾಶ್ವತಕ್ಕೂ ಅಲ್ಲೇ ವಾಸಿಸ್ತಾನೆ.+

17 ದೇವರ ಹತ್ರ ಸಾವಿರಾರು, ಲಕ್ಷಾಂತರ ಯುದ್ಧ ರಥಗಳಿವೆ.+

ಯೆಹೋವ ಸಿನಾಯಿ ಬೆಟ್ಟದಿಂದ ಪವಿತ್ರ ಸ್ಥಳಕ್ಕೆ ಬಂದಿದ್ದಾನೆ.+

18 ನೀನು ಉನ್ನತ ಸ್ಥಳಕ್ಕೆ ಏರಿಹೋದೆ,+

ನೀನು ಕೈದಿಗಳನ್ನ ತಗೊಂಡು ಹೋದೆ,

ನೀನು ಗಂಡಸರನ್ನ ಉಡುಗೊರೆಗಳಾಗಿ ತಗೊಂಡು ಹೋದೆ,+

ಹೌದು, ದೇವರಾದ ಯಾಹುವೇ, ಅವ್ರ ಜೊತೆ ವಾಸಿಸೋಕೆ ಹಠಮಾರಿಗಳನ್ನೂ+ ನೀನು ತಗೊಂಡು ಹೋದೆ.

19 ಪ್ರತಿದಿನ ನಮ್ಮ ಭಾರವನ್ನ ಹೊರೋ ಯೆಹೋವನಿಗೆ,+

ನಮ್ಮ ರಕ್ಷಕನಾದ ಸತ್ಯ ದೇವರಿಗೆ ಹೊಗಳಿಕೆ ಸಿಗಲಿ. (ಸೆಲಾ)

20 ಸತ್ಯದೇವರು ನಮ್ಮನ್ನ ರಕ್ಷಿಸೋ ದೇವರಾಗಿದ್ದಾನೆ,+

ವಿಶ್ವದ ರಾಜ ಯೆಹೋವ ಸಾವಿಂದ ನಮ್ಮನ್ನ ತಪ್ಪಿಸ್ತಾನೆ.+

21 ಹೌದು, ದೇವರು ತನ್ನ ಶತ್ರುಗಳ ತಲೆಗಳನ್ನ ಜಜ್ಜಿ ಹಾಕ್ತಾನೆ.

ಪಾಪ ಮಾಡ್ತಾನೇ ಇರೋ ಜನ್ರ* ತಲೆಗಳನ್ನ ಜಜ್ಜಿ ಹಾಕ್ತಾನೆ.+

22 ಯೆಹೋವ ಹೀಗೆ ಹೇಳಿದ್ದಾನೆ “ನಾನು ಅವ್ರನ್ನ ಬಾಷಾನಿನಿಂದ+ ಹಿಂದೆ ಕರ್ಕೊಂಡು ಬರ್ತಿನಿ,

ನಾನು ಅವ್ರನ್ನ ಸಮುದ್ರದ ಆಳದಿಂದ ಹಿಂದೆ ಕರ್ಕೊಂಡು ಬರ್ತಿನಿ,

23 ಆಗ ನಿಮ್ಮ ಕಾಲು ಶತ್ರುಗಳ ರಕ್ತದಲ್ಲಿ ತೇಲುತ್ತೆ+

ನಿಮ್ಮ ನಾಯಿಗಳು ಶತ್ರುಗಳ ರಕ್ತವನ್ನು ನೆಕ್ಕುತ್ತವೆ”

24 ದೇವರೇ, ನಿನ್ನ ವಿಜಯದ ಮೆರವಣಿಗೆಯನ್ನ ಅವರು ನೋಡ್ತಾರೆ,

ಪವಿತ್ರ ಸ್ಥಳದ ಕಡೆ ಹೋಗೋ ನನ್ನ ದೇವರ ಮೆರವಣಿಗೆಯನ್ನ, ನನ್ನ ರಾಜನ ಮೆರವಣಿಗೆಯನ್ನ ಅವರು ನೋಡ್ತಾರೆ.+

25 ಗಾಯಕರು ಮುಂದೆಮುಂದೆ ನಡೆದ್ರೆ, ತಂತಿವಾದ್ಯ ನುಡಿಸೋರು ಅವ್ರ ಹಿಂದೆಹಿಂದೆ ಹೋಗ್ತಾರೆ,+

ಅವರ ಮಧ್ಯ ಹುಡುಗಿಯರು ದಮ್ಮಡಿ ಬಾರಿಸ್ತಾ ಹೋಗ್ತಾರೆ.+

26 ಮಹಾ ಸಭೆಯಲ್ಲಿ ದೇವರನ್ನ ಹೊಗಳಿ,

ಇಸ್ರಾಯೇಲಿನ ಕಾಲುವೆಯಿಂದ ಬಂದಿರೋರೇ, ಯೆಹೋವನನ್ನ ಕೊಂಡಾಡಿ.+

27 ಅವ್ರಲ್ಲಿ ಚಿಕ್ಕವನಾದ ಬೆನ್ಯಾಮೀನ+ ಜನ್ರನ್ನ ವಶಮಾಡ್ಕೊಳ್ತಿದ್ದಾನೆ,

ಕೂಗಾಡ್ತಿರೋ ತಮ್ಮ ಗುಂಪಿನ ಜೊತೆ ಯೆಹೂದದ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ,

ಜೆಬುಲೂನಿನ ಮತ್ತು ನಫ್ತಾಲಿಯ ಅಧಿಪತಿಗಳೂ ಜನ್ರನ್ನ ವಶಮಾಡ್ಕೊಳ್ತಿದ್ದಾರೆ.

28 ನಿನಗೆ ಶಕ್ತಿ ಸಿಗುತ್ತೆ ಅಂತ ನಿನ್ನ ದೇವರು ಆಜ್ಞೆ ಕೊಟ್ಟಿದ್ದಾನೆ.

ನಮ್ಮ ಪರವಾಗಿ ಹೆಜ್ಜೆ ತಗೊಂಡ ದೇವರೇ, ನಿನ್ನ ಶಕ್ತಿಯನ್ನ ತೋರಿಸು.+

29 ಯೆರೂಸಲೇಮಲ್ಲಿರೋ ನಿನ್ನ ಆಲಯಕ್ಕಾಗಿ+

ರಾಜರು ನಿನ್ನ ಹತ್ರ ಉಡುಗೊರೆಗಳನ್ನ ತಗೊಂಡು ಬರ್ತಾರೆ.+

30 ಜನ್ರು ಬೆಳ್ಳಿ ತುಂಡುಗಳನ್ನ ತಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,

ಅಲ್ಲಿ ತನಕ ಹುಲ್ಲಿನ ಮಧ್ಯ ವಾಸಿಸೋ ಮೃಗಗಳನ್ನ,

ಹೋರಿಗಳನ್ನ+ ಮತ್ತು ಕರುಗಳನ್ನ ಗದರಿಸು,

ಯುದ್ಧದಲ್ಲಿ ಸಂತೋಷಿಸೋ ಜನ್ರನ್ನ ಚೆದರಿಸು.

31 ಈಜಿಪ್ಟಿಂದ ಕಂಚಿನ ವಸ್ತುಗಳನ್ನ ತರ್ತಾರೆ,*+

ದೇವರಿಗೆ ಉಡುಗೊರೆಗಳನ್ನ ಕೊಡೋಕೆ ಕೂಷ್‌ ಆತುರಪಡುತ್ತೆ.

32 ಭೂಮಿಯ ರಾಜ್ಯಗಳೇ, ದೇವರಿಗಾಗಿ ಗೀತೆಗಳನ್ನ ಹಾಡಿ,+

ಯೆಹೋವನಿಗಾಗಿ ಹಾಡಿ,* (ಸೆಲಾ)

33 ಪ್ರಾಚೀನ ಕಾಲದಿಂದಾನೂ ಆಕಾಶದ ಮೇಲೆ ಸವಾರಿ ಮಾಡ್ತಿರೋನಿಗೆ ಹಾಡಿ.+

ಕೇಳಿರಿ! ಆತನ ಧ್ವನಿಯಲ್ಲಿ ತುಂಬ ಶಕ್ತಿಯಿದೆ, ಆತನು ಮಾತಾಡುವಾಗ ಗುಡುಗ್ತಾನೆ.

34 ದೇವರಿಗೆ ಶಕ್ತಿ ಇದೆ ಅಂತ ಒಪ್ಕೊಳ್ಳಿ,+

ಆತನ ವೈಭವ ಇಸ್ರಾಯೇಲಿನ ಮೇಲಿದೆ,

ಆತನ ಶಕ್ತಿ ಆಕಾಶದಲ್ಲಿದೆ.*

35 ತನ್ನ* ಆರಾಧನಾ ಸ್ಥಳದಿಂದ ದೇವರು ಭಯವಿಸ್ಮಯ ಹುಟ್ಟಿಸ್ತಾನೆ.+

ಆತನು ಇಸ್ರಾಯೇಲಿನ ದೇವರು,

ಆತನು ತನ್ನ ಜನ್ರಿಗೆ ಶಕ್ತಿ ಕೊಡ್ತಾನೆ, ಬಲ ಕೊಡ್ತಾನೆ.+

ದೇವರಿಗೆ ಹೊಗಳಿಕೆ ಸಿಗಲಿ.

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ.

69 ದೇವರೇ, ನನ್ನನ್ನ ಕಾಪಾಡು. ಯಾಕಂದ್ರೆ ನಾನು ನೀರಲ್ಲಿ ಮುಳುಗಿ ಹೋಗ್ತಿದ್ದೀನಿ.+

 2 ಆಳವಾದ ಕೆಸ್ರಲ್ಲಿ ಮುಳುಗ್ತಿದ್ದೀನಿ, ಕಾಲು ಇಡಕ್ಕೂ ಗಟ್ಟಿನೆಲ ಸಿಗ್ತಿಲ್ಲ.+

ಆಳವಾದ ನೀರಲ್ಲಿ ಮುಳುಗಿ ಹೋಗ್ತಿದ್ದೀನಿ,

ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗ್ತಿದೆ.+

 3 ಕೂಗಿ ಕೂಗಿ ನನಗೆ ಸಾಕಾಗಿ ಹೋಯ್ತು,+

ನನ್ನ ಗಂಟಲು ಕಟ್ಕೊಂಡಿದೆ.

ನನ್ನ ದೇವರಿಗಾಗಿ ಕಾದುಕಾದು ನನ್ನ ಕಣ್ಣು ಸೋತುಹೋಗಿದೆ.+

 4 ಕಾರಣ ಇಲ್ಲದೆ ನನ್ನನ್ನ ದ್ವೇಷಿಸೋರು+

ನನ್ನ ಕೂದಲಿಗಿಂತ ಜಾಸ್ತಿ ಇದ್ದಾರೆ.

ನನ್ನನ್ನ ಮುಗಿಸೋಕೆ ನೋಡ್ತಿರೋ

ಮೋಸಗಾರ ಶತ್ರುಗಳು* ತುಂಬ ಜನ ಇದ್ದಾರೆ,

ನಾನು ಕದಿಲಿಲ್ಲ ಅಂದ್ರೂ ಅದನ್ನ ಕೊಡಬೇಕಾಯ್ತು.

 5 ದೇವರೇ, ನಾನು ದಡ್ಡ ಅಂತ ನಿನಗೇ ಗೊತ್ತು,

ನನ್ನ ತಪ್ಪು ನಿನಗೆ ಕಾಣಿಸ್ತಾನೇ ಇದೆ.

 6 ವಿಶ್ವದ ರಾಜ, ಸೈನ್ಯಗಳ ದೇವರಾದ ಯೆಹೋವನೇ,

ನಿನ್ನಲ್ಲಿ ನಿರೀಕ್ಷೆ ಇಟ್ಕೊಂಡ ಜನ್ರಿಗೆ ನನ್ನಿಂದ ಅವಮಾನ ಆಗೋಕೆ ಬಿಡಬೇಡ,

ಇಸ್ರಾಯೇಲ್‌ ದೇವರೇ,

ನಿನ್ನನ್ನ ಹುಡುಕೋರ ಹೆಸ್ರು ನನ್ನಿಂದ ಹಾಳಾಗದೇ ಇರಲಿ.

 7 ನಿನಗಾಗಿ ನಾನು ಬೈಗುಳ ಸಹಿಸ್ಕೊಳ್ತಾ ಇದ್ದೀನಿ,+

ಅವಮಾನದಿಂದ ನಾನು ಮುಖ ಮುಚ್ಕೊಂಡಿದ್ದೀನಿ.+

 8 ನಾನು ನನ್ನ ಅಣ್ಣತಮ್ಮಂದಿರಿಗೇ ಅಪರಿಚಿತನ ತರ ಆಗಿಬಿಟ್ಟಿದ್ದೀನಿ,

ನನ್ನ ಜೊತೆ ಹುಟ್ಟಿದವ್ರಿಗೆ ವಿದೇಶಿ ತರ ಆಗಿಬಿಟ್ಟಿದ್ದೀನಿ.+

 9 ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರೀತಿದೆ+

ನಿನ್ನನ್ನ ಅಣಕಿಸೋರ ಬೈಗುಳಗಳು ನನ್ನ ಮೇಲೆ ಬಂದು ಬಿದ್ದಿವೆ.+

10 ಉಪವಾಸ ಮಾಡಿ* ನಾನು ನನ್ನನ್ನ ತಗ್ಗಿಸ್ಕೊಂಡಾಗ,

ಅದಕ್ಕೂ ನನ್ನನ್ನ ಬೈದ್ರು.

11 ಗೋಣಿ ಬಟ್ಟೆ ಹಾಕ್ಕೊಂಡಾಗ,

ಅವರು ನನ್ನನ್ನ ನೋಡಿ ತಮಾಷೆ* ಮಾಡಿದ್ರು.

12 ಊರಬಾಗಿಲಲ್ಲಿ ಕೂತ್ಕೊಳ್ಳೋರು ನನ್ನ ಬಗ್ಗೆ ಮಾತಾಡ್ತಾರೆ,

ಕುಡುಕರು ನನ್ನನ್ನ ಅವ್ರ ಹಾಡಲ್ಲಿ ಸೇರಿಸ್ಕೊಳ್ತಾರೆ.

13 ಆದ್ರೆ ಯೆಹೋವನೇ,

ಸರಿಯಾದ ಸಮಯಕ್ಕೆ ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+

ದೇವರೇ, ನಿನ್ನ ಅಪಾರವಾದ ಶಾಶ್ವತ ಪ್ರೀತಿಯಿಂದ,

ನಿನ್ನ ರಕ್ಷಣೆಯ ಕೆಲಸಗಳಿಂದ ನನಗೆ ಉತ್ರ ಕೊಡು.+

14 ಕೆಸ್ರಿಂದ ನನ್ನನ್ನ ಕಾಪಾಡು,

ನನ್ನನ್ನ ಮುಳುಗೋಕೆ ಬಿಡಬೇಡ.

ದ್ವೇಷಿಸೋರಿಂದ, ಆಳವಾದ ನೀರಿಂದ ನನ್ನನ್ನ ರಕ್ಷಿಸು.+

15 ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗೋಕೆ ಬಿಡಬೇಡ,+

ಆಳವಾದ ನೀರು ನನ್ನನ್ನ ನುಂಗೋಕೆ ಬಿಡಬೇಡ,

ಬಾವಿ* ತನ್ನ ಬಾಯಿ ತೆಗೆದು ನನ್ನನ್ನ ಒಳಗೆ ಎಳ್ಕೊಳ್ಳೋಕೆ ಬಿಡಬೇಡ.+

16 ಯೆಹೋವನೇ, ನನಗೆ ಉತ್ರ ಕೊಡು. ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಒಳ್ಳೇದು.+

ನಿನ್ನ ಅಪಾರ ಕರುಣೆ ತೋರಿಸ್ತಾ ನನ್ನ ಕಡೆ ತಿರುಗು.+

17 ನಿನ್ನ ಸೇವಕನಿಂದ ನಿನ್ನ ಮುಖ ಮರೆ ಮಾಡ್ಕೊಬೇಡ.+

ನಾನು ಕಷ್ಟದಲ್ಲಿದ್ದೀನಿ, ತಕ್ಷಣ ನನಗೆ ಉತ್ರಕೊಡು.+

18 ನನ್ನ ಹತ್ರ ಬಂದು ನನ್ನನ್ನ ರಕ್ಷಿಸು,

ನನ್ನ ಶತ್ರುಗಳಿಂದ ನನ್ನನ್ನ ಬಿಡಿಸು.

19 ನನ್ನ ಮೇಲಿರೋ ಆರೋಪ, ನನಗಾಗಿರೋ ಅವಮಾನ, ಅಪಮಾನ, ನಿನಗೆ ಗೊತ್ತಿದೆ.+

ನೀನು ನನ್ನ ಶತ್ರುಗಳನ್ನೆಲ್ಲ ನೋಡಿದ್ದೀಯ.

20 ಆರೋಪದಿಂದ ನನ್ನ ಹೃದಯ ಒಡೆದು ಹೋಗಿದೆ, ನನ್ನ ಈ ಗಾಯ ವಾಸಿನೇ ಆಗ್ತಾ ಇಲ್ಲ.*

ನನಗೆ ಸಹಾನುಭೂತಿ ಸಿಕ್ಕರೆ ಸಾಕು, ಆದ್ರೆ ಅದು ಎಲ್ಲೂ ಸಿಗಲಿಲ್ಲ,+

ಸಾಂತ್ವನ ಕೊಡೋರನ್ನ ಹುಡುಕಿದೆ, ಆಗ್ಲೂ ನನಗೆ ಯಾರೂ ಸಿಗಲಿಲ್ಲ.+

21 ಅವರು ನನಗೆ ಊಟಕ್ಕೆ ಬದಲಾಗಿ ವಿಷ ಕೊಟ್ರು,+

ಬಾಯಾರಿದಾಗ ಕುಡಿಯೋಕೆ ಹುಳಿ ದ್ರಾಕ್ಷಾಮದ್ಯ ಕೊಟ್ರು.+

22 ಅವ್ರ ಊಟಾನೇ ಅವ್ರಿಗೆ ಉರುಲಾಗಲಿ,

ಅವ್ರ ಸಮೃದ್ಧಿನೇ ಅವ್ರಿಗೆ ಬಲೆಯಾಗಲಿ.+

23 ಅವ್ರ ಕಣ್ಣು ಕತ್ತಲಾಗಿ ಕಾಣದಂತಾಗಲಿ,

ಅವ್ರ ಕಾಲು ಯಾವಾಗ್ಲೂ ಗಡಗಡ ನಡುಗಲಿ.

24 ಅವ್ರ ಮೇಲೆ ನಿನ್ನ ಉಗ್ರಕೋಪ* ಸುರಿಸು,

ನಿನ್ನ ಕೋಪಾಗ್ನಿ ಅವ್ರನ್ನ ಅಟ್ಟಿಸ್ಕೊಂಡು ಹೋಗಿ ಹಿಡೀಲಿ.+

25 ಅವ್ರ ಪಾಳೆಯ* ಪಾಳುಬೀಳಲಿ,

ಅವ್ರ ಡೇರೆಯಲ್ಲಿ ಜನ್ರೇ ಇಲ್ಲದ ಹಾಗಾಗಲಿ.+

26 ಯಾಕಂದ್ರೆ ನೀನು ಗಾಯ ಮಾಡಿರೋರನ್ನ ಅವರು ಅಟ್ಟಿಸ್ಕೊಂಡು ಹೋಗ್ತಾರೆ,

ನೀನು ಮಾಡಿದ ಗಾಯದ ನೋವುಗಳ ಬಗ್ಗೆ ಹರಟೆ ಹೊಡೀತಾರೆ.

27 ಅವ್ರ ಅಪರಾಧಕ್ಕೆ ಇನ್ನೂ ಅಪರಾಧ ಸೇರಿಸು,

ನಿನ್ನ ನೀತಿಯಲ್ಲಿ ಅವ್ರಿಗೆ ಯಾವ ಪಾಲೂ ಸಿಗದಿರಲಿ.

28 ಜೀವದ ಪುಸ್ತಕದಿಂದ ಅವ್ರ ಹೆಸ್ರನ್ನ ತೆಗೆದುಹಾಕು,+

ನೀತಿವಂತರ ಪಟ್ಟಿಯಲ್ಲಿ ಅವ್ರ ಹೆಸ್ರನ್ನ ಸೇರಿಸಬೇಡ.+

29 ನಾನು ಕಷ್ಟದಲ್ಲಿದ್ದೀನಿ, ನೋವಲ್ಲಿದ್ದೀನಿ.+

ದೇವರೇ, ನಿನ್ನ ರಕ್ಷಣೆಯ ಶಕ್ತಿ ನನ್ನನ್ನ ಕಾಪಾಡಲಿ.

30 ದೇವರ ಹೆಸ್ರಿಗೆ ಗೌರವ ಕೊಡೋಕೆ ನಾನು ಹಾಡಿ ಕೊಂಡಾಡ್ತೀನಿ,

ಧನ್ಯವಾದ ಹೇಳ್ತಾ ಆತನನ್ನ ಹೊಗಳ್ತೀನಿ.

31 ಯೆಹೋವನಿಗೆ ಹೋರಿಗಿಂತ,

ಕೊಂಬುಗಳಿರೋ ಉಗುರಿರೋ ಎಳೇ ಹೋರಿಗಿಂತ ಇದೇ ಜಾಸ್ತಿ ಇಷ್ಟ.+

32 ದೀನ ಜನ್ರು ಇದನ್ನ ನೋಡಿ ಖುಷಿಪಡ್ತಾರೆ.

ದೇವರನ್ನ ಹುಡುಕ್ತಿರೋ ಜನ್ರೇ, ನಿಮ್ಮ ಹೃದಯಕ್ಕೆ ಮತ್ತೆ ಜೀವ ಬರಲಿ.

33 ಯಾಕಂದ್ರೆ ಯೆಹೋವ ಬಡವರ ಮೊರೆ ಕೇಳಿಸ್ಕೊಳ್ತಾನೆ,+

ಜೈಲಲ್ಲಿ ಇರೋ ತನ್ನ ಜನ್ರನ್ನ ಆತನು ಕೀಳಾಗಿ ನೋಡಲ್ಲ.+

34 ಭೂಮಿ ಮತ್ತು ಆಕಾಶ ಆತನನ್ನ ಹೊಗಳಲಿ,+

ಸಮುದ್ರ ಮತ್ತು ಅದ್ರಲ್ಲಿ ಈಜೋ ಎಲ್ಲವೂ ಆತನನ್ನ ಕೊಂಡಾಡಲಿ.

35 ಯಾಕಂದ್ರೆ ದೇವರು ಚೀಯೋನನ್ನ ಕಾಪಾಡ್ತಾನೆ,+

ಯೆಹೂದದ ಪಟ್ಟಣಗಳನ್ನ ಮತ್ತೆ ಕಟ್ತಾನೆ,

ಆತನ ಜನ್ರು ಅಲ್ಲಿ ವಾಸಿಸ್ತಾರೆ ಮತ್ತು ಅದನ್ನ* ವಶ ಮಾಡ್ಕೊಳ್ತಾರೆ.

36 ಆತನ ಸೇವಕರ ಸಂತತಿ ಅದನ್ನ ಆಸ್ತಿಯಾಗಿ ಪಡ್ಕೊಳ್ತಾರೆ,+

ಆತನ ಹೆಸ್ರನ್ನ ಪ್ರೀತಿಸೋರು+ ಅಲ್ಲಿ ಇರ್ತಾರೆ.

ಗಾಯಕರ ನಿರ್ದೇಶಕನಿಗೆ ಸೂಚನೆ, ನೆನಪಲ್ಲಿಡೋಕೆ* ದಾವೀದನ ಕೀರ್ತನೆ.

70 ದೇವರೇ, ನನ್ನನ್ನ ಕಾಪಾಡು.

ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+

 2 ನನ್ನ ಪ್ರಾಣ ತೆಗೀಬೇಕು ಅಂತ ಇರೋರಿಗೆ

ನಾಚಿಕೆ ಆಗಲಿ, ಅವಮಾನ ಆಗಲಿ.

ನನ್ನ ವಿಪತ್ತಲ್ಲಿ ಖುಷಿಪಡೋರು

ಅವಮಾನದಿಂದ ವಾಪಸ್‌ ಹೋಗಲಿ.

 3 ಯಾರು ನನ್ನನ್ನ ನೋಡಿ “ಆಹಾ! ಹಿಂಗೆ ಆಗಬೇಕಿತ್ತು!” ಅಂತ ಹೇಳ್ತಾರೋ

ಅವರು ನಾಚಿಕೆಯಿಂದ ವಾಪಸ್‌ ಹೋಗಲಿ.

 4 ಆದ್ರೆ ಯಾರು ನಿನ್ನನ್ನ ಹುಡುಕ್ತಾರೋ

ಅವರು ನಿನ್ನಲ್ಲಿ ಸಂಭ್ರಮಿಸಲಿ, ನಿನ್ನಲ್ಲಿ ಉಲ್ಲಾಸಪಡಲಿ.+

ನಿನ್ನ ರಕ್ಷಣೆಯ ಕೆಲಸಗಳನ್ನ ಪ್ರೀತಿಸೋರು,

“ದೇವರಿಗೆ ಗೌರವ ಸಿಗಲಿ!” ಅಂತ ಯಾವಾಗ್ಲೂ ಹೇಳೋ ತರ ಆಗಲಿ.

 5 ದೇವರೇ ನನ್ನ ಪರವಾಗಿ ಬೇಗ ಹೆಜ್ಜೆ ತಗೊ,+

ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.+

ಯೆಹೋವನೇ ತಡಮಾಡಬೇಡ,+

ನೀನೇ ನನ್ನ ಸಹಾಯಕ, ನನ್ನ ರಕ್ಷಕ.+

71 ಯೆಹೋವನೇ, ನಾನು ನಿನ್ನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ.

ಅವಮಾನ ಆಗೋ ಪರಿಸ್ಥಿತಿ ಯಾವತ್ತೂ ನನಗೆ ಬರಬಾರದು.+

 2 ನೀನು ನೀತಿವಂತನಾಗಿ ಇರೋದ್ರಿಂದ ನನ್ನನ್ನ ರಕ್ಷಿಸು, ನನ್ನನ್ನ ಕಾಪಾಡು.

ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡು ನನ್ನನ್ನ ಪಾರುಮಾಡು.+

 3 ಯಾವಾಗ ಬೇಕಾದ್ರೂ ನಾನು ಆಶ್ರಯ ಹುಡುಕಿ ಬರೋ ಹಾಗೆ

ನೀನು ಬಂಡೆ ತರ ಗಟ್ಟಿಯಾಗಿರೋ ಕೋಟೆ ಆಗು.

ನನ್ನನ್ನ ರಕ್ಷಿಸೋಕೆ ಯಾರನ್ನಾದ್ರೂ ಕಳಿಸು,

ಯಾಕಂದ್ರೆ ನೀನು ನನ್ನ ಬಂಡೆ, ನನ್ನ ಭದ್ರಕೋಟೆ.+

 4 ನನ್ನ ದೇವರೇ, ದುಷ್ಟನ ಕೈಯಿಂದ ನನ್ನನ್ನ ಕಾಪಾಡು,+

ಅನ್ಯಾಯವಾಗಿ ದೌರ್ಜನ್ಯ ಮಾಡೋರ ವಶದಿಂದ ನನ್ನನ್ನ ಬಿಡಿಸು.

 5 ಯಾಕಂದ್ರೆ ವಿಶ್ವದ ರಾಜನಾದ ಯೆಹೋವನೇ, ನೀನೇ ನನ್ನ ನಿರೀಕ್ಷೆ,

ನಾನು ಚಿಕ್ಕವನಿಂದ ನಿನ್ನಲ್ಲೇ ಭರವಸೆ* ಇಟ್ಟಿದ್ದೀನಿ.+

 6 ಹುಟ್ಟಿದಾಗಿಂದ ನೀನೇ ನನ್ನ ಆಧಾರ,

ಅಮ್ಮನ ಹೊಟ್ಟೆಯಿಂದ ನನ್ನನ್ನ ಹೊರಗೆ ತಂದವನು ನೀನೇ.+

ನಾನು ನಿನ್ನನ್ನ ಯಾವಾಗ್ಲೂ ಹೊಗಳ್ತೀನಿ.

 7 ನನಗೆ ಆಗಿದ್ದನ್ನ ನೋಡಿ ತುಂಬ ಜನ ಅದ್ಭುತ ಅಂದ್ರು,

ಆದ್ರೆ ನೀನೇ ನನ್ನ ಬಲವಾದ ಆಶ್ರಯ.

 8 ನಿನ್ನ ಹೊಗಳಿಕೆ ಬಿಟ್ಟು ಬೇರೆ ಏನೂ ನನ್ನ ಬಾಯಲ್ಲಿಲ್ಲ,+

ಇಡೀ ದಿನ ನಿನ್ನ ಘನತೆ ಬಗ್ಗೆ ನಾನು ಹೇಳ್ತಾ ಇರ್ತಿನಿ.

 9 ನನಗೆ ವಯಸ್ಸಾದಾಗ ದಯವಿಟ್ಟು ನನ್ನನ್ನ ತಳ್ಳಿಬಿಡಬೇಡ,+

ನನಗೆ ಶಕ್ತಿ ಇಲ್ಲದೆ ಹೋದಾಗ ನನ್ನ ಕೈಬಿಡಬೇಡ.+

10 ನನ್ನ ಶತ್ರುಗಳು ನನ್ನ ವಿರುದ್ಧ ಮಾತಾಡ್ತಾರೆ,

ನನ್ನ ಜೀವ ತೆಗಿಬೇಕು ಅಂತಿರೋರು ಒಟ್ಟಾಗಿ ಹೊಂಚು ಹಾಕ್ತಾರೆ,+

11 “ದೇವರು ಅವನ ಕೈಬಿಟ್ಟಿದ್ದಾನೆ.

ಅಟ್ಟಿಸ್ಕೊಂಡು ಹೋಗಿ ಅವನನ್ನ ಹಿಡೀರಿ. ಅವನನ್ನ ಕಾಪಾಡೋರು ಯಾರೂ ಇಲ್ಲ” ಅಂತಾರೆ.+

12 ದೇವರೇ, ನನ್ನಿಂದ ದೂರ ಇರಬೇಡ.

ನನ್ನ ದೇವರೇ, ನನಗೆ ಸಹಾಯ ಮಾಡೋಕೆ ಬೇಗ ಬಾ.+

13 ನನ್ನ ವಿರೋಧಿಗಳು

ನಾಚಿಕೆ ಪಡಲಿ, ನಾಶವಾಗಿ ಹೋಗಲಿ.+

ನನ್ನ ವಿಪತ್ತಿಗಾಗಿ ಕಾಯ್ತಾ ಇರೋರು

ಅವಮಾನಕ್ಕೆ, ತಮಾಷೆಗೆ ಗುರಿಯಾಗಲಿ.+

14 ಆದ್ರೆ ನಾನು ನಿನಗಾಗಿ ಕಾಯ್ತಾ ಇರ್ತಿನಿ,

ನಿನ್ನನ್ನ ಇನ್ನೂ ಜಾಸ್ತಿ ಹೊಗಳ್ತೀನಿ.

15 ನಿನ್ನ ಒಳ್ಳೇ ಕೆಲಸಗಳಿಗೆ, ನಿನ್ನ ರಕ್ಷಣೆಯ ಕೆಲಸಗಳಿಗೆ ಲೆಕ್ಕಾನೇ ಇಲ್ಲ.

ಅವನ್ನ ಅರ್ಥ ಮಾಡ್ಕೊಳ್ಳೋಕೆ ನನ್ನಿಂದ ಅಸಾಧ್ಯ.+

ಆದ್ರೂ ನನ್ನ ಬಾಯಿ ಇಡೀ ದಿನ ಅದ್ರ ಬಗ್ಗೆನೇ ವರ್ಣಿಸ್ತಾ ಇರುತ್ತೆ.+

16 ವಿಶ್ವದ ರಾಜನಾದ ಯೆಹೋವನೇ,

ನಾನು ಬಂದು ನಿನ್ನ ಅದ್ಭುತಗಳ ಬಗ್ಗೆ ಹೇಳ್ತೀನಿ,

ನಿನ್ನ ನೀತಿ ಬಗ್ಗೆ, ಹೌದು ಬರೀ ನಿನ್ನ ನೀತಿಯ ಬಗ್ಗೆನೇ ಮಾತಾಡ್ತೀನಿ.

17 ದೇವರೇ, ನಾನು ಚಿಕ್ಕವನಾಗಿ ಇದ್ದಾಗಿಂದ ನೀನು ನನಗೆ ಕಲಿಸಿದ್ದೀಯ,+

ಇಲ್ಲಿ ತನಕ ನಾನು ನಿನ್ನ ಅದ್ಭುತಗಳ ಬಗ್ಗೆ ಹೇಳ್ತಾನೇ ಬಂದಿದ್ದೀನಿ.+

18 ದೇವರೇ, ನನಗೆ ವಯಸ್ಸಾದಾಗ್ಲೂ ಬಿಳಿ ಕೂದಲು ಬಂದಾಗ್ಲೂ ನನ್ನ ಕೈಬಿಡಬೇಡ.+

ನಿನ್ನ ಶಕ್ತಿ ಬಗ್ಗೆ ಮತ್ತು ನಿನ್ನ ಬಲದ ಬಗ್ಗೆ

ಮುಂದಿನ ಪೀಳಿಗೆಗೆ, ಮುಂದೆ ಬರೋರಿಗೆ ನಾನು ಹೇಳೋ ತರ ಆಗಲಿ.+

19 ದೇವರೇ, ನಿನ್ನ ನೀತಿಯ ಕೆಲಸಗಳು ಎಷ್ಟೋ ಶ್ರೇಷ್ಠ,+

ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,

ದೇವರೇ, ನಿನ್ನ ತರ ಯಾರಿದ್ದಾರೆ?+

20 ನಾನು ತುಂಬ ಕಷ್ಟ, ವಿಪತ್ತು ಅನುಭವಿಸೋಕೆ ನೀನು ಬಿಟ್ಟಿದ್ರೂ,+

ನೀನೇ ನನ್ನಲ್ಲಿ ಮತ್ತೆ ಹೊಸ ಜೀವ ತುಂಬು,

ಭೂಮಿಯ ಆಳದಿಂದ* ನನ್ನನ್ನ ಮೇಲಕ್ಕೆ ಎತ್ತು.+

21 ನನ್ನ ಗೌರವವನ್ನ ಹೆಚ್ಚಿಸು,

ನನ್ನ ಸುತ್ತಲೂ ಇದ್ದು ನನ್ನನ್ನ ಸಂತೈಸು.

22 ಆಗ ನನ್ನ ದೇವರೇ, ನಿನ್ನ ನಂಬಿಗಸ್ತಿಕೆಗಾಗಿ

ತಂತಿವಾದ್ಯ ನುಡಿಸ್ತಾ ನಾನು ನಿನ್ನನ್ನ ಹೊಗಳ್ತೀನಿ.+

ಇಸ್ರಾಯೇಲ್ಯರ ಪವಿತ್ರ ದೇವರೇ,

ಸಂಗೀತವಾದ್ಯವನ್ನ ನುಡಿಸಿ ನಿನಗೆ ಹಾಡುಗಳನ್ನ ಹಾಡಿ ಹೊಗಳ್ತೀನಿ.*

23 ನೀನು ನನ್ನ ಜೀವವನ್ನ ಕಾಪಾಡಿದ್ರಿಂದ+

ನಿನ್ನನ್ನ ಹೊಗಳುವಾಗ ನನ್ನ ತುಟಿ ಖುಷಿಯಿಂದ ಜೈಕಾರ ಹಾಕುತ್ತೆ.+

24 ಇಡೀ ದಿನ ನನ್ನ ನಾಲಿಗೆ ನಿನ್ನ ನೀತಿಯ ಬಗ್ಗೆ ಮಾತಾಡುತ್ತೆ,*+

ಯಾಕಂದ್ರೆ ನನ್ನ ನಾಶನ ನೋಡೋಕೆ ಇಷ್ಟಪಡೋರಿಗೆ ನಾಚಿಕೆ, ಅವಮಾನ ಆಗುತ್ತೆ.+

ಸೊಲೊಮೋನನ ಬಗ್ಗೆ.

72 ದೇವರೇ, ನಿನ್ನ ತೀರ್ಪುಗಳ ಬಗ್ಗೆ ರಾಜನಿಗೆ ಕಲಿಸು,

ನಿನ್ನ ನೀತಿ ಬಗ್ಗೆ ರಾಜನ ಮಗನಿಗೆ ಬೋಧಿಸು.+

 2 ಅವನು ನೀತಿಯಿಂದ ನಿನ್ನ ಪ್ರಜೆಗಳ ಪರವಾಗಿ,

ನ್ಯಾಯದಿಂದ ನಿನ್ನ ದೀನ ಜನ್ರ ಪರವಾಗಿ ವಾದ ಮಾಡಲಿ.+

 3 ಪರ್ವತಗಳು ಜನ್ರಿಗೆ ಶಾಂತಿ ತರಲಿ,

ಬೆಟ್ಟಗಳು ನೀತಿ ತರಲಿ.

 4 ಜನ್ರಲ್ಲಿ ದೀನರಾಗಿ ಇರೋರಿಗೆ ಅವನು ನ್ಯಾಯ ಕೊಡಿಸಲಿ,

ಬಡವರ ಮಕ್ಕಳನ್ನ ಕಾಪಾಡಲಿ,

ಮೋಸಗಾರರನ್ನ ಜಜ್ಜಿಹಾಕಲಿ.+

 5 ಸೂರ್ಯ ಹೊಳೆಯೋ ತನಕ,

ಚಂದ್ರ ಆಕಾಶದಲ್ಲಿ ಇರೋ ತನಕ,

ಅವರು ನಿನಗೆ ಭಯಪಡ್ತಾರೆ,

ತಲತಲಾಂತರಕ್ಕೂ ಭಯಪಡ್ತಾರೆ.+

 6 ಕತ್ತರಿಸಿದ ಹುಲ್ಲಿನ ಮೇಲೆ ಬೀಳೋ ಮಳೆ ತರ ರಾಜ ಇರ್ತಾನೆ,

ಭೂಮಿಯನ್ನ ತೋಯಿಸೋ ತುಂತುರು ಮಳೆ ತರ ಇರ್ತಾನೆ.+

 7 ಅವನ ಕಾಲದಲ್ಲಿ ನೀತಿವಂತರು ಅಭಿವೃದ್ಧಿ ಆಗ್ತಾರೆ,*+

ಚಂದ್ರ ಇರೋ ತನಕ ಎಲ್ಲ ಕಡೆ ಶಾಂತಿ ತುಂಬಿತುಳುಕುತ್ತೆ.+

 8 ಅವನು ಸಮುದ್ರದಿಂದ ಸಮುದ್ರದ ತನಕ

ಮಹಾ ನದಿಯಿಂದ* ಭೂಮಿಯ ಕಟ್ಟಕಡೆಯ ತನಕ ಆಳ್ವಿಕೆ ಮಾಡ್ತಾನೆ.*+

 9 ಮರುಭೂಮಿಯ ನಿವಾಸಿಗಳು ಅವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ,

ಅವನ ಶತ್ರುಗಳು ಮಣ್ಣು ಮುಕ್ತಾರೆ.+

10 ತಾರ್ಷೀಷಿನ ರಾಜರು, ದ್ವೀಪಗಳ ರಾಜರು ಅವನಿಗೆ ಕಪ್ಪ ಕೊಡ್ತಾರೆ.+

ಶೆಬದ ರಾಜರು, ಸೆಬಾದ ರಾಜರು ಅವನಿಗೆ ಉಡುಗೊರೆಗಳನ್ನ ಕೊಡ್ತಾರೆ.+

11 ಎಲ್ಲ ರಾಜರು ಅವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ,

ಎಲ್ಲ ಜನಾಂಗದ ಜನ್ರು ಅವನ ಸೇವೆಮಾಡ್ತಾರೆ.

12 ಯಾಕಂದ್ರೆ ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ,

ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ.

13 ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ,

ಬಡವರ ಜೀವವನ್ನ ಕಾಪಾಡ್ತಾನೆ.

14 ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ,

ಅವನ ದೃಷ್ಟಿಯಲ್ಲಿ ಅವ್ರ ರಕ್ತ ತುಂಬ ಅಮೂಲ್ಯ.

15 ರಾಜ ಹೆಚ್ಚು ವರ್ಷ ಬದುಕಿ ಬಾಳಲಿ, ಶೆಬದ ಬಂಗಾರ ಅವನಿಗೆ ಸಿಗಲಿ.+

ಅವನಿಗಾಗಿ ಜನ್ರು ತಪ್ಪದೆ ಪ್ರಾರ್ಥನೆ ಮಾಡಲಿ,

ದಿನವೆಲ್ಲ ಅವನನ್ನ ಆಶೀರ್ವಾದ ಮಾಡಲಿ.

16 ಭೂಮಿ ಮೇಲೆ ಬೆಳೆ ಸಮೃದ್ಧವಾಗಿ ಇರುತ್ತೆ,+

ಪರ್ವತ ಶಿಖರಗಳ ಮೇಲೆ ಧಾನ್ಯ ತುಂಬಿತುಳುಕುತ್ತೆ.

ಲೆಬನೋನಿನ ಮರಗಳ ಹಾಗೆ ಅವನ ಹೊಲದ ಫಸಲು ಚೆನ್ನಾಗಿರುತ್ತೆ,+

ಭೂಮಿಯ ಹುಲ್ಲಿನ ತರ ಪಟ್ಟಣಗಳಲ್ಲಿ ಜನ್ರು ಜಾಸ್ತಿ ಆಗ್ತಾರೆ.+

17 ಅವನ ಹೆಸ್ರು ಯಾವಾಗ್ಲೂ ಇರುತ್ತೆ,+

ಸೂರ್ಯನಿರೋ ತನಕ ಅವನ ಹೆಸ್ರು ಪ್ರಸಿದ್ಧವಾಗಲಿ.

ಅವನಿಂದಾಗಿ ಜನ್ರೆಲ್ಲ ಆಶೀರ್ವಾದಗಳನ್ನ ಪಡಿಲಿ,+

ಎಲ್ಲ ಜನಾಂಗಗಳು ಅವನನ್ನ ಭಾಗ್ಯವಂತ ಅಂತ ಕರೀಲಿ.

18 ಇಸ್ರಾಯೇಲ್‌ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ,+

ಆತನು ಮಾತ್ರ ಅದ್ಭುತಗಳನ್ನ ಮಾಡ್ತಾನೆ.+

19 ಗೌರವ ಇರೋ ಆತನ ಹೆಸ್ರಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ,+

ಆತನ ಮಹಿಮೆ ಇಡೀ ಭೂಮಿಯನ್ನ ತುಂಬಿಕೊಳ್ಳಲಿ.+

ಆಮೆನ್‌,* ಆಮೆನ್‌.

20 ಇಷಯನ ಮಗ ದಾವೀದನ+ ಪ್ರಾರ್ಥನೆ ಇಲ್ಲಿಗೆ ಮುಗಿಯುತ್ತೆ.

ಮೂರನೇ ಪುಸ್ತಕ

(ಕೀರ್ತನೆ 73-89)

ಆಸಾಫನ ಮಧುರ ಗೀತೆ.+

73 ಶುದ್ಧ ಮನಸ್ಸಿರೋ ಇಸ್ರಾಯೇಲ್ಯರಿಗೆ ದೇವರು ನಿಜವಾಗ್ಲೂ ಒಳ್ಳೇದನ್ನೇ ಮಾಡ್ತಾನೆ.+

 2 ಆದ್ರೆ ನನ್ನ ಕಾಲು ಇನ್ನೇನು ದಾರಿ ತಪ್ಪಿ ಹೋಗ್ತಿತ್ತು,

ನನ್ನ ಪಾದ ಜಾರಿ ಇನ್ನೇನು ಬೀಳ್ತಿದ್ದೆ.+

 3 ಯಾಕಂದ್ರೆ ಕೆಟ್ಟವರು ಆರಾಮಾಗಿ ಜೀವಿಸ್ತಾ ಇರೋದನ್ನ ನೋಡಿ,

ಆ ಗರ್ವಿಷ್ಠರ* ಮೇಲೆ ನನಗೆ ಹೊಟ್ಟೆಕಿಚ್ಚಾಯ್ತು.+

 4 ಅವರು ಗಟ್ಟಿಮುಟ್ಟಾಗಿದ್ದಾರೆ.*

ಸಾವಿನಲ್ಲೂ ಅವ್ರಿಗೆ ನೋವು ಇಲ್ಲ.+

 5 ಬೇರೆಯವ್ರಿಗೆ ಇರೋ ತೊಂದರೆಗಳು ಅವ್ರಿಗಿಲ್ಲ,+

ಬೇರೆಯವ್ರ ತರ ಅವರು ಕಷ್ಟಪಡಲ್ಲ.+

 6 ಹಾಗಾಗಿ ಅಹಂಕಾರನೇ ಅವ್ರ ಕತ್ತಿನ ಸರ,+

ಹಿಂಸೆನೇ ಅವ್ರ ಬಟ್ಟೆ.

 7 ಅವ್ರ ಸಮೃದ್ಧಿಯಿಂದ* ಅವ್ರ ಕಣ್ಣು ಉಬ್ಬಿಕೊಂಡಿದೆ,

ಅವರು ಮನಸ್ಸಲ್ಲಿ ನೆನಸಿದ್ದಕ್ಕಿಂತ ಹೆಚ್ಚು ಯಶಸ್ಸನ್ನ ಪಡ್ಕೊಂಡಿದ್ದಾರೆ.

 8 ಅವರು ಬೇರೆಯವ್ರನ್ನ ಕೀಳಾಗಿ ನೋಡ್ತಾ, ಕೆಟ್ಟಕೆಟ್ಟ ಮಾತು ಆಡ್ತಾರೆ,+

ಜನ್ರನ್ನ ಹೆದರಿಸಿ ಬೆದರಿಸಿ ಜಂಬದಿಂದ ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ.+

 9 ಅವರು ಕೊಚ್ಚಿಕೊಳ್ಳೋ ಮಾತುಗಳು ಆಕಾಶ ಮುಟ್ಟುತ್ತೆ,

ಅವರು ಇಷ್ಟಬಂದ ಹಾಗೆ ಮಾತಾಡ್ತಾ ಭೂಮಿಯಲ್ಲೆಲ್ಲ ತಿರುಗ್ತಾರೆ.

10 ಹಾಗಾಗಿ ದೇವ್ರ ಜನ್ರು ಅವ್ರ ಕಡೆ ವಾಲ್ತಾರೆ,

ಉಕ್ಕಿ ಹರೀತಿರೋ ಅವ್ರ ನೀರನ್ನ ಕುಡಿತಾರೆ.

11 “ದೇವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ?+

ಸರ್ವೋನ್ನತನಿಗೆ ನಿಜವಾಗ್ಲೂ ಇದ್ರ ಬಗ್ಗೆ ಗೊತ್ತಾ?” ಅಂತ ಅವರು ಕೇಳ್ತಾರೆ.

12 ಹೌದು, ಈ ಕೆಟ್ಟವರಿಗೆ ಜೀವನ ಯಾವಾಗ್ಲೂ ಆರಾಮಾಗಿ ಇರುತ್ತೆ.+

ಅವ್ರ ಆಸ್ತಿ ಜಾಸ್ತಿ ಆಗ್ತಾನೇ ಇರುತ್ತೆ.+

13 ನಾನು ನನ್ನ ಹೃದಯನ ಶುದ್ಧವಾಗಿ ಇಟ್ಕೊಂಡು,

ನಾನು ನನ್ನನ್ನೇ ನಿರಪರಾಧಿ ಅಂತ ಸಾಬೀತು ಮಾಡಿದ್ದು ಎಲ್ಲ ವ್ಯರ್ಥ ಆಯ್ತು.+

14 ಇಡೀ ದಿನ ನಾನು ಕಷ್ಟಪಡ್ತಿದ್ದೆ,+

ದಿನಾ ಬೆಳಿಗ್ಗೆ ದೇವರು ನನಗೆ ಶಿಕ್ಷೆ ಕೊಡ್ತಿದ್ದ.+

15 ಆದ್ರೆ ಈ ವಿಷ್ಯಗಳನ್ನ ನಾನು ಹೇಳ್ಕೊಂಡಿದ್ರೆ,

ನಾನು ನಿನ್ನ ಜನ್ರಿಗೆ ದ್ರೋಹಮಾಡಿದ ಹಾಗೆ ಆಗ್ತಿತ್ತು.

16 ನಾನದನ್ನ ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸಿದಾಗ,

ಅದ್ರಿಂದ ನನಗೆ ನೋವಾಗ್ತಿತ್ತು.

17 ದೇವರ ಆರಾಧನಾ ಸ್ಥಳಕ್ಕೆ ಹೋಗಿ

ಕೆಟ್ಟವರ ಭವಿಷ್ಯದ ಬಗ್ಗೆ ಯೋಚಿಸಿದ ಮೇಲೆನೇ ನನಗೆ ಆ ನೋವು ಕಮ್ಮಿ ಆಯ್ತು.

18 ನೀನು ಖಂಡಿತ ಅವ್ರನ್ನ ಜಾರಿ ಬೀಳೋ ದಾರಿಯಲ್ಲಿ ನಿಲ್ಲಿಸ್ತೀಯ.+

ಹಾಗಾಗಿ ಅವರು ಬಿದ್ದು ನಾಶ ಆಗ್ತಾರೆ.+

19 ಎಷ್ಟು ಬೇಗ ಅವರು ಹಾಳಾಗಿ ಹೋದ್ರು!+

ಇದ್ದಕ್ಕಿದ್ದ ಹಾಗೆ ವಿಪತ್ತು ಬಂದು ಅವರು ಭಯಂಕರ ಅಂತ್ಯ ಕಂಡ್ರು!

20 ಯೆಹೋವನೇ, ಒಬ್ಬ ವ್ಯಕ್ತಿ ನಿದ್ದೆಯಿಂದ ಎದ್ದಾಗ ಕನಸನ್ನ ಮರಿಯೋ ತರ,

ನೀನು ಎದ್ದಾಗ, ಅವ್ರನ್ನ ಮರೆತುಬಿಡ್ತೀಯ.

21 ಆದ್ರೆ ನನ್ನ ಹೃದಯ ನೊಂದುಹೋಗಿತ್ತು,+

ನನ್ನ ಅಂತರಾಳದಲ್ಲಿ* ತುಂಬ ನೋವಿತ್ತು.

22 ನಾನು ಮೂರ್ಖನಾಗಿದ್ದೆ, ನನಗೆ ತಿಳುವಳಿಕೆ ಇರಲಿಲ್ಲ,

ಬುದ್ಧಿಯಿಲ್ಲದ ಮೃಗದ ತರ ಇದ್ದೆ.

23 ಆದ್ರೆ ಈಗ ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ,

ನೀನು ನನ್ನ ಬಲಗೈಯನ್ನ ಹಿಡ್ಕೊಂಡು ಇರ್ತಿಯ.+

24 ನೀನು ಸಲಹೆ ಕೊಟ್ಟು ನನಗೆ ದಾರಿ ತೋರಿಸ್ತೀಯ,+

ಆಮೇಲೆ ನೀನು ನನಗೆ ಸನ್ಮಾನ ಮಾಡಿಸ್ತೀಯ.+

25 ಸ್ವರ್ಗದಲ್ಲಿ ನಿನ್ನನ್ನ ಬಿಟ್ರೆ ನನಗೆ ಬೇರೆ ಯಾರಿದ್ದಾರೆ?

ನೀನು ನನ್ನ ಜೊತೆ ಇದ್ರೆ ಭೂಮಿ ಮೇಲಿರೋ ಯಾರೂ ನನಗೆ ಬೇಕಾಗಿಲ್ಲ.+

26 ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ,

ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ.

ಯಾವಾಗ್ಲೂ ಆತನೇ ನನ್ನ ಪಾಲು.+

27 ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ.

ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+

28 ಆದ್ರೆ ನನ್ನ ಪ್ರಕಾರ, ದೇವರಿಗೆ ಹತ್ತಿರ ಆಗೋದೇ ಒಳ್ಳೇದು.+

ವಿಶ್ವದ ರಾಜ ಯೆಹೋವನ ಕೈಕೆಲಸಗಳನ್ನೆಲ್ಲ ಹೇಳೋಕೆ ಆತನನ್ನ ಆಶ್ರಯ ಮಾಡ್ಕೊಂಡಿದ್ದೀನಿ.+

ಮಸ್ಕಿಲ್‌. ಆಸಾಫನ+ ಕೀರ್ತನೆ

74 ದೇವರೇ, ಯಾಕೆ ನಮ್ಮನ್ನ ಶಾಶ್ವತವಾಗಿ ಬಿಟ್ಟುಬಿಟ್ಟಿದ್ದೀಯ?+

ನೀನು ಮೇಯಿಸೋ ನಿನ್ನ ಕುರಿಗಳ ಮೇಲೆ ಯಾಕೆ ನಿನ್ನ ರೋಷಾಗ್ನಿ ಹೊತ್ತಿ ಉರೀತಿದೆ?*+

 2 ತುಂಬ ಕಾಲದ ಹಿಂದೆನೇ ನೀನು ಗಳಿಸಿದ ಆ ಜನ್ರನ್ನ ನೆನಪಿಸ್ಕೊ,+

ನಿನ್ನ ಆಸ್ತಿಯಾಗಿ ನೀನು ಬಿಡಿಸ್ಕೊಂಡ ಆ ಕುಲನ ಮರೀಬೇಡ.+

ನೀನಿದ್ದ ಆ ಚೀಯೋನ್‌ ಬೆಟ್ಟನ ಜ್ಞಾಪಿಸ್ಕೊ.+

 3 ಪೂರ್ತಿ ಹಾಳು ಬಿದ್ದಿರೋ ಜಾಗಗಳಿಗೆ ಗಮನಕೊಡು.+

ಪವಿತ್ರ ಸ್ಥಳದಲ್ಲಿದ್ದ ಎಲ್ಲವನ್ನ ವೈರಿ ನಾಶಮಾಡಿದ್ದಾನೆ.+

 4 ನಿನ್ನ ಆರಾಧನಾ ಸ್ಥಳದಲ್ಲಿ* ನಿನ್ನ ಶತ್ರುಗಳು ಜೋರಾಗಿ ಗರ್ಜಿಸಿದ್ದಾರೆ.+

ಅವರು ಅಲ್ಲಿ ತಮ್ಮ ಸ್ವಂತ ಧ್ವಜಗಳನ್ನ ಗುರುತಾಗಿ ನಿಲ್ಲಿಸಿದ್ದಾರೆ.

 5 ದೊಡ್ಡ ಕಾಡಲ್ಲಿರೋ ಮರಗಳನ್ನ ಕೊಡಲಿಯಿಂದ ಕಡಿಯೋ ಜನ್ರ ತರ ಅವರಿದ್ದಾರೆ.

 6 ಅವರು ತಮ್ಮ ಕೊಡಲಿಯಿಂದ, ಕಬ್ಬಿಣದ ಕಂಬಿಗಳಿಂದ ಎಲ್ಲ ಕೆತ್ತನೆಗಳನ್ನ+ ಹೊಡೆದುಹಾಕಿದ್ರು.

 7 ಅವರು ನಿನ್ನ ಆರಾಧನಾ ಸ್ಥಳಕ್ಕೆ ಬೆಂಕಿ ಇಟ್ರು.+

ನಿನ್ನ ಹೆಸ್ರಿಗೆ ಗೌರವ ತರೋ ಪವಿತ್ರ ಡೇರೆನ ನೆಲಸಮ ಮಾಡಿ ಅದಕ್ಕೆ ಅವಮಾನ ಮಾಡಿದ್ರು.

 8 ಅವರು ಮತ್ತು ಅವ್ರ ಸಂತತಿ ತಮ್ಮ ಹೃದಯದಲ್ಲಿ,

“ಈ ದೇಶದಲ್ಲಿರೋ ದೇವ್ರ ಎಲ್ಲ ಆಲಯಗಳನ್ನ* ಸುಟ್ಟು ಹಾಕಬೇಕು” ಅಂದ್ಕೊಂಡ್ರು.

 9 ನಮಗೆ ಯಾವ ಗುರುತುಗಳೂ ಕಾಣಿಸ್ತಿಲ್ಲ,

ಒಬ್ಬ ಪ್ರವಾದಿನೂ ಇಲ್ಲ,

ಎಲ್ಲಿ ತನಕ ಹೀಗೇ ನಡಿಯುತ್ತೆ ಅಂತ ನಮಗೆ ಯಾರಿಗೂ ಗೊತ್ತಿಲ್ಲ.

10 ದೇವರೇ, ವೈರಿ ನಿನ್ನನ್ನ ಹೀಗೆ ಎಷ್ಟರ ತನಕ ಹಂಗಿಸ್ತಾ ಇರ್ತಾನೆ?+

ಎಷ್ಟರ ತನಕ ನಿನ್ನ ಶತ್ರು ನಿನ್ನ ಹೆಸ್ರಿಗೆ ಅವಮಾನ ಮಾಡ್ತಾನೆ?+

11 ನೀನು ಯಾಕೆ ನಿನ್ನ ಕೈಯನ್ನ, ನಿನ್ನ ಬಲಗೈಯನ್ನ ಹಿಂದೆ ತಗೊಂಡೆ?+

ಕಟ್ಕೊಂಡಿರೋ* ನಿನ್ನ ಕೈಯನ್ನ ಹೊರಗೆ ತೆಗೆದು ಅವ್ರಿಗೆ ಅಂತ್ಯ ಹಾಡು.

12 ನನ್ನ ದೇವರೇ, ಎಷ್ಟೋ ವರ್ಷಗಳಿಂದ ನೀನೇ ನನ್ನ ರಾಜ,

ಭೂಮಿ ಮೇಲೆ ನೀನೇ ನಮ್ಮನ್ನ ಕಾಪಾಡೋನು.+

13 ನೀನು ನಿನ್ನ ಬಲದಿಂದ ಸಮುದ್ರವನ್ನ ಕಲಕಿದೆ,+

ಸಮುದ್ರದಲ್ಲಿರೋ ದೊಡ್ಡದೊಡ್ಡ ಜೀವಿಗಳ ತಲೆಗಳನ್ನ ಜಜ್ಜಿಬಿಟ್ಟೆ.

14 ಲಿವ್ಯಾತಾನ್‌* ತಲೆಗಳನ್ನ ಜಜ್ಜಿಬಿಟ್ಟೆ,

ಮರುಭೂಮಿಯಲ್ಲಿ ವಾಸಿಸೋ ಜನ್ರಿಗೆ ಅದನ್ನ ಆಹಾರವಾಗಿ ಕೊಟ್ಟೆ.

15 ನೀನು ನೀರಿನ ಬುಗ್ಗೆಗಳನ್ನ, ತೊರೆಗಳನ್ನ ತೆರೆದೆ,+

ಯಾವಾಗ್ಲೂ ಉಕ್ಕಿ ಹರೀತಿದ್ದ ನದಿಗಳನ್ನ ಬತ್ತಿಸಿಬಿಟ್ಟೆ.+

16 ಹಗಲೂ ನಿಂದೇ, ರಾತ್ರಿನೂ ನಿಂದೇ.

ಬೆಳಕನ್ನ ಮಾಡಿದವನು ನೀನೇ, ಸೂರ್ಯನನ್ನ ಮಾಡಿದವನೂ ನೀನೇ.+

17 ಭೂಮಿಗೆ ಗಡಿಗಳನ್ನ ಇಟ್ಟವನು ನೀನೇ,+

ಬೇಸಿಗೆಗಾಲ, ಚಳಿಗಾಲವನ್ನ ಮಾಡಿದವನೂ ನೀನೇ.+

18 ಯೆಹೋವನೇ, ಶತ್ರು ಹಂಗಿಸೋದನ್ನ ನೆನಪಿಸ್ಕೊ,

ಮುರ್ಖರು ನಿನ್ನ ಹೆಸ್ರಿಗೆ ಹೇಗೆ ಅವಮಾನ ಮಾಡಿದ್ದಾರೆ ಅಂತ ನೋಡು.+

19 ನಿನ್ನ ಪಾರಿವಾಳದ ಜೀವ ಕಾಡುಪ್ರಾಣಿಗಳ ಬಾಯಿಗೆ ತುತ್ತಾಗೋಕೆ ಬಿಡಬೇಡ.

ಕಷ್ಟದಲ್ಲಿರೋ ನಿನ್ನ ಜನ್ರ ಜೀವವನ್ನ ಶಾಶ್ವತವಾಗಿ ಮರೆತು ಹೋಗಬೇಡ.

20 ನಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದನ ನೆನಪಿಸ್ಕೊ,

ಯಾಕಂದ್ರೆ ಭೂಮಿ ಮೇಲೆ ಕತ್ತಲು ತುಂಬಿರೋ ಜಾಗಗಳು ಬಲಾತ್ಕಾರಿಗಳ ನೆಲೆ ಆಗಿಬಿಟ್ಟಿದೆ.

21 ಜಜ್ಜಿಹೋಗಿರೋ ವ್ಯಕ್ತಿ ನಿರಾಶೆಯಿಂದ ಹಿಂದೆ ಹೋಗೋಕೆ ಬಿಡಬೇಡ,+

ದೀನರು, ಬಡವರು ನಿನ್ನ ಹೆಸ್ರನ್ನ ಹೊಗಳೋ ತರ ಆಗಲಿ.+

22 ದೇವರೇ ಎದ್ದೇಳು, ನಿನ್ನ ಮೊಕದ್ದಮೆಯನ್ನ ವಾದಿಸು.

ಬುದ್ಧಿಯಿಲ್ಲದವರು ಇಡೀ ದಿನ ನಿನ್ನನ್ನ ಹೇಗೆ ಹಂಗಿಸ್ತಾ ಇದ್ದಾರೆ ಅಂತ ನೆನಪಿಸ್ಕೊ.+

23 ನಿನ್ನ ಎದುರಾಳಿಗಳು ಹೇಳ್ತಿರೋ ಮಾತುಗಳನ್ನ ಮರೀಬೇಡ.

ನಿನ್ನ ವಿರುದ್ಧ ಎದ್ದಿರೋರ ಕೂಗಾಟ ಮುಗಿಲು ಮುಟ್ತಾ ಇದೆ.

ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ. ಒಂದು ಗೀತೆ.

75 ದೇವರೇ, ನಾವು ನಿನಗೆ ಕೃತಜ್ಞತೆ ಹೇಳ್ತೀವಿ, ಹೌದು ನಿನಗೆ ಧನ್ಯವಾದ ಹೇಳ್ತೀವಿ,

ನಿನ್ನ ಹೆಸ್ರು ನಮ್ಮ ಜೊತೆ ಇದೆ,+

ಜನ್ರು ನಿನ್ನ ಅದ್ಭುತಗಳನ್ನ ಹೇಳ್ತಾರೆ.

 2 ನೀನು ಹೀಗೆ ಹೇಳ್ತಿದ್ದೆ “ನಾನು ಇಂಥ ಸಮಯ ಅಂದಮೇಲೆ,

ಆ ಸಮಯಕ್ಕೆ ಸರಿಯಾಗಿ ನ್ಯಾಯವಾಗಿ ತೀರ್ಪು ಮಾಡ್ತೀನಿ.

 3 ಭೂಮಿ ಮತ್ತು ಅದ್ರ ನಿವಾಸಿಗಳೆಲ್ಲ ಭಯದಿಂದ ನಡುಗಿದಾಗ,

ಅದ್ರ ಕಂಬಗಳನ್ನ ಸ್ಥಿರವಾಗಿ ಇಟ್ಟವನು ನಾನೇ.” (ಸೆಲಾ)

 4 ಬಡಾಯಿ ಕೊಚ್ಕೊಳ್ಳೋರಿಗೆ ನಾನು, “ಕೊಚ್ಕೊಬೇಡಿ” ಅಂತ ಹೇಳ್ತೀನಿ.

ಕೆಟ್ಟವರಿಗೆ ನಾನು ಹೀಗೆ ಹೇಳ್ತೀನಿ “ನೀವು ನಿಮ್ಮ ಕೊಂಬನ್ನ* ಮೇಲಕ್ಕೆ ಎತ್ತಬೇಡಿ.

 5 ನಿಮ್ಮ ಕೊಂಬನ್ನ* ತುಂಬ ಮೇಲಕ್ಕೆ ಎತ್ತಬೇಡಿ,

ಜಂಬದಿಂದ ಮಾತಾಡಬೇಡಿ.

 6 ಯಾಕಂದ್ರೆ ಘನತೆ ಪೂರ್ವದಿಂದಾಗಲಿ

ಪಶ್ಚಿಮದಿಂದಾಗಲಿ ದಕ್ಷಿಣದಿಂದಾಗಲಿ ಬರಲ್ಲ.

 7 ದೇವರೇ ನ್ಯಾಯಾಧೀಶ.+

ಆತನು ಒಬ್ಬನನ್ನ ತಗ್ಗಿಸಿ ಇನ್ನೊಬ್ಬನನ್ನ ಮೇಲಕ್ಕೆ ಎತ್ತುತ್ತಾನೆ.+

 8 ಯೆಹೋವನ ಕೈಯಲ್ಲಿ ಒಂದು ಪಾನಪಾತ್ರೆ ಇದೆ,+

ಅದು ನೊರೆ ಬಿಡ್ತಾ ಇದೆ. ಅದ್ರಲ್ಲಿ ಮಸಾಲೆ ಮಿಶ್ರಣ ತುಂಬಿದೆ,

ಆತನು ಅದನ್ನ ಸುರಿದೇ ಸುರಿತಾನೆ,

ಆಗ ಭೂಮಿ ಮೇಲಿರೋ ಕೆಟ್ಟವರೆಲ್ಲ ಅದ್ರ ತಳದಲ್ಲಿ ಇರೋದನ್ನೂ ಕುಡಿತಾರೆ.”+

 9 ಆದ್ರೆ ನಾನು, ಅದ್ರ ಬಗ್ಗೆ ಯಾವಾಗ್ಲೂ ಹೇಳ್ತಾನೇ ಇರ್ತಿನಿ,

ಯಾಕೋಬನ ದೇವರನ್ನ ಹೊಗಳ್ತಾ ಹಾಡು ಹಾಡ್ತೀನಿ.*

10 ಯಾಕಂದ್ರೆ ಆತನು ಹೀಗೆ ಹೇಳ್ತಾನೆ “ನಾನು ಕೆಟ್ಟವರ ಕೊಂಬುಗಳನ್ನ* ಮುರೀತೀನಿ,

ನೀತಿವಂತರ ಕೊಂಬುಗಳನ್ನ* ಮೇಲಕ್ಕೆ ಎತ್ತುತ್ತೀನಿ.”

ಗಾಯಕರ ನಿರ್ದೇಶಕನಿಗೆ ಸೂಚನೆ, ತಂತಿವಾದ್ಯಗಳ ಜೊತೆ ಹಾಡಬೇಕು. ಆಸಾಫನ+ ಮಧುರ ಗೀತೆ.

76 ಯೆಹೂದದಲ್ಲಿ ಇರೋರಿಗೆಲ್ಲ ದೇವರ ಪರಿಚಯ ಇದೆ,+

ಇಸ್ರಾಯೇಲಲ್ಲಿ ಆತನ ಹೆಸ್ರು ಪ್ರಸಿದ್ಧವಾಗಿದೆ.+

 2 ಸಾಲೇಮಲ್ಲಿ+ ಆತನ ಗುಡಾರ ಇದೆ,

ಚೀಯೋನಲ್ಲಿ ಆತನ ಮನೆ ಇದೆ.+

 3 ಅಲ್ಲಿ ಆತನು ಉರೀತಿರೋ ಬಾಣಗಳನ್ನ,

ಗುರಾಣಿ, ಕತ್ತಿ ಮತ್ತು ಯುದ್ಧದ ಆಯುಧಗಳನ್ನ ಮುರಿದುಬಿಟ್ಟ.+ (ಸೆಲಾ)

 4 ದೇವರೇ, ನೀನು ತೇಜಸ್ಸಿಂದ ಹೊಳೀತಿದ್ದೀಯ,*

ಕಾಡು ಪ್ರಾಣಿಗಳಿರೋ ಬೆಟ್ಟಕ್ಕಿಂತ ನಿನ್ನ ಮಹಿಮೆ ಎಷ್ಟೋ ದೊಡ್ಡದು.

 5 ಧೈರ್ಯದ ಗುಂಡಿಗೆ ಇರೋರನ್ನ ದೋಚಿದ್ರು.+

ವೀರ ಸೈನಿಕರು ಗಾಢ ನಿದ್ದೆಗೆ ಜಾರಿದ್ರು,

ಯಾಕಂದ್ರೆ ಅವ್ರಿಗೆ ಸಹಾಯ ಮಾಡೋಕೆ ಯಾರೂ ಇರ್ಲಿಲ್ಲ.+

 6 ಯಾಕೋಬನ ದೇವರೇ, ನೀನು ಗದರಿಸಿದಾಗ

ಸಾರಥಿಗಳು ಗಾಢ ನಿದ್ದೆಗೆ ಹೋದ್ರು,

ಕುದುರೆಗಳು ಗಾಢ ನಿದ್ದೆಗೆ ಜಾರಿದ್ವು.+

 7 ನೀನೊಬ್ಬನೇ ಭಯವಿಸ್ಮಯ ಹುಟ್ಟಿಸೋ ದೇವರು.+

ನಿನ್ನ ಉಗ್ರ ಕೋಪ ತಾಳಿಕೊಳ್ಳೋಕೆ ಯಾರಿಂದಾಗುತ್ತೆ?+

 8 ಸ್ವರ್ಗದಿಂದ ನೀನು ನ್ಯಾಯ ತೀರಿಸ್ತೀಯ,+

ಭೂಮಿ ಹೆದರಿ ಮೌನವಾಯ್ತು.+

 9 ಆಗ ನೀನು ಭೂಮಿಯಲ್ಲಿರೋ ದೀನ ಜನ್ರನ್ನೆಲ್ಲ ರಕ್ಷಿಸೋಕೆ,

ನ್ಯಾಯ ತೀರಿಸೋಕೆ ಎದ್ದೆ.+ (ಸೆಲಾ)

10 ಮನುಷ್ಯನ ಕೋಪ ಜಾಸ್ತಿ ಆದಷ್ಟು ನಿನಗೆ ಹೊಗಳಿಕೆ ಜಾಸ್ತಿ ಸಿಗುತ್ತೆ,+

ಅವ್ರಲ್ಲಿ ಉಳಿದಿರೋ ಅಲ್ಪಸ್ವಲ್ಪ ಕೋಪದಿಂದಾನೂ ನೀನು ನಿನ್ನನ್ನೇ ಅಲಂಕರಿಸಿಕೊಳ್ತೀಯ.

11 ನಿಮ್ಮ ದೇವರಾದ ಯೆಹೋವನಿಗೆ ಹರಕೆಗಳನ್ನ ಮಾಡ್ಕೊಳ್ಳಿ, ಅವುಗಳನ್ನ ತೀರಿಸಿ,+

ಆತನ ಸುತ್ತ ಇರೋರೆಲ್ಲ ಭಯಭಕ್ತಿಯಿಂದ ಆತನಿಗೆ ಉಡುಗೊರೆಗಳನ್ನ ತರಲಿ.+

12 ನಾಯಕರ ಜಂಬವನ್ನ ಆತನು ಅಡಗಿಸಿಬಿಡ್ತಾನೆ,

ರಾಜರಿಗೆ ಭಯ ಹುಟ್ಟಿಸ್ತಾನೆ.

ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್‌* ರಾಗದಲ್ಲಿ ಹಾಡಬೇಕು. ಆಸಾಫನ+ ಮಧುರ ಗೀತೆ.

77 ನಾನು ಜೋರಾಗಿ ದೇವರಿಗೆ ಮೊರೆ ಇಡ್ತೀನಿ,

ನಾನು ದೇವರಿಗೆ ಪ್ರಾರ್ಥಿಸ್ತೀನಿ, ಆತನು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊತಾನೆ.+

 2 ಕಷ್ಟಕಾಲದಲ್ಲಿ ನಾನು ಯೆಹೋವನಿಗಾಗಿ ಹುಡುಕ್ತೀನಿ.+

ಇಡೀ ರಾತ್ರಿ ನಾನು ನನ್ನ ಕೈಗಳನ್ನ ಆತನ ಕಡೆಗೆ ಚಾಚ್ಕೊಂಡೇ ಇರ್ತಿನಿ.

ಆದ್ರೂ ನನಗೆ ನೆಮ್ಮದಿ ಸಿಗ್ತಿಲ್ಲ.

 3 ದೇವರು ಮಾಡಿದ್ದನ್ನೆಲ್ಲ ನೆನಪಿಸ್ಕೊಂಡು ಆತನಿಗಾಗಿ ಹಾತೊರಿತಾ ಇದ್ದೀನಿ,+

ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ, ನನ್ನ ಶಕ್ತಿ ಇಳಿದುಹೋಗಿದೆ.+ (ಸೆಲಾ)

 4 ನನ್ನ ಕಣ್ಣಿನ ರೆಪ್ಪೆ ಮುಚ್ಚಿಹೋಗದೆ ಇರೋ ತರ ನೀನು ಹಿಡ್ಕೊತೀಯ,

ನಾನು ಚಿಂತೆಯಲ್ಲೇ ಮುಳುಗಿದ್ದೀನಿ, ನನ್ನಿಂದ ಮಾತಾಡೋಕೆ ಆಗ್ತಿಲ್ಲ.

 5 ಮುಗಿದು ಹೋದ ದಿನಗಳ ಬಗ್ಗೆ ನಾನು ಆಲೋಚಿಸ್ತೀನಿ,+

ಉರುಳಿ ಹೋದ ವರ್ಷಗಳ ಬಗ್ಗೆ ನಾನು ನೆನಪಿಸ್ಕೊಳ್ತೀನಿ.

 6 ರಾತ್ರಿ ಹೊತ್ತು ನಾನು ನನ್ನ ಹಾಡನ್ನ* ನೆನಪಿಸ್ಕೊತೀನಿ,+

ನನ್ನ ಮನಸ್ಸಲ್ಲಿ ಧ್ಯಾನಿಸ್ತೀನಿ,+

ಈ ಪ್ರಶ್ನೆಗಳಿಗೆ ಶ್ರದ್ಧೆಯಿಂದ ಉತ್ರ ಹುಡುಕ್ತೀನಿ.

 7 ಯೆಹೋವ ನಮ್ಮನ್ನ ಶಾಶ್ವತಕ್ಕೂ ಬಿಟ್ಟುಬಿಡ್ತಾನಾ?+

ಆತನು ತನ್ನ ಕೃಪೆನ ಇನ್ಯಾವತ್ತೂ ತೋರಿಸಲ್ವಾ?+

 8 ಆತನು ತನ್ನ ಪ್ರೀತಿಯನ್ನ ಶಾಶ್ವತವಾಗಿ ತೋರಿಸದೆ ಇರ್ತಾನಾ?

ಆತನು ಕೊಟ್ಟ ಮಾತು ನಿಜ ಆಗೋದನ್ನ ಯಾವ ಪೀಳಿಗೆನೂ ನೋಡಲ್ವಾ?

 9 ದೇವರು ತನ್ನ ಕೃಪೆ ತೋರಿಸೋದನ್ನ ಮರೆತುಬಿಟ್ಟಿದ್ದಾನಾ?+

ಅಥವಾ ಆತನು ತನ್ನ ಕೋಪದಿಂದ ಕರುಣೆ ತೋರಿಸೋದನ್ನ ನಿಲ್ಲಿಸಿಬಿಟ್ಟಿದ್ದಾನಾ? (ಸೆಲಾ)

10 “ಸರ್ವೋನ್ನತನು ನಮಗೆ ಸಹಾಯ ಮಾಡೋದನ್ನ ನಿಲ್ಲಿಸಿಬಿಟ್ಟಿದ್ದಾನೆ

ಅನ್ನೋ ಚಿಂತೆ ನನ್ನನ್ನ ಕಿತ್ತುತಿಂತಿದೆ”+ ಅಂತ ನಾನು ಹೇಳ್ತಾ ಇರಬೇಕಾ?

11 ಯಾಹುವಿನ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ,

ನೀನು ತುಂಬ ಹಿಂದೆ ಮಾಡಿದ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ನಾನು ನೆನಪಿಸ್ಕೊಳ್ತೀನಿ.

12 ನಿನ್ನ ಎಲ್ಲ ಚಟುವಟಿಕೆಗಳನ್ನ ನಾನು ಧ್ಯಾನಿಸ್ತೀನಿ,

ನಿನ್ನ ಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.+

13 ದೇವರೇ, ನಿನ್ನ ದಾರಿಗಳು ಪವಿತ್ರ.

ದೇವರೇ, ನಿನ್ನಂಥ ಮಹಾ ದೇವರು ಬೇರೆ ಯಾರಾದ್ರೂ ಇದ್ದಾರಾ?+

14 ನೀನೇ ಸತ್ಯ ದೇವರು, ನಿನ್ನ ಕೆಲಸಗಳೆಲ್ಲ ಅದ್ಭುತ.+

ನೀನು ನಿನ್ನ ಬಲವನ್ನ ಜನಾಂಗಗಳಿಗೆ ತೋರಿಸಿದೆ.+

15 ನಿನ್ನ ಶಕ್ತಿಯಿಂದ* ನಿನ್ನ ಜನ್ರಾದ

ಯಾಕೋಬನ ಮತ್ತು ಯೋಸೇಫನ ಮಕ್ಕಳನ್ನ ಕಾಪಾಡಿದೆ.*+ (ಸೆಲಾ)

16 ದೇವರೇ, ಸಮುದ್ರ ನಿನ್ನನ್ನ ನೋಡ್ತು,

ಅದು ನಿನ್ನನ್ನ ನೋಡಿ ಭಯಪಡ್ತು.+

ಆಳವಾದ ನೀರು ಅಲ್ಲೋಲಕಲ್ಲೋಲ ಆಯ್ತು.

17 ಮೋಡಗಳು ನೀರು ಸುರಿಸಿದ್ವು.

ಮೇಘಗಳಿಂದ ತುಂಬಿದ ಆಕಾಶ ಗುಡುಗಿತು,

ನಿನ್ನ ಮಿಂಚಿನ ಬಾಣಗಳು ಎಲ್ಲ ಕಡೆ ಹೊಳೆದ್ವು.+

18 ನಿನ್ನ ಗುಡುಗಿನ+ ಶಬ್ದ ಯುದ್ಧರಥದ ಶಬ್ದದ ತರ ಇತ್ತು,

ನಿನ್ನ ಮಿಂಚಿನ ಹೊಳಪಿಂದ ಇಡೀ ಭೂಮಿ* ಪ್ರಕಾಶಿಸ್ತು.+

ಭೂಮಿ ನಡುಗಿ, ಕಂಪಿಸ್ತು.+

19 ನಿನ್ನ ದಾರಿ ಸಮುದ್ರದ ಒಳಗಿಂದ ಹೋಯ್ತು,+

ನಿನ್ನ ಮಾರ್ಗ ಎಷ್ಟೋ ಜಲರಾಶಿಗಳ ಮಧ್ಯದಿಂದ ಹೋಯ್ತು,

ಆದ್ರೆ ನಿನ್ನ ಹೆಜ್ಜೆ ಗುರುತನ್ನ ಕಂಡುಹಿಡಿಯೋಕೆ ಆಗಲಿಲ್ಲ.

20 ಮೋಶೆ ಮತ್ತು ಆರೋನರ ಸಂರಕ್ಷಣೆಯ ಕೆಳಗೆ,*+

ನೀನು ನಿನ್ನ ಜನ್ರನ್ನ ಕುರಿ ಹಿಂಡಿನ ತರ ನಡೆಸಿದೆ.+

ಮಸ್ಕಿಲ್‌.* ಆಸಾಫನ+ ಕೀರ್ತನೆ.

78 ನನ್ನ ಜನ್ರೇ, ನನ್ನ ಉಪದೇಶ* ಕೇಳಿಸ್ಕೊಳ್ಳಿ,

ನನ್ನ ಬಾಯಿಂದ ಬರೋ ಮಾತುಗಳನ್ನ ಕೇಳಿಸ್ಕೊಳ್ಳಿ.

 2 ನಾನು ಗಾದೆಗಳ ಮೂಲಕ ಮಾತಾಡ್ತೀನಿ,

ಹಳೇ ಕಾಲದ ಒಗಟುಗಳನ್ನ ಹೇಳ್ತೀನಿ.+

 3 ನಾವು ಕೇಳಿಸ್ಕೊಂಡ, ನಮಗೆ ಗೊತ್ತಿರೋ ವಿಷ್ಯಗಳನ್ನ,

ನಮ್ಮ ಅಪ್ಪಂದಿರು ನಮಗೆ ಹೇಳಿಕೊಟ್ಟಿದ್ದನ್ನ,+

 4 ನಾವು ನಮ್ಮ ಮಕ್ಕಳಿಗೆ ಹೇಳದೆ ಇರಲ್ಲ,

ಹೊಗಳಲೇ ಬೇಕಾದ ಯೆಹೋವನ ಕೆಲಸಗಳನ್ನ ಮತ್ತು ಆತನ ಶಕ್ತಿಯನ್ನ,+

ಆತನು ಮಾಡಿದ ಅದ್ಭುತಗಳನ್ನ+

ನಾವು ಮುಂದೆ ಬರೋ ಪೀಳಿಗೆಗೆ ಹೇಳೇ ಹೇಳ್ತೀವಿ.+

 5 ಆತನು ಯಾಕೋಬನಿಗೆ ಒಂದು ವಿಷ್ಯ ಜ್ಞಾಪಿಸಿದ

ಇಸ್ರಾಯೇಲ್ಯರಿಗೆ ನಿಯಮ ಪುಸ್ತಕ ಕೊಟ್ಟ,

ಈ ವಿಷ್ಯಗಳನ್ನ ನಿಮ್ಮ ಮಕ್ಕಳಿಗೆ ತಿಳಿಸಬೇಕು ಅಂತ

ಆತನು ನಮ್ಮ ಪೂರ್ವಜರಿಗೆ ಆಜ್ಞೆ ಕೊಟ್ಟ.+

 6 ಆಗಲೇ ಮುಂದೆ ಬರೋ ಪೀಳಿಗೆಗೆ,

ಹುಟ್ಟೋ ಮಕ್ಕಳಿಗೆ ಅದ್ರ ಬಗ್ಗೆ ತಿಳ್ಕೊಳ್ಳೋಕೆ ಆಗುತ್ತೆ.+

ಅಷ್ಟೇ ಅಲ್ಲ ಅದನ್ನ ಅವ್ರ ಮಕ್ಕಳಿಗೂ ಹೇಳಿಕೊಡ್ತಾರೆ.+

 7 ಆಗ ಅವರು ದೇವರ ಮೇಲೆ ಭರವಸೆ ಇಡ್ತಾರೆ,

ದೇವರು ಮಾಡಿದ್ದನ್ನ ಮರೀದೆ+

ಆತನ ಆಜ್ಞೆಗಳನ್ನ ಪಾಲಿಸ್ತಾರೆ.+

 8 ಆಗ ಅವರು ತಮ್ಮ ಪೂರ್ವಜರ ತರ ಆಗಲ್ಲ,

ಅವ್ರ ಪೂರ್ವಜರು ಮೊಂಡರೂ ದಂಗೆಕೋರರೂ ಆಗಿದ್ರು,+

ಅವ್ರ ಹೃದಯ ಚಂಚಲವಾಗಿತ್ತು,+

ಅವರು ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು.

 9 ಎಫ್ರಾಯೀಮ್ಯರ ಹತ್ರ ಬಿಲ್ಲುಗಳಿದ್ರೂ,

ಯುದ್ಧದ ದಿನ ಓಡಿಹೋದ್ರು.

10 ಅವರು ದೇವರ ಒಪ್ಪಂದ ಪಾಲಿಸಲಿಲ್ಲ,+

ಆತನ ನಿಯಮ ಪುಸ್ತಕದ ಪ್ರಕಾರ ನಡೆಯೋಕೆ ಒಪ್ಪಲಿಲ್ಲ.+

11 ಅಷ್ಟೇ ಅಲ್ಲ ದೇವರು ಮಾಡಿದ್ದನ್ನ,

ಆತನು ಅವ್ರಿಗೆ ತೋರಿಸಿದ ಅದ್ಭುತಗಳನ್ನ+ ಅವರು ಮರೆತುಬಿಟ್ರು.+

12 ಈಜಿಪ್ಟಲ್ಲಿ, ಸೋನ್‌ ಪ್ರದೇಶದಲ್ಲಿ+

ಆತನು ಅವ್ರ ಪೂರ್ವಜರ ಕಣ್ಮುಂದೆ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+

13 ಅವರು ನಡೆದು ಹೋಗೋ ಹಾಗೆ ಸಮುದ್ರವನ್ನ ಎರಡು ಭಾಗ ಮಾಡಿದ,

ನೀರನ್ನ ಅಣೆಕಟ್ಟಿನ* ಹಾಗೆ ನಿಲ್ಲಿಸಿದ.+

14 ಆತನು ಅವ್ರನ್ನ ಹಗಲೆಲ್ಲ ಮೋಡದಿಂದ

ರಾತ್ರಿಯೆಲ್ಲ ಬೆಂಕಿಯ ಬೆಳಕಿಂದ ನಡೆಸಿದ.+

15 ಕಾಡಲ್ಲಿ ಬಂಡೆಗಳನ್ನ ಒಡೆದು,

ಸಮುದ್ರದಷ್ಟು ನೀರನ್ನ ಕೊಟ್ಟ.

ಆ ನೀರನ್ನ ಕುಡಿದು ಅವ್ರಿಗೆ ತೃಪ್ತಿ ಆಯ್ತು.+

16 ಕಡಿದಾದ ಬಂಡೆಯಿಂದ ಆತನು ಪ್ರವಾಹ ತಂದ,

ನದಿ ನೀರು ಹರಿಯೋ ತರ ನೀರನ್ನ ಹರಿಸಿದ.+

17 ಆದ್ರೆ ಅವರು ಕಾಡಲ್ಲಿ ಸರ್ವೋನ್ನತನ ವಿರುದ್ಧ ದಂಗೆ ಎದ್ದು,

ಆತನ ವಿರುದ್ಧ ಪಾಪ ಮಾಡ್ತಾನೇ ಇದ್ರು.+

18 ಅವರು ಆಸೆಪಟ್ಟ ಆಹಾರಕ್ಕಾಗಿ ಹಠಹಿಡಿದು,

ತಮ್ಮ ಹೃದಯದಲ್ಲಿ ದೇವರಿಗೇ ಸವಾಲು ಹಾಕಿದ್ರು.*+

19 “ಈ ಕಾಡಲ್ಲಿ ನಮಗೆ ಊಟ ಕೊಡೋಕೆ ದೇವರಿಂದ ಆಗುತ್ತಾ?” ಅಂತ ದೇವರ ವಿರುದ್ಧ ಮಾತಾಡಿದ್ರು.+

20 ಆತನು ಬಂಡೆಯನ್ನ ಹೊಡೆದ,

ಆಗ ನೀರು ಪ್ರವಾಹದ ತರ ಹರೀತು.+

ಹಾಗಿದ್ರೂ ಅವರು “ನಮಗೆ ಆತನು ರೊಟ್ಟಿ ಕೊಡೋಕೆ ಆಗುತ್ತಾ?

ತನ್ನ ಜನ್ರಿಗೆ ಮಾಂಸ ಕೊಡೋಕೆ ಆಗುತ್ತಾ?” ಅಂತ ಕೇಳಿದ್ರು.+

21 ಅವ್ರ ಮಾತನ್ನ ಯೆಹೋವ ಕೇಳಿಸ್ಕೊಂಡಾಗ ಆತನಿಗೆ ತುಂಬ ಕೋಪ ಬಂತು,+

ಯಾಕೋಬನ ವಿರುದ್ಧ ಬೆಂಕಿ+ ಹೊತ್ತಿ ಉರೀತು,

ಇಸ್ರಾಯೇಲಿನ ವಿರುದ್ಧ ಆತನ ರೋಷಾಗ್ನಿ ಭುಗಿಲೆದ್ದಿತು.+

22 ಯಾಕಂದ್ರೆ ಅವರು ದೇವರ ಮೇಲೆ ನಂಬಿಕೆ ಇಡಲಿಲ್ಲ,+

ಅವ್ರನ್ನ ರಕ್ಷಿಸೋಕೆ ಆತನಿಗೆ ಶಕ್ತಿ ಇದೆ ಅನ್ನೋ ಭರವಸೆ ಅವ್ರಿಗೆ ಇರಲಿಲ್ಲ.

23 ಹಾಗಾಗಿ ಆತನು ಆಕಾಶದ ಮೇಘಗಳಿಗೆ ಆಜ್ಞೆ ಕೊಟ್ಟ,

ಗಗನದ ಬಾಗಿಲುಗಳನ್ನ ತೆರೆದ.

24 ಆತನು ಅವ್ರಿಗೆ ತಿನ್ನೋಕೆ ಮನ್ನ ಸುರಿಸ್ತಾ ಇದ್ದ,

ಆತನು ಅವ್ರಿಗೆ ಸ್ವರ್ಗದ ಧಾನ್ಯವನ್ನ ಕೊಟ್ಟ.+

25 ದೇವದೂತರ* ಆಹಾರವನ್ನ ಮನುಷ್ಯರು ತಿಂದ್ರು,+

ತೃಪ್ತಿಯಾಗುವಷ್ಟು ಆಹಾರವನ್ನ ಆತನು ಅವ್ರಿಗೆ ಕೊಟ್ಟ.+

26 ಆಕಾಶದಲ್ಲಿ ಪೂರ್ವದ ಗಾಳಿ ಎಬ್ಬಿಸಿ,

ತನ್ನ ಶಕ್ತಿಯಿಂದ ದಕ್ಷಿಣ ಗಾಳಿಯನ್ನ ಬೀಸೋ ಹಾಗೆ ಮಾಡಿದ.+

27 ಧೂಳಿನ ತರ ಮಾಂಸವನ್ನ ಅವ್ರ ಮೇಲೆ ಸುರಿಸಿದ,

ಸಮುದ್ರ ತೀರದ ಮರಳಿನಷ್ಟು ಪಕ್ಷಿಗಳನ್ನ ಅವ್ರಿಗೆ ಕೊಟ್ಟ.

28 ಆತನು ಪಕ್ಷಿಗಳನ್ನ ತನ್ನ ಪಾಳೆಯದ ಮಧ್ಯದಲ್ಲಿ ಬೀಳೋ ಹಾಗೆ ಮಾಡಿದ,

ಅವನ್ನ ತನ್ನ ಡೇರೆ ಸುತ್ತ ಬೀಳಿಸಿದ.

29 ಹೊಟ್ಟೆ ಬಿರಿಯೋ ತನಕ ಅವರು ತಿಂದ್ರು,

ಅವರು ಬಯಸಿದ್ದನ್ನ ಅವ್ರಿಗೆ ಕೊಟ್ಟ.+

30 ಆದ್ರೆ ಅವರು ತಮ್ಮ ಆಸೆಗೆ ಕಡಿವಾಣ ಹಾಕಲಿಲ್ಲ,

ಅವ್ರ ಬಾಯಲ್ಲಿ ಇನ್ನೂ ಊಟ ಇರೋವಾಗ್ಲೇ,

31 ದೇವರ ಕೋಪ ಅವ್ರ ಮೇಲೆ ಹೊತ್ತಿ ಉರೀತು.+

ಆತನು ಅವ್ರ ಶಕ್ತಿಶಾಲಿ ಗಂಡಸರನ್ನ ಕೊಂದುಹಾಕಿದ,+

ಇಸ್ರಾಯೇಲಿನ ಯುವಕರನ್ನ ನೆಲಕ್ಕೆ ಉರುಳಿಸಿದ.

32 ಇಷ್ಟಾದ್ರೂ ಅವರು ಸುಮ್ಮನಿರದೆ ಇನ್ನೂ ಪಾಪ ಮಾಡಿದ್ರು+

ಆತನ ಅದ್ಭುತಗಳಲ್ಲಿ ನಂಬಿಕೆ ಇಡಲಿಲ್ಲ.+

33 ಹಾಗಾಗಿ ಆತನು ಒಂದು ಉಸಿರಿನ ಹಾಗೆ ಅವ್ರ ದಿನಗಳನ್ನ,+

ಕ್ಷಣಮಾತ್ರದಲ್ಲೇ ವಿಪತ್ತುಗಳಿಂದ ಅವ್ರ ಆಯಸ್ಸನ್ನ ಮುಗಿಸಿಬಿಟ್ಟ.

34 ಆತನು ಅವ್ರನ್ನ ಕೊಲ್ಲುತ್ತಿದ್ದಾಗೆಲ್ಲ ಅವರು ಆತನನ್ನ ಹುಡುಕ್ತಿದ್ರು,+

ವಾಪಸ್‌ ಬಂದು ಆತನಿಗಾಗಿ ನೋಡ್ತಿದ್ರು.

35 ಯಾಕಂದ್ರೆ ದೇವರು ತಮ್ಮ ಬಂಡೆ ಅಂತ ಅವರು ನೆನಪಿಸ್ಕೊಳ್ತಿದ್ರು+

ಸರ್ವೋನ್ನತ ದೇವರು ನಮ್ಮನ್ನ ಬಿಡಿಸ್ತಾನೆ* ಅಂತ ಜ್ಞಾಪಿಸಿಕೊಳ್ತಿದ್ರು.+

36 ಆದ್ರೆ ಅವರು ತಮ್ಮ ಬಾಯಿಂದ ಆತನನ್ನ ವಂಚಿಸೋಕೆ ಪ್ರಯತ್ನಿಸಿದ್ರು

ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದ್ರು.

37 ಆತನ ಕಡೆ ಅವ್ರ ಹೃದಯ ಸ್ಥಿರವಾಗಿ ಇರಲಿಲ್ಲ,+

ಆತನ ಒಪ್ಪಂದಕ್ಕೆ ಅವರು ನಂಬಿಗಸ್ತರಾಗಿ ಇರಲಿಲ್ಲ.+

38 ಆದ್ರೆ ಆತನು ಕರುಣಾಮಯಿ,+

ಆತನು ಅವ್ರ ತಪ್ಪುಗಳನ್ನ ಕ್ಷಮಿಸುತ್ತಿದ್ದ, ಅವ್ರನ್ನ ನಾಶಮಾಡ್ತಿರಲಿಲ್ಲ.+

ಕಡುಕೋಪದಿಂದ ಕೆರಳೋ ಬದಲಿಗೆ,

ತುಂಬ ಸಲ ಆತನು ತನ್ನ ಕೋಪವನ್ನ ಹಿಡಿದಿಡುತ್ತಿದ್ದ.+

39 ಯಾಕಂದ್ರೆ ಅವರು ಬರೀ ಮನುಷ್ಯರು,+

ಒಂದ್‌ ಸಲ ಬೀಸಿ ಹೋಗೋ ಗಾಳಿ ತರ ಇದ್ದಾರೆ* ಅಂತ ಆತನು ನೆನಪಿಸ್ಕೊಳ್ತಿದ್ದ.

40 ಕಾಡಲ್ಲಿ ಎಷ್ಟೋ ಸಲ ಅವರು ಆತನಿಗೆ ತಿರುಗಿಬಿದ್ರು,+

ಮರುಭೂಮಿಯಲ್ಲಿ ಅದೆಷ್ಟೋ ಸಲ ಆತನನ್ನ ನೋಯಿಸಿದ್ರು!+

41 ಪದೇಪದೇ ಅವರು ದೇವರನ್ನ ಪರೀಕ್ಷಿಸಿದ್ರು,+

ಇಸ್ರಾಯೇಲ್ಯರ ಪವಿತ್ರ ದೇವರನ್ನ ಸಂಕಟಪಡಿಸಿದ್ರು.

42 ಅವರು ಆತನ ಶಕ್ತಿಯನ್ನ* ನೆನಪಿಸ್ಕೊಳ್ಳಲಿಲ್ಲ,

ಶತ್ರುವಿನ ಕೈಯಿಂದ ಆತನು ಬಿಡಿಸಿದ ದಿನವನ್ನ ಮರೆತುಬಿಟ್ರು.+

43 ಈಜಿಪ್ಟಲ್ಲಿ ಆತನು ತೋರಿಸಿದ ಗುರುತುಗಳನ್ನ,+

ಸೋನ್‌ ಪ್ರದೇಶದಲ್ಲಿ ಆತನು ಮಾಡಿದ ಅದ್ಭುತಗಳನ್ನ ಅವರು ಮರೆತುಬಿಟ್ರು.

44 ಆತನು ನೈಲ್‌ ನದಿ ನೀರನ್ನ ರಕ್ತ ಮಾಡಿದ,+

ಅವರು ನದಿ ನೀರನ್ನ ಕುಡಿಯೋಕೆ ಆಗದ ಹಾಗೆ ಮಾಡಿದ.

45 ಅವ್ರನ್ನ ನುಂಗಿಹಾಕೋಕೆ ರಕ್ತಹೀರೋ ನೊಣಗಳನ್ನ,+

ಅವ್ರನ್ನ ನಾಶಮಾಡೋಕೆ ಕಪ್ಪೆಗಳನ್ನ ಕಳಿಸಿದ.+

46 ಆತನು ಅವ್ರ ಬೆಳೆಯನ್ನ ಹೊಟ್ಟೆಬಾಕ ಮಿಡತೆಗಳಿಗೆ ಕೊಟ್ಟ,

ಆತನು ಅವ್ರ ಕೈಕೆಲಸದ ಫಲವನ್ನ ಮಿಡತೆಗಳ ಪಾಲುಮಾಡಿದ.+

47 ಆಲಿಕಲ್ಲಿನ ಮಳೆಯಿಂದ+ ಅವ್ರ ದ್ರಾಕ್ಷಿಬಳ್ಳಿಯನ್ನ,

ಅವ್ರ ಅತ್ತಿ ಮರಗಳನ್ನ ನಾಶಮಾಡಿದ.

48 ಅವ್ರ ಮೃಗಗಳನ್ನ ಆಲಿಕಲ್ಲಿನ ಮಳೆಗೆ,+

ಅವ್ರ ಪ್ರಾಣಿಗಳನ್ನ ಸಿಡಿಲಿಗೆ* ಬಲಿಕೊಟ್ಟ.

49 ಆತನು ಅವ್ರ ಮೇಲೆ ತನ್ನ ರೋಷಾಗ್ನಿಯನ್ನ ಸುರಿಸಿದ,

ಕೋಪ, ಕ್ರೋಧ ಮತ್ತು ಸಂಕಟಗಳನ್ನ ತಂದ,

ಅವ್ರ ಮೇಲೆ ವಿಪತ್ತು ತರೋಕೆ ದೇವದೂತರ ದಂಡನ್ನ ಕಳಿಸಿದ.

50 ಆತನು ತನ್ನ ಕೋಪ ತೋರಿಸೋಕೆ ದಾರಿಮಾಡ್ಕೊಂಡ.

ಸಾವಿಂದ ಅವ್ರನ್ನ ಕಾಪಾಡಲಿಲ್ಲ,

ಅಂಟುರೋಗಗಳಿಗೆ ಅವ್ರನ್ನ* ಒಪ್ಪಿಸಿಬಿಟ್ಟ.

51 ಕೊನೆಗೆ ಆತನು ಈಜಿಪ್ಟಿನವರ ಮೊದಲ ಗಂಡುಮಕ್ಕಳನ್ನ ಕೊಂದುಹಾಕಿದ,+

ಹಾಮನ ಡೇರೆಯಲ್ಲಿ ಮೊದಲು ಹುಟ್ಟಿದವ್ರಿಗೆ ಅಂತ್ಯ ಹಾಡಿದ.

52 ಆಮೇಲೆ ಆತನು ಕುರಿಗಳ ತರ ಜನ್ರನ್ನ ಹೊರಗೆ ಕರ್ಕೊಂಡು ಬಂದ,+

ಕಾಡಲ್ಲಿ ಕುರುಬ ದಾರಿ ತೋರಿಸೋ ತರ ಅವ್ರಿಗೆ ದಾರಿ ತೋರಿಸಿದ.

53 ಆತನು ಅವ್ರನ್ನ ಸುರಕ್ಷಿತವಾಗಿ ನಡೆಸಿದ,

ಅವರು ಯಾವುದಕ್ಕೂ ಭಯಪಡಲಿಲ್ಲ,+

ಸಮುದ್ರ ಅವ್ರ ಶತ್ರುಗಳನ್ನ ಮುಳುಗಿಸ್ತು.+

54 ಆತನು ಅವ್ರನ್ನ ತನ್ನ ಪವಿತ್ರ ದೇಶಕ್ಕೆ ಕರ್ಕೊಂಡು ಬಂದ,+

ಆತನ ಬಲಗೈಯಿಂದ ಸಂಪಾದಿಸಿದ ಬೆಟ್ಟ ಪ್ರದೇಶಕ್ಕೆ ಕರ್ಕೊಂಡು ಬಂದ.+

55 ಆತನು ಜನಾಂಗಗಳನ್ನ ಅವ್ರ ಮುಂದಿಂದ ಓಡಿಸಿಬಿಟ್ಟ,+

ಅಳತೆಯ ದಾರದಿಂದ ಅಳೆದು ಅವ್ರಿಗೆ ಆಸ್ತಿ ಹಂಚಿಕೊಟ್ಟ,+

ಇಸ್ರಾಯೇಲ್‌ ಕುಲಗಳು ತಮ್ಮತಮ್ಮ ಮನೆಯಲ್ಲಿ ವಾಸಿಸೋ ತರ ಮಾಡಿದ.+

56 ಆದ್ರೆ ಅವರು ಸರ್ವೋನ್ನತ ದೇವ್ರಿಗೆ ಸವಾಲು ಹಾಕ್ತಾನೇ* ಇದ್ರು, ಆತನ ವಿರುದ್ಧ ದಂಗೆ ಏಳ್ತಾನೇ ಇದ್ರು,+

ಆತನು ಮತ್ತೆ ಮತ್ತೆ ಹೇಳ್ತಿದ್ದ ವಿಷ್ಯಗಳಿಗೆ ಗಮನ ಕೊಡಲೇ ಇಲ್ಲ.+

57 ಅವರೂ ದೇವರಿಗೆ ಬೆನ್ನು ಹಾಕಿದ್ರು, ತಮ್ಮ ಪೂರ್ವಜರ ತರ ಮೋಸ ಮಾಡಿದ್ರು.+

ಬಿಗಿಯಾಗಿರದ ಬಿಲ್ಲಿನ ತರ ಭರವಸೆ ಇಡೋಕೆ ಯೋಗ್ಯತೆ ಕಳ್ಕೊಂಡ್ರು.+

58 ಅವರದ್ದೇ ದೇವಸ್ಥಾನಗಳನ್ನ ಮಾಡ್ಕೊಂಡು ಆತನಿಗೆ ಕೋಪ ಬರಿಸ್ತಾನೇ ಇದ್ರು,+

ತಮ್ಮ ಕೆತ್ತಿದ ಮೂರ್ತಿಗಳಿಂದ ಆತನನ್ನ ರೇಗಿಸಿದ್ರು.+

59 ದೇವರು ಇದನ್ನೆಲ್ಲ ನೋಡಿ ಕೋಪ ಮಾಡ್ಕೊಂಡ,+

ಆತನು ಇಸ್ರಾಯೇಲ್ಯರನ್ನ ಸಂಪೂರ್ಣವಾಗಿ ಬಿಟ್ಟುಬಿಟ್ಟ.

60 ಕೊನೆಗೆ ಆತನು ಶೀಲೋನ ಪವಿತ್ರ ಡೇರೆಯನ್ನ,+

ಮನುಷ್ಯರ ಮಧ್ಯ ತಾನು ವಾಸವಿದ್ದ ಡೇರೆಯನ್ನ ತೊರೆದುಬಿಟ್ಟ.+

61 ಆತನು ತನ್ನ ಶಕ್ತಿಯ ಗುರುತನ್ನ ಸೆರೆಯಾಗಿ ಹೋಗೋಕೆ,

ತನ್ನ ವೈಭವವನ್ನ ಶತ್ರುವಿನ ಕೈವಶವಾಗೋಕೆ ಬಿಟ್ಟುಬಿಟ್ಟ.+

62 ಆತನು ತನ್ನ ಜನ್ರನ್ನ ಕತ್ತಿಗಳಿಗೆ ಒಪ್ಪಿಸಿದ,+

ತನ್ನ ಸ್ವತ್ತಿನ ಮೇಲೆ ಕೋಪಮಾಡ್ಕೊಂಡ.

63 ಆತನ ಯುವಕರನ್ನ ಬೆಂಕಿ ನುಂಗಿಹಾಕ್ತು,

ಆತನ ಕನ್ಯೆಯರಿಗಾಗಿ ಮದ್ವೆ ಹಾಡು ಕೇಳಿಸಲಿಲ್ಲ.*

64 ಆತನ ಪುರೋಹಿತರು ಕತ್ತಿಯಿಂದ ಸತ್ರು,+

ಅವರ ವಿಧವೆಯರು ಅವ್ರಿಗಾಗಿ ಅಳಲಿಲ್ಲ.+

65 ಆಗ ಯೆಹೋವ ನಿದ್ದೆಯಿಂದ ಏಳೋ ವ್ಯಕ್ತಿ ತರ ಎದ್ದ,+

ದ್ರಾಕ್ಷಾಮದ್ಯದ ಮತ್ತಿನಿಂದ ಹೊರಗೆ ಬಂದ ಬಲಿಷ್ಠ ವ್ಯಕ್ತಿ ತರ ಎದ್ದ.+

66 ಆತನು ತನ್ನ ಶತ್ರುಗಳನ್ನ ಓಡಿಸಿಬಿಟ್ಟ,+

ಅವ್ರಿಗೆ ಯಾವಾಗ್ಲೂ ಅವಮಾನ ಆಗೋ ತರ ಮಾಡಿದ.

67 ಆತನು ಯೋಸೇಫನ ಡೇರೆಯನ್ನ ತೊರೆದುಬಿಟ್ಟ,

ಎಫ್ರಾಯೀಮ್‌ ಕುಲವನ್ನ ಆರಿಸ್ಕೊಳ್ಳಲಿಲ್ಲ.

68 ಆದ್ರೆ ಆತನು ಯೆಹೂದ ಕುಲವನ್ನ,+

ತಾನು ಪ್ರೀತಿಸೋ ಚೀಯೋನ್‌ ಬೆಟ್ಟವನ್ನ ಆರಿಸ್ಕೊಂಡ.+

69 ಆತನು ತನ್ನ ಆರಾಧನಾ ಸ್ಥಳವನ್ನು ಯಾವಾಗ್ಲೂ ಇರೋ ಆಕಾಶದ ತರ,+

ಶಾಶ್ವತವಾಗಿರೋ ಭೂಮಿ ತರ ಮಾಡಿದ.+

70 ಆತನು ತನ್ನ ಸೇವಕ ದಾವೀದನನ್ನ ಆರಿಸ್ಕೊಂಡ,+

ಅವನನ್ನ ಕುರಿ ದೊಡ್ಡಿಯಿಂದ ತಗೊಂಡ.+

71 ಹಾಲು ಕೊಡೋ ಕುರಿಗಳನ್ನ ನೋಡ್ಕೊಳ್ತಿದ್ದ ಆ ವ್ಯಕ್ತಿಯನ್ನ,

ಯಾಕೋಬನ ಮೇಲೆ, ತನ್ನ ಜನ್ರ ಮೇಲೆ ಕುರುಬನಾಗಿ ಮಾಡಿದ,+

ತನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರ ಮೇಲೆ ಕುರುಬನಾಗಿ ಮಾಡಿದ.+

72 ದಾವೀದ ಶುದ್ಧ ಹೃದಯದಿಂದ ಅವ್ರನ್ನ ನಡೆಸಿದ,+

ತನ್ನ ಕುಶಲ ಕೈಗಳಿಂದ ಅವ್ರನ್ನ ಮಾರ್ಗದರ್ಶಿಸಿದ.+

ಆಸಾಫನ+ ಮಧುರ ಗೀತೆ.

79 ದೇವರೇ, ಬೇರೆ ದೇಶದ ಜನ್ರು ನಿನ್ನ ಆಸ್ತಿ ಮೇಲೆ ಆಕ್ರಮಣ ಮಾಡಿದ್ರು,+

ಅವರು ನಿನ್ನ ಪವಿತ್ರ ಆಲಯವನ್ನ ಅಪವಿತ್ರ ಮಾಡಿದ್ರು,+

ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು.+

 2 ಅವರು ನಿನ್ನ ಸೇವಕರ ಶವಗಳನ್ನ ಆಕಾಶದ ಪಕ್ಷಿಗಳಿಗೆ,

ನಿನ್ನ ನಿಷ್ಠಾವಂತರ ಮಾಂಸವನ್ನ ಭೂಮಿಯ ಕ್ರೂರ ಮೃಗಗಳಿಗೆ ಆಹಾರವಾಗಿ ಕೊಟ್ರು.+

 3 ಅವರು ನಿನ್ನ ಸೇವಕರ ರಕ್ತನ ಯೆರೂಸಲೇಮಿನ ಸುತ್ತ ನೀರಿನ ತರ ಹರಿಸಿದ್ರು,

ನಿನ್ನ ಸೇವಕರ ಶವಗಳನ್ನ ಮಣ್ಣುಮಾಡೋಕೆ ಯಾರೂ ಉಳಿದಿರಲಿಲ್ಲ.+

 4 ನಮ್ಮ ಅಕ್ಕಪಕ್ಕ ಇರೋರು ನಮ್ಮನ್ನ ನೋಯಿಸ್ತಿದ್ದಾರೆ,+

ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.

 5 ಯೆಹೋವನೇ, ಎಲ್ಲಿ ತನಕ ನೀನು ಹೀಗೆ ಕೋಪಮಾಡ್ಕೊಂಡು ಇರ್ತೀಯ? ಶಾಶ್ವತವಾಗಿ ಹೀಗೇ ಇರ್ತಿಯಾ?+

ಎಲ್ಲಿ ತನಕ ಬೆಂಕಿ ತರ ನಿನ್ನ ಕೋಪ ಉರಿತಾನೇ ಇರುತ್ತೆ?+

 6 ನಿನ್ನ ಕಡುಕೋಪವನ್ನ ನಿನ್ನ ಬಗ್ಗೆ ಗೊತ್ತಿಲ್ಲದ ಜನ್ರ ಮೇಲೆ ಸುರಿ,

ನಿನ್ನ ರೋಷನ ನಿನ್ನ ಹೆಸರೆತ್ತಿ ಪ್ರಾರ್ಥನೆ ಮಾಡದ ರಾಜ್ಯಗಳ ಮೇಲೆ ಹಾಕು.+

 7 ಯಾಕಂದ್ರೆ ಅವರು ಯಾಕೋಬನನ್ನ ನುಂಗಿಹಾಕಿದ್ದಾರೆ,

ಅವನ ಸ್ವದೇಶವನ್ನ ನಿರ್ಜನ ಮಾಡಿದ್ದಾರೆ.+

 8 ನಮ್ಮ ಪೂರ್ವಜರು ಮಾಡಿದ ತಪ್ಪುಗಳಿಗೆ ನಮ್ಮಿಂದ ಲೆಕ್ಕ ಕೇಳಬೇಡ.+

ಬೇಗ ನಮಗೆ ನಿನ್ನ ಕರುಣೆ ತೋರಿಸು,+

ಯಾಕಂದ್ರೆ ನಾವು ಪೂರ್ತಿಯಾಗಿ ಕೆಳಗೆ ಬಿದ್ದುಬಿಟ್ಟಿದ್ದೀವಿ.

 9 ನಮ್ಮ ರಕ್ಷಣೆಯ ದೇವರೇ, ನಮಗೆ ಸಹಾಯಮಾಡು,+

ನಿನ್ನ ಹೆಸ್ರಲ್ಲಿ ಗೌರವ ತುಂಬಿರೋದ್ರಿಂದ ನಮ್ಮನ್ನ ಕಾಪಾಡು,

ನಿನ್ನ ಹೆಸ್ರಿಗೆ ತಕ್ಕ ಹಾಗೆ ನಮ್ಮ ಪಾಪಗಳನ್ನ ಕ್ಷಮಿಸು.*+

10 “ಅವರ ದೇವರು ಎಲ್ಲಿದ್ದಾನೆ?” ಅಂತ ಜನ ಯಾಕೆ ಹೇಳಬೇಕು,+

ನಿನ್ನ ಸೇವಕರ ರಕ್ತ ಸುರಿಸಿದಕ್ಕೆ ನೀನು ಸೇಡು ತೀರಿಸ್ತೀಯ ಅಂತ ಆ ಜನ್ರಿಗೆ ಗೊತ್ತಾಗಲಿ,

ಅದನ್ನ ನಮ್ಮ ಕಣ್ಣು ನೋಡಲಿ.+

11 ಕೈದಿಯ ನಿಟ್ಟುಸಿರು ನಿನಗೆ ಕೇಳಿಸಲಿ.+

ಮರಣಶಿಕ್ಷೆಗೆ ಗುರಿಯಾದವರನ್ನ ನಿನ್ನ ಮಹಾ ಶಕ್ತಿಯಿಂದ* ಕಾಪಾಡು.*+

12 ಯೆಹೋವನೇ, ನಮ್ಮ ನೆರೆಯವರು ನಿನ್ನನ್ನ ಅಣಕಿಸಿದಕ್ಕೆ,+

ಅವ್ರಿಗೆ ಇನ್ನೂ ಏಳು ಪಟ್ಟು ಶಿಕ್ಷೆ ಕೊಡು.+

13 ಆಗ ನಿನ್ನ ಜನರಾಗಿರೋ ನಾವು, ನಿನ್ನ ಕುರಿಗಳಾಗಿರೋ ನಾವು,+

ನಿನಗೆ ಯಾವಾಗ್ಲೂ ಧನ್ಯವಾದ ಹೇಳ್ತೀವಿ,

ತಲೆಮಾರು ತಲೆಮಾರುಗಳ ತನಕ ನಿನ್ನನ್ನ ಹಾಡಿ ಹೊಗಳ್ತೀವಿ.+

ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ನೆನಪಲ್ಲಿಡೋಕೆ ಆಸಾಫನ+ ಮಧುರ ಗೀತೆ.

80 ಇಸ್ರಾಯೇಲಿನ ಕುರುಬನೇ,

ಯೋಸೇಫನನ್ನ ಕುರಿಗಳ ತರ ನಡೆಸುವವನೇ ಕೇಳು.+

ಕೆರೂಬಿಗಳ ಮೇಲೆ* ಕೂತಿರುವವನೇ+

ನಿನ್ನ ಬೆಳಕನ್ನ ಪ್ರಕಾಶಿಸು.*

 2 ಎಫ್ರಾಯೀಮ್‌, ಬೆನ್ಯಾಮೀನ್‌ ಮತ್ತು ಮನಸ್ಸೆಯ ಮುಂದೆ,

ನೀನು ನಿನ್ನ ಶಕ್ತಿಯನ್ನ ತೋರಿಸು,+

ಬಂದು ನಮ್ಮನ್ನ ಕಾಪಾಡು.+

 3 ದೇವರೇ, ಇನ್ನೊಂದು ಸಾರಿ ದಯೆ ತೋರಿಸು,+

ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+

 4 ಸೈನ್ಯಗಳ ದೇವರಾದ ಯೆಹೋವನೇ, ನೀನು ನಿನ್ನ ಜನ್ರನ್ನ ಎಲ್ಲಿ ತನಕ ವಿರೋಧಿಸ್ತೀಯ?

ಅವ್ರ ಪ್ರಾರ್ಥನೆಗಳನ್ನ ಎಲ್ಲಿ ತನಕ ಕೇಳದೆ ಇರ್ತಿಯ?+

 5 ನೀನು ಅವ್ರಿಗೆ ಕಣ್ಣೀರನ್ನ ಊಟವಾಗಿ ಕೊಟ್ಟೆ,

ಕಣ್ಣೀರಧಾರೆಯನ್ನ ಕುಡಿಯೋ ತರ ಮಾಡಿದೆ.

 6 ನಮ್ಮ ಅಕ್ಕಪಕ್ಕದವರು ನಮ್ಮ ಜೊತೆ ಜಗಳ ಆಡೋಕೆ ಬಿಟ್ಟೆ,

ನಮ್ಮ ಶತ್ರುಗಳು ಮನಸ್ಸಿಗೆ ಬಂದ ಹಾಗೆ ಮಾತಾಡಿ ನಮಗೆ ಗೇಲಿಮಾಡ್ತಾ ಇದ್ದಾರೆ.+

 7 ಸೈನ್ಯಗಳ ದೇವರೇ, ಇನ್ನೊಂದು ಸಾರಿ ದಯೆ ತೋರಿಸು,

ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+

 8 ಒಂದು ದ್ರಾಕ್ಷಿ ಬಳ್ಳಿನ+ ಕಿತ್ಕೊಂಡು ಬರೋ ತರ ನೀನು ನಿನ್ನ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದೆ.

ನೀನು ಜನಾಂಗಗಳನ್ನ ಅವುಗಳ ದೇಶದಿಂದ ಓಡಿಸಿ ಆ ದೇಶದಲ್ಲಿ ಅದನ್ನ ನೆಟ್ಟೆ.+

 9 ನೀನು ಅದಕ್ಕಾಗಿ ನೆಲವನ್ನ ಹದ ಮಾಡಿದೆ,

ಅದು ಬೇರು ಬಿಟ್ಟು ದೇಶದಲ್ಲೆಲ್ಲ ಹಬ್ಬಿತು.+

10 ಅದ್ರ ನೆರಳಿಂದ ಬೆಟ್ಟಗಳು ಮುಚ್ಚಿಹೋದ್ವು,

ಅದ್ರ ಕೊಂಬೆಗಳಿಂದ ದೇವರು ನೆಟ್ಟ ದೇವದಾರು ಮರಗಳು ಮರೆಯಾದ್ವು.

11 ಅದ್ರ ಕೊಂಬೆಗಳು ಸಮುದ್ರದ ತನಕ ಚಾಚಿಕೊಂಡ್ವು,

ಅದ್ರ ಚಿಗುರುಗಳು ನದಿ ತನಕ* ಹರಡಿಕೊಂಡ್ವು.+

12 ದಾರಿಹೋಕರೆಲ್ಲ ದ್ರಾಕ್ಷಿತೋಟದ ಹಣ್ಣನ್ನ ಕಿತ್ಕೊಂಡು ಹೋಗೋ ಹಾಗೆ,+

ನೀನು ಯಾಕೆ ಅದ್ರ ಕಲ್ಲಿನ ಗೋಡೆಗಳನ್ನ ಬೀಳಿಸಿಬಿಟ್ಟೆ?+

13 ಕಾಡುಹಂದಿಗಳು ಅದನ್ನ ನಾಶಮಾಡುತ್ತೆ,

ಬಯಲಿನ ಕಾಡು ಪ್ರಾಣಿಗಳು ಅದನ್ನ ತಿಂದುಹಾಕುತ್ತೆ.+

14 ಸೈನ್ಯಗಳ ದೇವರೇ, ದಯವಿಟ್ಟು ವಾಪಸ್‌ ಬಾ.

ಸ್ವರ್ಗದಿಂದ ಕೆಳಗೆ ನೋಡು!

ಈ ದ್ರಾಕ್ಷಿ ಬಳ್ಳಿ ಕಡೆ ಕಾಳಜಿ ತೋರಿಸು.+

15 ನಿನ್ನ ಬಲಗೈ ನೆಟ್ಟ ಆ ಸಸಿಯನ್ನ,+

ನೀನು ನಿನಗಾಗಿ ಬಲಪಡಿಸಿದ ಆ ಮಗನನ್ನ* ನೋಡು.+

16 ಆ ಕೊಂಬೆಯನ್ನ ಕಡಿದಿದ್ದಾರೆ, ಬೆಂಕಿಯಿಂದ ಸುಟ್ಟು ಹಾಕಿದ್ದಾರೆ.+

ನಿನ್ನ ಗದರಿಕೆಯಿಂದ ಅವರು ನಾಶ ಆಗ್ತಾರೆ.

17 ನಿನ್ನ ಬಲಗೈಯಲ್ಲಿರೋ ವ್ಯಕ್ತಿಗೆ,

ನೀನು ನಿನಗಾಗಿ ಬಲಪಡಿಸಿದ ಮನುಷ್ಯಕುಮಾರನಿಗೆ ಸಹಕಾರ* ಕೊಡು.+

18 ಆಗ ನಾವು ನಿನ್ನನ್ನ ಬಿಟ್ಟು ಬೇರೆ ಕಡೆ ತಿರುಗಿಕೊಳ್ಳಲ್ಲ.

ನಾವು ನಿನ್ನ ಹೆಸ್ರನ್ನು ಕರಿಯೋಕೆ ನಮ್ಮ ಜೀವವನ್ನ ಕಾಪಾಡು.

19 ಸೈನ್ಯಗಳ ದೇವರಾದ ಯೆಹೋವನೇ, ಇನ್ನೊಂದು ಸಾರಿ ದಯೆ ತೋರಿಸು,

ನಮಗೆ ರಕ್ಷಣೆ ಸಿಗೋ ಹಾಗೆ ನಿನ್ನ ಮುಖದ ಕಾಂತಿಯನ್ನ ನಮ್ಮ ಮೇಲೆ ಪ್ರಕಾಶಿಸು.+

ಗಾಯಕರ ನಿರ್ದೇಶಕನಿಗೆ ಸೂಚನೆ, ಗಿತ್ತೀತ್‌* ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ.

81 ನಮ್ಮ ಬಲವಾಗಿರೋ ದೇವರಿಗೆ+ ಸಂತೋಷದಿಂದ ಜೈಕಾರ ಹಾಕಿ.

ಯಾಕೋಬನ ದೇವರಿಗೆ ವಿಜಯಗೀತೆ ಹಾಡಿ.

 2 ಸಂಗೀತ ನುಡಿಸಿ, ದಮ್ಮಡಿ ಬಡೀರಿ,

ತಂತಿವಾದ್ಯಗಳ ಜೊತೆ ಇಂಪಾದ ವಾದ್ಯಗಳನ್ನ ನುಡಿಸಿ.

 3 ಅಮಾವಾಸ್ಯೆ ದಿನ,+

ಹುಣ್ಣಿಮೆ ದಿನ ನಮ್ಮ ಹಬ್ಬಕ್ಕಾಗಿ ಕೊಂಬು ಊದಿ.+

 4 ಯಾಕಂದ್ರೆ ಇದು ಇಸ್ರಾಯೇಲ್ಯರಿಗೆ ಒಂದು ಆಜ್ಞೆ ಆಗಿದೆ,

ಯಾಕೋಬನ ದೇವರು ಕೊಟ್ಟಿರೋ ನಿಯಮವಾಗಿದೆ.+

 5 ದೇವರು ಈಜಿಪ್ಟಿನ ವಿರುದ್ಧ ಹೋದಾಗ,+

ಇದನ್ನ ಯೋಸೇಫನಿಗೆ ಮತ್ತೆ ಮತ್ತೆ ನೆನಪಿಸಿದ.+

ನಾನು ಒಂದು ಧ್ವನಿ* ಕೇಳಿಸ್ಕೊಂಡೆ. ಆದ್ರೆ ಅದ್ರ ಗುರುತು ಹಿಡಿಲಿಲ್ಲ.

 6 “ನಾನು ಅವನ ಹೆಗಲಿಂದ ಭಾರ ಕೆಳಗಿಳಿಸಿದೆ,+

ಅವನು ಈಗ ಬುಟ್ಟಿ ಎತ್ತೋ ಅವಶ್ಯಕತೆ ಇಲ್ಲ.

 7 ನೀನು ಕಷ್ಟದಲ್ಲಿದ್ದಾಗ ನನ್ನನ್ನ ಕರೆದೆ, ನಾನು ನಿನ್ನನ್ನ ಕಾಪಾಡಿದೆ,+

ಗುಡುಗೋ ಮೋಡದಿಂದ* ನಾನು ನಿನಗೆ ಉತ್ರ ಕೊಟ್ಟೆ.+

ಮೆರೀಬಾದ* ನೀರಿನ ಹತ್ರ ನಾನು ನಿನ್ನನ್ನ ಪರೀಕ್ಷಿಸಿದೆ.+ (ಸೆಲಾ)

 8 ನನ್ನ ಪ್ರಜೆಗಳೇ ಕೇಳಿ, ನಾನು ನಿಮ್ಮ ವಿರುದ್ಧ ಸಾಕ್ಷಿ ಹೇಳ್ತೀನಿ.

ಇಸ್ರಾಯೇಲೇ, ನೀವು ನನ್ನ ಮಾತನ್ನ ಕೇಳಬೇಕಿತ್ತು.+

 9 ನಿಮ್ಮ ಹತ್ರ ಬೇರೆ ಯಾವ ದೇವರೂ ಇರಬಾರದು,

ನೀವು ಅದಕ್ಕೆ ಬಗ್ಗಿ ನಮಸ್ಕಾರ ಮಾಡಬಾರದು.+

10 ನಾನು ಯೆಹೋವ, ನಿಮ್ಮ ದೇವರು,

ಈಜಿಪ್ಟಿಂದ ನಿಮ್ಮನ್ನ ಹೊರಗೆ ತಂದವನು ನಾನೇ.+

ನಿಮ್ಮ ಬಾಯನ್ನ ಅಗಲವಾಗಿ ತೆಗಿರಿ, ನಾನು ಅದನ್ನ ತುಂಬಿಸ್ತೀನಿ.+

11 ಆದ್ರೆ ನನ್ನ ಜನ್ರು ನನ್ನ ಧ್ವನಿಯನ್ನ ಕೇಳಿಸ್ಕೊಳ್ಳಲಿಲ್ಲ,

ಇಸ್ರಾಯೇಲ್ಯರು ನನಗೆ ಅಧೀನರಾಗಲಿಲ್ಲ.+

12 ಹಾಗಾಗಿ ನಾನು ಅವ್ರಿಗೆ ತಮ್ಮ ಹಠಮಾರಿ ಹೃದಯಗಳ ಪ್ರಕಾರ ನಡ್ಕೊಳ್ಳೋಕೆ ಬಿಟ್ಟುಬಿಟ್ಟೆ,

ಅವ್ರಿಗೆ ಸರಿ ಅನಿಸಿದ್ದನ್ನ ಅವರು ಮಾಡಿದ್ರು.*+

13 ಅಯ್ಯೋ, ನನ್ನ ಜನ್ರು ನನ್ನ ಮಾತನ್ನ ಕೇಳಿದ್ರೆ,+

ಇಸ್ರಾಯೇಲ್ಯರು ನನ್ನ ದಾರಿಗಳಲ್ಲಿ ನಡೆದಿದ್ರೆ,+

14 ನಾನು ಅವ್ರ ಶತ್ರುಗಳನ್ನ ತಕ್ಷಣ ವಶ ಮಾಡ್ಕೊಳ್ತಿದ್ದೆ,

ನಾನು ನನ್ನ ಕೈಯನ್ನ ಅವ್ರ ಎದುರಾಳಿಗಳ ವಿರುದ್ಧ ತಿರುಗಿಸಿಬಿಡ್ತಿದ್ದೆ.+

15 ಯೆಹೋವನನ್ನ ದ್ವೇಷಿಸೋರು ಆತನ ಮುಂದೆ ಮುದುರಿಕೊಂಡು ನಿಂತ್ಕೊತಾರೆ,

ಅವರು ಶಾಶ್ವತವಾಗಿ ಶಿಕ್ಷೆ ಅನುಭವಿಸ್ತಾರೆ.

16 ಆದ್ರೆ ಆತನು ನಿನಗೆ* ಶ್ರೇಷ್ಠ* ಗೋದಿಯನ್ನ ಊಟಕ್ಕೆ ಕೊಡ್ತಾನೆ,+

ಬಂಡೆ ಒಳಗಿನ ಜೇನುತುಪ್ಪ ಕೊಟ್ಟು ನಿನ್ನನ್ನ ತೃಪ್ತಿಪಡಿಸ್ತಾನೆ.”+

ಆಸಾಫನ+ ಮಧುರ ಗೀತೆ.

82 ದೇವರು ತನ್ನ ಸಭೆಯಲ್ಲಿ ಎದ್ದು ನಿಲ್ತಾನೆ,+

ದೇವರುಗಳ ಮಧ್ಯ* ಆತನು ನ್ಯಾಯ ತೀರಿಸ್ತಾನೆ+ ಮತ್ತು ಹೀಗೆ ಹೇಳ್ತಾನೆ

 2 “ಎಲ್ಲಿ ತನಕ ನೀವು ಅನ್ಯಾಯ ಮಾಡ್ತಾ ಇರ್ತಿರ?+

ಎಲ್ಲಿ ತನಕ ನೀವು ದುಷ್ಟರ ಪಕ್ಷ ವಹಿಸ್ತಾ ಇರ್ತಿರ?+ (ಸೆಲಾ)

 3 ದೀನರ, ಅನಾಥರ ಪರವಾಗಿ ವಾದಿಸಿ.*+

ನಿಸ್ಸಹಾಯಕರಿಗೆ, ಗತಿ ಇಲ್ಲದವರಿಗೆ ನ್ಯಾಯ ಕೊಡಿಸಿ.+

 4 ದೀನರನ್ನ, ಬಡವರನ್ನ ಕಾಪಾಡಿ,

ಕೆಟ್ಟವರ ಕೈಯಿಂದ ಅವರನ್ನ ಬಿಡಿಸಿ.”

 5 ನ್ಯಾಯಾಧೀಶರಿಗೆ ಏನೂ ಗೊತ್ತಿಲ್ಲ, ಯಾವುದೂ ಅರ್ಥ ಆಗಲ್ಲ,+

ಅವರು ಕತ್ತಲಲ್ಲಿ ತಿರುಗ್ತಾ ಇದ್ದಾರೆ,

ಭೂಮಿಯ ಅಸ್ತಿವಾರಗಳೆಲ್ಲ ಅಲುಗಾಡ್ತಿದೆ.+

 6 “ನಾನು ಹೀಗಂದೆ ‘ನೀವು ದೇವರುಗಳು,*+

ನೀವೆಲ್ಲ ಸರ್ವೋನ್ನತನ ಮಕ್ಕಳು.

 7 ಆದ್ರೆ ಬೇರೆ ಮನುಷ್ಯರ ತರ ನೀವೂ ಸಾಯ್ತೀರ,+

ಬೇರೆ ನಾಯಕರ ತರ ನೀವೂ ಬಿದ್ದು ಹೋಗ್ತೀರ!’”+

 8 ದೇವರೇ ಎದ್ದೇಳು, ಭೂಮಿಗೆ ನ್ಯಾಯತೀರಿಸು,+

ಯಾಕಂದ್ರೆ ಎಲ್ಲ ಜನಾಂಗಗಳು ನಿಂದೇ.

ಆಸಾಫನ+ ಮಧುರ ಗೀತೆ.

83 ದೇವರೇ, ಸುಮ್ಮನಿರಬೇಡ,+

ಬಲಿಷ್ಠ ದೇವರೇ, ಮೌನವಾಗಿರದೆ* ಹೆಜ್ಜೆ ತಗೊ.

 2 ಯಾಕಂದ್ರೆ ನೋಡು! ನಿನ್ನ ಶತ್ರುಗಳು ಗರ್ಜಿಸ್ತಿದ್ದಾರೆ,+

ನಿನ್ನನ್ನ ದ್ವೇಷಿಸೋರು ಜಂಬದಿಂದ ನಡ್ಕೊಳ್ತಿದ್ದಾರೆ.*

 3 ಕಪಟದಿಂದ ನಿನ್ನ ಜನ್ರ ವಿರುದ್ಧ ರಹಸ್ಯವಾಗಿ ಸಂಚು ಮಾಡ್ತಾರೆ,

ನಿನ್ನ ಅಮೂಲ್ಯ* ಜನ್ರ ವಿರುದ್ಧ ಪಿತೂರಿ ನಡಿಸ್ತಾರೆ.

 4 “ಬನ್ನಿ, ಇಸ್ರಾಯೇಲ್‌ ಜನಾಂಗದ ಹೆಸ್ರನ್ನ ಯಾರೂ ನೆನಪಿಸ್ಕೊಳ್ಳದ ಹಾಗೆ,

ಆ ಇಡೀ ಜನಾಂಗನ ಸರ್ವನಾಶ ಮಾಡೋಣ”+ ಅಂತ ಹೇಳ್ತಿದ್ದಾರೆ.

 5 ಅವ್ರೆಲ್ಲ ಒಂದಾಗಿ ಬಂದು ಸೈನ್ಯ ಕಟ್ತಿದ್ದಾರೆ,

ನಿನ್ನ ವಿರುದ್ಧ ಯುದ್ಧಮಾಡೋಕೆ ಅವರು ತಮ್ಮತಮ್ಮಲ್ಲೇ ಒಪ್ಪಂದ* ಮಾಡ್ಕೊಂಡಿದ್ದಾರೆ.+

 6 ಡೇರೆಯಲ್ಲಿ ವಾಸಿಸೋ ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು,+ ಹಗ್ರೀಯರು,+

 7 ಗೆಬಲ್ಯರು, ಅಮ್ಮೋನಿಯರು,+ ಅಮಾಲೇಕ್ಯರು,

ಫಿಲಿಷ್ಟಿಯರು+ ಮತ್ತು ತೂರಿನ+ ನಿವಾಸಿಗಳು.

 8 ಇವ್ರ ಜೊತೆ ಅಶ್ಶೂರ್ಯರೂ+ ಸೇರಿಕೊಂಡಿದ್ದಾರೆ,

ಅವರು ಲೋಟನ ಮಕ್ಕಳಿಗೆ+ ಸಹಕಾರ ಕೊಡ್ತಿದ್ದಾರೆ.* (ಸೆಲಾ)

 9 ನೀನು ಮಿದ್ಯಾನ್ಯರಿಗೆ ಮಾಡಿದ ಹಾಗೆ,+

ಕೀಷೋನ್‌ ತೊರೆ ಹತ್ರ ಇರೋ ಸೀಸೆರನಿಗೆ ಮತ್ತು ಯಾಬೀನನಿಗೆ ಮಾಡಿದ ಹಾಗೆ ಇವ್ರಿಗೂ ಮಾಡು.+

10 ಅವರು ಎಂದೋರಲ್ಲಿ ನಾಶ ಆದ್ರು,+

ಅವರು ಹೊಲಕ್ಕೆ ಗೊಬ್ಬರ ಆದ್ರು.

11 ಓರೇಬನಿಗೆ ಮತ್ತು ಜೇಬನಿಗೆ ಬಂದ ಗತಿನೇ ಅವ್ರ ಪ್ರಧಾನರಿಗೂ ಬರಲಿ.+

ಜೆಬಹನಿಗೆ ಮತ್ತು ಚಲ್ಮುನ್ನನಿಗೆ ಆದ ಗತಿನೇ ಅವ್ರ ಅಧಿಕಾರಿಗಳಿಗೂ* ಆಗಲಿ.+

12 ಯಾಕಂದ್ರೆ ಅವರು “ಬನ್ನಿ, ದೇವರು ವಾಸಿಸೋ ದೇಶನ ಆಸ್ತಿಯಾಗಿ ಪಡ್ಕೊಳ್ಳೋಣ” ಅಂತ ಹೇಳ್ತಿದ್ರು.

13 ನನ್ನ ದೇವರೇ, ಅವ್ರನ್ನ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಮಾಡು,+

ಗಾಳಿಗೆ ತೂರಿಹೋಗೋ ಹೊಟ್ಟಿನ ತರ ಮಾಡು.

14 ಹೇಗೆ ಬೆಂಕಿ ಕಾಡನ್ನ ಸುಟ್ಟು ಹಾಕುತ್ತೋ,

ಹೇಗೆ ಜ್ವಾಲೆ ಪರ್ವತಗಳನ್ನ ದಹಿಸಿಬಿಡುತ್ತೋ,+

15 ಹಾಗೇ ನೀನು, ನಿನ್ನ ಚಂಡಮಾರುತದಿಂದ ಅವ್ರನ್ನ ಅಟ್ಟಿಸ್ಕೊಂಡು ಹೋಗು+

ನಿನ್ನ ಸುಂಟರಗಾಳಿಯಿಂದ ಅವ್ರನ್ನ ಹೆದರಿಸು.+

16 ಯೆಹೋವನೇ, ಅವರು ನಿನ್ನ ಹೆಸ್ರನ್ನ ಹುಡುಕೋ ತರ,

ಅವ್ರ ಮುಖಗಳನ್ನ ಅವಮಾನದಿಂದ ಮುಚ್ಚು.*

17 ಅವರು ಶಾಶ್ವತವಾಗಿ ನಾಚಿಕೆಪಡಲಿ, ಯಾವಾಗ್ಲೂ ಭಯಪಡಲಿ,

ಅವ್ರಿಗೆ ಅವಮಾನ ಆಗಲಿ, ನಾಶವಾಗಿ ಹೋಗಲಿ.

18 ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ+

ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.+

ಗಾಯಕರ ನಿರ್ದೇಶಕನಿಗೆ ಸೂಚನೆ: ಗಿತ್ತೀತ್‌ ರಾಗದಲ್ಲಿ ಹಾಡಬೇಕು. ಕೋರಹನ ಮಕ್ಕಳ+ ಮಧುರ ಗೀತೆ.

84 ಸೈನ್ಯಗಳ ದೇವರಾದ ಯೆಹೋವನೇ,

ನಿನ್ನ ಮಹಾ ಪವಿತ್ರ ಡೇರೆ ಎಷ್ಟು ಮನೋಹರ!+

 2 ಯೆಹೋವನ ಅಂಗಳಕ್ಕೆ ಹೋಗಬೇಕಂತ

ನನ್ನ ತನುಮನವೆಲ್ಲ ಹಾತೊರಿತಿದೆ,+

ಹೌದು, ಹಂಬಲಿಸಿ ಹಂಬಲಿಸಿ ನಾನು ಸೋತುಹೋಗಿದ್ದೀನಿ.

ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.

 3 ಸೈನ್ಯಗಳ ದೇವರಾದ ಯೆಹೋವನೇ,

ನನ್ನ ರಾಜನೇ, ನನ್ನ ದೇವರೇ! ನಿನ್ನ ಮಹಾವೇದಿ ಹತ್ರ

ಪಕ್ಷಿಗೂ ವಾಸಿಸೋಕೆ ಜಾಗ ಸಿಗುತ್ತೆ,

ಗುಬ್ಬಿನೂ ಗೂಡು ಕಟ್ಕೊಳ್ಳುತ್ತೆ.

ಅಲ್ಲಿ ತನ್ನ ಮರಿಗಳನ್ನ ಸಾಕಿಸಲಹುತ್ತೆ.

 4 ನಿನ್ನ ಮನೆಯಲ್ಲಿ ವಾಸಿಸೋರು ಭಾಗ್ಯವಂತರು!+

ಅವರು ಯಾವಾಗ್ಲೂ ನಿನ್ನನ್ನ ಹೊಗಳ್ತಾರೆ.+ (ಸೆಲಾ)

 5 ನಿನ್ನಲ್ಲಿ ಶಕ್ತಿ ಪಡಿಯೋ ಗಂಡಸರು ಭಾಗ್ಯವಂತರು,+

ಯಾರ ಹೃದಯ ನಿನ್ನ ಆಲಯಕ್ಕೆ ಹೋಗೋ ದಾರಿಯಲ್ಲಿ ನಡೆಯೋಕೆ ಬಯಸುತ್ತೋ ಅವರು ಖುಷಿಯಾಗಿ ಇರ್ತಾರೆ.

 6 ಅವರು ಬಾಕಾ ಕಣಿವೆಯನ್ನ* ಹಾದುಹೋಗುವಾಗ,

ಅದನ್ನ ನೀರಿನ ಬುಗ್ಗೆಗಳಾಗಿ ಮಾಡ್ಕೊತಾರೆ,

ಮುಂಗಾರು ಮಳೆ ಅದನ್ನ ಆಶೀರ್ವಾದಗಳಿಂದ ಮುಚ್ಚುತ್ತೆ.*

 7 ನಡೀತಾ ನಡೀತಾ ಅವ್ರ ಶಕ್ತಿ ಜಾಸ್ತಿ ಆಗ್ತಾ ಹೋಗುತ್ತೆ,+

ಅವ್ರಲ್ಲಿ ಎಲ್ರೂ ಚೀಯೋನಿನ ದೇವರ ಮುಂದೆ ಹಾಜರಾಗ್ತಾರೆ.

 8 ಸೈನ್ಯಗಳ ದೇವರಾದ ಯೆಹೋವನೇ, ನನ್ನ ಪ್ರಾರ್ಥನೆ ಕೇಳು.

ಯಾಕೋಬನ ದೇವರೇ, ಹೇಳೋದನ್ನ ಕೇಳಿಸ್ಕೊ. (ಸೆಲಾ)

 9 ನಮ್ಮ ಗುರಾಣಿಯೇ,+ ನಮ್ಮ ದೇವರೇ ನೋಡು,*

ನಿನ್ನ ಅಭಿಷಿಕ್ತನ ಮುಖನ ನೋಡು.+

10 ಬೇರೆಲ್ಲೋ ಸಾವಿರ ದಿನ ಕಳೆಯೋದಕ್ಕಿಂತ ನಿನ್ನ ಅಂಗಳದಲ್ಲಿ ಒಂದು ದಿನ ಕಳೆದ್ರೂ ಸಾಕು!+

ಕೆಟ್ಟವರ ಡೇರೆಯಲ್ಲಿ ಇರೋದಕ್ಕಿಂತ

ನನ್ನ ದೇವರ ಆಲಯದ ಹೊಸ್ತಿಲಲ್ಲಿ ಸೇವೆ ಮಾಡೋದೇ* ನನಗಿಷ್ಟ.

11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+

ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ.

ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋ

ಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+

12 ಸೈನ್ಯಗಳ ದೇವರಾದ ಯೆಹೋವನೇ,

ನಿನ್ನಲ್ಲಿ ಭರವಸೆ ಇಡೋ ವ್ಯಕ್ತಿ ಭಾಗ್ಯವಂತ.+

ಗಾಯಕರ ನಿರ್ದೇಶಕನಿಗೆ ಸೂಚನೆ: ಕೋರಹನ ಗಂಡುಮಕ್ಕಳ+ ಮಧುರ ಗೀತೆ.

85 ಯೆಹೋವನೇ, ನೀನು ನಿನ್ನ ದೇಶಕ್ಕೆ ದಯೆ ತೋರಿಸಿದೆ,+

ಯಾಕೋಬನ ಮಕ್ಕಳನ್ನ ಜೈಲಿಂದ ಬಿಡಿಸ್ಕೊಂಡು ಬಂದೆ.+

 2 ನೀನು ನಿನ್ನ ಜನ್ರ ತಪ್ಪುಗಳನ್ನ ಮನ್ನಿಸಿಬಿಟ್ಟೆ,

ಅವ್ರ ಪಾಪಗಳನ್ನೆಲ್ಲ ಕ್ಷಮಿಸಿಬಿಟ್ಟೆ.*+ (ಸೆಲಾ)

 3 ನೀನು ನಿನ್ನ ರೋಷವನ್ನ ತಡೆಹಿಡಿದೆ,

ನೀನು ನಿನ್ನ ಕಡುಕೋಪವನ್ನ ಬಿಟ್ಟುಬಿಟ್ಟೆ.+

 4 ನಮ್ಮನ್ನ ರಕ್ಷಿಸೋ ದೇವರೇ, ನಾವು ಮುಂಚೆ ಹೇಗೆ ಇದ್ವೋ ಹಾಗೆ ಮಾಡು,*

ನಮ್ಮ ಮೇಲಿರೋ ಬೇಜಾರನ್ನ ಪಕ್ಕಕ್ಕಿಡು.+

 5 ನೀನು ನಮ್ಮ ಮೇಲೆ ಶಾಶ್ವತವಾಗಿ ಕೋಪ ಮಾಡ್ಕೊಳ್ತೀಯಾ?+

ತಲೆಮಾರು ತಲೆಮಾರುಗಳ ತನಕ ನಿನ್ನ ಕಡುಕೋಪವನ್ನ ಹಾಗೆ ಇಟ್ಕೊತ್ತೀಯಾ?

 6 ನಿನ್ನ ಜನ ನಿನ್ನಲ್ಲಿ ಖುಷಿಪಡೋ ಹಾಗೆ

ನೀನು ನಮ್ಮಲ್ಲಿ ಮತ್ತೆ ಜೀವ ತುಂಬಲ್ವಾ?+

 7 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನ ನಮಗೆ ತೋರಿಸು,+

ನಮ್ಮನ್ನು ರಕ್ಷಿಸು.

 8 ಸತ್ಯ ದೇವರಾದ ಯೆಹೋವ ಹೇಳೋದನ್ನ ನಾನು ಕೇಳಿಸ್ಕೊಳ್ತೀನಿ,

ಯಾಕಂದ್ರೆ ಆತನು ತನ್ನ ಜನ್ರ ಜೊತೆ, ತನ್ನ ನಿಷ್ಠಾವಂತರ ಜೊತೆ ಶಾಂತಿಯಿಂದ ಮಾತಾಡ್ತಾನೆ,+

ಆದ್ರೆ ಅವರು ಮತ್ತೆ ತಮ್ಮ ಮೇಲೆನೇ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು.+

 9 ತನಗೆ ಭಯಪಡುವವರನ್ನ ರಕ್ಷಿಸೋಕೆ ಆತನು ಸಿದ್ಧನಾಗಿ ಇರ್ತಾನೆ.+

ಅದ್ರಿಂದಾಗಿ ನಮ್ಮ ದೇಶದಲ್ಲಿ ದೇವರ ಮಹಿಮೆ ತುಂಬಿರುತ್ತೆ.

10 ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಭೇಟಿ ಮಾಡುತ್ತೆ,

ನೀತಿ ಮತ್ತು ಶಾಂತಿ ಒಂದಕ್ಕೊಂದು ಮುತ್ತು ಕೊಡುತ್ತೆ.+

11 ನಂಬಿಗಸ್ತಿಕೆ ಭೂಮಿಯಿಂದ ಮೊಳಕೆ ಒಡೆಯುತ್ತೆ,

ದೇವರ ನೀತಿ ಆಕಾಶದಿಂದ ಹೊಳೆಯುತ್ತೆ.+

12 ಹೌದು, ಯೆಹೋವ ಒಳ್ಳೇದನ್ನೇ* ಕೊಡ್ತಾನೆ,+

ನಮ್ಮ ಭೂಮಿ ಅದ್ರ ಬೆಳೆಯನ್ನ ಕೊಡುತ್ತೆ.+

13 ನೀತಿ ಆತನ ಮುಂದೆ ನಡೆದು,+

ಆತನ ಹೆಜ್ಜೆಗಳಿಗೆ ದಾರಿ ಮಾಡಿಕೊಡುತ್ತೆ.

ದಾವೀದನ ಪ್ರಾರ್ಥನೆ.

86 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿ* ನನಗೆ ಉತ್ರ ಕೊಡು.

ಯಾಕಂದ್ರೆ ನಾನು ಕಷ್ಟದಲ್ಲಿದ್ದೀನಿ, ನಾನು ಬಡವ.+

 2 ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+

ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,

ಯಾಕಂದ್ರೆ ನೀನೇ ನನ್ನ ದೇವರು.+

 3 ಯೆಹೋವನೇ, ನನಗೆ ದಯೆ ತೋರಿಸು,+

ಇಡೀ ದಿನ ನಾನು ನಿನ್ನ ಕರೀತಾ ಇರ್ತಿನಿ.+

 4 ನಿನ್ನ ಸೇವಕ ಖುಷಿಪಡೋ ಹಾಗೆ ಮಾಡು,

ಯಾಕಂದ್ರೆ ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.

 5 ಯೆಹೋವನೇ, ನೀನು ಒಳ್ಳೆಯವನು,+ ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ,+

ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.+

 6 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,

ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು.+

 7 ನನಗೆ ಕಷ್ಟ ಬಂದಾಗ ನಾನು ನಿನ್ನನ್ನ ಕೂಗ್ತೀನಿ,+

ಯಾಕಂದ್ರೆ ನೀನು ನನಗೆ ಉತ್ರ ಕೊಡ್ತೀಯ.+

 8 ಯೆಹೋವನೇ, ದೇವರುಗಳಲ್ಲಿ ನಿನ್ನಂಥ ದೇವರು ಬೇರೆ ಯಾರೂ ಇಲ್ಲ,+

ನಿನ್ನ ಕೆಲಸಗಳಿಗೆ ಸರಿಸಾಟಿ ಇಲ್ಲ.+

 9 ಯೆಹೋವನೇ, ನೀನು ಸೃಷ್ಟಿಸಿದ ಎಲ್ಲ ಜನಾಂಗಗಳು

ನಿನ್ನ ಮುಂದೆ ಬಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತವೆ,+

ಅವು ನಿನ್ನ ಹೆಸ್ರಿಗೆ ಗೌರವ ತರುತ್ತವೆ.+

10 ಯಾಕಂದ್ರೆ ನೀನು ಮಹೋನ್ನತನು, ಅದ್ಭುತಗಳನ್ನ ಮಾಡ್ತೀಯ,+

ನೀನೇ ದೇವರು, ನೀನೊಬ್ಬನೇ ದೇವರು.+

11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+

ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+

ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+

12 ನನ್ನ ದೇವರಾದ ಯೆಹೋವನೇ, ಪೂರ್ಣ ಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ,+

ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ.

13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,

ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+

14 ದೇವರೇ, ಗರ್ವಿಷ್ಠರು ನನ್ನ ವಿರುದ್ಧ ಎದ್ದಿದ್ದಾರೆ,+

ಕ್ರೂರಿಗಳ ಗುಂಪು ನನ್ನ ಪ್ರಾಣದ ಹಿಂದೆ ಬಿದ್ದಿದೆ,

ನೀನಂದ್ರೆ ಅವ್ರಿಗೆ ಕಿಂಚಿತ್ತೂ ಬೆಲೆ ಇಲ್ಲ.*+

15 ಆದ್ರೆ ಯೆಹೋವನೇ, ನೀನು ಕರುಣೆ ಇರೋ ದೇವರು, ಕನಿಕರ ಇರೋ* ದೇವರು,

ಥಟ್ಟಂತ ಕೋಪಿಸಿಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತೀಯ, ನಂಬಿಗಸ್ತನು.*+

16 ನನ್ನ ಕಡೆ ತಿರುಗಿ ನನಗೆ ದಯೆ ತೋರಿಸು.+

ನಿನ್ನ ಸೇವಕನಿಗೆ ನಿನ್ನ ಶಕ್ತಿಯನ್ನು ಕೊಡು,+

ನಿನ್ನ ದಾಸಿಯ ಮಗನನ್ನ ರಕ್ಷಿಸು.

17 ನಿನ್ನ ಒಳ್ಳೇತನದ ಒಂದು ಗುರುತನ್ನ* ನನಗೆ ತೋರಿಸು,

ನನ್ನನ್ನ ದ್ವೇಷಿಸೋರು ಅದನ್ನ ನೋಡಿ ಅವಮಾನಪಡಲಿ.

ಯಾಕಂದ್ರೆ ಯೆಹೋವನೇ, ನನಗೆ ಸಹಾಯ ಮಾಡೋನೂ ನನ್ನನ್ನ ಸಂತೈಸೋನೂ ನೀನೇ.

ಕೋರಹನ ಮಕ್ಕಳ+ ಮಧುರ ಗೀತೆ.

87 ದೇವರ ಪಟ್ಟಣದ ಅಸ್ತಿವಾರ ಪವಿತ್ರ ಬೆಟ್ಟಗಳಲ್ಲಿ ಇದೆ.+

 2 ಯಾಕೋಬನ ಎಲ್ಲ ಡೇರೆಗಳಿಗಿಂತ

ಚೀಯೋನಿನ ಬಾಗಿಲುಗಳನ್ನ ಯೆಹೋವ ಪ್ರೀತಿಸ್ತಾನೆ.+

 3 ಸತ್ಯ ದೇವರ ಪಟ್ಟಣವೇ, ನಿನ್ನ ಬಗ್ಗೆ ಒಳ್ಳೇ ವಿಷ್ಯಗಳನ್ನ ಹೇಳ್ತಿದ್ದಾರೆ.+ (ಸೆಲಾ)

 4 ರಾಹಾಬ*+ ಮತ್ತು ಬಾಬೆಲನ್ನ ನನ್ನ ಬಗ್ಗೆ ಗೊತ್ತಿರೋರು* ಅಂದ್ಕೊಳ್ತೀನಿ,

ನೋಡಿ! ಫಿಲಿಷ್ಟಿಯ ಮತ್ತು ತೂರ್‌ ಕೂಷಿನ ಜೊತೆ ಇವೆ.

ನಾನು ಇವ್ರಲ್ಲಿ ಎಲ್ರ ಬಗ್ಗೆ “ಇವರು ಚೀಯೋನಿನಲ್ಲಿ ಹುಟ್ಟಿದರು” ಅಂತ ಹೇಳ್ತೀನಿ.

 5 ಚೀಯೋನಿನ ಬಗ್ಗೆ ನಾನು

“ಪ್ರತಿಯೊಬ್ರೂ ಇಲ್ಲೇ ಹುಟ್ಟಿದ್ರು” ಅಂತ ಹೇಳ್ತೀನಿ.

ಸರ್ವೋನ್ನತ ಅವಳನ್ನ ದೃಢವಾಗಿ ಸ್ಥಾಪಿಸ್ತಾನೆ.

 6 ಜನ್ರ ಹೆಸ್ರನ್ನ ದಾಖಲಿಸುವಾಗ ಯೆಹೋವ,

“ಇವನು ಅಲ್ಲೇ ಹುಟ್ಟಿದ” ಅಂತ ಹೇಳ್ತಾನೆ. (ಸೆಲಾ)

 7 ಹಾಡು ಹೇಳೋರು+ ಮತ್ತು ಕುಣಿಯೋರು,+

“ನನ್ನ ಬುಗ್ಗೆಗಳೆಲ್ಲ ನಿನ್ನಲ್ಲೇ ಇವೆ”* ಅಂತ ಹೇಳ್ತಾರೆ.+

ಕೋರಹನ ಮಕ್ಕಳ+ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಮಹಾಲತ್‌* ಶೈಲಿಯಲ್ಲಿ ಒಂದಾದ ಮೇಲೆ ಒಂದು ಹಾಡಬೇಕು. ಜೆರಹ್ಯನಾದ ಹೇಮಾನನ+ ಮಸ್ಕಿಲ್‌.*

88 ಯೆಹೋವನೇ, ನನ್ನನ್ನ ರಕ್ಷಿಸೋ ದೇವರೇ,+

ಬೆಳಗ್ಗೆ ನಾನು ನಿನಗೆ ಮೊರೆಯಿಡ್ತೀನಿ,

ರಾತ್ರಿ ನಾನು ನಿನ್ನ ಸನ್ನಿಧಿಗೆ ಬರ್ತಿನಿ.+

 2 ನನ್ನ ಪ್ರಾರ್ಥನೆ ನಿನಗೆ ಮುಟ್ಟಲಿ,+

ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೋ.*+

 3 ಯಾಕಂದ್ರೆ ನಾನು ಕಷ್ಟಗಳಲ್ಲಿ ಮುಳುಗಿ ಹೋಗಿದ್ದೀನಿ,+

ನನ್ನ ಜೀವ ಸಮಾಧಿಯ* ಅಂಚಿನಲ್ಲಿದೆ.+

 4 ಸಮಾಧಿಗೆ* ಸೇರೋ ಜನ್ರ ಜೊತೆ ಈಗಾಗಲೇ ನನ್ನನ್ನ ಎಣಿಸ್ತಾ ಇದ್ದಾರೆ,+

ನನಗೆ ಸಹಾಯ ಮಾಡೋಕೆ ಯಾರೂ ಇಲ್ಲ,*+

 5 ಸತ್ತವರ ಮಧ್ಯ ನಾನು ಇದ್ದೀನಿ

ಸಮಾಧಿಯಲ್ಲಿ ಬಿದ್ದಿರೋ ಶವದ ತರ,

ನೀನು ಇನ್ಯಾವತ್ತೂ ನೆನಪಿಸ್ಕೊಳ್ಳದ ವ್ಯಕ್ತಿ ತರ,

ನಿನ್ನ ಕಾಳಜಿ ಸಿಗದಿರೋ ಮನುಷ್ಯನ ತರ ನಾನಿದ್ದೀನಿ.

 6 ನೀನು ನನ್ನನ್ನ ಆಳವಾದ ಗುಂಡಿ ಒಳಗೆ ಹಾಕಿದೆ,

ಕತ್ತಲು ತುಂಬಿದ ಜಾಗದಲ್ಲಿ, ಆಳವಾಗಿರೋ ಜಾಗದಲ್ಲಿ ಬಿಟ್ಟೆ.

 7 ನಿನ್ನ ಕ್ರೋಧ ನನ್ನ ಮೇಲೆ ಭಾರವಾಗಿದೆ,+

ಅಪ್ಪಳಿಸೋ ನಿನ್ನ ಅಲೆಗಳಿಂದ ನೀನು ನನ್ನನ್ನ ಮುಳುಗಿಸಿ ಬಿಟ್ಟಿದ್ದೀಯ. (ಸೆಲಾ)

 8 ನೀನು ನನ್ನ ಪರಿಚಿತರನ್ನ ನನ್ನಿಂದ ದೂರ ಮಾಡಿದೆ,+

ಅವ್ರ ದೃಷ್ಟಿಯಲ್ಲಿ ನನ್ನನ್ನ ಒಂದು ಅಸಹ್ಯ ವಸ್ತುವಾಗಿ ಮಾಡಿದೆ.

ನಾನು ಸಿಕ್ಕಿಹಾಕಿಕೊಂಡಿದ್ದೀನಿ, ತಪ್ಪಿಸ್ಕೊಳ್ಳೋಕೆ ಆಗ್ತಿಲ್ಲ.

 9 ನನ್ನ ಕಷ್ಟದಿಂದಾಗಿ ನನ್ನ ಕಣ್ಣು ಸೋತುಹೋಗಿದೆ.+

ಯೆಹೋವನೇ, ಇಡೀ ದಿನ ನಾನು ನಿನಗೆ ಮೊರೆ ಇಡ್ತೀನಿ,+

ನಿನ್ನ ಕಡೆ ನನ್ನ ಕೈಗಳನ್ನ ಚಾಚ್ತೀನಿ.

10 ಸತ್ತವರಿಗಾಗಿ ನೀನು ಅದ್ಭುತಗಳನ್ನ ಮಾಡ್ತೀಯಾ?

ಸತ್ತಿರೋರೂ ಎದ್ದು ನಿನ್ನನ್ನ ಹೊಗಳ್ತಾರಾ?+ (ಸೆಲಾ)

11 ಸಮಾಧಿಯಲ್ಲಿ ನಿನ್ನ ಶಾಶ್ವತ ಪ್ರೀತಿ ಬಗ್ಗೆ ಸಾರಕ್ಕಾಗುತ್ತಾ?

ನಾಶನದ ಸ್ಥಳದಲ್ಲಿ* ನಿನ್ನ ನಂಬಿಗಸ್ತಿಕೆಯ ಬಗ್ಗೆ ಹೇಳಕ್ಕಾಗುತ್ತಾ?

12 ಕತ್ತಲು ತುಂಬಿರೋ ಜಾಗದಲ್ಲಿ ನಿನ್ನ ಅದ್ಭುತಗಳ ಬಗ್ಗೆ ಗೊತ್ತಾಗುತ್ತಾ?

ಗೊತ್ತಿಲ್ಲದ ಜಾಗದಲ್ಲಿ ನಿನ್ನ ನೀತಿಯ ಬಗ್ಗೆ ಗೊತ್ತಾಗುತ್ತಾ?+

13 ಆದ್ರೆ ಯೆಹೋವನೇ, ನಾನು ಸಹಾಯಕ್ಕಾಗಿ ನಿನಗೆ ಪ್ರಾರ್ಥಿಸ್ತಾನೇ ಇರ್ತಿನಿ,+

ದಿನಾ ಬೆಳಿಗ್ಗೆ ನನ್ನ ಪ್ರಾರ್ಥನೆಗಳು ನಿನ್ನ ಸನ್ನಿಧಿಯನ್ನ ಮುಟ್ಟುತ್ತೆ.+

14 ಯೆಹೋವನೇ, ಯಾಕೆ ನೀನು ನನ್ನನ್ನ ತಳ್ಳಿಬಿಟ್ಟಿದ್ದೀಯಾ?+

ಯಾಕೆ ನೀನು ನಿನ್ನ ಮುಖನ ನನ್ನ ಕಡೆಯಿಂದ ತಿರುಗಿಸ್ಕೊಂಡಿದ್ದೀಯಾ?+

15 ನಾನು ಚಿಕ್ಕವನಾಗಿ ಇದ್ದಾಗಿಂದ,

ಕಷ್ಟಗಳನ್ನ ಅನುಭವಿಸ್ತಾನೇ ಇದ್ದೀನಿ, ಸಾವಿಗೆ ಹತ್ತಿರವಾಗೇ ಇದ್ದೀನಿ,+

ನೀನು ಅನುಮತಿಸಿರೋ ಭಯಂಕರ ವಿಪತ್ತುಗಳನ್ನ ಸಹಿಸಿ ಸಹಿಸಿ ಮರಗಟ್ಟಿ ಹೋಗಿದ್ದೀನಿ.

16 ನಿನ್ನ ಕೋಪಾಗ್ನಿ ನನ್ನನ್ನ ಸದೆಬಡಿದಿದೆ,+

ನಿನ್ನ ಭಯ ನನ್ನನ್ನ ತಿಂದುಹಾಕ್ತಿದೆ.

17 ನಿನ್ನ ಭಯ ಇಡೀ ದಿನ ನನ್ನನ್ನ ಸಮುದ್ರದ ಅಲೆಗಳ ತರ ಸುತ್ಕೊಂಡಿದೆ,

ಎಲ್ಲ ಕಡೆಯಿಂದ* ಅದು ನನ್ನ ಮೇಲೆ ಆಕ್ರಮಣ ಮಾಡುತ್ತೆ.

18 ನೀನು ನನ್ನ ಸ್ನೇಹಿತರನ್ನ, ನನ್ನ ಜೊತೆಗಾರರನ್ನ ನನ್ನಿಂದ ದೂರ ಮಾಡಿದ್ದೀಯ,+

ಹಾಗಾಗಿ ಕತ್ತಲೇ ನನ್ನ ಸಂಗಾತಿಯಾಗಿದೆ.

ಜೆರಹ್ಯನಾದ ಏತಾನನ+ ಮಸ್ಕಿಲ್‌.*

89 ಯೆಹೋವನ ಶಾಶ್ವತ ಪ್ರೀತಿಯ ಬಗ್ಗೆ ನಾನು ಯಾವಾಗ್ಲೂ ಹಾಡ್ತೀನಿ.

ನಿನ್ನ ನಂಬಿಗಸ್ತಿಕೆಯ ಬಗ್ಗೆ ಎಲ್ಲ ಪೀಳಿಗೆಗೆ ಹೇಳ್ತೀನಿ.

 2 ಯಾಕಂದ್ರೆ ನಾನು ಹೀಗೆ ಹೇಳಿದೆ “ಶಾಶ್ವತ ಪ್ರೀತಿ ಯಾವಾಗ್ಲೂ ಇರುತ್ತೆ,+

ನೀನು ನಿನ್ನ ನಂಬಿಗಸ್ತಿಕೆಯನ್ನ ಸ್ವರ್ಗದಲ್ಲಿ ದೃಢವಾಗಿ ಸ್ಥಾಪಿಸಿದ್ದೀಯ.”

 3 ನೀನು ಹೀಗೆ ಹೇಳಿದೆ “ನಾನು ಆರಿಸ್ಕೊಂಡ ನನ್ನ ಸೇವಕ ದಾವೀದನ ಜೊತೆ ನಾನು ಒಂದು ಒಪ್ಪಂದ ಮಾಡ್ಕೊಂಡೆ.+

ನಾನು ಅವನಿಗೆ ಹೀಗೆ ಮಾತು ಕೊಟ್ಟೆ+

 4 ‘ನಾನು ನಿನ್ನ ಸಂತತಿಯನ್ನ+ ದೃಢಪಡಿಸ್ತೀನಿ, ಶಾಶ್ವತವಾಗಿ ಸ್ಥಾಪಿಸ್ತೀನಿ,

ನಿನ್ನ ಸಿಂಹಾಸನವನ್ನ ತಲತಲಾಂತರಕ್ಕೂ ಭದ್ರಮಾಡ್ತೀನಿ.’”+ (ಸೆಲಾ)

 5 ಯೆಹೋವನೇ, ನಿನ್ನ ಅದ್ಭುತಗಳ ಬಗ್ಗೆ ಸ್ವರ್ಗ ಹೊಗಳುತ್ತೆ,

ಹೌದು, ನಿನ್ನ ನಂಬಿಗಸ್ತಿಕೆಯ ಬಗ್ಗೆ ಪವಿತ್ರ ಜನ್ರ ಸಭೆ ಕೊಂಡಾಡುತ್ತೆ.

 6 ಆಕಾಶದಲ್ಲಿ ಯೆಹೋವನಿಗೆ ಸರಿಸಾಟಿ ಯಾರು?+

ದೇವರ ಮಕ್ಕಳಲ್ಲಿ*+ ಯಾರು ಯೆಹೋವನ ತರ ಇದ್ದಾರೆ?

 7 ಪವಿತ್ರ ಜನ್ರ ಸಭೆಯಲ್ಲಿ* ದೇವರನ್ನ ನೋಡಿದಾಗ ಆಶ್ಚರ್ಯ ಆಗುತ್ತೆ,+

ಆತನು ತನ್ನ ಸುತ್ತ ಇರೋರಿಗೆ ಮಹೋನ್ನತನು, ಭಯವಿಸ್ಮಯನು.+

 8 ಸೈನ್ಯಗಳ ದೇವರಾದ ಯೆಹೋವನೇ,

ಯಾಹುವೇ, ನಿನ್ನಷ್ಟು ಶಕ್ತಿಶಾಲಿ ಯಾರಿದ್ದಾರೆ?+

ನೀನು ಎಲ್ಲದ್ರಲ್ಲೂ ನಂಬಿಗಸ್ತನು.+

 9 ಸಮುದ್ರದ ಅಬ್ಬರವೂ ನಿನ್ನ ಹದ್ದುಬಸ್ತಿನಲ್ಲಿ ಇರುತ್ತೆ,+

ಅದ್ರ ಅಲೆಗಳು ಏಳುವಾಗ ಅವುಗಳನ್ನ ಶಾಂತ ಮಾಡ್ತೀಯ.+

10 ನೀನು ರಾಹಾಬನ್ನ*+ ಪೂರ್ತಿಯಾಗಿ ಸೋಲಿಸಿ, ಅದನ್ನ ಕೊಂದು ಹಾಕಿದೆ.+

ನಿನ್ನ ಬಲಿಷ್ಠ ತೋಳುಗಳಿಂದ ನಿನ್ನ ಶತ್ರುಗಳನ್ನ ಚೆದರಿಸಿಬಿಟ್ಟೆ.+

11 ಆಕಾಶ ನಿಂದೇ, ಭೂಮಿನೂ ನಿಂದೇ.+

ಬೆಳೆ ಕೊಡೋ ಭೂಮಿ, ಅದ್ರಲ್ಲಿರೋ ಎಲ್ಲವನ್ನೂ ಸೃಷ್ಟಿಮಾಡಿದವನು ನೀನೇ.+

12 ಉತ್ತರ, ದಕ್ಷಿಣವನ್ನ ಸೃಷ್ಟಿಸಿದವನೂ ನೀನೇ,

ತಾಬೋರ್‌+ ಮತ್ತು ಹೆರ್ಮೋನ್‌+ ಬೆಟ್ಟಗಳು ಖುಷಿಖುಷಿಯಾಗಿ ನಿನ್ನ ಹೆಸ್ರನ್ನ ಹೊಗಳ್ತವೆ.

13 ನಿನ್ನ ತೋಳು ಬಲಿಷ್ಠವಾಗಿದೆ,+

ನಿನ್ನ ಕೈಯಲ್ಲಿ ಶಕ್ತಿ ತುಂಬಿದೆ,+

ನಿನ್ನ ಬಲಗೈ ಮೇಲಕ್ಕೇರಿದೆ.+

14 ನೀತಿ, ನ್ಯಾಯ ನಿನ್ನ ಸಿಂಹಾಸನದ ಅಸ್ತಿವಾರ.+

ಶಾಶ್ವತ ಪ್ರೀತಿ, ಸತ್ಯತೆ ನಿನ್ನ ಮುಂದೆ ನಿಂತಿವೆ.+

15 ಆನಂದದಿಂದ ನಿನ್ನನ್ನ ಹೊಗಳೋ ಜನ್ರು ಭಾಗ್ಯವಂತರು.+

ಯೆಹೋವನೇ, ನಿನ್ನ ಮುಖದ ಬೆಳಕಲ್ಲಿ ಅವರು ನಡೀತಾರೆ.

16 ನಿನ್ನ ಹೆಸ್ರಿಂದ ಅವರು ಇಡೀ ದಿನ ಸಂಭ್ರಮಿಸ್ತಾರೆ,

ನಿನ್ನ ನೀತಿಯಿಂದ ಅವರು ಏಳಿಗೆ ಆಗ್ತಾರೆ.

17 ಯಾಕಂದ್ರೆ ನೀನೇ ಅವ್ರ ಮಹಿಮೆ, ಅವ್ರ ಬಲ,+

ನಿನ್ನ ಒಪ್ಪಿಗೆಯಿಂದ ನಮ್ಮ ಬಲ* ಜಾಸ್ತಿ ಆಗ್ತಾ ಹೋಗ್ತಿದೆ.+

18 ನಮ್ಮ ಗುರಾಣಿ ಯೆಹೋವನಿಗೆ ಸೇರಿದ್ದು,

ನಮ್ಮ ರಾಜ ಇಸ್ರಾಯೇಲ್ಯರ ಪವಿತ್ರ ದೇವ್ರಿಗೆ ಸೇರಿದವನು.+

19 ಆಗ ನೀನು ನಿನ್ನ ನಿಷ್ಠಾವಂತರಿಗೆ ದರ್ಶನದಲ್ಲಿ ಹೀಗೆ ಹೇಳಿದೆ

“ನಾನು ಒಬ್ಬ ಬಲಿಷ್ಠನಿಗೆ ಶಕ್ತಿ ಕೊಟ್ಟೆ,+

ಜನ್ರಿಂದ ಆರಿಸ್ಕೊಂಡಿರೋ ಅವನನ್ನ ದೊಡ್ಡ ಸ್ಥಾನದಲ್ಲಿ ಇಟ್ಟಿದ್ದೀನಿ.+

20 ನನಗೆ ನನ್ನ ಸೇವಕ ದಾವೀದ ಸಿಕ್ಕಿದ,+

ನನ್ನ ಪವಿತ್ರ ತೈಲದಿಂದ ನಾನು ಅವನನ್ನ ಅಭಿಷೇಕ ಮಾಡಿದೆ.+

21 ನನ್ನ ಕೈ ಅವನಿಗೆ ಸಹಾಯ ಮಾಡುತ್ತೆ,+

ನನ್ನ ತೋಳು ಅವನನ್ನ ಬಲಪಡಿಸುತ್ತೆ.

22 ಯಾವ ಶತ್ರುನೂ ಅವನಿಂದ ಕಪ್ಪ ವಸೂಲಿ ಮಾಡಲ್ಲ,

ಯಾವ ದುಷ್ಟನೂ ಅವನ ಮೇಲೆ ದಬ್ಬಾಳಿಕೆ ಮಾಡಲ್ಲ.+

23 ನಾನು ಅವನ ಶತ್ರುಗಳನ್ನ ಅವನ ಮುಂದೆನೇ ಜಜ್ಜಿ ಪುಡಿಪುಡಿ ಮಾಡ್ತೀನಿ+

ಅವನನ್ನ ದ್ವೇಷಿಸೋ ಜನ್ರನ್ನ ಸಂಹಾರ ಮಾಡ್ತೀನಿ.+

24 ನನ್ನ ನಂಬಿಗಸ್ತಿಕೆ ಮತ್ತು ಶಾಶ್ವತ ಪ್ರೀತಿ ಅವನ ಜೊತೆ ಇರುತ್ತೆ,+

ನನ್ನ ಹೆಸ್ರಿಂದ ಅವನ ಬಲ* ಹೆಚ್ಚುತ್ತೆ.

25 ನಾನು ಸಮುದ್ರವನ್ನ ಅವನ ಕೈಕೆಳಗೆ* ಇಡ್ತೀನಿ,

ನದಿಯನ್ನ ಅವನ ಬಲಗೈ ಕೆಳಗೆ ಇಡ್ತೀನಿ.+

26 ಅವನು ನನಗೆ ಮೊರೆ ಇಡ್ತಾ ‘ನೀನೇ ನನ್ನ ಅಪ್ಪ,

ನನ್ನ ದೇವರು, ನನ್ನ ರಕ್ಷಣೆಯ ಬಂಡೆ’ ಅಂತ ಹೇಳ್ತಾನೆ.+

27 ನಾನು ಅವನನ್ನ ನನ್ನ ಮೊದಲ ಮಗನಾಗಿ ಮಾಡಿಕೊಳ್ತೀನಿ,+

ಅವನಿಗೆ ಭೂಮಿಯ ಎಲ್ಲ ರಾಜರಿಗಿಂತ ದೊಡ್ಡ ಸ್ಥಾನ ಕೊಡ್ತೀನಿ.+

28 ಅವನ ಮೇಲೆ ಶಾಶ್ವತ ಪ್ರೀತಿಯನ್ನ ನಾನು ಯಾವಾಗ್ಲೂ ತೋರಿಸ್ತೀನಿ,+

ಅವನ ಜೊತೆ ಮಾಡ್ಕೊಂಡಿರೋ ನನ್ನ ಒಪ್ಪಂದ ಯಾವತ್ತೂ ಮುರಿದುಹೋಗಲ್ಲ.+

29 ನಾನು ಅವನ ಸಂತತಿಯನ್ನ ಶಾಶ್ವತವಾಗಿ ಸ್ಥಿರಪಡಿಸ್ತೀನಿ,

ಆಕಾಶ ಇರೋ ತನಕ ಅವನ ಸಿಂಹಾಸನ ಇರುತ್ತೆ.+

30 ಅವನ ಮಕ್ಕಳು ನನ್ನ ನಿಯಮಗಳನ್ನ ಒಪ್ಪದಿದ್ರೆ,

ನನ್ನ ತೀರ್ಪುಗಳ ಪ್ರಕಾರ ನಡೀದಿದ್ರೆ,

31 ನನ್ನ ಮಾತುಗಳನ್ನ ಮೀರಿದ್ರೆ,

ನನ್ನ ಆಜ್ಞೆಗಳನ್ನ ಪಾಲಿಸದಿದ್ರೆ

32 ಅವರು ಮಾಡಿದ ದ್ರೋಹಕ್ಕಾಗಿ* ನಾನು ಅವ್ರಿಗೆ ಕೋಲಿಂದ ಶಿಕ್ಷೆ ಕೊಡ್ತೀನಿ,+

ಅವರು ಮಾಡಿದ ತಪ್ಪಿಗಾಗಿ ಅವ್ರಿಗೆ ಕೊರಡೆಯಿಂದ ಬಾರಿಸ್ತೀನಿ.

33 ಆದ್ರೆ ಅವನ ಕಡೆಗಿರೋ ನನ್ನ ಶಾಶ್ವತ ಪ್ರೀತಿಯನ್ನ ನಾನು ಯಾವತ್ತೂ ಬಿಟ್ಟುಬಿಡಲ್ಲ+

ಕೊಟ್ಟ ಮಾತಿಗೆ ನಾನು ತಪ್ಪಲ್ಲ.*

34 ನಾನು ನನ್ನ ಒಪ್ಪಂದನ ಮೀರಲ್ಲ+

ನನ್ನ ತುಟಿಗಳು ಹೇಳಿದ ಮಾತನ್ನ ಬದಲಾಯಿಸಲ್ಲ.+

35 ನಾನು ನನ್ನ ಪವಿತ್ರತೆ ಮೇಲೆ ಆಣೆ ಮಾಡಿ, ದಾವೀದನಿಗೆ ಈಗಾಗ್ಲೇ ಹೇಳಿ ಆಗಿದೆ,

ಹಾಗಾಗಿ ನಾನು ಅವನಿಗೆ ಸುಳ್ಳು ಹೇಳಲ್ಲ.+

36 ಅವನ ಸಂತತಿ ಶಾಶ್ವತವಾಗಿ ಇರುತ್ತೆ,+

ಸೂರ್ಯನ ತರ ಅವನ ಸಿಂಹಾಸನ ಯಾವಾಗ್ಲೂ ನನ್ನ ಮುಂದೆನೇ ಇರುತ್ತೆ.+

37 ಆಕಾಶದಲ್ಲಿ ನಂಬಿಗಸ್ತ ಸಾಕ್ಷಿ ತರ ಇರೋ ಚಂದ್ರನ ಹಾಗೆ

ಅವನ ಸಿಂಹಾಸನ ಶಾಶ್ವತವಾಗಿ ಇರುತ್ತೆ.” (ಸೆಲಾ)

38 ಆದ್ರೆ ನೀನೇ ನಿನ್ನ ಅಭಿಷಿಕ್ತನನ್ನ ತಳ್ಳಿಹಾಕಿದೆ, ಅವನನ್ನ ಬೇಡ ಅಂದೆ,+

ಅವನ ಮೇಲೆ ತುಂಬ ಕೋಪ ಮಾಡ್ಕೊಂಡೆ.

39 ನೀನು ನಿನ್ನ ಸೇವಕನ ಜೊತೆ ಮಾಡ್ಕೊಂಡ ಒಪ್ಪಂದವನ್ನ ಕೀಳಾಗಿ ನೋಡಿದೆ,

ನೀನು ಅವನ ಕಿರೀಟವನ್ನ ನೆಲಕ್ಕೆ ಬಿಸಾಡಿ ಅದನ್ನ ಅಪವಿತ್ರ ಮಾಡಿದೆ.

40 ಅವನ ಕಲ್ಲಿನ ಗೋಡೆಗಳನ್ನೆಲ್ಲ ಬೀಳಿಸಿದೆ,

ಅವನ ಕೋಟೆಗಳನ್ನ ಧ್ವಂಸಮಾಡಿದೆ.

41 ಅದನ್ನ ದಾಟಿ ಹೋಗೋ ದಾರಿಹೋಕರೆಲ್ಲ ಅವನನ್ನ ಲೂಟಿ ಮಾಡಿದ್ರು.

ಅಕ್ಕಪಕ್ಕದವರೆಲ್ಲ ಅವನನ್ನ ಬೈದ್ರು.+

42 ಅವನ ವೈರಿಗಳು ಗೆಲ್ಲೋ ಹಾಗೆ ನೀನು ಮಾಡಿದೆ,*+

ಅವನ ಶತ್ರುಗಳೆಲ್ಲ ಖುಷಿಪಡೋ ತರ ಮಾಡಿದೆ.

43 ಅವನ ಕತ್ತಿಯನ್ನ ಕೆಲಸಕ್ಕೆ ಬಾರದ ಹಾಗೆ ಮಾಡಿದೆ,

ಯುದ್ಧ ಭೂಮಿಯಲ್ಲಿ ಅವನು ಸೋತು ಹೋಗೋ ತರ ಮಾಡಿದೆ.

44 ನೀನು ಅವನ ವೈಭವಕ್ಕೆ ಅಂತ್ಯ ಹಾಡಿದೆ,

ಅವನ ಸಿಂಹಾಸನವನ್ನ ಕೆಳಕ್ಕೆ ತಳ್ಳಿಬಿಟ್ಟೆ.

45 ಅವನಿಗೆ ಬೇಗ ವಯಸ್ಸಾಗೋ ತರ ಮಾಡಿದೆ,

ಅವಮಾನವನ್ನ ಅವನ ಮೇಲೆ ಬಟ್ಟೆ ತರ ಹೊದಿಸಿಬಿಟ್ಟೆ. (ಸೆಲಾ)

46 ಯೆಹೋವನೇ, ನೀನು ಎಲ್ಲಿ ತನಕ ಬಚ್ಚಿಟ್ಕೊಳ್ತೀಯಾ? ಹೀಗೇ ಬಚ್ಚಿಟ್ಕೊಂಡೇ ಇದ್ದುಬಿಡ್ತೀಯಾ?+

ನಿನ್ನ ಕೋಪ ಎಲ್ಲಿ ತನಕ ಬೆಂಕಿ ತರ ಉರೀತಾನೇ ಇರುತ್ತೆ?

47 ನನ್ನ ಜೀವನ ಎಷ್ಟು ಚಿಕ್ಕದು ಅಂತ ನಿನಗೆ ಗೊತ್ತೇ ಇದೆ!+

ನೀನು ಮನುಷ್ಯರನ್ನ ಯಾವ ಉದ್ದೇಶನೂ ಇಲ್ಲದೆ ಸೃಷ್ಟಿ ಮಾಡಿದ್ದೀಯಾ?

48 ಸಾವನ್ನೇ ನೋಡದ ವ್ಯಕ್ತಿ ಇದ್ದಾನಾ?+

ಅವನು ಸಮಾಧಿಯ* ಸೆರೆಯಿಂದ ತನ್ನ ಜೀವವನ್ನ ಕಾಪಾಡಿಕೊಳ್ಳೋಕೆ ಆಗುತ್ತಾ? (ಸೆಲಾ)

49 ಯೆಹೋವನೇ, ಈ ಹಿಂದೆ ಶಾಶ್ವತ ಪ್ರೀತಿಯಿಂದ ನೀನು ಮಾಡಿದ ಕೆಲಸಗಳೆಲ್ಲಾ ಏನಾಯ್ತು?

ನಿನ್ನ ನಂಬಿಗಸ್ತಿಕೆಯಿಂದ ಆ ಕೆಲಸಗಳ ಬಗ್ಗೆ ದಾವೀದನಿಗೆ ನೀನು ಮಾತುಕೊಟ್ಟಿದ್ದೆ ತಾನೇ?+

50 ಯೆಹೋವನೇ, ನಿನ್ನ ಸೇವಕರ ಮೇಲಿರೋ ಅವಮಾನದ ಮಾತುಗಳನ್ನ ನೆನಪಿಸ್ಕೊ,

ಎಲ್ಲ ಜನಾಂಗಗಳ ಜನ್ರು ಹಂಗಿಸ್ತಾ ಇರೋದನ್ನ ನಾನು ಸಹಿಸಿಕೊಳ್ತಾ ಇದ್ದೀನಿ* ಅನ್ನೋದನ್ನೂ ಜ್ಞಾಪಿಸ್ಕೊ.

51 ಯೆಹೋವನೇ, ನಿನ್ನ ಶತ್ರುಗಳು ನಿನ್ನ ಅಭಿಷಿಕ್ತನಿಗೆ ಹೇಗೆ ಅವಮಾನ ಮಾಡ್ತಿದ್ದಾರೆ ಅಂತ ನೋಡು.

ಅವನ ಪ್ರತಿಯೊಂದು ಹೆಜ್ಜೆಯನ್ನ ಹೇಗೆ ದೂರುತ್ತಿದ್ದಾರೆ ಅಂತ ನೋಡು.

52 ಯೆಹೋವನಿಗೆ ಸದಾಕಾಲಕ್ಕೂ ಹೊಗಳಿಕೆ ಸಿಗಲಿ. ಆಮೆನ್‌, ಆಮೆನ್‌.+

ನಾಲ್ಕನೇ ಪುಸ್ತಕ

(ಕೀರ್ತನೆ 90-106)

ಸತ್ಯದೇವರ ಸೇವಕ ಮೋಶೆಯ+ ಪ್ರಾರ್ಥನೆ.

90 ಯೆಹೋವನೇ, ತಲತಲಾಂತರಗಳಿಂದ ನೀನೇ ನಮ್ಮ ವಾಸಸ್ಥಾನ.*+

 2 ಬೆಟ್ಟಗಳು ಹುಟ್ಟೋಕೂ ಮುಂಚಿನಿಂದ

ಭೂಮಿ ಮತ್ತು ಅದ್ರ ಫಲವತ್ತಾದ ನೆಲವನ್ನ ನೀನು ಅಸ್ತಿತ್ವಕ್ಕೆ ತರೋದಕ್ಕಿಂತ* ಮುಂಚಿನಿಂದ ನೀನೇ ದೇವರು.+

ಹೌದು, ಯಾವಾಗ್ಲೂ ನೀನೇ ದೇವರಾಗಿದ್ದೆ, ಯಾವತ್ತೂ* ನೀನೇ ದೇವರಾಗಿ ಇರ್ತಿಯ.+

 3 ಮನುಷ್ಯರು ಮತ್ತೆ ಮಣ್ಣಿಗೆ ಸೇರೋ ತರ ನೀನು ಮಾಡ್ತೀಯ.

“ಮನುಷ್ಯರೇ, ಮಣ್ಣಿಗೆ ವಾಪಸ್‌ ಹೋಗಿ” ಅಂತ ಹೇಳ್ತೀಯ.+

 4 ಸಾವಿರ ವರ್ಷಗಳು ನಿನಗೆ ಕಳೆದು ಹೋದ ನಿನ್ನೆ ತರ ಇದೆ,+

ರಾತ್ರಿ ಹೊತ್ತಿನ ಕೆಲವು ತಾಸುಗಳ ತರ ಇದೆ.

 5 ನೀನು ಅವ್ರನ್ನ ಗುಡಿಸಿ ಗುಂಡಾಂತರ ಮಾಡ್ತೀಯ,+

ಅವರು ಕನಸಿನ ತರ ಕಣ್ಮರೆ ಆಗ್ತಾರೆ.

ಮುಂಜಾನೆ ಚಿಗುರೊಡೆಯೋ ಹುಲ್ಲಿನ ತರ ಇದ್ದಾರೆ.+

 6 ಅದು ಬೆಳಿಗ್ಗೆ ಹುಟ್ಟಿ, ಹೊಸದಾಗಿ ಚಿಗುರುತ್ತೆ.

ಆದ್ರೆ ಸಂಜೆ ಅಷ್ಟು ಹೊತ್ತಿಗೆ ಒಣಗಿ ಬಾಡಿಹೋಗುತ್ತೆ.+

 7 ಯಾಕಂದ್ರೆ ನಿನ್ನ ಕೋಪ ನಮ್ಮನ್ನ ನುಂಗಿಹಾಕುತ್ತೆ+

ನಿನ್ನ ಕ್ರೋಧದಿಂದ ನಾವು ಹೆದರಿ ಹೋಗಿದ್ದೀವಿ.

 8 ನೀನು ನಮ್ಮ ತಪ್ಪುಗಳನ್ನ ನಿನ್ನ ಮುಂದೆನೇ ಇಟ್ಕೊಂಡಿದ್ದೀಯ,*+

ನಾವು ರಹಸ್ಯವಾಗಿ ಮಾಡಿರೋ ಪಾಪಗಳು ನಿನ್ನ ಮುಖದ ಕಾಂತಿಯಿಂದ ಬಯಲಾಗಿವೆ.+

 9 ನಿನ್ನ ಕೋಪದಿಂದ ನಮ್ಮ ದಿನಗಳು ಕಮ್ಮಿಯಾಗ್ತಿವೆ,

ನಮ್ಮ ವರ್ಷಗಳು ನಿಟ್ಟುಸಿರಿನ ತರ* ಮುಗಿದುಹೋಗ್ತಿವೆ.

10 ನಮ್ಮ ಆಯಸ್ಸು 70 ವರ್ಷ,

ಸ್ವಲ್ಪ ಗಟ್ಟಿಮುಟ್ಟಾಗಿದ್ರೆ 80 ವರ್ಷ.+

ಆದ್ರೆ ಆ ವರ್ಷಗಳೂ ಕಷ್ಟ, ಕಣ್ಣೀರಿಂದಾನೇ ತುಂಬಿರುತ್ತೆ.

ಆ ವರ್ಷಗಳು ಬೇಗ ಕಳೆದುಹೋಗುತ್ತೆ ಮತ್ತು ನಾವು ಹಾರಿ ಹೋಗ್ತೀವಿ.+

11 ನಿನ್ನ ಕೋಪ ಎಷ್ಟಿದೆ ಅಂತ ಯಾರಿಂದ ಅಳೆಯೋಕಾಗುತ್ತೆ?

ನಿನ್ನ ಕ್ರೋಧವನ್ನ ಯಾರಿಂದ ಅರ್ಥಮಾಡಿಕೊಳ್ಳೋಕೆ ಆಗುತ್ತೆ? ನಿನ್ನ ಮೇಲಿನ ಭಯಕ್ಕಿಂತ ಅದು ದೊಡ್ಡದು.+

12 ನಾವು ವಿವೇಕ ತುಂಬಿರೋ ಹೃದಯ ಪಡ್ಕೊಳ್ಳೋಕೆ

ನಮ್ಮ ದಿನಗಳನ್ನ ಒಳ್ಳೇ ರೀತಿಯಲ್ಲಿ ಹೇಗೆ ಬಳಸೋದು ಅಂತ ಕಲಿಸ್ಕೊಡು.+

13 ಯೆಹೋವ, ಬಾ!+ ಇನ್ನು ಎಷ್ಟು ಹೊತ್ತು ಕಾಯಿಸ್ತೀಯ?+

ನಿನ್ನ ಸೇವಕರ ಮೇಲೆ ಕನಿಕರ ತೋರಿಸು.+

14 ಮುಂಜಾನೆನೇ ನಿನ್ನ ಶಾಶ್ವತ ಪ್ರೀತಿಯಿಂದ+ ನಮ್ಮನ್ನ ತೃಪ್ತಿಪಡಿಸು,

ಆಗ ನಾವು ಸಂತೋಷದಿಂದ ಜೈಕಾರ ಹಾಕ್ತೀವಿ ಮತ್ತು ನಾವು ಸಾಯೋ ತನಕ ಖುಷಿಖುಷಿಯಾಗಿ ಇರ್ತಿವಿ.+

15 ನೀನು ಎಷ್ಟು ದಿನ ನಮಗೆ ದುಃಖ ಕೊಟ್ಟಿದ್ದೀಯೋ, ಅಷ್ಟು ದಿನ ನಮಗೆ ಸಂತೋಷವನ್ನೂ ಕೊಡು,+

ನಾವು ಎಷ್ಟು ವರ್ಷ ಕಷ್ಟ ಪಟ್ಟಿದ್ದೀವೋ, ಅಷ್ಟು ವರ್ಷ ಖುಷಿಪಡೋ ತರ ಮಾಡು.+

16 ನಿನ್ನ ಸೇವಕರು ನೀನು ಮಾಡೋದನ್ನ ನೋಡ್ಲಿ.

ಅವರ ವಂಶದವರು ನಿನ್ನ ವೈಭವವನ್ನ ಕಾಣಲಿ.+

17 ನಮ್ಮ ದೇವರಾದ ಯೆಹೋವನ ಕೃಪೆ ನಮ್ಮ ಮೇಲಿರಲಿ,

ನಾವು ಕೈಹಾಕಿದ ಕೆಲಸಗಳೆಲ್ಲ ಚೆನ್ನಾಗಿ ಆಗಲಿ.

ಆ ಕೆಲಸಗಳೆಲ್ಲ ಅಭಿವೃದ್ಧಿ ಆಗಲಿ.+

91 ಸರ್ವೋನ್ನತನ ರಹಸ್ಯ ಜಾಗದಲ್ಲಿ ಆಶ್ರಯ ಪಡ್ಕೊಳ್ಳೋರು+

ಸರ್ವಶಕ್ತನ ನೆರಳಲ್ಲಿ ವಿಶ್ರಾಂತಿ ಪಡೀತಾರೆ.+

 2 ನಾನು ಯೆಹೋವನಿಗೆ “ನೀನು ನನ್ನ ಆಶ್ರಯ, ನನ್ನ ಭದ್ರಕೋಟೆ,+

ನಾನು ಭರವಸೆಯಿಡೋ ದೇವರು”+ ಅಂತ ಹೇಳ್ತೀನಿ.

 3 ಯಾಕಂದ್ರೆ ಆತನು ನಿನ್ನನ್ನ ಬೇಟೆಗಾರನ ಬಲೆಯಿಂದ ಬಿಡಿಸ್ತಾನೆ,

ಜೀವ ತೆಗಿಯೋ ಅಂಟುರೋಗದಿಂದ ಕಾಪಾಡ್ತಾನೆ.

 4 ತನ್ನ ರೆಕ್ಕೆಯ ಗರಿಗಳಿಂದ ನಿನ್ನ ಮುಚ್ತಾನೆ,*

ಆತನ ರೆಕ್ಕೆಗಳ ಕೆಳಗೆ ನೀನು ಆಶ್ರಯ ಪಡ್ಕೊಳ್ತೀಯ.+

ಆತನ ನಂಬಿಗಸ್ತಿಕೆ+ ದೊಡ್ಡ ಗುರಾಣಿ,+ ರಕ್ಷಣೆಯ ಗೋಡೆ ತರ* ಇರುತ್ತೆ.

 5 ರಾತ್ರಿ ಎಲ್ಲಿ ಏನಾಗುತ್ತೋ ಅಂತಾಗಲಿ,+

ಬೆಳಗ್ಗೆ ಹಾರಾಡೋ ಬಾಣಕ್ಕಾಗಲಿ ನೀನು ಹೆದ್ರಲ್ಲ,+

 6 ಕತ್ತಲಲ್ಲಿ ತಿರುಗಾಡೋ ವಿಪತ್ತಿಗಾಗಲಿ

ಮಟಮಟ ಮಧ್ಯಾಹ್ನ ನಡೆಯೋ ಕೇಡಿಗಾಗಲಿ ನೀನು ಭಯಪಡಲ್ಲ.

 7 ನಿನ್ನ ಪಕ್ಕದಲ್ಲಿ ಸಾವಿರ ಜನ,

ನಿನ್ನ ಬಲಗಡೆ ಹತ್ತು ಸಾವಿರ ಜನ ಬಿದ್ದುಹೋಗ್ತಾರೆ.

ಆದ್ರೆ ನಿನಗೆ ಏನೂ ಆಗಲ್ಲ.+

 8 ನೀನು ಇದನ್ನೆಲ್ಲ ನಿನ್ನ ಕಣ್ಣಾರೆ ನೋಡ್ತೀಯ

ಕೆಟ್ಟವರಿಗೆ ಆಗೋ ಶಿಕ್ಷೆಗೆ* ಪ್ರತ್ಯಕ್ಷ ಸಾಕ್ಷಿಯಾಗ್ತೀಯ.

 9 ಯಾಕಂದ್ರೆ “ಯೆಹೋವ ನನ್ನ ಆಶ್ರಯ” ಅಂತ ನೀನು ಹೇಳಿದೆ.

ಸರ್ವೋನ್ನತನನ್ನ ನಿನ್ನ ವಾಸಸ್ಥಳವಾಗಿ* ಮಾಡ್ಕೊಂಡೆ.+

10 ನಿನ್ನ ಮೇಲೆ ಯಾವ ವಿಪತ್ತೂ ಬರಲ್ಲ,+

ಯಾವ ಬಾಧೆನೂ ನಿನ್ನ ಡೇರೆ ಹತ್ರ ಸುಳಿಯಲ್ಲ.

11 ಯಾಕಂದ್ರೆ ನೀನು ಹೋದ ಕಡೆ ಎಲ್ಲ

ನಿನ್ನನ್ನ ಕಾದು ಕಾಪಾಡೋಕೆ ಆತನು ತನ್ನ ದೂತರಿಗೆ+ ಆಜ್ಞೆ ಕೊಡ್ತಾನೆ.

12 ನಿನ್ನ ಕಾಲು ಕಲ್ಲಿಗೆ ತಾಗದ ಹಾಗೆ+

ಅವರು ತಮ್ಮ ಕೈಯಿಂದ ನಿನ್ನನ್ನ ಎತ್ಕೊಳ್ತಾರೆ.+

13 ನೀನು ಎಳೇ ಸಿಂಹವನ್ನ ಮತ್ತು ನಾಗರಹಾವನ್ನ ಕಾಲಿಂದ ತುಳೀತಿಯ,

ಬಲಿಷ್ಠ ಸಿಂಹವನ್ನ ಮತ್ತು ದೊಡ್ಡ ಹಾವನ್ನ ಪಾದಗಳ ಕೆಳಗೆ ಹೊಸಕಿ ಹಾಕ್ತೀಯ.+

14 ದೇವರು ಹೀಗೆ ಹೇಳಿದನು “ಅವನು ನನ್ನನ್ನ ತುಂಬ ಪ್ರೀತಿಸೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+

ಅವನಿಗೆ ನನ್ನ ಹೆಸ್ರು ಗೊತ್ತಿರೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+

15 ಅವನು ನನಗೆ ಮೊರೆಯಿಡ್ತಾನೆ, ನಾನು ಅವನಿಗೆ ಉತ್ತರ ಕೊಡ್ತೀನಿ.+

ಕಷ್ಟ ಬಂದಾಗ ನಾನು ಅವನ ಜೊತೆ ಇರ್ತಿನಿ.+

ನಾನು ಅವನನ್ನ ರಕ್ಷಿಸ್ತೀನಿ, ಅವನಿಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡ್ತೀನಿ.

16 ಜಾಸ್ತಿ ಆಯಸ್ಸು ಕೊಟ್ಟು ನಾನು ಅವನನ್ನ ತೃಪ್ತಿಪಡಿಸ್ತೀನಿ,+

ನನ್ನ ರಕ್ಷಣೆಯ ಕೆಲಸಗಳನ್ನ ಅವನು ನೋಡೋ ತರ ಮಾಡ್ತೀನಿ.”+

ಸಬ್ಬತ್‌ ದಿನಕ್ಕಾಗಿ ಇರೋ ಮಧುರ ಗೀತೆ.

92 ಸರ್ವೋನ್ನತನೇ, ನಿನ್ನ ಹೆಸ್ರನ್ನ ಹಾಡಿ ಹೊಗಳೋದು* ಒಳ್ಳೇದು.

ಯೆಹೋವನಿಗೆ ಧನ್ಯವಾದ ಹೇಳೋದೂ ಒಳ್ಳೇದೇ.+

 2 ಬೆಳಿಗ್ಗೆ ನಿನ್ನ ಶಾಶ್ವತ ಪ್ರೀತಿಯನ್ನ,+

ರಾತ್ರಿ ನಿನ್ನ ನಂಬಿಗಸ್ತಿಕೆಯನ್ನ ಹೇಳೋದು ಒಳ್ಳೇದು.

 3 ಹತ್ತು ತಂತಿಗಳಿರೋ ತಂತಿವಾದ್ಯದ ಜೊತೆ,

ವೀಣೆಯ ಮಧುರ ಸಂಗೀತದ ಜೊತೆ ಸ್ತುತಿಸೋದು ಒಳ್ಳೇದು.+

 4 ಯಾಕಂದ್ರೆ ಯೆಹೋವನೇ, ನಿನ್ನ ಕೆಲಸಗಳಿಂದ ನನ್ನನ್ನ ಖುಷಿಪಡಿಸಿದ್ದೀಯ,

ಆ ಕೆಲಸಗಳನ್ನ ನೋಡಿ ಸಂಭ್ರಮದಿಂದ ನಾನು ಜೈಕಾರ ಹಾಕ್ತೀನಿ.

 5 ಯೆಹೋವನೇ, ನಿನ್ನ ಕೆಲಸಗಳು ಎಷ್ಟು ಶ್ರೇಷ್ಠ!+

ನಿನ್ನ ಯೋಚನೆಗಳು ಎಷ್ಟು ಆಳ!+

 6 ವಿವೇಕ ಇಲ್ಲದವನು ಅವುಗಳನ್ನ ತಿಳ್ಕೊಳ್ಳೋಕೆ ಆಗಲ್ಲ,

ಯಾವ ಮೂರ್ಖನೂ ಈ ವಿಷ್ಯನ ಅರ್ಥಮಾಡ್ಕೊಳ್ಳೋಕೆ ಆಗಲ್ಲ.+

 7 ದುಷ್ಟ ಕಳೆಗಳ ಹಾಗೆ* ಮೊಳಕೆ ಒಡೆಯೋದೂ

ತಪ್ಪು ಮಾಡೋರೆಲ್ಲ ಚೆನ್ನಾಗಿ ಬೆಳೆಯೋದೂ

ಶಾಶ್ವತವಾಗಿ ನಾಶ ಆಗೋಕೇ.+

 8 ಆದ್ರೆ ಯೆಹೋವನೇ, ನೀನು ಯಾವಾಗ್ಲೂ ಉನ್ನತ ಸ್ಥಾನದಲ್ಲಿ ಇರ್ತಿಯ.

 9 ಯೆಹೋವನೇ, ನೀನು ನಿನ್ನ ಶತ್ರುಗಳ ಸೋಲನ್ನ ನೋಡು,

ಅವರು ಹೇಗೆ ನಾಶವಾಗಿ ಹೋಗ್ತಾರೆ ಅಂತ ನೋಡು,

ತಪ್ಪು ಮಾಡೋರೆಲ್ಲ ಚೆಲ್ಲಾಪಿಲ್ಲಿ ಆಗ್ತಾರೆ.+

10 ಆದ್ರೆ ನೀನು ನನಗೆ ಜಾಸ್ತಿ ಬಲ ಕೊಟ್ಟು ನನ್ನಲ್ಲಿ ಕಾಡುಕೋಣದ ಶಕ್ತಿಯನ್ನ ತುಂಬ್ತೀಯ,

ತಾಜಾ ಎಣ್ಣೆಯನ್ನ ತ್ವಚೆಗೆ ಹಚ್ಕೊಂಡು ಚೈತನ್ಯ ಪಡ್ಕೊತೀನಿ.+

11 ನನ್ನ ಶತ್ರುಗಳ ಸೋಲನ್ನ ನನ್ನ ಕಣ್ಣು ನೋಡುತ್ತೆ,+

ನನ್ನ ಮೇಲೆ ಆಕ್ರಮಣಮಾಡೋ ದುಷ್ಟಜನ್ರು ಬಿದ್ದುಹೋಗೋದನ್ನ ನನ್ನ ಕಿವಿ ಕೇಳಿಸ್ಕೊಳ್ಳುತ್ತೆ.

12 ಆದ್ರೆ ನೀತಿವಂತರು ಖರ್ಜೂರದ ಮರದ ತರ ಚೆನ್ನಾಗಿ ಬೆಳೀತಾರೆ

ಲೆಬನೋನಿನ ದೇವದಾರು ಮರದ ತರ ದೊಡ್ಡದಾಗಿ ಬೆಳೀತಾರೆ.+

13 ಅವರು ಯೆಹೋವನ ಆಲಯದಲ್ಲಿ ಇದ್ದಾರೆ,

ನಮ್ಮ ದೇವರ ಅಂಗಳದಲ್ಲಿ ಅವರು ವೃದ್ಧಿಯಾಗ್ತಾರೆ.+

14 ಅವರು ಮುದುಕರಾದ್ರೂ ಫಲ ಕೊಡ್ತಾ ಇರ್ತಾರೆ,+

ಅವ್ರಲ್ಲಿ ಹುರುಪು,* ಹೊಸತನ ಹಾಗೇ ಇರುತ್ತೆ.+

15 ಯೆಹೋವ ನೀತಿವಂತ ಅಂತ ಅವರು ಪ್ರಕಟಿಸ್ತಾರೆ.

ಆತನು ನನ್ನ ಬಂಡೆ,+ ಆತನಲ್ಲಿ ಅನೀತಿ ಅನ್ನೋದೇ ಇಲ್ಲ.

93 ಯೆಹೋವ ರಾಜನಾಗಿದ್ದಾನೆ!+

ಆತನು ವೈಭವವನ್ನ ಹಾಕೊಂಡಿದ್ದಾನೆ,

ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,

ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ.

ಭೂಮಿ ಸ್ಥಿರವಾಗಿದೆ.

ಅದನ್ನ ಕದಲಿಸೋಕೆ* ಆಗಲ್ಲ.

 2 ತುಂಬ ಹಿಂದೆನೇ ನಿನ್ನ ಸಿಂಹಾಸನ ಸ್ಥಿರವಾಯ್ತು,+

ಅನಂತಕಾಲದಿಂದಾನೇ ನೀನು ಇದ್ದೀಯ.+

 3 ಯೆಹೋವನೇ, ನದಿಗಳು ಉಕ್ಕಿಹರಿದಿವೆ,

ಹರಿದು ಗರ್ಜಿಸಿವೆ, ಉಕ್ಕುತ್ತಾ ಜೋರಾಗಿ ಕೂಗ್ತಿವೆ.

 4 ಉನ್ನತ ಸ್ಥಳದಲ್ಲಿ ಕೂತಿರೋ ಯೆಹೋವ ಮಹಿಮಾನ್ವಿತನು,+

ಆಳವಾದ ಸಮುದ್ರದ ಗರ್ಜನೆಗಿಂತ, ದಡಕ್ಕೆ ಬಡಿಯೋ ಅಲೆಗಳಿಗಿಂತ ಶಕ್ತಿಶಾಲಿ.+

 5 ನೀನು ಕೊಡೋ ಎಚ್ಚರಿಕೆಗಳನ್ನ ನಂಬಬಹುದು.+

ಯೆಹೋವನೇ, ಯಾವಾಗ್ಲೂ ಪವಿತ್ರತೆ ನಿನ್ನ ಮನೆ ಅಲಂಕಾರವಾಗಿರುತ್ತೆ.+

94 ಸೇಡು ತೀರಿಸೋ ದೇವರಾದ ಯೆಹೋವನೇ,+

ಪ್ರತಿಕಾರ ತೀರಿಸೋ ದೇವರೇ, ನಿನ್ನ ಬೆಳಕನ್ನ ಪ್ರಕಾಶಿಸು!

 2 ಭೂಮಿಯ ನ್ಯಾಯಾಧೀಶನೇ, ಎದ್ದೇಳು.+

ದುರಹಂಕಾರಿಗಳಿಗೆ ತಕ್ಕ ಶಿಕ್ಷೆ ಕೊಡು.+

 3 ಯೆಹೋವನೇ, ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?

ಹೇಳು! ಎಲ್ಲಿ ತನಕ?+

 4 ಅವರು ಹುಚ್ಚುಹುಚ್ಚಾಗಿ ಮಾತಾಡ್ತಾರೆ, ಜಂಬದಿಂದ ಮಾತಾಡ್ತಾರೆ,

ತಪ್ಪು ಮಾಡೋರೆಲ್ಲ ತಮ್ಮ ಬಗ್ಗೆ ತಾವೇ ಬಡಾಯಿ ಕೊಚ್ಕೊಳ್ತಾರೆ.

 5 ಯೆಹೋವನೇ, ಅವರು ನಿನ್ನ ಜನ್ರನ್ನ ಜಜ್ಜುತ್ತಾರೆ,+

ನಿನ್ನ ಜನ್ರ* ಮೇಲೆ ದೌರ್ಜನ್ಯ ಮಾಡ್ತಾರೆ.

 6 ಅವರು ವಿಧವೆಯನ್ನ, ವಿದೇಶಿಯನ್ನ ಕೊಂದುಹಾಕ್ತಾರೆ,

ಅನಾಥರನ್ನ ಕೊಲ್ತಾರೆ.

 7 “ಯಾಹು ಇದನ್ನೆಲ್ಲ ನೋಡಲ್ಲ,+

ಯಾಕೋಬನ ದೇವರು ಇವನ್ನ ಗಮನಿಸಲ್ಲ”+ ಅಂತ ಅವರು ಹೇಳ್ತಾರೆ.

 8 ಅವಿವೇಕಿಗಳೇ, ಇದನ್ನ ಅರ್ಥಮಾಡ್ಕೊಳ್ಳಿ,

ಮೂರ್ಖರೇ, ನಿಮಗೆ ಯಾವಾಗ ಬುದ್ಧಿ* ಬರೋದು?+

 9 ಕಿವಿಯನ್ನ ಮಾಡಿದ* ದೇವರು ಕೇಳಿಸಿಕೊಳ್ಳಲ್ವಾ?

ಕಣ್ಣನ್ನ ಕೊಟ್ಟ ದೇವರು ನೋಡಲ್ವಾ?+

10 ದೇಶಗಳನ್ನೇ ತಿದ್ದೋನಿಗೆ ನಿಮ್ಮನ್ನ ತಿದ್ದಕ್ಕೆ ಆಗಲ್ವಾ?+

ಜನ್ರಿಗೆ ಜ್ಞಾನ ಕೋಡೋನು ಆತನೇ!+

11 ಮನುಷ್ಯರ ಆಲೋಚನೆಗಳ ಬಗ್ಗೆ ಯೆಹೋವನಿಗೆ ಗೊತ್ತು,

ಅವರು ಬರೀ ಉಸಿರು ಅಂತ ಆತನಿಗೆ ಗೊತ್ತು.+

12 ಯಾಹುವೇ, ಯಾವ ಮನುಷ್ಯನನ್ನ ನೀನು ತಿದ್ದುತ್ತೀಯೋ,+

ಯಾವ ವ್ಯಕ್ತಿಗೆ ನಿನ್ನ ನಿಯಮ ಪುಸ್ತಕದಿಂದ ಕಲಿಸ್ತಿಯೋ ಅವನು ಭಾಗ್ಯವಂತ,+

13 ಕಷ್ಟದ ದಿನಗಳಲ್ಲಿ ನೀನು ಅವನಿಗೆ ನೆಮ್ಮದಿ ಕೊಡು.

ಕೆಟ್ಟವನಿಗಾಗಿ ಒಂದು ಗುಂಡಿ ಅಗೆಯೋ ತನಕ ಅವನು ನಿರಾಳವಾಗಿ ಇರಲಿ.+

14 ಯೆಹೋವ ತನ್ನ ಜನ್ರನ್ನ ತೊರೆಯಲ್ಲ,+

ತನ್ನ ಆಸ್ತಿಯನ್ನ ಬಿಟ್ಟುಬಿಡಲ್ಲ.+

15 ಯಾಕಂದ್ರೆ ಇನ್ನೊಂದು ಸಲ ನೀತಿಯಿಂದ ತೀರ್ಪು ಆಗುತ್ತೆ,

ಹೃದಯದಲ್ಲಿ ಪ್ರಾಮಾಣಿಕರಾಗಿ ಇರೋರೆಲ್ಲ ಅದನ್ನ ಪಾಲಿಸ್ತಾರೆ.

16 ನನಗಾಗಿ ಕೆಟ್ಟವರ ವಿರುದ್ಧ ಯಾರು ಎದ್ದೇಳ್ತಾರೆ?

ನನಗಾಗಿ ತಪ್ಪು ಮಾಡೋರ ವಿರುದ್ಧ ಯಾರು ಎದ್ದು ನಿಲ್ತಾರೆ?

17 ಯೆಹೋವ ನನ್ನ ಸಹಾಯಕನಾಗಿ ಇರದಿದ್ರೆ,

ನಾನು ಬೇಗ ನಾಶವಾಗಿ ಹೋಗ್ತಿದ್ದೆ.*+

18 “ನನ್ನ ಕಾಲು ಜಾರಿತು” ಅಂತ ನಾನು ಹೇಳಿದಾಗ,

ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ನನಗೆ ಆಸರೆ ಕೊಡ್ತು.+

19 ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ,*

ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.+

20 ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋ ಭ್ರಷ್ಟ ಅಧಿಕಾರಿಗಳು

ನಿನ್ನ ಜೊತೆ ನಂಟು ಬೆಳೆಸ್ಕೊಳ್ಳೋಕೆ ಆಗುತ್ತಾ?+

21 ಅವರು ನೀತಿವಂತನ ಮೇಲೆ ಉಗ್ರ ಆಕ್ರಮಣ ಮಾಡ್ತಾರೆ+

ನಿರಪರಾಧಿಗೆ ಮರಣಶಿಕ್ಷೆ ಕೊಡ್ತಾರೆ.+

22 ಆದ್ರೆ ಯೆಹೋವ ನನಗೆ ಒಂದು ಸುರಕ್ಷಿತ ಆಶ್ರಯ ಆಗ್ತಾನೆ,*

ನನ್ನ ದೇವರು ನನಗೆ ಆಶ್ರಯ ಕೊಡೋ ಬಂಡೆ.+

23 ಅವ್ರ ದುಷ್ಟ ಕೆಲಸಗಳು ಅವ್ರ ಮೇಲೆನೇ ಬರೋ ತರ ಆತನು ಮಾಡ್ತಾನೆ.+

ಅವ್ರ ಕೆಟ್ಟತನದಿಂದ ಅವ್ರೇ ನಾಶವಾಗೋ ಹಾಗೆ ಮಾಡ್ತಾನೆ.

ನಮ್ಮ ದೇವರಾದ ಯೆಹೋವ ಅವ್ರನ್ನ ನಿರ್ನಾಮ ಮಾಡ್ತಾನೆ.+

95 ಬನ್ನಿ, ಯೆಹೋವನಿಗೆ ಜೈಕಾರ ಹಾಕೋಣ!

ರಕ್ಷಣೆಯ ಬಂಡೆ ಆಗಿರೋ ಆತನು ಗೆದ್ದಿದ್ದಕ್ಕೆ ಖುಷಿಪಡೋಣ.+

 2 ಆತನ ಸನ್ನಿಧಿಗೆ* ಬಂದು ಆತನಿಗೆ ಧನ್ಯವಾದ ಹೇಳೋಣ,+

ಆತನಿಗಾಗಿ ಹಾಡಿ ಜೈಕಾರ ಹಾಕೋಣ.

 3 ಯಾಕಂದ್ರೆ ಯೆಹೋವ ಮಹಾನ್‌ ದೇವರು,

ಬೇರೆಲ್ಲ ದೇವರುಗಳಿಂತ ದೊಡ್ಡ ರಾಜ.+

 4 ಭೂಮಿಯ ಆಳಗಳು ಆತನ ಕೈಯಲ್ಲಿವೆ,

ಪರ್ವತ ಶಿಖರಗಳು ಆತನಿಗೆ ಸೇರಿವೆ.+

 5 ಆತನು ಮಾಡಿದ ಸಮುದ್ರ ಆತನದ್ದೇ,+

ಆತನ ಕೈಗಳು ಒಣ ನೆಲವನ್ನ ಮಾಡಿವೆ.+

 6 ಬನ್ನಿ, ನಮ್ಮನ್ನ ಸೃಷ್ಟಿಸಿದ ಯೆಹೋವನ ಮುಂದೆ ಮೊಣಕಾಲೂರಿ,

ಬಗ್ಗಿ ನಮಸ್ಕರಿಸಿ, ಆತನನ್ನ ಆರಾಧಿಸೋಣ.+

 7 ಯಾಕಂದ್ರೆ ಆತನು ನಮ್ಮ ದೇವರು,

ಆತನು ಪರಿಪಾಲಿಸೋ ಜನ್ರು ನಾವು,

ಆತನು ಕಾಳಜಿವಹಿಸೋ* ಕುರಿಗಳು ನಾವು.+

ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+

 8 ನಿಮ್ಮ ಪೂರ್ವಜರು ಮೆರೀಬಾದಲ್ಲಿ* ಮಾಡಿದ ಹಾಗೆ,+

ಕಾಡಲ್ಲಿ ಮಸ್ಸಾ* ದಿನದಂದು ಮಾಡಿದ ಹಾಗೆ,

ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ,+

 9 ನಿಮ್ಮ ಪೂರ್ವಜರು ನನ್ನನ್ನ ಪರೀಕ್ಷಿಸಿದ್ರು,+

ಅವರು ನನ್ನ ಕೆಲಸಗಳನ್ನ ಕಣ್ಣಾರೆ ನೋಡಿದ್ರೂ ನನಗೆ ಸವಾಲು ಹಾಕಿದ್ರು.+

10 ಆ ಪೀಳಿಗೆಯಿಂದ 40 ವರ್ಷ ನಾನು ರೋಸಿ ಹೋಗಿ,

“ಈ ಜನ್ರು ಯಾವಾಗ್ಲೂ ಅಡ್ಡದಾರಿ ಹಿಡಿಯೋ ಹೃದಯ ಇರೋರು,

ಇವರು ನನ್ನ ದಾರಿಗಳನ್ನ ತಿಳಿದಿಲ್ಲ” ಅಂತ ಹೇಳಿದೆ.

11 ಹಾಗಾಗಿ ನಾನು ಕೋಪದಿಂದ,

“ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ”+ ಅಂತ ಆಣೆ ಮಾಡಿದೆ.

96 ಯೆಹೋವನಿಗೆ ಹೊಸ ಹಾಡನ್ನ ಹಾಡಿ!+

ಭೂಮಿಯಲ್ಲಿ ಇರೋ ಜನ್ರೇ ಯೆಹೋವನಿಗೆ ಗೀತೆಯನ್ನ ಹಾಡಿ!+

 2 ಯೆಹೋವನಿಗೆ ಹಾಡಿ, ಆತನ ಹೆಸ್ರನ್ನ ಸ್ತುತಿಸಿ.

ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!+

 3 ಜನಾಂಗಗಳ ಮಧ್ಯ ಆತನ ಗೌರವದ ಬಗ್ಗೆ,

ಆತನ ಅದ್ಭುತಗಳ ಬಗ್ಗೆ ಘೋಷಿಸಿ.+

 4 ಯೆಹೋವ ದೊಡ್ಡವನು, ಆತನು ಬೇರೆ ಎಲ್ರಿಗಿಂತ ಹೊಗಳಿಕೆಗೆ ಯೋಗ್ಯ.

ಬೇರೆಲ್ಲ ದೇವರುಗಳಿಗಿಂತ ಆತನು ವಿಸ್ಮಯ.

 5 ಜನಾಂಗಗಳ ದೇವರುಗಳಿಂದ ಯಾವ ಪ್ರಯೋಜನನೂ ಇಲ್ಲ,+

ಆದ್ರೆ ಯೆಹೋವನೇ ಆಕಾಶ ಮಾಡಿದ.+

 6 ಆತನ ಸಾನಿಧ್ಯದಲ್ಲಿ ಘನತೆ* ಮತ್ತು ವೈಭವ ಇದೆ,+

ಆತನ ಆರಾಧನಾ ಸ್ಥಳದಲ್ಲಿ ಶಕ್ತಿ ಮತ್ತು ಸೌಂದರ್ಯ ಇದೆ.+

 7 ಜನಾಂಗಗಳ ಜನ್ರೇ ಯೆಹೋವನಿಗೆ ಕೊಡಬೇಕಾಗಿ ಇರೋದನ್ನ ಕೊಡಿ,

ಯೆಹೋವನ ಮಹಿಮೆ ಮತ್ತು ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+

 8 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ,+

ಉಡುಗೊರೆಗಳನ್ನ ತಗೊಂಡು ಆತನ ಅಂಗಳಕ್ಕೆ ಬನ್ನಿ.

 9 ಪವಿತ್ರವಾದ ಬಟ್ಟೆಗಳನ್ನ ಹಾಕೊಂಡು ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡಿ.

ಭೂನಿವಾಸಿಗಳೇ, ಆತನ ಮುಂದೆ ಗಡಗಡ ಅಂತ ನಡುಗಿ!

10 “ಯೆಹೋವ ರಾಜನಾಗಿದ್ದಾನೆ” ಅಂತ ಎಲ್ಲ ಜನ್ರಿಗೆ ಸಾರಿಹೇಳಿ.+

ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ.

ಆತನು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡ್ತಾನೆ.+

11 ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,

ಸಮುದ್ರ ಮತ್ತು ಅದ್ರಲ್ಲಿರೋ ಎಲ್ಲವೂ ಜೈಕಾರ ಹಾಕಲಿ,+

12 ಬಯಲುಗಳು ಮತ್ತು ಅದ್ರಲ್ಲಿರೋ ಎಲ್ಲವೂ ಖುಷಿಪಡಲಿ.+

ಅದ್ರ ಜೊತೆ ಕಾಡಲ್ಲಿರೋ ಎಲ್ಲ ಮರಗಳು ಸಂತೋಷದಿಂದ ಕೂಗಾಡಲಿ,+

13 ಅವು ಯೆಹೋವನ ಮುಂದೆ ಸಂತೋಷದಿಂದ ಜೈಕಾರ ಹಾಕಲಿ, ಯಾಕಂದ್ರೆ ಆತನು ಬರ್ತಿದ್ದಾನೆ,*

ಆತನು ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.

ಆತನು ನೀತಿಯಿಂದ ಇಡೀ ಭೂಮಿಗೆ ನ್ಯಾಯತೀರಿಸ್ತಾನೆ+

ನಂಬಿಗಸ್ತಿಕೆಯಿಂದ ಎಲ್ಲ ಜನಾಂಗಗಳಿಗೆ ನ್ಯಾಯತೀರಿಸ್ತಾನೆ.+

97 ಯೆಹೋವ ರಾಜನಾಗಿದ್ದಾನೆ!+

ಭೂಮಿ ಖುಷಿಪಡಲಿ.+

ಎಲ್ಲ ದ್ವೀಪಗಳು ಉಲ್ಲಾಸಿಸಲಿ.+

 2 ಆತನ ಸುತ್ತ ಕಪ್ಪು ಮೋಡ ಕವಿದಿದೆ,+

ನೀತಿ, ನ್ಯಾಯ ಆತನ ಸಿಂಹಾಸನದ ಅಸ್ತಿವಾರ ಆಗಿದೆ.+

 3 ಬೆಂಕಿ ಆತನ ಮುಂದೆಮುಂದೆ ಹೋಗ್ತಾ+

ಸುತ್ತ ಇರೋ ಆತನ ಶತ್ರುಗಳನ್ನ ಸುಟ್ಟು ಭಸ್ಮಮಾಡುತ್ತೆ.+

 4 ಆತನ ಮಿಂಚಿನ ಬಾಣಗಳು ಭೂಮಿಯನ್ನ ಬೆಳಗಿಸುತ್ತೆ.

ಅದನ್ನ ನೋಡಿ ಭೂಮಿ ಗಡಗಡ ನಡುಗುತ್ತೆ.+

 5 ಯೆಹೋವನ ಮುಂದೆ, ಇಡೀ ಭೂಮಿಯ ಒಡೆಯನ ಮುಂದೆ,

ಬೆಟ್ಟಗಳು ಮೇಣದ ತರ ಕರಗಿಹೋಗುತ್ತೆ.+

 6 ಆಕಾಶ ಆತನ ನೀತಿಯನ್ನ ಘೋಷಿಸುತ್ತೆ,

ಎಲ್ಲ ಜನ್ರು ಆತನ ಮಹಿಮೆಯನ್ನ ನೋಡ್ತಾರೆ.+

 7 ಕೆತ್ತಿದ ಮೂರ್ತಿಗಳನ್ನ ಆರಾಧಿಸೋರಿಗೆ,

ಪ್ರಯೋಜನಕ್ಕೆ ಬರದ ದೇವರುಗಳ ಬಗ್ಗೆ ಕೊಚ್ಕೊಳ್ಳೋರಿಗೆ ಅವಮಾನ ಆಗುತ್ತೆ.+

ಎಲ್ಲ ದೇವರುಗಳೇ, ಆತನಿಗೆ ಬಗ್ಗಿ ನಮಸ್ಕರಿಸಿ.*+

 8 ಯೆಹೋವನೇ, ನಿನ್ನ ತೀರ್ಪುಗಳ ಬಗ್ಗೆ+

ಚೀಯೋನ್‌ ಕೇಳಿಸ್ಕೊಂಡು ಉಲ್ಲಾಸಿಸ್ತಾ ಇದೆ,

ಯೆಹೂದದ ಪಟ್ಟಣಗಳು ಸಂಭ್ರಮಿಸ್ತಾ ಇವೆ.+

 9 ಯಾಕಂದ್ರೆ ಯೆಹೋವ, ನೀನು ಭೂಮಿಯಲ್ಲೇ ಸರ್ವೋನ್ನತ,

ಬೇರೆಲ್ಲ ದೇವರುಗಳಿಗಿಂತ ಎಷ್ಟೋ ಉನ್ನತ.+

10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+

ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+

ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+

11 ನೀತಿವಂತರಿಗಾಗಿ ಬೆಳಕು ಪ್ರಜ್ವಲಿಸಿದೆ,+

ಪ್ರಾಮಾಣಿಕ ಹೃದಯ ಇರೋರಿಗೆ ಸಂಭ್ರಮದ ಅಲೆ ಎದ್ದಿದೆ.

12 ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ,

ಆತನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳಿ.*

ಮಧುರ ಗೀತೆ.

98 ಯೆಹೋವನಿಗೆ ಹೊಸ ಹಾಡನ್ನ ಹಾಡಿ,+

ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+

ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+

 2 ಯೆಹೋವ ತಾನು ಹೇಗೆ ರಕ್ಷಿಸ್ತಾನೆ ಅಂತ ತೋರಿಸ್ಕೊಟ್ಟಿದ್ದಾನೆ,+

ದೇಶಗಳ ಮುಂದೆ ತನ್ನ ನೀತಿಯನ್ನ ಬಯಲು ಮಾಡಿದ್ದಾನೆ.+

 3 ಇಸ್ರಾಯೇಲ್‌ ಮನೆತನದ ಕಡೆ ತನಗಿರೋ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯನ್ನ ನೆನಪಿಸ್ಕೊಂಡಿದ್ದಾನೆ.+

ನಮ್ಮ ದೇವರು ಹೇಗೆ ರಕ್ಷಿಸ್ತಾನೆ ಅನ್ನೋದನ್ನ* ಇಡೀ ಭೂಮಿ ನೋಡಿದೆ.+

 4 ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ.

ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+

 5 ತಂತಿವಾದ್ಯದ ಜೊತೆ ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡಿ,*

ವಾದ್ಯಗಳನ್ನ ನುಡಿಸ್ತಾ, ಮಧುರ ಗೀತೆಗಳನ್ನ ಹಾಡ್ತಾ ಆತನನ್ನ ಕೊಂಡಾಡಿ.

 6 ತುತ್ತೂರಿಗಳಿಂದ, ಕೊಂಬುಗಳ ಶಬ್ದದಿಂದ+

ರಾಜನಾದ ಯೆಹೋವನ ಮುಂದೆ ಜೈಕಾರ ಹಾಕಿ.

 7 ಸಮುದ್ರ ಅದ್ರಲ್ಲಿರೋ ಎಲ್ಲವೂ

ಭೂಮಿ ಅದ್ರಲ್ಲಿ ವಾಸವಾಗಿರೋ ಎಲ್ಲವೂ ಜೈಕಾರ ಹಾಕಲಿ.

 8 ನದಿಗಳು ಚಪ್ಪಾಳೆ ಹೊಡೀಲಿ,

ಬೆಟ್ಟಗಳೆಲ್ಲ ಒಟ್ಟುಸೇರಿ ಜೈಕಾರ ಹಾಕಲಿ.+

 9 ಯೆಹೋವನ ಮುಂದೆ ಜೈಕಾರ ಹಾಕಲಿ,

ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.*

ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+

ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+

99 ಯೆಹೋವ ರಾಜ ಆಗಿದ್ದಾನೆ.+ ದೇಶಗಳು ನಡುಗಲಿ.

ಆತನು ಕೆರೂಬಿಗಳ ಮೇಲೆ* ಕೂತಿದ್ದಾನೆ.+ ಭೂಮಿ ಕಂಪಿಸಲಿ.

 2 ಚೀಯೋನಲ್ಲಿ ಯೆಹೋವ ದೊಡ್ಡವನು,

ಆತನು ಉನ್ನತನು, ಎಲ್ಲ ಜನಾಂಗಗಳು ಆತನ ಕೈಕೆಳಗಿವೆ.+

 3 ಅವರು ನಿನ್ನ ಮಹಾ ಹೆಸ್ರನ್ನ ಸ್ತುತಿಸಲಿ,+

ಯಾಕಂದ್ರೆ ಅದು ವಿಸ್ಮಯವಾಗಿದೆ, ಪವಿತ್ರವಾಗಿದೆ.

 4 ಆತನು ನ್ಯಾಯವನ್ನ ಪ್ರೀತಿಸೋ ಶಕ್ತಿಶಾಲಿ ರಾಜ.+

ಯಾವುದು ಸರಿನೋ ಅದನ್ನ ನೀನು ದೃಢವಾಗಿ ಸ್ಥಾಪಿಸಿದ್ದೀಯ.

ಯಾಕೋಬಿನಲ್ಲಿ ನೀನು ನ್ಯಾಯ, ನೀತಿಯನ್ನ ಸ್ಥಾಪಿಸಿದ್ದೀಯ.+

 5 ನಮ್ಮ ದೇವರಾದ ಯೆಹೋವನನ್ನ ಉನ್ನತಕ್ಕೆ ಏರಿಸಿ,+

ಆತನ ಪಾದಪೀಠದ ಮುಂದೆ ಬಗ್ಗಿ ನಮಸ್ಕರಿಸಿ,*+

ಆತನು ಪವಿತ್ರನು.+

 6 ಆತನ ಪುರೋಹಿತರಲ್ಲಿ ಮೋಶೆ ಮತ್ತು ಆರೋನ ಇದ್ರು,+

ಆತನ ಹೆಸ್ರನ್ನ ಕರಿಯೋರಲ್ಲಿ ಸಮುವೇಲ ಇದ್ದ.+

ಅವರು ಯೆಹೋವನಿಗೆ ಮೊರೆ ಇಡ್ತಿದ್ರು,

ಆತನು ಅವ್ರಿಗೆ ಉತ್ತರ ಕೊಡ್ತಿದ್ದ.+

 7 ಆತನು ಮೋಡಗಳಿಂದ ಅವ್ರ ಜೊತೆ ಮಾತಾಡ್ತಿದ್ದ.+

ಆತನು ಅವ್ರಿಗೆ ಕೊಟ್ಟ ಎಚ್ಚರಿಕೆಯನ್ನ ಮತ್ತು ಆಜ್ಞೆಯನ್ನ ಅವರು ಪಾಲಿಸಿದ್ರು.+

 8 ನಮ್ಮ ದೇವರಾದ ಯೆಹೋವನೇ, ನೀನು ಅವ್ರಿಗೆ ಉತ್ತರ ಕೊಟ್ಟೆ.+

ನೀನು ಅವ್ರ ತಪ್ಪುಗಳನ್ನ ಕ್ಷಮಿಸಿದೆ,+

ಆದ್ರೆ ಅವ್ರ ಪಾಪಗಳಿಗಾಗಿ ಶಿಕ್ಷೆ ಕೊಟ್ಟೆ.*+

 9 ನಮ್ಮ ದೇವರಾದ ಯೆಹೋವನನ್ನ ಉನ್ನತಕ್ಕೆ ಏರಿಸಿ+

ಆತನ ಪವಿತ್ರ ಪರ್ವತದ ಮುಂದೆ ಬಗ್ಗಿ ನಮಸ್ಕರಿಸಿ,*+

ಯಾಕಂದ್ರೆ ನಮ್ಮ ದೇವರಾದ ಯೆಹೋವ ಪವಿತ್ರನು.+

ಧನ್ಯವಾದದ ಮಧುರ ಗೀತೆ.

100 ಇಡೀ ಭೂಮಿಯ ಜನ್ರೇ, ಯೆಹೋವನಿಗೆ ಜೈಕಾರ ಹಾಕಿ.+

 2 ಸಂತೋಷದಿಂದ ಯೆಹೋವನ ಸೇವೆ ಮಾಡಿ.+

ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.

 3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+

ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+

ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+

 4 ಧನ್ಯವಾದ ಹೇಳ್ತಾ ಆತನ ಬಾಗಿಲ ಹತ್ರ ಬನ್ನಿ,+

ಹೊಗಳ್ತಾ ಆತನ ಅಂಗಳಕ್ಕೆ ಬನ್ನಿ.+

ಆತನಿಗೆ ಧನ್ಯವಾದ ಹೇಳಿ, ಆತನ ಹೆಸ್ರನ್ನ ಕೊಂಡಾಡಿ.+

 5 ಯಾಕಂದ್ರೆ ಯೆಹೋವ ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ,

ಆತನ ನಂಬಿಗಸ್ತಿಕೆ ನಿರಂತರ.+

ದಾವೀದನ ಮಧುರ ಗೀತೆ.

101 ಯೆಹೋವನೇ, ನಾನು ನಿನಗಾಗಿ ಸ್ತುತಿಗೀತೆಗಳನ್ನ ಹಾಡ್ತೀನಿ.*

ಶಾಶ್ವತ ಪ್ರೀತಿ ಮತ್ತು ನ್ಯಾಯದ ಬಗ್ಗೆ ನಾನು ಹಾಡ್ತೀನಿ.

 2 ನಾನು ತಿಳುವಳಿಕೆಯಿಂದ, ತಪ್ಪಿಲ್ಲದವನಾಗಿ ನಡ್ಕೊತೀನಿ.*

ನೀನು ಯಾವಾಗ ನನ್ನ ಹತ್ರ ಬರ್ತಿಯಾ?

ನಾನು ಮನೆ ಒಳಗೂ ಪ್ರಾಮಾಣಿಕ ಹೃದಯ+ ಕಾಪಾಡ್ಕೊತೀನಿ.

 3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ.

ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+

ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.

 4 ನನ್ನ ಹತ್ರ ಮೋಸ ಮಾಡೋ ಹೃದಯ ಇಲ್ಲ.

ಕೆಟ್ಟದ್ದನ್ನ ನಾನು ಒಪ್ಕೊಳ್ಳಲ್ಲ.

 5 ಯಾವನಾದ್ರೂ ಗುಟ್ಟಾಗಿ ಬೇರೆಯವನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ,+

ನಾನು ಅವನನ್ನ ಮುಗಿಸಿಬಿಡ್ತೀನಿ.*

ಜಂಬದ ಕಣ್ಣು ಇರೋರನ್ನ, ಸೊಕ್ಕಿನ ಹೃದಯ ಇರೋರನ್ನ

ನಾನು ಸಹಿಸ್ಕೊಳ್ಳಲ್ಲ.

 6 ಭೂಮಿ ಮೇಲಿರೋ ನಂಬಿಗಸ್ತರು ನನ್ನ ಜೊತೆ ಇರೋಕೆ,

ನಾನು ಅವ್ರಿಗಾಗಿ ಹುಡುಕ್ತಿನಿ.

ನಿಯತ್ತಾಗಿ* ನಡ್ಕೊಳ್ಳೋರು ನನ್ನ ಸೇವೆಮಾಡ್ತಾರೆ.

 7 ಕಪಟಿಗಳಿಗೆ ನನ್ನ ಮನೆಯಲ್ಲಿ ಜಾಗ ಇಲ್ಲ,

ಸುಳ್ಳುಗಾರರಿಗೆ ನನ್ನ ಸನ್ನಿಧಿಯಲ್ಲಿ* ನಿಲ್ಲೋಕೆ ಅವಕಾಶ ಇಲ್ಲ.

 8 ದಿನಾ ಬೆಳಿಗ್ಗೆ ಭೂಮಿಯಲ್ಲಿರೋ ಕೆಟ್ಟವರನ್ನ ಮುಗಿಸಿಬಿಡ್ತೀನಿ,

ತಪ್ಪುಮಾಡೋರನ್ನ ಯೆಹೋವನ ಪಟ್ಟಣದಿಂದ ನಿರ್ನಾಮ ಮಾಡಿಬಿಡ್ತೀನಿ.+

ಕುಗ್ಗಿಹೋಗಿರೋ ವ್ಯಕ್ತಿ ಬೇಜಾರಲ್ಲಿ ಇರೋವಾಗ* ಯೆಹೋವನ ಮುಂದೆ ತನ್ನ ಚಿಂತೆ ತೋಡ್ಕೊಳ್ತಾ ಮಾಡೋ ಪ್ರಾರ್ಥನೆ.+

102 ಯೆಹೋವ, ನನ್ನ ಪ್ರಾರ್ಥನೆ ಕೇಳಿಸ್ಕೊ,+

ಸಹಾಯಕ್ಕಾಗಿ ನಾನಿಡೋ ಮೊರೆ ನಿನಗೆ ಮುಟ್ಟಲಿ.+

 2 ನಾನು ಕಷ್ಟದಲ್ಲಿ ಇರೋವಾಗ ನಿನ್ನ ಮುಖನ ನನ್ನಿಂದ ಮರೆಮಾಡ್ಕೊಬೇಡ.+

ನಾನು ಹೇಳೋದು ಕೇಳು,*

ನಾನು ಕರೆದ ತಕ್ಷಣ ನನಗೆ ಉತ್ರ ನೀಡು.+

 3 ಯಾಕಂದ್ರೆ ನನ್ನ ದಿನಗಳು ಹೊಗೆ ತರ ಕಣ್ಮರೆ ಆಗ್ತಿವೆ,

ನನ್ನ ಎಲುಬು ಬೆಂಕಿಗೂಡಿನ ತರ ಉರಿದು ಕಪ್ಪಾಗಿದೆ.+

 4 ನನ್ನ ಹೃದಯ ಸೂರ್ಯನ ಶಾಖಕ್ಕೆ ಒಣಗಿಹೋಗಿರೋ ಹುಲ್ಲಿನ ತರ ಆಗಿದೆ.+

ನಾನು ಊಟ ಮಾಡೋದನ್ನೇ ಮರೆತು ಹೋಗ್ತಿದ್ದೀನಿ.

 5 ನನ್ನ ಯಾತನೆ ಎಷ್ಟು ಜಾಸ್ತಿ ಆಗಿದೆ ಅಂದ್ರೆ ನರಳಿ ನರಳಿ,+

ನನ್ನ ಚರ್ಮ ಎಲುಬುಗಳಿಗೆ ಅಂಟ್ಕೊಂಡಿದೆ.+

 6 ನಾನು ಕಾಡಲ್ಲಿರೋ ಬಕಪಕ್ಷಿ* ತರ ಇದ್ದೀನಿ,

ಹಾಳುಬಿದ್ದ ಜಾಗದಲ್ಲಿರೋ ಗೂಬೆ ತರ ಇದ್ದೀನಿ.

 7 ಮಲಗಿದ್ರೂ ನನಗೆ ನಿದ್ದೆ ಬರ್ತಿಲ್ಲ.*

ಚಾವಣಿ ಮೇಲೆ ಕೂತ್ಕೊಳ್ಳೋ ಒಂಟಿ ಪಕ್ಷಿ ತರ ಇದ್ದೀನಿ.+

 8 ಇಡೀ ದಿನ ಶತ್ರುಗಳು ನನ್ನನ್ನ ಬೈತಾರೆ.+

ನನ್ನನ್ನ ಅಣಕಿಸೋರು* ನನ್ನ ಹೆಸ್ರನ್ನ ಶಾಪವಾಗಿ ಬಳಸ್ತಾರೆ.

 9 ಬೂದಿನೇ ನನ್ನ ಆಹಾರ ಆಗಿದೆ,+

ನಾನು ಕುಡಿಯೋ ನೀರಲ್ಲಿ ನನ್ನ ಕಣ್ಣೀರು ಬೆರೆತುಹೋಗಿದೆ,+

10 ನಿನ್ನ ಕೋಪ, ನಿನ್ನ ಸಿಟ್ಟಿಂದ ನನಗೆ ಇಂಥ ಪರಿಸ್ಥಿತಿ ಬಂದಿದೆ,

ನೀನು ನನ್ನನ್ನ ಎತ್ತಿ ಬಿಸಾಡಿ ಬಿಟ್ಟಿದ್ದೀಯ.

11 ನನ್ನ ದಿನಗಳು ಕಣ್ಮರೆಯಾಗೋ* ನೆರಳಿನ ತರ ಇದೆ,+

ನಾನು ಹುಲ್ಲಿನ ತರ ಒಣಗಿ ಹೋಗ್ತಿದ್ದೀನಿ.+

12 ಆದ್ರೆ ಯೆಹೋವನೇ, ನೀನು ಶಾಶ್ವತಕ್ಕೂ ಇರ್ತಿಯ,+

ನಿನ್ನ ಕೀರ್ತಿ* ತಲತಲಾಂತರಕ್ಕೂ ಇದ್ದೇ ಇರುತ್ತೆ.+

13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+

ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+

ಅಂದ್ಕೊಂಡಿದ್ದ ಸಮಯ ಬಂದಿದೆ.+

14 ಅದ್ರ ಕಲ್ಲುಗಳೆಂದ್ರೆ ನಿನ್ನ ಸೇವಕರಿಗೆ ತುಂಬ ಇಷ್ಟ,+

ಅದ್ರ ಧೂಳಿನ ಮೇಲೂ ಅವ್ರಿಗೆ ತುಂಬ ಪ್ರೀತಿ.+

15 ಯೆಹೋವನ ಹೆಸ್ರಿಗೆ ದೇಶಗಳು ಹೆದರುತ್ತೆ,

ನಿನ್ನ ಮಹಿಮೆ ನೋಡಿ ಎಲ್ಲ ರಾಜರು ಭಯಪಡ್ತಾರೆ.+

16 ಯಾಕಂದ್ರೆ ಯೆಹೋವ ಚೀಯೋನನ್ನ ಮತ್ತೆ ಕಟ್ತಾನೆ,+

ಆತನು ತನ್ನ ಮಹಿಮೆಯಲ್ಲಿ ಬರ್ತಾನೆ.+

17 ಆತನು ಗತಿ ಇಲ್ಲದವರ ಪ್ರಾರ್ಥನೆಗೆ ಗಮನಕೊಡ್ತಾನೆ,+

ಅವ್ರ ಪ್ರಾರ್ಥನೆಯನ್ನ ಆತನು ಕೀಳಾಗಿ ನೋಡಲ್ಲ.+

18 ಮುಂದೆ ಹುಟ್ಟೋ* ಜನ್ರು ಯಾಹುವನ್ನ ಸ್ತುತಿಸಬೇಕು ಅಂತ,+

ಈ ಮಾತು ಮುಂದಿನ ಪೀಳಿಗೆಗಾಗಿ ಬರೆದಿದೆ.

19 ಮೇಲಿರೋ ತನ್ನ ಪವಿತ್ರ ಸ್ಥಳದಿಂದ ಆತನು ಕೆಳಗೆ ನೋಡ್ತಾನೆ,+

ಸ್ವರ್ಗದಿಂದ ಯೆಹೋವ ಭೂಮಿ ಮೇಲೆ ದೃಷ್ಟಿ ಇಡ್ತಾನೆ.

20 ಯಾಕಂದ್ರೆ ಜೈಲಲ್ಲಿ ಇರೋರ ನಿಟ್ಟುಸಿರನ್ನ ಕೇಳಿಸ್ಕೊಳ್ಳೋಕೆ,+

ಮರಣಶಿಕ್ಷೆ ಆಗ್ತಿರೋರನ್ನ ಬಿಡಿಸೋಕೆ ಆತನು ಹೀಗೆ ಮಾಡ್ತಾನೆ.+

21 ಹಾಗಾಗಿ ಚೀಯೋನಲ್ಲಿ ಯೆಹೋವನ ಹೆಸ್ರನ್ನ ಜೋರಾಗಿ ಹೇಳ್ತಾರೆ,+

ಯೆರೂಸಲೇಮಲ್ಲಿ ಆತನನ್ನ ಹೊಗಳ್ತಾರೆ.

22 ಆಗ ದೇಶಗಳು ಮತ್ತು ರಾಜ್ಯಗಳು ಒಟ್ಟುಸೇರಿ

ಯೆಹೋವನನ್ನ ಆರಾಧಿಸೋಕೆ ಬರುತ್ತವೆ.+

23 ಸಮ್ಯ ಬರೋ ಮುಂಚೆನೇ ಆತನು ನನ್ನ ಶಕ್ತಿನ ಕಿತ್ಕೊಂಡ,

ನನ್ನ ದಿನ ಕಮ್ಮಿ ಆದ್ವು.

24 ನಾನು ಹೀಗೆ ಹೇಳಿದೆ “ನನ್ನ ದೇವರೇ,

ತಲತಲಾಂತರಕ್ಕೂ ಇರೋನೇ,+

ನನ್ನ ಅರ್ಧ ಆಯಸ್ಸಲ್ಲೇ ನನ್ನನ್ನ ಅಳಿಸಿಹಾಕಬೇಡ.

25 ತುಂಬ ವರ್ಷಗಳ ಹಿಂದೆನೇ ನೀನು ಭೂಮಿಗೆ ಬುನಾದಿ ಹಾಕಿದೆ,

ಆಕಾಶ ನಿನ್ನ ಕೈಕೆಲಸ.+

26 ಅವು ನಾಶ ಆದ್ರೂ ನೀನು ಸದಾಕಾಲಕ್ಕೂ ಇರ್ತಿಯ,

ಬಟ್ಟೆ ತರ ಅವೆಲ್ಲ ಹಾಳಾಗಿ ಹೋಗುತ್ತೆ.

ಬಟ್ಟೆ ತರ ನೀನು ಅವುಗಳನ್ನ ಬದಲಾಯಿಸ್ತೀಯ, ಅವು ಇಲ್ಲದೆ ಹೋಗುತ್ತೆ.

27 ಆದ್ರೆ ನೀನು ಇದ್ದ ಹಾಗೇ ಇರ್ತಿಯ, ನಿನಗೆ ಅಂತ್ಯಾನೇ ಇಲ್ಲ.+

28 ನಿನ್ನ ಸೇವಕರ ಮಕ್ಕಳು ಸುರಕ್ಷಿತವಾಗಿ ವಾಸಿಸ್ತಾರೆ,

ಅವರ ಸಂತತಿ ಯಾವಾಗ್ಲೂ ನಿನ್ನ ಮುಂದೆ ಇರುತ್ತೆ.”+

ದಾವೀದನ ಕೀರ್ತನೆ.

103 ನನ್ನ ಮನ ಯೆಹೋವನನ್ನ ಹೊಗಳಲಿ,

ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ.

 2 ನನ್ನ ಮನ ಯೆಹೋವನನ್ನ ಸ್ತುತಿಸಲಿ,

ಆತನು ಮಾಡಿದ ಯಾವುದನ್ನೂ ಅದು ಯಾವತ್ತೂ ಮರಿಯದಿರಲಿ.+

 3 ಆತನು ನನ್ನ ತಪ್ಪುಗಳನ್ನೆಲ್ಲ ಕ್ಷಮಿಸ್ತಾನೆ,+

ನನ್ನ ಕಾಯಿಲೆಗಳನ್ನೆಲ್ಲ ವಾಸಿಮಾಡ್ತಾನೆ.+

 4 ಆತನು ನನ್ನ ಜೀವವನ್ನ ಸಮಾಧಿಯಿಂದ* ಮೇಲೆ ಎಬ್ಬಿಸ್ತಾನೆ+

ತನ್ನ ಶಾಶ್ವತ ಪ್ರೀತಿ ಮತ್ತು ಕರುಣೆಯ ಕಿರೀಟವನ್ನ ನನಗೆ ಹಾಕ್ತಾನೆ.+

 5 ಆತನು ನನ್ನ ಜೀವನ ಪರ್ಯಂತ ನನಗೆ ಒಳ್ಳೇ ವಸ್ತುಗಳನ್ನ ಕೊಟ್ಟು ತೃಪ್ತಿ ಪಡಿಸಿದ್ದಾನೆ.+

ಹದ್ದಿನ ತರ ನಾನು ಯಾವಾಗ್ಲೂ ಯುವಕನಾಗಿ ಇರಬೇಕು ಅಂತ ಹೀಗೆ ಮಾಡ್ತಾನೆ.+

 6 ದೌರ್ಜನ್ಯ ಆಗ್ತಿರೋರಿಗೆ

ಯೆಹೋವ ನೀತಿಯಿಂದ ಹೆಜ್ಜೆ ತಗೊಂಡು,+ ಅವ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+

 7 ಆತನು ಮೋಶೆಗೆ ತನ್ನ ದಾರಿಗಳನ್ನ ತಿಳಿಸಿದನು,+

ಇಸ್ರಾಯೇಲ್ಯರಿಗೆ ತನ್ನ ಕೆಲಸಗಳನ್ನ ತೋರಿಸಿದನು.+

 8 ಯೆಹೋವ ಕರುಣೆ, ಕನಿಕರ* ಇರೋ ದೇವರು,+

ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ* ಅಪಾರವಾಗಿ ತೋರಿಸ್ತಾನೆ.+

 9 ಆತನು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ,+

ಮುನಿಸ್ಕೊಂಡು ಶಾಶ್ವತವಾಗಿ ಮನಸ್ಸಲ್ಲಿ ಇಟ್ಕೊಳ್ಳಲ್ಲ.+

10 ಆತನು ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡ್ಕೊಳ್ಳಲಿಲ್ಲ,+

ನಾವು ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆ ಕೊಡಲಿಲ್ಲ.+

11 ಆಕಾಶ ಭೂಮಿಯಿಂದ ಎಷ್ಟು ಎತ್ರದಲ್ಲಿ ಇದೆಯೋ,

ಆತನಿಗೆ ಭಯಪಡೋರ ಕಡೆ ಆತನಿಗಿರೋ ಶಾಶ್ವತ ಪ್ರೀತಿನೂ ಅಷ್ಟೇ ಜಾಸ್ತಿ ಇದೆ.+

12 ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ,

ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ.+

13 ಅಪ್ಪ ಮಕ್ಕಳಿಗೆ ಕರುಣೆ ತೋರಿಸೋ ಹಾಗೆ,

ಯೆಹೋವ ತನಗೆ ಭಯಪಡೋರಿಗೆ ಕರುಣೆ ತೋರಿಸ್ತಾನೆ.+

14 ಯಾಕಂದ್ರೆ ನಮ್ಮನ್ನ ರಚಿಸಿರೋದು ಹೇಗೆ ಅಂತ ಆತನಿಗೆ ಚೆನ್ನಾಗಿ ಗೊತ್ತು,+

ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ.+

15 ನಾಶವಾಗಿ ಹೋಗೋ ಮನುಷ್ಯನನ್ನ ನೋಡೋದಾದ್ರೆ

ಅವನ ಜೀವನ ಹುಲ್ಲಿನ ತರ ಕ್ಷಣಿಕ,+

ಅವನು ಬೈಲಲ್ಲಿರೋ ಹೂವಿನ ತರ ಅರಳ್ತಾನೆ,+

16 ಆದ್ರೆ ಗಾಳಿ ಬೀಸಿದ್ರೆ ಅದು ಇಲ್ಲದ ಹಾಗೆ ಹೋಗಿಬಿಡುತ್ತೆ,

ಅದು ಅಲ್ಲಿ ಇರಲೇ ಇಲ್ಲವೇನೋ ಅನ್ನೋ ತರ ಆಗಿಬಿಡುತ್ತೆ.

17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋ

ಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+

ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+

18 ಆತನ ಒಪ್ಪಂದನ ಒಪ್ಕೊಳ್ಳೋ ಜನ್ರಿಗೂ+

ಆತನ ಆಜ್ಞೆಗಳನ್ನ ಜಾಗ್ರತೆಯಿಂದ ಪಾಲಿಸೋ ಜನ್ರಿಗೂ ಹಾಗೇ ಆಗುತ್ತೆ.

19 ಯೆಹೋವ ತನ್ನ ಸಿಂಹಾಸನವನ್ನ ಸ್ವರ್ಗದಲ್ಲಿ ದೃಢವಾಗಿ ಸ್ಥಾಪಿಸಿದ್ದಾನೆ,+

ಆತನಿಗೆ ಎಲ್ಲದರ ಮೇಲೂ ಅಧಿಕಾರ ಇದೆ.+

20 ಆತನ ಸ್ವರಕ್ಕೆ ಅಧೀನರಾಗಿ, ಆತನ ಮಾತನ್ನ ಪಾಲಿಸೋ+

ಬಲಿಷ್ಠ ದೇವದೂತರೇ,+ ನೀವೆಲ್ಲ ಯೆಹೋವನನ್ನ ಹೊಗಳಿ.

21 ಆತನ ಇಡೀ ಸೈನ್ಯವೇ,

ಆತನ ಇಷ್ಟದ ಹಾಗೆ ಮಾಡೋ ಆತನ ಸೇವಕರೇ,+ ಯೆಹೋವನನ್ನ ಕೊಂಡಾಡಿ.+

22 ಯೆಹೋವನ ಸೃಷ್ಟಿಗಳೇ ಆತನನ್ನ ಹೊಗಳಿ, ಆತನು ಆಳ್ವಿಕೆ ಮಾಡೋ ಎಲ್ಲ ಜಾಗಗಳಲ್ಲಿ ಆತನನ್ನ ಸ್ತುತಿಸಿ.

ನನ್ನ ತನುಮನವೆಲ್ಲ ಯೆಹೋವನನ್ನ ಹಾಡಿ ಹೊಗಳಲಿ.

104 ನನ್ನ ಮನ ಯೆಹೋವನನ್ನ ಕೊಂಡಾಡಲಿ.+

ನನ್ನ ದೇವರಾದ ಯೆಹೋವನೇ ನೀನು ಮಹೋನ್ನತನು.+

ನೀನು ಘನತೆ,* ವೈಭವವನ್ನ ಹಾಕೊಂಡಿದ್ದೀಯ.+

 2 ನೀನು ಬೆಳಕನ್ನ+ ಬಟ್ಟೆ ತರ ಸುತ್ಕೊಂಡಿದ್ದೀಯ,

ಆಕಾಶವನ್ನ ಡೇರೆಯ ಬಟ್ಟೆ ತರ ಹರಡಿದ್ದೀಯ.+

 3 ಆತನು ಮೇಲಿನ ನೀರಲ್ಲಿ ತನ್ನ ಮನೆಯ ಮೇಲಿನ ಕೋಣೆಗಳ ತೊಲೆಗಳನ್ನ ಹಾಕ್ತಾನೆ,+

ಮೋಡಗಳನ್ನ ತನ್ನ ರಥವಾಗಿ ಮಾಡ್ಕೊಳ್ತಾನೆ,+

ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡ್ತಾನೆ.+

 4 ಆತನು ತನ್ನ ದೂತರನ್ನ ಶಕ್ತಿಶಾಲಿಗಳಾಗಿ ಮಾಡ್ತಾನೆ,

ತನ್ನ ಸೇವಕರನ್ನ ಸರ್ವನಾಶ ಮಾಡೋ ಬೆಂಕಿ ತರ ಮಾಡ್ತಾನೆ.+

 5 ಆತನು ಭೂಮಿಯನ್ನ ಅದ್ರ ಅಸ್ತಿವಾರದ ಮೇಲೆ ಸ್ಥಿರಮಾಡಿದ್ದಾನೆ,+

ಅದು ತನ್ನ ಜಾಗ ಬಿಟ್ಟು ಯಾವತ್ತೂ ಕದಲಲ್ಲ. ಶಾಶ್ವತವಾಗಿ ಇದ್ದಲ್ಲೇ ಇರುತ್ತೆ.+

 6 ಬಟ್ಟೆಯಿಂದ ಮುಚ್ಚೋ ಹಾಗೆ ಆಳವಾದ ನೀರಿಂದ ನೀನು ಭೂಮಿಯನ್ನ ಮುಚ್ಚಿದ್ದೀಯ.+

ನೀರು ಬೆಟ್ಟಗಳ ಮೇಲೆ ನಿಂತಿದೆ.

 7 ನಿನ್ನ ಗದರಿಕೆ ಕೇಳಿ ಅವು ಪರಾರಿ ಆಗ್ತವೆ,+

ನಿನ್ನ ಗುಡುಗಿನ ಶಬ್ದಕ್ಕೆ ಹೆದರಿ ಅವು ಓಡಿಹೋಗ್ತವೆ.

 8 ನೀನು ಹೇಳಿದ ಜಾಗಕ್ಕೆ ಅವು ಹೋದ್ವು,

ಬೆಟ್ಟಗಳು ಮೇಲೆ ಏರಿದ್ವು,+ ಕಣಿವೆಗಳು ಕೆಳಗೆ ಇಳಿದ್ವು.

 9 ಇನ್ಯಾವತ್ತೂ ನೀರು ಭೂಮಿನ ಮುಚ್ಚದ ಹಾಗೆ,

ದಾಟಬಾರದ ಒಂದು ಮೇರೆಯನ್ನ ಅದಕ್ಕೆ ಇಟ್ಟಿದ್ದೀಯ.+

10 ಆತನು ಕಣಿವೆಗಳಿಗೆ ಬುಗ್ಗೆಗಳನ್ನ ಕಳಿಸ್ತಾನೆ,

ಬೆಟ್ಟಗಳ ಮಧ್ಯದಿಂದ ಅವು ಹರಿದು ಬರುತ್ತವೆ.

11 ಎಲ್ಲ ಕಾಡುಪ್ರಾಣಿಗಳಿಗೆ ಅವು ನೀರು ಕೊಡುತ್ತವೆ,

ಕಾಡುಕತ್ತೆಗಳು ತಮ್ಮ ದಾಹ ನೀಗಿಸ್ಕೊಳ್ತವೆ.

12 ನೀರಿನ ಪಕ್ಕದಲ್ಲಿರೋ ಮರದಲ್ಲಿ ಪಕ್ಷಿಗಳು ಗೂಡು ಕಟ್ಕೊಳ್ತವೆ,

ದೊಡ್ಡ ಮರಗಳ ಕೊಂಬೆಗಳ ಮಧ್ಯ ಅವು ಹಾಡು ಹಾಡ್ತವೆ.

13 ಆತನು ತನ್ನ ಮೇಲಿನ ಕೋಣೆಗಳಿಂದ ಬೆಟ್ಟಗಳಿಗೆ ನೀರು ಹಾಕ್ತಾನೆ.+

ನಿನ್ನ ಶ್ರಮದ ಪ್ರತಿಫಲದಿಂದ ಭೂಮಿಗೆ ತೃಪ್ತಿಯಾಗಿದೆ.+

14 ಆತನು ಪ್ರಾಣಿಗಳಿಗಾಗಿ ಹುಲ್ಲನ್ನ,

ಮನುಷ್ಯರಿಗಾಗಿ ಗಿಡಮರಗಳನ್ನ ಹುಟ್ಟಿಸ್ತಾನೆ.+

ಹೀಗೆ ಆತನು ನೆಲದಿಂದ ಆಹಾರ ಬೆಳೆಯೋ ತರ ಮಾಡ್ತಿದ್ದಾನೆ.

15 ಮನುಷ್ಯರ ಹೃದಯಗಳನ್ನ ಸಂತೋಷಪಡಿಸೋ ದ್ರಾಕ್ಷಾಮದ್ಯ,+

ಅವ್ರ ಮುಖಗಳಿಗೆ ಕಾಂತಿ ಕೊಡೋ ಎಣ್ಣೆ,

ಮಾಮೂಲಿ ಮನುಷ್ಯನ ಹೃದಯವನ್ನ ಬಲಪಡಿಸೋ ರೊಟ್ಟಿ ಸಿಗೋ ತರ ಮಾಡ್ತಿದ್ದಾನೆ.+

16 ಯೆಹೋವನ ಮರಗಳಿಗೆ,

ಆತನು ನೆಟ್ಟಿರೋ ಲೆಬನೋನಿನ ದೇವದಾರು ಮರಗಳಿಗೆ ಸಮೃದ್ಧವಾಗಿ ನೀರು ಸಿಗ್ತಿದೆ.

17 ಅವುಗಳ ಮೇಲೆ ಪಕ್ಷಿಗಳು ಗೂಡು ಕಟ್ಕೊಳ್ತವೆ.

ಜುನಿಪರ್‌ ಮರಗಳಲ್ಲಿ ಕೊಕ್ಕರೆಗಳು+ ಮನೆ ಮಾಡ್ಕೊಂಡಿವೆ.

18 ಎತ್ತರವಾದ ಬೆಟ್ಟಗಳಲ್ಲಿ ಬೆಟ್ಟದ ಮೇಕೆಗಳು ವಾಸಿಸ್ತವೆ,+

ಕಡಿದಾದ ಬಂಡೆಗಳಲ್ಲಿ ಬೆಟ್ಟದ ಮೊಲಗಳು ಮನೆ ಮಾಡ್ಕೊಂಡಿವೆ.+

19 ಹೊತ್ತುಗಳನ್ನ ಸೂಚಿಸೋಕೆ ಆತನು ಚಂದ್ರನನ್ನ ಮಾಡಿದ,

ತಾನು ಯಾವಾಗ ಮುಳುಗಬೇಕು ಅಂತ ಸೂರ್ಯನಿಗೆ ಚೆನ್ನಾಗಿ ಗೊತ್ತು.+

20 ನೀನು ಕತ್ತಲನ್ನ ತಂದಾಗ ರಾತ್ರಿಯಾಗುತ್ತೆ,+

ಆಗ ಕಾಡುಪ್ರಾಣಿಗಳೆಲ್ಲ ಆಕಡೆ ಈಕಡೆ ಓಡಾಡ್ತವೆ.

21 ಎಳೇ ಸಿಂಹಗಳು ಬೇಟೆಗಾಗಿ ಗರ್ಜಿಸ್ತವೆ,+

ದೇವರು ಕೊಡೋ ಆಹಾರಕ್ಕಾಗಿ ಹುಡುಕ್ತವೆ.+

22 ಸೂರ್ಯ ಉದಯಿಸಿದಾಗ,

ಅವು ತಿರುಗಿ ತಮ್ಮ ಗುಹೆಗಳಿಗೆ ಹೋಗಿ ಮಲಗಿಕೊಳ್ತವೆ.

23 ಮನುಷ್ಯರು ಕೆಲಸಕ್ಕೆ ಹೋಗ್ತಾರೆ,

ಸಂಜೆ ತನಕ ಕಷ್ಟಪಟ್ಟು ದುಡಿತಾರೆ.

24 ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+

ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+

ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ.

25 ಸಮುದ್ರ ವಿಶಾಲವಾಗಿದೆ, ದೂರದೂರದ ತನಕ ಹರಡ್ಕೊಂಡಿದೆ,

ಲೆಕ್ಕ ಇಲ್ಲದಷ್ಟು ಚಿಕ್ಕದೊಡ್ಡ ಜೀವಿಗಳು ಅದ್ರಲ್ಲಿ ತುಂಬಿಕೊಂಡಿವೆ.+

26 ಅದ್ರಲ್ಲಿ ಹಡಗುಗಳು ಹೋಗ್ತವೆ,

ನೀನು ಮಾಡಿರೋ ಲಿವ್ಯಾತಾನ್‌*+ ಅದ್ರಲ್ಲಿ ಆಟ ಆಡುತ್ತೆ.

27 ನೀನು ಸಮ್ಯಕ್ಕೆ ಸರಿಯಾಗಿ ಊಟ ಕೊಡ್ತೀಯ+ ಅಂತ

ಅವು ನಿನಗಾಗಿ ಕಾಯ್ತವೆ.

28 ನೀನು ಕೊಡೋದನ್ನ ಅವು ತಿಂತವೆ.+

ನೀನು ನಿನ್ನ ಕೈತೆಗೆದು ಕೊಡುವಾಗ ಅವು ಒಳ್ಳೇ ವಸ್ತುಗಳಿಂದ ಸಂತೃಪ್ತಿ ಪಡಿತವೆ.+

29 ನೀನು ನಿನ್ನ ಮುಖವನ್ನ ಮರೆಮಾಡ್ಕೊಂಡಾಗ ಅವು ಚಡಪಡಿಸ್ತವೆ.

ನೀನು ಅವುಗಳ ಉಸಿರನ್ನ ತೆಗೆದ್ರೆ ಅವು ಸಾಯ್ತವೆ, ಮತ್ತೆ ಮಣ್ಣಿಗೆ ಹೋಗಿ ಸೇರಿಕೊಳ್ತವೆ.+

30 ನೀನು ನಿನ್ನ ಪವಿತ್ರಶಕ್ತಿಯನ್ನ ಕಳಿಸಿದ್ರೆ ಅವು ಸೃಷ್ಟಿಯಾಗ್ತವೆ,+

ನೀನು ಭೂಮಿಗೆ ಹೊಸತನ ಕೊಡ್ತೀಯ.

31 ಯೆಹೋವನ ಮಹಿಮೆ ಶಾಶ್ವತವಾಗಿ ಇರುತ್ತೆ,

ಯೆಹೋವ ತನ್ನ ಕೆಲಸಗಳನ್ನ ನೋಡಿ ಖುಷಿಪಡ್ತಾನೆ.+

32 ಆತನು ಭೂಮಿ ಕಡೆ ನೋಡಿದ್ರೆ ಅದು ನಡುಗುತ್ತೆ,

ಆತನು ಬೆಟ್ಟಗಳನ್ನ ಮುಟ್ಟಿದ್ರೆ ಅವು ಹೊಗೆಯನ್ನ ಕಕ್ಕುತ್ತೆ.+

33 ನಾನು ನನ್ನ ಜೀವನಪರ್ಯಂತ ಯೆಹೋವನಿಗೆ ಹಾಡು ಹಾಡ್ತೀನಿ,+

ನಾನು ಸಾಯೋ ತನಕ ನನ್ನ ದೇವರಿಗೆ ಕೃತಜ್ಞತೆಯ ಗೀತೆಗಳನ್ನ ಹಾಡ್ತೀನಿ.*+

34 ನನ್ನ ಆಲೋಚನೆಗಳು ಆತನಿಗೆ ಇಷ್ಟ ಆಗಲಿ,*

ನಾನು ಯೆಹೋವನಲ್ಲಿ ಖುಷಿಪಡ್ತೀನಿ.

35 ಪಾಪಿಗಳು ಭೂಮಿಯ ಮೇಲಿಂದ ಅಳಿದು ಹೋಗ್ತಾರೆ,

ದುಷ್ಟರು ಇನ್ಮುಂದೆ ಇರಲ್ಲ.+

ನನ್ನ ಮನ ಯೆಹೋವನನ್ನ ಕೊಂಡಾಡಲಿ! ಯಾಹುವನ್ನ ಸ್ತುತಿಸಿ!*

105 ಯೆಹೋವನಿಗೆ ಧನ್ಯವಾದ ಹೇಳಿ,+ ಆತನ ಹೆಸ್ರಲ್ಲಿ ಪ್ರಾರ್ಥಿಸಿ,

ಆತನ ಕೆಲಸಗಳ ಬಗ್ಗೆ ಜನ್ರಿಗೆ ಹೇಳಿ!+

 2 ಆತನಿಗೆ ಹಾಡನ್ನ ಹಾಡಿ, ಆತನನ್ನ ಹೊಗಳಿ,*

ಆತನ ಎಲ್ಲ ಅದ್ಭುತಗಳ ಬಗ್ಗೆ ಧ್ಯಾನಿಸಿ.*+

 3 ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+

ಯೆಹೋವನನ್ನ ಹುಡುಕುವವರ ಹೃದಯ ಖುಷಿಪಡಲಿ.+

 4 ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+

ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.

 5 ಆತನು ಮಾಡಿದ ಮಹತ್ಕಾರ್ಯಗಳನ್ನ,

ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,+

 6 ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ,+

ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ+ ಅದನ್ನ ನೆನಪಿಸ್ಕೊಳ್ಳಿ.

 7 ಆತನು ನಮ್ಮ ದೇವರಾದ ಯೆಹೋವ.+

ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+

 8 ಸಾವಿರ ಪೀಳಿಗೆಗಳಿಗೆ ತಾನು ಕೊಟ್ಟ ಮಾತನ್ನ*+

ತನ್ನ ಆ ಒಪ್ಪಂದವನ್ನ ಆತನು ಯಾವತ್ತೂ ಮರಿಯಲ್ಲ.+

 9 ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+

ಆತನು ಇಸಾಕನಿಗೆ ಕೊಟ್ಟ ಮಾತನ್ನ+

10 ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,

ಇಸ್ರಾಯೇಲ್ಯರ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ಕೊಂಡ.

11 “ನಾನು ಕಾನಾನ್‌ ದೇಶನ+

ನಿನ್ನ ಸೊತ್ತಾಗಿ ಕೊಡ್ತೀನಿ”+ ಅಂತ ಹೇಳಿದ್ದ.

12 ಅವರು ಆಗ ಸ್ವಲ್ಪಾನೇ ಜನ ಇದ್ರು,+ ಹೌದು, ತುಂಬ ಕಮ್ಮಿ ಇದ್ರು.

ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+

13 ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+

14 ಯಾರಿಂದನೂ ಅವ್ರಿಗೆ

ಅನ್ಯಾಯ ಆಗದೆ ಇರೋ ತರ ಆತನು ನೋಡ್ಕೊಂಡ,+

ಅವ್ರಿಗೋಸ್ಕರ ರಾಜರನ್ನೂ ಬೈದ,+

15 “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,

ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದನ್ನೂ ಮಾಡಬೇಡಿ”+ ಅಂತ ಹೇಳಿದ.

16 ಆತನು ಆ ದೇಶಕ್ಕೆ ಬರಗಾಲ ಬರೋ ತರ ಮಾಡಿದ,+

ಅವ್ರಿಗೆ ಆಹಾರ ಸಿಗದೆ ಇರೋ ತರ ಮಾಡಿದ.*

17 ಆತನು ಅವ್ರಿಗಿಂತ ಮುಂದೆ ಒಬ್ಬ ವ್ಯಕ್ತಿಯನ್ನ ಕಳಿಸಿದ.

ಅವರು ಅವನನ್ನ ದಾಸನಾಗಿ ಮಾರಿಬಿಟ್ರು, ಅವನೇ ಯೋಸೇಫ.+

18 ಅವನ ಕಾಲುಗಳನ್ನ ಬೇಡಿಗಳಿಂದ ಬಂಧಿಸಿದ್ರು,*+

ಅವನ ಕುತ್ತಿಗೆಗೆ ಕಬ್ಬಿಣದ ಸರಪಳಿ ಬಿಗಿದ್ರು.

19 ದೇವರ ಮಾತು ಸತ್ಯ ಅಂತ ಸಾಬೀತಾಗೋ ತನಕ+

ಯೆಹೋವನ ಮಾತೇ ಅವನನ್ನ ಶುದ್ಧ ಮಾಡ್ತು.

20 ಅವನನ್ನ ಬಿಡೋಕೆ ರಾಜ ಆಜ್ಞೆ ಕೊಟ್ಟ,+

ಅಧಿಕಾರಿಗಳು ಅವನನ್ನ ಬಿಟ್ಟುಬಿಟ್ರು.

21 ರಾಜ ಅವನನ್ನ ತನ್ನ ಮನೆಗೆ ಯಜಮಾನನಾಗಿ ಮಾಡಿದ,

ತನ್ನ ಎಲ್ಲ ಆಸ್ತಿ ಮೇಲೆ ಅಧಿಕಾರಿಯಾಗಿ ಇಟ್ಟ.+

22 ತಾನು ಮೆಚ್ಚೋ ತರ ತನ್ನ ದೊಡ್ಡ ಅಧಿಕಾರಿಗಳ ಮೇಲೆ ಅಧಿಕಾರ ನಡೆಸೋಕೆ,

ತನ್ನ ಹಿರಿಯರಿಗೆ ವಿವೇಕದ ಮಾತುಗಳನ್ನ ಕಲಿಸೋಕೆ ರಾಜ ಯೋಸೇಫನನ್ನ ನೇಮಿಸಿದ.+

23 ಆಮೇಲೆ ಇಸ್ರಾಯೇಲನು ಈಜಿಪ್ಟಿಗೆ ಬಂದ,+

ಹಾಮನ ದೇಶದಲ್ಲಿ ಯಾಕೋಬ ವಿದೇಶಿಯಾಗಿದ್ದ.

24 ದೇವರು ತನ್ನ ಜನ್ರ ಸಂಖ್ಯೆಯನ್ನ ಜಾಸ್ತಿ ಮಾಡಿದ.+

ಅವ್ರ ಶತ್ರುಗಳಿಗಿಂತ ಅವ್ರನ್ನ ಬಲಿಷ್ಠರಾಗಿ ಮಾಡಿದ.+

25 ಆತನು ಶತ್ರುಗಳ ಹೃದಯ ಬದಲಾಗೋಕೆ ಬಿಟ್ಟ.

ಹಾಗಾಗಿ ಅವರು ಆತನ ಸೇವಕರನ್ನ ದ್ವೇಷಿಸಿದ್ರು,

ಅವ್ರ ವಿರುದ್ಧ ಸಂಚು ಮಾಡಿದ್ರು.+

26 ಆತನು ತನ್ನ ಸೇವಕ ಮೋಶೆಯನ್ನ,+

ತಾನು ಆರಿಸ್ಕೊಂಡ ಆರೋನನನ್ನ+ ಕಳಿಸಿದ.

27 ಅವರು ಈಜಿಪ್ಟಿನವರ ಮುಂದೆ ಆತನ ಅದ್ಭುತಗಳನ್ನ,

ಹಾಮನ ದೇಶದಲ್ಲಿ ಆತನ ಮಹತ್ಕಾರ್ಯಗಳನ್ನ ತೋರಿಸಿದ್ರು.+

28 ಆತನು ಕತ್ತಲನ್ನ ಕಳಿಸಿದಾಗ ಇಡೀ ದೇಶ ಕತ್ತಲಾಯ್ತು,+

ಮೋಶೆ ಮತ್ತು ಆರೋನ ಆತನ ಮಾತಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ.

29 ಆತನು ಈಜಿಪ್ಟಿನವರ ನೀರನ್ನ ರಕ್ತ ಮಾಡಿದ,

ಅವ್ರ ಮೀನುಗಳನ್ನ ಸಾಯಿಸಿದ.+

30 ಅವ್ರ ದೇಶ ಕಪ್ಪೆಗಳಿಂದ ತುಂಬಿಹೋಯ್ತು,+

ಅವು ರಾಜನ ಮನೆಯನ್ನೂ ಬಿಡಲಿಲ್ಲ.

31 ರಕ್ತ ಹೀರೋ ನೊಣಗಳಿಗೆ ಆತನು ಅವ್ರ ಮೇಲೆ ಆಕ್ರಮಣ ಮಾಡು ಅಂತ ಆಜ್ಞೆ ಕೊಟ್ಟ.

ಸೊಳ್ಳೆಗಳಿಗೆ ಅವ್ರ ಎಲ್ಲ ಪ್ರದೇಶಗಳ ಮೇಲೆ ದಾಳಿ ಮಾಡೋಕೆ ಹೇಳಿದ.+

32 ಆತನು ಅವ್ರ ಮಳೆಯನ್ನ ಆಲಿಕಲ್ಲಾಗಿ ಬದಲಾಯಿಸಿದ

ಅವ್ರ ದೇಶದ ಮೇಲೆ ಸಿಡಿಲನ್ನ* ಬೀಳಿಸಿದ.+

33 ಆತನು ಅವ್ರ ದ್ರಾಕ್ಷಿ ತೋಟಗಳನ್ನ, ಅಂಜೂರ ಮರಗಳನ್ನ ನಾಶಮಾಡಿದ

ಅವ್ರ ಪ್ರದೇಶದಲ್ಲಿದ್ದ ಮರಗಳನ್ನ ಧ್ವಂಸಮಾಡಿದ.

34 ಆತನು ಮಿಡತೆಗಳಿಗೆ ಅವ್ರ ಮೇಲೆ ಆಕ್ರಮಣ ಮಾಡೋಕೆ ಹೇಳಿದ,

ಲೆಕ್ಕವಿಲ್ಲದಷ್ಟು ಮರಿ ಮಿಡತೆಗಳಿಗೆ ಆಜ್ಞೆ ಕೊಟ್ಟ.+

35 ಅವು ದೇಶದ ಬೆಳೆಯನ್ನೆಲ್ಲ ತಿಂದುಹಾಕಿದ್ವು,

ಭೂಮಿಯ ಫಸಲನ್ನ ನುಂಗಿಬಿಟ್ವು.

36 ಆಮೇಲೆ ಆತನು ಅವ್ರ ದೇಶದ ಎಲ್ಲ ಮೊದಲ ಮಕ್ಕಳನ್ನ ಹತಿಸಿದ,+

ಅವ್ರಿಗೆ ಮೊದಲು ಹುಟ್ಟಿದವರನ್ನೇ ಅಳಿಸಿಹಾಕಿದ.

37 ತನ್ನ ಜನ್ರು ಬೆಳ್ಳಿಬಂಗಾರ ತಗೊಂಡು ಬರೋ ತರ ಮಾಡಿದ,+

ಆತನ ಕುಲಗಳಲ್ಲಿ ಒಬ್ಬನೂ ಎಡವಿ ಬೀಳಲಿಲ್ಲ.

38 ಅವರು ಹೋದಾಗ ಈಜಿಪ್ಟಿನವರು ಖುಷಿಪಟ್ರು,

ಯಾಕಂದ್ರೆ ಇಸ್ರಾಯೇಲ್ಯರ ಭಯ ಅವ್ರನ್ನ ಕಾಡ್ತಿತ್ತು.+

39 ಇಸ್ರಾಯೇಲ್ಯರನ್ನ ಕಾಪಾಡೋಕೆ ಆತನು ಒಂದು ಮೋಡ ಇಟ್ಟ.+

ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭ ಇಟ್ಟ.+

40 ಅವರು ಮಾಂಸ ಕೇಳಿದಾಗ ಲಾವಕ್ಕಿಗಳನ್ನ ಕೊಟ್ಟ,+

ಸ್ವರ್ಗದಿಂದ ಆಹಾರ ಕಳಿಸಿ ಅವ್ರನ್ನ ತೃಪ್ತಿಪಡಿಸ್ತಾ ಇದ್ದ.+

41 ಆತನು ಬಂಡೆಯನ್ನ ಸೀಳಿದ, ಅದ್ರಿಂದ ನೀರು ಹರಿದುಬಂತು,+

ಆ ನೀರು ಮರುಭೂಮಿಯಲ್ಲಿ ನದಿ ತರ ಹರೀತು.+

42 ಆತನು ತನ್ನ ಸೇವಕ ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಂಡ.+

43 ಹಾಗಾಗಿ ತನ್ನ ಪ್ರಜೆಗಳನ್ನ ಹೊರಗೆ ತಂದ.+

ಆತನು ಆರಿಸ್ಕೊಂಡ ಜನ್ರು ಉಲ್ಲಾಸಿಸ್ತಾ, ಸಂತೋಷದಿಂದ ಜೈಕಾರ ಹಾಕ್ತಾ ಹೋದ್ರು.

44 ಬೇರೆ ಜನ್ರಿಗೆ ಸೇರಿದ ಪ್ರದೇಶಗಳನ್ನ ಆತನು ಅವ್ರಿಗೆ ಕೊಟ್ಟ,+

ಆ ಜನ್ರು ಕಷ್ಟಪಟ್ಟು ಕೆಲಸಮಾಡಿದ್ದರ ಪ್ರತಿಫಲವನ್ನ ಇವರು ಆಸ್ತಿಯಾಗಿ ಪಡ್ಕೊಂಡ್ರು.+

45 ಅವರು ತನ್ನ ಆಜ್ಞೆಗಳನ್ನ ಪಾಲಿಸಬೇಕಂತ,+

ತನ್ನ ನಿಯಮಗಳನ್ನ ಅನುಸರಿಸಬೇಕಂತ ಆತನು ಹೀಗೆ ಮಾಡಿದ.

ಯಾಹುವನ್ನ ಸ್ತುತಿಸಿ!*

106 ಯಾಹುವನ್ನ ಸ್ತುತಿಸಿ!*

ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.+

 2 ಯೆಹೋವನ ಶಕ್ತಿಶಾಲಿ ಕೆಲಸಗಳ ಬಗ್ಗೆ ಯಾರು ಚೆನ್ನಾಗಿ ಹೇಳ್ತಾರೆ?

ಹೊಗಳಿಕೆಗೆ ಯೋಗ್ಯವಾಗಿರೋ ಆತನ ಕೆಲಸಗಳ ಬಗ್ಗೆ ಯಾರು ಸಾರುತ್ತಾರೆ?+

 3 ನ್ಯಾಯವಾಗಿ ನಡಿಯೋರು ಖುಷಿಯಾಗಿ ಇರ್ತಾರೆ.

ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡೋರು ಭಾಗ್ಯವಂತರು.+

 4 ಯೆಹೋವನೇ, ಜನ್ರ ಕಡೆ ನಿನ್ನ ಕೃಪೆ* ತೋರಿಸುವಾಗ ನನ್ನನ್ನ ನೆನಪಿಸ್ಕೊ.+

ನನ್ನ ಕಡೆ ಕಾಳಜಿ ತೋರಿಸು, ನನ್ನನ್ನ ಕಾದು ಕಾಪಾಡು.

 5 ಆಗ, ನೀನು ಆರಿಸ್ಕೊಂಡಿರೋ ಜನ್ರಿಗೆ+ ತೋರಿಸೋ ಒಳ್ಳೇತನದಲ್ಲಿ ನಾನೂ ಖುಷಿಪಡ್ತೀನಿ,

ನಿನ್ನ ಜನಾಂಗದ ಜೊತೆ ನಾನೂ ಸಂಭ್ರಮಿಸ್ತೀನಿ,

ನಿನ್ನ ಆಸ್ತಿಯಾಗಿರೋ ಜನ್ರ ಜೊತೆ ಸೇರಿ ನಿನ್ನನ್ನ ಹೆಮ್ಮೆಯಿಂದ ಕೊಂಡಾಡ್ತೀನಿ.*

 6 ನಮ್ಮ ಪೂರ್ವಜರ ಹಾಗೆ ನಾವೂ ಪಾಪ ಮಾಡಿದ್ದೀವಿ,+

ತಪ್ಪು ಮಾಡಿದ್ದೀವಿ, ಕೆಟ್ಟದಾಗಿ ನಡ್ಕೊಂಡಿದ್ದೀವಿ.+

 7 ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ.

ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,

ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+

 8 ಆದ್ರೆ ಆತನು ತನ್ನ ಹೆಸ್ರಿನ ಕಾರಣ ಅವ್ರನ್ನ ರಕ್ಷಿಸಿದ,+

ತನ್ನ ಮಹಾಶಕ್ತಿ ತೋರಿಸೋಕೆ ಹೀಗೆ ಮಾಡಿದ.+

 9 ಆತನು ಕೆಂಪು ಸಮುದ್ರವನ್ನ ಗದರಿಸಿದಾಗ ಅದು ಬತ್ತಿಹೋಯ್ತು,

ಮರುಭೂಮಿಯಲ್ಲಿ* ನಡಿಸ್ಕೊಂಡು ಹೋಗೋ ತರ ಆತನು ಅವ್ರನ್ನ ಆಳವಾದ ಸಮುದ್ರದ ತಳದಲ್ಲಿ ನಡೆಸಿದ.+

10 ವೈರಿಗಳ ಕೈಯಿಂದ ಅವ್ರನ್ನ ರಕ್ಷಿಸಿದ,+

ಶತ್ರುಗಳ ಕೈಯಿಂದ ಅವ್ರನ್ನ ಬಿಡಿಸಿದ.+

11 ಸಮುದ್ರ ಅವ್ರ ಶತ್ರುಗಳನ್ನ ಮುಚ್ಚಿಹಾಕ್ತು,

ಅವ್ರಲ್ಲಿ ಒಬ್ಬನೂ ಬದುಕುಳಿಲಿಲ್ಲ.+

12 ಆಗ ಅವ್ರಿಗೆ ಆತನ ಮಾತಿನ ಮೇಲೆ ನಂಬಿಕೆ ಬಂದು,+

ಆತನಿಗೆ ಹಾಡಿ ಹೊಗಳೋಕೆ ಶುರುಮಾಡಿದ್ರು.+

13 ಆದ್ರೆ ಆತನು ಮಾಡಿದ್ದನ್ನ ಅವರು ತಕ್ಷಣ ಮರೆತುಬಿಟ್ರು,+

ಆತನ ಮಾರ್ಗದರ್ಶನಕ್ಕಾಗಿ ಅವರು ಕಾಯಲಿಲ್ಲ.

14 ಕಾಡಲ್ಲಿ ತಮ್ಮ ಸ್ವಾರ್ಥ ಬಯಕೆಗಳಿಗೆ ತಲೆಬಾಗಿದ್ರು,+

ಬಂಜರು ಭೂಮಿಯಲ್ಲಿ ದೇವರನ್ನ ಪರೀಕ್ಷಿಸಿದ್ರು.+

15 ಅವರು ಕೇಳಿದ್ದನ್ನ ಆತನು ಅವ್ರಿಗೆ ಕೊಟ್ಟ,

ಆದ್ರೆ ಆಮೇಲೆ ಅವ್ರನ್ನ ವ್ಯಾಧಿಯಿಂದ ನಾಶಮಾಡಿದ.+

16 ಪಾಳೆಯದಲ್ಲಿದಾಗ ಅವರು ಮೋಶೆ ಮೇಲೆ,

ಯೆಹೋವನ ಪವಿತ್ರ ಸೇವಕ+ ಆರೋನನ ಮೇಲೆ ಅಸೂಯೆಪಟ್ರು.+

17 ಆಗ ಭೂಮಿ ಬಾಯಿ ತೆಗೆದು ದಾತಾನನನ್ನ ನುಂಗಿಹಾಕ್ತು,

ಅಬೀರಾಮನ ಜೊತೆ ಇದ್ದವ್ರನ್ನ ಮುಚ್ಚಿಹಾಕ್ತು.+

18 ಅವ್ರ ಗುಂಪಿನ ಮಧ್ಯ ಬೆಂಕಿ ಹೊತ್ತಿ ಉರೀತು,

ಕೆಟ್ಟವರನ್ನ ಅಗ್ನಿ ಭಸ್ಮ ಮಾಡ್ತು.+

19 ಹೋರೇಬಲ್ಲಿ ಅವರು ಒಂದು ಕರು ಮಾಡಿದ್ರು,

ಆ ಲೋಹದ ಮೂರ್ತಿಗೆ* ಬಗ್ಗಿ ನಮಸ್ಕರಿಸಿದ್ರು.+

20 ನನಗೆ ಕೊಡಬೇಕಾದ ಗೌರವವನ್ನ,

ಅವರು ಹುಲ್ಲು ತಿನ್ನೋ ಹೋರಿಯ ಮೂರ್ತಿಗೆ ಕೊಟ್ರು.+

21 ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+

ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+

22 ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+

ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+

23 ಆತನು ಅವ್ರನ್ನ ಇನ್ನೇನು ನಿರ್ಮೂಲ ಮಾಡಿಬಿಡಬೇಕು ಅಂತಿದ್ದ,

ಅಷ್ಟರಲ್ಲಿ ಆತನು ಆರಿಸಿದ್ದ ಮೋಶೆ ಬಂದು ಆತನನ್ನ ಬೇಡ್ಕೊಂಡ,*

ನಾಶಮಾಡಬೇಕು ಅನ್ನೋ ಆತನ ಕೋಪನ ಶಾಂತಮಾಡಿದ.+

24 ಆಮೇಲೆ ಅವರು ಒಳ್ಳೇ ದೇಶವನ್ನ ಕೀಳಾಗಿ ನೋಡಿದ್ರು,+

ಆತನ ಮಾತಲ್ಲಿ ಅವ್ರಿಗೆ ಭರವಸೆ ಇರಲಿಲ್ಲ.+

25 ಅವರು ತಮ್ಮ ಡೇರೆಗಳಲ್ಲಿ ಗೊಣಗ್ತಾ ಇದ್ರು,+

ಯೆಹೋವನ ಸ್ವರ ಕೇಳಿಸ್ಕೊಳ್ಳಲಿಲ್ಲ.+

26 ಹಾಗಾಗಿ ಆತನು ತನ್ನ ಕೈಯೆತ್ತಿ ಅವ್ರ ಬಗ್ಗೆ ಆಣೆ ಮಾಡಿದ,

ಅವರು ಕಾಡಲ್ಲೇ ಸತ್ತುಹೋಗೋ ಹಾಗೆ ಮಾಡ್ತೀನಿ ಅಂತ,+

27 ಜನಾಂಗಗಳ ಮಧ್ಯ ಅವ್ರ ಸಂತತಿ ನಾಶವಾಗೋ ಹಾಗೆ ಮಾಡ್ತೀನಿ ಅಂತ,

ಅವ್ರನ್ನ ದೇಶದಲ್ಲೆಲ್ಲ ಚೆಲ್ಲಾಪಿಲ್ಲಿ ಮಾಡ್ತೀನಿ ಅಂತ ಹೇಳಿದ.+

28 ಆಮೇಲೆ ಅವರು ಪೆಗೋರಿನಲ್ಲಿದ್ದ ಬಾಳನ ಆರಾಧನೆಯಲ್ಲಿ ಸೇರಿಕೊಂಡ್ರು,+

ಸತ್ತವರಿಗೆ ಅರ್ಪಿಸಿದ ಬಲಿಗಳನ್ನ* ತಿಂದ್ರು.

29 ಅವರು ತಮ್ಮ ಕೆಲಸಗಳಿಂದ ಆತನನ್ನ ರೇಗಿಸಿದ್ರು,+

ಅದ್ರಿಂದ ಅವ್ರ ಮಧ್ಯ ಒಂದು ವ್ಯಾಧಿ ಶುರುವಾಯ್ತು.+

30 ಆದ್ರೆ ಫೀನೆಹಾಸ ಎದ್ದು ಮುಂದೆ ಬಂದಾಗ

ಆ ವ್ಯಾಧಿ ನಿಂತುಹೋಯ್ತು.+

31 ಇದ್ರಿಂದ ತಲತಲಾಂತರದ ತನಕ

ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+

32 ಅವರು ಆತನನ್ನ ಮೆರೀಬಾ ನೀರಿನ ಹತ್ರ ಮತ್ತೆ ರೇಗಿಸಿದ್ರು,

ಅವ್ರಿಂದ ಮೋಶೆ ತೊಂದ್ರೆ ಅನುಭವಿಸಿದ.+

33 ಅವರು ಮೋಶೆಗೆ ಕೋಪ ಬರೋ ಹಾಗೆ ಮಾಡಿದ್ರು,

ಅವನು ದುಡುಕಿ ಮಾತಾಡಿಬಿಟ್ಟ.+

34 ಅನ್ಯಜನಾಂಗಗಳನ್ನ ಪೂರ್ತಿ ನಾಶಮಾಡೋಕೆ ಯೆಹೋವ ಆಜ್ಞೆ ಕೊಟ್ಟಿದ್ರೂ,+

ಅವರು ಹಾಗೆ ಮಾಡಲಿಲ್ಲ.+

35 ಅವರು ಬೇರೆ ಜನಾಂಗಗಳ ಜೊತೆ ಸೇರಿ+

ಅವ್ರ ಪದ್ಧತಿಗಳನ್ನ ಒಪ್ಕೊಂಡ್ರು.*+

36 ಅವ್ರ ಮೂರ್ತಿಗಳನ್ನ ಆರಾಧಿಸ್ತಾ ಇದ್ರು,+

ಇದು ಅವ್ರ ಪ್ರಾಣಕ್ಕೆ ಕುತ್ತು ತಂತು.+

37 ಅವರು ತಮ್ಮ ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿಯಾಗಿ ಕೊಡ್ತಿದ್ರು.+

38 ಅವರು ನಿರಪರಾಧಿಗಳ ರಕ್ತವನ್ನ,+

ತಮ್ಮ ಸ್ವಂತ ಮಕ್ಕಳ ರಕ್ತವನ್ನ ಸುರಿಸ್ತಾನೇ ಇದ್ರು.

ಅವ್ರನ್ನ ಕಾನಾನಿನ ಮೂರ್ತಿಗಳಿಗೆ ಅರ್ಪಿಸ್ತಿದ್ರು,+

ದೇಶ ರಕ್ತಪಾತದಿಂದ ಹಾಳಾಗಿ ಹೋಯ್ತು.

39 ತಮ್ಮ ಕೆಲಸಗಳಿಂದ ಅವರು ಅಶುದ್ಧರಾದ್ರು,

ಹೀಗೆ ಅವರು ದೇವರಿಗೆ ನಂಬಿಕೆ ದ್ರೋಹ* ಮಾಡಿದ್ರು.+

40 ಹಾಗಾಗಿ ಯೆಹೋವನ ಕೋಪ ತನ್ನ ಜನ್ರ ಮೇಲೆ ಹೊತ್ತಿ ಉರೀತು,

ತನ್ನ ಆಸ್ತಿ ಮೇಲೆ ಆತನಿಗೆ ಅಸಹ್ಯ ಆಯ್ತು.

41 ಆತನು ಪದೇಪದೇ ಅವ್ರನ್ನ ಬೇರೆ ಜನಾಂಗಗಳ ಕೈಗೆ ಒಪ್ಪಿಸಿದ,+

ಹಾಗಾಗಿ ಅವ್ರನ್ನ ದ್ವೇಷಿಸೋ ಆ ಜನಾಂಗಗಳು ಅವ್ರ ಮೇಲೆ ಆಳ್ವಿಕೆ ಮಾಡಿದ್ವು.+

42 ಅವ್ರ ಮೇಲೆ ಶತ್ರುಗಳು ದಬ್ಬಾಳಿಕೆ ಮಾಡಿದ್ರು,

ಅವರು ಶತ್ರುಗಳಿಗಿದ್ದ ಶಕ್ತಿ ಮುಂದೆ ತಲೆತಗ್ಗಿಸಬೇಕಾಯ್ತು.

43 ಎಷ್ಟೋ ಸಲ ಆತನು ಅವ್ರನ್ನ ಬಿಡಿಸಿದ.+

ಆದ್ರೆ ಅವರು ತಿರುಗಿಬಿದ್ರು, ಮಾತು ಕೇಳಲಿಲ್ಲ,+

ಅವರ ತಪ್ಪಿಂದ ಅವ್ರಿಗೇ ಅವಮಾನ ಆಯ್ತು.+

44 ಆದ್ರೆ ಆತನು ಅವ್ರ ಕಷ್ಟಗಳನ್ನ ನೋಡ್ತಿದ್ದ+

ಸಹಾಯಕ್ಕಾಗಿ ಅವ್ರಿಟ್ಟ ಮೊರೆಯನ್ನ ಕೇಳಿಸ್ಕೊಳ್ತಿದ್ದ.+

45 ಅವ್ರಿಗಾಗಿ ಆತನು ತನ್ನ ಒಪ್ಪಂದವನ್ನ ನೆನಪಿಸಿಕೊಳ್ತಿದ್ದ,

ಶ್ರೇಷ್ಠವಾದ* ತನ್ನ ಶಾಶ್ವತ ಪ್ರೀತಿಯಿಂದ ಅವ್ರನ್ನ ನೋಡಿ ಮರುಗುತಿದ್ದ.*+

46 ಅವ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಿದ್ದವರೆಲ್ಲ

ಅವ್ರನ್ನ ನೋಡಿ ಪಾಪ ಅನ್ನೋ ತರ ಮಾಡ್ತಿದ್ದ.+

47 ನಮ್ಮ ದೇವರಾದ ಯೆಹೋವನೇ, ನಮ್ಮನ್ನ ಕಾಪಾಡು,+

ನಾವು ನಿನ್ನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳೋ ತರ,

ನಿನ್ನನ್ನ ಹೊಗಳೋದ್ರಲ್ಲಿ ಖುಷಿಪಡೋ ತರ+

ಬೇರೆ ಜನಾಂಗಗಳ ಮಧ್ಯ ಚೆದರಿಹೋಗಿರೋ ನಮ್ಮನ್ನ ಒಟ್ಟುಸೇರಿಸು.+

48 ಇಸ್ರಾಯೇಲಿನ ದೇವರಾದ ಯೆಹೋವನಿಗೆ

ಯುಗಯುಗಾಂತರಕ್ಕೂ* ಹೊಗಳಿಕೆ ಸಿಗಲಿ.+

ಎಲ್ಲ ಜನ್ರು “ಆಮೆನ್‌!”* ಅಂತ ಹೇಳಲಿ.

ಯಾಹುವನ್ನ ಸ್ತುತಿಸಿ!*

ಐದನೇ ಪುಸ್ತಕ

(ಕೀರ್ತನೆ 107-150)

107 ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.+

 2 ಯಾರನ್ನ ಯೆಹೋವ ಬಿಡಿಸಿದ್ನೋ,*

ಯಾರನ್ನ ಶತ್ರುಗಳ ಕೈಯಿಂದ* ಉಳಿಸಿದ್ನೋ ಅವರು ಹೀಗೇ ಹೇಳಲಿ.+

 3 ಪೂರ್ವ ಪಶ್ಚಿಮಗಳಿಂದ,

ಉತ್ತರ ದಕ್ಷಿಣಗಳಿಂದ,+

ದೇಶದೇಶಗಳಿಂದ ಆತನು ಸೇರಿಸೋ ಜನ್ರೆಲ್ಲಾ ಹೀಗೇ ಹೇಳಲಿ.+

 4 ಅವರು ಕಾಡಲ್ಲಿ, ಬಂಜರು ಭೂಮಿಯಲ್ಲಿ ಆಕಡೆ ಈಕಡೆ ಅಲೆದಾಡಿದ್ರು,

ಅವರು ವಾಸಿಸೋಕೆ ಒಂದು ಪಟ್ಟಣದ ದಾರಿಯನ್ನೂ ಹುಡುಕೊಳ್ಳೋಕೆ ಅವ್ರಿಂದ ಆಗಲಿಲ್ಲ.

 5 ಅವರು ಹಸಿದಿದ್ರು, ಬಾಯಾರಿದ್ರು.

ಆಯಾಸದಿಂದ ಸೊರಗಿಹೋಗಿದ್ರು.

 6 ಕಷ್ಟಕಾಲದಲ್ಲಿ ಅವರು ಯೆಹೋವನಿಗೆ ಮೊರೆಯಿಡ್ತಾನೇ ಇದ್ರು,+

ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಬಿಡಿಸಿದ.+

 7 ಆತನು ಅವ್ರನ್ನ ಸರಿಯಾದ ದಾರಿಲಿ ನಡೆಸಿದ,+

ಇದ್ರಿಂದ ಅವರು ಪಟ್ಟಣ ಸೇರಿ ವಾಸಮಾಡೋಕೆ ಆಯ್ತು.+

 8 ಯೆಹೋವನ ಶಾಶ್ವತ ಪ್ರೀತಿಗಾಗಿ,

ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,+

ಜನ್ರು ಆತನಿಗೆ ಧನ್ಯವಾದ ಹೇಳಲಿ.+

 9 ಯಾಕಂದ್ರೆ ಆತನು ಬಾಯಾರಿದವರಿಗೆ ನೀರು ಕೊಟ್ಟು ತೃಪ್ತಿಪಡಿಸಿದ,

ಹಸಿದವರಿಗೆ ಒಳ್ಳೊಳ್ಳೇ ಊಟ ಕೊಟ್ಟು ಖುಷಿಪಡಿಸಿದ.+

10 ಕೆಲವರು ಕತ್ತಲಲ್ಲಿ ವಾಸಿಸ್ತಿದ್ರು,

ಬೇಡಿ ಹಾಕೊಂಡು ಕೈದಿಗಳಾಗಿ ದುಃಖ ಅನುಭವಿಸ್ತಿದ್ರು.

11 ಯಾಕಂದ್ರೆ ಅವರು ದೇವರ ಮಾತಿಗೆ ವಿರುದ್ಧವಾಗಿ ದಂಗೆ ಎದ್ದಿದ್ರು,

ಸರ್ವೋನ್ನತನ ಸಲಹೆಯನ್ನ ಕೀಳಾಗಿ ನೋಡಿದ್ರು.+

12 ಹಾಗಾಗಿ ಅವರು ಕಷ್ಟಗಳನ್ನ ಅನುಭವಿಸೋಕೆ ಆತನು ಬಿಟ್ಟು ಅವ್ರ ಹೃದಯನ ತಗ್ಗಿಸಿದ,+

ಅವರು ಎಡವಿದ್ರು, ಅವ್ರಿಗೆ ಸಹಾಯ ಮಾಡೋರು ಯಾರೂ ಇರಲಿಲ್ಲ.

13 ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ರು,

ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡಿದ.

14 ಆತನು ಅವ್ರನ್ನ ಕತ್ತಲೆಯಿಂದ ಹೊರಗೆ ತಂದ,

ಅವ್ರ ಸರಪಳಿಗಳನ್ನ ಕಿತ್ತೆಸೆದ.+

15 ಯೆಹೋವನ ಶಾಶ್ವತ ಪ್ರೀತಿಗಾಗಿ,+

ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ

ಜನ್ರು ಆತನಿಗೆ ಧನ್ಯವಾದ ಹೇಳಲಿ.

16 ಯಾಕಂದ್ರೆ ಆತನು ತಾಮ್ರದ ಬಾಗಿಲುಗಳನ್ನ ಮುರಿದುಹಾಕಿದ.

ಕಬ್ಬಿಣದ ಕಂಬಿಗಳನ್ನ ತುಂಡುತುಂಡು ಮಾಡಿದ.+

17 ಮೂರ್ಖರು ಕಷ್ಟ ಅನುಭವಿಸಬೇಕಾಯ್ತು,+

ತಮ್ಮ ಅಪರಾಧಗಳಿಂದ, ತಪ್ಪುಗಳಿಂದ ಅವರು ದುಃಖಪಡಬೇಕಾಯ್ತು.+

18 ಅವ್ರ ಹಸಿವು ಸತ್ತುಹೋಯ್ತು,

ಅವರು ಸಾವಿನ ಬಾಗಿಲನ್ನ ತಟ್ಟಿದ್ರು.

19 ಕಷ್ಟಕಾಲದಲ್ಲಿ ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,

ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ.

20 ಆತನು ತನ್ನ ಆಜ್ಞೆಯಿಂದ ಅವ್ರನ್ನ ವಾಸಿಮಾಡಿದ,+

ಅವರು ಸಿಕ್ಕಿಹಾಕೊಂಡಿರೋ ಗುಂಡಿಯಿಂದ ಅವ್ರನ್ನ ರಕ್ಷಿಸಿದ.

21 ಯೆಹೋವನ ಶಾಶ್ವತ ಪ್ರೀತಿಗಾಗಿ,

ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,

ಜನ್ರು ಆತನಿಗೆ ಧನ್ಯವಾದ ಹೇಳಲಿ.

22 ಅವರು ಕೃತಜ್ಞತಾ ಬಲಿಗಳನ್ನ ಕೊಡಲಿ,+

ಸಂತೋಷದಿಂದ ಜೈಕಾರ ಹಾಕ್ತಾ ಆತನ ಕೆಲಸಗಳ ಬಗ್ಗೆ ಹೇಳಲಿ.

23 ಸಮುದ್ರದ ಮೇಲೆ ಹಡಗಲ್ಲಿ ಪ್ರಯಾಣಿಸೋರು,

ವಿಶಾಲವಾದ ಸಾಗರವನ್ನ ದಾಟಿ ವ್ಯಾಪಾರ ಮಾಡೋರು,+

24 ಯೆಹೋವನ ಕೆಲಸಗಳನ್ನ ನೋಡಿದ್ದಾರೆ,

ಆಳವಾದ ಸಮುದ್ರದಲ್ಲಿ ಆತನ ಅದ್ಭುತಗಳನ್ನ ಕಂಡಿದ್ದಾರೆ.+

25 ಆತನು ಕೊಡೋ ಅಪ್ಪಣೆಗೆ ಬಿರುಗಾಳಿ ಹೇಗೆ ಏಳುತ್ತೆ+ ಅಂತ,

ಸಮುದ್ರ ತನ್ನ ಅಲೆಗಳನ್ನ ಹೇಗೆ ಎಬ್ಬಿಸುತ್ತೆ ಅಂತ ಅವರು ನೋಡಿದ್ದಾರೆ.

26 ಆ ಅಲೆಗಳು ಅವ್ರನ್ನ ಬಾನೆತ್ತರಕ್ಕೆ ಏರಿಸ್ತವೆ,

ಸಮುದ್ರದ ಆಳಕ್ಕೆ ತಳ್ಳಿ ಮುಳುಗಿಸ್ತವೆ,

ಬರ್ತಿರೋ ವಿಪತ್ತನ್ನ ನೋಡಿ ಅವ್ರ ಧೈರ್ಯ ಕರಗಿಹೋಗುತ್ತೆ.

27 ಕುಡುಕರ ತರ ಅವರು ಓಲಾಡ್ತಾರೆ, ತೂರಾಡ್ತಾರೆ,

ಅವ್ರ ಎಲ್ಲ ಕೌಶಲಗಳು ವ್ಯರ್ಥ ಅಂತ ಸಾಬೀತಾಗುತ್ತೆ.+

28 ಕಷ್ಟದಲ್ಲಿರೋ ಅವರು ಆಗ ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡ್ತಾರೆ,+

ಅವ್ರ ಹೀನಾಯ ಸ್ಥಿತಿಯಿಂದ ಆತನು ಅವ್ರನ್ನ ಕಾಪಾಡ್ತಾನೆ.

29 ಬಿರುಗಾಳಿಯನ್ನ ಆತನು ನಿಲ್ಲಿಸ್ತಾನೆ,

ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ.+

30 ಅದನ್ನ ನೋಡಿ ಅವರು ಖುಷಿಪಡ್ತಾರೆ,

ಅವರು ಹೋಗಬೇಕು ಅಂತಿರೋ ಬಂದರಿಗೆ ಆತನು ಅವ್ರನ್ನ ಸೇರಿಸ್ತಾನೆ.

31 ಯೆಹೋವನ ಶಾಶ್ವತ ಪ್ರೀತಿಗಾಗಿ,

ಮನುಷ್ಯರಿಗೋಸ್ಕರ ಆತನು ಮಾಡಿದ ಅದ್ಭುತಗಳಿಗಾಗಿ,+

ಜನ್ರು ಆತನಿಗೆ ಧನ್ಯವಾದ ಹೇಳಲಿ.

32 ಅವರು ಜನ್ರ ಮಧ್ಯ ಆತನನ್ನ ಘನತೆಗೇರಿಸಲಿ,+

ಹಿರಿಯರ ಸಭೆಯಲ್ಲಿ ಆತನನ್ನ ಹೊಗಳಲಿ.

33 ಆತನು ನದಿಗಳನ್ನ ಮರುಭೂಮಿಯಾಗಿ

ನೀರಿನ ಬುಗ್ಗೆಗಳನ್ನ ಬತ್ತಿದ ನೆಲವಾಗಿ ಮಾಡ್ತಾನೆ.+

34 ಫಲವತ್ತಾದ ನೆಲವನ್ನ ಬಂಜರು ಭೂಮಿಯಾಗಿ ಮಾಡ್ತಾನೆ,+

ಅದ್ರಲ್ಲಿ ವಾಸಿಸೋ ಕೆಟ್ಟವರಿಂದ ಆತನು ಹೀಗೆ ಮಾಡ್ತಾನೆ.

35 ಆತನು ಮರುಭೂಮಿಯನ್ನ ನೀರಿನ ಕೆರೆಯಾಗಿ,

ಬಂಜರು ಭೂಮಿಯನ್ನ ನೀರಿನ ಬುಗ್ಗೆಗಳಾಗಿ ಮಾಡ್ತಾನೆ.+

36 ಹಸಿದವರು ಅಲ್ಲಿ ವಾಸಿಸೋ ತರ ಆತನು ಮಾಡ್ತಾನೆ,+

ವಾಸಿಸೋಕೆ ಸರಿಯಾದ ಪಟ್ಟಣ ಅವ್ರಿಗೆ ಸಿಗೋ ಹಾಗೆ ಆತನು ಮಾಡ್ತಾನೆ.+

37 ಅವರು ಹೊಲಗಳಲ್ಲಿ ಬೀಜ ಬಿತ್ತುತ್ತಾರೆ, ದ್ರಾಕ್ಷಿತೋಟಗಳನ್ನ ನೆಡ್ತಾರೆ.+

ಅವು ಒಳ್ಳೇ ಹಣ್ಣು ಕೊಡುತ್ತೆ.+

38 ಆತನು ಅವ್ರನ್ನ ಆಶೀರ್ವದಿಸ್ತಾನೆ ಮತ್ತು ಅವ್ರ ಸಂಖ್ಯೆ ಇನ್ನೂ ಜಾಸ್ತಿ ಆಗುತ್ತೆ,

ಅವ್ರ ಪ್ರಾಣಿಗಳ ಸಂಖ್ಯೆ ಕಡಿಮೆಯಾಗೋಕೆ ಆತನು ಬಿಡಲ್ಲ.+

39 ಆದ್ರೆ ದೌರ್ಜನ್ಯ, ವಿಪತ್ತು ಮತ್ತು ದುಃಖದಿಂದಾಗಿ

ಅವ್ರ ಸಂಖ್ಯೆ ಮತ್ತೆ ಕಮ್ಮಿಯಾಗುತ್ತೆ, ಅವ್ರಿಗೆ ಅವಮಾನ ಆಗುತ್ತೆ.

40 ಪ್ರಧಾನರು ತಲೆತಗ್ಗಿಸೋ ತರ ಮಾಡ್ತಾನೆ,

ದಾರಿನೇ ಇಲ್ಲದ ಕಾಡಲ್ಲಿ ಅವರು ಅಲೆದಾಡೋ ತರ ಮಾಡ್ತಾನೆ.+

41 ಆದ್ರೆ ಆತನು ಬಡವರನ್ನ ದಬ್ಬಾಳಿಕೆಯಿಂದ ಕಾಪಾಡ್ತಾನೆ.*+

ಅವ್ರ ಕುಟುಂಬಗಳ ಸಂಖ್ಯೆ ಕುರಿಗಳ ತರ ಜಾಸ್ತಿಯಾಗುತ್ತೆ.

42 ನೀತಿವಂತರು ಇದನ್ನ ನೋಡಿ ಖುಷಿಪಡ್ತಾರೆ,+

ಆದ್ರೆ ಅನೀತಿವಂತರು ತಮ್ಮ ಬಾಯನ್ನ ಮುಚ್ಚಿಕೊಳ್ತಾರೆ.+

43 ವಿವೇಕಿಗಳೆಲ್ಲ ಈ ವಿಷ್ಯಗಳನ್ನ ಗಮನಿಸ್ತಾರೆ,+

ಯೆಹೋವ ಶಾಶ್ವತ ಪ್ರೀತಿಯಿಂದ ಮಾಡಿದ್ದನ್ನೆಲ್ಲ ಸೂಕ್ಷ್ಮವಾಗಿ ನೋಡ್ತಾರೆ.+

ದಾವೀದನ ಮಧುರ ಗೀತೆ.

108 ದೇವರೇ, ನನ್ನ ಹೃದಯ ಸ್ಥಿರವಾಗಿದೆ,

ನನ್ನ ತನುಮನದಿಂದ ಹಾಡ್ತೀನಿ, ಸಂಗೀತ ರಚಿಸ್ತೀನಿ.+

 2 ತಂತಿವಾದ್ಯವೇ, ಎಚ್ಚರ ಆಗು. ಸಂಗೀತ ವಾದ್ಯಗಳೇ,+ ನೀವೂ ಎಚ್ಚರವಾಗಿ.

ನಾನು ನಸುಕನ್ನ ಎಬ್ಬಿಸ್ತೀನಿ.

 3 ಯೆಹೋವನೇ ದೇಶಗಳ ಜನ್ರ ಮಧ್ಯ ನಾನು ನಿನ್ನನ್ನ ಕೊಂಡಾಡ್ತೀನಿ,

ಅವ್ರ ಮಧ್ಯ ನಿನ್ನನ್ನ ಹೊಗಳ್ತೀನಿ.*

 4 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು.

ಅದು ಆಕಾಶವನ್ನು, ನಿನ್ನ ಸತ್ಯತೆ ಗಗನವನ್ನು ಮುಟ್ಟುತ್ತೆ.+

 5 ದೇವರೇ, ನಿನ್ನ ಮಹಿಮೆ ಭೂಮಿಯಲ್ಲೆಲ್ಲಾ ಇರಲಿ,

ಮೇಲೆ ಸ್ವರ್ಗದಲ್ಲೂ ನಿನಗೆ ಘನತೆಯಾಗಲಿ.+

 6 ನಿನ್ನ ಬಲಗೈಯಿಂದ ನಮ್ಮನ್ನ ಕಾಪಾಡು, ನನಗೆ ಉತ್ರ ಕೊಡು,

ಆಗ ನಿನ್ನ ಪ್ರೀತಿಪಾತ್ರರು ಉಳಿತಾರೆ.+

 7 ದೇವರು ಪವಿತ್ರನಾಗಿ ಇರೋದ್ರಿಂದ* ಮಾತಾಡಿದ್ದಾನೆ:

“ನಾನು ಖುಷಿಪಡ್ತೀನಿ, ಶೆಕೆಮನ್ನ+ ಆಸ್ತಿಯಾಗಿ ಕೊಡ್ತೀನಿ,

ಸುಕ್ಕೋತಿನ+ ಕಣಿವೆಯನ್ನ ಅಳೆದು ಕೊಡ್ತೀನಿ.

 8 ಗಿಲ್ಯಾದ್‌+ ನಂದು, ಮನಸ್ಸೆಯೂ ನಂದೇ,

ಎಫ್ರಾಯೀಮ್‌ ನನ್ನ ತಲೆಗೆ ಶಿರಸ್ತ್ರಾಣ,+

ಯೆಹೂದ ನನ್ನ ರಾಜದಂಡ.+

 9 ಮೋವಾಬ್‌ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+

ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+

ಫಿಲಿಷ್ಟಿಯನ್ನ ಸೋಲಿಸಿ ನಾನು ಖುಷಿಪಡ್ತೀನಿ.+

10 ಭದ್ರಕೋಟೆ ಇರೋ ಪಟ್ಟಣಕ್ಕೆ ನನ್ನನ್ನ ಯಾರು ಕರ್ಕೊಂಡು ಹೋಗ್ತಾರೆ?

ಎದೋಮಿನ ತನಕ ಯಾರು ನನ್ನನ್ನ ನಡಿಸ್ತಾರೆ?+

11 ದೇವರೇ, ನಿಜವಾಗ್ಲೂ ನಮ್ಮನ್ನ ಅಲ್ಲಿಗೆ ಕರ್ಕೊಂಡು ಹೋಗೋನು ನೀನೇ!

ಆದ್ರೆ ನೋಡು, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ,

ನಮ್ಮ ದೇವರಾಗಿರೋ ನೀನು ಈಗ ನಮ್ಮ ಸೈನ್ಯದ ಜೊತೆ ಬರಲ್ಲ.+

12 ಕಷ್ಟಕಾಲದಲ್ಲಿ ನಮಗೆ ಸಹಾಯಮಾಡು,+

ಯಾಕಂದ್ರೆ ರಕ್ಷಣೆಗಾಗಿ ಮನುಷ್ಯರನ್ನ ನಂಬೋದು ವ್ಯರ್ಥ.+

13 ದೇವರಿಂದ ನಾವು ಬಲ ಪಡ್ಕೊತೀವಿ,+

ಆತನು ನಮ್ಮ ಶತ್ರುಗಳನ್ನ ತುಳಿದುಹಾಕ್ತಾನೆ.+

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

109 ನಾನು ಹೊಗಳಿ ಸ್ತುತಿಸೋ ದೇವರೇ,+ ಮೌನವಾಗಿರಬೇಡ.

 2 ಯಾಕಂದ್ರೆ ಕೆಟ್ಟವರು, ಮೋಸಗಾರರು ನನ್ನ ವಿರುದ್ಧ ಮಾತಾಡ್ತಾರೆ.

ಅವ್ರ ನಾಲಿಗೆ ನನ್ನ ಬಗ್ಗೆ ಸುಳ್ಳು ಹೇಳುತ್ತೆ.+

 3 ಅವರು ನನ್ನನ್ನ ಸುತ್ಕೊಂಡು ಚುಚ್ಚಿ ಚುಚ್ಚಿ ಮಾತಾಡ್ತಾರೆ,

ಸುಮ್ಮಸುಮ್ಮನೆ ನನ್ನ ಮೇಲೆ ಆಕ್ರಮಣ ಮಾಡ್ತಾರೆ.+

 4 ನಾನು ಅವ್ರನ್ನ ಪ್ರೀತಿಸಿದ್ರೂ ಅವರು ನನ್ನನ್ನ ವಿರೋಧಿಸ್ತಾರೆ,+

ಆದ್ರೆ ನಾನು ಪ್ರಾರ್ಥನೆ ಮಾಡೋದನ್ನ ಬಿಡಲ್ಲ.

 5 ಅವರು ಉಪಕಾರಕ್ಕೆ ಅಪಕಾರ ಮಾಡ್ತಾರೆ+

ನನ್ನ ಪ್ರೀತಿಗೆ ಬದಲಾಗಿ ನನ್ನನ್ನ ದ್ವೇಷಿಸ್ತಾರೆ.+

 6 ನನ್ನ ಶತ್ರು ಮೇಲೆ ದುಷ್ಟನನ್ನ ನೇಮಿಸು,

ಅವನ ಬಲಗಡೆ ಒಬ್ಬ ವಿರೋಧಿ* ನಿಂತ್ಕೊಳ್ಳಲಿ.

 7 ನ್ಯಾಯ ವಿಚಾರಣೆ ಮಾಡೋವಾಗ ಅವನು ಅಪರಾಧಿ* ಅಂತ ತೀರ್ಪಾಗಲಿ,

ಅವನ ಪ್ರಾರ್ಥನೆಯನ್ನೂ ಪಾಪದ ತರ ನೋಡು.+

 8 ಅವನ ಆಯಸ್ಸು ಕಮ್ಮಿಯಾಗಲಿ,+

ಅವನ ಸ್ಥಾನವನ್ನ ಇನ್ನೊಬ್ಬ ಕಿತ್ಕೊಳ್ಳಲಿ.+

 9 ಅವನ ಮಕ್ಕಳಿಗೆ ಅಪ್ಪ ಇಲ್ಲದ ಹಾಗೆ ಆಗಲಿ,

ಅವನ ಹೆಂಡತಿ ವಿಧವೆ ಆಗಲಿ.

10 ಅವನ ಮಕ್ಕಳು ತಿರುಪೆ ಎತ್ತೋ ಭಿಕ್ಷುಕರಾಗಲಿ,

ಹಾಳುಬಿದ್ದಿರೋ ತಮ್ಮ ಮನೆಯಿಂದ ಹೊರಗೆ ಹೋಗಿ ಒಂದು ತುತ್ತಿಗೂ ಹುಡುಕಾಡಲಿ.

11 ಅವನಿಗೆ ಸಾಲ ಕೊಟ್ಟವನು ಅವನ ಆಸ್ತಿನೆಲ್ಲ ಜಪ್ತಿಮಾಡ್ಲಿ,

ಅವನ ಸೊತ್ತುಗಳನ್ನ ಯಾರಾದ್ರೂ ಲೂಟಿಮಾಡ್ಲಿ.

12 ಅವನಿಗೆ ಯಾರೂ ದಯೆ* ತೋರಿಸದೆ ಇರಲಿ,

ಅವನ ಅನಾಥ ಮಕ್ಕಳಿಗೆ ಯಾರೂ ಕರುಣೆ ತೋರಿಸದೆ ಇರಲಿ.

13 ಅವನ ವಂಶ ನಿರ್ವಂಶ ಆಗಲಿ,+

ಅವನ ವಂಶದವರ ಹೆಸ್ರು ಒಂದೇ ಪೀಳಿಗೆಯಲ್ಲಿ ಅಳಿದುಹೋಗಲಿ.

14 ಅವನ ಪೂರ್ವಜರ ತಪ್ಪುಗಳನ್ನ ಯೆಹೋವ ನೆನಪಿಸ್ಕೊಳ್ಳಲಿ,+

ಅವನ ಅಮ್ಮ ಮಾಡಿದ ಪಾಪನೂ ಅಳಿಸಿ ಹೋಗದಿರಲಿ.

15 ಅವರು ಮಾಡಿದ ವಿಷ್ಯಗಳು ಯೆಹೋವನ ಮನಸ್ಸಲ್ಲಿ ಹಾಗೇ ಇರಲಿ,

ಭೂಮಿ ಮೇಲಿಂದ ಅವ್ರ ನೆನಪನ್ನ ಆತನು ಶಾಶ್ವತವಾಗಿ ಅಳಿಸಿಹಾಕಲಿ.+

16 ಯಾಕಂದ್ರೆ ಆ ದುಷ್ಟ ಬೇರೆಯವರಿಗೆ ದಯೆ* ತೋರಿಸೋಕೆ ಮರೆತುಬಿಟ್ಟ,+

ಬದಲಾಗಿ, ದೌರ್ಜನ್ಯ ಆದವನನ್ನ, ಬಡವನನ್ನ ಮತ್ತು ಕುಗ್ಗಿಹೋದವನನ್ನ

ಕೊಲ್ಲೋಕೆ+ ಅಟ್ಟಿಸಿಕೊಂಡು ಹೋದ.+

17 ಬೇರೆಯವ್ರಿಗೆ ಶಾಪ ಹಾಕೋದಂದ್ರೆ ಅವನಿಗೆ ತುಂಬ ಇಷ್ಟ, ಅದಕ್ಕೇ ಅವನ ಮೇಲೆ ಶಾಪ ಬಂತು,

ಬೇರೆಯವ್ರಿಗೆ ಒಳ್ಳೇದನ್ನ ಬಯಸೋ ಮನಸ್ಸು ಅವನಿಗಿರಲಿಲ್ಲ, ಅದಕ್ಕೇ ಅವನಿಗೆ ಒಳ್ಳೇದಾಗಲಿಲ್ಲ.

18 ಅವನಿಗೆ ಶಾಪವನ್ನ ಬಟ್ಟೆ ತರ ಹಾಕಿದ್ರು.

ಶಾಪವನ್ನ ಅವನ ದೇಹದ ಒಳಗೆ ನೀರಿನ ತರ

ಅವನ ಎಲುಬಿನ ಒಳಗೆ ಎಣ್ಣೆ ತರ ಸುರಿದ್ರು.

19 ಅವನ ಮೇಲೆ ಹಾಕೋ ಶಾಪಗಳು ಅವನು ಸುತ್ಕೊಳ್ಳೋ ಬಟ್ಟೆ ತರ+

ಅವನು ಯಾವಾಗ್ಲೂ ಕಟ್ಕೊಳ್ಳೋ ಸೊಂಟಪಟ್ಟಿ ತರ ಇರಲಿ.

20 ಇದೇ ನನ್ನನ್ನ ವಿರೋಧಿಸೋನಿಗೆ,

ನನ್ನ ವಿರುದ್ಧ ಕೆಟ್ಟ ಮಾತು ಆಡೋನಿಗೆ ಯೆಹೋವನಿಂದ ಸಿಗೋ ಸಂಬಳ.+

21 ಆದ್ರೆ ವಿಶ್ವದ ರಾಜನಾದ ಯೆಹೋವನೇ,

ನಿನ್ನ ಹೆಸ್ರಿಗೆ ತಕ್ಕ ಹಾಗೆ ನನ್ನ ಪರ ಹೆಜ್ಜೆ ತಗೊ.+

ನಿನ್ನ ಶಾಶ್ವತ ಪ್ರೀತಿ ಒಳ್ಳೇದಾಗಿ ಇರೋದ್ರಿಂದ ನನ್ನನ್ನ ರಕ್ಷಿಸು.+

22 ಯಾಕಂದ್ರೆ ನಾನು ನಿಸ್ಸಹಾಯಕ, ಬಡವ,+

ನನ್ನ ಮನಸ್ಸಿಗೆ ಗಾಯ ಆಗಿದೆ.+

23 ಮಾಯವಾಗಿ ಹೋಗೋ ನೆರಳಿನ ತರ ನಾನಿದ್ದೀನಿ,

ಒಂದು ಮಿಡತೆ ತರ ನಾನು ನಡುಗ್ತಾ ಇದ್ದೀನಿ.

24 ಉಪವಾಸದಿಂದ ನನ್ನ ಮೊಣಕಾಲು ನಡುಗ್ತಿದೆ,

ನಾನು ಸೊರಗಿ ಒಣಗಿ ಹೋಗ್ತಿದ್ದೀನಿ.*

25 ಅವರು ನನ್ನನ್ನ ಅಣಿಕಿಸಿ ಮಾತಾಡ್ತಾರೆ.+

ನನ್ನನ್ನ ನೋಡಿ ಅವರು ತಲೆ ಅಲ್ಲಾಡಿಸ್ತಾರೆ.+

26 ನನ್ನ ದೇವರಾದ ಯೆಹೋವ, ನನಗೆ ಸಹಾಯಮಾಡು,

ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು.

27 ಯೆಹೋವನೇ, ಇದನ್ನ ನೀನೇ ಮಾಡಿದ್ದೀಯ ಅಂತ,

ನಿನ್ನ ಕೈಯಾರೆ ಇದನ್ನ ಮಾಡಿದ್ದೀಯ ಅಂತ ಅವ್ರಿಗೆ ಗೊತ್ತಾಗಲಿ.

28 ಅವರು ಬೇಕಾದ್ರೆ ನನ್ನ ಮೇಲೆ ಶಾಪಹಾಕಲಿ, ಆದ್ರೆ ನೀನು ನನ್ನನ್ನ ಆಶೀರ್ವದಿಸು.

ಅವರು ಯಾವಾಗ ನನ್ನ ವಿರುದ್ಧ ಏಳ್ತಾರೋ ಆಗ ಅವ್ರಿಗೆ ಅವಮಾನ ಆಗಲಿ,

ಆದ್ರೆ ನಿನ್ನ ಸೇವಕ ಖುಷಿಪಡಲಿ.

29 ನನ್ನನ್ನ ವಿರೋಧಿಸೋರಿಗೆ ಅವಮಾನನೇ ಬಟ್ಟೆ ಆಗಲಿ,

ನಾಚಿಕೆನೇ ಅವ್ರ ಅಂಗಿಯಾಗಲಿ.*+

30 ನನ್ನ ಬಾಯಿ ಖುಷಿಯಿಂದ ಯೆಹೋವನನ್ನ ಹೊಗಳುತ್ತೆ,

ಜನ್ರ ಗುಂಪಿನ ಮುಂದೆ ನಾನು ಆತನನ್ನ ಸ್ತುತಿಸ್ತೀನಿ.+

31 ಯಾಕಂದ್ರೆ ಆತನು ಬಡವನ ಬಲಗಡೆ ನಿಂತು,

ಅವನನ್ನ ಅಪರಾಧಿ ಅಂತ ತೀರ್ಪು ಮಾಡೋರಿಂದ ಅವನನ್ನ ಕಾಪಾಡ್ತಾನೆ.

ದಾವೀದನ ಮಧುರ ಗೀತೆ.

110 ಯೆಹೋವ ನನ್ನ ಒಡೆಯನಿಗೆ,

“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+

ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ.

 2 ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,

“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ.

 3 ಯಾವ ದಿನ ನೀನು ನಿನ್ನ ಸೈನ್ಯವನ್ನ ಕರ್ಕೊಂಡು ಯುದ್ಧಕ್ಕೆ ಬರ್ತಿಯೋ,

ಆ ದಿನ ನಿನ್ನ ಜನ್ರು ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ.

ನಿನ್ನ ಜೊತೆ ನಿನ್ನ ಯುವಸೇನೆ ಇರುತ್ತೆ,

ಅವ್ರಲ್ಲಿ ಪವಿತ್ರತೆಯ ತೇಜಸ್ಸು ಹೊಳಿಯುತ್ತೆ.

ಅವರು ಮುಂಜಾನೆಯ ಇಬ್ಬನಿ ತರ ಇರ್ತಾರೆ.

 4 “ನೀನು ಮೆಲ್ಕಿಜೆದೇಕನ ತರ+ ಪುರೋಹಿತನಾಗಿ ಇರ್ತಿಯ,

ನೀನು ಸದಾಕಾಲ ಪುರೋಹಿತನಾಗೇ ಇರ್ತಿಯ!”+

ಅಂತ ಯೆಹೋವ ಮಾತುಕೊಟ್ಟಿದ್ದಾನೆ.

ಆತನು ತನ್ನ ಮನಸ್ಸನ್ನ ಬದಲಾಯಿಸಲ್ಲ.*

 5 ಯೆಹೋವ ನಿನ್ನ ಬಲಗಡೆನೇ ಇರ್ತಾನೆ,+

ಆತನು ತನ್ನ ಕೋಪದ ದಿನದಲ್ಲಿ ರಾಜರನ್ನ ಜಜ್ಜಿಹಾಕ್ತಾನೆ.+

 6 ಆತನು ದೇಶಗಳ ವಿರುದ್ಧ* ನ್ಯಾಯತೀರಿಸ್ತಾನೆ,+

ಆತನು ದೇಶನ ಶವಗಳಿಂದ ತುಂಬಿಸ್ತಾನೆ.+

ಒಂದು ವಿಶಾಲ ದೇಶದ* ನಾಯಕನನ್ನ* ಜಜ್ಜಿಹಾಕ್ತಾನೆ.

 7 ಅವನು* ದಾರಿ ಪಕ್ಕದಲ್ಲಿರೋ ತೊರೆಯಿಂದ ನೀರು ಕುಡಿತಾನೆ.

ಹಾಗಾಗಿ ಅವನು ತಲೆ ಎತ್ತಿ ನಿಲ್ತಾನೆ.

111 ಯಾಹುವನ್ನ ಸ್ತುತಿಸಿ!*+

א [ಆಲೆಫ್‌]

ನಾನು ನನ್ನ ಪೂರ್ತಿ ಹೃದಯದಿಂದ ಯೆಹೋವನನ್ನ ಸ್ತುತಿಸ್ತೀನಿ,+

ב [ಬೆತ್‌]

ನೀತಿವಂತರು ಸೇರಿ ಬರೋ ಸಭೆಯಲ್ಲಿ ಹೊಗಳ್ತೀನಿ.

ג [ಗಿಮೆಲ್‌]

 2 ಯೆಹೋವನ ಕೆಲಸಗಳು ಶ್ರೇಷ್ಠ,+

ד [ಡಾಲತ್‌]

ಅದ್ರಲ್ಲಿ ಖುಷಿ ಪಡ್ಕೊಳ್ಳೋರು ಅದನ್ನ ಚೆನ್ನಾಗಿ ಗಮನಿಸ್ತಾರೆ.+

ה [ಹೆ]

 3 ಆತನ ಕೆಲಸಗಳು ಅದ್ಭುತ, ಅಸಾಮಾನ್ಯ.

ו [ವಾವ್‌]

ಆತನ ನೀತಿ ಶಾಶ್ವತ.+

ז [ಜಯಿನ್‌]

 4 ಆತನು ತನ್ನ ಅದ್ಭುತಗಳನ್ನ ನೆನಪಿಸ್ಕೊಳ್ಳೋ ಹಾಗೆ ಮಾಡ್ತಾನೆ.+

ח [ಹೆತ್‌]

ಯೆಹೋವ ದಯಾಮಯಿ,* ಕರುಣಾಮಯಿ.+

ט [ಟೆತ್‌]

 5 ಆತನ ಭಯ ಇರೋರಿಗೆ ಆತನು ಊಟ ಕೊಡ್ತಾನೆ.+

י [ಯೋದ್‌]

ಆತನು ತನ್ನ ಒಪ್ಪಂದವನ್ನ ಯಾವಾಗ್ಲೂ ನೆನಪಲ್ಲಿ ಇಟ್ಕೊಳ್ತಾನೆ.+

כ [ಕಾಫ್‌]

 6 ಬೇರೆ ಜನಾಂಗಗಳ ಸೊತ್ತನ್ನ ತನ್ನ ಜನ್ರಿಗೆ ಕೊಟ್ಟು,+

ל [ಲಾಮೆದ್‌]

ತನ್ನ ಶಕ್ತಿಶಾಲಿ ಕೆಲಸಗಳನ್ನ ಅವ್ರಿಗೆ ತೋರಿಸಿದ್ದಾನೆ.

מ [ಮೆಮ್‌]

 7 ಆತನ ಕೈಕೆಲಸಗಳೆಲ್ಲ ಸತ್ಯ, ನ್ಯಾಯ.+

נ [ನೂನ್‌]

ಆತನ ಅಪ್ಪಣೆಗಳೆಲ್ಲ ಭರವಸೆಗೆ ಯೋಗ್ಯ.+

ס [ಸಾಮೆಕ್‌]

 8 ಅವನ್ನ ಯಾವಾಗ್ಲೂ ನಂಬಬಹುದು, ಇಂದಿಗೂ ಎಂದೆಂದಿಗೂ ನಂಬಬಹುದು.

ע [ಅಯಿನ್‌]

ಸತ್ಯ, ನೀತಿನೇ ಅವುಗಳಿಗೆ ಆಧಾರ.+

פ [ಪೇ]

 9 ಆತನು ತನ್ನ ಜನ್ರನ್ನ ಬಿಡಿಸಿದ್ದಾನೆ.+

צ [ಸಾದೆ]

ತನ್ನ ಒಪ್ಪಂದ ಸದಾಕಾಲ ಇರಬೇಕಂತ ಆಜ್ಞೆ ಕೊಟ್ಟಿದ್ದಾನೆ.

ק [ಕೊಫ್‌]

ಆತನ ಹೆಸ್ರು ಪವಿತ್ರವಾಗಿದೆ, ವಿಸ್ಮಯವಾಗಿದೆ.+

ר [ರೆಶ್‌]

10 ಯೆಹೋವನ ಭಯನೇ ವಿವೇಕದ ಆರಂಭ.+

ש [ಶಿನ್‌]

ಆತನ ಆಜ್ಞೆಗಳನ್ನ ಪಾಲಿಸೋ ಜನ್ರೆಲ್ಲ ವಿವೇಚನೆಯಿಂದ ನಡ್ಕೊತಾರೆ.*+

ת [ಟಾವ್‌]

ಸದಾಕಾಲ ಆತನಿಗೆ ಹೊಗಳಿಕೆ ಸಿಗ್ತಾ ಇರಬೇಕು.

112 ಯಾಹುವನ್ನ ಸ್ತುತಿಸಿ!*+

א [ಆಲೆಫ್‌]

ಯೆಹೋವನಿಗೆ ಭಯಪಡೋನು ಭಾಗ್ಯವಂತ.+

ב [ಬೆತ್‌]

ದೇವರ ಆಜ್ಞೆಗಳಂದ್ರೆ ಅವನಿಗೆ ತುಂಬ ಖುಷಿ.+

ג [ಗಿಮೆಲ್‌]

 2 ಅವನ ವಂಶದವರು ಭೂಮಿ ಮೇಲೆ ಶಕ್ತಿಶಾಲಿ ಆಗ್ತಾರೆ.

ד [ಡಾಲತ್‌]

ನೀತಿವಂತನ ಪೀಳಿಗೆಗೆ ಆಶೀರ್ವಾದ ಸಿಗುತ್ತೆ.+

ה [ಹೆ]

 3 ಅವನ ಮನೆಯಲ್ಲಿ ಸಿರಿಸಂಪತ್ತು ಇರುತ್ತೆ.

ו [ವಾವ್‌]

ಅವನ ನೀತಿ ಶಾಶ್ವತವಾಗಿ ಇರುತ್ತೆ.

ז [ಜಯಿನ್‌]

 4 ಪ್ರಾಮಾಣಿಕರಿಗೆ ಅವನು ಕತ್ತಲಲ್ಲಿ ಹೊಳಿಯೋ ಬೆಳಕಾಗಿದ್ದಾನೆ.+

ח [ಹೆತ್‌]

ಅವನು ದಯಾಮಯಿ,* ಕರುಣಾಮಯಿ,+ ನೀತಿವಂತ.

ט [ಟೆತ್‌]

 5 ಧಾರಾಳವಾಗಿ* ಸಾಲಕೊಡೋನಿಗೆ ಒಳ್ಳೇದಾಗುತ್ತೆ.+

י [ಯೋದ್‌]

ಅವನು ಎಲ್ಲ ಕೆಲಸಗಳನ್ನ ನ್ಯಾಯವಾಗಿ ಮಾಡ್ತಾನೆ.

כ [ಕಾಫ್‌]

 6 ಅವನು ಯಾವತ್ತೂ ಕದಲಲ್ಲ.+

ל [ಲಾಮೆದ್‌]

ನೀತಿವಂತರನ್ನ ಯಾವಾಗ್ಲೂ ನೆನಪಿಸಿಕೊಳ್ತಾರೆ.+

מ [ಮೆಮ್‌]

 7 ಅವನು ಕೆಟ್ಟಸುದ್ದಿಗೆ ಭಯಪಡಲ್ಲ.+

נ [ನೂನ್‌]

ಅವನ ಹೃದಯ ಸ್ಥಿರವಾಗಿರುತ್ತೆ, ಅದು ಯೆಹೋವನಲ್ಲಿ ಭರವಸೆ ಇಟ್ಟಿರುತ್ತೆ.+

ס [ಸಾಮೆಕ್‌]

 8 ಅವನ ಹೃದಯ ನಡುಗಲ್ಲ, ಅವನು ಹೆದ್ರಲ್ಲ.+

ע [ಅಯಿನ್‌]

ಕೊನೆಗೆ ಶತ್ರುಗಳ ವಿರುದ್ಧ ಅವನು ಗೆಲ್ತಾನೆ.+

פ [ಪೇ]

 9 ಅವನು ಉದಾರವಾಗಿ* ಹಂಚಿದ್ದಾನೆ, ಅವನು ಬಡವ್ರಿಗೆ ಕೊಟ್ಟಿದ್ದಾನೆ.+

צ [ಸಾದೆ]

ಅವನ ನೀತಿ ಸದಾಕಾಲಕ್ಕೂ ಮುಂದುವರಿಯುತ್ತೆ.+

ק [ಕೊಫ್‌]

ಅವನ ಬಲ* ಗೌರವ ಜಾಸ್ತಿ ಆಗ್ತಾ ಹೋಗುತ್ತೆ.

ר [ರೆಶ್‌]

10 ಇದನ್ನ ನೋಡಿ ಕೆಟ್ಟವನು ನೆಮ್ಮದಿ ಕಳ್ಕೊತಾನೆ.

ש [ಶಿನ್‌]

ಅವನು ಹಲ್ಲು ಕಡಿತಾನೆ, ಕಣ್ಮರೆ ಆಗ್ತಾನೆ.

ת [ಟಾವ್‌]

ಕೆಟ್ಟವನ ಆಸೆಗಳು ಮಣ್ಣುಪಾಲಾಗುತ್ತೆ.+

113 ಯಾಹುವನ್ನ ಸ್ತುತಿಸಿ!*

ಯೆಹೋವನ ಸೇವಕರೇ, ಹಾಡಿಹೊಗಳಿ,

ಯೆಹೋವನ ಹೆಸ್ರನ್ನ ಕೊಂಡಾಡಿ.

 2 ಇವತ್ತಿಂದ ಶಾಶ್ವತವಾಗಿ

ಯೆಹೋವನ ಹೆಸ್ರಿಗೆ ಹೊಗಳಿಕೆ ಸಿಗಲಿ.+

 3 ಸೂರ್ಯ ಹುಟ್ಟಿ ಮುಳುಗೋ ತನಕ

ಯೆಹೋವನ ಹೆಸ್ರಿಗೆ ಸ್ತುತಿ ಆಗಲಿ.+

 4 ಎಲ್ಲ ಜನಾಂಗಗಳಿಗಿಂತ ಯೆಹೋವ ಉನ್ನತನು,+

ಆತನ ಮಹಿಮೆ ಆಕಾಶಕ್ಕಿಂತ ಉನ್ನತ.+

 5 ಉನ್ನತ ಸ್ಥಾನದಲ್ಲಿ ಇರೋ*

ನಮ್ಮ ದೇವರಾದ ಯೆಹೋವನ ತರ ಯಾರಿದ್ದಾರೆ?+

 6 ಆಕಾಶ ಭೂಮಿಯನ್ನ ನೋಡೋಕೆ ಆತನು ಕೆಳಗೆ ಬಗ್ತಾನೆ,+

 7 ದೀನನನ್ನ ಧೂಳಿಂದ ಎಬ್ಬಿಸ್ತಾನೆ.

ಬಡವನನ್ನ ಬೂದಿಯಿಂದ* ಮೇಲೆ ಎತ್ತುತ್ತಾನೆ.+

 8 ಅವನನ್ನ ಪ್ರಧಾನರ ಜೊತೆ,

ತನ್ನ ಜನ್ರ ಪ್ರಮುಖರ ಜೊತೆ ಕೂರಿಸೋಕೆ ಹೀಗೆ ಮಾಡ್ತಾನೆ.

 9 ಆತನು ಬಂಜೆಗೆ ತಾಯಿ ಆಗೋ ಸೌಭಾಗ್ಯ ಕೊಟ್ಟು,

ಅವಳು ಖುಷಿಯಾಗಿ ಮನೆಯಲ್ಲಿ ಮಕ್ಕಳ ಜೊತೆ ಇರೋ ಹಾಗೆ ಮಾಡ್ತಾನೆ.+

ಯಾಹುವನ್ನ ಸ್ತುತಿಸಿ!*

114 ಇಸ್ರಾಯೇಲ್‌ ಈಜಿಪ್ಟಿಂದ ಹೊರಗೆ ಬಂದಾಗ,+

ಯಾಕೋಬನ ಮನೆತನ ಬೇರೆ ಭಾಷೆ ಮಾತಾಡೋ ಜನ್ರ ಮಧ್ಯದಿಂದ ಬಂದಾಗ,

 2 ಯೆಹೂದ ಆತನ ಪವಿತ್ರ ಸ್ಥಳವಾಯ್ತು,*

ಇಸ್ರಾಯೇಲ್‌ ಆತನ ಸಾಮ್ರಾಜ್ಯವಾಯ್ತು.+

 3 ಅದನ್ನ ನೋಡಿ ಸಮುದ್ರ ಓಡಿಹೋಯ್ತು,+

ಯೋರ್ದನ್‌ ನದಿ ವಾಪಸ್‌ ಹೋಯ್ತು.+

 4 ಪರ್ವತಗಳು ಟಗರಿನ ತರ ಕುಣಿದಾಡಿದ್ವು,+

ಬೆಟ್ಟಗಳು ಕುರಿಮರಿ ತರ ಜಿಗಿದಾಡಿದ್ವು.

 5 ಸಮುದ್ರವೇ, ನೀನು ಯಾಕೆ ಓಡಿಹೋದೆ?+

ಯೋರ್ದನ್‌ ನದಿಯೇ, ನೀನು ಯಾಕೆ ವಾಪಸ್‌ ಹೋದೆ?+

 6 ಪರ್ವತಗಳೇ, ನೀವು ಯಾಕೆ ಟಗರಿನ ತರ ಕುಣಿದಾಡಿದ್ರಿ?

ಬೆಟ್ಟಗಳೇ, ನೀವು ಯಾಕೆ ಕುರಿಮರಿ ತರ ಜಿಗಿದಾಡಿದ್ರಿ?

 7 ಭೂಮಿಯೇ, ಒಡೆಯನಿಂದಾಗಿ,

ಯಾಕೋಬನ ದೇವರಿಂದಾಗಿ ನಡುಗು.+

 8 ಆತನು ಬಂಡೆಯನ್ನ ನೀರಿನ ಕೆರೆಯಾಗಿ,

ಒರಟಾದ ಬಂಡೆಯನ್ನ ನೀರಿನ ಬುಗ್ಗೆಯಾಗಿ ಮಾಡ್ತಾನೆ.+

115 ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ,*

ನಿನ್ನ ಹೆಸ್ರನ್ನ ಮಹಿಮೆಪಡಿಸು,+

ಯಾಕಂದ್ರೆ ನೀನು ಶಾಶ್ವತ ಪ್ರೀತಿಯ ದೇವರು, ನಂಬಿಗಸ್ತ ದೇವರು.+

 2 ಬೇರೆ ಜನಾಂಗಗಳು “ಅವ್ರ ದೇವರು ಎಲ್ಲಿದ್ದಾನೆ?” ಅಂತ

ಕೇಳೋಕೆ ಯಾಕೆ ಆಸ್ಪದ ಕೊಡಬೇಕು?+

 3 ನಮ್ಮ ದೇವರು ಸ್ವರ್ಗದಲ್ಲಿ ಇದ್ದಾನೆ,

ತನಗೆ ಇಷ್ಟ ಆಗೋದನ್ನೆಲ್ಲ ಆತನು ಮಾಡ್ತಾನೆ.

 4 ಅವ್ರ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,

ಅವನ್ನ ಮಾಡಿರೋದು ಅವ್ರ ಕೈಗಳೇ.+

 5 ಅವಕ್ಕೆ ಬಾಯಿದ್ರೂ ಮಾತಾಡೋಕೆ ಆಗಲ್ಲ.+

ಕಣ್ಣಿದ್ರೂ ನೋಡೋಕೆ ಆಗಲ್ಲ,

 6 ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗಲ್ಲ,

ಮೂಗಿದ್ರೂ ಮೂಸಲ್ಲ.

 7 ಕೈ ಇದ್ರೂ ಮುಟ್ಟಲ್ಲ,

ಕಾಲಿದ್ರೂ ನಡಿಯಲ್ಲ.+

ಗಂಟಲಿಂದ ಒಂದು ಶಬ್ದನೂ ಹೊರಗೆ ಬರಲ್ಲ.+

 8 ಅವನ್ನ ಮಾಡೋರೂ ಅವುಗಳ ಮೇಲೆ ಭರವಸೆ ಇಡೋರೂ ಅವುಗಳ ತರಾನೇ ಆಗ್ತಾರೆ.+

 9 ಇಸ್ರಾಯೇಲೇ ಯೆಹೋವನ ಮೇಲೆ ಭರವಸೆ ಇಡು,+

ಆತನು ನಿನ್ನ ಸಹಾಯಕ, ನಿನ್ನ ಗುರಾಣಿ.+

10 ಆರೋನನ ಮನೆತನವೇ+ ಯೆಹೋವನ ಮೇಲೆ ಭರವಸೆ ಇಡು,

ಆತನು ನಿನ್ನ ಸಹಾಯಕ, ನಿನ್ನ ಗುರಾಣಿ.

11 ಯೆಹೋವನಿಗೆ ಭಯಪಡೋರೇ, ಯೆಹೋವನ ಮೇಲೆ ಭರವಸೆ ಇಡಿ+

ಆತನು ನಿಮ್ಮ ಸಹಾಯಕ, ನಿಮ್ಮ ಗುರಾಣಿ.+

12 ಯೆಹೋವ ನಮ್ಮನ್ನ ನೆನಪಿಸ್ಕೊಳ್ತಾನೆ, ನಮ್ಮನ್ನ ಆಶೀರ್ವದಿಸ್ತಾನೆ,

ಆತನು ಇಸ್ರಾಯೇಲ್‌ ಮನೆತನವನ್ನ ಆಶೀರ್ವದಿಸ್ತಾನೆ,+

ಆತನು ಆರೋನನ ಮನೆತನವನ್ನ ಆಶೀರ್ವದಿಸ್ತಾನೆ.

13 ಯಾರು ಯೆಹೋವನಿಗೆ ಭಯಪಡ್ತಾರೋ ಅವ್ರನ್ನ ಆಶೀರ್ವದಿಸ್ತಾನೆ,

ಚಿಕ್ಕವರನ್ನ, ದೊಡ್ಡವರನ್ನ, ಎಲ್ರನ್ನೂ ಆಶೀರ್ವದಿಸ್ತಾನೆ.

14 ಯೆಹೋವ ನಿಮ್ಮ ಸಂಖ್ಯೆಯನ್ನ ಹೆಚ್ಚಿಸ್ತಾನೆ,

ನಿಮ್ಮನ್ನ ನಿಮ್ಮ ಮಕ್ಕಳನ್ನ ಅಭಿವೃದ್ಧಿ ಮಾಡ್ತಾನೆ.+

15 ಭೂಮಿ ಆಕಾಶವನ್ನ ನಿರ್ಮಿಸಿದ+

ಯೆಹೋವ ನಿಮ್ಮನ್ನ ಆಶೀರ್ವದಿಸಲಿ.+

16 ಸ್ವರ್ಗ ಯೆಹೋವನಿಗೆ ಸೇರಿದ್ದು,+

ಆದ್ರೆ ಭೂಮಿಯನ್ನ ಆತನು ಮನುಷ್ಯರಿಗೆ ಕೊಟ್ಟಿದ್ದಾನೆ.+

17 ಸತ್ತವರು ಯಾಹುವನ್ನ ಹೊಗಳಲ್ಲ,+

ಸತ್ತು ಮೌನಸ್ಥಿತಿಗೆ* ಜಾರಿರೋರು ಆತನನ್ನ ಕೊಂಡಾಡಲ್ಲ.+

18 ಆದ್ರೆ ನಾವು ಯಾಹುವನ್ನ ಹೊಗಳ್ತೀವಿ

ಇವತ್ತಿಂದ ಯಾವಾಗ್ಲೂ ಕೊಂಡಾಡ್ತೀವಿ.

ಯಾಹುವನ್ನ ಸ್ತುತಿಸಿ!*

116 ನಾನು ಯೆಹೋವನನ್ನ ಪ್ರೀತಿಸ್ತೀನಿ,

ಯಾಕಂದ್ರೆ ಆತನು ನನ್ನ ಧ್ವನಿಯನ್ನ ಕೇಳಿಸ್ಕೊಳ್ತಾನೆ,

ಸಹಾಯಕ್ಕಾಗಿ ನಾನಿಡೋ ಮೊರೆಯನ್ನ ಕೇಳಿಸ್ಕೊಳ್ತಾನೆ.+

 2 ಆತನು ಕೇಳಿಸ್ಕೊಳ್ಳೋಕೆ ನನ್ನ ಕಡೆ ಬಾಗ್ತಾನೆ,+

ನಾನು ಸಾಯೋ ತನಕ ಆತನಿಗೆ ಪ್ರಾರ್ಥಿಸ್ತೀನಿ.

 3 ಸಾವಿನ ಹಗ್ಗಗಳು ನನ್ನನ್ನ ಸುತ್ಕೊಂಡಿದ್ವು,

ಸಮಾಧಿ ನನ್ನನ್ನ ತನ್ನ ಬಿಗಿಮುಷ್ಟಿಯಲ್ಲಿ ಹಿಡ್ಕೊಂಡಿತ್ತು.*+

ಕಷ್ಟಸಂಕಟಗಳು ನನ್ನನ್ನ ಮುಳುಗಿಸಿಬಿಟ್ಟಿದ್ವು.+

 4 ಆದ್ರೆ ನಾನು “ಯೆಹೋವ, ನನ್ನನ್ನ ರಕ್ಷಿಸು!”

ಅಂತ ಹೇಳ್ತಾ ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸಿದೆ.+

 5 ಯೆಹೋವ ದಯಾಮಯಿ,* ನೀತಿವಂತ.+

ನಮ್ಮ ದೇವರು ಕರುಣಾಮಯಿ.+

 6 ಯೆಹೋವ ಅನುಭವ ಇಲ್ಲದವ್ರನ್ನ ಕಾದು ಕಾಪಾಡ್ತಾನೆ.+

ಯಾತನೆಯಿಂದ ನಾನು ಕುಗ್ಗಿಹೋಗಿದ್ದೆ, ಆತನು ನನ್ನನ್ನ ಕಾಪಾಡಿದ.

 7 ನನ್ನ ಜೀವಕ್ಕೆ* ಮತ್ತೆ ಶಾಂತಿ ಸಿಗಲಿ,

ಯಾಕಂದ್ರೆ ಯೆಹೋವ ನನ್ನ ಜೊತೆ ದಯೆಯಿಂದ ನಡ್ಕೊಂಡಿದ್ದಾನೆ.

 8 ನೀನು ನನ್ನನ್ನ ಸಾವಿಂದ ಬಿಡಿಸಿದೆ,

ನನ್ನ ಕಣ್ಣಲ್ಲಿ ಕಣ್ಣೀರು ಬರೋಕೆ ಬಿಡಲಿಲ್ಲ,

ನನ್ನ ಕಾಲುಗಳನ್ನ ಎಡವೋಕೆ ಬಿಡಲಿಲ್ಲ.+

 9 ನಾನು ಎಲ್ಲಿ ತನಕ ಬದುಕಿರ್ತೀನೋ ಅಲ್ಲಿ ತನಕ ಯೆಹೋವನ ಮುಂದೆ ನಡೀತಾನೇ ಇರ್ತಿನಿ.

10 ನನ್ನಲ್ಲಿದ್ದ ನಂಬಿಕೆ ನಾನು ಮಾತಾಡೋ ತರ ಮಾಡಿತು,+

ನಾನು ತುಂಬ ಕಷ್ಟದಲ್ಲಿದ್ದೆ.

11 ನಾನು ತುಂಬ ಹೆದ್ರಿ,

“ಎಲ್ರೂ ಸುಳ್ಳು ಹೇಳೋರೇ”+ ಅಂತ ಹೇಳಿದ್ದೆ.

12 ಯೆಹೋವ ನನಗೆ ಮಾಡಿರೋ ಎಲ್ಲ ಒಳ್ಳೇ ವಿಷ್ಯಗಳಿಗಾಗಿ

ಆತನ ಋಣನ ನಾನು ಹೇಗೆ ತೀರಿಸಲಿ?

13 ರಕ್ಷಣೆಯ* ಪಾತ್ರೆಯನ್ನ ತಗೊಂಡು

ಯೆಹೋವನ ಹೆಸ್ರಲ್ಲಿ ನಾನು ಪ್ರಾರ್ಥಿಸ್ತೀನಿ.

14 ಆತನ ಜನ್ರ ಮುಂದೆ

ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ.+

15 ಯೆಹೋವನ ದೃಷ್ಟಿಯಲ್ಲಿ ಆತನ ನಿಷ್ಠಾವಂತರ ಮರಣ ತುಂಬಲಾರದ ನಷ್ಟ.*+

16 ಯೆಹೋವ, ನಾನು ನಿನ್ನನ್ನ ಬೇಡ್ಕೊಳ್ತೀನಿ,

ಯಾಕಂದ್ರೆ ನಾನು ನಿನ್ನ ಸೇವಕ.

ಹೌದು ನಾನು ನಿನ್ನ ಸೇವಕ, ನಿನ್ನ ದಾಸಿಯ ಮಗ.

ನೀನು ನನ್ನನ್ನ ಬೇಡಿಗಳಿಂದ ಬಿಡಿಸಿದೆ.+

17 ನಾನು ನಿನಗೆ ಧನ್ಯವಾದ ಹೇಳ್ತಾ ಹಾಡ್ತೀನಿ,+

ನಾನು ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸ್ತೀನಿ.

18 ಆತನ ಜನ್ರ ಮುಂದೆ

ನಾನು ಯೆಹೋವನಿಗೆ ತೀರಿಸಬೇಕಾದ ಹರಕೆಗಳನ್ನ ತೀರಿಸ್ತೀನಿ.+

19 ಯೆಹೋವನ ಆಲಯದ ಅಂಗಳದಲ್ಲಿ,+

ಯೆರೂಸಲೇಮಿನ ಮಧ್ಯ ನಾನು ಇದನ್ನೆಲ್ಲ ಮಾಡ್ತೀನಿ.

ಯಾಹುವನ್ನ ಸ್ತುತಿಸಿ!*+

117 ಎಲ್ಲ ಜನ್ರೇ ಯೆಹೋವನನ್ನ ಹಾಡಿ ಹೊಗಳಿ,+

ಎಲ್ಲ ದೇಶದ ಜನ್ರೇ,* ಆತನಿಗೆ ಗೌರವ ಕೊಡಿ.+

 2 ಯಾಕಂದ್ರೆ ನಮ್ಮ ಕಡೆ ಆತನಿಗಿರೋ ಶಾಶ್ವತ ಪ್ರೀತಿ ಶ್ರೇಷ್ಠವಾಗಿದೆ,+

ಯೆಹೋವನ ನಂಬಿಗಸ್ತಿಕೆ+ ಶಾಶ್ವತವಾಗಿರುತ್ತೆ.+

ಯಾಹುವನ್ನ ಸ್ತುತಿಸಿ!*+

118 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.

 2 ಇಸ್ರಾಯೇಲ್‌ ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 3 ಆರೋನನ ಮನೆತನದವರು ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 4 ಯೆಹೋವನಿಗೆ ಭಯಪಡೋರು ಹೀಗೆ ಹೇಳಲಿ,

“ಆತನ ಪ್ರೀತಿ ಶಾಶ್ವತ.”

 5 ನನ್ನ ಕಷ್ಟಕಾಲದಲ್ಲಿ ನಾನು ಯಾಹುಗೆ* ಮೊರೆಯಿಟ್ಟೆ,

ಯಾಹು ನನಗೆ ಉತ್ರ ಕೊಟ್ಟು ನನ್ನನ್ನ ಸುರಕ್ಷಿತವಾದ* ಜಾಗಕ್ಕೆ ಕರ್ಕೊಂಡು ಬಂದ.+

 6 ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನಾನು ಹೆದ್ರಲ್ಲ.+

ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+

 7 ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನನ್ನ ಸಹಾಯಕನಾಗಿ ಇದ್ದಾನೆ,*+

ನನ್ನನ್ನ ದ್ವೇಷಿಸೋರು ಬಿದ್ದು ಹೋಗೋದನ್ನ ನಾನು ಕಣ್ಣಾರೆ ನೋಡ್ತೀನಿ.+

 8 ಮನುಷ್ಯರ ಮೇಲೆ ಭರವಸೆ ಇಡೋದಕ್ಕಿಂತ

ಯೆಹೋವನನ್ನ ಆಶ್ರಯಿಸೋದೇ ಮೇಲು.+

 9 ಅಧಿಕಾರಿಗಳ ಮೇಲೆ ಭರವಸೆ ಇಡೋದಕ್ಕಿಂತ

ಯೆಹೋವನನ್ನ ಆಶ್ರಯಿಸೋದೇ ಮೇಲು.+

10 ಎಲ್ಲ ಜನಾಂಗಗಳು ನನ್ನನ್ನ ಸುತ್ಕೊಂಡಿವೆ,

ಆದ್ರೆ ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.+

11 ಅವು ನನ್ನನ್ನ ಸುತ್ಕೊಂಡಿವೆ, ಹೌದು ನನ್ನನ್ನ ಎಲ್ಲ ಕಡೆಯಿಂದ ಸುತ್ಕೊಂಡಿವೆ.

ಆದ್ರೆ ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.

12 ಅವು ನನ್ನನ್ನ ಜೇನು ನೊಣಗಳ ತರ ಮುತ್ಕೊಂಡ್ವು,

ಆದ್ರೆ ಬೆಂಕಿ ಹತ್ಕೊಂಡಾಗ ತಕ್ಷಣ ಉರಿದು ಹೋಗೋ ಮುಳ್ಳಿನ ಪೊದೆ ತರ ಬೇಗ ನಾಶ ಆದ್ವು.

ನಾನು ಯೆಹೋವನ ಹೆಸ್ರಲ್ಲಿ

ಅವುಗಳನ್ನ ಓಡಿಸಿಬಿಡ್ತೀನಿ.+

13 ನಾನು ಬೀಳೋ ಹಾಗೆ ನನ್ನನ್ನ ಜೋರಾಗಿ ತಳ್ಳಿದ್ರೂ,*

ಯೆಹೋವ ನನಗೆ ಸಹಾಯಮಾಡಿದ.

14 ಯಾಹು ನನ್ನ ಆಶ್ರಯ, ನನ್ನ ಬಲ,

ಆತನು ನನ್ನ ರಕ್ಷಕ.+

15 ನೀತಿವಂತರಿಗೆ ರಕ್ಷಣೆ* ಸಿಕ್ಕಿದೆ,

ಹಾಗಾಗಿ ಅವ್ರ ಡೇರೆಗಳಿಂದ ಸಂತೋಷದ ಧ್ವನಿ ಕೇಳಿಸ್ತಿದೆ,

ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+

16 ಯೆಹೋವನ ಬಲಗೈ ಅದ್ಭುತಗಳನ್ನ ಮಾಡ್ತಿದೆ,

ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+

17 ಇಲ್ಲ, ನಾನು ಸಾಯಲ್ಲ,

ಯಾಹುವಿನ ಕೆಲಸಗಳ ಬಗ್ಗೆ ತಿಳಿಸೋಕೆ ಬದುಕಿರ್ತೀನಿ.+

18 ಯಾಹು ನನಗೆ ಚೆನ್ನಾಗಿ ಶಿಕ್ಷೆ ಕೊಟ್ಟ,+

ಆದ್ರೆ ನನ್ನನ್ನ ಸಾವಿನ ಕೈಗೆ ಒಪ್ಪಿಸಲಿಲ್ಲ.+

19 ನನಗಾಗಿ ನೀತಿಯ ಬಾಗಿಲನ್ನ ತೆಗೀರಿ,+

ನಾನು ಅದರೊಳಗೆ ಹೋಗಿ ಯಾಹುವನ್ನ ಹೊಗಳ್ತೀನಿ.

20 ಇದು ಯೆಹೋವನ ಬಾಗಿಲು.

ನೀತಿವಂತ ಅದರೊಳಗೆ ಹೋಗ್ತಾನೆ.+

21 ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನಗೆ ಉತ್ರ ಕೊಟ್ಟೆ,+

ನೀನು ನನ್ನ ರಕ್ಷಕನಾದೆ.

22 ಕಟ್ಟೋರು ಯಾವ ಕಲ್ಲನ್ನು ಬೇಡ ಅಂತ ಬಿಟ್ಟರೋ ಅದೇ

ಮುಖ್ಯವಾದ ಮೂಲೆಗಲ್ಲಾಯಿತು.*+

23 ಯೆಹೋವನೇ ಇದನ್ನ ಮಾಡಿದ್ದಾನೆ,+

ಎಂಥ ಆಶ್ಚರ್ಯ.+

24 ಇಂಥ ಒಂದು ದಿನ ಬಂದಿದೆ ಅಂದ್ರೆ ಅದಕ್ಕೆ ಯೆಹೋವನೇ ಕಾರಣ,

ಈ ದಿನ ನಾವು ಖುಷಿಪಡ್ತೀವಿ, ಆನಂದಪಡ್ತೀವಿ.

25 ಯೆಹೋವ, ನಾವು ಬೇಡಿಕೊಳ್ತೀವಿ, ದಯವಿಟ್ಟು ನಮ್ಮನ್ನ ಕಾಪಾಡು!

ಯೆಹೋವನೇ ದಯವಿಟ್ಟು ನಮ್ಮನ್ನ ಗೆಲ್ಲಿಸು!

26 ಯಾರು ಯೆಹೋವನ ಹೆಸ್ರಲ್ಲಿ ಬರ್ತಾನೋ ಅವನು ಆಶೀರ್ವಾದ ಪಡೀತಾನೆ,+

ನಾವು ನಿಮ್ಮನ್ನ ಯೆಹೋವನ ಆಲಯದಿಂದ ಆಶೀರ್ವದಿಸ್ತೀವಿ.

27 ಯೆಹೋವ ದೇವರಾಗಿದ್ದಾನೆ,

ಆತನು ನಮಗೆ ಬೆಳಕು ಕೊಡ್ತಾನೆ.+

ಕೈಯಲ್ಲಿ ಗರಿಗಳನ್ನ ಹಿಡ್ಕೊಂಡು ಹಬ್ಬದ ಮೆರವಣಿಗೆಗೆ ಬನ್ನಿ,+

ಯಜ್ಞವೇದಿಯ ಕೊಂಬುಗಳ ತನಕ ಬನ್ನಿ.+

28 ನೀನು ನನ್ನ ದೇವರು, ನಾನು ನಿನ್ನನ್ನ ಹಾಡಿ ಹೊಗಳ್ತೀನಿ,

ನನ್ನ ದೇವರೇ, ನಾನು ನಿನ್ನನ್ನ ಕೊಂಡಾಡ್ತೀನಿ.+

29 ಯೆಹೋವನಿಗೆ ಧನ್ಯವಾದ ಹೇಳಿ,+ ಆತನು ಒಳ್ಳೆಯವನು.

ಆತನ ಪ್ರೀತಿ ಶಾಶ್ವತ.+

א [ಆಲೆಫ್‌]

119 ತಮ್ಮ ಜೀವನದಲ್ಲಿ ಕಳಂಕ ಇಲ್ಲದೆ* ನಡೆಯೋರು,

ಯೆಹೋವನ ನಿಯಮ ಪುಸ್ತಕದ ಪ್ರಕಾರ ನಡೆಯೋರು ಭಾಗ್ಯವಂತರು.+

 2 ಆತನು ಕೊಡೋ ಎಚ್ಚರಿಕೆಗಳನ್ನ* ಯಾರು ಪಾಲಿಸ್ತಾರೋ,+

ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.+

 3 ಅವರು ಯಾವ ಕೆಟ್ಟಕೆಲಸವನ್ನೂ ರೂಢಿ ಮಾಡ್ಕೊಳ್ಳಲ್ಲ,

ಅವರು ಆತನ ದಾರಿಯಲ್ಲಿ ನಡೀತಾರೆ.+

 4 ನಿನ್ನ ಅಪ್ಪಣೆಗಳನ್ನ ಶ್ರದ್ಧೆಯಿಂದ ಪಾಲಿಸಬೇಕಂತ

ನೀನು ಆಜ್ಞೆ ಕೊಟ್ಟಿದ್ದೀಯ.+

 5 ನಿನ್ನ ನಿಯಮಗಳನ್ನ ಅನುಸರಿಸ್ತಾ ಇರೋ ಹಾಗೆ

ನನ್ನ ಮನಸ್ಸು ಯಾವಾಗ್ಲೂ ದೃಢವಾಗಿರಬೇಕು ಅನ್ನೋದೇ ನನ್ನಾಸೆ!+

 6 ಹೀಗೆ ನಾನು ನಿನ್ನ ಎಲ್ಲ ಆಜ್ಞೆಗಳ ಬಗ್ಗೆ ಯೋಚಿಸ್ತಾ ಇದ್ರೆ,

ನನಗೆ ಅವಮಾನ ಆಗಲ್ಲ.+

 7 ನಿನ್ನ ನೀತಿ ನ್ಯಾಯ ತೀರ್ಪುಗಳ ಬಗ್ಗೆ ಕಲಿಯೋವಾಗ

ನಾನು ನಿನ್ನನ್ನ ಪ್ರಾಮಾಣಿಕ ಹೃದಯದಿಂದ ಹೊಗಳ್ತೀನಿ.

 8 ನಾನು ನಿನ್ನ ನಿಯಮಗಳನ್ನ ಪಾಲಿಸ್ತೀನಿ.

ನೀನು ನನ್ನನ್ನ ಪೂರ್ತಿ ಬಿಟ್ಟುಬಿಡಬೇಡ.

ב [ಬೆತ್‌]

 9 ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?

ನಿನ್ನ ವಾಕ್ಯದ ಪ್ರಕಾರ ನಡೆದು ತಮ್ಮನ್ನ ಕಾಪಾಡ್ಕೊಳ್ಳೋ ಮೂಲಕನೇ ಅಲ್ವಾ.+

10 ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹುಡುಕ್ತೀನಿ.

ನಿನ್ನ ಆಜ್ಞೆಗಳಿಂದ ದೂರ ಆಗಿ ತಪ್ಪುದಾರಿ ಹಿಡಿಯೋಕೆ ನನ್ನನ್ನ ಬಿಡಬೇಡ.+

11 ನಿನ್ನ ವಿರುದ್ಧ ಪಾಪ ಮಾಡದ ಹಾಗೆ,+

ನಾನು ನನ್ನ ಹೃದಯದಲ್ಲಿ ನಿನ್ನ ಮಾತುಗಳನ್ನ ನಿಧಿ ತರ ಕಾಪಾಡ್ಕೊಳ್ತೀನಿ.+

12 ಯೆಹೋವನೇ, ನಿನಗೆ ಹೊಗಳಿಕೆ ಆಗಲಿ.

ನಿನ್ನ ನಿಯಮಗಳನ್ನ ನನಗೆ ಕಲಿಸು.

13 ನೀನು ಹೇಳಿರೋ ಪ್ರತಿಯೊಂದು ತೀರ್ಪುಗಳನ್ನ

ನನ್ನ ತುಟಿಗಳಿಂದ ಎಲ್ರಿಗೂ ಹೇಳ್ತೀನಿ.

14 ನೀನು ನನಗೆ ನೆನಪಿಸೋಕೆ ಹೇಳೋ ಮಾತುಗಳು

ಬೇರೆ ಅಮೂಲ್ಯ ವಸ್ತುಗಳಿಗಿಂತ ತುಂಬ ಖುಷಿ ತರುತ್ತೆ.+

15 ನಿನ್ನ ಆಜ್ಞೆಗಳ ಬಗ್ಗೆ ನಾನು ತುಂಬ ಆಲೋಚಿಸ್ತೀನಿ*+

ನಾನು ಹೇಗೆ ಜೀವಿಸಿದ್ರೆ ನಿನಗೆ ಇಷ್ಟ ಆಗುತ್ತೆ ಅಂತ ನಾನು ಧ್ಯಾನಿಸ್ತೀನಿ.+

16 ನಿನ್ನ ನಿಯಮಗಳು ನಂಗೆ ತುಂಬ ಇಷ್ಟ.

ನಾನು ನಿನ್ನ ವಾಕ್ಯವನ್ನ ಮರಿಯಲ್ಲ.+

ג [ಗಿಮೆಲ್‌]

17 ನಿನ್ನ ಸೇವಕನಾದ ನಾನು ಜೀವಂತವಾಗಿದ್ದು ನಿನ್ನ ವಾಕ್ಯ ಪಾಲಿಸೋಕೆ,

ನನ್ನ ಜೊತೆ ದಯೆಯಿಂದ ನಡ್ಕೊ.+

18 ನಿನ್ನ ನಿಯಮ ಪುಸ್ತಕದಲ್ಲಿರೋ ಅದ್ಭುತ ವಿಷ್ಯಗಳನ್ನ

ಸ್ಪಷ್ಟವಾಗಿ ನೋಡೋಕೆ ಆಗೋ ತರ ನನ್ನ ಕಣ್ಣುಗಳನ್ನ ತೆಗಿ.

19 ನಾನು ಬೇರೆ ದೇಶದಲ್ಲಿರೋ ಪರದೇಶಿ ತರ ಇದ್ದೀನಿ.+

ನನ್ನಿಂದ ನಿನ್ನ ಆಜ್ಞೆಗಳನ್ನ ಮುಚ್ಚಿಡಬೇಡ.

20 ನಾನು ಯಾವಾಗ್ಲೂ ನಿನ್ನ ತೀರ್ಪಿಗಾಗಿ ಹಾತೊರಿತಾ ಇರ್ತಿನಿ,

ಅದರ ಗುಂಗು ನನ್ನನ್ನ ನುಂಗಿಹಾಕ್ತಿದೆ.

21 ನೀನು ಗರ್ವಿಷ್ಠರನ್ನ,

ನಿನ್ನ ಆಜ್ಞೆಗಳಿಂದ ದೂರಹೋಗಿರೋ ಶಾಪಗ್ರಸ್ತರನ್ನ ಗದರಿಸ್ತೀಯ.+

22 ಅವಮಾನ, ಅಣಕಿಸೋ ಮಾತನ್ನ ನನ್ನಿಂದ ದೂರಮಾಡು,*

ಯಾಕಂದ್ರೆ ನೀನು ನನಗೆ ನೆನಪಿಸಿದ್ದನ್ನೆಲ್ಲ ನಾನು ಪಾಲಿಸಿದ್ದೀನಿ.

23 ನಾಯಕರು ಒಟ್ಟಾಗಿ ಕೂತು, ನನ್ನ ವಿರುದ್ಧ ಮಾತಾಡ್ತಿರೋವಾಗ್ಲೂ,

ನಿನ್ನ ಸೇವಕನಾದ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.*

24 ನಿನ್ನ ಎಚ್ಚರಿಕೆಗಳು ನನಗೆ ತುಂಬ ಇಷ್ಟ,+

ಅವು ನನಗೆ ಸಲಹೆಗಾರರ ತರ ಇವೆ.+

ד [ಡಾಲತ್‌]

25 ನಾನು ಧೂಳಿನಲ್ಲಿ ಮುಖ ಕೆಳಗೆ ಮಾಡ್ಕೊಂಡು ಬಿದ್ದಿದ್ದೀನಿ.+

ನಿನ್ನ ಮಾತಿನ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು.+

26 ನಾನು ಏನೆಲ್ಲ ಮಾಡ್ತೀನಿ ಅಂತ ನಿಂಗೆ ಹೇಳ್ದೆ, ನೀನು ನನಗೆ ಉತ್ರ ಕೊಟ್ಟೆ.

ನಿನ್ನ ನಿಯಮಗಳನ್ನ ನನಗೆ ಕಲಿಸು.+

27 ನಿನ್ನ ಆಜ್ಞೆಗಳ ಅರ್ಥವನ್ನ* ನನಗೆ ತಿಳಿಸು,

ಆಗ ನಿನ್ನ ಅದ್ಭುತಗಳ ಬಗ್ಗೆ ನಾನು ತುಂಬ ಆಲೋಚಿಸೋಕೆ ಆಗುತ್ತೆ.*+

28 ದುಃಖದಿಂದ ನನಗೆ ನಿದ್ದೆನೇ ಬರ್ತಿಲ್ಲ.

ನೀನು ಮಾತು ಕೊಟ್ಟ ಹಾಗೆ ನನ್ನನ್ನ ಬಲಪಡಿಸು.

29 ಮೋಸದ ದಾರಿಯನ್ನ ನನ್ನಿಂದ ದೂರ ಮಾಡು,+

ನಿನ್ನ ನಿಯಮ ಪುಸ್ತಕವನ್ನ ಕಲಿಸಿ ಕೃಪೆ ತೋರಿಸು.

30 ನಾನು ನಂಬಿಗಸ್ತಿಕೆಯ ದಾರಿ ಆರಿಸ್ಕೊಂಡೆ.+

ನಿನ್ನ ತೀರ್ಪುಗಳು ಸರಿಯಾಗೇ ಇವೆ ಅಂತ ನಾನು ತಿಳ್ಕೊಂಡೆ.

31 ನಿನ್ನ ಎಚ್ಚರಿಕೆಗಳನ್ನ ತಬ್ಬಿಕೊಳ್ತೀನಿ.+

ಯೆಹೋವ, ನನಗೆ ನಿರಾಸೆ ಆಗದ ಹಾಗೆ ನೋಡ್ಕೊ.*+

32 ನಾನು ನಿನ್ನ ಆಜ್ಞೆಗಳ ದಾರಿಯಲ್ಲಿ ತುಂಬ ಆಸೆಪಟ್ಟು ನಡೀತೀನಿ*

ಯಾಕಂದ್ರೆ ನೀನು ನನ್ನ ಹೃದಯದಲ್ಲಿ ಅದಕ್ಕಾಗಿ ಒಂದು ಮನೆ ಮಾಡಿದ್ದೀಯ.*

ה [ಹೆ]

33 ಯೆಹೋವನೇ, ನಿನ್ನ ನಿಯಮಗಳ ಬಗ್ಗೆ ನನಗೆ ಕಲಿಸು,+

ಕೊನೆ ತನಕ ನಾನು ಅದನ್ನ ಪಾಲಿಸ್ತೀನಿ.+

34 ನಿನ್ನ ನಿಯಮ ಪುಸ್ತಕವನ್ನ ಪಾಲಿಸೋಕೆ,

ಅದರ ಪ್ರಕಾರ ಪೂರ್ಣಹೃದಯದಿಂದ ನಡಿಯೋಕೆ

ನನಗೆ ಬುದ್ಧಿ ಕೊಡು.

35 ನಿನ್ನ ಆಜ್ಞೆಗಳ ದಾರಿಯಲ್ಲಿ ನನ್ನನ್ನ ನಡಿಸು,*+

ಯಾಕಂದ್ರೆ ಅದ್ರಲ್ಲಿ ನನಗೆ ತುಂಬ ಖುಷಿ ಸಿಗುತ್ತೆ.

36 ನನ್ನ ಹೃದಯ ಸ್ವಾರ್ಥ ಲಾಭದ ಕಡೆಗಲ್ಲ,+

ನಿನ್ನ ಎಚ್ಚರಿಕೆಗಳ ಕಡೆ ವಾಲೋ ತರ ಮಾಡು.

37 ಅಯೋಗ್ಯ ವಿಷ್ಯಗಳನ್ನ ನೋಡದ ಹಾಗೆ ನನ್ನ ದೃಷ್ಟಿಯನ್ನ ಪಕ್ಕಕ್ಕೆ ತಿರುಗಿಸು,+

ನಾನು ಜೀವಂತವಾಗಿರೋ ಹಾಗೆ ನಿನ್ನ ದಾರಿಗಳಲ್ಲಿ ನನ್ನನ್ನ ನಡಿಸು.

38 ನಿನ್ನ ಸೇವಕನಿಗೆ ಕೊಟ್ಟ* ಮಾತನ್ನ* ಉಳಿಸ್ಕೊ,

ಆಗ ಜನ್ರು ನಿನ್ನ ಮಾತು ಕೇಳ್ತಾರೆ.

39 ನಾನು ಭಯಪಡೋ ಅಣಕಿಸೋ ಮಾತುಗಳನ್ನ ನನ್ನಿಂದ ದೂರಮಾಡು,

ಯಾಕಂದ್ರೆ ನಿನ್ನ ತೀರ್ಪುಗಳು ಅತ್ಯುತ್ತಮ.+

40 ನಿನ್ನ ಆಜ್ಞೆಗಳಿಗಾಗಿ ನಾನು ಹೇಗೆ ಹಾತೊರಿತೀನಿ ಅಂತ ನೋಡು.

ನಿನ್ನ ನೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು.

ו [ವಾವ್‌]

41 ಯೆಹೋವ, ನಿನ್ನ ಶಾಶ್ವತ ಪ್ರೀತಿಯನ್ನ,+

ನೀನು ಮಾತು ಕೊಟ್ಟ ಹಾಗೆ ನೀನು ರಕ್ಷಿಸೋದನ್ನ ನನಗೆ ನೋಡೋಕೆ ಬಿಡು.+

42 ಆಗ ನಾನು ನನ್ನನ್ನ ಕೆಣಕೋರಿಗೆ ಉತ್ರ ಕೊಡ್ತೀನಿ,

ಯಾಕಂದ್ರೆ ನಾನು ನಿನ್ನ ಮಾತಲ್ಲಿ ಭರವಸೆ ಇಟ್ಟಿದ್ದೀನಿ.

43 ನನ್ನ ಬಾಯಿಂದ ಸತ್ಯದ ಮಾತುಗಳನ್ನ ಪೂರ್ತಿಯಾಗಿ ತೆಗಿದುಬಿಡಬೇಡ,

ಯಾಕಂದ್ರೆ ನಾನು ನಿನ್ನ ತೀರ್ಪಲ್ಲಿ ನಿರೀಕ್ಷೆ ಇಟ್ಟಿದ್ದೀನಿ.*

44 ನಾನು ನಿನ್ನ ನಿಯಮ ಪುಸ್ತಕವನ್ನ ಯಾವಾಗ್ಲೂ ಪಾಲಿಸ್ತೀನಿ,

ಸದಾಕಾಲಕ್ಕೂ ಅದ್ರ ಪ್ರಕಾರ ನಡಿತೀನಿ.+

45 ನಿನ್ನ ಆಜ್ಞೆಗಳಿಗಾಗಿ ನಾನು ಹುಡುಕೋದ್ರಿಂದ

ಸುರಕ್ಷಿತವಾದ* ಜಾಗದಲ್ಲಿ ನಡೆದಾಡ್ತೀನಿ.+

46 ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ರಾಜರ ಮುಂದೆ ಮಾತಾಡ್ತೀನಿ,

ನಾಚಿಕೆಪಡಲ್ಲ.+

47 ನನಗೆ ನಿನ್ನ ಆಜ್ಞೆಗಳು ಅಚ್ಚುಮೆಚ್ಚು,

ಹೌದು, ಅವಂದ್ರೆ ನನಗೆ ತುಂಬ ಇಷ್ಟ.+

48 ನಾನು ನನ್ನ ಕೈಯೆತ್ತಿ ನಿನಗೆ ಪ್ರಾರ್ಥಿಸ್ತೀನಿ,

ಯಾಕಂದ್ರೆ ನಿನ್ನ ಆಜ್ಞೆಗಳನ್ನ ನಾನು ಪ್ರೀತಿಸ್ತೀನಿ.+

ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+

ז [ಜಯಿನ್‌]

49 ನಿನ್ನ ಸೇವಕನಾದ ನನಗೆ ಕೊಟ್ಟ ಮಾತನ್ನ ನೆನಪಿಸ್ಕೊ,

ಅದ್ರಿಂದ ನೀನು ನನಗೆ ನಿರೀಕ್ಷೆ ಕೊಟ್ಟೆ.*

50 ಕಷ್ಟಕಾರ್ಪಣ್ಯಗಳಲ್ಲಿ ಅದೇ ನನ್ನನ್ನ ಸಂತೈಸುತ್ತೆ,+

ಯಾಕಂದ್ರೆ ನಿನ್ನ ಮಾತಿಂದಾನೇ ನಾನಿನ್ನೂ ಜೀವಂತವಾಗಿ ಇರೋದು.

51 ಅಹಂಕಾರಿಗಳು ನನ್ನನ್ನ ಎಷ್ಟೇ ಅಣಕಿಸಿದ್ರೂ

ನಾನು ನಿನ್ನ ನಿಯಮ ಪುಸ್ತಕವನ್ನ ಬಿಟ್ಟು ದೂರ ಹೋಗಲ್ಲ.+

52 ಯೆಹೋವನೇ, ಹಳೇ ಕಾಲದಲ್ಲಿ ನೀನು ಕೊಟ್ಟ ತೀರ್ಪುಗಳನ್ನೂ ನಾನು ನೆನಪಿಸಿಕೊಳ್ತೀನಿ,+

ಅದ್ರಿಂದ ನನಗೆ ನೆಮ್ಮದಿ ಸಿಗುತ್ತೆ.+

53 ನಿನ್ನ ನಿಯಮ ಪುಸ್ತಕವನ್ನ ತೊರೆದುಬಿಟ್ಟಿರೋ ಕೆಟ್ಟವರನ್ನ ನೋಡಿ

ನಾನು ತುಂಬ ಕೋಪದಿಂದ ಕುದೀತಾ ಇದ್ದೀನಿ.+

54 ನಾನು ಎಲ್ಲೇ ಇದ್ರೂ*

ನಿನ್ನ ನಿಯಮಗಳು ನನಗೆ ಮಧುರ ಗೀತೆಗಳು.

55 ಯೆಹೋವನೇ, ನಿನ್ನ ನಿಯಮ ಪುಸ್ತಕವನ್ನ ಪಾಲಿಸಬೇಕಂತ

ರಾತ್ರಿ ಹೊತ್ತಲ್ಲಿ ನಾನು ನಿನ್ನ ಹೆಸ್ರನ್ನ ನೆನಪಿಸ್ಕೊಳ್ತೀನಿ.+

56 ನಾನು ನಿನ್ನ ಆಜ್ಞೆಗಳನ್ನ ಪಾಲಿಸೋದ್ರಿಂದ

ಇದು ನನಗೆ ರೂಢಿ ಆಗಿಬಿಟ್ಟಿದೆ.

ח [ಹೆತ್‌]

57 ಯೆಹೋವನೇ, ನೀನೇ ನನ್ನ ಆಸ್ತಿ.+

ನಾನು ನಿನ್ನ ಮಾತುಗಳನ್ನ ಪಾಲಿಸ್ತೀನಿ ಅಂತ ಮಾತು ಕೊಟ್ಟಿದ್ದೀನಿ.+

58 ಪೂರ್ಣ ಹೃದಯದಿಂದ ನಾನು ನಿನ್ನ ಹತ್ರ ಮನವಿ ಮಾಡ್ಕೊಳ್ತೀನಿ,+

ನೀನು ಮಾತು ಕೊಟ್ಟ ಹಾಗೆ ನನಗೆ ದಯೆ ತೋರಿಸು.+

59 ನಾನು ನನ್ನ ದಾರಿಗಳನ್ನ ಚೆನ್ನಾಗಿ ಪರೀಕ್ಷೆ ಮಾಡ್ತೀನಿ,

ಆಗ ನಿನ್ನ ಎಚ್ಚರಿಕೆಗಳ ಕಡೆ ನನ್ನ ಪಾದವನ್ನ ತಿರುಗಿಸೋಕೆ ಆಗುತ್ತೆ.+

60 ನಾನು ನಿನ್ನ ಆಜ್ಞೆಗಳನ್ನ

ತಕ್ಷಣ ಪಾಲಿಸ್ತೀನಿ, ತಡಮಾಡಲ್ಲ.+

61 ದುಷ್ಟನ ಹಗ್ಗಗಳು ನನ್ನನ್ನ ಸುತ್ಕೊಂಡ್ರೂ

ನಾನು ನಿನ್ನ ನಿಯಮ ಪುಸ್ತಕವನ್ನ ಮರಿಯಲ್ಲ.+

62 ನಿನ್ನ ನೀತಿಯ ತೀರ್ಪುಗಳಿಗಾಗಿ

ನಾನು ಮಧ್ಯರಾತ್ರಿ ಎದ್ದು ನಿನಗೆ ಧನ್ಯವಾದ ಹೇಳ್ತೀನಿ.+

63 ಯಾರೆಲ್ಲ ನಿನಗೆ ಭಯಪಡ್ತಾರೋ

ಯಾರೆಲ್ಲ ನಿನ್ನ ಆಜ್ಞೆಗಳನ್ನ ಪಾಲಿಸ್ತಾರೋ ಅವ್ರಿಗೆಲ್ಲ ನಾನು ಸ್ನೇಹಿತ.+

64 ಯೆಹೋವ, ನಿನ್ನ ಶಾಶ್ವತ ಪ್ರೀತಿ ಇಡೀ ಭೂಮಿಯನ್ನ ತುಂಬಿಕೊಳ್ಳುತ್ತೆ.+

ನಿನ್ನ ನಿಯಮಗಳನ್ನ ನನಗೆ ಕಲಿಸು.

ט [ಟೆತ್‌]

65 ಯೆಹೋವನೇ, ನೀನು ಮಾತು ಕೊಟ್ಟ ಹಾಗೆ

ನಿನ್ನ ಸೇವಕನಾದ ನನಗೆ ಒಳ್ಳೇದನ್ನೇ ಮಾಡಿದೆ.

66 ನಾನು ನಿನ್ನ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೀನಿ

ಹಾಗಾಗಿ ನನಗೆ ಒಳ್ಳೇ ಬುದ್ಧಿ ಕೊಡು, ಜ್ಞಾನವನ್ನ ಕಲಿಸು.+

67 ಗೊತ್ತಿಲ್ಲದೆ ಪಾಪಮಾಡಿ ನಾನು ಕಷ್ಟಪಟ್ಟೆ,

ಆದ್ರೆ ಈಗ ನಾನು ನಿನ್ನ ಮಾತುಗಳನ್ನ ಪಾಲಿಸ್ತಿದ್ದೀನಿ.+

68 ನೀನು ಒಳ್ಳೆಯವನು,+ ನೀನು ಮಾಡೋದೆಲ್ಲ ಒಳ್ಳೇದೇ.

ನಿನ್ನ ನಿಯಮಗಳನ್ನು ನನಗೆ ಕಲಿಸು.+

69 ಗರ್ವಿಷ್ಠರು ನನ್ನ ಬಗ್ಗೆ ಸುಳ್ಳು ಹೇಳಿ ನನ್ನ ಹೆಸ್ರಿಗೆ ಮಸಿ ಬಳಿದಿದ್ದಾರೆ,

ಆದ್ರೂ ನಾನು ನನ್ನ ಪೂರ್ಣ ಹೃದಯದಿಂದ ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.

70 ಅವ್ರ ಹೃದಯ ಕಲ್ಲಿನ ತರ ಇದೆ,*+

ಆದ್ರೆ ನನಗೆ ನಿನ್ನ ನಿಯಮ ಪುಸ್ತಕ ಅಂದ್ರೆ ತುಂಬ ಪ್ರೀತಿ.+

71 ನನಗೆ ಕಷ್ಟಗಳು ಬಂದಿದ್ದು ಒಳ್ಳೇದೇ ಆಯ್ತು,+

ಅದ್ರಿಂದ ನಾನು ನಿನ್ನ ನಿಯಮಗಳನ್ನ ಕಲಿಯೋಕಾಯ್ತು.

72 ಬೆಳ್ಳಿ ಬಂಗಾರದ ಸಾವಿರಾರು ತುಂಡುಗಳಿಗಿಂತ,+

ನೀನು ಹೇಳಿರೋ ನಿಯಮಗಳೇ ನನಗೆ ಒಳ್ಳೇದು.+

י [ಯೋದ್‌]

73 ನಿನ್ನ ಕೈಗಳು ನನ್ನನ್ನ ಮಾಡಿದ್ವು, ನನ್ನನ್ನ ಸೃಷ್ಟಿಸಿದ್ವು.

ನಿನ್ನ ಆಜ್ಞೆಗಳನ್ನ ಕಲಿತುಕೊಳ್ಳೋಕೆ,

ನನಗೆ ಬುದ್ಧಿ ಕೊಡು.+

74 ನಿನಗೆ ಭಯಪಡೋರು ನನ್ನನ್ನ ನೋಡಿ ಖುಷಿಪಡ್ತಾರೆ,

ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.*+

75 ಯೆಹೋವ, ನಿನ್ನ ತೀರ್ಪುಗಳಲ್ಲಿ ನೀತಿ ಇದೆ+ ಅಂತ,

ನನ್ನನ್ನ ಶಿಕ್ಷಿಸೋ ಮೂಲಕ ನೀನು ನಿನ್ನ ನಂಬಿಗಸ್ತಿಕೆಯನ್ನ ತೋರಿಸಿದ್ದೀಯ ಅಂತ ನಂಗೊತ್ತು.+

76 ನಿನ್ನ ಸೇವಕನಾದ ನನಗೆ ನೀನು ಕೊಟ್ಟ ಮಾತಿನ ಪ್ರಕಾರ,

ನಿನ್ನ ಶಾಶ್ವತ ಪ್ರೀತಿಯಿಂದ+ ದಯವಿಟ್ಟು ಸಂತೈಸು.

77 ನಾನು ಜೀವಂತವಾಗಿ ಇರೋಕೆ ನೀನು ನನಗೆ ಕರುಣೆ ತೋರಿಸು,+

ಯಾಕಂದ್ರೆ ನನಗೆ ನಿನ್ನ ನಿಯಮಗಳು ಅಂದ್ರೆ ತುಂಬ ಪ್ರೀತಿ.+

78 ಗರ್ವಿಷ್ಠರಿಗೆ ಅವಮಾನ ಆಗಲಿ,

ಯಾಕಂದ್ರೆ ಸುಮ್ಮಸುಮ್ಮನೇ* ಅವರು ನನಗೆ ತೊಂದರೆ ಕೊಡ್ತಾರೆ.

ಆದ್ರೆ ನಾನು ನಿನ್ನ ಆಜ್ಞೆಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+

79 ನಿನಗೆ ಭಯಪಡೋರು,

ನಿನ್ನ ಎಚ್ಚರಿಕೆಗಳ ಬಗ್ಗೆ ತಿಳ್ಕೊಂಡಿರೋರು,

ನನ್ನ ಹತ್ರ ವಾಪಸ್‌ ಬರಲಿ.

80 ನಿನ್ನ ನಿಯಮಗಳನ್ನ ಪಾಲಿಸೋದ್ರಲ್ಲಿ ನನ್ನ ಹೃದಯ ನಿಷ್ಕಂಳಕವಾಗಿರಲಿ,+

ಆಗ ನನಗೆ ಅವಮಾನ ಆಗಲ್ಲ.+

כ [ಕಾಫ್‌]

81 ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,+

ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.

82 ನನ್ನ ಕಣ್ಣು ನಿನ್ನ ಮಾತಿಗಾಗಿ ಕಾಯ್ತವೆ,+

“ನನಗೆ ಯಾವಾಗ ಸಮಾಧಾನ ಮಾಡ್ತೀಯ?” ಅಂತ ನಾನು ನಿನ್ನನ್ನ ಕೇಳ್ತೀನಿ.+

83 ಹೊಗೆಯಲ್ಲಿ ಒಣಗಿಸಿದ ಚರ್ಮದ ಬುದ್ದಲಿ ತರ ನಾನಿದ್ದೀನಿ,

ಆದ್ರೂ ನಾನು ನಿನ್ನ ನಿಯಮಗಳನ್ನ ಮರಿಯಲ್ಲ.+

84 ನನಗೆ ಹಿಂಸೆ ಕೊಡ್ತಾ ಇರೋರಿಗೆ ನೀನು ಯಾವಾಗ ಶಿಕ್ಷೆ ಕೊಡ್ತೀಯಾ?

ನಿನ್ನ ಸೇವಕನಾದ ನಾನು ಇನ್ನೆಷ್ಟು ದಿನ ಕಾಯಬೇಕು?+

85 ನಿನ್ನ ನಿಯಮ ಪುಸ್ತಕವನ್ನ ಮೀರಿ ನಡಿಯೋ ದುರಹಂಕಾರಿಗಳು,

ನನಗೆ ಗುಂಡಿ ತೋಡ್ತಾರೆ.

86 ನಿನ್ನ ಆಜ್ಞೆಗಳಲ್ಲಿ ಭರವಸೆ ಇಡಬಹುದು.

ಸುಮ್ಮಸುಮ್ಮನೇ ಜನ್ರು ನನಗೆ ಕಿರುಕುಳ ಕೊಡ್ತಾರೆ, ನನಗೆ ಸಹಾಯಮಾಡು!+

87 ಅವರು ನನ್ನನ್ನ ಭೂಮಿಯಿಂದ ಬೇರು ಸಮೇತ ಕಿತ್ತುಹಾಕಿದ್ರೂ,

ನಾನು ನಿನ್ನ ಅಪ್ಪಣೆಗಳನ್ನ ಬಿಟ್ಟುಬಿಡಲಿಲ್ಲ.

88 ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸೋಕೆ ಆಗೋ ಹಾಗೆ,

ನಿನ್ನ ಶಾಶ್ವತ ಪ್ರೀತಿಯಿಂದ ನನ್ನ ಪ್ರಾಣವನ್ನ ಕಾಪಾಡು.

ל [ಲಾಮೆದ್‌]

89 ಯೆಹೋವ,

ನಿನ್ನ ವಾಕ್ಯ ನಿಜವಾಗ್ಲೂ ಸದಾಕಾಲ ಸ್ವರ್ಗದಲ್ಲಿರುತ್ತೆ.+

90 ನಿನ್ನ ನಂಬಿಗಸ್ತಿಕೆ ತಲತಲಾಂತರಗಳ ತನಕ ಇರುತ್ತೆ.+

ನೀನು ಭೂಮಿಯನ್ನ ಸ್ಥಿರವಾಗಿ ಸ್ಥಾಪಿಸಿದ್ದೀಯ, ಹಾಗಾಗಿ ಅದು ಇವತ್ತೂ ಕದಲದೆ ನಿಂತಿದೆ.+

91 ನಿನ್ನ ತೀರ್ಪಿಂದಾಗಿ ನೀನು ಸೃಷ್ಟಿ ಮಾಡಿದ್ದೆಲ್ಲ ಹಾಗೇ ಇವೆ,

ಯಾಕಂದ್ರೆ ಅವೆಲ್ಲ ನಿನ್ನ ಸೇವೆ ಮಾಡುತ್ತವೆ.

92 ನಿನ್ನ ನಿಯಮಗಳ ಮೇಲೆ ನನಗೆ ಪ್ರೀತಿ ಇಲ್ಲದೆ ಹೋಗಿದ್ರೆ,

ನಾನು ನನ್ನ ಕಷ್ಟದಲ್ಲೇ ಸತ್ತು ಹೋಗ್ತಿದ್ದೆ.+

93 ನಾನು ನಿನ್ನ ಆಜ್ಞೆಗಳನ್ನ ಯಾವತ್ತೂ ಮರಿಯಲ್ಲ,

ಯಾಕಂದ್ರೆ ನೀನು ನನ್ನನ್ನ ಜೀವಂತವಾಗಿ ಇಟ್ಟಿರೋದು ಅವುಗಳಿಂದಾನೇ.+

94 ನಾನು ನಿನ್ನವನು, ನನ್ನನ್ನ ರಕ್ಷಿಸು,+

ಯಾಕಂದ್ರೆ ನಿನ್ನ ಆಜ್ಞೆಗಳಿಗಾಗಿ ನಾನು ಹುಡುಕಾಡಿದೆ.+

95 ಕೆಟ್ಟವರು ನನ್ನನ್ನ ನಾಶಮಾಡೋಕೆ ಕಾಯ್ತಾ ಇದ್ದಾರೆ,

ಆದ್ರೆ ನನ್ನ ಸಂಪೂರ್ಣ ಗಮನ ನಿನ್ನ ಎಚ್ಚರಿಕೆಗಳ ಮೇಲಿದೆ.

96 ಎಲ್ಲ ಪರಿಪೂರ್ಣತೆಗೂ ಒಂದು ಮಿತಿ ಇರೋದನ್ನ ನಾನು ನೋಡಿದ್ದೀನಿ,

ಆದ್ರೆ ನಿನ್ನ ಆಜ್ಞೆಗಳಿಗೆ ಮಿತಿನೇ* ಇಲ್ಲ.

מ [ಮೆಮ್‌]

97 ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!+

ಇಡೀ ದಿನ ನಾನು ಅದ್ರ ಬಗ್ಗೆ ತುಂಬ ಆಲೋಚಿಸ್ತೀನಿ.+

98 ನಿನ್ನ ಆಜ್ಞೆಗಳಿಂದಾಗಿ ನಾನು ನನ್ನ ವಿರೋಧಿಗಳಿಗಿಂತ ಹೆಚ್ಚು ವಿವೇಕಿ ಆಗಿದ್ದೀನಿ,+

ಯಾಕಂದ್ರೆ ನಿನ್ನ ಆಜ್ಞೆಗಳು ಯಾವಾಗ್ಲೂ ನನ್ನ ಜೊತೆ ಇರುತ್ತೆ.

99 ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ* ಇದೆ,+

ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ.

100 ವಯಸ್ಸಾದವರಿಗಿಂತ ಬುದ್ಧಿವಂತನಾಗಿ ನಾನು ನಡ್ಕೊತೀನಿ,

ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.

101 ನಿನ್ನ ವಾಕ್ಯ ಪಾಲಿಸಬೇಕಂತ,

ನಾನು ಯಾವ ಕೆಟ್ಟ ದಾರಿಯಲ್ಲೂ ನಡಿಯಲ್ಲ.+

102 ನಿನ್ನ ತೀರ್ಪುಗಳಿಂದ ದೂರ ಹೋಗಲ್ಲ,

ಯಾಕಂದ್ರೆ ನೀನೇ ನನಗೆ ಕಲಿಸಿದ್ದೀಯ.

103 ನಿನ್ನ ಮಾತುಗಳು ನನ್ನ ನಾಲಿಗೆಗೆ ಎಷ್ಟೋ ಸಿಹಿಯಾಗಿವೆ,

ಜೇನಿಗಿಂತ ಮಧುರವಾಗಿವೆ.+

104 ನಿನ್ನ ಆಜ್ಞೆಗಳಿಂದಾಗಿ ನಾನು ಬುದ್ಧಿವಂತನಾಗಿ ನಡ್ಕೊತೀನಿ.+

ಅದಕ್ಕೇ ಕೆಟ್ಟ ದಾರಿಯನ್ನ ದ್ವೇಷಿಸ್ತೀನಿ.+

נ [ನೂನ್‌]

105 ನಿನ್ನ ವಾಕ್ಯ ನನ್ನ ಕಾಲಿಗೆ ದೀಪ,

ನನ್ನ ದಾರಿಗೆ ಬೆಳಕು.+

106 ನಿನ್ನ ನೀತಿಯ ತೀರ್ಪುಗಳನ್ನ ಒಪ್ಕೊಳ್ತೀನಿ,

ಅವನ್ನ ಪಾಲಿಸ್ತೀನಿ ಅಂತ ನಾನು ಮಾತುಕೊಟ್ಟಿದ್ದೀನಿ.

107 ನಾನು ತುಂಬ ಕಷ್ಟಪಟ್ಟಿದ್ದೀನಿ.+

ಯೆಹೋವ, ಕೊಟ್ಟ ಮಾತಿನ ಹಾಗೆ ನನ್ನ ಪ್ರಾಣ ಕಾಪಾಡು.+

108 ಯೆಹೋವ, ಮನಸಾರೆ ನಾನು ಕೊಡೋ ಸ್ತುತಿಯ ಕಾಣಿಕೆಯಲ್ಲಿ ದಯವಿಟ್ಟು ಆನಂದಿಸು,+

ನಿನ್ನ ತೀರ್ಪುಗಳನ್ನ ನನಗೆ ಕಲಿಸು.+

109 ನನ್ನ ಜೀವಾನ ನಾನು ಯಾವಾಗ್ಲೂ ಕೈಯಲ್ಲೇ ಹಿಡ್ಕೊಂಡಿರ್ತಿನಿ,*

ಆದ್ರೂ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ.+

110 ಕೆಟ್ಟವರು ನನಗಾಗಿ ಬಲೆ ಬೀಸಿದ್ದಾರೆ,

ಆದ್ರೆ ನಾನು ನಿನ್ನ ಆಜ್ಞೆಗಳನ್ನ ಬಿಟ್ಟು ದೂರ ಸರಿದಿಲ್ಲ.+

111 ನಿನ್ನ ಎಚ್ಚರಿಕೆಗಳನ್ನ ನಾನು ನನ್ನ ಶಾಶ್ವತ ಸೊತ್ತಾಗಿ* ಮಾಡ್ಕೊಂಡಿದ್ದೀನಿ,

ಯಾಕಂದ್ರೆ ಅದ್ರಿಂದ ನನ್ನ ಮನಸ್ಸಿಗೆ ಖುಷಿ ಆಗುತ್ತೆ.+

112 ನಿನ್ನ ನಿಯಮಗಳನ್ನ ಜೀವನಪರ್ಯಂತ ಅನುಸರಿಸಬೇಕಂತ,

ಕೊನೇ ಉಸಿರು ಇರೋ ತನಕ ಪಾಲಿಸಬೇಕಂತ,

ನಾನು ದೃಢನಿಶ್ಚಯ ಮಾಡಿದ್ದೀನಿ.*

ס [ಸಾಮೆಕ್‌]

113 ಅರೆಮನಸ್ಸಿನ ಜನರನ್ನ* ನಾನು ದ್ವೇಷಿಸ್ತೀನಿ,+

ಆದ್ರೆ ನಿನ್ನ ನಿಯಮಗಳನ್ನ ಪ್ರೀತಿಸ್ತೀನಿ.+

114 ನೀನೇ ನನ್ನ ಆಶ್ರಯ, ನನ್ನ ಗುರಾಣಿ,+

ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.+

115 ಕೆಟ್ಟವರೇ, ನಾನು ನನ್ನ ದೇವರ ಆಜ್ಞೆಗಳನ್ನ ಪಾಲಿಸಬೇಕು,

ನನ್ನಿಂದ ದೂರ ಇರಿ.+

116 ನಾನು ಜೀವಿಸ್ತಾ ಇರೋ ಹಾಗೆ,

ನೀನು ಕೊಟ್ಟ ಮಾತಿನ ಪ್ರಕಾರ ನನಗೆ ಆಸರೆಯಾಗು,+

ನನ್ನ ನಿರೀಕ್ಷೆಯನ್ನ ನಿರಾಶೆಯಾಗಿ ಮಾಡಬೇಡ.*+

117 ನನಗೆ ರಕ್ಷಣೆ ಸಿಗೋ ಹಾಗೆ ನನಗೆ ಆಧಾರವಾಗಿ ಇರು,+

ಆಗ ನಾನು ಯಾವಾಗ್ಲೂ ನಿನ್ನ ನಿಯಮಗಳಿಗೆ ಗಮನ ಕೊಡ್ತೀನಿ.+

118 ನಿನ್ನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿದಿರೋ ಜನ್ರನ್ನ ಬಿಟ್ಟುಬಿಡು,+

ಯಾಕಂದ್ರೆ ಅವರು ಸುಳ್ಳುಗಾರರು, ಮೋಸಗಾರರು ಆಗಿದ್ದಾರೆ.

119 ಕೆಲಸಕ್ಕೆ ಬಾರದ ಹೊಲಸನ್ನ ಎಸಿಯೋ ಹಾಗೆ ನೀನು ಭೂಮಿಯಲ್ಲಿರೋ ಎಲ್ಲ ಕೆಟ್ಟವರನ್ನ ಎಸೆದುಬಿಡ್ತೀಯ.+

ಅದಕ್ಕೇ ನಿನ್ನ ಎಚ್ಚರಿಕೆಗಳು ಅಂದ್ರೆ ನನಗಿಷ್ಟ.

120 ನಿನ್ನ ಭಯದಿಂದ ನನ್ನ ಶರೀರ ನಡುಗುತ್ತೆ,

ನಿನ್ನ ತೀರ್ಪುಗಳ ಬಗ್ಗೆ ನಾನು ಹೆದರ್ತೀನಿ.

ע [ಅಯಿನ್‌]

121 ನಾನು ನ್ಯಾಯನೀತಿಯಿಂದ ನಡ್ಕೊಂಡಿದ್ದೀನಿ.

ನನ್ನ ಮೇಲೆ ದಬ್ಬಾಳಿಕೆ ಮಾಡೋ ಕೈಗೆ ನನ್ನನ್ನ ಒಪ್ಪಿಸಬೇಡ!

122 ನಿನ್ನ ಸೇವಕನಾದ ನನಗೆ ಸುಖನೆಮ್ಮದಿ ಇರುತ್ತೆ ಅಂತ ಭರವಸೆಕೊಡು,

ಗರ್ವಿಷ್ಠರು ನನ್ನ ಮೇಲೆ ದಬ್ಬಾಳಿಕೆ ಮಾಡದ ಹಾಗೆ ನೋಡ್ಕೊ.

123 ನೀನು ಕೊಡೋ ರಕ್ಷಣೆಗಾಗಿ, ನಿನ್ನ ನೀತಿಯ ಮಾತಿಗಾಗಿ* ಕಾದುಕಾದು ನನ್ನ ಕಣ್ಣುಗಳು ಸೋತುಹೋಗಿವೆ.+

124 ನಿನ್ನ ಸೇವಕನಾದ ನನಗೆ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು,+

ನಿನ್ನ ನಿಯಮಗಳನ್ನ ಕಲಿಸು.+

125 ನಾನು ನಿನ್ನ ಸೇವಕ,

ನಿನ್ನ ಎಚ್ಚರಿಕೆಗಳನ್ನ ತಿಳ್ಕೊಳ್ಳೋಕೆ ನನಗೆ ಬುದ್ಧಿ ಕೊಡು.+

126 ಯೆಹೋವ, ನೀನು ಹೆಜ್ಜೆ ತಗೊಳ್ಳೋ ಸಮ್ಯ ಬಂದಿದೆ,+

ಯಾಕಂದ್ರೆ ಅವರು ನಿನ್ನ ನಿಯಮಗಳನ್ನ ಮೀರಿ ನಡೆದಿದ್ದಾರೆ.

127 ಹಾಗಾಗಿ ಚಿನ್ನಕ್ಕಿಂತ, ಹೌದು ಅಪ್ಪಟ* ಚಿನ್ನಕ್ಕಿಂತ ಜಾಸ್ತಿ

ನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ.+

128 ಅದಕ್ಕೇ ನಾನು ನಿನ್ನ ಎಲ್ಲ ಮಾರ್ಗದರ್ಶನಗಳನ್ನ* ಸರಿ ಅಂತ ಒಪ್ಕೊತೀನಿ.+

ಎಲ್ಲ ತಪ್ಪು ದಾರಿಗಳನ್ನ ನಾನು ದ್ವೇಷಿಸ್ತೀನಿ.+

פ [ಪೇ]

129 ನಿನ್ನ ಎಚ್ಚರಿಕೆಗಳು ಅದ್ಭುತ,

ಹಾಗಾಗೇ ನಾನು ಅವುಗಳನ್ನ ಪಾಲಿಸ್ತೀನಿ.

130 ನಿನ್ನ ವಾಕ್ಯದ ನಿಜವಾದ ಅರ್ಥ ಗೊತ್ತಾದಾಗ ಬೆಳಕು ಸಿಗುತ್ತೆ,+

ಅದು ಅನುಭವ ಇಲ್ಲದವನಿಗೆ ಬುದ್ಧಿ ಕೊಡುತ್ತೆ.+

131 ನಾನು ನನ್ನ ಬಾಯನ್ನ ಅಗಲವಾಗಿ ತೆಗೆದು ನಿಟ್ಟುಸಿರು* ಬಿಟ್ಟೆ,

ಯಾಕಂದ್ರೆ ನಾನು ನಿನ್ನ ಆಜ್ಞೆಗಳಿಗಾಗಿ ಹಾತೊರಿತಾ ಇದ್ದೀನಿ.+

132 ನಿನ್ನ ಹೆಸ್ರನ್ನ ಪ್ರೀತಿಸೋರ+ ಜೊತೆ ಹೇಗೆ ನಡ್ಕೊಬೇಕು ಅಂತ ನಿನ್ನ ನಿಯಮ ಇದೆಯೋ

ಅದೇ ತರ ನನ್ನ ಕಡೆ ತಿರುಗಿ, ನನ್ನ ಮೇಲೆ ದಯೆ ತೋರಿಸು.+

133 ನಿನ್ನ ಮಾತಿಂದ ನನ್ನನ್ನ ಮಾರ್ಗದರ್ಶಿಸು,*

ಯಾವ ಕೆಟ್ಟ ವಿಷ್ಯಗಳೂ ನನ್ನನ್ನ ನಿಯಂತ್ರಿಸದ ಹಾಗೆ ನೋಡ್ಕೊ.+

134 ದಬ್ಬಾಳಿಕೆ ಮಾಡೋರಿಂದ ನನ್ನನ್ನ ಬಿಡಿಸು,

ಆಗ ನಾನು ನಿನ್ನ ಅಪ್ಪಣೆಗಳನ್ನ ಪಾಲಿಸ್ತೀನಿ.

135 ನಿನ್ನ ಮುಖದ ಕಾಂತಿ* ನಿನ್ನ ಸೇವಕನ ಮೇಲೆ ಪ್ರಕಾಶಿಸೋ ಹಾಗೆ ಮಾಡು,+

ನಿನ್ನ ನಿಯಮಗಳನ್ನ ನನಗೆ ಕಲಿಸು.

136 ನನ್ನ ಕಣ್ಣಿಂದ ಕಣ್ಣೀರ ಧಾರೆ ಹರೀತಿದೆ.

ಯಾಕಂದ್ರೆ ಜನ್ರು ನಿನ್ನ ನಿಯಮಗಳನ್ನ ಪಾಲಿಸ್ತಿಲ್ಲ.+

צ [ಸಾದೆ]

137 ಯೆಹೋವನೇ, ನೀನು ನೀತಿವಂತ,+

ನಿನ್ನ ತೀರ್ಪುಗಳು ನ್ಯಾಯವಾಗಿವೆ.+

138 ನಿನ್ನ ಎಚ್ಚರಿಕೆಗಳಲ್ಲಿ ನೀತಿ ಇದೆ,

ಅವುಗಳನ್ನ ಪೂರ್ತಿ ನಂಬಬಹುದು.

139 ನಿನ್ನ ಮೇಲೆ ನನಗಿರೋ ಭಕ್ತಿ ನನ್ನೊಳಗೆ ಬೆಂಕಿ ತರ ಹೊತ್ತಿ ಉರೀತಿದೆ,+

ಯಾಕಂದ್ರೆ ನನ್ನ ಶತ್ರುಗಳು ನಿನ್ನ ಮಾತನ್ನ ಮರೆತು ಹೋಗಿದ್ದಾರೆ.

140 ನಿನ್ನ ಮಾತು ತುಂಬ ಶುದ್ಧ,+

ನಿನ್ನ ಸೇವಕ ಅದನ್ನ ಪ್ರೀತಿಸ್ತಾನೆ.+

141 ನಾನು ಏನೂ ಅಲ್ಲ, ಕೀಳಾಗಿದ್ದೀನಿ,+

ಆದ್ರೂ ನಾನು ನಿನ್ನ ಆಜ್ಞೆಗಳನ್ನ ಮರೆತಿಲ್ಲ.

142 ನಿನ್ನ ನೀತಿ ಯಾವಾಗ್ಲೂ ಇರುತ್ತೆ,+

ನಿನ್ನ ನಿಯಮ ಪುಸ್ತಕ ಸತ್ಯ.+

143 ಕಷ್ಟಕಾರ್ಪಣ್ಯಗಳು ನನ್ನ ಮೇಲೆ ಬಂದ್ರೂ,

ನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ.

144 ನಿನ್ನ ಎಚ್ಚರಿಕೆಗಳಲ್ಲಿ ಯಾವಾಗ್ಲೂ ನೀತಿ ಇರುತ್ತೆ,

ನಾನು ಜೀವಿಸ್ತಾ ಇರೋಕೆ ನನಗೆ ಬುದ್ಧಿ ಕೊಡು.+

ק [ಕೊಫ್‌]

145 ಯೆಹೋವನೇ, ಪೂರ್ಣಹೃದಯದಿಂದ ನಾನು ನಿನಗೆ ಪ್ರಾರ್ಥಿಸ್ತೀನಿ. ನನಗೆ ಉತ್ರಕೊಡು.

ನಿನ್ನ ನಿಯಮಗಳನ್ನ ನಾನು ಪಾಲಿಸ್ತೀನಿ.

146 ನಾನು ನಿನಗೆ ಮೊರೆ ಇಡ್ತೀನಿ, ನನ್ನನ್ನ ಕಾಪಾಡು!

ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸ್ತೀನಿ.

147 ಸಹಾಯಕ್ಕಾಗಿ ಮೊರೆ ಇಡೋಕೆ ನಾನು ಬೆಳಗಾಗೋ ಮುಂಚೆನೇ* ಎದ್ದೆ,+

ಯಾಕಂದ್ರೆ ನಿನ್ನ ಮಾತುಗಳೇ ನನ್ನ ನಿರೀಕ್ಷೆ.

148 ನಿನ್ನ ಮಾತುಗಳ ಬಗ್ಗೆ ಚೆನ್ನಾಗಿ ಆಲೋಚಿಸೋಕೆ,*

ಮಧ್ಯರಾತ್ರಿನೇ ಎದ್ದು ಕೂತೆ.+

149 ನಿನ್ನ ಶಾಶ್ವತ ಪ್ರೀತಿಯ ಕಾರಣ ನನ್ನ ಧ್ವನಿಯನ್ನ ಕೇಳಿಸ್ಕೊ.+

ಯೆಹೋವನೇ, ನಿನ್ನ ನ್ಯಾಯದ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು.

150 ನಾಚಿಕೆಗೆಟ್ಟ ನಡತೆಯವರು* ನನ್ನ ಹತ್ರ ಬರ್ತಿದ್ದಾರೆ,

ಅವರು ನಿನ್ನ ನಿಯಮಗಳಿಂದ ತುಂಬ ದೂರದಲ್ಲಿ ಇದ್ದಾರೆ.

151 ಯೆಹೋವನೇ, ನೀನು ನನಗೆ ಹತ್ರದಲ್ಲಿ ಇದ್ದೀಯ,+

ನಿನ್ನ ಆಜ್ಞೆಗಳೆಲ್ಲ ಸತ್ಯ.+

152 ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ತುಂಬ ಹಿಂದೆನೇ ಕಲಿತ್ಕೊಂಡೆ,

ಅವುಗಳನ್ನ ನೀನು ಶಾಶ್ವತವಾಗಿ ಸ್ಥಾಪಿಸಿದ್ದೀಯ.+

ר [ರೆಶ್‌]

153 ನನ್ನ ಕಷ್ಟಗಳನ್ನ ನೋಡಿ ನನ್ನನ್ನ ಕಾಪಾಡು,+

ಯಾಕಂದ್ರೆ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ.

154 ನನ್ನ ಪರ ವಾದಿಸಿ ನನ್ನನ್ನ ರಕ್ಷಿಸು,+

ನೀನು ಮಾತು ಕೊಟ್ಟ ಹಾಗೆ ನನ್ನ ಪ್ರಾಣವನ್ನ ಕಾಪಾಡು.

155 ರಕ್ಷಣೆ ಕೆಟ್ಟವರಿಂದ ತುಂಬ ದೂರದಲ್ಲಿದೆ,

ಯಾಕಂದ್ರೆ ಅವರು ನಿನ್ನ ನಿಯಮಗಳಿಗಾಗಿ ಹುಡುಕಲಿಲ್ಲ.+

156 ಯೆಹೋವನೇ, ನಿನ್ನ ಕರುಣೆ ತುಂಬ ಶ್ರೇಷ್ಠ.+

ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನ ಪ್ರಾಣನ ಕಾಪಾಡು.

157 ನನ್ನ ಮೇಲೆ ದಬ್ಬಾಳಿಕೆ ಮಾಡೋರು, ನನ್ನ ಶತ್ರುಗಳು ತುಂಬ ಜನ ಇದ್ರೂ,+

ನಿನ್ನ ಎಚ್ಚರಿಕೆಗಳನ್ನ ಬಿಟ್ಟು ನಾನು ಕದಲಲ್ಲ.

158 ನಂಬಿಕೆ ದ್ರೋಹಿಗಳನ್ನ ನೋಡಿ ನನಗೆ ಅಸಹ್ಯ ಆಗುತ್ತೆ,

ಯಾಕಂದ್ರೆ ಅವರು ನಿನ್ನ ಮಾತನ್ನ ಪಾಲಿಸಲ್ಲ.+

159 ನಿನ್ನ ಆಜ್ಞೆಗಳನ್ನ ನಾನು ಎಷ್ಟು ಪ್ರೀತಿಸ್ತೀನಿ ಅಂತ ನೋಡು!

ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು.+

160 ಸತ್ಯಾನೇ ನಿನ್ನ ವಾಕ್ಯದ ಜೀವಾಳ,+

ನಿನ್ನ ನೀತಿಯ ತೀರ್ಪುಗಳು ಶಾಶ್ವತವಾಗಿ ಇರುತ್ತೆ

ש [ಸಿನ್‌] ಅಥವಾ [ಶಿನ್‌]

161 ಸುಮ್ಮಸುಮ್ಮನೇ ನಾಯಕರು ನನ್ನನ್ನ ಹಿಂಸಿಸ್ತಾರೆ,+

ಆದ್ರೆ ನೀನು ಹೇಳಿದ ಮಾತುಗಳ ಮೇಲೆ ನನಗೆ ತುಂಬ ಗೌರವ ಇದೆ.+

162 ಸಿಕ್ಕಾಪಟ್ಟೆ ಕೊಳ್ಳೆ ಹೊಡೆದವನ ತರ,

ನಾನು ನಿನ್ನ ಮಾತುಗಳಲ್ಲಿ ಖುಷಿಪಡ್ತೀನಿ.+

163 ಸುಳ್ಳನ್ನ ನಾನು ದ್ವೇಷಿಸ್ತೀನಿ, ಅಸಹ್ಯವಾಗಿ ನೋಡ್ತೀನಿ.+

ನಿನ್ನ ನಿಯಮಗಳನ್ನ ಪ್ರೀತಿಸ್ತೀನಿ.+

164 ನಿನ್ನ ನೀತಿಯ ತೀರ್ಪುಗಳ ಕಾರಣ

ದಿನಕ್ಕೆ ಏಳು ಸಲ ನಾನು ನಿನ್ನನ್ನ ಹೊಗಳ್ತೀನಿ.

165 ನಿನ್ನ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ,+

ಯಾವುದೂ ಅವ್ರನ್ನ ಎಡವಿಸಲ್ಲ.*

166 ಯೆಹೋವನೇ, ನೀನು ಹೇಗೆ ರಕ್ಷಿಸ್ತೀಯ ಅಂತ ನಾನು ಆಸೆಯಿಂದ ಎದುರುನೋಡ್ತಿದ್ದೀನಿ,

ನಾನು ನಿನ್ನ ಆಜ್ಞೆಗಳನ್ನು ಪಾಲಿಸ್ತೀನಿ.

167 ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ,

ನಾನು ಅವನ್ನ ತುಂಬ ಪ್ರೀತಿಸ್ತೀನಿ.+

168 ನಾನು ನಿನ್ನ ಆಜ್ಞೆಗಳನ್ನ, ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ.

ನಾನು ಮಾಡೋದೆಲ್ಲ ನಿಂಗೊತ್ತು.+

ת [ಟಾವ್‌]

169 ಯೆಹೋವ, ಸಹಾಯಕ್ಕಾಗಿ ನಾನಿಡೋ ಮೊರೆ ನಿನಗೆ ಮುಟ್ಟಲಿ.+

ನಿನ್ನ ಮಾತಿನ ಪ್ರಕಾರ ನನಗೆ ಬುದ್ಧಿ ಕೊಡು.+

170 ನಿನ್ನ ಕೃಪೆಗಾಗಿ ನಾನು ಮಾಡೋ ಬಿನ್ನಹ ನಿನ್ನ ಸನ್ನಿಧಿಗೆ ಸೇರಲಿ.

ನೀನು ಮಾತು ಕೊಟ್ಟ ಹಾಗೆ ನನ್ನನ್ನ ರಕ್ಷಿಸು.

171 ನನ್ನ ತುಟಿಗಳಿಂದ ನಿನ್ನ ಸ್ತುತಿ ತುಂಬಿ ಹರೀಲಿ,+

ಯಾಕಂದ್ರೆ ನೀನು ನನಗೆ ನಿನ್ನ ನಿಯಮಗಳನ್ನ ಕಲಿಸಿದ್ದೀಯ.

172 ನಿನ್ನ ಮಾತುಗಳ ಬಗ್ಗೆ ನನ್ನ ನಾಲಿಗೆ ಹಾಡಲಿ,+

ಯಾಕಂದ್ರೆ ನಿನ್ನ ಆಜ್ಞೆಗಳೆಲ್ಲ ನೀತಿಯಿಂದ ತುಂಬಿವೆ.

173 ನಿನ್ನ ಆಜ್ಞೆಗಳನ್ನ ಪಾಲಿಸಬೇಕು ಅಂತ ನಾನು ತೀರ್ಮಾನ ಮಾಡಿರೋದ್ರಿಂದ+

ನನಗೆ ಸಹಾಯಮಾಡೋಕೆ ನಿನ್ನ ಕೈ ಯಾವಾಗ್ಲೂ ಸಿದ್ಧವಾಗಿರಲಿ.+

174 ಯೆಹೋವ, ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,

ನನಗೆ ನಿನ್ನ ನಿಯಮಗಳಂದ್ರೆ ತುಂಬ ಪ್ರೀತಿ.+

175 ನಾನು ನಿನ್ನನ್ನ ಹೊಗಳೋಕೆ ಆಗೋ ಹಾಗೆ ನನ್ನ ಪ್ರಾಣವನ್ನ ಕಾಪಾಡು,+

ನಿನ್ನ ತೀರ್ಪುಗಳು ನನಗೆ ಸಹಾಯಮಾಡಲಿ.

176 ನಾನು ಕಳೆದು ಹೋಗಿರೋ ಕುರಿ ತರ ಇದ್ದೀನಿ.+ ಈ ನಿನ್ನ ಸೇವಕನನ್ನ ಹುಡುಕು.

ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಮರೆತಿಲ್ಲ.+

ಯಾತ್ರೆ ಗೀತೆ.*

120 ಕಷ್ಟದಲ್ಲಿದ್ದಾಗ ನಾನು ಯೆಹೋವನಿಗೆ ಮೊರೆಯಿಟ್ಟೆ,+

ಆತನು ನನಗೆ ಉತ್ರ ಕೊಟ್ಟ.+

 2 ಯೆಹೋವನೇ, ಸುಳ್ಳು ಹೇಳೋ ತುಟಿಗಳಿಂದ,

ಮೋಸ ಮಾಡೋ ನಾಲಿಗೆಯಿಂದ ನನ್ನನ್ನ ಕಾಪಾಡು.

 3 ಮೋಸ ಮಾಡೋ ನಾಲಿಗೇ,

ದೇವರು ನಿನಗೆ ಏನು ಮಾಡ್ತಾನೆ ಅಂತ,

ನಿನ್ನನ್ನ ಹೇಗೆ ಶಿಕ್ಷಿಸ್ತಾನೆ ಅಂತ ಗೊತ್ತಾ?+

 4 ಆತನು ನಿನ್ನನ್ನ ಸೈನಿಕನ ಚೂಪಾದ ಬಾಣಗಳಿಂದ,+

ಉರಿಯೋ ಪೊದೆಯ ಕೆಂಡಗಳಿಂದ+ ಶಿಕ್ಷಿಸ್ತಾನೆ.

 5 ನನ್ನ ಗತಿ ಅಧೋಗತಿ! ನಾನು ಮೇಷೆಕಲ್ಲಿ ವಿದೇಶಿ ತರ ಇರಬೇಕಾಗಿದೆ,+

ಕೇದಾರಿನ ಡೇರೆಗಳಲ್ಲಿ ಬದುಕಬೇಕಾಗಿದೆ.+

 6 ನಾನು ತುಂಬಾ ಸಮಯದಿಂದ

ಶಾಂತಿಯನ್ನ ದ್ವೇಷಿಸೋ ಜನ್ರ ಜೊತೆ ಇದ್ದೀನಿ.+

 7 ನನಗೆ ಶಾಂತಿ ನೆಮ್ಮದಿ ಬೇಕು, ಆದ್ರೆ ನಾನು ಬಾಯಿ ತೆಗಿದ್ರೆ ಸಾಕು

ಅವರು ಯುದ್ಧಕ್ಕೆ ಬರ್ತಾರೆ.

ಯಾತ್ರೆ ಗೀತೆ.

121 ನಾನು ಬೆಟ್ಟದ ಕಡೆ ಕಣ್ಣೆತ್ತಿ ನೋಡ್ತೀನಿ.+

ನನಗೆ ಎಲ್ಲಿಂದ ಸಹಾಯ ಸಿಗುತ್ತೆ?

 2 ಭೂಮಿ ಆಕಾಶಗಳನ್ನ ಮಾಡಿದ

ಯೆಹೋವನಿಂದ ನನಗೆ ಸಹಾಯ ಸಿಗುತ್ತೆ.+

 3 ಆತನು ಯಾವತ್ತೂ ನಿನ್ನ ಕಾಲು ಜಾರೋಕೆ ಬಿಡಲ್ಲ.*+

ನಿನ್ನನ್ನ ಕಾಯೋ ದೇವರು ಯಾವತ್ತೂ ಮಂಪರಿನಲ್ಲಿ ಇರಲ್ಲ.

 4 ಇಗೋ! ಇಸ್ರಾಯೇಲನ್ನ ಕಾಯೋ ದೇವರು,

ತೂಕಡಿಸ್ತಾ ಇರೋದೂ ಇಲ್ಲ, ನಿದ್ದೆಗೆ ಜಾರೋದೂ ಇಲ್ಲ.+

 5 ಯೆಹೋವ ನಿನ್ನನ್ನ ಕಾದು ಕಾಪಾಡ್ತಾನೆ.

ಯೆಹೋವ ನಿನ್ನ ಬಲಗಡೆನೇ ಇದ್ದು+ ನಿನ್ನನ್ನ ಸಂರಕ್ಷಿಸೋ ನೆರಳಾಗಿ ಇರ್ತಾನೆ.+

 6 ಹಗಲಲ್ಲಿ ಸೂರ್ಯನಾಗಲಿ,+

ಇರುಳಲ್ಲಿ ಚಂದ್ರನಾಗಲಿ ನಿನಗೆ ಹಾನಿ ಮಾಡಲ್ಲ.+

 7 ಎಲ್ಲ ಅಪಾಯಗಳಿಂದ ಯೆಹೋವ ನಿನ್ನನ್ನ ರಕ್ಷಿಸ್ತಾನೆ.+

ನಿನ್ನ ಪ್ರಾಣವನ್ನ ಕಾದು ಕಾಪಾಡ್ತಾನೆ.+

 8 ನೀನು ಮಾಡೋ ಎಲ್ಲ ಕೆಲಸಗಳಲ್ಲಿ* ಯೆಹೋವ ನಿನ್ನನ್ನ ರಕ್ಷಿಸ್ತಾನೆ,

ಇವತ್ತಿಂದ ಯಾವತ್ತಿಗೂ ಕಾಪಾಡ್ತಾನೆ.

ಯಾತ್ರೆ ಗೀತೆ. ದಾವೀದನ ಕೀರ್ತನೆ.

122 “ಯೆಹೋವನ ಆಲಯಕ್ಕೆ ಹೋಗೋಣ ಬಾ” ಅಂತ

ಜನ್ರು ಹೇಳಿದಾಗ ನನಗೆ ಖುಷಿಯೋ ಖುಷಿ.+

 2 ಯೆರೂಸಲೇಮೇ, ಈಗ

ನಾವು ನಮ್ಮ ಪಾದಗಳನ್ನ ನಿನ್ನ ಬಾಗಿಲಿನ ಒಳಗೆ ಇಟ್ಟಿದ್ದೀವಿ.+

 3 ಅಚ್ಚುಕಟ್ಟಾಗಿ ಒಟ್ಟುಸೇರಿಸಿ ಕಟ್ಟಿರೋ ಪಟ್ಟಣದ ಹಾಗೆ

ಯೆರೂಸಲೇಮನ್ನ ಕಟ್ಟಲಾಗಿದೆ.+

 4 ಎಲ್ಲ ಕುಲಗಳು ಅಲ್ಲಿಗೆ ಹತ್ತಿ ಹೋಗಿವೆ,

ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞೆ ಪ್ರಕಾರ

ಯೆಹೋವನ ಹೆಸ್ರಿಗೆ ಕೃತಜ್ಞತೆ ಹೇಳೋಕೆ,

ಯಾಹುವಿನ* ಕುಲಗಳು ಅಲ್ಲಿಗೆ ಹೋಗಿವೆ.+

 5 ಯಾಕಂದ್ರೆ ಅಲ್ಲಿ ನ್ಯಾಯಪೀಠಗಳನ್ನ,+

ದಾವೀದನ ಮನೆತನದ ಸಿಂಹಾಸನಗಳನ್ನ ಇಟ್ಟಿದ್ದಾರೆ.+

 6 ಯೆರೂಸಲೇಮಿನ ಶಾಂತಿಗಾಗಿ ಪ್ರಾರ್ಥಿಸಿ.+

ಪಟ್ಟಣವೇ, ನಿನ್ನನ್ನ ಪ್ರೀತಿಸೋರು ಸುರಕ್ಷಿತವಾಗಿ ಇರ್ತಾರೆ.

 7 ನಿನ್ನ ಭದ್ರ ಗೋಡೆ* ಒಳಗೆ ಶಾಂತಿ ಇರಲಿ,

ನಿನ್ನ ಭದ್ರ ಕೋಟೆಗಳ ಒಳಗೆ ಸಂರಕ್ಷಣೆ ನೆಲೆಸಲಿ.

 8 ನನ್ನ ಸಹೋದರರನ್ನ, ನನ್ನ ಜೊತೆಗಾರರನ್ನ ಮನಸ್ಸಲ್ಲಿಟ್ಟು

“ನಿನ್ನಲ್ಲಿ ಸಮಾಧಾನ ಇರಲಿ” ಅಂತ ನಾನು ಹೇಳ್ತೀನಿ.

 9 ನಮ್ಮ ದೇವರಾದ ಯೆಹೋವನ ಆಲಯದ ಸಲುವಾಗಿ,+

ನಾನು ನಿನಗೆ ಒಳ್ಳೇದಾಗಲಿ ಅಂತ ಬಯಸ್ತೀನಿ.

ಯಾತ್ರೆ ಗೀತೆ.

123 ಸ್ವರ್ಗದಲ್ಲಿ ಕೂತಿರೋ ದೇವರೇ,

ನಾನು ನಿನ್ನ ಕಡೆ ಕಣ್ಣೆತ್ತಿ ನೋಡ್ತೀನಿ.+

 2 ದಾಸನ ಕಣ್ಣು ಯಜಮಾನನ ಕೈಯನ್ನ ನೋಡೋ ಹಾಗೆ,

ದಾಸಿಯ ಕಣ್ಣು ಯಜಮಾನಿಯ ಕೈಯನ್ನ ನೋಡೋ ಹಾಗೆ,

ನಮ್ಮ ದೇವರಾದ ಯೆಹೋವ ನಮಗೆ ಕೃಪೆ ತೋರಿಸೋ ತನಕ+

ನಮ್ಮ ಕಣ್ಣು ಆತನನ್ನೇ ನೋಡುತ್ತೆ.+

 3 ಕೃಪೆ ತೋರಿಸು ಯೆಹೋವನೇ, ಕೃಪೆ ತೋರಿಸು,

ಪಡಬೇಕಾದ ಅವಮಾನ ಈಗಾಗಲೇ ಪಟ್ಟಾಗಿದೆ.+

 4 ಅಹಂಕಾರಿಗಳ ಅಣಕಿಸೋ ಮಾತನ್ನ,

ಜಂಬದವರ ಆರೋಪಗಳನ್ನ ಕೇಳಿ ಕೇಳಿ ಸಾಕಾಗಿದೆ.

ಯಾತ್ರೆ ಗೀತೆ. ದಾವೀದನ ಕೀರ್ತನೆ.

124 “ಯೆಹೋವ ನಮ್ಮ ಜೊತೆ ಇಲ್ಲ ಅಂದಿದ್ರೆ”+

ಇಸ್ರಾಯೇಲ್‌ ಈಗ ಹೀಗೆ ಹೇಳಲಿ

 2 “ಯೆಹೋವ ನಮ್ಮ ಜೊತೆ ಇಲ್ಲ ಅಂದಿದ್ರೆ+

ಮನುಷ್ಯರು ನಮ್ಮ ಮೇಲೆ ದಾಳಿಮಾಡೋಕೆ ಬಂದಾಗ,+

 3 ಅವ್ರ ಕೋಪ ನಮ್ಮ ಮೇಲೆ ಹೊತ್ತಿ ಉರಿದು,+

ಅವರು ನಮ್ಮನ್ನ ಜೀವಂತ ನುಂಗಿಬಿಡ್ತಿದ್ರು.+

 4 ಆಗ ನೀರು ನಮ್ಮನ್ನ ಹೊಡ್ಕೊಂಡು ಹೋಗ್ತಿತ್ತು,

ಪ್ರವಾಹ ನಮ್ಮ ಮೇಲೆ ಉಕ್ಕಿ ಹರೀತಿತ್ತು.+

 5 ಸಮುದ್ರದ ಅಬ್ಬರ ನಮ್ಮನ್ನ ಮುಳುಗಿಸಿಬಿಡ್ತಿತ್ತು.

 6 ಯೆಹೋವನಿಗೆ ಹೊಗಳಿಕೆ ಸಿಗಲಿ,

ಯಾಕಂದ್ರೆ ಆತನು ನಮ್ಮನ್ನ ಶತ್ರುಗಳ ಕೈಗೆ ಒಪ್ಪಿಸಲಿಲ್ಲ.

ಒಪ್ಪಿಸಿಬಿಟ್ಟಿದ್ರೆ ಅವರು ನಮ್ಮನ್ನ ಬೇಟೆ ಆಡಿಬಿಡ್ತಿದ್ರು.

 7 ಬೇಟೆಗಾರನ ಬಲೆಯಿಂದ ತಪ್ಪಿಸ್ಕೊಂಡ

ಪಕ್ಷಿ ತರ ನಾವಿದ್ದೀವಿ.+

ಬಲೆ ಹರಿದು ಹೋಯ್ತು,

ನಾವು ತಪ್ಪಿಸ್ಕೊಂಡ್ವಿ.+

 8 ಭೂಮಿ ಆಕಾಶಗಳನ್ನ ಸೃಷ್ಟಿಸಿದ,

ಯೆಹೋವನ ಹೆಸ್ರಲ್ಲಿ ನಮಗೆ ಸಹಾಯ ಸಿಗುತ್ತೆ.+

ಯಾತ್ರೆ ಗೀತೆ.

125 ಯೆಹೋವನಲ್ಲಿ ಭರವಸೆ ಇಡೋರು+

ಯಾವತ್ತೂ ಕದಲದ, ಯಾವಾಗ್ಲೂ ಇರೋ

ಚೀಯೋನ್‌ ಬೆಟ್ಟದ ತರ ಇದ್ದಾರೆ.+

 2 ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ,+

ಇವತ್ತಿಂದ ಎಂದೆಂದಿಗೂ

ಯೆಹೋವ ತನ್ನ ಜನ್ರ ಸುತ್ತ ಇರ್ತಾನೆ.+

 3 ನೀತಿವಂತರ ದೇಶವನ್ನ ದುಷ್ಟ ರಾಜರು ಆಳ್ತಾನೇ ಇರಲ್ಲ.+

ಹಾಗಿದ್ರೆ ನೀತಿವಂತರು ತಪ್ಪು ದಾರಿ ಕಡೆ ತಿರುಗಿಬಿಡ್ತಾರೆ.+

 4 ಯೆಹೋವನೇ, ಒಳ್ಳೆಯವರಿಗೆ

ಪ್ರಾಮಾಣಿಕ ಹೃದಯ ಇರೋರಿಗೆ ಒಳ್ಳೇದನ್ನೇ ಮಾಡು.+

 5 ಸೊಟ್ಟ ದಾರಿಗೆ ತಿರುಗೋ ಜನ್ರನ್ನ

ಕೆಟ್ಟವರ ಜೊತೆ ಯೆಹೋವ ನಾಶಮಾಡಿಬಿಡ್ತಾನೆ.+

ಇಸ್ರಾಯೇಲಲ್ಲಿ ಶಾಂತಿ ನೆಮ್ಮದಿ ಇರಲಿ.

ಯಾತ್ರೆ ಗೀತೆ.

126 ಜೈಲಲ್ಲಿದ್ದ ಚೀಯೋನಿನ ಎಲ್ಲ ಜನ್ರನ್ನ

ಯೆಹೋವ ವಾಪಸ್‌ ಕರ್ಕೊಂಡು ಬಂದಾಗ+

ಇದು ಕನಸು ಅಂತ ಅಂದ್ಕೊಂಡ್ವಿ.

 2 ಆಗ ನಮ್ಮ ಬಾಯಿತುಂಬ ನಗು ಇತ್ತು,

ನಮ್ಮ ನಾಲಿಗೆ ಮೇಲೆ ಖುಷಿಯ ಜೈಕಾರ ಇತ್ತು.+

ಅಲ್ಲದೇ ಬೇರೆ ದೇಶದ ಜನ್ರು,

“ಯೆಹೋವ ಅವರಿಗೋಸ್ಕರ ಅದ್ಭುತಗಳನ್ನ ಮಾಡಿದ” ಅಂತ ತಮ್ಮಲ್ಲೇ ಮಾತಾಡ್ಕೊಂಡ್ರು.+

 3 ಯೆಹೋವ ನಮಗಾಗಿ ಅದ್ಭುತಗಳನ್ನ ಮಾಡಿದ,+

ಹಾಗಾಗಿ ನಮ್ಮ ಆನಂದಕ್ಕೆ ಕೊನೆಯೇ ಇರಲಿಲ್ಲ.

 4 ಯೆಹೋವನೇ, ಮಳೆ ದಕ್ಷಿಣದ ನಾಲೆಗಳನ್ನ* ಮತ್ತೆ ತುಂಬಿಸೋ ಹಾಗೆ,

ನೀನು ಜೈಲಲ್ಲಿರೋ ನಮ್ಮವ್ರನ್ನ ವಾಪಸ್‌ ಕರ್ಕೊಂಡು ಬಾ,*

 5 ಕಣ್ಣೀರು ಸುರಿಸ್ತಾ ಬೀಜ ಬಿತ್ತೋರು,

ಖುಷಿಯಿಂದ ಜೈಕಾರ ಹಾಕ್ತಾ ಕೊಯ್ಲು ಮಾಡ್ತಾರೆ.

 6 ಬೀಜದ ಚೀಲವನ್ನ ಹೊತ್ಕೊಂಡು ಅಳ್ತಾ

ಹೊಲಕ್ಕೆ ಹೋಗೋನು,

ಸಂತೋಷದಿಂದ ಜೈಕಾರ ಹಾಕ್ತಾ+

ತೆನೆಗಳ ಕಟ್ಟುಗಳನ್ನ ಹೊತ್ಕೊಂಡು ಬರ್ತಾನೆ.+

ಯಾತ್ರೆ ಗೀತೆ. ಸೊಲೊಮೋನನ ಕೀರ್ತನೆ.

127 ಯೆಹೋವ ಮನೆ ಕಟ್ಟದಿದ್ರೆ,

ಅದನ್ನ ಕಟ್ಟೋಕೆ ಕಷ್ಟ ಪಡೋದು ವ್ಯರ್ಥ.+

ಯೆಹೋವ ಪಟ್ಟಣ ಕಾಯದಿದ್ರೆ+

ಕಾವಲುಗಾರ ಎಚ್ಚರ ಇದ್ದು ಅದನ್ನ ಕಾಯೋದು ದಂಡ.

 2 ದೇವರ ಆಶೀರ್ವಾದ ನಿನ್ನ ಮೇಲೆ ಇಲ್ಲದಿದ್ರೆ

ನೀನು ಬೆಳಿಗ್ಗೆ ಬೇಗ ಎದ್ದು,

ರಾತ್ರಿ ಎಚ್ಚರ ಇದ್ದು,

ಊಟಕ್ಕಾಗಿ ಕಷ್ಟಪಡೋದೂ ವ್ಯರ್ಥ.

ಯಾಕಂದ್ರೆ ಆತನು ಯಾರನ್ನ ಪ್ರೀತಿಸ್ತಾನೋ

ಅವ್ರ ಕಾಳಜಿ ಮಾಡ್ತಾನೆ, ಅವ್ರಿಗೆ ಒಳ್ಳೇ ನಿದ್ದೆ ಕೊಡ್ತಾನೆ.+

 3 ನೋಡಿ! ಮಕ್ಕಳು* ಯೆಹೋವನಿಂದ ಸಿಗೋ ಆಸ್ತಿ,+

ಹೊಟ್ಟೆಯಲ್ಲಿರೋ ಮಗು ಆತನು ಕೊಡೋ ಬಹುಮಾನ.+

 4 ಯುವಪ್ರಾಯದಲ್ಲಿ ಹುಟ್ಟೋ ಮಕ್ಕಳು

ವೀರ ಸೈನಿಕನ ಕೈಯಲ್ಲಿ ಇರೋ ಬಾಣಗಳ ತರ ಇದ್ದಾರೆ.+

 5 ಅಂಥ ಬಾಣಗಳಿಂದ ತನ್ನ ಬಾಣದ ಬುಟ್ಟಿಯನ್ನ ತುಂಬುವವನು ಭಾಗ್ಯವಂತ.+

ಅವನು ಅವಮಾನ ಪಡಲ್ಲ.

ಯಾಕಂದ್ರೆ ಪಟ್ಟಣದ ಬಾಗಿಲಲ್ಲಿ ಅವನ ಮಕ್ಕಳು ಶತ್ರುಗಳಿಗೆ ಉತ್ರ ಕೊಡ್ತಾರೆ.

ಯಾತ್ರೆ ಗೀತೆ.

128 ಯೆಹೋವನಿಗೆ ಭಯಪಡೋ ಜನ್ರೆಲ್ಲ ಖುಷಿಯಾಗಿ ಇರ್ತಾರೆ,+

ಆತನ ದಾರಿಯಲ್ಲಿ ನಡಿಯೋ ಜನ್ರೆಲ್ಲ ಭಾಗ್ಯವಂತರು.+

 2 ಪರಿಶ್ರಮಪಟ್ಟು ದುಡಿದು ಬರೋ ಪ್ರತಿಫಲವನ್ನ ನೀನು ತಿಂತೀಯ.

ನೀನು ಖುಷಿಯಾಗಿ ಇರ್ತಿಯ, ಯಶ್ಸಸು ಸಿಕ್ಕಾಗ ಆಗೋ ಆನಂದವನ್ನ ಅನುಭವಿಸ್ತೀಯ.+

 3 ನಿನ್ನ ಹೆಂಡತಿ ನಿನ್ನ ಮನೆಯೊಳಗೆ ಹಣ್ಣು ಬಿಡೋ ದ್ರಾಕ್ಷಿ ಬಳ್ಳಿ ತರ ಇರ್ತಾಳೆ,+

ನಿನ್ನ ಮೇಜಿನ ಸುತ್ತ ನಿನ್ನ ಮಕ್ಕಳು ಆಲಿವ್‌ ಮರದ ಚಿಗುರುಗಳ ತರ ಇರ್ತಾರೆ.

 4 ನೋಡು! ಯೆಹೋವನಿಗೆ ಭಯಪಡೋ ವ್ಯಕ್ತಿಗೆ

ಈ ಎಲ್ಲ ಆಶೀರ್ವಾದ ಸಿಗುತ್ತೆ.+

 5 ಯೆಹೋವ ನಿನ್ನನ್ನ ಚೀಯೋನಿಂದ ಆಶೀರ್ವದಿಸ್ತಾನೆ.

ಬದುಕಿರೋ ತನಕ ಯೆರೂಸಲೇಮಿನ ಯಶಸ್ಸನ್ನ ನೀನು ನೋಡೋ ಹಾಗೆ ಆಗಲಿ.+

 6 ನಿನ್ನ ಮೊಮ್ಮಕ್ಕಳನ್ನು ನೋಡೋ ಸೌಭಾಗ್ಯ ನಿನಗೆ ಸಿಗಲಿ.

ಇಸ್ರಾಯೇಲಿನಲ್ಲಿ ಶಾಂತಿ ನೆಮ್ಮದಿ ಇರಲಿ.

ಯಾತ್ರೆ ಗೀತೆ.

129 “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,”+

ಇಸ್ರಾಯೇಲ್‌ ಹೀಗೆ ಹೇಳಲಿ

 2 “ಚಿಕ್ಕಂದಿನಿಂದ ನನ್ನ ಶತ್ರುಗಳು ಬೆನ್ನು ಬಿಡದೆ ನನ್ನ ಮೇಲೆ ಆಕ್ರಮಣ ಮಾಡ್ತಾನೇ ಇದ್ದಾರೆ,+

ಆದ್ರೆ ಅವ್ರಿಗೆ ನನ್ನನ್ನ ಸೋಲಿಸೋಕೆ ಆಗಿಲ್ಲ.+

 3 ಹೊಲ ಉಳೋರು ನನ್ನ ಬೆನ್ನಿನ ಮೇಲೆ ಉತ್ತಿದ್ರು,+

ಅವರು ಉತ್ತಿ ಉದ್ದುದ್ದ ಸಾಲುಗಳನ್ನ ಮಾಡಿದ್ರು.”

 4 ಆದ್ರೆ ಯೆಹೋವ ನೀತಿವಂತ,+

ಕೆಟ್ಟವರ ಹಗ್ಗಗಳನ್ನ ಆತನು ಕತ್ತರಿಸಿ ಹಾಕಿದ.+

 5 ಯಾರೆಲ್ಲ ಚೀಯೋನನ್ನ ದ್ವೇಷಿಸ್ತಾರೋ

ಅವ್ರೆಲ್ಲ ಅವಮಾನಕ್ಕೆ ಗುರಿ ಆಗ್ತಾರೆ,

ಅವರು ಅಪಮಾನದಿಂದ ವಾಪಸ್‌ ಹೋಗ್ತಾರೆ,+

 6 ಅವರು ಮನೆ ಚಾವಣಿ ಮೇಲಿರೋ ಹುಲ್ಲಿನ ತರ ಆಗ್ತಾರೆ,

ಅದನ್ನ ಕೀಳೋದಕ್ಕಿಂತ ಮೊದ್ಲೇ ಅದು ಒಣಗಿ ಹೋಗುತ್ತೆ.

 7 ಅದು ಕಟಾವು ಮಾಡುವವನ ಕೈಯನ್ನಾಗಲಿ,

ಧಾನ್ಯದ ತೆನೆಗಳ ಕಂತೆಯನ್ನ ಹೊರುವವನ ತೋಳನ್ನಾಗಲಿ ತುಂಬಲ್ಲ.

 8 “ಯೆಹೋವನ ಆಶೀರ್ವಾದ ನಿಮ್ಮ ಮೇಲಿರಲಿ,

ಯೆಹೋವನ ಹೆಸ್ರಲ್ಲಿ ನಾವು ನಿಮ್ಮನ್ನ ಆಶೀರ್ವದಿಸ್ತೀವಿ” ಅಂತ

ದಾರಿಹೋಕರು ಅವ್ರಿಗೆ ಹೇಳಲ್ಲ.

ಯಾತ್ರೆ ಗೀತೆ.

130 ಯೆಹೋವ, ತುಂಬ ದುಃಖದಲ್ಲಿ ಇರೋವಾಗ ನಾನು ನಿನಗೆ ಮೊರೆ ಇಡ್ತೀನಿ.+

 2 ಯೆಹೋವನೇ, ನನ್ನ ಧ್ವನಿ ಕೇಳಿಸ್ಕೊ.

ಸಹಾಯಕ್ಕಾಗಿ ನಾನಿಡೋ ಮೊರೆನ ನಿನ್ನ ಕಿವಿ ಗಮನಕೊಡಲಿ.

 3 ಯಾಹುವೇ,* ನೀನು ನಮ್ಮ ತಪ್ಪುಗಳನ್ನೇ ನೋಡೋದಾದ್ರೆ*

ಯೆಹೋವನೇ, ಯಾರು ತಾನೇ ನಿನ್ನ ಮುಂದೆ ನಿಲ್ಲಕ್ಕಾಗುತ್ತೆ?+

 4 ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ,+

ಹಾಗಾಗಿ ಅವ್ರ ಭಯಭಕ್ತಿಗೆ ಯೋಗ್ಯನಾಗಿದ್ದೀಯ.+

 5 ನಾನು ಯೆಹೋವನಲ್ಲಿ ನಿರೀಕ್ಷೆ ಇಟ್ಟಿದ್ದೀನಿ, ನನ್ನ ತನುಮನವೆಲ್ಲ ಆತನಲ್ಲಿ ನಿರೀಕ್ಷೆ ಇಟ್ಟಿದೆ.

ನಾನು ಆತನ ಮಾತಿಗಾಗಿ ಎದುರುನೋಡ್ತಾ ಇದ್ದೀನಿ.

 6 ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ,+

ಹೌದು, ಕಾವಲುಗಾರ ಬೆಳಗಾಗೋದಕ್ಕೆ ಕಾಯೋದಕ್ಕಿಂತ ಜಾಸ್ತಿ,

ನಾನು ಯೆಹೋವನಿಗಾಗಿ ಕಾಯ್ತಾ ಇದ್ದೀನಿ.+

 7 ಇಸ್ರಾಯೇಲ್‌ ಯೆಹೋವನಿಗಾಗಿ ಕಾಯ್ತಾ ಇರಲಿ,

ಯಾಕಂದ್ರೆ ಯೆಹೋವನ ಪ್ರೀತಿ ಶಾಶ್ವತ,+

ನಮ್ಮನ್ನ ಬಿಡಿಸೋಕೆ ಆತನಿಗಿರೋ ಶಕ್ತಿ ಅಪಾರ.

 8 ಇಸ್ರಾಯೇಲ್ಯರ ಎಲ್ಲ ತಪ್ಪುಗಳಿಂದ ಆತನು ಅವ್ರನ್ನ ಬಿಡಿಸ್ತಾನೆ.

ಯಾತ್ರೆ ಗೀತೆ. ದಾವೀದನ ಕೀರ್ತನೆ.

131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವ ಇಲ್ಲ,

ನನಗೆ ಸೊಕ್ಕಿನ ಕಣ್ಣಿಲ್ಲ,+

ದೊಡ್ಡದೊಡ್ಡ ಸಾಹಸ ಮಾಡಬೇಕು ಅನ್ನೋ ಅತಿಯಾಸೆ ಇಲ್ಲ,+

ನನ್ನ ಶಕ್ತಿಗೂ ಮೀರಿ ವಿಷ್ಯಗಳನ್ನ ಮಾಡೋ ಆಸೆಯಾಗಲಿ ನನಗಿಲ್ಲ.

 2 ಬದಲಿಗೆ ಎದೆಹಾಲನ್ನ ಬಿಟ್ಟಿರೋ ಮಗು ಅಮ್ಮನ ಹತ್ರ ನಿಶ್ಚಿಂತೆಯಿಂದ ಇರೋ ತರ,

ನಾನು ನನ್ನ ಪ್ರಾಣವನ್ನ* ಸಮಾಧಾನ ಪಡಿಸಿದ್ದೀನಿ,+

ಎದೆಹಾಲು ಬಿಟ್ಟಿರೋ ಮಗು ತರ ನಾನು ಸಂತೃಪ್ತಿಯಾಗಿ ಇದ್ದೀನಿ.

 3 ಇವತ್ತಿಂದ ಶಾಶ್ವತವಾಗಿ

ಇಸ್ರಾಯೇಲ್‌ ಯೆಹೋವನಿಗಾಗಿ ಕಾಯಲಿ.+

ಯಾತ್ರೆ ಗೀತೆ.

132 ಯೆಹೋವನೇ, ದಾವೀದನನ್ನ ಅವನ ಎಲ್ಲ ಕಷ್ಟಗಳನ್ನ ನೆನಪಿಸ್ಕೊ.+

 2 ಯೆಹೋವನೇ, ಅವನು ನಿನಗೆ ಮಾತು ಕೊಟ್ಟಿದ್ದನ್ನ ನೆನಪಿಸ್ಕೊ,

ನೀನು ಯಾಕೋಬನ ಶಕ್ತಿಶಾಲಿ ದೇವರು. ದಾವೀದ ನಿನಗೆ ಹೀಗೆ ಮಾತುಕೊಟ್ಟ+

 3 “ನಾನು ನನ್ನ ಡೇರೆಗಾಗಲಿ, ನನ್ನ ಮನೆಗಾಗಲಿ ಹೋಗಲ್ಲ.+

ನಾನು ನನ್ನ ಮಂಚದ ಮೇಲಾಗಲಿ, ಹಾಸಿಗೆ ಮೇಲಾಗಲಿ ಮಲಗಲ್ಲ.

 4 ನಾನು ನನ್ನ ಕಣ್ಣುಗಳನ್ನ ಮುಚ್ಚೋಕೆ ಬಿಡಲ್ಲ,

ನನ್ನ ಕಣ್‌ರೆಪ್ಪೆಗಳಿಗೆ ನಿದ್ದೆಮಾಡೋಕೆ ಬಿಡಲ್ಲ.

 5 ಎಲ್ಲಿ ತನಕ ಯೆಹೋವನಿಗಾಗಿ ನಾನು ಒಂದು ಜಾಗವನ್ನ,

ಯಾಕೋಬನ ಶಕ್ತಿಶಾಲಿ ದೇವರಿಗಾಗಿ ಒಂದು ಆಲಯವನ್ನ* ಹುಡುಕಲ್ವೋ ಅಲ್ಲಿ ತನಕ ನಿದ್ದೆ ಮಾಡಲ್ಲ.+

 6 ನೋಡು! ನಾವು ಅದ್ರ ಬಗ್ಗೆ ಎಫ್ರಾತದಲ್ಲಿ ಕೇಳಿಸ್ಕೊಂಡ್ವಿ,+

ಕಾಡಲ್ಲಿ ಅದನ್ನ ಕಂಡುಕೊಂಡ್ವಿ.+

 7 ಬನ್ನಿ ಆತನ ಆಲಯಕ್ಕೆ ಹೋಗೋಣ,+

ಆತನ ಪಾದಪೀಠದ ಕೆಳಗೆ ಬಗ್ಗಿ ನಮಸ್ಕರಿಸೋಣ.+

 8 ಯೆಹೋವ ದಯವಿಟ್ಟು ನಿನ್ನ ಶಕ್ತಿಯ ಗುರುತಾಗಿರೋ ಮಂಜೂಷದ ಜೊತೆ+

ನಿನ್ನ ವಿಶ್ರಾಂತಿಯ ಜಾಗಕ್ಕೆ ಬಾ.+

 9 ನಿನ್ನ ಪುರೋಹಿತರು ನೀತಿಯನ್ನ ಬಟ್ಟೆ ತರ ಹಾಕೊಳ್ಳಲಿ,

ನಿನ್ನ ನಿಷ್ಠಾವಂತರು ಸಂತೋಷದಿಂದ ಜೈಕಾರ ಹಾಕ್ಲಿ.

10 ನಿನ್ನ ಸೇವಕ ದಾವೀದನ ಸಲುವಾಗಿ

ನಿನ್ನ ಅಭಿಷಿಕ್ತನನ್ನ ತಳ್ಳಬೇಡ.*+

11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.

ಆ ಮಾತನ್ನ ಆತನು ನಿಜವಾಗ್ಲೂ ವಾಪಸ್‌ ತಗೊಳಲ್ಲ,

“ನಾನು ನನ್ನ ಸಿಂಹಾಸನದ ಮೇಲೆ

ನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+

12 ಒಂದುವೇಳೆ ನಿನ್ನ ಮಕ್ಕಳು ನನ್ನ ಒಪ್ಪಂದವನ್ನ,

ನಾನು ಅವ್ರಿಗೆ ಕೊಟ್ಟ ಸಲಹೆಗಳನ್ನ ಪಾಲಿಸಿದ್ರೆ,+

ಅವ್ರ ಮಕ್ಕಳೂ ನಿನ್ನ ಸಿಂಹಾಸನದಲ್ಲಿ ಶಾಶ್ವತವಾಗಿ ಕೂತ್ಕೊತಾರೆ.”+

13 ಯಾಕಂದ್ರೆ ಯೆಹೋವ ಚೀಯೋನನ್ನ ಆರಿಸ್ಕೊಂಡಿದ್ದಾನೆ,+

ಅದ್ರಲ್ಲಿ ಆತನು ಇರೋಕೆ ಇಷ್ಟಪಟ್ಟು ಹೀಗೆ ಹೇಳ್ತಿದ್ದಾನೆ+

14 “ಇದು ನಾನು ಯಾವಾಗ್ಲೂ ವಿಶ್ರಮಿಸೋ ಜಾಗ,

ನಾನು ಇಲ್ಲಿ ವಾಸಿಸ್ತೀನಿ,+ ಯಾಕಂದ್ರೆ ಇದು ನನ್ನ ಇಷ್ಟ.

15 ನಾನು ಆಹಾರ ನೀರನ್ನ ಸಮೃದ್ಧವಾಗಿ ಕೊಟ್ಟು ಈ ಪಟ್ಟಣವನ್ನ ಆಶೀರ್ವದಿಸ್ತೀನಿ,

ಅಲ್ಲಿರೋ ಬಡವರಿಗೆ ರೊಟ್ಟಿ ಕೊಟ್ಟು ಸಂತೃಪ್ತಿಪಡಿಸ್ತೀನಿ.+

16 ಅಲ್ಲಿರೋ ಪುರೋಹಿತರಿಗೆ ರಕ್ಷಣೆಯನ್ನ ಹೊದಿಸ್ತೀನಿ,+

ಅಲ್ಲಿರೋ ನಿಷ್ಠಾವಂತರು ಸಂತೋಷದಿಂದ ಜೈಕಾರ ಹಾಕ್ತಾರೆ.+

17 ಅಲ್ಲಿ ನಾನು ದಾವೀದನ ಬಲವನ್ನ* ಜಾಸ್ತಿ ಮಾಡ್ತೀನಿ.

ನನ್ನ ಅಭಿಷಿಕ್ತನಿಗೋಸ್ಕರ ನಾನು ಒಂದು ದೀಪ ಸಿದ್ಧ ಮಾಡಿರ್ತಿನಿ.+

18 ನಾನು ಅವನ ಶತ್ರುಗಳಿಗೆ ಅವಮಾನವನ್ನ ಹೊದಿಸ್ತೀನಿ,

ಆದ್ರೆ ಅವನ ತಲೆ ಮೇಲೆ ಕಿರೀಟ ಹೊಳಿತಾ ಇರುತ್ತೆ.+

ಯಾತ್ರೆ ಗೀತೆ. ದಾವೀದನ ಕೀರ್ತನೆ.

133 ನೋಡಿ! ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು

ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!+

 2 ಅದು ಆರೋನನ ತಲೆ ಮೇಲೆ ಹೊಯ್ದ ಶ್ರೇಷ್ಠ ತೈಲದ ತರ ಇದೆ,+

ಆ ತೈಲ ಅವನ ಗಡ್ಡದಿಂದ ಹರಿದು+

ಅವನ ಬಟ್ಟೆಯ ಕೊರಳ ಪಟ್ಟಿ ತನಕ ಹೋಯ್ತು.

 3 ಅದು ಚೀಯೋನ್‌ ಬೆಟ್ಟದ+ ಮೇಲಿಂದ ಇಳಿದು ಬರೋ

ಹೆರ್ಮೋನಿನ+ ಇಬ್ಬನಿ ತರ ಇದೆ.

‘ಅಲ್ಲಿ ನನ್ನ ಆಶೀರ್ವಾದ ಇರಲಿ,

ಹೌದು, ನಿತ್ಯಜೀವದ ಆಶೀರ್ವಾದ ಇರಲಿ’ ಅಂತ ಯೆಹೋವ ಆಜ್ಞೆ ಕೊಟ್ಟಿದ್ದಾನೆ.

ಯಾತ್ರೆ ಗೀತೆ.

134 ಯೆಹೋವನ ಎಲ್ಲ ಸೇವಕರೇ,

ರಾತ್ರಿಯಲ್ಲಿ ಯೆಹೋವನ ಆಲಯದಲ್ಲಿ ಸೇವೆಮಾಡೋ ಆತನ ಸೇವಕರೇ,+

ಯೆಹೋವನನ್ನ ಹಾಡಿಹೊಗಳಿ.+

 2 ಪ್ರಾರ್ಥಿಸೋಕೆ ನಿಮ್ಮ ಕೈಗಳನ್ನ ಎತ್ತುವಾಗ+ ಪವಿತ್ರರಾಗಿ ಇರಿ*

ಯೆಹೋವನನ್ನ ಸ್ತುತಿಸಿ.

 3 ಭೂಮಿ ಆಕಾಶಗಳನ್ನ ಮಾಡಿರೋ ಯೆಹೋವ

ಚೀಯೋನಿಂದ ನಿಮಗೆ ಆಶೀರ್ವಾದ ಮಾಡಲಿ.

135 ಯಾಹುವನ್ನ ಸ್ತುತಿಸಿ!*

ಯೆಹೋವನ ಹೆಸ್ರನ್ನ ಕೊಂಡಾಡಿ,

ಯೆಹೋವನ ಸೇವಕರೇ, ಆತನನ್ನ ಹಾಡಿ ಹೊಗಳಿ.+

 2 ಯೆಹೋವನ ಆಲಯದಲ್ಲಿ ನಿಂತಿರೋರೆ,

ನಮ್ಮ ದೇವರ ಆಲಯದ ಅಂಗಳದಲ್ಲಿ ನಿಂತಿರೋರೆ,

ಆತನನ್ನ ಕೊಂಡಾಡಿ.+

 3 ಯಾಹುವನ್ನ ಸ್ತುತಿಸಿ, ಯೆಹೋವ ಒಳ್ಳೆಯವನು.+

ಆತನ ಹೆಸ್ರನ್ನ ಸ್ತುತಿಸೋಕೆ ಗೀತೆಗಳನ್ನ ಹಾಡಿ,* ಅದು ರಮಣೀಯ.

 4 ಯಾಹು ತನಗಾಗಿ ಯಾಕೋಬನನ್ನ ಆರಿಸ್ಕೊಂಡ,

ಇಸ್ರಾಯೇಲನ್ನ ತನ್ನ ವಿಶೇಷ ಸೊತ್ತಾಗಿ* ಆರಿಸ್ಕೊಂಡ.+

 5 ಯೆಹೋವ ಮಹೋನ್ನತನು ಅಂತ ನನಗೆ ಚೆನ್ನಾಗಿ ಗೊತ್ತು,

ಬೇರೆಲ್ಲ ದೇವರುಗಳಿಗಿಂತ ನಮ್ಮ ಒಡೆಯ ಶ್ರೇಷ್ಠ.+

 6 ಆಕಾಶ, ಭೂಮಿ, ಸಮುದ್ರ ಮತ್ತು ಅದ್ರ ಆಳದಲ್ಲೂ,

ಯೆಹೋವ ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.+

 7 ಆತನು ಭೂಮಿಯ ಮೂಲೆಮೂಲೆಗಳಿಂದ ಮೋಡಗಳು* ಮೇಲೆ ಏರೋ ಹಾಗೆ ಮಾಡ್ತಾನೆ,

ಮಳೆಗಾಗಿ ಮಿಂಚನ್ನ* ಮಾಡ್ತಾನೆ,

ತನ್ನ ಭಂಡಾರಗಳಿಂದ ಗಾಳಿ ತರ್ತಾನೆ.+

 8 ಆತನು ಈಜಿಪ್ಟಲ್ಲಿದ್ದ ಮನುಷ್ಯರ ಮೊದಲ ಮಕ್ಕಳನ್ನ

ಪ್ರಾಣಿಗಳ ಎಲ್ಲ ಮೊದಲ ಮರಿಗಳನ್ನ ಸಂಹರಿಸಿದ.+

 9 ಈಜಿಪ್ಟೇ, ನಿನ್ನ ಫರೋಹನ ವಿರುದ್ಧ, ಅವನ ಸೇವಕರೆಲ್ಲರ ವಿರುದ್ಧ+

ಆತನು ಅದ್ಭುತಗಳನ್ನ ಮಾಡಿದ.+

10 ಆತನು ಅನೇಕ ಜನಾಂಗಗಳನ್ನ ಸಂಹರಿಸಿದ,+

ಬಲಿಷ್ಠ ರಾಜರನ್ನ ಕೊಂದುಹಾಕಿದ.+

11 ಅಮೋರಿಯರ ರಾಜ ಸೀಹೋನನನ್ನ,+

ಬಾಷಾನಿನ ರಾಜ ಓಗನನ್ನ,+

ಕಾನಾನಿನ ಎಲ್ಲ ರಾಜ್ಯಗಳನ್ನ ಸೋಲಿಸಿದ.

12 ಆತನು ಅವ್ರ ದೇಶವನ್ನ ತನ್ನ ಜನ್ರಾದ ಇಸ್ರಾಯೇಲ್ಯರಿಗೆ ಸೊತ್ತಾಗಿ ಕೊಟ್ಟ,

ಅವ್ರಿಗೆ ಆಸ್ತಿಯಾಗಿ ಕೊಟ್ಟ.+

13 ಯೆಹೋವ, ನಿನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ,

ಯೆಹೋವ, ನಿನ್ನ ಕೀರ್ತಿ ಯುಗಯುಗಾಂತರಕ್ಕೂ ಇರುತ್ತೆ.+

14 ಯಾಕಂದ್ರೆ ಯೆಹೋವ ತನ್ನ ಜನ್ರ ಪರ ವಾದಿಸ್ತಾನೆ,+

ತನ್ನ ಸೇವಕರಿಗೆ ಕನಿಕರ ತೋರಿಸ್ತಾನೆ.+

15 ಜನಾಂಗಗಳ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,

ಅವನ್ನ ಮನುಷ್ಯರೇ ಮಾಡಿದ್ದಾರೆ.+

16 ಅವಕ್ಕೆ ಬಾಯಿದ್ರೂ ಮಾತಾಡಕ್ಕಾಗಲ್ಲ.+

ಕಣ್ಣಿದ್ರೂ ನೋಡಕ್ಕಾಗಲ್ಲ,

17 ಕಿವಿ ಇದ್ರೂ ಕೇಳಿಸಿಕೊಳ್ಳಕ್ಕಾಗಲ್ಲ,

ಅವುಗಳ ಬಾಯಲ್ಲಿ ಉಸಿರೇ ಇಲ್ಲ.+

18 ಅವುಗಳನ್ನ ಮಾಡೋರೂ ಅವುಗಳಲ್ಲಿ ಭರವಸೆ ಇಡೋರೂ+

ಅವುಗಳ ತರಾನೇ.+

19 ಇಸ್ರಾಯೇಲ್‌ ಮನೆತನವೇ, ಯೆಹೋವನನ್ನ ಸ್ತುತಿಸು.

ಆರೋನನ ಮನೆತನವೇ, ಯೆಹೋವನನ್ನ ಕೊಂಡಾಡು.

20 ಲೇವಿಯ ಮನೆತನವೇ, ಯೆಹೋವನನ್ನ ಹಾಡಿ ಹೊಗಳು.+

ಯೆಹೋವನಿಗೆ ಭಯಪಡೋರೇ, ಯೆಹೋವನನ್ನ ಕೊಂಡಾಡಿ.

21 ಯೆರೂಸಲೇಮಲ್ಲಿ ವಾಸಿಸೋ+ ಯೆಹೋವನನ್ನ

ಚೀಯೋನಿಂದ ಸ್ತುತಿಸೋ ಹಾಗಾಗಲಿ.+

ಯಾಹುವನ್ನ ಸ್ತುತಿಸಿ!+

136 ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+

ಆತನ ಪ್ರೀತಿ ಶಾಶ್ವತ.+

 2 ಎಲ್ಲ ದೇವರಿಗಿಂತ ಅತ್ಯುನ್ನತ ದೇವರಾಗಿರೋ ಆತನಿಗೆ ಕೃತಜ್ಞತೆ ಸಲ್ಲಿಸಿ,+

ಆತನ ಪ್ರೀತಿ ಶಾಶ್ವತ.

 3 ಎಲ್ಲ ಒಡೆಯರಿಗಿಂತ ಮಹೋನ್ನತ ಒಡೆಯನಿಗೆ ಧನ್ಯವಾದ ಹೇಳಿ,

ಆತನ ಪ್ರೀತಿ ಶಾಶ್ವತ.

 4 ಮಹಾ ಅದ್ಭುತಗಳನ್ನ ಮಾಡೋನು ಆತನೊಬ್ಬನೇ,+

ಆತನ ಪ್ರೀತಿ ಶಾಶ್ವತ.+

 5 ಆತನು ತುಂಬ ನಿಪುಣತೆಯಿಂದ ಆಕಾಶ ರಚಿಸಿದ,+

ಆತನ ಪ್ರೀತಿ ಶಾಶ್ವತ.

 6 ಆತನು ನೀರಿನ ಮೇಲೆ ಭೂಮಿಯನ್ನ ಹರಡಿದ,+

ಆತನ ಪ್ರೀತಿ ಶಾಶ್ವತ.

 7 ಆತನು ದೊಡ್ಡದೊಡ್ಡ ಬೆಳಕುಗಳನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

 8 ಹಗಲಿನ ಮೇಲೆ ಅಧಿಕಾರ ಮಾಡೋಕೆ ಸೂರ್ಯನನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

 9 ರಾತ್ರಿ ಮೇಲೆ ಅಧಿಕಾರ ಮಾಡೋಕೆ ಚಂದ್ರ, ನಕ್ಷತ್ರಗಳನ್ನ ಮಾಡಿದ,+

ಆತನ ಪ್ರೀತಿ ಶಾಶ್ವತ.

10 ಆತನು ಈಜಿಪ್ಟಿನ ಮೊದಲ ಮಕ್ಕಳನ್ನ ಸಂಹರಿಸಿದ,+

ಆತನ ಪ್ರೀತಿ ಶಾಶ್ವತ.

11 ಇಸ್ರಾಯೇಲ್ಯರನ್ನ ಅವ್ರ ಮಧ್ಯದಿಂದ ಕರ್ಕೊಂಡು ಬಂದ,+

ಆತನ ಪ್ರೀತಿ ಶಾಶ್ವತ.

12 ತನ್ನ ಬಲಿಷ್ಠ ಕೈಯಿಂದ,+ ಚಾಚಿದ ತೋಳುಗಳಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ,

ಆತನ ಪ್ರೀತಿ ಶಾಶ್ವತ.

13 ಕೆಂಪು ಸಮುದ್ರವನ್ನ ಎರಡು ಭಾಗ* ಮಾಡಿದ.+

ಆತನ ಪ್ರೀತಿ ಶಾಶ್ವತ.

14 ಅದ್ರ ಮಧ್ಯ ಇಸ್ರಾಯೇಲ್ಯರು ನಡ್ಕೊಂಡು ಹೋಗೋ ಹಾಗೆ ಮಾಡಿದ,+

ಆತನ ಪ್ರೀತಿ ಶಾಶ್ವತ.

15 ಫರೋಹನನ್ನ, ಅವನ ಸೈನ್ಯವನ್ನ ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟ.+

ಆತನ ಪ್ರೀತಿ ಶಾಶ್ವತ.

16 ಕಾಡಲ್ಲಿ ದಾರಿತೋರಿಸ್ತಾ ಆತನು ತನ್ನ ಜನ್ರನ್ನ ನಡೆಸಿದ,+

ಆತನ ಪ್ರೀತಿ ಶಾಶ್ವತ.

17 ಆತನು ದೊಡ್ಡದೊಡ್ಡ ರಾಜರನ್ನ ನಾಶಮಾಡಿದ,+

ಆತನ ಪ್ರೀತಿ ಶಾಶ್ವತ.

18 ಆತನು ಬಲಿಷ್ಠ ರಾಜರನ್ನ ಕೊಂದುಹಾಕಿದ,

ಆತನ ಪ್ರೀತಿ ಶಾಶ್ವತ.

19 ಅಮೋರಿಯರ ರಾಜ ಸೀಹೋನನನ್ನ+ ಕೊಂದುಹಾಕಿದ,

ಆತನ ಪ್ರೀತಿ ಶಾಶ್ವತ.

20 ಬಾಷಾನಿನ ರಾಜ ಓಗನನ್ನ+ ಸಾಯಿಸಿಬಿಟ್ಟ,

ಆತನ ಪ್ರೀತಿ ಶಾಶ್ವತ.

21 ಆತನು ಅವ್ರ ದೇಶವನ್ನ ತನ್ನ ಜನ್ರಿಗೆ ಆಸ್ತಿಯಾಗಿ ಕೊಟ್ಟ,+

ಆತನ ಪ್ರೀತಿ ಶಾಶ್ವತ.

22 ತನ್ನ ಸೇವಕ ಇಸ್ರಾಯೇಲನಿಗೆ ಅದನ್ನ ಸೊತ್ತಾಗಿ ಕೊಟ್ಟ,

ಆತನ ಪ್ರೀತಿ ಶಾಶ್ವತ.

23 ನಾವು ಕುಗ್ಗಿಹೋದಾಗ ನಮ್ಮನ್ನ ನೆನಪಿಸ್ಕೊಂಡ,+

ಆತನ ಪ್ರೀತಿ ಶಾಶ್ವತ.+

24 ನಮ್ಮ ಶತ್ರುಗಳಿಂದ ನಮ್ಮನ್ನ ರಕ್ಷಿಸ್ತಾನೇ ಬಂದ,+

ಆತನ ಪ್ರೀತಿ ಶಾಶ್ವತ.

25 ಆತನು ತನ್ನ ಎಲ್ಲ ಸೃಷ್ಟಿಗೆ ಆಹಾರ ಕೊಡ್ತಾನೆ,+

ಆತನ ಪ್ರೀತಿ ಶಾಶ್ವತ.

26 ಸ್ವರ್ಗದ ದೇವರಿಗೆ ಧನ್ಯವಾದ ಹೇಳಿ,

ಆತನ ಪ್ರೀತಿ ಶಾಶ್ವತ.

137 ಬಾಬೆಲಿನ ನದಿಗಳ ದಡದಲ್ಲಿ+ ನಾವು ಕೂತ್ಕೊಂಡ್ವಿ,

ಚೀಯೋನನ್ನ ನೆನಪಿಸ್ಕೊಂಡು ಕಣ್ಣೀರು ಹಾಕಿದ್ವಿ.+

 2 ಅದ್ರ* ಮಧ್ಯದಲ್ಲಿದ್ದ ನೀರವಂಜಿ* ಮರಗಳಿಗೆ

ನಾವು ನಮ್ಮ ತಂತಿವಾದ್ಯಗಳನ್ನ ನೇತುಹಾಕಿದ್ವಿ.+

 3 ನಮ್ಮನ್ನ ಸೆರೆಹಿಡಿದವರು ಅಲ್ಲಿ ನಮಗೊಂದು ಹಾಡು ಹಾಡೋಕೆ ಹೇಳಿದ್ರು,+

ನಮ್ಮನ್ನ ಅಣಿಕಿಸೋರು ಮಜಾ ತಗೊಳ್ಳೋಕೆ,

“ಚೀಯೋನಿನ ಒಂದು ಹಾಡನ್ನ ನಮಗೋಸ್ಕರ ಹಾಡಿ” ಅಂದ್ರು.

 4 ವಿದೇಶಿ ಮಣ್ಣಲ್ಲಿ ನಾವು ಹೇಗೆ ತಾನೇ ಯೆಹೋವನ ಹಾಡನ್ನ ಹಾಡೋಕೆ ಸಾಧ್ಯ?

 5 ಯೆರೂಸಲೇಮೇ, ನಾನು ನಿನ್ನನ್ನ ಮರೆತ್ರೆ

ನನ್ನ ಬಲಗೈ ಬಿದ್ದುಹೋಗಲಿ.*+

 6 ನನ್ನ ಅಪಾರ ಆನಂದಕ್ಕೆ ಕಾರಣವಾಗಿದ್ದ

ಯೆರೂಸಲೇಮನ್ನ ನಾನು ಉನ್ನತ ಸ್ಥಾನದಲ್ಲಿ ಇಡದಿದ್ರೆ,+

ಅದನ್ನ ನೆನಪಿಸ್ಕೊಳ್ಳದಿದ್ರೆ

ನನ್ನ ನಾಲಿಗೆ ಸೇದಿಹೋಗಲಿ.

 7 ಯೆಹೋವನೇ, ನೆನಪಿಸ್ಕೊ!

ಯೆರೂಸಲೇಮ್‌ ಬಿದ್ದುಹೋಗೋ ದಿನ ಎದೋಮ್ಯರು,

“ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.

 8 ಬಾಬೆಲಿನ ಮಗಳೇ, ಆದಷ್ಟು ಬೇಗ ನಾಶ ಆಗಿ ಹೋಗುವವಳೇ,+

ನೀನು ನಮ್ಮ ಜೊತೆ ನಡ್ಕೊಂಡ ತರಾನೇ

ನಿನ್ನ ಜೊತೆನೂ ನಡ್ಕೊಳ್ಳೋರು ಭಾಗ್ಯವಂತರು.+

 9 ನಿನ್ನ ಮಕ್ಕಳನ್ನ ಹಿಡಿದು

ಬಂಡೆಗೆ ಅಪ್ಪಳಿಸೋರು ಸಂತೋಷ ಉಳ್ಳವರು.+

ದಾವೀದನ ಕೀರ್ತನೆ

138 ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ.+

ಬೇರೆ ದೇವರುಗಳ ಮುಂದೆ,*

ನಾನು ನಿನ್ನ ಹಾಡಿ ಹೊಗಳ್ತೀನಿ.

 2 ನಾನು ನಿನ್ನ ಪವಿತ್ರ ಆಲಯದ* ಕಡೆ ಬಗ್ಗಿ ನಮಸ್ಕರಿಸ್ತೀನಿ,+

ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಗಾಗಿ,

ನಾನು ನಿನ್ನ ಹೆಸ್ರನ್ನ ಕೊಂಡಾಡ್ತೀನಿ,+

ನೀನು ನಿನ್ನ ಮಾತನ್ನ, ನಿನ್ನ ಹೆಸ್ರನ್ನ ಬೇರೆ ಎಲ್ಲ ವಿಷ್ಯಗಳಿಗಿಂತ ಪ್ರಾಮುಖ್ಯವಾಗಿ ಇಟ್ಟಿದ್ದೀಯ.*

 3 ನಾನು ನಿನಗೆ ಮೊರೆಯಿಟ್ಟ ದಿನ ನೀನು ನನಗೆ ಉತ್ರ ಕೊಟ್ಟೆ,+

ನನ್ನಲ್ಲಿ ಧೈರ್ಯ ತುಂಬಿ ನನಗೆ ಬಲ ಕೊಟ್ಟೆ.+

 4 ಯೆಹೋವನೇ, ಭೂಮಿಯಲ್ಲಿ ಎಲ್ಲ ರಾಜರು ನಿನ್ನನ್ನ ಹೊಗಳ್ತಾರೆ,+

ಯಾಕಂದ್ರೆ ನೀನು ಕೊಟ್ಟ ಮಾತುಗಳ ಬಗ್ಗೆ ಅವರು ಕೇಳಿಸಿಕೊಂಡ್ರು.

 5 ಅವರು ಯೆಹೋವನ ಮಾರ್ಗಗಳ ಬಗ್ಗೆ ಹಾಡ್ತಾರೆ,

ಯಾಕಂದ್ರೆ ಯೆಹೋವನ ಮಹಿಮೆ ಅಪಾರ.+

 6 ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ,+

ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ.+

 7 ನಾನು ಅಪಾಯದಲ್ಲಿದ್ರೂ ನೀನು ನನ್ನ ಪ್ರಾಣನ ಕಾಪಾಡ್ತೀಯ.+

ಕೋಪದಿಂದ ಕೆರಳಿರೋ ನನ್ನ ಶತ್ರುಗಳ ವಿರುದ್ಧ ನೀನು ನಿನ್ನ ಕೈ ಚಾಚ್ತೀಯ,

ನಿನ್ನ ಬಲಗೈ ನನ್ನನ್ನ ಕಾಪಾಡುತ್ತೆ.

 8 ಯೆಹೋವ ನನ್ನ ಪರ ನಿಂತು ಎಲ್ಲ ಕೆಲಸ ಮಾಡಿ ಮುಗಿಸ್ತಾನೆ.

ಯೆಹೋವನೇ, ನಿನ್ನ ಪ್ರೀತಿ ಶಾಶ್ವತ.+

ನೀನು ನಿನ್ನ ಕೈಯಾರೆ ಮಾಡಿದ ಸೃಷ್ಟಿಯನ್ನ ತೊರೆದುಬಿಡಬೇಡ.+

ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.

139 ಯೆಹೋವ, ನೀನು ನನ್ನನ್ನ ಪರೀಕ್ಷಿಸಿದ್ದೀಯ, ನನ್ನ ಬಗ್ಗೆ ತಿಳ್ಕೊಂಡಿದ್ದೀಯ.+

 2 ನಾನು ಯಾವಾಗ ಕೂತ್ಕೊಳ್ತೀನಿ, ಯಾವಾಗ ನಿಂತ್ಕೊಳ್ತೀನಿ ಅಂತ ನಿಂಗೊತ್ತು.+

ದೂರದಿಂದಾನೇ ನೀನು ನನ್ನ ಯೋಚನೆನ ಕಂಡುಹಿಡಿತೀಯ.+

 3 ನಾನು ನಡೆದ್ರೂ, ಮಲಗಿದ್ರೂ ನೀನು ನನ್ನನ್ನ ಗಮನಿಸ್ತೀಯ.*

ನನ್ನ ಚಲನವಲನಗಳೂ ನಿನಗೆ ಚೆನ್ನಾಗಿ ಗೊತ್ತು.+

 4 ಯೆಹೋವ, ನನ್ನ ನಾಲಿಗೆ ತುದಿಯಿಂದ ಒಂದು ಮಾತು ಬರೋ ಮುಂಚೆನೇ

ಅದು ಏನಂತ ನಿನಗೆ ಗೊತ್ತಾಗಿಬಿಡುತ್ತೆ.+

 5 ನೀನು ನನ್ನ ಮುಂದೆ, ಹಿಂದೆ, ಸುತ್ತಲೂ ಇದ್ದೀಯ.

ನನ್ನ ಮೇಲೆ ನಿನ್ನ ಕೈ ಇಡ್ತೀಯ.

 6 ನಿನ್ನ ಜ್ಞಾನ ನನ್ನ ಯೋಚನೆಗೂ ಮೀರಿದ್ದು,

ಅದು ನನಗೆ ಎಟುಕದಷ್ಟು ಎತ್ರದಲ್ಲಿ ಇದೆ.+

 7 ನಿನ್ನ ಪವಿತ್ರಶಕ್ತಿಯಿಂದ ತಪ್ಪಿಸ್ಕೊಂಡು ನಾನು ಎಲ್ಲಿಗೆ ಹೋಗೋಕೆ ಆಗುತ್ತೆ?

ನಿನಗೆ ಕಾಣದಂತೆ ಎಲ್ಲಿ ಹೋಗಿ ನಾನು ಬಚ್ಚಿಟ್ಕೊಳ್ಳಲಿ?+

 8 ನಾನು ಸ್ವರ್ಗಕ್ಕೆ ಹೋದ್ರೂ ನೀನು ಅಲ್ಲಿ ಇರ್ತಿಯ,

ಸಮಾಧಿಯಲ್ಲಿ ಹಾಸಿಗೆ ಹಾಸಿ ಮಲ್ಕೊಂಡ್ರೂ ನೀನು ಅಲ್ಲೂ ಇರ್ತಿಯ!+

 9 ನಾನು ಬೆಳದಿಂಗಳ ರೆಕ್ಕೆಗಳನ್ನ ಹಾಕೊಂಡು ಹಾರಿಹೋಗಿ

ತುಂಬ ದೂರ ಇರೋ ಸಮುದ್ರತೀರದಲ್ಲಿ ಇದ್ರೂ,

10 ಅಲ್ಲೂ ನಿನ್ನ ಕೈ ನನ್ನನ್ನ ನಡಿಸುತ್ತೆ,

ನಿನ್ನ ಬಲಗೈ ನನಗೆ ಆಸರೆಯಾಗಿರುತ್ತೆ.+

11 “ಕತ್ತಲು ನನ್ನನ್ನ ಬಚ್ಚಿಡುತ್ತೆ!” ಅಂತ ಅಂದ್ಕೊಂಡ್ರೆ,

ನನ್ನ ಸುತ್ತಲೂ ಇರೋ ಕತ್ತಲು ಬೆಳಕಾಗಿಬಿಡುತ್ತೆ.

12 ನಿನಗೆ ಕತ್ತಲೆ ಕತ್ತಲಲ್ಲ,

ರಾತ್ರಿಯ ಕಾರ್ಗತ್ತಲು ನಿನಗೆ ಮಧ್ಯಾಹ್ನದ ಬೆಳಕಿನ ತರ ಇರುತ್ತೆ,+

ರಾತ್ರಿ ನಿನಗೆ ಹಗಲಿಗೆ ಸಮ.+

13 ನೀನು ನನ್ನ ಮೂತ್ರಪಿಂಡಗಳನ್ನ ರಚಿಸಿದೆ,

ಅಮ್ಮನ ಹೊಟ್ಟೆಯಲ್ಲಿ ನನ್ನನ್ನ ತೆರೆ ಮರೆಯಲ್ಲೇ ಇರಿಸಿದೆ.*+

14 ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನ್ನನ್ನ ಆಶ್ಚರ್ಯ ಹುಟ್ಟಿಸೋ ಹಾಗೆ ಅದ್ಭುತವಾಗಿ ರಚಿಸಿದ್ದೀಯ.+

ನಿನ್ನ ಕೆಲಸಗಳು ಅದ್ಭುತ,+

ಅದು ನನಗೆ ಚೆನ್ನಾಗಿ ಗೊತ್ತು.

15 ರಹಸ್ಯ ಸ್ಥಳದಲ್ಲಿ ನನ್ನನ್ನ ರೂಪಿಸ್ತಿದ್ದಾಗ,

ಅಮ್ಮನ ಹೊಟ್ಟೆಯಲ್ಲಿ ನಾನು ಬೆಳೀತಿದ್ದಾಗ,*

ನನ್ನ ಎಲುಬುಗಳೂ ನಿನಗೆ ಮರೆಯಾಗಿ ಇರಲಿಲ್ಲ.+

16 ನಾನು ಇನ್ನೂ ಪಿಂಡವಾಗಿ* ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು,

ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ,

ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತ

ನಿನ್ನ ಪುಸ್ತಕದಲ್ಲಿ ಬರೆದಿತ್ತು.

17 ಹಾಗಾಗಿ ನಿನ್ನ ಯೋಚನೆಗಳು ನನಗೆ ಎಷ್ಟೋ ಅಮೂಲ್ಯ!+

ದೇವರೇ, ಅವನ್ನ ಎಣಿಸಕ್ಕೇ ಆಗಲ್ಲ!+

18 ನಾನು ಅವನ್ನ ಎಣಿಸಕ್ಕೆ ಕೂತ್ಕೊಂಡ್ರೆ, ಸಮುದ್ರದ ಮರಳಿನ ಕಣಗಳಿಗಿಂತ ಜಾಸ್ತಿ ಇವೆ.+

ನಾನು ನಿದ್ದೆಯಿಂದ ಎದ್ದ ಮೇಲೂ ಇನ್ನೂ ಎಣಿಸ್ತಾನೇ ಇರ್ತಿನಿ.*+

19 ದೇವರೇ, ನೀನು ಕೆಟ್ಟವರನ್ನ ಹತಿಸಿದ್ರೆ ಎಷ್ಟು ಚೆನ್ನಾಗಿರುತ್ತೆ!+

ಆಗ, ದೌರ್ಜನ್ಯ ಮಾಡೋರು* ನನ್ನಿಂದ ತೊಲಗಿಹೋಗ್ತಾರೆ.

20 ಅವರು ಕೆಟ್ಟ ಉದ್ದೇಶದಿಂದ ನಿನ್ನ ವಿರುದ್ಧ ಮಾತಾಡ್ತಾರೆ,

ಅವರು ನಿನ್ನ ಶತ್ರುಗಳು, ನಿನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸ್ತಾರೆ.+

21 ಯೆಹೋವ, ನಿನ್ನನ್ನ ದ್ವೇಷಿಸೋರನ್ನ ನಾನು ದ್ವೇಷಿಸಲ್ವಾ?+

ನಿನ್ನ ವಿರುದ್ಧ ತಿರುಗಿ ಬೀಳೋರು ಅಂದ್ರೆ ನನಗೆ ಅಸಹ್ಯ ಅಲ್ವಾ?+

22 ನನಗೆ ಅವ್ರನ್ನ ಕಂಡ್ರೆ ಬರೀ ದ್ವೇಷ,+

ಅವರು ನನ್ನ ನಿಜವಾದ ಶತ್ರುಗಳು.

23 ದೇವರೇ, ನನ್ನನ್ನ ಪರಿಶೋಧಿಸಿ ನನ್ನ ಮನಸ್ಸನ್ನ ತಿಳ್ಕೊ.+

ನನ್ನನ್ನ ಪರೀಕ್ಷಿಸಿ ನನ್ನ ಚಿಂತೆಗಳನ್ನ* ಅರ್ಥ ಮಾಡ್ಕೊ.+

24 ಕೆಟ್ಟ ದಾರಿಗೆ ನಡಿಸೋ ವಿಷ್ಯ ಏನಾದ್ರೂ ನನ್ನಲ್ಲಿ ಇದ್ಯಾ ಅಂತ ನೋಡು,+

ಶಾಶ್ವತವಾಗಿ ಉಳಿಯೋ ದಾರಿಯಲ್ಲಿ ನನ್ನನ್ನ ನಡಿಸು.+

ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.

140 ಯೆಹೋವನೇ, ಕೆಟ್ಟವರಿಂದ ನನ್ನನ್ನ ರಕ್ಷಿಸು,

ಹಿಂಸೆ ಕೊಡೋರಿಂದ ನನ್ನನ್ನ ಕಾಪಾಡು.+

 2 ಯಾರು ತಮ್ಮ ಹೃದಯದಲ್ಲಿ ಪಿತೂರಿ ನಡಿಸ್ತಾರೋ,+

ಯಾರು ಇಡೀ ದಿನ ಜಗಳ ಎಬ್ಬಿಸ್ತಾರೋ ಅವ್ರಿಂದ ನನ್ನನ್ನ ರಕ್ಷಿಸು.

 3 ಅವರು ನಾಲಿಗೆಯನ್ನ ಹಾವಿನ ನಾಲಿಗೆ ತರ ಚೂಪು ಮಾಡ್ಕೊಂಡಿದ್ದಾರೆ,+

ಅವ್ರ ತುಟಿಯಲ್ಲಿ ಹಾವಿನ ವಿಷ ಇದೆ.+ (ಸೆಲಾ)

 4 ಯೆಹೋವನೇ, ಕೆಟ್ಟವರ ಕೈಯಿಂದ ನನ್ನನ್ನ ಕಾಪಾಡು,+

ಹಿಂಸೆ ಕೊಡೋರಿಂದ ನನ್ನನ್ನ ರಕ್ಷಿಸು,

ಅವರು ನನ್ನನ್ನ ಎಡವಿ ಬೀಳಿಸೋಕೆ ಹೊಂಚು ಹಾಕ್ತಿದ್ದಾರೆ.

 5 ಅಹಂಕಾರಿಗಳು ನನಗಾಗಿ ರಹಸ್ಯವಾಗಿ ಬಲೆ ಇಟ್ಟಿದ್ದಾರೆ,

ದಾರಿ ಪಕ್ಕ ಹಗ್ಗದಿಂದ ಮಾಡಿದ ಬಲೆ ಬೀಸಿದ್ದಾರೆ.+

ಅವರು ನನಗಾಗಿ ಉರುಲು ಇಟ್ಟಿದ್ದಾರೆ.+ (ಸೆಲಾ)

 6 “ಯೆಹೋವ, ನೀನೇ ನನ್ನ ದೇವರು.

ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೊ”+ ಅಂತ ನಾನು ಯೆಹೋವನಿಗೆ ಹೇಳ್ತೀನಿ.

 7 ವಿಶ್ವದ ರಾಜ ಯೆಹೋವ, ನನ್ನ ಬಲಿಷ್ಠ ರಕ್ಷಕನೇ,

ಯುದ್ಧದ ದಿನ ನೀನು ನನ್ನನ್ನ* ರಕ್ಷಿಸು.+

 8 ಯೆಹೋವನೇ, ಕೆಟ್ಟವರ ಬಯಕೆಗಳನ್ನ ನೆರವೇರಿಸಬೇಡ.

ಅವರ ಯೋಜನೆಗೆ ಯಶಸ್ಸು ಕೊಡಬೇಡ, ಕೊಟ್ರೆ ಅವರು ತಮ್ಮನ್ನೇ ಹೆಚ್ಚಿಸ್ಕೊಳ್ತಾರೆ.+ (ಸೆಲಾ)

 9 ನನ್ನನ್ನ ಸುತ್ಕೊಂಡಿರೋ ಜನ್ರು ನನ್ನ ಬಗ್ಗೆ ಏನು ಹೇಳ್ತಾರೋ

ಅದು ಅವ್ರ ತಲೆ ಮೇಲೆನೇ ಬರಲಿ.+

10 ಅವ್ರ ಮೇಲೆ ಕೆಂಡಗಳ ಸುರಿಮಳೆ ಆಗಲಿ.+

ಅವ್ರನ್ನ ಬೆಂಕಿಗೆ ಎಸಿ,

ಮತ್ತೆ ಎದ್ದುಬರೋಕೆ ಆಗದ ಹಾಗೆ ಆಳವಾದ ಗುಂಡಿಗೆ* ಬಿಸಾಕು.+

11 ಬೇರೆಯವರ ಬಗ್ಗೆ ಇಲ್ಲಸಲ್ಲದ್ದನ್ನ ಹೇಳೋರಿಗೆ ಭೂಮಿ ಮೇಲೆ* ಜಾಗ ಇಲ್ಲದ ಹಾಗಾಗಲಿ,+

ಹಿಂಸೆ ಕೊಡೋರನ್ನ ಕೇಡು ಅಟ್ಟಿಸ್ಕೊಂಡು ಹೋಗಿ ನಾಶಮಾಡಲಿ.

12 ಯೆಹೋವ ದೀನರ ಪರ ವಾದಿಸ್ತಾನೆ ಅಂತ,

ಬಡವರಿಗೆ ನ್ಯಾಯ ಸಿಗೋ ತರ ನೋಡ್ಕೊಳ್ತಾನೆ ಅಂತ ನಂಗೊತ್ತು.+

13 ನಿಜವಾಗ್ಲೂ ನೀತಿವಂತರು ನಿನ್ನ ಹೆಸ್ರನ್ನ ಕೊಂಡಾಡ್ತಾರೆ,

ಪ್ರಾಮಾಣಿಕರು ನಿನ್ನ ಸನ್ನಿಧಿಯಲ್ಲೇ ಇರ್ತಾರೆ.+

ದಾವೀದನ ಮಧುರ ಗೀತೆ.

141 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ.+

ಬೇಗ ಬಂದು ನನಗೆ ಸಹಾಯಮಾಡು.+

ನಾನು ನಿನಗೆ ಪ್ರಾರ್ಥಿಸಿದಾಗ ಗಮನಕೊಟ್ಟು ಕೇಳು.+

 2 ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ+ ಧೂಪದ+ ತರ,

ನಾನು ಮೇಲೆತ್ತಿರೋ ನನ್ನ ಕೈ ಸಂಜೆಯ ಧಾನ್ಯ ಅರ್ಪಣೆ ತರ ಇರಲಿ.+

 3 ಯೆಹೋವನೇ ನನ್ನ ಬಾಯಿಗೆ,

ನನ್ನ ತುಟಿಗಳಿಗೆ ಒಬ್ಬ ಕಾವಲುಗಾರನನ್ನ ಇಡು.+

 4 ಯಾವ ಕೆಟ್ಟ ವಿಷ್ಯದ ಕಡೆನೂ ನನ್ನ ಮನಸ್ಸು ವಾಲದ ಹಾಗೆ ನೋಡ್ಕೊ,+

ಕೆಟ್ಟವರ ಜೊತೆ ಸೇರಿ ಕೆಟ್ಟ ಕೆಲಸ ಮಾಡೋಕೆ ನನ್ನನ್ನ ಬಿಡಬೇಡ,

ಯಾವತ್ತೂ ನಾನು ಅವ್ರ ಊಟದ ರುಚಿ ನೋಡೋಕೆ ಇಷ್ಟಪಡಲ್ಲ.

 5 ನೀತಿವಂತ ನನ್ನನ್ನ ಹೊಡಿಯೋದು ಅವನಿಗೆ ನನ್ನ ಮೇಲಿರೋ ಶಾಶ್ವತ ಪ್ರೀತಿಯಿಂದಾನೇ,+

ಅವನು ನನ್ನನ್ನ ತಿದ್ದೋದು ನನ್ನ ತಲೆಯನ್ನ ತಂಪು ಮಾಡೋ ಎಣ್ಣೆ ತರ,+

ಯಾವ ಕಾರಣಕ್ಕೂ ನಾನು ಅದನ್ನ ಬೇಡ ಅನ್ನಲ್ಲ.+

ನೀತಿವಂತ ಕಷ್ಟದಲ್ಲಿ ಇರೋವಾಗ ನಾನು ಅವನಿಗಾಗಿ ಪ್ರಾರ್ಥಿಸ್ತಾ ಇರ್ತಿನಿ.

 6 ಅವ್ರ ನ್ಯಾಯಾಧೀಶರು ಕಡಿದಾದ ಬಂಡೆಯಿಂದ ಕೆಳಗೆ ತಳ್ಳಿದ್ರೂ

ಜನ್ರು ನನ್ನ ಮಾತಿಗೆ ಗಮನ ಕೊಡ್ತಾರೆ. ಯಾಕಂದ್ರೆ ಅವು ಮನಸ್ಸಿಗೆ ಮುದ ಕೊಡುತ್ತೆ.

 7 ಹೊಲವನ್ನ ಉಳುತ್ತಾ ಮಣ್ಣಿನ ಹೆಂಟೆಗಳನ್ನ ಒಡೆಯೋ ಹಾಗೆ,

ಸಮಾಧಿಯ* ಹತ್ರ ನಮ್ಮ ಎಲುಬುಗಳು ಚೆಲ್ಲಾಪಿಲ್ಲಿಯಾಗಿ ಬಿದ್ಕೊಂಡಿವೆ.

 8 ವಿಶ್ವದ ರಾಜ ಯೆಹೋವನೇ, ನನ್ನ ಕಣ್ಣು ನಿನ್ನನ್ನೇ ನೋಡುತ್ತೆ.+

ನಿನ್ನಲ್ಲಿ ನಾನು ಆಶ್ರಯ ಪಡ್ಕೊಂಡಿದ್ದೀನಿ,

ನನ್ನ ಪ್ರಾಣ ತೆಗೀಬೇಡ.

 9 ಅವರು ನನಗಾಗಿ ಬೀಸಿರೋ ಬಲೆಯಲ್ಲಿ ಸಿಕ್ಕಿಬೀಳದೆ ಇರೋ ಹಾಗೆ ನನ್ನನ್ನ ಕಾಪಾಡು,

ಕೆಟ್ಟವರ ಉರುಲಿಂದ ನನ್ನನ್ನ ರಕ್ಷಿಸು.

10 ನಾನು ಸುರಕ್ಷಿತವಾಗಿ ಅವನ್ನ ದಾಟಿ ಹೋಗ್ತೀನಿ.

ಆದ್ರೆ ಆ ಕೆಟ್ಟವರು ಬೀಸಿದ ಬಲೆಯಲ್ಲಿ ಅವ್ರೇ ಬೀಳ್ತಾರೆ.+

ಮಸ್ಕಿಲ್‌.* ದಾವೀದ ಗುಹೆಯಲ್ಲಿ ಇದ್ದಾಗ ರಚಿಸಿದ ಕೀರ್ತನೆ.+ ಇದೊಂದು ಪ್ರಾರ್ಥನೆ.

142 ನಾನು ಸಹಾಯಕ್ಕಾಗಿ ಯೆಹೋವನಿಗೆ ಮೊರೆ ಇಡ್ತೀನಿ,+

ನಾನು ದಯೆಗಾಗಿ ಯೆಹೋವನ ಹತ್ರ ಬೇಡ್ಕೊತೀನಿ.

 2 ಆತನ ಮುಂದೆ ನಾನು ನನ್ನ ಚಿಂತೆನ ತೋಡ್ಕೊಳ್ತೀನಿ,

ನನ್ನ ಕಷ್ಟಸಂಕಟಗಳ ಬಗ್ಗೆ ಹೇಳ್ಕೊಳ್ತೀನಿ.+

 3 ನನ್ನ ಮನಸ್ಸು ಕುಗ್ಗಿ ಹೋದಾಗ,

ನೀನು ನನ್ನ ಹೆಜ್ಜೆಯನ್ನ ಗಮನಿಸು.+

ನಾನು ನಡಿಯೋ ದಾರೀಲಿ,

ನನ್ನ ಶತ್ರುಗಳು ನನಗಾಗಿ ಬಲೆಯನ್ನ ಬಚ್ಚಿಟ್ಟಿದ್ದಾರೆ.

 4 ನನ್ನ ಸುತ್ತಮುತ್ತ ನೋಡು,

ನನಗೆ ಕಾಳಜಿ ತೋರಿಸೋರು* ಯಾರೂ ಇಲ್ಲ.+

ಎಲ್ಲಿಗೆ ಓಡಿ ಹೋಗಬೇಕು ಅಂತಾನೂ ನನಗೆ ಗೊತ್ತಾಗ್ತಿಲ್ಲ,+

ನನ್ನ ಬಗ್ಗೆ ಯೋಚಿಸೋರು ಯಾರೂ ಇಲ್ಲ.

 5 ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆ ಇಡ್ತೀನಿ.

“ನನ್ನ ಆಶ್ರಯನೂ ನೀನೇ,+

ನನ್ನ ಜೀವನದಲ್ಲಿ ನೀನೇ ನನಗೆಲ್ಲ”* ಅಂತ ನಾನು ಹೇಳ್ತೀನಿ.

 6 ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು,

ಯಾಕಂದ್ರೆ ನಾನು ತುಂಬ ಕಷ್ಟದಲ್ಲಿದ್ದೀನಿ.

ನನ್ನನ್ನ ಕಾಡಿಸೋ ಜನ್ರಿಂದ ನನ್ನನ್ನ ಕಾಪಾಡು,+

ಯಾಕಂದ್ರೆ ಅವರು ನನಗಿಂತ ಶಕ್ತಿಶಾಲಿಗಳು.

 7 ನಿನ್ನ ಹೆಸ್ರನ್ನ ಹೊಗಳೋಕೆ,

ನೀನು ನನ್ನನ್ನ ಜೈಲಿಂದ ಹೊರಗೆ ಕರ್ಕೊಂಡು ಬಾ.

ನೀನು ನನಗೆ ದಯೆ ತೋರಿಸಿದ್ದನ್ನ ನೋಡಿ

ನೀತಿವಂತರು ನನ್ನ ಜೊತೆ ಸೇರಿ ಖುಷಿಪಡ್ತಾರೆ.

ದಾವೀದನ ಮಧುರ ಗೀತೆ.

143 ಯೆಹೋವ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+

ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು.

ನೀನು ನಂಬಿಗಸ್ತ, ನೀತಿವಂತ.

ಹಾಗಾಗಿ ನನಗೆ ಉತ್ರ ಕೊಡು.

 2 ನಿನ್ನ ಸೇವಕನನ್ನ ನಿನ್ನ ನ್ಯಾಯಾಲಯದ ಮುಂದೆ ತರಬೇಡ,

ಯಾಕಂದ್ರೆ ಬದುಕಿರೋರಲ್ಲಿ ಯಾರೂ ನಿನ್ನ ಮುಂದೆ ನೀತಿವಂತರಲ್ಲ.+

 3 ಶತ್ರು ನನ್ನನ್ನ ಅಟ್ಟಿಸ್ಕೊಂಡು ಬರ್ತಿದ್ದಾನೆ.

ಅವನು ನನ್ನನ್ನ ನೆಲಕ್ಕೆ ಹಾಕಿ ತುಳಿದು ಬಿಟ್ಟಿದ್ದಾನೆ.

ಎಷ್ಟೋ ವರ್ಷಗಳ ಮುಂಚೆನೇ ಸತ್ತು ಹೋಗಿರೋರ ತರ ನಾನಾಗಿದ್ದೀನಿ.

ಅವನು ನನ್ನನ್ನ ಕತ್ತಲಲ್ಲಿ ವಾಸಿಸೋ ಹಾಗೆ ಮಾಡಿದ್ದಾನೆ.

 4 ನಾನು ಬೇಜಾರಾಗಿದ್ದೀನಿ, ನನಗೆ ಶಕ್ತಿನೇ ಇಲ್ಲ.+

ನನ್ನ ಹೃದಯ ಮರಗಟ್ಟಿ ಹೋಗಿದೆ.+

 5 ಕಳೆದು ಹೋದ ದಿನಗಳನ್ನ ನಾನು ನೆನಪಿಸ್ಕೊಳ್ತೀನಿ,

ನಿನ್ನ ಎಲ್ಲ ಕೆಲಸಗಳ ಬಗ್ಗೆ ನಾನು ಧ್ಯಾನಿಸ್ತೀನಿ,+

ನಿನ್ನ ಕೈಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.*

 6 ನಾನು ನಿನ್ನ ಮುಂದೆ ನನ್ನ ಕೈ ಚಾಚ್ತೀನಿ,

ಒಣಗಿದ ನೆಲ ಮಳೆಗಾಗಿ ಬಾಯಾರಿರೋ ತರ ನಾನು ನಿನಗಾಗಿ ಬಾಯಾರಿದ್ದೀನಿ.+ (ಸೆಲಾ)

 7 ಯೆಹೋವ, ಬೇಗ ಉತ್ರ ಕೊಡು,+

ಇದ್ರ ಮೇಲೆ ನನಗೆ ಇನ್ನು ತಾಳಿಕೊಳ್ಳೋಕಾಗಲ್ಲ.+

ನಿನ್ನ ಮುಖವನ್ನ ನನ್ನಿಂದ ಮರೆ ಮಾಡ್ಕೊಬೇಡ,+

ನೀನು ಮರೆ ಮಾಡ್ಕೊಂಡ್ರೆ ನನ್ನ ಗತಿ ಸಮಾಧಿಗೆ* ಸೇರಿದವರ ತರ ಆಗಿಬಿಡುತ್ತೆ.+

 8 ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,

ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.

ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+

ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.

 9 ಯೆಹೋವ, ನನ್ನ ಶತ್ರುಗಳಿಂದ ನನ್ನನ್ನ ಕಾಪಾಡು.

ರಕ್ಷಣೆಗಾಗಿ ನಾನು ನಿನ್ನ ಹತ್ರ ಓಡಿ ಬಂದಿದ್ದೀನಿ.+

10 ನಿನಗೆ ಏನು ಇಷ್ಟಾನೋ ಅದನ್ನ ಮಾಡೋಕೆ ನನಗೆ ಕಲಿಸು,+

ಯಾಕಂದ್ರೆ ನೀನೇ ನನ್ನ ದೇವರು.

ನೀನು ಒಳ್ಳೆಯವನು.

ನೀನು ನನ್ನನ್ನ ನಿನ್ನ ಪವಿತ್ರಶಕ್ತಿಯಿಂದ ಸಮ ನೆಲದ ಮೇಲೆ* ನಡಿಸು.

11 ಯೆಹೋವ, ನಿನ್ನ ಹೆಸ್ರಿಂದಾಗಿ ನನ್ನನ್ನ ಜೀವಂತವಾಗಿ ಉಳಿಸು.

ನಿನ್ನ ನೀತಿಯಿಂದಾಗಿ ನನ್ನನ್ನ ಕಷ್ಟದಿಂದ ಬಿಡಿಸು.+

12 ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಶತ್ರುಗಳಿಗೆ ಅಂತ್ಯ ಹಾಡು,*+

ನನಗೆ ಕಿರುಕುಳ ಕೊಡೋರನ್ನ ನಾಶಮಾಡು,+

ಯಾಕಂದ್ರೆ ನಾನು ನಿನ್ನ ಸೇವಕ.+

ದಾವೀದನ ಕೀರ್ತನೆ.

144 ನನ್ನ ಬಂಡೆಯಾಗಿರೋ+ ಯೆಹೋವನಿಗೆ ಹೊಗಳಿಕೆ ಸಿಗಲಿ,

ಆತನು ನನ್ನ ಕೈಗಳಿಗೆ ಯುದ್ಧಮಾಡೋದನ್ನ ಕಲಿಸಿದ್ದಾನೆ.

ಶತ್ರುಗಳ ಜೊತೆ ಹೋರಾಡೋದು ಹೇಗೆ ಅಂತ ನನ್ನ ಬೆರಳುಗಳಿಗೆ ಹೇಳಿ ಕೊಟ್ಟಿದ್ದಾನೆ.+

 2 ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,

ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,

ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+

ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+

 3 ಯೆಹೋವ, ಮನುಷ್ಯನ ಕಡೆಗೆ ನೀನು ಯಾಕೆ ಗಮನ ಕೊಡಬೇಕು?

ನಾಶವಾಗೋ ಮನುಷ್ಯನಿಗೆ ನೀನು ಯಾಕೆ ಬೆಲೆ ಕೊಡಬೇಕು?+

 4 ಮನುಷ್ಯ ಬರೀ ಉಸಿರಷ್ಟೇ,+

ಅವನ ಆಯಸ್ಸು ಮಾಯವಾಗಿ ಹೋಗೋ ನೆರಳಿನ ತರ ಇದೆ.+

 5 ಯೆಹೋವ, ನೀನು ನಿನ್ನ ಆಕಾಶವನ್ನ ಬಾಗಿಸಿ ಕೆಳಗಿಳಿದು ಬಾ,+

ಬೆಟ್ಟಗಳನ್ನ ಮುಟ್ಟಿ ಅವುಗಳಿಂದ ಹೊಗೆ ಬರಿಸು.+

 6 ಮಿಂಚಿನ ಹೊಳಪಿಂದ ಶತ್ರುಗಳನ್ನ ಚೆದರಿಸು,+

ನಿನ್ನ ಬಾಣಗಳನ್ನ ಬಿಟ್ಟು ಅವ್ರಲ್ಲಿ ಗಲಿಬಿಲಿ ಹುಟ್ಟಿಸು.+

 7 ಮೇಲಿಂದ ನಿನ್ನ ಕೈ ಚಾಚು,

ಉಕ್ಕೇರೋ ಸಮುದ್ರದಿಂದ, ವಿದೇಶಿಗಳ ಕೈಯಿಂದ*

ನನ್ನನ್ನ ಕಾಪಾಡು, ನನ್ನನ್ನ ರಕ್ಷಿಸು.+

 8 ಯಾರು ಸುಳ್ಳು ಹೇಳ್ತಾರೋ,

ಯಾರು ಬಲಗೈಯಿಂದ ಸುಳ್ಳಾಣೆ ಇಡ್ತಾರೋ ಅಂಥವ್ರಿಂದ ನನ್ನನ್ನ ಕಾಪಾಡು.

 9 ದೇವರೇ, ನಾನು ನಿನಗಾಗಿ ಒಂದು ಹೊಸ ಹಾಡನ್ನ ಹಾಡ್ತೀನಿ.+

ಹತ್ತು ತಂತಿಗಳಿರೋ ತಂತಿವಾದ್ಯವನ್ನ ನುಡಿಸ್ತಾ ನಾನು ನಿನ್ನನ್ನ ಹಾಡಿ ಹೊಗಳ್ತೀನಿ.*

10 ಯಾಕಂದ್ರೆ ನೀನು ರಾಜರಿಗೆ ಜಯ* ಕೊಟ್ಟೆ,+

ಕತ್ತಿಯಿಂದ ನಿನ್ನ ಸೇವಕ ದಾವೀದನನ್ನ ರಕ್ಷಿಸಿದೆ.+

11 ವಿದೇಶಿಯರ ಕೈಯಿಂದ ನನ್ನನ್ನ ರಕ್ಷಿಸಿ, ಕಾಪಾಡು.

ಅವರು ಸುಳ್ಳು ಹೇಳ್ತಾರೆ,

ಅವರು ತಮ್ಮ ಬಲಗೈಯಿಂದ ಸುಳ್ಳಾಣೆ ಇಡ್ತಾರೆ.

12 ಆಗ ನಮ್ಮ ಗಂಡುಮಕ್ಕಳು ಬೇಗ ಬೆಳೆಯೋ ಸಸಿಗಳ ತರ ಇರ್ತಾರೆ,

ನಮ್ಮ ಹೆಣ್ಣುಮಕ್ಕಳು ಅರಮನೆಗಾಗಿ ಕೆತ್ತಿರೋ ಮೂಲೆ ಕಂಬದ ತರ ಇರ್ತಾರೆ.

13 ನಮ್ಮ ಕಣಜಗಳು ಬೇರೆ ಬೇರೆ ಧಾನ್ಯಗಳಿಂದ ತುಂಬಿ ತುಳುಕುತ್ತೆ,

ನಮ್ಮ ಹೊಲಗಳಲ್ಲಿ ನಮ್ಮ ಕುರಿಗಳು ಸಾವಿರಾರು ಪಟ್ಟು, ಲಕ್ಷಾಂತರ ಪಟ್ಟು ಜಾಸ್ತಿಯಾಗುತ್ತೆ.

14 ಬಸುರಾಗಿರೋ ನಮ್ಮ ದನಗಳಿಗೆ ಯಾವ ತೊಂದ್ರೆನೂ ಆಗಲ್ಲ, ಅವುಗಳಿಗೆ ಗರ್ಭಪಾತ ಆಗಲ್ಲ,

ನಮ್ಮ ಪಟ್ಟಣದ ಮುಖ್ಯಸ್ಥಳದಲ್ಲಿ* ಯಾವ ಗೋಳಾಟನೂ ಕೇಳಿಸಲ್ಲ.

15 ಇಂಥ ಒಳ್ಳೇ ಪರಿಸ್ಥಿತಿಯಲ್ಲಿರೋ ಜನ ಧನ್ಯರು,

ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು.+

ಸ್ತುತಿಗೀತೆ. ದಾವೀದನ ಕೀರ್ತನೆ.

א [ಆಲೆಫ್‌]

145 ನನ್ನ ದೇವರೇ, ನನ್ನ ರಾಜನೇ, ನಾನು ನಿನ್ನನ್ನ ಕೊಂಡಾಡ್ತೀನಿ,+

ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ.+

ב [ಬೆತ್‌]

 2 ಇಡೀ ದಿನ ನಾನು ನಿನ್ನನ್ನ ಹೊಗಳ್ತೀನಿ,+

ಯಾವಾಗ್ಲೂ ನಾನು ನಿನ್ನ ಹೆಸ್ರನ್ನ ಸ್ತುತಿಸ್ತೀನಿ.+

ג [ಗಿಮೆಲ್‌]

 3 ಯೆಹೋವ ದೊಡ್ಡವನು, ಆತನು ಬೇರೆ ಎಲ್ಲರಿಗಿಂತ ಹೊಗಳಿಕೆಗೆ ಯೋಗ್ಯ.+

ಆತನ ಘನತೆ ಬಗ್ಗೆ ನಮ್ಮಿಂದ ಯೋಚಿಸೋಕೂ ಆಗಲ್ಲ.+

ד [ಡಾಲತ್‌]

 4 ಜನ್ರು ಯುಗಯುಗಾಂತರಕ್ಕೂ ನಿನ್ನ ಕೆಲಸಗಳನ್ನ ಕೊಂಡಾಡ್ತಾರೆ,

ನಿನ್ನ ಶಕ್ತಿಶಾಲಿ ಕೆಲಸಗಳ ಬಗ್ಗೆ ಹೇಳ್ತಾರೆ.+

ה [ಹೆ]

 5 ನಿನ್ನ ಮಹಿಮೆ, ಘನತೆ, ವೈಭವದ ಬಗ್ಗೆ ಅವರು ಮಾತಾಡ್ತಾರೆ,+

ನಿನ್ನ ಅದ್ಭುತಗಳ ಬಗ್ಗೆ ಧ್ಯಾನಿಸ್ತಾರೆ.

ו [ವಾವ್‌]

 6 ಆಶ್ಚರ್ಯ ಭಯ ಹುಟ್ಟಿಸೋ ನಿನ್ನ ಕೆಲಸಗಳ* ಬಗ್ಗೆ ಅವರು ಮಾತಾಡ್ತಾರೆ,

ನಾನು ನಿನ್ನ ದೊಡ್ಡತನವನ್ನ ಸಾರಿ ಹೇಳ್ತೀನಿ.

ז [ಜಯಿನ್‌]

 7 ನಿನ್ನ ಸಾಟಿಯಿಲ್ಲದ ಒಳ್ಳೇತನವನ್ನ ನೆನಪಿಸ್ಕೊಂಡು ಅವರು ಹೊಗಳಿಕೆಯ ಸುರಿಮಳೆಯನ್ನೇ ಸುರಿಸ್ತಾರೆ,+

ನಿನ್ನ ನೀತಿಯಿಂದಾಗಿ ಸಂತೋಷದಿಂದ ಜೈಕಾರ ಹಾಕ್ತಾರೆ.+

ח [ಹೆತ್‌]

 8 ಯೆಹೋವ ಕನಿಕರ,* ಕರುಣೆ ಇರೋ ದೇವರಾಗಿದ್ದಾನೆ,+

ಅಷ್ಟು ಬೇಗ ಕೋಪ ಮಾಡ್ಕೊಳಲ್ಲ, ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತಾನೆ.+

ט [ಟೆತ್‌]

 9 ಯೆಹೋವ ಎಲ್ರಿಗೂ ಒಳ್ಳೇದನ್ನೇ ಮಾಡ್ತಾನೆ.+

ಆತನ ಕರುಣೆ ಆತನ ಎಲ್ಲ ಕೆಲಸಗಳಲ್ಲಿ ಎದ್ದು ಕಾಣುತ್ತೆ.

י [ಯೋದ್‌]

10 ಯೆಹೋವನೇ, ನಿನ್ನ ಕೆಲಸಗಳೆಲ್ಲ ನಿನಗೆ ಗೌರವ ತರುತ್ತೆ,+

ನಿನ್ನ ನಿಷ್ಠಾವಂತರು ನಿನ್ನನ್ನ ಕೊಂಡಾಡ್ತಾರೆ.+

כ [ಕಾಫ್‌]

11 ಅವರು ರಾಜನಾಗಿರೋ ನಿನ್ನ ವೈಭವವನ್ನ ಸಾರಿ ಹೇಳ್ತಾರೆ,+

ನಿನ್ನ ಶಕ್ತಿಯ ಬಗ್ಗೆ ಮಾತಾಡ್ತಾರೆ,+

ל [ಲಾಮೆದ್‌]

12 ಜನ್ರಿಗೆ ನಿನ್ನ ಸಾಹಸಗಳ ಬಗ್ಗೆ ಹೇಳೋಕೆ,+

ರಾಜನಾಗಿ ನಿನಗಿರೋ ಗೌರವ, ವೈಭವದ ಬಗ್ಗೆ ತಿಳಿಸೋಕೆ ಅವರು ಹೀಗೆ ಮಾಡ್ತಾರೆ.+

מ [ಮೆಮ್‌]

13 ನೀನು ಶಾಶ್ವತವಾಗಿ ರಾಜನಾಗಿ ಇರ್ತಿಯ,

ನಿನ್ನ ಒಡೆತನ ಯುಗಯುಗಾಂತರಕ್ಕೂ ಇದ್ದೇ ಇರುತ್ತೆ.+

ס [ಸಾಮೆಕ್‌]

14 ಬೀಳೋರಿಗೆಲ್ಲ ಯೆಹೋವ ಆಸರೆಯಾಗಿ ಇರ್ತಾನೆ,+

ಕುಗ್ಗಿ ಹೋದವರನ್ನ ಆತನು ಎಬ್ಬಿಸ್ತಾನೆ.+

ע [ಅಯಿನ್‌]

15 ಎಲ್ಲ ಜೀವಿಗಳ ಕಣ್ಣು ನಿರೀಕ್ಷೆಯಿಂದ ನಿನ್ನ ಕಡೆ ನೋಡುತ್ತೆ,

ಸಮಯಕ್ಕೆ ಸರಿಯಾಗಿ ನೀನು ಅವುಗಳಿಗೆ ಊಟ ಕೊಡ್ತೀಯ.+

פ [ಪೇ]

16 ನೀನು ನಿನ್ನ ಕೈತೆಗೆದು,

ಎಲ್ಲ ಜೀವಿಗಳ ಬಯಕೆಯನ್ನ ಈಡೇರಿಸ್ತೀಯ.+

צ [ಸಾದೆ]

17 ಯೆಹೋವ ಎಲ್ಲ ವಿಷ್ಯಗಳಲ್ಲೂ ನೀತಿವಂತ,+

ಎಲ್ಲ ಕೆಲಸಗಳಲ್ಲಿ ನಿಷ್ಠಾವಂತ.+

ק [ಕೊಫ್‌]

18 ಯಾರೆಲ್ಲ ಆತನಿಗೆ ಮೊರೆ ಇಡ್ತಾರೋ,

ಯಾರೆಲ್ಲ ಪ್ರಾಮಾಣಿಕ ಹೃದಯದಿಂದ* ಪ್ರಾರ್ಥನೆ ಮಾಡ್ತಾರೋ,+

ಅವ್ರೆಲ್ಲರಿಗೆ ಯೆಹೋವ ಹತ್ರಾನೇ ಇರ್ತಾನೆ.+

ר [ರೆಶ್‌]

19 ಯಾರು ಆತನಿಗೆ ಭಯಪಡ್ತಾರೋ ಅವ್ರ ಆಸೆಗಳನ್ನ ಆತನು ಈಡೇರಿಸ್ತಾನೆ,+

ಸಹಾಯಕ್ಕಾಗಿ ಅವರಿಡೋ ಮೊರೆಯನ್ನ ಆತನು ಕೇಳಿಸಿಕೊಳ್ತಾನೆ, ಅವ್ರನ್ನ ಕಾಪಾಡ್ತಾನೆ.+

ש [ಶಿನ್‌]

20 ತನ್ನನ್ನ ಪ್ರೀತಿಸೋ ಜನ್ರನ್ನೆಲ್ಲ ಯೆಹೋವ ಕಾದುಕಾಪಾಡ್ತಾನೆ,+

ಆದ್ರೆ ಕೆಟ್ಟವರನ್ನ ನಿರ್ನಾಮ ಮಾಡ್ತಾನೆ.+

ת [ಟಾವ್‌]

21 ನನ್ನ ಬಾಯಿ ಯೆಹೋವನನ್ನ ಹೊಗಳುತ್ತೆ,+

ಎಲ್ಲ ಜೀವಿಗಳು ಆತನ ಪವಿತ್ರ ಹೆಸ್ರನ್ನ ಯಾವಾಗ್ಲೂ ಸ್ತುತಿಸಲಿ.+

146 ಯಾಹುವನ್ನ ಸ್ತುತಿಸಿ!*+

ನನ್ನ ತನುಮನವೆಲ್ಲ ಯೆಹೋವನನ್ನ ಹೊಗಳಲಿ.+

 2 ನನ್ನ ಜೀವನಪರ್ಯಂತ ನಾನು ಯೆಹೋವನನ್ನ ಕೊಂಡಾಡ್ತೀನಿ.

ನಾನು ಸಾಯೋ ತನಕ ನನ್ನ ದೇವರನ್ನ ಹಾಡಿಹೊಗಳ್ತೀನಿ.*

 3 ದೊಡ್ಡದೊಡ್ಡ ಅಧಿಕಾರಿಗಳ* ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ,

ಅವರು ರಕ್ಷಣೆ ಕೊಡೋಕೆ ಆಗಲ್ಲ.+

 4 ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ.+

ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.+

 5 ಸಹಾಯಕ್ಕಾಗಿ ಯಾಕೋಬನ ದೇವರಿಗೆ ಪ್ರಾರ್ಥಿಸೋರು,+

ತಮ್ಮ ದೇವರಾದ ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು.+

 6 ಆತನು ಆಕಾಶ, ಭೂಮಿ,

ಸಮುದ್ರ ಮತ್ತು ಅದ್ರಲ್ಲಿ ಇರೋ ಎಲ್ಲವನ್ನೂ ರಚಿಸಿದ,+

ಆತನು ಯಾವಾಗ್ಲೂ ನಂಬಿಗಸ್ತನಾಗೇ ಇರ್ತಾನೆ.+

 7 ಅನ್ಯಾಯ ಆದವ್ರಿಗೆ ಆತನು ನ್ಯಾಯ ಸಿಗೋ ತರ ಮಾಡ್ತಾನೆ,

ಹಸಿದವ್ರಿಗೆ ಊಟ ಕೊಡ್ತಾನೆ.+

ಯೆಹೋವ ಕೈದಿಗಳನ್ನ ಬಿಡಿಸ್ತಾನೆ.+

 8 ಯೆಹೋವ ಕುರುಡರ ಕಣ್ಣನ್ನ ತೆರೀತಾನೆ,+

ಯೆಹೋವ ಕುಗ್ಗಿ ಹೋಗಿರೋರನ್ನ ಎದ್ದು ನಿಲ್ಲೋ ತರ ಮಾಡ್ತಾನೆ,+

ಯೆಹೋವ ನೀತಿವಂತರನ್ನ ಪ್ರೀತಿಸ್ತಾನೆ.

 9 ಯೆಹೋವ ವಿದೇಶಿಯರನ್ನ ರಕ್ಷಿಸ್ತಾನೆ,

ಅನಾಥರನ್ನ, ವಿಧವೆಯರನ್ನ ಪರಿಪಾಲಿಸ್ತಾನೆ,+

ಆದ್ರೆ ಕೆಟ್ಟವರ ಯೋಜನೆಗಳನ್ನ ಕೆಡಿಸ್ತಾನೆ.*+

10 ಯೆಹೋವ ಯಾವಾಗ್ಲೂ ರಾಜನಾಗಿ ಇರ್ತಾನೆ,+

ಚೀಯೋನೇ, ನಿನ್ನ ದೇವರು ಯುಗಯುಗಾಂತರಕ್ಕೂ ರಾಜನಾಗಿ ಇರ್ತಾನೆ.

ಯಾಹುವನ್ನ ಸ್ತುತಿಸಿ!*

147 ಯಾಹುವನ್ನ ಸ್ತುತಿಸಿ!*

ನಮ್ಮ ದೇವರನ್ನ ಹಾಡಿ ಹೊಗಳೋದು* ಒಳ್ಳೇದು,

ಆತನನ್ನ ಸ್ತುತಿಸೋದು ಎಷ್ಟು ಮನೋಹರ! ಎಷ್ಟು ಉತ್ತಮ!+

 2 ಯೆಹೋವ ಯೆರೂಸಲೇಮನ್ನ ಕಟ್ತಾನೆ,+

ಚೆದರಿಹೋಗಿರೋ ಇಸ್ರಾಯೇಲ್ಯರನ್ನ ಒಟ್ಟುಸೇರಿಸ್ತಾನೆ.+

 3 ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ,

ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.

 4 ಆತನು ನಕ್ಷತ್ರಗಳನ್ನ ಎಣಿಸ್ತಾನೆ,

ಅವುಗಳಲ್ಲಿ ಒಂದೊಂದನ್ನೂ ಹೆಸರಿಡಿದು ಕರೀತಾನೆ.+

 5 ನಮ್ಮ ಒಡೆಯ ಮಹೋನ್ನತ, ಆತನು ಮಹಾ ಶಕ್ತಿಶಾಲಿ,+

ಆತನಿಗಿರೋ ಜ್ಞಾನಕ್ಕೆ ಮಿತಿನೇ ಇಲ್ಲ.+

 6 ಯೆಹೋವ ದೀನ ಜನ್ರನ್ನ ಮೇಲೆ ಎತ್ತುತ್ತಾನೆ,+

ಆದ್ರೆ ಕೆಟ್ಟವರನ್ನ ನೆಲಕ್ಕೆ ತಳ್ತಾನೆ.

 7 ಯೆಹೋವನಿಗೆ ಧನ್ಯವಾದ ಹೇಳಿ,

ತಂತಿವಾದ್ಯವನ್ನ ನುಡಿಸ್ತಾ ನಮ್ಮ ದೇವರನ್ನ ಹಾಡಿ ಹೊಗಳಿ.

 8 ಆತನು ಆಕಾಶವನ್ನ ಮೋಡಗಳಿಂದ ಮುಚ್ತಾನೆ,

ಭೂಮಿಗೆ ಮಳೆ ಕೊಡ್ತಾನೆ,+

ಬೆಟ್ಟಗಳ ಮೇಲೆ ಹುಲ್ಲು ಮೊಳಕೆ ಒಡೆಯೋ ಹಾಗೆ ಮಾಡ್ತಾನೆ.+

 9 ಆತನು ಪ್ರಾಣಿಗಳಿಗೆ ಊಟ ಕೊಡ್ತಾನೆ,+

ಆಹಾರಕ್ಕಾಗಿ ಕೂಗೋ ಕಾಗೆ ಮರಿಗಳಿಗೂ ಊಟ ಕೊಡ್ತಾನೆ.+

10 ಕುದುರೆ ಶಕ್ತಿಯಲ್ಲಿ ಆತನು ಖುಷಿಪಡಲ್ಲ,+

ಮನುಷ್ಯರ ಬಲವಾದ ಕಾಲುಗಳು ಆತನ ದೃಷ್ಟಿಯಲ್ಲಿ ಏನೇನೂ ಅಲ್ಲ.+

11 ಯೆಹೋವ ತನಗೆ ಭಯಪಡೋರಲ್ಲಿ,+

ತನ್ನ ಶಾಶ್ವತ ಪ್ರೀತಿಗಾಗಿ ಕಾಯೋರನ್ನ ಇಷ್ಟಪಡ್ತಾನೆ.+

12 ಯೆರೂಸಲೇಮೇ, ಯೆಹೋವನನ್ನ ಗೌರವಿಸು,

ಚೀಯೋನೇ, ನಿನ್ನ ದೇವರನ್ನ ಹೊಗಳು.

13 ಆತನು ನಿನ್ನ ಪಟ್ಟಣದ ಬಾಗಿಲಿನ ಪಟ್ಟಿಗಳನ್ನ ಭದ್ರ ಮಾಡ್ತಾನೆ,

ಆತನು ನಿನ್ನ ಮಕ್ಕಳಿಗೆ ಆಶೀರ್ವಾದ ಮಾಡ್ತಾನೆ.

14 ಆತನು ನಿನ್ನ ಪ್ರದೇಶಕ್ಕೆ ಶಾಂತಿ ತರ್ತಾನೆ,+

ಆತನು ನಿನ್ನನ್ನ ಒಳ್ಳೇ* ಗೋದಿಯಿಂದ ತೃಪ್ತಿಪಡಿಸ್ತಾನೆ.+

15 ಆತನು ತನ್ನ ಆಜ್ಞೆಯನ್ನ ಭೂಮಿಗೆ ಕಳಿಸ್ತಾನೆ,

ಆತನ ಮಾತು ಸಂದೇಶವಾಹಕನ ತರ ಚುರುಕಾಗಿ ಓಡುತ್ತೆ.

16 ಆತನು ಭೂಮಿಯನ್ನ ಬಿಳಿ ಮಂಜಿನಿಂದ ಹೊದಿಸ್ತಾನೆ,+

ಬೂದಿ ಹಾಗೆ ಹಿಮದ ಗಡ್ಡೆಯನ್ನ ಉದುರಿಸ್ತಾನೆ.+

17 ರೊಟ್ಟಿಯ ತುಂಡುಗಳ ಹಾಗೆ ಆತನು ಆಲಿಕಲ್ಲುಗಳನ್ನ ಎಸೀತಾನೆ.+

ಆತನು ಹುಟ್ಟಿಸೋ ಚಳಿನ ಯಾರು ತಡ್ಕೊಳ್ಳೋಕೆ ಆಗುತ್ತೆ?+

18 ಆತನು ಆಜ್ಞೆ ಕೊಟ್ಟಾಗ ಹಿಮ ಕರಗುತ್ತೆ.

ಆತನು ಗಾಳಿ ಬೀಸೋ ತರ ಮಾಡ್ತಾನೆ,+ ನೀರು ಹರಿಯೋ ತರ ಮಾಡ್ತಾನೆ.

19 ಆತನು ತನ್ನ ಮಾತನ್ನ ಯಾಕೋಬನಿಗೆ ಹೇಳ್ತಾನೆ,

ತನ್ನ ನಿಯಮಗಳನ್ನ ಮತ್ತು ತೀರ್ಪುಗಳನ್ನ ಇಸ್ರಾಯೇಲಿಗೆ ಕೂಗಿ ಹೇಳ್ತಾನೆ.+

20 ಈ ತರ ಆತನು ಬೇರೆ ಯಾವ ಜನಾಂಗದ ಜೊತೆನೂ ನಡ್ಕೊಂಡಿಲ್ಲ,+

ಅವ್ರಲ್ಲಿ ಯಾರಿಗೂ ಆತನ ತೀರ್ಪುಗಳ ಬಗ್ಗೆ ಗೊತ್ತಿಲ್ಲ.

ಯಾಹುವನ್ನ ಸ್ತುತಿಸಿ!*+

148 ಯಾಹುವನ್ನ ಸ್ತುತಿಸಿ!*

ಸ್ವರ್ಗದಲ್ಲಿ ಇರೋರೇ, ಯೆಹೋವನನ್ನ ಹೊಗಳಿ,+

ಎತ್ರವಾದ ಸ್ಥಳದಲ್ಲಿರೋರೇ, ಆತನನ್ನ ಕೊಂಡಾಡಿ.

 2 ಆತನ ದೇವದೂತರೇ, ನೀವೆಲ್ರೂ ಆತನನ್ನ ಹಾಡಿಹೊಗಳಿ,+

ಆತನ ಇಡೀ ಸೈನ್ಯವೇ, ಆತನನ್ನ ಕೊಂಡಾಡು.+

 3 ಸೂರ್ಯಚಂದ್ರರೇ, ಆತನನ್ನ ಸ್ತುತಿಸಿ.

ಹೊಳಿಯೋ ನಕ್ಷತ್ರಗಳೇ, ಆತನನ್ನ ಕೊಂಡಾಡಿ.+

 4 ಎಲ್ಲಕ್ಕಿಂತ ಎತ್ರದಲ್ಲಿರೋ ಆಕಾಶವೇ,

ಅದ್ರ ಮೇಲಿರೋ ಜಲರಾಶಿಯೇ ಆತನನ್ನ ಸ್ತುತಿಸಿ.

 5 ಅವು ಯೆಹೋವನ ಹೆಸ್ರನ್ನ ಸ್ತುತಿಸಲಿ,

ಯಾಕಂದ್ರೆ ಆತನು ಆಜ್ಞೆ ಕೊಟ್ಟಾಗ ಅವೆಲ್ಲ ಸೃಷ್ಟಿ ಆದ್ವು.+

 6 ಆತನು ಅವುಗಳನ್ನ ಶಾಶ್ವತಕ್ಕೂ ಇಟ್ಟಿದ್ದಾನೆ,+

ಎಂದಿಗೂ ರದ್ದಾಗದ ಒಂದು ಆಜ್ಞೆಯನ್ನ ಆತನು ಕೊಟ್ಟಿದ್ದಾನೆ.+

 7 ಭೂಮಿಯಲ್ಲಿ ಇರೋರೇ, ಯೆಹೋವನನ್ನ ಸ್ತುತಿಸಿ,

ಆಳವಾದ ಸಮುದ್ರವೇ, ಅದ್ರಲ್ಲಿರೋ ಮಹಾ ಜೀವಿಗಳೇ ಆತನನ್ನ ಹೊಗಳಿ.

 8 ಸಿಡಿಲೇ, ಆಲಿಕಲ್ಲಿನ ಮಳೆಯೇ, ಹಿಮವೇ, ದಟ್ಟವಾದ ಮೋಡಗಳೇ,

ಆತನ ಆಜ್ಞೆಗಳನ್ನ ಪಾಲಿಸೋ ಬಿರುಗಾಳಿಯೇ ಆತನನ್ನ ಸ್ತುತಿಸಿ.+

 9 ಪರ್ವತಗಳೇ, ಎಲ್ಲ ಬೆಟ್ಟಗಳೇ,+

ಹಣ್ಣಿನ ಮರಗಳೇ, ಎಲ್ಲ ದೇವದಾರು ಮರಗಳೇ ಆತನನ್ನ ಸ್ತುತಿಸಿ.+

10 ಕಾಡು ಪ್ರಾಣಿಗಳೇ,+ ಎಲ್ಲ ಸಾಕುಪ್ರಾಣಿಗಳೇ,

ತೆವಳೋ ಪ್ರಾಣಿಗಳೇ, ಹಾರಾಡೋ ಪಕ್ಷಿಗಳೇ ಆತನನ್ನ ಸ್ತುತಿಸಿ.

11 ಭೂಮಿಯ ರಾಜರೇ, ಎಲ್ಲ ಜನ್ರೇ,

ಅಧಿಕಾರಿಗಳೇ, ಭೂಮಿಯಲ್ಲಿರೋ ಎಲ್ಲ ನ್ಯಾಯಾಧೀಶರೇ ಆತನನ್ನ ಸ್ತುತಿಸಿ.+

12 ಯುವಕ, ಯುವತಿಯರೇ,

ವೃದ್ಧರೇ, ಮಕ್ಕಳೇ ಎಲ್ರೂ ಸೇರಿ ಆತನನ್ನ ಸ್ತುತಿಸಿ.

13 ಅವ್ರೆಲ್ಲ ಯೆಹೋವನ ಹೆಸ್ರನ್ನ ಕೊಂಡಾಡಲಿ,

ಯಾಕಂದ್ರೆ ಎಲ್ಲಕ್ಕಿಂತ ಆತನ ಹೆಸ್ರೇ ಶ್ರೇಷ್ಠ.+

ಆತನ ಗೌರವ ಭೂಮಿ ಆಕಾಶಕ್ಕಿಂತ ಎತ್ರದಲ್ಲಿದೆ.+

14 ಆತನು ತನ್ನ ಎಲ್ಲ ನಿಷ್ಠಾವಂತರಿಗೆ,

ತನಗೆ ಎಲ್ರಿಗಿಂತ ಆಪ್ತರಾಗಿರೋ ಇಸ್ರಾಯೇಲ್ಯರಿಗೆ ಕೀರ್ತಿ ಬರೋ ಹಾಗೆ

ಅವ್ರ ಬಲವನ್ನ* ಹೆಚ್ಚಿಸ್ತಾನೆ.

ಯಾಹುವನ್ನ ಸ್ತುತಿಸಿ!*

149 ಯಾಹುವನ್ನ ಸ್ತುತಿಸಿ!*

ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+

ನಿಷ್ಠಾವಂತರ ಸಭೆಯಲ್ಲಿ ಆತನನ್ನ ಸ್ತುತಿಸಿ.+

 2 ಇಸ್ರಾಯೇಲ್‌ ತನ್ನ ಮಹಾ ಸೃಷ್ಟಿಕರ್ತನಲ್ಲಿ ಖುಷಿಪಡಲಿ,+

ಚೀಯೋನಿನ ಮಕ್ಕಳು ತಮ್ಮ ರಾಜನಲ್ಲಿ ಆನಂದಿಸಲಿ.

 3 ಅವರು ಕುಣಿತಾ ಆತನ ಹೆಸ್ರನ್ನ ಕೊಂಡಾಡಲಿ,+

ದಮ್ಮಡಿ, ತಂತಿವಾದ್ಯವನ್ನ ನುಡಿಸ್ತಾ ಆತನನ್ನ ಹಾಡಿ ಹೊಗಳಲಿ.*+

 4 ಯಾಕಂದ್ರೆ ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ,+

ಆತನು ದೀನರನ್ನ ರಕ್ಷಿಸಿ ಅವ್ರನ್ನ ಅಲಂಕರಿಸ್ತಾನೆ.+

 5 ನಿಷ್ಠಾವಂತರು ತಮಗೆ ಸಿಕ್ಕ ಗೌರವದಿಂದ ಖುಷಿಪಡಲಿ,

ಅವರು ಸಂಭ್ರಮಿಸ್ತಾ ತಮ್ಮ ಹಾಸಿಗೆ ಮೇಲೆನೇ ಜೈಕಾರ ಹಾಕಲಿ.+

 6 ದೇವರಿಗಾಗಿ ಅವ್ರ ತುಟಿಗಳು ಸ್ತುತಿ ಗೀತೆಗಳನ್ನ ಹಾಡಲಿ,

ಅವ್ರ ಕೈಯಲ್ಲಿ ಇಬ್ಬಾಯಿಕತ್ತಿ ಇರಲಿ,

 7 ಅದ್ರಿಂದ ಅವರು ಜನಾಂಗಗಳಿಗೆ ಸೇಡು ತೀರಿಸಲಿ,

ದೇಶಗಳ ಜನ್ರಿಗೆ ಶಿಕ್ಷೆ ಕೊಡಲಿ.

 8 ಅವ್ರ ರಾಜರನ್ನ ಸರಪಳಿಯಿಂದ ಬಂಧಿಸಲಿ,

ಅವ್ರ ಪ್ರಧಾನರಿಗೆ ಕಬ್ಬಿಣದ ಬೇಡಿಗಳನ್ನ ಹಾಕಲಿ.

 9 ಅವ್ರ ವಿರುದ್ಧ ಬರೆದಿರೋ ನ್ಯಾಯತೀರ್ಪನ್ನ ಜಾರಿಗೆ ತರೋಕೆ ಹೀಗೆ ಮಾಡಲಿ.+

ಇದ್ರ ಕೀರ್ತಿ ಆತನ ಎಲ್ಲ ನಿಷ್ಠಾವಂತರಿಗೆ ಸೇರಿದೆ.

ಯಾಹುವನ್ನ ಸ್ತುತಿಸಿ!*

150 ಯಾಹುವನ್ನ ಸ್ತುತಿಸಿ!*+

ದೇವ್ರನ್ನ ಆತನ ಪವಿತ್ರ ಸ್ಥಳದಲ್ಲಿ ಕೊಂಡಾಡಿ.+

ಆತನ ಶಕ್ತಿಗೆ ಸಾಕ್ಷಿಯಾಗಿರೋ ಆಕಾಶದ ಕೆಳಗೆ ಆತನನ್ನ ಹೊಗಳಿ.+

 2 ಆತನ ಮಹಾ ಕೆಲಸಗಳಿಗಾಗಿ ಆತನನ್ನ ಸ್ತುತಿಸಿ.+

ಆತನ ದೊಡ್ಡತನಕ್ಕಾಗಿ ಆತನನ್ನ ಸ್ತುತಿಸಿ.+

 3 ಕೊಂಬನ್ನ ಊದುತ್ತಾ ಆತನನ್ನ ಹೊಗಳಿ.+

ತಂತಿವಾದ್ಯವನ್ನ, ಸಂಗೀತ ವಾದ್ಯಗಳನ್ನ ನುಡಿಸ್ತಾ ಆತನಿಗೆ ಹಾಡಿ ಹೊಗಳಿ.+

 4 ದಮ್ಮಡಿ ಬಡೀತಾ,+ ಕುಣಿಯುತ್ತಾ ಆತನನ್ನ ಕೊಂಡಾಡಿ.

ತಂತಿವಾದ್ಯ ನುಡಿಸ್ತಾ,+ ಕೊಳಲನ್ನ ಊದುತ್ತಾ ಆತನನ್ನ ಸ್ತುತಿಸಿ.+

 5 ಝಲ್ಲರಿಗಳನ್ನ ಬಾರಿಸ್ತಾ ಆತನನ್ನ ಹೊಗಳಿ,

ಝಲ್ಲರಿಗಳ ತಾಳಮೇಳದಿಂದ ಆತನನ್ನ ಕೊಂಡಾಡಿ.+

 6 ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ.

ಯಾಹುವನ್ನ ಸ್ತುತಿಸಿ!*+

ಅಥವಾ “ಮೆಲುಧ್ವನಿಯಲ್ಲಿ ಓದ್ತಾನೆ.”

ಅಥವಾ “ಯೋಚಿಸ್ತಿದ್ದಾರೆ.”

ಅಥವಾ “ಕ್ರಿಸ್ತನ.”

ಅಥವಾ “ಒಟ್ಟಾಗಿ ಆಲೋಚಿಸ್ತಿದ್ದಾರೆ.”

ಅಕ್ಷ. “ತಿದ್ದುಪಾಟನ್ನ ಸ್ವೀಕರಿಸಿ.”

ಅಕ್ಷ. “ಮಗನಿಗೆ ಮುತ್ತಿಡಿ.”

ಪದವಿವರಣೆ ನೋಡಿ.

ಅಕ್ಷ. “ಅಗಲವಾದ ಜಾಗ ಮಾಡಿಕೊಡು.”

ಅಥವಾ “ಗೌರವಿಸ್ತಾನೆ, ಆರಿಸಿಕೊಳ್ತಾನೆ.”

ಪದವಿವರಣೆ ನೋಡಿ.

ಅಥವಾ “ರಕ್ತಪಾತ ಮಾಡೋರು.”

ಅಥವಾ “ಆರಾಧನಾ ಸ್ಥಳದ.”

ಪದವಿವರಣೆ ನೋಡಿ.

ಅಥವಾ “ಕರುಣೆ.”

ಅಥವಾ “ನಿನ್ನನ್ನ ನೆನಪಿಸ್ಕೊಳ್ಳಲ್ಲ.”

ಪದವಿವರಣೆ ನೋಡಿ.

ಅಕ್ಷ. “ಈಜುತ್ತಿದೆ.”

ಬಹುಶಃ, “ನನ್ನನ್ನ ದ್ವೇಷಿಸೋ ಜನ್ರನ್ನ ವಿನಾಕಾರಣ ಬಿಟ್ಟುಬಿಟ್ಟಿದ್ರೆ.”

ಅಕ್ಷ. “ಮೂತ್ರಪಿಂಡಗಳು.”

ಅಥವಾ “ಕಠಿಣವಾಗಿ ಖಂಡಿಸ್ತಾನೆ.”

ಅಥವಾ “ಸಂಗೀತ ನುಡಿಸ್ತೀನಿ.”

ಪದವಿವರಣೆ ನೋಡಿ.

ಅಕ್ಷ. “ನಿನ್ನ ಕೈಕೆಲಸ ಆಗಿರೋ.”

ಅಥವಾ “ದೇವರ ತರ ಇರೋರಿಗಿಂತ.”

ಅಕ್ಷ. “ಬಯಲಿನ ಮೃಗಗಳ.”

ಪದವಿವರಣೆ ನೋಡಿ.

ಅಥವಾ “ಸಂಗೀತ ನುಡಿಸ್ತೀನಿ.”

ಅಥವಾ “ಫಲವತ್ತಾದ ನೆಲಕ್ಕೆ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಬಹುಶಃ, “ದುರಾಸೆ ಇರುವವನು ಅವನನ್ನೇ ಆಶೀರ್ವಾದ ಮಾಡ್ಕೊತಾನೆ.”

ಅಥವಾ “ಪೊದೆಯಲ್ಲಿ.”

ಅಥವಾ “ಬಲಿಷ್ಠ ಪಂಜಿನಲ್ಲಿ.”

ಅಕ್ಷ. “ತಂದೆ ಇಲ್ಲದವನಿಗೆ.”

ಅಥವಾ “ನ್ಯಾಯದ ಅಸ್ತಿವಾರನೇ.”

ಅಥವಾ “ಪ್ರಕಾಶಿಸ್ತಾ.”

ಬಹುಶಃ, “ಉರಿಯೋ ಕೆಂಡಗಳ.”

ಅಥವಾ “ಆತನ ಮೆಚ್ಚುಗೆಯನ್ನ ಅನುಭವಿಸ್ತಾರೆ.”

ಪದವಿವರಣೆ ನೋಡಿ.

ಅಥವಾ “ಹೊಗಳ್ತಾ.”

ಬಹುಶಃ, “ನೆಲದ ಮೇಲೆ ಇಟ್ಟಿರೋ ಲೋಹವನ್ನ ಕರಗಿಸೋ ಕುಲುಮೆ.”

ಅಥವಾ “ನನಗೆ ಪ್ರತಿಫಲ ಕೊಟ್ಟಿದ್ದಾನೆ.”

ಅಥವಾ “ಮಾನ ಕಳಿಯಲ್ಲ.”

ಅಕ್ಷ. “ಪ್ರಮಾಣ.”

ಪದವಿವರಣೆ ನೋಡಿ.

ಅಕ್ಷ. “ಮೂತ್ರಪಿಂಡಗಳು.”

ಅಥವಾ “ತತ್ತರಿಸಿ ಹೋಗಲ್ಲ, ಕುಸಿಯಲ್ಲ.”

ಅಥವಾ “ಶರೀರ.”

ಅದು, ಸಕಲ ಮಾನವರಿಗಾಗಿರುವ ಸಾಂಕೇತಿಕ ಸಮಾಧಿ. ಪದವಿವರಣೆ ನೋಡಿ.

ಅಕ್ಷ. “ಗುಂಡಿಯನ್ನ ನೋಡುವಂತೆ.”

ಅಕ್ಷ. “ನಿನ್ನ ಮುಖದಲ್ಲಿ.”

ಅಥವಾ “ಬಾಗಿ ಕೇಳಿಸ್ಕೊ.”

ಅಕ್ಷ. “ಕೊಬ್ಬಿನಿಂದ ಮುಚ್ಚಿಕೊಂಡಿದ್ದಾರೆ.”

ಅಥವಾ “ನೆಲಕ್ಕೆ ಉರುಳಿಸೋಕೆ.”

ಅಥವಾ “ಬಲಿಷ್ಠ ರಕ್ಷಕ.” ಪದವಿವರಣೆಯಲ್ಲಿ “ಕೊಂಬು” ನೋಡಿ.

ಅಥವಾ “ಗಾಳಿಯ ರೆಕ್ಕೆಗಳ.”

ಅಥವಾ “ವಿಶಾಲವಾದ ಸ್ಥಳಕ್ಕೆ.”

ಅಕ್ಷ. “ಕೈಗಳ ಶುದ್ಧತೆಗೆ.”

ಅಕ್ಷ. “ಬಂಡೆ.”

ಅಥವಾ “ಬೆಂಬಲ ಕೊಡುತ್ತೆ.”

ಅಥವಾ “ಕಣಕಾಲು.”

ಅಕ್ಷ. “ನಿಶಬ್ದ ಮಾಡ್ತೀನಿ.”

ಅಥವಾ “ಸಂಗೀತ ರಚಿಸ್ತೀನಿ.”

ಅಥವಾ “ಫಲವತ್ತಾದ ನೆಲದ.”

ಅಥವಾ “ಪರಿಷ್ಕರಿಸಿದ.”

ಅಥವಾ “ಎಷ್ಟೋ ಅಪರಾಧಗಳನ್ನ.”

ಅಥವಾ “ಸಲಹೆಗಳನ್ನ.”

ಅಥವಾ “ಮಹಾ ರಕ್ಷಣೆ.”

ಅಥವಾ “ಪರಿಷ್ಕರಿಸಿದ.”

ಅಕ್ಷ. “ಫಲವನ್ನ.”

ಅಕ್ಷ. “ಅವರ ಮುಖಗಳಿಗೆ.”

ಅಕ್ಷ. “ಬಿಲ್ಲಿನ ತಂತಿಗಳು.”

ಅಕ್ಷ. “ಸಂಗೀತ ರಚಿಸ್ತೀವಿ.”

ಬಹುಶಃ ಸ್ವರದ ಹೆಸರು ಅಥವಾ ಸಂಗೀತ ಶೈಲಿ.

ಅಥವಾ “ನಾಚಿಕೆ ಆಗಲಿಲ್ಲ.”

ಅಥವಾ “ಅಲಕ್ಷಿಸ್ತಾರೆ.”

ಅಕ್ಷ. “ಹೃದಯ ನಿತ್ಯನಿರಂತರಕ್ಕೂ ಬಡಿಬೇಕು.”

ಅಕ್ಷ. “ಕೊಬ್ಬಿದವರು.”

ಬಹುಶಃ, “ಪ್ರಶಾಂತವಾದ ಜಲರಾಶಿಗಳ ಹತ್ರ.”

ಅಥವಾ “ಸಾಂತ್ವನ.”

ಜನರು ಯೆಹೋವನ ಜೀವದ ಮೇಲೆ ಆಣೆ ಇಡೋದನ್ನ ಇಲ್ಲಿ ಸೂಚಿಸಿದೆ.

ಅಥವಾ “ನೀತಿವಂತ ಅಂತ ಕರೆಸಿಕೊಳ್ತಾನೆ.”

ಅಕ್ಷ. “ಅವರಿಗಾಗಿ ಅವಮಾನ ಕಾದು ಕೂತಿರುತ್ತೆ.”

ಅಥವಾ “ಪುರಾತನ ಕಾಲದಿಂದಲೂ.”

ಅಕ್ಷ. “ತೀರ್ಪು.”

ಅಥವಾ “ಸಮಗ್ರತೆಯಿಂದ, ನಿರ್ದೋಷಿಯಾಗಿ.”

ಅಕ್ಷ. “ನನ್ನ ಮೂತ್ರಪಿಂಡಗಳನ್ನ.”

ಅಕ್ಷ. “ಕೂತುಕೊಳ್ಳಲ್ಲ.”

ಅಥವಾ “ಕಪಟಿಗಳ ಜೊತೆ ಸೇರಲ್ಲ.”

ಅಥವಾ “ರಕ್ತ ಸುರಿಸೋರ.”

ಅಕ್ಷ. “ಬಿಡಿಸು.”

ಅಕ್ಷ. “ಸಮ್ಮೇಳನಗಳಲ್ಲಿ.”

ಅಥವಾ “ಆರಾಧನ ಸ್ಥಳದಲ್ಲೇ.”

ಬಹುಶಃ, “ಯೆಹೋವನ ಒಳ್ಳೇತನ ನೋಡ್ತೀನಿ ಅನ್ನೋ ದೃಢಭರವಸೆ ನನಗಿದೆ.”

ಅಥವಾ “ಸಮಾಧಿಗೆ ಹೋಗೋದಕ್ಕೆ ಸಮ.”

ಬಹುಶಃ, “ಆತನ ಪವಿತ್ರ ವೈಭವಕ್ಕಾಗಿ.”

ಅಥವಾ “ಆರಾಧಿಸಿ.”

ಇದು ಲೆಬನೋನಿನ ಬೆಟ್ಟಗಳು ಆಗಿರಬೇಕು.

ಅಥವಾ “ಆಕಾಶದ ಮಹಾಸಮುದ್ರದ.”

ಅಥವಾ “ಸೆಳೆದ ಕಾರಣ.”

ಪದವಿವರಣೆ ನೋಡಿ.

ಅಥವಾ “ಸಮಾಧಿಯಲ್ಲಿ.”

ಅಥವಾ “ಸಂಗೀತ ರಚಿಸಿ.”

ಅಕ್ಷ. “ನೃತ್ಯವಾಗಿ.”

ಅಥವಾ “ನನ್ನ ಮಹಿಮೆ.”

ಅಥವಾ “ನಂಬಿಗಸ್ತ ದೇವರೇ.”

ಅಥವಾ “ವಿಶಾಲವಾದ ಸ್ಥಳದಲ್ಲಿ.”

ಅಥವಾ “ಮನಸ್ಸಿಂದ.”

ಅಕ್ಷ. “ನನ್ನ ದಿನಗಳು.”

ಪದವಿವರಣೆ ನೋಡಿ.

ಅಕ್ಷ. “ತುಟಿಗಳು.”

ಅಕ್ಷ. “ನಾಲಿಗೆಗಳ ಜಗಳದಿಂದ.”

ಅಥವಾ “ನಿಮ್ಮ ಹೃದಯ ಬಲವಾಗಿರಲಿ.”

ಪದವಿವರಣೆ ನೋಡಿ.

ಅಕ್ಷ. “ಮುಚ್ಚಲಾಗಿದ್ಯೋ.”

ಅಕ್ಷ. “ಕೈ.”

ಅಥವಾ “ನನ್ನ ಜೀವದ ಸಾರ ಇಂಗಿಹೋಯ್ತು.”

ಅಥವಾ “ಸಂಗೀತ ರಚಿಸಿ.”

ಅಕ್ಷ. “ಅದರ ಸೈನ್ಯವೆಲ್ಲ.”

ಅಥವಾ “ಆಲೋಚನೆಗಳನ್ನ.”

ಅಥವಾ “ಸಲಹೆಗಳು.”

ಅಥವಾ “ಜಯ.”

ಅಥವಾ “ಯೆಹೋವನಲ್ಲಿ ಹೆಮ್ಮೆಪಡ್ತೀನಿ.”

ಅಥವಾ “ಪ್ರಾಯದ ಸಿಂಹಗಳು.”

ಅಥವಾ “ನಿರುತ್ಸಾಹ ಆಗಿರೋರನ್ನ.”

ಅಥವಾ “ವಿಪತ್ತುಗಳು.”

ಇಂಥ ಗುರಾಣಿಗಳನ್ನ ಬಿಲ್ಲುಗಾರರು ಬಳಸ್ತಿದ್ರು.

ಅಥವಾ “ಇಬ್ಬಾಯಿ ಕೊಡಲಿಯನ್ನ.”

ಬಹುಶಃ, “ದೇವಭಕ್ತಿ ಇಲ್ಲದವರು ಒಂದು ರೊಟ್ಟಿಗಾಗಿ ಅಣಕಿಸಿದ್ರು.”

ಅಥವಾ “ಪ್ರಾಯದ.”

ಅಥವಾ “ಧ್ಯಾನಿಸ್ತೀನಿ.”

ಅಕ್ಷ. “ದೇವರ ಬೆಟ್ಟದಂತಿದೆ.”

ಅಕ್ಷ. “ಕೊಬ್ಬನ್ನ.”

ಅಥವಾ “ಬುಗ್ಗೆ.”

ಅಥವಾ “ಕೋಪದಿಂದ ಕೆರಳಬೇಡ.”

ಅಥವಾ “ದೇಶದಲ್ಲಿದ್ದು.”

ಅಕ್ಷ. “ಮೇಲೆ ಉರುಳಿಸು.”

ಅಕ್ಷ. “ನಿರೀಕ್ಷೆಯಿಂದ.”

ಅಕ್ಷ. “ನಿರ್ದೋಷಿಯ ದಿನಗಳು.”

ಅಥವಾ “ನೀತಿವಂತ ದಯೆ ತೋರಿಸ್ತಾನೆ.”

ಅಥವಾ “ಸ್ಥಿರಪಡಿಸ್ತಾನೆ.”

ಅಥವಾ “ಬಾಯಿ ನಾಜೂಕಾಗಿ.”

ಅಥವಾ “ನಿಯತ್ತಾಗಿ ಇರೋನನ್ನ.”

ಅಕ್ಷ. “ಯಾವ ಅಂಗನೂ ಆರೋಗ್ಯವಾಗಿಲ್ಲ.”

ಅಕ್ಷ. “ಸೊಂಟದಲ್ಲಿ ಬೆಂಕಿ ತುಂಬ್ಕೊಂಡಿದೆ.”

ಅಕ್ಷ. “ಜೀವಂತವಾಗಿದ್ದಾರೆ.”

ಪದವಿವರಣೆ ನೋಡಿ.

ಅಕ್ಷ. “ಪ್ರಾಣಿಯ ಬಾಯಿಗೆ ಕಟ್ಟುವ ಕೊಕ್ಕೆ.”

ಅಥವಾ “ಕದಡಿತು.”

ಅಥವಾ “ನಿಟ್ಟುಸಿರು ಬಿಡ್ತಾನೇ.”

ಅಥವಾ “ನಾನೆಷ್ಟು ಕ್ಷಣಿಕ ಅಂತ.”

ಅಕ್ಷ. “ಗೇಣುದ್ದ.”

ಅಕ್ಷ. “ಶಬ್ದಮಾಡ್ತಾನೆ.”

ಅಥವಾ “ಒಬ್ಬ ಪ್ರವಾಸಿ ಆಗಿದ್ದೀನಿ.”

ಅಕ್ಷ. “ಮನಸಾರೆ ನಿರೀಕ್ಷಿಸಿದೆ.”

ಅಕ್ಷ. “ತನ್ನ ಕಿವಿಗಳನ್ನ ಬಗ್ಗಿಸಿದ.”

ಅಥವಾ “ಸುಳ್ಳುಗಾರರ.”

ಅಕ್ಷ. “ಗ್ರಂಥದ ಸುರುಳಿಯಲ್ಲಿ.”

ಅಥವಾ “ಸಂತೋಷ.”

ಅಕ್ಷ. “ಅವನ ಹಾಸಿಗೆಯನ್ನ ಪೂರ್ತಿ ಬದಲಾಯಿಸ್ತಾನೆ.”

ಅಕ್ಷ. “ತನ್ನ ಹಿಮ್ಮಡಿ ಎತ್ತಿದ್ದಾನೆ.”

ಅಥವಾ “ಹಾಗೆಯೇ ಆಗಲಿ.”

ಪದವಿವರಣೆ ನೋಡಿ.

ಬಹುಶಃ, “ನನ್ನ ಎಲುಬು ಮುರಿಯೋಕೆ.”

ಪದವಿವರಣೆ ನೋಡಿ.

ಅಥವಾ “ಅವರ ಬೆಲೆಯಿಂದ.”

ಅಕ್ಷ. “ಬಿಡಿಸು.”

ಪದವಿವರಣೆ ನೋಡಿ.

ಅಕ್ಷ. “ನನ್ನ ಕೆಲಸಗಳು.”

ಅಥವಾ “ನಕಲುಗಾರನ.”

ಪದವಿವರಣೆ ನೋಡಿ.

ಅಥವಾ “ಯಶಸ್ಸನ್ನ.”

ಅಕ್ಷ. “ನನಗೆ ಕಲಿಸುತ್ತೆ.”

ಅಥವಾ “ಪ್ರಾಮಾಣಿಕವಾದ.”

ಅಥವಾ “ರಕ್ತಬೋಳ.”

ಈ ಮರಗಳು ರಾಳ ಮತ್ತು ಎಣ್ಣೆಯನ್ನ ಉತ್ಪಾದಿಸುತ್ತವೆ. ಹಾಗಾಗಿ ಇವನ್ನ ಸುಗಂಧ ದ್ರವ್ಯದ ತಯಾರಿಕೆಯಲ್ಲಿ ಬಳಸ್ತಿದ್ರು.

ಅಕ್ಷ., “ಕ್ಯಾಸಿಯ.” ಪದವಿವರಣೆಯಲ್ಲಿ “ಕ್ಯಾಸಿಯ” ನೋಡಿ.

ಅಕ್ಷ. “ಮನೆ.”

ಪದವಿವರಣೆ ನೋಡಿ.

ಅಥವಾ “ಎತ್ತರ ಸ್ಥಳ.”

ಬಹುಶಃ, “ಗುರಾಣಿಗಳನ್ನ.”

ಅಥವಾ “ಟಗರಿನ ಕೊಂಬಿನ, ತುತ್ತೂರಿಯ.”

ಅಕ್ಷ. “ಗುರಾಣಿಗಳು.”

ಅಥವಾ “ಎತ್ತರ ಸ್ಥಳವಾಗಿದ್ದೀನಿ.”

ಅಥವಾ “ಮಾತಾಡ್ಕೊಂಡು ಬಂದಿದ್ದಾರೆ.”

ಅಕ್ಷ. “ಹೆಣ್ಣುಮಕ್ಕಳು.”

ಅಕ್ಷ. “ರಕ್ಷಣೆಯ ಮಣ್ಣುದಿಬ್ಬದ.”

ಬಹುಶಃ, “ನಾವು ಸಾಯೋ ತನಕ.”

ಅಥವಾ “ತಿಳುವಳಿಕೆಯ ಮಾತುಗಳ.”

ಅಕ್ಷ. “ತಪ್ಪುಗಳಿಂದ.”

ಅಕ್ಷ. “ಗುಂಡಿಯನ್ನ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಥವಾ “ಶಕ್ತಿಯಿಂದ.”

ಅಕ್ಷ. “ದೇವರುಗಳ ದೇವರಾಗಿರೋ.”

ಅಥವಾ “ಬಲಿಷ್ಠನಾಗಿರೋ, ದೇವರು, ಯೆಹೋವ.”

ಅಥವಾ “ಪರಿಪೂರ್ಣ.”

ಅಕ್ಷ. “ಗಂಡು ಆಡುಗಳಾಗಲಿ.”

ಅಕ್ಷ. “ಫಲವತ್ತಾದ ನೆಲ.”

ಅಥವಾ “ನಿರ್ದೇಶನವನ್ನ.”

ಬಹುಶಃ, “ಅವನ ಜೊತೆ ಸೇರಿಕೊಳ್ತೀಯ.”

ಅಥವಾ “ಹೆಸರು ಕೆಡಿಸ್ತೀಯ.”

ಅಥವಾ “ಮನಸ್ಸಲ್ಲೇ ಇದೆ.”

ಅಥವಾ “ಎಲ್ಲರಿಗಿಂತ ಜಾಸ್ತಿ.”

ಅಥವಾ “ಪಾಪದಿಂದಾನೇ ನನ್ನ ಅಮ್ಮ ನನ್ನನ್ನ ಹೆತ್ತಳು.”

ಪದವಿವರಣೆ ನೋಡಿ.

ಅಥವಾ “ಅನುಗ್ರಹಿಸಿ.”

ಪದವಿವರಣೆ ನೋಡಿ.

ಅಕ್ಷ. “ಜೀವಿತರ ದೇಶದಿಂದ.”

ಅಥವಾ “ಕೋಟೆಯಾಗಿ.”

ಅಕ್ಷ. “ಬೇರೆಯವರಿಗೆ ಕೇಡು ಮಾಡೋದನ್ನೇ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಥವಾ “ಬುದ್ಧಿ ಇಲ್ಲದವನು.”

ಅಕ್ಷ. “ಒಳನೋಟ.”

ಬಹುಶಃ, “ಹೆದರೋಕೆ ಕಾರಣ ಇಲ್ಲದಿದ್ರೂ ಹೆದರ್ತಾರೆ.”

ಅಕ್ಷ. “ನಿನ್ನ ವಿರುದ್ಧ ಪಾಳೆಯ ಹಾಕೋರ.”

ಪದವಿವರಣೆ ನೋಡಿ.

ಅಥವಾ “ಅವರು ದೇವರನ್ನ ತಮ್ಮ ಮುಂದೆ ಇಟ್ಕೊಳ್ಳಲ್ಲ.”

ಪದವಿವರಣೆ ನೋಡಿ.

ಅಥವಾ “ಸಹಾಯಕ್ಕಾಗಿ ಪ್ರಾರ್ಥಿಸುವಾಗ ಮರೆಯಾಗಬೇಡ.”

ಅಕ್ಷ. “ಅವರ ನಾಲಿಗೆಯನ್ನ ಸೀಳಿಹಾಕು.”

ಪದವಿವರಣೆ ನೋಡಿ.

ಅಥವಾ “ನನಗೆ ಸಮಾನನಾಗಿರೋ ಮನುಷ್ಯ.”

ಪದವಿವರಣೆ ನೋಡಿ.

ಅದು, ವಚನ 13, 14ರಲ್ಲಿ ತಿಳಿಸಿರೋ ಸ್ನೇಹಿತ.

ಅಥವಾ “ತತ್ತರಿಸಿ ಹೋಗೋಕೆ.”

ಪದವಿವರಣೆ ನೋಡಿ.

ಅಥವಾ “ನನ್ನನ್ನ ಕಚ್ಚಿ ಸೀಳಿಬಿಡಬೇಕು ಅಂತಿದ್ದಾನೆ.”

ಅಕ್ಷ. “ಮಾಂಸ.”

ಅಕ್ಷ. “ದೇವರ ಮುಂದೆ ನಡೀಬೇಕು ಅಂತ.”

ಪದವಿವರಣೆ ನೋಡಿ.

ಅಥವಾ “ಸಂಗೀತ ರಚಿಸ್ತೀನಿ.”

ಪದವಿವರಣೆ ನೋಡಿ.

ಅಕ್ಷ. “ಗರ್ಭದಿಂದಾನೇ.”

ಅಥವಾ “ಭ್ರಷ್ಟರಾಗಿದ್ದಾರೆ.”

ಪದವಿವರಣೆ ನೋಡಿ.

ಅಥವಾ “ರಕ್ತ ಕುಡಿಯೋರಿಂದ.”

ಅಥವಾ “ಬೊಗಳ್ತಾರೆ.”

ಅಥವಾ “ಎತ್ತರ ಸ್ಥಳ.”

ಅಥವಾ “ಬೊಗಳಲಿ.”

ಅಥವಾ “ಸಂಗೀತ ರಚಿಸ್ತೀನಿ.”

ಪದವಿವರಣೆ ನೋಡಿ.

ಬಹುಶಃ, “ಕೊಟ್ಟಿದ್ದೀಯ.”

ಬಹುಶಃ, “ತನ್ನ ಪವಿತ್ರ ಸ್ಥಳದಿಂದ.”

ಬಹುಶಃ, “ಭದ್ರವಾದ.”

ಅಥವಾ “ವಾಸಿಸ್ತಾನೆ.”

ಅಥವಾ “ಸಂಗೀತ ರಚಿಸ್ತೀನಿ.”

ಪದವಿವರಣೆ ನೋಡಿ.

ಅಥವಾ “ಎತ್ತರ ಸ್ಥಳ.”

ಅಕ್ಷ. “ನನ್ನ ಮಾಂಸ.”

ಅಥವಾ “ನರಿಗಳಿಗೆ.”

ಅಥವಾ “ಕೊಚ್ಚಿಕೊಳ್ತಾರೆ.”

ಅಕ್ಷ. “ಒಳನೋಟ ಇರುತ್ತೆ.”

ಅಥವಾ “ಕೊಚ್ಚಿಕೊಳ್ತಾರೆ.”

ಅಥವಾ “ಮನುಷ್ಯರು.”

ಅಥವಾ “ಆರಾಧನಾ ಸ್ಥಳದಲ್ಲಿರೋ.”

ಅಕ್ಷ. “ನೀನು ಕೊಡೋ ಸೂಚನೆಗಳನ್ನ.”

ಅಥವಾ “ಹೆಂಟೆಗಳನ್ನ.”

ಅಥವಾ “ಸಂಗೀತ ರಚಿಸಿ.”

ಅಥವಾ “ತತ್ತರಿಸಿ ಹೋಗೋಕೆ.”

ಅಕ್ಷ. “ನಮ್ಮ ಸೊಂಟದ ಮೇಲೆ.”

ಅಕ್ಷ. “ನಮ್ಮ ತಲೆ.”

ಅಥವಾ “ಗೌರವ ಕೊಡ್ತಾರೆ.”

ಅಥವಾ “ಸಂಗೀತ ರಚಿಸಿ.”

ಬಹುಶಃ, “ಮೋಡಗಳ ಮೇಲೆ.”

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಕ್ಷ. “ನ್ಯಾಯಾಧೀಶನಾಗಿ.”

ಅಥವಾ “ದಂಗೆಕೋರ.”

ಅಕ್ಷ. “ತೊಟ್ಟಿಕ್ಕಿತು.”

ಅಕ್ಷ. “ಆಸ್ತಿಗೆ.”

ಬಹುಶಃ, “ಕುರಿಯ ದೊಡ್ಡಿಗಳ ಮಧ್ಯ.”

ಅಥವಾ “ಹಳದಿ ಮಿಶ್ರಿತ ಹಸಿರು ಬಣ್ಣದ್ದು.”

ಅಥವಾ “ಅದು ಚಲ್ಮೋನಿನಲ್ಲಿ ಹಿಮ ಬಿದ್ದಂತೆ ಇತ್ತು.”

ಅಥವಾ “ಭವ್ಯವಾದ ಬೆಟ್ಟ”

ಅಥವಾ “ಪಾಪದ ದಾರಿಯಲ್ಲಿ ನಡೆಯೋ ಜನ್ರ.”

ಬಹುಶಃ, “ರಾಯಭಾರಿಗಳು ಬರ್ತಾರೆ.”

ಅಥವಾ “ಸಂಗೀತ ರಚಿಸಿ.”

ಅಕ್ಷ. “ಮೋಡಗಳಲ್ಲಿದೆ.”

ಅಕ್ಷ. “ನಿನ್ನ.”

ಅಥವಾ “ಕಾರಣ ಇಲ್ಲದೆ ದ್ವೇಷಿಸೋರು.”

ಬಹುಶಃ, “ಅತ್ತು ಉಪವಾಸ ಮಾಡಿ.”

ಅಕ್ಷ. “ಗಾದೆ.”

ಅಥವಾ “ಗುಂಡಿ.” ಇದು, ಸಮಾಧಿಯನ್ನ ಸೂಚಿಸುತ್ತಿರಬಹುದು.

ಅಥವಾ “ನನಗೆ ನಿರೀಕ್ಷೆನೇ ಇಲ್ಲದ ಹಾಗೆ ಆಗಿದೆ.”

ಅಥವಾ “ಕ್ರೋಧ.”

ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯ.”

ಅದು, ಆ ದೇಶನ.

ಅಥವಾ “ಜ್ಞಾಪಿಸಿಕೊಳ್ಳೋಕೆ.”

ಅಥವಾ “ವಿಶ್ವಾಸ.”

ಅಥವಾ “ಆಳವಾದ ನೀರಿಂದ.”

ಅಥವಾ “ಸಂಗೀತ ರಚಿಸ್ತೀನಿ.”

ಅಥವಾ “ಧ್ಯಾನಿಸುತ್ತೆ.”

ಅಕ್ಷ. “ಮೊಳಕೆ ಒಡಿತಾರೆ.”

ಅದು, ಯೂಫ್ರೆಟಿಸ್‌.

ಅಕ್ಷ. “ಅವನಿಗೆ ಪ್ರಜೆಗಳು ಇರ್ತಾರೆ.”

ಅಥವಾ “ಹಾಗೇ ಆಗಲಿ.”

ಅಥವಾ “ಕೊಚ್ಚಿಕೊಳ್ಳೋರ.”

ಅಥವಾ “ಅವರಿಗೆ ದೊಡ್ಡ ಹೊಟ್ಟೆ ಇದೆ.”

ಅಕ್ಷ. “ಕೊಬ್ಬಿಂದ.”

ಅಕ್ಷ. “ನನ್ನ ಮೂತ್ರಪಿಂಡದಲ್ಲಿ.”

ಅಕ್ಷ. “ವೇಶ್ಯೆರ ತರ ನಡ್ಕೊಂಡು.”

ಅಕ್ಷ. “ನಿಶಬ್ದ ಮಾಡ್ತೀಯ.”

ಅಕ್ಷ. “ಹೊಗೆ ಆಡ್ತಿದೆ?”

ಅಥವಾ “ಸಭೆ ಸೇರೋ ಜಾಗದಲ್ಲಿ.”

ಅಥವಾ “ಆರಾಧಿಸೋ ಸ್ಥಳಗಳನ್ನ.”

ಅಕ್ಷ. “ಬಟ್ಟೆಯ ಮಡಿಚಿಕೆಯಿಂದ.”

ಪದವಿವರಣೆ ನೋಡಿ.

ಅಕ್ಷ. “ಬಲವನ್ನ.”

ಅಕ್ಷ. “ಬಲವನ್ನ.”

ಅಥವಾ “ಸಂಗೀತ ನುಡಿಸ್ತೀನಿ.”

ಅಕ್ಷ. “ಬಲವನ್ನ.”

ಅಕ್ಷ. “ಬಲವನ್ನ.”

ಅಥವಾ “ನಿನ್ನ ಸುತ್ತ ಬೆಳಕು ತುಂಬಿದೆ.”

ಪದವಿವರಣೆ ನೋಡಿ.

ಅಥವಾ “ತಂತಿವಾದ್ಯದ ಸಂಗೀತವನ್ನ.”

ಅಕ್ಷ. “ತೋಳಿಂದ.”

ಅಕ್ಷ. “ಬಿಡಿಸಿದೆ.”

ಅಥವಾ “ಫಲವತ್ತಾದ ನೆಲ.”

ಅಕ್ಷ. “ಕೈಯಿಂದ.”

ಪದವಿವರಣೆ ನೋಡಿ.

ಅಥವಾ “ನಿಯಮಗಳನ್ನ.”

ಅಥವಾ “ಗೋಡೆ.”

ಅಕ್ಷ. “ಪರೀಕ್ಷಿಸಿದ್ರು.”

ಅಕ್ಷ. “ಬಲಿಷ್ಠರ.”

ಅಥವಾ “ನಮ್ಮ ಪರವಾಗಿ ಸೇಡು ತೀರಿಸ್ತಾನೆ.”

ಬಹುಶಃ, “ಜೀವ ಒಂದುಸಲ ಹೋದ್ರೆ ಹೇಗೆ ಮತ್ತೆ ಬರಲ್ವೋ ಹಾಗಿದ್ದಾರೆ.”

ಅಕ್ಷ. “ಕೈ.”

ಬಹುಶಃ, “ಜ್ವರಕ್ಕೆ.”

ಅಕ್ಷ. “ಅವರ ಜೀವವನ್ನ.”

ಅಕ್ಷ. “ದೇವರನ್ನ ಪರೀಕ್ಷಿಸ್ತಾನೇ.”

ಅಕ್ಷ. “ಆತನ ಕನ್ಯೆಯರನ್ನ ಕೊಂಡಾಡಲಿಲ್ಲ.”

ಅಕ್ಷ. “ಪರಿಹರಿಸು.”

ಅಕ್ಷ. “ಕೈಯಿಂದ.”

ಬಹುಶಃ, “ಬಿಡಿಸು.”

ಬಹುಶಃ, “ಮಧ್ಯದಲ್ಲಿ.”

ಅಥವಾ “ನಿನ್ನ ತೇಜಸ್ಸನ್ನ ತೋರಿಸು.”

ಅದು, ಯೂಫ್ರೆಟಿಸ್‌.

ಅಥವಾ “ಈ ರೆಂಬೆಯನ್ನ.”

ಅಕ್ಷ. “ನಿನ್ನ ಕೈ ಬೆಂಬಲಿಸಲಿ.”

ಪದವಿವರಣೆ ನೋಡಿ.

ಅಥವಾ “ಭಾಷೆ.”

ಅಕ್ಷ. “ರಹಸ್ಯ ಜಾಗದಿಂದ.”

ಅರ್ಥ “ಜಗಳ.”

ಅಕ್ಷ. “ಅವರ ಆಲೋಚನೆಯಂತೆ ನಡೆದ್ರು.”

ಅಕ್ಷ. “ಆತನ.” ಅಂದ್ರೆ, ದೇವರ ಜನರಿಗೆ.

ಅಕ್ಷ. “ಕೊಬ್ಬಿದ.”

ಅಥವಾ “ದೇವರ ತರ ಇರೋರ ಮಧ್ಯ.”

ಅಥವಾ “ತೀರ್ಪು ಕೊಡಿ.”

ಅಥವಾ “ದೇವರ ತರ ಇರೋರು.”

ಅಥವಾ “ಮೂಕನಾಗಿರದೆ.”

ಅಥವಾ “ತಮ್ಮ ತಲೆಯನ್ನ ಎತ್ತಿದ್ದಾರೆ.”

ಅಕ್ಷ. “ನೀನು ಬಚ್ಚಿಟ್ಟಿರೋ.”

ಅಥವಾ “ಮೈತ್ರಿ.”

ಅಕ್ಷ. “ಭುಜವಾಗಿದ್ದಾರೆ.”

ಅಥವಾ “ನಾಯಕರಿಗೂ.”

ಅಕ್ಷ. “ತುಂಬಿಸು.”

ಅಥವಾ “ಬಾಕಾ ಪೊದೆಗಳ ಕಣಿವೆಯನ್ನ.”

ಬಹುಶಃ, “ಶಿಕ್ಷಕ ತನ್ನನ್ನೇ ಆಶೀರ್ವಾದಗಳಿಂದ ಮುಚ್ಚಿಕೊಳ್ತಾನೆ.”

ಬಹುಶಃ, “ದೇವರೇ ನಮ್ಮ ಗುರಾಣಿಯನ್ನ ನೋಡು.”

ಅಕ್ಷ. “ನಿಲ್ಲೋದೇ.”

ಅಕ್ಷ. “ಪರಿಹರಿಸಿಬಿಟ್ಟೆ.”

ಅಥವಾ “ನಮ್ಮನ್ನ ಮತ್ತೆ ಒಂದುಮಾಡು.”

ಅಥವಾ “ಸಮೃದ್ಧಿಯನ್ನೇ.”

ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿ.”

ಅಥವಾ “ಚಂಚಲವಲ್ಲದ ಹೃದಯವನ್ನ.”

ಪದವಿವರಣೆ ನೋಡಿ.

ಅಥವಾ “ನಿನ್ನನ್ನ ಅವರು ತಮ್ಮ ಮುಂದೆ ಇಟ್ಕೊಳ್ಳಲಿಲ್ಲ.”

ಅಥವಾ “ದಯಾಳು.”

ಅಥವಾ “ಸತ್ಯವಂತನು.”

ಅಥವಾ “ಪುರಾವೆ.”

ಬಹುಶಃ ಇದು ಈಜಿಪ್ಟನ್ನ ಸೂಚಿಸುತ್ತೆ.

ಅಥವಾ “ನನ್ನನ್ನ ಒಪ್ಪಿಕೊಳ್ಳೋರು.”

ಅಥವಾ “ಎಲ್ಲ ವಿಷ್ಯಗಳ ಮೂಲ ನೀನೇ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿಸ್ಕೊ.”

ಪದವಿವರಣೆ ನೋಡಿ.

ಅಥವಾ “ಗುಂಡಿಗೆ.”

ಅಥವಾ “ಶಕ್ತಿ ಇಲ್ಲದವನ ತರ ಆಗಿದ್ದೀನಿ.”

ಅಥವಾ “ಅಬದ್ದೋನ್‌.” ಪದವಿವರಣೆ ನೋಡಿ.

ಬಹುಶಃ, “ಒಂದೇ ಸಮನೇ.”

ಪದವಿವರಣೆ ನೋಡಿ.

ಅಥವಾ “ದೇವದೂತರಲ್ಲಿ.”

ಅಥವಾ “ಸಮೂಹದಲ್ಲಿ.”

ಬಹುಶಃ ಇದು ಈಜಿಪ್ಟನ್ನ ಅಥವಾ ಫರೋಹನನ್ನ ಸೂಚಿಸ್ತಿದೆ.

ಅಕ್ಷ. “ಕೊಂಬು.”

ಅಕ್ಷ. “ಕೊಂಬು.”

ಅಥವಾ “ಅಧಿಕಾರದ ಕೆಳಗೆ.”

ಅಥವಾ “ದಂಗೆ ಎದ್ದಿದ್ದಕ್ಕಾಗಿ.”

ಅಕ್ಷ. “ನಿಮ್ಮ ನಂಬಿಕೆನ ಸುಳ್ಳು ಮಾಡಲ್ಲ.”

ಅಕ್ಷ. “ಅವನ ವೈರಿಗಳ ಬಲಗೈಯನ್ನ ಮೇಲೆ ಎತ್ತಿದೆ.”

ಪದವಿವರಣೆ ನೋಡಿ.

ಅಕ್ಷ. “ನನ್ನ ತೋಳಿನ ತೆಕ್ಕೆಯಲ್ಲಿ ಇಟ್ಕೊಂಡಿದ್ದೀನಿ.”

ಬಹುಶಃ, “ನಮ್ಮ ಆಶ್ರಯ.”

ಅಥವಾ “ಪ್ರಸವವೇದನೆಯನ್ನ ಸಹಿಸಿ ಅಸ್ತಿತ್ವಕ್ಕೆ ತರೋದಕ್ಕಿಂತ.”

ಅಥವಾ “ಯುಗಯುಗಾಂತರಕ್ಕೂ.”

ಅಥವಾ “ನಮ್ಮ ತಪ್ಪುಗಳು ನಿಂಗೊತ್ತು.”

ಅಕ್ಷ. “ಪಿಸುಮಾತಿನ ತರ.”

ಅಥವಾ “ನಿನ್ನ ಹತ್ರ ಬರೋ ದಾರಿಯನ್ನ ತಡಿತಾನೆ.”

ಅಥವಾ “ಅಡ್ಡಗೋಡೆ ತರ.”

ಅಕ್ಷ. “ಶಾಸ್ತಿಗೆ.”

ಬಹುಶಃ, “ಕೋಟೆ, ಆಶ್ರಯ.”

ಅಥವಾ “ಸಂಗೀತ ರಚಿಸೋದು.”

ಅಥವಾ “ಹುಲ್ಲಿನ ಹಾಗೆ.”

ಅಕ್ಷ. “ಕೊಬ್ಬು.”

ಅಥವಾ “ಅಲ್ಲಾಡಿಸೋಕೆ.”

ಅಕ್ಷ. “ಆಸ್ತಿಯ.”

ಅಕ್ಷ. “ಒಳನೋಟ.”

ಅಕ್ಷ. “ನೆಟ್ಟ.”

ಅಕ್ಷ. “ನಿಶಬ್ಧದಲ್ಲಿ ನಾನು ವಾಸಿಸ್ತಿದ್ದೆ.”

ಅಥವಾ “ಕಳವಳ ಜಾಸ್ತಿ ಆದಾಗ.”

ಅಥವಾ “ಉನ್ನತ ಸ್ಥಳ ಆಗ್ತಾನೆ.”

ಅಕ್ಷ. “ಮುಖದ ಮುಂದೆ.”

ಅಕ್ಷ. “ಆತನ ಕೈಯಲ್ಲಿರೋ.”

ಅರ್ಥ “ಜಗಳ ಮಾಡೋದು.”

ಅರ್ಥ “ಪರೀಕ್ಷಿಸೋದು.”

ಅಥವಾ “ಗೌರವ.”

ಅಥವಾ “ಫಲವತ್ತಾದ ನೆಲವನ್ನ.”

ಅಥವಾ “ಅಲ್ಲಾಡಿಸೋಕೆ, ಅದುರಿಸೋಕೆ.”

ಅಥವಾ “ಬಂದಿದ್ದಾನೆ.”

ಅಥವಾ “ಆತನನ್ನ ಆರಾಧಿಸಿ.”

ಅಕ್ಷ. “ಹೆಸ್ರನ್ನ ಸ್ಮರಿಸಿ.”

ಅಥವಾ “ಆತನಿಗೆ ಜಯ ತಂದಿದೆ.”

ಅಥವಾ “ದೇವರ ವಿಜಯವನ್ನ.”

ಅಥವಾ “ಸಂಗೀತ ರಚಿಸಿ.”

ಅಥವಾ “ಸಂಗೀತ ರಚಿಸಿ.”

ಅಥವಾ “ಬಂದಿದ್ದಾನೆ.”

ಬಹುಶಃ, “ಮಧ್ಯದಲ್ಲಿ.”

ಅಥವಾ “ಆರಾಧಿಸಿ.”

ಅಕ್ಷ. “ಅವರಿಗೆ ಸೇಡು ತೀರಿಸಿದೆ.”

ಅಥವಾ “ಆರಾಧಿಸಿ.”

ಅಥವಾ “ಒಪ್ಕೊಳ್ಳಿ.”

ಅಥವಾ “ಸಂಗೀತ ರಚಿಸ್ತೀನಿ.”

ಅಥವಾ “ನಿಯತ್ತಿಂದ ಇರ್ತೀನಿ.”

ಅಥವಾ “ಕೆಲಸಕ್ಕೆ ಬಾರದ.”

ಅಕ್ಷ. “ಸದ್ದನ್ನ ಅಡಗಿಸ್ತೀನಿ.”

ಅಥವಾ “ನಿಷ್ಕಳಂಕರಾಗಿ.”

ಅಕ್ಷ. “ನನ್ನ ಕಣ್ಮುಂದೆ.”

ಅಥವಾ “ಶಕ್ತಿ ಇಲ್ಲದೆ ಇರೋವಾಗ.”

ಅಥವಾ “ನೀನು ಬಗ್ಗಿ ಕೇಳಿಸ್ಕೊ.”

ಅಂದ್ರೆ, ಪೆಲಿಕನ್‌.

ಬಹುಶಃ, “ಸೊರಗಿ ಹೋಗಿದ್ದೀನಿ.”

ಅಥವಾ “ತಮಾಷೆ ಮಾಡೋರು.”

ಅಥವಾ “ಉದ್ದ ಆಗ್ತಿರೋ.”

ಅಥವಾ “ಹೆಸರು.” ಅಕ್ಷ. “ನೆನಪು.”

ಅಕ್ಷ. “ಸೃಷ್ಟಿಯಾಗೋ.”

ಅಥವಾ “ಗುಂಡಿಯಿಂದ.”

ಅಥವಾ “ಕೃಪೆ.”

ಅಥವಾ “ಪ್ರೀತಿಪೂರ್ವಕ ದಯೆಯನ್ನ.”

ಅಥವಾ “ಯುಗಯುಗಾಂತರಕ್ಕೂ.”

ಅಥವಾ “ಗೌರವ.”

ಪದವಿವರಣೆ ನೋಡಿ.

ಅಥವಾ “ಸಂಗೀತ ರಚಿಸ್ತೀನಿ.”

ಬಹುಶಃ, “ನನ್ನ ಧ್ಯಾನ ಆತನು ಮೆಚ್ಚೋ ತರ ಇರಲಿ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಆತನಿಗಾಗಿ ಸಂಗೀತ ರಚಿಸಿ.”

ಬಹುಶಃ, “ಮಾತಾಡಿ.”

ಅಕ್ಷ. “ಆಜ್ಞೆಯನ್ನ.”

ಅಕ್ಷ. “ರೊಟ್ಟಿಯ ಎಲ್ಲ ಕೋಲನ್ನ ಮುರಿದುಬಿಟ್ಟ.” ಬಹುಶಃ ಅದು ರೊಟ್ಟಿ ತೂಗು ಹಾಕೋಕೆ ಬಳಸ್ತಿದ್ದ ಕೋಲು ಇರಬೇಕು.

ಅಕ್ಷ. “ಬಾಧಿಸಿದ್ರು.”

ಅಥವಾ “ಬೆಂಕಿಯನ್ನ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಅನುಗ್ರಹ.”

ಅಥವಾ “ಹೊಗಳ್ತೀನಿ.”

ಅಥವಾ “ಕಾಡಲ್ಲಿ.”

ಅಥವಾ “ಅಚ್ಚಲ್ಲಿ ಹೊಯ್ದ ಮೂರ್ತಿಗೆ.”

ಅಕ್ಷ. “ಆತನ ಮುಂದಿರೋ ಬಿರುಕಲ್ಲಿ ನಿಂತ್ಕೊಂಡ.”

ಅದು, ಸತ್ತವರಿಗೆ ಅಥವಾ ಜೀವವಿಲ್ಲದ ಮೂರ್ತಿಗಳಿಗೆ ಕೊಟ್ಟ ಬಲಿ.

ಅಥವಾ “ಕಲಿತ್ರು.”

ಅಕ್ಷ. “ವೇಶ್ಯೆ ತರ ನಡ್ಕೊಂಡ್ರು.”

ಅಥವಾ “ಅಪಾರವಾದ.”

ಅಥವಾ “ಬೇಜಾರು ಮಾಡ್ಕೊಂಡ.”

ಅಥವಾ “ನಿತ್ಯನಿರಂತರಕ್ಕೂ.”

ಅಥವಾ “ಹಾಗೆಯೇ ಆಗಲಿ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ವಾಪಸ್‌ ಕೊಂಡುಕೊಂಡ್ನೋ.”

ಅಥವಾ “ಶಕ್ತಿಯಿಂದ.”

ಅಥವಾ “ಮೇಲೆ ಇಡ್ತಾನೆ.” ಅಂದ್ರೆ, ಕೈಗೆ ಸಿಗದಂತೆ ಮಾಡ್ತಾನೆ.

ಅಥವಾ “ಸಂಗೀತ ರಚಿಸ್ತೀನಿ.”

ಬಹುಶಃ, “ತನ್ನ ಪವಿತ್ರ ಸ್ಥಳದಿಂದ.”

ಅಥವಾ “ಆರೋಪ ಹಾಕೋನು.”

ಅಥವಾ “ದುಷ್ಟ.”

ಅಥವಾ “ಶಾಶ್ವತ ಪ್ರೀತಿ.”

ಅಥವಾ “ಶಾಶ್ವತ ಪ್ರೀತಿ.”

ಅಕ್ಷ. “ಕೊಬ್ಬಿನಾಂಶ (ಎಣ್ಣೆ) ಇಲ್ಲದೆ ನಾನು ಬಡಕಲಾಗಿದ್ದೀನಿ.”

ಅಥವಾ “ತೋಳಿಲ್ಲದ ಅಂಗಿಯಾಗಲಿ.”

ಅಥವಾ “ಆತನು ವಿಷಾದಪಡಲ್ಲ.”

ಅಥವಾ “ಮಧ್ಯ.”

ಅಥವಾ “ಭೂಮಿಯ.”

ಅಕ್ಷ. “ಪ್ರಧಾನ.”

ಇವನು ವಚನ 1ರಲ್ಲಿ “ನನ್ನ ಒಡೆಯ” ಅಂತ ಯಾರಿಗೆ ಹೇಳಿದ್ದಾನೋ ಅವನೇ ಆಗಿದ್ದಾನೆ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಕನಿಕರ ತೋರಿಸ್ತಾನೆ.”

ಅಕ್ಷ. “ಒಳನೋಟ ತೋರಿಸ್ತಾರೆ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಕನಿಕರ ತೋರಿಸ್ತಾನೆ.”

ಅಕ್ಷ. “ದಯೆಯಿಂದ.”

ಅಕ್ಷ. “ವಿಸ್ತಾರವಾಗಿ.”

ಅಕ್ಷ. “ಕೊಂಬು.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಸಿಂಹಾಸನದಲ್ಲಿ ಕೂತಿರೋ.”

ಬಹುಶಃ, “ತಿಪ್ಪೆಯಿಂದ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಕ್ಷ. “ಆರಾಧನಾ ಸ್ಥಳ.”

ಅಥವಾ “ಯೆಹೋವನೇ, ನಮ್ಮದೇನೂ ಇಲ್ಲ.”

ಅಕ್ಷ. “ನಿಶ್ಶಬ್ದಕ್ಕೆ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಕ್ಷ. “ಷೀಓಲಿನ ಕಷ್ಟಗಳು ನನ್ನನ್ನ ಗುರುತಿಸ್ತಿವೆ.”

ಅಥವಾ “ಕನಿಕರ ತೋರಿಸ್ತಾನೆ.”

ಪದವಿವರಣೆಯಲ್ಲಿ “ಪ್ರಾಣ” ನೋಡಿ.

ಅಥವಾ “ಅತಿ ದೊಡ್ಡ ರಕ್ಷಣೆಯ.”

ಅಥವಾ “ಅಮೂಲ್ಯವಾಗಿದೆ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಕುಲಗಳೇ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ವಿಶಾಲವಾದ.”

ಬಹುಶಃ, “ನನಗೆ ಸಹಾಯ ಮಾಡೋ ಜನರ ಜೊತೆ ಇದ್ದಾನೆ.”

ಬಹುಶಃ, “ನೀನು ನನ್ನನ್ನ ಜೋರಾಗಿ ತಳ್ಳಿಬಿಟ್ಟೆ.”

ಅಥವಾ “ಜಯ.”

ಅಕ್ಷ. “ಮೂಲೆಯ ತಲೆ ಆಯ್ತು.”

ಅಥವಾ “ನಿಯತ್ತಿಂದ.”

ಅಂದ್ರೆ ಪದೇಪದೇ ಕೊಟ್ಟ ಆಜ್ಞೆಗಳು, ಸಲಹೆಗಳು ಅಥವಾ ನಿರ್ದೇಶನಗಳು.

ಅಥವಾ “ಅಧ್ಯಯನ ಮಾಡ್ತೀನಿ.”

ಅಕ್ಷ. “ನನ್ನ ಮೇಲಿಂದ ಉರುಳಿಸು.”

ಅಥವಾ “ಅಧ್ಯಯನ ಮಾಡ್ತೀನಿ.”

ಅಕ್ಷ. “ದಾರಿಯನ್ನ.”

ಅಥವಾ “ಅಧ್ಯಯನ ಮಾಡ್ತೀನಿ.”

ಅಥವಾ “ನನಗೆ ಅವಮಾನ ಆಗೋಕೆ ಬಿಡಬೇಡ.”

ಅಕ್ಷ. “ಓಡ್ತೀನಿ.”

ಬಹುಶಃ, “ಹೃದಯದಲ್ಲಿ ಭರವಸೆ ತುಂಬಿದ್ದೀಯ.”

ಅಥವಾ “ಮಾರ್ಗದರ್ಶಿಸು.”

ಬಹುಶಃ, “ನಿನಗೆ ಭಯಪಡೋರ ಜೊತೆ ನೀನು ಮಾಡಿರೋ.”

ಅಥವಾ “ವಾಗ್ದಾನವನ್ನ.”

ಅಥವಾ “ತೀರ್ಪಿಗಾಗಿ ಕಾಯ್ತಾ ಇದ್ದೀನಿ.”

ಅಥವಾ “ವಿಶಾಲವಾದ.”

ಅಥವಾ “ಅದು ನಿಜ ಆಗೋ ತನಕ ನಾನು ಕಾಯೋ ಹಾಗೆ ಮಾಡಿದೆ.”

ಅಥವಾ “ನಾನು ಪರದೇಶಿಯಾಗಿದ್ರೂ.”

ಅಕ್ಷ. “ಕೊಬ್ಬು ತುಂಬಿ ದಪ್ಪ ಆಗಿದೆ.”

ಅಥವಾ “ನಿನ್ನ ವಾಕ್ಯಕ್ಕಾಗಿ ಕಾಯ್ತೀನಿ.”

ಬಹುಶಃ, “ಸುಳ್ಳು ಹೇಳಿ.”

ಅಕ್ಷ. “ತುಂಬ ವಿಶಾಲ.”

ಅಕ್ಷ. “ಒಳನೋಟ.”

ಅಕ್ಷ. “ಪ್ರತಿಕ್ಷಣ ನನ್ನ ಜೀವಕ್ಕೆ ಕುತ್ತಿದೆ.”

ಅಥವಾ “ಪಿತ್ರಾರ್ಜಿತ ಸೊತ್ತಾಗಿ.”

ಅಕ್ಷ. “ಹೃದಯವನ್ನ ಅವುಗಳ ಕಡೆ ವಾಲಿಸಿದ್ದೀನಿ.”

ಅಥವಾ “ಚಂಚಲ ಹೃದಯದವರನ್ನ.”

ಅಥವಾ “ನನ್ನನ್ನ ಅವಮಾನಕ್ಕೆ ಗುರಿಮಾಡಬೇಡ.”

ಅಥವಾ “ವಾಗ್ದಾನಕ್ಕಾಗಿ.”

ಅಥವಾ “ಪರಿಷ್ಕರಿಸಿದ.”

ಅಥವಾ “ಅಪ್ಪಣೆಯನ್ನ.”

ಅಕ್ಷ. “ಏದುಸಿರು.”

ಅಥವಾ “ನನ್ನ ಹೆಜ್ಜೆಗಳನ್ನ ಸ್ಥಿರಪಡಿಸು.”

ಅಥವಾ “ಮುಗುಳ್ನಗೆಯ ಬೆಳಕು.”

ಅಥವಾ “ನಸುಕಲ್ಲೇ.”

ಅಥವಾ “ಅಧ್ಯಯನ ಮಾಡೋಕೆ.”

ಅಥವಾ “ಅಶ್ಲೀಲವಾಗಿ ನಡ್ಕೊಳ್ಳೋರು.”

ಅಥವಾ “ಅಂಥವರಿಗೆ ಯಾವುದೇ ಎಡವುಗಲ್ಲು ಇರಲ್ಲ.”

ಪದವಿವರಣೆ ನೋಡಿ.

ಅಥವಾ “ಅಲುಗಾಡಕ್ಕೂ ಬಿಡಲ್ಲ.”

ಅಕ್ಷ. “ನೀನು ಹೊರಗೆ ಹೋದ್ರು ಒಳಗೆ ಬಂದ್ರೂ.”

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಕ್ಷ. “ರಕ್ಷಣೆಯ ಮಣ್ಣುದಿಬ್ಬದ.”

ಅಕ್ಷ. “ನೆಗೆಬಿನ ತೊರೆಗಳನ್ನ.”

ಅಥವಾ “ನಮ್ಮವ್ರಲ್ಲಿ ಮತ್ತೆ ಜೀವ ತುಂಬು.”

ಅಕ್ಷ. “ಗಂಡುಮಕ್ಕಳು.”

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಲೆಕ್ಕ ಇಡೋದಾದ್ರೆ.”

ಪದವಿವರಣೆ ನೋಡಿ.

ಅಥವಾ “ಪವಿತ್ರ ಡೇರೆಯನ್ನ.”

ಅಕ್ಷ. “ಮುಖ ತಿರುಗಿಸ್ಕೊಬೇಡ.”

ಅಕ್ಷ. “ಕೊಂಬನ್ನ.”

ಬಹುಶಃ, “ಆರಾಧನಾ ಸ್ಥಳದಲ್ಲಿರಿ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಸಂಗೀತ ರಚಿಸಿ.”

ಅಥವಾ “ಅಮೂಲ್ಯ ಆಸ್ತಿಯಾಗಿ.”

ಅಥವಾ “ಆವಿ.”

ಬಹುಶಃ, “ಪ್ರವಾಹ ದ್ವಾರಗಳನ್ನ.”

ಅಕ್ಷ. “ತುಂಡು.”

ಬಾಬೆಲಿನ ಬಗ್ಗೆ ಹೇಳ್ತಿದ್ದಾರೆ.

ಅಥವಾ, “ಪಾಪ್ಲರ್‌.”

ಬಹುಶಃ, “ಒಣಗಿಹೋಗಲಿ.”

ಬಹುಶಃ, “ವಿರುದ್ಧ.”

ಅಥವಾ “ಆರಾಧನಾ ಸ್ಥಳ.”

ಬಹುಶಃ, “ನೀನು ನಿನ್ನ ಹೆಸ್ರಿಗಿಂತ ನಿನ್ನ ಮಾತಿಗೆ ಪ್ರಾಮುಖ್ಯತೆ ಕೊಟ್ಟಿದ್ದೀಯ.”

ಅಕ್ಷ. “ಅಳತೆ ಮಾಡ್ತೀಯ.”

ಬಹುಶಃ, “ಹೆಣೆದೆ.”

ಅಕ್ಷ. “ನನ್ನನ್ನ ಭೂಮಿಯ ಆಳದಲ್ಲಿ ಹೆಣೀತಿದ್ದಾಗ.”

ಅಥವಾ “ಭ್ರೂಣವಾಗಿ.”

ಅಕ್ಷ. “ಇನ್ನೂ ನಿನ್ನ ಜೊತೆನೇ ಇರ್ತಿನಿ.”

ಅಥವಾ “ರಕ್ತಾಪರಾಧಿಗಳು.”

ಅಥವಾ “ಕಳವಳಗಳನ್ನ.”

ಅಕ್ಷ. “ನನ್ನ ತಲೆಯನ್ನ.”

ಅಥವಾ “ನೀರು ತುಂಬಿರೋ ಗುಂಡಿಗೆ.”

ಅಥವಾ “ದೇಶದಲ್ಲಿ.”

ಪದವಿವರಣೆ ನೋಡಿ.

ಪದವಿವರಣೆ ನೋಡಿ.

ಅಕ್ಷ. “ನನ್ನನ್ನ ಒಪ್ಕೊಳ್ಳೋರು.”

ಅಕ್ಷ. “ನನ್ನ ಪಾಲು.”

ಅಥವಾ “ಅಧ್ಯಯನ ಮಾಡ್ತೀನಿ.”

ಅಥವಾ “ಗುಂಡಿಗೆ.”

ಅಥವಾ “ಪ್ರಾಮಾಣಿಕತೆಯ ದೇಶದಲ್ಲಿ.”

ಅಕ್ಷ. “ನಿಶ್ಶಬ್ದ ಮಾಡು.”

ಅಥವಾ “ಎತ್ತರ ಸ್ಥಳ.”

ಅಥವಾ “ಹಿಡಿತದಿಂದ.”

ಅಥವಾ “ಸಂಗೀತ ರಚಿಸ್ತೀನಿ.”

ಅಥವಾ “ರಕ್ಷಣೆ.”

ಪದವಿವರಣೆ ನೋಡಿ.

ಅಥವಾ “ಶಕ್ತಿಯ.”

ಅಥವಾ “ಕೃಪೆ.”

ಅಕ್ಷ. “ಸತ್ಯತೆಯಿಂದ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಸಂಗೀತ ರಚಿಸ್ತೀನಿ.”

ಅಥವಾ “ನಾಯಕರ.”

ಅಥವಾ “ದುಷ್ಟರ ದಾರಿಯನ್ನ ಸೊಟ್ಟ ಮಾಡ್ತಾನೆ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಸಂಗೀತ ರಚಿಸೋದು.”

ಅಕ್ಷ. “ಕೊಬ್ಬಿದ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಕ್ಷ. “ಕೊಂಬನ್ನ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಸಂಗೀತ ರಚಿಸಲಿ.”

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ